०६२ अम्बरीशयज्ञः

वाचनम्
ಭಾಗಸೂಚನಾ

ವಿಶ್ವಾಮಿತ್ರರಿಂದ ಶುನಃಶೇಪನ ರಕ್ಷಣೆಯ ಸಫಲ ಪ್ರಯತ್ನ ಮತ್ತು ತಪಸ್ಸು

ಮೂಲಮ್ - 1

ಶುನಃಶೇಪಂ ನರಶ್ರೇಷ್ಠ ಗೃಹೀತ್ವಾ ತು ಮಹಾಯಶಾಃ
ವ್ಯಶ್ರಮತ್ ಪುಷ್ಕರೇ ರಾಜಾ ಮಧ್ಯಾಹ್ನೇ ರಘುನಂದನ ॥

ಅನುವಾದ

(ಶತಾನಂದರು ಹೇಳುತ್ತಿದ್ದಾರೆ) - ನರಶ್ರೇಷ್ಠ ರಘುನಂದನ! ಮಹಾಯಶಸ್ವೀ ರಾಜಾ ಅಂಬರೀಷನು ಶುನಃಶೇಪನನ್ನು ಜೊತೆಗೆ ಕರೆದುಕೊಂಡು ಮಧ್ಯಾಹ್ನದ ಸಮಯಕ್ಕೆ ಪುಷ್ಕರ ತೀರ್ಥಕ್ಕೆ ಬಂದು ಅಲ್ಲಿ ವಿಶ್ರಮಿಸಿದನು.॥1॥

ಮೂಲಮ್ - 2

ತಸ್ಯ ವಿಶ್ರಮಮಾಣಸ್ಯ ಶುನಃಶೇಪೋ ಮಹಾಯಶಾಃ ।
ಪುಷ್ಕರಂ ಶ್ರೇಷ್ಠಮಾಗಮ್ಯ ವಿಶ್ವಾಮಿತ್ರಂ ದದರ್ಶ ಹ ॥

ಮೂಲಮ್ - 3½

ತಪ್ಯಂತಮೃಷಿಭಿಃ ಸಾರ್ಧಂ ಮಾತುಲಂ ಪರಮಾತುರಃ ।
ವಿಷಣ್ಣವದನೋ ದೀನಸ್ತೃಷ್ಣಯಾ ಚ ಶ್ರಮೇಣ ಚ ॥
ಪಪಾತಾಂಕೇ ಮುನೇರಾಮ ವಾಕ್ಯಂ ಚೇದಮುವಾಚ ಹ ।

ಅನುವಾದ

ಶ್ರೀರಾಮಾ! ಅವನು ವಿಶ್ರಮಿಸತೊಡಗಿದಾಗ ಮಹಾ ಯಶಸ್ವೀ ಶುನಃಶೇಪನು ಜ್ಯೇಷ್ಠ ಪುಷ್ಕರದಲ್ಲಿ ಋಷಿಗಳೊಡನೆ ತಪಸ್ಸು ಮಾಡುತ್ತಿದ್ದ ಮಾವನಾದ ವಿಶ್ವಾಮಿತ್ರರನ್ನು ಭೆಟ್ಟಿಯಾದನು. ಅವನು ಅತ್ಯಂತ, ದೀನನಾಗಿದ್ದು, ಮುಖ ಬಾಡಿಹೋಗಿತ್ತು. ಹಸಿವು ಬಾಯಾರಿಕೆ ಮತ್ತು ಆಯಾಸದಿಂದ ದೀನನಾಗಿ ಮುನಿಯ ತೊಡೆಯಲ್ಲಿ ಬಿದ್ದುಬಿಟ್ಟನು ಹಾಗೂ ಹೇಳಿದನು.॥2-3½॥

ಮೂಲಮ್ - 4½

ನ ಮೇಽಸ್ತಿ ಮಾತಾ ನ ಪಿತಾ ಜ್ಞಾತಯೋ ಬಾಂಧವಾಃ ಕುತಃ ॥
ತ್ರಾತುಮರ್ಹಸಿ ಮಾಂ ಸೌಮ್ಯ ಧರ್ಮೇಣ ಮುನಿಪುಂಗವ ।

