೦೨ ಮಾಹಾತ್ಮ್ಯೆ

ಮೂಲಮ್

ರಾಮಂ ವಿಶ್ವಮಯಂ ವಂದೇ ರಾಮಂ ವಂದೇ ರಘೂದ್ವಹಮ್ ।ರಾಮಂ ವಿಪ್ರವರಂ ವಂದೇ ರಾಮಂ ಶ್ಯಾಮಾಗ್ರಜಂ ಭಜೇ ॥
ಯಸ್ಯ ವಾಗಂಶುತಶ್ಚ್ಯೂತಂ ರಮ್ಯಂ ರಾಮಾಯಣಾಮೃತಮ್ ।ಶೈಲಜಾಸೇವಿತಂ ವಂದೇ ತಂ ಶಿವಂ ಸೋಮರೂಪಿಣಮ್ ॥

Misc Detail
ಮೂಲಮ್

ಸಚ್ಚಿದಾನಂದಸಂದೋಹಂ ಭಕ್ತಿಭೂತಿವಿಭೂಷಣಮ್ ।ಪೂರ್ಣಾನಂದಮಹಂ ವಂದೇ ಸದ್ಗುರುಂ ಶಂಕರಂ ಸ್ವಯಮ್ ॥
ಅಜ್ಞಾನಧ್ವಾಂತಸಂಹರ್ತ್ರೀ ಜ್ಞಾನಾಲೋಕವಿಲಾಸಿನೀ ।ಚಂದ್ರಚೂಡವಚಶ್ಚಂದ್ರಚಂದ್ರಿಕೇಯಂ ವಿರಾಜತೇ ॥
ಅಪ್ರಮೇಯ ತ್ರಯಾತೀತ ನಿರ್ಮಲಜ್ಞಾನಮೂರ್ತಯೇ ।
ಮನೋಗಿರಾಂ ವಿದೂರಾಯ ದಕ್ಷಿಣಾಮೂರ್ತಯೇ ನಮಃ ॥1॥

ಅನುವಾದ

ಪ್ರತ್ಯಕ್ಷಾದಿಪ್ರಮಾಣಗಳಿಂದಅತೀತನೂ,ಗುಣಾತೀತನೂ, ನಿರ್ಮಲನೂ, ಜ್ಞಾನಸ್ವರೂಪನೂ ಮತ್ತು ಮನಸ್ಸು, ಮಾತು ಮೊದಲಾದವುಗಳಿಗೆ ವಿಷಯನಲ್ಲದ ಆ ದಕ್ಷಿಣಾಮೂರ್ತಿ ಭಗವಾನ್ ಸದಾಶಿವನಿಗೆ ನಮಸ್ಕಾರವು.॥1॥

ಮೂಲಮ್ (ವಾಚನಮ್)

ಸೂತ ಉವಾಚ

ಮೂಲಮ್

ಕದಾಚಿನ್ನಾರದೋ ಯೋಗೀ ಪರಾನುಗ್ರಹವಾಂಛಯಾ ।
ಪರ್ಯಟನ್ ಸಕಲಾಂಲ್ಲೋಕಾನ್ ಸತ್ಯಲೋಕಮುಪಾಗಮತ್ ॥2॥

ಅನುವಾದ

ಸೂತಪುರಾಣಿಕರುಹೇಳುತ್ತಾರೆ-ಯೋಗಿರಾಜನಾರದರು ಲೋಕದ ಜನರ ಮೇಲೆ ಕೃಪೆಗೈಯಲು ಸಮಸ್ತ ಲೋಕಗಳಲ್ಲಿ ವಿಚರಿಸುತ್ತ ಒಮ್ಮೆ ಸತ್ಯಲೋಕಕ್ಕೆ ಬಂದರು. ॥2॥

ಮೂಲಮ್

ತತ್ರ ದೃಷ್ಟ್ವಾ ಮೂರ್ತಿಮದ್ಭಿಚ್ಛಂದೋಭಿಃ ಪರಿವೇಷ್ಟಿತಮ್ ।
ಬಾಲಾರ್ಕಪ್ರಭಯಾ ಸಮ್ಯಗ್ಭಾಸಯಂತಂ ಸಭಾಗೃಹಮ್ ॥3॥
ಮಾರ್ಕಂಡೇಯಾದಿಮುನಿಭಿಃ ಸ್ತೂಯಮಾನಂ ಮುಹುರ್ಮುಹುಃ ।
ಸರ್ವಾರ್ಥಗೊಚರಜ್ಞಾನಂ ಸರಸ್ವತ್ಯಾ ಸಮನ್ವಿತಮ್ ॥4॥
ಚತುರ್ಮುಖಂ ಜಗನ್ನಾಥಂ ಭಕ್ತಾಭೀಷ್ಟಫಲಪ್ರದಮ್ ।
ಪ್ರಣಮ್ಯ ದಂಡವದ್ಭಕ್ತ್ಯಾ ತುಷ್ಟಾವ ಮುನಿಪುಂಗವಃ ॥5॥

ಅನುವಾದ

ಅಲ್ಲಿ ಮೂರ್ತಿಮಂತ ವೇದಗಳಿಂದ ಸುತ್ತುವರಿದುಕೊಂಡಿರುವ, ಬಾಲ ಸೂರ್ಯನಂತೆ ತನ್ನ ಪ್ರಭೆಯಿಂದ ಸಭಾಭವನವನ್ನು ಪೂರ್ಣವಾಗಿ ಬೆಳಗಿಸುತ್ತಾ, ಮಾರ್ಕಂಡೇಯಾದಿ ಮುನಿಗಳಿಂದ ಬಾರಿ-ಬಾರಿಗೂ ಸ್ತುತಿಸಲ್ಪಡುತ್ತ, ಸಂಪೂರ್ಣ ಪದಾರ್ಥಗಳ ಜ್ಞಾನವುಳ್ಳ ಮತ್ತು ಭಕ್ತರಿಗೆ ಬಯಸಿದ ಫಲವನ್ನು ಕರುಣಿಸುವ, ಸರಸ್ವತಿಯಿಂದೊಡಗೂಡಿದ ಜಗತ್ಪತಿ ಬ್ರಹ್ಮದೇವರನ್ನು ನೋಡಿ ಮುನಿಶ್ರೇಷ್ಠ ನಾರದರು ಅವರಿಗೆ ಸಾಷ್ಟಾಂಗ ಪ್ರಣಾಮಗೈದು ಭಕ್ತಿಭಾವದಿಂದ ಸ್ತುತಿಸಿದರು. ॥3-5॥

ಮೂಲಮ್

ಸಂತುಷ್ಟಸ್ತಂ ಮುನಿಂ ಪ್ರಾಹ ಸ್ವಯಂಭೂರ್ವೈಷ್ಣವೋತ್ತಮ್ ।
ಕಿಂ ಪ್ರಷ್ಟುಕಾಮಸ್ತ್ವಮಸಿ ತದ್ವದಿಷ್ಯಾಮಿ ತೇ ಮುನೇ ॥6॥

ಅನುವಾದ

ಆಗ ಸ್ವಯಂಭೂ ಬ್ರಹ್ಮದೇವರು ಪ್ರಸನ್ನರಾಗಿ ವೈಷ್ಣವಾಗ್ರಣೀ ಶ್ರೀನಾರದರಲ್ಲಿ ಹೇಳಿದರು- ಮುನಿಯೇ! ನೀನು ಏನ್ನನ್ನು ಕೇಳಲು ಬಯಸುತ್ತಿಯೇ? ನಾನು ನಿನ್ನಲ್ಲಿ ಅದೆಲ್ಲವನ್ನು ಹೇಳುವೆನು.॥6॥

