०१० ऋष्यशृङ्गकथा

वाचनम्
ಭಾಗಸೂಚನಾ

ಅಂಗದೇಶಕ್ಕೆ ಋಷ್ಯಶೃಂಗ ಬರುವುದು ಹಾಗೂ ಶಾಂತಾಳೊಡನೆ ವಿವಾಹವಾದ ಪ್ರಸಂಗವನ್ನು ವಿಸ್ತಾರವಾಗಿ ವರ್ಣಿಸುದುದು

ಮೂಲಮ್ - 1

ಸುಮಂತ್ರಶ್ಚೋದಿತೋ ರಾಜ್ಞಾ ಪ್ರೋವಾಚೇದಂ ವಚಸ್ತದಾ ।
ಯರ್ಥರ್ಷ್ಯಶೃಂಗಸ್ತ್ವಾನೀತೋ ಯೇನೋಪಾಯೇನಮಂತ್ರಿಭಿಃ ।
ತನ್ಮೇ ನಿಗದಿತಂ ಸರ್ವಂ ಶೃಣು ಮೇ ಮಂತ್ರಿಭಿಃ ಸಹ ॥

ಅನುವಾದ

ರಾಜನ ಅಪ್ಪಣೆ ಪಡೆದು ಸುಮಂತ್ರನು ಹೀಗೆ ಹೇಳಲು ಪ್ರಾರಂಭಿಸಿದನು - ಮಹಾರಾಜಾ! ರೋಮಪಾದನ ಮಂತ್ರಿಗಳು ಋಷ್ಯಶೃಂಗರನ್ನು ಯಾವ ಉಪಾಯದಿಂದ ಕರೆಸಿದ್ದನು? ಅದೆಲ್ಲವನ್ನು ನಾನು ತಿಳಿಸುವೆನು. ತಾವು ಮಂತ್ರಿಗಳೊಂದಿಗೆ ನನ್ನ ಮಾತನ್ನು ಕೇಳಿರಿ.॥1॥

ಮೂಲಮ್ - 2

ರೋಮಪಾದಮುವಾಚೇದಂ ಸಹಾಮಾತ್ಯಃ ಪುರೋಹಿತಃ ।
ಉಪಾಯೋ ನಿರಪಾಯೋಽಯಮಸ್ಮಾಭಿರಭಿಚಿಂತಿತಃ ॥

ಅನುವಾದ

ಆಗ ಅಮಾತ್ಯರೊಂದಿಗೆ ಪುರೋಹಿತರು ರೋಮಪಾದನಲ್ಲಿ - ಮಹಾರಾಜನೇ! ನಾವು ಒಂದು ಉಪಾಯವನ್ನು ಯೋಚಿಸಿರುವೆವು. ಅದನ್ನು ಉಪಯೋಗಿಸಿದ್ದರಿಂದ ಯಾವುದೇ ವಿಘ್ನ-ಬಾಧೆ ಬರುವ ಸಂಭವವೇ ಇಲ್ಲ.॥2॥

ಮೂಲಮ್ - 3

ಋಷ್ಯಶೃಂಗೋ ವನಚರಸ್ತಪಃಸ್ವಾಧ್ಯಾಯಸಂಯುತಃ ।
ಅನಭಿಜ್ಞಸ್ತು ನಾರೀಣಾಂ ವಿಷಯಾಣಾಂಸುಖಸ್ಯ ಚ ॥

ಅನುವಾದ

ಋಷ್ಯಶೃಂಗ ಮುನಿಯು ಸದಾ ಕಾಡಿನಲ್ಲೇ ಇರುತ್ತಾ ತಪಸ್ಸು ಮತ್ತು ಸ್ವಾಧ್ಯಾಯದಲ್ಲೇ ತೊಡಗಿರುವವರು. ಅವರಿಗೆ ಸ್ತ್ರೀಯರ ಪರಿಚಯವೇ ಇಲ್ಲ ಮತ್ತು ವಿಷಯಸುಖದ ಅನುಭವವೇ ಇಲ್ಲ.॥3॥

ಮೂಲಮ್ - 4

ಇಂದ್ರಿಯಾರ್ಥೈರಭಿಮತೈರ್ನರಚಿತ್ತಪ್ರಮಾಥಿಭಿಃ ।
ಪುರಮಾನಾಯಯಿಷ್ಯಾಮಃ ಕ್ಷಿಪ್ರಂ ಚಾಧ್ಯವಸೀಯತಾಮ್ ॥

ಅನುವಾದ

ನಾವು ಮನಸ್ಸನ್ನು ಕದಡುವ ಮನೋವಾಂಛಿತ ವಿಷಯಗಳ ಪ್ರಲೋಭನೆ ತೋರಿಸಿ ಅವರನ್ನು ನಮ್ಮ ನಗರಕ್ಕೆ ಕರೆತರುವೆವು. ಆದ್ದರಿಂದ ಇದಕ್ಕಾಗಿ ಬೇಗನೇ ಪ್ರಯತ್ನಮಾಡೋಣ.॥4॥

