೦೪ ಪರಮ-ಪದ-ಸೋಪಾನಂ

श्रीमते निमगान्तमहादेशिकाय नमः श्रीमान् वेङ्कटनाथार्य : कवितार्किककेंसरी । वेदान्ताचार्यवर्यो मे सन्निधत्तां सदा हृदि । ಶ್ರೀಮನ್ನಿಗಮಾಂತ ಮಹಾದೇಶಿಕರು “ಪರಮಪದಸೋಪಾನಂ” ಎಂಬ ಪ್ರಬಂಧವನ್ನು ಕರುಣಿಸಿರುವರು. ಇದರಲ್ಲಿ

“विवेको निर्वेदस्थितिरथ विरक्ति भयमथो प्रसादश्चोत्क्रान्तिः प्रपदनधनार्चिर्मुखसृतिः । परव्योमारोहः परमपुरुषार्थानुभवनम् तदेवं सोपानक्रम मभिदधेऽन्ते निगमनम् " । ಎಂಬ ಕ್ರಮದಲ್ಲಿ 9 ಪರ್ವಗಳಿವೆ 21 ಪಾಶುರಗಳಿವೆ. 7 1, 2 ಗ್ರಂಥ ಪ್ರತಿಪಾದನವಿಷಯವಾಗಿಯೂ, 3 ವಿವೇಕ, 4, 5 ನಿರ್ವದ, 6, ವಿರಕ್ತಿ, 8, 9 ಭೀತಿ, 10, ॥ ಪ್ರಸಾದ 12, 13 ಉತ್ಕಾಂತಿ, 14, 15 ಅರ್ಚಿರಾದಿ, 16, 17 ಪರಮಪದಾರೋಹಣ, 18, 19 ಪರಿಪೂರ್ಣಾನುಭವ, 20ರಲ್ಲಿ ಸೋಪಾನ ಪರ್ವಾನುಕ್ರಮ, 21ರಲ್ಲಿ ನಿರ್ಗಮನ, ಈ ರೀತಿ ವಿಷಯಭಾವದಿಂದ ಕೂಡಿದೆ). 1. ಸಕಲಶಾಸ್ತ್ರಗಳಲ್ಲಿ ಪಾರಂಗತರಾಗಿದ್ದರೂ, ಸತ್ವರಕ್ಷನಾದ ಶ್ರೀಮನ್ನಾರಾಯಣನ “ಸ್ವಾಭಾವಿಕವೂ, ಅನವಧಿಕವೂ, ಅತಿಶಯವೂ ಆದ ಸಶ್ವೇಶ್ವರತನವನ್ನು ಅರಿಯದಿದ್ದರೆ, ಅವರು ಮೋಕ್ಷಕ್ಕೆ ಬಹಿರ್ಭೂತರಾಗುವರೆಂದಿರುವರು. 2. “ಪ್ರಿಯಃಪತಿಯ ಆಜ್ಞೆಯನ್ನು ಮೀರಿದವರು ಅನಾದಿಕಾಲದಿಂದ ಈ ಸಂಸಾರದಲ್ಲಿದ್ದು ಬೇಸತ್ತು, ಕೊನೆಗೆ ಅವನ ಕರುಣೆಯಿಂದ ಇದರಲ್ಲಿ ಜಹಾಸೆಹೊಂದಿ, ಮರುಗಿ, ಉನಿಷತ್ತುಗಳು ಮೊಳಗುವ ಪ್ರಪತ್ತಿಮಾರ್ಗದಲ್ಲಿ ಪ್ರವರ್ತಿಸುವರು’’ ಎಂದು ಹೇಳಿದೆ. 3. “ಬ್ರಹ್ಮಪದವಿಯವರೆಗೂ ಎಲ್ಲ ಲೋಕಗಳಲ್ಲೂ ಒದಗುವ ದುಃಖಗಳನ್ನು ವಿಮರ್ಶಿಸುವವರು, ಈ ಸಂಸಾರದಿಂದ ವಿರಕ್ತರಾಗಿ, ಅನಿತ್ಯವಾದ ಲೀಲಾವಿಭೂತಿಗಿಂತ ನಿತ್ಯವಿಭೂತಿಯಾದ ಪರಮಪದವನ್ನು ಸೇರಲು ಆಕಾಂಕ್ಷಿಗಳಾಗುವರು’’ ಎಂದು ಹೇಳಿದೆ. 256 ಪರಮಪದಸೋಪಾನಂ 4. ಭಗವಂತನು ಈ ಸ೦ಸಾರಿ ಚೇತನರು ತನ್ನವರಾದರೂ ಅತಿಪ್ರಿಯರಲ್ಲವೆಂದಿದ್ದರೂ, ವಿವೇಕ, ನಿರ್ವೇದ, ವಿರಕ್ತಿ ಭೀತಿಗಳನ್ನು ಉಂಟುಮಾಡಿದ ಸಹಾಚಾರರ ಕೃಪೆಯಮೂಲಕ ಮೋಕ್ಷೆಕ ಪ್ರಯೋಜನವುಳ್ಳವರಾದರೆ ಅವರಲ್ಲಿ ಅತ್ಯಂತ ಪ್ರೀತರಾಗುವನು. ಪ್ರಪತ್ತಿಯ ಪೂರ್ಣಫಲವನ್ನು ಇವರು ಪಡೆಯುವರು ಎನ್ನುವರು. 5. ‘‘ಸಂಸಾರ ದುಃಖವನ್ನು ಕಳೆದುಕೊಳ್ಳಲಿರುವವರು ಭಕ್ತಿ ಪ್ರಪತ್ತಿಗಳಲ್ಲಿ ತಮ್ಮಧಿಕಾರಕ್ಕೆ ಅನುಗುಣವಾಗಿ, ಒಂದನ್ನು ಆಚರಿಸಿ, ಸಮಸ್ತ ಪಾಪಗಳಿಂದಲೂ ವಿಮುಕ್ತರಾಗಿ, ಮುಕ್ತಿಸಾಮ್ರಾಜ್ಯಫಲವನ್ನು ಪಡೆವ ಪ್ರಸಾದಕ್ಕೆ ಪಾತ್ರರಾಗುವರು’’ ಎಂದು ವಿಶದಪಡಿಸಿದೆ. 6. ಪರಮಾತ್ಮನು ಪ್ರಪನ್ನರನ್ನು ಪರಮಪದಕ್ಕೆ ಕರೆಸಿಕೊಳ್ಳುವನು. ಬದ್ಧಚೇತನರು ಈ ಶರೀರ ಬಂಧನದಿಂದ ಬಿಡಿಸಿಕೊಂಡು ಹೋಗುವ ಪ್ರಕಾರವನ್ನು ತಿಳಿಸಿರುವುದು. ಸಂಸಾರದಿಂದ ವಿಮುಕ್ತರಾಗಿ, ಅರ್ಚಿರಾದಿ ಮಾರ್ಗದಲ್ಲಿ ಹೊರಡುವ ನಮಗೆ ಅಮಿತ ಸಂತೋಷವಾಗುವುದೆಂದೂ, ಆ ಮಾರ್ಗವಾಗಿ ಪರಮಪದ ಸೇರಿದವರಿಗೆ ಮತ್ತೆ ಈ ಸಂಸಾರ ದೆಸೆಯಿಲ್ಲವೆಂದೂ ವಿವರಿಸಿರುವುದು. 7. 8. ಸಂಸಾರದೆಸೆಯಲ್ಲಿ ಕೇವಲ ದುಃಖ ಹೊರತು ಮತ್ತೇನನ್ನೂ ಹೊಂದಿದಂತಾಗಲಿಲ್ಲ, ಸತ್ವಶರಣ್ಯನ ಕೃಪೆಯಿಂದ ಪರಮ ಫಲವಾದ ಪರಮ ಪದವನ್ನು ಹೊಂದಿದವರಾದೆವು. ಅರ್ಚಿರಾದಿ ಮಾರ್ಗದಲ್ಲಿ ಅತಿವಾಹಿಕ ಪುರುಷರು ತೋರಿದ ಸತ್ಕಾರಾದಿಗಳನ್ನು ನೆನೆನೆನೆದು ಹೇಳಿಕೊಳ್ಳುವಂತಾದೆವು ಎಂದು ಹೇಳಿದೆ. 9. ಪರಮಪದದಲ್ಲಿ ನಿತ್ಯರೂ, ಮುಕ್ತರೂ ಆಗಿರುವವರೊಂದಿಗೆ, ಕೂಡಿ, ಸಾಮಗಾನಮಾಡಿ, ಅದರೊಡನೆ ‘ಪಲ್ಲಾಂಡ್’ ಪಾಡುವವರಾಗುವೆವು. ಮತ್ತು ಪರಮಾನಂದಭರಿತರಾಗಿ, ಪರಿಪೂರ್ಣ ಬ್ರಹ್ಮಾನುಭವವನ್ನು ಪಡೆಯುವೆವು ಎಂಬುದನ್ನು ಅನೇಕ ದೃಷ್ಟಾಂತಗಳೊಡನೆ ನಿರೂಪಿಸಿದೆ. ಈ ರೀತಿ ‘ಪರಮಪದಸೋಪಾನ’ ಎಂಬ ನಾಮಧೇಯವು ಅತ್ಯಂತ ಉಚಿತವಾದುದೆಂಬುದನ್ನು ಶ್ರೀಮದಾಚಾದ್ಯರು ತಿಳಿತಮಿಳಿನ ಕವಿತಾಸುಧೆಯಲ್ಲಿ ಬೆರೆಸಿ, ಉಪದೇಶಿಸಿರುವರು. ಮುಕ್ತಿಕಾಮನಾದ ಪ್ರತಿಯೊಬ್ಬ ಚೇತನನಿಗೂ ಈ ಪ್ರಬಂಧೋಪದೇಶಾಮೃತವು ಅತ್ಯಾದರಣೀಯವಾದುದು. ಶಾರ್ವರಿ ಕಾರ್ತೀಕ 1960 ಇತಿ ಶ್ರೀಮದಾಚಾರಪಾದಸೇವೀ ವಿದ್ವಾನ್. ಹ. ಗೋಪಾಲಾಚಾರ್ಯಃ ಮೈಸೂರು ॥3,08 ॥ ॥ಶ್ರೀಮತೇ ನಿಗಮಾಂತ ಮಹಾದೇಶಿಕಾಯ ನಮಃ ॥ ಪರಮಪದಸೋಪಾನಂ ಮೂಲ : ಅಡರ್‌ಪುಳ್ಳರಶಿಲುಮನ್ವಣರ್‌ ಮಾಟ್ಟಿಲುಮಿನ್ನಮುದ ಕಡರ್‌ಪ್ಪಳ್ಳಿ ತನ್ನಿಲುಂಕಾವಿರಿಯುಳ್ಳಮುಹಂದಪಿರಾನ್ ಇಡೈಪ್ಪಿಯಾಹಿಯುರೈತದುರೈಕ್ಕುಮೆತಿವರನಾ‌ ಮಡೈಪ್ಪಳ್ಳಿವನಮಣಮಂಗಳ ವಾರ್ತೆಯುಮನ್ನಿಯದೇ ॥

ಅರ್ಥ :- ಅಡಲ್ : ಪರಾಕ್ರಮವುಳ್ಳ, ಪುಳ್ -ಅರಶಿಲುಂ = ಪಕ್ಷಿರಾಜ (ಗರುಡ)ನಲ್ಲಿಯೂ, ಅಂದಣರ್ = ಬ್ರಾಹ್ಮಣೋತ್ತಮರ, ಮಾಟ್ಟಿಲುಂ = ಸಮೀಪದಲ್ಲೂ, (ಶ್ರೀ ವೈಷ್ಣವರ ಗೋಷ್ಠಿಯಲ್ಲೂ) (ಇನ್ -ಅಮುದ-ಕಡಲ್ -ಪಳ್ಳಿ-ತನ್ನಿಲುಂ) ಇನ್ : ಭೋಗ್ಯವಾದ, ಅಮುದ : ಅಮೃತವು, (ದೊರಕಿದ) ಕಡಲ್ : ಸಮುದ್ರವೆಂಬ, (ಕ್ಷೀರಸಮುದ್ರವೇ) ಪಳ್ಳಿ-ತನ್ನಿಲುಂ - ಹಾಸಿಗೆಯ ಮೇಲೂ, (ಕಾವಿರಿ-ಉಳ್ಳಂ-ಉಹನ್ನ- ಪಿರ್ರಾ) ಕಾವಿರಿ - ಕಾವೇರೀ ನದಿಯ, ಉಳ್ಳಂ - ನಡುವೆ, ಉಹನ - ಒಲಿದು ನಿತ್ಯವಾಸ ಮಾಡುವ, ಪಿರ್ರಾ : ಪರಮೋದಾರನಾದ ಶ್ರೀರಂಗನಾಥನು, ಇಡ್ಡೆ-ಪಿಳ್ಳೆ-ಆಹಿ : ಶ್ರೀಕೃಷ್ಣನರೂಪದಿಂದವತರಿಸಿ, ಉರೈತದ್ = ಉಪದೇಶಿಸಿದ ಗೀತೆಯನ್ನು, ಉರೈಕ್ಕುಂ - ವ್ಯಾಖ್ಯಾನಮಾಡಿದ, ಯತಿ-ವರನಾರ್ - ಯತಿಶ್ರೇಷ್ಠರಾದ ಶ್ರೀರಾಮಾನುಜಾಚಾರರ, ಮಡ್ಕ -ಪಳ್ಳಿ -ವಂದಮಣಂ : (ಅಡಿಗೆಯ ಕೈಂಕರವನ್ನು ಮಾಡುತ್ತಿದ್ದ) ಕಿಡಾಂಬಿ ಆರ್ಚ್ಚಾ ಎಂಬುವರ ವಂಶದಲ್ಲಿ ನಡುವೆನಿಂತು ಹೋಗದೆ ಕ್ರಮವಾಗಿ ಲಬ್ಧವಾದ ಸಂಪ್ರದಾಯ ಪರಿಮಳವು, (ಶ್ರೀ ಭಾಷ್ಯಕಾರರು ಕಿಡಾಂಬಿ ಆಚ್ಚಾನವರಿಗೆ ಉಪದೇಶಿಸಿದುದು ಅಪ್ಪುಳ್ಳಾರ್ ರವರಿಗೆ ಲಭಿಸಿದ ಸಂಪ್ರದಾಯ ಸಿದ್ಧವಾದ ರಹಸ್ಯಾರ್ಥ ವಿಶೇಷಗಳೆಂದರ್ಥ), ಎಂಗಳ್ = ನಮ್ಮ (ಅವರ ಶಿಷ್ಯವರ್ಗದಲ್ಲಿ ಕ್ರಮವಾಗಿ ಬಂದವನಾದ ನನ್ನ) ವಾರ್ತೆಯುಳ್ : ಪ್ರಬಂಧಗಳಲ್ಲಿ ಮನ್ನಿಯದೇ ಸ್ಥಿರವಾಗಿರುವುದಲ್ಲವೇ

पक्षीशेऽत्यन्तवीरे द्विजवरसमितौ भोग्यपीयूषवार्धी तल्पीभूते वदान्यः प्रमुदित उदित स्सह्यकान्यान्तरीपे । गोपाल स्स्न् स्वगीतां विवरितु मिह तां लक्ष्मणार्यात्मना यः तस्यायं सौदगन्धः किल फणितिषु न स्सुस्थिर स्संप्रवाति ॥ १258 ಪರಮಪದಸೋಪಾನಂ ಮೂಲ : ಕಳ್ಳಮನತ್ತುರ್ಡಕಣ್ಣು ಮುಯನ ಕಡುವಿನೈಯಾಲ್, ನಳ್ಳಿರುಳಾಳಿಯಿಲ್ ನರುವೈಯ್ಯನ್‌ನನಾಡಿಯವೋರ್, ಅಳ್ಳಲಿಲ್‌ನಾಳುಂ ವಿಳುನ್ಗಳ್‌ಯಾವಹೈಯಾರಣನೂಲ್, ವಳ್ಳಲ್‌ವಳಂಗಿಯ ವಾನ್ನಡಿಯಾನವಯಿದುವೇ ॥ -

