೦೨

[ಎರಡನೆಯ ಸರ್ಗ]

ಭಾಗಸೂಚನಾ

ಭಾರಪೀಡಿತ ಭೂದೇವಿಯು ಬ್ರಹ್ಮಾದಿ ದೇವತೆಗಳ ಬಳಿಗೆ ಹೋಗುವುದು ಮತ್ತು ಭಗವಂತನು ಅವರ ಪ್ರಾರ್ಥನೆಯಿಂದ ಪ್ರಕಟನಾಗಿ ಅವರಿಗೆ ಧೈರ್ಯ ಕೊಡುವುದು.

1
ಮೂಲಮ್ (ವಾಚನಮ್)

ಪಾರ್ವತ್ಯುವಾಚ

ಮೂಲಮ್

ಧನ್ಯಾಸ್ಮ್ಯನುಗೃಹೀತಾಸ್ಮಿ ಕೃತಾರ್ಥಾಸ್ಮಿ ಜಗತ್ಪ್ರಭೋ ।
ವಿಚ್ಛಿನ್ನೋಮೇಽತಿ ಸಂದೇಹ ಗ್ರಂಥಿರ್ಭವದನುಗ್ರಹಾತ್ ॥

ಅನುವಾದ

ಪಾರ್ವತಿಯು ಹೇಳಿದಳು — ಓ ಜಗದೊಡೆಯನೇ! ನಿನ್ನ ಕೃಪೆಯಿಂದ ಅನುಗ್ರಹಿತಳಾದ ನಾನು ಧನ್ಯಳೂ, ಕೃತಕೃತ್ಯಳೂ ಆಗಿರುವೆ ಹಾಗೂ ನನ್ನ ಕಠಿಣವಾದ ಹೃದಯಗ್ರಂಥಿಯು ಕಳಚಿಹೋಯಿತು.॥1॥

2
ಮೂಲಮ್

ತ್ವನ್ಮುಖಾದ್ಗಲಿತಂ ರಾಮತತ್ತ್ವಾಮೃತರಸಾಯನಮ್ ।
ಪಿಬಂತ್ಯಾ ಮೇ ಮನೋ ದೇವ ನ ತೃಪ್ಯತಿ ಭವಾಪಹಮ್ ॥

ಅನುವಾದ

ಹೇ ದೇವದೇವಾ! ನಿನ್ನಮುಖದಿಂದ ಪಕ್ವವಾಗಿ ಹೊರಟಿರುವ ಭವಭಯಹಾರಿ ರಾಮತತ್ತ್ವರೂಪೀ ಅಮೃತಮಯ ರಸಾಯನವನ್ನು ಪಾನ ಮಾಡುತ್ತ-ಮಾಡುತ್ತ ನನ್ನ ಮನಸ್ಸು ತೃಪ್ತವಾಗಿಲ್ಲ.॥2॥

3
ಮೂಲಮ್

ಶ್ರೀರಾಮಸ್ಯ ಕಥಾ ತ್ವತ್ತಃ ಶ್ರುತಾ ಸಂಕ್ಷೇಪತೋ ಮಯಾ ।
ಇದಾನೀಂ ಶ್ರೋತುಮಿಚ್ಛಾಮಿ ವಿಸ್ತರೇಣ ಸ್ಫುಟಾಕ್ಷರಮ್ ॥

ಅನುವಾದ

ನಾನು ನಿನ್ನ ಮುಖದಿಂದ ಶ್ರೀರಾಮಚಂದ್ರನ ಕಥೆಯನ್ನು ಸಂಕ್ಷೇಪವಾಗಿ ಕೇಳಿದೆ. ಈಗ ನಾನು ಅದನ್ನು ಸ್ವಷ್ಟವಾಗಿ ವಿಸ್ತಾರವಾಗಿ ಕೇಳಲು ಬಯಸುತ್ತೇನೆ.॥3॥

ಮೂಲಮ್

(ಶ್ಲೋಕ - 4)

ಮೂಲಮ್ (ವಾಚನಮ್)

ಶ್ರೀಮಹಾದೇವ ಉವಾಚ

ಮೂಲಮ್

ಶೃಣು ದೇವಿ ಪ್ರವಕ್ಷ್ಯಾಮಿ ಗುಹ್ಯಾದ್ಗುಹ್ಯತರಂ ಮಹತ್ ।
ಅಧ್ಯಾತ್ಮರಾಮಚರಿತಂ ರಾಮೇಣೋಕ್ತಂ ಪುರಾ ಮಮ ॥

ಅನುವಾದ

ಶ್ರೀಮಹಾದೇವನಿಂತೆಂದನು — ಎಲೈ ದೇವಿಯೆ! ಕೇಳು, ನಾನು ನಿನಗೆ ಗುಹ್ಯಾತಿಗುಹ್ಯವಾದ, ಮೊದಲು ಶ್ರೀರಾಮಚಂದ್ರನು ನನಗೆ ಹೇಳಿದ ಮಹಾನ್ ಅಧ್ಯಾತ್ಮ ರಾಮಾಯಣವನ್ನು ತಿಳಿಸುತ್ತೇನೆ. ॥4॥

