०४४ कौसल्यासान्त्वनम्

वाचनम्
ಭಾಗಸೂಚನಾ

ಸುಮಿತ್ರೆಯು ಕೌಸಲ್ಯೆಗೆ ಆಶ್ವಾಸನೆ ಕೊಟ್ಟುದು

ಮೂಲಮ್ - 1

ವಿಲಪಂತೀಂ ತಥಾ ತಾಂ ತು ಕೌಸಲ್ಯಾಂ ಪ್ರಮದೋತ್ತಮಾಮ್ ।
ಇದಂ ಧರ್ಮೇ ಸ್ಥಿತಾ ಧರ್ಮ್ಯಂ ಸುಮಿತ್ರಾ ವಾಕ್ಯಮಬ್ರವೀತ್ ॥

ಅನುವಾದ

ನಾರಿಯರಲ್ಲಿ ಶ್ರೇಷ್ಠಳಾದ ಕೌಸಲ್ಯೆಯು ಈ ಪ್ರಕಾರ ವಿಲಪಿಸುವುದನ್ನು ನೋಡಿ ಧರ್ಮಪರಾಯಣ ಸುಮಿತ್ರೆಯು ಹೀಗೆ ಧರ್ಮಯುಕ್ತವಾದ ಮಾತನ್ನು ಹೇಳಿದಳು.॥1॥

ಮೂಲಮ್ - 2

ತವಾರ್ಯೇ ಸದ್ಗುಣೈರ್ಯುಕ್ತಃ ಸ ಪುತ್ರಃ ಪುರುಷೋತ್ತಮಃ ।
ಕಿಂ ತೇ ವಿಲಪಿತೇನೈವಂ ಕೃಪಣಂ ರುದಿತೇನ ವಾ ॥

ಅನುವಾದ

ಆರ್ಯಳೇ! ನಿನ್ನ ಪುತ್ರ ಶ್ರೀರಾಮನು ಉತ್ತಮ ಗುಣಗಳಿಂದ ಯುಕ್ತನಾಗಿ, ಪುರುಷರಲ್ಲಿ ಶ್ರೇಷ್ಠನಾಗಿದ್ದಾನೆ. ಅವನಿಗಾಗಿ ಹೀಗೆ ವಿಲಾಪಮಾಡುವುದು, ದೀನಳಾಗಿ ಅಳುವುದು ವ್ಯರ್ಥವಾಗಿದೆ, ಈ ರೀತಿ ಅಳುವುದರಿಂದ ಏನು ಪ್ರಯೋಜನ.॥2॥

ಮೂಲಮ್ - 3

ಯಸ್ತವಾರ್ಯೇ ಗತಃ ಪುತ್ರಸ್ತ್ಯಕ್ತ್ವಾ ರಾಜ್ಯಂ ಮಹಾಬಲಃ ।
ಸಾಧುಕುರ್ವನ್ಮಹಾತ್ಮಾನಂ ಪಿತರಂ ಸತ್ಯವಾದಿನಮ್ ॥

ಮೂಲಮ್ - 4

ಶಿಷ್ಟೈರಾಚರಿತೇ ಸಮ್ಯಕ್ಶಶ್ವತ್ ಪ್ರೇತ್ಯ ಫಲೋದಯೇ ।
ರಾಮೋ ಧರ್ಮೇ ಸ್ಥಿತಃ ಶ್ರೇಷ್ಠೋ ನ ಸ ಶೋಚ್ಯಃಕದಾಚನಃ ॥

ಅನುವಾದ

ಅಕ್ಕಾ! ರಾಜ್ಯವನ್ನು ಬಿಟ್ಟು ಮಹಾತ್ಮಾ ತನ್ನ ತಂದೆಯನ್ನು ಸತ್ಯವಾದಿಯಾಗಿಸಲು ವನಕ್ಕೆ ಹೋದ, ನಿನ್ನ ಆ ಮಹಾಬಲಿ ಶ್ರೇಷ್ಠಪುತ್ರ ಶ್ರೀರಾಮನು ಸತ್ಪುರುಷರು ಸದಾಕಾಲ, ಚೆನ್ನಾಗಿ ಪಾಲಿಸಿದ, ಪರಲೋಕದಲ್ಲಿಯೂ ಸುಖಮಯ ಫಲವನ್ನು ಕೊಡುವ ಉತ್ತಮಧರ್ಮದಲ್ಲಿ ಸ್ಥಿತನಾಗಿರುವನು. ಇಂತಹ ಧರ್ಮಾತ್ಮನಿಗಾಗಿ ಎಂದಿಗೂ ಶೋಕ ಮಾಡಬಾರದು.॥3-4॥