2

ಅರ್ಥ :- ಕಳ್ಳಂ : ಅಹಂಕಾರ, ಮಮಕಾರಗಳಿಂದ ಕೂಡಿ, ಮನತ್ತು-ಉರ್ಡ = ಮನಸ್ಸಿನಿಂದ, ಕಂಡು : (ತತ್ವಗಳನ್ನು ವಿಪರೀತವಾಗಿ) ಅರಿತು, ಮುಯನ್ನ ಆರಂಭಿಸಲ್ಪಟ್ಟ ಕಡು-ವಿನೈಯಾಲ್ : ಉಗ್ರವಾದ ಪಾಪಗಳಿಂದ, ನಲ್ -ಇರುಳ್ -ಆಳಿಯಿಲ್ = ಗಾಢವಾದ ಅಜ್ಞಾನವೆಂಬ ಕಗ್ಗತ್ತಲೆಯ ಚಕ್ರದಲ್ಲಿ ಐಂದುಂ = ವಿಷಯಗಳೆದೂ (ಅತ್ಯಲ್ಪ ಸಾರಗಳಾಗಿದ್ದರೂ) ನಲ್ -ಶುವೈ-ಎನ : (ಆತ್ಮನಿಗೆ ಶಬ್ದಾದಿ ಉಪಭೋಗ್ಯವಾದ) ಒಳ್ಳೆಯ ರಸಗಳೆಂದು ಭ್ರಮಿಸಿ, ನಾಡಿಯದ್ = ಹುಡುಕಲ್ಪಡುವ, ಓ‌-ಅಳ್ಳಲಿಲ್ = (ಶಬ್ದಾದಿ ವಿಷಯಗಳೆಂಬ) ಸರಿಸಾಟಿಯೆನಿಸದ ಕೆಸರಿನ ದೊಡ್ಡ ಹಳ್ಳದಲ್ಲಿ ನಾಳುಂ = ಯಾವಾಗಲೂ, ವಿಳುಂದ್ = ಬಿದ್ದು, ಅಳಿಯಾ = ನಾಶವಾಗದ, ವಹೈ = ರೀತಿಯಲ್ಲಿ (ಭಗವದ್ಗುಣಾನುಭವವೇ ಜೀವಾತ್ಮನಿಗೆ ಸತ್ತಾಪಾದಕವಾದುದರಿಂದ ಶಬ್ದಾದ್ಯನುಭವವು ಆತ್ಮನಿಗೆ ನಾಶಕರವೆಂದು ಭಾವ) ಆರಣನೂಲ್ ಉಪನಿಷತ್ತುಗಳಿಂದಲೂ, ವಳ್ಳಲ್ : ಉದಾರವಾಗಿ (ಅಥವಾ ವಳ್ಳಲ್ ಪರಮೋದಾರನಾದ ಶ್ರೀ ಕೃಷ್ಣನಿಂದಲೂ) ವಳಂಗಿಯ : ಉಪಕಾರ ಮಾಡಲ್ಪಟ್ಟ (ಹೇಳಲ್ಪಟ್ಟ) (ತೇಽರ್ಚಿಷಮಭಿಸಂಭವತಿ ಪಕ್ಷ’’ ಎಂದೂ, ‘ಅಗ್ನಿರ್ಜ್ಯೋತಿರಹಶುಕ್ಲ ….ಜನಾಃ ’ ಎಂದೂ ಎಂದರ್ಥ) ನಾನ್ = ಪರಮಪದದ ಪಡಿಯಾನ - ಸೋಪಾನದ, ವಳಿ - ಮಾರ್ಗವು, ಇದುವೇ = ಇದೇನೆ. (ಈ ಪ್ರಬಂಧದಲ್ಲಿ ಹೇಳಿರುವ ವಿವೇಕಾದಿ ನವಸೋಪಾನಗಳಿಂದ ಭೂಷಿತವಾದ ಮಾರ್ಗವೇ ಉಪನಿಷತ್ತುಗಳಿಂದಲೂ, ಅವುಗಳಿಂದ ಪ್ರತಿಪಾದ್ಯಮಾನನಾದ ಶ್ರೀ ಕೃಷ್ಣನಿಂದಲೂ ಸ್ಪಷ್ಟವಾಗಿ ಹೇಳಲ್ಪಟ್ಟ ಅರ್ಚಿರಾದಿ ಮಾರ್ಗವು ಎಂದು ತಾತ್ಪರ್ಯ). प्रारब्धै र्दुरितै र्विलोक्य मनसा चोरेण दुर्दारुणैः गाढाज्ञानतमिस्रचक्रवशंग श्शब्दादयो भोगदाः । इत्येवासमपङ्कगर्तपतितो न स्यात्तथैषा किल प्रोक्त दिव्यपदाधिरोहणसृतिः वेदावतंसोक्तिभिः ॥ ಮೂಲ: ಅರುವುರುವಾನವೈಯನೈತುಮರಿವಾರೇಲುಂ ಅರುಂಕಲೈಹಳ್ ಕತ್ತುರೈಕ್ಕವಲ್ಲಾರೇಲುಂ 4 ಪರಮಪದಸೋಪಾನಂ ದರುಮವಳಿಯಳಿಯಾಮಲ್‌ಕಾಪ್ಪಾರೇಲುಂ ತನಿಮರೈಯಿನ್ ತಾತಪರಿಯಂತರುವಾರೇಲುಂ ಇರುವಿನೈಯಿನೊಳುಕ್ಕತ್ತಾಳ್ ಏವಲೋರಾದು ಇಂಗೇನಾಂಶಿರೈಯಿರುಂದ ವೀನಂ ತೀರಂ ತಿರುಮಗಳಾರ್ ಪಿರಿಯಾದ ದೇವನ್ ತಿಣ್ಣಂ ತೇರಾದಾ‌ ತಿಣ್‌ಡಿಯಿಲೇರಾದಾರೇ ॥

259 3 ಅರ್ಥ:- ಅರು-ಉರು-ಆನವೈ : ಸೂಕ್ಷ್ಮವೂ, ಸ್ಕೂಲವೂ, ಆದ ವಿಷಯಗಳು, (ಸಮಸ್ತ ಶಾಸ್ತ್ರ ತಾತ್ಪರಾರ್ಥಗಳು) ಅನೈತ್ತುಂ = ಎಲ್ಲವನ್ನೂ, ಅರಿವಾರ್-ಏಲುಂ = ಅರಿತವಳಾಗಿದ್ದರೂ, ಅರುಂ = ಅತಿ ಸೂಕ್ಷ್ಮವಾಗಿ (ಅವಶ್ಯ ತಿಳಿಯಬೇಕಾದ) ಕಲೈಹಳ್ : ವೇದಶಾಸ್ತ್ರಾದಿ 64 ವಿದ್ಯೆಗಳನ್ನೂ, ಕತ್ತು : ಅಭ್ಯಾಸಮಾಡಿ, ಉರೈಕ್ಕ : ಆಶ್ರಿತರಿಗೆ ಉಪದೇಶಿಸಲು, ವಾರ್ -ಏಲುಂ = ಬಲ್ಲವರಾಗಿದ್ದರೂ, ದರುಮ-ವಳಿ : ಶ್ರುತಿಸ್ಮೃತಿಗಳಲ್ಲಿ ಹೇಳಿರುವ ನಿತ್ಯನೈಮಿತಿಕಾದಿ ಕರ್ಮಮಾರ್ಗವನ್ನು, ತನಿ-ಮರೈಯಿನ್ = ವೇದಾಂತಗಳ, ತಾತ್ ಪರಿಯರಿ - ತಾತ್ಪರಾರ್ಥಗಳನ್ನು, ತರುವಾ‌-ಏಲುಂ = ಆಶ್ರಿತರಿಗೆ ಉಪದೇಶಮಾಡುವವರಾಗಿದ್ದರೂ, ಅಳಯಾಮಲ್ : ಸಂಪ್ರದಾಯ ವಿಚ್ಛೇದವಿಲ್ಲದಂತೆ, ಕಾಪ್ಪಾರ್ -ಏಲುಂ = (ತಾವೂ ಅನುಷ್ಠಿಸಿ ಆಶ್ರಿತರಿಂದಲೂ ಅನುಷ್ಠಾನಮಾಡಿಸಿ ಕಾಪಾಡಿಕೊಂಡು ಬರುವವರಾದರೂ) (ಇರು-ವಿನೈಯಿನ್ - ಒಳುಕ್ಕತ್ತಾಳ್ -ಏವಲ್ -ಓರಾದು) : ಇರು-ವಿನೈಯಿನ್ - (ಅನಾದಿಪುಣ್ಯರೂಪವಾದ) ಎರಡು ವಿಧಪಾಪಕರ್ಮಗಳ, ಒಳುಕ್ಕತ್ತಾಲ್ - ಪ್ರವಾಹದಿಂದ, ಏವಲ್ = (ಮಾಡಬೇಕೆಂದು ಆಸೆಪಡದೆ) (ಇಂಗ್ಲೀ-ನಾಂ-ಶಿ-ಇರುಂದ-ಈನಂ-ತೀರಂ :) ಇಂಗೇ = ಈ ಸಂಸಾರದಲ್ಲಿ, ನಾಂ = ನಾವು, ಶಿರೋ-ಸೆರೆಯಲ್ಲಿ (ಬದ್ಧರಾಗಿ) ಇರುಂದ : ಇದ್ದ ಈನಂ = ಹೀನತೆಯನ್ನು, ತೀರುಂ ನಿವಾರಿಸುವ, (ನಿತ್ಯಸಂಸಾರಿಗಳನ್ನು ನಿತ್ಯಸೂರಿ ಪದವಿಯಲ್ಲಿ ಇರಿಸುವ ) ತಿರುಮಗಳಾರ್ - ಪಿರಿಯಾದ ದೇವನ್ ಮಹಾಲಕ್ಷ್ಮಿಯನ್ನೆಂದಿಗೂ ಅಗಲಿರದ ಶ್ರೀಮನ್ನಾರಾಯಣನ, ತಿಣ್ಣಂ - (ನಿರುಪಾಧಿಕವಾದ ಸಶ್ವೇಶ್ವರತ್ವರೂಪ) ದೃಢತೆಯನ್ನು, ತೇರಾದಾರ್ : ನಿರ್ಧರಿಸಿಕೊಳ್ಳದವರು (ನಂಬದವರು), ತಿಣ್ -ಪಡಿಯಿಲ್ = ದೃಢವಾದ ಪರಮಪದಸೋಪಾನದಲ್ಲಿ ಏರಾದಾರೇ : ಹತ್ತಲಾರರು, (ಅದಕ್ಕೆ ಬಹಿರ್ಭೂತರಂತಹವರೆಂದರ್ಥ). (ಇದು ವಿವೇಕಪರ್ವವು, ಸರ್ವಶರಣ್ಯನಾದ ಪ್ರಿಯಃಪತಿಯ ಸನ್ವೇಶ್ವರತ್ವವನ್ನು ಸಕಲ ಶಾಸ್ತ್ರ ನಿಪುಣನಾಗಿದ್ದರೂ, ನಂಬದೆ ಹೋದರೆ ಅವನು ಮೋಕ್ಷಾಧಿಕಾರಿಯಲ್ಲಿ ವಿವೇಕ ಹೀನನೆಂದರ್ಥ).

ד

260 ಪರಮಪದಸೋಪಾನಂ शास्त्रार्थान् स्थूलसूक्ष्मान् विदु रपि च कला स्ताश्च सर्वा विबोद्धुम् दक्षा धर्माध्वरक्षाचरणपटुधियोऽप्यागमान्तार्थदाश्च । पापद्वन्द्वौघमुक्ता भगवदभिमतेप्साविहीना यदि स्युः अत्रत्यास्मद्भवस्थित्यभिहतिनिपुणस्येह नारायणस्य ॥ सदैव लक्ष्मीसहितस्य जात्वपि श्रियाविनानास्थितदैवतस्य । सर्वेशतायां दृढतानभिज्ञाः सोपानमार्गाच्च दृढात् बहिष्ठाः ॥ ಮೂಲ: ಮರುತ್ತಾರ್ ತಿರುವುರ್ಡ ಮಾಲ್‌ದರಿತ್ತರ್ವ ವಾಶಕ ಮರುತ್ತಾರ್‌ಮಯಕ್ಕಮುಂ ಮತ್ತನಾಲ್‌ ವಮಾನರಹುಂ ನಿರುತ್ತಾ‌ ಬವಲ್ ನೆಡುನಾಳುಳಕ್ರಮೈ ಕಂಡದನಾಲ್ ವೆರುತ್ತಾರಣನೆರಿಯೇ ವೆಲ್ಫ್ ಹಯೋಡ ವಿರೈವ‌ಳೇ ॥

३ १ 4 ಅರ್ಥ :- ವಕ್ಷಸ್ಥಳದಲ್ಲಿ ತಿರು-ಉರ್ಡ=ಮಹಾಲಕ್ಷ್ಮಿಯೊಂದಿಗೆ, ಮರು - (ಗುರುತಾದ) ಶ್ರೀವತ್ಸಚಿಹವನ್ನೂ, ತಾರ್ : ಮಾಲೆಯಾದ ವೈಜಯಂತಿಯನ್ನೂ, ದರಿತ್ತವನ್ = ಧರಿಸಿದ ಶ್ರೀಕೃಷ್ಣನ, ವಾಶಕ = ವಾಕ್ಯವನ್ನು (ಭಜಸ್ವಮಾಂ’’ ಎಂದೂ ‘‘ಮಾಮೇಕಂ ಶರಣಂವ್ರಜ ಎಂದು ಹೇಳಿದುದನ್ನು ಮರುತ್ತಾರ್ : ಮೀರಿದವರು (ಭಕ್ತಿ ಪ್ರಪತ್ತಿಮಾರ್ಗಗಳಲ್ಲಿ ಪ್ರವೇಶಿಸಿದವರು ಎಂದರ್ಥ) ಮಯಕ್ಕಮುಂ = ಅವಿದ್ಯೆಯೂ, ಮತ್ತೆ = ಅಷ್ಟೇ ಅಲ್ಲದೆ, ಅದನಾಲ್ : ಆ ಅವಿದ್ಯೆಯಿಂದ, ವಂದ = ಬಂದ, ಮಾ-ನರಕುಂ = ತೀವ್ರವಾದ ನರಕಯಾತನೆಯನ್ನೂ, ನಿರುತ್ತು = ತನ್ನಲ್ಲಿಯೇ ನಿಲ್ಲಿಸಿಕೊಳ್ಳುವ ಶಕ್ತಿಯುಳ್ಳ, ಆರ್ = ಅತಿ ವಿಸ್ತಾರವಾದ ಸಂಸಾರದಲ್ಲಿ ನೆಡು-ನಾಳ್ = ಬಹಳ ಹಿಂದಿನಿಂದ, ಉಳನಮೈ ಅಲೆದಾಡಿದುದನ್ನೂ, ಕಂಡು - (ನೋಡಿದಂತೆ) ವಿಮರ್ಶಿಸಿ, ಅದನಾಲ್ - ಅದರಿಂದ, ವೆರುತ್ತು = ಮರುಗಿ (ನಿರ್ವದಗೊಂಡು) ಇರುವವರು, ವೆಳ್ ಹಿ - (ಹಿಂದೆ ಅಲೆದಾಡಿದುದಕ್ಕೆ) ನಾಚಿಕೆಗೊಂಡು, (ಮುಂದೆ) ಆರಣ-ನೆರಿಯೇ - ವೇದಾಂತಗಳು ಹೇಳುವ ಭಕ್ತಿ ಪ್ರಪತ್ತಿಮಾರ್ಗಗಳಲ್ಲೇ, ಓಡ-ವಿರೈವರ್‌ಹಳ್ = ತಡಮಾಡದೆ ಬೇಗೆ ಪ್ರವರ್ತಿಸುವರು, (ನಿರ್ವದಪರ್ವವು ಮೊದಲಾಯಿತು.ನಿರ್ವದ ಬಂದರೇನೇ ಉಪಾಯದಲ್ಲಿ ತೊಡಗುವನು. ಉಪಾಯಾನುಷ್ಠಾನಮಾಡಿದರೇನೇ ಮುಕ್ತಿ ಅದು ಖಂಡಿತ ದೊರಕುವುದೆಂದು ನಂಬಿದರೇನೇ ಪೂರ್ಣಫಲವನ್ನು ಬೇಗನೇ ಅನುಭವಿಸಬಹುದೆಂದು ಭಾವ.)

