೧೦ ಪನ್ನಿರು-ನಾಮಮ್

ಪ್ರಾಯಶಃ ವಿಷ್ಣುಭಕ್ತರು ನಾಮವನ್ನು ಧರಿಸುವರು. ವಿಶೇಷವಾಗಿ ಶ್ರೀ ವೈಷ್ಣವರು ಧರಿಸುವುದೇ ಅಲ್ಲದೆ ತಾವು ಆಚರಿಸುವ ಕರ್ಮಗಳಿಗೆ ಅದು ಅಂಗವಾಗಿದ್ದು ಫಲಪ್ರದವಾಗುವುದೆಂದು ಅನೇಕ ಪ್ರಮಾಣಗಳಿಂದ ನಿರ್ಣಯಿಸಲ್ಪಟ್ಟಿರುವುದರಲ್ಲಿ ವಿಶ್ವಾಸವಿಟ್ಟಿರುವರು.

ಶ್ರೀಮದ್ದೇಶಿಕರು ತಮ್ಮ “ಸಚ್ಚರಿತ್ರರಕ್ಷೆ’ಯಲ್ಲಿ ‘ನಾಮಧಾರಣೆ’’, ಅದರ ಆಕಾರ, ಅಳತೆ, ಸಂಖ್ಯೆ, ಸ್ಥಳ, ಅಧಿದೇವತೆ, ಮತ್ತು ಆ ದೇವತೆಗಳ ರೂಪ, ವರ್ಣ, ಆಯುಧ, ಧ್ಯಾನ, ಹಾಗೆಯೇ ಫಲ’’ ಎಲ್ಲವನ್ನೂ ಸಪ್ರಮಾಣವಾಗಿಯೂ, ವಿಸ್ತಾರವಾಗಿಯೂ ವಿವರಿಸಿರುವರು. ಪ್ರಮಾಣಶರಣರಾದ ನಮಗೆ ಇದು ಬಹು ಮುಖ್ಯ. ಇದನ್ನೇ ತಿಳಿತಮಿಳಿನಲ್ಲಿ ಸಂಕ್ಷೇಪಿಸಿರುವರು. ಇದೇ ‘‘ಪನ್ನಿರುನಾಮಂ’ ಎಂಬುದು.

ಶಾರ್ವರಿ
ಚೈತ್ರ-ವೈಶಾಖ-ಜೇಷ್ಠ
1962
ಇತಿ, ಸದಾಚಾರದಯಾವಲಂಬೀ
ವಿದ್ವಾನ್. ಹ. ಗೋಪಾಲಾಚಾರ್ಯಃ
ನಂ. 14,4ನೇ ಕ್ರಾಸ್, ಕಾಳಿದಾಸ ರಸ್ತೆ ವಾಣಿವಿಲಾಸ್ ಮೊಹಲ್ಲ, ಮೈಸೂರು

॥3,0:॥ ॥ಶ್ರೀಮತೇ ನಿಗಮಾಂತ ಮಹಾದೇಶಿಕಾಯ ನಮಃ ।

ಪನ್ನಿರು-ನಾಮಮ್

ಮೂಲ : ಕೇಶವನಾಯ್ ನಿನ್ನು ಕೀಳ್ ದಿಶೆಯಿಲು ನೆತ್ತಿಯಿಲುಂ ತೇಶುಡೆಯ್ಯಾಳಿ ಹಳ್ ನಾನುಡನ್ ಕೆಂಪಶುಂಪೊನ್ಮ ಪೋಲ್, ವಾಶಮಿಹುತ್ತೆನ್ನೈ ಮಂಗಾಮರಾಕ್ಕು ಮರೆಯದನಾಲ್, ಆ ಮಿಹುತ್ತವಯನ್ ಮಕವೇದಿಯಿಲರುದನೇ ॥

1 ಅರ್ಥ :- ಆಶೆ-ಮಿಹುಂದ (ಭಗವದ್ವಿಷಯದಲ್ಲಿ) ನಿರತಿಶಯವಾದ ಭಕ್ತಿಯುಳ್ಳ ಅಯನ್ - ಬ್ರಹ್ಮನ, ಮಕ-ವೇದಿಯಿಲ್ - ಯಜ್ಞವೇದಿಕೆಯಲ್ಲಿ (ಉದ್ಭವವಾದ) ಅಬ್ಬುದನ್ = ಅದ್ಭುತ ವ್ಯಾಪಾರವುಳ್ಳ ದೇವಾಧಿರಾಜನು. ಕೇಶವನಾಯ್ = ಕೇಶವನೆಂಬ ದಿವ್ಯವಾದ ಅವತಾರವುಳ್ಳವನಾಗಿ, ತೇಶುಡ್ಡೆ - ತೇಜಸ್ಸುಳ್ಳ, ಆಳಿಹಳ್ -ನಾನ್ಸ್-ಉಡನ್ : ನಾಲ್ಕು ಚಕ್ರಗಳೊಂದಿಗೆ, ಶೆಂ-ಪಶುಂ-ರ್ಪೊ-ವಲೈ-ಪೋಲ್ = ಕೆಂಪಾಗಿಯೂ, ಅರಿಶಿನದಂತೆಯೂ ಇರುವ ಚಿನ್ನದ ಪರ್ವತದಂತೆ, ಕೀಳ್ - ದಿಶೈಯಿಲುಂ : ಪೂತ್ವದಿಕ್ಕಿನಲ್ಲೂ ನೆತ್ತಿಯಿಲುಂ - ಹಣೆಯಮೇಲೂ, ನಿನ್ನು : ಪ್ರತಿಷ್ಠಿತನಾಗಿ, ವಾಶಿ-ಮಿಹುತ್ : (ಪರವ್ಯೂಹಾದಿಗಳಿಗಿಂತ) ರಕ್ಷಣೆಯಲ್ಲಿ ಅತಿಶಯ ವ್ಯತ್ಯಾಸವನ್ನು ತೋರಿಸುತ್ತಾ, ಮರೆಯದನಾಲ್ : ವೇದಗಳಿಂದ, ಎನ್ನೆ - ನನ್ನನ್ನು, ಮಂಗಾಮಲ್ = (ಅವಿದ್ಯೆಯಿಂದ) ನಾಶವಾಗದಂತೆ, ಕಾಕ್ಕುಂ : ರಕ್ಷಿಸುವನು.

ತಾತ್ವಯ್ಯ - ಊರ್ಧ್ವ ಪುಂಡ್ರಗಳನ್ನು ಧರಿಸಿಕೊಳ್ಳುವಾಗ ಆಯಾ ಸ್ಥಾನಗಳಲ್ಲಿ ವಿಹಿತವಾಗಿರುವ ಮೂರ್ತಿಗಳನ್ನು ಧ್ಯಾನಮಾಡಬೇಕು, ಹೀಗೆ ಹನ್ನೆರಡು ನಾಮಗಳನ್ನು ಹಾಕಿಕೊಳ್ಳುವಾಗ, ಆಯಾ ಮೂರ್ತಿಯ, ನಾಮ, ವರ್ಣ, ಸ್ಥಾನ, ಆಯುಧ ಮೊದಲಾದ ವಿಶೇಷಾಕಾರಗಳನ್ನು ಬಿಡದೆ ಅನುಸಂಧಾನ ಮಾಡಬೇಕು. ಹಣೆಯಲ್ಲಿರುವ ನಾಮದೇವತೆ, ಕೇಶವ -ಸ್ವರ್ಣವರ್ಣ-ನಾಲ್ಕು ಹಸ್ತಗಳಲ್ಲೂ ನಾಲ್ಕು ಚಕ್ರಗಳು. ಇವುಗಳಿಂದ ಅಲಂಕೃತವಾದ ಪರಮಾತ್ಮನು ರಕ್ಷಿಸಲೆಂದು ಧ್ಯಾನಿಸಬೇಕು. ಇದನ್ನೇ “ಚತುಶ್ಚಕ್ರಂ ನಮಸ್ಯಾಮಿ ಕೇಶವಂ ಕನಕ ಪ್ರಭಂಗ್’ ಎಂಬ ಧ್ಯಾನ ಶ್ಲೋಕವು ತಿಳಿಸುತ್ತದೆ. ಅವಿದ್ಯೆಯೆಂಬ ಅಲೆಯಲ್ಲಿ ಸಿಕ್ಕಿ ನಶಿಸಿ ಹೋಗದಂತೆ ಕಾಪಾಡುವನು. ಸೃಷ್ಟಿಕರ್ತನಾದ ಬ್ರಹ್ಮನು ಯಾಗ ಮಾಡಿದ ವೇದಿಕೆಯಲ್ಲಿ ಅವತರಿಸಿ, ಆಶ್ಚರವನ್ನು ವ್ಯಕ್ತಪಡಿಸಿದ ಕಂಚಿಯ ವರದರಾಜನೇ ಅರ್ಚಾವತಾರವಾಗಿದ್ದರೂ ಕೇಶವನಾಗಿ ಬಂದು ನಾಮ ದೇವತೆಯಾಗಿರುತ್ತಾ ತನ್ನ ರಕ್ಷಣೆಯ ಸ್ಥಾನವಾದ ಪೂರ್ವದಿಕ್ಕನ್ನೂ ಮತ್ತು ನಮ್ಮ MUHORONILMANIZETTINGEL 462 ಪನ್ನಿರುನಾಮಂ ನೆತ್ತಿಯನ್ನೂ ಸಂರಕ್ಷಿಸುವನೆಂದುಭಾವ. ಇದನ್ನೇ ಪುರಸ್ತಾತ್ ಕೇಶವಃ ಪಾತು ಚಕ್ರೀ ಜಾಂಬೂನದ ಪ್ರಭುಃ’’ ಎಂಬುದೂ ಹೇಳುವುದು. द्वादशनामप्रबन्धः ॥ श्रीकेखवो दिशि हरे रलिके च पाति । दीप्त चतुर्भिररिभि स्त्वधिकोऽनवद्यम् ॥ वैदै स्सवुर्णनगवत् हरितारुणो माम् । आशाधिकाजमखवेदिभवोऽभ्दुतो हि ॥ ಮೂಲ : ನಾರಣನಾಮ್ ನಲ್ವಲಂಬುರಿ ನಾಲುಮುಹನ್ನೆಡುತ್ತು ಕಾರಣಿ ಮೇಗ ಮೆನವೇ ಯುದರಮುಮೇರು ನಿನ್. ಆರಣನೂಲ್ ತನ್ನರುಳಾಲಡೈಲಂ ಕೊಂಡರುಳುಂ,

१ ವಾರಣ ವೆಲ್ ಮಳ್ಳೆಮುಗಿಲ್ ಪೋಲ್ ನಿನ್ನ ಮಾಯವನೇ ॥ ಅರ್ಥ :- ವಾರಣ-ವೆಲ್ = ಹಸ್ತಿಗಿರಿಯಲ್ಲಿ, ಮಳ್ಳೆ-ಮುಗಿಲ್ -ಪೋಲ್ : ಮಳೆಸುರಿಸುವ ಕಾಳಮೇಘದಂತೆ, ನಿನ್ನ = ಇರುವ, ಮಾಯವನ್ : ಆಶ್ಚರ ಚರಿತನಾದ ವರದರಾಜನು, ನಾರಣನ್-ಆಯ್ -ನಾರಾಯಣನೆಂಬ ಮೂರ್ತಿ ವಿಶೇಷ ವಿಶಿಷ್ಟನಾಗಿ, ನಲ್-ವಲಂಬುರಿ-ನಾಲುಂ = ಅತ್ಯುತ್ತಮವಾದ ನಾಲ್ಕು ಶಂಖಗಳನ್ನು ಉಹನ್ನು : ಅತಿ ಪ್ರೀತಿಯಿಂದ, ಎಡುತ್ತು = ಧರಿಸಿ, ಕಾರ್-ಅಣಿ-ಮೇಗಂ-ಎನವೇ ಶ್ಯಾಮಲವರ್ಣದಿಂದಲಂಕೃತವಾದ ಮೇಘದಂತೆಯೇ, ಉದರ ಮುಂ ಉದರದಲ್ಲಿಯೂ, ಮೇಲ್ಕಂ - ಪಶ್ಚಿಮದಲ್ಲಿಯೂ, ನಿನ್ನು : ಸ್ಥಿರವಾಗಿದ್ದು, ಅರುಳಾಲ್ = ಕರುಣೆಯಿಂದ, ಆರಣ-ನೂಲ್ = ಉಪನಿಷತ್ ಶಾಸ್ತ್ರವನ್ನು, ತಂದು - ಕೊಟ್ಟು, ಅಕ್ಕಲಂ : ರಕ್ಷಿಸಲ್ಪಡಬೇಕಾದ ವಸ್ತುವೆಂದು, ಕೊಂಡು = ಸ್ವೀಕರಿಸಿ, ಅರುಳುಂ = ಕೃಪೆಮಾಡುವನು.

