೦೦೦ ಸೂ ದೇವಸನ್ತತಿ ...{Loading}...
ಸೂ. ದೇವಸಂತತಿ ನಲಿಯೆ ಪಾಂಡವ
ಜೀವಿ ಹರಿಯೆಂಬೀ ಪ್ರತಿಜ್ಞೆಯ
ಭಾವ ಸಂದುದು ಧರ್ಮಜನ ಪಟ್ಟಾಭಿಷೇಕದಲಿ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನಾ: ದೇವವಂಶವೆಲ್ಲವೂ ಸಂತೋಷಿಸಲು ಧರ್ಮರಾಯನ ಪಟ್ಟಾಭಿಷೇಕದಲ್ಲಿ ‘ಪಾಂಡವ ಜೀವಿ ಹರಿ’ ಯೆಂಬ ಪ್ರತಿಜ್ಞೆಯು ಸಾರ್ಥಕವಾಯಿತು.
ಪದಾರ್ಥ (ಕ.ಗ.ಪ)
ದೇವಸಂತತಿ-ದೇವತೆಗಳ ಸಮೂಹ, ಸಂದುದು-ನಡೆಯಿತು, ಸಾರ್ಥಕವಾಯಿತು.
ಮೂಲ ...{Loading}...
ಸೂ. ದೇವಸಂತತಿ ನಲಿಯೆ ಪಾಂಡವ
ಜೀವಿ ಹರಿಯೆಂಬೀ ಪ್ರತಿಜ್ಞೆಯ
ಭಾವ ಸಂದುದು ಧರ್ಮಜನ ಪಟ್ಟಾಭಿಷೇಕದಲಿ
೦೦೧ ಕೇಳು ಜನಮೇಜಯ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ಹಿಮಗಿರಿ ತೊಡಗಿ ಸಾಗರ
ವೇಲೆ ಪರಿಯಂತಖಿಳ ನಗರ ಗ್ರಾಮ ಪುರವರದ
ಮೇಲುವರ್ಣಪ್ರಮುಖವಾಚಾಂ
ಡಾಲರವಧಿ ಸಮಸ್ತ ಭೂಜನ
ಜಾಲ ಹಸ್ತಿನಪುರಿಗೆ ಬಂದುದು ಕಂಡುದವನಿಪನ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜನಮೇಜಯರಾಜನೇ ಕೇಳು, ಹಿಮಾಲಯ ಪರ್ವತದಿಂದ ತೊಡಗಿ ಸಮುದ್ರದ ಗಡಿಯವರೆಗಿನ ಎಲ್ಲ ನಗರ, ಗ್ರಾಮ, ಶ್ರೇಷ್ಠಪುರಗಳ, ಮುಖ್ಯವಾದ ಮೇಲುಜಾತಿಯಿಂದ ಹಿಡಿದು ಚಾಂಡಾಲಜಾತಿಗಳವರೆಗೆ ಸಮಸ್ತ ಜನತೆಯೂ ಹಸ್ತಿನಾವತಿಗೆ ಬಂದು ರಾಜನನ್ನು ಕಂಡರು.
ಪದಾರ್ಥ (ಕ.ಗ.ಪ)
ತೊಡಗಿ-ಪ್ರಾರಂಭಿಸಿ, ಸಾಗರವೇಲೆ-ಸಮುದ್ರದಗಡಿ, ಚಾಂಡಾಲರವಧಿ-ಚಾಂಡಾಲಜಾತಿಯವರೆಗೆ, ಭೂಜನಜಾಲ-ಭೂಮಿಯ ಜನ ಸಮೂಹ
ಮೂಲ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ಹಿಮಗಿರಿ ತೊಡಗಿ ಸಾಗರ
ವೇಲೆ ಪರಿಯಂತಖಿಳ ನಗರ ಗ್ರಾಮ ಪುರವರದ
ಮೇಲುವರ್ಣಪ್ರಮುಖವಾಚಾಂ
ಡಾಲರವಧಿ ಸಮಸ್ತ ಭೂಜನ
ಜಾಲ ಹಸ್ತಿನಪುರಿಗೆ ಬಂದುದು ಕಂಡುದವನಿಪನ ॥1॥
೦೦೨ ಚ್ಯವನ ಮುದ್ಗಲ ...{Loading}...
ಚ್ಯವನ ಮುದ್ಗಲ ಕಣ್ವ ಕಠ ಭಾ
ರ್ಗವ ಭರದ್ವಾಜಾಂಗಿರಸ ಗಾ
ಲವ ಪುಲಸ್ತ ್ಯ ರುಮಣ್ವ ಗೌತಮ ಯಾಜ್ಞವಲ್ಕ ್ಯಮುನಿ
ಧ್ರುವ ವಿಭಾಂಡಕ ಗಾಗ್ರ್ಯ ಘಟಸಂ
ಭವ ಮೃಕಂಡುಸುತಾದಿ ಭೂಮಿ
ಪ್ರವರ ಮುನಿಗಳು ಬಂದು ಕಂಡರು ಧರ್ಮನಂದನನ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಚ್ಯವನ, ಮುದ್ಗಲ, ಕಣ್ವ, ಕಠ, ಭಾರ್ಗವ, ಭರದ್ವಾಜ, ಅಂಗಿರಸ, ಗಾಲವ, ಪುಲಸ್ತ್ಯ, ರುಮಣ್ವ, ಗೌತಮ, ಯಾಜ್ಞವಲ್ಕ್ಯ, ಧ್ರುವ, ವಿಭಾಂಡಕ, ಗಾರ್ಗ್ಯ, ಅಗಸ್ತ್ಯ , ಮಾರ್ಕಂಡೇಯ ಮೊದಲಾದ ಶ್ರೇಷ್ಠ ಮುನಿಗಳು ಬಂದು ಧರ್ಮರಾಯನನ್ನು ಕಂಡರು.
ಪದಾರ್ಥ (ಕ.ಗ.ಪ)
ಘಟಸಂಭವ-ಅಗಸ್ಯ್ತ , ಮೃಕಂಡುಸುತ-ಮಾರ್ಕಂಡೇಯ, ಭಾರ್ಗವ - ಪರಶುರಾಮ
ಟಿಪ್ಪನೀ (ಕ.ಗ.ಪ)
ಮುದ್ಗಲ - ಈತನ ವಿಷಯ ಅರಣ್ಯಪರ್ವದ ವ್ರೀಹಿ ದ್ರೋಣಾಖ್ಯಾನ ಪರ್ವದಲ್ಲಿ ಬರುತ್ತದೆ. ದೇವರು ಭಕ್ತರನ್ನು ಉಗ್ರೋಗ್ರ ಪರೀಕ್ಷೆಗಳಿಂದ ಶಾಪಿಸಿ ನೋಡುತ್ತಾನೆ ಎಂಬ ಮಾತಿಗೆ ನಿದರ್ಶನವಾಗಿದೆ ಈ ಮುದ್ಗಲನ ಕಥೆ. ಆದರೆ ಭಕ್ತರೂ ಅಷ್ಟೇ ಭಂಡರು ಎಲ್ಲ ಪರೀಕ್ಷಾದಿವ್ಯಗಳನ್ನು ಎದುರಿಸಬಲ್ಲ ಆತ್ಮ ಸ್ಥೈರ್ಯವುಳ್ಳವರು ಎಂಬುದೂ ಈ ಕಥೆಯಲ್ಲಿ ಸ್ಪಷ್ಟವಾಗುತ್ತದೆ.