श्रीवत्सं वैजयन्ती मपि सह रमया वक्षसाऽलंकरिष्णोः वाचो ये वावमन्यन्त इह पुन रविद्यां तदीया व्यथाश्च । ಪರಮಪದಸೋಪಾನಂ भुक्त्वात्रं स्थापयत्तद्भ्रमण मतिचिरात् संसृतौ वीक्ष्य चाथो निर्विण्णा लज्जमांना उपनिषदुदितोपाय एवाशु यान्ति ॥ ಮೂಲ : ವಾಸ್ಪಿಟ್ಟಮನ್ನಿರುಳಿಲ್ ಮಯಂಗುಮಾರುಂ ಮರಿತ್ತೊರು ಕಾಲೆನೈಯೂಳಿಶಾಲನ್ನೊ‌ ಊನ್ನಟ್ಟವುಡಲಾಳಿವಿದ್ಯೆಯೊಳುಕ್ಕಿಲ್ ಒರುಕರೆಯುಂ ಕಾಣಾದೇಯೊಳುಕುಮಾರಂ ತೇನ್ನಟ್ಟವಿಡಂಪೋಲತಿತ್ತಿಕ್ಕಿನ ಶಿರುಪಯನೇಯುರುಪಯನೆರುನುಮಾರುಂ ತಾನ್ನಟ್ಟಪಡಿಯಿನ್ನೇ‌ ತಾನೇ ಕಂಡು ತಳರ್‌ ಡುಮೇಲ್ ವಳರ್‌ ಡುಮೇತಕ್ಕವಾರೇ ॥

261 5 ಅರ್ಥ :- ವಾನ್ = ಆಕಾಶ, (ಚಿರಸ್ಥಾಯಿಯಾದುದು) ಪಟ್ಟ = (ಬಹಳ ಕಾಲ ಇರುವಿಕೆಯನ್ನು) ಪಡೆದ, ಮನ್-ಇರುಳಿಲ್ = (ಪ್ರಾಕೃತ ಪ್ರಳಯವಾದ ) ಗಾಢಾಂಧಕಾರದಲ್ಲಿ, ಮಯಂಗುಮಾರುಂ : ಅರಿವಿಲ್ಲದಂತೆ ಬಹಳ ಕಾಲ ಮೋಹಿತನಾಗಿರುವ ರೀತಿಯನ್ನೂ, ಮರಿತ್ತು = ಮತ್ತೆ ಒರು-ಕಾಲ್ -ಎನ = ಒಂದೇ ಕಾಲದಂತೆ ಒಂದೇ ಸಮನಾಗಿ ಬಹಳ ಕಾಲ, ಊಳಿ - ಪ್ರಳಯವು, ಶೆನಾಲ್ : ಕಳೆದ ಮೇಲೆ, ಅನ್ನು - ಆಗ (ಸೃಷ್ಟಿ ಕಾಲವು ಬಂದಾಗ) ಊನ್ - ಮಾಂಸಾದಿಗಳು, ಪಟ್ಟ - ಇರುವ, ಉಡಲ್ - (ದೇವಾದಿ) ಶರೀರದ, ಆಳಿ = ಚಕ್ರದಂತೆ ಮತ್ತೆ ಮತ್ತೆ ತಿರುಗಿ ಬರುವ ಜನ್ಮವುಳ್ಳವರು, ವಿನೈ - (ಪುಣ್ಯಪಾಪರೂಪಗಳಾದ) ಕರಗಳ, ಒಳುಕ್ಕಿಲ್ : ಪ್ರವಾಹದಲ್ಲಿ (ಸಿಕ್ಕಿಕೊಂಡು) ಒರು-ಕರೈಯುಂ-ಕಾಣದೇ : ಮೋಕ್ಷವೆಂಬ ಪ್ರಧಾನವಾದ ಮಾರ್ಗವನ್ನು ಕಾಣದೆಯೇ, ಒಳುಕುಮಾರುಂ = (ಕರ್ಮಪ್ರವಾಹದಲ್ಲೇ ತೇಲಿಹೋಗುವ ಪ್ರಕಾರವನ್ನೂ, ತೇನ್ - ಜೇನು, ಪಟ್ಟ- ಕೂಡಿರುವ, ವಿಡುಂಪೋಲ = ವಿಷದಂತೆ, ತಿತ್ತಿಕ್ಕಿನ = ರುಚಿಸುವ (ಮೇಲಕ್ಕೆ ಸ್ವಾದುವಾಗಿ ತೋರುವ) ಶಿರು-ಪಯನೇ : ಅಲ್ಪ ಫಲವಾದ ಶಬ್ದಾದಿ ವಿಷಯಗಳನ್ನೇ, ಉರು-ಪಯನ್ = ದೊಡ್ಡ ಫಲವು (ಆತ್ಮನಿಗೆ ಪರಮಭೋಗ್ಯವೆಂದು), ಎನ್ - ಎಂದು, ಅರುಂದುಮಾರುಂ = ಅರಿತು ಆಸ್ವಾದಿಸುವ ರೀತಿಯನ್ನೂ), ತಾನ್-ಪಟ್ಟ-ಪಡಿ - ತಾನು ಅನುಭವಿಸಿದ ಪ್ರಕಾರವನ್ನು, ಇನ್ನೇರ್ : ಈ ರೀತಿಯಲ್ಲಿ, ತಾನೇ - ತಾನೇ, ಕಂಡು = ಶಾಸ್ಪೋಪದೇಶದ ಬಲದಿಂದ) ಪರಾಮರ್ಶಿಸಿ, ತಳರ್‌ನ್ಸ್-ಇಡು : ತಳಮಳಗೊಂಡ (ನಿರ್ವೇದಗೊಂಡ) (ಅವನಿಗೆ), ಮೇಲ್ : ನಿರ್ವದಬಂದ ಬಳಿಕ, ತಕ್ಕವಾರೇ = ಆತ್ಮನಿಗೆ ಹಿತಕರವಾದ ಪ್ರವೃತ್ತಿಗಳೇ, ವಳರ್‌ ಡುಮೇ ದಿನದಿನಕ್ಕೂ ಹೆಚ್ಚುತ್ತಾ ಬರುವುವು.

NBLOUBO 262 ಪರಮಪದಸೋಪಾನಂ व्योमेव स्थायितावत्तिमिरततिगताचित्प्रकारं चिरेण काले भूयोऽपि चैकीकृत इंव सति कल्पान्त एवान्तमेते । मांसासृक्कायचक्रभ्रमणनिपततां पुण्यपापात्मकर्म स्रोतस्सम्प्लावितानां कमपि तट मनालोकितानां च रीतिम् ॥ १ क्ष्वेड स्स्वाद्यो यथा स्यान्मधुसहित इहाल्पार्थ एवात्मभोग्यः ज्यायानर्थ स्तथैवं ह्यवगतविषयाणां स्वतश्च प्रकारम् । एवं ह्यात्मानुभूतिं स्वय मभिविमृशन् यस्तु निर्वेद मेयात् तस्मैवात्मप्रयत्ना श्शुभफलमहिता नित्य मेधन्त एव ॥ ಮೂಲ: ಉಲಹತ್ತುಯರ್‌ನವರೊನುಂ ಪಯನಿಲುರುನುಯರುಂ ಅಲಗಿಲ್ ಪಡಾದವಟ್ಟೋಗಂ ಕವರ್‌ನೆಳುಮಂಬುಯನ್ ಕಲಹತ್ತೊಳಿದುಕೈಟಬರಾಲ್‌ಪಡುಂಕಟಮೆಣ್ಣುಂ ಪಲಕತ್ತಮೆಯ್ಯಡಿಯಾರ್ ಪಡಿಯಾರ್ ಇಕ್ಕಡುಂಬವ II * 6 ಅರ್ಥ :- ಉಲಹತ್ತು = ಈ ಭೂಲೋಕದಲ್ಲಿ, ಉಯರ್‌ನವರ್ ಉನ್ನತರಾಗಿದ್ದವರು, (ರಾಜ್ಯ, ಧನ, ವೀರಾದಿಗಳಿಂದ ಬಲುಮೇಲಾಗಿದ್ದ ನಳ, ನೃಕ, ನಹುಷಾದಿರಾಜಾಧಿರಾಜರು) ಒನ್ನುಂ = ಅನುಭವಿಸುವ, ಪಯನಿಲ್ = ಫಲದಲ್ಲಿ (ಸಾಮ್ರಾಜ್ಯ ಪದವಿಯಲ್ಲಿ) ಉರುಂ = ಒಂದೇಸಮನಾಗಿ ಬರುತ್ತಿದ್ದ ತುಯರುಂ = ದುಃಖಗಳನ್ನೂ, (ನಳ ಹುಚ್ಚನಾದನು, ನೃಕ ಹೆಂಟೆಗೊದ್ದನಾದನು, ನಹುಷ ಅಜಗರನಾದನು, ಹೀಗೆ ಪಡಬಾರದ ಕಷ್ಟವನ್ನನುಭವಿಸಿದರಲ್ಲವೆ?) ಅಲಹ್ -ಇಲ್‌ಡಾದ - ಅವಧಿಯಿಲ್ಲದ (ಅಮಿತವಾದ), ಅ-ಬೋಗಂ - ಎಲ್ಲೆಯಿಲ್ಲದ ಆನಂದವನ್ನು, ಕವರ್‌ನ್ಸ್ - ಪಡುವವನಾಗಿ, ಎಳುಂ-ಅಂಬುಯನ್ : ಬಹಳ ಮೇಲೆನಿಸಿದ ಬ್ರಹ್ಮನೂ ಕೂಡ, ಕಲಹ-ತೊಳಿಲ್ : ಜಗಳವೇ ಕೃತ್ಯವಾಗಿದ್ದ, ಮದು-ಕೈಟಬರಾಲ್ : ಮಧು, ಕೈಟಭ ಎಂಬ ರಾಕ್ಷಸರಿಂದ, ಪಡುಂ = ಪಡುವ, ಕಟ್ಟಂ = ಕಷ್ಟವನ್ನೂ, (ಎಲ್ಲಕ್ಕೂ ಮೂಲವಾದ ವೇದವನ್ನೇ ಅಪಹರಿಸಿಕೊಂಡು ದಿಕ್ಕುತೋಚದಂತಾಗಿ ಬ್ರಹ್ಮನು ಮೊರೆಯಿಡುವಂತೆ ಮಾಡಿದ ಕಷ್ಟವೆಂದರ್ಥ) ಎಣ್ಣುಂ = ಪರಾಮರ್ಶಿಸುವವರೂ, ಪಲ = ಹಲವಾರು ಶಾಸ್ತ್ರಾರ್ಥಗಳನ್ನೂ, ಕತ್ತ = ಕಲಿತವರೂ, ಮೆಯ್ಯ-ಅಡಿಯಾರ್ : (ಭಗವಂತನ ಪರತ್ವವನ್ನೂ, ಇತರರ ಅಪರತ್ವವನ್ನೂ, ನಿತ್ಯವಿಭೂತಿಯ ವೈಲಕ್ಷಣ್ಯವನ್ನೂ, ಲೀಲಾ ವಿಭೂತಿಯ ಹೇಯತೆಯನ್ನೂ, ಅರಿತು

ಪರಮಪದಸೋಪಾನಂ 263

ನಿರ್ವೇದವುಳ್ಳವರೂ) ಡಂಬಾದಿಗಳಿಲ್ಲದ ಪರಮೈಕಾಂತಿಗಳು, ಇ-ಕಡುಂ-ಬವ : ಈ ಕ್ರೂರವಾದ ಸಂಸಾರದಲ್ಲಿ, ಪಡಿಯಾರ್ = ಒಗ್ಗರು, (ಆಸಕ್ತರಾಗುವುದಿಲ್ಲ). लोके ह्यत्युन्नतानां सुकृतवति फलेऽप्याप्तदुःखाधिकत्वं तादृग्भोगं समश्नन् निरवधि मुदितो नीरजातासनोऽपि । कष्टं जन्यैकनित्यक्रियमधुमुखरक्षः कृतं प्राप तादृक् ज्ञात्वा शास्त्रप्रवीणाः पदजुष ऋजवो नेयु रुग्रं भवं तु ॥ ಮೂಲ : ತಂತಿರಂಗಳಳವಿಲರಾಯ್ ದನತ್ತಾಲ್‌ಮಿಕ್ಕ ತಾರ್‌ವೇನ್ದರ್‌ತೊಳವೈಯ್ಯಮಾಂಡಾರ್ ಮಾಂಡಾರ್ ಶಂದಿರನುಂ ಶೂರಿಯನುಂ ವೀಯುಂಕಾಲಂ ತಾರಕೈಯಿನ್‌ಡಮತ್ತು ಮತ್ತುತ್ತನಿವಾನಾಹುಂ ಇಂದಿರನುಮೇರುಯರ್‌ತವೀಶನಾನುಂ ಈರಿರಂಡು ಮುಹತ್ತಾನುಮಿಲ್ಲಾವಾಳ್ ನನ್ನಿರುಮಾಲ್ ನಿಲೆಕಂಡಾರ್ ನಾಕಮೆಲ್ಲಾಂ ನರನ್ನುನರದಮೇ ನಾಡುವಾರೇ ॥

7 ಅರ್ಥ :- ತಂತಿರಂಗಳ್ = ಚತುರಂಗ ಬಲವನ್ನು, (ರಥ, ಗಜ, ತುರಗ, ಪದಾತಿ) ಅಳವು-ಇಲರ್ -ಆಮ್ : ಅಪರಿಮಿತವಾಗಿ ಪಡೆದಿರುವ, ದನತ್ಕಾಲ್ -ಮಿಕ್ಕ = `ಧನಧಾನ್ಯಾದಿ ಸಂಪತ್ತಿನಿಂದ ಅಧಿಕರೆನಿಸಿದ, ತಾರ್ = (ಶಿರೋಮಾಲಿಕೆ, ಕೊರಳು ಮಾಲಿಕೆ) ಹಾರವನ್ನು ಧರಿಸಿದ, ವೇನ್ನರ್ : (ಚಂದ್ರ ಸೂರ ವಂಶೋತ್ಪನ್ನರಾದ) ರಾಜಾಧಿರಾಜರು, ತೊಳ - (ನಮಿಸಿ) ಸೇವೆ ಮಾಡಲು, ವೈಯಂ = ಭೂಮಂಡಲವನ್ನು, ಆಂಡಾರ್ = ಅಳಿದ ಸಾರಭೌಮರೆಲ್ಲ ಮಾಂಡಾರ್ = ಹೆಸರೇ ಉಳಿಯದಂತೆ ಅಳಿದರು, (ಅಷ್ಟೇ ಅಲ್ಲದೆ) ಚಂದಿರನುಂ - ಚಂದ್ರನೂ, ಸೂರಿಯನುಂ = ಸೂರನೂ, ವೀಯುಂ = ನಶಿಸುವ, ಕಾಲಂ = ಕಾಲದಲ್ಲಿ ತಾರಕೈರ್ಯಿ - ನಕ್ಷತ್ರಗಳ, ವಡಂ - ಮಂಡಲವು ಅತ್ತು - ಅಳಿದು, ತನಿ-ವಾನ್-ಆಹುಂ : ಪರಮಾಕಾಶವೇ ಉಳಿಯುವುದು, (ಸೂಕ್ಷ್ಮ ಪ್ರಕೃತಿಯೇ ಉಳಿಯವುದೆಂದೂ ಹೇಳಬಹುದು ಇಂದಿರುನುಂ = ಇಂದ್ರನೂ, ಏರ್ : ವೃಷಭವು, ಉಯರ್‌- ಮೇಲೆ ಕಾಣುವ ಧ್ವಜವುಳ್ಳ, ಈರ್ಶ-ತಾನುಂ : ಈಶ್ವರನೂ, ಈರ್ ಇರಂಡು-ಮುಹತ್ತಾನುಂ - ನಾಲ್ಕು ಮುಖದವನ (ಬ್ರಹ್ಮನೂ), ಇಲ್ಲಾ ಅನ್ನಾಳ್ = ಇವರು ಯಾರೂ ಇಲ್ಲದ ಬ್ರಹ್ಮ ಪ್ರಳಯದಲ್ಲಿ ನಂ : ನಮ್ಮ ತಿರುಮಾಲ್ =

1 264

ಪರಮಪದಸೋಪಾನಂ ಶ್ರೀಮನ್ನಾರಾಯಣನ, ನಿಲೈ - (ಸತ್ವ ಕಾರಣತ್ವವನ್ನು ತೋರಿಸುವ) ಸ್ಥಿತಿಯನ್ನು ಕಂಡಾರ್ = ನೋಡಿದವರು (ಶಾಸ್ತ್ರದಿಂದ ತಿಳಿದವರು) ನಾಕಂ-ಎಲ್ಲಾಂ-ನರಕು-ಎನ್ನು = ಸ್ವರ್ಗವೇ ಮೊದಲಾದ ಲೀಲಾ ವಿಭೂತಿಯೆಲ್ಲಾ ನರಕಪ್ರಾಯವೆಂದು, (ತಿಳಿದು ವೈರಾಗ್ಯ ಪಡದು) ನಲ್-ಪದಮೇ : ಸರೋತ್ತಮವಾದ ಪರಮ ಪದವನ್ನೇ, ನಾಡುವಾರೇ : ಹುಡುಕುವವರಾಗುತ್ತಾರೆ. (ವಿಮರ್ಶಿಸಿ, ಕೊನೆಗೆ ಪಡೆಯುತ್ತಾರೆ ಎಂದರ್ಥ) मानातीतपरिच्छदा स्समधिका वित्तेशतादित्वतः नेमु र्दामधरा धराधिपतयो यान् सार्वभौमांश्च ते । याता नन्वमृतद्युतिग्रहपती यातौ च तारागणः नाशं यात्यथ शिष्यते च परमाकाश स्स सूक्ष्मः परः ॥ वृषा च वृषभध्वजो द्विगुणितद्वयास्य श्च ते न सन्ति हि यदा तदा सकलकारणत्वं च नः । रमेशितु रवेक्ष्य तं नरक मेव नाकं त्विति प्रियं च परमं पदं किल गवेषयन्ते बुधाः ॥ ಮೂಲ : ತುರವರಮೇ ತುಣಿವಾರ್ ತುಣಕ್ಕತ್ತ ವಿಳನ್ಗುಣಿವೋರ್, ಉರವಿಲರಾದಲಿಲ್ ನಾಮುಯರ್‌ನಾರುಡನ್ ಒನಿನ್ನೊಂ ಮರವಳಿಮಾತಿ ಎಮ್ಮೆಯಿಲೈರ್ತವರ್‌ಮನ್ನರುಳಾಲ್,

