ಶ್ರೀಃ
ಶ್ರಿಯೈ ನಮಃ
ನಾಲಾಯಿರ ದಿವ್ಯಪ್ರಬಂಧಂ(ಮುದಲಾಯಿರಮ್)
೦
ಪೆರಿಯಾೞ್ವಾರ್ ತಿರುಪ್ಪಲ್ಲಾಣ್ಡು
(ತಮಿಳು ಮೂಲ, ಕನ್ನಡದಲ್ಲಿ ಪ್ರತಿಪದಾರ್ಥ, ತಾತ್ಪರ್ಯ, ವಿವರಣೆಯೊಡನೆ)
ಸಂಪುಟ-೧
ವಿಷಯ ಸೂಚಿ.
೧. ಹಿನ್ನೆಲೆಯ ಮಾತು- ಪುಟ
ಅ. ಭಕ್ತಿಪಂಥ ೧
ಆ.ವಿಷ್ಣುಪೂಜೆ ೨
ಇ. ಭಾಗವತರು ೫
ಈ. ಭಕ್ತಿ ೬
ಉ. ಆೞ್ವಾರರು ೯
ಊ. ನಾಲಾಯಿರ ದಿವ್ಯಪ್ರಬಂಧ ೧೩
ಋ. ಆೞ್ವಾರರ ತರುವಾಯ ೧೫
ಎ. ಭಕ್ತಿ-ಪ್ರಪತ್ತಿ ೧೯
೨. ಪ್ರಬಂಧದ ಲಿಪಿ ೨೭
೩. ತನಿಗಳು ೩೩
೪. ತಿರುಪ್ಪಲ್ಲಾಣ್ಡು ೪೩
೫. ಗ್ರಂಥಋಣ ೮೨
ಶ್ರೀಃ
೧. ಹಿನ್ನೆಲೆಯ ಮಾತು
ಅ. ಭಕ್ತಿಪಂಥ
ಭಕ್ತಿಪಂಥ ಎಂಬುದು ಏಕದೇವೋಪಾಸನೆಯ ಪಂಥ. ಇದು ವೇದಗಳ ಕಾಲದಿಂದ ನಡೆದುಬಂದದ್ದು. ವೇದ, ಉಪನಿಷತ್ತುಗಳ ಮೂಲಕ ಋಷಿಗಳು ಈ ಪದ್ಧತಿಯನ್ನು ಪ್ರಚಾರ ಮಾಡಿದರು. ಭಜನೆ ಕೀರ್ತನೆಗಳು ಇದನ್ನು ದೃಢಪಡಿಸಿದವು. ಭಕ್ತಿಪಂಥವನ್ನು ಪಳಗಿಸಿ ಬೆಳಗಿಸಿಕೊಂಡು ಬಂದವರು ಬಹುಮಂದಿ. ಅವರಲ್ಲಿ ಕವಲುಗಳನ್ನು ಕಾಣಬಹುದು. ಆದರೆ, ಆ ಭಕ್ತರ ನಡೇಯೆಲ್ಲ ಬಹುಮಟ್ಟಿಗೆ ಒಂದೇ ನಿಟ್ಟಿನದು. ಎಂದರೆ, ಆರಾಧ್ಯ ದೈವದಲ್ಲಿ ಇಡುವ ಅನನ್ಯಭಕ್ತಿ, ಭಗವಂತನಲ್ಲಿ ನಡೆಸುವ ನಾನಾ ವಿಧ ಸೇವೆ. ತನ್ನ ಜೀವನವನ್ನೇ ಭಗವಂತನಿಗಾಗಿ ಮೀಸಲಿಡುವುದು, ಮತ್ತು ಆತ್ಮಸಮರ್ಪಣ ಮಾಡುವುದು.
ಮತಾಚಾರ್ಯರೆಲ್ಲರೂ ಭಕ್ತಿಯನ್ನು ಬೋಧಿಸಿದರು. ಶ್ರೀ ಆದಿಶಂಕರರು ಜ್ಞಾನಮಾರ್ಗ ಬೋಧಿಸಿದರು, ದಿಟ. ಆದರೆ, ಅವರೂ ಭಕ್ತಿಯನ್ನು ಬಿಡಲಿಲ್ಲ. ಶ್ರೀಲಕ್ಷ್ಮೀನೃಸಿಂಹನಲ್ಲಿ ಕಡುಭಕ್ತಿಯಿಂದ ಕರಾವಲಂಬನೆಗಾಗಿ ಪ್ರಾರ್ಥನೆ ಸಲ್ಲಿಸಿದರು. ಹೀಗೆ, ಭಕ್ತಿಯ ಮಹತ್ವವೇನೆಂಬುದನ್ನು ಅವರು ಆಚರಿಸಿ ತೋರಿಸಿದರು. ಶ್ರೀರಾಮಾನುಜರೂ ಶ್ರೀಮಧ್ವರೂ ಭಕ್ತಿಮಾರ್ಗವನ್ನೇ ಪ್ರಧಾನವಾಗಿ ಮಾಡಿಕೊಂಡರು. ಕರ್ಮಮಾರ್ಗ, ಜ್ಞಾನಮಾರ್ಗಗಳಿಗಿಂತ ಭಕ್ತಿಮಾರ್ಗವನ್ನು ಹಿಡಿದು ಪರಮಾತ್ಮನನ್ನು ಒಲಿಸಿಕೊಳ್ಳೂವುದು ಸುಲಭ ಎಂದು ಅವರು ತೋರಿಸಿಇಕೊಟ್ಟರು. ಭಕ್ತಿಮಾರ್ಗವನ್ನು ಹಿಡಿದು, ನಡೆದು, ಭಕ್ತಿಯ ಹಿರಿಮೆಯನ್ನು ಜೀವನದಲ್ಲಿ ಸಾಧಿಸಿ, ತೋರಿಸಿಕೊಟ್ಟ, ಭಕ್ತ ಮಹನೀಯರು, ಸಾಧು ಸಂತರು- ಎಷ್ಟೋ ಮಂದಿ.
ಹೀಗೆ, ಭಕ್ತಿಪಂಥಕ್ಕೆ ಒಂದು ಪರಂಪರೆಯೇ ಬೆಳೆದು ಬಂದಿದೆ. ಇದರಲ್ಲಿ ಆರಾಧ್ಯದೈವ ಯಾವುದಾದರೂ ಆಹಿರಲಿ- ಸಿದ್ಧಾಂತಗಳಲ್ಲಿ ಪೂಜಾವಿಧಾನದಲ್ಲಿ, ಆತ್ಮಸಮರ್ಪಣದಲ್ಲಿ, ಅತೀಂದ್ರಿಯಾನುಭವದಲ್ಲಿ
೨
ಜನತಾ ಸೇವೆಯಲ್ಲಿ, ಭಜನೆ ಕೀರ್ತನೆ ಮುಂತಾದ ಭಕ್ತಿಕರ್ಮಗಳಲ್ಲಿ ಅಷ್ಟೇನೂ ವ್ಯತ್ಯಾಸ ಕಂಡುಬರುವುದಿಲ್ಲ. ಭಕ್ತರಲ್ಲಿ ಎಲ್ಲ ಬಗೆಯವರೂ ಇದ್ದಾರೆ. ಸಂಸಾರಿಗಳಿದ್ದಾರೆ; ವಿರಕ್ತರಿದ್ದಾರೆ. ಎಲ್ಲರಂತೆ ಕಷ್ಟ ಕಾರ್ಪಣ್ಯಗಳನ್ನು ಅನುಭವಿಸುತ್ತಾ ಭಕ್ತಿಮಾರ್ಗದಲ್ಲಿ ಹಣ್ಣಾದವರಿದ್ದಾರೆ. ಅನುಭಾವಿಗಳು ಅವರು. ಎಲ್ಲರೂ ಮಹನೀಯರೇ, ಮಹಾನುಭಾವರೇ. ಅವರು ಬಾಳಿದ ಬಾಳು, ಆಡಿದ ಮಾತು, ಹಾಡಿದಹಾಡು, ನುಡಿದ ನುಡಿವಚನ, ಮಾಡಿದ ಪೂಜೆ- ಇವೆಲ್ಲವೂ ಎಲ್ಲ ಕಾಲಕ್ಕೂ ಲೋಕಕ್ಕೆ ಬೆಳಕು ಕೊಡತಕ್ಕವು. ಅಜ್ಞಾನಾಂಧಕಾರದಲ್ಲಿ ತೊಳಲುವ ಜನರಿಗೆ ಇವು ಜ್ಞಾನದೀವಿಗೆ. ಮತ್ತು ಶಾಶ್ವತಾನಂದದತ್ತ ನಡೆಯಲು ಸುಲಭವಾದ ಸೂಚಕಗಳು- ಕೈಕಂಬಗಳು, ಮಾರ್ಗದರ್ಶಕಗಳು, ಮೈಲಿಕಲ್ಲುಗಳು.
ಆ. ವಿಷ್ಣುಪೂಜೆ.
ಭಕ್ತಿಪಂಥದಲ್ಲಿ ವಿಷ್ಣುಪೂಜೆ ಒಂದು ಕವಲು. ಯಜ್ಞಯಾಗಾದಿಗಳಲ್ಲಿ ಇಂದ್ರ, ಅಗ್ನಿ, ಮಿತ್ರ, ವರುಣ, ವಾಯು, ಮರುತ್ತುಗಳು, ರುದ್ರ- ಇವರುಗಳಿಗೆಲ್ಲ ಸ್ಥಾನವಿದೆ. ಇವರುಗಳಿಗೆ ಆಹುತಿಯನ್ನು ಹವಿಸ್ಸನ್ನು ಅಗ್ನಿಯ ಮೂಲಕ ಸಲ್ಲಿಸುತ್ತಾರೆ. ಹಾಗೆಯೇ ಯಜ್ಞಯಾಗಾದಿಗಳಲ್ಲಿ ವಿಷ್ಣುವಿಗೆ ಪ್ರಧಾನ ಸ್ಥಾನವಿದೆ. (ಅದು ಪ್ರಧಾನವಾದ ಸ್ಥಾನವೇ!) ಹವಿಸ್ಸನ್ನು ವಿಷ್ಣುವಿಗೂ ಅರ್ಪಿಸುತ್ತಾರೆ. ಆ ರೂಪದಲ್ಲಿ ವಿಷ್ಣುಪೂಝೆ ನಡೆಯುತ್ತದೆ. ಎಂದರೆ, ವೇಡಗಳ ಕಾಲದಿಂದಲೂ ವಿಷ್ಣುಪೂಜೆ ನಡೆದು ಬಂದಿದೆ.
ವಿಷ್ಣುಪೂಜೆಗೆ ಪ್ರಾಶಸ್ತ್ಯ ಬರಲು ಕಾರಣವೇನಿರಬಹುದು? ಅದಕ್ಕೆ ತ್ರಿಮೂರ್ತಿಗಳಲ್ಲಿ ವಿಷ್ಣುವಿಗಿರುವ ಸ್ಥಾನವೇ ಎನ್ನಿಸುತ್ತದೆ. ಪರಬ್ರಹ್ಮನು ತನ್ನ ಕಾರ್ಯಗಳನ್ನು ನಡಸಲು ಮೂರು ರೂಪಗಳನ್ನು ಅಳವಡಿಸಿಕೊಂಡನು. ತ್ರಿಮೂರ್ತಿಗಳು ಎಂದು ಕರೆಯುವ ಚತುರ್ಮುಖ ಬ್ರಹ್ಮ, ವಿಷ್ಣು, ಈಶ್ವರ- ಎಂಬಿವೇ ಆ ಮೂರು ರೂಪಗಳು. ಬ್ರಹ್ಮನು ಸೃಷ್ಟಿಕರ್ತನಾದ. ಸೃಷ್ಟಿ ಮಾಡುವುದೇ ಅವನ ಕೆಲಸ. ಈಶ್ವರ ಲಯಕರ್ತನೆನ್ನಿಸಿದ. ಎಲ್ಲವನ್ನು “ಲಯ” ಮಾಡಿಬಿಡೂವುದು ಅವನ ಕೆಲಸ. ಇನ್ನು, ಸೃಷ್ಟಿಗೂ ಲಯಕ್ಕೂ
೩
ಎಂದರೆ ಹುಟ್ಟೂ ಸಾವುಗಳ ನಡುವೆ ಬರುವುದು “ಸ್ಥಿತಿ”. ಇದು ಜೀವಿಕೆಯ ಕಾರ್ಯ. ಜೀವನದಲ್ಲಿ ನಡೇಯಬೇಕಾದ ಬೆಳವಣೀಗೆ, ಏಳಿಗೆ, ಮಾರ್ಪು- ಇವಕ್ಕೆ ಅದು ಸಂಬಂಧಿಸಿದ ಕಾರ್ಯ-“ಸ್ಥಿತಿ” ಎಂದರೆ ಜೀವನ ರಕ್ಷಣೆಯ ಭಾರ. (ಇದು) ವಿಷ್ಣುವಿನ ಕಾರ್ಯವಾಯಿತು. ಹುಟ್ಟಿಗೆ ಮುಂಚೆ ಏನು ಎಂಬುದು ಜೀವನಿಗೆ ತಿಳಿಯದ್ದು. ಅಂಕೆಯೇ, ಸಾವಿನ ಬಳೀಕ ಹೇಗೆ ಏನು ಎಂಬುದೂ ತಿಳೀಯದ ವಿಷಯವೆ. ಎರಡೂ ಅಗೋಚರ ವಿಷಯಗಳೇ. ಆದರೆ, ಇವೆರಡರ ನಡುವಣ ಸ್ಥಿತಿಯಾದರೀ ಗೋಚರಸ್ಥಿತಿ. ಅನುಭವಕ್ಕೆ ಪ್ರತ್ಯಕ್ಷವಾದದ್ದು ಜೀವನ. ಇಂಥ ಗೋಚರಸ್ಥಿತಿಗೆ ಒಡೆಯನಾಗಿ, ಜೀವನನ್ನು ರಕ್ಷಿಸುವ ದೈವವಾದವನು, ವಿಷ್ಣು. ಆದ್ದರಿಂದ, ವಿಷ್ಣುವಿಗಲ್ಲದೆ, ಅಗೋಚರದಿಂದ ಗೋಚರಕ್ಕೆ ಜೀವನನ್ನು ಎಳೆತರುವ ಬ್ರಹ್ಮನಿಗಾಗಲಿ, ಅವನನ್ನು ಗೋಚರದಿಂದ ಅಗೋಚರಕ್ಕೆ ಕೊಂಡೊಯ್ಯುವ ಈಶ್ವರನಿಗಾಗಲಿ, ಇಲ್ಲದ ಈ ಮಹತ್ವ ವಿಷ್ಣುವಿಗೆ ಹೇಗೆ ಬಂದೀತು?
ಅಲ್ಲದೆ, ಧರ್ಮಸಂಸ್ಥಾಪನೆಯ ಮತ್ತು ಧರ್ಮಸಂರಕ್ಷಣೆಯ ಹೊಣೆಹೊತ್ತಿರುವ ದೈವವಲ್ಲವೆ ವಿಷ್ಣು? ಧರ್ಮ ಖಿಲವಾಗುವ ಸಂದರ್ಭವೊದಗಿದಾಗಲೆಲ್ಲಾ, ದುಷ್ಟಶಕ್ತಿ ತಲೆಯೆತ್ತಿದಾಗಲೆಲ್ಲಾ, ಕೆಟ್ಟದ್ದು ಇಳ್ಳೆಯದನ್ನು ಮೆಟ್ಟಿ ತನ್ನ ಪ್ರಾಬಲ್ಯವನ್ನು ಹೆಚ್ಚಿಸಿಕೊಂಡಾಗಲೆಲ್ಲಾ, ಅಂಥ ದುಷ್ಟಶಕ್ತಿಯನ್ನು ಅಡಗಿಸಿ, ಕೆಟ್ಟದ್ದನ್ನು ನಿವಾರಿಸಿ ಒಳ್ಳೆಯದನ್ನು ಉದ್ಧರಿಸುವುದಕ್ಕಾಗಿ, ಸಜ್ಜನರ ಪಾಲನೆ ಪೋಷಣೆಗಾಗಿ ಪದೇಪದೇ ಅವತರಿಸುವೆನೆಂದೂ ಧರ್ಮರಕ್ಷಣೆ ಮಾಡುವೆನೆಂದೂ ಫಣತೊಟ್ಟವನಲ್ಲವೆ ವಿಷ್ಣು. ಅವತಾರವೆತ್ತಿ ಜಗತ್ತಿನಲ್ಲಿ ಮಾನವರ ನಡುವೆ, ಮಾನವರಿಗಾಗಿ, ಅವರ ಕಷ್ಟಸುಖಗಳಲ್ಲಿ ಪಾಲುಗೊಳ್ಳುತ್ತಾ, ಅವರಂತೆ ತಾನೂ ಅವುಗಳನ್ನು ಅನುಭವಿಸುವವನಂತೆ ನಟಿಸುತ್ತಾ ಇದ್ದುವಂದ ದೈವ ವಿಷ್ಣುವೇ. ಆದ್ದರಿಂದ, ತ್ರಿಮೂರ್ತಿಗಳಲ್ಲಿ ವಿಷ್ಣುವಿಗೇ ಪ್ರಾಧಾನ್ಯ.
ವಿಷ್ಣುವನ್ನು ವಿಷ್ಣುವಾಗಿಯೇ ಪೂಜಿಸುವುದು ವಿರಳ. ವಾಡಿಕೆಯಲ್ಲಿ ಅಪರೂಪ ಎನ್ನಬಹುದು. ವಿಷ್ಣುವಿನ ಬೇರೆ ರೂಪಗಳ ಪೂಜೆ ರೂಢಿಯಲ್ಲಿದೆ. ನಾರಾಯಣ, ಶ್ರೀನಿವಾಸ(ಹರಿ), ವಾಸುದೇವ, ರಾಮ
೪
ಕೃಷ್ಣ, ನರಸಿಂಹ- ಇವು ಮುಖ್ಯವಾದವು. ಹರಿ, ನಾರಾಯಣ, ವಿಷ್ಣು ಒಂದೇ ದೈವದ, ಎಂದರೆ, ವಿಷ್ಣುವಿನ ಹೆಸರುಗಳು. ರಾಮ,ಕೃಷ್ಣ, ನರಸಿಂಹ, ವಾಸುದೇವ- ಇವು ಆ ದೈವದ ಅವತಾರ ರೂಪಗಳು.
ವಿಷ್ಣುವಿಗೆ “ನಾರಾಯಣ” ಎಂಬ ಹೆಸರು ಬಹಳ ಹಳೆಯದು. ನಾರಾಯಣ ಸೂಕ್ತವು ನಾರಾಯಣ ನಾಮದ ಭಗವಂತನ ಹಿರಿಮೆಯನ್ನು ವಿವರಿಸುತ್ತದೆ. ನಾರಾಯಣ ಮಂತ್ರವು “ಅಷ್ಟಾಕ್ಷರೀ ಮಂತ್ರ” ಎಂದು ಪ್ರಸಿದ್ಧಗೊಂಡಿದೆ. ಸೃಷ್ಟಿಯಾಗಿರುವ ರೂಪವೆಲ್ಲವೂ ನಾರಾಯಣ; ಅವುಗಳಲ್ಲಿ ಒಂದೊಂದರಲ್ಲಿಯೂ ಅಡಗಿರುವವನೂ ನಾರಾಯಣ. ಸೃಷ್ಟಿಯ ಹೊರಗಿದ್ದು ವ್ಯಕ್ತಾ ವ್ಯಕ್ತವಾಗಿದ್ದುಕೊಂಡು ಅದನ್ನು ನಡಸುವವನೂ ನಾರಾಯಣನೇ.
ವಿಷ್ಣುವು ನರನಾರಾಯಣ ಮುನಿಗಳ ಅವತಾರವೆತ್ತಿ ಹಿಮಾಲಯದ ತಪ್ಪಲಿನಲ್ಲಿ ತಪಸ್ಸುಮಾಡುತ್ತಿದ್ದುದನ್ನು ಭಾಗವತ ಪುರಾಣ ಹೇಳುತ್ತದೆ. ತಪಸ್ಸಿನ ಹಿರಿಮೆಯನ್ನು ಮುನಿಜೀವನದ ಶ್ರೇಷ್ಠತೆಯನ್ನೂ ತೋರಿಸಿಕೊಡುವುದು ಈ ಅವತಾರದ ಉದ್ದೇಶ. ನರ ಆತ್ಮಸ್ವರೂಪ; ನಾರಾಯಣ ಪರಮಾತ್ಮ ಸ್ವರೂಪ. ಆದ್ದರಿಂದ, ಆತ್ಮಪರಮಾತ್ಮರ ನಡುವೆ ಇರುವ ಬಾಂಧವ್ಯ್ ಎಂಥಾದ್ದು ಎಂಬುದನ್ನೂ ಇದು ವಿವರಿಸುತ್ತದೆ.
ಮಹಾಭಾರತವಂತು ನಾರಾಯಣ ಸ್ಮರಣೆಯಿಂದಲೇ ಪ್ರಾರಂಭವಾಗುವುದು.1
ಭಾಗವತದಲ್ಲಿ ನಾರಾಯಣನ ವೈಶಿಷ್ಟ್ಯ, ವರ್ಣನೆ, ಸ್ತುತಿ, ಉಪಾಸನೆ, ಅವನ ಅವತಾರಗಳ ಮಹತ್ವ, ಅವನ ಧರ್ಮಪರಿಪಾಲನೆಯ ಕಾರ್ಯ, ಮುಂತಾದವೆಲ್ಲದರ ವಿವರಣೆ ಬರುತ್ತದೆ. ಭೃಗು ಮಹರ್ಷು ಮೂರು ಲೋಕಗಳನ್ನು ಸುತ್ತಾಡಿ, ತ್ರಿಮೂರ್ತಿಗಳನ್ನು ಪರೀಕ್ಷಿಸಿ, ಅವರಲ್ಲಿ ನಾರಾಯಣನೇ ಶ್ರೇಷ್ಠನೆಂದು ಕಂಡುಕೊಂಡು, ಮಹರ್ಷಿಗಳ ಸಭೆಯಲ್ಲಿ ಅದನ್ನು ಸಿದ್ಧಾಂತಪಡಿಸುತ್ತಾನೆ. ಇದೂ ಭಾಗವತದ ಅಂಶವೇ. ನಾರಾಯಣ ಪೂಜಕರ ಧರ್ಮವೇನೆಂಬುದನ್ನು ಭಾಗವತದಲ್ಲಿ ವಿಶದವಾಗಿ ವಿವರಿಸಿದೆ.
- ನಾರಾಯಣಂ ನಮಸ್ಕೃತ್ಯ ನರಂ ಚೈವ ನರೋತ್ತಮಂ|
ದೇವೀಂ ಸರಸ್ವತೀಂ ವ್ಯಾಸಂ ತತೋಜಯ ಮುದೀರಯೇತ್||
೫
ಇ. ಭಾಗವತರು
“ಭಾಗವತ” ಎಂಬುದು ಭಕ್ತಿಪಂಥವನ್ನು ಹಿಡಿದವರಿಗೆಲ್ಲ ಅನ್ವಯವಾಗುತ್ತದೆ. ಆದರೆ, ಅವರು ಮುಖ್ಯವಾಗಿ ವಾಸುದೇವ ಭಕ್ತರು ಎಂದೂ ಕ್ರಿ.ಪೂ.-1, 2 ನೆಯ ಶತಮಾನಗಳಲ್ಲಿದ್ದರೆಂದೂ ಅಪರೂಪ ಶಾಸನಗಳಿಂದ ತಿಳಿದುಬಂದಿದೆ. ಈ “ವಾಸುದೇವ” ಎಂಬವನು ಶ್ರೀಕೃಷ್ಣನೇ- ವಸುದೇವನ ಮಗನೇ; ವೃಷ್ಣಿ ಕುಲದವನು. ಶ್ರೀಮನ್ನಾರಾಯಣನ ಪೂರ್ಣಾವತಾರಗಳಲ್ಲಿ ಕೃಷ್ಣಾವತಾರಕ್ಕೆ ಬಹಳ ಹೆಚ್ಚಿನ ಪ್ರಸಿದ್ಧಿ ಬಂದಿದೆ. ಧರ್ಮವನ್ನು ಉದ್ಧರಿಸುವುದು, ಧರ್ಮಮಾರ್ಗವನ್ನು ಬೋಧಿಸುವುದು, ಧರ್ಮಖಿಲವಾಗದಂತೆ ನೋಡಿಕೊಳ್ಳುವುದು, ದುಷ್ಟರನ್ನೂ ಪ್ರಜಾಕಂಟಕರನ್ನೂ ಶಿಕ್ಷಿಸುವುದು, ಸಜ್ಜನರನ್ನು ರಕ್ಷಿಸುವುದು- ಇವೆಲ್ಲವೂ ಶ್ರೀಕೃಷ್ಣನ ಎಸಕ. ಭಾಗವತ, ಭಾರತಗಳಲ್ಲಿ ಶ್ರೀಕೃಷ್ಣನ ಅದ್ಭುತ ಕಾರ್ಯಗಳು, ಅಮಾನುಷ ಮತ್ತು ಅತಿಮಾನುಷ ದಿವ್ಯಲೀಲೆಗಳು- ಇವುಗಳನ್ನೆಲ್ಲ ವಿಶದವಾಗಿ ವರ್ಣಿಸಿದೆ. ಶ್ರೀಕೃಷ್ಣನ ಶ್ರೇಷ್ಠತೆಗೆ ಕಳಶದಂತಿರುವುದು ಶ್ರೀಕೃಷ್ಣನೇ ಸ್ವತಃ ಬೋಧಿಸಿದ ಭಗವದ್ಗೀತೆ. ಅದೊಂದು ಉಪನಿಷತ್ತು, ಯೋಗಶಾಸ್ತ್ರ, ಬ್ರಹ್ಮವಿದ್ಯೆ, ವೇದೋಪನಿಷತ್ತುಗಳ ಸಾರ ಅದರಲ್ಲಿ ಅಡಗಿದೆ. ಕರ್ಮ, ಜ್ಞಾನ, ಧ್ಯಾನ, ಭಕ್ತಿ ಯೋಗಗಳ ಸಾಮರಸ್ಯವನ್ನು ಅದು ಅದ್ವಿತೀಯವಾಗಿ, ಬಹುಸರಳರೀತಿಯಲ್ಲಿ, ವಿವರಿಸಿ ಬೋಧಿಸಿದೆ. ಅರ್ಜುನನಿಗೆಂದು ಶ್ರೀಕೃಷ್ಣ ಅದನ್ನು ಬೋಧಿಸಿದರೂ ಸಹ, ಅದು ಎಲ್ಲ ಮಾನವರಿಗಾಗಿ, ಎಂದರೆ, ಮಾನ ಕುಲೋದ್ಧಾರಕ್ಕಾಗಿ ಉಪಯುಕ್ತವಾಗಿದೆ. ಹೀಗೆ, ಕೃಷ್ಣಸ್ವರೂಪಿಯಾದ ವಿಷ್ಣುವುದು ಬೋಧಿಸಿದ ಯೋಗಗಳಲ್ಲಿ ಭಕ್ತಿಯೋಗವನ್ನು ಮಾತ್ರವೇ ಭಾಗವತರು ಪ್ರಧಾನವಾಗಿ ಮಾಡಿಕೊಂಡರು. ಮತ್ತು, ಅದನ್ನೇ ಬಳಕೆಗೆ ತಂದರು.
ಒಮ್ಮನಸ್ಸಿನಿಂದ ಏಕಮೂರ್ತಿಯ ಪೂಜೆ ನಡೆಸುವುದು, ಆ ಮೂರ್ತಿಯಲ್ಲಿ ಅನನ್ಯ ಭಕ್ತಿ ಇಡುವುದು, ದೇಹದಲ್ಲಿಯೂ ದೇಹಾನುಬಂಧಿಗಳಲ್ಲಿಯೂ ಆಸಕ್ತಿ ಕಡಮೆಮಾಡುವುದು, ಸಾಧುಸಂತರಲ್ಲಿ ಹೆಚ್ಚು ಆಸಕ್ತಿ ತೋರಿಸುವುದು, ಅವರ ಸಂಗವನ್ನು ಬಯಸುವುದು, ಸಮಸ್ತ
೬
ಭೂತಗಳಲ್ಲಿ ಸಮಾನ ಪ್ರೇಮವಿರಿಸುವುದು, ದೀನರಲ್ಲಿ ದಯೆ, ಸಮಾನರಲ್ಲಿ ಮೈತ್ರಿ, ಹಿರಿಯರಲ್ಲಿ ನಮ್ರತೆ, ದ್ವಂದ್ವಗಳಲ್ಲಿ ಸಹನೆ, ದೈವಲಬ್ಧವಾದದ್ದರಲ್ಲಿ ತೃಪ್ತಿ, ಭಗವಂತನಿಗೆ ಸಂಬಂಧಿಸಿದ ಎಲ್ಲ ವಿಷಯಗಳಲ್ಲಿಯೂ ಆಸಕ್ತಿ, ಭಗವಂತನಾದ ಶ್ರೀಹರಿಯ ಕಲ್ಯಾಣಗುಣಗಳನ್ನು ಕೇಳುವುದು, ಕೊಂಡಾಡುವುದು, ಧ್ಯಾನಿಸುವುದು, ತಾನು ಮಾಡುವುದೆಲ್ಲವೂ ಭಗವದರ್ಪಣ ಮಾಡುವುದು, ಶ್ರೀಹರಿಯನ್ನೇ ತನಗೆ ಪರಮಗತಿಯೆಂದು ನಂಬುವುದು, ತನಗೆ ಭಗವಂತನಲ್ಲಿರುವ ಭಕ್ತಿಪರಿಪಾಕದಿಂದ ಮೈನವಿರೇಳೂವುದು, ಕಂಠಬಿಗಿಯುವುದು, ಆನಂದಾಶ್ರುಗಳು, ಹರಿಯುವುದು, ಉನ್ಮತ್ತನಂತೆ ವರ್ತಿಸುವುದು, ಕುಣಿಯುವುದುಯ್, ಒಟ್ಟಿನಲ್ಲಿ ಭಗವಂತನ ಗುಣಾತಿಶಯಗಳಲ್ಲೇ ಮೈಮರೆಯುವುದು- ಇವೆಲ್ಲವೂ ಭಾಗವತ ಲಕ್ಷಣಗಳು.