ಅನುವಾದ

ಸೌಮ್ಯ ಮುನಿಪುಂಗವರೇ! ನನಗೆ ತಂದೆಯಾಗಲಿ, ತಾಯಿಯಾಗಲಿ, ಬಂಧು-ಬಾಂಧವರಾಗಲಿ ಯಾರೂ ಇಲ್ಲ. ನಾನು ಅಸಹಾಯನಾಗಿದ್ದೇನೆ, ಆದ್ದರಿಂದ ನೀವೇ ಧರ್ಮದಿಂದ ನನ್ನನ್ನು ಕಾಪಾಡಬೇಕು.॥4½॥

ಮೂಲಮ್ - 5

ತ್ರಾತಾ ತ್ವಂ ಹಿ ನರಶ್ರೇಷ್ಠ ಸರ್ವೇಷಾಂ ತ್ವಂ ಹಿ ಭಾವನಃ ॥

ಮೂಲಮ್ - 6

ರಾಜಾ ಚ ಕೃತಕಾರ್ಯಃ ಸ್ಯಾದಹಂ ದೀರ್ಘಾಯುರವ್ಯಯಃ ।
ಸ್ವರ್ಗಲೋಕಮುಪಾಶ್ನೀಯಾಂ ತಪಸ್ತಪ್ತ್ವಾಹ್ಯನುತ್ತಮಮ್ ॥

ಅನುವಾದ

ನರಶ್ರೇಷ್ಠರೇ! ನೀವು ಎಲ್ಲರ ರಕ್ಷಕರಾಗಿರುವಿರಿ ಹಾಗೂ ಬೇಕಾದ ವಸ್ತುವನ್ನು ಪ್ರಾಪ್ತಿಮಾಡಿಸಿಕೊಡುವವರಾಗಿದ್ದೀರಿ. ಈ ರಾಜನೂ ಕೃತಾರ್ಥನಾಗಿ, ನಾನೂ ವಿಕಾರರಹಿತ ದೀರ್ಘಾಯುಷ್ಯ ಹೊಂದಿ, ಸರ್ವೋತ್ತಮ ತಪಸ್ಸು ಮಾಡಿ ಸ್ವರ್ಗಲೋಕವನ್ನು ಪಡೆಯುವಂತೆ ನನ್ನ ಮೇಲೆ ಕೃಪೆ ಮಾಡಿರಿ.॥5-6॥

ಮೂಲಮ್ - 7

ಸ ಮೇ ನಾಥೋ ಹ್ಯನಾಥಸ್ಯ ಭವ ಭವ್ಯೇನ ತೇಜಸಾ ।
ಪಿತೇವ ಪುತ್ರಂ ಧರ್ಮಾತ್ಮಂಸ್ತ್ರಾತುಮರ್ಹಸಿ ಕಿಲ್ಬಿಷಾತ್ ॥

ಅನುವಾದ

ಧರ್ಮಾತ್ಮರೇ! ನೀವು ನಿರ್ಮಲಚಿತ್ತದಿಂದ ಅನಾಥನಾದ ನನಗೆ ನಾಥರಾಗಿ (ಸಂರಕ್ಷಕರಾಗಿರುವಿರಿ). ತಂದೆಯು ತನ್ನ ಪುತ್ರನನ್ನು ರಕ್ಷಿಸುವಂತೆ ನೀವು ನನ್ನ ಈ ಪಾಪ ಮೂಲಕ ವಿಪತ್ತಿನಿಂದ ಉದ್ಧರಿಸಿರಿ.॥7॥

ಮೂಲಮ್ - 8

ತಸ್ಯ ತದ್ವಚನಂ ಶ್ರುತ್ವಾ ವಿಶ್ವಾಮಿತ್ರೋ ಮಹಾತಪಾಃ ।
ಸಾನ್ತ್ವಯಿತ್ವಾ ಬಹುವಿಧಂ ಪುತ್ರಾನಿದಮುವಾಚ ಹ ॥

ಅನುವಾದ

ಶುನಃಶೇಪನ ಈ ಮಾತನ್ನು ಕೇಳಿ ಮಹಾತಪಸ್ವಿ ವಿಶ್ವಾಮಿತ್ರರು ಅವನನ್ನು ಅನೇಕ ವಿಧದಿಂದ ಸಾಂತ್ವನ ಮಾಡಿ ತನ್ನ ಪುತ್ರರಲ್ಲಿ ಈ ಪ್ರಕಾರ ಹೇಳಿದರು.॥8॥

