೧೦

ದಶಮಾಶ್ವಾಸಂ

೧. ಶ್ರೀನಾರೀವಲ್ಲಭಂ–ಐಶ್ವರ್ಯವೆಂಬ ಸ್ತ್ರೀಗೆ ಒಡೆಯನಾದ, ಆಭಿಮಾನ ಧನಂ– ಆತ್ಮಗೌರವವೆಂಬ ಧನವನ್ನುಳ್ಳ, ಹರಿಗಂ–ಅರ್ಜುನ, ಆ ಕುರುಕ್ಷೇತ್ರದೊಳ್–ಆ ಕುರು ರಣಾಂಗಣದಲ್ಲಿ, ಏನುಂಮಾಣದೆ–ಏನೂ ತಡಮಾಡದೆ, ಬಿಟ್ಟುದಂ–ಪಾಳೆಯ ಬಿಟ್ಟುದನ್ನು, ಆ ನೆಗೞ್ದ ಸುಯೋಧನಂಗೆ–ಆ ಪ್ರಸಿದ್ಧನಾದ ದುರ್ಯೋಧನನಿಗೆ, ಚರರ್–ದೂತರು, ಅಱಿಪುವುದುಂ–ತಿಳಿಸುತ್ತಲು;

೨. ಗುರು ಗುರುಸುತ ಕೃಪಾಂಗರಾಜರಂ–ದ್ರೋಣಾಶ್ವತ್ಥಾಮ ಕೃಪಕರ್ಣರನ್ನು, ಬರಿಸಿ– ಬರಮಾಡಿಕೊಂಡು, ಅವನಿಪಂ–ರಾಜ ದುರ್ಯೋಧನ, ನುಡಿದಂ–ಹೇಳಿದನು; ಪಾಂಡು ಸುತರ–ಪಾಂಡವರ, ಮುನಿಸಿನ–ಕೋಪದ, ತಱಿಸಲವಿನ–ನಿಶ್ಚಯದ, ಚಲದ–ಛಲದ, ಬಲದ, ಕಲಿತನದ–ಶೌರ್ಯದ, ಅಳವಂ–ಪ್ರಮಾಣವನ್ನು, ಅಳತೆಯನ್ನು, ಏಂ ಕೇಳ್ದಿರೆ– ಏನು ಕೇಳಿದಿರಾ!

೩. ಬಂದು, ಕುರುಕ್ಷೇತ್ರದೊಳ್–ಕುರುಕ್ಷೇತ್ರದಲ್ಲಿ, ಅಳವೊಂದಿರೆ– ಸಾಮರ್ಥ್ಯ ದಿಂದಿರಲು, ನಮ್ಮೊಳ್–ನಮ್ಮಲ್ಲಿ, ಮಿಗೆಕಡಂಗಿ–ಮಿಗಿಲಾಗಿ ಉತ್ಸಾಹಿಸಿ, ತಳ್ತಿಱಿಯಲ್ಕೆಂದಾ ನುಂ–ತಾಗಿ ಯುದ್ಧ ಮಾಡುವುದಕ್ಕೆಂಬುದಾಗಿಯೂ, ಬಂದಿರ್ದರ್–ಬಂದಿದ್ದಾರೆ; ಇದೇಂ ದಾಯಿಗತನಮಂ–ಇದೇನು ದಾಯಾದಿತನವನ್ನು, ಎಮಗೆ, ನಮಗೆ, ಅವರ್–ಪಾಂಡವರು, ತೋಱಿದಪರ್–ತೋರಿಸುತ್ತಾರೆ!

೪. ಆ ಬಲಕ್ಕೆ–ಆ ಪಾಂಡವರ ಸೈನ್ಯಕ್ಕೆ, ಪಡೆವಳ್ಳಂ–ಸೇನಾಪತಿ, ದಲೆ–ನಿಶ್ಚಯ ವಾಗಿಯೂ, ಆ ದೃಷ್ಟದ್ಯುಮ್ನನೆಂಬ–ಆ ದೃಷ್ಟದ್ಯುಮ್ನನೆನ್ನುವ, ಒಳ್ಳೆ–ನೀರು ಹಾವು, ಗಡಂ– ಅಲ್ಲವೇ; ಆ ಪಡೆಯೊಳ್–ಆ ಸೈನ್ಯದಲ್ಲಿ, ಗಂಡನುಂ–ಶೂರನೂ, ಆ ಮೊಲಂ–ಆ ಮೊಲಕ್ಕೆ ಸಮನಾದ, ದ್ರುಪದನುಂ–ದ್ರುಪದನೂ; ಪೇರೊಟ್ಟೆ–ಹಿರಿದಾದ ಒಂಟೆ, ಆ ಮತ್ಸ್ಯನುಂ–ಆ ವಿರಾಟನೂ; ಅಂತು–ಹಾಗೆ, ಆ ಬಲಕಾಳ್ದಂಗಡ–ಆ ಸೈನ್ಯಕ್ಕೆ ಸ್ವಾಮಿ ಅಲ್ಲವೆ! ಧರ್ಮಜ್ಞನ್– ಧರ್ಮವನ್ನು ತಿಳಿದವನಾದ, ಆ ಧರ್ಮಜಂ–ಆ ಧರ್ಮರಾಜನು; ಏನಱಿಯಿರೇ–ಏನು ತಿಳಿಯಿರೇ, ನಾಯಕರೊಳ್ಳಿದರ್–ಒಳ್ಳೆಯ ಎಂದರೆ ಶೂರರಾದ ನಾಯಕರು, ಮತ್ಸೈನ್ಯದೊಳ್ ಕಾದಲ್ಕೆ–ನನ್ನ ಸೈನ್ಯದೊಡನೆ ಯುದ್ಧಮಾಡಲು, ಏಂ ನೆರೆದರೋ–ಏನು ಕೂಡಿಬಂದರೋ, ಗಡಂ– ದಿಟವಾಗಿಯೂ, ಇಲ್ಲಿ ಪಾಂಡವ ಸೈನ್ಯದ ವೀರರ ಬಗ್ಗೆ ದುರ್ಯೋಧನನ ತಿರಸ್ಕಾರವಿದೆ.

ವಚನ : ಕುಂಭಸಂಭವಂ–ದ್ರೋಣ.

೫. ಕುರುಭೂಮಿಯಂ–ಕುರುಕ್ಷೇತ್ರವನ್ನು, ಕಳವೇೞ್ದೈ–ಯುದ್ಧರಂಗವನ್ನಾಗಿ ನಿಯಮಿ ಸಿದೆ; ಎಂದಂತೆ–ಹೇಳಿದ ಹಾಗೆ, ಕಳಕೆ–ಕಾಳಗದ ರಂಗಕ್ಕೆ, ಅವರ್ ವಂದಿರ್ದರ್–ಅವರು ಬಂದಿದ್ದಾರೆ; ದೋರ್ವಳ–ಬಾಹು ಬಲವನ್ನೂ, ಚಾತುರ್ವಳ–ಚತುರಂಗ ಸೈನ್ಯವನ್ನೂ, ತತ್ಸುಹೃದ್ಬಳಮಂ–ಅವರ ಸ್ನೇಹಿತರ ಶಕ್ತಿಯನ್ನೂ, ಇನ್ನು, ಏಗೇಳ್ದಪಯ್–ಏನೆಂದು ಕೇಳು ತ್ತೀಯ! ಪಾಂಡವರ್–ಪಾಂಡವರು, ಬಳಸಂಪನ್ನರ್–ಶಕ್ತಿಸಂಪನ್ನರಾದವರು; ಉದಗ್ರ ದೈವ ಬಳಸಂಪನ್ನರ್–ಶ್ರೇಷ್ಠವಾದ ದೈವಸಹಾಯ ಸಂಪತ್ತಿಯುಳ್ಳವರು; ಇಂ–ಇನ್ನು ಮುಂದೆ, ಮರುಳ್ಮಾತಂ–ತಿಳಿಗೇಡಿತನದ ಮಾತುಗಳನ್ನು, ಉೞಿ–ಬಿಟ್ಟುಬಿಡು, ಸುಯೋಧನಾ– ದುರ್ಯೋಧನನೇ, ಗಾಂಗೇಯರ–ಭೀಷ್ಮರು, ಪೇೞ್ದ–ಹೇಳಿದ, ಅದೊಂದು ತೆಱದಿಂ– ಅದೊಂದು ರೀತಿಯಿಂದ, ನೀಂ–ನೀನು, ಕಾದು–ಯುದ್ಧ ಮಾಡು, ಇಲ್ಲಿ ೞಳ ಕಾರಗಳ ಮಿಶ್ರ ಪ್ರಾಸವಿದೆ.

ವಚನ : ಆ ಮಾತಂ ಮನದೆಗೊಂಡು–ಆ ಮಾತನ್ನು ಮನದಲ್ಲಿ ಒಪ್ಪಿ; ನಿಶಾಸಮಯ ದೊಳ್–ರಾತ್ರಿಹೊತ್ತಿನಲ್ಲಿ; ಕೆಯ್ದೀವಿಗೆಗಳ–ಕೈದೀಪಗಳ; ಕತಿಪಯ–ಕೆಲವು; ರಾಜರಾಜಂ– ದುರ್ಯೋಧನನು; ಸಿಂಧುಜನ–ಭೀಷ್ಮನ; ಮಂಚದೊಳೇಱಲ್ ಕರೆದೊಡೆ–ಮಂಚದ ಮೇಲೆ ಕುಳಿತುಕೊಳ್ಳುವಂತೆ ಹೇಳಿದರೆ; ಒಲ್ಲೆಂ–ನನಗೆ ಬೇಡ, ನಾನು ಒಪ್ಪೆನು; ಮಹಾ ಪ್ರಸಾದಂ–ಮಹಾ ಅನುಗ್ರಹ; ಇಂತಿರ್ಪೆಂ–ಹೀಗೆಯೇ ಇರುವೆನು; ಮಣಿಮಯ ಹೇಮಾಸನ ದೊಳ್–ರತ್ನಖಚಿತವಾದ ಚಿನ್ನದ ಪೀಠದಲ್ಲಿ; ಕುಳ್ಳಿರ್ದನಂ–ಕುಳಿತುಕೊಂಡವನನ್ನು; ಕಜ್ಜಂಪುಟ್ಟಿದೊಡೆ–ಕೆಲಸವುಂಟಾದರೆ; ಬೞಿಯಟ್ಟದೆ–ದೂತನೊಡನೆ ಹೇಳಿ ಕಳುಹಿಸದೆ; ಈ ಪೊೞ್ತು–ಈ ಹೊತ್ತು (ರಾತ್ರಿ); ಇದಾವುದು ಮನೆವಾೞ್ತೆಗೆೞ್ತಂದೆ–ಇದು ಯಾವ ಗೃಹಕೃತ್ಯಕ್ಕಾಗಿ ಬಂದೆ?

೬. ಹರಿಬಲದಿಂ–ಕೃಷ್ಣನ ಬೆಂಬಲದಿಂದ, ಪಾಂಡವರ್–ಪಾಂಡವರು, ಎನ್ನೊಳ್–ನನ್ನಲ್ಲಿ, ಅನುವರಮಂ–ಯುದ್ಧವನ್ನು, ಪೊತ್ತಿಸಿದರ್–ಹೊತ್ತಿಸಿದರು, ಆಂ–ನಾನು, ಕರಮಱಿದು– ಚೆನ್ನಾಗಿ ತಿಳಿದುಕೊಂಡು, ಅಂದು–ಆಗ (ಹಿಂದಿನ ಕಾಲದಲ್ಲಿ), ಆ ಹರಿಯಂ–ಆ ಕೃಷ್ಣನನ್ನು, ಕೋಡಗಗಟ್ಟಾಗಿರೆ–ಕಪಿಯನ್ನು ಕಟ್ಟುವ ಕಟ್ಟಾಗಿರಲು, ಕಟ್ಟಿದೊಡೆ–ಕಟ್ಟಿದರೆ, ನೀಮೆ–ನೀವೇ, ಬಿಡಿಸಿದಿರಲ್ತೇ–ಬಿಡಿಸಿದರಲ್ಲವೇ!

೭. ಕರಿಗಂ ಪರಮಾಣುಗಂ–ಆನೆಗೂ ಅಣುವಿಗೂ, ಅಂತರಂ–ಸಂಬಂಧವು ಆವುದೊ– ಯಾವುದೋ! ನಿಮಗಂ–ನಿಮಗೂ, ಅಸುರ ವೈರಿಗಂ–ಕೃಷ್ಣನಿಗೂ, ಏನಂತರಂ–ಏನು ಸಂಬಂಧ; ಅಂತೆ–ಹಾಗೆಯೇ, ಅಗ್ಗದ ಪರಶುಧರಂ–ಶ್ರೇಷ್ಠನಾದ ಪರಶುರಾಮನು, ನಿಮ್ಮೊಳ್– ನಿಮ್ಮೊಡನೆ, ಪೊಣರ್ದು–ಹೋರಾಡಿ, ತಾನ್–ತಾನು, ಅದು ಅಂದು–ಅದು ಆಗ, ಏನಾದಂ– ಏನಾದನು? ಎಂದರೆ ಪರಶುರಾಮನಿಗೆ ಭೀಷ್ಮನನ್ನು ಗೆಲ್ಲಲಾಗಲಿಲ್ಲ.

೮. ಅವರ್–ಆ ಪಾಂಡವರು, ಅಸುರ ವೈರಿಯಂ–ಕೃಷ್ಣನನ್ನು, ಒಡಂಬಡಿಂ–ಒಪ್ಪಿಗೆ ಯಿಂದ, ಪಿಡಿದರ್–ಹಿಡಿದರು, ಆಶ್ರಯಿಸಿದರು; ಆಂ–ನಾನು, ನಿಮ್ಮಡಿಯಂ–ನಿಮ್ಮ ಪಾದ ಗಳನ್ನು; ತೊೞ್ತುವೆಸದಿಂ–ಸೇವಾಕಾರ್ಯದಿಂದ ಎಂದರೆ ಸೇವಕತನದಿಂದ, ಪಿಡಿದೆಂ– ಹಿಡಿದೆನು, ಆಶ್ರಯಿಸಿದೆನು; (ಇಲ್ಲಿಂದ ಮುಂದಕ್ಕೆ ಅರ್ಥ ಮಾಡುವುದು ಕಷ್ಟವಾಗಿದೆ; ಇಲ್ಲಿ ಏನೋ ಕೆಟ್ಟ ಪಾಠವಿದೆ); ಅದೇಂ–ಅದೇನು? ತಾನ್–ತಾನು, ಎಚ್ಚುಂ–ಬಾಣಪ್ರಯೋಗ ಮಾಡಿಯೂ, ಪಿಡಿದೊಡೆ–ಆಶ್ರಯಿಸಿದರೆ, ಅವರ್–ಅವರು (ಪಾಂಡವರು), ವಂದು– ಶರಣಾಗತರಾಗಿ ಬಂದು, ಪಿಡಿದರ್–ಹಿಡಿದರು (ಆಶ್ರಯಿಸಿದರು); ಎನ್ನದೆ–ನನ್ನದೇ, ಗೆಲ್ಲಂ–ಜಯ.

೯. ನಿಮ್ಮ ದಯೆಯಿಂ–ನಿಮ್ಮ ಕರುಣೆಯಿಂದ, ಶ್ರೀ–ಲಕ್ಷ್ಮಿಯು (ಐಶ್ವರ್ಯವು, ರಾಜ ಲಕ್ಷ್ಮಿಯು), ಕೊರಲೊಳ್–ಕೊರಳಿನಲ್ಲಿ, ಕಟ್ಟಿದ–ಕಟ್ಟಿಕೊಂಡ, ದೇವಿಯಂತಿರೆ–ದುರ್ಗಿ ದೇವತೆಯ ಹಾಗೆ, ಎಂದರೆ ಕೊರಳಿಗೆ ಕಟ್ಟಿಕೊಂಡ ದುರ್ಗಾದೇವಿಯ ಪದಕದಂತೆ, ತೊಟ್ಟಿ ಲೊಳ್ ತೊಟ್ಟು–ತೊಟ್ಟಿಲಿನಲ್ಲಿ ಮೊದಲಾಗಿ, ಶಿಶುತನದಿಂದ ಆರಂಭವಾಗಿ, ಅನಂತರಂ– ಆಮೇಲೂ, ಉರದೊಳ್–ನನ್ನೆದೆಯಲ್ಲಿ, ನೆಲಸಿತ್ತು–ನೆಲಸಿ ಇದೆ; ನಿಮ್ಮಂ–ನಿಮ್ಮನ್ನು, ಕರಂ-ವಿಶೇಷವಾಗಿ, ನಚ್ಚಿ-ನಂಬಿಕೊಂಡು, ಬಲ್ಲಿದರೊಳ್-ಶೂರರಲ್ಲಿ, ಸಂಗರಮಂ-ಯುದ್ಧವನ್ನು, ಪೊಣರ್ಚಿದೆಂ.ಹೂಡಿದೆನುದ್ ಅದರ್ಕೆ.ಅದಕ್ಕಾಗಿ, ರಣಾಜಿರದೊಳ್-ಯುದ್ಧ ರಂಗದಲ್ಲಿ, ರಣಶ್ರೀ.ಜಯಲಕ್ಷ್ಮಿ, ಮಾಣದೆ.ಬಿಡದೆ, ಎನ್ನೊಳೆ.ನನ್ನಲ್ಲಿಯೆ, ಪೊರ್ದುವಂತೆ-ಸೇರುವ ಹಾಗೆ, ನಿಮ್ಮೊಂದಭಿಪ್ರಾಯಮಂ.ನಿಮ್ಮ ಒಂದು ಆಲೋಚನೆಯನ್ನು, ಬೆಸಸಿಂ-ಹೇಳಿಸಿ, ಅಪ್ಪಣೆ ಕೊಡಿಸಿರಿ.

ವಚನ : ನಯದ ವಿನಯದ-ನುಣುಪಾದ, ನಮ್ರತೆಯ; ಕುರುವೃದ್ಧಂ-ಭೀಷ್ಮ.

೧೦. ನೀಂ–ನೀನು, ಪೃಥಾಸುತರಂ–ಪಾಂಡವರನ್ನು, ನೋಯಿಸಲಾಗದು–ದುಃಖಪಡಿಸ ಬಾರದು, ಎಂದು, ಧೃತರಾಷ್ಟ್ರಂ–ಧೃತರಾಷ್ಟ್ರನು, ನುಡಿದು–ಹೇಳಿ, ಆರ್ತನೇ–ಸಮರ್ಥ ನಾದನೇ?; ಹರಿ–ಕೃಷ್ಣನು, ಭರಂಗೆಯ್ದು–ರಭಸವನ್ನು ತೋರಿಯೂ, ಆರ್ತನೇ–ಶಕ್ತನಾದನೇ?; ಆಮ್–ನಾವು, ನುಡಿದು–ಹೇಳಿ, ಏನ್ ಆರ್ತೆಮೇ–ಏನು ಸಮರ್ಥರಾದೆವೇ? ಎಂದರೆ ನಿನ್ನ ಛಲವನ್ನು ಹೋಗಲಾಡಿಸಲು ಯಾರೂ ಸಮರ್ಥರಾಗಲಿಲ್ಲ; ನಿನ್ನ–ನಿನ್ನ, ಒರಂಟುತನಂ– ಒರಟುತನವು, ಕೆಯ್ಗೞಿವಾಯ್ತು– ಕೈಮೀರಿತು; ಅದಪ್ಪೊಡೆ–ಅದಾದರೆ, ಮಹಾಭಾರಾ ವತಾರಂ–ಭೂಮಿಯ ಮಹಾ ಭಾರವನ್ನು ಇಳಿಸುವ ಯುದ್ಧ; ರಣೋದ್ಯತನಾಗು–ಯುದ್ಧಕ್ಕೆ ಸಿದ್ಧನಾಗು, ಎಂಬುದಂ–ಎಂಬುದನ್ನು, ಎಮ್ಮಂ–ನಮ್ಮನ್ನು, ಅನ್ಯರವೋಲ್–ಇತರರಂತೆ, ನೀಂ–ನೀನು, ಪ್ರಾರ್ಥಿಸಲ್ವೇೞ್ಪುದೇ–ಪ್ರಾರ್ಥಿಸಬೇಕಾಗಿದೆಯೇ? ಎಂದರೆ ಯುದ್ಧಕ್ಕೆ ನಾನು ಯಾವಾಗಲೂ ಸಿದ್ಧ, ನೀನು ಹೇಳಬೇಕಾಗಿಯೇ ಇಲ್ಲ.

ವಚನ : ಗಾಂಗೇಯಂ–ಭೀಷ್ಮ, ತನ್ನಂತರ್ಗತದೊಳ್–ತನ್ನ ಮನಸ್ಸಿನಲ್ಲಿ;

೧೧. ಅಣಿಯರಂ–ವಿಶೇಷವಾಗಿ, ಒದವಿದ–ಉಂಟಾದ, ಮುಳಿಸಿನೋಳ್–ಕೋಪದಲ್ಲಿ, ಅವರ್–ಪಾಂಡವರು, ಅಣಂ–ಸ್ವಲ್ಪವೂ, ಉಱದವರ್–ಹುದುವಾಗದವರು ಎಂದು, ರಣದೊಳೆ–ಕಾಳೆಗದಲ್ಲಿ, ಜಯಿಸಲ್–ಗೆಲ್ಲಲು, ನಾರಾಯಣನೊಳಂ–ಕೃಷ್ಣನಲ್ಲೂ, ಉದಾತ್ತ ನಾರಾಯಣನೊಳಂ–ಅರ್ಜುನನಲ್ಲೂ, ಇಂತು–ಹೀಗೆ, ಎತ್ತಿಕೊಂಡ–ಯುದ್ಧವನ್ನು ಸಂಕಲ್ಪಿಸಿದ, ಗಂಡರುಂ–ಶೂರರೂ, ಒಳರೇ–ಉಂಟೇ? ಭೀಷ್ಮ ದುರ್ಯೋಧನನನ್ನು ಮೆಚ್ಚಿ ಕೊಳ್ಳುತ್ತಾನೆ.

೧೨. ಭೀಷ್ಮನ ಧರ್ಮಸಂಕಟ: ಎನ್ನನೆ–ನನ್ನನ್ನೇ, ನಚ್ಚಿದಂ–ನಂಬಿದವನು, ದುರ್ಯೋಧನ; ಅನುವರಕೆ–ಯುದ್ಧಕ್ಕೆ, ಎನ್ನನೆ–ನನ್ನನ್ನೇ, ಪೂಣಿಸಿದನ್–ಶಪಥ ಮಾಡಿಸಿದನು; ಎನಗೆ–ನನಗೆ, ಎರೞ್ತಂಡಮುಂ–ಉಭಯ ಪಕ್ಷಗಳೂ, ಓರನ್ನರೆದಲ್–ಸಮನಾದವರೇ ಅಲ್ಲವೇ! ಎನ್ನಯ ಮಕ್ಕಳೊಳಂ–ನನ್ನ ಮಕ್ಕಳಲ್ಲೂ, ಮೊಮ್ಮಕ್ಕಳೊಳಂ–ಮೊಮ್ಮಕ್ಕಳುಗಳಲ್ಲೂ, ಎಂತು ಕಾದು ವೆಂ–ಹೇಗೆ ಯುದ್ಧ ಮಾಡುವೆನು?

೧೩. ಮಕ್ಕಳಮೊಮ್ಮಕ್ಕಳರಥಂ–ಮಕ್ಕಳ ಮೊಮ್ಮಕ್ಕಳ ರಥಗಳು, ಎಕ್ಕೆಯಿಂ–ಒಟ್ಟಾಗಿ, ಎಡೆಗೊಂಡೊಡೆ–(ಯುದ್ಧದ) ನಡುವೆ ಎದುರಿಸಿದರೆ, ಓವದೆ–ರಕ್ಷಿಸದೆ, ರಣದೊಳ್– ಯುದ್ಧದಲ್ಲಿ, ಮಕ್ಕಳಂ–ಮಕ್ಕಳನ್ನು, ಆಂ ಕೊಂದೊಡೆ–ನಾನು ಕೊಂದರೆ, ಪಾವು–ಹಾವು, ತನ್ನಿಕ್ಕಿದ ತತ್ತಿಯನೆ–ತಾನು ಹಾಕಿದ ಮೊಟ್ಟೆಗಳನ್ನೇ, ನೊಣೆವಂತಕ್ಕು–ನುಂಗುವಂತೆ ಆಗುತ್ತದೆ.

೧೪. ಎನ್ನಂ-ನನ್ನನ್ನು, ಧುರದೊಳ್-ಯುದ್ಧದಲ್ಲಿ, ಮಾರ್ಕೊಳ್ವರ್-ಎದುರಿಸುವವರು, ನರನಾರಾಯಣರಿರ್ವರೆ-ಅರ್ಜುನ ಕೃಷ್ಣರಿಬಪ್ರೇದ್ ಒರ್ವಂ-ಒಬಪ್ನು, ಮೊಮ್ಮಂ-ಮೊಮ್ಮಗನು, ಒರ್ವಂ-ಒಬಪ್, ಪರಮಗುರು-ಲೋಕದ ಶ್ರೇಷ್ಠನಾದ ಗುರು, ಅವರಿರ್ವರುಮಂ-ಅವರಿಬಪ್ರನ್ನೂ, ಕಾದು-ರಕ್ಷಿಸಿ, ಉೞಿದ ರಿಪುನೃಪಬಲಮಂ-ಮಿಕ್ಕ ಶತ್ರುರಾಜರ ಸೈನ್ಯವನ್ನು, ಅೞಿವೆಂ-ನಾಶ ಮಾಡುವೆನು.

ವಚನ : ಬಗೆಯುತ್ತಿರ್ಪಿನಂ–ಚಿಂತಿಸುತ್ತಿರುವಾಗ; ಸಹಸ್ರ ಕಿರಣೋದಯದೊಳ್– ಸೂರ್ಯೋದಯದಲ್ಲಿ, ಬೞಿಯನಟ್ಟಿ–ದೂತನನ್ನು ಕಳುಹಿಸಿ; ಗುಹಂಗೆ–ಷಣ್ಮುಖನಿಗೆ; ಪುರಂದರನ–ಇಂದ್ರನ;

೧೫. ತುಂಗಮೃದಂಗ ಶಂಖಪಟಹಧ್ವನಿ–ಮದ್ದಲೆ ಶಂಖ ತಮಟೆಗಳ ತಾರಸ್ವರ, ದಿಕ್ತಟ ದಂತಂ–ದಿಕ್ಪ್ರದೇಶಗಳ ಅಂತ್ಯವನ್ನು, ಎಯ್ದೆ–ಸಮೀಪಿಸಲು; ವಾರಾಂಗನೆಯರ್–ಸೂಳೆ ಯರು, ಚಳಲ್ಲುಳಿತ–ಅಲುಗಾಡಿ ಗುಂಡಗೆ ಚಲಿಸುತ್ತಿರುವ, ಚಾಮರಮಂ–ಚಾಮರಗಳನ್ನು, ನೆರೆದು–ಸೇರಿ, ಇಕ್ಕೆ–ಬೀಸಲು; ಪಂಚರತ್ನಂಗಳುಮಂ ಪುದುಂಗೊಳಿಸಿ–ಐದು ಬಗೆಯ ರತ್ನ ಗಳನ್ನೂ ರಾಶಿ ಮಾಡಿ, ಪೊಂಗಳಸಂಗಳೊಳಿರ್ದ–ಚಿನ್ನದ ಕಲಶಗಳಲ್ಲಿ ತುಂಬಿದ್ದ, ಪುಣ್ಯ ತೋಯಂಗಳೊಳ್–ಪುಣ್ಯಕರವಾದ ನೀರುಗಳಲ್ಲಿ, ಅೞ್ಕಱಿಂ–ಪ್ರೀತಿಯಿಂದ, ಮಿಸಿಸಿ–ಸ್ನಾನ ಮಾಡಿಸಿ, ಆ ವಿಭು–ಆ ಪ್ರಭು, ದುರ್ಯೋಧನನು, ವೀರಪಟ್ಟಮಂ–ಸೈನ್ಯಾಧಿಪತಿಯ ಪಟ್ಟವನ್ನು, ಕಟ್ಟಿದನು.

ವಚನ : ಪಗೆವರಂ–ಹಗೆಗಳನ್ನು; ಪೊಟ್ಟಳಿಸುವ–ಬೀಗುವ, ಗರ್ವಪಡುವ; ಅವಕರ್ಣಿಸಿ– ಕೇಳಿ;

೧೬. ಇಲ್ಲಿಂದ ಕರ್ಣ–ಭೀಷ್ಮರ ವಿವಾದ, ೨೫ನೆ ಪದ್ಯ ಪೂರ್ತಿಯಾಗಿ; ಕರ್ಣನ ಮಾತು; ಭಗವತಿಯ–ದುರ್ಗಾದೇವಿಯ, ಏಱುವೇೞ್ವ–ಯುದ್ಧಗಳನ್ನು ಹೇಳುವ, ತೆಱದಿಂ–ರೀತಿ ಯಿಂದ, ಇವರ–ಈ ಭೀಷ್ಮರ, ಏಱು–ಯುದ್ಧಗಳು, ಕಥೆಯಾಯ್ತು–ಎಂದೋ ನಡೆದ ವೃತ್ತಾಂತಗಳಾಗಿವೆ; ನೀನ್ ಇದಂ ಬಗೆದು–ನೀನು ಇದನ್ನು ಭಾವಿಸಿ, ಇವರ್–ಈ ಭೀಷ್ಮರು, ಇನ್ನುಂ–ಇನ್ನು ಕೂಡ, ಆಂತು–ಹಗೆಗಳನ್ನು ಎದುರಿಸಿ, ಇಱಿವರ್–ಹೋರಾಡುವರು, ಎಂದು–ಎಂಬುದಾಗಿ, ವಿಮೋಹಿಸಿ–ಭ್ರಾಂತನಾಗಿ, ವೀರಪಟ್ಟಮಂ–ಸೇನಾಧೀಶ ಪಟ್ಟವನ್ನು, ಬಗೆಯದೆ–ಯೋಚಿಸದೆ, ಕಟ್ಟಿದೈ–ಕಟ್ಟಿದ್ದೀಯೇ; ಗುರುಗಳಂ–ಗುರುಗಳನ್ನೂ, ಕುಲ ವೃದ್ಧರಂ–ಕುಲಕ್ಕೆ ಹಿರಿಯರನ್ನೂ, ಆಜಿಗೆ–ಯುದ್ಧಕ್ಕೆ, ಉಯ್ದು–ತೆಗೆದುಕೊಂಡು ಹೋಗಿ, ಕೆಮ್ಮಗೆ–ಸುಮ್ಮನೆ, ಪಗೆವಾಡಿಯೊಳ್–ಶತ್ರುಗಳ ಶ್ರೇಣಿಯಲ್ಲಿ, ನಗಿಸಿಕೊಂಡೊಡೆ–ನಗೆಗೆ ಎಂದರೆ ಪರಿಹಾಸಕ್ಕೆ ಈಡುಮಾಡಿದರೆ, ಸುಯೋಧನಾ–ದುರ್ಯೋಧನನೇ, ಬಂದಪುದು– ನಿನಗೆ ಬರುವುದು, ಏನ್–ಏನು? ನಿನಗೇನು ಲಾಭ ಈ ಮುದುಕರನ್ನು ಶತ್ರುಗಳ ಎದುರಿಗೆ ನಿಲ್ಲಿಸುವುದರಿಂದ?

೧೭. ಕಣ್ಗೆಟ್ಟ–ಕಣ್ಣು ನಷ್ಟವಾದ, ದೃಷ್ಟಿಪಾಟವವಿಲ್ಲದ, ಮುದುಪಂಗೆ–ಮುದುಕನಿಗೆ, ಕಟ್ಟಿದ ಪಟ್ಟಮೆ–ಕಟ್ಟಿದ ವೀರಪಟ್ಟವೆ, ಸರವಿಗೆ–ಹಗ್ಗಕ್ಕೆ, ದೊರೆ–ಸಮಾನ; ಪಿಡಿದ ಬಿಲ್ಲೆ– ಅವನು ಹಿಡಿದಿರುವ ಬಿಲ್ಲೇ, ದಂಟಿಂಗೆ–ದಂಟಿಗೆ, ಎಣೆ–ಸಮಾನ; ಪಗೆವರ–ಹಗೆಗಳ, ನಿಟ್ಟೆಲ್ವಂ–ಉದ್ದವಾದ ಮೂಳೆಗಳನ್ನು, ಮುಱಿವೊಡೆ–ಮುರಿಯುವ ಪಕ್ಷದಲ್ಲಿ, ಎನಗೆ– ನನಗೆ, ಪಟ್ಟಂಗಟ್ಟಾ–ವೀರ ಪಟ್ಟವನ್ನು ಕಟ್ಟು.

೧೮. ಆದಿಯೊಳ್–ಮೊದಲು, ಅವರಂ–ಪಾಂಡವರನ್ನು, ಪಿರಿದು ಒಂದು ಆದರದಿಂ– ಹಿರಿದಾದ ಒಂದು ಪ್ರೀತಿಯಿಂದ, ನಡಪಿದ–ಸಲಹಿದ, ಅಜ್ಜರಪ್ಪುದಱಿಂದಂ–ಅಜ್ಜರಾಗಿರು ವುದರಿಂದ, ಇವರ್–ಇವರು, ಅವರೊಳ್–ಅವರಲ್ಲಿ, ಕಾದರ್–ಯುದ್ಧಮಾಡರು; ಅವರುಂ–ಆ ಪಾಂಡವರು ಕೂಡ, ನೆರೆದು–ಎದುರಿಸಿ, ಇವರೊಳ್–ಈ ಭೀಷ್ಮರಲ್ಲಿ, ಕಾದರ್–ಹೋರಾಡರು; ನೃಪತೀ–ದೊರೆಯಾದ ದುರ್ಯೋಧನನೇ, ಎಂತು ನಂಬುವೆ–ಹೇಗೆ ನಂಬುವೆ?

ವಚನ : ಸಿಡಿಲ್ದು–ಸಿಡಿದು; ಕುಂಭಸಂಭವಂ–ದ್ರೋಣ.

೧೯. ವನಮಾತಂಗಂಗಳಿಂ–ಕಾಡಾನೆಗಳಿಂದ, ಸಿಂಗದ ಮುಪ್ಪುಂ–ಸಿಂಹದ ಮುದಿತನವೂ, ಅಸುಹೃಚ್ಚತುರಂಗಬಲಂಗಳಿಂ–ಶತ್ರುಗಳ ಚತುರಂಗ ಸೈನ್ಯಗಳಿಂದ, ನೆಗೞ್ದ–ಪ್ರಸಿದ್ಧರಾದ, ಈ ಗಾಂಗೇಯರ–ಈ ಭೀಷ್ಮರ, ಮುಪ್ಪುಂ–ಮುದಿತನವೂ, ಅದೆಂತುಂ–ಅದು ಹೇಗೊ, ಅಂಗಾಧಿಪತೀ–ಕರ್ಣನೇ, ಇಳಿಕೆವಡೆಗುಮೆ–ತಿರಸ್ಕೃತವಾಗುವುದೆ? ಇಲ್ಲವೆಂದು ತಾತ್ಪರ್ಯ.

೨೦. ಕುಲಜರಂ–ಸತ್ಕುಲದವರನ್ನು, ಉದ್ಧತರಂ–ಘನತೆಯುಳ್ಳವರನ್ನು, ಭುಜಬಲ ಯುತರಂ–ಬಾಹುಬಲವುಳ್ಳವರನ್ನು ಎಂದರೆ ಶೂರರನ್ನು, ಹಿತರಂ–ಎಲ್ಲರಿಗೂ ಬೇಕಾದ ವರನ್ನು, ಈ ಸಭಾಮಧ್ಯದೊಳ್–ಈ ಸಭೆಯ ನಡುವೆ, ಅಗ್ಗಲಿಸಿದ–ಅಧಿಕವಾದ, ಮದದಿಂ– ಕೊಬ್ಬಿನಿಂದ, ನಾಲಗೆ–ನಾಲಗೆಯು ಎಂದರೆ ಮಾತು, ಕುಲಮಂ–ಕುಲವನ್ನು, ತುಬ್ಬುವ ವೊಲ್–ಸೂಚಿಸುವಂತೆ, ಉಱದೆ–ಇರದೆ, ನೀಂ–ನೀನು, ಕೆಡೆನುಡಿಪೈ–ಹೀಯಾಳಿಸಿ ಮಾತಾ ಡುವೆ; “ತುಬ್ಬು–ಚೋರಸೂಚನೇ.”