ಈ. ಭಕ್ತಿ
ಭಾಗವತರ ಲಕ್ಷಣಗಳೆಲ್ಲ ಭಕ್ತಿಯ ಪರಿಣಾಮವಾಗಿ ಹೊಮ್ಮಿದವು. ಭಗವಂತನ ಸೌಂದರ್ಯ, ಸೌಶೀಲ್ಯ, ಜ್ಞಾನ, ಔದಾರ್ಯ, ಐಶ್ವರ್ಯ, ವೀರ್ಯಬಲ ಮುಂತಾದ ಕಲ್ಯಾಣಗುಣಗಳನ್ನು ಕುರಿತು ಯೋಚಿಸುವುದು, ಧ್ಯಾನಿಸುವುದು ಭಕ್ತಿ. ತನ್ನ ದೇಹಾತ್ಮಗಳನ್ನು ದೈವಯೋಗ್ಯವಾಗುವಂತೆ ಸಿದ್ಧಮಾಡಿಕೊಳ್ಳುವುದು ಭಕ್ತಿ. ತನ್ನ ಅಹಂಕಾರ ಮಮಕಾರಗಳನ್ನು ಬದಿಗೊತ್ತಿ, ದೈವದ ಮುಂದೆ ತಾನಿರುವಂತೆಯೂ, ಸ್ವರ್ಗಾದಿ ಭೋಗಗಳು ಯಾವೊಂದನ್ನೂ ಆಶಿಅದೆ, ಯಾವ ಆಶೋತ್ತರಗಳನ್ನೂ ಇಟ್ಟುಕೊಳ್ಳದೆ, ಭಗವಂತನ ಪರಮಪ್ರೇಮದಲ್ಲಿ ತಾನು ಲೀನವಾದಂತೆಯೂ ಭಾವಿಸುವುದು ಮತ್ತು ವರ್ತಿಸುವುದು ಭಕ್ತಿ.
ಅನುಷ್ಠಾನಕ್ಕೆ ಸುಲಭವಾದದ್ದು ಭಕ್ತಿ. ಅದು ಇಡಿಯ ಮಾನವ ಕುಲಕ್ಕೇ ಅನುಕೂಲವಾದದ್ದು. ಭಾರತದ ಋಷಿಗಳೂ ಸಂತರೂ ಇದನ್ನು ಅರಿತಿದ್ದರು. ಅವರು ಭಕ್ತಿಯ ಬಗೆಗೆ ದೀರ್ಘವಾಗಿ ಯೋಚಿಸಿ, ಅದನ್ನು ಬೆಳೆಸಲು ಒಂಬತ್ತು ಮುಖ್ಯಾಂಶಗಳೆಂದು ಕಂಡುಕೊಂಡಿದ್ದರು. ಅವೇ ಏಕಾಂತಿಕ ಭಕ್ತಿಯ ಲಕ್ಷಣಗಳೆಂದು ಅರಿತಿದ್ದರು. ಅವು ಯಾವುವೆಂದರೆ:
ಶ್ರವಣಂ- ಭಗವಂತನ ಲೀಲಾವಿನೋದಗಳನ್ನು ಕುರಿತ್ತ ದಿವ್ಯದ್ಭುತ ಕಥೆಗಳನ್ನು ಒಮ್ಮನಸ್ಸಿನಿಂದ ಕಿವಿಗೊಟ್ಟು ಕೇಳುವುದು.
ಕೀರ್ತನಂ- ಭಗವಂತನ ಲೀಲಾಪ್ರಸಂಗಗಳನ್ನು ಬಾಯಿ ತುಂಬ ಹಾಡಿ ಹೊಗಳುವುದು. ದಿವ್ಯ ನಾಮ ಸಂಕೀರ್ತನ ಮಾಡುವುದು.
೭
ಸ್ಮರಣಂ- ಕೇಳಿ, ಓದಿ, ತಿಳಿದ ಭಗವದ್ವಿಷಯಗಳೆಲ್ಲವನ್ನೂ ಮತ್ತೆಮತ್ತೆ ಸ್ಮರಿಸುವುದು, ಚಿಂತಿಸುವುದು, ಧ್ಯಾನಿಸುವುದು, ಮನನ ಮಾಡುವುದು.
ಪಾದಸೇವನಂ- ಭಗವಂತನನ್ನು ಪೂಜಿಸುವೆಡೆಗಳಲ್ಲಿ ಸೇವೆ ನಡಸುವುದು. ಭಗವದ್ಭಕ್ತರ ಸೇವೆ ಮಾಡುವುದು.
ಅರ್ಚನಂ- ದೇವಾಲಯಗಳಲ್ಲಿ, ಪೂಜಾಮಂದಿರಗಳಲ್ಲಿ ಸಾರ್ವಜನಿಕ ಪ್ರದೇಶಗಳಲ್ಲಿ, ಮತ್ತು ಮನೆಗಳಲ್ಲಿ, ವಿಧಿವತ್ತಾಗಿಯೇ ಅಥವಾ ಹಿತವೆನ್ನಿಸಿದ ಇತರ ರೀತಿಗಳಲ್ಲಿಯೋ ಭಗವಂತನ ಅರ್ಚಾ ಮೂರ್ತಿಗೆ ಪೂಜಾದಿಗಳನ್ನು ನಡಸುವುದು.
ವಂದನಂ- ತನ್ನನ್ನು ಭಗವಂತನ ಪಾದಗಳಲ್ಲಿ ಭಕ್ತಿಯಿಂದ ಅರ್ಪಿಸಿಕೊಳ್ಳುವುದು. ಅಡ್ಡಬಿದ್ದು ನಮಸ್ಕರಿಸುವುದು.
ದಾಸ್ಯಂ- ಭಗವಂತನ ದಾಸ ತಾನೆಂದು ನಡೆದುಕೊಳ್ಳುವುದು, ಅತಿಥಿ ಅಭ್ಯಾಗತರ, ದೀನ ದರಿದ್ರರ, ಭಾಗವತರ, ಸಾಧುಸಂತರ ಸೇವೆಗಳನ್ನು ಭಗವಂತನ ಸೇವೆಯೆಂದೇ ನಡಸುವುದು.
ಸಖ್ಯಂ- ಹೊರಜೀವನದಲ್ಲಿ ಸಾಧುಸಂತರ, ಭಕ್ತರ ಸ್ನೇಹವನ್ನು ಗಳಿಸುವುದು, ಆಂತರಂಗಿಕವಾಗಿ, ಭಗವಂತನ ಗೆಳೆತನವನ್ನು ಬೆಳಸಿಕೊಳ್ಳುವುದು.
ಆತ್ಮನಿವೇದನಂ- ಭಗವಂತನಿಗೆ ತನ್ನ ಸರ್ವಸ್ವವನ್ನೂ ಅರ್ಪಿಸುವುದು. ಜೊತೆಗೆ ತನ್ನ ಆತ್ಮವನ್ನೂ ಸಮರ್ಪಿಸಿಕೊಳ್ಳುವುದು. ಎಲ್ಲ ವಿಷಯದಲ್ಲೂ ತಾನು ಭಗವಂತನ ಅಧೀನನೆಂದೂ ಅವನ ಕೃಪಾಕಟಾಕ್ಷದ ಹೊರತೂ ತನಗೆ ಯಾವುದೂ ಸಾಧ್ಯವಿಲ್ಲವೆಂದೂ, ಅವನೇ ತನಗೆ ರಕ್ಷಕನೂ, ಮಾರ್ಗದರ್ಶಕನೂ ಎಂಬ ದೃಢನಂಬಿಕೆಯಿಂದ ಅವನಲ್ಲಿ ಶರಣಾಗುವುದು.
ಮೇಲೆ ಹೇಳಿದ ಒಂಬತ್ತು ಅಂಶಗಳಲ್ಲಿ ಮೊದಲು ಮೂರು- ಎಂದರೆ, ಶ್ರವಣಂ, ಕೀರ್ತನಂ, ಸ್ಮರಣಂ- ಎಂಬವು ಜ್ಞಾನಾತ್ಮಕ. ಭಗವಂತನಲ್ಲಿ ಭಕ್ತಿ ಮಾಡಲು ಬುದ್ಧಿಯನ್ನು ಅವು ಪ್ರಚೋದಿಸುತ್ತವೆ. ಭಗವಂತನನ್ನು ಅರಿತುಕೊಳ್ಳಲು ಸಾಧಕಗಳಾಗುತ್ತವೆ. ಅನಂತರ ಬರುವ ಮೂರು ಅಂಶಗಳು- ಎಂದರೆ, ಪಾದಸೇವನಂ, ಅರ್ಚನಂ, ವಂದನಂ- ಭಗವಂತನನ್ನು ಕುರಿತ ಕರ್ಮಾಚರಣೆ. ತನಗೆ ತೃಪ್ತಿಯನ್ನೂ, ಸಂತೋಷವನ್ನೂ, ಮನಶ್ಶಾಂತಿಯನ್ನೂ ತಂದುಕೊಳ್ಳುವುದಕ್ಕಾಗಿ ನಡಸುವ ಫಲಾಪೇಕ್ಷೆಯಿಲ್ಲದ ನಿಃಸ್ವಾರ್ಥ ಕರ್ಮಗಳು ಅವು. ಕಡೆಯ ಮೂರು ಅಂಶಗಳು, ಎಂದರೆ ದಾಸ್ಯಂ, ಸಖ್ಯಂ,
೮
ಆತ್ಮನಿವೇದನಂ- ಭಗವಂತನನ್ನು ಸಾಕ್ಷಾತ್ಕರಿಸಿಕೊಳ್ಳುವುದಕ್ಕೆ ಕ್ರಮ.
ಭಗವದ್ಗೀತೆಯಲ್ಲಿ ಭಕ್ತಿಯ ಸಾಧನೆ ಮತ್ತು ಭಕ್ತನ ನಡವಳಿಕೆಗಳನ್ನು ಕುರಿತ ವಿವರಣೆ ಇದೆ. ಭಕ್ತಿಹೇಗೆ ಉತ್ತಮವಾದದ್ದು, ಅದರ ಹಿರಿಮೆಯೇನು ಎಂಬುದನ್ನು ಅದರಿಂದ ಗಮನಿಸಬಹುದು. ಅದರ ಸಾರಾಂಶ ಹೀಗಿದೆ:
“ವೇದ, ತಪಸ್ಸು, ದಾನ, ಯಜ್ಞ- ಇವುಗಳಿಂದ ನನ್ನ ವಿಶ್ವರೂಪದರ್ಶನ ಲಭಿಸುವುದಿಲ್ಲ. ನನ್ನನ್ನು ತಿಳೀಯುವುದಕ್ಕೆ, ನನ್ನನ್ನು ನೋಡುವುದಕ್ಕೆ, ನನ್ನನ್ನು ಸೇರುವುದಕ್ಕೆ, ಅನನ್ಯಭಕ್ತಿಯಿಂದ ಮಾತ್ರವೇ ಸಾಧ್ಯ. (ಅಧ್ಯಾ-11-53, 54)
ನನ್ನಲ್ಲಿ ಮನಸ್ಸನ್ನು ಲೀನಮಾಡಿ ಶ್ರದ್ಧೆಯಿಂದ ನನ್ನನ್ನು ಭಜಿಸುವವನು ಯೋಗಿಗಳಲ್ಲಿ ಶ್ರೇಷ್ಠನು. ನನ್ನನ್ನು ಭಜಿಸುವವರು ನನ್ನನ್ನು ಸೇರುತ್ತಾರೆ. (ಅಧ್ಯಾ-9-22,30)
ನನ್ನಲ್ಲಿಯೇ ಚಿತ್ತವಿಟ್ಟೂ, ನನ್ನಲ್ಲಿಯೇ ಆತ್ಮನಿವೇದನ ಮಾಡಿದವರು ಒಬ್ಬರಿಗೊಬ್ಬರು ಉಪದೇಶ ಮಾಡುತ್ತಾ, ಸದಾ ನನ್ನ ಕೀರ್ತನೆ ಮಾಡುತ್ತಾರೆ. ಆನಂದ ಪರವಾಶರಾಗುತ್ತಾರೆ. ಹೀಗೆ, ನನ್ನಲ್ಲಿ ತನ್ಮಯರಾದವರು ಪ್ರೇಮಪೂರ್ವಕವಾಗಿ ನನ್ನನ್ನು ಭಜಿಸುವವರು ನನ್ನನ್ನು ಹೊಂದುತ್ತಾರೆ. (ಅಧ್ಯಾ-10-9, 10)
ಯಾರು ಕರ್ಮಗಳನ್ನೆಲ್ಲಾ ನನಗೆ ಸಮರ್ಪಿಸುತ್ತಾರೋ, ನನ್ನಲ್ಲಿ ಪರಾಯಣರಾಗುತ್ತಾರೋ, ನನ್ನ ಭಕ್ತರಾಗುತ್ತಾರೋ, ಆಸಕ್ತಿ ತ್ಯಜಿಸುತ್ತಾರೋ, ಸಕಲ ಭೂತಗಳ ಹಿತದಲ್ಲಿ ಮಗ್ನರಾಗುತ್ತಾರೋ, ನನ್ನನ್ನೇ ಧ್ಯಾನಿಸಿ ಉಪಾಸನೆ ಮಾಡುತ್ತಾರೋ, ಯಾರು ಸರ್ವತ್ರ ಸಮಬುದ್ಧಿಯನ್ನಿಟ್ಟುರುತ್ತಾರೋ ಅವರನ್ನು ನಾನು ಮೃತ್ಯುರೂಪವಾದ ಸಂಸರಸಾಗರದಿಂದ ಒಡನೆಯೇ ಪಾರು ಮಾಡುತ್ತೇನೆ.(ಅಧ್ಯಾ-11-55)
ನಿನ್ನ ಮನಸ್ಸನ್ನು ನನ್ನಲ್ಲಿ ನೆಲೆಗೊಳಿಸು. ನಿನ್ನ ಬುದ್ಧಿಯನ್ನು ನನ್ನಲ್ಲಿಡು. ಹಾಗೆ ಮಾಡಿದರೆ, ನನ್ನನ್ನು ಸೇರಿತ್ತೀ. ನಿನ್ನ ಚಿತ್ತವನ್ನು ಸಿಧಗೊಳಿಸಲು ಸಾಧ್ಯವಾಗದಿದ್ದರೆ. ಅಭ್ಯಾಸದಿಂದ ನನ್ನನ್ನು ಪಡೆಯಲು
೯
ಯತ್ನಿಸು. ಅಭ್ಯಾಸಕ್ಕು ಅಸಮರ್ಥನಾದರೆ, ನೀನು ಮಾಡುವ ಕರ್ಮಗಳನ್ನೆಲ್ಲಾ ನನಗೆ ಅರ್ಪಣೆ ಮಾಡು; ಸಿದ್ಧಿಪಡೆಯುವೆ. (ಅಧ್ಯಾ-12-8,9,10)
ಅಭ್ಯಾಸಕ್ಕಿಂತ ಜ್ಞಾನ ಶ್ರೇಷ್ಠ. ಜ್ಞಾನಕ್ಕಿಂತ ಧ್ಯಾನ ಹೆಚ್ಚು. ಧ್ಯಾನಕ್ಕಿಂತ ಕರ್ಮಫಲತ್ಯಾಗ ಹಿರಿದು. ಅದರಿಂದ ಶಾಂತಿ ಕೂಡಲೇ ಲಭಿಸುವುದು. (ಅಧ್ಯಾ-12-12)
ಎಲ್ಲಾ ಪ್ರಾಣಿಗಳಲ್ಲೂ ದ್ವೇಷವಿಲ್ಲದವನಾಗಿ, ಎಲ್ಲರಿಗೂ ಮಿತ್ರನಾಗಿ, ದಯಾವಂತನಾಗಿ, ಅಹಂಕಾರ ಮಮಕಾರವಿಲ್ಲದವನಾಗಿ, ಸುಖದುಃಖಗಳನ್ನು ಸಮಾನವಾಗಿ ಸಹಿಸುವವನಾಗಿ, ಸದಾ ಸಂತೋಷಿಯಾಗಿ, ಯೋಗಿಯಾಗಿ, ಇಂದ್ರಿಯಗಳನ್ನು ನಿಗ್ರಹಿಸಿದವನಾಗಿ ,ಮನಸ್ಸನ್ನು ಸ್ಥಿರಪಡಿಸಿಕೊಂಡವನಾಗಿ, ಮನಸ್ಸನ್ನೂ ಬುದ್ಧಿಯನ್ನೂ ನನಗೆ ಅರ್ಪಣೆ ಮಾಡಿದವನಾಗಿ ಇರುವ ಭಕ್ತನು ನನಗೆ ಪ್ರಿಯ(ಅಧ್ಯಾ-12-13,14)
ಇತರರ ಕೀಟಲೆ ಕೋಟಲೆಗಳಿಂದ ಉದ್ವೇಗಗೊಳ್ಳದವನಾಗಿ, ಹರ್ಷ ಭಯ ಕ್ರೋಧ, ಈರ್ಷೆಗಳಿಂದ ಮುಕ್ತನಾಗಿರುವ ಭಕ್ತ ನನಗೆ ಪ್ರಿಯ. (ಅಧ್ಯಾ.-12-15)
ಆಸಕ್ತಿಯಿಲ್ಲದವನಾಗಿ, ಪವಿತ್ರನಾಗಿ, ದಕ್ಷನಾಗಿ, ಚಿಂತೆಯಿಲ್ಲದವನಾಗಿ, ಶುಭಾಶುಭಗಳನ್ನು ತ್ಯಜಿಸಿದವನಾಗಿ, ಇರುವ ಭಕ್ತ ನನಗೆ ಪ್ರಿಯ.(ಅಧ್ಯಾ-12-17)
ಶತ್ರು-ಮಿತ್ರ, ಮಾನ-ಅಪಮಾನ, ಶೀತ-ಉಷ್ಣ, ಸುಖ-ದುಃಖ, ನಿಂದೆ-ಸ್ತುತಿ, ಮುಂತಾದ ದ್ವಂದ್ವಗಳಿಂದ ಕದಲದವನಾಗಿ ಮೌನಿಯಾಗಿ, ಲಭಿಸಿದ್ದರಲ್ಲಿ ತೃಪ್ತನಾಗಿ, ಸ್ಥಿರಚಿತ್ತನಾಗಿ-ಇರುವ ಭಕ್ತ ನನಗೆ ಪ್ರಿಯ (ಅಧ್ಯಾ-12-18,19)
ಆದ್ದರಿಂದ, ನನ್ನ ಭಕ್ತನಾಗು. ನನಗಾಗಿ ಯಜ್ಞಮಾಡು. ನನ್ನನ್ನು ನಮಸ್ಕರಿಸು. ನನ್ನಲ್ಲಿ ಪರಾಯಣನಾಗು. ನನ್ನೊಂದಿಗೆ ಆತ್ಮವನ್ನು ಸೇರಿಸು. ನನ್ನನ್ನೇ ಹೊಂದುತ್ತೀಯೆ.(ಅಧ್ಯಾ-18-65)
ನನ್ನ ಭಕ್ತನಿಗೆ ಎಂದೆಂದಿಗೂ ನಾಶವಿಲ್ಲ. (ಅಧ್ಯಾ-9-31)
ಭಗವದ್ಗೀತೆ ಬೋಧಿಸಿದ ಈ ಭ್ಕ್ತಿಮಾರ್ಗಕ್ಕೆ, ಈ ಸುಲಭೋಪಾಯಕ್ಕೆ ಜನ ಮನಸೋತರು. ಪರಂಪರಾಗತವಾಗಿ ಬಂದ ಭಕ್ತಿಯ ಕರ್ಮಗಳನ್ನು ಮುಂದುವರೆಸಿದರು. ಹೀಗೆ ಬೆಳೆಯಿತು ಭಕ್ತಿಪಂಥ.
ಉ. ಆೞ್ವಾರರು.
ಭಕ್ತಿಮಾರ್ಗಕ್ಕೆ ಹೆಚ್ಚು ಪ್ರಾಶಸ್ತ್ಯ ಬಂದದ್ದು ದಕ್ಷಿಣ ಭಾರತದ ಆೞ್ವಾರರು ಮತ್ತು ನಾಯನಾರುಗಳಿಂದ ಎನ್ನಬಹುದು. ನಾಯನಾರುಗಳು
೧೦
ಶಿವಭಕ್ತರು. ಆೞ್ವಾರರು ವಿಷ್ಣುಭಕ್ತರು. ಅಚಲವಾದ ನಂಬಿಕೆಯಿಂದ, ಸ್ತೋತ್ರದಿಂದ, ಉಪಾಸನೆಯಿಂದ, ಆತ್ಮ ಸಮರ್ಪಣದಿಂದ ಭಗವಂತನ ಅನುಗ್ರಹವನ್ನು ದೊರಕಿಸಿಕೊಳ್ಳಬಹುದೆಂದು ಸ್ವತಃ ಆಚರಿಸಿ, ಅನುಭವಿಸಿ, ಈ ಮಹನೀಯರು ತೋರಿಸಿಕೊಟ್ಟರು.
ಭಕ್ತಿಮಾರ್ಗಕ್ಕೆ ವಿವರಣೆ ಕೊಟ್ಟವರು ಯಾಜ್ಞವಲ್ಕ್ಯ ಮಹರ್ಷಿಗಳು. ಅದು “ಯೋಗ”ವಾಯಿತು. ಆೞ್ವಾರರು ಅದನ್ನು ಆತ್ಮಸಾಧನೆಯಿಂದಲೂ ಅತೀಂದ್ರಿಯ ಅನುಭವದಿಂದಲೂ ದೃಢಪಡಿಸಿದರು.
ಸಾಂಪ್ರದಾಯಿಕವಾಗಿ ಆೞ್ವಾರರು ಕಲಿಯುಗದ ಆದಿಯಲ್ಲಿದ್ದರೆಂದು ಹೇಳುತ್ತಾರೆ. ಆದರೆ, ಅವರು ಕ್ರಿ.ಶ.2ನೆಯ ಶತಮಾನದಿಂದ 8ನೆಯ ಶತಮಾನದವರೆಗೆ ಇದ್ದರೆಂದು ತಿಳಿದುಬಂದಿದೆ. ಚರಿತ್ರೆಯ ಸಂಶೋಧನೆಯಂತೆ ಕ್ರಿ.ಶ.900ಕ್ಕೆ ಹಿಂದಿನವರು ಅವರೆಂದು ಖಚಿತಪಟ್ಟಿದೆ.
ಆೞ್ವಾರರ ಜೀವನದಿಂದ ಆಗಿನ ಕಾಲದ ಭಕ್ತಿಪಂಥದ ನಡೆಯೇನು ಎಂಬುದು ತಿಳಿದುಬರುತ್ತದೆ. ವೇದ,ಪುರಾಣ, ಆಗಮಗಳ ಹಿನ್ನೆಲೆ ಅದಕ್ಕೆ ಪೂರ್ಣವಾಗಿತ್ತೆಂದು ಕಂಡುಬರುತ್ತದೆ. ಅದಕ್ಕೂ ಮಿಗಿಲಾದದ್ದು ಅವರ “ದಿವ್ಯಾನುಭವ”ಗಳು-ಎಂದರೆ, ಅವರ ಅತೀಂದ್ರಿಯ ಅನುಭವಗಳು.
ಅತೀಂದ್ರಿಯಾನುಭವ ಎಂಬುದು ಒಂದು ಆಕರ್ಷಣೀಯ ವಿಚಾರ. ಆಧ್ಯಾತ್ಮಿಕ ಅನುಭವದಲ್ಲಿ ಅದೊಂದು ವೈಶಿಷ್ಟ್ಯ.
ಅತೀಂದ್ರಿಯತೆ ತರುವ ಅನುಭವವನ್ನು ಮಾತು ವರ್ಣಿಸಲಾರದು. ಅದನ್ನು ಇಂದ್ರಿಯಗಳೂ ಅರಿಯಲಾರವು. ಆದ್ದರಿಂದಲೇ, ಅದು ಅತೀಂದ್ರಿಯ ಅನುಭವ- ಅದು ಇಂದ್ರಿಯಗಳ ಎಲ್ಲೆಯನ್ನು ದಾಟಿದ್ದು. ಅದನ್ನು “ಸಾಕ್ಷಾತ್ಕಾರ” ಎನ್ನುತ್ತಾರೆ. ವಾದವಾಗಲೀ, ತರ್ಕವಾಗಲೀ, ಯುಕ್ತಿಯಾಗಲಿ, ಇಂದ್ರಿಯಗಳಾಗಲಿ, ಮಾತಾಗಲಿ ಇಲ್ಲಿ ಉಪಯೋಗಕ್ಕೆ ಬರುವುದಿಲ್ಲ. ಅದನ್ನು ಸ್ವತಃ ಅನುಭವಿಸಿಯೇ ಅರಿಯಬೇಕು. ಆ ಕಾರಣದಿಂದಲೇ ಅದನ್ನು “ಅಪರೋಕ್ಷಾನುಭೂತಿ” ಎಂದು ಕರೆಯುವುದು. ಆ ಅನುಭವ ಬರುವಾಗ ಭಕ್ತನಿಗೆ ತನ್ನ ಸುತ್ತಮುತ್ತಲ ಅರಿವಾಗಲಿ ಇಂದ್ರಿಯಗಳ ಜ್ಞಾನವಾಗಲಿ ಇರುವುದಿಲ್ಲ. ಹಾಗಿರಲು ಅವಕಾಶವೇ ಇಲ್ಲ. ಆ ಅನುಭವಕ್ಕೆ ಇಂದ್ರಿಯ ಪ್ರಪಂಚವನ್ನು ದಾಟಿ, ಇಂದ್ರಿಯಾತೀತ ನೆಲೆಯನ್ನು ಅವನು ಸೇರಲೇಬೇಕು. ಇದೇ “ಸಮಾಧಿ ಸ್ಥಿತಿ” ಎಂಬುದು.
೧೧
ಇದರ ಫಲ ಆನಂದ ಮತ್ತು ಶಾಂತಿ. ಈ ಆನಂದವನ್ನು ಕೆಲವು ವಿಶೇಷಣೆಗಳ ಜೋಡಣೆಯಿಂದ- ಮಹದಾನಂದ, ಪರಮಾನಂದ, ಬ್ರಹ್ಮಾನಂದ, ಆತ್ಮಾನಂದ- ಎಂದು ಮುಂತಾಅಗಿ ಹೇಳಬಹುದಷ್ಟೇ. ಅನುಭವ ಪಡೆದವನಿಗೇ ಗೊತ್ತು ಅದರ ಸವಿಯೇನೆಂದು. ಈ ಆನಂದದ ನೆಲೆಯನ್ನು ಮುಟ್ಟಿದಾಗ, ಭಕ್ತನು ತನ್ನ ಇಷ್ಟದೈವದೊಂದಿಗೆ ಒಂದಾಗುತ್ತಾನೆ ಅಥವಾ, ಆ ದೈವದ ಸಮ್ಮುಖದಲ್ಲಿ ಆನಂದವನ್ನು ಅನುಭವಿಸುತ್ತಾ ಇರುತ್ತಾನೆ.
ಮುಖ್ಯವಾಗಿ, ಎರಡೂ ಬಹೆಯಲ್ಲಿ ಸಮಾಧಿಸ್ಥಿತಿಯನ್ನು ತಂದುಕೊಳ್ಳಬಹುದು ಎನ್ನುತ್ತಾರೆ. ಒಂಟಿಯಾಗಿ, ನಿರ್ಜನ ಪ್ರದೇಶದಲ್ಲಿ ಕುಳಿತು ಮನಸ್ಸನ್ನು ಏಕಾಗ್ರಗೊಳಿಸಿ, ಬಾಹ್ಯ ವ್ಯಾಪಾರಗಳನ್ನು ಅಡಗಿಸಿ, ಇಂದ್ರಿಯಗಳನ್ನು ಹಿಡಿದಿಟ್ಟು, ನಾದೋಪಾಸನೆಯ ಮೂಲಕವೋ ಬೇರೆ ವಿಧದಿಂದಲೋ ಪರಂಜ್ಯೋತಿಯನ್ನು ನಿಲುಕಿ, ಅದರೊಂದಿಗೆ ಒಂದಾಗಿ ಆನಂದಿಸುವುದು ಒಂದು ಬಗೆ. ಇದು ಪ್ರಯಾಸದ ಸಾಧನೆ. ಅಡಗಲೊಲ್ಲದ ಚಂಚಲ ಮನಸ್ಸನ್ನು ಅಡಗಿಸುವುದು ಮತ್ತು ಅಭ್ಯಾಸದಿಂದ ಅದನ್ನು ಏಕಾಗ್ರಗೊಳಿಸುವುದು ಕಷ್ಟ ಸಾಧ್ಯ. ಹೀಗೆ ನಡಸುವ ಸಾಧನೆಯನ್ನು “ನಿರ್ಗುಣೋಪಾಸನೆ” ಎನ್ನುತ್ತಾರೆ. ಇನ್ನೊಂದು ಬಗೆಯದು “ಸಗುಣೋಪಾಸನೆ” ಇದರಲ್ಲಿ ಭಕ್ತ ತನಗೆ ಇಷ್ಟವಾದ ಮೂರ್ತಿಯನ್ನು ಲಕ್ಷ್ಯವಾಗಿ ಇಟ್ಟುಕೊಂಡು, ತನ್ಮೂಲಕ ಮನಸ್ಸನ್ನು ಹದಗೊಳಿಸುವುದು. ಸಾಕಾರ ಮೂರ್ತಿಯೊಂದನ್ನು ಮನಸ್ಸಿಗೆ ತಂದುಕೊಳ್ಳುವುದು; ಅದರ ಸ್ವರೂಪ ಪೂರ್ತಿಯಾಗಿ ಮನಸ್ಸಿನಲ್ಲಿ ಮೂಡಿ ಬರುವಂತೆ ಸಾಧನೆ ಮಾಡುತ್ತ ಮಾಡುತ್ತ ಸಮಾಧಿಸ್ಥಿತಿಯನ್ನು ನಿಲುಕುವುದು. ಅಥವಾ ತನ್ನ ಇಷ್ಟದೈವದ ಗುಣಾತಿಶಯಗಳನ್ನೂ ಸೌಂದರ್ಯಾತಿಶಯಗಳನ್ನು ದಿವ್ಯಾದ್ಭುತ ಲೀಲಾಪ್ರಸಂಗಗಳನ್ನೂ ಮನಸ್ಸಿನಲ್ಲಿ ತುಂಬಿಕೊಂಡು ಅವುಗಳನ್ನು ಕುರಿತು ಸದಾ ಚಿಂತಿಸುತ್ತಿರುವುದು. ಆಗ, ತಮ್ಮ ಕಣ್ಣಮುಂದೆ ಅವಕ್ಕೆ ಸ್ವಲ್ಪಮಾತ್ರ ಹೋಲಿಸಬಹುದಾದ ಯಾವುದನ್ನು ಕಂಡರೂ ಸಾಕು; ಅದು ಅವರನ್ನು ಸಮಾಧಿಸ್ಥಿತಿಗೆ ಏರಿಸಿಬಿಡುವುದು. ಉದಾಹರಣೆಗೆ, ಕಾರ್ಮುಗಿಲನ್ನು ನೋಡಿದ ಕೂಡಲೇ ಗೋಪಿಕೆಯರಿಗೆ ಶ್ರೀಕೃಷ್ಣನ ದಿವ್ಯಸುಂದರ ದೇಹದ ಬಣ್ಣ ನೆನಪಿಗೆ ಬಂದು, ಅವರ್ರು ಹಾಗೆಯೇ ಮೈಮರೆಯುತ್ತಿದ್ದರಂತೆ! ಇಂಥ ಭಕ್ತಿಭಾವವನ್ನು ಬೆಳಸುವುದಕ್ಕೆ ಭಕ್ತನು ತನ್ನ ಇಷ್ಟದೈವಕ್ಕೆ ತನುಮನಧನಗಳನ್ನು ಸಮರ್ಪಿಸಿ ಸೇವೆ ಮಾಡುತ್ತಾ ತನ್ನ ಜೀವಿಕೆಯನ್ನೆಲ್ಲಾ ಆ ದೈವದ ಸೇವೆಯಲ್ಲಿ
೧೨
ಕಳೆಯುವುದು ಒಂದು ಸುಲಭೋಪಾಯ.
