००१ ऋषीणाम् अभयप्रार्थनम्

वाचनम्
ಭಾಗಸೂಚನಾ

ಶ್ರೀರಾಮ-ಲಕ್ಷ್ಮಣ ಮತ್ತು ಸೀತೆಯರ ತಪಸ್ವೀ ಆಶ್ರಮಮಂಡಳದಲ್ಲಿ ಸತ್ಕಾರ

ಮೂಲಮ್ - 1

ಪ್ರವಿಶ್ಯ ತು ಮಹಾರಣ್ಯಂ ದಂಡಕಾರಣ್ಯಮಾತ್ಮವಾನ್ ।
ರಾಮೋ ದದರ್ಶ ದುರ್ಧರ್ಷಸ್ತಾಪಸಾಶ್ರಮಮಂಡಲಮ್ ॥

ಅನುವಾದ

ದಂಡಕಾರಣ್ಯ ಎಂಬ ಮಹಾವನವನ್ನು ಪ್ರವೇಶಿಸಿ, ಮನಸ್ಸನ್ನು ವಶವಿರಿಸಿಕೊಂಡ ದುರ್ಜಯ ವೀರ ಶ್ರೀರಾಮನು ಅಲ್ಲಿ ತಪಸ್ವೀಮುನಿಗಳ ಅನೇಕ ಆಶ್ರಮಗಳನ್ನು ನೋಡಿದನು.॥1॥

ಮೂಲಮ್ - 2

ಕುಶಚೀರಪರಿಕ್ಷಿಪ್ತಂ ಬ್ರಾಹ್ಮಯಾ ಲಕ್ಷ್ಮ್ಯಾ ಸಮಾವೃತಮ್ ।
ಯಥಾ ಪ್ರದೀಪ್ತಂ ದುರ್ದರ್ಶಂ ಗಗನೇ ಸೂರ್ಯಮಂಡಲಮ್ ॥

ಅನುವಾದ

ಅಲ್ಲಿ ದರ್ಭೆಗಳು, ವಲ್ಕಲಗಳು ಹರಿಡಕೊಂಡಿದ್ದವು. ಆ ಆಶ್ರಮಗಳು ಋಷಿಗಳ ಬ್ರಹ್ಮವಿದ್ಯೆಯ ಅಭ್ಯಾಸದಿಂದ ಪ್ರಕಟವಾದ ವಿಲಕ್ಷಣ ತೇಜದಿಂದ ವ್ಯಾಪ್ತವಾಗಿದ್ದವು. ಅದರಿಂದ ಆಕಾಶದಲ್ಲಿ ಹೊಳೆಯುತ್ತಿರುವ ದುರ್ದರ್ಶ ಸೂರ್ಯನಂತೆ ಅವು ಬೆಳಗುತ್ತಿದ್ದವು. ರಾಕ್ಷಸಾದಿಗಳು ಅವುಗಳ ಕಡೆಗೆ ನೋಡುವುದೂ ಕಠಿಣವಾಗಿತ್ತು.॥2॥

ಮೂಲಮ್ - 3

ಶರಣ್ಯಂ ಸರ್ವಭೂತಾನಾಂ ಸುಸಂಮೃಷ್ಟಾಜಿರಂ ಸದಾ ।
ಮೃಗೈರ್ಬಹುಭಿರಾಕೀರ್ಣಂ ಪಕ್ಷಿಸಂಘೈಃ ಸಮಾವೃತಮ್ ॥

ಅನುವಾದ

ಆ ಆಶ್ರಮಗಳು ಎಲ್ಲ ಪ್ರಾಣಿಗಳಿಗೆ ಶರಣ್ಯವಾಗಿದ್ದವು. ಅವುಗಳ ಅಂಗಳಗಳು ಗುಡಿಸಿ-ಸಾರಿಸಿ ಸ್ವಚ್ಛವಾಗಿದ್ದವು. ಅಲ್ಲಿ ಅನೇಕ ವನ್ಯಪಶುಗಳು ತುಂಬಿದ್ದು, ಪಕ್ಷಿಗಳ ಸಮುದಾಯವೂ ಅವನ್ನು ಆವರಿಸಿಕೊಂಡಿತ್ತು.॥3॥

