०३३ कुशनाभकन्योद्वाहः

वाचनम्
ಭಾಗಸೂಚನಾ

ಕುಶನಾಭನು ಕನ್ಯೆಯರಿಗೆ ಧೈರ್ಯಹೇಳಿದುದು, ಕ್ಷಮಾಗುಣದ ಪ್ರಶಂಸೆ, ಬ್ರಹ್ಮದತ್ತನ ಜನ್ಮ, ಅವನೊಡನೆ ಕುಶನಾಭನ ಕನ್ಯೆಯರ ವಿವಾಹ

ಮೂಲಮ್ - 1

ತಸ್ಯ ತದ್ವಚನಂ ಶ್ರುತ್ವಾ ಕುಶನಾಭಸ್ಯ ಧೀಮತಃ ।
ಶಿರೋಭಿಶ್ಚರಣೌ ಸ್ಪೃಷ್ಟ್ವಾಕನ್ಯಾಶತಮಭಾಷತ ॥

ಅನುವಾದ

ಧೀಮಂತನಾದ ಕುಶನಾಭನ ಮಾತನ್ನು ಕೇಳಿ, ಆ ನೂರು ಕನ್ಯೆಯರು ತಂದೆಯ ಚರಣಗಳಲ್ಲಿ ತಲೆಯನ್ನಿಟ್ಟು ಪ್ರಣಾಮಮಾಡಿ ಇಂತೆಂದರು .॥1॥

ಮೂಲಮ್ - 2

ವಾಯುಃ ಸರ್ವಾತ್ಮಕೋ ರಾಜನ್ ಪ್ರಧರ್ಷಯಿತುಮಿಚ್ಛತಿ ।
ಅಶುಭಂ ಮಾರ್ಗಮಾಸ್ಥಾಯ ನ ಧರ್ಮಂ ಪ್ರತ್ಯವೇಕ್ಷತೇ ॥

ಅನುವಾದ

ಮಹಾರಾಜಾ! ಎಲ್ಲೆಡೆ ಸಂಚರಿಸುವ ವಾಯುದೇವನು ಅಶುಭಮಾರ್ಗವನ್ನು ಅವಲಂಬಿಸಿ ಧರ್ಮದೃಷ್ಟಿ ಇಲ್ಲದೆ, ನಮ್ಮನ್ನು ಅವಮಾನಪಡಿಸಲು ಇಚ್ಛಿಸಿದನು.॥2॥

ಮೂಲಮ್ - 3

ಪಿತೃಮತ್ಯಃ ಸ್ಮ ಭದ್ರಂ ತೇ ಸ್ವಚ್ಛಂದೇ ನ ವಯಂ ಸ್ಥಿತಾಃ ।
ಪಿತರಂ ನೋ ವೃಣೀಷ್ವ ತ್ವಂ ಯದಿ ನೋ ದಾಸ್ಯತೇ ತವ ॥

ಅನುವಾದ

ನಾವು ಅವನಲ್ಲಿ ಹೇಳಿದೆವು - ದೇವನೇ! ನಿನಗೆ ಮಂಗಳವಾಗಲಿ. ನಮಗೆ ತಂದೆಯಿರುವರು, ನಾವು ಸ್ವತಂತ್ರರಲ್ಲ. ನೀವು ತಂದೆಯವರ ಬಳಿಗೆ ಹೋಗಿ ಕನ್ಯೆಯನ್ನು ಕೊಡುವಂತೆ ಕೇಳು, ಅವರು ನಮ್ಮನ್ನು ನಿನಗೆ ಒಪ್ಪಿಸಿದರೆ ನಾವು ನಿಮ್ಮನ್ನು ವರಿಸುವೆವು.॥3॥

ಮೂಲಮ್ - 4

ತೇನ ಪಾಪಾನುಬಂಧೇನ ವಚನಂ ನ ಪ್ರತೀಚ್ಛತಾ ।
ಏವಂ ಬ್ರುವಂತ್ಯಃ ಸರ್ವಾಃ ಸ್ಮ ವಾಯುನಾಭಿಹತಾ ಭೃಶಮ್ ॥

