ಶ್ರೀಭಗವದ್ಗೀತೆಯು ಭಗವನ್ಮುಖಕಮಲದಿಂದ ಬಂದುದು. ಶ್ರೀವೇದವ್ಯಾಸರ ಶ್ರೀಮನ್ಮಹಾಭಾರತವೆಂಬ ಕ್ಷೀರಸಾಗರದ ಅಮೃತವಿದು. ಉಪನಿಷತ್ತುಗಳು ಘೋಷಿಸುವ ವ್ಯಕ್ತವಾಗಿ ತೋರುವ ತತ್ವಗಳ ನಿಧಿ, ಭಾರತದ 18 ವರ್ಷಗಳ ಸಾರವು ಇದರ 18 ಅಧ್ಯಾಯಗಳಾದಂತಿವೆ. ಇದಕ್ಕೆ ಇರುವ ವ್ಯಾಖ್ಯಾನಗಳು ಅಷ್ಟಿಷ್ಟಲ್ಲ. ಮಹರ್ಷಿಗಳಾದಿಯಾಗಿ ‘‘ತತ್ವಂಜಿಜ್ಞಾಸಮಾನಾನಾಂಹೇತುಭಿಸ್ಸತ್ವತೋಮುಖೈಃ ತತ್ವಮೇಕೋ ಮಹಾಯೋಗೀ ಹರಿರ್ನಾರಾಯಣಃ ಪರಃ ॥’’ ‘‘ಆಲೋಗ್ಯಸತ್ವಶಾಸ್ತ್ರಾಣಿ ವಿಚಾರಚಪುನಃಪುನಃ | ಇದಮೇಕಂ ಸುನಿಷ್ಟನ್ನಂ ಧೈಯೋನಾರಾಯಣಸ್ಸದಾ ॥’’ ‘‘ಅಪನಿಷದಂ ಪುಣ್ಯಾಂಕೃಷ್ಣಪಾಯನೊಬ್ರವೀತ್!’’ ‘‘ಭಾರತೇ ಭಗವದ್ಗೀತಾ’’। ‘‘ಸ್ವಧರ್ಮಜ್ಞಾನವೈರಾಗ್ಯಸಾಧ್ಯಭಕ ಗೋಚರಃ | ನಾರಾಯಣಃ ಪರಬ್ರಹ್ಮ ಗೀತಾಶಾಸ್ತ್ರಸಮೀರಿತಃ !!’’ ಇತ್ಯಾದಿ ಬಹುಸೂಕ್ತಿಗಳಿಂದ ವ್ಯಕ್ತಪಡಿಸಿರುವರು. ಸಾತ್ವಿಕತಮವೂ ಆಗಿರುವ ಇದರಲ್ಲಿ ಪ್ರತಿಪಾದಿತವಾದ ತತ್ವವೂ ‘ಶ್ರೀಮನ್ನಾರಾಯಣನೇ’’ ಎಂಬುದಂತೂ ಸುಸ್ಪಷ್ಟ. ಹೀಗಿದ್ದರೂ ಸಮಂಜಸವೆನಿಸದ ಎಷ್ಟೋ ಅಭಿಪ್ರಾಯಗಳು ‘‘ಗೀತೆಯಮೇಲೆ’’ ಇದ್ದುವು. ಎಲ್ಲರನ್ನೂ ಉಜೀವನಗೊಳಿಸುವ ಜ್ಞಾನಿಗಳಲ್ಲಿ ತಿಲಕಪ್ರಾಯರಾಗಿದ್ದ ಶ್ರೀಯಾಮುನಾಚಾರರು ಅಸಮಂಜಸವಾದ ಅಭಿಪ್ರಾಯಗಳನ್ನು ಖಂಡಿಸಿ, ಮುಂದೆ ಇಂತಹುದು ಮತ್ತೆ ತಲೆಯೆತ್ತದಂತಾಗಲೆಂದು, ‘ಶ್ರೀಗೀತಾರ್ಥ ಸಂಗ್ರಹ’‘ವೆಂಬ ಸಂಕ್ಷೇಪ ಗ್ರಂಥವನ್ನು ಅವರು ಕರುಣಿಸಿದರು. ಈ ಮಹಿಮರ ಮಾರ್ಗ ನಿಷ್ಕಂಟಕವೂ ಸುಗಮವೂ ಆಗಿದ್ದರಿಂದಲೇ ‘‘ಶ್ರೀರಾಮಾನುಜರು’’ ಗೀತಾಭಾಷ್ಯವನ್ನು ಇದನ್ನು ಅನುಸರಿಸಿಯೇ ವಿರಚಿಸಿದರು. ಈ ಗೀತಾ ಭಾಷ್ಯದ ಅರ್ಥವೇ ಸತ್ಯವಾದುದೆಂದು ಸಾರಿ ‘‘ತಾತ್ಪಯ್ಯ ಚಂದ್ರಿಕಾ’’ ಎಂಬ ಹೆಸರಿನಿಂದ ಗೀತಾ ಭಾಷ್ಯವನ್ನು ವಿಸ್ತಾರವಾಗಿ ವ್ಯಾಖ್ಯಾನಮಾಡಿ, ಶ್ವೇತರ ಸಮಸ್ತಮತಗಳನ್ನೂ ಖಂಡಿಸಿ, ಶ್ರೀಭಾಷ್ಯಕಾರರ ಅಭಿಮತವೇ ಗೀತಾಚಾರನಾದ ಶ್ರೀಕೃಷ್ಣ ಪರಮಾತ್ಮನ ಅಭಿಮತವೆಂದೂ, ಸಕಲ ವೇದಗಳ ಪರಮ ತಾತ್ಪರವೂ ಅದೇ ಎಂದೂ ನಮ್ಮ ಗುರುಮಣಿಗಳು ಸ್ಥಾಪಿಸಿದರು. ಶ್ರೀಯಾಮುನರ “ಗೀತಾರ್ಥಸಂಗ್ರಹ’‘ಕ್ಕೆ ‘‘ಗೀತಾರ್ಥ ಸಂಗ್ರಹ ರಕ್ಷಾ’’ ಎಂಬ ಪುಟ್ಟ ವ್ಯಾಖ್ಯಾನವನ್ನು ಬರೆದು, ಆ ಹೆಸರಿನಿಂದಲೇ ಅದರ ಭಾವಾನುವಾದವೋ ಎಂಬಂತೆ ತಿಳಿ ತಮಿಳಿನಲ್ಲಿ ತಮಿಳುನಾಡಿನೊಳನಾಡಿಗಳಿಗೂ ಅದರ ಸವಿ ಸವಿಯುವಂತಾಗಲೆಂದು ಈ ‘ಗೀತಾರ್ಥ ಸಂಗ್ರಹವೆಂಬ’ ದಿವ್ಯ ಪ್ರಬಂಧವನ್ನು ಅನುಗ್ರಹಿಸಿದರು.556 ಶ್ರೀ ಗೀತಾರ್ಥ ಸಂಗ್ರಹಃ ಹೀಗೆ ಕ್ರಮವಾಗಿ ದೊರಕಿರುವ ಈ ತತ್ವಸಾರಾಸ್ವಾದನೆಯು ನಮ್ಮ ನಾಡಿನ ತಮಿಳೊಡನಾಡಿಗಳಿಗೂ ಲಭಿಸಬೇಕಾದುದು ಅತ್ಯಗತ್ಯವೆಂದೆಣಿಸಿ, ಪ್ರಯತ್ನಿಲಸಾಗಿದೆ. ಶ್ರೀಮದಾಚಾರರ ಪರಮಾನುಗ್ರಹದಿಂದಲೂ, ಸಂಪ್ರದಾಯಾಭಿಮಾನಿಗಳ ನೆರವಿನಿಂದಲೂ ಈ ಸೇವೆಯು ಪೂರ್ಣ ಬೆಂಬಲವನ್ನು ಪಡೆದು, ಸಫಲಗೊಳ್ಳುವುದೆಂದು ನಂಬಿರುವೆನು. ಶುಭಕೃತ್ 1962 ಇತಿ, ಶ್ರೀ ದೇಶಿಕಮಣಿಕೃಪಾಭಾಜನಂ ವಿದ್ವಾನ್.ಹ. ಗೋಪಾಲಾಚಾರ ನಂ.14, ನಾಲ್ಕನೆಯ ಬೀದಿ, ಕಾಳಿದಾಸ ರಸ್ತೆ ವಾಣಿವಿಲಾಸ ಮೊಹಲ್ಲ, ಮೈಸೂರು - 2 ॥8,e: ॥ ॥ಶ್ರೀಮತೇ ನಿಗಮಾಂತ ಮಹಾದೇಶಿಕಾಯ ನಮಃ ॥ ಶ್ರೀ ಗೀತಾರ್ಥ ಸಂಗ್ರಹಃ ತನಿಯನ್ ಮೂಲ : ಕಟ್ಟಿಪೊರುಳ್ ವಿರಿತ್ತ ಕಾಶಿನಿಯಲ್ ನಾನಕೈಯಿನ್, ಇಟ್ಟಪೊರುಳಿಯಮ್ಯುಮಿನ್ಪೊರುಳ್ಳೆ, ಶಿಟ್ಟರ್ಳುಂ ವೇದಾನದೇಶಿಕನೈಮೇವುವಾರ್ಂಗಳಿರು ಪ್ಪಾದಾಂಬುಯಮಡಿಯೇನ್ಪತ್ತು ॥ ಗೀತೈಮೊಳಿನ್ದರುಳುಂ ವೇದಾಂತದೇಶಿಕನಾರ್ ಪಾದಾರವಿಂದಮಲರ್ಪತ್ತು 1 ಅರ್ಥ :-
1 2
ಕಟ್ಟ-ಪೊರುಳ್ -ವಿರಿತ್ತ-ಕಾಶಿನಿಯಲ್ : ಅನುಚಿತವಾದ ಅರ್ಥವನ್ನೇ ಹರಡಿರುವ ಈ ಜಗತ್ತಿನಲ್ಲಿ ನಾನಕೈಯಿನ್ = ವೇದಗಳಲ್ಲಿ ಇಟ್ಟ-ಪೊರುಳ್ : ಗೂಢವಾಗಿರುವ ಸಾರಾರ್ಥವನ್ನು, ಇಯಂಬುಮಿನ್ = ಅವಲಂಬಿಸಿರಿ, (ಅಂತಹ) ಪೊರುಳ್ಳಿ - ಅರ್ಥವನ್ನು ಸ್ಪಷ್ಟಪಡಿಸಿದ, (ಮತ್ತು) ಶಿಟ್ಟರ್ -ತೊಳುಂ = ಶಿಷ್ಟರಾದವರು ಸೇವಿಸುವಂತಹ, ವೇದಾಂತದೇಶಿಕ = ನಿಗಮಾಂತದೇಶಿಕರನ್ನು, ಮೇವುವಾರ್ ತಂಗಳ್ = ಸೇವಿಸುವ ಮಹಿಮರ, ಪಾದಾಂಬುಯಂ = ಅಡಿದಾವರೆಗಳು, ಅಡಿಯೇನ್ - ನನಗೆ, ಆಶ್ರಯವು. ಪತ್ತು =
ಗೀತೆ-ಮೊಳಿಂದ್ -ಅರುಳುಂ = ಗೀತಾರ್ಥವನ್ನು ಕರುಣಿಸಿದ, ವೇದಾಂತ ದೇಶಿಕನ್ - ನಿಗಮಾಂತ ಮಹಾದೇಶಿಕರ, ಆರ್ = ಸಕಲಗುಣಭರಿತವಾದ, ಪಾದಾರವಿಂದ-ಮಲ = ಅಡಿದಾವರೆಗಳು, ಪತ್ತು = ಆಶ್ರಯವು. दृष्टार्थेकप्रचारे भुवन इह चतुर्वेदनिष्ठं सदर्थम् । गृह्णीध्वं शिष्टसेव्यं श्रुतिशिखरगुरुं ये भजन्तेऽतिभक्त्या ॥ तेषां पादाम्बुजानि श्रयणपद महो मे तथा योऽन्वगृह्णात् । गीतार्थं वेदचूडागुरुमणि रनघ स्तत्पदाब्जे श्रयध्वम् ॥ 558 ಶ್ರೀ ಗೀತಾರ್ಥ ಸಂಗ್ರಹಃ ಮೂಲ : ಕರುಮಮುಂ ಞಾನಮುಂ ಕೊಂಡಳುಂಕಾದಲುಕ್ಕೋರಿಲಕ್ಕೆನ್ನು, ಅರುಮರೈಯುಚ್ಚಿಯುಳಾದರಿತ್ತೊದುಮರುಂ ಪಿರಮಂ, ತಿರುಮಹಳೋಡುವರುಂ ತಿರುಮಾಲೆನ್ನುತಾನುರೈತಾನ್, ದರುಮಮುಹನದನಂಜಯನುಕ್ಕವನ್ ಶಾರತಿಯೇ |
ಅರ್ಥ :- ದರುಮಂ : ಧರ್ಮವನ್ನು, ಉಹಂದ = ಅನುಭವಿಸಿದ, ದನಂಜಯನುಕ್ಕು = ಅರ್ಜುನನಿಗೆ, ಶಾರತಿ - ಸಾರಥಿಯಾದ, ಅವನ್ - ಆ ಪರಮಾತ್ಮನು, ಕರುಮಮುಂ : ಕರಯೋಗವನ್ನೂ, ಞಾನಮುಂ ಅವಲಂಬಿಸಿಕೊಂಡು, ಎಳುಂ = ಉಂಟಾಗುವ, ಕಾದಲುಕ್ಕು = ಭಕ್ತಿಯೋಗಕ್ಕೆ, ಓರ್ - ಜ್ಞಾನಯೋಗವನ್ನೂ, ಕೊಂಡು : ಇಲಕ್ಕು-ಎನ್ನು = ಒಂದೇ ಗುರಿಯೆಂದು, ಆದರಿತ್ತು: ಆದರದಿಂದ, ಅರುಂ-ಮರೈ- ಉಚ್ಚಿಯುಳ್ : ದುರವಗಾಹವಾದ ಉಪನಿಷತ್ತುಗಳಲ್ಲಿ ಆರುಂ = ದುರ್ಜ್ಞೆಯನೂ, ದುರ್ಲಭವ (ಆದ) ಪಿರಮಂ : ಪರಬ್ರಹ್ಮವು, ತಿರು-ಮಗಳೋಡು : ಮಹಾಲಕ್ಷ್ಮಿಯೊಡನೆಯೇ, ವರುಂ : ಬುದ್ದಿಗೆ ಕಾಣುವವನಾದ, ತಿರು-ಮಾಲ್ : ಉಭಯ ವಿಭೂತಿಗೂ ಸರ್ವೆಶ್ವರನಾದ ಶ್ರೀಮನ್ನಾರಾಯಣನು, ತಾನ್ : ತಾನೇ, ಉರೈ-ಎನ್ನುತ್ತಾನ್ : (ಶ್ರೀ ಗೀತೆಯನ್ನು) ಹೇಳಿದನು.
ತಾತ್ವರ :- ‘‘ಸ್ವಧರ್ಮ ಜ್ಞಾನ ವೈರಾಗ್ಯ ಸಾಧ್ಯ ಭಕಗೋಚರಃ | ನಾರಾಯಣಃ ಪರಬ್ರಹ್ಮ ಗೀತಾಶಾಸ್ತ್ರ ಸಮೀರಿತಃ !!"
ಶ್ರೀ ಕೃಷ್ಣನು ಪರಮಪ್ರಿಯನಾದ ಅರ್ಜುನನಿಗೆ ಸಾರಥಿಯಾಗಿದ್ದು, ಸರಿಯಾದ ಸಮಯದಲ್ಲಿ ಬಹಳ ಆದರದಿಂದ ‘ಕರ್ಮಯೋಗ, ಜ್ಞಾನಯೋಗಗಳಿಂದ ಬರುವ ಭಕ್ತಿಯೋಗಕ್ಕೆ ಏಕಮಾತ್ರ ಲಕ್ಷ್ಯಭೂತನೂ ತಾನೆಂದೂ, ಹಾಗೆಯೇ ಅತಿ ಗಹನವಾದ ಉಪನಿಷತ್ತುಗಳಲ್ಲಿ ಲಕ್ಷ್ಮೀಸಮೇತನಾಗಿಯೇ ವೇದ್ಯನಾಗುವನೂ ತಾನೇ ಎಂದೂ, ಮತ್ತು ಉಭಯ ವಿಭೂತಿಯ ಸಶ್ವೇಶ್ವರನೂ ತಾನೇ’’ ಎಂದೂ ಚೆನ್ನಾಗಿ ತಿಳಿಸಿದನಷ್ಟೆ. ಇದರಲ್ಲಿ ಕ್ರಮವಾಗಿ ಆರಾರು ಅಧ್ಯಾಯಗಳ ಮುಖ್ಯಾರ್ಥಗಳಾದ ಕರ್ಮ, ಜ್ಞಾನ, ಭಕ್ತಿಗಳು ಸಂಗ್ರಹಿಸಲ್ಪಟ್ಟವು. (ಈ ಸಾರವಾದ ಅರ್ಥವನ್ನೇ ಮೇಲಿನ ಯಾಮುನಾಚಾರ್ಯರ ಸಂಗ್ರಹ ಶ್ಲೋಕವೂ ವಿವರಿಸುವುದು) यो वाधर्मानुभोक्तुः प्रभुरपि जगतां सारथिः पाण्डवस्य । कर्मज्ञानोदिताया भवति पदजुषा मेकलक्ष्यं च भक्तेः । । दर्ज्ञेयाम्नायमौलिष्वधिगतपरमब्रह्मनारायण स्सः । श्रीमानेवोपयात स्स्वयमुभयविभूतीश इत्याह तस्मै ॥ १ ಶ್ರೀ ಗೀತಾರ್ಥ ಸಂಗ್ರಹಃ ಮೂಲ : ಉಹವೈಯಡೈಂದ ವುರವುಡೈಯಾರ್ ಉರವತ್ತವನ್ನಾಳ್, ತಹವುಡನನ್ನು ಕರೈಪುರಳದ್ದರುಮತಳವಿಲ್, ಮಿಹವುಳಮಂಜಿವಿಳುನ್ದಡಿಶೇರ್ನ್ದವಿಶಯನುಕ್ಕೋರ್. ನಹೈಯುಡನುಯುರೈಕ್ಕವನನರ್ ನಾರಣರೇ ॥
559 2 ಅರ್ಥ :- ಉಹವೈ-ಅಟೈಂದ : ಪ್ರೀತಿಯುಳ್ಳವರೂ, ಉರವ್ -ಉಡೈಯಾರ್ : ಸಂಬಂಧವುಳ್ಳವರೂ (ಆಗಿದ್ದರೂ) ಉರವ್ -ಅತ್ತ: ಸಂಬಂಧವನ್ನು ಬಿಟ್ಟ ಅ-ನಾಳ್ - ಆ ಸಮಯದಲ್ಲಿ ತಹವ್ -ಉಡನ್ : ದಯಾಸಹಿತವಾದ, ಅನ್ಯ - ಸ್ನೇಹವು, ಕರೆ-ಪುರಳ = ಮಿತಿಮೀರಿಹೋಗಲು, ದರುಮತ್ತು-ಅಳವಿಲ್ = ಧರ್ಮದ ಅಳತೆಯಲ್ಲಿಯೂ, ಉಳಂ ಮನಸ್ಸು, ಮಿಹ-ಅಂಜಿ - ತುಂಬ ಹೆದರಿ, ಮಿಳುಂಡ್ : ನಮಿಸಿ, ಅಡಿ-ಶೇರ್ನ್ದ : ಚರಣಗಳನ್ನು ಆಶ್ರಯಿಸಿದ, (ಶಿಷ್ಯನಾಗಿದ್ದ) ವಿಶಯನುಕ್ಕು : ಅರ್ಜುನನಿಗೆ, ಓರ್ -ನಗೈ-ಉಡನ್ - ವಿಲಕ್ಷಣವಾದ ನಗುವೊಡನೆ, ಉಣ್ಣೆ - ನಿಜತತ್ವವನ್ನು, ಉರೈಕ್ಕ = ಉಪದೇಶಿಸುವುದಕ್ಕಾಗಿ, ನಾರಣ = ನಾರಾಯಣನೇ ಅಲ್ಲವೆ, ಅಮೈಂದನರ್ : ಉಚಿತತಮ ಗುರುವಾಗಿ ಆದನು.