ಕರವೈಯುಹನ್ದಪಿರಾನ್‌ಕಳಲ್‌ಡುಂಕರುತ್ತಿನಮೇ ॥

१ ಅರ್ಥ :- ತುರ-ಅರಮೇ : ತ್ಯಾಜ್ಯವಾದ ಧರ್ಮವನ್ನೇ (ಆತ್ಮಾಪಹಾರವಾಗುವ ಧರ್ಮದಲ್ಲೇ), ತುಣಿವಾರ್ = (ಹಿಂಜರಿಯದೆ) ಮಾಡುವವರೂ (ದೇಹಾತ್ಮಾಭಿ ಮಾನಿಗಳು ತುಣುಕ್ಕು : ಮೋಕಪ್ರವಣತೆಯು, ಅತ್ತ - ಇಲ್ಲಿದೆ, (ಮುಕ್ತಿಯಲ್ಲಿ ಆಸೆಯಿಲ್ಲದ) ಇಳಂ - ಅಲ್ಪವಾದವು (ಐಶ್ವಯ್ಯ ಕೈವಲ್ಯಾದಿಗಳಲ್ಲಿ) ಗಳಲ್ಲಿಯೇ, ತುಣಿವೋರ್ ಆಸೆಪಟ್ಟು ಯತ್ನಿಸುವವರೂ, ಉರವು-ಇಲರ್ - (ಮುಮುಕ್ಷುಗಳಿಗೆ) ಬಂಧುಗಳಲ್ಲ ಆದಲಿಲ್ -ನಾಂ = ಮೋಕ್ಷವೇ ಮುಖ್ಯ ಪ್ರಯೋಜನವುಳ್ಳನಾವು, ಉಯರ್ ಸ್ಟಾರ್-ಉಡನ್ : (ಮುಕ್ತಿಯೇ ಪ್ರಧಾನ ಫಲವೆಂದಿರುವ ಮುಮುಕ್ಷುಗಳೊಡನೆ, ಒನ್ನಿ-ನಿನ್ನೊಂ : ಒಮ್ಮತರಾಗಿ ಕಲೆತು ನಿಂತರಾದೆವು. (ಅಷ್ಟೇ ಅಲ್ಲದೆ ) (ಮರ-ವಳಿ-ಮಾತಿ = ಮರಂ = ಕೋಪವೇ (ಕಾಮಾದಿಗಳೂ ತೋರುತ್ತವೆ) ಮುಂತಾದ, ವಳಿ = ಮಾರ್ಗವನ್ನು, ಮಾತ್ತಿ = ಹೋಗಲಾಡಿಸಿ, (ವಿವೇಕ, ನಿರ್ವೇದ, ಎರಕ್ತಿ, ಭೀತಿ,

ಪರಮಪದಸೋಪಾನಂ

265

ಇವುಗಳನ್ನುಂಟುಮಾಡಿ), ಎಂ = ನಮ್ಮ ಮೈ - ದೇಹದ, ಅಲೈ - ಅಲೆದಾಟವನ್ನು ತೀರ್ತ್ತವರ್ : ಕೊನೆಗಾಣಿಸಿದವರಾದ (ಮತ್ತೆ ಮತ್ತೆ ಹಲವಾರು ಜನ್ಮವೆತ್ತುವುದನ್ನು ನಿವಾರಿಸಿದ) ಸದಾಚಾರರ, ಮನ್-ಅರುಳಾಲ್ = ದೃಢವಾದ ಕರುಣೆಯಿಂದ, ಕರವೈ : ಹಸುಗಳನ್ನು, ಉಹನ = ಸಂತೋಷವಾಗಿ ರಕ್ಷಿಸಿದ, ಪಿರ್ರಾ : ಮಹೋಪಕಾರಮಾಡಿದ ಶ್ರೀ ಕೃಷ್ಣನ, ಕಳಲ್ : ಪಾದಾರವಿಂದಗಳನ್ನು, ಶೂಡುಂ - ತಲೆಯಮೇಲೆ ಧರಿಸುವ, (ಶ್ರೀಮನ್ನಾರಾಯಣನನ್ನು ಆಶ್ರಯಿಸುವ) ಕರುತ್ತಿನಂ - ಅಭಿಪ್ರಾವುಳ್ಳರಾದೆವು. (ಎ = ಅಲ್ಲವೇ !)

सक्ता स्त्याज्येषु धर्मेष्वविरत मरता मुक्त्युपाये ऽल्पकेऽर्थे ग्रा ये बन्धवस्ते न हि तदिह सहैकेप्सुभि स्समोऽथ किं च । कोपाद्यध्वापनेतुः विविधतनुपरिभ्रान्तिहर्तु र्गुरो र्नः कारुण्यात् गोप्रियस्येशितु रमलपदं धारयाम श्शिरस्सु ॥ ಮೂಲ : ವನ್ದನಪೋಲ್‌ರುವನವು ಮನಂತಮಾಹಿ ಮಾಳಾದ ತುಯರ್ ತರುವಲ್ ವಿನೈನೆರುಪ್ಪುಕ್ಕು

ಇಂದನಮಾಯೆಣ್ಣಿರಂದ ಕಾಲಮೆಲ್ಲಾಮಿನ್ನು ಮುಮಿಬವ ಕ್ಕುಳಿಕ್ಕೇಳಿಯಾವಣ್ಣಂ, ಎಂದದೊರುಕುಳವಿದ್ಯೆ ನಕ್ಕುಮರನಾಕ್ಕುಂವೆರಿತುಳಬವಿತಹನಾರ್ ವಿದಿಯೇ ಕೊಂಡಾರ್, ಬಂದನಮಾಮವೈಯನೈತ್ತುಂಪಾರುಕ್ಕುಂ ಪಳಮರೆಯಿನ್ ಪದಮೊಪಯಿಲುವಾರೇ |

ಅರ್ಥ :- ವಂದನ-ಪೋಲ್ = ಬಂದ ದುಃಖಗಳಂತೆಯೇ, ವರುವನವುಂ ಇನ್ನು ಮೇಲೆ ಬರುವ ದುಃಖಗಳೂ, ಅನಂತಂ-ಆಹಿ = ಕೊನೆಯೇ ಇಲ್ಲದಾಗಿ, ಮಾಳಾದ (ಅನುಭವ ಮತ್ತು ಪ್ರಾಯಶ್ಚಿತ್ತಗಳಿಂದ) ಕಳೆದುಕೊಳ್ಳುವುದಕ್ಕಾಗದ, ತುಯರ್ - ದುಃಖವನ್ನು, ತರು = ಕೊಡುವ, ವಲ್ -ವಿನ್ಯ - ಕ್ರೂರವಾದ ಪಾಪಗಳೆಂಬ, ನೆರುಪು = ಕಾಡುಕಿಚ್ಚಿಗೆ, ಎಣ್ ಇರುಂದ -ಕಾಲಂ - ಎಲ್ಲಾಂ : ಎಣಿಸಲಾಗದ ಹಿಂದಿನ ಕಾಲವೆಲ್ಲಾ ಇಂದನಮಾಯ್ : ಕಟ್ಟಿಗೆ (ಸೌದೆ)ಯಾಗಿ, ಇನ್ನು ಮುಂ : ಇನ್ನುಮುಂದೆಯೂ, (ಎಣಿಸಲಾಗದಷ್ಟು ಕಾಲ) ಇ-ಬವ-ಕುಳಕ್ಕೆ - ಈ ಸಂಸಾರವೆಂಬ ಹಳ್ಳದಲ್ಲಿ, ಇಳಯಾ-ವಣ್ಣಂ
ನಾಶವಾಗದಂತೆ (ಅಸತ್ಯಲ್ಪವಾಗಿ ಆಗದಂತೆ, ತಿಳಿದು) ವೆಂದದ್ -ಒರು-ಕುಳವಿದ್ಯೆ : (ಅಶ್ವತ್ಥಾಮಾಸ್ಕದಿಂದ ಗರ್ಭದಲ್ಲೇ) ಬೆಂದುಹೋಗಿ

266 ಪರಮಪದಸೋಪಾನಂ ಜಿನಿಸಿದ ಮಗುವನ್ನು, (ಪರೀಕ್ಷಿತನ್ನು) ನಲ್ -ಕುಮಾರನ್ -ಆಕ್ಕುಂ = ಒಳ್ಳೆಯ ಶಿಶುವನ್ನಾಗಿ ಮಾಡಿದ, ವೆರಿ-ತುಳಬ-ವಿತಹನಾರ್ = ಪರಿಮಳಿಸುವ ತುಲಸೀಮಾಲೆಯುಳ್ಳ ಮತ್ತು ವಿಸ್ಮಯಪಡಿಸುವ ಶ್ರೀಕೃಷ್ಣನ, ವಿದಿಯೇ-ಕೊಂಡಾರ್ = (ಭಜಸ್ವ-ಶರಣಂವ್ರಜ ಎಂಬ) ವಾಕ್ಯಗಳನ್ನೇ (ತಮಗೂ) ತಂದುಕೊಡುವರು, ಬಂದನಂ-ಆಂ-ಆವೈ-ಅನೈತ್ತುಂ = ಮುಕ್ತಿಗೆ ತಡೆಯಾಗಿರುವ ಎಲ್ಲಾ ಪಾಪಗಳನ್ನೂ, ಪಾರು : ದೂಳಿಯಾಗುವಂತೆ, ಕೈಕ್ಕುಂ ನಾಶಮಾಡುವ, ಪಳಮರೈರ್ಯಿ -ಪದಂ-ಒ : ಅನಾದಿಯಾದ ವೇದಾಂತದಲ್ಲಿ ಹೇಳಿರುವ ಪ್ರಪತ್ತಿಮಾರ್ಗವೊಂದನ್ನೇ, ಪಯಿಲುವಾರ್ : ಅಭ್ಯಾಸಮಾಡಲು ನೋಡುವರು.

प्राप्तानीवागमिष्यन्त्यपि मितिरहितानीह भोगादिना न । क्षय्याणीदृशि दुःखान्युपरि च ददतो तीव्रपापौघवहेः ॥ एधीभूतं च कालं सकलमपि गतं वीक्ष्य भूयोऽपि तद्वत् । न स्यु स्संसारगर्ते निखिलमवसरं यापयन्तो यथा न ॥ दग्धं गर्भगतार्भकं कमपि यो मुग्धं शिशुं निर्ममे । धत्ते यस्तुलसीस्रजं सुरभितां तस्याद्भुतेहावतः । । विध्युक्तिप्रविदश्च मुक्तिविहतिक्षोदीकरिष्यत्त्रयी- चूडावाक्षु गिरं प्रपत्तिमहिता मेकां हितेऽधीयते ॥ 0 = ಮೂಲ : ಕರುಮಾಲೈಯಲ್‌ವರುಂಕಟ್ಟಂಗಳಿಕ್ಕುಂಕರುತ್ತುಡೈಯಾರ್, ಒರುಮಾಲ್ ಪೆರುಹುಂ ಉಯೋಗಿನ್ಯುಯನ್ನುಮದನ್ತಿಯುಂನಂ ತಿರುಮಾಲಡಿಯಿತಿಣ್‌ಶರಣಾಹುಮೆನವರಿತ್ತು, ತರುಮಾಲಿನಯವೈತಾನೇ ಎನತ್ತಹವೆಣ್ಣುವರೇ ॥

९ 10 ಅರ್ಥ :- ಕರು-ಮಾಲೈಯಿಲ್ - ಗರ್ಭ ಪರಂಪರೆಯಲ್ಲಿ (ಗರ್ಭ-ಜನ್ಮ-ಜರಾ ಮರಣಾದಿಗಳಲ್ಲಿ ವರುಂ = ಬರುವ, (ಒದಗುವ) ಕಟ್ಟು = ಕಷ್ಟಗಳನ್ನು, ಕಳಿಕ್ಕುಂ ಕಳೆದಕೊಳ್ಳಬೇಕೆಂಬ, ಕರುತ್ತ= ಅಭಿಪ್ರಾಯವನ್ನು, ಉಡೈಯಾರ್ = ಹೊಂದಿರುವವರು (ಮುಮುಕ್ಷುಗಳು) ಒರು-ಮಾಲ್-ಪೆರುಹುಂ = ಒಂದೇಸಮನಾಗಿ (ನಡುವೆ ನಿಲ್ಲದೆ) ಭಕ್ತಿರೂಪವಾದ ಜ್ಞಾನವು ಧಾರಾಕಾರವಾಗಿ ಹರಿಯುವ, ಯೋಗಿಲ್ - ಭಕ್ತಿಯೋಗದಲ್ಲಿ ಮುಯನ್ಸ್ = ಉದ್ಯಮಿಸಿ (ಪ್ರವೇಶಿಸಿ), ಅದ್ -ಆ ಭಕ್ತಿಯೋಗವನ್ನೂ, ಅನ್ನಿಯುಂ - ಬಿಟ್ಟವರು (ಅಕಿಂಚನರಾಗಿಯೂ, ವಿಳಂಬವನ್ನು ಸಹಿಸದವರಾಗಿಯೂ ಇರುವ

ಪರಮಪದಸೋಪಾನಂ

ಅಧಿಕಾರಿಗಳು), ನಂ-ತಿರು-ಮಾಲ್ - ಪ್ರಸಿದ್ಧನಾದ ಶ್ರೀಮನ್ನಾರಾಯಣನ, ಅಡಿ-ಇಷ್ಟೆ = ಅಡಿಗಳೆರಡೇ, ತಿಣ್ -ಶರಣ್ -ಆಹುಂ-ಎನ - ಅಮೋಘವಾದ ಉಪಾಯವಾಗ ಬೇಕೆಂದು, ವರಿತ್ತು : (ಸಾಂಗವಾದ ಆತ್ಮರಕ್ಷಾಭರ ಸಮರ್ಪಣವನ್ನು ಮಾಡಿಯೂ, ಇನಿ = ಇದಾದಮೇಲೆ, ಅವೈ - ಅವುಗಳನ್ನು (ಅನಿಷ್ಟ ನಿವೃತ್ತಿ, ಇಷ್ಟ ಪ್ರಾಪ್ತಿಗಳನ್ನು), ತಾನೇ-ತರುಂ-ಎನ - (ನಮ್ಮನ್ನೂ ಬೇರೆ ಸಹಾಯವನ್ನು ಅಪೇಕ್ಷಿಸಿದೆ) ತಾನಾಗಿಯೇ ಫಲವನ್ನು ಕೊಡುವನೆಂದು (ನಂಬಿ) ಮಾಲ್ : ಆ ಪರಮಾತ್ಮನ, ತಹವು -ಏ - ದಯೆಯನ್ನೇ, ಎಣ್ಣುವರ್ : (ಚಾತಕ ಪಕ್ಷಿಯು ಮೇಘವನ್ನು ಎದುರುನೋಡುವಂತೆ) . ಎದುರುನೋಡುತ್ತಿರುವರು, (ಇದು ಪ್ರಸಾದ ಪರ್ವದ ವಿಭಾಗವೆಂದರಿಯಬೇಕು.

गर्भाविर्भूयदुःस्वाद्यपसृतिनिरता मुक्तिसक्ताः प्रवृत्ताः । अच्छेद्ये भक्तियोगे तदनु च चिरसाध्येऽक्षमा स्तं विहाय ॥ श्रीमन्नारायणस्यैव हि चरणयुगं ये शरण्यं प्रपन्नाः । सप्रीत सर्वदायी स्वयमिति करुणां संप्रतीक्ष्यासतेऽत्र ॥ ಮೂಲ : ಮುನ್‌ಯವಿನೈತ್ತಿರಳಿಲ್‌ಮುತ್ತದ ಮತ್ತುಳ್ಳಮುದಲರಿ’ಮುಳ್ಳತಕೂತಿಲ್, ತನ್‌ಯ್ಯತ್ತಿರುವರುಳಾಲಿಶೈವು ಪಾರ್ಚ್, ತಳಲ್‌ಶೇ‌ ನತೂಲಮೆನತ್ತಾನೇತೀರ್ತ್, ಪಿನ್‌ಯ್ಯುವಿನೈಯಿಲ್‌ ನಿನೈವೊನಾದೊನ್ನುಂ ಪಿಳ್ಳೆಪೊರುತ್ತುವೇರುಳದು ವಿರಹಾ ಮಾತ್ತುಂ ಎನ್‌ಯ್ಯತಾಮರೈಕ್ಕಣ್‌ಪೆರುಮಾನೆಣ್ಣಂ ಎಣ್ಣಾದಾರೆಟ್ಟಿರಂಡುಮಣ್ಣಾದಾರೇ,

१०

॥ ಅರ್ಥ :- ಮುನ್ -ಹಿಂದೆ, ಶಬ್ದ - ಮಾಡಿದ, ವಿದ್ಯೆ = ಪಾಪಗಳ, ತಿರಳಿಲ್ = ಸಮೂಹದಲ್ಲಿ ಮುಳ್ಳತ್ತು : ಫಲೋನ್ಮುಖವಾಗಿರುವ, ಅದ್ -ಅನ್ನಿ ಪ್ರಾರಬ್ಧಕರ್ಮವನ್ನು ಹೊರತು, ಮತ್ತುಳ್ಳಂ = ಉಳಿದುದನ್ನು (ಪಾರಬೇತರವಾದ ಸತ್ವಪಾಪವನ್ನೂ ಮುದಲ್ : ಉಪಾಯ ಪ್ರಾರಂಭದ ಕ್ಷಣದಲ್ಲಿಯೇ, (ಉಭಯಾದಿಕಾರಿಗಳಿಗೂ) ಅರಿನ್ಸ್ - ನಾಶಮಾಡಿ, (ಸಹಿಸಿ) (ಇನ್ನುಮುಂದೆ ಸ್ವತಂತ್ರ ಪ್ರಪನ್ನವನ್ನು ಕುರಿತು ಹೇಳಲಾಗುವುದು) ಮುಳ್ಳತ್ತ-ಕೂಲ್ = ಪ್ರಾರಬ್ಧವಾದುದರಲ್ಲೂ ಕೆಲವು ಅಂಶಗಳನ್ನು, ಇಶ್ಯವು : (ಪ್ರಪನ್ನನ ಆರ್ತಿಯ) ತಾರತಮ್ಯವನ್ನು, ಪಾರ್ತು

