೧೩ ಚರಮ-ಶ್ಲೋಕಚ್-ಚ್ಚುರುಕ್ಕುಮ್

ಮೂಲ : ಕಲ್ಲಾರಹಲುಂ ಕರುಮಮುಂ ಇಾನಮುಂ ಕಾದಲುಂ ಮತ್ತು, ಎಲ್ಲಾನಿಲೈಹಳುಕ್ಕೇರ ವಿದಿತ್ತ ಕಿರಿಶೈಹಳು,

ವಲ್ಲಾರ್ ಮುಯಲ್‌ ವಲಿಯಿಳಾರೆ,ನೈಳುಹನ್ನು, ಎಲ್ಲಾತರುಮಮುರೈತ್ತವರಿನ್ನಡಿ ಶೇರ್‌ನ್ದನಮೇ ॥ 1 ಅರ್ಥ :- ಕಲ್ಲಾರ್ - ಸಮ್ಯಕ್ ಜ್ಞಾನವಿಲ್ಲದವರು, ಅಹಲುಂ = ಬಿಟ್ಟುಬಿಡುವ, ಕರುಮಮುಂ = ಕರ್ಮ ಯೋಗದಲ್ಲೂ ಜ್ಞಾನಮುಂ = ಜ್ಞಾನಯೋಗದಲ್ಲೂ, ಕಾದಲುಂ * ಭಕ್ತಿಯೋಗದಲ್ಲೂ ಮತ್ತು = ಮತ್ತು ಎಲ್ಲಾ-ನಿಲೈಹಳುಕ್ಕು = ಅವಸ್ಥೆಗಳೆಲ್ಲಕ್ಕೂ, ಏರ = ತಕ್ಕಂತೆ, ವಿದಿತ್ತ = (ಗೀತೆಯಲ್ಲಿ ಶ್ರೀ ಕೃಷ್ಣನು ವಿಧಿಸಿದ, ಕಿರಿಶೈಹಳುಂ : ಕ್ರಿಯೆಗಳಲ್ಲೂ ವಲ್ಲಾರ್ - ಶಕ್ತಿಯುಳ್ಳವರು, ಮುಯಗ್ರಹ :- ಪ್ರವರ್ತಿಸುವರು, ವಲಿ-ಯಿಳನ್ಸಾರ್ ಸಾಮರ್ಥ್ಯವಿಲ್ಲದವರು, ಎನ್ -ತನೈ - ನನ್ನನ್ನೇ, ತೊಳುಹ = ಉಪಾಯಾಂತರ ಸ್ಥಾನದಲ್ಲಿರಿಸಿ ಕೊಳ್ಳುವರು, ಎನ್ನು = ಹೀಗೆ, ಎಲ್ಲಾ-ದರುಮಂ = ಧರ್ಮವೆಲ್ಲವನ್ನೂ, ಉರೈತವರ್ = ಉಪದೇಶಿಸಿದ ಶ್ರೀಕೃಷ್ಣನ, ಇನ್-ಅಡಿ = ಭೋಗ್ಯವಾದ ಪಾದಗಳನ್ನು, ಶೇರ್‌ನ್ದನಂ ಸೇರಿದವರಾದವು.

ತಾತ್ಪರ :- ಜ್ಞಾನಹೀನರು ಬಿಟ್ಟುಬಿಡುವಂತಹ ಕರ್ಮ ಜ್ಞಾನ-ಭಕ್ತಿಯೋಗಗಳಲ್ಲೂ ಸಮರ್ಥರಾದವರು ತಮತಮಗೆ ರುಚಿಸಿದ ಕ್ರಿಯೆಯಲ್ಲಿ ಪ್ರವೃತ್ತರಾಗುವರು. ಶಕ್ತಿಯಿಲ್ಲದವರು ತನ್ನನ್ನೇ (ಪರಮಾತ್ಮನನ್ನೇ) ಉಪಾಯಾಂತರಸ್ಥಾನದಲ್ಲಿರಿಸಿಕೊಳ್ಳುವರು. ಎಂದು ಎಲ್ಲಾ ಧರ್ಮವನ್ನೂ ಅವರವರಿಗೆ ತಕ್ಕಂತೆ ಎಲ್ಲರೂ ಪರಿಗ್ರಹಿಸಿಕೊಳ್ಳುವುದಕ್ಕೆ ಅರ್ಜುನನ್ನು ವ್ಯಾಜೀಕರಿಸಿಕೊಂಡು ಉಪದೇಶಿಸಿದ ಗೀತಾಚಾರನ ಪಾದಾರವಿಂದಗಳನ್ನೇ ಸದಾಚಾರ ಕಟಾಕ್ಷದಿಂದ ತತ್ವಪುರುಷಾರ್ಥವನ್ನು ಪಡೆದ ನಾವು ಉಪಾಯಾಂತರಗಳಲ್ಲಿ ಪ್ರವರ್ತಿಸಲಾಗದೆ ವಿಶ್ವಾಸಾತಿಶಯದಿಂದ ವಿಳಂಬಾಕ್ಷಮರಾಗಿ ಉಪಾಯವನ್ನಾಗಿಯೂ ಉಪೇಯವನ್ನಾಗಿಯೂ ಪಡೆದವು. सम्यक्ज्ञानेन हीना यदिह च विजहुः कर्मयोगादिकांश्च । तेष्वप्यन्यास्ववस्थास्वनुगुणविधिनोपात्तसर्वक्रियासु ॥ सम्यक्ज्ञानाः प्रवृत्ता स्स्युरपि तदबला मां ह्युपयं न्यसेयुः । एवं सर्वांश्च धर्मान् उपदिशत उपाशिश्रयामोऽङ्घ्रियुग्मम् ॥ १ ……. • 502 ಚರಮಶ್ಲೋಕಚ್ಚುರುಕ್ಕು ಮೂಲ : ಪೆರುಮೈಯುಣ್ಣರ್‌ನದು ಮುನ್ನಿಟ್ಟು ವೇರಂಗಮಿ ಯೆನ, ಕುರಿಯವನಿವೈಯೆಟ್ಟಕ್ಕುದಿತ್ತಿಡುಂ ಕೋಣೆತುರಂದು, ಉರುಮಯನತಿರಮೆನ್ನ ಪೊರಾನಿ ಯೋರ್‌ಡವೋರ್, ಅರನೆರಿಯನ್ನು ರೈತಾನಳಿಯಾ ವರಮಾಯಿನನೇ ॥

ಅರ್ಥ:- ವೆರುಮೈ - ಅಕಿಂಚನತೆಯನ್ನು, ಉಣರ್‌ನು = ತಿಳಿದುಕೊಂಡು, ಅದು-ಮುನ್ನಿಟ್ಟು = ಆಕಿಂಚನ್ಯವನ್ನೇ ಮುಂದಿಟ್ಟುಕೊಂಡು, ವೇರು ಅಂಗಂ-ಇ-ಎನ - ಬೇರೆ ಯಾವ ಅಂಗಗಳೂ ಇಲ್ಲವೆಂದು, ಕುರಿಯವನ್ - ಕುಳ್ಳ ಮನುಷ್ಯನು, ನಿನ್ನ-ಅವೈ = ಇರುವ ಹಣ್ಣು- ಹೂ ಮೊದಲಾದುವನ್ನು, ಎಟ್ಟ : ಎಟುಕಿಸಿಕೊಳ್ಳಲು, ಕುದಿತ್ತಿಡುಂ ನೆಗೆಯುವ, ಕೋಣೆ = ಪೀಡೆಯನ್ನು, (ಕೇಶವನ್ನು) ತುರಂದು = ಬಿಟ್ಟು, ಉರು : ದೃಢವಾದ, ಅಯನ್-ಅತ್ತಿರಂ-ಎನ್ನ : ಬ್ರಹ್ಮಾಸ್ತ್ರದಂತೆ, ಪೋರಾ ಸಹಾಯಾಂತರಾಪೇಕ್ಷೆಯಿಲ್ಲದ, ನಿಲೈ : (ಪ್ರಪತ್ತಿಯ) ಸ್ಥಿತಿಯನ್ನು, ಓರ್‌ನ್ಸ್ - ತಿಳಿದು, ಇಡ = (ಭಾರವನ್ನು) ಇರಿಸಲು, ಓರ್ = ಅಸಾಧಾರಣವಾದ, ಅರ-ನೆರಿ = ಧರ್ಮಮಾರ್ಗವನ್ನು, ಅಳಿಯಾ : ಎಂದಿಗೂ ಅಳಿಯದ, ಅರಂ : ಆಯಿರ್ನ : ಧರ್ಮನೆನೆಸಿದ (ಶ್ರೀಕೃಷ್ಣನು) ಅನ್ನು = ಆ ಕಾಲದಲ್ಲಿ ಉರೈತಾನ್ : ಉಪದೇಶಿಸಿದನು.

