विस्तारः (द्रष्टुं नोद्यम्)
ತಮ್ಮ ‘ಶ್ರೀರಹಸ್ಯಪದವೀ” ಮೊದಲಾಗಿ “ಶ್ರೀ ರಹಸ್ಯತ್ರಯಸಾರ’ದವರೆಗೆ ಇರುವ ಬಹು ಪ್ರಂಬಂಧಗಳಲ್ಲಿ ತಕ್ಕಂತೆ ಎಲ್ಲರಿಗೂ ತಿಳಿಯುವಂತೆ, ಸಂಕ್ಷೇಪವಾಗಿಯೂ ವಿಸ್ತಾರವಾಗಿಯೂ ತಾವೇ ವ್ಯಾಖ್ಯಾನರೂಪದಲ್ಲಿ ಉಪದೇಶಿಸಿರುವರು. ವಿರೋಧ ಪರಿಹಾರದಲ್ಲಂತೂ ಸಂಭವಿಸುವಂತಹ ಎಲ್ಲ ಸಂಶಯಗಳನ್ನೂ ಪರಿಹರಿಸಿರುವರು.
ಅಂತಹ ರಹಸ್ಯತ್ರಯವಾದ ‘‘ಮೂಲಮಂತ್ರ, ದ್ವಯ, ಚರಮಶ್ಲೋಕ’ ಎಂಬ ವಿಖ್ಯಾತವಾದ ಮಂತ್ರಗಳ ಸಾರಾರ್ಥಗಳನ್ನೂ ದ್ರವಿಡ ನುಡಿಯ ರಸಿಕರಿಗೆ ಶ್ರುತಿ ಮನೋಹರವಾದ ಪಾಶುರಗಳಿಂದ ವಿಶದಪಡಿಸಿರುವರು. ಇದು ಅತಿ ಸಂಗ್ರಹರೂಪ. ಕ್ರಮವಾಗಿ ‘ತಿರುಮಂತಿರಚುರುಕ್ಕು, ದ್ವಯಚ್ಚುರುಕ್ಕು, ಚರಮ ಶ್ಲೋಕಚ್ಚುರುಕ್ಕು’’ ಎಂದಾಗಿವೆ.
ಮೊದಲನೆಯ ಮಂತ್ರದಲ್ಲಿ 8 ಅಕ್ಷರಗಳೂ, 9 ಅರ್ಥಗಳೂ ಆಭರಣದಲ್ಲಿ ಹುದುಗಿ ಹೊಳೆಯುವಂತಿವೆ.
ಎರಡನೆಯದು ಪ್ರಥಮದ ವಿವರಣರೂಪ. ಇದೇ ಪ್ರಪತ್ತಿಯ ‘‘ಕರಣಮಂತ್ರ". ಶ್ರೀಭಾಷ್ಯಕಾರರು ತಮ್ಮ ಗದ್ಯದಲ್ಲಿ ಇದನ್ನೇ ಹೇಳಿರುವರು. ಕಠಶ್ರುತಿ- ಭಗವಚ್ಛಾಸ್ತ್ರಾದಿಗಳಲ್ಲಿರುವ ಇದರ ಮಹಾತ್ಮಯನ್ನೂ, ಸದಾಚಾರಲಬ್ಧವಾದ 10 ಅರ್ಥಗಳನ್ನೂ 12 ಪದ್ಯಗಳಲ್ಲಿ ಹೇಳಿರುವರು.
ಮೂರನೆಯದು ‘ಶ್ರೀಭಗವದ್ಗೀತೆ’‘ಯಲ್ಲಿ ಪ್ರಸಿದ್ಧವಾದುದು. ಹೀಗೆ ಇವೆಲ್ಲವನ್ನೂ ಕನ್ನಡಿಸಲಾಗಿದೆ.
ಸದವಕಾಶವನ್ನು ಸಾರ್ಥಕಪಡಿಸಿಕೊಳ್ಳಬೇಕೆಂದು ಪ್ರಾರ್ಥನೆ.
ಮೂಲ : ನಾವಲ ಮರೈನಾಲೊದ್ರುಂ ನಲಹರೈಯೊನ್ನೂರ, ತಾವಲುಪ್ಪನ್ನು ಮೋಹವುಂದಿನಿಲಮರ್ಕಿರ್ ! ತೂವಲಂಬುರಿಯಾಮೊಲ್ುಲಕ್ಕಮಾಮಣಿವಣ್ಣಮೆನ್ನಾ ಕಾವಲೆಕರತ್ತಾಯ್ಕ್ಕರುತ್ತರಕ್ಕಾ ನೀರೇ
ಅರ್ಥ :- ತಾವು - ಧಾವನ (ಓಟ)ದಿಂದಲೂ, ಅಲುಪ್ಪು- ನಿರ್ವೇದನದಿಂದಲೂ, ಅಲೈಕ್ಕುಂ : ಅಲೆದಾಡಿಸುವ, ಮೋಹತ್ತು = ಅಜ್ಞಾನದಲ್ಲಿ ಅಳುಂದಿ -ನಿನ್ನು : ಮಗ್ನರಾಗಿರುತ್ತಾ, ಅಲಮರುಹಿ : ಗಾಬರಿಗೊಂಡಜನರೇ !ನಾವ್ = ನಾಲಿಗೆಯಲ್ಲಿ ಅಲರ್ = ವಿಕಾಸಗೊಳ್ಳುವ, ಮರೆ-ನಾಲುಂ = ನಾಲ್ಕು ವೇದಗಳೂ, ಒನ್ನು = ಒಂದಾಗಿ ನಲಂ-ತಿಹಳ್ = ಆನಂದದಿಂದ ಪ್ರಕಾಶಿಸುವ, ಮರೆ-ವೇದವೆಂದು, ಓರ : ಭಾವಿಸುವಂತಿರುವ, ತೂ = ಪರಿಶುದ್ಧವಾದ, ವಲಂಬುರಿ-ಆ೦ = (ಶಂಖರೂಪದ) ಅಕ್ಷರಾತ್ಮಕವಾದ, ಒಲ್ : ಒಂದರಲ್ಲಿ (ಪ್ರಣವದಲ್ಲಿ) ತುಲಕ್ಕ : ನಿರ್ಮಲವಾದ, ಮಾ-ಮಣಿವಣ್ಣಂ = ಮಹಾಮಣಿ ಸ್ವಭಾವದ, ಒನ್ಸಾಲ್ = ಒಂದು ವಸ್ತುವಿನಿಂದ (ಭಗವಂತನಿಂದ) ಕಾವಲ್ - ರಕ್ಷಣೆಯು, ಎನ್ - ಎಂಬ, ಅಕರಹವಾಯ್ -ಅಕಾರದ ತಾತ್ಪರಾರ್ಥ್ಯವನ್ನು, ಕರುತ್ತು: ಮನಸ್ಸಿನಲ್ಲಿ ಉರ = ನೆಲೆಗೊಳ್ಳುವಂತೆ, ಕಾನೀ (ಉಪದೇಶವು ವ್ಯರ್ಥವಾಗದಂತೆ) ಕಾಣುವವರಾಗಬೇಕು.
