೧೫ ನವರತ್ನ-ಮಾಲೆ

विस्तारः (द्रष्टुं नोद्यम्)

ಶ್ರೀಮದಾಚಾರ್ಯಮಣಿಗಳು ಶ್ರೀದೇವನಾಯಕನೆಂಬ ತಿರುವಹೀಂದ್ರಪುರದ ದೇವರ ವಿಷಯವಾಗಿ 9 ಕೃತಿ ರತ್ನಗಳನ್ನು ರಚಿಸಿರುವರು. ಈ ‘‘ನವರತ್ನಮಾಲೆ’’ ಅವುಗಳಲ್ಲೊಂದು. ಇದರ ಕೊನೆಯ ಪಾಶುರದಲ್ಲಿ ತಾವೇ ‘‘ದೇವನಾಯಕ ಪಂಚಾಶತ್, ಅಚ್ಯುತಶತಕ, ಮುಮ್ಮಣಿಕೋವೈ, ಪಂದ್, ಕಳಿಲ್, ಊಶಲ್, ಏಶಲ್, ಅಮ್ಮಾನೈ ಮತ್ತು ನವರತ್ನಮಾಲೆ’’ - ಈ ಒಂಬತ್ತನ್ನೂ ಮಾಡಿ ಭಗವಂತನಿಗೆ ಒಪ್ಪಿಸಿದಂತೆ ಹೇಳಿರುವರು.

ಪ್ರಕೃತ ಇದರಲ್ಲಿ ಮೊದಲು ಆ ಪರಮಾತ್ಮನ ಪದಪದ್ಮಗಳ ಹಿರಿಮೆ ಮಹಿಮೆಗಳನ್ನೂ, ದಶಾವತಾರವೆತ್ತಿ ಬಂದು ತೋರಿದ ಪ್ರಭಾವವನ್ನೂ, ಬ್ರಹ್ಮ-ಗರುಡ ಆದಿಶೇಷ-ಮತ್ತು ಭೂದೇವಿ ಇವರ ಪುಣ್ಯತೀರ್ಥಗಳಿಗೆ ಒಲಿದು, ಅವುಗಳ ತೀರಗಳಲ್ಲೇ ಬಿಜಯಮಾಡಿ ರುವುದನ್ನೂ, ಮಾಘಮಾಸದಲ್ಲಿ ದೇವರು ಕಡಲಿನತಡಿಗೆ ಬಲು ಬೆಡಗಿನ ನಡಿಗೆಯಿಂದ ಬಂದು, ಅಲ್ಲಿ ಮರಳಿನ ಮೇಲಿನ ಉತ್ಸವವನ್ನು ಪಡೆವ ರೀತಿಯನ್ನೂ ವರ್ಣಿಸಿ ಆ ದಿವ್ಯಮಂಗಳ ವಿಗ್ರಹದಲ್ಲಿ ಮಾರು ಹೋದುದನ್ನೂ, ಆ ಸನ್ನಿವೇಶವನ್ನು ನೋಡಿ, ಮರೆಯದೆ, ಅಡಿಗಡಿಗೆ ನೆನೆಯುವವರಿಗೆ ಈ ಸಂಸಾರ ಬಂಧನವು ನೀಗುವುದೆಂಬುದನ್ನೂ ಸ್ಪಷ್ಟಪಡಿಸಿ, ತಮ್ಮ ಅಂತ್ಯಕಾಲದಲ್ಲಿ ತಮಗೆ ಅಭಯ ಪ್ರದಾನಮಾಡುವಂತೆ ಪ್ರಾರ್ಥಿಸಿ, ಕೊನೆಗೆ ಆ ದೇವರಿತ್ತ ಆಜ್ಞೆಯಂತೆ ತಾವು ಈ 9 ಗ್ರಂಥಗಳನ್ನು ಮಾಡಿ, ಅವನ ಸಾನ್ನಿಧ್ಯದಲ್ಲಿ ಪಾಡಿದುದಾಗಿ ತಿಳಿಸಿ, ಮುಗಿಸಿರುವರು.

ಶುಭಕ್ರತು
1962

ಇತಿ, ಶ್ರೀ ದೇಶಿಕಮಣಿಕೃಪಾಭಾಜನಂ
ವಿದ್ವಾನ್-ಹ-ಗೋಪಾಲಾಚಾರ್ಯಃ
ನಂ.14, ನಾಲ್ಕನೆಯ ಬೀದಿ, ಕಾಳಿದಾಸ ರಸ್ತೆ ವಾಣಿವಿಲಾಸ ಮೊಹಲ್ಲ, ಮೈಸೂರು

  • 2–, —– -" ॥ श्रीमते निगमान्तमहादेशिकाय नमः ॥ ನವರತ್ನಮಾಲೆ ಮೂಲ : ಒರುಮತಿಯನ್ನರುಳಂಕವರ್‌ನ್ದನ ಉಲಹಮಡಜವಳರ್‌ನ್ಗಳನ್ದನ, ಒರುಪಡೆಯ ಗಂಗೈತನ್ನನ ಉರಗಪಡಂಗಳರಙ್ಗ ಕೊಡ್ಡನ, ದರುಮಮುಯರ್‌ದಿದೆನ್ನ ನಿನ್ನನ ದರುಮನಿರನದಿಶೈಬ್ದುನ್ನ, ಶಕಡಮುಡೈನುಕಲಙ್ಗವನ್ನನ ತಮ‌ಹಳರುನ್ನು ಮರುನಿದೆನ್ನನ, ತಿರುಮಗಳಯ್ಯಕರನ ತಿಗಳ್‌ುಳವುನುಮಣಙ್ಗ ಮನನ, ಶೆಳುಮಣಿಕೊಂಡಶಿಲವಿಲಜೈನ ಶಿಲೈತನಿಲ ರಣಚ್ಚು ಮಿಳನನ, ಅರುಮರೈಯನ್ನಮಮರ್‌ ಉಪಣ್ಣಿನ ಅಯನ್ನುಡಿ ತನ್ನಿಲಮ‌ ನುಯರ್‌ನ್ದನ, ಅರುಳ್‌ತರವೆಣ್ಣಿಯಯಿ ವನ

ಅಡಿಯವರ್ ಮೆಯ್ಯರ್ ಮಲ‌ಪ್ಪದಙ್ಗಳೇ ॥

1 ಅರ್ಥ :- ಅಡಿಯವರ್ = ಭಕ್ತರಿಗೆ, ಮೆಯ್ಯರ್ = ಸತ್ಯನಾದವನ (ದೇವನಾಯಕನ), ಮಲರ್-ಪದಂಗಳ್ = ಪಾದಾರವಿಂದಗಳು, ಒರು-ಮತಿ-ಅನ್ಸರ್ : (ತನ್ನಲ್ಲಿ) ಒಂದೇ ವಿಧವಾದ ಭಕ್ತಿಯುಳ್ಳ ಭಾಗವತರ, ಉಳಂ : ಮನಸ್ಸನ್ನು, ಕವರ್‌ನ್ದನ ವಶಪಡಿಸಿಕೊಳ್ಳುವುವು, ಉಲಹಂ-ಅಡಂಗ : ಲೋಕಗಳೆಲ್ಲ ತನ್ನಲ್ಲಿ ಅಡಗುವಂತೆ, ವಳರ್‌ನ್ನು - ಬೆಳೆದು, ಅಳಂದನ : ಅಳೆದವು, ಒರು-ಶಡೈ-ಒನ್ರಿಯ - ಅಸದೃಶವಾದ ಜಟೆಯಲ್ಲಿ ಒಂದಾಗಿ ಸೇರಿದ, ಗಂಗೈ : ಗಂಗೆಯನ್ನು, ತಂದನ : ತಂದುಕೊಟ್ಟವು, ಉರಗ-ಪಡಂಗಳ್ = ಕಾಳಿಂಗನ ಹೆಡೆಗಳನ್ನು, ಅರಂಗು-ಕೊಂಡನ = ನಾಟ್ಯರಂಗವನ್ನಾಗಿ ಮಾಡಿಕೊಂಡವು, ಉಯರ್‌ ದು-ದರುಮಂ-ಇದು-ಎ-ನಿನ್ನನ ಉತ್ತಮೋತ್ತಮವಾದ ಉಪಾಯವು ಈ ಜೋಡಿಯೇ ಎಂದು ತಿಳಿಯುವಂತೆ ಇರುವುವು ಇವೇ, ದರುಮನ್ : ಧರ್ಮರಾಜನು, ಇರಂದುದು - ಪ್ರಾರ್ಥಿಸಿದುದನ್ನು, ಇಂದು - ಕೇಳಿ, ಒಪ್ಪಿಕೊಂಡು, ಶಕ್ರನ - (ದೂತ್ಯಕ್ಕೆ) ಹೋದುವು, ಶಕಟಂ-ಉಡ್ಕಂದ್-ಕಲಂಗ = ಶಕಟಾಸುರನು ನುಚ್ಚುನೂರಾಗುವಂತೆ, ವೆನ್ನನ = ಒದ್ದು ಧ್ವಂಸಮಾಡಿದುವು, ಇದು - ಈ

538 ನವರತ್ನಮಾಲೈ

ಪಾದಗಳ ಜೋಡಿಯು, ತಮರ್ -ಹಳ್ -ಅರುಂದುಂ = ಭಾಗವತರು (ಸಂಸಾರ ದುಃಖ ನೀಗುವಂತೆ) ಅನುಭವಿಸುವ (ಸವಿಯುವ), ಮರುಂದು ಎನ್ನನ : ಅಮೃತ ವೆನಿಸಿಕೊಳ್ಳುವುವು, ತಿರು-ಮಗಳ - ಮಹಾಲಕ್ಷ್ಮಿಯ, ಶಯ್ಯ-ಕರಂಗಳ್ = ಕೋಮಲವೂ ಅರುಣವೂ ಆದ ಕೈಗಳೊಂದಿಗೆ, ಒನ್ನಿನ - ಒಂದಾಗಿ ಸೇರಿದುವು, ತಿಗಳ್ -ತುಳವು-ಉಷ್ಣುಂ ಪ್ರಕಾಶಿಸುವ ತುಲಸಿಯಲ್ಲಿ ಉಂಟಾಗುವ, ಮಣಂ-ಕಮಳನ್ದನ = ಪರಿಮಳವನ್ನು ಬೀರುವಂತಾದುವು, ಶೆಳು-ಮಣಿ-ಕೊಂಡ = ಪ್ರಜ್ವಲಿಸುವ ರತ್ನಗಳನ್ನು ಕೆತ್ತಿದ, ಶಿಲಂಬು-ಇಲಂಗಿನ : ಕಾಲಂದಿಗೆಗಳಿಂದ ಬೆಳಗಿದವು, ಅನ್ನು : ಆಗ (ರಾಮಾವತಾರ ದಲ್ಲಿ), ಶಿಲೈ-ತನಿಲ್ - ಶಿಲೆಯ ರೂಪವನ್ನು ತಾಳಿದ್ದ, ಓರ್ -ಅಣಂಗು - ಒಬ್ಬ ಸ್ತ್ರೀಯನ್ನು, ಉಮಿಳನ್ದನ - ನಿಜರೂಪಗೊಳಿಸಿದುವು, ಅರು-ಮ-ಅಂತಂ : ಅರಿಯುವುದು ಕಷ್ಟವೆಂದಿರುವ ಉಪನಿಷತ್ತುಗಳಲ್ಲಿ, ಅಮರ್‌ನ : ಹೊಂದಿಕೊಂಡು, ಪಣ್ಣಿನ ಹೊಗಳಿಸಿಕೊಂಡವು, ಅಯನ್-ಮುಡಿ-ತನ್ನಿಲ್ = ಬ್ರಹ್ಮನ ಶಿರಸ್ಸಿನಲ್ಲಿ ಅಮರ್‌ು : ಹೊಂದಿಕೊಂಡು, ಉಯರ್‌ನನ - ಮೇಲೆ ಮೇಲೆ ಬೆಳಗುತ್ತಾ ಬೆಳೆದುವು, ಅರುಳ್‌ -ತರ-ಎಣ್ಣೆ - ಕರುಣಿಸಬೇಕೆಂದು ಭಾವಿಸಿ, ಅಯಿಂದೈ - ತಿರುವಹೀಂದ್ರಪುರಕ್ಕೆ,

ವಂದನ = ಬಂದವತರಿಸಿದುವು.