ಮುದ್ಗಲನು ಪ್ರತಿತಿಂಗಳ ಪಾಂಡ್ಯದಿಂದ ಚತುರ್ದಶಿಯವರೆಗೆ ಹದಿನಾಲ್ಕು ದಿವಸ ಭಿಕ್ಷಾಟನೆ ಮಾಡುತ್ತಿದ್ದ. ಅವನು ಬೇಡುತ್ತಿದ್ದುದೇನು? ಒಂದು ಹಿಡಿ ಭತ್ತ ಮಾತ್ರ. ಹದಿನೈದನೆಯ ದಿನ ಹಾಗೆ ಸಂಗ್ರಹಿಸಿದ ಭತ್ತ್ರವನ್ನೆಲ್ಲ ಕುಟ್ಟಿ ಅಕ್ಕಿ ತೆಗೆದು ಅನ್ನ ಮಾಡುತ್ತಿದ್ದ. ಆ ಅನ್ನವನ್ನು ದೇವಪಿತೃ ಪೂಜೆಗೆ ಬಳಸಿ ಅತಿಥಿಗಳಿಗೂ ಬಡಿಸಿ ಉಳಿದುದನ್ನು ಹೆಂಡತಿ ಮಕ್ಕಳಿಗೆ ಕೊಟ್ಟು ತಾನೂ ತಿನ್ನುತ್ತಿದ್ದ. ಅವನು ತಿನ್ನುತ್ತಿದ್ದುದು ಅಮಾವಾಸ್ಯೆ ಪೂರ್ಣಮೆಯ ದಿನಗಳಂದು ಮಾತ್ರ.
ಒಂದು ಅಮಾವಾಸ್ಯೆಯ ದಿನ ದುರ್ವಾಸ ಮಹರ್ಷಿ ಅವನ ಮನೆಗೆ ಬರಬೇಕೆ! ಮುದ್ಗಲ ಸಂತೋಷದಿಂದ ಬಡಿಸಿದರೆ ಆ ಋಷಿ ಎಲ್ಲ ಅನ್ನವನ್ನು ಒಬ್ಬನೇ ಭಕ್ಷಿಸಿದ ಉಳಿದ ಅನ್ನವನ್ನು ಬಡಿಸುವಂತೆ ಹೇಳಿ ಅದನ್ನು ಮೈಕೈಗಳಿಗೆಲ್ಲ ಹಚ್ಚಿಕೊಂಡ ಹೀಗಾಗಿ ಆ ದಿನ ಮುದ್ಗಲ ಮತ್ತು ಅವನ ಸಂಸಾರವೆಲ್ಲ ಉಪವಾಸ ಇರಬೇಕಾಯಿತು.
ದುರ್ವಾಸನ ಪೀಡೆ ಒಂದು ದಿನಕ್ಕೆ ಮುಗಿಯುವಂಥದಲ್ಲವಲ್ಲ. ಪ್ರತಿ ಅಮಾವಾಸ್ಯೆ, ಪೌರ್ಣಮಿಗೂ ಆತ ಸರಿಯಾಗಿ ಊಟದ ವೇಳೆಗೆ ಬರುತ್ತಿದ್ದ ಹೀಗೆ ಅವನು 648 ಸಲ ಬಂದನೆಂದರೆ ಮುದ್ಗಲ ಮತ್ತು ಅವನ ಸಂಸಾರದವರ ಉಪವಾಸದ ಕಾಲ ಪ್ರಮಾಣ ತಿಳಿದೀತು. ಆದರೂ ಮುದ್ಗಲ ಜಗ್ಗಲಿಲ್ಲ. ಆಗ ಇವನ ಸತ್ವ ಪರೀಕ್ಷೆ ಮಾಡಿದ ಮುನಿ ಮುದ್ಗಲನ ಹಿರಿಮೆಯನ್ನು ಹೊಗಳಿ ಅವನಿಗೆ ಸ್ವರ್ಗದ ಸೌಖ್ಯ ದೊರೆಯುವುದೆಂದು ಆಶ್ವಾಸನೆಯಿತ್ತು ಹೊರಟುಹೋದ.
ದುರ್ವಾಸ ಹೇಳಿದ್ದಂತೆ ಸ್ವರ್ಗದಿಂದ ಒಂದು ವಿಯೋಗವೂ ಬಂದಿತು. ಆದರೆ ಸ್ವರ್ಗದ ಬಗೆಗೆ ಮುದ್ಗಲನಿಗೆ ವಿವರಗಳು ಬೇಕಿದ್ದುವು. ಎಲ್ಲ ದೇವದೂತನಿಂದ ಕೇಳಿ ತಿಳಿದುಕೊಂಡ ಮೇಲೆ ಮುದ್ಗಲನಿಗೆ ಸ್ವರ್ಗದ ಮೇಲೆ ಮೋಹ ಉಳಿಯಲಿಲ್ಲ. ಏಕೆ? ಎಂದು ಕೇಳಿದಾಗ ದೇವದೂತನಿಗೆ ಹೇಳಿದ.
‘‘ಅಯ್ಯ ದೇವಪುರುಷ ನೀನೇ ಸ್ವರ್ಗದ ಬಗೆಗೆ ವಿವರಿಸಿದ್ದೀಯೇ ಮನುಷ್ಯರು ಪುಣ್ಯವನ್ನು ಎಷ್ಟು ಗಳಿಸಿದ್ದಾರೆಂಬ ಪ್ರಮಾಣದ ಮೇಲೆ ಅವರಿಗೆ ಸ್ವರ್ಗದಲ್ಲಿ ಜಾಗಕೊಡುತ್ತೀರಿ. ಆದರೆ ಅವನ ಪುಣ್ಯದ ದಾಸ್ತಾನು ಮುಗಿದ ಕೂಡಲೇ ನಿರ್ದಾಕ್ಷಿಣ್ಯವಾಗಿ ಅವನನ್ನು ಭೂಮಿಗೆ ತಳ್ಳುತ್ತೀರಿ ಅಲ್ಲವೆ…..?
‘‘ಹೌದು….’’
‘‘ನಿಮ್ಮ ಸ್ವರ್ಗ ನನಗೆ ಬೇಕಾಗಿಲ್ಲ. ಇನ್ನಷ್ಟು ತಪಸ್ಸು ಮಾಡಿ ವಿಷ್ಣು ಲೋಕ ಸೇರಿಕೊಳ್ಳುತ್ತೇನೆ ಅಲ್ಲಿ ಸ್ಥಾನಪಲ್ಲಟವಿರುವುದಿಲ್ಲವಲ್ಲ!’’
ಮುದ್ಗಲನಿಗೆ ವೈಕುಂಠ ಲೋಕ ಪ್ರಾಪ್ತಿಯಾಯಿತು ಎಂದು ಹೇಳಬೇಕಾಗಿಲ್ಲವಷ್ಟೇ.ಈತನ ವಿಷಯ ಅರಣ್ಯಪರ್ವದ ವ್ರೀಹಿ ದ್ರೋಣಾಖ್ಯಾನ ಪರ್ವದಲ್ಲಿ ಬರುತ್ತದೆ. ದೇವರು ಭಕ್ತರನ್ನು ಉಗ್ರೋಗ್ರ ಪರೀಕ್ಷೆಗಳಿಂದ ಶಾಪಿಸಿ ನೋಡುತ್ತಾನೆ ಎಂಬ ಮಾತಿಗೆ ನಿದರ್ಶನವಾಗಿದೆ ಈ ಮುದ್ಗಲನ ಕಥೆ. ಆದರೆ ಭಕ್ತರೂ ಅಷ್ಟೇ ಭಂಡರು ಎಲ್ಲ ಪರೀಕ್ಷಾದಿವ್ಯಗಳನ್ನು ಎದುರಿಸಬಲ್ಲ ಆತ್ಮ ಸ್ಥೈರ್ಯವುಳ್ಳವರು ಎಂಬುದೂ ಈ ಕಥೆಯಲ್ಲಿ ಸ್ಪಷ್ಟವಾಗುತ್ತದೆ.
