०३४ विश्वामित्रवंशकथा

वाचनम्
ಭಾಗಸೂಚನಾ

ಗಾಧಿ-ವಿಶ್ವಾಮಿತ್ರ-ಸತ್ಯವತಿಯರ ಜನ್ಮವೃತ್ತಾಂತ

ಮೂಲಮ್ - 1

ಕೃತೋದ್ವಾಹೇ ಗತೇ ತಸ್ಮಿನ್ ಬ್ರಹ್ಮದತ್ತೇ ಚ ರಾಘವ ।
ಅಪುತ್ರಃ ಪುತ್ರಲಾಭಾಯ ಪೌತ್ರೀಮಿಷ್ಟಿಮಕಲ್ಪಯತ್ ॥

ಅನುವಾದ

ರಘುನಂದನ! ವಿವಾಹಗಳನ್ನು ಮಾಡಿಕೊಂಡು ರಾಜಾ ಬ್ರಹ್ಮದತ್ತನು ಹೊರಟುಹೋದಾಗ, ಪುತ್ರಹೀನ ಕುಶನಾಭನು ಶ್ರೇಷ್ಠ ಪುತ್ರನ ಪ್ರಾಪ್ತಿಗಾಗಿ ಪುತ್ರಕಾಮೇಷ್ಟಿ ಯಜ್ಞವನ್ನು ಕೈಗೊಂಡನು.॥1॥

ಮೂಲಮ್ - 2

ಇಷ್ಟ್ಯಾಂತು ವರ್ತಮಾನಾಯಾಂ ಕುಶನಾಭಂ ಮಹೀಪತಿಮ್ ।
ಉವಾಚ ಪರಮೋದಾರಃ ಕುಶೋ ಬ್ರಹ್ಮಸುತಸ್ತದಾ ॥

ಅನುವಾದ

ಆ ಯಜ್ಞ ನಡೆಯುತ್ತಿರುವಾಗ ಪರಮ ಉದಾರ ಬ್ರಹ್ಮಕುಮಾರ ಮಹಾರಾಜ ಕುಶನು ಕುಶನಾಭನಲ್ಲಿ ಹೇಳಿದನು.॥2॥

ಮೂಲಮ್ - 3

ಪುತ್ರಸ್ತೇ ಸದೃಶಃ ಪುತ್ರ ಭವಿಷ್ಯತಿ ಸುಧಾರ್ಮಿಕಃ ।
ಗಾಧಿಂ ಪ್ರಾಪ್ಸ್ಯಸಿ ತೇನ ತ್ವಂ ಕೀರ್ತಿಂ ಲೋಕೇ ಚ ಶಾಶ್ವತೀಮ್ ॥

ಅನುವಾದ

ಮಗು ಕುಶನಾಭನೇ! ಪರಮಧಾರ್ಮಿಕನಾದ ಹಾಗೂ ನಿನಗೆ ಅನುರೂಪನಾದ ಮಗನು ಹುಟ್ಟುವನು. ಅವನನ್ನು ಗಾಧಿ ಎಂದು ಕರೆಯುವರು. ಅವನಿಂದ ನೀನು ಲೋಕದಲ್ಲಿ ಶಾಶ್ವತವಾದ ಕೀರ್ತಿಯನ್ನು ಪಡೆಯುವೆ.॥3॥

ಮೂಲಮ್ - 4

ಏವಮುಕ್ತ್ವಾ ಕುಶೋ ರಾಮ ಕುಶನಾಭಂ ಮಹೀಪತಿಮ್ ।
ಜಗಾಮಾಕಾಶಮಾವಿಶ್ಯ ಬ್ರಹ್ಮಲೋಕಂ ಸನಾತನಮ್ ॥

ಅನುವಾದ

ಶ್ರೀರಾಮ! ಪೃಥ್ವಿಪತಿ ಕುಶನಾಭನಲ್ಲಿ ಹೀಗೆ ಹೇಳಿ ರಾಜರ್ಷಿ ಕುಶನು ಆಕಾಶದಲ್ಲಿರುವ ಸನಾತನ ಬ್ರಹ್ಮಲೋಕಕ್ಕೆ ತೆರಳಿದನು.॥4॥