+268

ಪರಮಪದಸೋಪಾನಂ

ನೋಡಿ, (ಅದಕ್ಕೆ ಸರಿಹೋಗುವಂತೆ ತನ್ = ನನ್ನ (ಭಗವಂತನ ಶಯ್ಯ = ಋಜುವಾದ, ತಿರು-ಅರುನಾಳ್ : ಶ್ರೀ ಕೃಪೆಯಿಂದ, ತಳಲ್ = ಬೆಂಕಿಯು, ಶೇರ್‌ನ್ದ = ಸೇರಿದ, ತೂಲಂ -ಎನ = ಹತ್ತಿಯರಾಶಿಯಂತೆ, ತಾನೇ : ತಾನಾಗಿಯೇ, ತೀರ್ - ನಾಶಮಾಡಿ, ರ್ಪಿ : (ಉಪಾಯವನ್ನಾಚರಿಸಿದ) ಅನಂತ ಕಾಲದಲ್ಲಿ ಶೆಯ್ಯುಂ = ಮಾಡುವ, ಏನೈಯಿಲ್ = ಪಾಪದಲ್ಲಿ, ನಿನೈವು-ತಿಳಿದು (ಜ್ಞಾನಪೂರ್ವಕವಾಗಿ) ಒನ್ನಾದ = ಮಾಡದ, ಒನ್ನುಂ-ಪಿಳ್ಳೆ = (ಅಜ್ಞಾನದಿಂದ ಮಾಡಿದ) ಪಾಪವನ್ನು, ಪೊರುತ್ತು: (ಕ್ಷಮಿಸಿ) ನಾಶಮಾಡಿ, (ಉಪಾಯ ಪರಿಗ್ರಹಕಾಲದಲ್ಲೇ ಸಂಬಂಧಿಸಿದದಂತೆ ಸಂಕಲ್ಪಿಸಿ) ವೇರ್ - ಉಳದ್ - ಬೇರೆ ಉಳಿದಿರುವ ಪಾಪವನ್ನು, (ಉತ್ತರಾಘದಲ್ಲಿ ಜ್ಞಾನಪೂರ್ವಕವಾದುದನ್ನು) ವಿರಹಾಲ್ : (ಚತುರತೆಯಿಂದ ಮತ್ತೆ ಪ್ರಾಯಶ್ಚಿತ ಪ್ರಪತ್ನಿ ಅನುತಾಪ ಮೊದಲಾದ ಲಘಪಾಯದಿಂದ, ಮಾತ್ತುಂ = ನಿವಾರಿಸುವ, (ಕ್ರೋಢೀಕರಿಸುವ) ಎನ್ -ನನ್ನ, ಶಯ್ಯ = ಕೆಂಪಾದ, ತಾಮರೈ - ತಾವರೆಯಂತೆ, ಕರ್ಣ್ಣ = ಕಣ್ಣುಗಳುಳ್ಳ, ಪೆರುಮಾನ್ : ಪರಮಾತ್ಮನ, ಎಣ್ಣಂ : (ಸಂಕಲ್ಪವನ್ನು) ಜೀವೋಜೀವನ ಚಿಂತನೆಯನ್ನು, ಎಣ್ಣಾದಾ‌ ಪರಾಮರ್ಶಿಸದವರು, ಎಟ್ಸ್-ಇರಂಡುಂ = (8+2= 10) ಹತ್ತು ಎನ್ನಲೂ ತಿಳಿಯದ (ಪಶುಪ್ರಾಯ) ಪಾಮರರೇ ಹೌದಲ್ಲವೆ ! (ಅಥವಾ : 8 ಅಷ್ಟಾಕ್ಷರಗಳನ್ನೂ, 2 = ದ್ವಯವನ್ನೂ, ಅವುಗಳ ತತ್ವಾರ್ಥವನ್ನೂ ತಿಳಿಯದವರಲ್ಲವೆ ! ಎಂದು ಭಾವ). प्रारब्धे पापसङ्के फलमुखदुरितं चान्तरान्यद्यदंहः । प्रारब्धात् पूर्वपापात् प्रथममखिलमप्युज्जिहायाथ तत्र ॥ प्रारब्धांशेऽषि किंचित् विहितभरनरातिंप्रकारं विमृश्यै - । तत्साम्यात्मानुकम्पात इह दहनयुक्तूलवत् संप्रदग्ध्य ॥ त्यक्त्वैवं चोत्तराघे मतिकृतमथ विश्लिष्टमज्ञानपूर्वम् । कर्तुं संकल्प्य चांशं मतिकृतमितरं चानुतापादिनाऽत्र । । क्रोडीकृत्याभिगोप्तु स्त्वरुणितकमलाक्षस्य संकल्परीतिम् । येवा सम्यङ् न जानन्त्यथ च पशव एवाष्ट च द्वौ च ते हि ॥ ಮೂಲ : ಉರೈಯಿಟ್ಟವಾಳೆನ ವೂನುಳುರೈಹಿನಯೋಗಿಹಳ್ಳಿ, ನರುಮಟ್ಟೆಳಿಲುತ್ತ ನತ್ತುಳವೇಂದಿಯನಾಯಕನಾರ್, ನಿರೈಮಟ್ಟಲಾದ ನೆಡುಂಪಯನ್‌ಕಾಟ್ಟ ನಿನೈತ್ತುಡಲ~ ಚಿರೈವೆಟಿವಿಟ್ಸ್ವಳಿಪ್ಪಡುತ್ತುಂವಶೆಯಿಡುಮೇ ॥ ११ १ 12 ಪರಮಪದಸೋಪಾನಂ

269 ಅರ್ಥ :- ಉರೈ-ಇಟ್ಟ-ವಾಳ್ -ಎನ = ಒರೆಯಲ್ಲಿಟ್ಟಿರುವ ಕತ್ತಿಯಂತೆ, (ಒಳಗಡೆ ನಿರ್ಮಲವಾಗಿದ್ದು, ಹೊರಗಡೆ ಕೊಳೆಯಾದ ಮೈಯಿಂದ ಮುಚ್ಚಲ್ಪಟ್ಟಿರುವಂತೆ) ಊನುಳ್ - ಮಾಂಸಾದಿ ಮಯವಾದ ಶರೀರದಲ್ಲಿ ಉರೈಹಿನ : ವಾಸಮಾಡುವ, ಯೋಗಿಹಳ್ಳಿ : ಯೋಗಿಗಳನ್ನು, (ಅಷ್ಟಾಂಗಯೋಗಯುಕ್ತರಾದ ಭಕ್ತರನ್ನೂ, ಪ್ರಪನ್ನರನ್ನೂ) ನರು = ಪರಿಮಳವೂ, ಮಟ್ಸ್: ಮಧುರಸವೂ, ಎಳಿಲ್ = ಪ್ರಕಾಶವೂ. ಉತ್ತ= ಪೂರ್ಣವಾಗಿರುವ, (‘ನರುಮಳ್ಕೊಳಿವತ್ತ’ ಎಂದೂ ಪಾಠವುಂಟು, ಆಗ ಪರಿಮಳವೂ ಮಧುವೂ ಎಡಬಿಡದಿರುವ ಎಂದರ್ಥ), ನಲ್ ತುಳವ್ : ಅತ್ಯುತ್ತಮವಾದ ತುಲಸಿಯ ಮಾಲೆಯನ್ನು, ಏಂದಿಯ = ಧರಿಸಿರುವ, ನಾಯಕನಾರ್ : ಸಶ್ವೇಶ್ವರನಾದ ಶ್ರೀಮನ್ನಾರಾಯಣನು, ನಿರೈ = ಪರಿಪೂರ್ಣವಾದ, ಮರ್ಟ್ಸ್ ಅವಧಿ, ಇಲಾದ - ಇಲ್ಲದ, ನೆಡುಂ = ಸಂಪೂರ್ಣವಾದ, ಪಯನ್ = ಫಲವನ್ನು, (ನಿರವಧಿಕಾತಿಶಯ ಪರಿಪೂರ್ಣ ಬ್ರಹ್ಮಾನುಭವ ಕೈಂಕರ್ಯವನ್ನು), ಕಾಟ್ಟ: (ಪರಮಪದಕ್ಕೆ ಕರೆದುಕೊಂಡು, ಅಲ್ಲಿಪೂರ್ಣ ಬ್ರಹ್ಮಾನಂದವನ್ನು ಅನುಭವಿಸುವಂತೆ ಮಾಡಲು, ನಿನ್ನೆತ್ : ಸಂಕಲ್ಪಿಸಿ, ಉಡಲ : ಸ್ಕೂಲಶರೀರವೆಂಬ, ಶಿ = ಸೆರೆಯನ್ನು, ವೆಟ್ಟಿ-ವಿಟ್ಸ್ - ಸಂಪೂರ್ಣವಾಗಿ ನಾಶಮಾಡಿ, (ಪ್ರಾಕೃತಿಕಶರೀರದಿಂದ ಜೀವವನ್ನು ಹೊರಹೊರಡಿಸಿ) ವಳಿ-ಪಡುತ್ತ = ಅರ್ಚಿರಾದಿ ಮಾರ್ಗದಲ್ಲಿ ಹೋಗುವ, ವಹೈ = ರೀತಿಯನ್ನು, ಶೆಯ್ದಿಡುಮೇ - ಮಾಡಿ ಕರುಣಿಸುವನಲ್ಲವೆ !

ಉತ್ಕಾಂತಿಪರ್ವವಿದು. ಪ್ರಪನ್ನರನ್ನು ಸರ್ವಶರಣ್ಯನು ಪರಮಪದಕ್ಕೆ ಕರೆದುಕೊಳ್ಳುವನು. ಈ ಪ್ರಾಕೃತಶರೀರದಿಂದ ಬಿಡುಗಡೆಮಾಡಿ, ಅರ್ಚಿರಾದಿ ಮಾರ್ಗವಾಗಿ ಬಂದು ಸೇರುವಂತೆ ಪರಮ ದಯೆಯಿಂದ ಮಾಡುವನು. कोशावास्यसिवञ्च मांसमयकायान्तर्वसद्योगिनः । कर्तुं पूर्णनिरन्तसद्गुणपरब्रह्मानुभूत्यात्मनः ॥ सौरभ्यामृतकान्तिपूर्णतुलसीमालोऽखिलाधीश्वरः । कारेवात्तवपु विनाश्य कुरुते रीतिं सुमार्गान्विताम् ॥. ಮೂಲ : ಮುದ್ರಕರುವಿರೈಂದುಂಮನಟ್ಟ ಮುಕ್ಕಿಯಮಾಂ ಮರುತ್ತಿಲವೈಶೇರ್‌ದೆಲ್ಲಾಂ, ನನ್ಗುಣರುಮುಯಿರಿಲ್ ರ್ಶೀಂಬೂತ ನಣ್ಣುವಿತ್‌ರ್ತಾತನ್ಸಾಲ್‌ವೈಕ್ಕುಂನಾತನ್, ಒನ್ನದುಡನ್‌ವಾಶಲಿರಂಡುಡೈತ್ತಾಯುಳ್ಳ ಒರುಕೋಟಿತುಯರ್‌ವಿಳ್ಳೆಕ್ಕು ಮುಡಂಬಾಯೊನು, १२ A 270 ಪರಮಪದಸೋಪಾನಂ ವನ್‌ರೈಯಿನ್‌ತಲೈವಾಶಲ್‌ ರನ್ನುನಮ್ಮೆ ವಾನೇರವಳಿಪ್ಪಡುತ್ತಮನಮುತ್ತಾನೇ ॥

13

ಅರ್ಥ :- ಮುನ್ = ಮೊದಲು, ಈರ್ -ಐಂದ್ -ಕರುವಿ-ಉಂ = (275) ಹತ್ತು ಇಂದ್ರಿಯಗಳನ್ನೂ ಕೂಡ, ಮನತ್ತಿಲ್ = ಮನಸ್ಸಿನಲ್ಲಿ ಕೊಟ್ಟು ಮನಸ್ಸಿನೊಂದಿಗೆ ಸೇರಿಸಿ, ಅವೈ : ಮನಸ್ಸಿನೊಡನೆ ಕೂಡಿದ ಆ ಇಂದ್ರಿಯಗಳನ್ನು, ಮುಕ್ಕಿಯಂ-ಆಂ-ಮರುತ್ತಿಲ್ ಮುಖ್ಯವಾದ ಪ್ರಾಣವಾಯುವಿನಲ್ಲಿ ಶೇರು = ಸೇರಿಸಿ, ಅದೆಲ್ಲಾಂ : ಅವುಗಳೆಲ್ಲವನ್ನೂ, ನಲ್ -ಗುಣರುಂ-ಉಯಿರಿಲ್ = ಒಳ್ಳೆಯ ಜ್ಞಾನವುಳ್ಳ ಆತ್ಮನಲ್ಲಿ ಶೇರ್ತು = ಸೇರಿಸಿ (ಆ ಆತ್ಮನನ್ನು), ಐಂ-ಬೂತ : ಐದುಸೂಕ್ಷ್ಮಭೂತಗಳೊಂದಿಗೆ, ನಣ್ಣುವಿತ್ = ಸೇರುವಂತೆಮಾಡಿ, ರ್ತಾ : ತಾನು, ತನ್-ಪಾಲ್. ವೈಕ್ಕುಂ - ತನ್ನವಶದಲ್ಲೇ ಇರಿಸಿಕೊಳ್ಳುವ, ನಾತನ್ - ಸ್ವಾಮಿಯಾದ ಪರಮಾತ್ಮನು, ಒನ್ಸದ್ -ಉಡನ್ ಇರಂಡ್ (9+2 = ॥) ವಾಶಲ್ -ಉಡೈತ್ತಾಯ್ - (ಮೂಗುಹೊಳ್ಳೆ 2, ಕಿವಿ 2, ಕಣ್ಣು2, ಬಾಯಿ 1, ಮೂತ್ರದ್ವಾರ - 1, ಪಾಯು 1, ನಾಭಿ 1, ಬ್ರಹ್ಮನಾಡಿ 1 = ॥) ಪ್ರಾಣ ಹೋಗುವ ಹನ್ನೊಂದು ಬಾಗಿಲುಗಳುಳ್ಳದ್ದಾಗಿ, ಉಳ್ಳ = ಒಳಗೆ, ಒರು-ಕೋಟಿ-ತುಯರ್ : ಲೆಕ್ಕವಿಲ್ಲದಷ್ಟು ದುಃಖಗಳನ್ನು, (ಜೀವನಿಗೆ) ಎಳ್ಳಕ್ಕುಂ = ಹೆಚ್ಚಿಸುವಂತಹ, ಉಡಂಬಾಯ್ = ಶರೀರವಾಗಿರುವ, ಒನ್ನುಂ : (ಯಾವುದಾದರೊಂದು) ಒಂದು, ವನ್ : ಬಲವಾದ, ಶಿರೈಯಿನ್ : ಸೆರೆಮನೆಯ, (ಶರೀರದ) ತಲೈವಾಶಲ್ : ತಲೆಬಾಗಿಲನ್ನು, (ಬ್ರಹ್ಮರಂಧ್ರವನ್ನು) ತಿರಂದ್ : ತೆರಿಸಿಕೊಟ್ಟು, ನಮ್ಮ = (ಪ್ರಪನ್ನರಾದ) ನಮ್ಮನ್ನು, ವಾನ್ -ಏರ = ಪರಮಪದಕ್ಕೆ ಸೇರಿಸುವ, ವಳಿ-ಪಡುತ್ತ (ಅರ್ಚಿರಾದಿ) ಮಾರ್ಗದಲ್ಲಿ ಹೋಗಗೊಳಿಸುವ, ಮನಂ-ಉತ್ತಾನ್ - ಮನಸ್ಸುಳ್ಳವನಾದನು. (ಸಂಕಲ್ಪಿಸುವನು).