ಮುದ್ಗಲನು ಪ್ರತಿತಿಂಗಳ ಪಾಂಡ್ಯದಿಂದ ಚತುರ್ದಶಿಯವರೆಗೆ ಹದಿನಾಲ್ಕು ದಿವಸ ಭಿಕ್ಷಾಟನೆ ಮಾಡುತ್ತಿದ್ದ. ಅವನು ಬೇಡುತ್ತಿದ್ದುದೇನು? ಒಂದು ಹಿಡಿ ಭತ್ತ ಮಾತ್ರ. ಹದಿನೈದನೆಯ ದಿನ ಹಾಗೆ ಸಂಗ್ರಹಿಸಿದ ಭತ್ತ್ರವನ್ನೆಲ್ಲ ಕುಟ್ಟಿ ಅಕ್ಕಿ ತೆಗೆದು ಅನ್ನ ಮಾಡುತ್ತಿದ್ದ. ಆ ಅನ್ನವನ್ನು ದೇವಪಿತೃ ಪೂಜೆಗೆ ಬಳಸಿ ಅತಿಥಿಗಳಿಗೂ ಬಡಿಸಿ ಉಳಿದುದನ್ನು ಹೆಂಡತಿ ಮಕ್ಕಳಿಗೆ ಕೊಟ್ಟು ತಾನೂ ತಿನ್ನುತ್ತಿದ್ದ. ಅವನು ತಿನ್ನುತ್ತಿದ್ದುದು ಅಮಾವಾಸ್ಯೆ ಪೂರ್ಣಮೆಯ ದಿನಗಳಂದು ಮಾತ್ರ.
ಒಂದು ಅಮಾವಾಸ್ಯೆಯ ದಿನ ದುರ್ವಾಸ ಮಹರ್ಷಿ ಅವನ ಮನೆಗೆ ಬರಬೇಕೆ! ಮುದ್ಗಲ ಸಂತೋಷದಿಂದ ಬಡಿಸಿದರೆ ಆ ಋಷಿ ಎಲ್ಲ ಅನ್ನವನ್ನು ಒಬ್ಬನೇ ಭಕ್ಷಿಸಿದ ಉಳಿದ ಅನ್ನವನ್ನು ಬಡಿಸುವಂತೆ ಹೇಳಿ ಅದನ್ನು ಮೈಕೈಗಳಿಗೆಲ್ಲ ಹಚ್ಚಿಕೊಂಡ ಹೀಗಾಗಿ ಆ ದಿನ ಮುದ್ಗಲ ಮತ್ತು ಅವನ ಸಂಸಾರವೆಲ್ಲ ಉಪವಾಸ ಇರಬೇಕಾಯಿತು.
ದುರ್ವಾಸನ ಪೀಡೆ ಒಂದು ದಿನಕ್ಕೆ ಮುಗಿಯುವಂಥದಲ್ಲವಲ್ಲ. ಪ್ರತಿ ಅಮಾವಾಸ್ಯೆ, ಪೌರ್ಣಮಿಗೂ ಆತ ಸರಿಯಾಗಿ ಊಟದ ವೇಳೆಗೆ ಬರುತ್ತಿದ್ದ ಹೀಗೆ ಅವನು 648 ಸಲ ಬಂದನೆಂದರೆ ಮುದ್ಗಲ ಮತ್ತು ಅವನ ಸಂಸಾರದವರ ಉಪವಾಸದ ಕಾಲ ಪ್ರಮಾಣ ತಿಳಿದೀತು. ಆದರೂ ಮುದ್ಗಲ ಜಗ್ಗಲಿಲ್ಲ. ಆಗ ಇವನ ಸತ್ವ ಪರೀಕ್ಷೆ ಮಾಡಿದ ಮುನಿ ಮುದ್ಗಲನ ಹಿರಿಮೆಯನ್ನು ಹೊಗಳಿ ಅವನಿಗೆ ಸ್ವರ್ಗದ ಸೌಖ್ಯ ದೊರೆಯುವುದೆಂದು ಆಶ್ವಾಸನೆಯಿತ್ತು ಹೊರಟುಹೋದ.
ದುರ್ವಾಸ ಹೇಳಿದ್ದಂತೆ ಸ್ವರ್ಗದಿಂದ ಒಂದು ವಿಯೋಗವೂ ಬಂದಿತು. ಆದರೆ ಸ್ವರ್ಗದ ಬಗೆಗೆ ಮುದ್ಗಲನಿಗೆ ವಿವರಗಳು ಬೇಕಿದ್ದುವು. ಎಲ್ಲ ದೇವದೂತನಿಂದ ಕೇಳಿ ತಿಳಿದುಕೊಂಡ ಮೇಲೆ ಮುದ್ಗಲನಿಗೆ ಸ್ವರ್ಗದ ಮೇಲೆ ಮೋಹ ಉಳಿಯಲಿಲ್ಲ. ಏಕೆ? ಎಂದು ಕೇಳಿದಾಗ ದೇವದೂತನಿಗೆ ಹೇಳಿದ.
‘‘ಅಯ್ಯ ದೇವಪುರುಷ ನೀನೇ ಸ್ವರ್ಗದ ಬಗೆಗೆ ವಿವರಿಸಿದ್ದೀಯೇ ಮನುಷ್ಯರು ಪುಣ್ಯವನ್ನು ಎಷ್ಟು ಗಳಿಸಿದ್ದಾರೆಂಬ ಪ್ರಮಾಣದ ಮೇಲೆ ಅವರಿಗೆ ಸ್ವರ್ಗದಲ್ಲಿ ಜಾಗಕೊಡುತ್ತೀರಿ. ಆದರೆ ಅವನ ಪುಣ್ಯದ ದಾಸ್ತಾನು ಮುಗಿದ ಕೂಡಲೇ ನಿರ್ದಾಕ್ಷಿಣ್ಯವಾಗಿ ಅವನನ್ನು ಭೂಮಿಗೆ ತಳ್ಳುತ್ತೀರಿ ಅಲ್ಲವೆ…..?
‘‘ಹೌದು….’’
‘‘ನಿಮ್ಮ ಸ್ವರ್ಗ ನನಗೆ ಬೇಕಾಗಿಲ್ಲ. ಇನ್ನಷ್ಟು ತಪಸ್ಸು ಮಾಡಿ ವಿಷ್ಣು ಲೋಕ ಸೇರಿಕೊಳ್ಳುತ್ತೇನೆ ಅಲ್ಲಿ ಸ್ಥಾನಪಲ್ಲಟವಿರುವುದಿಲ್ಲವಲ್ಲ!’’
ಮುದ್ಗಲನಿಗೆ ವೈಕುಂಠ ಲೋಕ ಪ್ರಾಪ್ತಿಯಾಯಿತು ಎಂದು ಹೇಳಬೇಕಾಗಿಲ್ಲವಷ್ಟೇ.
ಮೂಲ ...{Loading}...
ಚ್ಯವನ ಮುದ್ಗಲ ಕಣ್ವ ಕಠ ಭಾ
ರ್ಗವ ಭರದ್ವಾಜಾಂಗಿರಸ ಗಾ
ಲವ ಪುಲಸ್ತ ್ಯ ರುಮಣ್ವ ಗೌತಮ ಯಾಜ್ಞವಲ್ಕ ್ಯಮುನಿ
ಧ್ರುವ ವಿಭಾಂಡಕ ಗಾಗ್ರ್ಯ ಘಟಸಂ
ಭವ ಮೃಕಂಡುಸುತಾದಿ ಭೂಮಿ
ಪ್ರವರ ಮುನಿಗಳು ಬಂದು ಕಂಡರು ಧರ್ಮನಂದನನ ॥2॥
೦೦೩ ಜಲಧಿ ಮಧ್ಯದ ...{Loading}...
