०३८ रामेण दशरथप्रार्थना

वाचनम्
ಭಾಗಸೂಚನಾ

ಸೀತೆಯು ನಾರುಮಡಿಯನ್ನುಡುವುದು ಅನುಚಿತವೆಂದು ದಶರಥನೂ ಹೇಳಿ ಕೈಕೇಯಿಯನ್ನು ನಿಂದಿಸಿದುದು, ಕೌಸಲ್ಯೆಯ ಮೇಲೆ ಕೃಪಾದೃಷ್ಟಿಯನ್ನಿಡುವಂತೆ ಶ್ರೀರಾಮನು ತಂದೆಯನ್ನು ಕೇಳಿಕೊಂಡುದು

ಮೂಲಮ್ - 1

ತಸ್ಯಾಂ ಚೀರಂ ವಸಾನಾಯಾಂ ನಾಥವತ್ಯಾಮನಾಥವತ್ ।
ಪ್ರಚುಕ್ರೋಶ ಜನಃ ಸರ್ವೋ ಧಿಕ್ ತ್ವಾಂ ದಶರಥಂ ತ್ವಿತಿ ॥

ಅನುವಾದ

ನಾಥನಿದ್ದರೂ ಅನಾಥಳಂತೆ ನಾರುಮಡಿಯನ್ನು ಉಡುತ್ತಿದ್ದ ಸೀತಾದೇವಿಯನ್ನು ನೋಡಿ ಎಲ್ಲ ಜನರು ‘ದಶರಥನಿಗೆ ಧಿಕ್ಕಾರ!’ ಎಂದು ಕೂಗಿಕೊಂಡರು.॥1॥

ಮೂಲಮ್ - 2

ತೇನ ತತ್ರ ಪ್ರಣಾದೇನ ದುಃಖಿತಃ ಸ ಮಹೀಪತಿಃ ।
ಚಿಚ್ಛೇದ ಜೀವಿತೇ ಶ್ರದ್ಧಾಂ ಧರ್ಮೇ ಯಶಸಿಚಾತ್ಮನಃ ॥

ಮೂಲಮ್ - 3

ಸ ನಿಃಶ್ವಸ್ಯೋಷ್ಣಮೈಕ್ಷ್ವಾಕಸ್ತಾಂ ಭಾರ್ಯಾಮಿದಮಬ್ರವೀತ್ ।
ಕೈಕೇಯಿ ಕುಶಚೀರೇಣ ನ ಸೀತಾ ಗಂತುಮರ್ಹತಿ ॥

ಅನುವಾದ

ತನ್ನನ್ನು ಧಿಕ್ಕರಿಸುತ್ತಿದ್ದ ಜನರ ಆಕ್ರೋಶವನ್ನು ಕೇಳಿ ಅತಿದುಃಖಿತನಾದ ದಶರಥನು ಜೀವಿತದಲ್ಲಿ, ಧರ್ಮದಲ್ಲಿ, ಯಶಸ್ಸಿನಲ್ಲಿ ಆಸಕ್ತಿಯನ್ನು ಕಳೆದುಕೊಂಡನು. ಬಿಸಿಯಾಗಿ ನಿಟ್ಟಿಸಿರುಬಿಡುತ್ತಾ ಭಾರ್ಯೆಗೆ ಹೇಳಿದನು - ಕೈಕೇಯಿ! ಕುಶ-ಚೀರ (ವಲ್ಕಲ) ವಸ್ತ್ರಗಳನ್ನುಟ್ಟು ಸೀತೆಯು ಕಾಡಿಗೆ ಹೋಗುವುದು ಖಂಡಿತವಾಗಿ ಉಚಿತವಲ್ಲ.॥2-3॥

ಮೂಲಮ್ - 4

ಸುಕುಮಾರೀ ಚ ಬಾಲಾ ಚ ಸತತಂ ಚ ಸುಖೋಚಿತಾ ।
ನೇಯಂ ವನಸ್ಯ ಯೋಗ್ಯೇತಿ ಸತ್ಯಮಾಹ ಗುರುರ್ಮಮ ॥

ಅನುವಾದ

ಇವಳು ಸುಕುಮಾರಿಯಾಗಿರುವಳು, ಸದಾ ಸುಖದಲ್ಲೇ ಬೆಳೆದವಳು. ನಮ್ಮ ಗುರುಗಳು ಸರಿಯಾಗಿಯೇ ಹೇಳುತ್ತಿದ್ದಾರೆ-ಈ ಸೀತೆಯು ಕಾಡಿಗೆ ಹೋಗಲು ಯೋಗ್ಯಳಲ್ಲ.॥4॥

