೦೭ ಅಡೈಕಲಪ್ಪತ್

ಮೂಲ : ಪತಿಮುದಲಾಮವಲ್ ಪತಿಯೆನಕ್ಕು ಕ್ಯೂಡಾಮಲ್, ಎತ್ತಿಪ್ಪೆಯು ಮುಳನ್ನಿಡಿಯಿಳ್ಳೆತ್ತುವಿಳುಂ ಕಾಕಂಪೋಲ್, ಮುತ್ತಿತರುಂನಗರೇಳಿಲ್ ಮುಕ್ಕಿಯಮಾಂ ಕಚ್ಚಿತನಿಲ್, ಅತ್ತಿಗಿರಿಯರುಳಾಳ‌ ಅಡೈಕ್ಕಲನಾಂ ಪುಹುಂದೇನೇ ॥

1

ಅರ್ಥ :- ಪತ್ತಿ = ಭಕ್ತಿಯೇ, ಮುದಲಾಂ = ಅವತ್ತಿಲ್ : ಮೊದಲಾದವುಗಳಲ್ಲಿ ಪದಿ - ನಿಲುಗಡೆಯು, ಎನಕ್ಕು : ನನಗೆ, ಕೂಡಾಮಲ್ : ದೊರಕದೆ, ಎತ್ತಿಶೆಯುಂ ಎಲ್ಲೆಲ್ಲೂ ಉಳಿ = ಅಲೆದಾಡಿ, ಓಡಿ = ಓಡಿ, ಇತ್- ಬಹಳ ಆಯಾಸಗೊಂಡು,
ಎಳುಂ : (ಕಾಲಿಗೆ) ಬಿದ್ದ, ಕಾಕಂಪೋಲ್ = ಕಾಕಾಸುರನಿಗೆ ಕೊಟ್ಟಂತೆ, ಮುತ್ತಿ ಮುಕ್ತಿಯನ್ನು, ತರುಂ = ಕೊಡುವ, ನಗರ್ -ಏಳಿಲ್ = ಏಳು ನಗರಗಳಲ್ಲಿ, ಮುಕ್ಕಿಯುಂ-ಆಂ ಮುಖ್ಯವಾದ, ಕಚ್ಚಿ-ತನಿಲ್ - ಕಂಚಿಯಲ್ಲಿ (ಕಂಗೊಳಿಸುವ) ಅತ್ತಿಗಿರಿ ಹಸ್ತಿಗಿರಿಯಲ್ಲಿರುವ, ಅರುಳಾಳ‌ = ದಯಾಸಾಗರನಾದ ವರದರಾಜನಿಗೆ, ಅಡೈಕ್ಕಲಂ : ರಕ್ಷಿಸಲ್ಪಡಬೇಕಾದ ವಸ್ತುವಾಗಿ, ನಾಂ - ನಾನು, ಪುಹುಂದೇನ್ : ಆಶ್ರಯಿಸಿದವನಾದನು.

ತಾತ್ಪರ - ನನಗೆ ಭಕ್ತಿ ಮೊದಲಾದುವಲ್ಲಿನೆಲೆ ದೊರಕಲಿಲ್ಲ. ಕಾರಣ ಅನರ್ಹತೆ. ಎಲ್ಲಕಡೆಯೂ ಅಲೆದಲೆದು, ಓಡೋಡಿ, ಸಾಕಾಗಿ ಕಡೆಗೂ ಯಾವ ರಕ್ಷಣೆಯೂ ಸಿಕ್ಕದೆ, ಶ್ರೀರಾಮನನ್ನು ಶರಣುಹೋದ ಕಾಕಾಸುರನಿಗೆ ದಯಾನಿಧಿಯಾದ ಶ್ರೀರಾಮನು ರಕ್ಷಣೆಯನ್ನು ಕರುಣಿಸಿದ ಹಾಗೆ ಮುಕ್ತಿಕೊಡಲು ಶಕ್ತಿಯಿರುವ ಏಳು ಪುಣ್ಯನಗರಗಳಲ್ಲಿ ಪ್ರಧಾನವೆನಿಸಿದ ಕಾಂಚಿಯಲ್ಲಿ ಬೆಳಗುವ ಹಸ್ತಿಗಿರಿಯಲ್ಲಿ ಕಂಗೊಳಿಸುವ ಕರುಣೆಗೆ ಕಡಲಾದ ಆ ವರದ ಪ್ರಭುವನ್ನು ಶರಣುಹೊಂದಿ ಉಜ್ಜಿವಿತನಾದೆನು. भक्त्या अनवाप्तसुस्थितिः अटन् सर्वत्र धावन् यथा श्रान्त स्सन् पतितो रघूत्तमपदे काक स्तथा सप्तसु । मुक्तिप्राप्ति करीषु पूर्षु महिते काञ्चीपुरे दीव्यतः हस्तीशस्य कृपैकलक्ष्य मधुना भूत्वा त माशिश्रिये ॥ 406 ಅಡೈಕಲಪ್ಪತ್ ಮೂಲ : ಶಡೈಮುಡಿರ್ಯ ಶತುಮುಹನೆವರ್ ಮುದಲಾಂತರಮೆಲ್ಲಾಂ, ಅಡೈಯವಿನ್ನೆಪ್ಪಯನಾಹಿಅಳಿನ್ಸ್‌ಡುಂ ಪಡಿಕಂಡ್, ಕಡಿಮಲರಾಳ್ ಪಿರಿಯಾದ ಕಚ್ಚಿನಹರತ್ತಿಗಿರಿ, ಇಡಮುಡೈಯ ವರುಳಾಳರಿಯಡಿಹಳಡೈಂದೇನೇ ॥ 2

ಅರ್ಥ :- ಶಡೈ -ಮುಡಿಯನ್ : ಜಟೆತಲೆಯವನೂ, (ಈಶ್ವರನೂ), ಶತು-ಮುಹನ್ = ಚತುರ್ಮುಖನೂ, (ಬ್ರಹ್ಮನೂ) ಎನ್-ಇವ‌- ಮುದಲಾಂ-ತರಂ-ಎಲ್ಲಾಂ = ಇವರೇ ಮೊದಲಾದ ಬಗೆಯವರೆಲ್ಲರೂ, ಅಡ್ಡೆಯ ಒಟ್ಟಾಗಿ ಬಂದು ಸೇರಲು, ವಿದ್ಯೆ-ಪಯನ್-ಆಹಿ = ಕರ್ಮದ ಫಲವಾಗಿ, ಅಳಿಂದ್-ವಿಡುಂ = ನಶಿಸಿ ಹೋಗುವ, ಪಡಿ = ರೀತಿಯನ್ನು, ಕಂಡ್ = ಕಂಡು, ಕಡಿಮಲರಾಳ್ : ತುಂಬ ಸುವಾಸನೆಯ ಪೂವಿನಲ್ಲಿ ಅವತರಿಸಿದ ಲಕ್ಷ್ಮಿಯು, ಪಿರಿಯಾದ : ಅಗಲದಿರುವ, ಕಚ್ಚಿನಹರ್ = ಕಾಂಚೀಪುರದಲ್ಲಿರುವ, ಅತ್ತಿಗಿರಿ : ಹಸ್ತಿಗಿರಿಯಲ್ಲಿ ಬೆಳಗುವ, ಅರುಳಾಳ‌ = ದಯಾಳುವಾದ ವರದರಾಜನ, ಇ-ಅಡಿಹಳ್ - ಪಾದಗಳೆರಡನ್ನೂ, ಅಷ್ಟೆಂದೇನ್

  • ಶರಣುಹೋದೆನು.

ತಾತ್ಪರ :- “ಬ್ರಹ್ಮರುದ್ರಾದಿ ದೇವತೆಗಳ ಐಸಿರಿಯೆಲ್ಲವೂ ನಶ್ವರವಾದುದು. ಅವರೂ ಅವರವರ ಕರ್ಮಾನುಸಾರವಾಗಿರುವರು. ಅದಕ್ಕೆ ತಕ್ಕಂತೆ ಅವರವರ ಐಶ್ವರ್ಯ ಬಂದಿದೆ’ ಎಂಬುದನ್ನು ಚೆನ್ನಾಗಿ ಅರಿತು, ಘಮಿಘಮಿಸುವ ಪೂ ಪರಿಮಳದ ಕುವರಿಯಾದ ಸಿರಿದೇವಿಯನ್ನು ಬಿಟ್ಟಿರದ, ಕಂಚಿಯಲ್ಲಿ ಕಂಗೊಳಿಸುವ, ಆ ಹಸ್ತಿಗಿರಿ ಪ್ರಭುವಾದ, ಮತ್ತು ದಯಾನಿಧಿಯಾದ ವರದರಾಜನ ಅಡಿದಾವರೆಗಳೆರಡನ್ನೂ ಶರಣುಹೋಗಿಹೆನು. कपर्दिचतुराननप्रभृतयः स्वकर्मानुगाः भवन्ति चलवैभवा इति विलोक्य पद्माजुषः । गजाचलमहेशितुः प्रथितकाञ्चिपूर्वासिनः दयाब्धिवरदप्रभो: शरणमेमि पादद्वयम् ॥ ಮೂಲ : ತಂದಿರಂಗಳ್ ವೇರಿತಮದವಳಿಯಳಿಯಾದ್, ಮಂದಿರಂಗಳ್ ತಮ್ಮಾಲುಂ ಮತ್ತು ಮುಳ್ಳವುರೈಯಾಲು, ಅಂದರಂಕಂಡಡಿಪಣಿವಾರನೈವರುಮರುಳ್ ಪುರಿಯುಂ ಶಿಂದುರವೆರ್ಪಿಗೈಯವನಾ‌ ಶೀಲವಲ್ಲದರಿಯೇನೇ | 3

ಅಡೈ ಕಲಪ್ಪತ್ 407

ಅರ್ಥ :- ವೇರು : ಬೇರೆ, ತಂತಿರಂಗ - ತಂತ್ರಗಳು (ಉಪಾಯಗಳು) ಇನ್ನಿ - ಇಲ್ಲದೆ, ತಮದ್ - ತಮ್ಮ ತಮ್ಮ ವಳಿ = ಮಾರ್ಗವು, ಅಳಿಯಾದ್ : ಕೆಟ್ಟುಹೋಗದೆ, ಮಂತಿರಂಗಳ್ -ತಮ್ಮಾಲುಂ = ಮಂತ್ರಗಳಿಂದಲೂ, (ಅಷ್ಟೇಅಲ್ಲದೆ) ಮತ್ತುಂ = ಮತ್ತು ಉಳ್ಳ = ಇರುವ, ಉರೈಯಾಲುಂ = ಸೂಕ್ತಿಗಳಿಂದಲೂ, ಅಂತರಂ = ವ್ಯತ್ಯಾಸವನ್ನು, ಕಂಡ್ - ನೋಡಿ, (ತಿಳಿದು) ಅಡಿ = ಪಾದಗಳನ್ನು, ಪಣಿವಾರ್ : ನಮಿಸುವ, ಅನೈವರುಂ ಎಲ್ಲರಿಗೂ, ಅರುಳ್ - ದಯೆಯನ್ನು, ಪುರಿಯುಂ ಸುರಿಸುವ (ತೋರುವ), ಶಿಂದುರವೆರ್ಸ್ : ಹಸ್ತಿಗಿರಿಗೆ, ಇರೈಯವ-ನಾರ್ = ಒಡೆಯನಾದ ವರದರಾಜನ, ಶೀಲಂ-ಅಲ್ಲದ್ : ಸ್ವಭಾವವನ್ನು ಹೊರತು, (ಬೇರೆ ಯಾವುದನ್ನೂ) ಅರಿರ್ಯೇ - ಅರಿಯೆನು.

ತಾತ್ವರ :- ನಮ್ಮ ವರದರಾಜನ ಶೀಲವಿಂತಹುದೆಂದು ಹೇಳಲರಿಯೆನು. ಆಶ್ಚರಕರವಾದುದದು, ಮತ್ತು ಅಪಾರವಾದುದು. ಯಾರೇ ಆಗಲಿ ಅವರವರು ತಂತಮ್ಮ ಧರ್ಮಗಳನ್ನು ಬಿಡದೆ ನಡೆಸಿಕೊಂಡು ಪ್ರಪನ್ನರಾದರೆ ಅಂತಹವರಿಗೆ ಪೂರ್ಣ ಫಲವನ್ನು ಕೊಡದೆ ಇರನು. ಕೊಟ್ಟೇ ಕೊಡುವನು. ಇದೇ ಅವನ ಶೀಲ. (ವರ್ಣಾಶ್ರಮ ಧರ್ಮಗಳೂ, ನಿತ್ಯನೈಮಿತ್ತಿಕ ಕರ್ಮಗಳೂ ಭಗವಂತನ ಆಜ್ಞೆಯೆಂದು ಆಚರಿಸಬೇಕು. ಶರಣಾಗತರನ್ನು ಸಂರಕ್ಷಿಸಿ, ಇಷ್ಟಫಲಗಳನ್ನು ಕರುಣಿಸುವನು. ಪ್ರಪನ್ನನೆಂದಿಗೂ ಕೆಡನು). तन्त्रै रन्यै विना स्वस्वसरणिं अविनाश्यैव मन्त्रै स्तथोक्तैः वैलक्षण्यं च सूक्तैः सुविशद मवलोक्यैव पादौ नमन्ति । कारुण्योद्वर्षिणोऽस्मास्वखिलतनुयुतेष्वस्य देवाधिनेतुः हस्तिक्षोणीधराधीश्वरवरदविभोः शीलतोऽन्यन्न जाने ॥ ಮೂಲ : ಕಾಕಮಿರಾಕ್ಕದನ್ ಮನ್ನ‌ ಕಾದಲಿಕತ್ತಿರಬಂದು, ನಾಕಮರನಯನ್‌ ಮುದಲಾವಾಹನಹರಾ‌ ತಮಕ್ಕುಂ, ಬೋಗಮುಯ‌ ವೀಡುಪೆರ ಪೊನ್ನರುಳ್ ಶೆಯ್ದಮೈಕಂಡ್, ನಾಕಮಲೈನಾಯಹನಾರ್ ನಲ್ಲಡಿಪ್ಪೋದತೈಂದೇನೇ !!

