ಅನುವಾದ
ಶ್ರೀವಾಲ್ಮೀಕಿರಾಮಾಯಣದ ಪಾರಾಯಣ ವಿಧಿಗಳು ಅನೇಕ ಪ್ರಕಾರಗಳಿಂದ ಇವೆ. ಶ್ರೀರಾಮಸೇವಾಗ್ರಂಥ, ಅನುಷ್ಠಾನಪ್ರಕಾಶ, ಸ್ಕಾಂದೋಕ್ತ ರಾಮಾಯಣ ಮಾಹಾತ್ಮ್ಯ, ಬೃಹದ್ಧರ್ಮ ಪುರಾಣ ಹಾಗೂ ಶಂಕರ, ರಾಮಾನುಜ, ಮಧ್ವ, ರಾಮಾನಂದ ಮೊದಲಾದ ಸಂಪ್ರದಾಯಗಳ ವಿಧಿಗಳು ಬೇರೆ-ಬೇರೆ ಆಗಿವೆ. ಇವುಗಳಲ್ಲಿ ಅಲ್ಪ-ಸ್ವಲ್ಪ ವ್ಯತ್ಯಾಸಗಳಿವೆ ಅಷ್ಟೇ. ಹೀಗೆಯೇ ಇದರ ಸಕಾಮ ಮತ್ತು ನಿಷ್ಕಾಮ ಅನುಷ್ಠಾನದ ಭೇದಗಳೂ ಇವೆ. ಇವೆಲ್ಲವನ್ನು ಬರೆಯುವುದು ಇಲ್ಲಿ ಅಸಂಭವವಾಗಿದೆ. ವಾಲ್ಮೀಕಿರಾಮಾಯಣದ ಪರಮ ಪ್ರಸಿದ್ಧ ನವಾಹ್ನ ಪಾರಾಯಣ ವಿಧಿಯನ್ನೇ ಇಲ್ಲಿ ಕೊಡಲಾಗಿದೆ.
ಚೈತ್ರ, ಮಾಘ, ಕಾರ್ತಿಕ ಶುಕ್ಲ ಪಂಚಮಿಯಿಂದ ತ್ರಯೋದಶಿವರೆಗೆ ಇದರ ನವಾಹ್ನ ಪಾರಾಯಣದ ವಿಧಿ ಇದೆ.
ಮೂಲಮ್
ಚೈತ್ರೇ ಮಾಘೇ ಕಾರ್ತಿಕೇ ಚ ಸಿತೆಪಕ್ಷೆ ಚ ವಾಚಯೇತ್ ।
ನವಾಹಂ ಸುಮಹಾಪುಣ್ಯಂ ಶ್ರೋತವ್ಯಂ ಚ ಪ್ರಯತ್ನತಃ ॥
ಪಂಚಮ್ಯಾಂ ದಿನಮಾರಭ್ಯ ರಾಮಾಯಣ ಕಥಾಮೃತಮ್ ।
ನವಾಹಶ್ರವಣೇನೈವ ಸರ್ವಪಾಪೈಃ ಪ್ರಮುಚ್ಯತೇ ॥
ಅನುವಾದ
(ರಾಮಸೇವಾಗ್ರಂಥ)
ಯಾವುದೇ ಪುಣ್ಯಕ್ಷೇತ್ರ, ಪವಿತ್ರತೀರ್ಥ, ಮಂದಿರದಲ್ಲಿ ಅಥವಾ ತನ್ನ ಮನೆಯಲ್ಲೇ ಭಗವಾನ್ ವಿಷ್ಣು ಹಾಗೂ ತುಲಸಿಯ ಸನ್ನಿಧಿಯಲ್ಲಿ ವಾಲ್ಮೀಕಿರಾಮಾಯಣ ಪಾರಾಯಣ ಮಾಡಬೇಕು. ಸಾಧ್ಯವಿದ್ದಷ್ಟು ಕಥಾಸ್ಥಾನವನ್ನು ಸಾರಿಸಿ, ಧ್ವಜ-ಪತಾಕೆಗಳಿಂದ, ಬಾಳೆಕಂಬದಿಂದ ಸುಂದರ ಮಂಟಪವನ್ನು ನಿರ್ಮಿಸಬೇಕು. ನಡುವಿನಲ್ಲಿ ಸರ್ವತೋಭದ್ರಯುಕ್ತ ವೇದಿಕೆ ಇರಬೇಕು. ಇತರ ವೇದಿಕೆಗಳೂ, ಸ್ಥಂಡಿಲ-ಕುಂಡಗಳೂ ಇರಬೇಕು. ಮಂಟಪದ ದಕ್ಷಿಣ-ಪಶ್ಚಿಮ ಸ್ಥಾನದಲ್ಲಿ ವಕ್ತಾ (ಪ್ರವಚನಕಾರ) ಹಾಗೂ ಶ್ರೋತೃವಿನ ಆಸನವಿರಬೇಕು. ವಕ್ತಾ ಆಸನದ ಮುಂದೆ ಪುಸ್ತಕಕ್ಕೆ ಆಸನ ಇರಬೇಕು. ಇತರ ಶ್ರೋತೃಗಳಿಗೂ ವಿಶಾಲ ಜಾಗವಿರಲಿ. ಶ್ರೋತೃಗಳ ಆಸನಕ್ಕಿಂತ ವಕ್ತಾ ಮತ್ತು ಪುಸ್ತಕದ ಆಸನ ಎತ್ತರವಾಗಿರಬೇಕು. ಪ್ರಾಯಶ್ಚಿತ್ತ ಹಾಗೂ ನಿತ್ಯಕರ್ಮ ಮಾಡಿ ಭಗವಾನ್ ಶ್ರೀರಾಮನ ಪ್ರತಿಮೆಯನ್ನು ಸ್ಥಾಪಿಸಬೇಕು ಅಥವಾ ಪುಸ್ತಕದ ಮೇಲೆಯೇ ಸಪರಿವಾರ ಸಹಿತ ಭಗವಾನ್ ಶ್ರೀರಾಮಚಂದ್ರ, ಭಗವತಿ ಸೀತಾದೇವೀ, ಲಕ್ಷ್ಮಣ, ಭರತ, ಶತ್ರುಘ್ನ, ಶ್ರೀಹನುಮಂತನೇ ಮೊದಲಾದವರನ್ನು ಆವಾಹನ ಸ್ಥಾಪನ ಮಾಡಬೇಕು. ಬಳಿಕ ಎಲ್ಲ ಉಪಕರಣಗಳಿಂದ ಅಲಂಕೃತ ದಿವ್ಯ ಕಲಶಗಳನ್ನು ಸ್ಥಾಪಿಸಿ ಸ್ವಸ್ತಿಪುಣ್ಯಾಹವಾಚನ, ಗಣಪತಿಪೂಜನ, ಬಟುಕು, ಕ್ಷೇತ್ರಪಾಲ, ಯೋಗಿನೀ, ಮಾತೃಕಾ, ನವಗ್ರಹ, ತುಲಸೀ, ಲೋಕಪಾಲ, ದಿಕ್ಪಾಲರನ್ನು ಪೂಜಿಸಬೇಕು. ನಾಂದೀಶ್ರಾದ್ಧ ಪೂರ್ವಕ ಸಪರಿವಾರ ಭಗವಾನ್ ಶ್ರೀರಾಮಚಂದ್ರನನ್ನು ಪೂಜಿಸಬೇಕು.
ಸೂಚನಾ
ಶ್ರೀಮದ್ಭಗವತೋ ಮಹಾಪುರುಷಸ್ಯ —- ಎಂಬ ನಿತ್ಯ ಸಂಕಲ್ಪ ಹೇಳಿ, ನಾಮಗೋತ್ರವನ್ನು ಉಚ್ಚರಿಸಿ -ಓಂ ಭೂರ್ಭುವಃಸ್ವರೋಮ್ । ಮಮೋಪಾತ್ತದುರಿತಕ್ಷಯ ಪೂರ್ವಕಂ ಶ್ರೀಸೀತಾರಾಮ ಪ್ರೀತ್ಯರ್ಥಂ ಶ್ರೀಸೀತಾ ಲಕ್ಷ್ಮಣ ಭರತ ಶತ್ರುಘ್ನ ಹನುಮತ್ಸಮೇತ ಶ್ರೀರಾಮಚಂದ್ರ ಪ್ರಸಾದ ಸಿಧ್ಯರ್ಥಂ ಚ ಶ್ರೀರಾಮಚಂದ್ರಪ್ರಸಾದೇನ ಸರ್ವಾಭೀಷ್ಟ ಸಿದ್ಧ್ಯರ್ಥಂ ಶ್ರೀರಾಮಚಂದ್ರಪೂಜನಮಹಂ ಕರಿಷ್ಯೇ । ಶ್ರೀವಾಲ್ಮೀಕಿರಾಮಾಯಣಸ್ಯ ಪಾರಾಯಣಂ ಚ ಕರಿಷ್ಯೇ, ತದಂಗ ಭೂತಂ ಕಲಶ ಸ್ಥಾಪನಂ ಸ್ವಸ್ತ್ಯಯನಪಾಠಂ ಗಣಪತಿ ಪೂಜನಂ ವಟುಕಕ್ಷೇತ್ರಪಾಲಯೋಗಿನೀಮಾತೃಕಾನವಗ್ರಹ ತುಲಸೀಲೋಕಪಾಲದಿಕ್ಪಾಲಾದಿ ಪೂಜನಂ ಚಾಹಂ ಕರಿಷ್ಯೇ ।
ಅನುವಾದ
ಹೀಗೆ ಸಂಕಲ್ಪ ಮಾಡಿ ಪೂಜೆ ಮಾಡಬೇಕು.