ತಾತ್ವರ :- ಅಸ್ಥಾನಸ್ನೇಹಕಾರುಣ್ಯ ಧರ್ಮಾಧರ್ಮಧಿಯಾಕುಲಂ | ಪಾರ್ಥಂ ಪ್ರಪನ್ನ ಮುದ್ದಿಶ್ಯ ಶಾಸ್ತ್ರಾವತರಣಂ ಕೃತಂ |
ದ್ರೋಣ, ಭೀಷ್ಮಾದಿ ಗುರುಹಿರಿಯರ ಪ್ರೀತ್ಯಾದರಗಳಿಗೆ ಅರ್ಜುನನು ಪೂರ್ಣ ಪಾತ್ರನಾಗಿದ್ದನು. ಆದರೂ ಅವರು ಇವನನ್ನೆದುರಿಸಿ ಯುದ್ಧಕ್ಕೆ ನಿಂತರು. ಇದನ್ನು ಕಂಡು ಅರ್ಜುನ ನು ತನ್ನ ವೀರಕ್ಷತ್ರಿಯ ಧರ್ಮವಾದ ಯುದ್ಧ ಮಾಡುವುದನ್ನು ಬಿಟ್ಟು ಅದಕ್ಕೆ ಬದಲು ಅವರಲ್ಲಿ ಅತ್ಯಂತ ಪ್ರೀತಿಯನ್ನೂ ಕರುಣೆಯನ್ನೂ ತೋರಿದನು. ಕರ್ತವ್ಯಲೋಪವನ್ನರಿಯದವನಾದನು. ಖಿನ್ನನಾಗಿ ಏನೂಮಾಡಲೂ ತೋಚದೆ, ಬೆಪ್ಪಾಗಿ, ಬಿಲ್ಲು ಬಾಣಗಳನ್ನು ಬಿಸುಟು, ರಥದಡಿಯಲ್ಲಿ ಸುಮ್ಮನೆ ಕುಳಿತನು. ಶ್ರೀಕೃಷ್ಣನನ್ನು ತನಗಿರುವ ಮೋಹ ತೊಲಗುವಂತೆ ಬೇಡಿದನು. ಆಗ ಪ್ರಪನ್ನನಾದ ಅರ್ಜುನನಿಗೆ ಜೀವ ಪರಮಾತ್ಮರ ಸ್ವರೂಪ ಸ್ವಭಾವಗಳನ್ನೂ, ಜೀವನು ಪರಮಾತ್ಮನನ್ನು ಪಡೆವ ಉಪಾಯವನ್ನೂ ಮತ್ತು ಪರಮ ಪುರುಷಾರ್ಥವನ್ನೂ ಮನವರಿಕೆಯಾಗುವಂತೆ ಸುಲಭವಾಗಿ ಬೋಧಿಸಿ, ಅವನನ್ನು ಕರ್ತವ್ಯನಿರತನನ್ನಾಗಿಯೂ, ಪರಮಜ್ಞಾನಿಯಾಗಿಯೂ, ವಿಜಯ ಗಳಿಸುವಂತೆಯೂ ಮಾಡಲು ಉಪದೇಶಿಸತೊಡಗಿದನು. बान्धव्यप्रीतिमन्तोऽप्युभयविरहिता स्सन्त आसन् तदा वै । कारुण्यस्नेहयो स्स्वा मिति मतिवहतो: मानसे धर्ममाने ॥ 560 ಶ್ರೀ ಗೀತಾರ್ಥ ಸಂಗ್ರಹಃ भीतेऽत्यन्तं प्रणम्य स्वचरण मयमाने च पार्थेऽथ तस्मै । तत्वं बोद्धुं स्मितास्यो गुरुमणि रुपयाति स्म नारायण स्सन् ॥ २ ಮೂಲ : ಉಡಲಮಳಿಡುಮುಳ್ಳುಯಿರೊನ್ನಳಿಯಾದೆನೈಸ್ಟೋಲ್, ವಿಡುಮದುಪತ್ತುವಿಡಾದದಡೈನ್ದಕಿರಿಶೈಹಳೇ, ಕಡುಹವುನಕ್ಕುಯಿರ್ ಕಾಟ್ಟುಂ ನಿನೈವದನಾಲುಳದಾಂ, ವಿಡುಮಯಲೆನ್ನು ವಿಶಯನೈ ತೇತ್ತಿನನ್ ವಿತಹನೇ ॥
3
ಅರ್ಥ :- ಉಡಲಂ : ಒಡಲು (ಶರೀರವು), ಅಳಿಡುಂ = ಅಳಿದುಹೋಗುವುದು ಉಳ್ = ಒಳಗಿರುವ, ಉಯಿರ್ = ಜೀವನು, ಒನು : ಒಂದು ಮಾತ್ರ, ಅಳಿಯಾದೆ = : = ನಾಶವಾಗದೆ, ಎನ್ನೆ-ಪೋಲ್ - ನನ್ನಹಾಗೆ ಇರುವುದು (ಅದು ಅನಿತ್ಯವು) ಅಟೈಂದ (ಶಾಸ್ತ್ರಬೋಧಿತವಾಗಿ) ಪ್ರಾಪ್ತವಾದ, ಕಿರಿಶೈಹಳ್ = ಕರ್ಮಗಳು, ವಿಡಾದದ್ : ಬಿಡತಕ್ಕವಲ್ಲ (ಮಾಡಲೇಬೇಕಾದುವು), ಪತ್ತು = ಸಂಗವು (ಸಂಬಂಧವು), ವಿಡುಮದ್ ಬಿಡಲ್ಪಡತಕ್ಕದ್ದು, ಅದನಾಲ್ = ನಿಷ್ಕಾಮಕರ್ಮಯೋಗದಿಂದ, ಉನಕ್ಕು : ನಿನಗೆ, ಉಯಿರ್ = ಆತ್ಮಸ್ವರೂಪವನ್ನು, ಕಾಟ್ಟುಂ = ಸಾಕ್ಷಾತ್ಕಾರ ಮಾಡಿಸುವ, ನಿನೈವು = ಧ್ಯಾನವು (ಸ್ಕೃತಿ ಸಂತತಿರೂಪವಾದ ಜ್ಞಾನಯೋಗವು), ಕಡುಹ : ಬೇಗನೆ, ಉಳದಾಂ = ಉಂಟಾಗುವುದು, ಮಯಲ್ - ಮೋಹವನ್ನು, ವಿಡು = ಬಿಡು, ಎನ್ನು = ಎಂದು, ವಿತಹನ್ ವಿಸ್ಮಯನೀಯ ಚರಿತನಾದ ಆ ಪರಮಾತ್ಮನು, ವಿಶಯನೈ - ವಿಜಯಶೀಲನಾಗುವ ಅರ್ಜುನನ್ನು, ತೇತ್ತಿನನ್ = ಆಶ್ವಾಸನಗೊಳಿಸಿದನು.
ತಾತ್ಪರ :- ನಿತ್ಯಾತ್ಯಾಸಂಗಕರ್ಮೇಹಾಗೋಚರಾ ಸಾಂಖ್ಯಯೋಗಧೀಃ ॥ ದ್ವಿತೀಯೇ ಸ್ಥಿರಧೀಲಕ್ಷಾ ಪ್ರೋಕ್ತಾತಹಶಾಂತಯೇ ॥’’ ಇದು ಎರಡನೆಯ ಅಧ್ಯಾಯದ ಸಾರಾಂಶ. ಅರ್ಜುನ ! ನಾನು ಸರ್ವೆಶ್ವರ, ಅಳಿವಿಲ್ಲದೆ ನಿತ್ಯವಾಗಿರುವೆನು. ಹೀಗೆಯೇ ಜೀವಾತ್ಮರೂ ನಿತ್ಯರು. ಇದರಲ್ಲಿ ಸಂಶಯಬೇಡ. ಆದರೆ ‘‘ಹುಟ್ಟಿದನು’’ ‘‘ಸತ್ತನು’’ ಎಂಬುದು ಹೇಗೆಂಬ ಪ್ರಶ್ನೆ ಇದೆ ಅದಕ್ಕೆ ಅವಕಾಶವಿಲ್ಲ, ಬಾಲ್ಯ, ಯೌವ್ವನ, ಮುಪ್ಪುಗಳು ಶರೀರದ ಧರ್ಮಗಳು. ಇವುಗಳನ್ನು ಒಂದಾದಮೇಲೊಂದನ್ನು ಜೀವನು ಅನುಭವಿಸುವಾಗ ಸತ್ತೆನೆಂದಾಗಲೀ, ಹುಟ್ಟಿದೆನೆಂದಾಗಲೀ ಅವನಿಗೆ ವ್ಯಥೆಯಾಗುವುದಿಲ್ಲ. ಕಾರಣ ಆತ್ಮ ನಿತ್ಯನಾಗಿರುವುದರಿಂದಲೇ ಅಲ್ಲವೆ, ಹಾಗೆಯೇ ಆತ್ಮನು ಒಂದು ದೇಹವನ್ನು ಬಿಟ್ಟು ತನ್ನ ಕರ್ಮಾನುಸಾರವಾಗಿ ಮತ್ತೊಂದನ್ನು ಪ್ರವೇಶಿಸುವ ಮತ್ತು ಬಿಡುವ ವ್ಯವಹಾರಗಳು. ಅದಕ್ಕೆ ಏವೇಕಿಯಾದವನು ಮರುಗುವುದಿಲ್ಲ. ಈಗ ಈ ಯುದ್ಧದಲ್ಲಿ ನಿನ್ನಿಂದ ಕೊಲ್ಲಲ್ಪಡುವ ಶ್ರೀ ಗೀತಾರ್ಥ ಸಂಗ್ರಹಃ 561 ರಂದಿರುವ ಈ ಜೀವರು ಸ್ವರ್ಗಕ್ಕೆ ಹೋಗಿ, ಉತ್ತಮ ದೇಹವನ್ನು ಹೊಂದಿ ಉತ್ತಮ ಸುಖಪಡುವರು. ಆದ್ದರಿಂದ ಶಾಸ್ತ್ರಗಳಿಂದ ಆತ್ಮಸ್ವರೂಪವನ್ನರಿತು ಕರ್ಮ ಮಾಡುವಾಗ ಅದರಫಲದ ಅಪೇಕ್ಷೆಯಿಲ್ಲದೆ ಭಗವತೇವಾ ದೃಷ್ಟಿಯಿಂದ ಮಾಡಬೇಕು. ಫಲಮಾತ್ರ ಬಿಟ್ಟು ಕರ್ಮಗಳನ್ನು ಬಿಡದೆ ಮಾಡಲೇಬೇಕು. ಯುದ್ಧವು ಕ್ಷತ್ರಿಯನಿಗೆ ವಿಹಿತಕರ್ಮ. ಧರ್ಮ ಯುದ್ದಕ್ಕಿಂತ ಬೇರೆ ಕರ್ಮ ನಿನಗಿಲ್ಲ, ಮಾಡು, ಅದರಿಂದ ಮುಕ್ತಿಯುಂಟು. ಕರ್ಮಯೋಗದಿಂದ ಮನಸ್ಸು ಶುದ್ಧವಾಗಿ ವಶವಾದಮೇಲೆ ಪರಮಾತ್ಮನಿಗೆ ಶರೀರವಾಗಿರುವ ಜೀವಾತ್ಮ ಸ್ವರೂಪವನ್ನು ಸದಾ ಚಿಂತಿಸುವುದರಿಂದ ಜ್ಞಾನಯೋಗವೂ ಸಿದ್ದಿಸಿ, ಆತ್ಮಸಾಕ್ಷಾತ್ಕಾರವೂ ಆಗುವುದು. ಆದ್ದರಿಂದ ಆತ್ಮಸ್ವರೂಪವನ್ನೂ ಮತ್ತು ಯುದ್ಧವೆಂಬ ಕರ್ಮಯೋಗವು ಆತ್ಮಸಾಕ್ಷಾತ್ಕಾರಕ್ಕೆ ಸಾಧನವೆಂಬುದನ್ನೂ ಅರಿತುಕೊಂಡು, “ದೇಹವೇ ಆತ್ಮಾ’’ ಎಂಬ ಅಜ್ಞಾನವನ್ನು ಬಿಡುವವನಾಗು ಎಂದು ಶ್ರೀಕೃಷ್ಣನು ಉಪದೇಶಿಸಿದನು. नश्यत्येव शरीर मन्त रुषितो जीव स्तु नाहं यथा । त्याज्य स्सङ्ग उपातकर्मनिकरो न त्याज्य एवाशु ते ॥ तस्मादात्मविबोधनस्मृतितति जयेत मोहं त्यजे- 1 त्युक्त्वा तं विजयं विचित्रचरितः श्रीश स्समाश्वासयत् ॥ ಮೂಲ : ಶಂಗಂತವಿರ್ಸ್ಥಶಗಂಶದಿ ಪೆತ್ತದನಂಜಯನೇ ! ಪೊಂಗುಂಗುಣಂಗಳ್ ಪುಣರ್ಪ್ಪತ್ತುಂ ಪುಹವಿಟ್ಟವೈತ್ತು, ನಂಕಣ್ಣನುರೈತಕಿರಿಶೈಯೆಲ್ಲಾ ಮೆನವುಂನವಿನಾರ್, ಎಂಗುಮರಿವಾರ್ಹಳೇಯೆನ್ನು ನಾತನಿಯಂಬಿನನೇ ti
m 4 ಅರ್ಥ :- ಶಗಂ = ಜಗತ್ತಿನಲ್ಲಿ ಶದಿ-ಪೆತ್ತ = ಸಾರಾಸಾರ ವಿವೇಕ ಚತುರನೆಂದು ಖ್ಯಾತಿ ಪಡೆದ, ಧನಂಜಯನೇ ! : ಅರ್ಜುನನೇ !, ‘‘ಶಂಗಂ : (ಕರ್ಮಫಲದ) ಸಂಬಂಧವನ್ನು, ತವಿರ್ನ್ಸ್ - ತ್ಯಜಿಸಿ, ಪೊಂಗುಂ - ಮೇಲೆ ಮೇಲೆ ಬರುವ, ಗುಣಂಗಳ್ - ಗುಣಗಳುಳ್ಳ, ಅನೈತ್ತು-ಪುಣರ್ಪ್ಪು - ಸಮಸ್ತ ಸಾತ್ವಿಕ ಕ್ರಿಯೆಗಳನ್ನೂ, ಅವೈತ್ತು = ಆ ಸಾತ್ವಿಕ ಗುಣಗಳಲ್ಲಿಯೇ, ಪುಹವಿಟ್ಟು = ಆರೋಪಿಸಿ, ಉರೈತ: ಶಾಸ್ತ್ರವಿಹಿತವಾದ, ಕಿರಿಶೈಯೆಲ್ಲಾಂ = ಕ್ರಿಯೆಗಳೆಲ್ಲವನ್ನೂ, ನಂ-ಕಣ್ = ನನ್ನಲ್ಲಿ ಎನ = ಎಂದು, ನವಿಸ್ರಾರುಂ - ಹೇಳಿದವರೂ ಸಹ, ಎಂಗುಂ - ಸತ್ವ ವಿಷಯದಲ್ಲಿಯೂ, ಅರಿವಾರ್ಹಳೇ - ಜ್ಞಾನಿಗಳು ತಾನೇ, ಎನ್ನು ಎಂದು, ನಾತನ್ - ಸ್ವಾಮಿಯಾದ ಶ್ರೀ ಕೃಷ್ಣನು, ಇಯಂಬಿನನ್ - ಹೇಳಿದನು.