ತಾತ್ಪರ್ಯ : ‘‘ನಾರಾಯಣಂ ಘನಶ್ಯಾಮಂ’ ಚತುಶಂಖಂ ನಮಾಮ್ಯಹಂ’’ ‘‘ಪಶ್ಚಾನ್ನಾರಾಯಣ ಶಂಖೀ ನೀಲಜೀಮೂತಸನ್ನಿಭಃ’’ ಇತ್ಯಾದಿ ಪ್ರಮಾಣ ಪ್ರತಿಪಾದಿತವಾದ ದ್ವಿತೀಯ ಪುಂಡ್ರಾಧಿದೇವತೆಯ ವರ್ಣ-ಆಯುಧಾದಿಗಳನ್ನು ಇದರಲ್ಲಿ ತಿಳಿಸಲಾಗುವುದು.
ಹಸ್ತಿಗಿರಿಯ ಶಿಖರದಲ್ಲಿ ಸ್ನಿಗ್ಧ-ಶ್ಯಾಮಳ-ಶೀತಲ ಕಾಂತಿಯಿಂದ ನೀಲ ಮೇಘದಂತೆ ಭಕ್ತಾಭೀಷ್ಟಗಳನ್ನು ಸುರಿಸುವ ದಯಾಳು ವರದನೇ ನೀಲಮೇಘ ಶ್ಯಾಮಲನಾದ

ಪನ್ನಿರುನಾಮಂ 463 ಶ್ರೀ ನಾರಾಯಣನೆಂಬ ವ್ಯೂಹಾಂತರಾವತಾರ ವಿಶೇಷನಾಗಿ, ನಮ್ಮ ಉದರದಲ್ಲೂ ಪಶ್ಚಿಮದಿಕ್ಕಿನಲ್ಲೂ ಸುಪ್ರತಿಷ್ಠಿತನಾಗಿ, ವಿರಾಜಿಸುತ್ತಾ ಉಪನಿಷತ್ತುಗಳು ಸಾರುವ ಶರಣಾಗತ ಭಾರವನ್ನು ಪರಮಕರುಣೆಯಿಂದ ಸ್ವೀಕರಿಸಿ ಶರಣಾಗತಿಯನ್ನು ಸಾಂಗವಾಗಿ ನೆರವೇರಿಸುವವನಾಗಿ ಬೆಳಗಿ, ಕಾಪಾಡುವನು. मदावलधराधरस्थितवलाहको वार्षुकः । धृताग्ग्रचतुरम्बुजोऽद्भुतकरो हि नारायणः ॥ स पाशिदिशि चोदरे रुचिरनीलपाथोदवत् । वितीर्य कृपया श्रुती रवति मां स्वरक्ष्यं विभुः ॥ ಮೂಲ : ಮಾದವನಾಮಮುಂ ವಾನ್ ಗದೈನಾಯ್ಡು ಮಣಿನಿರಮುಂ ಓದುಮುರೈಪ್ಪಡಿಯೇನ್ದ್ರಿಯುರತ್ತಿರಲುಂ ಮೇಲುಂನಲ್‌ಹಿ, ಪೋದಲ‌ ಮಾದುಡನ್ ಪುಂದಿಯಿಲಟ್ಬಾಲ್ ಪುಹುಂದಳಿಕ್ಕು, ತೂದನುಂ ನಾದನು ಮಾಹಿಯ ತೊಲ್ಲತ್ತಿಗಿರಿಚ್ಚುಡರೇ

3

ಅರ್ಥ :- ತೂದನುಂ : ಆಳಾಗಿಯೂ, ನಾದನುಂ : ಸ್ವಾಮಿಯೂ, ಆಹಿಯ = ಆಗಿರುವ, ತೊಲ್ : ಅನಾದಿಯಾದ, ಅತ್ತಿಗಿರಿ : ಹಸ್ತಿಗಿರಿಯಲ್ಲಿ (ಬೆಳಗುವ), ಶುಡರೆ = ಜ್ಯೋತಿರೂಪನಾದ ವರದರಾಜನೇ, ಮಾದವನಾಮಮುಂ : ‘‘ಮಾಧವ’‘ನೆಂಬ ಹೆಸರನ್ನೂ ವಾನ್ = ವಿಲಕ್ಷಣವಾದ, ಗದೈ -ನಾನುಂ : ನಾಲ್ಕು ಗದೆಗಳನ್ನೂ, ಮಣಿ-ನಿರಮುಂ : ಇಂದ್ರನೀಲಮಣಿಯ ಬಣ್ಣವನ್ನೂ, ಓದುಂ-ಉರೈ-ಪ್ಪಡಿಯೇ (ವೇದಕ್ಕೆ ಸಮಾನವಾದ) ಭಗವಚ್ಛಾಸ್ತ್ರಗಳಲ್ಲಿ ಹೇಳಿರುವಂತೆಯೇ, ಏಂದಿ = ಧರಿಸಿ, ಉರತ್ತಿಲುಂ = ಎದೆಯಲ್ಲಿಯೂ, ಮೇಲುಂ - ಮೇಲುಗಡೆಯೂ, ನಲ್ ಹಿ : ಪ್ರೀತಿಯಿಂದ ಪ್ರತಿಷ್ಠಿತನಾಗಿ, ಪೋದು-ಅಲರ್ -ಮಾದು-ಉಡನ್ : ಅರಳಿದ ತಾವರೆಯಲ್ಲಿರುವ ಲಕ್ಷ್ಮಿಯ ಸಹಿತನಾಗಿ ಪುಂದಿಯಿಲ್ - (ನನ್ನ) ಅಂತಃಕರಣದಲ್ಲಿ, ಅನ್ಸಾಲ್ = ವಾತ್ಸಲ್ಯಾತಿಶಯದಿಂದ, ಪುಹುಂದ್ = ಪ್ರವೇಶಿಸಿ, ಅಳಿಕ್ಕುಂ : ರಕ್ಷಿಸುವನು.

‘‘ಮಾಧವಂ ಮಣಿಭಂಗಾಭಂ ಚಿಂತಯಾಮಿ ಚತುರ್ಗದಂ’’ ‘‘ಇಂದೀವರದಲ ಶ್ಯಾಮೋ ಮಾಧವ ಊರ್ಧ್ವಂ ಗದಾಧರಃ’’ ಇಂದ್ರನೀಲದಲ ಶ್ಯಾಮಂ ಚತುರ್ಹಸ್ತ ಗದಾಧರಂ | ಹೃದಯೇ ಮಾಧವಾಯೇತಿ ಧಾರಯೇದಂಗುಲಾಷ್ಟಕಂ’’ ॥ ಇತ್ಯಾದಿ ವಚನಗಳಂತೆ ಮೂರನೆಯ ನಾಮದ ಅದಿಧೇವತೆಯಾದ ‘‘ಮಾಧವ’ನ ವರ್ಣಾಯುಧಗಳನ್ನು ವರ್ಣಿಸಲಾಗುವುದು.464 ಪನ್ನಿರುನಾಮಂ ತಾತ್ಪರ :- ಆಶ್ರಿತರ ವಿಷಯದಲ್ಲಿ ವಾತ್ಸಲ್ಯ ಸೌಲಭ್ಯಾದಿ ಗುಣಾತಿಶಯದಿಂದ, ದೌತ್ಯಾದಿ ಕೃತ್ಯಗಳನ್ನು ಮಾಡಿಯೂ ಅದರ ಪ್ರಯುಕ್ತ ಬಂದ ಮೇಲೆಯಿಂದ ಸ್ವಯಂ ಸತ್ವಸ್ವಾಮಿಯಾಗಿಯೂ, ಅನಾದಿಕಾಲದಿಂದ ಹಸ್ತಿಗಿರಿಯಲ್ಲೇ ಬೆಳಗುವ ಸ್ವಯಂಜ್ಯೋತೀರೂಪನಾಗಿಯೂ ಇರುವ ವರದರಾಜನು ಮಾಧವ’ನೆಂಬ ಹೆಸರನ್ನೂ ವಿಲಕ್ಷಣವಾದ ನಾಲ್ಕು ಗದೆಗಳನ್ನೂ ಮತ್ತು ನೀಲಮಣಿಯ ವರ್ಣವನ್ನೂ ಧರಿಸಿ, ಭಗವಚ್ಛಾಸೋಕ್ತವಾಗಿಯೇ ವಕ್ಷಸ್ಥಳದಲ್ಲೂ ಮತ್ತು ಮೇಲುಗಡೆಯೂ ಬಲು ಪ್ರೇಮದಿಂದ ನೆಲೆಸಿ, ಸತ್ರ ಲಕ್ಷ್ಮೀಸಹಿತನಾಗಿಯೇ ಇರುವವನಾಗಿ ಈ ನನ್ನ ಅಂತಃಕರಣದಲ್ಲಿಯೂ ಅತ್ಯಂತ ವಾತ್ಸಲ್ಯದಿಂದ ಪ್ರವೇಶಿಸಿ ರಕ್ಷಿಸುವನು. नाथो दूतोऽप्यनादिद्विरदगिरिमहो माधव चित्रचर्यः । प्रीत्योरस्यूर्ध्वभागे चतृसृभिरसमाभि र्गदाभि स्समेतः ॥ देवाधीशानरत्नप्रभ इह विकसत्पुष्पयोषाविभूषः । बुद्धौ न स्सप्रविश्य स्वय मधिकदयो वत्सलो रक्षतीशः ॥ ಮೂಲ : ಗೋವಿಂದನೆನ್ನು ಕುಳಿದಿಯಾಹಿಕ್ಕೋಡಿಯವರೈ, ಏವುಂದನುಕ್ಕಳುಡನ್ ತೆರಿಲುಮುಳ್‌ಳುತ್ತು ನಿನ್ನು, ಮೇವುಂತಿರುವರುಳಾಲ್ ಏನೈತೀರ್ತೆಮ್ಮೆ ಯಾರುಳುಂ, ಪೂವನ್ ತೊಳವತ್ತಿ ಮಾಮಲೈಮೇಲ್ ನಿನ್ನಪುಣ್ಣಿಯನೇ ॥

