+गरणि

ಸುಮಾರು ದಶಕಗಳ ಹಿಂದೆಯೇ ಕೀರ್ತಿಶೇಷರಾದ ಉ.ವೇ. ಶ್ರೀ ಗರಣಿ ಶ್ರೀನಿವಾಸನ್ (1907-1985) ಎಂಬ ಕನ್ನಡಿಗ ಶ್ರೀವೈಷ್ಣವ ಭಕ್ತ ಶಿರೋಮಣಿಗಳು ತಮ್ಮ ಆತ್ಮಾನುಭವಕ್ಕಾಗಿ ತಮಿಳು ಭಾಷೆ ಅಧ್ಯಯನ ಮಾಡಿ ಸುಪ್ರಸಿದ್ಧ ಉ.ವೇ. ಶ್ರೀ ಅಣ್ಣಂಗಾಚಾರ್ಯರವರ ಮಣಿಪ್ರವಾಳ ದಿವ್ಯಪ್ರಬಂಧ ವ್ಯಾಖ್ಯಾನ ಮತ್ತಿತರ ಗ್ರಂಥಗಳನ್ನು ಸುಧೀರ್ಘ ಅಧ್ಯಯನ ಮಾಡಿ ತಮ್ಮ ದೈನಂದಿನ ಉಸಿರಾಟದಂತೆ ಈ 24 ದಿವ್ಯ ಪ್ರಬಂಧಗಳ ನಾಲಾಯಿರ ಪಾಶುರಗಳಿಗೆ ಕನ್ನಡ ಲಿಪ್ಯಂತರ, ಪ್ರತಿಪದಾರ್ಥಗಳು, ಭಾವಾರ್ಥಗಳು, ವ್ಯಾಖ್ಯಾನಗಳನ್ನು ತಪಸ್ಸಿನಂತೆ ನಿರಂತರವಾಗಿ ಪ್ರತಿದಿನ ದಶಕಗಳ ಕಾಲ ಕೈಬರಹದಲ್ಲಿ ರಚಿಸಿದ್ದಾರೆ. ಅವರು ವೈಕುಂಠವಾಸಿಗಳಾದ ನಂತರ ಅವರ ಸುಪುತ್ರರಾದ ಶ್ರೀ ಗರಣಿ ರಾಧಾಕೃಷ್ಣನ್‌ರವರು ಸುಮಾರು 6000 ಪುಟಗಳ ಕೈಬರಹ ಕೃತಿಯನ್ನು ಗಣಕೀಕೃತ ಸ್ಕ್ಯಾನ್ ಮಾಡಿ ವಿವಿಧ ಇ-ಮಾಧ್ಯಮಗಳಲ್ಲಿ ಪ್ರಚಾರಪಡಿಸಿದ್ದಾರೆ. ಪ್ರಸ್ತುತ ಈ ಕೃತಿಯನ್ನು ಗ್ರಂಥರೂಪದಲ್ಲಿ ಹಲವು ಸಂಪುಟಗಳಲ್ಲಿ ನಮ್ಮ ಸನಾತನ ಧರ್ಮ ಪ್ರಚಾರಕ್ಕಾಗಿ ಕನ್ನಡದ ಎಲ್ಲಾ ಭಗವದ್ಭಕ್ತರ ಪ್ರೇರಣೆಯಂತೆ ಹೊರತರಲಾಗುತ್ತಿದೆ.

  • On garaNi-shrInivAsa and his divyaprabandha commentary, see here.
  • Scans here.