5
ಮೂಲಮ್

ತದದ್ಯ ಕಥಯಿಷ್ಯಾಮಿ ಶೃಣು ತಾಪತ್ರಯಾಪಹಮ್ ।
ಯಚ್ಛ್ರುತ್ವಾ ಮುಚ್ಯತೇ ಜಂತುರಜ್ಞಾನೋತ್ಥಮಹಾಭಯಾತ್ ।
ಪ್ರಾಪ್ನೋತಿ ಪರಮಾಮೃದ್ಧಿಂ ದೀರ್ಘಾಯುಃ ಪುತ್ರಸಂತತಿಮ್ ॥

ಅನುವಾದ

ಈಗ ನಾನು ನಿನಗೆ ಯಾವುದನ್ನು ಕೇಳುವುದರಿಂದ ಜೀವಿಯು ಅಜ್ಞಾನಜನಿತ ಮಹಾಭಯದಿಂದ ಬಿಡುಗಡೆ ಹೊಂದುವನೋ ಹಾಗೂ ಪರಮ ಐಶ್ವರ್ಯ, ದೀರ್ಘಾಯು ಮತ್ತು ಪುತ್ರ-ಪೌತ್ರಾದಿಗಳನ್ನು ಪಡೆಯುವನೋ ಅಂತಹ ತಾಪತ್ರಯಗಳನ್ನು ಹರಿಸುವಂತಹ ಅಧ್ಯಾತ್ಮ ರಾಮಾಯಣವನ್ನು ಹೇಳುವೆನು, ಸಾವಧಾನವಾಗಿ ಕೇಳು.॥5॥

6
ಮೂಲಮ್

ಭೂಮಿರ್ಭಾರೇಣ ಮಗ್ನಾ ದಶವದನ ಮುಖಾಶೇಷ -
ರಕ್ಷೋಗಣಾನಾಂ
ಧೃತ್ವಾ ಗೋರೂಪಮಾದೌ ದಿವಿಜಮುನಿಜನೈಃ
ಸಾಕಮಬ್ಜಾಸನಸ್ಯ ।
ಗತ್ವಾ ಲೋಕಂ ರುದಂತೀ ವ್ಯಸನಮುಪಗತಂ
ಬ್ರಹ್ಮಣೇ ಪ್ರಾಹ ಸರ್ವಂ
ಬ್ರಹ್ಮಾ ಧ್ಯಾತ್ವಾ ಮುಹೂರ್ತಂ ಸಕಲಮಪಿ ಹೃದಾ
ವೇದಶೇಷಾತ್ಮಕತ್ವಾತ್ ॥

ಅನುವಾದ

ಒಂದು ಸಲ ದಶಕಂಠನೇ ಮೊದಲಾದ ರಾಕ್ಷಸರ ಭಾರದಿಂದ ದುಃಖಿತಳಾದ ಭೂದೇವಿಯು ಗೋವಿನ ರೂಪವನ್ನು ಧರಿಸಿ ದೇವತೆಗಳೂ ಹಾಗೂ ಮುನಿಜನರ ಸಹಿತ ಬ್ರಹ್ಮದೇವರ ಲೋಕಕ್ಕೆ ಹೋದಳು. ಅಲ್ಲಿಗೆ ಹೋಗಿ ಅಳುತ್ತಾ ತನಗೆ ಉಂಟಾಗಿರುವ ಎಲ್ಲ ದುಃಖವನ್ನು ಬ್ರಹ್ಮದೇವರಲ್ಲಿ ಹೇಳಿಕೊಂಡಳು. ಸೃಷ್ಟಿಕರ್ತ ಬ್ರಹ್ಮದೇವರು ಆಗ ಒಂದು ಮೂಹೂರ್ತಕಾಲ ಧ್ಯಾನಸ್ಥರಾಗಿ ತನ್ನ ಮನಸ್ಸಿನಲ್ಲಿ ಆಕೆಯ ದುಃಖ ನಿವೃತ್ತಿಯ ಉಪಾಯವನ್ನು ತಿಳಿದುಕೊಂಡರು.॥6॥

7
ಮೂಲಮ್

ತಸ್ಮಾತ್ ಕ್ಷೀರಸಮುದ್ರತೀರಮಗಮದ್
ಬ್ರಹ್ಮಾಥ ದೇವೈರ್ವೃತೋ
ದೇವ್ಯಾ ಚಾಖಿಲಲೋಕಹೃತ್ಸ್ಥಮಜರಂ
ಸರ್ವಜ್ಞಮೀಶಂ ಹರಿಮ್ ।
ಅಸ್ತೌಷೀಚ್ಛ್ರುತಿಸಿದ್ಧನಿರ್ಮಲಪದೈಃ
ಸ್ತೋತ್ರೈಃ ಪುರಾಣೋದ್ಭವೈ-
ರ್ಭಕ್ತ್ಯಾ ಗದ್ಗದಯಾ ಗಿರಾತಿವಿಮಲೈಃ
ಆನಂದ ಬಾಷ್ಪೈರ್ವೃ ತಃ ॥

