- ಮೂಲ : ಇನ್ನಮುದಿಲ್ ಪಿರನ್ಹಾಳಿತಂ ಕೇಳವುರೈಪಿರಾನ್, ಪೊನ್ನರುಳಾನರೈಮೌಲಿಯಿಲ್ ಪೂಣವಿರಣಿಶೈತ್ತು ತನ್ನುರೈಮಿಕ್ಕ ದನಮಿದೆನನ್ನ ವೇದಹತಿಲ್
- ತುನ್ನುಪೊರುಳ್ ಹಳ್ ಪತ್ತುಂ ತೊಲೆಯಾನಿದಿ ಯಾಹಿನದೇ ॥1
ಅರ್ಥ :- ಇನ್ -ಅಮುದಿಲ್ = ಭೋಗ್ಯವಾದ ಅಮೃತದಲ್ಲಿ ಪಿರಂದಾಳ್ - ಹುಟ್ಟಿದ ಮಹಾಲಕ್ಷ್ಮಿಯು, ಇತಂ : ಹಿತವನ್ನು ಕೇಳ - (ವಿಷ್ಣುವನ್ನು) ಕೇಳಲು, ಉರೈತ್ತ = ಉಪದೇಶಿಸಿದ, ಪಿರಾನ್ - ಮಹೋಪಕಾರಕನಾದ, ಪೊನ್ -ಅರುಳಾಲ್ - ಆದರಣೀಯವಾದ ದಯೆಯಿಂದ, ಮರೈ -ಮೌಳಿಯಲ್ : ವೇದಾಂತದಲ್ಲಿ, ಪೂಂಡ = ಹುದುಗಿಕೊಂಡಿರುವ, ಇರಂಡು : ಎರಡು ವಾಕ್ಯಗಳನ್ನು, ಇಶ್ಯತ್ತು = ಒಂದಾಗಿಸೇರಿಸಿ, ಇದು - ಈ ಮಂತ್ರವು, ತನ್ -ಉರೈ = ತನ್ನ ಮಾತುಗಳಲ್ಲಿ, ಮಿಕ್ಕ = ಅತಿಶಯವಾದ, ದನಂ-ಎನ ಧನವೆಂದು, ತಂದ - ಹೇಲ್ಪಟ್ಟ, ವೇದಹಲ್ - ವೇದವೆಂಬ ನಿವಾಸದಲ್ಲಿ (ಅಥವಾ ತಿಳಿಸುವಸ್ಥಳದಲ್ಲಿ) ತುನ್ನು -ವ್ಯಾಪ್ತವಾದ, ಪೊರುಳ್ ಹಳ್ -ಪತ್ತುಂ - ಹತ್ತುಅರ್ಥಗಳೂ, ತೊಲೈಯಾ = ನಾಶವಾಗದ, ನಿದಿ-ಆಹಿನ್ನದ್ = ನಿಧಿಯಾಗಿವೆ.
ತಾತ್ಪರ :- ಸಕಲಜಗನ್ಮಾತೆಯು ಸಕಲ ಜಗತಿತಾವಾದ ಶ್ರೀಮನ್ನಾರಾಯಣನನ್ನು ತನ್ನ ನಿರ್ವಾಜವಾತ್ಸಲ್ಯಾತಿಶಯದಿಂದ ‘‘ಸಮಸ್ತ ಚೇತನರೂ ಉದ್ಬವಿಸುವುದು ಹೇಗೆ ?’’ ಎಂದು ಪ್ರಶ್ನಿಸಿದಳು. ಅದಕ್ಕೆ ‘ಪ್ರಶ್ನೆಸಂಹಿತೆ’’ ಎಂಬ ಗ್ರಂಥವನ್ನೇ ಪ್ರತ್ಯುತ್ತರವಾಗಿ ಹೇಳಿ ಲೋಕಕ್ಕೆ ಮಹೋಪಕಾರ ಮಾಡಿದನು. ಅದರಲ್ಲಿ ತನ್ನಡಿಗಳನ್ನು ಆಶ್ರಯಿಸುವುದೇ ಪರಮ ಹಿತತಮವಾದುದು’’ ಎಂಬುದು ವಿಶದವಾಗಿದೆ. ಪ್ರಕೃತ ಅಕಿಂಚನರಾಗಿರುವರು ಆಚರಿಸುವ ಸಾಂಗಪ್ರಪತ್ತಿಯನ್ನು ಈ ದ್ವಯ ತಿಳಿಸುತ್ತದೆ. ಇದನ್ನು ‘ಪ್ರಪತ್ತಿಯ ಕರಣಮಂತ್ರ’ವೆನ್ನುವರು ಸಂಪ್ರದಾಯಾಭಿಜ್ಞರು. ಎರಡು ಭಾಗವಾಗಿರುವುದನ್ನು ಕೂಡಿಸಿ, ಅರ್ಥಸಮೇತ ಒಂದು ಸಲ ಅನುಷ್ಠಿಸಿದರೆ ಸಂಸಾರತಾರಕವಾಗುವುದು. ಇದರಲ್ಲಿ 10 ಅರ್ಥಗಳಿವೆ. (ಶ್ರೀಶಬ್ದ-ಮತುಪ್ಪ್ರತ್ಯಯ-ನಾರಾಯಣ-ಚರಣ-ಶರಣ ಶಬ್ದಗಳು- ಉಪಸರ್ಗಸಹಿತ -ಧಾತು- ಉತ್ತಮಪುರುಷ ಉತ್ತರಖಂಡದ ಸವಿಶೇಷಣ ನಾರಾಯಣಶಬ್ದ - ಅದರ ಮುಂದಿನ ಚತುರ್ಥಿ-ನಮಃ ಶಬ್ದ) ಹೀಗೆ ಮಹಾಧನದಂತೆ ಪರಮ ಗೋಪ್ಯವೂ ಪರಮಭೋಗ್ಯವೂ ಆಗಿದೆ. ಇವೆಲ್ಲವನ್ನೂ ಸದಾಚಾರರ ಮೂಲಕ
490 · ದ್ವಯಚುರುಕ್ಕು ಚೆನ್ನಾಗಿ ಅರಿತು ಉಜೀವಿತರಾಗಬೇಕು. ಸದಾ ಇದನ್ನು ಮನನ ಮಾಡುವುದೇ ಪ್ರಪನ್ನನ ಮುಖ್ಯ ಕರ್ತವ್ಯ. पृच्छन्त्या मिन्दिराया ममृतभुवि हितं संप्रवक्त्रोपकर्त्रा कारुण्यात्सस्पृहाच्च श्रुतिशिस्वरलसद्वाक्ययुग्मं मिलित्वा ॥ मन्त्र श्चेत्यात्मवाचा धन मतिशयितं चोपदिष्टं त्रयीषु व्याप्तै रथै विशिष्टो दशभिरपि भवत्यक्षयोऽस्मन्निधिर्हि ॥ ત્રણ ಮೂಲ: ಆರುವುರುವಾನವೈತ ಯಡೈಡತ್ತಾನಷ್ಟೆಂದು, ವೆರುವುರೈಕೇಟ್ಟವೈ ಕೇಳಿತಕತ್ತುಂ ವಿನೈವಿಲಕ್ಕಿ, ಇರುತಲೈ ಯನ್ನುತನಾಲೆಮ್ಮೆಯಿನ್ನಡಿಶೇರರುಳು, ತಿರುವುಡನೇ ತಿಹಳ್ಯಾರ್ ಶಿರಿನ್ಹಾರೆಂಗಟ್ಟೆಯುಳ್ಳ 1