ಮೂಲಮ್ - 5

ವರ್ತತೇ ಚೋತ್ತಮಾಂ ವೃತ್ತಿಂ ಲಕ್ಷ್ಮಣೋಽಸ್ಮಿನ್ ಸದಾನಘಃ ।
ದಯಾವಾನ್ ಸರ್ವಭೂತೇಷು ಲಾಭಸ್ತಸ್ಯಮಹಾತ್ಮನಃ ॥

ಅನುವಾದ

ನಿಷ್ಪಾಪ ಲಕ್ಷ್ಮಣನು ಸಮಸ್ತ ಪ್ರಾಣಿಗಳ ಕುರಿತು ದಯಾಳು ಆಗಿದ್ದಾನೆ. ಸದಾ ರಾಮನ ಕುರಿತು ಉತ್ತಮವಾಗಿ ವರ್ತಿಸುತ್ತಿದ್ದಾನೆ. ಆದ್ದರಿಂದ ಆ ಮಹಾತ್ಮಾ ಲಕ್ಷ್ಮಣನಿಗಾಗಿ ಇದು ಲಾಭಪ್ರದವೇ ಆಗಿದೆ.॥5॥

ಮೂಲಮ್ - 6

ಅರಣ್ಯವಾಸೇ ಯದ್ದುಃಖಂ ಜಾನಂತ್ಯೇವ ಸುಖೋಚಿತಾ ।
ಅನುಗಚ್ಛತಿ ವೈದೇಹೀ ಧರ್ಮಾತ್ಮಾನಂ ತವಾತ್ಮಜಮ್ ॥

ಅನುವಾದ

ಸುಖವನ್ನು ಅನುಭವಿಸಲು ಯೋಗ್ಯಳಾದ ವಿದೇಹನಂದಿನೀ ಸೀತೆಯೂ ಕೂಡ ವನವಾಸದ ದುಃಖಗಳನ್ನು ಚೆನ್ನಾಗಿ ತಿಳಿದುಕೊಂಡೇ ನಿನ್ನ ಧರ್ಮಾತ್ಮಾ ಪುತ್ರನನ್ನು ಅನುಸರಿಸುವಳು.॥6॥

ಮೂಲಮ್ - 7

ಕೀರ್ತಿಭೂತಾಂ ಪತಾಕಾಂ ಯೋಲೋಕೇ ಭ್ರಮಯತಿ ಪ್ರಭುಃ ।
ಧರ್ಮಃ ಸತ್ಯವ್ರತಪರಃ ಕಿಂ ನ ಪ್ರಾಪ್ತಸ್ತವಾತ್ಮಜಃ ॥

ಅನುವಾದ

ಜಗತ್ತಿನಲ್ಲಿ ತನ್ನ ಕೀರ್ತಿಮಯ ಪತಾಕೆಯನ್ನು ಹಾರಾಡಿಸುತ್ತಿರುವ, ಸದಾ ಸತ್ಯವ್ರತದ ಪಾಲನೆಯಲ್ಲಿ ತತ್ಪರನಾದ ಧರ್ಮಸ್ವರೂಪೀ ಸ್ವಾಮಿಯಾದ ನಿನ್ನ ಪುತ್ರ ಶ್ರೀರಾಮನಿಗೆ ಯಾವ ಶ್ರೇಯಸ್ಸು ತಾನೇ ಪ್ರಾಪ್ತವಾಗಲಿಲ್ಲ.॥7॥

ಮೂಲಮ್ - 8

ವ್ಯಕ್ತಂ ರಾಮಸ್ಯ ವಿಜ್ಞಾಯ ಶೌಚಂ ಮಾಹಾತ್ಮ್ಯಮುತ್ತಮಮ್ ।
ನ ಗಾತ್ರಮಂಶುಭಿಃ ಸೂರ್ಯಃ ಸಂತಾಪಯಿತುಮರ್ಹತಿ ॥