ಅನುವಾದ

ಭೂದೇವಿಯ ಪ್ರಾರ್ಥನೆಯನ್ನು ಕೇಳಿ ಸಮಸ್ತ ದೇವತೆಗಳಿಂದೊಡಗೂಡಿ ಬ್ರಹ್ಮದೇವರು ಭೂದೇವಿಯನ್ನು ಜೊತೆಗೆ ಕರೆದುಕೊಂಡು ಕ್ಷೀರಸಾಗರದ ತಡಿಗೆ ಬಂದರು ಹಾಗೂ ಅಲ್ಲಿ ಅವರು ಅತ್ಯಂತ ನಿರ್ಮಲ ಆನಂದಾಶ್ರುಗಳಿಂದ ಕೂಡಿದವರಾಗಿ ಅಖಿಲಲೋಕಾಂತರ್ಯಾಮಿಯೂ, ಅಜನೂ, ಸರ್ವಜ್ಞನೂ ಆದ ಭಗವಾನ್ ಶ್ರೀಹರಿಯನ್ನು ಅತಿನಿರ್ಮಲ ಭಕ್ತಿಯಿಂದಕೂಡಿ ಗದ್ಗದಿತ ವಾಣಿಯಿಂದ ಶ್ರುತಿಸಿದ್ಧ ವಿಮಲ ಮಂತ್ರಗಳಿಂದ ಮತ್ತು ಪುರಾಣೋಕ್ತ ಸ್ತೋತ್ರಗಳಿಂದ ಸ್ತುತಿಸಿದರು.॥7॥

8
ಮೂಲಮ್

ತತಃ ಸ್ಫುರತ್ಸಹಸ್ರಾಂಶುಸಹಸ್ರಸದೃಶಪ್ರಭಃ ।
ಆವಿರಾಸೀದ್ಧರಿಃ ಪ್ರಾಚ್ಯಾಂ ದಿಶಾಂ ವ್ಯಪನಯಂಸ್ತಮಃ ॥

ಅನುವಾದ

ಅಲ್ಲಿ ಹೊಳೆಯುತ್ತಿರುವ ಸಾವಿರಾರು ಸೂರ್ಯರಿಗೆ ಸಮಾನ ವಾದ ಕಾಂತಿಯುಳ್ಳ ಶ್ರೀಹರಿಯು ತನ್ನ ತೇಜಸ್ಸಿನಿಂದ ಎಲ್ಲ ದಿಕ್ಕುಗಳ ಅಂಧಕಾರವನ್ನು ಹೋಗಲಾಡಿಸುತ್ತ ಪೂರ್ವದಿಶೆಯಲ್ಲಿ ಪ್ರಕಟನಾದನು. ॥8॥

9
ಮೂಲಮ್

ಕಥಂಚಿದ್ದೃಷ್ಟವಾನ್ಬ್ರಹ್ಮಾ ದುರ್ದರ್ಶಮಕೃತಾತ್ಮನಾಮ್ ।
ಇಂದ್ರನೀಲ ಪ್ರತೀಕಾಶಂ ಸ್ಮಿತಾಸ್ಯಂ ಪದ್ಮಲೋಚನಮ್ ॥

10
ಮೂಲಮ್

ಕಿರೀಟಹಾರಕೇಯೂರಕುಂಡಲೈಃ ಕಟಕಾದಿಭಿಃ ।
ವಿಭ್ರಾಜಮಾನಂ ಶ್ರೀವತ್ಸಕೌಸ್ತುಭಪ್ರಭಯಾನ್ವಿತಮ್ ॥

11
ಮೂಲಮ್

ಸ್ತುವದ್ಭಿಃ ಸನಕಾದ್ಯೈಶ್ಚ ಪಾರ್ಷದೈಃ ಪರಿವೇಷ್ಟಿತಮ್ ।
ಶಂಖಚಕ್ರಗದಾಪದ್ಮವನಮಾಲಾವಿರಾಜಿತಮ್ ॥

12
ಮೂಲಮ್

ಸ್ವರ್ಣಯಜ್ಞೋಪವೀತೇನ ಸ್ವರ್ಣವರ್ಣಾಂಬರೇಣ ಚ ।
ಶ್ರಿಯಾ ಭೂಮ್ಯಾ ಚ ಸಹಿತಂ ಗರುಡೋಪರಿ ಸಂಸ್ಥಿತಮ್ ॥

