१०६ राज्यस्वीकारार्थं पुनर्याचना

वाचनम्
ಭಾಗಸೂಚನಾ

ಭರತನು ಶ್ರೀರಾಮನನ್ನು ಅಯೋಧ್ಯೆಗೆ ಹಿಂದಿರುಗಲು ಮತ್ತು ರಾಜ್ಯವನ್ನು ಸ್ವೀಕರಿಸಲು ಪುನಃ ಪ್ರಾರ್ಥಿಸಿದುದು

ಮೂಲಮ್ - 1

ಏವಮುಕ್ತ್ವಾ ತು ವಿರತೇ ರಾಮೇ ವಚನಮರ್ಥವತ್ ।
ತತೋ ಮಂದಾಕಿನೀತೀರೇ ರಾಮಂ ಪ್ರಕೃತಿವತ್ಸಲಮ್ ॥

ಮೂಲಮ್ - 2

ಉವಾಚ ಭರತಶ್ಚಿತ್ರಂ ಧಾರ್ಮಿಕೋ ಧಾರ್ಮಿಕಂ ವಚಃ ।
ಕೋ ಹಿ ಸ್ಯಾದೀದೃಶೋ ಲೋಕೇಯಾದೃಶಸ್ತ್ವಮರಿಂದಮ ॥

ಅನುವಾದ

ಇಂತಹ ಅರ್ಥಯುಕ್ತ ವಚನಗಳನ್ನು ಹೇಳಿ ಶ್ರೀರಾಮನು ಸುಮ್ಮನಾದಾಗ ಧರ್ಮಾತ್ಮಾ ಭರತನು ಮಂದಾಕಿನೀ ತೀರದಲ್ಲಿ ಪ್ರಜಾವತ್ಸಲ ಧರ್ಮಾತ್ಮಾ ಶ್ರೀರಾಮನಲ್ಲಿ ಹೀಗೆ ಹೇಳಿದನು - ಶತ್ರುದಮನ ರಘುವೀರನೇ! ಈ ಜಗತ್ತಿನಲ್ಲಿ ನಿನ್ನಂತಹವನು ಬೇರೆ ಯಾರು ಇರಬಲ್ಲನು.॥1-2॥

ಮೂಲಮ್ - 3

ನ ತ್ವಾಂ ಪ್ರವ್ಯಥಯೇದ್ದುಖಂ ಪ್ರೀತಿರ್ವಾ ನ ಪ್ರಹರ್ಷಯೇತ್ ।
ಸಮ್ಮತಶ್ಚಾಸಿ ವೃದ್ಧಾನಾಂ ತಾಂಶ್ಚ ಪೃಚ್ಛಸಿ ಸಂಶಯಾನ್ ॥

ಅನುವಾದ

ಯಾವುದೇ ದುಃಖವು ನಿನ್ನನ್ನು ವ್ಯಥಿತನನ್ನಾಗಿಸಲಾರದು. ಎಷ್ಟೇ ಪ್ರಿಯವಾದ ಮಾತಾಗಿದ್ದರೂ ನಿನ್ನನ್ನು ಹರ್ಷಿತ ವಾಗಿಸಲಾರದು. ವೃದ್ಧರಿಗೆ ಸಮ್ಮಾನನೀಯನಾಗಿದ್ದರೂ ನೀನು ಅವರಲ್ಲಿ ಸಂಶಯದ ಮಾತನ್ನು ಕೇಳುತ್ತಿರುವೆ.॥3॥

ಮೂಲಮ್ - 4

ಯಥಾ ಮೃತಸ್ತಥಾ ಜೀವನ್ ಯಥಾಸತಿ ತಥಾಸತಿ ।
ಯಸ್ಯೈಷ ಬುದ್ಧಿಲಾಭಃ ಸ್ಯಾತ್ ಪರಿತಪ್ಯೇತ ಕೇನ ಸಃ ॥

ಅನುವಾದ

ದೇಹದಿಂದ ಅಗಲಿದ ಜೀವಿಗೆ ತನ್ನ ಶರೀರಾದಿಗಳಲ್ಲಿ ಯಾವುದೇ ಸಂಬಂಧವಿರುವುದಿಲ್ಲವೋ ಹಾಗೆಯೇ ದೇಹದಲ್ಲಿ ಇರುವಾಗಲೇ ಅವುಗಳ ಸಂಬಂಧದಿಂದ ರಹಿತನಾಗಿರಬೇಕು. ವಸ್ತುವಿನ ಅಭಾವದಲ್ಲಿ ಅದರ ಕುರಿತು ರಾಗ-ದ್ವೇಷಗಳು ಇರುವುದಿಲ್ಲವೋ ಹಾಗೆಯೇ ಅವುಗಳು ಇದ್ದಾಗಲೂ ಮನುಷ್ಯನು ರಾಗ-ದ್ವೇಷರಹಿತನಾಗಿರಬೇಕು. ಇಂತಹ ವಿವೇಕಯುಕ್ತ ಬುದ್ಧಿ ಪ್ರಾಪ್ತವಾದಾಗ ಅವನಿಗೆ ಸಂತಾಪ ಏಕೆ ಆಗುತ್ತದೆ.॥4॥

