वाचनम्
ಭಾಗಸೂಚನಾ
ಮಹಾರಾಣಿ ಕೌಸಲ್ಯೆಯ ವಿಲಾಪ
ಮೂಲಮ್ - 1
ತತಃ ಸಮೀಕ್ಷ್ಯ ಶಯನೇ ಸನ್ನಂ ಶೋಕೇನ ಪಾರ್ಥಿವಮ್ ।
ಕೌಸಲ್ಯಾ ಪುತ್ರಶೋಕಾರ್ತಾತಮುವಾಚ ಮಹೀಪತಿಮ್ ॥
ಅನುವಾದ
ಪುತ್ರಶೋಕದಿಂದ ವ್ಯಾಕುಲನಾಗಿ ಶಯ್ಯೆಯಲ್ಲಿ ಬಿದ್ದಿರುವ ಮಹಾರಾಜರನ್ನು ನೋಡಿ, ಪುತ್ರಶೋಕದಿಂದಲೇ ಪೀಡಿತಳಾದ ಕೌಸಲ್ಯೆಯು ರಾಜನ ಬಳಿ ಹೇಳಿದಳು.॥1॥
ಮೂಲಮ್ - 2
ರಾಘವೇ ನರಶಾರ್ದೂಲೇ ವಿಷಂ ಮುಕ್ತ್ವಾಹಿಜಿಹ್ಮಗಾ ।
ವಿಚರಿಷ್ಯತಿ ಕೈಕೇಯೀ ನಿರ್ಮುಕ್ತೇವ ಹಿ ಪನ್ನಗೀ ॥
ಅನುವಾದ
ನರಶ್ರೇಷ್ಠ ಶ್ರೀರಾಮನ ಮೇಲೆ ತನ್ನ ವಿಷವನ್ನು ಚೆಲ್ಲಿ ಅಂಕುಡೊಂಕಾಗಿ ಚಲಿಸುವ ಕೈಕೇಯಿ ಪೊರೆಯನ್ನು ಬಿಟ್ಟು ನೂತನ ಶರೀರದಿಂದ ಪ್ರಕಟವಾದ ಸರ್ಪಿಣಿಯಂತೆ ಈಗ ಸ್ವಚ್ಛಂದವಾಗಿ ಸಂಚರಿಸಲಿ.॥2॥
ಮೂಲಮ್ - 3
ವಿವಾಸ್ಯ ರಾಮಂ ಸುಭಗಾ ಲಬ್ಧಾಕಾಮಾ ಸಮಾಹಿತಾ ।
ತ್ರಾಸಯಿಷ್ಯತಿ ಮಾಂ ಭೂಯೋ ದುಷ್ಟಾಹಿರಿವ ವೇಶ್ಮನಿ ॥
ಅನುವಾದ
ಮನೆಯಲ್ಲಿ ವಾಸಿಸುವ ದುಷ್ಟ ಸರ್ಪವು ಪದೇ-ಪದೇ ಭಯಪಡಿಸುವಂತೆ ಶ್ರೀರಾಮಚಂದ್ರನನ್ನು ವನವಾಸಕ್ಕೆ ಕಳಿಸಿ ಸಫಲ ಮನೋರಥಳಾದ ಸುಭಗೆ ಕೈಕೇಯಿಯು ಸದಾ ಎಚ್ಚರವಾಗಿದ್ದು ನನಗೆ ಕಷ್ಟ ಕೊಡುತ್ತಾ ಇರುವಳು.॥3॥
ಮೂಲಮ್ - 4
ಅಥಾಸ್ಮಿನ್ನಗರೇ ರಾಮಶ್ಚರನ್ ಭೈಕ್ಷಂ ಗೃಹೇ ವಸೇತ್ ।
ಕಾಮಕಾರೋ ವರಂ ದಾತುಮಪಿ ದಾಸಂಮಮಾತ್ಮಜಮ್ ॥
ಅನುವಾದ
