०५८ रामसन्देशनिवेदनम्

वाचनम्
ಭಾಗಸೂಚನಾ

ಮಹಾರಾಜರ ಆಜ್ಞೆಯಂತೆ ಸುಮಂತ್ರನು ಶ್ರೀರಾಮ-ಲಕ್ಷ್ಮಣರ ಸಂದೇಶ ತಿಳಿಸಿದುದು

ಮೂಲಮ್ - 1

ಪ್ರತ್ಯಾಶ್ವಸ್ತೋ ಯದಾ ರಾಜಾ ಮೋಹಾತ್ಪ್ರತ್ಯಾಗತಸ್ಮೃತಿಃ ।
ತದಾಜುಹಾವ ತಂ ಸೂತಂ ರಾಮವೃತ್ತಾಂತಕಾರಣಾತ್ ॥

ಅನುವಾದ

ಮೂರ್ಛೆತಳೆದು ರಾಜನು ಎಚ್ಚರಗೊಂಡಾಗ ಸುಸ್ಥಿರ ಚಿತ್ತನಾಗಿ ಅವನು ಶ್ರೀರಾಮನ ವೃತ್ತಾಂತವನ್ನು ಕೇಳಲು ಸಾರಥಿ ಸುಮಂತ್ರನನ್ನು ಕರೆಸಿದನು.॥1॥

ಮೂಲಮ್ - 2

ತದಾ ಸೂತೋ ಮಹಾರಾಜಂ ಕೃತಾಂಜಲಿರುಪಸ್ಥಿತಃ ।
ರಾಮಮೇವಾನುಶೋಚಂತಂ ದುಃಖಶೋಕಸಮನ್ವಿತಮ್ ॥

ಅನುವಾದ

ಆಗ ಸುಮಂತ್ರನು ಶ್ರೀರಾಮನ ಶೋಕ, ಚಿಂತೆಯಲ್ಲಿ ನಿರಂತರ ಮುಳುಗಿದ, ದುಃಖದಿಂದ ವ್ಯಾಕುಲನಾದ ದಶರಥ ಮಹಾರಾಜರ ಬಳಿಯಲ್ಲಿ ಕೈಮುಗಿದು ನಿಂತುಕೊಂಡನು.॥2॥

ಮೂಲಮ್ - 3

ವೃದ್ಧಂ ಪರಮಸಂತಪ್ತಂ ನವಗ್ರಹಮಿವ ದ್ವಿಪಮ್ ।
ವಿನಿಃಶ್ವಸಂತಂ ಧ್ಯಾಯಂತಮಸ್ವಸ್ಥಮಿವ ಕುಂಜರಮ್ ॥

ಮೂಲಮ್ - 4

ರಾಜಾ ತು ರಜಸಾ ಸೂತಂ ಧ್ವಸ್ತಾಂಗಂ ಸಮುಪಸ್ಥಿತಮ್ ।
ಅಶ್ರುಪೂರ್ಣಮುಖಂ ದೀನಮುವಾಚಪರಮಾರ್ತವತ್ ॥

ಅನುವಾದ

ಕಾಡಿನಿಂದ ಆಗಲೇ ಹಿಡಿದು ತಂದ ಆನೆಯು ತನ್ನ ಗುಂಪಿನ ಗಜರಾಜನನ್ನು ನೆನೆಯುತ್ತಾ ದೀರ್ಘವಾಗಿ ನಿಟ್ಟುಸಿರುಬಿಡುತ್ತಾ ಅತ್ಯಂತ ಅಸ್ವಸ್ಥವಾಗುವಂತೆಯೇ ವೃದ್ಧ ದಶರಥನು ಶ್ರೀರಾಮನಿಗಾಗಿ ಅತ್ಯಂತ ಸಂತಪ್ತನಾಗಿ ದೀರ್ಘವಾಗಿ ನಿಟ್ಟುಸಿರುಬಿಡುತ್ತಾ, ರಾಮನನ್ನೇ ಚಿಂತಿಸುತ್ತಾ ಅಸ್ವಸ್ಥನಾದನು. ರಾಜನು ನೋಡುತ್ತಾನೆ - ಸಾರಥಿಯ ಶರೀರವೆಲ್ಲ ಧೂಳಿನಿಂದ ತುಂಬಿ ಹೋಗಿತ್ತು. ಎದುರಿಗೆ ನಿಂತು ಕಣ್ಣೀರಿನ ಧಾರೆ ಹರಿಯುತ್ತಿದ್ದು, ಅತ್ಯಂತ ದೀನನಾಗಿ ಕಂಡು ಬರುತ್ತಿದ್ದನು. ಆ ಸ್ಥಿತಿಯಲ್ಲಿ ರಾಜನು ಅತ್ಯಂತ ಆರ್ತನಾಗಿ ಅವನಲ್ಲಿ ಕೇಳಿದನು.॥3-4॥

