००३ राम-विराधयुद्धम्

वाचनम्
ಭಾಗಸೂಚನಾ

ವಿರಾಧ ಮತ್ತು ಶ್ರೀರಾಮನ ಮಾತುಕತೆ, ಶ್ರೀರಾಮ-ಲಕ್ಷ್ಮಣರಿಂದ ವಿರಾಧನ ಮೇಲೆ ಬಾಣಪ್ರಯೋಗ ಹಾಗೂ ವಿರಾಧನು ಸಹೋದರರಿಬ್ಬರನ್ನೂ ಎತ್ತಿಕೊಂಡು ಇನ್ನೊಂದು ವನಕ್ಕೆ ಹೋದುದು

ಮೂಲಮ್ - 1

ಅಥೋವಾಚ ಪುನರ್ವಾಕ್ಯಂ ವಿರಾಧಃ ಪೂರಯನ್ ವನಮ್ ।
ಪೃಚ್ಛತೋ ಮಮ ಹಿ ಬ್ರೂತಂ ಕೌ ಯುವಾಂ ಕ್ವ ಗಮಿಷ್ಯಥಃ ॥

ಅನುವಾದ

ಅನಂತರ ವಿರಾಧನು ವನವೆಲ್ಲ ತುಂಬುವಂತೆ ಭಾರೀ ಗರ್ಜನೆ ಮಾಡಿ, ಎಲವೊ! ನೀವಿಬ್ಬರು ಯಾರು ಮತ್ತು ಎಲ್ಲಿಗೆ ಹೋಗುವಿರಿ? ನನಗೆ ಹೇಳಿ, ನಾನು ಕೇಳುತ್ತಿದ್ದೇನೆ.॥1॥

ಮೂಲಮ್ - 2

ತಮುವಾಚ ತತೋ ರಾಮೋ ರಾಕ್ಷಸಂ ಜ್ವಲಿತಾನನಮ್ ।
ಪೃಚ್ಛಂತಂ ಸುಮಹಾತೇಜಾ ಇಕ್ಷ್ವಾಕುಕುಲಮಾತ್ಮನಃ ॥

ಮೂಲಮ್ - 3

ಕ್ಷತ್ರಿಯೌ ವೃತ್ತಸಂಪನ್ನೌ ವಿದ್ಧಿ ನೌ ವನಗೋಚರೌ ।
ತ್ವಾಂ ತು ವೇದಿತುಮಿಚ್ಛಾವಃ ಕಸ್ತ್ವಂ ಚರಸಿ ದಂಡಕಾನ್ ॥

ಅನುವಾದ

ಆಗ ಮಹಾತೇಜಸ್ವೀ ಶ್ರೀರಾಮನು ತನ್ನ ಪರಿಚಯವನ್ನು ಕೇಳುತ್ತಿರುವ ಉರಿಯುವ ಮುಖವುಳ್ಳ ಆ ರಾಕ್ಷಸನಲ್ಲಿ ಹೀಗೆ ಹೇಳಿದನು-ಮಹಾರಾಜ ಇಕ್ಷ್ವಾಕುವಿನ ಕುಲವೇ ನನ್ನ ದಾಗಿದೆ ಎಂದು ತಿಳಿ. ನಾವಿಬ್ಬರೂ ಸಹೋದರರು. ಸದಾಚಾರವನ್ನು ಪಾಲಿಸುತ್ತಿರುವ ಕ್ಷತ್ರಿಯರಾಗಿದ್ದು, ಕಾರಣಾಂತರಗಳಿಂದ ಈ ಕಾಡಿನಲ್ಲಿ ವಾಸಿಸುತ್ತಿದ್ದೇವೆ. ಈಗ ನಾವು ನಿನ್ನ ಪರಿಚಯವನ್ನು ತಿಳಿಯಲು ಬಯಸುತ್ತೇವೆ. ಈ ದಂಡಕಾರಣ್ಯದಲ್ಲಿ ಸ್ವೇಚ್ಛೆಯಿಂದ ತಿರುಗುತ್ತಿರುವೆಯಲ್ಲ ನೀನು ಯಾರು.॥2-3॥