ಮೂಲಮ್ - 5

ಗಣಿಕಾಸ್ತತ್ರ ಗಚ್ಛಂತು ರೂಪವತ್ಯಃ ಸ್ವಲಂಕೃತಾಃ ।
ಪ್ರಲೋಭ್ಯವಿವಿಧೋಪಾಯೈರಾನೆಷ್ಯಂತೀಹ ಸತ್ಕೃತಾಃ ॥

ಅನುವಾದ

ಸುಂದರ ಆಭೂಷಣಗಳಿಂದ ಅಲಂಕೃತರಾದ ಮನೋಹರ ರೂಪವುಳ್ಳ ವೇಶ್ಯೆಯರು ಅಲ್ಲಿಗೆ ಹೋದರೆ, ಅವರು ಬಗೆ ಬಗೆಯ ಉಪಾಯಗಳಿಂದ ಅವರನ್ನು ಮರುಳುಗೊಳಿಸಿ ನಗರಕ್ಕೆ ಕರೆತರುವರು. ಆದ್ದರಿಂದ ಅವರನ್ನು ಸತ್ಕಾರಪೂರ್ವಕ ಕಳಿಸು.॥5॥

ಮೂಲಮ್ - 6

ಶ್ರುತ್ವಾ ತಥೇತಿ ರಾಜಾ ಚ ಪ್ರತ್ಯುವಾಚ ಪುರೋಹಿತಮ್ ।
ಪುರೋಹಿತೋ ಮಂತ್ರಿಣಶ್ಚ ತದಾಚಕ್ರುಶ್ಚ ತೇ ತಥಾ ।।

ಅನುವಾದ

ಇದನ್ನು ಕೇಳಿ ರಾಜನು ಪುರೋಹಿತರಲ್ಲಿ - ‘ಬಹಳ ಒಳ್ಳೆಯದು ನೀವು ಹಾಗೆಯೇ ಮಾಡಿರಿ’ ಎಂದು ಹೇಳಿದನು. ಅಪ್ಪಣೆ ಪಡೆದು ಪುರೋಹಿತರು ಮತ್ತು ಮಂತ್ರಿಗಳು ಹಾಗೆಯೇ ವ್ಯವಸ್ಥೆ ಮಾಡಿದರು.॥6॥

ಮೂಲಮ್ - 7

ವಾರಮುಖ್ಯಾಸ್ತು ತಚ್ಛ್ರುತ್ವಾ ವನಂ ಪ್ರವಿವಿಶುರ್ಮಹತ್ ।
ಆಶ್ರಮಸ್ಯಾವಿದೂರೇಽಸ್ಮಿನ್ ಯತ್ನಂ ಕುರ್ವಂತಿ ದರ್ಶನೇ ॥

ಅನುವಾದ

ಆಗ ನಗರದ ಮುಖ್ಯ-ಮುಖ್ಯ ವೇಶ್ಯೆಯರು ರಾಜನ ಆದೇಶ ಪಡೆದು ಆ ವನಕ್ಕೆ ತೆರಳಿದರು. ಅಲ್ಲಿ ಮುನಿಯ ಆಶ್ರಮದ ಸ್ವಲ್ಪ ದೂರದಲ್ಲಿ ತಂಗಿದ್ದು, ಅವರ ದರ್ಶನಕ್ಕಾಗಿ ಪ್ರಯತ್ನಿಸತೊಡಗಿದರು.॥7॥

ಮೂಲಮ್ - 8

ಋಷೆಃ ಪುತ್ರಸ್ಯ ಧೀರಸ್ಯ ನಿತ್ಯಮಾಶ್ರಮವಾಸಿನಃ ।
ಪಿತುಃ ಸ ನಿತ್ಯಸಂತುಷ್ಟೋ ನಾತಿಚಕ್ರಾಮ ಚಾಶ್ರಮಾತ್ ॥

ಅನುವಾದ

ಮುನಿಕುಮಾರ ಋಷ್ಯಶೃಂಗರು ಬಹಳ ಧೀರ ಸ್ವಭಾವದವರಾಗಿದ್ದು, ಸದಾ ಆಶ್ರಮದಲ್ಲೇ ಇರುತ್ತಿದ್ದರು. ಅವರಿಗೆ ಯಾವಾಗಲೂ ತನ್ನ ತಂದೆಯ ಬಳಿ ಇರುವುದರಲ್ಲೇ ಹೆಚ್ಚು ಸುಖ ಸಿಗುತ್ತಿತ್ತು. ಆದ್ದರಿಂದ ಅವರು ಆಶ್ರಮದ ಹೊರಗೇ ಬರುತ್ತಿರಲಿಲ್ಲ.॥8॥