ವಚನ : ಕರ್ಣಂ ಕಿನಿಸಿ–ಕರ್ಣನು ಕೋಪಿಸಿ.

೨೧. ಕುಲಮನೆ–ಕುಲವನ್ನೇ, ಮುನ್ನಂ–ಮೊದಲು, ಉಗ್ಗಡಿಸಿರೇಂಗಳ–ಏನು ಕೂಗಿ ಹೇಳುತ್ತಿರಲ್ಲವೆ? ಆಂತು–ಎದುರಿಸಿ, ಮಾರ್ಮಲೆವನಂ–ಪ್ರತಿಭಟಿಸುವವನನ್ನು, ನಿಮ್ಮ ಕುಲಂಗಳ್–ನಿಮ್ಮ ಕುಲಗಳು, ಅಟ್ಟಿ–ಬೆನ್ನಟ್ಟಿ ಬಂದು, ತಿಂಬುವೆ–ತಿನ್ನುತ್ತವೆಯೆ? ಕುಲಂ– ಹುಟ್ಟಿದ ಕುಲ, ಜಾತಿ, ಕುಲಮಲ್ತು–ನಿಜವಾದ ಕುಲವಲ್ಲ; ಚಲಂ–ಛಲವು, ಕುಲಂ–ಕುಲ; ಗುಣಂ–ಗುಣವು, ಕುಲಂ–ಕುಲ; ಅಭಿಮಾನವೊಂದೆ–ಆತ್ಮಗೌರವವೊಂದೇ, ಕುಲಂ–ಕುಲ, ಅಣ್ಮು–ಪರಾಕ್ರಮವು, ಕುಲಂ–ಕುಲ; ಬಗೆವಾಗಳ್–ಚಿಂತಿಸಿದಾಗ, ಈಗಳ್–ಈಗ, ಈ ಕಲಹದೊಳ್–ಈ ಯುದ್ಧದಲ್ಲಿ, ಅಣ್ಣ, ನಿಮ್ಮ ಕುಲಂ–ನಿಮ್ಮ ಕುಲವು, ಆಕುಲಮಂ– ದುಃಖವನ್ನು, ನಿಮಗುಂಟುಮಾಡುಗುಂ–ನಿಮಗೆ ಉಂಟುಮಾಡುತ್ತದೆ.

೨೨. ಗಂಗಾಸುತಂ–ಭೀಷ್ಮನು, ಪೃಥಾಸುತರಂ–ಪಾಂಡವರನ್ನು, ಗೆಲ್ದೊಡೆ–ಗೆದ್ದರೆ, ತಪಕೆ–ತಪಸ್ಸಿಗೆ, ಪೋಪೆಂ–ಹೋಗುವೆನು; ಅವರ್ಗಳ ಕೈಯೊಳ್–ಆ ಪಾಂಡವರ ಕೈಯಲ್ಲಿ, ಗಾಂಗೇಯಂ–ಭೀಷ್ಮನು, ಅೞಿದೊಡೆ–ನಾಶವಾದರೆ, ಅಹಿತರಂ–ವೈರಿಗಳನ್ನು, ಆಂ–ನಾನು, ಗೆಲೆ–ಗೆಲ್ಲಲು, ತಳ್ತಿಱಿವೆಂ–ಸೇರಿ ಯುದ್ಧಮಾಡುವೆನು; ಅನ್ನೆಗಂ–ಅದುವರೆಗೂ, ಬಿಲ್ವಿಡಿ ಯೆಂ–ಬಿಲ್ಲನ್ನು ಹಿಡಿಯುವುದಿಲ್ಲ, ಎಂದರೆ ಯುದ್ಧ ಮಾಡುವುದಿಲ್ಲ ಎಂದು ಕರ್ಣನ ಪ್ರತಿಜ್ಞೆ.

೨೩. ಕಲಿತನದ–ಶೌರ್ಯದ, ಉರ್ಕು–ಗರ್ವ, ಜವ್ವನದ–ಯೌವನದ, ಸೊರ್ಕು– ಮದ, ನಿಜೇಶನ–ನಿನ್ನ ಒಡೆಯನ, ನಚ್ಚು–ನಂಬಿಕೆ, ಮಿಕ್ಕ–ಮೀರಿದ, ಅತಿಶಯವಾದ, ತೋಳ್ವಲದ–ಭುಜಬಲದ, ಪೊಡರ್ಪು–ಸ್ಫುರಣೆ, ಶಕ್ತಿ, ಕರ್ಣ–ಕರ್ಣನೇ, ನಿನಗುಳ್ಳನಿತು– ನಿನಗಿರುವಷ್ಟು, ಏನ್ ಎನಗೆ ಉಂಟೆ–ಏನು ನನಗೆ ಇದೆಯೆ? ಭಾರತಂ ಕಲಹಂ–ಯುದ್ಧ ಸಾಮಾನ್ಯ ಯುದ್ಧವಲ್ಲ, ಭಾರತ ಯುದ್ಧ, ಇದಿರ್ಚುವಂ–ಎದುರಿಸುವವನು, ಹರಿಗಂ– ಅರ್ಜುನನು, ಅಪ್ಪೊಡೆ–ಆದರೆ, ನೀಂ–ನೀನು, ಏಕೆ–ಏತಕ್ಕೆ, ಮೊಕ್ಕಳಂ–ವಿಶೇಷವಾಗಿ, ಪಳಂಚಿ–ತಾಗಿ, ಅಲೆದಪೆ–ಪೀಡಿಸುತ್ತೀಯೆ, ಅಣ್ಣ–ಕರ್ಣನೆ, ಮಹಾಜಿರಂಗದೊಳ್–ಮಹಾ ಯುದ್ಧರಂಗದಲ್ಲಿ, ಸೂೞ್ಪಡೆಯಲಪ್ಪುದು–ಸರದಿಯನ್ನು ಪಡೆಯಲಾಗುತ್ತದೆ, ಕಾಣ– ನೋಡು.

೨೪. ಮುದುಪರ–ಮುದಿಯನ, ಬಿಲ್ಬಲ್ಮೆಯುಂ–ಬಿಲ್ವಿದ್ದೆಯ ನೈಪುಣ್ಯವೂ, ಇಱಿವ– ಹೊಡೆಯುವ, ಅದಟುಂ–ಪರಾಕ್ರಮವೂ, ಬಗೆವಾಗಳ್–ಯೋಚಿಸಿದಾಗ, ಅಣ್ಣಂ–ಕರ್ಣನು, ಎಂದಂತುಟೆ–ಎಂದು ಹೇಳಿದ ಹಾಗೆಯೇ! ತಪ್ಪದು–ತಪ್ಪಾಗುವುದಿಲ್ಲ; ಕದನದೊಳ್–ಯುದ್ಧ ದಲ್ಲಿ, ಕರಮೆ–ವಿಶೇಷವಾಗಿಯೇ, ತುಚ, ಮಕ್ಕುಂ–ಹೀನವಾಗುತ್ತದೆ; ಇನ್ನೆನ್ನ ನುಡಿದ–ಇನ್ನು ನಾನು ಹೇಳಿದ, ನುಡಿಯಂ–ಪ್ರತಿಜ್ಞೆಯನ್ನು, ಕೇಳಿಂ–ಕೇಳಿರಿ.

೨೫. ಚಕ್ರಮಂ–ಚಕ್ರಾಯುಧವನ್ನು, ಪಿಡಿಯೆನ್–ಹಿಡಿಯೆನು, ಎಂಬ–ಎನ್ನುವ, ಚಕ್ರಿಯಂ–ಕೃಷ್ಣನನ್ನು, ಇಳಾಚಕ್ರಂ–ಭೂಮಂಡಲವು, ಭಯಂಗೊಳ್ವಿನಂ–ಹೆದರುತ್ತಿರಲು, ಕರಚಕ್ರಮಂ–ಕೈಯಚಕ್ರವನ್ನು, ಪಿಡಿಯಿಪ್ಪೆಂ–ಹಿಡಿಯುವಂತೆ ಮಾಡುತ್ತೇನೆ; ನರರಥಂ– ಅರ್ಜುನನ ರಥ, ಆ ಕುರುಕ್ಷೇತ್ರದಿಂ–ಆ ಕುರುಭೂಮಿಯಿಂದ, ತೂಳ್ದು–ತಳ್ಳಲ್ಪಟ್ಟು, ಪಡುವು–ಪಶ್ಚಿಮಕ್ಕೆ, ಎಣ್ಗಾವುದು ಪೋಗೆ–ಎಂಟು ಗಾವುದ ಹೋಗಲು, ಪೋ, ಗಡ, ಇಸುವೆಂ–ಬಾಣದಿಂದ ಹೊಡೆಯುತ್ತೇನೆ, ಅಲ್ಲವೆ, ಹೋಗು; ನಿಚ್ಚಂ–ಪ್ರತಿ ದಿನವೂ, ಪಯಿಂಛಾಸಿರ್ವರಂ–ಹತ್ತು ಸಾವಿರ, ಧರಾಧೀಶರಂ–ರಾಜರನ್ನು, ಓವದೆ–ರಕ್ಷಿಸದೆ, ಯುದ್ಧ ದೊಳ್–ರಣದಲ್ಲಿ, ಪಡಲ್ವಟ್ಟಂತಿರೆ–ಚದರಿ ಬೀಳುವ ಹಾಗೆ, ಮಾೞ್ಪೆಂ–ಮಾಡುತ್ತೇನೆ.

ವಚನ : ಅಳವಂ–ಶಕ್ತಿಯನ್ನು, ಅಳವಲ್ಲದೆ–ಅಳತೆ ಇಲ್ಲದೆ, ಅಧಿಕವಾಗಿ,

೨೬. ಕೌರವರು ಯುದ್ಧಭೂಮಿಗೆ ಪ್ರಯಾಣಮಾಡಿದ್ದು; ಪದ್ಮಜಂ–ಬ್ರಹ್ಮನು, ಆಸನಾಂಬುರುಹದಿಂದೆ–ಆಸನವಾದ ಕಮಲದಿಂದ, ಕೆಡೆದಂ–ಬಿದ್ದನು; ಆಗಳ್–ಆಗ, ಸುರೇಂದ್ರಾಚಳಂ–ಮೇರು ಪರ್ವತ, ನಡುಗಿತ್ತು–ಕಂಪಿಸಿತು; ಅರ್ಕಂ–ಸೂರ್ಯನು, ಅಳುರ್ಕೆಗಟ್ಟು–ವ್ಯಾಪ್ತಿಯನ್ನು ನೀಗಿಕೊಂಡು, ನಭದಿಂ–ಆಕಾಶದಿಂದ, ತೂಳ್ದಂ–ಹಿಮ್ಮೆಟ್ಟಿ ದನು; ಗೌರಿ–ಪಾರ್ವತಿಯು, ಮರುಳ್ದು–ಭ್ರಾಂತಳಾಗಿ, ಮೃಡನಂ–ಶಿವನನ್ನು, ಅಪ್ಪಿದಳ್– ತಬ್ಬಿಕೊಂಡಳು; ಸಮಸ್ತಮೀತ್ರಿಭುವನಂ–ಈ ಮೂರು ಲೋಕಗಳೆಲ್ಲ, ಪಂಕೇಜಪತ್ರಾಂಬು ವೋಲ್–ತಾವರೆ ಎಲೆಯ ಮೇಲಣ ನೀರಂತೆ, ನಡುಗಿತ್ತು–ಅಲ್ಲಾಡಿತು, ಎಂಬಿನಂ–ಎನ್ನು ತ್ತಿರಲು, ತತ್ಸನ್ನಾಹ ಭೇರೀರವಂ–ಕೌರವರ ಯುದ್ಧ ಸಿದ್ಧತೆಯ ಆ ಭೇರೀನಾದ, ಪರ್ವಿದುದು– ಹಬ್ಬಿತು.

ವಚನ : ಮೊೞಗುವ–ಶಬ್ದ ಮಾಡುವ, ಗುಡುಗುವ; ಕೇತುಗಳೊಡನೆ–ಬಾವುಟ ಗಳೊಡನೆ; ಉತ್ಪಾತಕೇತುಗಳ್–ಅಪಶಕುನ ಸೂಚಕವಾದ ಬೀಳ್ನಕ್ಷತ್ರಗಳು ಅಥವಾ ಧೂಮ ಕೇತುಗಳು; ಪೆರ್ವೆಂಡಿರ್–ವೃದ್ಧಸ್ತ್ರೀಯರು; ಸೂಸುವ ಸೇಸೆಯೊಡನೆ–ಚೆಲ್ಲುವ ಮಂತ್ರಾಕ್ಷತೆ ಗಳೊಡನೆ; ರುಧಿರವರ್ಷಂ–ರಕ್ತದಮಳೆ; ಅನಿಮಿತ್ತಂ–ನಿಷ್ಕಾರಣವಾಗಿ; ನೆಗೞೆಯುಂ– ಉಂಟಾಗಲು; ಸೆರಗಂಬೆರಗುಮಂ ಬಗೆಯದೆ–ಭಯವನ್ನೂ ಅಪಾಯವನ್ನೂ ಲೆಕ್ಕಿಸದೆ; ನೆಱೆದುಕೆಯ್ಗೆಯ್ದು–ಚೆನ್ನಾಗಿ ಸಿಂಗರಿಸಿಕೊಂಡು, ಆಯೋಗಂಗೊಂಡು–ಯುಕ್ತರಾಗಿ, ಸೇರಿ, ಪಟ್ಟವರ್ಧನದ– ಪೂಜಾಗಜದ; ಬೆಂಗೆವಾಯ್ದು–ಬೆನ್ನಿಗೆ ಹಾರಿ, ಎಂದರೆ ಬೆನ್ನಿನ ಮೇಲೆ ಕುಳಿತು.

೨೭. ನಯಂ ಅನಯಂ–ನೀತಿ, ಅನೀತಿ; ಎನಗೆ–ನನಗೆ, ಜಯಮಿದು–ಇದು ಜಯ, ಅಪಜಯ ಮಿದು–ಇದು ಸೋಲು, ಯಶಂ–ಕೀರ್ತಿ, ಅಯಶಂ–ಅಕೀರ್ತಿ ಎಂಬ, ಇದಂ– ಇದನ್ನು, ಬಗೆಯದೆ–ಗಣಿಸದೆ, ಕಲಹಮನೆ–ಯುದ್ಧವನ್ನೇ, ಮನದೊಳ್–ಮನದಲ್ಲಿ, ನಿಶ್ಚಯಿಸಿ–ನಿರ್ಣಯಿಸಿ, ಭಯಮಱಿಯದ ಕಲಿ–ಭಯವೇನೆಂಬುದನ್ನು ತಿಳಿಯದ ಶೂರ, ಸುಯೋಧನಂ–ದುರ್ಯೋಧನನು, ಪೊಱಮಟ್ಟಂ–ಹೊರಕ್ಕೆ ಹೊರಟನು. ಪೊಱಮಡು>ಪೊಱಗು+ಮಡು.

ವಚನ : ಮಿಳಿರ್ವ ಅಲುಗಾಡುವ; ಪಾಳಿಕೇತನಂಗಳುಂ–ಪಾಲಿಧ್ವಜಗಳೂ (ವಿವರಗಳಿಗೆ ಹಿಂದೆ ನೋಡಿ); ಪಂಚಮಹಾಶಬ್ದಂಗಳುಂ–ಶೃಂಗ, ತಮ್ಮಟೆ, ಭೇರಿ, ಜಯಘಂಟೆ, ಕಹಳೆ ಎಂಬ ಐದು ವಾದ್ಯಗಳ ಧ್ವನಿಗಳೂ; ಸುತ್ತಿಱಿದು–ಸುತ್ತುಗಟ್ಟಿ; ತಳರ್ವಂತೆ–ಚರಿಸುವ ಹಾಗೆ;

೨೮. ಕರಿ–ಆನೆಗಳು, ಮಕರಂಗಳಂ–ದೊಡ್ಡ ಮೀನುಗಳನ್ನು; ಕರಿಘಟಾವಳಿ–ಆನೆಗಳ ಸಾಲುಗಳು, ಅಬ್ದಕುಲಂಗಳಂ–ಮೇಘಗಳ ಸಮೂಹವನ್ನು; ಹಯಸಂತತಿ–ಕುದುರೆಗಳ ಸಮೂಹ, ಭಯಂಕರತರಮಾದ –ಅತಿ ಭಯಂಕರವಾದ, ಪೆರ್ದೆರೆಗಳಂ–ದೊಡ್ಡ ಅಲೆಗಳನ್ನು; ಅಮತ್ಸ್ಯ ಕೋಟಿಯಂ–ಕೋಟ್ಯಂತರ ಮೀನುಗಳನ್ನು, ಸ್ಫುರಿತ–ಹೊಳೆಯುವ, ನಿಶಾತ–ಹರಿತ ವಾದ, ಹೇತಿಯುತ–ಕತ್ತಿಗಳಿಂದ ಕೂಡಿದ, ಸದ್ಭಟ ಕೋಟಿ–ಕೋಟ್ಯಂತರ ಯೋಧರು, ಘೂರ್ಣಿತಾರ್ಣವಮಂ–ಘೂರ್ಣಿಸುವ ಸಮುದ್ರವನ್ನು, ನಿರಂತರಂ–ಯಾವಾಗಲೂ, ತಿರಸ್ಕರಿಸಿರೆ–ಕೀಳ್ಮಾಡಿಸಲು; ಚತುರ್ಬಲಾರ್ಣವಂ–ಚತುರಂಗ ಸೈನ್ಯ ಸಾಗರ, ಒತ್ತರಿಸಿತ್ತು– ಮುಂದೆ ತಳ್ಳಿಕೊಡು ಬಂತು.

೨೯. ಮದವದ್ದಂತಿ ವರೂಥವಾಜಿ ಭಟಸಂಘಾತಂಗಳ್–ಸೊಕ್ಕಾನೆ ರಥ ಕುದುರೆ ಯೋಧರ ಸಮೂಹಗಳು, ಈ ಲೆಕ್ಕಮೆಂಬುದಂ–ಈ ಸಂಖ್ಯೆಯೆನ್ನುವುದನ್ನು, ಆಂ ನಿಟ್ಟಿಸ ಲಾಱೆಂ–ನಾನು ನೋಡಲಾರೆನು; ಒಂದನ್ ಅಱಿವೆಂ–ಒಂದನ್ನು ಮಾತ್ರ ತಿಳಿಯುವೆನು; ತತ್ಸೈನ್ಯಪಾ ದೋತ್ಥಿತಂ–ಆ ಸೈನ್ಯದ ಕಾಲ್ತುಳಿತದಿಂದ ಮೇಲೆದ್ದ, ರಜಂ–ಧೂಳು, ಎತ್ತಂ– ಎಲ್ಲೆಲ್ಲೂ, ಪುದಿದು–ತುಂಬಿಕೊಂಡು, ಅಂಬರಸ್ಥಳಮುಮಂ–ಆಕಾಶಪ್ರದೇಶವನ್ನು ಕೂಡ, ಮುಟ್ಟಿತ್ತು–ಸೋಕಿತು; ತಳ್ತುರ್ವಿ–ಸೇರಿ ಅಧಿಕವಾಗಿ, ಪರ್ವಿದೊಡೆ–ಹರಡಿದರೆ, ಆಕಾಶಗಂಗಾ ಜಳಂ–ದೇವಗಂಗಾನದಿಯ ನೀರು, ಮುನ್ನಿನ–ಮೊದಲಿನ, ತೆಳ್ಪುಗೆಟ್ಟು–ತಿಳಿಯಾಗಿರುವಿಕೆ ಯನ್ನು ಕಳೆದುಕೊಂಡು, ಕೆಸಱಾಯ್ತು–ಬಗ್ಗಡವಾಯಿತು,

೩೦. ರವಿಕಿರಣಾಳಿಗಳ್–ಸೂರ್ಯನ ಕಿರಣಗಳ ಸಾಲು, ಧ್ವಜ ಪಟಾಳಿಯ–ಬಾವುಟದ ಬಟ್ಟೆಗಳ ಸಾಲುಗಳ, ತಿಂತಿಣಿಯಿಂದಂ–ಸಮೂಹದಿಂದ, ಉರ್ಚಲಾಱವೆ–ಭೇದಿಸಲಾರವೆ; ಎಂದರೆ ಧ್ವಜಪಟಗಳನ್ನು ನುಸುಳಿಕೊಂಡು ಬರುವುದಕ್ಕೆ ಸೂರ್ಯಕಿರಣಗಳಿಂದ ಆಗುತ್ತಿರ ಲಿಲ್ಲ; ರವಿವಾಜಿಗಳ್–ಸೂರ್ಯನ ಕುದುರೆಗಳು, ನೆಗೆದ ಪಾಂಸುಗಳಿಂ–ಎದ್ದ ದೂಳಿಗಳಿಂದ, ದೆಸೆಗೆಟ್ಟು–ದಿಕ್ಕು ಗಾಣದೆ, ಪೋಗಲಾಱವೆ–ಹೋಗಲಾರವೆ; ರವಿಬಿಂಬಮಂದು–ಸೂರ್ಯ ಮಂಡಲವು ಆಗ, ಎಸೆಯಲಾಱದೆ–ಹೊಳೆಯಲಾರದೆ; ಪೆಂಪಿನ ತಿಣ್ಪನಾಂತ–ಹಿರಿಮೆಯ ಭಾರವನ್ನು ಹೊಂದಿರುವ, ಕೌರವ ಬಳದ–ಕೌರವ ಸೈನ್ಯದ, ಅಂತು–ಕೊನೆ, ಮೇರೆ–ಎಲ್ಲೆ, ಪವಣ್–ಅಳತೆ, ಎಂಬದಂ–ಎನ್ನುವುದನ್ನು, ಅಱಿವಂದಂ–ತಿಳಿವ ರೀತಿ, ಆವುದೋ– ಯಾವುದೋ!

೩೧. ಮದವದ್ದಂತಿ ಮದಾಂಬುಧಾರೆಗಳ್–ಸೊಕ್ಕಾನೆಗಳ ಮದದ ನೀರಿನ ಧಾರೆಗಳು, ಅವು–ಅವು, ಅದು ಒಂದೊಂದಱೊಳ್–ಒಂದೊಂದರಲ್ಲಿ, ಕೂಡೆ–ಸೇರಲು; ಪಣ್ಣಿದ– ಮಾಡಿದ ಎಂದರೆ ಅಲಂಕಾರ ಮಾಡಿದ, ಸಜ್ಜು ಮಾಡಿದ; ಜಾತ್ಯಶ್ವ ರಥಾಶ್ವ ಸಂಕುಳ ಖಲೀನೋದ್ಭೂತಲಾಲಾಜಲಂ–ಜಾತಿ ಕುದುರೆ, ರಥ ಕುದುರೆಗಳ ಸಮೂಹದ ಕಡಿವಾಣ ದಿಂದ ಉಂಟಾದ ಜೊಲ್ಲು ನೀರು, ಕದಡೆೞ್ದು–ಕದಡೆದ್ದು; ಕಲಕಿ, ಬಗ್ಗಡವಾಗಿ, ಎತ್ತಂ– ಎಲ್ಲೆಲ್ಲೂ, ಅವುಂಕೆ–ಒತ್ತರಿಸಲು, ಪರಭಾಗಂ ಬೆತ್ತು–ಸೊಗಸನ್ನು ಹೊಂದಿ, ಕೌರವಧ್ವಜಿನಿ ಯೊಳ್–ಕೌರವನ ಸೈನ್ಯದಲ್ಲಿ, ಕಾಳಿಂದಿಯುಂ ಗಂಗೆಯುಂ–ಯಮುನೆಯೂ ಗಂಗೆಯೂ, ಲೋಕಕ್ಕೆ–ಜನಕ್ಕೆ, ಸನ್ನಿದಮಾಗಿರ್ದುವು–ಸಮೀಪವಾಗಿದ್ದುವು.

ವಚನ : ಕರ್ಣತಾಳಾಹತಿಯಿಂ–ಕಿವಿಗಳ ಬೀಸುವಿಕೆಯ ಏಟಿನಿಂದ; ಜೀಱೆೞ್ದು– ಜೀರೆಂದು ಶಬ್ದ ಮಾಡುತ್ತ ಎದ್ದು; ಪಾಱೇೞೆಯುಂ–ಹಾರಿ ಮೇಲಕ್ಕೇಳಲೂ, ನಿಚ್ಚವಯಣ ದಿಂ–ನಿತ್ಯ ಪ್ರಯಾಣದಿಂದ; ಪ್ರಳಯಂ–ಪ್ರಳಯ ಕಾಲವು, ಮೂರಿವಿಟ್ಟಂತೆ–ಗುಂಪಾದಂತೆ; ಬೀಡುಬಿಟ್ಟು–ಪಾಳಯವನ್ನು ಬಿಟ್ಟು.

೩೨. ಉಳ್ಳ ಕೈದುಗಳಂ–ಇರುವ ಆಯುಧಗಳನ್ನು, ಮಸೆಯಿಸುಗೆ–ಉಜ್ಜಿ ಹರಿತ ಗೊಳಿಸಲಿ; ಆನೆಗಳಂ–ಆನೆಗಳನ್ನು, ಅರ್ಚಿಸುಗೆ–ಪೂಜಿಸಲಿ, ವಿಶುದ್ಧವಾಜಿಗಳಂ– ನಿರ್ಮಲ ವಾದ ಕುದುರೆಗಳನ್ನು, ತಗುಳ್ದು ಪೂಜಿಸುಗೆ–ಅನುಸರಿಸಿ ಪೂಜಿಸಲಿ; ಆಜಿಗೆ–ಕಾಳಗಕ್ಕೆ, ಜೆಟ್ಟಿಗರಾಗಿ–ಮಲ್ಲರಾಗಿ, ಕೊಳ್ಳಿವೀಸಿಸುಗೆ–ಕೊಳ್ಳಿಯನ್ನು ಬೀಸಿಸಲಿ (ಯುದ್ಧ ಆರಂಭವಾಗ ಲೆಂಬುದನ್ನು ಕೊಳ್ಳಿಯನ್ನು ಬೀಸಿ ತೋರಿಸುವುದು ವಾಡಿಕೆ); ನಿರಂತರಂ–ಸಂತತವಾಗಿ, ರವಳಿ–ಸಾಮೂಹಿಕ ಶಬ್ದವು, ಘೋಷಿಸುಗೆ–ಕೂಗಲಿ; ಇಂದೆ–ಇವತ್ತೆ, ಕಡಂಗಿ–ಉತ್ಸಾಹಿಸಿ, ಸಾರ್ಚ್ಚಿ–ಸಮೀಪಕ್ಕೆ ಬಂದು, ಬಿಟ್ಟು–ಪಾಳಯವನ್ನು ಬಿಟ್ಟು, ಉಸಿರದೆ ನಿಲ್ವ–ಮಾತಾಡದೆ ನಿಲ್ಲುವ, ಸುಮ್ಮನಿರುವ, ಕಾರಣಂ ಅದಾವುದೊ–ಕಾರಣವು ಅದು ಏನೋ! ನೆಟ್ಟನೆ–ನೇರ ವಾಗಿ, ನಾಳೆ–ನಾಳೆ ದಿನವೇ, ಕಾಳಗಂ–ಯುದ್ಧ, ರವಳಿ=(ತೆ) ರವಲಿ, ರವಳಿ–ಶಬ್ದ, ಗದ್ದಲ ಎಂಬರ್ಥ; (ತೆ) ರವಳಿಂಚು ಎಂಬ ಕ್ರಿಯಾರೂಪವೂ ಇದೆ; ರೌತುಲಾ ರವಳಿತೋ–ರಾವುತರ ರವಳಿಯಿಂದ ಎಂಬ ಪ್ರಯೋಗವೂ ಇದೆ. ಸ್ವಲ್ಪ ದೂರಕ್ಕೆ ಕೇಳಿಬರುವ ಸಂತೆಯ ಶಬ್ದ.

೩೩. ಪಗೆಮಸೆದಂದೆ–ಹಗೆತನವನ್ನು ಮಸೆದ ದಿನವೇ, ಕೆಯ್ದು–ಆಯುಧಗಳು, ಮಸೆದು ಇರ್ದುವು–ಸಾಣೆ ಹಿಡಿಯಲ್ಪಟ್ಟಿವೆ; ಪೂಜಿಸುವ–ಪೂಜೆ ಮಾಡುವ, ಅಂಕದಾನೆ ವಾಜಿಗಳ್– ಯುದ್ಧದ ಆನೆ ಕುದುರೆಗಳು, ಎಮಗಿಲ್ಲ–ನಮಗಿಲ್ಲ; ಜೆಟ್ಟಿಗರೆ–ಪೈಲ್ವಾನರೆ, ಎನ್ನೊಡ ವುಟ್ಟಿದರ್–ನನ್ನ ಸಹೋದರರು, ನಾಲ್ಕುಮಾನೆಗಳ್–ನಾಲ್ಕು ಆನೆಗಳು; ಅಲ್ತೆ–ಅಲ್ಲವೆ? ಇವನ್–ಇವುಗಳನ್ನು, ಆಂ–ನಾನು, ದಲ್–ದಿಟವಾಗಿಯೂ, ಈ ರಣದೊಳ್–ಈ ಯುದ್ಧದಲ್ಲಿ, ಅರ್ಚಿಸಿ–ಪೂಜಿಸಿ, ಬಿಟ್ಟಪೆನ್–ಛೂ ಬಿಡುತ್ತೇನೆ; ಏಕೆ ಮಾಣ್ಬೆನ್–ಏಕೆ ನಿಲ್ಲುವೆನು, ತಡಮಾಡುವೆನು; ಇದನ್–ಈ ಮಾತನ್ನು; ಆವಗಂ–ಪೂರ್ಣವಾಗಿ, ಇಂತೆ–ಹೀಗೆಯೇ, ನೆಱೆಯೆ–ಪೂರ್ತಿ, ಪೇೞ್–ಹೇಳು; ನಾಳೆಯೆ ಕಾಳೆಗಂ–ನಾಳೆಯೇ ಯುದ್ಧ; ಅಂತೆಗೆಯ್ವೆಂ ಆಂ–ನಾವೂ ಹಾಗೆಯೇ ಮಾಡುತ್ತೇವೆ.

ವಚನ : ಪುಂಡರೀಕಾಕ್ಷಂಗೆ–ಕೃಷ್ಣನಿಗೆ; ಬೞಿಯನಟ್ಟಿ ಬರಿಸಿ–ದೂತನನ್ನು ಕಳಿಸಿ ಬರಮಾಡಿಕೊಂಡು; ಪಡೆಯೊಳ್–ಸೈನ್ಯದಲ್ಲಿ; ಕಟ್ಟುವಂ–ಕಟ್ಟೋಣ;

೩೪. ವಿರಾಟನ ಹಿರಿಯ ಮಗ ಶ್ವೇತನಿಗೆ ವೀರಪಟ್ಟ–ಮಾತುಂಗಾಸುರ ವೈರಿಯಲ್ಲಿ– ಈಶ್ವರನಲ್ಲಿ, ಬಿಲ್ಲಂ–ಬಿಲ್ಲನ್ನು, ಪಡೆದಂ–ಪಡೆದನು; ಧನುರ್ವಿದ್ಯೆಗೆ– ಬಿಲ್ವಿದ್ದೆಯಲ್ಲಿ, ಅಂತು–ಹಾಗೆ, ಆತಂಗೆ–ಅವನಿಗೆ, ಅಗ್ಗಳಂ–ಮಿಗಿಲಾದವರು, ಆರುಂ ಇಲ್ಲ–ಯಾರೂ ಇಲ್ಲ, ಅದಱಿಂ–ಆದುದರಿಂದ, ಆ ಶ್ವೇತಂಗಂ–ಆ ಶ್ವೇತನಿಗೂ, ಅಂತಾ ನದೀಜಾತಂಗಂ– ಹಾಗೆ ಆ ಭೀಷ್ಮನಿಗೂ, ಯುದ್ಧಂ–ಕಾಳಗವು, ದೊರೆ–ಸಮಾನ, ಸಾಟಿ; ಎಂದಱಿದು–ಎಂದು ತಿಳಿದು, ಭೂಲೋಕ ವಿಖ್ಯಾತಂಗೆ–ಭೂಮಿಯಲ್ಲಿ ಪ್ರಸಿದ್ಧನಾದ, ತಚ್ಛ್ವೇತಂಗೆ–ಆ ಶ್ವೇತನಿಗೆ, ಉದಾರಂ ಧರ್ಮಜಂ–ಉದಾರಿಯಾದ ಧರ್ಮರಾಜನು, ಅಗ್ಗಳ ವೀರಪಟ್ಟಮಂ–ಶ್ರೇಷ್ಠ ವಾದ ಸೇನಾನಾಯಕ ಪಟ್ಟವನ್ನು, ಕಟ್ಟಿದಂ–ಹಣೆಗೆ ಕಟ್ಟಿದನು.

ವಚನ : ಪಡೆವಳರ್–ಪಡೆಯಪಾಲಕರು; ಸಾಱಿಂ–ಸಾರಿ ಹೇಳಿರಿ;

೩೫. ಸೂರ್ಯನು ಮುಳುಗುವುದು: ಪಗೆ ಸುಗಿವನ್ನೆಗಂ–ಹಗೆಯು ಹೆದರುತ್ತಿರಲು, ಮಸೆವ–ಮಸೆಯುತ್ತಿರುವ, ವೀರಭಟರ್ಕಳ್–ಶೂರಯೋಧರ, ರೌದ್ರಮಪ್ಪ ಕೆಯ್ದುಗಳಿಂ– ಭಯಂಕರವಾದ ಆಯುಧಗಳಿಂದ; ಅಗುರ್ವಿನ–ಭಯದ, ಅದ್ಭುತದಿಂ–ಆಶ್ಚರ್ಯದಿಂದ, ಉರ್ವಿದ–ಉಬ್ಬಿದ, ಕೆಂಗಿಡಿಗಳ್–ಕೆಂಪಾದ ಕಿಡಿಗಳು, ಪಳಂಚಿ–ಸಂಘಟ್ಟಿಸಿ, ತೊಟ್ಟಗೆ– ಬೇಗನೆ, ಕೊಳೆ–ಹಿಡಿಯಲು, ಪಾಯ್ದವೋಲ್–ನುಗ್ಗಿದಂತೆ, ಪೊಳೆವ–ಹೊಳೆಯುತ್ತಿರುವ, ಸಂಜೆಯ ಕೆಂಪದು–ಆ ಸಂಜೆಯ ಕೆಂಬಣ್ಣ, ಸಾಣೆಗೊಡ್ಡಿದ–ಸಾಣೆಗೆ ಚಾಚಿದ, ಇಟ್ಟಗೆಯ ರಜಂಬೊಲ್–ಇಟ್ಟಿಗೆಯ ಕೆಂದೂಳಿಯಂತೆ, ಎಂಬಿನೆಗಂ–ಎನ್ನುತ್ತಿರಲು, ದಿವಾಕರಂ– ಸೂರ್ಯ, ಅಸ್ತಮಯಕ್ಕಿೞಿದಂ–ಅಸ್ತಮಾನಕ್ಕಿಳಿದನು, ಎಂದರೆ ಮುಳುಗಿದನು.

ವಚನ : ಚಾತುರ್ಯಾಮಾವಸಾನ–ನಾಲ್ಕು ಜಾವಗಳ ಅಂತ್ಯದಲ್ಲಿ; ಸಮುದಿತ– ಹುಟ್ಟಿದ; ರವಳಿ ಘೋಷಿಸಿ–ಸಾಮೂಹಿಕ ಶಬ್ದವನ್ನು ಮಾಡಿ, ಕೊಳ್ಳಿವೀಸಿದಾಗಳ್–ಕೊಳ್ಳಿ ಯನ್ನು ಬೀಸಿದಾಗ (ರಾತ್ರಿ ಹೊತ್ತಿನಲ್ಲಿ).