ಮೂಲಮ್

ಇತ್ಯಾಕರ್ಣ್ಯ ವಚಸ್ತಸ್ಯ ಮುನಿರ್ಬ್ರಹ್ಮಾಣಮಬ್ರವೀತ್ ।
ತ್ವತ್ತಃ ಶ್ರುತಂ ಮಯಾ ಸರ್ವಂ ಪೂರ್ವಮೇವ ಶುಭಾಶುಭಮ್ ॥7॥
ಇದಾನೀಮೇಕಮೇವಾಸ್ತಿ ಶ್ರೋತವ್ಯಂ ಸುರಸುತ್ತಮ ॥
ತದ್ರಹಸ್ಯಮಪಿ ಬ್ರೂಹಿ ಯದಿ ತೇಽನುಗ್ರಹೋ ಮಯಿ ॥8॥

ಅನುವಾದ

ಬ್ರಹ್ಮದೇವರ ವಚನಗಳನ್ನು ಕೇಳಿಕೊಂಡು ನಾರದರು ಅವರಲ್ಲಿ ಹೇಳಿದರು-ಹೇ ದೇವ ಶ್ರೇಷ್ಠ! ಶುಭಾ-ಶುಭ ಕರ್ಮಗಳ ವರ್ಣನೆಯಾದರೋ ನಾನು ನಿಮ್ಮಿಂದ ಮೊದಲೇ ಕೇಳಿಕೊಂಡಿದ್ದೇನೆ. ಈಗ ನನಗೆ ಒಂದು ಮಾತನ್ನು ಇನ್ನೂ ಕೇಳುವುದಿದೆ; ಒಂದು ವೇಳೆ ನನ್ನ ಮೇಲೆ ನಿಮ್ಮ ಕೃಪೆ ಇರುವುದಾದರೆ ಗೋಪನೀಯವಾದ್ದರೂ ಅದನ್ನು ಹೇಳಿರಿ. ॥7-8॥

ಮೂಲಮ್

ಪ್ರಾಪ್ತೇ ಕಲಿಯುಗೇ ಘೋರೇ ನರಾಃ ಪುಣ್ಯವಿವರ್ಜಿತಾಃ ।
ದುರಾಚಾರರತಾಃ ಸರ್ವೇ ಸತ್ಯವಾರ್ತಾಪರಾಙ್ಮುಖಾಃ ॥9॥

ಅನುವಾದ

ಮುಂದೆ ಘೋರ ಕಲಿಯುಗವು ಬಂದಾಗ ಮನುಷ್ಯರು ಪುಣ್ಯ ಕರ್ಮಗಳನ್ನು ಬಿಟ್ಟು, ಸತ್ಯ ಭಾಷಣದಿಂದ ವಿಮುಖರಾಗಿ ದುರಾಚಾರಗಳಲ್ಲಿ ಪ್ರವೃತ್ತರಾಗುವರು.॥9॥

ಮೂಲಮ್

ಪರಾಪವಾದನಿರತಾಃ ಪರದ್ರವ್ಯಾಭಿಲಾಷಿಣಃ ।
ಪರಸ್ತ್ರೀಸಕ್ತಮನಸಃ ಪರಹಿಂಸಾಪರಾಯಣಾಃ ॥10॥

ಅನುವಾದ

ಅವರು ಬೇರೆಯವರ ನಿಂದೆಯಲ್ಲೇ ತತ್ಪರರಾಗುವರು, ಬೇರೆಯವರ ಧನವನ್ನು ಇಚ್ಛಿಸುವರು, ಪರಸ್ತ್ರೀಯರಲ್ಲೇ ಮನಸ್ಸನ್ನಿಡುವರು ಮತ್ತು ಪರರಿಗೆ ಹಿಂಸೆ ಮಾಡುವರು.॥10॥

ಮೂಲಮ್

ದೇಹಾತ್ಮದೃಷ್ಟಯೋ ಮೂಢಾ ನಾಸ್ತಿಕಾಃ ಪಶುಬುದ್ಧಯಃ ।
ಮಾತಾಪಿತೃಕೃತದ್ವೇಷಾಃ ಸ್ತ್ರೀದೇವಾಃ ಕಾಮಕಿಂಕರಾಃ ॥11॥

ಅನುವಾದ

ಆ ಮೂಢರು ದೇಹದಲ್ಲೇ ಆತ್ಮಬುದ್ಧಿಯುಳ್ಳವರಾಗಿ, ನಾಸ್ತಿಕರಾದಾರು; ಅವರ ಬುದ್ಧಿಯು ಪಶುಬುದ್ಧಿಯಂತೆ ಆಗುವುದು ಮತ್ತು ಅವರು ಕಾಮಕ್ಕೆ ಗುಲಾಮರಾಗಿ ಹೆಂಡತಿಯ ಭಕ್ತರಾಗಿ, ತಂದೆ-ತಾಯಿಗೆ ದ್ರೋಹಿಗಳಾಗುವರು.॥11॥

ಮೂಲಮ್

ವಿಪ್ರಾ ಲೊಭಗ್ರಹಗ್ರಸ್ತಾ ವೇದವಿಕ್ರಯಜೀವಿನಃ ।
ಧನಾರ್ಜನಾರ್ಥಮಭ್ಯಸ್ತವಿದ್ಯಾ ಮದವಿಮೋಹಿತಾಃ ॥12॥
ತ್ಯಕ್ತಸ್ವಜಾತಿಕರ್ಮಾಣಃ ಪ್ರಾಯಶಃ ಪರವಂಚಕಾಃ ।
ಕ್ಷತ್ರಿಯಾಶ್ಚ ತಥಾ ವೈಶ್ಯಾಃ ಸ್ವಧರ್ಮತ್ಯಾಗಶೀಲಿನಃ ॥13॥
ತದ್ವಚ್ಛೂದ್ರಾಶ್ಚ ಯೇ ಕೇಚಿದ್ ಬ್ರಾಹ್ಮಣಾಚಾರತತ್ಪರಾಃ ।
ಸ್ತ್ರಿಯಶ್ಚ ಪ್ರಾಯಶೋ ಭ್ರಷ್ಟಾ ಭರ್ತ್ರವಜ್ಞಾನನಿರ್ಭಯಾಃ ॥14॥
ಶ್ವಶುರದ್ರೋಹಕಾರಿಣ್ಯೋ ಭವಿಷ್ಯಂತಿ ನ ಸಂಶಯಃ ।
ಏತೇಷಾಂ ನಷ್ಟಬುದ್ಧೀನಾಂ ಪರಲೊಕಃ ಕಥಂ ಭವೇತ್ ॥15॥
ಇತಿ ಚಿಂತಾಕುಲಂ ಚಿತ್ತಂ ಜಾಯತೇ ಮಮ ಸಂತತಮ್ ।
ಲಘೂಪಾಯೇನ ಯೇನೈಷಾಂ ಪರಲೊಕಗತಿರ್ಭವೇತ್ ।
ತಮುಪಾಯಮುಪಾಖ್ಯಾಹಿ ಸರ್ವಂ ವೇತ್ತಿ ಯತೋ ಭವಾನ್ ॥16॥