३ 4 ಅರ್ಥ :- ಪೂವನ್ : (ಹೂವಿನಲ್ಲಿ ಜನಿಸಿದ) ಬ್ರಹ್ಮನು, ತೊಳಿ : ಸೇವೆಮಾಡುವಂತೆ, ಅತ್ತಿ-ಮಾ-ಮಲೈ-ಮೇಲ್ : ಹಸ್ತಿಗಿರಿಯ ಶಿಖರದಲ್ಲಿ ನಿನ್ನ ವಿರಾಜಮಾನವಾಗಿರುವ, ಪುಣ್ಣಿಯನ್ - ಶುಭಕರ ಕರ್ಮಪ್ರವರ್ತಕನಾಗಿ ಬೆಳಗುವ ವರದ ರಾಜನು, ಗೋವಿಂದನ್ -ಎನ್ನು = ಗೋವಿಂದನೆಂಬ ನಾಮವುಳ್ಳವನಾಗಿ, ಕುಳಿರ್ -ಮದಿ-ಆಹಿ = ಶೀತಲ ಚಂದ್ರಪ್ರಭನಾಗಿ, ಕೊಡಿಯವರ = ಕ್ರೂರ ಜನರನ್ನು ಏವುಂ : ನಿಗ್ರಹಿಸುವಂತಹ, ದನುಕ್ಕಳ್ -ಉಡನ್ = ನಾಲ್ಕು ಬಿಲ್ಲುಗಳ ಸಮೇತನಾಗಿ, ತೆರಿಲುಂ : ದಕ್ಷಿಣದಿಕ್ಕಿನಲ್ಲೂ ಉಳ್-ಕಳುತ್ತುಂ = ಕಂಠದ ಮುಂಭಾಗದಲ್ಲೂ ನಿನ್ನು ಇದ್ದು ಮೇವುಂ - ಸಾದರಣೀಯವಾದ, ತಿರು-ಅರುಳಾಲ್ - ಮಹಾ ದಯೆಯಿಂದ, ವಿನೈ - ಕರ್ಮಗಳನ್ನು, ತೀರು: ನಾಶಗೊಳಿಸಿ, ಎಮ್ಮೆ ನಮ್ಮನ್ನು, ಆಂಡ್ -ಅರುಳುಂ = (ತನ್ನ ಸೇವೆಯಲ್ಲಿ) ವಿನಿಯೋಗಿಸಿ ರಕ್ಷಿಸುವನು.

17 ತಾತ್ಪಯ್ಯ : “ಚಂದ್ರಭಾಸಂ ಚತುಶ್ಯಾರ್ಙ್ಗ೦ ಗೋವಿಂದಮಭಿ ಸಂಶ್ರಯೇ ‘‘ಗೋವಿಂದೋ ದಕ್ಷಿಣೇಪಾರ್ಶ್ವ ಧ ಚಂದ್ರಪ್ರಭೋ ಮಹಾನ್’’ ‘‘ಚತುರ್ಭುಜಂ ಪನ್ನಿರುನಾಮಂ 465 ಧನುಷ್ಯಂತಂ ಚಂದ್ರಹಾಸ ಸಮದ್ಯುತಿಂ | ಗೋವಿಂದಾಯೇತಿ ಮಂತ್ರೇಣ ಕಂಠಾಗ್ರೇ. ಚತುರಂಗುಳಂ ’’ ಎನ್ನುವಂತೆ ನಾಲ್ಕನೆಯ ನಾಮದೇವತೆಯನ ವರ್ಣಾದಿಗಳನ್ನು ಇದರಲ್ಲಿ ತಿಳಿಸಲಾಗುವುದು. ಬ್ರಹ್ಮನು ಯಾಗಮಾಡಿದ ವೇದಿಕೆಯಲ್ಲಿ ಆವಿರ್ಭವಿಸಿ, ಆತನಿಂದ ಸೇವೆಗೊಳ್ಳುವ, ಸ್ವಯಂಜ್ಯೋತಿರೂಪನಾದ ಹಸ್ತಿಗಿರಿಯ ದೇವರಾಜನು ‘ಗೋವಿಂದ’ನೆಂಬ ಹೆಸರಿನಿಂದ ಆಶ್ರಿತರಿಗೆ ಶುಭಕರ್ಮ ಪ್ರವರ್ತಕನಾಗಿ ಕ್ರೂರ ಜನರನ್ನು ನಿರ್ನಾಮಗೊಳಿಸುವ ನಾಲ್ಕು ಧನುಸ್ಸುಗಳನ್ನೂ, ಅತಿ ಶೀತಲನಾದ ಚಂದ್ರನ ಪ್ರಭೆಯನ್ನೂ ಧರಿಸಿ, ದಕ್ಷಿಣದಿಾಗದಲ್ಲೂ ಮತ್ತು ನಮ್ಮ ಕಂಠದ ಮುಂಭಾಗದಲ್ಲೂ ಸುಪ್ರತಿಷ್ಠಿತನಾಗಿ, ಸಾದರಣೀಯವಾದ ಕೃಪೆಯಿಂದ ನಮ್ಮ ಅನಾದಿಕರ್ಮಗಳನ್ನು ಕೊನೆಗೊಳಿಸಿ, ಪರಿಶುದ್ಧರನ್ನಾಗಿ ಮಾಡಿ, ತನ್ನ ಸೇವೆಯಲ್ಲಿ ಭಾಗಿಗಳನ್ನಾಗಿ ಮಾಡಿ, ಕಾಪಾಡುವನು. ન -नोविन्द श्शिशिरेन्दुभा धृतचतुश्चापश्च पापापहा । पाथोजासनसेवितः करिमहाद्रीशः शुभप्रेरकः ॥ ग्रीवायः पुरतश्च दक्षिणदिशि स्थित्वा दयालुः प्रभुः । कर्मोन्मूल्य नियोज्य नश्च परिपात्यात्मीयसेवाविधौम् ॥ ಮೂಲ : ವಿಟ್ಟುವಲವತ್ತಿನ್ ಕಣ್‌ಡಕ್ಕುಂ ವಿಡಾದು ನಿನ್ನು, ಮಟ್ಟವಿಳ್ ತಾಮರೈತ್ತಾದು ನಿರಂಕೊಂಡ ಮೇನಿಯನಾಯ್, ತೊಟ್ಟ ಕಪ್ಪೆಹಳೀರಿರಾಲುಂ ತುಯರರುಕ್ಕುಂ, ಕಟ್ಟೆಳಿಗ್ಗೋಲೆಕ್ಕರಿಗಿರಿಮೇಲ್ ನಿನ್ನ ಕರಕಮೇ ॥

5

ಅರ್ಥ :- ಕಟ್ಟು - ಸಾಂದ್ರತೆಯಿಂದ, ಎಳಿಲ್ = ಕಂಗೊಳಿಸುವ,
= ಶೋಲೈ ತೋಟಗಳಿರುವ, ಕರಿ-ಗಿರಿ-ಮೇಲ್ - ಹಸ್ತಿಗಿರಿಯ ಮೇಲೆ, ನಿನ್ನ - ಪ್ರತಿಷ್ಠಿತನಾದ, ಕರಕಂ - ಕಲ್ಪವೃಕ್ಷದಂತಿರುವ ವರದರಾಜನು, ವಿಟ್ಟು : ವಿಷ್ಣುವಾಗಿ, ವಲ-ವಯತ್ತಿನ್ -ಕಣ್ ಉದರದ ಬಲಗಡೆಯಲ್ಲಿಯೂ, ವಡಕ್ಕುಂ = ಉತ್ತರದಿಕ್ಕಿನಲ್ಲಿಯೂ, ವಿಡಾದೇ : ಅಗಲಿರದೇ, ನಿನ್ನ = ನೆಲೆಸಿ, ಮಟ್ಟು - ಮಕರಂದರಸವುಳ್ಳ, ಅವಿಳ್ = ಅರಳಿದ, ತಾಮರೈ - ತಾವರೆಯ, ತಾದು = ಕೇಸರಗಳ, ನಿರಂ = ಬಣ್ಣವನ್ನು, ಕೊಂಡ = ತಾಳಿದ, ಮೇನಿಯನಾಯ್ = ಮೈಯುಳ್ಳವನಾಗಿ, ತೊಟ್ಟಿ = ಧರಿಸಿರುವ, ಕಲಪ್ಪೆಹಳ್ ನೇಗಿಲುಗಳ, ಈರ್ -ಇರಂಡಾಲುಂ : ನಾಲ್ಕರಿಂದಲೂ, ತುಯರ್ : ದುಃಖಗಳನ್ನು, ಅರುಕ್ಕುಂ : ನಾಶಮಾಡುವನು.

466 ಪನ್ನಿರುನಾಮಂ ತಾತ್ಪಯ್ಯ :- ವಿಷ್ಣುಂ ಚತುರ್ಹಲಂ ವಂದೇ ಪದ್ಮಕಿಂಜಲ್ಕಸನ್ನಿಭಂ’’ ‘‘ಉತ್ತರೇ ಹಲದೃಗ್ವಿಷ್ಣುಃ ಪದ್ಮಕಿಂಜಲ್ಕಸನ್ನಿಭಃ’’ ‘‘ಚತುರ್ಹಲಧರಂ ದೇವಂ ಪದ್ಮಕಿಂಜ ಸನ್ನಿಭಂ ವೈಷ್ಣವೋಽಷ್ಟಾಂಗುಲಮಿತಂ ಧಾರಯೇದಕ್ಷಿಣೋದರೇ!!’’ ಇತ್ಯಾದಿ ವಚನಗಳಂತೆ ಐದನೆಯ ನಾಮ ದೇವತೆಯ ವರ್ಣ-ಆಯುಧಾದಿಗಳನ್ನು ಇದರಲ್ಲಿ ಹೇಳಲಾಗಿದೆ. ಒತ್ತಾಗಿ ಮರಗಳು ಬೆಳೆದಿರುವ ತೋಟಗಳಿರುವ ಹಸ್ತಿಗಿರಿಯ ಮೇಲೆ ವಿರಾಜಿಸುವ ವರದರಾಜನು ಇಂದ್ರನ ನಂದನವನದಲ್ಲಿರುವ ಕಲ್ಪವೃಕ್ಷದಂತೆ, ಆಶ್ರಿತರ ಸಕಲೇಷ್ಟಗಳನ್ನೂ ಕೊಡುವವನಾಗಿ, ವಿಷ್ಣು’ ಎಂಬ ಹೆಸರಿನಿಂದ ಸತ್ವವ್ಯಾಪಿಯಾಗಿದ್ದರೂ, ವಿಶೇಷವಾಗಿ ಉದರದ ಬಲಗಡೆಯಲ್ಲಿಯೂ ಉತ್ತರ ದಿಬ್ಬಾಗದಲ್ಲೂ ನೆಲೆಸಿ, ಬೆಳಗುತ್ತಾ, ಮಕರಂದರಸಭರಿತವಾದ ಕಮಲದ ಕೇಸರಗಳ ಬಣ್ಣದ ವಿಗ್ರಹವುಳ್ಳವನಾಗಿ, ತನ್ನನಾಲ್ಕು ಕೈಗಳಲ್ಲೂ ಹಲಗಳನ್ನು ಧರಿಸಿ, ನಮ್ಮ ದುಃಖಗಳೆಲ್ಲವನ್ನೂ ಪರಮ ದಯೆಯಿಂದ ಹೋಗಲಾಡಿಸಿ, ಕಾಪಾಡುವನು. विष्णु र्दक्षिणकुक्षिभाग मविहायैवोत्तराशां तथा । निष्यन्दन्मधुफुल्लपद्मसुमनः किञ्जल्कवर्णाकृतिः ॥ हस्तालङ्कृतिभि र्भिनत्ति सकलं पापं चतुर्भिर्हलैः । राजत्सान्द्रपलाशिषण्डकरिगिर्यूर्ध्वस्थकल्पद्रुमः ॥ ಮೂಲ: ಮದುಸೂದನನೆನ್ ವಲಬ್ಬುಯನೆಳಕ್ಕೆ ವತ್ತಿಲ್, ಪದಿಯಾಯಿರುಂದು ಪಣಾದುರೈ ಪಂಗಯವಣ್ಣನುಮಾಯ್, ಮುದುಮಾವಿನೈಹಳರುಕ್ಕುಂ ಮುಯಲಙ್ಗಳೀರಿರಂಡಾಲ್, ಮದುವಾರಿಳಂ ಪೊಳಿಲ್ ವಾರಣವೆರಿನ್ ಮಳ್ಳೆ ಮುಗಿಲೇ ॥ 6