ತಾತ್ಪರ :- ಭಕ್ತರಿಗೆ ಸತ್ಯರೂಪನಾಗಿ ಬೆಳಗುವ ದೇವನಾಯಕನ ಈ ಪಾದಾರವಿಂದ ಗಳೆರಡೂ ಬೇರೆ ಯಾವ ಉಪಾಯವನ್ನಾಗಲೀ ಫಲವನ್ನಾಗಲೀ ಬಯಸದ ಪರಮೈ ಕಾಂತಿಗಳ ಚಿತ್ತಗಳನ್ನು ವಶೀಕರಿಸಿ ಅವುಗಳಿಂದ ಸದಾ ಧ್ಯಾನಿಸಲ್ಪಡದ ತಕ್ಕವು. ತ್ರಿವಿಕ್ರಮ ವಾಗಿ ಅವತರಿಸಿದಾಗ ಸಮಸ್ತವೂ ತನಗೆ ಒಳಪಡುವಂತೆ ಹಿರಿದಾಗಿ ಬೆಳೆದು ಬೆಳಗಿದವು. ’ ಈಶ್ವರನ ಜಟೆಯಲ್ಲಿ ತಂಗಿಸಿ, ಅದರಿಂದ ಅವನನ್ನು ಪಾವನಗೊಳಿಸಲು ಗಂಗೆಯನ್ನು ತಂದವು. ಕಾಳಿಯ ಸರ್ಪದ ಹೆಡೆಗಳನ್ನೇ ನರ್ತನಕ್ಕೆ ರಂಗಸ್ಥಲವನ್ನಾಗಿ ಮಾಡಿಕೊಂಡು ದುಷ್ಟದಮನವನ್ನೂ ಶಿಷ್ಟ ಸಂಮೋದನವನ್ನೂ ಉಂಟು ಮಾಡಿದುವು. ಉಪಾಸಕರಿಗೆ ಪ್ರಧಾನವಾದ ಉಪಾಯವಾಗಿ ಶಿಷ್ಟಸನ್ನೋದವನ್ನೂ ಫಲವನ್ನು ಕೊಡುವುವು. ಧರ್ಮರಾಯನು ಪ್ರಾರ್ಥಿಸಿಕೊಂಡಂತೆ ದೂತ ಕಾವ್ಯಕ್ಕಾಗಿ ದುದ್ಯೋಧನನ ಬಳಿಗೆ ಹೋದುವು. ಶ್ರೀಕೃಷ್ಣನನ್ನು ಕೊಲ್ಲಲು ಬಂದ ಶಕಟಾಸುರನನ್ನು ನುಚ್ಚುನೂರಾಗಿಸಿ ಜಯಗಳಿಸಿದುವು. ಸಂಸಾರವನ್ನು ನೀಗುವ ಔಷಧವೂ ಅಮೃತವೂ ಇವೇ ಎಂದು ಶ್ಲಾಘಿಸಲ್ಪಟ್ಟುವು. ಮಹಾಲಕ್ಷ್ಮಿಯು ಪರಮಪುರುಷನ ಪಾದ ಕಮಲಗಳನ್ನು ಒತ್ತುವಾಗ ಆಕೆಯ ಕಮಕಮಲಗಳೊಂದಿಗೆ ಒಂದಾದುವು. ಸದಾ ತುಲಸಿಯ ಪರಿಮಳವು, ಘಮಘಮಿಸುವಂತೆ ಮಾಡಿದುವು. ಅಮೂಲ್ಯ ನವರತ್ನಖಚಿತವಾದ ನೂಪುರಗಳನ್ನು ಧರಿಸಿ ಬೆಳಗಿದುವು. ಗೌತಮ ಪತ್ನಿಯಾದ ಅಹಲೈಗೆ ಶಿಲೆಯ ರೂಪವನ್ನು ಹೋಗಲಾಡಿಸಿ, ಅವಳನ್ನು ಭವ್ಯ ರೂಪಳನ್ನಾಗಿ ಮಾಡಿ ಬೆಳಗಿದವು. ಇವೇ ಪರತತ್ವವೆಂದು ಸಮಸ್ತ ವೇದಾಂತಗಳೂ ಮೊಳಗುವಂತೆ ಆಗಿರುವುವು. ತ್ರಿಕಮಾವತಾರದಲ್ಲಿ ಪಾದವನ್ನು ನವರತ್ನಮಾಲೈ 539 ಮೇಲಕ್ಕೆ ನೀಡಿದಾಗ ಬ್ರಹ್ಮನ ಶಿರಸ್ಸಿನ ಮೇಲೆ ಅಲಂಕರಿಸಿ, ಮುಂದಕ್ಕೂ ಬೆಳೆದು ಬೆಳಗಿದುವು. ‘‘ಇಂತಹ ಪಾದಗಳನ್ನು ಈ ಕರ್ಮಭೂಮಿಯಲ್ಲಿ ಇರುವವರೆಲ್ಲರೂ ಸೇವಿಸಿ, ಉದ್ಬವಿಸಲಿ’ ಎಂದು ಸಂಕಲ್ಪಿಸಿ, ತಿರುವಹೀಂದ್ರಪುರಕ್ಕೆ ಬಿಜಯ ಮಾಡಿಸಿವೆ. ಇಂತಹ ಮಹಿಮೆಯ ಅಡಿಗಳ ಸೌಲಭ್ಯಾತಿಶಯವನ್ನು ಎಷ್ಟೆಂದು ವರ್ಣಿಸೋಣ ! निजपदाश्रितसत्यपदाम्बुजे सममतिप्रियभक्तहृदावृते । मितवती जगतीरभिवर्धिताः सरितमाहरतां हरमौलिगाम् ॥ अकुरुतां निजनाट्यभुवं फणाः परमधर्म इवाभवतातीममे । अगमतां यमजार्थितकर्मणे शकलशोऽकुरुतां शकटासुरम् ॥ पदजुषामतिभोग्यसुधेव ते कमलजारुणपाणिविमर्दिते । द्युततुलस्युदितातिसुगन्धिनी प्रविलसन्मणिन्पुरभूषिते ॥ अतनुतां सुतनुं च तदोपलात् दुरवबोधनवेदशिरोनुते । उपचितेऽजशिरस्युचिते धृते उपगतेऽहिपुरं करुणाप्रदे ॥ ಮೂಲ : ಮಕರಂಗಳರುಮಳವಿಲ್ ಪೌವ ಮಡೈಯ ವುತ್ತಲೈತನೈ, ವಡಿವುಕಮಟಮೆನವಮರ್‌ನುಗಿರಿತನೈದರಿತ, ಮಲಿಯುಮಶುರನುರಮಿಡನ್ನುವಶುದೈಪೇರ್ತೆಡುತ್ತ, ವಲಿಕೊಳವುಣನುಡಲ್ ಪಿಳನ್ನು ಮದಲೈ ಮೆಯ್‌ಕ್ಕುದಿತ, ಪಹರುಮುಲಗಮಡಿಯಳನ್ನು ತಮರ್‌ಹಳುಕ್ಕಳಿತ ಪರುಶುಮುನಿವನ್‌ವಡಿವುಕೊಂಡು ಪಕೈವರೈತುಣಿತ, ಪಣಿಯವಿಶೈವಿಲ್ ದಶಮುಕನನ್ ಮುಡಿಹಳ್ ಪತರುತ್ತನೆ, ಪಡಿಯುಮುರುವಿಲ್ ವರುಪಿಲಮೃವತುರನೈತಗರ್ತನೈ ನಗರಿತುವರೈಯೆನವುಹನ್ನುವರೈ ಕರತ್ತೆಡುತ್ತ ನಡಮೋಡಿಯಲುಪರಿಯಿಲ್‌ವನ್ನು ನಲಿವರುಕ್ಕವುತ್ತ, ನಲಿಯುಂವಿನೈಹಳ್ಗುಮರುರ್ಸ್ಟ ನಲಮುರೈನ್ದವೆರಿ, ನಣುಗುಗರುಡನದಿಕಳರ್‌ ನಪುನಲುಹಪ್ಪಿಲ್ ವೈತನೈ, ಅಕರಮುದಲವುರೈಹೊಣ್‌ಮಂಗೈಕಣವನುಕ್ಕಳಿತ, १ २ ३ 540

ನವರತ್ನಮಾಲೆ ಅಡೈಯುಂ ವಿನತೈಶಿರುವನುಯ್ಯವರುಳಡುತ್ತುಯರ್‌, ಅಡಿಯುಮಯುಮೆನುಮನ ನಡಿತೊಳಕ್ಕಳಿತನೆ, ಅವನಿಮರುವುತಿರುವಯಿಯಡಿಯವರುಮಯ್ಯನೇ ॥