2 १
ಅರ್ಥ :- ಅರು-ಉರು-ಆನವೈ : ಚೇತನಾಚೇತನಗಳೆಲ್ಲವೂ, ತನ್ನೆ - ತನ್ನನ್ನು, ಅಡೈಂದಿಡ : ಆಶ್ರಯಿಸಿರಲು, ಸಮಸ್ತಕ್ಕೂ ಆಧಾರಳಾದ) ತಾನ್ : ತಾನು, ಅಷ್ಟೊಂದು ಆಶ್ರಯಿಸಿ (ಅಂತರ್ವಾಪಿನಿಯಾಗಿ ವೆರು-ಉರೈ = ಭಯದ ಮಾತುಗಳನ್ನು, (ಸಂಸಾರಿಗಳ ಆರ್ತನಾದವನ್ನು ಕೇಟ್ಟು : ಕೇಳಿ, ಅವೈ : ಅವನ್ನು, ಕೇಳಿತ್ತು: (ತನ್ನವಲ್ಲಭನಿಗೆ) ಕೇಳಿಸುವಂತೆ ಮಾಡಿ, ಅಹತ್ತುಂ = ಅಗಲುವಂತೆ ಮಾಡುವ, ವಿದ್ಯೆ : ಕರ್ಮಗಳನ್ನು, ವಿಲಕ್ಕಿ = ಹೋಗಲಾಡಿಸಿ, ಇರು-ತಲೈ = ಎರಡು ಕಡೆಗಳಲ್ಲೂ, ಅದ್ಭುತನಾಲ್ : ಪ್ರೇಮ ವಾತ್ಸಲ್ಯಗಳಿಂದ, ನಮ್ಮ = ನಮ್ಮನ್ನು, ಇನ್-ಅಡಿ = ಭೋಗ್ಯವಾದ ಅಡಿಗಳನ್ನು, ಶೇರ್ತು-ಅರುಳುಂ : ಸೇರಿಸಿ ಕೃಪೆ ಮಾಡುವವಳಾದ, ತಿರುವುಡನೇ - ಮಹಾಲಕ್ಷ್ಮಿಯೊಡನೇ, ತಿಹಳ್ವಾರ್ : ಪ್ರಕಾಶಿಸುವ ಪರಮಾತ್ಮನು, ಎಂಗಳ್ - ನಮ್ಮ, ಶಿಂದ್ಯೆಯುಳ್ಳ = ಹೃದಯದಲ್ಲಿ ಶಿರಿಂದಾರ್ : - ವಿಜೃಂಭಿಸಿದರು.
ತಾತ್ವರ :- ಚೇತನಾಚೇತನ ವಸ್ತುಗಳಿಂದ ಆಶ್ರಯಿಸಲ್ಪಟ್ಟವಳೂ, ಸಮಸ್ತಕ್ಕೂ ಆಶ್ರಯಳೂ, ಆಶ್ರಿತರ ಆರ್ತನಾದವನ್ನು ತಾನು ಕೇಳಿ, ತನ್ನ ವಲ್ಲಭನೂ ಅದನ್ನು ಕೇಳುವಂತೆ ಮಾಡುವವಳೂ, ಸಕಲ ಪಾಪನಿವಾರಕಳೂ ಮತ್ತು ಶೇಷರಾದ ನಮ್ಮಲ್ಲೂ ಶೇಷಿಯಾದ ಪರಮಾತ್ಮನಲ್ಲೂ ಅತ್ಯಂತ ಪ್ರೇಮವುಳ್ಳವಳಾಗಿ, ಭಗವಂತನ ಪಾದಪದ್ಮಾಮೃತವನ್ನು ನಾವು ಸದಾ ಸವಿಯುವಂತೆ ಮಾಡುವವಳೂ ಆದ ಶ್ರೀದೇವಿಯೊಡನೆ ವಿಭ್ರಾಜಮಾನನೂ, ದಯಾನಿಧಿಯೂ ಆದ ವರದರಾಜನು ನಮ್ಮ ಚಿತ್ರದಲ್ಲಿ ಸತ್ವದಾ ಧ್ಯಾನವಿಷಯನಾಗಿ ವಿರಾಜಿಸುವನು. (ಶ್ರೀಯಾಮುನರು ‘‘ಶ್ರೀರಿವಚ ನಾಮತೇ ಭಗವತಿ ! ಬೂಮಕಥಂ ತ್ವಾಂ ವಯಂ’’ ಎಂದೂ ಶ್ರೀಭಾಷ್ಯಕಾರರು ಗದ್ಯದಲ್ಲಿ ದ್ವಯಚುರುಕ್ಕು 491 “ಭಗವನ್ನಾರಾಯಣ” ಎಂದಾರಂಭಿಸಿ, ‘‘ಭಗವತೀಂ ಶ್ರಿಯಂ’’ ಎಂದು ಪ್ರಯೋಗಿಸಿ, ಇಬ್ಬರ ಆನುರೂಪ್ಯವನ್ನೂ ಕೊಂಡಾಡಿ, ಸ್ಟುಟಪಡಿಸಿರುವರು. आत्मानं संश्रितेषु स्वत इह सततं चेतनाचेतनेषु । व्याप्यैवात्माऽपि सर्वाण्यतिभयवचनाऽन्याश्रितानां निशम्य ॥ नाथं चाऽऽश्राव्य याऽघं विघटक मवमद्योभयोः प्रमभूम्ना । प्राप्यांघ्योः प्रापिका यो लसति सह मयोज्जृम्भतेऽन्त स्तया नः ॥ २ | ಮೂಲ : ಓರುಯಿರಾಮ್ನಿನ್ನ ಒಣ್ುಡರಿನವುರುತ್ತನಿಲುಂ, ಪೇರುರುವತ್ತಿಲುಂ ಪಿನ್ನದಿಲ್ನುಮುರುಕ್ಕಳಿಲು ಓರುರುವಾನ ವುಲಹಿಲುಮೇರು ಮುರುಕ್ಕಳಿನಾಲ್, ಶೇರುದಲ್ಮನ್ನು ಶೆಯ್ಯಾಳನ್ನ ನಮ್ಮನಂ ಶೇರ್ನ್ದನರೇ II
3