ಮೂಲಮ್ - 5

ಪರಾವರಜ್ಞೋ ಯಶ್ಚ ಸ್ಯಾದ್ ಯಥಾ ತ್ವಂ ಮನುಜಾಧಿಪ ।
ಸ ಏವ ವ್ಯಸನಂ ಪ್ರಾಪ್ಯ ನ ವಿಷೀದಿತುಮರ್ಹತಿ ॥

ಅನುವಾದ

ನರೇಶ್ವರನೇ! ನಿಮ್ಮಂತೆ ಆತ್ಮಾ ಮತ್ತು ಅನಾತ್ಮಾ ಇವುಗಳ ಜ್ಞಾನವುಳ್ಳವನೇ ಸಂಕಟದಲ್ಲಿ ಸಿಲುಕಿದರೂ ವಿಷಾದಿಸುವುದಿಲ್ಲ.॥5॥

ಮೂಲಮ್ - 6

ಅಮರೋಪಮಸತ್ತ್ವಸ್ತ್ವಂ ಮಹಾತ್ಮಾ ಸತ್ಯಸಂಗರಃ ।
ಸರ್ವಜ್ಞಃ ಸರ್ವದರ್ಶೀ ಚ ಬುದ್ಧಿಮಾಂಶ್ಚಾಸಿ ರಾಘವ ॥

ಅನುವಾದ

ರಘುನಂದನ! ನೀನು ದೇವತೆಗಳಂತೆ ಸತ್ತ್ವಗುಣ ಸಂಪನ್ನ, ಮಹಾತ್ಮಾ, ಸತ್ಯಪ್ರತಿಜ್ಞ, ಸರ್ವಜ್ಞ, ಎಲ್ಲರ ಸಾಕ್ಷಿ ಮತ್ತು ಬುದ್ಧಿವಂತನಾಗಿರುವೆ.॥6॥

ಮೂಲಮ್ - 7

ನ ತ್ವಾಮೇವಂಗುಣೈರ್ಯುಕ್ತಂ ಪ್ರಭವಾಭವಕೋವಿದಮ್ ।
ಅವಿಷಹ್ಯತಮಂ ದುಃಖಮಾಸಾದಯಿತುಮರ್ಹತಿ ॥

ಅನುವಾದ

ಇಂತಹ ಉತ್ತಮ ಗುಣಗಳಿಂದ ಕೂಡಿದ ಮತ್ತು ಜನ್ಮ-ಮರಣದ ರಹಸ್ಯವನ್ನು ತಿಳಿದಿರುವ ನಿನ್ನ ಬಳಿಗೆ ಅಸಹ್ಯ ದುಃಖವು ಬರಲಾರದು.॥7॥

ಮೂಲಮ್ - 8

ಪ್ರೋಷಿತೇ ಮಯಿ ಯತ್ಪಾಪಂ ಮಾತ್ರಾ ಮತ್ಕಾರಣಾತ್ಕೃತಮ್ ।
ಕ್ಷುದ್ರಯಾ ತದನಿಷ್ಟಂ ಮೇ ಪ್ರಸೀದತು ಭವಾನ್ಮಮ ॥

ಅನುವಾದ

ನಾನು ಪರದೇಶದಲ್ಲಿದ್ದಾಗ ನೀಚ ವಿಚಾರವುಳ್ಳ ನನ್ನ ತಾಯಿಯು ನನಗಾಗಿ ಮಾಡಿದ ಪಾಪವು ನನಗೆ ಇಷ್ಟವಿಲ್ಲ; ಆದ್ದರಿಂದ ನೀನು ಅದನ್ನು ಕ್ಷಮಿಸಿ ನನ್ನ ಮೇಲೆ ಪ್ರಸನ್ನನಾಗ.॥8॥

ಮೂಲಮ್ - 9

ಧರ್ಮಬಂಧೇನ ಬದ್ಧೋಽಸ್ಮಿ ತೇನೇಮಾಂ ನೇಹ ಮಾತರಮ್ ।
ಹನ್ಮಿ ತೀವ್ರೇಣ ದಂಡೇನ ದಂಡಾರ್ಹಾಂ ಪಾಪಕಾರಿಣೀಮ್ ॥

ಅನುವಾದ

ನಾನು ಧರ್ಮ ಬಂಧನದಲ್ಲಿ ಬಂಧಿತನಾಗಿದ್ದೇನೆ, ಅದಕ್ಕಾಗಿ ಈ ಪಾಪ ಮಾಡಿರುವ ಹಾಗೂ ದಂಡನೀಯ ತಾಯಿಯನ್ನು ನಾನು ಕಠೋರ ದಂಡವನ್ನು ವಿಧಿಸಿ ಕೊಲ್ಲಲಾರೆನು.॥9॥