ತಾತ್ಪರ :- ‘ಅಸತ್ಯಾಲೋಕರಕ್ಷಾಯ್ಕೆ ಗುಣೇಷ್ಯಾರೋಪ್ಯ ಕರ್ತೃತಾಂ | ಸಶ್ವೇಶ್ವರೇ ವಾನ್ಯ ಸ್ಕೋಕ್ತಾತೃತೀಯೇ ಕರಕಾರತಾ '’
562 ಶ್ರೀ ಗೀತಾರ್ಥ ಸಂಗ್ರಹಃ ‘‘ಕ್ಷತ್ರಿಯನಧರ್ಮ ಯುದ್ಧಮಾಡುವುದೇ ಹೊರತು ಬಿಡುವುದಲ್ಲ.’’ ಅರ್ಜುನ ! ಇಡೀ ಜಗತ್ತಿನಲ್ಲೇ ನಿನ್ನ ಕೀರ್ತಿ ಹರಡಿದೆ. ಕರ್ಮಯೋಗವನ್ನೇ ಆಚರಿಸು. ಆದರೆ ಫಲದೃಷ್ಟಿಯಿಡಬೇಡ. ನೇರವಾಗಿ ಜ್ಞಾನಯೋಗವನ್ನಾಚರಿಸಬಾರದು. ಕರ್ಮಯೋಗವಿಲ್ಲದೆ ಜ್ಞಾನಯೋಗ ಸಿದ್ಧಿಸದು. ಪ್ರಳಯ ಕಾಲಬಿಟ್ಟು ಉಳಿದ ಎಲ್ಲ ಕಾಲದಲ್ಲಿಯೂ ಸಕಲ ಜೀವರೂ ಏನಾದರೊಂದು ಮಾಡುತ್ತಲೇ ಇರುವರಲ್ಲವೆ ? ಇಲ್ಲವೆಂದರೆ ಬದುಕುವುದೇ ಕಷ್ಟವಾಗುವುದಲ್ಲವೇ ? ನಿನ್ನಂತಹ ಕರ್ಮಯೋಗಾಧಿ ಕಾರಿಯು ಅದನ್ನು ಬಿಟ್ಟು ಸಾಕ್ಷಾತ್ ಜ್ಞಾನಕ್ಕೆ ಯತ್ನಿಸುವುದಾದರೆ ಅನಧಿಕಾರಿಗಳೂ ಮಾಡಲು ತೊಡಗಿ ವೃಥಾ ಹಾಳಾಗುವರು. ಆ ದೋಷವು ನಿನ್ನಂತಹವರಿಗೆ ತಟ್ಟದೆ ಬಿಡದು. ಸತ್ವಾದಿ ಗುಣಗಳೇ ಹಾಗೆ ಕರ್ಮವನ್ನು ಮಾಡಿಸುತ್ತವೆಯೆಂದಾಗಲೀ, ಜೀವಾತ್ಮನೇ ಈ ಗುಣಗಳಿಗೆ ವಶನಾಗಿ ಮಾಡುವನೆಂದಾಗಲಿ ಹೇಳಿದರೂ ಆಗಲೂ ಆಯಾ ಕರ್ಮಫಲ ಸಂಗವನ್ನು ಬಿಟ್ಟು ಭಗವನ್ನುಸೋಲ್ಲಾಸಕ್ಕಾಗಿ ಮಾಡುವೆನೆಂದೇ ಮಾಡಬೇಕು. ಹೀಗೆ ಆಚರಿಸುವವರೇ ಜ್ಞಾನಿಗಳು. ಈ ವಿಷಯವನ್ನೇ ಶಾಸ್ತ್ರಗಳೂ ಮೊಳಗುವುದು. ಸಮಸ್ತವನ್ನೂ ಪರಮಾತ್ಮನೇ ತನ್ನ ಸಂಕಲ್ಪಕ್ಕನುರೂಪವಾಗಿ ತನ್ನ ಸಂತೋಷಕ್ಕಾಗಿಯೇ ಆಯಾ ಚೇತನನನ್ನು ಸಾಧನವನ್ನಾಗಿ ಮಾಡಿಕೊಂಡು ಮಾಡಿಸುವನೆಂದು ತಿಳಿ. ನಿನಗೆ ಯಾವ ಪಾಪಲೇಪವೂ ಅಂಟುವುದಿಲ್ಲ. ಇವೇ ಮೊದಲಾಗಿ ಮೂರನೆಯ ಅಧ್ಯಾಯದಲ್ಲಿ ಉಪದೇಶಿಸಿ, ಕರ್ಮಯೋಗವನ್ನುಪದೇಶಿಸಿ, ಅರ್ಜುನನ್ನು ಕರ್ತನ್ಮುಖನನ್ನಾಗಿ ಮಾಡಿದನು. “सारासारज्ञ एक चतुरमतिरिति ख्यातिपात्रार्जुनात्र । त्यक्त्वा सङ्गं समुद्यद्गुणकृतिमखिलां सत्वं आरोपय त्वम् ॥ सर्वाण्युक्तानि कर्माण्यपि मयि विनिवेश्यानि चेत्यब्रुवन् ये । सर्वत्र ज्ञानिन स्तेऽप्यतिशययशस” चेति नाथो जगाद ॥ ಮೂಲ ಪಿರವಾಮೃತನ್ನಿಡತಾನೇಪಿರಕ್ಕುಂ ಪೆರುಮೈಹಳು, ತುರುವಾರಿಶೈಹಳಯ್ತಿತನ್ನಾಲ್ ತುಲಂಗುಹೈಯುಂ, ಇರವಾವುಯಿರ್ನಿಲೈಯುಂ ಕಂಡಿಡುಮುಲಹಿನ್ನಿಲೆಯುಂ, ಮರೈವಾಳಿಮಾಯವನೇಯನಕ್ಕಿನರಿವಿತ್ತನನೇ ॥
5 ಅರ್ಥ :- ಮರೈ-ವಾಳು : ವೇದಗಳಲ್ಲಿ ಬೆಳಗುವಂತಹ, ಮಾಯವನೇ : ತನ್ನ ಸಂಕಲ್ಪದಿಂದಲೇ ವಿಧವಿಧವಾಗಿ ಅವತರಿಸುವ ಪರಮಾತ್ಮನೇ, ಪಿರಿವಾಯ್ಕೆ : ಮತ್ತೆ ಜನಿಸದೇ ಇರುವುದನ್ನು, ತಂದಿಡ = ಕೊಡುವುದಕ್ಕಾಗಿ (ಮೋಕ್ಷವನ್ನು ಕೊಡುವುದಕ್ಕೆ), ತಾನೇ = ಸಮಸ್ತಗುಣಭೂಷಿತನಾದ ತಾನೇ, ಪಿರಕ್ಕುಂ-ಪೆರುಮೈಹಳುಂ - ಅವತರಿಸುವ
ಶ್ರೀ ಗೀತಾರ್ಥ ಸಂಗ್ರಹಃ 563 ಮಾಹಾತ್ಮ ಗಳನ್ನೂ, ತುರವಾ : ಬಿಡಬಾರದಾದ, ಕಿರಿಶೈಹಳ್ : ಕರ್ಮಗಳು, ತೂಯ್-ಮತಿಯಾಲ್ = ಪರಿಶುದ್ಧವಾದ ಜ್ಞಾನದಿಂದ, ತುಲಂಗುಹೆಯುಂ : ನಿರ್ಮಲವಾಗುವುದನ್ನೂ, ಇರವಾ = ನಶಿಸಿದ, ಉಯಿರ್ - ಆತ್ಮನ, ನಿಲೈಯುಂ - ನಿಷ್ಠೆಯ ಮಾರ್ಗವನ್ನೂ ಕಂಡಿತುಂ = ತಿಳಿಯುವಂತಹ, ಉಲಹಿನ್ = ಲೋಕದ, ನಿಲೈಯುಂ ಸ್ಥಿತಿಯನ್ನೂ, ಎನಕ್ಕು : (ಮೋಹಗೊಂಡಿದ್ದ ನನಗೆ, ಇನ್ನು - (ಸದಾಚಾರಕಟಾಕ್ಷ ಪಡೆದ) ಈ ದಿನ, ಅರಿವಿತ್ತನನನ್ - ಅರಿಯುವಂತೆ ಮಾಡಿದನು.
ತಾತರ :- ಪ್ರಸಂಗಾತೃಸ್ವಭಾವೋಕ್ತಿ ಕರ್ಮಕರ್ಮತಾಸ್ಯಚ | ಭೇದೋಜ್ಞಾನಸ್ಯ ಮಾಹಾತ್ಮಂ ಚತುರ್ಥಿ ಧ್ಯಾಯ ಉಚ್ಯತೇ ॥’’ ಸಕಲ ವೇದ್ಯನೂ, ಸಮಸ್ತ ಚೇತನರನ್ನು ರಕ್ಷಿಸಲು ತಾನೇ ತನ್ನ ಸಂಕಲ್ಪದಿಂದ ವಿವಿಧವಾಗಿ ಅವತರಿಸುವವನೂ, ಆದ ಆ ಪರಮಾತ್ಮನೆಂಬುದನ್ನೂ, ತನ್ನನ್ನಾಶ್ರಯಿಸಿದ ಜೀವರು ಮತ್ತೊಮ್ಮೆ ಜನಿಸದೇ ಮುಕ್ತಿಯನ್ನು ಪಡೆಯುವಂತಾಗಲೆಂದು ತನ್ನ ಅವತಾರಮಹಿಮೆಯನ್ನೂ ಅವರವರಿಗೆ ಉಚಿತವಾದ ಕರ್ಮವನ್ನು ಬಿಡದೇ ಮಾಡಬೇಕೆಂಬುದನ್ನೂ, ಹಾಗೆ ಮಾಡುವ ಕರ್ಮವೂ ಸಹ ಫಲಸಂಗವಿಲ್ಲದೇ ಮಾಡಿದರೇನೇ ಪರಿಶುದ್ಧವಾಗುವುದೆಂಬುದನ್ನೂ, ನಿತ್ಯರಾದ ಜೀವಾತ್ಮರ ನಿಷ್ಠೆಯನ್ನು ಅರಿಯುವ ಲೋಕದ ಸ್ಥಿತಿಯನ್ನೂ ಸಹ ಸದಾಚಾರರೂಪಿಯಾದ ಶ್ರೀಕೃಷ್ಣನು ತನ್ನ ಕೃಪಾಕಟಾಕ್ಷಕ್ಕೆ ಪಾತ್ರನಾದ ಅರ್ಜುನನಿಗೆ ಉಪದೇಶಿಸುವನು. (ಇದು 4ನೇ ಅಧ್ಯಾಯ) मायावी वेदजीवी वितरितु मपुनर्जन्मभावं मुकुन्दः । स्वाविर्भावानुभावान् स्वय मिह निखिलावर्ण्यकर्माणि चैव ॥ शुद्धज्ञानात्तशुद्धीन्यपि हतिरहितात्मस्थितिं लोकनिष्ठाम् । एवं प्रावेदयन्मे सुविशद मधुनाचार्यसम्प्रेक्षिताय ! ಮೂಲ : ಕಂಡಳಿತಾಂ ಕರುಮಮುಯಿರ್ ಕಾಟ್ಟುಂ ಕಡುಹುದುಂ | ಮಂಡಿಯ ತನ್ನಡಿಯಿಲ್ ಮನಂಕೊಳ್ಳು ವರಿಶೈಹಳು, ಕಂಡರಿಯಾವುಯಿರೈಕಾಣಲುತ್ತ ನಿನೈವುಹಳುಂ, ವಣ್ಣುವರೀಶನಿಯಂಬಿನನ್ ವಾಶವನ್ ಮೈಂದನುಕ್ಕೇ ॥
6 ಅರ್ಥ :- ಕಂಡ್ - ಅರಿತರೆ, ಎಳಿದಾಂ : ಸುಖಕರವಾದ, ಕರುಮ೦ ಕರ್ಮಯೋಗವು, ಉಯಿರ್ - ಆತ್ಮವನ್ನು, ಕಾಟ್ಟುಂಕಡುಹುದುಂ = ತೋರಿಸುವ ಶೀಘ್ರತೆಯನ್ನೂ, ಅದನ್ನಡಿಯಿಲ್ = ಆ ಯೋಗದ ಪ್ರಕಾರಗಳಲ್ಲಿ ಮಂಡಿ = ಬಹಳ ಆ 564 ಶ್ರೀ ಗೀತಾರ್ಥ ಸಂಗ್ರಹಃ
- ಆಸಕ್ತನಾಗಿ, ಮನಂ = ಮನಸ್ಸನ್ನೂ, ಕೊಳ್ಳುಂವರಿಶೈಹಳುಂ = ಇರಿಸುವ ಕರ್ಮಗಳನ್ನೂ, ಕಂಡರಿಯಾ = ಎಂದೂ ನೋಡಲಾಗದ ಉಯಿರೈ : ಆತ್ಮನನ್ನು, ಕಾಣಲ್-ಉತ್ತ
- ನೋಡುವುದನ್ನು ಹೊಂದಿದ, ನಿನೈವುಹಳುಂ : ಜ್ಞಾನಗಳನ್ನೂ, ವಾಶವನ್ = ಇಂದ್ರನ, ಮೈಂದನುಕ್ಕು : ಮಗನಿಗೆ (ಅರ್ಜುನನಿಗೆ) ವಣ್ = ಸುಂದರವಾದ, ತುವರ್ : ಈಶನ್ - ಪ್ರಭುವಾದ ಗೀತಾಚಾರನು, ಇಯಂಬಿನನ್ - ಹೇಳಿದನು.
- ದ್ವಾರಕೆಗೆ, ತಾತ್ಪರ :- “ಕರ್ಮಯೋಗಸ್ಯಸೌಕರ್ಯ೦ ಶೈಫಂ ಕಾಶ್ಚಗತದ್ವಿಧಾಃ | ಬ್ರಹ್ಮಜ್ಞಾನಪ್ರಕಾರಶ್ಚಪಂಚಮೇಧ್ಯಾಯ ಉಚ್ಯತೇ ॥’’ ಜ್ಞಾನಯೋಗಕ್ಕಿಂತ ಕರ್ಮಯೋಗವು ಸುಲಭ, ಫಲವೂ ಬೇಗ ಲಭಿಸುವುದು. ಶಾಸ್ತ್ರವಿಹಿತವಾದುದನ್ನು ಭಗವತ್ತೇವೆಯೆಂದು ಮಾಡುವುದರಿಂದ ರಜಸ್ತಮೋಗುಣಗಳು ಹೋಗಿ, ಮನಸ್ಸು ತಿಳಿಗೊಳ್ಳುವುದು. ಮನವು ಶುದ್ಧವಾಗುವುದರಿಂದ ಇತರ ಇಂದ್ರಿಯಗಳು ವಿಧೇಯವಾಗುವುವು. ನಿಜವಾದ ಆತ್ಮಸ್ವರೂಪವನ್ನು ಬಲ್ಲವನು ಇತರ ಎಲ್ಲಾ ಆತ್ಮಗಳ ಸ್ವರೂಪವೂ ಒಂದೇ ರೀತಿಯಾದುದು ಎಂದರಿಯುವನು. ಇದರಿಂದಾಗಿ ಆತ್ಮಸಾಕ್ಷಾತ್ಕಾರವೂ ಸುಲಭವಾಗುವುದು. ಇಂದ್ರಿಯಗಳೂ, ಪ್ರಾಣಗಳೂ ಕರ್ಮಸಂಬಂಧದಿಂದ ಜೀವನಿಗೆ ಸಹಕರಿಸುತ್ತವೆ. ಅವು ಮಾಡುವುದನ್ನು ಜೀವನೆಂದು ತಿಳಿಯಬಾರದು. ಸದಾಚಾರ್ಯರ ಉಪದೇಶದಿಂದ ಜೀವನು ತನ್ನ ಸ್ವರೂಪ ವನ್ನರಿಯಬೇಕು. ಶರೀರಗಳು ವಿಧವಿಧವಾಗಿದ್ದರೂ ಅವುಗಳಲ್ಲಿರುವ ಆತ್ಮರು ಸಮಾನರು ಅಂದರೆ ಜ್ಞಾನಸ್ವರೂಪರೂ, ಜ್ಞಾನಗುಣಕರೂ ಆಗಿ ಒಂದೇ ವಿಧವಾದವರೆಂಬುದು ದೃಢಪಡಿಸುವುದು. ಇದನ್ನೇ 5ನೇ ಅಧ್ಯಾಯದಲ್ಲಿ ವಿವರಿಸಿರುವುದು. आत्मालोके च शैध्यं सुविदितसुकरोपात्तकर्मोदितं तत् । संसक्त स्तप्रकारोष्वधिकमपि मनः प्रापिका स्ताः क्रियाश्च ॥ दुष्प्रेक्ष्यामावलोकीकरणपरिकरज्ञानयोगप्रकारान् । रम्याया द्वारकाया अधिपति वदद्वासवस्यात्मजाय ॥ ६ ಮೂಲ : ಯೋಗಮುಯರ್ಚಿಯುಂ ಯೋಗಿ ಸಮನಿಲೈನಾಲ್ವಹೈಯುಂ, ಯೋಗಿನುಪಾಯಮುಂ ಯೋಗುತನ್ನಾಲ್ವರುಂ ಪೊರುಳು, ಯೋಗುತನಿಲ್ರ್ತತಿರಮಡೈಯೋಗುತನ್ನುಕ್ಕಿಯಮುಂ, ನಾಕಣೆಯೋಗಿನವಿನನನ್ ನನ್ನುಡಿವೀರನುಕ್ಕೇ ॥
7 ಅರ್ಥ:- ಯೋಗ - ಯೋಗದ, ಮುಯರಿಯುಂ = ಅಭ್ಯಾಸವನ್ನೂ, (ಜ್ಞಾನ ಕರ್ಮಯೋಗ ಸಾಧ್ಯವಾದ ಆತ್ಮಾವಲೋಕನರೂಪ ಯೋಗಾಭ್ಯಾಸವನ್ನು) ಯೋಗಿಲ್
ಶ್ರೀ ಗೀತಾರ್ಥ ಸಂಗ್ರಹಃ
ಯೋಗದಲ್ಲಿರುವ, ನಾಲ್ವಹೈ - ನಾಲ್ಕು ವಿಧವಾದ, ಸಮ-ನಿ : ಸಮವಾದ ನಿಷ್ಠೆಯನ್ನೂ, ಯೋರ್ಗಿ-ಉಪಾಯಮುಂ : ಯೋಗದ ಸಾಧನಗಳನ್ನೂ, ಯೋಗುತನ್ನಾಲ್ -ವರುಂ : ಯೋಗದಿಂದ ಸಿದ್ಧಿಸುವ, ಪೊರುಳುಂ = ಫಲಗಳನ್ನೂ, ಯೋಗು-ತನಿಲ್ - ಯೋಗಗಳಲ್ಲಿ ತನ್-ರಂ-ಉಡೈ - ತನ್ನನ್ನೇ ವಿಷಯವಾಗಿಟ್ಟು ಕೊಂಡಿರುವ, ಯೋಗು ತನ್ -ಮುಕ್ಕಿಯಮುಂ .. ಯೋಗದ ಮುಖ್ಯತೆಯನ್ನೂ, ನಲ್ -ಮುಡಿ = ಒಳ್ಳೆಯ ಕಿರೀಟಧರನಾದ, ವೀರನುಕ್ಕು = ವೀರನಾದ ಅರ್ಜುನನಿಗೆ, ನಾಕಣೆ -ಯೋಗಿ - ನಾಗಶಯನ ಯೋಗಿಯೆನಿಸಿದ ಪರಮಾತ್ಮನು, ನವಿನನನ್ ಉಪದೇಶಿಸಿದನು.