ತಾತ್ಪರ : :- ಅನಾದಿಕರ್ಮದಿಂದ ವಿವಿಧ ಜನ್ಮಗಳಲ್ಲಿ ಓಡೋಡಿ, ನಿರ್ವಿಣ್ಣರಾಗುವಂತೆ ಅಲೆದಾಡಿಸುವ ಅಜ್ಞಾನಾಂಧಕಾರದಲ್ಲೇ ಚಿರಕಾಲವಿದ್ದು, ಗಾಬರಿಗೊಂಡ ಮಾನವರೇ! ಅಧ್ಯಯನಮಾಡಿದಷ್ಟೂ ನಾಲಿಗೆಗೆ ಉಲ್ಲಾಸಕರವಾದ ನಾಲ್ಕು ವೇದಗಳೂ ಒಂದೇ ಆಗಿ ಅತಿ ಸಂತೋಷದಿಂದ ಬೆಳಗುವ ವೇದವೋ ಎಂಬಂತೆಯೂ, ಅತಿಧವಳವಾದ ಶಂಖವೋ (ಶಂಖಧ್ವನಿಯೋ) ಎಂಬಂತೆಯೂ, ಇರುವ ಅಕ್ಷರಾತ್ಮಕವಾದ ಪ್ರಣವದಲ್ಲಿ ಅಡಗಿರುವ ಮೊದಲಾಕ್ಷರವಾದ ಅಕಾರದ ಅರ್ಥವು ಮಹಾಮಣಿ ವರ್ಣನಾದ ಭಗವಂತನೇ ಸತ್ವರಕ್ಷಕನು’’ ಎಂದು ದೃಢವಾಗಿ ಮನಸ್ಸಿನಲ್ಲಿ ಅನುಸಂಧಾನ ಮಾಡಿ, ಲಭಿಸಿದ ಉಪದೇಶವು ವ್ಯರ್ಥವಾಗದಂತೆಯೂ, ಅಪಾರ್ಥೋಪದೇಶಕರ ಬಲೆಗೆ ಸಿಗದಂತೆಯೂ ಬಾಳಿ, ಉದ್ಬವಿತರಾಗಿ. 478 ತಿರುಮಂತಿರಚುರುಕ್ಕು निर्वेदात् प्रविधावनात् अटयितर्यज्ञानवार्थौ चिरम् । मग्नाः ! विह्वलिताः उपेत्य रसनोल्लासागमा एकताम् । एकैव श्रुति रेकवर्णकलितेवानन्ददात्रादिमे । वर्णे च प्रणवस्य निर्मलमहामण्येकशीलावनम् ॥ व्यक्तं तात्पर्यमेवं हीत्यनुसन्धाय मानसे । स्थिरीकुरुत निर्बाधं अकारार्थविमर्शनम् ॥
ಮೂಲ : ಇಳಕ್ಕ ಮಿಲಯಕ್ಕಂತನ್ನಾಲ್ ಎನಕ್ಕುನಾನುರಿಯೇನೆನ್ನುಂ, ಕಳಕ್ಕರುಕೊಂಡು ಕಡುನರಹತ್ಯೆಂದುನಿರ್, ವಿಳಕ್ಕು ಮವ್ವಳುತ್ತಿನಾಲಾಂ ವೇದ್ರುಮೈಯೇಟ್ರವಾಂಗಿ, ತುಳಕ್ಕಮಿಲಡಿಮೈಪೂಣ್ಣು ತೂಯರಾಯ್ವಾಮಿನೀರೇ II 2 ಅರ್ಥ :- ಇಳಕ್ಕಂ-ಇಲ್ : ಶಿಥಿಲವಾಗದ (ದೃಢವಾದ) ಮಯಕ್ಕಂ-ತನ್ನಾಲ್ ಅಜ್ಞಾನದಿಂದ, ಎನಕ್ಕು-ನಾನ್ -ಉರಿಯೇನ್ -ಎನ್ನುಂ : ನನಗೆ ನಾನೇ ಸ್ವತಂತ್ರನೆಂಬ, ಕಳ-ಕರತ್ತು-ಒನ್ : ವಿರುದ್ಧವಾದ ಬುದ್ಧಿಯೊಂದನ್ನೇ, ಕೊಂಡು - ಅವಲಂಬಿಸಿ, ಕಡು-ನರಹು = ಕ್ರೂರನರಕಗಳನ್ನು ಸ್ವರೂಪವಿರುದ್ಧವಾದ ಸಾಂಸಾರಿಕ ಜಗತ್ತುಗಳನ್ನು) ಅಡೊಂದು-ಪಡೆದು, ನಿರ್ = ಚಿರಕಾಲನಿಂತಿರುವ ಮಾನವರೇ ! ಅ-ಎಳತ್ತು : ಅ ಎಂಬ ಅಕ್ಷರವನ್ನು, ವಿಳಕ್ಕುಂ : ಪ್ರಕಾಶ ಪಡಿಸುವ, ನಾಲಾಂ = ನಾಲ್ಕನೆಯ, ವೇಟ್ರುಮೈ = ವಿಭಕ್ತಿಯನ್ನು ಏತ್ತಿ= ಸೇರಿಸಿ, ವಾಂಗಿ - ಲೋಪಮಾಡಿ, ತುಳಕ್ಕಂ-ಇಲ್ - ಚಲನವಿಲ್ಲದ (ಮರೆಯದ) ಅಡಿಮೆ = ದಾಸ್ಯವನ್ನು, ಪೂಂಡು : ಬಿಡದೆ ಕೈಗೊಂಡು, (ಒಪ್ಪಿಕೊಂಡು) ತೂಯರಾಯ್ - ಅತಿಪರಿಶುದ್ಧರಾಗಿ, ವಾಳ್ = ಮಿನೀರ್ : ಬಾಳಿರಿ.
"" ತಾತ್ಪರ :- ಏ ಮಾನವರೇ !ಸ್ವರೂಪಕ್ಕೆ ವಿರುದ್ಧವಾದ ಸಾಂಸಾರಿಕ ಜಗರೂಪವಾದ ಕ್ರೂರನರಕದಲ್ಲೇ ಚಿರಕಾಲದಿಂದಿರುವಿರಿ, ಕಾರಣ: ಸ್ವಲ್ಪವೂ ಕಡಿಮೆಯಾಗದ ಅಜ್ಞಾನದಿಂದ ‘ನನಗೆ ನಾನೇ ಸ್ವತಂತ್ರ’’ ಎಂಬ ಅತಿವಿರುದ್ಧ ಬುದ್ಧಿಯುಳ್ಳವರಾಗಿರುವಿರಿ. ಅಕಾರ-ಉಕಾರ ಮಕಾರಾತ್ಮಕವಾದ ಪ್ರಣವದಲ್ಲಿರುವ ಅಕಾರಕ್ಕೆ ಶಬ್ದಸಾಧುತ್ವ ದೃಷ್ಟಿಯಿಂದಲೂ, ಅರ್ಥಸಾಧುತ್ವ ದೃಷ್ಟಿಯಿಂದಲೂ ಬಲು ಸೊಗಸಾಗಿ ಪರಿಷ್ಕರಿಸುವಂತಹ ಚತುರ್ಥಿ ವಿಭಕ್ತಿಯನ್ನು ಸೇರಿಸಿಯೂ, ಲೋಪಮಾಡಿಯೂ ‘‘ಲುಪ್ತಚತುರ್ಥಿಯ ತಾತ್ಪಯ್ಯ ವಿಷಯವಾದ ಭಗವದ್ದಾಸ್ಯವು ನಮ್ಮಲ್ಲೇ’ ಎಂದು ಅನುಸಂಧಾನಮಾಡಿ, ‘‘ಕ್ಷೇತ್ರಜ್ಞನೇಶ್ವರ ಜ್ಞಾನಾತ್ ವಿಶುದ್ಧಿಃಪರಮಾಮತಾ’’ ಎಂಬಂತೆ ಉಪಾಯಾನರ್ಹತೆ ಯಿಲ್ಲದವದಾಗಿ, ಸಕಲ ಚೇತನರೂ ಶ್ರೀಮನ್ನಾರಾಯಣನ ಶೇಷಭೂತರು. ದಾಸ್ಯವು ನಮಗೆಂದು ಭಾವಿಸಿ, ಪರಿಶುದ್ಧ ಬುದ್ಧಿಯುತರಾಗಿ, ಬಾಳನ್ನುಹಸನಾಗಿಸಿ, ಬೆಳಗಿಸಿಕೊಳ್ಳಿ.. 1 ! ತಿರುಮಂತಿರಚುರುಕ್ಕು आत्मा स्वस्मै स्वतन्त्र स्त्वितिविमतमनीषैकनिष्ठाः प्रगाढात् । मोहात् क्रूराघलोकान् अधिवसनपराः ! द्योतयन्ती मवर्णम् ॥ संयोज्यपोह्य सार्थं समवनकृदकारस्य तुर्यां विभक्तिम् । शेषत्वं चाभ्युपेता अशिथिल मिह संजीवतात्यन्तपूताः । । 479 ಮೂಲ : ಅಪೊರುಳಿಹಳು ಮತ್ತುಂಕಳಿದ್ದೆಳುವಾರ್ತಾಳಿಲ್, ಇಪ್ಪರುಳಿಹಳ್ ನನವನ್ವಾಲ್ ಇರಂಗಿನೀರ್ ವಣಂಗಿವೀಲ್ವೀರ್, ಉಪೊರುಳುಳ್ಳಿ ಮತ್ತೊರುಯಿರ್ ಹಳುಕ್ಕುರಿಮೈಮಾ ಎಪೊರುಳ್ ಪಯನುಮೀದೆಣ್ಣಿರಳುಮಿನೀರೇ ॥
3
ಅರ್ಥ :- ನೀರ್ = (ಅನ್ಯಶೇಷತಾ ಭ್ರಮವನ್ನು ಬಿಡದ) ನೀವು, ಅ-ಪೊರುಳ್ (ಪೂರ್ವೋಕ್ತ) ಅಕಾರಾರ್ಥವನ್ನು, ಇಹಳು - ತ್ಯಜಿಸಿ, (ಒಪ್ಪದೆ) ಮತ್ತುಂ : ಮತ್ತೂ ಉಳಿದ ಐಶ್ವಯ್ಯಾದಿಗಳೂ, ಕಳಿದ್ದು = ಬಿಡಲ್ಪಟ್ಟು, ಅಳಿದ್ದು = ಅಳಿದು, ಎಳುವಾರ್ : ಉತ್ಪನ್ನರಾಗುವವರ, (ಅತ್ಯಲ್ಪಶ್ವರರಾಗಿ ಉತ್ಪತ್ತಿವಿನಾಶ ಯೋಗಿಗಳಾದ ಕ್ಷುದ್ರ ದೇವತೆಗಳ) ತಾಳಿಲ್ : ಪಾದಗಳಲ್ಲಿ ಇರುಳ್ - ಈ ಅರ್ಥದಲ್ಲಿ ಕಾಣುವ ಅಲ್ಪಪುರುಷಾರ್ಥಗಳಲ್ಲಿ) ಇಹಳನ-ಅನ್ಸಾಲ್ : ಪ್ರೀತಿಯನ್ನು ಬಿಟ್ಟು ಇರಂಗಿ = ಇಳಿದುಹೋದ ಮನಸ್ಸುಳ್ಳವರಾಗಿ, ವಣಂಗಿ : ಪ್ರಣತರಾಗಿ, ವೀಳ್ಯವೀರ್ = ಅಧೋಗತಿಗಿಳಿಯುವ ಮಾನವರೇ ! ಉಪೊರುಳ್ : ಉದಾರವಾದರ್ಥಗಳನ್ನು, ಉಳ್ಳಿ ಮನಸ್ಸಿಗೆ ತಂದುಕೊಂಡು, ಮತ್ತೋರ್ : ಭಗವದ್ವತಿರಿಕ್ತವಾದ, ಉಯಿಹಳುಕ್ಕು = ಚೇತನರಿಗೆ, ಉರಿಮೈ = ಶೇಷವಾಗುವಿಕೆಯನ್ನು, ಮಾ: ಪರಿತ್ಯಜಿಸಿ, (ದೇವತಾಂತರ ಸಂಸರ್ಗಾದಿಗಳನ್ನು ಬಿಟ್ಟು) ಎಫೊರುಳ್ ಪಯನುಂ = ಸಮಸ್ತಾರ್ಥಗಳ ಫಲವೂ, ಇದು = ಇದುವೇ, ಎನ್ನು-ಎಣ್ಣಿ = ಎಂದು ತಿಳಿದು, ನೀರ್ - (ಇಂತಹ ನಿಷ್ಠೆಯುಳ್ಳ) ನೀವು, ಎಣ್ಣಿರ್ = ಪರಿಗಣಿಸಿದವರಾಗಿ, ಎಳುಮಿನೀರ್ - ಪ್ರಕಾಶಿಸಿರಿ, (ಭಗವದೇಕ ಮಾಶ್ರಿತರಾಗಿ ಬಾಳಿರಿ.)