ಮೂಲಮ್ - 4

ಪೂಜಿತಂ ಚೋಪನೃತ್ತಂ ಚ ನಿತ್ಯಮಪ್ಸರಸಾಂ ಗಣೈಃ ।
ವಿಶಾಲೈರಗ್ನಿಶರಣೈಃ ಸ್ರುಗ್ಭಾಂಡೈರಜಿನೈಃ ಕುಶೈಃ ॥

ಮೂಲಮ್ - 5

ಸಮಿದ್ಭಿಸ್ತೋಯಕಲಶೈಃ ಫಲಮೂಲೈಶ್ಚ ಶೋಭಿತಮ್ ।
ಆರಣ್ಯೈಶ್ಚ ಮಹಾವೃಕ್ಷೈಃ ಪುಣ್ಯೈಃ ಸ್ವಾದುಲೈರ್ಯುತಮ್ ॥

ಅನುವಾದ

ಅಲ್ಲಿ ಅಪ್ಸರೆಯರು ಪ್ರತಿದಿನ ಬಂದು ನೃತ್ಯಮಾಡುತ್ತಿದ್ದರೋ ಎಂಬಂತೆ ಅಲ್ಲಿಯ ಪ್ರದೇಶ ರಮಣೀಯವಾಗಿತ್ತು. ವಿಶಾಲವಾದ ಅಗ್ನಿಶಾಲೆಗಳಿಂದ ಸ್ರುವಾದಿ ಯಜ್ಞಪಾತ್ರೆಗಳಿಂದ, ಮೃಗಚರ್ಮ, ಕುಶ, ಸಮಿತ್ತು, ಜಲಪೂರ್ಣ ಕಲಶಗಳಿಂದ, ಫಲ-ಮೂಲಗಳಿಂದ ಅದರ ಶೋಭೆ ಹೆಚ್ಚಾಗಿತ್ತು. ರುಚಿಕರ ಹಣ್ಣುಗಳನ್ನು ಕೊಡುವ ಪರಮ ಪವಿತ್ರ ದೊಡ್ಡ-ದೊಡ್ಡ ಕಾಡು ವೃಕ್ಷಗಳಿಂದ ಆ ಆಶ್ರಮಮಂಡಳವು ಆವರಿಸಿಕೊಂಡಿತ್ತು.॥4-5॥

ಮೂಲಮ್ - 6

ಬಲಿಹೋಮಾರ್ಚಿತಂ ಪುಣ್ಯಂ ಬ್ರಹ್ಮಘೋಷನಿನಾದಿತಮ್ ।
ಪುಷ್ಪೈಶ್ಚಾನ್ಯೈಃ ಪರಿಕ್ಷಿಪ್ತಂ ಪದ್ಮಿನ್ಯಾ ಚ ಸಪದ್ಮಯಾ ॥

ಅನುವಾದ

ಬಲಿವೈಶ್ವದೇವ ಮತ್ತು ಹೋಮದಿಂದ ಪೂಜಿತವಾದ ಆ ಪವಿತ್ರ ಆಶ್ರಮ ಸಮೂಹವು ವೇದಮಂತ್ರಗಳ ಧ್ವನಿಗಳಿಂದ ಪ್ರತಿಧ್ವನಿಸುತ್ತಿತ್ತು. ತಾವರೆಯ ಕೊಳಗಳಿಂದ ಆ ಸ್ಥಾನದ ಶೋಭೆ ಹೆಚ್ಚಿತ್ತು. ಅನೇಕ ಪ್ರಕಾರದ ಹೂವುಗಳು ಎಲ್ಲೆಡೆ ಚಲ್ಲಿಹೋಗಿದ್ದವು.॥6॥