ತಾತ್ಪರ :- “ಯೋಗಾಭ್ಯಾಸವಿಧಿರ್ಯೋಗೀ ಚತುರ್ಧಾಯೋಗಸಾಧನಂ । ಯೋಗಸಿದ್ಧಿಯೋಗಸ್ಯಪಾರಮ್ಯಂ ಷಷ್ಠ ಉಚ್ಯತೇ ॥’’ ಜ್ಞಾನಕರ್ಮ ಸಾಧ್ಯವಾದ ಆತ್ಮಾವಲೋಕನರೂಪವಾದ ಯೋಗವನ್ನು ವಿಹಿತಸಮಯದಲ್ಲಿ ವಿಧಿಸಿರುವಂತೆ ಆಚರಿಸಬೇಕು. ಸಮದರ್ಶನ ನಿಷ್ಠೆಯು ನಾಲ್ಕು ವಿಧವಾಗಿದೆ. ಜೀವಾತ್ಮನು ಪ್ರಕೃತಿಸಂಬಂಧವಿಲ್ಲದ ಶುದ್ದದೆಸೆಯಲ್ಲಿ ಜ್ಞಾನಸ್ವರೂಪನಾಗಿ ತೋರುವನು. ಇದರಿಂದ ಇತರ ಜೀವರೂ ಹೀಗೆಯೇ ಎಂಬ ಸಾಮ್ಯದರ್ಶನದ ಪರಿಪಕ್ವತೆಯುಂಟಾಗುವುದು. ಪುಣ್ಯ ಪಾಪಗಳನ್ನು ನೀಗಿಕೊಂಡು ಈಶ್ವರ ಸಾಮ್ಯತೆಯನ್ನು ಪಡೆಯುವನು. ಎಲ್ಲರೂ ಹೀಗೆಯೇ ಎಂದು ಎಲ್ಲ ಜೀವರಲ್ಲೂ ಸಮಾನತೆ ಮೂಡುವುದು. ಕರ್ಮಸಂಬಂಧವಿಲ್ಲದೆಯೂ ಜ್ಞಾನ ಸಂಕೋಚವಿಲ್ಲದೆಯೂ ಈಶ್ವರನಿಗೆ ಅಪೃಥಕ್ತಿದ್ದ ವಿಶೇಷಣರೂಪನಾಗಿ ಸಮದರ್ಶಿಯಾಗುವನು. ಸುಖದುಃಖಗಳೆರಡರಲ್ಲೂ ಸಮಾನ ಜ್ಞಾನವುಳ್ಳವನಾಗಿ, ದೋಷವನ್ನು ಬಿಟ್ಟು ವೈರಾಗ್ಯ ಪಡೆದು ಫಲ ಹೊಂದುವನು. ಹೀಗೆ ಸಾಧನಗಳನ್ನೂ, ಯೋಗಸಿದ್ಧಿಯಾಗಿ ಬರುವ ಫಲವಿಶೇಷವನ್ನೂ, ಅದರಲ್ಲೂ ಆ ಯೋಗ ತನ್ನನ್ನೇ ಕುರಿತು ಆದರೆ ಅತಿಶಯ ಮಹಿಮೆಯುಳ್ಳದಾಗುವುದೆಂಬುದನ್ನೂ ವಿಶದವಾಗಿ 6ನೆಯ ಅಧ್ಯಾಯದಲ್ಲಿ ಅರ್ಜುನನಿಗೆ ಉಪದೇಶಿಸಿರುನು ಪರಮಾತ್ಮ ಶ್ರೀಕೃಷ್ಣ. योगाभ्यासं प्रभेदांश्चतुर इह समानस्थितींश्चापि योगे । योगोपायांश्च योगादधिगतपरमार्थांश्च योगेषु तेषु ॥ स्वात्मोद्देशैकयोगं सकलजनहितं मुख्यतां योगनिष्ठाम् । वीराग्रण्ये त्ववोचद्वरमकुटभृते भोगिपर्यङ्कयोगी ॥ ಮೂಲ : ತಾನಿನವುಣ್ಣೆಯ ರ್ತತನಿಮಾಯ್ಕೆಮರೆತನವು, ತಾನಮಾಚೈತನೈ ತವಿರ್ಪಾನ್ರಹತ್ತಮೈಯುಂ,566 ಶ್ರೀ ಗೀತಾರ್ಥ ಸಂಗ್ರಹಃ ಮೇನಿನ ಬತ್ತರ್ಹಳ್ ನಾಲ್ವರಿಲ್ ಜ್ಞಾನಿರ್ತಮೇಹಳುಂ, ತೇನಿನಳಲಾನ್ ತೆಳಿವಿತನನ್ ಪಾರ್ತನು ॥
ಅರ್ಥ :- ತೇನ್ = ಮಧುರರಸವು, ನಿನ್ನ ಮಧುರರಸವು, ನಿನ್ನ = ಭರಿತವಾದ, ಶಂ-ಕಳಲಾನ್ ಅರುಣಿತ ಚರಣನಾದ ಪರಮಪುರುಷಾರ್ಥನು, ತಾನ್ - ತಾನು, ನಿನ್ನ : ಇರುವ, ಉಯ್ಯ = ಯಥಾರ್ಥತೆಯನ್ನೂ, ರ್ತ : ತನ್ನ, ತನಿ = ಅಸದೃಶವಾದ, ಮಾಯ್ಕೆ ಪ್ರಕೃತಿಯ, ಮರೆತನವುಂ - (ತೆರೆಯಂತೆ) ಮರೆಸುವಿಕೆಯನ್ನೂ, ಮಾಯ್-ತನೈ : ಆ ಮಾಯೆಯನ್ನು (ದಾಟಲು) ತಾನ್, ಅನ್ನಿ - ತಾನೇ ಅಲ್ಲದೆ, ವಿರಹು - ಬೇರೆ ಉಪಾಯವು, ಅತ್ತಮೈಯುಂ - ಇಲ್ಲದಿರುವುದನ್ನೂ, ಮೇಲ್ -ನಿನ್ನ : ಮೇಲಾದವರೆಂದೆನಿಸಿಸುವ, ನಾಲ್ವರ್ -ಬತ್ತರ್ ಹಳಿಲ್ : ನಾಲ್ಕುವಿಧ (ಆರ್ತ, ಜಿಜ್ಞಾಸು, ಅರ್ಥಾರ್ಥೀ, ಜ್ಞಾನೀ) ಭಕ್ತರಲ್ಲಿ ಞಾನಿ-ತನ್ = ಜ್ಞಾನಿಯ, ಮೇಹಳುಂ : ಪ್ರಭಾವಗಳನ್ನೂ, ಪಾರ್ತನುಕ್ಕು - ಅರ್ಜುನನಿಗೆ, ತೆಳಿವಿತ್ತನನ್ - ವಿಶದವಾಗಿ ತಿಳಿಸಿದನು.
ತಾತ್ಸರ :- ‘ಸ್ವಯಾಥಾತ್ಮ ಪ್ರಕೃತ್ಯಾ ಸ್ವತಿರೋಧಿಶರಣಾಗತಿಃ | ಭಕ್ತಭೇದಃಪ್ರಬುದ್ಧಸ್ಯ ಶ್ರೇಷ್ಠಂ ಸಪ್ತಮ ಉಚ್ಯತೇ ॥ ಪರಬ್ರಹ್ಮನೂ, ಉಪಾಸ್ಯನೂ, ಸಮಸ್ತ ಶೇಷಿಯೂ, ಸರ್ವ ಕಾರಣನೂ, ಸರ್ವಾಧಾರನೂ, ಸರ್ವಶರೀರಿಯೂ ಸರ್ವಪ್ರಕಾರವಾಗಿಯೂ ಆಗಿರುವುದರಿಂದ ಸರ್ವಶಬ್ದವಾಚ್ಯನೂ, ಸರ್ವ ನಿಯಾಮಕನೂ, ಸಮಸ್ತ ಕಲ್ಯಾಣಗುಣನಿಧಿಯೂ ಆದ ಪುರುಷೋತ್ತಮನು ಶ್ರೀ ವಾಸುದೇವನೇ ; ಬೇರೆಯಲ್ಲ, ಇದೇ ಅವನ ಯಾಥಾತ್ಮ, ಅರಿವು ತಿಳಿಗೊಂಡರೆ ಸಕಲಚೇತನರೂ ಉಜೀವಿತರಾಗುವರು. ಈ ಸತ್ವರಜಸ್ತಮೋಮಯವಾಗಿ ದೇಹೇಂದ್ರಿಯರೂಪವಾಗಿಯೂ, ಭೋಗ್ಯ ವಾಗಿಯೂ, ಅನಾದಿಕಾಲದಿಂದ ಪ್ರವೃತ್ತವಾದ ದುಷ್ಕೃತಪ್ರವಾಹಕ್ಕೆ ಕಾರಣವಾಗಿಯೂ, ಪರಮಾತ್ಮನಿಗೆ ಶೇಷಭೂತವಾಗಿಯೂ, ಅವನ ವಿಚಿತ್ರ ಸೃಷ್ಟಿಗೆ ಉಪಕರಣವಾಗಿಯೂ ಇರುವ ಭಗವನ್ಮಾಯೆಯೆಂಬ ಪ್ರಕೃತಿಯೇ ಮೇಲೆಹೇಳಿದ ಭಗವದ್ಯಾಥಾತ್ಮವನ್ನು ಮರೆಮಾಡುವುದು. ಈ ಮರೆಸುವ ಮಾಯೆಯನ್ನು ದಾಟಿ ಪರಮಾತೋಪಾಸನೆ ಮಾಡಲು ಇರುವ ಸಾಧನವೆಂದರೆ ಅವರ ಅಡಿದಾವರೆಗಳಲ್ಲಿ ಶರಣುಹೋಗುವುದೊಂದೇ ಮತ್ತಾವುದರಿಂದಲೂ ಅದು ನಿವೃತ್ತಿಯಾಗುವುದಿಲ್ಲ. ಈರೀತಿ ಶರಣಾಗತರಾಗಿ ಉಪಾಸನೆ ಮಾಡುವವರು ನಾಲ್ಕುವಿಧವಾಗಿರುವರು. ಅವರಲ್ಲಿ ಭಗವದನುಭವವನ್ನೇ ಪರಮಫಲವಾಗಿ ಕೊಂಡಿರುವ ಜ್ಞಾನಿಯೆಂದೆನೆಸಿ ಶ್ರೀ ಗೀತಾರ್ಥ ಸಂಗ್ರಹಃ 567 ಕೊಂಡವನೇ ಎಲ್ಲರಿಗಿಂತ ಅತ್ಯುತ್ತಮನು. ಹೀಗೆ ಈ ವಿಷಯಗಳನ್ನು 7ನೆಯ ಅಧ್ಯಾಯದಲ್ಲಿ ತಿಳಿಯಾಗಿ ಉಪದೇಶಿಸಿರುವನು ಆ ಕರುಣಾಮಯ ಪರಮಾತ್ಮ ಶ್ರೀಕೃಷ್ಣ. याथार्थ्यं स्वीय मात्मप्रकृतिनिरुपमाच्छादकत्वं च तां च । माया मात्मैकतार्यां समधिकचतुरात्मीयभक्तेषु तेषु ॥ “ज्ञानी त्वात्मैव मे” हीत्यसदृशमहिमोत्कर्षतां ज्ञानिन श्व । माध्वी पूर्णारुण श्रीचरण उपदिदेशात्र पार्थाय शौरिः । ಮೂಲ : ಆರಾದಶೆಲ್ವಮುಮಾರುಯಿರ್ ಕಾಣುಮರುಂಪಯನುಂ, ಪೇರಾದು ತನ್ನಳಲ್ ಕೀಳಮರುಂ ಪೆರುವಾಳ್ಚಿಹಳು, ಶೋರಾದುಹಂದವರ್ ತೂಮತಿಕೊಳ್ಳದುಂ ಶೆಯ್ವನವುಂ, ತೋರಾವಿಶಯನುಕ್ಕುತ್ತಿರುನಾರಣನ್ ಶೆಪ್ಪಿನನೇ ॥
ಅರ್ಥ :- ತಿರುನಾರಾಯಣನ್ - ಶ್ರೀಮನ್ನಾರಾಯಣನು, ಆರಾದ = ತೃಪ್ತಿಯಾಗದ, ಶೆಲ್ವಮುಂ = ಐಶ್ವರವನ್ನೂ, ಆರ್ = ತೃಪ್ತಿಕರವಾದ, ಉಯಿರ್ : ಆತ್ಮನನ್ನು, ಕಾಣುಂ = ಸಾಕ್ಷಾತ್ಕರಿಸುವಂತಹ, ಅರುಂ - ದುರ್ಲಭವಾದ, ಪಯನುಂ = ಫಲವನ್ನೂ, ಪೇರಾದ = ಪುನರ್ಜನ್ಮವಿಲ್ಲದಂತಹ, ರ್ತ-ಕಳಲ್ -ಕೀಳ್ : ತನ್ನ ಪಾದಗಳಡಿಯಲ್ಲಿ ಅಮರುಂ = ಹೊಂದಿಕೊಂಡು ಸೇವಿಸುವಂತಹ, ಪೇರು-ವಾಳ್ಚಿಹಳುಂ ಈ ಮಹಾ ಪುರುಷಾರ್ಥಗಳನ್ನೂ, ಶೋರಾದು : ಅನವರತವೂ, ಉಹಂದವರ್ = ಆಸೆಪಡುವವರು, ಶೆಯೌವನವು : ಅನುಷ್ಠಿಸತಕ್ಕವನ್ನೂ, ತೋರಾ - ಯಾರಿಗೂ ಸೋಲದ, ವಿಶಯನುಕ್ಕು = ಅರ್ಜುನನಿಗೆ, ಶೆಪ್ಪಿನನ್ - ಹೇಳಿದನು.
ತಾತ್ವರ :- ‘ಐಶ್ವಯ್ಯಾಕ್ಷರ ಯಾಥಾತ್ಮ ಭಗವಚ್ಚರಣಾರ್ಥಿನಾಂ | ವೇದ್ಯೋಪಾದೇಯ ಭಾವಾನಾಮಷ್ಟಮೇ ಭೇದ ಉಚ್ಯತೇ ।’ ಇಂದ್ರ, ಬ್ರಹ್ಮ, ರುದ್ರಾದಿ ದೇವತೆಗಳ ಭೋಗಕ್ಕಿಂತ ಮೇಲಾದ ಭೋಗವೆಂಬ ಐಶ್ವರವನ್ನೂ, ಪ್ರಕೃತಿಯ ಸಂಬಂಧವನ್ನೂ ನೀಗಿಕೊಂಡು, ಪರಿಶುದ್ಧವಾದ ಆತ್ಮ ಸ್ವರೂಪ ಸಾಕ್ಷಾತ್ಕಾರವೆಂಬ ಕೈವಲ್ಯವನ್ನೂ ಮತ್ತು ಪರಮಪುರುಷನಾದ ಶ್ರೀಮನ್ನಾರಾಯಣನ ಅಡಿದಾವರೆಗಳನ್ನೂ ಕ್ಷಣಕಾಲವೂ ಬಿಟ್ಟಿರದ ಸತ್ರ, ಸತ್ವದಾ ಸಾವಸ್ಥೆಯಲ್ಲೂ ಸಕಲ ವಿಧ ಕೈಂಕಯ್ಯಗಳನ್ನೂ ಮಾಡಬಹುದಾದ ಸನ್ನಿವೇಶವೆಂಬ ಮೋಕ್ಷವನ್ನೂ ಇಚ್ಛಿಸುವ ಭಗವದ್ಭಕ್ತರು ತಿಳಿಯಬೇಕಾದ ಮತ್ತು ಕೈಗೊಳ್ಳಬೇಕಾದುವನ್ನೂ, ಅವರವರ ಇಷ್ಟಫಲಾನು ರೂಪವಾದ ಪರಮಪುರುಷನ ಚಿಂತೆ-ಚರಮ ದೆಸೆಯಲ್ಲಿನ ಸ್ಕೃತಿ, ಮತ್ತು ಗತಿಚಿಂತನಾದಿ ಗಳನ್ನೂ ಆಯಾ ಅಧಿಕಾರಾನುಗುಣವಾಗಿ 8ನೇ ಅಧ್ಯಾಯದಲ್ಲಿವಿಶದವಾಗಿ ಉಪದೇಶಿಸಿರುವನು. 568 ಶ್ರೀ ಗೀತಾರ್ಥ ಸಂಗ್ರಹಃ ऐश्वर्यं चानलंधीकरमखिलमलंबुद्धिपूर्णं फलं तत् । दुप्प्रापं चात्मसाक्षात्कृतिमदनुभवं वीतभूयोभवं च ॥ सेवास्स्वांघ्यो रधस्तादभिलषितसदासेवनेन्छानुरूपाः । श्रीमन्नारायणोऽस्मा अविजितविजयायाह सर्वानुकम्पी ॥ ಮೂಲ : ತನ್ಮನೈಯುಂ ರ್ತಪಿರಪ್ಪಿಲ್ ತಳರಾನಿಮೆಯ್ಕೆಯುಂ, ಪನಿ ನಣ್ಣಿನಾಲ್ ಪಿರಿಯಾವನ್ನರಾಶೆಹಳು, ಪುನಿ ವಿಣ್ಣವರ್ ಪಾಲ್ ಪುರಿಯಾದತನ್ನತಿಯ್ಕೆಯುಂ, ನನ್ನೇನಿ ನಾರಣನ್ತಾನ್ ನರನುಕ್ಕು ನವಿನನನೇ ॥
९ 10 ಕ ಅರ್ಥ :- ನಲ್ -ಮೇನಿ : ದಿವ್ಯವೂ ಮಂಗಳಕರವೂ ಆದ ವಿಗ್ರಹವುಳ್ಳ, ನಾರರ್ಣ = ನಾರಾಯಣನು, ರ್ತಾ : ತಾನೇ, ರ್ತ-ಮೇನೈಯುಂ : ತನ್ನ ಉತ್ಕರ್ಷವನ್ನೂ, ರ್ತ -ಪಿರಪ್ಟಿಲ್ = ತನ್ನ ಅವತಾರದಲ್ಲಿ, ತಳರಾ = ಕಡಿಮೆಯಾಗದ, ತನಿಮೈಯ್ಯಯುಂ ಇತರ ವೈಲಕ್ಷಣ್ಯವನ್ನೂ, ಪಲ್-ಮೇನಿ - ಬಹುವಿಧ ಶರೀರಗಳನ್ನೂ, ನಣ್ಣಿನನ್-ಪಾಲ್: ಪಡೆದವನ ವಿಷಯದಲ್ಲಿ ಪಿರಿಯಾ : ಅಗಲದ, (ಬೇರೆಯಾಗದ) ಅನ್ವರ್ -ಅಶೈಹಳುಂ ಪ್ರೀತಿಯುಳ್ಳವರ ಪ್ರೀತಿಯನ್ನೂ, ಪುಲ್ -ಮೇನಿ : ಅತ್ಯಲ್ಪ ಶರೀರಗಳುಳ್ಳ, ವಿಣ್ಣವರ್ ಪಾಲ್ : ದೇವತೆಗಳ ವಿಷಯದಲ್ಲೂ ಪುರಿಯಾದ - ಪ್ರವರ್ತಿಸದ,ರ್ತ - ಸ್ವ ವಿಷಯವಾದ, ಪತಿಯ್ಕೆಯುಂ - ಪರಭಕ್ತಿಯ ಸ್ವರೂಪವನ್ನೂ, ನರನುಕ್ಕು = ಅರ್ಜುನನಿಗೆ, ನವಿನಾಸ್ = ಹೇಳಿದನು.