ತಾತ್ಪರ :-ಪರಮಾತ್ಮನನ್ನು ಪಡೆಯಲು ನಮ್ಮಲ್ಲಿ ಏನೂ ಇಲ್ಲದಿರುವುದನ್ನು ಮೊದಲು ತಿಳಿಯಬೇಕು. ಆಭಾವನೆಯನ್ನು ಪುರಸ್ಕರಿಸಿಕೊಂಡು, ಪ್ರಪತ್ತಿಗೆ ನಿಯತವಾದ ಆನುಕೂಲ್ಯ ಸಂಕಲ್ಪಾದ್ಯಂಗಗಳ ಹೊರತು ಬೇರೆ ಯಾವುದೂ ಬೇಕಿಲ್ಲವೆಂಬುದನ್ನರಿಯಬೇಕು. ಯತ್ನಿಸಿದರೂ ಎಟುಕಿಸದಷ್ಟು ಎತ್ತರದಲ್ಲಿ ಹಣ್ಣಿಗಾಗಿ ಕುಳ್ಳನು ನೆಗೆನೆಗೆದು ವೃಥಾಕ್ಷೇಶಪಡುವಂತೆ ಶ್ರಮಪಡದೆ, ಇತರ ಸಹಕಾರಪೇಕ್ಷೆಯಿಲ್ಲದ ಬ್ರಹ್ಮಾಸನ್ಯಾಯದಂತೆ ಎಂದು ದೃಢವಾಗಿ ನಂಬಿ, ಆತ್ಮಭರವನ್ನು ದೇವರಲ್ಲಿ ಒಪ್ಪಿಸಬೇಕು. “ಎಂದಿಗೂ ಅಳಿಯದ ಧರ್ಮ’’ ನೆಂದೆನಿಸಿದ ಕೃಷ್ಣಪರಮಾತ್ಮನು ಅರ್ಜುನನಿಗೆ ಉಪದೇಶಿಸುವ ನೆಪದಲ್ಲಿ ಈ ಪರಮರಹಸ್ಯವನ್ನು ಜಗತ್ತಿಗೇ ಕರುಣಿಸಿರುವನಲ್ಲವೆ ! ಸದಾಚಾರೋಪದೇಶದಿಂದ ಇದನ್ನರಿತು ಉಜ್ಜವಿತರಾಗಬೇಕು. (ಸರ್ವಧರ್ಮಾನ್ ಪರಿತ್ಯಜ್ಯ’’ ಎಂಬುದರ ವಿವರಣೆಯಿದು). आकिंचन्यं विदित्वा तदनु तदु पुरस्कृत्य चान्याः प्रतीकाः । नापेक्ष्या इत्यवेत्योन्नतफल मिव तत् प्राप्तु मुत्पत्य खर्वः ॥ खिन्न सन्त्यज्य तच्चाप्यतिदृढचतुरास्यास्त्ररीतिं च बुध्वा । न्यस्तव्यं चैकधर्मायनमतिशयितः प्राह धर्मस्तदानीम् ॥ २

ಚರಮಶ್ಲೋಕಚ್ಚುರುಕ್ಕು

503 ಮೂಲ : ವಾರಿದಿವಿಟ್ಟು ಮಲರ್ ಮಹಡು ಮದುರೈವಂದು, ಬಾರತ ವಂಶಮರ್ ಪಾರ್‌ಮಹಳ್ ಬಾರಂ ಶೆಹವುಹಂದು, ಶಾರತಿಯಾಯ್ ಮುನ್ನು ತೂದನುಮಾಳ್‌ಳರುಂವಿಶಯನ್, ತೇರದಿಲ್‌ ನಿನ್ನವನೈ ತೇತ್ತಿನಾನ್ ತಿರಮಾಯಿನಮೇ ॥ 3 ಅರ್ಥ :- ವಾರದಿ-ವಿಟ್ಟು - ಕ್ಷೀರಸಮುದ್ರವನ್ನು ಬಿಟ್ಟು, ಮಲರ್-ಮಹಳ್ -ಓಡು - ಮಹಾಲಕ್ಷ್ಮಿಯೊಡನೆ, ಮದುರೈ-ವಂದ್ : ಉತ್ತರ ಮಧುರೆಯಲ್ಲಿ ಬಂದವತರಿಸಿ, ಬಾರತ-ವೆಂ-ಶಮರ್ : ಕ್ರೂರವಾದ ಭಾರತಯುದ್ಧದಲ್ಲಿ ಪಾರ್ -ಮಹಳ್ : ಭೂದೇವಿಯ, ಬಾರಂ = ಭಾರವನ್ನು, ಶೆಹ : ನಾಶಮಾಡುವುದಕ್ಕೆ, ಉಹಂದು = ಕಲ್ಪಿಸಿ, ಶಾರತಿಯಾಮ್ : ಸಾರಥಿಯಾಗಿಯೂ, ಮುನ್ಸ್ : (ಇದಕ್ಕಿಂತ) ಮೊದಲು, ತೂದನುಮಾಯ್ : ದೂತನಾಗಿಯೂ (ನಂತರ) ತಳರುಂ : ವ್ಯಾಕುಲ ಚಿತ್ತನಾದ, ವಿಶರ್ಯ : ಅರ್ಜುನನ, ತೇರ್ -ಅದಿಲ್ -ನಿನ್ = ರಥದಲ್ಲಿದ್ದುಕೊಂಡೇ, ಅವನೈ : ಆ ಅರ್ಜುನನ್ನು, ತೇತಿನಾನ್ : ತತ್ರೋಪದೇಶಮಾಡಿ, ಉದ್ಧರಿಸಿ ಗೀತಾಚಾರನ, ತಿರಂ-ಆಯಿನಂ : ವಶವಾದವು (‘‘ಮಾಂ’’ ಎಂಬುದರ ವಿವರಣೆ)

