१०७ रामस्य पित्राज्ञापालनकथनम्

वाचनम्
ಭಾಗಸೂಚನಾ

ಶ್ರೀರಾಮನು ಭರತನಿಗೆ ಸಮಜಾಯಿಸಿ ಅವನನ್ನು ಅಯೋಧ್ಯೆಗೆ ಹೋಗಲು ಆದೇಶಿಸಿದುದು

ಮೂಲಮ್ - 1

ಪುನರೇವಂ ಬ್ರುವಣಂ ತಂ ಭರತಂ ಲಕ್ಷ್ಮಣಾಗ್ರಜಃ ।
ಪ್ರತ್ಯುವಾಚ ತತಃ ಶ್ರೀಮಾನ್ ಜ್ಞಾತಿಮಧ್ಯೇಸುಸತ್ಕೃತಃ ॥

ಅನುವಾದ

ಭರತನು ಪುನಃ ಈ ಪ್ರಕಾರ ಪ್ರಾರ್ಥಿಸಿದಾಗ ಪರಿವಾರದ ನಡುವೆ ಸತ್ಕಾರಪೂರ್ವಕ ಕುಳಿತಿರುವ ಲಕ್ಷ್ಮಣಾಗ್ರಜ ಶ್ರೀಮಾನ್ ರಾಮಚಂದ್ರನು ಅವನಿಗೆ ಈ ಪ್ರಕಾರ ಉತ್ತರಿಸಿದನು-॥1॥

ಮೂಲಮ್ - 2

ಉಪಪನ್ನಮಿದಂ ವಾಕ್ಯಂ ಯಸ್ತ್ವಮೇವಮಭಾಷಥಾಃ ।
ಜಾತಃ ಪುತ್ರೋ ದಶರಥಾತ್ ಕೈಕೇಯ್ಯಾಂ ರಾಜಸತ್ತಮಾತ್ ॥

ಅನುವಾದ

ತಮ್ಮ! ನೀನು ನೃಪಶ್ರೇಷ್ಠ ದಶರಥ ಮಹಾರಾಜರಿಂದ ಕೇಕಯರಾಜ ಕನ್ಯೆ ಕೈಕೇಯಿಯ ಗರ್ಭದಿಂದ ಹುಟ್ಟಿರುವೆ. ಆದ್ದರಿಂದ ನೀನು ಹೇಳುವ ಉತ್ತಮ ವಚನಗಳು ಸರ್ವಥಾ ನಿನಗೆ ಯೋಗ್ಯವಾಗಿವೆ.॥2॥

ಮೂಲಮ್ - 3

ಪುರಾ ಭ್ರಾತಃ ಪಿತಾ ನಃ ಸ ಮಾತರಂ ತೇಸಮುದ್ವಹನ್ ।
ಮಾತಾಮಹೇ ಸಮಾಶ್ರೌಷೀದ್ ರಾಜ್ಯಶುಲ್ಕಮನುತ್ತಮಮ್ ॥

ಅನುವಾದ

ಸಹೋದರ! ಇಂದಿನಿಂದ ಬಹಳ ಹಿಂದಿನ ಮಾತು, ತಂದೆಯವರ ವಿವಾಹ ನಿನ್ನ ತಾಯಿಯೊಂದಿಗೆ ಆದಾಗ ಅವರು ನಿನ್ನ ತಾತನ ಬಳಿ ಕೈಕೇಯಿಯ ಪುತ್ರನಿಗೆ ರಾಜ್ಯವನ್ನು ಕೊಡುವ ಉತ್ತಮ ಪ್ರತಿಜ್ಞೆಯನ್ನು ಮಾಡಿದ್ದರು.॥3॥

ಮೂಲಮ್ - 4

ದೇವಾಸುರೇ ಚ ಸಂಗ್ರಾಮೇ ಜನನ್ಯೈ ತವ ಪಾರ್ಥಿವಃ ।
ಸಂಪ್ರಹೃಷ್ಟೋ ದದೌ ರಾಜಾ ವರಮಾರಾಧಿತಃ ಪ್ರಭುಃ ॥