ಮೂಲಮ್ - 5

ಕಸ್ಯಚಿತ್ ತ್ವಥ ಕಾಲಸ್ಯ ಕುಶನಾಭಸ್ಯ ಧೀಮತಃ ।
ಜಜ್ಞೇ ಪರಮಧರ್ಮಿಷ್ಠೋ ಗಾಧಿರಿತ್ಯೇವ ನಾಮತಃ ॥

ಅನುವಾದ

ಕೆಲವು ಕಾಲದ ಬಳಿಕ ಬುದ್ಧಿವಂತ ರಾಜಾ ಕುಶನಾಭನಲ್ಲಿ ಪರಮ ಧಾರ್ಮಿಕ ಗಾಧಿ ಎಂಬ ಪುತ್ರನು ಹುಟ್ಟಿದನು.॥5॥

ಮೂಲಮ್ - 6

ಸ ಪಿತಾ ಮಮ ಕಾಕುತ್ಸ್ಥ ಗಾಧಿಃ ಪರಮಧಾರ್ಮಿಕಃ ।
ಕುಶವಂಶ ಪ್ರಸೂತೋಽಸ್ಮಿ ಕೌಶಿಕೋ ರಘುನಂದನ ॥

ಅನುವಾದ

ಕಾಕುತ್ಸ್ಥನೇ! ಆ ಪರಮ ಧರ್ಮಾತ್ಮಾ ರಾಜಾ ಗಾಧಿಯು ನನ್ನ ತಂದೆಯಾಗಿದ್ದರು. ನಾನು ಕುಶನ ವಂಶದಲ್ಲಿ ಹುಟ್ಟಿದ್ದರಿಂದ ನನ್ನನ್ನು ‘ಕೌಶಿಕ’ ಎಂದು ಹೇಳುತ್ತಾರೆ.॥6॥

ಮೂಲಮ್ - 7

ಪೂರ್ವಜಾ ಭಗಿನೀ ಚಾಪಿ ಮಮ ರಾಘವ ಸುವ್ರತಾ ।
ನಾಮ್ನಾಸತ್ಯವತೀ ನಾಮ ಋಚೀಕೇ ಪ್ರತಿಪಾದಿತಾ ॥

ಅನುವಾದ

ರಾಮನೇ! ನನಗಿಂತಲೂ ಮೊದಲು ಹುಟ್ಟಿದ ಸುವ್ರತೆಯಾದ ಸತ್ಯವತಿ ಎಂಬ ಹೆಸರಿನ ನಮ್ಮಕ್ಕನನ್ನು ಋಚೀಕನು ಪಾಣಿಗ್ರಹಣ ಮಾಡಿಕೊಂಡನು.॥7॥

ಮೂಲಮ್ - 8

ಸಶರೀರಾ ಗತಾ ಸ್ವರ್ಗಂ ಭರ್ತಾರಮನುವರ್ತಿನೀ ।
ಕೌಶಿಕೀ ಪರಮೋದಾರಾ ಪ್ರವೃತ್ತಾ ಚ ಮಹಾನದೀ ॥

ಅನುವಾದ

ತನ್ನ ಪತಿಯನ್ನು ಅನುಸರಿಸುವ ಸತ್ಯವತಿಯು ಶರೀರಸಹಿತ ಸ್ವರ್ಗಲೋಕಕ್ಕೆ ಹೊರಟುಹೋದಳು. ಆಕೆಯೇ ಪರಮ ಉದಾರ ಮಹಾನದೀ ಕೌಶಿಕಿಯ ರೂಪದಲ್ಲಿ ಪ್ರಕಟಳಾಗಿ ಈ ಭೂಲೋಕದಲ್ಲಿ ಹರಿಯುತ್ತಿರುವಳು.॥8॥

