विस्तारः (द्रष्टुं नोद्यम्)
ಅರಿಕೆ
ಕಂಚಿಯಲ್ಲಿ ವರದರಾಜನು ಬಿಜಯಮಾಡಿರುವ ಸ್ಥಳಕ್ಕೆ ಹಸ್ತಿಗಿರಿಯೆಂದು ಹೆಸರು. ಆ ಕ್ಷೇತ್ರದಲ್ಲಿ ಆಚರಿಸುವ ಕರ್ಮ, ವ್ರತಗಳೆಲ್ಲವೂ ಸತ್ಪಲವನ್ನು ಕೊಡುತ್ತವೆ. ಅರ್ಥಿಗಳಾದ ಭಕ್ತರ ಅಭೀಷ್ಟವನ್ನು ಈಡೇರಿಸಲು ಸತ್ಯವತ್ತನಾಗಿ ಭಗವಂತನಿರುವುದರಿಂದ ‘ಸತ್ಯವ್ರತ ಕ್ಷೇತ್ರ’ವೆನ್ನುವರು. ಬ್ರಹ್ಮನು ಅಶ್ವಮೇಧಯಾಗ ಮಾಡಿದಾಗ ಆ ಯಾಗವೇದಿಯಲ್ಲಿ ಆವಿರ್ಭವಿಸಿ, ಜಗದ ಪುಣ್ಯದಿಂದ ಇಂದಿಗೂ ಭಗವಂತನು ಅಲ್ಲಿ ವಿರಾಜಮಾನನಾಗಿರುವನು.
ಎಲ್ಲರಿಗೂ ಹಿತತಮವಾದವಿಷಯವು ವೇದಾಂತವು. ಇದನ್ನು ಉಪಬೃಂಹಿಸಲು ವಿವಿಧವಾದ ಪುರಾಣಗಳು ತೋರಿಕೊಂಡುವು. ಇವುಗಳಲ್ಲಿ ಮುಖ್ಯವಾದದ್ದು ಬ್ರಹ್ಮಾಂಡ ಪುರಾಣ’. ಇದರಲ್ಲಿ ಈ ಕ್ಷೇತ್ರದ ಮಹಿಮೆಯು ವರ್ಣಿತವಾಗಿದೆ. ಈ ಕ್ಷೇತ್ರದ ಮಹಿಮೆಯ ಸತ್ಯವನ್ನು ನಮ್ಮ ಶ್ರೀ ದೇಶಿಕರು ತಮ್ಮದೇ ಆದ ಅನಿತರಸಾಧಾರಣ ಶೈಲಿಯಲ್ಲಿ ತಿಳಿ ತಮಿಳಿನಲ್ಲಿ ಆಯಾ ಸಂದರ್ಭಗಳಿಗೆ ತಕ್ಕ ವೃತ್ತ ಪದಗಳಯೋಜನೆ, ರಸ, ಅಲಂಕಾರ, ಅರ್ಥಗಾಂಭೀರ್ಯ, ಅಷ್ಟೇ ಅಲ್ಲದೆ ಎಲ್ಲಕ್ಕಿಂತ ಮೇಲಾಗಿ ವೇದಾಂತ ತತ್ವಗಳು, ಎಲ್ಲವನ್ನೂ ಹೃದಯಂಗಮವಾಗಿ ವರ್ಣಿಸಿರುವರು.
ಯಾಗವನ್ನು ಅವರಿವರ ಪ್ರೇರಣೆಯಿಂದ ಕೆಡಿಸಲು ನದೀರೂಪತಾಳಿ, ಬಹಳ ಕುಪಿತಳಾಗಿ, ಬರುತ್ತಿರುವ ಸರಸ್ವತಿಯನ್ನು ವರ್ಣಿಸಿರುವ ಪಾಶುರವನ್ನು ವರ್ಣಿಸಲು ಅಸದಳ. ಕೇವಲಸಹೃದಯರ ಅನುಭವಕ್ಕೇ ವೇದ್ಯವು.
ಬ್ರಹ್ಮಸೂತ್ರವಾದ 4 ಅಧ್ಯಾಯ ಹಾಗೂ 16 ಪಾದಗಳ ಸಾರಾರ್ಥಗಳನ್ನು 16 ಪಾದಗಳುಳ್ಳ ಒಂದೇ ಪಾಶುರದಲ್ಲಿ ಅಳವಡಿಸಿ, ಸಂದರ್ಭಕ್ಕೆ ತಕ್ಕಂತೆ ಹೊಂದಿಸಿರುವುದು ಅನಿತರ ಸಾಮಾನ್ಯ ಪ್ರತಿಭೆಯ, ಅತ್ಯಂತ ಶ್ರೇಷ್ಠ ಕವಿತಾ ಶಕ್ತಿಯ ಸಾಕ್ಷಿಯಾಗಿರುವುದು.
ತಮಿಳು ಸೂಕ್ತಿಗಳಲ್ಲಿ ಶ್ರೀಮದಾಚಾದ್ಯರು ತಮ್ಮ ಬಿರುದಾವಳಿಗಳನ್ನು ಹೆಚ್ಚಾಗಿ ಕೊಂಡಾಡಿಕೊಂಡಿರುವುದು ಈ ಪ್ರಬಂಧದ ಕೊನೆಯಲ್ಲೇ, ಉಭಯವೇದಾಂತಗಳೂ ಮತ್ತು ತಜ್ಞರೂ ರಸಿಕರಾಗಿ ಅನಂತಕಾಲ ಆನಂದಿಸಲೆಂದು ಮಂಗಳಾಶಾಸನ ಮಾಡಿರುವರು.
362
ಶ್ರೀಮದಾಚಾರ್ಯರು ರಹಸ್ಯಗಳನ್ನು ಹೊರಸೂಸಿರುವ ಕೃತಿಗಳು ಹಲವಾರು. “ಅವುಗಳಲ್ಲಿ ಹಸ್ತಿಗಿರಿ ಮಾಹಾತ್ಮ್ಯ"ವೆಂಬುದೂ ಒ೦ದು. ಅದು ಮಣಿಪ್ರವಾಳ ರೂಪದಲ್ಲಿದ್ದು, ಆಯಾ ಪಾಶುರಕ್ಕೆ ತಮಗಿರುವ ಭಾವವನ್ನು ವ್ಯಾಖ್ಯಾನರೂಪದಲ್ಲೂ ಬರೆದಿರುವರು. ಅದರ ಸಂಗ್ರಹವೇ ಈ ಪ್ರಬಂಧ.
ಇದರ ರಸಾನುಭವವು ಕನ್ನಡ ಜನತೆಗೂ ಆಗಬೇಕೆಂಬ ಹೆಬ್ಬಯಕೆಯು ಈ ಸೇವೆಯಲ್ಲಿ ತೊಡಗುವಂತೆ ಮಾಡಿತು. ಸಂಪ್ರದಾಯಾಭಿಮಾನಿಗಳ ಸಹಕಾರವೂ ಕೂಡಿ ಈ ಕೃತಿರತ್ನವು ಬೆಳಕಿಗೆ ಬಂದಿತು.
ರಹಸ್ಯಾರ್ಥಗಳು ಸದಸ್ಯವಾಗುತ್ತಿರುವ ಈ ಸದವಕಾಶವನ್ನು ರಸಿಕಶಿರೋಮಣಿಗಳು ಉಪಯೋಗಿಸಿಕೊಳ್ಳುವರೆಂದು ನಂಬಲಾಗಿದೆ.
ಶುಭಕೃತ್ - ಪುಷ್ಯ
1962
ವಿದ್ವಾನ್ ಹ. ಗೋಪಾಲಾಚಾರ್ಯ
ಮೈಸೂರು
॥3,0:॥ ಶ್ರೀಮತೇ ನಿಗಮಾಂತ ಮಹಾದೇಶಿಕಾಯ ನಮಃ II ಶ್ರೀಹಸ್ತಿಗಿರಿ ಮಾಹಾತ್ಮ ಮೂಲ : ವಾಳಿಯರುಳಾಳ ವಾಳಿಯಣಿಯತ್ತಿಗಿರಿ, ವಾಳಿಯತಿರಾರ್ಶ ವಾಶಕತ್ಕಲ್ -ವಾಳಿ ಶರಣಾಗತಿಯೆನ್ನು ಶಾರ್ವುಡನ್ ಮತ್ತೊ ಅರಣಾಹಕ್ಕೊಳ್ಳಾದಾರನ್ನು
ಅರ್ಥ :- ಅರುಳಾಳ - ದಯಾನಿಧಿಯಾದ ವರದನು, ವಾಳಿ = ಬೆಳಗಲನುಗಾಲ. ಅಣಿ : (ಜಗತ್ತಿಗೆ) ಅಲಂಕಾರವಾದ ಅತ್ತಿಗಿರಿ = ಹಸ್ತಿಗಿರಿಯು, ವಾಳಿ = ಬಾಳಿ ಕಂಗೊಳಿಸಲಿ, ಯತಿರಾಶರ್-ವಾಶಕರ್ - ಶ್ರೀಭಾಷ್ಯಕಾರ ಶ್ರೀ ಸೂಕ್ತಿಗಳನ್ನು ಅರಿತ ಮಹಿಮರು. ವಾಳಿ = ಒಳಿದು ಬಾಳಲಿ, ಶರಣಾಗತಿ-ಎನ್ನುಂ ಶಾರು -ಉಡನ್ : ಎನ್ನು-ಶಾರು ಪ್ರಪತ್ತಿಯೆಂಬ ಉಪಾಯದೊಂದಿಗೆ, ಮತ್ತು-ಒಳ್ಳೆ = ಮತ್ತೊಂದನ್ನು, ಅರಣಾಹ : ಉಪಾಯವನ್ನಾಗಿ, ಕೊಳ್ಳಾದಾರ್ -ಅನ್ನು = ಕೊಳ್ಳದೆ ಇರುವ ಮಹನೀಯರ ಪ್ರೀತಿಯು, ವಾಳಿ = ನಿರಂತರಬಾಳಲಿ. ತಾತ್ಪಯ್ಯ :- :- ಕರುಣಾಕರನಾದ ಶ್ರೀ ವರದರಾಜನೂ, ಆ ಪರಮಾತ್ಮನು, ಬಿಜಯ ಮಾಡಿರುವ ಹಸ್ತಿಗಿರಿಯೂ, ಶ್ರೀಮದ್ರಾಮಾನುಜಾಚಾದ್ಯರ ಶ್ರೀ ಸೂಕ್ತಿಗಳನ್ನು ಅರಿತು ನುರಿತಿರುವ ಸಂಪ್ರದಾಯಾಭಿಜ್ಜರೂ, ಅನಿತರ ಸಾಧಾರಣವಾಗಿರುವ ಶರಣಾಗತಿಯೆಂಬ ಉಪಾಯವೂ, ಮತ್ತು ಪ್ರಪನ್ನರಿಗೆ ಆ ಭಗವಂತನಲ್ಲಿರುವ ಪರಮ ಭಕ್ತಿಯೂ ಬಹಳಕಾಲ ಜಯಿಸಿರಲಿ, ಬಾಳಲಿ ಎಂದು ಈ ಪ್ರಬಂಧದ ಮೊದಲು ಮಂಗಳಾಶಾಸನವನ್ನು ಮಾಡಿರುವರು ನಮ್ಮ ದೇಶಿಕಮಣಿಗಳು. जयतु वरदराजो हस्तिशैल स्स जीयात् । यतिपतिसुवचोभिज्ञातृवर्या जयन्तु ॥ जयतु च शरणागत्याख्यगत्या सहान्या- । वन मनभिगतानां धीमतां प्रीति स्त्र ॥ ಮೂಲ : ಎಣ್ಣೆಯುಂ ಕಡಲೇಳುಂ ಮಲೈಹಳೇಳು ಈರೇಳುವೈಯಹಮುಂ ಪಡೈತ್ತಿಲಂಗುಂ, १ 364 ಹಸ್ತಗಿರಿ ಮಾಹಾತ್ಮ ಪುಂಡರೀಕ ಯನ್ ಪುಣರ್ತಪೆರಿಯವೇಳ್ ಪುನಿತನರುಂ ಬೋಗಿಯಯುವನ್ನುವನ್ನು ತೊಣ್ಣೆಯೆನುಂ ಮಣ್ಣಲರ್ತಿನಡುವಿಲ್ಾರಿಲ್ ತೂನಿಲಮೆಯ್ ಎರತಲ್ ತೋ ನಿನ್ನ, ಕೊಣ್ಡಲರುಳ್ ಗುಣಮೇನಾಂ ಕೂರುಹಿನ್ನೊಂ ಕೊರತಿಯೀ ಕುರಿಪ್ಪಾಹ ಕ್ಕೊಳ್ಳೆನೀರೇ ॥
2 ಅರ್ಥ :- ಕೂರ್ -ಮತೀಯರ್ - ಸೂಕ್ಷ್ಮ ಬುದ್ಧಿಗಳೇ ! ಎಣ್-ದಿಶೈಯುಂ = 8 ದಿಕ್ಕುಗಳನ್ನೂ, ಕಡಲ್ -ಏಳುಂ = 7 ಸಮುದ್ರಗಳನ್ನೂ, ಮಲೈಹಳ್ -ಏಳುಂ = 7 ಕುಲಪರ್ವತಗಳನ್ನೂ, ಈರ್ -ಏಳು-ವೈಯಹಮುಂ : 14 ಲೋಕಗಳನ್ನೂ, ಪಡ್ಡೆತ್ತು = ಸೃಷ್ಟಿಸಿ, ಇಲಂಗು = ಬೆಳಗುತ್ತಲಿರುವವನೂ, ಪುಂಡರೀಕತ್ತು-ಅರ್ಯ - ನಾಭಿಕಮಲಸಂಭವನಾದ ಬ್ರಹ್ಮನು, ಪುರ್ಣ = ನಡೆಸಿದ, ಪೆರಿಯ-ವೇ
(ಅಶ್ವಮೇಧ) ಮಹಾಯಾಗದ, ಪುನಿದ -ನರು-ಬೋಯತ್ನ : ಪರಿಶುದ್ಧವೂ ಪರಿಮಳವೂ ಆದ ಹವಿಸ್ಸನ್ನು, ಉವಂದು-ವಂದು : ಸಂತೋಷದಿಂದ ಬಂದು, ತೊಂಡೈ-ಎನುಂ-ತುಂಡಲತ್ತಿನ್-ನಡುವಿಲ್ : ಉಂಡೀಮಂಡಲದ ನಡುವೆ, ಪಾರಿಲ್ -ನಿಲಂ : ಭೂಮಂಡಲದಲ್ಲೇ ಅತ್ಯಂತ ಪವಿತ್ರ ಸ್ಥಳವಾದ, ಮೆಯ್ -ವಿರತತ್ತು = ಸತ್ಯವ್ರತವೆಂಬ ದಿವ್ಯ ಕ್ಷೇತ್ರದಲ್ಲಿ, ತೋ-ನಿನ್ನ = ಎಲ್ಲರ ಕಣ್ಣಿಗೂ ಗೋಚರವಾಗಿನಿಂತಿರುವ, (ದೇವರಾಜನ) ಕೊಂಡಲ್ -ಅರುಳ್ -ಗುಣಮೇ - ಮೇಘದ ಗುಣವುಳ್ಳ ಕರುಣೆಯೆಂಬ ಗುಣವನ್ನೇ, ನಾಂ - ನಾವು, ಕೂರುಹಿನ್ನೊಂ : ಸಾರಿಹೇಳಿತ್ತಿರುವೆವು. ನೀರ್ - ನೀವು, ಕುರಿಯಾಹ-ಕೊರ್ಣಿ : (ಮೇಲೆ ಹೇಳಿರುವುದನ್ನು) ಗುರಿಯಾಗಿಟ್ಟುಕೊಂಡು ಬಿಡದೆ ಪಡೆಯಿರಿ.
ತಾತ್ಪರ : ಭಗವಂತನ ನಾಭಿಕಮಲದಲ್ಲಿ ಅವತರಿಸಿ, ಸಕಲ ಲೋಕಗಳನ್ನೂ ಸೃಜಿಸಬಲ್ಲ ಬ್ರಹ್ಮನು ಪರಮಾತ್ಮನನ್ನು ಕುರಿತು, ಇಡೀ ಭೂಮಂಡಲದಲ್ಲೇ ಅತ್ಯಂತ ಪವಿತ್ರ ಕ್ಷೇತ್ರವೆಂದು ಪ್ರಖ್ಯಾತಿ ಪಡೆದಿರುವ ಸತ್ಯವ್ರತ ಕ್ಷೇತ್ರದಲ್ಲಿ ಅಶ್ವಮೇಧ ಮಹಾಯಾಗವನ್ನು ಮಾಡಿದನು. ಆ ಯಜ್ಞದ ಹವಿಸ್ಸನ್ನು ಸವಿಯುವ ಪರಮಪುರುಷ ವದರಾಜನು ಆ ಯಜ್ಞವೇದಿಯಲ್ಲೇ ಅವತರಿಸಿರುವನು. ಸಕಲ ಜನರೂ ಸಂದರ್ಶಿಸಿ ಹಿಗ್ಗುವಂತೆ ದಿವ್ಯರೂಪನಾಗಿ ನಿಂತಿಹನು. ಆ ದೇವರಾಜನ ಗುಣಗಳಲ್ಲಿ ಮುಖ್ಯವಾಗಿರುವ ಕರುಣೆಯನ್ನು ಕಾರುಗಿಲಿನಂತೆ ಸಾರ್ವತ್ರಿಕವಾಗಿ ವರ್ಷಿಸುವ ಉದಾರಗುಣವುಳ್ಳದುದನ್ನು ರಸಿಕರೂ, ಭಾಗವತೋತ್ತಮರೂ ಮತ್ತು ಜ್ಞಾನಿಗಳೂ ಆದ ಪೂಧ್ವಜರು ಮನತಣಿವಂತೆ ಕೊಂಡಾಡಿರುವರು. ಆ ದೇವಾಧಿ ದೇವನನ್ನು ಮನದಲ್ಲಿ ಭಾವಾತಿರೇಕವೂ ವಾಣಿಯಲ್ಲಿ ಹಸ್ತಗಿರಿ ಮಾಹಾತ್ಮಂ 365 ರಾಗವೂ ಕೈಯಲ್ಲಿ ತಾಳವೂ ಇರುವ ಭರತ ಶಾಸ್ತ್ರವನ್ನು ಮೀರಿಸಿದಂತೆ ಪಾಡಿಕೊಂಡಾಡುವೆವು. ಸೂಕ್ಷ್ಮಮತಿಗಳಾದ ಭಾಗವತೋತ್ತಮರಿರಾ ! ನೀವೆಲ್ಲರೂ ಏಕಾಗ್ರಚಿತ್ತದಿಂದ ಗಮನಿಸಿ ಕೇಳುವವರಾಗಿರಿ.