ಮೂಲಮ್ - 5

ಕ್ವ ನು ವತ್ಸ್ಯತಿ ಧರ್ಮಾತ್ಮಾ ವೃಕ್ಷಮೂಲಮುಪಾಶ್ರಿತಃ ।
ಸೋಽತ್ಯಂತಸುಖಿತಃ ಸೂತ ಕಿಮಶಿಷ್ಯತಿ ರಾಘವಃ ॥

ಅನುವಾದ

ಸೂತನೇ! ಧರ್ಮಾತ್ಮಾ ಶ್ರೀರಾಮನು ವೃಕ್ಷದ ಬೇರುಗಳ ಆಶ್ರಯ ಪಡೆದು ಎಲ್ಲಿ ವಾಸಿಸುವನು? ಅವನು ಅತ್ಯಂತ ಸುಖದಲ್ಲಿ ಬೆಳೆದಿದ್ದನು, ಆ ನನ್ನ ಮುದ್ದಿನ ರಾಮನು ಅಲ್ಲಿ ಏನು ತಿನ್ನುವನು.॥5॥

ಮೂಲಮ್ - 6

ದುಃಖಸ್ಯಾನುಚಿತೋ ದುಃಖಂ ಸುಮಂತ್ರ ಶಯನೋಚಿತಃ ।
ಭೂಮಿಪಾಲಾತ್ಮಜೋ ಭೂವೌ ಶೇತೇ ಕಥಮನಾಥವತ್ ॥

ಅನುವಾದ

ಸುಮಂತ್ರ! ದುಃಖವನ್ನು ಅನುಭವಿಸಲು ಯೋಗ್ಯನಲ್ಲದ ಶ್ರೀರಾಮನಿಗೆ ಭಾರೀ ದುಃಖ ಪ್ರಾಪ್ತವಾಯಿತು. ರಾಜೋಚಿತ ಶಯ್ಯೆಯಲ್ಲಿ ಮಲಗುವ ಆ ರಾಜಕುಮಾರ ಶ್ರೀರಾಮನು ಅನಾಥನಂತೆ ನೆಲದಲ್ಲಿ ಹೇಗೆ ಮಲಗುವನು.॥6॥

ಮೂಲಮ್ - 7

ಯಂ ಯಾಂತಮನುಯಾಂತಿ ಸ್ಮ ಪದಾತಿರಥಕುಂಜರಾಃ ।
ಸ ವತ್ಸ್ಯತಿ ಕಥಂ ರಾಮೋ ವಿಜನಂ ವನಮಾಶ್ರಿತಃ ॥

ಅನುವಾದ

ಅವನು ಪ್ರಯಾಣ ಹೊರಟರೆ ಹಿಂದೆ-ಹಿಂದೆ ಕಾಲಾಳುಗಳು, ರಥಗಳು ಹಾಗೂ ಆನೆಯ ಸವಾರರ ಸೇನೆ ನಡೆಯುತ್ತಿತ್ತು. ಅದೇ ಶ್ರೀರಾಮನು ನಿರ್ಜನ ವನದಲ್ಲಿ ಹೇಗೆ ಸಂಚರಿಸುವನು.॥7॥

ಮೂಲಮ್ - 8

ವ್ಯಾಲೈರ್ಮೃಗೈರಾಚರಿತಂ ಕೃಷ್ಣಸರ್ಪನಿಷೇವಿತಮ್ ।
ಕಥಂ ಕುಮಾರೌ ವೈದೇಹ್ಯಾ ಸಾರ್ಧಂ ವನಮುಪಾಶ್ರಿತೌ ॥

ಅನುವಾದ

ಹೆಬ್ಬಾವುಗಳು, ಹುಲಿ-ಸಿಂಹಗಳು, ಕೃಷ್ಣಸರ್ಪಗಳೇ ಆದಿ ಸಂಚರಿಸುವ ವನವನ್ನು ಆಶ್ರಯಿಸಿದ ಇಬ್ಬರೂ ರಾಜಕುಮಾರರು ಸೀತೆಯೊಂದಿಗೆ ಹೇಗೆ ಇರುತ್ತಾರೋ.॥8॥

ಮೂಲಮ್ - 9

ಸುಕುಮಾರ್ಯಾ ತಪಸ್ವಿನ್ಯಾ ಸುಮಂತ್ರ ಸಹ ಸೀತಯಾ ।
ರಾಜಪುತ್ರೌ ಕಥಂ ಪಾದೈರವರುಹ್ಯ ರಥಾದ್ ಗತೌ ॥

ಅನುವಾದ

ಸುಮಂತ್ರನೇ! ಪರಮ ಸುಕುಮಾರಿ ತಪಸ್ವಿನೀ ಸೀತೆಯೊಂದಿಗೆ ಆ ರಾಜಕುಮಾರ ಶ್ರೀರಾಮ-ಲಕ್ಷ್ಮಣರು ರಥದಿಂದ ಇಳಿದು ಕಾಲ್ನಡಿಗೆಯಿಂದ ಹೇಗೆ ಹೋದಾರು.॥9॥