ಮೂಲಮ್ - 9

ದಿವ್ಯಾ ಪುಣ್ಯೋದಕಾ ರಮ್ಯಾ ಹಿಮವಂತ ಮುಪಾಶ್ರಿತಾ ।
ಲೋಕಸ್ಯ ಹಿತಕಾರ್ಯಾರ್ಥಂ ಪ್ರವೃತ್ತಾ ಭಗಿನೀ ಮಮ ॥

ಅನುವಾದ

ನನ್ನ ಅಕ್ಕನು ಜಗತ್ತಿನ ಹಿತಕ್ಕಾಗಿ ಹಿವಾಲಯವನ್ನು ಆಶ್ರಯಿಸಿ ನದಿ ರೂಪದಿಂದ ಪ್ರವಹಿಸುತ್ತಿರುವಳು. ಆ ಪುಣ್ಯಸಲಿಲಾ ದಿವ್ಯ ನದಿಯು ಬಹಳ ರಮಣೀಯವಾಗಿರುವಳು.॥9॥

ಮೂಲಮ್ - 10

ತತೋಽಹಂ ಹಿಮವತ್ಪಾರ್ಶ್ವೇ ವಸಾಮಿ ನಿಯತಃ ಸುಖಮ್ ।
ಭಗಿನ್ಯಾಂ ಸ್ನೇಹ ಸಂಯುಕ್ತಃ ಕೌಶಿಕ್ಯಾಂ ರಘುನಂದನ ॥

ಅನುವಾದ

ರಘುನಂದನ! ನನಗೆ ನನ್ನ ಅಕ್ಕನಾದ ಕೌಶಿಕಿಯ ಕುರಿತು ತುಂಬಾ ಸ್ನೇಹವಿದೆ. ಆದ್ದರಿಂದ ನಾನು ಹಿಮಾಲಯದ ಬಳಿ ಅದರ ತೀರದಲ್ಲಿ ನಿಯಮಾನುಪೂರ್ವಕ ಬಹಳ ಸುಖವಾಗಿ ವಾಸಿಸುತ್ತಿದ್ದೇನೆ.॥10॥

ಮೂಲಮ್ - 11

ಸಾ ತು ಸತ್ಯವತೀ ಪುಣ್ಯಾ ಸತ್ಯೇ ಧರ್ಮೇ ಪ್ರತಿಷ್ಠಿತಾ ।
ಪತಿವ್ರತಾ ಮಹಾಭಾಗಾ ಕೌಶಿಕೀ ಸರಿತಾಂ ವರಾ ॥

ಅನುವಾದ

ಪುಣ್ಯಮಯಿ ಸತ್ಯವತಿಯು ಸತ್ಯಧರ್ಮದಲ್ಲಿ ಪ್ರತಿಷ್ಠಿತಳಾಗಿದ್ದಾಳೆ. ಆ ಪರಮ ಸೌಭಾಗ್ಯಶಾಲಿನೀ ಪತಿವ್ರತಾ ದೇವಿಯು ಇಲ್ಲಿ ನದಿಗಳಲ್ಲಿ ಶ್ರೇಷ್ಠವಾದ ಕೌಶಿಕಿಯ ರೂಪದಿಂದ ಇರುವಳು.॥11॥

ಮೂಲಮ್ - 12

ಅಹಂ ಹಿ ನಿಯಮಾದ್ ರಾಮ ಹಿತ್ವಾ ತಾಂ ಸಮುಪಾಗತಃ ।
ಸಿದ್ಧಾಶ್ರಮ ಮನುಪ್ರಾಪ್ತಃ ಸಿದ್ಧೋಽಸ್ಮಿ ತವ ತೇಜಸಾ ॥

ಅನುವಾದ

ಶ್ರೀರಾಮಾ! ಯಜ್ಞ ಸಂಬಂಧೀ ನಿಯಮದ ಸಿದ್ಧಿಗಾಗಿಯೇ ನನ್ನ ಅಕ್ಕನನ್ನು ಬಿಟ್ಟು ಸಿದ್ಧಾಶ್ರಮಕ್ಕೆ ಬಂದಿದ್ದೆ. ಈಗ ನಿನ್ನ ತೇಜದಿಂದ ನನಗೆ ಆ ಸಿದ್ಧಿಯು ಪ್ರಾಪ್ತವಾಯಿತು.॥12॥