ಸೂಚನಾ
ಓಂ ಅಚ್ಯುತಾಯನಮಃ, ಓಂ ಅನಂತಾಯನಮಃ, ಓಂ ಗೋವಿಂದಾಯನಮಃ, ಓಂ ನಾರಾಯಣಾಯನಮಃ,ಓಂ ಮಧುಸೂದನಾಯನಮಃ, ಓಂ ಹೃಷೀಕೇಶಾಯನಮಃ, ಓಂ ಮಾಧವಾಯವಮಃ, ಓಂ ತ್ರಿವಿಕ್ರಮಾಯನಮಃ, ಓಂ ದಾಮೋದರಾಯನಮಃ, ಓಂ ಮುಕುಂದಾಯನಮಃ, ಓಂ ವಾಮನಾಯನಮಃ, ಓಂ ಪದ್ಮನಾಭಾಯನಮಃ,ಓಂ ಕೇಶವಾಯನಮಃ, ಓಂ ವಿಷ್ಣುವೇನಮಃ, ಓಂ ಶ್ರೀಧರಾಯನಮಃ, ಓಂ ಶ್ರೀಸೀತಾರಾಮಾಭ್ಯಾಂನಮಃ
ಅನುವಾದ
ಹೀಗೆ ನಮಸ್ಕರಿಸಿ ಕೆಳಗಿನಂತೆ ಪೂಜೆ ಮಾಡಬೇಕು.
ಸೂಚನಾ
ಶ್ರೀಸೀತಾ ಲಕ್ಷ್ಮಣ ಭರತ ಶತ್ರುಘ್ನ ಹನುಮತ್ಸಮೇತಂ ಶ್ರೀರಾಮಚಂದ್ರಂ ಧ್ಯಾಯಾಮಿ ।
’’ ಆವಾಹಯಾಮಿ ।
’’ ರತ್ನಸಿಂಹಾಸನಂ ಸಮರ್ಪಯಾಮಿ ।
’’ ಪಾದ್ಯಂ ಸಮರ್ಪಯಾಮಿ ।
’’ ಅರ್ಘ್ಯಂ ಸಮರ್ಪಯಾಮಿ ।
’’ ಸ್ನಾನೀಯಂ ಸಮರ್ಪಯಾಮಿ ।
’’ ಆಚಮನೀಯಂ ಸಮರ್ಪಯಾಮಿ ।
’’ ವಸ್ತ್ರಂ ಸಮರ್ಪಯಾಮಿ ।
’’ ಯಜ್ಞೋಪವೀತಂ ಸಮರ್ಪಯಾಮಿ ।
’’ ಗಂಧಾನ್ ಸಮರ್ಪಯಾಮಿ ।
’’ ಅಕ್ಷತಾನ್ ಸಮರ್ಪಯಾಮಿ ।
’’ ಪುಷ್ಪಾಣಿ ಸಮರ್ಪಯಾಮಿ ।
’’ ಧೂಪಮಾಘ್ರಾಪಯಾಮಿ ।
’’ ದೀಪಂ ದರ್ಶಯಾಮಿ ।
’’ ನೈವೇದ್ಯಂ ಫಲಾನಿ ಚ ಸಮರ್ಪಯಾಮಿ ।
’’ ತಾಂಬೂಲಂ ಸಮರ್ಪಯಾಮಿ ।
’’ ಕರ್ಪೂರ ನೀರಾಜನಂ ಸಮರ್ಪಯಾಮಿ ।
’’ ಛತ್ರ ಚಾಮರಾದಿ ಸಮರ್ಪಯಾಮಿ ।
’’ ಪುಷ್ಪಾಂಜಲಿಂ ಸಮರ್ಪಯಾಮಿ ।
’’ ಪ್ರದಕ್ಷಿಣ ನಮಸ್ಕಾರಾನ್ ಸಮರ್ಪಯಾಮಿ ।
ಬಳಿಕ ಕೆಳಗಿನಂತೆ ಪಂಚೋಪಚಾರದಿಂದ ಶ್ರೀರಾಮಾಯಣ ಗ್ರಂಥವನ್ನು ಪೂಜಿಸಬೇಕು.
ಮೂಲಮ್
ಓಂ ಸದಾ ಶ್ರವಣ ಮಾತ್ರೇಣ ಪಾಪಿನಾಂ ಸದ್ಗತಿಪ್ರದೇ ।
ಶುಭೇ ರಾಮಕಥೇ ತುಭ್ಯಂ ಗಂಧಮಾದ್ಯ ಸಮರ್ಪಯೇ ॥
ಸೂಚನಾ
-ಇತಿ ಗಂಧಂ ಸಮರ್ಪಯಾಮಿ
ಮೂಲಮ್
ಓಂ ಬಾಲಾದಿ ಸಪ್ತಕಾಂಡೇನ ಸರ್ವಲೋಕ ಸುಖಪ್ರದಮ್ ।
ರಾಮಾಯಣ ಮಹೋದಾರ ಪುಷ್ಪಂ ತೇಽದ್ಯ ಸಮರ್ಪಯೇ ॥
ಸೂಚನಾ
-ಇತಿ ಪುಷ್ಪಾಣಿ ಪುಷ್ಪಮಾಲಾಂ ಚ ಸಮರ್ಪಯಾಮಿ
ಮೂಲಮ್
ಓಂ ಯಸ್ಯೈಕಶ್ಲೋಕಪಾಠಸ್ಯ ಫಲಂ ಸರ್ವಫಲಾಧಿಕಮ್ ।
ತಸ್ಮೈ ರಾಮಾಯಣಾಯಾದ್ಯಾ ದಶಾಂಗಂ ಧೂಪಮರ್ಪಯೇ॥
ಸೂಚನಾ
-ಇತಿ ಧೂಪಮಾಘ್ರಾಪಯಾಮಿ
ಮೂಲಮ್
ಓಂ ಯಸ್ಯ ಲೋಕೇ ಪ್ರಣೀತಾರೋ ವಾಲ್ಮೀಕ್ಯಾದಿ ಮಹರ್ಷಯಃ ।
ತಸ್ಮೈ ರಾಮಚರಿತಾಯ ಘೃತದೀಪಂ ಸಮರ್ಪಯೇ ॥
ಸೂಚನಾ
-ಇತಿ ದೀಪಂ ದರ್ಶಯಾಮಿ
ಮೂಲಮ್
ಓಂ ಶ್ರೂಯತೇ ಬ್ರಹ್ಮಣೋ ಲೋಕೇ ಶತಕೋಟಿ ಪ್ರವಿಸ್ತರಮ್ ।
ರೂಪಂ ರಾಮಾಯಣಸ್ಯಾಸ್ಯ ತಸ್ಮೈ ನೈವೇದ್ಯಮರ್ಪಯೇ ॥
ಸೂಚನಾ
-ಇತಿ ನೈವೇದ್ಯಂ ಸಮರ್ಪಯಾಮಿ
ಪೂಜೆ ಮಾಡಿದ ಬಳಿಕ ಕರ್ಪೂರಾರತಿ ಮಾಡಿ ನಾಲ್ಕು ಪ್ರದಕ್ಷಿಣೆ ಮಾಡಿ ಮಂತ್ರಪುಷ್ಪಾಂಜಲಿ ಅರ್ಪಿಸಬೇಕು. ಮತ್ತೆ ಸಾಷ್ಟಾಂಗ ನಮಸ್ಕಾರ ಮಾಡಬೇಕು.
ಮೂಲಮ್
ವಾಲ್ಮೀಕಿಗಿರಿಸಂಭೂತಾ ರಾಮಸಾಗರಗಾಮಿನೀ ।
ಪುನಾತಿ ಭುವನಂ ಪುಣ್ಯಾ ರಾಮಾಯಣಮಹಾನದೀ ॥
ಶ್ಲೋಕಸಾರ ಸಮಾಕೀರ್ಣಂ ಸರ್ವಕಲ್ಲೋಲಸಂಕುಲಮ್ ।
ಕಾಂಡಗ್ರಾಹಮಹಾಮೀನಂ ವಂದೇ ರಾಮಾಯಣಾರ್ಣವಮ್ ॥
ಸೂಚನಾ
ಮತ್ತೆ ದೇವತೆಗಳನ್ನು, ಬ್ರಾಹ್ಮಣಾದಿಗಳನ್ನು ಪೂಜಿಸಿ, ಪಾರಾಯಣದ ಸಂಕಲ್ಪ ಮಾಡಿ ಋಷ್ಯಾದಿ ನ್ಯಾಸ ಮಾಡಬೇಕು. ಅನುಷ್ಠಾನ ಪ್ರಕಾಶನಕ್ಕನುಸಾರ ಕಾಮನಾಭೇದದಿಂದ ಪೂರ್ಣ ರಾಮಾಯಣದ ಪಾರಾಯಣ ಆಗದಿದ್ದರೆ ಬೇರೆ-ಬೇರೆ ಕಾಂಡಗಳ ಅನುಷ್ಠಾನ ವಿಧಿಯೂ ಇದೆ. ಸಂತಾನದ ಇಚ್ಛೆಯುಳ್ಳವರು ಬಾಲಕಾಂಡವನ್ನು, ಸಂಪತ್ತಿನ ಇಚ್ಛೆಯುಳ್ಳವರು ಅಯೋಧ್ಯಾಕಾಂಡವನ್ನು ಪಾರಾಯಣ ಮಾಡಬೇಕು. ಹೀಗೆಯೇ ನಷ್ಟರಾಜ್ಯದ ಪ್ರಾಪ್ತಿಗಾಗಿ ಕಿಷ್ಕಿಂಧಾಕಾಂಡವನ್ನು, ಎಲ್ಲ ಕಾಮನೆಗಳ ಇಚ್ಛೆಯುಳ್ಳವರು ಸುಂದರಕಾಂಡವನ್ನು, ಶತ್ರುಗಳ ನಾಶಕ್ಕಾಗಿ ಯುದ್ಧಕಾಂಡವನ್ನು ಪಾರಾಯಣ ಮಾಡಬೇಕು. ಬೃಹದ್ಧರ್ಮ ಪುರಾಣಕ್ಕನುಸಾರ ಇನ್ನೂ ಬೇರೆ-ಬೇರೆ ಸಕಾಮ ಉಪಯೋಗಗಳಿವೆ. ಅದಕ್ಕನುಸಾರ ನ್ಯಾಸಾದಿಗಳ ವಿಧಿಯನ್ನು ಮುಂದೆ ಬರೆಯಲಾಗಿದೆ.