ಜಲಧಿ ಮಧ್ಯದ ಕುರುವ ಘಟ್ಟಾ
ವಳಿಯ ಕೊಳ್ಳದ ಕುಹರ ಕುಂಜದ
ನೆಲೆಯ ಗಿರಿಸಾನುಗಳ ಶಿಖರದ ದುರ್ಗವೀಥಿಗಳ
ನೆಲನಶೇಷಪ್ರಜೆ ನಿಖಿಳ ಮಂ
ಡಳಿಕ ಮನ್ನೆಯ ವಂದಿಜನ ಸಂ
ಕುಲ ಮತಂಗಜಪುರಿಗೆ ಬಂದುದು ನೃಪನ ಕಾಣಿಕೆಗೆ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಮುದ್ರ ಮಧ್ಯದಲ್ಲಿನ ಗುಡ್ಡಪ್ರದೇಶಗಳ, ಘಟ್ಟಪ್ರದೇಶಗಳ, ಹಳ್ಳಕೊಳ್ಳಗಳ ಪ್ರದೇಶಗಳ, ಗುಹೆ-ಗವಿಗಳ, ಬೆಟ್ಟದ ತಪ್ಪಲಿನ, ಶಿಖರದ, ದುರ್ಗಗಳ ಬೀದಿಗಳಲ್ಲಿನ ನೆಲದ ಪ್ರಜೆಗಳಲ್ಲಿ ಯಾರೂ ಉಳಿಯದೆ, ಎಲ್ಲ ಮಂಡಳಿಕರು, ಮನ್ನೆಯರು, ವಂದಿಜನಗಳ ಸಮೂಹವು ಧರ್ಮರಾಯನನ್ನು ನೋಡಲು ಹಸ್ತಿನಾವತಿಗೆ ಬಂದರು.
ಪದಾರ್ಥ (ಕ.ಗ.ಪ)
ಜಲಧಿ-ಸಮುದ್ರ, ಕುರುವ-ಎತ್ತರಪ್ರದೇಶ, ದ್ವೀಪ, ಘಟ್ಟಾವಳಿ-ಘಟ್ಟಪ್ರದೇಶ, ಕುಹರ-ಗುಹೆ, ಕುಂಜ-ಗವಿ, ಗಿರಿಸಾನು-ಬೆಟ್ಟಸಾಲು, ಬೆಟ್ಟದತಪ್ಪಲು, ದುರ್ಗವೀಧಿ- ಕೋಟೆಯೊಳಗಿನ ಬೀದಿ, ಅಶೇಷ-ಎಲ್ಲರೂ, ಮಂಡಳಿಕ-ಚಕ್ರವರ್ತಿಯ ಅಧೀನದ ರಾಜ, ಮನ್ನೆಯರು-ರಾಜನ ಅಧೀನದ ಸಣ್ಣಪುಟ್ಟ ರಾಜರು, ವಂದಿಜನ-ಹೊಗಳುಭಟ್ಟರು, ಸಂಕುಲ-ಸಮಸ್ತ ಪರಿವಾರ, ಮತಂಗಜಪುರಿ-ಗಜಪುರಿ, ಹಸ್ತಿನಾವತಿ, ಕಾಣಿಕೆ-ನೋಡುವಿಕೆ
ಮೂಲ ...{Loading}...
ಜಲಧಿ ಮಧ್ಯದ ಕುರುವ ಘಟ್ಟಾ
ವಳಿಯ ಕೊಳ್ಳದ ಕುಹರ ಕುಂಜದ
ನೆಲೆಯ ಗಿರಿಸಾನುಗಳ ಶಿಖರದ ದುರ್ಗವೀಥಿಗಳ
ನೆಲನಶೇಷಪ್ರಜೆ ನಿಖಿಳ ಮಂ
ಡಳಿಕ ಮನ್ನೆಯ ವಂದಿಜನ ಸಂ
ಕುಲ ಮತಂಗಜಪುರಿಗೆ ಬಂದುದು ನೃಪನ ಕಾಣಿಕೆಗೆ ॥3॥
೦೦೪ ವ್ಯಾಸ ನಾರದ ...{Loading}...
ವ್ಯಾಸ ನಾರದ ಕೃಷ್ಣ ಮೊದಲಾ
ದೀ ಸಮಸ್ತ ಮುನೀಂದ್ರನಿಕರ ಮ
ಹೀಶನನು ಪಟ್ಟಾಭಿಷೇಕಕೆ ಮನವನೊಡಬಡಿಸಿ
ದೋಷರಹಿತ ಮುಹೂರ್ತ ಲಗ್ನ ದಿ
ನೇಶವಾರ ಶುಭಗ್ರಹೋದಯ
ಲೇಸೆನಲು ನೋಡಿದರು ಮಿಗೆ ಗಾಗ್ರ್ಯಾದಿ ಜೋಯಿಸರು ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವ್ಯಾಸ, ನಾರದ ಕೃಷ್ಣ ಮೊದಲಾದ ಸಮಸ್ತ ಮುನಿ ಸಮೂಹವು ಧರ್ಮರಾಯನನ್ನು ಪಟ್ಟಾಭಿಷೇಕಕ್ಕೆ ಒಡಂಬಡಿಸಿ, ದೋಷವಿಲ್ಲದ ಮುಹೂರ್ತವಿರುವ ಒಂದು ಭಾನುವಾರದಂದು ಶುಭಗ್ರಹಗಳು ಉದಯವಾಗುವ ಸಮಯವು ಒಳ್ಳೆಯದೆನಲು, ಗಾಗ್ರ್ಯಾದಿ ಜೋಯಿಸರು ಲಗ್ನವನ್ನು ನೋಡಿ ನಿಶ್ಚಯಿಸಿದರು.
ಪದಾರ್ಥ (ಕ.ಗ.ಪ)
ಒಡಂಬಡಿಸಿ-ಒಪ್ಪಿಸಿ, ದೋಷರಹಿತ-ದೋಷವಿಲ್ಲದ, ದಿನೇಶವಾರ-ಭಾನುವಾರ, ಮಿಗೆ-ವಿಶೇಷವಾಗಿ
ಮೂಲ ...{Loading}...
ವ್ಯಾಸ ನಾರದ ಕೃಷ್ಣ ಮೊದಲಾ
ದೀ ಸಮಸ್ತ ಮುನೀಂದ್ರನಿಕರ ಮ
ಹೀಶನನು ಪಟ್ಟಾಭಿಷೇಕಕೆ ಮನವನೊಡಬಡಿಸಿ
ದೋಷರಹಿತ ಮುಹೂರ್ತ ಲಗ್ನ ದಿ
ನೇಶವಾರ ಶುಭಗ್ರಹೋದಯ
ಲೇಸೆನಲು ನೋಡಿದರು ಮಿಗೆ ಗಾಗ್ರ್ಯಾದಿ ಜೋಯಿಸರು ॥4॥
೦೦೫ ತರಿಸಿ ಮಙ್ಗಳ ...{Loading}...
ತರಿಸಿ ಮಂಗಳ ವಸ್ತುಗಳ ಸಂ
ವರಿಸಿ ಬಹುವಿಧವಾದ್ಯರವ ವಿ
ಸ್ತರದ ಪಂಚಮಹಾನಿನಾದದ ಸರ್ವಜನಮನದ
ಹರುಷಪೂರದ ವೇದಮಂತ್ರೋ
ಚ್ಚರಣಸಾರದ ನೃಪನ ಪಟ್ಟಾ
ಧ್ವರವೆಸೆಯಲುತ್ಸವವನೆಸಗಿದನಸುರರಿಪುವಂದು ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಂಗಳ ವಸ್ತುಗಳನ್ನು ತರಿಸಿ, ಬಹುವಿಧವಾದ ಪಂಚಮಹಾವಾದ್ಯಗಳ ಶಬ್ದಗಳನ್ನು ಮೇಳವಿಸಿ, ಸಕಲ ಜನಮನದ ಹರ್ಷದೊಂದಿಗೆ ವೇದಮಂತ್ರಗಳ ಸಾರವನ್ನು ಉಚ್ಚರಿಸುತ್ತಾ, ಧರ್ಮರಾಯನ ಪಟ್ಟಾಭಿಷೇಕವನ್ನು ಮಹೋತ್ಸವದಿಂದ ಕೃಷ್ಣ ಅಂದು ನಡೆಸಿದನು.