- 7 ಸಾಗರಗಳು :- ಲವಣ-ಇಕ್ಷು-ಕ್ಷೀರ-ಮಧು-ಕೃತ-ದಧಿ-ಶುದ್ಧಜಲ- 7 ಪರ್ವತಗಳು :- ಮಹೇಂದ್ರ-ಮಲಯ- ಸಹ್ಯ-ಶುಕ್ತಿರ್ಮಾ ರುಕ್ಷ-ವಿಂಧ್ಯ-ಪಾರಿಯಾತ್ರ-
- 14 ಲೋಕಗಳು :- ಅತಲ-ವಿಠಲ-ಸುತಲ-ಧರಾತಲ ಮಹಾತಲ ರಸಾತಲ-ಪಾತಾಲ-ಭೂ-ಭುವಃ-ಸುವಃ-ಮಹಃ- ಜನಃ-ತಪಃ-ಸತ್ಯಂ अष्टाशा स्सप्तवार्धीन् धरणिधरवरान् सप्त लोकान् द्विसप्ता - । प्युत्पाद्य भ्राजमान स्सलिलभवभवो यं हि चक्रेऽश्वमेधम् ॥. पूतं भोग्यं तदीयं सुरभि हवि रुपादातुकामो दयालुः । प्रादुर्भूतोऽतिमोदात् निखिलसुजनदृग्गोचर स्सन् विभाति ॥ १ तुण्डीरे मण्डलेऽस्मिन् जगति शुचितमे क्षेत्रसत्यव्रताख्ये । देवाधीशस्य तस्य त्वनवधिसुगुणेष्वेकमत्रोलिखामः । । ( उद्गिरामः) कारुण्याख्योऽत्युदार स्स तु जलधरवत् पक्षपातानभिज्ञः । भो भो स्सूक्ष्मार्थविज्ञा ! स्सुधिय ! इह समागत्य लक्ष्यं लभध्वम् ॥ २ ಮೂಲ : ವಮ್ಮಿನ್ ಪುಲವೀರರುಳಾಳಪೆರುಮಾಳೆನು ಅರುಳಾಳಿ, ಅಮ್ಮಾನನ್ನುಂತಿರುಮಹಳ್ಳೆಪ್ಪೆತ್ತು ಮೆನ್ನೆಂಜಂಕೋಯಿಲ್ಕೊಂಡ, ಪೇರರುಳಾಳರೆನ್ನಂ ವಿಯಪ್ಪಾವಿರುದೂದುಂಬಡಿಕರೈಪುರಂಡ, ಕರುಣೈಕ್ಕಡಲೈಯೆವ್ವಣ್ಣಂ ಪೇಶುವೀರಿದೆನ್ನ ಪಾಂಗೇ ಅರ್ಥ :- ಪುಲವೀರ್
3 ಬನ್ನಿ, ವಿದ್ಯಾವಂತರಿರಾ ! ವರ್ಮಿ ಅರುಳಾಳಪ್ಪೆರುಮಾಳ್ -ಎನ್ನುಂ ಕರುಣೆಯಿಂದಲೇ ಲೋಕಗಳನ್ನಾಳುವ ಪುರುಷೋತ್ತಮನೆಂದೂ, ಅರುಳ್ -ಆಳಿ-ಅಮ್ಮಾನ್-ಎನ್ನುಂ : ಕರುಣೆಗೆಕಡನಿಸಿದ ಸ್ವಾಮಿಯೆಂದೂ, ತಿರು-ಮಗ-ಪೆತ್ತುಂ - ಮಹಾಲಕ್ಷ್ಮಿಯನ್ನೇದೇವಿಯನ್ನಾಗಿ ಪಡೆದುದೂ ಅಲ್ಲದೆ, ಎನ್ -ನೆಂಜಂ - ನನ್ನ ಮನಸ್ಸನ್ನೂ, ಕೋಯಿಲ್ಂಡ - (ತನ್ನ) ವಾಸದ ನೆಲೆಯನ್ನಾಗಿ, ಮಾಡಿಕೊಂಡ, ಪೇರ್ -ಅರುಳ್ -ಆಳರ್ -ಎನ್ನು = ಪರಮ ದಯಾಳುವೆಂದೂ, ವಿಯಪ್ಪಾ = ಆಶ್ಚಯ್ಯಕರವಾಗಿ, ಬಿರುದು - ಊದು-ಪಡಿ Anna K 366 ಹಸ್ತಿಗಿರಿ ಮಾಹಾತ್ಮ =ಬಿರುದಾವಳಿಯನ್ನೂ ಘೋಷಿಸಿರುವ, ಕ-ಪುರಂಡ-ಕರುಣೆ-ಕ್ಕಡಿಲೈ ದಡವನ್ನು ಮೀರಿ ಹೊರಳುವ ಕರುಣೆಗೆ ಕಡಲೆನಿಸಿದ ವರದರಾಜನನ್ನು, ಎವ್ವಣ್ಣಂ ಯಾವರೀತಿ, ಪೇಶುವೀರ್ - ಹೊಗಳುವಿರಿ ? ಇದು = ಈರೀತಿ ಮಾಡುವುದು, ಎನ್ನ-ಪಾಂಗು = ಅದೆಂತಹ ಪರಿಪಾಕವು ? ತಾತ್ವರ :- ಪರಿಪೂರ್ಣಮಹನೀಯರೇ ! ಬನ್ನಿ. ನಮ್ಮಿದೇವರಾಜನಕರುಣೆ ಎಂಬ ಗುಣವನ್ನು ಆಳ್ವಾರುಗಳೂ ಮತ್ತು ಪೂತ್ವಜರೂ ಅದ್ಭುತರೀತಿಯಲ್ಲಿ ಹಲವಾರು ಬಿರುದಾವಳಿಗಳೊಂದಿಗೆ ಪಾಡಿ ಅನುಭವಿಸಿರುವರು. ಅಂತಹ ಕರುಣೆಗೆ ಕಡಲೆನಿಸಿದ ವರದ ಮಹಿಮೆಯನ್ನು ನೀವು ಹೇಗೆ ವರ್ಣಿಸುವಿರಿ ? ಹಾಗೆ ವರ್ಣಿಸಲು ಮುಂದೆ ಬರುವುದೂ ಸಾಧಾರಣವಲ್ಲ. ಅಸಾಧ್ಯವೆಂದೇ ಹೇಳಬಹುದು. ನಮ್ಮೊಡನೆ ಬಂದು ಸೇರಿ. ನಾವೆಲ್ಲರೂ ಕೂಡಿ ಅವನ ಹಿರಿಮೆಯ ಮಹಿಮೆಯನ್ನೂ ಪಾಡಿ, ಗುಣಾನುಭವ ಮಾಡೋಣ. ಅದಕ್ಕೂ ಮನಃಪರಿಪಾಕ ಬೇಕಲ್ಲವೆ ! विद्वद्वर्या ! उपैत स्वय ममितदयो देवराट् शास्ति सर्वम् । कारुण्याम्भोधिरीशोप्युपगतकमलो प्यात्तमञ्चितवासः ॥ देवाधीशोऽनुकम्पाकर इति बिरुदै रद्भुतं कीर्त्यमानम् । वेलातीतं दयाब्धिं कथ मिह वरदं संस्तुथेदं नु भाग्यम् ॥ ಮೂಲ : ಒಪುಹಲೆನುಣನವರ್ ಕಾಟ್ಟತ್ತಿರುವರುಳಾಲ್ ಅನೇಯಕ್ಕಲಂ ಕೊಂಡ ನಮ್ಮತ್ತಿಗಿರಿತ್ತಿರುವಾಲ್ ಇನ್ನೇಯಿಶೈಯಲಿಹೈಯಡಿಶೇರ್ಪ್ಪ ಇನಿಪ್ಪಿರವೋಂ, ನವರುವದೆಲ್ಲಾಂ ನಮಕ್ಕುಪ್ಪರಮೊಲದೇ ॥
३
ಅರ್ಥ :- ತಿರು-ಅರುಳಾಲ್ : ಮಹಾಲಕ್ಷ್ಮಿಯ ದಯೆಯಿಂದ, ಒ (ಶ್ರೀಮನ್ನಾರಾಯಣ) ಒಬ್ಬನೇ, ಪುಹಲ್ = ಉಪಾಯವು, ಕಾಟ್ಟ = ತೋರಿಸಲು (ಉಪದೇಶಿಸಲು) ಅನ್ನೋ : ಆಗಲೇ, ಅಡೈಕ್ಕಲಂ-ಕೊಂಡ = ರಕ್ಷಿಸತಕ್ಕ ವಸ್ತುವಿದೆಂದು ಅಂಗೀಕರಿಸಿದ, ನಂ-ಅತ್ತಿ-ಗಿರಿ-ತಿರುಮಾಲ್ - ನಮ್ಮ ಹಸ್ತಿಗಿರಿಯ ಲಕ್ಷ್ಮೀವಲ್ಲಭನು. ಇನ್ನೇ ಪ್ರಪತ್ತಿಯ ಮರುಗಳಿಗೆಯಲ್ಲೇ, ಇಚ್ಛೆಯಿಲ್ = ಕೋರಿದರೆ, ಇ-ಅಡಿ : (ತನ್ನ) ಪಾದಗಳೆರಡನ್ನೂ, ಶೇಕ್ಟರ್ : ಸೇರುವಂತೆ ಮಾಡುವನು. ಇನಿ : ಮಾಡಿದಮೇಲೆ, ಪಿರವೋಂ : ಮತ್ತೆ ಇಲ್ಲಿ ಜನ್ಮತಾಳುವುದಿಲ್ಲ. ವರುವದೆಲ್ಲಾಂ ದೇಹತ್ಯಾಗ ಇರುವತನಕ ಒದಗುವುದೆಲ್ಲ ನನ್ನೆ - ಒಳ್ಳೆಯದೇ ಆಗಿರುತ್ತದೆ. ನಮಕ್ಕು = ನಮಗೆ, ಪರಂ-ಒನ್ನುಂ = ಯಾವದೊಂದೂ ಭಾರವೂ, ಇಲದೇ - ಇಲ್ಲವಷ್ಟೆ !
ಹಸ್ತಗಿರಿ ಮಾಹಾತ್ಮಂ 367 ತಾತ್ಪರ :- ನಮ್ಮ ಆಚಾರ್ಯರು ‘ಶ್ರೀಮನ್ನಾರಾಯಣನೊಬ್ಬನೇ ಉಪಾಯವು’’ ಎಂದರಿತು ಅನುಭವಿಸಿ, ನಮಗೂ ಉಪದೇಶಿಸಿ, ಅವನಡಿದಾವರೆಗಳಲ್ಲಿ ನಮ್ಮನ್ನು ಒಪ್ಪಿಸಿದರು. ಸತ್ವಶರಣ್ಯನಾದ ದೇವಾಧಿರಾಜನ ನಮ್ಮ ಮೇಲಿನ ಸಹಜಕೃಪೆಯಿಂದಲೂ, ಮಹಾಲಕ್ಷ್ಮಿಯ ಸಮಾಧಾನೋಕ್ತಿಗಳಿಂದಲೂ, ನಮ್ಮನ್ನು ರಕ್ಷಿಸತಕ್ಕ ವಸ್ತುವನ್ನಾಗಿ ಕೂಡಲೇ ಅಂಗೀಕರಿಸಿರುವನು. ನಾವು ಇಂದೇ ಮುಕ್ತಿಯನ್ನು ಅಪೇಕ್ಷಿಸಿದರೂ ಅವನು ಕೊಡಲು ಕಾದಿರುವನು. ಇನ್ನು ನಮಗೆಂದಿಗೂ ಮತ್ತೆ ಜನ್ಮವಿಲ್ಲ. ಈ ಕರ್ಮಭೂಮಿಯಲ್ಲಿರುವ ತನಕ ಒದಗುವ ಸುಖವೋ ದುಃಖವೋ ಎಲ್ಲವೂ ಅನುಕೂಲವಾಗಿಯೇ ಇರುವುವು. ನಾವು ಉದ್ಬವಿಸಲು ಮತ್ತೆ ಮಾಡಬೇಕಾದುದೇನೂ ಉಳಿದಿಲ್ಲ. ಆದರೂ ಇರುವವರೆಗೆ ಒಳ್ಳೆಯ ಹೊತ್ತಾಗಿ ಕಳೆದು, ಮನವನ್ನು ತಣಿಸಿ, ಶ್ರೀ ವರದರಾಜನ ಮಹಿಮೆಯನ್ನೂ ಹಿರಿಮೆಯನ್ನೂ ಕೊಂಡಾಡುವೆವು. ‘ಸಂತೋಷಾರ್ಥಂ ವಿಮೃಶತಿ ಮುಹುಃ’’ ಎಂಬಂತೆ ಪ್ರಪನ್ನನಿಗೆ ಇದಕ್ಕಿಂತ ಮತ್ತೇನಿದೆ ಆತ್ಮೀಜೀವನಕ್ಕಾಗಿ ಎಂದು ಭಾವ सिद्धोपाय स्स एवेत्यवगमयितृषु श्रीदयैकाश्रयेषु । रक्ष्यत्वेनैव गृह्णन् सपदि करिगिरिश्रीधरो न स्तदैव ॥ मुक्तावभ्यर्थितायां निजपदयुगळीं प्रापयत्येव, भूयः । नैवोत्पत्तिः यदाप्तं शुभकर मखिलं, नास्ति नो ह्यात्मभारः ॥ ಮೂಲ : ವಂಬಿವಿಲ್ಪೋದಮ ಮಾದರುಹನವಮ್ಮಾನಿದಿಯೆ, ತನ್ನಲಮೇಕೊಂಡು ಕಾಣಕ್ಕರುದಿಯ ತಾಮರೈಯೋನ್, ಮುನ್ನಲ ಕುತ್ತತ್ತು ವಲ್ವಿನೈ ಮೊಯಕ್ಕೆ ಮುಹಿಳ ಮತಿಯಾಯ್ ಅಂಬುಲಿವೇಂಡಿಯ ಪಾಲನೈಪ್ಪೋಲವಳುದನನೇ ॥
5 ಅರ್ಥ :- ವಂಬು-ಅವಿಳ್ = ಪರಿಮಳಿಸುತ್ತಾ ಅರಳಿದ. ಪೋದು-ಅಮರ್ = ಹೂವಿನಲ್ಲಿ ವಾಸಿಸುವ, ಮಾದರ್ - ಮಹಾಲಕ್ಷ್ಮಿಯ, ಉಹಂದ - ಪ್ರೀತಿಗೆ ವಶನಾದ ಅ-ಮಾ-ನಿದಿಯ್ಯ = ದೊಡ್ಡನಿಧಿಯಂತಿರುವ ಆ ಪರಮ ಪುರುಷನನ್ನು, ರ್ತ-ಫಲಮೇ- ಕೊಂಡು = ತನ್ನ ಭೋಗಫಲವನ್ನೇ ಹೊಂದಿ, ಕಾಣ-ಕರುದಿಯ, ತಾಮರೈಯೋನ್ : ಪ್ರತ್ಯಕ್ಷಮಾಡಿಕೊಳ್ಳಲು ಧ್ಯಾನಿಸಿದ ಬ್ರಹ್ಮನು. ಮುನ್ -ಪಲ-ಕುತ್ತತ್ತು =ಹಿಂದಿನ ಹಲವಾರು ಅಪರಾಧಗಳಿಂದ ಸೇರಿಕೊಂಡು ಬಂದ, ವಲ್ -ನೈ-ಮೊಯ್ಕ್ಕ - ಪ್ರಬಲವಾದ ಪಾಪಕರ್ಮಗಳು ಆವರಿಸಿಕೊಳ್ಳಲು, ಮುಹಿಳ್ -ಮತಿಯಾಯ್ - ಮಂಕುಹಿಡಿದ ಬುದ್ಧಿಯಾಗಿ, ಅಂಬುಲಿ-ವೇಂಡಿಯ : (ಎಟುಕಿಸದ) ಚಂದ್ರನನ್ನು ಹಿಡಿದು ತರುವಂತೆ =368 ಹಸ್ತಗಿರಿ ಮಾಹಾತ್ಮಂ ಆಸೆಪಟ್ಟ, ಬಾಲನ್ಯ-ಪೋಲ : ಎಳೆಯ ಹುಡುಗನಂತೆ. ಅಳುದನನ್ = (ಆಸೆಯು ಈಡೇರದಿದ್ದುದಕ್ಕಾಗಿ ಅತ್ತನು. ತಾತರ :- ಸಕಲ ಶುಭಗುಣನಿಧಿಯೂ, ಸತ್ವಶಕ್ತನೂ, ಸತ್ವಶರಣ್ಯನೂ, ಸಕಲೈಶ್ವಯ್ಯ ಪರಿಪೂರ್ಣನೂ ಮತ್ತು ಪರಿಮಳವಾಸಿತ ತಾಮರಸವಾಸಿನಿಯಾದ ಮಹಾಲಕ್ಷ್ಮಿಯ ಪ್ರಿಯವಲ್ಲಭನೂ ಆದ ಶ್ರೀಮನ್ನಾರಾಯಣನನ್ನು ಬ್ರಹ್ಮನು ತನ್ನ ಯೋಗಫಲ ಬಲದಿಂದಲೇ ಪ್ರತ್ಯಕ್ಷಮಾಡಿಕೊಳ್ಳಲು ಯತ್ನಿಸಿದರೂ, ಅದು ಅವನ ಹಿಂದಿನ ಕರ್ಮಗಳ ಫಲವಾಗಿ ಸಫಲವಾಗದೆ ಬಹಳ ವ್ಯಸನಪಟ್ಟನು. ಮಕ್ಕಳು ಆಕಾಶದಲ್ಲಿ ಕಂಗೊಳಿಸುವ ಚಂದ್ರ ಬಿಂಬವನ್ನು ಹಿಡಿದುಕೊಳ್ಳಲು ಪ್ರಯತ್ನಿಸಿ, ಅದು ಸಾಧ್ಯವಾಗದೆ, ಅಸಾಧ್ಯವೆಂಬರಿವೂ ಇಲ್ಲದೆ ಅಳುವಂತೆ, ತುಂಬ ಅತ್ತನು. ಪರಮಪುರುಷನ ಒಲಿಮೆಯು ಅವನ ಸಂಕಲ್ಪಾಧೀನ. सौरभ्यालयफुल्लपद्मनिवसल्लक्ष्मीप्रियं तं महा- 1 निक्षेचं पुरुषोत्तमं निजबलादेवेक्षितुं पद्मजः ॥ नाशक्नोन्निजनैकमन्तुफलतः दुष्कर्मदोषाविलः । मोहान्धो व्यरुदञ्च बाल इव तच्चन्द्राभिलाषी तदा ॥ ಮೂಲ: ಅಡಂಗಾಕ್ಕರಣಂಗಳೆನ್ನುಡನಾರುಮಡಕ್ಕಿ ಮುನ್ನಂ, ನೆಡುಂಕಾಲಮಿನ್ನಿಲಮೇನಿಲೈಯಾಡ್ಕೊಂಡು ನೀಡುರೈವಾನ್, ಶೆಡಂಗಾರ್ ಪೆರಿಯತವಂಗಳ್ ಶೈಕ್ಲೋನನ್ನತಮ್ಮೆಯಿದೆನು, ಇಡಂಕಾತ್ತಿರುಂದದಿಶೈಮುಕನ್ ತನ್ನೆಹಳನ್ದನನೇ ॥
6 ಅರ್ಥ :- ಇಡಂ-ಕಾತ್ತು-ಇರುಂದ : ತಾನುಪಡೆದಿರುವ ಬ್ರಹ್ಮಪದವಿಯನ್ನು ರಕ್ಷಿಸಿಕೊಂಡಿದ್ದ ದಿಶೆ-ಮುಕನ್ - ಬ್ರಹ್ಮನು, ನೆಡುಂ-ಕಾಲಂ = ಬಹಳಕಾಲ, ಇ-ನಿಲಮೇ * ಈ ಬ್ರಹ್ಮಲೋಕವನ್ನೇ, ನಿಲೈಯಾಮ್ -ಪೂಂಡು : ನೆಲೆಯಾಗಿರುವಂತೆ ಪಡೆದು, ನೀಡು ಉರೈವಾನ್ = ಚಿರಕಾಲಬಾಳಿ ಬೆಳಗಲು ಆಸೆಪಟ್ಟು, ಪ್ರಾರ್ಥಿಸಿ, ಮುನ್ನಂ ಮೊದಲೇ, ಅಡಂಗಾ-ಕರಣಂಗಳ್ -ಐಂದು ಉಡನ್ : 5 ಅಡಗಿಸಲಾಗದ ಕರ್ಮೇಂದ್ರಿಯಗಳೊಂದಿಗೆ, ಆರುಂ-ಅಡಕ್ಕಿ : ಜ್ಞಾನೇಂದ್ರಿಯಗಳನ್ನೂ ಅಡಗಿಸಿ, ಶೆಡಂಗಾಲ್ -ಪೆರಿಯ - (ತಪಸ್ಸಿನ) ಅಂಗಗಳಾದ ವ್ರತಗಳಿಂದ ಹಿರಿದಾದ, ತವಂಗಳ್ = ತಪಸ್ಸುಗಳನ್ನು, ಶೆಯೇನ್ = ಮಾಡಿದೆನು, ಇದು-ಎನ್ನ-ತ-ಎನ್ನು = ಇದು (ತಾನುಮಾಡಿದುದು) ಎಂತಹ ಕಾರವಾಯಿತು ? ಎಂದು, ತನ್ನ ತನ್ನನ್ನೇ, ಇಹನ್ದನನ್ - ಲಜ್ಜೆಗೊಂಡು ಹಳಿದುಕೊಂಡನು.