ಅರ್ಥ :- ಓ -ಉಯಿರಾಮ್ -ನಿನ್ನ = (ಸಕಲ ಜಗತ್ತಿಗೂ) ಒಬ್ಬನೇ ಅಂತರಾತ್ಮನಾಗಿರುವ, ಒಣ್ = ಉಜ್ವಲವಾದ (ಸಕರೂಪವಾದ) ಶುಡರ್ : ಜ್ಯೋತಿರೂಪವಾದ (ಜ್ಞಾನಾತ್ಮಕವಾದ) ಇನ್ನು ಆನಂದರೂಪವಾದ, (ಸತ್ಯನೂ, ಆನಂತನೂ, ಜ್ಞಾನರೂಪನೂ, ಆನಂದನೂ, ಅಮಲನೂ ಆದ) ಉರುತ್ತನಿಲುಂ ರೂಪದಲ್ಲಿಯೂ, (ಸ್ವರೂಪ ನಿರೂಪಕ ಗುಣಪಂಚಕದಿಂದ ನಿರೂಪಿತವಾದ ದಿವ್ಯಾತ್ಮ ಸ್ವರೂಪದಲ್ಲಿಯೂ) ಪೇರ್ - ಮಹತ್ತರವಾದ, ಉರುವತ್ತಿಲುಂ = ರೂಪದಲ್ಲಿಯೂ, ಪಿನ್ = ಅನಂತರ, ಅದಿಲ್ : ಆ ಪರವಿಗ್ರಹದಿಂದ, ತೋನು = ಉಂಟಾಗುವ, ಉರುಕ್ಕಳಿಲುಂ = ರೂಪಗಳಲ್ಲಿಯೂ, (ವ್ಯೂಹಾದಿಗಳಲ್ಲೂ) ಓರ್ ಉರುವಾನ : ಏಕರೂಪವಾದ, (ದಿವ್ಯದಂಪತಿ ಶೇಷಕರೂಪವಾದ) ಉಲಹಿಲುಂ : ಲೋಕದಲ್ಲೂ, ಏರುಂ ಅನುರೂಪವಾದ, ಉರುಕ್ಕಳಿನಾಲ್ = ರೂಪಗಳಿಂದಲೂ, (ಸ್ವರೂಪ -ವಿಗ್ರಹ ಸಾಧಾರಾಣವಾದುದು ರೂಪ) ಶೇರುದಲ್ = ಸೇರಿಕೊಳ್ಳುವುದರಲ್ಲಿ, ಮನು : ಸ್ಥಿರಳಾದ (ಬಿಡದೆ ಕೂಡಿಕೊಂಡಿರುವ) ಶಯ್ಯಾಳ್ = ಋಜು ಪ್ರಕೃತಿಯಾದ ಮಹಾಲಕ್ಷ್ಮಿಯಲ್ಲಿ ಅನ್ಸರ್ : ಪ್ರೇಮವುಳ್ಳ, (ಶ್ರೀವಲ್ಲಭನು) ಭಗವಂತನು, ನಂ-ಮನಂ - ನಮ್ಮ ಮನಸ್ಸಿನಲ್ಲಿ ಶೇರ್ನ್ದನ - ಸೇರಿರುವನು.
ತಾತ್ಪಯ್ಯ :- ಸಮಸ್ತ ಜಗತ್ತಿಗೂ ಒಬ್ಬನೇ ಅಂತರಾತ್ಮನೂ, ಅತ್ಯುಜ್ವಲ ಜ್ಯೋತಿರೂಪನೂ, ಆನಂದರೂಪನೂ, ದಿವ್ಯಾತ್ಮರೂಪನೂ, ಮಹಾರೂಪನೂ, ಪರರೂಪನೂ ಮತ್ತು ವ್ಯೂಹಾದಿರೂಪನೂ ಆದ ಭಗವಂತನು ಸತ್ವತ್ರ ಏಕರೂಪವಾದ ಲೋಕದಲ್ಲಿರುವ ಅನುರೂಪವಾದ ಸಮಸ್ತ ರೂಪಗಳೊಂದಿಗಿರುವುದರಲ್ಲಿ ಸ್ಥಿರ 494 ದ್ವಯಚುರುಕ್ಕು . माध्वी पूर्णारुणश्रीचरण उपवसन् धाम नित्योपसेव्यम् । नित्याकारः क्रमेण ह्युपगतचतुराकार इच्छाविसारः ॥ लीलाकूर्मो वराहाकृति रिति विभवाकार आत्मान्तरात्मा । सर्वालोकोचितार्चाकृतिरिह चरणौ न्यस्तवान् मानसे नः ॥ ಮೂಲ : ವೇರೋರಣಂಗುತೊಳುಂ ವಿನೈತೀ ಹೆಮ್ಮೆ ಯಾಣಿಡುವಾನ್, ಆರುಮದನ್ವಯನುಂ ತನ್ನಳಿಕ್ಕು ಮರುಳುಡೈಯಾನ್, ಮಾರಿಲದಾಯಿಲಹುಂ ಮದುವೆಲ್ಲಡಿ ಪೋದಿರಂಡಾಲ್, ನಾರುತುಳಾಯ್ ಮುಡಿಯಾನ್ ನಮಕ್ಕು ಚರಣಾಯಿನನೇ ॥ 6
6 ಅರ್ಥ :- ವೇರ್ -ಓರ್ -ಅಣಂಗು = (ವಿಷ್ಣುವನ್ನು ಬಿಟ್ಟು ಬೇರೆ ಒಂದು ದೇವತೆಯನ್ನು, ತೊಳುಂ-ವಿನೈ = ಸೇವಿಸುವುದನ್ನು, ತೀರ್ತು : ನಿವಾರಿಸಿ, ಎಮ್ಮೆ ನಮ್ಮನ್ನು, ಆಡುವಾನ್ = ವಿನಿಯೋಗಿಸಿಕೊಳ್ಳುವವನಾದ, ಆರುಂ = ಉಪಾಯವನ್ನೂ, ಅದನ್-ಪಯನುಂ : ಅದರಫಲವನ್ನೂ, ತಂದ್ = ಕೊಟ್ಟು, ನಾರು-ತುಳಾಯ್ - ಮುಡಿಯಾನ್ - ಪರಿಮಳಿಸುವ ತುಳಸಿಮಾಲೆಯ ಮಳಿಯ ಭಗವಂತನು, ಮಾರಿಲದಾಯ್ : (ಆಶ್ರಿತರಿಗೆ) ಚ್ಯುತಿಯಿಲ್ಲದಂತೆ, ಇಲಹುಂ : ಬೆಳಗುವ, ಮದು = ರಸಭರಿತವಾದ, ಮೆಲ್ - ಮೃದುವಾದ, ಅಡಿ-ಪೋದು : ಪಾದಗಳೆಂಬ ಹೂವಿನ, ಇರಂಡಾಲ್ - ಎರಡರಿಂದ, ನಮಕ್ಕು : ನಮಗೆ, ಶರಣ್ -ಆಯಿನನ್ = ರಕ್ಷಕನಾಗಿ ಆಗಿರುವನು.