ತಾತ್ವರ :- ಓ ಮಾನವರಿರಾ ! ‘‘ಭಗವದಿತರರಿಗೆ ಶೇಷರು ನಾವು’’ ಎಂಬ ಅಜ್ಞಾನವನ್ನು ಬಿಡದಿರುವ ನೀವು ಹಿಂದೆ ಹೇಳಿದ೦ತಹ ಅಕಾರಾರ್ಥವನ್ನು ಮನಸ್ಸಿಗೆ ತಂದುಕೊಳ್ಳದೆ ಉಳಿದೈಶ್ವರ್ಯವನ್ನು ಕಳೆದಕೊಂಡಿರಿ. ಜನನ ಮರಣ ಯೋಗಿಗಳಂತಹ ಕ್ಷುದ್ರದೇವತೆಗಳಕಾಲಿಗೆ ಬಿದ್ದು ಅತ್ಯಲ್ಪ ಪುರುಷಾರ್ಥ ಪ್ರಾಪ್ತಿಯುಳ್ಳವರಾಗಿರಿ. ಕೊನೆಗೆ ಅದರಲ್ಲೂ ನಿರಾಶರಾಗಿ ಅಧೋಗತಿಗಿಳಿದು ವಿನಾಶೋನ್ಮುಖರಾಗುತ್ತಿರುವಿರಿ. ಆದುದರಿಂದ “ಆ ಪರಮಾತ್ಮನಾದ 480 ತಿರುಮಂತಿರಚ್ಚುರುಕ್ಕು ಶ್ರೀಮನ್ನಾರಾಯಣನೇ ಸತ್ವಶೇಷಿಯು, ಉಳಿದವರೆಲ್ಲ ಅವನ ಶೇಷಭೂತರು, ಅವನೇ ಸಕಲಸಂರಕ್ಷಕನು’’ ಎಂಬ ಉದಾರವಾದ ಅರ್ಥವನ್ನು ಕೊಡುವ ಪ್ರಣವಾಕಾರದರ್ಥವನ್ನು ಅರಿತು, ಅನುಸಂಧಾನ ಮಾಡಿ, ಭಗವದ್ ವ್ಯತಿರಿಕ್ತರಿಗೆ ಶೇಷರೆಂಬುದನ್ನು ಬಿಟ್ಟು ಸಮಸ್ತವೇದಗಳೂ, ಶಾಸ್ತ್ರಗಳೂ ಈ ಅರ್ಥವನ್ನೇ ಸಾರುತ್ತವೆಂದು ತಿಳಿದು, ಆ ವೇದಶಾಸ್ತ್ರಗಳ ಫಲಿತಾರ್ಥವೇ ಇದೆಂದು ದೃಢವಾಗಿ ನಂಬಿ, ಭಗವದೇಕಸಮಾಶ್ರಯಣಪ್ರವಣರಾಗಿ, ನಿಮ್ಮ ಬಾಳನ್ನು ಬೆಳಗಿರಿ. त्यक्तोक्ताकारवाच्या व्यपगतविभवा ये विनश्यन्ति भूयः । जायन्ते चेदृशानां प्रणमितशिरसः पादयोः प्रीत्यपेताः । । . यातारोऽध श्च मर्त्याः ! भगवदितरशेषत्वरिक्ताः उदारान् । वेदार्थान्ध्यायमाना अखिलफलमिदं हीति राराजतेह ॥ ಮೂಲ: ಎನ್ನುಮೋರೇತಮಿನಿ ಯರವಿಯುಮೊಳಿಯುಂಪೋಲ, ಒನಿನ್ನುಲಹಳಿಕ್ಕುಮುಗಮಿಹಳ್ ಸ್ಟಡಿಮೈವೈತೀರ್, ಒನ್ನುಮೂಳುತ್ತಾಯೊನ್ನುಮೊಲೊನ್ನುಡೈಯಮುನ್ನೇ, ಒಯವಿರಂಡೈಯುಳ್ಳಿಯುಳರೆನವುಮ್ಮಿನೀರೇ ॥ 4. A ಅರ್ಥ :- ಎನ್ನುಂ = ಯಾವಕಾಲದಲ್ಲೂ ಓರ್ -ಏತಂ-ಇ = ಯಾವುದೊಂದು ಅವದ್ಯವೂ ಇಲ್ಲದೆ, ಇರವಿಯುಂ-ಒಳಿಯಂ-ಪೋಲ = ಸೂರನೂ ಪ್ರಭೆಯೂ ಇರುವಂತೆ, ಒನ್ನಿ-ನಿನ್ನು - ಒಂದಾಗಿದ್ದು (ನಿತ್ಯಸಂಶಿಷ್ಟರಾಗಿ) ಉಲಹು : ಲೋಕಗಳನ್ನು, ಅಳಿಕ್ಕುಂ = ರಕ್ಷಿಸುವಂತಹ, ಉಗಂ = ಜೋಡಿಯನ್ನು (ದಿವ್ಯದಂಪತಿಗಳನ್ನು) ಇಹಳು = ತ್ಯಜಿಸಿ, ಅಡಿಮೈ = ದಾಸ್ಯವನ್ನು (ಕೇವಲ ಭಗವಂತನಲ್ಲಿ ವೈತ್ತೀರ್ : ಇಟ್ಟಿರುವ ಮನುಜರೇ ! ಒನ್ನು = ಒಂದಾಗುವ, ಒಲ್ = ಒಂದು ಪದದಲ್ಲಿ ಒನ್ನುಡೈಯ ಒಂದುವರ್ಣದ, ಮುನ್ನೇ - ಪೂರ್ವಭಾಗದಲ್ಲಿ ಒನ್ರಿಯ : ಏಕೀಭವಿಸಿದ ಇರಂಡೈ = ಎರಡು ವರ್ಣಗಳನ್ನು, ಉಳ್ಳಿ : ಅನುಸಂಧಾನ ಮಾಡಿ, ಉಳರೆನ = ಉಯ್ ಮಿನ್ = ಉದ್ಬವಿಸಿರಿ. ಸಾತ್ವಿಕರೆಂದು,
- ತಾತ್ಪರ :- ಸೂರ್ಯ ಮತ್ತು ಅವನ ಪ್ರತಿಭೆಯಂತೆ ಒಬ್ಬರನ್ನೊಬ್ಬರು ಎಂದಿಗೂ ಅಗಲದೆ ಒಂದಾಗಿರುತ್ತಾ ಲೋಕಗಳನ್ನು ಸಂರಕ್ಷಿಸುವ ಆ ದಿವ್ಯ ದಂಪತಿಗಳಾದ ಲಕ್ಷ್ಮೀನಾರಾಯಣರಿಗೆ ಸ್ವತಃ ಶೇಷರು ತಾವು ಎಂದರಿಯದೇ, ಭಗವಂತನಿಗೆ ಮಾತ್ರ ದಾಸಭೂತರೆಂದಿರುವ ಮಾನವರೇ ! ವೇದದಲ್ಲಿಮೂರಕ್ಷರಗಳ ಸಮುದಾಯ ರೂಪವು ಒಂದೇ ಅಕ್ಷರ ಎಂದು ಪ್ರಸಿದ್ಧವಾಗಿ, ಸಂಹಿತೇತರದೆಸೆಯಲ್ಲಿ ಒಂದೇ ಅಕ್ಷರವಾಗುವ
- 14
- ತಿರುಮಂತಿರಚ್ಚುರುಕ್ಕು
- 481
- ಪ್ರಣವರೂಪ ವಿಲಕ್ಷಣಶಬ್ದದಲ್ಲಿ ಅಕಾರ ಉಕಾರಗಳು ಏಕಾರ್ಥ ಭಾವದಿಂದ ಇತರೇತರ ದ್ವಂದ್ವ ಸಮಾಸಾನುಸಾರವಾಗಿ ಸರ್ವಶೇಷಿ ನಾರಾಯಣನನ್ನೂ ಸ್ವಪತೀತರಸರ್ವಶೇಷಿಣೀ ಮಹಾಲಕ್ಷ್ಮಿಯನ್ನೂ, ಅಕಾರೇಣೋಚ್ಯತೇವಿಷ್ಣುಃ’’ ಸರ್ವಲೋಕೇಶ್ವರೋಹರಿಃ | ಉಕಾರೇಣೋಚ್ಯತೇಲಕ್ಷ್ಮೀಃ ಸರ್ವಲೋಕೇಶ್ವರೀತಥಾ !!’’ ಎಂಬಂತೆ ತಿಳಿಸುತ್ತವೆ. ಅನಂತವಿರುವ ಮಕಾರಾರ್ಥ ಜೀವನು ಮಕಾರಸ್ತುತಯೋರ್ದಾಸ’’ ಎಂಬಂತೆ ಆ ದಿವ್ಯ ದಂಪತಿಗಳಿಗೆ ಶೇಷನು” ಎಂದು ಅನುಸಂಧಾನ ಮಾಡಿ, ಸಜ್ಜನರಾಗಿ, ಉದ್ಬವಿಸಿರಿ.