2

ಅರ್ಥ :- ಅವನಿ = ಭೂದೇವಿಯು, ಮರುವು = ಪಡೆದ, ತಿರು-ಅಯಿನ್ - ತಿರುವಹೀಂದ್ರಪುರದಲ್ಲಿ (ಬಿಜಯಮಾಡಿಸಿರುವ) ಅಡಿಯವರು-ಮೆಯ್ಯನೇ = ಭಕ್ತರ ಸತ್ಯನೆ ! ಮಕರಂ-ವಳರುಂ-ಅಳವಿಲ್ : ಮತ್ಸರೂಪವನ್ನು ಪಡೆದು ಬೆಳೆದಾಗ, ಪೌವಂ-ಅಡೈಯ - ಸಮುದ್ರವನ್ನೆಲ್ಲಾ ಉತ್ತು= ಆವರಿಸಿ, ಅಲೆನ - ಕಲಕಿದೆಯಲ್ಲವೇ, ವಡಿವು-ಕಮಟಂ-ಎನ - (ಪಡೆದ) ರೂಪವು ನಿಜವಾದ ಆಮೆಯೇಯೋ ಎಂಬಂತೆ, ಅಮರ್‌ನ್ನು : ನೆಲೆಯಾಗಿದ್ದು, ಗಿರಿ-ತನೈ-ದರಿತ್ತನೆ : ಮಂದರ ಪರ್ವತವನ್ನು ಧರಿಸಿನಿಂತೆಯಷ್ಟೆ, ಮಲಿಯುಂ-ಅಶುರ್ರ : ಮೇಲೆಬೀಳಲು ಬಂದ ಹಿರಣ್ಯಾಕ್ಷನೆಂಬ ರಾಕ್ಷಸನ, ಉರಂ-ಇಡಂದು : ಎದೆಯನ್ನು ಸೀಳಿ, ವಶುವೈಯ್ಯ : ವಸುಧೆಯನ್ನು (ಭೂಮಿಯನ್ನು), ಪೆಯರ್ತ್ತೆಡುತ್ತನೆ = ಉದ್ದರಿಸಿದೆ, ವಲಿಹೊಳ್ -ಅವುಣನ್ - ಬಲಿಷ್ಠನಾದ ಹಿರಣ್ಯಕಶುಪುವಿನ, ಉಡಲ್ -ಪಿಳಂದು : ಹೊಟ್ಟೆಯನ್ನು ಬಗೆದು, ಮದಲೈ-ಮೆಯ್‌ಕ್ಕು = ಅವನ ಹಿರಿಯ ಮಗನಾದ ಪ್ರಹ್ಲಾದನನ್ನು ಕಾಪಾಡಲು, ಉದಿತ್ತ ಉದಯಿಸಿದೆ, ಪಹರುಂ-ಉಲಹಂ : (ಬಲಿಯು ತನ್ನದೆಂದು ಹೇಳಿದ) ಸಮಸ್ತ ಲೋಕಗಳನ್ನೂ, ಅಡಿ-ಅಳಂದು - ತನ್ನಡಿಗಳಿಂದ ಅಳೆದು, ತಮರ್‌ಹಳುಕ್ಕು : ಭಕ್ತರಾದ ದೇವತೆಗಳಿಗೆ, ಅಳಿತನೆ = ಕೊಡಿಸಿದೆಯ್ಯ, ಪರಶುಮುನಿವನ್ -ವಡಿವು-ಕೊಂಡು = ಪರುಶರಾಮನ ರೂಪವನ್ನು ಹೊಂದಿ, ಪಗೈವರೈ - ಶತ್ರುಗಳೆನಿಸಿದ್ದ ಕ್ಷತ್ರಿಯರನ್ನು, ತುಣಿತ್ತನೆ ಕೊಂದೆಯಲ್ಲವೇ, ಪಣಿಯ-ಇಶೈವು-ಇಲ್ - (ಶ್ರೀರಾಮನಾಗಿದ್ದ ನಿನ್ನ) ಅಡಿಗಳನ್ನು ಸ್ತುತಿಸಲು ಸಮ್ಮತಿಸದಿದ್ದ ದಶಮುಕನ್ ತನ್ = ರಾವಣನ, ಮುಡಿಹಳ್ -ಪತ್ತು : ಹತ್ತು ತಲೆಗಳನ್ನೂ, ಅರುತ್ತನೆ = ಕತ್ತರಿಸಿ ಕೆಡವಿದೆಯಲ್ಲವೆ, ಪಡಿಯುಂ-ಉರುವಿಲ್-ವರು ಈ (ಬಹಳ ಚೆನ್ನಾಗಿ) ಒಪ್ಪುವಂತಹ (ಗೊಲ್ಲನ) ರೂಪದಲ್ಲಿ ಬಂದ, ಪಿಲಂಬ-ಅಶುರನ್ಯ - ಪ್ರಲಂಬಾಸುರನನ್ನು, ತಹರ್ತನ್ - (ಬಲರಾಮನಾಗಿ ಬಂದು) ಕೊಂದೆಯಲ್ಲವೇ, ನಗರಿ-ತುವರೈ-ಎನ-ಉಹಣ್ಣು : (ತನಗೆ ವಾಸಕ್ಕೆ) ದ್ವಾರಕಾನಗರವೇ ಸರಿಯಾದುದೆಂದು ಸಂತೋಷಿಸಿ, ವರೆ = ಗೋವರ್ಧನ ಗಿರಿಯನ್ನು, ಕರತ್ತು-ಎಡುತ್ತ = ಕೈಯಲ್ಲಿ ಎತ್ತಿದೆಯಲ್ಲವೇ, ನಡಂ-ಒಡು-ಇಯಲು-ಪರಿಯಲ್ - ನರ್ತಿಸುವ ವಿಚಿತ್ರ ನಡಿಗೆಯುಳ್ಳ ಕುದುರೆಯ ಮೇಲೆ, ಎಂದು : (ಕಲ್ಕಿಯಾಗಿ) ಬಂದು, ನಲಿವು-ಅರುಕ್ಕ - (ಕಲಿಯಿಂದ ಬರುವ) ಪಾಪಗಳನ್ನು ನಾಶಮಾಡುವುದಕ್ಕೆ, ಉತ್ತ : ಒಪ್ಪಿದೆಯಲ್ಲವೇ, ನಲಿಯುಂ-ವಿನೈಹಳ್ = (ಸಂಸಾರಿಗಳನ್ನು) ದುಃಖಕ್ಕೆ ಈಡುಮಾಡಿ ನಲಿಯುವ ಪುಣ್ಯಪಾಪಕರ್ಮಗಳನ್ನು, ಹುಂ-ಮರುಂದಿನ್ = ಹೋಗಲಾಡಿಸುವ ಔಷಧದಂತೆ,

ನವರತ್ನಮಾಲೆ ನದಿಯಿಂದ ಬರುವ, ಪುನಲ್ :

541 ನಲಂ-ಉರೈಂದ-ವೆನೈ = ನಮಗೆ ನೆಲೆಯಾಗಿರುವ ಔಷಧಾದ್ರಿಯನ್ನು ವಾಸಸ್ಥಾನವನ್ನಾಗಿ ಮಾಡಿಕೊಂಡಿರುವೆ, ನಣುಹು - ಸಮೀಪದಲ್ಲಿರುವ, ಗರುಡ-ನದಿ-ಕಿಳರ್‌ನ - ಗರುಡ ಹೊನಲನ್ನು (ದಿವ್ಯವಾದ ತೀರ್ಥವನ್ನು) ಉಹಪ್ಟಿಲ್ -ವೈತನ್ಯ : ಬಹಳ ಸಂತೋಷದಿಂದ ಒಲಿದಿರುವೆ, ಉರೈ-ಕೊಳ್-ಮಂಗೈ ವಾಕ್ಕನ್ನೇ (ತನ್ನ) ರೂಪವಾಗಿಯುಳ್ಳ ಸರಸ್ವತೀದೇವಿಯ, ಕಣವನುಕ್ಕು = ಪ್ರಿಯನಾದ ಬ್ರಹ್ಮನಿಗೆ, ಅಕರಂ-ಮುದಲ : ಅಕಾರಾದಿಯಾದ ವೇದರಾಶಿಯನ್ನು, ಅಳಿತ ಉಪದೇಶಿಸಿ ಸಂರಕ್ಷಿಸಿದೆಯಲ್ಲವೆ, ಅಡೈಯುಂ - (ತನ್ನನ್ನು) ಆಶ್ರಯಿಸಿ, ವಿನತೈ-ಶಿರುವನ್ - ವಿನತೆಯ ತನಯನಾದ ಗರುಡನು, ಉಯ್ಯ - ಉಜೀವಿಸಲು, ಅರುಳ್ -ಕೊಡುತ್ತು ಕೃಪೆಯಿಟ್ಟು ಉಯರ್ತ್ತಿನೈ : (ಅವನನ್ನು) ಧ್ವಜದಲ್ಲಿರುವಂತೆ ಮಾಡಿರುವೆ, ಅನಂತನ್ : ಆದಿಶೇಷನು, ಅಡಿ-ತೊಳ - ಪಾದಗಳನ್ನು ಸೇವೆಮಾಡಲು, ಕಳಿತ : (ಅದರಿಂದ) ಉಲ್ಲಾಸಗೊಂಡೆಯೆ.

ತಾತ್ಪಯ್ಯ :- ಭಕ್ತರ ಸತ್ಯ ಮೂರ್ತಿಯೇ ಹಯಗ್ರೀವನೆಂಬ ಅಸುರನು ವೇದಗಳನ್ನು ಅಪಹರಿಸಿ, ಸಮುದ್ರದಲ್ಲಿ ಅವಿತುಕೊಂಡಿರಲು, ಮತ್ಯಾವತಾರ ಮಾಡಿ, ಅವನನ್ನು ಮರ್ದಿಸಿ, ಮತ್ತೆ ಆ ವೇದಗಳನ್ನು ಬ್ರಹ್ಮನಿಗೆ ಉಪದೇಶಿಸಿ, ಕರುಣಿಸಿದೆ. ದೇವಾಸುರರು ಮಂದರ ಗಿರಿಯನ್ನು ಕಡೆಗೋಲಾಗಿ ಮಾಡಿಕೊಂಡು ಕಡಲನ್ನು ಕಡೆಯುವಾಗ ಕೂರ್ಮಾವತಾರದಿಂದ, ಆ ಪರ್ವತವು ಕೆಳಕ್ಕೆ ಬೀಳದಂತೆ ಬೆನ್ನಿನ ಮೇಲೆ ಹೊತ್ತು ಜಗತ್ತನ್ನು ಪೊರಿದಿಹೆ.‘ಹಿರಣ್ಯಾಕ್ಷನು ಭೂದೇವಿಯನ್ನು ಚಾಪೆಯಂತೆ ಸುತ್ತಿಕೊಂಡು ಸಮುದ್ರದಲ್ಲಿ ಅಡಗಿಕೊಳ್ಳಲು, ವರಾಹರೂಪದಿಂದ ಅವನನ್ನು ಸಂಹರಿಸಿ, ಭೂಮಾತೆಯನ್ನು ಉದ್ಧರಿಸಿ ಎಂದಿನಂತೆ ವಿಸ್ತರಿಸಿರುವೆ. ಭಕ್ತಶಿರೋಮಣಿಯಾದ ಪ್ರಹ್ಲಾದನ ನುಡಿಯು ಸತ್ಯವಾದುದೆಂದು ಬೆಳಗಿ, ಅವನ ತಂದೆಯನ್ನು ಸಂಹರಿಸಲು ನರಸಿಂಹನಾಗಿ ಕಂಬದಿಂದ ಆವಿರ್ಭವಿಸಿದೆ. ಬಲಿಯು ದೇವೇಂದ್ರನ ರಾಜ್ಯವನ್ನು ಪಡೆದು, ಮಹಾಯಾಗವನ್ನು ಮಾಡಿದಾಗ ವಾಮನಮೂರ್ತಿಯಾಗಿ ಬಂದು, ಮೂರಡಿ ನೆಲವನ್ನು ಯಾಚಿಸಿ, ಕಡೆಗೆ ತ್ರಿವಿಕ್ರಮನಾಗಿ ಮೂರು ಲೋಕಗಳನ್ನು ಅಳೆದು, ಸಕಲ ಚೇತನರನ್ನೂ ಪಾವನಗೊಳಿಸಿ, ದೇವೇಂದ್ರನಿಗೆ ಮತ್ತೆ ಅವನ ಸಿರಿಯನ್ನು ಕೊಡಿಸಿದೆ. ಪರಶುರಾಮನಾಗಿ ಬಂದು ಮಹೀತಲದ ದುಷ್ಟ ಕ್ಷತ್ರಿಯರನ್ನು ಸದೆಬಡಿದೆ. ಶ್ರೀರಾಮನಾಗಿ, ನಿನ್ನನ್ನು ಆಶ್ರಯಿಸದ ದಶಮುಖ ರಾವಣನ ದಶ ಶಿರಸ್ಸುಗಳನ್ನೂ ಕಡಿದುರುಳಿಸಿದೆ. ಬಲರಾಮ ನಾಮದಿಂದವತರಿಸಿ, ಬೃಂದಾವನದಲ್ಲಿ ಗೋಪವೇಷಧಾರನಾಗಿ ಬಂದು ಉಪದ್ರವ ಗೊಳಿಸಿದ ಪ್ರಲಂಬನನ್ನು ಸಂಹರಿಸಿದೆ. ಶ್ರೀಕೃಷ್ಣನಾಗಿ ಗೋವರ್ಧನಗಿರಿಯನ್ನು ಕರದಿಂದೆತ್ತಿ ಸಕಲ ಗೋ ಗೋಪಾಲಕರನ್ನೂ ಪರಿಪಾಲಿಸಿದೆ. ಕಲ್ಕಿಯಾಗಿ ಬಿಳಿಯ ಕುದುರೆಯನ್ನೇರಿ ಬಂದು ಕಲಿಯ ಹಾವಳಿಯನ್ನು ನೀಗುವೆ. ಕ್ರೂರ ಪಾಪಗಳನ್ನು ನಿವಾರಿಸಲು 542 ನವರತ್ನಮಾಲೈ ಓಷಧಾದ್ರಿಯನ್ನು ನೆಲವೀಡಾಗಿ ಮಾಡಿಕೊಂಡಿರುವೆ. ಅದರ ಹತ್ತಿರದಲ್ಲೇ ಹರಿಯುವ ಗರುಡ ನದಿಯ ತಿಳಿನೀರನ್ನು ನೋಡಿ ಮನವೊಲಿದಿರುವೆ. ಬ್ರಹ್ಮನಿಗೆ ಅಕಾರಾದಿ ವೇದರಾಶಿಗಳನ್ನುಪದೇಶಿಸಿದೆ. ನಿನ್ನಡಿಗಳನ್ನು ಮುಡಿಯಮೇಲೆ ಪಡೆದ ಗರುಡನನ್ನು ನಿನ್ನ ಧ್ವಜದಲ್ಲಿ ಉನ್ನತನಾಗಿ ರಾರಾಜಿಸುವಂತೆ ಮಾಡಿರುವೆ, ನಿನಗೆ ಪಾದುಕೆಯಾಗಿಯೂ, ಹಾಸಿಗೆಯಾಗಿಯೂ, ನಿತ್ಯಕೈಂಕರ್ಯ ಮಾಡುವ ಆದಿಶೇಷನನ್ನು ಅನುಗ್ರಹಿಸಿರುವೆ. ಭೂಮಿಗೆ ಭಾರವಾಗಿರುವವರನ್ನು ಕೊಂದು, ಹೊರೆಯನ್ನಿಳುಹಿ, ಪೊರೆದು, ಆಕೆಯು ಸದಾ ನಮ್ರಳಾಗಿರುವಂತೆ ಮಾಡಿರುವೆ. ಹೀಗೆ ಪರಮೋಪಕಾರ ಮಾಡಿ ಹಿರಿಮೆಯನ್ನು ತೋರಿದ ನಿನ್ನನ್ನು ನಾವು ಇನ್ನೇನೆಂದು ವರ್ಣಿಸಬಲ್ಲೆವು. (ತಿರುವಹೀಂದ್ರ ಪುರದಲ್ಲಿ ಬ್ರಹ್ಮತೀರ್ಥ, ಗರುಡತೀರ್ಥ, ಶೇಷತೀರ್ಥ, ಭೂಮಿತೀರ್ಥ’’ ಎಂದು 4 ಪುಣ್ಯತೀರ್ಥಗಳಿವೆ. ಇವುಗಳಲ್ಲಿ ಅಭಿಷೇಕಗೊಂಡು ಸಂತೋಷಿಸಿ, ಅವನ್ನು ಕಟಾಕ್ಷಿಸಿ, ಅವುಗಳ ತೀರಪ್ರದೇಶಗಳಲ್ಲಿ ಸರ್ವದಾ ಸರ್ವಪ್ರದನಾಗಿ ಶ್ರೀ ದೇವನಾಯಕನು ವಾಸಮಾಡುತ್ತಿರುವನು. ಆ ತೀರ್ಥಾದಿದೇವತೆಗಳ ಪ್ರಾರ್ಥನೆಯಂತೆ ಆಯಾತೀರ್ಥಗಳಲ್ಲಿ ಸ್ನಾನ ಮಾಡಿದ ಭಾಗವೋತ್ತಮರಿಗೆ ಗಂಗಾ ಸ್ನಾನ ಫಲವನ್ನೂ ಕೊಟ್ಟಿರುವನು. ಆಹಾ ! ಆ ದೇವರ ಮತ್ತು ಆ ತೀರ್ಥಾಧಿ ದೇವರ ಔದಾರ್ಯವೆಂತಹದು ?) विधृतमकरतनुविवृद्धविचलिताखिलाम्बुधे | मथनशिखरिविधरणाय कमठरूप मापिथ ॥ समभिपतितदनुजहृद्विदीर्य भूमि मुदधरः । बलवदसुरजठरदारणादुदैश्च ऋतभृते ॥ निजपदमितनिखिललोक ! पुन रदापयश्च तान् । परशुमुनिपतनुरमारयोऽरिराजमण्डलम् ॥ विनुतिविमुखदशमुखास्यादशक माशु दधरिथ । पशुपतनयतनुधरं च समहोऽसुरं हरे ॥ दधिथ मुदित इह गिरिं हि द्वारकापुरीति कृष्ण ! । कलिजदुरितहरमहौषधादि मास्थितोऽन्वहम् । निकटगरुडसरिदुदेतसलिलसेवनोत्सुकः । । m ನವರತ್ನಮಾಲೆ वचनदेवतेश्वराय चाक्षराण्युपादिशः । प्रणतगरुड मवितु मध्यवासयो निजं ध्वजम् ॥ अहिपविहितचरणशयनसेवया हि मुमुदिषे । frcherya ! fa ! at ॥ 543 ಮೂಲ : ಪುರಮುಯರ್ತ್ತವಶುರರ್‌ರ್ ಪುರಮುರೈತಪೊಯ್ಯನಾನ್, ವರೆಎಡುತ್ತು ಮತಡುತ್ತ ಮಳ್ಳೆಯೊಡೊತ್ತಮೈಯ್ಯನಾನ್, ತಿರೈನಿರೈತ್ತ ಕಡಲೆರಿತ್ತ ಶಿಲೈವಳ್ಳೆತಕೈಯಿನಾನ್,