ಅನುವಾದ

ಅನಂತರ ದೇವಾಸುರ ಸಂಗ್ರಾಮದಲ್ಲಿ ನಿನ್ನ ತಾಯಿಯು ಪ್ರಭಾವಶಾಲೀ ಮಹಾರಾಜರ ಬಹಳ ದೊಡ್ಡ ಸೇವೆಯನ್ನು ಮಾಡಿದ್ದಳು. ಇದರಿಂದ ಸಂತುಷ್ಟರಾಗಿ ಮಹಾರಾಜರು ಆಕೆಗೆ ವರದಾನ ಕೊಟ್ಟಿದ್ದರು.॥4॥

ಮೂಲಮ್ - 5

ತತಃ ಸಾ ಸಂಪ್ರತಿಶ್ರಾವ್ಯ ತವ ಮಾತಾ ಯಶಸ್ವಿನೀ ।
ಅಯಾಚತ ನರಶ್ರೇಷ್ಠಂ ದ್ವೌ ವರೌ ವರವರ್ಣಿನೀ ॥

ಅನುವಾದ

ಅದರ ಪೂರ್ತಿಗಾಗಿ ಪ್ರತಿಜ್ಞೆ ಮಾಡಿಸಿ ನಿನ್ನ ಯಶಸ್ವಿನೀ ತಾಯಿಯು ಆ ನರಶ್ರೇಷ್ಠ ತಂದೆಯವರಲ್ಲಿ ಎರಡು ವರವನ್ನು ಕೇಳಿದಳು.॥5॥

ಮೂಲಮ್ - 6

ತವ ರಾಜ್ಯಂ ನರವ್ಯಾಘ್ರ ಮಮ ಪ್ರವ್ರಾಜನಂ ತಥಾ ।
ತಚ್ಚ ರಾಜಾ ತಥಾ ತಸ್ಮೈ ನಿಯುಕ್ತಃ ಪ್ರದದೌ ವರಮ್ ॥

ಅನುವಾದ

ಪುರುಷಸಿಂಹನೇ! ಒಂದು ವರದಿಂದ ನಿನಗೆ ರಾಜ್ಯ ವನ್ನು ಕೇಳಿದಳು ಮತ್ತು ಇನ್ನೊಂದರಿಂದ ನನಗೆ ವನವಾಸ. ಆಕೆಯಿಂದ ಹೀಗೆ ಪ್ರೇರಿತರಾಗಿ ರಾಜರು ಆ ಎರಡು ವರಗಳನ್ನು ಆಕೆಗೆ ಕೊಟ್ಟರು.॥6॥

ಮೂಲಮ್ - 7

ತೇನ ಪಿತ್ರಾಮಹಪ್ಯತ್ರ ನಿಯುಕ್ತಃ ಪುರುಷರ್ಷಭ ।
ಚತುರ್ದಶ ವನೇ ವಾಸಂ ವರ್ಷಾಣಿ ವರದಾನಿಕಮ್ ॥

ಅನುವಾದ

ಪುರುಷಪ್ರವರ! ಈ ಪ್ರಕಾರ ಆ ತಂದೆಯವರು ವರದಾನದ ರೂಪದಲ್ಲಿ ನನಗೆ ಹದಿನಾಲ್ಕು ವರ್ಷಗಳವರೆಗೆ ವನವಾಸದ ಆಜ್ಞೆಯನ್ನು ಕೊಟ್ಟರು.॥7॥

ಮೂಲಮ್ - 8

ಸೋಽಯಂ ವನಮಿದಂ ಪ್ರಾಪ್ತೋ ನಿರ್ಜನಂ ಲಕ್ಷ್ಮಣಾನ್ವಿತಃ ।
ಸೀತಯಾ ಚಾಪ್ರತಿದ್ವಂದ್ವಃ ಸತ್ಯವಾದೇ ಸ್ಥಿತಃ ಪಿತುಃ ॥

ಅನುವಾದ

ಇದೇ ಕಾರಣದಿಂದ ನಾನು ಸೀತೆ ಮತ್ತು ಲಕ್ಷ್ಮಣನೊಂದಿಗೆ ಈ ನಿರ್ಜನ ವನಕ್ಕೆ ಬಂದಿರುವೆನು. ಇಲ್ಲಿ ನನಗೆ ಯಾರೂ ಪ್ರತಿದ್ವಂದ್ವಿಗಳಿಲ್ಲ. ನಾನು ಇಲ್ಲಿ ತಂದೆಯವರ ಸತ್ಯವನ್ನು ರಕ್ಷಿಸಲು ಸ್ಥಿತನಾಗಿದ್ದೇನೆ.॥8॥

