वाचनम्
ಭಾಗಸೂಚನಾ
ಪುತ್ರರ ಮರಣದಿಂದ ದುಃಖಿತಳಾದ ದಿತಿಯು ಇಂದ್ರನನ್ನು ಸಂಹರಿಸಲು ಸಮರ್ಥನಾದ ಪುತ್ರನನ್ನು ಪಡೆಯಲು ತಪಸ್ಸುಮಾಡಿದುದು, ಇಂದ್ರನ ಉಪಚಾರ, ದಿತಿಯು ಅಶುಚಿಯಾಗಿದ್ದಾಗ ಇಂದ್ರನು ಆಕೆಯ ಗರ್ಭವನ್ನು ಏಳು ತುಂಡುಗಳಾಗಿಸಿದುದು
ಮೂಲಮ್ - 1
ಹತೇಷು ತೇಷು ಪುತ್ರೇಷು ದಿತಿಃ ಪರಮದುಃಖಿತಾ ।
ಮಾರೀಚಂ ಕಶ್ಯಪಂ ನಾಮ ಭರ್ತಾರಮಿದಮಬ್ರವೀತ್ ॥
ಅನುವಾದ
ಯುದ್ಧದಲ್ಲಿ ಹತರಾದ ತನ್ನ ಪುತ್ರರನ್ನು ನೋಡಿ ದುಃಖಿತಳಾದ ದಿತಿಯು ತನ್ನ ಪತಿ ಮರೀಚಿ ನಂದನ ಕಶ್ಯಪರ ಬಳಿಗೆ ಹೋಗಿ ನುಡಿದಳು.॥1॥
ಮೂಲಮ್ - 2
ಹತಪುತ್ರಾಸ್ಮಿ ಭಗವಂಸ್ತವ ಪುತ್ರೈರ್ಮಹಾಬಲೈಃ ।
ಶಕ್ರಹಂತಾರಮಿಚ್ಛಾಮಿ ಪುತ್ರಂ ದೀರ್ಘತಪೋರ್ಜಿತಮ್ ॥
ಅನುವಾದ
ಪೂಜ್ಯರೇ! ನಿಮ್ಮ ಮಹಾಬಲ ಪುತ್ರರಾದ ದೇವತೆಗಳು ನನ್ನ ಪುತ್ರರನ್ನು ಕೊಂದು ಹಾಕಿದರು. ಆದ್ದರಿಂದ ನಾನು ದೀರ್ಘಕಾಲ ತಪಸ್ಸು ಮಾಡಿ, ಇಂದ್ರನನ್ನು ಸಂಹರಿಸಲು ಸಮರ್ಥನಾದ ಪುತ್ರನನ್ನು ಬಯಸುತ್ತಿರುವೆನು.॥2॥
ಮೂಲಮ್ - 3
ಸಾಹಂ ತಪಶ್ಚರಿಷ್ಯಾಮಿ ಗರ್ಭಂ ಮೇ ದಾತುಮರ್ಹಸಿ ।
ಈಶ್ವರಂ ಶಕ್ರಹಂತಾರಂ ತ್ವಮನುಜ್ಞಾತುಮರ್ಹಸಿ ॥
ಅನುವಾದ
ನಾನು ತಪಸ್ಸು ಮಾಡುವೆನು, ನೀವು ನನಗೆ ಅಪ್ಪಣೆ ಕೊಡಿ ಹಾಗೂ ನನ್ನ ಗರ್ಭದಲ್ಲಿ ಅಂತಹ ಪುತ್ರನನ್ನು ಕರುಣಿಸಿರಿ, ಅವನು ಸರ್ವ ಕಾರ್ಯನಿಪುಣನೂ, ಸಮರ್ಥನೂ ಹಾಗೂ ಇಂದ್ರನನ್ನು ವಧಿಸುವಂತಹನು ಆಗಲಿ.॥3॥
ಮೂಲಮ್ - 4
ತಸ್ಯಾಸ್ತದ್ವಚನಂ ಶ್ರುತ್ವಾ ಮಾರೀಚಃ ಕಶ್ಯಪಸ್ತದಾ ।