ಓಂ ಅಸ್ಯ ಶ್ರೀವಾಲ್ಮೀಕಾರಾಮಾಯಣ ಮಹಾಮಂತ್ರಸ್ಯ । ಭಗವಾನ್ ವಾಲ್ಮೀಕಿಋಷಿಃ । ಅನುಷ್ಟುಪ್ ಛಂದಃ। ಶ್ರೀರಾಮಃ ಪರಮಾತ್ಮಾ ದೇವತಾ । ಅಭಯಂ ಸರ್ವಭೂತೇಭ್ಯ ಇತಿ ಬೀಜಮ್ । ಅಂಗುಲ್ಯಗ್ರೇಣ ತಾನ್ ಹನ್ಯಾಮಿತಿ ಶಕ್ತಿಃ । ಏತದಸ್ತ್ರಬಲಂ ದಿವ್ಯಮಿತಿ ಕೀಲಕಮ್ । ಭಗವನ್ನಾರಾಯಣೋ ದೇವ ಇತಿ ತತ್ತ್ವಮ್ । ಧರ್ಮಾತ್ಮಾ ಸತ್ಯಸಂಧಶ್ಚೇತ್ಯಸ್ತ್ರಮ್ । ಪುರುಷಾರ್ಥ ಚತುಷ್ಟಯ ಸಿಧ್ಯರ್ಥಂ ಪಾಠೇ ವಿನಿಯೋಗಃ ॥
ಓಂ ಶ್ರೀಂ ರಾಂ ಆಪದಾಮಪಹರ್ತಾರಮಿತ್ಯಂಗುಷ್ಠಾಭ್ಯಾಂ ನಮಃ । ಹೃದಯಾಯಾ ನಮಃ ।
ಓಂ ಹ್ರೀಂ ರೀಂ ದಾತಾರಮಿತಿ ತರ್ಜನೀಭ್ಯಾಂ ನಮಃ ಶಿರಸೇ ಸ್ವಾಹಾ ।
ಓಂ ರೋಂ ರುಂ ಸರ್ವಸಂಪದಾಮಿತಿ ಮಧ್ಯಮಾಭ್ಯಾಂ ನಮಃ । ಶಿಖಾಯೈ ವೌಷಟ್ ।
ಓಂ ಶ್ರೀಂ ರೈಂ ಲೋಕಾಭಿರಾಮಮಿತ್ಯನಾಮಿಕಾಭ್ಯಾಂ ನಮಃ । ಕವಚಾಯ ಹುಂ ।
ಓಂ ಶ್ರೀಂ ರೌಂ ಶ್ರೀರಾಮಮಿತಿ ಕನಿಷ್ಠಿಕಾಭ್ಯಾಂ ನಮಃ । ನೇತ್ರತ್ರಯಾಯ ವೌಷಟ್ ।
ಓಂ ರೌಂ ರಃ ಭೂಯೋ ಭೂಯೋ ನಮಾಮ್ಯಹಮಿತಿ ಕರತಲಕರಪೃಷ್ಟಾಭ್ಯಾಂ ನಮಃ । ಅಸ್ತ್ರಾಯ ಫಟ್ ।
ಹೀಗೆಯೇ ಹೃದಯಾದಿ ನ್ಯಾಸ ಮಾಡಬೇಕು. ಕೊನೆಗೆ
ಮೂಲಮ್
ಬ್ರಹ್ಮಾ ಸ್ವಯಂಭೂರ್ಭಗವಾನ್ ದೇವಾಶ್ಚೈವ ತಪಸ್ವಿನಃ ।
ಸಿದ್ಧಿಂ ದಿಶಂತು ಮೇ ಸರ್ವೇ ದೇವಾಃ ಸರ್ಷಿಗಣಾಸ್ತ್ವಿಹ ॥
ಸೂಚನಾ
ಇತಿ ದಿಗ್ಬಂಧಃ ।
ಮತ್ತೆ ಹೀಗೆ ಧ್ಯಾನ ಮಾಡಬೇಕು.
ಮೂಲಮ್
ವಾಮೇ ಭೂಮಿಸುತಾ ಪುರಸ್ತು ಹನುಮಾನ್
ಪಶ್ಚಾತ್ ಸುಮಿತ್ರಾಸುತಃ
ಶತ್ರುಘ್ನೋ ಭರತಶ್ಚ ಪಾರ್ಶ್ವದಲಯೋ
ರ್ವಾಯ್ವಾದಿ ಕೋಣೇಷು ಚ ।
ಸುಗ್ರೀವಶ್ಚ ವಿಭೀಷಣಶ್ಚ ಯುವರಾಟ್
ತಾರಾಸುತೋ ಜಾಂಬವಾನ್
ಮಧ್ಯೇ ನೀಲಸರೋಜ ಕೋಮಲ ರುಚಿಂ
ರಾಮಂ ಭಜೇ ಶ್ಯಾಮಲಮ್ ॥
‘ಆಪದಾಮಪಹರ್ತಾರಂ ದಾತಾರಂ ಸರ್ವಸಂಪದಾಮ್ ।
ಲೋಕಾಭಿರಾಮಂ ಶ್ರೀರಾಮಂ ಭೂಯೋ ಭೂಯೋ ನಮಾಮ್ಯಹಮ್ ॥’
ಸೂಚನಾ
ಇದು ಸಂಪುಟ ಮಂತ್ರವಾಗಿದೆ. ಇದರಿಂದ ಸಂಪುಟಿತ ಪಾರಾಯಣ ಮಾಡಿದರೆ ಸಮಸ್ತ ಮನಃಕಾಮನೆಗಳ ಸಿದ್ಧಿ ಯಾಗುತ್ತದೆ. ಬೃಹದ್ಧರ್ಮ ಪುರಾಣಕ್ಕನುಸಾರ ಮಂಗಲಾ ಚರಣದ ಮೊದಲು ರಾಮಾಯಣ ಕವಚವನ್ನು ಹೇಳಬೇಕು. ರಾಮಾಯಣಕವಚ ಇದರ ಕೊನೆಗೆ ಕೊಡಲಾಗಿದೆ.
ಮತ್ತೆ ಕೆಳಗೆ ಬರೆದಂತೆ ಮಂಗಲಾಚರಣ ಮಾಡಿ ಪಾರಾಯಣವನ್ನು ಪ್ರಾರಂಭಿಸಬೇಕು.
ಭಾಗಸೂಚನಾ
ಗಣಪತಿ ಧ್ಯಾನ
ಮೂಲಮ್
ಶುಕ್ಲಾಂಬರಧರಂ ದೇವಂ ಶಶಿವರ್ಣಂ ಚತುರ್ಭುಜಮ್ ।
ಪ್ರಸನ್ನವದನಂ ಧ್ಯಾಯೇತ್ ಸರ್ವವಿಘ್ನೋಪ ಶಾಂತಯೇ ॥
ವಾಗೀಶಾದ್ಯಾಃ ಸುಮನಸಃ ಸರ್ವಾರ್ಥಾನಾಮುಪಕ್ರಮೇ ।
ಯಂ ನತ್ವಾ ಕೃತಕೃತ್ಯಾಃ ಸ್ಯುಸ್ತಂ ನಮಾಮಿ ಗಜಾನನಮ್ ॥
ಭಾಗಸೂಚನಾ
ಗುರುವಂದನೇ
ಮೂಲಮ್
ಗುರುರ್ಬ್ರಹ್ಮಾ ಗುರುರ್ವಿಷ್ಣೋರ್ಗುರುರ್ದೇವೋ ಮಹೇಶ್ವರಃ ।
ಗುರುಃ ಸಾಕ್ಷಾತ್ ಪರಂ ಬ್ರಹ್ಮ ತಸ್ಮೈ ಶ್ರೀಗುರವೇನಮಃ ॥
ಅಖಂಡಮಂಡಲಾಕಾರಂ ವ್ಯಾಪ್ತಂ ಯೇನ ಚರಾಚರಮ್ ।
ತತ್ಪದಂ ದರ್ಶಿತಂ ಯೇನ ತಸ್ಮೈ ಶ್ರೀಗುರವೇ ನಮಃ ॥
ಭಾಗಸೂಚನಾ
ಸರಸ್ವತೀ ಸ್ಮರಣ
ಮೂಲಮ್
ದೊರ್ಭಿಯುಕ್ತಾ ಚತುರ್ಭಿಃ ಸಟಿಕಮಣಿಮಯೀಮಕ್ಷಮಾಲಾಂ ದಧಾನಾ
ಹಸ್ತೇನೈಕೇನ ಪದ್ಮಂ ಸಿತಮಪಿ ಚ ಶುಕಂ ಪುಸ್ತಕಂ ಚಾಪರೇಣ ।
ಭಾಸಾ ಕುಂದೇಂದು ಶಂಖಸಟಿಕಮಣಿನಿಭಾ ಭಾಸಮಾನಾಸಮಾನಾ
ಸಾ ಮೇ ವಾಗ್ದೇವತೇಯಂ ನಿವಸತು ವದನೇ ಸರ್ವದಾ ಸುಪ್ರಸನ್ನಾ ॥
ಭಾಗಸೂಚನಾ
ವಾಲ್ಮೀಕಿ ವಂದನೆ
ಮೂಲಮ್
ಕೂಜಂತಂ ರಾಮ ರಾಮೇತಿ ಮಧುರಂ ಮಧುರಾಕ್ಷರಮ್ ।
ಆರುಹ್ಯಕವಿತಾಶಾಖಾಂ ವಂದೇ ವಾಲ್ಮೀಕಿ ಕೋಕಿಲಮ್ ॥
ಯಃ ಪಿಬನ್ ಸತತಂ ರಾಮಚರಿತಾಮೃತಸಾಗರಮ್ ।
ಅತೃಪ್ತಸ್ತಂ ಮುನಿಂ ವಂದೇ ಪ್ರಾಚೇತಸಮಕಲ್ಮಷಮ್ ॥
ಭಾಗಸೂಚನಾ
ಹನುಮಂತನಿಗೆ ನಮಸ್ಕಾರ