ಮೂಲಮ್ - 4

ತಮುವಾಚ ವಿರಾಧಸ್ತು ರಾಮಂ ಸತ್ಯಪರಾಕ್ರಮಮ್ ।
ಹಂತ ವಕ್ಷ್ಯಾಮಿ ತೇರಾಜನ್ನಿಬೋಧ ಮಮ ರಾಘವ ॥

ಅನುವಾದ

ಇದನ್ನು ಕೇಳಿ ವಿರಾಧನು ಸತ್ಯಪರಾಕ್ರಮಿ ಶ್ರೀರಾಮನಲ್ಲಿ ಹೇಳಿದನು - ರಘುವಂಶೀ ನರೇಶನೇ! ನಾನು ಸಂತೋಷವಾಗಿ ನನ್ನ ಪರಿಚಯ ಹೇಳುತ್ತಿದ್ದೇನೆ, ಕೇಳು.॥4॥

ಮೂಲಮ್ - 5

ಪುತ್ರಃ ಕಿಲ ಜವಸ್ಯಾಹಂ ಮಾತಾ ಮಮ ಶತಹ್ರದಾ ।
ವಿರಾಧ ಇತಿ ಮಾಮಾಹುಃ ಪೃಥಿವ್ಯಾಂ ಸರ್ವರಾಕ್ಷಸಾಃ ॥

ಅನುವಾದ

ನಾನು ‘ಜವ’ ಎಂಬ ರಾಕ್ಷಸನ ಮಗನು. ಶತಹ್ರದಾ ನನ್ನ ತಾಯಿಯ ಹೆಸರು. ಭೂಮಂಡಲದ ಸಮಸ್ತ ಜನರು ನನ್ನನ್ನು ವಿರಾಧ ಎಂದು ಹೇಳುತ್ತಾರೆ.॥5॥

ಮೂಲಮ್ - 6

ತಪಸಾ ಚಾಭಿಸಂಪ್ರಾಪ್ತಾ ಬ್ರಹ್ಮಣೋ ಹಿ ಪ್ರಸಾದಜಾ ।
ಶಸ್ತ್ರೇಣಾವಧ್ಯತಾ ಲೋಕೇಽಚ್ಛೇದ್ಯಾ ಭೇದ್ಯತ್ವಮೇವ ಚ ॥

ಅನುವಾದ

ನಾನು ತಪಸ್ಸಿನಿಂದ ಬ್ರಹ್ಮದೇವರನ್ನು ಒಲಿಸಿಕೊಂಡು ‘ಯಾವುದೇ ಶಸ್ತ್ರದಿಂದ ನನ್ನ ವಧೆ ಆಗದಿರಲಿ. ನಾನು ಜಗತ್ತಿನಲ್ಲಿ ಅಚ್ಛೇದ ಮತ್ತು ಅಭೇದ್ಯವಾಗಿ ಇದ್ದು, ಯಾರೂ ನನ್ನ ಶರೀರವನ್ನು ಭಿನ್ನ-ಭಿನ್ನ ಮಾಡಬಾರದು’ ಎಂಬ ವರವನ್ನು ಪಡೆದಿರುವೆನು.॥6॥

ಮೂಲಮ್ - 7

ಉತ್ಸೃಜ್ಯ ಪ್ರಮದಾಮೇನಾಮನಪೇಕ್ಷೌ ಯಥಾಗತಮ್ ।
ತ್ವರಮಾಣೌ ಪಲಾಯೇಥಾಂ ನ ವಾಂ ಜೀವಿತಮಾದದೇ ॥

ಅನುವಾದ

ಈಗ ನೀವಿಬ್ಬರೂ ಈ ಯುವತಿಯನ್ನು ಇಲ್ಲೇ ಬಿಟ್ಟು, ಈಕೆಯನ್ನು ಪಡೆಯುವ ಆಸೆಯನ್ನು ಬಿಟ್ಟು, ಬಂದ ಹಾಗೆಯೇ ಕೂಡಲೇ ಇಲ್ಲಿಂದ ಓಡಿಹೋಗಿರಿ. ನಾನು ನಿಮ್ಮಿಬ್ಬರನ್ನು ಕೊಲ್ಲುವುದಿಲ್ಲ.॥7॥