ಆೞ್ವಾರರು ಹೀಗೆ ನಡಸಿದರು. ಅವರ ಕಾಲವೆಲ್ಲ ಭಗವಂತನ ಸೇವೆಗೇ ಮೀಸಲು. ಅನನ್ಯ ಭಕ್ತಿಯಿಂದ ಅವರು ನಡಸಿದ ಅವಿಶ್ರಾಂತ ಸೇವೆಯ ಫಲವಾಗಿ ಅವರಿಗೆ ಹಲವಾರು ದಿವ್ಯಾನುಭವಗಳು ಆದವು.
ಭಗವದ್ಗುಣಾನುಭವದಲ್ಲಿ ಆಳವಾಗಿ ಮುಳುಗಿದ್ದವರಾದ್ದರಿಂದ ಅವರಿಗೆ “ಆೞ್ವಾರ್”(ಆೞ್+ವಾರ್= ಆಳಕವಾಗಿ ಮುಳೂಗಿದವರು) ಎಂಬ ಹೆಸರು ಬಂತು. ಅವರ ಆಧ್ಯಾತ್ಮಿಕತೆ ಭಕ್ತಿಮಯ. ಭಗವಂತನ ಅವತಾರಗಳಲ್ಲಿ, ಆ ಅವತಾರಗಳ ಉದ್ದೇಶಗಳಲ್ಲಿ ಮತ್ತು ಅವುಗಳ ಸಾಧನೆಗಳಲ್ಲಿ ಅವರಿಗೆ ಪೂರ್ಣ ನಂಬಿಕೆ. ಮತ್ತು ಅವತಾರಗಳಲ್ಲಿ ಪೂರ್ಣಾವತರಗಳೆನ್ನಿಸಿದ ರಾಮ,ಕೃಷ್ಣ, ನರಸಿಂಹ ಇವುಗಳಲ್ಲಿ ಅವರಿಗೆ ತೀರದ ಭಕ್ತಿ. ಮತ್ಸ್ಯ, ಕೂರ್ಮ, ವರಾಹ, ವಾಮನ, ತ್ರಿವಿಕ್ರಮ, ಪರಶುರಾಮ- ಈ ಅವತಾರಗಳೂ ಅವರಿಗೆ ಪ್ರಿಯವೇ.
ಭಗವಂತ ಮಾನವ ಲೋಕದಲ್ಲಿ ಎತ್ತಿದ ಅವತಾರಗಳು, ಆಗ ಭಗವಂತ ನಡಸಿದ ಅತಿಮಾನುಷ, ದಿವ್ಯ, ಅದ್ಭುತ ಲೀಲೆಗಳು- ಇವುಗಳೆಲ್ಲದರ ಆನಂದಾನುಭವದಲ್ಲಿ ಇಳಿಯ ಮುಳುಗಿದವರು ಅವರು. ತನ್ನ ಸೃಷ್ಟಿಯಲ್ಲಿ ಭಗವಂತನಿಗೆ ಇರುವ ಕೃತಿ, ಕರುಣೆ, ಅನುಗ್ರಹಗಳು ಮಾನವನಿಗೆ ಅರ್ಥವಾಗುವುದಕ್ಕಿಂತಲೂ, ಬಹಳ ಹೆಚ್ಚು. ಅದರ ಮಿತಿಯೇನೆಂದು ಭಕ್ತನು ಅರಿಯಲು ಯತ್ನಿಸುವಾಗ, ಅವನಲ್ಲಿ ಆಶ್ಚರ್ಯಕರವಾದ ಭಾವನೆಗಳೂ ಅಪರಿಮಿತವಾದ ಭಕ್ತಿನಂಬಿಕೆಗಳೂ ಒಟ್ಟುಗೂಡಿ ಭಗವಂತನ ದಿವ್ಯಾನುಭವದಲ್ಲಿ ಕಲೆತು ಅವನಲ್ಲಿ ಅತೀಂದ್ರಿಯ ಶಕ್ತಿಯನ್ನು ಬೆಳಸುತ್ತವೆ. ಆ ದಿವ್ಯಾನುಭವದ ಆನಂದದಿಂದ ಮೈಮರೆತು ತನ್ನ ಸುತ್ತಲ ಜಗತ್ತಿನ ಪರಿವೆಯಿಲ್ಲದ ಸ್ಥಿತಿಯಿಂದ ಸಾಮಾನ್ಯ ಮಾನವನ ಸ್ಥಿತಿಗೆ ಅವನು ಮರಳಿದಾಗ, ಅಂಥ ಉನ್ನತಮಟ್ಟದಿಂದ ಅಧಃಪತನ ಹೊಂದಿದೆನಲ್ಲಾ ಎಂಬ ವ್ಯಥೆಯೂ ಜುಗುಪ್ಸೆಯೂ ಅವನಲ್ಲಿ ತುಂಬಿರುತ್ತದೆ. ಮತ್ತೆ ಅದೇ ಆನಂದದ ಸ್ಥಿತಿಗೆ ಅವನನ್ನು ಏರಿಸುವದಕ್ಕಾಗಿ ಭಗವತ್ಕಟಾಕ್ಷಕ್ಕಾಗಿ, ಸಾಕ್ಷಾತ್ಕಾರಕ್ಕಾಗಿ ಹಾತೊರೆಯುವುದು ಭಕ್ತನ ಸರ್ವ ಸಾಮಾನ್ಯ ಲಕ್ಷಣ.
ಭಗವಂತನ ಸೌಂದರ್ಯವಂತು ಅಳತೆಗೆ ನಿಲುಕದ್ದು, ತೃಪ್ತಿತಾರದ್ದು. ಅದನ್ನು ಎಷ್ಟು ನೋಡಿದರೂ ತೀರದು; ಇನ್ನೂ ನೋಡುತ್ತಲೇ ಇರಬೇಕು ಎನ್ನಿಸುತ್ತದೆ. ಅದನ್ನು ಎಷ್ಟು ಅನುಭವಿಸಿದರೂ ಸಾಲದೆನ್ನಿಸುತ್ತದೆ.
೧೩
ಭಗವಂತನ ದಿವ್ಯಮಂಗಳ ಮೂರ್ತಿಯನ್ನು ಎಡೆಬಿಡದೆ ನೋಡುತ್ತಿರಬೇಕು. ಭಗವಂತನ ಪಾದಸೇವೆ ಮಾಡುತ್ತಿರಬೇಕು. ಭಗವತ್ಕೈಂಕರ್ಯಗಳನ್ನು ಬಿಡದೆ ನಡಸುತ್ತಿರಬೇಕು; ಭಗವಂತನ ಪರಮ ನಮ್ರತೆಯ ದಾಸಾನುದಾಸನಾಗಿರಬೇಕು; ಭಗವಂತನ ಸಕಲ ಕಲ್ಯಾಣಗುಣಗಳನ್ನು ಅನುಭವಿಸಿ ಅರಿಯಬೇಕು; ಹೀಗೆ, ಭಗವಂತನ ಪೂರ್ನ ಕಟಾಕ್ಷಕ್ಕೆ ಪಾತ್ರನಾಗಬೇಕು-ಇವೆಲ್ಲವೂ ಭಕ್ತನ ಉತ್ಕಟಾಪೇಕ್ಷೆ. ಆೞ್ವಾರರಲ್ಲಿ ಕಂಡುಬರುವುದೆಲ್ಲ ಈ ಭಾವನೆಯೇ. ಭಗವಂತನಲ್ಲಿ ಐಕ್ಯಹೊಂದಿ ಸಾಯುಜ್ಯ ಸುಖವನ್ನು ಅನುಭವಿಸುವುದಕ್ಕೆ ಬದಲಾಗಿ ಸ್ವಾಮಿಯ ದಿವ್ಯಾದ್ಭುತ ಸೌಂದರ್ಯವನ್ನು ಆಸ್ವಾದಿಸುತ್ತಾ ಭಗವಂತನ ಸೇವೆತಲ್ಲಿ ಸದಾ ನಿರತರಾಗಿರಬೇಕು ಎಂಬುದೇ ಆೞ್ವಾರರ “ಮುಕ್ತಿ”ಯ ವಿವರಣೆ. ಆೞ್ವಾರರಿಗೆ ಮುಕ್ತಿ ಬೇಕು. ಅವರೂ ಜನನ ಮರಣ ಪ್ರವಾಹವನ್ನು ದಾಟಬೇಕು. ಅಮರತ್ವ ಬೇಕು. ಆದರೆ, ಆ ಮುಕ್ತಿಯಲ್ಲಿ ಭಗವಂತನ ಸಾನ್ನಿಧ್ಯವನ್ನು ಮಾತ್ರ ಮರೆಯಾಗಬಾರದು. ಆ ಭವ್ಯ ಸೌಂದರ್ಯವನ್ನು ಸವಿಯುತ್ತಾ ಭಗವಂತನ ಪಾದಸೇವೆಯಲ್ಲಿ ಸರ್ವದಾ ನಿರತರಾಗಿರಬೇಕು. ಆ ಪಾದಸೇವೆ ಎಂದೆಂದಿಗೂ ತಪ್ಪಲೇಬಾರದು.
ಊ. ನಾಲಾಯಿರ ದಿವ್ಯಪ್ರಬಂಧ
ಆೞ್ವಾರರು ತಮಗೆ ಆದ ದಿವ್ಯಾನುಭವಗಳನ್ನು ತಾವು ಮಾತ್ರವೇ ಅನುಭವಿಸಿ ಮುಗಿಸಿದವರಲ್ಲ. ತಮ್ಮ ಆನಂದಾನುಭವ ಲೋಕಕ್ಕೂ ಒದಗಿ ಬರಲೆಂದು ಆಶಿಸಿ, ಅದನ್ನೆಲ್ಲಾ ಭಕ್ತಿಪೂರ್ಣವಾಗಿ ಹಾಡಿದರು. ಆ ಭಕ್ತಿಯ ಹಾಡುಗಳ ಸಂಕಲನವೇ ದಿವ್ಯಪ್ರಬಂಧ. ಈ ಭಕ್ತಿಗೀತೆಗಳು ಒಟ್ಟು ನಾಲ್ಕುಸಾವಿರ. ಆದ್ದರಿಂದ, ಅದಕ್ಕೆ “ನಾಲಾಯಿರ” ಎಂದು ಹೆಸರು ಬಂತು.
ಈ ಭಕ್ತಿಯ ಹಾಡುಗಳನ್ನು “ಪಾಶುರ”ಗಳು ಎನ್ನುತ್ತಾರೆ. ಪಾಶುರ ಎಂಬುದಕ್ಕೆ ದಿವ್ಯಕವನ, ಭಕ್ತಿಗೀತೆ, ಸದುಕ್ತಿ, ಸೂತ್ರ, ವೇಣುಗಾನ- ಎಂದು ಅರ್ಥವಿದೆ. ಈ ಪಾಶುರಗಳಲ್ಲಿ ಭಕ್ತಿಯ ಪಾರವಶ್ಯವಿದೆ. ಉದಾತ್ತ ಬೋಧೆಯಿದೆ. ವೇದಾಂತವಿದೆ. ಪುರಾಣಕಥಾ ಸಂದರ್ಭಗಳ ಸೂಚನೆಗಳಿವೆ. ಅವತಾರ ರಹಸ್ಯಗಳಿವೆ. ಭಗವಂತನ ಕರುಣೆಯ ಕಾರ್ಯಗಳಿವೆ. ಭಕ್ತನ ಬೇಡಿಕೆಗಳಿವೆ. ಮಾನವನ ದೈನಿಕ ಜೀವನದಲ್ಲಿ
೧೪
ಕಂಡುಬರುವ ಕಷ್ಟಕಾರ್ಪಣ್ಯಗಳನ್ನು ಕುರಿತ, ಹೄದಯಾಂತರಾಳದಿಂದ ತೋಡಿಕೊಳ್ಳುವ ಸಂಕಟವಿದೆ ಭಗವಂತನ ಸಾಮೀಪ್ಯ ಸೇವೆಗಳು ಬೇಕೆನ್ನುವ ಉತ್ಕಟವಾದ ಆಕಾಂಕ್ಷೆಯಿದೆ. ಮಿಗಿಲಾಗಿ, ಆೞ್ವಾರರ ಆಳವಾದ ಭಗವದ್ಭಕ್ತಿಯ ಪ್ರತ್ಯಕ್ಷಾನುಭವವಿದೆ.
ಆೞ್ವಾರರ ಈ ಸಾಹಿತ್ಯದಿಂದ ಕೆಲವು ವೈಶಿಷ್ಟ್ಯಗಳು ಹೊರಪಡುತ್ತವೆ; ವೇದ, ಪುರಾಣ, ಆಗಮಗಳ ಪರಂಪರಾಗತವಾದ ಜ್ಞಾನಭಂಡಾರ ಅದರಲ್ಲಿದೆ. ಭಗವಂತನ ಸಾಕಾರ ಸ್ವರೂಪ, ಅವನ ಅಮಿತ ಸೌಂದರ್ಯ, ಅಪಾರ ಕಾರುಣ್ಯ, ಸಂರಕ್ಷಕತ್ವ, ಶರಣಾಗತ ಜನೋದ್ಧರಣ,. ದಿವ್ಯಲೀಲಾ ವಿಶೇಷಗಳು- ಇವುಗಳೆಲ್ಲವನ್ನೂ ಮನಮುಟ್ಟುವಂತೆ ಅಲ್ಲಿ ವಿವರಿಸಿದೆ. ಭಗವಂತ ಧರ್ಮಸಂರಕ್ಷಣೆಗಾಗಿ, ದುಷ್ಟಶಿಕ್ಷಣಕ್ಕಾಗಿ, ಭೂಭಾರವನ್ನಿಳಿಸುವುದಕ್ಕಾಗಿ ಅವತಾರಗಳನ್ನು ತಳೆದು ಧರೆಗೆ ಬರುತ್ತಾನೆ. ಅವನು ಭಕ್ತವತ್ಸಲ. ಭಕ್ತಪರಾಧೀನ. ಸುಲಭಸಾಧ್ಯ ಪ್ರೇಮಧರ್ಮಗಳ ಸಾಕಾರಮೂರ್ತಿ. ಕೃಪಾಸಿಂಧುವೇ ಅವನು. ಅಂಥ ಭಗವಂತನನ್ನು ಅನನ್ಯವಾಗಿ ನಂಬಿ, ಶರಣಾಗಿ, ಭಗವಂತನಿಗಾಗಿ ಕೈಂಕರ್ಯವನ್ನೆಸಗುತ್ತಾ ಅವನ ಕೃಪಾಕಟಾಕ್ಷವನ್ನು ಪಡೆಯಲು ಮಾನವನು ಸದಾ ಯತ್ನಿಸಬೇಕು. ಅಭಗವತ್ಕಟಾಕ್ಷವೇ ಭಕ್ತನಿಗೆ ಯೋಗಕ್ಕೂ ಮೋಕ್ಷಕ್ಕೂ ಮೂಲ. ಭಕ್ತನ ಈ ದೃಢನಂಬಿಕೆ ಮತ್ತು ಕೈಂಕರ್ಯವೇ ಭಗವಂತ ಕೃಪೆದೋರುವಂತೆ ಮಾಡುತ್ತದೆ. ಇವುಗಳನ್ನೆಲ್ಲಾ ಆೞ್ವಾರರ ಸಾಹಿತ್ಯ ಸಮೃದ್ಧಿಯಾಗಿ ಹರಿಸುತ್ತದೆ.
ಆೞ್ವಾರರು ಹಾಡಿದ್ದು ನಾಡನುಡಿಯಾದ ತಮಿಳಿನಲ್ಲಿ. ಜನಸಾಮಾನ್ಯಕ್ಕೆ ತಿಳಿಯುವಂತೆ. ಆದ್ದರಿಂದ, ಅವರ ಪಾಶುರಗಳು ಜನರಲ್ಲಿ ಹರಡಲು ಅವಕಾಶವಾಯಿತು. ತಮಿಳುನಾಡಿನಲ್ಲಿ ಇಂದಿಗೂ ಈ ಪಾಶುರಗಳನ್ನು ವಿಧವಿಧರಾಗಗಳಲ್ಲಿ ಹಾಡಿ ಪೂಜಿ ನಲಿಯುವ ವಾಡಿಕೆಯಿದೆ.
ಆೞ್ವಾರರ ಪಾಶುರಗಳು ಭಕ್ತಿಗೂ ಶರಣಾಗತಿಗೂ ಬೆಲೆ ಕೊಟ್ಟಿದೆ. ಆದ್ದರಿಂದ ಜನಸಾಮಾನ್ಯರ ಆಧ್ಯಾತ್ಮಿಕ ಅಭ್ಯುದಯಕ್ಕೆ ಇವು ದಾರಿಮಾಡಿಕೊಟ್ಟಿವೆ. ವೇದಗಳ ಮತ್ತು ಶಾಸ್ತ್ರಗಳ ಜ್ಞಾನಪಂಡಿತರದಾಗಿತ್ತು. ಅದೇ ವೇದಶಾಸ್ತ್ರಗಳ ವಿಷಯವನ್ನೇ ಸಾಮಾನ್ಯರ ಭಾಷೆಯಲ್ಲಿ ಈ ಪಾಶುರಗಳು ಬೋಧಿಸಿದವು. ಆದ್ದರಿಂದ, ಪಂಡಿತರಿಗೆ ಮೀಸಲಾಗಿದ್ದ ಆಧ್ಯಾತ್ಮಿಕಜ್ಞಾನ ಪಾಮರರ ಸೊತ್ತಾಯಿತು. ಈ
೧೫
ಆಧ್ಯಾತ್ಮಿಕ ಸಂಪತ್ತನ್ನು ಉಚ್ಚ ನೀಚ ಎನ್ನದೆ, ಬಡವ ಬಲ್ಲಿದ ಎನ್ನದೆ ಗಂಡುಹೆಣ್ಣು ಎನ್ನದೆ, ಜಾತಿ ಕುಲ ಎನ್ನದೆ- ಎಲ್ಲರಿಗೂ ಸಮಾನವಾಗಿ ಈ ಪಾಶುರಗಳ ಮೂಲಕ ಆೞ್ವಾರರು ಹಂಚಿ ಹರಡಿದರು.
ದಿವ್ಯಪ್ರಬಂಧವನ್ನು ದ್ರಾವಿಡ ಭಾಷೆಯಾದ ತಮಿಳೀನಲ್ಲಿ ರಚಿಸಿದ್ದರೂ, ಇದರಲ್ಲಿ ನಾಲ್ಕು ವೇದಗಳ ಸಾರವೂ ಇರುವುದರಿಂದ, ಇದಕ್ಕೆ “ದ್ರಾವಿಡವೇದ”, “ದ್ರಾವಿಡಾಮ್ನಾಯ” ಎಂದು ಹೆಸರಿದೆ. ವೇದಗಳಿಗೆ ಕೊಟ್ಟಿರುವ ಪಾವಿತ್ರತೆಯನ್ನೂ ಪ್ರಾಶಸ್ತ್ಯವನ್ನೂ ಇದಕ್ಕೂ ಕೊಟ್ಟಿದ್ದಾರೆ. ಆದ್ದರಿಂದ ಪವಿತ್ರವಾದ ಪ್ರಬಂಧವನ್ನು ವೈದಿಕ ಗೋಷ್ಠಿಗಳಲ್ಲಿ ಹಾಡುತ್ತಾರೆ. ವೈದಿಕಾರಾಧನೆಗಳಲ್ಲಿ, ದೇವಸ್ಥಾನಗಳಲ್ಲಿ, ಪಾಶುರಗಳನ್ನು ಹಾಡೂತ್ತಾರೆ. ಶ್ರೀವೈಷ್ಣವ ದೇವಾಲಯಗಳಲ್ಲಿಯೂ, ಮನೆಗಳಲ್ಲಿಯೂ, ವೇದಮಂತ್ರಗಳೊಡನೆ ಆೞ್ವಾರರ ಪಾಶುರಗಳನ್ನು ಹಾಡುವ ಅರ್ಚನಾವಿಧಿಯನ್ನು ಇಂದಿಗೂ ನೋಡಬಹುದು.
ಋ. ಆೞ್ವಾರರ ತರುವಾಯ
ಆೞ್ವಾರರು ಶುದ್ಧವಾದ ಭಕ್ತಿಧರ್ಮ-ಎಂದರೆ ಪ್ರೇಮಧರ್ಮ. ಜಾತಿ, ಮತ,ಉಚ್ಚ,ನೀಚ ಎಂಬುದನ್ನೆಲ್ಲಾ ಸಡಿಲಗೊಳಿಸಿದ್ದದಧರ್ಮ. ಆೞ್ವಾರರಿಗೆ ಪ್ರಧಾನವೆನ್ನಿಸಿದ್ದು ಸತ್ಯಾನ್ವೇಷಣೆ ಮಾತ್ರವೇ, ಸತ್ಯವಸ್ತುವಿನ ಸಾಕ್ಷಾತ್ಕಾರವೊಂದೇ. ಅದನ್ನು ತಾವು ಅನುಭವಿಸಿ ತಿಳಿಯಬೇಕೆಂಬುದೇ. ಆದ್ದರಿಂದ ಮತಧರ್ಮದ ಅನುಷ್ಠಾನಗಳಲ್ಲೂ, ದರ್ಶನದ ವಿಷಯಗಳಲ್ಲೂ, ಅವರ ದಿವ್ಯಾನುಭವಗಳಲ್ಲೂ ಅವರಿಗೆ ವ್ಯತ್ಯಾಸ ತೋರಿಬರಲಿಲ್ಲ. ಹೀಗೆ ಅವರು ಪಳಗಿದ ವೈಷ್ಣವ ಪಂಥದಲ್ಲಿ ವಿಶಿಷ್ಟಾದ್ವೈತ ಮತದ ಹಿನ್ನೆಲೆಯ ಚಿಹ್ನೆಗಳಿದ್ದವು. ಶ್ರೀವೈಷ್ಣವಪಂಥ ಎಂದು ಕರೆಯಲಾದ ಅದು ಅವರ ಕಾಲದಲ್ಲಿ ಮನುಷ್ಯನು ಆಚರಿಸಬಹುದಾದ ಸರವತ್ರಿಕ ಮತದಮಟ್ಟಕ್ಕೆ ಏರಿತ್ತು. ಅವರು ಕಾಲವಾದ ಬಳಿಕ, ಸರಿಯಾದ ನಿರ್ವಾಹಕರಿಲ್ಲದೆ, ಶ್ರೀವೈಷ್ಣವ ಪಂಥ ಮೆಲ್ಲಮೆಲ್ಲಗೆ ಜಾಡು ಬಿಟ್ಟಿತು. ಅದರಲ್ಲಿ ಮಾರ್ಪಾಡುಗಳು ಉಂಟಾದವು. ಅಂಥ ಸಂದಿಗ್ಧ ಕಾಲದಲ್ಲಿ ಬಂದರು ನಾಥಮುನಿ ಎಂಬ ಮಹಾಯೋಗಿ. ಆೞ್ವಾರರು ಅನುಷ್ಠಾನದಲ್ಲಿ ತಂದುಕೊಂದದ್ದನ್ನೂ ತಾವೇ ಸ್ವತಃ ಕಂಡುಕೊಂಡದ್ದನ್ನು ಒಟ್ಟುಗೂಡಿಸಿ ಅವರು ಬೋಧಿಸಿದರು. ಆೞ್ವಾರರು ಹಾಡಿದ ದಿವ್ಯಪ್ರಬಂಧದ ಹಿರಿಮೆಯನ್ನು ಅರಿತರು. ಆ ವೇಳೆಗೆ ದಿವ್ಯಪ್ರಬಂಧ ಖಿಲವಾಗುತ್ತಿತ್ತು. ನಾಥಮುನಿ ಬಹಳ ಶ್ರಮಪಟ್ಟು ಆ ದಿವ್ಯಪಾಶುರಗಳನ್ನೆಲ್ಲಾ ಮತ್ತೆ ಶೇಖರಿಸಿದರು.
೧೬
ಮತಗಳ ಮಡೀವಂತಿಕೆಯನ್ನೂ, ಭೇದವನ್ನೂ, ಬದಿಗೆ ತಳ್ಳಿ , ಆೞ್ವಾರರು ನಡೆದು ತೋರಿಸಿದ ಉದಾರ ಮಾರ್ಗವನ್ನು ಉಜ್ಜೀವನಗೊಳಿಸಲು ಶ್ರಮವಹಿಸಿದರು. ಹೀಗೆ, ಶ್ರೀವೈಷ್ಣವ ಮತವನ್ನು ನಾಥಮುನಿ ಸ್ಥಿರಗೊಳಿಸಿದರು. ಅಲ್ಲದೆ ಅದನ್ನು ಭಾರತದೇಶದಲ್ಲಿ “ಪಿತ್ರಾರ್ಜಿತವಾದ ಆಧ್ಯಾತ್ಮಿಕ ಆಸ್ತಿ” ಎಂದು ಸಾರಿದರು.
ನಾಥಮುನಿಯ ತರುವಾಯ ಅವರ ಪ್ರತಿಭಾವಂತನಾದ ಮೊಮ್ಮಗ ಯಾಮುನಾಚಾರ್ಯ ಅಥವಾ ಯಾಮುನ ಮುನಿ ಬಂದರು. ಆತನಿಗೆ ಆಳವಂದಾನ್” ಎಂದೂ ಹೆಸರು. ಆತ ನಾಥಮುನಿಯ ಆಧ್ಯಾತ್ಮಿಕ ಉತ್ತರಾಧಿಕಾರಿ. ಆೞ್ವಾರರು ನಡೆದ ಮತ್ತುನಾಥಮುನಿ ಉಜ್ಜೀವನಗೊಳಿಸಿದ ಭಕ್ತಿಪಂಥವನ್ನೂ ವೇದಮತವನ್ನೂ ಸಮನ್ವಯಗೊಳಿಸಿದ ಮಹಾಪುರುಷ ಆತ. ಈ ಸಂಸ್ಕೃತವಾದ (ಪರಿಷ್ಕೃತ)ಮತವನ್ನು ಆತ “ವಿಶಿಷ್ಟಾದ್ವೈತ ಮತ” ಎಂದು ಕರೆದನು. ಯಾಮುನಮುನಿ ಅತೀಮ್ದ್ರಿಯವಾದಿ. ತನ್ನ ಮತದ ಬೋಧೆ ಹೃದಯಕ್ಕೆ ಸಂಬಂಧಿಸಿದ್ದೆಂದೂ, ಭಕ್ತಿಪ್ರಧಾನವಾದದ್ದೆಂದೂ, ಅತೀಂದ್ರಿಯ ಆಧ್ಯಾತ್ಮಿಕ ಪ್ರವೃತ್ತಿಗಳಿಗೆ ಅದು ಕೊಂದಿಕೊಳ್ಳುವುದೆಂದೂ ಆತ ಕಂಡುಕೊಂಡನು. ಭಕ್ತನಾದವನು ತನ್ನ ಹೃದಯವನ್ನೂ ತನ್ನ ಸರ್ವಸ್ವವನ್ನೂ ಪರಮಾತ್ಮನಿಗೆ ಸಮರ್ಪಣ ಮಾಡಬೇಕೆಂದು ಬೋಧಿಸಿದನು. ಅದೇ “ಪ್ರಪತ್ತಿಮಾರ್ಗ” ಎಂಬುದು- ಎಂದರೆ, ಭಗವಂತನಲ್ಲಿ ಸರ್ವವಿಧದಿಂದಲೂ ಶರಣಾಗುವ ಮಾರ್ಗ. ಉದಾಹರಣೆಗೆ ಯಾಮುನಾಚಾರ್ಯರ ಸ್ತೋತ್ರರತ್ನದ ಒಂದು ಶ್ಲೋಕ ಹೀಗಿದೆ;
ಪಿತಾತ್ವಂ ಮಾತಾತ್ವಂ ದಯಿತ ತನಯಸ್ತ್ವಂ ಪ್ರಿಯಸುಹೃತ್ |
ತ್ವಮೇವತ್ವಂ ಮಿತ್ರಂ ಗುರುರಸಿ ಗತಿಶ್ಚಾಪಿ ಜಗತಾಮ್ |
ತ್ವದೀತಸ್ತ್ವದ್- ಭೃತ್ಯಸ್ತವ ಪರಿಜನಸ್ತ್ವದ್ಗತಿರಹಮ್ |
ಪ್ರಪನ್ನಶ್ಚೈವಂ ಸತ್ಯಹಮಪಿ ತವೈವಾಸ್ಮಿ ಹಿ ಭರಃ||
ತಂದೆ, ತಾಯಿ, ಗಂದ, ಮಕ್ಕಳು, ಪ್ರಿಯ, ಗೆಳೆಯ, ಗುರು ಜಗತ್ತಿಗೆ ಗತಿ ನೀನಾಗಿದ್ದೀ. ನಿನ್ನ ಸೇವಕ, ಪರಿಜನನಾದ ನನಗೆ ನೀನೇ ಗತಿ. ನಿನಗೆ ಶರಣಾಗಿದ್ದೇನೆ. ಸತ್ಯವಾಗಿಯೂ ನಿನ್ನವನೇ ನಾನು, ನಿನ್ನ ರಕ್ಷಣೆಗೆ ಒಳಗಾಗಿರುವವನೇ.