ಮೂಲಮ್ - 9

ನ ತೇನ ಜನ್ಮಪ್ರಭೃತಿ ದೃಷ್ಟಪೂರ್ವಂ ತಪಸ್ವಿನಾ ।
ಸ್ತ್ರೀ ವಾ ಪುಮಾನ್ ವಾ ಯಚ್ಚಾನ್ಯತ್ಸತ್ವಂ ನಗರರಾಷ್ಟ್ರಜಮ್ ॥

ಅನುವಾದ

ಆ ತಪಸ್ವೀ ಋಷಿಕುಮಾರನು ಹುಟ್ಟಿದಂದಿನಿಂದ ಇಂದಿನವರೆಗೆ ಯಾವುದೇ ಸ್ತ್ರೀಯನ್ನು ನೋಡಿರಲಿಲ್ಲ ಹಾಗೂ ತಂದೆಯಲ್ಲದೆ ಬೇರೆ ಪುರುಷನನ್ನು ನೋಡಿರಲಿಲ್ಲ. ನಗರದಲ್ಲಿ ಅಥವಾ ಹಳ್ಳಿಗಳಲ್ಲಿ ವಾಸಿಸುವ ಬೇರೆ-ಬೇರೆ ಪ್ರಾಣಿಗಳನ್ನೂ ಸಹ ನೋಡಿರಲಿಲ್ಲ.॥9॥

ಮೂಲಮ್ - 10

ತತಃ ಕದಾಚಿತ್ ತಂ ದೇಶಮಾಜಗಾಮ ಯದೃಚ್ಛಯಾ ।
ವಿಭಾಂಡಕಸುತಸ್ತತ್ರ ತಾಶ್ಚಾಪಶ್ಯದ್ ವರಾಂಗನಾಃ ॥

ಅನುವಾದ

ಅನಂತರ ಒಂದು ದಿನ ವಿಭಾಂಡಕ ಕುಮಾರ ಋಷ್ಯಶೃಂಗನು ಅಕಸ್ಮಾತ್ ತಿರುಗಾಡುತ್ತಾ ವೇಶ್ಯೆಯರು ತಂಗಿದ್ದ ಸ್ಥಾನಕ್ಕೆ ಬಂದನು. ಅಲ್ಲಿ ಅವನು ಆ ಸುಂದರ ವನಿತೆಯರನ್ನು ನೋಡಿದನು.॥10॥

ಮೂಲಮ್ - 11

ತಾಶ್ಚಿತ್ರವೇಷಾಃ ಪ್ರಮದಾ ಗಾಯಂತ್ಯೋ ಮಧುರಸ್ವರಮ್ ।
ಋಷಿಪುತ್ರಮುಪಾಗಮ್ಯ ಸರ್ವಾ ವಚನಮಬ್ರುವನ್ ॥

ಅನುವಾದ

ಆ ಪ್ರಮದೆಯರ ವೇಷ-ಭೂಷಣಗಳು ಸುಂದರ ಮತ್ತು ಅದ್ಭುತವಾಗಿತ್ತು. ಅವರು ಮಧುರವಾಗಿ ಹಾಡುತ್ತಿದ್ದರು. ಅಲ್ಲಿಗೆ ಬಂದ ಋಷಿಕುಮಾರನನ್ನು ನೋಡಿ ಅವರೆಲ್ಲರೂ ಅವನ ಬಳಿಗೆ ಬಂದು ಸುತ್ತುವರೆದು ನಿಂತು ಹೀಗೆ ಕೇಳತೊಡಗಿದರು.॥11॥

ಮೂಲಮ್ - 12

ಕಸ್ತ್ವಂ ಕಿಂ ವರ್ತಸೇ ಬ್ರಹ್ಮನ್ ಜ್ಞಾತುಮಿಚ್ಛಾಮಹೇ ವಯಮ್ ।
ಏಕಸ್ತ್ವಂ ವಿಜನೇ ದೂರೇ ವನೇ ಚರಸಿ ಶಂಸ ನಃ ॥

ಅನುವಾದ

ವಿಪ್ರೋತ್ತಮನೇ! ನೀನು ಯಾರು? ಏನು ಮಾಡುತ್ತಿರುವೇ? ಈ ನಿರ್ಜನ ವನದಲ್ಲಿ ಆಶ್ರಮದಿಂದ ಹೊರಗೆ ಇಷ್ಟು ದೂರ ಬಂದು ಒಬ್ಬನೇ ಏನು ವಿಚಾರ ಮಾಡುತ್ತಿರುವೆ? ಇದನ್ನು ನಮಗೆ ಹೇಳು. ನಾವು ಇದನ್ನು ತಿಳಿಯಲು ಬಯಸುತ್ತಿರುವೆವು.॥12॥