ಅನುವಾದ

ಆದರೆ ಅವನ ಮನಸ್ಸು ಪಾಪದಿಂದ ಬಂಧಿತವಾಗಿತ್ತು. ಅವನು ನಮ್ಮ ಮಾತನ್ನು ಒಪ್ಪಿಕೊಳ್ಳಲಿಲ್ಲ. ನಾವೆಲ್ಲರೂ ಹೀಗೆ ಹೇಳುತ್ತಿರುವಾಗಲೂ, ವಾಯುವು ನಿರಪರಾಧಿಗಳಾದ ನಮಗೆ ಈ ಅವಸ್ಥೆಯನ್ನು ಉಂಟುಮಾಡಿದನು.॥4॥

ಮೂಲಮ್ - 5

ತಾಸಾಂ ತು ವಚನಂ ಶ್ರುತ್ವಾ ರಾಜಾ ಪರಮಧಾರ್ಮಿಕಃ ।
ಪ್ರತ್ಯುವಾಚ ಮಹಾತೇಜಾಃ ಕನ್ಯಾಶತಮನುತ್ತಮಮ್ ॥

ಅನುವಾದ

ಕನ್ಯೆಯರ ಮಾತನ್ನು ಕೇಳಿ ಪರಮ ಧಾರ್ಮಿಕ ಮಹಾತೇಜಸ್ವೀ ರಾಜನು ತನ್ನ ಮಕ್ಕಳಲ್ಲಿ ಹೀಗೆ ನುಡಿದನು.॥5॥

ಮೂಲಮ್ - 6

ಕ್ಷಾಂತಂ ಕ್ಷಮಾವತಾಂ ಪುತ್ರ್ಯಃ ಕರ್ತವ್ಯಂ ಸುಮಹತ್ಕೃತಮ್ ।
ಐಕಮತ್ಯಮುಪಾಗಮ್ಯ ಕುಲಂ ಚಾವೇಕ್ಷಿತಂ ಮಮ ॥

ಅನುವಾದ

ಪುತ್ರಿಯರಿರಾ! ಕ್ಷಮಾಶೀಲ ಮಹಾಪುರುಷರು ಮಾಡುವ ಕಾರ್ಯವನ್ನೇ ನೀವೂ ಮಾಡಿರುವಿರಿ. ನಿಮ್ಮಿಂದ ಈ ಮಹತ್ಕಾರ್ಯ ನೆರವೇರಿದಂತಾಯಿತು. ನೀವೆಲ್ಲರೂ ಐಕಮತ್ಯರಾಗಿ ಕುಲಧರ್ಮವನ್ನು ನೆನೆದು, ಕಾಮಕ್ಕೆ ವಶರಾಗದೆ ಮಹತ್ಕಾರ್ಯ ಮಾಡಿರುವಿರಿ.॥6॥

ಮೂಲಮ್ - 7½

ಅಲಂಕಾರೋ ಹಿ ನಾರೀಣಾಂ ಕ್ಷಮಾ ತು ಪುರುಷಸ್ಯ ವಾ ।
ದುಷ್ಕರಂ ತದ್ಧಿ ವೈ ಕ್ಷಾಂತಂ ತ್ರಿದಶೇಷು ವಿಶೇಷತಃ ॥
ಯಾದೃಶೀ ವಃ ಕ್ಷಮಾ ಪುತ್ರ್ಯಃ ಸರ್ವಾಸಾಮವಿಶೇಷತಃ ।

ಅನುವಾದ

ಸ್ತ್ರೀಯಾಗಿರಲಿ, ಪುರುಷನಾಗಿರಲಿ ಅವರಿಗೆ ಕ್ಷಮೆಯೇ ಭೂಷಣವಾಗಿದೆ. ಪುತ್ರಿಯರಿರಾ! ನಿಮ್ಮೆಲ್ಲರಲ್ಲಿ ಒಂದೇ ರೀತಿಯಾಗಿರುವ ಕ್ಷಮೆ ಇಲ್ಲವೇ ಸಹಿಷ್ಣುತೆ ವಿಶೇಷವಾಗಿ ದೇವತೆಗಳಿಗೂ ದುಷ್ಕರವಾಗಿದೆ.॥7½॥

ಮೂಲಮ್ - 8½

ಕ್ಷಮಾ ದಾನಂ ಕ್ಷಮಾ ಸತ್ಯಂ ಕ್ಷಮಾ ಯಜ್ಞಾಶ್ಚ ಪುತ್ರಿಕಾಃ ॥
ಕ್ಷಮಾ ಯಶಃ ಕ್ಷಮಾ ಧರ್ಮಃ ಕ್ಷಮಯಾಂ ವಿಷ್ಠಿತಂ ಜಗತ್ ।