13
ಮೂಲಮ್

ಹರ್ಷಗದ್ಗದಯಾ ವಾಚಾ ಸ್ತೋತುಂ ಸಮುಪಚಕ್ರಮೇ ॥

ಅನುವಾದ

ಪುಣ್ಯಹೀನ ಪುರುಷರಿಗೆ ನೋಡಲು ದುಸ್ಸಾಧ್ಯನಾದ ಭಗವಾನ್ ಶ್ರೀಹರಿಯ ಅಮಿತ ತೇಜಸ್ಸಿನಿಂದಾಗಿ ಬ್ರಹ್ಮದೇವರು ಅತಿಕಷ್ಟದಿಂದ ಅವನನ್ನು ನೋಡಿದರು. ಇಂದ್ರನೀಲ ಮಣಿಯಂತೆ ಅವನ ಶ್ಯಾಮಲ ವರ್ಣವು ತೇಜೋಮಯವಾಗಿತ್ತು. ಮುಖದಲ್ಲಿ ಮಧುರ ಮಂದಸ್ಮಿತವಿತ್ತು ಮತ್ತು ಕಮಲದಂತೆ ವಿಶಾಲ ಹಾಗೂ ಮನೋಹರ ಕಣ್ಣುಗಳಿದ್ದುವು. ಅವನು ಕಿರೀಟ, ಹಾರ, ಕೇಯೂರ, ಕುಂಡಲ ಮತ್ತು ಕಂಕಣಾದಿ ಆಭೂಷಣಗಳಿಂದ ಸುಶೋಭಿತನಾಗಿ, ಶ್ರೀವತ್ಸ, ಕೌಸ್ತುಭಮಣಿಯ ಶೋಭೆಯಿಂದೊಡಗೂಡಿದ್ದನು. ಅವನನ್ನು ಸ್ತುತಿಸುತ್ತಿರುವ ಸನಕಾದಿ ಪಾರ್ಷದರು ನಾಲ್ಕೂ ಕಡೆಗಳಲ್ಲಿ ಸುತ್ತುವರಿದಿದ್ದರು. ಮತ್ತು ಅವನು ಶಂಖ, ಚಕ್ರ, ಗದೆ ಪದ್ಮ ಹಾಗೂ ವನಮಾಲೆಯಿಂದ ಅಪೂರ್ವವಾಗಿ ಶೋಭಿಸುತ್ತಿದ್ದನು. ಅವನು ಬಂಗಾರದ ಯಜ್ಞೋಪವೀತವನ್ನು ಮತ್ತು ಪೀತಾಂಬರದಿಂದ ಸುಶೋಭಿತನಾಗಿದ್ದು ಶ್ರೀಲಕ್ಷ್ಮೀದೇವಿ ಭೂದೇವಿಯರ ಸಹಿತ ಗುರುಡನ ಮೇಲೆ ವಿರಾಜಮಾನನಾಗಿದ್ದನು. ಇಂತಹ ದಿವ್ಯರೂಪವನ್ನು ಕಂಡು ಪಿತಾಮಹ ಬ್ರಹ್ಮದೇವರು ಹರ್ಷದಿಂದ ಗದ್ಗದಿತರಾಗಿ ಸುತ್ತಿಸಲು ತೊಡಗಿದರು. ॥9-13॥

14
ಮೂಲಮ್ (ವಾಚನಮ್)

ಬ್ರಹ್ಮೋವಾಚ

ಮೂಲಮ್

ನತೋಽಸ್ಮಿ ತೇ ಪದಂ ದೇವ ಪ್ರಾಣಬುದ್ಧೀಂದ್ರಿಯಾತ್ಮಭಿಃ ।
ಯಚ್ಚಿಂತ್ಯತೇ ಕರ್ಮಪಾಶಾದ್ ಹೃದಿ ನಿತ್ಯಂ ಮುಮುಕ್ಷುಭಿಃ ॥

ಅನುವಾದ

ಬ್ರಹ್ಮದೇವರು ಹೇಳಿದರು — ಓ ದೇವನೇ! ಕರ್ಮಪಾಶದಿಂದ ಮುಕ್ತರಾಗಲು ಮುಮುಕ್ಷುಗಳು ತಮ್ಮ ಪ್ರಾಣ, ಬುದ್ಧಿ, ಇಂದ್ರಿಯಗಳು ಮತ್ತು ಮನಸ್ಸಿನಿಂದ ಯಾವುದನ್ನು ಪ್ರತಿದಿನವು ಚಿಂತನೆ ಮಾಡುತ್ತಾರೋ ಅಂತಹ ನಿನ್ನ ಚರಣಾರವಿಂದಗಳಲ್ಲಿ ನಾನು ನಮಸ್ಕರಿಸುತ್ತೇನೆ. ॥14॥

15
ಮೂಲಮ್

ಮಾಯಯಾ ಗುಣಮಯ್ಯಾ ತ್ವಂ ಸೃಜಸ್ಯವಸಿ ಲುಂಪಸಿ ।
ಜಗತ್ತೇನ ನ ತೇ ಲೇಪ ಆನಂದಾನುಭವಾತ್ಮನಃ ॥

ಅನುವಾದ

ನೀನು ನಿನ್ನ ತ್ರಿಗುಣಮಯ ಮಾಯೆಯ ಆಶ್ರಯವನ್ನು ಪಡೆದುಕೊಂಡೇ ಈ ಜಗತ್ತಿನ ಉತ್ಪತ್ತಿ, ಪಾಲನೆ ಮತ್ತು ಲಯ ಮಾಡುತ್ತಿರುವೆ, ಆದರೂ ಜ್ಞಾನಾನಂದ ಸ್ವರೂಪನಾದ ನೀನು ಆ ಮಾಯೆಯಿಂದ ಅಂಟಿ ಕೊಂಡಿರುವುದಿಲ್ಲ. ॥15॥