ಅನುವಾದ

ಶ್ರೀರಾಮನ ಪವಿತ್ರತೆ ಮತ್ತು ಉತ್ತಮ ಮಾಹಾತ್ಮ್ಯವನ್ನು ತಿಳಿದು ಸೂರ್ಯನೂ ತನ್ನ ಕಿರಣಗಳಿಂದ ಖಂಡಿತವಾಗಿ ಅವನ ಶರೀರವನ್ನು ಸಂತಪ್ತ ಮಾಡಲಾರನು.॥8॥

ಮೂಲಮ್ - 9

ಶಿವಃ ಸರ್ವೇಷು ಕಾಲೇಷುಕಾನನೇಭ್ಯೋ ವಿನಿಃಸೃತಃ ।
ರಾಘವಂ ಯುಕ್ತಶೀತೋಷ್ಣಃ ಸೇವಿಷ್ಯತಿ ಸುಖೋಽನಿಲಃ ॥

ಅನುವಾದ

ಎಲ್ಲ ಕಾಲಗಳಲ್ಲಿ ಚಳಿ ಮತ್ತು ಸೆಕೆಯಿಂದ ಕೂಡಿದ ಸುಖಮಯ ಹಾಗೂ ಮಂಗಲಮಯ ವಾಯುವು ಶ್ರೀರಘುನಾಥನ ಸೇವೆ ಮಾಡುವುದು.॥9॥

ಮೂಲಮ್ - 10

ಶಯಾನಮನಘಂ ರಾತ್ರೌ ಪಿತೇವಾಭಿಪರಿಷ್ವಜನ್ ।
ಧರ್ಮಘ್ನಃ ಸಂಸ್ಪೃಶನ್ ಛೀತಶ್ಚಂದ್ರಮಾ ಹ್ಲಾದಯಿಷ್ಯತಿ ॥

ಅನುವಾದ

ರಾತ್ರಿಯಲ್ಲಿ ಬಿಸಿಲಿನ ಕಷ್ಟ ದೂರಗೊಳಿಸುವ ಶೀತ ಚಂದ್ರನು ಮಲಗಿರುವ ನಿಷ್ಪಾಪ ಶ್ರೀರಾಮನನ್ನು ತನ್ನ ಕಿರಣರೂಪೀ ಕರಗಳಿಂದ ಆಲಿಂಗಿಸಿ, ಸ್ಪರ್ಶಿಸಿ ರಾಮನಿಗೆ ಆಹ್ಲಾದವನ್ನು ಕೊಡುವನು.॥10॥

ಮೂಲಮ್ - 11

ದದೌ ಚಾಸ್ತ್ರಾಣಿ ದಿವ್ಯಾನಿ ಯಸ್ಮೈ ಬ್ರಹ್ಮಾ ಮಹೌಜಸೇ ।
ದಾನವೇಂದ್ರಂ ಹತಂ ದೃಷ್ಟ್ವಾ ತಿಮಿಧ್ವಜಸುತಂ ರಣೇ ॥

ಅನುವಾದ

ಶ್ರೀರಾಮನು ರಣಭೂಮಿಯಲ್ಲಿ ತಿಮಿಧ್ವಜ (ಶಂಬರನ) ಪುತ್ರ ದಾನವೇಂದ್ರ ಸುಬಾಹುವನ್ನು ಕೊಂದಿರುವುದನ್ನು ನೋಡಿ ವಿಶ್ವಾಮಿತ್ರರು ಆ ಮಹಾತೇಜಸ್ವೀ ವೀರರಾಮನಿಗೆ ಬಹಳಷ್ಟು ದಿವ್ಯಾಸ್ತ್ರಗಳನ್ನು ಕರುಣಿಸಿದ್ದರು.॥11॥

ಮೂಲಮ್ - 12

ಸ ಶೂರಃ ಪುರುಷವ್ಯಾಘ್ರಃ ಸ್ವಬಾಹುಬಲಮಾಶ್ರಿತಃ ।
ಅಸಂತ್ರಸ್ತೋ ಹ್ಯರಣ್ಯೇಽಸೌ ವೇಶ್ಮನೀವ ನಿವತ್ಸ್ಯತೇ ॥