ಅರ್ಥ :- ಮದು : ಜೇನಿನಿಂದ, ಆರ್ = ಪರಿಪೂರ್ಣವಾದ, ಇಳಂ-ಪೊಳಿಲ್ = ಬಾಲೋದ್ಯಾನಗಳಿಂದ ಕಂಗೊಳಿಸುವ, ವಾರಣ-ವೆರಿನ್ = ಹಸ್ತಿಗಿರಿಯಲ್ಲಿರುವ, ಮಳೆ-ಮುಗಿಲ್ - ಮಳೆಯನ್ನು ಸುರಿಸುವ ನೀಲಮೇಘದಂತಿರುವ, ವರದ ರಾಜನು, ಮದುಸೂದನನ್ : ಮಧುಸೂದನನೆಂಬ ನಾಮಧೇಯದಿಂದ, ಎನ್ : ವಲ-ಬುಯಂ = ಬಲ ಭುಜ ಮತ್ತು, ತೆನ್ -ಕಿಳಕ್ಕು = (ದಕ್ಷಿಣ ಪೂರೈ) ಆಸ್ಟ್ರೇಯದಿಕ್ಕು, ನನ್ನ, ಎನ್-ಇವತ್ತಿಲ್ : ಎಂಬ ಈ ಸ್ಥಳಗಳಲ್ಲಿ, ಪರಿಯಾಮ್ = ವಾಸಮಾಡಿ, ಇರುಂದು = ಪ್ರತಿಷ್ಠಿತನಾಗಿ, ಪಣ್ = ಸ್ತುತಿಸಲ್ಪಡುವ, ಮಾದು - ಸ್ತ್ರೀಗೆ (ಲಕ್ಷ್ಮಿಗೆ) ಉರೈ ವಾಸಸ್ಥಾನವಾದ, ಪಂಗಯ - ಕಮಲಪುಷ್ಪದ, ವಣ್ಣನುಂ-ಆಯ್ = ಬಣ್ಣವುಳ್ಳನಾಗಿ, ಮುಯಲಂಗಳ್ = ಮುಸಲಗಳ (ಒನಕೆಗಳ) ಈರ್ -ಇರಂಡಾಲ್ = ನಾಲ್ಕರಿಂದ,

1 + ಪನ್ನಿರುನಾಮಂ

467 ಮುದು - ಹಿಂದಿನ, ಮಾ-ವಿನೈಹಳ್ = ಮಹಾಪಾತಕಗಳನ್ನು, ಅರುಕ್ಕುಂ : (ಛೇದಿಸಿ) ವಿನಾಶಮಾಡಿ, ಕಾಪಾಡುವನು. ತಾತ್ಪರ :- ‘‘ಚತುರ್ಮುಸಲಮಬ್ಬಾಭಂ ಸಂಶ್ರಯೇ ಮಧುಸೂದನಂ’’ ಆಗೇಯ್ಯಾಂ ಅರವಿಂದಾಭೋ ಮುಸಲೀ ಮಧುಸೂದನಃ ॥ ಮುಸಲಾಸ್ತ್ರಂ ಮಹಾವಿಷ್ಣುಂ ಅರವಿಂದಾಭ ಮೇವಚ | ಮಧುಸೂದನ ಮಂತ್ರೇಣ ಧಾರಯೇತ್ ದಕ್ಷಿಣೇ ಭುಜೇ’’ ಇತ್ಯಾದಿ ಪ್ರಮಾಣಗಳಂತೆ ಆರನೆಯ ಪುಂಡ್ರದ ಅಧಿದೇವತೆ ಯ ವರ್ಣ-ಆಯುಧಾದಿಗಳನ್ನು ಇದರಲ್ಲಿ ವಿವರಿಸಲಾಗಿದೆ. ಮಧುಭರಿತವಾದ ಬಾಲೋಪವನಗಳಿಂದ ಕಂಗೊಳಿಸುವ ಹಸಿಶೈಲದಮೇಲೆ ಕಾರುಗಿಲು ಸದ್ಯಃ ವೃಷ್ಟಿಯನ್ನುವರ್ಷಿಸುವಂತೆ ಭಕ್ತಾಭೀಷ್ಟಗಳನ್ನು ಕೊಡುವ ವರದರಾಜನೇ, ಮಧುಸೂದನನೆಂಬ ಅಭಿಧಾನದಿಂದ ಅವತ್ತಾರ ವಿಶೇಷವುಳ್ಳವನಾಗಿ, ನಿಖಿಲ ಲೋಕಗಳಿಂದಲೂ ವೇದಗಳಿಂದಲೂ ಸ್ತುತಿಸಲ್ಪಡುವ ಕಮಲವಾಸಿನಿಯಾದ ಮಹಾಲಕ್ಷ್ಮೀರಮಣನಾಗಿ, ಆ ಕಮಲದ ವರ್ಣವನ್ನೇ ತಾನೂ ಧರಿಸಿ, ನಾಲ್ಕು ಮುಸಲಗಳನ್ನು ಹಿಡಿದು, ನಮ್ಮ ಬಲಭುಜದಲ್ಲಿಯೂ, ಆಗೇಯದಿಗ್ಯಾಗದಲ್ಲಿಯೂ, ಪ್ರತಿಷ್ಠಿತನಾಗಿ, ಪರಮ ದಯೆಯಿಂದ ನಮ್ಮ ಪ್ರಾಚೀನಮಹಾಪಾತಕಗಳನ್ನು ನಾಶಮಾಡಿ ಸಂರಕ್ಷಿಸುವನು. माध्वीपूर्णसुवृक्षकोपवनके नागाद्रिशीर्षे स्थितः । वर्षी सन् मधुसूदनो दिशि शुचेः बाहौ च मे दक्षिणे ॥ सर्वोद्गीतरमाधिवासिकमलश्रीः पूर्वकर्मानुगम् । पापौघं मुसलैश्चतुर्भिरिह नः सम्मर्द्य संरक्षति ॥ ಮೂಲ : ತಿರುವಿಕ್ಕಿರಮನ್ ತಿಹಳ್ ತೀನಿರತನ್ ತೆಳಿವುಡೈವಾಳ್, ಉರುವಿಕ್ಕರಂಗಳಿಲೀರಿರಣೇವಲಕ್ಕಳುತ್ತುಂ, ಪೆರುವಿಕ್ಕಿರಮತ್ತರಕ್ಕರ್‌ದಿಕ್ಕುಂ ಶಿರಾಡುಮಿರೈ, ಮರುವಿಕ್ಕರಿಗಿರಿಮೇಲ್ ವರಂತನ್ದಿಡುಂ ಮನ್ನವನೇ ॥

६ 7 ಅರ್ಥ :- ಇ - ಸರ್ವೆಶ್ವರನಾದ, ಕರಿಗಿರಿಮೇಲ್ : ಹಸ್ತಿಗಿರಿಯ ಮೇಲೆ, ಮರುವಿ = ನಿಯತವಾಗಿ ವಾಸಮಾಡುತ್ತಾ, ವರಂ : ಇಷ್ಟಾರ್ಥಗಳನ್ನು, ತಂದ್ -ಇಡುಂ = ಕೊಡುವವನಾದ, ಮನ್ನವನ್ = ರಾಜನು, (ರಾಜನಂತಿರುವ ದೇವರಾಜನು) ತಿರುವಿಕ್ಕಿರಮನ್ : ತ್ರಿವಿಕ್ರಮನೆಂಬ ಅವತಾರ ವಿಶೇಷ ನಾಮಾಂಕಿತನಾಗಿ, ತಿಹಳ್ -

468 ಪನ್ನಿರುನಾಮಂ ಜ್ವಲಿಸುವ, ತೀ = ಬೆಂಕಿಯ, ನಿರನ್ = ಬಣ್ಣವುಳ್ಳವನಾಗಿ, ತೆಳಿವ್ -ಉಡೈ ನಿರ್ಮಲವಾಗಿರುವ, ಈ‌-ಇರಂಡ್-ವಾಳ್ = ಒರೆಗಳಿಂದ ಹೊರಕ್ಕೆ ತೆಗೆದು, ಕರಂಗಳಿಲ್ -ಎಂದಿ = ಕೈಗಳಲ್ಲಿ ಹಿಡಿದು, ವಲ-ಕಳುತ್ತುಂ ನಾಲ್ಕು ಖಡ್ಗಗಳನ್ನು, ಉರುವಿ : - ಕತ್ತಿನ ಬಲಗಡೆಯಲ್ಲಿಯೂ ಪೆರು = ಹೆಚ್ಚು, ವಿಕ್ಕಿರಮತ್ತು = ಪರಾಕ್ರಮವುಳ್ಳ, ಅರಕ್ಕ‌ - ರಾಕ್ಷಸರ, ದಿಕ್ಕುಂ = ದಿಕ್ಕಿನಲ್ಲಿಯೂ, (ನೈಋತ್ಯ ದಿಕ್ಕಿನಲ್ಲೂ ಶಿರಂದು - ಅಟ್ಟಹಾಸದಿಂದ, ಆಡುಂ : ವಿಹರಿಸುವನು.