ಮೂಲಮ್ - 13

ಅದೃಷ್ಟರೂಪಾಸ್ತಾಸ್ತೇನ ಕಾಮ್ಯರೂಪಾ ವನೇ ಸ್ತ್ರಿಯಃ ।
ಹಾರ್ದಾತ್ತಸ್ಯ ಮತಿರ್ಜಾತಾ ಆಖ್ಯಾತುಂ ಪಿತರಂ ಸ್ವಕಮ್ ॥

ಅನುವಾದ

ಋಷ್ಯಶೃಂಗನು ಕಾಡಿನಲ್ಲಿ ಎಂದೂ ಸ್ತ್ರೀಯನ್ನು ನೋಡಿರಲಿಲ್ಲ. ಆ ಸ್ತ್ರೀಯರು ಅತ್ಯಂತ ಕಮನೀಯ ರೂಪವತಿಯರಾಗಿದ್ದರು. ಆದ್ದರಿಂದ ಅವರನ್ನು ನೋಡಿ ಅವನ ಮನಸ್ಸಿನಲ್ಲಿ ಸ್ನೇಹ ಉಂಟಾಯಿತು. ಆದ್ದರಿಂದ ಅವನು ತನ್ನ ಮತ್ತು ತಂದೆಯ ಪರಿಚಯ ಮಾಡಿಸಲು ವಿಚಾರ ಮಾಡಿದನು.॥13॥

ಮೂಲಮ್ - 14

ಪಿತಾ ವಿಭಾಂಡಕೋಽಸ್ಮಾಕಂ ತಸ್ಯಾಹಂ ಸುತ ಔರಸಃ ।
ಋಷ್ಯಶೃಂಗ ಇತಿ ಖ್ಯಾತಂ ನಾಮಕರ್ಮ ಚ ಮೇ ಭುವಿ ॥

ಅನುವಾದ

ಅವನು ಹೇಳುತ್ತಾನೆ - ನನ್ನ ತಂದೆ ವಿಭಾಂಡಕ ಮುನಿಗಳು. ನಾನು ಅವರ ಔರಸ ಪುತ್ರನು. ನನ್ನ ಹೆಸರು ಋಷ್ಯಶೃಂಗ. ನನ್ನ ನಿತ್ಯ ನೈಮಿತ್ತಿಕ ತಪಸ್ಸು ಇತ್ಯಾದಿ ಕರ್ಮಗಳು ಈ ವನದಲ್ಲೇ ನಡೆಯುತ್ತಿವೆ.॥14॥

ಮೂಲಮ್ - 15

ಇಹಾಶ್ರಮಪದೋಽಸ್ಮಾಕಂ ಸಮೀಪೇ ಶುಭದರ್ಶನಾಃ
ಕರಿಷ್ಯೇ ವೋಽತ್ರ ಪೂಜಾಂ ವೈ ಸರ್ವೇಷಾಂ ವಿಧಿಪೂರ್ವಕಮ್ ॥

ಅನುವಾದ

ಇಲ್ಲಿ ಸನಿಹದಲ್ಲೇ ನನ್ನ ಆಶ್ರಮವಿದೆ. ನೀವು ನೋಡಲು ಪರಮ ಸುಂದರರಾಗಿದ್ದೀರಿ. ನೀವು ನನ್ನ ಆಶ್ರಮಕ್ಕೆ ನಡೆಯಿರಿ. ಅಲ್ಲಿ ನಾನು ನಿಮ್ಮೆಲ್ಲರನ್ನು ವಿಧಿವತ್ತಾಗಿ ಪೂಜಿಸುವೆನು.॥15॥

ಮೂಲಮ್ - 16

ಋಷಿಪುತ್ರವಚಃ ಶ್ರುತ್ವಾ ಸರ್ವಾಸಾಂ ಮತಿರಾಸ ವೈ।
ತದಾಶ್ರಮಪದಂ ದ್ರಷ್ಟುಂಜಗ್ಮುಃ ಸರ್ವಾಸ್ತತೋಽಂಗನಾಃ ॥

ಅನುವಾದ

ಋಷಿಕುಮಾರನ ಮಾತನ್ನು ಕೇಳಿ ಅವರೆಲ್ಲರೂ ಒಪ್ಪಿಕೊಂಡರು ಮತ್ತೆ ಆ ಎಲ್ಲ ಸುಂದರಿಯರು ಅವನ ಆಶ್ರಮವನ್ನು ನೋಡಲು ಹೊರಟರು.॥16॥