ಮೂಲಮ್ - 7

ಫಲಮೂಲಾಶನೈರ್ದಾಂತೈಶ್ಚೀರಕೃಷ್ಣಾಜಿನಾಂಬರೈಃ ।
ಸೂರ್ಯವೈಶ್ವಾನರಾಭೈಶ್ಚ ಪುರಾಣೈರ್ಮುನಿಭಿರ್ಯುತರ್ಮ್ ॥

ಅನುವಾದ

ಆ ಆಶ್ರಮಗಳಲ್ಲಿ ನಾರುಮಡಿ ಮತ್ತು ಕಷ್ಣಮೃಗ ಚರ್ಮ ಧರಿಸುವ, ಫಲ-ಮೂಲಗಳ ಆಹಾರದಲ್ಲೇ ಇರುವ, ಜಿತೇಂದ್ರಿಯರಾದ, ಸೂರ್ಯ ಮತ್ತು ಚಂದ್ರರಂತೆ ಮಹಾ ತೇಜಸ್ವೀಗಳಾದ ಪುರಾತನ ಮುನಿಗಳು ವಾಸಿಸುತ್ತಿದ್ದರು.॥7॥

ಮೂಲಮ್ - 8

ಪುಣ್ಯೈಶ್ಚ ನಿಯತಾಹಾರೈಃ ಶೋಭಿತಂ ಪರಮರ್ಷಿಭಿಃ ।
ತದ್ಬ್ರಹ್ಮಭವನಪ್ರಖ್ಯಂ ಬ್ರಹ್ಮಘೋಷನಿನಾದಿತಮ್ ॥

ಅನುವಾದ

ನಿಯಮಿತ ಆಹಾರವುಳ್ಳ ಪವಿತ್ರ ಮಹರ್ಷಿಗಳಿಂದ ಸುಶೋಭಿತ ಆ ಆಶ್ರಮ ಸಮೂಹವು ಬ್ರಹ್ಮದೇವರ ಧಾಮದಂತೆ ತೇಜಸ್ವೀ ಹಾಗೂ ವೇದಧ್ವನಿಗಳಿಂದ ನಿನಾದಿಸುತ್ತಿತ್ತು.॥8॥

ಮೂಲಮ್ - 9½

ಬ್ರಹ್ಮವಿದ್ಭಿ ರ್ಮಹಾಭಾಗೈರ್ಬ್ರಾಹ್ಮಣೈರುಪಶೋಭಿತಮ್ ।
ತದ್ದೃಷ್ಟ್ವಾ ರಾಘವಃ ಶ್ರೀಮಾಂಸ್ತಾಪಸಾಶ್ರಮಮಂಡಲಮ್ ॥
ಅಭ್ಯಗಚ್ಛನ್ಮಹಾತೇಜಾ ವಿಜ್ಯಂ ಕೃತ್ವಾ ಮಹದ್ಧನುಃ ।

ಅನುವಾದ

ಅನೇಕ ಮಹಾಭಾಗ ಬ್ರಹ್ಮವೇತ್ತರಾದ ಬ್ರಾಹ್ಮಣರು ಆ ಆಶ್ರಮಗಳ ಶೋಭೆಯನ್ನು ಹೆಚ್ಚಿಸಿದ್ದರು. ಮಹಾತೇಜಸ್ವೀ ಶ್ರೀರಾಮನು ಆ ಆಶ್ರಮಮಂಡಳವನ್ನು ನೋಡಿ ತನ್ನ ಧನುಸ್ಸಿನ ಹಗ್ಗವನ್ನು ಬಿಚ್ಚಿ ಮತ್ತೆ ಆಶ್ರಮದೊಳಗೆ ಹೋದನು.॥9॥