ಮೂಲಮ್ - 13

ಏಷಾ ರಾಮ ಮಮೋತ್ಪತ್ತಿಃ ಸ್ವಸ್ಯ ವಂಶಸ್ಯ ಕೀರ್ತಿತಾ ।
ದೇಶಸ್ಯ ಹಿ ಮಹಾಬಾಹೋ ಯನ್ಮಾಂ ತ್ವಂ ಪರಿಪೃಚ್ಛಸಿ ॥

ಅನುವಾದ

ಮಹಾಬಾಹು ಶ್ರೀರಾಮಾ! ನೀನು ಕೇಳಿದ್ದರಿಂದ ನಾನು ನಿನಗೆ ಶೋಣಭದ್ರ ತೀರದ ಪ್ರವೇಶದ ಪರಿಚಯವನ್ನು ಮಾಡಿಸುವಾಗ ನನ್ನ ಹಾಗೂ ನನ್ನ ಕುಲದ ಉತ್ಪತ್ತಿಯನ್ನು ತಿಳಿಸಿದೆ.॥1.॥

ಮೂಲಮ್ - 14

ಗತೋಽರ್ಧರಾತ್ರಃ ಕಾಕುತ್ಸ್ಥ ಕಥಾಃ ಕಥಯತೋ ಮಮ ।
ನಿದ್ರಾಮಭ್ಯೇಹಿ ಭದ್ರಂ ತೇ ಮಾ ಭೂದ್ ವಿಘ್ನೋಽಧ್ವನೀಹ ನಃ ॥

ಅನುವಾದ

ಕಾಕುತ್ಸ್ಥನೇ! ನಾನು ಕಥೆ ಹೇಳುತ್ತಾ-ಹೇಳುತ್ತಾ ಅರ್ಧರಾತ್ರಿ ಕಳೆದುಹೋಯಿತು. ಈಗ ಸ್ವಲ್ಪ ನಿದ್ದೆಮಾಡು. ನಿನಗೆ ಮಂಗಳವಾಗಲೀ. ಹೆಚ್ಚು ಜಾಗರಣೆಯಿಂದ ನಮ್ಮ ಯಾತ್ರೆಯಲ್ಲಿ ವಿಘ್ನ ಉಂಟಾಗಲು ನಾನು ಬಯಸುವುದಿಲ್ಲ.॥14॥

ಮೂಲಮ್ - 15

ನಿಷ್ಪಂದಾಸ್ತರವಃ ಸರ್ವೇ ನಿಲೀನಾ ಮೃಗಪಕ್ಷಿಣಃ ।
ನೈಶೇನ ತಮಸಾ ವ್ಯಾಪ್ತಾ ದಿಶಶ್ಚ ರಘುನಂದನ ॥

ಅನುವಾದ

ಯಾವುದೇ ವೃಕ್ಷದ ಒಂದು ಎಲೆಯೂ ಅಲುಗಾಡುವುದಿಲ್ಲ. ಪಶು-ಪಕ್ಷಿಗಳು ತಮ್ಮ-ತಮ್ಮ ವಾಸಸ್ಥಾನದಲ್ಲಿ ಅಡಗಿ ವಿಶ್ರಮಿಸುತ್ತಿರುವವು. ರಘುನಂದನ! ರಾತ್ರಿಯ ಅಂಧಕಾರದಿಂದ ಸಮಸ್ತ ದಿಕ್ಕುಗಳು ವ್ಯಾಪ್ತವಾಗಿವೆ.॥15॥