೩೬. ಕೊಳ್ಳಿಯನ್ನು ಬೀಸಿದುದರ ಪರಿಣಾಮ: ಅಂಬರಂ–ಆಕಾಶವು, ಉರಿ ಮುಟ್ಟಿದ ಅರಳೆಯಂತೆ–ಉರಿ ಸೋಕಿದ ಹತ್ತಿಯಂತೆ, ಉರಿದತ್ತು–ಉರಿಯಿತು; ಅಜನಪದ್ಮವಿಷ್ಟರದ ಎಸೞ್–ಬ್ರಹ್ಮನ ಪದ್ಮ ಪೀಠದ ಎಸಳು, ಅಂದು–ಆಗ, ಅರೆ ಸೀದುವು–ಅರ್ಧ ಸುಟ್ಟುವು; ಅಖಿಳದಿಗ್ದ್ವಿರದರದಂಗಳ್–ಎಲ್ಲ ದಿಕ್ಕಿನ ಆನೆಗಳ ದಂತಗಳು, ಕರಮೆ–ವಿಶೇಷವಾಗಿ, ಆಗಳ್–ಆಗ, ಕರಿಪುಗಾಱಿದುವು–ಕಪ್ಪನ್ನು ಕಕ್ಕಿದುವು ಎಂದರೆ ಕರಿಬಣ್ಣದವಾದುವು.

ವಚನ : ಕೊಳ್ಳಿವೀಸಿದಿಂಬೞಿಯಿಂ–ಕೊಳ್ಳಿಯನ್ನು ಬೀಸಿ ಆದಮೇಲೆ, ಅನಂತರದಲ್ಲಿ.

೩೭. ಧೃತಧವಳ ವಸನರ್–ಧರಿಸಿದ ಬಿಳಿವಸ್ತ್ರವನ್ನುಳ್ಳವರು, ಆರಾಧಿತ ಶಿವರ್–ಪೂಜಿ ಸಲ್ಪಟ್ಟ ಶಿವನನ್ನುಳ್ಳವರು, ಅರ್ಚಿತ ಸಮಸ್ತ ಶಸ್ತ್ರರ್–ಪೂಜಿಸಲ್ಪಟ್ಟ ಸರ್ವಾಯುಧ ಗಳನ್ನುಳ್ಳವರು, ನೀರಾಜಿತ ತುರಗರ್–ಆರತಿ ಎತ್ತಲ್ಪಟ್ಟ ಕುದುರೆಗಳನ್ನುಳ್ಳವರು, ಕೆಲರ್– ಕೆಲವರು, ಅತಿರಥ, ಸಮರಥ, ಮಹಾರಥ, ಅರ್ಧರಥರ್ಕಳ್–ಅತಿರಥ, ಸಮರಥ, ಮಹಾರಥ, ಅರ್ಧರಥಿಕರೆಂಬವರು, ಒಪ್ಪಿದರ್–ಶೋಭಿಸಿದರು.

೩೮. ಉಡಲುಂ ತುಡಲುಂ–ಉಟ್ಟುಕೊಳ್ಳುವುದಕ್ಕೂ, ತೊಟ್ಟುಕೊಳ್ಳುವುದಕ್ಕೂ, ವಸ್ತ್ರಂ– ವಸ್ತ್ರವನ್ನು, ತುಡುಗೆಯಂ–ಒಡವೆಗಳನ್ನು; ಆನೆಯುಮಂ–ಆನೆಯನ್ನೂ, ಅರ್ಥಿಸಂತತಿಗೆ– ಯಾಚಕರನೇಕರಿಗೆ, ಈಯಲ್–ಕೊಡಲು; ಬಿಡುವೊನ್ನುಮಂ– ಬಿಡಿಬಿಡಿಯಾದ ಹೊನ್ನು (ನಾಣ್ಯ)ಗಳನ್ನೂ, ಆಳ್ಗೆ–ಮನುಷ್ಯನಿಗೆ, ಅಟ್ಟುವ–ಕಳಿಸಿಕೊಡುವ, ತೊಡರೊಳ್–ತೊಡಕಿ ನಲ್ಲಿ, ಸಿಕ್ಕಿನಲ್ಲಿ, ಕೆಲಬರ್–ಕೆಲವರು, ಅರಸು ಮಕ್ಕಳ್–ರಾಜಪುತ್ರರು, ತೊಡರ್ದಿರ್ದರ್– ಸಿಕ್ಕಿಬಿದ್ದಿದ್ದರು.

ವಚನ : ಪ್ರಸ್ತಾವ–ಸಮಯ; ದೋರ್ವಲದ–ಬಾಹುಬಲದ; ಅಗುರ್ವಿನೊಳ್– ಭೀಕ ರತೆಯಲ್ಲಿ, ಆಧಿಕ್ಯದಲ್ಲಿ; ಉರ್ವೀಪತಿಯಂ–ರಾಜನನ್ನು.

೩೯. ಇಲ್ಲಿಂದ ೪೯ ಪೂರ್ತಿ ಸೈನಿಕರ ವೀರಾಲಾಪಗಳು ಉಕ್ತವಾಗಿವೆ :– ವಿರೋಧಿ ಸಾಧನ ಘಟಾಘಟಿತಾಹವದಲ್ಲಿ–ಶತ್ರು ಸೈನ್ಯದ ಆನೆಗಳಿಂದುಂಟಾಗುವ ಯುದ್ಧದಲ್ಲಿ, ನಾಳೆ, ನಿನ್ನ ಕಟ್ಟಾಳಿರೆ–ಶೂರರಿರಲು, ಮುಂಚಿತಾಗದೊಡಂ–ಎಲ್ಲರಿಗಿಂತ ಮುಂಚಿತ ವಾಗಿಯೇ ಮೇಲೆ ನುಗ್ಗದಿದ್ದರೂ, ಅಳ್ಕುಱೆತಾಗಿ–ಭಯವಾಗುವಂತೆ ಎದುರಿಸಿ, ವಿರೋಧಿ ಸೈನ್ಯ ಭೂಪಾಳರಂ–ಶತ್ರುಸೈನ್ಯದ ರಾಜರನ್ನು, ಒಂದೆ ಪೊಯ್ಯದೊಡಂ–ಒಟ್ಟಿಗೆ ಹೊಡೆಯ ದಿದ್ದರೂ, ಈ ತಲೆ ಪೋದೊಡಂ–ಈ ತಲೆ ಹೋದರೂ, ಅಟ್ಟೆ–ಮುಂಡವು, ಕಟ್ಟಾಳನೆ– ಶೂರರನ್ನೇ, ಅಟ್ಟಿ ಮುಟ್ಟಿ–ಬೆನ್ನಟ್ಟಿ ಸೋಕಿ, ತಳ್ತಿಱಿಯದಿರ್ದೊಡಂ–ಸೇರಿ ಯುದ್ಧ ಮಾಡ ದಿದ್ದರೂ, ಮಹೀಪತೀ–ರಾಜನೇ, ಆಂ–ನಾನು, ಅಂಜಿದೆನ್–ಅಂಜಿದವನಾಗುತ್ತೇನೆ.

ವಚನ : ಮನದ ಪೊಡರ್ಪುಮಂ–ಮನಸ್ಸಿನ ಸ್ಫುರಣೆಯನ್ನು ಎಂದರೆ ಚೈತನ್ಯವನ್ನು, ಕೂರ್ಪುಮಂ–ತೀಕ್ಷ್ಣತೆಯನ್ನು, ತನ್ನನಾಳ್ದಂ–ತನ್ನ ಸ್ವಾಮಿ, ಪ್ರಭು; ಕರಂಮೆಯ್ವೆರ್ಚೆ– ವಿಶೇಷವಾಗಿ ಮೈಯುಬ್ಬಿ;

೪೦. ಒದವಿದ–ಉಂಟಾದ, ನಿನ್ನದೊಂದು ದಯೆ–ನಿನ್ನ ಒಂದು ದಯೆಯು, ಪಿರಿದೋ– ದೊಡ್ಡದೋ, ಮೇಣ್–ಅಥವಾ, ನೆಗೞ್ದ–ಪ್ರಸಿದ್ಧವಾದ, ಎನ್ನ ಗಂಡುಂ–ನನ್ನ ಪೌರುಷವೂ, ಆದದಟುಂ–ಉಂಟಾದ ಶೌರ್ಯವೂ, ಅಳುರ್ಕೆಯುಂ–ವ್ಯಾಪ್ತಿಯೂ, ಪಿರಿದೊ– ದೊಡ್ಡದೋ, ಸಂದೆಯಮಾದಪುದು–(ನನಗೆ) ಸಂದೇಹವಾಗುತ್ತಿದೆ, ಇಂತಿದು–ಹೀಗೆ ಇದು, ಇಲ್ಲಿ ತೂಗಿದೊಡೆ–ಇಲ್ಲಿ ತೂಕಮಾಡಿದರೆ, ಅಱಿಯಲ್ಕೆ ಬಾರದು–ತಿಳಿಯುವುದಕ್ಕಾಗು ವುದಿಲ್ಲ; ಅದು ಕಾರಣದಿಂ–ಆ ಕಾರಣದಿಂದ, ರಿಪುಭೂಪ ದಂತಿದಂತದ–ಶತ್ರುರಾಜರ ಆನೆಗಳ ದಂತವೆಂಬ, ತೊಲೆಯೊಳ್–ತಕ್ಕಡಿಯಲ್ಲಿ, ಭೂಪತಿ–ರಾಜನೇ, ಪರಾಕ್ರಮದಿಂ– ಪ್ರತಾಪದಿಂದ, ಎನ್ನನೆ–ನನ್ನನ್ನೇ, ತೂಗಿ–ತೂಕಮಾಡಿ, ತೋಱೆನೇ–ತೋರಿಸೆನೇ? ಎಂದರೆ ತೋರಿಸುತ್ತೇನೆ ಎಂದು ತಾತ್ಪರ್ಯ.

ವಚನ : ಸೆರಗುಂಬೆರಗುಮಿಲ್ಲದ–ಭಯವೂ ಅಪಾಯವೂ ಇಲ್ಲದ; ಕಲಿತನಮಂ– ಶೌರ್ಯವನ್ನು; ಉದಾರವೀರರಸ ರಸಿಕನಾಗಿ–ವಿಶಾಲವಾದ ವೀರರಸದಲ್ಲಿ ಆಸಕ್ತನಾಗಿ;

೪೧. ಕುದುರೆಯಂ–ಕುದುರೆಯನ್ನು, ಏಱಿದಂ ಬೆರಸು–ಹತ್ತಿದ ಸವಾರನ ಸಮೇತ ವಾಗಿ, ಸೌಳೆನೆವೋಗಿರೆ–ಸಿಳ್ ಎಂದು (ಕತ್ತರಿಸಿ) ಹೋಗುವ ಹಾಗೆ, ಪೊಯ್ದು–ಹೊಡೆದೂ; ಎಯ್ದೆ–ಚೆನ್ನಾಗಿ, ಕಟ್ಟಿದಿರೊಳೆ–ಎದುರುಗಡೆಯಲ್ಲೆ, ನೂಂಕಿದಾನೆಗಳ–ನುಗ್ಗಿ ಬಂದ ಆನೆಗಳ, ಕೋಡುಗಳಂ–ಕೊಂಬುಗಳನ್ನು, ಬಳೆವೋಗೆ–ಬಳೆಗಳು ಎಂದರೆ ಅಣಸುಗಳು ಬಿದ್ದು ಹೋಗು ವಂತೆ, ಪೊಯ್ದುಂ–ಹೊಡೆದೂ, ಆಂತ ಅದಟರಂ–ಇದಿರಾದ ಶೂರರನ್ನು, ಒಂದೆಪೊಯ್ದುಂ– ಒಟ್ಟಿಗೇ ಹೊಡೆದೂ, ಎರಡುಂಬಲಂ–ಎರಡು ಕಡೆಯ ಸೈನ್ಯಗಳೂ, ಎನ್ನನೆ ನೋಡೆ–ನನ್ನನ್ನೇ ನೋಡಲು, ತಕ್ಕಿನ–ಯೋಗ್ಯತೆಯನ್ನುಳ್ಳ, ಎನ್ನದಟುಮಂ–ನನ್ನ ಶೌರ್ಯವನ್ನೂ, ಎನ್ನ ವೀರ ಮುಮಂ–ನನ್ನ ಪ್ರತಾಪವನ್ನೂ, ಆಜಿಯೊಳ್–ಯುದ್ಧದಲ್ಲಿ, ಎನ್ನರಸಂಗೆ–ನನ್ನ ರಾಜನಿಗೆ, ತೋಱುವೆಂ–ತೋರಿಸುತ್ತೇನೆ.

ವಚನ : ಅತಿರಭಸ ರಣ ವ್ಯಸನಮಂ–ಅತಿ ವೇಗದಿಂದ ಕೂಡಿದ ಯುದ್ಧಾಸಕ್ತಿಯನ್ನು; ಆತ್ಮೀಯ–ತನ್ನ; ಶಾಸನಾಯತ್ತಂ–ಅಧೀನವನ್ನಾಗಿ, ಮಂಡಳಾಗ್ರಮಂ–ಕತ್ತಿಯನ್ನು; ಅನುಗೆಯ್ದು–ಸಿದ್ಧ ಮಾಡಿಕೊಂಡು; ವೀರಗ್ರಹಗ್ರಸ್ತರಾಗಿ–ಶೌರ್ಯವೆಂಬ ಗ್ರಹದಿಂದ ಹಿಡಿಯಲ್ಪಟ್ಟವನಾಗಿ.

೪೨. ಸಿಡಿಲೊಳೆ ತಳ್ತು ಪೋರ್ವ ಸಿಡಿಲಂತಿರೆ–ಸಿಡಿಲಿನಲ್ಲಿಯೇ ಸೇರಿ ಹೋರಾಡುವ ಸಿಡಿಲಿನಂತೆ, ಬಾಳ್ಬಾಳೊಳೆ ಪಳಂಚಿ–ಕತ್ತಿ ಕತ್ತಿಯಲ್ಲಿ ತಾಗಿ, ಮಾರ್ಕಿಡಿವಿಡೆ–ಎದುರು ಕಿಡಿ ಗಳನ್ನು ಸೂಸುತ್ತಿರಲು, ದೆಸೆದೇವತೆಗಳ್–ದಿಗ್ದೇವತೆಗಳು, ನೋಡಲಂಜಿ–ನೋಡಲು ಹೆದರಿ, ಪೆಱಪಿಂಗೆ–ಹಿಂಜರಿಯುತ್ತಿರಲು, ತೋಳತೀನ್ ಕಿಡೆ–ತೋಳಿನ ತೀಟೆ ಹೋಗಲು, ನಲಿದು– ಸಂತೋಷಿಸಿ, ಒಂದೆರೞ್ಕುದುರೆಯಟ್ಟೆಯುಂ–ಒಂದೆರಡು ಕುದುರೆಗಳ ಅಟ್ಟೆಗಳೂ, ಒಂದೆರಡಾನೆಯಟ್ಟೆಯುಂ–ಒಂದೆರಡು ಆನೆಗಳ ಮುಂಡಗಳೂ, ತೊಡರ್ದು–ಕತ್ತಿಗೆ ಸಿಕ್ಕಿಕೊಂಡು, ಒಡನೆ ಆಡೆ–ಕತ್ತಿಯೊಡನೆ ಕುಣಿಯಲು, ತಳ್ತಿಱಿಯದಿರ್ದೊಡೆ–ಇದಿರಾಗಿ ಯುದ್ಧ ಮಾಡದಿದ್ದರೆ, ಜೋಳಮಂ–ಅನ್ನದ ಹಂಗನ್ನು, ಎಂತು–ಹೇಗೆ, ನೀಗುವೆಂ– ಕಳೆಯುವೆನೊ?

೪೩. ಸುರಲೋಕಂ–ದೇವಲೋಕವು, ಸ್ವರ್ಗವು; ದೊರೆಕೊಳ್ವುದು–ಸಿಕ್ಕುವುದು, ಲಭ್ಯ ವಾಗುವುದು, ಒಂದು; ಪರಮ ಶ್ರೀ ಲಕ್ಷ್ಮಿಯುಂ–ಉತ್ಕೃಷ್ಟವಾದ ಐಶ್ವರ್ಯವು, ಬರ್ಪುದು–ಬರುವುದು; ಆದರದಿಂ–ಪ್ರೀತಿಯಿಂದ, ದೇವನಿಕಾಯದೊಳ್–ದೇವತೆಗಳ ಸಮೂಹದಲ್ಲಿ, ನೆರೆವುದು–ಕೂಡುವುದು, ಒಂದು; ಉತ್ಸಾಹಮುಂ–ಉತ್ಸಾಹವೂ, ತನ್ನ ಮೆಯ್ಸಿರಿ–ತನ್ನ ದೇಹಕಾಂತಿಯೂ, ಭಾಗ್ಯವೂ, ನೆರಮಪ್ಪುದು–ಸಹಾಯವಾಗುವುದು, ಒಂದೆ ರಣದೊಳ್–ಒಂದೇ ಯುದ್ಧದಲ್ಲಿ; ಆಜಿಯಂ ಗೆಲ್ದು–ಯುದ್ಧದಲ್ಲಿ ಗೆದ್ದು, ಸಂಗರ ದೊಳ್–ಕಾಳಗದಲ್ಲಿ, ತಳ್ತು–ಸೇರಿ, ಜೋಳದ ಪಾೞಿಯಂ–ಅನ್ನದ ಧರ್ಮವನ್ನು, ಹಂಗನ್ನು; ನೆರಪಿದಂ–ಕೂಡಿಸಿದವನು, ಗಂಡಂ–ಶೂರನು; ಪೆಱಂ–ಬೇರೆಯವನು, ಗಂಡನೇ–ಶೂರನೇ? ಅಲ್ಲ.

೪೪. ಮಾಱಾಂತಬಲಂ–ಪ್ರತಿಭಟಿಸಿದ ಸೈನ್ಯವು, ತವೆ–ನಾಶವಾಗುವಂತೆ, ಕಱುತ್ತು– ಕೋಪಿಸಿ, ಇಱಿದು–ಹೊಡೆದು, ತನ್ನಾಳ್ದಂ–ತನ್ನ ಪ್ರಭು, ಕರಂಮೆಚ್ಚೆ–ಅಧಿಕವಾಗಿ ಮೆಚ್ಚಲು, ಗೆಲ್ದವನಂ–ಗೆದ್ದವನನ್ನು, ಶ್ರೀವಧು–ಶ್ರೀವನಿತೆಯು, ಪತ್ತುಗುಂ–ಸೇರುತ್ತದೆ; ಮಡಿದನಂ– ಸತ್ತವನನ್ನು, ದೇವಾಂಗನಾನೀಕಂ–ದೇವಸ್ತ್ರೀಯರ ಸಮೂಹವು, ಉತ್ಸವದಿಂದೆ–ಒಸಗೆ ಯಿಂದ, ಉಯ್ಗುಂ–ಸ್ವರ್ಗಕ್ಕೆ ಒಯ್ಯುತ್ತದೆ; ಎಂತುಂ–ಹೇಗೂ, ಸುಭಟಂಗೆ–ಒಳ್ಳೆಯ ಶೂರನಿಗೆ, ಇಂಬು–ಸುಖ ಸಂತೋಷ; ಇಂತಪ್ಪುದಂ ಕಂಡು–ಹೀಗಾಗುವುದನ್ನು ತಿಳಿದೂ, ಅಂಜುವಂ–ಹೆದರುವವನು, ಏಕಂಜುವಂ–ಏಕೆ ಹೆದರುವನು? ಎಂದ–ಎಂಬುದಾಗಿ, ಪೆರ್ಚಿ– ಉಬ್ಬಿ, ಮತ್ತೊರ್ವಂ–ಬೇರೊಬ್ಬನು, ಆಸ್ಥಾನದೊಳ್–ಸಭೆಯಲ್ಲಿ, ನುಡಿದಂ–ಹೇಳಿದನು, ಇಂಬು=(ತ) ಇಂಬಂ–ಸಂತೋಷ, ಸುಖ.

ವಚನ : ದರ್ಭಶಯನಂ ಮಾಡಿ–ದರ್ಭೆಯ ಮೇಲೆ ಮಲಗಿಕೊಂಡು; ಪಲ್ಲಂ ಸುಲಿದು– ಹಲ್ಲನ್ನು ಉಜ್ಜಿ; ಪರಿಚೆ, । ದಿಸಿರ್ದರ್–ನಿಶ್ಚಯಿಸಿದ್ದರು; ಈ ಪೊೞ್ತೆಪೊೞ್ತು–ಈ ಹೊತ್ತೇ ಹೊತ್ತು; ನಿನಗೆ ಅಱಿವುಂಟೆ–ನಿನಗೆ ತಿಳಿವು ಇದೆಯೆ? ಓಲೆವಾಗ್ಯಂ–ಓಲೆಯ ಭಾಗ್ಯವು; ಪರಿಚೆ, । ದಮಂ–ನಿಶ್ಚಯವನ್ನು;

೪೫. ತಾಂಗಡ–ತಾನಲ್ಲವೇ, ನಾಳೆ ಪೋಗಿ–ನಾಳೆ ಹೋಗಿ, ದಿವಿಜಾಂಗನೆಯೊಳ್– ದೇವಸ್ತ್ರೀಯಲ್ಲಿ, ತೊಡರ್ದು ಇರ್ಪಂ–ಕೂಡಿ ಇರುವನು; ಇಲ್ಲಿ, ಮಾಣ್ದು–ನಿಂತು, ಆಂ– ನಾನು, ಇರ್ಪೆನೆ ಗಡಂ–ಇರುತ್ತೇನಲ್ಲವೆ; ಅಂತು–ಅನಿತು, ಬೆಳ್ಳೆನೆ–ಹಾಗೆ ಅಷ್ಟು ದಡ್ಡಳೆ ನಾನು; ಮುನ್ನಮೆ–ಮೊದಲೇ, ಪೋಗಿ–ಸ್ವರ್ಗಕ್ಕೆ ಹೋಗಿ, ದೇವಲೋಕದೊಳ್–ಸ್ವರ್ಗದಲ್ಲಿ, ಅಧೀಶನಂ–ನನ್ನ ಸ್ವಾಮಿಯನ್ನು, ಆಂ–ನಾನು, ಇದಿರ್ಗೊಳ್ವೆಂ–ಎದುರ್ಗೊಳ್ಳುತ್ತೇನೆ; ಓವೊ–ಓಓ, ಸಗ್ಗಂಗಳೊಳಿರ್ಪ–ಸ್ವರ್ಗಗಳಲ್ಲಿರುವ, ದೇವಡಿತಿ–ದೇವಸ್ತ್ರೀಯರ, ತೊೞ್ತಿರೊಳ್–ದಾಸಿಯರಲ್ಲಿ, ಅೞ್ತಿಯಂ–ಪ್ರೀತಿಯನ್ನು, ಆಗಲೀವೆನೇ–ಆಗಲು ಅವಕಾಶ ಕೊಡುತ್ತೇನೆಯೇ?

ವಚನ : ಕೈದವಮಿಲ್ಲದ–ಕಪಟವಿಲ್ಲದ, ನಲ್ಮೆಯಂ–ಪ್ರೇಮವನ್ನು; ತನ್ನಾಣ್ಮನ– ತನ್ನ ಗಂಡನ; ದೋರ್ವಲದಗುರ್ವಂ–ಭುಜಬಲದ ಆಧಿಕ್ಯವನ್ನು (ಭಯವನ್ನು); ನಚ್ಚಿ– ನಂಬಿ.

೪೬. ಜಲಧಿಯೊಳಾದ–ಸಮುದ್ರದಲ್ಲಿ ಹುಟ್ಟಿದ, ಮುತ್ತುಗಳ್–ಮುತ್ತುಗಳು, ಅವೇಂ–ಅವೇನು, ಪೊಸತಾದುವೆ–ಹೊಸದಾದುವೆ? ಅಲ್ಲ; ನಿನ್ನ ತೋಳ ಬಾಳೊಳೆ–ನಿನ್ನ ತೋಳಿನ ಕತ್ತಿಯಲ್ಲೇ, ಬಲಗರ್ವದಿಂ–ಶಕ್ತಿಯ ಹೆಮ್ಮೆಯಿಂದ, ತೆಗೆದ–ಎತ್ತಿಕೊಂಡ, ಉದಗ್ರ ವಿರೋಧಿ ಮದೇಭ ಮಸ್ತಕ ಸ್ಥಳ ಜಳ ರಾಶಿಯೊಳ್–ಶ್ರೇಷ್ಠರಾದ ಶತ್ರುಗಳ ಆನೆಗಳ ಕುಂಭಸ್ಥಳವೆಂಬ ಸಮುದ್ರದಲ್ಲಿ, ಬಳೆದ–ಬೆಳೆದಿರುವ; ನಿರ್ಮಳ–ಶುದ್ಧವಾದ, ನಿರ್ವ್ರಣ– ಗಾಯವಿಲ್ಲದ, ಎಂದರೆ ಮುಕ್ಕಾಗದ, ವೃತ್ತ–ದುಂಡಗಿರುವ, ಮೌಕ್ತಿಕಾವಳಿಯನೆ–ಮುತ್ತು ಗಳ ಸಮೂಹವನ್ನೇ, ತರ್ಪುದು–ತರುವುದು, ಎಂದು–ಎಂಬುದಾಗಿ, ಒರ್ವಳ್–ಒಬ್ಬಳು, ನಿಜೇಶನಂ ನುಡಿದು–ತನ್ನ ಗಂಡನಿಗೆ ಹೇಳಿ, ಅೞ್ಕಱೊಳ್–ಪ್ರೀತಿಯಲ್ಲಿ, ಆಱಿಸಿದಳ್– ಸಮಾಧಾನಪಡಿಸಿದಳು.

ವಚನ : ಉಭಯ ಬಲಂಗಳೊಳ್–ಎರಡು ಸೈನ್ಯಗಳಲ್ಲಿಯೂ; ವೀರಜನ ಜನಿತಾಳಾ ಪಂಗಳ್–ಶೂರರಿಂದ ಹುಟ್ಟಿದ ಮಾತುಗಳು; ನೆಗೞೆ–ಉಂಟಾಗಲು; ಜಲಕ್ಕನಿರೆ–ನಿರ್ಮಲ ವಾಗಿರಲು; ಪಲ್ಗಳಂ ಸುಲಿದು–ಹಲ್ಲನ್ನು ತೊಳೆದು; ಮಂಗಳ ವಸದನಂಗೊಂಡು–ಮಂಗಳ ಕರವಾದ ಅಲಂಕಾರಗಳನ್ನು ಮಾಡಿಕೊಂಡು; ಪಱೆಗಳೆಸೆಯೆ–ವಾದ್ಯಗಳು ಧ್ವನಿಮಾಡಲು; ನಾಂದೀಮುಖಮಂ–ನಾಂದೀಮುಖರೆಂಬ ಪಿತೃಗಳ ಶ್ರಾದ್ಧವನ್ನು, ನಿರ್ವಹಿಸಿ–ಮುಗಿಸಿ; ಸನ್ನಾಹಕರ್ಮ ನಿರ್ಮಿತನುಂ–ಯುದ್ಧ ಕಾರ್ಯಕ್ಕೆ ಸಿದ್ಧಪಡಿಸಲ್ಪಟ್ಟವನೂ; ಹಸ್ತಾಯುಧ– ಸೊಂಡಿಲೆಂಬ ಆಯುಧ; ಭದ್ರಮನನುಂ–ಭದ್ರಜಾತಿಗೆ ಸೇರಿದ ಆನೆಯ ಮನಸ್ಸುಳ್ಳವನೂ; ಶರಾಸನ–ಬಿಲ್ಲು; ಶರಧಿ–ಬತ್ತಳಿಕೆ; ತನುತ್ರ–ಕವಚ;

೪೭. ಬೆಳಗುವ ಸೊಡರ್ಗಳ–ಉರಿಯುತ್ತಿರುವ ದೀಪಗಳ, ಬೆಳಗುಮಂ–ಪ್ರಕಾಶ ವನ್ನೂ, ಇಳಿಸಿ–ಕೀಳ್ಮಾಡಿ, ನರನ–ಅರ್ಜುನನ, ದಿವ್ಯಾಸ್ತ್ರಂಗಳ್–ದಿವ್ಯವಾದ ಬಾಣಗಳು, ತೞತ್ತೞಿಸಿ–ಥಳಥಳ, ಪೊಳೆಯೆ–ಹೊಳೆಯಲು, ತಮ್ಮಯ–ತಮ್ಮ, ಬೆಳಗು–ಕಾಂತಿಯು, ಅಗ್ಗಳಿಸಿ–ಹೆಚ್ಚಾಗಿ, ತೞತೞೆಸಿ–ಹೊಳೆಹೊಳೆದು, ವಿದ್ಯುದ್ವಿಳಸಿತಂ ಎನಿಸಿದುವು–ಮಿಂಚಿ ನಿಂದ ಪ್ರಕಾಶಿತವಾದುವು ಎನಿಸಿಕೊಂಡವು.

೪೮. ಅರಿಗನ–ಅರ್ಜುನನ, ಅಸ್ತ್ರಚಯಂಗಳ್–ಬಾಣಗಳ ಸಮೂಹವು, ಸೊಡರ್ ಗುಡಿಯ–ದೂಪದ ಕುಡಿಗಳ, ಕೆಂಪಿನೊಳ್–ಕೆಂಪಿನಲ್ಲಿ, ಕೆಂಪಿಡಿದರೆ–ಕೆಂಪು ಬಣ್ಣ ತುಂಬಿರಲು, ರಿಪುನೃಪತಿಬಲದ–ಶತ್ರುರಾಜರ ಸೈನ್ಯದ, ಶೋಣಿತಜಲಮಂ–ರಕ್ತವೆಂಬ ನೀರನ್ನು; ಕುಡಿಯದೆಯುಂ–ಕುಡಿಯದೆ ಇದ್ದರೂ, ದಲ್–ದಿಟವಾಗಿಯೂ, ಮುನ್ನಮೆ– ಮೊದಲೇ, ಕುಡಿದಂತೆ–ಕುಡಿದ ಹಾಗೆ, ಎಸೆದಿರ್ದುವು–ಪ್ರಕಾಶಿಸುತ್ತಿದ್ದುವು.

ವಚನ : ಬೀಡು ಬೀಡುಗಳ್ಗೆಲ್ಲಂ–ಎಲ್ಲಾ ಶಿಬಿರಗಳಲ್ಲೂ, ತೊೞಲ್ದು–ಸುತ್ತಾಡಿ; ಏಕಿರ್ಪಿರ್–ಏಕೆ ಇನ್ನೂ ಇದ್ದೀರಿ; ಏೞಿಂ–ಏಳಿರಿ, ಪಣ್ಣಿಂ–ಸಿದ್ಧರಾಗಿರಿ;

೪೯. ತಂಡದೆ–ಗುಂಪಾಗಿ, ಕೀಱಿ–ಕೋಪಿಸಿ, ಸಾಱುವ–ಕೂಗಿ ಹೇಳುವ, ಪಲರ್ ಪಡೆವಳ್ಳರ–ಹಲವರು ಸೇನಾನಾಯಕರ, ಮಾತುಗಳ್–ಮಾತುಗಳು, ಮನಂಗೊಂಡಿರೆ– ಮನಸ್ಸನ್ನು ಮುಟ್ಟಿರಲು, ಸನ್ನಣಂದುಡುವ–ಕವಚವನ್ನು ತೊಡಿಸುವ, ಪಣ್ಣುವ–ಮಾಡುವ, ಎಂದರೆ ಸಿದ್ಧತೆಗಳನ್ನು ಮಾಡಿಕೊಳ್ಳುವ, ಬಾೞ್ತೆಯವಂದಿರಂ–ಬದುಕಿನವರನ್ನು ಎಂದರೆ ಕೆಲಸದವರನ್ನು, ಮರುಳ್ಗೊಂಡವೊಲ್–ಪಿಶಾಚಿ ಹಿಡಿದ ಹಾಗೆ, ಊಳ್ವ–ಗಟ್ಟಿಯಾಗಿ ಕೂಗುವ, ಬಗ್ಗಿಸುವ–ಗದರಿಸಿಕೊಳ್ಳುವ, ಬೇಗದೊಳ್–ಹೊತ್ತಿನಲ್ಲಿ, ಆ ಕಟಕಂಗಳ್–ಆ ಸೈನ್ಯಗಳು, ಮಂದರ ಕ್ಷುಭಿತ ದುಗ್ಧಪಯೋಧಿಗಭೀರನಾದಮಂ–ಮಂದರಪರ್ವತವು ಕಡೆದ ಹಾಲ್ಗಡಲಿನ ಗಟ್ಟಿಯಾದ ಸದ್ದನ್ನು, ಎಯ್ದೆಕೆಯ್ಕೊಂಡವು–ಚೆನ್ನಾಗಿ ಸ್ವೀಕರಿಸಿದುವು.

೫೦. ಕೃತವಿವಿಧಾಸ್ತ್ರಶಸ್ತ್ರ ವೀರಭಟಕೋಟಿ–ನಾನಾ ಬಗೆಯಾದ ಆಯುಧಗಳಲ್ಲಿ ಪರಿಣತಿ ಪಡೆದಿರುವ ಶೂರಯೋಧರ ಸಮೂಹವು, ಭಯಂಕರಮಾಗೆ–ಭಯವಾಗುವ ಹಾಗೆ, ಬೀಸುವ ಆವುತಿಯ–ಆವುತಿಯೆಂಬ ಆಯುಧದ (?), ಕಳಂಕ ಪಂಕದೊಳೆ– ಕರೆ ಯೆಂಬ ಕೆಸರಿನಲ್ಲೇ, ಪೆರ್ಚಿದ ಕೞ್ತಲೆ–ಹೆಚ್ಚಾದ ಕತ್ತಲೆಯು, ತೀವ್ರಶಸ್ತ್ರಸಂಹತಿಗಳ ದೀಪ್ತಿ ಯಿಂ–ಹರಿತವಾದ ಶಸ್ತ್ರಸಮೂಹಗಳ ಕಾಂತಿಯಿಂದ, ಬಿಸುಗೆಯಾಗಿ–ಬೆಸುಗೆಯನ್ನು ಹೊಂದಿ, ಕರಂ–ವಿಶೇಷವಾಗಿ, ಪೊಗರ್ವಟ್ಟು–ಕಾಂತಿಯುಕ್ತವಾಗಿ, ಅಗುರ್ವುಮದ್ಭುತ ಮುಮಂ–ಭಯವನ್ನೂ ಆಶ್ಚರ್ಯವನ್ನೂ, ಈಯೆ–ಉಂಟುಮಾಡಲು (ಕೊಡಲು), ಪಾಂಡವ ಕೌರವರೌದ್ರ ಸಾಧನಂ–ಪಾಂಡವರ ಭಯಂಕರ ಸೈನ್ಯಗಳು, ಪಣ್ಬಿದುವು–(ಸಮರಕ್ಕೆ) ಸಿದ್ಧವಾದುವು.

ವಚನ : ಎರಡುಂ ಪಡೆಗಳುಂ–ಎರಡು ಸೈನ್ಯಗಳೂ; ಪಣ್ಣ ಪಣ್ಣನೆ ಪಣ್ಣಿ–ಮೆಲ್ಲ ಮೆಲ್ಲಗೆ ಸಿದ್ಧವಾಗಿ; ಒಡರಿಸಿದಾಗಳ್–ತೊಡಗಿದಾಗ

೫೧. ಲೋಕೈಕಚಕ್ಷು–ಲೋಕಕ್ಕೆ ಒಂದು ಕಣ್ಣಾಗಿರುವ, ನವಕಮಲಾಕರ ಬಾಂಧವಂ– ಹೊಸದಾದ ತಾವರೆಗೊಳದ ನಂಟನಾಗಿರುವ, ಅನೇಕ ದಿತಿಸುತಸಮರಾನೀಕ ಭಯಂಕರಂ– ಹಲವು ರಾಕ್ಷಸರ ರಣಸೈನ್ಯಕ್ಕೆ, ಭಯಂಕರಂ–ಭಯವನ್ನುಂಟುಮಾಡುವ, ಸೂರ್ಯನು, ಎರಡು ಆನೀಕಂಗಳಂ–ಉಭಯ ಸೈನ್ಯಗಳನ್ನು, ಅಡರಿ–ಮೇಲೆ ಹತ್ತಿ, ನೋಡುವಂತೆ– ನೋಡುವ ಹಾಗೆ, ಉದಯಿಸಿದಂ–ಹುಟ್ಟಿದನು, ಸೂರ್ಯೋದಯವಾಯಿತೆಂದು ತಾತ್ಪರ್ಯ.