M 4

ಅರ್ಥ :- ಕಾಕಂ - ಕಾಕಾಸುರ, ಇರಾಕ್ಕದನ್ = ವಿಭೀಷಣ, ಮನ್ನರ್ -ಕಾದಲಿ = ರಾಜರಾದ (ವೀರರಾದ) ಪಾಂಡವರ ಪ್ರಿಯಮಡದಿ (ದೌಪದಿ), ಕತ್ತಿರಬಂದು ಕ್ಷತ್ರ ಬಂಧು, ನಾಕಂ = ಕಾಳಿಂಗ ಅಥವಾ ಗಜೇಂದ್ರ, ಅರನ್ - ರುದ್ರ, ಅಯನ್ : ಬ್ರಹ್ಮ ಮುದಲಾಂ - ಮೊದಲಾದ, ನಾಕನಗರಾರ್ -ತಮಕ್ಕುಂ : ದೇವಲೋಕನಿವಾಸಿಗಳಾದ ದೇವತೆಗಳಿಗೂ, ಬೋಗಂ : ಸುಖಗಳಲ್ಲಿ ಉಯ‌ = ಉತ್ತಮವಾದ ಆನಂದವುಳ್ಳ,

408 ಅಡೈ ಕಲಪ್ಪತ್

ವೀಡ್ : ಮೋಕ್ಷವನ್ನೂ, ಪೆರ : ಪಡೆಯುವಂತೆ, ಪೋನ್ -ಅರುಳ್ = ದಯೆಯನ್ನು, ಶೆಯ್ದಮೈ = ತೋರಿರುವುದನ್ನು, ಕಂಡ್ = ತಿಳಿದು, ನಾಕ -ಮಲೈ ಉತ್ತಮವಾದ = ಹಸ್ತಿಗಿರಿಯ, ನಾಯಕನಾರ್ = ಪ್ರಭುವಾದ ವರದರಾಜನ, ನಲ್ -ಅಡಿ-ಪೋದು : ಅತ್ಯುತ್ತಮವಾದ ಅಡಿದಾವರೆಗಳನ್ನು, ಅಡೈಂದೇನ್ - ಶರಣುಹೊಂದಿದೆನು.

ತಾತ್ಪರ :- ಭಗವಂತನು ಸೀತಾದೇವಿಯಲ್ಲಿ ಪಾಪವೆಸಗಿದ ಕಾಕಾಸುರನನ್ನೂ ರಕ್ಷಿಸಿದನಲ್ಲವೇ ! ವಿಭೀಷಣ ಮತ್ತು ಅವನೊಡನಿದ್ದರಕ್ಕಸರನ್ನು ಅಕ್ಕರೆಯಿಂದ ರಕ್ಷಿಸಿ, ಅವರ ಆನಂದವನ್ನು ಉಕ್ಕಿಸಿದನಲ್ಲವೇ ! ಖ್ಯಾತವೀರರಾದ ಪಾಂಡವರ ಪ್ರಿಯಮಡದಿ ದೌಪದಿಯನ್ನು ಸಂರಕ್ಷಿಸಿ, ಅವಳ ಪ್ರತಿಜ್ಞೆಯನ್ನು ಈಡೇರಿಸಿದುದೂ ಅಲ್ಲದೆ ಅವಳಿಗಾಗಿಯೇ ಪಾಂಡವರನ್ನುಳಿಸಿ ಕಾಪಾಡಿದನಲ್ಲವೇ ! ಕಾಳಿಂಗನ ಹಾವಳಿಯನ್ನು ಅಳಿಸಿ ಪೊರೆದನಲ್ಲವೇ ! ಗಜರಾಜನನ್ನು ಉಜ್ಜಿವನಗೊಳಿಸಿದನಲ್ಲವೇ ! ರುದ್ರನಿಗೆ ಬಂದ ಬ್ರಹ್ಮಹತ್ಯೆಯನ್ನು ನಿವಾರಿಸಿದನಷ್ಟೆ. ಬ್ರಹ್ಮನನ್ನು ಕೈಬಿಡದೆ, ವೇದಗಳನ್ನು ಮತ್ತೆ ತಂದಿತ್ತು, ಪರಿಪಾಲಿಸಿದನಲ್ಲವೆ ! ಹೀಗೆ ಮಾಡಿದ ರಕ್ಷಣಾಕಾರಗಳಷ್ಟಿಷ್ಟಲ್ಲ. ಆಶ್ರಿತರಿಗೆ ಐಹಿಕ ಮತ್ತು ಆಮುಷ್ಠಿಕ ಐಶ್ವಯ್ಯಗಳನ್ನು ದೊರಕಿಸಿ ಪೊರೆದಿಹನು. ಅಂತಹ ಕರುಣೆಗೆ ಕಡಲೆನಿಸಿಹ ಹಸ್ತಿಗಿರಿಯೊಡೆಯ ವರದನ ಅಡಿದಾವರೆಗಳನ್ನು ಪಿಡಿದನು. (ನಾವೆಂತಹ ಪಾಪವೆಸಗಿದ್ದರೂ ಪೂರ್ಣನಂಬಿಕೆಯಿಂದ ಸತ್ವಶಕ್ತನಾದ ಅವನನ್ನು ಶರಣುಹೋದರೆ ಕಾಪಾಡುವನು.) स्थाणु-ब्रह्मादिबृन्दारकपुरनिलयेभ्य स्सुखेष्वग्ग्रभाजम् । मोक्षं चानन्दपूर्णं ददत मिह दयां प्रेक्ष्य पूर्णां तदीयां नागागाधीशदेवाधिपवरदपदाम्भोजयुग्मं प्रपद्ये ॥ ಮೂಲ : ಉಹಕ್ಕುಮವೈಯುಹನ್ನುಹವಾವನೈತ್ತು ಮೊಳಿನುರವುಗುಣಂ, ಮಹತುಣಿವು ಪೆರವುಣರ್ನ್ಸ್ ವಿಯನ್ ಕಾವಲೆನವರಿತ್ ಶಹತ್ತಿಲೊರುಪುಹಲಿಲ್ಲಾತ್ತವ ಮಿಲಿಯೇನ್ ಮದಿಇಚ್ಚಿ ನಹರರುನಾದ ನಲ್ಲಕ್ಕಲಮಾಯಡೈನ್ದನೇ ॥

5

ಅರ್ಥ :- ಉಹಕ್ಕುಂ ಅವೈ : ಸಂತೋಷಪಡುವಂತಹವುಗಳನ್ನು, ಉಹನ್ನು ಸಂತೋಷವಾಗಿ ಸ್ವೀಕರಿಸಿ (ದೇವರಿಗೆ) ಉಹವಾ - ಬೇಡವಾದ, ಅನೈತ್ತುಂ = ಎಲ್ಲವನ್ನೂ ಒಳಿಂದ್ - ಬಿಟ್ಟು, ಉರವು - ಸಂಬಧವನ್ನೂ, ಗುಣಂ = ಗುಣಗಳನ್ನೂ, ಮಿಹ - ಹೆಚ್ಚಾಗಿ, ತುಣಿವ್ - ವಿಶ್ವಾಸವನ್ನು, ಪೆರ : ಪಡೆಯುವಂತೆ, ಉಣರ್ನ್ - ಪರಿಶೀಲಿಸಿ, ತಿಳಿದು,

ಅಡೈ ಕಲಪ್ಪತ್

409 ವಿಯನ್-ಕಾವಲ್ -ಎನ = ಅತಿ ವಿಲಕ್ಷಣವಾದ ರಕ್ಷಣವಿದೆಂದು, ಪರಿತ್ತ್ ಬೇಡಿ, ಶಹತ್ತಿಲ್ = ಜಗತ್ತಿನಲ್ಲಿ ಒರು-ಪುಹಲ್ -ಇಲ್ಲಾ - ಬೇರೊಂದು ಉಪಾಯವಿಲ್ಲದೆ, ತವಂ - ತಪಸ್ಸನ್ನು, ಅರಿಯೇನ್ - ಅರಿಯದ ನಾನು, ಮದಿಳ್ - ಪ್ರಾಕಾರದಿಂದ ಸುತ್ತುವರಿದ, ಕಚ್ಚಿ-ನಹ‌ = ಕಾಂಚೀ ನಗರದಲ್ಲಿರುವ, ಕರುಣೆ-ನಾದ : ದಯಾಳುವಾದ ಪ್ರಭುವನ್ನು (ವರದನನ್ನು) ನಲ್ : ಅತ್ಯುತ್ತಮವಾದ, ಅಡೈಲಮಾಯ್ : ರಕ್ಷಿಸುವ ವಸ್ತುವೆಂದು, ಅಡೈಂದೇನ್ ಶರಣುಹೊಂದಿದೆನು.

ತಾತ್ವರ :- ನಮಗೆ ಅನುಕೂಲವಾದುವೂ ಹಾಗೂ ಭಗವಂತನಿಗೆ ಅನುಕೂಲವಾದುವೂ ಯಾವುವು ? ಎಂದರೆ ಆಜ್ಞಾನುಜ್ಞಾತ ಕೈಂಕಯ್ಯಗಳು. ಅವು ಅವನ ಮುಖೋಲ್ಲಾಸವನ್ನುಂಟುಮಾಡತಕ್ಕವು. ಅವನ್ನು ಬಿಡದೆ ಮಾಡಿ, ನಮಗೆ ಪ್ರತಿಕೂಲವಾದುವನ್ನೂ ಅವನಿಗೆ ರಕ್ಷಿಸಲು ಪ್ರತಿಕೂಲವಾದುವನ್ನೂ ಮಾಡದೆ ಬಿಟ್ಟು, ಅವನಿಗೂ ನಮಗೂ ಇರುವ ‘‘ಶೇಷಿ-ಶೇಷಭಾವಾ’‘ದಿ ಸಂಬಂಧವನ್ನೂ ಅವನ ವಾತ್ಸಲ್ಯಾದಿ ಗುಣಗಳನ್ನೂ ಪರಿಶೀಲಿಸಿ ಪೂರ್ಣ ವಿಶ್ವಾಸವನ್ನು ಪಡೆದೆನು. ಒಳ್ಳೆಯ ಅರಿವಿನಿಂದ ಬೇರಾವ ದೇವತೆಯೂ ನಮಗೆ ಮುಕ್ತಿ ಕೊಡಲಾರದೆಂದು ದೃಢಪಡಿಸಿಕೊಂಡೆನು. ಕರುಣೆಗೆ ಕಡಲಿನಂತಿರುವ ವರದನ ಅಡಿಗಳನ್ನು ಶರಣುಹೊಂದಿದೆನು. (ಅಂಗಪಂಚಕ ಕವಚಿತವಾದ ಶರಣಾಗತಿಯ ಅನುಷ್ಠಾನವು ಸಂಕ್ಷೇಪವಾಗಿ ಇಲ್ಲಿ ವರ್ಣಿತವಾಗಿದೆ) श्रीशोल्लासक्रिया या बिदधदतिमुदा संजिहानोऽनभीष्टाः सम्बन्धौघं गुणौघं समधिक मनुभूयैव विश्वासकाष्ठाम् । श्रेष्ठां संप्रार्थ्य रक्षांजगति गतिधुतो नैव चक्रे तपोऽहं काञ्च्यां सालावृतायां वरद मुरुदयं रक्षितारं प्रपद्ये ॥ ಮೂಲ : ಅಳವುಡೈಯಾರಡೈಂದಾರಂ ಅದನುರೈಯೇಕೊಂಡವರುಂ, ವಲೈವುರೈತನವನರುಳೇ ಮನ್ನಿಯ ಮಾದವತ್ತೊರುಂ, ಕಳವೊಳಿಲಾರೆಮರೆನ್ನವಿಶೈಂದವರುಂ ಕಾವಲರಾಂ, ತುಳವಮುಡಿಯರುಳ್ ವರದರ್ ತುವಕ್ಕಿಲೆನೈವೈತ್ತೇನೇ ॥ 6 ಅರ್ಥ :- ಅಳವ್ -ಉಡೈಯಾರ್ - ಎಲ್ಲವನ್ನೂ ಚೆನ್ನಾಗಿ) ಅರಿತವರಾಗಿ, (ಬಂದು) ಅಡೈಂದಾರುಂ - = ಶರಣುಹೊಂದಿದವರಿಗೂ, ಅದನ್ -ಉರೈಯೇ ಈ ಆ ಪ್ರಪತ್ತಿಯ ಮಾತುಗಳನ್ನೇ, ಕೊಡವರುಂ : (ಅಂಗೀಕರಿಸಿ) ಆಚರಿಸಿದವರಿಗೂ, ವಳ - ಶ್ರೇಷ್ಠವಾದ, ಉರೈ - ಮಾತನ್ನು, ತಂದವನ್ = ಉಪದೇಶಿಸಿದವರ, ಅರುಳೇ = ದಯೆಯನ್ನೇ, ಮನ್ನಿಯ

VAIN 410

ಅಡೈ ಕಲಪ್ಪತ್ * ದೃಢವಾಗಿ ಬಿಡದೆ ಕೈಕೊಂಡ, ಮಾ ತವರುಂ = ಮಹಾ ತಪಸ್ವಿಗಳಿಗೂ, ಕಳವ್ -ಒಳವಾರ್ = ಕಳ್ಳತನವನ್ನು ಬಿಟ್ಟಿರುವವರು, ಎಮರ್ = ನಮ್ಮವರು, ಎನ್ನ ಎಂದು, ಇಂದವುಂ = ಆಸೆಯಿಂದ ಒಪ್ಪಿದವರಿಗೂ, ಕಾವಲರ್ = ಪಾಲಕರಾದ, ತುಳವ-ಮುಡಿ - ತುಳಿಸೀಧಾರಿಯಾದ, ಅರುಳ್ -ವರದರ್ = ಕರುಣಾಳುವಾದ ವರದನ, ತುವಕ್ಕಿಲ್ : ಸಂಬಂಧದಲ್ಲಿ, ಎನ್ನ : ನನ್ನನ್ನು (ಈ ನನ್ನ ಆತ್ಮನನ್ನು) ವೈತ್ತೇನ್ - ರಕ್ಷವಾಗಿಟ್ಟೆನು.