ಮೂಲಮ್ - 10½

ದಿವ್ಯ ಜ್ಞಾನೋಪಪನ್ನಾಸ್ತೇ ರಾಮಂ ದೃಷ್ಟ್ವಾ ಮಹರ್ಷಯಃ ॥
ಅಭಿಜಗ್ಮುಸ್ತದಾ ಪ್ರೀತಾ ವೈದೇಹೀಂ ಚ ಯಶಸ್ವಿನೀಮ್ ।

ಅನುವಾದ

ಶ್ರೀರಾಮ ಮತ್ತು ಯಶಸ್ವಿನೀ ಸೀತೆಯರನ್ನು ಆ ದಿವ್ಯಜ್ಞಾನ ಸಂಪನ್ನ ಮಹರ್ಷಿಗಳು ಬಹಳ ಸಂತೋಷದಿಂದ ತಮ್ಮ ಬಳಿಗೆ ಬರಮಾಡಿಕೊಂಡರು.॥10½॥

ಮೂಲಮ್ - 11

ತೇ ತು ಸೋಮವಿವೋದ್ಯಂತಂ ದೃಷ್ಟ್ವಾ ವೈ ಧರ್ಮಚಾರಿಣಮ್ ॥

ಮೂಲಮ್ - 12

ಲಕ್ಷ್ಮಣಂ ಚೈವ ದೃಷ್ಟ್ವಾ ತು ವೈದೇಹೀಂ ಚ ಯಶಸ್ವಿನೀಮ್ ।
ಮಂಗಲಾನಿ ಪ್ರಯುಂಜಾನಾಃ ಪ್ರತ್ಯಗೃಹ್ಣನ್ ದೃಢವ್ರತಾಃ ॥

ಅನುವಾದ

ದೃಢವ್ರತರಾದ ಆ ಮಹರ್ಷಿಗಳು ಉದಯಕಾಲದ ಚಂದ್ರನಂತೆ ಮನೋಹರ, ಧರ್ಮಾತ್ಮಾ ಶ್ರೀರಾಮನನ್ನು, ಲಕ್ಷ್ಮಣನನ್ನು ಹಾಗೂ ಯಶಸ್ವಿನೀ ವಿದೇಹಕುಮಾರೀ ಸೀತೆಯನ್ನು ನೋಡಿ ಅವರೆಲ್ಲರಿಗೆ ಮಂಗಳಮಯ ಆಶೀರ್ವಾದ ಕೊಡಲು ತೊಡಗಿದರು. ಆ ಮೂವರನ್ನೂ ಆದರಣೀಯ ಅತಿಥಿಯಾಗಿ ಅವರು ಸ್ವೀಕರಿಸಿದರು.॥11-12॥

ಮೂಲಮ್ - 13

ರೂಪಸಂಹನನಂ ಲಕ್ಷ್ಮೀಂ ಸೌಕುಮಾರ್ಯಂಸುವೇಷತಾಮ್ ।
ದದೃಶುರ್ವಿಸ್ಮಿತಾಕಾರಾ ರಾಮಸ್ಯ ವನವಾಸಿನಃ ॥

ಅನುವಾದ

ಶ್ರೀರಾಮನ ರೂಪ ಶರೀರದ ಮೈಕಟ್ಟು, ಮುಖದ ಕಾಂತಿ, ಸೌಕುವಾರ್ಯ ಹಾಗೂ ಸುಂದರವೇಷವನ್ನು ಆ ವನವಸೀ ಮುನಿಗಳು ಆಶ್ಚರ್ಯಚಕಿತರಾಗಿ ನೋಡಿದರು.॥13॥

ಮೂಲಮ್ - 14

ವೈದೇಹೀಂ ಲಕ್ಷ್ಮಣಂ ರಾಮಂ ನೇತ್ರೈರನಿಮಿಷೈರಿವ ।
ಆಶ್ಚರ್ಯಭೂತಾನ್ದ ದೃಶುಃ ಸರ್ವೇ ತೇ ವನವಾಸಿನಃ ॥