ಅನುವಾದ

ಪುತ್ರಿಯರೇ! ಕ್ಷಮೆಯೇ ದಾನವಾಗಿದೆ. ಕ್ಷಮೆಯೇ ಸತ್ಯ, ಯಜ್ಞ, ಯಶ, ಧರ್ಮವಾಗಿದೆ. ಕ್ಷಮೆಯ ಮೇಲೆಯೇ ಈ ಜಗತ್ತು ಸ್ಥಿರವಾಗಿದೆ.॥8½॥

ಮೂಲಮ್ - 9

ವಿಸೃಜ್ಯ ಕನ್ಯಾಃ ಕಾಕುತ್ಸ್ಥ ರಾಜಾ ತ್ರಿದಶವಿಕ್ರಮಃ ॥

ಮೂಲಮ್ - 10

ಮಂತ್ರಜ್ಞೋ ಮಂತ್ರಯಾಮಾಸ ಪ್ರದಾನಂ ಸಹ ಮಂತ್ರಿಭಿಃ ।
ದೇಶೇ ಕಾಲೇ ಚ ಕರ್ತವ್ಯಂ ಸದೃಶೇ ಪ್ರತಿಪಾದನಮ್ ॥

ಅನುವಾದ

ಕಾಕುತ್ಸ್ಥನೇ! ದೇವತೆಗಳಂತೆ ಪರಾಕ್ರಮಿಯಾದ ರಾಜಾ ಕುಶನಾಭನು ಕನ್ಯೆಯರಲ್ಲಿ ಹೀಗೆ ಹೇಳಿ ಅವರಿಗೆ ಅಂತಃಪುರಕ್ಕೆ ಹೋಗುವಂತೆ ಆಜ್ಞಾಪಿಸಿದನು. ನಿಷ್ಣಾತರಾದ ಮಂತ್ರಿಗಳೊಂದಿಗೆ ಕುಳಿತು ಕನ್ಯೆಯರ ವಿವಾಹದ ಕುರಿತು ಯಾವ ದೇಶದಲ್ಲಿ ಯಾವಾಗ, ಯಾವ ಸುಯೋಗ್ಯ ವರನೊಂದಿಗೆ ವಿವಾಹ ಮಾಡಬಹುದು ಎಂದು ವಿಚಾರ ವಿಮರ್ಶೆ ಮಾಡಿದನು.॥9-10॥

ಮೂಲಮ್ - 11

ಏತಸ್ಮಿನ್ನೇವ ಕಾಲೇ ತು ಚೂಲೀ ನಾಮ ಮಹಾದ್ಯುತಿಃ ।
ಊರ್ಧ್ವರೇತಾಃ ಶುಭಾಚಾರೋ ಬ್ರಾಹ್ಮಂ ತಪ ಉಪಾಗಮತ್ ॥

ಅನುವಾದ

ಅದೇ ಸಮಯದಲ್ಲಿ ಚೂಲಿ ಎಂಬ ಪ್ರಸಿದ್ಧ ಓರ್ವ ಮಹಾತೇಜಸ್ವೀ, ಸದಾಚಾರಿ, ನೈಷ್ಠಿಕ ಬ್ರಹ್ಮಚಾರಿ ಮುನಿಯು ವೇದೋಕ್ತ ತಪಸ್ಸನ್ನು ಮಾಡುತಿದ್ದನು. (ಅಥವಾ ಬ್ರಹ್ಮಚಿಂತನರೂಪೀ ತಪಸ್ಸಿನಲ್ಲಿ ತೊಡಗಿದ್ದನು.॥11॥

ಮೂಲಮ್ - 12

ತಪಸ್ಯಂತಮೃಷಿಂ ತತ್ರ ಗಂಧರ್ವೀ ಪರ್ಯುಪಾಸತೇ ।
ಸೋಮದಾ ನಾಮ ಭದ್ರಂ ತೇ ಊರ್ಮಿಲಾತನಯಾತದಾ ॥

ಅನುವಾದ

ಶ್ರೀರಾಮಾ! ನಿನಗೆ ಮಂಗಳವಾಗಲೀ. ಆಗ ಒಬ್ಬ ಗಂಧರ್ವಕನ್ಯೆ ಅಲ್ಲಿದ್ದು ಆ ತಪಸ್ವಿಯ ಸೇವೆ ಮಾಡುತ್ತಿದ್ದಳು. ಆಕೆಯು ಊರ್ಮಿಳೆಯ ಪುತ್ರಿಯಾಗಿದ್ದು, ಆಕೆಯ ಹೆಸರು ಸೋಮದಾ ಎಂದಿತ್ತು.॥12॥