ಅನುವಾದ

ಬ್ರಾಹ್ಮಣರು ಲೋಭರೂಪೀ ಗ್ರಹದಿಂದ ಗ್ರಸ್ತರಾಗಿ ವೇದವನ್ನು ಮಾರಿ ತನ್ನ ಜೀವನವನ್ನು ನಡೆಸುವರು. ಅವರು ಧನೋಪಾರ್ಜನೆಗಾಗಿ ವಿದ್ಯಾಭ್ಯಾಸ ಮಾಡುವರು ಮತ್ತು ವಿದ್ಯೆ ಮತ್ತು ಬ್ರಾಹ್ಮಣತ್ವದ ಮದದಿಂದ ಉನ್ಮತ್ತರಾಗುವರು. ಕ್ಷತ್ರಿಯರು ಮತ್ತು ವೈಶ್ಯರೂ ಕೂಡ ಸ್ವಧರ್ಮವನ್ನು ತ್ಯಜಿಸುವವರಾಗಿ, ತಮ್ಮ ಜಾತಿ ಕರ್ಮಗಳನ್ನು ಬಿಟ್ಟು ಪ್ರಾಯಶಃ ಬೇರೆಯವರಿಗೆ ಮೋಸ ಮಾಡುವರು. ಇದೇ ಪ್ರಕಾರ ಶೂದ್ರರೂ ಕೂಡ ಬ್ರಾಹ್ಮಣರ ಆಚಾರದಲ್ಲಿ ತೊಡಗುವರು ಹಾಗೂ ಸ್ತ್ರೀಯರು ಪ್ರಾಯಶಃ ಭ್ರಷ್ಟಾಚಾರಿಣಿಗಳಾಗಿ, ತಮ್ಮ ಪತಿಯ ಅಪಮಾನ ಮಾಡುವುದರಲ್ಲಿ ನಿರ್ಭಯರಾಗುವರು. ಅವರು ನಿಸ್ಸಂದೇಹವಾಗಿ ತಮ್ಮ ಅತ್ತೆ-ಮಾವಂದಿರನ್ನು ದ್ವೇಷಿಸುವರು. ಈ ನಷ್ಟ ಬುದ್ಧಿಯವರ ಪರಲೋಕವು ಯಾವ ಪ್ರಕಾರದಿಂದ ಸುಧಾರಿಸೀತು? ಈ ಚಿಂತೆಯಿಂದ ನನ್ನ ಮನಸ್ಸು ನಿರಂತರ ವ್ಯಾಕುಲವಾಗುತ್ತಾ ಇದೆ. ಇದೆಲ್ಲವನ್ನು ಬಲ್ಲವರಾದ ನೀವು ಸುಗಮ ಉಪಾಯದಿಂದ ಇವರ ಪರಲೋಕವು ಸುಧಾರಿಸುವಂತೆ ನನಗೆ ತಿಳಿಸಿರಿ. ॥12-16॥

ಮೂಲಮ್

ಇತ್ಯೃಷೇರ್ವಾಕ್ಯಮಾಕರ್ಣ್ಯ ಪ್ರತ್ಯುವಾಚಾಂಬುಜಾಸನಃ ।
ಸಾಧು ಪೃಷ್ಟಂ ತ್ವಯಾ ಸಾಧೋ ವಕ್ಷ್ಯೇ ತಚ್ಛ್ರುಣು ಸಾದರಮ್ ॥17॥

ಅನುವಾದ

ದೇವಋರ್ಷಿಗಳ ಈ ಮಾತುಗಳನ್ನು ಕೇಳಿ ಕಮಲಾಸನ ಬ್ರಹ್ಮದೇವರು ಹೇಳಿದರು - ಎಲೈ ಸಾಧುವೆ! ನೀನು ತುಂಬಾ ಒಳ್ಳೆಯ ಮಾತನ್ನು ಕೇಳಿರುವೆ. ನಾನು ಅದನ್ನು ತಿಳಿಸುತ್ತೇನೆ, ನೀನು ಶ್ರದ್ಧಾಪೂರ್ವಕ ಕೇಳು ॥17॥

ಮೂಲಮ್

ಪುರಾ ತ್ರಿಪುರಹಂತಾರಂ ಪಾರ್ವತೀ ಭಕ್ತವತ್ಸಲಾ ।
ಶ್ರೀರಾಮತತ್ತ್ವಂ ಜಿಜ್ಞಾಸುಃ ಪಪ್ರಚ್ಛ ವಿನಯಾನ್ವಿತಾ ॥18॥

ಅನುವಾದ

ಹಿಂದಿನ ಕಾಲದಲ್ಲಿ ಭಕ್ತವತ್ಸಲೆಯಾದ ಪಾರ್ವತಿಯು ಶ್ರೀರಾಮತತ್ತ್ವದ ಜಿಜ್ಞಾಸೆಯಿಂದ ತ್ರಿಪುರನಾಶಕ ಭಗವಾನ್ ಶಂಕರನಲ್ಲಿ ವಿನಯ ಪೂರ್ವಕವಾಗಿ ಇದೇ ಪ್ರಶ್ನೆಯನ್ನು ಮಾಡಿದ್ದಳು. ॥18॥

ಮೂಲಮ್

ಪ್ರಿಯಾಯೈ ಗಿರಿಶಸ್ತಸ್ತೈ ಗೂಢಂ ವ್ಯಾಖ್ಯಾತವಾನ್ ಸ್ವಯಮ್ ।
ಪುರಾಣೋತ್ತಮಮಧ್ಯಾತ್ಮರಾಮಾಯಣಮಿತಿ ಸ್ಮೃತಮ್ ॥19॥
ತತ್ಪಾರ್ವತೀ ಜಗದ್ಧಾತ್ರೀ ಪೂಜಯಿತ್ವಾ ದಿವಾನಿಶಮ್ ।
ಆಲೋಚಯಂತೀ ಸ್ವಾನಂದಮಗ್ನಾ ತಿಷ್ಠತಿ ಸಾಂಪ್ರತಮ್ ॥20॥

ಅನುವಾದ

ಆಗ ತನ್ನ ಪ್ರಿಯತಮೆಗೆ ಶ್ರೀಮಹಾದೇವನು ಯಾವ ಗೂಢ ರಹಸ್ಯವನ್ನು ವರ್ಣಿಸಿದ್ದನೋ, ಆ ಉತ್ತಮ ಪುರಾಣವು ಅಧ್ಯಾತ್ಮ ರಾಮಾಯಣದ ಹೆಸರಿನಿಂದ ಪ್ರಸಿದ್ಧವಾಯಿತು. ಅಂದಿನಿಂದ ಜಗಜ್ಜನನೀ ಪಾರ್ವತಿಯು ಅದನ್ನು ಪೂಜಿಸುತ್ತ ಹಗಲು-ರಾತ್ರಿ ಅದನ್ನೇ ಮನನ ಮಾಡುತ್ತ ನಿರಂತರ ಆತ್ಮಾನಂದದಲ್ಲಿ ಮಗ್ನಳಾಗಿರುತ್ತಾಳೆ. ॥19-20॥

ಮೂಲಮ್

ಪ್ರಚರಿಷ್ಯತಿ ತಲ್ಲೋಕೇ ಪ್ರಾಣ್ಯದೃಷ್ಟವಶಾದ್ಯದಾ ।
ತಸ್ಯಾಧ್ಯಯನಮಾತ್ರೇಣ ಜನಾ ಯಾಸ್ಯಂತಿ ಸದ್ಗತಿಮ್ ॥21॥

ಅನುವಾದ

ಪ್ರಾಣಿಗಳ ಸೌಭಾಗ್ಯದಿಂದ ಜಗತ್ತಿನಲ್ಲಿ ಅದರ ಪ್ರಚಾರವಾಗುವಾಗ ಅದರ ಅಧ್ಯಯನ ಮಾತ್ರದಿಂದಲೇ ಜನರು ಶುಭ ಗತಿಯನ್ನು ಪಡೆಯುವರು.॥21॥

ಮೂಲಮ್

ತಾವದ್ವಿಜೃಂಭತೇ ಪಾಪಂ ಬ್ರಹ್ಮಹತ್ಯಾಪುರಃಸರಮ್ ।
ಯಾವಜ್ಜಗತಿ ನಾಧ್ಯಾತ್ಮರಾಮಾಯಣಮುದೇಷ್ಯತಿ ॥22॥

ಅನುವಾದ

ಪ್ರಪಂಚದಲ್ಲಿ ಅಧ್ಯಾತ್ಮರಾಮಾಯಣದ ಪ್ರಾದುರ್ಭಾವ ಆಗುವವರೆಗೆ ಬ್ರಹ್ಮಹತ್ಯಾದಿ ಪಾಪಗಳು ನೆಲೆಯಾಗಿರುವವು.॥22॥