ಮೂಲಮ್ - 5

ಇಯಂ ಹಿ ಕಸ್ಯಾಪಿ ಕರೋತಿ ಕಿಂಚಿತ್
ತಪಸ್ವಿನೀ ರಾಜವರಸ್ಯ ಪುತ್ರೀ ।
ಯಾ ಚೀರಮಾಸಾದ್ಯ ಜನಸ್ಯ ಮಧ್ಯೇ
ಸ್ಥಿತಾ ವಿಸಂಜ್ಞಾ ಶ್ರಮಣೀವ ಕಾಚಿತ್ ॥

ಅನುವಾದ

ರಾಜರಲ್ಲಿ ಶ್ರೇಷ್ಠರಾದ ಜನಕನ ಈ ತಪಸ್ವೀ ಪುತ್ರಿಯು ಯಾರದಾದರೂ ಏನಾದರು ಕೆಡಿಸಬಲ್ಲಳೇ? ಅವಳು ಈ ಪ್ರಕಾರ ಜನಸಮುದಾಯಕದ ನಡುವೆ ಏನೂ ತಿಳಿಯದೆ ಕಿಂಕರ್ತವ್ಯವಿಮೂಢ ಭಿಕ್ಷುಕನಂತೆ ವಲ್ಕಲ ಧರಿಸಿ ನಿಂತುಕೊಂಡಿರುವಳಲ್ಲ.॥5॥

ಮೂಲಮ್ - 6

ಚೀರಾಣ್ಯಪಾಸ್ವಾಜ್ಜನಕಸ್ಯ ಕನ್ಯಾ
ನೇಯಂ ಪ್ರತಿಜ್ಞಾ ಮಮ ದತ್ತಪೂರ್ವಾ ।
ಯಥಾಸುಖಂ ಗಚ್ಛತು ರಾಜಪುತ್ರೀ
ವನಂ ಸಮಗ್ರಾ ಸಹ ಸರ್ವರತ್ನೈಃ ॥

ಅನುವಾದ

ಜನಕನಂದಿನೀ ತನ್ನ ವಲ್ಕಲಗಳನ್ನು ಕಿತ್ತೆಸೆಯಲಿ. ಇವಳು ಈ ರೂಪದಿಂದ ಕಾಡಿಗೆ ಹೋಗಬೇಕೆಂದು ನಾನು ಪ್ರತಿಜ್ಞೆಯನ್ನು ಮಾಡಿಲ್ಲ ಹಾಗೂ ಯಾರಿಗೂ ಈ ರೀತಿಯ ಮಾತು ಕೊಟ್ಟಿಲ್ಲ. ಆದ್ದರಿಂದ ರಾಜಕುಮಾರೀ ಸೀತೆಯು ಸಮಸ್ತ ವಸ್ತ್ರಾಲಂಕಾರದಿಂದ ಕೂಡಿದ್ದು, ಅವಳು ಸಖವಾಗಿರುವಂತಹ ಎಲ್ಲ ಪ್ರಕಾರದ ರತ್ನಗಳ ಜೊತೆಗೆ ವನಕ್ಕೆ ಹೋಗಬಲ್ಲಳು.॥6॥

ಮೂಲಮ್ - 7

ಅಜೀವನಾರ್ಹೇಣ ಮಯಾ ನೃಶಂಸಾ
ಕೃತಾ ಪ್ರತಿಜ್ಞಾ ನಿಯಮೇನ ತಾವತ್ ।
ತ್ವಯಾ ಹಿ ಬಾಲ್ಯಾತ್ಪ್ರತಿಪನ್ನಮೇತತ್
ತನ್ಮಾಂ ದಹೇದ್ವೇಣುಮಿವಾತ್ಮಪುಷ್ಪಮ್ ॥