ಪ್ರತ್ಯುವಾಚ ಮಹಾತೇಜಾ ದಿತಿಂ ಪರಮದುಃಖಿತಾಮ್ ॥
ಅನುವಾದ
ಆಕೆಯ ಮಾತನ್ನು ಕೇಳಿ ಮಹಾತೇಜಸ್ವೀ ಮರೀಚಿನಂದನ ಕಶ್ಯಪರು ಪರಮ ದುಃಖಿತೆಯಾದ ದಿತಿಯಲ್ಲಿ ಈ ಪ್ರಕಾರ ಹೇಳಿದರು-॥4॥
ಮೂಲಮ್ - 5
ಏವಂ ಭವತು ಭದ್ರಂ ತೇ ಶುಚಿರ್ಭವ ತಪೋಧನೇ ।
ಜನಯಿಷ್ಯಸಿ ಪುತ್ರಂ ತ್ವಂ ಶಕ್ರಹಂತಾರಮಾಹವೇ ॥
ಅನುವಾದ
ತಪೋಧನಳೇ! ಹಾಗೆಯೇ ಆಗಲಿ. ನೀನು ಶುಚಿತ್ವವನ್ನು ಪಾಲಿಸು. ನಿನಗೆ ಮಂಗಳವಾಗಲಿ. ಯುದ್ಧದಲ್ಲಿ ಇಂದ್ರನನ್ನು ಕೊಲ್ಲುವಂತಹ ಮಗನು ನಿನಗೆ ಹುಟ್ಟುವನು.॥5॥
ಮೂಲಮ್ - 6
ಪೂರ್ಣೇ ವರ್ಷಸಹಸ್ರೇ ತು ಶುಚಿರ್ಯದಿ ಭವಿಷ್ಯಸಿ ।
ಪುತ್ರಂ ತ್ರೈಲೋಕ್ಯಹಂತಾರಂ ಮತ್ತಸ್ತ್ವಂಜನಯಿಷ್ಯಸಿ ॥
ಅನುವಾದ
ನೀನು ಒಂದು ಸಾವಿರ ವರ್ಷಗಳವರೆಗೆ ಪವಿತ್ರತೆಯಿಂದ ಇದ್ದರೆ ನೀನು ನನ್ನಿಂದ ತ್ರೈಲೋಕ್ಯನಾಥ ಇಂದ್ರನನ್ನು ವಧೆ ಮಾಡುವುದರಲ್ಲಿ ಸಮರ್ಥನಾದ ಪುತ್ರನನ್ನು ಪಡೆಯುವೆ.॥6॥
ಮೂಲಮ್ - 7
ಏವಮುಕ್ತ್ವಾ ಮಹಾತೇಜಾಃ ಪಾಣಿನಾ ಸಮ್ಮಮಾರ್ಜತಾಮ್ ।
ಸಮಾಲಭ್ಯ ತತಃ ಸ್ವಸ್ತಿ ಇತ್ಯುಕ್ತ್ವಾ ತಪಸೇ ಯಯೌ ॥
ಅನುವಾದ
ಹೀಗೆ ಹೇಳಿ ಮಹಾತೇಜಸ್ವೀ ಕಶ್ಯಪರು ದಿತಿಯ ಶರೀರವನ್ನು ನೇವರಿಸಿದರು ಮತ್ತೆ ಆಕೆಯನ್ನು ಸ್ಪರ್ಶಿಸಿ ‘ನಿನಗೆ ಮಂಗಳವಾಗಲಿ’ ಎಂದು ಹೇಳಿ ತಪಸ್ಸಿಗಾಗಿ ಹೊರಟು ಹೋದರು.॥7॥
ಮೂಲಮ್ - 8
ಗತೇ ತಸ್ಮಿನ್ನರಶ್ರೇಷ್ಠ ದಿತಿಃ ಪರಮಹರ್ಷಿತಾ ।
ಕುಶಪ್ಲವಂ ಸಮಾಸಾದ್ಯ ತಪಸ್ತೇಪೇ ಸುದಾರುಣಮ್ ॥
ಅನುವಾದ