अक्षाण्यादौ द्विपञ्च स्वमनसि कलयन् प्राणवायौ तत स्ता- । न्येकीकुर्वंश्च जीवे सुगुणवति तत स्सूक्ष्मभूतै स्सहाथो ॥ सर्वाण्येतानि तानि स्वयमवितुमधिष्ठाय हार्दः प्रभुस्सन् ॥ द्वारै रभ्यन्तरे च द्वययुतनवभिः वर्ष्मणो निर्मितस्य ॥ १ दृढबन्धनस्य मूर्धद्वारां चोद्घाटयन्नस्मान् । परमपदवर्त्म नेतुं संकल्पितवान् हि करुणालुः ॥ ಮೂಲ : ತೆರುಳಾರ್ ಪಿರಮಪುರರೈಶೇರ್‌ಡವಂದವರ್ ತಾಂ, ಅರುಳಾಲ್ ಪಿರಮಪುರಚ್ಚಿರೈತೀರ್‌ನಪಿನ್‌ವನೈದಿರ್‌ಂಡು, १३ ಪರಮಪದಸೋಪಾನಂ

271

ಅರುಳಾಲಮರ‌ ನಡುವಿಮಾಯ್ಕೆ ಕಡಂದದರ್‌ ಪಿನ್, ಶುರುಳಾ‌ ಬವನರಕಚ್ಚುಳಲಾನ್ ತನ್‌ಳ್ ಚ್ಚಿಯಿಲೇ ॥ 14 ಅರ್ಥ :- ತೆರುಳ್ -ಆರ್ = ಜ್ಞಾನ ಪರಿಪೂರ್ಣನಾದ, ಪಿರಮಪುರ (ಬ್ರಹ್ಮಪುರವೆಂಬ ಹೆಸರಿನ) ಜೀವಶರೀರಕ್ಕೆ, ಇರೈ ಸ್ವಾಮಿಯಾದ, (ಅಂತರ್ಯಾಮಿಯಾಗಿರುವ ಪರಮಾತ್ಮನನ್ನು) ಶೇರ್‌ಡ - ಸೇರಿ ಹೊರಟ, ವಂದವ‌ತಾಂ = (ಶ್ರೀ ವೈಕುಂಠಕ್ಕೆ ಪ್ರಯಾಣ ಹೊರಟು) ಬಂದವರು, ಅರುಳಾಲ್ = (ಹಾರ್ದಸ್ವಾಮಿಯ) ಕೃಪೆಯಿಂದ, ಪಿರಮ-ಪುರ-ಚಿರೈ - ಬ್ರಹ್ಮಪುರವೆಂದು ಹೆಸರಾಂತ ಸ್ಕೂಲಶರೀರವೆಂಬ ಬಂಧವು, ತೀರ್‌ಸ್ಥ-ಪಿನ್ = : ನೀಗಿಹೋದಮೇಲೆ, (ಹಾರ್ದಾನುಗ್ರಹಲಬ್ದ ಮಧ್ಯದಮನಿದ್ವಾರಾತ್ ಬಹಿರ್ನಿಗ್ರತಃ’’ ಎಂಬುದನ್ನು ಸ್ಮರಿಸಬೇಕು) ಅಮರರ್ - (ಅರ್ಚಿರಾದಿಗಳು) ಆತಿವಾಹಿಕಪುರುಷರಾದ ದೇವತೆಗಳು, ಅರುಳಾಲ್ = ಅತ್ಯಂತ ಆದರದಿಂದ, ನಡ: ತಮ್ಮತಮ್ಮ ಎಲ್ಲೆಯವರೆಗೆ ಕರೆದುಕೊಂಡು ಹೋಗಲು, ಇ-ಮಾಯ್ಯ = ಈ ಪ್ರಕೃತಿಮಂಡಲವನ್ನು, ಕಡಂದ-ತನ್ -ಪಿನ್ : (ಅರ್ಚಿರಾದಿಮಾರ್ಗದಿಂದ) ಪರಮಪದಕ್ಕೆ ಹೋದವರು ಮತ್ತೆ ಬವ-ನರಕ-ಶುಳಲ್ -ಆಲ್ -ತನ್ -ಶೂಳ್ ಚ್ಚಿಯಿಲ್ = ಸಂಸಾರ ನರಕವೆಂಬ ಸುಳಿಗಳಿರುವ ನದಿಯ ಸುಳಿಯಲ್ಲಿ ಶುರುಲಾರ್ - ಸಿಕ್ಕಿ ನರಳುವುದಿಲ್ಲ. (ಅರ್ಚಿರಾದಿ ಮಾರ್ಗದಿಂದ ಪರಮಪದ ಸೇರಿದವರು ತಿರುಗಿಯೂ ಈ ಭವಸಾಗರದಲ್ಲಿ ಸಿಕ್ಕಿಕೊಳ್ಳುವಂತೆ ಜನನವನ್ನು ಹೊಂದುವುದಿಲ್ಲ) (ಇದು ಅರ್ಚಿರಾದಿ ಪರ್ವದ ಪದ್ಯ. सार्धे प्रह्मपुरेशजीववपुषा सर्वज्ञहार्देन ये बन्धात् ब्रह्मपुरात् तदीयकृपया प्रस्थापिता देहिनः । एतां सादरं अर्चिरादिविबुधै र्मायां समुत्तारिता: मुक्तिस्था न पुनर्भवाघनिलयावर्तापगावर्तिनः । । eme ಮೂಲ : ವಿಳಿಯಲ್ಲಾಲ್ ವೇಲಿ ವಿಣ್ಣಮಾದರ್, ಮೇನಿಯಲ್ಲಾಲ್ ವಿಲ್ಲಿ ಮೀನವ‌ ಮೊಳಿಯಲ್ಲಾಲಮುದಿಯೆನ್ನುಮುನ್ನಾಳ್, ಮುತ್ತಿವಳಿಮುನಿನ್ದಡೆಂದಮೋಹಂತೀರ್ ನ್ಹೋಂ, ಕಳಿಯಲ್ಲಾಡಲಿ ಯೆನ್ಯಾರ್‌ಪೋಲ, ಕಾರಿಯಮೇಕಾರಣವೆನ್ನು ರೈಪ್ಪಾರ್‌ಕಾಟ್ಟುಂ, … 272 ! ಪರಮಪದಸೋಪಾನಂ ವಳಿಯಲ್ಲಾವಳಿಯೆಲ್ಲಾಂ ಕಡನ್ನೋಂ ಮತ್ತು, ವಾನೇರುಂವಳಿಕಂಡೋಂ ಮಹಿಳ್ ಜ್ಯೋಮೇ ॥

15 ಅರ್ಥ :- ಮುನ್ನಾಳ್ = ಹಿಂದೆಲ್ಲಾ (ನಾವು), ಮುತ್ತಿ-ವಳಿ - ಮುಕ್ತಿಯ ದಾರಿಯನ್ನು, ಮುನಿಂದ್ : ಅನಾದರಿಸಿ, ಮೀನವರ್ * ಮೀನಕೇತನವಾದ ಮನ್ಮಥನಿಗೆ, ವಿಣ್ಣಿನ್ -ಮಾದ್ : ದೇವಲೋಕ ಸ್ತ್ರೀಯರ, (ಅಂದರೆ ಅಷ್ಟು ಚೆಲುವೆಯರ), ವಿಳಿ-ಅಲ್ಲಾಲ್ = ಕಡೆಗಣೋಟವನ್ನು ಬಿಟ್ಟರೆ, ವೇಲ್ -ಇ - (ಬೇರೆ) ಆಯುಧವೇ ಇಲ್ಲ. ಮೇನಿ-ಅಲ್ಲಾಲ್ - ಅವರ ಮಧುರವಾದ ಮಾತುಗಳು ಹೊರತು, ಅಮುದ್-ಇ = ಬೇರೆ ಅಮೃತವನ್ನು ಸುರಿಸುವ ವಸ್ತು ಇಲ್ಲ (ಇವೆಲ್ಲಾ ಮೋಕ್ಷಕ್ಕಿಂತ ಹೆಚ್ಚಿನವು) ಎನ್ = ಎಂದುಕೊಂಡು, ಅಡ್ಕಂದ ಮೋಹಂ : ಬಹಳ ಹಿಂದಿನಿಂದ ಹೊಂದಿದ್ದ ವ್ಯಾಮೋಹವನ್ನು, ತೀರ್‌ನ್ಹೋಂ : ಈಗತಾನೇ ಬಿಟ್ಟವರಾದೆವು. (ಅಷ್ಟೇ ಅಲ್ಲದೆ) ಕಳಿ-ಅಲ್ಲಾಲ್ (ಸಮುದ್ರದ ಏಕದೇಶವಾದ) ನದೀಮುಖದ ಹೊರತು, ಕಡಲ್ ಸಮುದ್ರವೆಂಬುದು ಬೇರೊಂದಿಲ್ಲ ಎನ್ಸಾರ್ -ಪೋಲ - ಎಂದು ಹೇಳುವವರಂತೆ, ಕಾರಿಯಮೇ = ಭಗವಂತನ ಕಾರವಾದ ಈ ಜಗತ್ತೇ, ಕಾರಣಂ = ಕಾರಣನಾದ ಪರಬ್ರಹ್ಮ (ಜಗತ್ತು ಹೊರತು ಬೇರೆ ದೇವರೆಂಬ ವಸ್ತುವಿಲ್ಲ), ಎನ್ನು : ಎಂದು, ಉರೈಪ್ಪಾ‌ (ಪ್ರಮಾಣವಿರುದ್ಧವಾಗಿ ಹೇಳುವ ಈಶ್ವರಾಪಲಾಪಿಗಳು), ಕಾಟ್ಟುಂ = (ತಮಗೆ ತೋರಿದಂತೆ) ತೋರಿಸುವ, ವಳಿ-ಅಲ್ಲಾ = ದಾರಿಯಲ್ಲದ, ವಳಿ-ಎಲ್ಲಾಂ ಮಾರ್ಗಗಳನ್ನೆಲ್ಲಾ ಕಡಂದೋಂ : ಬಿಟ್ಟುದಾಟಿಬಂದೆವು, (ಅಲ್ಲದೆ) ಮತ್ತ= ಅವಕ್ಕಿಂತ ಬೇರೆಯದಾದ, ವಾನ್ -ಏರುಂ-ವಳಿ : (ಶ್ರೀ ವೈಕುಂಠಕ್ಕೆ ಹೋಗುವ) ಅರ್ಚಿರಾದಿ ಮಾರ್ಗವನ್ನು, ಕಂಡೋಂ ನೋಡಿದವರಾದೆವು, ಅಷ್ಟೇ ಅಲ್ಲದೆ) ಮಹಿಳನ್-ಇಟ್ಟೋಂ : (ಆತಿವಾಹಿಕರಿಂದ ಸತ್ಕರಿಸಲ್ಪಟ್ಟು (ಹಿಂದೆ ಪಟ್ಟ ಸಂಸಾರ ದುಃಖವೆಲ್ಲಾ ತೀರಿ ಅದಕ್ಕೆ ಬದಲಾಗಿ ಅತ್ಯಾನಂದ ಪಟ್ಟವರಾದೆವು.

मोक्षं चोपेक्ष्य पूर्वं वय मिह विबुधस्त्रीकटाक्षं विनान्यत् शस्त्रं नो मीनकेतो धनुरपि न विना तत्तनूभिः परं स्यात् । पीयूषं देवयोषिन्मधुरवचनतो नान्यदित्येव मत्या व्यामोहं प्राप्तवन्तस्तमखिल मसहं प्राजहामातिशुद्धाः ॥ संभेदो जलधि र्न चापर इतीवेह ब्रुवाणै र्जनैः कार्यं चैव हि कारणंत्विति वददूभिर्दर्शितानध्वनः । सर्वानर्हपथोऽपि तेरिम वयं किंच प्रशस्तं पदं * १ गन्तुं सत्पथ मीक्षिषीमहि परं चानान्दिनोऽभूम च ॥ १५ ಪರಮಪದಸೋಪಾನಂ 273 ಮೂಲ : ವನ್‌ ಪತ್ತುರ್ಡಮಯಲ್‌ಪೊಣ್ಣು ಮತ್ತೋರ್‌ಗತಿಯಾಲಿನನಾಳ್ ಎನ್‌ಪೆರುಸ್ಥಾನಮು ಮೆತನೈಪೋದುಳದಾಂ, ತುನ್‌ಬತ್ತನ್‌ುಣಿವಾಲ್ ತುಯರ್‌ರುಂ ತುಳಾಯ್‌ಮುಡಿಯಾನ್, ಇನ್‌ಬುತ್ತನಲ್‌ವಳಿಯಾಲ್ ಏರುನ‌ ಪದಮೆಣ್ಣುವಮೇ ॥ ಪೆರುತಾನಮಂ

16 ಅರ್ಥ :- ವನ್ -ಪತ್-ಉಡನ್ - ಪ್ರಬಲವಾದ ಆಯಾಕರ್ಮವಾಸನೆಯೊಂದಿಗೆ, ಮಯಲ್-ಸಂಸಾರ ಭ್ರಮಣದಲ್ಲೇ, ಪೂಂಡು : ಬಿಡದೆ ಹೊಂದಿಕೊಂಡು, ಮತ್-ಓ‌-ಗತಿಯಾಲ್ = ಬೇರೆ ಉಪಾಯದಿಂದ, ಇನ-ನಾಳ್ : ಇಷ್ಟು ಕಾಲವೂ, ಎನ್-ಪೆದ್ : ಯಾವ ಪದವಿಯನ್ನು ಪಡೆಯಲಾಯಿತು ? (ಯಾವುದೂ ಇಲ್ಲ) ಹಿರಿದಾದ ಸ್ಥಾನವೂ (ಬ್ರಹ್ಮಾದಿ ಸ್ಥಾನವೂ) ಎತ್ತನೈ-ಪೋದು-ಉಳದಾಂ = ಅದೆಷ್ಟು ಕಾಲ ಸ್ಥಿರವಾಗಿರಬಲ್ಲುದು ? (ಇದೆಲ್ಲವನ್ನೂ ಬಿಟ್ಟು ಈಗ) ತುನ್ಸ್ -ಅತ್ತ : ದುಃಖ ಸಂಬಂಧವಿಲ್ಲದ, ತನ್ -ತುಣಿವಾಲ್ : ತನ್ನನ್ನೇ (ಪರಮಾತ್ಮನನ್ನೇ) ಉಪಯೋಪೇಯವಾಗಿ ಆಶ್ರಯಿಸುವಂತಹ ವಿಶ್ವಾಸದಿಂದ (ಭಕ್ತಿ ಪ್ರಪತ್ತಿ ವಿಶೇಷ ಜ್ಞಾನದಿಂದ) ತುಯರ್-ತೀರುಂ : ದುಃಖವನ್ನು ವಿನಾಶ ಮಾಡುವ, ತುಳಾಯ್ ಮುಡಿಯಾನ್ = ತುಲಸೀ ಮಾಲೆಯನ್ನು ತಲೆಯಲ್ಲಿ ಧರಿಸಿ ಶ್ರೀಕೃಷ್ಣನ, ಇನ್ಸ್ -ಉತ್ತ = ಪರಮ ಭೋಗ್ಯವಾದ, ನಲ್ -ವಳಿಯಾಲ್ = ಒಳ್ಳೆಯ ಮಾರ್ಗದಿಂದ, (ಅರ್ಚಿರಾದಿ ಮಾರ್ಗದಿಂದ ಏಡು = ಹೋಗಿ ಸೇರಬಹುದಾಡ, ನಲ್ -ಪದಂ = ಅತಿ ವಿಲಕ್ಷಣವಾದ ಪರಮ ಪದವನ್ನು ಎಣ್ಣುವಮೇ - ನೆನೆಯುವವರಾದೆವು ಅಲ್ಲವೇ ? (ಇದು ಪರಮಪದಾರೋಹಣದ ಪರ್ವವು)

तत्तत्संस्कृतिभिर्दृढै र्भवरतै रन्यै रुपायैः पदं
किं वाऽद्यावधि साधितं ? ह्यजपमदाद्येतत् कियत्कालिकम् । निर्दुःखात्मभरार्पणेन तुलसीमौले: अघोन्मूलिनः भोग्येनोत्तमवर्त्मनाप्यमतुलं ध्यायेम विष्णोः पदम् ॥
ಮೂಲ : ಪಣೆಯಿರುವಿನೈಯಾತಿಲ್ ಪಡಿದ್ದು ಪಾರಂ,
ಕಾಣಾದೇಯೊಳುಹಿಯನಾಂ ಬಾಗಿಯತ್ತಾಲ್,
ವಣ್ಣಮರುಮಲರ್‌ಮಾದ‌ ಮಿನ್ನಾಯ್‌ಮನ್ನ, ವೈಶಯನಿಮಣಿವಿಲ್ಲಾಯ್ ವಿಳಂಗವಾನ್‌ಶೇರ್,
१६

274 ಪರಮಪದಸೋಪಾನಂ ಕೊಣ್ಣೂರುಳಮಲೈಪೊಳಿಯವನ್ದದೊಪ್ಪಾಂ, ಕುಳಿರ್‌ನ್ನುತೆಳಿನಮುದಾಯ ವಿರಶೈಯಾ, ಕಣಣುಹಿಕ್ಕರುತ್ತಾಲೇ ಕಡದ್ದುಮೀಳಾ, ಕರೈಕ ಸ್ಟೋರ್ ಗತಿಯೆಲ್ಲಾಂಗತಿತಿದ್ದೋಮೇ ॥

17

ಅರ್ಥ:- ಪಣ್ -ಇರು-ವಿನೈ-ಆಲ್ - ಅನಾದಿಯಾದ ಪುಣ್ಯ ಪಾಪ ರೂಪವಾದ ಪ್ರವಾಹದಲ್ಲಿ ಪಡಿದ್ದು = ಬಿದ್ದು ಪಾರಂ-ಕಾಣಾದೇ = ದಡವನ್ನು ಕಾಣದೇ, ಒಳುಹಿಯ = ಕೊಚ್ಚಿಕೊಂಡು ಹೋಗುತ್ತಿರುವ, ನಾಂ = ನಾವು, ಬಾಗಿಯತ್ತಾಳ್ = ಅದೃಷ್ಟವಶದಿಂದ, (ದೇವರ ದಯೆಯಿಂದ) ವಂಡ್ -ಅಮರು-ಮಲರ್-ಮಾದರ್ : ಭ್ರಮರಗಳು ರಸಪಾನಕ್ಕಾಗಿ ಮುತ್ತಿಕೊಂಡಿರುವ ತಾವರೆಯಲ್ಲಿ ವಾಸಮಾಡುವ ಮಹಾಲಕ್ಷ್ಮಿಯು, ಮಿನ್ಸಾಯ್ -ಮನ್ನ - ಕಾಳ ಮೇಘದ ನಡುವೆ ಸ್ಥಿರವಾಗಿ ಬೆಳಗುತ್ತಿರಲು, ವೈಶಯಂತೀ ವೈಜಯಂತಿಯೆಂಬ ವನಮಾಲೆಯು, ಮಣಿ-ವಿಲ್ -ಆಮ್ = ಮಣಿ ಮಯವಾದ ಇಂದ್ರ ಧನುಸ್ಸಿನಂತೆ, ವಿಳಂಗ = ಬೆಳಗಲು, ವಾನ್ -ಶೇರ್ -ಕೊಂಡಲ್ = ಪರಮಾಕಾಶದಲ್ಲಿರುವ ಶ್ರೀ ಪತಿಯೆಂಬ ನೀಲ ಮೇಘವು, ಅರುಳ್ -ಮಳೆ-ಪೊಳಿಯ : ಕರುಣೆಯೆಂಬ ಮಳೆಯನ್ನು ಸುರಿಸಲು, ವಂದದ್ -ಒಪ್ಪು-ಆ೦ = ಬಂದಿತೋ ಎಂಬಂತಿರುವ, ಕುಳಿರ್ನು (ಸಂಸಾರತಾಪವಾರುವಂತೆ) ಶೀತಳವಾದ, ತೆಳಿನ್ಸ್ = ನಿರ್ಮಲವಾದ, ಅಮುದಾಯ ಅಮೃತರೂಪವಾದ, ವಿರಶೈ-ಆತ್ಸೆ - ವಿರಜಾ ನದಿಯನ್ನು, ಕಣ್ಣು = ನೋಡಿ, ಅಣುಹಿ = ಸಮೀಪಿಸಿ, ಕರುತ್ತಾರೆ - (ಭಗವತ್ಸಂಕಲ್ಪಾಧೀನವಾದ) ತನ್ನ ಸಂಕಲ್ಪದಿಂದ ಕಡಂದು = ದಾಟಿ, ಮೀಳಾ ಕರೈ-ಕಣ್ಣೂರ್ = ಹಿಂತಿರುಗಿ ಬರದಂತಿರುವ ಆಚೆಯ ದಡವನ್ನು ನೋಡುವ ಮುಕ್ತರ, ಗತಿ-ಎಲ್ಲಾಂ = ಮಾರ್ಗ ಸತ್ಕಾರವನ್ನೆಲ್ಲಾ ಗತಿತಿಟ್ಟೋಮೇ ವಿಸ್ತಾರವಾಗಿ ಹೇಳುವಂತೆ ಪಡೆದವು.