ತಾತ್ಪರ್ಯ :- “ಅಗ್ನಿವರ್ಣಂ ಚತುಃಖಡ್ಗಂ ಭಾವಯಾಮಿ ತ್ರಿವಿಕ್ರಮಂ’’ “ತ್ರಿವಿಕ್ರಮಃ ಖಡ್ಗಪಾಣಿಃ ನೈಋತ್ಯಾಂಜ್ವಲನ ಪ್ರಭಃ॥” “ಖಡ್ಗಪಾಣಿಂ ಚತುರ್ಹಸ್ತ ಅಗ್ನಿಸನ್ನಿಭತೇಜಸಂ | ತ್ರಿವಿಕ್ರಮಂಚ ಮಂತ್ರೇಣ ಧಾರಯೇದಕ್ಷಿಣೇಗಲೇ!’’ ಇತ್ಯಾದ್ಯುಕ್ತಿಗಳಂತೆ ಏಳನೆಯ ಪುಂಡ್ರದ ಅಧಿದೇವತೆಯ ಹೆಸರು-ರೂಪ- ವರ್ಣ-ಆಯುಧಾದಿಗಳನ್ನು ಇದರಲ್ಲಿ ವಿವರಿಸಲಾಗಿದೆ. ಒಬ್ಬ ರಾಜನು ತನ್ನ ವಾಸಕ್ಕೆ ದುರ್ಗವೊಂದನ್ನಾರಿಸಿಕೊಳ್ಳುವಂತೆ ವರದರಾಜನು ತಾನು ಸಶ್ವೇಶ್ವರನಾಗಿದ್ದರೂ ಹಸ್ತಿಗಿರಿಯನ್ನು ತನ್ನ ನಿತ್ಯವಾಸಕ್ಕಾಗಿ ಆರಿಸಿಕೊಂಡು ಅಲ್ಲಿರುತ್ತಾ, ಭಕ್ತರಿಗೆ ಬೇಕಾದುದೆಲ್ಲವನ್ನೂ ಕಾಲಕಾಲಕ್ಕೆ ಕೊಡುತ್ತಾ, ತ್ರಿವಿಕ್ರಮನೆಂಬ ಹೆಸರಿನಿಂದ ಇಡೀ ಲೋಕವನ್ನೇ ಪಾವನಗೊಳಿಸುವವನಾಗಿ, ತನ್ನ ನಾಲ್ಕು ಕೈಗಳಲ್ಲೂ ಹೊಳೆಯುವ ಕತ್ತಿಗಳನ್ನು ಹಿಡಿದು, ಜಾಜ್ವಲ್ಯಮಾನವಾದ ಅಗ್ನಿಯಂತೆ ಜ್ವಲಿಸುವ ವರ್ಣನಾಗಿ, ನಮ್ಮ ಕಂಠದ ಬಲಗಡೆಯೂ, ಅತ್ಯಧಿಕ ಬಲರಾದ ರಾಕ್ಷಸರು ನೆಲೆಸಿರುವ ನೈಋತ್ಯ ದಿಗ್ಯಾಗದಲ್ಲೂ ವಿಜೃಂಭಿಸುತ್ತಾ ವಿಹರಿಸುವವ್ಯಾಜದಿಂದ ನಮ್ಮ ಅನಿಷ್ಟಗಳನ್ನು ನಿವಾರಿಸಿ ಸದಾ ಕಾಪಾಡುವನು. त्रिविक्रम इहेशिता करिगिरौ वसन्निष्टदः । ज्वलज्ज्वलनभास्वरो वरदराज उत्कोशितान् । विधृत्य विहरत्यसीन् निजकरै स्समुज्जृम्भितः । विवृद्धबलरक्षसां दिशि च मे गले दक्षिणे ॥ ಮೂಲ : ವಾಮನನನ್ ನಾಮೋದರಮುಂ ವಾಯುವಿನ್ ದಿಶೆಯುಂ, ದಾಮಮಡೈನ್ನು ತರುಣವರುಕ್ಕನ್ ನಿರತನುಮಾಯ್, ಶೇಮ ಮರಕ್ಕಲಂ ಕೆಂಪವಿ ಯೀರಿರಂಡಾಲ್ ತಿಹಳು, ನಾಮಮೇವಿಯ ನಾನುಕನ್ ವೇದಿಯಿಲ್ (ವೇಳ್ವೆಯಿಲ್) ನಮ್ಬರನೆ ॥ 8 ಪನ್ನಿರುನಾಮಂ

469 ಅರ್ಥ :- ನಾಮಂಗೈ = ಸರಸ್ವತೀದೇವಿಯಿಂದ, ಮೇವಿಯ : ಸೇವಿಸಲ್ಪಡುವ, ನಾಯ್ಡುಹನ್ = ಬ್ರಹ್ಮನ, ವೇದಿಯಿಲ್ ವೇದಿಕೆಯಲ್ಲಿ ಅವತರಿಸಿದ (ವೇಯಿಲ್ ಎಂದು ಪಾಠವಾದರೆ, ಯಾಗದಲ್ಲಿ ಆವಿರ್ಭವಿಸಿದ ಎಂದರ್ಥ), ನಂ = ನಮ್ಮ ಪರ್ರ = ಸತ್ವಸ್ಮಾತ್ ಪರನಾದ ವರದರಾಜನು, ವಾಮನನ್ = ವಾಮನನೆಂಬ ಹೆಸರಿನಿಂದ, ಎಣ್ಣೆ : ನನ್ನ, ವಾಮೋದರಂ : ಉದರದ ಎಡಗಡೆಯನ್ನೂ, ವಾಯುರ್ವಿ ದಿಶೆಯುಂ ವಾಯವ್ಯದಿಗ್ಯಾಗವನ್ನೂ, ದಾಮಂ : ವಾಸಸ್ಥಾನವನ್ನಾಗಿ, ಅಡೈಂದ್ = ಪಡೆದು, ತರುಣ -ಅರುಕ್ಕನ್ ಚಂಡ ಸೂರ್ಯನ, ನಿರತನುಂ-ಆಮ್ = ವರ್ಣ ವುಳ್ಳವನಾಗಿಯೂ, ಶೇಮಂ = ಕ್ಷೇಮದಿಂದ, ಮರಕ್ಕಲಂ = ಸಂಸಾರಸಾಗರವನ್ನು ದಾಟಿಸುವ ನಾವೆಯಂತಿರುವವನಾಗಿಯೂ, ಶಂ-ಪವಿ-ಈರ್ -ಇರಂಡಾಲ್ = ಕೆಂಪಾದ ನಾಲ್ಕು ವಜ್ರಾಯುಧಗಳನ್ನು ಧರಿಸಿ, ತಿಹಳುಂ - ಪ್ರಕಾಶಿಸುವನು.

ತಾತ್ಪರ - ವಾಮನಂ ಬಾಲಸೂರ್ಯಾಭಂ ಚತುರ್ವಜಂ ವಿಭಾವಯೇ ।’’ ‘‘ವಾಯವ್ಯಾಂ ವಾಮನೋ ವಜ್ರ ತರುಣಾದಿತ್ಯದೀಪ್ತಿಮಾನ್ !’ “ಚತುರ್ವಪ್ರಧರಂದೇವಂ ತರುಣಾದಿತ್ಯ ಸನ್ನಿಭಂ ’’ ““ವಾಮನಾಯನಮೋಂತೇನ ವಾಮೇಕುತು ಧಾರಯೇತ್ ॥’’ ಇತ್ಯಾದಿ ಪ್ರಮಾಣ ವಚನಾನುಗುಣವಾಗಿ ಎಂಟನೆಯ ನಾಮದ ಅಧಿದೇವತೆಯ. ಹೆಸರು-ರೂಪ-ವರ್ಣ-ಆಯುಧಾದಿಗಳನ್ನು ಇಲ್ಲಿ ತಿಳಿಸಲಾಗಿದೆ. ಸರಸ್ವತೀವಲ್ಲಭನಾದ ಬ್ರಹ್ಮನು ಸ್ವಾಧೀನ ಸಕಲವೇದನಾಗಿ ನಡೆಸಿದ ಯಾಗದಲ್ಲಿ ವೇದಿಕೆಯಂತಿರುವ ಹಸಿಶೈಲದಲ್ಲಿ ಆವಿರ್ಭವಿಸಿ, ಪರಾತ್ಪರನಾಗಿ ವಿರಾಜಮಾನನಾದ ವರದರಾಜನು, ಪರಮದಯೆಯಿಂದ ವಾಮನಾವತಾರ ವಿಶೇಷವುಳ್ಳವನಾಗಿ ನಮ್ಮ ಉದರದ ಎಡಭಾಗವನ್ನೂ, ವಾಯವ್ಯದಿಕ್ಕನ್ನೂ ಆಶ್ರಿತಸಂರಕ್ಷಣಾರ್ಥವಾಗಿ ತನ್ನ ನಿತ್ಯ ವಾಸಸ್ಥಾನವನ್ನಾಗಿ ಮಾಡಿಕೊಂಡು, ಪ್ರಚಂಡ ಸೂರ್ಯನಂತೆ ದೇದೀಪ್ಯಮಾನನಾಗಿ, ಸಂಸಾರಿ ಚೇತನರಾದ ತನ್ನ ಭಕ್ತರ ವೃಂದವನ್ನು ಸಂಸಾರ ಸಮುದ್ರದಿಂದ ದಾಟಿಸುವ ನಾವೆಯಂತಾಗಿ, ನಾಲ್ಕು ಕೈಗಳಲ್ಲೂ ವಜ್ರಾಯುಧಗಳನ್ನು ಧರಿಸಿ, ಸದಾ ಪ್ರಜ್ವಲಿಸುತ್ತಾ ಸಂರಕ್ಷಿಸುವನು. वाग्देवीसमुपासितस्य चतुरास्यस्याध्वरे चोदितः । स्वामी वामन आददान उदरं वामं च वायो र्दिशम् ॥ धामत्वेन युवार्कसन्निभतनुः क्षेमंकरो नः प्लवः । वज्र स्तैश्च चतुर्भिरायुधवरै र्देव श्चकास्ते परः ॥ 470 ಪನ್ನಿರುನಾಮಂ ಮೂಲ : ಶೀರಾರ್ ಶಿರೀದನಾಯ್ ಶಿರ್ವ ದಿಕ್ಕುಮಿಡಬ್ಬುಯಮುಂ, ಏರಾರಿಡಂಕೊಂಡಿಲಂಗುವೆಣ್ಣಾಮರೈಮೇನಿಯನಾಯ್, ಪಾರಾಯಪಟ್ಟಯಮೀರಿರಣ್ಣಾಲುಂಬಯಮರುಕ್ಕುಂ, ಆರಾವಮುದ ಮಾಮಲೈ ಮೇಲ್ ಮೇಲ್ ನಿನ್ನವಚ್ಚುತನೇ !! 9

