ಶ್ರೀಮನ್ನಿಗಮಾಂತ ಮಹಾದೇಶಿಕರು ತಿರುವಹೀಂದ್ರಪುರದ ‘‘ಶ್ರೀದೇವ ನಾಯಕನ’’ ವಿಷಯವಾಗಿ ಏಳು ಪ್ರಬಂಧಗಳನ್ನು ಬರೆದರು. ಅವು “ಊಶಲ್ ಏಶಲ್, ಪಂದ್, ಕಳಲ್, ಅಮ್ಮಾನ್ಯ, ಮುಮ್ಮಣಿಕೋವೈ, ನವಮಣಿಮಾಲೈ’’ ಎಂದು. ಇವುಗಳಲ್ಲೊಂದು ‘ಮುಮ್ಮಣಿಕೋವೈ’’. ತಮಿಳಿನ ಪ್ರಬಂಧ ಲಕ್ಷಣದಂತೆ 30 ಪಾಶುರಗಳಿರಬೇಕು, ಹಾಗಿಲ್ಲದೆ ನಮಗೆ ದೊರಕಿರುವುದು 10 ಪಾಶುರಗಳು ಮಾತ್ರ. ಉಳಿದ 20 ಪಾಶುರಗಳೂ ಮತ್ತು ಊಶಲ್’ ಆದಿ 5 ಪ್ರಬಂಧಗಳೂ ನಮ್ಮ ದುರದೃಷ್ಟದಿಂದ ಲುಪ್ತವಾಗಿವೆ. ‘‘ಮುಮ್ಮಣಿಕೋವೈ’’ ಮೂರು ವಿಧರತ್ನಗಳಿಂದ ಕೂಡಿದ ಮೂಲೆಯಂತೆ ಮೂರು ವಿಧವೃತ್ತಗಳಿಂದ (ಅಹವಲ್, ವೆಣ್ಣಾ, ಕಲಿತ್ತುರೈ) ಕೂಡಿದೆ. ಆದುದರಿಂದಲೇ ಈ ಹೆಸರು . ಬಂದಿದೆ. ಹಾಗೂ ಅಂತಾದಿ ರೂಪವಾಗಿದೆ. ಇದರಲ್ಲಿ ಮೊದಲು ಶ್ರೀದೇವಿಯ ಪ್ರಭಾವವನ್ನೂ, ‘ಶ್ರೀ’’ ಶಬ್ದದ 6 ಅರ್ಥಗಳಲ್ಲಿ ಪುರುಷಾಕಾರ ಪ್ರಪತ್ನಿ ಮಾಡುವರು. ಬಳಿಕ ಶ್ರೀ ದೇವನಾಯಕನ ಕಲ್ಯಾಣಗುಣಗಳನ್ನು ಹೊಗಳಿ ಎಲ್ಲಾ ವಸ್ತುವೂ ಎಲ್ಲಾ ವಿಧ ಬಂಧುವೂ ಅವನೇ ಎಂದು ಸಕಾರಣವಾಗಿ ತಿಳಿಸಿ, ಅವನ ಪಾದಾರವಿಂದಗಳನ್ನು ಶರಣು ಹೊಂದಿದವರು ಅವನಿಗೆ ಸಮಾನರಾಗುವರು ಎಂದು ವ್ಯಕ್ತಪಡಿಸಿರುವರು ಈ ನಮ್ಮ ದೇಶಿಕೇಂದ್ರರು. ಶ್ರೀ ದೇವನಾಯಕನಲ್ಲಿ ದೇಶಿಕರಿಗೆ ಅತಿಶಯವಾದ ಭಕ್ತಿಯಿರುವುದರಿಂದ ಅಳ್ವಾರುಗಳಂತೆ, ತಾವೂ ಅವನನ್ನು ನಾಯಕನನ್ನಾಗಿಯೂ, ತನ್ನನ್ನೂ ನಾಯಕಿಯಂತೆಯೂ, ಮಾಡಿಕೊಂಡು, ಗೆಳತಿಯ ಮತ್ತು ತಾಯಿಯ ಮಾತುಗಳಂತೆ ಹಾಡಿರುವ ಕೆಲವು ಪಾಶುರಗಳು ಓದುಗರಾದ ರಸಿಕರನ್ನು ಮುಗ್ಧರನ್ನಾಗುವಂತೆ ಮಾಡುವುವು. ಶುಭಕೃತ್ 1962 ವಿದ್ವಾನ್ ಹ. ಗೋಪಾಲಾಚಾರ್ಯ ಮೈಸೂರು ॥3,0:॥ ॥ಶ್ರೀಮತೇ ನಿಗಮಾಂತ ಮಹಾದೇಶಿಕಾಯ ನಮಃ ॥
ಮುಮ-್-ಮಣಿಕ್-ಕೋವೈ
ಮೂಲ : ಅರುಳತರುಂ ಅಡಿಯರ್‌ಪಾಲ್‌ಮೆಯ್ಯವೈತ್ತು ತೆರುಳತರನಿನ್ನ ದೈವನಾಯಕಾ ! ನಿನ್,
ಅರುಳೆನುಂ ಶೀರೋ ಅರಿವೈಯಾನದೆನ, ಇರುಳ್‌ಹವೆಮಕ್ಕೋರ್ ಇನ್ನೊಳಿವಿಳಕ್ಕಾಯ್, ಮಣಿವರೈಯನ್ನನಿನ್‌ರುವುರುವಿಲ್, ಅಣಿಯಮರಾದ ಅಲಂಗಲಾಯಿಲಂಗಿ, ನಿನ್ನಡಿಕ್ಕೆಲ್ಲಾಂ ತನ್ನಡಿಯೇರ ಅನ್ವುಡನ್ ಉನ್ನೋಡವತರಿತ್ತರುಳಿ, ವೇಂಡುರೈಕೇಟ್ಟುಮೀಂಡವೈಕೇಳಿತ್ತು, ಇಂಡಿಯ ವಿನೈಹಳ್ ಮಾಂಡಿಡಮುಯನ್ನು, ತನ್ನಡಿಶೇರ್ ನತಮ ಉನೈಅಣುಹ, ನಿನ್ನುಡನ್‌ಶೇರ್‌ನಿಯ್ಕುಂನಿನ್ ತಿರುವೇ ॥
1 ಅರ್ಥ:- ಅರುಳ್ ತರುಂ : ದಯೆಯನ್ನು ಬೀರುವ, ಅಡಿಯರ್-ಪಾಲ್ - ನಿನ್ನ ಭಕ್ತರ ವಿಷಯದಲ್ಲಿ ಮೆಯ್ಯ : ಸತ್ಯವನ್ನೂ (ಅಥವಾ ದಿವ್ಯಮಂಗಳ ವಿಗ್ರಹವನ್ನೂ) ವೈತ್ತು = ಸ್ಥಾಪಿಸಿ, ತೆರುಳ್ ತರ : ಜ್ಞಾನವನ್ನು ಕೊಡುವುದಕ್ಕಾಗಿ, ನಿನ್ನ = ಇರುವ, ದೈವನಾಯಕ - ದೇವನಾಯಕನೇ ! ರ್ನಿ-ಅರುಳ್ -ಎನುಂ - ನಿನ್ನ ಕರುಣೆಯೆಂಬ, ಶೀರ್ ಕಲ್ಯಾಣ ಗುಣವು, ಓರ್ -ಅರಿ-ಆನದು-ಎನ = ಒಂದು ಸ್ತ್ರೀರೂಪವನ್ನು ತಾಳಿರುವುದೋ ಎಂಬಂತೆ, ಇರುಳ : ಅಜ್ಞಾನವೆಂಬ ಕತ್ತಲು, ಶೆಹ : ನಾಶವಾಗುವಂತೆಯೂ, ಎಮಕ್ಕು : ನಮಗೆ, ಓ -ಇನ್-ಒಳಿ-ಅಸದೃಶವಾದ ಮತ್ತು ಭೋಗ್ಯವಾದ ಪ್ರಕಾಶವುಳ್ಳ, ವಿಳಕ್ಕಾಯ್ = ದೀಪವಾಗಿ, ಮಣಿ-ವರೆ-ಅನ್ನ - ರತ್ನಪರ್ವತದಂತಹ, ನಿನ್ -ತಿರು-ಉರುವಿಲ್ - ನಿನ್ನ ಚೆಲುವಿನ (ತನುವಿನಲ್ಲಿ) ರೂಪದಲ್ಲಿ ಅಣಿ-ಅಮರ್ : ಆಭರಣ ಭೂಷಿತವಾದ, ಆಹ - ವಕ್ಷಸ್ಥಳದಲ್ಲಿ, ಅಲಂಗಲಾಯ್ ಮಾಲೆಯಂತೆ ಅಲಂಕಾರವಾಗಿ, ಇಲಂಗಿ - ಪ್ರಕಾಶಿಸಿ, ರ್ನಿ-ಪಡಿ-ಎಲ್ಲಾಂ - ನಿನ್ನ
=516
ಮುಮ್ಮಣಿಕ್ಕೋವೈ
ಪ್ರಕಾರಗಳಿಗೆಲ್ಲಾ ರ್ತ-ಪಡಿ - ತನ್ನ ಪ್ರಕಾರಗಳನ್ನೂ, ಏ = ಒಪ್ಪಿರುವಂತೆ, ಅನ್ನುರ್ಡ : ಪ್ರೀತಿಯಿಂದ, ಉನ್ನೋಡು = ನಿನ್ನೊಡನೆ, ಅವತರಿತ್ತರುಳಿ : ಅವತಾರಮಾಡಿ, ವೇಂಡು ಉರೈ = ಬೇಕಾದ ಸಂಗತಿಗಳನ್ನು, ಕೇಟ್ಟು = ಕೇಳಿ, ಮೀಂಡು-ಅವೈ : ಮತ್ತೆ ಅವನನ್ನು, ಕೇಳಿತ್ತು = ಕೇಳುವಂತೆ ಮಾಡಿ, ಇಂಡಿಯ-ಎನೈಹಳ್ : ಪಾಪಸಮೂಹವು, ಮಾಂಡಿಡ : ನಾಶವಾಗುವಂತೆ, ಮುಯನ್ನು : ಯತ್ನಿಸಿ, ರ್ತ-ಅಡಿ-ಶೇರ್‌ನ್ನ-ತಮ ತನ್ನಡಿಯಿಡಿದ ಭಕ್ತರು, ಉ = ಅಣುಹ - ನಿನ್ನನ್ನು ಸೇರುವಂತೆ, ನಿನ್ನುರ್ಡಶೇರ್ = ನಿನ್ನೊಡನೆ (ಎಂದಿಗೂ ಅಗಲದಂತೆ) ಸೇರಿ, ನಿಲ್ಕುಂ : ಇರುವ, ರ್ನಿ-ತಿರುವೇ = ಲಕ್ಷ್ಮಿಯೇ ಅಲ್ಲವೇ. ನಿನ್ನ
