वाचनम्
ಭಾಗಸೂಚನಾ
ತ್ರಿಶಂಕುವಿನ ಯಜ್ಞ ಮಾಡಿಸಲು ವಿಶ್ವಾಮಿತ್ರರ ಅಂಗೀಕಾರ, ಋಷಿ-ಮುನಿಗಳಿಗೆ ಯರ್ತ್ವಿಜ್ಯಕ್ಕಾಗಿ ಆಹ್ವಾನ, ಆಮಂತ್ರಣವನ್ನು ತಿರಸ್ಕರಿಸಿದ ಮಹೋದಯನಿಗೂ, ವಸಿಷ್ಠರ ಪುತ್ರರಿಗೂ ವಿಶ್ವಾಮಿತ್ರರು ಶಾಪಕೊಟ್ಟು ನಾಶಮಾಡಿದುದು
ಮೂಲಮ್ - 1
ಉಕ್ತವಾಕ್ಯಂ ತು ರಾಜಾನಂ ಕೃಪಯಾ ಕುಶಿಕಾತ್ಮಜಃ ।
ಅಬ್ರವೀನ್ಮಧುರಂ ವಾಕ್ಯಂ ಸಾಕ್ಷಾಚ್ಚಂಡಾಲತಾಂ ಗತಮ್ ॥
ಅನುವಾದ
(ಶತಾನಂದರು ಹೇಳುತ್ತಿದ್ದಾರೆ) - ಶ್ರೀರಾಮಾ! ಸಾಕ್ಷಾತ್ ಚಾಂಡಾಲ ಸ್ವರೂಪವನ್ನು ಪಡೆದ ತ್ರಿಶಂಕು ಆಡಿದ ಮಾತನ್ನು ಕೇಳಿ ಕುಶಿಕನಂದನ ವಿಶ್ವಾಮಿತ್ರರು ದಯಾರ್ದ್ರರಾಗಿ ಅವನಲ್ಲಿ ಮಧುರ ವಚನಗಳನ್ನು ಹೇಳಿದರು-॥1॥
ಮೂಲಮ್ - 2
ಇಕ್ಷ್ವಾಕೋ ಸ್ವಾಗತಂ ವತ್ಸ ಜಾನಾಮಿ ತ್ವಾಂ ಸುಧಾರ್ಮಿಕಮ್ ।
ಶರಣಂತೇ ಪ್ರದಾಸ್ಯಾಮಿ ಮಾ ಭೈಷಿರ್ನೃಪಪುಂಗವ ॥
ಅನುವಾದ
ವತ್ಸ! ಇಕ್ಷ್ವಾಕು ಕುಲನಂದನ! ನಿನಗೆ ಸ್ವಾಗತವಿರಲಿ. ನೀನು ಧರ್ಮಾತ್ಮನಾಗಿರುವುದನ್ನು ನಾನು ಬಲ್ಲೆ. ನೃಪತಿಯೇ! ಹೆದರಬೇಡ, ನಾನು ನಿನಗೆ ಆಶ್ರಯಕೊಡುವೆನು.॥2॥
ಮೂಲಮ್ - 3
ಅಹಮಾಮಂತ್ರಯೇ ಸರ್ವಾನ್ ಮಹರ್ಷೀನ್ಪುಣ್ಯಕರ್ಮಣಃ ।
ಯಜ್ಞಸಾಹ್ಯಕರಾನ್ರಾಜಂಸ್ತತೋ ಯಕ್ಷ್ಯಸಿ ನಿರ್ವೃತಃ ॥
ಅನುವಾದ
ರಾಜನೇ! ನಿನ್ನ ಯಜ್ಞದಲ್ಲಿ ಸಹಾಯ ಮಾಡುವ ಸಮಸ್ತ ಪುಣ್ಯಾತ್ಮರಾದ ಮಹರ್ಷಿಗಳನ್ನು ನಾನು ಆಮಂತ್ರಿಸುವೆನು, ಮತ್ತೆ ನೀನು ಆನಂದವಾಗಿ ಯಜ್ಞಮಾಡು.॥3॥