ಮೂಲಮ್ - 9

ಯತ್ಕೃತೇಪಿತರಃ ಪುತ್ರಾಂಜನಯಂತಿ ಶುಭಾರ್ಥಿನಃ ।
ಪರಲೋಕಹಿತಾರ್ಥಾಯ ತಸ್ಯ ಕಾಲೋಽಯಮಾಗತಃ ॥

ಅನುವಾದ

ಮಕ್ಕಳಿರಾ! ಶುಭವನ್ನು ಬಯಸುವ ತಂದೆಯು ಯಾವ ಪಾರಲೌಕಿಕ ಹಿತದ ಉದ್ದೇಶದಿಂದ ಪುತ್ರರನ್ನು ಪಡೆಯುತ್ತಾನೋ, ಅದರ ಪೂರ್ಣತೆಯ ಸಮಯ ಈಗ ಬಂದಿದೆ.॥9॥

ಮೂಲಮ್ - 10

ಅಯಂ ಮುನಿಸುತೋ ಬಾಲೋ ಮತ್ತಃ ಶರಣಮಿಚ್ಛತಿ ।
ಅಸ್ಯಜೀವಿತಮಾತ್ರೇಣ ಪ್ರಿಯಂ ಕುರುತ ಪುತ್ರಕಾಃ ॥

ಅನುವಾದ

ಪುತ್ರರೇ! ಈ ಮುನಿಕುಮಾರನು ನನ್ನಿಂದ ತನ್ನ ರಕ್ಷಣೆಯನ್ನು ಬಯಸುತ್ತಿದ್ದಾನೆ. ನೀವು ತಮ್ಮ ಎಲ್ಲ ಜಿವನವನ್ನು ಕೊಟ್ಟು ಇವನಿಗೆ ಪ್ರಿಯವಾದುದನ್ನು ಮಾಡಿರಿ.॥10॥

ಮೂಲಮ್ - 11

ಸರ್ವೇ ಸುಕೃತಕರ್ಮಾಣಃ ಸರ್ವೇ ಧರ್ಮಪರಾಯಣಾಃ ।
ಪಶುಭೂತಾ ನರೇಂದ್ರಸ್ಯ ತೃಪ್ತಿಮಗ್ನೇಃ ಪ್ರಯಚ್ಛತ ॥

ಅನುವಾದ

ನೀವೆಲ್ಲರೂ ಪುಣ್ಯಾತ್ಮರು ಮತ್ತು ಧರ್ಮಪರಾಯಣ ಆಗಿರುವಿರಿ. ಆದ್ದರಿಂದ ರಾಜನ ಯಜ್ಞದಲ್ಲಿ ಪಶುವಾಗಿ ಯಜ್ಞೇಶ್ವರನನ್ನು ತೃಪ್ತಿಪಡಿಸಿರಿ.॥11॥

ಮೂಲಮ್ - 12

ನಾಥವಾಂಶ್ಚ ಶುನಃಶೇಪೋ ಯಜ್ಞಶ್ಚಾವಿಘ್ನತೋ ಭವೇತ್ ।
ದೇವತಾಸ್ತರ್ಪಿತಾಶ್ಚ ಸ್ಯುರ್ಮಮ ಚಾಪಿ ಕೃತಂ ವಚಃ ॥

ಅನುವಾದ

ಇದರಿಂದ ಶುನಃಶೇಪನ ಉದ್ಧಾರವಾದೀತು, ರಾಜನ ಯಜ್ಞವು ನಿರ್ವಿಘ್ನವಾಗಿ ಪೂರ್ಣವಾಗುವುದು, ದೇವತೆಗಳೂ ತೃಪ್ತರಾಗುವರು. ನಿಮ್ಮಿಂದ ನನ್ನ ಆಜ್ಞಾಪಾಲನೆ ಆದಂತಾಗುವುದು.॥12॥