ಶ್ರೀರಾಮನು ಈ ನಗರದಲ್ಲಿ ಭಿಕ್ಷೆಬೇಡಿಕೊಂಡು ಮನೆಯಲ್ಲಿದ್ದರೆ ಅಥವಾ ನನ್ನ ಪುತ್ರನನ್ನು ಕೈಕೇಯಿಯು ದಾಸನಾಗಿಸಿಕೊಂಡಿದ್ದರೂ ಅದು ನನಗೆ ವರದಾನವೇ ಆಗುತ್ತಿತ್ತು. (ಏಕೆಂದರೆ ಆ ಸ್ಥಿತಿಯಲ್ಲಿ ನನಗೂ ಶ್ರೀರಾಮನ ದರ್ಶನವಾಗುತ್ತಾ ಇರುತ್ತಿತ್ತು ಶ್ರೀರಾಮನ ವನವಾಸದ ವರವನ್ನು ಕೈಕೇಯಿಯು ನನಗೆ ದುಃಖಕೊಡಲೆಂದೇ ಬೇಡಿರುವಳು.॥4॥
ಮೂಲಮ್ - 5
ಪಾತಯಿತ್ವಾ ತು ಕೈಕೇಯ್ಯಾ ರಾಮಂ ಸ್ಥಾನಾದ್ಯಥೇಷ್ಟತಃ ।
ಪ್ರದಿದ್ಧೋ ರಕ್ಷಸಾಂ ಭಾಗಃ ಪರ್ವಣೀವಾಹಿತಾಗ್ನಿನಾ ॥
ಅನುವಾದ
ಯಾವನಾದರು ಅಗ್ನಿಹೋತ್ರಿಯು ಪರ್ವದಿನದಲ್ಲಿ ದೇವತೆಗಳನ್ನು ಅವರ ಭಾಗದಿಂದ ವಂಚಿತಗೊಳಿಸಿ ಆ ಭಾಗವನ್ನು ರಾಕ್ಷಸರಿಗೆ ಅರ್ಪಿಸಿದಂತೆ ಕೈಕೇಯಿಯು ತನ್ನ ಇಚ್ಛೆಗನುಸಾರ ಶ್ರೀರಾಮನನ್ನು ಅವನ ಸ್ಥಾನದಿಂದ ಭ್ರಷ್ಟಗೊಳಿಸಿರುವಳು.॥5॥
ಮೂಲಮ್ - 6
ನಾಗರಾಜಗತಿರ್ವೀರೋ ಮಹಾಬಾಹುರ್ಧನುರ್ಧರಃ ।
ವನಮಾವಿಶತೇ ನೂನಂ ಸಭಾರ್ಯಃ ಸಹಲಕ್ಷ್ಮಣಃ ॥
ಅನುವಾದ
ಗಜರಾಜನಂತೆ ಮಂದಗತಿಯಲ್ಲಿ ನಡೆಯುವ ವೀರ ಮಹಾಬಾಹು ಧನುರ್ಧರ ಶ್ರೀರಾಮನು ನಿಶ್ಚಯವಾಗಿ ತನ್ನ ಪತ್ನೀ ಮತ್ತು ಲಕ್ಷ್ಮಣನೊಂದಿಗೆ ವನದಲ್ಲಿ ಪ್ರವೇಶ ಮಾಡುತ್ತಿರಬಹುದು.॥6॥
ಮೂಲಮ್ - 7
ವನೇ ತ್ವದೃಷ್ಟದುಃಖಾನಾಂ ಕೈಕೇಯ್ಯಾನುಮತೇ ತ್ವಯಾ ।
ತ್ಯಕ್ತಾನಾಂ ವನವಾಸಾಯ ಕಾನ್ಯಾವಸ್ಥಾ ಭವಿಷ್ಯತಿ ॥
ಅನುವಾದ