ಪದಾರ್ಥ (ಕ.ಗ.ಪ)
ಸಂವರಿಸಿ-ಸಿದ್ಧಮಾಡಿ, ಏರ್ಪಾಟು ಮಾಡಿ,
ಟಿಪ್ಪನೀ (ಕ.ಗ.ಪ)
ಪಂಚಮಹಾನಿನಾದ-ಪಂಚವಾದ್ಯಗಳ ಮಹಾಧ್ವನಿ (ಪಂಚಮಹಾವಾದ್ಯಗಳು- ಶೃಂಗ(ಕೊಂಬು), ತಮ್ಮಟೆ, ಶಂಖ, ಭೇರಿ, ಜಾಗಟೆ. (ಇವುಗಳನ್ನು ಭಿನ್ನ ರೀತಿಯಲ್ಲಿ ನಿರೂಪಿಸುವುದುಂಟು.) ಹರುಷಪೂರ-ಹರ್ಷದ ಹೊನಲು, ಪಟ್ಟಾಧ್ವರ-ಪಟ್ಟಾಭಿಷೇಕ
ಮೂಲ ...{Loading}...
ತರಿಸಿ ಮಂಗಳ ವಸ್ತುಗಳ ಸಂ
ವರಿಸಿ ಬಹುವಿಧವಾದ್ಯರವ ವಿ
ಸ್ತರದ ಪಂಚಮಹಾನಿನಾದದ ಸರ್ವಜನಮನದ
ಹರುಷಪೂರದ ವೇದಮಂತ್ರೋ
ಚ್ಚರಣಸಾರದ ನೃಪನ ಪಟ್ಟಾ
ಧ್ವರವೆಸೆಯಲುತ್ಸವವನೆಸಗಿದನಸುರರಿಪುವಂದು ॥5॥
೦೦೬ ಆದುದಾ ಪಟ್ಟಾಭಿಷೇಕದೊ ...{Loading}...
ಆದುದಾ ಪಟ್ಟಾಭಿಷೇಕದೊ
ಳಾ ದುರಾತ್ಮಕ ಬಾಷ್ಕಳನ ಪರಿ
ವಾದವನು ಮುನಿನಿಕರ ಕೇಳಿದು ಖತಿಯ ಭಾರದಲಿ
ಭೇದಿಸಿದರವನಸುರನೆಂದು ವಿ
ಷಾದವಹ್ನಿಯಲುರುಹಿದರು ಬಳಿ
ಕಾದರಿಸಿ ಧರ್ಮಜನ ಸಂತೈಸಿದನು ಮುರವೈರಿ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಟ್ಟಾಭಿಷೇಕದಲ್ಲಿ ದುರಾತ್ಮನಾದ ಬಾಷ್ಕಳನ ವಾದವನ್ನು ಮುನಿಗಳು ಕೇಳಿ ಕೋಪವನ್ನು ತಾಳಿದರು. ಅವನು ರಾಕ್ಷಸನೆಂಬುದನ್ನು ತಿಳಿದು ಅತಿಶಯವಾದ ಕೋಪಾಗ್ನಿಯಿಂದ ಅವನನ್ನು ಸುಟ್ಟುಹಾಕಿದರು. ನಂತರ ಕೃಷ್ಣನು ಧರ್ಮರಾಯನನ್ನು ಸಮಾಧಾನಿಸಿ ಸಂತೈಸಿದನು.
ಪದಾರ್ಥ (ಕ.ಗ.ಪ)
ದುರಾತ್ಮಕ-ದುಷ್ಟಸ್ವಭಾವದ, ದುಷ್ಟನಾದ, ಪರಿವಾದ-ವಿರೋಧವಾದ (ಧರ್ಮಜನಿಗೆ ವಿರೋಧವಾದ ಮಾತುಗಳು) ಮುನಿನಿಕರ-ಋಷಿಗಳಸಮೂಹ, ಖತಿ-ಕೋಪ, ಭಾರದಲಿ-ಅತಿಯಾದ, ಹೆಚ್ಚಾದ, ಭೇದಿಸಿದರು-ತಿಳಿದರು, ಸತ್ಯವನ್ನು ಹೊರೆತೆಗೆದರು, ವಿಷಾದವಹ್ನಿ-ಕೋಪಾಗ್ನಿ, ಉರುಹು-ಸುಟ್ಟುಹಾಕು, ಆದರಿಸಿ-ಸಮಾಧಾನಿಸಿ, ಸಂತೈಸು-ಸಮಾಧಾನಿಸು
ಟಿಪ್ಪನೀ (ಕ.ಗ.ಪ)
- ಬಾಷ್ಕಳ: ಒಬ್ಬರಾಕ್ಷಸ ಹಿರಣ್ಯ ಕಶಿಪುವಿನ ಮಗ. ಮಹಿಷಾಸುರನ ಸೇನಾಪತಿ. ಚಾರ್ವಾಕ (ಬಾಷ್ಕಲ?) - ನಾಸ್ತಿಕರ ಆಚಾರ್ಯನಾದ ಚಾರ್ವಾಕನೇ ಅಲ್ಲದೆ ಕೌರವನ ಆಪ್ತ ಸ್ನೇಹಿತನಾಗಿದ್ದ ಒಬ್ಬ ರಾಕ್ಷಸವೀರ ಇವನು, ಕುಮಾರವ್ಯಾಸನು ಮಾತ್ರ ಇವನನ್ನು ‘ಬಾಷ್ಕಳ’ ಎಂದು ಹೆಸರಿಸಿದ್ದಾನೆ. (ಗದಾಪರ್ವ 13.6) ಕೌರವನ ಮರಣಾನಂತರ ಕೃಷ್ಣಾರ್ಜುನ ಭೀಮಾದಿಗಳು ಮತ್ತು ವ್ಯಾಸರು ತುಂಬ ಸಾಹಸದಿಂದ ಧರ್ಮರಾಯನನ್ನು ಪಟ್ಟಾಭಿಷೇಕಕ್ಕೆ ಒಪ್ಪಿಸುತ್ತಾರೆ. ಬ್ರಾಹ್ಮಣರಿಂದ ಆಶೀರ್ವಾದ ಮಾಡಿಸುತ್ತಾರೆ. ಚಾರ್ವಾಕನು ಅಲ್ಲಿಗೆ ಬ್ರಾಹ್ಮಣ ವೇóಷದಲ್ಲಿ ಬಂದು ಕುಳಿತಿದ್ದ. ಪಾಂಡವ ವಿನಾಶವೇ ಅವನ ಗುರಿಯಾಗಿತ್ತು. ಧರ್ಮರಾಯನಿಗೆ ಅವಮಾನ ಮಾಡಲು ಸರಿಯದ ಸಮಯವನ್ನು ಕಾದಿದ್ದು ಇದ್ದಕ್ಕಿದ್ದಂತೆ ಎದ್ದು ನಿಂತು ಬಾóಷ್ಕಲನು ಧರ್ಮರಾಯನನ್ನು ಧಿಕ್ಕರಿಸಿ ಮಾತನಾಡುತ್ತಾನೆ. ‘ದಾಯಾದಿಗಳನ್ನೆಲ್ಲ ಹೀನಾಯವಾಗಿ ಕೊಂದು ಹಾಕಿದವ ನೀನು’ ಎಂದು ಧರ್ಮರಾಯನನ್ನು ಬಗೆಬಗೆಯಾಗಿ ಮೂದಲಿಸುತ್ತಾನೆ. ಇವನ ಮಾತುಗಳನ್ನು ಕೇಳಿ ಧರ್ಮರಾಯನು ಪೆಚ್ಚಾಗಿ ತಲೆ ತಗ್ಗಿಸಿ ನಿಂತುಕೊಳ್ಳುತ್ತಾನೆ. ತುಂಬಿದ ಸಭೆಯಲ್ಲಿ ‘ದಿಗ್ಭವಂತಂ, ಕು-ನೃಪತಿಂ ಜ್ಞಾತು ಘಾತಿನ ಮಸ್ತು ವೈ’ (ಛಿ! ಧಿಕ್ಕಾರ. ಹತ್ತಿರದ ಬಂಧುಗಳನ್ನೆಲ್ಲ ಕೊಂದವನು ಈ ಧರ್ಮರಾಯ) ಎಂದು ಆಕ್ಷೇಪಿಸಿದರೆ ಧರ್ಮರಾಯ ಇನ್ನೇನು ಮಾಡಿಯಾನು?