ಮೂಲಮ್ - 10

ಕಥಂ ದಶರಥಾಜ್ಜಾತಃ ಶುಭಾಭಿಜನಕರ್ಮಣಃ ।
ಜಾನನ್ ಧರ್ಮಮಧರ್ಮಂ ಚ ಕುರ್ಯಾಂ ಕರ್ಮ ಜುಗುಪ್ಸಿತಮ್ ॥

ಅನುವಾದ

ಕುಲ ಮತ್ತು ಕರ್ಮ ಎರಡೂ ಶುಭವಾಗಿದ್ದ ಮಹಾರಾಜರಿಂದ ಹುಟ್ಟಿ, ಧರ್ಮ ಮತ್ತು ಅಧರ್ಮಗಳನ್ನು ತಿಳಿದುಕೊಂಡು ನಾನು ಮಾತೃವಧರೂಪೀ ಲೋಕನಿಂದಿತ ಕರ್ಮ ಹೇಗೆ ಮಾಡಲಿ.॥10॥

ಮೂಲಮ್ - 11

ಗುರುಃ ಕ್ರಿಯಾವಾನ್ ವೃದ್ಧಶ್ಚ ರಾಜಾ ಪ್ರೇತಃ ಪಿತೇತಿ ಚ ।
ತಾತಂ ನ ಪರಿಗರ್ಹೇಽಯಂ ದೈವತಂ ಚೇತಿ ಸಂಸದಿ ॥

ಅನುವಾದ

ಮಹಾರಾಜರು ನನ್ನ ಗುರುಗಳು, ಶ್ರೇಷ್ಠ ಯಜ್ಞಕರ್ಮ ಮಾಡುವವರು, ವೃದ್ಧರೂ, ರಾಜರೂ, ತಂದೆಯೂ ಮತ್ತು ದೇವತೆಯೂ ಆಗಿದ್ದರು. ಈಗ ಪರಲೋಕವಾಸಿಗಳಾಗಿದ್ದಾರೆ, ಆದ್ದರಿಂದ ತುಂಬಿದ ಸಭೆಯಲ್ಲಿ ಅವರನ್ನು ನಿಂದಿಸುವುದಿಲ್ಲ.॥11॥

ಮೂಲಮ್ - 12

ಕೋ ಹಿ ಧರ್ಮಾರ್ಥಯೋರ್ಹೀನಮೀದೃಶಂ ಕರ್ಮ ಕಿಲ್ಬಿಷಮ್ ।
ಸ್ತ್ರಿಯಃ ಪ್ರಿಯಚಿಕೀರ್ಷುಃ ಸನ್ ಕುರ್ಯಾದ್ಧರ್ಮಜ್ಞ ಧರ್ಮವಿತ್ ॥

ಅನುವಾದ

ಧರ್ಮಜ್ಞ ರಘುನಂದನ! ಧರ್ಮವನ್ನು ತಿಳಿದಿದ್ದರೂ ಪತ್ನಿಗೆ ಪ್ರಿಯವನ್ನುಂಟುಮಾಡುವ ಇಚ್ಛೆಯಿಂದ ಇಂತಹ ಧರ್ಮ ಮತ್ತು ಅರ್ಥಹೀನ ಕುತ್ಸಿತ ಕರ್ಮವನ್ನು ಯಾವ ಮನುಷ್ಯನು ತಾನೇ ಮಾಡಬಲ್ಲನು.॥12॥

ಮೂಲಮ್ - 13

ಅಂತಕಾಲೇ ಹಿ ಭೂತಾನಿ ಮುಹ್ಯಂತೀತಿ ಪುರಾಶ್ರುತಿಃ ।
ರಾಜ್ಞೈವಂ ಕುರ್ವತಾ ಲೋಕೇ ಪ್ರತ್ಯಕ್ಷಾ ಸಾ ಶ್ರುತಿಃ ಕೃತಾ ॥

ಅನುವಾದ

‘ಅಂತ್ಯ ಕಾಲದಲ್ಲಿ ಎಲ್ಲ ಪ್ರಾಣಿಗಳು ಮೋಹಿತರಾಗುತ್ತಾರೆ - ಅವರ ಬುದ್ಧಿನಷ್ಟವಾಗುತ್ತದೆ’ ಎಂಬ ಲೋಕೋಕ್ತಿ ಇದೆ. ದಶರಥ ಮಹಾರಾಜರು ಇಂತಹ ಕಠೋರ ಕರ್ಮಮಾಡಿ ಆ ಲೋಕೋಕ್ತಿಯನ್ನು ಸತ್ಯವಾಗಿಸಿದರು.॥13॥

ಮೂಲಮ್ - 14

ಸಾರ್ಧ್ವರ್ಥಮಭಿಸಂಧಾಯ ಕ್ರೋಧಾನ್ಮೋಹಾಚ್ಚ ಸಾಹಸಾತ್ ।
ತಾತಸ್ಯ ಯದತೀಕ್ರಾಂತಂ ಪ್ರತ್ಯಾಹರತು ತದ್ ಭವಾನ್ ॥