ಅರುಳ್ ಕೊಡುತ್ತುವಿನೈತವಿರುಮಡಿಯವರುಮೆಯ್ಯನೇ ॥ 3 ಅರ್ಥ :- ಪುರಂ-ಉಯರ್ತ - (ತಮ್ಮ) ನಗರಗಳು ಮೇಲೆದ್ದು ಹಾರಾಡುವಂತಹ ವರಗಳನ್ನು ಪಡೆದ, ಅಸುರ‌ ಹಳುಕ್ಕು = ಅಸುರರಿಗೆ, ಓರ್ -ಪುರಂ-ಉರೈತ್ತ- ಪೊಯ್ಯನಾನ್ - ಒಂದು ಬಾಹ್ಯಮತವನ್ನುಪದೇಶಿಸಿ ಸುಳ್ಳಾದವನಂತಾಗಿಯೂ, ವರೈ-ಎಡುತ್ತು : (ಗೋವರ್ಧನ) ಗಿರಿಯನ್ನೆತ್ತಿ ಮಳೆ ತಡುತ್ತ ಮಳೆಯನ್ನು ತಡೆದ, ಮಳ್ಳೆ-ಒಡು-ಒತ್ತ-ಮೆಯ್ಯನಾನ್ - ನೀಲಮೇಘ ಶ್ಯಾಮಸುಂದರ ವಿಗ್ರಹನೂ, ತಿರೈ-ನಿರೈತ-ಕಡಲ್ = ಅಲೆಗಳಿಂದ ತುಂಬಿದ ಸಮುದ್ರವನ್ನು, ಎರಿತ್ತ: ಬತ್ತಿಹೋಗುವಂತೆ ಮಾಡಿದವನೂ, ಶಿಲೈ-ವಳೆತ್ತ-ಕೈಯಿನಾನ್ - ಬಿಲ್ಲನ್ನೆತ್ತಿ ಬಾಗಿಸಿದ ಕೈಗಳಿಂದಲಂಕೃತನೂ, ಅರುಳ್ - *-ಕೊಡುತ್ತು : ದಯೆಯನ್ನು ಬೀರಿ, ವಿನೈ-ತವಿರುಂ = ಪಾಪಗಳನ್ನು ನಿವಾರಿಸುವವನೂ ಆದ ಆ ಪರಮಾತ್ಮನು, ಅಡಿಯವರು-ಮೆಯ್ಯನೇ - ಭಕ್ತರಿಗೆ ಸತ್ಯನೆಂದು ಖ್ಯಾತಿಪಡೆದ ಈ ದೇವನಾಯಕನೇ ಅಲ್ಲದೆ, ಬೇರಾರು ?

ತಾತ್ವರ :- ಮೂರು ಜನ ಅಸುರರು ರುದ್ರನನ್ನು ಕುರಿತು ತಪಸ್ಸುಮಾಡಿ, ಅದರ ಫಲವಾಗಿ ಆಕಾಶದಲ್ಲಿ ಸಂಚರಿಸುವಂತಹ ಮೂರು ಮಹಾನಗರಗಳನ್ನುಪಡೆದು, ಕಂಡ ಕಂಡ ಕಡೆ ತಿರುಗುತ್ತಾ, ವಿಪರೀತ ಹಾವಳಿ ಮಾಡುತ್ತಿದ್ದರು. ಇವರ ಕಾಟವನ್ನು ಸಹಿಸಲಾರದೆ ದೇವತೆಗಳು ಭಗವಂತನನ್ನು ಶರಣುಹೊಂದಿ ಮೊರೆಯಿಟ್ಟರು. ಪರಮಾತ್ಮನು ಆಗ ಅವರಿಗೆ ಅಭಯವನ್ನಿತ್ತು, ತಾನೊಬ್ಬ ಬೌದ್ಧನ ವೇಷವನ್ನು ತಾಳಿ, ಆ ಅಸುರರಿರುವ ಸ್ಥಳಕ್ಕೆ ಹೋಗಿ ತನ್ನನ್ನು ಎಲ್ಲರೂ ಪರಮಧಾರ್ಮಿಕನೆಂದು ಹೇಳುವಂತೆ ಅವರಿಗೆ ಉಪದೇಶಿಸಿ, ಅವರೂ ಅದು ನಿಜವೆಂದು, ನಿಜವಾದ ಧರ್ಮದಲ್ಲಿದ್ದ ಅಲ್ಪಸ್ವಲ್ಪ ಆಸಕ್ತಿಯನ್ನೂ ಕಳೆದುಕೊಂಡು, ಅಧರ್ಮವನ್ನೇ ಮಾಡುತ್ತ ಕಡೆಗೆ ನರಕಗಾಮಿಗಳಾಗುವಂತೆ ಮಾಡಿ, ಲೋಕೋಪಕಾರಮಾಡಿದನು (ಇದು ಮೊದಲನೆಯ ಪಾದದಪೂರಕಥೆ ಸಹಿತ ತಾತ್ಪರ) ಗೋಕುಲದಲ್ಲಿ ಗೋವರ್ಧನ ಪರ್ವತವನ್ನೆತ್ತಿ ಮಳೆಯಿಂದ ರಕ್ಷಿಸಿ ಗೋವುಗಳನ್ನೂ, ಗೋಪರನ್ನೂ, ಲೋಕವನ್ನೂ ಕಾಪಾಡಿದನು. ಸೀತೆಯನ್ನು ಕರೆತರಲು

544 ನವರತ್ನಮಾಲೆ ಮತ್ತು ರಾವಣನನ್ನು ಸಂಹರಿಸಲು, ಕಡಲ ದಡದಲ್ಲಿ ಬೀಡುಗೈದು, ಅಡ್ಡಲಾಗಿದ್ದ ಸಮುದ್ರವನ್ನು ಶೋಷಿಸುವಂತೆ ಕೋಪಗೊಳ್ಳಲು ಸಮುದ್ರರಾಜನು ಮರೆಹೊಕ್ಕು, ಪರಮ ಭಕ್ತನಾದನು. ಹೀಗೆ ಶರಣಾಗತರನ್ನು ಕೈಬಿಡದ ಪೊರೆದನು. ಮೇಲೆ ಹೇಳಿದ ಅಸಾಧಾರಣ ರೂಪಿಯಾಗಿ ದೇವನಾಯಕ ನಾಮಧೇಯದಿಂದ ಸಕಲರ ನಯನ ವಿಷಯನಾಗಿ, ಸಮಸ್ತ ಪಾಪಗಳನ್ನು ನಿವಾರಿಸುತ್ತಿರುವನು. समुत्पतत्पुरासुरेभ्य आह योऽनृतं मतम् । समुद्धरन् गिरिं निवार्य वृष्टि मभ्रविग्रहः ॥ तरङ्गपूर्णसिन्धुशोषणात्तधन्वहस्त ! भोः ! दयां प्रदाय पापनाशकोऽसि सत्य ! सेविनाम् ॥ ಮೂಲ : ತೇಳ್ಕೊತ್ತಾರಿಯೆನುಂ ದೆಯ್ದನಾಯಕ‌, ವಾಶಕ್ಕುಳ ಮಾಮಲರಾಳ್ ಮಣವಾಳ‌, ವಾಶಿತ್ತೆಳುಂ ಮನದನಾರ್ ಮಣತ್ಕಪ್ಪಿಲ್, ಮಾಶಿಕ್ಕಡಲಾಡಿ ಮಗಳನ್ನುವರುವಾರೇ !!