ತಾತ್ಪರ :- ಶ್ರೀಮನ್ನಾರಾಯಣನು ಕ್ಷೀರಸಮುದ್ರದಲ್ಲಿ ಮಹಾಲಕ್ಷ್ಮಿ ಸಮೇತನಾಗಿದ್ದಂತೆಯೇ ಉತ್ತರ ಮಧುರೆಯಲ್ಲೂ ಲಕ್ಷ್ಮಿಯೊಡನೆಯೇ ಅವತರಿಸಿದನು. ಅಧರ್ಮವನ್ನು ನಿರ್ಮೂಲಗೊಳಿಸಿ, ಭೂಭಾರವನ್ನು ಕಡಿಮೆಮಾಡಿ ಧರ್ಮವನ್ನು ನೆಲೆಗೊಳಿಸಲು, ಪಾಂಡವರ ದೂತನೂ ಆದನು. ಯುದ್ಧದಲ್ಲಿ ಅರ್ಜುನನಿಗೆ ಸಾರಥಿಯಾಗಿದ್ದನು. ಧರ್ಮಾಧರ್ಮಬುದ್ಧಿ ವ್ಯಾಕುಲನಾಗಿ ಶರಣುಹೊಂದಿದ ಅರ್ಜುನನಿಗೆ ತತ್ವಪದೇಶಮಾಡಿದನು. ಅವನನ್ನು ಉದ್ಧರಿಸಿದನು. ಅಂತಹ ಪರಮಾತ್ಮನಿಗೆ ವಶವಾಗಿಹೆವು. ನಮ್ಮನ್ನೂ ಅಂತೆಯೇ ಉಜೀವಿತರನ್ನಾಗಿ ಮಾಡುವನು. ಅವನ ನಿತ್ಯಸೇವೆಗೈದು ಆನಂದಿಸೋಣ. (ಅರ್ಜುನವ್ಯಾಜದಿಂದ ಲೋಕಕ್ಕೆ ಅನುಗ್ರಹಿಸಿದ ‘‘ಚರಮಶ್ಲೋಕ’‘ದಲ್ಲಿರುವ ‘ಮಾಂ’’ ಎಂಬುದರ ತತ್ವಾರ್ಥವನ್ನು ಸದಾಚಾದ್ಯೋಪದೇಶದಿಂದ ಅರಿತು, ನಿತ್ಯಸುಖಿಗಳಾಗಬೇಕು.) त्यक्त्वा क्षीरपयोनिधिं च मधुरां लक्ष्म्या सहागत्य तम् । भूभारं त्ववतार्य भारतरणे भूत्वा च सूतः पुरा ॥ दूतोऽतीवभयार्तफल्गुनरथात् यस्तं ररक्ष स्वयम् ॥ तस्यैतस्य हरेः पदाम्बुजमहादासा वयं स्मोऽधुना ॥ 504 ಚರಮಶ್ಲೋಕಚ್ಚುರುಕ್ಕು ಮೂಲ : ತನ್ನರುಳಾಲ್ ಪೆರುಂ ಶಾದನಂ ಶಾದಕನೆನಿಮತ್ತೆ, ತನ್ನುಡನೆಣ್ಣುದಲ್ ನೀಂಗ ತನಿತ್ತೊರು ಶಾದನವಾಯ್, ಪೊನ್ನರುಳೋಡುಮಪ್ಪಮಹಡುಂ ಪುಹಳನಿನ್ನ, ಇನ್ನುರೈ ಯೀಶನೈಯೇ ಯೇಕಮಣ್ಣ ವಿಶೈಂದನಮೇ ॥

4 ಅರ್ಥ :- ತನ್ನರುಳಾಲ್ - ತನ್ನ (ಪರಮಾತ್ಮನ) ದಯೆಯಿಂದಲೇ, (ಚೇತನನು) ಪೆರುಂ : ಪಡೆಯುವ, ಶಾದನಂ : ಉಪಾಯವು, ಶಾದರ್ಕ : ಸಾಧಕನಾಗಿರುವುದೂ, ಎವತ್ತೆ : ಎಂಬ ವಿಷಯವನ್ನು, ನೀಂಗ = ನಿವಾರಿಸಲು, ತನಿತ್ (ತಾನು) = ತಾನೇ ಆದ, ಒರು : ಅಸದೃಶನಾದ, ಶಾದನಮಾಯ್ = ಉಪಾಯವಾಗಿ, ರ್ಪೊ-ಅರುಳೋಡು : ಸತ್ವಭೋಗ್ಯವಾದ ಪರಮಕರುಣೆಯೊಂದಿಗೂ, ಪೂ -ಮಹಡುಂ : ಮಹಾಲಕ್ಷ್ಮಿಯೊಂದಿಗೂ (ಕೂಡಿಯೇ) ಪುಹಳ್ : ಹೊಗೊಳಿಸಿಕೊಳ್ಳುವಂತೆ, ನಿನ್ನ = ಇರುವ, ಇನ್ -ಉರೈ = ಇಂಪಾದ ಮಾತುಗಳುಳ್ಳ, ಈಶನೈಯೇ : ಸಶ್ವೇಶ್ವರನಾದ ನಾರಾಯಣನನ್ನೇ, “ಏಕಂ’ ಮಂತ್ರದಲ್ಲಿರುವ ಏಕಪದದರ್ಥವೆಂದು, ಎಣ್ಣ - ತಿಳಿಯಲು, ಇಚ್ಚೆಂದನಂ = ಅನುಸಂಧಾನ ಮಾಡಿದೆವು.

ತಾತ್ಪರ :- ಚೇತನನು ತಾನು ಸಾಧಕನೆಂದೂ, ತಾನಾಚರಿಸುವುದು ಉಪಾಯವೆಂದೂ, ಮತ್ತು ಅದರ ಫಲವನ್ನು ತಾನು ಪಡೆಯುವನೆಂದೂ ತಿಳಿದಿರುವನಷ್ಟೆ. ಈ ಭಾವನೆ ತಪ್ಪು, ಇದು ಹೋಗಬೇಕು. ಹೇಗೆ ಹೋಗುವುದೆಂದರೆ, ‘‘ಮಾಂ’’ ಶಬ್ದದದಲ್ಲಿರುವ ಆ ಅರ್ಥಗಳನ್ನರಿಯಬೇಕು. ಪರಮಾತ್ಮನ ನಿರವಧಿಕವೂ, ನಿರ್ವ್ಯಾಜವೂ ಆದ ಪರಮಕರುಣೆಯಿಂದಲೇ ಉಪಾಯವು ಲಭಿಸಿದುದು. ಆ ಉಪಾಯವಾದರೋ ಅವನೇ, ಬೇರೆಯಲ್ಲ, ಅವನಿತ್ತ ಕರಣ ಕಳೇಬರಾದಿಗಳಿಂದ ಕೂಡಿದ ಚೇತನನು ಅವನು ದಯಪಾಲಿಸಿದ ಸ್ವರೂಪಜ್ಞಾನದಿಂದ ಹಾಲು ಕುಡಿಯುವಮಗುವು ಅಳುವಂತೆ ಪ್ರಾರ್ಥಿಸಿಕೊಳ್ಳುವನಷ್ಟೆ ತಾನು ಆಚರಿಸುವ ಪ್ರಪತ್ತುಪಾಯವು ವ್ಯಾಜಮಾತ್ರ. ಚೇತನನ ಭರವನ್ನು ಸ್ವೀಕರಿಸುವ ಸ್ವಾಮಿಯು ತಾನೇ ಉಪಾಯಾಂತರ ಸ್ಥಾನದಲ್ಲಿರುವನು. ಹಾಗೆ ಸ್ವೀಕರಿಸುವುದೂ ಲಕ್ಷ್ಮೀ ಸಮೇತನಾಗಿಯೇ ಮತ್ತು ನಿರತಿಶಯ ದಯೆಯಿಂದಲೇ, ಎಂಬ ಈ ವಿಶದವಾದ ಅರ್ಥವೆಲ್ಲಾ ಅವನ ಮುಖಕಮಲದಿಂದ ಬಂದ ಉಪದೇಶಾಮೃತ ರೂಪವಾದ ರಹಸ್ಯಕ್ತಿಯಲ್ಲಿರುವ ‘‘ಮಾಂ’’ ಎಂಬ ಪದದಲ್ಲಿ ಅಡಗಿದೆ. ಇದನ್ನೇ ಪ್ರಾಪ್ಯಸ್ಥ್ಯವಪ್ರಾಪಕತ್ವಂ’’ ಸ್ವಪ್ರಾಧಾನ್ಯ ನಿವಾರಣಂ, ಪ್ರಪತೇಃ ವ್ಯಾಜಮಾತ್ರತ್ವಂ, ಅನ್ನೋಪಾಯ್ಯಃ ಅನನ್ವಯಃ, ತದಂಗೈರಪಿ ಅಸಂಬಂಧಃ, ಸರ್ವಸಾಧ್ಯಷು ಅಭಿನ್ನತಾ’’, ಎಂದು ಶ್ರೀಮದಾಚಾರ್ಯರು ಸಂಗ್ರಹಿಸಿರುವರು. लभ्यं साधन मात्मनीनकृपया तत् साधकश्च स्वयम् । प्राप्नोतीत्यपनेतु माश्रितजनैकोपायभूतं हरिम् ॥