ತಾತ್ವ :- ‘ಸ್ವಮಹಾತ್ಮಂ ಮನುಷ್ಯತ್ವ ಪರತ್ವಂ ಚ ಮಹತ್ಮನಾಂ। ವಿಶೇಷ ನವಮೇ ಯೋಗೋ ಭಕ್ತಿರೂಪಃ ಪ್ರಕೀರ್ತತಃ ॥ ಶ್ರೀಕೃಷ್ಣನು ತಾನು ಮಾನುಷಾವತಾರವೆತ್ತಿದಾಗಲೂ ಅಂತೆಯೇ ಇತರ ಅವತಾರಗಳಲ್ಲೂ ಅತಿಮಾನುಷನೆನಿಸಿಕೊಂಡು, ನಿರವಧಿಕ ಮಹಿಮೆಯುಳ್ಳವನೂ, ಪರತ್ವನಿಷ್ಕರ್ಷಕ ಸಮಸ್ತಗುಣ ಪರಿಪೂರ್ಣನೂ, ಆಗಿರುವುದನ್ನೂ, ಜ್ಞಾನಿಗಳಾದ ಮಹಾತ್ಮರ ವಿಶೇಷವನ್ನೂ ಮತ್ತು ಭಕ್ತಿರೂಪವಾದ ಉಪಾಸನಾ ಸ್ವರೂಪವನ್ನೂ ಸಹ 9ನೆಯ ಅಧ್ಯಾಯದಲ್ಲಿ ವಿಶದವಾಗಿ ಉಪದೇಶಿಸಿರುವನು. श्रीमानप्राकृतात्मा स्वय मतुलसमुत्कर्ष मात्मावतारे । वैलक्षण्यं त्वनूनं धृतविविधतनौ प्रीति मेत त्सुवित्सु ॥ ಶ್ರೀ ಗೀತಾರ್ಥ ಸಂಗ್ರಹಃ भक्तिं त्यक्ताल्पकायत्रिदशपरिषदि स्वं प्रतीतां तदीयाम् । सर्वं चैवं नराय स्वपरहितपरः प्राह नारायणोऽस्मै ॥ ಮೂಲ : ಎಲ್ಲೆಯಿಲಾದ ತನ್ ಶೀಲಮುಂ ಇನ್ನಮುದಕ್ಕಡಲು, ಎಲ್ಲೆಯಿಲಾದ ವಿಬೂತಿಯೆಲಾಂ ತನದಾನಮೈಯುಂ, ಎಲ್ಲೆಯಿಲ್ಪತ್ತಿತನೆ ಎಳುವಿಕ್ಕತ್ತಿರುವರುಳಾಲ್,
569 १० ಎಲ್ಲೆಯಿಲ್ ಈಶನಿಯಂಬಿನನ್ ಇಂದಿರನ್ ಮೈಂದನುಕ್ಕೇ ॥ ॥
ಅರ್ಥ :- ಎಲ್ಫ್-ಇಲ್ -ಈಶನ್ = ನಿರವಧಿಕ್ವೆಶ್ವರಶಾಲಿಯಾದ ಸರ್ವೆಶ್ವರನು, ತಿರು-ಅರುಳಾಲ್ - ನಿರ್ವ್ಯಾಜಕಾರುಣ್ಯದಿಂದ, ಎಲ್ಲೆಯಿಲಾದ : ಎಲ್ಲೆಯೇ ಇಲ್ಲದಂತಹ, ಪತ್ತಿ-ತನ್ಯ - ಭಕ್ತಿಯನ್ನು ಎಳುವಿಕ್ಕ : ಉಂಟಾಗುವುದಕ್ಕೂ, ವೃದ್ಧಿಪಡಿಸುವುದಕ್ಕೂ, ಎಲ್ಲೆ-ಇಲಾದ : ಅಪಾರವಾದ, ರ್ತ : ತನ್ನ, ಶೀಲಮುಂ - ಸೌಶೀಲ್ಯವನ್ನೂ, ಇ೯ : ಭೋಗ್ಯವಾದ, ಅಮುದ-ಕಡಲುಂ = ಅಮೃತಸಾಗದಂತಿರುವ ಕಲ್ಯಾಣಗುಣಗಳನ್ನೂ, ಎಲ್ಲೆಯಿಲಾದ - ಅಸಂಖ್ಯಯವಾದ, ಎಲ್ಲಾಂ - ಎಲ್ಲವಸ್ತುಗಳೂ ತನದ್ - ತನ್ನದಾದ, ವಿಬೂತಿ-ಆನ-ಅವೈಯುಂ : ವಿಭೂತಿಯಾದ ರೀತಿಯನ್ನೂ, ಇಂದಿರ = ದೇವೇಂದ್ರನ, ಮೈಂದನುಕ್ಕು : ಮಗನಾದ ಅರ್ಜುನನಿಗೆ, ಇಯಂಬಿನನ್ - ಹೇಳಿದನು.
ತಾತ್ವರ :- ‘ಸ್ವಕಲ್ಯಾಣಗುಣಾನಂತ್ಯಕೃತ ಸ್ವಾಧೀನತಾಮತಿಃ | ಭಕ್ಕುತ್ತತ್ತಿವಿವೃರ್ಥಾ ವಿಸ್ತೀರ್ಣಾದಶಮೋದಿತಾ ॥
ಶ್ರೀಕೃಷ್ಣಪರಮಾತ್ಮನು ತನ್ನ ಸ್ವಾಭಾವಿಕವೂ, ನಿರವಧಿಕವೂ ಆದ ಐಶ್ವಯ್ಯಾದಿ ಸಮಸ್ತ ಕಲ್ಯಾಣ ಗುಣಗಳನ್ನೂ, ಚೇತನಾಚೇತನಾತ್ಮವಾದ ಇಡೀ ಜಗತ್ತೇ ತನಗೆ ಶರೀರವಾಗಿರುವುದನ್ನೂ ಮತ್ತು ಅದಕ್ಕೆ ತಾನು ಆತ್ಮಭೂತನಾಗಿ ಅದರ ಸ್ವರೂಪ ಸ್ಥಿತಿ ಪ್ರವೃತ್ತಿಗಳೆಲ್ಲವೂ ತನ್ನಧೀನವೆಂಬುದನ್ನೂ ವಿಶದವಾಗಿ 10ನೆಯ ಅಧ್ಯಾಯದಲ್ಲಿ ಅರ್ಜುನನಿಗೆ ಉಪದೇಶಿಸಿರುವನು. ಈ ಉಪದೇಶವನ್ನು ಚೆನ್ನಾಗಿ ಅರಿತವರಿಗೆ ತನ್ನಷ್ಟಕ್ಕೆ ತಾನೇ ಆ ಭಗವಂತನಲ್ಲಿ ಭಕ್ತಿಯುಂಟಾಗುವುದು ಮತ್ತು ಅವನ ಅತಿಮಾನುಷವಾದ ಆಶ್ಚರ್ಯ ಕ್ರಿಯೆಗಳನ್ನೇ ಪ್ರಶಂಸಿಸುತ್ತಾ ಕಾಲ ಕಳೆಯುವಂತೆಯೂ ಅಂತಹ ಗುಣಾನುಭವ ಮಾಡದ ಕ್ಷಣಕಾಲವೂ ಕೂಡ ಜೀವಿಸಿರಲಾಗುವುದಿಲ್ಲವೆಂಬುವಷ್ಟು ಭಕ್ತಿಯೂ ಬೆಳದು ಉದ್ಬವಿಸಲು ತುಂಬ ನೆರವಾಗುವುದೆಂದೇ ಇಷ್ಟು ವಿಸ್ತಾರವಾಗಿ ಉಪದೇಶಿಸುದುದು. ಇದೇ ಇದರ ಪರಮೋದ್ದೇಶ. श्रीकारुण्येन भक्तिं निरवधि मुदयार्थं विवृध्द्यर्थमस्याः । सौशील्यं च स्वकीयं निरवधि सुगुणापारभोग्यामृताब्धिम् ॥ 570 ಶ್ರೀ ಗೀತಾರ್ಥ ಸಂಗ್ರಹಃ सर्वामेतां विभूतिं निरवधिविभवा मात्ममात्राधिनाथाम् । निस्सीमैश्वर्यशाली हरि रमरपते व्र्व्याजहारात्मजाय ॥
११ ? ಮೂಲ : ಎಲ್ಲಾಂತನಕ್ಕುರುವಾಯಿಲಂಗುಂವಕ್ಕೆ ತಾನುರೈತ್ತು, ಶೋಲ್ಲಾಲರಿಂದದ್ ಶೋರಾಮಲ್ ಕಂಡಿಡವೇಂಡುಮೆನ್ನು, ಎಲ್ಲಾಳನುಕ್ಕನ್ನು ಮೆಯ್ಣ್ ಕೊಡುತ್ತಿದುವರು ಮುಂಡೋ ನಲ್ಲಾಹಹಳ್ ಕಾರೆನುಂನವಿನಾನ್ ಎಂಗಲ್ ನಾಯಕನೇ !! 12 ಅರ್ಥ :- ಎಂಗಳ್ -ನಾಯಕನ್ - ನಮ್ಮ ನಾಯಕನು, ಎಲ್ಲಾಂ = ಎಲ್ಲವೂ, ತನಕ್ಕು - ತನಗೆ, ಉರುವಾಯ್ - ಶರೀರವಾಗಿ, ಇಲಂಗುಂ-ವಕ್ಕೆ : ಬೆಳಗುವ ರೀತಿಯನ್ನೂ, ರ್ತಾ : ತಾನು, ಉರೈತ್ತು : ಉಪದೇಶಿಸಿ, ಶೆಲ್ಲಾಲ್ - (ಶ್ರೀಕೃಷ್ಣನ) ಉಕ್ತಿಗಳಿಂದ, ಅರಿಂದದ್ : ತಿಳಿದುದನ್ನೂ, ಶೋರಾಮಲ್ - ಬಿಡದೆ, ಕಂಡಿಡಬೇಂಡು : ಸಾಕ್ಷಾತ್ಕರಿಸಬೇಕು, ಎನ್ನು : ಎಂದು ಪ್ರಾರ್ಥಿಸಿದ, ವಿಲ್ಲಾಳನುಕ್ಕು = ಬಿಲ್ಲಾಳನೆನಿಸಿದ ಅರ್ಜುನನಿಗೆ, ಅನ್ನು - ಆಗ, ಮೆಯ್ -ಕಣ್ = ದಿವ್ಯವಾದ ಕಣ್ಣನ್ನು, ಕೊಡುತ್ತು: ಕೊಟ್ಟು ಇದು - ಇದು, ವೇರುಂ : ಭಕ್ತಿಗಿಂತ ಸಾಧನ ಬೇರೊಂದು, ಉಂಡೋ ? = ಉಂಟೆ ?, ನಲ್ಲಾ ಹಳ್ - ಸಾಧುಗಳು, ಕಾರ್ = ನೋಡುವವರು, ಎನ್ನುಂ = ಎಂದೂ, ನವಿಸ್ರ್ರಾ : ಹೇಳಿದನು.
ತಾತ್ಪರ :- “ಏಕಾದಶೇಶ್ವಯಾಥಾ ಸಾಕ್ಷಾತ್ಕಾರಾವಲೋಕನಂ | ವ್ಯಕ್ತಮುಕ್ತಾವಿದಿಪ್ರಾಃ ಭಕ್ಕೇಕೋಪಾಯತಾತಥಾ ॥’’
ಪರಮ ಪುರುಷನಾದ ಶ್ರೀಕೃಷ್ಣನು ತನ್ನ ಅತಿವಿಲಕ್ಷಣವಾದ ಸ್ವಭಾವವನ್ನೂ ನಿರಂಕುಶ ಐಶ್ವರವನ್ನೂ ಮತ್ತು ಚೇತನಾಚೇತನಾತ್ಮಕಸತ್ವ ಜಗತನಗೆ ಶರೀರವಾಗಿಯೂ, ತಾನು ಅದಕ್ಕೆ ಆತ್ಮಭೂತನಾಗಿಯೂ ಇರುವುದನ್ನೂ ವಿಸ್ತಾರವಾಗಿ ಉಪದೇಶಿಸಿದ ಮೇಲೆ ಅರ್ಜುನನು ಆ ಪರಮಾತ್ಮನನ್ನು ಯಥಾವತ್ತಾಗಿ ನೋಡಿ, ಆನಂದಿಸಬೇಕೆಂದು ಇಚ್ಚಿಸಲು, ಆಗ ನಿರವಧಿಕಾತಿಶಯ ದದಾರ ಸೌಶೀಲ್ಯ ವಾತ್ಸಲ್ಯಾದ್ಯನೇಕ ಗುಣ ಮಹೋದಧಿಯಾದ ಪುರುಷೋತ್ತಮನು ತನ್ನ ನಿಜರೂಪವನ್ನು ನೋಡಲು ದಿವ್ಯ ಚಕ್ಷುಸ್ಸನ್ನು ಕೊಟ್ಟು ಅವನಿಗೆ ತೋರಿಸಿದುದನ್ನೂ ಮತ್ತು ಜ್ಞಾನವೂ-ದರ್ಶನವೂ ಪ್ರಾಪ್ತಿಯೂ ಸಹ ಕೇವಲ ಸ್ವವಿಷಯ ಭಕ್ತಿಯೊಂದರಿಂದಲೇ ಲಭ್ಯವಾಗತಕ್ಕವೆಂಬುದನ್ನೂ ॥ನೆಯ ಅಧ್ಯಾಯದಲ್ಲಿ ಸ್ಪಷ್ಟವಾಗಿ ಅಪ್ಪಣೆ ಕೊಡಿಸಿರುವನು. ಶ್ರೀ ಗೀತಾರ್ಥ ಸಂಗ್ರಹಃ सर्वस्वं नायको न स्स्वतनु रिति लसत्तत्प्रकारं ब्रुवन् सन् । साक्षात्कर्तुं विभूतिं सपदि तदुदितां प्रार्थयामास धन्वी ॥ दत्वास्मै दिव्यचक्षुः कि मुचित मितर त्साधनं वास्ति भक्तेः । साक्षात्कुर्वन्ति सन्त स्त्विति च सुविशदं प्राब्रवीत् वासुदेवः ॥ ಮೂಲ : ತನ್ಳಲಿಲ್ಪತ್ತಿತಾಳಾದದುಮದಿನ್ಕಾರಣಮಾಂ,
ಇನ್ಗುಣರ್ಂದೈಯು ಮೀದರಿಯಾರ್ವ್ವಡಿಮೈಹಳು, ತನ್ರುಮಂಗಳರಿಯಾದವರುಲಗುನಿಲೈಯುಂ,
571 १२ ತನ್ಳಲವರು ನಲ್ಲವನ್ ಶಾನನ್ ಪಾರ್ತನುಕ್ಕೇ ॥ 13 ಅರ್ಥ :- ತನ್ -ಕಳಲ್ -ಅಕ್ಷರು : ತನ್ನ ಚರಣಗಳಲ್ಲಿ ಅತಿಪ್ರೀತಿಯುಳ್ಳವರಿಗೆ ನಲ್ಲವನ್ = (ಅತ್ಯಂತ ಪ್ರೀತನಾದ) ಸಾಧುತಮನಾದ ಪರಮಪುರುಷನು, ತನ್ -ಕಳಲಿಲ್ ತನ್ನಡಿಗಳಲ್ಲಿ, ಪತ್ತಿ : (ಮಾಡುವ) ಭಕ್ತಿಯೋಗವು, ತಾಳಾದದುಂ : ಫಲ ವಿಳಂಬವಾಗದಿರುವುದನ್ನೂ, ಅದಿನ್ = ಆ ಭಕ್ತಿಯೋಗಕ್ಕೆ, ಕಾರಣಂ-ಆಂ = ಸಾಧನವಾಗುವ, ಇನ್ = ಭೋಗ್ಯವಾದ, ಗುಣರ್ : ಗುಣವುಳ್ಳವರ, ಶಿಂದೈಯುಂ ಅಭ್ಯಾಸವನ್ನೂ, ಈದ್ = ಈ ಗುಣಚಿಂತನೆಯನ್ನು, ಅರಿಯಾದರು = ಅರಿಯದವರಿಗೆ, ಅ-ಅಡಿಮೈಹಳುಂ : ಆ ಕೈಂಕರ್ಯಗಳನ್ನೂ, ತನ್ಕರುಮಂಗಳ್ -ಅರಿಯಾದವರು (ಮೇಲೆ ಹೇಳಿದ) ಭಗವತ್ಕರ್ಮಗಳನ್ನು ಅರಿಯದವರಿಗೆ, ಲಗು-ನಿಲೈ: ಲಘುವಾದ ನಿಷ್ಠೆಯನ್ನೂ, (ಆತ್ಮಸ್ವಭಾವಾನುಸಂಧಾನರೂಪವಾದ ಆತ್ಮನಿಷ್ಠೆಯನ್ನೂ) ಪಾರ್ತನುಕ್ಕು = ಅರ್ಜುನನಿಗೆ, ಶಾತಿನನ್ - ವಿಶದವಾಗಿ ಉಪದೇಶಿಸಿದನು.