ઇ * ಹಸ್ತಗಿರಿ ಮಾಹಾತ್ಮಂ
385 ಕಂಗೆಟ್ಟವರಿಗೆ ದೊರಕಿದ ಸ್ವಾದುಸ್ವಚ್ಛ ಶೀತಲವಾದ ನೀರಿನ ಹೊನಲೋ ಎನ್ನುವಂತೆಯೂ, ಹಸ್ತಿಗಿರಿಯು ತಗ್ಗಿಬರುವಂತೆಯೂ, ಇಡೀ ಲೋಕದ ಹೊರಗಿನ ಕತ್ತಲು ಹೋಗಲು, ಸೂರನಿರುವಂತೆ ಹೊರಗಿನ ಮತ್ತು ಒಳಗಿನ ಅಜ್ಞಾನಾಂಧಕಾರವನ್ನು ನೀಗಲು, ಪ್ರಜ್ವಲಿಸುವ ತೇಜಪ್ಪೋ ಎಂಬಂತೆಯೂ, ಬ್ರಹ್ಮನು ಇಷ್ಟು ಕಷ್ಟದಿಂದ ಮಾಡಿದ ಅಶ್ವಮೇಧ ಯಾಗಕ್ಕೆ ದೊರಕಿದ ಪರಮ ಫಲವೋ ಎಂಬಂತೆಯೂ, ಸಕಲ ಜೀವರಾಶಿಗಳಲ್ಲೂ ಇರುವ ಪರಮಾತ್ಮನೋ ಎಂಬಂತೆಯೂ, ಭಕ್ತಿರಸಪರವಶರಾದ ಭಾಗವತರಿಗೆ ಲಭಿಸುವ ಅಮೃತವೋ ಎಂಬಂತೆಯೂ ನಿತ್ಯಸೂರಿಗಳಿಗೆ ಪ್ರಕಾಶಿಸಿದನೆಂದು ವರ್ಣಿಸುವುವು. दिनकरभास्वरमकुटम् । व्युदितकलानिधिवदनम् । द्विविधलसत्श्रुतियुगले । त्वभिपतनोत्सुकमकरौ ॥ अतुलदयोन्नतिरमया । घुतमणिनायतहृदयम् । चिदचित उद्वमदुदरम् । जगदभिविक्रमचरणौ ॥ दधदतिदुर्गमनिगमैः । वरिवसितौ करिवरदः । धुतकरुणाकृति रिहत । न्महिम परं त्वभिविनुमः ॥ मरुभुवि तज्जलसृतिवद्विनतनगोपरि नगवत् । अमतिविनाशकरुचिवत्कमलभवाभिमतफलम् ॥ सकलतनुष्वसव इव प्रणतनॄणा मिव च सुधा । इति कविभिः परिपणितं द्रुहिण उदीक्ष्य च मुमुदे ॥ ಮೂಲ: ಚಿತ್ತಚಿತ್ತನವಿರಿತುರೈತನ, ವನೈತಮೈತುರೈಯುಮಿರೈವನಾರ್, ಶಿರಿಯಪೆರಿಯವುರುವಡೆಯವುಡಲಮೆನ, ನಡಲಮಿಲದಿಲಹುನಿಲೈಯಿನಾರ್, ಚಿತ್ತಿರತ್ತೊಳಿಲೈಯೊತ್ತಪತರೊಡು, ಮುತ್ತರ್ ಬಿತ್ತಿಯೆನುಮುಣರ್ನಾರ್, ಶಿದೈವಿನ್ಮರೈನೆರಿಯಿಲೆರಿಯವುರುಮುರೈಹಳ್, ಮುರಿಯಶಿರೈಯರಿಯನಿರೈವಿನಾರ್, २ १८ 386 ಹಸ್ತಗಿರಿ ಮಾಹಾತ್ಮಂ ಕತ್ತುವಿಕ್ಕವಲಹತ್ತುವಿದ್ದೆವಳಿ, ಕತ್ತವರ್ಶೈವಿಲ್ಮಾಯನಾರ್, ಕಪಿಲರ್ಕಣಚರಣ ಶುಗರ್ ಶಮಣರರರ್, ವಳಿಹಳಳಿಯುಮರುಳಮೊಳಿಯಿನಾರ್, ಕತ್ತಿಲಕ್ಕಿಲುಮರುಕ್ಕುಲತ್ತಿಲು, ಅಚಿತ್ತಿಲೊಕ್ಕುಮೊರುಮುದಲ್ಪನಾರ್, ಕರಣಮಿಡುಕಡಿಯಪದಿನೊರಿರುಡಿಕಮು, ಮಡೈಯಮುಡಿಯುಮಡಿಯಿರುಡಿಯಾರ್, ಒತ್ತನೈತುಲಹುಮೊತ್ತಿಯೊತ್ತಿದ್ದರು, ಇಬ್ಬವತ್ತಿಶೈಯಿನಿಶೈವಿನಾರ್, ಉರುವಮರುವಮನುಮುಲರ್ಹಿ ಮುಡಹಿಲದಿಲ್, ಉವಮೈಯಿಲತಿಲಹುತಲೈವನಾರ್, ಉತ್ತಮಪ್ಪಡಿವಹುತ್ತವಿದ್ದೆ ಹಳಿಲ್, ಉದ್ದರಿಕ್ಕವುಣರ್ ಗುಣವನಾರ್, ಉರಿಯಕಿರಿಶೈಹಳಿಲರಿಯದೊರುವಿರಹು, ತೆರಿಯವಿರೈಯುಮವರ್ ಪರಿವಿನಾ, ಶತಶತ್ತೆನುಮನೈತಣ್ಣೆತವಿದ್ಯೆ, ತೊತ್ತರುಕ್ಕುವಲತುಣಿವಿನಾರ್, ಶರಿಯುಮಳವಿಲುರಿಯವರೈಯರಿವರಿಯ, ದಮನಿನೆರಿತೆರುಹುವಿರಹಿನಾರ್, ತತ್ತುವತ್ತಿರಳುದೈತುದೈತಡೆವು, ತತ್ತು ವಿಕ್ಕುಮವರ್ ತಲೈವನಾರ್, ತರುಹವುಣರುಮವರ್ಶರಣಮಡುಹವಿಡ, ಲರಿಯವರುವರದರಡಿಯಮೇ | 19 w
ಹಸ್ತಿಗಿರಿ ಮಾಹಾತ್ಮಂ
387
ಅರ್ಥ :- ಚಿತ್ - ಅಚಿತ್ -ಎನ : ಜ್ಞಾನವುಳ್ಳದ್ದು-ಜ್ಞಾನವಿಲ್ಲದುದು (ಚೇತನ ಅಚೇತನ) ಎಂದು, ವಿರಿತ್ತು-ಉರೈತನ : (ವಿಭಾಗಿಸಿ) ವಿಸ್ತಾರವಾಗಿ (ಚೇತನ-ಅಚೇತನ) ಹೇಳಲ್ಪಟ್ಟರುವ, ಅನೈತ್ತುಂ = ಸಮಸ್ತವನ್ನೂ, ಅಮೈತ್ತು: ಸೃಷ್ಟಿಸಿ, ಉರೈಯುಂ : (ಅವುಗಳಲ್ಲಿ ಅಂತರ್ಯಾಮಿಯಾಗಿ) ಇರುತ್ತಿರುವ, ಇರೈವನಾರ್ : ನಿಯಮಿಸುವ ಈಶ್ವರನಾದ; ಶಿರಿಯ-ಪೆರಿಯ - ಸೂಕ್ಷ್ಮವೂ ಸ್ಕೂಲವೂ ಆದ, ಉರು-ಅಡೈಯ : ರೂಪವುಳ್ಳ ವಸ್ತುಗಳೆಲ್ಲವೂ, ಉಡಲುಂ-ಎನ - (ತನಗೆ) ಶರೀರಗಳಾಗಿರುವಂತೆ ಇದ್ದು, ನಡಲಂ-ಇಲದು - ಅವುಗಳ ದೋಷವು ಸೋಂಕದಂತೆ, ಇಲಹು-ಬೆಳಗುವ, ನಿಲೈಯಿನಾ : ಸ್ಥಿತಿಯುಳ್ಳವನಾದ; ಚಿತ್ತರ-ತೊಳಿ : ಅಂದವಾದ ಚಿತ್ರಕೆಲಸಕ್ಕೆ, ಒತ್ತ = ಸಮಾನವಾದ, ಬತ್ತರ್ -ಒಡು-ಮುತ್ತರ್ : ಬದ್ಧರಿಗೂ ಮುಕ್ತರಿಗೂ ಮತ್ತು ನಿತ್ಯರಿಗೂ, ಬತ್ತಿಯನುಂ = ಆಶ್ರಯವಾದ ಗೋಡೆಯಂತೆ ಸಾಧಾರನಾಗಿ, ಉಣರ್ ವಿನಾರ್ = ಜ್ಞಾನವುಳ್ಳವನಾದ (ಸಂಕಲ್ಪವುಳ್ಳವನಾದ); ಶಿವು -ಇ = ನಾಶವಿಲ್ಲದ, ಮರೆ-ನೆರಿಯಿಲ್ - ವೇದಮಾರ್ಗದಲ್ಲಿ ಎರಿ : ತಳ್ಳಲ್ಪಟ್ಟ ಅ-ಉರು-ಮುರೈಹಳ್ ಅಚೇತನವಾದ ರೀತಿಗಳು, ಮುರಿಯ : ನಾಶವಾಗುವಂತೆ, ಶಿರೈ -ಅರಿಯ ಸಂಕೋಚವಿಲ್ಲದ, ನಿರೈವಿನಾರ್ = ಪರಿಪೂರ್ಣಮಹಿಮೆಯವನಾದ, ಕತ್ತುವಿಕ್ಕ-ವಲ (ಕಂಡ ಕಡೆಯೆಲ್ಲ ಇಲ್ಲದಿದ್ದರೂ ಕಾರಣ ಕಲ್ಪಿಸಲು) ಆರ್ಭಟಮಾಡಿ ಕಾರಣವನ್ನು ಕಲ್ಪಿಸಲು ಸಮರ್ಥವಾದ, ಕತ್ತುವಿದ್ದೆವಳಿ : ಜಲವಾದ’ವೆಂಬ ಮಾರ್ಗವನ್ನು, ಕತ್ತುವರು ಕಲಿತಿರುವವರಿಂದ, ಅಶೈವು-ಇಲ್ - ಅಲುಗಿಸಲಾಗದಂತಹ, ಮಾಯಿನಾರ್ - ಅದ್ಭುತ ಮಾಯಾಶಕ್ತಿಯುಳ್ಳವನೂ ಆದ; ಕಪಿಲರ್ = ಕಪಿಲರ, ಕಣಚರಣರ್ = ಕಣಾದರ ಶುಗತರ್ = ಬುದ್ಧರ, ಶಮಣರ್ - ಜಿನರ, ಅರರ್ : ಹರನ, ವಳಿಹಳ್ - ಮಾರ್ಗಗಳು (ಹೇಳಿದ ಸಿದ್ಧಾಂತಗಳು), ಅಳಿಯುಂ = ನಾಶಗೊಳಿಸಲು ಕಾರಣವಾದ, ಅರುಳ್ ಕೃಪೆಯಿಂದ, ಮೊಳೆಯಿನಾರ್ : (ಪಾಂಚರಾತ್ರವನ್ನು) ತಾನೇ ಹೇಳಿದವನೂ ಆದ; ಕತ್ತು-ಇಲಕ್ಕಿಲುಂ : ಇಂದ್ರಿಯಗಳಿಗೆ ವಿಷಯವಾಗುವ 5 ಭೂತಗಳಲ್ಲೂ ಅರು-ಕುಲತ್ತಿಲುಂ = ಜೀವರುಗಳ ಸಮೂಹದಲ್ಲಿಯೂ, ಅಚಿತ್ತಿಲ್ -ಒಕ್ಕುಂ = ಅಚೇತನ ತತ್ವಗಳಲ್ಲಿ ಹೇಳಿರುವಂತೆಯೇ, ಒರು-ಮುದನಾರ್ = ಒಬ್ಬನೇ ಮೂಲಕಾರಣನೂ ಆದ; ಕರಣಂ-ಇಡು : ಇಂದ್ರಿಯಗಳಿಗೆ ಗೋಚರವು, ಕಡಿಯ - ಆಗದಿರುವ, ಪದಿನೂರು-ಇರುಡಿಕಮುಂ - ಹನ್ನೊಂದು ಇಂದ್ರಿಯಗಳು, ಅಡ್ಡೆಯ - ಎಲ್ಲವೂ, ಮುಡಿಯುಂ-ಅಡಿ - ನಶಿಸಿಹೋಗುವ ಕಾಲದಲ್ಲಿ ಆದಿಕಾಲದಲ್ಲಿ) ಇರುಡಿಯಾರ್ : ಋಷಿಗಳಂತೆ ಇಂದ್ರಿಯಾಪೇಕ್ಷೆಯಿಲ್ಲದೆಯೇ ಎಲ್ಲವನ್ನು ತಿಳಿಯುವವನಾದ; ಒತ್ತು : ಸರ್ವದಾ ಒಂದೇ ಸಮನಾಗಿರುತ್ತಾ, ಆನೈತ್ತು-ಉಲಹುಂ ಈ ಸಮಸ್ತಜೀವರಾಶಿಗಳನ್ನೂ, ಒತ್ತಿ-ಒತ್ತಿ-ವರುಂ = ಕ್ರಮಕ್ರವಾಗಿ ಬಿಡದೆ ಆಕ್ರಮಿಸಿಕೊಂಡು ಬರುವ, ಇ-ಬವತ್ತು =
**
388
ಹಸ್ತಗಿರಿ ಮಾಹಾತ್ಮಂ
ಈ ಸಂಸಾರವನ್ನು ನಡೆಸುವಂತೆ, ಇಚ್ಛೆಯುಂ - ಅಂಗೀಕರಿಸುವ, ಇಶೈವಿನಾ ಸಂಕಲ್ಪವುಳ್ಳವನೂ ಆದ, ಉರುವಂಅರುವಂ-ಎನ : ರೂಪವುಳ್ಳ ಮತ್ತು ರೂಪವಿಲ್ಲದ, ಉಲಹಿನ್ - ಲೋಕದಲ್ಲಿ ಮುಡುಹು-ಇಲದಿಲ್ = ದೋಷವಿಲ್ಲವೆನ್ನುವುದರಲ್ಲಿ ಉವಮೈ ಇಲದ್ : ಉಪಮಾನವಿಲ್ಲದೆ, ಇಲಹು = ಪ್ರಕಾಶಿಸುವ, ತಲೈವನಾ ಪ್ರಧಾನನಾಗಿಯೂ ಇರುವ; ಉತ್ತಮ ಪಡಿ ವಹುತ್ತ-ವಿದೆಹಳಿಲ್ = ವಿಭಜಿಸಿದ (ಭಕ್ತಿಯೋಗಾದಿಗಳಲ್ಲಿ) ವಿದ್ಯೆಗಳಲ್ಲಿ ಉದ್ಧರಿಕ್ಕ = ಉತ್ತಮರೀತಿಯಾಗಿ, ಸಂಸಾರ ಸಾಗರದಿಂದ ಉದ್ದರಿಸಲು, ಉಣರ್ : ಅನುಸಂಧಾನ ಮಾಡಲರ್ಹನಾದ, ಗುಣವನಾರ್ - ಗುಣಗಳನ್ನು ಪಡೆದಿರುವವನಾದ, ಉರಿಯ-ಕಿರಿಶೈಹಳಿಲ್ = (ಭಕ್ತಿಗೆ) ಬೇಕಾದ (ತಕ್ಕ) ವರ್ಣಾಶ್ರಮ ವಿಹಿತ ಕರ್ಮಗಳಲ್ಲಿ ಅರಿಯದು - ಮಾಡಲಾಗದಂತಹ, ಒರು-ವಿರಹು - ಒಂದುಪಾಯವನ್ನು (ಸಾತ್ವಿಕತ್ಯಾಗ), ತೆರಿಯ = ತಿಳಿದುಕೊಳ್ಳುವುದಕ್ಕೆ, ವಿರೈಯುಮವರ್ - ಆತುರಪಡುವವರಲ್ಲಿ ಪರಿವಿನಾರ್ - ಬಲುಪ್ರೇಮವಿರುವವನಾದ; ಶತ್ತು-ಅಶತ್ತು-ಎನುಂ - ಸತ್ವಂ ಅಸತ್ವವೆಂಬ (ಪುಣ್ಯಪಾಪವೆಂಬ) ಅತ್ತ: ಜೀವಾತ್ಮರನ್ನು ಆವರಿಸಿಕೊಂಡಿರುವ, ಅನೈತ್ತು-ವಿನೈ - ಸಮಸಪಾಪಗಳ, ತೊತ್ತು = ಸಂಬಂಧವನ್ನು, ಅರುಕ್ಕ-ವಲ - ನಿರ್ಮೂಲಗೊಳಿಸಬಲ್ಲ ತುಣಿವನಾರ್ : ಶರಿಯುಂ-ಅಳವಿಲ್ - ಶರೀರತ್ಯಾಗಮಾಡುವ (ಅವಸಾನ) ಕಾಲದಲ್ಲಿ ಉರಿಯವರೆ = ದೃಢಸಂಕಲ್ಪವುಳ್ಳವನಾದ, ಮುಕ್ತಿಗೆ ಅರ್ಹರಾದ ಜೀವಾತ್ಮನನ್ನು. ಅರಿವು-ಅರಿಯ = ಅರಿಯಲಾಗದಂತಿರುವ, ದಮನಿ-ನೆರಿ : ಬ್ರಹ್ಮ (ಮೂರ್ಧನ್ಯ) ನಾಡಿಯ ಮಾರ್ಗದಲ್ಲಿ ಶೆರುಹ : ಪ್ರವೇಶಗೊಳಿಸುವ, ವಿರಹಿನಾರ್ = ಉಪಾಯವನ್ನು ತಿಳಿದು, ಮಾಡುವವನಾದ; ತತ್ತುವ-ತಿರಳ್ : (ಅಚೇತನ) ತತ್ವಗಳ ಸಮೂಹವೆಲ್ಲವನ್ನೂ, ಉದೈತ್ತು: ಕಾಲಿಂದ ಒದ್ದು ತಳ್ಳಿ, ಅಡೈವು - ಕ್ರಮವಾಗಿ, ತತ್ತುವಿಕ್ಕುಮವರ್ : (ಪ್ರಕೃತಿಮಂಡಲದಿಂದ) ಮುಂದು ಮುಂದಕ್ಕೆ ದಾಟಿಸುವ ಅತಿವಾಹಿಕರಿಗೆ, ತಲೈವನಾರ್ - ಮುಖ್ಯನೂ ಸ್ವಾಮಿಯೂ ಆದ; ತರುಹ : (ದೇವರು) ಕೊಡುವ ಫಲವನ್ನು ಉಣರುಮವರ್ = (ಅಡಿಗಡಿಗೆ ಧ್ಯಾನಿಸುತ್ತಾ) ಅನುಭವಿಸುವ, (ಉಪಾಸಿಸುವ) ಜೀವಾತ್ಮರ, ಶರಣಂ-ಅಣುಹ : (ತನ್ನ) ಪಾದಗಳಲ್ಲಿ ಶರಣಾಗತರಾಗಲು, ವಿಡಲ್ - ಅರಿಯ : ಅರುಳ್ -ವರದ : ಕರುಣೆಯೇ ಮೂರ್ತಿಯಾಗಿರುವ ವರದ ರಾಜನ, ಅಡಿಯಂ - ಬಿಡುವುದನ್ನು ಅರಿಯದಿರುವ, ದಾಸರಾಗಿರುತ್ತೇವೆ. (16 ಪದದವೃತ್ತವಿದು)