ಮಹಾರಾಜರೇ! ಜೀವನದಲ್ಲಿ ಎಂದೂ ದುಃಖವನ್ನೇ ನೋಡದಿರುವ ಶ್ರೀರಾಮ, ಲಕ್ಷ್ಮಣ ಮತ್ತು ಸೀತೆ ಇವರನ್ನು ನೀವು ಕೈಕೇಯಿಯ ಮಾತಿನಂತೆ ಕಾಡಿಗೆ ಕಳಿಸಿಬಿಟ್ಟಿರಿ. ಈಗ ಆ ಬಡಪಾಯಿಗಳಿಗೆ ವನವಾಸದ ಕಷ್ಟಗಳನ್ನು ಅನುಭವಿಸುವುದಲ್ಲದೆ ಬೇರೆ ಯಾವ ಸ್ಥಿತಿಯಾಗಬಹುದು.॥7॥
ಮೂಲಮ್ - 8
ತೇ ರತ್ನಹೀನಾಸ್ತರುಣಾಃ ಫಲಕಾಲೇ ವಿವಾಸಿತಾಃ ।
ಕಥಂ ವತ್ಸ್ಯಂತೀ ಕೃಪಣಾಃ ಫಲಮೂಲೈಃ ಕೃತಾಶನಾಃ ॥
ಅನುವಾದ
ರತ್ನತುಲ್ಯ ಉತ್ತಮ ವಸ್ತುಗಳಿಂದ ವಂಚಿತರಾದ ತರುಣರಾದ ಆ ಮೂವರನ್ನು ಸುಖರೂಪ ಫಲಗಳನ್ನು ಅನುಭವಿಸುವ ಸಮಯದಲ್ಲಿ ಮನೆಯಿಂದ ಹೊರಹಾಕಲಾಯಿತು. ಈಗ ಆ ಬಡಪಾಯಿಗಳು ಫಲ-ಮೂಲಗಳನ್ನು ತಿನ್ನುತ್ತಾ ಹೇಗೆ ಇರಬಲ್ಲರು.॥8॥
ಮೂಲಮ್ - 9
ಅಪೀದಾನೀಂ ಸ ಕಾಲಃ ಸ್ಯಾನ್ಮಮ ಶೋಕಕ್ಷಯಃ ಶಿವಃ ।
ಸಹ ಭಾರ್ಯಂ ಸಹ ಭ್ರಾತ್ರಾ ಪಶ್ಯೇಯಮಿಹ ರಾಘವಮ್ ॥
ಅನುವಾದ
ನನ್ನ ಶೋಕವನ್ನು ನಾಶಗೊಳಿಸುವ ಶುಭ ಸಮಯ ಪುನಃ ಎಂದು ಬರುವುದೋ? ವನವಾಸದಿಂದ ಬಂದ ಸೀತಾಲಕ್ಷ್ಮಣಸಹಿತ ಶ್ರೀರಾಮನನ್ನು ನಾನು ಎಂದು ನೋಡುವೆನೋ.॥9॥
ಮೂಲಮ್ - 10
ಶ್ರುತ್ವೈವೋಪಸ್ಥಿತೌ ವೀರೌ ಕದಾಯೋಧ್ಯಾ ಭವಿಷ್ಯತಿ ।
ಯಶಸ್ವಿನೀ ಹೃಷ್ಟಜನಾ ಸೂಚ್ಛ್ರಿತಧ್ವಜಮಾಲಿನೀ ॥
ಅನುವಾದ
ವೀರ ಶ್ರೀರಾಮ, ಸೀತೆ ಮತ್ತು ಲಕ್ಷ್ಮಣರು ವನವಾಸದಿಂದ ಮರಳಿದರೆಂದು ಕೇಳಿ ಯಶಸ್ವಿನೀ ಅಯೋಧ್ಯೆಯ ಎಲ್ಲ ಜನರು ಹರ್ಷದಿಂದ ಉಬ್ಬಿಹೋಗಿ, ಮನೆ-ಮನೆಗಳಲ್ಲಿ ಎತ್ತರವಾಗಿ ಹಾರಾಡುವ ಧ್ವಜಗಳಿಂದ ಶೋಭಿಸುತ್ತಾ ಇರುವ ಆ ಶುಭಸಂದರ್ಭ ಎಂದು ಪ್ರಾಪ್ತವಾಗುವುದೋ.॥10॥
ಮೂಲಮ್ - 11