ತಾತ್ಪರ :- ಭಕ್ತಿಶ್ಚಷ್ಟಮುಪಾಯೋಕ್ತಿ ಅಶಕ್ತಸ್ಯಾತ್ಮನಿಷ್ಠತಾ | ತತ್ತ್ವಕಾರಸ್ವತಿಪ್ರೀತಿಃ ಭಕೇದ್ವಾದಶ ಉಚ್ಯತೇ ॥’’
- ಆತ್ಮ ಪ್ರಾಪ್ತಿಗೆ ಸಾಧನವಾದ ಆತ್ರೋಪಾಸನ (ಜ್ಞಾನಯೋಗಕ್ಕಿಂತ ಪರಮಾತ್ಮಪ್ರಾಪ್ತಿಗೆ ಸಾಧನವಾದ ಭಕ್ತಿರೂಪವಾದ ಭಗವದುಪಾಸನವು ಅತಿ ಸುಕರವೂ ಶೀಘ್ರ ಫಲದಾಯಕವೂ ಆಗಿರುವುದರಿಂದ ಅತಿ ಶ್ರೇಷ್ಠವೆಂದೂ, ““ಅಥ ಚಿತ್ತಂ ಸಮಾಧಾತು’’ ಮೊದಲಾಗಿ 2 ಶ್ಲೋಕಗಳಿಂದ ಆ ಭಕ್ತಿಯೋಗದ ಉಪಾಯವನ್ನೂ ಭಗವಂತನಲ್ಲಿ ಚಿತ್ತವನ್ನು ನೆಲೆಗೊಳಿಸಲು ಆಗದವರಿಗೆ ಭಗವದ್ಗುಣಾನುಭವವನ್ನೂ, ಅದರಲ್ಲೂ ಅಶಕ್ತರಿಗೆ ಪ್ರೀತಿಪೂರ್ವಕನಾದ ಭಗವದಂತರಂಗ ಕೈಂಕಯ್ಯಗಳನ್ನೂ ಅದರಲ್ಲೂ ಅಸಮರ್ಥನಾದವನಿಗೆ ಆತ್ಮನಿಷ್ಠೆಯನ್ನೂ, ಅದರ ಪ್ರಕಾರಗಳನ್ನೂ, ಕೊನೆಗೆ
- 572
- ಶ್ರೀ ಗೀತಾರ್ಥ ಸಂಗ್ರಹಃ
- ಭಕ್ತನಾದವನಲ್ಲಿ ತನಗಿರುವ ಅತಿ ಪ್ರೀತಿಯನ್ನೂ 12ನೆಯ ಅಧ್ಯಾಯದಲ್ಲಿ ವಿಶದಪಡಿಸಿರುವನು ಶ್ರೀಕೃಷ್ಣ
- भक्ति स्स्वाङ्घ्रिसमर्पिताऽऽशुफलदा ह्येषा विलम्बाक्षमा । तस्यास्साधन मेव भोग्यगुणिनो ध्यानं तदज्ञानिनाम् ॥ कैङ्कर्याणि लघु स्स्वकर्ममतिहीनाना मुपायस्त्विति । श्रीश स्स्वीयपदप्रियप्रियतमः पार्थाय चोपादिशत् । ।
- ಮೂಲ : ಊನಿನ್ನಡಿಯು ಮುಯಿರಿ ಪಿರವುಮುಯಿರುವಾರ್,
- ಞಾನಂಪೆರುವಹೈಯುಂ ಇಾನಮೀನವುಯಿ ಯನು, ಊನಿನ್ನದರಡಿಯುಂ ಉಯಿರ್ರಿಡುಮುಳ್ರಹುಂ, ತೇನಿಪಾದನ್ತೆವಿತ್ತನನ್ ಲೈಪ್ಪಾರ್ತನುಕ್ಕೇ ॥
१३ 14
ಅರ್ಥ :- ತೇನ್ -ನಿ-ಪಾದನ್ : ಮಕರಂದ ಭರಪಾದಾರವಿಂದನಾದ ವಾಸುದೇವನು, ಊನಿನ್ -ಪಡಿಯುಂ - ಶರೀರದ ಪ್ರಕಾರವನ್ನೂ, ಉಯಿರಿನ್ -ಪಿರವುಂ ಆತ್ಮದ ವಿಭಾಗವನ್ನೂ, ಉಯಿರ್ -ಪೆರುವಾರ್ : ಆತ್ಮವನ್ನು ಪಡೆದವರ, ಞಾನಂ-ಪೆರುವಹೈಯುಂ : ಜ್ಞಾನವನ್ನು ಪಡೆಯುವ ಪ್ರಕಾರವನ್ನೂ, ಇಶಾನಂ-ಈ - ಜ್ಞಾನದಿಂದುಂಟಾಗುವ, ಉಯಿರ್-ಪಯನುಂ : ಆತ್ಮಪ್ರಾಪ್ತಿರೂಪ ಫಲವನ್ನೂ, ಊನ್ -ನಿನ್ನವರು : ಶರೀರದಲ್ಲಿರುವವರಿಗೆ, ಅಡಿಯುಂ : ಮೂಲಕಾರಣವನ್ನೂ (ನಾನಾವಿಧ ಶರೀರ ಧಾರಣೆಗೆ ಕಾರಣವನ್ನೂ) ಉಯಿರ್ = ಆತ್ಮವನ್ನು, ವೇರ್ -ಇಡುಂ • ಬೇರ್ಪಡಿಸುವ, ಉಳ್ -ವಿರಹುಂ = ಅಂತರಂಗೋಪಾಯವನ್ನೂ, ಶಿ - ಬಿಲ್ಲಾಳನಾದ, ಪಾರ್ತನುಕ್ಕು - ಪಾರ್ಥನಿಗೆ, ತಳವಿತ್ತನನ್ = ವಿಶದವಾಗಿ ಉಪದೇಶಿಸಿದನು. ತಾತ್ವರ :- ‘ದೇಹಸ್ವರೂಪಮಾತ್ಮಾಪ್ತಿ ಹೇತುರಾತ್ಮವಿಶೋಧನಂ | ಬಂಧಹೇತುರ್ವಿವೇಕಶ್ಚತ್ರಯೋದಶ ಉದೀರತೇ 1 ಗೀತಾಚಾರ್ಯನು 13ನೆಯ ಅಧ್ಯಾಯದಲ್ಲಿ ದೇಹದ ಮತ್ತು ಜೀವಾತ್ಮರ ಸ್ವರೂಪವನ್ನೂ, ದೇಹಯಾಥಾತ್ಮ ಶೋಧನೆಯನ್ನೂ, ಅಮಾನಿತ್ವಂ’’ - ಮೊದಲಾದವುಗಳಿಂದ ಶರೀರದಿಂದ ಬೇರ್ಪಟ್ಟ ಆತ್ಮನ ಪ್ರಾಪ್ತಿಗೆ ಉಪಾಯವನ್ನೂ, ‘‘ಜೇಯಂಯತ್ ತಮ್ಮವಾಮಿ’’ ಎಂದು ಉಪಕ್ರಮಿಸಿ ದೇಹದಿಂದ ಬಿಡಲ್ಪಟ್ಟ ಆತ್ಮದ ಸ್ವರೂಪ ಶೋಧನೆಯನ್ನೂ, ‘ಕಾರಣಂ ಗುಣಸಂಗೋSಸ್ಯ ಸದಸನಿಜನಸು’’ ಎಂಬುದರಿಂದ ಆತ್ಮನು ಅಚಿತಿನೊಡನೆ ಸಂಬಂಧವನ್ನು ಹೊಂದಲು ಕಾರಣವನ್ನೂ ಮತ್ತು * ಶ್ರೀ ಗೀತಾರ್ಥ ಸಂಗ್ರಹಃ 573 ‘‘ಧ್ಯಾನೇನಾತ್ಮನಿ ಪಶ್ಯಂತಿ’ - ಇತ್ಯಾದಿಗಳಿಂದ ಜೀವಾತ್ಮನು ದೇಹದಿಂದ ಬೇರೆಯಾದವನೆಂದರಿಯುವ ವಿವೇಕಾನುಸಂಧಾನ ಪ್ರಕಾರವನ್ನೂ ಯಥಾಧಿಕಾರವಾಗಿ ಪಾರ್ಥನಿಗೆ ಉಪದೇಶಿಸಿರುವನು. देहानां च स्वरूपं श्रुतिशतविदितं जीवमेदं तथात्म- । प्रेप्सूनां ज्ञानलाभक्रम मथ च फलं स्वात्मनो ज्ञानजस्य ॥ मूलं देहोपलब्धेः पृथगपि करणं चात्मनोऽन्तस्स्थमार्ग | पीयूषस्यन्दिपादो हरि रवगमयत् धन्विपार्थाय सम्यक् ॥ ಮೂಲ : ಮುಕ್ಕುಣಮೇಯುಯಿರ್ಮುತವುಂ ಕಟ್ಟಡಮೂಂಡಮೈಯುಂ, ಮುಕ್ಕುಣಮೇ ಯನೈತ್ತುಂ ವಿನೈಕೊಳ್ಳ ಮುಯಮೈಯುಂ, ಮುಕ್ಕುಣ ಮಾಯ್ಕೆಕಡತ್ತಲುಂ ಮುಕ್ಕತಿತಂದಪ್ಪು, ಮುಕ್ಕುಣ ಮತಪಿರಾನ್ನೊಳಿರ್ದ್ದಾ ಮುಡಿಯೋನನಕ್ಕೆ ॥
- १४
- 15
- ಅರ್ಥ :- ಮುಕ್ಕುಣಂ ಅತ್ಯ- ತ್ರಿಗುಣಾತೀತನಾದ, ಪಿರಾನ್ = ಉಪಕಾರಕನಾದ ನಾರಾಯಣನು, ಮುಕ್ಕುಣಮೇ - ಮೂರು ಗುಣಗಳೇ, ಉಯಿರ್ : ಆತ್ಮನನ್ನು, ಮುತ್ತುವುಂ - ಸಂಪೂರ್ಣವಾಗಿ, ಕಟ್ಟಡ : ಬಂಧಿಸಲು, ಮೂಂಡಮೈಯುಂ
- ಪ್ರವರ್ತಿಸುವ ರೀತಿಯನ್ನೂ, ಮುಕ್ಕುಣಮೇ : ಮೂರು ಗುಣಗಳೇ, ಅನೈತ್ತು ಸಮಸ್ತವಾದ, ವಿನೈ = ಕರ್ಮಗಳನ್ನು, ಕೊಳ್ಳ - ಮಾಡಲು, ಮುಯನ್-ಅಮೈ ಯುಂ ವ್ಯಾಪಿಸಿರುವುದನ್ನೂ, ಮುಕ್ಕುಣ-ಮಾಯ್ಕೆ - ತ್ರಿಗುಣಾತ್ಮಕವಾದ ಮಾಯೆಯನ್ನು, ಕಡಲು : ದಾಟುವುದನ್ನೂ, ಮುಕ್ಕತಿ : (ಕೈವಲ್ಯ -ಐಶ್ವರ -ಅಪವರ್ಗ) ಮೂರು ಗತಿಗಳನ್ನೂ, ತಂದೆ ಅಳಿಪ್ಪು = ಕೊಟ್ಟು ರಕ್ಷಿಸುವುದನ್ನೂ, ಮುಡಿರ್ಯೋ ತನಕ್ಕು =
ಕಿರೀಟಿಯಾದ ಅರ್ಜುನನಿಗೆ, ಮೊಳಿಂದಾನ್ - ಹೇಳಿದನು. ತಾತ್ವರ :- ಗುಣ ಬಂಧ ವಿಧಾ ತೇಷಾಂ ಕರ್ತೃತ್ವಂ ತನ್ನಿವರ್ತನಂ | ಗತಿತ್ರಯಸ್ಯ ಮೂಲತ್ವಂ ಚತುರ್ದಶ ಉದೀರತೇ | ಗುಣಗಳಲ್ಲಿ ಸತ್ವವು ಸುಖಜ್ಞಾನದಿಂದಲೂ, ರಜಸ್ಸು ಕರ್ಮಸಂಸರ್ಗದಿಂದಲೂ, ತಮಸ್ಸು-ಪ್ರಮಾದ-ಆಲಸ್ಯ-ನಿದ್ರಾದಿಗಳಿಂದಲೂ ಜೀವನನ್ನು ಬಂಧಿಸುತ್ತವೆ. ಇದೇ “ಗುಣಬಂಧವಿಧಾ’’ ಎನಿಸಿರುವುದು, ಈ ವಿಷಯವನ್ನೂ, ‘‘ನಾನ್ಯಂ ಗುಣೇಭ್ಯಃ ಕರ್ತಾರಂ” - ಇತ್ಯಾದಿಗಳಿಂದ ಹಿಂದೆ ಹೇಳಿದಂತೆ ಪ್ರಾಪ್ತಾಪ್ರಾಪ್ತ ವಿವೇಕದಿಂದ ಆ ಗುಣಗಳಲ್ಲಿ ಕರ್ತೃತ್ವಾರೋಪವನ್ನೂ, ‘ಮಾಂಚವ್ಯಭಿಚಾರೇಣ 574 ಶ್ರೀ ಗೀತಾರ್ಥ ಸಂಗ್ರಹಃ ಇತ್ಯಾದಿಗಳಿಂದ ಗುಣ ನಿವರ್ತಿಸುವ ಪ್ರಕಾರವನ್ನೂ ಮತ್ತು ಆ ಗುಣ ನಿವೃತ್ತಿಪೂರೈಕ ಆತ್ಮಯಾಥಾತ್ಮ ಮತ್ತು ಭಗವತ್ಥಾಪ್ತಿಗೆ ಭಗವಂತನಲ್ಲಿ ಮಾಡುವ ಭಕ್ತಿಯೇ ಮೂಲವೆಂದೂ, ತತ್ತೂರಕ ಬ್ರಹ್ಮಾನುಭವವನ್ನೂ ಸಹ ಶ್ರೀಕೃಷ್ಣ ಪರಮಾತ್ಮನು ಕಿರೀಟಿಯಾದ ಅರ್ಜುನನಿಗೆ 14ನೆಯ ಅಧ್ಯಾಯದಲ್ಲಿ ಉಪದೇಶಿಸಿರುವನು. बन्धुं त्रेगुण्यमेवाखिलपुरुष मिहानूनतः सम्प्रवृत्तम् । कर्तुं त्रैगुण्यमेव प्रसृतवदखिलं दुष्कृतं बन्धमूलम् ॥ एवं त्रैगुण्यमायोत्तरण मपि गतीनां च दानाभिरक्षे । निस्त्रैगुणयोपकारी निजगद मकुटालङ्कृतायार्जुनाय ॥ ಮೂಲ : ಮೂವೆಟ್ಟಿಲುಂ ಅದಿನ್ ಮೋಹಮಚ್ಚೆನವುಯಿರ್ಹಳಿಲುಂ, ನಾವೆಳುತೊಡು ನಡುನಣ್ಣಿನ ನಮ್ಪರಿಲು, ಮೇವೆಟ್ಟುವನ್ಗುಣವಿಕ್ಟೋರ್ಹಳಿಲುಂ ವಿಶಯನುಕ್ಕು, ತಾವಿಟ್ಟುಲಹಳಾನ್ ತನ್ನೆವೇರನ್ನುಶಾತಿನನೇ ॥ १५ 16
ಅರ್ಥ:- ತಾವಿಟ್ಟು = ಧಾವಿಸಿ (ವ್ಯಾಪಿಸಿ) ಉಲಹ್ -ಅಳಕ್ಟ್ರಾನ್ = ಜಗತ್ತನ್ನಳೆದ ಪರಮಾತ್ಮನು, ಮೂವೆಟ್ಟಿಲುಂ = (3 X 8 = 24) 24 ತತ್ವಗಳಿಗಿಂತಲೂ, x ಅದಿಲ್ -ಮೋಹಂ-ಅಡ್ಕಂದ-ಉಯಿರ್ಹಳಿಲುಂ = ಆ ತತ್ವಗಳಲ್ಲಿ ಮೋಹಗೊಂಡ ಜೀವಾತ್ಮರಿಗಿಂತಲೂ, (ಬದ್ಧಚೇತನನಿಗಿಂತಲೂ) ನಾ-ಎಟ್ಟು-ಎಳಿತ್ತು-ಒಡು ನಾಲಿಗೆಯಿಂದ ಅಷ್ಟಾಕ್ಷರವನ್ನೂ, ನಲ್ - ವೀಡುಂ = ಪರಮಪದವನ್ನೂ ಪಡೆದ, ವಿಶ್ವಾಸವುಳ್ಳವರಿಗಿಂತ (ಮುಕ್ತರಿಗಿಂತಲೂ) ಮೇವು : ಆದರಣೀಯವಾದ, ವನ್ - ನಿತ್ಯವಾಸಿಗಳಿಗಿಂತಲೂ, (ನಿತ್ಯರಿಗಿಂತಲೂ) ತನ್ನೈ - ತನ್ನನ್ನು ವೇರೆನು - ಬೇರೆ ವಿಲಕ್ಷಣವಾಗಿರುವೆನೆಂದು, ವಿಶಯನುಕ್ಕು : ಅರ್ಜುನನಿಗೆ, ಶಾತ್ತಿನನ್ ನವ ಪರಿಲುಂ -
- ವಿಶದವಾಗಿ ಹೇಳಿದನು.
- ತಾತ್ಸರ :- ಅಚಿಮ್ಮಿಶ್ರಾದ್ವಿಶುದ್ದಾಚ್ಚ ಚೇತನಾತ್ ಪುರುಷೋತ್ತಮಃ |
- બં
- ವ್ಯಾಪನಾದ್ಧರಣಾತ್ ಸ್ವಾಮ್ಯಾತ್ ಅನ್ಯಃ ಪಂಚದಶೋದಿತಃ !!”
- ಪ್ರಕೃತಿ, ಮಹತ್, ಅಹಂಕಾರ, 5 ಜ್ಞಾನೇಂದ್ರಿಯ, 5 ಕರ್ಮೇಂದ್ರಿಯ, ಮನಸ್ಸು, 5 ಮಹಾಭೂತಗಳು, 5 ತನ್ಮಾತ್ರೆಗಳು ಇವೇ 24 ತತ್ವಗಳು. ಇವನ್ನು ಶರೀರವಾಗಿ ಮಾಡಿಕೊಂಡಿರುವ ಭಗವಂತನು ಇವುಗಳಿಗಿಂತ ಬೇರ್ಪಟ್ಟಿರುವನು. ಪ್ರಕೃತಿಯಲ್ಲೇ ಮೋಹಗೊಂಡು ಇದರಲ್ಲೇ ತೊಳಲುತ್ತಾಆಯಾ ಕರ್ಮಫಲಗಳನ್ನು ಅನುಭವಿಸುವವನೇ
ಶ್ರೀ ಗೀತಾರ್ಥ ಸಂಗ್ರಹಃ 575 ಬದ್ಧಜೀವನು. ಸಂಸಾರದಲ್ಲಿ ಮೊದಲು ಸಿಕ್ಕಿದ್ದರೂ ಸನ್ಮಾರ್ಗ ಗಮನದಿಂದ ಅಷ್ಟಾಕ್ಷರಾದಿ ರಹಸ್ಯಾರ್ಥಗಳನ್ನರಿತು ಪ್ರಪತ್ಯನುಷ್ಠಾನದಿಂದ ಮುಕ್ತಿ ಪಡೆಯುವವನು ಮುಕ್ತನು. ಸಂಸಾರಗಂಧವನ್ನು ಎಂದೂ ಅರಿಯದೆ, ಪರಮ ಪುರುಷನಂತೆಯೇ ಗುಣಾಷ್ಟಕ ವಿಶಿಷ್ಟರಾಗಿ, ಜ್ಞಾನಸಂಕೋಚವಿಲ್ಲದೆ ಇರುವವರು ನಿತ್ಯರು. ಹೀಗೆ ಅಚೇತನ ವಸ್ತುಗಳಿಗಿಂತಲೂ, ತ್ರಿವಿಧ ಚೇತನ ವರ್ಗಕ್ಕಿಂತಲೂ ಬೇರ್ಪಟ್ಟು ಅವುಗಳಲ್ಲೇ ಅಂತರ್ಯಾಮಿಯಾಗಿರುತ್ತಾ, ಅವನ್ನು ಧರಿಸಿ, ಪ್ರಭುವೆನಿಸಿಕೊಂಡು ಬೆಳಗುವನು. ಈ ಕಾರಣದಿಂದಲೇ ಅಲ್ಲವೆ ಶ್ರುತಿ ಸ್ಮೃತಿ ಇತ್ಯಾದಿಗಳು ಅವನನ್ನು ಪುರುಷೋತ್ತಮನೆಂದು ಪ್ರಶಂಸಿಸುವುವು. ಈ ವಿಷಯಗಳೆಲ್ಲವನ್ನೂ ಶ್ರೀಕೃಷ್ಣನು 15ನೆಯ ಅಧ್ಯಾಯದಲ್ಲಿ ಅರ್ಜುನನಿಗೆ ಉಪದೇಶಿಸಿರುವನು. तत्वेभ्य स्त्र्यष्टकेभ्य स्तनुगतपुरुषेभ्योऽपि तन्मोहितेभ्यः । जिह्वाप्रोक्ताष्टवर्णै स्सहपरमपदप्रेप्सुविश्वारसिपुम्भ्यः ॥ आदर्तव्यैः परव्योम्यपि विमलगुणै रष्टभि र्भासूरेभ्यः । व्यापी विक्रान्तलोको निजगद विजयाय स्वमन्यं विचित्रम् ॥ ಮೂಲ : ಆಮರಾದವರ್ದೇವರ್ ಅಲ್ಲಾವಳಕ್ಕೋರುಶುರ, ಕೋನೈಮರಾದ ಗುಣಚ್ಚೆಲ್ವನೀಕುರಿಕ್ಕೊಣರೈಯ್ಕೆ, ಪೇಣಿಯತತ್ತುವಮುಂ ಪಿಣಿಯತ್ತಕ್ತಿರಿಶೈಹಳುಂ, ಕಾಣಿದನಾಲ್ ವಿಶಯಾ ವೆನ್ನುಕಣ್ಣನಿಯಂಬಿನನೇ ॥
१६ 17 ಅರ್ಥ :- ವಿಶಯಾ = ಅರ್ಜುನ!, ಆಣೆ - ಆಜ್ಞೆಯನ್ನು, ಮರಾದವರ್ - ಮೀರಿದವರು, ದೇವರ್ = ದೇವತೆಗಳು (ಭಗವದಾಜ್ಞಾಭೀರುಗಳು) ಅಲ್ಲಾ : ದುಷ್ಟವಾದ, ವಳಕ್ಕೋರ್ ವ್ಯವಹಾರವುಳ್ಳವರು, (ಆಜ್ಞಾತಿಲಂಘನರುಚಿಯುಳ್ಳವರು) ಅಶುರರ್ - ರಾಕ್ಷಸರು, ಕೋನೆ ಸ್ವಾಮಿಯನ್ನು, ಮರಾದ - ಮೀರದಂತಿರುವ, ಗುಣ = ಗುಣಗಳುಳ್ಳ, ಶೆಲ್ವಂ : ಸಂಪತ್ತುಳ್ಳ, ನೀ - ನೀನು, ಮರೈಯೆ = ವೇದವನ್ನು (ಶಾಸ್ತ್ರವನ್ನು), ಕುರಿಕ್ಕೊಳ್ = ಅವಲಂಬಿಸು, ಇದನಾಲ್ - ಈಶಾಸ್ತ್ರದಿಂದ, ಪೇಣಿಯ - ಅತ್ಯಾದರಣೀಯವಾದ, ತುಮಮುಂ - ಪರತತ್ವವನ್ನೂ, ಪಿಣಿ-ಆತ್ಮ ದುಃಖವಿಲ್ಲದ, (ದುಃಖವನ್ನು ನಿವಾರಿಸುವ) ಕಿರಿಶೈಹಳುಂ = ಕಾವ್ಯಗಳನ್ನೂ (ಬಂಧಕೇಶ ನಿವರ್ತಕವಾದ ಕರ್ಮಜ್ಞಾನ ಭಕ್ತಿಗಳನ್ನೂ), ಕಾಣ್ = ವಿಶದವಾಗಿ ಅರಿತುಕೋ, ಎನ್ನು = ಎಂದು, ಕರ್ಣ್ಣ - ಶ್ರೀಕೃಷ್ಣನು, ಇಯಂಬಿನನ್ - ಹೇಳಿದನು.