ತಾತ್ಪರ :- 1) ಚೇತನ -ಅಚೇತನ ವಸ್ತುಗಳೆಲ್ಲವನ್ನೂ ಸೃಷ್ಟಿಸುವ, ಎಲ್ಲವನ್ನೂ ತನಗೆ ಶರೀರವಾಗಿ ಮಾಡಿಕೊಂಡಿರುವ, 2) ಸಮಸ್ತಕ್ಕೂ ತಾನು ಆಧಾರವಾಗಿ ತನಗೆ ತಾನೇ ಆಧಾರನಾಗಿರುವ, 3) ನಿರತಿಶಯಮಹಿಮನಾಗಿರುವ, 4) ‘‘ಶ್ರೀಮನ್ನಾರಾಯಣನೇ ಪರಬ್ರಹ್ಮನು. ಅವನೇ ಜಗತ್ಕಾರಣನು.” ಎಂಬ ಅಭಿಪ್ರಾಯಕ್ಕೆ ವಿರೋಧವಾಗಿಯೂ,
ಹಸ್ತಗಿರಿ ಮಾಹಾತ್ಮ 389 5) ದೋಷರೂಷಿತವಾಗಿಯೂ ಇರುವ ವಿಮತರ ತಾತ್ಪರಕ್ಕೆ ಲಕ್ಷ್ಮನಾಗಿಲ್ಲದಿರುವ, 6) ಪರತತ್ವವನ್ನು ವ್ಯಕ್ತಪಡಿಸಲು ಹೊರಟು, ದಾರಿತಪ್ಪಿ, ವಿಪರೀತಾರ್ಥಗಳನ್ನು ಪ್ರಚಾರ ಪಡಿಸುವ ಇತರ ಮತಗಳನ್ನು ನಿವಾರಿಸಲು, ತಾನೇ ಪಾಂಚರಾತ್ರ ಶಾಸ್ತ್ರವನ್ನು ಪ್ರಕಟಿಸಿ, ಅದರಂತೆ ನಡೆಯುವ ತನ್ನ ಭಕ್ತರಿಗೆ ಪರಮಾನುಕೂಲವಾಗಿಯೂ ಇರುವ 7) ಜೀವೋಪಕರಣಗಳಿಂದ ಪಂಚಭೂತಗಳನ್ನೂ ಸೃಜಿಸಿರುವ 8) ಸಕಲೇಂದ್ರಿಯಗಳಿಗೂ ಕಾರಣನಾದ, 9) ನಿಖಿಲಚೇತನಗಳ ಜಾಗ್ರತ್ ಸ್ವಪ್ನ-ಸುಷುಪ್ತಿ-ಮೂರ್ಛ-ಮರಣ ಮೊದಲಾದ ಎಲ್ಲಾ ಅವಸ್ಥೆಗಳಲ್ಲೂ ತಾನೇ ನಿರ್ವಾಹಕನಾಗಿ, ಜಗತ್ತನ್ನು ನಡೆಸುವ, 10) ಚೇನತಾಚೇತನಗಳೊಂದಿಗೆ ತಾನೂ ಕೂಡಿಕೊಂಡು ಅಂತರಾಮಿಯಾಗಿದ್ದರೂ ಅವುಗಳ ಸಹಜದೋಷ ತನಗೆ ತಟ್ಟದಂತೆ ಇರುವವನೂ, ॥) ಮುಕ್ತಿಗೆ ಸಾಧನವಾಗಿ ಭಕ್ತಿಯೋಗಾದಿಗಳು ಹೇಳಲ್ಪಟ್ಟು, ಅವುಗಳಲ್ಲಿ ಪರಸ್ಪರ ನ್ಯೂನಾತಿರೇಕ-ಗುಣಾತಿಶಯ ಗಳಿದ್ದರೂ ಪರಸ್ಪರ ಅವು ವಿರುದ್ಧವಾಗದೆ ಸಕಲವಿದ್ಯೆಗಳು ಇರುವ ಉಪಾಸ್ಯನು ತಾನೇ? ಎಂದಿರುವವನೂ, 12) ಯೋಗಾಂಗವಾದ ನಿತ್ಯ ನೈಮಿತ್ತಿಕಾದಿ ಕರ್ಮಗಳುಳ್ಳ ವರ್ಣಾಶ್ರಮ ಧರ್ಮಗಳನ್ನು, ಸಾತ್ವಿಕತ್ಯಾಗ’’ ಪೂತ್ವಿಕವಾಗಿ ಮಾಡುವುದನ್ನು ತಾನು ಸ್ವೀಕರಿಸಿ, ಅತ್ಯಂತ ಪ್ರೀತನಾಗಿ ಒಳ್ಳೆಯ ಜ್ಞಾನವನ್ನು ಕೊಡುವವನೂ, 13) ಉಪಾಸಕರ ಸಮಸ್ತಕರ್ಮಗಳನ್ನೂ (ಪುಣ್ಯ-ಪಾಪ) ನಿವಾರಿಸುವವನೂ, 14) ಪ್ರಸನ್ನರಾಗಿ ಮುಕ್ತಿಹೊಂದುವವರನ್ನು ಬ್ರಹ್ಮನಾಡೀ ಮೂಲಕ ಪ್ರವೇಶಗೊಳಿಸುವವನೂ, 15 ಅಂತಹ ಚೇತನರನ್ನು ಆತಿವಾಹಿಕ ಪುರುಷರ ಮೂಲಕ ಸಂಸಾರಮಂಡಲದಿಂದ ದಾಟಿಸಿ, ಪರಮಪದವನ್ನು ಸೇರಿಸುವವನೂ, 16) ಅನಂತರ ಮತ್ತೆ ಹಿಂತಿರುಗಿಸದಂತೆ ಮಾಡಿ, ತನ್ನ ಆತ್ಮಶ್ವರದ ಪರಮಾವಧಿಯ ಸ್ವಸಾಮ್ಯವನ್ನಿತ್ತು ಬೆಳಗಿಸುವ ಆ ಪರಮಾತ್ಮನಾದ ಈ ವರದರಾಜನಿಗೆ ನಿತ್ಯಸೇವಕರಾಗಿ ಜನಿಸಿ, ಇರುವೆವಲ್ಲಾ! ಆಹಾ ! ಅದೆಂತಹ ಭಾಗ್ಯವಂತರು ನಾವು’’ ಎಂದು ಸಮಸ್ತ ದೇವತೆಗಳೂ ಕೊಂಡಾಡಿದರು ಎಂದು ಶ್ರೀವೇದವ್ಯಾಸರು ರಚಿಸಿರುವ ‘ಬ್ರಹ್ಮಸೂತ್ರ’ದ 4 ಅಧ್ಯಾಯ - 16 ಪಾದಗಳಲ್ಲಿನ ಸಾರಾರ್ಥವನ್ನು ತಮ್ಮ 16 ಈ ಪಾದಗಳುಳ್ಳ ಪಾಶುರದಲ್ಲಿ ಅಳವಡಿಸಿ, ಪರತತ್ವ ಸಾರವನ್ನು ನಮಗೆ ನಮ್ಮ ಶ್ರೀ ದೇಶಿಕೋತ್ತಮರು ಉಪದೇಶಿಸಿರುವರು. ಹೀಗೆಯೇ ಕೇವಲ ನಾಲ್ವೇ ಪಾದಗಳುಳ್ಳ ಒಂದು ಶ್ಲೋಕದಲ್ಲಿ ಅಳವಡಿಸಿ, ‘‘ಅಧಿಕರಣಸಾರಾವಳಿ’’ ಎಂಬ ಗ್ರಂಥದಲ್ಲಿ ಒಂದೊಂದು ಪದದಿಂದ ಒಂದೊಂದು ಪಾದದ ಸಾರಾರ್ಥವನ್ನು ವ್ಯಕ್ತಪಡಿಸಿ, ತಮ್ಮ ಅನಿತರ ಸಾಧಾರಣ ಕವಿತಾಸಾಮರ್ಥ್ಯವನ್ನೂ ತೋರ್ಪಡಿಸಿರುವರು. ಆ ಶ್ಲೋಕ :- “ಸ್ರಷ್ಟಾದೇಹೀಧ್ವನಿಷ್ಟೋ ನಿರವಧಿಮಹಿಮಾಪಾಸ್ತಬಾಧಃ ಶ್ರಿತಾಪ 1 ಖಾತ್ನಾದೇಃ ಇಂದ್ರಿಯಾದೇಃ ಉಚಿತ ಜನನಕೃತ್ ಸಂಸ್ಕೃತಂತ್ರವಾಹೀ ॥ ನಿರ್ದೋಷತ್ವಾದಿರಮ್ಯ ಬಹುಭಜನಪದಂ ಸ್ವಾರ್ಹಕರ್ಮ ಪ್ರಸಾದ್ಯಃ | ಪಾಪಚ್ಚಿತ್
60 ॥23 390 ಹಸ್ತಗಿರಿ ಮಾಹಾತ್ಮಂ ಬ್ರಹ್ಮನಾಡೀಕೃತ್ ಅತಿವಹನ್ ಸಾಮ್ಯದಶ್ಚಾತ್ರವೇದ್ಯಃ II’’ ಎಂದು (ಸಹೃದಯರಿಗೇನೆ ಶ್ರೀಮದಾಚಾರರ ಉಪದೇಶಾಮೃತಾಸ್ವಾದದ ಹಿರಿಮೆಯರಿವಾಗುವುದು) विवृत्योक्तं शास्त्रे चिदचिदिति सर्वं सृजसि तत् । तदन्तर्यामी सन्निवससि तदन्त स्तदधिपः ॥ सरूपं स्थूलं वा भवतु सकलं सूक्ष्म मपि वा । तदात्मा तद्देही प्रविलससि तद्दोषरहितः ॥ यथा भित्त्याधारं भवति रुचिरं चित्र मखिलम् । तथा बद्धा मुक्ताः परमपदिनोऽप्याश्रयबलाः । । त्रयीमार्गे त्यक्ता अचिदहितरीति र्निरसितुम् । सदोदारप्रज्ञो महिमपरिपूर्णोऽसि भगवन् ! सहेतुपरिकल्पनाचतुरजल्पविद्याचणैः । अचाल्य उरुशक्तिमानतिविचित्रमायानिधिः ॥ सकापिलकणादसौगतजिनेशवाचोदितम् । श्री ताप्त उपमर्दितुं सदय आत्थ शास्त्रं स्वयम् ॥ निदान मुचितं यथाचिति तथात्मवर्गे परः । हृषीकविषयेषु च प्रथितपञ्चभूतेष्वसि ॥ दशैककरणेष्वपि प्रलय इन्द्रियागोचरे- । ष्ववेक्षणविचक्षणो मुनि रहो ! महान् दृश्यसे ॥ समग्रसमभावनः सकललोकनिर्वाहकः । क्रमेण समुपावृतं त्वघभवं भवं शास्ति च ॥ विचेतनसचेतने जगति वीतदोषस्थितौ । अनुत्तमयशोनिधिः निरुपम स्समस्ताधिपः ॥ कलासु विविधास्वनुत्तमतया विभक्तास्वपि । समुद्धरणभावनानुगुणसगुणानां निधे ! ॥ 04 ………. ಹಸ್ತಗಿರಿ ಮಾಹಾತ್ಮ प्रशस्तनिजकर्मसु त्यजनशेमुषी दुष्करा । ह्युपाय मिम माचरत्स्वतिदयः प्रिय स्तुष्यसि ॥ उपासकमुपावृता न्यखिलपुण्यपापान्यपि । प्रणाष्य पुनरागमव्यपगमाय संकल्पवान् । शरीरपतनस्थितौ प्रणमता मनावृत्तिके । प्रवेशकरणक्षमोऽस्यनववोध्यनाडीपथे ॥ प्रकृत्यनुगुणं ततं निखिलतत्व मुन्मूल्य च । भवाम्बुनिधितारकेष्वतिमहाधिकार्यग्रणीः ॥ वितीर्णफलचिन्तकान् शरण मागतान् आत्मन: । Hasa ! d faa! Aff an aq | ಮೂಲ
· 391. १९ ತಿರುಮಗಳಗಳ ನೀಲೈಮುದಲಾವೆಲ್ಲಾ ತೇವಿಯರುಂ ತನ್ನುಡನೇ ತಿಹಳು ನಿಮ್ಮ, ದರುಮಮಿರು ಮೂನ್ನುಮುದಲ ನೈತುಂತೋನ, ತನ್ನನೈಯ ಶೂರಿಯ ತನ್ನಡಿಲ್ವಾಳ, ಅರುಮರೈ ಶೇರಳವಿಲ್ಲಾವವ ನಿಯಿನ್ಕಣ್, ಅರೈವ ಮೇಲ್ವೀ೬ ರುಪ್ಪಾಲನೈತ್ತುಂಕಾಕ್ಕುಂ, ಕರುಮಣಿಯೆಕ್ಕರಿಗಿರಿ ಮೇಲ್ಕಂಡೇನ್, ಎನ್ನ್ನಡು ವಿನೈಹಳನೈತ್ತು ನಾನ್ಯಂಡಿಲೇನೇ |
20 ಅರ್ಥ :- ತಿರುಮಗಳ್ = ಮಹಾಲಕ್ಷ್ಮಿ, ಮಣ್ಮಗಳ್ - ಭೂದೇವಿ, ನೀಳ್ಳೆ : ನೀಳಾದೇವಿ, ಮುದಲಾ-ಎಲ್ಲಾ-ದೇವಿಯರುಂ - ಮೊದಲಾದ ಸಮಸ್ತ ದೇವಿಯರೂ, ತನ್ನುಡನೇ -ತಿಹಳು-ನಿರ : ತನ್ನ ಜೊತೆಯಲ್ಲಿ ಬೆಳಗುತ್ತಿರಲು, ಇರು-ಮೂನು- ದರುಮಂ-ಮುದಲ್ = ಜ್ಞಾನಶಕ್ಕಾಗಿ ಆರು ಗುಣಗಳೇ ಮೊದಲಾದ, ಅನೈತ್ತುಂ = ತೋನ : ಎಲ್ಲಾ ಗುಣಗಳೂ ಬೆಳಗಲು, ತನ್ -ಅನೈಯ - ತನ್ನಂತೆಯೇ ಇರುವ, ಶೂರಿಯರ್ - ನಿತ್ಯಸೂರಿಗಳು, ತನ್ -ಅಡಿ-ಕೀಳ್ -ವಾಳ - ತನ್ನಡಿಗಳಲ್ಲಿ ಸೇವೆ ಮಾಡುತ್ತಿರಲು, ಅರು-ಮರೈ-ಶೇರ್ - ಅತಿಗಹನವಾದ ವೇದಗಳಿಂದ ಸ್ತುತಿಸಲ್ಪಡುವ, ಅಳವು- ಇಲ್ಲಾ ಅವನಿಯನ್-ಕಣ್ = ಅಳತೆ ಮಾಡಲಾರದಷ್ಟು ವಿಶಾಲವಾದ ಪರಮ ಪದದಲ್ಲಿ ಅರವು-ಅಣೆ-ಮೇಲ್ : ಆದಿಶೇಷನೆಂಬ ಮಂಚದ ಮೇಲೆ, ವೀತಿರುಪ್ಪಾಲ್ ಬಿಜಯಮಾಡಿಸಿರುವುದರಿಂದಲೇ, ಅನೈತ್ತುಂ-ಕಾಕ್ಕುಂ : ಸಮಸ್ತವನ್ನೂ ಸಂರಕ್ಷಿಸುವ,
392
ಹಸ್ತಗಿರಿ ಮಾಹಾತ್ಮ ಕರುಮಣಿಯೆ : ನೀಲರತ್ನದಂತಿರುವ ವರದರಾಜನನ್ನು, ಕರಿಗಿರಿ ಮೇಲ್ : ಹಸ್ತಿಗಿರಿಯ ಮೇಲೆ, ಕಂಡೇನ್ - ನೋಡಿದೆನು, ಎನ್-ತನ್ -ಕಡು-ವಿನೈಹಳ್ -ಅನೈತ್ತುಂ : ನನ್ನ ಕಡುತರಕರ್ಮಗಳಾವುದನ್ನೂ, ನಾನ್-ಕಂಡಿಲೇನ್ - ನಾನು ಕಾಣಲಿಲ್ಲ.