३ ಅರ್ಥ :- ವಾಶ-ಕುಳಿಲ್ = ಘಮಘಮಿಸುವ ಕೇಶವುಳ್ಳ, ಮಾ-ಮಲರ್ -ಆಳ್ = ಮಹಾಲಕ್ಷ್ಮಿಯು, ಮಣವಾಳ‌ = ಪ್ರಿಯನಾದ (ಮತ್ತು), ತೇಶು-ಒತ್ತಾರ್-ಇ-ಎನುಂ - ತೇಜಸ್ಸುಳ್ಳವರಲ್ಲಿ ತನ್ನಂತೆ ಮತ್ತಾರೂ ಇಲ್ಲವೆನ್ನುವಂತಹ, ದೈವನಾಯಕ‌ : ದೇವನಾಯಕನು, ಮಾಶಿ-ಕಡಲ್ -ಅಡಿ = ಮಾಘಮಾಸದ ಮಖಾನಕ್ಷತ್ರದಲ್ಲಿ ಕಡಲಿನಲ್ಲಿ ಅಭಿಷೇಕಗೊಂಡು, ವಾಶಿತ್ತು-ಎಳುಂ = ಹೆಚ್ಚುಸುಗಂಧವುಳ್ಳ, ಮನ್ಮತನ್ -ಆರ್ = ಅತಿಸೌಂದರ್ಯಪೂರ್ಣವಾದ, ಮಣಲ್ -ತೊಪ್ಪಿಲ್ ಆನಂದದಾಯಕವಾದ ಸಮುದ್ರ ತೀರಪ್ರದೇಶದಲ್ಲಿ ಮಹಿಳನು-ವರುವಾರ್‌ ಸಂತೋಷವಾಗಿ ಬರುವರು, (ಮನ್ಮತನಾರ್ -ವಾಶಿ-ತೊಳುಂ : ಎಂದೂ ಅನ್ವಯಮಾಡಬಹುದು. ಆಗ ಮನ್ಮಥನು ರೂಪದಲ್ಲಿ ಭಗವಂತನಿಗೆ ಸೋತು ಸೇವೆ ಮಾಡಲು ಬಂದವನಂತೆ ಎಂದರ್ಥ).

ತಾತಯ್ಯ :- ದಿವ್ಯಮಂಗಳ ವಿಗ್ರಹದ ದಿವ್ಯಗಂಧಕ್ಕೆ ಸರಿಸಾಟಿಯಿಲ್ಲದವನಾಗಿಯೂ, ತುಂಬ ಪರಿಮಳವನ್ನು ಬೀರುವ ಮತ್ತು ಅಂದವಾದ ಕೂದಲುಳ್ಳ ಮಹಾಲಕ್ಷ್ಮಿಯವಲ್ಲಭನಾದ ದೇವನಾಯಕನು ಮಾಘಮಾಸದ ಮಖಾನಕ್ಷತ್ರದಲ್ಲಿ ಸಮುದ್ರ ತೀರಕ್ಕೆ ಬಿಜಯಮಾಡಿ, ತೀರ್ಥಾಭಿಷೇಕಗೊಂಡು ತೀರ್ಥಪ್ರಸಾದಾದಿಗಳನ್ನಿತ್ತು, ಸುಗಂಧಿತವಾದ ಆ ಕಡಲಿನ ತೀರದ ಮರಳಿನಲ್ಲಿ ವಿಜಯಯಾತ್ರೆಯಾಗಿ ದಯ ನವರತ್ನಮಾಲೆ 545 ಮಾಡುವನು. ಆ ಸುಂದರ ದೃಶ್ಯವನ್ನು ನಮ್ಮ ದೇಶಿಕವರರು ‘ರೂಪದಲ್ಲಿ ತಾನೇ ಸುಂದರತಮನೆಂದು ತಿಳಿದಿದ್ದ ಮನ್ಮಥನೂ ಈ ದರ್ಶನದಿಂದ ನಿಗರ್ವಿಯಾಗಿ ತನ್ನ ಸೋಲನ್ನೊಪ್ಪಿ, ದೇವನಾಯಕನನ್ನು ಸೇವೆ ಮಾಡಲು ಬಂದಿಹನೋ ಎಂಬಂತಿದೆ’’ ಎಂದು ವರ್ಣಿಸಿರುವರು. (ಇಂದಿಗೂ ಈ ಉತ್ಸವವು ಅತಿ ವಿಜೃಂಭಣೆಯಿಂದ ನಡೆಯುತ್ತಿದೆ.) तेजस्विष्वधिको नचान्य इति यो बाभाति देवाधिराट् । तस्मिन् याति सुगन्धिकुन्तलमहापद्मासिनीवल्लभे ॥ माघे मासि मखे महोदधिमहातीरेऽभिषेकोत्सवे । लोकानन्दनसैकते स मदनः प्रतीव तं प्रार्चितुम् ॥ ಮೂಲ : ಉರುಳುಂಶಕಡಮೊನ್ನು ದೈತ್ತಾಯ್ ಉಲಹಮೇಳುಣ್ಣುಮಿಳ್ ಸ್ಥಳನಾಯ್, ಪೊರುಳು ಮಳಲು ಮಿರೈಯಾಗಪ್ಪನಡಿಮೈ ಯನಿನ್‌ನೇನ್, ಇರುಳುಂ ಮರುಳುಂ ತರುಮನ್ನಾಳ್ ಎಳಿ ಲಾರಾಳಿಕೆ, ಅರುಳುಂತೆರುಳುಂತರವೆನ್‌ಪಾಲ್ ಅಡಿ ಯೋರ್‌ಮೆಯ್ಯವನರುಳೇ ॥

5 * ಅರ್ಥ :- ಉರುಳುಂ : (ತನ್ನನ್ನು ಕೊಲ್ಲಲು) ಉರುಳಿಕೊಂಡು ಬಂದ, ಒನ್ನು-ಶಕಟಂ : (ಅಸುರಾವಿಷ್ಟವಾದ ಒಂದು ಗಾಡಿಯನ್ನು, ಉದೈತ್ತಾಯ್ : ಒದ್ದು ನುಚ್ಚುನೂರಾಗಿಸಿದವನೇ ! ಏಳು-ಉಲಹಂ - ಏಳು ಲೋಕಗಳನ್ನೂ, ಉಂಡು - ಉದರದಲ್ಲಿರಿಸಿಕೊಂಡು, ಉಮಿಳನ್ನು - ಹೊರಪಡಿಸಿ (ಪಡೆದು) ಅಳಂದಾಯ್ = ಅಳೆದವನೇ ! ಅಡಿಯೋರ್ -ಮೆಯ್ಯ - ಆಶ್ರಿತರ ಸತ್ಯಮೂರ್ತಿಯೇ ! ಪೊರುಳುಂ : ಐಶ್ವರವನ್ನೂ, ಅಳಲುಂ - (ಅಗ್ನಿಯಂತೆದಹಿಸಬಲ್ಲ) ಕಾಮವನ್ನೂ, ಮಿರೈಯಾಹ- ಪೂಂಡೇನ್ = ದೋಷವುಳ್ಳವುಗಳೆಂದು ಪಡೆದೆನು. ಅಡಿಮೈಯಿನಿಲ್ - (ನಿನ್ನ) ಸೇವೆಯಲ್ಲಿ ಮೀಂಡೇನ್ = ಮತ್ತೆ ಹಿಂತಿರುಗಿ ಬಂದೆನು. ಇರುಳುಂ : (ಅಜ್ಞಾನವೆಂಬ) ಕಗ್ಗತ್ತಲನ್ನೂ, ಮರುಳುಂ = ವಿಪರೀತ ಜ್ಞಾನವನ್ನೂ, ತರುಂ = ಕೊಡುವ, ಅನಾಳ್ - ಆ (ಮರಣ) ಸಮಯದಲ್ಲಿ, ಎಳಿಲ್ -ಆರ್ - ಸೌಂದಯ್ಯ ಪೂರ್ಣವಾದ, ಆಳಿ-ತಂಗಂ ಚಕ್ರವನ್ನೂ, ಶಂಖವನ್ನೂ, ಏ = ಧರಿಸಿ, ಅರುಳುಂ = ಕೃಪೆಯನ್ನೂ, ತೆರುಳು0 : ಜ್ಞಾನವನ್ನೂ, ತರ = (ನನಗೆ) ಕೊಡುವುದಕ್ಕಾಗಿ, ಎನ್-ಪಾಲ್ -ಂದು-ಅರುಳ್ - ನನ್ನ ಹತ್ತಿರ ಬಂದು ಕರುಣಿಸು.

ತಾತ್ಪರ :- ಶಿಶುತನದಲ್ಲಿಯೇ ತೊಟ್ಟಿಲಲ್ಲಿ ಮಲಗಿರುವಾಗ ನಿನ್ನನ್ನು ಕೊಲ್ಲಲು ಬಂದ ಶಕಟಾಸುರನನ್ನು ಒದ್ದು ಕೊಂದವನೇ ! ಏಳು ಲೋಕಗಳನ್ನೂ, ಪ್ರಳಯಕಾಲದಲ್ಲಿ546 ‘ನವರತ್ನಮಾಲೆ ತನ್ನುದರಲ್ಲಿರಿಸಿಕೊಂಡು, ಮತ್ತೆ ಸೃಷ್ಟಿಕಾಲದಲ್ಲಿ ಹೊರಪಡಿಸಿ, ತ್ರಿವಿಕ್ರಮಾವತಾರದಲ್ಲಿ ಅದನ್ನು ಅಳೆದವನೇ ! ನಿನ್ನಡಿಯ ಸೇವಕರ ಸತ್ಯಮೂರ್ತಿಯಾಗಿ, ತಿರುವಹೀಂದ್ರಪುರದಲ್ಲಿ ವಿರಾಜಿಸುವ ದೇವನಾಯಕನೇ ! ಅರ್ಥಗಳಿಂದಲೂ, ಕಾಮಗಳಿಂದಲೂ ಬರುವ ಕೇಡುಗಳನ್ನು ನೆನೆದು, ಅವು ನನಗೆ ಸರಿಯಲ್ಲವೆಂದು ಅವನ್ನು ಪರಿತ್ಯಜಿಸಿದನು. ಈಗ ನಿನ್ನ ಸೇವೆಗೈವುದೊಂದೇ-ಉತ್ತಮ ಫಲದಾಯಕವೆಂದು ಚೆನ್ನಾಗಿ ಅರಿತುಮಾಡುತ್ತಿರುವೆನು. ಅಜ್ಞಾನವೂ ವಿಪರೀತಜ್ಞಾನವೂ ತುಂಬಿರುವಂತಹ ಅಂತ್ಯಕಾಲದಲ್ಲಿ ನಿನ್ನನ್ನು ನಾನು ನೆನೆಯದಿದ್ದರೂ ಈಗ ಪ್ರಾರ್ಥಿಸುತ್ತಿರುವುದನ್ನೇ ಕೊಂಡು, ಅಜ್ಞಾನವೆಂಬ ಶತ್ರುವನ್ನು ಅಳಿಸಬಲ್ಲ ಚಕ್ರದೇವನನ್ನೂ ಒಳ್ಳೆಯ ಜ್ಞಾನವನ್ನು ಕೊಡಬಲ್ಲ ಶಂಖವನ್ನೂ ಧರಿಸಿ ಬಂದು, ನಿನ್ನಡಿಯ ಅಡಿಗನಾದ ನನ್ನ ಮೇಲೆ ದಯೆಯನ್ನು ಬೀರಬೇಕೆ. चलितशकटमर्दिन् ! सप्तलोकीं ग्रसित्वा । 9f faaa! THEHGTH ! ॥ अनलसदृशकामं वित्त मप्यत्यजं तत् । पुनरपि वरिवस्या मेव ते प्राप्नवं च ॥ अज्ञानेनान्यथाज्ञाने काले त्वं चक्रशङ्खधृत् । कारुण्यज्ञानदानाय तनुष्वानुग्रहं मयि ॥ ಮೂಲ : ವಂಚನೈಶೆಯ್‌ಪೂತನಿಯೆಮಲಿಯುಂ ಶಾಟ್ಸ್, ಮಲ್ಲರೈಯೋರ್ ಮದಕಳಿವಾನೋರಂಜುಂ, ಕಂಜನೈಮುನ್‌ಡಿದ್ದವನಿಬಾರಂ ತೀರ್ತ, ಕಾವಲನೇ ಕೋವಲನಾಯ್ ನಿನ್ನಕೋವೇ, ಅಂಜನಮುಂ ಕಾಯಾವುಮನೈಯಮೇನಿ, ಅಡಿಯವರು ಮೆಯ್ಯನೇ ! ಅಯಿನೆವಾಳು, ಮಂಜೇನವೇಯರುಳ್ ಪೊಳಿಯುಂವಳ್ಳಲೇನಿನ್, ವಡಿವಳಹುಮರವಾದಾರ್ ಪಿರವಾದಾರೇ ॥ १ २ 6 ಅರ್ಥ :- ವಂಚನೈ-ಶೆಯ್ -ಪೂತನಿಯ್ಯ : ವಂಚಿಸಕೊಲ್ಲಲು ಬಂದ ಪೂತನಿಯನ್ನೂ, ಮಲಿಯುಂ-ಶಾಟ್ಸ್ = ಹಿಂಸಿಸಿ ಪ್ರಾಣಕಳೆಯಲು ಬಂದ ಶಕಟಾಸುರನನ್ನೂ, ಮಲ್ಲರೆ : ಜಟ್ಟಿಗಳನ್ನೂ, ಓರ್ -ಮದ-ಕಳಿ = ಅಪ್ರತಿಮವಾದ ಮತ್ತು ನವರತ್ನಮಾಲೆ 547