ತಾತ್ವರ :- ದೇವಾಸುರ ವಿಭಾಗೋಕ್ತಿಪೂದ್ವಿಕಾ ಶಾಸ್ತ್ರವಶ್ಯತಾ ! ತತ್ವಾನುಷ್ಠಾನ ವಿಜ್ಞಾನಸ್ಟೇಯೇ ಷೋಡಶ ಉಚ್ಯತೇ ॥’ 1576 ಶ್ರೀ ಗೀತಾರ್ಥ ಸಂಗ್ರಹಃ ಭಗವದಾಜ್ಞೆಯೇ ಶಾಸ್ತ್ರ ಅದನ್ನು ಅನುವರ್ತಿಸುವವರೇ ದೇವತೆಗಳು, ಅಂತಹವರೇ ಭಗವದನುಗ್ರಹ ಪಾತ್ರರು. ಭಗವದಾಜ್ಞೆಯನ್ನು ಮೀರಿ ನಡೆಯುವವರೇ ಅಸುರರು. ಅವರು ಅವನ ನಿಗ್ರಹಕ್ಕೆ ಪಾತ್ರರು. ನಾವು ಅಸುರರಂತಿರಬಾರದು. ದೇವತೆಗಳಂತೆ ನಡೆದುಕೊಳ್ಳಬೇಕು. ಹೀಗೆ ಅವರವರ ಗುಣ ಕ್ರಿಯಾದಿಗಳಿಂದ ವಿಭಾಗಮಾಡಿ, ಆ ಮೂಲಕ ಶಾಸ್ತ್ರವಶ್ಯರಾಗಿರಬೇಕೆಂದೂ, ಇದಿಷ್ಟೂ ಪ್ರಾತ್ಯತತ್ವಜ್ಞಾನವೂ ಪ್ರಾಪ್ಯ ಪ್ರಾಪ್ಯ ಪಾಯ ಜ್ಞಾನವೂ ವೈದಿಕಮೂಲವೆಂದು ಶಾಸ್ತ್ರವಿಹಿತಾನುಷ್ಠಾನವು ನೆಲೆಗೊಳ್ಳಬೇಕೆಂಬುದಕ್ಕಾಗಿಯೇ ಎಂದು ಗೀತಾಚಾರನು ಅರ್ಜುನನಿಗೆ 16ನೆಯ ಅಧ್ಯಾಯದಲ್ಲಿ ಉಪದೇಶಿಸಿರುವನು. ये स्वाज्ञापरिपालका स्सुकृतिनो देवा मता स्ते तथा । ये वा तद्विपरीतकर्मनिरता स्ते राक्षसा दुष्कृताः । । त्वं तावत् प्रभुशासनानुगगुणैश्वर्यः श्रुतीराश्रय | ग्राह्यं तत्त्व मदुः स्वकर्म विजयावेहीति कृष्णोऽब्रवीत् ॥ १७ ಮೂಲ : ಮರೈಪೊರುಂದಾದ ವಲ್ಲಶುರರ್ು ವಹುತ್ತಮೈಯುಂ, ಮರೈಪೊರುಂದು ನಿಲೈಯುಂ ರ್ವಗುಣಪ್ಪಡಿ ಮೂವಹೈಯುಂ, ಮರೈನಿಲೈತವಹುಕ್ಕುಂ ಕುರಿಮೂರ್ನಿ ಮೇಯೆಯುಂ, ಮರೈಯುಮಿಳ್ ಸ್ವಾನುರೈತಾನ್ ವಾಶವನ್ತನ್ರುವನುಕ್ಕೆ 10 18 ಅರ್ಥ :- ಮರೈ = ವೇದಗಳನ್ನು, ಉಮಿಳ ಸ್ಟಾನ್ = ಪ್ರಕಾಶಪಡಿಸಿದ, ಪರಮಾತ್ಮನು, ಮರೈ-ಪೊರುಂದಾದ : ವೇದಸಮ್ಮತಿಯಿಲ್ಲದ ಕರ್ಮಗಳು, ವಲ್ -ಅಶುರರು ಪ್ರಬಲರಾದ ಅಸುರರಿಗಾಗಿ, ವಹುತ್ತಮೈಯುಂ : ವಿಭಾಗಿಸಲ್ಪಟ್ಟಿರುವುದನ್ನು, ಮರೈ-ಪೊರುಂದುಂ - ವೇದವಿಹಿತವಾದ, ನಿಲೈಯುಂ - ಕರ್ಮನಿಷ್ಠೆಯನ್ನೂ, ವನ್ = - ದೃಢವಾದ, ಗುಣ : ಗುಣಗಳ, ಪಡಿ - ಪ್ರಕಾರಗಳ, ಮೂ-ವಹೈಯುಂ = ಮೂರು ಪ್ರಕಾರವನ್ನೂ, ಮರೆ-ನಿಲೈ-ತನ್ನೈ ಶ್ರುತಿಸಮ್ಮತ ಕರ್ಮನಿಷ್ಠೆಯನ್ನು, ವಹುಕ್ಕುಂ ಮೂರು ಲಕ್ಷಣಗಳ, ಮೇಯ್ಕೆಯುಂ :
ವಿಭಜಿಸುವ, ಕುರಿ-ಮೂನ್
ಉತ್ಕರ್ಷವನ್ನೂ, ವಾಶವನ್ -ತನ್ - ವಾಸವನ (ಇಂದ್ರನ) ಶಿರುವನುಕ್ಕು = ಮಗನಾದ
ಅರ್ಜುನನಿಗೆ, ಉರೈತಾನ್ - ಹೇಳಿದನು. ತಾತ್ವರ :- “ಅಶಾಸ್ತ್ರಮಾಸುರಂ ಕೃಷ್ಣಂ ಶಾಸ್ತ್ರೀಯಂ ಗುಣತಃ ಪೃಥಕ್ | મ્ ಲಕ್ಷಣಂ ಶಾಸ್ತ್ರಸಿದ್ಧಸ್ಯ ಧಾ ಸಪ್ತದಶೋದಿತಂ !! ಶ್ರೀ ಗೀತಾರ್ಥ ಸಂಗ್ರಹಃ 577 ಮುಕ್ತಿ ಮತ್ತು ಇತರ ಪುರುಷಾರ್ಥಗಳ ಪ್ರಾಪ್ತಿಗೆ ಮುಖ್ಯ ಕಾರಣ ಯಜ್ಞ. ದಾನ-ತಪಸ್ಸು ಮುಂತಾದ ವೇದವಿಹಿತ ಕರಗಳೇ ಹೊರತು ಬೇರೆಯಲ್ಲ. ಅವುಗಳ ಅನುಷ್ಠಾನವೂ ಫಲಾಭಿಸಂಧಿರಹಿತವಾಗಿಯೇ ಇರಬೇಕು. ವೈದಿಕ ಕರ್ಮದ ಸಾಮಾನ್ಯ ಲಕ್ಷಣವು ಪ್ರಣಯಾನ್ವಯವು. ಹಾಗೂ ಪರಸ್ಪರ ಭೇದವು ‘‘ತತ್’’ ‘‘ಸತ್’’ ಎಂಬ ಶಬ್ದಗಳಿಂದ ನಿರ್ದೇಶಿಸಲ್ಪಡುವುದು. ಇದೇ ಅವುಗಳ ಶಾಸ್ತ್ರಸಿದ್ಧ ಲಕ್ಷಣವೆನಿಸುವುದು. ಇಂತಹ ಕರ್ಮಾನುಷ್ಠಾನಾರಂಭವೂ ಸತ್ವಗುಣೋದ್ರೇಕದಿಂದಲೇ ಆಗುವುದು. ಆ ಗುಣವೂ ಸಹ ಸತ್ವ ಗುಣಮಯವಾದ ಆಹಾರ ಸೇವನೆಯಿಂದಲೇ ಅಭಿವೃದ್ಧಿ ಯಾಗುವುದು. ಹೀಗೆ ಇಂತಹವನನ್ನು ಆಚರಿಸುವವರೇ ಸುರರೆನಿಸುವರು. ಇದಕ್ಕೆ ವಿರುದ್ಧವಾದುವೆಲ್ಲ ಆಸುರವೆನಿಸುವುವು. ಅದರ ಫಲವು ನರಕವೇ. ಆದ್ದರಿಂದ ಶಾಸ್ತ್ರ ನಿಷಿದ್ಧವಾದುವನ್ನು ಬಿಟ್ಟು ಶಾಸ್ತ್ರೀಯವೂ ಹಾಗೂ ಗುಣಬೇಧದಿಂದ ಬೇರೆ ಬೇರೆಯಾಗಿ ಶಾಸ್ತ್ರಸಿದ್ಧ ಲಕ್ಷಣದಿಂದ ಕೂಡಿರುವುದನ್ನೇ ಆಚರಿಸಿ, ಅಭ್ಯುದಯ ಮತ್ತು ನಿಶ್ರೇಯಸ್ಸನ್ನು ಪಡೆಯುವವರಾಗಬೇಕೆಂದು 17ನೆಯ ಅಧ್ಯಾಯದಲ್ಲಿ ಶ್ರೀ ಕೃಷ್ಣನು ಅರ್ಜುನನಿಗೆ ಉಪದೇಶಿಸಿರುವನು. वेदानुक्तानि कर्माण्यतिबलदितिजेभ्यो विभक्तानि तद्वत् । वेदोक्तां कर्मनिष्ठां दृढतरगुणत स्त्रीन् प्रकारांस्तदीयान् ॥ वेदोक्तायाश्च तस्या स्त्रिविधविभजने लक्षणं तत्प्रभावम् । वेदोद्वारी मुरारि र्निजगद विशदं वासवस्यात्मजाय ॥ : ಮೂಲ : ಶತ್ತುವವೀಡುಡ್ಡೆ ನರರುಮಂ ತಾನುಹಂದಮೈಯುಂ, ಶುವಮುಳ್ಳದುತಾನ್ ಕುರಿಕ್ಕೊಳಶೆಯ್ದುವು, ಶಶುವನಲ್ ಕಿರಿಶೈಪ್ಪಯನುಂ ಶರಣಾಗತಿಯುಂ, ಶತ್ರುವಮೇ ತರುವಾನುರೈತಾನ್ ತನಿಪ್ಪಾರ್ತನುಕ್ಕೇ ॥
१८ 19 ಅರ್ಥ :- ಶತ್ರುವಮೇ : ಸತ್ವಗುಣವನ್ನೇ, ತರುವಾನ್ - ಕೊಡುವಂತಹ ಪರಮಪುರುಷನು, ಶತ್ತುವ - ಸತ್ವದ, ವೀಡುಡ್ಡೆ - ತ್ಯಾಗವುಳ್ಳ (ಸಾತ್ವಿಕತ್ಯಾಗದಿಂದ ಕೂಡಿದ) ನಲ್ -ಕರುಮಂ = ಒಳ್ಳೆಯ ಕರ್ಮವನ್ನು, ತಾನ್ = ತಾನು, ಉಹಂದಮೈಯುಂ : ಬಹಳ ಪ್ರೀತಿಸುವುದನ್ನೂ, ಶಶುವಂ-ಉಳ್ಳದ್ =ಸಾತ್ವಿಕವ್ಯಾಪಾರವನ್ನು, ತಾನ್ - ತಾನು, ಕುರಿಕ್ಕೊಳ್-ವಹೈ = ಗುರಿಯಾಗಿ ಸ್ವೀಕರಿಸುವಂತೆ, ಶೆಯ್ದದುವುಂ: ಮಾಡುವುದನ್ನೂ, ಶಶುವ-ನಲ್-ಕಿರಿಶೆ = ಸಾತ್ವಿಕವಾದ ಒಳ್ಳೆಯ ಕಾರ್ಯದ, ಪಯನುಂ = ಫಲವನ್ನೂ, ಶರಣಾಗತಿಯುಂ = ಶರಣಾಗತಿಯನ್ನೂ, ತನಿ = ಅಸಾಧಾರಣನಾದ, ಪಾರ್ತನುಕ್ಕು : ಅರ್ಜುನನಿಗೆ, ಉರೈರ್ತಾ - ಹೇಳಿದನು.