ವಚನ : ಏಱಿಸಿದ–ಮೇಲಕ್ಕೆ ಎತ್ತಿ ಇಟ್ಟ; ಬಿಸುಗೆಗಳುಂ–ಅಂಬಾರಿಗಳೂ; ಇಕ್ಕಿದ– ಹಾಕಿದ, ಲೋಕವಕ್ಕರೆಗಳುಂ–ಲೋಹದ ಪಕ್ಷರಕ್ಷೆಗಳೂ; ಉರ್ಚಿದ–ಬಿಚ್ಚಿದ, ಮೊಗವಡಂ ಗಳುಂ–ಮುಖವಾಡಗಳೂ; ಕಟ್ಟಿದ ಪೞಯಿಗೆಗಳುಂ–ಕಟ್ಟಿದ ಧ್ವಜಗಳೂ, ಒಟ್ಟಿದ– ರಾಶಿಹಾಕಿದ; ಎಱಂಕೆವೆರಸಿದ–ರೆಕ್ಕೆಯೊಡನೆ ಕೂಡಿದ; ತಳರ್ವಂತೆ–ಚಲಿಸುವಂತೆ; ಚೀತ್ಕೃತ ನಾದ–ಚೀತ್ಕಾರದ ಶಬ್ದ; ಚಕ್ರಾಘಾತ–ಚಕ್ರದ ಹೊಡೆತ; ನಿಶಿತಹೇತಿಗರ್ಭಂಗಳುಂ–ಹರಿತವಾದ ಆಯುಧಗಳನ್ನು ಒಳಕೊಂಡ; ವಾಜಿರಾಜಿಗಳುಂ–ಕುದುರೆಯ ಸಾಲುಗಳೂ, ದೊಮ್ಮಳಿಸಿ– ಸಂಭ್ರಮದಿಂದ ಸುತ್ತಾಡಿ; ಖುರಮಂ–ಗೊರಸೂ; ಪಕ್ಕರೆಯಿಕ್ಕಿ–ಪಾರ್ಶ್ವಕ್ಕೆ ಹಾಕುವ ಗುಳವನ್ನು ಧರಿಸಿ, ಪೊನ್ನಪರ್ಯಾಣಂಗಳುಂ–ಚಿನ್ನದ ಜೀನುಗಳನ್ನೂ, ಘೋೞಾಯ್ಲರ್– ಕುದುರೆ ಸವಾರರು; ಪೊಳೆಯಿಸಿ–ಹೊರಳಿಸಲು; ಪೊಳೆವಂತೆ–ಹೊಳೆಯುವ ಹಾಗೆ; ಕಡುಗು ದುರೆಗಳುಮಂ–ವೇಗಶಾಲಿಗಳಾದ ಕುದುರೆಗಳನ್ನೂ; ಮಿಡುಮಿಡುಕನೆ ಮಿಡುಕುವ–ಮಿಡುಕು ಮಿಡುಕೆಂದು ಹಾರುವ; ಸಿಡಿಲೇೞ್ಗೆಯುಮಂ–ಸಿಡಿಲಿನ ವೃದ್ಧಿಯನ್ನೂ; ಕೋಳ್ಮಸಗಿದ– ವಶವಾಗಿ, ಸೆರೆಗೆ ಸಿಕ್ಕಿ ಕೆರಳಿದ, ನಡೆವಣಿಯ=ನಡೆವ+ಅಣಿಯ–ನಡೆಯುವ ಸೈನ್ಯದ ಸಾಲುಗಳ; ಸಂದಣಿಯುಮಂ–ಸಮೂಹವನ್ನೂ; ಕಾೞ್ತುಱು–ಕಾಡ ಹಸು, ಮಸಗಿದ– ವಿಜೃಂಭಿಸಿದ; ದುರ್ಧರ–ಎದುರಿಸಲಸಾಧ್ಯವಾದ; ಧನುರ್ಧರಬಲಮುಮಂ ಬಿಲ್ಗಾರರ ಸೈನ್ಯವನ್ನೂ; ಓಜೆಯೊಳ್–ಕ್ರಮದಲ್ಲಿ, ರೀತಿಯಲ್ಲಿ; ಪಡೆವಳರ್ಕಳ್–ಸೇನಾಪಾಲಕರು, ಒಡ್ಡಿನಿಂದಾಗಳ್–ಚಾಚಿ ನಿಂತಾಗ, ಬಿಸುಗೆ ಶಿಬಿಕಾ?; ಬೂತುಗಂ–ರಾಜಾದಿತ್ಯನಂ ಬಿಸುಗೆಯೆ ಕಳನಾಗೆ ಸುರಗಿಱಿದು ಕಾದಿಕೊನ್ದು ಎಂಬ ಶಾಸನ ಪ್ರಯೋಗ (ಮಂಡ್ಯ ೪೧; ೯೪೯ ಕ್ರಿ.ಶ.); ಕಡುಗುದುರೆ ಕಡಿದು+ಕುದುರೆ; “ಪೊಳೆ–ಲುಠನೇ” –ಹೊರಳಾಡು, ಕೋಳ್ ಕೊಳ್– ಗ್ರಹಣೇ, ಭಾವನಾಮ; ಅಣಿ=(ತ) ಪಡೈಯುಱುಪ್ಪು, ಸೈನ್ಯದ ತುಕಡಿ, ಸಾಲು.

೫೨. ಜಲಶಯನೋದರಾಂತರದಿಂ–ವಿಷ್ಣುವಿನ ಬಸಿರೊಳಗಿಂದ, ಈ ತ್ರಿಜಗಂ–ಈ ಮೂರು ಲೋಕಗಳೂ, ಈಗಳ್–ಈಗ, ಪೊಱಮಟ್ಟುದು–ಹೊರ ಹೊರಟಿತು, ಎಂಬ ಉಲಿ ಸಲೆ–ಎಂಬ ಮಾತು ಸಲ್ಲಲು, ತಮ್ಮ ತಮ್ಮ ಶಿಬಿರಂಗಳಿಂ–ತಂತಮ್ಮ ಬೀಡುಗಳಿಂದ, ಪಲವುಮಂ–ಹಲವು, ಉಗ್ರಚತುರ್ಬಲಂಗಳಂ–ಭೀಕರ–ಚತುರಂಗ ಸೈನ್ಯಗಳನ್ನು, ಒಂದೆ ಮಾಡಿ–ಒಟ್ಟುಗೂಡಿಸಿ, ದೆಸೆಗಳ್ ಮಸುಳಲ್–ದಿಕ್ಕುಗಳು ಕಂದುತ್ತಿರಲು, ಇರ್ವಲದಲ್– ಎರಡು ಸೈನ್ಯಗಳಲ್ಲಿ, ಅರಾತಿನಾಯಕರುಂ–ಶತ್ರುಗಳಾದ ಸೇನಾಪತಿಗಳೂ, ಒರ್ಬರ ನೊರ್ಬರೆ–ಒಬ್ಬರನ್ನೊಬ್ಬರೇ, ಗೆಲ್ವ–ಗೆಲ್ಲುವ, ತಕ್ಕಿನೊಳ್–ಶೌರ್ಯದಲ್ಲಿ, ಆಜಿಗೆ– ಯುದ್ಧಕ್ಕೆ, ನಡೆತಂದರ್–ಬಂದರು.

ವಚನ : ತನ್ನೊಡ್ಡಿದ–ತಾನು ಚಾಚಿದ, ರಚಿಸಿದ, ಮಕರವ್ಯೂಹ–ಮೀನಿನಾಕಾರದ ಒಂದು ಸೇನಾರಚನೆ; ಮೊನೆಯೊಳ್–ತುದಿಯಲ್ಲಿ; ಸುತ್ತಿಱಿದು–ಸುತ್ತುಗಟ್ಟಿ; ತೊಳಪ–ಹೊಳೆ ಯುವ; ಪೞವಿಗೆಗಳುಂ–ಬಾವುಟಗಳೂ; ಜೋಲ್ವ ಪುರ್ಬಂ–ಜೋತುಬಿದ್ದಿರುವ ಹುಬ್ಬನ್ನು; ಲಲಾಟಪಟ್ಟದೊಳ್–ಹಣೆಯ ಪ್ರದೇಶದಲ್ಲಿ, ಇಟ್ಟಳಂ–ಸೊಗಸಾಗಿ, ಬೀರವಟ್ಟಮುಂ–ವೀರ ಪಟ್ಟವೂ; ಅಸದಳಂ–ಅತಿಶಯವಾಗಿ; ಪರಶುರಾಮಂ ಬಾಳ್ಗೆಂದು–ಪರಶುರಾಮನು ಬಾಳಲಿ ಎಂದು ಘೋಷಿಸಿ; ಮಾರ್ಕೊಂಡು–ಎದುರಿಸಿ; ಸೂಚೀವ್ಯೂಹಮನೊಡ್ಡಿ–ಸೂಜಿಯ ಆಕಾರ ದಲ್ಲಿ ಸೇನಾ ರಚನೆಯನ್ನು ಮಾಡಿ, ಉಪಾರೂಢ–ಏರಿದ, ಕನಕ ರಥನುಂ–ಚಿನ್ನದ ರಥವುಳ್ಳ ವನೂ, ಕೈಲಾಸವಾಸಿಗೆ–ಶಿವನಿಗೆ; ಅದಿರದೆ–ನಡುಗದೆ, ಹೆದರದೆ;

೫೩. ಶ್ವೇತನ ಗಂಗಾಜಾತನ–ಶ್ವೇತನ ಮತ್ತು ಭೀಷ್ಮನ, ಮಾತನೆ–ಮಾತನ್ನೇ, ಅಪ್ಪಣೆ ಯನ್ನೇ, ಪಾರ್ದು–ಎದುರು ನೋಡುತ್ತ, ನಿರೀಕ್ಷಿಸುತ್ತ; ಎರಡುಮೊಡ್ಡಣಂ–ಉಭಯ ಸೈನ್ಯ ಗಳೂ, ಕಾದಲ್ಕೆಂದು–ಕಾಳಗ ಮಾಡಬೇಕೆಂದು, ಈ ತೆಱದಿಂ–ಈ ರೀತಿಯಿಂದ, ಕೆಸಱ ಕಡಿತದತೆಱದಿಂ–ಕೆಸರಿನ ಮೇಲೆ ಹರಡಿರುವ ಕಡತದಂತೆ, ಭೂತಳಮಳ್ಳಾಡೆ–ನೆಲವು ನಡು ಗಲು, ಒಡ್ಡಿ ನಿಂದುವು–ಚಾಚಿ ನಿಂತವು.

ವಚನ : ಕೌರವ ಬಲದೊಡ್ಡಣದ–ಕೌರವ ಸೈನ್ಯದ ವ್ಯೂಹಗಳ, ಮಕರ ಮಸ್ತಕ ಭೂಮಿ ಯೊಳ್–ಮೀನಿನಾಕಾರದ ವ್ಯೂಹದ ತಲೆಯ ಪ್ರದೇಶದಲ್ಲಿ.

೫೪. ನಿಜರಜತ ರಥಂ–ತನ್ನ ಬೆಳ್ಳಿಯ ರಥವು, ಕೆಂಬಣ್ಣದ ಕುದುರೆಗಳೊಳ್–ಕೆಂಪಾಗಿ ರುವ ಕುದುರೆಗಳಲ್ಲಿ, ಒಡಂಬಡೆ–ಒಪ್ಪಲು; ಅಗುರ್ವು–ಭಯವು, ಉರ್ವರೆಯಂ–ಭೂಮಿ ಯನ್ನು, ತಿಂಬೆ–ತುಂಬಲು; ಕಳಶ ಧ್ವಜಂ–ಕಲಶದ ಗುರುತುಳ್ಳ ಬಾವುಟ, ಮಿಳಿರ್ದು– ಚಲಿಸಿ, ಅಂಬರಮಂ–ಆಕಾಶವನ್ನು, ಬಳಸೆ–ವ್ಯಾಪಿಸಲು, ನಿಂದನ್–ನಿಂತುಕೊಂಡಿರು ವವನು, ಆತಂ–ಆತನು, ದ್ರೋಣಂ–ದ್ರೋಣನು.

೫೫. ಆತನಸಾರೆ–ಆ ದ್ರೋಣನ ಹತ್ತಿರ, ಕಮಂಡಲು ಕೇತನಂ–ಕಮಂಡಲದ ಚಿಹ್ನೆಯುಳ್ಳ ಬಾವುಟ, ಅಂಬರಮನಡರೆ–ಆಕಾಶವನ್ನು ಏರಲು, ಚತುರಂಗ ಬಲೋಪೇತನ್–ಚತುರಂಗ ಸೈನ್ಯದಿಂದ ಕೂಡಿದವನು, ಅತಿಧವಳರಥಂ–ಬಲು ಬೆಳ್ಳಗಿರುವ ರಥವನ್ನುಳ್ಳವನು, ಅಭಿಜಾತಂ– ಸತ್ಕುಲದವನು, ಕ್ಷತ್ರಿಯರಂ–ಕ್ಷತ್ರಿಯರನ್ನು, ಉಱದ–ಬಗೆಯದ, ಕಲಿಕೃಪಂ–ಶೂರನಾದ ಕೃಪಾಚಾರ್ಯನು, ಆತಂ–ಅವನು.

ವಚನ : ದಕ್ಷಿಣೋಪಾಂತದೊಳ್–ಬಲಗಡೆಯ ಮಗ್ಗುಲಲ್ಲಿ; ಸಮೀಪದಲ್ಲಿ; ಕರ್ಗನೆ–ಕಪ್ಪಾಗಿ, ಕರ್ಗಿದ–ಕರಿದಾದ, ಸಮದಗಜಘಟಾಟೋಪದ ನಡುವೆ–ಮದಿಸಿದ ಆನೆಯ ಸೈನ್ಯದ ಆಡಂಬರದ ನಡುವೆ, ಇಲ್ಲಿ ‘ಕರ್ಗನೆಕರ್ಗಿದ’ ಎಂಬುದಕ್ಕೆ ಬದಲಾಗಿ ಕರ್ಗನೆ ಕನಿತ (ಖ.ಘ), ಕರ್ಗನೆ ಗಂನಿತ (ಗ) ಎಂದೆರಡು ಪಾಠಾಂತರಗಳಿವೆ. ಇವುಗಳಲ್ಲಿ ಕನಿತ ಎಂಬ ಪಾಠ ಸ್ವೀಕರಣ ಯೋಗ್ಯ; ದನುಜೇಂದ್ರನೊಡ್ಡುಕರ್ಗನೆ (ಪಾಠ–ಕಂಗನೆ) ಕನಿಯುತ್ತಿರೆ (ಪಂಪ ರಾ. ೧೩–೨೧) ಎಂಬಲ್ಲಿ ಇರುವ ಕನಿಧಾತುಗೆ ಹೊಳೆ, ಪ್ರಕಾಶಿಸು ಎಂದು ಅರ್ಥೈಸಬಹುದು; (ತ) ಕನಿ–ತೞಲ್ ಮಿಗುದಲ್ ನೋಡಿ.

೫೬. ಸರದದ ಮುಗಿಲನೆ–ಶರತ್ಕಾಲದ ಮೋಡವನ್ನೇ, ಬಿಡದೆ ಅನುಕರಿಸುವ–ಬಿಡದೆ ಹೋಲುವ, ಧವಳಾಶ್ವದಿಂದಂ–ಬಿಳಿಯ ಕುದುರೆಗಳಿಂದ, ಎಸೆದು–ಒಪ್ಪುವ, ಲೋಹರಥ ಮದುಂ–ಕಬ್ಬಿಣದ ರಥವದು; ಪುಲಿಯ ಪೞಯಿಗೆವೆರಸು–ಹುಲಿಯ ಧ್ವಜ ಸಮೇತವಾಗಿ, ತೞತ್ತೞಿಸೆ–ಹೊಳೆ ಹೊಳೆಯಲು, ನಿಂದನ್–ನಿಂತವನು, ಆತಂ–ಅವನು, ಶಲ್ಯಂ–ಶಲ್ಯ ರಾಜನು.

ವಚನ : ವಾಮಭಾಗದೊಳ್–ಎಡಭಾಗದಲ್ಲಿ, ಅಂಬರಭಾಗಮಂ–ಆಕಾಶದ ಭಾಗವನ್ನು, [ತ] ಟ್ಟಿ ಮೆಡಱಿದಂತಾಗೆ–ತಡಿಕೆಯನ್ನು ಹೆಣೆದ ಹಾಗಿರಲು; ಒಟ್ಟಿದ ಕೈದುಗಳ–ರಾಶಿ ಮಾಡಿದ ಆಯುಧಗಳ; ಇಲ್ಲಿ ಮೆಡಱು ಧಾತುವಿನ ಅರ್ಥ ಖಚಿತವಾಗಿದೆ. “ತಟ್ಟಿ ಮೆಡಱಿದ ನೆಂದು ತಟ್ಟಿವೆಣೆದಂ” (ಶಮದ) ನೋಡಿ; ಇದಕ್ಕೆ ಸಂವಾದಿಯಾದ ಧಾತು ಇತರ ದ್ರಾವಿಡ ಭಾಷೆಗಳಲ್ಲಿ ಸಿಕ್ಕಿಲ್ಲ.

೫೭. ಕಱೆ–ಕಪ್ಪು ಮಚ್ಚೆ, ಕೊರಲೊಳ್–ಕೊರಳಿನಲ್ಲಿ; ಕಣ್–ಕಣ್ಣು, ನೊಸಲೊಳ್– ಹಣೆಯಲ್ಲಿ; ಪೆಱೆ–ಅರ್ಧಚಂದ್ರ ಅಥವಾ ಬಾಲಚಂದ್ರ, ಮಕುಟಾಗ್ರದೊಳ್–ಕಿರೀಟದ ತುದಿ ಯಲ್ಲಿ, ಉಗ್ರಧನು–ಭಯಂಕರವಾದ ಬಿಲ್ಲು, ಕರಾಗ್ರದೊಳ್–ಕೈಯ ತುದಿಯಲ್ಲಿ, ಇರೆ– ಇರಲು, ಹರಿಕೇತು–ಸಿಂಹಧ್ವಜವು, ನಭದೊಳ್–ಆಕಾಶದಲ್ಲಿ, ಅಳ್ಳಿಱಿಯೆ–ಮಿಡುಕು ತ್ತಿರಲು, ಮಿಱುಗುವ–ಹೊಳೆಯುವ, ಚೆಂಬೊನ್ನ ರಥದಂ–ಕೆಂಪು ಚಿನ್ನದ ರಥದವನು, ಅಶ್ವತ್ಥಾಮಂ–ಅಶ್ವತ್ಥಾಮನು.

ವಚನ : ಆ ರುದ್ರಾವತಾರನ–ಆ ರುದ್ರನ ಅವತಾರವಾದ ಅಶ್ವತ್ಥಾಮನ, ಕೆಲದೊಳ್– ಮಗ್ಗುಲಲ್ಲಿ; ಕಿಕ್ಕಿಱಿಗಿಱಿದ–ಒತ್ತಾಗಿ ಸೇರಿಕೊಂಡ; ತೞೆದುಱುಗಲ–ಛತ್ರಿಗಳ ಸಮೂಹದ; ಬಾಳಬಟ್ಟಂ–?. ಬಾಳಪಟಂ ಎಂಬ ಪಾಠಾಂತರಕ್ಕೆ ಬದಲಾಗಿ ಚಾೞಬಟ್ಟಂ ಎಂದಿದ್ದರೆ ‘ರಾಹು ಮಂಡಲ’ ಎಂದರ್ಥವಾಗಬಹುದು; ತೂಂತಿಟ್ಟಂತೆ–ರಂಧ್ರ ಮಾಡಿದ ಹಾಗೆ, ಅಣಿಯ ನಡುವೆ–ಸೇನೆಯ ನಡುವೆ; ವಿಚಿತ್ರಾತಪತ್ರಂಗಳ–ಸೊಗಸಾದ ಕೊಡೆಗಳ; ಸೆಱೆಕೋಲೊಳ್– ಪಕ್ಕಗಳ ಅಂಚಿನಲ್ಲಿ. (ತ) ಶಿಱೈಕ್ಕೋಲ್–ರೆಕ್ಕೆಗಳ ಅಂಚು; ಅಣುಗಮಯ್ದುನಂ–ಪ್ರೀತಿಯ ಮೈದುನ; ಕರಟತಟಗಳಿತ–ಆನೆಯ ಕಪೋಲ ಪ್ರದೇಶದಿಂದ ಸುರಿಯುತ್ತಿರುವ; ಮದಜಳ ಧಾರಾಪೂರ ಪರಿಪ್ಲಾವಿತ–ಮದೋದಕ ಧಾರೆಯೆಂಬ ಪ್ರವಾಹದಿಂದ ತೇಲುತ್ತಿರುವ; ವೃದ್ಧ ವೈರಮಂ–ಹಳೆಯ ದ್ವೇಷವನ್ನು; ಕಾದುವ ಬೆಸನಂ–ಯುದ್ಧದ ಕಾರ್ಯವನ್ನು; ಕಾಳನೀಳ ಜಳಧರಂಗಳ್–ಕಡೆಗಾಲದ ನೀಲಿ ಮೋಡಗಳು; ತಳಿರ್ತಂತೆ–ಚಿಗುರಿದ ಹಾಗೆ, ಮಿಳಿರ್ವ– ಅಲುಗಾಡುವ; ಫೇನ–ನೊರೆ; ಸಂಕಾಶ–ಸಮಾನ; ಪಾಂಡುಛತ್ರ–ಬೆಳ್ಗೊಡೆಗಳು.

೫೮. ಕನಕ….ಬಿಂಬಮಂ : ಕನಕಗಿರೀಂದ್ರ–ಮೇರುಪರ್ವತದ, ರುಂದ್ರ–ವಿಶಾಲವಾದ, ಶಿಖರಸ್ಥಿತ–ಶಿಖರದ ಮೇಲಿರುವ, ಬಾಳದಿನೇಶಬಿಂಬಮಂ–ಬಾಲಸೂರ್ಯನ ಮಂಡಲವನ್ನು, ನೆನೆಯಿಸೆ–ನೆನಪಿಗೆ ತಂದು ಕೊಡಲು, ತನ್ನ ಪೊನ್ನ ರಥದೊಳ್–ತನ್ನ ಚಿನ್ನದ ರಥದಲ್ಲಿ, ನೆಲಸಿರ್ದು–ಕುಳಿತಿದ್ದು, ವಿಳಾಸದಿಂದೆ–ಠೀವಿಯಿಂದ, ಭೀಮನ ಸೇನೆಯಂ–ಭೀಮಸೇನನ ಸೈನ್ಯವನ್ನು (ಅದರ ವಿನ್ಯಾಸ ಸಿದ್ಧತೆ ಮುಂತಾದವುಗಳನ್ನು), ಆರಯಲ್–ವಿಚಾರಿಸಿಕೊಂಡು (ಬರಲು), ವನೀಪಕರಂ–ಭಿಕ್ಷುಕ ವೇಷದವರನ್ನು (ಗೂಢಚಾರರನ್ನು), ಅಟ್ಟಿ–ಕಳುಹಿಸಿ ಕೊಟ್ಟು, ಫಣೀಂದ್ರಕೇತನಂ–ದುರ್ಯೋಧನನು, ಯುಗಾಂತವಾರ್ಧಿ–ಪ್ರಳಯ ಕಾಲದ ಸಮುದ್ರ, ಭೋಂಕನೆ–ಶೀಘ್ರವಾಗಿ; ತಳರ್ವಂದದಿಂ–ಚಲಿಸುವ ಹಾಗೆ, ತಳರಲ್–ಚಲಿಸಲು, ನಡೆಯಲು, ಅಟ್ಟಿಪನಲ್ತೆ–(ಸಂದೇಶವನ್ನು) ಕಳುಹಿಸುವನಲ್ಲವೆ? ಮೊನೆ ಶಬ್ದಕ್ಕೆ ಕನ್ನಡದಲ್ಲಿ ಇರುವ ಸಾಧಾರಣಾರ್ಥ ಯುದ್ಧ, ಕಾಳಗ ಎಂದು; ಆದರೆ ಪ್ರಕೃತ ಪದ್ಯದಲ್ಲಿ ಅದಕ್ಕೆ ಸೈನ್ಯ ಎಂಬರ್ಥವಾಗಬಹುದು; (ತ) ಮುನೈ–ಗುಂಪು; (ತೆ) ಮೊನ–ಸೈನ್ಯ.

೫೯. ಸೆಱೆಕೋಲ್ ಸೆಱೆಕೋಲಿಂ–ಒಂದು ಪಾರ್ಶ್ವದ ಕೊನೆಯಿಂದ ಇನ್ನೊಂದು ಪಾರ್ಶ್ವದ ಅಂಚಿನವರೆಗೆ, ಪತ್ತಱುಗಾವುದದ–೧೬ ಗಾವುದದ, ಬಲದ–ಸೈನ್ಯದ, ಪವಣನ್–ಅಳತೆ ಯನ್ನು, ಅನಿತಿನಿತೆಂದು–ಅಷ್ಟು ಇಷ್ಟು ಎಂದು, ಆನಱಿಯೆಂ–ನಾನು ತಿಳಿಯೆನು; ಅವನಿ ಪತೀ–ರಾಜನೇ, ದೇವಾಸುರದೊಳಂ–ದೇವದಾನವರ ಯುದ್ಧದಲ್ಲೂ, ಆನ್–ನಾನೇ, ಇನಿತು ಬಲಮಂ–ಇಷ್ಟು ಸೈನ್ಯವನ್ನು; ಅಱಿಯೆಂ–ನಾನು ತಿಳಿಯೆನು, ಬಂಡಿಯ ಈಸುಮರಕ್ಕೆ ಎಡದಲ್ಲಿರುವುದನ್ನು ಎಡಗೋಲೆಂದೂ, ಬಲದಲ್ಲಿರುವುದನ್ನು ಬಲಗೋಲು ಎಂದೂ ಕರೆಯುವುದು ರೂಢಿ; ಇಲ್ಲಿ ಶಿಱೈ ಸೆಱೆ ಎಂದರೆ ತಮಿಳಿನಲ್ಲಿ ರೆಕ್ಕೆ (ಹಕ್ಕಿಯ) ಎಂದರ್ಥ; ಸೆಱೆಕೋಲ್ ಎಂದರೆ ರೆಕ್ಕೆಯ ಕಡೆಯಿಂದ ಎಂದರ್ಥವಾಗಬಹುದು; ಅದೇ ಪಾರ್ಶ್ವ, ಪಕ್ಕ.

ವಚನ : ದ್ರೋಣನ ಮೊನೆಗೆ–ದ್ರೋಣನ ಸೈನ್ಯಕ್ಕೆ–ನಕ್ತಂಚರರ ಮೊನೆಗೆ–ರಾಕ್ಷಸರ ಸೈನ್ಯಕ್ಕೆ; ತನ್ನ ಚಕ್ರರಕ್ಷೆಗೆ ಪೇೞ್ದು–ತನ್ನ ಸೈನ್ಯ ರಕ್ಷೆಗೆ ನಿಯಮಿಸಿ; ನೆಱೆದು ನಿಂದು–ಪೂರ್ಣ ನಾಗಿ, ಸಮರ್ಥನಾಗಿ ನಿಂತು; ಕೆಯ್ವೀಸು–ಕೈಯನ್ನು ಬೀಸು; ಯುದ್ಧವು ಆರಂಭವಾಗಲಿ ಎಂದು ಸೂಚಿಸುವ ಸಂಕೇತ ಕೈಬೀಸುವುದು (ಹಗಲಲ್ಲಿ), ರಾತ್ರಿಯಲ್ಲಿ ಕೊಳ್ಳಿ ಬೀಸುವುದು.

೬೦. ನರೇಂದ್ರ–ಧರ್ಮರಾಜನ, ಬಳಮೆರಡುಂ–ಎರಡು ಸೈನ್ಯಗಳೂ, ತನ್ನನೆ–ತನ್ನನ್ನೇ, ಮಿಳಮಿಳನೋಡೆ–ಮಿಳ ಮಿಳಕಣ್ಣು ಬಿಟ್ಟುಕೊಂಡು ನೋಡುತ್ತಿರಲು, ಒಂದೆ ರಥದಿಂದೆ– ಒಂದೇ ರಥಸಮೇತನಾಗಿ, ಅಸುಹೃದ್ಬಳಮಂ–ಶತ್ರು ಸೈನ್ಯವನ್ನು, ಇರದೆ–ಬಿಡದೆ, ಎಯ್ದಿ– ಸೇರಿ, ಭೀಷ್ಮರ, ಚರಣ ಯುಗಳಕ್ಕೆ–ಎರಡು ಚರಣಗಳಿಗೆ, ಎಱಗೆ–ನಮಿಸಲು, ನಿನಗೆ, ಜಯಮಕ್ಕೆ–ಜಯವಾಗಲಿ, ಎಂದಂ–ಎಂದು ಆಶೀರ್ವದಿಸಿದನು.

ವಚನ : ಪರಕೆಯಂ ಕೆಯ್ಕೊಂಡು–ಆಶೀರ್ವಾದವನ್ನು ಸ್ವೀಕರಿಸಿ.

೬೧. ಗುರುಕೃಪಗುರುಸುತ ಶಲ್ಯರ–ದ್ರೋಣ ಕೃಪ ಅಶ್ವತ್ಥಾಮ ಶಲ್ಯರ, ಚರಣಂ ಗಳ್ಗೆಱಗಿ–ಪಾದಗಳಿಗೆ ಬಾಗಿ, ಪೋಗಿ–ಹೋಗಿ, ಪೊಡೆವಡುವುದುಂ– ನಮಸ್ಕರಿಸುತ್ತಿರಲು, ಅವರ್–ಅವರು, ಆ ನೃಪನಂ–ಆ ರಾಜಧರ್ಮಪುತ್ರನನ್ನು, ಆದರದಿಂದಂ ನಲ್ಮೆಯೊಳಂ– ಆದರದಿಂದಲೂ ಪ್ರೀತಿಯಿಂದಲೂ, ಪರಸಿ–ಹರಸಿ, ಮನಂಗೊಂಡು–ಮನಸ್ಸಿನಲ್ಲಿ ಮೆಚ್ಚಿ, ನುಡಿದರ್–ಹೇಳಿದರು.

೬೨. ನಿನ್ನ ಬರಮಿದಂ–ನಿನ್ನ ಬರುವಿಕೆಯಿಂದ ಎಂದರೆ ಇಲ್ಲಿಗೆ ಬಂದಿದ್ದರಿಂದ, ಎಮ್ಮ ಮನಂ–ನಮ್ಮ ಮನಸ್ಸು, ನಿನಗೆ ಎಱಗಿದುದು–ನಿನಗೆ ಬಾಗಿತು ಎಂದರೆ ನಮ್ಮ ಪ್ರೀತಿ ನಿನಗುಂಟಾಯಿತು; ಎಮ್ಮೀದೆಸೆಯಿಂದಂ–ನಮ್ಮ ಈ ಕಡೆಯಿಂದ, ಜಯಮುಂ–ವಿಜಯವೂ, ಗೆಲ್ಲವೂ, ಸಾರ್ಗೆ–ಸಾರಲಿ, ಬರಲಿ; ಪೋಗು–ಹೋಗು, ಎನೆ–ಎನ್ನಲು; ಆಗಳ್–ಆಗ, ಅಂತಕತನಯಂ–ಧರ್ಮಪುತ್ರನು, ಗುರುಜನಮಂ–ಹಿರಿಯರನ್ನು, ಮನ್ನಿಸಿ–ಗೌರವಿಸಿ.

ವಚನ : ಮಗುೞ್ದು–ಹಿಂದಿರುಗಿ, ತನ್ನೊಡ್ಡಣಕ್ಕೆ–ತನ್ನ ಸೈನ್ಯಕ್ಕೆ;

೬೩. ಪವನಜನಿಂದೆ–ಭೀಮನಿಂದ, ಕೌರವಕುಲಂ–ಕೌರವವಂಶವು, ಪಡಲಿಟ್ಟವೊಲಕ್ಕು– ನಾಶವಾದಂತಾಗುತ್ತದೆ. ಆದೊಡೆ–ಆದರೆ, ಇನ್ನವರವರ್–ಇನ್ನು ಅವರಿಗೆ ಸೇರಿದವರು, ಸಂತತಿಯವರು, ಆರುಮಿಲ್ಲ–ಯಾರೂ ಇಲ್ಲ; ಅಣಮೆ–ವಿಶೇಷವಾಗಿ, ಸಂತತಿ–ಸಂತಾನವು, ಕೆಟ್ಟಪುದು–ನಷ್ಟವಾಗುತ್ತದೆ; ಈ ಬವರದೊಳ್–ಈ ಯುದ್ಧದಲ್ಲಿ, ಈಗಳ್–ಈಗ, ಆನ್– ನಾನು, ಇವನಂ–ಇವನನ್ನು, ಕಾವೆಂ–ರಕ್ಷಿಸುತ್ತೇನೆ, ಎಂದು–ಎಂದು ಹೇಳಿ, ನೃಪಂ–ಧರ್ಮ ರಾಜನು, ದಯೆಯಿಂದಂ–ಕರುಣೆಯಿಂದ, ಆ ಯುಯುತ್ಸುವನೊಡಗೊಂಡು–ಆ ಯುಯುತ್ಸುವೆಂಬವನನ್ನು ಒಡಗೂಡಿ, ಬಂದಂ–ತನ್ನ ಪಾಳಯಕ್ಕೆ ಬಂದನು; ಎನಿತಾದೊಡಂ– ಎಷ್ಟಾದರೂ, ಏಂ–ಏನು, ಪ್ರಭು–ಧರ್ಮರಾಜನು, ಪೊಲ್ಲಕೆಯ್ಗುಮೇ–ಕೆಟ್ಟುದನ್ನು ಮಾಡು ತ್ತಾನೆಯೇ?

ವಚನ : ಪದದೊಳ್–ಸಮಯದಲ್ಲಿ; ದಿವ್ಯಸ್ವರೂಪಮಂ–ವಿಶ್ವರೂಪವನ್ನು;

೬೪. ಆ ಮಲೆದು ಒಡ್ಡಿದ ಚಾತುರಂಗಮೆಂಬುದು–ಈ ಕೆರಳಿ ಎದುರಾಗಿರುವ ಚತುರಂಗ ಸೇನೆಯೆಂಬುದು, ಅದಿರದೆ–ಹೆದರದೆ, ಇದಿರ್ಚಿ–ಸಂಘಟ್ಟಿಸಿ, ಇಱಿಯಲ್–ಹೊಡೆ ದಾಡಲು, ನಿನಗೆ, ಒಡ್ಡಿ–ಚಾಚಿ, ನಿಂದುದು–ಮುಂದೆ ನಿಂತುಕೊಂಡಿದೆ, ಇದಂ–ಇದನ್ನು, ಕೊಲ್ವೊಡೆ–ಕೊಲ್ಲುವ ಪಕ್ಷದಲ್ಲಿ, ನೀನುಂ–ನೀನು ಕೂಡ, ಎನ್ನ ಕಜ್ಜದೊಳ್–ನನ್ನ ಕಾರ್ಯದಲ್ಲಿ, ಎಸಗು–ಮಾಡು, ಎಂದು, ಸೈತು–ನೇರಾಗಿ, ಅಜಿತಂ–ಶ್ರೀಕೃಷ್ಣನು, ಕದನತ್ರಿಣೇ ತ್ರನಂ–ಅರ್ಜುನನನ್ನು, ಆದಿಯ ವೇದರಹಸ್ಯದೊಳ್–ಪ್ರಾಚೀನವಾದ ವೇದಗಳ ಗೂಢಾರ್ಥ ದಲ್ಲಿ, ನಿರಂತರ ಪರಿಚರ್ಯೆಯಿಂ–ಸಂತತವಾದ ಸೇವೆಯಿಂದ, ಉಪಾಸನೆಯಿಂದ, ನೆಱೆಯೆ– ಪೂರ್ಣವಾಗಿ, ಯೋಚಿಸಿದಂ–ತೊಡಗಿಸಿದನು, ಸೇರಿಸಿದನು.