ತಾತ್ಪರ :- ಶ್ರೀಮನ್ನಾರಾಯಣನು ನಮ್ಮನ್ನು ತನ್ನ ಸೇವೆಯಲ್ಲೇ ರಸಿಕರನ್ನಾಗಿಯೂ, ಇತರ ದೇವತೆಗಳನ್ನು ಸೇವಿಸದಂತೆಯೂ ಮಾಡಿದನು. ದಯಾನಿಧಿಯಾಗಿ, ಉಪಾಯವನ್ನೂ ಅದರ ಫಲವನ್ನೂ ನಮಗೆ ಕೊಟ್ಟನು. ಪರಿಮಳಭರಿತತುಲಸೀದಾಮ ಮೌಳಿಯಾಗಿ, ಯಾವಕೊರತೆಯೂ ಇಲ್ಲದೆ ಬೆಳಗುವ, ಮಧುರಸಪರಿಪೂರ್ಣವಾದ, ಮತ್ತು ಅತಿಮೃದುವಾದ ಚರಣಕಮಲಗಳಿಂದಲೇ ಶರಣಾಗತರಾದ ನಮ್ಮನ್ನು ಸಂರಕ್ಷಿಸುವವನಾಗಿರುತ್ತಾನೆ. (‘ಶರಣ’’ ಶಬ್ದಾರ್ಥದ ವಿವರಣೆಯಿದು.) अस्मान् देवान्नरोपासनकरदुरितान्मोचयन् सन्नियन्ता । दत्वोपायं तदीयं फलमपि करुणाळु श्च सत्रायमाणः ॥ सौरभ्यावासभूतां स्वशिरसि तुलसीमालिकां धारयन् सन् । संरक्षत्यच्युतश्रीमधुरमृदुलेनाङ्घ्रिपुष्पद्वयेन ॥ ದ್ವಯಚುರುಕ್ಕು 495 ಮೂಲ : ಪೆರುವದುನಾಂ ಪೆರಿಯೋರ್ ಪೆರುಂಪೇರೆನ ನಿನ್ನವೆಮ್ಮೆ, ವೆರುಮೈಯುಣರಿ ವಿಲಕ್ಕಾದ ನನ್ನಿಲೈಯಾದರಿಪ್ಪಿತ್ತು ಉರುಮತಿಯಾಲ್ ತನ್ನೆಯೊಣ್ ಶರಣೆನ್ನವುಣರ್ರವು ತನ್ನ ಮರುವುಡೈ ಮಾರ್ನುಕ್ಕೆ ಮನ್ನಕ್ಕಲಮಾಯಿನಮೇ ॥ 7
ಅರ್ಥ :- ಪೆರಿಯೋರ್ : ಹಿರಿಯರಾದಮಹಾತ್ಮರು, ಪೆರುಂ = ಪಡೆಯುವ, ಪೇರು - ಪುರುಷಾರ್ಥವನ್ನು, ಪೆರುವದು = ಪಡೆಯೋಣ. ಎನ : ಎಂದು, ನಿನ್ನ = ಇಚ್ಛಿಸುವ, ಎಮ್ಮೆ - ನಮ್ಮನ್ನು, ವೆರು = ಏನೂ ಇಲ್ಲದಿರುವಿಕೆಯನ್ನು (ಆಕಿಂಚನ್ಯವುಳ್ಳವರೆಂದು) ಉಣರ್ತಿ - ತಿಳಿಸಿ, ವಿಲಕ್ಕಾದ : ಅಗಲುವಂತೆ ಮಾಡದ, ನಲ್ -ನಿಲೈ = ಒಳ್ಳೆಯ ನಿಷ್ಠೆಯನ್ನು, ಆದರಿಪ್ಪಿತ್ತು : ಆದರಿಸುವಂತೆಮಾಡಿ, ಉರು-ಮತಿಯಾಲ್ : ದೃಢವಾದ ಜ್ಞಾನದಿಂದ (ಮಹಾವಿಶ್ವಾಸದಿಂದ) ತನ್ನೈ - ತನ್ನನ್ನು, (ಶ್ರಿಯಃಪತಿಯನ್ನು) ಒಣ್ = ಉಜ್ವಲವಾದ (ಉಪಾಯಾಂತರ ನಿರಪೇಕ್ಷವಾದ) ಶರಣ್ -ಎನ್ನ : ಶರಣು ಎಂದು ಹೇಳುವಂತೆ, ಉಣರ್ವು : ಜ್ಞಾನವನ್ನು, ತನ್ನ = ಕೊಟ್ಟ, (ಮತ್ತು) ಮರು-ಉಡೈ-ಮಾನುಕ್ಕೆ : ಶ್ರೀವತ್ಸದಿಂದ ಅಲಂಕೃತವಾದ ವಕ್ಷಸ್ಥಳದ ಆ ಪರಮಾತ್ಮನಿಗೇ, ನಾಂ - ನಾವು, ಮನ್ -ಅಡೈಕ್ಕಲಂ = ದೃಢವಾದ ರಕ್ಷಣೀಯವಸ್ತುವಾಗಿ, ಆಯಿನಂ = ಆದೆವು,
ತಾತ್ವರ :- ‘‘ಮಹಾತ್ಮರಿಗೆ ಲಭಿಸುವ ಪುರುಷಾರ್ಥಕ್ಕೆ ಆಸೆಪಡುವ ನಾವು ತೀರ. ಅಕಿಂಚನರು’ ಎಂಬುದನ್ನು ತಿಳಿಸಿದನು. ಎಂದೂ ಅಗಲದಂತಹ ಒಳ್ಳೆಯ ನಿಷ್ಠೆಯನ್ನು ನಾವು ಆದರಿಸುವಂತೆ ಮಾಡಿದನು. ದೃಢವಿಶ್ವಾಸದಿಂದ, “ಶ್ರಯಃಪತಿಯೇ ಶರಣು’ ಎಂದು ಮೊರೆಯಿಡುವಂತೆ ಪೂರ್ಣ ಜ್ಞಾನವನ್ನಿತ್ತನು. ನಾವು ಅಂತಹ ಶ್ರೀವತ್ಸ ಶೋಭಿತ ವಕ್ಷಸ್ಥಳನಾದ ಆ ಭಗವಂತನಿಗೇ ಸಂರಕ್ಷಣೀಯ ವಸ್ತುವಾಗಿರುವೆವು. ‘ಪ್ರಪದ್ಯ’ ಎಂಬುದರ ವಿವರಣೆ). प्राप्स्याम स्तं पुमर्थं वय मिति महतां लभ्य माशावतो नः । आंवेद्याकिञ्चनत्वं त्वपगतविरहावस्थितावादृतांश्च ॥ कृत्वा स्वं गाढमत्योज्ज्वलशरणमितीवानुभूतेः प्रदातुः । श्रीवत्सोरस्स्थलस्यैव हि परपुरुषस्याभवामाभिरक्ष्याः ॥ ಮೂಲ : ಅರುಮರೆಯಾದುಂ ತುರವೋಮೆನವರಿನ್ಹಾರ್ ಕವರುಂ, ಕರುಮಮುಂ ಜ್ಞಾನಮುಂ ಕಾದಲುಂ ಕಣ್ಣುಮುಯಲಕಿಲ್ಲೋಂ496