ಮದಿಸಿದ ಆನೆಯಾದ ಕುವಲಯಾ ಪೀಡವನ್ನೂ, ವಾನೋರ್ -ಅಂಜುಂ-ಕಂಜನ್ಯ ದೇವಾಧಿದೇವತೆಗಳೂ ಹೆದರುವಂತಹ ವೀರವುಳ್ಳ ಕಂಸನನ್ನೂ, ಮುನ್ -ಕಡಿನ್ನು = ಹಿಂದೆಯೇ ಕೊಂದು, ಅವನಿ-ಬಾರಂ-ತೀರ್ತ : ಭೂದೇವಿಯ ಭಾರವನ್ನು ಕಡಿಮೆಮಾಡಿದ, ಕಾವಲನೇ = ಸಜ್ಜನಪರಿಪಾಲಕನೇ ! ಕೋವಲನಾಯ್ -ನಿನ್ನ-ಕೋವೇ ಗೋಪಕುಮಾರನಾಗಿ ಸಂರಕ್ಷಿಸುವ ಗೋಪಾಲನೇ ! ಅಂಜನ ಮುಂಕಾಯಾವುಂ- ಅನೈಯ-ಮೇನಿ = ಕಣ್ಣಿಗೆ ಹಚ್ಚುವ ಕಪ್ಪಿನ ಮತ್ತು ಅಗಸೆಯ ಬಣ್ಣವನ್ನು ಹೋಲುವ ದಿವ್ಯಮಂಗಳ ವಿಗ್ರಹನಾದ, ಅಡಿಯವರು -ಮೆಯ್ಯನೇ : ಭಕ್ತರಸತ್ಯನೇ ! ಅಯಿಂ-ವಾಳುಂ-ಮಂಶು-ಎನವೇ - ತಿರುವಹೀಂದ್ರಪುರದಲ್ಲಿ ನಿತ್ಯವಾಸಮಾಡುವ ಮೇಘವೋ ಎಂಬಂತೆ, ಅರುಳ್ -ಪೊಳಿಯುಂ-ವಳ್ಳಲೇ= ದಯೆಯೆಂಬ ನೀರನ್ನು ಸುರಿಸುವ ಉದಾರನೇ ! ನಿನ್-ಡಿವು-ಅಳಹು - ನಿನ್ನ ದಿವ್ಯರೂಪದ ಸೌಂದರವನ್ನೂ ಮರವಾದಾರ್ : ಮರೆಯದ ಮಹಾನುಭಾವರು, ಪರವಾದಾರೇ : ಮತ್ತೆ ಜನ್ಮತಾಳರು, ನಿತ್ಯಾನಂದವನ್ನನುಭವಿಸುವರು.

ತಾತ್ಸರ :- ಭಕ್ತಶಿರೋಮಣಿಗಳ ಸತ್ಯನೇ ! ಹಿಂದೆ ಪೂತನಿ- ಶಕಟಾಸುರ -ಮುಷ್ಟಿಕಾಸುರ ಚಾಣೂರಾದಿ ಮಲ್ಲರು-ಕುವಲಯಾಪೀಡವೆಂಬ ಮದ್ದಾನೆ-ವೀರಾಗ್ರಣಿಯಾದ ಕಂಸ ಮೊದಲಾದವರನ್ನು ಧ್ವಂಸಮಾಡಿ, ಭೂದೇವಿಯ ಹೊರೆಯನ್ನು ಇಳಿಸಿ, ಸಾಧುಸಂತರನ್ನು ಸಂರಕ್ಷಿಸಿದೆ, ಇಷ್ಟೊಂದು ಹಿರಿಮೆ ಮಹಿಮೆಗಳಿಂದ ಕೂಡಿದವನಾಗಿದ್ದರೂ ಗೊಲ್ಲಕೇರಿಯಲ್ಲಿ ಗೋಪಾಲಕನಾಗಿರುತ್ತಾ, ನಿನ್ನ ಸೌಲಭ್ಯ ಸೌಶೀಲ್ಯಾದಿ ದಿವ್ಯಗುಣಗಳನ್ನು ಜಗತ್ತಿಗೇ ತೋರಿಸಿದೆ. ತಿರುವಹೀಂದ್ರಪುರದಲ್ಲಿ ನಿತ್ಯ ವಾಸಮಾಡುವ ನೀಲಮೇಘವೊಂದು ಭಕ್ತರೊಡನೆ ಮಾತಾಡುವಂತೆ ಕರುಣೆಯೆಂಬ ನೀರನ್ನು ಸುರಿಸುತ್ತಿರುವ ನಿನ್ನ ಔದಾರಗುಣವನ್ನು ಏನೆಂದು ಬಣ್ಣಿಪೆನು. ಅಂಜನವರ್ಣನೂ ಅತಸಿಯವರ್ಣದ ವಿಗ್ರಹನೂ ಆದ ನಿನ್ನ ದಿವ್ಯಕಾಂತಿಯನ್ನು ಮರೆಯದೆ ಅನುಭವಿಸುವವರು ಕರ್ಮಬಂಧವನ್ನು ಬಿಡಿಸಿಕೊಂಡು, ನಿತ್ಯಾನಂದ ಸುಖವನ್ನು
ಪಡೆಯುವರು.
वञ्चनाकृतिं च नूतनां नृशंसशाकटं
मल्लमत्तवारणांश्च भीकरं दिवौकसाम् । कंस मादित: प्रमर्द्य भूमिधूर्निवारण !
age ! Tr ! Taale ! red ॥ अञ्जनातसीसवर्णवर्णनीयविग्रह !
भोगिपूरधिष्ठवारिमुदयैकवार्षुक ! |
.

548 ನವರತ್ನಮಾಲೆ भो वदान्य ! भक्तसत्य ! दिव्यमङ्गलाकृतेः ये हि तेऽतिचारुतां न विस्मरन्ति तेऽमराः ॥ ಮೂಲ : ಮೈಯುಮಾಕಡಲುಂ ಮಯಿಲುಮಾಮಳ್ಳೆಯುಂ ಮಣಿಹಳುಂಕುವಳ್ಳಿಯುಂಕೊಂಡ,

ಮೆಯ್ಯನೇ ! ಯಡಿಯೋರ್‌ಮೆಯ್ಯನೇ ! ಎಷ್ಟೋ ರೀಶನೇ! ನೀಶನೇನಡೈನೇನ್, ಕೈಯುಮಾಳಿಯುವಾಯ್ಳಿರುಕಾವನೇ ! ಕಾಲನಾರ್ ತಮರೆನೈಕ್ಕವರಾದು, ಐಯನೇ ! ವನ್ದನಇಲೆರುಳನ್ ಅಯಿಮಾನಗರಮರ್‌ನಾನೇ ॥

२ 7 ಅರ್ಥ :- ಮೈಯುಂ = (ಕಣ್ಣಿಗಿಡುವ) ಕಪ್ಪ ಮಾ-ಕಡಲುಂ = ಮಹಾಸಾಗರವೂ, ಮಯಿಲುಂ : ನವಿಲೂ, ಮಾ-ಮಳ್ಳೆಯುಂ : ಹಿರಿಮೆಯುಳ್ಳ ಮೇಘವೂ, ಮಣಿಹಳುಂ ಇಂದ್ರನೀಲಮಣಿಗಳೂ, ಕುವಳ್ಳಿಯುಂ : ಕನ್ನೈದಿಲೆಹೂವು, (ಅಂದರೆ ಇವುಗಳ ಸ್ವಭಾವವನ್ನೂ) ಕೊಂಡ = ಹೊಂದಿರುವ, ಮೆಯ್ಯನೇ ! ಶರೀವುಳ್ಳವನೇ ! ಅಡಿಯೋರ್- ಮೆಯ್ಯನೇ : ದಾಸರ ಸತ್ಯನೇ ! ವಿಕ್ಟೋರ್ -ಈಶನೇ : ನೀಶನೇನ್ - ನೀಚನಾದ ನಾನು, ಅಡೈಂದೇನ್ : (ನಿನ್ನನ್ನು ಶರಣು ಹೊಂದಿದೆನು. ನಿತ್ಯಸೂರಿಗಳಧಿಪತಿಯೇ!, ಕೈಯ್ಯುಂ- ಆಳಿಯುಂ-ಆಯ್ = ಕೈಯಲ್ಲಿ ಚಕ್ರವನ್ನು ಧರಿಸಿದವನಾಗಿ, ಕಳಿರು-ಕಾತ್ತವನೇ - ಗಜೇಂದ್ರನನ್ನು ಸಂರಕ್ಷಿಸಿದವನೇ ! ತೆನ್ -ಅಯಿಂದೈ -ಮಾ-ನಗರ್ -ಅಮರ್‌ಾನೇ : ರಮ್ಯವಾದ ತಿರುವಹೀಂದ್ರಪುರದಲ್ಲಿ ನಿತ್ಯವಾಸಮಾಡುವವನೇ ! ಐಯನೇ - ಸ್ವಾಮಿಯೇ! ಕಾಲನಾರ್ -ತಮರ್ = ಯಮಭಟರು, ಎ-ಕವರಾದು : ನನ್ನನ್ನು ಕರೆದುಕೊಂಡು ಹೋಗದಂತೆ, ಅನ್ನು-ವಂದು : ಅಂದು ಬಂದು, ಅಂಜಲ್ -ಎನ್ನು-ಅರುಳ್ ಅಂಜದಿರು ಎಂದು ಹೇಳಿ ಕರುಣಿಸು.