ಅನುವಾದ

ಆ ಪುರುಷಸಿಂಹ ಶ್ರೀರಾಮನು ಬಹಳ ಶೂರವೀರನಾಗಿರುವನು. ಅವನು ತನ್ನ ಬಾಹುಬಲವನ್ನು ಆಶ್ರಯಿಸಿ ಅರಮನೆಯಲ್ಲಿ ಇರುವಂತೆಯೇ ಕಾಡಿನಲ್ಲೂ ನಿರ್ಭಯನಾಗಿ ಇರುವನು.॥12॥

ಮೂಲಮ್ - 13

ಯಸ್ಯೇಷುಪಥಮಾಸಾದ್ಯ ವಿನಾಶಂ ಯಾಂತಿ ಶತ್ರವಃ ।
ಕಥಂ ನ ಪೃಥಿವೀ ತಸ್ಯ ಶಾಸನೇ ಸ್ಥಾತುಮರ್ಹತಿ ॥

ಅನುವಾದ

ಯಾರ ಬಾಣಗಳಿಗೆ ಗುರಿಯಾಗಿ ಎಲ್ಲ ಶತ್ರುಗಳು ವಿನಾಶರಾಗುವರೋ, ಅವನ ಶಾಸನದಲ್ಲಿ ಈ ಪೃಥಿವೀ ಮತ್ತು ಇಲ್ಲಿಯ ಪ್ರಾಣಿಗಳು ಹೇಗೆ ಸುಖವಾಗಿ ಇರಲಾರರು.॥13॥

ಮೂಲಮ್ - 14

ಯಾ ಶ್ರೀಃ ಶೌರ್ಯಂ ಚ ರಾಮಸ್ಯ ಯಾ ಚ ಕಲ್ಯಾಣಸತ್ತ್ವತಾ ।
ನಿವೃತ್ತಾರಣ್ಯವಾಸಃ ಸ್ವಂ ಕ್ಷಿಪ್ರಂ ರಾಜ್ಯಮವಾಪ್ಸ್ಯತಿ ॥

ಅನುವಾದ

ರಾಮನಲ್ಲಿರುವ ಶೋಭೆಯಿಂದ, ಪರಾಕ್ರಮದಿಂದ, ಕಲ್ಯಾಣಕಾರಿಣೀ ಶಕ್ತಿಯಿಂದ ಅವನು ಶೀಘ್ರವಾಗಿಯೇ ವನವಾಸದಿಂದ ಬಂದು ತನ್ನ ರಾಜ್ಯವನ್ನು ಪಡೆಯುವನು ಎಂದು ಅನಿಸುತ್ತದೆ.॥14॥

ಮೂಲಮ್ - 15

ಸೂರ್ಯಸ್ಯಾಪಿ ಭವೇತ್ಸೂರ್ಯೋ ಹ್ಯಗ್ನೇರಗ್ನಿಃ ಪ್ರಭೋಃ ಪ್ರಭುಃ ।
ಶ್ರಿಯಾಃ ಶ್ರೀಶ್ಚ ಭವೇದಗ್ರ್ಯಾಕೀರ್ತ್ಯಾಃ ಕೀರ್ತಿಃ ಕ್ಷಮಾಕ್ಷಮಾ ॥

ಮೂಲಮ್ - 16

ದೈವತಂ ದೈವತಾನಾಂ ಚ ಭೂತಾನಾಂ ಭೂತಸತ್ತಮಃ ।
ತಸ್ಯ ಕೇ ಹ್ಯಗುಣಾ ದೇವಿವನೇ ವಾಪ್ಯಥವಾ ಪುರೇ ॥

ಅನುವಾದ

ದೇವಿ! ಶ್ರೀರಾಮನು ಸೂರ್ಯನಿಗೂ ಸೂರ್ಯ (ಪ್ರಕಾಶಕ)ನು, ಅಗ್ನಿಗೂ ಅಗ್ನಿ(ದಾಹಕ)ಯು ಆಗಿರುವನು. ಅವನು ಪ್ರಭುಗಳಿಗೂ ಒಡೆಯನು, ಲಕ್ಷ್ಮಿಗೂ ಉತ್ತಮ ಶ್ರೀಯು, ಕ್ಷಮೆಗೂ ಕ್ಷಮೆಯು ಆಗಿದ್ದಾನೆ. ಇಷ್ಟೇ ಅಲ್ಲ ಅವನು ದೇವತೆಗಳಿಗೂ ದೇವತೆಯಾಗಿದ್ದಾನೆ. ಪ್ರಾಣಗಳಿಗೂ ಉತ್ತಮಪ್ರಾಣನು. ಅವನು ಕಾಡಿನಲ್ಲಿರಲಿ, ನಗರದಲ್ಲಿರಲಿ ಅವನಿಗೆ ಯಾವ ಚರಾಚರ ಪ್ರಾಣಿ ದೋಷಾವಹ ಆಗಬಲ್ಲದು.॥15-16॥