ಚರಮಶ್ಲೋಕಚ್ಚುರುಕ್ಕು अत्यन्तस्पृहणीयया करुणया लक्ष्म्या च साकं स्तुतम् । रस्योक्तिं प्रभु मभ्युपेयीय परं चेहैकवाच्यं वयम् ॥ ಮೂಲ : ಊನಿಲಿತುಳಲ್ ವಿಕ್ಕುಂ ವಿನೈಕ್ಕಡಲು ವಿಳುಂದ, ಯಾನೆನದಾನಗುಣಂಗಳೆನಕ್ಕಿ ನಲ್ವಳಿಯುಂ, ತಾನುದವಿತ್ತ ತಡನಿನ್ನ ತನಿತ್ತರುಮಂ,

505 ನಾ ನಿನಿ ವೇರೋರ್ ಪರಂ ನಣುಹಾವಹೈ ನಹಿನದೇ ॥ 5

ಅರ್ಥ :- ಊನಿಲ್ - ಮಾಂಸಮಯವಾದ ದೇಹದಲ್ಲಿ, ಇಟ್ಸ್ : ಒಂದಾಗಿ ಸೇರಿಸಿ, ಉಳಲ್ವಿಕ್ಕುಂ : ಭ್ರಮಿಸುವಂತೆಮಾಡುವ, ವಿದ್ಯೆ-ಕಡಲುಳ್ = ಕರ್ಮ ಮೂಲವಾದ ಪಾಪಸಮುದ್ರದಲ್ಲಿ ವಿಳುಂದ : ಬಿದ್ದಿರುವ, ಯಾನ್ = ನನ್ನನ್ನೂ, ಜನದಾನ = ನನ್ನದಾದ, ಗುಣಂಗಳ್ - ಗುಣಗಳನ್ನೂ, (ಅನನ್ಯಾರ್ಹದಾಸಾದಿಗಳನ್ನು) ಎನಕ್ಸ್-ಇಶ್ಯ ನನ್ನ ಸ್ವಭಾವಕ್ಕೆ ಅನುಗುಣವಾದ, ನಲ್ -ವಳಿಯುಂ = ಸನ್ಮಾರ್ಗವನ್ನೂ, ತಾನ್ = (ನಿರವಧಿಕದಯೆಯುಳ್ಳ) ತಾನೇ, ಉದವಿ = ಒದಗಿಸಿಕೊಟ್ಟು, ತನ್ನೈ = ತನ್ನನ್ನು, ತಂದಿಡ = ಲಭಿಸುವಂತೆ ಮಾಡುವುದಕ್ಕಾಗಿಯೇ, ನಿನ್ನ - ಇರುವಂತಹ, ತನಿ-ದರುಮಂ - ಅದ್ವಿತೀಯ ಧರ್ಮನೆನಿಸಿರುವ ಪರಮಾತ್ಮನು, ಇನಿ = ಇನ್ನುಮುಂದೆ, ರ್ನಾ = ನಾನು, ವೇರ್ -ಓರ್ -ಪರಂ = ಬೇರೊಂದುಭಾರವನ್ನು, ನಣುಹಾವಕ್ಕೆ : ಹೊಂದದಹಾಗೆ, ನಲ್ ಹಿನ್ನದ್ : ಅತ್ಯಂತ ಪ್ರೀತಿಯಿಂದಲಲ್ಲವೆ ಮಾಡಿರುವುದು.

ತಾತ್ವರ :- ಮಾಂಸಾದಿಮಯಕಾಯದಲ್ಲಿ ಏಕೀಭವಿಸಿರುವಂತೆ ಇದ್ದು, ಅನಾದಿ ಕರ್ಮ ಪ್ರವಾಹದಲ್ಲಿ ಸಿಕ್ಕಿ ಸಾಕಾಗಿರುವೆನು. ನನಗೆ ಒಳ್ಳೆಯ ಗುಣಗಳನ್ನೂ, ಒಳ್ಳೆಯ ಮಾರ್ಗವನ್ನೂ ಸಹ ಆ ಪರಮಕೃಪಾಳುವಾದ ಪರಮಾತ್ಮನು ತಾನೇ ಕರುಣಿಸಿದನು. ಇಂತಹ ನನಗೆ ತಾನು ಲಭಿಸುವಂತೆ ಇರುವ ಅಸದೃಶಧರ್ಮನೆನಿಸಿದ ಆ ಗೀತಾಚಾರನು ಮತ್ತೆ ಬೇರೊಂದು ಭಾರವನ್ನು ನಾನು ವಹಿಸದಂತೆ ಮಾಡಿರುವನು. ಹೀಗೆ ಮಾಡಿದುದು ಕೇವಲ ಅವನ ನಿರ್ವ್ಯಾಜಕರುಣಾತಿಶಯದಿಂದಲೇ ಹೊರತು ಬೇರಾವುದರಿಂದಲೂ ಅಲ್ಲ. (ಇದೇ ‘‘ಶರಣಂ’ ಎಂಬುದರ ಸಾರಾರ್ಥ). देहे संयोज्य संभ्रमयति च दुरिताम्भोनिधौ मां निमग्नम् । शेषत्वादीन् मदीयान् अपिच शुभगुणान् स्वानुरूपं सुगार्गम् ॥ कारुण्यब्धि स्स्वयं मे स्वमिह वितरितुं धर्म एवाद्वितीयः । नान्यं लप्स्ये यथेतः पर मिह परमं मय्यभिस्निह्यतीशः ॥506 ಚರಮಶ್ಲೋಕಚ್ಚುರುಕ್ಕು ಮೂಲ : ಕಡುವಿನೈನಾಂ ಪೆರುಂಪೇಳ್ವೆ,ಹನಮೈಕೊಣ್ಣುನಮ್ಮೇಲ್, ನಡೆ ವಿಲಹಾಮಲಿಶೈನೊರುಕಾಲು ತುಣಿವುಡನೇ, ಉಡಮೈಯಡೈಕ್ಕಲಮಾಹ ಅಡೈಕ್ಕು ಮುಹಪ್ಪದನಾಲ್, ಅಡೈ ಯೆನ ವನ್ನುರೈತಾನ ಡೈವಿತನನ್ ತನ್ನಡಿಯೇ ॥

6

ಅರ್ಥ :- ನಾಂ - ನಾವು, ಪೆರುಂ-ಪೇಟೆ - ಪಡೆಯಬಹುದಾದ ಪುರುಷಾರ್ಥವನ್ನು, ಕಡು-ವಿನೈ : ಕ್ರೂರವಾದ ಪ್ರಾರಬ್ಧಕರ್ಮಗಳು, ತಹಂದಮೈ -ಕೊಣ್ಣು ತಡೆಗಟ್ಟಿವೆಯೆಂದು ತಿಳಿದು, ನಮ್ಮೆಲ್ : ಆಶ್ರಿತರಾದ ನಮ್ಮ ವಿಷಯದಲ್ಲಿ, ನಡೆ ಆಚರಣೆಯು (ಅನುಗ್ರಹಿಸಿವುದು) ವಿಲಹಾಮಲ್ : ಬಿಟ್ಟುಹೋಗದಂತೆ, ಇಫ್ರೆಂದ್ = ಅಂಗೀಕರಿಸಿ, ತುಣಿವುಡನೇ = ಮಹಾವಿಶ್ವಾಸದೊಂದಿಗೆ, ಒರುಕಾಲಂ = ಒಂದುಸಲ, ಉಡಮೈ : (ರಕ್ಷಿಸಲ್ಪಡುವ) ವಸ್ತುವನ್ನು, ಅಡೈಕ್ಕಲಮಾಹ : ರಕ್ಷಿಸಬೇಕಾದುದಾಗಿ, ಅಡೈಕ್ಕುಂ - ಒಪ್ಪಿಸಿಡುವ, ಉಹಶನಾಲ್ - ಸಂತೋಷದಿಂದ, ಅಡೈ - ಹೊಂದು, ಎನ = ಎಂದು, ಅನ್ನು = ಆಗ, ಉರೈತಾನ್ : ಉಪದೇಶಿಸಿದ ಶ್ರೀಕೃಷ್ಣನು, ತನ್ನಡಿ - ತನ್ನ ಪಾದಗಳನ್ನು, ಅಡೈವಿತ್ತನನ್ - (ನಾನು) ಪಡೆಯುವಂತೆ ಮಾಡಿದನು.