- ತಾತ್ವ :- ಪರಮ ಪದದದಲ್ಲಿ ಪರಮಪದನಾಥನ ಪಕ್ಕಗಳಲ್ಲಿ ಶ್ರೀ, ಭೂ, ನೀಳಾದೇವಿಯರು ವಿರಾಜಿಸುವರು. ನಿತ್ಯಸೂರಿಗಳು ಅವನ ಪಾದಸೇವೆಗಳನ್ನು ಮಾಡುತ್ತಿರುವರು. ಜ್ಞಾನ, ಶಕ್ತಿ, ಬಲ, ಐಶ್ವಯ್ಯ, ವೀರ, ತೇಜಸ್ಸುಗಳೆಂಬ ಆರು ಪ್ರಧಾನತಮಗುಣಗಳಾದಿಯಾಗಿ ಸಮಸ್ತಕಲ್ಯಾಣ ಗುಣಗಳೂ ಬೆಳಗುವಂತೆ, ಅನಂತನಾದ ದಿವ್ಯ ಪಠ್ಯಂಕದಲ್ಲಿ ಇರುತ್ತಲೇ, ತನ್ನ ದಿವ್ಯಾಮೃತ ಕಟಾಕ್ಷವೀಕ್ಷಣದಿಂದಲೇ ಸಕಲ ಲೋಕಗಳನ್ನೂ ಪರಿಪಾಲಿಸುವ ಪರಮಾತ್ಮನನ್ನು ಈ ಹಸ್ತಿಗಿರಿಯಲ್ಲಿ ಇಂದು ಕಣ್ಣಾರಕಂಡೆನು. ನನ್ನ ಸಮಸ್ತ ಪಾಪಗಳೂ ತೊಲಗಿದವು. ಎಂದು ಬ್ರಹ್ಮನು ನೆನೆನೆನೆದು ಆನಂದಿಸಿದನು.
- श्रीभूनीलादिदेवीष्वनुपमसुषुमास्वेजमानेषु षट्सु । ज्ञानादिष्वात्मसाम्येष्वपि कृतपदसेवेषु नित्येषु नित्यम् ॥ वेदस्तुत्येऽप्रमेये परमपद इते भोगितल्पे स्थिते र्हि । नीलं रत्नं जगत्त्रं करिगिरिशिखरेऽपश्य मुग्रे न मेऽघम् ॥
- ಮೂಲ : ಪೆಡೆಯಿರಣೆಯೊರನಮಡೈನ್ನು, ಪಿರಿನ್ದಿಡಾವಹೈಪೇಶಲಾಂ,
- ಪೆರುಹುಮರುವಿಹಳರುಹುಮರುವಿಯ,
- ಪೆರಿಯಮಣಿವರೈಪಯಿಲಲಾಂ,
- ಪಿಡಿಯಿರಣ್ಣೂಡುಕಳಬನ್ನು, ಪಿನ್ನಪೇರಳಹೋದಲಾಂ, ಪಿರಿವಿಲೊಳಿಯೊಡುನಿಳಲುಮರುಹುರು, ಮಿರವಿ
- ಯಿಲಹುದಲ್ಪರವಲಾಂ
- ಕೊಡಿಯಿರಣೋಡು ವಿಡವಿಯೊನ್ನು,
- ಕುಳಿನವಾರುಕುಲಾವಲಾಂ,
- ಕುರೈವಿಲ್ ಶುರದಿಯುಂನಿನೈವು ಮಿಲಹಿಯದರುಮವರು
- ನಿಲೈಯೆನ್ನಲಾಂ,
- ಅಡಿಯಿರಣ್ಯುಮಡೈಯುಮನ್ವರರಿದ್ದಪೇರರುಳಾಳನಾರ್, ಅಣಹುಮಲರಹಳವನಿಮಹಳೊಡು ಕರಟಿಗಿರಿ
- ನಿಲೈಕವರ್ದಲೇ ॥
- २०
- 21
- J
- ಹಸ್ತಗಿರಿ ಮಾಹಾತ್ಮಂ
393
ಅರ್ಥ :- ಅಡಿ-ಇರಂಡೈಯುಂ : ತನ್ನೆರಡಡಿಗಳನ್ನೂ, ಅಡೈಯುಂ-ಅನ್ಸ ಪಡೆಯುವ ಭಕ್ತರಿಂದ, ಅರಿಂದ : ಧ್ಯಾನಮಾಡಲ್ಪಟ್ಟ, ಪೇರರುಳಾಳನಾರ್ - ದೇವಾಧಿರಾಜನು, ಅಣುಹುಂ = ಎರಡು ಪಕ್ಕಗಳಲ್ಲೂ ಮಲರ್-ಮಹಳ್ -ಅವನಿ- ಮಹಳ್ -ಓಡು = ಮಹಾಲಕ್ಷ್ಮಿ ಮತ್ತು ಭೂದೇವಿಯೊಡನೆ, ಕರಟಿಗಿರಿ = ಹಸಿಶೈಲದಲ್ಲಿ ನಿಲೈ-ಕವರ್ದಲ್ : ನೆಲೆಸಿ ಬೆಳಗುವುದನ್ನು (ನೋಡಿದರೆ) ಒರ್ -ಅನಂ = ಒಂದು ಹಂಸವು, ಪೆಡ್ಡೆ -ಇರಂಡೈ = ಎರಡು ಹಂಸಿಗಳೊಂದಿಗೆ, ಅಡ್ಡೆಂದು : ಜೊತೆಗೂಡಿ, ಪಿರಿಂದ್ ಇಡಾ-ವ : ಎಂದೂ ಅಗಲದ ರೀತಿಯಂತಿದೆಯೆಂದು, ಪೇಶಲಾಂ = ಹೇಳೋಣ. ಪೆರುಹುಂ = ಹರಿಯುವ, ಅರುವಿಹಳ್ = ಗಿರಿನದಿಗಳೆರಡು, ಅರುಹು : ಅರುಗಿನಲ್ಲೇ, ಮರುವಿಯ = ಕೂಡಿಕೊಂಡಿರುವ, ಪೆರಿಯ-ಮಣಿ-ವರ : ದೊಡ್ಡ ರತ್ನಪರ್ವತವೆಂದು, ಪಯಿಲಿಲಾಂ = ಯಾವಾಗಲೂ ನೆನೆಯೋಣ. ಒನ್ನು ಕಳಬಂ : ಒಂದು ಆನೆಯು, ಪಿಡಿ-ಇರಂಡು ಒಡು : ಎರಡು ಹೆಣ್ಣಾನೆಗಳೊಡನೆ, ಪಿಂದ ಸೇರಿರುವ, ಪೇರ್ -ಅಳಿಹು - ತುಂಬ ಸೊಗಸಿನಂತಿದೆಯೆಂದು, ಓದಲಾಂ : ಹೇಳೋಣ. ಪಿರಿವು-ಇಲ್ -ಒಳಿ-ಒಡು : ತನ್ನನ್ನು ಬಿಡದೆ ಇರುವ ಪ್ರಕಾಶದೊಂದಿಗೆ, ನಿಳಲುಂ = ನೆರಳೂ, ಅರುಹು-ಉರುಂ ಈ ಪಾರ್ಶ್ವವನ್ನು ಹೊಂದಿಕೊಂಡಿರುವ, ಇರವಿ : ಸೂಯ್ಯನು, ಇಲಹುದಲ್ = ಪ್ರಕಾಶಿಸುವುದನ್ನು (ಪ್ರಕಾಶಿಸುವಂತಿದೆಯೆಂದು) ಪರವಲಾಂ = ಎಲ್ಲೆಡೆಯೂ ಹರಡೋಣ (ಹೊಗಳೋಣ). ಒನು-ವಿಟವಿ : ಒಂದು ಮರವು, ಕೊಡಿ-ಇರಂಡು -ಒಡು = ಎರಡು ಲತೆಗಳೊಂದಿಗೆ, ಕುಳಿರ್-ವಾರು = ತಂಪಾಗಿರುತ್ತಾ ಇರುವಂತಿದೆ ಯೆಂದು, ಕುಲಾವಲಾಂ : ಕೊಂಡಾಡೋಣ, ಕುರುವೈ -ಇಲ್ ವಿಕಲತೆಯಿಲ್ಲದ, ಶುರುದಿಯುಂ-ಶ್ರುತಿಯೂ, ನಿನೈವುಂ -ಸ್ಕೃತಿಯೂ (ಕೂಡಿಕೊಂಡು) ಇಲಹಿಯ - ಪ್ರಕಾಶಿಸುವ, ದರುಮ-ಅರು-ನಿಲೈ : ಧರ್ಮದ ಸೂಕ್ಷ್ಮಸ್ಥಿತಿಯೋ ಎಂಬಂತೆಯೂ, ಎನ್ನಲಾಂ = ವರ್ಣಿಸೋಣ.
1
ತಾತ್ವರ:- ದೇವಾಧಿರಾಜನು ಶ್ರೀದೇವಿ ಭೂದೇವಿಯರೊಡನೆ ಕೂಡಿ, ಹಸ್ತಿಗಿರಿಲ್ಲಿ ನೆಲೆಸಿ, ಕಂಗೊಳಿಸುವುದನ್ನು ನೋಡಿದರೆ, “ಒಂದು ರಾಜಹಂಸವು ಎರಡು ಹಂಸಿಗಳೊಂದಿಗೆ ಕೂಡಿ ವಿಹರಿಸುವಂತೆಯೂ, ಒಂದು ನೀಲಮಣಿ ಪರ್ವತವು ತನ್ನೆರಡು ಪಕ್ಕಗಳಲ್ಲೂ ಝರಿಗಳನ್ನು ಹೊಂದಿ ಕಂಗೊಳಿಸುವಂತೆಯೂ, ಒಂದು ಆನೆಯು, ತನ್ನ ಎರಡು ಹೆಣ್ಣಾನೆಗಳನ್ನು ಕೂಡಿಕೊಂಡು, ಉಲ್ಲಾಸದಿಂದರುವಂತೆಯೂ, ಸೂರನು ತನ್ನ ಪ್ರಭೆ ಮತ್ತುಛಾಯೆಗಳೊಡನೆ ಪ್ರಕಾಶಿಸುವಂತೆಯೂ, ಒಂದು ವೃಕ್ಷವು ಎರಡು ಅಂದವಾದ ಬಳ್ಳಿಗಳನ್ನು ಹಬ್ಬಿಸಿಕೊಂಡು ಮನೋಹರವಾಗಿರುವಂತೆಯೂ, ಮತ್ತು ಧರ್ಮಶಾಸ್ತ್ರದ ಸೂಕ್ಷ್ಮಸ್ಥಿತಿಯು ಶ್ರುತಿ ಮತ್ತು ಸ್ಮೃತಿಗಳನ್ನು ಬಿಡದೆ ಕೂಡಿಕೊಂಡು, ಸಫಲವಾಗಿ,394 ಹಸ್ತಗಿರಿ ಮಾಹಾತ್ಮಂ ಹೊಂದಿಕೊಂಡಿರುವಂತೆಯೂ,’ ಇರುತ್ತಾ, ಅನ್ಯಾದೃಶಸಾದೃಶ್ಯವನ್ನು ಹೊಂದಿರುವನೆಂತ ವರ್ಣಿಸೋಣ. ಹೀಗೆ ಬ್ರಹ್ಮನು ಸದ್ಗುಣನಿಧಿಯಾಗಿದ್ದು ಪರಮಾತ್ಮನನ್ನು ಸಂದರ್ಶಿಸಿ ಹಿ ಹೋದನು. पादद्वन्द्वाश्रयैकप्रियविदितदयामूर्तिदेवाधिनेतुः । पार्श्वस्थ श्रीधरस्य स्तुतकरटिगिरौ कल्पनं स्थेमधाम्नः ॥ हंसीभ्यां हंस एकोऽविरहित इव वाश्लिष्ट इत्युट्टणीम । पार्श्वस्त्रोतस्विनीकं मणिमय मिव वाम्रेडयामाचलेन्द्रम् ॥ संलीष्टं तं वशाभ्या मिभ मिव च महासुन्दरं ह्यामनाम । जुष्टं छायाप्रभाभ्यां रवि मिव सुरुचिं वर्णयामा वियुक्तम् ॥ वीरुद्भ्यां भासमानं विटपिन मिव संशीतलं संस्तवाम । निर्वैकल्यश्रुतिस्मृत्युपचित मिव तं धर्मसूक्ष्मं फणाम ॥ २१ ಮೂಲ : ವೇರೊಪ್ಪಾರ್ವಿಣುದಲಾಂಕಾವುಕ್ಕೆಲಾಂ, ವಿಳಿಯೊಪ್ಪಾ ವೇದಮೆನುಂಕಣ್ತನಕ್ಕು, ಕಾಪ್ಪಾರ್ ಕರುಣೆ ಮಳ್ಳೆ ಪೊಳಿಡುಂಕಾಲ್, ಕಡಲೊಪ್ಪಾರ್ ಕಣ್ಣಿಡಿನುಂ ಕಾಣಾಕ್ಕೂತ್ಕಾಲ್ ನೀರೊಪ್ಪಾರ್ನಿಲಮಳಿಕ್ಕುಂತತನ್ನಾಲ್, ನಿಲಮೊಪ್ಪಾ ನೆಡುಂಪಿಳ್ಳೆಹಳ್ ಪೊರುಕ್ಕುನೇರಾಲ್, ಆರೊಪ್ಪಾರಿವರ್ಗುಣಂ ಗಳನೈತ್ತುಂಕಂಡಾಲ್, ಅರುಳಾಳರ್ ತಾವೆನಿನುಂತಮ ಕ್ಕೊವ್ವಾರೇ ॥ Q 22 ಅರ್ಥ :- ಅರುಳಾಳ : ಆಕಾಶಾದಿಗಳಿಂದಾಗುವ ಜಗತ್ತೆಂಬ, ಕಾವುಕ್ಕೆ-ಎಲ್ಲಾ : ಕಾಡುಗಳಿಗೆ (ಮರಗಳಿಗೆಲ್ಲಾ ದೇವರಾಜನು, ಎಣ್-ಮುದಲ್ -ಆಂ : ವೇರ್ -ಒಪ್ಪಾರ್ : ದೊಡ್ಡ ಬೇರಿನಂತೆಯೂ, ವೇದಂ ಎನುಂ : ವೇದಗಳೆಂಬ, = ಕಣ್-ತನಕ್ಕು = ಕಣ್ಣುಗಳಿಗೆ, ವಿಳಿ-ಒಪ್ಪಾರ್ = ಕಣ್ಣಿನ ನಡುವೆ ಇರುವ ಪಾಪೆಯಂತೆಯೂ, ಕರುಣೆ-ಮಳ್ಳೆ : ಕರುಣೆಯೆಂಬ ಮಳೆಯನ್ನು, ಪೊಳಿಂದಿಡುಂಕಾಲ್ : ಸುರಿಸುವ ಕಾಲದಲ್ಲಿ ಕಾರ್ -ಒಪ್ಪಾರ್ - ಮೇಘದಂತೆಯೂ, ಕಂಡಿಡಿನುಂ - ಕಣ್ಣಾರನೋಡಿದ್ದರೂ, ಕಾಣಾ-ಕೂತ್ಕಾಲ್ - ಪೂರ್ಣವಾಗಿ ನೋಡಲಾಗದಂತಹ ಹೆಚ್ಚಳಿಕೆಯಿಂದ, ಕಡಲ್ -ಒಪ್ಪಾರ್ = ಸಮುದ್ರದಂತೆಯೂ, ನಿಲಂ-ಅಳಿಕ್ಕುಂ ತನೈ-ತನ್ನಾಲ್ - ನೆಲವನ್ನೆಲ್ಲಾ