ದ್ವಯಚುರುಕ್ಕು ವರುವದು ಮಿನ್ನಿಲೈಯಾಯ್ ಮಯಲುತ್ತವೆಮಕ್ಕುಳದೋ, ತಿರುಮಹಳಾರ್ ಪಿರಿಯಾತಿರುಮಾಲನಿ ನರ್ಚರಣೆ ॥ 8. ಅರ್ಥ :- ಅರು-ಮರೆಯಾದುಂ = ಅತಿಗಹನವೂ ಪಾವನವೂ ಆಗಿರುವ ವೇದಗಳೆಲ್ಲವನ್ನೂ, ತುರವೋಂ - ತೊರೆಯಲಾರೆವು, ಎನ = ಎಂದು, ಅರಿಂದಾರ್ - ದೃಢವಾಗಿ ಅರಿತಿರುವವರಿಂದ, ಕವರುಂ = ಸ್ವೀಕರಿಸಲ್ಪಟ್ಟ ಕರುಮಮುಂ = ಕರ್ಮಯೋಗವನ್ನೂ, ಜ್ಞಾನಮುಂ : ಜ್ಞಾನಯೋಗವನ್ನೂ, ಕಾದಲುಂ : ಭಕ್ತಿಯೋಗವನ್ನೂ, ಕಂಡು : (ಅವು ದುಷ್ಕರಳಗೆಂದು) ವಿಮರ್ಶಿಸಿ ತಿಳಿದು, ಮುಯಲ - ಪ್ರವರ್ತಿಸಲು, ಹಿಲ್ಲೋಂ - ಶಕ್ತರಲ್ಲವಷ್ಟೆ ವರುವದುಂ ಮುಂದೆ ಬರುವುದೂ ಸಹ, ಇನ್ನಿಲೈಯಾಮ್ = ಇದೇಸ್ಥಿತಿಯಾಗಿ, ಮಯಲ್ = ವ್ಯಾಮೋಹವನ್ನು, (ಅಜ್ಞಾನವನ್ನು) ಉತ್ತ ಹೊಂದಿದ, ಎಮಕ್ಕು = ನಮಗೆ, ತಿರು-ಮಗಳಾರ್ - ಮಹಾಲಕ್ಷ್ಮಿಯೊಂದಿಗೆ, ಪಿರಿಯಾ - (ಎಂದಿಗೂ) ಅಗಲದಿರುವ, ತಿರು-ಮಾಲ್ -ಅ = ಎರಡು ವಿಭೂತಿಗಳಿಗೂ ಅಧಿಪತಿಯಾದ ಲಕ್ಷ್ಮೀವಲ್ಲಭನ ಹೊರತು, (ಬೇರೆ) ನಲ್ -ಶರಣ್ -ಉಳದೋ ? ಒಳ್ಳೆಯ ಉಪಾಯವು (ಶರಣವು) ಉಂಟೋ ? (ಇಲ್ಲ)
ತಾತ್ವರ :- ಪಾವನವೂ, ಅತಿಗಹನವೂ ಆದ ವೇದಗಳನ್ನು ಬಿಡಲಾಗುವುದಿಲ್ಲವೆಂದು ದೃಢವಾಗಿ ನಂಬಿರುವವರು ಆಚರಿಸುವ ಕರ್ಮ-ಜ್ಞಾನ-ಭಕ್ತಿಯೋಗಗಳನ್ನು ನಡೆಸಲು ನಾವು ಶಕ್ತರಲ್ಲ. ಅಕಿಂಚನತೆಯೊಂದೇ ನಮ್ಮಲ್ಲಿರುವುದು. ಮುಂದೆಯೂ ನಮ್ಮ ಸ್ಥಿತಿ ಹೀಗೆಯೇ ಇರಬಹುದು. ಆದ್ದರಿಂದ ಮಹಾಲಕ್ಷ್ಮಿಯನ್ನೆಂದಿಗೂ ಅಗಲದವನಾಗಿಯೂ, ಲೀಲಾ-ಭೋಗ ವಿಭೂತಿಗಳಿಗೆ ಅಧಿಪತಿಯಾಗಿಯೂ, ಇರುವ ಶ್ರೀಪತಿಯೇ ನಮಗೆ ಪರಮೋಪಾಯವು, ಮತ್ತಾವುದೂ ಇಲ್ಲ. सर्वान् दुर्ज्ञेयवेदानपि न हि विसृजाम स्त्विति ज्ञातवद्भिः । कर्म ज्ञानं च भक्तिं त्रितय मुपगृहीतं समीक्ष्य प्रवृत्ताः ॥ नानुष्ठाने किल स्म स्थिति रिय मनुवर्तेत पश्चादपीति । व्यामुग्धानां विना नः क उभयपतिमाश्लिष्टमं रक्षकोऽस्ति ॥ ಮೂಲ : ಶುರುಂಗಾವಕಲಮೆಲ್ಲಾಂ ತುಳಂಗಾ ವಮುದಕ್ಕಡಲಾಯ್, ನೆರುಂಗಾದನೈತ್ತುಡನೇ ನಿನ್ನ ನಂ ತಿರುನಾರಣನಾರ್, ಇರಂಗಾದಕಾಲಂಗಳೆಲ್ಲಾ ಮಿಳನ ಪಯನ್ ಪೆರವೋ, ಪೆರುಂಕಾದಲುತ್ತಿನಿಮೇಲ್ ಪಿರಿಯಾಮೈ ಯುಹನ್ದನಮೇ ॥ ८ 9 ದ್ವಯಚುರುಕ್ಕು
- 497
- ಅರ್ಥ :- ಶುರುಂಗಾ = ಸೊರಗದ (ಸಂಕೋಚವಾಗದ) ಅಹಲಂ-ಎಲ್ಲಾಂ = ವಿಸ್ತಾರವಾದುವೆಲ್ಲವೂ, ತುಳಂಗಾ : ತುಳುಕದ (ಚಲಿಸದ) ಅಮುದ-ಕಡಲಾಯ್ = ಅಮೃತಸಾಗರದಂತೆ (ಪರಮಭೋಗ್ಯಳಾಗಿರುವ) ಅನೈತ್ತುಡನೇ = ಸಮಸ್ತ ವಸ್ತುಗಳೊಂದಿಗೂ, ನೆರುಂಗಾದ : ಬಿಟ್ಟಿರದೆ, ನಿನ್ನ : ಕೂಡಿಕೊಂಡಿರುವ, ನಂ-ತಿರು-ನಾರಣನಾರ್ - ಶ್ರೀಮನ್ನಾರಾಯಣನು, ಇರಂಗಾದ : ಕರುಣಿಸದ, ಕಾಲಂಗಳೆಲ್ಲಾಂ = ಕಾಲಗಳಲ್ಲೆಲ್ಲಾ ಇಳಿದ್ದ = ಲಭಿಸದ, ಪಯನ್ = ಫಲವನ್ನು (ಮೋಕ್ಷ) ನಾ - (ಸ್ವರೂಪ ಯೋಗ್ಯತೆಯುಳ್ಳ) ನಾವು, ಪೆರ : ಪಡೆಯಲು, ಓರ್ 2 ಅಸಾಧಾರಣವಾದ, ಪೆರುಂಕಾದಲ್ : ಉತ್ಕಟವಾದ ಆಕಾಂಕ್ಷೆಯನ್ನು, ಉತ್ತು ಪಡೆದು, ಇನಿಮೇಲ್ = ಇನ್ನು, ಪಿರಿಯಾ = ಅವನನ್ನು ಅಗಲದೆ, ಉಹನ್ದನಂ - ಆನಂದಿತರಾದೆವು.