ತಾತ್ಪಯ್ಯ :- ಭಗವಂಕಯ್ಯ ರೂಪಪುರುಷಾರ್ಥವು ನನಗೆ ಪಿತ್ರಾರ್ಜಿತವಾದ ಆಸ್ತಿಯಂತೆ ಸ್ವತಃ ಲಭಿಸಬೇಕಾದುದು. ಆದರೂ ಪ್ರಾರಬ್ಧಕರ್ಮವು ಅದು ಲಭಿಸದಂತೆ ಮಾಡುವುದು. ಪರಮಾತ್ಮನು ತನ್ನ ಅಸದೃಶಕೃಪೆಯಿಂದ ಅದನ್ನು ದೊರಕಿಸಿಕೊಡುವನು. ಅದು ಅವನ ಅನನ್ಯ ಸಾಧಾರಣವಾದ ಆಚರಣೆ. ನನ್ನನ್ನು ರಕ್ಷಿಸಬೇಕು” ಎಂದು ಮಹಾವಿಶ್ವಾಸದಿಂದ ಒಂದು ಸಲ ಕೇಳಿಕೊಂಡು, ಭರವನ್ನು ಒಪ್ಪಿಸಿ, ಆಶ್ರಯಿಸಿದರೆ ರಕ್ಷಿಸುವೆನೆಂದು ಹೇಳಿರುವನು. ಆ ಗೀತಾಚಾರನ ಅಡಿಗಳನ್ನು ನಾನು ಪಡೆಯುವಂತೆ ಅವನೇ ಮಾಡಿರುವನು. (ವ್ರಜ’’ ಎಂಬುದರ ವಿವರಣೆಯಿದು) ६ कर्मस्वत्यन्तकृच्छ्रेष्विह पुरुषफलावाप्तिविघ्नायितेषु । स्वीकृत्याचार मस्मास्वविरत मिह तत्पूर्णविश्वासयुक्तः । वस्त्वेतत्स्वैकरक्ष्यं न्यसनकरणतश्चैकदैवातिहृष्टः । गीताचार्यो व्रजेति श्रित मुवद तदाऽलम्भयच्चात्मपादौ ॥ ಮೂಲ : ಕಾನೆನ ವೇದಂಗಳ್‌ ಕರುಂ ಪರನೆನ್ನು ಕಾಟ್ಟನಿನ, ತಾನಿನ್ನರಿಯ ಹಿಲ್ಲಾರ್‌ರಿವಿಕ್ಕುಂ ತನಿತ್ತಿರಲೋನ್, ವಾನೊನಾರೋಡು ಮಾಡನೆನ್ನಅವತರಿಪ್ಪಾನ್, ನಾನೆ ನಂತಿರುವಾಲ್ ನಮ್ಮನರ್‌ಪದಂ ಶೇಡುಮೇ ॥ 7 ಚರಮಶ್ಲೋಕಚ್ಚುರುಕ್ಕು

507 ಅರ್ಥ :- ಕಾನ್ -ಎನ್ನ = ಕಾಡುಗಳಂತಿರುವ (ಅತಿಗಹನವಾದ) ವೇದಂಗಳ್ : ವೇದಗಳಿಂದ, ಕಕ್ಕುಂ = ಅಭ್ಯಸಿಸಲ್ಪಡುವ, ಪರನ್ : ಪರಮಪುರುಷನು, (ಪರತತ್ವವು) ಎನ್ = ಎಂದು, ಕಾಟ್ಟ-ನಿನ್ನ : ತೋರಿಸುವುದಕ್ಕಾಗಿಯೇ ಇರುವ, ತಾನ್ - ತಾನು, ಇನ್ಸ್ = ಈಗ (ಗೀತಾಚಾರನಾಗಿ ಬಂದಾಗ) ಅರಿಯಹಿಯಿಲ್ಲಾರು ಅರಿಯಲಾರದವರಿಗೆ, ಅರಿವಿಕ್ಕುಂ = ಅರಿಯುವಂತೆಮಾಡುವ, ತನಿ = ಅಸಮಾನವಾದ, ತಿರಲೋನ್ - ಪ್ರಭಾವುಳ್ಳವನೂ, ವಾನ್ : ಪರಮಪದದಲ್ಲಿ ಒನಾರೋಡು : ತನ್ನಹಾಗೆಯೇ ಇರುವ ನಿತ್ಯಸೂರಿಗಳೊಡನೆ, ಮಾಡನ್ -ಎನ್ನ = ಮನುಷ್ಯನಂತೆ, ಅವತರಿರ್ಪ್ಪಾ = ಅವತರಿಸಿರುವವನೂ, “ನಾನ್’ - ನಾನು, ಎನ್ನ = ಎಂದು ಹೇಳಿದವನೂ ಆದ, ನಂ-ತಿರು-ಮಾಲ್ - ನಮ್ಮ ಶ್ರೀವಲ್ಲಭನು, ನಮ್ಮ - ನಮ್ಮನ್ನು, ನ‌-ಪದಂ = ಉತ್ತಮವಾದ ಪರಮಪದವನ್ನು, ಶೇರ್ತಿಡುಂ - ಸೇರಿಸುವನು.

ತಾತ್ಪರ :- ಅರಿಯಲು ಸುಲಭವಲ್ಲದ ವೇದಗಳು ಪ್ರತಿಪಾದಿಸುವ ಪರಾತ್ಪರ ತತ್ವವು “ತಾನೇ’’ ಎಂದು ತಾನೇ ಗೀತೆಯಲ್ಲಿ ‘ವೇದೃಶ್ಯಸತ್ವರಹಮೇವ ವೇದ್ಯ’’ ಎಂದು ಅರಿವಿಲ್ಲದ ತನ್ನ ಭಕ್ತರಿಗೆ ಚೆನ್ನಾಗಿ ಬೋಧಿಸುವ ಪ್ರಭಾವವುಳ್ಳನಾಗಿಯೂ, ಪರಮ ಪದದಲ್ಲಿ ನಿತ್ಯಸೂರಿಗಳೊಡನಿದ್ದಂತೆಯೇ ಅನಂತನೇ ಬಲರಾಮನಾಗಿಯೂ, ಗರುಡನೇ ಅರ್ಜುನನಾಗಿಯೂ, ತಾನು ಶ್ರೀಕೃಷ್ಣರೂಪನಾಗಿಯೂ, ಸಾಮಾನ್ಯ ಮಾನವರಂತೆ ಅವತರಿಸಿ, ‘ನಾನು’ ಎಂದ ಶ್ರೀಮನ್ನಾರಾಯಣನು ಪ್ರಪನ್ನರಾದ ನಮ್ಮನ್ನು ತನ್ನ ನಿತ್ಯ ನಿವಾಸವಾದ ಪರಮಪದಕ್ಕೆ ಸೇರಿಸಿಕೊಳ್ಳುವನು. (ಅಹಂ’’ ಎಂಬುದರ ಅರ್ಥವಿದು.) वेद्यो दुर्ज्ञेयवेदैः पर इति सकलात् य स्स्वयं चाधुना स्वम् । मर्त्याकारं य एवं न विदुरिह तदावेदनात्तप्रभावः ॥ सार्धं तै र्नित्यसङ्घै स्त्ववतरति जगत्युत्तमः पूरुषोऽहम् । शब्दार्थ : श्रीप्रियोऽस्मान् निजपरमपदं प्रापयत्येव भक्तान् ॥ ಮೂಲ : ತನ್ನಿ ಕಾಟ್ಟಿತನಿದ್ಯೆಯುಹನ್ನು ತನಿಹವಾಲ್, ನಂನಿಲೈತೀರ ಅಡೈಕ್ಕಲಂ ಕೊಂಡಡಿಶರ್ತಿಡವೇ, ಪನ್ನಿಲೈಮೂಲವೆಳುತ್ತಿಲುಂ ಪಾಂಡವರ್ ತೇರ್‌ತನಿಲುಂ, ಮುನ್ನಿಲೈಕೊಂಡಪಿರಾನ್ ಎಮ್ಮೆ ಮುನ್ನಿ ಕೊಣ್ಡನನೇ ॥ 8 ಅರ್ಥ :- (ಪರಮಾತ್ಮನು) ತನ್-ನಿಲೈ-ಕಾಟ್ಟಿ - ತನ್ನ ಅನನ್ಯಸಾಧಾರಣ ಸ್ವರೂಪವನ್ನು ತೋರಿಸಿ, ತನಿಮೈ : (ಆಶ್ರಿತರ ಅಸಹಾಯಕತೆಯನ್ನು (ನೋಡಿ) ಉಹಂದ್ : ಹರ್ಷಿಸಿ, ! 508 ಚರಮಶ್ಲೋಕಚ್ಚುರುಕ್ಕು