ವಚನ : ಪುರಾಣಪುರುಷನಪ್ಪ–ಆದಿಪುರುಷನಾದ; ರಥಾಂಗಧರನಂ–ಚಕ್ರಪಾಣಿ ಯನ್ನು, ಶ್ರೀಕೃಷ್ಣನನ್ನು; ಮೂಱುಸೂೞ್–ಮೂರು ಬಾರಿ; ತವದೊಣೆಗಳಂ–ಅಕ್ಷಯವಾದ ಬತ್ತಳಿಕೆಗಳನ್ನು; ದ್ರೋಣಂಬಾೞ್ಗೆ–ಗುರುಗಳಾದ ದ್ರೋಣರು ಬಾಳಲಿ; ಜೇವೊಡೆದು–ಬಿಲ್ಲಿನ ಹೆದೆಯನ್ನು ಎಳೆದು ಟಂಕಾರ ಮಾಡಿ; ಒಡ್ಡಣದತ್ತ–ಸೇನೆಯತ್ತ ಕಡೆಗೆ;

೬೫. ಕುಳಶೈಳೇಂದ್ರಗಳ್–ಕುಲಪರ್ವತಗಳು, ಅಂಭೋನಿಧಿಗಳ್–ಸಮುದ್ರಗಳು, ಅಖಿಳ ದಿಗ್ದಂತಿಗಳ್–ಸಮಸ್ತ ದಿಕ್ಕಿನ ಆನೆಗಳು; ವಿಶ್ವಧಾತ್ರೀವಳಯಂ–ಸಮಗ್ರ ಭೂಮಂಡಲವು, ಪಾತಾಳಮೂಲಂ–ಪಾತಾಳಲೋಕದ ತಳ, ಸಕಲ ಭುವನಂ–ಸಮಸ್ತ ಲೋಕ ಗಳು, ಒಂದೊಂದಱೊಳ್–ಒಂದೊಂದರಲ್ಲಿ, ಕೇಣಿಗೊಂಡು–ಸಾಲಾಗಿ, ಉಚ್ಚಳಿಸಲ್– ಮೇಲಕ್ಕೆ ಚಿಮ್ಮಲು, ಸೂಸಲ್–ಚೆಲ್ಲಾಡಲು, ಪಳಂಚಲ್–ತಾಗಲು, ಸಿಡಿದು ಒಡೆದ ಅಳಱಲ್–ಸಿಡಿದು ಒಡೆದು ಹೆದರಲು, ಪಾಱಿ ಜೀಱೇೞಲ್–ಹಾರಿ ಜೀರೆಂದು ಶಬ್ದ ಮಾಡಲು, ಅಂದು–ಆಗ, ಉಮ್ಮಳಿಸುತ್ತೆ–ವ್ಯಾಕುಲಪಡುತ್ತ, ಅತ್ತಿರ್ದರ್–ಅತ್ತ ಇದ್ದರು (ಇದ್ದವು ಎಂದಿರಬೇಕೇನೊ), ಆವಂ–ಯಾವನು, ಮೀರಿ–ಉಲ್ಲಂಘಿಸಿ, ಹರಿಗನೊಳ್– ಅರ್ಜುನನಲ್ಲಿ, ಇದಿರಂ–ಎದುರನ್ನು ಎದುರಾಗಿ, ಮಾಱಾಂಪ ಗಂಡಂ–ಪ್ರತಿಭಟಿಸುವ ಶೂರನು?

ವಚನ : ಜಾತ–ಹುಟ್ಟಿದ, ಉತ್ಪಾತವಾತ ನಿರ್ಘಾತ–ಮೇಲಕ್ಕೆ ನೆಗೆದ ಗಾಳಿಯ ಹೊಡೆತ ದಿಂದ; ತಳ್ಳಂಕುಗುಟ್ಟುವ–ತುಳುಕಾಡುವ, ಕ್ಷೋಭೆಗೊಳ್ಳುವ; ಕೆಯ್ವೀಸಿದಾಗಳ್–ಯುದ್ಧಾ ರಂಭ ಸೂಚನೆಗಾಗಿ ಕೈಗಳನ್ನು ಬೀಸಿದಾಗ.

೬೬. ಪೂರ್ವಾಪರ ಜಲನಿಧಿಗಳ್–ಪೂರ್ವಪಶ್ಚಿಮ ಸಮುದ್ರಗಳು; ಅಗುರ್ವಿಸುವಿನಂ– ಭಯವನ್ನುಂಟುಮಾಡುತ್ತಿರಲು, ಒಂದನೊಂದು–ಒಂದನ್ನೊಂದು, ತಾಗುವವೊಲ್– ತಗಲುವ ಹಾಗೆ, ಘಟ್ಟಿಸುವಂತೆ, ಅಗುರ್ವು ಉರ್ವಿರೆ–ಭಯವು ಹೆಚ್ಚಿರಲು, ಪರ್ವಿ–ಹಬ್ಬಿ, ಚತುರ್ವಲಂ–ಚತುರಂಗ ಸೇನೆ, ಏರ್ವೆಸದಿಂದೆ–ಯುದ್ಧೋದ್ಯೋಗದಿಂದ, ಅಂದುಬಂದು– ಆಗ ಎದುರಾಗಿ ಬಂದು, ತಾಗಿತ್ತಾಗಳ್–ಸಂಘಟ್ಟಿಸಿತು;

೬೭. ಘಟೆಯ–ಆನೆಗಳ, ದೞದ–ಸೈನ್ಯದ, ಉಲಿವು–ಘೀಂಕಾರ ಶಬ್ದ, ಲಯಘನ ಘಟೆಗಳ–ಪ್ರಳಯ ಕಾಲದ ಮೋಡಗಳ ಸಮೂಹ, ಮೊೞಗೆನಿಸೆ–ಗುಡುಗು ಎನ್ನಿಸಲು, ರಟತ್….ದಿಂದ: ರಟತ್–ಶಬ್ದ ಮಾಡುತ್ತಿರುವ, ಪಟು–ಸಮರ್ಥವಾದ, ಪಟಹ–ತಮ್ಮಟೆ ಗಳ, ಶಂಖ–ಶಂಖಗಳ, ಭೇರಿಯ–ಭೇರಿಗಳ ಚಟುಳಿತದಿಂದ–ಸ್ಪಂದನದಿಂದ, ಎಂದರೆ ಧ್ವನಿಗಳಿಂದ, ಅಟಳ ಪಟಳಂ–ಅತಲವೆಂಬ ಪಾತಾಳದ ಮಾಳಿಗೆಯೂ, ಅಂಬರಪಟಳಂ– ಆಕಾಶದ ಮೇಲಾ, ವಣೆಯೂ, ಪೊಟ್ಟಗೆ–ಫಟ್ಟೆಂದು, ಒಡೆದತ್ತು–ಒಡೆಯಿತು, ಸೀಳಿತು. ಇಲ್ಲಿರುವ ಟಕಾರದ ಅನುಪ್ರಾಸ, ನಡೆದ ಕ್ರಿಯೆಯ ಆರ್ಭಟವನ್ನು ಸೂಚಿಸುತ್ತದೆ.

೬೮. ಕರಿತುರಗರಥಪದಾತಿಯ–ಆನೆ ಕುದುರೆ ರಥ ಕಾಲಾಳುಗಳ, ಚರಣಾಸಂಘಾತ ಜಾತರಜಂ–ಕಾಲ್ತುಳಿತದಿಂದ ಹುಟ್ಟಿದ ಧೂಳು, ಅಜಸ್ರಂ–ಸಂತತವಾಗಿ, ನೆರೆದು–ಸೇರಿ, ಅಂಬರಕ್ಕೆ–ಬಾನಿಗೆ, ಒಗೆಯಲ್–ನೆಗೆಯಲು, ಧರೆ–ನೆಲವು, ಬಳಭರದಿಂ–ಸೇನೆಯ ವೇಗದಿಂದ, ಎೞ್ದು–ಎದ್ದು, ಪಾಱುವಂತೆ–ಹಾರುವ ಹಾಗೆ, ಆಗಳ್–ಆಗ, ಆಯ್ತು–ಆಯಿತು.

೬೯. ಸಮರ ರಸ ಪ್ರಿಯರೊಳ್–ಯುದ್ಧರಸದಲ್ಲಿ ಆಸಕ್ತಿಯುಳ್ಳವರಲ್ಲಿ, ಸತ್ವಮುಂ– ಶಕ್ತಿಯೂ, ಇಳೆಯೊಳ್–ನೆಲದಲ್ಲಿ, ರಜಮುಂ–ಧೂಳೂ, ಒದವೆ–ಉಂಟಾಗಲು, ರಣಗೞ್ತಲೆಯೊಳ್–ಯುದ್ಧದ ಕತ್ತಲೆಯಲ್ಲಿ, ತಮಮುಂ–ಕತ್ತಲೆಯೂ, ಮಿಗೆ–ಹೆಚ್ಚಾಗಲು, ಎರಡುಂ ಪಡೆಯೊಳ್–ಎರಡೂ ಸೈನ್ಯಗಳಲ್ಲಿ, ಸತ್ವರಜಸ್ತಮಂಗಳಂ–ಸತ್ತ್ವರಜಸ್ಸು ತಮಸ್ಸು ಗಳೆಂಬ ಮೂರು ಗುಣಗಳನ್ನು, ಕಾಣಲಾದುದು–ಕಾಣಲಾಯಿತು. ಮೊಲಗೞ್ತಲೆ, ರಣಗೞ್ತಲೆ, ಗೋವಳಗೞ್ತಲೆ, ತಮಾಲಗೞ್ತಲೆ ಎಂಬ ಕೆಲವು ‘ಕೞ್ತಲೆ’ ಗಳು ಹಳಗನ್ನಡ ಕಾವ್ಯಗಳಲ್ಲಿ ಉಕ್ತವಾಗಿವೆ. ಇವುಗಳ ವಿಷಯ ಸ್ಪಷ್ಟವಾಗಿ ತಿಳಿಯದು; ಯುದ್ಧ ಭೂಮಿಯಲ್ಲಿ ಎದ್ದು ಧೂಳು ಎತ್ತಿದ ಪತಾಕೆಗಳ ಛತ್ರಿಗಳ ನೆರಳು–ಇವುಗಳಿಂದ ಆದ ಒಂದು ತೆರದ ಕತ್ತಲೆಗೆ ರಣಗೞ್ತಲೆಯೆಂದು ಹೆಸರಿರಬಹುದು.

೭೦. ಪಡೆಯ ಪೊಱೆಗೆ–ಸೇನೆಯ ಭಾರಕ್ಕೆ, ಶೇಷಂ–ಆದಿಶೇಷನು, ಅಗಿದು–ಹೆದರಿ, ಪೆಡೆಗಳಂ–ಹೆಡೆಗಳನ್ನು, ಉಡುಗುವುದುಂ–ಕುಗ್ಗಿಸಿಕೊಳ್ಳುತ್ತಲು, ಅಡಿಗಿಡೆ–ತಳವು ಕೆಡಲು, ಕೂರ್ಮನ–ಭೂಮಿಯನ್ನು ಹೊತ್ತಿರುವ ಆಮೆಯ, ಬೆನ್–ಬೆನ್ನು, ಅಂದು–ಆಗ, ನುಚ್ಚುನೂಱಪ್ಪಿನೆಗಂ–ನುಗ್ಗುನುರಿಯಾಗುತ್ತಿರಲು, ಒಡನೆ–ಕೂಡಲೇ, ಒಡೆದು, ಸಿಡಿಲ್ದು– ಸಿಡಿದು, ಎಳೆ–ಭೂಮಿ, ಬೊದಿಲ್ಲೆನೆ–ಬೊದಿಲ್ ಎಂದು, ಬಿೞ್ದತ್ತು–ಬಿತ್ತು; “ಉಡುಗು– ಸಂಕೋಚೇ.”

ವಚನ : ಅಂಬರಂಬರಂ–ಆಕಾಶದವರೆಗೆ; ಮಾರ್ಬಲಮಂ–ಎದುರು ಸೈನ್ಯವನ್ನು; ಸಮ ಕಟ್ಟುಗೆಟ್ಟು–ವ್ಯವಸ್ಥೆ ತಪ್ಪಿಹೋಗಿ; ತಪ್ಪುಪೊಟ್ಟೆಂದು–ಥಟ್ಫಟ್ಟೆಂದು, ತಱಿದು–ಕತ್ತರಿಸಿ; ಘಟ್ಟಿಸೆಯುಂ–ಹೊಡೆಯುತ್ತಲು; ಆಂಕೆಗೊಂಡು–ಎದುರಿಸಿ, ಸರಿಯೊಳಂ–ಮಳೆಯಲ್ಲೂ; ಅಂಬಿರಿವಿಟ್ಟುಪಾಯ್ವ–ಪ್ರವಾಹವಾಗಿ ಹರಿಯುವ; ಕಳಕಳಕ್ಕೆ–ಗದ್ದಲಕ್ಕೆ; ಪಱಿಯೆ (=ಪರಿಯೆ)–ಓಡಲು; ಘಟ್ಟಿಸಿದ–ಬಲವಾಗಿ ತಾಗಿದ; ಕೀೞ–ಕಡಿವಾಣದ; ಘಟ್ಟಣೆ ಯೊಳ್–ಹೊಡೆತದಲ್ಲಿ; ಪೊಟ್ಟಗೊಡೆದ–ಫಟ್ಟೆಂದು ಸೀಳಿದ; ತಾಳುಗೆಗಳ–ನಾಲಗೆಗಳ; ರುಧಿರಜಲದೊಳ್–ರಕ್ತದ ನೀರಿನಲ್ಲಿ; ಪದಗೆಂಪನಾಳ್ದ–ಹದವಾದ ಕೆಂಬಣ್ಣವನ್ನು ತಾಳಿದ; ಜಾತ್ಯಶ್ವದ–ಜಾತಿ ಕುದುರೆಗಳ; ಲಾಳಾಜಲದೊಳಂ–ಜೊಲ್ಲು ನೀರಿನಲ್ಲಿಯೂ; ಮೊದಲ್ ಮೂಲಂಗಿಡೆಯುಂ–ಮೊದಲು ಬೇರು ಹಾಳಾಗಲು ಎಂದರೆ ಧೂಳಿಗೆ ಮೂಲವಾದ ನೆಲ ಒದ್ದೆಯಾದ್ದರಿಂದ ಧೂಳೇಳುವುದು ನಿಂತು ಹೋಗಲು; ತಿಱಿದಿಕ್ಕಿದಂತೆ–ಕತ್ತರಿಸಿ ಹಾಕಿದ ಹಾಗೆ; ಪಱಿದುರುಳ್ದೊಡೆ–ಛೇದಿಸಿ ಉರುಳಿದರೆ; ಪೋೞ್ಗಳೊಳಗಣಿಂದಂ–ಪೊಟ್ಟರೆಗಳ ಒಳಗಿನಿಂದ; ಒಗೆದ–ಹುಟ್ಟಿದ, ಕೇಸುರಿಗಳ–ಕೆಂಪಾದ ಉರಿಗಳ; ಬಳಗದಂತೆ–ಸಮೂಹ ದಂತೆ; ಅಟ್ಟೆಗಳಿಂದಂ–ಮುಂಡಗಳಿಂದ; ಅಂಬರಂಬರಂ–ಆಕಾಶದವರೆಗೂ; ಸುಟ್ಟುರೆ ಗಳಿಂದಂ–ಸುಂಟರಗಾಳಿಯಿಂದಲೂ; ಮಸುಳನಾಗೆ–ಮಾಸಲು; ದೆಸೆಯಱಿದು–ದಿಕ್ಕನ್ನು ತಿಳಿದು; ಮಾರ್ವಲಮುಮಂ–ಎದುರು ಸೈನ್ಯವನ್ನೂ; ನವರುಧಿರಜಳ–ಹೊಸದಾದ ರಕ್ತವೆಂಬ ನೀರಿನ; ಚಳತ್ ಸೇಚನದೊಳ್–ಬಾರಿ ಬಾರಿಗೆ ಒದ್ದೆಯಾಗುವಿಕೆಯಲ್ಲಿ: ಘಟ್ಟಿಸಿ–ದಮ್ಮಸ್ಸು ಮಾಡಿ; ಸಿಂದುರದೊಳ್–ಕೆಂಪುಕಾವಿಕಲ್ಲಿನಲ್ಲಿ; ನೆಲಗಟ್ಟಿಸಿದಂತಿರ್ದ–ನೆಲಕ್ಕೆ ಹಾಸಿದಂತಿದ್ದ; ಬಿಲ್ಗಾಳೆಗಂ–ಬಿಲ್ಲಿನ ಯುದ್ಧವನ್ನು.

೭೧. ಪಿಡಿಕೆಯ್–ಕೈಯ ಮುಷ್ಟಿಯು, ತೀವಿದ–ತುಂಬಿದ, ಕೂರ್ಗಣೆ–ಹರಿತವಾದ ಬಾಣ; ಮಡಕಾಲ್ವರಂ–ಕಾಲಿನ ಹರಡಿನವರೆಗೂ, ಅಲೆವ–ಇಳಿಬಿದ್ದು ಅಲುಗಾಡುವ, ಕಚ್ಚೆ– ವೀರಕಚ್ಚೆಯು; ನಿಡಿಯ ಅಸಿಯ ಒಱೆ–ಉದ್ದವಾದ ಕತ್ತಿಯ ಒರೆ, ಕರ್ಪಿಡಿದ–ಕಪ್ಪು ಬಣ್ಣ ತುಂಬಿದ, ಪಣೆಗಟ್ಟು–ಹಣೆಯ ಕಟ್ಟು, ಕೆಯ್ಪೊಡೆ–ಕೈಚೀಲ–ಇವು, ಬೆಡಂಗನೊಳಕೊಳೆ– ಬೆಡಗನ್ನು ಹೊಂದಿರಲು, ಧನುರ್ಧರರ್–ಬಿಲ್ಗಾರರು, ಪೆಣೆದು–ಹೆಣೆದುಕೊಂಡು, ಎಚ್ಚರ್– ಬಾಣಗಳನ್ನು ಬಿಟ್ಟರು. ಈ ಪದ್ಯದಲ್ಲಿ ಬಿಲ್ಲಾಳುಗಳ ವೇಷ ಚೆನ್ನಾಗಿ ಚಿತ್ರಿತವಾಗಿದೆ.

೭೨. ಶರಸಂಧಾನಂ–ಬಾಣವನ್ನು ಹೂಡುವುದು, ನಿಟ್ಟಿಸಲ್–ನೋಡಲು, ಅರಿದು ಎಂಬಿನಂ–ಅಸಾಧ್ಯವೆನ್ನಲು (ಎಂದರೆ ಅಷ್ಟು ವೇಗವಾಗಿ ಬಾಣಗಳ ಹೂಡಿಕೆ ನಡೆಯುತ್ತಿತ್ತು); ಎರಡು ಬಲದ–ಸೇನೆಯ, ಕಡುವಿಲ್ಲರ್–ವೇಗಶಾಲಿಗಳಾದ ಬಿಲ್ಗಾರರು, ಭೋರ್ಗರೆದು– ಭೋರೆಂದು ಶಬ್ದ ಮಾಡಿ, ಇಸೆ–ಪ್ರಯೋಗಿಸಲು, ಕೂರ್ಗಣೆಯೊಳ್–ಹರಿತವಾದ ಬಾಣ ಗಳಲ್ಲಿ, ಗಗನಮಂಡಳಮೆಲ್ಲಂ–ಆಕಾಶ ಮಂಡಲವೆಲ್ಲ, ಪಂದರ್ ಇಕ್ಕಿದಂತಾಯ್ತು–ಚಪ್ಪರ ಹಾಕಿದ ಹಾಗಾಯಿತು. ಕಡುವಿಲ್ಲರ್–ಕಡಿದು+ಬಿಲ್ಲರ್; ಪಂದರ್=(ತ)ಪಂದರ್, ಇದರಿಂದ ಇಂಗ್ಲಿಷ್ Pandal ಬಂದಿದೆ.

೭೩. ಗಱಿ ಸನ್ನೆಗೆಯ್ದು–ಬಾಣಕ್ಕೆ ಕಟ್ಟಿರುವ ಗರಿಗಳಿಂದ ಸಂಜ್ಞೆ ಮಾಡಿ, ತೆಗೆನೆಱೆದು– ಕಿವಿಯವರೆಗೂ ಎಳೆದು, ಎಱಗಿ–ಬಾಗಿ, ಪರಂಕಲಿಸಿ–ವಿಸ್ತಾರವಾಗಿ ಹರಡಿ, ಪರ್ವಿ–ಹಬ್ಬಿ, ಕೂಕಿಱಿದು–ಮೇಲಕ್ಕೆ ನೆಗೆದು, ಇಸೆ–ಬಾಣವನ್ನು ಬಿಡಲು, ಕೆಂಗಱಿಯ–ಕೆಂಪಾದ ಗರಿ ಗಳನ್ನುಳ್ಳ, ಮೊನೆಯಂಬುಗಳ್–ಹರಿತವಾದ ಬಾಣಗಳು ಪೊಣರ್ವ–ಹೋರಾಡುವ; ಬಿಲ್ಲ– ಬಿಲ್ಲಿನ, ಕಡುವಿತ್ತೆಗರಂ–ಅತಿಶಯವಾದ ಪ್ರೌಢಿಮೆಯುಳ್ಳವರನ್ನು, ಕಣ್ದೆಱೆಯಿಸಿದುವು– ಕಣ್ಣು ತೆರೆಯುವಂತೆ ಮಾಡಿದುವು. “ತೆಗೆನೆಱೆ–ಆಕರ್ಣಾಂತೇ” ; ಪರಂಕಲಿಸು–ಪರಕಲಿಸು; ಇದರ ಅರ್ಥ ಅನಿರ್ದಿಷ್ಟ; ಕೂಕಿಱಿ ಕೊಂಕು–ಉತ್ಸರ್ಪಣೇ+ಇಱಿ; ಕೊಂಕು ಎಂಬುದಕ್ಕೆ ತುರುಕು, ತಳ್ಳು ಎಂಬರ್ಥವೂ ಇರುತ್ತದೆ, “ನಕ್ತಂಚರೀಮುಖದೊಳ್ ಕೊಂಕುವುದಾಂತರಂ ದಶಮುಖೋತ್ಖಾತಾಸಿಧಾರಾಮುಖಂ” ಎಂಬ ಪ್ರಯೋಗವಿದೆ (ಪಂಪರಾ. ೧೦–೨೨೩); ಕೂಕು, ಕೂಂಕು(ತೆ)–ಗಟ್ಟಿಯಾಗಿ ಕೂಗು, ಗರ್ಜಿಸು ಎಂದೂ ಆಗುತ್ತದೆ. “ಬಿತ್ತೆಗನೆಂದು ಪ್ರೌಢಂ”, ಕಡಿದು+ಬಿತ್ತೆಗ ಕಡುವಿತ್ತೆಗ.

೭೪. ಅರಿವ–ಕತ್ತರಿಸುವ, ನಡುವ–ನಾಟುವ, ಉಡಿವ–ಮುರಿಯುವ, ನೇರ್ಗೋಲ್ವ ರಿದು–ನೇರಾಗಿ ಬಾಣ ಹಾರಿಬಂದು, ಉರ್ಚುವ–ಸೀಳುವ, ನಟ್ಟು ತೊನೆವ–ನಾಟಿಕೊಂಡು ತೂಗಾಡುವ, ಕಣೆಗಳ್ಗೆ–ಬಾಣಗಳಿಗೆ, ಮೊಗಂದಿರಿಯದೆ–ಮುಖವನ್ನು ತಿರುಗಿಸದೆ, ಇದಿರಿದಿ ರಂ–ಸಮ್ಮುಖವಾಗಿ, ಅದಿರದೆ–ನಡುಗದೆ, ಹೆದರದೆ; ಸುರಿಗಿಱಿವಂತೆ–ಕತ್ತಿಯಿಂದ ಹೊಡೆದ ಹಾಗೆ, ಅಂಬನಂಬು–ಬಾಣವನ್ನು ಬಾಣ, ಅಟ್ಟುವಿನಂ–ಅಟ್ಟಿಸಿಕೊಂಡು ಬರುತ್ತಿರಲು, ಎಚ್ಚರ್–ಬಾಣ ಪ್ರಯೋಗ ಮಾಡಿದರು.

೭೫. ಪಿಡಿಕೆಯ್ಯ–ಕೈಯ್ಯ ಹಿಡಿಯ, ದೊಣೆಯ–ಬತ್ತಳಿಕೆಯ ಪೊದೆಯಂಬು–ಹೊದರಿ ನಂತಿರುವ ಎಂದರೆ ಗುಂಪಾದ ಬಾಣಗಳು, ಇಡೆ ಮುಡಿವಿನಂ–ಪ್ರಯೋಗಿಸಿ ಮುಗಿಯು ತ್ತಿರಲು, ಎಚ್ಚು–ಪ್ರಯೋಗ ಮಾಡಿ, ಸುರಿಗೆಗಿೞ್ತು–ಕತ್ತಿಯನ್ನು ಸೆಳೆದುಕೊಂಡು, ಅದಿರದೆ– ಹೆದರದೆ, ಇದಿರಂ–ಇದಿರಾದವರನ್ನು, ಪಡೆ–ಸೈನ್ಯ, ಪೆಣೆದು–ಹೆಣೆದುಕೊಂಡು ಎಂದರೆ ಸೇರಿ ಇಱಿದುಂ–ಹೊಡೆದೂ, ಬಿಲ್ವಡೆ–ಬಿಲ್ಲಿನ ಸೇನೆ, ಭೋರ್ಗರೆದು–ಭೋರೆಂದು ಶಬ್ದ ಮಾಡಿ, ಪರಿವ–ಹರಿಯುವ, ನೆತ್ತರ ಕಡಲಂ–ರಕ್ತದ ಸಮುದ್ರವನ್ನು, ಪಡೆದುದು–ಉಂಟು ಮಾಡಿತು.

ಈ ಮೇಲಿನ ಮೂರು ಕಂದಗಳಲ್ಲಿ ಕಾಣುವ ಶುದ್ಧದೇಸಿ ಶೈಲಿಯ ಕೆಚ್ಚು ಆಕರ್ಷಕ ವಾಗಿದೆ.

ವಚನ : ಧನುರ್ಧರರ ಬಲಂಗಳುಂ–ಬಿಲ್ಗಾರರ ಸೈನ್ಯಗಳೂ; ಅೞ್ಗಿ ಮೞ್ಗದಾಗಳ್– ನಾಶವಾದಾಗ; “ಅೞ್ಗು–ಲಯೇ ಕ್ಷೀಣತ್ವೇ” ; ಮೞ್ಗು= (ತ)ಮೞುಕು–ನಾಶವಾಗು.

೭೬. ತೊಳಗುವ–ಹೊಳೆಯುವ, ಬಾಳ್–ಕತ್ತಿ; ತೞಿತ್ತೞಿಪ ಕಕ್ಕಡೆ–ಥಳಥಳಿಸುವ ಕಕ್ಕಡೆ ಯೆಂಬ ಆಯುಧ: ಬುಂಭುಕದೊಳ್–ಕುಚ್ಚುಗಳಲ್ಲಿ (?), ತಗುಳ್ದು–ಸೇರಿ, ಪಜ್ಜಳಿಸುವ– ಪ್ರೞ್ವಲಿಸುವ, ಪಂಚರಾಯುಧಂ–ಪಂಚರ ಎಂಬ ಆಯುಧ; ಅಗುರ್ವಿಸುವ–ಹೆದರಿಸುವ, ಆವುತಿ–ಆವುತಿಯೆಂಬ ಆಯುಧ; ಪೂಸಿದಂತೆ–ಬಳಿದ ಹಾಗೆ, ಇಟ್ಟಳಂ–ಒತ್ತಾಗಿ, ಅಮರ್ದಿರ್ದ–ಸೇರಿದ್ದ, ಮಾಳಜಿಗೆ–ಮಾಳಜಿಗೆಯೆಂಬ ಆಯುಧ, ಪಕ್ಕರೆಯಿಕ್ಕಿದ– ಜೂಲನ್ನು ಹಾಕಿದ, ಜಾಯಿಲಂ–ಜಾತಿ ಕುದುರೆಗಳು; ಭಯಂಗೊಳಿಸೆ–ಭಯಪಡಿಸಲು, ಕಡಂಗಿ–ಉತ್ಸಾಹಿಸಿ, ತುಂಗ ತುರಂಗ ಸಾಧನಂ–ಎತ್ತರವಾದ ಕುದುರೆಗಳ ಸೈನ್ಯ; ಅಸುಂಗೊಳೆ– ಪ್ರಾಣಾಪಹಾರ ಮಾಡಲು, ತಾಗಿದುದು–ಸಂಘಟ್ಟಿಸಿತು, ತಾಗಿತು.

ವಚನ : ಕಾೞ್ಕಿರ್ಚಿನ ಬೇಗೆ–ಕಾಡುಗಿಚ್ಚಿನ ಶಾಖ; ಸಾರ್ವಂತೆ–ಬರುವ ಹಾಗೆ, ಸಮೀಪಿಸು ವಂತೆ, ಇರ್ವಲದ–ಎರಡು ಸೈನ್ಯಗಳ, ಅಳವುಂ–ಪರಾಕ್ರಮವೂ; ಕಿರ್ಚ್ಚುಂ ಕಿಡಿಯುಮಾಗಿ– ಕಿಚ್ಚು ಕಿಡಿಯಾಗಿ ದಳ್ಳಿಸಿ;

೭೭. ಈ ಪದ್ಯದ ತುಂಬ ಯುದ್ಧದ ಪರಿಭಾಷೆಯ ದೇಶೀ ಶಬ್ದಗಳು ತುಂಬಿವೆ; ಅವಕ್ಕೆ ಅರ್ಥ ಅಸ್ಪಷ್ಟ; ಪಸುಗೆ–ವಿಭಾಗ, ನೆಲಂ–ನೆಲವು, ಜಲಂ–ಜಲವು, ಹಯದ–ಕುದುರೆಯ, ಒಡಂಬಡಂ–ಒಪ್ಪಿಗೆ, ವಂಚನೆ–ಮೋಸ, ಕೇಣಂ–ಮಾತ್ಸರ್ಯ, ಆಸನಂ–ಔದಾಸೀನ್ಯ, ಕೊಸೆ–ವಾಹನವನ್ನು ಹತ್ತುವುದು, ದೆಸೆ–ದಿಸಿಯು, ದಿಟ್ಟಿ–ದೃಷ್ಟಿ, ಮುಟ್ಟಿ–ಮುಷ್ಟಿ; ಕೆಲಜಂಕೆ– ಮಗ್ಗುಲನ್ನು ಹೆದರಿಸುವುದು. ನಿವರ್ತನೆ–ಮರಳುವುದು, ಕಾಣ್ಕೆ–ನೋಡುವುದು–ಇವೆಲ್ಲ, ಪರ್ವಿದ–ವಿಸ್ತಾರವಾದ, ಏರ್ವೆಸನದೊಳ್–ಯುದ್ಧಕಾರ್ಯದಲ್ಲಿ, ಆದ–ಉಂಟಾದ, ಬಲ್ಮೆಯೊಳ್–ಅರಿವಿನಲ್ಲಿ, ಒಡಂಬಡೆ–ಒಪ್ಪಲು, ತಳ್ತಿಱಿವಲ್ಲಿ–ತಾಗಿ ಹೊಯ್ದಾಡು ವಾಗ, ಸಮರಾಂಗಣಂ–ಯುದ್ಧರಂಗವು, ಉಳ್ಕುವ–ಪ್ರಕಾಶಿಸುವ, ಬಾಳ್ಗಳ–ಕತ್ತಿಗಳ, ಉಳ್ಕದಿಂ–ದೀಪ್ತಿಯಿಂದ, ಕಾಂತಿಯಿಂದ, ಮಿಂಚಿನೊಳ್–ಮಿಂಚಿನಲ್ಲಿ, ಮುಸುಕಿದ– ಮುಚ್ಚಿದ, ಮಾೞ್ಕೆಯಾಯ್ತು–ರೀತಿಯಾಯಿತು. “ಕೊಸೆ–ನಿಧುವನಕರಣೇ, ವಾಹಾರೋಹ ಭೇದೇ ಚ” ; ತೇರಂ ಕೊಸೆಗೊಂಡು ಚಕ್ರಿಯಂ ಬಿನ್ನವಿಕುಂ ಎಂದು ಪಂಪನ ಇನ್ನೊಂದು ಪ್ರಯೋಗವಿದೆ (ಆದಿಪು. ೧೧–೫೭); ಕಾಣ್ಕೆ; ಕಾಣ್ಕೆ ಕಾಣ್ಕೆಯಂ ಗೆಲೆ (ಗದಾ. ೮–೨೩).

೭೮. ಕರ ಕರವಾಳ ಘಾತದೊಳ್–ಕೈಗತ್ತಿಯ ಏಟಿನಿಂದ, ಅರಾತಿಯ–ಹಗೆಯ, ಪಂದಲೆ– (ಆಗ ತಾನೆ ಕತ್ತರಿಸಿದ) ಹಸಿತಲೆಯು; ಪಂಚರಾಯುಧಂ ಬೆರಸು–ಪಂಚರ ಎಂಬ ಆಯುಧ ಸಮೇತವಾಗಿ; ಎಸೆವ ಅಟ್ಟೆ–ಪ್ರಕಾಶಿಸುವ ಮುಂಡವು, ತೊಟ್ಟಕವಚಂ ಬೆರಸು–ಧರಿಸಿದ ಕವಚದ ಸಮೇತವಾಗಿ, ಏಱಿದ ವಾಜಿ–ಹತ್ತಿದ ಕುದುರೆ, ಲೋಕವಕ್ಕರೆವೆರಸು–ಕಬ್ಬಿಣದ ಗುಳ ಸಮೇತವಾಗಿ, ಒಂದೆ ಸೂೞೊಳೆ–ಒಂದೇ ಬಾರಿಯಲ್ಲೇ, ಪಡಲ್ವಡೆ–ಕೆದರಿ ಬೀಳಲು, ದೋರ್ವಲದ–ಭುಜಬಲದ, ಉರ್ವು–ಉಬ್ಬು, ಆಧಿಕ್ಯ, ಬೀರದೊಳ್–ಶೌರ್ಯದಲ್ಲಿ, ಪೊರೆದಿರೆ–ವ್ಯಾಪಿಸಿರಲು, ಕೂಡಿರಲು, ಬಿನ್ನಣಂ–ಪ್ರೌಢಿಮೆ, ಪಟ್ಟುಗಳು, ನೆಗೞೆ–ಉಂಟಾ ಗಲು, ಕೆಲರ್–ಕೆಲವರು ಯೋಧರು, ಆಜಿರಂಗದೊಳ್–ಕಾಳಗದ ಕಳದಲ್ಲಿ, ತಳ್ತಿಱಿದರ್– ಬೆರಸಿ ಹೊಯ್ದಾಡಿದರು. ಬಿನ್ನ (ಸಂ) ವಿಜ್ಞಾನ, ಪಾದಮೋಟನವೇ ಮುಂತಾದ ಕುಸ್ತಿಯ ಪಟ್ಟುಗಳು; ನೆಲಸಿದ ಬಿನ್ನಣಂ ಸೆಣಸಿ ಬಿನ್ನಣಮಂ ಗೆಲೆ (ಗದಾ. ೮–೨೩) ಮಲ್ಲಯುದ್ಧದ ವಿಶೇಷವರಿಸೆಗಳಿಗೆ ವಿಜ್ಞಾನವೆಂದು ಹೆಸರು.

೭೯. ಪಿಡಿದು ಉದಿರ್ವ–ಎಡೆಬಿಡದೆ ಉದುರುತ್ತಿರುವ ಎಂದರೆ ಸುರಿಯುತ್ತಿರುವ, ಬಾಳ ಕಿಡಿಗಳಿಂ–ಕತ್ತಿಯ ಕಿಡಿಗಳಿಂದ, ಒಡನೊಡನೆ–ಕೂಡಲೇ, ಅರೆವೊತ್ತಿ–ಅರ್ಧ ಹತ್ತಿ ಕೊಂಡು, ತೊಟ್ಟ–ಧರಿಸಿದ, ಸನ್ನಣಂ–ಕವಚವು, ಉರಿಯಲ್ಕೆ–ಉರಿಯುವುದಕ್ಕೆ, ಒಡರಿಸಿ ದೊಡೆ–ತೊಡಗಿದರೆ, ಅವಱ–ಆ ಕವಚಗಳ, ಪರ್ವಂ–ಜೋಡಣೆಗಳನ್ನು, ಬಿಡೆಯರಿದು– ಬಿರಿಯುವಂತೆ ಕತ್ತರಿಸಿ, ಅರಿಸಮಿತಿಯೊಡನೆ–ಶತ್ರುಸಮೂಹದೊಡನೆ, ಅರೆಬರ್–ಕೆಲವರು, ಕಾದಿದರ್–ಯುದ್ಧ ಮಾಡಿದರು.