ಮೂಲ ...{Loading}...
ಆದುದಾ ಪಟ್ಟಾಭಿಷೇಕದೊ
ಳಾ ದುರಾತ್ಮಕ ಬಾಷ್ಕಳನ ಪರಿ
ವಾದವನು ಮುನಿನಿಕರ ಕೇಳಿದು ಖತಿಯ ಭಾರದಲಿ
ಭೇದಿಸಿದರವನಸುರನೆಂದು ವಿ
ಷಾದವಹ್ನಿಯಲುರುಹಿದರು ಬಳಿ
ಕಾದರಿಸಿ ಧರ್ಮಜನ ಸಂತೈಸಿದನು ಮುರವೈರಿ ॥6॥
೦೦೭ ಅರಸ ಕೇಳೈ ...{Loading}...
ಅರಸ ಕೇಳೈ ಪಟ್ಟವದು ಹಿರಿ
ಯರಸನದು ಯುವರಾಜಪಟ್ಟವೆ
ಹರಿತನೂಜನೊಳಾಯ್ತು ಸೇನಾಪತಿ ಧನಂಜಯನು
ವರ ಕುಮಾರರು ಯಮಳರಲ್ಲಿಗೆ
ಹಿರಿಯ ಸಚಿವನು ವಿದುರನವನಿಪ
ಪರುಠವಿಸಿದ ಯುಯುತ್ಸುವನು ಸರ್ವಾಧಿಕಾರದಲಿ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜನಮೇಜಯರಾಜನೇ ಕೇಳು, ರಾಜನ ಪಟ್ಟ ಧರ್ಮರಾಯನಿಗಾಯ್ತು. ಯುವರಾಜನ ಪಟ್ಟ ಭೀಮನಿಗಾಯಿತು. ಅರ್ಜುನ ಮತ್ತು ಅವಳಿಗಳಾದ ನಕುಲ ಸಹದೇವರುಗಳು ಸೇನಾಪತಿಗಳಾದರು. ಅಲ್ಲಿಗೆ ವಿದುರ ಪ್ರಧಾನ ಸಚಿವನಾದ. ಯುಯುತ್ಸುವನ್ನು ಧರ್ಮರಾಯನು ಸರ್ವಾಧಿಕಾರಿಯಾಗಿ ನೇಮಿಸಿದ.
ಪದಾರ್ಥ (ಕ.ಗ.ಪ)
ಪಟ್ಟ-ಅರಸುತನ, ಹಿರಿಯರಸ-ದೊಡ್ಡವನಾದ ಅರಸ (ಇಲ್ಲಿ ಧರ್ಮರಾಯ), ಹರಿತನೂಜ-ಭೀಮ (ಹರಿ-ವಾಯು), ಯಮಳರು-ಅವಳಿಗಳು (ಇಲ್ಲಿ ನಕುಲ ಸಹದೇವರುಗಳು), ಪರುಠವಿಸು-ಏರ್ಪಡಿಸು, ನೇಮಿಸು
ಮೂಲ ...{Loading}...
ಅರಸ ಕೇಳೈ ಪಟ್ಟವದು ಹಿರಿ
ಯರಸನದು ಯುವರಾಜಪಟ್ಟವೆ
ಹರಿತನೂಜನೊಳಾಯ್ತು ಸೇನಾಪತಿ ಧನಂಜಯನು
ವರ ಕುಮಾರರು ಯಮಳರಲ್ಲಿಗೆ
ಹಿರಿಯ ಸಚಿವನು ವಿದುರನವನಿಪ
ಪರುಠವಿಸಿದ ಯುಯುತ್ಸುವನು ಸರ್ವಾಧಿಕಾರದಲಿ ॥7॥
೦೦೮ ವರ ಮುನೀನ್ದ್ರರ ...{Loading}...
ವರ ಮುನೀಂದ್ರರ ನಿಖಿಳ ದೇಶಾಂ
ತರದ ಭೂಸುರವರ್ಗವನು ಸ
ತ್ಕರಿಸಿದನು ಗೋ ಭೂಮಿ ವಸನ ಹಿರಣ್ಯದಾನದಲಿ
ಪರಿಜನವ ಪುರಜನವ ರತ್ನಾ
ಕರಪರೀತ ಮಹೀಜನವನಾ
ದರಿಸಿದನು ವೈಭವವಿಹಿತ ಸನ್ಮಾನ ದಾನದಲಿ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮರಾಯನು ಶ್ರೇಷ್ಠರಾದ ಮುನಿಗಳನ್ನು, ಎಲ್ಲ ದೇಶಗಳ ಬ್ರಾಹ್ಮಣ ಸಮೂಹವನ್ನು, ಗೋವು, ಭೂಮಿ ವಸ್ತ್ರ, ಚಿನ್ನದ ದಾನಗಳಿಂದ ಸತ್ಕರಿಸಿದ. ತನ್ನ ಪರಿವಾರದವರನ್ನು, ನಗರದ ಜನವನ್ನು ಸಮುದ್ರಪರ್ಯಂತ ಇರುವ ಎಲ್ಲ ಜನವನ್ನೂ ವೈಭವದೊಡನೆ ಸನ್ಮಾನ ದಾನಗಳಿಂದ ಗೌರವಿಸಿದ.
ಪದಾರ್ಥ (ಕ.ಗ.ಪ)
ನಿಖಿಳ-ಎಲ್ಲ, ದೇಶಾಂತರದ-ದೂರದ ದೇಶಗಳ, ಭೂಸುರ-ಬ್ರಾಹ್ಮಣ, ವಸನ-ವಸ್ತ್ರ, ಬಟ್ಟೆ, ಹಿರಣ್ಯ-ಚಿನ್ನ, ಪರಿಜನ-ಸುತ್ತಲೂ ಇರುವ ಜನ, ಪರಿವಾರ, ರತ್ನಾಕರಪರೀತ-ಸಮುದ್ರದಿಂದ ಆವರಿಸಲ್ಪಟ್ಟ ಭೂಮಿ (ರತ್ನಕ್ಕೆ ಆಕರವಾದುದು ರತ್ನಾಕರ-ಸಮುದ್ರ), ಮಹೀಜನ-ಭೂಮಿಯಮೇಲಿನ ಜನ.
ಮೂಲ ...{Loading}...
ವರ ಮುನೀಂದ್ರರ ನಿಖಿಳ ದೇಶಾಂ
ತರದ ಭೂಸುರವರ್ಗವನು ಸ
ತ್ಕರಿಸಿದನು ಗೋ ಭೂಮಿ ವಸನ ಹಿರಣ್ಯದಾನದಲಿ
ಪರಿಜನವ ಪುರಜನವ ರತ್ನಾ
ಕರಪರೀತ ಮಹೀಜನವನಾ
ದರಿಸಿದನು ವೈಭವವಿಹಿತ ಸನ್ಮಾನ ದಾನದಲಿ ॥8॥
೦೦೯ ಆ ಸುಯೋಧನನರಮನೆಯನವ ...{Loading}...