ಹಸ್ತಗಿರಿ ಮಾಹಾತ್ಮ
.395 ಕಾಪಾಡುವ ಸಹಜಗುಣದಿಂದ, ನೀರ್ -ಒಪ್ಪಾರ್ - ನೀರಿನಂತೆಯೂ, ನೆಡುಂ-ಪಿಳ್ಳೆಹಳ್ ಸಮಸ್ತ ಅಪರಾಧಗಳನ್ನೂ, ಪೊರಕ್ಕುಂ-ನೇರಾಲ್ - ಸಹಿಸಿಕೊಳ್ಳುವ ಸ್ವಭಾವದಿಂದ, ನಿಲ೦-ಒಪ್ಪಾರ್ ಭೂಮಿಯಂತೆಯೂ ಇವರ್ -ಗುಣಂಗಳ್ -ಅನೈತ್ತುಂ-ಕಂಡಾಲ್ : ಇವರ ಎಲ್ಲಾ ಗುಣಗಳನ್ನೂ (ಒಟ್ಟಿಗೆ ಇರುವನು. (ಆದರೆ) ಒಂದೆಡೆ) ಪಾಲೋಚಿಸಿದರೆ, ಒಪ್ಪಾರ್-ಆರ್ : ಸಮಾನರೆಂದೆನಿಸುವವರು ಯಾರು ? (ಯಾರೂ ಇಲ್ಲ) ತಾಮೆ-ಎನಿನುಂ : ತಾನೇ ಆಗಿರಬಹುದಲ್ಲವೆಂದರೆ (ಹೋಲಿಕೆಯಾಗುವವರು ತಮಕ್-ಒನ್ಸಾರ್ - ತನಗೂ ತಾನಾಗಲಾರನು. ತಾತ್ಪಯ್ಯ :- ಆಕಾಶಾದಿ ಪಂಚಭೂತಗಳಿಂದ ಆಗಿರುವ ಈ ಜಗತ್ತೆಂಬ ಮಹೋದ್ಯಾನದ ಮರಗಳಿಗೆ ಒಂದೇ ಬೇರಾಗಿ ಇರುವಂತೆ ಸಾಧಾರನೆಂದು ಬೇರಿಗೆ ಹೋಲಿಸಿಕೊಳ್ಳಬಹುದು, ಪರಮಾತ್ಮನು ಹಾಗೆಯೇ ವೇದಗಳೆಂಬ ಕಣ್ಣುಗಳಿಗೆ ಮಧ್ಯದಲ್ಲಿರುವ ದೃಷ್ಟಿ ಪ್ರಧಾನವಾದ ಪಾಪಗಳಂತೆ ಎಂದು ಜ್ಞಾನ ಜ್ಯೋತಿಪ್ರದನಾಗಿ, ಅದಕ್ಕೆ ಸಮಾನನೆನ್ನಿಸಿಕೊಳ್ಳುವನು, ಪಕ್ಷಪಾತವಿಲ್ಲದೆ ಸಲ್ವತ್ರ ಒಂದೇರೀತಿ ಮಳೆಸುರಿಸುವ ಮೇಘವನ್ನು ಹೋಲುವನು, ತಾನು ದಯಾದೃಷ್ಟಿಯನ್ನು ಸುರಿಸುವುದರಿಂದ, ಭಕ್ತರ ಕಣ್ಣಿಗೆ ಗೋಚರನಾದರೂ, ಕೇವಲ ಕೆಲವಂಶದಲ್ಲಿಯೇ ಹೊರತು ಪೂರ್ಣನಾಗಿ ಗೋಚರನಾಗದಂತಹ ಅತಿಶಯ ಅದ್ಭುತನಾಗಿರುವುದರಿಂದ ಸಮುದ್ರಕ್ಕೆ ಹೋಲಿಸಿಕೊಳ್ಳಬಹುದು. ಸಮುದ್ರವನ್ನು ಎಲ್ಲರೂ ನೋಡುವಂತಾಗಿದ್ದರೂ ಏಕದೇಶವದು. ಅದರ ವೈಶಾಲ್ಯ, ಗಂಭೀರತೆ, ಅದರಲ್ಲಿನ ಸತ್ವ ಮೊದಲಾದುವನ್ನು ಸಂಪೂರ್ಣವಾಗಿ ನೋಡಲಾಗುವುದಿಲ್ಲವೋ ಅದರಂತೆ ಅವನೂ ಅಗೋಚರ-ನೀರು ಭೂಮಿಯನ್ನು ಬಾಡಿಸದಂತೆ ಒದ್ದೆಯಾಗಿಯೇ ಇಟ್ಟು ಕಾಪಾಡುವಂತೆ, ತಾನು ಜಗದ ಜೀವರಾಶಿಗಳನ್ನು ದುಃಖಕ್ಕೆ ಈಡುಮಾಡದೆ ಉಜೀವನಗೊಳಿಸುವವನಾದುದರಿಂದ ನೀರಿಗೆ ಹೋಲಿಸಿಕೊಳ್ಳಬಹುದು. ನಾವು ಮಾಡುವ ಸಮಸ್ತ ಅಪಚಾರ ಅಪರಾಧಗಳನ್ನೂ ತಾಳ್ಮೆಯಿಂದ ತಾಳುವ ಭೂಮಾತೆಯಂತೆ ಸತ್ವವನ್ನೂ ಕ್ಷಮಿಸುವವನಾದುದರಿಂದ, ಭೂಮಿಗೆ ಹೋಲುವನು, ಹೀಗೆ ಕೆಲವು ಅಂಶಗಳಲ್ಲಿ ಒಂದೊಂದನ್ನು ಹೋಲಿಸಿದರೂ, ಎಲ್ಲವೂ ಒಂದೆಡೆಯಿರುವ ವಸ್ತುವಿಗೆ ಹೋಲಿಸಿಕೊಳ್ಳಲು ಅಂತಹ ವಸ್ತುವೇ ಸೃಷ್ಟಿಯಲ್ಲಿಲ್ಲ. ಹೋಗಲಿ, ತಾನೇ ತನ್ನನ್ನು ಹೋಲಲೂ ಆಗುವುದಿಲ್ಲ. ಎಲ್ಲೂ ಒಂದೇ ಕಾಲದಲ್ಲಿ ತನ್ನ ಸತ್ವಸ್ವವನ್ನೂ ತೋರಿಸಿಲ್ಲ, ಅಂದರೆ ಅಂತಹ ಅಪಾರಮಹಿಮನು ನಮ್ಮ ದೇವರಾಜನು ಅವನದೇ ಒಂದು ವೈಶಿಷ್ಟ್ಯ. ಈ ರೀತಿ ಬ್ರಹ್ಮದೇವನು ಭಗವಂತನನ್ನು ನೋಡಿ, ಹಿಗ್ಗಿ, ಆನಂದಪಟ್ಟನು. आकाशादिसमस्तविष्टपमहोद्यानैकमूलोपमः । आम्नायाक्षिकनीनिकेव च दयावर्षेण मेघोपमः ॥ 396 ಹಸ್ತಗಿರಿ ಮಾಹಾತ್ಮಂ दृष्टादृष्टत एधितोत्तमगुणात् वाराशिनीकाशितः । मेदिन्या िशशिरीकृते रवनतश्चाम्भोनिभो देवराट् ॥ लोकानां सकलापराधसहनात् सर्वंसहासन्निभः । लोकेऽन्य स्सदृशोऽस्य सद्गुणपरामर्शे तु लभ्येत कः ? नान्यस्स्वोपम इत्यसंशयवचः स्यादात्मनात्मैव वे- । त्यामर्शे नहि जाघटीति यदयं सत्यं स्वतो निस्तुलः ॥ ಮೂಲ : ಎನ್ನಿಲಮುಂ ಕುರತ್ತಾಳ್ ಕುರಿಶೆಯ್ವೆಳಿಲ್ಪಪರಿಕೊಂಡು, ಅನ್ನಮುಯರ್ತಯ್ಯೋನ್ ಅನ್ನುವೇಳ್ವಿವೇದಿಯಿನೈಲ್, ಮುನ್ನಿಲೈಯಾಹಿಯಮೂರ್ತಿಯನ್ನಾನುಹಮತ್ತುಮುನಕ್ಕು, ಎನ್ನವರಂ ತರುವೋಯೆನ್ನು ನಾದನಿಯಂಬಿನನೇ ॥
१ २२ 23 ಅರ್ಥ :- ಅನ್ನ-ಉಯರ್ ನ ಅನ್ನ-ಉಯರ್ನ್ನ : ಹಂಸವಾಹನನೂ, ಶೆಯ್ಯೋನ್ ಋಜುಸ್ವಭಾವದವನೂ ಆದ ಬ್ರಹ್ಮನು, ಎಲಮುಂ : ಭೂಮಿಯಲ್ಲಿ ಎಲ್ಲೆಲ್ಲೂ ಕುರುತ್ತಾಲ್ = ಕಾಲುಗೊರಸುಗಳಿಂದ, ಕುರಿ-ಶೆಯ = ಗುರುತನ್ನು ಮಾಡಿರುವ, ಎಳಿಲ್ ಪರಿ-ಕೊಂಡು : ಕಂಗೊಳಿಸುವ ಕುದುರೆಯ ಮೂಲಕ, ಅನ್ನು : ಆಗ, ವೇಳ್ವೆ-ಶೆಮ್ = ಯಾಗಮಾಡಿದ, ವೇದಿಯಿನ್ -ಮೇಲ್ = ವೇದಿಕೆಯ ಮೇಲೆ, ನಾದನ್ ಪ್ರಭುವಾದ ದೇವರಾಜನು, ಮುನ್-ನಿಲೈ-ಆಹಿಯ-ಮೂರ್ತಿಯನ್ : ಎದುರಿಗೆ ಕಾಣಿಸಿಕೊಂಡು. (ಅರ್ಚಾರೂಪಿಯಾಗಿ ಪ್ರತ್ಯಕ್ಷನಾಗಿ) ನಾನುಹ ! = ಎಲೈ ಬ್ರಹ್ಮನೆ ! ಉನಕ್ಕು = ನಿನಗೆ, ಮತ್ತುಂ-ಎನ್ನ : (ಪ್ರತ್ಯಕ್ಷವಾಗಿರುವುದಲ್ಲದೆ) ಮತ್ತೆ ಯಾವ, ವರಂ = ವರವನ್ನು, ತರುವೋಂ : ಕೊಡಬೇಕು. (ಕೇಳುವವನಾಗು) ಎನ್ನು = ಎಂದು, ಇಯಂಬಿನನ್ - ಕರುಣಿಸಿ ಕೇಳಿದನು.
ತಾತ್ಪರ :- ಹೀಗೆ ಬ್ರಹ್ಮದೇವನು ಕೈಗೊಂಡ ಅಶ್ವಮೇಧಯಾಗ ವೇದಿಕೆ ಪರಮಾತ್ಮನು ಆ ದೇವಾಧಿರಾಜನು ಅವತರಿಸಿ, ಬ್ರಹ್ಮನಿಗೆ ಅಮಿತಾನಂದವನ್ನು ಕೆಯಲ್ಲಿ ಕರುಣಿಸಿದುದೂ ಅಲ್ಲದೆ, “ಓ ಬ್ರರ್ಹ್ಮ ನಿನ್ನ ಅಭೀಷ್ಟವಾದುದನ್ನು ಕೇಳಬಹುದು. ನನ್ನನ್ನು ಪ್ರತ್ಯಕ್ಷವಾಗಿ ಕಂಡಮಹಾತ್ಮರು ಸಮಸ್ತ ಫಲಗಳನ್ನೂ ಪಡೆಯಬಹುದು’ ಎಂದು ಅವನನ್ನು ಕಟಾಕ್ಷಿಸಿ ಭಗವಂತನು ಕೇಳಿದನು. ગ્ कुर्वन्तं हंसवाहे प्रगुणितहृदये क्ष्मां खुराघातलक्ष्माम् । अर्वन्तं चाददाने ज्वलित मिह परं यागभूमेध्यवेद्याम् ॥ ಹಸ್ತಿಗಿರಿ ಮಾಹಾತ್ಮ प्रादुर्भूत स्स नाथः पुर उदितवपुः भो चतुश्शीर्ष ! तुभ्यम् । 397 किं वाद्यान्यत् प्रदद्यां वर मुचित मिति प्राह देवाधिराजः ॥ २३ ಮೂಲ : ಶೆನ್ನುಮಲ ಪರಿತ್ತು ಎನ್ನಾದನ್ ಶೇವಡಿಪ್ಪೋದುವನ್ನು ನನ್ನನೀರ್ ಶುಡರ್ ನನ್ಮುಕವಾಶಮಿಲೈಕೊಡುತ್ತು ಕನ್ನಲಿಲಡ್ಡು ಕತ್ತೋಡನ್ನು ಶೀಡೈಕರಿಪಡೈತ್ತು ಪಿನ್ನುಂ ಶೇವಿತವಾದಂ ಪಣಿಮಿನ್ದಳೆನ್ನನನೇ ॥ 24
ಅರ್ಥ :- ಶೆನ್ನು : (ಶರಣು ಹೊಂದಿ) ಸೇರಿ, ಮಲರ್ ಪರಿತ್ತು : ಹೂಗಳನ್ನು ಕುಯ್ದು, ಎನ್-ನಾದ : ನಮ್ಮ ಸ್ವಾಮಿಯಾದ ದೇವರಾಜನ, ಶೇ-ಅಡಿ-ಪೋದು - ಕೆಂಪಾದ ಪಾದಕಮಲಗಳನ್ನು, ಉಹನ್ನು ಪೂಜಿಸಿ, ನನ್ನು-ಎನುಂ-ನೀರ್ = ಉತ್ತಮವಾದ ಬಾಯಿ ಮುಖ ಮೊದಲಾದುವನ್ನೂ, ಸುವಾಸನೆಗೊಳಿಸುವ ‘ಮುಖವಾಸ’’ ಮತ್ತು ‘‘ತಾಂಬೂಲ’‘ಗಳನ್ನು ಕೊಡುತ್ತು: ಕೊಟ್ಟು ಕನ್ನಲ್ = ಕಬ್ಬಿನರಸ (ಅಥವಾ ಸಕ್ಕರೆಯಿಂದ ಆಗವ) ಇಲಡ್ಡು ಹತ್ತೋಡು : ಲಾಡು ಎಂಬ ಭಕ್ಷ್ಯವನ್ನೂ, ಅನ್ನಂ = ಪರಿಕರ ಸಹಿತವಾದ ಅನ್ನವನ್ನೂ, ಶೀ - ತಿಂಡಿಯನ್ನೂ, ಕರಿ - ವ್ಯಂಜನವನ್ನೂ, ಪಚ್ಚೆತ್ತು ಸಂಪಾದಿಸಿ, ಪಿನ್ನುಂ = ತಿರುಗಿಯೂ, ಶೇವಿತ್ತು = ಮಂತ್ರ ಜಪವನ್ನು ಮಾಡಿ, ಅವನ್ -ಪಾದಂ-ಪಣಿಮಿನ್ಗಳ್ = ಅವನ ಪಾದಗಳನ್ನು ಧ್ಯಾನಮಾಡಿ, ಎನ್ನರ್ನ = ಎಂದು ಉಪದೇಶಿಸಿದನು.