ಮೂಲಮ್
ಗೋಷ್ಪದೀಕೃತವಾರೀಶಂ ಮಶಕೀಕೃತರಾಕ್ಷಸಮ್ ।
ರಾಮಾಯಣಮಹಾರತ್ನಂ ವಂದೇಽನಿಲಾತ್ಮಜಮ್ ॥
ಅಂಜನಾನಂದನಂ ವೀರಂ ಜಾನಕೀಶೋಕನಾಶನಮ್ ।
ಕಪೀಶಮಕ್ಷಹಂತಾರಂ ವಂದೇ ಲಂಕಾಭಯಂಕರಮ್ ॥
ಉಲ್ಲಂಘ್ಯ ಸಿಂಧೋ ಸಲಿಲಂ ಸಲೀಲಂಯಃ ಶೋಕವಹ್ನಿಂ ಜನಕಾತ್ಮಜಾಯಾಃ ।
ಆದಾಯ ತೇನೈವ ದದಾಹ ಲಂಕಾಂನಮಾಮಿ ತಂ ಪ್ರಾಂಜಲಿರಾಂಜನೇಯಮ್ ॥
ಆಂಜನೇಯ ಮತಿಪಾಟಲಾನನಂ ಕಾಂಚನಾದ್ರಿಕಮನೀಯವಿಗ್ರಹಮ್ ।
ಪಾರಿಜಾತತರುಮೂಲವಾಸಿನಂಭಾವಯಾಮಿ ಪವಮಾನನಂದನಮ್ ।
ಯತ್ರ ಯತ್ರ ರಘುನಾಥ ಕೀರ್ತನಂತತ್ರ ತತ್ರ ಕೃತಮಸ್ತಕಾಂಜಲಿಮ್ ।
ಬಾಷ್ಪವಾರಿಪರಿಪೂಣಲೋಚನಂಮಾರುತಿಂ ನಮತ ರಾಕ್ಷಸಾಂತಕಮ್ ॥
ಮನೋಜವಂ ಮಾರುತತುಲ್ಯವೇಗಂಜಿತೇಂದ್ರಿಯಂ ಬುದ್ಧಿಮತಾಂ ವರಿಷ್ಠಮ್ ।
ವಾತಾತ್ಮಜಂ ವಾನರಯೂಥಮುಖ್ಯಂಶ್ರೀರಾಮದೂತಂ ಶಿರಸಾ ನಮಾಮಿ ॥
ಭಾಗಸೂಚನಾ
ಶ್ರೀರಾಮನ ಧ್ಯಾನಕ್ರಮ
ಮೂಲಮ್
ವೈದೇಹೀಸಹಿತಂ ಸುರದ್ರುಮತಲೇ ಹೈಮೇ ಮಹಾಮಂಡಪೇ
ಮಧ್ಯೇ ಪುಷ್ಪಕಮಾಸನೇ ಮಣಿಮಯೇ ವೀರಾಸನೇ ಸಂಸ್ಥಿತಮ್ ।
ಅಗ್ರೇವಾಚಯತಿ ಪ್ರಭಂಜನಸುತೇ ತತ್ತ್ವಂ ಮುನಿಭ್ಯಃ ಪರಂ
ವ್ಯಾಖ್ಯಾಂತಂ ಭರತಾದಿಭಿಃ ಪರಿವೃತಂ ರಾಮಂ ಭಜೇ ಶ್ಯಾಮಲಮ್ ॥
ವಾಮೇ ಭೂಮಿಸುತಾ ಪುರಸ್ತು ಹನುಮಾನ್ ಪಶ್ಚಾತ್ ಸುಮಿತ್ರಾಸುತಃ
ಶತ್ರುಘ್ನೋ ಭರತಶ್ಚ ಪಾರ್ಶ್ವದಲಯೋರ್ವಾಯ್ವಾದಿಕೋಣೇಷು ಚ ।
ಸುಗ್ರೀವಶ್ಚ ವಿಭೀಷಣಶ್ಚ ಯುವರಾಟ್ ತಾರಾಸುತೋ ಜಾಂಬವಾನ್
ಮಧ್ಯೇ ನೀಲಸರೋಜ ಕೋಮಲ ರುಚಿಂ ರಾಮಂಭಜೇ ಶ್ಯಾಮಲಮ್ ॥
ಭಾಗಸೂಚನಾ
ಶ್ರೀರಾಮ ಪರಿವಾರದ ವಂದನೆ
ಮೂಲಮ್
ರಾಮಂ ರಾಮಾನುಜಂ ಸೀತಾಂ ಭರತಂ ಭರತಾನುಜಮ್ ।
ಸುಗ್ರೀವಂ ವಾಯುಸೂನುಂ ಚ ಪ್ರಣಮಾಮಿ ಪುನಃ ಪುನಃ ॥
ನಮೋಽಸ್ತು ರಾಮಾಯ ಸಲಕ್ಷ್ಮಣಾಯ ದೇವ್ಯೈಚ ತಸ್ಮೈ ಜನಕಾತ್ಮಜಾಯೈ ।
ನಮೋಽಸ್ತು ರುದ್ರೇಂದ್ರಯಮಾನಿಲೇಭ್ಯೋ ನಮೋಽಸ್ತು ಚಂದ್ರಾರ್ಕಮರುದ್ಗಣೇಭ್ಯಃ ॥
ಭಾಗಸೂಚನಾ
ರಾಮಾಯಣಕ್ಕೆ ನಮಸ್ಕಾರ
ಮೂಲಮ್
ಚರಿತಂ ರಘುನಾಥಸ್ಯ ಶತಕೋಟಿ ಪ್ರವಿಸ್ತರಮ್ ।
ಏಕೈಕಮಕ್ಷರಂ ಪುಂಸಾಂ ಮಹಾಪಾತಕನಾಶನಮ್ ॥
ವಾಲ್ಮೀಕಿಗಿರಿ ಸಂಭೂತಾ ರಾಮಾಂಭೋನಿಸಂಗತಾ ।
ಶ್ರೀಮದ್ರಾಮಾಯಣೀ ಗಂಗಾ ಪುನಾತಿ ಭುವನತ್ರಯಮ್ ॥
ವಾಲ್ಮೀಕೇರ್ಮುನಿಸಿಂಹಸ್ಯ ಕವಿತಾವನ ಚಾರಿಣಃ ।
ಶೃಣ್ವನ್ ರಾಮಕಥಾನಾದಂ ಕೋ ನ ಯಾತಿ ಪರಾಂ ಗತಿಮ್ ॥
ಸೂಚನಾ
ಪಾರಾಯಣವನ್ನು ಪ್ರಾರಂಭಿಸಿ ಸರ್ಗ (ಅಧ್ಯಾಯದ) ನಡುವೆ ವಿಶ್ರಮಿಸಬಾರದು. ನಿಲ್ಲಿಸಿದರೆ ಪುನಃ ಅದೇ ಅಧ್ಯಾಯವನ್ನು ಮೊದಲಿನಿಂದ ಪಾರಾಯಣ ಮಾಡಬೇಕು, ಮಧ್ಯಮ ಸ್ವರದಿಂದ, ಸ್ಪಷ್ಟವಾಗಿ ಉಚ್ಚರಿಸುತ್ತಾ ಶ್ರದ್ಧಾ - ಭಕ್ತಿಯಿಂದ ಪಾರಾಯಣ ಮಾಡಬೇಕು. ಹಾಡುತ್ತಾ, ತಲೆ ಅಲ್ಲಾಡಿಸುತ್ತಾ ಅವರಸ ಅವರಸವಾಗಿ, ಅರ್ಥ ತಿಳಿಯದೆ ಪಾರಾಯಣ ಮಾಡಬಾರದು. ಸಂಧ್ಯಾಸಮಯದಲ್ಲಿ ಕೆಳಗಿನ ಸ್ಥಳಗಳಲ್ಲಿ ಪ್ರತಿದಿನ ವಿಶ್ರಾಮ ಮಾಡಬೇಕು.
ಅನುವಾದ
ಮೊದಲನೆಯ ದಿನ - ಅಯೋಧ್ಯಾಕಾಂಡದ 6ನೆ ಸರ್ಗ ಸಮಾಪ್ತಿವರೆಗೆ,
ಎರಡನೆಯ ದಿನ - ಅಯೋಧ್ಯಾಕಾಂಡದ 80ನೆಯ ಸರ್ಗ ಸಮಾಪ್ತಿವರೆಗೆ,
ಮೂರನೆಯ ದಿನ - ಅರಣ್ಯಕಾಂಡದ 20ನೆಯ ಸರ್ಗ ಸಮಾಪ್ತಿವರೆಗೆ,
ನಾಲ್ಕನೆಯ ದಿನ - ಕಿಷ್ಕಿಂಧಾಕಾಂಡದ 46ನೆಯ ಸರ್ಗ ಸಮಾಪ್ತಿವರೆಗೆ,
ಐದನೆಯ ದಿನ - ಸುಂದರಕಾಂಡದ 47ನೆಯ ಸರ್ಗ ಸಮಾಪ್ತಿವರೆಗೆ,
ಆರನೆಯ ದಿನ - ಯುದ್ಧಕಾಂಡದ 50ನೆಯ ಸರ್ಗ ಸಮಾಪ್ತಿವರೆಗೆ,
ಏಳನೆಯ ದಿನ - ಯುದ್ಧಕಾಂಡದ 99ನೆಯ ಸರ್ಗ ಸಮಾಪ್ತಿವರೆಗೆ,
ಎಂಟನೆಯ ದಿನ - ಉತ್ತರಕಾಂಡದ 36ನೆಯ ಸರ್ಗ ಸಮಾಪ್ತಿವರೆಗೆ,
ಒಂಭತ್ತನೆಯ ದಿನ - ಉತ್ತರಕಾಂಡದ ಕೊನೆಯ ಸರ್ಗದವರೆಗೆ.