ನರಶ್ರೇಷ್ಠನೇ! ಕಶ್ಯಪರು ಹೊರಟುಹೋದ ಬಳಿಕ ದಿತಿಯು ಅತ್ಯಂತ ಹರ್ಷಿತಳಾಗಿ, ಕುಶಪ್ಲವ ಎಂಬ ತಪೋವನಕ್ಕೆ ಬಂದು ಅತ್ಯಂತ ಕಠೋರ ತಪಸ್ಸು ಮಾಡತೊಡಗಿದಳು.॥8॥
ಮೂಲಮ್ - 9
ತಪಸ್ತಸ್ಯಾಂ ಹಿ ಕುರ್ವಂತ್ಯಾಂ ಪರಿಚರ್ಯಾಂ ಚಕಾರ ಹ ।
ಸಹಸ್ರಾಕ್ಷೋ ನರಶ್ರೇಷ್ಠ ಪರಯಾ ಗುಣಸಂಪದಾ ॥
ಅನುವಾದ
ಪುರುಷಪ್ರವರ ಶ್ರೀರಾಮಾ! ದಿತಿಯು ತಪಸ್ಸು ಮಾಡುತ್ತಿದ್ದಾಗ ಸಹಸ್ರಾಕ್ಷ ಇಂದ್ರನು ವಿನಯಾದಿ ಉತ್ತಮ ಗುಣಗಳಿಂದ ಕೂಡಿಕೊಂಡು ಆಕೆಯ ಸೇವೆ ಮಾಡತೊಡಗಿದನು.॥9॥
ಮೂಲಮ್ - 10
ಅಗ್ನಿಂ ಕುಶಾನ್ಕಾಷ್ಠಮಪಃ ಫಲಂ ಮೂಲಂ ತಥೈವ ಚ ।
ನ್ಯವೇದಯತ್ಸಹಸ್ರಾಕ್ಷೋಯಚ್ಚಾನ್ಯದಪಿ ಕಾಂಕ್ಷಿತಮ್ ॥
ಅನುವಾದ
ಸಹಸ್ರಲೋಚನ ಇಂದ್ರನು ತನ್ನ ಚಿಕ್ಕಮ್ಮ ದಿತಿಗಾಗಿ ಅಗ್ನಿ, ಕುಶ, ಕಾಷ್ಠ, ಜಲ, ಫಲ-ಮೂಲ ಹಾಗೂ ಇತರ ಅಗತ್ಯವಸ್ತುಗಳನ್ನು ತಂದು-ತಂದುಕೊಡುತ್ತಿದ್ದನು.॥10॥
ಮೂಲಮ್ - 11
ಗಾತ್ರಸಂವಾಹನೈಶ್ಚೈವ ಶ್ರಮಾಪನಯನೈಸ್ತಥಾ ।
ಶಕ್ರಃ ಸರ್ವೇಷು ಕಾಲೇಷು ದಿತಿಂ ಪರಿಚಚಾರಹ ॥
ಅನುವಾದ
ಇಂದ್ರನು ಚಿಕ್ಕಮ್ಮನ ಶಾರೀರಿಕ ಸೇವೆ ಮಾಡುತ್ತಾ, ಆಕೆಯ ಕಾಲುಗಳನ್ನೊತ್ತಿ ಬಳಲಿಕೆಯನ್ನು ದೂರಗೊಳಿಸುತ್ತಿದ್ದನು. ಹೀಗೆಯೇ ಬೇರೆ ಅವಶ್ಯಕ ಸೇವೆಗಳಿಂದ ಎಲ್ಲಾ ಹೊತ್ತಿನಲ್ಲಿ ದಿತಿಯ ಪರಿಚರ್ಯೆಯನ್ನು ಮಾಡುತ್ತಿದ್ದನು.॥11॥
ಮೂಲಮ್ - 12
ಪೂರ್ಣೇ ವರ್ಷ ಸಹಸ್ರೇ ಸಾ ದಶೋನೇ ರಘುನಂದನ ।
ದಿತಿಃ ಪರಮಸಂಹೃಷ್ಟಾ ಸಹಸ್ರಾಕ್ಷಮಥಾಬ್ರವೀತ್ ॥
ಅನುವಾದ
ರಘುನಂದನ! ಸಾವಿರ ವರ್ಷಗಳು ಪೂರ್ಣವಾಗಲು ಇನ್ನೂ ಹತ್ತು ವರ್ಷ ಬಾಕಿ ಉಳಿದಾಗ ಒಂದು ದಿನ ದಿತಿಯು ಅತ್ಯಂತ ಹರ್ಷಗೊಂಡು ದೇವೇಂದ್ರನಲ್ಲಿ ಹೇಳಿದಳು.॥12॥