ಮೂಲಮ್

ತಾವತ್ಕಲಿಮಹೋತ್ಸಾಹೋ ನಿಃಶಂಕಂ ಸಂಪ್ರವರ್ತತೇ ।
ಯಾವಜ್ಜಗತಿ ನಾಧಾತ್ಮರಾಮಾಯಣಮುದೇಷ್ಯತಿ ॥23॥

ಅನುವಾದ

ಜಗತ್ತಿನಲ್ಲಿ ಅಧ್ಯಾತ್ಮ ರಾಮಾಯಣದ ಉದಯವಾಗುವವರೆಗೆ ಕಲಿಯುಗದ ಮಹಾನ್ ಉತ್ಸಾಹವು ನಿರಂಕುಶವಾಗಿ ಇರುವುದು. ॥23॥

ಮೂಲಮ್

ತಾವದ್ಯಮಭಟಾಃ ಶೂರಾಃ ಸಂಚರಿಷ್ಯಂತಿ ನಿರ್ಭಯಾಃ ।
ಯಾವಜ್ಜಗತಿ ನಾಧ್ಯಾತ್ಮರಾಮಾಯಣಮುದೇಷ್ಯತೇ ॥24॥

ಅನುವಾದ

ಭೂತಲದಲ್ಲಿ ಅಧ್ಯಾತ್ಮ ರಾಮಾಯಣವು ಪ್ರಕಟವಾಗುವವರೆಗೆ ಯಮರಾಜನ ಶೂರ-ವೀರ ದೂತರು ನಿರ್ಭಯರಾಗಿ ಸಂಚರಿಸುತ್ತಿರುವರು. ॥24॥

ಮೂಲಮ್

ತಾವತ್ಸರ್ವಾಣಿ ಶಾಸ್ತ್ರಾಣಿ ವಿವದಂತೇ ಪರಸ್ಪರಮ್ ॥25॥
ತಾವತ್ಸ್ವರೂಪಂ ರಾಮಸ್ಯ ದುರ್ಬೊಧಂ ಮಹತಾಮಪಿ ।
ಯಾವಜ್ಜಗತಿ ನಾಧ್ಯಾತ್ಮರಾಮಾಯಣಮುದೇಷ್ಯತಿ ॥26॥

ಅನುವಾದ

ಭೂಲೋಕದಲ್ಲಿ ಅಧ್ಯಾತ್ಮರಾಮಾಯಣದ ಪ್ರಕಾಶ ಉಂಟಾಗುವವರೆಗೆ ಸಂಪೂರ್ಣ ಶಾಸಗಳಲ್ಲಿ ಪರಸ್ಪರ ವಿವಾದ ಉಳಿದೀತು ಮತ್ತು ಮಹಾ ಪುರುಷರಿಗೂ ಕೂಡ ಭಗವಾನ್ ಶ್ರೀರಾಮನ ಸ್ವರೂಪದ ಜ್ಞಾನ ಉಂಟಾಗಲಾರದು. ॥25 -26॥

ಮೂಲಮ್

ಅಧ್ಯಾತ್ಮರಾಮಾಣಯಸಂಕೀರ್ತನಶ್ರವಣಾದಿಜಮ್ ।
ಫಲಂ ವಕ್ತುಂ ನ ಶಕ್ನೋಮಿ ಕಾರ್ತನ್ಸ್ಯೇನ ಮುನಿಸತ್ತಮ ॥27॥
ತಥಾಪಿ ತಸ್ಯ ಮಾಹಾತ್ಮ್ಯಂ ವಕ್ಷ್ಯೇ ಕಿಂಚಿತ್ತವಾನಘ ।
ಶ್ರುಣು ಚಿತ್ತಂ ಸಮಾಧಾಯ ಶಿವೇನೋಕ್ತಂ ಪುರಾ ಮಮ ॥28॥

ಅನುವಾದ

ಹೇ ಮುನಿಶ್ರೇಷ್ಠನೇ! ಅಧ್ಯಾತ್ಮರಾಮಾಯಣದ ಕೀರ್ತನ, ಶ್ರವಣಾದಿಗಳಿಂದ ಉಂಟಾಗುವ ಫಲದ ಪೂರ್ಣ ವರ್ಣನೆ ಮಾಡಲು ನನ್ನಿಂದ ಸಾಧ್ಯವಾಗದು. ಆದರೂ ಪುಣ್ಯಾತ್ಮನೇ! ನಾನು ನಿನಗೆ ಅದರ ಸ್ವಲ್ಪ ಮಾಹಾತ್ಮ್ಯವನ್ನು ಹೇಳುವೆನು. ಇದನ್ನು ಹಿಂದೆ ಶಿವನು ನನಗೆ ಹೇಳಿದ್ದನು. ನೀನು ಎಚ್ಚರವಾಗಿ ಕೇಳು. ॥27-28॥

ಮೂಲಮ್

ಅಧ್ಯಾತ್ಮರಾಮಾಯಣತಃ ಶ್ಲೋಕಂ ಶ್ಲೋಕಾರ್ಧಮೇವ ವಾ ।
ಯಃ ಪಠೇದ್ಭಕ್ತಿಸಂಯುಕ್ತಃ ಸ ಪಾಪಾನ್ಮುಚ್ಯತೇ ಕ್ಷಣಾತ್ ॥29॥

ಅನುವಾದ

ಅಧ್ಯಾತ್ಮ ರಾಮಾಯಣದ ಒಂದು ಅಥವಾ ಅರ್ಧ ಶ್ಲೋಕವನ್ನು ಕೂಡ ಭಕ್ತಿಪೂರ್ವಕ ಪಠಿಸುವವನು ತತ್ ಕ್ಷಣ ಪಾಪದಿಂದ ಮುಕ್ತನಾಗಿ ಹೋಗುತ್ತಾನೆ.॥29॥

ಮೂಲಮ್

ಯಸ್ತು ಪ್ರತ್ಯಹಮಧ್ಯಾತ್ಮರಾಮಾಯಣಮನನ್ಯಧೀಃ ।
ಯಥಾಶಕ್ತಿ ವದೇದ್ಭಕ್ತ್ಯಾ ಸ ಜೀವನ್ಮುಕ್ತ ಉಚ್ಯತೇ ॥30॥

ಅನುವಾದ

ಈ ಅಧ್ಯಾತ್ಮ ರಾಮಾಯಣವನ್ನು ಪ್ರತಿದಿನ ಅನನ್ಯ ಬುದ್ಧಿಯಿಂದ, ಭಕ್ತಿ ಪೂರ್ವಕ ಯಥಾಶಕ್ತಿ ಕೇಳುವವನು ಜೀವನ್ಮುಕ್ತನೇ ಆಗುವನು.॥ 30॥

ಮೂಲಮ್

ಯೋ ಭಕ್ತ್ಯಾರ್ಚಯತೇಽಧ್ಯಾತ್ಮರಾಮಾಯಣಮತಂದ್ರಿತಃ ।
ದಿನೇ ದಿನೇಽಶ್ವಮೇಧಸ್ಯ ಫಲಂ ತಸ್ಯ ಭವೇನ್ಮುನೇ ॥31॥

ಅನುವಾದ

ಹೇ ಮುನಿಯೇ! ಆಲಸ್ಯವನ್ನು ಬಿಟ್ಟು ಭಕ್ತಿಭಾವದಿಂದ ದಿನನಿತ್ಯ ಅಧ್ಯಾತ್ಮ ರಾಮಾಯಣದ ಪೂಜೆ ಮಾಡುವವನಿಗೆ ಅಶ್ವಮೇಧ ಯಜ್ಞದ ಫಲವು ಸಿಗುತ್ತದೆ.॥31॥