ತಾತ್ಪರ:- ಕಣ್ಣಿಗಿಡುವ ಕಾಡಿಗೆಯೂ ಗಂಭೀರವಾದಮಹಾಸಾಗರವೂ ಬಣ್ಣಬಣ್ಣಗೊಂಡ ನವಿಲೂ, ನೀರು ಸುರಿಸುವ ಮೇಘವೂ, ನೀಲಮಣಿಯೂ ಮತ್ತು ಕನ್ನೈದಿಲೆಹೂವು ಇವೆಲ್ಲವನ್ನೂ ಹೋಲುವ ದಿವ್ಯ ದೇಹಕಾಂತಿಯುಳ್ಳ ದೇವನಾಯಕನೇ ! ನಿನ್ನನ್ನು ಶರಣುಹೋಗಿರುವೆನು. ಕೈಯಲ್ಲಿರುವ ಚಕ್ರದಿಂದ ಮೊಸಳೆಯ ಬಾಯಿಗೆ ಸಿಕ್ಕಿದ್ದ ಗಜೇಂದ್ರನನ್ನು ಸಂರಕ್ಷಿಸಿದಂತೆ, ನನ್ನ ಅಂತ್ಯಕಾಲದಲ್ಲಿ ಯಮದೂತರು ಬಂದು, ಸೆಳದುಕೊಂಡು ಹೋಗಿ ನೋಯಿಸದಹಾಗೆ ನೀನು ನನಗೆ ಅಭಯವನ್ನಿತ್ತು ಕಾಪಾಡಿ, ಕರುಣಿಸಬೇಕು. ನವರತ್ನಮಾಲೆ सावर्ण्यस्याञ्जनाम्भोनिधिमुदिरमयूरेन्द्रनीलोत्पलैश्च । Ta: ! Aaat I aasa fa: ! at fat ಇ Had: ! art ! fur 3qaa ! V and 1 549% मा भी रित्येव चोक्त्वा नहि यमभटसात् स्यां तथा पाहि काले ॥ ७ ಮೂಲ : ಮಂಜುಲಾವು ಶೋಲೈಳಯಿ ಮನ್ನುಮನ್ನುಶೀರ್, ವರೈಯೆಡುತ್ತುನಿರೈಯಳಿತ್ತುಮಾಶಿಲ್ ವಾಶುದೇವನೇ, ಶೆಂಜೊಲಸ್ಟರ್‌ನ್ಸ್‌ಕೊಂಡು ತೀದಿಲಾದತೂದನಾಯ್, ತೇರುಮೂರ್‌ನ್ನು ತೇಶುಯರ್‌ನ್ದ ಶೆದೆಯನಾಯಕಾ, ವೆಂಜೊಲಾಳರ್‌ ಕಾಲದೂತರ್‌ ವೀಶುಪಾಶಂವನ್‌ ಮೇಲ್, ವಿಳುನ್ಗಳುಯಾನಯರ್‌ನ್ನು ವೀಳದರುಮುನ್ನನೀ ಅಂಜಲಂಜಲಂಜಲೆನಳಿಕ್ಕ ವೇಂಡುಮಚ್ಯುತಾ ಅಡಿಯವರ್ಕ್ಕುಮರುಳಿಯಕ್ಕುಮಡಿಯವರುಮೆಯ್ಯನೇ II

ಅರ್ಥ :- ಮಂಜು-ಉಲಾವು - ಮೇಘಗಳು ಸಂಚರಿಸುವ, ಶೋಲೆ-ಶೂಳ ವನಗಳಿಂದ ಸುತ್ತಗಟ್ಟಲ್ಪಟ್ಟ, ಅಯಿಂದೈ -ಮನ್ನುಂ : ತಿರುವಹೀಂದ್ರಪುರದಲ್ಲಿ ನಿತ್ಯ ವಾಸಮಾಡುವ, ಶೀರ್ ಕಲ್ಯಾಣಗುಣಗಳುಳ್ಳವನೂ, ವರ-ಎಡುತ್ತು ಗೋವರ್ಧನಗಿರಿಯನ್ನು ಎತ್ತಿ, ನಿರೈ - ಅಳಿತ್ತ : ಹಸುಗಳ ಮಂದೆಯನ್ನು ಕಾಯ್ದು ಮಾಶು-ಇಲ್ - ನಿರ್ದೋಷಿಯಾದ, ವಾಸುದೇವನೇ - ವಸುದೇವ ಕುಮಾರನೇ ! ಶೆಂಜೊಲ್ -ಅನ್ಸರ್ : ಕ್ಷೇಮವಾಗುವ ಮಾತುಗಳನ್ನಾಡಿ, ಪ್ರಿಯರಾದ ಪಾಂಡವರ, ಶಿಂದೆ-ಕೊಂಡು = ಚಿಂತೆಯನ್ನೇ ಮಾಡುತ್ತಾ ತೀದು-ಇಲಾದ-ದೂತನಾಯ್ = ಯಾವ ದೋಷವೂ ಇಲ್ಲದ ದೂತನಾಗಿ, ತೇರುಂ-ಊರ್‌ನ್ನು - ರಥವನ್ನೂ ನಡೆಸಿ, ದೆಯ್ದನಾಯಕಾ :

  • ದೇವನಾಯಕನೇ ! ಅಚ್ಚುತಾ - (ಆಶ್ರಿತರನ್ನು ಕೈಬಿಡದವನೇ ! ಅಡಿಯವರು = ಭಕ್ತರಿಗೆ, ಮರುಳ್ -ಇಯಕ್ಕುಂ : ಅಜ್ಞಾನವನ್ನು ಹೋಗಲಾಡಿಸುವ, ಅಡಿಯವರು-ಮೆಯ್ಯನೇ = ಭಕ್ತರ ಸತ್ಯನೇ ! ವೆಂ-ಶೂಲ್ -ಆಳರ್ : ಕಟಕಿಗಳನ್ನು ಹೇಳುವ, ಕಾಲದೂತರ್ = ಯಮದೂತರಿಂದ, ಶು-ಪಾಶಂ - ಬೀಸಲ್ಪಡುವ ಬಲೆಯು, ಎನ್-ಮೇಲ್ - ನನ್ನಮೇಲೆ, ನಂದು ವಿಳುನು = ಬಂದು ಬಿದ್ದು ಅದಕ್ಕೆ ಸಿಕ್ಕಿಕೊಳ್ಳುವಾಗ, ಯಾನ್ -ಅಯರ್‌ನ್ನು - ನಾನು ಹೆದರಿ ಬೆಪ್ಪಾಗಿ, ವೀಳದರು-ಮುನ್ನಂ = ಬೀಳುವುದಕ್ಕೆ ಮೊದಲೇ, ನೀ - ನೀನು, ಅಂಜಲ್ -ಅಂಜಲ್ - ಅಂಜಲ್ -ಎನ್ನು = ಹೆದರಬೇಡ, ಹೆದರಬೇಡ, ಹೆದರಬೇಡ ಎಂದು. ಅಕ್ಕವೇಂಡುಂ = ಕಾಪಾಡಬೇಕು.

! 550 ನವರತ್ನಮಾಲೈ ತಾತ್ಪರ :- ಮೋಡಗಳು ಬಂದು ತಂಗಿ ಅಲ್ಲಲ್ಲೇ ಓಡಾಡುವಂತೆ ಬಹಳ ಉನ್ನತವಾದ, ತೋಟಗಳಿಂದ ಕಂಗೊಳಿಸುವ ತಿರುವಹೀಂದ್ರಪುರದಲ್ಲಿ ನಿತ್ಯವಾಸಮಾಡಿ, ಭಕ್ತರಿಗೆ ಅಜ್ಞಾನವನ್ನು ನೀಗಿ, ಅನುಗ್ರಹಿಸುವ ಭಕ್ತರ ಸತ್ಯನೇ ! ಗೋವರ್ಧನ ಗಿರಿಯನ್ನೆತ್ತಿ ಗೋ ಗೋಪರೆಲ್ಲರನ್ನೂ ಕಾಪಾಡಿದೆ, ಸತ್ಯವನ್ನೇ ನುಡಿಯುವ ಪಾಂಡವರ ಪ್ರಾರ್ಥನೆಯನ್ನು ಅಂಗೀಕರಿಸಿ, ಅವರಿಗಾಗಿ ದೂತತನವನ್ನು ಆಶ್ರಯಿಸಿ, ಕೃಪೆ ಮಾಡಿದೆ, ಅರ್ಜುನನಿಗೆ ಸಾರಥಿಯಾಗಿದ್ದು, ತತ್ವಪದೇಶಮಾಡಿದ್ದರಿಂದ ನಿನ್ನ ಹಿರಿಮೆಯನ್ನು ಹೆಚ್ಚಾಗಿ ತೋರಿಸಿಕೊಂಡೆ. ಹೀಗೆ ಹಲವಾರು ಮಂದಿ ನಿನ್ನ ಭಕ್ತರಿಗೆ ಆಪತ್ಕಾಲದಲ್ಲಿ ರಕ್ಷಣೆಯನ್ನಿತ್ತೆ, ಇವನ್ನೆಲ್ಲಾ ಚಿಂತಿಸಿ, ನಿನ್ನನ್ನು ಶರಣುಹೋದ ನಾನು ಯಮದೂತರು ಬಂದು ಪಾಶವನ್ನು ಬೀಸಲು, ಅದರಿಂದ ಗಾಬರಿಗೊಳ್ಳುವ ಮುನ್ನವೇ ನೀನು ಬಂದು ಅಭಯಪ್ರದಾನಮಾಡಿ ನನ್ನನ್ನು ಕಾಪಾಡಿ, ದಯೆಗೈಯ್ಯಬೇಕು. विचारिमेघकाननावृताहिपूस्स्थ ! सद्गुणिन् ! | ತಾನ ! IG ! 3g ! aga ! : ॥ स्वकीयाकौशलोक्तिसक्तचित्त ! पूतदूत्यभाक् । नियन्तृताभिवृद्धकीर्तिवित्त ! देवनायक ! alli ! ! : 1 यदा कटूक्तिकालदूतपाशपाशितो भयात् ॥ पतेय माशु पूर्व मेव मेऽभयप्रदोऽच्युत ! बिभीहि मा बिभीहि मा बिभीहि मेति पाहि माम् ॥ ಮೂಲ : ಪೊರುತ್ತಂ ಪೊರುನ್ನಲುಂ ಪೋಕಿನವರುಡನ್ನೊಯ್ಯದಿಮೇಲ್, ವಿರುತ್ತಂ ಕಲಿತ್ತುರೈಮೇವುಮಳ ಮದವೇರಿನಿಯನ್, ತಿರುತ್ತಮನನಿಲ್ ಶೇರಾವೆಮೈಯ್ಯನಾಯಕನಿನ್, ವರುತ್ತಂ ಪೊರಾವರುಳಾಲ್ ಮನ್ನಡಕ್ಕಲಂ ಕೊಣ್ಣೂರುಳೇ ॥

२ 9 ಅರ್ಥ :- ದೆಯ್ಯನಾಯಕಾ - ದೇವನಾಯಕನೇ ! ಪೊರುತ್ತಂ-ಪೊರುಂದಲುಂ = (ನಿನ್ನ ಸಂಕಲ್ಪಕ್ಕೆ ತಕ್ಕಂತೆ ಚೇತನರೊಂದಿಗೆ) ಹೊಂದಿಕೆಯುಂಟಾದಾಗ, ತವತ್ತುಡನ್ ತಪ್ಪುಗಳೊಂದಿಗೆ, ಪೊಮ್‌ಮತಿ - ಅಜ್ಞಾನವೂ, ಮೇವ್ : ಅದಕ್ಕೂ ಮೇಲೆ, ವಿರುತ್ತಂ = ವಿಪರೀತಜ್ಞಾನವೂ, ಕಲಿತ್ತು-ಉರೈ-ಮೇವುಂ = ಉಂಟಾಗಿ ನೆಲೆಯಾಗಿರುವ, ಅಳಿಲ್ = ಬೆಂಕಿಯಂತಹ ಕಾಮವೂ, ಮದಂ : ಕೊಬ್ಬು, ಪೋಹುಂ : ಬಿಟ್ಟುಹೋಗುವುವು,