ತಾತ್ಪರ :- ಭಕ್ತರಾದ ನಮಗೆ ಜ್ಞಾನಜ್ಯೋತಿಯನ್ನು ಬೆಳಗುವುದರಲ್ಲಿ ‘ದಾಸಸತ್ಯ’’ ಎಂಬ ಬಿರುದನ್ನು ಪಡೆದು, ದಿವ್ಯವಾದ ಜ್ಞಾನ ನಯನಗಳನ್ನು ಕೊಟ್ಟು, ಕರುಣಿಸುವ ಶ್ರೀ ದೇವನಾಯಕನೇ ! ದಿವ್ಯ ಭೂಷಣಗಳಿಂದ ವಿಭೂಷಿತಳಾಗಿದ್ದರೂ, ಸುಸವರ್ಣತೆಯನ್ನು ಹೊಂದಲು, ಇಂದ್ರನೀಲ ಶೈಲದಂತಿರುವ ನಿನ್ನ ದಿವ್ಯಮಂಗಳ ಮೂರ್ತಿಯ ವಕ್ಷಸ್ಥಳದಲ್ಲಿ ವಿರಾಜಿಸುತ್ತಾ, ದಿವ್ಯ ಮಾಲಿಕೆಯಂತೆ ಕ್ಷಣವೂ ಅಗಲಿರದೆ ಶ್ರೀದೇವಿಯು ನಿತ್ಯ ವಾಸಮಾಡುತ್ತಿರುವಳು. ಈ ಲೋಕದಲ್ಲಿ ನೀನು ಅವತರಿಸುವಾಗಲೆಲ್ಲಾ ಆಕೆಯೂ ನಿನ್ನ ದಿವ್ಯರೂಪಕ್ಕೆ ಅನುರೂಪವಾದ ರೂಪಳಾಗಿಯೇ ಅವತರಿಸುವಳು. ದಿವ್ಯರತ್ನಪ್ರದೀಪದಂತೆ ತಾನಿರುತ್ತಾನಮ್ಮ ಹೃದಯಾಂಧಕಾರವನ್ನು, ನಿವಾರಿಸಿ ಬೆಳಗುವಳು. ಭಕ್ತರ ಕೋರಿಕೆಗಳನ್ನು ತಾನು ಆಲಿಸಿ, ನಿನ್ನಲ್ಲಿ ಅರಿಕೆ ಮಾಡಿ, ಅವರ ಕರ್ಮಗಳನ್ನು ಹೋಗಲಾಡಿಸುವಳು. ತನ್ನನ್ನು ಆಶ್ರಯಿಸಿದವರನ್ನು ನಿನ್ನನ್ನು ಪಡೆಯುವಂತೆ ಮಾಡಿ, ನಿನ್ನದಯಯೇ ಮೂರ್ತಿಮತ್ತಾಗಿ ಬಂದಂತೆ ತಾನಿರುವಳು. ಅನವರತವೂ ನಿನ್ನೊಡನೆ ಬೆಳಗಿ, ನಿನ್ನ ಪ್ರಭಾವವನ್ನು ಹೆಚ್ಚಿಸಿರುವ ಈ ಮಹಾಲಕ್ಷ್ಮಿಯೇ ನಮ್ಮ ಈ ಪ್ರಪತಿಯಿಂದ ಪ್ರಸನ್ನಳಾಗಿ ಸಕಲ ವಿಧದಿಂದಲೂ ನಮಗೆ ಜ್ಞಾನ ಜ್ಯೋತಿಯನ್ನು ಬೀರಿ, ಕೃಪೆಮಾಡುವಳು. सत्यं रूपं निधाय स्वक मिह करुणादियिषु स्वाश्रितेषु । ज्ञानं दातुं स्थित ! श्रीदिविषदधिपते ! सद्गुण स्ते कृपाख्यः ॥ एकं स्त्रीरूप मन्यादृश मिव गतवानज्ञतोच्छित्तये नः । भूत्वा न्तर्दीप्तदीपो मरिधर इव ते विग्रहे दिव्यभव्ये ॥ आविर्भूय त्वया या सह वृतवच आकर्ण्य भूय स्तदेव । प्रश्राव्योन्मूलने ये स्वदुरितनिचयस्योद्यता स्वाङ्घ्रिरक्ताः ॥ त्वा मेवाप्ता यथा स्युर्भगवदनुगुणा स्त्वत्सनाथा तदर्थम् । दीव्यन्ती सुस्थिता सा भवति भगवती त्वत्प्रिया पद्मसद्मा ॥ १ ಮುಮ್ಮಣಿಕ್ಕೋವೈ ಮೂಲ : ತಿರುಮಾಲಡಿಯವರನ್ನು ಮೆಯ್ಯನಾರ್‌ಶೆಯ್ಯ, ತಿರುಮಾಮಹಳ್ ಎನ್ನುಂ ಶೇರುಂ-ತಿರುಮಾರ್‌ಬಿಲ್, ಇಮ್ಮಣಿಕ್ಕೋವೈಯುಡನ್ ಏರಿಗ್ರಾರೆನನ್, ಮುಮ್ಮಣಿಕ್ಕೋವೈಮೊಳಿ ॥
517 2 ಅರ್ಥ :- ತಿರುಮಾಲ್ = ಶ್ರೀಮನ್ನಾರಾಯಣನು, ಅಡಿಯವರು = ಭಕ್ತರ ವಿಷಯದಲ್ಲಿ, ಮೆಯ್ಯನಾರ್ : ಸತ್ಯವನ್ನು ಬಿಡದವನೂ, (ತನ್ನ ನಿಜರೂಪ ತೋರಿಸಿಕೊಳ್ಳುವವನೂ ಶೆಯ್ಯ = ಕೆಂಪಿಡಿದ, ತಿರು-ಮಾ-ಮಹಳ್ - ಮಹಾಲಕ್ಷ್ಮಿಯು, ಎನ್ನುಂ : ಯಾವಾಗಲೂ, ಶೇರುಂ = ಸೇರಿರುವ, ತಿರುಮಾರ್ ಬಿಲ್ - ತನ್ನ ಚೆಲುವಾದ ಹೃದಯದಲ್ಲಿ ಇ-ಮಣಿ-ಕೋವೈ -ಉರ್ಡ : ಈ ಮಣಿಗಳಿಂದಾದ ಮಾಲೆಯೊಡನೆ, ಎಳ್-ರ್ತ - ತನ್ನದಾದ, ಮು-ಮಣಿಕೋವೈಮೊಳಿ : ಮುಮ್ಮಣಿಕ್ಕೋವೈಯೆಂಬ ಮಾತನ್ನು, ಏರಿದ್ರಾರ್ - ಒಪ್ಪಿಕೊಂಡು ಆನಂದಿಸುವನು.
ತಾತ್ವರ :- ಶರಣಾಗತರಿಗೆ ಸತ್ಯರೂಪನಾದ ದೇವನಾಯಕನು, ಅನವರತವೂ ಮಹಾಲಕ್ಷ್ಮಿಯು ನಿತ್ಯವಾಸರಸಿಕಳಾಗಿರುವ ತನ್ನ ವಕ್ಷಸ್ಥಳದಲ್ಲಿ ಕೌಸ್ತುಭಾದಿ ಭೂಷಣಗಳಿಂದ ಶೋಭಿತನಾಗಿರುವಂತೆ ಈ ದಾಸನ ಈ ದಿವ್ಯ ಪ್ರಬಂಧವನ್ನು (ಮುಮ್ಮಣಿಕೋವೈ) ಅತ್ಯಾದರದಿಂದ ತನ್ನ ಹೃದಯದಲ್ಲಿ ಧರಿಸಿ, ಕೊಂಡಾಡುವನು. (‘‘ಶ್ರೀದೇವನಾಯಕನು ಈ ಕೃತಿಯನ್ನು ಪ್ರೇಮದಿಂದ ಆಲಿಸುವುದರಿಂದ ಅವನ ಭಕ್ತಶಿರೋಮಣಿಗಳಿಗೂ ಅತಿಭೋಗ್ಯದಾಯಕವೆಂಬುದರಲ್ಲಿ ಸಂಶಯವೇ ಇಲ್ಲ.’’ ಎಂದು ಭಾವ). श्रीलोल स्स्वपदाश्रितेषु सततं सत्यानपेतोक्तिमान् । ऋज्व्या रक्तरुचा च शोभितमहावक्षस्स्थले हि श्रिया ॥ रम्यै रत्नवरैर्युता मिह महामाला मिवेमां स्वकाम् । मालामप्युररीकरोति सुवचस्त्रैविध्यक्लप्तां मुदा ॥ ಮೂಲ : ಮೊಳಿವಾ ಮೊಳವನಮುಮ್ಮಕೈಯಾಹುಂಅಯಿಂದೈಯಿಲ್ ವಂದ್, ಇಳಿವಾರಿಳಿಹವೆನ್ನು ಇನ್ನಮುದಕ್ಕಡಲಾಹಿನಿ, ವಿಳಿವಾ ಅರುಳಮೆಯ್ಯರ್ ಮೆಲ್ಲಡಿ ವೇಂಡಿಯಮೆಲ್ಲಿಯಳಮೇಲ್ ಪೊಳಿವಾ ಅನಂಗರ್ ತಂಪೂಂಕರುಂಬುಂದಿಯಪೂಮಳ್ಳೆಯೇ ॥ 3 २ 518
ಮುಮ್ಮಣಿಕ್ಕೋವೈ
ಅರ್ಥ :- ಮೊಳಿವಾರ್ = ಮಾತಾಡುವವರು, ಮೊಳಿವನ = ಆಡುವ ಮಾತುಗಳೆಲ್ಲಾ, ಮುಮ್ಮ-ಆಹುಂ : ಮೂರು ವೇದಗಳೋ ಎಂಬಂತಾಗುವ, ಅಯಿಂದೈಯಿಲ್ ತಿರುವಹೀಂದ್ರಪುರದಲ್ಲಿ ವಂದು = ಬಂದು, ಇಳಿವಾರ್ - ಅನುಭವಿಸಲಾಸೆಯುಳ್ಳವರು, ಇಳಿಹ-ಎನ್ನು : ಬಂದನುಭವಿಸಿರೆಂದು ಹೇಳುವಂತೆ, ಇನ್-ಅಮುದ-ಕಡಲ್-ಆಹಿ = (ಅನುಭವಿಸುವವರಿಗೆ) ಅಮೃತಸಾಗರವೋ ಎಂಬಂತೆ, ನಿರ - ಇರುವ, ಎಳಿವಾಡ್ -ಅರುಳ್ = ಕಟಾಕ್ಷಕೃಪೆಯುಳ್ಳ, ಮೆಯ್ಯರ್ : (ಭಕ್ತರಿಗೆ) ಸತ್ಯರೂಪನಾಗಿಯೇ ದರ್ಶನವೀಯುವ ದೇವನಾಯಕನ, ಮೆಲ್ -ಅಡಿ = ಅತಿಮೃದುಚರಣ ಕಮಲವನ್ನು, ವೇಂಡಿಯ : ಅನುಭವಿಸುವ, ಮಲ್-ಇಯಳ್ -ಮೇಲ್ - ಕೋಮಲಾಂಗನೆಯಾದ ಇವಳ ಮೇಲೆ, ಅನಂಗರ್ - ಮನ್ಮಥನು, ತಂ-ಪೂಂ-ಕರುಂಬು-ಉಂದಿಯ = ತನ್ನ ಅಂದವಾದ ಕಬ್ಬುಬಿಲ್ಲಿನಿಂದ ಹೊರಡುವ, ಪೂ-ಮಳ್ಳೆಯೇ : ಹೂಮಳೆಯನ್ನು,
ಪೊಳಿವಾರ್ - ಸುರಿಸುವರು.