ಮೂಲಮ್ - 17

ಪೃಥಿವ್ಯಾ ಸಹ ವೈದೇಹ್ಯಾ ಶ್ರಿಯಾಚ ಪುರುಷರ್ಷಭಃ ।
ಕ್ಷಿಪ್ರಂ ತಿಸೃಭಿರೇತಾಭಿಃ ಸಹ ರಾಮೋಽಭಿಷೇಕ್ಷ್ಯತಿ ॥

ಅನುವಾದ

ಪುರುಷಶ್ರೇಷ್ಠ ಶ್ರೀರಾಮನು ಬೇಗನೇ ಪೃಥಿವೀ, ಸೀತೆ ಮತ್ತು ಲಕ್ಷ್ಮೀ - ಈ ಮೂವರೊಂದಿಗೆ ರಾಜ್ಯದಲ್ಲಿ ಅಭಿಷಿಕ್ತನಾಗುವನು.॥17॥

ಮೂಲಮ್ - 18

ದುಃಖಜಂ ವಿಸೃಜತ್ಯಶ್ರುನಿಷ್ಕ್ರಾಮಂತಮುದೀಕ್ಷ್ಯಯಮ್ ।
ಅಯೋಧ್ಯಾಯಾಂ ಜನಃ ಸರ್ವಃ ಶೋಕವೇಗಸಮಾಹತಃ ॥

ಮೂಲಮ್ - 19

ಕುಶಚೀರಧರಂ ವೀರಂ ಗಚ್ಛಂತಮಪರಾಜಿತಮ್
ಸೀತೇವಾನುಗತಾ ಲಕ್ಷ್ಮೀಸ್ತಸ್ಯ ಕಿಂ ನಾಮ ದುರ್ಲಭಮ್ ॥

ಅನುವಾದ

ಯಾರು ನಗರದಿಂದ ಹೊರಡುವುದನ್ನು ನೋಡಿ ಅಯೋಧ್ಯೆಯ ಎಲ್ಲ ಜನಸಮುದಾಯವು ಶೋಕದ ವೇಗದಿಂದ ಆಹತವಾಗಿ ಕಣ್ಣುಗಳಿಂದ ದುಃಖದ ಕಣ್ಣೀರು ಹರಿಸುತ್ತಿವೆಯೋ, ನಾರುಮಡಿಯನ್ನು ಧರಸಿ ವನಕ್ಕೆ ಹೋಗುತ್ತಿರುವ ಅಪರಾಜಿತ ನಿತ್ಯವಿಜಯೀ ವೀರನ ಹಿಂದೆ- ಹಿಂದೆ ಸೀತೆಯ ರೂಪದಲ್ಲಿ ಸಾಕ್ಷಾತ್ ಲಕ್ಷ್ಮಿಯೇ ಹೋಗಿರುವಳೋ, ಆ ರಾಮನಿಗಾಗಿ ಏನು ತಾನೇ ದುರ್ಲಭವಾಗಿದೆ.॥18-19॥

ಮೂಲಮ್ - 20

ಧನುರ್ಗ್ರಹವರೋ ಯಸ್ಯ ಬಾಣಖಡ್ಗಾಸ್ತ್ರಭೃತ್ ಸ್ವಯಮ್ ।
ಲಕ್ಷ್ಮಣೋ ವ್ರಜತಿ ಹ್ಯಗ್ರೇ ತಸ್ಯ ಕಿಂ ನಾಮ ದುರ್ಲಭಮ್ ॥

ಅನುವಾದ

ಯಾರ ಮುಂದೆ ಧನುರ್ಧರರಲ್ಲಿ ಶ್ರೇಷ್ಠ ಲಕ್ಷ್ಮಣನು ಸ್ವಯಂ ಬಾಣ ಮತ್ತು ಖಡ್ಗವೇ ಮೊದಲಾದ ಅಸ್ತ್ರಗಳನ್ನು ಧರಿಸಿ ಹೋಗುತ್ತಿರುವನೋ ಆ ರಾಮನಿಗೆ ಜಗತ್ತಿನಲ್ಲಿ ಯಾವ ವಸ್ತು ದುರ್ಲಭವಾಗಿದೆ.॥20॥