ಮೂಲಮ್

ಯದೃಚ್ಛಯಾಪಿ ಯೋಽಧ್ಯಾತ್ಮರಾಮಾಯಣಂ ಅನಾದರಾತ್ ।
ಅನ್ಯತಃ ಶೃಣುಯಾನ್ಮರ್ತ್ಯಃ ಸೋಽಪಿ ಮುಚ್ಯೇತ ಪಾತಕಾತ್ ॥32॥

ಅನುವಾದ

ಶ್ರದ್ಧಾ-ಭಕ್ತಿ ಇಲ್ಲದೆ, ಆಕಸ್ಮಿಕವಾಗಿ ಅಧ್ಯಾತ್ಮರಾಮಾಯಣದ ಶ್ರವಣಮಾಡಿದವನೂ ಕೂಡ ಪಾತಕಗಳಿಂದ ಬಿಡುಗಡೆ ಹೊಂದುತ್ತಾನೆ.॥32॥

ಮೂಲಮ್

ನಮಸ್ಕರೋತಿ ಯೋಽಧ್ಯಾತ್ಮರಾಮಾಯಣಮದೂರತಃ ।
ಸರ್ವದೇವಾರ್ಚನ ಫಲಂ ಸ ಪ್ರಾಪ್ನೋತಿ ನ ಸಂಶಯಃ ॥33॥

ಅನುವಾದ

ಅಧ್ಯಾತ್ಮರಾಮಾಯಣದ ಬಳಿಗೆ ಹೋಗಿ ಅದಕ್ಕೆ ನಮಸ್ಕಾರ ಮಾಡುವವನು ಸಮಸ್ತ ದೇವತೆಗಳ ಪೂಜೆಯ ಫಲವನ್ನು ಪಡೆಯುತ್ತಾನೆ. ಇದರಲ್ಲಿ ಸಂದೇಹವೇ ಇಲ್ಲ.॥33॥

ಮೂಲಮ್

ಲಿಖಿತ್ವಾ ಪುಸ್ತಕೇಽಧ್ಯಾತ್ಮರಾಮಾಯಣಮಶೇಷತಃ ।
ಯೋ ದದ್ಯಾದ್ರಾಮಭಕ್ತೇಭ್ಯಸ್ತಸ್ಯ ಪುಣ್ಯಫಲಂ ಶ್ರುಣು ॥34॥

ಅನುವಾದ

ಅಧ್ಯಾತ್ಮರಾಮಾಯಣದ ಪುಸ್ತಕವನ್ನು ಸಂಪೂರ್ಣವಾಗಿ ಬರೆದು ರಾಮ ಭಕ್ತರಿಗೆ ಹಂಚುವವನಿಗೆ ದೊರೆಯುವ ಪುಣ್ಯದ ಫಲವನ್ನು ಕೇಳು. ॥34॥

ಮೂಲಮ್

ಅಧೀತೇಷು ಚ ವೇದೇಷು ಶಾಸ್ತ್ರೇಷು ವ್ಯಾಕೃತೇಷು ಚ ।
ಯತ್ಫಲಂ ದುರ್ಲಭಂ ಲೋಕೇ ತತ್ಫಲಂ ತಸ್ಯ ಸಂಭವೇತ್ ॥35॥

ಅನುವಾದ

ಅವನಿಗೆ ಜಗತ್ತಿನಲ್ಲಿ ವೇದಗಳನ್ನು ಓದುವುದರಿಂದ ಮತ್ತು ಶಾಸ್ತ್ರಗಳನ್ನು ವ್ಯಾಖ್ಯಾನ ಮಾಡುವುದಕ್ಕಿಂತ ಹೆಚ್ಚಿನ ದುರ್ಲಭವಾದ ಫಲವುಸಿಗುತ್ತದೆ.॥35॥

ಮೂಲಮ್

ಏಕಾದಶೀದಿನೇಽಧ್ಯಾತ್ಮರಾಮಾಯಣಮುಪೋಷಿತಃ ।
ಯೋ ರಾಮಭಕ್ತಃ ಸದಸಿ ವ್ಯಾಕರೋತಿ ನರೋತ್ತಮಃ ॥36॥
ತಸ್ಯ ಪುಣ್ಯಫಲಂ ವಕ್ಷ್ಯೇ ಶ್ರುಣು ವೈಷ್ಣವಸತ್ತಮ ।
ಪ್ರತ್ಯಕ್ಷರಂ ತು ಗಾಯತ್ರೀಪುರಶ್ಚರ್ಯಾಫಲಂ ಭವೇತ್ ॥37॥

ಅನುವಾದ

ವೈಷ್ಣವ ಶ್ರೇಷ್ಠನೇ! ನರಶ್ರೇಷ್ಠನಾದ ರಾಮಭಕ್ತನು ಏಕಾದಶಿಯಂದು ಉಪವಾಸ ಮಾಡಿ ಸಭೆಯಲ್ಲಿ ಅಧ್ಯಾತ್ಮರಾಮಾಯಣದ ವ್ಯಾಖ್ಯಾನ ಮಾಡುವವನ ಪುಣ್ಯದ ಫಲವನ್ನು ಹೇಳುತ್ತೇನೆ, ಕೇಳು! ಅವನಿಗೆ ಅಧ್ಯಾತ್ಮ ರಾಮಾಯಣದ ಒಂದೊಂದು ಅಕ್ಷರ ಓದುವುದರಿಂದ ಗಾಯತ್ರೀ ಪುರಶ್ಚರಣದ ಫಲಸಿಗುತ್ತದೆ.॥36-37॥

ಮೂಲಮ್

ಉಪವಾಸವ್ರತಂ ಕೃತ್ವಾ ಶ್ರೀರಾಮನವಮೀದಿನೇ ।
ರಾತ್ರೌ ಜಾಗರಿತೋಽಧ್ಯಾತ್ಮರಾಮಾಯಣಮನನ್ಯಧೀಃ ।
ಯಃ ಪಠೇತ್ ಶೃಣುಯಾದ್ವಾಪಿ ತಸ್ಯ ಪುಣ್ಯಂ ವದಾಮ್ಯಹಮ ॥38॥

ಅನುವಾದ

ರಾಮನವಮಿಯ ದಿನ ಉಪವಾಸವಿದ್ದು ಹಾಗೂ ರಾತ್ರಿಯಲ್ಲಿ ಜಾಗರಣೆ ಮಾಡಿ ಅನನ್ಯ ಬುದ್ಧಿಯಿಂದ ಅಧ್ಯಾತ್ಮ ರಾಮಾಯಣವನ್ನು ಪಠಿಸುವ ಅಥವಾ ಕೇಳುವ ಪುರುಷನ ಪುಣ್ಯವನ್ನು ನಾನು ಹೇಳುತ್ತೇನೆ ಕೇಳು. ॥38॥

ಮೂಲಮ್

ಕುರುಕ್ಷೇತ್ರಾದಿನಿಖಿಲಪುಣ್ಯತೀರ್ಥೇಷ್ವನೇಕಶಃ ।
ಆತ್ಮತುಲ್ಯಂ ಧನಂ ಸೂರ್ಯಗ್ರಹಣೇ ಸರ್ವತೋಮುಖೇ ॥39॥
ವಿಪ್ರೇಭ್ಯೋ ವ್ಯಾಸತುಲ್ಯೇಭ್ಯೋ ದತ್ವಾ ಯತ್ಫಲಮಶ್ನುತೇ ।
ತತ್ಫಲಂ ಸಂಭವೇತ್ತಸ್ಯ ಸತ್ಯಂ ಸತ್ಯಂ ನ ಸಂಶಯಃ ॥40॥