ಅನುವಾದ

ವನವಾಸಿಗಳಾದ ಅವರೆಲ್ಲರೂ ಶ್ರೀರಾಮ-ಲಕ್ಷ್ಮಣ-ಸೀತೆಯನ್ನು ನೆಟ್ಟನೋಟದಿಂದ ನೋಡುತ್ತಾ, ಅವರ ಸ್ವರೂಪ ಆ ಮುನಿಗಳಿಗೆ ಆಶ್ಚರ್ಯಮಯವಾಗಿ ಕಂಡಿತು.॥14॥

ಮೂಲಮ್ - 15

ಅತ್ರೈನಂ ಹಿ ಮಹಾಭಾಗಾಃ ಸರ್ವಭೂತಹಿತೇ ರತಾಃ ।
ಅತಿಥಿಂ ಪರ್ಣಶಾಲಾಯಾಂ ರಾಘವಂ ಸಂನ್ಯವೇಶಯನ್ ॥

ಅನುವಾದ

ಸರ್ವಪ್ರಾಣಿಗಳ ಹಿತದಲ್ಲೇ ಇರುವ ಆ ಮಹಾಭಾಗ ಮಹರ್ಷಿಗಳು ತಮ್ಮ ಪ್ರಿಯ ಅತಿಥಿಯಾದ ಭಗವಾನ್ ಶ್ರೀರಾಮನನ್ನು ಪರ್ಣಶಾಲೆಗೆ ಕರೆದುಕೊಂಡು ಹೋಗಿ ಉಳಿಸಿಕೊಂಡರು.॥15॥

ಮೂಲಮ್ - 16

ತತೋ ರಾಮಸ್ಯ ಸತ್ಕೃತ್ಯ ವಿಧಿನಾ ಪಾವಕೋಪಮಾಃ ।
ಆಜಹ್ರುಸ್ತೇ ಮಹಾಭಾಗಾಃ ಸಲಿಲಂ ಧರ್ಮಚಾರಿಣಃ ॥

ಅನುವಾದ

ಅಗ್ನಿಯಂತೆ ತೇಜಸ್ವೀ, ಧರ್ಮಪರಾಯಣ ಆ ಮಹಾಭಾಗ ಮುನಿಗಳು ಶ್ರೀರಾಮನಿಗೆ ವಿಧಿವತ್ತಾಗಿ ಸತ್ಕರಿಸಿ ನೀರನ್ನು ಸಮರ್ಪಿಸಿದರು.॥16॥

ಮೂಲಮ್ - 17

ಮಂಗಲಾನಿ ಪ್ರಯುಂಜಾನಾ ಮುದಾ ಪರಮಯಾ ಯುತಾಃ ।
ಮೂಲಂ ಪುಷ್ಪಂ ಫಲಂ ಸರ್ವಮಾಶ್ರಮಂ ಚ ಮಹಾತ್ಮನಃ ॥

ಅನುವಾದ

ಮತ್ತೆ ಬಹಳ ಆನಂದದಿಂದ ಮಂಗಳ ಸೂಚಕ ಆಶೀರ್ವಾದಗಳನ್ನು ಕೊಡುತ್ತಾ, ಮಹಾತ್ಮಾ ಶ್ರೀರಾಮನಿಗೆ ಅವರು ಫಲ-ಮೂಲ-ಪುಷ್ಪಗಳೊಂದಿಗೆ ಇಡೀ ಆಶ್ರಮವನ್ನೇ ಸಮರ್ಪಿಸಿದರು.॥17॥

ಮೂಲಮ್ - 18

ನಿವೇದಯಿತ್ವಾ ಧರ್ಮಜ್ಞಾಸ್ತೇ ತು ಪ್ರಾಂಜಲಯೋಽಬ್ರುವನ್ ।
ಧರ್ಮಪಾಲೋ ಜನಸ್ಯಾ ಸ್ಯ ಶರಣ್ಯಶ್ಚ ಮಹಾಯಶಾಃ ॥