೮೦. ಭುಗಭುಗನೆ–ಭುಗ್ ಭುಗ್ ಎಂದು, ಉರ್ಚಿ–ಭೇದಿಸಿಕೊಂಡು, ಪಾಯ್ವ– ನುಗ್ಗುವ, ಬಿಸುನೆತ್ತರ–ಬಿಸಿರಕ್ತದ, ಸುಟ್ಟುರೆಯಂ–ಸುಳಿಯನ್ನು, ನೆಲಕ್ಕೆ–ಭೂಮಿಗೆ, ಪರ್ದುಗಳ್–ಹದ್ದುಗಳು, ಉಗಲೀಯದೆ–ಸುರಿಯಲು ಬಿಡದೆ, ಅವ್ವಳಿಸಿ–ಮೇಲೆ ಹಾಯ್ದು, ಪೀರ್ವಿನಂ–ಹೀರುತ್ತಿರಲು, ಒರ್ಮೆಯೆ–ಒಂದೇ ಸಲಕ್ಕೆ, ಪೊಯ್ವ ಪೊಯ್ಗಳಿಂ– ಹೊಡೆವ ಹೊಡೆತದಿಂದ, ತಲೆಗಳ್–ತಲೆಗಳು, ನೆಗೆದು–ಹಾರಿ, ಮುಗಿಲ್ಗಳ ಇಟ್ಟೆಡೆಗಳೊಳ್– ಮೋಡಗಳ ಇಕ್ಕಟ್ಟಾದ ಸಂದುಗಳಲ್ಲಿ, ತೊಡರ್ದಿರ್ದ–ಸಿಕ್ಕಿಕೊಂಡಿದ್ದ, ಜೇನಪುಟ್ಟಿಗಳನೆ– ಜೇನಿನ ಹಲ್ಲೆಗಳನ್ನೇ, ಏಂ ಪೋಲ್ತುವೋ–ಏನು ಹೋಲಿದುವೋ! ತುರಂಗ ಸೈನ್ಯದೊಳ್– ಕುದುರೆ ಸೈನ್ಯದಲ್ಲಿ, ಕಲಹ–ಕಾಳಗ, ಏಂ ಅಚ್ಚರಿಯಾಯ್ತೊ–ಏನು ಆಶ್ಚರ್ಯವಾಯಿತೋ! ಸುಟ್ಟುರೆ ಶಬ್ದಕ್ಕೆ ಸಾಧಾರಣವಾಗಿ ಸುಂಟರಗಾಳಿ ಎಂಬ ಅರ್ಥವುಂಟು; ಆದರೆ ಇಲ್ಲಿಯೂ ಇತರ ಪ್ರಯೋಗಗಳಲ್ಲಿಯೂ ಈ ಅರ್ಥ ಹೊಂದುವುದಿಲ್ಲ; ನೆಗೆದ ನೆತ್ತರ ಸುಟ್ಟರೆ ಕೆಂಡದಿಂಡೆಗಳ್ (ಪಂಪಭಾ. ೧೧–೮೯), ಪಂದಲೆಪಾಱಿ ಪುಟ್ಟೆ ಬಿಸುನೆತ್ತರ ಸುಟ್ಟುರೆ (ಪಂಪರಾ. ೪–೬೦), ಪಱಿದ ತಲೆ ನೆತ್ತರ ಸುಟ್ಟುರೆ ಕಂಡದಿಂಡೆ (ಪಂಪರಾ. ೧೪–೭); ಇದಕ್ಕೆ ಸಂವಾದಿಯಾದ ತಮಿಳು ಶಬ್ದ ಶುೞಲ್ಕ್ಕಾಱ್ರು; ಇಲ್ಲಿರುವ ಶುೞಲ್ಗೆ, ಸುಳಿ, ಸುಳಿನೀರ್ ಎಂಬರ್ಥವಿರುವುದರಿಂದ ಅದನ್ನು ಇಲ್ಲಿ ಹೇಳಿದೆ; ಸುಟ್ಟುರೆ=ಪ್ರವಾಹ (ಪಂಪಭಾ. ಕೋ) ಎಂದು ಇದೆ.

ವಚನ : ದೞಂಗಳ್–ಸಾಮಾನ್ಯ ಸೈನ್ಯಗಳು; ಕಿಱಿದಾನುಂ ಬೇಗಂ–ಸ್ವಲ್ಪ ಹೊತ್ತು; ತಟ್ಟು ಪೊಟ್ಟೆಂದು–ಥಟ್ ಫಟ್ ಎಂದು; ಕೋಲ್ಕುಟ್ಟಿ–ಬಾಣಗಳಿಂದ ಹೊಡೆದು; ಕುದುರೆಯಟ್ಟೆ ಯುಂ–ಕುದುರೆಗಳ ಅಟ್ಟೆಯೂ, ಇಲ್ಲಿ ಏನೋ ಕ್ಲೇಶವಿದೆ. ಅಟ್ಟೆಯಿನ್ ಎಂದು (ಪ) ಸೂಚನೆ; ಎಂದರೆ ಅಟ್ಟೆಗಳಿಂದ ಎಂದಾಗುತ್ತದೆ; ಅಟ್ಟೆಯುಂ–ಅಟ್ಟೆಯೂ; ಬಸಮೞಿದು– ಸ್ವಾಧೀನ ತಪ್ಪಿ; ಪೆಱಪಿಂಗಿ–ಹಿಮ್ಮೆಟ್ಟಿ; ಅನುವಿಸಿದಂತಾನುಂ–ಮೇಳೈಸಿದ ಹಾಗೂ, ಗೊಂದಣಿಸಿ–ಗುಂಪಾಗಿ; ಅಣಿಯಂ–ಸೇನೆಯ ಸಾಲನ್ನು; ಕಡಿತಲೆಯ–ಕತ್ತಿಯ: ಬಳ್ಳು ಗೆಡೆದು–ನರಿಯಂತೆ ಕೂಗಿ; ಎಕ್ಕೆವಾಱವಾಱಿ–ಒಂದೆ ಹಾರನ್ನು ಹಾರಿ; ಪಲಗೆ ವಾ [ರಿಗಳ್ಕುರುಳ್ಚಿ]–ಗುರಾಣಿಗಳನ್ನೂ ಕತ್ತಿಗಳನ್ನೂ ಝಳಪಿಸಿ; ಮಾರ್ಕೊಂಡು–ಪ್ರತಿಭಟಿಸಿ, ಕಾದೆ–ಯುದ್ಧಮಾಡಲು; ವಾರಿ ಎಂಬುದು ತರವಾರಿ=ಕತ್ತಿ ಎಂಬುದರ ಸಂಕ್ಷಿಪ್ತ ರೂಪವಿರ ಬಹುದು; ವಾರಿಯ ಬೀರರ್ ಪಾಳಿಯೊಳೆಸೆದರ್ ಎಂದು ಜನ್ನನ ಪ್ರಯೋಗ (ಯಶೋಚ); “ಕುರುಳ್ಚು–ಶಸ್ತ್ರ ಸಂಚಾಳನೇ.”

೮೧. ಈ ಪದ್ಯದಲ್ಲಿ ಕತ್ತಿಗಾಳಗದ ಕೆಲವು ಪರಿಭಾಷಾ ದೇಶೀ ಶಬ್ದಗಳಿವೆ; ಅವಕ್ಕೆ ಅರ್ಥ ತಿಳಿಯದು; ಪುಸಿ–ಸುಳ್ಳು, ನಸುವಂಚನೆ–ಸ್ವಲ್ಪ ಮೋಸ, ನೋರ್ಪು–? ಅಥವಾ ನೋರ್ಪ+ಅನುವು, ನೋಡುವ ರೀತಿ: ಅಸಿದು–ಕೃಶ, ಅಗಲಿತು–ವಿಸ್ತಾರ, ತಕ್ಕು–ಯೋಗ್ಯತೆ, ದಕ್ಕು– ಮುಳ್ಳಿನಂಥ ಕತ್ತಿ, ಪಗೆ–ದ್ವೇಷ, ಕೆಯ್ಬಗೆ–ಕೈಸಂಚಾಲನದ ವಿವಿಧ ರೀತಿ. ಕೆಯ್ಕೆಸುರಿ– ಕೈಯ ಸೂಕ್ಷ್ಮಕಾರ್ಯ; ನುಸುಳ್–ನುಸುಳಿ ಹೋಗುವುದು, ಎಂಬ–ಎನ್ನುವ, ಕೇಣದ ಕುಸುರಿ ಯಂ–ಮಾತ್ಸರ್ಯದ ಸೂಕ್ಷ್ಮತೆಯನ್ನು, ಅಱಿದು–ತಿಳಿದು, ಇಱಿದು–ಹೊಡೆದು, ಮೆಱೆದು– ಸಮರ್ಥರಾಗಿ, ಉಱದೆ–ಬಿಡದೆ, ಅರೆಬರ್–ಕೆಲವರು, ಇಱಿದರ್–ಹೊಯ್ದರು, ಪದ್ಯದ ತಾತ್ಪರ್ಯ ದುರವಗಾಹ.

೮೨. ಬಱಸಿಡಿಲೆಱಪಂತಿರೆ–ಬರಸಿಡಿಲು ಮೇಲ್ಬೀಳುವಂತೆ, ಬಂದು ಎಱಗಿದರಂ–ಮೇಲೆ ಬಿದ್ದವರನ್ನು, ತಳ್ತು–ಸಂಧಿಸಿ, ಬಾಳ–ಕತ್ತಿಯ, ಕಿೞ್ಮೊನೆಯಿಂ–ಕೆಳತುದಿಯಿಂದ, ತತ್ತಱದ ಱಿದು–ತರಿದು ತರಿದು, ಕತ್ತರಿಸಿ; ಉಬ್ಬರಮೆಂಬಿವನಱಿದು–ಉಬ್ಬರ (?) ಎಂಬಿವನ್ನು ತಿಳಿದು, ಪೆಣಬಣಂಬೆಗಳ್–ಹೆಣದ ರಾಶಿಗಳು; ನೆಗೆವಿನೆಗಂ–ಉಂಟಾಗುತ್ತಿರಲು, ನೆಗೞ್ವಿ ನೆಗಂ ಎಂದಿರಬಹುದೆ? ಇಱಿದರ್–ಹೊಯ್ದಾಡಿದರು, ಈ ಪದ್ಯದಲ್ಲಿ ಕೆಲವು ಪಾಠ ಸಂಕಷ್ಟಗಳಿವೆ; ಸದ್ಯಕ್ಕೆ ಅವು ಅಪರಿಹಾರ್ಯ.

೮೩. ಬಾಳಾಗಮಂ–ಕತ್ತಿಯ ಶಾಸ್ತ್ರ ಅಥವಾ ವಿದ್ಯೆ, ಅವತಾರಂಗೆಯ್ದಂತೆ–ಅವತಾರ ಮಾಡಿ ದಂತೆ ಎಂದರೆ ರೂಪುಗೊಂಡಂತೆ, ಚಾರಿಸಿ–ಕತ್ತಿಗಳನ್ನು ಝಳಪಿಸಿ, ಕಾಲದಂತಕನನೆ–ಪ್ರಳಯ ಕಾಲದ ಯಮನನ್ನೇ, ಪೋಲ್ತು–ಹೋಲಿ, ಆರುತ್ತುಂ–ಗರ್ಜಿಸುತ್ತ, ಕವಿವ–ಮುತ್ತುವ, ಅದಟರಂ–ಶೂರರನ್ನು, ಓರೊಂದೋರೊಂದೆ–ಒಂದೊಂದೇ ಒಂದೊಂದೇ (ಏಟನ್ನು), ಪೊಯ್ದು–ಹೊಡೆದು, ಪಲರಂ–ಹಲವರನ್ನು, ಕೊಂದರ್–ಕೊಂದರು.

೮೪. ಬಾಳ್ವಾಳ್ಗಳ–ಕತ್ತಿಕತ್ತಿಗಳ, ಘಟ್ಟಣೆಯೊಳ್–ತಾಕಾಟದಲ್ಲಿ, ಬಳ್ವಳ–ವಿಶೇಷ ವಾಗಿ, ಬಳೆದು–ವೃದ್ಧಿಯಾಗಿ, ಒಗೆದು–ಹುಟ್ಟಿ, ನೆಗೆದ–ಹಾರಿದ, ಕಿಡಿಗಳ–ಉರಿಯ ಕಿಡಿಗಳ, ಬಂಬಲ್ಗಳ್ವೆರಸು–ಸಮೂಹದೊಡನೆ ಕೂಡಿ, ಬಾಳ್ವೊಗೆ–ಕತ್ತಿಯ ಹೊಗೆ, ಕಾ [ರ] ಮುಗಿಲ್– ಮಳೆಗಾಲದ ಮೋಡ, ಬಳ್ಳಿಮಿಂಚಿನಿಂದೆ–ಬಳ್ಳಿಮಿಂಚಿನಿಂದ, ಉಳ್ಕುವ ವೋಲ್– ಪ್ರಕಾಶಿ ಸುವ ಹಾಗೆ, ಪೊಳೆದು–ಹೊಳೆದು, ನೆಗೆದುದು–ನೆಗೆಯಿತು.

೮೫. ತಲೆ ನೆಲದೊಳ್ ಉರುಳ್ದೊಡಂ–ತಲೆ ನೆಲದಲ್ಲಿ ಉರುಳಿದರೂ, ಮೆಯ್ಗಲಿ ಯೊರ್ವಂ–ಒಬ್ಬ ಶೂರನು, ಪಿಡಿದು–ಹಿಡಿದುಕೊಂಡು, ತಲೆಯಂ–ತಲೆಯನ್ನು, ಅಟ್ಟೆ ಯೊಳಿಟ್ಟು–ಮುಂಡಕ್ಕೆ ಸೇರಿಸಿಕೊಂಡು, ಅಗ್ಗಲಿಸಿದ–ಅಧಿಕವಾದ, ಮುಳಿಸಿಂ–ಕೋಪದಿಂದ, ಮಾಟದ ತಲೆಯಿಟ್ಟಾಡುವನಂ–ಕೃತಕವಾದ ತಲೆಯನ್ನಿಟ್ಟುಕೊಂಡು ಆಡುವವನನ್ನು, ಇನಿಸು ಪೋಲ್ತು–ಒಂದಿಷ್ಟು ಹೋಲಿ, ಅನುಗೆಯ್ದಂ–ಸಿದ್ಧವಾದನು.

ವಚನ : ಅಣಿ–ಸೈನ್ಯದ ಸಾಲು, ಮಣಿಯದೆ–ಭಯಪಡದೆ, ಸೆಣಸಿ–ಮತ್ಸರಿಸಿ, ಪೊಣರ್ದು–ಹೋರಾಡಿ; “ಮಣಿ–ನಮನೇ, ಭಯರತ್ನಯೋಃ.”

೮೬. ಮಾರುತ–ಮೂಹಂ; ಮಾರುತ–ಗಾಳಿಯ, ಘಾತ–ಹೊಡೆತದಿಂದ, ಸಂಚಳಿತ– ಅಲುಗಿಸಲ್ಪಟ್ಟ, ಕೇತು ಸಮೂಹಂ–ಧ್ವಜಗಳ ಸಮೂಹವು; ಉದಗ್ರ ಚಕ್ರಚೀತ್ಕಾರಂ– ದೊಡ್ಡ ಗಾಲಿಗಳ ಚೀರೆಂಬ ಶಬ್ದವು; ಉದಾರ–ರವಂ: ಉದಾರ–ಶ್ರೇಷ್ಠರಾದ, ವೀರಭಟ– ವೀರಯೋಧರ, ಸಿಂಹನಿನಾದ–ಸಿಂಹಗರ್ಜನೆಯಿಂದ, ವಿಮಿಶ್ರಿತ–ಬೆರಸಿದ, ಉತ್ಕಟ– ಅತಿಶಯವಾದ, ಜ್ಯಾ ರವಂ–ಬಿಲ್ಲಿನ ಹೆದೆಯ ಟಂಕಾರ ಶಬ್ದವು, ಇವು, ಅಂಬರಾಂತರ ಮಂ–ಆಕಾಶದ ಒಳಪ್ರದೇಶವನ್ನು, ಅಳ್ಳಿಱಿದು–ಕಂಪಿಸುವಂತೆ ಮಾಡಿ, ಅವ್ವಳಿಪನ್ನೆಗಂ– ಮುನ್ನುಗ್ಗು ತ್ತಿ ರಲು, ಶರಾಸಾರದ–ಬಾಣವೃಷ್ಟಿಯ, ಅಗುರ್ವು–ಭೀಕರತೆ, ಪರ್ವಿ ನಿಲೆ– ವ್ಯಾಪಿಸಿ ನಿಲ್ಲಲು, ಉಗ್ರರಥಂ–ಭಯಂಕರವಾದ ರಥಗಳು, ರಥಾಳಿಯೊಳ್–ರಥಗಳ ಸಮೂಹ ದಲ್ಲಿ, ತಾಗಿದುವು–ಸಂಘಟ್ಟಿಸಿದುವು.

೮೭. ಕುದುರೆಯ ಬಣ್ಣದಿಂ–ಕುದುರೆಗಳ ಬಣ್ಣದಿಂದ, ರಥದ ತೋರ್ಕೆಯಿಂ–ರಥಗಳ ತೋರಿಕೆಯಿಂದ; ಎತ್ತಿದ–ಏರಿಸಿದ, ಚಿತ್ರಕೇತು ವೃಂದದ–ಬಣ್ಣಬಣ್ಣ ಧ್ವಜ ಸಮೂಹಗಳ, ಕುಱುಪಿಂದೆ–ಗುರುತಿನಿಂದ, ಉದಗ್ರ ರಥ ಚೋದಕ ಚಿಹ್ನದಿಂ–ಶ್ರೇಷ್ಠರಾದ ಸಾರಥಿಗಳ ಚಿಹ್ನೆಗಳಿಂದ, ಆತನೀತಂ–ಅವನು ಇವನು, ಎಂಬುದಂ–ಎನ್ನುವುದನ್ನು, ಅಱಿದು–ತಿಳಿದು, ಒರ್ವರೊರ್ವರನೆ–ಒಬ್ಬರೊಬ್ಬರನ್ನೇ, ಮಚ್ಚರದಿಂ–ಹುರುಡಿನಿಂದ, ಗಱಿ ಸನ್ನೆಗೆಯ್ದು– ಬಾಣದ ಗರಿಗಳಿಂದ ಸನ್ನೆ ಮಾಡಿ, ಇದಿರ್ಚಿದ ಪದದೊಳ್–ಎದುರಿಸಿದ ಸಮಯದಲ್ಲಿ, ಸಮಸ್ತದಿಕ್ತಟಂ–ಎಲ್ಲಾ ದಿಕ್ಪ್ರದೇಶಗಳು, ಪತತ್ರಿಮಯಂ–ಬಾಣಮಯವು, ಎಂಬ, ಇನಿತಾಯ್ತು–ಇಷ್ಟಾಯಿತು, ತೋರ್ಕೆ ತೋಱು+ಕೆ; ಗಱಿಸನ್ನೆಗೆಯ್ಯುವುದು ಯುದ್ಧ ಆರಂಭವಾಗಲಿ ಎಂಬುದಕ್ಕೆ ಸೂಚನೆ.

೮೮. ಪರಶು ಶರನಿಕರದಿಂ–ಕೊಡಲಿಯಾಕಾರದ ಬಾಣಸಮೂಹಗಳಿಂದ, ಕುಮ್ಮರಿಗಡಿದ ವೊಲ್–(ಹಂಗಾಮಿ ಬೇಸಾಯಕ್ಕಾಗಿ) ಕಾಡನ್ನು ಕತ್ತರಿಸಿದಂತೆ, ಒಡನೆ–ಕೂಡಲೇ, ಕಡಿಯೆ–(ರಥಗಳನ್ನು) ಕತ್ತರಿಸಲು, ರಥಿಕರ್–ರಥಯೋಧರು, ರಥದಿಂ ಧರೆಗಿೞಿದು– ರಥದಿಂದ ನೆಲಕ್ಕಿಳಿದು, ಅರೆಬರ್–ಕೆಲವರು, ವಿರಥರತಿರಥರ್–ರಥವಿಲ್ಲದವರು, ಅತಿ ರಥರು; ಮೇಲ್ವಾಯ್ದು–ಮೇಲೆ ನುಗ್ಗಿ, ರಥಿಗಳಂ–ರಥಿಕರನ್ನು, ಸುರಿಗಿಱಿದರ್–ಕತ್ತಿ ಯಿಂದ ಹೊಡೆದರು. ಕುಮ್ಮರಿಯಂ: ಕುಮ್ಮರಿಯಂ ಸುಡಲೆಂದು ಕಡಿದೊಟ್ಟಿದ ಮರಂಗಳ; ಕುಮ್ಮರಿಯ ನೋಡಲೆಂದು ಪೋದಂ (ವಡ್ಡಾ. ೧೫೬).

೮೯. ತೇರಂ ಪಾಯಿಸಿ–ರಥವನ್ನು ಹರಿಯಬಿಟ್ಟು, ನೋಯಿಸಿ–ನೋವನ್ನುಂಟುಮಾಡಿ, ವಾರುವ ಕುದುರೆಗಳಂ–ಬಾಡಬ ಜಾತಿಗೆ ಸೇರಿದ ಕುದುರೆಗಳನ್ನು, ಅರೆಬರ್–ಕೆಲವರು, ಎರ್ದೆಯುರಿಯೆಚ್ಚರ್–ಎದೆ ಉರಿಯುವಂತೆ ಬಾಣದಿಂದ ಹೊಡೆದರು; ಸಾರಥಿಯ ರಥಿಯ ತಲೆಗಳಂ–ಸಾರಥಿಯ ಮತ್ತು ರಥಿಕರ ತಲೆಗಳನ್ನು, ಓರೊಂದಸ್ತ್ರದೊಳೆ– ಒಂದೊಂದು ಬಾಣದಲ್ಲಿಯೇ, ಪಾಱಿ–ಹಾರಿ, ಜೀಱೇೞ್ವಿನೆಗಂ–ಜೀರೆಂದು ಶಬ್ದವಾಗು ತ್ತಿರಲು, [ಎಚ್ಚರ್–ಹೊಡೆದರು]. ವಾರುವ ಕುದುರೆ ಎಂಬುದರ ಅರ್ಥ ಚಿಂತನೀಯ; ವಾರುವ (ಸಂ) ಬಾಡಬ–ಬೀಜದ ಕುದುರೆ, ಇದರ ಜೊತೆಗೆ ಕುದುರೆ ಶಬ್ದ ಸೇರಿದೆ; ಬಹುಶಃ ಗಂಡು ಹೆಣ್ಣು ಕುದುರೆಗಳಿರಬಹುದು; ವಾರುವದ ಬೋರಗುದರೆಗಳ್ ಎಂಬ ಪ್ರಯೋಗವುಂಟು.

೯೦. ನೆತ್ತರ ಕೆಸಱೊಳ್–ರಕ್ತದ ಕೆಸರಿನಲ್ಲಿ, ಗಾಲಿಗಳ್–ಚಕ್ರಗಳು, ಎತ್ತಂ–ಎಲ್ಲೆಲ್ಲೂ, ಜಿಗಿಲ್ತು–ಅಂಟಿಕೊಂಡು, ನಿಲೆ–ನಿಲ್ಲಲು, ಧರೆಗಿೞಿದು–ನೆಲಕ್ಕಿಳಿದು, ಆರ್ದು–ಗಟ್ಟಿಯಾಗಿ ಕೂಗಿ, ಎತ್ತಿ–ಮೇಲಕ್ಕೆತ್ತಿ, ಕೆಲಬರ್–ಕೆಲವರು, ಸೂತರ್–ಸಾರಥಿಗಳು, ಪರಿಯಿಸಿದರ್–ರಥ ಗಳನ್ನು ಹಾಯಿಸಿದರು; ಅಲ್ಲಿ–ಆ ಸಮಯದಲ್ಲಿ, ರಥಕಲ್ಪಂ–ರಥ ಚೋದನೆಯ ವಿದ್ಯೆ, ಏಂ ಮೆಯ್ವೆತ್ತುದೋ–ಏನು ಸಾಕಾರವಾಯಿತೋ!

ವಚನ : ವರೂಥಿನಿಯ–ಸೈನ್ಯದ; ವರೂಥಂಗಳ್–ರಥಗಳು; ಮಲ್ಲಾಮಲ್ಲಿಯಾಗಿ– ಮಲ್ಲನು ಮಲ್ಲನೊಡನೆ ಕಾದುವ ಯುದ್ಧ ಮಲ್ಲಾಮಲ್ಲಿ, ಇದಾಗಲು; ಎಂದರೆ ದ್ವಂದ್ವ ಯುದ್ಧವಾಗಲು,

೯೧. ಉಡಿದಿರ್ದ–ಮುರಿದಿದ್ದ, ಅಚ್ಚು–ಅಚ್ಚಿನ ಮರ, ಅೞಿದ ಈಸು–ಹಾಳಾದ ಇರ್ಚಿಮರ, ತೞ್ಗಿದ–ತಗ್ಗಿ ಹೋದ, ನೊಗಂ–ನೊಗವು, ಜೀಱೆಱ್ದ ಚಕ್ರಂ–ಜೀರೆಂದು ಶಬ್ದ ಮಾಡಿ ಹಾರಿಹೋದ ಗಾಲಿ, ಸಿಡಿಲ್ ಪೊಡೆದಂತೆ–ಸಿಡಿಲು ಹೊಡೆದ ಹಾಗೆ, ಒರ್ಮೆಯೆ– ಒಂದು ಸಲಕ್ಕೆ, ಸೂಸಿ–ಚೆಲ್ಲಿ, ಪಾಱುವ–ಹಾರುವ, ಮಡಂ–ಪಾರಿಯ ಮರ, ನುರ್ಗಾದ ಕೀಲ್–ನುಚ್ಚಾದ ಕೀಲು, ಸಾಯಕಂ ನಡೆ–ಬಾಣವು ನಾಟಲು, ನೊಂದು–ನೋವನ್ನು ಹೊಂದಿ, ಎಯ್ದೆ–ಚೆನ್ನಾಗಿ, ಸುರುಳ್ದುರುಳ್ದ–ಸುರುಟಿ ಬಿದ್ದ, ತುರಗಂ–ಕುದುರೆ, ಸುರ್ಕಿರ್ದು– ಸುಕ್ಕಿಹೋದ, ಸೂತಂ–ಸಾರಥಿ, ಕಡಲ್ ಕಡಲಂ ಮುಟ್ಟಿ–ಸಮುದ್ರ ಸಮುದ್ರವನ್ನು ಸೋಕಿ, ತೆರಳ್ವ–ಹರಿಯುವ, ನೆತ್ತರ ಪೊನಲ್–ರಕ್ತದ ಪ್ರವಾಹ, ಉಗ್ರಾಜಿಯೊಳ್–ಭೀಕರ ಯುದ್ಧ ದಲ್ಲಿ, ಕಣ್ಗೊಂಡುದು–ಕಾಣಿಸಿತು.

ವಚನ : ವರೂಥ ಯೂಥಂಗಳ್–ರಥಗಳ ಸಮೂಹಗಳು; ಅೞ್ಕಿಮೆೞ್ಕಿದಂತೆ– ಹಾಳಾಗಿ ಸಾರಿಸಿದಂತೆ ಎಂದರೆ ಸಂಪೂರ್ಣವಾಗಿ ನಾಶವಾಗಿ, ಮೆೞ್ಕು=ಮೆಱುಗು (ತ)=ಮ್ರೇಗು (ತೆ)–ಸಾರಿಸು, ಲೇಪಿಸು.

೯೨. ಇಕ್ಕಿದ–ಹಾಕಿದ ಎಂದರೆ ತೊಡಿಸಿದ, ಲೋಹವಕ್ಕರೆಯ–ಕಬ್ಬಿಣದ ಗುಳದ, ಕರ್ಪುಗಳಿಂ–ಕರಿಯ ಬಣ್ಣಗಳಿಂದ, ಕವಿತರ್ಪ–ಮುಚ್ಚಿಕೊಂಡು ಬರುವ, ವಿಂಧ್ಯ ಶೈಲಕ್ಕೆ– ವಿಂಧ್ಯ ಪರ್ವತಕ್ಕೆ, ಎಣೆಯಾಗೆ–ಸಮಾನವಾಗಲು; ಜೋದರ್–ಮಾವಟಿಗರು, ಇಸುವ– ಪ್ರಯೋಗಿಸುವ, ಅಂಬಿನ–ಬಾಣಗಳ, ಬಲ್ಸರಿ–ದೊಡ್ಡ ಮಳೆ, ತಿಣ್ಣಮಾಗಿ–ಜೋರಾಗಿ, ಕೆಯ್ಮಿಕ್ಕು–ಕೈಮೀರಿ, ವಿರೋಧಿಸಾಧನ ಘಟಾಳಿಯಂ–ಶತ್ರುಸೈನ್ಯದ ಆನೆಗಳನ್ನು, ಓಡಿಸಲ್– ಓಡಿಸಲು, ಆಗಳ್ ಆರ್ದು–ಆಗ ಗರ್ಜಿಸಿ, ನಿಷಾದಿಗಳ್–ಮಾವಟಿಗರು, ಮುಳಿಸಿಂ–ಕೋಪ ದಿಂದ, ಉಗ್ರ ಸಿಂಧುರ ಘಟಾವಳಿಯಂ ಭಯಂಕರವಾದ ಆನೆಗಳ ಸಮೂಹವನ್ನು, ಬಿಟ್ಟಿಕ್ಕಿ ದರ್–ತೋರಿಬಿಟ್ಟರು, ಎಂದರೆ ಛೂ ಬಿಟ್ಟರು, ನುಗ್ಗಿಸಿದರು.

೯೩. ಆದಿತ್ಯಂ–ಸೂರ್ಯನು, ಧ್ವಜಘಟಾಟೋಪಗಳಿಂ–ಧ್ವಜಗಳನ್ನು ಧರಿಸಿರುವ ಆನೆಗಳ ವಿಜೃಂಭಣೆಯಿಂದ, ಮಸುಳ್ವನ್ನೆಗಂ–ಕಾಂತಿಹೀನವಾಗುತ್ತಿರಲು; ಲಯಾಂಭೋದಂಗಳ್– ಪ್ರಳಯ ಕಾಲದ ಮೋಡಗಳು, ಕವಿವಂತೆವೋಲ್–ಮುತ್ತಿಕೊಳ್ಳುವ ಹಾಗೆ, ಕವಿವುದುಂ– ಮುತ್ತಲು, ಕಾಲ್ಗಾಪು ಕಾಲ್ಗಾಪಿನೊಳ್–ಪದಾತಿಗಳು ಪದಾತಿಗಳಲ್ಲಿ, ಜೋದರ್ ಜೋದ ರೊಳ್–ಮಾವಟಿಗರು ಮಾವಟಿಗರಲ್ಲಿ, ಆನೆಯಾನೆಯೊಳ್–ಆನೆಗಳು ಆನೆಗಳಲ್ಲಿ, ಅಗುರ್ವಪ್ಪನ್ನೆಗಂ–ಭಯವುಂಟಾಗುತ್ತಿರಲು, ಕಾದೆ–ಯುದ್ಧಮಾಡಲು, ಮಾದ್ಯದ್ಗ ಜೇಂದ್ರಾಹವಂ–ಮದಿಸಿದ ಆನೆಗಾಳಗ, ಮೂಱುನೆಲೆಯಿಂ–ಮೂರು ಅವಸ್ಥೆಗಳಲ್ಲಿ, ಕಣ್ಗೆ– ಕಣ್ಣುಗಳಿಗೆ, ಆದಂ–ವಿಶೇಷವಾಗಿ, ಚೆಲ್ವೆಸೆದತ್ತು–ಸೊಗಸಾಯಿತು.

ವಚನ : ಆರೋಹಕರ್–ಸವಾರರು, ಮಾವಾಟಿಗರು; ತೋಱಿಕೊಟ್ಟು–ತೋರಿಸಿ ಬಿಟ್ಟು, ಛೂಬಿಟ್ಟು; ಮೊಗಂಬುಗಿಸಿದಾಗಳ್–ಮುಖಕ್ಕೆ ಮುಖವನ್ನು ಸೇರಿಸಿದಾಗ ಎಂದರೆ ಸಮ್ಮುಖದಲ್ಲಿ ನಿಲ್ಲಿಸಿದಾಗ; ಉಭಯ ವ್ಯಾಳದಂತಿ–ಎರಡು ಕಡೆಗಳ ತುಂಟಾನೆಗಳು, ವಧ್ಯಕ್ರಮಂಗಳೊಳ್–ಕೊಲ್ಲುವ ವಿಧಾನಗಳಲ್ಲಿ, ಭಾರ್ಗವರ್–ಧನುರ್ಧರರು, ಸುರಗಿಱಿ ವಂತೆ–ಕತ್ತಿಯನ್ನು ಚುಚ್ಚುವಂತೆ, ಇಱಿಯೆ–ಚುಚ್ಚಲು, ಸೂಸುವ–ಚೆಲ್ಲುವ, ಕೆನ್ನೆತ್ತರ್– ಕೆಂಪು ರಕ್ತವು, ಕೞಲ್ದು–ಸಡಿಲವಾಗಿ, ಉದಿರ್ವ–ಕೆಳಗೆ ಸ್ವಲ್ಪವಾಗಿ ಬೀಳುವ, ಸಕ್ಕದ– ಕಟವಾಯಿಯ, ಸಿಪ್ಪುಗಳಂ–(ದಂತದ) ಚಿಪ್ಪುಗಳೂ, ಜೀಱೇೞ್ವ–ಜೀರೆಂದು ಸಿಡಿಯುವ, ಕೋೞ್ಕಳಂ–ಕೊಂಬುಗಳೂ, ಅಗುರ್ವಂ ಪಡೆಯೆ–ಭಯವನ್ನುಂಟುಮಾಡಲು, ಸಕ್ಕ (ಸಂ) ಸೃಕ್ವ.

೯೪. ನಡುವೆ ಸರಲ್ಗೆ–ನಾಟುವ ಬಾಣಗಳಿಗೆ, ಮೆಯ್ಯೊಳಗೆ ಅಡಂಗುವ–ಮೈಯೊಳಗೆ ಮುಳುಗುವ ಎಂದರೆ ನಾಟಿ ಒಳಕ್ಕೆ ಹೋಗಿ ಕಾಣದಾಗುವ, ಸಂಕುಗೆ–ಕಠಾರಿಗಳಿಗೆ, ದಿಂಕು ಗೊಳ್ವ–ಹಾರಿ ಬರುವ, ಕಕ್ಕಡೆಗೆ–ಕಕ್ಕಡೆಯೆಂಬ ಆಯುಧಗಳಿಗೆ, ಇದಿರ್ ಉರ್ಚುವ ಇಟ್ಟಿಗೆ– ಎದುರಾಗಿ ಸೀಳುವ ಈಟಿಗಳಿಗೆ, ಆನೆಯ ಕೋೞ್ಕಳ–ಆನೆಯ ಕೊಂಬುಗಳ, ಕೋಳ್ಗೆ–ತಿವಿತಕ್ಕೆ, ನೊಂದು–ನೋವನ್ನು ಹೊಂದಿ, ಬಾಯ್ವಿಡದೆ–ಕೂಗಿಕೊಳ್ಳದೆ, ಇನಿಸಪ್ಪೊಡಂ–ಸ್ವಲ್ಪ ವಾದರೂ, ಪೆಳಱದೆ–ಹೆದರದೆ, ಅಳ್ಕದೆ–ಶಕ್ತಿಗುಂದದೆ, ಪಾವಿನಲಿಟ್ಟವೋಲ್–ಹಾವಿನಿಂದ ಹೊಡೆದ ಹಾಗೆ, ಪೊಡರ್ಪು ಉಡುಗದೆ–ಚೈತನ್ಯ ಕುಂದದೆ, ಕೆಲವುನ್ಮದಗಂಧಸಿಂಧುರಂ– ಕೆಲವು ಮದಿಸಿದ ಆನೆಗಳು, ಇರ್ದ ನೆಲೆಯಿಂ–ಇದ್ದ ಸ್ಥಾನದಿಂದ, ಬಿೞ್ದುವು–ಬಿದ್ದುವು. ಇಲ್ಲಿ ‘ಪಾವಿನಲಿಟ್ಟವೋಲ್’ ಎಂಬುದರ ಇಂಗಿತವೇನು?