ತನಿ-ತಹವಾಲ್ = ತನ್ನದೇ ಆದ ದಯೆಯಿಂದ, ನಂ-ನಿಲೈ-ತೀರ - (ಅನಾದಿಯಾದ) ನಮ್ಮಸ್ಥಿತಿ ಪರಿಹಾರವಾಗುವುದಕ್ಕಾಗಿ, ಅಡೈಕ್ಕಲಂ-ಕೊಂಡು : (ನಮ್ಮನ್ನು ರಕ್ಷಿಸಬೇಕಾದ ವಸ್ತುವೆಂದು ಅಂಗೀಕರಿಸಿ, ಅಡಿ-ಶೇರ್ತಿಡವೇ ತನ್ನಡಿಸೇವೆಯಲ್ಲಿ ಸೇರಿಸಿಕೊಳ್ಳುವುದಕ್ಕಾಗಿಯೇ, ಪಲ್ -ನಿಲೈ -ಮೂಲ-ಎಳುತ್ತಿಲುಂ : ಹಲವಾರು ತೆರನಾಗಿರುವ ಪ್ರಣವದ ಆದ್ಯಕ್ಷರದಲ್ಲೂ ಪಾಂಡವರ್ -ತೇರ್ -ತನಿಲುಂ - ಅರ್ಜುನನ ರಥದಲ್ಲಿಯೂ, ಮುನ್-ಲೈ -ಕೊಂಡ : (ಪ್ರಣವದಲ್ಲಿ) ಮೊದಲೂ, (ತೇರಿನಲ್ಲಿ) ಮುಂದೆಯೂ, ಇರುವಂತೆ ಸಂಕಲ್ಪಿಸಿರುವ, ಪಿರ್ರಾ : ಮಹೋಪಕಾರಮಾಡಿದ ಶ್ರೀಕೃಷ್ಣನು, ಎಮ್ಮೆ = ನಮ್ಮನ್ನು, ಮುನ್-ನಿಲೆ-ಕೊಂಡನನ್ ತನ್ನ ಎದುರಿಗೆ ಇರುವಂತೆ (ನಾವು ಅವನನ್ನು ಸದಾ ಸೇವಿಸುವಂತೆ ಮಾಡಲು ಸ್ವೀಕರಿಸಿದನು. ತಾತ್ಪರ :- ಪರಮಾತ್ಮನು ತನ್ನ ಚಿದಚಿದ್ವಿಲಕ್ಷಣವಾದ ಸ್ವರೂಪವನ್ನು ಅರ್ಜುನನ ನೆಪದಲ್ಲಿ ಜಗತ್ತಿಗೇ ತೋರಿಸಿಕೊಟ್ಟನು. ಪರಮಪುರುಷಾರ್ಥವನ್ನು ಪಡೆಯಬೇಕೆಂಬ ಉತ್ಕಟಾಭಿಲಾಷೆಯೊಂದೇ ತನ್ನಾಶ್ರಿತರಲ್ಲಿದ್ದು, ಬೇರಾವುದೂ ಇಲ್ಲದುದನ್ನು ನೋಡಿ ಹರ್ಷಿಸಿ, ತನ್ನ ಪಾದಸೇವೆಯನ್ನು ಅವರಿಗೆ ಸರ್ವದಾ ಕೊಡಬೇಕೆಂದು ಸಂಕಲ್ಪಿಸಿದನು. ಅದಕ್ಕಾಗಿಯೇ ಪ್ರಣವದ ಮೊದಲಕ್ಷರವಾದ ‘ಅ’ಕಾರದಲ್ಲಿಯೂ, ಅರ್ಜುನನ ರಥದ ಮುಂದೆಯೂ ಕಂಗೊಳಿಸಿದನು. ‘ನಿನ್ನನ್ನು’ ಎಂದು ಸಂಬೋಧಿಸುವುದರ ಮೂಲಕ ಆಶ್ರಿತರೆಲ್ಲರನ್ನೂ ಉಜೀವನಗೊಳಿಸಿ ಮಹೋಪಕಾರ ಮಾಡಿದನು. ನಮ್ಮನ್ನು ತನ್ನೆದುರಿಗಿರುವಂತೆಯೇ ಕರುಣಿಸಿದನು. (‘ತ್ವಾ ಎಂಬುದು ನಿರ್ಭರವಾದ ನಿನ್ನನ್ನು ಎಂಬರ್ಥಕೊಡುವುದೆಂದು ಭಾವ) आत्मीयां दर्शयित्वा स्थिति मतिमुदित श्चासहायान् विलोक्य । तामस्माकं ह्यपोढुं स्थिति मिह परिगृह्यात्मरक्ष्यान् प्रपन्नान् । । आत्मांत्री एवदातुं विविधगतियुते मूलवर्णे शताङ्गे । पार्थस्याप्यास्थितोऽस्मान् उपकृदुपगतान् स्वीचकाराद्यधर्मान् ॥८ ಮೂಲ : ಕಾಡುಹಳ ನರಕೋ ಕಡಿತಾಂಗರಳತ್ತಿದ್ದಳೋ, ಶೂಡುವಿಡಾವನಲೋ ತೊಲೈಯಾನಿ ನಳ್ಳಿರುಳೋ, ಶಾಡುಪಡಚ್ಚರಣಾಲನ್ನು ಶಾಡಿಯ ಶಾರತಿಯಾರ್, ವೀಡು ಶೆಮ್ ವಿತ್ತು ನಮ್ಮೆ ವಿಡುವಿಕ್ಕಿನ ಪಾವಂಗಳೇ !!

ಅರ್ಥ :- ಶಾಡು = ಗಾಡಿಯು (ಶಕಟಾಸುರನು) ಪಡ : ನಾಶವಾಗುವಂತೆ, ಅನ್ನು = ಆಗ, ಚರಣಾಲ್ = ಕಾಲುಗಳಿಂದ, ಶಾಡಿಯ = ಒದ್ದಂತಹ, ಶಾರದಿಯಾಮ್ =

ಚರಮಶ್ಲೋಕಚ್ಚುರುಕ್ಕು 509 ಸಾರಥಿಯೂ ಆಗಿದ್ದ ಶ್ರೀಕೃಷ್ಣನು, ವೀಡು : ತ್ಯಾಗವನ್ನು (ಭರನ್ಯಾಸವನ್ನು), ಶೆಮ್‌ ವಿತ್ತು - ಮಾಡಿಸಿ, ನಮ್ಮ - ನಮ್ಮನ್ನು, ವಿಡುವಿಕ್ಕಿನ = ಬಿಡಿಸುವಂತಹ, ಪಾವಂಗಳ್ = ಪಾಪಗಳು, (ಏನಾದುವು ಎಂದರೆ) ಕಾಡುಹಳ್ = ಕಾಡುಗಳೋ, ನರಕೋ : ತಾರವಾದಿ ನರಕಗಳೋ, ಕಡಿದಾಂ = ಕ್ರೂರವಾದ, ಗರಳ -ತಿರ : ವಿಷದರಾಶಿಯೋ, ಶೂಡು-ವಿಡಾ = ಬಿಸಿಯಾರದ, ಅನಲೋ = ಬೆಂಕಿಯೋ, ತೊಲೆಯಾ = ತೊಲಗದ, ನಿಲೈ : ಸ್ಥಿತಿಯುಳ್ಳ, ನಳ್ -ಇರುಳೋ-ಕಾಳರಾತ್ರಿಯೋ, (ಎಂಬಂತಾದುವು)