- +
ತಾತ್ಪರ :- ಬರದೆಸೆಯಲ್ಲಿ ಪ್ರತಿಕಲಳಾಗಿಯೂ, ಉದಾಸೀನಳಾಗಿಯೂ, ಅಲ್ಪಾನುಕೂಲಳಾಗಿಯೂ, ತೋರುವವಸ್ತುಗಳೆಲ್ಲವೂ ಕರ್ಮಬಂಧ ನಿವೃತ್ತಿದೆಸೆಯಲ್ಲಿ ತರಂಗರ ಹಿತ ಸುಧಾಸಾಗರದಂತೆ ಪರಮಭೋಗ್ಯಳಾಗಿರಲು ಕಾರಣ ಶ್ರೀಮನ್ನಾರಾಯಣನು ಅವುಗಳೊಂದಿಗೆ ಸದಾ ಬಿಡದೆ ಕೂಡಿಕೊಂಡಿರುವುದೆ. ಇದೀಗ ನಮಗೆ ಅರಿವಾಯಿತು. ಇದುವರೆಗೆ ನಮಗೆ ಅವನು ಕರುಣಿಸದಿದ್ದ ಫಲಗಳೆಲ್ಲವನ್ನೂ ಕೊಡುವನು. ನಾವೂ ಪಡೆಯಲರ್ಹರಾದವು ಮತ್ತು ಆಸೆಪಡುವವರಾದೆವು. ಇನ್ನು ಅವನನ್ನು ಅಗಲದೆ, ಅತ್ಯಂತ ಹರ್ಷಚಿತ್ತರಾದೆವು. (ಸವಿಶೇಷಣ ನಾರಾಯಣಪದದಲ್ಲಿ ಪತ್ನಿ ವಿಭೂತಿ ವೈಶಿಷ್ಟ್ಯ ಪ್ರಯುಕ್ತವಾದ ಪರಮಭೋಗ್ಯತೆಯನ್ನೂ ತತ್ಪಲವಾಗಿ ಚೇತನನಲ್ಲುಂಟಾಗುವ ಭಗವದ್ವಿರಹಾಸಹಿಷ್ಣುತೆಯನ್ನೂ, ತದ್ಧ ಪ್ರೇಮಪರವಶತೆಯನ್ನೂ ವಿಶದ ಪಡಿಸಿದಂತಾಯಿತು). निस्सङ्कोचं समस्तं विसृत मविचलं सौधपाथोधिवच्च । श्रीमान्नायणो न स्त्वविरत मविनाभावसंरक्षितात्मा ॥ येष्वप्राप्तं फलं तद्व्यवहितकरुणेष्वत्र कालेषु लब्धुम् । विश्वासं प्रप्य चेतः पर ममित मविश्लेषिता मोदिता स्स्मः ॥ ಮೂಲ : ಕಡಿಗೂಡುಮೂನುಂ ಕಳಲ್ ಹಣಿನ್ದಾರುಕ್ಕಡಿಂದಿಡವೇ, ಮುಡಿಗೂಡಿನಿನ ಮುಹಿಲ್ವಣ್ಣನಾ ಮುನ್ನುಲಹಳಂದ, ಅಡಿಕೂಡು ನಾಮವರಾದರತ್ತಾಲುಡುತ್ತು ಕಳ್ಳೆಯುಂ ಪಡಿಶೂಡಿಯನ್ನುಡನೇ ಪಣೆಶೆಯ್ಯ ಪ್ಪಣಿಂದನಮೇ ॥ ९ 10 498 ದ್ವಯಚುರುಕ್ಕು
ಅರ್ಥ :- ಕಳಲ್ -ಪಣಿಂದಾರು : (ತನ್ನ) ಪಾದಗಳನ್ನು ಶರಣವೆಂದು ಆಶ್ರಯಿಸಿದವರಿಗೆ, ಕಡಿ = ಸಹಿಸಲಾಗದ (ಕಡುತರವಾದ) ಶೂಡು-ಮೂನ್ನುಂ = ಮೂರು ತಾಪಗಳನ್ನೂ (ಆಧ್ಯಾತ್ಮಿಕಾದಿಗಳನ್ನೂ), ಕಡಿಂಗ್ -ಇಡವೇ : ನಿವಾರಿಸುವುದಕ್ಕಾಗಿಯೇ ಮುಡಿ-ಶೂಡಿ-ನಿನ್ನ : ಕಿರೀಟವನ್ನು ಧರಿಸಿಕೊಂಡಿರುವ, (ಭಕ್ತರ ತಾಪಗಳನ್ನು ಕಡಿಯುವುದಕ್ಕಾಗಿಯೇ ಸಾರಭೌಮತ್ವವನ್ನು ಧರಿಸಿದೆಯೋ ಎಂಬಂತಿರುವ) ಮುಗಿಲ್ -ವಣ್ಣನ್ -ಆರ್ : ನೀಲಮೇಘವರ್ಣನಾದ ಮತ್ತು ಸರೋದಾರನಾದ ಭಗವಂತನ, ಮುನ್ : ಹಿಂದೆ (ತ್ರಿವಿಕ್ರಮಾವತಾರದಲ್ಲಿ) ಉಲಹು - ಲೋಕಗಳನ್ನು, ಅಳಂದ - ಅಳೆದ, ಅಡಿ = ಪಾದಗಳನ್ನು, ಶೂಡು - ಶಿರಸ್ಸಿನಲ್ಲಿಧರಿಸಿರುವ, ನಾಂ - ನಾವು, ಅವರ್ -ಆದರತ್ತಾಲ್ = ಆ ನೀಲಮೇಘನ ಆದರದಿಂದ, ಉಡುತ್ತು-ಕ್ಕಳ್ಳೆಯುಂ-ಪಡಿ : ಧರಿಸಿ, ಮತ್ತೆ ತೆಗೆಯುವ ರೀತಿಯನ್ನು, ಶೂಡಿ : ವಹಿಸಿಕೊಂಡು, ಅನ್ವುಡನೆ : ಪ್ರೇಮದಿಂದ, ಪಣಿ = ಕೈಂಕಯ್ಯಗಳನ್ನೂ, ಶೆಯ್ಯ ಮಾಡಲು, ಪಣಿಂದನಂ : ನಮಿಸಿ, ಅದರಲ್ಲೇ ಹುದುಗಿದೆವು.