ಸೂಚನಾ
ಇದರ ಬೇರೊಂದು ವಿಶ್ರಾಮ ಸ್ಥಳಗಳೂ ಇವೆ. ಇದರಲ್ಲಿ ಉತ್ತರಕಾಂಡದ ಪಾರಾಯಣ ಇಲ್ಲದಿರುವ ಒಂದು ಪಾರಾಯಣ ಕ್ರಮವೂ ಇದೆ. ಅದರ ವಿಶ್ರಾಮಸ್ಥಳ ಇಂತಿವೆ -
ಅನುವಾದ
ಮೊದಲನೆಯ ದಿನ - ಬಾಲಕಾಂಡದ 77 ಸರ್ಗಗಳು
ಎರಡನೆಯ ದಿನ - ಅಯೋಧ್ಯಾಕಾಂಡದ 90 ಸರ್ಗಗಳು
ಮೂರನೆಯ ದಿನ - ಅಯೋಧ್ಯಾಕಾಂಡದ 119 ಸರ್ಗಗಳು
ನಾಲ್ಕನೆಯ ದಿನ - ಅರಣ್ಯಕಾಂಡದ 68 ಸರ್ಗಗಳು
ಐದನೆಯ ದಿನ - ಕಿಷ್ಕಿಂಧಾಕಾಂಡದ 49 ಸರ್ಗಗಳು
ಆರನೆಯ ದಿನ - ಸುಂದರಕಾಂಡದ 56 ಸರ್ಗಗಳು
ಏಳನೆಯ ದಿನ - ಯುದ್ಧಕಾಂಡದ 50 ಸರ್ಗಗಳು
ಎಂಟನೆಯ ದಿನ - ಯುದ್ಧಕಾಂಡದ 111 ಸರ್ಗಗಳು
ಒಂಭತ್ತನೆಯ ದಿನ - ಯುದ್ಧಕಾಂಡದ 131 ಸರ್ಗಗಳು
ಸೂಚನಾ
ಪ್ರತಿದಿನವೂ ಕಥಾಸಮಾಪ್ತಿಯ ಸಮಯ ಕೆಳಗೆ ಬರೆದ ಶ್ಲೋಕಗಳನ್ನು ಪಠಿಸಿ ಪಾರಾಯಣ ಮುಗಿಸಬೇಕು.
ಮೂಲಮ್
ಸ್ವಸ್ತಿ ಪ್ರಜಾಭ್ಯಃ ಪರಿಪಾಲಯಂತಾಂ,ನ್ಯಾಯ್ಯೇನ ಮಾರ್ಗೇಣ ಮಹೀಂ ಮಹೀಶಾಃ ।
ಗೋಬ್ರಾಹ್ಮಣೇಭ್ಯಃ ಶುಭಮಸ್ತು ನಿತ್ಯಂ,ಲೋಕಾಃ ಸಮಸ್ತಾಃ ಸುಖಿನೋ ಭವಂತು ॥
ಕಾಲೇವರ್ಷತು ಪರ್ಜನಯಃ ಪೃಥಿವೀ ಸಸ್ಯಶಾಲಿನೀ ।
ದೇಶೋಽಯಂ ಕ್ಷೋಭರಹಿತೋ ಬ್ರಾಹ್ಮಣಾಃ ಸಂತು ನಿರ್ಭಯಾಃ ॥
ಅಪುತ್ರಾಃ ಪುತ್ರಿಣಃ ಸಂತು ಪುತ್ರಿಣಃ ಸಂತು ಪೌತ್ರಿಣಃ ।
ಅಧನಾಃ ಸಧನಾಃ ಸಂತು ಜೀವಂತು ಶರದಾಂ ಶತಮ್ ॥
ಚರಿತಂ ರಘುನಾಥಸ್ಯ ಶತಕೋಟಿಪ್ರವಿಸ್ತರಮ್ ।
ಏಕೈಕಮಕ್ಷರಂ ಪ್ರೋಕ್ತಂ ಮಹಾಪಾತಕನಾಶನಮ್ ॥
ಶೃಣ್ವನ್ ರಾಮಾಯಣಂ ಭಕ್ತ್ಯಾಯಃ ಪಾದಂ ಪಾದಮೇವ ವಾ ।
ಸ ಯಾತಿ ಬ್ರಹ್ಮಣಃ ಸ್ಥಾನಂ ಬ್ರಹ್ಮಣಾ ಪೂಜ್ಯತೇ ಸದಾ ॥
ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇದಸೇ ।
ರಘುನಾಥಾಯ ನಾಥಾಯ ಸೀತಾಯಾಃ ಪತಯೇ ನಮಃ ॥
ಯನ್ಮಂಗಲಂ ಸಹಸ್ರಾಕ್ಷೋ ಸರ್ವದೇವನಮಸ್ಕೃತೇ ।
ವೃತ್ರನಾಶೇ ಸಮಭವತ್ ತತ್ ತೇ ಭವತು ಮಂಗಲಮ್ ॥
ಯನ್ಮಂಗಲಂ ಸುಪರ್ಣಸ್ಯ ವಿನತಾಕಲ್ಪಯತ್ ಪುರಾ ।
ಅಮೃತಂ ಪ್ರಾರ್ಥಯಾನಸ್ಯ ತತ್ತೇ ಭವತು ಮಂಗಲಮ್ ॥
ಮಂಗಲಂ ಕೌಸಲೇಂದ್ರಾಯ ಮಹನೀಯಗುಣಾತ್ಮನೇ ।
ಚಕ್ರವರ್ತಿತನೂಜಾಯ ಸಾರ್ವಭೌಮಾಯ ಮಂಗಲಮ್ ॥
ಅಮೃತೋತ್ಪಾದನೋ ದೈತ್ಯಾನ್ ಘ್ನತೋ ವಜ್ರಧರಸ್ಯ ಯತ್ ।
ಅದಿತಿರ್ಮಂಗಲಂ ಪ್ರಾದಾತ್ ತತ್ತೇ ಭವತು ಮಂಗಲಮ್ ॥
ತ್ರೀನ್ ವಿಕ್ರಮಾನ್ ಪ್ರಕ್ರಮತೋ ವಿಷ್ಣೋರಮಿತತೇಜಸಃ ।
ಯದಾಸೀ ನ್ಮಂಗಲಂ ರಾಮ ತತ್ತೇ ಭವತು ಮಂಗಲಮ್ ॥
ಋಷಯಃ ಸಾಗರಾ ದ್ವಿಪಾ ವೇದಾ ಲೋಕಾ ದಿಶಶ್ವ ತೇ ।
ಮಂಗಲಾನಿ ಮಹಾಬಾಹೋ ದಿಶಂತು ತವ ಸರ್ವದಾ ॥
ಕಾಯೇನ ವಾಚಾ ಮನಸೇಂದ್ರಿಯೈರ್ವಾಬುದ್ಧ್ಯಾಽಽತ್ಮನಾ ವಾ ಪ್ರಕೃತೇ ಸ್ವಭಾವಾತ್ ।
ಕರೋಮಿ ಯದ್ ಯತ್ ಸಕಲಂ ಪರಸ್ಮೈನಾರಾಯಣೇತಿ ಸಮರ್ಪಯೇ ತತ್ ॥
ಅನುವಾದ
ಬೇರೆ ಬೇರೆ ಕಾಂಡಗಳ ಸಕಾಮ ಪಾರಾಯಣದ ಋಷ್ಯಾದಿನ್ಯಾಸ ಈ ಪ್ರಕಾರವಿದೆ.
ಭಾಗಸೂಚನಾ
ಬಾಲಕಾಂಡದ ವಿನಿಯೋಗ
ಸೂಚನಾ
ಓಂ ಅಸ್ಯ ಶ್ರೀಬಾಲಕಾಂಡಮಹಾಮಂತ್ರಸ್ಯ ಋಷ್ಯಶೃಂಗ ಋಷಿಃ । ಅನುಷ್ಟುಪ ಛಂದಃ । ದಾಶರಥಿಃ ಪರಮಾತ್ಮಾ ದೇವತಾ । ರಾಂ ಬೀಜಮ್ । ನಮಃ ಶಕ್ತಿಃ । ರಾಮಾಯೇತಿ ಕೀಲಕಮ್ । ಶ್ರೀರಾಮ ಪ್ರೀತ್ಯರ್ಥೇ ಬಾಲಕಾಂಡಪಾರಾಯಣೇ ವಿನಿಯೋಗಃ ।
ಭಾಗಸೂಚನಾ
ಋಷ್ಯಾದಿನ್ಯಾಸ
ಸೂಚನಾ
ಓಂ ಋಷ್ಯಶೃಂಗಋಷಯೇ ನಮಃ ಶಿರಸಿ । ಓಂ ಅನುಷ್ಟುಪ್ ಛಂದಸೇನಮಃ ಮುಖೇ । ಓಂ ದಾಶರಥಿ ಪರಮಾತ್ಮಾದೇವತಾಯೈ ನಮಃ ಹೃದಿ । ಓಂ ರಾಂ ಬೀಜಾಯನಮಃ ಗುಹ್ಯೇ । ಓಂ ನಮಃ ಶಕ್ತಯೇ ನಮಃ ಪಾದಯೋಃ । ಓಂ ರಾಮಾಯ ಕೀಲಕಾಯ ಸರ್ವಾಂಗೇ ॥
ಭಾಗಸೂಚನಾ
ಕರನ್ಯಾಸ
ಸೂಚನಾ
ಓಂ ಸುಪ್ರಸನ್ನಾಯ ಅಂಗುಷ್ಠಾಭ್ಯಾಂ ನಮಃ । ಓಂ ಶಾಂತಮನಸೇ ತರ್ಜನೀಭ್ಯಾಂ ನಮಃ । ಓಂ ಸತ್ಯಸಂಧಾಯಮಧ್ಯಮಾಭ್ಯಾಂ ನಮಃ । ಓಂ ಜಿತೇಂದ್ರಿಯಾಯ ಅನಾಮಿಕಾಭ್ಯಾಂ ನಮಃ । ಓಂ ಧರ್ಮಜ್ಞಾಯ ನಯಸಾರಜ್ಞಾಯ ಕನಿಷ್ಠಿಕಾಭ್ಯಾಂ ನಮಃ । ಓಂ ರಾಜ್ಞೆ ದಾಶರಥಯೇ ಜಯಿನೇ ಕರತಲಕರಪೃಷ್ಠಾಭ್ಯಾಂ ನಮಃ ॥
ಇದೇ ಮಂತ್ರಗಳಿಂದ ಹೃದಯಾದಿ ನ್ಯಾಸ ಮಾಡಬೇಕು. ಮತ್ತೆ ಹೀಗೆ ಧ್ಯಾನಿಸಬೇಕು.