ತಾತ್ಪರ :- ಪ್ರಪತ್ತಿಯಲ್ಲಿ ಇದು ಅಂಗಿ, ಇದು ಅಂಗ ಎಂಬುದನ್ನು ಚೆನ್ನಾಗಿ ಅರಿತು ಶರಣಾಗತಿಯನ್ನು ಆಚರಿಸಿದವರಿಗೂ (ಸ್ವತಂತ್ರ ನಿಷ್ಠರಿಗೂ), ಯಾವ ವಿಶದಜ್ಞಾನವೂ ಇಲ್ಲದೆ ಇದ್ದರೂ ಪೂರ್ಣ ಪ್ರಪತಿಯ ವಾಚ್ಚಾರಣೆ ಮಾಡುವುದರೊಡನೆ ಆಚರಿಸಿದವರಿಗೂ (ಉಕ್ತನಿಷ್ಠೆಯಲ್ಲಿರುವವರಿಗೂ) ರಹಸ್ಯತ್ರಯಾದಿಗಳನ್ನು ಚೆನ್ನಾಗಿ ಉಪದೇಶಿಸಿದ ಆಚಾರರ ಕೃಪೆಯನ್ನೇ ನ೦ಬಿ ಆಚರಿಸಿದವರಿಗೂ (ಆಚಾರನಿಷ್ಠೆಯಲ್ಲಿರುವವರಿಗೂ), ರಕ್ಷಕನು ಆ ಶರಣ್ಯನೇ ಆಗಿರುವನು. ಇವರೆಲ್ಲರೂ ಬೇರೆ ಬೇರೆ ದಾರಿಯಲ್ಲಿರುವವರೆಂದು ತೋರಿದರೂ ಸಂಪ್ರದಾಯದ ಸತ್ಪಥವನ್ನೇ ಹಿಡಿದವರು. ಆದರೆ ಇವೆಲ್ಲಕ್ಕೂ ಧೈಯ್ಯವೂ, ನಂಬಿಕೆಯೂ ಕಾರಣ. ನಂಬಿಕೆಯಿಂದಲೂ, ಧೈಯ್ಯದಿಂದಲೂ ಆಚರಿಸಿದರೇನೇ ಸತ್ಪಲ ಖಂಡಿತ ದೊರಕುವುದು. ಹೀಗೆಯೇ ಮತ್ತೆ ಕೆಲವರು ಭಗವಂತನಿಗೆ ಸೇರಿದ ಈ ಆತ್ಮ ವಸ್ತುವನ್ನು ತನ್ನದೆಂದು ತಿಳಿಯುವ ಕಳ್ಳರಾಗದೆ, ಭಾಗವತ ಪರತಂತ್ರರಾಗಿಯೂ, ತತ್ವಜ್ಞಾನಿಗಳಾಗಿಯೂ ಇರುವರು. ಅವರೂ ನಮ್ಮ ಆಪ್ತರೇ ಹೌದು. (ಭಾಗತನಿಷ್ಠರು) ಅವರನ್ನೂ ಆ ದಯಾಳು ಕೈಬಿಡನು. ಅಂತಹ ಪರಮಾತ್ಮನಲ್ಲಿ ಈ ನನ್ನ ಆತ್ಮನನ್ನು ಒಪ್ಪಿಸಿದೆನು. प्राज्ञा ये शरणं गता अनुययु र्ये वा तदुक्त्या दृढं ये वैतादृशतारकोक्तिदकृपा मेवैत्य चेरु स्तपः । चौर्यस्याकरणात् स्वका इम इति प्रीत्याङ्ग्यकुर्वश्च ये तेषां गोप्तरि मां दयाळुवरदे न्यस्ये तुलस्यद्वहे ॥ ಮೂಲ : ಉಮದಡಿಹಳಡೈಹಿನೆನ್ನೂರುಕಾಲುರೈತವರೈ, ಅಮೈಯುಮಿನಿಯೆನ್ನವರ್‌ಪೋಲ್ ಅಂಜನಕ್ಕರಂತೈತ್ತು, ತಮದನೈತ್ತು ಅವರ್‌ತಮಕ್ಕುಂ ವಳಂಗಿಯುಂರ್ತಾ ಮಿಹವಿಳಂಗುಂ, ಅಮೈವುಡೈಯವರುಳಾಳರಡಿಯಿಯಷ್ಟೆಂದೇನೇ ॥ 7 ಅರ್ಥ :- ಉಮದ್ - ನಿಮ್ಮ, ಅಡಿಹಳ್ : ಪಾದಗಳನ್ನು, ಅಡೈಹಿನ್ ಶರಣುಹೋಗುತ್ತೇನೆ, ಎನ್ ಐ ಎಂದು, ಒರು-ಕಾಲ್ = ಒಂದುಸಲ, ಉರೈತ್ತ-ವರೈ :

ಅಡೈ ಕಲಪ್ಪತ್ * 4॥ ಹೇಳಿದವರನ್ನು, ಇನಿ-ಅಮೈಯುಂ - ಇನ್ನು ಇದು ಸಾಕು, ಎನ್ನವರ್ ಪೋಲ್ - ಎಂದು ಹೇಳುವವರಂತೆ, ಅಂಜಲ್ - ಹೆದರಬೇಡಿ, ಎನ = ಎಂದು, ಕರಂ : ಕೈಯನ್ನು, ವೈತ್ತು= ಇಟ್ಟು (ತೋರಿಸಿ), ತಮದ್ : ತಮ್ಮ, ಅನೈತ್ತುಂ, ಎಲ್ಲವನ್ನೂ, ಅವರ್ -ತಮಕ್ಕುಂ : ಆ ಪ್ರಪತ್ತಿಮಾಡಿದವರಿಗೂ, ವಳಂಗಿಯುಂ = ಕೊಟ್ಟೂ ತಾನ್ : ತಾನು, ಮಿಹ = ಹೆಚ್ಚಾಗಿ, ವಿಳಂಗುಂ - ಬೆಳಗುವ, ಅಮೈವು-ಉಡೈಯ - ಪರಿಪೂರ್ಣತೆಯುಳ್ಳ, ಅರುಳಾಳರ್ : ಕರುಣಾಳು ವರದನ, ಅಡಿ-ಇಯ್ಯ = ಅಡಿಗಳೆರಡನ್ನೂ, ಅಡೈಂದೇನ್ = ಸೇರಿದೆನು. 4 ತಾತ್ವರ :- ವರದರಾಜದೇವರು ಅಭಯಮುದ್ರಿಕೆಯ ಹಸ್ತವನ್ನು ತೋರುತ್ತಿರುವರು. ಭಕ್ತರು ಬಂದು ‘ಸ್ವಾಮಿ ! ನಿನ್ನನ್ನು ಶರಣು ಹೋದೆನು’’ ಎಂದು ಒಂದು ಸಲ ಹೇಳಿದರೆ ಸಾಕು. ಮತ್ತೊಮ್ಮೆ ಅದನ್ನು ಹೇಳಬೇಕಿಲ್ಲ. ಅಂತಹವರಿಗೆ ನೀವು ಭಯಪಡಬೇಡಿ. ನಿಮ್ಮನ್ನು ರಕ್ಷಿಸುತ್ತೇನೆ. ನನ್ನ ಸಮಸ್ತ ಸಿರಿಯೂ ನಿಮ್ಮದೇ’’ ಎಂದು ಹೇಳಿ ಅಭಯತೋರುತಿಹನು. ಇದೇ ಆ ತೋರಿಕೆಯ ಸಾರಾರ್ಥ ದೃಢಭಾವನೆಯಿಂದ ಒಂದು ಸಲ ಪ್ರಪತ್ತಿಯನ್ನಾಚರಿಸಿದರೆ ಸಾಕು. ಪೂರ್ಣ ಫಲ ಕೊಡುವನು. ಸಶಕ್ತನೂ ಸತ್ವಶರಣ್ಯನೂ, ಅಪಾರ ಕಾರುಣ್ಯನೂ ಆದ ಆ ಪರಮಾತ್ಮನ ಪಾದಾರವಿಂದಗಳನ್ನೇ ಬಿಡದೆ ಪಡೆದಿಹೆನು. ಜೀವನದಲ್ಲಿ ಪ್ರಪತಿಯೆಂಬುದು ಒಂದು ಸಲ ಆಚರಿಸಲ್ಪಡತಕ್ಕದ್ದು. ಅದಕ್ಕೆ ಫಲ ಖಂಡಿತ ಉಂಟೆಂದೂ, ಪ್ರಪನ್ನರಿಗಲ್ಲದೆ ಬೇರೆಯವರಿಗೆ ಮುಕ್ತಿಸಾಮ್ರಾಜ್ಯಸುಖವನ್ನು ಅವನು ಕೊಡುವುದಿಲ್ಲವೆಂಬುದೂ ನಿಶ್ಚಯ. ಈ ವಿಷಯವಿಲ್ಲಿ ಸ್ಪಷ್ಟವಾಗಿದೆ. भवत्पदयुगं श्रये त्विति सकृत् प्रवक्तु नलं प्रतीत इति बोधयन् इव करं प्रदर्श्याभयम् । वितीर्य सकलं स्वकं स्वयमतीव यो राजते ‘दयाळु वरदप्रभोः पदयुगं च तस्याश्रये ॥ ಮೂಲ : ತಿಕುರೈಯಾಮೈಕ್ಕುಂ ನಿರೈಹೈಕ್ಕುಂ ತೀವಿನೈಯಾಲ್, ಉಣ್ಣೆಮರೈವಾಮೈಕ್ಕುಂ ಉಳಮದಿಯಿಲುಹಕ್ಕೆಕ್ಕುಂ ತಣ್ಣೆಕುರೈಯಾಮೈಕ್ಕುಂ ದರಿಹೈಕ್ಕುಂ ತಣಿಹೈಕ್ಕು, ವಯುಡೈಯವರುಳಾಳರ್‌ ವಾಶಕಂಗಳ್ ಮರವೇನೇ |

ಅರ್ಥ :- ತಿ - ದೃಢತೆಯು (ಮಹಾ ವಿಶ್ವಾಸವು) ಕುರೈಯಾಮೈಕ್ಕುಂ ಕಡಿಮೆಯಾಗದಿರುವುದಕ್ಕೂ, (ಇರತಕ್ಕದ್ದು) ನಿರೈಹೈಕ್ಕುಂ : ಪೂರ್ಣವಾಗುವುದಕ್ಕೂ, ತೀ-ನೈಯಾಲ್ : ಕ್ರೂರಕರ್ಮದ ಫಲವಾಗಿ, ಉಣ್ಣೆ - ನಿಜಾಂಶವನ್ನು, ಮರವಾಮೈಕ್ಕುಂ : ಮರೆಯದಿರುವುದಕ್ಕಾಗಿಯೂ, ಉಳಮತಿಯಿಲ್ = ಇರುವ 412 ಅಡೈ ಕಲಪ್ಪತ್ತ್

ಬುದ್ಧಿಯಲ್ಲಿ ಉಹಕ್ಕುಂ : ಸಂತೋಷಪಡುವುದಕ್ಕೂ, ತಣ್ಣೆ : ತಂಪು (ಶಾಂತತೆ) ಕುರೈಯಾಮೈಕ್ಕುಂ - ಕಡಿಮೆಯಾಗದಿರುವುದಕ್ಕೂ, ದರಿಹೈಕ್ಕುಂ = ಧರಿಸುವುದಕ್ಕೂ, ತಣಿಹೈಕ್ಕುಂ : ಸೌಮ್ಯವಾಗಿರುವುದಕ್ಕೂ ವಣ್ಣೆಯುಡೈ - ಸೊಬಗಿನ ಅರುಳಾಳರ್ : ಕರುಣಾಳು ವರದನ, ವಾಶಕಂಗಳ : ಮಾತುಗಳನ್ನು, ಮರವೇನೇ = ಮರೆಯುವೆನೆ ? *

ತಾತ್ಪರ:- ಪರಮಾತ್ಮನು ಪ್ರಪನ್ನನಿಗೆ ಕೊಟ್ಟ ಅಭಯೋಕ್ತಿಗಳನ್ನು ಮರೆಯಬಾರದು. ಅಡಿಗಡಿಗೆ ಅನುಸಂಧಾನ ಮಾಡುತ್ತಿರಬೇಕು. ಮಹಾವಿಶ್ವಾಸವು ಬರಬರುತ್ತಾ ಕಡಿಮೆಯಾಗದು. ಇರುವ ವಿಶ್ವಾಸವು ದಿನೇದಿನೇ ಹೆಚ್ಚಿ ಪೂರ್ಣವಾಗುವುದು. ಕ್ರೂರಕರ್ಮದ ಫಲವಾಗಿ ‘‘ನಾವು ಶೇಷರು, ಭಗವಂತನಿಗಧೀನರು’’ ಎಂಬ ನಿಜಸಂಗತಿಯೂ ಹೋಗಿಬಿಡುವುದುಂಟು. ಹಾಗಾಗದಿರಬೇಕು. ಇರುವ ಅರಿವನ್ನೇ “ಭಗವಂತನ ಕೃಪೆಯಿಂದ ಇಷ್ಟಾದರೂ ಬಂದಿತಲ್ಲ’’ ಎಂದು ನೆನೆದು ಹರ್ಷಿಸಬೇಕು. ಸತ್ವವೂ ದೇವರೆಂದು ಯಾವ ವಿಧವಾದ ಅಪಚಾರವೂ ಸಂಭವಿಸದಂತೆ ಎಚ್ಚರಿಕೆಯಿಂದರಬೇಕು. ಸ್ವಪರ ಸ್ವರೂಪಜ್ಞಾನವುಂಟಾಗಿ, ಸಂಸಾರದಲ್ಲಿ ಜಿಹಾಸ ಹುಟ್ಟಿದರೂ ಆ ಶರಣ್ಯನ ಕೃಪೆಯನ್ನೇ ಎದುರುನೋಡುತ್ತಿರಬೇಕು. ತಾಪತ್ರಯಗಳು ಸಂತಾಪಗೊಳಿಸಿದರೂ ಲೆಕ್ಕಿಸದೇ ಶಾಂತವಾಗಿರಬೇಕು. ಸೌಂದಯ್ಯ-ಸೌಶೀಲ್ಯ - ಕಾರುಣ್ಯಾದಿಗಳಿಗೆ ನಿಧಿಯಾದ ವರದನ ಅಡಿಗಳನ್ನು ಮುಡಿಯಲ್ಲಿ ಮುಡಿದುಕೊಂಡರೆ ಎಲ್ಲವೂ ಸಿದ್ಧಿಸಿ, ಇಹಪರಗಳಲ್ಲಿ ಅಮಿತ ಸುಖವನ್ನು ಪಡುವೆವು. ಆದುದರಿಂದಲೇ ಶರಣುಹೋದೆನು. (ವ್ಯಸ್ತಭರರು ನಿರ್ಭಯರಾಗಿಯೂ ನಿರ್ಭರರಾಗಿಯೂ ಇರುವುದು ಇಲ್ಲಿ ವಿಶದೀಕೃತವಾಗಿದೆ.) विश्वासान्यूनतायै उपचितफलपूर्त्यै च दुष्कर्मलब्धां सत्यांशाविस्मृतिं तां निरसयितु मवाप्तोपलब्धौ प्रतुष्ट्यै । शैतल्याहीनतायै विधरणकरणार्थं प्रशान्त्यै दयाळोः सौन्दर्योपासिमूर्तेः करिगिरिकमितुः किं गिरो विस्मरामि ॥ ಮೂಲ : ಶುರುದಿನಿನೈ ವಿಮೈಯರಿಯುಂತಣಿವುಡೈಯಾರ್ತೂಮ್‌ಮೊಳಿಹಳ್ ಪರಿದಿಮದಿಯಾಶಿರಿಯ‌ ಪಾಶುರಂ ಶೇರ್ನ್ದರುಕ್ಕಣಂಗಳ್, ಕರುದಿಯೊರುತೆಳಿವಾಳಾಲ್ ಕಲಕ್ಕಮರುತ್ತತ್ತಿಗಿರಿ, ಪರಿದಿಮದಿನಯನಮುಡೈಪ್ಪರಮನಡಿಪಣಿಂದೇನೇ ॥