ಅನುವಾದ

ತಂದೆಯವರು ಕ್ರೋಧ, ಮೋಹ ಮತ್ತು ಸಾಹಸದಿಂದ ಸರಿ ಎಂದು ತಿಳಿದು ಮಾಡಿದ ಧರ್ಮದ ಉಲ್ಲಂಘನೆಯನ್ನು ನೀನು ಸರಿಪಡಿಸು - ಅದರ ಸುಧಾರಣೆ ಮಾಡು.॥14॥

ಮೂಲಮ್ - 15

ಪಿತುರ್ಹಿ ಸಮತಿಕ್ರಾಂತಂ ಪುತ್ರೋ ಯಃ ಸಾಧು ಮನ್ಯತೇ ।
ತದಪತ್ಯಂ ಮತಂ ಲೋಕೇ ವಿಪರೀತಮತೋಽನ್ಯಥಾ ॥

ಅನುವಾದ

ತಂದೆಯು ಮಾಡಿದ ತಪ್ಪನ್ನು ಯಾವ ಪುತ್ರನು ಸರಿಪಡಿಸುವನೋ, ಅವನೇ ಲೋಕದಲ್ಲಿ ಉತ್ತಮ ಸಂತಾನವೆಂದು ತಿಳಿಯಲಾಗಿದೆ. ಇದಕ್ಕೆ ವಿಪರೀತವಾಗಿ ನಡೆಯುವವನು ಪಿತನ ಶ್ರೇಷ್ಠಸಂತಾನವಲ್ಲ.॥15॥

ಮೂಲಮ್ - 16

ತದಪತ್ಯಂ ಭವಾನಸ್ತು ಮಾ ಭವಾನ್ ದುಷ್ಕೃತಂ ಪಿತುಃ ।
ಅತಿ ಯತ್ ತತ್ ಕೃತಂ ಕರ್ಮ ಲೋಕೇಧೀರವಿಗರ್ಹಿತಮ್ ॥

ಅನುವಾದ

ಆದ್ದರಿಂದ ನೀನು ಪಿತನ ಯೋಗ್ಯ ಸಂತಾನವಾಗಿರು. ಅವರ ಅನುಚಿತ ಕರ್ಮವನ್ನು ಸಮರ್ಥಿಸಬೇಡ. ಅವರು ಈಗ ಮಾಡಿದುದು ಧರ್ಮದ ಮೇರೆ ಮೀರಿದುದು. ಜಗತ್ತಿನಲ್ಲಿ ಧೀರಪುರುಷರು ಅದನ್ನು ನಿಂದಿಸುತ್ತಾರೆ.॥16॥

ಮೂಲಮ್ - 17

ಕೈಕೇಯೀಂ ಮಾಂ ಚ ತಾತಂ ಚ ಸುಹೃದೋ ಬಾಂಧವಾಂಶ್ಚ ನಃ ।
ಪೌರಜಾನಪದಾನ್ ಸರ್ವಾಂಸಾತು ಸರ್ವಮಿದಂ ಭವಾನ್ ॥

ಅನುವಾದ

ಕೈಕೇಯಿಯ, ನನ್ನ, ತಂದೆಯ, ಸುಹೃದರ, ಬಂಧು-ಬಾಂಧವರ, ಪುರವಾಸಿಗಳ, ರಾಷ್ಟ್ರದ ಪ್ರಜೆಯ - ಹೀಗೆ ಎಲ್ಲರ ರಕ್ಷಣೆಗಾಗಿ ನೀನು ನನ್ನ ಪ್ರಾರ್ಥನೆಯನ್ನು ಸ್ವೀಕರಿಸು.॥17॥

ಮೂಲಮ್ - 18

ಕ್ವ ಚಾರಣ್ಯಂ ಕ್ವ ಚ ಕ್ಷಾತ್ರಂ ಕ್ವ ಜಟಾಃ ಕ್ವ ಚ ಪಾಲನಮ್ ।
ಈದೃಶಂ ವ್ಯಾಹತಂ ಕರ್ಮ ನ ಭವಾನ್ ಕರ್ತುಮರ್ಹತಿ ॥

ಅನುವಾದ

ಎಲ್ಲಿ ವನವಾಸ, ಎಲ್ಲಿ ಕ್ಷಾತ್ರಧರ್ಮ? ಎಲ್ಲಿ ಜಟಾಧಾರಣ, ಎಲ್ಲಿ ಪ್ರಜಾಪಾಲನ? ಇಂತಹ ಪರಸ್ಪರ ವಿರೋಧಿ ಕರ್ಮವನ್ನು ನೀನು ಮಾಡಬಾರದು.॥18॥