ತಾತ್ವರ :- ತಿರುವಹೀಂದ್ರಪುದಲ್ಲಿರುವ ಸಮಸ್ತ ಜೀವರಾಶಿಗಳ ಉಕ್ತಿಗಳು ಸಾಮಾನ್ಯವಲ್ಲ. ಎಲ್ಲವೂ ವೇದಸಾರಗಳು. ಇಂತಹ ದಿವ್ಯಕ್ಷೇತ್ರದಲ್ಲಿ ದೇವನಾಯಕನು ‘‘ಸಕಲ ಮನುಜರೂ ಸೇವಿಸಿ, ಉಜೀವಿಸಲೆಂದು ಬಂದು ದರ್ಶನವಿತ್ತು, ಭಕ್ತರಿಗೆ ಅಮೃತಸಾಗರದಂತಹ ತನ್ನ ಕಟಾಕ್ಷಗಳನ್ನು ಬೀರುವನು. ಅಂತಹ ಸುಂದರ ಮತ್ತು ಕರುಣಾಳುವನ್ನು ನಿರತಿಶಯ ಭಕ್ತಿಯಿಂದ ಕೂಡಲು ಉತ್ಕಟಾಕಾಂಕ್ಷೆಯಿಂದ ಹಂಬಲಿಸಿದರೂ ದೊರಕದಿರಲು, (ನಾಯಕಿಗೆ) ಮನ್ಮಥನು ಸಮಯ ಸಿಕ್ಕಿತೆಂದು ತನ್ನ ಪುಷ್ಪಬಾಣಗಳನ್ನು ಸುರಿಸುತ್ತಾ ತುಂಬಾ ಕಂಗೆಡಿಸುವನಲ್ಲಾ! ಮಾಡುವುದೇನು ? ಎಂದು ನಾಯಕಿಯ ಸ್ನೇಹಿತ ಮರುಗುವಳು. ಶ್ರೀ ದೇಶಿರ್ಕರವರು ನಾಯಕಿಯ ಭಾವದಿಂದ ಅನುಭವಿಸಿದ ಅವಸ್ಥಾವಿಶೇಷವಿದು. ಇದನ್ನು ನೋಡಿದ ಸಖಿಯ ಮಾತಿನಂತಿದು ಇದು. ಆಳ್ವಾರುಗಳೂ ಹೀಗೆಯೇ ನಾಯಿಕಾಭಾವಾವೇಶದಿಂದ ಅನುಭವಿಸಿರುವರು, ಭಕ್ತಿಯು ಎಲ್ಲೆ ಮೀರಿ ಶೃಂಗಾರಭಾವವನ್ನು ತಾಳುವುದು. ಭಕ್ತಿ ಶೃಂಗಾರವತ್ಯಾಪರಿಣಮತಿ’’ ಎಂದೂ, “ಭಕ್ತಿಂನಿಜಾಂ ಪ್ರಣಯ ಭಾವನಯಾಗೃಣಂತಃ’’ ಎಂದು ಗೋದಾಸ್ತುತಿಯಲ್ಲೂ ಶ್ರೀ ದೇಶಿಕರೇ ಹೇಳಿರುವರು. ಇಂತಹ ಪಾಶುರಗಳು ಇದರಲ್ಲಿ ಮೂರು ಇವೆ. ಇದೊಂದು, ಆರನೆಯದೊಂದು ಮತ್ತು ಒಂಭತ್ತನೆಯದೊಂದು, ಈ ಮೂರು ಪರಭಕ್ತಿ, ಪರಜ್ಞಾನ, ಪರಮಭಕ್ತಿ ಸ್ಥಾನದಲ್ಲಿರುವಂತೆ ಇವೆ. (ಸಖಿಯ ಉಕ್ತಿಯಿದು) यत्रोदीरयतां व्रजन्ति समतां त्रय्युक्तिभिश्चोक्तयः । तन्नाहीन्द्रपुरेऽवतीर्य भगवान् “आत्मानुभूत्युत्सुकाः ॥ ಮುಮ್ಮಣಿಕ್ಕೋವೈ आस्तेऽत्रानुभवन्त्विति ह्यमृतवाराशेर्दयालोकिनः । तस्य तस्य मृदू पदा वभिलषन्त्याः कोमलाङ्याः तनौ ॥ अनङ्ग स्त्वात्मरम्येक्षुचापनिस्सृतमार्गणान् । पुष्ववर्षे र्निर्विशेषां प्रवर्षति मुदा सदा ॥ ಮೂಲ : ಮಳೆಯಿಲೆಳುಂದ ಮೊಕ್ಕುಳ ಪೋಲ್ ವೈಯಂ, ಅಳಿಯವೊಳಿಯಾವಡಿಯವರ್‌ಮೆಯ್ಯ, ಅರುಮರೈಯಿನ್ ಪೊರುಳ್ ಆಯ್ ನೈಡುಕ್ಕುಂಗಾಲ್ ತಿರುವುಡನಮರ್ ದೈವನಾಯಕನ್ ನೀ, ನಿನಿರುತನಕ್ಕು ನೀ ತಿರುವಾಹಿ, ಇಂದು ತನ್ನಿಲವುಡನ್ ಇಲಂಗು ತನ್ನೆಯನೈ, ನಂದುದಲಿಲ್ಲಾನಲ್ ವಿಳಾಹಿ, ಅಂದಮಿಲಮುದ ವಾಳಿಯಾಯ್ ನಿತ್ತಿ, ಪಾರಡಲ್ ತನ್ನಿಲ್ ಪನ್ಮಣಿಯನ್ನ, ಶೀರಣಂ ಶೇರ್‌ನ್ದ ಶೀಲ ಮೆಲ್ಲೆಯಿನೈ, ಅಡಿಯವ ಪಿಳ್ಳೆಕಳ್ ನಿನ್ ಕರುತ್ತಡೈಯಾದು, ಅಡೈಯ ವಾಣರುಳುಂ ಅರಶನುಮ ನೀಯೇ, ಉಯರ್ನ್ನ ನೀಯು ಯೆಮ್ಮುಡನ್ ಕಲನ, ಅಯಿಂ ಮಾನಕರಿಲಮರ್‌ನ್ ಯೆಮಕ್ಕಾಯ್, ಶಿರಮಣಿಯೆನ ವನೈತ್ತುನೀ ಯಣಿದಿ, ಅತ್ತಿರಮಣಿಯನ ಅನೈತ್ತು ನೀ ಅಣುಹಿ ವಿಣ್ಣಿನುಳಮರ್‌ದ್ದ ವಿಯನುರುವದನಾಲ್, ಎಣ್ಣೆಯವೀರಿರಂಡು ಉರುಕ್ಕಳು ಮಡೈದಿ, ಪನ್ನಿರುನಾಮಂ ಪಲಪಲ ವುರುವಾಯ್, ಎನ್ನುರುವೆಂಗುಂ ಎಯ್ದಿ ನೀ ನೀನಿತ್ತಿ ಮೀನೋಡಾಮೈಕೇಳಲ್ ಕೋಳರಿಯಾಯ್, ನಾನಾರ್ ಕುರಳಾಯ್ ಮಳುಪ್ಪಡೈಮುನಿಯಾಯ್, 519 520 ಮುಮ್ಮಣಿಕ್ಕೋವೈ ಪಿನ್ನುಮಿರಾಮರಿರುವರಾಮ್ ಪಾರಿಲ್ ತುನ್ನಿಯ ಪರಂತೀರ್‌ತುವರೈ ಮನ್ನನುಮೂಮ್, ಕಲಿ ತವಿರಕ್ಕುಂ ಕರಿ ಯಾಯ್ ಮತ್ತುಂ, ಮಲಿವದರೆನುಂವಲ್ ವಿನೈ ಮಾತ್ತ ನಾನಾಉರುವುಂ ಕೊಂಡು ನಲ್ಲಡಿಯೋರ್, ವಾನಾರಿನಮಿಂಗುರವರುದಿ, ಓರಯಿರುಲಹಕ್ಕೆನ ನೀ ತಿರುವೋಡು, ಏರುಯಿರೆಲ್ಲಾ ಮೇಂದಿಯಿನ್‌ಪುರುದಿ ಯಾವರುಮರಿಯಾದೆಂಗು ನೀ ಕರಂದ್, ಮೇವುರುಚೂಳ್ ನುವಿಯಪ್ಪಿನಾಲ್ ಮಿಹುದಿ, ಕೊಂಡಿಡವೆಮ್ಮೆ ಯಡೈಕ್ಕಲಮುಲಹಿಲ್, ಕಂಡಿಲಂಗತಿಯುನೈಯನ್ರಿ, ಮತ್ತೊನ್ನುಂ, ಪನಿನ ನಿನ್ನಡಿಯನೈತ್ತುಂ, ತೊಹೈಕಾಟ್ಟು ತುಣಿನುತೂಮರೈಯೇ ॥ ಅರ್ಥ :- ಮಳೆಯಿಲ್ -ಎಳುಂದ
ಮಳೆಯನೀರಿನಿಂದುಂಟಾದ,
- ಮೊಕ್ಕುಳ್ -ಪೋಲ್ = ಗುಳ್ಳೆಗಳಂತೆ, ವೈಯಂ : ಲೋಕವೆಲ್ಲಾ ಅಳಿಯ = ಅಳಿದರೂ, ಒನ್ನು-ಅಳಿಯಾ : ಸ್ವಲ್ಪವೂ ಅಳಿಯದಿರುವ, ಅಡಿಯವರ್ -ಮೆಯ್ಯ = ಭಕ್ತರಿಗೆ ಸತ್ಯರೂಪಿಯಾದ ದೇವನಾಯಕನೇ ! ಅರುಮಧೈರ್ಯ-ಪೊರುಳ್ : ಅತಿಗಹನವಾದ ವೇದಾರ್ಥಗಳನ್ನು, ಆಯ್‌ನ್ಸ್-ಎಡುಕ್ಕುಂ-ಕಾಲ್ = ಆರಿಸಿ ಸಾರಾರ್ಥವನ್ನು ನಿರ್ಧರಿಸುವ ಸಮಯದಲ್ಲಿ ತಿರು-ಉಡನ್ -ಅಮರ್ : ದೈವ-ನಾಯಕನ್ : ಎಲ್ಲಾ ದೇವತೆಗಳಿಗೂ ನಾಯಕನು, ನೀ - ನೀನೊಬ್ಬನೇ. ನೀ : ಮಹಾಲಕ್ಷ್ಮೀಸಮೇತನಾದ, (ಅಂತಹ) ನೀನು, ರ್ನಿ-ತಿರು-ತನಕ್ಕು - (ಯಾರ ಸಂಬಂಧದಿಂದ ನಿನಗೆ ದೇವನಾಯಕ ತನವು ಸಿದ್ಧಿಸಿತೋ, ಅಂತಹ) ನಿನ್ನ ಹಿರಿಯ ಪ್ರೇಯಸಿಗೆ, ತಿರು-ಆಹಿ - ಅವಳ ಹಿರಿಮೆಗೆ ಕಾರಣವಾಗಿ, ಇಂದು - ಚಂದ್ರನು, ತನ್ -ನಿಲವ್ -ಉಡನ್ - ತನ್ನ ಬೆಳದಿಂಗಳಿನೊಡನೆ, ಇಲಂಗ್ -ತಟ್ಟೆಯಿನೈ - ಪ್ರಕಾಶಿಸುವಂತಹ, ನಲ್ -ವಿಳಕ್ಕೆ ಆಹಿ - ಒಳ್ಳೆಯದೀಪವಾಗಿ, ಅಂತಂ - ಇಲ್ = ಅಪಾರವಾದ, ಅಮುದ್ -ಆಳಿಯಾಮ್ = ಅಮೃತಸಾಗರದಂತೆ, ನಿತ್ತಿ = ನಿಂತಿರುವೆ, ಪಾಲ್-ಕಡಲ್ -ತನ್ನಿಲ್ - ಕ್ಷೀರಸಮುದ್ರದಲ್ಲಿನ, ಪಲ್-ಮಣಿಯನ್ನ: ಹಲವು ಬಗೆಯ ರತ್ನಗಳಿರುವಂತೆ, ಶೀರ್ -ಕಣಂ-ಶೇರ್ : ಕಲ್ಯಾಣಗುಣಗಳ
ಮುಮ್ಮಣಿಕ್ಕೋವೈ ಸಮೂಹದಲ್ಲಿ ಸೇರಿದ, ಶೀಲಂ :
521 ಸೌಶೀಲ್ಯವೆಂಬ ಗುಣವಿಶೇಷಣವನ್ನು (ಕೀಳುತನದವರೊಡನೆ ಬೇಸರಿಸದೆ ಕೂಡಿರುವುದು) ಎಲ್ಲೆ -ಇಲೈ - ಅಳೆಯಲಾಗದಷ್ಟು ಪಡೆದಿರುವೆ. ಅಡಿಯವರ್ -ಪಿಳ್ಳೆಹಳ್
મ