ಮೂಲಮ್ - 21

ನಿವೃತ್ತವನವಾಸಂ ತಂ ದ್ರಷ್ಟಾಸಿ ಪುನರಾಗತಮ್ ।
ಜಹಿ ಶೋಕಂ ಚ ಮೋಹಂ ಚ ದೇವಿ ಸತ್ಯಂ ಬ್ರವೀಮಿ ತೇ ॥

ಅನುವಾದ

ದೇವಿ! ನೀನು ವನವಾಸದ ಅವಧಿ ಪೂರ್ಣವಾಗಿ ಇಲ್ಲಿಗೆ ಮರಳಿ ಬಂದ ಶ್ರೀರಾಮನನ್ನು ಮತ್ತೆ ನೋಡುವಿ ಎಂಬುದು ನಾನು ನಿನ್ನಲ್ಲಿ ನಿಜವನ್ನೇ ಹೇಳುವೆನು. ಅದಕ್ಕಾಗಿ ನೀನು ಶೋಕ, ಮೋಹವನ್ನು ಬಿಡು.॥21॥

ಮೂಲಮ್ - 22

ಶಿರಸಾ ಚರಣಾವೇತೌ ವಂದಮಾನಮನಿಂದಿತೇ ।
ಪುನರ್ದ್ರಕ್ಷ್ಯಸಿ ಕಲ್ಯಾಣಿ ಪುತ್ರಂ ಚಂದ್ರಮಿವೋದಿತಮ್ ॥

ಅನುವಾದ

ಕಲ್ಯಾಣಿ! ಅನಿಂದಿತೇ! ನೀನು ನವೋದಿತ ಚಂದ್ರನಂತೆ ನಿನ್ನ ಪುತ್ರನನ್ನು ಪುನಃ ನಿನ್ನ ಚರಣಗಳಲ್ಲಿ ತಲೆಯನ್ನಿಟ್ಟು ನಮಸ್ಕಾರ ಮಾಡುವುದನ್ನು ನೋಡುವಿ.॥22॥

ಮೂಲಮ್ - 23

ಪುನಃ ಪ್ರವಿಷ್ಟಂ ದೃಷ್ಟ್ವಾ ತಮಭಿಷಿಕ್ತಂ ಮಹಾಶ್ರಿಯಮ್ ।
ಸಮುತ್ಸ್ರಕ್ಷ್ಯಸಿ ನೇತ್ರಾಭ್ಯಾಂ ಶೀಘ್ರಮಾನಂದಜಂ ಜಲಮ್ ॥

ಅನುವಾದ

ರಾಜಭವನದಲ್ಲಿ ಪ್ರವೇಶಿಸಿ ಪುನಃ ರಾಜನಾಗಿ ಅಭಿಷಿಕ್ತನಾದ ನಿನ್ನ ಪುತ್ರನು ಅತುಲ ರಾಜಲಕ್ಷ್ಮಿಯಿಂದ ಸಂಪನ್ನನಾದ ಶ್ರೀರಾಮನನ್ನು ನೋಡಿ ನೀನು ಶೀಘ್ರವಾಗಿಯೇ ಕಣ್ಣುಗಳಿಂದ ಆನಂದದ ಅಶ್ರುಗಳನ್ನು ಹರಿಸುವೆ.॥23॥

ಮೂಲಮ್ - 24

ಮಾ ಶೋಕೋ ದೇವಿ ದುಃಖಂ ವಾ ನ ರಾಮೇ ದೃಶ್ಯತೇಽಶಿವಮ್ ।
ಕ್ಷಿಪ್ರಂ ದ್ರಕ್ಷ್ಯಸಿ ಪುತ್ರಂ ತ್ವಂ ಸಸೀತಂ ಸಹಲಕ್ಷ್ಮಣಮ್ ॥