ಮೂಲಮ್
ಶ್ರೀರಾಮಯಾಶ್ರಿತ ಜನಾಮರಭೂರುಹೇಶ-ಮಾನಂದ ಶುದ್ಧಮಖಿಲಾಮರವಂದಿತಾಂಘ್ರಿಮ್ ।
ಸೀತಾಂಗನಾಸುಮಿಲಿತಂ ಸತತಂ ಸುಮಿತ್ರಾ-ಪುತ್ರಾನ್ವಿತಂ ಧೃತಧನುಃ ಶರಮಾದಿದೇವಮ್ ॥
ಓಂ ಸುಪ್ರಸನ್ನಃ ಶಾಂತಮನಾಃ ಸತ್ಯಸಂಧೋ ಜಿತೇಂದ್ರಿಯಃ ।
ಧರ್ಮಜ್ಞೋ ನಯಸಾರಜ್ಞೋ ರಾಜಾ ದಾಶರಥಿರ್ಜಯೀ ॥
ಸೂಚನಾ
ಈ ಮಂತ್ರದಿಂದ ಪೂಜಿಸಬೇಕು, ಅಥವಾ ಈ ಮಂತ್ರದಿಂದ ಸಂಪುಟಿತ ಮಾಡಿ ಬಾಲಕಾಂಡವನ್ನು ಪಾರಾಯಣ ಮಾಡಬೇಕು. ಇದರಿಂದ ಗ್ರಹಶಾಂತಿ, ಈತಿ-ಭೀತಿ-ಶಾಂತಿ ಹಾಗೂ ಪುತ್ರಪ್ರಾಪ್ತಿ ಸಂಭವಿಸುವುದು.
ಭಾಗಸೂಚನಾ
ಅಯೋಧ್ಯಾಕಾಂಡದ ವಿನಿಯೋಗ
ಸೂಚನಾ
ಓಂ ಅಸ್ಯ ಶ್ರೀ ಅಯೋಧ್ಯಾಕಾಂಡ ಮಹಾಮಂತ್ರಸ್ಯ । ಭಗವಾನ್ ವಸಿಷ್ಠ ಋಷಿಃ । ಅನುಷ್ಟುಪ್ ಛಂದಃ । ಭರತೋದಾಶರಥಿಃ ಪರಮಾತ್ಮಾ ದೇವಾತಾ । ಭಂ ಬೀಜಮ್ । ನಮಃ ಶಕ್ತಿಃ । ಭರತಾಯೇತಿ ಕಿಲಕಮ್ । ಮಮ ಭರತಪ್ರಸಾದ ಸಿದ್ಧ್ಯರ್ಥಂ ಅಯೋಧ್ಯಾಕಾಂಡ ಪಾರಾಯಣೇ ವಿನಿಯೋಗಃ ॥ ಓಂ ವಸಿಷ್ಠಋಷಯೇ ನಮಃ ಶಿರಸಿ । ಓಂ ಅನುಷ್ಟುಪ್ ಛಂದಸೇ ನಮಃ ಮುಖೇ । ಓಂ ದಾಶರಥಿಭರತಪರಮಾತ್ಮಾ ದೇವತಾಯೈ ನಮಃ ಹೃದಿ । ಓಂ ಭಂ ಬೀಜಾಯ ನಮಃ ಗುಹ್ಯೇ । ಓಂ ನಮಃ ಶಕ್ತಿಯೇ ನಮಃ ಪಾದಯೋಃ । ಓಂ ಭರತಾಯ ಕೀಲಕಾಯ ನಮಃ ಸರ್ವಾಂಗೇ ॥
ಭಾಗಸೂಚನಾ
ಕರನ್ಯಾಸ
ಸೂಚನಾ
ಓಂ ಭರತಾಯ ನಮಸ್ತಸ್ಮೈ ಅಂಗುಷ್ಠಾಭ್ಯಾಂ ನಮಃ । ಓಂ ಸಾರಜ್ಞಾನ ತರ್ಜನೀಭ್ಯಾಂ ನಮಃ । ಓಂ ಮಹಾತ್ಮನೇ ಮಧ್ಯಮಾಭ್ಯಾಂ ನಮಃ । ಓಂ ತಾಪಸಾಯ ಅನಾಮಿಕಾಭ್ಯಾಂ ನಮಃ । ಓಂ ಅತಿಶಾಂತಾಯ ಕನಿಷ್ಠಿಕಾಭ್ಯಾಂ ನಮಃ । ಓಂ ಶತ್ರುಘ್ನಸಹಿತಾಯ ಚ ಕರತಲಕರಪೃಷ್ಠಾಭ್ಯಾಂ ನಮಃ ॥
ಅನುವಾದ
ಹೀಗೆ ಹೃದಯಾದಿ ನ್ಯಾಸ ಮಾಡಬೇಕು. ಮತ್ತೆ ಧ್ಯಾನ ಮಾಡಬೇಕು-
ಮೂಲಮ್
ಶ್ರೀರಾಮಪಾದದ್ವಯಪಾದುಕಾಂತಸಂಸಕ್ತಚಿತ್ತಂ ಕಮಲಾಯತಾಕ್ಷಮ್ ।
ಶ್ಯಾಮಂ ಪ್ರಸನ್ನವದನಂ ಕಮಲಾವದಾತಶತ್ರುಘ್ನಯುಕ್ತಮನಿಶಂ ಭರತಂ ನಮಾಮಿ ॥
ಭರತಾಯ ನಮಸ್ತಸ್ಮೈ ಸಾರಜ್ಞಾಯ ಮಹಾತ್ಮನೇ ।
ತಾಪಸಾಯಾತಿಶಾಂತಾಯ ಶತ್ರುಘ್ನಸಹಿತಾಯ ಚ ॥
ಸೂಚನಾ
ಈ ಮಂತ್ರದಿಂದ ಪೂಜಿಸಬೇಕು. ಲಕ್ಷ್ಮೀಪ್ರಾಪ್ತಿಯ ಇಚ್ಛೆ ಇದ್ದರೆ ಈ ಮಂತ್ರದಿಂದ ಸಂಪುಟಿತ ಅಯೋಧ್ಯಾಕಾಂಡದ ಪಾರಾಯಣ ಮಾಡಬೇಕು.
ಭಾಗಸೂಚನಾ
ಅರಣ್ಯಕಾಂಡದ ವಿನಿಯೋಗ
ಸೂಚನಾ
ಓಂ ಅಸ್ಯ ಶ್ರೀಮದರಣ್ಯಕಾಂಡಮಹಾಮಂತ್ರಸ್ಯ ಭಗವಾನ್ ಋಷಿಃ । ಅನುಷ್ಟುಪ್ ಛಂದಃ । ಶ್ರೀರಾಮೋದಾಶರಥಿಃ ಪರಮಾತ್ಮಾ ಮಹೇಂದ್ರೋ ದೇವತಾ । ಈಂ ಬೀಜಮ್ । ನಮಃ ಶಕ್ತಿಃ । ಇಂದ್ರಾಯೇತಿ ಕಿಲಕಮ್ । ಇಂದ್ರಪ್ರಸಾದ ಸಿದ್ಧ್ಯರ್ಥೇ ಅರಣ್ಯಕಾಂಡ ಪಾರಾಯಣೇ ಜಪೇ ವಿನಿಯೋಗಃ ॥ ಓಂ ಭಗವಾನ್ ಋಷಯೇ ನಮಃ ಶಿರಸಿ । ಓಂ ಅನುಷ್ಟುಪ್ ಛಂದಸೇನಮಃ ಮುಖೇ । ಓಂ ದಾಶರಥಿಶ್ರೀರಾಮಪರಮಾತ್ಮಮಹೇಂದ್ರ ದೇವತಾಯೈ ನಮಃ ಹೃದಿ । ಓಂ ಈ ಬೀಜಾಯ ನಮಃ ಗುಹ್ಯೇ । ಓಂ ನಮಃ ಶಕ್ತಯೇ ನಮಃ ಪಾದಯೋಃ । ಓಂ ಇಂದ್ರಾಯ ಕೀಲಕಾಯನಮಃ ಸರ್ವಾಂಗೇ ॥
ಭಾಗಸೂಚನಾ
ಕರನ್ಯಾಸ
ಸೂಚನಾ
ಓಂ ಸಹಸ್ರನಯನಾಯ ಅಂಗುಷ್ಠಾಭ್ಯಾಂ ನಮಃ । ಓಂ ದೇವಾಯ ತರ್ಜನೀಭ್ಯಾಂ ನಮಃ । ಓಂ ಸರ್ವದೇವನಮಸ್ಕೃತಾಯ ಮಧ್ಯಮಾಭ್ಯಾಂ ನಮಃ । ಓಂ ದಿವ್ಯವಜ್ರ ಧರಾಯ ಅನಾಮಿಕಾಭ್ಯಾಂ ನಮಃ । ಓಂ ಮಹೇಂದ್ರಾಯಕನಿಷ್ಠಿಕಾಭ್ಯಾಂ ನಮಃ । ಓಂ ಶಚೀಪತಯೇ ಕರತಲಕರ ಪೃಷ್ಠಾಭ್ಯಾಂ ನಮಃ ॥
ಅನುವಾದ
ಹೀಗೆ ಹೃದಯಾದಿ ನ್ಯಾಸಮಾಡಿ, ಈ ಶ್ಲೋಕದಿಂದ ಧ್ಯಾನಮಾಡಬೇಕು.