ಮೂಲಮ್ - 8

ತಂ ರಾಮಃ ಪ್ರತ್ಯುವಾಚೇದಂ ಕೋಪಸಂರಕ್ತಲೋಚನಃ ।
ರಾಕ್ಷಸಂ ವಿಕೃತಾಕಾರಂ ವಿರಾಧಂ ಪಾಪಚೇತಸಮ್ ॥

ಅನುವಾದ

ಇದನ್ನು ಕೇಳಿ ಶ್ರೀರಾಮಚಂದ್ರನು ತಾಮ್ರಾಕ್ಷನಾದನು. ಪಾಪಪೂರ್ಣ ವಿಚಾರವುಳ್ಳ, ವಿಕಟಾಕಾರದ ಆ ಪಾಪೀ ರಾಕ್ಷಸ ವಿರಾಧನಲ್ಲಿ ಈ ಪ್ರಕಾರ ಹೇಳಿದನು.॥8॥

ಮೂಲಮ್ - 9

ಕ್ಷುದ್ರ ಧಿಕ್ ತ್ವಾಂ ತು ಹೀನಾರ್ಥಂ ಮೃತ್ಯು ಮನ್ವೇಷಸೇಧ್ರುವಮ್ ।
ರಣೇ ಪ್ರಾಪ್ಸ್ಯಸಿ ಸಂತಿಷ್ಠ ನ ಮೇ ಜೀವನ್ ವಿಮೋಕ್ಷಸೆಸೇ ॥

ಅನುವಾದ

ನೀಚನೇ! ನಿನಗೆ ಧಿಕ್ಕಾರವಿರಲಿ. ನಿನ್ನ ಅಭಿಪ್ರಾಯ ಬಹಳ ಕೆಟ್ಟದಾಗಿದೆ. ನಿಶ್ಚಯವಾಗಿ ನೀನು ತನ್ನ ಸಾವನ್ನು ಹುಡುಕುತ್ತಿರುವೆ, ಅದು ನಿನಗೆ ಯುದ್ಧದಲ್ಲಿ ಸಿಗುವುದು, ನಿಲ್ಲು, ಈಗ ನೀನು ನನ್ನ ಕೈಯಿಂದ ಬದುಕುಳಿಯಲಾರೆ.॥9॥

ಮೂಲಮ್ - 10

ತತಃ ಸಜ್ಯಂ ಧನುಃ ಕೃತ್ವಾ ರಾಮಃ ಸುನಿಶಿತಾನ್ ಶರಾನ್ ।
ಸುಶೀಘ್ರಮಭಿಸಂಧಾಯ ರಾಕ್ಷಸಂ ನಿಜಘಾನ ಹ ॥

ಅನುವಾದ

ಹೀಗೆ ಹೇಳಿ ಭಗವಾನ್ ಶ್ರೀರಾಮನು ಧನುಸ್ಸಿಗೆ ಹೆದೆಯೇರಿಸಿ ಕೂಡಲೇ ಹರಿತವಾದ ಬಾಣಾನುಸಂಧಾನ ಮಾಡಿ ಆ ರಾಕ್ಷಸನನ್ನು ಹೊಡೆಯ ತೊಡಗಿದನು.॥10॥

ಮೂಲಮ್ - 11

ಧನುಷಾ ಜ್ಯಾಗುಣವತಾ ಸಪ್ತ ಬಾಣಾನ್ಮುಮೋಚ ಹ ।
ರುಕ್ಮಪುಂಖಾನ್ ಮಹಾವೇಗಾನ್ಸುಪರ್ಣಾನಿಲತುಲ್ಯಗಾನ್ ॥