ಮೂಲಮ್ - 19½

ಪೂಜನೀಯಶ್ಚ ಮಾನ್ಯಶ್ಚ ರಾಜಾ ದಂಡಧರೋ ಗುರುಃ ।
ಇಂದ್ರಸ್ಯೈವ ಚತುರ್ಭಾಗಃ ಪ್ರಜಾ ರಕ್ಷತಿ ರಾಘವ॥
ರಾಜಾ ತಸ್ಮಾದ್ವರಾನ್ ಭೋಗಾನ್ ರಮ್ಯಾನ್ ಭುಂಕ್ತೇ ನಮಸ್ಕೃತಃ ।

ಅನುವಾದ

ಎಲ್ಲವನ್ನೂ ನಿವೇದಿಸಿ ಆ ಧರ್ಮಜ್ಞರಾದ ಮುನಿಗಳು ಕೈಮುಗಿದು ಹೇಳಿದರು - ರಘುನಂದನ! ದಂಡಧರಿಸುವ ರಾಜನು ಧರ್ಮದ ಪಾಲಕನೂ, ಮಹಾಯಶಸ್ವಿಯೂ, ಈ ಜನ ಸಮುದಾಯಕ್ಕೆ ಶರಣುಕೊಡುವ ಮಾನನೀಯನೂ, ಪೂಜನೀಯನೂ, ಎಲ್ಲರ ಗುರುವೂ ಆಗಿದ್ದಾನೆ. ಈ ಭೂತಳದಲ್ಲಿ ಇಂದ್ರನ ನಾಲ್ಕನೆಯ ಅಂಶವಾದ ಕಾರಣ ಅವನು ಪ್ರಜೆಯನ್ನು ರಕ್ಷಿಸುತ್ತಾನೆ. ಆದ್ದರಿಂದ ರಾಜನು ಎಲ್ಲರಿಂದ ವಂದಿತನಾಗಿ ಉತ್ತಮ, ರಮಣೀಯ ಭೋಗಗಳನ್ನು ಅನುಭವಿಸುತ್ತಾನೆ. (ಸಾಧಾರಣ ರಾಜನ ಸ್ಥಿತಿಯೇ ಹೀಗಾಗಿದ್ದರೆ ನಿನಗಾಗಿ ಹೇಳುವುದೇನಿನದೆ? ನೀನಾದರೋ ಸಾಕ್ಷತ್ ಭಗವಂತನಾಗಿರುವೆ.॥18-19½॥

ಮೂಲಮ್ - 20

ತೇ ವಯಂ ಭವತಾ ರಕ್ಷ್ಯಾ ಭವದ್ವಿಷಯವಾಸಿನಃ ।
ನಗರಸ್ಥೋ ವನಸ್ಥೋ ವಾ ತ್ವಂ ನೋ ರಾಜಾ ಜನೇಶ್ವರಃ ॥

ಅನುವಾದ

ನಾವು ನಿನ್ನ ರಾಜ್ಯದಲ್ಲಿ ವಾಸಿಸುತ್ತಿದ್ದೇವೆ, ಆದ್ದರಿಂದ ನೀನು ನಮ್ಮನ್ನು ರಕ್ಷಿಸಬೇಕು. ನೀನು ನಗರದಲ್ಲಿರಲೀ, ವನದಲ್ಲಿರಲೀ ನಮಗೆಲ್ಲರಿಗೆ ರಾಜನೇ ಅಗಿರುವೆ. ನೀನು ಸಮಸ್ತ ಜನ ಸಮುದಾಯದ ಶಾಸಕ ಮತ್ತು ಪಾಲಕನಾಗಿರುವ.॥20॥