ಅರ್ಥ :- ಆರಾ = ತೃಪ್ತಿಯಾಗುವಂತಹ, ಅಮುದು : ಅಮೃತವಾದ, (ಅತ್ಯಂತ ಭೋಗ್ಯತಮನಾದ) ಅತ್ತಿ-ಮಾ-ಮಲೈ-ಮೇಲ್-ನಿನ್ನ : ಹಸ್ತಿಗಿರಿ ಶಿಖರ ನಿವಾಸಿಯಾದ, ಅಚ್ಚುತನೇ : ವರದರಾಜನೇ, ಶೀರ್ -ಆರ್ : ಸಕಲ ಕಲ್ಯಾಣಗುಣ ಪರಿಪೂರ್ಣನಾದ, ಶಿರೀರ್ದ-ಆಮ್ : ಶ್ರೀಧರನೆಂಬ ಹೆಸರಿನಿಂದ, ಶಿವನ್ -ದಿಕ್ಕುಂ = ಈಶಾನ ದಿಕ್ಕಾದ ಈಶಾನ್ಯ ದಿಗ್ಗಾಗವನ್ನೂ, ಇಡ-ಬುಯಮುಂ ಏರ್ -ಆರ್ -ಇಡಂ-ಕೊಂಡು = ಅತ್ಯಂತೌಚಿತ್ಯಪೂರ್ಣವಾದ ಸ್ಥಾನವನ್ನಾಗಿ ಸ್ವೀಕರಿಸಿ, ಎಡ ಭುಜವನ್ನೂ, ಇಲಂಗು : ಹೊಳೆಯುತ್ತಿರುವ, ವೆಣ್ -ತಾಮರೈ : ಬಿಳಿದಾವರೆಯಂತಿರುವ, ಮೇನಿಯನ್ -ಆಮ್ : ದಿವ್ಯದೇಹವುಳ್ಳವನಾಗಿ, ಪಾರಾಯ : ಭಾರವಾದ, ಪಟ್ಟಯಂ-ಈರ್ -ಇರಂಡಾಲುಂ = ನಾಲ್ಕು ಪಟ್ಟಸವೆಂಬ ಖಡ್ಗವಿಶೇಷಗಳಿಂದಲೂ, ಬಯಂ : (ಆಶ್ರಿತರ) ಭಯವನ್ನು, ಅರುಕ್ಕುಂ = ಕತ್ತರಿಸುವನು (ನಾಶಮಾಡುವನು) ತಾತ್ವರ :- “ಶ್ರೀಧರಂ ಪುಂಡರೀಕಾಭಂ ಚತುಃಪಟ್ಟಸಮಾಶ್ರಯೇ ’’ “ಐಶಾನ್ಯಾಂ ಪುಂಡರೀಕಾಭಃ ಶ್ರೀಧರಃಪಟ್ಟಸಾಯುಧಃ’ ‘‘ಪಟ್ಟಸಾಯುಧಹಸ್ತಂಚ ಪುಂಡರೀಕಾಭಮೇವ ಚ !??

‘‘ಶ್ರೀಧರಾಯೇತಿ ಮಂತ್ರೇಣ ಭುಜೇ ವಾಮೇತು ಧಾರಯೇತ್ [ ಇತ್ಯಾದಿ ಪ್ರಮಾಣೋಕ್ತಿಗಳಿಗನುಸಾರವಾಗಿ ಒಂಭತ್ತನೆಯ ನಾಮದ ಅಧಿದೇವತೆಯ ಹೆಸರು-ವರ್ಣ-ಆಯುಧಾದಿಗಳು ಇಲ್ಲಿ ನಿರೂಪಿಸಲ್ಪಡುವುವು. ಎಷ್ಟು ದರ್ಶನಮಾಡಿದರೂ ತೃಪ್ತಿಯೇ ಆಗದಷ್ಟು ಭೋಗ್ಯತಮನಾದ, ಭಕ್ತರ ಹೃದಯದಿಂದಂದೂ ಚ್ಯುತನಾಗದಂತಹ, ಹಸ್ತಿಗಿರಿ ಶಿಖರದಲ್ಲಿ ಬೆಳಗುತ್ತಿರುವ ಶ್ರೀ ವರದರಾಜನೇ ಸಮಸ್ತಕಲ್ಯಾಣಗುಣಾಭಿರಾಮನಾದ ‘‘ಶ್ರೀಧರ” ನೆಂಬ ನಾಮಧೇಯದಿಂದ ಈಶಾನ್ಯ ದಿಗ್ಗಾಗವನ್ನೂ, ಆಶ್ರಿತರಾದ ನಮ್ಮ ಎಡಭುಜವನ್ನೂ ಪರಮಕೃಪೆಯಿಂದ ತನ್ನ ವಾಸಸ್ಥಾನವನ್ನಾಗಿ ಅಂಗೀಕರಿಸಿ, ಪೊಳೆವ ಬಿಳಿದಾವರೆಯಂತೆ ಹೊಳೆಯುತ್ತಾ ತತ್ವವರ್ಣ ದಿವ್ಯಮಂಗಳ ವಿಗ್ರಹನಾಗಿ, ಅನ್ಯ ದುರ್ಧರವಾದ ನಾಲ್ಕು ಪಟ್ಟಸವೆಂಬ ಕತ್ತಿಯ ಜಾತಿಯ ಆಯುಧಗಳನ್ನು ಧರಿಸಿ, ಧರ್ಮಾರ್ಥಕಾಮ ಮೋಕ್ಷಗಳೆಂಬ ಪುರುಷಾರ್ಥಗಳಿಗೆ ವಿರೋಧಿಯಾಗುವುದೆಲ್ಲವನ್ನೂ ಒಂದೇ ಸಲಕ್ಕೆ ಕತ್ತರಿಸುವಂತೆ ಸ್ವಾಶ್ರಿತರಿಗೆ ಅಭಯವನ್ನೀಯುತ್ತಾ ಅವರ ಸರ್ವವಿಧ ಭಯವನ್ನೂ ನಿವಾರಿಸಿ ಪರಿಪಾಲಿಸುವನು. ಪನ್ನಿರುನಾಮಂ पूर्णो भव्यगुणै रिभाद्रिशिखरेऽपूर्णामृतः श्रीधरः । स्वीकृत्योचित्तधाम वामभुज मप्यैशीं दिशं चाच्युतः ॥ सन्धार्येतरदुर्धरांश्च चतुर स्तान् पट्टसाख्यानसीन् । राजत्पाण्डरपद्मसन्निभतनु र्भीतिं भिनत्तीह नः ॥ ಮೂಲ: ಎರುಡೀಕೇಶನಿರೈ ಕೀಳಿಡಕ್ಕಳುವೆವಲ್,

471 ನನ್ನಿಲೈಮಿನ್ನುರುವಾಯ್ ನಾಲು ಮುಗ್ಗರಂ ಕೊಳಿಕ್ಕುಂ ಪೊನ್ನಕಿಲ್ ಶೇರ್‌ನ್ದಲೈಕ್ಕುಂ ಪುನಲ್‌ವೇಗೈವಡಕರೈಯಿಲ್, ತೆನ್ನನುಹನ್ನುತೊಳುಂ ತೇನೈವೇದಿಯ‌ ದೆಯ್ದಮೊನ್ನೆ ॥ 10 ಅರ್ಥ :- ಪೊನ್ = ಎಲ್ಲರೂ ಆಸೆಪಡುವಂತಹ, ಅಹಿಲ್ : ಸುಗಂಧದ ವೃಕ್ಷವಿಶೇಷಗಳೊಂದಿಗೆ, ಶೇರ್‌ನ್ನು - ಸೇರಿ, ಅಲೈಕ್ಕುಂ : ಅಲೆಗಳಿಂದ, ಪುನಲ್ ಹರಿಯುವ, ವೇಗೈ - ವೇಗವತಿಯ, ವಡ-ಕರೈಯಿಲ್ - ಉತ್ತರದ ತೀರದಲ್ಲಿ, ತೆನ್ನನ್ - ದಕ್ಷಿಣ ದಿಕೃತಿಯಾದ ರಾಜನಿಂದ, ಉಹಣ್ಣು = ಅತ್ಯಾಸೆಪಟ್ಟುತೊಳುಂ = ಸೇವಿತನಾದ, ತೇನೆ : ‘‘ತೇನಂ” ಎಂಬ ಕಾಂಚಿಯ ಉಪಗ್ರಾಮದಲ್ಲಿ ವಾಸವಾಗಿರುವ, ವೇದಿಯರ್ = ವೇದಾಧ್ಯಯನ ಮಾಡಿದವರ, ದೆಯ್ಯಂ-ಒನ್‌ - ಅನನ್ಯದೇವತೆಯಾದ ವರದರಾಜನು, ಎನ್ - ನನ್ನ, ಇರೆ - ಸ್ವಾಮಿಯಾದ, ಇರುಡಿಕೇಶನ್ - ಹೃಷಿಕೇಶನೆಂಬ ಹೆಸರಿನಿಂದ, ಕೀಳ್ = ಕೆಳಗಡೆ, ಇಡ-ಕಳುತ್ತು : ಕುತ್ತಿಗೆಯ ಎಡಭಾಗ, ಎನ್-ಇವಲ್ ಸ್ಥಳಗಳಲ್ಲಿ, ನಲ್ -ನಿಲೈ : ಒಳ್ಳೆಯ ಸ್ಥಿತಿಯುಳ್ಳವನಾಗಿಯೂ, ಮಿನ್ -ಉರುವಾಯ್ : ಮಿಂಚಿನಂತೆ ರೂಪವುಳ್ಳವನಾಗಿಯೂ, ನಾಲು-ಮುಗ್ಗರಂ : ನಾಲ್ಕು ಮುದ್ರರ (ಹಾರೆ)ಗಳನ್ನು ಕೊಂಡು = ಧರಿಸಿ, ಅಳಿಕ್ಕುಂ = ಸಂರಕ್ಷಿಸುವನು.

ತಾತ್ಪರ :- ‘‘ಚತುರ್ಮುದ್ದರ ಮಭೇಮಿ ಹೃಷೀಕೇಶಂ ತಟಿತ್ವಭಂ !’’ ‘‘ವಿದ್ಯುತ್ವಭೋ ಹೃಷೀಕೇಶೋಹ್ಯವಾಚ್ಯಾಂ ದಿಶಿಮುದ್ದರೀ !!?” ‘‘ಧರಂತಂ ಮುದ್ದರ್ರಾ ದೋರ್ಭಿಶ್ಚತುರ್ಭಿಃ ವೈದ್ಯುತದ್ಯುತಿಂ ’ ಹೃಷೀಕೇಶತಿ ಮಂತ್ರೇಣ ಧಾರಯೇದ್ವಾಮ ಕಂಧರೇ ’’ ಎಂಬ ಇತ್ಯಾದಿ ಪ್ರಮಾಣವಚನಗಳಂತೆ ಹತ್ತನೆಯ ನಾಮದ ದೇವತೆಯ ಹೆಸರು-ವರ್ಣ- ಆಯುಧಾದಿಗಳನ್ನು ತಿಳಿಸಲಾಗುವುದು. ಅತ್ಯಂತ ಸ್ಪೃಹಣೀಯವಾದ ಅಗರು-ಗಂಧ ಮೊದಲಾದ ವೃಕ್ಷಗಳ ಸಂಬಂಧದಿಂದ ಸುವಾಸನೆಯಾಗಿ ಹರಿಯುವ ವೇಗವತೀನದಿಯ ಉತ್ತರದ ದಡದಲ್ಲಿ ದಕ್ಷಿಣ ದಿಕ್ಕಿನ ಕಡೆ ಇರುವ ರಾಜರಿಂದ ಸುಸೇವಿತನಾಗಿಯೂ, ‘‘ತೇನಂ’’ ಎಂಬ ಊರಿನ ಅಧ್ಯಯನ ……. 472 ಪನ್ನಿರುನಾಮಂ ಸಂಪನ್ನರೂ, ಜ್ಞಾನ-ವೈರಾಗ್ಯ -ಅನುಷ್ಠಾನನಿಷ್ಠರೂ ಆದ ಭಾಗವತೋತ್ತಮರಿಂದ ಕುಲದೇವತೆಯಂತೆ ಸಮಾರಾಧಿತನಾದ, ಹಸ್ತಿಗಿರಿಯ ವರದರಾಜನು ‘‘ಹೃಷೀಕೇಶ’ನೆಂಬ ಹೆಸರಿನಿಂದ ಮಿಂಚಿನ ಪ್ರತಿಭೆಯುಳ್ಳವನಾಗಿ, ಕಬ್ಬಿಣದ ಹಾರೆಗಳನ್ನು ಹಿಡಿದು ಸದಾ ಆಶ್ರಿತ ಸಂರಕ್ಷಣೆಗಾಗಿಯೇ ಬದ್ಧ ದೀಕ್ಷಿತನಾಗಿ ನನ್ನ ಕಂಠದ ಎಡಭಾಗದಲ್ಲೂ ಕೆಳದಿಕ್ಕಿನಲ್ಲೂ ನೆಲೆಸಿ ಪರಮ ದಯೆಯಿಂದ ಪರಿಪಾಲಿಸುವನು. रोधस्यत्यन्तहृद्ये सुरभितमहितस्रोतसो वेगवत्याः । नागाद्रीशो ह्यवाच्यां दिशिनृपतिवरै स्सेवितोऽत्यादरेण ॥ तेनं ग्रामस्थसाङ्गश्रुतिविदभिजनेशो हृषीकेश एषः । विद्युद्रा वामकण्ठे ममच धृतचतुर्मुद्ररः पात्यधश्च ॥ ಮೂಲ : ಎಮ್ಬರನಾಬನು ಮೆನನಂ ಪತಿಮನ್ನಿನಿನು, ವಮೊರತಿರವನ್ ಆಯಿರಂಮೇವಿಯ ಮೆಯ್ಯರುವಾಯ್, ಅಂಪೊರರಂಗಳಿಲೈಮಡೈಕೊಣ್ಣಂಜಲೆಳಿಕ್ಕುಂ, ಶೆಮೊನ್ ತಿರುಮದಿಳ್ ಶೂಳ್ ಶಿಬ್ದುರಾಶಲಕ್ಷೇವಕನೇ ॥