ಮೂಲಮ್ - 10

ಸಿದ್ಧಾರ್ಥಃ ಖಲು ಸೂತ ತ್ವಂ ಯೇನ ದೃಷ್ಟೌ ಮಮಾತ್ಮಜೌ ।
ವನಾಂತಂ ಪ್ರವಿಶಂತೌ ತಾವಶ್ವಿನಾವಿವ ಮಂದರಮ್ ॥

ಅನುವಾದ

ಸಾರಥಿಯೇ! ನೀನು ಕೃತಕೃತ್ಯನಾಗಿರುವೆ; ಏಕೆಂದರೆ ಅಶ್ವಿನೀಕುಮಾರರು ಮಂದರಾಚಲದ ವನದಲ್ಲಿ ಹೋಗುವಂತೆಯೇ, ಕಾಡಿನಲ್ಲಿ ಪ್ರವೇಶಿಸುತ್ತಿರುವ ನನ್ನ ಇಬ್ಬರೂ ಪುತ್ರರನ್ನು ನೀನು ನೋಡಿರುವೆ.॥10॥

ಮೂಲಮ್ - 11

ಕಿಮುವಾಚ ವಚೋ ರಾಮಃ ಕಿಮುವಾಚ ಚ ಲಕ್ಷ್ಮಣಃ ।
ಸುಮಂತ್ರ ವನಮಾಸಾದ್ಯ ಕಿಮುವಾಚ ಚ ಮೈಥಿಲೀ ॥

ಅನುವಾದ

ಸುಮಂತ್ರನೇ! ವನಕ್ಕೆ ತಲುಪಿದ ಶ್ರೀರಾಮನು ನಿನ್ನಲ್ಲಿ ಏನು ಹೇಳಿದನು? ಲಕ್ಷ್ಮಣನು ಏನು ಹೇಳಿದನು? ಹಾಗೂ ಮಿಥಿಲೇಶ ಕುಮಾರೀ ಸೀತೆಯು ಏನು ಸಂದೇಶ ಕಳಿಸಿರುವಳು.॥11॥

ಮೂಲಮ್ - 12

ಆಸಿತಂ ಶಯಿತಂ ಭುಕ್ತಂ ಸೂತ ರಾಮಸ್ಯ ಕೀರ್ತಯ ।
ಜೀವಿಷ್ಯಾಮ್ಯಯಮೇತೇನ ಯಯಾತಿರಿವ ಸಾಧುಷು ॥

ಅನುವಾದ

ಸೂತನೇ! ನೀನು ಶ್ರೀರಾಮನು ಕುಳಿತುಕೊಂಡ, ಮಲಗುವ, ಊಟ-ತಿಂಡಿಯ ಸಂಬಂಧವಾದ ಮಾತನ್ನು ಹೇಳು. ಸ್ವರ್ಗದಿಂದ ಪತನನಾದ ಯಯಾತಿಯು ಸತ್ಪುರುಷರ ನಡುವೆ ಉಪಸ್ಥಿತನಾಗಿ ಸತ್ಸಂಗದ ಪ್ರಭಾವದಿಂದ ಪುನಃ ಸುಖಿಯಾಗಿದ್ದನು; ಹಾಗೆಯೇ ನಿನ್ನಂತಹ ಸಾಧುಪುರುಷನಿಂದ ಪುತ್ರರ ವೃತ್ತಾಂತವನ್ನು ಕೇಳುವುದರಿಂದ ನಾನು ಸುಖವಾಗಿ ಬದುಕಿರಬಲ್ಲೆನು.॥12॥

ಮೂಲಮ್ - 13

ಇತಿ ಸೂತೋ ನರೇಂದ್ರೇಣ ಚೋದಿತಃ ಸಜ್ಜಮಾನಯಾ ।
ಉವಾಚ ವಾಚಾ ರಾಜಾನಂ ಸ ಬಾಷ್ಪಪರಿಬದ್ಧಯಾ ॥

ಅನುವಾದ

ಮಹಾರಾಜರು ಹೀಗೆ ಕೇಳಿದಾಗ ಸಾರಥಿ ಸುಮಂತ್ರನು ದುಃಖಾಶ್ರುಗಳಿಂದ ಗಂಟಲು ಕಟ್ಟಿ, ಗದ್ಗದನಾಗಿ ಹೇಳತೊಡಗಿದನು.॥13॥