16
ಮೂಲಮ್

ತಥಾ ಶುದ್ಧಿರ್ನ ದುಷ್ಟಾನಾಂ ದಾನಾಧ್ಯಯನಕರ್ಮಭಿಃ ।
ಶುದ್ಧಾತ್ಮತಾ ತೇ ಯಶಸಿ ಸದಾ ಭಕ್ತಿಮತಾಂ ಯಥಾ ॥

ಅನುವಾದ

ಭಗವಂತನೇ! ನಿನ್ನ ವಿಮಲ ಯಶದಲ್ಲಿ ಸದಾಕಾಲ ಪ್ರೇಮವಿರಿಸುವ ಭಕ್ತರ ಅಂತಃಕರಣವು ಶುದ್ಧವಾಗುವಂತೆ ಮಲಿನ ಅಂತಃಕರಣವುಳ್ಳ ಪರುಷರಿಗೆ ದಾನ ಮತ್ತು ಅಧ್ಯಯನ ಮೊದಲಾದ ಶುಭಕರ್ಮಗಳಿಂದಲೂ ಶುದ್ಧಿಯು ಆಗುವುದಿಲ್ಲ.॥16॥

17
ಮೂಲಮ್

ಅತಸ್ತವಾಂಘ್ರಿರ್ಮೇದೃಷ್ಟಃ ಚಿತ್ತದೋಷಾಪನುತ್ತಯೇ ।
ಸದ್ಯೋಽಂತರ್ಹೃದಯೇ ನಿತ್ಯಂ ಮುನಿಭಿಃ ಸಾತ್ವತೈರ್ವೃತಃ ॥

ಅನುವಾದ

ಆದುದರಿಂದ ಭಕ್ತ ಮುನಿಜನರು ನಿರಂತರ ತಮ್ಮ ಹೃದಯದಲ್ಲಿ ಧ್ಯಾನಿಸುವ ನಿನ್ನ ಚರಣ ಕಮಲಗಳನ್ನು ಇಂದು ನಾನು ನನ್ನ ಅಂತಃಕರಣದ ದೋಷಗಳನ್ನು ಕೂಡಲೇ ನಾಶ ಮಾಡಲಿಕ್ಕಾಗಿ ದರ್ಶನ ಮಾಡುತ್ತಿದ್ದೇನೆ. ॥17॥

18
ಮೂಲಮ್

ಬ್ರಹ್ಮಾದ್ಯೈಃ ಸ್ವಾರ್ಥಸಿದ್ಧ್ಯರ್ಥಮಸ್ಮಾಭಿಃ ಪೂರ್ವಸೇವಿತಃ ।
ಅಪರೋಕ್ಷಾನುಭೂತ್ಯರ್ಥಂ ಜ್ಞಾನಿಭಿರ್ಹೃದಿ ಭಾವಿತಃ ॥

ಅನುವಾದ

ನಿನ್ನ ಈ ಚರಣ ಕಮಲಗಳನ್ನು ಮೊದಲೂ ಕೂಡ ಬ್ರಹ್ಮನಾದ ನಾನು ದೇವತೆಗಳೊಂದಿಗೆ ನಮ್ಮ ಸ್ವಾರ್ಥಸಿದ್ಧಿಗಾಗಿ ಭಜಿಸಿದ್ದೆನು ಮತ್ತು ಜ್ಞಾನೀ ಮುನಿಜನರು ಅಪರೋಕ್ಷಾನನುಭಾವಕ್ಕಾಗಿ (ಪ್ರತ್ಯಕ್ಷದರ್ಶನಕ್ಕಾಗಿ) ತಮ್ಮ ಹೃದಯದಲ್ಲಿ ನಿರಂತರ ಧ್ಯಾನ ಮಾಡಿದ್ದಾರೆ. ॥18॥

19
ಮೂಲಮ್

ತವಾಂಘ್ರಿಪೂಜಾನಿರ್ಮಾಲ್ಯತುಲಸೀಮಾಲಯಾ ವಿಭೋ ।
ಸ್ಪರ್ಧತೇ ವಕ್ಷಸಿ ಪದಂ ಲಬ್ಧ್ವಾಪಿ ಶ್ರೀಃ ಸಪತ್ನಿವತ್ ॥

ಅನುವಾದ

ಓ ವಿಭೋ! ಲಕ್ಷ್ಮೀದೇವಿಯು ನಿನ್ನ ವಕ್ಷಃಸ್ಥಳದಲ್ಲಿ ಸ್ಥಾನವನ್ನು ಪಡೆದುಕೊಂಡರೂ ನಿನ್ನ ಚರಣ ಪೂಜೆಯ ಸಮಯದಲ್ಲಿ ಅರ್ಪಿಸಿದ ತುಲಸಿಯ ಮಾಲೆಯೊಡನೆ ಸವತಿಯಂತೆ ಸ್ಪರ್ಧಿಸುತ್ತಿದ್ದಾಳೆ. ॥19॥