ಅನುವಾದ

ದೇವಿ! ಶ್ರೀರಾಮನಿಗಾಗಿ ನಿನ್ನ ಮನಸ್ಸಿನಲ್ಲಿ ಶೋಕ ಮತ್ತು ದುಃಖ ಆಗಬಾರದು; ಏಕೆಂದರೆ ಅವನಲ್ಲಿ ಯಾವುದೇ ಅಶುಭವಾದ ಮಾತು ಕಂಡುಬರುವುದಿಲ್ಲ. ನೀನು ಸೀತಾ-ಲಕ್ಷ್ಮಣನೊಂದಿಗೆ ನಿನ್ನ ಪುತ್ರ ಶ್ರೀರಾಮನನ್ನು ಬೇಗನೇ ಇಲ್ಲಿ ನೋಡುವೆ.॥24॥

ಮೂಲಮ್ - 25

ತ್ವಯಾಶೇಷೋ ಜನಶ್ಚಾಯಂ ಸಮಾಶ್ವಾಸ್ಯೋ ಯತೋನಘೇ ।
ಕಿಮಿದಾನಿಮಿದಂ ದೇವಿ ಕರೋಷಿ ಹೃದಿ ವಿಕ್ಲವಮ್ ॥

ಅನುವಾದ

ಪಾಪರಹಿತ ದೇವಿ! ನೀನಾದರೋ ಈ ಎಲ್ಲ ಜನರಿಗೆ ಧೈರ್ಯ ಕೊಡಬೇಕು; ಹೀಗಿದ್ದರೂ ಸ್ವತಃ ನೀನೇ ಈಗ ತನ್ನ ಹೃದಯದಲ್ಲಿ ಇಷ್ಟೊಂದು ಏಕೆ ದಃಖಿಸುತ್ತಿರುವೆ.॥25॥

ಮೂಲಮ್ - 26

ನಾರ್ಹಾ ತ್ವಂ ಶೋಚಿತುಂ ದೇವಿ ಯಸ್ಯಾಸ್ತೇ ರಾಘವಃಸುತಃ ।
ನಹಿ ರಾಮಾತ್ಪರೋ ಲೋಕೇ ವಿದ್ಯತೇ ಸತ್ಪಥೇ ಸ್ಥಿತಃ ॥

ಅನುವಾದ

ದೇವಿ! ನೀನು ಶೋಕಿಸಬಾರದು; ಏಕೆಂದರೆ ನಿನಗೆ ರಘುಕುಲನಂದನ ರಾಮನಂತಹ ಮಗನು ಸಿಕ್ಕಿರುವನು. ಶ್ರೀರಾಮನಿಗಿಂತ ಮಿಗಿಲಾಗಿ ಸನ್ಮಾರ್ಗದಲ್ಲಿ ಸ್ಥಿರವಾಗಿರುವ ಮನುಷ್ಯ ಜಗತ್ತಿನಲ್ಲಿ ಬೇರೆ ಯಾರೂ ಇಲ್ಲ.॥26॥

ಮೂಲಮ್ - 27

ಅಭಿವಾದಯಮಾನಂ ತಂ ದೃಷ್ಟ್ವಾಸಸುಹೃದಂ ಸುತಮ್ ।
ಮುದಾಶ್ರು ಮೋಕ್ಷ್ಯಸೇ ಕ್ಷಿಪ್ರಂ ಮೇಘರೇಖೇವ ವಾರ್ಷಿಕೀ ॥

ಅನುವಾದ

ವರ್ಷಾಕಾಲದಲ್ಲಿ ಮೇಘಗಳು ನೀರನ್ನು ಮಳೆಗರೆಯು ವಂತೆಯೇ ಸುಹೃದರೊಂದಿಗೆ ನಿನ್ನ ಪುತ್ರ ಶ್ರೀರಾಮನೂ ನಿನ್ನ ಚರಣಗಳಲ್ಲಿ ನಮಸ್ಕರಿಸುವುದನ್ನು ನೋಡಿ ನೀನು ಆನಂದವಾಗಿ ಹರ್ಷಾಶ್ರುಗಳ ಮಳೆಗರೆಯುವೆ.॥27॥

ಮೂಲಮ್ - 28

ಪುತ್ರಸ್ತೇ ವರದಃ ಕ್ಷಿಪ್ರಮಯೋಧ್ಯಾಂ ಪುನರಾಗತಃ ।
ಕರಾಭ್ಯಾಂ ಮೃದುಪೀನಾಭ್ಯಾಂ ಚರಣೌ ಪೀಡಯಿಷ್ಯತಿ ॥