ಮೂಲಮ್ - 17

ಗತಾನಾಂ ತು ತತಃ ಪೂಜಾಮೃಷಿ ಪುತ್ರಶ್ಚಕಾರ ಹ ।
ಇದಮರ್ಘ್ಯಮಿದಂ ಪಾದ್ಯಮಿದಂ ಮೂಲಂ ಫಲಂ ಚ ನಃ ॥

ಅನುವಾದ

ಅಲ್ಲಿಗೆ ಹೋದ ಮೇಲೆ ಋಷಿಕುಮಾರರು ಇದೋ ಅರ್ಘ್ಯ, ಇದೋ ಪಾದ್ಯ, ಇದು ಭೋಜನಕ್ಕಾಗಿ ಫಲ-ಮೂಲಗಳು ಸಿದ್ಧವಾಗಿವೆ, ಎಂದು ಹೇಳುತ್ತಾ ಅವರೆಲ್ಲರನ್ನು ವಿಧಿವತ್ತಾಗಿ ಪೂಜಿಸಿದನು.॥17॥

ಮೂಲಮ್ - 18

ಪ್ರತಿಗೃಹ್ಯ ತು ತಾಂ ಪೂಜಾಂ ಸರ್ವಾ ಏವಸಮುತ್ಸುಕಾಃ ।
ಋಷೇರ್ಭೀತಾಶ್ಚ ಶೀಘ್ರಂ ತು ಗಮನಾಯ ಮತಿಂ ದಧುಃ ॥

ಅನುವಾದ

ಋಷಿಕುಮಾರನ ಪೂಜೆಯನ್ನು ಸ್ವೀಕರಿಸಿ ಅವರೆಲ್ಲರೂ ಹೊರಟುಹೋಗಲು ಉತ್ಸುಕರಾದರು. ಅವರಿಗೆ ವಿಭಾಂಡಕ ಮುನಿಯ ಭಯವಿತ್ತು. ಅದಕ್ಕಾಗಿ ಅವರು ಶೀಘ್ರವಾಗಿ ಅಲ್ಲಿಂದ ಹೋಗಲು ವಿಚಾರ ಮಾಡಿದರು.॥18॥

ಮೂಲಮ್ - 19

ಅಸ್ಮಾಕಮಪಿ ಮುಖ್ಯಾನಿ ಫಲಾನೀಮಾನಿ ಹೇ ದ್ವಿಜ ।
ಗೃಹಾಣ ವಿಪ್ರ ಭದ್ರಂ ತೇ ಭಕ್ಷಯಸ್ವ ಚ ಮಾ ಚಿರಮ್ ॥

ಅನುವಾದ

ಅವರು ಹೇಳಿದರು - ವಿಪ್ರರೇ! ನಮ್ಮ ಬಳಿಯೂ ಇಂತಹ ಉತ್ತಮೋತ್ತಮ ಫಲಗಳಿವೆ. ಇವನ್ನು ಸ್ವೀಕರಿಸಿರಿ. ನಿಮ್ಮ ಕಲ್ಯಾಣವಾಗಲೀ ಈ ಫಲಗಳನ್ನು ಬೇಗನೇ ತಿಂದುಬಿಡಿ, ತಡಮಾಡಬೇಡಿ.॥19॥

ಮೂಲಮ್ - 20

ತತಸ್ತಾಸ್ತಂ ಸಮಾಲಿಂಗ್ಯ ಸರ್ವಾ ಹರ್ಷಸಮಿನ್ವಿತಾಃ ।
ಮೋದಕಾನ್ಪ್ರದದುಸ್ತಸ್ಮೈ ಭಕ್ಷ್ಯಾಂಶ್ಚ ವಿವಿಧಾನ್ ಶುಭಾನ್ ॥

ಅನುವಾದ

ಹೀಗೆ ಹೇಳಿ ಅವರೆಲ್ಲರೂ ಹರ್ಷಗೊಂಡು ಋಷಿಯನ್ನು ಆಲಿಂಗಿಸಿ, ಅವರಿಗೆ ತಿನ್ನಲು ಯೋಗ್ಯವಾದ ಬಗೆಬಗೆಯ ಒಳ್ಳೆಯ ಪದಾರ್ಥ ಹಾಗೂ ಬಹಳಷ್ಟು ಸಿಹಿ ತಿನಿಸುಗಳನ್ನು ನೀಡಿದರು.॥20॥

ಮೂಲಮ್ - 21

ತಾನಿ ಚಾಸ್ವಾದ್ಯ ತೇಜಸ್ವೀ ಫಲಾನೀತಿ ಸ್ಮಮನ್ಯತೇ ।
ಅನಾಸ್ವಾದಿತಪೂರ್ವಾಣಿ ವನೇ ನಿತ್ಯನಿವಾಸಿನಾಮ್ ॥