20
ಮೂಲಮ್

ಅತಸ್ತ್ವತ್ಪಾದಭಕ್ತೇಷು ತವ ಭಕ್ತಿಃ ಶ್ರಿಯೋಽಧಿಕಾ ।
ಭಕ್ತಿಮೇವಾಭಿವಾಂಛಂತಿ ತ್ವದ್ಭಕ್ತಾಃ ಸಾರವೇದಿನಃ ॥

ಅನುವಾದ

ನಿನ್ನ ಚರಣ ಕಮಲಗಳಲ್ಲಿ ಪ್ರೇಮವಿರಿಸುವ ಭಕ್ತರಲ್ಲಿ ನಿನಗೆ ಲಕ್ಷೀದೇವಿಯರಿಗಿಂತಲೂ ಹೆಚ್ಚಾದ ಪ್ರೇಮವಿದೆ. ಅದಕ್ಕಾಗಿ ನಿನ್ನ ಸಾರಗ್ರಾಹೀ ಭಕ್ತರು ಕೇವಲ ನಿನ್ನ ಭಕ್ತಿಯನ್ನೇ ಇಚ್ಛಿಸುತ್ತಾರೆ. ॥20॥

21
ಮೂಲಮ್

ಅತಸ್ತ್ವತ್ಪಾದಕಮಲೇ ಭಕ್ತಿರೇವ ಸದಾಸ್ತು ಮೇ ।
ಸಂಸಾರಾಮಯತಪ್ತಾನಾಂ ಭೇಷಜಂ ಭಕ್ತಿರೇವ ತೇ ॥

ಅನುವಾದ

ದೇವದೇವಾ! ನಿನ್ನ ಚರಣ ಕಮಲಗಳಲ್ಲಿ ನನಗೆ ಭಕ್ತಿಯು ಸದಾ ಇರಲಿ; ಏಕೆಂದರೆ ಭವರೋಗಿಗಳಿಗೆ ನಿನ್ನ ಭಕ್ತಿಯೇ ಏಕಮಾತ್ರ ದಿವ್ಯ ಔಷಧವಾಗಿದೆ. ॥21॥

22
ಮೂಲಮ್

ಇತಿ ಬ್ರುವಂತಂ ಬ್ರಹ್ಮಾಣಂ ಬಭಾಷೇ ಭಗವಾನ್ ಹರಿಃ ।
ಕಿಂ ಕರೋಮೀತಿ ತಂ ವೇಧಾಃ ಪ್ರತ್ಯುವಾಚಾತಿಹರ್ಷಿತಃ ॥

ಅನುವಾದ

ಈ ಪ್ರಕಾರ ಸ್ತುತಿಸುತ್ತಿರುವ ಬ್ರಹ್ಮದೇವರಲ್ಲಿ ಭಗವಾನ್ ಶ್ರೀಹರಿಯು ಕೇಳಿದನು- ‘ನಾನು ನಿನ್ನ ಯಾವ ಕಾರ್ಯವನ್ನು ಮಾಡಲಿ?’ ಆಗ ಬ್ರಹ್ಮದೇವರು ಅತ್ಯಂತ ಪ್ರಸನ್ನರಾಗಿ ಹೇಳಿದರು. ॥22॥

23
ಮೂಲಮ್

ಭಗವನ್ ರಾವಣೋ ನಾಮ ಪೌಲಸ್ತ್ಯತನಯೋ ಮಹಾನ್ ।
ರಾಕ್ಷಸಾನಾಮಧಿಪತಿರ್ಮದ್ದತ್ತವರದರ್ಪಿತಃ ॥

ಅನುವಾದ

ಓ ಭಗವಂತನೇ! ಪುಲಸ್ತ್ಯನಂದನ ವಿಶ್ರವಸುವಿನ ಪುತ್ರನಾದ ರಾವಣನು ರಾಕ್ಷಸರ ರಾಜನಾಗಿದ್ದಾನೆ. ಅವನು ನನ್ನ ವರ ಪ್ರಭಾವದಿಂದ ಅತ್ಯಂತ ಕೊಬ್ಬಿ ಹೋಗಿರುವನು.॥23॥

24
ಮೂಲಮ್

ತ್ರಿಲೋಕೀಂ ಲೋಕಪಾಲಾಂಶ್ಚ ಬಾಧತೇ ವಿಶ್ವಬಾಧಕಃ ।
ಮಾನುಷೇಣ ಮೃತಿಸ್ತಸ್ಯ ಮಯಾ ಕಲ್ಯಾಣ ಕಲ್ಪಿತಾ ।
ಅತಸ್ತ್ವಂ ಮಾನುಷೋ ಭೂತ್ವಾ ಜಹಿ ದೇವರಿಪುಂ ಪ್ರಭೋ ॥

