००८ अश्वमेधसन्नाहः

वाचनम्
ಭಾಗಸೂಚನಾ

ದಶರಥನು ಮಕ್ಕಳನ್ನು ಪಡೆಯಲು ಅಶ್ವಮೇಧಯಾಗ ಮಾಡುವ ಪ್ರಸ್ತಾಪಮಾಡಿದುದು, ಮಂತ್ರಿಗಳು ಹಾಗೂ ಬ್ರಾಹ್ಮಣರ ಅನುಮೋದನೆ

ಮೂಲಮ್ - 1

ತಸ್ಯ ಚೈವಂ ಪ್ರಭಾವಸ್ಯ ಧರ್ಮಜ್ಞಸ್ಯ ಮಹಾತ್ಮನಃ ।
ಸುತಾರ್ಥಂ ತಪ್ಯಮಾನಸ್ಯ ನಾಸೀದ್ ವಂಶಕರಃ ಸುತಃ ॥

ಅನುವಾದ

ಧರ್ಮಜ್ಞನಾದ, ಮಹಾತ್ಮ ದಶರಥ ರಾಜನು ಹೀಗೆ ಪ್ರಭಾವಶಾಲಿಯಾಗಿದ್ದರೂ ಪುತ್ರಸಂತಾನಕ್ಕಾಗಿ ಚಿಂತಿತನಾಗಿದ್ದನು. ಅವನ ವಂಶವನ್ನು ಮುಂದುವರಿಸುವ ಯಾವ ಪುತ್ರನೂ ಇರಲಿಲ್ಲ.॥1॥

ಮೂಲಮ್ - 2

ಚಿಂತಯಾನಸ್ಯ ತಸ್ಯೇವಂ ಬುದ್ಧಿರಾಸೀನ್ಮಹಾತ್ಮನಃ ।
ಸುತಾರ್ಥಂ ವಾಜಿಮೇಧೇನ ಕಿಮರ್ಥಂ ನ ಯಜಾಮ್ಯಹಮ್ ॥

ಅನುವಾದ

ಅದಕ್ಕಾಗಿ ಚಿಂತಿಸುತ್ತಾ ಒಂದು ದಿನ ಮಹಾತ್ಮಾ ದಶರಥ ರಾಜನು ಮನಸ್ಸಿನಲ್ಲಿ ನಾನು ಪುತ್ರ ಪ್ರಾಪ್ತಿಗಾಗಿ ಅಶ್ವಮೇಧ ಯಜ್ಞವನ್ನು ಏಕೆ ಮಾಡಬಾರದು? ಎಂದು ಯೋಚಿಸಿದನು.॥2॥

ಮೂಲಮ್ - 3

ಸ ನಿಶ್ಚಿತಾಂ ಮತಿಂ ಕೃತ್ವಾ ಯಷ್ಟವ್ಯಮಿತಿ ಬುದ್ಧಿಮಾನ್ ।
ಮಂತ್ರಿಭಿಃ ಸಹ ಧರ್ಮಾತ್ಮಾ ಸರ್ವೈರಸಿ ಕೃತಾತ್ಮಭಿಃ ॥

ಮೂಲಮ್ - 4

ತತೋಽಬ್ರವೀನ್ಮಹಾತೇಜಾಃ ಸುಮಂತ್ರಂಮಂತ್ರಿಸತ್ತಮ ।
ಶೀಘ್ರಮಾನಯ ಮೇ ಸರ್ವಾನ್ ಗುರೂಂಸ್ತಾನ್ಸಪುರೋಹಿತಾನ್ ॥

ಅನುವಾದ

ತನ್ನ ಬುದ್ಧಿವಂತ ಮಂತ್ರಿಗಳೊಂದಿಗೆ ಚರ್ಚಿಸಿ ಯಜ್ಞಮಾಡಲು ನಿಶ್ಚಯಿಸಿ, ಮಹಾ ತೇಜಸ್ವಿಯೂ, ಬುದ್ಧಿವಂತನೂ, ಧರ್ಮಾತ್ಮನೂ ಆದ ರಾಜನು ಸುಮಂತ್ರನಲ್ಲಿ ‘ಮಂತ್ರಿವರ್ಯನೇ! ನೀನು ನಮ್ಮ ಎಲ್ಲ ಗುರುಗಳನ್ನು ಮತ್ತು ಪುರೋಹಿತರನ್ನು ಇಲ್ಲಿಗೆ ಬೇಗನೆ ಕರೆದುಕೊಂಡು ಬಾ’ ಎಂದು ಹೇಳಿದನು.॥3-4॥