ಮೂಲಮ್
ಶಚೀಪತಿಂ ಸರ್ವಸುರೇಶವಂದ್ಯಂ-ಸರ್ವಾರ್ತಿ ಹರ್ತಾರ ಮಚಿಂತ್ಯಶಕ್ತಿಮ್ ।
ಶ್ರೀರಾಮಸೇವಾನಿರತಂ ಮಹಾಂತಂ ವಂದೇಮಹೇಂದ್ರಂ ಧೃತ ವಜ್ರಮೀಡ್ಯಮ್ ॥
ಸಹಸ್ರನಯನಂ ದೇವಂ ಸರ್ವದೇವನಮಸ್ಕೃತಮ್ ।
ದಿವ್ಯ ವಜ್ರಧರಂ ವಂದೇ ಮಹೇಂದ್ರಂ ಚ ಶಚೀಪತಿಮ್ ॥
ಅನುವಾದ
ಈ ಮಂತ್ರದಿಂದ ಇಂದ್ರನನ್ನು ಪೂಜಿಸಿ, ನಷ್ಟದ್ರವ್ಯ ಪ್ರಾಪ್ತಿ ಮೊದಲಾದ ಕಾಮನೆಯಿಂದ ಈ ಮಂತ್ರದಿಂದ ಸಂಪುಟಿತ ಪಾರಾಯಣ ಮಾಡಬೇಕು.
ಭಾಗಸೂಚನಾ
ಕಿಷ್ಕಿಂಧಾಕಾಂಡದ ವಿನಿಯೋಗ
ಸೂಚನಾ
ಓಂ ಅಸ್ಯ ಶ್ರೀಕಿಷ್ಕಿಂಧಾಕಾಂಡ ಮಹಾಮಂತ್ರಸ್ಯ । ಭಗವಾನ್ ಋಷಿಃ । ಅನುಷ್ಟುಪ್ ಛಂದಃ । ಸುಗ್ರೀವೋ ದೇವತಾ । ಸುಂ ಬೀಜಮ್ । ನಮಃ ಶಕ್ತಿಃ । ಸುಗ್ರೀವೇತಿ ಕಿಲಕಮ್ । ಮಮ ಸುಗ್ರೀವ ಪ್ರಸಾದ ಸಿದ್ದ್ಯರ್ಥೇ ಕಿಷ್ಕಿಂಧಾಕಾಂಡ ಪಾರಾಯಣೇ ವಿನಿಯೋಗಃ ॥ ಓಂ ಭಗವಾನ್ ಋಷಯೇ ನಮಃ ಶಿರಸಿ । ಓಂ ಅನುಷ್ಟುಪ್ ಛಂದಸೇನಮಃ ಮುಖೇ। ಓಂ ಸುಗ್ರೀವ ದೇವತಾಯೈ ನಮಃ ಹೃದಯೇ । ಓಂ ಸುಂ ಬೀಜಾಯ ನಮಃ ಗುಹ್ಯೇ । ಓಂ ನಮಃ ಶಕ್ತಯೇ ನಮಃ ಪಾದಯೋಃ । ಓಂ ಸುಗ್ರೀವಾಯ ಕೀಲಕಾಯ ಸರ್ವಾಂಗೇ ॥
ಭಾಗಸೂಚನಾ
ಕರನ್ಯಾಸ
ಸೂಚನಾ
ಓಂ ಸುಗ್ರೀವಾಯ ಅಂಗುಷ್ಠಾಭ್ಯಾಂ ನಮಃ । ಓಂ ಸೂರ್ಯತನಯಾಯ ತರ್ಜನೀಭ್ಯಾಂ ನಮಃ । ಓಂ ಸರ್ವವಾನರ ಪುಂಗವಾಯ ಮಧ್ಯಮಾಭ್ಯಾಂ ನಮಃ । ಓಂ ಬಲವತೇ ಅನಾಮಿಕಾಭ್ಯಾಂ ನಮಃ । ಓಂ ರಾಘವಸಖಾಯ ಕನಿಷ್ಠಿಕಾಭ್ಯಾಂ ನಮಃ । ಓಂ ವಶೀರಾಜ್ಯಂ ಪ್ರಯಚ್ಛ ಇತಿ ಕರತಲಕರಪೃಷ್ಠಾಭ್ಯಾಂ ನಮಃ ॥
ಅನುವಾದ
ಹೀಗೆ ಹೃದಯಾದಿ ನ್ಯಾಸ ಮಾಡಿ, ಹೀಗೆ ಧ್ಯಾನಿಸಬೇಕು.
ಮೂಲಮ್
ಸುಗ್ರೀವ ಮರ್ಕತನಯಂ ಕಪಿವರ್ಯವಂದ್ಯ-ಮಾರೋಪಿತಾಚ್ಯುತಪದಾಂಬುಜಮಾದರೇಣ ।
ಪಾಣಿಪ್ರಹಾರ ಕುಶಲಂ ಬಲಪೌರುಷಾಡ್ಯ-ಮಾಶಾಸ್ಯದಾಸ್ಯನಿಪುಣಂ ಹೃದಿಭಾವಯಾಮಿ ॥
ಮತ್ತೆ ಸುಗ್ರೀವಾಯನಮಃ ಹಾಗೂ
ಸುಗ್ರೀವಃ ಸೂರ್ಯತನಯಃ ಸರ್ವವಾನರ ಪುಂಗವಃ ।
ಬಲವಾನ್ ರಾಘವಸಖಾವಶೀರಾಜ್ಯಂ ಪ್ರಯಚ್ಛತು ॥
ಅನುವಾದ
ಈ ಮಂತ್ರದಿಂದ ಸುಗ್ರೀವನ ಪೂಜೆ ಮಾಡಿ, ಇದರಿಂದ ಸಂಪುಟಿತ ಕಿಷ್ಕಿಂಧಾಕಾಂಡದ ಪಾರಾಯಣ ಮಾಡಬೇಕು.
ಭಾಗಸೂಚನಾ
ಸುಂದರ ಕಾಂಡದ ವಿನಿಯೋಗ
ಸೂಚನಾ
ಓಂ ಅಸ್ಯ ಶ್ರೀಮತ್ಸುಂದರಕಾಂಡ ಮಹಾಮಂತ್ರಸ್ಯ । ಭಗವಾನ್ ಹನುಮಾನ್ ಋಷಿಃ । ಅನುಷ್ಟುಪ್ ಛಂದಃ । ಶ್ರೀ ಜಗನ್ಮಾತಾ ಸೀತಾ ದೇವತಾ । ಶ್ರೀಂ ಬೀಜಮ್ । ಸ್ವಾಹಾ ಶಕ್ತಿಃ । ಸೀತಾಯೈ ಕೀಲಕಮ್ । ಸೀತಾಪ್ರಸಾದ ಸಿದ್ಧ್ಯರ್ಥಂ ಸುಂದರಕಾಂಡ ಪಾರಾಯಣೇ ವಿನಿಯೋಗಃ ॥ ಓಂ ಭಗವದ್ ಹನುಮದ್ ಋಷಯೇ ನಮಃ ಶಿರಸಿ । ಅನುಷ್ಟುಪ್ ಛಂದಸೇನಮಃ ಮುಖೇ । ಶ್ರೀ ಜಗನ್ಮಾತೃಸೀತಾದೇವತಾಯೈ ನಮಃ ಹೃದಿ । ಶ್ರೀಂ ಬೀಜಾಯ ನಮಃ ಗುಹ್ಯೇ । ಸ್ವಾಹಾ ಶಕ್ತಯೇ ನಮಃ ಪಾದಯೋಃ । ಸೀತಾಯೈ ಕೀಲಕಾಯನಮಃ ಸರ್ವಾಂಗೇ ॥
ಭಾಗಸೂಚನಾ
ಕರನ್ಯಾಸ
ಸೂಚನಾ
ಓಂ ಸೀತಾಯೈ ಅಂಗುಷ್ಠಾಭ್ಯಾಂ ನಮಃ । ಓಂ ವಿದೇಹರಾಜಸುತಾಯೈ ತರ್ಜನೀಭ್ಯಾಂ ನಮಃ । ಓಂ ರಾಮಸುಂದರ್ಯೈ ಮಧ್ಯಮಾಭ್ಯಾಂ ನಮಃ । ಓಂ ಹುನುಮತಾ ಸಮಾಶ್ರಿತಾಯೈ ಅನಾಮಿಕಾಭ್ಯಾಂ ನಮಃ । ಓಂ ಭೂಮಿಸುತಾಯೈ ಕನಿಷ್ಠಿಕಾಭ್ಯಾಂ ನಮಃ । ಶರಣಂ ಭಜೆ ಕರತಲಕರಪೃಷ್ಠಾಭ್ಯಾಂ ನಮಃ ॥
ಅನುವಾದ
ಹೀಗೆಯೇ ಹೃದಯಾದಿ ನ್ಯಾಸ ಮಾಡಿ, ಈ ಪ್ರಕಾರ ಧ್ಯಾನಮಾಡಬೇಕು.