ಅನುವಾದ

ವರದಾಯಕನಾದ ನಿನ್ನ ಪುತ್ರನು ಪುನಃ ಶೀಘ್ರವಾಗಿಯೇ ಅಯೋಧ್ಯೆಗೆ ಬಂದು ತನ್ನ ಪುಷ್ಟವಾದ ಕೋಮಲ ಕೈಗಳಿಂದ ನಿನ್ನ ಎರಡೂ ಕಾಲುಗಳನ್ನು ಒತ್ತುವನು.॥28॥

ಮೂಲಮ್ - 29

ಅಭಿವಾದ್ಯ ನಮಸ್ಯಂತಂ ಶೂರಂ ಸಸುಹೃದಂ ಸುತಮ್ ।
ಮುದಾಸ್ತ್ರೈಃ ಪ್ರೋಕ್ಷ್ಯಸೇ ಪುತ್ರಂ ಮೇಘರಾಜಿರಿವಾಚಲಮ್ ॥

ಅನುವಾದ

ಸುಹೃದರ ಸಹಿತ ನಿನ್ನ ಶೂರವೀರ ಪುತ್ರನು ನಿನಗೆ ಅಭಿವಾದನಮಾಡುತ್ತಿರುವಾಗ ಮೇಘಗಳು ಪರ್ವತಗಳನ್ನು ತೋಯಿಸುವಂತೆ ನೀನು ಆನಂದಾಶ್ರುಗಳಿಂದ ಅಭಿಷೇಕ ಮಾಡುವಿ.॥29॥

ಮೂಲಮ್ - 30

ಆಶ್ವಾಸಯಂತೀ ವಿವಿಧೈಶ್ಚ ವಾಕ್ಯೈ-
ರ್ವಾಕ್ಯೋಪಚಾರೇ ಕುಶಲಾನವದ್ಯಾ ।
ರಾಮಸ್ಯ ತಾಂ ಮಾತರಮೇವಮುಕ್ತ್ವಾ
ದೇವೀ ಸುಮಿತ್ರಾ ವಿರರಾಮ ರಾಮಾ ॥

ಅನುವಾದ

ಮಾತಿನಲ್ಲಿ ಕುಶಲಳಾದ, ದೋಷ ರಹಿತ ಹಾಗೂ ರಮಣೀಯ ರೂಪವುಳ್ಳ ದೇವೀ ಸುಮಿತ್ರೆಯು ಹೀಗೆ ಬಗೆ-ಬಗೆಯ ಮಾತುಗಳಿಂದ ಶ್ರೀರಾಮಮಾತೆ ಕೌಸಲ್ಯೆಯನ್ನು ಸಮಾಧಾನಪಡಿಸಿ ಸುಮ್ಮನಾದಳು.॥30॥

ಮೂಲಮ್ - 31

ನಿಶಮ್ಯ ತಲ್ಲಕ್ಷ್ಮಣಮಾತೃವಾಕ್ಯಂ
ರಾಮಸ್ಯ ಮಾತುರ್ನರದೇವಪತ್ನ್ಯಾಃ ।
ಸದ್ಯಃ ಶರೀರೇ ವಿನನಾಶ ಶೋಕಃ
ಶರದ್ಗತೋ ಮೇಘ ಇವಾಲ್ಪತೋಯಃ ॥

ಅನುವಾದ

ಲಕ್ಷ್ಮಣನ ತಾಯಿಯ ಮಾತನ್ನು ಕೇಳಿ ದಶರಥನ ಪತ್ನೀ, ಶ್ರೀರಾಮನ ತಾಯಿ ಕೌಸಲ್ಯೆಯ ಎಲ್ಲ ಶೋಕವೂ ಮನಸ್ಸಿನಲ್ಲೇ ವಿಲೀನವಾಯಿತು. ಶರದ್ಋತುವಿನ ಅಲ್ಪ ನೀರುಳ್ಳ ಮೋಡಗಳು ಬೇಗನೇ ಭಿನ್ನ-ಭಿನ್ನವಾಗುವಂತೆ ಆಕೆಯ ಶೋಕವು ಹಾರಿಹೋಯಿತು.॥31॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ನಲವತ್ತನಾಲ್ಕನೆಯ ಸರ್ಗ ಪೂರ್ಣವಾಯಿತು.॥44॥