ನಿನ್ನ ಆಶ್ರಿತರ ಅಪರಾಧಗಳು, ನಿನ್ನ-ಕರುತ್ತು-ಅಡೈಯಾದು - ನಿನ್ನ ಅಭಿಪ್ರಾಯಗಳನ್ನು ಪಡೆಯದಂತೆ, ಅಡೈಯ ಎಲ್ಲವನ್ನೂ, ಆಂಡು : ಪರಿಪಾಲಿಸಿ, ಅರುಳುಂ = ಕೃಪೆಮಾಡುವ, ಅರಶನುಂ-ನೀಯೇ = ಅರಸನೂ ನೀನೇ, ಉಯರ್-ನೀ - ಎಲ್ಲಕ್ಕಿಂತಲೂ ಹಿರಿಮೆಯುಳ್ಳವನು ನೀನು, ಉ : ಅಂತಹ ನಿನ್ನನ್ನು, ಎನ್ನುಡನ್ : ಅತ್ಯಂತ ನಿಹೀನರಾದ ನಮ್ಮೊಡನೆ, ಕಲಂದಕ್ಕೆ : ಸೇರಿಸಿಕೊಂಡಿರುವೆ. ಅಯಿಂದೈ -ಮಾ-ನಗರಿಲ್ : ತಿರುವಹೀಂದ್ರಪುರದಲ್ಲಿ ಎಮಕ್ಕಾಯ್ = ನಮಗಾಗಿ, ಅಮರ್‌ನ - ನಿತ್ಯವಾಸಮಾಡುತ್ತೀಯೆ, ಶಿತ್ತಿರ-ಮಣಿ-ಎನ = ಅಂದವಾದ ನೀಲರತ್ನದಂತೆ, ತಿಹಳು : ಪ್ರಕಾಶಿಸುವ, ಮನ್ನುರವಿಲ್ = ನಿತ್ಯವಾದ ದಿವ್ಯಮಂಗಳವಿಗ್ರಹದಲ್ಲಿ, ಅತ್ತಿರಂ-ಅಣಿ-ಎನ - ಅಸ್ತ್ರಗಳು ಆಭರಣಗಳೆಂದು, ಅನೈತ್ತುಂ ಎಲ್ಲವನ್ನೂ, ನೀ - ನೀನು, ಅಣಿದಿ : ಧರಿಸಿರುವೆ, ವಿಣ್ಣಿನುಳ್, ಅಮರ್ - ಶ್ರೀ
-
- ವೈಕುಂಠದಲ್ಲಿ ವಿಜಯಮಾಡಿರುವ, ವಿಯನ್ - ಉರು ವಿಲಕ್ಷಣವಾದ ಪರವಾಸುದೇವರೂಪವನ್ನೂ, ಅದನಾಲ್ -ಎಣ್ಣಿಯ = ಅದರಿಂದ ಸಂಕಲ್ಪಿಸಲ್ಪಟ್ಟ, ಈರಿರಂಡು-ಉರುಕ್ಕಳುಂ = (ವಾಸುದೇವ-ಸಂಕರ್ಷಣ-ಪ್ರದ್ಯುಮ್ನ ಅನಿರುದ್ಧ) ನಾಲ್ಕು ರೂಪಗಳನ್ನೂ, ಅಡೈದಿ = ಪಡೆದಿರುತ್ತೀಯೆ. ಪನ್ನಿರುನಾಮಂ - (ಕೇಶವಾದಿ) ಹನ್ನೆರಡು ಹೆಸರುಗಳುಳ್ಳ, ಪಲಪಲ-ಉರುವಾಯ್ = ಬೇರೆ ಬೇರೆ ವಿಗ್ರಹಗಳುಳ್ಳವನಾಗಿ, ಎನ್-ಉರು-ಎಂಗುಂ - ನನ್ನ ಶರೀರದ ಎಲ್ಲ ಭಾಗವನ್ನೂ, ಎಯ್ = ಪಡೆದು, ನೀ-ನಿ
-
- ನೀನು ಇರುತ್ತೀಯೆ, ಮೀನೊಡು = ಮತ್ಯಾವತಾರವೂ, ಆಯ್ಕೆ : ಕೂರ್ಮ, ಕೇಳಲ್ = ವರಾಹ, ಕೋಳರಿಯಾಯ್ - ನರಸಿಂಹನೂ ಆಗ, ವಾನಾರ್ -ಕುರಳಾಯ್ - ವಾಮನ ರೂಪಿಯಾಗಿಯೂ, ಮಳುಪ್ಪಡೈ-ಮುನಿಯಾಮ್ = ಪರುಶರಾಮನಾಗಿಯೂ, ಪಿನ್ನುಂ ಅಷ್ಟೇ ಅಲ್ಲದೆ, ಇರಾಮರ್-ಇರುವರಾಯ್ = (ದಾಶರಥಿರಾಮ-ಬಲರಾಮ) ಇಬ್ಬರುರಾಮರಾಗಿ, ಪಾರಿಲ್ -ತುನ್ನಿಯ = ಭೂಮಿಯಮೇಲಿರುವ, ಪರಂ-ತೀರ್ - ಭಾರವನ್ನೂ ಹೋಗಲಾಡಿಸಿದ, ತುವರೈ-ಮನ್ನನಾಯ್ - ದ್ವಾರಕಾಧೀಶನಾದ ಶ್ರೀಕೃಷ್ಣನಾಗಿಯೂ, ಕಲಿ-ತವಿರ್ತು-ಅಳಿಕ್ಕುಂ = ಕಲಿಯಲ್ಲಿಬರುವ ದುಃಖಗಳನ್ನು ನೀಗಿ ರಕ್ಷಿಸುವ, ಕರಿಯಾಮ್ = ಕಲ್ಕಿ ಎಂಬ ರೂಪನಾಗಿಯೂ, ಮಟ್ರುಂ = ಮತ್ತು ಮಲಿವದರು - ಎಲ್ಲರಿಗೂ ಅತ್ಯಂತ ಸುಲಭನಾಗಿರುವುದಕ್ಕಾಗಿ, ಎನ್ನುಂ - ಎಂದೆಂದಿಗೂ, ವಲ್ -ವಿನ್ಯ = (ಆಶ್ರಿತರ) ಬಲವಾದಪಾಪಗಳನ್ನೂ, ಮಾತ್ತ ನಿವಾರಿಸುವುದಕ್ಕಾಗಿ, ನಾನಾ -ಉರುವುಂ - ಬೇರೆ ಹಲವು ದಿವ್ಯಮಂಗಳ ವಿಗ್ರಹಗಳನ್ನೂ, ಕೊಂಡು = ಪರಿಗ್ರಹಿಸಿ, ನಲ್ಲಡಿಯೋರ್ ಒಳ್ಳೆಯ ಭಕ್ತರು, ವಾನ್ -ಆರ್ -ಇನ್ನಂ - ಶ್ರೀವೈಕುಂಠದಲ್ಲಿರುವ ಪರಿಪೂರ್ಣಾ
—
522
ಮುಮ್ಮಣಿಕ್ಕೋವೈ
ನಂದವನ್ನೂ, ಇಂಗ್ -ಉರ = ಇಲ್ಲೇಪಡೆಯುವಂತೆ, ವರುದಿ : ಅವತರಿಸುತ್ತೀಯ, ಉಲಹರು : ಜಗತ್ತಿನ ಸಕಲ ಚೇತನಾ ಚೇತನಗಳಿಗೂ, ಉಯಿರ್ -ಎನ್ನುಂ : ಅಸಾಧಾರಣವಾದ, ಅಂತರಾತ್ಮನಾಗಿರುವ, ನೀ - ನೀನು, ತಿರುವೋಡು - ಲಕ್ಷ್ಮಿಯೊಡನೆ, ಏರ್ -ಉಯಿರ್ -ಎಲ್ಲಾಂ - ಸುಂದರವಾದ ಆತ್ಮವರ್ಗವನ್ನೆಲ್ಲಾ ಏನ್ದಿ : (ಅಂತರ್ಯಾಮಿ) ಸ್ವರೂಪನಾಗಿ ಧರಿಸಿ, ಇನ್ನುರುದಿ : ವಿಶೇಷವಾದ ಆನಂದವನ್ನು ಪಡೆಯುತ್ತೀಯ, ಯಾವರು-ಅರಿಯಾದು : ಯಾರೂ ತಿಳಿಯದಂತೆ, ಎಂಗುಂ : ನೀ-ಕರನ್ನು = (ಹಾಲಿನಲ್ಲಿ ತುಪ್ಪದಂತೆ) ನೀನು ಮರೆಯಾಗಿದ್ದುಕೊಂಡು, ಮೇ-ಉರು : ಎಲ್ಲಾ ಕಡೆಯಲ್ಲೂ ಮೇಲೆಯನ್ನು ಪಡೆಯಲು, ಶೂಳನ್ಸ್ : (ಎಲ್ಲವನ್ನೂ) ವ್ಯಾಪಿಸಿ, ವಿಯಪ್ಪಿನಾಲ್ : (ಆ) ಆಶ್ಚರದಿಂದ, ಮಿಹುದಿ - ಮೇಲಾಗಿರುವೆ. ಎಮ್ಮೆ = ನಮ್ಮನ್ನು, ಅಕ್ಕಲಂ-ಕೊಂಡಿಡ - ರಕ್ಷಿಸಲ್ಪಡುವ ವಸ್ತುವಾಗಿ ಸ್ವೀಕರಿಸುವ, ಉಲಹಿಲ್ : ಈ ಲೋಕದಲ್ಲಿ, ಉನೈ-ಅನ್ನಿ ನಿನ್ನನ್ನು ಬಿಟ್ಟು, ಗತಿ-ಮತ್ತು-ಒನ್ನುಂ = ಬೇರೆ ಯಾವ ರಕ್ಷಣೆಯನ್ನೂ, ಕಂಡಿಲಂ - (ನಾವು ಕಾಣಲಿಲ್ಲ ಪಲ್-ವ-ನಿನ್ನ : ಹಲವಾರು ಬಗೆಯಾಗಿರುವ, ನಿನ್ -ಪಡಿ -ಅನೈತ್ತುಂ : ನಿನ್ನ ರೀತಿಯೆಲ್ಲವನ್ನೂ, ತೊಲ್ -ವದ್ಯೆಯೇ = ಶುದ್ಧವಾದ, ಪಳಗಿದ ಹಿಂದಿನ ದಾರಿಯಿಂದ ಬಂದಿರುವ, ತೂ-ಮರೈಯೇ - ಪರಿಶುದ್ಧವಾದ ವೇದವೊಂದೇ, ತುಣಿಂದ್ : ಧೈರವಾಗಿ (ನಿಶ್ಚಯವಾಗಿ) ಕಾಟ್ಟುಂ = ತೋರಿಸಿಕೊಡುವುದು.
ತಾತ್ಪರ :- ದಾಸವರ್ಗಕ್ಕೆ ಸತ್ಯನೆನಿಸಿದ ದೇವನಾಯಕನೇ ! ಮಳೆಬೀಳುವಾಗ ಹುಟ್ಟಿ ಮರುಘಳಿಗೆಯಲ್ಲೇ. ಅಳಿದುಹೋಗುವ ನೀರಿನ ಗುಳ್ಳೆಗಳಂತೆ, ಈ ಲೋಕಗಳು ಪ್ರಳಯಕಾಲದಲ್ಲಿ ಅಳಿದರೂ ನಿನ್ನ ಸ್ವರೂಪ, ರೂಪ, ಗುಣಗಳಾದಿಯಾಗಿ ಎಲ್ಲವೂ ಯಾವ ವಿಕಾರವನ್ನೂ ಹೊಂದದೆ ಪ್ರಕಾಶಿಸುತ್ತೀಯ. ವೇದವೇದಾಂತಗಳಲ್ಲಿ ಎಲ್ಲಿ ವಿಮರ್ಶಿಸಿದರೂ ಶ್ರೀ ವಲ್ಲಭನಾದ ನೀನೇ ಪರತತ್ವವೆಂಬುದರಲ್ಲಿ ಸಂಶಯವಿಲ್ಲದಂತೆ ಪ್ರತಿಪಾದಿತನಾಗಿದ್ದೀಯೆ. ನಿನಗೆ ಹಿರಿಮೆಯನ್ನು ತರುವ ಶ್ರೀದೇವಿಗೂ ಶ್ರೀಯನ್ನು ಕೊಡುವವನಾಗಿ, ಚಂದ್ರನು ಚಂದ್ರಿಕೆಯನ್ನು ಬಿಡದೆ ಕೂಡಿಕೊಂಡಿರುವಂತೆ ಅನವರತವೂ ಆಕೆಯನ್ನಗಲದೆ ಕೂಡಿಯೇ ಬೆಳಗುತ್ತಿರುವೆ. ಎಂದಿಗೂ ನಂದದಂತಹ ರತ್ನದೀಪವಾಗಿರುತ್ತಾ ಲೋಕಕ್ಕೆ ಜ್ಞಾನಜ್ಯೋತಿಯನ್ನು ಕೊಡುತ್ತಾ, ಭಕ್ತರು ಅನುಭವಿಸಲು ಸುಲಭನಾಗಿ ಅಮೃತಸಾಗರನಾಗಿರುತ್ತೀಯೆ. ಸಮುದ್ರದಲ್ಲಿ ಹಲವಾರು ಬಗೆಯ ರತ್ನಗಳು ಕಂಗೊಳಿಸುವಂತೆ, ಕಲ್ಯಾಣಗುಣಗಳಿಂದ ಅಲಂಕೃತನಾಗಿದ್ದರೂ, ಅವುಗಳಲ್ಲಿ ಹೆಚ್ಚಳಿಕೆಯನ್ನು ಗಳಿಸಿದ ಸೌಶೀಲ್ಯವೆಂಬ ಗುಣವು ಎಲ್ಲೆ ಮೀರಿರುವಂತಿರುತ್ತೀಯೆ. ಪ್ರಜೆಗಳ ಅಪರಾಧಗಳನ್ನು ಮನ್ನಿಸಿ ರಕ್ಷಿಸುವ ರಾಜನಂತೆ ಆಶ್ರಿತರ ಅಪರಾಧಗಳನ್ನೆಲ್ಲಾ ಕ್ಷಮಿಸಿ, ಪರಮಕರುಣಾಳುವಾಗಿ ಸಂರಕ್ಷಿಸುತ್ತೀಯ. ಸತ್ವಪ್ರಕಾರದಿಂದಲೂ ಎಲ್ಲಕ್ಕಿಂತ ಮೇಲೆನಿಸಿದ ನೀನು ಎಲ್ಲರಿಗಿಂತ ಅತಿನೀಚನಾದ ನನ್ನಂತಹವರೊಡನೆ ಏಕದೇಹದಂತೆ ಕಲೆತಿರುತ್ತಾ