१० ॥ ಅರ್ಥ :- ಶೆಂ-ಪೊನ್ = ಹೊಳೆಯುವ ಚಿನ್ನದಂತಿರುವ, ತಿರು-ಮದಿಳ್ ಪ್ರಾಕಾರದಿಂದ, ಶೂಳ್ - ಪರಿವೃತವಾದ, ಶಿಂದುರಾಚಲ ಹಸ್ತಿಶೈಲದಲ್ಲಿರುವ, ಶೇವಕನ್ = ಮಹಾಭಟನಂತಿರುವ ವರದರಾಜನು, ಎಂ : ನಮ್ಮ ಪದ್ಮನಾಬನ್ = ಪದ್ಮನಾಭನೆಂಬ ಹೆಸರಿನಿಂದ, ಎನ್-ಪಿನ್ - ನನ್ನ ಬೆನ್ನುಭಾಗವನ್ನೂ, ಮನಮುಂ = (ಉಂ ಎಂಬುದನ್ನು ಇಲ್ಲಿ ಸೇರಿಸಬೇಕು) ಮನಸ್ಸನ್ನೂ, ಪತ್ತಿ: ಆಶ್ರಯಿಸಿ, ಮನ್ನಿ - ಸ್ಥಿರವಾಗಿ, ನಿನ್ನು - ನಿಂತು, ಅಂ = ಸುಂದರವಾದ, ಪೊನ್ : ಬಹಳ ಆಸೆಯಾಗುವಂತಹ, ಕದಿರವನ್-ಆಯಿರ್ - ಸಾವಿರ ಸೂರರಂತೆ, ಮೇವಿಯ = ಅತ್ಯಾದರಣೀಯವಾದ, (ಮತ್ತು) ಮೆಯ್ ಸತ್ಯಸ್ವರೂಪವಾದ, ಉರುವಾಯ್ : ರೂಪವುಳ್ಳವನಾಗಿ, ಅಂ-ಪೊನ್ -ಕರಂಗಳಿಲ್ = ರಮಣೀಯ ಸುವರ್ಣವರ್ಣ ಕೈಗಳಲ್ಲಿ ಐಂ-ಪಡೆ : ಐದು ಆಯುಧಗಳನ್ನು (ಶಂಖ-ಚಕ್ರ-ಗದಾ-ಧನುಸ್ಸು-ಖಡ್ಗಗಳನ್ನು) ಕೊಂಡು = ಪಿಡಿದು, ಅಂಜಲ್ = ಭಯಪಡಬೇಡ, ಎನ್ = ಎಂದು, ಅಳಿಕ್ಕುಂ - ಸಂರಕ್ಷಿಸುವನು.

ತಾತ್ಪರ :- ‘‘ಪಂಚಾಯುಧಂ ಪದ್ಮನಾಭಂ ಪ್ರಣಮಾಮ್ಯರ್ಕರೋಚಿಷಂ!’’ “‘ಹೃದೇ ಪದ್ಮನಾಭೋ ಮೇ ಸಹಸ್ರಾರ್ಕಸಮಪ್ರಭಃ [ ‘‘ಪಂಚಾಯುಧಧರಂ ದೇವಂ ಸಹಸ್ರಾರ್ಕಸಮಪ್ರಭಂ !’’ ‘‘ಪೃಷ್ಟೇ ಸಂಧಾರಯೇತ್ಪದ್ಮನಾಭಾಯೇತಿ ಚ ಮಂತ್ರತಃ ॥’ ಪನ್ನಿರುನಾಮಂ 473 ಇತ್ಯಾದಿ ವಚನಗಳಂತೆ ಹನ್ನೊಂದನೆಯ ನಾಮದ-ದೇವತೆಯ ಹೆಸರು-ವರ್ಣ- ಆಯುಧಾದಿಗಳು ಇಲ್ಲಿ ನಿರೂಪಿಸಲ್ಪಡುತ್ತವೆ. ಕಲಿಪುರುಷನು ಪ್ರವೇಶಿಲಾಗದಂತಹುದೂ, ಸುವರ್ಣದಂತೆ ಹೊಳೆಯುವುದೂ ಆದ ಪ್ರಾಕಾರದಿಂದ ಪರಿವೃತವಾದ, ದುರಾರೋಹವಾದ ಪ್ರಬಲ ಗಜದಮೇಲೇರಿ ಕಂಗೊಳಿಸುವ ಯೋಧ ಪುರುಷನಂತೆ, ಹಸಿಶೈಲದ ಶಿಖರದಲ್ಲಿ ವಿರಾಜಿಸುವ ಪುರುಷೋತ್ತಮನಾದ ವರದರಾಜನು “ಪದ್ಮನಾಭ’‘ನೆಂಬ ಹೆಸರಿನಿಂದ ನಮ್ಮ ಬೆನ್ನು ಭಾಗದಲ್ಲೂ ಮನಸ್ಸಿನಲ್ಲೂ ನೆಲೆಸಿಕೊಂಡು, ಅತಿ ರಮ್ಯವೂ, ಸ್ವರ್ಣವರ್ಣನೂ ಆದ ಸೂರ್ಯನು ಸಾವಿರ ಸಂಖ್ಯೆಯಲ್ಲಿದ್ದಂತೆ ಪ್ರಭೆಯಿಂದ ಕಂಗೊಳಿಸುತ್ತಾ, (ಪಂಚಭೂತಗಳನ್ನೂ, ಇಂದ್ರಿಯಗಳನ್ನೂ, ಪ್ರಾಣಗಳನ್ನೂ ಈ ಪ್ರಪಂಚದಲ್ಲಿ ಏಕಕಾಲದಲ್ಲಿ ಕಾಪಾಡುವವನಾಗಿದ್ದೇನೆಂದು ತೋರುತ್ತಿಹನೋ ಎಂಬಂತೆ) ಪಂಚಾಯುಧಗಳನ್ನೂ ಸುವರ್ಣ ಸುಂದರ ಕರಗಳಲ್ಲಿ ಧರಿಸಿ ಭಕ್ತರಿಗೆ “ಭಯಪಡಬೇಡಿ’’ ಎಂದು ಅಭಯವನ್ನು ನೀಡುತ್ತಾ ಅನವರತವಾಗಿ ಸಂರಕ್ಷಿಸುವನು. संराजत्काञ्चन श्रीवरणपरिवृताने कपाहार्ययोधः | स्वामीनः पद्मनाभो दृढ मधिहृदय पृष्ठदेशे स्थितश्च ॥ सत्याकारोऽभिकाङ्क्ष्यो रुचिररुचिसहस्रार्कवत् रम्यहस्तैः । धृत्वा पञ्चायुधानि स्वयमवति वदन् माच भैषीरितीह ॥ ಮೂಲ : ದಾಮೋದರನೆನನ್ ದಾಮಂಗಳ್ ನಾಲುಕರಂಗಳಿಲ್‌ಕೊಂಡು, ಆಮೋತರಮೆನ ವಾಹತ್ತಿನುಳ್ ಪುರಂಪಿರ್‌ಳುತ್ತುಂ, ತಾಮೋರಿಳಂಕದಿರೋನೆನ ವೆನ್ನುಳಿರುಳರುಕ್ಕುಂ

११ ಮಾಮೋಹಂಮಾತುಂ ಮದಿಳತ್ತಿಯೂರಿನ್ ಮರಕತಮೇ ॥ 12 ಅರ್ಥ :- ಮಾ-ಮೋಹಂ - ದುರ್ವಾರವೆನಿಸಿರುವ ಅಜ್ಞಾನವನ್ನೂ, ಮಾತ್ತು : ನಾಶಮಾಡುವ, ಮದಿಳ್ : ಪ್ರಾಕಾರವುಳ್ಳ, ಅತ್ತಿ-ಊರಿಲ್ : ಹಸ್ತಿಗಿರಿಯಿಂದಲಂಕೃತವಾದ

  • ಕಾಂಚಿಯಲ್ಲಿ ಪ್ರಕಾಶಿಸುವ, ಮರಕತಂ : ಮರಕತರತ್ನದಂತಿರುವ ವರದರಾಜನು, ಎರ್ತ-ದಾಮೋದರನ್ - ನನ್ನಸ್ವಾಮಿ ದಾಮೋದರನೆಂಬ ಹೆಸರಿನಿಂದ, (ಆಮೋತರಂ ಎಂಬುದನ್ನು ಹಿಂದುಮುಂದಾಗಿ ‘‘ತರಂ-ಆಮೋ’’ ಎಂದು ಅನ್ವಯಿಸಬೇಕು) (ಮತ್ತಾರಾದರೂ) ತರಂ-ಆಮೋ 1 = ಸಮಾನವಾಗುವನೋ ! ಎನ : ಎಂಬಂತೆ, ಆಹತ್ತಿನ್ -ಉಳ್ - ದೇಹದ ಒಳಗಡೆಯೂ, ಪುರಂ = ಹೊರಗಡೆಯೂ, ಪಿರ್‌ಗಳುತ್ತುಂ ಕತ್ತಿನ ಹಿಂದುಗಡೆಯೂ, ತಾಂ = ತಾನು, ಓರ್ : ಅಸದೃಶನಾದ, ಇಳಂ : ಎಳೆಯ, ಕದಿರೋನ್ -ಎನ = ಸೂರ್ಯನೋ ಎನ್ನುವಂತೆ, (ಪ್ರತಿಷ್ಠಿತನಾಗಿ), ನಾಲು-ಕರಂಗಳಿಲ್