ಮೂಲಮ್ - 5

ತತಃ ಸುಮಂತ್ರಸ್ತ್ವರಿತಂ ಗತ್ವಾ ತ್ವರಿತವಿಕ್ರಮಃ ।
ಸಮಾನಯತ್ ಸ ತಾನ್ಸರ್ವಾನ್ ಸಮಸ್ತಾನ್ ವೇದಪಾರಗಾನ್ ॥

ಅನುವಾದ

ಆಗ ಶೀಘ್ರಗಾಮಿಯಾದ ಸುಮಂತ್ರನು ಒಡನೆಯೇ ಹೋಗಿ ವೇದವೇದಾಂಗ ಪಾರಂಗತರಾದ ಮುನಿಗಳನ್ನು ಅರಮನೆಗೆ ಕರೆದುಕೊಂಡು ಬಂದನು.॥5॥

ಮೂಲಮ್ - 6

ಸುಯಜ್ಞಂ ವಾಮದೇವಂ ಚ ಜಾಬಾಲಿಮಥ ಕಾಶ್ಯಪಮ್ ।
ಪುರೋಹಿತಂ ವಸಿಷ್ಠಂ ಚ ಯೇ ಚಾಪ್ಯನ್ಯೇ ದ್ವಿಜೋತ್ತಮಾಃ ॥

ಮೂಲಮ್ - 7

ತಾನ್ ಪೂಜಯಿತ್ವಾ ಧರ್ಮಾತ್ಮಾ ರಾಜಾ ದಶರಥಸ್ತದಾ ।
ಇದಂ ಧರ್ಮಾರ್ಥಸಹಿತಂ ಶ್ಲಕ್ಷ್ಣಂ ವಚನಮಬ್ರವೀತ್ ॥

ಅನುವಾದ

ಆಗಮಿಸಿದ ಸುಯಜ್ಞ, ಜಾಬಾಲಿ, ಕಾಶ್ಯಪ, ಕುಲಪುರೋಹಿತರಾದ ವಸಿಷ್ಠರು ಹಾಗೂ ಇತರ ಎಲ್ಲ ಶ್ರೇಷ್ಠ ಬ್ರಾಹ್ಮಣರನ್ನು ಧರ್ಮಾತ್ಮನಾದ ದಶರಥ ರಾಜನು ಧರ್ಮಾರ್ಥ ಸಾಧನೆಗೆ ಕಾರಣವಾದ ಮಧುರ ಮಾತುಗಳಿಂದ ಹೀಗೆ ಹೇಳಿದನು.॥6-7॥

ಮೂಲಮ್ - 8

ಮಮ ಲಾಲಪ್ಯಮಾನಸ್ಯ ಸುತಾರ್ಥಂ ನಾಸ್ತಿ ವೈ ಸುಖಮ್ ।
ತದರ್ಥಂ ಹಯಮೇಧೇನ ಯಕ್ಷ್ಯಾಮೀತಿಮತಿರ್ಮಮ ॥

ಅನುವಾದ

ಮಹರ್ಷಿಗಳೇ! ನಾನು ಸದಾ ಪುತ್ರ ಸಂತಾನಕ್ಕಾಗಿ ವಿಲಾಪಿಸುತ್ತಾ ಇರುತ್ತೇನೆ. ಪುತ್ರನಿಲ್ಲದೆ ಈ ರಾಜ್ಯಾದಿಗಳಿಂದ ನನಗೆ ಸುಖ ಸಿಗುವುದಿಲ್ಲ. ಆದ್ದರಿಂದ ಪುತ್ರ ಪ್ರಾಪ್ತಿಗಾಗಿ ನಾನು ಅಶ್ವಮೇಧ ಯಾಗವನ್ನು ಮಾಡಬೇಕೆಂದು ನಿಶ್ಚಯಿಸಿದ್ದೇನೆ.॥8॥