578 ಶ್ರೀ ಗೀತಾರ್ಥ ಸಂಗ್ರಹಃ ತಾತ್ಪರ :- ‘‘ಈಶ್ವರೇ ಕರ್ತೃತಾಬುದ್ಧಿಃ ಸತ್ತೋಪಾದೇಯತಾಂತಿಮೇ | ಸ್ವಕರ್ಮಪರಿಣಾಮಶ್ಚಶಾಸ್ತ್ರಸಾರಾರ್ಥ ಉಚ್ಯತೇ !’’ ಮುಕ್ತಿಗೆ ಸಾಧನವೆಂದಿರುವ ತ್ಯಾಗ ಮತ್ತು ಸನ್ಯಾಸಗಳು ಬೇರೆಬೇರೆಯಲ್ಲ. ಎರಡೂ ಒಂದೇ ಎಂಬುದನ್ನೂ, ತ್ಯಾಗಸ್ವರೂಪವನ್ನೂ, ಸಕಲಕರಸಮಾರಾಧ್ಯನೂ ಸಕಲಕರ್ಮಗಳ ಕರ್ತೃವೂ ಆದ ಶ್ರೀಮನ್ನಾರಾಯಣನೇ ಎಂದು ಅನುಸಂಧಾನ ಮಾಡಬೇಕೆಂಬುದನ್ನೂ, ಸತ್ವರಜಸ್ತಮೋಗುಣಗಳ ಕಾರ್ಯವನ್ನೂ ವರ್ಣಿಸಿರುವುದರಿಂದ ಅವುಗಳಲ್ಲಿ ಸತ್ವಗುಣವೇ ಉಪಾದೇಯವೆಂಬುದನ್ನೂ, ಸ್ವಸ್ವವರ್ಣಾಶ್ರಮೋಚಿತ ಕರ್ಮಗಳನ್ನು ಯಾವಜೀವಿತ ಬಿಡದೆ ಮಾಡಲೇಬೇಕೆಂದೂ, ಅವು ಭಗವದಾರಾಧನರೂಪವಾದುವೆಂದೂ, ಅವೇ ಕಡೆಗೆ ಪರಮಪುರುಷಾರ್ಥಪ್ರಾಪ್ತಿಯನ್ನುಂಟುಮಾಡುತ್ತವೆಯಾಗಿ ಅವುಗಳ ಪ್ರಕಾರಗಳನ್ನೂ ಮತ್ತು ಇಡೀ ಗೀತೆಯಲ್ಲಿ ಸಾರವಾದ ಅರ್ಥವು ಭಕ್ತಿಯೋಗವೇ ಎಂಬುದನ್ನೂ ಈ 18ನೆಯ ಅಧ್ಯಾಯದಲ್ಲಿ ಶ್ರೀಕೃಷ್ಣನು ಉಪದೇಶಿಸಿದನು. (ಗೀತಾಭಾಷ್ಯದಲ್ಲಿ ಅಂಗಾಧಿಕಾರದಲ್ಲಿ ಪ್ರಪತ್ತಿಗೂ ಭಕ್ತಿಯೇ ಅಂಗಿಯೆಂಬ ಕಾರಣದಿಂದ ಭಕ್ತಿಗೆ ಪ್ರಾಧಾನ್ಯವಿರುವುದರಿಂದಲೂ, ಆರಂಭದಲ್ಲಿ ಗೀತಾರ್ಥಸಂಗ್ರಹದ ಯಾಮುನರ ಶ್ಲೋಕದಲ್ಲಿ - ‘‘ಭಕಗೋಚರಃ’’ ಎಂದಿರುವುದರಿಂದಲೂ ಈ ವಿವರಣೆ ಎಂದು ಭಾವ.) सत्कर्मातिप्रियं मे तदिह यदि भवेत्सात्त्विकत्यागयुक्तम् । सत्वानुष्ठाननिष्ठो यदपि विहितवानात्मलक्ष्यत्वत स्तत् । । सत्वानुष्ठानलभ्यं फलमपि शरणागत्यनुष्ठान मेवम् । सत्वस्यैव प्रदाता हातिशयशसे प्राह पार्थाय शौरिः ॥ ಮೂಲ : ವನ್ಪತ್ತರುಕ್ಕು ಮರುನ್ದನು ಮಾಯವನ್ ತಾನುರೈ ಇನ್ನಕ್ಕಡಲಮುದಾಮನನಿನ ವಿಕ್ಕೀತೈತನೈ, ಅನ್ವರುರೈಪ್ಪವರ್ ಕೇಳ್ ಪವರಾದರಿತ್ತೋದುಮವರ್, ತುನಕ್ಕಡಲಿಲ್ ತುಳಂಗು ನೀಂಗಿತ್ತುಲಂಗುವರೇ ॥
- १९
- 20
- ಅರ್ಥ :- ವನ್ - ಪ್ರಬಲವಾದ, ಪತ್: ಸಂಗವನ್ನು, ಅರುಕ್ಕುಂ = ಕತ್ತರಿಸುವ (ನಿವಾರಿಸುವ) ಮರುಂದ್ - ಔಷಧ, ಎನ್ = ಎಂದು, ಮಾಯವನ್ :
- : ಆಶ್ಚಯ್ಯ ಚೇಷ್ಟಿತನಾದ ಪರಮಾತ್ಮನು, ರ್ತಾ - ತಾನೇ, ಉರೈತ್ತ ಹೇಳಿದ, ಇನ್ನ-ಕಡಲ್-ಅಮುದಾಂ -ಎನ -ನಿನ್ನ : ಪರಮಭೋಗ್ಯವಾದ ಸಮುದ್ರದಿಂದ ತೆಗೆದ ಅಮೃತದಂತಿರುವ, ಇ-ಗೀತೈ-ತನ್ಯ : ಈ ಭಗವದ್ಗೀತೆಯನ್ನು, ಅವರು : ಭಗವದ್ಭಕ್ತರಿಗೆ, ಉರೈಪ್ಪವರ್ = ಹೇಳುವವರೂ, ಕೇಳ್ ಪವರ್ : ಕೇಳುವವರೂ, ಆದರಿತ್ತು-ಓದುಂ-ಅವರ್ :
; ಶ್ರೀ ಗೀತಾರ್ಥ ಸಂಗ್ರಹಃ 579 ಶ್ರದ್ಧೆಯಿಂದ ಓದುವವರೂ (ಕಲಿಯುವವರೂ) ತುನ್ನ-ಕಡಲಿಲ್ = ದುಃಖಸಾಗರದಲ್ಲಿ ತುಳಂಗುಹೈ = ಪರಿಭ್ರಮಿಸುವುದನ್ನು, ನೀಂಗಿ - ಹೋಗಲಾಡಿಸಿಕೊಂಡು, ತುಲಂಗುವರ್ : ನಿರ್ಮಲರಾಗಿ’ ಬೆಳಗುವರು. ತಾತ್ವರ :- ಪ್ರಬಲವಾದ ಸಂಸಾರ ಬಂಧನಕ್ಕೆ ಸಿಕ್ಕಿ ನರುಳುವವರಿಗೆ ದಿವ್ಯವಾದ ಮಹೌಷಧವು ಈ ಗೀತೆ. ಅತ್ಯಾಶ್ಚಯ್ಯ ಚರವುಳ್ಳ ಶ್ರೀಕೃಷ್ಣ ಪರಮಾತ್ಮನೇ ನೇರವಾಗಿ ಅರ್ಜುನನಿಗೆ ಉಪದೇಶಿಸಿದುದು. ಅತ್ಯಂತ ಭೋಗ್ಯವಾದ ಕಡಲಿನಿಂದ ಕಡೆದು ತೆಗೆದ ಅಮೃತದಂತಿದೆ. ಇಂತಹ ಹಿರಿಮೆಯ ಮಹಿಮೆಯುಳ್ಳ ಈ ಭಗವದ್ಗೀತೆಯನ್ನು ಶ್ರದ್ಧೆಯಿಂದ ಓದುವ ಶಿಷ್ಯರಿಗೆ ಉಪದೇಶಿಸುವವರೂ, ಆದರದಿಂದ ಕೇಳುವವರೂ ಮತ್ತು ಪ್ರೀತಿಯಿಂದ ಓದುವವರೂ ಸಹ ಸಂಸಾರ ದುಃಖಸಾಗರದಲ್ಲಿ ಮುಳುಗಿ ತೊಳಲುವುದನ್ನು ನೀಗಿಕೊಂಡು ನಿರ್ಮಲಚಿತ್ತರಾಗಿ ಕಂಗೊಳಿಸಿ ಸಕಲ ಪುರುಷಾರ್ಥಗಳನ್ನು ಪಡೆಯುವರು. सङ्गोन्मूलौषधं हीत्यतिबल ममुना मायिना शौरिणोक्ताम् । भोग्याम्भोधेरिवेमा मतिमधुरसुधां सर्वदात्रीं च गीताम् ॥ भक्तेभ्यो ये प्रयच्छन्त्यथ च निशमयन्त्यादराद्वा पठन्ति । भ्राजन्ते धूतदुःखाम्बुधिगतविविधभ्रान्तय स्ते कृतार्थः ॥ ಮೂಲ: ತೀದತ್ತನಲ್ ಗುಣಪ್ಪಾರಡಲ್ ತಾಮರೈಚ್ಚೆಮ್ಮಲ ಮೇಲ್, ಮಾದುತ್ತಮಾಯನ್ಮರುವವಿದ್ಗೀತೆಯಿನ್ ವಣ್ಪೊರುಳ್ಳಿ, ಕೋದತನಾನರೈಮೌಲಿಯಿನಾಶರಿಯನ್ನಕುರಿತಾನ್, ಕಾದಲ್ತುಣಿವುಡೈಯಾರ್ಕರುಂವಣ್ಣಂಕರುತ್ತುಡನೇ ॥
- २०
- 21
- ಅರ್ಥ:- ಕೋದು-ಅತ್ತ- ಅವದ್ಯವಿಲ್ಲದ (ದೋಷವಿಲ್ಲದ) ನಾಲ್ -ಮರೈ = ನಾಲ್ಕು ವೇದಗಳ, ಮೌಲಿ = ಶಿರಸ್ಸುಗಳಿಗೆ (ಉಪನಿಷತ್ತುಗಳಿಗೆ) ಆಶರಿರ್ಯ : ಆಚಾರರಾಗಿರುವ ಶ್ರೀವೇದಾಂತಾಚಾರ್ಯವರ್ಯರು, ತೀದು-ಅತ್ತ - ಹೇಯವಲ್ಲದ, ನಲ್ -ಗುಣ = ಒಳ್ಳೆಯ ಗುಣಗಳಿಗೆ, ಪಾರಡಲ್ ಕ್ಷೀರಸಮುದ್ರದಂತಿರುವ, ತಾಮರೈ-ಶೆಂ-ಮಲರ್-ಮೇಲ್ -ಮಾದು+ಉತ್ತ- ವಿಕಸಿತ ವಿಶಾಲಾರುಣ ರಮಣೀಯ ಕಮಲವಾಸಿನಿಯಾದ ಮಹಾಲಕ್ಷ್ಮೀಸಮೇತನಾದ, ಮಾರ್ಯ - ಅದ್ಭುತ ವ್ಯಾಪಾರನಾದ ಶ್ರೀಕೃಷ್ಣನು, (ಉಪದೇಶಿಸಿದ) ಮರುವ = ಆದರಿಸಿರುವಂತಹ, ಇ೯ : ಅತಿಭೋಗ್ಯವಾದ, ಗೀತೆಯಿನ್ : ಗೀತೆಯಲ್ಲಿರುವ, ವಣ್ -ಪೊರುಳ್ಳಿ - ಸುಂದರವಾದ ಅರ್ಥಗಳನ್ನು, (ಗೀತಾಶಾಸ್ತ್ರ ಸಾರಾರ್ಥವನ್ನು) ಕಾದಲ್ = ಭಕ್ತಿ, ತುಣಿವ್ - ವಿಶ್ವಾಸ (ಪ್ರಪತ್ತಿ), ಉಡೈಯಾರ್ - ಇವೆರಡನ್ನೂ ಉಳ್ಳವರು, (ಭಕ್ತರೂ, ಪ್ರಪನ್ನರೂ ಎಂದರ್ಥ)
580 ಶ್ರೀ ಗೀತಾರ್ಥ ಸಂಗ್ರಹಃ ಕುಂ-ವಣ್ಣಂ - ಅಭ್ಯಾಸಮಾಡುವ, ಕರುತ್ತುಡನೇ : ಅಭಿಪ್ರಾಯದಿಂದ, ಸುಲಭವಾಗಿ ಅರಿತು ಧರಿಸುವಂತಾಗಲೆಂದು, ಕುರಿತ್ತಾನ್ : ಸಂಗ್ರಹಿಸಿ ಕರುಣಿಸಿರುವರು.
ತಾತ್ಪರ :- ಹೇಯಗುಣರಹಿತನೂ, ಸಮಸ್ತ ಕಲ್ಯಾಣಗುಣಾಮೃತ ಮಹೋದಧಿಯೂ, ವಿಕಸಿತಾಯತಾರುಣ ರಮಣೀಯ ನಳಿನವಾಸಿನಿಯಾದ ಮಹಾಲಕ್ಷ್ಮಿ ಸಮೇತನೂ ಆದ ಶ್ರೀ ನಾರಾಯಣನು, ಶ್ರೀ ಕೃಷ್ಣನಾಗಿ ಅತ್ಯಾಶ್ಚಠ್ಯಕ್ರಿಯನಾಗಿ, ಅರ್ಜುನನ ಪ್ರಿಯನಾಗಿ, ಅವನಿಗೆ ಉಪದೇಶಿಸಿದ ಗೀತೆಯಲ್ಲಿರುವ ಮನೋಹರವಾದ ಸಾರಾರ್ಥಗಳನ್ನು ಭಕ್ತರೂ, ಪ್ರಪನ್ನರೂ ಹಾಗೂ ಸತ್ವರೂ ಅತಿಸುಲಭವಾಗಿ ತಿಳಿದುಕೊಳ್ಳಲೆಂದು, ದೋಷಗಂಧವಿಲ್ಲದ ವೇದಾಂತಗಳಿಗೆಲ್ಲಾ ಆಚಾರರೆಂಬ ಬಿರುದನ್ನು ಪಡೆದ ನಮ್ಮ ಶ್ಲೋಕ ಶ್ರೀ ದೇಶಿಕರು ತಮ್ಮ ಈ ಪ್ರಬಂಧದಲ್ಲಿ ತಿಳಿಸಿ, ಕರುಣಿಸಿರುವರು. ಒಂದೇ ಶ್ಲೋಕದಲ್ಲಿ ಈ 18 ಅಧ್ಯಾಯಗಳ ಸಾರಾರ್ಥವನ್ನು ಹೀಗೆ ಸಂಗ್ರಹಿಸಿರುವರು. “ಅಧ್ಯಾಯೆಶಿಷ್ಯಮೋಹಸದುಪಶಮವಿಧಿಃ ಕರ್ಮಯೋಗೋSಸ್ಯಭೇದಾಃ | ತಕಾದಿಯೋಗಃ ತದುಚಿತಮಹಿಮಾ ಭೂತಿಕಾಮಾದಿಭೇದಃ ॥ ಭಕ್ತಿಸ್ತನ್ಮೂಲ ಭೂಮಾ ಭಜನ ಸುಲಭತಾ ಭಕ್ತಿಶ್ಚಿಫ್ರಾ ದಿಜೀವ | ಕೈಗುಣ್ಯಂಶಾಸಿತಾಜ್ಞಾತದಧಿಗಮಪರಃ ಸಾರವರ್ಗಶ್ಚಗೀತಾಃ ॥” ಇದು ತಾತ್ಪರಚಂದ್ರಿಕೆಯ ಕೊನೆಯಲ್ಲಿರುವುದು. निर्धूताखिलदोषमङ्गलगुणक्षीराब्धिपद्मासिनी- वक्षोऽत्यद्भुतचेष्टितप्रियतमा गीता तदीयं हि तम् । । निर्दोषागममौलिदेशिकवरो भक्तिप्रपत्त्यर्थिनो : । सारार्थं सुखबोधधारणकृते सङ्गृह्य चान्वग्रहीत् ॥ t1 ft TRIHAR: H श्रीमद्यामुनयोगिदर्शितपथे गीतार्थसंग्राहकः । ग्रन्थ श्रीनिगमान्तदेशिककृतो वर्वर्ति यो द्राविडः । । गोपालो गुरुराडनुग्रहफलः तत्सूक्तिलोलो मुदा । व्याख्यात् कन्नडभाषया च विबुधव्याहारतोऽश्लोकयत् ॥ २१ !!ಶ್ರೀಮತೇ ನಿಗಮಾಂತ ಮಹಾದೇಶಿಕಾಯ ನಮಃ । ಪ್ರಬಂಧಸಾರ ಶ್ರೀಮದಾಚಾರ್ಯರು ಈ ಪ್ರಬಂಧಸಾರದಲ್ಲಿ ಆಳ್ವಾರುಗಳ ಪ್ರಬಂಧಗಳ ಸಾರಾರ್ಥವನ್ನು ಅವರವರ ಪಾಶುರಗಳಲ್ಲಿ ಚಿಕ್ಕ ಚಿಕ್ಕ ವಿಶೇಷಣಗಳ ಮೂಲಕ ಅಳವಡಿಸಿರುವುದರಿಂದ ಈ ಗ್ರಂಥದ ಹೆಸರು ಅನ್ವರ್ಥವಾಗಿ ಬಹಳ ಸಮಂಜಸವಾಗಿ ಒಪ್ಪಿದೆ. ನಾಲ್ಕು ಸಾವಿರ ಪಾಶುರಗಳಲ್ಲಿ ತಮಗೆ ಪರಮಾದರವೂ ಆಲೋಡನೆಯೂ ಇರುವುದರಿಂದಲೇ ಆಳ್ವಾರುಗಳು ಅವತರಿಸಿದ ದಿವ್ಯದೇಶ, ತಿಂಗಳು, ನಕ್ಷತ್ರ ಮತ್ತು ಅವರವರ ಹಿರಿಮೆ ಮಹಿಮೆಗಳು, ಆಯಾ ಪ್ರಬಂಧದ ಹೆಸರು ಅದರಲ್ಲಿರುವ ಪಾಶುರಗಳ ಸಂಖ್ಯೆ ಮತ್ತು ಆಯಾ ಪ್ರಬಂಧದ ಜೀವನಾಡಿಯಂತಿರುವ ಸಾರಾಂಶ ಇವೆಲ್ಲವನ್ನೂ ಸ್ಪಷ್ಟಪಡಿಸಿ, ತಮ್ಮ ಅನುಸಂಧಾನಕ್ಕಾಗಿ ಆಯಾ ಪ್ರಬಂಧಗಳನ್ನು ತಮಗೆ ಅನುಗ್ರಹಿಸುವಂತೆ ಆಯಾ ಆಳ್ವಾರುಗಳನ್ನು ಪ್ರಾರ್ಥಿಸಿ, ಕೊನೆಗೆ 2 ಪಾಶುರಗಳಲ್ಲಿ ಎಲ್ಲಾ ಆಳ್ವಾರುಗಳ ಹೆಸರುಗಳನ್ನೂ ಅವರವರ ದಿವ್ಯ ಪ್ರಬಂಧಗಳಲ್ಲಿರುವ ಒಟ್ಟು ಪಾಶುರಗಳ ಸಂಖ್ಯೆಯನ್ನೂ ಹೇಳಿ, ಒಂದು ಪಾಶುರದಲ್ಲಿ ಒಂದೇ ಶ್ರೇಣಿಯಲ್ಲಿ ಎಲ್ಲರನ್ನೂ ಸಂಕೀರ್ತಿಸಿ, ಆ ಪ್ರಬಂಧಗಳೇ ತಮ್ಮ ಉಜೀವನ ಸಾಧನವೆಂದು ಮೊಳಗಿ, ಅವುಗಳಲ್ಲಿ ತಮಗಿರುವ ಅನಿತರ ಸಾಧಾರಣ ಜ್ಞಾನ ಭಕ್ತಿಗಳ ಸಂಕೇತವೆಂಬಂತೆ ತಮ್ಮನ್ನು ತಾವೇ ತಮಿರ್ಳಮರೈಯೋನ್’ ಎಂದು ಹೆಮ್ಮೆಯಿಂದ ಹೊಮ್ಮಿ ಹೇಳಿಕೊಂಡಿರುವರು. ಈ ಪ್ರಬಂಧಸಾರವನ್ನೂ ಅನುಸಂಧಾನ ಮಾಡುವವರಿಗೆ ಭಗವಂತನ ಕೃಪೆಯಿಂದ ಸಕಲ ಕ್ಷೇಮವೂ ಆಗುವುದೆಂದು ಅನುಗ್ರಹಿಸಿರುವರು. ಶ್ರೀಮದಾಚಾದ್ಯರು ತಮ್ಮ ಸತ್ವವಿಧ ಶಕ್ತಿಯನ್ನೂ ಈ ಪ್ರಬಂಧದಲ್ಲಿ ತೋರಡಿಸಿಕೊಂಡಿರುವರು. ન ಅವರು ಅನುಗ್ರಹಿಸಿರುವಂತೆ ನಮ್ಮ ನಾಡಿನವರೂ ಅದರ ಪೂರ್ಣಫಲವನ್ನು ಅನುಭವಿಸುವಂತಾಗಲೆಂದು ಪ್ರಯತ್ನಿಸಲಾಗಿದೆ. ಸದಭಿಮಾನಿಗಳ ಸಹಾಯದಿಂದ ಸಾರ್ಥಕವಾಗಲೆಂದು ಪ್ರಾರ್ಥಿಸುತ್ತೇನೆ. ಶುಭಕೃತ್ ಕಾರ್ತಿಕ - ಮಾರ್ಗಶಿರ 1962 ಇತಿ, ಸದಾಚಾರದಯಾವಲಂಬೀ ವಿದ್ವಾನ್ ಹ- ಗೋಪಾಲಾಚಾರ್ಯಃ ನಂ. 14, 4ನೇ ಕ್ರಾಸ್, ಕಾಳಿದಾಸ ರಸ್ತೆ ವಾಣಿವಿಲಾಸ ಮೊಹಲ್ಲ, ಮೈಸೂರು ॥8,call ॥ ಶ್ರೀಮತೇ ನಿಗಮಾಂತ ಮಹಾದೇಶಿಕಾಯ ನಮಃ ॥