ಮೂಲಮ್ - 13
ತಪಶ್ಚರಂತ್ಯಾ ವರ್ಷಾಣಿ ದಶ ವೀರ್ಯವತಾಂ ವರ ।
ಅವಶಿಷ್ಟಾನಿ ಭತ್ರಂ ತೇ ಭ್ರಾತರಂ ದ್ರಕ್ಷ್ಯಸೇ ತತಃ ॥
ಅನುವಾದ
ವೀರರಲ್ಲಿ ಶ್ರೇಷ್ಠವೀರನೇ! ಈಗ ನನ್ನ ತಪಸ್ಸಿನ ಕೇವಲ ಹತ್ತುವರ್ಷ ಉಳಿದಿವೆ. ನಿನಗೆ ಮಂಗಳವಾಗಲಿ. ಹತ್ತುವರ್ಷಗಳ ಬಳಿಕ ಹುಟ್ಟಲಿರುವ ನಿನ್ನ ತಮ್ಮನನ್ನು ನೀನು ನೋಡಲಿರುವೆ.॥13॥
ಮೂಲಮ್ - 14
ಯಮಹಂ ತ್ವತ್ಕೃತೇ ಪುತ್ರಂ ತಮಾಧಾಸ್ಯೇಜಯೋತ್ಸುಕಮ್ ।
ತ್ರೈಲೋಕ್ಯವಿಜಯಂ ಪುತ್ರ ಸಹ ಭೋಕ್ಷ್ಯಸಿ ವಿಜ್ವರ ॥
ಅನುವಾದ
ಮಗು! ನಾನು ನಿನ್ನ ವಿನಾಶಕ್ಕಾಗಿ ಯಾವ ಪುತ್ರನನ್ನು ಬಯಸಿದ್ದೆನೋ, ಅವನು ನಿನ್ನನ್ನು ಗೆಲ್ಲಲು ಉತ್ಸುಕನಾದಾಗ ನಾನು ಅವನನ್ನು ಶಾಂತಗೊಳಿಸುವೆನು. ಅವನನ್ನು ನಿನ್ನ ಕುರಿತು ವೈರಭಾವ ರಹಿತ, ಭ್ರಾತೃ ಸ್ನೇಹಯುಕ್ತನನ್ನಾಗಿಸಿ ಬಿಡವೆನು. ಮತ್ತೆ ನೀನು ಅವನೊಂದಿಗೆ ಇದ್ದು ಅವನ ಮೂಲಕ ಗಳಿಸಿದ ತ್ರಿಭುವನ ವಿಜಯದ ಸುಖವನ್ನು ನಿಶ್ಚಿಂತನಾಗಿ ಭೋಗಿಸು.॥14॥
ಮೂಲಮ್ - 15
ಯಾಚಿತೇನ ಸುರಶ್ರೇಷ್ಠ ಪಿತ್ರಾ ತವ ಮಹಾತ್ಮನಾ ।
ವರೋ ವರ್ಷಸಹಸ್ರಾಂತೆ ಮಮ ದತ್ತಃ ಸುತಂ ಪ್ರತಿ ॥
ಅನುವಾದ
ಸುರಶ್ರೇಷ್ಠನೇ! ನಾನು ಪ್ರಾರ್ಥಿಸಿದಾಗ ನಿನ್ನ ಮಹಾತ್ಮಾ ಪಿತನು ಒಂದು ಸಾವಿರ ವರ್ಷಗಳ ಬಳಿಕ ಪುತ್ರನು ಹುಟ್ಟುವಂತಹ ವರವನ್ನು ನನಗೆ ಕೊಟ್ಟಿದ್ದಾರೆ.॥15॥
ಮೂಲಮ್ - 16
ಇತ್ಯುಕ್ತ್ವಾ ಚ ದಿತಿಸ್ತ್ರತ್ರ ಪ್ರಾಪ್ತೇ ಮಧ್ಯಂ ದಿನೇಶ್ವರೇ ।