ಅನುವಾದ

ಅವನು ಧನುಸ್ಸಿನಿಂದ ವಿರಾಧನ ಮೇಲೆ ಒಂದೇ ಸಮನೆ ಗರುಡ ಮತ್ತು ವಾಯುವಿನಂತಹ ಮಹಾವೇಗಶಾಲೀ, ಚಿನ್ನದ ಪಂಖಗಳುಳ್ಳ ಏಳು ಬಾಣಗಳನ್ನು ಪ್ರಯೋಗಿಸಿದನು.॥11॥

ಮೂಲಮ್ - 12

ತೇ ಶರೀರಂ ವಿರಾಧಸ್ಯ ಭಿತ್ತ್ವಾ ಬರ್ಹಿಣವಾಸಸಃ ।
ನಿಪೇತುಃ ಶೋಣಿತಾದಿಗ್ಧಾ ಧರಣ್ಯಾಂ ಪಾವಕೋಪಮಾಃ ॥

ಅನುವಾದ

ಪ್ರಜ್ವಲಿತ ಅಗ್ನಿಯಂತೆ ತೇಜಸ್ವೀ ಮತ್ತು ನವಿಲುಗರಿಯಳ್ಳ ಆ ಬಾಣಗಳು ವಿರಾಧನ ಶರೀರವನ್ನು ಭೇದಿಸಿ ರಕ್ತರಂಜಿತ ವಾಗಿ ಭೂಮಿಯಲ್ಲಿ ಬಿದ್ದು ಹೋದವು.॥12॥

ಮೂಲಮ್ - 13

ಸ ವಿದ್ಧೋ ನ್ಯಸ್ಯ ವೈದೇಹೀಂ ಶೂಲಮುದ್ಯಮ್ಯ ರಾಕ್ಷಸಃ ।
ಅಭ್ಯದ್ರವತ್ ಸುಸಂಕ್ರುದ್ಧಸ್ತದಾ ರಾಮಂ ಸಲಕ್ಷ್ಮಣಮ್ ॥

ಅನುವಾದ

ಗಾಯಗೊಂಡಾಗ ಆ ರಾಕ್ಷಸನು ವಿದೇಹ ಕುಮಾರೀ ಸೀತೆಯನ್ನು ಬೇರೆಯಾಗಿ ಇರಿಸಿ, ಕೈಯಲ್ಲಿ ಶೂಲವನ್ನೆತ್ತಿಕೊಂಡು, ಅತ್ಯಂತ ಕುಪಿತನಾಗಿ ಶ್ರೀರಾಮ-ಲಕ್ಷ್ಮಣರ ಮೇಲೆ ಏರಿಹೋದನು.॥13॥

ಮೂಲಮ್ - 14

ಸ ವಿನದ್ಯ ಮಹಾನಾದಂ ಶೂಲಂ ಶಕ್ರಧ್ವಜೋಪಮಮ್ ।
ಪ್ರಗೃಹ್ಯಾಶೋಭತ ತದಾ ವ್ಯಾತ್ತಾನನ ಇವಾಂತಕಃ ॥

ಅನುವಾದ

ಅವನು ಗಟ್ಟಿಯಾಗಿ ಗರ್ಜಿಸಿ ಇಂದ್ರಧ್ವಜನಂತೆ ಶೂಲವನ್ನೆತ್ತಿಕೊಂಡು, ಬಾಯಿತೆರೆದು ನಿಂತಿರುವ ಅವನು ಈಗ ಕಾಲನಂತೆ ಕಂಡುಬರುತ್ತಿದ್ದನು.॥14॥