ಮೂಲಮ್ - 9

ಭವಾನಪಿ ತಥೇತ್ಯೇವ ಪಿತರಂ ಸತ್ಯವಾದಿನಮ್ ।
ಕರ್ತುಮರ್ಹತಿ ರಾಜೇಂದ್ರ ಕ್ಷಿಪ್ರಮೇವಾಭಿಷಿಂಚನಾತ್ ॥

ಅನುವಾದ

ರಾಜೇಂದ್ರನೇ! ನೀನೂ ಕೂಡ ಅವರ ಆಜ್ಞೆಯನ್ನು ಮನ್ನಿಸಿ ಶೀಘ್ರವಾಗಿ ರಾಜಪದವಿಯಲ್ಲಿ ಅಭಿಷಿಕ್ತನಾಗು ಮತ್ತು ತಂದೆಯವರನ್ನು ಸತ್ಯವಾದಿಯಾಗಿಸು-ಇದೇ ನಿನಗೆ ಉಚಿತವಾಗಿದೆ.॥9॥

ಮೂಲಮ್ - 10

ಋಣಾನ್ಮೋಚಯ ರಾಜಾನಂ ಮತ್ಕೃತೇ ಭರತ ಪ್ರಭುಮ್ ।
ಪಿತರಂ ಚಾಪಿಧರ್ಮಜ್ಞ ಮಾತರಂ ಚಾಭಿನಂದಯ ॥

ಅನುವಾದ

ಧರ್ಮಜ್ಞ ಭರತನೇ! ನೀನು ನನಗಾಗಿ ಪೂಜ್ಯ ತಂದೆ ಮಹಾರಾಜರನ್ನು ಕೈಕೇಯಿಯ ಋಣದಿಂದ ಮುಕ್ತಗೊಳಿಸು, ಅವರು ನರಕದಲ್ಲಿ ಬೀಳುವುದನ್ನು ತಪ್ಪಿಸು ಹಾಗೂ ತಾಯಿಯ ಆನಂದವನ್ನು ಹೆಚ್ಚಿಸು.॥10॥

ಮೂಲಮ್ - 11

ಶ್ರೂಯತೇ ಧೀಮಾತಾ ತಾತ ಶ್ರುತಿರ್ಗೀತಾ ಯಶಸ್ವಿನಾ ।
ಗಯೇನ ಯಜಮಾನೇನ ಗಯೇಷ್ವೇವ ಪಿತೄನ್ ಪ್ರತಿ ॥

ಅನುವಾದ

ಅಪ್ಪಾ! ಬುದ್ಧಿವಂತ, ಯಶಸ್ವೀ ರಾಜನಾದ ಗಯನು ಗಯಾದೇಶದಲ್ಲಿ ಯಾಗ ಮಾಡುತ್ತಿರುವಾಗ ಪಿತೃಗಳನ್ನು ಉದ್ದೇಶಿಸಿ ಈ ದಿವ್ಯ ಲೋಕೋಕ್ತಿಯನ್ನು ಹೇಳಿದ್ದನೆಂದು ನಾವು ಕೇಳಿದ್ದೇವೆ.॥11॥

ಮೂಲಮ್ - 12

ಪುನ್ನಾಮೋ ನರಕಾದ್ಯಸ್ಮಾತ್ ಪಿತರಂ ತ್ರಾಯತೇ ಸುತಃ ।
ತಸ್ಮಾತ್ಪುತ್ರ ಇತಿ ಪ್ರೋಕ್ತಃ ಪಿತೄನ್ ಯಃಪಾತಿ ಸರ್ವತಃ ॥

ಅನುವಾದ

(ಅದು ಇಂತಿದೆ-) ಮಗನು ಪುತ್ ಎಂಬ ನರಕದಿಂದ ತಂದೆಯನ್ನು ಉದ್ಧರಿಸುವನು, ಅದಕ್ಕಾಗಿ ಅವನು ಪುತ್ರನೆಂದು ಹೇಳಿಸಿಕೊಳ್ಳುವನು. ಪಿತೃಗಳನ್ನು ಎಲ್ಲ ಕಡೆಯಿಂದ ರಕ್ಷಿಸುವವನೇ ಪುತ್ರನಾಗಿದ್ದಾನೆ.॥12॥