ಅನುವಾದ

ಕುರುಕ್ಷೇತ್ರಾದಿ ಸಮಸ್ತ ಪವಿತ್ರ ತೀರ್ಥಗಳಲ್ಲಿ ಪೂರ್ಣಗ್ರಸ್ತ ಸೂರ್ಯಗ್ರಹಣದ ಸಮಯದಲ್ಲಿ ವ್ಯಾಸ ಸಮಾನರಾದ ಬ್ರಾಹ್ಮಣರಿಗೆ ತನ್ನ ಅತ್ಯಂತ ಪ್ರಿಯವಾದ ವಸ್ತುಗಳನ್ನು ದಾನಮಾಡುವುದರಿಂದ ಸಿಗುವ ಫಲವು ಅವನಿಗೆ ಸಿಗುತ್ತದೆ, ಇದರಲ್ಲಿ ಯಾವ ಸಂದೇಹವೂ ಇಲ್ಲ, ಇದು ತ್ರಿವಾರ ಸತ್ಯವಾಗಿದೆ.॥39-40॥

ಮೂಲಮ್

ಯೋ ಗಾಯತೇ ಮುದಾಧ್ಯಾತ್ಮರಾಮಾಯಣಂ ಅಹರ್ನಿಶಮ್ ।
ಆಜ್ಞಾಂ ತಸ್ಯ ಪ್ರತೀಕ್ಷಂತೇ ದೇವಾ ಇಂದ್ರಪುರೋಗಮಾಃ ॥41॥

ಅನುವಾದ

ಮನುಷ್ಯನು ಹಗಲು ರಾತ್ರಿ ಪ್ರಸನ್ನ ಚಿತ್ತದಿಂದ ಅಧ್ಯಾತ್ಮರಾಮಾಯಣದ ಗಾನವನ್ನು ಮಾಡುವವನ ಆಜ್ಞೆಯನ್ನು ಇಂದ್ರಾದಿ ದೇವತೆಗಳು ಪ್ರತೀಕ್ಷೆ ಮಾಡುತ್ತಿರುತ್ತಾರೆ. ॥41॥

ಮೂಲಮ್

ಪಠನ್ ಪ್ರತ್ಯಹಮಧ್ಯಾತ್ಮರಾಮಾಯಣಮನುವ್ರತಃ ।
ಯದ್ಯತ್ಕರೋತಿ ತತ್ಕರ್ಮ ತತಃ ಕೋಟಿಗುಣಂ ಭವೇತ್ ॥42॥

ಅನುವಾದ

ಅಧ್ಯಾತ್ಮರಾಮಾಯಣವನ್ನು ನಿಯಮಪೂರ್ವಕವಾಗಿ ಪ್ರತಿದಿನ ಪಾರಾಯಣ ಮಾಡುವುದರಿಂದ ಮನುಷ್ಯನು ಮಾಡುವ ಪುಣ್ಯಕರ್ಮಗಳು ಕೋಟಿ ಪಟ್ಟು ಆಗುತ್ತವೆ. ॥42॥

ಮೂಲಮ್

ತತ್ರ ಶ್ರೀರಾಮಹೃದಯಂ ಯಃ ಪಠೇತ್ಸುಸಮಾಹಿತಃ ।
ಸ ಬ್ರಹ್ಮಘ್ನೋಽಪಿ ಪೂತಾತ್ಮಾ ತ್ರಿಭಿರೇವ ದಿನೈರ್ಭವೇತ್ ॥43॥

ಅನುವಾದ

ಈ ಅಧ್ಯಾತ್ಮರಾಮಾಯಣದಲ್ಲಿನ ‘ಶ್ರೀರಾಮಹೃದಯ’ ದ ಪಾರಾಯಣೆಯನ್ನು ಭಕ್ತಿಪೂರ್ವಕವಾಗಿ ಮಾಡುವವನು, ಬ್ರಹ್ಮ ಹತ್ಯೆ ಮಾಡಿದವನಾದರೂ ಮೂರು ದಿನಗಳಲ್ಲಿ ಪವಿತ್ರನಾಗುತ್ತಾನೆ. ॥43॥

ಮೂಲಮ್

ಶ್ರೀರಾಮಹೃದಯಂ ಯಸ್ತು ಹನೂಮತ್ ಪ್ರತಿಮಾಂತಿಕೇ ।
ತ್ರಿಃಪಠೇತ್ ಪ್ರತ್ಯಹಂಮೌನೀ ಸ ಸರ್ವೇಪ್ಸಿತಭಾಗ್ಭವೇತ್ ॥44॥

ಅನುವಾದ

ಆಂಜನೇಯನ ಪ್ರತಿಮೆಯ ಮುಂದೆ ಪ್ರತಿದಿನ ಮೂರು ಬಾರಿ ಮೌನವಾಗಿದ್ದು ಶ್ರೀರಾಮ ಹೃದಯದ ಪಾರಾಯಣೆ ಮಾಡುವವನು ಸಮಸ್ತ ಇಚ್ಛಿತ ಫಲಗಳನ್ನು ಪಡೆಯುತ್ತಾನೆ.॥44॥

ಮೂಲಮ್

ಪಠನ್ ಶ್ರೀರಾಮಹೃದಯಂ ತುಲಸ್ಯಶ್ವತ್ಥಯೋರ್ಯದಿ ।
ಪ್ರತ್ಯಕ್ಷರಂ ಪ್ರಕುರ್ವೀತ ಬ್ರಹ್ಮಹತ್ಯಾನಿವರ್ತನಮ್ ॥45॥

ಅನುವಾದ

ಒಂದು ವೇಳೆ ಯಾವನಾದರು ಪುರುಷನು ತುಲಸೀ ಅಥವಾ ಅಶ್ವತ್ಥದ ಬಳಿಯಲ್ಲಿ ಶ್ರೀರಾಮಹೃದಯದ ಪಾರಾಯಣೆ ಮಾಡಿದರೆ ಅವನು ಒಂದೊಂದು ಅಕ್ಷರದಲ್ಲಿ ತನ್ನ ಬ್ರಹ್ಮಹತ್ಯೆಯಂತಹ ಪಾಪಗಳನ್ನು ಕಳೆದುಕೊಳ್ಳುತ್ತಾನೆ. ॥45॥

ಮೂಲಮ್

ಶ್ರೀರಾಮಗೀತಾಮಾಹಾತ್ಮ್ಯಂ ಕೃತ್ಸ್ನಂ ಜಾನಾತಿ ಶಂಕರಃ ।
ತದರ್ಧಂ ಗಿರಿಜಾ ವೇತ್ತಿ ತದರ್ಧಂ ವೇದ್ ಮ್ಯಹಂಮುನೇ ॥46॥

ಅನುವಾದ

ಹೇ ಮುನಿಯೇ! ಶ್ರೀರಾಮಗೀತೆಯ ಮಾಹಾತ್ಮ್ಯವು ಸಂಪೂರ್ಣವಾಗಿಯಾದರೋ ಶ್ರೀಮಹಾದೇವನೇ ಬಲ್ಲನು. ಅದರಲ್ಲಿ ಅರ್ಧ ಪಾರ್ವತಿಯು ತಿಳಿಯುವಳು ಮತ್ತು ಅದರಿಂದ ಅರ್ಧ ನಾನು ತಿಳಿಯುತ್ತೇನೆ.॥46॥

ಮೂಲಮ್

ತತ್ತೇ ಕಿಂಚಿತ್ ಪ್ರವಕ್ಷಾಮಿ ಕೃತ್ಸ್ನಂ ವಕ್ತುಂ ನ ಶಕ್ಯತೇ ।
ಯಜ್ ಜ್ಞಾತ್ವಾ ತತ್ ಕ್ಷಣಾಲ್ಲೋಕಶ್ಚಿತ್ತಶುದ್ಧಿಮವಾಪ್ನುಯಾತ್ ॥47॥