ಅನುವಾದ

ಅವನ್ನು ಸವಿಯುತ್ತಾ ತೇಜಸ್ವೀ ಋಷಿಯು ಇವುಗಳೂ ಫಲಗಳೆಂದೇ ತಿಳಿದನು, ಏಕೆಂದರೆ ಇದಕ್ಕಿಂತ ಮೊದಲು ಎಂದೂ ಅವನು ಅಂತಹ ಪದಾರ್ಥಗಳನ್ನು ತಿಂದಿರಲಿಲ್ಲ. ಸದಾ ವನದಲ್ಲೇ ಇರುವವರಿಗೆ ಇಂತಹ ವಸ್ತುಗಳ ರುಚಿ ಸವಿಯುವ ಅವಕಾಶವಾದರೂ ಎಲ್ಲಿ ತಾನೇ ಇರುವುದು.॥21॥

ಮೂಲಮ್ - 22

ಆಪೃಚ್ಛ್ಯ ಚ ತದಾ ವಿಪ್ರಂ ವ್ರತಚರ್ಯಾಂ ನಿವೇದ್ಯ ಚ ।
ಗಚ್ಛಂತಿ ಸ್ಮಾಪದೇಶಾತ್ತಾ ಭೀತಾಸ್ತಸ್ಯ ಪಿತುಃ ಸ್ತ್ರಿಯಃ ॥

ಅನುವಾದ

ಅನಂತರ ವಿಭಾಂಡಕ ಮುನಿಯ ಭಯದಿಂದ ಆ ಸ್ತ್ರೀಯರು ವ್ರತ ಮತ್ತು ಅನುಷ್ಠಾನದ ಮಾತನ್ನು ಹೇಳಿ ಬ್ರಾಹ್ಮಣ ಕುಮಾರನಲ್ಲಿ ಆ ನೆಪವನ್ನೊಡ್ಡಿ ಅಲ್ಲಿಂದ ಹೊರಟುಹೋದರು.॥22॥

ಮೂಲಮ್ - 23

ಗತಾಸು ತಾಸು ಸರ್ವಾಸು ಕಾಶ್ಯಪಸ್ಯಾತ್ಮಜೋ ದ್ವಿಜಃ ।
ಅಸ್ವಸ್ಥಹೃದಯಶ್ಚಾಸೀದ್ ದುಃಖಾಚ್ಚ ಪರಿವರ್ತತೇ ॥

ಅನುವಾದ

ಅವರೆಲ್ಲರೂ ಹೊರಟು ಹೋದ ಬಳಿಕ ಕಾಶ್ಯಪ ಕುಮಾರ ಋಷ್ಯಶೃಂಗನು ಮನಸ್ಸಿನಲ್ಲಿ ವ್ಯಾಕುಲಗೊಂಡನು ಮತ್ತು ಬಹಳ ದುಃಖದಿಂದ ಅತ್ತ-ಇತ್ತ ಅಲೆಯತೊಡಗಿದನು.॥23॥

ಮೂಲಮ್ - 24½

ತತೋಽಪರೇದ್ಯುಸ್ತಂ ದೇಶಮಾಜಗಾಮ ಸ ವೀರ್ಯವಾನ್ ।
ವಿಭಾಂಡಕಸುತಃ ಶ್ರೀಮಾನ್ ಮನಸಾಚಿಂತಯನ್ಮುಹುಃ ॥
ಮನೋಜ್ಞಾ ಯತ್ರತಾ ದೃಷ್ಟಾ ವಾರಮುಖ್ಯಾಃ ಸ್ವಲಂಕೃತಾಃ ।

ಅನುವಾದ

ಅನಂತರ ಮರುದಿನ ಪುನಃ ಮನಸ್ಸಿನಲ್ಲಿ ಅವರನ್ನೇ ಚಿಂತಿಸುತ್ತಾ ಶಕ್ತಿಶಾಲಿ ವಿಭಾಂಡಕ ಕುಮಾರ ಋಷ್ಯಶೃಂಗನು ಹಿಂದಿನ ದಿನ ವಸ್ತ್ರಾಭರಣ ಭೂಷಣಗಳಿಂದ ಅಲಂಕೃತರಾದ ಆ ಸುಂದರ ರೂಪವುಳ್ಳ ವೇಶ್ಯೆಯರನ್ನು ನೋಡಿದಲ್ಲಿಗೆ ಹೋದನು.॥24½॥