८ ಅರ್ಥ :- ಶುರುದಿ : ಶ್ರುತಿಯು, ನಿನೈವು, : ತಾತ್ಸರವನ್ನು, ಇಮೈ ಎವೈಯಿಕ್ಕುವುದರೊಳಗೆ, ಅರಿಯುಂ = ಅರಿಯತಕ್ಕ, ತುಣಿವು : ಮನೋಬಲವನ್ನು

ಅಡೈ ಕಲಪ್ಪತ್ತ್

413

ಉಡೈಯಾರ್ = ಉಳ್ಳವರ, ತೂಯ್ಮೊಳಿಹಳ್ = ಪರಿಶುದ್ಧವಾದ ಮಾತುಗಳು, ಪರಿದಿ = ಸೂರನಂತೆ ಬೆಳಗುವ, ಮತಿ = ಬುದ್ದಿಯುಳ್ಳ, ಆಶರಿಯರ್ - ಆಚಾರರ, ಪಾಶುರಂ = ಪಾಶುರಗಳೂ (ಸೂಕ್ತಿಗಳೂ) ಶೇರ್ನ್ಸ್ - ಹೊಂದಿಕೆಯಾಗಿ ಸೇರಿ, ಅರು-ಕ್ಕಣಂಗಳ್ ಜೀವರಾಶಿಗಳನ್ನು, ಕರುದಿ : ಕುರಿತು, ಒರು-ತೆಳಿ-ವಾಳಾಲ್ = ಜ್ಞಾನವೆಂಬ ಒಂದು ಕತ್ತಿಯಿಂದ, ಕಲಕ್ಕಂ - ಮೋಹವನ್ನು (ಅಜ್ಞಾನವನ್ನು) ಅರು : ಬೇರುಸಹಿತ ಕಿತ್ತು, ಅತ್ತಿಗಿರಿ : ಹಸ್ತಿಗಿರಿಯಲ್ಲಿ (ಕಂಗೊಳಿಸುವ) ಪರಿದಿ-ಮದಿ-ನಯನಂ-ಉಡ್ಡೆ = ಪಾದಗಳನ್ನು, ಪಣಿಂದೇನ್ - ನಮಿಸಿದೆನು. ತಾತ್ವರ :- ತಮ್ಮ ತಪೋಬಲದಿಂದ ವೇದಗಳ ಗೂಢಾರ್ಥಗಳನ್ನೂ ಅರಘಳಿಗೆಯಲ್ಲಿ ಅರುಹಬಲ್ಲ ಪರಶುರಾಮಾದಿ ತಪೋಧನರ ಸೂಕ್ತಿಗಳ ಮೂಲಕವೂ, ಕತ್ತಲನ್ನು ನೀಗಿ, ಬೆಳಕನ್ನು ಹರಿಸಿ, ಜಗತ್ತಿಗೇ ಉಪಕರಿಸುವ ಸೂರದೇವನಂತೆ ಬೆಳಗುವ ಆಚಾರ್ಯರುಗಳನ್ನು ಅವತರಿಸುವಂತೆ ಮಾಡಿ, ಅವರ ಉಪದೇಶಾದಿಗಳ ಮೂಲಕವೂ, ತಾನು ಜ್ಞಾನನಿಧಿಯನ್ನು ಆ ಭಗವಂತನು ಒದಗಿಸಿಕೊಟ್ಟಿರುವನು. ಸೂರಚಂದ್ರರೇ ಆತನ ಕಣ್ಣುಗಳಲ್ಲಿವೆ. ತಿಳಿಯಾದರಿವೆಂಬ ಕತ್ತಿಯಿಂದ ಸಮಸ್ತಜೀವರ ಸಂಶಯಾದಿ ದೋಷಗಳನ್ನೂ ನಿವಾರಿಸಿ ಕರುಣಿಸುವನು. ಪ್ರಪನ್ನನಾಗಿ, ಭಗವತ್ಕರುಣೆ ಬಂದು, ಶರೀರತ್ಯಾಗಮಾಡುವತನಕ ಮಾಡಬೇಕಾದ ಕೃತ್ಯಗಳು ಸಂಕ್ಷೇಪವಾಗಿ ಅಡಗಿವೆ. (ಶ್ರೀಮದಾಚಾದ್ಯರು ಸ್ವಾರ್ಥವಾಗಿಯೇ ಅಲ್ಲದೇ ಸ್ವಕೀಯರ ಉಜೀವನಾರ್ಥವ ಭರನ್ಯಾಸಮಾಡಿದಂತೆ ಭಾಸವಾಗುವುದು) क्षणे च निगमार्थवित्सुमनसां विशुद्धोक्तिभिः शुभारविधियां च ता स्सुकलयन् गुरूणां गिरः । विनाश्य धिषणासिना विशय मात्मनः प्राणमं रवीन्दुनयनस्य तत्पदयुगं गजाद्रीशितुः ॥ ಮೂಲ : ತಿರುಮಹಳುಂ ತಿರುವಡಿವುಂ ತಿರುವರುಳುಂ ತೆಳ್ಳರಿವು, ಅರುಮೈಯಿಲಾಮೈಯುಮುರವುಂ ಅಳಪ್ಪರಿಯ ವಡಿಯರಶು, ಕರುಮಮಳಿಪ್ಪಳಿಪ್ಪಮೈಪ್ಪು ಕಲಕ್ಕಮಿಲಾವಹೈನಿನ

१ ಅರುಳರದ‌ ನಿಲೈಯಿಲಕ್ಕಿಲಂಬೆನನಾನಮಿನ್ದನೇ ॥ 10 ಅರ್ಥ :- ತಿರುಮಹಳು - ಶ್ರೀದೇವಿಯಲ್ಲೂ ತಿರು-ವಡಿಪುಂ : ದಿವ್ಯಮಂಗಳ ಮೂರ್ತಿಯಲ್ಲೂ ತಿರು-ಅರುಳಂ : ಕರುಣೆಯಲ್ಲಿಯೂ, ತೆಳ್ -ಅರಿವುಂ : ತೆಳುವಾದರಿವಿನಲ್ಲೂ ಅರು-ಇಲಾಮೈಯುಂ - ಮಾಡಲಸಾಧ್ಯವಾಗದಿರುವುದರಲ್ಲೂ

॥414

ಅಡೈ ಕಲಪ್ಪತ್

ಉರವುಂ - ಸಂಬಂಧದಲ್ಲೂ ಅಳಪ್ಸ್-ಅರಿಯ - ಅಳೆಯಲಾಗದಂತಿರುವ, ಅಡಿ-ಅರಶುಂ : ರಾಜ್ಯಸಿರಿಯಲ್ಲೂ ಅಳಿಪ್ಟ್ = ನಾಶ, ಅಳಿಪ್ಸ್ - ರಕ್ಷಣೆ, ಅಮೈಲ್ಸ್ - ಸೃಷ್ಟಿ (ಮುಂತಾದ) ಕರುಮಂ = ಕಾವ್ಯಗಳಲ್ಲೂ ಕಲಕ್ಕಂ-ಇಲಾ-ವ-ನಿನ್ನ ಕಲುಷಿತವಾಗದ ರೀತಿಯಲ್ಲಿರುವ, ಅರುಳ್ -ವರದರ್ : ದಯೆಯೇ ಆಕಾರವೆತ್ತಿ ಬಂದಂತಿರುವ ವರದನ, ನಿಲೈ : ಸ್ಥಿರವಾದ, ಇಲಕ್ಕಿಲ್ - ಗುರಿಗೆ, ಅಂಬ್ -ಎನ - ಬಾಣದಂತೆ, ನಾನ್ : ನಾನು, ಅಮಿನ್ದನೆ = ಬಿಡಿಸಲಾಗದಂತೆ ಸೇರಿಕೊಂಡೆನು.

ತಾತರ :- ಶ್ವೇತರ ಸಮಸ್ತವನ್ನೂ ಸೃಷ್ಟಿಸಿ, ರಕ್ಷಿಸಿ, ಅಳಿಸಿ, ಮತ್ತೆ ಮತ್ತೆ ಇದೇರೀತಿ ಲೀಲೆಯಾಡಿದರೂ ಸ್ವಲ್ಪವೂ ಕದಡದ ರೀತಿಯುಳ್ಳ ಆ ಪರಮಾತ್ಮನು ಜೀವಾತ್ಮರ ಮೇಲೆ . ಕರುಣೆಯಿಂದ ತನ್ನನ್ನರಿವ ಅರಿವನ್ನು ಕೊಡುತ್ತಲೂ, ಕರುಣಿಸುತ್ತಲೂ, ‘ನಂಬಿದವರಿಗೆ ಅಸಾಧ್ಯವಾವುದೂ ಇಲ್ಲ’ವೆಂಬುದನ್ನು ತೋರಿಸುತ್ತಲೂ, ತನ್ನ ರೂಪಾದಿಗಳನ್ನು ಕಾಣುವಂತೆ ಮಾಡುತ್ತಲೂ, ಹೀಗೆಯೇಅವೇಕ ವಿಧದಲ್ಲಿ ಉಪಕರಿಸುತ್ತದಯೆಗೈಯ್ದಿಹನು ಆ ಪರಮಾತ್ಮ, ಪ್ರಣವವೆಂಬ ಬಿಲ್ಲಿನಲ್ಲಿ ಆತ್ಮನೆಂಬ ಬಾಣವನ್ನು ಹೂಡಿ, ಬ್ರಹ್ಮವೆಂಬ ಗುರಿಗೆ ಜಾಗರೂಕತೆಯಿಂದ ಹೊಡೆದರೆ ಗುರಿಯಲ್ಲಿ ಬಾಣವು ನಾಟುವುದು.’ ಎನ್ನುವಂತೆ ಈ ನನ್ನ ಆತ್ಮವಸ್ತುವನ್ನು ಆ ಪರದೇವತೆಯಲ್ಲಿ ಅರ್ಪಿಸಿಹೆನು. ಸಮಸ್ತವೂ ಶರಣ್ಯನ ದಯಾ ಪರವಶವಾದುದರಿಂದ ಅವನಿಗೆ ಒಪ್ಪಿಸುವಂತೆ ಸಾತ್ವಿಕತ್ಯಾಗದ ರೀತಿಯಲ್ಲಿ ವ್ಯಕ್ತಗೊಳಿಸಿರುವರು. लक्ष्म्यां द्वियाकृतौ तन्निरवधिकरुणानिर्मलज्ञानयोश्च संसाध्ये स्वानुबन्धे त्वमितजनपदैश्वर्यपूर्णे प्रणाशे । रक्षायां सर्गकार्येऽप्यनुदितकलुषाकाररीत्या स्थितस्य सुस्थे लक्ष्ये विलग्न श्शर इव वरदस्यानुकम्पावतोऽहम् ॥ ಮೂಲ : ಆರುಪರ್ಯವೇರಿಲ್ಲಾವಡಿಯವರ್ ಹಳವರುಂ ಆರುಮದನ್ ಪಯನುಮಿವೈಯೊರುಹಾಲುಂ ಪಲಹಾಲು, ಆರುಪಯನನವೇ ಕಂಡರುಳಾಳರಡಿಯಿಣೆ ಮೇಲ್, ಕೂರಿಯ ನದ್ಗುಣವುರೈಹಳ್ ಇವೈಪತ್ತುಂ ಕೋದಿಲವೇ ॥ १० ॥ ಅರ್ಥ :- ಆರು = ಉಪಾಯವೂ, ಪರ್ಯ = ಫಲವೂ, (ದೇವರನ್ನು ಬಿಟ್ಟು ಬೇರು = ಬೇರೆ ಯಾವುದೂ, ಇಲ್ಲಾ = ಇಲ್ಲದವರರಾದ, ಅಡಿಯವರ್‌ಹಳ್ = ಭಕ್ತರಾದ, ಅನೈವರುಂ - ಎಲ್ಲರಿಗೂ ಆರುಂ = ಶರಣಾಗತಿಯೂ, ಅರ್ದ = ಅದರ, ಪರ್ಯ : ಫಲವೂ, (ಆದ) ಇವೆ - ಇವು, ಒರು-ಕಾಲಂ : ಒಂದು ಕಾಲದಲ್ಲೂ ಪಲ-ಕಾಲಂ = ಅಡೈ ಕಲಪ್ಪತ್

415 (ಫಲವು) ಬಹುಕಾಲ ಕಳೆದೂ, ಆರು = ಉಪಾಯ, ಪರ್ಯ - ಫಲ, ಎನವೇ = ಎಂದೇ, ಕಂಡ್ = ನೋಡಿ, ಅರುಳಾಳ‌ : ದಯಾಮೂರ್ತಿಯಾದ ವರದನ, ಇ-ಅಡಿಹಳ್ - ಅಡಿಗಳೆರಡರ ಮೇಲೆ, ಕೂರಿಯ : ಹೇಳಿರುವ, ನಲ್ -ಗುಣ-ಉರೈಹಳ್ ಒಳ್ಳೆಯಗುಣಗಳಿಂದ ತುಂಬಿದ ಸೂಕ್ತಿಗಳಾದ, ಇಪತ್ತುಂ = ಈ ಹತ್ತೂ ಕೋದು-ಇಲ ಅಸಾರವಾದುದಲ್ಲ.