G
ತಾತ್ಪ :- ಶ್ರೀಮನ್ನಾರಾಯಣನು ವರ್ಣದಲ್ಲೂ ಗುಣದಲ್ಲೂ ನೀಲಮೇಘಸನ್ನಿಭನಾಗಿ, ತನ್ನಾಶ್ರಿತರ ತಾಪತ್ರಯವನ್ನು ನಿವಾರಿಸಲು, ತ್ರಿವಿಕ್ರಮವ್ಯಾಜದಿಂದ ಜಗತ್ತನ್ನೇ ಅನುಗ್ರಹಿಸಿದನು. ಆ ಪರಮಾತ್ಮನ ಅಡಿದಾವರೆಗಳನ್ನು ಶಿರೋಭೂಷಣವಾಗಿ ಮಾಡಿಕೊಂಡಿರುವೆವು. ನಿರತಿಶಯ ಪ್ರೀತಿಯಿಂದ ಆ ಚರಣಸೇವೆಯಲ್ಲಿ ಅನವರತವೂ ಸಂಸಕ್ತರಾದೆವು. (ತಾದರ್ಥ್ಯವು ಚತುರ್ಥಿ ಪ್ರತಿಪಾದ್ಯವು. ಅದರ ಕಾರವು ಕೈಂಕರವು ಆ ಕೈಂಕರವೇ ಪುರುಷಾರ್ಥವು. ಈ ಅರ್ಥವು ಇಲ್ಲಿ ನಿರೂಪಿಸಲ್ಪಟ್ಟಿತು. तीव्रं तापत्रयं तन्निजपदशरणानां च हर्तुं विधर्तुः । दीक्षाबद्धं किरीटं धृतजलदरुचेः पादयोर्लोकमात्रोः ॥ धर्तारो ह्युतमाङ्गे वय मिह तदुदारादरादेत्य रीतिम् । न्यासान्यासक्रियायाः प्रियतरपरिचर्या विधातुं नता स्स्मः ॥ ಮೂಲ : ತನದವೈಯೆನ ತಾನನ ಮರೆತೊನ್ನದೆಲ್ಲಾ, 3 go ತನದೆನ್ನುಂ ತಾನೆನ್ನುಮೆಣ್ಣುದಲಾಲ್ ವರುಮೀನಮೆಲ್ಲಾಂ, ಮನದೊನ್ನಿಯನ್ನು ನಮವೆನ್ನದೇ ಕೊಣ್ಣುಮಾತ್ತುದಲಾಲ್ ತನದಯೊನುಮಿಲ್ಲಾತ್ತನಿತ್ತಾ ಶದಿರ್ತನನೇ ॥ ॥
ದ್ವಯಚುರುಕ್ಕು
499 ಅರ್ಥ :- ಇವೈ = ಈ ಪದಾರ್ಥಗಳು, (ದೇಹೇಂದ್ರಿಯಾದಿಗಳು) ತನದ್ -ಎನ್ನು ತನ್ನವಲ್ಲ ತಾನ್ -ಅನು : ತಾನೂ, (ಆತ್ಮವೂ) ಅಲ್ಲ, ಎನ = ಎಂದು, = : ಮರೆ-ತೊನ್ನದು-ಎಲ್ಲಾಂ - ವೇದಗಳು ಹೇಳಿದುವೆಲ್ಲವೂ, ತನದು-ಎನ್ನುಂ - ತನ್ನವೆಂದೂ, ತಾನ್ -ಎನ್ನುಂ - ತಾನೆಂದೂ, (ಆತ್ಮನೆಂದೂ) ಎಣ್ಣುದಲಾಲ್ = ತಿಳಿಯುವುದರಿಂದ, ವರುಂ = ಬರುವ, ಈನಂ - ಹೀನತೆಯು, (ಅಥವಾ ಹಾನಿಯು) ಎಲ್ಲಾಂ : (ಅಹಂಕಾರ ಮಮಕಾರ ಮೂಲಕವಾದ ಸಾಂಸಾರಿಕ ದೋಷಗಳು) ಎಲ್ಲವೂ, ಇನ್ನು - ಈಗ, ಮನದು = ಮನಸ್ಸಿನಲ್ಲಿ ಒನ್ನಿ = ಊರಿ, ನಮ-ಎನ್ನದೇ-ಕೊಂಡು : ‘ನಮಃ’’ ಎಂಬ ಪದವನ್ನೇ ಹೇಳಿ, ಮಾತ್ತುದಲಾಲ್ - ಹೋಗಲಾಡಿಸುವುದರಿಂದ, ತನದ್ -ಅನಿ - ತನ್ನದಲ್ಲದುದು, (ತನಗೆ ಶೇಷವಾಗದ) ಒನು ಇಲ್ಲಾ = ಯಾವುದೊಂದೂ ಇಲ್ಲದವನಾದ, (ಸ್ವಶೇಷಾರ್ಥನಾದ) ತನಿ-ತಾ = ಅಸಾಧಾರಣ ತಂದೆಯಾದ ಸರ್ವಶರಣ್ಯನೂ, ಶದಿರ್ತನನ್ - ಚತುರನಾದನು.