ಮೂಲಮ್ - 25

ದೃಷ್ಟೈವ ಚ ತತೋ ವಿಪ್ರಮಾಯಾಂತಂ ಹೃಷ್ಟಮಾನಸಾಃ ॥

ಮೂಲಮ್ - 26

ಉಪಸೃತ್ಯ ತತಃ ಸರ್ವಾಸ್ತಾಸ್ತಮೂಚುರಿದಂ ವಚಃ ।
ಏಹ್ಯಾಶ್ರಮಪದಂ ಸೌಮ್ಯ ಅಸ್ಮಾಕಮಿತಿ ಚಾಬ್ರುವನ್ ॥

ಅನುವಾದ

ಬ್ರಾಹ್ಮಣ ಋಷ್ಯಶೃಂಗನು ಬಂದಿರುವುದನ್ನು ನೋಡಿ ಕೂಡಲೇ ಆ ವೇಶ್ಯೆಯರ ಮನಸ್ಸು ಹರ್ಷಗೊಂಡಿತು. ಅವರೆಲ್ಲರೂ ಅವನ ಬಳಿಗೆ ಹೋಗಿ ಅವನಲ್ಲಿ ಸೌಮ್ಯ! ಬನ್ನಿ, ಇಂದು ನಮ್ಮ ಆಶ್ರಮಕ್ಕೆ ನಡೆಯಿರಿ ಎಂದು ಹೇಳಿದರು.॥25-26॥

ಮೂಲಮ್ - 27

ಚಿತ್ರಾಣ್ಯತ್ರ ಬಹೂನಿ ಸ್ಯುರ್ಮೂಲಾನಿ ಚ ಫಲಾನಿ ಚ ।
ತತ್ರಾಪ್ಯೇಷ ವಿಶೇಷೇಣ ವಿಧಿರ್ಹಿ ಭವಿತಾ ಧ್ರುವಮ್ ॥

ಅನುವಾದ

ಇಲ್ಲಿ ನಾನಾ ವಿಧದ ಫಲ-ಮೂಲ ಬಹಳ ಸಿಗುತ್ತಿದ್ದರೂ, ಅಲ್ಲಿಯೂ ನಿಶ್ಚಯವಾಗಿ ವಿಶೇಷ ರೂಪದಿಂದ ಸಿಗಬಲ್ಲದು. ನಡೆಯಿರಿ ಎಂದು ಹೇಳಿದರು.॥27॥

ಮೂಲಮ್ - 28

ಶ್ರುತ್ವಾ ತು ವಚನಂ ತಾಸಾಂ ಸರ್ವಾಸಾಂ ಹೃದಯಂಗಮಮ್ ।
ಗಮನಾಯ ಮತಿಂ ಚಕ್ರೇತಂ ಚ ನಿನ್ಯುಸ್ತಥಾ ಸ್ತ್ರಿಯಃ ॥

ಅನುವಾದ

ಅವರೆಲ್ಲರ ಮನೋಹರ ಮಾತನ್ನು ಕೇಳಿ ಋಷ್ಯಶೃಂಗನು ಅವರೊಂದಿಗೆ ಹೊರಡಲು ಸಿದ್ಧನಾದನು. ಆ ಸ್ತ್ರೀಯರೆಲ್ಲ ಅವನನ್ನು ಅಂಗದೇಶಕ್ಕೆ ಕರೆದುಕೊಂಡು ಹೋದರು.॥28॥

ಮೂಲಮ್ - 29

ತತ್ರ ಚಾನೀಯಮಾನೇ ತು ವಿಪ್ರೇ ತಸ್ಮಿನ್ಮಹಾತ್ಮನಿ ।
ವವರ್ಷ ಸಹಸಾ ದೇವೋ ಜಗತ್ ಪ್ರಹ್ಲಾದಯಂಸ್ತದಾ ॥

ಅನುವಾದ

ಆ ಮಹಾತ್ಮ ಬ್ರಾಹ್ಮಣನು ಅಂಗದೇಶಕ್ಕೆ ಬರುತ್ತಲೇ ಇಂದ್ರನು ಸಮಸ್ತ ಜಗತ್ತನ್ನು ಸಂತೋಷಗೊಳಿಸುತ್ತಾ ಕೂಡಲೇ ಮಳೆಗರೆಯಲು ಪ್ರಾರಂಭಿಸಿದನು.॥29॥

ಮೂಲಮ್ - 30

ವರ್ಷೇಣೈವಾಗತಂ ವಿಪ್ರಂ ತಾಪಸಂ ಸ ನರಾಧಿಪಃ ।
ಪ್ರತ್ಯುದ್ಗಮ್ಯ ಮುನಿಂ ಪ್ರಹ್ವಃ ಶಿರಸಾ ಚ ಮಹೀಂ ಗತಃ ॥