ತಾತ್ಪರ :- ಆಶ್ಚರ ಚೇಷ್ಟಿತನಾದ ಪರಮಾತ್ಮನು ಕೃಷ್ಣಾವತಾರದಲ್ಲಿ ಶಿಶುವಾಗಿರುವಾಗಲೇ ಶಕಟಾಸುರನನ್ನು ಒದ್ದು ಸಂಹರಿಸಿದನು. ಅರ್ಜುನನಿಗೆ ಸಾರಥಿಯಾಗಿ ಆಶ್ರಿತರನ್ನು ರಕ್ಷಿಸಿದನು. ಅಂತಹ ಪರಾತ್ಪರನು ತನ್ನಲ್ಲಿ ನಾವು ನಮ್ಮ ರಕ್ಷಾಭರವನ್ನು ಸಮರ್ಪಿಸುವಂತೆ ಮಾಡಿ, ಸಮಸ್ತ ವಿಧಪಾಪಗಳನ್ನೂ ನಿವಾರಿಸಿ, ಕಾಪಾಡಿದನು. ಆ ಪಾಪಗಳು, ಕಾಡುಗಳೋ, ನರಕಗಳೋ, ಉಗ್ರವಿಷವೋ, ಜ್ವಲಿಸುವ ಬೆಂಕಿಯೋ, ಕಾಳರಾತ್ರಿಯೋ ಎಂಬತಿದ್ದುವು. ಅಂದರೆ ಪ್ರಾಪ್ತಿ ವಿರೋಧಿಗಳಾದ ಪುಣ್ಯಪಾಪಗಳು ದುಸ್ತರವಾದುದರಿಂದ ಕಾಡುಗಳಿಗೂ, ದುಸ್ಸಹದುಃಖಕರವಾದುದರಿಂದ ನರಕಗಳಿಗೂ, ದುಃಖಮಿಶ್ರವಾಗಿಯೂ ಇರುವುದರಿಂದ ವಿಷಕ್ಕೂ, ತಾಪತ್ರಯಕರಗಳಾದ್ದರಿಂದ ಬೆಂಕಿಗೂ, ಸ್ವರೂಪವನ್ನೇ ತಿಳಿಯದಂತೆ ಮಾಡುವುದರಿಂದ ನಿವಾರಿಸಲಾಗದ ಕಾಳರಾತ್ರಿಗೂ ಹೋಲಿಸಿರುವರು. ಇಷ್ಟು ಕಡುತರವಾದ ಪಾಪವೆಲ್ಲವನ್ನೂ ನಾಶಮಾಡಿ ಸಂರಕ್ಷಿಸುವನು ಆ ದಯಾಮೂರ್ತಿಯಾದ ಶ್ರೀಮನ್ನಾರಾಯಣನು ಎಂದು ಭಾವ. (ಸತ್ವಪಾಪೇಭ್ಯಃ’ ಎಂಬುದರ ವಿವರಣೆ) पादाभ्यां च तदा जघान शकटं य श्चाभवत्सारथिः । चक्रे न्यस्तभरां च नो विघटकान्यस्माकमेनांसि च ॥ आरण्यान्युत नारकानुत महाक्ष्वेडौघमाहोऽनलम् । सोष्णां वा दुरपोढगाढतिमिरां रात्रिं समीयु र्ध्रुवम् ॥ ಮೂಲ : ಶೆಟ್ರುಯರ್‌ ವಾನಮರ್‌ಡಿಯಾರುಡನ್ ಶೇರ್‌ಡವೇ, ಇನ್ನೆನಿಲಿನ್ನುನಾಳ್ಮೆಯೆನಿಲ್ ನಾಳ್ಮೆಯಿನಿ ಶರಿನ್ನು, ನಿನ್ನನಿಲೈ ನಿನ್ನನೈತ್ತುವಿನೈಯುಂ ನಿನ್‌ಟ್ಟಹಲ, ಕವಿಡುಪ್ಪನೆನಾನ್‌ರುತ್ತಾಲ್ ನಮ್ಮೆ ಕಾಡುಮೇ ॥ 10 ಅರ್ಥ :- ಇನಿ = (ನೀನು ನನ್ನಲ್ಲಿ ಭರವನ್ನು ಅರ್ಪಿಸಿದ) ಮೇಲೆ, ಶೆರಿಂದ್ = ದೇಹವನ್ನು ಬಿಟ್ಟು, ನಿನ್ನ = ಇರತಕ್ಕ, ನಿಲೈ -ನಿನ್ನ = ಸ್ಥಿರವಾಗಿದ್ದ, ನಿನ್ - ನಿನ್ನ,

510 ಚರಮಶ್ಲೋಕಚ್ಚುರುಕ್ಕು

ಅನೈತ್ತು-ವಿನೈಯುಂ = ಸಮಸ್ತಪಾಪಗಳೂ, ನಿನ್ -ವಿಟ್ಟು = ನಿನ್ನನ್ನು ಬಿಟ್ಟು, ಅಹಲ - ಅಗಲಿ ಹೋಗುವಂತೆ, ಶೆನ್ನು - (ಅಡ್ಡಿರಾದಿಗತಿಯಿಂದ) ಸೇರಿ, ಉಯ‌ - ಸರೋತ್ಕೃಷ್ಟವಾದ, ನಾನ್ : ಪರಮಪದದಲ್ಲಿ ಅಮರ್‌ನ್ನು : ಸ್ಥಿರವಾಗಿದ್ದು, ಅ-ಅಡಿಯಾರ್-ಉಡನ್ : (ನನ್ನಂತೆ ಇರುವ) ನಿತ್ಯಸೂರಿಗಳೊಡನೆ, ಶೇರ್ ಡ - ಒಂದಾಗಿ ಸೇರುವಂತೆ, ಇನ್ನು-ಎನಿಲ್ - ಇಂದೇ ಹೋಗಬೇಕೆಂದರೆ, ಇನ್ನು : ಈವತ್ತೇ, ನಾಲೈ-ಎನಿಲ್ - ನಾಳೆಯೆಂದರೆ, ನಾಳೆ = ನಾಳೆಯೇ, ವಿಡುಪ್ಪನ್ = ಬಿಡುಗಡೆ ಮಾಡುವೆನು, ಕ ಕೋಪಿಸಿಕೊಂಡು, (ಬಿಡಿಸುವೆನು.) ಎನ್ನಾನ್ ಎಂದು ಹೇಳಿದ ಭಗವಂತನ, ಕರುತ್ತಾಲ್ = ಸಂಕಲ್ಪದಿಂದ, ನಮ್ಮ = (ಪ್ರಪನ್ನರಾದ ನಮ್ಮನ್ನು, ಕಾತ್ತಿಡುಂ - ಸಂರಕ್ಷಿಸುವನು.