ಮುಮ್ಮಣಿಕ್ಕೋವೈ 523 ಒಳ್ಳೆಯ ಅರಿವನ್ನು ಕರುಣಿಸಲು, ತಿರುವಹೀಂದ್ರಪುರದಲ್ಲಿ ಬಿಜಯಮಾಡಿ, ಅರ್ಚಾಮೂರ್ತಿಯಾಗಿ ಬೆಳಗುತ್ತಿರುವೆ. ಇಂದ್ರನೀಲಶೈಲದಂತಿರುವ ನಿನ್ನ ದಿವ್ಯ ದೇಹದಲ್ಲಿ ಸಮಸ್ತ ತತ್ತ್ವಗಳನ್ನು ಅಸ್ತ್ರಗಳಂತೆಯೂ ಆಭರಣಗಳಂತೆಯೂ ಧರಿಸಿರುವೆ. ಶ್ರೀವೈಕುಂಠದಲ್ಲಿ ಪರವಾಸುದೇವನಾಗಿರುವೆ. ಭಕ್ತರ ಧ್ಯಾನಕ್ಕೆ ಅನುಕೂಲವಾಗಿ ವಾಸುದೇವಾದಿ ವ್ಯೂಹಮೂರ್ತಿಯಾಗಿರುವುದಲ್ಲದೆ ಅದರಿಂದ ಕೇಶವಾದಿ ದ್ವಾದಶನಾಮಮೂರ್ತಿಯಾಗಿಯೂ, ಭಾಗವತರ ಶರೀರಗಳಲ್ಲೂ ಈ ಹನ್ನೆರಡು ಸ್ಥಾನಗಳಲ್ಲಿ ಅದೇ ಹೆಸರಿನಿಂದ ಅನುಗ್ರಹಿಸುತ್ತಿರುವೆ. ಸಂಸಾರಿ ಚೇತನರನ್ನು ಸಂರಕ್ಷಿಸಲು ಮತ್ಯಾದಿ ಅವತಾರವೆತ್ತಿ, ಭಕ್ರೋತ್ತಮರು ಪರಮಪದದಲ್ಲಿ ಅನುಭವಿಸುವ ಪರಮಾನಂದವನ್ನು ಇಲ್ಲೇ ಅನುಭವಿಸುವಂತೆ ಮಾಡುತ್ತೀಯೆ. ಲೋಕಕ್ಕೆಲ್ಲಾ ಆತ್ಮವೊಂದೇ ಎಂಬಂತೆ ಶ್ರೀಸಮೇತನಾಗಿರುತ್ತಾ ಚೇತನಾ ಚೇತನಗಳನ್ನೆಲ್ಲಾ ತನ್ನ ವಿಗ್ರಹದ ಒಂದು ಭಾಗದಲ್ಲಿ ಧರಿಸಿ, ತೋರಿಸಿ, ನಿನ್ನ ವಿರಾಟ್ ರೂಪವನ್ನು ತೋರಿಸಿಕೊಳ್ಳುತ್ತೀಯೆ. ಅರಿಯುವುದು ಅತಿಗಹನವಾಗುವಂತೆ, ಸಕಲದರಲ್ಲೂ ಅಂತರ್ಯಾಮಿಯಾಗಿರುತ್ತಾ ಅದನ್ನರಿತ ಸಮಸ್ತರೂ ಅತಿಮೇಲೆನಿಸುವಂತೆ ಇರುತ್ತೀಯೆ. ಈ ರೀತಿಯಾದ ಹಿರಿಮೆಯನ್ನು ಪಡೆದ ನಿನ್ನ ಹೊರತು. ನಮ್ಮನ್ನು ಕಾಪಾಡುವ ಮತ್ತೊಂದುಗತಿಯನ್ನರಿಯೆನು. ನಿನ್ನಸ್ವರೂಪ, ರೂಪ, ಗುಣ, ವಿಭೂತಿ ಮೊದಲಾದುವನ್ನು ಹೇಳಲು ಹೊರಟ ಅಪೌರುಷವಾಗಿಯೂ ಅನಾದಿಯಾಗಿಯೂ ಇರುವ ವೇದವು ಒಂದೇ ಧೈಯ್ಯಮಾಡಿ ಮುನ್ನುಗಿದುದಲ್ಲದೆ ಮತ್ತಾರಿಂದ ಸಾಧ್ಯ ? वर्षोत्था इव बुद्बुदाः प्रविलयं याताश्च लोका अभी । यो नैवेषदपि प्रयाति विकृतिं सत्याकृति र्भेजुषाम् ॥ दुर्ज्ञेयागमवेदनीयविषये सश्रीक एवेष्यते । तादृग्वैभवदेवनायक ! भवानेकोऽस्ति तत्तादृशः ॥ श्रीस्त्वं ते श्रिय एव चन्द्र इव सज्योत्स्नः स्वभावान्वितः । सद्दीप स्त्वविनाश्यभा निरवधिः पीयूषपायोनिधिः क्षीराब्धिर्विविधै र्यथा मणिवरै रापूरितो भ्राजते । त्वं कल्याणवगुणवलिप्रविलसच्छीलप्रभावान् सदा ॥ भक्तानां दुरितानि नेयु रपि ते स्वान्तं यथा तान्यहो । सर्वाण्यप्यनुशास्य रक्षसि तथा त्वं चैव तादृक् प्रभुः । त्वं सन्नप्यसम स्समं च कृतवान् त्वां सक्त मस्मादृशैः । स्थित्वाहीन्द्रमहापुरे करुणया संदृश्यसे नः कृते ॥ २ 524 ಮುಮ್ಮಣಿಕ್ಕೋವೈ चारुश्यामलरत्नवत्प्रविलसन्नित्याग्यमूर्ती हि ते । अस्त्रालङ्करणाख्यंत स्त्व मखिलं तत्वं बिभर्ष्यन्वहम् ॥ वैकुण्ठे परवासुदेवतनुतो धत्से चतूरूपताम् । नामद्वादशनैकरूपमहितो व्याप्तोऽसि देहं च मे ॥ मत्स्यः कूर्मो वराहो नरहरि रमराधिष्ठिते स्सम्प्रमाता । मायावी वामनोऽसौ परशुधरमुनि स्तौ द्विधाभूतरामौ ॥ उर्वीभारापनेता यदुकुलतिलको द्वारकाधीशकृष्णः । कल्की कल्युग्रपापप्रशमननिपुण स्सर्वसन्त्राणदक्षः । । स्थातुं सौलभ्यतोऽत्राप्यतिबलदुरितोन्मूलनार्थं सदा त्वम् । नानारूपाणि गृह्णन् स्वचरणशरणा स्साधुचर्या महान्तः । । वैकुण्ठे दिव्यधामन्यतिशयमहिमा शोभिते सर्वभोग्यम् । तं चानन्दं महान्तं त्वनुभवितु मिवेहावतीर्य स्थितोऽसि ॥ विश्वात्मैकान्तरात्मा ह्यानितरसदृश स्त्वं सदा श्री समेतः । अन्तर्यन्तात्मवर्गं सरुचिरमखिलं धारयन् मोदसे त्वम् ॥ सर्वत्रान्यै खेद्यो घृत मिव पयसि व्यापृतं स्सन् समस्तम् । कुर्वाणोऽत्युत्तमं त्वं समधिकमहिमा व्याप्यचाश्चर्यभूम्ना ॥ संरक्ष्यत्वेन चास्मान् जगति परिगृहीतुं समर्थंविनात्वम् । पश्यामो नैव चान्यां वय मिह सुगतिं प्रोक्तनानाप्रकारैः ॥ सर्वं विद्योतयन्तं प्रतनतमपथा त्यन्तशुद्धाः प्रसिद्धाः । धैर्येणाग्रप्रवृत्ता निगमफणितयश्चैव सन्दर्शयन्ति ॥ ಮೂಲ : ತೂಮರೈಯಿನುಳ್ಳಂ ತುಳಂಗಾತ್ತುವುತರುಂ, ಆಮರಿವಾಲ್ ಆರ್ ಡಿಮೈಯಾಹಿಂ, ಪೂಮರೈರ್ಯೋ ಪಾರಾಯಣ ಪಣಿಯುಂ ಅಯಿಂದೈನಗರ್, ನಾರಾಯಣನಾರೇನಾಮ್ ॥ A ७ 5
ಮುಮ್ಮಣಿಕ್ಕೋವೈ 525 ಅರ್ಥ :- ತೂ-ಮರೆಯಿನ್ = ಪರಿಶುದ್ಧವಾದ ವೇದದ, ಉಳ್ಳಂ : ತಾತ್ಸರವು, ತುಳಂಗಾ : ಸಂಶಯವಿಲ್ಲದಂತೆ, ತುಣಿವ್ -ತರುಂ = ನಿರ್ಣಯವನ್ನು ಕೊಡುವ, ಆಂ-ಅರಿವಾಲ್ : ತಕ್ಕ ಜ್ಞಾನವಿಶೇಷದಿಂದ, ಆರ್‌ನ್ಸ್ - ತುಂಬಿ, ಅಡಿಮೈ-ಆಹಿನ್ನೊಂ = ಸೇವಕರಾಗುವೆವು. (ಯಾರಿಗೆಂದರೆ) ಪೂಮರೈಯೋನ್ - ಕಮಲ ಸಂಭವನಾದ ಬ್ರಹ್ಮನ, ಪಾರಾಯಣತ್ತಿಲ್ - ವೇದ ಪಾರಾಯಣದಲ್ಲಿ ಪಣಿಯುಂ : ನಮಸ್ಕರಿಸಲ್ಪಟ್ಟು, ಅಯಿಂದೈ-ನಗ ತಿರುವಹೀಂದ್ರ ಪುರದಲ್ಲಿ ಬಿಜಯಮಾಡಿರುವ, ನಾರಾಯಣನಾರ್‌ಕ್ಕೇ = ನಾರಾಯಣ ಶಬ್ದವಾಚ್ಯದ ಭಗವಂತನಿಗೇ, ನಾಂ - ನಾವು, (ಸೇವಕರಾಗಿರುವೆವು).