ಮೂಲಮ್ - 13

ಮುನೇಸ್ತದ್ ವಚನಂ ಶ್ರುತ್ವಾ ಮಧುಚ್ಛಂದಾದಯಃ ಸುತಾಃ ।
ಸಾಭಿಮಾನಂ ನರಶ್ರೇಷ್ಠ ಸಲೀಲಮಿದಮಬ್ರುವನ್ ॥

ಅನುವಾದ

ನರಶ್ರೇಷ್ಠನೇ! ವಿಶ್ವಾಮಿತ್ರಮುನಿಯ ಆ ಮಾತನ್ನು ಕೇಳಿ, ಮಧುಚ್ಛಂದರೆ ಆದಿ ಅವನ ಪುತ್ರರು ಅಭಿಮಾನ ಮತ್ತು ಅವಹೇಳನಕಾರಿ ಮಾತನ್ನು ಈ ರೀತಿಯಾಗಿ ನುಡಿದರು.॥13॥

ಮೂಲಮ್ - 14

ಕಥಮಾತ್ಮಸುತಾನ್ ಹಿತ್ವಾ ತ್ರಾಯಸೇಽನ್ಯಸುತಂ ವಿಭೋ ।
ಅಕಾರ್ಯಮಿವ ಪಶ್ಯಾಮಃ ಶ್ವಮಾಂಸಮಿವ ಭೋಜನೇ ॥

ಅನುವಾದ

ಸ್ವಾಮಿ! ನೀವು ನಿಮ್ಮ ಅನೇಕ ಪುತ್ರರನ್ನು ತ್ಯಜಿಸಿ ಬೇರೆಯವರ ಪುತ್ರನನ್ನು ಹೇಗೆ ರಕ್ಷಿಸುವಿರಿ? ಪವಿತ್ರ ಭೋಜನದಲ್ಲಿ, ನಾಯಿಯ ಮಾಂಸ ಬಿದ್ದರೆ ಅಗ್ರಾಹ್ಯವಾಗುವಂತೆ, ಎಲ್ಲಿ ನಿಮ್ಮ ಪುತ್ರರ ರಕ್ಷಣೆ ಅವಶ್ಯಕವಿರುವಾಗ ಅಲ್ಲಿ ಬೇರೆಯವರ ಪುತ್ರನನ್ನು ರಕ್ಷಿಸುವುದು ಅಕರ್ತವ್ಯವೆಂದೇ ನಾವು ತಿಳಿಯುತ್ತೇವೆ.॥14॥

ಮೂಲಮ್ - 15

ತೇಷಾಂ ತದ್ವಚನಂ ಶ್ರುತ್ವಾ ಪುತ್ರಾಣಾಂ ಮುನಿಪುಂಗವಃ ।
ಕ್ರೋಧಸಂರಕ್ತನಯನೋ ವ್ಯಾಹರ್ತುಮುಪಚಕ್ರಮೇ ॥

ಅನುವಾದ

ಪುತ್ರರ ಆ ಮಾತನ್ನು ಕೇಳಿ ಮುನಿವರ ವಿಶ್ವಾಮಿತ್ರರ ಕಣ್ಣುಗಳು ಸಿಟ್ಟಿನಿಂದ ಕೆಂಡವಾದವು. ಅವರು ಈ ಪ್ರಕಾರ ಹೇಳತೊಡಗಿದರು.॥15॥

ಮೂಲಮ್ - 16

ನಿಃಸಾಧ್ವಸಮಿದಂ ಪ್ರೋಕ್ತಂ ಧರ್ಮಾದಪಿ ವಿಗರ್ಹಿತಮ್ ।
ಅತಿಕ್ರಮ್ಯ ತು ಮದ್ವಾಕ್ಯಂ ದಾರುಣಂ ರೋಮಹರ್ಷಣಮ್ ॥

ಮೂಲಮ್ - 17

ಶ್ವಮಾಂಸಭೋಜಿನಃ ಸರ್ವೇ ವಾಸಿಷ್ಠಾ ಇವ ಜಾತಿಷು ।
ಪೂರ್ಣಂ ವರ್ಷಸಹಸ್ರಂ ತು ಪೃಥಿವ್ಯಾಮನುವತ್ಸ್ಯಥ ॥