ಮೂಲಮ್ - 14

ಅಬ್ರವೀನ್ಮೇ ಮಹಾರಾಜ ಧರ್ಮಮೇವಾನುಪಾಲಯನ್ ।
ಅಂಜಲಿಂ ರಾಘವಃ ಕೃತ್ವಾ ಶಿರಸಾಭಿಪ್ರಣಮ್ಯ ಚ ॥

ಮೂಲಮ್ - 15

ಸೂತ ಮದ್ವಚನಾತ್ತಸ್ಯ ತಾತಸ್ಯ ವಿದಿತಾತ್ಮನಃ ।
ಶಿರಸಾ ವಂದನೀಯಸ್ಯ ವಂದ್ಯೌಪಾದೌ ಮಹಾತ್ಮನಃ ॥

ಮೂಲಮ್ - 16

ಸರ್ವಮಂತಃಪುರಂ ವಾಚ್ಯಂ ಸೂತ ಮದ್ವಚನಾತ್ತ್ವಯಾ ।
ಆರೋಗ್ಯಮವಿಶೇಷೇಣ ಯಥಾರ್ಹಮಭಿವಾದನಮ್ ॥

ಅನುವಾದ

ಮಹಾರಾಜರೇ! ಶ್ರೀರಾಮಚಂದ್ರನು ಧರ್ಮವನ್ನು ನಿರಂತರ ಪಾಲಿಸುತ್ತಾ ಕೈಮುಗಿದುಕೊಂಡು, ತಲೆಬಾಗಿ ಹೇಳಿರುವನು- ಸೂತನೇ! ನೀನು ನನ್ನ ಪರವಾಗಿ ಆತ್ಮಜ್ಞಾನೀ ಹಾಗೂ ವಂದನೀಯ ನನ್ನ ಮಹಾತ್ಮಾ ಪಿತನ ಚರಣಗಳಲ್ಲಿ ನಮಸ್ಕರಿಸಿ ಹೇಳು ಮತ್ತು ಅಂತಃಪುರದ ಎಲ್ಲ ಮಾತೆಯರಿಗೆ ನನ್ನ ಆರೋಗ್ಯದ ಸಮಾಚಾರ ಹೇಳುತ್ತಾ, ಅವರಿಗೆ ವಿಶೇಷವಾಗಿ ಯಥೋಚಿತ ನನ್ನ ಪ್ರಣಾಮಗಳನ್ನು ನಿವೇದಿಸು.॥14-16॥

ಮೂಲಮ್ - 17

ಮಾತಾ ಚ ಮಮ ಕೌಸಲ್ಯಾ ಕುಶಲಂ ಚಾಭಿವಾದನಮ್ ।
ಅಪ್ರಮಾದಂ ಚ ವಕ್ತವ್ಯಾ ಬ್ರೂಯಾಶ್ಚೈನಾಮಿದಂ ವಚಃ ॥

ಮೂಲಮ್ - 18

ಧರ್ಮನಿತ್ಯಾ ಯಥಾಕಾಲಮಗ್ನ್ಯಾಗಾರಪರಾ ಭವ ।
ದೇವಿದೇವಸ್ಯ ಪಾದೌ ಚ ದೇವವತ್ ಪರಿಪಾಲಯ ॥

ಅನುವಾದ

ಅನಂತರ ನನ್ನ ತಾಯಿ ಕೌಸಲ್ಯೆಗೆ ನನ್ನ ಪರವಾಗಿ ನಮಸ್ಕರಿಸಿ- ‘ನಾನು ಕ್ಷೇಮವಾಗಿದ್ದೇನೆ ಮತ್ತು ಧರ್ಮಪಾಲನೆಯಲ್ಲಿ ಜಾಗರೂಕನಾಗಿದ್ದೇನೆ’ ಎಂದು ತಿಳಿಸಿ, ಈ ಸಂದೇಶವನ್ನು ಹೇಳು- ಅಮ್ಮಾ! ನೀನು ಸದಾ ಧರ್ಮದಲ್ಲಿ ತತ್ಪರಳಾಗಿ ಕಾಲಕ್ಕೆ ಸರಿಯಾಗಿ ಅಗ್ನಿಹೋತ್ರ ಕಾರ್ಯದಲ್ಲಿ ಸಂಲಗ್ನವಾಗಿರು. ದೇವಿ! ಮಹಾರಾಜರನ್ನು ದೇವತೆಯಂತೆ ತಿಳಿದು ಅವರ ಚರಣಸೇವೆ ಮಾಡುವುದು.॥17-18॥

ಮೂಲಮ್ - 19

ಅಭಿಮಾನಂ ಚ ಮಾನಂ ಚತ್ಯಕ್ತ್ವಾವರ್ತಸ್ವ ಮಾತೃಷು ।
ಅನುರಾಜಾನಮಾರ್ಯಾಂ ಚಕೈಕೇಯೀಮಂಬ ಕಾರಯ ॥

ಅನುವಾದ

ಅಭಿಮಾನ1 ಮತ್ತು ದೊಡ್ಡಸ್ತಿಕೆ2 ತ್ಯಜಿಸಿ ಎಲ್ಲ ತಾಯಂದಿರ ಕುರಿತು ಸಮಾನವಾಗಿ ವರ್ತಿಸಬೇಕು. ಅವರೊಂದಿಗೆ ಬೆರೆತು ಇರುವುದು. ಅಮ್ಮ! ಮಹಾರಾಜರ ಅನುರಾಗವುಳ್ಳ ಕೈಕೇಯಿಯನ್ನು ಶ್ರೇಷ್ಠಳೆಂದೇ ತಿಳಿದು ಆಕೆಯನ್ನು ಸತ್ಕರಿಸಬೇಕು.॥19॥