ಮೂಲಮ್ - 15

ಅಥ ತೌ ಭ್ರಾತರೌ ದೀಪ್ತಂ ಶರವರ್ಷಂ ವವರ್ಷತುಃ ।
ವಿರಾಧೇ ರಾಕ್ಷಸೇ ತಸ್ಮಿನ್ ಕಾಲಾಂತಕಯಮೋಪಮೇ ॥

ಅನುವಾದ

ಆಗ ಕಾಲಾಂತಕ ಯಮರಾಜನಂತೆ ಇದ್ದ ಆ ಭಯಂಕರ ರಾಕ್ಷಸ ವಿರಾಧನ ಮೇಲೆ ಆ ಇಬ್ಬರೂ ಸಹೋದರರು ಪ್ರಜ್ವಲಿತ ಬಾಣಗಳ ಮಳೆಗರೆದರು.॥15॥

ಮೂಲಮ್ - 16

ಸ ಪ್ರಹಸ್ಯ ಮಹಾರೌದ್ರಃ ಸ್ಥಿತ್ವಾಜೃಂಭತ ರಾಕ್ಷಸಃ ।
ಜೃಂಭಮಾಣಸ್ಯ ತೇ ಬಾಣಾಃ ಕಾಯಾನ್ನಿಷ್ಪೇತುರಾಶುಗಾಃ ॥

ಅನುವಾದ

ಇದನ್ನು ನೋಡಿ ಆ ಮಹಾಭಯಂಕರ ರಾಕ್ಷಸನು ಅಟ್ಟಹಾಸ ಮಾಡಿ ನಿಂತುಕೊಂಡು, ಮೈಮುರಿಯುತ್ತಾ ಆಕಳಿಸತೊಡಗಿದನು. ಅವನು ಹಾಗೆ ಮಾಡುತ್ತಲೇ ಶೀಘ್ರಗಾಮಿ ಬಾಣಗಳು ಅವನ ಶರೀರದಿಂದ ಕಳಚಿ ನೆಲಕ್ಕೆ ಬಿದ್ದುಹೋದುವು.॥16॥

ಮೂಲಮ್ - 17

ಸ್ಪರ್ಶಾತ್ ತು ವರದಾನೇನ ಪ್ರಾಣಾನ್ ಸಂರೋಧ್ಯ ರಾಕ್ಷಸಃ ।
ವಿರಾಧಃ ಶೂಲಮುದ್ಯಮ್ಯ ರಾಘವಾವಭ್ಯಧಾವತ ॥

ಅನುವಾದ

ವರದಾನದಿಂದಾಗಿ ಆ ರಾಕ್ಷಸ ವಿರಾಧನು ಪ್ರಾಣಗಳನ್ನು ತಡೆ ಹಿಡಿದಿದ್ದು, ಶೂಲವನ್ನೆತ್ತಿಕೊಂಡು ಆ ಇಬ್ಬರೂ ರಘುವಂಶೀ ವೀರರ ಮೇಲೆ ಆಕ್ರಮಣ ಮಾಡಿದನು.॥17॥

ಮೂಲಮ್ - 18

ತಚ್ಛೂಲಂ ವಜ್ರಸಂಕಾಶಂ ಗಗನೇ ಜ್ವಲನೋಪಮಮ್ ।
ದ್ವಾಭ್ಯಾಂ ಶರಾಭ್ಯಾಂ ಚಿಚ್ಛೇದ ರಾಮಃ ಶಸ್ತ್ರ ಭೃತಾಂ ವರಃ ॥

ಅನುವಾದ

ಅವನ ಆ ಶೂಲವು ಆಕಾಶದಲ್ಲಿ ವಿದ್ಯುತ್ ಮತ್ತು ಅಗ್ನಿಯಂತೆ ಪ್ರಜ್ವಲಿಸಿತು; ಆದರೆ ಶಸ್ತ್ರಧಾರಿಗಳಲ್ಲಿ ಶ್ರೇಷ್ಠನಾದ ಶ್ರೀರಾಮಚಂದ್ರನು ಎರಡು ಬಾಣಗಳಿಂದ ಅದನ್ನು ತುಂಡರಿಸಿದನು.॥18॥