ಯಾಮುನಾಚಾರ್ಯರ ಮೊಮ್ಮಗನೂ ಅವರ ಪ್ರಿಯಶಿಷ್ಯನೂ ಆಗಿ ಅನಂತರ ಬಂದವರು ಶ್ರೀರಾಮಾನುಜರು. ಆೞ್ವಾರರ ಮಾರ್ಗವೂ ವೇದದರ್ಶನವೂ ಉಪನಿಷತ್ತೂ ಒಂದೇ ಎನ್ನಿಸಿದ್ದು ಇವರಲ್ಲಿ. ಎಂದರೆ, ಇವರು
೧೭
ವಿಶಿಷ್ಟಾದ್ವೈತಮತವನ್ನು ಸಿದ್ಧಾಂತಪಡಿಸಿದರು. ಶ್ರೀ ಆದಿಶಂಕರರು ಯಾವುದನ್ನು ಆಧಾರವಾಗಿ ಇಟ್ಟುಕೊಂಡು ಅದ್ವೈತಸಿದ್ಧಾಂತವನ್ನು ಸ್ಥಾಪಿಸಿದರೋ, ಅವುಗಳನ್ನೇ ಎಂದರೆ, ಉಪನಿಷತ್ತು, ಬ್ರಹ್ಮಸೂತ್ರ, ಭಗವದ್ಗೀತೆ ಎಂಬ ಪ್ರಸ್ಥಾನ ತ್ರಯವನ್ನು ಆಧಾರವಾಗಿ ತೆಗೆದುಕೊಂಡು ತಮ್ಮ “ಭಾಷ್ಯ”ವನ್ನು ಬರೆದರು. ಇದೇ ಅವರ “ಶ್ರೀಭಾಷ್ಯ”. ವೇದ, ಉಪನಿಷತ್ತು, ಬ್ರಹ್ಮಸೂತ್ರ, ಭಗವದ್ಗೀತೆ, ಪಾಂಚರಾತ್ರ ಆಗಮ ಮತ್ತು ದ್ರಾವ್ಡಾಮ್ನಾಯ- ಇವೆಲ್ಲಕ್ಕೂ ಹೊಂದಿಕೆಯಾಗಿರುವಂತೆ ವಿಶಿಷ್ಟಾದ್ವೈತ ತತ್ತ್ವಗಳನ್ನು ಅವರ ಶ್ರೀಭಾಷ್ಯದಲ್ಲಿ ಪ್ರತಿಪಾದಿಸಿದರು. ಸಂಸ್ಕೃತ ವೇದಾಂತವನ್ನೂ ಆೞ್ವಾರರ ಪಾಶುರಗಳಲ್ಲಿ ಅಡಗಿರುವ ದ್ರಾವಿಡವೇದಾಂತವನ್ನೂ ಸಮನ್ವಯಗೊಳಿಸಿದ್ದರಿಂದ ಅವರ ವೇದಾಂತಕ್ಕೆ “ಉಭಯವೇದಾಂತ” ಎಂದು ಹೆಸರಾಯಿತು. ಮತ್ತು ಅವರಿಗೆ “ಉಭಯ ವೇದಾಂತ ಪ್ರವರ್ತಕ” ಎಂಬ ಬಿರುದು ಬಂತು.
ಶ್ರೀರಾಮಾನುಜರು ಸ್ಥಾಪಿಸಿದ ವಿಶಿಷ್ಟಾದ್ವೈತ ತತ್ತ್ವಗಳ ಸಾರಾಂಶ ಹೀಗಿದೆ; “ತಾಯಿಯ ವಾತ್ಸಲ್ಯದ ಸ್ನೇಹದ ಮೂಲಕ ತಂದೆಯ ಒಲವನ್ನು ಸಂಪಾದಿಸುವ ಕ್ರಮದಂತೆ, ವಿಷ್ಣುವಿನ ಅನುಗ್ರಹವನ್ನು ದೊರಕಿಸಿಕೊಳ್ಳುವುದಕ್ಕೆ ವಿಷ್ಣುಪತ್ನಿಯೂ ಜಗಜ್ಜನನಿಯೂ ಆದ ಲಕ್ಶ್ಮೀ(ಶ್ರೀ) ದೇವೊಯ ಸಹಾಯ ಮುಖ್ಯವೆಂಬುದು ಈ ಮತದ ವೈಶಿಷ್ಟ್ಯ…. ಜೀವ, ಜಗತ್ತು, ಈಶ್ವರ- ಬೇರೆಬೇರೆ. ಪ್ರಪಂಚ ಅಥವಾ ಜಗತ್ತು ಚಿತ್, ಅಚಿತ್ ರೂಪವಾದದ್ದು. ಜಗತ್ತು ಈಶ್ವರನ ಅಧೀನ ಮತ್ತು ಅವನಿಗೆ ಶರೀರ ಭೂತ. ಜಗತ್ತು ಸತ್ಯ. ಜಗತ್ತಿಗೆ ಈಶ್ವರ ಉಪಾದಾನ ಮತ್ತು ನಿಮಿತ್ತ ಕಾರಣ. ಈಶ್ವರನ ದೇಹದಲ್ಲಿ ಚಿತ್ ಅಚಿತ್ ವಸ್ತುಗಳು ಸೂಕ್ಷ್ಮರೂಪದಲ್ಲಿವೆ. ಅವುಗಳಿಂದ ಜೀವಜಗತ್ತು ವ್ಯಕ್ತವಾಗುತ್ತವೆ. ಇವು ಚಿತ್ ಅಚಿತ್ ಗಳ ಸ್ಥೂಲರೂಪ. ಜೀವರು ಅನೇಕ. ಈಶ್ವರನಿಂದ ಭಿನ್ನ. ಚಿದಚಿತ್ ಸ್ವರೂಪಿಯಾದ ಶ್ರೀಮನ್ನಾರಾಯಣನೇ ಪರಬ್ರಹ್ಮ. ಇವನನ್ನು ಭಕ್ತಿಪ್ರಪತ್ತಿ ಮಾರ್ಗಗಳಿಂದ ಆರಾಧಿಸಿ ಮುಕ್ತನಾಗಬಹುದು. ಮುಕ್ತ ಜೀವರುಗಳಲ್ಲಿ ತರತಮಭಾವವಿಲ್ಲ1”
ವಿಶಿಷ್ಟಾದ್ವೈತ ವೇದಾಂತವನ್ನು ಪ್ರತಿಪಾದಿಸಿ ಪ್ರಚಾರಮಾಡಿದವರಲ್ಲಿ ಹೆಸರು ಪಡೆದವರು ಮೂವರು ಮಹನೀಯರು: ವೆಂಕಟನಾಥರು ಅಥವಾ ವೇದಾಂತದೇಶಿಕರು, ಪಿಳ್ಳೈ ಲೋಕಾಚಾರ್ಯರು ಮತ್ತು
- “ವಿವಿಧ ಮತಗಳ ಚಾರಿತ್ರ್ಯಕ ವಿಮರ್ಶೆ ಮತ್ತು ಸಮನ್ವಯ”-
-ಕೆ.ಪಿ. ರಾಮನಾಥಯ್ಯ ಮತ್ತು ಹೆಚ್. ನಾರಾಯಣರಾವ್
೧೮
ಮಣವಾಳ ಮಹಾಮುನಿಗಳು. ಈ ಮೂವರೂ ಮಹಾ ವಿದ್ವಾಂಸರು, ಮೇಧಾವಿಗಳು. ಸಂಸ್ಕೃತ ತಮಿಳು ಭಾಷೆಗಳಲ್ಲಿ ಅದ್ವಿತೀಯಪಂಡಿತರು. ವಿಶಿಷ್ಟಾದ್ವೈತ ತತ್ತ್ವಗಳನ್ನು ವಿವರಿಸುವುದರಲ್ಲಿಯೂ ಶ್ರೀವೈಷ್ಣವ ಮತವನ್ನು ಪ್ರಚಾರ ಮಾಡುವುದರಲ್ಲಿಯೂ ಇವರ ಸೇವೆ ಅತ್ಯಧಿಕ ವೇದಾಂತದೇಶಿಕರೂ ಪಿಳ್ಳೈಲೋಕಾಚಾರ್ಯರೂ ಸಮಕಾಲೀನರು. ಅವರ ಕಾರ್ಯಕ್ಷೇತ್ರ ಪ್ರಧಾನವಾಗಿ ಕಂಚಿ ಮತ್ತು ಶ್ರೀರಂಗ; ಸಾಧಾರಣವಾಗಿ ಇಡಿಯದೇಶವೆಲ್ಲಾ.
ವೇದಾಂತದೇಶಿಕರು ಬರೆದ ಗ್ರಂಥಾದಿಗಳು ನೂರಕ್ಕೂ ಮೇಲಿವೆ. ಅವನ್ನು ಶ್ರೀವೈಷ್ಣವ ಮತೀಯ ತಾತ್ತ್ವಿಕಗ್ರಂಥಗಳು, ಧಾರ್ಮಿಕ ಗ್ರಂಥಗಳು, ಸ್ತೋತ್ರಾದಿಗಳು, ಕಾವ್ಯ, ನಾಟಕಗಳು, ವೇದಾಂತ ವಿವರಣಾತ್ಮಕ ಕೃತಿಗಳು, ಮತ್ತು ವ್ಯಾಖ್ಯಾನಗಳು-ಎಂಬುದಾಗಿ ವಿಂಗಡಿಸಬಹುದು. ಇವುಗಳಲ್ಲಿ ಅವರು ಬಳಸಿರುವ ಭಾಷೆ ಸಂಸ್ಕೃತ, ತಮಿಳು ಮತ್ತು ಈ ಎರಡು ಭಾಷೆಗಳ ಸುಮಧುರ ಮಿಶ್ರಣದಿಂದಾದ “ಮಣಿಪ್ರವಾಳ”ದಲ್ಲಿ. ಇವರ “ರಹಸ್ಯತ್ರಯಸಾರ” ದಲ್ಲಿ ಪ್ರಪತ್ತಿಯ ಬಗೆಗೆ ಪೂರ್ಣವಿವರಣೆ ಇದೆ. ಇವರಿಗೆ “ಕವಿತಾರ್ಕಿಕ ಸಿಂಹ”, “ವೇದಾಂತ ದೇಶಿಕ” ಎಂಬವು ಬಿರುದುಗಳು.
ಪಿಳ್ಳೈ ಲೋಕಾಚಾರ್ಯರು ವೇದಾಂತದ ಹದಿನೆಂಟು ಉದ್ಗ್ರಂಥಗಳನ್ನು ಬರೆದರು. “ಮಣಿಪ್ರವಾಳ” ಭಾಷೆಯಲ್ಲೇ ತಾವು ಬರೆಯುವುದು ಎಂದು ಫಣ ತೊಟ್ಟುದ್ದರಿಂದ ಅವರ ಗ್ರಂಥಗಳೆಲ್ಲವೂ ಮಣಿಪ್ರವಾಳದಲ್ಲೇ ಇವೆ.
ಮಣವಾಳ ಮಹಾಮುನಿಗಳು ಅದೇ ಮಣಿಪ್ರವಾಳ ಭಾಷೆಯಲ್ಲಿ ಪಿಳ್ಳೈಲೋಕಾಚಾರ್ಯರ ಗ್ರಂಥಗಳಿಗೆ ವಿಶದವಾದ, ಸರಳವಾದ, ವ್ಯಾಖ್ಯಾನವನ್ನು ಬರೆದು ಕೀರ್ತಿಗಳಿಸಿದ್ದಾರೆ. ಅದರಿಂದ ಅವರಿಗೆ “ವಿಶದವಾಕ್ ಶಿಖಾಮಣಿ” ಎಂಬ ಬಿರುದು ಬಂತು.
ದೇಶ ಭಾಷೆಗೆ ಕೊಟ್ಟಿರುವ ಪ್ರಾಹಸ್ತ್ಯ, ಭಕ್ತಿಗೆ ಕೊಟ್ಟಿರುವ ಶ್ರೇಷ್ಠತೆ, ಮತ್ತು ಜಾತಿಕುಲ ಗೋತ್ರಗಳನ್ನು ದೂರಕ್ಕೆ ತಳ್ಳಿಹಾಕಿ, ತತ್ತ್ವಗಳನ್ನು ವಿವರಿಸಿರುವ ರೀತಿ- ಇವು ಈ ಗ್ರಂಥಗಳಲ್ಲಿ ಕಂಡುಬರುವ ವೈಶಿಷ್ಟ್ಯ.ಇದೊಂದು ಅತಿಶಯ ವಿಷಯವೆ. ಜಾತಿ ವರ್ಣಗಳ ಕಟ್ಟುಪಾಡನ್ನು ಸಡಲಿಸಿ, ಜಾತ್ಯತೀತ ಧರ್ಮವನ್ನು ಬೋಧಿಸಿದ್ದು, ಬೆಳಸಿದ್ದು ದಕ್ಷಿಣಭಾರತದ ಸಂಸ್ಕೃತಿಯ ಹಿರಿಮೆ. ಭಾಗವತರು ಜಾತಿ ಕುಲಗಳಿಂದ ಅತೀತರು. ಅವರ ಜಾತಿ ಕುಲಗಳನ್ನು ಕೇಳುವುದು ಅವರಿಗೆ ಅಪಮಾನವೆಸಗಿದಂತೆ. ಅದೊಂದು ಮಹಾ ಅಪಚಾರವೆಸಗಿದಂತೆ. ಸ್ವಾಭಿಮಾನವನ್ನು
೧೯
ತೊರೆದು ಲೋಕಸೇವೆಗೆಂದೇ ತಮ್ಮ ಜೀವನವನ್ನು ಮುಡಿಪು ಮಾಡಿದ್ದವರು ಅವರು. ಆದ್ದರಿಂದ, ಅವರು ಯಾರೇ ಆಗಿರಲಿ, ಕೀಳು ಮೇಲು ಎನ್ನುವುದಕ್ಕೆ ಅವಕಾಶವಿಲ್ಲ. ಅವರು ಪವಿತ್ರರು. ಭಕ್ತನು ಯಾರಾದರೇನು? ಅವನು ಶ್ರೇಷ್ಠ ಬ್ರಾಹ್ಮಣನೇ ಶ್ವಪಚನಾಗಲಿ, ಮ್ಲೇಚ್ಛನಾಗಲಿ, ಭಕ್ತನಾದ ಮೇಲೆ ಅವನು ಪೂಝ್ಯನೇ. ಅವನನ್ನು ಜಾತಿಭಾವದಿಂದ ಕಂಡವನು ನರಕಕ್ಕೆ ಬೀಳುತ್ತಾನೆ. ಈ ಭಾವವನ್ನು ಮಣವಾಳ ಮಹಾಮುನಿಗಳು ತಮ್ಮ “ಶ್ರೀವಚನಭೂಷಣ” ವ್ಯಾಖ್ಯಾನದಲ್ಲಿ ವ್ಯಕ್ತಪಡಿಸಿದ್ದಾರೆ. ಯಾರು ಧನಮದ, ವಿದ್ಯಾಮದ, ಜಾತಿ ಮದಗಳನ್ನು ತೊರೆದಿದ್ದಾನೋ ಅವನೇ ನಿಜವಾದ ಶ್ರೀವೈಷ್ಣವ ಎಂದರು ಶ್ರೀರಾಮಾನುಜರು.
ಮೇಲೆ ಹೇಳಿದ ಭಾವನೆಗಳಿಗೆ ಆಧಾರವಾಗಿರುವುದು ಆೞ್ವಾರರ ಸಿರಿನುಡಿ- ಅವರ ಸದುಕ್ತಿಗಳು ಮತ್ತು ಪಾಶುರಗಳು. ವೆಳ್ಳಾಳ ಕುಲದಲ್ಲಿ ಹುಟ್ಟಿದ ನಮ್ಮಾೞ್ವಾರರು ಹೇಳುತ್ತಾರೆ. “ಭಕ್ತಿಯೇ ಕುಲವನ್ನು ತರುವುದು, ಸಂಪತನ್ನೂ ತರುವುದು” ಎಂದು. ಭಕ್ತನೇ ನಿಜವಾಗಿ ಸತ್ಕುಲದಲ್ಲಿ ಹುಟ್ಟಿದವನು. ಭಕ್ತನೇ ಸಿರಿವಂತ. ಅವನ ಭಕ್ತಿಯೇ ಮಹದೈಶ್ವರ್ಯ.
ಎ. ಭಕ್ತಿ-ಪ್ರಪತ್ತಿ
ಭಕ್ತಿಯ ಧ್ಯೇಯ ಯಾವುದೋ ಅದೇ ಪ್ರಪತ್ತಿಯ ಧ್ಯೇಯವೂ. ಆದರೆ, ಭಕ್ತಿ ಪ್ರಪತ್ತಿಗಳ ನಡುವೆ ಇರುವುದು ಸಣ್ಣಪುಟ್ಟ ವ್ಯತ್ಯಾಸಗಳು. ಭಕ್ತಿಯನ್ನು ದೇಹ ಎಂದು ಕರೆದರೆ ಪ್ರಪತ್ತಿಯನ್ನು ಅದರ ಆತ್ಮ ಎನ್ನಬೇಕು. ಇವೆರಡರ ನಡುವೆ ದಿವ್ಯವಾದ ಸಾಮರಸ್ಯವಿರಬೇಕಾದದ್ದು ಬಹಳ ಮುಖ್ಯ.
ಭಗವಂತನ ಅನಂತಕಲ್ಯಾಣಗುಣಗಳನ್ನು ಕುರಿತು ಯೋಚಿಸುವುದು, ಧ್ಯಾನಿಸುವುದು, ಭಜಿಸುವುದು, ಆನಂದಿಸುವುದು, ಮೈಮರೆಯುವುದು- ಇದೆಲ್ಲ ಭಕ್ತಿ, ಭಗವಂತನ ದಿವ್ಯಾನುಗ್ರಹವನ್ನು ಪಡೆಯುವುದು ಪ್ರಪತ್ತಿ. ಭಗವಂತನ ಸದ್ಗುಣಗಳ ಸ್ವಭಾವದ ಸಾಕ್ಷಾತ್ಕಾರದತ್ತ ಗಮನಹರಿಸಿದರೆ ಸಾಕು, ದೈವಿಕ ಉದ್ದೇಶಗಳು ಮನಸ್ಸಿನ ಮೇಲೆ ಪರಿಪೂರ್ಣವಾಗಿ, ಪರಿಣಾಮಕಾರಿಯಾಗಿ, ವರ್ತಿಸುವುದರ ಅರಿವುಂಟಾಗುತ್ತದೆ.
೨೦
ನಮೋ ನಮೋ ವಾಙ್ಮನಸಾದಿ ಭೂಮಯೇ |
ನಮೋ ನಮೋ ವಾಙ್ಮನಸೈಕ ಭೂಮಯೇ |
ನಮೋ ನಮೋಽನಂತ ಮಹಾವಿಭೂತಯೇ|
ನಮೋ ನಮೋಽನಂತ ದಯೈಕಸಿಂಧವೇ|| (ಸ್ತೋತ್ರರತ್ನ)
ಇತ್ಯಾದಿ.
ಮಾನವನು ತನ ದೇಹಾತ್ಮಾದಿಗಳನ್ನು ದೈವಯೋಗ್ಯವಾಗುವಂತೆ ಸಿದ್ಧಮಾಡಿಕೊಳ್ಳುವ ಕಾರ್ಯ ಭಕ್ತಿಗೂ ಪ್ರಪತ್ತಿಗೂ ಸಾಮಾನ್ಯ. ಭಕ್ತಿಪ್ರಪತ್ತಿಗಳ ಮೂಲಕ ಭಗವಂತನಿಗೆ ಅಂಟಿಕೊಳ್ಳುವುದು, ಭಗವಂತನನ್ನು ಆಶ್ರಯಿಸುವುದು ಎಂದರೆ, ಆತ್ಮನಿಗೂ ದೇಹಕ್ಕೂ ಅದರದರ ಅವಶ್ಯ ಕಾರ್ಯಗಳಿಗೂ ನಿರ್ದಿಷ್ಟವಾದ ವ್ಯತ್ಯಾಸವನ್ನು ಕಂಡುಕೊಂಡಂತೆಯೇ. ಪ್ರಪನ್ನನೂ (ಪ್ರಪತ್ತಿ ಮಾಡಿದವನು) ಭಕ್ತನೂ ಮಾಡುವುದೆಲ್ಲ ತನ್ನ ಅಹಂಕಾರ ಮಮಕಾರಗಳನ್ನು ದೂರತಳ್ಳುವುದು, ಭಗವಂತನ ಸಮ್ಮುಖದಲ್ಲಿ ಸದಾ ತಾನಿರುವಂತೆ ಭಾವಿಸಿಕೊಳ್ಳುವುದು. ಯಾವ ವಿಧವಾದ ಆಶೋತ್ತರಗಳನ್ನೂ ಇಟ್ಟುಕೊಳ್ಳದೆ ಸ್ವರ್ಗಾದಿ ಭೋಗಗಳನ್ನೂ ಆಶಿಸದೆ ಇರುವುದು ಮತ್ತು ಭಗವಂತನ ಪರಮಪ್ರೇಮದಲ್ಲಿ ತಾನು ಇಳಿಯಮುಳುಗಿರುವಂತೆ ನಂಬಿರುವುದು.
ಸ್ವಾಭಾವಿಕವಾಗಿ ಅಪ್ರಯತ್ನಪೂರ್ವಕವಾಗಿ ಭಕ್ತಿ ಕೊನೆಮುಟ್ಟುವ ಸ್ಥಿತಿಯೇ ಪ್ರಪತ್ತಿ. ಕರ್ಮಯೋಗ ತನ್ನ ಗುರಿಯನ್ನು ಸಾಧಿಸಲು ಜ್ಞಾನಯೋಗದಲ್ಲಿ ಬೆರೆತು ಹೋಗಬೇಕು. ಜ್ಞಾನಯೋಗವೂ ಹಾಗೆಯೇ ಭಕ್ತಿಯೋಗವಾಗಿ ಪರಿಣಮಿಸಿದರೆ ಅದು ತನ್ನ ಕೆಲಸವನ್ನು ಮಾಡಿದಂತೆ ಆಗುತ್ತದೆ. ಹಾಗೆಯೇ, ಭಕ್ತಿಯೋಗ ಆತ್ಮಸಮರ್ಪಣದಲ್ಲಿ ಅಥವಾ ಪರಾಭಕ್ತಿಯಲ್ಲಿ ಅಥವಾ ಪ್ರಪತ್ತಿಯಲ್ಲಿ ಕೊನೆಗಾಣಬೇಕು. ಭಕ್ತನು ಎಲ್ಲ ಕರ್ಮಗಳಲ್ಲೂ ತನ್ನ ಕರ್ತೃತ್ವವನ್ನು ತ್ಯಜಿಸಿದರೆ, ಕರ್ಮಗಳನ್ನೆಲ್ಲಾ ಅಕಿಂಚನತೆಗೂ (ಸರ್ವದ್ರವ್ಯತ್ಯಾಗ- ಬಡತನ) ಈಶ್ವರಾನುಗ್ರಹಕ್ಕೂ ಒಪ್ಪಿಸಿದರೆ. ಅದು ಪ್ರಪತ್ತಿಯಲ್ಲಿ ಕೊನೆಗಾಣುತ್ತದೆ. ಭಗವಂತನ ಸನ್ನಿಧಿಯಲ್ಲಿ ದಾಸ್ಯ ನಡಸಿದರೆ ಅದು ಮುಕ್ತಿಯಲ್ಲಿ ಕೊನೆಗಾಣೂತ್ತದೆ. ಯಾಮುನ ಮುನಿ ಸೂಚಿಸಿರುವಂತೆ –ಕರ್ಮ, ಜ್ಞಾನ, ಭಕ್ತಿ ಸಾಧನಗಳ ಪೂರ್ಣವಾದ ಪರಿಶುದ್ಧವಾದ ಸಮ್ಮಿಳನವೇ ಪ್ರಪತ್ತಿ.
ನ ಧರ್ಮ ನಿಷ್ಠೋಸ್ಮಿ ನ ಚಾತ್ಮವೇದೀ |
ನ ಭಕ್ತಿಮಾನ್ಸ್ತ್ವಚ್ಚರಣಾರವಿಂದೇ |
ಅಕಿಂಚನೋಽನನ್ಯಗತಿಂ ಶರಣ್ಯಃ |
ತ್ವತ್ಪಾದಪದ್ಮೇ ಶರಣಂ ಪ್ರಪದ್ಯೇ||(ಸ್ತೋತ್ರರತ್ನ)
೨೧
ನಾನು ಧರ್ಮನಿಷ್ಠನಲ್ಲ; ಆತ್ಮಜ್ಞಾನಿಯಲ್ಲ; ನಿನ್ನ ಪಾದಾರವಿಂದಗಳಲ್ಲಿ ಭಕ್ತಿ ಮಾಡಿದವನಲ್ಲ, ನಾನು ಅಕಿಂಚನ. ನನಗೆ ರಕ್ಷಕರು ಯಾರನ್ನೂ ಕಾಣೆ. ಆದ್ದರಿಂದ, ನಿನ್ನ ಪಾದಪದ್ಮಗಳಲ್ಲಿ ನಾನು ನಮ್ರನಾಗಿ ಶರಣಾಗಿದ್ದೇನೆ.
ಹೀಗೆ, ಭಗವಂತನಲ್ಲಿಟ್ಟಿರುವ ಅಪರಿಮಿತವಾದ ಪ್ರೇಮದ ಕಾರಣದಿಂದ ಆತ್ಮನಿವೇದನ ಮಾಡಿಕೊಳ್ಳುವುದು ಪ್ರಪತ್ತಿ. “ನಾನು , ನನ್ನದು, ಯಾವುದೂ ಇಲ್ಲ. ಎಲ್ಲವೂ ನೀನೇ, ನಿನ್ನದೇ”- ಎಂಬ ಪರಮ ಪವಿತ್ರ ಭಾವನೆಯೇ ಅದು. ಸ್ವಾರ್ಥರಹಿತವಾದ ಪರಿತ್ಯಾಗ ಭಾವನೆಯೇ ಅದು. ಭಗವಂತನನ್ನು ಸಾಕ್ಷಾತ್ಕರಿಸಿಕೊಳ್ಳೂವುದು ಅವನ ಪೂರ್ಣಾನುಭವ ಪಡೆಯುವುದಕ್ಕೆ ಸಾಧನ. ತನ್ನ ರಕ್ಷಣೆಯ ಭಾರವನ್ನೇ ಭಗವಂತನಿಗೆ ವಹಿಸಿಕೊಡುವುದು ಅದು. ಈ ವಿಷಯದಲ್ಲಿ ಭಗವಂತನ ಆಶ್ವಾಸನೆಯಿದೆ. ಖಚಿತವಾಗಿದೆ:
ಸರ್ವಧರ್ಮಾನ್ ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ |
ಅಹಂ ತ್ವಾ ಸರ್ವಪಾಪೇಭ್ಯೋ ಮೋಕ್ಷಯಿಷ್ಯಾಮಿ ಮಾ ಶುಚಃ||(ಭಗವದ್ಗೀತೆ ಅಧ್ಯಾ 18-66)
ಈ ನಂಬಿಕೆ, ಈ ನಡತೆಯೇ ಕ್ರಮ. ಇದೇ ಸಿದ್ಧೋಪಾಯ. ಇದೇ ಆತ್ಮಸಮರ್ಪಣ. ಇದೇ ಭರನ್ಯಾಸ.
ಇನ್ನು ಪ್ರಪತ್ತಿ ಯಾರಿಗೆ? ಅದು ಬೇಕೆನ್ನುವವನಿಗೆ. ಜನನ ಮರಣಾದಿ ದುಃಖಗಳಲ್ಲಿ ಕ್ಲೇಶಗಳಲ್ಲಿ ತೊಳಲಿ ಬಳಲಿದ ಜೀವಿಗೆ. ಇದಕ್ಕೆ ವರ್ಣ ಆಶ್ರಮಗಳ ಅಡ್ಡಿ ಆತಂಕಗಳಿಲ್ಲ. ಅತಿ ಗಾಢವಾದ ನಂಬಿಕೆಯೊಂದೇ ಮುಖ್ಯ. ಪ್ರಪತ್ತಿಯಲ್ಲಿ ಅಚಲವಾದ ಆಸಕ್ತಿಯಿದ್ದರೆ ಭಗವಂತ ನಂಬಿದವರನ್ನು ಕೈಬಿಡನೆಂಬ ದೃಢನಂಭಿಕೆಯಿದ್ದರೆ, ಆ ಪ್ರಪನ್ನನಿಗೆ ಮೋಕ್ಷ ಸ್ವತಸ್ಸಿದ್ಧ.