ತಾತ್ವರ :- ನಾವು ಉಪನಿಷತ್ತುಗಳಲ್ಲಿ ತುಂಬ ಪರಿಶ್ರಮವುಳ್ಳವರಾಗಿ, ಯಾರಿಂದಲೂ ಯಾವ ರೀತಿಯಿಂದಲೂ ಕಲಕಲ್ಪಡಲಾಗದಂತಹ ನಿಶ್ಚಯಜ್ಞಾನವನ್ನು ಪಡೆದವರಾಗಿರುವೆವು. ವೇದಗಳನ್ನು ಸತ್ವದ ಹೇಳಿಕೊಂಡಿರುವ ಬ್ರಹ್ಮನಿಂದ ಆ ವೇದಗಳಿಂದಲೇ ಸುತಿಸಲ್ಪಟ್ಟು, ಆಶ್ರಯಿಸಲ್ಪಟ್ಟ ಶ್ರೀ ದೇವನಾಯಕನ ಅಡಿದಾವರೆಗಳಲ್ಲಿಯೇ ಅನನ್ಯದಾಸರಾಗಿ ಬೆಳಗುವ ಹಿರಿಮೆಯನ್ನು ಪಡೆದವರಾಗಿರುವೆವು. (ಇಲ್ಲಿ ಶ್ರೀಮತೇ ನಾರಾಯಣಾಯ ನಮಃ’’ ಎಂಬ ಭಾಗದರ್ಥವು ವಿವರಿಸಲ್ಪಟ್ಟಿದೆ) तात्पर्य परिशुद्धवेदनिहितं निस्संशयं निश्चितम् । वेदान्तप्रविवोधनातिशयत स्संप्राप्य पूर्णा वयम् ॥ अम्भोजासनवेदपाठसमये वेद्याय वन्द्याय हि । श्रीनारायणनाम्न एव नियता दासा अभूम ध्रुवम् ॥ ಮೂಲ : ಆರುಂ ಕರುಪೊಳಿವಾನ್, ಆಯಿಂದೈಯಿಲ್ ವಂದಮರ್ ಕಾಲ್ಗೊಂಡಲೈಕ್ಕಂಡ ಕಾದರ್ ಪುನಮಯಿಲ್ ಕಣ್ನಿಯಾ ವೇರುಂ ಮುಕಿಕ್ಕುಂ ವಿದಿ ವಿದಿರುವೆ ವೆವುಯಿರುಂ, ಪಾರಿನವರ್‌ಕ್ಕಿದು ವೆನ್‌ಲ್ ಎನ್ನುಪಯಿಲುವಮೇ 1
८ 6 ಅರ್ಥ :- ಯಾರುಂ = ಯಾರಿಗೂ (ಎಲ್ಲರಿಗೂ), ಕರುಣ್ - ದಯೆಯನ್ನೂ, ಪೊಳಿವಾನ್ = ಬೀರುವನೂ (ದಯಾರೂಪ ಮಳೆಯನ್ನು ಸುರಿಸುವನು), ಅಯಿಂದೈಯಿಲ್ ತಿರುವಹೀಂದ್ರಪುರದಲ್ಲಿ ನಂದ್: ಬಂದು, ಅಮರ್‌ನ : ಸ್ಥಿರವಾಗಿನಿಂತ, ಕಾರ್ -ಕೊಂಡ : ನೀಲಮೇಘವನ್ನು (ಕಾರ್ಮುಗಿಲನ್ನು) ಕಂಡ : ನೋಡಿದ, (ನೋಡಿದಕೂಡಲೇ ಉಂಟಾದ) ಕಾದಲ್ -ಭಕ್ತಿಯುಂಟಾದ, ಪುನಮಯಿಲ್ - ವನದ ನವಿಲು, (ನವಿಲಿನಂತೆ ಚಲುವಾದ ಈ ನಾಯಿಕೆಯು) ಕಣ್ -ಪನಿಯಾ =526
ಮುಮ್ಮಣಿಕ್ಕೋವೈ
ಕಂಬನಿತುಂಬುವಳು. ವೇರುಂ : ಮೈಬೆವರುವಳು, ಮುಕಿಕ್ಕುಂ : ರೋಮಾಂಚಿತ ಳಾಗುವಳು, (ಮೈ ನವಿರೇಳುವುದು) ವಿದಿರ್, ವಿದಿರುಂ : ನಡುಗುವಳು, ಬೆಳ್ಳಿ - ನಾಚಿಕೊಂಡು, ವೆವ್ವುಯಿಲ್ಕುಂ : ನಿಟ್ಟುಸಿರುಬಿಡುವಳು, ಪಾರಿನವರುಂ : ನೋಡಿ ಗಮನಿಸುವವರಿಗೆ, ಇದ್ -ಎನ್-ಕೊಲ್-ಎನ್ನು : ಇದು ಎಂತಹ ಸ್ಥಿತಿಯೆಂದು, ನಾಂ = ನಾವು, ಪಯಿಲುವಂ - ಹೇಳೋಣ (ಈ ಬಗೆಯಾದುದೆಂದು ಹೇಳಲಾಗುವುದಿಲ್ಲ)
ತಾತ್ಪರ :- ಮೇಲುಕೀಳೆನಿಸದ ಆಶ್ರಿತರಾದವರೆಲ್ಲರನ್ನೂ ತನ್ನ ಸ್ವರೂಪರೂಪ ಗುಣಗಳನ್ನು ವ್ಯಕ್ತಪಡಿಸುವುದರ ಮೂಲಕ ನೀಲಮೇಘದಂತಿರುವ ಶ್ರೀದೇವನಾಯಕನು ಕರುಣೆಯೆಂಬ ನೀರನ್ನು ವರ್ಷಿಸುವುದನ್ನು ನೋಡಿ, ಮಲೆಪ್ರದೇಶದಲ್ಲಿ ಪ್ರಮೋದಿಸುವ ಸುಂದರ ನವಿಲಿನಂತಿರುವ (ಶ್ರೀದೇಶಿಕರೆಂಬ ನಾಯಕಿಯು) ಈಗ ಆ ಮೇಘವನ್ನು ಕಾಣದೆ ಅಗಲಿ ವಿರಹವೇದನೆಯಿಂದ ಕಣ್ಣೀರಿಡುತ್ತಾ ಮೈ ಬೆವರಿ, ಮೈನವಿರದ್ದು ಕಂಪಿಸಿ, ನಾಚಿಕೆಗೊಂಡು, ಬಿಸಿ ಬಿಸಿ ನಿಟ್ಟುಸಿರುಬಿಡುತ್ತಿರುವ ಅವಸ್ಥೆಯನ್ನು ನೋಡಿ ಕೇಳುವವರಿಗೆ ಇದು ಯಾತರಿಂದಾಯಿತೆಂದು ಹೇಳಲಿ ? ಹಿಂದೆ ನಾಯಕಿಗೆ ತನ್ನ ರೂಪಾದಿಗಳನ್ನು ತೋರಲು ಹಿಗ್ಗಿ ಆನಂದಿಸುತ್ತಿರಲು ಕೂಡಲೇ ಮರೆಯಾಗಲು, ಅವಳು ಪಡುವ ಪಾಡನ್ನು ಸಖಿಯು ನೋಡಿ ಹೇಳುವಳು. ಇಲ್ಲಿಯೂ ನಾಯಕಿಯ ಭಾವೋದ್ರೇಕಸ್ಥಿತಿಯನ್ನು ಹೇಳಿರುವರು. वर्षन्तं यस्य कस्या प्यहिपतिपुर मास्थाय कारुण्यवर्षम् । नीलं तं प्रेक्ष्य मेघं वनरुचिरमयूर्युत्कटप्रेमभावा । जाताश्रु स्स्विन्नगात्री पुलकिततनु रुत्कम्पमानात्तलज्जा । किं चास्ते निश्वसन्ती किमिदमिति वयं पश्यतां वा वदाम ॥ ಮೂಲ : ಪದ್ಧತಿ ನೀಯೇ ವೆಳೆಯುಂ ನೀಯೇ ಪಯಿನ್ಮತಿತರುದಲಿನ್ ಬೆಳಿಯುರನಿತ್ತಲಿನ್, ತಾಯುಂ ನೀಯೇ ಚಾಯ್ಕೆ ತಂದುಹಂದುದಲಿನ್, ತಂದೆಯುಂ ನೀಯೇ ಮುಂದಿ ನಿನ್ನಳಿತಲಿನ್, ಉರುವುಂ ನೀಯೇ ತುರವಾದೊಳುದಲಿನ್, ಉತ್ತದುಂ ನೀಯೇ ಶಿಸ್ಟಮಿನ್ಮಯಿನ್, ಆರುಂ ನೀಯೇ ಆತುಕ್ಕರುಳದಲಿನ್ ಅರುಮುಂ ನೀಯೇ ಮರನಿಲೈಮಾಯ್ತತ್ತದಲಿನ್, w ಮುಮ್ಮಣಿಕ್ಕೋವೈ ತುಣೈವನುಂನೀಯೇ ಇಯಿಲೈಯಾದಲಿನ್ ತುಯ್ಯನುಂ ನೀಯೇ ಶಯ್ಯಾಳುರೈದಲಿನ್, ಕಾರಣಂ ನೀಯೇ ನಾರಣನಾದಲಿನ್, ಕರಕಂ ನೀಯೇ ನರ್‌ದಂ ತರುದಲಿನ್, ಇದೈವನುಂ ನೀಯೇ ಕುರೈಯೊಲಾಮೈಯಿನ್, ಇನ್ನಮುಂ ನೀಯೇ ತುನ್ನಂ ತುಡೈತ್ತಲಿನ್, ಯಾನುಂ ನೀಯೇ ಎನ್ನುಳ್ ಉರೈದಲಿನ್, ಎನದುಂ ನೀಯೇ ಯುನದನಿಯನೈರ್ಯ, ನಲ್ಲಾಯ್ ನೀಯೇ ಪೊಲ್ಲಾಂಗಿಲಾಮೈರ್ಯ ವಲ್ಲಾಯ್ ನೀಯೇ ವೈಯಮುಂಡುಮಿಳನ್, ಎಂಗನಮಾಹುಂ ವೈಯ್ಯ ನಿನ್ ವಿಯಪ್ಪ, ಅಂಗನೇ ಯೊಕ್ಕ ಅರಿವ ದಾರಣಮೇ ॥
527 7 ಅರ್ಥ :- ಪಯಿಲ್ -ಮತಿ-ತರುದಲಿನ್ - (ನಿನ್ನನ್ನು) ಅನುಭವಿಸಬಲ್ಲ ಅರಿವನ್ನು ಕೊಡುವುದರಿಂದ, ಪಯಿಲ್ -ಮತಿ-ನೀಯೇ - ಅನುಭವಿಸುವ ಚಂದ್ರನೂ, ನೀನೇ,
ಬೆಳಿ-ಉರ -ನಿತ್ತಲಿನ್ : (ಸಮಸ್ತವಸ್ತುಗಳೂ) ನಿನ್ನಿಂದಲೇ ಪ್ರಕಾಶಿಸ ಲ್ಪಡುವುದರಿಂದ, ವೆಳಿಯುಂ-ನೀಯೇ - ಜ್ಯೋತಿಯೂ (ಸೂರನೂ) ನೀನೇ,
‘ಚಾಯ್ ತಂದು-ಉಹ೦ದುದಲಿನ್ = ನಿನ್ನ ಪಾದದ ನೆರಳನ್ನು ಕೊಟ್ಟು ಸಂತೋಷಪಡಿಸುವುದರಿಂದ, ತಾಯುಂ-ನೀಯ - ತಾಯಿಯೂ ನೀನೇ. ಮುಂದೆ-ನಿನ್ನು : ಸೃಷ್ಟಿಗೆ ಹಿಂದೆ ಒಬ್ಬನೇ ಇದ್ದು, ಅಳಿತಲಿನ್ ಸಂರಕ್ಷಿಸುವುದರಿಂದ, ತಂದೆಯುಂ -ನೀಯೇ - ತಂದೆಯೂ ನೀನೇ, ತುರವಾದು-ಒಳುದಲಿನ್ = ನಮ್ಮನ್ನು ಕೈಬಿಡದ ಸ್ವಭಾವವಾದುದರಿಂದ ಉರವುಂ-ನೀಯೇ = (ಸಕಲವಿಧ) ಬಂಧುವೂ ನೀನೇ. ಶಿತ್ತ್-ಇನ್ನಂ-ಇನ್ನೈಯಿನ್ : ನೀನು ಈ ಲೋಕದ ಅಲ್ಪಸುಖವಿಲ್ಲದವ ನಾಗಿರುವುದರಿಂದ, ಉತ್ತದುಂ-ನೀಯೇ - (ನನಗೆ ಬೇಕಾದ ಪುರುಷಾರ್ಥವೂ ನೀನೇ,
ಆತುಕ್ಕು : (ನಾನು ಆಚರಿಸುವ) ಉಪಾಯಕ್ಕೆ, ಅರುಳ್ -ತಲಿನ್ = ಫಲವನ್ನು ಕೊಡುವುದರಿಂದ, ಆರುಂ-ನೀಯೇ = ಉಪಾಯವೂ ನೀನೇ, 528 ಮುಮ್ಮಣಿಕ್ಕೋವೈ ಇ-ಇಲೈಯಾದಲಿನ್ = ನಿನಗೆ ಸರಿಸಮನಾದವರು ಮತ್ತೊಬ್ಬರಿಲ್ಲ ದಿರುವುದರಿಂದ, ತುಣ್ಯವನುಂ-ನೀಯೇ - (ನಾನುಪಡೆದ) ಸಹಾಯಕನೂ ನೀನೇ, ಶಯ್ಯಾಳ್ -ಉರೈದಲಿನ್ = ಮಹಾಲಕ್ಷ್ಮಿಯು (ನಿನ್ನ ವಕ್ಷಸ್ಥಳದಲ್ಲಿ) ನಿತ್ಯವಾಸ ಮಾಡುವುದರಿಂದ, ತುಯ್ಯನುಂ-ನೀಯೇ - ಪರಿಶುದ್ಧನೂ ನೀನೇ,
ನಾರಣನ್-ಆದಲಿನ್ = ಶ್ರೀಮನ್ನಾರಾಯಣನಾಗಿರುವುದರಿಂದ, ಕಾರಣಂ- ನೀಯೇ = ಸಮಸ್ತಕ್ಕೂ ಕಾರಣನಾಗಿರುವವನು ನೀನೇ,
ನಲ್ -ಪದಂ ತರುದಲಿನ್ = ಅತ್ಯುತ್ತಮ ಪದವಿಯನ್ನು (ವೈಕುಂಠವನ್ನು) ಕೊಡುವುದರಿಂದ, ಕರಕಂ-ನೀಯೇ - ಕಲ್ಪತರುವೂ ನೀನೇನೆ, ಕುರೆ-ಒನ್ನು ಇಲಾಮೈಯಿನ್
= ಯಾವದೊ೦ದೂ ಕೊರತೆಯೂ ಇಲ್ಲದಿರುವದರಿಂದ, ಇರೈವನ-ನೀಯೇ - ಸತ್ವಸ್ವಾಮಿಯೂ ನೀನೇ, ತುನ್ನಂ-ತುಡೈಲಿನ್
ದುಃಖಗಳನ್ನು ಹೋಗಲಾಡಿಸುವುದರಿಂದ, ಇನ್ನಮುಂ-ನೀಯೇ - ಆನಂದಸ್ವರೂಪನೂ ನೀನೇನೆ,
ಎನ್ನುಳ್ -ಉರೈದಲಿನ್ : ನನ್ನಲ್ಲಿ ಅಂತರಾಮಿಯಾಗಿ ವಾಸಿಸುವುದರಿಂದ, ಯಾನುಂನೀಯೇ ಈ ‘ನಾನು’’ ಎಂದು ಹೇಳಿಕೊಳ್ಳುವ ಆತ್ಮವಸ್ತುವೂ ನಿನ್ನಿಂದ ಬೇರೆಯಾಗಿರದೆ ನೀನಾಗಿಯೇ ಆಗಿರುವೆ, ಉನದ್-ಅನ್ರಿ-ಇಚ್ಛೆಯಿನ್ : (ಲೋಕದಲ್ಲಿ) ನಿನ್ನದಲ್ಲದವಸ್ತುವು ಯಾವುದೂ ಇಲ್ಲದಿರುವುದರಿಂದ, ಎನದುಂ-ನೀಯೇ : ನನ್ನದೆಂದು ಅಭಿಮಾನಿಸಿದ ವಸ್ತುವೂ ನೀನೇತಾನೆ, ಪೊಲ್ಲಾಂಗು-ಇಲಾಮೈಯಿನ್
ಯಾವ ವಿಧವಾದ ದೋಷವೂ ಇಲ್ಲದಿರುವುದರಿಂದ, ನಲ್ಲಾಯ್ -ನೀಯೇ = ಉತ್ತಮೋತ್ತಮನೂ ನೀನೇಯೇ,
ವೈಯಂ-ಉಂಡು-ಉಮಿಳ್ ಲಿನ್ - (ಪ್ರಳಯದಲ್ಲಿ ಲೋಕವೆಲ್ಲವನ್ನೂ) ನುಂಗಿ (ಸೃಷ್ಟಿಯಲ್ಲಿ) ಹೊರಪಡಿಸುವುದರಿಂದ, ವಲ್ಲಾಯ್ -ನೀಯೇ - ನಿಸ್ಸಮಶಕ್ತನೂ ನೀನೇ.