ಅನುವಾದ

ಅವನು ಸಮಸ್ತ ವಿಶ್ವಕ್ಕೆ ಬಾಧಕನಾಗಿ ಮೂರೂ ಲೋಕಗಳಿಗೂ, ಲೋಕಪಾಲಕರಿಗೂ ಕಂಟಕನಾಗಿದ್ದಾನೆ. ಹೇ ಕಲ್ಯಾಣ ಸ್ವರೂಪಿಯೇ! ನಾನು ಅವನ ಮೃತ್ಯುವನ್ನು ಮನುಷ್ಯನ ಕೈಯ್ಯಲ್ಲಿರಿಸಿದ್ದೇನೆ. ಅದಕ್ಕಾಗಿ ಹೇ ಪ್ರಭೋ! ನೀನು ಮನುಷ್ಯರೂಪವನ್ನು ಧರಿಸಿ ಆ ದೇವತೆಗಳ ಶತ್ರುವನ್ನು ವಧಿಸಿಬಿಡು.॥24॥

25
ಮೂಲಮ್ (ವಾಚನಮ್)

ಶ್ರೀಭಗವಾನುವಾಚ

ಮೂಲಮ್

ಕಶ್ಯಪಸ್ಯ ವರೋ ದತ್ತಸ್ತಪಸಾ ತೋಷಿತೇನ ಮೇ ॥

26
ಮೂಲಮ್

ಯಾಚಿತಃ ಪುತ್ರಭಾವಾಯ ತಥೇತ್ಯಂಗೀಕೃತಂ ಮಯಾ ।
ಸ ಇದಾನೀಂ ದಶರಥೋ ಭೂತ್ವಾ ತಿಷ್ಠತಿ ಭೂತಲೇ ॥

ಅನುವಾದ

ಶ್ರೀಭಗವಂತನು ಹೇಳಿದನು — ಹಿಂದೆ ನಾನು ಕಶ್ಯಪರ ತಪಸ್ಸಿಗೆ ಒಲಿದು ಅವರಿಗೆ ವರವನ್ನು ಕೊಟ್ಟಿದ್ದೆ. ಅವರು ತಮ್ಮಲ್ಲಿ ಪುತ್ರರೂಪದಿಂದ ಹುಟ್ಟಿಬರಲು ಪ್ರಾರ್ಥಿಸಿದ್ದರು, ಆಗ ನಾನು ‘ಹಾಗೇ ಆಗಲಿ’ ಎಂದು ಅದನ್ನು ಸ್ವೀಕರಿಸಿದ್ದೆ. ಈ ಸಮಯದಲ್ಲಿ ಅವರು ಪೃಥ್ವಿಯಲ್ಲಿ ರಾಜಾ ದಶರಥನಾಗಿ ವಿದ್ಯಮಾನರಾಗಿದ್ದಾರೆ. ॥25-26॥

27
ಮೂಲಮ್

ತಸ್ಯಾಹಂ ಪುತ್ರತಾಮೇತ್ಯ ಕೌಸಲ್ಯಾಯಾಂ ಶುಭೇ ದಿನೇ ।
ಚತುರ್ಧಾತ್ಮಾನಮೇವಾಹಂ ಸೃಜಾಮೀತರಯೋಃ ಪೃಥಕ್ ॥

ಅನುವಾದ

ಅವರಲ್ಲಿ ಪುತ್ರರೂಪದಿಂದ ಬೇರೆ-ಬೇರೆ ನಾಲ್ಕು ಅಂಶಗಳಿಂದ ನಾನು ಶುಭ ಅವಸರದಲ್ಲಿ ಕೌಸಲ್ಯೆಯ ಮತ್ತು ಬೇರೆ ಮಾತೆಯರಲ್ಲಿ ಅವತರಿಸುವೆನು. ॥27॥

28
ಮೂಲಮ್

ಯೋಗಮಾಯಾಪಿ ಸೀತೇತಿ ಜನಕಸ್ಯ ಗೃಹೇ ತದಾ ।
ಉತ್ಪತ್ಸ್ಯತೇ ತಯಾ ಸಾರ್ಧಂ ಸರ್ವಂ ಸಂಪಾದಯಾಮ್ಯಹಮ್ ।
ಇತ್ಯುಕ್ತ್ವಾಂತರ್ದಧೇ ವಿಷ್ಣುರ್ಬ್ರಹ್ಮಾ ದೇವಾನಥಾಬ್ರವೀತ್ ॥

ಅನುವಾದ

ಅದೇ ಸಮಯದಲ್ಲಿ ನನ್ನ ಯೋಗ ಮಾಯೆಯೂ ಜನಕರಾಜನ ಮನೆಯಲ್ಲಿ ಸೀತೆಯ ರೂಪದಿಂದ ಅವತರಿಸುವಳು; ಅವಳನ್ನು ಕೂಡಿಕೊಂಡು ನಾನು ನಿಮ್ಮ ಸಮಸ್ತ ಕಾರ್ಯವನ್ನು ಸಿದ್ಧಗೊಳಿಸುವೆನು ಎಂದು ಹೇಳಿ ಭಗವಾನ್ ವಿಷ್ಣುವು ಅಂತರ್ಧಾನನಾದನು; ಆಗ ಬ್ರಹ್ಮದೇವರು ದೇವತೆಗಳಿಗೆ ತಿಳಿಸುತ್ತಾರೆ. ॥28॥