ಕದಾ ಪ್ರೇಕ್ಷ್ಯ ನರವ್ಯಾಘ್ರಾವರಣ್ಯಾತ್ ಪುನರಾಗತೌ ।
ಭವಿಷ್ಯತಿ ಪುರೀ ಹೃಷ್ಟಾ ಸಮುದ್ರ ಇವ ಪರ್ವಣಿ ॥
ಅನುವಾದ
ನರಶ್ರೇಷ್ಠ ಶ್ರೀರಾಮ-ಲಕ್ಷ್ಮಣರು ಪುನಃ ವನದಿಂದ ಬಂದಿರುವುದನ್ನು ನೋಡಿ ಈ ಅಯೋಧ್ಯೆಯು ಪೂರ್ಣಿಮೆಯಂದು ಉಕ್ಕುತ್ತಿರುವ ಸಮುದ್ರದಂತೆ ಹರ್ಷೋಲ್ಲಾಸದಿಂದ ಎಂದು ಪರಿಪೂರ್ಣವಾಗುವುದು.॥11॥
ಮೂಲಮ್ - 12
ಕದಾಯೋಧ್ಯಾಂ ಮಹಾಬಾಹುಃ ಪುರೀಂ ವೀರಃ ಪ್ರವೇಕ್ಷ್ಯತಿ ।
ಪುರಸ್ಕೃತ್ಯ ರಥೇ ಸೀತಾಂ ವೃಷಭೋ ಗೋವಧೂಮಿವ ॥
ಅನುವಾದ
ಗೂಳಿಯು ಹಸುವಿನ ಹಿಂದೆಯೇ ಹೋಗುವಂತೆ ಮಹಾಬಾಹು ಶ್ರೀರಾಮನು ರಥದಲ್ಲಿ ಸೀತೆಯನ್ನು ಮುಂದೆ ಕುಳ್ಳಿರಿಸಿಕೊಂಡು ಅಯೋಧ್ಯೆಯನ್ನು ಎಂದು ಪ್ರವೇಶಿಸುವನೋ? ತಿಳಿಯದು.॥12॥
ಮೂಲಮ್ - 13
ಕದಾ ಪ್ರಾಣಿಸಹಸ್ರಾಣಿ ರಾಜಮಾರ್ಗೇ ಮಮಾತ್ಮಜೌ ।
ಲಾಜೈರವಕರಿಷ್ಯಂತಿ ಪ್ರವಿಶಂತಾವರಿಂದಮೌ ॥
ಅನುವಾದ
ಇಲ್ಲಿಯ ಸಾವಿರಾರು ಜನರು ಪುರವನ್ನು ಪ್ರವೇಶಿಸಿ ರಾಜಮಾರ್ಗದಲ್ಲಿ ಬರುತ್ತಿರುವ ನಮ್ಮ ಇಬ್ಬರೂ ಶತ್ರುದಮನ ಪುತ್ರರ ಮೇಲೆ ಅರಳಿನ ಮಳೆ ಎಂದು ಗರೆಯುವರೋ.॥13॥
ಮೂಲಮ್ - 14
ಪ್ರವಿಶಂತೌ ಕದಾಯೋಧ್ಯಾಂ ದ್ರಕ್ಷ್ಯಾಮಿ ಶುಭಕುಂಡಲೌ ।
ಉದಗ್ರಾಯುಧನಿಸ್ತ್ರಿಂಶೌ ಸಶೃಂಗಾವಿವ ಪರ್ವತೌ ॥
ಅನುವಾದ
ಉತ್ತಮ ಆಯುಧ ಹಾಗೂ ಖಡ್ಗಹಿಡಿದ ಶಿಖರಯುಕ್ತ ಪರ್ವತಗಳಂತೆ ಕಂಡು ಬರುವ ಶ್ರೀರಾಮ-ಲಕ್ಷ್ಮಣರು ಸುಂದರ ಕುಂಡಲಗಳಿಂದ ಅಲಂಕೃತರಾಗಿ ಅಯೋಧ್ಯೆಯನ್ನು ಪ್ರವೇಶಿಸಿ ನನ್ನ ಕಣ್ಣಮುಂದೆ ಎಂದು ಪ್ರಕಟರಾಗುವರು.॥14॥