ಮೈಯ್ಯ : ಸತ್ಯರೂಪಿಯೇ ! ನಿನ್-ವಿಯಪ್ಪೇ - ನಿನ್ನ ಅತ್ಯದ್ಭುತಸ್ವಭಾವವನ್ನು, ಎಂಗನಂ-ಆಹುಂ : ಯಾವರೀತಿ ಇರುವುದೋ, ಅಂಗನೇ-ಒಕ್ಕ - ಆ ರೀತಿಯಾಗಿಯೇ ಒಪ್ಪಾಗಿರುವುದರಿಂದ, ಅರಿವದ್ = ಅದನ್ನು ಅರಿಯಬಲ್ಲುದು, ಆರಣಮೇ - ವೇದಗಳೇ (ಬೇರೆಯಾವುದರಿಂದಲೂ ಸಾಧ್ಯವಿಲ್ಲ) SUMERAbouki ಮುಮ್ಮಣಿಕ್ಕೋವೈ मत्याः प्रदानात् प्रतिभान्वितायाः । मति नवोन्मेषवती त्वमेव ॥ त्वतो हि सर्वाणि चकासते ततः । त्वमेव तेजोवसति: प्रभाकरः ॥ छायाप्रदानाहितसंप्रमोदात् । माता त्वमेवापि समेत्य पूर्वम् ॥ संरक्षितत्वाच्च पिता त्वमेव । त्वमेव जात्वप्यविसृष्टबन्धुः ॥ आशाश्वतात्यल्पसुचेतरत्वात् । त्वमेव नित्यः पुरुषार्थभूतः । । फलानपेक्षाकरणादुपायः । त्वमेव सर्वार्थपुमर्थ रूपः ॥ अधर्ममार्गप्रविमोचकत्वात् । त्वमेव धर्मः परमोsसमश्च । त्वमेव चान्यादृशरूपवत्वात् । त्वमेव लक्ष्मीवसतेर्विशुद्धः ॥ नारायणेति व्यपदिष्टनाम्नः । त्वमेव वेदोदितसर्वकारणम् ॥ अनन्यलभ्योत्तमधामदानात् । त्वमेव सर्वप्रदकल्पवृक्षः । । अन्यूनभावात् किल सर्वथापि । त्वमेव सर्वाधिपतीश्वरश्च ॥ . दुःखापनेदैकसमर्थ भावात् । त्वमेव चानन्दमहागुणाकृतिः । । मय्यन्तरात्माभिधया निवासात् । त्वमेव चाहंपदवाच्य आत्मा ॥ 529 ६. 530 ಮುಮ್ಮಣಿಕ್ಕೋವೈ न किंचिदस्तीति विनात्वदीयम् । त्वमेव सर्वंवसु मामकीनम् ॥ कस्यप्यभावादसतश्च कर्मणः । “a’ ga: Haarana ॥ अन्तर्निवेशात् जगता मथैषाम् । त्वं सर्वशक्तश्च बहिर्निवेशात् ॥ सत्य ! त्वदीया भवतीह यादृशी । माया तथैवोपमितास्ति नान्या ॥ तादृक्प्रभावानुभव प्रवृत्ताः । आम्नायवाचः खलु निर्विशङ्काः । । ಮೂಲ : ಆರಂಣಗಳ ತೇಡ ಅಯಿಂದೈ ನಗರ್ ವಂದುದಿತ್ತ, ಕಾರಣರಾಯ್ ನಿನ್ನ ಕಡಲ್ ವಣ್ಣ, ನಾರಣನಾರ್, ಇಪ್ಪಡಿಸ್ಕ್ ಮಿಕ್ಸ್ ಅನ್ನೆಡುತ್ತಾದಂ ಕಳುವ, ಮೆಯ್ ಪ್ಪಡಿಕ್ಕ ಮಾನದು ಪೊನ್‌ವೆರ್ಪು,
८ M 8 ಅರ್ಥ :- :- ಆರಣಂಗಳ್ -ತೇಡ : ವೇದಗಳು (ಪರಮಾತ್ಮನನ್ನು ಕಾಣದೇ) ಹುಡುಕುತ್ತಿರಲಾಗಿ, ಅಯಿಂದೈ -ನಗರ್-ವಂದ್ -ಉದಿತ್ತ - ತಿರುವಹೀಂದ್ರಪುರದಲ್ಲಿ ಬಂದು ಅವತರಿಸಿದರೂ, ಕಾರಣ -ಆಯ್ -ನಿನ್ನ : ಕಾರಣನಾಗಿಯೂ, ಕಡಲ್-ವಣ್ಣರ್ - ಸಮುದ್ರ ಬಣ್ಣವುಳ್ಳವನೂ ಆದ, ನಾರಣನಾ ಸಕಲ ಜಗತ್ತಿಗೂ ಶ್ರೀಮನ್ನಾರಾಯಣನಾಗಿರುವ, (ಆಶ್ರಿತರ ವಿಷಯದಲ್ಲಿ ಸತ್ಯರೂಪಿಯಾದ ದೇವನಾಯಕನು, ಅನು = ತ್ರಿವಿಕ್ರಮಾವತಾರದಲ್ಲಿ ಇ-ಪಡಿಕ್ಕು-ಮಿಕ್ಕು : ಈ ಭೂಮಿಯಿಂದ ಮೇಲ್ಗಡೆಗೆ, ಎಡುತ್ತ : (ಬ್ರಹ್ಮ ಲೋಕದವರೆಗೆ) ಎತ್ತಿದ, ಪಾದಂ : ಪಾದವನ್ನು, ಕಳುವ : (ಬ್ರಹ್ಮನು) ತೊಳೆಯಲು, ಪೊನ್ -ವೆರು = ಚಿನ್ನದ ಪರ್ವತವಾದ ಮೇರುವು, ಮೆಯ್ -ಪಡಿಕ್ಕಂ-ಆನದು = ನಿಜವಾಗಿಯೂ ಪ್ರತಿಗ್ರಹಪಾತ್ರವಾಯಿತು.
ತಾತ್ಪರ :- ದಾಸಸತ್ಯನಾದ ದೇವನಾಯಕನು ತ್ರಿವಿಕ್ರಮಾವತಾರದಲ್ಲಿ ಈ ಭೂಮಂಡಲವನ್ನೆಲ್ಲಾ ಒಂದಡಿಯಿಂದಳೆದು, ಮತ್ತೊಂದನ್ನು ಬ್ರಹ್ಮಲೋಕದವರೆಗೆ ಮೇಲಕ್ಕೆ ನೀಡಿದ ಕಾಲದಲ್ಲಿ ಬ್ರಹ್ಮನು ಆ ಪಾದವನ್ನು ಅಭಿಷೇಕಿಸಲು, ಆ ತೀರ್ಥವನ್ನು ಧರಿಸಲು ಮೇರುಪರ್ವತವೇ ಪ್ರತಿಗ್ರಹ ಬಟ್ಟಲಿನಂತಾಯಿತು. ಹೀಗಲ್ಲವೇ ಅವನ ಮುಮ್ಮಣಿಕ್ಕೋವೈ 531 ಮಹಿಮೆಯಿರುವುದು. ವೇದಗಳೂ, ಸಕಲ ಜಗತ್ಕಾರಣವಾದ ಅವನ ಪ್ರಭಾವವನ್ನು ಕಂಡರಿಯದೇ ಹುಡುಕುತ್ತಿರಲು, ಅವನು ಈ ಕರ್ಮಭೂಮಿಯಲ್ಲಿರುವ ಭಕ್ತರನ್ನು ಸಂರಕ್ಷಿಸುವುದಕ್ಕಾಗಿ, ತಿರುವಹೀಂದ್ರಪುರದಲ್ಲಿ ಬಂದವತರಿಸಿ, ಸಮಸ್ತರಿಗೂ ಇಷ್ಟಾರ್ಥಗಳನ್ನು ಕೊಟ್ಟು ನಿಂತಿರುವನು. ಆಹಾ ! ಅವನ ಸೌಲಭ್ಯ ಎಂತಹುದು. आम्नायेषु गवेषयत्स्वहिपुरी मेत्यावतीर्य स्थितः । पाथोनिध्युपमो निदान मखिलस्यापीह नारायणः ॥ ऊर्ध्वं पादमुदक्षिपच्च तमिमं प्राक्षालयत् विश्वसृट् ॥ तत्तीर्थग्रहणैकपात्र मभवन्नूनं सुवर्णाचल: ॥ ಮೂಲ : ವೆರ್ಪುಡನೊ ಆಯಿಂದೈಯಿಲ್, ವೆನೈತೀರ್ ಮರುಂದೊನ್ನು, ಅರುದಮಾಹ ವಮರ್‌ನದೈಕೊಂಡು, ಅರುಳ್ ವೇಂಡಿ ನಿರ, ಪಶ್ಚಿಲಮರ್‌ನಶೆಯ್ಯಾಳ್ ಪಡಿಕಾಟ್ಟಿಯ ಪಣ್ಣುಡೈ ಎಂ ವಿರುರುವಕ್ಕೋಡಿಕ್ಕೋ ವಿಲಂಗಾ ಮಯಲ್ ಪೆತ್ರನಮೇ ॥ 9
ಅರ್ಥ :- ಅಯಿಂದೈಯಿಲ್ - ತಿರುವಹೀಂದ್ರಪುರದಲ್ಲಿ ವೆಲ್ವಿನೈ-ತೀರ್ - ಕ್ರೂರಪಾಪಗಳನ್ನೂ ನಾಶಪಡಿಸುವ, ಒನು-ಮರುಂದ್ : ಅನುಪಮವಾದ (ದೇವನಾಯಕನೆಂಬ ಔಷಧವು, ಎದ್ದು-ಉಡನ್ -ಓನಿ : (ಓಷಧಾದ್ರಿ ಎಂಬ) ಪರ್ವತದೊಂದಿಗೆ ಹೊಂದಿಕೊಂಡು, ಅರುದಮಾಹ : ಆಶ್ಚರ್ಯಕರವಾಗಿ, ಅಮರ್‌ನ್ದದೈ-ಕೊಂಡು : ನಿತ್ಯವಾಸಮಾಡುತ್ತಿರುವುದನ್ನು ಕೇಳಿ, ಅರುಳ್ -ವೇಂಡಿ-ನಿರ - (ಅದರ) ಕರುಣೆಯನ್ನು ಬೇಡಿಕೊಂಡಿರಲು, ಪಶ್ಚಿಲ್ -ಅಮರ್‌ನ್ನ : ಪದ್ಮದಲ್ಲಿ ಅವತರಿಸಿ ನೆಲೆಸಿದ, ಶೆಯ್ಯಾಳ್ : ಮಹಾಲಕ್ಷ್ಮಿಯ, ಪಡಿ-ಕಾಟ್ಟಿಯ = ಪ್ರಕಾರಗಳನ್ನು (ನಾವು ತಿಳಿಯುವಂತೆ) ತೋರಿಸಿಕೊಟ್ಟ, ಪಣ್-ಉಡೈ-ಸ್ವಭಾವವುಳ್ಳ, ಎಂ-ಎಲ್ -ಪುರುವ- ಕೊಡಿಕ್ಕು = ಬಿಲ್ಲಿನಂತಿರುವ ಹುಬ್ಬುಗಳುಳ್ಳ ಬಳ್ಳಿಯನ್ನು ಹೋಲುವ, ನಮ್ಮ ಹುಡುಗಿಗೆ, ವಿಲಂಗಾ-ಓರ್ -ಮಯಲ್ - ಅದ್ವಿತೀಯವಾದ ಮತ್ತುನೀಗಲಾರದ (ಅವನೊಡನಿರುವ) ಆಸೆಯನ್ನು, ಪತ್ತನಂ - ಪಡೆದೆವು. (ಇದು ನಾಯಿಕೆಯ ತಾಯಿಯ ಉಕ್ತಿ.)