ತಾತ್ವರ :- “ನೀನು ನಿನ್ನ ಸಮಸ್ತಭಾರವನ್ನು ನನ್ನಲ್ಲಿ ಒಪ್ಪಿಸು. ಪ್ರಾಪ್ತಿವಿರೋಧಿಗಳಾಗಿ ಹಿಂದಿದ್ದ ಮತ್ತು ಮುಂದೆ ಬರುವಂತಹ ಎಲ್ಲಪಾಪಗಳನ್ನೂ ನಾಶಮಾಡುವೆನು. ಅರ್ಚಿರಾದಿ ಮಾರ್ಗದಿಂದ ಪರಮಪದಕ್ಕೆ ಸೇರಿಸಿ, ಅಲ್ಲಿ ನಿತ್ಯಸೂರಿಗಳೊಂದಿಗೆ ಆನಂದಿಸುವಂತೆ ಮಾಡುವೆನು. ನೀನು ಈವತ್ತೇ ಸೇರಬೇಕೆಂದರೆ ಈವತ್ತೇ, ನಾಳೆಯೆಂದರೆ ನಾಳೆಯೇ, ಯಾವಾಗಲಾದರೂ ಸರಿಯೆ ನಿನಗಿಷ್ಟ ಬಂದಾಗ ಸೇರಿಸುವೆನು’’ ಎಂದು ಹೇಳಿ, ಸಂಕಲ್ಪಿಸಿದ ಶ್ರೀಮನ್ನಾರಾಯಣನು ನಮ್ಮನ್ನು ಸಂರಕ್ಷಿಸಿದನು. (ಮೋಕ್ಷಯಿಷ್ಯಾಮಿ’’ ಎಂಬುದರ ವಿವರಣೆ.) संन्यस्तात्मीयभारात् परमिह जनितैनांसि नो मोचयित्वा । पद्धत्याऽर्चिः प्रभृत्या परमपद मसौ प्रापयन् मोचयित्वा । तत्रत्यैः नित्यमुक्तैः रमयितु मनिशं त्वद्य चेदद्य एव । श्वश्चेत् श्चश्चैव संकल्पत उरुकरुणो मोक्षयन् त्रायते नः ॥ ಮೂಲ : ಅರಿವುಮತ್ತುವಿಲಾ ವಡಿಯೋಮೈಯಡೈಕ್ಕಲಂಕೊಂದು, ಉರವೆನನಿನದೆಲ್ಲಾಮುರವೇನಿನ್ನ ತಾನೆಮಕ್ಕಾಯ್ ಮರುಪಿರವಿತ್ತುಯರ್‌ವಾರಾವಹೈಮನಂಕೊಂಡಹಲಾ, ಇರೈಯವನಿನ್ನರುಳಾಲೆಂಗಲ್ ಶೋಕಂ ತವಿರ್ತನನೇ ॥

१० ॥ ಅರ್ಥ :- ಅನೈತ್- ಅರಿವು-ಇಲಾ = ಯಾವ ಒಂದು ಅವಶ್ಯಕವಾದ ಅರಿವೂ ಇಲ್ಲದ, ಅಡಿಯೋಮ್ಯ - (ಸದಾಚಾರರ ಅನುಗ್ರಹದಿಂದ) ದಾಸರೆಂದರಿತ ನಮ್ಮನ್ನು, ಅಡೈಕ್ಕಲಂ-ಕೊಂಡು : ರಕ್ಷಿಸಬೇಕಾದ ವಸ್ತುವೆಂದು ಅಂಗೀಕರಿಸಿ, ಉರವ್ -ಎನ- ನಿನ್ನದ್ -ಎಲ್ಲಾ= (ಮಾತಾಪಿತ್ರಾದಿ) ಸಂಬಂಧವೆಂದು ಇರತಕ್ಕವೆಲ್ಲವನ್ನೂ, ಉರವೇ = ಹೊಂದುವುದಕ್ಕಾಗಿಯೇ, ನಿನ್ನ : ಇರುವಂತಹ, ತಾನ್ - (ಭಗವಂತನು ತಾನು, ಚರಮಶ್ಲೋಕಚ್ಚುರುಕ್ಕು

5॥ ಎಮಕ್ಕಾಯ್ = ನಮಗಾಗಿಯೇ ಆಗಿ; ಮರು-ಪಿರವಿ-ತುಯರ್ = ಪುನಃ ಜನನಾದಿಯಾದ ದುಃಖವು, ವಾರಾವಕ್ಕೆ : ಬಂದಿರುವ ಹಾಗೆ, ಮನಂ-ಕೊಂಡು - ತಂದುಕೊಂಡು, (ಸಂಕಲ್ಪಿಸಿ) ಅಹಲಾ : (ನಮ್ಮ ಮನವನ್ನು) ಬಿಟ್ಟಗಲದೆ ಇರುವ, ಮನಸ್ಸಿಗೆ . ಇರೈಯವನ್ - ಸತ್ವಸ್ವಾಮಿಯೂ ಆದ ಪರಮಾತ್ಮನ, ಇನ್ -ಅರುಳಾಲ್ - ಭೋಗ್ಯವಾದ ಕೃಪೆಯಿಂದ, ಎಂಗಳ್ - (ನ್ಯಸಭರರಾದ) ನಮ್ಮ ಶೋಕಂ - ಶೋಕವನ್ನು, ತವಿರ್ತನನ್ = ಹೋಗಲಾಡಿಸಿದನು. (ಮಾಶುಚಃ’ ಎಂಬುದರರ್ಥ.)

ತಾತ್ಪರ :- ಅತ್ಯಾವಶ್ಯಕವಾಗಿರಬೇಕಾದ ದೇಹಾತ್ಮಜ್ಞಾನವನ್ನಾಗಲೀ ಶೇಷಶೇಷಿಭಾವ ಜ್ಞಾನವನ್ನಾಗಲೀ, ಸ್ವರೂಪಾನುರೂಪವಾದ ಪುರುಷಾರ್ಥ ಜ್ಞಾನವನ್ನಾಗಲೀ ಯಾವುದೊಂದನ್ನೂ ನಾವು ಪಡೆದಿರಲಿಲ್ಲ. ಸದಾಚಾರರ ಅನುಗ್ರಹ ವಿಶೇಷದಿಂದ ಭಗವಂತನ ನಿರುಪಾಧಿಕದಾಸರೆಂದೂ, ಅವನೇ ಸತ್ವವಿಧ ಬಂಧುವೆಂದೂ ಅರಿತೆವು. ನಮಗೆ ವಿಪರೀತಜ್ಞಾನವುಂಟಾಗದಂತೆಯೂ, ಪುನರ್ಜನ್ಮಾದಿಗಳು ಸಂಭವಿಸದಂತೆಯೂ ಇರುವುದಕ್ಕಾಗಿಯೇ ರಕ್ಷಣೀಯವಸ್ತುವನ್ನಾಗಿ ಅವನು ನಮ್ಮನ್ನು ಅಂಗೀಕರಿಸಿದನು. ಆ ಸಶ್ವೇಶ್ವರನಾದ ಶ್ರೀಮನ್ನಾರಾಯಣನು ಪ್ರಪನ್ನರಾದ ನಮ್ಮನ್ನು ಅಗಲದಂತೆ ಪರಮದಯೆಯಿಂದ ಸಮಸ್ತ ದುಃಖವನ್ನೂ ಹೋಗಲಾಡಿಸಿ, ಸಂರಕ್ಷಿಸಿದನು. स्वीकुर्वन् नः प्रपन्नान् धुतसकलमतीन् आत्मसंरक्षणीयान् । बन्धूक्त्यर्हान् समस्तान् स्वय मिह विधरन् अस्मदर्थं हि भूत्वा ॥ दुःखं माभूत पुर्नभूकृत मिति हृदयं चाजहत्संवसंश्च । स्वामी सर्वाणि दुःखान्यतिशयकृपया भोग्ययाऽनाशयन्नः ॥ श्रीमते निगमान्तमहादेशिकाय नमः । श्रीदेशिकप्रबन्धस्थः चरमश्लोकसङ्ग्रहः । सश्लोक स्सार्थतात्पर्यः कृतो गोपालसूरिणा ॥ इति श्री देशिकप्रबन्धान्तर्गत-रहस्यत्रय संग्रहस्य सारार्थप्रकाशः विदुषा गोपालार्येण कृतः सम्पूर्ण: ॥ श्रीमते वेदान्तरामानुजमहादेशिकाय नमः ॥ ११ j744 श्रीमते निगमान्तमहादेशिकाय नमः ।