ಮೂಲಮ್ - 15
ಕದಾ ಸಮುನಸಃ ಕನ್ಯಾ ದ್ವಿಜಾತೀನಾಂ ಲಾನಿ ಚ ।
ಪ್ರದಿಶಂತ್ಯಃ ಪುರೀಂ ಹೃಷ್ಟಾಃ ಕರಿಷ್ಯಂತಿ ಪ್ರದಕ್ಷಿಣಮ್ ॥
ಅನುವಾದ
ಬ್ರಾಹ್ಮಣರ ಕನ್ಯೆಯರು ಹರ್ಷದಿಂದ ಹೂವು ಮತ್ತು ಫಲಗಳನ್ನು ಅರ್ಪಿಸುತ್ತಾ ಅಯೋಧ್ಯೆಯ ಪ್ರದಕ್ಷಿಣೆ ಎಂದು ಮಾಡುವರೋ.॥15॥
ಮೂಲಮ್ - 16
ಕದಾ ಪರಿಣತೋ ಬುದ್ಧ್ಯಾವಯಸಾ ಚಾಮರಪ್ರಭಾಃ ।
ಅಭ್ಯುಪೈಷ್ಯತಿ ಧರ್ಮತ್ಮಾ ಸುವರ್ಷ ಇವ ಲಾಲಯನ್ ॥
ಅನುವಾದ
ಪರಿಣತವಾದ ಬುದ್ಧಿಯುಳ್ಳ ವಯಸ್ಸಿನಲ್ಲಿ ದೇವತೆಗಳಂತೆ ನಿತ್ಯಯುವಕನಾದ ಧರ್ಮಾತ್ಮನಾದ ಶ್ರೀರಾಮನು ಉತ್ತಮ ಮಳೆಯಂತೆ ಜನಸಮುದಾಯವನ್ನು ಪಾಲಿಸುತ್ತಾ ಎಂದು ಆಗಮಿಸುವನೋ.॥16॥
ಮೂಲಮ್ - 17
ನಿಃಸಂಶಯಂ ಮಯಾ ಮನ್ಯೇ ಪುರಾ ವೀರ ಕದರ್ಯಯಾ ।
ಪಾತುಕಾಮೇಷು ವತ್ಸೇಷು ಮಾತೄಣಾಂ ಶಾತಿತಾಃ ಸ್ತನಾಃ ॥
ಅನುವಾದ
ಹಿಂದಿನ ಜನ್ಮದಲ್ಲಿ ಕ್ಷುದ್ರೆಯಾದ ನಾನು ಸ್ತನ್ಯಪಾನ ಮಾಡಬೇಕೆಂಬ ಇಚ್ಛೆಯಿಂದ ಕರುಗಳು ಹಸುಗಳ ಬಳಿಗೆ ಹೋದಾಗ ಆ ಹಸುಗಳ ಕೆಚ್ಚಲುಗಳನ್ನೇ ಕತ್ತರಿಸಿರುವೆ ಎಂಬುದರಲ್ಲಿ ಸಂಶಯವೇ ಇಲ್ಲ. ಇಲ್ಲದಿದ್ದರೆ ಇಂತಹ ಪುತ್ರವಿಯೋಗದ ಶೋಕಕ್ಕೆ ನಾನು ಈಡಾಗುತ್ತಿರಲಿಲ್ಲ.॥17॥
ಮೂಲಮ್ - 18
ಸಾಹಂ ಗೌರಿವ ಸಿಂಹೇನ ವಿವತ್ಸಾ ವತ್ಸಲಾ ಕೃತಾ ।
ಕೈಕೇಯ್ಯಾ ಪುರುಷವ್ಯಾಘ್ರ ಬಾಲವತ್ಸೇವ ಗೌರ್ಬಲಾತ್ ॥
ಅನುವಾದ