ಅನುವಾದ

ನಾನು ಜೀವಿಸಿರಲು ಯೋಗ್ಯನಲ್ಲ. ನಾನು ನಿನ್ನ ಮರಳುಮಾತಿನಲ್ಲಿ ಸಿಲುಕಿ ಒಂದು ಇಂತಹ ಪ್ರತಿಜ್ಞೆ ಮಾಡಿದೆ, ಇನ್ನೊಂದು ನೀನು ಮೂರ್ಖತೆಯಿಂದ ಸೀತೆಗೆ ಇಂತಹ ನಾರುಮಡಿ ಉಡಿಸಲುತೊಡಗಿದೆ. ಬಿದಿರಿನ ಹೂವು ಅದನ್ನೇ ಒಣಗಿಸಿಬಿಡುವಂತೆ ನಾನು ಮಾಡಿದ ಪ್ರತಿಜ್ಞೆಯೇ ನನ್ನನ್ನು ಬೂದಿ ಮಾಡುತ್ತಿದೆ.॥7॥

ಮೂಲಮ್ - 8

ರಾಮೇಣ ಯದಿ ತೇ ಪಾಪೇ ಕಿಂಚಿತ್ಕೃತಮಶೋಭನಮ್ ।
ಅಪಕಾರಃ ಕ ಇಹ ತೇ ವೈದೇಹ್ಯಾ ದರ್ಶಿತೋಽಧಮೇ ॥

ಅನುವಾದ

ನೀಚ ಪಾಪಿನೀ! ಶ್ರೀರಾಮನು ನಿನ್ನ ಯಾವುದಾದರೂ ಅಪರಾಧ ಮಾಡಿದ್ದರೆ (ಅವನಿಗೆ ನೀನು ವನವಾಸ ಕೊಟ್ಟಿರುವೆ), ವಿದೇಹನಂದಿನೀ ಸೀತೆಯು ಇಂತಹ ಶಿಕ್ಷೆ ಅನುಭವಿಸಲು ನಿನಗೆ ಯಾವ ಅಪಕಾರ ಮಾಡಿರುವಳು.॥8॥

ಮೂಲಮ್ - 9

ಮೃಗೀವೋತ್ಫುಲ್ಲನಯನಾ ಮೃದುಶೀಲಾ ಮನಸ್ವಿನೀ ।
ಅಪಕಾರಂ ಕಮಿವ ತೇ ಕರೋತಿ ಜನಕಾತ್ಮಜಾ ॥

ಅನುವಾದ

ಯಾರ ಕಣ್ಣುಗಳು ಜಿಂಕೆಯಂತೆ ಅರಳಿವೆಯೋ, ಯಾರ ಸ್ವಭಾವ ಅತ್ಯಂತ ಕೋಮಲ ಮತ್ತು ಮಧುರವಾಗಿದೆಯೋ. ಆ ಬುದ್ಧಿವಂತ ಜನಕನಂದಿನಿ ನಿನಗೆ ಯಾವ ಅಪರಾಧ ಮಾಡುತ್ತಿದ್ದಾಳೆ.॥9॥

ಮೂಲಮ್ - 10

ನನು ಪರ್ಯಾಪ್ತಮೇವಂ ತೇ ಪಾಪೇ ರಾಮವಿವಾಸನಮ್ ।
ಕಿಮೇಭಿಃ ಕೃಪಣೈಭೂರ್ಯಃ ಪಾತಕೈರಪಿ ತೇ ಕೃತೈಃ ॥

ಅನುವಾದ

ಪಾಪಿನೀ! ನೀನು ಶ್ರೀರಾಮನಿಗೆ ವನವಾಸ ವಿಧಿಸಿ ಪೂರ್ಣ ಪಾಪ ಗಳಿಸಿರುವೆ. ಈಗ ಸೀತೆಯನ್ನು ಕಾಡಿಗೆ ಕಳಿಸುವ ಹಾಗೂ ವಲ್ಕಲಗಳನ್ನು ಉಡಿಸುವ ಅತ್ಯಂತ ದುಃಖಮಯ ಕಾರ್ಯಮಾಡಿ ಪುನಃ ನೀನು ಇಷ್ಟು ಪಾಪವನ್ನು ಏಕೆ ಬಾಚಿ ಕೊಳ್ಳುತ್ತಿರುವೆ.॥10॥