ತಾತ್ಪರ :- ಆಗ ಬ್ರಹ್ಮನು “ಎಲೈ ಭಗವಂತನೇ ! ನೀನು ಪರಮಪದದಲ್ಲೂ ಕ್ಷೀರ ಸಮುದ್ರದಲ್ಲೂ ನಿತ್ಯ ವಾಸಮಾಡುವಂತೆ, ಈ ಸತ್ಯವ್ರತ ಕ್ಷೇತ್ರದಲ್ಲೂ ನಿತ್ಯ ವಾಸಮಾಡಬೇಕು. ಹಸ್ತಿಗಿರಿಯ ಶಿಖರದಲ್ಲಿ ಸಕಲಲೋಕ ಜನರಿಂದಲೂ ನಮಿಸಲ್ಪಡುತ್ತಾ ಬೆಳಗುವ ಈ ಪುಣ್ಯಕೋಟಿ ವಿಮಾನದಲ್ಲಿ ಎಲ್ಲರೂ ಯಾವಾಗಲೂ ನಿನ್ನನ್ನು ನೇರವಾಗಿ ನೋಡಿ ಉದ್ಬವಿತರಾಗಬೇಕು’’ ಎಂದು ಕೇಳಿಕೊಂಡನು. ಅಲ್ಲಿದ್ದ ಮಹರ್ಷಿಗಳಿಗೂ ಅಭಿಗಮನ, ಉಪಾದಾನ ಇಜ್ಯಾ-ಸ್ವಾಧ್ಯಾಯ- ಯೋಗವೆಂಬ ಪಂಚಕಾಲ ಪೂಜಾಕ್ರಮವನ್ನು ಉಪದೇಶಿಸಿದನು. (ಈ ಪಾಶುರವು ಅನೇಕ ಮಾತೃಕೆಗಳಲ್ಲಿದೊರಕಿಲ್ಲ. ಒಂದೆರಡರಲ್ಲಿ ಮಾತ್ರವಿತ್ತು. ಬಿಡುವುದಕ್ಕಿಂತ ಪ್ರಕಟಿಸುವುದು ಮೇಲೆಂದು ವಿವರಿಸಲಾಗಿದೆ.) ಓ ಮಹರ್ಷಿಗಳಿರಾ ! ಪ್ರಾತಃಕಾಲ ದೇವರಲ್ಲಿ ಪ್ರಪತ್ತಿಯನ್ನಾಚರಿಸಿ (ಅಭಿಗಮನ) ಹೂ-ತುಲಸಿ-ಮೊದಲಾದುವನ್ನು ತಂದು ಪೂಜಿಸಿ, (ಉಪಾದಾನ) ಮನಸ್ಸನ್ನು ನಿರ್ಮಲವನ್ನಾಗಿಸಿಕೊಳ್ಳಿ. ನಂತರ ಶುದ್ಧವಾದ ತೀರ್ಥ, ಧೂಪ, ದೀಪ, ತಾಂಬೂಲ, ಅನ್ನ, ಸಕ್ಕರೆಯ ವಸ್ತುಗಳನ್ನು-ಎಲ್ಲವನ್ನೂ ಸಂಪಾದಿಸಿ, ನಿವೇದಿಸಿ ಶೇಷವನ್ನು ಪ್ರಸಾದದಂತೆ 398 ಹಸ್ತಗಿರಿ ಮಾಹಾತ್ಮಂ ಭುಜಿಸಿ (ಇಜೈ), ಮತ್ತೆ ಜಪಾದಿಗಳನ್ನು ಮಾಡಿ (ಸ್ವಾಧ್ಯಾಯ) ಮತ್ತೆ ಧ್ಯಾನಾದಿಗಳನ್ನಾಚರಿಸಿ (ಯೋಗ) ಈ ರೀತಿ ಆರಾಧಿಸಿ ನಿಮ್ಮ ಅಭಿಮತವನ್ನು ಸಾಧಿಸಿ, ಲೋಕಕಲ್ಯಾಣ ವನ್ನುಂಟುಮಾಡಿ ಎಂದು ಅವರಿಗೆ ಅರುಹಿದನು. नाथं प्राप्यस्मदीयं कुसुम मपचितं तत्पदाब्जेऽर्पयित्वा । पूतं नीरं च दीपं मुखसुरभिवसु प्रेष्ठताम्बूलदानम् ॥ पानीयं चेक्षुसाराद्युपहित मशनं लड्डुकाद्यं सुभक्ष्यम् । दत्वा भूयो जपित्वा तदुभयचरणं ध्यायतेत्यादिदेश ॥ ಮೂಲ : ಆಳಿನಿವಿನೈಕಡಿವಾನಯಮೇದಮುಡಿದ್ದದರ್ಪಿನ್
ವೇಳಮಲೈನಾಯಕನಾ ವಿಡೈಕೊಡುಕ್ಕವಿಣ್ಣೀರಿ ನಾಳಿಹೈಯಿಲ್ ವಾನವರೈ ಮಾತಿಯಿಡುಂ ನಾನ್ನುಹನ್ತಾನ್ ಊಳಿಯೆಲಾ ಮಳಿಯಾದ ಯೋಗಮಡ್ಕಂದಿರುಂದಾನೇ ॥
२४ 25 ಅರ್ಥ :- ನಾಳಿಹೈಯಿಲ್ - ಕ್ಷಣಕಾಲದಲ್ಲಿ, ವಾನವರೆ = ದೇವತೆಗಳನ್ನು, ಮಾತಿಯಿಡುಂ = ಆಯಾ ಸ್ಥಾನದಿಂದ ಬದಲಾಯಿಸುವಂತಹ, ನಾನ್ಮುಕನ್-ರ್ತಾ = ಚತುರ್ಮುಖ ಬ್ರಹ್ಮನು, ಆಳಿ-ನಿಲೈ-ವಿನೈ - ಸಮುದ್ರದಂತೆ ಅಪಾರವಾದ ಕರ್ಮಗಳನ್ನು, ಕಡಿರ್ವಾ : ಹೋಗಲಾಡಿಸುವುದಕ್ಕಾಗಿ, ಅಯಮೇದಂ : ಅಶ್ವಮೇಧಯಾಗವು, ಮುಡಿನ್ದದರ್ಪಿನ್ - ಮುಗಿದನಂತರ, ವೇಳಮ-ನಾಯಕನಾರ್ : ಹಸ್ತಿಗಿರೀಶನಾದ ವರದರಾಜನು, ವಿದ್ಯೆ-ಕೊಡುಕ್ಕ = ಬೀಳ್ಕೊಡಲು, ವಿಣ್ -ಏರಿ = ಬ್ರಹ್ಮಲೋಕಕ್ಕೆ ಹೋಗಿ, ಊಳಿ-ಎಲಾಂ-ಅಳಿಯಾದ : ಪ್ರಳಯಕಾಲದಲ್ಲೂ ಅಳಿಯದಂತಹ, ಯೋಗಂ : ಯೋಗವನ್ನು (ಭಗವದ್ಯಾನವನ್ನು) ಅಡೈಂದ್ -ಇರುಂದಾನ್ = ಪಡೆದು, ನೆಲೆಯಾಗಿದ್ದನು. ગ્
ತಾತ್ಪರ :- ಬ್ರಹ್ಮನು ಅಶ್ವಮೇಧ ಯಾಗವನ್ನು ಭಗವತೃಪೆಯಿಂದ ನೆರವೇರಿಸಿ, ಪರಮಾತ್ಮನನ್ನು ಸಾಕ್ಷಾತ್ಕರಿಸಿ, ಅವನ ಮಹಿಮೆಯನ್ನು ಕೊಂಡಾಡಿ, ಭಗವನ್ನಿಯಮವನ್ನು ಪಡೆದು, ತನ್ನ ಹಿಂದಿನ ವಾಸಸ್ಥಾನವೂ ಮತ್ತು ಅಧಿಕಾರ ಸ್ಥಾನವೂ ಆದ ಸತ್ಯಲೋಕಕ್ಕೆ (ಬ್ರಹ್ಮಲೋಕಕ್ಕೆ) ಬೀಳ್ಕೊಂಡು ಹೋಗಿ ಸೇರಿದನು. ಎಂದಿನಂತೆ ತನ್ನ ಹಿಂದಿನ ಅಧಿಕಾರವನ್ನು ನಡೆಸುತ್ತಾ ವರದರಾಜನ ಕೃಪಾಮಹಿಮೆಯನ್ನೂ ಅವನ ಸತ್ಯಸಂಕಲ್ಪವನ್ನೂ ಅನುಸಂಧಾನ ಮಾಡುತ್ತಾ, ಕಲ್ಪಕಾಲದಲ್ಲೂ ಅಳಿದು ಹೋಗದಂತಹ ಭಗವದ್ಗುಣ ರಸಾನುಭವ (ಯೋಗವನ್ನು ಮಾಡುತ್ತಾ ಕೃತಕೃತ್ಯನಾಗಿ, ಅತ್ಯಂತ ಭಾಗ್ಯಶಾಲಿಯಾಗಿ ಇರುತ್ತಿದ್ದನು. ಹಸ್ತಗಿರಿ ಮಾಹಾತ್ಮ देवानुद्वास्य चान्थान् नियमयितुमलं य श्रुतुर्वक्त्र आशु ! पारावारोपमं तन्निजदुरित मपोढुं च निर्वर्त्य यज्ञम् ॥ हस्त्यद्रीशानुमत्या पुनरपि भुवनं स्वीय मागत्य तत्र । योगे कल्पानपाये भगवदभिमुखो ध्याननिष्ठो बभूव ॥ ಮೂಲ : ಆದಿಯುಗತ್ತಯನ್ ಕಣ್ಣಿಡ ನಿನ್ನವರುಳರದರ್ 399 २५ ಕಾದಲುಯರ್ನಕಳಿತ್ತಿರೇತೈಯಿಲ್ ಕಾಡಳಿತ್ತು ವಾದುಯರ್ ದೇವಗುರುವುಕ್ಕಿರಂಗಿದ್ದುವಾಪರಲ್ ಮೋದಿಯನನ್ನನ್ ಕಲಿಯಿಲ್ ತೊಳುದಳ ನಿನ್ನನರೇ II 26
- ಅರ್ಥ :- ಆದಿಯುಗತ್ತು - ಕೃತಯುಗದಲ್ಲಿ ಕಂಡಿಡ -ನಿನ್ನ - (ಬ್ರಹ್ಮನು) ಸಾಕ್ಷಾತ್ಕರಿಸುವಂತೆ ಇದ್ದವನೂ, ಅರುಳ್ -ವರದ = ಕರುಣೆಯೇ ಮೂರ್ತಿಗೊಂಡಂತೆಯೂ ಇರುವ ವರದನು, ತಿರೇತೈಯಿಲ್ - ತ್ರೇತಾಯುಗದಲ್ಲಿ ಕಾದರ್ -ಉಯರ್ಥ್ಯ - (ತನ್ನಲ್ಲಿ ಬಹಳ ಭಕ್ತಿಯಿದ್ದ ಕಳಿತ್ಸೆ = ಗಜೇಂದ್ರನನ್ನು, ಕಾಳಿತ್ತು - ಸಂರಕ್ಷಿಸಿ, ದುವಾಪರಿತ್ತಿಲ್ : ದ್ವಾಪರ ಯುಗದಲ್ಲಿ ವಾದು-ಉಯರ್ - ವಾದಮಾಡಲ್ಪಡುವುದರಲ್ಲಿ ಅತಿ ಮೇಲಾದ, ದೇವ-ಗುರುವುಕ್ಕು : ದೇವತೆಗಳ ಗುರುವಾದ ಬೃಹಸ್ಪತಿಗೆ, ಇರಂಗಿ : ಕರುಣಿಸಿ, ಕಲಿಯಿಲ್ - ಕಲಿಯುಗದಲ್ಲಿ ಶೋತಿ- ಅನಂರ್ತ : ಜ್ವಲಿಸುವ ಆದಿಶೇಷನು, ತೊಳುದು-ಎಳ = ಸೇವಿಸಿ ಉಜ್ಜಿವನಗೊಳ್ಳಲು, ನಿನ್ನನರ್ = ನೆಲೆಸಿ ಇರುವನು.
ತಾತ್ಪರ :- ಕರುಣೆಯೇ ಆಕಾರವೆತ್ತಿ ನಿಂತಿರುವಂತಿರುವ ವರದರಾಜನು ಕೃತಯುಗದಲ್ಲಿ ಯಾಗವೇದಿಕೆಯಲ್ಲಿ ಅವತರಿಸಿ, ಬ್ರಹ್ಮನನ್ನು ಅನುಗ್ರಹಿಸಿದನು. ತ್ರೇತಾಯುಗದಲ್ಲಿ ಗಜೇಂದ್ರನ ನಿಸ್ತುಲಭಕ್ತಿಗೆ ಪ್ರಸನ್ನನಾಗಿ ಅದನ್ನು ಕಾಪಾಡಿದನು. (ತ್ರಿಕೂಟಾಚಲದ ಶಿಖರದಲ್ಲಿ ಮಹಾಶಾಂತನೆಂಬೋರ್ವ ಬ್ರಾಹ್ಮಣನು ಕಡುತಪ್ಪಸ್ಸನ್ನಾಚರಿಸಿದನು. ಅದರಿಂದ ತನ್ನ ಪದವಿಗೆ ಧಕ್ಕೆಯಾಗಬಹುದೆಂದಂಜಿ ಇಂದ್ರನು ಅದನ್ನು ಕೆಡಿಸಲು ಅಪ್ಪರಸ್ತ್ರೀಯರನ್ನು ಕಳುಹಿಸಿದನು. ಆದರೂ ಆ ಬ್ರಾಹ್ಮಣನ ಮನವು ಚಲಿಸಲಿಲ್ಲ. ಆಗ ಇಂದ್ರನೇ ಆನೆಯಾಗಿ ಹಲವು ಹೆಣ್ಣಾನೆಗಳೊಂದಿಗೆ ಇವನೆದುರಿಗೆ ವಿಹರಿಸಿದನು. ಅದನ್ನು ನೋಡಿ ಮನಸೋತು, ತಾನೂ ಆನೆಯ ರೂಪವನ್ನೇ ತಾಳಿ ಹಲವಾರು ಹೆಣ್ಣಾನೆಗಳೊಂದಿಗೆ ವನದಲ್ಲಿ ವಿಹರಿಸುತ್ತಾ ತನ್ನ ತಪಶ್ಚರಣೆಯನ್ನೇ ಮರೆತನು. ಹೀಗೆ ಅಲೆಯುತ್ತಾ ಸಾಲಿಗ್ರಾಮ ಕ್ಷೇತ್ರದಲ್ಲಿ ಚಕ್ರತೀರ್ಥದಲ್ಲಿ ಮುಳುಗಿದಾಗ ಹಿಂದಿನ ಸ್ಮರಣೆ ಬಂದು, ವಿಷ್ಣು ಕ್ಷೇತ್ರಗಳಲ್ಲಿರಬೇಕೆಂದೆಣಿಸಿ, ಬರುವಾವ ಮಾರ್ಗದಲ್ಲಿ ಗೋದಾವರಿ 400 ಹಸ್ತಗಿರಿ ಮಾಹಾತ್ಮ ತೀರದಲ್ಲಿ ಮೃಕಂಡುವಿನ ಆಶ್ರಮಕ್ಕೆ ಬರಲು ಅದನ್ನು ತನ್ನ ಜ್ಞಾನದೃಷ್ಟಿಯಿಂದ ನಿಜಾಂಶವನ್ನರಿತು, ಆ ಆನೆಯನ್ನು ಪೂಜಿಸಿ, ಪುಣ್ಯ ಕ್ಷೇತ್ರಗಳ ಮಹಿಮೆಯನ್ನು ವರ್ಣಿಸುತ್ತಾ, ಕಂಚಿಯಲ್ಲಿರುವ ಅನಂತಸರಸ್ಸಿನಲ್ಲಿ ಮಿಂದು ದೇವರನ್ನು ಸೇವಿಸಿದರೆ ದೋಷನಿವಾರಣೆಯಾಗುವುದೆನಲು, ಕೂಡಲೆ ಅಲ್ಲಿಗೆ ಆನೆಯು ಹೋಗಿ, ದಿನವೂ ಸಾವಿರಾರು ತಾವರೆಗಳನ್ನು ಕೊಯ್ದು ಪೂಜಿಸುತ್ತಿದ್ದಿತು. ಒಮ್ಮೆ ಮಳೆಯಿಲ್ಲದೆ ಎಲ್ಲಿ ನೋಡಿದರೂ ನೀರಿಲ್ಲದೆ ಕೊಳಗಳು ಬತ್ತಿಹೋದವು. ಹೂ ದೊರಕಲಿಲ್ಲ. ಹುಡುಕುತ್ತಾ ಚಿತ್ರಕೂಟದಲ್ಲಿ ಒಂದು ಕೆರೆಯಲ್ಲಿ ಹೂ ತುಂಬ ಇರಲು ಅಲ್ಲಿಳಿಯಿತು, ಅಲ್ಲಿದ್ದ ಮೊಸಳೆ ಯೊಂದು ಇದರ ಕಾಲು ಹಿಡಿಯಿತು. ಅಲ್ಲಿರುವ ಹೂವನ್ನೇ ಕೊಯ್ದು ‘ವರದ’‘ನನ್ನು ಮೊರೆಯಿಡಲು ಗರುಡಾರೂಡನಾಗಿ ಬಂದ ಶ್ರೀಕಾಂತನು ಕೂಡಲೇ ತನ್ನ ಚಕ್ರದಿಂದ ಮೊಸಳೆಯನ್ನು ಕೊಂದು, ಆನೆಯನ್ನು ಉದ್ಧಾರಮಾಡಿದನು. ಇದೇ ಇದರ ಹಿಂದಿನ ಕತೆ.) ದ್ವಾಪರ ಯುಗದಲ್ಲಿ ಸುರಗುರುವಾದ ಬೃಹಸ್ಪತಿಯನ್ನು ಉಜೀವಿತನನ್ನಾಗಿ ಮಾಡಿದನು. ಒಮ್ಮೆ ದೇವ ಸಭೆಯಲ್ಲಿ ಗೃಹದಲ್ಲಿದ್ದು ಪೂಜಿಸುವುದು ಮೇಲೋ ಅಥವಾ ತೀರ್ಥಯಾತ್ರಾದಿಗಳನ್ನು ಮಾಡುವುದು ಮೇಲೋ’ ಎಂದು ಚರ್ಚೆಯಾಯಿತು. ಮುನಿಗಳೆಲ್ಲರೂ ಮೊದಲನೆಯದನ್ನೇ ಸಾಧಿಸಿದರು. ಬೃಹಸ್ಪತಿಯು ವಾದಿಸಿ, ಮುನಿಗಳಿಗೆ ತೇಜೋವಧೆಮಾಡಿ ಎರಡನೆಯದನ್ನೇ ಸಾಧಿಸಿದಾಗ ಮುನಿಗಳು ಇವನ ಗರ್ವಕ್ಕೆ ಕೋಪಗೊಂಡು ಮಾನವನಾಗಿ ಜನಿಸಿ, ನೋವನ್ನು ಅನುಭವಿಸುವಂತೆ ಶಪಿಸಿದರು. ಬೃಹಸ್ಪತಿಯು ಕೂಡಲೇ ನರ್ಮದಾ ತೀರದಲ್ಲಿ ಒಬ್ಬ ಬಡಬ್ರಾಹ್ಮಣ ದಂಪತಿಗೆ ಮಗುವಾಗಿ ಜನಿಸಿ, ಚಿಕ್ಕಂದಿನಿಂದಲೇ ತಂದೆತಾಯಂದಿರನ್ನು ಕಳೆದುಕೊಂಡು, ಮತ್ತೊಬ್ಬನ ಆಸರದಲ್ಲಿರುತ್ತಾ ಬಲುಕಷ್ಟಪಟ್ಟು ಕಡೆಗೆ ಗಂಗಾತೀರದಲ್ಲಿ ಭರದ್ವಾಜ ಮುನಿಯನ್ನು ಶರಣು ಹೋಗಲು, ಅವರು ಜ್ಞಾನದೃಷ್ಟಿಯಿಂದಲ್ಲವನ್ನೂ ಅರಿತು ಹಸ್ತಿಗಿರಿಯಲ್ಲಿ ವರದರಾಜನನ್ನು ಕುರಿತು ತಪಸ್ಸು ಮಾಡಿದರೆ ಶಾಪವಿಮೋಚನೆಯಾಗುವುದು’’ ಎಂದೆನಲು, ಗುರುವು ಒಡನೆ ಹಾಗೆಯೇ ಮಾಡಲು, ಶ್ರೀಕಾಂತನು ಪ್ರಸನ್ನನಾಗಿ ದ್ವಾಪರಯುಗದಲ್ಲಿ ಪೂಜಿಸೆಂದು ಆಣತಿಯಿಡಲು, ತಪಸ್ಸನ್ನಾಚರಿಸಿ ತನ್ನ ಸ್ಥಾನವನ್ನು ಮತ್ತೆ ಸೇರಿದನು.) ಕಲಿಯುಗದಲ್ಲಿ ಆದಿಶೇಷನು ಸೇವೆಮಾಡುತ್ತಿರುವನು. ಹೀಗೆ ಇವರಿಗಾಗಿ ನಿಂತಿರುವ ಆ ಪರಮಾತ್ಮನ ಮಹಿಮೆಯೆಷ್ಟೆಂದು ಹೇಳಲು ಸಾಧ್ಯ. (ಆದಿವರಾಹ ರೂಪದಲ್ಲಿ ಹಿಂದೆ ಭಗವಂತನು ಭೂ ದೇವಿಯನ್ನು ಪಾತಾಳದಿಂದುದ್ಧರಿಸಿದನು. ಆ ರೂಪವನ್ನು ಸಂದರ್ಶಿಸಿದ ಆದಿಶೇಷನು ಆ ಭಗವಂತನನ್ನು ಸೇವಿಸಲು ಮೇಲಕ್ಕೆ ಶೇಷನು ಮೇಲೆ ಬಂದಾಗ ಆದ ಹಳ್ಳವೇ ಈಗಿರುವ ಅನಂತ ಸರಸ್ಸು) ಹಸ್ತಗಿರಿ ಮಾಹಾತ್ಮಂ 401 ಬಂದು ಅದರ ಸಮೀಪದಲ್ಲೇ ಒಂದು ಹುತ್ತದಲ್ಲಿರುತ್ತಾ ಇಂದಿಗೂ ಸೇವೆ ಮಾಡುತ್ತಿರುವನು. ಈ ಆಖ್ಯಾನಗಳು ಕಾಂಚಿಯ ಹಿರಿಮೆಯನ್ನು ವ್ಯಕ್ತಪಡಿಸುತ್ತವೆ.) धात्रा साक्षात्कृतोऽसौ वरद इह कृपाकार आद्ये युगेऽभूत् । त्रेतायां भक्तिं भूम्ना कृतवरिवसितं तं करीन्द्रं ररक्ष ॥ वादेष्वत्यन्तदक्षे निरुपमितगुरौ द्वापरेऽपिप्रयच्च । दीप्तोऽनन्तः कलौ स्यात्स्वपदपरिचरो भूष्णु रित्यास्थितोऽत्र ॥ ಮೂಲ : ಪುಡ್ಲರೀಕಮುಯರ್ತ್ತಪುರಾಣನಾ ಪೊಯ್ಯಲ್ ಮಾಮಕವುತರ ವೇದಿಯಿಲ್ ಕೊಡಲಾರರು ಮಾರಿ ಪೊಳಿಡ ಕೊಣ್ಡದೋರುಯ ಕೂರತಿಯನ್ನಿನಾಲ್ ಪನಾನರ ಮೌಲಿಪಡಿನ್ದಯಾನ್ ಪಾರಿನೈಯ್ವಿರತಕ್ಕವಿಪಾಡಿನೇನ್ ತೊಣ್ಡಮಣ್ಣಲವೇದಿಯ ವಾಳವೇ ತೂಯತೆನ್ನರೈವಲ್ಲವವಾಳವೇ ॥
२६ 27 ಅರ್ಥ :-ಪುಂಡರೀಕಂ-ಉಯಿರ - (ಭಗವಂತನ) ನಾಭಿಕಮಲದಲ್ಲಿ ಜನಿಸಿದ, ಪುರಾಣನಾರ್ : ಅನಾದಿ ಪುರುಷನಾದಬ್ರಹ್ಮನ, ಪೊಯ್ -ಇಲ್ -ಮಾ-ಮಕ- ಉತ್ತರ-ವೇದಿಯಿಲ್ - ಸತ್ಯವ್ರತ ಕ್ಷೇತ್ರದಲ್ಲಿ ಆಚರಿಸಿದ ಮಹಾಯಾಗದ ಉತ್ತರ ವೇದಿಕೆಯಲ್ಲಿ ಕೊಂಡಲ್ : (ವರದರಾಜನೆಂಬ) ಮೋಡವು, ಆರ್ -ಅರುಳ್ -ಮಾರಿ = ತುಂಬಿದಕರುಣೆಯೆಂಬ ಮಳೆಯನ್ನು, ಪೊಳಿಂದಿಡ = ಸುರಿಸುತ್ತಿರಲು, ಕೊಂಡದು : (ಅದರಿಂದ) ಉಂಟಾದ, ಓರ್ -ಉಯರ್ = ಅಸಮಾನನಾಗಿಯೂ ಉತ್ತಮವಾಗಿಯೂ ಇರುವ, ಕೂರ್ -ಮತಿ-ಅಬ್ಬಿನಾಲ್ - ಸೂಕ್ಷ್ಮಬುದ್ಧಿಯಿಂದಲೂ, ಅತ್ಯಂತ ಗಾಢವಾದ ಭಕ್ತಿಯಿಂದಲೂ, ತೊಂಡಮಂಡಲವೆಂಬ ಕಾಂಚಿಯ ಪ್ರಾಂತದಲ್ಲಿ ವೇದವನ್ನರಿತ ಭಾಗವತೋತ್ತಮರಲ್ಲ, ವಾಳ : ಬಲುಗಾಲ ಬಾಳಲೆಂದೂ, ತೂಯ್-ತೆನ್ - ಮರೆ-ವಲ್ಲವರ್ : ಪರಿಶುದ್ಧವಾದ ತಮಿಳು ವೇದವನ್ನು ಅರಿತ ಭಾಗವತೋತ್ತಮರೂ, ವಾಳ - ಬಲುಗಾಲ ಬಾಳಲೆಂದೂ, ಪಂಡೈ = ಅನಾದಿಯಾದ, ನಾನ್ಗ = ನಾಲ್ಕು ವೇದಗಳ, ಮೌಲಿ = ತಲೆಯಲ್ಲಿ (ಕೊನೆಯಲ್ಲಿ) ಪಡಿಂದ = ತುಂಬ ನುರಿತವನಾದ, ಯಾನ್ - ನಾನು, (ವೇದಾಂತಾಚಾರ್ಯನೆಂಬ ಬಿರುದಿನ ನಾನು) ಪಾರಿಲ್ = ಭೂ ಮಂಡಲದಲ್ಲಿ
. 402 ಹಸ್ತಗಿರಿ ಮಾಹಾತ್ಮಂ ಮೆಯ್ -ವಿರತ-ಕವಿ : ಸತ್ಯವ್ರತನೆಂಬ ಕ್ಷೇತ್ರದ ಮಹಿಮೆಯನ್ನು ವರ್ಣಿಸುವ ಈ ಪಾಶುರಗಳನ್ನು, ಪಾಡಿನೇನ್ - ಕೀರ್ತನೆ ಮಾಡಿರುವೆನು.