ಹಾಗಾದರೆ, ಪ್ರಪತ್ತಿಯ ವ್ಯವಸಾಯವೆಂತು? ಭಗವಂತ ದಯಾಸಾಗರ, ಕೃಪಾಜಲಧಿ, ಕರುಣಾಪಾರಾವಾರ. ಅವನು ತನ್ನ ಪ್ರಪನ್ನನನ್ನು ಉದ್ಧರಿಸಲು ಸದಾ ಸಿದ್ಧನಾಗಿ, ಕಾತರನಾಗಿರುತ್ತಾನೆ. ಗತಿ ಇಲ್ಲದವರಿಗೆ ಭಗವಂತನೇ ಗತಿ. ಭಗವಂತನನ್ನು ಸೇರಲು ಭಕ್ತನಿಗೆ ಕಾತರವಿದ್ದರೆ, ಅದರ ನೂರ್ಮಡಿ ಕಾತರದಿಂದ ಅವನನ್ನು ದುಃಖಕ್ಲೇಶಗಳಿಂದ ಪಾರುಮಾಡಲು, ತನ್ನ ಬಳಿಗೆ ಅವನನ್ನು ಕರೆದುಕೊಳ್ಳಲು ಭಗವಂತ ಸಿದ್ಧ. ಭಗವಂತನಿಗೂ ಜೀವನಿಗೂ ಸಂಬಂಧ ಹೀಗೆ: ಭಗವಂತ ಪರಮಾತ್ಮ, ಜೀವ ಆತ್ಮ; ಭಗವಂತಶೇಷಿ, ಜೀವ ಶೇಷ
೨೨
ಭಗವಂತ ನಿಯಾಮಕ, ಜೀವನು ನಿಯಾಮ್ಯ, ಭಗವಂತ ಆಧಾರ, ಜೀವನು ಆಧೇಯ; ಭಗವಂತ ಶರೀರಿ, ಜೀವ ಶರೀರ; ಭಗವಂತ ಕೃಪಾಸಾಗರ, ಜೀವನು ಅಕಿಂಚನ.
ಪ್ರಪತ್ತಿಯ ಆವಶ್ಯಕ ಅಂಶಗಳು ಆರು. ಅವುಗಳಲ್ಲಿ ಒಂದೊಂದನ್ನೂ ಸಂಗ್ರಹವಾಗಿ ಇಲ್ಲಿ ಹೇಳಿದೆ:
೧. ಅನುಕೂಲಸ್ಯ ಸಂಕಲ್ಪಃ:- ಮೊದಲನೆಯದಾಗಿ, ಪ್ರಪತ್ತಿಗೆ ಅನುಕೂಳಿಸುವುದನ್ನು ತಪ್ಪದೆ ಮಾಡುವೆನೆಂದು ಸಂಕಲ್ಪಿಸುವುದು. ಭಗವಂತನಲ್ಲಿ ಅನನ್ಯಪ್ರೇಮವಿಡುವುದಾಗಿಯೂ, ಭಗವತ್ಸಂಬಂಧವಾದ ಕೈಂಕರ್ಯಗಳನ್ನು ಅತ್ಯಾಸಕ್ತಿಯಿಂದ ನಡಸುವುದಾಗಿಯೂ ಸಂಕಲ್ಪಿಸುವುದು. ಮತ್ತು ಭಗವಂತನ ಸೃಷ್ಟಿಯಾದ ಮಾನವಸೇವೆಯಲ್ಲಿ ತೊಡಗುವುದು. ಸೃಷ್ಟೀಯ ಎಲ್ಲ ವಸ್ತುಗಳ ಹಿತಕ್ಕಾಗಿ ದುಡಿಯುವುದು. ತಾನು ಮಾಡುವ ಕೆಲಸಗಳನ್ನೆಲ್ಲಾ ನಾರಾಯಣಾರ್ಪಣವೆಂದು ಮಾಡುವುದು. ಇದು ಸುಲಭವೇನಲ್ಲ. ಇದಕ್ಕಾಗಿ ಭಕ್ತನು ಸತತ ಪ್ರಯತ್ನಮಾಡಿ ತನ್ನ ಮನಸ್ಸನ್ನು ಆ ದಿಸೆಯಲ್ಲಿ ಒಲಿಸಿಕೊಳ್ಳಬೇಕು. ಭಗವಂತನ ಸೇವೆಗಾಗಿಯೇ ತಾನಿರುವುದು ಎಂಬುದರ ಗುರುತಾಗಿ ಹಣೆಯ ಮೇಲೆ ಏನಾದರೂ ಚಿಹ್ನೆಯನ್ನು ಧರಿಸಬೇಕು.
೨. ಪ್ರಾತಿಕೂಲಸ್ಯ ವರ್ಜನಂ:- ಪ್ರಪತ್ತಿಗೆ ಅಡ್ಡೀ ಬರುವುದನ್ನು ಮಾಡದಿರುವುದು, ತೊರೆಯುವುದು ಇದು. ಆದರೆ, ಮೊದಲು ಹೇಳಿದ ಲಕ್ಷಣದ ಮುಂದುವರಿಕೆಯೇ ಇದು. ಮೊದಲ ಲಕ್ಷಣವನ್ನು ಉದ್ದೇಶ ಎನ್ನುವುದಾದರೆ, ಇದು ಅದರ ಸಾಧನೆ. ಎರಡೂ ಜೊತೆಜೊತೆಯಲ್ಲಿ ಹೆಜ್ಜೆಯಿಡುತ್ತವೆ. ಭಗವಂತನಿಗೆ ಎಂದರೆ ಜೀವಕೋಟಿಗೆ ಅಪಚಾರ ನಡಸದಂತೆ ಎಚ್ಚರಿಕೆ ವಹಿಸುವುದು. ಹೄದಯದಲ್ಲಿ ಪರೋಫಕಾರ ಬುದ್ಧಿಯೂ ದಯೆಯೂ ತುಂಬಿ ಹರಿಯುತ್ತಿರುವಾಗ, ಇತರರಿಗೆ ಅಪಕಾರವೆಸಗುವುದಾಗಲಿ, ಕಾಠಿಣ್ಯ ತೋರಿಸುವುದಾಗಲಿ ಆದೀತೇ? ಸ್ವಾರ್ಥತ್ಯಾಗಕ್ಕಾಗಿ, ಅಹಂಕಾರ ಮಮಕಾರ ನಿರಸನಕ್ಕಾಗಿ ಪ್ರಪನ್ನನು ಸದಾ ಚಿಂತಿಸುತ್ತಿರಬೇಕು.
೩. ರಕ್ಷಸ್ಯತೀತಿ ವಿಶ್ವಾಸಃ:- ಭಗವಂತನೇ ರಕ್ಷಕನೆಂಬ ದೃಢ ವಿಶ್ವಾಸವಿದು. ಜೀವನದಲ್ಲಿ ಎಂಥ ಕಷ್ಟಕಾರ್ಪಣ್ಯಗಳು ಒದಗಿಬಂದರೂ ಸಹ ಭಗವಂತ ರಕ್ಷಿಸುವನು ಎಂಬ ಅಚಲ ನಂಬಿಕೆ. ಪರಮಾತ್ಮನಲ್ಲಿ ಕೈಂಕರ್ಯಬದ್ಧನಾಗಿ, ಸ್ವಾರ್ಥತ್ಯಾಗ ಮಾಡಿದ ಮೇಲೆ, ದೈವಕೃಪೆಯಲ್ಲಿ, ದೈವಾನುಗ್ರಹದಲ್ಲಿ
೨೩
ವಿಶ್ವಾಸ ತಾನಾಗಿ ಬೆಳೆಯುತ್ತದೆ. ಭಗವಂತ ಕೃಪಾಳುವೆಂದೂ ಭಕ್ತನನ್ನು ಅವನ ಕಷ್ಟದಲ್ಲಿ ಕೈಬಿಡುವುದಿಲ್ಲವೆಂದೂ ನಂಬಿಕೆ ಭಕ್ತನಲ್ಲಿ ಬೇರೂರುತ್ತದೆ. ಇಂಥ ವಿಶ್ವಾಸ ಬರದೆ ಪ್ರಪತ್ತಿ ಸಾಧ್ಯವೇ ಇಲ್ಲ. ಭಗವಂತ ಸತ್ಯಕಾಮ, ಸತ್ಯಸಂಕಲ್ಪ. ಇದರಲ್ಲಿ ಶ್ರದ್ಧಾಭಕ್ತಿಗಳನ್ನಿಟ್ಟು ಕೈಂಕರ್ಯನಡಸಿದರೆ, ಪ್ರಪತ್ತಿ ಸುಲಭ. “ತೇಷಾಂ ನಿತ್ಯಾಭಿಯುಕ್ತಾನಾಂ ಯೋಗಕ್ಷೇಮಂ ವಹಾಮ್ಯಹಂ”- ಎಂದಲ್ಲವೇ ಭಗವದ್ಗೀತೆಯಲ್ಲಿ ಭಗವಂತನ ಆಶ್ವಾಸನೆ?
೪. ಗೋಪ್ತೃವರಣಂ:- ರಕ್ಷಣೆಯ ರಹಸ್ಯವನ್ನು ಕುರಿತು ಯೋಚಿಸುವುದು ಮತ್ತು ಹಾಗೆಯೇ ನಡೆದುಕೊಳ್ಳುವುದು ಇದು.
ಪಿತಾಸಿ ಲೋಕಸ್ಯ ಚರಾಚರಸ್ಯ
ತ್ವಮಸ್ಯ ಪೂಜ್ಯಶ್ಚ ಗುರುರ್ಗರೀಯಾನ್ |
ನತ್ವತ್ಸಮೋಸ್ತ್ಯಭ್ಯಧಿಕಃ ಕುತೋಽನ್ಯೋ
ಲೋಕತ್ರಯೇಽಪ್ಯ ಪ್ರತಿಮಪ್ರಭಾವಃ ||(ಭ.ಗೀ: ಅಧ್ಯಾ11-43)
ಸ್ಥಾವರ ಜಂಗಮ ಜಗತ್ತುಗಳಿಗೆ ನೀನು ತಂದೆ. ನೀನು ಅವಕ್ಕೆ ಪೂಜ್ಯ, ಶ್ರೇಷ್ಠ, ಗುರು, ನಿನಗೆ ಸಮಾನರಾರೂ ಇಲ್ಲ. ನಿನಗಿಂತ ಹೆಚ್ಚಿನವರು ಹೇಗೆ ಸಧ್ಯ? ಮೂರು ಲೋಕಗಳಲ್ಲಿಯೂ ನಿನ್ನ ಸಾಮರ್ಥ್ಯಕ್ಕೆ ಸಾಟಿಯಿಲ್ಲ.
ಇಂಥ ಮಹಾವಿಶ್ವಾಸವನ್ನು ಬೆಳಸಿಕೊಳ್ಳುವುದು, ಭಗವಂತನ ಐದು ರೂಪಗಳಿವು: ಪರ (ನಿರ್ಗುಣ ಸ್ವರೂಪ), ವ್ಯೂಹ(ಆನಂದ ಸ್ವರೂಪ), ವಿಭವ (ಅವತಾರ ಸ್ವರೂಪ), ಅಂತರ್ಯಾಮಿ (ಹೄದಯದಲ್ಲಿ ಇರುವ ರೂಪ), ಅರ್ಚಾ (ಪೂಜನ ರೂಪ)- ಈ ರೂಪಗಳಲ್ಲಿ ನಡಸುವ ಸೇವೆಯೇ ಆತ್ಮನು ಪರಮಾತ್ಮನಲ್ಲಿ ಶರಣುಹೋಗುವುಕ್ಕೆ ಮೂಲ. “ಆಚಾರ್ಯಾಭಿಗಮನ” ಅಥವಾ ಗುರುಪೂಜೆಯ ತತ್ತ್ವ ಎಂಬುದು ಗೋತ್ಪ್ರವರಣದ ಬಳಕೆಯ ರೂಪ ಮಾತ್ರ. ಗುರುವಿನಲ್ಲಿ ಅನುಸಂಧಾನ ನಡಸುವುದು ಪ್ರಪತ್ತಿ ಮಾಡುವುದಕ್ಕಿಂತ ಒಂದು ಕೈ ಹೆಚ್ಚೆಂದು ಕೆಲವರ ಮತ. ಗುರುಭಕ್ತಿಗೆ ಕೊಟ್ಟಿರುವ ಮಹತ್ವ ಇದು.
೫. ಆತ್ಮ ನಿಕ್ಷೇಪ:- ಆತ್ಮವನ್ನು ಪರಮಾತ್ಮನಲ್ಲಿ ಅರ್ಪಿಸಿಕೊಳ್ಳೂವುದು ಇದು. ಇದೇ ಭಕ್ತಿ ವ್ಯವಸಾಯದ ಪಾರಮ್ಯ. ಇದೇ ವಾಸ್ತವವಾಗಿ, ಪೂರ್ಣ ಶರಣಾಗತಿಯ ಸಾರ. ದೇವ, ಮಾನವ, ಪ್ರಾಣಿವರ್ಗಕ್ಕೆ ನಡಸುವ ನಿಃಸ್ವಾರ್ಥ ಕರ್ಮಗಳಲ್ಲಿ ಯತ್ನವನ್ನೂ ಫಲವನ್ನೂ
೨೪
ತ್ಯಜಿಸುವಿಕೆ. ಆತ್ಮನಿವೇದನ, ಆತ್ಮ ಸಮರ್ಪಣ, ಆತ್ಮನ್ಯಾಸ, ಆತ್ಮಹವಿಸ್ಸು, ಆತ್ಮಸನ್ಯಾಸ, ಆತ್ಮತ್ಯಾಗ, ಆತ್ಮನಿಷೇದ- ಇವೆಲ್ಲಕ್ಕೂ ಒಂದೇ ಅರ್ಥ. ಪ್ರಪತ್ತಿಯ ಅಂತಿಮ ಫಲವನ್ನು ಭಗವದನುಭವಕ್ಕೆ ಒಪ್ಪಿಸುವುದು ಎಂದು.
ಈ ಆತ್ಮನಿಕ್ಷೇಪ ಮುಖ್ಯವಾಗಿ ಪರಮಾತ್ಮನಿಗೂ ಮಾನವನಿಗೂ ಇರುವ ನಿಕಟ ಭಕ್ತಿ ಸಂಬಂಧವನ್ನು ಆಧಾರವಾಗಿ ಉಳ್ಳದ್ದು. ಬಳಕೆಯಲ್ಲಿ ಕಂಡುಬರುವ ಕೆಲವು ಭಕ್ತಿಭಾವಗಳು ಎಂದರೆ:- ಕಾಂತಭಾವ, ಗೋಪೀಭಾವ, ರಾಸೋತ್ಸವ ಭಾವ, ರಾಧಾಭಾವ, ಮತ್ತು ಪುತ್ರಭಾವ. ಭಾವಗಳು ಬೇರೆಬೇರೆ ಎನ್ನಿಸಿದರೂ ಧ್ಯೇಯೊದ್ದೇಶಗಳು ಎಲ್ಲಕ್ಕೂ ಒಂದೇ. ಈ ಭಾವಗಳಲ್ಲಿ ಯಾವುದಾರೊಂದನ್ನು ಪಳಗಿಸಿಕೊಂಡಲ್ಲದೆ ಆತ್ಮನಿಕ್ಷೇಪ ಮತ್ತು ಅಹಂಕಾರ ಮಮಕಾರ ನಿರಸನ ಎಂಬುದು ಅಸಾಧ್ಯ.
ಮಡದಿಯಾದವಳು ಪತಿಯಲ್ಲಿ ತನಗಿರುವ ಅತಿಶಯವಾದ ಪ್ರೇಮಭಾವದಿಂದ ತನ್ನನ್ನು ಹೇಗೆ ಪೂರ್ತಿಯಾಗಿ ಮರೆಸಿಕೊಳ್ಳುವಳೋ ಹಾಗೆಯೇ, ಕಾಂತಭಾವದಲ್ಲಿ ಆತ್ಮನು ಪರಮಾತ್ಮನಲ್ಲಿ ಎಂದರೆ ಪರಮಪುರುಷನಲ್ಲಿ ಪೂರ್ತಿಯಾಗಿ ರತನಾಗಬೇಕು. ಈ ಆದರ್ಶದಿಂದ ತಾನು ಗಳಿಸಿದ ನೈತಿಕ, ಧಾರ್ಮಿಕ, ತಾತ್ತ್ವಿಕ, ಮತ್ತು ಆಧ್ಯಾತ್ಮಿಕ ಸಾಧನೆಗಳೆಲ್ಲವನ್ನೂ ಒಮ್ಮನಸ್ಸಿನಿಂದ ಭಗವಂತನಲ್ಲಿ ಸಮರ್ಪಿಸಿಲಿಡುವುದು. ಈ ಭಾವದಲ್ಲಿ ನಮ್ಮಾೞ್ವಾರರು ಇಳಿಯ ಮುಳುಗಿದ್ದವರು.
ಕಾಂತಭಾವದ ಬೇರೆಬೇರೆ ಹಂತಗಳ ಸಾಕ್ಷಾತ್ಕಾರವಾಗಿ ಬರುವುದು ಉಳಿದ ಎಲ್ಲ ಭಾವಗಳೂ ಭಕ್ತಕಬೀರ ನೆಮ್ಮಿದ್ದದ್ದು ಗೋಪೀಭಾವವನ್ನು. ಶ್ರೀಕೃಷ್ಣಚೈತನ್ಯದು (ಗೌರಾಂಗ ಪ್ರಭು) ರಾಧಾಭಾವ. ರಾಸೋತ್ಸವಭಾವದಲ್ಲಿ ದಿವ್ಯ ವೈಕುಂಠದ ಆನಂದಗಳ ಕಲ್ಪನೆ ಮಾತ್ರವಲ್ಲದೆ ಅವತಾರಗಳ ಅರಿವಿನ ಕಲ್ಪನೆಯೂ ಉಂಟು. ಪೆರಿಯಾೞ್ವಾರರು ಪುತ್ರವಾತ್ಸಲ್ಯಭಾವದಲ್ಲಿ ಮುಳುಗಿದ್ದವರು. ಅಂತೆಯೇ ಪುರಂದರದಾಸರೂ.
೬. ಕಾರ್ಪಣ್ಯಃ:- ದೀನನಾಗಿ ದುಃಖಿಸುವುದು, ತಾನು ವಿವೇಕ ಶೂನ್ಯ, ಮನೋಬಲವಿಲ್ಲದವನು, ಕಡುಕಷ್ಟದಲ್ಲಿ ಸಿಕ್ಕಿರುವವನು, ದುಃಖ್ಹವನ್ನು ಸಂಕಟವನ್ನು ಅನುಭವಿಸುತ್ತಿರುವವನು, ಭಗವಂತ ದಯೆತೋರಿಸಲು ತಾನು ಯೋಗ್ಯ- ಇದು ಕಾರ್ಪಣ್ಯಭಾವ. ಆತ್ಮನಿವೇದನದಿಂದ ಉಂಟಾದದ್ದು. ಭಗವಂತನ ಸೇವೆಯಲ್ಲಿ ತನಗೆ ಪೂರ್ಣತೆಯನ್ನು ಸಾಧಿಸಲು ಸಾಧ್ಯವಿಲ್ಲವೆಂಬುದನ್ನೂ ತತ್ಪರಿಣಾಮವಾದ್ ಅವ್ಯಥೆಯನ್ನು ಇದು ಸೂಚಿಸುವುದು.
೨೫
ಪ್ರಪತ್ತಿಯ ವಿಧಗಳು- ಪ್ರಪತ್ತಿಯಲ್ಲಿ ಎರಡು ಬಗೆ: ಆರ್ತ ಪ್ರಪತ್ತಿ ಮತ್ತು ದೃಪ್ತ ಪ್ರಪತ್ತಿ.
ಆರ್ತಪ್ರಪತ್ತಿಯಲ್ಲಿ ಪ್ರಪನ್ನನು ತನ್ನ ಸರ್ವಸ್ವವನ್ನೂ ಭಗವಂತನಲ್ಲಿ ಸಮರ್ಪಣ ಮಾಡುವುದರಿಂದ ವಿಯೋಗ ಭಾವವೂ ಆಧ್ಯಾತ್ಮಿಕತಯೂ ಭರಿಸಲು ಅಸಾಧ್ಯವಾಗುವುದರಿಂದ ತಾನು ಭಗವಂತನನ್ನು ಬಹುಬೇಗ ಸೇರಿಬಿಡಬೇಕೆಂದೂ ತನ್ನ ಜೀವನವನ್ನು ಸಾಕುಮಾಡಬೇಕೆಂದೂ ಕಾತರವಿರುವುದು.
ದೃಪ್ತ ಪ್ರಪತ್ತಿಯಲ್ಲಿ ಹಂತಹಂತವಾಗಿ ಆತ್ಮಸಮರ್ಪಣ ಮಾಡುವುದರಿಂದ ವಿಯೋಗ ಅಷ್ಟು ಅಸದಳವೆನ್ನಿಸುವುದಿಲ್ಲ. ಇದರಲ್ಲಿ ಮಾನವನು ತನ್ನ ಜೀವನವನ್ನು ತನ್ನ ಕೈಯಲ್ಲಾದಷ್ಟು ಉತ್ತಮಮಟ್ಟದಲ್ಲಿ ನಡಸುತ್ತ ಬರಬೇಕು. ಆಂತರಿಕವಾಗಿ ಭಗವಂತನಲ್ಲಿ ಮರೆಹೊಕ್ಕು ಅವನನ್ನು ಬಿಡದೆ ಭಜಿಸುತ್ತಿರಬೇಕು.
ಪ್ರಪತ್ತಿಯ ಮಹತ್ವ:- ಭಗವಂತ ತನ್ನ ಸೃಷ್ಟಿಜಗತ್ತಿನ ವಿಷಯದಲಿ ಅಪರಿಮಿತವಾದ ಕೃಪೆಯನ್ನೂ ಅನುಗ್ರಹವನ್ನೂ ತೋರಿಸುತ್ತಾನೆ. ಹಾಗೆಯೇ, ಮಾನವನೂ ತನ್ನ ಅಳತೆಯ ಮಿತಿಯಲ್ಲಿ ತನ್ನ ಕರ್ತೃತ್ವದ ಫಲಸಮರ್ಪಣವನ್ನು ಭಗವಂತನಿಗೆ ಹಿಂತಿರುಗಿಸಬೇಕು ಎನ್ನುವುದೇ ಪ್ರಪತ್ತಿಯ ಮಹತ್ವ.
ಆದ್ದರಿಂದ, ಪ್ರಪತ್ತಿ ಮೂರು ಬಗೆಯ ಅರ್ಪಣಗಳನ್ನು ತೋರುತ್ತದೆ. ಲಾಭಾರ್ಪಣ, ಭರಾರ್ಪಣ, ಮತ್ತು ಸ್ವರೂಪಾರ್ಪಣ. ಲಾಭ ಸಮರ್ಪಣದಿಂದ ಪ್ರಪತ್ತಿಯ ಹ್ಸಿಖರವನ್ನೇ ನಿಲುಕಲು ಸಾಧ್ಯ. ತನಗೆ ಉಂಟಾದ ಸುಖ, ಸಂತೋಷ, ಆನಂದ, ತೃಪ್ತಿ ಮುಂತಾದವೆಲ್ಲವನ್ನೂ ಪ್ರಪನ್ನನು ಭಗವಂತನಿಗೆ ಅರ್ಪಿಸಿಬಿಡುವುದು ಲಾಭಾರ್ಪಣ.
ತನ್ನ ಆಗುಹೋಗುಗಳೆಲ್ಲಕ್ಕೂ ಪರಮಾತ್ಮನನ್ನೇ ಶರಣುಹೋಗುವುದು ಪ್ರಪತ್ತಿಯ ಪರಿಪೂರ್ಣತೆ ಮತ್ತು ಪಾರಿಶುಧ್ಯತೆ ಎನ್ನಬಹುದು. ಭರಸಮರ್ಪಣ ಎನ್ನುವುದು ಇದಕ್ಕೆ ಸೇರಿದ್ದು. ತಾನುಕರ್ತ ಎಂಬುದನ್ನು ಮರೆತುಬಿಡುವುದೇ ಇದು. ಇದಕ್ಕೂ ಸ್ವರೂಪ ಸಮರ್ಪಣಕ್ಕೂ ನಿಕಟ ಬಾಂಧವ್ಯವಿದೆ. ಇದು ಆತ್ಮನಿವೇದನ. ಭಗವಂತನೇ ತನ್ನ ಆತ್ಮಕ್ಕೆ ಒಡೆಯ ರಕ್ಷಕ ಮತ್ತು ಶರಣ್ಯ ಎಂಬ ಭಾವನೆ ಇದು.
ಪ್ರಪತ್ತಿ ನಿಜವಾದ ತತ್ತ್ವಜ್ಞಾನವನ್ನು ನೀಡುತ್ತದೆ. ಮೊದಲ ಹಂತದಲ್ಲಿ ಪ್ರಪನ್ನನು ಭಗವಂತನಲ್ಲಿ ವಿಶ್ವಾಸ ಬೆಳೆಸುತ್ತಾನೆ. ಅವನು ಧಾರ್ಮಿಕನಾಗುತ್ತಾನೆ. ಅವನಿಗೆ ತತ್ತ್ವ, ಹಿತ, ಪುರುಷಾರ್ಥಗಳ ಅರಿವು
೨೬
ಉಂಟಾಗುತ್ತದೆ. ಒಳ್ಳೆಯದು ಕೆಟ್ಟದ್ದರ ಅರಿವು ಬರುತ್ತದೆ.
ಎರಡನೆಯ ಹಂತದಲ್ಲಿ ಪ್ರಪನ್ನನು ಭಾಗವತನಾಗುತ್ತಾನೆ. ಅವನು ಭಗವಂತನ ಕಿಂಕರ. ಭಗವಂತನ ದಯೆ, ಕೃಪೆ, ಅನುಗ್ರಹ ಮುಂತಾದವು ಅವನಿಗೆ ಮನದಟ್ತಾಗುತ್ತದೆ. ತಾನು ಭಗವಂತನಿಗೆ ಸರ್ವವಿಧದಲ್ಲೂ ಅಧೀನನೆನ್ನುವುದು ಭಕ್ತಿಯನ್ನು ಹೆಚ್ಚಿಸುತ್ತದೆ.
ಇದರಿಂದ ಮೂರನೆಯ ಹಂತ ಸಿಕ್ಕುತ್ತದೆ. ಪುರುಷಾರ್ಥಗಳಲ್ಲಿ ಯಾವುದರಿಂದಲೂ ಉಪಯೋಗವಿಲ್ಲವೆಂದೂ ಭಗವಂತನಿಂದ ಮಾತ್ರವೇ “ಅನನ್ಯ ಪ್ರಯೋಜನತ್ವ”ವೆಂದೂ ಅವನಿಗೆ ಮನದಟ್ಟಾಗುತ್ತದೆ.
ಇದು ಕಡೆಯ ಹಂತವಾದ ಭಗವಂತನನ್ನು ಸೇರುವ ಸಾಧ್ಯತೆಯಲ್ಲಿ ಅವನನ್ನು ತೊಡಗಿಸುತ್ತದೆ.
ಈ ನಾಲ್ಕು ಹಂತಗಳೂ ಒಟ್ಟಾಗಿ ಸೇರಿ ನಡಸುವ ಒಂದು ಕ್ರಿಯೆಯೇ “ಭರನ್ಯಾಸ” ಅಥವಾ “ಶರಣವರಣ” ಎಂದರೆ, ಮಾನವನು ತನ್ನ ಅಂತರಂಗದಲ್ಲಿ ಭಗವಂತನನ್ನು ಸಾಕ್ಷಾತ್ಕರಿಸಿಕೊಳ್ಳುವುದು. ಆತ್ಯಂತಿಕ ಅನುಭವವೆಂದರೆ ಭಗವಂತನ ಸಾನ್ನಿಧ್ಯದಲ್ಲಿ ಭಗವಂತನ ಕೈಂಕರ್ಯದಲ್ಲಿಯೇ ತನ್ನನ್ನು ಒಪ್ಪಿಸಿಕೊಳ್ಳುವುದು.
ಪ್ರಪತ್ತಿ ಎಲ್ಲ ಮಾನವರ ಸೊತ್ತು. ಇದನ್ನು ವರಿಸುವ ಬಾಧ್ಯತೆ ಎಲ್ಲರಿಗೂ ಇದೆ. ಆದ್ದರಿಂದ, ಇದು ಸಾರ್ವತ್ರಿಕ ಸಾಧನೋಪಾಯ. ಅಮರತ್ವಕ್ಕೂ ಅಖಂಡಾನಂದಕ್ಕೂ ಪರಮೌಷಧ.
೨೭
೨. ದಿವ್ಯಪ್ರಬಂಧದ ಲಿಪಿ
ನಾಲಾಯಿರ ದಿವ್ಯಪ್ರಬಂಧವನ್ನು ರಚಿಸಿರುವುದು ಹಾಡಿರುವುದು ತಮಿಳಿನಲ್ಲಿ ಬರೆದು ಅಚ್ಚಾಗಿರುವುದೂ ತಮಿಳು ಲಿಪಿಯಲ್ಲಿಯೇ. ತಮಿಳು ದ್ರಾವಿಡ ಭಾಷೆಗಳಲ್ಲಿ ಒಂದು. ತಮಿಳರಿಗೆ ಅದು ಮಾತೃಭಾಷೆ. ಅವರ ಓದು, ಬರಹ, ವ್ಯವಹಾರ-ಎಲ್ಲವೂ ಸಾಮಾನ್ಯವಾಗಿ ತಮಿಳೀನಲ್ಲಿಯೇ. ಆದ್ದರಿಂದ, ದಿವ್ಯಪ್ರಬಂಧ ವಿಷಯದಲ್ಲಿ ಅವರಿಗೆ ಯಾವ ಬಗೆಯ ತೊಂದರೆಯೂ ಕಂಡುಬರುವುದಿಲ್ಲ. ಮನಸ್ಸೊಂದಿದ್ದರೆ ಸಾಕು, ಅದನ್ನು ಅವರು ಓದಬಹುದು, ಅರಿಯಬಹುದು. ಇದು ಸಹಜವೇ.