ಮೂಲಮ್ - 11

ಪ್ರತಿಜ್ಞಾತಂ ಮಯಾ ತಾವತ್ ತ್ವಯೋಕ್ತಂ ದೇವಿ ಶೃಣ್ವತಾ ।
ರಾಮಂ ಯದಭಿಷೇಕಾಯ ತ್ವಮಿಹಾಗತಮಬ್ರವೀಃ ॥

ಅನುವಾದ

ದೇವಿ! ಶ್ರೀರಾಮ ಪಟ್ಟಾಭಿಷೇಕಕ್ಕೆ ಸಿದ್ಧನಾಗಿ ಇಲ್ಲಿಗೆ ಬಂದಾಗ ನಾನು ಕೇಳುತ್ತಿರುವಂತೆ ನೀನು ಅವನಲ್ಲಿ ಏನನ್ನು ಹೇಳಿರುವೆಯೋ ಅಷ್ಟೇ ನಾನು ಪ್ರತಿಜ್ಞೆ ಮಾಡಿದ್ದೆ. ಅದನ್ನು ಮೀರಿ ನಾನು ಪ್ರತಿಜ್ಞೆ ಮಾಡಿರಲಿಲ್ಲ.॥11॥

ಮೂಲಮ್ - 12

ತತ್ತ್ವೇತತ್ ಸಮತಿಕ್ರಮ್ಯ ನಿರಯಂ ಗಂತುಮಿಚ್ಛಸಿ ।
ಮೈಥಿಲೀಮಪಿ ಯಾ ಹಿ ತ್ವಮೀಕ್ಷಸೇ ಚೀರವಾಸಿನೀಮ್ ॥

ಅನುವಾದ

ಇದನ್ನು ಉಲ್ಲಂಘಿಸಿ ಮಿಥಿಲೇಶಕುಮಾರೀ ಜಾನಕಿಯೂ ನಾರುಮಡಿಯನ್ನು ಉಡುವುದನ್ನು ನೀನು ನೋಡ ಬಯಸುತ್ತಿರುವೆ. ನೀನು ನರಕಕ್ಕೆ ಹೋಗಲು ಇಚ್ಛಿಸುತ್ತಿರುವೆ ಎಂದು ಅನಿಸುತ್ತದೆ.॥12॥

ಮೂಲಮ್ - 13

ಏವಂ ಬ್ರುವಂತಂ ಪಿತರಂ ರಾಮಃ ಸಂಪ್ರಸ್ಥಿತೋ ವನಮ್ ।
ಅವಾಕ್ಶಿರಸಮಾಸೀನಮಿದಂ ವಚನಮಬ್ರವೀತ್ ॥

ಅನುವಾದ

ದಶರಥನು ತಲೆಯನ್ನು ತಗ್ಗಿಸಿ ಕುಳಿತು ಈ ಪ್ರಕಾರ ಹೇಳುತ್ತಿದ್ದಂತೆ ಆಗ ವನವಾಸಕ್ಕೆ ಹೊರಟ ಶ್ರೀರಾಮನು ತಂದೆಯ ಬಳಿ ಈ ಪ್ರಕಾರ ಹೇಳಿದನು.॥13॥

ಮೂಲಮ್ - 14

ಇಯಂ ಧಾರ್ಮಿಕ ಕೌಸಲ್ಯಾ ಮಮ ಮಾತಾ ಯಶಸ್ವಿನೀ ।
ವೃದ್ಧಾ ಚಾಕ್ಷುದ್ರಶೀಲಾ ಚ ನ ಚ ತ್ವಾಂ ದೇವ ಗರ್ಹತೇ ॥