✪474 ಪನ್ನಿರುನಾಮಂ = ನಾಲ್ಕು ಕೈಗಳಲ್ಲೂ, ದಾಮಂಗಳ್ = ಪಾಶಗಳನ್ನು, ಕೊಂಡು = ಧರಿಸಿ, ಎನ್ -ಉಳ್ - ನನ್ನ ಅಂತಃಕರಣದಲ್ಲಿರುವ, ಇರುಳ್ : ಅಜ್ಞಾನಾಂಧಕಾರವನ್ನು, ಅರುಕ್ಕುಂ : ನಿರ್ಮೂಲಗೊಳಿಸಿ, ಜ್ಞಾನ ಬೆಳಕನ್ನು ಕೊಟ್ಟು ಪರಿಪಾಲಿಸುವನು. ತಾತ್ಪರ್ಯ :- ‘‘ದಾಮೋದರಂ ಚತುಃಪಾಶಂ ಇಂದ್ರಕೋಪನಿಭಂ ಭಜೇ ’’ ‘‘ಇಂದ್ರಕೋಪಕಸಂಕಾಶಃ’ ಪಾಶಹಸ್ಕೋಪರಾಜಿತಃ ॥” ‘‘ಚತುಃಪಾಶಕರಂ ದೇವಂ ಬಾಲಾರ್ಕಸದೃಶದ್ಯುತಿಂ ’ “ದಾಮೋದರಾಯ ಮಂತ್ರೇಣ ಧಾರಯೇತ್ಪಶ್ಚಿಮೇ ಗಲೇ !?? ಇತ್ಯಾದಿ ಸೂಕ್ತಿಗಳಂತೆ ಹನ್ನರಡನೆಯ ಪುಂಡ್ರದ ದೇವತೆಯ ಹೆಸರು-ವರ್ಣ- ಆಯುಧಾದಿಗಳನ್ನು ಪ್ರತಿಪಾದಿಸಲಾಗುವುದು.

ದೇಹಾತ್ಮಭ್ರಮ-ಸ್ವತಂತ್ರಾಭ್ರಮ-ತತ್ಕಾರಗಳನ್ನುಂಟುಮಾಡುವ ಅಜ್ಞಾನವನ್ನು ವಿನಾಶಗೊಳಿಸುವ, ಪ್ರಾಕಾರಗಳಿಂದ ಭೂಷಿತವಾದ, ಹಸ್ತಿಶೈಲದಿಂದ ಅಲಂಕಾರಗೊಂಡ ಕಾಂಚಿಯಲ್ಲಿ ದೇದೀಪ್ಯಮಾನವಾದ ಮರಕತರತ್ನದಂತೆ ಸ್ನಿಗ್ಧಶ್ಯಾಮಲ ಮಂಜುಲೋಜ್ವಲ ದಿವ್ಯಮಂಗಳ ವಿಗ್ರಹನಾದ ವರದರಾಜನು’’ ‘‘ದಾಮೋದರ’ನೆಂಬ ಹೆಸರಿನಿಂದ ತನ್ನಂತಹ ಮೂರ್ತಿ ಮತ್ತೊಂದಿಲ್ಲವೆನ್ನುವಂತೆ ಅಭಿವ್ಯಕ್ತನಾಗಿ, ನಮ್ಮಂತರಂಗದಲ್ಲೂ ಹೊರಗೂ, ಕುತ್ತಿಗೆ ಹಿಂಭಾಗದಲ್ಲೂ ಸುಪ್ರತಿಷ್ಠತನಾಗಿ, ಬಾಲಸೂರ್ಯಪ್ರಕಾಶನಾಗಿ, ಸ್ವತರಸಮಸ್ತ ಮೂರ್ತಿ ವಿಲಕ್ಷಣನಾಗಿ, ನಾಲ್ಕು ಕೈಗಳಲ್ಲೂ ಪಾಶಗಳನ್ನು ಧರಿಸಿ, ಪ್ರಜ್ವಲಿಸುತ್ತಾ, ನನ್ನ ಅಂತಃಕರಣದಲ್ಲಿರುವ ಅಜ್ಞಾನವೆಂಬ ಕತ್ತಲನ್ನು ನಿವಾರಿಸಿ, ಜ್ಞಾನಪ್ರಕಾಶವನ್ನು ಕೊಟ್ಟು ಸಂರಕ್ಷಿಸುವನು. महामोहापोह क्षमवरणकाञ्चीमरकतः । प्रभुश्चैको दामोदर इह भवेत् किन्विह गले ॥ प्रतीचीने मूर्ते र्बहिरप गतोऽन्तश्च वरदः । छिनत्ति व्यामोहं दिनमणिनिभ श्च स्वय महो ॥ ಮೂಲ: ಕತ್ತುತ್ತಿರಿಯುಂ ಕಲೈಹಳ್ಳವೆಲ್ಲಂ ಕರುತ್ತಿತ್ತು, ಪತಿಕ್ಕುರುತುಣೈ ಪನ್ನಿರುನಾಮಂ ಪಯಿಲ್ಲವರು, ಮುತ್ತಿಕ್ಕುಮೂಲಮೆನವೇ ಮೊಳಸ್ಥವಿಮೂನುನಾಯ್ಡುಂ ತಿಕ್ಕುಮೆಂಗಳರುವತ್ತಿಯೂರರೈಚ್ಚರವರೇ ॥ १२ 13 ಅರ್ಥ :- ಪತ್ತಿಕ್ಕು - ಭಕ್ತಿಗೆ, ಉರು : ಅತಿಸಮೀಪವಾದ, ತುಣೈ -ಆ೦ = ಸಹಾಯವಾಗುವ, ಪನ್ನಿರುನಾಮಂ - (ಕೇಶವಾದಿ) ಹನ್ನೆರಡು ನಾಮಗಳನ್ನು, ಕತ್ತು =

ಪನ್ನಿರುನಾಮಂ

475

ಕಲಿತು, ತಿರಿಯುಂ - ಸಂಚರಿಸುವ, ಕಲೈಹಳ್ಳೆ = ವಿದ್ಯೆಗಳನ್ನು, ವೆಲ್ಲಂ = ಜಯಿಸುವಂತಹ, ಕರುತ್ತಿಲ್ : ಮನಸ್ಸಿನಲ್ಲಿ, ವೈತ್ತು = ಇರಿಸಿ (ಗ್ರಹಿಸಿ), ಪಯಿಲ್ ಬವರು ಅಭ್ಯಾಸಮಾಡುವವರಿಗೆ, ಎಂಗಳ್ - ನಮ್ಮ ತಿರು-ಅತ್ತಿ-ಊರರೈ = ಶ್ರೀ ಹಸ್ತಿಗಿರಿಯಲ್ಲಿ ವಾಸಿಸುವ ವರದರಾಜನನ್ನು ಶೇರವರು : ಆಶ್ರಯಿಸುವವರಿಗೆ, ಮುತ್ತಿಕ್ಕು - ಮೋಕ್ಷಕ್ಕೆ, ಮೂಲ೦-ಎನ : ಮುಖ್ಯ ಕಾರಣವೆಂದು, ಮೊಳಿಂದ : ಹೇಳಲಾಗಿರುವ, ಇ-ಮೂನ್ನು-ನಾನು : ಈ ಹನ್ನೆರಡು ನಾಮಗಳಿಂದ ಕೂಡಿದ ಗಾಧೆಗಳು, ತಿತಿಕ್ಕುಂ ಅಮೃತದಂತೆ ಅತ್ಯಂತ ಭೋಗ್ಯವಾಗುವುವು. (‘ಶಿದ್ದಿಕ್ಕುಂ’’ ಎಂದು ಪಾಠವುಂಟು. ಆಗ ಸಿದ್ಧಿಸುವುವು ಎಂದರ್ಥ.)

ತಾತ್ಪರ :- ಭಗವದ್ಭಕ್ತಿವರ್ಧಕಗಳಾಗಿಯೂ, ಭಕ್ತಿಪರೀವಾಹಗಳಾಗಿಯೂ, ಇರುವುದರಿಂದ ಈ ಹನ್ನೆರಡು ನಾಮಗಳನ್ನೂ, ಸ್ಥಾನ-ರೂಪ-ವರ್ಣ-ಆಯುದಾಧಿ’ಗಳ ಸಹಿತ ಅಭ್ಯಾಸಮಾಡಿ, ಸಕಲ ವಾದಿಗಳನ್ನೂ ಜಯಿಸುವ ಸಾಮರ್ಥ್ಯವನ್ನು ಸಮಸ್ತ ವಿದ್ಯೆಗಳ ಧಾರಣಕ್ಕೆ ವಿದ್ಯಾಸ್ಥಾನದಂತಿರುವ ಮನಸ್ಸಿಗೆ ಉಂಟು ಮಾಡಿಕೊಂಡು, ಜಯಿಸಿ, ತತ್ವಾರ್ಥಗಳನ್ನರಿತು ಈ ನಾಮಾನುಸಂಧಾನವು ಮುಕ್ತಿಗೆ ಮೂಲಕಾರಣವೆಂಬುದನ್ನು ಎಲ್ಲರಿಗೂ ತಿಳಿಸಿ, ಈ ಹನ್ನೆರಡು ಪದ್ಯಗಳನ್ನು ಅಮೃತಲಾಭವಾದಂತೆ ತಿಳಿಯುವರು ಉತ್ತಮ ಭಾಗವತರು. ಈ ಹಸ್ತಿಗಿರಿ ನಾಥನಾದ ವರದರಾಜನ ಪಾದಾರವಿಂದಗಳನ್ನು ಆಶ್ರಯಿಸಿದ ಭಕ್ತಶ್ರೇಷ್ಠರಿಗಲ್ಲದೆ ಮತ್ತಾರಿಗೂ ಇಂತಹ ನಾಮಾಮೃತವು ರುಚಿಸುವುದೂ ಇಲ್ಲ ಲಭಿಸುವುದೂ ಇಲ್ಲ. ಇದನ್ನು ಕಲಿತವರಿಗೆ ಸಕಲ ಸಿದ್ಧಿಗಳೂ ಸಿದ್ಧಿಸುವುವು. नामानि द्वादशैतान्यतिनिकटचराण्येव भक्तेरधीत्य । भ्राम्यद्वादार्थितन्त्रोद्विदलनविजयिन्यात्मनि ध्यायतां च ॥ श्रीमन्नागाद्रिभूषाञ्चितपुरवरदं संश्रितानां प्रभुं नः । गाथा चैतास्सुभोग्याः परमपदनिदानं हि सिध्यन्ति चार्थाः ॥ Id Ta 7: 1 वेदान्तार्यगुरूत्तमा अभिदधु र्लोकोपदेशेच्छया । गाधा द्वादशनामवैभवजुषः पुण्ड्राधिदेवाञ्चिताः । । अर्थं देशगिरा गिरा सुमनसां श्लोकांश्च तासां पुनः । श्रीमद्देशिकवर्य एव कृपया गोपालतोऽकारयत् । । श्री देशिकप्रबन्धस्यः भागो द्वादशनामकः । सार्थ: संश्लोकित चाप पूर्णतां प्रीयतां गुरुः ॥ १३ ॥3,0 ॥ ॥ಶ್ರೀಮತೇ ನಿಗಮಾಂತ ಮಹಾದೇಶಿಕಾಯ ನಮಃ ॥