- नित्याश्लिष्टानवद्यौ दिनमणिरिव भा चैकभावी पती नः । त्यक्त्वा लोकावितारौ कृतपरिचरणा मानवाः ! विष्णुमात्रे ॥ एकीभूतत्रिवर्णात्मकपदगतयो वर्णयो स्सार मर्थम् । ध्यायं ध्यायं प्रबुद्धाः विमृशत सततं सन्त उज्जीवतेह ॥
- ಮೂಲ : ತತ್ತುವಮರುನಾನ್ನೋಡು ತನಿಯಿರೈಯ ನಿನ್ನ,
- ಶಿತ್ತಿನೈಯುಣರಾದೆನ್ನು ತಿರಳಹೈಯಾಹಿ ನಿರ್, ಮತನೈತ್ತನಿವಿಡಾದೇ ಮೈಯಿಲಾವಿಳಕ್ಕಮಾಕ್ಕಿ,
- ಉತ್ತಮನಡಿಮೈಯಾನ ವುಯಿರ್ನಿಲೈಯುಣರ್ಮಿನೀರೇ ॥ 5
ಅರ್ಥ :- ತತ್ತುವಂ : ತತ್ವಗಳ, ಆರು ನಾನು - ಓಡು : (6 X 4) ಇಪ್ಪತ್ತು ನಾಲ್ಕರೊಂದಿಗೆ, ತನಿ : ಅದ್ವಿತೀಯನಾದ, ಇರೈ - ಸ್ವಾಮಿಯು, ಅನ್ನಿ - ಆಗದೆ, ನಿನ್ನ - ಇರುವ, (ಪ್ರಕೃತಿಮಹದಹಂಕಾರಾದಿಗಳಿಗಿಂತಲೂ, ಭಗವಂತನಿಗಿಂತಲೂ, ವಿಲಕ್ಷಣನಾದ) ಶಿತಿ : ಜೀವಾತ್ಮನನ್ನು, ಎನ್ನುಂ - ಎಂದಿಗೂ, ಉಣರಾದು - ತಿಳಿದುಕೊಳ್ಳದೆ, ತಿರಳ : ಗುಂಪಾಗಿರುವ, ತೊಹೈ-ಆಹಿ : ನವಿಲುಗರಿ ಕಂತೆಯಾಗಿಮಾಡಿ, ನಿರ್ = ನಿಂತಿರುವಮಾನವರೇ ! ಮತನೈ : ಮಕಾರಾರ್ಥವಾದ ಜೀವನನ್ನು, ತನಿ-ವಿಡಾದೇ : ಬೇರೆಯಾಗಿಮಾಡದೆ, ಮೈ-ಇಲಾ - ಕಾಡಿಗೆ ಕಟ್ಟದ, ವಿಳಕ್ಕಂ-ಆಕ್ಕಿ - ದೀಪವನ್ನಾಗಿ ಮಾಡಿ, (‘‘ಮನ-ಜ್ಞಾನೇ’’ ಎಂಬುದರಿಂದ ನಿಷ್ಪನ್ನವಾದ ರೂಪದರ್ಥ) ಉತ್ತಮನ್ - ಪುರುಷೋತ್ತಮನಿಗೆ, ಅಡಿಮೈಯಾನ-ದಾಸ್ಯರೂಪವಾದ, ಉಯಿರ್ -ನಿಲೈ : ಜೀವನ ಸ್ಥಿತಿಯನ್ನು (ಭಗವದ್ಧಾಸ್ಯಾತ್ಮಕವಾದ ಜೀವಾತ್ಮನ ಸ್ವಾಭಾವಿಕವಾದ ಆಕಾರವನ್ನು) ಉಣರ್ಮಿನೀರ್ - ಅನುಸಂಧಾನಮಾಡಿರಿ.
ತಾತ್ಪರ :- ಪ್ರಕೃತ್ಯಾದಿಗಳಿಗಿಂತಲೂ, ಬುದ್ದಿ-ಕಾಲ-ಶುದ್ಧಸತ್ವಗಳಿಗಿಂತಲೂ, ಮತ್ತು ಪರಮಾತ್ಮನಿಗಿಂತಲೂ ಬೇರೆಯಾಗಿರುವ ಜೀವಾತ್ಮನನ್ನು ಎಂದೂ ನಿಜವಾಗಿ ಅರಿಯದೆ, ನವಿಲುಗರಿಯ ಕಂತೆಯಂತೆ ಎಲ್ಲದರೊಂದಿಗೂ ಬೆರೆಸಿ, ಸಮೂಹಾತ್ಮಕವಾಗಿ ತಿಳಿದು, 482 ತಿರುಮಂತಿರಚುರುಕ್ಕು ಅನುಭವಿಸುತ್ತಿರುವ ಮಾನವರೇ ! ಈ ಜೀವನನ್ನು ಪ್ರಕೃತಿ-ಮಹತ್ -ಅಹಂಕಾರ- ಪಂಚಜ್ಞಾನೇಂದ್ರಿಯ-ಪಂಚಕರ್ಮೇಂದ್ರಿಯ- ಮನಸ್ಸು, ಪಂಚತನ್ಮಾತ್ರೆಗಳು- ಪಂಚಭೂತಗಳು’’ ಎಂಬ 24 ತತ್ವಗಳಿಗಿಂತ ಬೇರಟ್ಟವನೆಂದೂ, ‘ಮನ-ಜ್ಞಾನೇ’’ ಎಂಬ ಧಾತುವಿನಿಂದ ಕರ್ತರಿ ಲ್ಯುಡಂತವಾಗಿಸಿ, ಜ್ಞಾನಾಶ್ರಯನೆಂದೂ,,ಇದರಿಂದಲೇ ಅಚೇತನವಲ್ಲವೆಂದೂ, ‘ಮನ-ಪರಿಮಾಣೇ’’ ಎಂಬ ಪರಿಮಾಣ ಸಾಮಾನ್ಯಾರ್ಥಕ ಧಾತುವಿನಿಂದ ರೂಪಗೊಳಿಸಿ, ಪರಿಮಾಣವಿಶೇಷದಲ್ಲಿ ಕೊನೆಗೊಳಿಸಿ, ಅಣುಪರಿಮಾಣನೆಂದೂ, ಇದರಿಂದಲೇ ವಿಭುವಾದ ಈಶ್ವರನಲ್ಲವೆಂದೂ, ವಿಶದವಾಗಿತಿಳಿದು, ಈ ತತ್ವಗಳಿಂದ ನಿರಾಕಾಂಕ್ಷವಾಗುವಂತೆ ಮಾಡದೆ. ‘ಮನ-ಜ್ಞಾನೇ’’ ಎಂಬ ಧಾತುವಿನಿಂದ ಜ್ಞಾನಸ್ವರೂಪನೆಂದೂ, ಸ್ವಯಂಪ್ರಕಾಶನೆಂದೂ, ಕಿಟ್ಟಕಟ್ಟದ ದೀಪದಂತೆ, ಇರುವನೆಂದೂ ಅರಿಯಿರಿ. ಅಷ್ಟೇ ಅಲ್ಲದೆ ಪರಮಪುರುಷನಾದ ಶ್ರೀಮನ್ನಾರಾಯಣನಲ್ಲಿ ತನ್ನ ದಾಸ್ಯವೃತ್ತಿಯೇ ತನ್ನ ಸ್ವರೂಪವೆಂಬುದನ್ನು ಪ್ರಣವದ ಮಕಾರಾರ್ಥಲಬ್ಧವಾದ ಜೀವಾತ್ಮನ ಸ್ವಭಾವವೆಂದು ಅನುಸಂಧಾನಮಾಡಿ, ತತ್ವ ಯಾಥಾರ್ಥಜ್ಞಾನಿಗಳಾಗಿ ಉದ್ಬವಿಸಿರಿ. ನಿತ್ಯ ಸುಖವನ್ನು ಅನುಭವಿಸುವವರಾಗಿರಿ. तत्वेभ्य ष्षट्चतुभ्र्भ्योऽप्यपरमनुपमात् ब्रह्मणोऽन्यं परस्मात् । आत्मानं नावगत्य क्वचिदपि कथमप्यात्तसङ्घातबोधाः ॥ मर्त्याः पिच्छोपमाना: पृथगकृतमकारार्थकं तं प्रदीपम् । कृत्वाथात्मीयदास्यं ह्यनुभवत परे पुंसि चामोदयध्वम् ॥ ಮೂಲ : ತನದಿವೈಯನೈತುಮಾಹ ತಾನಿರೈಯಾಹು ಮಾಯನ್, ಉನದೆನುಮುಣರಿ ತಾರಾದುಮಕ್ಕು ನೀರುರಿಮೈಯುತ್ತೀರ್, ಎನದಿವೈಯನೈತ್ತುಂ ಯಾನೇಯಿರೈಯೆನು ಮಿರುತೀರ, ಮನವೆನುಮಿರಣ್ಣಿನ್ ಮಾರಾವ