೯೫. ಪಾಱುವ–ಹಾರಿಬರುವ, ಪಾಱುಂಬಳೆ–ಚಕ್ರಾಯುಧ, ಕೊಳೆ–ಕತ್ತರಿಸಲು, ಜೀಱೆೞ್ದು–ಜೀರೆಂದು ನೆಗೆದು, ಅಂಬರಕ್ಕೆ–ಆಕಾಶಕ್ಕೆ, ತಲೆ–ತಲೆಗಳು, ಸಿಡಿಲ್ದೊಡಂ– ಸಿಡಿದರೂ, ಜೋದರ–ಮಾವಟಿಗರ, ಅಟ್ಟೆಗಳ್–ಮುಂಡಗಳು, ಕೆಲವು, ಆಗಳ್–ಆಗ, ಆ ಕಾಯ್ಪಾಱದೆ–ಆ ಕೋಪ ಶಮನವಾಗದೆ, ಜಾಱಲ್ಲದೆ–ಅಪಸರಣವಿಲ್ಲದೆ, ಹಿಮ್ಮೆಟ್ಟಿ ಲ್ಲದೆ, ಹರಣಂಗೆಯ್ದುವು–ಕೊಲೆ ಮಾಡಿದುವು.

೯೬. ಚಕ್ರತೀವ್ರಹತಿಯಿಂ–ಚಕ್ರಾಯುಧದ ತೀವ್ರವಾದ ಏಟಿನಿಂದ, ತಲೆ–ತಲೆಗಳು, ಕಣಕ್ ಎನೆ–ಕಣಕ್ ಎಂದು, ಪೋದೊಡೆ–ಕತ್ತರಿಸಿ ಹೋದರೆ, ಜೋದರ–ಮಾವಟಿಗರ, ಅಟ್ಟ–ಮುಂಡಗಳು, ಸಂದಣಿಸಿದ–ಗುಂಪಾದ, ಬಂಧದಿಂ?, ಬಿಸುಗೆಯಲ್ಲಿ–ಅಂಬಾರಿ ಯಲ್ಲಿ, ನೆಲಸಿರ್ದು–ನೆಲಸಿ ಇದ್ದು, ಎಸೆದು–ಸೊಗಸಿ, ಆಡೆ–ಕುಣಿಯಲು, ನಟ್ಟಕೂರ್ಗಣೆ ವೆರಸು–ನಾಟಿದ ಹರಿತವಾದ ಬಾಣಗಳು ಬೆರಸಿ, ಉಚ್ಚಳಿಸುತ್ತಿರೆ–ಎಬ್ಬುತ್ತಿರಲು, ಸುಯ್ವ ಪುಣ್ಣ ತಿಂತಿಣಿಗಳಿಂ–ಸುಯ್ಯುತ್ತಿರುವ ಹುಣ್ಣುಗಳ ಸಮೂಹದಿಂದ, ಒಂದೆರಡಾನೆ ಯಟ್ಟೆಗಳು–ಒಂದೆರಡು ಆನೆಗಳ ಕಬಂಧಗಳು, ಅಂದು ಆಗ, ಅಗುರ್ವುವೆರಸು–ಭೀಕರತೆ ಯಿಂದ ಕೂಡಿ, ಆಡಿದುವು–ಕುಣಿದುವು.

ವಚನ : ತಟ್ಟಿಱಿಯೆ–ಅಪ್ಪಳಿಸಿ ಹೊಡೆಯಲು; ಬಿಸುನೆತ್ತರ–ಬಿಸಿದಾದ ರಕ್ತದ, ಅರ್ಬಿಗಳ್–ಬೆಟ್ಟದ ಝರಿಗಳು, ಪಾಯೆ–ಹರಿಯಲು, ಪೇರರ್ವಿಗಳ್ವೆರಸು–ದೊಡ್ಡ ಝರಿ ಗಳಿಂದ ಕೂಡಿದ, ಜಾಜಿನ ಪರ್ವತಂಗಳಂತೆ–ಕಾವಿಕಲ್ಲ ಬೆಟ್ಟಗಳಂತೆ, ಕೆಡೆದು–ಬಿದ್ದು, ಅೞ್ಗಿತೞ್ಗೆದಾಗಳ್–ನಾಶವಾಗಿ ತಗ್ಗಿದಾಗ; ಜಾಜು (ಸಂ)ಧಾತು,

೯೭. ಈ ನಾಲ್ಕುಂಬಲಂ–ಈ ಚತುರಂಗ ಸೈನ್ಯ, ಆನಿರೆ–ನಾನಿರಲು; ಇಱಿವುದು ಗಡಂ– ಯುದ್ಧ ಮಾಡುತ್ತಿರುವುದಲ್ಲವೆ? ಇದಲ್ತೆ ಪರಿಭವಂ ಎನಗೆ–ಇದಲ್ಲವೆ ನನಗೆ ಸೋಲು, ಎಂದು–ಎನ್ನುತ್ತ, ಏನುಂ ಮಾಣದೆ–ಏನೂ ಬಿಡದೆ, ನಿಲ್ಲದೆ, ಅನೂನಬಲಂ–ಕುಂದಿಲ್ಲದ ಶಕ್ತಿಯುಳ್ಳ, ಭೀಮಂ–ಭೀಮನು, ಕುರುಬಲದೊಳ್–ಕೌರವನ ಸೈನ್ಯದಲ್ಲಿ, ಬಂದು, ತಾಗಿದಂ– ಸಂಘಟ್ಟಿಸಿದನು.

ವಚನ : ಮಿಳಿರ್ದು–ಅಲುಗಾಡಿ; ಮಿಳ್ಳಿಸಿದ–ಚಲಿಸಿದ, ಸಿಂಗದ ಪೞವಿಗೆಯಂ–ಸಿಂಹದ ಧ್ವಜವನ್ನು, ಮಿೞ್ತು–ಮೃತ್ಯು, ಪಲ್ಮೊರೆವಂತೆ–ಹಲ್ಲು ಕಡಿಯುವಂತೆ, ಕಿಸುವೊನ್ನ–ಕೆಂಪು ಲೋಹದ, ತಾಮ್ರದ, ಪಗೆವರ–ಹಗೆಗಳ, ಒತ್ತಿ–ಊದಿ, ಮುಂದೊಡ್ಡಿದ ಒಡ್ಡೆಲ್ಲಮಂ– ಮುಂದೆ ಚಾಚಿದ ಸೈನ್ಯವನ್ನೆಲ್ಲ, ಅಂಬಿನ ಬಂಬಲೊಳೆ–ಬಾಣಗಳ ಸಮೂಹದಲ್ಲಿಯೇ; ಪಡಲ್ವಡಿಸುತ್ತುಂ–ಬೀಳಿಸುತ್ತಾ, ಬರ್ಪ–ಬರುವ, ಅದಿರದೆ–ನಡುಗದೆ, ಇದಿರಾಂತಾಗಳ್– ಎದುರಿಸಿದಾಗ, ಮಿಳ್ಳಿಸು; “ಮಿಳಿರ್ದುಮಿಳ್ಳಿಸೆ ವಾನರಕೇತನಂ” ಎಂದು ನಾಗಚಂದ್ರನ ಪ್ರಯೋಗ (ಪಂಪರಾ.)

೯೮. ಎಂತು ಇದಿರ್ ಆಂತೆ–ಹೇಗೆ ಎದುರಿಸಿದೆಯೋ, ಅಂತೆ–ಹಾಗೆ, ಕಲಿಯಾಗು–ಶೂರ ನಾಗು, ಒಳಸೋರದಿರ್–ಹಿಂಜರಿಯದಿರು, ಎಂದು, ಭೀಮಂ–ಭೀಮನು, ಕನಲ್ದು– ಕೋಪಿಸಿ, ಓರಂತೆ–ಕ್ರಮವಾಗಿ, ತಿಣ್ಣಂ ಇಸೆ–ತೀಕ್ಷ್ಣವಾಗಿ ಬಾಣ ಪ್ರಯೋಗ ಮಾಡಲು, ಪಾಯ್ವ ಸರಲ್ಗಳಂ–ನುಗ್ಗಿಬರುವ ಬಾಣಗಳನ್ನು, ಎಯ್ದಲೀಯದೆ–ಹತ್ತಿರಕ್ಕೆ ಬರಗೊಡದೆ, ಆಂತು ಆಂತು–ಎದುರಿಸಿ ಎದುರಿಸಿ, ನಿರಂತರಂ–ಎಡೆಬಿಡದೆ, ತಱಿದು–ಕತ್ತರಿಸಿ, ಸೂತನಂ– ಸಾರಥಿಯನ್ನು, ಆತನ ವಾಜಿಯಂ–ಅವನ ಕುದುರೆಗಳನ್ನು, ಮಹೀಶಂ–ದುರ್ಯೋಧನ, ಅಚ್ಚ ಬಿಸುನೆತ್ತರ–ಅಪ್ಪಟ ಬಿಸಿ ರಕ್ತದ, ಸುಟ್ಟುರೆ–ಪ್ರವಾಹ?, ಸೂಸುವನ್ನೆಗಂ–ಚೆಲ್ಲಾಡುತ್ತಿರಲು, ತೆಗೆದು ಎಚ್ಚುಂ–ಬಿಲ್ಲ ಹಗ್ಗವ್ನನು ಎಳೆದು ಪ್ರಯೋಗಿಸಿದನು.

೯೯. ಇಸೆ–ಬಾಣಗಳನ್ನು ಬಿಡಲು, ಭೀಮಂ–ಭೀಮನು, ಮಸಗಿ–ಕೆರಳಿ, ಈರಯ್ದು– ಹತ್ತು, ಶಿರಾಸ್ತ್ರದಿಂ–ಹರಿತವಾದ ಬಾಣಗಳಿಂದ, ಸೂತಂ–ಸಾರಥಿ, ಉರುಳೆ–ಉರುಳಿ ಬೀಳಲು, ರಥಂ–ರಥವು, ಉಡಿಯೆ–ಮುರಿಯಲು, ಕುದುರೆ–ಕುದುರೆಗಳು, ಕೀಲಿಸಿ–ಮೊಳೆ ಹೊಡೆದಂತೆ ಸ್ತಬ್ಧವಾಗಿರಲು, ಪೞವಿಗೆ–ಬಾವುಟವು, ಮುಱಿಯೆ–ಮುರಿಯಲು, ಒಂದೆ ಸರಲೊಳ್–ಒಂದೇ ಬಾಣದಲ್ಲಿ, ಮಸಕದಿಂ–ಕೋಪದಿಂದ, ನೊಸಲಂ–ಹಣೆಯನ್ನು, ಎಚ್ಚಂ–ಹೊಡೆದನು.

೧೦೦. ಪಟ್ಟಂಗಟ್ಟಿದ–ಪಟ್ಟವನ್ನು ಕಟ್ಟಿದ, ನೊಸಲಂ–(ದುರ್ಯೋಧನನ) ಹಣೆ ಯನ್ನು, ನಟ್ಟ–ನಾಟಿದ, ಸರಲ್ವಿಡಿದು–ಬಾಣವನ್ನು ಅನುಸರಿಸಿ, ನೆತ್ತರ್–ರಕ್ತವು, ಅಂಬಿರಿ ವಿಡೆ–ಧಾರೆಯಂತೆ ಸುರಿಯಲು, ಕಣ್ಗೆಟ್ಟಿರ್ದ–ದಿಕ್ಕು ತೋರದಿದ್ದ, ಕಂಗೆಟ್ಟಿದ್ದ, ನೃಪನ ದುರ್ಯೋಧನನಂ–ರಾಜ ದುರ್ಯೋಧನನನ್ನು, ಅಂಕದ–ಯುದ್ಧದ, ಕಟ್ಟಾಳ್ಗಳ್–ಶೂರರು, ಕಾದು–ರಕ್ಷಿಸಿ, ಕಳಿಪೆ–(ಶಿಬಿರಕ್ಕೆ) ಕಳುಹಿಸಿಕೊಡಲು;

ವಚನ : ಅನುಜರ್ ನೂರ್ವರುಂ–ನೂರು ಜನ ತಮ್ಮಂದಿರೂ; ಒರ್ವನಂ–ಒಬ್ಬನನ್ನು, ತಾಗಿದೊಡೆ–ಎದುರಿಸಿದರೆ, ಭಾರತಮನಿಂದೆ ಸಮೆಯಿಸುವೆನೆಂದು–ಭಾರತ ಯುದ್ಧವನ್ನು ಈ ದಿನವೇ ಮುಗಿಸಿಬಿಡುತ್ತೇನೆ ಎಂದು; ಕೋದಂಡಮಂ–ಬಿಲ್ಲನ್ನು.

೧೦೧. ಕುರುಬಲಮಂ–ಕೌರವ ಸೈನ್ಯವನ್ನು, ಪಡಲ್ವಡಿಪ–ಧ್ವಂಸಮಾಡುವ, ತಕ್ಕಿನೊಳ್– ಪರಾಕ್ರಮದಲ್ಲಿ, ಎಯ್ತರೆ–ಹತ್ತಿರಕ್ಕೆ ಬರಲು, ಬರ್ಪ ಭೀಮನಂ–ಬರುವ ಭೀಮನನ್ನು, ಬರೆ ಬರಲೀಯದೆ–ಬರುವುದಕ್ಕೆ ಬಿಡದೆ, ಇರ್ದವರಂ–ಇದ್ದವರನ್ನು, ಆ ಪದದೊಳ್– ಆ ಸಮಯದಲ್ಲಿ, ಪೆಱಗಿಕ್ಕಿ–ಹಿಂದಿಕ್ಕಿ, ಕಳಿಂಗರಾಜಂ–ಕಳಿಂಗ ದೇಶದರಸು, ಗಂಧಸಿಂಧುರ ಘಟೆ ನಾಲ್ಕು ಕೋಟಿವೆರಸು–ನಾಲ್ಕು ಕೋಟಿ ಸೊಕ್ಕಾನೆಗಳ ಸೈನ್ಯದೊಡನೆ, ಆಗಡೆ–ಆಗಳೇ, ಬಂದು ಆಂತಿರೆ–ಎದುರಿಸಲು, ಪಗೆ–ಹಗೆ, ಕೆಯ್ಗೆ ಬಂದು–ಕೈಗೆ ಸಿಕ್ಕಿ, ಬರ್ದುಕಾಡಿದ–ತಪ್ಪಿಸಿ ಕೊಂಡ, ಬಲ್ಮುಳಿಸಿಂ–ಬಲು ಕೋಪದಿಂದ, ವೃಕೋದರಂ–ಭೀಮಸೇನನು; ಬರೆಬರಲ್– ಪ್ರಯೋಗ ಚಿಂತನೀಯ; ಬರ್ ಎಂಬುದರ ಭಾವನಾಮ, ಬರಂ, ಬರವು; ಬರಂ+ಬರಲೀ ಯದೆ=ಬರಬರಲೀಯದೆ ಎಂದಿರಬಹುದು.

ವಚನ : ಮಾತಂಗ ಘಟೆಗಳ–ಆನೆಯ ಸೈನ್ಯಗಳ; ಮುಳಿಸಂ ಕಳೆವೆಂ–ಕೋಪವನ್ನು ತೀರಿಸಿಕೊಳ್ಳುತ್ತೇನೆ.

೧೦೨. ಮರುನ್ನಂದನಂ–ಭೀಮಸೇನನು, ಗಜೆಯಂ ಭೋರನೆ ಪರ್ವಿ ಬೀಸಿ–ಭೋರೆಂದು ಗದೆಯನ್ನು ವಿಶಾಲವಾಗಿ ಬೀಸಿ, ಕಡುಪಿಂದೆ–ತೀವ್ರತೆಯಿಂದ, ಎಯ್ತಂದು–ಸಮೀಪಿಸಿ, ಮಾಱಾಂತ–ಪ್ರತಿಭಟಿಸಿದ, ಸಾಮಜ ಸಂಘಾತಮಂ–ಆನೆಗಳ ಸಮೂಹವನ್ನು, ಒಂದುಗೊಳ್ ಎರಡುಗೊಳ್–ಒಂದನ್ನು ತಗೋ, ಎರಡನ್ನು ತಗೋ, ಎಂದು, ಉರ್ವಿ ಪೊಯ್ವ–ಉಬ್ಬಿ ಹೊಡೆಯುವ, ಒಂದು ಪೊಯ್ಗೆ–ಒಂದು ಹೊಡೆತಕ್ಕೆ, ಜವಂ ಗುಂದಿ–ವೇಗವು ಕುಗ್ಗಿ, ಸಿಡಿಲ್ದು–ಸಿಡಿದು, ಮುನ್ನೆ–ಮೊದಲೇ, ಅಡಿಗುರುಳ್ತರ್ಪನ್ನೆಗಂ–ಕೆಳಕ್ಕೆ ಬೀಳು ತ್ತಿರಲು, ಬೀೞೆ–ಉರುಳಲು, ದಿಗ್ಗಜಮಂ ಪೋಲ್ವಗಜಂಗಳಂ–ದಿಗ್ದಂತಿಗಳನ್ನು ಹೋಲುವ ಆನೆಗಳನ್ನು, ಪಲವುಮಂ–ಹಲವನ್ನು, ಕೊಂದಂ–ಕೊಂದಂ.

೧೦೩. ಬಡಿಗೊಳೆ–ದೊಣ್ಣೆಯಿಂದ (ಗದೆಯಿಂದ) ಹೊಡೆಯಲು, ಬಿದು–ಕುಂಭ ಸ್ಥಳವು, ಬಿಬ್ಬರಬಿರಿದು–ಪೂರ್ತಿಯಾಗಿ ಬಿರಿದುಹೋಗಿ, ಒಡನೆ–ಕೂಡಲೇ, ಪೊಸಮುತ್ತು– ಹೊಸ ಮುತ್ತುಗಳು, ಉಗೆ–ಚೆಲ್ಲಾಡಲು, ಮದೇಭಂ–ಮದ್ದಾನೆಗಳು, ಕೋಡನೂಱಿ– ಕೊಂಬುಗಳನ್ನು ನೆಲದ ಮೇಲೆ ಊರಿ, ಕೊಲ್ಲದಿರ್–ಕೊಲ್ಲಬೇಡ, ಎಂದು, ಇರದೆ, ಅಡಿಗೆ ಱಗುವ–ಪಾದಕ್ಕೆ ಬೀಳುವ, ತೆಱನಂ–ರೀತಿಯನ್ನು, ಇನಿಸಂ–ಇಷ್ಟನ್ನು, ಅನುಕರಿಸುವನಂ– ಹೋಲುತ್ತಿರಲು, ಕೆಡೆದುವು–ಬಿದ್ದುವು.

ವಚನ : ಪಡಲ್ವಡಿಸಿಯುಂ–ಚೆಲ್ಲಾಪಿಲ್ಲಿಯಾಗಿ ಬೀಳಿಸಿಯೂ;

೧೦೪. ಒಂದೊಂದಱ–ಒಂದೊಂದು ಆನೆಯ, ಗಾತ್ರಮಂ–ದೇಹವನ್ನು, ಪಿಡಿದು–ಹಿಡಿದು ಕೊಂಡು, ತಿರಿಪಿಕೊಂಡು–ಗಿರ್ರನೆ ತಿರುಗಿಸಿ, ಒಂದೊಂದಱೊಳ್– ಒಂದೊಂದು ಆನೆಯ ಮೈಯಲ್ಲಿ, ಪೊಯ್ದು–ಹೊಡೆದೂ, ಎಲ್ವುಅಡಗು ಅಪ್ಪನ್ನೆಗಂ–ಎಲುಬು ಮಾಂಸಗಳಾಗು ತ್ತಿರಲು, ಎತ್ತಿಕೊಂಡು–ಮೇಲೆತ್ತಿ, ಅಸಗವೊಯ್ ಪೊಯ್ಲೊಳ್–ಅಗಸನ ಒಗೆತದ ಹೊಡೆತ ದಲ್ಲಿ, ತಡಂಬೊಯ್ದುಂ–ಬಿರುಸಾಗಿ, ಜೋರಾಗಿ, ಹೊಡೆದು, ಉಳ್ಳಡಗುಂ–ಒಳಗಡೆಯ ಮಾಂಸವೂ, ನೆತ್ತರುಂ–ರಕ್ತವೂ, ಎಲ್ಲದೆಸೆಗಂ–ಎಲ್ಲಾ ದಿಕ್ಕುಗಳಿಗೂ, ಜೀಱೆೞ್ದು–ಜೀರೆಂದು ಶಬ್ದ ಮಾಡಿ ಚಿಮ್ಮಿ, ಪಾಱೇೞೆ–ಹಾರಿ ನೆಗೆಯಲು, ಬಲ್ದಡಿಗಂ–ಬಲು ದಾಂಡಿಗನಾದ ಎಂದರೆ ಶೂರನಾದ ಭೀಮ, ಬೀಸಿಯುಂ–ಬೀಸಾಡಿಯೂ, ಒಂದು ಕೋಟಿವರೆಗಂ–ಒಂದು ಕೋಟಿ ಸಂಖ್ಯೆಯ ಆನೆಗಳವರೆಗೂ, ಮದೇಭಂಗಳಂ–ಮದ್ದಾನೆಗಳನ್ನು, ಕೊಂದಂ–ಕೊಂದನು.

೧೦೫. ಸಿಡಿಲಂತೆ ಒರ್ಮ್ಮೆಯೆ ಪೊಯ್ಯೆ–ಸಿಡಿಲಿನ ಹಾಗೆ ಒಂದೇ ಸಲ ಹೊಡೆಯಲು, ಪೊಯ್ದಭರದಿಂದೆ–ಹೊಡೆದ ತೀವ್ರತೆಯಿಂದ, ಒಂದಾನೆ–ಒಂದು ಆನೆಯ, ತೋಲ್ ನೆತ್ತರ್ ಎಲ್ವು ಅಡಗು–ಚರ್ಮ ರಕ್ತ ಮೂಳೆ ಮಾಂಸಗಳು, ಒಂದೊಂದಱೊಳ್– ಒಂದೊಂದರಲ್ಲಿ, ಒಂದು–ಒಂದೂ, ಒಂದದೆ–ಸೇರಿಕೊಳ್ಳದೆ, ಗದಾನಿರ್ಘಾತದಿಂ–ಗದೆಯ ಏಟಿನಿಂದ, ಮಾಯಮಾದೊಡೆ–ಕಣ್ಣಿಗೆ ಕಾಣದ ಹಾಗಾಗಲು, ಪೋ–ಹೋಗು, ತಪ್ಪಿದೆ ನೆಂದು–ತಪ್ಪು ಮಾಡಿದೆನೆಂದು, ಪಲ್ಮೊರೆದು–ಹಲ್ಲನ್ನು ಉಜ್ಜಿ ಶಬ್ದಮಾಡಿ, ಅಗುರ್ವಪ್ಪ ನ್ನೆಗಂ–ಭಯವುಂಟಾಗುತ್ತಿರಲು, ಉಗ್ರಾಜಿಯೊಳ್–ಭಯಂಕರ ಯುದ್ಧದಲ್ಲಿ, ಭೀಮನಾ– ಭೀಮನ, ತೋಳ್ವಲದೇೞ್ಗೆ–ತೋಳ್ಬಲದ ಏಳಿಗೆಯನ್ನು, ಮೆಚ್ಚುವನಿತರ್ಕೆ–ಮೆಚ್ಚುವಷ್ಟಕ್ಕೆ, ಮೀಸೆಯಂ–ಮೀಸೆಯನ್ನು, ಕಡಿದಂ–ಕಚ್ಚಿದನು.

೧೦೬. ಧ್ವಜಮುಂ–ಬಾವುಟವೂ, ಬಿಸುಗೆಯುಂ–ಅಂಬಾರಿಯೂ, ಏಱಿರ್ದ ಜೋದ ರುಂ–ಹತ್ತಿದ್ದ ಮಾವಟಿಗರೂ, ಬೆರಸು–ಕೂಡಿ, ಗದೆಯಿಂ–ಗದೆಯಿಂದ, ಅರಿ ಗಜಘಟೆಯಂ– ವೈರಿಯ ಆನೆಗಳ ತಂಡವನ್ನು, ಗಿಜಿಗಿಜಿಯಾಗಿರೆ–ಅಜಿಗುಜಿಯಾಗುವಂತೆ, ಪೊಯ್ದೊಡೆ– ಹೊಡೆದರೆ, ಅಮರರ್–ದೇವತೆಗಳು, ಅಂಬರತಳದೊಳ್–ಆಕಾಶ ಪ್ರದೇಶದಲ್ಲಿ, ಗುಜು ಗುಜುಗೊಂಡು–ಪಿಸುಗುಟ್ಟುತ್ತ, ತಂತಮ್ಮಲ್ಲಿಯೇ ಮಾತಾಡುತ್ತ, ಆರ್ದರ್–ಗರ್ಜಿಸಿದರು.

ವಚನ : ಘನಘಟೆಯಂತೆ–ಮೋಡಗಳ ಗುಂಪಿನಂತೆ, ಕೞಕುೞಂ ಮಾಡಿದಂ–ಚೆದರ ಹೋಗುವಂತೆ ಮಾಡಿದನು, ಮೊನೆಯೊಳ್–ಯುದ್ಧದಲ್ಲಿ, ಕೆಲ್ಲಂಬುಗಳಿಂದೆ ಈಟಿಯಂತಿ ರುವ ಬಾಣಗಳಿಂದ; “ಕೞಕುೞಮೆಂದು ಸ್ಥಾನವ್ಯಾಕುಲತೆ”, ಕೞಕುೞಮಾಗೆ ಪಂಚಳನ ಬಲ್ಪಡೆ ಪಂಚಳನಶ್ವ ಸಂಕುಲಂ ಕೞಕುೞಮಾಗೆ ಎಂದು ರನ್ನನ ಪ್ರಯೋಗ (ಅಜಿಪು.); ಕೆಲ್ಲಂಬು=(ತೆ) ಚಿಲ್ಲಕೋಲ.

೧೦೭. ಉರಮಂ–ಎದೆಯನ್ನು, ಬಿರಿವಿನಂ–ಬಿರಿಯುವಂತೆ, ಇಸೆ–ಹೊಡೆಯಲು, ಮದ್ರರಾಜಂ–ಶಲ್ಯನು, ಅಳಿಯನ–ಸೋದರಳಿಯನಾದ ಧರ್ಮರಾಜನ, ಪರಾಕ್ರಮಕ್ಕೆ– ಪೌರುಷಕ್ಕೆ, ಒಸೆದು–ಸಂತೋಷಿಸಿ, ಮೊಗಂ ಮುರಿಯದೆ–ಮುಖವನ್ನು ತಿರುಗಿಸಿಕೊಳ್ಳದೆ, ಪೆಱತುಂ ರಥಮಂ ತರಿಸಿ–ಬೇರೊಂದು ರಥವನ್ನು ತರಿಸಿ, ಕನಲ್ದು–ಕೆರಳಿ, ಅಡರ್ದು– ಹತ್ತಿ, ಕದನಕೆ–ಯುದ್ಧಕ್ಕೆ, ಆಗಳೆ–ಆಗಲೇ, ನೆಱೆದಂ–ಸಮರ್ಥನಾದನು.

೧೦೮. ರಥಮಂ–ರಥವನ್ನು, ಮುಱಿದು–ಒಡೆದು, ರಥಾಶ್ವಮಂ–ರಥದ ಕುದುರೆ ಗಳನ್ನು, ಉಱದೆ–ಬಿಡದೆ, ಎರಡುಂ ಶರದೆ–ಎರಡು ಬಾಣಗಳಿಂದ, ಸೂತನಂ–ಸಾರಥಿ ಯನ್ನು, ನಾಲ್ಕಱಿಂ–ನಾಲ್ಕು ಬಾಣಗಳಿಂದ, ಪೞವಿಗೆಯಂ–ಬಾವುಟವನ್ನು, ಒಂದು ಅಱಿಕೆಯ ಸರಲೊಳ್–ಒಂದು ಪ್ರಸಿದ್ಧವಾದ ಬಾಣದಿಂದ, ಮಾಣದೆ–ನಿಲ್ಲದೆ, ತಱಿದಂ– ಕತ್ತರಿಸಿದನು; ಏಂ ಕೃತಾಸ್ತ್ರನೋ ಶಲ್ಯಂ–ಏನು ಅಸ್ತ್ರವಿದ್ಯಾಪಾರಂಗತನೋ ಶಲ್ಯನು.

ವಚನ : ವಿರಥನಂ ಮಾಡಿ–ರಥಹೀನನನ್ನಾಗಿ ಮಾಡಿ; ಚಕ್ರರಕ್ಷಕಂ–ಸೈನ್ಯರಕ್ಷಕನು; ಎಡೆಗೊಂಡು–ನಡುವೆ ಹೊಕ್ಕು.

೧೦೯. ಮೃಗರಾಜ ನಖರ ಬಾಣಾಳಿಗಳಿಂ–ಸಿಂಹದ ಉಗುರಿನ ಆಕಾರದ ಬಾಣ ಸಮೂಹ ಗಳಿಂದ, ತೆಗೆನೆಱೆದು–ಪೂರ್ಣವಾಗಿ ಎಳೆದು, ಶಲ್ಯಂ–ಶಲ್ಯನು, ಉಱದೆ–ಇರದೆ, ಇಸೆ– ಪ್ರಯೋಗ ಮಾಡಲು, ಮೃಗರಾಜಂಗಳೆ–ಸಿಂಹಗಳೆ, ಬಿದುವಂ–ಕುಂಭಸ್ಥಲಗಳನ್ನು, ಪೋೞ್ವ ವೊಲ್–ಸೀಳುವಂತೆ, ಉಗ್ರಬಾಣಾವಳಿಗಳ್–ಭೀಕರ ಬಾಣಜಾಲಗಳು, ಅಗಲ್ವಿನಂ– ಅಗಲಿ ಹೋಗುವಂತೆ, ಬೇರಾಗುವಂತೆ, ಪೋೞ್ದುವು–ವಿಭಾಗಿಸಿದುವು.

ವಚನ : ಊಱಿಕೊಂಡು–ಬಲವಾಗಿ ಅಮುಕಿ, ಎಚ್ಚಾಗಳ್–ಪ್ರಯೋಗಿಸಿದಾಗ; ತೆಗೆನೆಱೆದೂಱಿಕೊಂಡಿಸೆ ಶಿರಂ ಪಱಿದತ್ತ ವಿಯತ್ತಳಂಬರಂ–ನೆಗೆದೊಡೆ–ಎಂದು ಪಂಪನ ಇನ್ನೊಂದು ಪ್ರಯೋಗ (ಪಂಪಭಾ. ೧೨–೧೫೪).

೧೧೦. ಪೆಱಗಿಡುವ–ಹಿಮ್ಮೆಟ್ಟುವ, ದಂತಿಯಂ–ಆನೆಯನ್ನು, ಕಲಿ–ಶೂರನಾದ ನೀಳನು, ನಿಱಿಸಿ–ನಿಲ್ಲಿಸಿ, ಸ್ಥಾಪಿಸಿ, ಚಲಂ–ಛಲವು, ನೆಲಸೆ–ನೆಲೆಸಲು, ತೋಱಿಕುಡು ವುದುಂ–ತೋರಿ ಬಿಡುತ್ತಲು, ಛೂ ಬಿಡುತ್ತಲು, ಆಗಳ್–ಆಗ, ಶಲ್ಯ–ಶಲ್ಯನು, ಆಂತ ನೀಳನ ತಲೆಯಂ–ಏದುರಿಸಿದ ನೀಲನ ತಲೆಯನ್ನು, ಪೊಱಮುಯ್ವವರಂ–ಹೆಗಲ ಹೊರಗಡೆ ಯವರೆಗೆ, ತೆಗೆ ನೆಱೆದು–ಕಿವಿಯವರೆಗೆ ಬಾಣವನ್ನು ಸೆಳೆದು, ಉಱದೆ–ಇರದೆ, ಎಚ್ಚಂ–ಹೊಡೆ ದನು.

ವಚನ : ಮೇಗಣಿಂ–ಮೇಲ್ಗಡೆಯಿಂದ, ಮೃಗರಾಜನಂತೆ–ಸಿಂಹದಂತೆ, ಹಸ್ತಿ ಮಸ್ತಕ ದಿಂ–ಆನೆಯ ತಲೆಯಿಂದ, ಕೆಡುವುದುಂ–ಬೀಳುತ್ತಲು, ಪೆಱಗಿಕ್ಕಿ–ಹಿಂದಿಟ್ಟು.

೧೧೧. ಗೋಗ್ರಹಣದೊಳ್–ಗೋಗ್ರಹಣದ ಯುದ್ಧ ಸಮಯದಲ್ಲಿ, ಪಗೆವಾಡಿ–ಶತ್ರು ಗಳ ಸಾಲುಗಳು, ನಗೆ–ನಗಲು, ಪೊಱಮಾಱಿದ–ಹಿಂದಕ್ಕೆ ಓಡಿ ಬಂದ, ಬನ್ನಂ ಒಂದು–ಒಂದು ಅವಮಾನ, ನೆಟ್ಟಗೆ–ನೇರಾಗಿ, ಮನಮಂ–ಮನವನ್ನು, ಪಳಂಚಿ–ತಾಗಿ, ಅಲೆಯೆ– ಹಿಂಸಿಸಲು, ಮಾಣದೆ–ನಿಲ್ಲದೆ, ಶಲ್ಯನಂ–ಶಲ್ಯ ರಾಜನನ್ನು, ಅಂದು–ಆಗ, ಅಶಲ್ಯನಂ– ಆಯುಧ ರಹಿತನನ್ನಾಗಿ, ಬಗೆವವೊಲ್–ಗಣಿಸುವ ಹಾಗೆ, ಏಳಿದಂ ಬಗೆದು–ಕಡೆಗಣಿಸಿ ನೋಡಿ, ದಂತಿಯಂ–ತನ್ನ ಆನೆಯನ್ನು, ಆಗಡೆ–ಆಗಲೇ, ತೋಱಿಕೊಟ್ಟು–ಛೂ ಬಿಟ್ಟು, ತೊಟ್ಟಗೆ–ಬೇಗನೆ, ರಥಮಂ ಪಡಲ್ವಡಿಸಿ–ರಥವನ್ನು ನೆಗ್ಗಿ ಬೀಳಿಸಿ, ಅರಾತಿಯಂ–ಹಗೆಯನ್ನು, ಅಸ್ತ್ರಕೋಟಿಯಿಂ–ಕೋಟ್ಯಂತರ ಬಾಣಗಳಿಂದ, ಪೂೞ್ದನ್–ಹೂಳಿದನು. ‘ಪೊಱಮಾಱೆಂದು ಬೆನ್ನೀಹಂ’, ಪೊಱಗು+ಮಾಱು;

ವಚನ : ಅಳವುಮದಟುಂ–ಶಕ್ತಿಯೂ ಶೌರ್ಯವೂ, ರಾಜೋತ್ತರಮಾಗೆ–ಚಂದ್ರನಂತೆ ವರ್ಧಿಸಲು; ಸಿಗ್ಗಾಗಿ–ನಾಚಿ.

೧೧೨. ಉತ್ತರನ ಮರಣ: ತಾರಕನಂ–ತಾರಕಾಸುರನನ್ನು, ಗುಹಂ–ಷಣ್ಮುಖನು, ಆಂತು– ಎದುರಿಸಿ, ಶಕ್ತಿಯಿಂ–ಶಕ್ತ್ಯಾಯುಧದಿಂದ, ಇಡುವಂತೆ–ಪ್ರಹಾರ ಮಾಡುವಂತೆ, ಅರಾತಿ ಸಂಹಾರಕವಪ್ಪ–ಹಗೆಯನ್ನು ಕೊಲ್ಲುವುದಾದ, ವಿಸ್ಫುರಿತ ಶಕ್ತಿಯಿಂ– ಹೊಳೆಯುತ್ತಿರುವ ಶಕ್ತಿಯೆಂಬ ಆಯುಧದಿಂದ, ಆತನಂ–ಉತ್ತರನನ್ನು, ಇಟ್ಟು–ಹೊಡೆದು, ಖೞ್ಗದಿಂ–ಕತ್ತಿ ಯಿಂದ, ವಾರಣಮಂ–(ಉತ್ತರನ) ಆನೆಯನ್ನು, ಪಡಲ್ವಡಿಸಿ–ಚೂರು ಚೂರಾಗಿ ಬೀಳಿಸಿ, ತಾಂ–ತಾನು (ಶಲ್ಯನು) ಪೆಱಪಿಂಗುವುದುಂ–ಹಿಂದಕ್ಕೆ ಸರಿಯುತ್ತಲು, ಬಲಕ್ಕೆ–(ಪಾಂಡವರ) ಸೈನ್ಯಕ್ಕೆ, ಹಾಹಾರವಂ–ಅಯ್ಯೋ, ಅಯ್ಯೊ ಎಂಬ ಶಬ್ದ, ಉಣ್ಮೆ–ಹುಟ್ಟಲು, ತಲೆದೋರಲು, ಆಜಿಯೊಳ್–ಯುದ್ಧದಲ್ಲಿ, ಉತ್ತರಂ–ಉತ್ತರನು, ದಂತಿವೆರಸು–ತನ್ನ ಆನೆಯ ಸಮೇತವಾಗಿ, ಅೞ್ಗಿ–ನಾಶವಾಗಿ, ತೞ್ಗಿದಂ–ತಗ್ಗಿದನು, ಕುಸಿದನು.