स्रोतस्विन्यामनादिद्विविधदुरितरूपापगायां पतित्वा यातेष्वस्मास्वदृष्ट्वा निजनियतिवशात् चञ्चलायां स्थिरायाम् । माध्वीलिण्मानितेन्दीवरसुमविहरन्त्यां तथैवेन्दिरायां राजनृत्यां वैजयन्त्यां मणिमयधनुराकारवत्यां च सत्यम् ॥ आकाशे परमे प्रवर्षति कृपां पाथोमुचीवागतां स्वच्छां तां विरजां विलोक्य शिशिरां श्रीशस्य संकल्पतः । सन्तीर्याऽमृतवाहिनीं त्वपुनरावृत्त्यातपारेक्षिणां मुक्तानां गतिसत्क्रिया श्च विशदीकर्तुं ह्यभूम क्षमाः ॥ १

१७ ಪರಮಪದಸೋಪಾನಂ ಮೂಲ : ಪೂವಳರುಂ ತಿರುಮಾದುಪುಣರ್‌ನ್ದನಂ ಪುಣ್ಣಿಯನಾ‌, ತಾವಳಮಾನತನಿತ್ತಿನಂ ಶೇರ್‌ನ್ನು ತಮರುಡನೇ, 275 ನಾವಳರುಂ ಪೆರುನಾರೈಯೋದಿಯಗೀತಮೆಲ್ಲಾಂ, ಪಾವಳರುಂಪಲ್ಲಾಂಡಿಯುಡನ್‌ಾಡುವಮೇ ॥ 18

ಅರ್ಥ :- ಪೂ -ವಳರು-ತಿರು-ಮಾದು - ಕಮಲದಲ್ಲಿ ಬೆಳೆಯುವ ಶ್ರೀದೇವಿಯು, ಪುಣರ್‌: ಆಲಂಗಿಸಿಕೊಂಡ, ನಂ-ಪುಣ್ಣಿಯನಾರ್ = ನಮ್ಮತಿಳಿಯದ ಸುಕೃತ ವಿಶೇಷಕ್ಕೆ ಮೂಲಕಾರಣಾದ ಶ್ರೀಮನ್ನಾರಾಯಣನಿಗೆ, ತಾವಳಮಾನ-ತನಿ-ತಿವಂ ನಿತ್ಯವಾಸಸ್ಥಾನವಾಗಿಯೂ, ಆಪ್ಯಾಯಮಾನವಾಗಿಯೂ, ಅನುಪಮವಾಗಿಯೂ ಇರುವ ಪರಮಪದವನ್ನು ಶೇರ್‌ನ್ನು - ಸೇರಿ, ತಮ‌ -ಉಡನೇ - ನಿತ್ಯಸೂರಿಗಳೂ, ಮುಕ್ತರೂ ಆದವರೊಂದಿಗೆ, ನಾವಳರುಂ-ಪೆರುಂ-ನಾಲ್ -ಮರೆ - ನಾಲಿಗೆಯಿಂದ ಉಚ್ಚರಿಸಲ್ಪಟ್ಟು ಶ್ಲಾಮ್ಯವಾದ ಉಪನಿಷತ್ತಿನಲ್ಲಿ ಓದಿಯ-ಗೀತಂ-ಎಲ್ಲಾಂ = ಪಠಿಸುವ ಸಾಮಗಾನ ವಿಶೇಷವೆಲ್ಲವನ್ನೂ, ಪಾ-ವಳರುಂ-ತಮಿಳ್ = ಛಂದಸ್ಸಿನಲ್ಲಿ ರಚಿತವಾದ ತಮಿಳಿನ ವೇದದಲ್ಲಿ ಅಧ್ಯಯನ ಮಾಡಲ್ಪಡುವ, ಪಲ್-ಆಂಡ್ -ಇ-ಉಡನ್ - ಪಲ್ಲಾಂಡೆಂದು ಪಾಡುವ ಕೆಲವು ಮಂಗಳಪದ್ಯಗಳೊಂದಿಗೆ, ಪಾಡುವಮ್ - ಕೀರ್ತನೆ ಮಾಡೋಣ, (ಯಥೇಚ್ಛವಾದ ಕೈಂಕರ್ಯ ಸೇವಾವೃತ್ತಿ ವಿಶೇಷವನ್ನು ಮಾಡಲು ಸಮರ್ಥರಾಗಿರುವೆವು.) ಇದು ಪರಿಪೂರ್ಣಾನುಭವಪರ್ವದ ಪದ್ಯ. यस्याश्लिष्टोरसि श्रीरुपचितसुमना स्तस्य नः पुण्यहेतोः । नित्यावासप्रधानं निरुपमतिभोग्यं गता स्सम्मिलन्तः । मुक्तैः र्नित्यै रसज्ञापरिचितनिगमान्तस्थसामानुगानं सर्वं छन्दोनिबद्धं द्रविडकृतिशुभाशासनं कीर्तयाम ॥ ಮೂಲ : ಅಡಲುರಗಮುಂಡುಮಿಳ್ ನವರುಕ್ಕಲ್ಲೋಲ ಅಳುಕ್ಕಡೈನುಕಳುವಿಯ ನಲ್‌ರಳಂಪೋಲ, ಕಡಲೊಳುಕಿಕ್ಕರೈಶೇರ್‌ಕಲಮೇಪೋಲ ಕಾಟ್ಟುಕ್ಕಲನೊಳಿದ್ದಕಳಿರೇಪೋಲ, ಮಡಲ್‌ವರುಂಮಯಲ್‌ಳಿನ್ದ ಮಾದರ್‌ಪೋಲ ವನ್‌ರೈಪೋಯ್ ಮನ್ನರ್‌ ಪದಂ ಪೆತ್ತಾರ್‌ ಪೋಲ, ಉಡನ್ಮುದಲಾವುಯಿರ್ ಮರೈಕ್ಕುಮಾಯ್ಕೆನೀಂಗಿ ಉಯರ್‌ನಪದಮೇರಿಯುಣರ್‌ನೋಮೆ ॥ १८ 19 276

ಪರಮಪದಸೋಪಾನಂ

ಅರ್ಥ :- ಅಡಲ್ -ಉರಗಂ = ಪ್ರಬಲವಾದ ಹಾವಾದ ರಾಹು ಗ್ರಹದಿಂದ, ಉಂಡು ಈ ಗ್ರಸ್ತನಾಗಿ (ನುಂಗಲ್ಪಟ್ಟು) ಉಮಿಳನ : ಮುಕ್ತನಾದ, (ಬಿಡಲ್ಪಟ್ಟ) ಅರುಕ್ಕನ್‌ಪೋಲ : ಅರ್ಕ (ಸೂರ್ಯ) ನಂತೆಯೂ, ಅಳು-ಅಡೈಂಡ್ = (ಮೊದಲು) ಕೊಳೆ ಹಿಡಿದು, ಕಳುವಿಯ - (ಅನಂತರ) ಚೆನ್ನಾಗಿ ತೊಳೆಯಲ್ಪಟ್ಟ, ನಲ್ -ತರಳಂ-ಪೋಲ ಉತ್ತಮವಾದ ಮುತ್ತಿನಂತೆಯೂ, ಕಡಲ್ : ಸಮುದ್ರದಲ್ಲಿ ಒಳುಹಿ : (ಚಂಡಮಾರುತದಿಂದ) ವಿಷಮಸ್ಥಿತಿಯಲ್ಲಿದ್ದು, ಕರೆ-ಶೇರ್‌ನ - ದಡವನ್ನು ಸೇರಿದ, ಕಲಂ-ಏ-ಪೋಲ - ನಾವೆಯಂತೆಯೂ, ಕಾಟ್ಸ್–ಕಲನ್ಸ್ - ಕಾಡುಕಿಚ್ಚಿನಲ್ಲಿ ಸಿಕ್ಕಿಕೊಂಡು, ಒಳಿಂದ : ಬದುಕಿ ಹೊರಕ್ಕೆ ಬಂದ, ಕಳಿರೇ-ಪೋಲ = ಆನೆಯಂತೆಯೂ, ಮಡಲ್-ಕವರುಂ-ಮಯಲ್ -ಕಳಿಂದ = (ನಾಯಕನನ್ನು ಅಗಲಿ ಅವನನ್ನು ವಶಪಡಿಸಿಕೊಳ್ಳಲು ಪಡುವ) ಅವಸ್ಥೆಗೆ ಸಿಲುಕಿ, ನೊಂದು, ನಾಯಕನನ್ನು ಪಡೆದು ಆ ಸ್ಥಿತಿಯನ್ನು ಕಳೆದ, ಮಾದರ್ -ಪೋಲ = ಯುವತಿಯಂತೆಯೂ, ವನ್ -ಶಿರೈ - ಕಷ್ಟತರವಾದ ಸೆರೆಯು, ಪೋಯ್ - ಹೋಗಿ, ಮನ್ನರ್ -ಪದಂ = ರಾಜಪದವಿಯನ್ನು, ಪತ್ತಾರ್-ಪೋಲ = ಪಡೆದ ರಾಜಕುಮಾರನಂತೆಯೂ, (ಕಾರಣಾಂತರದಿಂದ ಸೆರೆಯಲ್ಲಿದ್ದು ಬಿಡುಗಡೆಯಾದ ರಾಜಕುಮಾರನು ಮತ್ತೆ ರಾಜ್ಯವನ್ನು ಪಡೆಯುವಂತೆ ಎಂದು ಭಾವ) ಉಡಲ್-ಮುದಲಾ - ಶರೀರ ಮೊದಲಾದವುಗಳಿಂದ ! ಉಯಿರ್ = ಜೀವವನ್ನು, ಮರೈಕ್ಕುಂ = ಮರೆಮಾಡುವ, ಮಾಯ್ - ಮಾಯೆಯನ್ನು, (ಪ್ರಕೃತಿಯನ್ನು), ನೀಂಗಿ : ಬಿಟ್ಟುಬಂದು, ಉಯರ್‌ನ-ಪದಂ = ಉತ್ತಮಪದವಿಯಾದ ಪರಮಪದವನ್ನು, ಏರಿ : ಹತ್ತಿ (ಸೇರಿ) ಉಣರ್‌ನ್ಸ್ = ಸಮಸ್ತಾನಂದನುಭವವನ್ನು ಪಡೆದು, ಒನೋಮೇ - ಶ್ರೀಮನ್ನಾರಾಯಣನೊಂದಿಗೆ ಅವನಲ್ಲಿ ಅಂತರ್ಭೂತನಾಗುವುದನ್ನು ಅವಿಭಾಗೇನದೃಷ್ಟಾತ್’’ ಎಂಬಂತೆ ಸೇರಿರುವವರಾದವಲ್ಲವೆ ? (ಸಂಸಾರವನ್ನು ನೀಗಿ ಪರಮಪದ ಸೇರಿ, ಪರಮಾನಂದ ನಿರ್ಭರರಾಗುವುದನ್ನು ಹಲವಾರು ದೃಷ್ಟಾಂತಗಳೊಡನೆ ವಿವರಿಸಿದೆ.)

दुर्वारोरुपराक्रमोरगनिगीर्णोऽकों विमुक्तो यथा मालिन्याक्तविशोधितातिविमला मुक्ताऽतिमूल्येव च । पारावारविपत्पराहतिमती नौकेव पारं गता निर्मुक्तो वनवह्निना परिवृतो दन्तीव सन्तापितः ॥ कान्तेवाश्लिष्टकान्ता वशयितुमवशं क्लेशिताप्त्याऽथ हृष्टा बन्धादुग्राद्विमुक्तो धरणिपतिसुतो लब्धराज्यो यथा वा । आत्मानं छादयन्तीं प्रकृतिमिह विहायैव देहादिरूयां धाम प्राप्यानुभूयोन्नतमतिसुखदं चैकतां प्राप्नवाम ॥

१९
ಪರಮಪದಸೋಪಾನಂ
ಮೂಲ : ಮಣ್ಣುಲಹಿಲ್‌ಮಯಲ್‌ರ್‌ನುಮನಂತಳುಂ(ದುಂಬಿ
ಮನ್ನಾದಪಯನಿಹನುಮಾಲೇಯ, ಕಣ್ಣಿಲತೆನಂಜಿಯವನ್ ಳಲೇಪೂಣ್ಣು
ಕಡುಂ ಶಿರೈಪೋಯ್‌ಕರೈಯೇರುಂಗತಿಯೇಶನು, ವಿಷ್ಣುಲಹಿಲ್ ವಿಯಷ್ಟೆಲ್ಲಾಂ ವಿಳಂಗಕ್ಕಂಡ್ ವಿಣ್ಣವರ್‌ಂಕುಳಾಂಗಳುಡನ್ ವೇದಂಪಾಡಿ, ಹಣ್ಣುಲಹಿಲ್‌ಡಿಯಾದ ವಿಶೆಯಾಲ್ಪಾಡುಂ ಪಲ್ಲಾಂಡೇ ಪಲ್ಲಾಂಡುಂ ಪಾಡುವೋಮೇ ॥
J
277
20
ಅರ್ಥ -ಮಣ್ -ಉಲಹಿಲ್ = ಭೂಲೋಕದಲ್ಲಿ ಮಯಲ್ - ವ್ಯಾಮೋಹವನ್ನು (ಸ್ವಪರಸ್ವರೂಪಗಳಲ್ಲಿ ಅನ್ಯಥಾ ಜ್ಞಾನವನ್ನು) ತೀರ್‌ನ್ನು = ಬಿಟ್ಟು ವಿವೇಕಹೊಂದಿ, (ಆಚಾರ್ಯರು ಉಪದೇಶಿಸಿದ ಶಾಸ್ತ್ರದ ಮೂಲಕ ಸ್ವಪರಸ್ವರೂಪಜ್ಞಾನವೆಂಬ ವಿವೇಕವನ್ನು ಪಡೆದು ಎಂದರ್ಥ. ಈ ಪರಮಪದ ಸೋಪಾನದ ಮೊದಲನೆಯ ವಿವೇಕಪರ್ವ ಸೂಚಿತವಾಯಿತು) ಮನಂ = ಮನಸ್ಸು, ತಳುಂಬಿ = ತತ್ತಳಿಸಿ (ವಿವೇಕವು ಬಂದಮೇಲೆ ತಾನು ಅನಾದಿಕಾಲದಿಂದ ಸಂಸಾರದಲ್ಲಿ ಪಾಡುಪಟ್ಟುದನ್ನು ನೋಡಿ ದುಃಖಿಸುವುದು, ಇದೇ ನಿರ್ವೇದವೆಂಬುದು. ಇದರಿಂದ 2ನೆಯ ನಿರ್ವದಪರ್ವದ ವಿಷಯಸೂಚಿತವಾಗುತ್ತದೆ) ಮನ್-ಆದ-ಪಯನ್-ಇಹಳು = ಸ್ಥಿರವಲ್ಲದ ಫಲಗಳನ್ನು ಬಿಟ್ಟು (ನಿರ್ವದ ಬಂದಮೇಲೆ ಐಶ್ವರ್ಯಾದಿ ಪ್ರಯೋಜನಾಂತರಗಳ ಅಲ್ಪತನವನ್ನೂ, ಅಸ್ಥಿರತೆಯನ್ನೂ, ಇತರ ದೋಷಗಳನ್ನೂ ಪರಾಮರ್ಶಿಸಿ, ಪೂರ್ತಿಯಾಗಿ ತ್ಯಜಿಸಿ ಎಂದರೆ ವಿರಕ್ತಿಗೊಂಡು ಎಂದರ್ಥ. ವಿರಕ್ತಿಪರ್ವತೋರುತ್ತೆ. ಮಾಲೇ-ಅನ್ರಿ-ಕಣ್ಣಿಲದ್-ಎನ್ನು - (ಮೋಕ್ಷವನ್ನು ಕೊಡಲು ಸಮರ್ಥನಾದವನು) ಶ್ರೀವಲ್ಲಭನೊಬ್ಬನೇ ಹೊರತು ಬೇರೆ ಯಾರೂ ಇಲ್ಲವೆಂದು, ಅಂಜಿ : ಹೆದರಿ, ಅವನ್ -ಕಳಲೇ -ಪೂಂಡು : (ಸ್ವಾಧಿಕಾರಾನುರೂಪವಾಗಿ ಭಕ್ತಿ ಪ್ರಪತ್ತಿಗಳಿಂದ, ಆ ಶರಣ್ಯನ ಪಾದಾರವಿಂದಗಳನ್ನೇ ಆಶ್ರಯಿಸಿ, ಕಡುಂ-ಶಿರೈ-ಪೋಮ್ = (ಪ್ರಾರಬ್ಧಕರ್ಮಾಧೀನವಾದ ಈ ದೇಹದ ಅವಸಾನದಲ್ಲಿ ಅತಿಕ್ರೂರವಾಗಿರುವ ಸ್ಕೂಲ ದೇಹವನ್ನು ಬಿಟ್ಟು ಕರೈ-ಏರುಂ-ಗತಿಯೇ-ಶೆನ್ನು : ಸಂಸಾರ ಸಾಗರದ ಆಚೆದಡವಾದ ಪರಮಪದವನ್ನು (ಹೋಗುವ ಮಾರ್ಗವಾದ) ಅರ್ಚಿರಾದಿ ಮಾರ್ಗದಿಂದ ಸೇರಿ, ವಿಣ್ -ಉಲಹಿಲ್ = ಭೂಲೋಕದಲ್ಲಿರುವ, ವಿಯಪ್ಪೆಲ್ಲಾಂ = ಅತ್ಯಾಶ್ಚರ್ಯವಾದುವೆಲ್ಲವೂ, ವಿಳಂಗ = ಕಂಗೊಳಿಸಲು, ಕಂಡು : ನೋಡಿ, (ಶ್ರೀ ವೈಕುಂಠ ಗದ್ಯದಲ್ಲಿ ಅನುಸಂಧಾನ