ಅನುವಾದ

ಎಲಾ! ನೀವು ನಿರ್ಭಯರಾಗಿ ಧರ್ಮರಹಿತ ಹಾಗೂ ನಿಂದಿತವಾದ ಮಾತನ್ನು ಆಡಿದಿರಲ್ಲ! ನನ್ನ ಆಜ್ಞೆಯನ್ನು ಉಲ್ಲಂಘಿಸಿ ಈ ದಾರುಣ ಮತ್ತು ರೋಮಾಂಚಕರ ಮಾತು ನಿಮ್ಮ ಬಾಯಿಯಿಂದ ಹೊರಟಿತಲ್ಲ! ಈ ಅಪರಾಧದಿಂದಾಗಿ ನೀವೆಲ್ಲರೂ ವಸಿಷ್ಠರ ಪುತ್ರರಂತೆ ನಾಯಿಯ ಮಾಂಸ ತಿನ್ನುವ ಮುಷ್ಠಿಕ ಮೊದಲಾದ ಜಾತಿಯಲ್ಲಿ ಹುಟ್ಟಿ ಒಂದು ಸಾವಿರ ವರ್ಷಗಳವರೆಗೆ ಈ ಪೃಥ್ವಿಯಲ್ಲಿರುವಿರಿ.॥16-17॥

ಮೂಲಮ್ - 18

ಕೃತ್ವಾ ಶಾಪಸಮಾಯುಕ್ತಾನ್ ಪುತ್ರಾನ್ಮುನಿವರಸ್ತದಾ ।
ಶುನಃಶೇಪಮುವಾಚಾರ್ತಂ ಕೃತ್ವಾ ರಕ್ಷಾಂ ನಿರಾಮಯಾಮ್ ॥

ಅನುವಾದ

ಈ ಪ್ರಕಾರ ತನ್ನ ಪುತ್ರರನ್ನು ಶಪಿಸಿ ಮುನಿವರ ವಿಶ್ವಾಮಿತ್ರರು ಆಗ ಶೋಕಾರ್ತ ಶುನಃಶೇಪನನ್ನು ನಿರ್ವಿಘ್ನವಾಗಿ ರಕ್ಷಿಸಿ ಅವನಲ್ಲಿ ಇಂತೆಂದರು.॥18॥

ಮೂಲಮ್ - 19

ಪವಿತ್ರಪಾಶೈರಾಬದ್ಧೋ ರಕ್ತಮಾಲ್ಯಾನುಲೇಪನಃ ।
ವೈಷ್ಣವಂ ಯೂಪಮಾಸಾದ್ಯ ವಾಗ್ಭಿರಗ್ನಿ ಮುದಾಹರ ॥

ಮೂಲಮ್ - 20

ಇಮೇ ಚ ಗಾಥೇ ದ್ವೇ ದಿವ್ಯೇ ಗಾಯೇಥಾ ಮುನಿಪುತ್ರಕ ।
ಅಂಬರೀಷಸ್ಯ ಯಜ್ಞೇಽಸ್ಮಿಂಸ್ತತಃ ಸಿದ್ಧಿಮಮಾಪ್ಸ್ಯಸಿ ॥

ಅನುವಾದ

ಮುನಿಕುಮಾರ! ಅಂಬರೀಷನ ಈ ಯಜ್ಞದಲ್ಲಿ ನಿನ್ನನ್ನು ದರ್ಭೆಗಳೇ ಆದಿ ಪವಿತ್ರ ಪಾಶಗಳಿಂದ ಬಂಧಿಸಿ, ಕೆಂಪು ಹೂವುಗಳ ಮಾಲೆಯನ್ನು ತೊಡಿಸಿ, ಕೆಂಪು ಚಂದನವನ್ನು ಹಚ್ಚಿದಂತಹ ನೀನು ವಿಷ್ಣುದೇವತಾ ಸಂಬಂಧೀ ಯೂಪದ ಬಳಿಗೆ ಹೋಗಿ ವಾಣಿಯಿಂದ ಅಗ್ನಿಯ (ಇಂದ್ರ ಮತ್ತು ವಿಷ್ಣುವಿನ) ಸ್ತುತಿಸುತ್ತಾ ಈ ಎರಡು ದಿವ್ಯ ಗಾಥೆ (ಸೂಕ್ತ) ಗಳನ್ನು ಗಾನಮಾಡು. ಇದರಿಂದ ನೀನು ಮನೋವಾಂಛಿತ ಸಿದ್ಧಿಯನ್ನು ಪಡೆದುಕೊಳ್ಳುವೆ.॥19-20॥