ತಾತ್ವರ :- ಉಪಾಯವೂ ಅದರ ಫಲವೂ ಆ ಶರಣ್ಯನೇ, ಬೇರೆಯಿಲ್ಲ, ನಾವೆಲ್ಲ ಶೇಷಭೂತರು. ಉಪಾಯಾನುಷ್ಠಾನವಾದರೋ ಒಂದೇ ಸಲ್ಲ. ಅದೂ ಅಲ್ಪಕಾಲದಲ್ಲಿ ಅದರ ಫಲವಾದರೋ ಬಹುಕಾಲ ಕಳೆದ ಮೇಲೆ ಆದರೂ ಪರಿಪೂರ್ಣ ಬ್ರಹ್ಮಾನುಭವವು ಖಂಡಿತ. ಅದರನುಭವಕ್ಕೆ ಅವಧಿಯಿಲ್ಲ. ಇಂತಹ ನಿರವಧಿಕದಯಾ ಕಾವ್ಯವನ್ನು ಮಾಡುವ ಪರಮಾತ್ಮನ ವಿಷಯವಾದ, ಅವನ ಅತ್ಯುತ್ತಮ ಗುಣಗಳನ್ನು ಬೆಳಗುವ, ಮತ್ತು ಪ್ರಪನ್ನರಿಗೂ ಪ್ರಪತ್ತಿಕಾಂಕ್ಷಿಗಳಿಗೂ ಉಪಾದೇಯತಮವಾದ ಈ ಗ್ರಂಥ ಭಾಗ 10 ಪದ್ಯಗಳನ್ನುಳ್ಳದ್ದು. ಅತ್ಯಂತ ಸಾರವತ್ತಾದುದು. ಪರಮಾತ್ಮನ ಪಾದಗಳೆರಡೂ ಉಪಾಯ ಮತ್ತು ಫಲಗಳು. ಅವೆರಡೂ ಈ ಜೀವನಿಗೆ ಅತ್ಯಗತ್ಯವಾದುವು. ಆದುದರಿಂದಲೇ ಅವೆರಡರಲ್ಲೇ ಜೀವಾತ್ಮನು ಸೇರುವಂತೆ ಶರಣುಹೋದೆನು. उपायोऽन्यो न स्यात् फलमपि रमेशादिति विदां प्रपत्ति स्सर्वेषां फलमपि तदीयं सकृदिमे । कदाचिद्वोपायः फलमति च मत्वैव पदयोः कृपाळोः प्रोक्तं सद्गुणिदशक मेताद्विकलुषम् ॥ श्रीदेशिकप्रबन्धस्यप्रपत्तिदशकस्य हि । गोपालार्यो लिलेखार्थतात्पर्ये श्लोकसंयुते । ॥ aad RTH: ॥ ११ .. ॥ 3,0= ॥| 14 ಶ್ರೀಮತೇ ನಿಗಮಾಂತ ಮಹಾದೇಶಿಕಾಯ ನಮಃ ॥ ಅರ್ಥಪಂಚಕಂ ಮೂಲ : ಅಮಲನವಿಯಾದರುಡರಳವಿಲ್ಲಾವಾರಮುದಂ ಅಮಲವುರುಕ್ಕುಣಂಗಳಯಾಯುದಂಗಳಡಿಯವರ್ ಹಳ್ ಅಮಲವಳಿಯಾದನಗರಳಿಂದಳುಂಕಾವುಡನೆಲ್ಲಾಂ ಕಮಲೈಯುಡನರಶಾಳುಂ ಕರಿಗಿರಿಮೇಲ್‌ಕಾವಲನೇ ॥ 1 ಅರ್ಥ :- (ಅಮಲನ್) ನಿರ್ಮಲನಾದ, (ಅವಿಯಾದ-ಶುಡರ್) ಸತ್ವ ಕಾಲದಲ್ಲೂ ನಂದಿಹೋಗದ ಜ್ಯೋತಿರೂಪನಾದ, (ಅಳವ್ ಇಲ್ಲಾ ಆರ್ -ಅಮುದಂ) ಅಳತೆ ಮಾಡಲಾಗದ ಮತ್ತು ಪರಿಪೂರ್ಣವಾದ ಅಮೃತದಂತೆ ಪರಮಭೋಗ್ಯನಾದ (ಕರಿ-ಗಿರಿ-ಮೇಲ್-ಕಾವಲನೇ) ಕಾಂಚಿಯ ಹಸ್ತಿಗಿರಿ ಶಿಖರದಲ್ಲಿರುವ ಸತ್ವ ಸಂರಕ್ಷಕನಾದ ವರದರಾಜರೂಪಿನ ಶ್ರೀಮನ್ನಾರಾಯಣನೇ, (ಕಮಲೈ-ಉಡನ್) ಮಹಾಲಕ್ಷ್ಮೀ ಸಮೇತನಾಗಿ ಅಮಲ-ಉರು-ಗುಣಂಗಳ್ -ಅಣಿ-ಆಯುದಂಗಳ್ -ಅಡಿಯಯವ‌ ಹಳ್) ನಿರ್ಮಲವಾದ ವಿಗ್ರಹ, ಕಲ್ಯಾಣಗುಣಗಳು, ಆಭರಣಗಳು, ಚಕ್ರಾದ್ಯಾಯುಧಗಳು ಮತ್ತು ನಿತ್ಯರು, ಮುಕ್ತರು ಈ ಎಲ್ಲರನ್ನೂ (ಅಮಲ-ಅಳಿಯಾದ ನಗರ್ ನಿರ್ಮಲವಾದ ಅಪ್ರಾಕೃತವಾಗಿ ಶಾಶ್ವತವಾದ ಪರಮಪದವನ್ನೂ (ಮತ್ತು) (ಅಳಿಂದ್-ಎಳುಂ-ಕಾವುಡನ್ ಎಲ್ಲಾಂ) ನಾಶಹೊಂದಿ ಮತ್ತೆ ಉತ್ಪನ್ನವಾಗಿರುವ ತೋಪುಗಳುಳ್ಳ ಈ ಲೀಲಾ ವಿಭೂತಿಯಾದ ಜಗತ್ತೆಲ್ಲವನ್ನೂ (ಅರಶ್ -ಆಳುಂ) ಸರೇಶ್ವರನಾಗಿ ಆಳುವನು.