ಮೂಲಮ್ - 4
ಗುರುಶಾಪಕೃತಂ ರೂಪಂ ಯದಿದಂ ತ್ವಯಿ ವರ್ತತೇ ।
ಅನೇನ ಸಹ ರೂಪೇಣ ಸಶರೀರೋ ಗಮಿಷ್ಯಸಿ ॥
ಮೂಲಮ್ - 5
ಹಸ್ತಪ್ರಾಪ್ತಮಹಂ ಮನ್ಯೇ ಸ್ವರ್ಗಂ ತವ ನರಾಧಿಪ ।
ಯಸ್ತ್ವಂ ಕೌಶಿಕಮಾಗಮ್ಯ ಶರಣ್ಯಂ ಶರಣಾಗತಃ ॥
ಅನುವಾದ
ಗುರುಗಳ ಶಾಪದಿಂದ ನಿನಗೆ ಉಂಟಾದ ಈ ರೂಪದಿಂದಲೇ ನೀನು ಸದೇಹ ಸ್ವರ್ಗಲೋಕಕ್ಕೆ ಹೋಗುವೆ. ನರೇಶ್ವರ! ಶರಣಾಗತ ವತ್ಸಲ ವಿಶ್ವಾಮಿತ್ರರಲ್ಲಿ ನೀನು ಶರಣು ಬಂದಿರುವೆ. ಇದರಿಂದ ಸ್ವರ್ಗಲೋಕವು ನಿನ್ನ ಕೈಯಲ್ಲೇ ಇದೆ ಎಂದು ನಾನು ತಿಳಿಯುತ್ತೇನೆ.॥4-5॥
ಮೂಲಮ್ - 6
ಏವಮುಕ್ತ್ವಾ ಮಹಾತೇಜಾಃ ಪುತ್ರಾನ್ಪರಮಧಾರ್ಮಿಕಾನ್ ।
ವ್ಯಾದಿದೇಶ ಮಹಾಪ್ರಾಜ್ಞಾನ್ ಯಜ್ಞಸಂಭಾರಕಾರಣಾತ್ ॥
ಅನುವಾದ
ಹೀಗೆ ಹೇಳಿ ಮಹಾತೇಜಸ್ವೀ ವಿಶ್ವಾಮಿತ್ರರು ತನ್ನ ಪರಮ ಧರ್ಮಪರಾಯಣ ಮಹಾಜ್ಞಾನಿ ಪುತ್ರರಿಗೆ ಯಜ್ಞದ ಸಾಮಗ್ರಿಯನ್ನು ಒಟ್ಟುಗೂಡಿಸಲು ಆಜ್ಞಾಪಿಸಿದರು.॥6॥
ಮೂಲಮ್ - 7½
ಸರ್ವಾನ್ ಶಿಷ್ಯಾನ್ಸಮಾಹೂಯ ವಾಕ್ಯಮೇತದುವಾಚ ಹ ।
ಸರ್ವಾನೃಷೀನ್ಸವಾಸಿಷ್ಠಾನಾನಯಧ್ವಂ ಮಮಾಜ್ಞಯಾ ॥
ಸಶಿಷ್ಯಾನ್ ಸುಹೃದಶ್ಚೈವ ಸರ್ತ್ವಿಜಃ ಸುಬಹುಶ್ರುತಾನ್ ।
ಅನುವಾದ
ಅನಂತರ ಸಮಸ್ತ ಶಿಷ್ಯರನ್ನು ಕರೆದು ಅವರಲ್ಲಿ ಹೇಳಿದರು - ನೀವು ನನ್ನ ಅಪ್ಪಣೆಯಂತೆ ಅನೇಕ ವಿಷಯಗಳಲ್ಲಿ ಜ್ಞಾನಿಗಳಾದ ಸಮಸ್ತ ಋಷಿ-ಮುನಿಗಳನ್ನು ಅದರಲ್ಲಿ ವಸಿಷ್ಠರ ಮಕ್ಕಳೂ ಸೇರಿ, ಅವರ ಶಿಷ್ಯರು, ಸುಹೃದರು ಹಾಗೂ ಋತ್ವಿಜರೊಂದಿಗೆ ಕರೆದುಕೊಂಡು ಬನ್ನಿ.॥7½॥