ಮೂಲಮ್ - 19

ಏಷ ಹಿ ಪ್ರಥಮೋ ಧರ್ಮಃ ಕ್ಷತ್ರಿಯಾಸ್ಯಾಭಿಷೇಚನಮ್ ।
ಯೇನ ಶಕ್ಯಂ ಮಹಾಪ್ರಾಜ್ಞ ಪ್ರಜಾನಾಂ ಪರಿಪಾಲನಮ್ ॥

ಅನುವಾದ

ಮಹಾಪ್ರಾಜ್ಞನೇ! ಕ್ಷತ್ರಿಯನು ರಾಜ್ಯಾಭಿಷಿಕ್ತನಾಗುವುದು ಅವನಿಗೆ ಮೊದಲನೆಯ ಧರ್ಮವಾಗಿದೆ. ಅದರಿಂದ ಅವನು ಚೆನ್ನಾಗಿ ಪ್ರಜೆಯನ್ನು ಪಾಲಿಸಬಲ್ಲನು.॥19॥

ಮೂಲಮ್ - 20

ಕಶ್ಚ ಪ್ರತ್ಯಕ್ಷಮುತ್ಸೃಜ್ಯ ಸಂಶಯಸ್ಥಮಲಕ್ಷಣಮ್ ।
ಆಯತಿಸ್ಥಂ ಚರೇದ್ಧರ್ಮಂ ಕ್ಷತ್ರಬಂಧುರನಿಶ್ಚಿತಮ್ ॥

ಅನುವಾದ

ಪ್ರತ್ಯಕ್ಷ ಸುಖದ ಸಾಧನವಾದ ಪ್ರಜಾಪಾಲನರೂಪೀ ಧರ್ಮವನ್ನು ಪರಿತ್ಯಜಿಸಿ, ಸಂಶಯದಲ್ಲಿ ಸ್ಥಿತನಾಗಿ, ಸುಖದ ಲಕ್ಷಣಗಳಿಂದ ರಹಿತನಾಗಿ, ಭವಿಷ್ಯದಲ್ಲಿ ಫಲ ಕೊಡುವ ಅನಿಶ್ಚಿತ ಧರ್ಮವನ್ನು ಆಚರಿಸುವ ಕ್ಷತ್ರಿಯನು ಯಾರು ತಾನೇ ಇರಬಲ್ಲನು.॥20॥

ಮೂಲಮ್ - 21

ಅಥ ಕ್ಲೇಶಜಮೇವ ತ್ವಂ ಧರ್ಮಂ ಚರಿತುಮಿಚ್ಛಸಿ ।
ಧರ್ಮೇಣ ಚತುರೋ ವರ್ಣಾನ್ ಪಾಲಯನ್ ಕ್ಲೇಶಮಾಪ್ನುಹಿ ॥

ಅನುವಾದ

ನೀನು ಕ್ಲೇಶಸಾಧ್ಯ ಧರ್ಮವನ್ನೇ ಆಚರಿಸಲು ಬಯಸುವೆಯಾದರೆ ಧರ್ಮಾನುಸಾರ ನಾಲ್ಕೂ ವರ್ಣಗಳನ್ನು ಪಾಲಿಸುತ್ತಲೇ ಕಷ್ಟಪಡಬಾರದೇಕೆ.॥21॥

ಮೂಲಮ್ - 22

ಚತುರ್ಣಾಮಾಶ್ರಮಾಣಾಂ ಹಿ ಗಾರ್ಹಸ್ಥ್ಯಂ ಶ್ರೇಷ್ಠಮುತ್ತಮಮ್ ।
ಆಹುರ್ಧರ್ಮಜ್ಞ ಧರ್ಮಜ್ಞಾಸ್ತಂ ಕಥಂ ತ್ಯಕ್ತುಮಿಚ್ಛಸಿ ॥

ಅನುವಾದ

ಧರ್ಮಜ್ಞ ರಘುನಂದನ! ಧರ್ಮಜ್ಞನಾದ ಪುರುಷರು ನಾಲ್ಕು ಆಶ್ರಮಗಳಲ್ಲಿ ಗಾರ್ಹಸ್ಥ್ಯವನ್ನೇ ಶ್ರೇಷ್ಠವೆಂದು ಹೇಳುತ್ತಾರೆ. ಮತ್ತೆ ನೀನು ಅದನ್ನು ಪರಿತ್ಯಾಗ ಏಕೆ ಮಾಡಲು ಬಯಸುತ್ತಿರುವೆ.॥22॥

ಮೂಲಮ್ - 23

ಶ್ರುತೇನ ಬಾಲಃ ಸ್ಥಾನೇನ ಜನ್ಮನಾ ಭವತೋ ಹ್ಯಹಮ್ ।
ಸ ಕಥಂ ಪಾಲಯಿಷ್ಯಾಮಿ ಭೂಮಿಂ ಭವತಿ ತಿಷ್ಠತಿ ॥

ಅನುವಾದ

ಶಾಸ್ತ್ರಜ್ಞಾನ ಮತ್ತು ವಯಸ್ಸು ಎರಡೂ ದೃಷ್ಟಿಯಿಂದ ನಿನಗಿಂತ ನಾನು ಸಣ್ಣ ಬಾಲಕನಾಗಿದ್ದೇನೆ. ಹಾಗಿರುವಾಗ ನೀನಿರುವಾಗ ನಾನು ರಾಜ್ಯವನ್ನು ಹೇಗೆ ಪಾಲಿಸುವೆನು.॥23॥