ಮೂಲಮ್ - 13

ಸಾ ಚ ತಂ ಪ್ರಣತಾ ಭೂತ್ವಾ ಶುಶ್ರೂಷಣಪರಾಯಣಾ ।
ಉವಾಸ ಕಾಲೇ ಧರ್ಮಿಷ್ಠಾ ತಸ್ಯಾಸ್ತುಷ್ಟೋಽಭವದ್ಗುರುಃ ॥

ಅನುವಾದ

ಆಕೆಯು ಪ್ರತಿನಿತ್ಯ ಮುನಿಯನ್ನು ನಮಸ್ಕರಿಸುತ್ತಾ ಅವರ ಸೇವೆಯಲ್ಲಿ ತೊಡಗಿದ್ದಳು. ಧರ್ಮದಲ್ಲಿ ನೆಲೆಯಾಗಿದ್ದು, ಸಮಯಕ್ಕೆ ಸರಿಯಾಗಿ ಸೇವೆ ಮಾಡುತ್ತಾ ಇರುವಾಗ ಆಕೆಯ ಮೇಲೆ ಗೌರವಶಾಲಿ ಮುನಿಯು ಸಂತುಷ್ಟರಾದರು.॥13॥

ಮೂಲಮ್ - 14

ಸ ಚ ತಾಂ ಕಾಲಯೋಗೇನ ಪ್ರೋವಾಚ ರಘುನಂದನ ।
ಪರಿತುಷ್ಟೋಽಸ್ಮಿ ಭದ್ರಂ ತೇ ಕಿಂ ಕರೋಮಿ ತವ ಪ್ರಿಯಮ್ ॥

ಅನುವಾದ

ರಘುನಂದನ! ಶುಭಸಮಯ ಬಂದಾಗ ಗಂಧರ್ವಕನ್ಯೆಯಲ್ಲಿ ಚೂಲಿ ಹೇಳಿದರು - ಶುಭಾಂಗಳೇ! ನಿನಗೆ ಮಂಗಳವಾಗಲೀ. ನಾನು ನಿನ್ನ ಮೇಲೆ ಪರಮ ಸಂತುಷ್ಟನಾಗಿರುವೆನು. ನಿನಗೆ ಪ್ರಿಯವಾದ ಯಾವ ಕಾರ್ಯವನ್ನು ಮಾಡಲೀ, ತಿಳಿಸು.॥14॥

ಮೂಲಮ್ - 15

ಪರಿತುಷ್ಟಂ ಮುನಿಂ ಜ್ಞಾತ್ವಾ ಗಂಧರ್ವೀ ಮಧುರಸ್ವರಮ್ ।
ಉವಾಚ ಪರಮಪ್ರೀತಾ ವಾಕ್ಯಜ್ಞಾ ವಾಕ್ಯಕೋವಿದಮ್ ॥

ಅನುವಾದ

ಮುನಿಯು ಸಂತುಷ್ಟವಾಗಿರುವುದನ್ನು ನೋಡಿ ಗಂಧರ್ವ ಕನ್ಯೆಯು ಸಂತೋಷಗೊಂಡಳು. ಮಾತಿನ ಕಲೆಯನ್ನು ಬಲ್ಲ ಆಕೆಯು ವಾಣಿಯ ಮರ್ಮಜ್ಞರಾದ ಮುನಿಯಲ್ಲಿ ಮಧುರವಾಗಿ ಇಂತೆಂದಳು.॥15॥

ಮೂಲಮ್ - 16

ಲಕ್ಷ್ಮ್ಯಾ ಸಮುದಿತೋ ಬ್ರಾಹ್ಮ್ಯಾ ಬ್ರಹ್ಮಭೂತೋ ಮಹಾತಪಾಃ ।
ಬ್ರಾಹ್ಮೇಣ ತಪಸಾ ಯುಕ್ತಂ ಪುತ್ರಮಿಚ್ಛಾಮಿ ಧಾರ್ಮಿಕಮ್ ॥