  1. ಶ್ರೀಮನ್ನಾರಾಯಣನೇ ಪ್ರಾಪ್ಯವಾದ ಪರಬ್ರಹ್ಮ, 2) ಜೀವಾತ್ಮನೇ ಪ್ರಾಪ್ತಾ 3) ಪ್ರಾಪ್ಯವನ್ನು ಪ್ರಾಪ್ತಾಪಡೆಯಲು ಇರುವ ಉಪಾಯವು ಪ್ರಪತ್ತಿ. 4) ಆ ಪ್ರಪತ್ತಿಗೆ ತಕ್ಕ ಫಲ ಪರಮಪದದ ಪರಿಪೂರ್ಣ ಬ್ರಹ್ಮಾನಂದಾನುಭವವೇ. 5) ಇಂತಹ ಉಪಾಯಕ್ಕೆ ವಿರೋಧಿಗಳಾಗಿರುವುದರ ಅರಿವು. ಹೀಗೆ ಇರುವ ಈ ಐದು ಅರ್ಥಗಳನ್ನು ವಿವೇಕಿಯಾದ ಮುಮುಕ್ಷುವು ತಿಳಿಯಬೇಕಾದುದು ಅಗತ್ಯ. ಇದೇ ಅರ್ಥಪಂಚಕ, ಪ್ರಾಪ್ತವಾದ ಪರಬ್ರಹ್ಮದ ಸ್ವರೂಪವನ್ನು ನಿರೂಪಿಸುವ ಗುಣಗಳಿಂದ ನಿರೂಪಿತವಾಗುವ ಸ್ವರೂಪವು ಮೂರ್ತಿ, ಗುಣ, ಭೂಷಣ, ಆಯುಧ, ಉಭಯ ವಿಭೂತಿಗಳಿಂದ ವಿಶಿಷ್ಟವಾದುದು ಎಂದು ಭಾವ. : 418 ಅರ್ಥಪಂಚಕಂ स्वच्छोऽविच्छिन्नतेजा अपरिमितसमग्रामृतात्मा विशुद्ध- । स्वाकारालंकृतीनि प्रविमलगुणजातायुधात्माश्रितां श्च ॥ स्वच्छां नित्यां विभूतिं प्ररमपदपुरीं नश्यदुत्पन्नलीला- भूतिं च श्रीसमेतः करिगिरिवरदो रक्षितैव प्रशास्ति ॥ ಮೂಲ: ಉಳ್ಳಪೊರುಳನೈತ್ತುಕ್ಕುಮುರುವನಿಕರುಮಂಗಳ್ ತೆಳ್ಳಿಶೈಯಿನ್‌ವಶಮಾಹುಯಿರಾಯುರೈಹಿನಾನ್ ನಳ್ಳಿರುಳ್ ರ್ತಡಿಯವರ್‌ನಲಂಕೊಡುಕ್ಕುಂತಿರುವುದನೇ ವಳ್ಳಲರುಳಾಳರೆನ್ನು ವಾರಣವೆರಿರೈಯವನೇ ॥ १ 2 ಅರ್ಥ :- (ಉಳ್ಳ-ಪೊರುಳ್ -ಅನೈತುಕ್ಕುಂ ಪ್ರಮಾಣಸಿದ್ಧವಾಗಿರುವ ಸಮಸ್ತ ಪದಾರ್ಥಗಳಿಗೂ (ಉರುವ-ನಿ-ಕರುಮಂಗಳ್) ರೂಪವನ್ನೂ, ಸ್ಥಿತಿಯನ್ನೂ, ಪ್ರವರ್ತಿಸುವಿಕೆಯನ್ನೂ, ಅಂದರೆ ಸ್ವರೂಪಸ್ಥಿತಿ ಪ್ರವೃತ್ತಿಗಳನ್ನೂ, (ತೆಳ್ -ಇಶೈಯಿನ್ - ವಶಂ-ಆಕ್ಕಿ) ತನ್ನ ತಿಳಿಯಾದ ದಯಾರೂಪಸಂಕಲ್ಪಕ್ಕೆ ವಶಪಡಿಸಿಕೊಂಡು (ಉಯಿರಾಯ್ -ತಿಹಳ್ ನ್ನು) ಅಂತರಾತ್ಮನಾಗಿ ಪ್ರಕಾಶಿಸುತ್ತಾ (ಉರೈಹಿನಾನ್ ) ವಾಸಮಾಡುವ (ವಳ್ಳಲ್) ಮಹೋಪಕಾರನಾದ (ಅರುಳಾಳರೆನ್ನು) ದಯಾನಿಧಿ ವರದರಾಜನೆಂದು ಪ್ರಸಿದ್ಧನಾದ (ವಾರಣ-ವೆರು-ಇರೈಯವನೇ) ಹಸ್ತಗಿರಿಗೆ ನಾಥನಾಗಿರುವವನೇ (ತಿರು-ಉಡನೆ) ಮಹಾಲಕ್ಷ್ಮೀಸಮೇಶನಾಗಿ (ಅಡಿಯವರು-ನಳ್ -ಇರುಳ್ -ತೀರ್ತು) ಆಶ್ರಿತರಾದ ಪ್ರಪನ್ನರಿಗೆ ಗಾಢವಾಗಿದ್ದ ಸಂಸಾರದ ಅಜ್ಞಾನಾಂಧಕಾರವನ್ನು ನಿವಾರಿಸಿ ಪರಿಪೂರ್ಣಾನಂದವನ್ನು ಕೊಡುವನು. (ನಲಂ-ಕೊಡುಕ್ಕುಂ) ಸಮಸ್ತ ವಸ್ತುಗಳ ಸ್ವರೂಪಸ್ಥಿತಿ ಪ್ರವೃತ್ತಿಗಳನ್ನೂ ಅನುಗ್ರಹರೂಪದಿಂದ ಪ್ರಸನ್ನವಾಗುವ ತನ್ನ ಸಂಕಲ್ಪಕ್ಕೆ ಅಧೀನಳನ್ನಾಗಿ ಮಾಡಿಕೊಂಡು ಸ್ವನಿಯಾಮ್ಯತ್ವಲಕ್ಷಣವಾದ ಶರೀರಭಾವದಿಂದಲೂ, ಆತ್ಮಭಾವದಿಂದಲೂ ಇದ್ದು ಲೀಲಾ ವಿಭೂತಿ ಭೋಗವಿಭೂತಿಳೆರಡನ್ನೂ ಆಳುವಂತಹ ಸಶ್ವೇಶ್ವರನೇ ಪ್ರಾಪ್ತವಾದ ಬ್ರಹ್ಮನೆಂದು ವಿಶದಪಡಿಸಿದಂತಾಯಿತು. सर्वेषां च स्वरूपं स्थिति मतिविमला स्तत्प्रवृत्ती रशेषाः । स्वेच्छाया एव निघ्ना विदधदधिवसन्नात्मभावेन दीव्यन् ॥ देवेश साह्यकर्ता निरवधिकरुणो वारणक्ष्माधरेन्द्रः । श्रीमानेवाश्रितेभ्यो दृढतिमिर मपास्यात्मतोषं ददाति ॥ ಅರ್ಥಪಂಚಕಂ ಮೂಲ : ಭೂತವುಡಲ್‌ಪುಲನ್‌ಗಳಮನಂಪುಲ್ಲಾ ಪುನ್ನಿಯನ್ನುಂ ಯಾದುಮಲನಾಯುಲಹಿಲ್ ಯಾನನ್ನುಮಿನ್ನುರಿವಾಯ್ 419 ಚೇತನನಾಯಡಿಮೈಯುಮಾಯುಯಿರೆಲ್ಲಾಂತಿಣ್ಣುಯಿರಾಮ್ ನೀದಲತಿಹಳುಂಶೀರ್ ಅತ್ತಿಗಿರಿತ್ತಿರುಮಾಲೇ ॥ 3 ಅರ್ಥ :- (ಶೀರ್) ಕಲ್ಯಾಣಗುಣಪರಿಪೂರ್ಣನಾದ (ಅತ್ತಿಗಿರಿ-ತಿರುಮಾಲ್ ) ಹಸ್ತಗಿರಿಯ ಶ್ರೀಲೋಲನಾದ ವರದರಾಜನು (ಉಲಹಿಲ್) ಈ ಜಗತ್ತಿನಲ್ಲಿ (ಬೂತ - ಉಡಲ್) ಪಂಚಭೂತಮಯವಾದ ಶರೀರಗಳೂ (ಪುಲನ್‌ ಗಳ್ ) ಇಂದ್ರಿಯಗಳೂ (ಮನಂ) ಮನಸೂ (ಪುಲ್ -ಆವಿ) ತೃಣದಂತೆ ಅತಿಸುಲಭವಾಗಿ ಛೇದಿಸಲ್ಪಡುವಂತಹ ಪ್ರಾಣಗಳೂ (ಪುಷ್ಪ) ಬುದ್ಧಿಯೂ (ಎನ್ನುಂ) ಈ ರೀತಿ ಹೇಳಲ್ಪಟ್ಟಿರುವಗಳಲ್ಲಿ (ಯಾದುಂ-ಅಲನಾಯ್) ಯಾವುದೊಂದೂ ಆಗಿರದವನಾಗಿ (ಯಾನ್ -ಎನ್ನು) ನಾನು ಎಂದು ಪ್ರಕಾಶಿಸುವ (ಇನ್) ಭೋಗ್ಯವಾದ (ನುಣ್) ಸೂಕ್ಷ್ಮವಾದ (ಅರಿವಾಯ್ ) ಜ್ಞಾನ ಸ್ವಭಾವವಾಗಿಯೇ ಭಗವಂತನಿಗೆ ಸೇವಕನಾದ (ಉಯಿರ್-ಎಲ್ಲಾಂ) ಜೀವಾತ್ಮನಾಗಿರುವ ಆತ್ಮವರ್ಗಕ್ಕೆಲ್ಲಾ (ತಿಣ್ -ಉಯಿರಾಯ್ ) ದೃಢವಾದ ಆತ್ಮನಾಗಿ, ಅಂದರೆ ಎಲ್ಲಕ್ಕೂ ಅಂತರಾಮಿಯಾಗಿ (ತೀದಲ್ -ಅನ್ನಿ) ಯಾವ ಅವಧ್ಯವೂ ಇಲ್ಲದಂತೆ (ತಿಹಳುಂ) ಚೇತನವರ್ಗದ ಯಾವ ದೋಷವೂ ಲೇಪಿಸದಂತೆ ಕಂಗೊಳಿಸುವನು. (ಪ್ರಾಪ್ಯವಾದ ಪರಬ್ರಹ್ಮನ ಸ್ವರೂಪ ಸ್ವಭಾವಗಳನ್ನು ಹಿಂದೆ ತಿಳಿಸಲಾಯಿತು. ಇಲ್ಲಿ ಪ್ರಾಪ್ತವಾದ ಜೀವಾತ್ಮನ ಸ್ವರೂಪ ಸ್ವಭಾವಗಳನ್ನು ಎರಡು ಪದ್ಯಗಳಲ್ಲಿ ಹೇಳಲು ಉದ್ದೇಶಿಸಿ, ಮೊದಲು ಜೀವನ ಸ್ವರೂಪಾದಿಗಳನ್ನು ಹೇಳುತ್ತಾ ಅವೂ ಸಹ ಪರಮಾತ್ಮನ ಅಧೀನಗಳೆಂದು ವಿಶದಪಡಿಸುವರು). काया भूतमया मनोऽक्षनिचय: प्राणाश्च तुल्या स्तृणैः । बुद्धिश्चेति न कोऽप्यमीषु कथितो जीव स्ततोऽन्य स्सुखी ॥ धीरूपो मतिमान् निषेवणरति स्स्या तादृशानां दृढ - । स्त्वन्तर्याम्यनवद्यसद्गुणनिधि भतीभशैलाधिपः ॥ ಮೂಲ : ತಾನಡೆತಗುಣಂಕರುವಿನ್ ಕಿರಿಶೈವಳಿಯೊಳುಕ್ಕಿ ಊನೆಡುತ್ತುಂಡುಮಿಳುಳಲುಮುಯಿರೆಲ್ಲಾಮುಯಿರಾಹಿ ಕಾಲ್‌ನಡತಿಕ್ಕಮಲೈಯುಡನ್ ಕಂಡುಹಂದು ವಿಳ್ಳೆಯಾಡುಂ ತೇನೆಡುತ್ತಲೈಹಳ್ಳ್ ತಿರುವತ್ತಿಯೂರಾನೇ ॥ 420 ಅರ್ಥಪಂಚಕಂ ಅರ್ಥ :- (ತೇನ್ ) ಜೇನನ್ನು (ಎಡುತ್ತ) ತುಂಬಿಕೊಂಡಿರುವ (ಶೋಲೈಹಳ್ - ಶೂಳ್) ಉಪವನಗಳಿಂದ ಪರಿವೃತವಾದ (ತಿರು-ಅತ್ತಿ-ಊರಾನ್) ಸಂಪತ್ತುಳ್ಳ ಹಸ್ತಿಗಿರಿಯಿರುವ ಕಾಂಚಿಯಲ್ಲಿ ನಿತ್ಯವಾಸಮಾಡುವ ವರದರಾಜನು (ಕಮ-ಉಡನ್) ಲಕ್ಷ್ಮೀಸಮೇತನಾಗಿ (ತಾನ್ -ಅಡೈತ್ಯ ತಾನೇ ಆಯಾ ಜೀವಾತ್ಮರು ಪಡೆಯುವಂತೆ ಮಾಡಿದ (ಗುಣಂ) ಗುಣಗಳನ್ನು ಕರುವಿ) ಮರೆಸಿ, (ತನ್ -ಕಿರಿ-ವಳ್ -ಒಳುಕ್ಕಿ) ಆಯಾಜೀವರು ತಮ್ಮ ತಮ್ಮ ಕರ್ಮಮಾರ್ಗದಲ್ಲಿ ಪ್ರವರ್ತಿಸುವಂತೆಮಡಿ, (ಊನ್ -ಎಡುತ್ತ್) ಮಾಂಸಾದಿಮಯವಾದ ಶರೀರವನ್ನು ಪಡೆದು, (ಉಂಡು) ಕರ್ಮಾನುಗುಣವಾದ ಪ್ರಾಕೃತ ವಿಷಯಸುಖದುಃಖಗಳನ್ನು ಅನುಭವಿಸಿ, (ಉಮಿನ್ಸ್) ಕಕ್ಕುತ್ತಾ ಅಂದರೆ ಅವುಗಳಿಂದ ಬೇರೆಯಾಗಿ, (ಉಳಲುಂ) ಅಲೆದಾಡುತ್ತಿರುವ (ಉಯಿರ್-ಎಲ್ಲಾಂ) ಎಲ್ಲಾ ಜೀವರಿಗೂ (ಉಯಿರ್ -ಆಹಿ) ಆತ್ಮನಾಗಿ, ಅಂದರೆ ಅಂತರಾಮಿಯಾಗಿ, (ಕಾಲ್ -ನಡತ್ತಿ) ನಡೆಸುತ್ತಾ (ಕಂಡ್) ತಾನು ನಡೆಸುವ ಸಂಸಾರಚಕ್ರ ಪರಿವರ್ತನವನ್ನು ನೋಡಿ (ಉಹಂದ್ ) ಸಂತೋಷಗೊಂಡು (ವಿಳ್ಳೆಯಾಡುಂ) ಲೀಲಾನಂದವನ್ನು ಅನುಭವಿಸುವನು. (ಪ್ರತ್ಯಗಾತ್ಮನ ಸ್ವಾಭಾವಿಕವಾದ ಆಕಾರಗಳನ್ನು ವಿವರಿಸಿ. ಇದರಲ್ಲಿ ಅನಾದಿ ಕರಕೃತವಾದ ಪ್ರಕೃತಿ ಸಂಬಂಧವೆಂಬ ಉಪಾಧಿಗಳಿಂದ ಕೂಡಿದ ಆಕಾರಗಳನ್ನು ವಿಶದವಾಗಿ ಹೇಳಿ, ಅವುಗಳೊಡನೆ ಪರಮಾತ್ಮನು ಲೀಲಾರಸವನ್ನು ಅನುಭವಿಸುವನೆಂಬುದನ್ನು ಸ್ಪುಟವಾಗಿ ತಿಳಿಸಿರುವರು.) माध्वी पूर्णवनावृतानवरत श्रीनागशैलाधिपः । सश्रीक श्च निजोपलम्भितगुणान् विस्मार्य कर्माध्वनि ॥ जीवान् तद्गुणिनि प्रवर्त्यवपु राधायानुभूतान् च्युतान् । भ्रान्तान् वीक्ष्य कृपावश स्तदधिप स्तुष्टश्च संक्रीडते ॥ ಮೂಲ: ಉಯ್ಯುಮುರವಿಶೈಯಾದೇಯೊತ್ತವರೇ ಯಡಿಮೈಯುಮಾಯ್ ಪೊಯ್ಯುರುವೃತನ ತಿಪುಲನ್‌ಕೊಂಡಪಯಸ್ಕೊಂಡು, ಐಯ್ಯುರವುಮಾರಿರುಳುಮಲ್ವಳಿಯುಮಚ್ಚೆಂದವರು, ಮೆಯ್ಯರುಳ್‌ಶೆಯ್ದಿಡುಂತಿರುಮಾಲ್ ವೇಳಮಲೈಮೆಯ್ಯವನೇ II 5 ಅರ್ಥ :- (ವೇಳ-ಮಲೈ-ಮೆಯ್ -ಅವನ್) ಹಸ್ತಿಗಿರಿಯಲ್ಲಿ ಸತ್ಯಸ್ವರೂಪನಾಗಿ ಬಿಜಯ ಮಾಡಿರುವ (ತಿರು-ಮಾಲ್ ) ಲಕ್ಷ್ಮೀವಲ್ಲಭನಾದ ಪರಮಾತ್ಮನೇ (ಉಯ್ಯಂ-ಉರವ್ -ಇಚ್ಛೆಯಾದೆ) ಉಜೀವನಗೊಳ್ಳುವ ಸಂಬಂಧವನ್ನು ಒಪ್ಪಿಕೊಳ್ಳದೆ ಅಂದರೆ ಸ್ವರೂಪೋಚಿತ ಪುರುಷಾರ್ಥ ಪ್ರಾಪಕವಾದ ಈ ಭಗವದಾಸ್ಯತ್ವವನ್ನು ಅರ್ಥಪಂಚಕಂ 421 ಅಂಗೀಕರಿಸದೆ, (ಒತ್ತವರೇ-ಅಡಿಮೈಯುಂ-ಆಯ್) ತಮಗೆ ಸಮಾನವಾಗಿರುವವರಿಗೇನೆ ಸೇವಕರಾಗಿ (ತನಕ್ಕೆ) ನಿಜವಾಗಿಯೂ ಜ್ಞಾನಾನಂದಪೂರ್ಣವರಾಗಿ ಜೀವತತ್ವಗಳಾದ ತಮಗೆ (ಪೊಯ್ -ಉರುವೈ-ಏತ್ತಿ) ಇಲ್ಲದ ಸಲ್ಲದ ದೇಹಾದಿ ರೂಪವನ್ನು ಆರೋಪಿಸಿಕೊಂಡು, (ಪುಲನ್ ಕೊಂಡ-ಪರ್ಯ) ಇಂದ್ರಿಯಗಳಿಂದ ಗ್ರಹಿಸಲಾಗುವ ಫಲಗಳನ್ನೂ (ಐಮ್ -ಉರವು) ‘ತಂದೆ-ತಾಯಿ-ಸೋದರ-ನೃತ್ಯ-ಸ್ವಾಮಿ’’ ಎಂಬ ಐದು ವಿಧ ಸಂಬಂಧಗಳನ್ನೂ (ಆರ್ -ಇರುಳುಂ) ಕಾಮ-ಕ್ರೋಧ-ಲೋಭ- ಮೋಹ-ಮದ-ಮಾತ್ಸಲ್ಯಗಳೆಂಬ ಆರು ವಿಧವಾದ ಅಜ್ಞಾನಕರವಾದ ಅಂಧಕಾರಗಳನ್ನೂ (ಅಲ್-ವಳಿಯುಂ) ಅವುಗಳಿಂದ ಸಂಭವಿಸುವ ದುರ್ಮಾರ್ಗಗಳನ್ನೂ ಅಡ್ಡೆಂದವರ್) ಪಡೆದಿರುವ ಈ ಸಂಸಾರಿ ಚೇತನರಿಗೆ (ಮಯ್ -ಅರುಳ್ -ಶೆಮ್ಸ್-ಇಡುಂ) ಮಿಂಚಿನಂತೆ ಹೊಳೆದು ಕಾಣಿಸಿಕೊಳ್ಳದೆ ಸುಳ್ಳೋ, ಎಂಬಂತಾಗದೆ ಸಹಜವಾಗಿಯೇ ಸತ್ಯಭೂತವಾದ ದಯೆಯ ಕಾವ್ಯವನ್ನು ಮಾಡಿಯೇಬಿಡುವನು. (ಪರಬ್ರಹ್ಮ-ಜೀವಾತ್ಮರ ಸ್ವರೂಪ ಸ್ವಭಾವಾದಿಗಳನ್ನು ಹೇಳಿದ ಮೇಲೆ “ಪ್ರಾಪ್ಯಸಾಯಂ ಫಲಂ ಚೈವ ತಥಾಪ್ರಾಪ್ತಿವಿರೋಧಿಚ’’ ಎಂಬ ವಚನದಂತೆ ಕ್ರಮ ಪ್ರಾಪ್ತವಾದ ಪ್ರಾಪುಪಾಯ’‘ವನ್ನು ಬಿಟ್ಟು ಕೊನೆಯದಾದ ಪ್ರಾಪ್ತಿವಿರೋಧಿ’‘ಯನ್ನು ವಿಶದಪಡಿಸಲುಪಕ್ರಮಿಸಿ ಮೊದಲು ಸಂಸಾರಚಕ್ರ ಪರಿವೃತ್ತಿಗೆ ನಿದಾನವಾದ ‘‘ವಿಪರೀತಜ್ಞಾನ’ವೆಂಬ ಪ್ರಾಪ್ತಿವಿರೋಧಿಯನ್ನು ತಿಳಿಸಿ, ಅದನ್ನು ನಿವಾರಿಸುವುದು ಭಗವತ್ಯಪೆಯೇ ಹೊರತು ಬೇರೆಯಲ್ಲವೆಂದು ಹೇಳಿರುವರು). श्रीलोलः करिशैलसत्य इह ये चोत्तारकत्वादिकम् । स्वस्मिन्नाभ्युपगम्य तत्समधिवश्चान्यान् निषेव्यात्मनि ॥ आरोप्यानृततां तदिन्द्रियफलं पञ्चानुबन्धान् तम - 1 ष्षट्कं दुष्पथ माश्रितावितनुते सत्यां दयां तेषु हि ॥ ಮೂಲ : ವಿದೈಮುಲೈಯಿನ್‌ಯಾಯಾಲಡಿಯಿಲ್ಲಾವಿನೈಯಡೈವೇ, ಶದೈಯುಡಲನಾಹೈಯುಂ ಶರಣಳಿಪ್ಪಾನೆನವಿಯನ್ನು ಪದವಿಯರಿಯಾದುಪಳಂಪಾಳಿಲುಳ ಹಿನಾಲ್ಕಂ, ಶಿದೈವಿಲರುಳ್‌ತರುಂ ತಿರುಮಾಲ್ ತಿರುವತ್ತಿನಹರಾನೇ ॥ 6 ಅರ್ಥ :- (ತಿರು-ಮಾಲ್ ) ಮಹಾಲಕ್ಷ್ಮಿಲೋಲನಾದ (ತಿರು-ಅತ್ತಿ-ನಗರ್ರಾ) ಶ್ರೀ ಹಸಿಗಿರಿನಿವಾಸಿಯಾದ ದೇವರಾಜನು (ವಿದ್ಯೆ -ಮುಳ್ಳೆರ್ಯಿ-ನಿಯಾಯತ್ತಾಳ್ ಬೀಜ ಮತ್ತು ಅಂಕುರಗಳ ನ್ಯಾಯದಂತೆ (ಅಡಿ-ಇಲ್ಲಾ-ವಿದ್ಯೆ) ಇದು ಮೊದಲೆಂದು ಹೇಳಲಾಗದ 422 ಅರ್ಥಪಂಚಕಂ ಅನಾದಿ ಕರ್ಮಗಳ (ಅಡೈವೇ) ಪರಿಪಕ್ವವಾದ ಕ್ರಮದಿಂದಲೇ (ಶ-ಉಡಲಂ- ನಾಲ್ವಹೈಯುಂ) ಮಾಂಸಮಯವಾದ ದೇವಾದಿ ನಾಲ್ಕು ವಿಧ ಶರೀರಗಳನ್ನು (ಶರಣ್ ) ರಕ್ಷಕನಾದವನಾಗಿ (ಅಳಿಪ್ಪಾನ್) ಕಾಪಾಡುವನು ಅವನು (ಎನ) ಎಂದು (ತಮಿಳನ್ಸ್) ಸಂಕ್ರಮಿಸಿ (ಪದವಿ) ಆಜೀವನ ಮಾರ್ಗವನ್ನು ಅರಿಯಾದು) ಕಾಣದೆ (ಪಳಂ ಪಾಳಿಲ್ ) ಪುರಾತನವಾದಪ್ರಕೃತಿಮಂಡಲದಲ್ಲಿ (ಉಳಲ್ ಹಿನಾಲ್ಕುಂ) ಅಲೆದಾಡುವವರಿಗೂ (ಶಿವಿಲ್) ಸಡಿಲಿಸದಿರುವ (ಅರುಳ್ ) ದಯೆಯನ್ನು (ತರುಂ) ಬೀರುವನು. મ ಹಿಂದೆ ಹೇಳಿದ ವಿಪರೀತ ಜ್ಞಾನಕ್ಕೆ ಫಲವಾದ ದೇವ ಮನುಷ್ಯಾದಿ ಶರೀರ ಪ್ರವೇಶ ಪ್ರವೃತ್ತಿರೂಪವಾದ ವಿರೋಧಿಯನ್ನು ತಿಳಿಸುತ್ತಾ ಅದರ ನಿವೃತ್ತಿಯೂ ಪರಮಾತ್ಮನ ಕೃಪೆಯಿಂದಲೇ ಆಗುವುದೆಂದು ಹೇಳಿದರು. श्रीलोलः करिशैलवासरसिको बीजाङ्कुरन्यायतः । प्राप्तानादिकृतक्रियान् कृतभरान् संरक्षतीत्यागताः ॥ आत्मोज्जीवपथं त्वनीक्ष्य सुचिरं प्रत्ने च शून्यस्थले । नृणां संचरतां कृपा मशिथिलामत्यादरात् यच्छति ॥ ಮೂಲ : ಯಮನಿಯಮೋಪಾಶನಂಗಳ್ ಇಯಲಾವಿಪುಲನಡಕ್ಕುಂ ತಮದರಿಯುಂದಾರಹಳ್ ದಾರೈಯರಾನಿನೈವೊಳುಕ್ಕಂ ಶಮಮುಡೈಯಶಮಾದಿನಲಂಶಾದಿಪ್ಪಾಲಕ್ಕಾಹುಂ ಅಮರ‌ಳುಮತ್ತಿಗಿರಿಯಂಬುಯತ್ತಾಳಾರಮುದೇ ॥ ६ 7 ಅರ್ಥ :- (ಅಮರರ್-ತೊಳುಂ) ದೇವತೆಗಳಿಂದ ಸೇವಿಸಲ್ಪಡುವ (ಅತ್ತಿ-ಗಿರಿ) ಹಸ್ತಿಗಿರಿಯಲ್ಲಿ ನಿತ್ಯವಾಸಮಾಡುವ (ಅ೦ಬುಯತ್ನಾಳ್ ) ಕಮಲವಾಸಿನಿಯಾದ ಮಹಾಲಕ್ಷ್ಮಿಯ (ಅರ್-ಅಮುದೇ) ಪರಿಪೂರ್ಣವಾದ ಅಮೃತವೇ ಅಂದರೆ ಪರಮ ಭೋಗ್ಯನಾದ ವರದ ಪರಮಾತ್ಮನೇ (ಯಮ) ““ಬ್ರಹ್ಮಚರ -ಅಹಿಂಸಾ-ಸತ್ಯ -ಅಸ್ತೇಯ-ಅಪರಿಗ್ರಹ’’ ಎಂಬುವನ್ನೂ (ನಿಯಮ) “ಸ್ವಾಧ್ಯಾಯ-ಶೌಚ-ಸಂತೋಷ- ತಪಸ್ಸು-ನಿಯಮಾತ್ಮವತ್ವ’’ ಎಂಬುವನ್ನೂ (ಉಪಾಶನಂಗಳ್ ) ತನಗೆ ಅಭ್ಯಾಸವಾಗಿರುವ ಮತ್ತು ಸುಖಕರವಾಗಿರುವ ಆಸನವನ್ನೂ (ಇಯಲ್) ಉಚಿತವಾದ (ಆವಿ) ಪ್ರಾಣದೊಂದಿಗೂ (ಪುಲನ್) ಇಂದ್ರಿಯಗಳೊಂದಿಗೂ (ಅಡಕ್ಕಂ) ನಿರೋಧವನ್ನೂ (ತಮದ್) ತಮ್ಮ ಮನಸ್ಸಿನಿಂದ (ಅರಿಯುಂ) ಅರಿಯಲಾಗುವ (ದಾರಣೆಹಳ್ ) “ಪ್ರಾಣಯಾಮೇನ ಪವನೇ ಪ್ರತ್ಯಾಹಾರೇಣಚೇಂದ್ರಿಯೇ | ವಶೀಕೃತೇ ತತಃಕುಲ್ಯಾತ್ ಸ್ಥಿತಂಚೇತಶುಭಾಶ್ರಯೇ !’ ಎಂದು ಉಪಕ್ರಮಿಸಿ, ‘ಮೂರ್ತೆಭಾಗವತರೂಪೇ : ಅರ್ಥಪಂಚಕಂ 423 ಸಾಪಾಶ್ರಯನಿಸ್ಪೃಹೇ | ಏಷಾಸಾಧಾರಣಾಪ್ರೋಕ್ತಾಯಚಿತ್ತಂ ತತ್ರಧಾರತೇ’’ ಎಂದು ಹೇಳಿದ ಧಾರಣೆಯನ್ನೂ (ದಾರೆ -ಆರಾ) ನಡುವೆನಿಂತು ಹೋಗದೆ ಧಾರಾಕಾರವಾಗಿರುತ್ತಿರುವ (ನಿನೈವ್ ) ನೆನಪುಗಳ ಅಂದರೆ ಧ್ಯಾನದ (ಒಳುಕ್ಕಂ) ಪ್ರವಾಹವನ್ನೂ (ಶಮಂ-ಉಡೈಯ) ಅಂತರಿಂದ್ರಿಯ ನಿಗ್ರಹವುಳ್ಳ (ಶಮಾದಿ-ನಲಂ) ಸಮಾಧಿಸ್ಥಿತಿಯ ಆನಂದವನ್ನೂ (ಶಾದಿಪ್ಪಾರ್) ಸಾಧಿಸುವವರಿಗೆ (ಇಲಕ್-ಆಹುಂ) ಲಕ್ಷಭೂತನಾಗುವನು ಅಂದರೆ ಧ್ಯಾನಕ್ಕೆ ವಿಷಯನಾಗುವನು. (ಭಕ್ತಿರೂಪಸಾದ್ಯೋಪಾಯವನ್ನು ಅಂದರೆ ಯಮ-ನಿಯಮ-ಆಸನ-ಪ್ರಾಣಾಯಾಮ- ಪ್ರತ್ಯಾಹಾರ-ಧಾರಣ-ಧ್ಯಾನ-ಸಮಾಧಿ’’’ ರೂಪವಾಗಿ ಅಷ್ಟಾಂಗ ಯೋಗವೆಂದು ಹೆಸರುವಾಸಿಯಾದುದನ್ನು ಸಂಪೂರ್ಣವಾಗಿ ಹೇಳಿ, ಇದಕ್ಕೆ ವಿಷಯನಾಗುವ ಶ್ರಿಯಃಪತಿಯೇ ಸಿದ್ಧೋಪಾಯನೆಂದು ಹೇಳಿದೆ. प्राणै र्योम्यै हृषीकै स्सह यमनियमावासनं धारणं च । चेतोवेद्यं च धाराकृति मविचलितां सन्ततिं च स्मृतीनाम् ॥ भक्त्या ये साधयन्ति प्रशमयुतसमाधिप्रमोदं च तेषाम् । लक्ष्यं स्यादेव देवार्चितकरिशिखरि श्रीसमग्रामृतोऽयम् ॥ ಮೂಲ : ಪುಹಲುಲಹಿಲಿಲ್ಲಾದುಪೊನ್ನರು ಕಂಡುತ್ತವರು ಅಹಲಹಿಲ್ಲಾವರು ಮತನ್ನರುಳಿಕೊಡುತ್ತು ಪಹಲದನಾಲ್ಕಳಂಕಂಗುಲ್ ಡಿವಿಕ್ಕುಂಪಂಗಯತ್ತಾಳ್ ಅಹಲಹಿಲ್ಲೇನೆನ್ನುರೈಯುಮತ್ತಿಗಿರಿಯರುಣ್‌ಮುಗಿಲೇ ಅರ್ಥ :- (ಪಂಗಯತ್ನಾಳ್ ) ಪಂಕಜವಾಸಿನಿಯಾದ ಮಹಾಲಕ್ಷ್ಮಿಯು (ಅಹಲ-ಹಿರ್ಲ್ಲೇ) ಅಗಲಿ ಇರಲು ಸಮರ್ಥಳಲ್ಲ ಎನ್-ಉರೈಯುಂ) ಎಂದು ನೆನದು ನಿತ್ಯ ವಾಸಮಾಡುವ ದಿವ್ಯಸ್ಥಳವಾದ (ಅತ್ತಿ-ಗಿರಿ) ಹಸ್ತಿಗಿರಿಯಲ್ಲಿರುವ (ಅರುಳ್-ಮುಹಿಲ್) ದಯೆಯನ್ನು ವರ್ಷಿಸುವ ಮೋಡವು, ಅಂದರೆ ವರದ ಪ್ರಭುವು (ಉಲಹಿಲ್) ಲೋಕದಲ್ಲಿ (ಪುಹಲ್ -ಇಲ್ಲಾದ್) ಕರ್ಮ ಜ್ಞಾನ ಭಕ್ತಿಯೋಗಗಳಲ್ಲಿ ನಿಷ್ಠೆಯು ದುರ್ಲಭವಾದ್ದರಿಂದ “ಅನಾಗತಾನಂತ ಕಾಲ ಸಮೀಕ್ಷಯಾಪಿ ಅದೃಷ್ಟಸಂತಾರೋಪಾಯಃ | ತತ್ಪಾದಾಂಬುಜದ್ವಯ ಪ್ರಪಃ ಅನ್ಯನ್ನಮೇ ಕಲ್ಪಕೋಟಿಸಹಸ್ರೇಣಾಪಿ ಸಾಧನ ಮಸೀತಿಮಾನಃ’’ ಎಂಬ ಸ್ಥಿತಿಯಲ್ಲಿ ಬೇರೆ ಉಪಾಯವಿಲ್ಲದೆ (ಪೊನ್-ಅರುಳ್ ಕಂಡು) ಎಲ್ಲರೂ ಆಸೆಪಡುವಂತಿರುವ ದಯೆಯನ್ನು ನೋಡಿ (ಉತ್ತವನ್ನುಂ) ಆಶ್ರಯಿಸಿದವರಿಗೂ (ಅಹಲಹಿಲ್ಲಾ ಅನ್ವರುಂ)424 “ಸಕೃತ್ವದಾಕಾರವಿಲೋಕ ನಾಶಯಾ ಅರ್ಥಪಂಚಕಂ ಯದ್ವಿರಹೋತಿದುಸ್ಸಹಃ’’ ಎಂಬಂತೆಯೇ ಕ್ಷಣವೂ ಅಗಲಿರದ ಉತ್ಕಟ ಪ್ರೇಮಶಾಲಿಗಳಾದ ಮಹಾತ್ಮರಿಗೂ (ಅ) ಅವರು ಕೋರಿದಾಗಲೇ (ತನ್ -ಅರುಳ್ -ಕೊಡುತ್ತು) ತನ್ನ ಅಮೋಘವಾದ ದಯೆಯನ್ನು ಬೀರಿ (ಪಹಲ್ - ಅದನಾಲ್ -ಪಳ೦) ಹಗಲಿನಿಂದ ಬಹಳ ದೂರವಾಗಿದ್ದ (ಕಂಗುಲ್ ) ಸಂಸಾರವೆಂಬ ಕಾಳರಾತ್ರಿಯನ್ನು (ವಿಡಿವಿಕ್ಕುಂ) ಬೆಳಗಾಗುವಂತೆ ಮಾಡುವನು. (ಪ್ರಪತ್ತಿರೂಪವಾದ ಸಾದ್ಯೋಪಾಯವನ್ನು ಅದರ ಅಧಿಕಾರಸಹಿತ ವಿವರಿಸಿ, ಅದರಿಂದ ವಶೀಕೃತನಾದ ಸಿದ್ಯೋಪಾಯನಾದ ಸಕಲ ಶರಣ್ಯನಾದ ಶ್ರೀಯಃಪತಿಯು ಪ್ರಪತ್ತುಪಾಯನಿಷ್ಠರಿಗೆ ಪ್ರಾರಬ್ಧವನ್ನೂ ಕ್ಷಮಿಸಿ ಅವರಪೇಕ್ಷಿಸಿದ ಕಾಲದಲ್ಲೇ ಪೂರ್ಣಫಲವನ್ನು ಕೊಡುವನು’’ ಎಂಬುದು ಸಾರಾರ್ಥ) सोढुं लक्ष्मी र्न शक्ता प्रियविरहमितीव ब्रुवाणो द्विपाद्रौ । स्थास्नुः कारुण्यधाराधर इह तरणोपायदौर्लभ्यदृष्ट्या ॥ प्रार्थ्यां वीक्ष्यानुकम्पां शरणजुष उरूप्रीतिभाज स्सभाजः । संगृह्यानुग्रहेण व्यपगमितनिशं सुप्रभाहं करोति ॥ ಮೂಲ : ಇರುವಿಲಂಗ್ ವಿಡುತ್ತಿರುಂದ ಶಿರೈವಿಡುತ್ತೋರ್ ನಾಡಿಯಿನಾಲ್, ಕರುನಿಲಂಗಳ ಕಡಕ್ಕುಂವಳಿಕಾವಲರಾಲ್ ಕಡತ್ತು ವಿತ್ತು ಪೆರುನಿಲಂಕಂಡುಯಿರುಣರ್‌ನ್ಸ್ ಪಿರಿಯಾಮಲರುಳಯ್ಯುಂ, ಉರುನಿಲಂಕೊಂಡುರುಂತಿರುವೋಡುಉಯರತ್ತಿಗಿರಿಯಾನೇ !! ಅರ್ಥ :- (ಉರು-ನಿಲಂಕೊಂಡು) ಶರೀರವೆಂಬ ಸ್ಥಲವನ್ನು ಸ್ವೀಕರಿಸಿ, (ಉರುಂ) ಸಾನ್ನಿಧ್ಯ ಕೊಡಲು ವಾಸಮಾಡುವವನಾದ (ತಿರು-ಓಡು) ಮಹಾಲಕ್ಷ್ಮಿಯೊಡನೆ (ಉಯರ್) ಉನ್ನತವಾದ (ಅತ್ತಿ-ಗಿರಿಯಾನ್) ಹಸ್ತಿಗಿರಿನಾಥನಾದ ವರದಪ್ರಭುವು (ಇರು-ವಿಲಂಗ್ ) ಪುಣ್ಯಪಾಪಗಳೆಂಬ ಎರಡುವಿಧ ಬಂಧನಗಳನ್ನೂ (ವಿಡುತ್ತು) ಬಿಡಿಸಿ (ಓರ್‌ನಾಡಿಯಿನಾಲ್) ಅಸಾಧಾರಣವಾದ ಒಂದುನಾಡಿಯಮೂಲಕ (ಇರುಂದ-ಶಿರೈ) ಜೀವನನ್ನು ವಾಸಮಾಡುವ ಕಾರಾಗೃಹದಂತಿರುವ ದೇಹಭಾಗದಿಂದ (ಏಡುತ್) ಹೊರಹೊರಡಿಸಿ (ಕರು-ನಿಲಂಗಳ್ -ಕಡಕ್ಕುಂ-ವಳಿ) ಮತ್ತೆ ಹುಟ್ಟುವ ಗರ್ಭಸ್ಥಳಗಳನ್ನು ದಾಟಿಸುವ ಮಾರ್ಗವಾದ ಅರ್ಚರಾದಿ ಮಾರ್ಗವನ್ನು (ಕಾವಲರಾಲ್ -ಕಡತ್ತು-ವಿತ್ತು) ರಕ್ಷಕರಾದ ಆತಿವಾಹಿಕಪುರುಷರಿಂದ ದಾಟಿಸಿ (ಪೆರು-ನಿಲಂ-ಕಂಡ್) ಪರಮಪದವನ್ನು ನೋಡಿ (ಉಯಿರ್ ) ಆತ್ಮನು (ಉಣರ್‌ನ್ಸ್) ಪರಮಾತ್ಮನನ್ನು ಅನುಭವಿಸಿ (ಪಿರಿಯಾಮಲ್ ) ಮತ್ತೆ ಅಗಲದಂತೆ (ಅರುಳ್ -ಶೆಯ್ಯುಂ) ದಯೆಯನ್ನು ಬೀರುವನು.
10