ನಿದ್ರಾಯಾಪಹೃತಾ ದೇವೀ ಪಾದೌ ಕೃತ್ವಾಥ ಶೀರ್ಷತಃ ॥
ಅನುವಾದ
ಹೀಗೆ ಹೇಳಿ ದಿತಿಯು ನಿದ್ದೆಹೋದಳು. ಆಗ ಸೂರ್ಯನು ನೆತ್ತಿಯ ಮೇಲೆ ಇದ್ದ ಮಧ್ಯಾಹ್ನದ ಸಮಯವಾಗಿತ್ತು. ದಿತಿದೇವಿಯು ಕುಳಿತಲ್ಲೇ ನಿದ್ದೆ ಮಾಡತೊಡಗಿದಳು. ತಲೆಬಾಗಿ ಕೂದಲು ಕಾಲುಗಳನ್ನು ಸ್ಪರ್ಶಿಸಿದವು. ಈ ಪ್ರಕಾರ ನಿದ್ರಾವಸ್ಥೆಯಲ್ಲಿ ಆಕೆಯ ಕಾಲು ತಲೆಗೆ ತಗುಲಿತು.॥16॥
ಮೂಲಮ್ - 17
ದೃಷ್ಟ್ವಾ ತಾಮಶುಚಿಂ ಶಕ್ರಃ ಪಾದಯೋಃ ಕೃತಮೂರ್ಧಜಾಮ್ ।
ಶಿರಃಸ್ಥಾನೇ ಕೃತೌ ಪಾದೌ ಜಹಾಸ ಚ ಮುಮೋದ ಚ ॥
ಅನುವಾದ
ಆಕೆಯು ತನ್ನ ಕೇಶಗಳನ್ನು ಕಾಲಿನ ಮೇಲೆ ಹಾಕಿದ್ದಳು. ತಲೆಗೆ ಆಧಾರವಾಗಿ ಎರಡು ಕಾಲುಗಳನ್ನೇ ಬಳಸಿದ್ದಳು. ಇದನ್ನು ನೋಡಿ ದಿತಿಯು ಅಪವಿತ್ರಳಾದಳೆಂದು ತಿಳಿದು ಇಂದ್ರನು ನಕ್ಕು, ಸಂತೋಷಗೊಂಡನು.॥17॥
ಮೂಲಮ್ - 18
ತಸ್ಯಾಃ ಶರೀರವಿವರಂ ಪ್ರವಿವೇಶ ಪುರಂದರಃ ।
ಗರ್ಭಂ ಚ ಸಪ್ತಧಾ ರಾಮಚಿಚ್ಛೇದ ಪರಮಾತ್ಮವಾನ್ ॥
ಅನುವಾದ
ಶ್ರೀರಾಮಾ! ಸದಾ ಎಚ್ಚರವಾಗಿರುವ ಇಂದ್ರನು ದಿತಿಯ ಉದರವನ್ನು ಪ್ರವೇಶಿಸಿ, ಅಲ್ಲಿದ್ದ ಗರ್ಭವನ್ನು ಏಳು ತುಂಡುಗಳಾಗಿ ಕತ್ತರಿಸಿದನು.॥18॥
ಮೂಲಮ್ - 19
ಭಿದ್ಯಮಾನಸ್ತತೋ ಗರ್ಭೋ ವಜ್ರೇಣ ಶತವರ್ಪಣಾ ।
ರುರೋದ ಸುಸ್ವರಂ ರಾಮ ತತೋ ದಿತಿರಬುಧ್ಯತ ॥
ಅನುವಾದ
ರಾಮಚಂದ್ರ! ನೂರು ಅಲಗುಗಳುಳ್ಳ ವಜ್ರಾಯುಧದಿಂದ ಕತ್ತರಿಸುವಾಗ ಆ ಗರ್ಭಸ್ಥ ಬಾಲಕನು ಜೋರಾಗಿ ಅಳತೊಡಗಿದನು. ಇದರಿಂದ ದಿತಿಯು ನಿದ್ದೆಹರಿದು ಎಚ್ಚರಗೊಂಡಳು.॥19॥
ಮೂಲಮ್ - 20
ಮಾ ರುದೋ ಮಾ ರುದಶ್ಚೇತಿ ಗರ್ಭಂ ಶಕ್ರೋಽಭ್ಯಭಾಷತ ।