ಮೂಲಮ್ - 20

ಕುಮಾರೇ ಭರತೇ ವೃತ್ತಿರ್ವರ್ತಿತವ್ಯಾ ಚ ರಾಜವತ್ ।
ಅಪ್ಯಜ್ಯೇಷ್ಠಾ ಹಿ ರಾಜಾನೋ ರಾಜಧರ್ಮಮನುಸ್ಮರ ॥

ಅನುವಾದ

ಕುಮಾರ ಭರತನ ಕುರಿತು ರಾಜೋಚಿತ ವರ್ತನೆ ಮಾಡಬೇಕು. ರಾಜನು ಸಣ್ಣ ವಯಸ್ಸಿನವನಾಗಿದ್ದರೂ ಅವನು ಆದರಣೀಯನಾಗಿದ್ದಾನೆ ಈ ರಾಜಧರ್ಮವನ್ನು ನೆನಪಿಡಬೇಕು.॥20॥

ಟಿಪ್ಪನೀ
  1. ಮುಖ್ಯ ಪಟ್ಟದರಸಿಯಾದುದರ ಅಹಂಕಾರ. 2. ತನ್ನ ದೊಡ್ಡಸ್ತಿಕೆಯ ಗರ್ವದಿಂದ ಬೇರೆಯವರನ್ನು ತಿರಸ್ಕರಿಸುವ ಭಾವನೆ.
ಮೂಲಮ್ - 21

ಭರತಃ ಕುಶಲಂ ವಾಚ್ಯೋ ವಾಚ್ಯೋ ಮದ್ವಚನೇನ ಚ ।
ಸರ್ವಾಸ್ವೇವ ಯಥಾನ್ಯಾಯಂ ವೃತ್ತಿಂ ವರ್ತಸ್ವ ಮಾತೃಷು ॥

ಅನುವಾದ

ಭರತಕುಮಾರನಿಗೂ ನನ್ನ ಕ್ಷೇಮ-ಸಮಾಚಾರ ತಿಳಿಸಿ, ಅವನಲ್ಲಿ ನನ್ನ ಪರವಾಗಿ - ‘ತಮ್ಮ! ನೀನು ಯಾವಾಗಲೂ ತಾಯಿಯರ ಕುರಿತು ನ್ಯಾಯೋಚಿತವಾಗಿ ವರ್ತಿಸಬೇಕು’ ಎಂದು ಹೇಳು.॥21॥

ಮೂಲಮ್ - 22

ವಕ್ತವ್ಯಶ್ಚ ಮಹಾಬಾಹುರಿಕ್ಷ್ವಾಕುಕುಲನಂದನಃ ।
ಪಿತರಂ ಯೌವರಾಜ್ಯಸ್ಥೋ ರಾಜ್ಯಸ್ಥಮನುಪಾಲಯ ॥

ಅನುವಾದ

ಇಕ್ಷ್ವಾಕುಕುಲನಂದನ ಮಹಾಬಾಹು ಭರತನಲ್ಲಿ ‘ಯುವರಾಜ ಪದವಿಯಲ್ಲಿ ಅಭಿಷಿಕ್ತನಾದ ಮೇಲೆಯೂ ಸಿಂಹಾಸನದಲ್ಲಿ ವಿರಾಜಿಸುವ ನೀನು ತಂದೆಯ ರಕ್ಷಣೆ, ಸೇವೆಯಲ್ಲಿ ಸಂಲಗ್ನವಾಗಿರು’ ಇದನ್ನು ಹೇಳಬೇಕು.॥22॥

ಮೂಲಮ್ - 23

ಅತಿಕ್ರಾಂತವಯಾ ರಾಜಾ ಮಾ ಸ್ಮೈನಂ ವ್ಯರೋರುಧಃ ।
ಕುಮಾರರಾಜ್ಯೇ ಜೀವಸ್ವ ತಸ್ಯೈವಾಜ್ಞಾಪ್ರವರ್ತನಾತ್ ॥

ಅನುವಾದ

ಮಹಾರಾಜರು ಬಹಳ ಮುದುಕರಾಗಿದ್ದಾರೆ ಎಂದು ತಿಳಿದು ನೀನು ಅವರ ವಿರೋಧ ಮಾಡಬೇಡ. ಅವರನ್ನು ಸಿಂಹಾಸನದಿಂದ ಇಳಿಸಬೇಡ. ಯುವರಾಜನಾಗಿದ್ದೇ ಅವರ ಆಜ್ಞೆಯನ್ನು ಪಾಲಿಸುತ್ತಾ ಜೀವನ ನಿರ್ವಾಹ ಮಾಡು.॥23॥

ಮೂಲಮ್ - 24

ಅಬ್ರವೀಚ್ಚಾಪಿ ಮಾಂ ಭೂಯೋ ಭೃಶಮಶ್ರೂಣಿ ವರ್ತಯನ್ ।
ಮಾತೇವ ಮಮ ಮಾತಾ ತೇ ದ್ರಷ್ಟವ್ಯಾ ಪುತ್ರಗರ್ಧಿನೀ ॥