ತಾತ್ಪರ :- ದೇಹಾದಿವಸ್ತುವಾವುದೂ ಆತ್ಮನದಲ್ಲವೆಂದೂ, ಆತ್ಮನೂ ಅಲ್ಲವೆಂದೂ, ಶ್ರುತಿಗಳು ಘೋಷಿಸಿದರೂ, ಅವಿವೇಕದಿಂದ ಎಲ್ಲವೂ ತನ್ನದೆಂದೂ, ತಾನೆಂದೂ, ಭಾವಿಸಿದ್ದರಿಂದ ಈ ಹೀನಸಂಸಾರಚಕ್ರಕ್ಕೆ ಸಿಕ್ಕಿರುವೆವು ಇಂದು ವಿವೇಕಗೊಂಡು, “ನಮಃ’’ ಎನ್ನಲಾರಂಭಿಸಲು, ನನ್ನದೆಂಬುದಾವುದೂ ಇಲ್ಲ. ಆ ಪರಮಾತ್ಮನದಲ್ಲದುದು ಯಾವುದೂ ಇಲ್ಲ. ಎಲ್ಲವೂ ಅವನ ಶೇಷಭೂತವು, ಎಂಬರ್ಥವು ಮನಮುಟ್ಟಿತು. ಇಂತಹ ಅರ್ಥದ ಮಂತ್ರವನ್ನು ಕರುಣಿಸಿ, ಸರ್ವಶರಣ್ಯನೂ, ಜಗತ್ತಿತ್ತನೂ ಆದ ಭಗವಂತನು ಅತಿಚತುರನಾಗಿ, ತನ್ನದು ತನ್ನನ್ನು ಸೇರಿತೆಂದು ಅತ್ಯಾನಂದಭರಿತನಾದನು. (‘ನಮಃ’ ಶಬ್ದಾರ್ಥನು ಸಂಧಾನದಿಂದ ಅಹಂಕಾರ ಮಮಕಾರಗಳೆಂಬುವು ಅನಿಷ್ಟ ನಿವೃತ್ತಿಯಾಗಿ, ಇಷ್ಟಸಿದ್ಧಿಸುವುದೆಂದು ವಿವರಿಸಲ್ಪಟ್ಟಿತು). स्वीया नैते न चापि स्वय मिति निगमोदीरितं सर्वमेव । स्वीयं चेति स्वयं चेत्यवगतिसुलभां हीनतां स्वान्तरूढाम् । विज्ञायाद्यैवतूक्तेः नम इति विगमात् हीनतायाश्च तस्याः तातोऽसाधारणोऽयं चतुरतम इह ह्यात्माशेषाखिलार्थ: ॥ ११ ಮೂಲ : ಶೇರುಂತಿರುವಾಳರ್ ಶೇರ್ತಿಯಿಲ್ಮನ್ನುದಲ್ ಶೀರ್ ಪೆರಿಯೋರು ಏರುಂ ಗುಣಂಗಳಿಲಕ್ಕಾಂ ವಡಿವಿಲಿ ಯಡಿಹಳ್, ಪಾರುಂಶರಣತ್ತಿಲ್ ಪತ್ತುದಲ್ ನಲೈನಾಂ ಪೆರುಂ ಪೇರು, ಏರಿನವೆಲ್ಲೋ ಹಳೆಲ್ಲಾಂ ಕಳ್ಳೆಯರ ವಣ್ಣಿನಮೇ ॥ 12 500
ದ್ವಯಚುರುಕ್ಕು
ಅರ್ಥ :- ಶೇಲ್ಕಂ - (ಚೇತನರನ್ನು ತನ್ನ ಪತಿಯೊಡನೆ) ಸೇರಿಸುವ, ತಿರುವಾಳ - ಮಹಾಲಕ್ಷ್ಮಿಯೊಡನಿರುವ ನಾರಾಯಣನು, ಶೀರ್ತಿಯಿಲ್ : (ತಾನು) ಕೂಡಿರುವುದರಲ್ಲಿ, ಮನ್ನುದಲ್ - ಸ್ಥಿರತೆಯ (ನಿತ್ಯಸಂಬಂಧವು) ಪರಿಯೋರು - ಪರಾತ್ಪರ ಪರಮ ಪುರುಷನಿಗೆ, ಏಲ್ಕುಂ = ತಕ್ಕಂತಹ, ಗುಣಂಗಳ್ = ಗುಣಗಳಿಗಿಂತಲೂ, ಇಲಕ್ಕಾಂ = ಲಕ್ಷವಾಗುವ, (ಮನಸ್ಸಿಗೆ ವೇದ್ಯವಾಗುವ) ವಡಿವಿಲ್ : ವಿಗ್ರಹದಲ್ಲಿ ಶೀರ್ : ಮಂಗಳಗುಣ ಪೂರ್ಣವಾದ, ಇವೆ-ಆಡಿಹಳ್ - ಎರಡು ಪಾದಗಳು (ಎಂದು), ಪಾಲ್ಗೊಂ : ವಿಮರ್ಶಿಸಿ ನಿರ್ಣಯಿಸಿರುವ, ಶರಣತ್ತಿಲ್ = ಉಪಾಯದಲ್ಲಿ, ಪತ್ತುದಲ್ ಆಶ್ರಯಿಸುವುದು, ನನ್ನಿ : ಒಳ್ಳೆಯ ಸ್ಥಿತಿಯನ್ನು (ಆಕಿಂಚನ್ಯವನ್ನು), ನಾಂ ಜ (ಸಂಸಾರಿಗಳಾದ) ನಾವು, ಪೆರುಂ-ಪೇರು - ಪಡೆಯುವ ಪರಮ ಪುರುಷಾರ್ಥವು, ಏರಿನ - ಇವುಗಳಿಗೆ ಉಚಿತವಾದ, ಎಹಳ್ -ಎಲ್ಲಾಂ : ಎಲ್ಲೆಗಳೆಲ್ಲವೂ, ಕಳ್ಳ-ಅರ ( ಪೈರಿಗೆ ಕಳೆಯಂತಿರುವ) ವಿರೋಧಿಗಳು ನಾಶವಾಗಲು, ಎಣ್ಣಿನಂ = ಪರಿಗಣಿಸಿದೆವು.
ತಾತ್ವರ :- ‘‘ಪುರುಷಕಾರಳಾದ ಶ್ರೀಯೊಂದಿಗೆ ನಾರಾಯಣನಿಗಿರುವ ನಿತ್ಯ ಸಂಬಂಧ, ದಿವ್ಯಮಂಗಳ ವಿಗ್ರಹೋಪಲಕ್ಷಕ ಚರಣದ್ವಂದ್ವ, ಅದನ್ನೇ ಉಪಾಯವನ್ನಾಗಿ ಪಡೆಯುವಿಕೆ, ಅಕಿಂಚನತೆ, ಪಡೆಯುವ ಪುರುಷಾರ್ಥ, ಇವುಗಳಿಗೆ ತಕ್ಕ ಸ್ವರೂಪ ಸ್ವಭಾವಗಳು, ಎಲ್ಲವೂ ವಿಶದಪಡಿಸಲ್ಪಟ್ಟಿವೆ’’ ಎಂದು ಆರಂಭಾನುಗುಣವಾಗಿ ಹಿಂದೆ ಹೇಳಿರುವ ವಿಷಯಗಳನ್ನೇ ಓದುಗರಿಗೆ ಮನದಟ್ಟಾಗಲು ಸಂಗ್ರಹಿಸಿ, ಮುಕ್ತಾಯಗೊಳಿಸಿರುವರು. सन्धात्र्या लोकमातु नियमयितु रियं नित्यसम्बन्धता च । सर्वस्मादुत्तमस्योचितगुणगणतो लक्ष्यभूते स्वरूपे ॥ भव्यात्मीयांघ्रियुग्मं शरणवरणताऽकिंचनत्वं पुमर्थः । इत्येषां युक्तसीमाभुव इव गणयामासमाद्याऽनवद्याः ॥ श्रीमते निगमान्तमहादेशिकाय नमः । श्रीदेशिक प्रबन्धस्थाः द्वयसङ्गहगाथिकाः । सार्थाः श्लोकीकृता सर्वा: गोपालार्येण सन्मुदे ॥ १२ ॥8,eall ॥ಶ್ರೀಮತೇ ನಿಗಮಾಂತ ಮಹಾದೇಶಿಕಾಯ ನಮಃ !!