ಮೂಲಮ್ - 21

ಶುನಃಶೇಪೋ ಗೃಹೀತ್ವಾ ತು ದ್ವೇ ಗಾಥೇ ಸುಸಮಾಹಿತಃ ।
ತ್ವರಯಾ ರಾಜಸಿಂಹಂ ತಮಂಬರೀಷಮುವಾಚ ಹ ॥

ಅನುವಾದ

ಶುನಃಶೇಪನು ಏಕಾಗ್ರಚಿತ್ತನಾಗಿ ಎರಡು ಗಾಥೆಗಳನ್ನು ಗ್ರಹಿಸಿದನು ಹಾಗೂ ರಾಜಸಿಂಹ ಅಂಬರೀಷನ ಬಳಿಗೆ ಹೋಗಿ ಅವನಲ್ಲಿ ಅವಸರವಾಗಿ ಇಂತೆಂದನು.॥21॥

ಮೂಲಮ್ - 22

ರಾಜಸಿಂಹ ಮಹಾಬುದ್ಧೇ ಶೀಘ್ರಂ ಗಚ್ಛಾವಹೇ ವಯಮ್ ।
ನಿರ್ವರ್ತಯಸ್ವ ರಾಜೇಂದ್ರ ದೀಕ್ಷಾಂ ಚ ಸಮುದಾಹರ ॥

ಅನುವಾದ

ರಾಜೇಂದ್ರನೇ! ಪರಮಬುದ್ಧಿವಂತ ರಾಜಸಿಂಹನೇ! ಈಗ ನಾವಿಬ್ಬರೂ ಬೇಗನೇ ಹೋಗೋಣ. ನೀವುಯಜ್ಞದ ದೀಕ್ಷೆ ಕೈಗೊಳ್ಳಿರಿ ಹಾಗೂ ಯಜ್ಞಕಾರ್ಯ ನೆರವೇರಿಸಿರಿ.॥22॥

ಮೂಲಮ್ - 23

ತದ್ವಾಕ್ಯಮೃಷಿಪುತ್ರಸ್ಯ ಶ್ರುತ್ವಾ ಹರ್ಷಸಮನ್ವಿತಃ ।
ಜಗಾಮ ನೃಪತಿಃ ಶೀಘ್ರಂ ಯಜ್ಞವಾಟಮತಂದ್ರಿತಃ ॥

ಅನುವಾದ

ಋಷಿಕುವಾರನ ಆ ಮಾತನ್ನು ಕೇಳಿ ಅಂಬರೀಷನು ಆಲಸ್ಯ ಬಿಟ್ಟು, ಹರ್ಷಗೊಂಡು ಶೀಘ್ರವಾಗಿ ಯಜ್ಞಶಾಲೆಗೆ ಹೋದನು.॥23॥

ಮೂಲಮ್ - 24

ಸದಸ್ಯಾನುಮತೇ ರಾಜಾ ಪವಿತ್ರಕೃತಲಕ್ಷಣಮ್ ।
ಪಶುಂ ರಕ್ತಾಂಬರಂ ಕೃತ್ವಾ ಯೂಪೇ ತಂ ಸಮಬಂಧಯತ್ ॥

ಅನುವಾದ

ಅಲ್ಲಿ ಸದಸ್ಯರ ಅನುಮತಿ ಪಡೆದು ಅಂಬರೀಷರಾಜನು ಶುನಃಶೇಪನನ್ನು ಕುಶಗಳ ಪವಿತ್ರ ಪಾಶಗಳಿಂದ ಬಂಧಿಸಿ ಅವನನ್ನು ಪಶುವಿನ ಲಕ್ಷಣ ಸಂಪನ್ನನಾಗಿಸಿದನು. ಯಜ್ಞಪಶುವಿಗೆ ತೊಡಿಸುವ ಕೆಂಪುವಸ್ತ್ರ ಉಡಿಸಿ ಯೂಪಕ್ಕೆ ಕಟ್ಟಿಹಾಕಿದನು.॥24॥