ಅನುವಾದ

ಮಹರ್ಷಿಗಳೇ! ತಾವು ಬ್ರಹ್ಮತೇಜದಿಂದ ಸಂಪನ್ನರಾಗಿ ಬ್ರಹ್ಮಸ್ವರೂಪರಾಗಿರುವಿರಿ. ಆದ್ದರಿಂದ ತಾವು ಮಹಾತಪಸ್ವಿಗಳಾಗಿದ್ದೀರಿ. ನಾನು ನಿಮ್ಮಿಂದ ಬ್ರಹನಿಷ್ಠನಾದ, ಪರಮಧಾರ್ಮಿಕನಾದ ಪುತ್ರನನ್ನು ಬಯಸುತ್ತಿರುವೆನು.॥16॥

ಮೂಲಮ್ - 17

ಅಪತಿಶ್ಚಾಸ್ಮಿ ಭದ್ರಂ ತೇ ಭಾರ್ಯಾ ಚಾಸ್ಮಿ ನ ಕಸ್ಯಚಿತ್ ।
ಬ್ರಾಹ್ಮೇಣೋಪಗತಾಯಾಶ್ಚ ದಾತುಮರ್ಹಸಿ ಮೇ ಸುತಮ್ ॥

ಅನುವಾದ

ಮುನಿಯೇ! ನಿಮಗೆ ಶುಭವಾಗಲಿ. ನನಗೆ ಯಾರೂ ಪತಿಯಿಲ್ಲ. ನಾನು ಮದುವೆಯೇ ಆಗಿಲ್ಲ ಹಾಗೂ ಆಗುವುದೂ ಇಲ್ಲ. ನಾನು ನಿಮ್ಮ ಸೇವೆಗೆ ಬಂದಿರುವೆನು. ನೀವು ತಮ್ಮ ತಪಃಶಕ್ತಿಯಿಂದ ನನಗೆ ಪುತ್ರನನ್ನು ಕರುಣಿಸಿರಿ.॥17॥

ಮೂಲಮ್ - 18

ತಸ್ಯಾಃ ಪ್ರಸನ್ನೋ ಬ್ರಹ್ಮರ್ಷಿರ್ದದೌ ಬ್ರಾಹ್ಮಮನುತ್ತಮಮ್ ।
ಬ್ರಹ್ಮದತ್ತ ಇತಿ ಖ್ಯಾತಂ ಮಾನಸಂ ಚೂಲಿನಃ ಸುತಮ್ ॥

ಅನುವಾದ

ಆ ಗಂಧರ್ವಕನ್ಯೆಯ ಸೇವೆಯಿಂದ ಸಂತುಷ್ಟರಾದ ಬ್ರಹ್ಮರ್ಷಿ ಚೂಲಿಯು ಆಕೆಗೆ ಪರಮೋತ್ತಮ ಬ್ರಹ್ಮತಪಸ್ಸಿನಿಂದ ಸಂಪನ್ನನಾದ ಪುತ್ರನನ್ನು ಕರುಣಿಸಿದನು. ಅವನು ಅವರ ಮಾನಸಿಕ ಸಂಕಲ್ಪದಿಂದ ಪ್ರಕಟನಾದ ಮಾನಸ ಪುತ್ರನಾಗಿದ್ದನು. ಅವನ ಹೆಸರು ‘ಬ್ರಹ್ಮದತ್ತ’ ಎಂದಿತ್ತ.॥18॥

ಮೂಲಮ್ - 19

ಸ ರಾಜಾ ಬ್ರಹ್ಮದತ್ತಸ್ತು ಪುರೀಮಧ್ಯವಸತ್ತದಾ ।
ಕಾಂಪಿಲ್ಯಾಂ ಪರಯಾ ಲಕ್ಷ್ಮ್ಯಾ ದೇವರಾಜೋ ಯಥಾ ದಿವಮ್ ॥