ಮೂಲಮ್ - 15

ಮಯಾ ವಿಹೀನಾಂ ವರದ ಪ್ರಪನ್ನಾಂ ಶೋಕಸಾಗರಮ್ ।
ಅದೃಷ್ಟಪೂರ್ವವ್ಯಸನಾಂ ಭೂಯಃ ಸಮ್ಮಂತುಮರ್ಹಸಿ ॥

ಅನುವಾದ

ಧರ್ಮಾತ್ಮನೇ! ಈ ನನ್ನ ತಾಯಿ ಕೌಸಲ್ಯೆಯು ವೃದ್ಧಳಾಗುತ್ತಾ ಇದ್ದಾಳೆ. ಅವಳ ಸ್ವಭಾವ ಬಹಳ ಉಚ್ಚ ಮತ್ತು ಉದಾರವಾಗಿದೆ. ಸ್ವಾಮಿ! ಅವಳು ಎಂದೂ ನಿಮ್ಮನ್ನು ನಿಂದಿಸಿಲ್ಲ. ಆಕೆಯು ಮೊದಲು ಎಂದೂ ಇಂತಹ ಭಾರೀ ಸಂಕಟವನ್ನು ನೋಡಿರಲಿಲ್ಲ. ವರದಾಯಕ ನರೇಶ! ಅವಳು ನಾನು ಇಲ್ಲದಿರುವ ಶೋಕಸಮುದ್ರದಲ್ಲಿ ಮುಳುಗಿ ಹೋಗುವಳು. ಆದ್ದರಿಂದ ನೀವು ಸದಾಕಾಲ ಅವಳ ಹೆಚ್ಚು ಸಮ್ಮಾನ ಮಾಡುತ್ತಾ ಇರಿ.॥14-15॥

ಮೂಲಮ್ - 16

ಪುತ್ರಶೋಕಂ ಯಥಾ ನರ್ಚ್ಛೇತ್ತ್ವಯಾ ಪೂಜ್ಯೇನ ಪೂಜಿತಾ ।
ಮಾಂ ಹಿ ಸಂಚಿಂತಯಂತೀ ಸಾ ತ್ವಯಿ ಜೀವೇತ್ತಪಸ್ವಿನೀ ॥

ಅನುವಾದ

ನಿಮ್ಮಂತಹ ಪೂಜ್ಯತಮ ಪತಿಯಿಂದ ಸಮ್ಮಾನಿತಳಾಗಿ ಈ ಪ್ರಕಾರದ ಪುತ್ರಶೋಕವನ್ನು ಅನುಭವಿಸದಿರಲಿ. ನನ್ನನ್ನು ಚಿಂತಿಸುತ್ತಾ ನಿಮ್ಮ ಆಶ್ರಯದಲ್ಲೇ ನನ್ನ ತಪಸ್ವಿನೀ ಮಾತೆಯು ಜೀವನಧಾರಣ ಮಾಡುವಂತೆ ಪ್ರಯತ್ನ ಮಾಡಿರಿ.॥16॥

ಮೂಲಮ್ - 17

ಇಮಾಂ ಮಹೇಂದ್ರೋಪಮ ಜಾತಗರ್ಧಿನೀಂ
ತಥಾ ವಿಧಾತುಂ ಜನನೀಂ ಮಮಾರ್ಹಸಿ ।
ಯಥಾ ವನಸ್ಥೇ ಮಯಿ ಶೋಕಕರ್ಶಿತಾ
ನ ಜೀವಿತಂ ನ್ಯಸ್ಯ ಯಮಕ್ಷಯಂ ವ್ರಜೇತ್ ॥

ಅನುವಾದ

ಇಂದ್ರನಂತಹ ತೇಜಸ್ವೀ ಮಹಾರಾಜರೇ! ಅವಳು ಅಗಲಿದ ಮಗನನ್ನು ನೋಡಲು ಉತ್ಸುಕಳಾಗಿರುವಳು. ನಾನು ವನದಲ್ಲಿ ಇರುವಾಗಲೇ ಇವಳು ಶೋಕದಿಂದ ಕಾತರಳಾಗಿ ಪ್ರಾಣತ್ಯಾಗ ಮಾಡಿ ಯಮಲೋಕಕ್ಕೆ ಹೋಗುವಂತೆ ಆಗದಿರಲಿ. ಆದ್ದರಿಂದ ನೀವು ನನ್ನ ತಾಯಿಯನ್ನು ಮೇಲಿನ ಆಶಂಕೆಗೆ ಅವಕಾಶ ಕೊಡದೆ ಇರುವ ಪರಿಸ್ಥಿತಿಯಲ್ಲಿ ಇರಿಸಿರಿ.॥17॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ಮೂವತ್ತೆಂಟನೆಯ ಸರ್ಗ ಪೂರ್ಣವಾಯಿತು.॥38॥