ತಾತ್ಪರ:- ಪರ್ವತಸಾಮಾನ್ಯದಲ್ಲಿರುವ ಔಷಧವು ಶರೀರಕ್ಕೆ ಬರುವ ರೋಗಗಳನ್ನು ಪರಿಹರಿಸುವುದಷ್ಟೆ ತಿರುವಹೀಂದ್ರಪುರದಲ್ಲಿರುವ ಓಷಧಾದ್ರಿಯಲ್ಲಿ ಕಂಗೊಳಿಸುವ ದೇವನಾಯಕನೆಂಬ ಔಷಧವಾದರೋ ಅತಿವಿಲಕ್ಷಣವಾದುದು. ರೋಗ ಹಿಡಿಯುವ ದೇಹ ಪ್ರಾಪ್ತಿಗೆ ಕಾರಣವಾದ ಪಾಪಗಳನ್ನೇ ಪರಿಹರಿಸಿ, ಮತ್ತೆ ದೇಹವನ್ನು ಪಡೆಯದೆ, ಶಾಶ್ವತ ಆನಂದವನ್ನು ಪಡೆಯುವ ಅಮೃತವನ್ನೀಯುವುದು. ಈ 532 ಮುಮ್ಮಣಿಕ್ಕೋವೈ ಆಶ್ಚರ್ಯಗುಣಚೇಷ್ಟಿತಗಳನ್ನು ಕೇಳಿ ನೋಡಿ ನನ್ನ ಮಗಳೂ ಅದನ್ನು ಪಡೆಯಲು ಆಸೆಪಟ್ಟು ದೊರಕದೆ ತವಕಿಸುವಳು. ಪದ್ಮಾವಾಸಿನಿಯಂತೆ ನನ್ನ ಮಗಳೂ ಆಶ್ರಿತರಸತ್ಯನಾದ ಭಗವಂತನನ್ನು ಬಿಟ್ಟು ಅಗಲಿರಲಾರಳು. ಬಿಲ್ಲಿನಂತೆ ಬಾಗಿದಹುಟ್ಟೂ, ಸುವರ್ಣಲತೆಯಂತೆ ಇರುವ ಅವಳ ಒಡಲೂ, ಎಂತಹವರನ್ನೂ ಆಕರ್ಷಿಸುವಂತಲ್ಲವೆ ಇವೆ, ಈಗ ನನ್ನ ಮಗಳು ಆ ದಾಸಸತ್ಯನನ್ನು ಕೂಡಿರಲು ಆಸೆಪಟ್ಟು ತುಂಬ ಕಷ್ಟಪಡುವಳಲ್ಲ. ಏನು ಮಾಡುವುದು ? ಎಂದು ಅವಳ ಸ್ಥಿತಿಯನ್ನು ಹೇಳುವಳು. अद्रावौषधमोषधे रहिपुरे क्रूराघनिर्मूलन । श्रुत्वाश्चर्य मिहोषितं तदमितप्रेमेप्सुयोषिन्मणेः ॥ पद्माया विविधानुभूतिनिवहान् सन्दर्शयन्त्याश्चनः । चापभ्रूव्रतते स्सुदुस्त्यजपरोत्कण्ठाऽऽविरासातुला ॥ ಮೂಲ : ಪೆತನೈನೀಯೇ ಮತ್ತುಳವೆಲ್ಲಾ ಪೆರುವದು ನಿನ್ನೆ ಯುರುವದುಕೊಳ್ವಾರ್ ನಿನ್ನಾಲೆ, ಮನ್ನಾರಿನಂ ನಿನ್ನೊರುಟ್ಟುನೀ ಎನ್ನೊರುಟ್ಟಿ, ನಿನ್ನುರು ನಿನ್ನು ಮಿನ್ನುರುನು, ನಿನ್ ತನಕ್ಕು ಬಹರ್ ನಿನ್ನಡಿಯಡೈವಾರ್ ನಿನ್ನಾಲ೩ ಅನ್ಯಾಲುಯ್ಯಾರ್ ವಾರಣ ಮಲೈಕ್ಕೆ ವಂದಕಾರಣಮೇ ॥
९ 10 ಅರ್ಥ :- ವಾರಣಂ - ಗಜೇಂದ್ರನು, ಅಕ್ಕ - ಕೂಗಿದಾಗ, ನಂದ = ಬಂಧ, ಕಾರಣಮೇ = ಸಮಸಕ್ಕೂ ಕಾರಣನಾದ ಪರಮಾತ್ಮನೇ ! ಮತ್ತು-ಉಳ-ಎಲ್ಲಾಂ = ಉಳಿದ ಚೇತನಾ ಚೇತನಗಳನ್ನೆಲ್ಲಾ, ಪೆತನೈ -ನೀಯೇ : ಪಡೆದವನು ನೀನೇ ಅಲ್ಲವೆ, ಉರುವದು-ಕೊಳ್ಳಾರ್ = ಉಪಾಯವನ್ನೂ ಅದರ ಫಲವನ್ನೂ ಬೇಕೆನ್ನುವವರು, ಪೆರುವದು-ನಿನ್ನೆ = ಪಡೆಯುವುದು ನಿನ್ನನ್ನೇ ಅಲ್ಲವೆ, ನಿನ್ನಾಲ್ -ಅನ್ನಿ : ನಿನ್ನಿಂದಲ್ಲದೆ ಮತ್ತಾರಿಂದಲೂ; ಇನ್ನಂ = ಸುಖವನ್ನು, ಮನ್ನಾರ್ - ಸ್ಥಿರವಾಗಿ ಪಡೆಯಲಾರರು, ನೀ = ನೀನು, ರ್ನಿ -ಪೊರುಟ್ಟು : ನಿನಗೋಸ್ಕರವೇ, (ನಿನ್ನ ಕಾರನಿಗಾಗಿಯೇ) ಎನ್-ಪೊರುಟ್ಟು-ಇಲ್ಲೆ - ನನಗಾಗಿ ಅಲ್ಲವೇ ಅಲ್ಲ ನಿನ್ ಉರು-ನಿನ್ನುಂ - ನಿನ್ನ ದಿವ್ಯಮಂಗಳಕಾಯದಿಂದಲೇ, ಮಿನ್ -ಉರು-ತೋನುಂ = ಮಿಂಚಿನಂತೆ ಹೊಳೆಯುವ ಸ್ಥಿರವಲ್ಲದ ಈ ಸ್ಥಾವರ ಜಂಗಮಗಳೆಲ್ಲಾ ಕಾಣಿಸಿಕೊಳ್ಳುವುವಲ್ಲವೇ, ರ್ನಿ-ಅಡಿ-ಅಡೈವಾ
G
ಮುಮ್ಮಣಿಕ್ಕೋವೈ
533 ನಿನ್ನ ಪಾದಗಳನ್ನು ಪಡೆಯುವವರು, ರ್ನಿ-ತನಕ್ಕು : ನಿನಗೆ, ನಿಹರ್ ಸರಿಸಮಾನನಾಗುವರು, ರ್ನಿ -ಪಾಲ್ - ನಿನ್ನ ವಿಷಯದಲ್ಲಿ ಅನ್ಸಾಲ್ - ಅನಿ ಭಕ್ತಿಯೊಂದರಿಂದಲ್ಲದೆ ಮತ್ತಾವುದರಿಂದಲೂ, ಉಯ್ಯಾರ್ ಉಜೀವಿಸಲಾರ,
ತಾತ್ಸರ :- ಹಿಂದೆ ಮೊಸಳೆಯ ಬಾಯಿಯ ಸೆಳೆತಕ್ಕೆ ಸಿಕ್ಕಿದ ಗಜೇಂದ್ರನು ‘ಆದಿಮೂಲವೇ’’ ಎಂದು ಮೊರೆಯಿಡಲು ಕೂಡಲೇ ಬಂದು ರಕ್ಷಿಸಿ, ‘‘ಸಕಲ ಜಗತ್ಕಾರಣವನ್ನು ನೀನೇ’’ ಎಂಬುದನ್ನುಳಿಸಿ ಕೊಂಡೆಯಲ್ಲವೇ, ದಾಸಸತ್ಯನಾದ ದೇವನಾಯಕನೇ ! ಲೋಕವನ್ನೆಲ್ಲವನ್ನೂ ಪಡೆದ ನಿನ್ನನ್ನೇ ಪ್ರಪನ್ನರು ತಮ್ಮ ಸ್ವರೂಪಕ್ಕೆ ತಕ್ಕ ಉಪಾಯವನ್ನಾಗಿಯೂ, ಫಲವನ್ನಾಗಿಯೂ ಕೊಳ್ಳುವರು. ನಿಸ್ಸಮಾನಂದವೆಂಬ ಮುಕ್ತಿಯನ್ನು ಕೊಡುವವನು ನೀನೇ, ಮತ್ತಾರಿಗೂ ಈ ಶಕ್ತಿಯಿಲ್ಲ. ನೀನು ಇತರರಿಗಾಗಿ ಏನು ಮಾಡಿದರೂ ಅದರ ಫಲವು ನಿನಗೇ. ಸಕಲವೂ ನಿನ್ನ ಒಡಲಿನಿಂದಲೇ ಉಂಟಾಗುವುದು. ನಿನ್ನನ್ನು ಆಶ್ರಯಿಸಿ, ಸೇವಿಸುವವರು ನಿನಗೆ ಸಮನಾಗುವರು ನಿನ್ನಲ್ಲಿ ಭಕ್ತಿಯಿಲ್ಲದವರಿಗೆ ಉಜೀವಿಸಲು ಬೇರೆ ಮಾರ್ಗವೇ ಇಲ್ಲವೆ. (ಇಷ್ಟೇ ದೊರತಿರುವುದು ಉಳಿದುವು ಕಣ್ಮರೆಯಾಗಿವೆ)
समाह्वयति वारणे सपदि कारणोपागतः । त्वमेव हि ससर्जिथ त्वदितराणि सर्वाण्यपि ॥ उपायफललिप्सव स्समुपयन्ति च त्वंपरम् । प्रयन्त्यमितसम्मदं भवत एव न त्वन्यतः ॥ त्वदर्थमिह ते कृतिः ममकृते कथं वापि न । त्वदीयवपुषा जगत्समभवत्तटिच्चञ्चलम् ॥ भवत्पदसमाश्रिताः खलु भवत्समानाश्च ते । त्वयि त्वकृतभक्तयो जगति ते च नोज्जीविताः ॥ श्रीमते निगमान्त महादेशिकाय नमः । वेदान्तार्यः कवीन्द्रो गुरुमणि रिह यां " मुम्मणिक्कोवै” नाम्नीम् । चक्रे मालां प्रक्लृप्तां त्रिभिरिव मणिभिः द्राविडीं सूक्तिमालाम् ॥ श्रीमत्त्रय्यन्तरामानुजगुरुकरुणापात्रगोपालसूरिः । कर्णाटोक्त्या विवव्रे त्रिदशभणितिभि श्लोकयामास मोदात् ॥ १०
॥8 6:॥ ॥ಶ್ರೀಮತೇ ನಿಗಮಾಂತಮಹಾದೇಶಿಕಾಯ ನಮಃ 1