ಮೂಲಮ್ - 9

ತದಹಂ ಯಷ್ಟುಮಿಚ್ಛಾಮಿ ಶಾಸ್ತ್ರದೃಷ್ಟೇನ ಕರ್ಮಣಾ ।
ಕಥಂ ಪ್ರಾಪ್ಸ್ಯಾಮ್ಯಹಂ ಕಾಮಂ ಬುದ್ಧಿರತ್ರ ವಿಚಿಂತ್ಯತಾಮ್ ॥

ಅನುವಾದ

ಶಾಸ್ತ್ರೋಕ್ತ ವಿಧಿಯಿಂದ ಈ ಯಜ್ಞದ ಅನುಷ್ಠಾನ ಮಾಡಿದರೆ ನನ್ನ ಮನೋವಾಂಛಿತ ವಸ್ತು ಹೇಗೆ ದೊರೆಯಬಹುದು? ಇದನ್ನು ನೀವೆಲ್ಲ ವಿಚಾರಮಾಡಿ ತಿಳಿಸಬೇಕೆಂದು ನಾನು ಬಯಸುತ್ತಿದ್ದೇನೆ.॥9॥

ಮೂಲಮ್ - 10

ತತಃ ಸಾಧ್ವಿತಿ ತದ್ವಾಕ್ಯಂ ಬ್ರಾಹ್ಮಣಾಃ ಪ್ರತ್ಯಪೂಜಯನ್ ।
ವಸಿಷ್ಠ ಪ್ರಮುಖಾಃ ಸರ್ವೇ ಪಾರ್ಥಿವಸ್ಯ ಮುಖೇರಿತಮ್ ॥

ಅನುವಾದ

ರಾಜನ ಈ ಮಾತನ್ನು ಕೇಳಿ ವಸಿಷ್ಠಾದಿ ಎಲ್ಲ ಬ್ರಾಹ್ಮಣರು ಸಾಧುವಾಗಿದೆ, ಬಹಳ ಒಳ್ಳೆಯದು ಎಂದು ಒಟ್ಟಿಗೆ ಅನುಮೋದಿಸಿದರು.॥10॥

ಮೂಲಮ್ - 11

ಊಚುಶ್ಚ ಪರಮಪ್ರೀತಾಃ ಸರ್ವೇ ದಶರಥಂ ವಚಃ ।
ಸಂಭಾರಾಃ ಸಂಭ್ರಿಯಂತಾಂ ತೇ ತುರಗಶ್ಚವಿಮುಚ್ಯತಾಮ್ ॥

ಮೂಲಮ್ - 12½

ಸರಯ್ವಾಶ್ಚೋತ್ತರೇ ತೀರೇ ಯಜ್ಞಭೂಮಿರ್ವಿಧೀಯತಾಮ್ ।
ಸರ್ವಥಾ ಪ್ರಾಪ್ಸ್ಯಸೇ ಪುತ್ರಾನಭಿಪ್ರೇತಾಂಶ್ಚಪಾರ್ಥಿವ ॥
ಯಸ್ಯ ತೇ ಧಾರ್ಮಿಕೀ ಬುದ್ಧಿರಿಯಂ ಪುತ್ರಾರ್ಥಮಾಗತಾ ।

ಅನುವಾದ

ಮತ್ತೆ ಅವರೆಲ್ಲರೂ ಸಂತೋಷಗೊಂಡು ದಶರಥ ರಾಜನಲ್ಲಿ ‘ಮಹಾರಾಜಾ! ಯಜ್ಞ ಸಾಮಗ್ರಿಗಳ ಸಂಗ್ರಹವಾಗಲಿ, ಯಜ್ಞ ಸಂಬಂಧೀ ಒಳ್ಳೆಯ ಅಶ್ವವನ್ನು ಭೂಮಂಡಲದಲ್ಲಿ ಸಂಚಾರಕ್ಕಾಗಿ ಬಿಡಲಾಗುವುದು, ಸರಯೂ ತೀರದ ಉತ್ತರ ದಿಕ್ಕಿನಲ್ಲಿ ಯಜ್ಞವೇದಿಕೆಯು ನಿರ್ಮಾಣವಾಗಲಿ, ನೀನು ಯಜ್ಞದ ಮೂಲಕ ತನ್ನ ಇಚ್ಛೆಗನುಸಾರವಾದ ಪುತ್ರನನ್ನು ಪಡೆದುಕೊಳ್ಳುವೆ. ಏಕೆಂದರೆ, ಪುತ್ರಪ್ರಾಪ್ತಿಗಾಗಿ ನಿನ್ನ ಹೃದಯದಲ್ಲಿ ಇಂತಹ ಧಾರ್ಮಿಕ ಬುದ್ಧಿಯ ಉದಯವಾಗಿದೆ’ ಎಂದು ಹೇಳಿದರು.॥11-12½॥