ಆ ಸುಯೋಧನನರಮನೆಯನವ
ನೀಶ ಹೊಕ್ಕನು ಪವನಸುತ ದು
ಶ್ಶಾಸನನ ಸದನವನು ಪಾರ್ಥಗೆ ಕರ್ಣಭವನದಲಿ
ವಾಸವಾದುದು ಯಮಳರಿಗೆ ದು
ಶ್ಯಾಸನಾನುಜರರಮನೆಗಳುಳಿ
ದೈಸುಮನೆ ಭಂಡಾರವಾದುದು ಭೂಪ ಕೇಳ್ ಎಂದ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ದುರ್ಯೋಧನನ ಅರಮನೆಯನ್ನು ಧರ್ಮರಾಯ ಪ್ರವೇಶಿಸಿದ: ಭೀಮ ದುಶ್ಶಾಸನನ ಅರಮನೆಯನ್ನು ಪ್ರವೇಶಿಸಿದ. ಅರ್ಜುನನಿಗೆ ಕರ್ಣನರಮನೆಯಲ್ಲಿ ವಾಸ. ನಕುಲ ಸಹದೇವರಿಗೆ ದುಶ್ಶಾಸನನ ತಮ್ಮಂದಿರ ಅರಮನೆಗಳಾದುವು. ಉಳಿದ ಅಷ್ಟೂ ಮನೆಗಳೂ ಭಂಡಾರವಾದುವು - ರಾಜನೇ ಕೇಳು ಎಂದು ಜನಮೇಜಯರಾಜನಿಗೆ ವೈಶಂಪಾಯನರು ಹೇಳಿದರು.
ಪದಾರ್ಥ (ಕ.ಗ.ಪ)
ಅವನೀಶ-ಭೂಮಿಯ ಒಡೆಯ (ಇಲ್ಲಿ ಧರ್ಮರಾಯ), ಐಸು-ಅಷ್ಟೂ
ಮೂಲ ...{Loading}...
ಆ ಸುಯೋಧನನರಮನೆಯನವ
ನೀಶ ಹೊಕ್ಕನು ಪವನಸುತ ದು
ಶ್ಶಾಸನನ ಸದನವನು ಪಾರ್ಥಗೆ ಕರ್ಣಭವನದಲಿ
ವಾಸವಾದುದು ಯಮಳರಿಗೆ ದು
ಶ್ಯಾಸನಾನುಜರರಮನೆಗಳುಳಿ
ದೈಸುಮನೆ ಭಂಡಾರವಾದುದು ಭೂಪ ಕೇಳೆಂದ ॥9॥
೦೧೦ ಮನ್ನಣೆಯಲಿ ಯುಯುತ್ಸು ...{Loading}...
ಮನ್ನಣೆಯಲಿ ಯುಯುತ್ಸು ಹೊಕ್ಕನು
ತನ್ನ ಮನೆಯನು ಭೀಷ್ಮ ಗುರುಕೃಪ
ರುನ್ನತಾಲಯವಾಯ್ತು ನೃಪನ ಪಸಾಯ್ತಸಂತತಿಗೆ
ಮುನ್ನಿನವರೇ ಮಂತ್ರಿ ಸಚಿವರು
ಮುನ್ನದಾವಂಗಾವ ಪರುಠವ
ಭಿನ್ನವಿಲ್ಲದೆ ಪೌರಜನವೆಸೆದಿರ್ದುದಿಭಪುರಿಯ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯುಯುತ್ಸುವು ವಿಜೃಂಭಂಣೆಯಿಂದ ತನ್ನ ಅರಮನೆಗೆ ಪ್ರವೇಶ ಮಾಡಿದ; ಭೀಷ್ಮ, ದ್ರೋಣ, ಕೃಪಾಚಾರ್ಯರ ವೈಭವಪೂರ್ಣವಾದ ಮನೆಗಳು ಧರ್ಮರಾಯನ ಸಾಮಂತರಾಜಸಮೂಹಕ್ಕಾದುವು. ಮೊದಲಿನವರೇ ಮಂತ್ರಿಗಳು ಹಾಗೂ ಸಚಿವರುಗಳು. ಮೊದಲು ಯಾರಿಗೆ ಯಾವ ಜವಾಬ್ದಾರಿಯಿತ್ತೋ ಅವೇ ಜವಾಬ್ದಾರಿಗಳು ಯಾವ ವ್ಯತ್ಯಾಸವೂ ಇಲ್ಲದೆ ಮುಂದುವರಿದವು. ಪುರಜನರು ಹಸ್ತಿನಾವತಿಯಲ್ಲಿ ತುಂಬಿದ್ದರು.
ಪದಾರ್ಥ (ಕ.ಗ.ಪ)
ಮನ್ನಣೆ-ವೈಭವ, ಗೌರವ, ಉನ್ನತಾಲಯ-ಶ್ರೇಷ್ಠವಾದ ಮನೆ, ಪಸಾಯ್ತಸಂತತಿ-ಸಾಮಂತ ರಾಜರ ವಂಶ, ಸಾಮಂತ ರಾಜರ ಗುಂಪು, ಮಂತ್ರಿ-ರಾಜನಿಗೆ ಸಲಹೆ ನೀಡುವ ಉನ್ನತ ಹುದ್ದೆಯನ್ನಲಂಕರಿಸಿದವರು, ಸಚಿವ-ರಾಜಾಸ್ಥಾನದಲ್ಲಿ ಉನ್ನತ ಹುದ್ದೆಯನ್ನು ಹೊಂದಿರುವ ಅಧಿಕಾರಿ, ಪರುಠವ-ಜವಾಬ್ದಾರಿ, ಹೊಣೆ, ಭಿನ್ನವಿಲ್ಲದೆ-ವ್ಯತ್ಯಾಸವಿಲ್ಲದೆ, ಭೇದವಿಲ್ಲದೆ, ಎಸೆದಿರ್ದುದು - ಶೋಭೆಯಿಂದಿದ್ದುದು.
ಮೂಲ ...{Loading}...
ಮನ್ನಣೆಯಲಿ ಯುಯುತ್ಸು ಹೊಕ್ಕನು
ತನ್ನ ಮನೆಯನು ಭೀಷ್ಮ ಗುರುಕೃಪ
ರುನ್ನತಾಲಯವಾಯ್ತು ನೃಪನ ಪಸಾಯ್ತಸಂತತಿಗೆ
ಮುನ್ನಿನವರೇ ಮಂತ್ರಿ ಸಚಿವರು
ಮುನ್ನದಾವಂಗಾವ ಪರುಠವ
ಭಿನ್ನವಿಲ್ಲದೆ ಪೌರಜನವೆಸೆದಿರ್ದುದಿಭಪುರಿಯ ॥10॥
೦೧೧ ಅರಸು ಧರ್ಮಜನಾದ ...{Loading}...
ಅರಸು ಧರ್ಮಜನಾದ ನಮಗಿ
ನ್ನುರವಣಿಪ ಮನ ಬೇಡ ಬೇಡು
ತ್ತರಿಸುವಿಹಪರವೆರಡ ಪಡೆದವು ನಿಖಿಳ ಜಗ ಹೊಗಳೆ
ಪರಿಮಿತದ ಜನ ತಮ್ಮ ಸುಬಲವ
ನಿರದೆ ಮಾಡುವೆನೆಂದು ಮುನಿಜನ
ಧರಣಿಸುರರೊಳಗಾದ ಪುರಜನರೊಲಿದು ಹರಸಿದರು ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮರಾಯನು ರಾಜನಾದ. ನಮಗೆ ಇನ್ನು ಆತಂಕ ಬೇಡ. ಇಹ - ಪರಗಳೆರಡನ್ನೂ ದಾಟುವ ಭಾಗ್ಯವನ್ನು ಪಡೆದೆವೆಂದು ಸಮಸ್ತ ಜನವೂ ಹೊಗಳಿತು. ಆಪ್ತರಾದ ಜನತೆಯು, ತಮ್ಮ ತಮ್ಮ ಕೈಲಾದ ಉತ್ತಮ ಸಹಾಯವನ್ನು ಮಾಡುತ್ತೇವೆಂದರು. ಮುನಿಜನರು, ಬ್ರಾಹ್ಮಣರು ಮುಂತಾದ ಎಲ್ಲ ಪರಿಜನರೂ ಪ್ರೀತಿಯಿಂದ ಪಾಂಡವರನ್ನು ಹರಸಿದರು.