ಮೂಲಮ್ - 16

ಶನೈರ್ವಿಸೃಜ್ಯತೇ ಸಂಧ್ಯಾ ನಭೋ ನೇತ್ರೈರಿವಾವೃತಮ್ ।
ನಕ್ಷತ್ರತಾರಾಗಹನಂ ಜ್ಯೋತಿರ್ಭಿರವಭಾಸತೇ ॥

ಅನುವಾದ

ನಿಧಾನವಾಗಿ ಸಂಧ್ಯೆಯು ದೂರ ಸರಿಯುತ್ತಿದೆ. ನಕ್ಷತ್ರಗಳಿಂದ ತುಂಬಿದ ಆಕಾಶವು (ಸಹಸ್ರಾಕ್ಷ ಇಂದ್ರನಂತೆ) ಸಾವಿರಾರು ಜೋತಿರ್ಮಯ ನೇತ್ರಗಳಿಂದ ಆವೃತವಾಗಿವೆಯೋ ಎಂಬಂತೆ ಪ್ರಕಾಶಿತವಾಗುತ್ತಿದೆ.॥16॥

ಮೂಲಮ್ - 17

ಉತ್ತಿಷ್ಠತೇ ಚ ಶೀತಾಂಶುಃ ಶಶೀ ಲೋಕತಮೋನುದಃ ।
ಹ್ಲಾದಯನ್ ಪ್ರಾಣಿನಾಂ ಲೋಕೇ ಮನಾಂಸಿ ಪ್ರಭಯಾ ಸ್ವಯಾ ॥

ಅನುವಾದ

ಸಮಸ್ತಲೋಕಗಳ ಅಂಧಕಾರವನ್ನು ದೂರ ಮಾಡುವ ಶೀತರಶ್ಮಿ ಚಂದ್ರನು ತನ್ನ ಪ್ರಭೆಯಿಂದ ಜಗತ್ತಿನ ಪ್ರಾಣಿಗಳ ಮನಸ್ಸನ್ನು ಆಹ್ಲಾದ ಗೊಳಿಸುತ್ತ ಉದಯವಾಗುತ್ತಿದ್ದಾನೆ.॥17॥

ಮೂಲಮ್ - 18

ನೈಶಾನಿ ಸರ್ವಭೂತಾನಿ ಪ್ರಚರಂತಿ ತತಸ್ತತಃ ।
ಯಕ್ಷರಾಕ್ಷಸಸಂಘಾಶ್ಚ ರೌದ್ರಾಶ್ಚ ಪಿಶಿತಾಶನಾಃ ॥

ಅನುವಾದ

ರಾತ್ರೆಯಲ್ಲಿ ಸಂಚರಿಸುವ ಸಮಸ್ತ ಪ್ರಾಣಿ-ಯಕ್ಷ, ರಾಕ್ಷಸರೂ, ಸಮುದಾಯಗಳೂ ಹಾಗೂ ಭಯಂಕರ ಪಿಶಾಚಿಗಳು ಅಲ್ಲಿ-ಇಲ್ಲಿ ಅಲೆಯುತ್ತಾ ಇವೆ.॥18॥

ಮೂಲಮ್ - 19

ಏವಮುಕ್ತ್ವಾ ಮಹಾತೇಜಾ ವಿರರಾಮ ಮಹಾಮುನಿಃ ।
ಸಾಧುಸಾಧ್ವಿತಿ ತೇ ಸರ್ವೇ ಮುನಯೋ ಹ್ಯಭ್ಯಪೂಜಯನ್ ॥

ಅನುವಾದ

ಹೀಗೆ ಹೇಳಿ ಮಹಾತೇಜಸ್ವೀ ಮಹಾಮುನಿ ವಿಶ್ವಾಮಿತ್ರರು ಸುಮ್ಮನಾದರು. ಆಗ ಎಲ್ಲ ಮುನಿಗಳು ಧನ್ಯವಾದ ಕೊಡುತ್ತಾ ವಿಶ್ವಾಮಿತ್ರರನ್ನು ಭೂರಿ-ಭೂರಿ ಪ್ರಶಂಸೆ ಮಾಡಿದರು.॥19॥