ಮೂಲಮ್ - 24

ಹೀನಬುದ್ಧಿಗುಣೋ ಬಾಲೋ ಹೀನಃಸ್ಥಾನೇನ ಚಾಪ್ಯಹಮ್ ।
ಭವತಾ ಚ ವಿನಾಭೂತೋ ನ ವರ್ತಯಿತುಮುತ್ಸಹೇ ॥

ಅನುವಾದ

ನಾನು ಬುದ್ಧಿ ಹಾಗೂ ಗುಣ ಎರಡರಿಂದಲೂ ಹೀನನಾಗಿದ್ದೇನೆ, ಬಾಲಕನಾಗಿದ್ದೇನೆ, ನನ್ನ ಸ್ಥಾನವು ನಿನಗಿಂತ ಬಹಳ ಸಣ್ಣದಾಗಿದೆ; ಆದ್ದರಿಂದ ನಾನು ನೀನಲ್ಲದೆ ಜೀವಿಸಿಯೂ ಇರಲಾರೆನು. ಹಾಗಿರುವಾಗ ರಾಜ್ಯವಾಳುವ ಮಾತು ಹೇಗೆ ಸಂಭವಿಸಬಹುದು.॥24॥

ಮೂಲಮ್ - 25

ಇದಂ ನಿಖಿಲಮಪ್ಯಗ್ರ್ಯಂ ರಾಜ್ಯಂ ಪಿತ್ರ್ಯಮಕಂಟಕಮ್ ।
ಅನುಶಾಧಿ ಸ್ವಧರ್ಮೇಣ ಧರ್ಮಜ್ಞ ಸಹ ಬಾಂಧವೈಃ ॥

ಅನುವಾದ

ಧರ್ಮಜ್ಞ ರಘುನಂದನ! ತಂದೆಯ ಈ ಇಡೀ ರಾಜ್ಯವು ಶ್ರೇಷ್ಠ ಮತ್ತು ನಿಷ್ಕಂಟಕವಾಗಿದೆ, ಆದ್ದರಿಂದ ನೀನು ಬಂಧು-ಬಾಂಧವರೊಂದಿಗೆ ಸ್ವಧರ್ಮಾನುಸಾರ ಅದನ್ನು ಪಾಲಿಸು.॥25॥

ಮೂಲಮ್ - 26

ಇಹೈವ ತ್ವಾಭಿಷಿಂಚಂತು ಸರ್ವಾಃ ಪ್ರಕೃತಯಃ ಸಹ ।
ಋತ್ವಿಜಃ ಸವಸಿಷ್ಠಾಶ್ಚ ಮಂತ್ರವಿನ್ಮಂತ್ರಕೋವಿದಾಃ ॥

ಅನುವಾದ

ಮಂತ್ರಜ್ಞ ರಘುವೀರ! ಮಂತ್ರಗಳ ಜ್ಞಾತಾ ಮಹರ್ಷಿ ವಸಿಷ್ಠಾದಿ ಎಲ್ಲ ಋತ್ವಿಜರೂ, ಮಂತ್ರಿಗಳೂ, ಸೇನಾಪತಿಗಳೂ, ಪ್ರಜೆಗಳೂ ಆದಿ ಎಲ್ಲ ಪ್ರಕೃತಿಗಳು ಇಲ್ಲಿ ಉಪಸ್ಥಿತರಾಗಿದ್ದಾರೆ. ಇವರೆಲ್ಲರೂ ಇಲ್ಲೇ ನಿನ್ನ ಪಟ್ಟಾಭಿಷೇಕ ಮಾಡುವರು.॥26॥

ಮೂಲಮ್ - 27

ಅಭಿಷಿಕ್ತಸ್ತ್ವಮಸ್ಮಾಭಿರಯೋಧ್ಯಾಂ ಪಾಲನೇ ವ್ರಜ ।
ವಿಜಿತ್ಯ ತರಸಾ ಲೋಕಾನ್ ಮರುದ್ಭಿರಿವ ವಾಸವಃ ॥

ಅನುವಾದ

ನಮ್ಮಿಂದ ಪಟ್ಟಾಭಿಷಿಕ್ತನಾಗಿ ನೀನು ಮುರುದ್ಗಣರಿಂದ ಅಭಿಷಿಕ್ತನಾದ ಇಂದ್ರನಂತೆ ಬೇಗನೇ ಎಲ್ಲ ಲೋಕಗಳನ್ನು ಗೆದ್ದು ಪ್ರಜೆಯನ್ನು ಪಾಲಿಸಲು ಅಯೋಧ್ಯೆಗೆ ದಯಮಾಡಿಸು.॥27॥