ಮೂಲಮ್ - 25

ಸ ಬದ್ಧೋ ವಾಗ್ಬಿರಗ್ರಯಾಭಿರಭಿತುಷ್ಟಾವ ವೈಸುರೌ ।
ಇಂದ್ರಮಿಂದ್ರಾನುಜಂ ಚೈವ ಯಥಾವನ್ಮುನಿಪುತ್ರಕಃ ॥

ಅನುವಾದ

ಬಂಧಿತನಾದ ಮುನಿಪುತ್ರ ಶುನಃಶೇಪನು ಉತ್ತಮವಾಣಿಯಿಂದ ಇಂದ್ರ ಮತ್ತು ಉಪೇಂದ್ರ ಈ ಇಬ್ಬರು ದೇವತೆಗಳನ್ನು ಯಥಾವತ್ತಾಗಿ ಸ್ತುತಿಸಿದನು.॥25॥

ಮೂಲಮ್ - 26

ತತಃ ಪ್ರೀತಃ ಸಹಸ್ರಾಕ್ಷೋ ರಹಸ್ಯಸ್ತುತಿತೋಷಿತಃ ।
ದೀರ್ಘಮಾಯುಸ್ತದಾ ಪ್ರಾದಾಚ್ಛುನಃಶೇಪಾಯ ವಾಸವಃ ॥

ಅನುವಾದ

ಆ ರಹಸ್ಯ ತುಂಬಿದ ಸ್ತುತಿಯಿಂದ ಸಂತುಷ್ಟನಾಗಿ ಸಹಸ್ರಾಕ್ಷ ಇಂದ್ರನು ಬಹಳ ಸಂತೋಷಗೊಂಡನು. ಆಗ ಅವನು ಶುನಃಶೇಪನಿಗೆ ದೀರ್ಘಾಯುಷ್ಯವನ್ನು ಕರುಣಿಸಿದನು.॥26॥

ಮೂಲಮ್ - 27

ಸ ಚ ರಾಜಾ ನರಶ್ರೇಷ್ಠ ಯಜ್ಞಸ್ಯ ಚ ಸಮಾಪ್ತವಾನ್ ।
ಫಲಂ ಬಹುಗುಣಂ ರಾಮ ಸಹಸ್ರಾಕ್ಷಪ್ರಸಾದಜಮ್ ॥

ಅನುವಾದ

ನರಶ್ರೇಷ್ಠ ಶ್ರೀರಾಮನೇ! ರಾಜಾ ಅಂಬರೀಷನು ದೇವೇಂದ್ರನ ಕೃಪೆಯಿಂದ ಆ ಯಜ್ಞದ ಬಹುರೂಪ ಸಂಪನ್ನ ಉತ್ತಮ ಫಲವನ್ನು ಪಡೆದುಕೊಂಡನು.॥27॥

ಮೂಲಮ್ - 28

ವಿಶ್ವಾಮಿತ್ರೋಽಪಿ ಧರ್ಮಾತ್ಮಾ ಭೂಯಸ್ತೇಪೇ ಮಹಾತಪಾಃ ।
ಪುಷ್ಕರೇಷು ನರಶ್ರೇಷ್ಠ ದಶವರ್ಷಶತಾನಿ ಚ ॥

ಅನುವಾದ

ಪುರುಷಪ್ರವರನೇ! ಅನಂತರ ಮಹಾತಪಸ್ವಿ ಧರ್ಮಾತ್ಮ ವಿಶ್ವಾಮಿತ್ರರೂ ಕೂಡ ಪುಷ್ಕರ ಕ್ಷೇತ್ರದಲ್ಲಿ ಪುನಃ ಒಂದು ಸಾವಿರ ವರ್ಷ ತೀವ್ರ ತಪ್ಪಸ್ಸನ್ನಾಚರಿಸಿದರು.॥28॥

ಅನುವಾದ (ಸಮಾಪ್ತಿಃ)

ವಾಲ್ಮೀಕಿ ವಿರಚಿತ ಆರ್ಷ ರಾಮಾಯಣ ಆದಿಕಾವ್ಯದ ಬಾಲಕಾಂಡದಲ್ಲಿ ಅರವತ್ತೆರಡನೆಯ ಸರ್ಗ ಪೂರ್ಣವಾಯಿತು. ॥62॥