ಮೂಲಮ್ - 8½
ಯದನ್ಯೋ ವಚನಂಬ್ರೂಯಾನ್ಮದ್ವಾಕ್ಯಬಲಚೋದಿತಃ ॥
ತತ್ಸರ್ವಮಖಿಲೇನೋಕ್ತಂ ಮಮಾಖ್ಯೇಯಮನಾದೃತಮ್ ।
ಅನುವಾದ
ನನ್ನ ಸಂದೇಶದಂತೆ ಆಮಂತ್ರಿಸಿದವರು ಅಥವಾ ಬೇರೆ ಯಾರಾದರೂ ಈ ಯಜ್ಞದ ವಿಷಯದಲ್ಲಿ ಏನಾದರೂ ಅವಹೇಳನಕಾರಿ ಮಾತಾಡಿದರೆ ನೀವು ಬಂದು ಅವೆಲ್ಲವನ್ನು ಪೂರ್ಣವಾಗಿ ನನಗೆ ತಿಳಿಸುವುದು.॥8½॥
ಮೂಲಮ್ - 9
ತಸ್ಯ ತದ್ವಚನಂ ಶ್ರುತ್ವಾ ದಿಶೋ ಜಗ್ಮುಸ್ತದಾಜ್ಞಯಾ ॥
ಮೂಲಮ್ - 10½
ಅಜಗ್ಮುರಥ ದೇಶೇಭ್ಯಃ ಸರ್ವೇಭ್ಯೋ ಬ್ರಹ್ಮವಾದಿನಃ ।
ತೇ ಚ ಶಿಷ್ಯಾಃ ಸಮಾಗಮ್ಯ ಮುನಿಂಜ್ವಲಿತತೇಜಸಮ್ ॥
ಊಚುಶ್ಚ ವಚನಂ ಸರ್ವಂ ಸರ್ವೇಷಾಂ ಬ್ರಹ್ಮವಾದಿನಾಮ್ ।
ಅನುವಾದ
ಅವರ ಅಪ್ಪಣೆಯನ್ನು ಪಡೆದು ಎಲ್ಲ ಶಿಷ್ಯರು ನಾಲ್ಕು ದಿಕ್ಕುಗಳಿಗೂ ತೆರಳಿದರು. ಮತ್ತೆ ಎಲ್ಲ ದೇಶಗಳಿಂದ ಬ್ರಹ್ಮಾದಿ ಮುನಿಗಳು ಬರತೊಡಗಿದರು. ವಿಶ್ವಾಮಿತ್ರರ ಆ ಶಿಷ್ಯರು ಆ ಪ್ರಜ್ವಲಿತ ತೇಜಸ್ಸುಳ್ಳ ಮಹರ್ಷಿಗಳ ಬಳಿಗೆ ಎಲ್ಲರಿಗಿಂತ ಮೊದಲು ಮರಳಿ ಬಂದು, ಸಮಸ್ತ ಬ್ರಹ್ಮವಾದಿಗಳು ಹೇಳಿದ ಎಲ್ಲ ಮಾತುಗಳನ್ನು ವಿಶ್ವಾಮಿತ್ರರಲ್ಲಿ ತಿಳಿಸಿದರು.॥9-10½॥
(ಶ್ಲೋಕ 11½)
ಮೂಲಮ್
ಶ್ರುತ್ವಾ ತೇ ವಚನಂ ಸರ್ವೇ ಸಮಾಯಾಂತಿ ದ್ವಿಜಾತಯಃ ॥
ಸರ್ವದೇಶೇಷು ಚಾಗಚ್ಛನ್ ವರ್ಜಯಿತ್ವಾ ಮಹೋದಯಮ್ ।
ಅನುವಾದ