ಅನುವಾದ

ಆದರೆ ಅದನ್ನೂ ಕೂಡ ಪೂರ್ತಿಯಾಗಿ ಹೇಳಲೂ ಸಾಧ್ಯವಿಲ್ಲ, ಅದರಲ್ಲಿನ ಸ್ವಲ್ಪವನ್ನು ನಿನಗೆ ಹೇಳುತ್ತೇನೆ, ಅದನ್ನು ತಿಳಿದ ಮಾತ್ರದಿಂದ ಚಿತ್ತವು ತತ್ಕಾಲವೇ ಶುದ್ಧವಾಗುತ್ತದೆ.॥47॥

ಮೂಲಮ್

ಶ್ರೀರಾಮಗೀತಾ ಯತ್ಪಾಪಂ ನ ನಾಶಯತಿ ನಾರದ ।
ತನ್ನ ನಶ್ಯತಿ ತೀರ್ಥಾದೌ ಲೊಕೇ ಕ್ವಾಪಿ ಕದಾಚನ ।
ತನ್ನ ಪಶ್ಯಾಮ್ಯಹಂಲೊಕೇಮರ್ಗಮಾಣೋಽಪಿ ಸರ್ವದಾ ॥48॥

ಅನುವಾದ

ಹೇ ನಾರದನೇ! ಯಾವ ಪಾಪವನ್ನು ಶ್ರೀರಾಮ ಗೀತೆಯು ನಾಶವಾಗಿಸಲಾರದೋ ಅದು ಜಗತ್ತಿನಲ್ಲಿ ಎಂದೂ ಯಾವುದೇ ತೀರ್ಥಾದಿಗಳಿಂದಲೂ ನಾಶವಾಗಲಾರದು. ನಾನು ಸದಾಕಾಲ ಹುಡುಕಿದರೂ ಆ ಪಾಪವನ್ನು ನೋಡಲಾರೆ ಅರ್ಥಾತ್ ಶ್ರೀರಾಮಗೀತೆಯಿಂದ ನಷ್ಟವಾಗದಿರುವ ಯಾವ ಪಾಪವೂ ಇಲ್ಲ. ॥48॥

ಮೂಲಮ್

ರಾಮೇಣೊಪನಿಷತ್ ಸಿಂಧುಮುನ್ಮಥ್ಯೋತ್ಪಾದಿತಾಂ ಮುದಾ ।
ಲಕ್ಷ್ಮಣಾಯಾರ್ಪಿತಾಂ ಗೀತಾಸುಧಾಂ ಪೀತ್ವಾಮರೋಭವೇತ್ ॥49॥

ಅನುವಾದ

ಯಾವ ಗೀತಾಮೃತವನ್ನು ಭಗವಾನ್ ಶ್ರೀರಾಮನು ಉಪನಿಷತ್ಸಾಗರದ ಮಂಥನ ಗೈದು ತೆಗೆದಿರುವನೋ, ಹಾಗೂ ಹೆಚ್ಚಿನ ಪ್ರಸನ್ನತೆಯಿಂದ ಲಕ್ಷ್ಮಣನಿಗೆ ಕರುಣಿಸಿದನೋ ಅದನ್ನು ಮನುಷ್ಯನು ಪಾನಮಾಡಿ ಅಮರನಾಗುತ್ತಾನೆ. ॥49॥

ಮೂಲಮ್

ಜಮದಗ್ನಿಸುತಃ ಪೂರ್ವಂ ಕಾರ್ತವೀರ್ಯವಧೇಚ್ಛಯಾ ।
ಧನುರ್ವಿದ್ಯಾಮಭ್ಯಸಿತುಂ ಮಹೇಶಸ್ಯಾಂತಿಕೇ ವಸನ್ ॥50॥

ಅನುವಾದ

ಹಿಂದಿನ ಕಾಲದಲ್ಲಿ ಸಹಸ್ರಾರ್ಜುನನ ವಧೆಯ ಇಚ್ಛೆಯಿಂದ ಜಮದಗ್ನಿನಂದನ ಶ್ರೀಪರಶುರಾಮರು ಧನುರ್ವಿಧ್ಯೆಯ ಅಭ್ಯಾಸ ಮಾಡಲೋಸುಗ ಶ್ರೀಮಹಾದೇವನ ಬಳಿಯಲ್ಲಿ ಇರುತ್ತಿದ್ದರು. ॥50॥

ಮೂಲಮ್

ಅಧೀಯಮಾನಾಂ ಪಾರ್ವತ್ಯಾ ರಾಮಗೀತಾಂ ಪ್ರಯತ್ನತಃ ।
ಶ್ರುತ್ವಾ ಗೃಹೀತ್ವಾಶು ಪಠನ್ನಾರಾಯಣಕಲಾಮಗಾತ್ ॥51॥

ಅನುವಾದ

ಆ ಸಮಯದಲ್ಲಿ ರಾಮಗೀತೆಯ ಅಧ್ಯಯನ ಮಾಡುತ್ತಿರುವ ಪಾರ್ವತಿದೇವಿಯಿಂದ ಅದನ್ನು ಶ್ರದ್ಧಾ ಪೂರ್ವಕ ಕೇಳಿಕೊಂಡು, ಆಗಲೇ ಹೃದಯಂಗಮವಾಗಿ ಪಾರಾಯಣೆ ಮಾಡುತ್ತಾ ಅವರು ಶ್ರೀನಾರಾಯಣನ ಕಲಾರೂಪರಾದರು. ॥51॥

ಮೂಲಮ್

ಬ್ರಹ್ಮಹತ್ಯಾದಿಪಾಪಾನಾಂ ನಿಷ್ಕೃತಿಂ ಯದಿ ವಾಂಛತಿ ।
ರಾಮಗೀತಾಂ ಮಾಸಮಾತ್ರಂ ಪಠಿತ್ವಾ ಮುಚ್ಯತೇ ನರಃ ॥52॥

ಅನುವಾದ

ಒಂದು ವೇಳೆ ಪುರುಷನು ಬ್ರಹ್ಮಹತ್ಯಾದಿ ಘೋರ ಪಾಪಗಳಿಂದ ಮುಕ್ತನಾಗಬೇಕೆಂದು ಬಯಸಿದರೆ ಕೇವಲ ಒಂದು ತಿಂಗಳು ರಾಮಗೀತೆಯ ಪಾರಾಯಣ ಮಾಡುವುದರಿಂದ ಬಿಡುಗಡೆ ಹೊಂದಬಲ್ಲನು. ॥52॥

ಮೂಲಮ್

ದುಷ್ಪ್ರತಿಗ್ರಹದುರ್ಭೋಜ್ಯದುರಾಲಾಪಾದಿಸಂಭವಮ್ ।
ಪಾಪಂ ಯತ್ತತ್ಕೀರ್ತನೇನ ರಾಮಗೀತಾ ವಿನಾಶಯೇತ್ ॥53॥

ಅನುವಾದ

ಕೆಟ್ಟದಾನ, ನಿಷಿದ್ಧ ಭೋಜನ ಮತ್ತು ಸುಳ್ಳು ಮಾತುಕತೆಗಳಿಂದ ಉಂಟಾಗುವ ಪಾಪಗಳು ರಾಮಗೀತೆಯ ಪಾಠಮಾತ್ರದಿಂದ ನಾಶವಾಗುತ್ತವೆ.॥53॥

ಮೂಲಮ್

ಶಾಲಗ್ರಾಮಶಿಲಾಗ್ರೇ ಚ ತುಲಸ್ಯಶ್ವತ್ಥಸನ್ನಿಧೌ ।
ಯತೀನಾಂ ಪುರತಸ್ತದ್ವದ್ರಾಮಗೀತಾಂ ಪಠೇತ್ತು ಯಃ ॥54॥
ಸ ತತ್ಫಲಮವಾಪ್ನೋತಿ ಯದ್ವಾಚೋಽಪಿ ನಗೋಚರಮ್ ॥55॥