ಮೂಲಮ್ - 25

ಇತ್ಯೇವಂ ಮಾಂ ಮಹಾಬಾಹುರ್ಬ್ರುವನ್ನೇವ ಮಹಾಯಶಾಃ ।
ರಾಮೋ ರಾಜೀವಪತ್ರಾಕ್ಷೋ ಭೃಶಮಶ್ರೂಣ್ಯವರ್ತಯತ್ ॥

ಅನುವಾದ

ಮತ್ತೆ ಶ್ರೀರಾಮನು ಕಣ್ಣುಗಳಿಂದ ಕಣ್ಣೀರು ಸುರಿಸಿ ಭರತನಿಗೆ ಹೇಳುವಂತೆ ಈ ಸಂದೇಶವನ್ನು ನನಗೆ ಹೇಳಿರುವನು - ‘ಭರತನೇ! ನನ್ನ ಪುತ್ರವತ್ಸಲಾ ತಾಯಿಯನ್ನು ನಿನ್ನ ತಾಯಿಯೆಂದೇ ತಿಳಿಯಬೇಕು’ ನನ್ನಲ್ಲಿ ಇಷ್ಟು ಹೇಳಿ ಮಹಾಬಾಹು ಮಹಾಯಶಸ್ವೀ ಕಮಲನಯನ ಶ್ರೀರಾಮನು ಕಣ್ಣೀರಿನ ಮಳೆ ಸುರಿಸಿದನು.॥24-25॥

ಮೂಲಮ್ - 26

ಲಕ್ಷ್ಮಣಸ್ತು ಸುಸಂಕ್ರುದ್ಧೋ ನಿಃಶ್ವಸನ್ ವಾಕ್ಯಮಬ್ರವೀತ್ ।
ಕೇನಾಯಮಪರಾಧೇನ ರಾಜಪುತ್ರೋ ವಿವಾಸಿತಃ ॥

ಅನುವಾದ

ಆದರೆ ಲಕ್ಷ್ಮಣನು ಆಗ ಅತ್ಯಂತ ಕುಪಿತನಾಗಿ ದೀರ್ಘವಾಗಿ ನಿಟ್ಟುಸಿರುಬಿಡುತ್ತಾ - ಸುಮಂತ್ರನೇ! ಯಾವ ಅಪರಾಧಕ್ಕಾಗಿ ಮಹಾರಾಜರು ಈ ರಾಜಕುಮಾರ ಶ್ರೀರಾಮನನ್ನು ಕಾಡಿಗೆ ಕಳಿಸಿದರು? ಎಂದು ಹೇಳಿದನು.॥26॥

ಮೂಲಮ್ - 27

ರಾಜ್ಞಾ ತು ಖಲು ಕೈಕೇಯ್ಯಾ ಲಘು ಚಾಶ್ರುತ್ಯ ಶಾಸನಮ್ ।
ಕೃತಂ ಕಾರ್ಯಮಕಾರ್ಯಂ ವಾ ವಯಂ ಯೇನಾಭಿಪೀಡಿತಾಃ ॥

ಅನುವಾದ

ಮಹಾರಾಜರು ಕೈಕೇಯಿಯ ಆದೇಶ ಕೇಳುತ್ತಲೇ ಕೂಡಲೇ ಅದನ್ನು ಪೂರ್ಣಮಾಡುವ ಪ್ರತಿಜ್ಞೆ ಮಾಡಿದರು. ಅವರ ಈ ಕಾರ್ಯ ಉಚಿತವೋ, ಅನುಚಿತವೋ, ಆದರೆ ನಮಗೆ ಅದರಿಂದ ಕಷ್ಟ ಅನುಭವಿಸಬೇಕಾಯಿತು.॥27॥

ಮೂಲಮ್ - 28

ಯದಿ ಪ್ರವ್ರಾಜಿತೋ ರಾಮೋ ಲೋಭಕಾರಣಕಾರಿತಮ್ ।
ವರದಾನನಿಮಿತ್ತಂ ವಾ ಸರ್ವಥಾ ದುಷ್ಕೃತಂ ಕೃತಮ್ ॥

ಅನುವಾದ

ಶ್ರೀರಾಮನಿಗೆ ವನವಾಸ ವಿಧಿಸುವುದು ಕೈಕೇಯಿಯ ಲೋಭದ ಕಾರಣದಿಂದ ಆಗಿರಬಹುದು, ಅಥವಾ ರಾಜನು ಕೊಟ್ಟ ವರದಿಂದಾಗಿರಬಹುದು; ನನ್ನ ದೃಷ್ಟಿಯಲ್ಲಿ ಇದು ಸರ್ವಥಾ ಪಾಪವೇ ಮಾಡಲಾಗಿದೆ.॥28॥