29
ಮೂಲಮ್ (ವಾಚನಮ್)

ಬ್ರಹ್ಮೋವಾಚ

ಮೂಲಮ್

ವಿಷ್ಣುರ್ಮಾನುಷರೂಷೇಣ ಭವಿಷ್ಯತಿ ರಘೋಃ ಕುಲೇ ॥

30
ಮೂಲಮ್

ಯೂಯಂ ಸೃಜಧ್ವಂ ಸರ್ವೇಽಪಿ ವಾನರೇಷ್ವಂಶಸಂಭವಾನ್ ।
ವಿಷ್ಣೋಃ ಸಹಾಯಂ ಕುರುತ ಯಾವತ್ಸ್ಥಾಸ್ಯತಿ ಭೂತಲೇ ॥

ಅನುವಾದ

ಬ್ರಹ್ಮದೇವರು ಇಂತೆಂದರು — ಭಗವಾನ್ ವಿಷ್ಣುವು ರಘುಕುಲದಲ್ಲಿ ಮನುಷ್ಯರೂಪದಿಂದ ಅವತರಿಸುವನು. ನೀವೆಲ್ಲರು ತಮ್ಮ-ತಮ್ಮ ಅಂಶದಿಂದ ವಾನರವಂಶದಲ್ಲಿ ಹುಟ್ಟಿ ಭಗವಂತನು ಭೂಲೋಕದಲ್ಲಿರುವವರೆಗೆ ಅವನಿಗೆ ಸಹಾಯ ಮಾಡುತ್ತಾ ಇರಿ. ॥29-30॥

31
ಮೂಲಮ್

ಇತಿ ದೇವಾನ್ಸಮಾದಿಶ್ಯ ಸಮಾಶ್ವಾಸ್ಯ ಚ ಮೇದಿನೀಮ್ ।
ಯಯೌ ಬ್ರಹ್ಮಾ ಸ್ವಭವನಂ ವಿಜ್ವರಃ ಸುಖಮಾಸ್ಥಿತಃ ॥

ಅನುವಾದ

ಈ ಪ್ರಕಾರ ದೇವತೆಗಳಿಗೆ ಆಜ್ಞೆಯನ್ನಿತ್ತು, ಭೂದೇವಿಯನ್ನು ಸಂತೈಸಿ ಬ್ರಹ್ಮದೇವರು ತಮ್ಮ ಲೋಕಕ್ಕೆ ಹೊರಟುಹೋಗಿ ನಿಶ್ಚಿಂತರಾಗಿ ಭಗವದ್ಧ್ಯಾನ ಮಾಡುತ್ತ ನೆಮ್ಮದಿಯಾಗಿ ಇರತೊಡಗಿದರು. ॥31॥

32
ಮೂಲಮ್

ದೇವಾಶ್ಚ ಸರ್ವೇ ಹರಿರೂಪಧಾರಿಣಃ
ಸ್ಥಿತಾಃ ಸಹಾಯಾರ್ಥಮಿತಸ್ತತೋ ಹರೇಃ ।
ಮಹಾಬಲಾಃ ಪರ್ವತವೃಕ್ಷಯೋಧಿನಃ
ಪ್ರತೀಕ್ಷಮಾಣಾ ಭಗವಂತಮೀಶ್ವರಮ್ ॥

ಅನುವಾದ

ಇತ್ತ ಸಮಸ್ತ ದೇವತೆಗಳು ಪರ್ವತ ಮತ್ತು ವೃಕ್ಷಗಳಿಂದ ಯುದ್ಧಮಾಡುವ ಮಹಾ ಬಲಶಾಲಿಗಳಾದ ವಾನರರ ರೂಪವನ್ನು ಧರಿಸಿಕೊಂಡು ಭಗವಂತನ ಸಹಾಯಕ್ಕಾಗಿ ಅವನ ಪ್ರತೀಕ್ಷೆ ಮಾಡುತ್ತ ಅಲ್ಲಿ - ಇಲ್ಲಿ ಇರತೊಡಗಿದರು. ॥32॥

ಮೂಲಮ್ (ಸಮಾಪ್ತಿಃ)

ಇತಿ ಶ್ರೀಮದಧ್ಯಾತ್ಮರಾಮಾಯಣೇ ಉಮಾಮಹೇಶ್ವರ ಸಂವಾದೇ ಬಾಲಕಾಂಡೇ ದ್ವಿತೀಯಃ ಸರ್ಗಃ ॥2॥
ಉಮಾಮಹೇಶ್ವರ ಸಂವಾದರೂಪೀ ಶ್ರೀಅಧ್ಯಾತ್ಮರಾಮಾಯಣದ ಬಾಲಕಾಂಡದಲ್ಲಿ ಎರಡನೆಯ ಸರ್ಗವು ಮುಗಿಯಿತು.