ಮೂಲಮ್ - 13

ತತಸ್ತುಷ್ಟೋಽಭವದ್ ರಾಜಾ ಶ್ರುತ್ವೈತದ್ವಜಭಾಷಿತಮ್ ॥

ಮೂಲಮ್ - 14

ಅಮಾತ್ಯಾನಬ್ರವೀದ್ ರಾಜಾ ಹರ್ಷವ್ಯಾಕುಲ ಲೋಚನಃ ।
ಸಂಭಾರಾಃ ಸಂಭ್ರಿಯಂತಾಂ ಮೇ ಗುರೂಣಾಂ ವಚನಾದಿಹ ॥

ಮೂಲಮ್ - 15

ಸಮರ್ಥಾಧಿಷ್ಠಿತಶ್ಚಾಶ್ವಃ ಸೋಪಾಧ್ಯಾಯೋ ವಿಮುಚ್ಯತಾಮ್ ।
ಸರ್ಯವಾಶ್ಚೋತ್ತರೇ ತೀರೇ ಯಜ್ಞಭೂಮಿರ್ವಿಧೀಯತಾಮ್ ॥

ಮೂಲಮ್ - 16

ಶಾಂತಯಶ್ಚಾಪಿವರ್ಧಂತಾ ಯಥಾಕಲ್ಪಂ ಯಥಾವಿಧಿ ।
ಶಕ್ಯಃ ಪ್ರಾಪ್ತುಮಯಂ ಯಜ್ಞಃ ಸರ್ವೇಣಾಪಿ ಮಹೀಕ್ಷಿತಾ ॥

ಮೂಲಮ್ - 17

ನಾಪರಾಧೋಭವೇತ್ಕಷ್ಟೋ ಯದ್ಯಸ್ಮಿನ್ ಕ್ರತುಸತ್ತಮೇ ।
ಛಿದ್ರಂ ಹಿ ಮೃಗಯಂತೇ ಸ್ಮ ವಿದ್ವಾಂಸೋ ಬ್ರಹ್ಮರಾಕ್ಷಸಾಃ ॥

ಅನುವಾದ

ಬ್ರಾಹ್ಮಣರ ಈ ಮಾತನ್ನು ಕೇಳಿ ರಾಜನು ಬಹಳ ಸಂತೋಷಗೊಂಡನು. ವಿಕಸಿತವಾದ ದೃಷ್ಟಿಯಿಂದ ತನಗುಂಟಾದ ಹರ್ಷಾಧಿಕ್ಯದಿಂದ ಅಮಾತ್ಯರಲ್ಲಿ ಹೇಳಿದನು. ಗುರುಗಳ ಆಜ್ಞೆಯಂತೆ ಯಜ್ಞದ ಸಾಮಗ್ರಿಗಳನ್ನು ಸಿದ್ಧಪಡಿಸಿರಿ. ಸಮರ್ಥ ರಾದ ವೀರರ ರಕ್ಷಣೆಯಲ್ಲಿ ಋತ್ವಿಜರ ಸಹಿತ ಯಜ್ಞಾಶ್ವವನ್ನು ವಿಧಿವತ್ತಾಗಿ ಬಿಟ್ಟುಬಿಡಿರಿ. ಸರಯೂ ತೀರದ ಉತ್ತರ ದಿಕ್ಕಿನಲ್ಲಿ ಯಜ್ಞಭೂಮಿಯು ನಿರ್ಮಾಣವಾಗಲೀ. ವಿಘ್ನನಿವಾರಣೆಗಾಗಿ ಶಾಸ್ತ್ರೋಕ್ತ ವಿಧಿಯಿಂದ ಶಾಂತಿಕರ್ಮಗಳು ಕ್ರಮವತ್ತಾಗಿ ನಡೆಯಲಿ. ಈ ಶ್ರೇಷ್ಠಯಜ್ಞದಲ್ಲಿ ಕಷ್ಟಪ್ರದ ಅಪರಾಧವಾಗುವ ಭಯವಿಲ್ಲದಿದ್ದರೆ ಎಲ್ಲ ರಾಜರೂ ಇದನ್ನು ಮಾಡ ಬಲ್ಲರು; ಆದರೆ ಹೀಗಾಗಲು ಕಷ್ಟವಿದೆ; ಏಕೆಂದರೆ ವಿದ್ವಾಂಸರಾದ ಬ್ರಹ್ಮರಾಕ್ಷಸರು ಯಜ್ಞದಲ್ಲಿ ವಿಘ್ನವನ್ನುಂಟುಮಾಡಲು ಮಾರ್ಗಗಳನ್ನು ಹುಡುಕುತ್ತಾ ಇರುತ್ತಾರೆ.॥13-17॥