ಶಿಷ್ಯರು ಹೇಳುತ್ತಿದ್ದಾರೆ-ಗುರುದೇವ! ತಮ್ಮ ಆದೇಶ ಸಂದೇಶ ಕೇಳಿ ಪ್ರಾಯಶಃ ಎಲ್ಲ ದೇಶಗಳಲ್ಲಿರುವ ಎಲ್ಲ ಬ್ರಾಹ್ಮಣರು ಬರುತ್ತಿದ್ದಾರೆ. ಕೇವಲ ಮಹೋದಯ ಎಂಬ ಋಷಿ ಮತ್ತು ವಸಿಷ್ಠರ ಪುತ್ರರನ್ನು ಬಿಟ್ಟು ಎಲ್ಲ ಮಹರ್ಷಿಗಳು ಇಲ್ಲಿಗೆ ಬರಲು ಹೊರಟಿದ್ದಾರೆ.॥11½॥
(ಶ್ಲೋಕ 12½)
ಮೂಲಮ್
ವಾಸಿಷ್ಠಂ ಯಚ್ಛತಂ ಸರ್ವಂ ಕ್ರೋಧಪರ್ಯಾಕುಲಾಕ್ಷರಮ್ ॥
ಯಥಾಹ ವಚನಂ ಸರ್ವಂ ಶೃಣು ತ್ವಂ ಮುನಿಪುಂಗವ ।
ಅನುವಾದ
ಮುನಿಶ್ರೇಷ್ಠರೇ! ವಸಿಷ್ಠರ ನೂರು ಮಂದಿ ಪುತ್ರರು ಕ್ರೋಧದಿಂದ ಆಡಿದ ಮಾತನ್ನು ನೀವು ಕೇಳಿರಿ.॥12½॥
ಮೂಲಮ್ - 13
ಕ್ಷತ್ರಿಯೋ ಯಾಜಕೋ ಯಸ್ಯ ಚಂಡಾಲಸ್ಯವಿಶೇಷತಃ ॥
ಮೂಲಮ್ - 14½
ಕಥಂ ಸದಸಿ ಭೋಕ್ತಾರೋ ಹವಿಸ್ತಸ್ಯ ಸುರರ್ಷಯಃ ।
ಬ್ರಾಹ್ಮಣಾ ವಾ ಮಹಾತ್ಮಾನೋ ಭುಕ್ತ್ವಾ ಚಾಂಡಾಲಭೋಜನಮ್ ॥
ಕಥಂ ಸ್ವರ್ಗಂ ಗಮಿಷ್ಯಂತಿ ವಿಶ್ವಾಮಿತ್ರೇಣ ಪಾಲಿತಾಃ ।
ಅನುವಾದ
ಅವರು ಹೇಳುತ್ತಿದ್ದಾರೆ-ಯಾರು ವಿಶೇಷವಾಗಿ ಚಾಂಡಾಲನಾಗಿರುವನೋ ಅವನ ಯಜ್ಞ ಮಾಡಿಸುವ ಆಚಾರ್ಯನು ಕ್ಷತ್ರಿಯನಾಗಿರುವನೋ, ಆ ಯಜ್ಞದಲ್ಲಿ ದೇವರ್ಷಿ ಅಥವಾ ಮಹಾತ್ಮಾ ಬ್ರಾಹ್ಮಣರು ಹವಿಷ್ಯಾನ್ನವನ್ನು ಹೇಗೆ ಊಟಮಾಡಬಲ್ಲರು? ಅಥವಾ ಚಾಂಡಾಲನ ಅನ್ನವನ್ನು ತಿಂದು ವಿಶ್ವಾಮಿತ್ರನಿಂದ ಪಾಲಿತರಾದ ಬ್ರಾಹ್ಮಣರು ಸ್ವರ್ಗಕ್ಕೆ ಹೇಗೆ ಹೋಗಬಲ್ಲರು.॥13-14½॥
(ಶ್ಲೋಕ 15½)
ಮೂಲಮ್