ಮೂಲಮ್
ಸೀತಾಮುದಾರ ಚರಿತಾಂ ವಿಸಾಂಬವಿಷ್ಣು-ವಂದ್ಯಾಂ ತ್ರಿಲೋಕಜನನೀಂ ಶತಕಲ್ಪವಲ್ಲೀಮ್ ।
ಹೇಮೈರನೇಕಮಣಿರಂಜಿತಕೋಟಿಭಾಗೈ-ರ್ಭೂಷಾಚಯೈರನುದಿನಂ ಸಹಿತಾಂ ನಮಾಮಿ ॥
ಅನುವಾದ
ಸುಂದರಕಾಂಡದ ಪಾರಾಯಮದ ವಿಶೇಷ ವಿಧಿ ಇಂತಿದೆ - ಪ್ರತಿದಿನ ಏಕೋತ್ತರವೃತ್ತಿಯಿಂದ ಕ್ರಮವಾಗಿ ಒಂದೊಂದು ಸರ್ಗ ಹೆಚ್ಚಿಸುತ್ತಾ 11ನೇ ದಿನ ಪಾರಾಯಣ ಮುಗಿಸಬೇಕು. 12ನೇಯ ದಿನ ಉಳಿದ ಎರಡು ಸರ್ಗದ ಜೊತೆಗೆ ಪ್ರಾರಂಭದ 10 ಸರ್ಗ ಓದಬೇಕು. 13ನೇಯ ದಿನ 11 ರಿಂದ 23ರತನಕ, ಹೀಗೆ ಮೂರು ಆವೃತ್ತಿಯ ಪಾರಾಯಣದಿಂದ ಎಲ್ಲ ಕಾಮನೆಗಳು ಸಿದ್ದಿಯಾಗುತ್ತವೆ. ಇನ್ನೊಂದು ಕ್ರಮ-ಪ್ರತಿದಿನ 5 ಸರ್ಗದ ಪಾರಾಯಣ, ಇದರಲ್ಲಿಯೂ ಹಿಂದಿನಂತೆ 14ನೇಯ ದಿನ ಕೊನೆಯ 3 ಹಾಗೂ ಪ್ರಾರಂಭದ 2 ಸರ್ಗ ಪಾರಾಯಣ ಮಾಡಬೇಕು. ‘‘ಶ್ರೀಸೀತಾಯೈನಮಃ’’ ಎಂಬುದು ಸಂಪುಟಿತ ಮಂತ್ರ ಅಥವಾ-
ಮೂಲಮ್
ರಾಮಭದ್ರ ಮಹೇಷ್ವಾಸ ರಘುವೀರ ನೃಪೋತ್ತಮ ।
ಭೋ ದಶಾಸ್ಯಾಂತಕಾಸ್ಮಾಕಂ ರಕ್ಷಾಂ ದೇಹಿ ಶ್ರಿಯಂ ಚ ತೇ ॥
ಸೂಚನಾ
ಈ ಮಂತ್ರದಿಂದಲೂ ಸಂಪುಟಿತ ಸುಂದರಕಾಂಡದ ಪಾರಾಯಣ ಮಾಡಬಹುದು.
ಭಾಗಸೂಚನಾ
ಯುದ್ಧಕಾಂಡದ ವಿನಿಯೋಗ
ಸೂಚನಾ
ಓಂ ಅಸ್ಯ ಶ್ರೀಯುದ್ಧಕಾಂಡ ಮಹಾಮಂತ್ರಸ್ಯ । ವಿಭೀಷಣ ಋಷಿಃ । ಅನುಷ್ಟುಪ್ ಛಂದಃ । ವಿಧಾತಾ ದೇವತಾ । ಬಂ ಬೀಜಮ್ । ನಮಃ ಶಕ್ತಿಃ । ವಿಧಾತೇತಿ ಕೀಲಕಮ್ । ಶ್ರೀವಿಧಾತೃಪ್ರಸಾದಸಿದ್ಧ್ಯರ್ಥೇ ಯುದ್ಧಕಾಂಡ ಪಾರಾಯಣೇ ವಿನಿಯೋಗಃ ॥ ಓಂ ವಿಭೀಷಣ ಋಷಿಯೇ ನಮಃ ಶಿರಸಿ । ಓಂ ಅನುಷ್ಟುಪ್ ಛಂದಸೇ ನಮಃ ಮುಖೇ । ಓಂ ವಿಧಾತೃದೇವತಾಯೈ ನಮಃ ಹೃದಿ । ಓಂ ಬಂ ಬೀಜಾಯ ಗುಹ್ಯೇ । ಓಂ ನಮಃ ಶಕ್ತಯೇ ನಮಃ ಪಾದಯೋಃ । ಓಂ ವಿಧಾತೇತಿ ಕೀಲಕಾಯ ನಮಃ ಸರ್ವಾಂಗೆ ॥
ಭಾಗಸೂಚನಾ
ಕರನ್ಯಾಸ
ಸೂಚನಾ
ಓಂ ವಿಧಾತ್ರೇ ನಮಃ ಅಂಗುಷ್ಠಾಭ್ಯಾಂ ನಮಃ । ಓಂ ಮಹಾದೇವಾಯ ತರ್ಜನೀಭ್ಯಾಂ ನಮಃ । ಓಂ ಭಕ್ತಾನಾಮಭಯ ಪ್ರದಾಯ ಮಧ್ಯಮಾಭ್ಯಾಂ ನಮಃ । ಓಂ ಸರ್ವದೇವಪ್ರೀತಿ ಕರಾಯ ಅನಾಮಿಕಾಭ್ಯಾಂ ನಮಃ । ಓಂ ಭಗವತ್ ಪ್ರಿಯಾಯ ಕನಿಷ್ಠಿಕಾಭ್ಯಾಂ ನಮಃ । ಓಂ ಈಶ್ವರಾಯ ಕರತಲಕರಪೃಷ್ಠಾಭ್ಯಾಂ ನಮಃ ॥
ಅನುವಾದ
ಹೀಗೆಯೇ ಹೃದಯಾದಿ ನ್ಯಾಸ ಮಾಡಿಕೊಂಡು - ಈ ಪ್ರಕಾರ ಧ್ಯಾನ ಮಾಡಬೇಕು.
ಮೂಲಮ್
ದೇವಂ ವಿಧಾತಾರಮನಂತವೀರ್ಯಂಭಕ್ತಾಭಯಂ ಶ್ರೀಪರಮಾದಿದೇವಮ್ ।
ಸರ್ವಾಮರಪ್ರೀತಿಕರಂ ಪ್ರಶಾಂತಂವಂದೇ ಸದಾ ಭೂತಪತಿಂ ಸುಭೂತಿಮ್ ॥
ವಿಧಾತಾರಂ ಮಹಾದೇವಂ ಭಕ್ತಾನಾಮಭಯಪ್ರದಮ್ ।
ಸರ್ವದೇವಪ್ರೀತಿಕರಂ ಭಗವತ್ ಪ್ರಿಯಮೀಶ್ವರಮ್ ॥
ಅನುವಾದ
ಈ ಮಂತ್ರದಿಂದ ಪಂಚೋಪಚಾರ ಪೂಜಿಸಿ, ಇದೇ ಮಂತ್ರದಿಂದ ಸಂಪುಟಿತ ಪಾರಾಯಣ ಮಾಡಬೇಕು. ಇದರಿಂದ ಶತ್ರುವಿನ ಮೇಲೆ ವಿಜಯದೊರೆತು, ಅಪ್ರತಿಷ್ಠೆ ನಾಶವಾಗುತ್ತದೆ.
ಪುನರ್ವಸು ನಕ್ಷತ್ರದಲ್ಲಿ ಪ್ರಾರಂಭಿಸಿ ಆದ್ರಾವರೆಗೆ 27 ದಿನಗಳಲ್ಲಿಯೂ ಪೂರ್ಣ ರಾಮಾಯಣದ ಪಾರಾಯಣವಿದೆ. 40 ದಿನಗಳ ಪಾರಾಯಣವೂ ಒಂದಿದೆ. ನವರಾತ್ರದಲ್ಲಿಯೂ ಇದರ ನವಾಹ್ನಪಾರಾಯಣದ ನಿಯಮವೂ ಇದೆ.
ಭಾಗಸೂಚನಾ
ಶ್ರೀರಾಮ ಕವಚ
ಸೂಚನಾ
ಓಂ ನಮೋಽಷ್ಟಾದಶತತ್ತ್ವರೂಪಾಯ ರಾಮಾಯಣ ಮಹಾಮಂತ್ರಸ್ವರೂಪಾಯ । ಮಾನಿಷಾದೇತಿ ಮೂಲಂ ಶಿರೋಽವತು । ಅನುಕ್ರಮಣಿಕಾಬೀಜಂ ಮುಖಮವತು । ಋಷ್ಯಶೃಂಗೋಪಾಖ್ಯಾನ ಮೃಷಿರ್ಜಿಹ್ವಾಮವತು । ಜಾನಕೀಲಾಭೋಽನುಷ್ಟುಪ್ ಛಂದೋಽವತು ಗಲಮ್ । ಕೇಕಯ್ಯಜ್ಞಾದೇವತಾಹೃದಯಮವತು । ಸೀತಾಲಕ್ಷ್ಮಣಾನುಗಮನ ಶ್ರೀರಾಮಹರ್ಷಾಃ ಪ್ರಮಾಣಂ ಜಠರಮವತು । ಭಗವದ್ಭಕ್ತಿಃ ಶಕ್ತಿರವತು ಮೇ ಮಧ್ಯಮಮ್ । ಶಕ್ತಿಮಾನ್ ಧರ್ಮೋಮುನೀನಾಂ ಪಾಲನಂ ಮಾಮೋರೂ ರಕ್ಷತು । ಮಾರೀಚವಚನಂ ಪ್ರತಿಪಾಲನಮವತು ಪಾದೌ । ಸುಗ್ರೀವ ಮೈತ್ರಮರ್ಥೋಽವತುಸ್ತನೌ । ನಿರ್ಣಯೋ ಹನುಮಚ್ಚೇಷ್ಟಾವತು ಬಾಹೂ । ಕರ್ತಾಸಂಪಾತಿಪಕ್ಷೋದ್ಗಮೋಽವತು ಸ್ಕಂಧೌ ಪ್ರಯೋಜನಂ ವಿಭೀಷಣರಾಜ್ಯಂ ಗ್ರೀವಾಂ ಮಮಾವತು । ರಾವಣವಧಃ ಸ್ವರೂಪಮವತು ಕರ್ಣೌ । ಸೀತೋದ್ವಾರೋ ಲಕ್ಷ್ಮಣಮವತು ನಾಸಿಕೇ । ಅಮೋಘಸ್ತವ ಸಂಸ್ತವೋಽವತು ಜೀವಾತ್ಮಾನಮ್ । ನಯಃ ಕಾಲಲಕ್ಷ್ಮಣಸಂವಾದೋಽವತುನಾಭಿಮ್ । ಆಚರಣೀಯಂ ಶ್ರೀರಾಮಾದಿಧರ್ಮಂ ಸರ್ವಾಂಗಂ ಮಮಾವತು । ಇತಿ ರಾಮಾಯಣ ಕವಚಮ್ ॥
ಅನುವಾದ
(ಬೃಹದ್ಧರ್ಮಪುರಾಣಮ್, ಪೂರ್ವಖಂಡ 25ನೆಯ ಅಧ್ಯಾಯ)