ಮೂಲಮ್ - 19

ತದ್ರಾಮವಿಶಿಖೈಚ್ಛಿನ್ನಂ ಶೂಲಂ ತಸ್ಯಾಪತದ್ ಭುವಿ ।
ಪಪಾತಾಶನಿನಾ ಚ್ಛಿನ್ನಂ ಮೇರೋರಿವ ಶಿಲಾತಲಮ್ ॥

ಅನುವಾದ

ಶ್ರೀರಾಮನು ಬಾಣಗಳಿಂದ ತುಂಡರಿಸಿದ ವಿರಾಧನ ಆ ಶೂಲವು ವಜ್ರಾಯುಧದಿಂದ ನುಚ್ಚುನೂರಾದ ಮೇರುವಿನ ಶಿಲಾಖಂಡದಂತೆ ಭೂಮಿಗೆ ಬಿದ್ದುಹೋಯಿತು.॥19॥

ಮೂಲಮ್ - 20

ತೌ ಖಡ್ಗೌ ಕ್ಷಿಪ್ರಮುದ್ಯಮ್ಯ ಕೃಷ್ಣ ಸರ್ಪಾವಿವೋದ್ಯತೌ ।
ತೂರ್ಣಮಾಪತತುಸ್ತಸ್ಯ ತದಾ ಪ್ರಹರತಾಂ ಬಲಾತ್ ॥

ಅನುವಾದ

ಮತ್ತೆ ಅವರಿಬ್ಬರೂ ಸಹೋದರರು ಶೀಘ್ರವಾಗಿ ಕಷ್ಣಸರ್ಪಗಳಂತೆ ಇರುವ ಎರಡು ಖಡ್ಗವನ್ನೆತ್ತಿಕೊಂಡು ಕೂಡಲೇ ಅವನನ್ನು ಆಕ್ರಮಿಸಿ, ಬಲವಂತವಾಗಿ ಪ್ರಹರಿಸ ತೊಡಗಿದರು.॥20॥

ಮೂಲಮ್ - 21

ಸ ವಧ್ಯಮಾನಃ ಸುಭೃಶಂ ಭುಜಾಭ್ಯಾಂ ಪರಿಗೃಹ್ಯ ತೌ ।
ಅಪ್ರಕಂಕ್ಷ್ಯಾ ನರವ್ಯಾಘ್ರೌ ರೌದ್ರಃ ಪ್ರಸ್ಥಾತುಮೈಚ್ಛತ ॥

ಅನುವಾದ

ಅವರ ಆಘಾತದಿಂದ ಅತ್ಯಂತ ಗಾಯಗೊಂಡ ಆ ಭಯಂಕರ ರಾಕ್ಷಸನು ತನ್ನೆರೆಡೂ ಭುಜಗಳಿಂದ ಆ ಅಕಂಪ್ಯ ಪುರುಷಸಿಂಹ ವೀರರನ್ನು ಹಿಡಿದುಕೊಂಡು ಬೇರೆಡೆಗೆ ಹೋಗಲು ಬಯಸಿದನು.॥21॥