ಮಾತುರೇ ॥ 6 ಅರ್ಥ :- ಇವೈ-ಅನೈತ್ತುಂ : ಈ ಸಮಸ್ತ ವಸ್ತುಗಳೂ, ತನದು- ಆಹ ತನ್ನಾಳ್ವಿಕೆಗೊಳಪಟ್ಟು, ತಾನ್ : ತಾನು, ಇ-ಆಹುಂ = ಈಶ್ವರನೂ ಆಗಿರುವನು, ಮಾಯನ್ : ಅದ್ಭುತಸ್ವಭಾವದವನು, ಉನದು - ನಿಮ್ಮದು, ಎನುಂ-ಉಣರಿ= ಎಂಬ ಜ್ಞಾನವನ್ನು, ತಾರಾದು = ಕೊಟ್ಟಿರುವುದಿಲ್ಲ ನೀರ್ - ನೀವು, ಉಮಕ್ಕು = ನಿಮಗೆ, ಉರಿಮೈ = ಪರತಂತ್ರವಾಗಿರುವಿಕೆಯನ್ನು, ಉತ್ತೀರ್ = ಹೊಂದಿರುವಿರಿ, ಮನ-ಎನುಂ-ಇರಂಡಿನ್ = ‘ಮನ’’ ಎಂಬ ಎರಡು ಪದಗಳಿಂದ (ನಮಃ ಎಂಬುದನ್ನು ಹಿಂದುಮುಂದಾಗಿ M. ತಿರುಮಂತಿರಚುರುಕ್ಕು 483 ಮಾಡಿಕೊಳ್ಳಬೇಕು) ಇವೆ-ಅನೈತ್ತುಂ = ಈ (ದೇಹೇಂದ್ರಿಯಾದಿಗಳು) ಎಲ್ಲವೂ, ಎನದು - ನನ್ನವು, ಯಾನೇ - ನಾನೇ ತಾನೇ, ಇರೆ = ಸ್ವಾಮಿಯು, (ಸ್ವತಂತ್ರನು) ಎನುಂ-ಇರಣ್ಣು - ಎಂಬ ದುರಭಿಮಾನವೆರಡೂ, ತೀರ : ನಶಿಸುವಂತೆ ಮಾಡಿದರೆ, ಮಾರಾ = (ಪ್ರವಾಹದಂತೆ) ಸದಾ ಮೇಲೆ ಮೇಲೆ ಬರುತ್ತಾ ಇರುವ, ವಲ್ -ವಿನೈ - ಪ್ರಬಲವಾದ ಪಾಪಗಳನ್ನು ಮಾತ್ತುವೀರ್ : ಹೋಗಲಾಡಿಸಿಕೊಳ್ಳುವಂತಾಗುವಿರಿ. ತಾತ್ಪರ:- ಶ್ರುತಿಃ ಸ್ಮೃತಿಃ ಮವೈವಾಜ್ಞಾ’’ ಎಂದೂ, ‘‘ತಸ್ಮಾತ್ ಶಾಸ್ತ್ರಂ ಪ್ರಮಾಣಂ ತೇ ಕಾರಾಕಾರವ್ಯವಸ್ಥಿತ್ | ಜ್ಞಾತ್ವಾಶಾಸ್ತ್ರವಿಧಾನೋಕ್ತಂ ಕರ್ಮಕರ್ತುಮಿಹಾರ್ಹಸಿ !!’’ ಎಂದು ಸರ್ವನಿಯಂತಾವಾದ ಪರಮಾತ್ಮನ ಆದೇಶದಂತೆ, ಉಪದೇಶದಂತೆ ಶಾಸ್ತ್ರವು ಭಗವಂತನ ಆಜ್ಞಾರೂಪಕವೆಂದೂ, ಅದರಲ್ಲಿ ಪೂರ್ಣನಂಬಿಕೆಯಿರಬೇಕೆಂದೂ, ಮೊದಲು ಅರಿಯಬೇಕು. ಆ ಶಾಸ್ತ್ರಗಳು ‘ಸಮಸ್ತವಸ್ತುಗಳೂ ಪರಮಾತ್ಮನವು. ಆತನೇ ಸರ್ವೆಶ್ವರನು, ಜೀವಾತ್ಮರಿಗೆ ಸಹಜವಾದ ಸ್ವಾತಂತ್ರ್ಯವಾಗಲೀ ಸ್ವಾಮಿತ್ವವಾಗಲೀ ಇಲ್ಲ’’ ಎಂದು ಘೋಷಿಸುತ್ತವೆ. ಹೀಗಿದ್ದರೂ ಪ್ರಕೃತಮಂತ್ರದ “ನಮಃ” ಎಂಬುದರ ಅರ್ಥವನ್ನು ಅರಿಯದ ನರರೇ ! ನೀವು ‘‘ಸಮಸ್ತಕ್ಕೂ ನಾವೇ ಪ್ರಭುಗಳು, ಎಲ್ಲವೂ ನಮ್ಮವು’’ ಎಂದು ಭಾವಿಸಿರುವಿರಿ, ಅದು ಕೇವಲ ಭ್ರಮೆ, ಅದು ಹೋಗಬೇಕು. ಅದಕ್ಕಾಗಿ ತತ್ವಾರ್ಥವಡಗಿರುವ ಮಂತ್ರಾರ್ಥವನ್ನು ತಿಳಿಯಿರಿ: ಅಹಿರ್ಬುಧರು ಉಪದೇಶಿಸಿರುವುದನ್ನು ಆಲಿಸಿ, ‘‘ನಮಃ’’ ಎಂಬುದನ್ನು ಒಡೆದು ಎರಡು ಪದಗಳನ್ನಾಗಿಯೂ, ಅವನ್ನೂ ಹಿಂದುಮುಂದಾಗಿಯೂ, ಮಾಡಿದರೆ ‘‘ಮ,ನ’’ ಎಂದಾಗುವುದು. “ಮ’’ ಎಂಬುದು ಅಸ್ಮತ್ ಶಬ್ದದ ಷಷ್ಠಿವಿಭಕ್ಕಂತದ ರೂಪ. ‘ಕಿಂಚಿತ್’’ ‘‘ಸ್ವಾತಂತ್ರಂ’’ ಎಂಬೆರಡು ಪದಗಳನ್ನು ಅಧ್ಯಾಹಾರ ಮಾಡಿಕೊಂಡು, “ಯಾವುದರವಿಷಯದಲ್ಲಿಯೂ ನನಗೆ ಸ್ವಲ್ಪವೂ ಸಹಜವಾದ ಸ್ವಾತಂತ್ರ್ಯವಿಲ್ಲ’ ಎಂಬ ಜ್ಞಾನವನ್ನು ದೃಢಪಡಿಸಿಕೊಳ್ಳಿರಿ. ಹಿಂದಿನ ಭ್ರಮವು ಹೋಗುವುದು. ಅನನ್ಯತ್ವ ಜ್ಞಾನ ನೆಲೆಗೊಳ್ಳುವುದು. ಹಾಗಲ್ಲದೆ ಪ್ರಬಲ ಪಾಪಗಳು ಹೋಗುವುದಿಲ್ಲ. ತತ್ವಜ್ಞಾನಮಾತ್ರದಿಂದಲೇ ನಿವಾರಣೆಯಾಗುವ ಬೇರಾವುದರಿಂದಲೂ ನಶಿಸದ ಪಾಪಗಳನ್ನು ನೀಗಿಕೊಂಡು, ನಿತ್ಯಸುಖಿಗಳಾಗಿ ಬಾಳಿರಿ. स्वार्थायत्ताखिलस्वः स्वय मिह सकलाधीश आश्चर्यचर्यः । यौष्माकीणं किलेदं त्विति किमपि न दत्तं च वः पारतन्त्यम् ॥ ಆfa’’’’ = ’’’’ ’ स्वाम्यस्मीत्यज्ञतां च व्यपनयत बलैनांसि च ध्वंसयध्वम् ॥ | ઈ ६484 ತಿರುಮಂತಿರಚುರುಕ್ಕು ಮೂಲ : ಅಳಿವಿಲಾವುಯಿರ್ಹಳೆಲ್ಲಾಮರುಕ್ಕನಾಯಳಿಯಾ ವೀಶನ್, ವಳಿಯಲಾವಳಿವಿಲಕ್ಕು ಮತಿಯೆಳ ಮಾಯಮೂರಿ, ವಳುವಿಲಾದಿವೈಯನೆತ್ತುಂ ವತ್ತಿಲ್ವೈತುಮಿ ಮಾಲ್ಯ, ನಳುವಿಲಾ ನಾರವಾಕ್ಕಿಲ್ ನಾಡಿನೀರ್ ನಣುಹುವಿರೇ ॥ 7 ಅರ್ಥ :- ಅಳಿವು ಇಲಾ :