ಮೂಲಮ್ - 29

ಇದಂ ತಾವದ್ಯಥಾಕಾಮಮೀಶ್ವರಸ್ಯ ಕೃತೇ ಕೃತಮ್ ।
ರಾಮಸ್ಯ ತು ಪರಿತ್ಯಾಗೇ ನ ಹೇತುಮುಪಲಕ್ಷಯೇ ॥

ಅನುವಾದ

ಶ್ರೀರಾಮನಿಗೆ ವನವಾಸ ಕೊಡುವ ಈ ಕಾರ್ಯ ಮಹಾರಾಜರ ಸ್ವೇಚ್ಛಾಚಾರದಿಂದಾಗಿರಬಹುದು, ಅಥವಾ ಈಶ್ವರ ಪ್ರೇರಣೆಯಿಂದಾಗಿರಲಿ; ಆದರೆ ಶ್ರೀರಾಮನ ಪರಿತ್ಯಾಗದ ಉಚಿತವಾದ ಯಾವುದೇ ಕಾರಣ ಕಂಡುಬರುವುದಿಲ್ಲ.॥29॥

ಮೂಲಮ್ - 30

ಅಸಮೀಕ್ಷ್ಯಸಮಾರಬ್ಧಂ ವಿರುದ್ಧಂ ಬುದ್ಧಿಲಾಘವಾತ್ ।
ಜನಯಿಷ್ಯತಿ ಸಂಕ್ರೋಶಂ ರಾಘವಸ್ಯ ವಿವಾಸನಮ್ ॥

ಅನುವಾದ

ಬುದ್ಧಿಯ ಕೊರತೆ ಅಥವಾ ತುಚ್ಛತೆಯ ಕಾರಣ ಉಚಿತ, ಅನುಚಿತ ವಿಚಾರ ಮಾಡದೆಯೇ ಈ ರಾಮನ ವನವಾಸ ರೂಪೀ ಶಾಸ್ತ್ರವಿರುದ್ಧ ಕಾರ್ಯ ಪ್ರಾರಂಭಿಸಿದುದು ಅವಶ್ಯವಾಗಿ ನಿಂದೆ ಮತ್ತು ದುಃಖದ ಜನಕವಾದೀತು.॥30॥

ಮೂಲಮ್ - 31

ಅಹಂ ತಾವನ್ಮಹಾರಾಜೇ ಪಿತೃತ್ವಂ ನೋಪಲಕ್ಷಯೇ ।
ಭ್ರಾತಾ ಭರ್ತಾ ಚ ಬಂಧುಶ್ಚ ಪಿತಾ ಚ ಮಮ ರಾಘವಃ ॥

ಅನುವಾದ

ನನಗೆ ಈಗ ಮಹಾರಾಜರಲ್ಲಿ ತಂದೆ ಎಂಬ ಭಾವ ಕಾಣುವುದಿಲ್ಲ. ಈಗಲಾದರೋ ರಘುನಂದನ ಶ್ರೀರಾಮನೇ ನನಗೆ ಅಣ್ಣ, ಸ್ವಾಮಿ, ಬಂಧು-ಬಾಂಧವ ಹಾಗೂ ಪಿತನೂ ಆಗಿದ್ದಾನೆ.॥31॥

ಮೂಲಮ್ - 32

ಸರ್ವಲೋಕಪ್ರಿಯಂತ್ಯಕ್ತ್ವಾ ಸರ್ವಲೋಕಹಿತೇ ರತಮ್ ।
ಸರ್ವಲೋಕೋಽನುರಜ್ಯೇತ ಕಥಂ ಚಾನೇನ ಕರ್ಮಣಾ ॥

ಅನುವಾದ

ಸಮಸ್ತ ಲೋಕಗಳ ಹಿತದಲ್ಲಿ ತತ್ಪರನಾದ ಕಾರಣ ಎಲ್ಲ ಜನರಿಗೆ ಪ್ರಿಯನಾದ ಶ್ರೀರಾಮನನ್ನು ಪರಿತ್ಯಾಗಮಾಡಿ ರಾಜನು ಮಾಡಿದ ಈ ಕ್ರೂರವಾದ ಪಾಪಕೃತ್ಯದ ಕಾರಣ ಈಗ ಇಡೀ ಜಗತ್ತು ಅವರಲ್ಲಿ ಹೇಗೆ ಅನುರಕ್ತವಾಗಿ ಇರಬಲ್ಲದು? (ಈಗ ಅವರಲ್ಲಿ ರಾಜೋಚಿತ ಗುಣವೇ ಉಳಿಯಲಿಲ್ಲ.॥32॥

ಮೂಲಮ್ - 33

ಸರ್ವಪ್ರಜಾಭಿರಾಮಂ ಹಿ ರಾಮಂ ಪ್ರವ್ರಜ್ಯ ಧಾರ್ಮಿಕಮ್ ।
ಸರ್ವಲೋಕ ವಿರೋಧೇನ ಕಥಂ ರಾಜಾ ಭವಿಷ್ಯತಿ ॥