ಮೂಲಮ್ - 20

ಕುಶಿಕಾನಾಮಯಂ ವಂಶೋ ಮಹಾನ್ ಧರ್ಮಪರಃ ಸದಾ ।
ಬ್ರಹ್ಮೋಪಮಾ ಮಹಾತ್ಮಾನಃ ಕುಶವಂಶ್ಯಾ ನರೋತ್ತಮಾಃ ॥

ಅನುವಾದ

ಕುಶಪುತ್ರರ ಈ ವಂಶ ಸದಾಕಾಲ ಮಹಾನ್ ಧರ್ಮಪರಾಯಣವಾಗಿದೆ. ಕುಶವಂಶೀ ಮಹಾತ್ಮಾ ಶ್ರೇಷ್ಠ ಮಾನವರು ಬ್ರಹ್ಮದೇವರಂತೆ ತೇಜಸ್ವಿಯಾಗಿದ್ದಾರೆ.॥20॥

ಮೂಲಮ್ - 21

ವಿಶೇಷೇಣ ಭವಾನೇವ ವಿಶ್ವಾಮಿತ್ರ ಮಹಾಯಶಃ ।
ಕೌಶಿಕೀ ಸರಿತಾಂ ಶ್ರೇಷ್ಠಾ ಕುಲೋದ್ಯೋತಕರೀ ತವ ॥

ಅನುವಾದ

ಮಹಾಯಶಸ್ವೀ ವಿಶ್ವಾಮಿತ್ರರೇ! ನಿಮ್ಮ ವಂಶದಲ್ಲಿ ಎಲ್ಲರಿಗಿಂತ ದೊಡ್ಡ ಮಹಾತ್ಮ ತಾವೇ ಆಗಿರುವಿರಿ ಹಾಗೂ ನದಿಗಳಲ್ಲಿ ಶ್ರೇಷ್ಠ ಕೌಶಿಕಿಯೂ ತಮ್ಮ ಕುಲದ ಕೀರ್ತಿಯನ್ನು ಬೆಳಗುತ್ತಿರುವಳು.॥21॥

ಮೂಲಮ್ - 22

ಮುದಿತೈರ್ಮುನಿಶಾರ್ದೂಲೈಃ ಪ್ರಶಸ್ತಃ ಕುಶಿಕಾತ್ಮಜಃ ।
ನಿದ್ರಾಮುಪಾಗಮಚ್ಛ್ರೀಮಾನಸ್ತಂಗತ ಇವಾಂಶುಮಾನ್ ॥

ಅನುವಾದ

ಹೀಗೆ ಆನಂದಮಗ್ನರಾದ ಆ ಮುನಿವರರಿಂದ ಪ್ರಶಂಶಿತನಾದ ಶ್ರೀಮಾನ್ ಕೌಶಿಕ ಮುನಿಗಳು ಅಸ್ತನಾದ ಸೂರ್ಯನಂತೆ ನಿದ್ದೆ ಮಾಡಿದರು.॥22॥

ಮೂಲಮ್ - 23

ರಾಮೋಽಪಿ ಸಹಸೌಮಿತ್ರಿಃ ಕಿಂಚಿದಾಗತವಿಸ್ಮಯಃ
ಪ್ರಶಸ್ಯ ಮುನಿಶಾರ್ದೂಲಂ ನಿದ್ರಾಂ ಸಮುಪಸೇವತೇ ॥

ಅನುವಾದ

ಆ ಕಥೆಯನ್ನು ಕೇಳಿ ಲಕ್ಷ್ಮಣ ಸಹಿತ ಶ್ರೀರಾಮನಿಗೂ ಆಶ್ಚರ್ಯವಾಯಿತು. ಅವನೂ ಮುನಿಶ್ರೇಷ್ಠ ವಿಶ್ವಾಮಿತ್ರರನ್ನು ಹೊಗಳುತ್ತಾ ನಿದ್ದೆಹೋದನು.॥23॥

ಅನುವಾದ (ಸಮಾಪ್ತಿಃ)

ವಾಲ್ಮೀಕಿ ವಿರಚಿತ ಆರ್ಷ ರಾಮಾಯಣ ಆದಿಕಾವ್ಯದ ಬಾಲಕಾಂಡದಲ್ಲಿ ಮೂವತ್ತನಾಲ್ಕನೆಯ ಸರ್ಗ ಪೂರ್ಣವಾಯಿತು. ॥34॥