:278 ಪರಮಪದಸೋಪಾನಂ

ಮಾಡುತ್ತಿದ್ದುದೆಲ್ಲವನ್ನೂ ಅತ್ಯದ್ಭುತ ರೀತಿಯಲ್ಲಿ ಅನುಭವಿಸಿ) ವಿಣ್ಣವರ್ -ತಂ- - ನಿತ್ಯರ ಮತ್ತು ಮುಕ್ತರ, ಕುಳಾಂಗಳ್ -ಉಡನ್ - ಗೋಷ್ಠಿಗಳೊಂದಿಗೆ, ವೇದಂ-ಪಾಡಿ = ಸಾಮಗಾನವನ್ನು ಮಾಡಿ, ಪಣ್ಣುಲಹಿಲ್ - (ಪಣ್ = ರಾಗವಿಶೇಷ ಉಲಹ್ : ಸಮೂಹ) ಪ್ರಕೃತಿಮಂಡಲದಲ್ಲಿ ಕೇಳಿ ಬರುವ ರಾಗಗಳಲ್ಲಿ, ಪಡಿಯಾದ : ಸೇರದಿರುವ (ಅತಿವಿಲಕ್ಷಣವಾದ) ಇಯಾಲ್ : ಅಪ್ರಾಕೃತವಾದ ದೇವಗಾನ ವಿಶೇಷಗಳಿಂದ, ಪಾಡುಂ - ಹಾಡುವಂತಹ, ಪಲ್ಲಾಂಡೇ ಪಲ್ಲಾಂಡುಂ : ‘‘ಬಹಳ ಕಾಲಮಂಗಳವಾಗಲಿ” ಎಂದರ್ಥ ಬರುವಂತೆ ಮಂಗಳಾಶಾಸನಗಳನ್ನು, ಪಾಡುವೋಮೆ = ಸೇವಾರೂಪವಾಗಿ ಹಾಡುವವರಾಗುವವು.

भूमौ मोहं विसृज्य प्रचकितमनसोऽथो फलान्यस्थिराणि त्यक्त्वा सम्यक् विमुक्तिप्रद इह कमलाक्षान्न चान्य स्समर्थः । इत्यालोच्यातिभीता स्तदुभयपदपद्माश्रिता उग्रबन्धात् विस्रस्ताः पार मातुं परमपद मिता अर्चिराद्यैव गत्या ॥ तत्रालोक्याद्भुतानि क्षितितलविदिताश्चर्यरीत्यैव सर्वा- ण्याम्नायं साम गात्वा परमपदलसन्नित्यमुक्तै स्समं च । नानारागप्रपञ्चापरिचितमधुरापूर्वरागैकगेयं गायामानन्तकालं शुभभरितसमाशासनं माधवस्य ॥ ಮೂಲ : ಮಾಳಾದವಿನೈಯನೈತ್ತುಂ ಮಾಳನಾಂಪೋಸ್ ವಾನೇರಿಮಲರ್‌ಮಗಳಾರನ್ನುಪೂಣು, ತೋಳಾದ ಮಾಮಣಿಕ್ಕುತ್ತೊಂಡು ಪೂಂಡು ತೊಳುದುಹನ್ನುತೋತ್ತಿರಂಗಲ್ ಪಾಡಿಯಾಡಿ ಕೇಳಾದಪಳ್ಳಿಮರೈಯಿನ್ ಗೀತಂಕೇಟ್ಸ್ ಕಿಡೈಯಾದಪೇರಿಸ್ಟಂ ಪೆರುಹನಾಳು, ಮೀಳಾದಪೇರಡಿಮೈಕ್ಕನ್ನುಪೆಂ ಮೇದಿನಿಯಿಲಿರುಕ್ಕಿಂ ವಿದಿಯಿನಾಲೇ ॥ ಅರ್ಥ :- ನಾಂ = ನಾವು ಮಾಳಾದ * १ २० 21 ಮತ್ತಾವುದರಿಂದಲೂ ನಿವಾರಿಸಿಕೊಳ್ಳಲಾಗದ, ವಿನೈ -ಅನೈತ್ತುಂ : ಪಾಪಗಳೆಲ್ಲವೂ, ಮಾಳ : ನಾಶವಾಗಲು,

ಪರಮಪದಸೋಪಾನಂ

279

ಪೋಮ್ - (ಅರ್ಚಿರಾದಿ ಮಾರ್ಗದಿಂದ) ಹೋಗಿ, ರ್ವಾ -ಏರಿ = ಪರಪದವನ್ನು ಸೇರಿ, ಮಲರ್ -ಮಗಳ್ -ಆರ್ - ಮಹಾಲಕ್ಷ್ಮಿಯ, ಅನ್ನು-ಪೂಣುಂ = ಪ್ರೀತಿಯಿಂದ ಉರಸ್ಸಿನಲ್ಲಿ ಭೂಷಣದಂತೆ ಧರಿಸಲ್ಪಟ್ಟಿರುವ, ತೋಳಾದ - ಸ್ವಲ್ಪವೂ ತುಳುಕಾಡದ, ಮಾ-ಮಣಿಕ್ಕು ಮಹಾನೀಲರತ್ನ ಸ್ಥಾನೀಯನಾದ ಶ್ರೀಮನ್ನಾರಾಯಣನಿಗೆ, ತೊಂಡು ಸೇವೆಮಾಡಲ್ಪಡುವುದರಲ್ಲಿ ಪೂಂಡು : ಅತ್ಯಂತ ಸಕ್ತರಾಗಿ, ತೊಳುದು : ಪ್ರಣಮಿಸಿ, ಉಹದ್ದು - ಸಂತುಷ್ಟರಾಗಿ, ತೋತ್ತಿರಂಗಳ್ -ಪಾಡಿ - ಗುಣಾನುಭವದ ಸ್ತೋತ್ರಗಳನ್ನು ಕೀರ್ತನೆ ಮಾಡುತ್ತಾ ಆಡಿ : ನರ್ತಿಸುತ್ತಾ ಕೇಳಾದ : (ಬದ್ಧದೆಸೆಯಲ್ಲಿ) ಎಂದೂ ಕೇಳಲಾಗದಂತಹ, ಪಳ್ಳೆ-ಮರೆಯಿನ್ : ಅನಾದಿಯಾದ ಸಾಮವೇದದ, ಗೀತಂ = ಗಾನವನ್ನು, ಕೇಟ್ಟು - ಕೇಳಿ, ಕಿಡ್ಡೆಯಾದ : ಪಡೆಯಲಾಗದಂತಹ, ಪೇರ್ -ಇನ್ನಂ ಅತಿಶಯಾನಂದವು, ಪೆರುಹ - ಪ್ರವಾಹದಂತೆ ಮೇಲೆ ಮೇಲೆ ಉಕ್ಕಿ ಬರುತ್ತಿರಲು, ನಾಳುಂ - ಎಂದೆಂದಿಗೂ, ಮೀಳಾದ : ಮತ್ತೆ ಹಿಂತಿರುಗಿ ಬರದಂತಹ, ಪೇರ್-ಅಡಿಮೈಕ್ಕು ನಿರತಿಶಯಕ್ಕೆಂಕಯ್ಯಕ್ಕೆ, ಅನ್ನು ಪತ್ತೊಂ - ಪರಮಭಕ್ತಿಯನ್ನು ಪಡೆದೆವು, ವಿದಿಯನಾಲೆ = ದೈವದ ಬಲದಿಂದ, ಮೇದಿನಿಯಲ್-ಇರುಕ್ಕಿನೊಂ = ಭೂಮಿಯಲ್ಲಿರುತ್ತಿರುವೆವು.

..

ತಾತ್ಪರ್ಯ :- ಮೊದಲು ಪರಮಾತ್ಮನ ಕಟಾಕ್ಷಕ್ಕೆ ಪಾತ್ರರಾಗಿ, ಸದಾಚಾರರ ಮೂಲಕ ಭಗವತಮಾಶ್ರಯಣವನ್ನು ಪಡೆದರುವ ನಾವು ಶರಣಾಗತಿ ವಶೀಕೃತನಾದ ಸತ್ವಶರಣ್ಯನ ದಯೆಯಿಂದ ಮತ್ತಾವುದರಿಂದಲೂ ಹೋಗಲಾಡಿಸಲಾಗದ ಪಾಪವೆಲ್ಲವನ್ನೂ “ಸತ್ವಪಾಪೇಭೋಮೋಕ್ಷಯಿಷ್ಯಾಮಿ” ಎಂಬ ಉಕ್ತಿಯ ಕ್ರಮದಲ್ಲಿಯೂ, ಪ್ರಾರಬೇತರ ಪೂತ್ವಪಾಪಮಖಿಲಂ’’ ಎಂಬ ಆಚಾರರ ಸೂಕ್ತಿಯಂತೆಯೂ, ಸಂಪೂರ್ಣವಾಗಿ ನೀಗಿಕೊಂಡು, ಅರ್ಚಿರಾದಿ ಮಾರ್ಗವಾಗಿ ವಿರಜಾನದಿಯ ಆಚೆದಡದಲ್ಲಿರುವ ಪರಮಪದವನ್ನು ಸೇರಿ, ಮಹಾಲಕ್ಷ್ಮಿಯ ಪ್ರೀತಿಯಿಂದ ಅವಳ ವಕ್ಷಸ್ಥಳದ ಆಭರಣವಾದ
• ಮಹಾನೀಲಮಣಿಯಂತೆ ರಾರಾಜಿಸುವ ಶ್ರೀ ವಲ್ಲಭನ ಸೇವೆಯಲ್ಲಿ ಅತ್ಯಂತ ಆಸಕ್ತರಾಗಿ, ಪ್ರಣಾಮಗಳನ್ನರ್ಪಿಸುತ್ತಾ ನಿರತಿಶಯ ಕಲ್ಯಾಣಗುಣಗಳನ್ನು, ಕಂಡು ಅತಿಸಂತುಷ್ಟರಾಗಿ, ಆ ಸದ್ಗುಣಗಳನ್ನು ಮನದಣಿಯ ಮಧುರತಮಪದಗಳಿಂದ ಸ್ತೋತ್ರ ಮಾಡುತ್ತಾ ಅಷ್ಟಕ್ಕೇ ಪಠ್ಯಾಪ್ತಿಗೊಳ್ಳದೆ ಪರವಶರಾಗಿ ನರ್ತಿಸುತ್ತಾ ಬದ್ದದೆಸೆಯಲ್ಲೆಂದೂ ಕೇಳಲಾಗದಂತಹ ಅನಾದಿಯಾದ ಸಾಮವೇದಗಾನವನ್ನು ಕೇಳಿ, ಎಂದೂ ಲೀಲಾವಿಭೂತಿಯಲ್ಲಿ ಲಭಿಸದಂತಹ ಅಮೃತದ ಹೊನಲಿನಂತಹ ನಿರತಿಶಯವಾದ ಆನಂದವುಂಟಾಗಲು, ಕಾಲತತ್ವವಿರುವ ತನಕವೂ ಮತ್ತೆಂದೂ ಹಿಂತಿರುಗದಂತಹ ಸತ್ವದೇಶಸತ್ವ ಕಾಲ ಸಾವಸ್ಥೆಗಳಿಗೂ ಉಚಿತತಮವೂ, ನಿತ್ಯವೂ, ನಿರವದ್ಯವೂ, ನಿರತಿಶಯವೂ ಆದ ಕೈಂಕರ ಸಾಮ್ರಾಜ್ಯ ಪಡೆಯಲು ಅದಕ್ಕನುಗುಣವಾದ ಪರಮಭಕ್ತಿಯನ್ನು ಈ ಲೀಲಾ ವಿಭೂತಿಯಾದ ಭೂ ಮಂಡಲದಲ್ಲೇ ಪಡೆದವರಾಗಿರುವೆವು. ಪರಮಭಕ್ತಿಲಾಭವಾದ
280.
ಪರಮಪದಸೋಪಾನಂ
ನಂತರ ಮುಕ್ತರಾಗುವರೆಂಬುದನ್ನು ಶಾಸ್ತ್ರವು ಘೋಷಿಸಿದರೂ ಮೇಲೆ ಹೇಳಿದಂತಹ . ಅಧಿಕಾರಿಗಳು ಇಲ್ಲೇ ಇನ್ನೂ ಇರಲು ಕಾರಣ ಆ ಪರಮಾತ್ಮನ ಸತ್ಯಸಂಕಲ್ಪವೊಂದೇ, ಆ ಶರಣ್ಯನ ದಯಾಬಲವೇ ಬಲಾತ್ಕಾರವಾಗಿ ತನ್ನ ಸಂಕಲ್ಪಕಾಲಾವಧಿ ಈ ಲೀಲಾವಿಭೂತಿಯಲ್ಲಿ
ಈ ಚೇತನದ ಮೂಲಕ ಲೋಕವನ್ನು ತಿದ್ದಿ ಸನ್ಮಾರ್ಗಕ್ಕೆ ತರಬೇಕೆಂಬ ದಯೆಯಿಂದ ಇರುತ್ತಿರುವವು ಅಷ್ಟೆ ಇಲ್ಲಿರಲು ಮತ್ತಾವಕಾರಣವೂ ಇಲ್ಲ ಮುಕ್ತರಾಗಿ ನಿತ್ಯಾನಂದಭರಿತರಾಗುವ ಯೋಗ್ಯತೆಯಿದ್ದರೂ ಇಲ್ಲೇ ಇರುವ ಕಾರಣವೇನಿರಬಹುದು? ಎಂದು ಆಶ್ಚರ್ಯಗೊಂಡರೆ ಅದರ ಸಕಾರಣವಾದ ಉತ್ತರದ ಸಮಾಧಾನವಿದು.
दुर्वाराखिलदुष्कृते विगलिते पूता वयं प्रस्थिताः मुक्तिं प्राप्य समाश्रयस्य कमलावक्षोविभूषामणेः । श्रीनाथस्य नियोजिताः करुणया सेवारसास्वादने नित्वा तुष्टहृदश्च सद्गुणनुतीरुद्राय सन्नर्त्य च ॥ आकर्ण्याश्रुतपूर्वकर्णमधुरं गानं च सामश्रुतेः आकालं त्वतिदुर्लभे प्रवहति स्वानन्द उद्रोधसि । भक्तिं तां परमामवाप्नुम तथानावृत्तसेवाप्तये मेदिन्यां तु लभामहे विधिबलोत्कर्षान्निवासं परम् ॥
गुरु स्त्रय्यन्तार्यः परमपदसोपान मिति याः हिताय व्यातेने द्रविडगिरि गाधा स्सुमनसाम् । विपश्चित् गोपालो व्यवृणुत च कर्णाटकगिरा सुरोक्त्या च श्लोकीचकर परयाचार्यकृपया ॥
२१

f. น ॥ಶ್ರೀಮತೇ ನಿಗಮಾಂತಮಹಾದೇಶಿಕಾಯ ನಮಃ ॥