ಅನುವಾದ

(ಕುಶನಾಭನಲ್ಲಿ ಕನ್ಯೆಯರ ವಿವಾಹದ ವಿಚಾರ ನಡೆಯುತ್ತಿತ್ತು) ಆ ಸಮಯದಲ್ಲಿ ರಾಜಾಬ್ರಹ್ಮದತ್ತನು ಉತ್ತಮ ಲಕ್ಷ್ಮಿಸಂಪನ್ನನಾಗಿ ‘ಕಾಂಪಿಲ್ಯ’ ಎಂಬ ನಗರದಲ್ಲಿ ಸ್ವರ್ಗದ ಅಮರಾವತಿಯಲ್ಲಿ ದೇವೇಂದ್ರನು ಇರುವಂತೆಯೇ ವಾಸಿಸುತ್ತಿದ್ದನು.॥19॥

ಮೂಲಮ್ - 20

ಸ ಬುದ್ಧಿಂ ಕೃತವಾನ್ ರಾಜಾ ಕುಶನಾಭಃ ಸುಧಾರ್ಮಿಕಃ ।
ಬ್ರಹ್ಮದತ್ತಾಯ ಕಾಕುತ್ಸ್ಥ ದಾತುಂ ಕನ್ಯಾಶತಂ ತದಾ ॥

ಅನುವಾದ

ಎಲೈ ಕಾಕುತ್ಸ್ಥನೇ! ಆಗ ಪರಮ ಧಾರ್ಮಿಕ ರಾಜಾ ಕುಶನಾಭನು ಬ್ರಹ್ಮದತ್ತನೊಂದಿಗೆ ತನ್ನ ನೂರು ಮಂದಿ ಕನ್ಯೆಯರನ್ನು ವಿವಾಹಮಾಡಿ ಕೊಡಲು ನಿಶ್ಚಯಿಸಿದನು.॥20॥

ಮೂಲಮ್ - 21

ತಮಾಹೂಯ ಮಹಾತೇಜಾ ಬ್ರಹ್ಮದತ್ತಂ ಮಹೀಪತಿಃ ।
ದದೌ ಕನ್ಯಾಶತಂ ರಾಜಾ ಸುಪ್ರೀತೇನಾಂತರಾತ್ಮನಾ ॥

ಅನುವಾದ

ಮಹಾತೇಜಸ್ವೀ ಭೂಪಾಲ ರಾಜಾ ಕುಶನಾಭನು ಬ್ರಹ್ಮದತ್ತನನ್ನು ಕರೆದು ಅತ್ಯಂತ ಸಂತೋಷ ಚಿತ್ತದಿಂದ ಅವರಿಗೆ ನೂರು ಕನ್ಯೆಯರನ್ನು ಒಪ್ಪಿಸಿದನು.॥21॥

ಮೂಲಮ್ - 22

ಯಥಾಕ್ರಮಂ ತದಾ ಪಾಣೀಂ ಜಗ್ರಾಹ ರಘುನಂದನ ।
ಬ್ರಹ್ಮದತ್ತೋ ಮಹೀಪಾಲಸ್ತಾಸಾಂ ದೇವಪತಿರ್ಯಥಾ ॥

ಅನುವಾದ

ರಘುನಂದನ! ಆಗ ದೇವೇಂದ್ರನಂತೆ ತೇಜಸ್ವೀ ಪೃಥ್ವಿಪತಿ ಬ್ರಹ್ಮದತ್ತನು ಕ್ರಮವಾಗಿ ಆ ಎಲ್ಲ ಕನ್ಯೆಯರ ಪಾಣಿಗ್ರಹಣವನ್ನು ಮಾಡಿದನು.॥22॥

ಮೂಲಮ್ - 23

ಸ್ಪೃಷ್ಟಮಾತ್ರೇ ತದಾ ಪಾಣೌ ವಿಕುಬ್ಜಾ ವಿಗತಜ್ವರಾಃ ।
ಯುಕ್ತಂ ಪರಮಯಾ ಲಕ್ಷ್ಮ್ಯಾ ಬಭೌ ಕನ್ಯಾಶತಂ ತದಾ ॥

ಅನುವಾದ

ವಿವಾಹ ಕಾಲದಲ್ಲಿ ಬ್ರಹ್ಮದತ್ತನು ಪಾಣಿಗ್ರಹಣ ಮಾಡಿದಾಕ್ಷಣ ಅವರೆಲ್ಲರೂ ಕುಬ್ಜತ್ವದೋಷದಿಂದ ರಹಿತ, ನಿರೋಗಿ ಹಾಗೂ ಉತ್ತಮ ಶೋಭಾಸಂಪನ್ನರಾದರು.॥23॥