ಅರ್ಥಪಂಚಕಂ 425 (ಪುಣ್ಯಪಾಪಗಳನ್ನು ಬಿಡಿಸುವ ಮೊದಲುಗೊಂಡು ಗುಣಾಷ್ಟಕ ಪ್ರಾದುರ್ಭಾವ ಪರ್ಯಂತವಾಗಿರುವ ಹಾರ್ದ ವ್ಯಾಪಾರವನ್ನು ಹೇಳಿದಂತಾಯಿತು) बन्धद्वन्द्द्वान्निवार्य स्थितनिगळगृहात् निर्गमय्यैकनाड्या गर्भावाप्तिस्थलोत्तारकपथ मथ तद्रक्षकै स्तारयित्वा । आत्मानं दृष्टदिव्यस्थलममितमुदं चाविनाभाविनं च कुर्योदेवात्तवर्म्मोन्नतकरिगिरिपः पद्मसद्मासमेतः ॥ ಮೂಲ : ತ೯ತಿರುವಾದುಡನೇ ತಾನ್ ತನಿಯರಶಾಯುರೈಹಿನ, ಅನ್ದಮಿಲ್ ಪೇರಿನ್ನತಿಲಡಿಯವರೋಡೆಮ್ಮೆ ಚೇರ್ತು, ಮುನ್ದಿಯಳನ್ದನವೆಲ್ಲಾ ಮುಳುಕ್ಕತ್ತನಾಳ್ಕೊಳ್ಳು, ಅನಮಿಲಾವರುಳಾಳಿಯತ್ತಿಗಿರಿತ್ತಿರುವಾಲೇ ॥ ९ ಅರ್ಥ :- (ಅಂತಂ-ಇಲಾ-ಅರುಳ್ -ಆಳಿ) ಅಪಾರವಾಗಿರುವ ಕರುಣೆಯ ಸಾಗರನಾದ (ಅತ್ತಿ-ಗಿರಿ-ತಿರು-ಮಾಲ್) ಹಸ್ತಿಗಿರಿಯಲ್ಲಿ ದೇದೀಪ್ಯಮಾನವಾಗಿರುವ ಲಕ್ಷ್ಮೀವಲ್ಲಭನಾದ ವರದ ಪ್ರಭುವು (ತನ್ -ತಿರು-ಮಾದು-ಉಡನೆ) ತನ್ನ ಪ್ರಿಯಳಾದ ಲಕ್ಷ್ಮಿಯ ಜೊತೆಯಲ್ಲೇ (ತಾನ್-ತನಿ-ಅರಶಾಯ್ -ಉರೈಹಿನ) ತಾನು ಅನನ್ಯ ಸಾಧಾರಣ ಧರಣೀಧರನಾಗಿ ವಾಸಮಾಡುವ ಸ್ಥಾನವಾದ (ಅಂತಂ-ಇಲ್ -ಪೇರ್ -ಇನ್ಸತ್ತಿಲ್ ) ಅಪರಿಮಿತವೂ ಸ್ವಭಾವವಾಗಿಯೇ ನಿರತಿಶಯವೂ ಮಹಾನಂದದಾಯಕವೂ ಆದ ಪರಮಪದದಲ್ಲಿ (ಅಡಿಯವರ್-ಓಡೆ) ಕಿಂಕರರಾದ ನಿತ್ಯರೊಂದಿಗೂ, ಮುಕ್ತರೊಂದಿಗೂ (ಎಮ್ಮೆ-ಶೇರ್ತ್) ನಮ್ಮನ್ನು ಸೇರಿಸಿ (ಮುಂದಿ) ಹಿಂದೆ ಸಂಸಾರದೆಸೆಯಲ್ಲಿ (ಇಳಂದನ-ಎಲ್ಲಾಂ) ಬಿಟ್ಟುಹೋಗಿದ್ದ ಸರ್ವವಿಧ ಸೇವೆಯನ್ನೂ (ಮಳುಕ್ಕ) ಸಂಪೂರ್ಣವಾಗಿ ಅಂದರೆ ಸಂಸಾರದೆಸೆಯಲ್ಲಿದ್ದುದನ್ನು ಮರೆತು ತಾನೆಂದೆಂದೂ ಹೀಗೆಯೇ ನಿತ್ಯಕಿಂಕರನಾಗಿದ್ದಂತೆ ಉಂಟುಮಾಡಿ (ತನ್ತಾಳ್ -ಕೊಳ್ಳು) ತನ್ನ ದಿವ್ಯ ಪಾದಾರವಿಂದಗಳಲ್ಲಿ ನೆಲೆಯಾಗಿರುವಂತೆ ಸ್ವೀಕರಿಸುವನು. (ಪರಿಪೂರ್ಣ ಬ್ರಹ್ಮಾನಂದನಾಭವಪರೀವಾಹದಿಂದ ಒಳಿವಿಲ್ ಕಾಲಮೆಲ್ಲಾ ಮುಡನಾಯ್ ಮನ್ನಿ ವಳುವಿಲಾವಡಿಮೈಶೆಯ್ಯವೇಂಡುಂನಾಂ’’ ಎಂಬ ನಮ್ಮಾಳ್ವಾರ ಶ್ರೀಸೂಕ್ತಿಯಂತೆ, ಇರುವಂತೆ ಮಾಡುವುದನ್ನು ಕೃಪಾಪಾರಪಾರಾವಾರನಾದ ಪರಮಾತ್ಮನು ಈ ಅರ್ಥಪಂಚಕವನ್ನು ಚೆನ್ನಾಗಿ ಅರಿತು ನಡೆದುಕೊಳ್ಳುವವನಿಗೆ ಉಂಟುಮಾಡುವ ನೆಂಬುದು ಸತ್ಯವೆಂದು ಉಪದೇಶಿಸಿರುವರು). 426 ಅರ್ಥಪಂಚಕಂ अपारकरुणाम्बुधिः करिमहीधरश्रीधरः स्वयं त्वसदृशः प्रभु स्सरम एव मोदप्रदे । पदे महति मेलयन् सह निजै र्वितीर्याथ नः पुरा गतिनिषेवणं वितनुते स्वकीयांघ्रिसात् ॥ ಮೂಲ: ಅಯಣಿಯುಮತ್ತಿಗಿರಿಯರುಳಾಳರಡಿಯಿಮೇಲ್, ನಯಂಕೊಳಶೇರ್‌ಕಚ್ಚಿನಗರ್ ನಾನಗೈಯೋರ್ ನಲ್ಲರುಳಾಲ್, ಪಯನ್‌ಹಳಿವೈಯನೈತ್ತುಮನಪ್ಪಂಡುರೈತಾರ್ ಪಡಿಯುರೈ, ವಿಯನ್‌ಕಲೈಹಳೀರೈನ್ನುಂ ವೇದಿಯರ್‌ಹಳ್ಳಿನಿಯನವೇ ॥ १० ಅರ್ಥ :- (ಅಯನ್ -ಪಣಿಯುಂ) ಬ್ರಹ್ಮನಿಂದ ಸೇವೆಗೊಳ್ಳುತ್ತಿರುವ (ಅತ್ತಿ-ಗಿರಿ-ಅರುಳಾರ್ ) ಹಸ್ತಿಗಿರಿಯ ಕರುಣಾನಿಧಿಯಾದ ವರದ ಪ್ರಭುವಿನ (ಅಡಿ-ಇ-ಮೇಲ್) ಪಾದಾರವಿಂದಗಳೆರಡರ ವಿಷಯವಾಗಿ (ನಯಂ-ಕೊಳ್ -ಶೇರ್ ) ನ್ಯಾ ಯಗಳಿಂದ ಕೂಡಿ ಬಿಡದಿರುವ (ಕಚ್ಚಿ-ನಗರ್ -ನಾಲ್ -ಮರೆಯೋರ್)