ಮೂಲಮ್ - 18½

ವಿಧಿಹೀನಸ್ಯ ಯಜ್ಞಸ್ಯ ಸದ್ಯಃ ಕರ್ತಾ ವಿವಶ್ಯತಿ ।
ತದ್ಯಥಾ ವಿಧಿಪೂರ್ವಂ ಮೇ ಕ್ರತುರೇಷ ಸಮಾಪ್ಯತೇ ॥
ತಥಾ ವಿಧಾನಂ ಕ್ರಿಯತಾಂ ಸಮರ್ಥಾಃ ಸಾಧನೇಷ್ಟಿತಿ ।

ಅನುವಾದ

ವಿಧಿಹೀನ ಯಜ್ಞದ ಅನುಷ್ಠಾನ ಮಾಡುವ ಯಜಮಾನನು ಕೂಡಲೇ ನಾಶವಾಗುತ್ತಾನೆ. ಆದ್ದರಿಂದ ನನ್ನ ಈ ಯಜ್ಞವು ವಿಧಿಪೂರ್ವಕ ನೆರವೇರುವಂತೆ ಉಪಾಯ ಮಾಡಿರಿ. ನೀವೆಲ್ಲರೂ ಈ ಪ್ರಕ್ರಿಯೆಗಳಲ್ಲಿ ನಿಪುಣರಾಗಿರುವಿರಿ.॥18½॥

ಮೂಲಮ್ - 19½

ತಥೇತಿ ಚಾಬ್ರುವನ್ ಸರ್ವೇ ಮಂತ್ರಿಣಃ ಪ್ರತಿಪೂಜಿತಾಃ ॥
ಪಾರ್ಥಿವೇಂದ್ರಸ್ಯ ತದ್ವಾಕ್ಯಂ ಯಥಾಪೂರ್ವಂ ನಿಶಮ್ಯತೇ ।

ಅನುವಾದ

ರಾಜನಿಂದ ಸಮ್ಮಾನಿತರಾದ ಎಲ್ಲ ಮಂತ್ರಿಗಳು ದಶರಥನ ಮಾತನ್ನು ಕೇಳಿ ಹಾಗೆಯೇ ಆಗುವುದು, ಎಂದು ಹೇಳಿದರು.॥19½॥

ಮೂಲಮ್ - 20½

ತಥಾ ದ್ವಿಜಾಸ್ತೇ ಧರ್ಮಜ್ಞಾ ವರ್ಧಯಂತೋ ನೃಪೋತ್ತಮಮ್ ॥
ಅನುಜ್ಞಾತಾಸ್ತತಃ ಸರ್ವೇ ಪುನರ್ಜಗ್ಮುರ್ಯಥಾಗತಮ್ ।

ಅನುವಾದ

ಹಾಗೆಯೇ ಎಲ್ಲ ಧರ್ಮಜ್ಞರಾದ ಬ್ರಾಹ್ಮಣರೂ ನೃಪಶ್ರೇಷ್ಠ ದಶರಥನನ್ನು ಆಶೀರ್ವದಿಸಿ, ಅವನಿಂದ ಅನುಮತಿ ಪಡೆದು ಅವರವರ ಸ್ಥಾನಗಳಿಗೆ ತೆರಳಿದರು.॥20½॥