ಮೂಲಮ್ - 24

ಸ ದೃಷ್ಟ್ವಾ ವಾಯುನಾ ಮುಕ್ತಾಃ ಕುಶನಾಭೋ ಮಹೀಪತಿಃ ।
ಬಭೂವ ಪರಮಪ್ರೀತೋ ಹರ್ಷಂ ಲೇಭೇ ಪುನಃಪುನಃ ॥

ಅನುವಾದ

ವಾತರೋಗದ ರೂಪದಲ್ಲಿ ಬಂದಿರುವ ವಾಯುದೇವರು ಆ ಕನ್ಯೆಯರನ್ನು ಬಿಟ್ಟುಬಿಟ್ಟನು. ಇದನ್ನು ನೋಡಿದ ಪೃಥ್ವೀಪತಿ ಕುಶನಾಭರಾಜನು ಬಹಳ ಸಂತೋಷಗೊಂಡು ಪದೇ-ಪದೇ ಹರ್ಷಿತನಾಗುತ್ತಿದ್ದನು.॥24॥

ಮೂಲಮ್ - 25

ಕೃತೋದ್ವಾಹಂ ತು ರಾಜಾನಂ ಬ್ರಹ್ಮದತ್ತಂ ಮಹೀಪತಿಮ್ ।
ಸದಾರಂ ಪ್ರೇಷಯಾಮಾಸ ಸೋಪಾಧ್ಯಾಯಗಣಂ ತದಾ ॥

ಅನುವಾದ

ಭೂಪಾಲ ರಾಜಾ ಬ್ರಹ್ಮದತ್ತನ ವಿವಾಹಕಾರ್ಯ ನೆರವೇರಿದಾಗ ಮಹಾರಾಜಾ ಕುಶನಾಭನು ಪತ್ನಿಯರ ಸಹಿತ ಪುರೋಹಿತರೊಂದಿಗೆ ಬ್ರಹ್ಮದತ್ತನನ್ನು ಆದರದಿಂದ ಬೀಳ್ಕೊಟ್ಟನು.॥25॥

ಮೂಲಮ್ - 26

ಸೋಮದಾಪಿ ಸುತಂ ದೃಷ್ಟ್ವಾ ಪುತ್ರಸ್ಯ ಸದೃಶೀಂ ಕ್ರಿಯಾಮ್ ।
ಯಥಾನ್ಯಾಯಂ ಚ ಗಂಧರ್ವೀ ಸ್ನುಷಾಸ್ತಾಃ ಪ್ರತ್ಯನಂದತ ।
ಸ್ಪೃಷ್ಟ್ವಾ ಸ್ಪೃಷ್ಟ್ವಾ ಚ ತಾಃ ಕನ್ಯಾಃ ಕುಶನಾಭಂ ಪ್ರಶಸ್ಯ ಚ ॥

ಅನುವಾದ

ಗಂಧರ್ವೀ ಸೋಮದೆಯು ತನ್ನ ಪುತ್ರನನ್ನು ಹಾಗೂ ಅವನ ಯೋಗ್ಯವಿವಾಹ ಸಂಬಂಧ ನೋಡಿ ತನ್ನ ಆ ಸೊಸೆಯರನ್ನು ಯಥೋಚಿತವಾಗಿ ಅಭಿನಂದಿಸಿದಳು. ಆಕೆಯು ಒಬ್ಬೊಬ್ಬರಾಗಿ ಎಲ್ಲ ರಾಜಕನ್ಯೆಯರನ್ನು ಆಲಂಗಿಸಿ ಮಹಾ ರಾಜಾಕುಶನಾಭನನ್ನು ಹೊಗಳುತ್ತಾ ಅಲ್ಲಿಂದ ಹೊರಟಳು.॥26॥

ಅನುವಾದ (ಸಮಾಪ್ತಿಃ)

ವಾಲ್ಮೀಕಿ ವಿರಚಿತ ಆರ್ಷ ರಾಮಾಯಣ ಆದಿಕಾವ್ಯದ ಬಾಲಕಾಂಡದಲ್ಲಿ ಮೂವತ್ತಮೂರನೆಯ ಸರ್ಗ ಪೂರ್ಣವಾಯಿತು. ॥33॥