ನವರತ್ನಮಾಲೈ 551 ಮನತ್ತಿನಿಲ್ -ತಿರುತ್ತಂ-ಶೇರಾ-ಎಮ್ಮೆ = ಮನಸ್ಸಿನಲ್ಲಿ ತಿದ್ದಿಕೊಳ್ಳದ ನಮ್ಮನ್ನು ವರುತ್ತಂ-ಪೋರಾ - (ಇತರರ) ದುಃಖವನ್ನು ಸಹಿಸಲಾರದ, ನಿನ್ -ಅರುಳಾಲ್ : ನಿನ್ನ ಕರುಣೆಯಿಂದ, ಮನ್ -ಅಡೈಕ್ಕಲಂ-ಕೊಂಡು-ಅರುಳ್ : ಸ್ಥಿರವಾಗಿ ರಕ್ಷಿಸಲ್ಪಡುವ ವಸ್ತುವನ್ನಾಗಿ ಸ್ವೀಕರಿಸಿಕೊಳ್ಳುವಂತೆ ಕೃಪೆಮಾಡು, ಇನಿ-ವೇರು-ಎನ್ - ಇದಕ್ಕಿಂತ ಬೇರೆ ಉತ್ತಮವಾದುದು ಏನಿದೆ ? ನಾವು ಬೇಡುವಂತಹುದು. ತಾತ್ವರ - ದೇವನಾಯಕನೇ ! ನಿನ್ನ ಸತ್ಯಸಂಕಲ್ಪಕ್ಕೆ ಅನುಗುಣವಾಗಿಯೇ ತಾನು ನಡೆದುಕೊಳ್ಳುವ ಚೇತನನಿಗೆ, ಅವನು ಮಾಡಿದ ಅಪರಾಧಗಳು, ಅಜ್ಞಾನ, ವಿಪರೀತ ಜ್ಞಾನ, ಬೆಂಕಿಯಂತೆ ಮೇಲೆಮೇಲೆ ಬೆಳೆದು ಬರುವ ಕಾಮ ಮತ್ತು ಗರ್ವ ಇವೆಲ್ಲವೂ ನಶಿಸಿಹೋಗುವುವು. ನನ್ನ ಮನಸ್ಸಾದರೋ ಅಂತಹ ಪರಿಪಕ್ವವಾದ ಸ್ಥಿತಿಯನ್ನು ಪಡೆಯದೇ ಇದೆ. ಆದರೂ ಇತರರ ದುಃಖವನ್ನು ನೋಡಲು ಸಹಿಸದ ನಿನ್ನ ಕರುಣೆಯಿಂದ ನನ್ನನ್ನೂ ರಕ್ಷಿಸಲ್ಪಡಬೇಕಾದ ವಸ್ತುವೆಂದು ನಿನ್ನ ಪಾದಗಳಲ್ಲಿಯೇ ಸೇರಿಸಿಕೊಳ್ಳಬೇಕು. ಇಷ್ಟವಿಲ್ಲದೇ ಇನ್ನೇನುತಾನೇ ನಾನು ಬೇಡಲಿ ? ಬೇಡಲು ಮತ್ತೇನೂ ಇಲ್ಲ. મ त्वत्सङ्कल्पोऽनुकूलो भवति यदि तदा चेतने देवनाथः ! | अज्ञानं चापराधा: विमतिरपि समारूढकामोऽग्निकल्पः ॥ गर्वश्वापि त्यजन्ति ह्यनुपदमपितु स्वान्तशिक्षाविहीनम् । सोढुं मामक्षम स्त्वं समव करुणया रक्ष्यमन्यद्वृणे किम् ? ಮೂಲ : ಅನ್ದಮಿಲ್‌ರಯಿನಗರಮರ್‌ನ್ದನಾದನ್ ಅಡಿಯಿಮೇಲಡಿಯುರೈ ಯಾಲೈಮ್‌ದೇ, ಶಿಕವರ್‌ ಪಿರಾಕಿರುತನೂರುಕೂರಿ ಶಬ್ದಮಿ ಮುಮ್ಮಣಿಕ್ಕೋವೈಶೆರಿಯಚೇರ್ತು, ಪಕ್ಷುಕಳಲಮ್ಮಾನೈಯೂಶಲೇಶಲ್ ಪರವುನವಮಣಿಮಾಲೈಯಿವೈಯುಂನ್ನೇನ್, ಮುನ್ಸ್‌ ಮರೈಮೊಯ್ಯವಳಿಮೊಳಿನೀಯನ್ನು ಮುಕುನ್ದನರುಳ್‌ ತನ್ನಪಯನ್ ಪೆತ್ತೇನ್‌ನಾನೇ ॥ 10

ಅರ್ಥ :- ಅಂತಂ-ಇಲ್-ಶೀರ್ = ನಿರವಧಿಕ ಮಹಿಮೆಯುಳ್ಳ, ಅಯಿಂದೈ, ನಗರ್ ತಿರುವಹೀಂದ್ರಪುರದಲ್ಲಿ, ಅಮರ್‌ನ್ನ-ನಾದನ್ : ಸದಾ ವಾಸಮಾಡುವ ದೇವನಾಯಕನ, ಅಡಿ-ಇ-ಮೇಲ್ : ಎರಡು ಪಾದಾರವಿಂದಗಳ ಮೇಲೂ, 552

ನವರತ್ನಮಾಲೈ

ಅಡಿ-ಉರೈಯಾಲ್ - (ಎಲ್ಲಾ ಭಾಷೆಗಳಿಗೂ ಮೂಲವಾದ ಸಂಸ್ಕೃತ ಭಾಷೆಯಲ್ಲಿ ಐಂ-ಪತ್ತು-ಏತ್ತಿ : (ದೇವನಾಯಕ ಪಂಚಾಶತ್ ) ಐವತ್ತು ಶ್ಲೋಕಗಳಿಂದ ಸ್ತುತಿಸಿ,
ಶಿಂದೈ-ಕವರ್ = ಮನಸ್ಸನ್ನು ಆಕರ್ಷಿಸುವ, ಪಿರಾಕಿರುತಂ-ನೂರು-ಕೂರಿ : (ಅಚ್ಯುತ ಶತಕಂ) ಪ್ರಾಕೃತದಲ್ಲಿ ನೂರು ಪದ್ಯಗಳನ್ನು ಹೇಳಿ, ಶಂ-ತಮಿಳ್ = ಅಂದವಾದ ತಮಿಳಿನಲ್ಲಿ, ಮುಮ್ಮಣಿಕ್ಕೋವೈ – ಈ ಹೆಸರಿನ ಪ್ರಬಂಧವನ್ನೂ ತೆರಿಯ-ಶೇರ್ತು - ಅರ್ಥವು ಬಹಳ ಚೆನ್ನಾಗಿ ಒಪ್ಪುವಂತೆ ಸೇರಿಸಿ, ಪಂದು-ಕಳಲ್ -ಅಮಾನ್ಯ- ಊಶಲ್ -ಏಶಲ್ - ಪರವುನಮಣಿಮಾಲೈ : ಪಂದ್, ಕಳಲ್, ಅಮಾನ್ಯ, ಊಶಲ್, ಏಶಲ್, ಎಲ್ಲರೂ ಕೊಂಡಾಡುವಂತಹ ನವರತ್ನಮಾಲೆ,’’ ಎಂಬ, ಇವೈಯುಂ-ತೊನ್ಸನ್ - ಇವಲ್ಲವನ್ನೂ ಪಾಡಿದೆನು. ಮುಂಬೈ-ಮರೈ -ಮೊಯ್ಯ - ಅನಾದಿವೇದಗಳು ಕೊಂಡಾಡಿದ, ವಳಿ : ಮಾರ್ಗದಲ್ಲೇ (ಅದೇ ಅರ್ಥವನ್ನು), ನೀ-ಮೊಳಿ-ಎನ್ನು = ನೀನು ಈ ಪ್ರಬಂಧಗಳ ಮೂಲಕ ಪಾಡು ಎಂದು, ಮುಕುಂರ್ದ, ಅರುಳ್ -ತಂದ-ಪಯನ್ - ಪರಮಾತ್ಮನು ತೋರಿದ ದಯೆಗೆ ಅವನ ಆಜ್ಞೆಯ ಫಲವನ್ನು, ನಾನ್ -ಪೆತೇನ್ - ನಾನು ಪಡೆದನು.

ತಾತ್ಪರ :- ಹಿರಿಮೆಯಲ್ಲಿ ಮುಂದಾಗಿ ಮೆರೆಯುವ ತಿರುವಹೀಂದ್ರಪುರದಲ್ಲಿ ಕಂಗೊಳಿಸುವ ದೇವನಾಯಕನು ನನಗೆ “ವೇದಗಳು ಮೊಳಗುವ ಅರ್ಥಗಳನ್ನು ಸ್ತೋತ್ರರೂಪವಾಗಿ ನೀನು ಪಾಡು” ಎಂದು ಅಣಿತಿಯಿತ್ತನು. ಅದನ್ನು ಶಿರಸಾವಹಿಸಿ, ಎಲ್ಲಾ ಭಾಷೆಗಳಿಗೂ ಮೂಲವೆನಿಸಿರುವ ಸಂಸ್ಕೃತದಲ್ಲಿ ‘ದೇವನಾಯಕ ಪಂಚಾಶತ್ತ’‘ನ್ನೂ, ಸರಸ್ವತಿಗೆ ಅತಿಮೆಚ್ಚಿಗೆಯಾದ ಮತ್ತು ಸತ್ವರ ಮನಸ್ಸನ್ನೂ ಆಕರ್ಷಿಸುವಂತಹ ಪ್ರಾಕೃತಭಾಷೆಯಲ್ಲಿ ಅಚ್ಯುತಶತಕಂ’’ ಎಂಬುದನ್ನೂ, ಸರಳವೂ, ರಮ್ಯವೂ ಆದ ತಮಿಳಿನಲ್ಲಿ (ಪಂದು, ಕಳಲ್, ಅಮಾನ್ಯ, ಊಶಲ್, ಏಶಲ್, ಇವಿಷ್ಟೂ ಉಪಲಬ್ಧಯಿಲ್ಲ) ನವಮಣಿಮಾಲೈಯನ್ನೂ ಸೊಗಸಾಗಿ ಪಾಡಿ, ಅವನ ಆಜ್ಞಾಫಲಕ್ಕೆ ಭಾಗಿಯಾದೆ, ಈ ಒಂಬತ್ತೂ ದೇವನಾಯಕನ ವಿಷಯವಾದುದೆಂದು ತಂತ್ರವಾಗಿ ನವಮಣಿಮಾಲೆ ಎಂಬ ಪದದಿಂದ ಸೂಚಿಸಿ, ಮುಕುಂದನೆಂಬ ಪದದಿಂದ ಭೋಗಮೋಕ್ಷಗಳೆರಡನ್ನೂ ಕೊಡುವವನಾದುದರಿಂದ, ಪರಿಪಕ್ವಮನದವರು ಇಲ್ಲೇ ಪೂರ್ಣ ಬ್ರಹ್ಮಾನಂದಾ ನುಭವವನ್ನು ಪಡೆಯುವರು. ಪರಮಪದದಲ್ಲಿ ಅನುಭವಿಸುವುದನ್ನು ಹೇಳಬೇಕೇ ಎಂಬ ಭಾವವನ್ನು ಸೂಚಿಸಿರುವರು. لب अध्यासीनविसीमवैभवगुणाहीशानपूरीशितुः । पादाम्भोजयुगे गिरा सुमनसां पञ्चाशतं प्रोचिवान् ॥ हृद्यप्राकृतभाषया च शतकं सुद्राविडोक्त्याकृती: । स्वस्वाख्यानुगुणा स्त्रिरत्नविलसन्मालां सुबन्धां तथा ॥ १ ನವರತ್ನಮಾಲೈ गाधां कन्तु प्रधानां सुललितघटिकागाधिका हास्यपूर्णाः । कौबेराक्षिप्रमोदां नवमणिकलितां डोलिकागाधिकाश्च 1 एताः प्रीत्या ह्यवोचं नव च भगवत श्शासनस्यानुरूपम् । “त्रय्यन्तोक्तार्थजातं त्वमिह विशदये” त्याप्नवं तत्फलं च । श्रीमान् आम्नायचूडागुरुमणि रफणीत् रत्नमालां नवाद्याम् । रम्यां तामादितेयोक्तिभिरभिरचित्तैः हृद्यपद्यैस्समिद्धाम् ॥ कर्णाटोक्त्यर्थपूर्णां सकलबुघमुदेऽचीकरद्देवनाथः । श्रीमद्वेदान्तरामानुजगुरुकरुणाशालिगोपालवाचा ॥ 553 २ 1 ॥ಶ್ರೀಮತೇ ನಿಗಮಾಂತ ಮಹಾದೇಶಿಕಾಯ ನಮಃ ॥