ವಚನ : ಜವಂಗೆ–ಯಮನಿಗೆ, ಪೊಸತಿಕ್ಕುವಂತೆ–ಪ್ರಥಮ ಬಲಿಕೊಡುವ ಹಾಗೆ, ಇಕ್ಕಿ– ಹೊಡೆದು, ಬಸವೞಿದ–ಆಯಾಸಗೊಂಡ; ಅಮರಾಪಗಾಸುತನ–ಭೀಷ್ಮನ, ಮೊನೆಯೊಳ್ –ಸೈನ್ಯದಲ್ಲಿ, ಭರಂಗೆಯ್ದು–ತೀವ್ರತೆಯನ್ನು ಮಾಡಿ, ಅತೀತನಾದುದಂ–ಸತ್ತುದನ್ನು; ಪೊಸತಂ+ಇಕ್ಕು=ಪೊಸತಿಕ್ಕು; ಒಕ್ಕಣೆ ಆದ ಮೇಲೆ ಅನ್ನವನ್ನು ದಿಕ್ಕುದಿಕ್ಕಿಗೆ ಚೆಲ್ಲಿ ಬಲಿಕೊಡು ವುದಕ್ಕೆ ಪೊಸತು ಎಂದು ಹೆಸರು, ಮಲೆನಾಡಿನಲ್ಲಿ ಇದು ರೂಢಿಯಾಗಿದೆಯಂತೆ.

೧೧೩. ಪ್ರಳಯ ಪಯೋಧಿವೋಲ್–ಪ್ರಳಯಕಾಲದ ಕಡಲಂತೆ, ಅಳುರ್ದು–ವ್ಯಾಪಿಸಿ, ಪೆಂಕುಳಿಗೊಂಡ–ಹುಚ್ಚಾದ, ಮದೇಭವೈರಿವೋಲ್–ಸಿಂಹದಂತೆ, ಕೆಳರ್ದು–ಕೆರಳಿ, ಲಯಾಗ್ನಿ ವೋಲ್–ಪ್ರಳಯದ ಕಿಚ್ಚಿನಂತೆ, ಅಳುರ್ದು–ಹರಡಿ (ಸುಟ್ಟು), ಮದ್ರಮಹೀಶನಂ–ಶಲ್ಯ ರಾಜನನ್ನು, ಎಯ್ದೆತಾಗೆ–ಸಮೀಪಿಸಿ ತಾಗಲು, ಈಗಳ್–ಈಗ, ಶಲ್ಯನೊಳೆ–ಶಲ್ಯನಲ್ಲಿಯೇ, ಕಾಳಗಂ–ಯುದ್ಧ, ಬಳ್ವಳ ಬಳೆದತ್ತು–ಅಧಿಕವಾಗಿ ಬೆಳೆಯಿತು, ಎನುತ್ತಂ–ಎಂದು ಹೇಳುತ್ತಾ, ಅಂತೆ–ಹಾಗೆಯೇ, ಅಹಿಕೇತು–ದುರ್ಯೋಧನನು, ಕೆಯ್ಕೊಳಲ್–ಶಲ್ಯನನ್ನು ರಕ್ಷಿಸುವುದ ಕ್ಕಾಗಿ, ಸಿಂಧುತನಯಂಬೆರಸು–ಭೀಷ್ಮನೊಡನೆ ಬಂದು, ತಾಗಿದಂ–(ಶ್ವೇತನನ್ನು) ಎದುರಿಸಿ ದನು. ಪೆಂಕುಳಿಗೊಳ್: ಅದು ಪೆಂಕುಳಿನಾಯ ವಿಷಾಪಹಾರಕಂ (ಲೋಕೋಪ ೧೦–೩೫); ಇವಱಿಂದೆ ಪೆಂಕುಳಿಗೊಂಡ ನಾಯ್ ಕರ್ಚ್ಚಿದ ವಿಷಂ ಮಾಣ್ಬುದು (ಅದೇ–ವ್ಯಾಖ್ಯಾನ); ಪೆಂಕುಳಿನಾಯ್–ಪುರ್ಚುಗೊಂಡನಾಯ್ (ಖಗೇಂದ್ರ. ೧೩–೨೪, ೩೫); ಪ್ರಾಣಿಗಳಿಗೆ ಬೆದೆಗಾಲದಲ್ಲಿ ಹುಚ್ಚು ಹಿಡಿಯುವುದು ಸಹಜ; ಸಿಂಹಕ್ಕೂ ಹಾಗೆಯೇ; ಪೆಣ್+ಕುಳಿ=ಪೆಂಕುಳಿ (ಹೆಣ್ಣನ್ನು ಸ್ವೀಕರಿಸುವ ಶೀಲವುಳ್ಳವನು).

ವಚನ : ರಣಪಟಹಂಗಳಂ ನೆಗೞ್ಚೆ–ಯುದ್ಧದ ಭೇರಿಗಳನ್ನು ಹೊಡೆಯಿಸಲು; ಗಱಿ ಸನ್ನೆಗೆಯ್ದು–ಬಾಣದ ಗರಿಗಳಿಂದ ಸಂಜ್ಞೆ ಮಾಡಿ.

೧೧೪. ನಡುವ–ನಾಟುವ, ಸರಲ್–ಬಾಣ; ಸರಲ್ಕೊಳೆ ಸುರುಳ್ವ ಹಯಂ–ಬಾಣ ಚುಚ್ಚಲು ಸುರಟಿ ಬೀಳುವ ಕುದುರೆ; ಹಯದ–ಕುದುರೆಯ, ಉಳ್ಗರುಳ್ಗಳೊಳ್–ಒಳ ಕರುಳು ಗಳಲ್ಲಿ, ತೊಡರ್ವ–ಸಿಕ್ಕಿಕೊಳ್ಳುವ, ಭಟರ್–ಯೋಧರು; ಭಟರ್ಕಳೊಳೆ–ಭಟರಲ್ಲಿಯೇ, ತೞ್ತುೞಿಮಾೞ್ಪ–ಸೊಪ್ಪುಗುಟ್ಟುವ, ಅರೆಯುವ, ರಥಂ–ರಥಗಳು, ರಥಕ್ಕೆ ಪಾಯ್ದು– ರಥದ ಮೇಲೆ ನುಗ್ಗಿ, ಅಡಿಗಿಡೆ–ಹೆಜ್ಜೆ ಜಾರಲು, ಮೆಯ್ವೊಣರ್ಚುವ–ಮೈಯನ್ನು ಸೇರಿಸುವ, ಮಹಾರಥರ್–ಮಹಾರಥಿಕರು, ಆಜಿಯೊಳ್–ಯುದ್ಧದಲ್ಲಿ, ಅಂತು–ಹಾಗೆ, ಅಗುರ್ವಿನ– ಭಯದ, ಅಚ್ಚು–ಮುದ್ರೆ, ಉಡಿದರೆ–ಮುರಿದಿರಲು, ಬಿಸುನೆತ್ತರಸುಟ್ಟುರೆ–ಬಿಸಿರಕ್ತದ ಸುಳಿ, ಪ್ರವಾಹ; ಸೂಸುವನ್ನೆಗಂ–ಚೆಲ್ಲುವವರೆಗೂ, ಕಾದಿ–ಯುದ್ಧ ಮಾಡಿ, ಬಿಚ್ಚಳಿಸಿದರ್– ವಿಸ್ತರಿಸಿದರು ಎಂದರೆ ಅತಿಶಯಿಸಿದರು. ‘ತೊೞ್ತುೞಿಯೆಂದು ಸೊಪ್ಪಾದುದು.’

ವಚನ : ಪಡೆಯ–ಸೈನ್ಯದ; ತಲೆಮಟ್ಟು–ತಲೆಯನ್ನು ಸೇರಿಸಿ ಎಂದರೆ ಸಮ್ಮುಖರಾಗಿ; ಅೞಿವಿನೊಳ್–ಸಾವಿನಲ್ಲಿ; ಮುಳಿಸಿನೊಳ್–ಕೋಪದಲ್ಲಿ; ಮುಟ್ಟೆವಂದು–ಹತ್ತಿರಕ್ಕೆ ಬಂದು, “ತಲೆಮಡು–ಶಿರಸ್ಸಂಧಾನೇ.”

೧೧೫. ಮುಳಿಸಿನೊಳ್–ಕೋಪದಲ್ಲಿ, ಎಯ್ದೆ ಕೆಂಪಡರ್ದ–ಚೆನ್ನಾಗಿ ಕೆಂಪೇರಿದ, ಕಣ್ಗಳಿಂ–ಕಣ್ಣುಗಳಿಂದ, ಒರ್ಮೆಯೆ–ಒಂದೇ ಸಲಕ್ಕೆ, ನುಂಗುವಂತೆ–ನುಂಗುವ ಹಾಗೆ, ಅಸುಂಗೊಳೆ–ಪ್ರಾಣವನ್ನು ಹೀರಲು, ನಡೆ ನೋಡಿ–ನಾಟುವಂತೆ ನೋಡಿ, ಮಾಣದೆ–ಬಿಡದೆ, ಉರಮಂ–ಎದೆಯನ್ನು, ಬಿರಿಯೆಚ್ಚೊಡೆ–ಸೀಳುವಂತೆ ಹೊಡೆದರೆ, ಸೂಸಿಪಾಯ್ವ–ಚೆಲ್ಲಿ ಹರಿಯುವ, ಅಸೃಗ್ಜಳಂ–ರಕ್ತದ ನೀರು, ಅವನ, ಉಗ್ರಕೋಪ ಶಿಖಿ–ಭಯಂಕರ ಕೋಪ ವೆಂಬ ಅಗ್ನಿ, ತಳ್ತು–ಸೇರಿ, ಅಳುರ್ವಂತೆ ವೊಲಾಗೆ–ವ್ಯಾಪಿಸಲು ಹಾಗಾಗಲು, ಶಲ್ಯಂ– ಶಲ್ಯನು, ಆ ರಣದೊಳ್–ಆ ಕಾಳಗದಲ್ಲಿ, ನೆಱಲ್ದೊಡೆ–ನಿಶ್ಚೇಷ್ಟನಾದರೆ, ಸುರಾಪಗಾತ್ಮ ಜಂ–ಭೀಷ್ಮನು, ಅವನಂ–ಶಲ್ಯನನ್ನು, ಪೆಱಗಿಕ್ಕಿ–ಹಿಂದಿಕ್ಕಿ ಎಂದರೆ ರಕ್ಷಣೆಗೆ ಬಂದು.

ವಚನ : ಪನ್ನಿರ್ವರಾದಿತ್ಯರ–ಹನ್ನೆರಡು ಸೂರ್ಯರ, ದ್ವಾದಶಾದಿತ್ಯರ; ಭೈರವಾಂಡಬರ ಮುಮಂ–ಭೀಕರವಾದ ಆಟೋಪವನ್ನೂ, ಕಾಲಾಂತಕನ–ಪ್ರಳಯದ ಯಮನ, ಮಸಕ ಮುಮಂ–ವಿಜೃಂಭಣೆಯನ್ನೂ.

೧೧೬. ಖರಕಿರಣಪ್ರಚಂಡ ಕಿರಣಾವಳಿ–ತೀಕ್ಷ್ಣವಾದ ಕಿರಣಗಳುಳ್ಳ ಸೂರ್ಯನ ರಶ್ಮಿ ಸಮೂಹವು, ಲೋಕಮಂ–ಜಗತ್ತನ್ನು, ಎಯ್ದೆ–ಚೆನ್ನಾಗಿ, ಪರ್ವುವಂತಿರೆ–ಹಬ್ಬುವ ಹಾಗೆ, ಕಡುಕೆಯ್ದು–ವೇಗವನ್ನು ತೋರಿಸಿ, ತನ್ನೆರಡು ಕೈಯೊಳಂ–ತನ್ನ ಎರಡು ಕೈಗಳಿಂದಲೂ, ಎಚ್ಚ ಶರಾಳಿಗಳ್–ಬಿಟ್ಟ ಬಾಣ ಸಮೂಹಗಳು, ಭಯಂಕರ ತರಮಾಗೆ–ಅತಿ ಭೀಕರ ವಾಗಲು, ಭೂಭುವನಮೆಲ್ಲಮಂ–ಭೂಲೋಕವನ್ನೆಲ್ಲಾ, ಒರ್ಮೆಯೆ–ಒಂದೇ ಬಾರಿಗೆ ಸುತ್ತಿ, ಮುತ್ತಿಕೊಂಡಿರೆ–ಬಳಸಿ ಕವಿದುಕೊಂಡಿರಲು, ದೆಸೆಗಾಣಲಾಗದು–ದಿಕ್ಕನ್ನು ನೋಡಲು ಆಗದು: ದಲ್–ದಿಟವಾಗಿಯೂ, ಆ ರಣಗೞ್ತಲೆ–ಆ ಯುದ್ಧದ ಕತ್ತಲೆ, ಮಂದಮಾದು ದೋ–ದಟ್ಟವಾಯಿತೋ!

ವಚನ : ಅಂಬಿನ ಬಂಬಲೊಳಂ–ಬಾಣಗಳ ಗುಂಪುಗಳಲ್ಲೂ; ಜೋಡಾಗಿ– ಜೊತೆಗೂಡಿ; ಗಜವ್ರಜಂಗಳ–ಆನೆಗಳ ಸಮೂಹಗಳ; ಡೊಣೆವುಗಳಿಂದೆ–(ಗಾಯದ) ಬಿಲ ಗಳಿಂದ (?), ಒಱೆತು–ಸ್ರವಿಸಿ, ಜಿನುಗಿ; ಮಿಳಿರ್ವಪೞವಿಗೆಗಳ್–ಅಲ್ಲಾಡುವ ಬಾವುಟಗಳು; ತಲೆದೋಱೆ–ಮೇಲೆ ಕಾಣುತ್ತಿರಲು, ಮುೞುಂಗಿದ–ಮುಳುಗಿದ, ಓಸರಿಸಿ–ಒಂದು ಕಡೆಗೆ ಸರಿಸಿ, ಕೀೞಂಕರ್ಚಿ–ಕಡಿವಾಣವನ್ನು ಕಚ್ಚಿ; ದಿಂಡುಮಗುಳ್ದು(ೞ್ದು)–ರಾಶಿಯಾಗಿ ಹೊರಳಿ, ತಿಂತಿಣಿಯೊಳ್–ಗುಂಪಿನಲ್ಲಿ; ತೊಡರ್ದು–ಸಿಕ್ಕಿ, ಎಡಪುತ್ತುಂ–ಎಡವುತ್ತ, ಎೞ್ಬಟ್ಟಿ– ಎಬ್ಬಿಸಿ, ಓಡಿಸಿ, ತೊಂಡು ಮರುಳ್ಗಳುಂ–ದುಷ್ಟ ಪಿಶಾಚಿಗಳೂ; ಪಂದಲೆಗಳುಂ–ಹಸಿ ತಲೆಗಳೂ, ಪುದುಂಗೊಳಿಸೆ–ಸೇರಿಸಲು, ನಾಡೆಯುಂ ಪೊೞ್ತು–ತುಂಬ ಹೊತ್ತು.

೧೧೭. ಪಟ್ಟಂಗಟ್ಟಿದ–ಪಟ್ಟವನ್ನು ಕಟ್ಟಿಕೊಂಡ, ಇಳಾಧಿನಾಥರೆ–ರಾಜರೆ, ಪಯಿಂಛಾ ಸಿರ್ವರ್–ಹತ್ತು ಸಾವಿರ; ಪಟ್ಟಂಗಟ್ಟಿದವು–ಪಟ್ಟವನ್ನು ಕಟ್ಟಿಸಿಕೊಂಡ, ಒಳ್ಳಾನೆಗಳ್– ಭದ್ರಹಸ್ತಿಗಳು, ಒಂದು ಲಕ್ಕ–ಒಂದು ಲಕ್ಷವು (ಇಲ್ಲಿ ಲಕ್ಕಂ ಎಂದಿರಬೇಕು; ಪ್ರಕೃತಿ ಪ್ರಯೋಗ); ತುರಗಂ–ಕುದುರೆಗಳು, ಪತ್ತೆಂಟು ಲಕ್ಕಂ–ಹತ್ತೆಂಟು ಲಕ್ಷವು; (ಇವೆಲ್ಲಾ ಭೀಷ್ಮನ) ಒಂದೆ ಬಿಲ್ಗೆ–ಒಂದೇ ಬಿಲ್ಲಿಗೆ, ಪಡಲ್ವಟ್ಟು–ಚದರಿ ಹೋಗಿ, ಅೞ್ಕಾಡಿದುವು– ನಾಶವಾದವು, ಎನೆ–ಎನ್ನಲು, ನದೀಪುತ್ರಂಗೆ–ಭೀಷ್ಮನಿಗೆ, ಚಲಂ ಬಟ್ಟುಂ–ಮತ್ಸರಿಸಿಯೂ, ಮಾರ್ಮಲೆದು–ಪ್ರತಿಭಟಿಸಿ, ಅಂಬುದೊಟ್ಟುಂ–ಬಾಣವನ್ನು ಹೂಡಿಯೂ, ಸಂಗ್ರಾಮ ರಂಗಾಗ್ರದೊಳ್–ಯುದ್ಧರಂಗದ ಮುಂಭಾಗದಲ್ಲಿ, ಉೞಿವರ್–ಉಳಿಯುವವರು ಎಂದರೆ ಜೀವಸಹಿತ ಇರುವವರು, ಆರ್–ಯಾರು, ಪೇಳ್–ಹೇಳು? ಎಂದರೆ ಯಾರೂ ಇಲ್ಲ.

ವಚನ : ಎಂಬನ್ನೆಗಂ–ಎನ್ನುತ್ತಿರುವಲ್ಲಿ; ಅನವರತ ಶರಾಸಾರದಿಂ–ಸಂತತವಾದ ಬಾಣ ವೃಷ್ಟಿಯಿಂದ; ಸಣ್ಣಿಸಿದಂತೆ–ನಯವಾದ ಪುಡಿಯಾದಂತೆ; ತವೆ–ನಾಶವಾಗಲು; ನೆರವಿ ಯಂ–(ಸಾಮಾನ್ಯ) ಸೈನ್ಯ ಸಮೂಹವನ್ನು; ಏವಂದಪುದು–ಏನು ಬರುತ್ತದೆ, ಅದಿರದೆ– ಹೆದರದೆ, ಇದಿರಂ–ಮಾರ್ಕೊಂಡು–ಇದಿರಿನಲ್ಲಿ ಪ್ರತಿಭಟಿಸಿ, ಬಿಲ್ವೊಯ್ದು–ಬಿಲ್ಲಿನ ಟಂಕಾರವನ್ನು ಮಾಡಿ; ಸಣ್ಣಿಸು ಸಣ್ಣ+ಇಸು; ಸಣ್ಣ (ಸಂ) ಶ್ಲಕ್ಷ್ಣ; (ಪ್ರಾ) ಸಣ್ಹ.

೧೧೮. ಶ್ವೇತಭೀಷ್ಮರ ಯುದ್ಧ, ಶ್ವೇತನ ಮರಣ: ಶ್ವೇತನ ಬಿಲ್ಲೊಳಿರ್ದ–ಶ್ವೇತನ ಬಿಲ್ಲಿನಲ್ಲಿ ಇದ್ದ, ಮದನಾರಿಯ ರೂಪು–ಶಿವನ ಆಕಾರವು, ಎರ್ದೆಗೊಳ್ವುದುಂ–ಹೃದಯ ವನ್ನು ಆಕರ್ಷಿಸಲು, ನದೀಜಾತಂ–ಭೀಷ್ಮನು, ಉದಾತ್ತ ಭಕ್ತಿಯೊಳೆ–ಅತಿಶಯವಾದ ಭಕ್ತಿಯಲ್ಲೆ, ಕೆಯ್ಮುಗಿದಾಗಳ್–ಕೈಗಳನ್ನು ಮುಗಿದಾಗ, ಇದೆಂತೊ–ಇದು ಹೇಗೋ? ನಿಮ್ಮ ಪೆರ್ಮಾತಿನ–ದೊಡ್ಡ ಮಾತಿನ ಎಂದರೆ ಅಧಿಕವಾಗಿ ಕೊಚ್ಚಿಕೊಳ್ಳುವ, ಬೀರಂ–ಶೌರ್ಯ, ಮುಪ್ಪಿನೊಳ್–ಮುದಿತನದಲ್ಲಿ, ಈ ಎಡೆಗೆ ವಂದುದೆ–ಈ ಸ್ಥಿತಿಗೆ ಬಂತೆ? ಲೋಕವಿ ಖ್ಯಾತರಿರ್–ಲೋಕದಲ್ಲೆಲ್ಲಾ ಪ್ರಸಿದ್ಧರಾಗಿದ್ದೀರಿ; ಆಗಿ–ಹಾಗೆ ಪ್ರಸಿದ್ಧರಾಗಿ, ಕೆಯ್ದುವಿಡಿ ವಲ್ಲಿಯೆ–ಆಯುಧವನ್ನು ಹಿಡಿಯಬೇಕಾದ ಸಮಯದಲ್ಲೇ, ಕಾಲ್ವಿಡಿಯಲ್ಕೆ–ಕಾಲನ್ನು ಹಿಡಿಯುವುದಕ್ಕೆ, ತಕ್ಕುದೇ–ಯೋಗ್ಯವೇ?

೧೧೯. ರಣಾಗ್ರದೊಳ್–ಯುದ್ಧಮುಖದಲ್ಲಿ, ಪೊಣರ್ವೊಡೆ–ಹೋರಾಡುವ ಪಕ್ಷದಲ್ಲಿ, ಅಂಕದ ಪೊಂಕದ–ಪ್ರಸಿದ್ಧವಾದ ಶೌರ್ಯವನ್ನುಳ್ಳ ಅಥವಾ ಯುದ್ಧದ ಉಬ್ಬಾಟವನ್ನುಳ್ಳ, ಸಿಂಧುಪುತ್ರನೋರ್ವನೆ–ಭೀಷ್ಮನೊಬ್ಬನೆ, ಎನಗೆ–ನನಗೆ, ದೊರೆಯೆಂದು–ಸಮಾನನೆಂದು, ನಿಮ್ಮೊಳೆ–ನಿಮ್ಮಲ್ಲಿಯೇ, ತಱಿಸಂದಿಱಿಯಲ್ಕೆ–ನಿರ್ಣಾಯಕವಾಗಿ ಯುದ್ಧ ಮಾಡಲು, ಆನ್–ನಾನು, ಪೂಣ್ದೆಂ ವಲಂ–ಪ್ರತಿಜ್ಞೆ ಮಾಡಿದೆನು, ಅಲ್ಲವೆ? ಎನಗೆ–ನನಗೆ, ಇಱಿ ವೞ್ತಿಯಂ–ಯುದ್ಧ ಮಾಡುವ ಆಸಕ್ತಿಯನ್ನು, ಕಿಡಿಸಿ–ಹಾಳುಮಾಡಿ, ನಿಮ್ಮಳವಂ–ನಿಮ್ಮ ಶಕ್ತಿಯನ್ನು, ಪೆಱಗಿಕ್ಕಿ–ಹಿಂದಕ್ಕೆ ಇಟ್ಟು, ನೀಮುಂ–ನೀವೂ, ಇಂತು–ಹೀಗೆ, ಇನಿತು–ಇಷ್ಟು, ಎರ್ದೆಗೆಟ್ಟಿರ್–ಧೈರ್ಯಹೀನರಾದಿರಿ; ಇಂ–ಇನ್ನು, ತುೞಿಲಸಂದರಂ–ಯುದ್ಧಕ್ಕೆ ಬಂದವರನ್ನು, ಆರುಮಂ–ಯಾರನ್ನೂ, ಎಂತು–ಹೇಗೆ, ನಂಬುವರ್–ನಂಬುತ್ತಾರೆ?

ವಚನ : ನೋಯೆ ನುಡಿದೊಡೆ–ನೋವುಂಟಾಗುವ ಹಾಗೆ ಮಾತಾಡಿದರೆ,

೧೨೦. ಏನೆಂದೊಡಂ–ನೀನು ಏನು ಹೇಳಿದರೂ, ಎಂದುದು–ಹೇಳಿದ್ದು, ನಿನಗೆ, ಒಪ್ಪಿದ ಪುದು–ಒಪ್ಪುತ್ತದೆ; ಅಂತು ಏಕೆ ಎನ್ನ–ಹಾಗೇಕೆ ಎಂದು ಕೇಳುವೆಯೊ? ನಿನ್ನ, ಈ ಶರಾಸನ ದೊಳ್–ಈ ಬಿಲ್ಲಿನಲ್ಲಿ, ಶೂಲ ಕಪಾಲಪಾಣಿ–ಶೂಲವನ್ನೂ, ಕಪಾಲವನ್ನೂ ಕೈಯಲ್ಲಿ ಉಳ್ಳ ಶಿವನು, ದಯೆಯಿಂ–ಕರುಣೆಯಿಂದ, ಬಂದು, ಇರ್ದಂ–ಇದ್ದಾನೆ, ಉಂತೆ–ಸುಮ್ಮನೆ, ಆನುಂ–ನಾನು ಕೂಡ, ಇಂತನಿತಂ–ಹೀಗೆ ಇಷ್ಟನ್ನು, ನೀಂ ನುಡಿವನ್ನೆಗಂ–ನೀನು ದುಡಿ ಯುತ್ತಿರಲು, ತಡೆವೆನೇ–ತಡಮಾಡುತ್ತೇನೆಯೇ? ತ್ರೈಲೋಕ್ಯನಾಥಂ–ಮೂರು ಲೋಕಕ್ಕೆ ಒಡೆಯನು, ಕಣಾ–ನೋಡು, ವಿನಮನ್ಮಸ್ತಕನಾದೆಂ–ತಲೆಬಾಗಿದವನಾದೆನು, ಅಣ್ಮು ವೊಡೆ–ನಾನು ಯುದ್ಧ ಮಾಡುವ ಪಕ್ಷದಲ್ಲಿ, ನೀಂ–ನೀನು, ಈ ದೇವನಂ–ಈ ಮೂಲೋಕ ದೊಡೆಯನಾದ ಶಿವನನ್ನು, ತೋಱುವೈ–ತೋರಿಸುತ್ತೀಯೆ.

೧೨೧. ನಿನಗೆ, ಇಱಿವಂತು–ಯುದ್ಧ ಮಾಡುವ ಹಾಗೆ, ಮನದೊಳ್–ಮನಸ್ಸಿನಲ್ಲಿ, ತಱಿಸಲವುಂಟಪ್ಪೊಡೆ–ನಿಶ್ಚಯವಿರುವುದೇ ಆದರೆ, ಎಲವೊ–ಎಲವೋ, ಈ ದೇವೇಶನನ್– ಈ ಶಿವನನ್ನು, ಏಂ ಸೆಱೆವಿಡಿದೆ–ಏನು ಮೊರೆಹೊಕ್ಕೆ? ದೇವನ ಮಱೆಯಂ–ಶಿವನ ಮೊರೆ ಯನ್ನು, ತೊಲಗು, ಬಿಟ್ಟುಹೋಗು, ಬೞಿಕ–ಅನಂತರ, ಎನಗಂ ನಿನಗಂ–ನನಗೂ ನಿನಗೂ, ಅಱಿಯಲಕ್ಕುಂ–ತಿಳಿಯಲಾಗುತ್ತದೆ. ನಮ್ಮಿಬ್ಬರು ಶೌರ್ಯ ಪ್ರತಾಪಗಳನ್ನೂ ನಾವಿಬ್ಬರೂ ತಿಳಿಯುವುದಾಗುತ್ತದೆ ಎಂದು ತಾತ್ಪರ್ಯ.

೧೨೨. ಕಾಗೆಪೋಲ್–ಕಾಗೆಯಂತೆ, ಬಿಲ್ಗೆ–ಬಿಲ್ಲಿಗೆ, ಕರಂ–ವಿಶೇಷವಾಗಿ, ಅಂಜುವಿರ್– ಅಂಜುತ್ತೀರಿ, ಅಂಜಲಿಂ–ಹೆದರಬೇಡಿರಿ, ಆ ತ್ರಿಣೇತ್ರನಂ–ಆ ಶಿವನನ್ನು, ಪೋ–ಹೋಗು, ಗೆಡೆಗೊಂಡು–ಮೇಳಿಸಿಕೊಂಡು, ಕಾಡುವೆನೆ–ಯುದ್ಧ ಮಾಡುತ್ತೇನೆಯೆ? ಕಾದೆಂ–ಯುದ್ಧ ಮಾಡೆನು; ಹರನಿತ್ತುದು–ಶಿವ ಕೊಟ್ಟದ್ದು, ಎಂದು ಇದಂ–ಈ ಬಿಲ್ಲನ್ನು, ನೋಡ–ನೋಡು, ಆಗಡುಂ–ಯಾವಾಗಲೂ, ಅೞ್ತಿಯಿಂ ಪಿಡಿವೆಂ–ಪ್ರೀತಿಯಿಂದ ಹಿಡಿಯುತ್ತೇನೆ; ಅಕ್ಕಟ– ಅಚ್ಚರಿ, ನಿಮ್ಮನದಿರ್ಪುವಲ್ಲಿ–ನಿಮ್ಮನ್ನು ಅಡಗಿಸುವಾಗ, ಚಾಪಾಗಮಂ–ಧನುರ್ವಿದ್ಯೆ, ಏವುದು–ಯಾವುದು, ಅಂತೆನಗೆ–ಹಾಗೆ ನನಗೆ, ಬಿಲ್ವರಂ–ಬಿಲ್ಲಿನವರೆಗೆ, ಎಂದರೆ ಬಿಲ್ಲನ್ನು ಹಿಡಿಯುವವರೆಗೆ ಆಜಿಯೊಳ್–ಯುದ್ಧದಲ್ಲಿ, ಆಂಪ–ಎದುರಿಸುವ, ಗಂಡರಾರ್–ಶೂರರು ಯಾರು?

೧೨೩. ಬಿಲ್ಲಂ–ಬಿಲ್ಲನ್ನು, ಬಿಸುಟೆಂ–ಬೀಸಾಡಿದೆನು, ಅದೇವುದು–ಅದು ಯಾವುದು, ಎಂದು, ಕಡುಪಿಂದೆ–ಬೇಗನೆ, ಈಡಾಡಿ–ಎಸೆದು, ಸೂರ್ಯರಭಾಪ್ರಸರಂಗಳ್–ಸೂರ್ಯನ ಕಾಂತಿಯ ಹಸರಗಳು, ಮಸುಳ್ವನ್ನೆಗಂ–ಕಂದುತ್ತಿರಲು, ಪೊಳೆವುದು–ಹೊಳೆಯುತ್ತಿರುವ, ಒಂದು ಶಕ್ತಿಯಂ–ಒಂದು ಶಕ್ತ್ಯಾಯುಧವನ್ನು, ಕೊಂಡು–ಹಿಡಿದು, ಅಗುರ್ವಿಸಿ–ಹೆದರಿಸಿ, ಗಾಂಗೇಯನಂ–ಭೀಷ್ಮನನ್ನು, ಇಟ್ಟಂ–ಹೊಡೆದನು, ಇಟ್ಟೊಡೆ–ಇಟ್ಟರೆ, ಅದಂ–ಆ ಶಕ್ತಿ ಯನ್ನು, ಪೇರಾಳ್–ಮಹಾಶೂರನಾದ ಭೀಷ್ಮ, ಈರಯ್ದು–ಹತ್ತು, ಅಸ್ತ್ರದಿಂ–ಬಾಣಗಳಿಂದ, ಖಂಡಿಸಿ–ಕತ್ತರಿಸಿ, ತಿಱಿದಿಕ್ಕಿದಂತೆ–ಚಿಮ್ಮಿ ಎಸೆದ ಹಾಗೆ, ಆ ಶ್ವೇತನಾ–ಆ ಶ್ವೇತನ, ತಲೆಯಂ– ತಲೆಯನ್ನು, ಪೋಗೆಚ್ಚನ್–ಹೋಗುವಂತೆ ಹೊಡೆದನು.

೧೨೪. ಶ್ವೇತನ, ಉಪಮಾತೀತಮಂ–ಹೋಲಿಕೆಗೆ ಮೀರಿದ, ಈ ಧರೆಗೆ–ಈ ಭೂಮಿಗೆ, ನೆಗೞೆನೆಗೞ್ದುದಂ–ಮಾಡಿ ಪ್ರಸಿದ್ಧವಾದ, ಬೀರಮಂ–ಶೌರ್ಯವನ್ನು, ನಾಂ–ನಾನು, ಪಾತಾಳ ಕ್ಕಱಿಪುವೆಂ–ಪಾತಾಳಕ್ಕೆ ತಿಳಿಯಪಡಿಸುತ್ತೇನೆ, ಎಂಬೀತೆಱದೊಳೆ–ಎಂಬೀ ರೀತಿಯಲ್ಲೆ, ಅಪರ ಜಳನಿಧಿಗೆ–ಪಶ್ಚಿಮ ಸಮುದ್ರಕ್ಕೆ, ದಿನಪಂ–ಸೂರ್ಯನು, ಇೞಿದಂ–ಇಳಿದನು.

ವಚನ : ಅಪಹಾರ ತೂರ್ಯಂಗಳ–ಯುದ್ಧದ ನಿಲುಗಡೆಯನ್ನು ಸೂಚಿಸುವ ವಾದ್ಯ ಗಳನ್ನು, ಬಾಜಿಸಿ-ಬಾರಿಸಿದ್ ಆದಿತ್ಯಂ-ಸೂರ್ಯನು; ಅದಿರ್ಪುವಂತು-ಅಡಗಿಸುವ ಹಾಗೆ; ಆಟಂದು-ಮೇಲೆ ಬಿದ್ದು; ಪೆಸರ್ಗಳನನ್ವರ್ಥಂ ಮಾಡಿ-ಹೆಸರುಗಳನ್ನು ಸಾರ್ಥಕವಾಗಿರುವಂತೆ ಮಾಡಿ.

೧೨೫. ಪಡೆಯ ಪಾಡಿಯ-ಸೈನ್ಯದ ಸಾಲುಗಳ, ಬೀರರ-ಶೂರರ, ಪೆಂಡಿರ್.ಸ್ತ್ರೀಯರು, ಅನುರಾಗದಿಂ-ಸಂತೋಷದಿಂದ, ನೆರೆದು-ಒಟ್ಟಾಗಿ ಸೇರಿ, ಅೞ್ಕಱಿಂ-ಪ್ರೀತಿಯಿಂದ, ಪರಸಿ-ಹರಸಿ, ಒಱಲ್ದು-ಸ್ನೇಹಿಸಿ, ಸೇಸೆಗಳನಿಕ್ಕೆ-ಮಂತ್ರಾಕ್ಷತೆಗಳನ್ನು ಹಾಕಲು, ಮುರಾರಿಯ-.ಶ್ರೀಕೃಷ್ಣನ, ಪಾಂಚಜನ್ಯ-ಪಾಂಚಜನ್ಯವೆಂಬ ಶಂಖದ, ವಿಸುಬಿರಿತ ರವಂ-ವಿಕಂಪಿತ ಶಬ್ದವು, ಜಯೋತ್ಸವದ-ವಿಜಯೋತ್ಸವದ, ಘೋಷಣೆಯಂತಿರೆ-ಡಂಗುರದಂತೆ ಇರಲು, ಉದಾತ್ತಚಿತ್ತಂ-ಉದಾರವಾದ ಮನವುಳ್ಳ, ಅವನೀತಳ ಪೂಜ್ಯಗುಣಂ-ಭೂಮಂಡಲದಿಂದ ಪೂಜಿಸಲ್ಪಟ್ಟ ಗುಣವುಳ್ಳ, ಗುಣಾರ್ಣವಂ-ಅರಿಕೇಸರಿ, ಅರ್ಜುನ, ಆತ್ಮಮಂದಿರಮಂ-ತನ್ನ ಶಿಬಿರವನ್ನು (ಗೃಹವನ್ನು), ಪೊಕ್ಕಂ-ಪ್ರವೇಶಿಸಿದನು.

ದಶಮಾಶ್ವಾಸಂ ಸಂಪೂರ್ಣಂ