ಅಳಿವಿಲ್ಲದ, ಉಯಿಹಳು-ಎಲ್ಲಾಂ ಸಮಸ್ತಾತ್ಮರಿಗೂ, ಮತಿ : ಜ್ಞಾನವು, ಎಳ : ಉದಯಿಸುವಂತೆ, ಅರುಕ್ಕನ್-ಆಯ್ = ಸೂರನಂತೆ ಪ್ರಕಾಶಿಸುವವನಾಗಿ, ವಳಿಯಲಾ - ಸನ್ಮಾರ್ಗವಾಗದ, ವಳಿ - ಮಾರ್ಗದಿಂದ, ವಿಲಕ್ಕುಂ : ನಿವಾರಣೆ ಮಾಡಿದವನಾದ, ಅಳಿಯಾ ಈ ಸರ್ವೆಶ್ವರನಾದ, ಮಾಯ :
ನಾಶವಿಲ್ಲದ, ಈಶನ್ = ಆಶ್ಚರ್ಯವನ್ನುಂಟುಮಾಡುವ, ಮೂರ್ತಿ: ವಿಗ್ರಹವುಳ್ಳವನಾದ, ಇವೈ-ಅನೈತ್ತುಂ : ಈ ಸಕಲ ವಸ್ತುಗಳನ್ನೂ, ವಳುವಿಲಾದು - ಚಲಿಸದಂತೆ, ವಯಿತ್ತಿಲ್ : ಹೊಟ್ಟೆಯಲ್ಲಿ ವೈತ್ತು 2 ಇರಿಸಿ, ಉಮಿಳನ : ಹೊರಕ್ಕೆ ಬರಸಿದವನಾದ, ಮಾಲೆ = ಸ್ವಾಮಿಯನ್ನು, ನಳುವಿಲಾ = ಬಿಟ್ಟು ಹೋಗದಿರುವ ನಾರ-ವಾಕ್ಸಿಲ್ = ನಾರಶಬ್ದದಲ್ಲಿ ನಾಡಿ-ಹುಡುಕಿ (ಸಾವಧಾನವಾಗಿ ಅನುಸಂಧಾನ ಮಾಡಿ) ನೀರ್ = ಜ್ಞಾನವನ್ನು ಸಂಪಾದಿಸಿದ ನೀವು, ನಣುಹುವೀರ್ = ಆಶ್ರಯಿಸಿದವರಾಗುವಿರಿ. ತಾತ್ವರ :- ನಾವು ಬಹಳ ವಿದ್ಯಾವಂತರಾಗಿರಬಹುದು, ಆದರೆ ಸಂಪ್ರದಾಯಾಗತ ತತ್ವಾರ್ಥಗಳನ್ನರಿತು, ಉಪದೇಶಿಸುವ ಸದಾಚಾರರನ್ನು ಆಶ್ರಯಿಸಲೇಬೇಕು. ಸರ್ವಂಮನ್ಯರೆಂಬ ದುರಭಿಮಾನದಿಂದ ಲಜ್ಜೆಗೊಂಡು ಆಶ್ರಯಿಸದೆ ಇರಬಾರದು, ಓ ಮಾನವರೇ ! ‘‘ಅಂತಃ ಬಹಿಃ ಸರ್ವತ್ರಚ’ ವ್ಯಾಪಿಸಿರುವ ಆ ಪರಮಾತ್ಮನ ಯಾಥಾರ್ಥ್ಯವು ‘‘ನಾರಾಯಣ’’ ಎಂಬುದರಲ್ಲಿದೆ. ಶರಣ್ಯಗುಣಪೂರ್ಣನೂ ಸರ್ವರಕ್ಷಕನೂ, ಮತ್ತು ಸರ್ವಶೇಷಿಯೂ ಆದ ಪರಮಾತ್ಮನ, ಮತ್ತು ಶರಣಾಗತನೂ, ಆತ್ಮಗುಣ ಪೂರ್ಣನೂ, ರಕ್ಷಣೀಯನೂ ಮತ್ತು ಶೇಷಭೂತನೂ ಆದ ಜೀವಾತ್ಮನ ರೀತಿಗಳನ್ನು ಬೇರೆ ಬೇರೆ ಆಕಾರಗಳಿಂದ ಪ್ರಕಾಶಪಡಿಸುವುದು. “ನಾರಗಳನ್ನು ಅಯನ’ವಾಗಿ ಉಳ್ಳವನು, ಅಥವಾ ‘‘ನಾರ’ಗಳಿಗೆ “ಅಯನ’ ವಾಗಿರುವನು ಎಂದು, ಬಹುಹಿ ತತ್ಪುರುಷ ಸಮಾಸಗಳಿಂದ ತಿಳಿಯುವುದು. (ಸರ್ವಕಾರಣನೂ ಸರ್ವರಕ್ಷಕನೂ ಮತ್ತು ಸರ್ವಶೇಷಿಯೂ ಆದ ಶ್ರಿಯಃಪತಿಗೇ ಜೀವಾತ್ಮನಾದ ನಾನು ನಿತ್ಯ ನಿರುಪಾಧಿಕ ಶೇಷನು). ಇದನ್ನು ಅನುಸಂಧಾನ ಮಾಡಿ, (ಸಂಕೀರ್ತನೆ ಮಾಡಿ, ಪರಮಾತ್ಮನನ್ನು ಸೇರುವಿರಿ, ಆನಂದಿಸುವಿರಿ, ಈ ಸಾರಾರ್ಥವನ್ನೇ ‘ಯಚ್ಚಕಿಂಚಿತ್ ಜಗತ್ಯಸ್ಮಿನ್ ದೃಶ್ಯತೇ ಶೂಯತೇಪಿ ವಾ | ಅಂತರ್ಬಹಿಶ್ಚ ತತ್ಸತ್ವಂ ವ್ಯಾಪ್ಯನಾರಾಯಣಸ್ಸಿತಃ” ಎಂಬ ಉಪನಿಷದ್ವಾಕ್ಯವು ಸ್ಪಷ್ಟಿಕರಿಸುತ್ತದೆ. ತಿರುಮಂತಿರಚುರುಕ್ಕು नित्यानां निखिलात्मनां सुमतिदो भास्वान् सहस्रांशुवत् । दुर्मार्गाद्विनिवारकोऽद्भुतवपुः नित्य स्समस्ताधिपः ॥ विश्वं न्यस्यति निश्चलं स्वजठरे काले बहिर्न्यस्यति । श्रीशो यश्च विमृश्य संश्रयत तं नारेति शब्दे नराः ॥ 485 ಮೂಲ : ವಯನಮೊಗ್ರರಿನುರೈಪ್ಪಾ ವನ್ಕಳಿಲ್ ವಣಂಗವೆಳಹಿ, ನಯನಮುಳ್ಳಿನಾಳುಂ ನಳ್ಳಿರುಳ್ ನಣ್ಣಿನಿರ್, ಅಯನಮಿವ್ವನೈತುಕ್ಕುಂ ತಾನವೈ ತನಕ್ಕಯನಮನ್ನ, ಪಯನುಮಾಯ್ಪದಿಯುಮಾನ ಪರಮನೈಪ್ಪಾಡುಮಿನೀರೇ ॥ 6
ಮೂಲ :- ವಯನಂ-ಒನ್ನು = ವಚನ (ಶಾಸ್ತ್ರ)ವೊಂದನ್ನು, ಅರಿನು - ಅರಿತು (ನಿರೂಪಿಸಿ) ಉರೈಪ್ಪಾರ್ - ಉಪದೇಶಿಸಿರುವವರ (ಆಚಾರ್ಯರ) ವನ್ -ಕಳಲ್ = (ಆಶ್ರಿತರನ್ನು ಬಿಡದ) ದೃಢವಾದ ಪಾದಗಳನ್ನು, ವಣಂಗ = ನಮಿಸಲು, ವೆಳ್ಹಿ = ಲಜ್ಜೆಪಟ್ಟು, ನಾಳುಂ = ಒಂದು ದಿನವೂ, ಉಳ್ -ನಯನಂ-ಇ - ಅಂತರ್ದೃಷ್ಟಿಯಿಲ್ಲದೆ, ನಳ್ -ಇರುಳ್ -ನಣ್ಣಿನಿರ್ - ಗಾಡಾಂಧಕಾರದಲ್ಲಿರುವ ಮಾನವರೇ ! ತಾನ್ - ವಿಭುವಾದ ತಾನು, ಇವ್ವನೈತುಕ್ಕುಂ : ಈ ಎಲ್ಲಕ್ಕೂ, ಅಯನಂ = ಪ್ರಾಪ್ಯವಾದ (ಸೇರಬೇಕಾದ ಸ್ಥಾನ) ಅವೈ = ಆ ವಸ್ತುಗಳೆಲ್ಲವೂ, ತನಕ್ಕು : (ಪ್ರತೀಕಾರಾನರ್ಹನಾದ) ತನಗೆ, ಅಯನಂ = ಪ್ರಾಪ್ಯಗಳು, ಎನ್ನ : ಎನ್ನುವ, ಪಯನುಮಾಯ್-ಫಲವೂ ಆಗಿ, ಪದಿಯುಮಾನ = ಆಧಾರವೂ ಆದ, ಪರಮನೈ : ಪರಮಪುರುಷನನ್ನು, ಪಾಡುಮಿನೀರ್ : ಗಾನಮಾಡಿರಿ.