ತಮಿಳು ಮಾತೃಭಾಷೆಯಾಗಿದ್ದರೂ ಸಹ ಅದನ್ನು ಓದಲು ಬರೆಯಲು ಕಲಿಯದವರಿಗೂ, ತಮಿಳು ಮಾತೃಭಾಷೆಯಲ್ಲದವರಿಗೂ ಈ ದಿವ್ಯಪ್ರಬಂಧದ ಭಕ್ತಿಯೂಟ ಒದಗುವುದು ಹೇಗೆ? ಮಾತೃಭಾಷೆಯಾದ ತಮಿಳನ್ನು ಓದಿ ಬರೆಯುವುದನ್ನು ಕಲಿಯದೆ ಇರುವುದು ವಿಷಾದದ ಸಂಗತಿಯೆ. ಅವರು ತಮಿಳನ್ನು ಕಲಿಯಬೇಕು. ತಮಿಳರಲ್ಲದವರೋ? ಅಲ್ಲದ ಮಾತ್ರಕ್ಕೆ ಏನಂತೆ? ಸರಳ ಸುಂದರವಾದ ತಮಿಳನ್ನು ಕಲಿಯುವುದು ಅವರಿಗೂ ಒಳ್ಳೆಯದು. ಅಕ್ಕತಂಗಿಯರಂತಿರುವ ದ್ರಾವಿಡಭಾಷೆಗಳ ಪರಸ್ಪರ ಸಂಬಂಧವನ್ನೂ ವ್ಯಾಪಕತ್ವವನ್ನೂ ಅರಿತುಕೊಳ್ಳಲು ಇದು ಸಹಕಾರಿಯಾಗುತ್ತದೆ. ಭಕ್ತಿ ಸಾಹಿತ್ಯವಂತು ತಮಿಳಿನಲ್ಲಿ ಅಪಾರವಾಗಿದೆ. ಅದರ ಸವಿಯುಣಿಸೂ ಸಿಕ್ಕುತ್ತದೆ. ಒಂದು ಪ್ರಯೋಗವನ್ನು ಇಲ್ಲಿ ಸೂಚಿಸಲಾಗಿದೆ. ಅದು ತಮಿಳು ಭಾಷೆಯನ್ನು ಕಲಿಯುವ ಪ್ರಯೋಗವೇ.
ತಮಿಳು ಅತಿ ಸರಳವಾದದ್ದು. ಅಕ್ಷರಗಳ ರಚನೆ, ಉಚ್ಚಾರಣೆ ಇತ್ಯಾದಿಗಳು ಇತರ ಭಾಷೆಗಳಿಗಿರುವಂತೆಯೇ. ಇದರಲ್ಲಿ ಕೆಲವು ವೈಶಿಷ್ಟ್ಯಗಳೀವೆ. ಕೆಳಗ್ ಎತಮಿಳು ಅಕ್ಷರಗಳನ್ನು ಕನ್ನಡ ಅಕ್ಷರಗಳನ್ನೂ ಜೊತೆಜೊತೆಯಾಗಿ ಕೊಟ್ಟಿದೆ. ಗಮನವಿಟ್ಟು ಅವನ್ನು ಪರಿಚಯಮಾಡಿಕೊಂಡು, ಓದುವುದನ್ನು ಬರೆಯುವುದನ್ನು ಕಲಿಯಬಹುದು.
ಸ್ವರಗಳು
ಅ-அ ಆ-ஆ ಇ-இ ಈ-ஈ ಉ-உ ಊ-ஊ ಎ-எ ಏ-ஏ ಐ-ஐ ಒ-ஒ ಓ-ஓ ಔ-ஔ ಅಕ್-ஃ
ಸೂಚನೆ: ಇದರಲ್ಲಿ ಋ ೠ ಇಲ್ಲ. ಕಡೆಯ “ಅಕ್” ಹೊಸದು.
ವ್ಯಂಜನಗಳು
೨೮
ವರ್ಗೀಯ ವ್ಯಂಜನಗಳು:
ಕ-க ಙ-ங ಚ-ச ಞ-ஞ ಟ-ட ಣ-ண ಶ-ஸ ನ-ன ಪ-ப ಮ-ம
ಅವರ್ಗೀಯ ವ್ಯಂಜನಗಳು:
ಯ-ர ರ-ர ಲ-ல ವ-வ ೞ-ழ ಳ-ள ಱ-ற ನ-ன
ಸಂಸ್ಕೃತಾಕ್ಷರಗಳು(ವಡಶೊಲ್):-
ಜ-ஜ ಸ-ஸ ಷ-ஷ ಹ-ஹ ಕ್ಷ-க்ஷ
ಇವು ಹೊಸದಾಗಿ ಸೇರಿಸಿದವು.
ಸೂಚನೆ:- ೧. ವರ್ಗೀಯ ವ್ಯಂಜನಗಳಲ್ಲಿ ಕನ್ನಡ ಸಂಸ್ಕೃತಗಳಲ್ಲಿರುವಂತೆ ಪ್ರತಿವರ್ಗಕ್ಕೂ ಐದು ಅಕ್ಷರಗಳಿಲ್ಲ. ಒಂದು ವರ್ಗಕ್ಕೆ ಎರಡೇ ಅಕ್ಷರಗಳು- ವರ್ಗದ ಮೊದಲ ಅಕ್ಷರ, ಮತ್ತು ಆ ವರ್ಗದ ಅನುನಾಸಿಕ. ಆದ್ದರಿಂದ, ವರ್ಗೀಯ ವ್ಯಂಜನಗಳು ಹತ್ತೇ.
೨. ಅವರ್ಗೀಯ ವ್ಯಂಜನಗಳಲ್ಲಿ ಮೊದಲು ಇದ್ದದ್ದು ಎಂಟೇ ಅಕ್ಷರಗಳು. ಯ,ರ,ಲ,ವ, ಳ ಗಳು ಕನ್ನಡ, ಸಂಸ್ಕೃತ, ತಮಿಳಿಗೆ ಸಾಮಾನ್ಯ. ಅನಂತರ ಬರುವ ಮೂರು ಅಕ್ಷರಗಳಲ್ಲಿ ಹಳಗನ್ನಡದ ಎರಡು ಅಕ್ಷರಗಳೂ ತಮಿಳಿನಲ್ಲಿವೆ. ೞ, ಱ. ಕಡೇಯ ಒಂದಕ್ಷರ ತಂಇಲಿಗೆ ಸೇರಿದ್ದು. ವಿವರಣೆ ಕೆಳಗೆ ಬರೆದಿದೆ:
ಳ ள (ಳ): ಕನ್ನಡ, ಸಂಸ್ಕೃತಗಳಲ್ಲಿ ಸಾಮಾನ್ಯವಾಗಿ ಇರುವ “ಳ” ಕಾರ. ಕನ್ನಡ ವ್ಯಾಕರಣ ಇದನ್ನು “ಕುಳ:- ಳ ಕಾರವೆಂದು ಕರೆಯುತ್ತದೆ.
ೞ ழ (ರಳ): ಇದು ಹಳೆಗನ್ನಡ “ಳ” ಕಾರ. ಇದನ್ನು “ರಳ”-ಳ ಕಾರ ಎನ್ನುತ್ತಾರೆ. ಉಚ್ಚಾರಣೆಯಲ್ಲಿ ಸಾಮಾನ್ಯ “ಳ” ಕಾರಕ್ಕಿಂತ ಭಿನ್ನ ಷ, ಜ ಗಳ ಸಂಯೋಗ ಶಬ್ದ.
ರ ர (ರ): ಇದು ಸಾಮಾನ್ಯ-“ರ” ಕಾರ. ವ್ಯಾಕರಣದಂತೆ ಇದು ರೇಫ, ಅರ್- ಕಾರ. ಕನ್ನಡ, ಸಂಸ್ಕೃತ, ತಮಿಳುಗಳಿಗೆ ಸಾಮಾನ್ಯ.
೨೯
ಱ ற (ರರ): ಇದು ಹಳೆಗನ್ನಡದ ಅಕ್ಷರ. ಇದನ್ನು “ರರ”ಕಾರ ಎಂತಲೂ, ಬಂಡಿ-ರ ಎಂತಲೂ ಕರೆಯುತ್ತಾರೆ. ಇದು “ರ” ಕಾರವೇ. ಉಚ್ಚಾರಣೆಯಲ್ಲಿ ಸ್ವಲ್ಪ ಗಡುಸು- ಅಷ್ಟೆ.
ನ ன(ರನ): ಇದು ತಮಿಳೀನ ವೈಶಿಷ್ಟ್ಯ. ಬಂಡಿ-ರ ಮಗ್ಗುಲಲ್ಲಿ ಬರುವುದರಿಂದ ಇದಕ್ಕೆ ರನ- ಕಾರವೆಂದು ಹೆಸರಿಟ್ಟಿದ್ದಾರೆ.
ಕೆಲವು ಹೆಚ್ಚಿನ ವಿಶೇಷಗಳನ್ನು ಗಮನಿಸುವುದು:-
೧. ತಮಿಳಿನಲ್ಲಿ ವ್ಯಂಜನಗಳಲ್ಲಿ ಎರಡು ನ-ಕಾರಗಳಿವೆ. ಒಂದು ವರ್ಗೀಯ ನ ಕಾರ. ಅದನ್ನು “ತನ” ಎನ್ನುತ್ತಾರೆ. ’ತ’ ಕಾರದ ಜೊತೆಯಲ್ಲಿಯೇ ಅದಕ್ಕೆ ಮುಂಚೆ ಇದು ಬರುವುದರಿಂದ. ಅಲ್ಲದೆ, “ನ” ಕಾರದಿಂದ ಮೊದಲಾಗುವ ಪದಗಳನ್ನು ಬರೆಯುವಾಗ ಇದನ್ನು ಬರೆಯಬೇಕು.
೨. ತಮಿಳಿನ ಅವರ್ಗೀಯ ನ-ಕಾರವನ್ನು “ರನ” ಎನ್ನುತ್ತಾರೆ. ತನ- ಬಳಸದೆ ಇರುವ ಕಡೆಗಳಲ್ಲೆಲ್ಲಾ ಇದು ಉಪಯೋಗ.
೩. ಕುಳ ಕಾರವನ್ನು, “ಳ” ವ್ಯಂಜನಾಕ್ಷರವಾಗಿ ಬಳಸುವುದು ಸರಿಯಷ್ಟೆ. ಅಲ್ಲದೆ, ಇದನ್ನು ವಿಶೇಷ ಚಿಹ್ನೆಯಾಗಿಯೂ ಉಪಯೋಗಿಸುತ್ತಾರೆ.
ಉದಾ: “ಊ”ಕಾರ ಬರೆಯುವಾಗ “ಉ” ಕಾರದ ಜೊತೆಯಲ್ಲಿ ಮತ್ತು, “ಔ” ಕಾರ ಬರೆಯುವಾಗ “ಒ” ಕಾರದ ಜೊತೆಯಲ್ಲಿ.
ಕಾಗುಣಿತ
ಕ್க் ಕ-க ಕಾ-கா ಕಿ-கி ಕೀ-கீ ಕು-கு ಕೂ-கூ ಕೆ-கெ ಕೇ-கே ಕೈ-கை ಕೊ-கொ ಕೋ-கோ ಕೌ-கௌ
ಸೂಚನೆ:- ಕೆಳಗೆ ಸೂಚಿಸಿರುವ ಕೆಲವು ವಿಶೇಷಗಳನ್ನು ಬಿಟ್ಟರೆ ಮಿಕ್ಕ ಎಲ್ಲ ಕಡೆಗಳಲ್ಲಿಯೂ ಕಾಗುಣಿತದ ಚಿಹ್ನೆಗಳ ಕ-ಕಾರಕ್ಕೆ ಜೋಡಿಸಿರುವಂತೆಯೇ.
ಕೆಲವು ವಿಶೇಷಗಳು:
೩೦
೧. ಚ-ச ಪ-ப ಯ-ய ಳ-ள –ಗಳಲ್ಲಿ ಕೊಂಬು, ಕೊಂಬಿನ ದೀರ್ಘಗಳಲ್ಲಿ ವ್ಯತ್ಯಾಸ.
ಚು-சு, ಪು-பு, ಯು-யு, ಳು-ளு, ಚೂ-சூ, ಪೂ-பூ ಯೂ-யூ ಳೂ-ளூ
೨. ಟ-ட - ದಲ್ಲಿ, ಗುಡಿಸಿ, ಗುಡಿಸಿ ದೀರ್ಘ, ಕೊಂಬು, ಕೊಂಬಿನ ದೀರ್ಘಗಳಲ್ಲಿ ವ್ಯತ್ಯಾಸ.
ಟಿ-டி, ಟೀ-டீ, ಟು-டு, ಟೂ-டூ
೩. ಣ-ண, ನ-ன, ಱ-ற – ಗಳಲ್ಲಿ ದೀರ್ಘದಲ್ಲಿ ವ್ಯತ್ಯಾಸ
ಣಾ-ணா ನಾ-னா ಱಾ-றா
೪. ಣ-ண, ನ-ன, ಲ-ல ಳ-ள- ಗಳಲ್ಲಿ ಐತ್ವದಲ್ಲಿ ವ್ಯತ್ಯಾಸ
ಣೈ-ணை, ನೈ-னை, ಲೈ-லை, ಳೈ-ளை
೫. ಶ-ஶ, ನ-ன, ಣ-ண, ನ-ன, ಲ-ல,-ಗಳಲ್ಲಿ ಕೊಂಬು ಕೊಂಬಿನದೀರ್ಘ
ಶು-ஶு, ನು-னு, ಣು-ணு, ನು-னு, ಲು-லு, ಶೂ-ஶூ, ನೂ-னூ, ಣೂ-ணூ, ನೂ-னூ, ಲೂ-லூ
೬. ಣ-ண, ನ-ன, ಱ-ற –ಗಳಲ್ಲಿ ಒತ್ವ, ಓತ್ವ
ಣೊ-ணொ, ನೊ-னொ, ಱೊ-றொ, ಣೋ-ணோ, ನೋ-னோ, ಱೋ-றோ
ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು
ಇದು ಬಹು ಸುಲಭ ಕ್ರಮ ಹೀಗಿದೆ: ಮೊದಲು ಬರುವುದು ಅರ್ಧಾಕ್ಷರ, ಅದೇ ಒತ್ತು. ಅನಂತರ ಪೂರ್ಣಾಕ್ಷರ. ಒಂದರ ಮಗ್ಗುಲಲ್ಲಿ ಒಂದು ಬರುತ್ತದೆ.
க் க-ಕ್ ಕ=ಕ್ಕ; ப் ப-ಪ್ ಪ=ಪ್ಪ; ச் ச-ಚ್ ಚ=ಚ್ಚ; த் த-ತ್ ತ=ತ್ತ
ಹೀಗೆಯೇ ಸಂಯುಕ್ತಾಕ್ಷರಗಳು:
க் ர-ಕ್ ರ=ಕ್ರ; த் ம-ತ್ ಮ=ತ್ಮ; ப் ன-ಪ್ ನ=ಪ್ನ, ಇತ್ಯಾದಿ
ಉಚ್ಚಾರಣೆಯನ್ನು ಕುರಿತು:
೧. ಪದದ ಪ್ರಾರಂಭದಲ್ಲಿ ಬರುವ ವರ್ಗೀಯ ವ್ಯಂಜನಾಕ್ಷರವನ್ನು ಆ ವರ್ಗದ ಮೊದಲ ಸಂಜ್ಞೆಯಿಂದಲೇ ಉಚ್ಚರಿಸುವುದು.
೩೧
೨. ಅದೇ ಅಕ್ಷರ ಪದದ ನಡುವೆ ಬಂದಾಗ ಅದನ್ನು ಆ ವರ್ಗದ ಮೂರನೆಯ ವರ್ಗಾಕ್ಷರದ ಸಂಜ್ಞೆಯಿಂದ ಉಚ್ಚರಿಸುವುದು.ಅಲ್ಲದೆ ಆ ವರ್ಗದ ಮೊದಲಕ್ಷರ ಸಂಜ್ಞೆಯಿಂದಲೇ ಉಚ್ಚರಿಸುವುದೂ ಉಂಟು.
೩. ತಮಿಳಿನಲ್ಲಿ ಮಹಾಪ್ರಾಣಾಕ್ಷರಗಳಿಲ್ಲ. ಆ ಉಚ್ಚಾರಣೆಯೂ ಇಲ್ಲ. ಸಂಸ್ಕೃತ ಶಬ್ದಗಳಾದರೆ ಮಾತ್ರ ಉಂಟು. ಆಗ ಬರೆವಣಿಗೆಗೆ ಸಾಮಾನ್ಯ ವರ್ಗೀಯಾಕ್ಷರವೇ. ಆದ್ದರಿಂದ, ಬಳಕೆಯಿಂದ ಇದನ್ನು ಸರಿಯಾಗಿ ಓದುವುದನ್ನು ಪಳಗಬಹುದು.
೪. க-ಕ- ಇದು ಪದಗಳ ನಡುವೆ ಬಂದಾಗ ಹಿಂದೆ ಹೇಳಿದಂತೆ ಇದು “ಗ” ಆಗುತ್ತದೆ. ಆದರೆ ಇದನ್ನು “ಹ” ಎಂದು ವಿಚಿತ್ರವಾಗಿ ಉಚ್ಚರಿಸುವುದೂ ಉಂಟು. ಹಾಗೆಯೇ ச-ಚ- ಇದು ಪದಗಳ ನಡುವೆ “ಜ” ಆಗುತ್ತದೆ. ಆದರೆ, ಪದಗಳ ಪ್ರಾರಂಭದಲ್ಲಿ ಇದನ್ನು ವಿಚಿತ್ರವಾಗಿ “ಶ” ಎಂತಲೂ, ಪದಗಳ ನಡುವೆ “ಜ” ಅಥವಾ “ಚ” ಎಂತಲೂ ಉಚ್ಚರಿಸುತ್ತಾರೆ. ಉದಾ: …………..ಮಗಾರಾಜ, ಮಹಾರಾಜ
೫. ಪದದ ಕೊನೆಯಲ್ಲಿ ಬರುವ ಕೊಂಬುಳ್ಳ ಅಕ್ಷರವನ್ನು ಅರ್ಧಾಕ್ಷರದಂತೆ ಉಚ್ಚರಿಸುವುದು ವಾಡಿಕೆ. ಆದರೆ, ಬರೆಯುವುದು ಮಟ್ಟಿಗೆ ಕೊಂಬಿನಿಂದಲೆ ಅರ್ಧಾಕ್ಷರವಾಗಿ ಅಲ್ಲ.
೬. ತಮಿಳಿನಲ್ಲಿ ಅನುಸ್ವಾರ, ವಿಸರ್ಗಗಳಿಲ್ಲ. ಅನುಸ್ವಾರ ಬರೆಯಬೇಕಾದರೆ ಆಯಾ ವರ್ಗದ ಅನುನಾಸಿಕವನ್ನು ಅರ್ಧಾಕ್ಷರವನ್ನಾಗಿ ಮಾಡಿ ಬರೆಯಬೇಕು. ಇದು ಸಂಸ್ಕೃತದಂತೆ. ಈಚೆಗೆ ವಿಸರ್ಗದ ಚಿಹ್ನೆಯನ್ನು ಸಂಸ್ಕೃತದ ಚಿಹ್ನೆಯಂತೆಯೇ ಬಳಸುತ್ತಾರೆ. ಕಾರಣ, ವಿಸರ್ಗವೆಲ್ಲ ಸಂಸ್ಕೃತದ ಆತಸ್ತಿಯೇ. ಉದಾ: ……….(ಚ್ ರಿಯಃ ಪತಿಃ)= ಶ್ರಿಯಃ ಪತಿಃ.
೭. …. ಗಳನ್ನೂ ಸಾಮಾನ್ಯ ಅಕ್ಷರಗಳಂತೆಯೇ ಕಾಗುಣಿತ ಜೋಡಿಸಿ ಬಳಸುವುದು ವಾಡಿಕೆ ಇದರಲ್ಲಿದೆ. ಉದಾ:………(ಞಾನಮ್)=ನಾನಮ್
೮. ர-ರ, ல-ಲ, ಗಳನ್ನು ಬಿಡಿಯಾಗಿ ಬಳಸುತ್ತಾ ಪದಗಳನ್ನು ಪ್ರಾರಂಭಿಸುವುದಿಲ್ಲ. ಇವುಗಳಿಗೆ ……….. ಗಳನ್ನು ಹಿಂದುಗಡೆ ತಪ್ಪದೆ ಸೇರಿಸುತ್ತಾರೆ.
೯. றಕ್ಕೆ ற ವತ್ತು ಕೊಟ್ಟಾಗ ಎಂದರೆ ……ಎಂದು ಬರೆದ ಕಡೆ, ಅದರ ಉಚ್ಚಾರಣೆಯನ್ನು “ಟ್ರ” ಎನ್ನುತ್ತಾರೆ. ಇದು ಸಾಮಾನ್ಯವಾಗಿ ಹೇಳುವ ಕ್ರಮ ಕೆಲವೊಮ್ಮೆ ಇದನ್ನು “ತ್ತ” ಎಂದೂ ಉಚ್ಚರಿಸುತ್ತಾರೆ.
೧೦. ಇನ್ನುಹಳೆಗನ್ನಡದ ಎರಡು ಅಕ್ಷರಗಳ ವಿಷಯ. ಅವುಗಳ ಕಾಗುಣೀತವನ್ನು ಇಲ್ಲಿ ಪೂರ್ತಿಯಾಗಿ ಬರೆದಿದೆ. ಏಕೆಂದರೆ, ಈ ಎರಡು ಅಕ್ಷರಗಳನ್ನು ತಮಿಳನ್ನು ಕನ್ನಡ ಅಕ್ಷರಗಳಲ್ಲಿ ಬರೆಯುವಾಗ ಬಳಸಲೇಬೇಕಾಗುತ್ತದೆ.
೩೨
೧. ೞ (ರಳ)-ழ
ೞ, ೞಾ, ೞಿ, ೞೀ, ೞು, ೞೂ, ೞೆ, ೞೇ, ೞೈ, ೞೊ, ೞೋ, ೞೌ
೨. ಱ (ಬಂಡಿ-ರ)-ற
ಱ, ಱಾ, ಱಿ, ಱೀ, ಱು, ಱೂ, ಱೆ, ಱೇ, ಱೈ, ಱೊ, ಱೋ, ಱೌ
ಸೂಚನೆ: ಈ ಎರಡು ಅಕ್ಷರಗಳಿಗೆ ವ್ಯತ್ಯಾಸ ಕಂಡುಹಿಡಿಯುವುದು ಬಹಳ ಸುಲಭ. ಎರಡು ಸುಳಿಗಳ ನಡುವೆ ಸ್ಥಳವನ್ನು ಮೊದನಲೆಯದರಲ್ಲಿ ಬಿಟ್ಟಿದೆ, ಎರಡನೆಯದರಲ್ಲಿ ಅಡ್ಡಗೀಟಿನಿಂದ ಸೇರಿಸಿದೆ. ಸೇರಿಸಿರುವುದು “ರ”. ಇನ್ನೊಂದು “ರಳ” ಳ ಕಾರ. ಇದರ ಉಚ್ಚಾರಣೆಯನ್ನು ತಿಳಿದವರಿಂದ ಕಲಿಯುವುದು ಒಳ್ಳೆಯದು.
ಕೆಲವು ಉದಾಹರಣೆಗಳು:
ಬರಹ ಉಚ್ಚಾರ
೧. ತನ್ ಕೈ ತಂದೈ
೨. ಪತಙ್ ಕಳ್ ಪದಂಗಳ್
೩. ಚನ್ ತಿರನ್ ಚಂದಿರನ್
೪. ಪಙ್ ಕಚಮ್ ಪಂಕಜಮ್
೫. ಚಿವಪಕ್ ತಿ ಶಿವಭಕ್ತಿ (ಚಿವಪಕ್ತಿ)
೬. ಮಞ್ ಚಳ್ ಮಂಜಳ್
೭. ವಞ್ ಚನಮ್ ವಂಚನಮ್
೮. ಕುಱ್ ಱಮ್ ಕುಟ್ರಮ್(ಕುತ್ತಮ್)
೯. ಅರಙ್ ಜನ್ ಅರಂಗನ್
೧೦. ಇಲಕ್ ಕಣಮ್ ಇಲಕ್ಕಣಮ್
೧೧. ಉಲಕಮ್ ಉಲಹಮ್
೧೨. ವನ್ ತತು ವಂದದ್
೧೩. ಪೋಕಿಱತು ಪೋಹಿರದ್
೧೪. ಪತ್ ತಿರಿಕ್ ಕೈ ಪತ್ತಿರಿಕ್ಕೈ
೧೫. ಪಾಮೀಳಾಹ ಪ್ ಪಟೈ ಪಾಮೀಳಾಹಪ್ಪಡೈ
೧೬. ಚಙ್ ಕಮೆಟುತ್ ತೂತ ಶಂಗಮೆಡುತ್ತೂದ
ಸೂಚನೆ: ೧೫,೧೬ನೆಯ ಉದಾಹರಣೆಗಳು ಸಮಾಸ ಪದಗಳನ್ನು ಬರೆಯುವ ಓದುವ ಕ್ರಮವನ್ನು ಸೂಚಿಸುತ್ತದೆ. ಎರಡು ಪದಗಳ ನಡುವೆ ಬರುವ ಒತ್ತಕ್ಷರವನ್ನು ಎರಡಕ್ಕೂ ಬಿಡಿಸಿ, ಅರ್ಧಾಕ್ಷರವನ್ನು ಮೊದಲದರ ಕಡೆಯಲ್ಲೂ ಪೂರ್ಣಾಕ್ಷರದಿಂದ ಎರಡನೆಯ ಪದವನ್ನೂ ಬರೆಯುತ್ತಾರೆ. ಓದುವಾಗ ಮೊದಲ ಪದವನ್ನು ಅರ್ಧಾಕ್ಷರದವರೆಗೆ ಓದಿಕೊಂಡು ಎರಡನೆಯದಕ್ಕೆ ಅದನ್ನು ಸೇರಿಸಿ ಓದುವುದು.
೩೩
೩. ತನಿಗಳು
೧. ರಾಮಾನುಜ ದಯಾಪಾತ್ರಂ ಜ್ಞಾನವೈರಾಗ್ಯಭೂಷಣಂ |
ಶ್ರೀಮದ್ವೇಂಕಟನಾಥಾರ್ಯಂ ವಂದೇ ವೇದಾಂತದೇಶಿಕಂ||
ರಾಮಾನುಜ ದಯಾಪಾತ್ರಂ= ಶ್ರೀರಾಮಾನುಜರ ದಯೆಗೆ ಪಾತ್ರರಾದ, ಜ್ಞಾನವೈರಾಗ್ಯ ಭೂಷಣಂ= ಜ್ಞಾನದಿಂದಲೂ, ವೈರಾಗ್ಯದಿಂದಲೂ ಅಲಂಕೃತರಾದ ವೇದಾಂತದೇಶಿಕಂ= ವೇದಾಂತಕ್ಕೆ ಮಾರ್ಗದರ್ಶಕರಾದ, ಶ್ರೀಮತ್=ಸಂಪದ್ಭರಿತರಾದ, ವೇಂಕಟನಾಥ ಆರ್ಯ= ವೆಂಕಟನಾಥ ಎಂಬ ಪೂಜ್ಯರನ್ನು, ವಂದೇ= ನಮಸ್ಕರಿಸುತ್ತೇನೆ.
ಶ್ರೀರಾಮಾನುಜರ ದಯೆಗೆ ಪಾತ್ರರಾದವರೂ, ಜ್ಞಾನ ವೈರಾಗ್ಯಗಳಿಂದ ಭೂಷಿತರೂ, ವೇದಾಂತಕ್ಕೆ ದಾರಿ ತೋರಿಸುವವರೂ ಆದ ಶ್ರೀವೇಂಕಟನಾಥ ಎಂಬ ಪೂಜ್ಯರನ್ನು ನಮಸ್ಕರಿಸುತ್ತೇನೆ.
ಈ ತನಿಯನ್ನು ಶ್ರೀ ಬ್ರಹ್ಮತಂತ್ರ ಪರಕಾಲಸ್ವಾಮಿಗಳು ಕರುಣಿಸಿದ್ದು. ತನಿ (…………)-ಎಂದರೆ, ಅಪರೂಪವಾಗಿ, ಬಿಡಿಯಾಗಿ, ಅಥವಾ ಒಂಟಿಯಾಗಿ ರಚಿಸಿರುವ ಶ್ಲೋಕ ಅಥವಾ ಪದ್ಯ. ಅದು ಪ್ರತ್ಯೇಕವಾದದ್ದು. ತನ್ನಷ್ಟಕ್ಕೇ ಪೂರ್ತಿಯಾದದ್ದು. ಒಬ್ಬರ ಅಥವಾ ಒಂದು ವಿಷಯವನ್ನು ಕುರಿತು ಹೇಳಿರುವುದು. ಚಿಕ್ಕದಾದರೂ ಅರ್ಥಗರ್ಭಿತವಾದದ್ದು. ಆದ್ದರಿಂದಲೇ, ಅದು ತನಿ ಅಥವಾ ಪೂರ್ಣ. ತಮಿಳೀನಲ್ಲಿ “ತನಿಯನ್”-“ತನಿಯನ್ ಹಳ್” ಎಂದು ಕರೆಯುತ್ತಾರೆ.
ವೆಂಕಟನಾಥ (ಕ್ರಿ.ಶ.1268-1369) ಎಂಬವರಿಗೆ ವೇಂಕಟೇಶ ವೆಂಕಟಾಚಾರ್ಯ, ವೇದಾಂತಾಚಾರ್ಯ, ವೇದಾಂತದೇಶಿಕ-ಎ ಬ ಹೆಸರುಗಳೀವೆ. ವೇದಾಂತಾಚಾರ್ಯ, ವೇದಾಂತ ದೇಶಿಕ ಎಂಬವು ಬಿರುದು. ಅವೂ ಹೆಸರಿನಂತೆಯೇ ಸಾಮಾನ್ಯವಾಗಿ ಬಳಕೆಗೆ ಬಂದಿವೆ.