ಮೂಲಮ್ - 13

ಏಷ್ಟವ್ಯಾ ಬಹವಃ ಪುತ್ರಾ ಗುಣವಂತೋ ಬಹುಶ್ರುತಾಃ ।
ತೇಷಾಂ ವೈ ಸಮವೇತಾನಾಮಪಿ ಕಶ್ಚಿದ್ಗಯಾಂ ವ್ರಜೇತ್ ॥

ಅನುವಾದ

ಗುಣವಂತ ಮತ್ತು ಬಹುಶ್ರುತ ಅನೇಕ ಮಕ್ಕಳ ಇಚ್ಛೆ ಇರಿಸಬೇಕು. ಪಡೆದ ಆ ಪುತ್ರರಲ್ಲಿ ಯಾವನಾದರೊಬ್ಬನಾದರೂ ಗಯೆಯಲ್ಲಿ ಪಿಂಡದಾನ ಮಾಡುವನು.॥13॥

ಮೂಲಮ್ - 14

ಏವಂ ರಾಜರ್ಷಯಃ ಸರ್ವೇಪ್ರತೀತಾ ರಘುನಂದನ ।
ತಸ್ಮಾತ್ತ್ರಾಹಿ ನರಶ್ರೇಷ್ಠ ಪಿತರಂ ನರಕಾತ್ ಪ್ರಭೋ ॥

ಅನುವಾದ

ರಘುನಂದನ! ನರಶ್ರೇಷ್ಠ ಭರತನೇ! ಈ ಪ್ರಕಾರ ಎಲ್ಲ ರಾಜರ್ಷಿಗಳು ಪಿತೃಗಳ ಉದ್ಧಾರದ ನಿಶ್ಚಯ ಮಾಡಿರುವರು. ಆದ್ದರಿಂದ ಪ್ರಭು! ನೀನೂ ನಿನ್ನ ಪಿತನನ್ನು ನರಕದಿಂದ ಉದ್ಧರಿಸು.॥14॥

ಮೂಲಮ್ - 15

ಅಯೋಧ್ಯಾಂ ಗಚ್ಛ ಭರತ ಪ್ರಕೃತೀರುಪರಂಜಯ ।
ಶತ್ರುಘ್ನಸಹಿತೋ ವೀರ ಸಹಸರ್ವೈರ್ದ್ವಿಜಾತಿಭಿಃ ॥

ಅನುವಾದ

ವೀರ ಭರತ! ನೀನು ಶತ್ರುಘ್ನ ಹಾಗೂ ಸಮಸ್ತ ಬ್ರಾಹ್ಮಣರನ್ನು ಜೊತೆಗೂಡಿ ಅಯೋಧ್ಯೆಗೆ ಮರಳಿ ಹೋಗು ಹಾಗೂ ಪ್ರಜೆಗಳಿಗೆ ಸುಖವನ್ನು ಕೊಡು.॥15॥

ಮೂಲಮ್ - 16

ಪ್ರವೇಕ್ಷ್ಯೇ ದಂಡಕಾರಣ್ಯಮಹಮಪ್ಯವಿಲಂಬಯನ್ ।
ಆಭ್ಯಾಂ ತು ಸಹಿತೋ ವೀರ ವೈದೇಹ್ಯಾಲಕ್ಷ್ಮಣೇನ ಚ ॥

ಅನುವಾದ

ವೀರನೇ! ಈಗ ನಾನೂ ಲಕ್ಷ್ಮಣ ಮತ್ತು ಸೀತೆಯೊಂದಿಗೆ ಶೀಘ್ರವಾಗಿ ದಂಡಕಾರಣ್ಯವನ್ನು ಪ್ರವೇಶಿಸುವೆನು.॥16॥