ಪುರುಷಸಿಂಹ! ಯಾವುದೋ ಸಿಂಹವು ಪುಟ್ಟ ಕರುವುಳ್ಳ ವಾತ್ಸಲ್ಯಮಯಿ ಹಸುವನ್ನು ಬಲವಂತನಾಗಿ ಕರುವಿನಿಂದ ಬೇರ್ಪಡಿಸಿದಂತೆ ಕೈಕೇಯಿಯು ನನ್ನನ್ನು ಬಲವಂತವಾಗಿ ಮಗನಿಂದ ಬೇರ್ಪಡಿಸಿರುವಳು.॥18॥
ಮೂಲಮ್ - 19
ನಹಿ ತಾವದ್ಗುಣೈರ್ಜುಷ್ಟಂ ಸರ್ವಶಾಸ್ತ್ರವಿಶಾರದಮ್ ।
ಏಕಪುತ್ರಾ ವಿನಾ ಪುತ್ರಮಹಂ ಜೀವಿತುಮುತ್ಸಹೇ ॥
ಅನುವಾದ
ಉತ್ತಮ ಗುಣಗಳಿಂದ ಕೂಡಿದ, ಸಮಸ್ತ ಶಾಸ್ತ್ರಗಳಲ್ಲಿ ಪ್ರವೀಣನಾದ ನನ್ನ ಪುತ್ರ ಶ್ರೀರಾಮನು ಇಲ್ಲದೆ, ಏಕಮಾತ್ರ ಪುತ್ರವುಳ್ಳ ನಾನು ಜೀವಿಸಿ ಇರಲಾರೆನು.॥19॥
ಮೂಲಮ್ - 20
ನ ಹಿ ಮೇ ಜೀವಿತೇ ಕಿಂಚಿತ್ಸಾಮರ್ಥ್ಯಮಿಹ ಕಲ್ಪ್ಯತೇ ।
ಅಪಶ್ಯಂತ್ಯಾಃ ಪ್ರಿಯಂ ಪುತ್ರಂ ಲಕ್ಷ್ಮಣಂ ಮಹಾಬಲಮ್ ॥
ಅನುವಾದ
ಈಗ ಪ್ರಿಯಪುತ್ರ ಶ್ರೀರಾಮ ಮತ್ತು ಮಹಾಬಲಿ ಲಕ್ಷ್ಮಣನನ್ನು ನೋಡದೆ ಜೀವಂತವಾಗಿ ಇರುವ ಯಾವ ಶಕ್ತಿಯೂ ನನ್ನಲ್ಲಿ ಇಲ್ಲ.॥20॥
ಮೂಲಮ್ - 21
ಅಯಂ ಹಿ ಮಾಂ ದೀಪಯತೇಽದ್ಯ ವಹ್ನಿ-
ಸ್ತನೂಜಶೋಕಪ್ರಭವೋ ಮಹಾಹಿತಃ ।
ಮಹೀಮಿಮಾಂ ರಶ್ಮಿಭಿರುತ್ತಮಪ್ರಭೋ
ಯಥಾ ನಿದಾಘೇ ಭಗವಾನ್ ದಿವಾಕರಃ ॥
ಅನುವಾದ
ಗ್ರೀಷ್ಮಋತುವಿನಲ್ಲಿ ಉತ್ಕೃಷ್ಟ ಪ್ರತಿಭೆಯುಳ್ಳ ಸೂರ್ಯನು ತನ್ನ ಕಿರಣಗಳಿಂದ ಪೃಥಿವಿಗೆ ಹೆಚ್ಚು ತಾಪವನ್ನು ಕೊಡುವಂತೆಯೇ ಈ ಪುತ್ರಶೋಕ ಜನಿತ ಅಹಿತಕರ ಮಹಾಗ್ನಿಯು ಇಂದು ನನ್ನನ್ನು ಸುಡುತ್ತಾ ಇದೆ.॥21॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ನಲವತ್ತಮೂರನೆಯ ಸರ್ಗ ಪೂರ್ಣವಾಯಿತು.॥43॥