ಏತದ್ವಚನನೈಷ್ಠುರ್ಯಮೂಚುಃ ಸಂರಕ್ತಲೋಚನಾಃ ॥
ವಾಸಿಷ್ಠಾ ಮುನಿಶಾದೂರ್ಲ ಸರ್ವೇ ತೇ ಸಮಹೋದಯಾಃ ।
ಅನುವಾದ
ಮುನಿಶ್ರೇಷ್ಠರೇ! ಮಹೋದಯನೊಂದಿಗೆ ವಸಿಷ್ಠರ ಎಲ್ಲ ಪುತ್ರರು ಸಿಟ್ಟಿನಿಂದ ಕಣ್ಣು ಕೆಂಪಾಗಿಸಿ, ಮೇಲೆ ಹೇಳಿದ ನಿಷ್ಠುರವಾದ ಈ ಮಾತುಗಳನ್ನು ಹೇಳಿದ್ದರು.॥15½॥
(ಶ್ಲೋಕ 16½)
ಮೂಲಮ್
ತೇಷಾಂ ತದ್ವಚನಂ ಶ್ರುತ್ವಾ ಸರ್ವೇಷಾಂ ಮುನಿಪುಂಗವಃ ॥
ಕ್ರೋಧಸಂರಕ್ತನಯನಃ ಸರೋಷಮಿದಮಬ್ರವೀತ್ ।
ಅನುವಾದ
ಅವರೆಲ್ಲರ ಈ ಮಾತನ್ನು ಕೇಳಿ ಮುನಿವರ ವಿಶ್ವಾಮಿತ್ರರ ಕಣ್ಣುಗಳು ಕ್ರೋಧದಿಂದ ಕೆಂಪಾದವು ಹಾಗೂ ರೋಷಗೊಂಡು ಈ ಪ್ರಕಾರ ನುಡಿದರು.॥16½॥
(ಶ್ಲೋಕ 17½)
ಮೂಲಮ್
ಯದ್ ದೂಷಯಂತ್ಯದುಷ್ಟಂ ಮಾಂ ತಪ ಉಗ್ರಂ ಸಮಾಸ್ಥಿತಮ್ ॥
ಭಸ್ಮೀಭೂತಾ ದುರಾತ್ಮಾನೋ ಭವಿಷ್ಯಂತಿ ಸಸಂಶಯಃ ।
ಅನುವಾದ
ನಾನು ಉಗ್ರ ತಪಸ್ಸಿನಲ್ಲಿ ತೊಡಗಿರುವೆ ಹಾಗೂ ದೋಷ ಅಥವಾ ದುರ್ಭಾವನೆಯಿಂದ ರಹಿತನಾಗಿದ್ದೇನೆ, ಹೀಗಿದ್ದರೂ ನನ್ನ ಮೇಲೆ ದೋಷಾರೋಪಣೆ ಮಾಡುತ್ತಿರುವ ಆ ದುರಾತ್ಮರು ಭಸ್ಮವಾಗಿ ಹೋಗುವುದರಲ್ಲಿ ಸಂಶಯವೇ ಇಲ್ಲ.॥17½॥
ಮೂಲಮ್ - 18
ಅದ್ಯ ತೇ ಕಾಲಪಾಶೇನ ನೀತಾ ವೈವಸ್ವತಕ್ಷಯಮ್ ॥
ಮೂಲಮ್ - 19
ಸಪ್ತ ಜಾತಿಶತಾನ್ಯೇವ ಮೃತಪಾಃ ಸಂಭವಂತು ತೇ ।
ಶ್ವಮಾಂಸನಿಯತಾಹಾರಾ ಮುಷ್ಟಿಕಾ ನಾಮ ನಿರ್ಘೃಣಾಃ ॥
ಅನುವಾದ