ಅನುವಾದ

ಶಾಲಿಗ್ರಾಮದ ಮುಂದೆ, ತುಲಸೀ ಅಶ್ವತ್ಥದ ಬಳಿಯಲ್ಲಿ ಅಥವಾ ಯತಿಗಳ ಮುಂದೆ ರಾಮಗೀತೆಯ ಪಾರಾಯಣೆ ಮಾಡುವವನಿಗೆ ಹೇಳಲಸದಳವಾದ ಫಲವು ದೊರೆಯುತ್ತದೆ.॥54-55॥

ಮೂಲಮ್

ರಾಮಗೀತಾಂ ಪಠನ್ ಭಕ್ತ್ಯಾ ಯಃ ಶ್ರಾದ್ಧೇ ಭೋಜಯೇದ್ ದ್ವಿಜಾನ್ ।
ತಸ್ಯ ತೇ ಪಿತರಃ ಸರ್ವೇ ಯಾಂತಿ ವಿಷ್ಣೋಃ ಪರಂ ಪದಮ್ ॥56॥

ಅನುವಾದ

ಶ್ರಾದ್ಧದಲ್ಲಿ ರಾಮಗೀತೆಯನ್ನು ಭಕ್ತಿಯಿಂದ ಪಾರಾಯಣೆ ಮಾಡಿ ಬ್ರಾಹ್ಮಣರಿಗೆ ಭೋಜನ ಮಾಡಿಸು ವವನ ಪಿತೃಗಳು ಭಗವಾನ್ ವಿಷ್ಣುವಿನ ಪರಮ ಧಾಮಕ್ಕೆ ಹೋಗುತ್ತಾರೆ.॥56॥

ಮೂಲಮ್

ಏಕಾದಶ್ಯಾಂ ನಿರಾಹಾರೋ ನಿಯತೋ ದ್ವಾದಶೀದಿನೇ ।
ಸ್ಥಿತ್ವಾಗಸ್ತ್ಯತರೋರ್ಮೂಲೇ ರಾಮಗೀತಾಂ ಪಠೇತ್ತು ಯಃ ।
ಸ ಏವ ರಾಘವಃ ಸಾಕ್ಷಾತ್ಸರ್ವದೇವೈಶ್ಚ ಪೂಜ್ಯತೇ ॥57॥

ಅನುವಾದ

ಏಕಾದಶಿಯ ದಿನ ಉಪವಾಸ ಮತ್ತು ಜಿತೇಂದ್ರಿಯನಾಗಿದ್ದು ದ್ವಾದಶಿಗೆ ಅಗಸ್ತ್ಯ ವೃಕ್ಷದ ಕೆಳಗೆ ಕುಳಿತು ಕೊಂಡು ರಾಮಗೀತೆಯನ್ನು ಪಾರಾಯಣೆ ಮಾಡುವವನು ಸಾಕ್ಷಾತ್ ರಾಮರೂಪವೇ ಆಗುತ್ತಾನೆ, ಸಮಸ್ತ ದೇವತೆಗಳು ಅವನ ಪೂಜೆ ಮಾಡುತ್ತಾರೆ.॥57॥

ಮೂಲಮ್

ವಿನಾ ದಾನಂ ವಿನಾ ಧ್ಯಾನಂ ವಿನಾ ತಿರ್ಥಾವಗಾಹನಮ್ ।
ರಾಮಗೀತಾಂ ನರೋಽಧೀತ್ಯ ತದನಂತ ಫಲಂ ಲಭೇತ್ ॥58॥

ಅನುವಾದ

ರಾಮಗೀತೆಯ ಪಾರಾಯಣೆ ಮಾಡುವುದರಿಂದ ಮನುಷ್ಯನು ಯಾವುದೇ ದಾನ, ಧ್ಯಾನ ಅಥವಾ ತೀರ್ಥಸ್ನಾನ ಮಾಡದೆಯೇ ಅಕ್ಷಯ ಫಲವನ್ನು ಪಡೆಯುತ್ತಾನೆ. ॥58॥

ಮೂಲಮ್

ಬಹುನಾ ಕಿಮಿಹೋಕ್ತೇನ ಶ್ರುಣು ನಾರದ ತತ್ತ್ವತಃ ।
ಶ್ರುತಿಸ್ಮೃತಿಪುರಾಣೇತಿಹಾಸಾಗಮಶತಾನಿ ಚ ।
ಅರ್ಹಂತಿ ನಾಲ್ಪಮಧ್ಯಾತ್ಮರಾಮಾಯಣಕಲಾಮಪಿ ॥59॥

ಅನುವಾದ

ಹೇ ನಾರದನೇ! ಇನ್ನು ಹೆಚ್ಚು ಏನು ಹೇಳ ಬಹುದು! ಯಾವುದು ವಾಸ್ತವಿಕ ಮಾತಾಗಿದೆಯೋ ಅದನ್ನು ಕೇಳು-ಶ್ರುತಿ, ಸ್ಮೃತಿ, ಪುರಾಣ ಮತ್ತು ಇತಿಹಾಸ ಮೊದಲಾದ ನೂರಾರು ಶಾಸ್ತ್ರಗಳೂ ಕೂಡ ಶ್ರೀಅಧ್ಯಾತ್ಮರಾಮಾಯಣದ ಫಲದ ಮುಂದೆ ಹದಿನಾರು ಕಲೆಗಳಲ್ಲಿ ಒಂದು ಕಲೆಗೂ ಸಮಾನವಾಗಲಾರದು.॥59॥

ಮೂಲಮ್

ಅಧ್ಯಾತ್ಮರಾಮಚರಿತಸ್ಯ ಮುನೀಶ್ವರಾಯ
ಮಾಹಾತ್ಮ್ಯಮೇತದುದಿತಂ ಕಮಲಾಸನೇನ ।
ಯಃ ಶ್ರದ್ಧಯಾ ಪಠತಿ ವಾ ಶ್ರುಣುಯಾತ್ಸಮರ್ತ್ಯಃ
ಪ್ರಾಪ್ನೋತಿ ವಿಷ್ಣುಪದವೀಂ ಸುರಪೂಜ್ಯಮಾನಃ ॥60॥

ಅನುವಾದ

ಈ ಅಧ್ಯಾತ್ಮರಾಮಾಯಣದ ಮಾಹಾತ್ಮ್ಯವು ಬ್ರಹ್ಮದೇವರು ಮುನಿರಾಜರಾದ ಶ್ರೀನಾರದರಲ್ಲಿ ಹೇಳಿದ್ದಾರೆ. ಇದನ್ನು ಶ್ರದ್ಧಾ ಪೂರ್ವಕ ಓದುವವನು ಅಥವಾ ಕೇಳುವವನು ದೇವತೆಗಳಿಂದ ಪೂಜಿತನಾಗಿ ಭಗವಾನ್ ಶ್ರೀವಿಷ್ಣುವಿನ ಪದವನ್ನು ಪಡೆಯುತ್ತಾನೆ.॥60॥

ಮೂಲಮ್ (ಸಮಾಪ್ತಿಃ)

ಇತಿ ಶ್ರೀಬ್ರಹ್ಮಾಂಡ ಪುರಾಣೇ ಉತ್ತರಖಂಡೇಽಧ್ಯಾತ್ಮರಾಮಾಯಣ ಮಾಹಾತ್ಮ್ಯಮ್ ಸಂಪೂರ್ಣಮ್ ॥
ಬ್ರಹ್ಮಾಂಡ ಪುರಾಣದ ಉತ್ತರ ಖಂಡದಲ್ಲಿ ಅಧ್ಯಾತ್ಮ ರಾಮಾಯಣ ಮಾಹಾತ್ಮ್ಯವು ಮುಗಿಯಿತು ॥