  • ಕಾಂಚೀನಗರದಲ್ಲಿ ವಾಸಿಸುವ ಸಮಸ್ತ ವೇದಗಳನ್ನೂ ಅರಿತ ಭಾಗವತರ (ನಲ್ -ಅರುಳಾಲ್ ) ನಿರತಿಶಯವಾದ ದಯೆಯಿಂದ (ಇ-ಅನೈತ್ತುಂ-ಪಯನ್ ಹಳ್ - ಎನ) ಇವೆಲ್ಲವೂ ಸಮಸ್ತಫಲಗಳು ಎಂದು (ಪಂಡು-ಉರೈತ್ತಾರ್ -ಪಡಿ-ಉರೈತ) ಹಿಂದಿನ ಆಚಾರ್ಯರು ಉಪದೇಶಿಸಿದ್ದ ರೀತಿಯಲ್ಲೇ ನನ್ನಿಂದ ಹೇಳಲಾಗಿರುವ (ವಿರ್ಯ -ಕಲೈಹಳ್ -ಈರ್-ಐಂದುಂ) ಅತಿ ವಿಚಿತ್ರವಾದ ಈ ಹತ್ತು ಪದ್ಯಗಳೂ (ವೇದಿಯರ್‌ಹಳ್) ವೇದಾರ್ಥದ ಸಾರವನ್ನರಿತವರಿಗೆ (ಇನಿಯನವೇ) ಹೃದ್ಯಗಳಾಗಿ ಪರಮಭೋಗ್ಯವಾಗಿರುವುವಲ್ಲವೇ ! L ब्रह्मासेवितहस्तिशैलकरुणामूर्तेः पदद्वन्द्वयोः कारुण्याच्च सतां चतुर्निंगमविन्न्याय्याध्वकाञ्चीजुषाम् ॥ सर्वाणीव फलान्यमूनि च पुराचार्योपदिष्टाध्वना पद्यान्यद्य विदां द्विपञ्चकलितान्यत्यन्तहृद्यानि वै ॥ श्रीदेशिकप्रबन्धस्थमर्थपञ्चकमर्थदम् । सश्लोकं सार्थमतनोत् गोपालार्यो सतां मुदे ॥ इति श्रददेशिकप्रबन्धासारार्थप्रकाशे विदुषा गोपालार्येण कृते अर्थपंचकं संपूर्णम् ॥ ११ ॥3,0:॥ 1.ಶ್ರೀಮತೇ ನಿಗಮಾಂತ ಮಹಾದೇಶಿಕಾಯ ನಮಃ ।