ಮೂಲಮ್ - 28

ಋಣಾನಿ ತ್ರೀಣ್ಯಪಾಕುರ್ವನ್ ದುರ್ಹೃದಃ ಸಾಧು ನಿರ್ದಹನ್ ।
ಸುಹೃದಸ್ತರ್ಪಯನ್ ಕಾಮೈಸ್ತ್ವಮೇವಾತ್ರಾನುಶಾಧಿಮಾಮ್ ॥

ಅನುವಾದ

ಅಲ್ಲಿ ದೇವತೆ, ಋಷಿ ಮತ್ತು ಪಿತೃಗಳ ಋಣವನ್ನು ತೀರಿಸುತ್ತಾ, ದುಷ್ಟ ಶತ್ರುಗಳನ್ನು ಚೆನ್ನಾಗಿ ದಮನಮಾಡಿ ಮಿತ್ರರಿಗೆ ಇಚ್ಛಾನುಸಾರ ವಸ್ತುಗಳಿಂದ ತೃಪ್ತಿಪಡಿಸುತ್ತಾ ನೀನೇ ಅಯೋಧ್ಯೆಯಲ್ಲಿ ನನಗೆ ಧರ್ಮದ ಉಪದೇಶಮಾಡು.॥28॥

ಮೂಲಮ್ - 29

ಅದ್ಯಾರ್ಯ ಮುದಿತಾಃ ಸಂತು ಸುಹೃದಸ್ತೇಽಭಿಷೇಚನೇ ।
ಅದ್ಯ ಭೀತಾಃ ಪಲಾಯಂತು ದುಷ್ಪ್ರದಾಸ್ತೇ ದಿಶೋ ದಶ ॥

ಅನುವಾದ

ಆರ್ಯ! ನಿನ್ನ ಅಭಿಷೇಕ ನೆರವೇರಿದ ಬಳಿಕ ಸುಹೃದರು ಸಂತೋಷಪಡುವರು ಮತ್ತು ದುಃಖಕೊಡುವ ನಿನ್ನ ಶತ್ರುಗಳು ಭಯಗೊಂಡು ಹತ್ತು ದಿಕ್ಕುಗಳಿಗೆ ಓಡಿಹೋಗುವರು.॥29॥

ಮೂಲಮ್ - 30

ಆಕ್ರೋಶಂ ಮಮ ಮಾತುಶ್ಚ ಪ್ರಮೃಜ್ಯ ಪುರುಷರ್ಷಭ ।
ಅದ್ಯ ತತ್ರಭವಂತಂ ಚ ಪಿತರಂ ರಕ್ಷ ಕಿಲ್ಬಿಷಾತ್ ॥

ಅನುವಾದ

ಪುರುಷ ಪ್ರವರ! ಇಂದು ನೀನು ನನ್ನ ತಾಯಿಯ ಕಳಂಕವನ್ನು ತೊಳೆದುಹಾಕಿ ಪೂಜ್ಯ ತಂದೆಯವರನ್ನು ನಿಂದೆಯಿಂದ ಪಾರುಮಾಡು.॥30॥

ಮೂಲಮ್ - 31

ಶಿರಸಾ ತ್ವಾಭಿಯಾಚೇಽಹಂ ಕುರುಷ್ವ ಕರುಣಾಂಮಯಿ ।
ಬಾಂಧವೇಷು ಚ ಸರ್ವೇಷು ಭೂತೇಷ್ವಿವಮಹೇಶ್ವರಃ ॥

ಅನುವಾದ

ನಾನು ನಿನ್ನ ಚರಣಗಳಲ್ಲಿ ತಲೆಯನ್ನಿಟ್ಟು ಯಾಚಿಸುತ್ತಿದ್ದೇನೆ. ನೀನು ನನ್ನ ಮೇಲೆ ದಯೆಮಾಡು. ಮಹಾದೇವನು ಎಲ್ಲ ಪ್ರಾಣಿಗಳ ಮೇಲೆ ಅನುಗ್ರಹ ಮಾಡುವಂತೆ ನೀನೂ ನಿನ್ನ ಬಂಧು ಬಾಂಧವರ ಮೇಲೆ ಕೃಪೆಮಾಡು.॥31॥

ಮೂಲಮ್ - 32

ಅಥವಾ ಪ್ರಷ್ಠತಃ ಕೃತ್ವಾ ವನಮೇವ ಭವಾನಿತಃ ।
ಗಮಿಷ್ಯತಿ ಗಮಿಷ್ಯಾಮಿ ಭವತಾ ಸಾರ್ಧಮಪ್ಯಹಮ್ ॥

ಅನುವಾದ

ಅಥವಾ ನೀನು ನನ್ನ ಪ್ರಾರ್ಥನೆಯನ್ನು ಅಲ್ಲಗಳೆದು ಇಲ್ಲಿಂದ ವನಕ್ಕೆ ಹೋಗುವಿಯಾದರೆ ನಾನೂ ನಿನ್ನ ಜೊತೆಗೆ ಬರುವೆನು.॥32॥