ಮೂಲಮ್ - 17

ತ್ವಂ ರಾಜಾ ಭರತ ಭವ ಸ್ವಯಂ ನರಾಣಾಂ
ವನ್ಯಾನಾಮಹಮಪಿ ರಾಜರಾಣ್ಮೃಗಾಣಾಮ್ ।
ಗಚ್ಛ ತ್ವಂ ಪುರವರಮದ್ಯ ಸಂಪ್ರಹೃಷ್ಟಃ
ಸಂಹೃಷ್ಟಸ್ತ್ವಹಮಪಿ ದಂಡಕಾನ್ ಪ್ರವೇಕ್ಷ್ಯೇ ॥

ಅನುವಾದ

ಭರತನೇ ನೀನು ಸ್ವತಃ ಮನುಷ್ಯರ ರಾಜನಾಗು ಮತ್ತು ನಾನು ಕಾಡಿನ ಮೃಗಗಳ ಸಾಮ್ರಾಟನಾಗುವೆನು. ಈಗ ನೀನು ಅತ್ಯಂತ ಹರ್ಷದಿಂದ ಶ್ರೇಷ್ಠನಗರ ಅಯೋಧ್ಯೆಗೆ ಹೋಗು ಹಾಗೂ ನಾನು ಸಂತೋಷವಾಗಿ ದಂಡಕಾರಣ್ಯವನ್ನು ಪ್ರವೇಶಿಸುವೆನು.॥17॥

ಮೂಲಮ್ - 18

ಛಾಯಾಂ ತೇ ದಿನಕರಭಾಃ ಪ್ರಬಾಧಮಾನಂ
ವರ್ಷತ್ರಂ ಭರತ ಕರೋತು ಮೂರ್ಧ್ನಿ ಶೀತಾಮ್ ।
ಏತೇಷಾಮಹಮಪಿ ಕಾನನದ್ರುಮಾಣಾಂ
ಛಾಯಾಂ ತಾಮತಿಶಯನೀಂ ಶನೈಃ ಶ್ರಯಿಷ್ಯೇ ॥

ಅನುವಾದ

ಭರತ! ಸೂರ್ಯನ ತಾಪವನ್ನು ನಿವಾರಿಸಲು ಛತ್ರವು ನಿನ್ನ ತಲೆಯ ಮೇಲೆ ಶೀತಲ ನೆರಳನ್ನು ಕೊಡಲಿ. ಈಗ ನಾನೂ ನಿಧಾನವಾಗಿ ಈ ಕಾಡಿನ ದಟ್ಟವಾದ ಮರಗಳ ನೆರಳನ್ನು ಆಶ್ರಯಿಸುವೆನು.॥18॥

ಮೂಲಮ್ - 19

ಶತ್ರುಘ್ನಃ ಸ್ತ್ವತುಲಮತಿಸ್ತು ತೇ ಸಹಾಯಃ
ಸೌಮಿತ್ರಿರ್ಮಮ ವಿದಿತಃ ಪ್ರಧಾನಮಿತ್ರಮ್ ।
ಚತ್ವಾರಸ್ತನಯವರಾ ವಯಂ ನರೇಂದ್ರಂ
ಸತ್ಯಸ್ಥಂ ಭರತ ಚರಾಮ ಮಾ ವಿಷೀದ ॥

ಅನುವಾದ

ಭರತನೇ! ಅತುಲಿತ ಬುದ್ಧಿಯುಳ್ಳ ಶತ್ರುಘ್ನನು ನಿನ್ನ ಸಹಾಯಕ್ಕೆ ಇರಲಿ ಮತ್ತು ಸುವಿಖ್ಯಾತ ಸುಮಿತ್ರಾಕುಮಾರ ಲಕ್ಷ್ಮಣನು ನನಗೆ ಪ್ರಧಾನ ಮಿತ್ರ (ಸಹಾಯಕ)ನಾಗಿದ್ದಾನೆ; ನಾವು ನಾಲ್ವರೂ ಪುತ್ರರೂ ನಮ್ಮ ತಂದೆ ದಶರಥರಾಜರ ಸತ್ಯವನ್ನು ರಕ್ಷಿಸುವಾ ನೀನು ವಿಷಾದಪಡಬೇಡ.॥19॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ಒಂದು ನೂರ ಏಳನೆಯ ಸರ್ಗ ಪೂರ್ಣವಾಯಿತು.॥107॥