ಅನುವಾದ

ಸಮಸ್ತ ಪ್ರಜೆಯ ಮನಸ್ಸು ರಮಮಾಣವಾಗುವ ಧರ್ಮಾತ್ಮಾ ಶ್ರೀರಾಮನನ್ನು ದೇಶದಿಂದ ಹೊರ ಹಾಕಿ ಸಮಸ್ತ ಲೋಕಗಳ ವಿರೋಧ ಮಾಡಿದ್ದರಿಂದ ಈಗ ಅವರು ಹೇಗೆ ರಾಜರಾಗಿರಬಲ್ಲರು.॥33॥

ಮೂಲಮ್ - 34

ಜಾನಕೀ ತು ಮಹಾರಾಜ ನಿಃಶ್ವಸಂತೀ ತಪಸ್ವಿನೀ ।
ಭೂತೋಪಹತಚಿತ್ತೇವ ವಿಷ್ಠಿತಾ ವಿಸ್ಮಿತಾ ಸ್ಥಿತಾ ॥

ಅನುವಾದ

ಮಹಾರಾಜರೇ! ತಪಸ್ವಿನೀ ಜನಕನಂದಿನೀ ಸೀತೆಯು ದೀರ್ಘವಾಗಿ ನಿಟ್ಟುಸಿರು ಬಿಡುತ್ತಾ ಭೂತಸಂಚಾರವಾದವಳಂತೆ ನಿಶ್ಚೇಷ್ಟಿತಳಾಗಿ ನಿಂತಿದ್ದಳು. ಮಂಕಾಗಿ ಕಾಣುತ್ತಿದ್ದಳು.॥34॥

ಮೂಲಮ್ - 35

ಅದೃಷ್ಟಪೂರ್ವವ್ಯಸನಾ ರಾಜಪುತ್ರೀ ಯಶಸ್ವಿನೀ ।
ತೇನ ದುಃಖೇನ ರುದತೀ ನೈವ ಮಾಂ ಕಿಂಚಿದಬ್ರವೀತ್ ॥

ಅನುವಾದ

ಆ ಯಶಸ್ವಿನೀ ರಾಜಕುಮಾರಿಯು ಮೊದಲು ಎಂದೂ ಇಂತಹ ಸಂಕಟ ನೋಡಿರಲಿಲ್ಲ. ಅವಳು ಪತಿಯ ದುಃಖದಲ್ಲಿ ದುಃಖಿತೆಯಾಗಿ ಅಳುತ್ತಿದ್ದಳು. ಆಕೆಯು ನನ್ನ ಬಳಿ ಏನನ್ನೂ ಹೇಳಲಿಲ್ಲ.॥35॥

ಮೂಲಮ್ - 36

ಉದ್ವೀಕ್ಷಮಾಣಾ ಭರ್ತಾರಂಮುಖೇನ ಪರಿಶುಷ್ಯತಾ ।
ಮುಮೋಚ ಸಹಸಾ ಬಾಷ್ಪಂ ಪ್ರಯಾಂತಮುಪವೀಕ್ಷ್ಯಸಾ ॥

ಅನುವಾದ

ನಾನು ಇತ್ತ ಬರಲು ಹೊರಟಿರುವುದನ್ನು ನೋಡಿ ಆಕೆಯು ಶುಷ್ಕದೃಷ್ಟಿಯಿಂದ ಪತಿಯನ್ನು ನೋಡುತ್ತಾ ಕಣ್ಣೀರು ಸುರಿಸುತ್ತಿರಬೇಕು.॥36॥

ಮೂಲಮ್ - 37

ತಥೈವ ರಾಮೋಽಶ್ರುಮುಖಃ ಕೃತಾಂಜಲಿಃ
ಸ್ಥಿತೋಽಬ್ರವೀಲ್ಲಕ್ಷ್ಮಣಬಾಹುಪಾಲಿತಃ ।
ತಥೈವ ಸೀತಾ ರುದತೀ ತಪಸ್ವಿನೀ
ನಿರೀಕ್ಷತೇ ರಾಜರಥಂ ತಥೈವ ಮಾಮ್ ॥

ಅನುವಾದ

ಈ ಪ್ರಕಾರ ಲಕ್ಷ್ಮಣನ ಭುಜಗಳಿಂದ ಸುರಕ್ಷಿತ ಶ್ರೀರಾಮನು ಆಗ ಕೈಮುಗಿದು ನಿಂತಿದ್ದನು. ಅವನ ಮುಖದಲ್ಲಿ ಕಣ್ಣೀರಿನ ಧಾರೆ ಹರಿಯುತ್ತಿತ್ತು. ಮನಸ್ವಿನೀ ಸೀತೆಯೂ ಅಳುತ್ತಾ ಕೆಲವೊಮ್ಮೆ ನಿಮ್ಮ ಈ ರಥವನ್ನು ನೋಡುತ್ತಾ, ಕೆಲವೊಮ್ಮೆ ನನ್ನನ್ನು ನೋಡುತ್ತಿದ್ದಳು.॥37॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ಐವತ್ತೆಂಟನೆಯ ಸರ್ಗ ಪೂರ್ಣವಾಯಿತು ॥58॥