ವೇದಾಂತ ದೇಶಿಕರಿಗೆ “ಕವಿತಾರ್ಕಿಕ ಸಿಂಹ”, “ಸರ್ವತಂತ್ರಸ್ವತಂತ್ರ” ಎಂಬ ಬಿರುದುಗಳೂ ಉಂಟು. ಅವರು ಸುಸಂಸ್ಕೃತರು. ವೈರಾಗ್ಯ, ನಮ್ರತೆಗಳಲ್ಲಿ ಅನಾದೃಶವಾದ ಆದರ್ಶರು. ಆದ್ದರಿಂದ, “ಆರ್ಯ” ಎಂಬುದು ಅವರಿಗೆ ಬಹಳ ಚೆನ್ನಾಗಿ ಒಪ್ಪುತ್ತದೆ. ಅವರು ಕವಿಶ್ರೇಷ್ಠರು, ದಾರ್ಶನಿಕರು, ತತ್ತ್ವದರ್ಶಿಗಳು, ವಿಮರ್ಶಕರು, ಮೇಧಾವಿಗಳು, ಮಹಾಜ್ಞಾನಿಗಳು, ಆದ್ದರಿಂದ ಅವರಿಗೆ ಸಂದ ಬಿರುದುಗಳಿಗೆ ಎಲ್ಲ ವಿಧದಲ್ಲೂ ಬಾಧ್ಯರು.
ಶ್ರೀರಾಮಾನುಜ ತತ್ತ್ವದರ್ಶನಕ್ಕೆ ಮೆರುಗುಕೊಟ್ಟು ಪ್ರಚಾರ ಮಾಡಿದವರಲ್ಲಿ ಇವರೊಬ್ಬರು. ಶತಾಯುವಾಗಿ ಬಾಳಿದವರು. ಕಂಚಿ,
೩೪
ಶ್ರೀರಂಗ, ಸತ್ಯಮಂಗಲ, ಮೇಲುಕೋಟೆಗಳಲ್ಲಿ ಭಗವತ್ಸೇವೆ ನಡಸಿದವರು. ಸಂಸ್ಕೃತದಲ್ಲೂ ತಮಿಳೀನಲ್ಲೂ ಮಣಿಪ್ರವಾಳ ಶೈಲಿಯಲ್ಲೂ ನೂರಕ್ಕಿಂತ ಹೆಚ್ಚು ಗ್ರಂಥಗಳನ್ನು ರಚಿಸಿದವರು. ವಿಜಯನಗರ ಸಂಸ್ಥಾನದ ಆಸ್ಥಾನಕ್ಕೆ ಅವರನ್ನು ಆಹ್ವಾನಿಸಿದಾಗ, “ಭಗವದ್ಭಕ್ತರು ರಾಜನನ್ನಾಗಲಿ ಶ್ರೀಮಂತನನನ್ನಾಗಲಿ ತಮ್ಮ ಹೊಟ್ಟೆಗಾಗಿ ಯಾಚಿಸುವುದಿಲ್ಲ” ಎಂಬ ಕೆಚ್ಚಿನ ಉತ್ತರವನ್ನು ಐದು ಶ್ಲೋಕಗಳಲ್ಲಿ ಬರೆದು ಕಳುಹಿಸಿದರು. ಅದು “ವೈರಾಗ್ಯ ಪಂಚಕ”ವೆಂದು ಸುಪ್ರಸಿದ್ಧ. ಅದರಲ್ಲಿ ರತ್ನದಂಥ ಒಂದು ಶ್ಲೋಕ ಇಲ್ಲಿದೆ:
ನಾಸ್ತಿ ಪಿತ್ರಾರ್ಜಿತಂ ಕಿಂಚಿನ್ನಮಯಾ ಕಿಂಚಿದಾರ್ಜಿತಂ |
ಅಸ್ತಿ ಮೇ ಹಸ್ತಿಶೈಲಾಗ್ರೇ ವಸ್ತು ಪೈತಾಮಹಂ ಧನಂ||
ತಮಗಿರುವ ಪಿತ್ರಾರ್ಜಿತ ಸಂಪತ್ತು ಎಂಥಾದ್ದು ಎಂಬುದಕ್ಕೆ ವಿವರಣೆ ಕೊಟ್ಟಿದ್ದಾರೆ. ಇದು ಅವರ ವೈರಾಗ್ಯದ ಪಾರಮ್ಯ.
೨. ಶ್ರೀಶೈಲೇಶ ದಯಾಪಾತ್ರಂ ಧೀ ಭಕ್ತ್ಯಾದಿ ಗುಣಾರ್ಣವಂ |
ಯತೀಂದ್ರಪ್ರವಣಂ ವಂದೇ ರಮ್ಯಜಾಮಾತರಂ ಮುನಿಂ||
ಶ್ರೀಶೈಲೇಶ= ಶ್ರೀಶೈಲಕ್ಕೆ ಒಡಯನೆನ್ನಿಸಿಕೊಂಡ, ತಿರುಮಲೈ ಆೞ್ವಾರ್ ಅಥವಾ ತಿರುವಾಯ್ ಮೊೞಿಪ್ಪಿಳ್ಳೈ ಎಂಬವರ, ದಯಾಪಾತ್ರಂ= ಕೃಪೆಗೆ ಪಾತ್ರರಾದವರೂ, ಧೀ= ಜ್ಞಾನ, ಭಕ್ತಿ, ಆದಿ= ಮುಂತಾದ, ಗುಣ ಅರ್ಣವಂ= ಸದ್ಗುಣಗಳೀಗೆ ಸಮುದ್ರದಂತೆ ಇರುವವರೂ, ಯತೀಂದ್ರ ಪ್ರವಣಂ= ಯತೀಂದ್ರ ಪ್ರವಣ” ಎಂಬ ಬಿರುದನ್ನು ಪಡೆದವರೂ (ಯತೀಂದ್ರರಾದ ಶ್ರೀರಾಮಾನುಜರಿಗೆ ನಮ್ರ ಶಿಷ್ಯರಾದವರೂ), ಆದ, ರಮ್ಯ ಜಾಮಾತರಂ ಮುನಿಂ= ಅವಿಹಿಯ ಮಣವಾಳ ಮಹಾಮುನಿಗಳನ್ನು, ವಂದೇ= ನಮಸ್ಕರಿಸುತ್ತೇನೆ.
ಶ್ರೀಶೈಲೇಶ ಎಂದು ಪ್ರಸಿದ್ಧರಾದ ತಿರುಮಲೈ ಆೞ್ವಾರ್ (ತಿರುವಾಯ್ ಮೊೞಿಪ್ಪಿಳ್ಳೈ) ಎಂಬವರ ಕೃಪೆಗೆ ಪಾತ್ರರಾಗಿ, ಜ್ಞಾನಭಕ್ತಿ ಮುಂತಾದ ಸದ್ಗುಣಗಳೀಗೆ ಸಾಗರರಾಗಿ, “ಯತೀಂದ್ರ ಪ್ರವಣ” ಎಂಬ ಬಿರುದನ್ನು ಪಡೆದ ಯತಿರಾಜರಾದ ಶ್ರೀರಾಮಾನುಜರ ನಮ್ರ ಶಿಷ್ಯರಾದ) ಅವಿಹಿಯ ಮಣವಾಳ ಮಹಾಮುನಿಗಳನ್ನು ವಂದಿಸುತ್ತೇನೆ.
ಶ್ರೀರಾಮಾನುಜರಿಗೆ ಒದಗಿ ಬಂದ ಮುಖ್ಯ ಶಿಷ್ಯರಲ್ಲಿ “ಎಂಬಾರ್” ಎಂಬವರು ಒಬ್ಬರು. ಅವರ ಶಿಷ್ಯ ಪೀಳಿಗೆಯಲ್ಲಿ (ಪರಂಪರೆಯಲ್ಲಿ)ಪಿಳ್ಳೈ ಲೋಕಾಚಾರ್ಯರು ಸುಪ್ರಸಿದ್ಧರು. ಅವರಿಗೆ ಪ್ರಧಾನ ಶಿಷ್ಯರಾಗಿದ್ದವರೇ ತಿರುಮಲೈ ಆೞ್ವಾರ್. ಅವರು ಆಚಾರ್ಯ ಸ್ಥಾನವನ್ನು ಅಲಂಕರಿಸಿ “ಶ್ರೀಶೈಲೇಶ” ಎಂಬ ಹೆಸರು ಪಡೆದಿದ್ದರು. ಅವರಿಗೆ ತಿರುವಾಯ್ಮೊೞಿ
೩೫
ಪ್ಪಿಳ್ಳೈ ಎಂದೂ ಹೆಸರಿತ್ತು. ಈ ಆಚಾರ್ಯರು “ಅವಿಹಿಯ ಮಣವಾಳ ನಾಯನಾರ್” ಎಂಬವರನ್ನು ಶಿಷ್ಯರನ್ನಾಗಿ ಸ್ವೀಕರಿಸಿದರು. ಅವಹಿಯ ಮಣವಾಳ ನಾಯನಾರ್ ಅವರೇ “ಮಣವಾಳ ಮಹಾಮುನಿ” ಎಂಬ ಪ್ರಖ್ಯಾತ ಆಚಾರ್ಯರು.
ತಿರುವಾಯ್ಮೊೞಿ ಪ್ಪಿಳ್ಳೈ ಅವರು ತಮ್ಮ ಶಿಷ್ಯರ ನೆರವಿನಿಂದ ಶ್ರೀರಾಮಾನುಜಾಚಾರ್ಯರಿಗೆ ಒಂದು ದೇವಾಲಯವನ್ನು ಕಟ್ಟಿಸಿದರು. ಅದರಲ್ಲಿ ಪ್ರತಿಷ್ಠೆ ಮಾಡಿದ ರಾಮಾನುಜಾಚಾರ್ಯರ ವಿಗ್ರಹಕ್ಕೆ ಪೂಜಾದಿ ಸೇವೆಗಳನ್ನು ಸಲ್ಲಿಸುವುದಕ್ಕಾಗಿ ತಮ್ಮ ನೆಚ್ಚಿನ ಶಿಷ್ಯರಾದ ಮಣವಾಳರನ್ನು ನಿಯಮಿಸಿದರು. ಮಣವಾಳರು ಅಮರಿಮಿತವಾದ ಭಕ್ತ್ಯಾದರಗಳಿಂದ ಆಚಾರ್ಯರ ಸೇವೆ ಸಲ್ಲಿಸುತ್ತಿರುವದನ್ನು ಕಂಡು ಹಿರಿಹಿಗ್ಗಿದ ತಿರುವಾಯ್ಮೊೞಿಪ್ಪಿಳ್ಳೈ ಮಣವಾಳರನ್ನು “ಯತೀಂದ್ರಪ್ರವಣ” ಎಂದು ಪ್ರೀತಿಯಿಂದ ಕರೆಯತೊಡಗಿದರು. ಒಂದು ರೀತಿಯಲ್ಲಿ ಇದು ಅವರಿಗೆ ಪ್ರಶಸ್ತಿಯೇ ಆದರೂ, ಅದು ಗುರುಗಳಿಂದ ಬಂದ ಪ್ರೀತಿಯ ಹೆಸರು ಎಂದರೆ ಒಪ್ಪುತ್ತದೆ.
“ಯತೀಂದ್ರ” ಎಂದರೆ “ಯತಿರಾಜ” ಎನ್ನಿಸಿಕೊಂಡ ಶ್ರೀರಾಮಾನುಜರು. “ಪ್ರವಣ” ಎಂದರೆ “ಶಿಷ್ಯ” ಆದ್ದರಿಂದ, “ಯತೀಂದ್ರಪ್ರವಣ” ಎಂದರೆ, ಯತಿರಾಜರ ಶ್ರೀರಾಮಾನುಜಾಚಾರ್ಯರ ನಮ್ರಶಿಷ್ಯ, ಎಂದು ಕರೆಯುವುದರಲ್ಲಿ ಮಣವಾಳರ ವಿಷಯದಲ್ಲಿ ಗುರುಗಳ ಮೆಚ್ಚಿಗೆ ಎಷ್ಟು ಹೆಚ್ಚಿನದು ಎಂಬುದನ್ನು ಸೂಚಿಸುತ್ತದೆ.
ಶ್ರೀರಾಮಾನುಜರು ಪ್ರತಿಪಾದಿಸಿದ ವಿಶಿಷ್ಟಾದ್ವೈತ ಸಿದ್ಧಾಂತವನ್ನು ಪ್ರಚುರಪಡಿಸಿದವರು ಮೂವರು ಸುಪ್ರಸಿದ್ಧ ಮಹನೀಯರು. ವೇದಾಂತದೇಶಿಕರು ಒಬ್ಬರು. ಪಿಳ್ಳೈ ಲೋಕಾಚಾರ್ಯರೂ ಮಣವಾಳ ಮಹಾಮುನಿಗಳೂ ಇನ್ನಿಬ್ಬರು. ಪಿಳ್ಳೈಲೋಕಾಚಾರ್ಯರು “ಮಣೀಪ್ರವಾಳ” ಶೈಲಿಯಲ್ಲಿ ರಾಮಾನುಜ ಸಿದ್ಧಾಂತಗಳನ್ನು ವಿವರಿಸುವ ಹದಿನೆಂಟು ಉದ್ಗ್ರಂಥಗಳನ್ನು ಬರೆದರು. ಮಣವಾಳ ಮಹಾಮುನಿಗಳು ಪಿಳ್ಳೈಲೋಕಾಚಾರ್ಯರ ಗ್ರಂಥಗಳಿಗೆ ಅದೇ “ಮಣಿಪ್ರವಾಳ” ದಲ್ಲಿ ವಿವರಣಾತ್ಮಕ ಗ್ರಂಥಗಳನ್ನು ಬರೆದು ಪ್ರಸಿದ್ಧಿಪಡೆದರು. ಅವರು ಮಹಾಮೇಧಾವಿಗಳು. ಸಕಲ ಶಾಸ್ತ್ರಪಾರಂಗತರು. ಆಚಾರ್ಯರು.
ಮಣಿಪ್ರವಾಳ ಶೈಲಿ- ಇದು ಸಂಸ್ಕೃತ ಮತ್ತು ತಮಿಳು ಪದಗಳ ಸರಳವಾದ ಸುಂದರವಾದ ಜೋಡಣೆಯಿಂದ ಉಂಟಾದ ಶೈಲಿ
೩೬
ಸಂಸ್ಕೃತ ಪದಗಳು “ಮಣಿ”- ಎಂದರೆ, ರತ್ನಗಳು, ತಮಿಳು ಪದಗಳು “ಪ್ರವಾಳ” ಎಂದರೆ ಹವಳ. ರತ್ನಗಳನ್ನೂ ಹವಳಗಳನ್ನೂ ಬಹುರಮ್ಯವಾಗಿ ಜೋಡಿಸಿ ಮಾಡಿರುವ ಶೈಲಿ ಅದು. ಮೂವರು ಪ್ರವರ್ತಕರೂ ಈ ಶೈಲಿಯಲ್ಲಿ ರಾಮಾನುಜ ಸಿದ್ಧಾಂತಗಳನ್ನು ಪ್ರತಿಪಾದಿಸಿದ್ದಾರೆ.
೩. ಲಕ್ಷ್ಮೀನಾಥ ಸಮಾರಂಭಾಂ ನಾಥಯಾಮುನ ಮಧ್ಯಮಾಂ|
ಅಸ್ಮದಾಚಾರ್ಯ ಪರ್ಯತಾಂ ವಂದೇ ಗುರು ಪರಂಪರಾಂ||
ಲಕ್ಷ್ಮೀನಾಥ= ಜಗಜ್ಜನನಿಯಾದ ಲಕ್ಷ್ಮೀದೇವಿಗೆ ಪತಿಯಾದ ಶ್ರೀಮನ್ನಾರಾಯಣನ್ನು, ಸಮಾರಂಭಾಂ=ಮೊದಲು ಮಾಡಿಕೊಂಡು, ನಾಥ= ನಾಥ ಮುನಿಗಳನ್ನೂ, ಯಾಮುನ= ಯಾಮುನ ಮುನಿಗಳನ್ನೂ, ಮಧ್ಯಮಾಂ= ನಡೂವೆಯಾಗಿ ಮಾಡಿಕೊಂಡು, ಅಸ್ಮತ್= ನಮ್ಮ, ಆಚಾರ್ಯ= ಆಚಾರ್ಯರ (ಗುರುಗಳ), ಪರ್ಯಂತಾಂ=ವರೆಗೂ, ಗುರುಪರಂಪರಾಂ= ಗುರುಗಳ ಪರಂಪರೆಯನ್ನು, ವಂದೇ= ನಮಸ್ಕರಿಸುತ್ತೇನೆ.
ಜಗಜ್ಜನನಿಯಾದ ಲಕ್ಷ್ಮೀದೇವಿಗೆ ಪತಿಯಾದ ಶ್ರೀಮನ್ನಾರಾಯಣನನ್ನು ಮೊದಲು ಮಾಡಿಕೊಂಡು, ನಾಥಮುನಿ ಯಾಮುನ ಮೌನಿಗಳನ್ನುನಡುವೆ ಮಾಡಿಕೊಂಡು, ಅವರಿಂದ ನಮ್ಮ ಈಗಿನ ಆಚಾರ್ಯರವರೆಗೂ ಬಂದಿರುವ ಗುರುಗಳ ಪರಂಪರೆಯನ್ನು ವಂದಿಸುತ್ತೇನೆ.
ಈ ತನಿಯನ್ನು ಕೂರತ್ತಾೞ್ವಾರರು ಕರುಣಿಸಿದ್ದು. ಕೂರತ್ತಾೞ್ವಾರರು ಶ್ರೀರಾಮಾನುಜರ ಪರಮ ಆಪ್ತ ಶಿಷ್ಯರಲ್ಲಿ ಒಬ್ಬರು. ಗುರುಭಕ್ತಿಯಲ್ಲಿಯೂ ಗುರುಸೇವೆಯಲ್ಲಿಯೂ ಅವರು ಆಂಜನೇಯನ ಹಾಗೆ. ಆದರ್ಶ ಶಿಷ್ಯರು. ಗುರುವಿಗೆ (ಶ್ರೀರಾಮಾನುಜರಿಗೆ) ಬಂದಿದ್ದ ಕುತ್ತದಿಂದ ಅವರನ್ನು ಪಾರುಮಾಡುವುದಕ್ಕಾಗಿ ಅವರಂತೆ ತಾವು ವೇಷ ಮರೆಸಿಕೊಂಡು ಹೋಗಿ, ಚಿತ್ರಹಿಂಸೆಗೆ ಒಳಗಾಗಿ ಪ್ರಾಣತ್ಯಾಗ ಮಾಡಿದ ಮಹಾತ್ಮರು ಇವರು.
ಜಗಜ್ಜನನಿಯಾಮಕನಾದ ಶ್ರೀಮನ್ನಾರಾಯಣನೇ ಪರಮಗುರು. ಪ್ರಾಪ್ಯನೂ ಪ್ರಾಪಕನೂ ವನೇ. ಅವನ ಕೃಪೆ ಅನುಗ್ರಹಗಳಿಗೆ ಪಾತ್ರರಾಗಲು ಜಗಜ್ಜನನಿಯೂ ಶ್ರೀಮನ್ನಾರಾಯಣನ ಪತ್ನಿಯೂ ಆಗಿರುವ ಲಕ್ಷ್ಮೀ (ಶ್ರೀ)ದೇವಿಯನ್ನು ಮೊದಲು ಸೇವಿಸಿ, ಆಕೆಯನ್ನು ಮೊದಲು ಒಲಿಸಿಕೊಳ್ಳಬೇಕು. ಶ್ರೀದೇವಿಯ ಕೃಪಾಶ್ರಯದಿಂದ ಭಗವಂತನ ಕೃಪೆ ದೊರಕುವುದು ಖಂಡಿತ. ಇದು ವಿಶಿಷ್ಟಾದ್ವೈತ ತತ್ತ್ವ. ಆದ್ದರಿಂದ, ಜಗತ್ಕಾರಣರಾದ ಈ ತಾಯಿತಂದೆಗಳ ಹೆಸರನ್ನು ಮೊದಲು ಸ್ಮರಿಸಿಕೊಳ್ಳುವುದು, ನಮಸ್ಕರಿಸುವುದು ಯುಕ್ತವಾಗಿದೆ.
೩೭
ನಾಥಮುನಿ (ಕ್ರಿ.ಶ.824-920)
ಆೞ್ವಾರರ ತರುವಾಯ ಗುರುಪರಂಪರೆಯಲ್ಲಿ ನಾಥಮುನಿಗಳೇ ಮೊದಲನೆಯವರು. ಆೞ್ವಾರರ ಪಾಶುರಗಳ ದಿವ್ಯಾರ್ಥಗಳನ್ನು ನಾಥಮುನಿ ಅರಿತು, ಅವುಗಳನ್ನು ಶೇಖರಿಸಿದರು. ಈ ಪಾಶುರಗಳನ್ನು ರಾಗವಾಗಿ ಹಾಡುವುದನ್ನು ಕಲಿಸಿ, ಜನಪ್ರಿಯಗೊಳಿಸಿದರು. ಅದನ್ನು “ದೇವಗಾನ” ಎಂದು ಕರೆದರು. ಸಂಸ್ಕೃತ ವೇದಾಂತವನ್ನೂ ದ್ರಾವಿಡ ಪ್ರಬಂಧಗಳ ವೇದಾಂತವನ್ನು ಸಮನ್ವಯಗೊಳಿಸಿ, ತಮ್ಮ ಶಿಷ್ಯರಿಗೆ ಬೋಧಿಸಿದರು. ಅವರ ಕೃತಿಯಾದ “ಯೋಗರಹಸ್ಯ”ದಲ್ಲಿ “ಭಗವಂತನಲ್ಲಿ ಒಂದಾಗುವ ಕಾರ್ಯವೇ ಯೋಗ” ಎಂದಿದ್ದಾರೆ.
ಯಾಮುನ ಮುನಿ (ಕ್ರಿ.ಶ.916-1042)-(ಯಾಮುನಾಚಾರ್ಯ)
ನಾಥಮುನಿಗಳ ಶ್ರೇಷ್ಠ ಆಧ್ಯಾತ್ಮಿಕ ಶಿಷ್ಯರು ಯಾಮುನಾಚಾರ್ಯರು. ಅವರು ಮಹಾ ಮೇಧಾವಿಗಳು. ಮಹಾಭಾಷ್ಯಭಟ್ಟ ಎಂಬವರಲ್ಲಿ ಶಿಷ್ಯರಾಗಿದ್ದುಕೊಂಡು ಅದ್ವಿತೀಯ ಪಾಂಡಿತ್ಯಗಳಿಸಿದರು. ಆಗ ದೇಶದ ರಾಜಸ್ಥಾನದಲ್ಲಿ ಅಕ್ಕಿಯಾೞ್ವಾನ್ ಎಂಬೊಬ್ಬ ಪಂಡಿತನಿದ್ದ. ತಾನೇ ಸರ್ವೋತ್ಕೃಷ್ಟ ಪಂಡಿತನೆಂದು ಹೆಮ್ಮೆಪಡುತ್ತಿದ್ದ. ಅವನಿಗೆ ದೇಶದಲ್ಲಿರುವ ಒಬ್ಬೊಬ್ಬ ಪಂಡಿತನೂ ತನ್ನ ಆದಾಯದ ಹತನ್ನೆಯ ಒಂದು ಭಾಗವನ್ನು ಕೊಡಬೇಕೆಂದು ರಾಜಾಜ್ಞೆ ಮಾಡಿಸಿದ್ದ. ಈ ಆಜ್ಞಾಪತ್ರ ಎಲ್ಲಾ ಪಂಡಿತರಿಗೂ ಹಂಚಲಾಯಿತು. ಅಂಥದೊಂದು ಯಾಮುನಾಚಾರ್ಯರ ಗುರುಗಳಿಗೂ ಬಂತು. ಅದನ್ನು ಯಾಮುನಾಚಾರ್ಯರು ಓದಿನೋಡಿ ಹರಿದು ಹಾಕಿದರು. ಈ ಕೆಚ್ಚಿನ ಕೆಲಸಕ್ಕಾಗಿ ಅವರನ್ನು ರಾಜನ ಆಸ್ಥಾನಕ್ಕೆ ಕರೆದೊಯ್ಯಲಾಯಿತು. ಯಾಮುನಾಚಾರ್ಯರಿಗೆ ತೊಂದರೆಯಾಗದಿರಲೆಂದು ರಾಣಿಯು ಹರಕೆ ಹೊತ್ತಳು. ಹಾಗೆಯೇ ಅವರು ವಾಗ್ವಾದದಲ್ಲಿ ಗೆದ್ದರೆ ತನ್ನ ರಾಜ್ಯದ ಅರ್ಧಭಾಗವನ್ನು ಕೊಡುವುದಾಗಿ ವಾಗ್ದಾನ ಮಾಡಿದರು. ಆಸ್ಥಾನದಲ್ಲಿ ಅಕ್ಕಿಯಾೞ್ವಾನನಿಗೂ ಯಾಮುನಾಚಾರ್ಯರಿಗೂ ವಾಗ್ವಾದ ನಡೆಯಿತು. ಅದರಲ್ಲಿ ಯಾಮುನಾಚಾರ್ಯರು ಗೆದ್ದರು. ಅಕ್ಕಿಯಾೞ್ವಾನನು ಅವರ ಶಿಷ್ಯನಾದನು. ರಾನೀಗೆ ಮಹದಾನಂದವಾಯಿತು. “ಆಳವಂದಾರ್”- (ನಮ್ಮನ್ನು ಆಳಲು ಬಂದರು)- ಎಂದು ಗೌರವಾದರಗಳಿಂದ ಅವರನ್ನು ಕರೆದಳು. ರಾಜನೂ ತನ್ನ ವಾಗ್ದಾನವನ್ನು ಉಳಿಸಿಕೊಂಡನು. ಯಾಮುನಾಚಾರ್ಯರು ಪ್ರೀತಿಯ ಹೆಸರಾದ “ಆಳವಂದಾರ್” ಆಗಿ ಕೆಲವು ವರ್ಷಗಳು ರಾಜ್ಯಭಾರ ಮಾಡಿದರು. ಆದರೆ, ಅವರ ಬದುಕು ದೇವರ ಸೇವೆಯಲ್ಲಿ ಸಾಗಬೇಕಾಗಿತ್ತಾದ್ದರಿಂದ
೩೮
ತಮ್ಮ ರಾಜ್ಯಭಾರವನ್ನು ತ್ಯಜಿಸಿ, ಶ್ರೀರಂಗದಲ್ಲಿದುಉಕೊಂಡು ಶ್ರೀರಂಗನಾಥಸ್ವಾಮಿಗೆ ಕೈಂಕರ್ಯ ನಡಸುತ್ತಾ, ತಮ್ಮ ಶಿಷ್ಯರಿಗೆ ಪ್ರವಚನ ನೀಡುತ್ತಾ, ವಿರಕ್ತರಾಗಿ ನಿಃಸ್ವಾರ್ಥ ಜೀವನ ನಡಸಿದರು. ಭಕ್ತಿ ನಮ್ರತೆಗಳಲ್ಲಿ ಅವರು ಅಗ್ರಗಣ್ಯರಾಗಿದ್ದರು. ಅವುಗಳ ವೈಶಿಷ್ಟ್ಯದಿಂದ ಶ್ರೀರಂಗನಾಥನ ಸಾಕ್ಷಾತ್ಕಾರ ಪಡೆದರು.
ಆಳವಂದಾರರು ರಚಿಸಿದ ಸ್ತೋತ್ರರತ್ನ, ಸಿದ್ಧಿತ್ರಯ ಮತ್ತು ಆಗಮಪ್ರಾಮಾಣ್ಯ ಗ್ರಂಥಗಳು ವಿಶಿಷ್ಟಾದ್ವೈರ ಸಿದ್ಧಾಂತಕ್ಕೆ ಅಡಿಗಲ್ಲು. ತಮ್ಮ ಮೊಮ್ಮಗನಾದ ರಾಮಾನುಜರ ಚುರುಕು ಬುದ್ಧಿಯನ್ನೂ ದೈವಭಕ್ತಿಯನ್ನೂ ಕಂಡು ತಮ್ಮ ಬಳಿಕ ತಮ್ಮ ಸಿದ್ಧಾಂತವನ್ನು ನೆಲೆಗೊಳಿಸುವವರು ಅವರೇ ಎಂದು ನಿರ್ಧರಿಸಿದರು. ಅವರ ಮಾತು ಸತ್ಯವಾಯಿತು. ರಾಮಾನುಜರು ಆಚಾರ್ಯರಾದರು.
ತಮ್ಮ ಶಿಷ್ಯ ವೃಂದಕ್ಕೆ ಅವರು ಹೇಳಿದ ಕಡೆಯ ಮಾತುಗಳಿವು. “ಸಾತ್ಮರೇ, ರಂಗನಾಥನ ದೇವಾಲಯವನ್ನು ಕಾಪಾಡಿಕೊಂಡು ಬನ್ನಿ. ಅವನೇ ನಿಮಗೆ ರಕ್ಷಕನು. ಅವನಿಗೆ ಪರಮಪ್ರಿಯನಾದ ಪಂಚಮಜಾತಿಯ ತಿರುಪ್ಪಾಣಾೞ್ವಾರರನ್ನು ನಿಮ್ಮ ಆದರ್ಶವನ್ನಾಗಿ ಮಾಡಿಕೊಳ್ಳಿರಿ ರಂಗನಾಥನ ಚರಣಾರವಿಂದವನ್ನು ನಂಬಿ ಬಿಡದೆ ಅಱಿಸಿ ಗುರುಸೇವೆಮಾಡಿ”.