ಮೂಲಮ್ - 21

ನ್ಯಸ್ತದಂಡಾ ವಯಂ ರಾಜನ್ಜಿತಕ್ರೋಧಾ ಜಿತೇಂದ್ರಿಯಾಃ ।
ರಕ್ಷಣೀಯಾಸ್ತ್ವಯಾ ಶಶ್ವದ್ಗರ್ಭಭೂತಾಸ್ತಪೋಧನಾಃ ॥

ಅನುವಾದ

ಮಹಾರಾಜಾ! ನಾವು ಪ್ರಾಣಿಮಾತ್ರರನ್ನು ದಂಡಿಸುವುದನ್ನು ಬಿಟ್ಟಿದ್ದೇವೆ, ಕ್ರೋಧವನ್ನು, ಇಂದ್ರಿಯಗಳನ್ನು ಗೆದ್ದಿದ್ದೇವೆ. ಈಗ ತಪಸ್ಸೇ ನಮ್ಮ ಧನವಾಗಿದೆ. ತಾಯಿಯ ಗರ್ಭಸ್ಥ ಶಿಶುವನ್ನು ರಕ್ಷಿಸುವಂತೆಯೇ ನೀನು ಸದಾ ಎಲ್ಲ ರೀತಿಯಿಂದ ನಮ್ಮನ್ನು ರಕ್ಷಿಸಬೇಕು.॥21॥

ಮೂಲಮ್ - 22

ಏವಮುಕ್ತ್ವಾ ಫಲೈರ್ಮೂಲೈಃ ಪುಷ್ಪೈರನ್ಯೈಶ್ಚ ರಾಘವಮ್ ।
ವನ್ಯೈಶ್ಚ ವಿವಿಧಾಹಾರೈಃ ಸಲಕ್ಷ್ಮಣಮಪೂಜಯನ್ ॥

ಅನುವಾದ

ಹೀಗೆ ಹೇಳಿ ಆ ತಪಸ್ವೀ ಮುನಿಗಳು ಕಾಡಿನಲ್ಲಿದ್ದ ಫಲ ಮೂಲ-ಪುಷ್ಪಗಳನ್ನು ಹಾಗೂ ಇತರ ಅನೇಕ ರೀತಿಯ ಆಹಾರಗಳಿಂದ ಲಕ್ಷ್ಮಣ ಮತ್ತು ಸೀತಾ ಸಹಿತ ಶ್ರೀರಾಮಚಂದ್ರನನ್ನು ಸತ್ಕರಿಸಿದರು.॥22॥

ಮೂಲಮ್ - 23

ತಥಾನ್ಯೇ ತಪಸಾಃ ಸಿದ್ಧಾ ರಾಮಂ ವೈಶ್ವಾನರೋಪಮಾಃ ।
ನ್ಯಾಯವೃತ್ತಾ ಯಥಾನ್ಯಾಯಂ ತರ್ಪಯಾಮಾಸುರೀಶ್ವರಮ್ ॥

ಅನುವಾದ

ಇವರಲ್ಲದೆ ಇತರ ಅಗ್ನಿತುಲ್ಯ ತೇಜಸ್ವೀಹಾಗೂ ನ್ಯಾಯಯುಕ್ತ ವರ್ತನೆಯುಳ್ಳ ಸಿದ್ಧ ತಾಪಸರೂ ಕೂಡ ಸರ್ವೇಶ್ವರ ಭಗವಾನ್ ಶ್ರೀರಾಮನ್ನನ್ನು ಯಥೋಚಿತವಾಗಿ ತಪ್ತಿಪಡಿಸಿದರು.॥23॥

ಅನುವಾದ (ಸಮಾಪ್ತಿಃ)

ಶ್ರೀ ವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅರಣ್ಯಕಾಂಡದಲ್ಲಿ ಮೊದಲನೆಯ ಸರ್ಗ ಸಂಪೂರ್ಣವಾಯಿತು.॥1॥