ತಾತ್ಪರ :- ರಃ’ ಅಳಿಯುವುವು. “ನರಃ” ಎಂದಿಗೂ ಅಳಿಯವು. ಚೇತನಗಳು, ‘‘ನಾರ’’ ಚೇತನರ ಸಮೂಹ, ಅದೂ ಅನೇಕ ಎಂದೂ, ನರಃ ಯಾವುದರಿಂದಲೂ ನಾಶವಿಲ್ಲದ, ನೇತಾ ಸಶ್ವೇಶ್ವರ, ಅವನೊಡನೆ ಪ್ರಮಾಣಾನುಗುಣವಾಗಿ ಸಂಬಂಧವುಳ್ಳವೆಲ್ಲವೂ ನಾರ’’ ಎಂದೂ ಅರ್ಥ. ಓ ಮನುಜರೇ ! ಈ ಅರ್ಥವನ್ನು ಸಾವಧಾನದಿಂದ ಅನುಸಂಧಾನ ಮಾಡುತ್ತಾ ನೀವು ‘‘ನಾಶವಿಲ್ಲದ ಎಲ್ಲ ಜೀವರಿಗೂ ಜ್ಞಾನೋದಯವಾಗುವಂತೆ ಸೂರನ ಹಾಗೆ ಪ್ರಕಾಶಿಸುವವನೂ, ದುರ್ಮಾರ್ಗದಿಂದ ನಿವಾರಿಸುವವನೂ, ಸಮಸ್ತವನ್ನೂ ಪ್ರಳಯದಲ್ಲಿ ತನ್ನುದರದಲ್ಲಿರಿಸಿಕೊಂಡು ಮತ್ತೆ ಸೃಷ್ಟಿಸುವಾಗ ಹೊರಬರಸುವವನೂ, ನಿತ್ಯನೂ, ಅದ್ಭುತ ದಿವ್ಯಮಂಗಳ ವಿಗ್ರಹನೂ, ಮತ್ತು ಸರ್ವೆಶ್ವರನೂ ಆದ ಶ್ರೀಯಃಪತಿಯನ್ನು ‘ನಾರ” ಎಂಬ ಶಬ್ದದಲ್ಲಿ ವಿಮರ್ಶಿಸಿ ತಿಳಿಯಿರಿ. ಚೆನ್ನಾಗಿ ಅರಿತರೆ ಸಾಕ್ಷಾನ್ನಾರಾಯಣನನ್ನು ಕಾಣುವಿರಿ. 486 ತಿರುಮಂತಿರಚ್ಚುರುಕ್ಕು शास्त्रीयं वचनं सदोपदिशता मङ्घी गुरूणां दृढौ । नन्तुं वीतनिजान्तरङ्गनयना दुर्मानिनो व्रीडिताः । । गाढध्वान्तचिरोषिताः ! अयनतां प्राप्तोऽखिलानां च यः । यस्यैतेऽयन मीदृशं फलममुं नाथं परं गायत ॥ ಮೂಲ: ಉಯರ್ನವರುಣರ್ ವಾತ್ತಾಲುಹನ್ದಕುತ್ತೇವಲ್ಲಾ, ಅಯರ್ನ್ನುನೀರೈಂಬುಲನ್ ಹಳ್ಳಡಿಮೈಪೂಣ್ಡಲಮರುಹಿರ್, ಪಯವೈಯನೈತುಮೇನುಂ ಪರಮನಾರ್ ನಾಮಮೊಲ್, ವಿಯನ್ನಪೇರಡಿಮೆತೋನುಂಡೇಟು ಮೈಮೇವುವೀರೇ ॥ ೨
ಅರ್ಥ :- ಉಯರ್ನವರ್ - (ಸರ್ವಸ್ಮಾತ್ಪರನಾದ) ಪರಮಾತ್ಮನು, ಉಣರ್ನವಾತ್ತಾಲ್ ಸಂಕಲ್ಪಿಸಿದಂತೆಯೇ, ಉಹನ : ನಿತ್ಯಸೂರಿಗಳು ಆಸೆಯಿಂದಮಾಡುವ, ಕುತ್ತೇವಲ್ಲಾಂ : ಸಕಲವಿಧ ಕೈಂಕಯ್ಯಗಳನ್ನೂ, ಅಯರ್ನ್ನು - ಮರೆತುಬಿಟ್ಟು ನೀರ್ = (ಪರಮಪುರುಷಾರ್ಥವನ್ನು ಪಡೆಯಲು ಸಮರ್ಥರಾದ ನೀವು, ಐಂ-ಪುಲನ್ಗಳು : ಪಂಚೇಂದ್ರಿಯಗಳಿಗೆ, ಅಡಿಮೈ : ಸೇವೆಯನ್ನು, ಪೂಂಡು - ಮಾಡುವುದರಲ್ಲಿ ಸಂಲಗ್ನರಾಗಿ, ಅಲಮರುಹಿರ್ - ತಡಬಡಾಯಿಸುತ್ತಿರುವವರೇ ! ಪಯನ್ನು : ವ್ಯಾಪಿಸಿಕೊಂಡು, ಇವೈ-ಅನೈತ್ತುಂ ಎಂದುಂ : ಈ ಸಮಸ್ತವನ್ನು ಧರಿಸಿಕೊಂಡಿರುವ, ಪರಮನಾರ್ : ಪರಮಪುರುಷನ, ನಾಮಂ-ಒಲ್ : (ಇತರ ಹೆಸರುಗಳಿಗಿಂತ ಬಹಳ ವ್ಯಾಪಕತಮವಾದ) ‘‘ನಾರಾಯಣ’’ ಎಂಬ ಒಂದು ಹೆಸರಿನಶಬ್ದದಲ್ಲಿ ವಿಯಂದ = ವಿಲಕ್ಷಣವಾದ, ಪೇರ್ = ಬಲುಹಿರಿಯದಾದ, ಅಡಿಮೈ - ಸೇವೆಯನ್ನು, ತೋನುಂ = ತೋರಿಸುವ (ಬೋಧಿಸುವ) ವೇಟುಮೈ : (ಚತುರೀ) ವಿಭಕ್ತಿಯನ್ನು, ಮೇವುವೀರ್ = ಆದರದಿಂದ ಪರಿಶೀಲಿಸಿರಿ.
- ತಾತ್ವರ :- ಓ ಮಾನವರೇ! ನೀವು ಪರಮಪುರುಷಾರ್ಥವನ್ನು ಪಡೆಯಲು ಅರ್ಹರು. ನಿಸ್ಸಮಾಭ್ಯಧಿಕನಾದ ಆ ಪರಮಾತ್ಮನ ಸಂಕಲ್ಪಕ್ಕೆ ಅನುಸಾರವಾಗಿ, ಅತಿ ಸಂತೋಷದಿಂದ ನಿತ್ಯಸೂರಿಗಳುಮಾಡುವ ಕೈಂಕಯ್ಯಗಳನ್ನೆಲ್ಲಾ ಮಾಡತಕ್ಕವರು. ಆದರೆ ಅದೆಲ್ಲವನ್ನೂ ಮರೆತು, ನಶ್ವರವಾದ ಪಂಚೇಂದ್ರಿಯಗಳಿಗೆ ಅಡಿಯಾಳಾಗಿ, ಆ ಸೇವೆಯಲ್ಲಿಯೇ ಮಗ್ನರಾದಿರಿ. ಪೇಚಾಡುತ್ತಿರುವಿರಿ. ಸಮಸ್ತಕ್ಕೂ ಆಧಾರನಾಗಿರುವ ಪರಮಪುರುಷನ ನಾಮಗಳಲ್ಲಿ ಅತ್ಯಂತ ಮೇಲೆನಿಸಿದ ನಾರಾಯಣ’’ ಎಂಬುದರಲ್ಲಿ ಪೂರ್ಣತಿಳುವಳಿಕೆ ಹೊಂದಿ, ಮೂಲಮಂತ್ರದ ಮೂರನೆಯಪದವಾದ ಇದರಕೊನೆಯಲ್ಲಿರುವ ಚತುರ್ಥಿ’ ವಿಭಕ್ತಿಯಯ ಅರ್ಥವನ್ನು ಪರಿಶೀಲಿಸಿರಿ. ಸಕಲೇಷ್ಟಗಳನ್ನೂ ಪಡೆಯುವಿರಿ.