ಮೂಲಮ್ - 33

ತಥಾಭಿರಾಮೋ ಭರತೇನ ತಾಮ್ಯತಾ
ಪ್ರಸಾದ್ಯಮಾನಃ ಶಿರಸಾ ಮಹೀಪತಿಃ ।
ನಚೈವ ಚಕ್ರೇ ಗಮನಾಯ ಸತ್ತ್ವವಾನ್
ಮತಿಂ ಪಿತುಸ್ತದ್ವಚನೇ ಪ್ರತಿಷ್ಠಿತಃ ॥

ಅನುವಾದ

ಗ್ಲಾನಿಗೊಂಡ ಭರತನು ಮನೋಭಿರಾಮ ರಾಜಾ ಶ್ರೀರಾಮನನ್ನು ಅವನ ಚರಣಗಳ ಮೇಲೆ ಬಿದ್ದು ಪ್ರಸನ್ನಗೊಳಿಸಲು ಪ್ರಯತ್ನಿಸುತ್ತಿದ್ದರೂ, ಸತ್ವಗುಣ ಸಂಪನ್ನ ರಘುನಾಥನು ತಂದೆಯ ಆಜ್ಞೆಯಲ್ಲೇ ದೃಢವಾಗಿ ಇದ್ದು ಅಯೋಧ್ಯೆಗೆ ಹೋಗುವ ವಿಚಾರವನ್ನು ಮಾಡಲಿಲ್ಲ.॥33॥

ಮೂಲಮ್ - 34

ತದದ್ಭುತಂ ಸ್ಥೈರ್ಯಮವೇಕ್ಷ್ಯ ರಾಘವೇ
ಸಮಂ ಜನೋ ಹರ್ಷಮವಾಪ ದುಃಖಿತಃ ।
ನ ಯಾತ್ಯಯೋಧ್ಯಾಮಿತಿ ದುಃಖಿತೋಽಭವತ್
ಸ್ಥಿರಪ್ರತಿಜ್ಞತ್ವಮವೇಕ್ಷ್ಯ ಹರ್ಷಿತಃ ॥

ಅನುವಾದ

ಶ್ರೀರಾಮಚಂದ್ರನ ಆ ಅದ್ಭುತ ದೃಢತೆಯನ್ನು ನೋಡಿ ಎಲ್ಲ ಜನರು ಒಟ್ಟಿಗೆ ದುಃಖಿಗಳಾದರು ಮತ್ತು ಹರ್ಷಿತರೂ ಆದರು. ಇವನು ಅಯೋಧ್ಯೆಗೆ ಹೋಗುವುದಿಲ್ಲ ಎಂದು ಯೋಚಿಸಿ ದುಃಖಿತರಾದರು ಹಾಗೂ ಪ್ರತಿಜ್ಞಾಪಾಲನೆಯಲ್ಲಿ ಅವನ ದೃಢತೆಯನ್ನು ನೋಡಿ ಎಲ್ಲರಿಗೆ ಹರ್ಷವಾಯಿತು.॥34॥

ಮೂಲಮ್ - 35

ತಮೃತ್ವಿಜೋ ನೈಗಮಯೂಥವಲ್ಲಭಾ -
ಸ್ತಥಾ ವಿಸಂಜ್ಞಾಶ್ರುಕಲಾಶ್ಚ ಮಾತರಃ ।
ತಥಾ ಬ್ರುವಾಣಂ ಭರತಂ ಪ್ರತುಷ್ಟುವುಃ
ಪ್ರಣಮ್ಯ ರಾಮಂ ಚ ಯಯಾಚಿರೇ ಸಹ ॥

ಅನುವಾದ

ಆಗ ಋತ್ವಿಜರು, ಪುರವಾಸಿಗಳು, ಬೇರೆ-ಬೇರೆ ಸಮುದಾಯದ ಮುಖಂಡರು ಮತ್ತು ತಾಯಂದಿರು ನಿಶ್ಚೇಷ್ಟಿತರಾಗಿ ಕಂಬನಿ ಸುರಿಸುತ್ತಾ ಭರತನು ಆಡಿದ ಮಾತುಗಳ ಬಗ್ಗೆ ಭಾರಿ-ಭಾರಿ ಪ್ರಶಂಸೆ ಮಾಡತೊಡಗಿದರು. ಅವರೆಲ್ಲರೂ ಅವನೊಂದಿಗೆ ಯೋಗ್ಯತಾನುಸಾರ ಶ್ರೀರಾಮನ ಎದುರಿಗೆ ವಿನೀತರಾಗಿ ಅವನಲ್ಲಿ ಅಯೋಧ್ಯೆಗೆ ಮರಳಿ ಬರಲು ಯಾಚಿಸುತ್ತಿದ್ದರು.॥35॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ಒಂದು ನೂರ ಆರನೆಯ ಸರ್ಗ ಪೂರ್ಣವಾಯಿತು ॥106॥