ಮೂಲಮ್ - 21½

ವಿಸರ್ಜಯಿತ್ವಾ ತಾನ್ ವಿಪ್ರಾನ್ಸಚಿವಾನಿದಮಬ್ರವೀತ್ ॥
ಋತ್ವಿಗ್ಭಿರುಪಸಂದಿಷ್ಟೋ ಯಥಾವತ್ ಕ್ರತುರಾಪ್ಯತಾಮ್ ।

ಅನುವಾದ

ಆ ಬ್ರಾಹ್ಮಣರನ್ನು ಬೀಳ್ಕೊಟ್ಟು ರಾಜನು ಮಂತ್ರಿಗಳಲ್ಲಿ ‘ಪುರೋಹಿತರ ಉಪದೇಶದಂತೆ ಈ ಯಜ್ಞವನ್ನು ವಿಧಿವತ್ತಾಗಿ ಪೂರ್ಣವಾಗಿಸಬೇಕು’ ಎಂದು ಹೇಳಿದನು.॥21½॥

ಮೂಲಮ್ - 22½

ಇತ್ಯುಕ್ತ್ವಾನೃಪಶಾರ್ದೂಲಃ ಸಚಿವಾನ್ಸಮುಪಸ್ಥಿತಾನ್ ॥
ವಿಸರ್ಜಯಿತ್ವಾ ಸ್ವಂ ವೇಶ್ಮ ಪ್ರವಿವೇಶ ಮಹಾಮತಿಃ ।

ಅನುವಾದ

ಅಲ್ಲಿ ನೆರೆದ ಮಂತ್ರಿಗಳಲ್ಲಿ ಹೀಗೆ ಹೇಳಿ ಪರಮ ಬುದ್ಧಿವಂತನಾದ ನೃಪಶ್ರೇಷ್ಠ ದಶರಥನು ಅವರನ್ನು ಬೀಳ್ಕೊಟ್ಟು ತನ್ನ ಅಂತಃಪುರಕ್ಕೆ ತೆರಳಿದನು.॥22½॥

ಮೂಲಮ್ - 23½

ತತಃ ಸ ಗತ್ವಾ ತಾಃ ಪತ್ನೀರ್ನರೇಂದ್ರೋ ಹೃದಯಂಗಮಾಃ ॥
ಉವಾಚ ದೀಕ್ಷಾಂ ವಿಶತ ಯಕ್ಷ್ಯೇಽಹಂ ಸುತಕಾರಣಾತ್ ।

ಅನುವಾದ

ಅಲ್ಲಿಗೆ ಹೋಗಿ ಅರಸನು ತನ್ನ ಪ್ರಿಯಪತ್ನಿಯರಲ್ಲಿ - ‘ದೇವಿಯರಿರಾ! ನೀವೂ ದೀಕ್ಷೆಯನ್ನು ಕೈಗೊಳ್ಳಿರಿ, ನಾನು ಪುತ್ರಪ್ರಾಪ್ತಿಗಾಗಿ ಅಶ್ವಮೇಧ ಯಜ್ಞ ಮಾಡುವೆನು’ ಎಂದು ಹೇಳಿದನು.॥23½॥

ಮೂಲಮ್ - 24

ತಾಸಾಂ ತೇನಾತಿಕಾಂತೇನ ವಚನೇನ ಸುವರ್ಚಸಾಮ್ ।
ಮುಖಪದ್ಮಾನ್ಯಶೋಭಂತ ಪದ್ಮಾನೀವ ಹಿಮಾತ್ಯಯೇ ॥

ಅನುವಾದ

ಆ ಮನೋಹರವಚನಗಳಿಂದ ಸುಂದರ ಕಾಂತಿಯುಳ್ಳ ರಾಣಿಯರ ಮುಖಕಮಲಗಳು - ಹಿಮಕಾಲವು ಕಳೆದಾಗ ಅರಳುವ ಕಮಲಗಳಂತೆ ಅರಳಿ ಕಂಗೊಳಿಸಿದವು.॥24॥

ಅನುವಾದ (ಸಮಾಪ್ತಿಃ)

ವಾಲ್ಮೀಕಿ ವಿರಚಿತ ಆರ್ಷ ರಾಮಾಯಣ ಆದಿಕಾವ್ಯದ ಬಾಲಕಾಂಡದಲ್ಲಿ ಎಂಟನೆಯ ಸರ್ಗ ಪೂರ್ಣವಾಯಿತು. ॥8॥