ಇಂದು ಕಾಲಪಾಶದಿಂದ ಬಂಧಿತರಾಗಿ ಅವರು ಯಮಲೋಕಕ್ಕೆ ತಲುಪಿರುವರು. ಇನ್ನು ಅವರು ಏಳುನೂರು ಜನ್ಮಗಳವರೆಗೆ ಹೆಣಗಳನ್ನು ಕಾಯುವ, ನಿಶ್ಚಿತವಾಗಿ ನಾಯಿಯ ಮಾಂಸ ತಿನ್ನುವ ಮುಷ್ಟಿಕ ಎಂಬ ಪ್ರಸಿದ್ಧ ನಿರ್ದಯೀ ಚಾಂಡಾಲ ಜಾತಿಯಲ್ಲಿ ಹುಟ್ಟಲಿ.॥18-19॥
ಮೂಲಮ್ - 20
ವಿಕೃತಾಶ್ಚ ವಿರೂಪಾಶ್ಚ ಲೋಕಾನನುಚರಂತ್ವಿಮಾನ್ ।
ಮಹೋದಯಶ್ಚ ದುರ್ಬುದ್ಧಿರ್ಮಾಮದೂಷ್ಯಂ ಹ್ಯದೂಷಯತ್ ॥
ಮೂಲಮ್ - 21½
ದೂಷಿತಃ ಸರ್ವಲೋಕೇಷು ನಿಷಾದತ್ವಂ ಗಮಿಷ್ಯತಿ ।
ಪ್ರಾಣಾತಿಪಾತನಿರತೋ ನಿರನುಕ್ರೋಶತಾಂ ಗತಃ ॥
ದೀರ್ಘಕಾಲಂ ಮಮ ಕ್ರೋಧಾದ್ದುರ್ಗತಿಂ ವರ್ತಯಿಷ್ಯತಿ ।
ಅನುವಾದ
ಅವರು ವಿಕೃತ ಹಾಗೂ ವಿರೂಪರಾಗಿ ಈ ಲೋಕದಲ್ಲಿ ಸಂಚರಿಸಲಿ. ಜೊತೆಗೆ ದೋಷಹೀನನಾದ ನನ್ನನ್ನೂ ಕೂಡ ದೋಷಿಗೊಳಿಸಿದ ದುರ್ಬುದ್ಧಿ ಮಹೋದಯನೂ ಕೂಡ ನನ್ನ ಕ್ರೋಧದಿಂದ ದೀರ್ಘ ಕಾಲದವರೆಗೆ ಜನರಲ್ಲಿ ನಿಂದಿತನಾಗಿ ಇತರ ಪ್ರಾಣಿಗಳ ಹಿಂಸೆಯಲ್ಲಿ ತತ್ಪರ ಹಾಗೂ ದಯಾಶೂನ್ಯ ನಿಷಾದಯೋನಿಯನ್ನು ಪಡೆದು ದುರ್ಗತಿ ಅನುಭವಿಸುವನು.॥20-21½॥
ಮೂಲಮ್ - 22
ಏತಾವದುಕ್ತ್ವಾ ವಚನಂ ವಿಶ್ವಾಮಿತ್ರೋ ಮಹಾತಪಾಃ ।
ವಿರಾರಾಮ ಮಹಾತೇಜಾ ಋಷಿಮಧ್ಯೇ ಮಹಾಮುನಿಃ ॥
ಅನುವಾದ
ಋಷಿಗಳ ನಡುವೆ ಹೀಗೆ ಹೇಳಿ ಮಹಾತಪಸ್ವೀ, ಮಹಾತೇಜಸ್ವೀ ಹಾಗೂ ಮಹಾಮುನಿ ವಿಶ್ವಾಮಿತ್ರರು ಸುಮ್ಮನಾದರು.॥22॥
ಅನುವಾದ (ಸಮಾಪ್ತಿಃ)
ವಾಲ್ಮೀಕಿ ವಿರಚಿತ ಆರ್ಷ ರಾಮಾಯಣ ಆದಿಕಾವ್ಯದ ಬಾಲಕಾಂಡದಲ್ಲಿ ಐವತ್ತೊಂಭತ್ತನೆಯ ಸರ್ಗ ಪೂರ್ಣವಾಯಿತು. ॥59॥