೪. ಯೋ ನಿತ್ಯಮಚ್ಯುತ ಪದಾಂಬುಜಯುಗ್ಮರುಕ್ಮ-
ವ್ಯಾಮೋಹಿತಸ್ತದಿತರಾಣಿ ಶೃಣಾಯಮೇನೇ|
ಅಸ್ಮದ್ಗುರೋರ್ಭಗವತೋಽಸ್ಯ ದಯೈಕಸಿಂಧೋಃ
ರಾಮಾನುಜಸ್ಯ ಚರಣೌ ಶರಣಂ ಪ್ರಪದ್ಯೇ ||
ಯಃ=ಯಾರು, ನಿತ್ಯಂ= ಅನುದಿನವೂ, ಅಚ್ಯುತ= ನಾಶರಹಿತನಾದ ಶ್ರೀಮನ್ನಾರಾಯಣನ, ಪದಾಂಬುಜಯುಗ್ಮ= ಕಮಲದಂತೆ (ಸುಂದರವಾಗಿಯೂ ಕೋಮಲವಾಗಿಯೂ) ಇರುವ ಎರಡು ಪಾದಗಳೆಂಬ, ರುಕ್ಮ= ಚಿನ್ನದಲ್ಲಿ ವ್ಯಾಮೋಹಿತಃ= ಆಶೆ ಹೊಂದಿದ್ದರೋ, ತದ್ ಇತರಾಣಿ= ಮಿಕ್ಕ ಎಲ್ಲವುಗಳನ್ನೂ, ಶೃಣಾಯ= ಹುಲ್ಲಿಗೆ ಸಮನೆಂದು (ಹುಲ್ಲಿನ ಹಾಗೆ,)ಮೇನೇ= ತಿಳಿದಿದ್ದರೋ, ಅಂಥ, ಅಸ್ಮದ್ಗುರೋಃ= ನಮ್ಮಾ ಗುರುಗಳೂ, ಭಗವತಃ= ದೈವಸ್ವರೂಪರೂ, ದಯೈಕಸಿಂಧೋಃ= ದಯಾಸಾಗರರೂ, ಆದ, ಅಸ್ಯ ರಾಮಾನುಜಸ್ಯ= ಈ ರಾಮಾನುಜರ, ಚರಣೌ= ಎರಡು ಪಾದಗಳನ್ನು, ಶರಣಂ= ರಕ್ಷಣೆಗಾಗಿ, ಪ್ರಪದ್ಯೇ= ಆಶ್ರಯಿಸುತ್ತೇನೆ.
೩೯
ಯಾರು ಅನುದಿನವೂ ಶ್ರೀಮನ್ನಾರಾಯಣನ ಪಾದಕಮಲಗಳೆಂಬ ಅಮೂಲ್ಯವಸ್ತು (ಚಿನ್ನ)ವಿನಲ್ಲೇ ಅತಿಶಯವಾಗಿ ಮೋಹಗೊಂಡಿದ್ದರೋ, ಮಿಕ್ಕೆಲ್ಲ ಪ್ರಾಪಂಚಿಕ ವಸ್ತುಗಳನ್ನು ತೃಣಕ್ಕೆ(ಹುಲ್ಲಿಗೆ) ಸಮನಾಗಿ ಭಾವಿಸಿದ್ದರೋ ಅಂಥ ದೈವಸ್ವರೂಪರೂ ದಯಾಸಾಗರರೂ ನಮ್ಮ ಗುರುಗಳೂ ಆದ ಶ್ರೀರಾಮಾನುಜರ ಪಾದಗಳೆರಡನ್ನೂ ಶರಣೆಂದು ಆಶ್ರಯಿಸುತ್ತೇನೆ.
ಈ ತನಿಯನ್ನು ರಾಮಾನುಜರ ಆತ್ಮೀಯ ಶಿಷ್ಯರಲ್ಲಿ ಒಬ್ಬರಾದ ಕೂರತ್ತಾೞ್ವಾರರು ಕರುಣಿಸಿದ್ದು. ಶಿಷ್ಯನಾದವನು ಎಂಥ ಸದ್ಗುರುವನ್ನು ಅನುಸರಿಸಬೇಕು. ಆ ಗುರುವಿನ ಲಕ್ಷಣಗಳೇನು, ಆ ಗುರುವನ್ನು ಆಶ್ರಯಿಸುವುದು ಹೇಗೆ ಎಂಬುದು ಇದರ ಸಾರಾಂಶ. ಗುರುವಿಗೆ ಎಲ್ಲಾ ಧರ್ಮಗಳೂ ಅಗ್ರಸ್ಥಾನ ಕೊಟ್ಟಿವೆ. ಗುರುವೇ ದೇವರತ್ತ ದಾರಿ ತೋರಿಸುವವನು. ಗುರುಸೇವೆ ಮಾಡುವುದು, ಗುರುವನ್ನು ಒಲಿಸಿಕೊಳ್ಳೂವುದು, ಗುರೂಪದೇಶ ಪಡೆಯುವುದು, ಅದನ್ನು ಚಾಚೂ ತಪ್ಪದಂತೆ ಶ್ರದ್ಧೆಯಿಂದ ಪಾಲಿಸಿಕೊಂಡು ಬರುವುದು- ಇವು ಆಧ್ಯಾತ್ಮಿಕ ಶ್ರದ್ಧೆಯನ್ನು ಬೆಳಸುವ ಕ್ರಮ. ಆದ್ದರ್ದ, ಗುರುವಿನಲ್ಲಿ ಸಮಾಶ್ರಯಣ ಮಾಡುವುದು ಮುಖ್ಯ. ಇದು ಎಲ್ಲ ಧರ್ಮಗಳಿಗೂ ಅನ್ವಯಿಸುತ್ತದೆ. ಇಲ್ಲಿ, ವಿಶಿಷ್ಟಾದ್ವೈತ ಆಚಾರ್ಯರಾದ ಶ್ರೀರಾಮಾನುಜರನ್ನು ಆರಿಸಿ ಹೇಳಿದೆ.
ಶ್ರೀರಾಮಾನುಜಚಾರ್ಯರು (ಕ್ರಿ.ಶ.1017-1137)
ಮದರಾಸಿನ ಬಳಿ ಇರುವ ಪೆರಂಬದೂರ್ ಎಂಬ ಗ್ರಾಮದಲ್ಲಿ ಜನಿಸಿದರು. ಇವರ ತಂದೆ ಆಸೂರಿ ಕೇಶವಭಟ್ಟ ಅಥವಾ ಕೇಶವ ಸೋಮಯಾಜಿ. ತಾಯಿ ಕಾಂತಿಮತಿ. ಬಾಲ್ಯವಿದ್ಯಾಭ್ಯಾಸ ಇವರ ಸೋದರ ಮಾವಂದಿರಾದ ಶ್ರೀಶೈಲ ಪೂರ್ಣರಲ್ಲಿ ನಡೆಯಿತು. ತಾರುಣ್ಯದಲ್ಲಿ ಯಾದವಪ್ರಕಾಶ ಎಂಬ ಅದ್ವೈತ ಪಂಡಿತರಲ್ಲಿ ನಡೆಯಿತು. ಶ್ರುತಿಗಳ ಅರ್ಥವಿವರಣೆಯ ವಿಷಯದಲ್ಲಿ ಗುರುಶಿಷ್ಯರಿಗೆ ವೈಮನಸ್ಯ ಬಂದದ್ದರಿಂದ, ಇವರು ಬೇರೆಬೇರೆ ಐವರುಗುರುಗಳನ್ನು ಆಶ್ರಯಿಸಿ ತಮ್ಮ ವಿದ್ಯಾಭ್ಯಾಸವನ್ನು ಪೂರ್ತಿಗೊಳಿಸಿದರು; ಮತ್ತು ಸಂಸ್ಕೃತ, ದ್ರಾವಿಡ ವೇದಾಂತಗಳ (ಎಂದರೆ, ಉಭಯ ವೇದಾಂತ) ತತ್ತ್ವಗಳನ್ನು ಗ್ರಹಿಸಿದರು. ಅಗಿನ ಚೋಳರಾಜ ಕುಲೋತ್ತುಂಗನ (ಕ್ರಿ.ಶ 1074-1118) ರಾಜ್ಯದಲ್ಲಿ ಇವರು ನಿಲ್ಲುವುದು ಅಸಾಧ್ಯವಾಯಿತು. ಆದ್ದರಿಂದ, ಇವರು ಕನ್ನಡ ದೇಶಕ್ಕೆ ವಲಸೆ ಹೊರಟು ಸಾಲಿಗ್ರಾಮ ಎಂಬ ಹಳ್ಳಿಯಲ್ಲಿ ಹನ್ನೆರಡು ವರ್ಷಗಳ ಕಾಲ ನೆಲಸಿದ್ದರು. ಅಲ್ಲಿ ಅನೇಕರು ಅವರ ಪ್ರಭಾವಕ್ಕೆ ಒಳಪಟ್ಟು ವೈಷ್ನರಾದರು. ಬಿಟ್ಟಿದೇವನೆಂಬ ಕನ್ನಡ ಅರಸು ವೈಷ್ಣವನಾಗಿ ವಿಷ್ಣುವರ್ಧನನಾದನು. ಅನಂತರ ಆಚಾರ್ಯರು ಮೇಲುಕೋಟೆಗೆ ತೆರಳಿ, ಅಲ್ಲಿ ನೆಲಸಿ, (ಕ್ರಿ.ಶ.1086-1100) ತಿರುನಾರಾಯಣ ಸ್ವಾಮಿಯ ದೇವಾಲಯವನ್ನು ಜೀಣೋದ್ಧಾರ ಮಾಡಿದರು. ಮತ್ತು ಸ್ವಾಮಿಯ ಪೂಜಾದಿಗಳನ್ನು ವ್ಯವಸ್ಥೆಗೊಳಿಸಿದರು. ಕ್ರಿ.ಶ.1118ರಲ್ಲಿ ಕುಲೋತ್ತುಂಗನ ಮರಣದ ನಂತರ, ಇವರು ತಮಿಳುದೇಶಕ್ಕೆ ಮತ್ತೆ ತೆರಳಿದರು. ಶ್ರೀರಂಗದಲ್ಲಿದ್ದುಕೊಂಡು, ನೆಚ್ಚಿನ ಶಿಷ್ಯ
೪೦
ವೃಂದವನ್ನು ಬೆಳಸಿ, ವಂಶೋದ್ಧರಣ ಕಾರ್ಯದಲ್ಲಿ ಕಾಲ ಕಳಯುತ್ತಾ, ನೂರಿಪ್ಪತ್ತು ವರ್ಷಗಳ ಕಾಲ ಬದುಕಿದರು. ಶ್ರೀಭಾಷ್ಯ, ವೇದಾಂತದೀಪ, ವೇದಾಂತಸಾರ, ವೇದಾಂತ ಸಂಗ್ರಹ, ಭಗವದ್ಗೀತಾ ಭಾಷ್ಯ ಇತ್ಯಾದಿ ಗ್ರಂಥಗಳನ್ನು ರಚಿಸಿದರು. ಇವರ ತರುವಾಯ ಬಂದ ಇವರ ಶಿಷ್ಯರು ಈ ಗ್ರಂಥಗಳಿಗೆ ವಿವರಣೆ ವ್ಯಾಖ್ಯಾನಗಳನ್ನು ಬರೆದು ಪ್ರಚುರ ಪಡಿಸಿದರು.
೫. ಮಾತಾ ಪಿತಾ ಯುವತಯಸ್ತನಯಾ ವಿಭೂತಿಃ
ಸರ್ವಂ ಯದೇವ ನಿಯಮೇನ ಮದನ್ವಯಾನಾಂ||
ಆದ್ಯಸ್ಯ ನಃ ಕುಲಪತೇರ್ವಕುಳಾಭಿರಾಮಂ
ಶ್ರೀಮತ್ತದಂಘ್ರಿಯುಗಳಂ ಪ್ರಣಮಾಮಿ ಮೂರ್ಧ್ನಾ||
ಮತ್= ನಮ್ಮ, ಅನ್ವಯಾನಾಂ= ಕುಲದವರೆಲ್ಲರಿಗೂ, ನಿಯಮೇನ= ಕ್ರಮವಾಗಿ, ಮತಾ= ತಾಯಿ, ಪಿತಾ= ತಂದೆ, ಯುವತಯಃ=ಸ್ತ್ರೀಯರು, ತನಯಾಃ= ಮಕ್ಕಳು, ವಿಭೂತಿಃ= ಐಶ್ವರ್ಯ, ಸರ್ವಂ= ಎಲ್ಲವೂ, ಯತ್ ಏವ= ಯಾವುದಾಗಿದೆಯೋ, ತತ್=ಆ, ನಃ= ನಮ್ಮ, ಆದ್ಯಸ್ಯ= ಮೊಟ್ಟಮೊದಲಿನ, ಕುಲಪತೇಃ= ಕುಲಕ್ಕೆ ಆಚಾರ್ಯರ, ವಕುಳಾಭಿರಾಮಂ= ವಕುಳಾಭರಣ ಎಂಬ ಹೆಸರಿನ, ಶ್ರೀಮತ್= ಶ್ರೇಷ್ಠವಾದ, ಅಂಘ್ರಿಯುಗಳಂ=ಎರಡು ಪಾದಗಳನ್ನು, ಮೂರ್ಧ್ನಾ=ತಲೆಯಿಂದ, ಪ್ರಣಮಾಮಿ= ನಮಸ್ಕರಿಸುತ್ತೇನೆ.
ನಮ್ಮ ಕುಲದವರೆಲ್ಲರಿಗೂ ಕ್ರಮವಾಗಿ ತಾಯಿ,ತಂದೆ, ಹೆಂಡಿರು, ಮಕ್ಕಳು ಸಂಪತ್ತು ಎಲ್ಲವೂ ಆಗಿರುವ, ವಕುಳಾಭರಣ ಎಂಬ ಹೆಸರಿನ ಆದ್ಯಕುಲಪತಿ ಎನ್ನಿಸಿಕೊಂಡವರ ಎರಡು ಪಾದಗಳಿಗೆ ತಲೆಯಿಂದ ನಮಸ್ಕರಿಸುತ್ತೇನೆ.
ಈ ತನಿಯನ್ನು ಆಳವಂದಾರರು (ಯಾಮುನಾಚಾರ್ಯರು) ಕರುಣಿಸಿದ್ದು.
ಯಾಮುನಾಚಾರ್ಯರ ತಾತಂದಿರಾದ ನಾಥಮುನಿ ಧ್ಯಾನದಲ್ಲಿರುವಾಗ ನಮ್ಮಾೞ್ವಾರರು ಗೋಚರಿಸಿ ದಿವ್ಯಪ್ರಬಂಧವನ್ನು ಪೂರ್ತಿಯಾಗಿ ಉಪದೇಶಮಾಡಿದರು. ಇದರಿಂದ ಅವರು ವಿಶಿಷ್ಟಾದ್ವೈತ ಸಿದ್ಧಾಂತಗಳನ್ನು ಪ್ರಕಟ ಮಾಡಿದರು. ಈ ಕಾರಣದಿಂದ ನಮ್ಮಾೞ್ವಾರರು “ಆದ್ಯಕುಲಪತಿ” ಆದರು.
ಆದರೆ, ಶ್ರೀಮನ್ನಾರಾಯಣನೇ ಪರಮಗುರುವಾದದ್ದರಿಂದ ಆದ್ಯಕುಲಪತಿ-ಶ್ರೀಮನ್ನಾರಾಯಣನೇ ಎಂದೂ ಅರ್ಥ ಮಾಡುತ್ತಾರೆ.
ಆೞ್ವಾರರಲ್ಲಿ ಪರಮಶ್ರೇಷ್ಠರೆಂದು ಹೆಸರು ಪಡೆದವರು ಶಠಗೋಪರು.
ವೇದಗಳು ಸಂಸ್ಕೃತ ಭಾಷೆಯಲ್ಲಿವೆ. ಹಿಂದೆ ಅವನ್ನು ಕಲಿಯಲು ಕೆಲವು ಕಟ್ಟುಪಾಡುಗಳೀದ್ದವು. ಎಷ್ಟೇ ಆಸಕ್ತಿಯಿರಲಿ, ವೇದ ಕಲಿಯಲು ಅಧಿಕಾರ ಎಲ್ಲರಿಗೂ ಇಲ್ಲವಾಗಿತ್ತು. ಶಠಗೋಪರು ಇದನ್ನು ಯೋಚಿಸಿದರು. ವೇದಾರ್ಥಗಳನ್ನು ಸರಳವಾಗಿ, ಯಥಾರ್ಥವಾಗಿ, ಯಾವ ಕಟ್ಟೂಪಾಡೂ ಇಲ್ಲದಂತೆ, ಎಲ್ಲರೂ ಕಲಿಯಲು, ತಿಳಿಯಲು ಅನುಕೂಲಿಸುವಂತೆ ಸಂಸ್ಕೃತ ವೇದಗಳನ್ನು ತಮಿಳಿನಲ್ಲಿ ರಚಿಸಿದರು. ಈ ಕಾರಣದಿಂದ ಇವರಿಗೆ “ವೇದ ತಮಿೞ್ ಶೈದ ಮಾರನ್” ಎಂಬ ಬಿರುದು.
೪೧
ಇವರು ಬರೆದಿರುವ “ತಿರುವರುತ್ತಂ”- ಎಂಬುದು ಋಗ್ವೇದದ ಸಾರ; “ತಿರುವಾಶಿರಿಯಂ”-ಎಂಬುದು ಯಜುರ್ವೇದದ ಸಾರ; “ತಿರುವಾಯ್ ಮೊೞಿ” ಎಂಬುದು ಸಾಮವೇದದ ಸಾರ ಮತ್ತು “ಪೆರಿಯ ತಿರುವಂದಾದಿ”- ಎಂಬುದು ಅಥರ್ವಣ ವೇದದ ಸಾರ.
ಇವರಿಗೆ “ಮಾರನ್”, “ಪರಾಂಕುಶ”, “ವಕುಳಾಭರಣ” ಎಂಬ ಹೆಸರುಗಳಿವೆ. ವೆಳ್ಳಾಳ ಕುಲದ ತಂದೆ ತಾಯಿಗಳು ಇಟ್ಟ ಹೆಸರು “ಮಾರನ್” ಎಂದು. ವಕುಳಪುಷ್ಪಮಾಲಿಕೆ ಧರಿಸುತ್ತಿದ್ದದ್ದರಿಂದ “ವಕುಳಾಭರಣ” ಎಮ್ದು ಹೆಸರು. ಆದರೆ, ಎಲ್ಲಕ್ಕಿಂತ ಮಿಗಿಲಾಗಿ, ಇವರಿಗೆ ಬಂದ ಪ್ರೀತಿಯ ಹೆಸರು “ನಮ್ಮಾೞ್ವಾರ್”.
ಪ್ರಥಮ ಗುರುವಿನ ಪಾದಗಳೀಗೆ “ಶಠಾರಿ” ಎಂದು ಹೆಸರು. ಭಗವಂತನಾದ ಶ್ರೀಮನ್ನಾರಾಯಣನೇ ಪರಮಗ್ರುವಾದಾದ್ದರಿಂದ ಆತನ ದಿವ್ಯ ಪಾದಗಳು ಶಠಾರಿ. ಅಂತೆಯೇ, ನರರೂಪದಲ್ಲಿ ಬಂದ ಆದಿಗುರುವಿನ ದಿವ್ಯಪಾದಗಳೂ ಶಠಾರಿ.
ಟೋಪಿಯಂತೆ ದುಂಡಗೆ ಎತ್ತರವಾಗಿರುವ ಪೀಠದ ಮೇಲೆ ಎರಡು ಪಾದಗಳ ಗುರುತಿರುತ್ತದೆ. ಇದನ್ನೆಲ್ಲ ಪಂಚಲೋಹದಿಂದಲೋ ಬೆಳ್ಳಿಯಿಂದಲೋ ಮಾಡಿರುತ್ತಾರೆ. ಶ್ರೀವೈಷ್ಣವ ದೇವಾಲಯಗಳಲ್ಲಿ ಇದನ್ನು ಭಕ್ತನ ತಲೆಯಮೇಲೆ ಸೋಕಿಸುವುದು ವಾಡಿಕೆ. ಗುರುವಿನ ಅಥವಾ ಭಗವಂತನ ಪಾದಗಳು ನಮ್ಮ ತಲೆಯ ಮೇಲಿದ್ದು ನಮಗೆ ರಕ್ಷೆಯಾಗಿರುವುದು ಎಂದು ಇದರ ಅರ್ಥ. ಇದೇ ಶಾಠಾರಿ ಸೇವೆ.
ಇಲ್ಲಿ ಆೞ್ವಾರ್, ಆಚಾರ್ಯ- ಎಂಬುದರ ಅರ್ಥವಿವರಣೆ ಕೊಡುವುದು ಉಚಿತವೆನ್ನಿಸುತ್ತದೆ. ಆೞ್ವಾರರು ಭಕ್ತರು, ಕವಿಗಳು, ಆತ್ಮಜ್ಞಾನಿಗಳು, ಪ್ರಪನ್ನರು. ಅವರು ಹಾಡಿದ್ದು ಭಕ್ತಿಗೀತೆಗಳು. ಅವರು ತಮ್ಮಷ್ಟಕ್ಕೆ ತಾವು ಅನುಭವಿಸಿ ಆನಂದಿಸಿದವರು. ಆಚಾರ್ಯರೂ ಭಕ್ತರೇ, ಪ್ರಪನ್ನರೇ. ಅವರು ದಾರ್ಶನಿಕರು, ಮತಪ್ರವರ್ತಕರು, ಮಾರ್ಗದರ್ಶಕರು. ಆೞ್ವಾರರು ಹಾಡಿದ ಭಕ್ತಿಗೀತೆಗಳಲ್ಲಿ ಅಡಗಿದ್ದ ತತ್ತ್ವಗಳನ್ನು ಕಂಡುಕೊಂಡು ಸರಳವಾದ ರೀತಿಯಲ್ಲಿ, ತಮ್ಮ ಶಿಷ್ಯರ ಮೂಲಕ, ಅವನ್ನು ಪ್ರಚಾರ ಮಾಡಿದರು. ಆದ್ದರಿಂದ ಆೞ್ವಾರರೂ ಆಚಾರ್ಯರೂ ಪೂಜಾರ್ಹರು.
೬. ಭೂತಂ ಸರಶ್ಚ ಮಹದಾಹ್ವಯ ಭಟ್ಟನಾಥ |
ಶ್ರೀಭಕ್ತಿಸಾರ ಕುಲಶೇಖರ ಯೋಗಿ ವಾಹಾನ್ |
ಭಕ್ತಾಂಘ್ರಿರೇಣು ಪರಕಾಲ ಯತೀಂದ್ರಮಿಶ್ರಾನ್
ಶ್ರೀಮತ್ಪರಾಂಕುಶ ಮುನಿಂ ಪ್ರಣತೋಸ್ಮಿ ನಿತ್ಯಂ||
ಭೂತಂ= ಭೂಟಮುನಿ, ಸರಃ ಚ= ಸರೋ ಯೋಗಿ, ಮಹದಾಹ್ವಯ= ಮಹದಾಹ್ವಯರು, ಭಟ್ಟನಾಥ= ಭಟ್ಟನಾಥರು, ಶ್ರೀಭಕ್ತಿಸಾರ= ಭಕ್ತಿಸಾರರು
೪೨
ಕುಲಶೇಖರ= ಕುಲಶೇಖರರು, ಯೋಗಿವಾಹಾನ್= ಯೋಗಿವಾಹರು, ಭಕ್ತ ಅಂಘ್ರಿ ರೇಣು= ಭಕ್ತರ ಪಾದಧೂಳಿ, ಪರಕಾಲ= ಪರಕಾಲರು, ಯತೀಂದ್ರಮಿಶ್ರಾನ್= ಯತಿರಾಜರಾದ ರಾಮಾನುಜರು, ಶ್ರೀಮತ್ ಪರಾಂಕುಶ ಮುನಿಂ= ಶ್ರೇಷ್ಠರಾದ ಪರಾಂಕುಶ ಮುನಿಗಳು,ಇವರನ್ನು, ನಿತ್ಯಂ= ಎಲ್ಲ ಕಾಲದಲ್ಲೂ, ಪ್ರಣತೋಸ್ಮಿ= ನಮಸ್ಕರಿಸುವವನಾಗಿದ್ದೇನೆ.
ಭೂತಮುನಿ, ಸರೋಯೋಗಿ, ಮಹದಾಹ್ವಯರು, ಭಟ್ಟನಾಥರು, ಭಕ್ತಿಸಾರರು, ಕುಲಶೇಖರರು, ಯೋಗಿವಾಹರು, ಭಕ್ತರ ಪಾದಧೂಳಿ ಎನ್ನಿಸಿಕೊಂಡವರು, ಪರಕಾಲರು, ಯತಿರಾಜರು, ಪರಾಂಕುಶರು-ಇವರುಗಳನ್ನು ಎಲ್ಲ ಕಾಲದಲ್ಲೂ ನಮಸ್ಕರಿಸುತ್ತೇನೆ.
ಈ ತನಿಯನ್ನು ಆಳವಂದಾರರು ಕರುಣಿಸಿದ್ದು. ಇಲ್ಲಿ ಹನ್ನೊಂದು ಹೆಸರುಗಳು ಬಂದಿವೆ. ಯತೀಂದ್ರ ಎಂದರೆ ಯತಿರಾಜರಾದ ರಾಮಾನುಜರು. ಅವರನ್ನು ಬಿಟ್ಟರೆ, ಉಳಿದ ಹತ್ತು ಹೆಸರುಗಳು ಆೞ್ವಾರರದು. ಎಲ್ಲರೂ ಪ್ರಸಿದ್ಧರು. ಇಲ್ಲಿ ಹೇಳಿರುವುದು ಆೞ್ವಾರರ ಸಂಸ್ಕೃತದ ಹೆಸರುಗಳನ್ನು. ಅವರಿಗೆ ತಮಿಳಿನ ಹೆಸರುಗಳೂ ಉಂಟು. ಈ ಕೆಳಗೆ ಎರಡನ್ನೂ ಜೊತೆಯಲ್ಲಿ ಕೊಟ್ಟಿದೆ.
ಸಂಸ್ಕೃತದ ಹೆಸರು ತಮಿಳಿನ ಹೆಸರು ಗ್ರಂಥ-ಪಾಶುರ
೧.ಭೂತಮುನಿ ಪೂದತ್ತಾೞ್ವಾರ್ 1:100 ಪಾಶುರ
೨.ಸರೋಯೋಗಿ ಪೊಯ್ ಗೈಯಾೞ್ವಾರ್ 1:100 “
೩.ಮಹದಾಹ್ವಯ ಪೇಯಾೞ್ವಾರ್ 1:100 “
೪.ಭಟ್ಟನಾಥ(ವಿಷ್ಣುಭಕ್ತಿ)ಪೆರಿಯಾೞ್ವಾರ್ 2:473 “
೫.ಭಕ್ತಿಸಾರ ತಿರುಮುಳಿಶೈ ಆೞ್ವಾರ್ 2:216 “
೬.ಕುಲಶೇಖರ ಕುಲಶೇಖರಾೞ್ವಾರ್ 1:105 “
೭.ಯೋಗಿವಾಹರು ತಿರುಪ್ಪಾಣಾೞ್ವಾರ್ 1:10 “
೮. ಭಕ್ತಾಂಘ್ರಿರೇಣು
(ವಿಪ್ರನಾರಾಯಣ) ತೊಂಡರಡಿಪ್ಪೊಡಿಯಾೞ್ವಾರ್ 2:55 “
೯.ಪರಕಾಲ ತಿರುಮಂಗೈಯಾೞ್ವಾರ್ 6:1361 “
೧೦.ಪರಾಂಕುಶ (ಶಠಗೋಪ) ನಮ್ಮಾೞ್ವಾರ್ 4:1296 “
೧೧.ಮಧುರಕವಿ ಮಧುಕವಿಯಾೞ್ವಾರ್ 1:11 “
೧೨.ಗೋದಾದೇವಿ ಆಂಡಾಳ್ 2:173 “
4000 ಪಾಶುರ
ಭಗವಂತನ ಪ್ರಸಿದ್ಧ ಅವತಾರಗಳು ಹತ್ತು. ಆೞ್ವಾರರು ಹತ್ತು ಮಂದಿ ಎಂದೆಣಿಸಿ ಇವರೂ ಭಗವಂತನ ಅವತಾರಗಳೆಂದಿದ್ದಾರೆ. ಆದರೆ, ಆೞ್ವಾರರು ಹನ್ನೆರಡು ಮಂದಿ. ಎಲ್ಲರೂ ಪ್ರಸಿದ್ಧರೇ. ಕಡೆಯ ಎರಡು ಹೆಸರುಗಳನ್ನುಳಿದು ಹತ್ತು ಹೆಸರುಗಳನ್ನು ಪಾಶುರದಲ್ಲಿ ಕೊಟ್ಟಿದೆ. ಮಧುರಕವಿ ವಿಷ್ಣುಚಿತ್ತರ ಪ್ರಿಯಶಿಷ್ಯ, ಗೋದಾದೇವಿ ಅವರ ಸಾಕುಮಗಳು ಭಟ್ಟನಾಥರನ್ನು ನಮಸ್ಕರಿಸುವಾಗಲೇ ಇವರನ್ನು ಸ್ಮರಿಸಿಕೊಂಡಂತೆಯೇ ಎಂದು ಭಾವಿಸಬೇಕು.
ಮೊದಲು ಮೂವರನ್ನು ಪೂರ್ವಾಚಾರ್ಯರೆಂದೂ, ಅನಂತರ ಮೂವರನ್ನು ನಡುಕಾಲದವರೆಂದೂ, ಕಡೆಯಲ್ಲಿ ಬಂದವರನ್ನು ಈಚಿನವರೆಂದೂ ವಿಂಗಡಿಸಿದ್ದಾರೆ.
೪೩
೮೨
೫. ಗ್ರಂಥ ಋಣ.
- Alwar of South India- K.C. Varadachari
- Ramanuja’s Teachings in his own words-M. Yamunacharya.
- Vedanta Deshika- Dr. Satyavrata Singh
- ಭಾರತೀತ ಸಂಸ್ಕೃತಿ ದರ್ಶನ- ಸರಕಾರದ ಪ್ರಕಟಣೆ.
- ದಿವ್ಯಸೂರಿ ಚರಿತೆ- ಡಿ. ಕೃಷ್ಣೈಯ್ಯಂಗಾರ್
- ಶ್ರೀ ರಾಮಾನುಜ- ಜಿ.ಎನ್.ಎಸ್. ದೇಶಿಕನ್
- ರಾಮಾನುಜ ದರ್ಶನ- ಕೆ.ಎಸ್. ರಾಮಚಂದ್ರರಾವ್
- ಶ್ರೀವಿಷ್ಣುಚಿತ್ತ- ಜಿ.ಪಿ. ರಾಜರತ್ನಂ
- ತಿರುಪ್ಪಲ್ಲಾಣ್ಡು(ತಮಿಳು)- ಶ್ರೀಸೂಕ್ತಿ ಮಾಲಾ.
- ತಿರುಪ್ಪಲ್ಲಾಣ್ಡು (ತಮಿಳು)- ಪಿ.ಬಿ.ಅಣ್ಣಂಗ್ರಾಚಾರ್ಯರ್ ಸ್ವಾಮಿಗಳು.
ಇತ್ಯಾದಿ.