મ મ ತಾತ್ಪರ :- ಬ್ರಹ್ಮನು ಮಾಡಿದ ಅಶ್ವಮೇಧಯಾಗದ ವೇದಿಕೆಯಲ್ಲಿ ಅವತರಿಸಿದ ವರದರಾಜನ ಕೃಪಾತಿಶಯದಿಂದ ತೆಳುವಾದ ಅರಿವನ್ನೂ ಅಚಲ ಭಕ್ತಿಯನ್ನೂ ಪಡೆದು, ಈ ಹಸ್ತಿಗಿರಿ ಮಾಹಾತ್ಮವನ್ನು ಸಂಕೀರ್ತಿಸಿದೆನು. ಶ್ರೀ ವರದರಾಜನನ್ನು ಶರಣುಹೋಗಿ, ಬೆಳಗುವ ತೊಂಡಮಂಡಲದ ವೇದವೇತ್ತರಾದ ಭಾಗವತರೂ, ಭಗವತ್ಕಪೆಯಿಂದ ಆಳ್ವಾರುಗಳು ಪಾಡಿರುವ ದ್ರಾವಿಡ ವೇದದಲ್ಲಿ ನುರಿತು ರಸಿಕರಾದ ಭಾಗವತರೂ, ಅಂದರೆ ಉಭಯ ವೇದಾಂತ ರಸಿಕ ಶಿರೋಮಣಿಗಳು ಈ ದಿವ್ಯ ಪ್ರಬಂಧವನ್ನು (ಹಸ್ತಿಗಿರಿ ಮಾಹಾತ್ಮವನ್ನು) ಅನುಸಂಧಾನ ಮಾಡಿ, ಹಲವಾರು ವರ್ಷಗಳು ಹರ್ಷದಿಂದ ಬಾಳಿ ಬೆಳಗಲಿ. पुण्डरीकजपुराणपुंस्कृते । निर्व्यलीक उदिते महामखे । देववारिमुचि वार्षुके कृपाम् । तत्समृद्धमतिसूक्ष्मभक्तितः । । तोण्डमण्डलगता श्च वैदिकाः । पावनद्रविडवेदवेदिनः । जीविता स्स्युरिति सत्यवैभवम् । प्राक्तनोक्तिमकुटार्य उज्जगौ ॥ ಮೂಲ : ಉಯ್ರತಮೊನ್ನಿನ್ನಿಯಡೈನಾರುಯ್ಯ, ವೊರುವಿರತಂ ತಾನ್ನೊಂಡವುಯರ್ ಮಾಲೆ, ಶೆಮ್ರತಮೊಾಲುಂ ತೆಳಿಯಹಿಲ್ಲಾ ಶಿಕ್ಷೆಯಿನಾಲ್ ದಿಶೈಪಡೈತ್ತದಿಶೈಮುಹನ್ತಾನ್ ಪೊಯ್ರತನಿಲಮೆಲ್ಲಾಂಪೋಯೇಮೀಂಡು, ಪುಹಲಿದುವೇ ಪುಣ್ಣಿಯತ್ತುಕೈನುಶೇರ್ ಮೆಯ್ವಿರತನನ್ನಿಲತುಮೇಯೇತಿ ವೇದಾನವಾಶಿರಿಯನ್ ವಿಳಂಗಿನಾನೇ !!
२७ 28 ಅರ್ಥ:- ದಿಶ್ಯ-ಪಡೈತ್ತ: ದಿಕ್ಕುಗಳನ್ನೂ ಸೃಷ್ಟಿಸಿದವನೂ, ದಿಶೆ-ಮುಹನ್ = (ದಿಕ್ಕುಗಳು 4) ನಾಲ್ಕು ಮುಖವುಳ್ಳವನೂ ಆದ ಬ್ರಹ್ಮನು, ಉಯ್ -ವಿರತಂ : (ತಾವು) ಉಜೀವಿಸಲು ಉಪಾಯವು, ಒನ್ನುಂ-ಇ-ಅಡೊಂದಾರ್ - (ಬೇರೊಂದು) ಇಲ್ಲದೆ ಶರಣುಹೋದವರು, ಉಯ್ಯ = ಉದ್ದಾರಮಾಡುವುದಕ್ಕೆ, ಒರುವಿರತಂ : (‘‘ಶರಣಾಗತರಕ್ಷಣ’‘ವೆಂಬ) ಅಸಾಧಾರಣವ್ರತವನ್ನು, ತಾನ್-ಕೊಂಡ = ತಾನೇ ಹಸ್ತಗಿರಿ ಮಾಹಾತ್ಮಂ
403 ಕೈಗೊಂಡವನಾದ, ಉಯರ್ನ್ನ-ಮಾಲೈ : (ಅದರಿಂದ) ಅತ್ಯುತ್ತಮನೆಂದು ಹೊಗಳಿಸಿಕೊಳ್ಳುವ ಭಗವಂತನನ್ನು, ಶೆಯ್ -ರತಂ-ಒಾಲುಂ - (ತನ್ನಿಂದ) ಮಾಡಲ್ಪಡುವ ಮತ್ತಾವ ವ್ರತದಿಂದಲೂ ತೆಳಯಹಿಲ್ಲಾದ-ಶಿಂದೈಯಿನಾಲ್ - ನೇರವಾಗಿ ನೋಡಲಾಗದಂತಹ ಚಿಂತೆಯಿಂದ, ಪೊಯ್ -ವಿರತನಿಲಂ-ಎಲ್ಲಾಂ (ಫಲವಿಲ್ಲದುದರಿಂದ ವ್ಯರ್ಥವಾಗುವ ವ್ರತಗಳುಳ್ಳ ಕ್ಷೇತ್ರಗಳಿಗೆಲ್ಲಾ, ಪೋಯ್ - ಹೋಗಿ ಸುತ್ತಿ ಮೀಂಡು : ಹಿಂತಿರುಗಿ, ಇದುವೇ -ಪುಣ್ಣಿಯತ್ತುಕ್ಕು-ಪುಹಲ್ : ಈ ಕ್ಷೇತ್ರವೇ ಪುಣ್ಯವನ್ನು ಪಡೆಯಲು ಸಾಧಕವಾಗುವುದು, ಎನ್ನು = ಎಂದು, ಶೇರ್ನ: ಬಂದು ಸೇರಿದ, ಮೆಯ್ವಿರತ-ನಲ್ -ನಿಲತ್ತು: ಸತ್ಯವ್ರತವೆಂಬ ಕ್ಷೇತ್ರದ, ಮೇ - ಮೇಲೆಯನ್ನು, ಎತ್ತಿ = ಕೊಂಡಾಡಿ, ವೇದಾಂತ-ಆಶಿರಿಯನ್ - ವೇದಾಂತ ದೇಶಿಕರು, ವಿಳಂಗಿನಾನ್ - ಚೆನ್ನಾಗಿ ಬೆಳೆದರು.
- ತಾತ್ಪರ ಸತ್ಯವ್ರತ ಕ್ಷೇತ್ರವು ಬಹು ಪುಣ್ಯಕ್ಷೇತ್ರ, ಬ್ರಹ್ಮನು ಅನೇಕ ಕ್ಷೇತ್ರಗಳಲ್ಲಿ ಸಂಚರಿಸಿ, ಕಡೆಗೆ ಈ ಕ್ಷೇತ್ರಕ್ಕೆ ಬಂದು ಅಶ್ವಮೇಧ ಯಾಗಮಾಡಿ, ಆ ಯಾಗವೇದಿಕೆಯಲ್ಲಿ ಅವತರಿಸಿದ ವರದರಾಜನನ್ನು ಸೇವಿಸಿ, ಸಂದರ್ಶಿಸಿ, ಅಸಾಧಾರಣ ಫಲವನ್ನು ಪಡೆದನು. ಅಂತಹ ಮಹಿಮೆಯುಳ್ಳ ಕ್ಷೇತ್ರದ ಮೇಲೆಯನ್ನು ವೇದಾಂತಾಚಾರನಾದ ನಾನು “ಹಸ್ತಿಗಿರಿ ಮಹಾತ್ಮ’ವೆಂಬ ದಿವ್ಯ ಪ್ರಬಂಧದ ಮೂಲಕ ಪ್ರಚುರಪಡಿಸಿರುವೆನು.
- મ
- ಅಖಂಡವಾಗಿದ್ದ ವೇದರಾಶಿಯನ್ನು ನಾಲ್ಕು ಗುಂಪಾಗಿ ವಿಂಗಡಿಸಿ, ಬ್ರಹ್ಮಸೂತ್ರಗಳನ್ನು ರಚಿಸಿ, ಶ್ರೀ ವೇದವ್ಯಾಸರು ವೇದಾಚಾರರೆನಿಸಿದರು. ಹಾಗೆಯೇ ನಮ್ಮ ದೇಶಿಕರು ತಮಿಳು ವೇದಗಳನ್ನು (ಪ್ರಬಂಧ ಸಾರದಲ್ಲಿ ವಿಭಾಗಿಸಿ, ತೋರಿಸಿಕೊಟ್ಟು, ‘‘ರಹಸ್ಯ ರತ್ನಾವಳೀ’’ ಮುಂತಾದ ಸೂತ್ರಗಳನ್ನು ರಚಿಸಿ, ‘‘ಹಸ್ತಿಗಿರಿ ಮಾಹಾತ್ಮ’‘ವೆಂಬ ಇತಿಹಾಸವನ್ನೂ ಪಾಡಿ, “ವೇದಾಂತಾಚಾರ’ರೆಂಬ ಬಿರುದನ್ನು ಶ್ರೀ ರಂಗನಾಥನಿಂದಲೇ ಪಡೆದು ಮೆರೆದರಲ್ಲವೇ, ಈ ಆಶಯವು ಅವರ ಉಕ್ತಿಯಿಂದಲೇ ವ್ಯಕ್ತವಾಗಿದೆ.
- મ
- स्रष्टाशानां दिवस्य स्त्वनितरगतिकोज्जीवनैकव्रतस्य । धर्तुदैवाधिराज स्तदितरकरणात् चिन्तयाऽनीक्ष्यतायाः ॥ सर्वत्र व्यर्थभूमिष्वपि चिर मटनात् सन्निवृत्तोऽतिपुण्यम् । आयादित्येव सत्यव्रतविभव मगायच्च वेदान्तसूरिः ॥
- ಮೂಲ : ಶ್ರೀರಾರುಂತೂಪ್ಪು ತಿರುವೇಂಗಡಮುಡೈಯಾನ್,
- ತಾರಾರರುಳಾಳರ್ಾಳ್ನಯನ್ನು-ಶೀರಾಹ
- २८404
- ಹಸ್ತಿಗಿರಿ ಮಾಹಾತ್ಮಂ
- ಮೆಯ್ವಿರತನ್ನಿಲತುಮೇಸ್ಟ್ರಿಯಿದು ಮೊಳಿಸ್ಟಾನ್ ಕೈಯಿಲ್ ಕನಿಪೋಲಕ್ಕಂಡು ॥
29 ಅರ್ಥ :- ಶೀರ್ -ಅರುಂ = ಮಹಿಮಾ ಪೂರ್ಣರಾದ, ತೂಪ್ಪುಲ್ - ತೂಪ್ಪುಲಿನಲ್ಲಿ ಅವತರಿಸಿದ, ತಿರು-ವೇಂಗಡಮುಡೈಯಾನ್ = “ಶ್ರೀಮಾನ್ ವೇಂಕಟನಾಥನು’ ಎಂಬ ದೇಶಿಕರು, ತಾರ್ -ಆರ್ -ಅರುಳಾಳರ್ - ಹಾರಗಳಿಂದ ತುಂಬಿ ಪರಿಭೂಷಿತನಾದ ವರದರಾಜ, ತಾಳ್ -ನಯನ್ನು - ಪಾದಾರವಿಂದಗಳನ್ನೇ ಹೊಂದಿ, ಮೆಯ್ ವಿರತ-ನಲ್ - ನಿಲತ್ತು-ಮೇ : ಸತ್ಯವ್ರತನೆಂಬ ಅತಿ ಶ್ರೇಷ್ಠ ಕ್ಷೇತ್ರದ ಹಿರಿಮೆಯನ್ನು, ಕೈಯಿಲ್ -ಕನಿ-ಪೋಲ-ಕಂಡು = ಅಂಗೈಯಲ್ಲಿರುವ ನೆಲ್ಲೀ ಹಣ್ಣಿನಂತೆ ಚೆನ್ನಾಗಿ ಅರಿತು, ಶ್ರೀರಾಹ : ಬಳುವಳಿಯಂತೆ, ಇದು : ಈ ಪ್ರಬಂಧವನ್ನು, ಮೊಳಿಂದಾನ್ - ಹೇಳಿ ಬೆಳಗಿದರು. ತಾತ್ವ :- ಮಹಾಮಹಿಮರಾದ ತೂಪ್ಪುಲ್ನಲ್ಲಿ ಶ್ರೀನಿವಾಸನ ಘಂಟೆಯ ಅಂಶವಾಗಿ, ಶ್ರೀರ್ಮಾ ವೇಂಕಟನಾಥಃ’’ ಎಂದು ಖ್ಯಾತಿಪಡೆದು ಅವತರಿಸಿದ, ಶ್ರೀ ದೇಶಿಕನಾದ ನಾನು, ಶ್ರೀ ವರದರಾಜನ ಅಡಿದಾವರೆಗಳನ್ನೇ ಅತ್ಯಾದರಿಸಿ, ಸತ್ಯವ್ರತ ಕ್ಷೇತ್ರದ ಮಹಿಮೆಯನ್ನು ಅಂಗೈಯಲ್ಲಿನ ಹಣ್ಣಿನಂತೆ ಚೆನ್ನಾಗಿ ಅನುಭವಿಸಿ ಈ ಪ್ರಬಂಧದ ಮೂಲಕ ಪ್ರಕಾಶಪಡಿಸಿರುವೆನು. तूप्पुल् श्रीवेङ्कटेश: शुभगुणविभव स्तस्य देवाधिनेतुः । मालाद्यैर्भूषितस्य प्रथितपदयुगं संश्रितोऽनन्यभक्त्या ॥ क्षेत्रे सत्यव्रताख्ये निधिमिव निहितं तद्रतं वैभवं च । संप्रेक्ष्येमं समग्रं करतलफलवत् प्राह दिव्यप्रबन्धम् ॥ ॥ श्रीमते निगमान्तमहादेशिकाय नमः ॥ श्रीमान् वेङ्कटनाथदेशिकमणिः सत्यव्रतैकाश्रयः । श्रीमद्धस्तिगिरिप्रभावमतुलं गाधाभिरास्वादयत् । । गोपालो निगमान्तलक्ष्मणगुरुप्रार्घ्याङ्घ्रिपद्माश्रयः । कर्णाटामरभाषितेन विवृतिं श्लोकां श्च तासां व्यधात् ॥ २१ श्रीमते निगमान्तमहादेशिकाय नमः ॥ श्रीमान् वेङ्कटनाथार्यः कवितार्किकेसरी ॥ वेदान्ताचार्यवर्यो मे सन्निधत्तां सदाहृदि । ।