ಅನುವಾದ

ಮಳೆಯನ್ನು ನೋಡಿ ಆ ತಪಸ್ವೀ ಬ್ರಾಹ್ಮಣಕುಮಾರನು ಬಂದಿರಬೇಕು ಎಂದು ರಾಜನು ಅನುಮಾನಪಟ್ಟನು ಮತ್ತೆ ಬಹಳ ವಿನಯದಿಂದ ರಾಜನು ಅವರನ್ನು ಸ್ವಾಗತಿಸಿ, ಕಾಲುಮುಟ್ಟಿ ಸಾಷ್ಟಾಂಗ ನಮಸ್ಕಾರ ಮಾಡಿದನು.॥30॥

ಮೂಲಮ್ - 31

ಅರ್ಘ್ಯಂ ಚ ಪ್ರದದೌ ತಸ್ಮೈ ನ್ಯಾಯತಃ ಸುಸಮಾಹಿತಃ ।
ವವ್ರೇ ಪ್ರಸಾದಂ ವಿಪ್ರೇಂದ್ರಾನ್ಮಾ ವಿಪ್ರಂ ಮನ್ಯುರಾವಿಶೇತ್ ॥

ಅನುವಾದ

ಮತ್ತೆ ಸಂತುಷ್ಟನಾದ ರೋಮಪಾದನು ಋಷಿಗೆ ಅರ್ಘ್ಯ-ಪಾದ್ಯಾದಿಗಳನ್ನು ನಿವೇದಿಸಿ ಆ ವಿಪ್ರಶಿರೋಮಣಿಯಲ್ಲಿ ‘ಸ್ವಾಮಿ! ತಮ್ಮ ಮತ್ತು ತಮ್ಮ ಪಿತನ ಕೃಪಾಪ್ರಸಾದ ನನಗೆ ಸಿಗಲಿ’ ಎಂದು ವರವನ್ನು ಬೇಡಿದನು. ಎಲ್ಲಾದರೂ ಕಪಟ ಪೂರ್ವಕ ಇಲ್ಲಿಗೆ ಕರೆದುತಂದ ರಹಸ್ಯವನ್ನು ತಿಳಿದಾಗ ವಿಪ್ರವರ ಋಷ್ಯಶೃಂಗ ಅಥವಾ ವಿಭಾಂಡಕ ಮುನಿಯ ಮನಸ್ಸಿನಲ್ಲಿ ನನ್ನ ಕುರಿತು ಕ್ರೋಧ ಉಂಟಾಗದಿರಲೆಂದು ಹೀಗೆ ಮಾಡಿದನು.॥31॥

ಮೂಲಮ್ - 32

ಅಂತಃಪುರಂ ಪ್ರವಿಶ್ಯಾಸ್ಮೈ ಕನ್ಯಾಂ ದತ್ವಾ ಯಥಾವಿಧಿ ।
ಶಾಂತಾಂ ಶಾಂತೇನ ಮನಸಾ ರಾಜಾ ಹರ್ಷಮವಾಪ ಸಃ ॥

ಅನುವಾದ

ಅನಂತರ ಋಷ್ಯಶೃಂಗರನ್ನು ಅಂತಃಪುರಕ್ಕೆ ಕರೆದುಕೊಂಡು ಹೋಗಿ ರಾಜನು ಶಾಂತಚಿತ್ತದಿಂದ ಶಾಂತಾಳನ್ನು ಅವರೊಂದಿಗೆ ವಿಧಿವತ್ತಾಗಿ ಮದುವೆ ಮಾಡಿಕೊಟ್ಟನು.॥32॥

ಮೂಲಮ್ - 33

ಏವಂ ಸ ನ್ಯವಸತ್ತತ್ರ ಸರ್ವಕಾಮೈಃ ಸುಪೂಜಿತಃ ।
ಋಷ್ಯಶೃಂಗೋ ಮಹಾತೇಜಾಃ ಶಾಂತಯಾ ಸಹ ಭಾರ್ಯಯಾ ॥

ಅನುವಾದ

ಹೀಗೆ ಮಹಾತೇಜಸ್ವಿ ಋಷ್ಯಶೃಂಗನು ರಾಜನಿಂದ ಪೂಜಿತನಾಗಿ ಸಮಸ್ತ ಮನೋವಾಂಛಿತ ಭೋಗಗಳನ್ನು ಪಡೆದು ತನ್ನ ಧರ್ಮಪತ್ನೀ ಶಾಂತಾಳೊಂದಿಗೆ ಅಲ್ಲೇ ಇರಲು ತೊಡಗಿದನು.॥33॥

ಅನುವಾದ (ಸಮಾಪ್ತಿಃ)

ವಾಲ್ಮೀಕಿ ವಿರಚಿತ ಆರ್ಷ ರಾಮಾಯಣ ಆದಿಕಾವ್ಯದ ಬಾಲಕಾಂಡದಲ್ಲಿ ಹತ್ತನೆಯ ಸರ್ಗ ಪೂರ್ಣವಾಯಿತು. ॥10॥