ಬಿಭೇದ ಚ ಮಹಾತೇಜಾ ರುದಂತಮಪಿ ವಾಸವಃ ॥
ಅನುವಾದ
ಆಗ ಇಂದ್ರನು ಆಳುತ್ತಿರುವ ಗರ್ಭಕ್ಕೆ ‘ತಮ್ಮ, ಅಳಬೇಡ, ಅಳಬೇಡ’ ಎಂದು ಹೇಳುತ್ತಾ ಮಹಾ ತೇಜಸ್ವೀ ಇಂದ್ರನು ಅಳುತ್ತಿದ್ದರೂ ಆ ಗರ್ಭವನ್ನು ತುಂಡುಗಳನ್ನಾಗಿ ಮಾಡಿದನು.॥20॥
ಮೂಲಮ್ - 21
ನ ಹಂತವ್ಯಂ ನ ಹಂತವ್ಯಮಿತ್ಯೇವ ದಿತಿರಬ್ರವೀತ್ ।
ನಿಷ್ಪಪಾತ ತತಃ ಶಕ್ರೋ ಮಾತುರ್ವಚನಗೌರವಾತ್ ॥
ಅನುವಾದ
ಆಗ ದಿತಿಯು ಹೇಳಿದಳು - ಇಂದ್ರನೇ! ಮಗುವನ್ನು ಕೊಲ್ಲಬೇಡ, ಕೊಲ್ಲಬೇಡ, ತಾಯಿಯ ಮಾತಿಗೆ ಗೌರವ ಕೊಟ್ಟು ಇಂದ್ರನು ಕೂಡಲೇ ಉದರದಿಂದ ಹೊರಗೆ ಬಂದನು.॥21॥
ಮೂಲಮ್ - 22
ಪ್ರಾಂಜಲಿರ್ವಜ್ರಸಹಿತೋ ದಿತಿಂ ಶಕ್ರೋಽಭ್ಯಭಾಷತ ।
ಅಶುಚಿರ್ದೇವಿ ಸುಪ್ತಾಸಿ ಪಾದಯೋಃ ಕೃತಮೂರ್ಧಜಾ ॥
ಮೂಲಮ್ - 23
ತದಂತರಮಹಂ ಲಬ್ಧ್ವಾ ಶಕ್ರಹಂತಾರಮಾಹವೇ ।
ಅಭಿಂದಂ ಸಪ್ತಧಾ ದೇವಿ ತನ್ಮೇ ತ್ವಂ ಕ್ಷಂತುಮರ್ಹಸಿ ॥
ಅನುವಾದ
ಮತ್ತೆ ವಜ್ರಸಹಿತ ಇಂದ್ರನು ಕೈ ಜೋಡಿಸಿಕೊಂಡು ದಿತಿಯಲ್ಲಿ ಹೇಳಿದನು - ಅಮ್ಮಾ! ನಿನ್ನ ತಲೆಕೂದಲು ಕಾಲುಗಳನ್ನು ಮುಟ್ಟಿದ್ದವು. ಹೀಗೆ ನೀನು ಅಪವಿತ್ರ ಸ್ಥಿತಿಯಲ್ಲಿ ಮಲಗಿದ್ದೆ. ಇದೇ ಸಂದರ್ಭವನ್ನು ಬಳಸಿಕೊಂಡು ನಾನು ಇಂದ್ರಹಂತಕನಾದ ಬಾಲಕನನ್ನು ಏಳು ತುಂಡುಗಳಾಗಿಸಿದೆ. ಅದಕ್ಕಾಗಿ ತಾಯೇ! ನೀನು ನನ್ನ ಅಪರಾಧವನ್ನು ಕ್ಷಮಿಸು.॥22-23॥
ಅನುವಾದ (ಸಮಾಪ್ತಿಃ)
ವಾಲ್ಮೀಕಿ ವಿರಚಿತ ಆರ್ಷ ರಾಮಾಯಣ ಆದಿಕಾವ್ಯದ ಬಾಲಕಾಂಡದಲ್ಲಿ ನಲವತ್ತಾರನೆಯ ಸರ್ಗ ಪೂರ್ಣವಾಯಿತು.॥46॥