ತಿರುಮಂತಿರಚ್ಚುರುಕ್ಕು संकल्पस्यानुरूपा बहुविधवरिवस्या उपास्याः परस्य । पुंसो विस्मृत्य पञ्चेन्द्रियमरिचणव्याकुलीभूतमर्त्याः ! ॥ व्याप्येदं य स्समस्तं विधरति परम स्तस्य नारायणेति । 487 प्राह्णे चित्रां दिशन्तीं परिचरणविधिं चाद्रियध्वं विभक्तिम् ॥ ९ ಮೂಲ : ಎಣ್ಣೆಪರವುಂ ಶೀರೋರಂಗಳುಕ್ಕೀನ್ದವೆಟ್ಟಿಲ್, ಉಣ್ಣವಾರುರೈಪ್ಪಾರ್ಪೋಲ ವೊಡ್ಡದುಪೊರುಳುರೆತ್ತೋಂ, ಪಣ್ಣುನಾನ್ಮಯೋರ್ಕಾಕ್ಕುಂ ಮಾನದಿಯಿವೈಯತ್ತು, ಕಣ್ಣವಳ್ಳಾವಿಳ್ಳಕ್ಕರುದುವಾರ್ಕಾಲಾರೇ ॥
10
ಅರ್ಥ :- ಎಣ್ -ದಿತ್ಯ = ಎಂಟುದಿಕ್ಕುಗಳಲ್ಲೂ (ಎಲ್ಲಕಡೆಯೂ) ಪರವುಂ : ಹರಡುವ, ಶೀರ್ -ಓರ್ : (ಸದ್ಗುಣಗಳಿಂದ ಬರುವ) ಕೀರ್ತಿಯುಳ್ಳ ಸದಾಚಾರದಿಂದ, ಎಂಗಳನ್ನು = ನಮಗೆ, ಈಂದ : ಉಪದೇಶಿಸಲ್ಪಟ್ಟ, ಎಟ್ಟಿಲ್ : ಎಂಟಕ್ಷರದಲ್ಲಿ (ಮೂಲಮಂತ್ರದಲ್ಲಿ ಒನ್ನದು-ಪೊರುಳ್ = ಒಂಬತ್ತು (ಅಕಾರ, ಲುಪ್ತಚತುರ್ಥಿ ಉಕಾರ, ಮಕಾರ, ನಮಶಬ್ದ (ನ,ಮ,ಕಾರ) ನಾರಶಬ್ದ, ಅಯನಶಬ್ದ ಚತುರ್ಥಿ, ಹೀಗೆ ಇವುಗಳ) ಅರ್ಥಗಳನ್ನು, ಉಂಡವಾರು ಅನುಭವಿಸಿದಂತೆಯೇ, ಉರೈಪ್ಪಾರ್-ಪೋಲ - ಹೇಳುವವರ ಹಾಗೆ, ಉರೈತ್ಕಂ - ಪ್ರತಿಪಾದಿಸಿರುವೆನು, ಪಂಡು - ಅನಾದಿಯಾದ, ನಾಲ್ -ಮರೆಯೋರ್ = ನಾಲ್ಕು ವೇದಗಳನ್ನು ಅರಿತವರಿಂದ, ಕಾಕ್ಕುಂ : ರಕ್ಷಿತವಾದ, ಮಾ-ನಿದಿ = ದೊಡ್ಡನಿಧಿಯಂತೆ, ಇವೈ-ಅನೈತ್ತುಂ - ಈ ಸಕಲಾರ್ಥಗಳನ್ನೂ, ಕಂಡವರ್ = ಅರಿತವರು, ವಿಳ್ಳಾರ್ : ಪ್ರಕಾಶಪಡಿಸರು, ವಿಳ್ಳಕ್ಕರುದುವಾರ್ : ಪ್ರಕಟಪಡಿಸಲು ಇಷ್ಟವುಳ್ಳವರು, ಕಾಣ್ಣಿಲಾರ್ = ಕಾಣುವುದಿಲ್ಲ.
ತಾತ್ಪರ :- ಎಂಟುದಿಕ್ಕುಗಳಲ್ಲೂ ಕೀರ್ತಿಯನ್ನು ಪಡೆದ ಸದಾಚಾರರು ಉಪದೇಶಿಸಿದುದು ಎಂಟೇ ಅಕ್ಷರ. ಆದರೆ ಅದರಲ್ಲಿರುವ 9 ಅರ್ಥಗಳನ್ನೂ ಅವರು ಅನುಭವಿಸಿರುವಂತೆಯೇ ಅವರ ಅನುಗ್ರಹದಿಂದ ವಿಶದಪಡಿಸಿರುವೆನು. ಸಮಸ್ತವೇದಗಳನ್ನೂ ಅಧ್ಯಯನಮಾಡಿ, ಅದರಲ್ಲಿನ ಸಕಲಾರ್ಥ ವಿಶೇಷಗಳನ್ನೂ, ಅರಿತಿದ್ದರೂ, ಅಂತಹವರು ಇದನ್ನು ಪ್ರಕಟಿಸುವುದಿಲ್ಲವಲ್ಲಾ! ಮನಸ್ಸಿನಲ್ಲೂ ತಿಳಿಸಬೇಕೆಂಬ ಇಷ್ಟವಿಲ್ಲವಲ್ಲಾ! ಹಾಗಿರುವವರು ಕಾಣಿಸಲಿಲ್ಲವಲ್ಲಾ! ಎಂದು ಮರುಗುವರು. ರಹಸ್ಯವನ್ನು ರಹಸ್ಯವಾಗಿಯೇ ಇರಿಸಬೇಕೆಂಬ ನಿಯಮಕ್ಕೆ ಹೆದರಿ ಸುಮ್ಮನಾಗಿದ್ದಿರಬಹುದಾದರೂ, ಸಮಯಬಂದಾಗ ಸ್ಪಷ್ಟಪಡಿಸಬೇಕು. ಅದರಿಂದ ಉಜೀವನಗೊಳಿಸುವುದು ಅತ್ಯುತ್ತಮನ ಅವಶ್ಯ ಕರ್ತವ್ಯ ಎಂಬುದನ್ನು ವ್ಯಕ್ತಗೊಳಿಸಿರುವರು. ಅಪಾರವಾದ ವೇದಗಳನ್ನು ಅಧ್ಯಯನ ↑ 488 ತಿರುಮಂತಿರಚ್ಚುರುಕ್ಕು ಮಾಡಿಯೂ, ಅದರಲ್ಲಿ ಕಂಗೊಳಿಸುವ ಸಕಲೋಜೀವಕವಾದ ಮಹಾನಿಧಿಯಂತಿರುವ ಮಂತ್ರದ ಅರ್ಥವನ್ನು ತಿಳಿಯದವರಾಗಿ, ಉಪದೇಶಿಸಲೂ ಆಗದೆ ಆಯಿತಲ್ಲಾ! ಎಂದು ಮರುಗಿ, ಮುಂದಾದರೂ ಸಂಪ್ರದಾಯಾಗತಾರ್ಥವು ನಶಿಸದಿರಲೆಂದು ಗ್ರಂಥರೂಪವಾಗಿ ಪರಮದಯಾಳುವಾದ ಸ್ವಾಮಿ ದೇಶಿಕರು ಈ ರೀತಿಯಲ್ಲಿ ಕರುಣಿಸಿರುವರು. अष्टास्वाशासु येषां सुचरितसुगुणा व्यापृता देशिकैस्तैः । उक्तेष्वस्माक मष्टास्वतऩव मिह चार्थान् नवाहं यथावत् । चित्तारूढानुभूता अभिदधत इवानादिवेदाभिगुप्तम् । न्यासं न ब्रूयु रेतान् प्रकटनमनसो वा न दृश्यन्त एव । । श्रीदेशिकप्रबन्धस्थः “तिरुमन्त्रार्थसङ्ग्रहः” । गोपालार्येण सश्लोक स्सार्थोऽतन्यत सन्मुदे ॥ श्रीमते निगमान्तमहादेशिकाय नमः ॥ १० ॥3,08॥ |ಶ್ರೀಮತೇ ನಿಗಮಾಂತ ಮಹಾದೇಶಿಕಾಯ ನಮಃ !!