ಮೂಲಮ್ - 22

ತಸ್ಯಾಭಿಪ್ರಾಯಮಾಜ್ಞಾಯ ರಾಮೋ ಲಕ್ಷ್ಮಣಮಬ್ರವೀತ್ ।
ವಹತ್ವಯಮಲಂ ತಾವತ್ ಪಥಾನೇನ ತು ರಾಕ್ಷಸಃ ॥

ಮೂಲಮ್ - 23

ಯಥಾ ಚೇಚ್ಛತಿ ಸೌಮಿತ್ರೇ ತಥಾ ವಹತು ರಾಕ್ಷಸಃ ।
ಅಯಮೇವ ಹಿ ನಃ ಪಂಥಾ ಯೇನ ಯಾತಿ ನಿಶಾಚರಃ॥

ಮೂಲಮ್ - 24

ಸ ತು ಸ್ವಬಲವೀರ್ಯೇಣ ಸಮುತ್ಕ್ಷಿಪ್ಯ ನಿಶಾಚರಃ ।
ಬಾಲಾವಿವ ಸ್ಕಂಧಗತೌ ಚಕಾರಾತಿಬಲೋದ್ಧತಃ ॥

ಅನುವಾದ

ಅವನ ಅಭಿಪ್ರಾಯವನ್ನು ಅರಿತ ಶ್ರೀರಾಮನು ಲಕ್ಷ್ಮಣನಲ್ಲಿ ಹೇಳಿದನು ಸುಮಿತ್ರಾನಂದನನೇ! ಈ ರಾಕ್ಷಸನು ತನ್ನ ಇಚ್ಛೆಯಂತೆ ನಮ್ಮನ್ನು ಈ ಮಾರ್ಗದಿಂದ ಹೊತ್ತುಕೊಂಡು ಹೋಗಲಿ. ಇವನು ಬಯಸಿದಂತೆ ವಾಹನನಾಗಿ ನಮ್ಮನ್ನು ಕೊಂಡು ಹೋಗಲಿ. ಈ ನಿಶಾಚರ ಹೋಗುವ ದಾರಿಯೇ ನಮಗೆ ಮುಂದಕ್ಕೆ ಹೋಗುವ ಮಾರ್ಗವಾಗಿದೆ.॥22-24॥

ಮೂಲಮ್ - 25

ತಾವಾರೋಪ್ಯ ತತಃ ಸ್ಕಂಧಂ ರಾಘವೌ ರಜನೀಚರಃ ।
ವಿರಾಧೋ ನಿನದನ್ ಘೋರಂ ಜಗಾಮಾಭಿಮುಖೋ ವನಮ್ ॥

ಅನುವಾದ

ಅತ್ಯಂತ ಬಲಗರ್ವಿತನಾದ ನಿಶಾಚರ ವಿರಾಧನು ತನ್ನ ಬಲ-ಪರಾಕ್ರಮದಿಂದ ಇಬ್ಬರೂ ಸಹೋದರರನ್ನು ಬಾಲಕರಂತೆ ತನ್ನ ಹೆಗಲ ಮೇಲೆ ಕುಳ್ಳಿರಿಸಿಕೊಂಡನು.॥25॥

ಮೂಲಮ್ - 26

ವನಂ ಮಹಾಮೇಘನಿಭಂ ಪ್ರವಿಷ್ಟೋ
ದ್ರುಮೈರ್ಮಹದ್ಭಿರ್ವಿವಿಧೈರುಪೇತಮ್ ।
ನಾನಾವಿಧೈಃ ಪಕ್ಷಿಕುಲೈರ್ವಿಚಿತ್ರಂ
ಶಿವಾಯುತಂ ವ್ಯಾಲಮೃಗೈರ್ವಿಕೀರ್ಣಮ್ ॥

ಅನುವಾದ

ಅನಂತರ ಮಹಾನ್ ಮೇಗಳಂತೆ ದಟ್ಟವಾದ ಮತ್ತು ನೀಲಿಯಾದ, ನಾನಾ ಪ್ರಕಾರದ ದೊಡ್ಡ ದೊಡ್ಡ ವೃಕ್ಷಗಳಿಂದ ತುಂಬಿದ, ಬಗೆ-ಬಗೆಯ ಪಕ್ಷಿಸಂಕುಲಗಳಿಂದ ವಿಚಿತ್ರವಾಗಿ ಶೋಭಿಸುವ, ಅನೇಕ ತೋಳ, ಹಿಂಸಕ ಪಶುಗಳಿಂದ ಆವತವಾದ ಘೋರವನವನ್ನು ಪ್ರವೇಶಿಸಿದನು.॥26॥

ಅನುವಾದ (ಸಮಾಪ್ತಿಃ)

ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅರಣ್ಯಕಾಂಡದಲ್ಲಿ ಮೂರನೆಯ ಸರ್ಗ ಸಂಪೂರ್ಣವಾಯಿತು.॥3॥