ಪದಾರ್ಥ (ಕ.ಗ.ಪ)
ಉರವಣಿಪ-ಸಂಭ್ರಮಿಸುವ, ಸಡಗರಿಸುವ, ಉತ್ತರಿಸು-ದಾಟು, ಇಹಪರ-ಇಹಲೋಕ ಮತ್ತು ಪರಲೋಕ, ಪರಿಮಿತದ ಜನ-ಆಪ್ತರಾದ ಜನ, ಸುಬಲ-ಉತ್ತಮ ಶಕ್ತಿ ಸಾಮಥ್ರ್ಯ, ಪುರಜನ-ಪಟ್ಟಣದ ಜನತೆ
ಮೂಲ ...{Loading}...
ಅರಸು ಧರ್ಮಜನಾದ ನಮಗಿ
ನ್ನುರವಣಿಪ ಮನ ಬೇಡ ಬೇಡು
ತ್ತರಿಸುವಿಹಪರವೆರಡ ಪಡೆದವು ನಿಖಿಳ ಜಗ ಹೊಗಳೆ
ಪರಿಮಿತದ ಜನ ತಮ್ಮ ಸುಬಲವ
ನಿರದೆ ಮಾಡುವೆನೆಂದು ಮುನಿಜನ
ಧರಣಿಸುರರೊಳಗಾದ ಪುರಜನರೊಲಿದು ಹರಸಿದರು ॥11॥
೦೧೨ ಬಳಿಕ ಭೀಷ್ಮನ ...{Loading}...
ಬಳಿಕ ಭೀಷ್ಮನ ಬಾಣಶಯನ
ಸ್ಥಳಕೆ ಧರ್ಮಜ ಬಂದು ಧರ್ಮಂ
ಗಳನು ಕೇಳಿದು ರಾಜಧರ್ಮ ಸಮಸ್ತಧರ್ಮವನು
ತಿಳಿದನಗ್ಗದ ದಾನಧರ್ಮಾ
ವಳಿಯನಾತನ ರಾಜ್ಯಪಾಲನ
ನಳ ನಹುಷ ಭರತಾದಿ ಭೂಪರ ಗತಿಗೆ ಗುರುವಾಯ್ತು ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಂತರ ಭೀಷ್ಮನ ಶರಶಯನ ಸ್ಥಳಕ್ಕೆ ಧರ್ಮರಾಯ ಬಂದು ಧರ್ಮದ ವಿಚಾರಗಳನ್ನು ಅವರಿಂದ ಕೇಳಿ, ರಾಜಧರ್ಮ ಮತ್ತು ಸಮಸ್ತಧರ್ಮವನ್ನೂ ತಿಳಿದನು. ಶ್ರೇಷ್ಠವಾದ ದಾನಧರ್ಮಗಳನ್ನೂ ತಿಳಿದನು. ಅವನ ರಾಜ್ಯಪಾಲನೆಯು ನಳ, ನಹುಷ, ಭರತನೇ ಮುಂತಾದ ರಾಜರ ರೀತಿಗೂ ಮಿಗಿಲಾಯಿತು.
ಪದಾರ್ಥ (ಕ.ಗ.ಪ)
ಬಾಣಶಯನ-ಬಾಣಗಳ ಹಾಸಿಗೆ, ಶರಶಯನ, ಅಗ್ಗದ-ಶ್ರೇಷ್ಠವಾದ, ರಾಜ್ಯಪಾಲನ-ರಾಜ್ಯವನ್ನು ಪಾಲಿಸುವ ಕ್ರಮ, ಗತಿಗೆ-ರೀತಿಗೆ, ಕ್ರಮಕ್ಕೆ, ಗುರುವಾಯ್ತು-ಮಿಗಿಲಾಯ್ತು,
ಮೂಲ ...{Loading}...
ಬಳಿಕ ಭೀಷ್ಮನ ಬಾಣಶಯನ
ಸ್ಥಳಕೆ ಧರ್ಮಜ ಬಂದು ಧರ್ಮಂ
ಗಳನು ಕೇಳಿದು ರಾಜಧರ್ಮ ಸಮಸ್ತಧರ್ಮವನು
ತಿಳಿದನಗ್ಗದ ದಾನಧರ್ಮಾ
ವಳಿಯನಾತನ ರಾಜ್ಯಪಾಲನ
ನಳ ನಹುಷ ಭರತಾದಿ ಭೂಪರ ಗತಿಗೆ ಗುರುವಾಯ್ತು ॥12॥
೦೧೩ ಕದನದಲಿ ಕಯ್ಯಾರೆ ...{Loading}...
ಕದನದಲಿ ಕಯ್ಯಾರೆ ದೈತ್ಯರ
ಸದೆದು ಭೂಭಾರವನು ಪರಹ
ಸ್ತದಲಿ ಕಟ್ಟಿಸಿ ಕೊಟ್ಟಭಾಷೆಯನುತ್ತರಾಯೆನಿಸಿ
ನದಿಯ ನಂದನನನು ಪರಾನಂ
ದದಲಿಸೇರಿಸಿ ಪರಮ ಪರಿತೋ
ಷದಲಿ ಪಯಣವ ಮಾಡಿದನು ಮುರವೈರಿ ನಿಜಪುರಿಗೆ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯುದ್ಧದಲ್ಲಿ ತನ್ನ ಕೈಗಳಿಂದಲೇ ರಾಕ್ಷಸರನ್ನು ಸಂಹರಿಸಿ, ಭೂಭಾರವನ್ನು ಬೇರೆಯವರ ಕೈಯಿಂದ ನಾಶಪಡಿಸಿ, ಕೊಟ್ಟ ಭಾಷೆಯನ್ನು ಉತ್ತರಾಯವೆನ್ನಿಸಿ, ಭೀಷ್ಮನನ್ನು ಪಾರಲೌಕಿಕದ ಆನಂದಲ್ಲಿ (ಸ್ವರ್ಗದಲ್ಲಿ) ಸೇರಿಸಿ, ಪರಮ ಸಂತೋಷದಿಂದ ಕೃಷ್ಣ ತನ್ನ ನಗರವಾದ ದ್ವಾರಕೆಗೆ ಪ್ರಯಾಣ ಮಾಡಿದ.
ಪದಾರ್ಥ (ಕ.ಗ.ಪ)
ಕೈಯಾರೆ-ಸ್ವತಃ, ತನ್ನ ಕೈಗಳಿಂದ, ದೈತ್ಯರ-ರಾಕ್ಷಸರನ್ನು, ಸದೆದು-ಸಂಹರಿಸಿ, ಭೂಭಾರ-ಭೂಮಿಗೆ ಭಾರವಾಗುವಷ್ಟು ಜನಸಂಖ್ಯೆ, ಪರಹಸ್ತದಲಿ-ಬೇರೆಯವರ ಕೈಯಿಂದ, ಕಟ್ಟಿಸಿ-ಆಗು ಮಾಡಿಸಿ, ಉತ್ತರಾಯ-ಹೊಣೆಗಾರ , ನದಿಯನಂದನ- ಗಂಗೆಯಮಗ, ಭೀಷ್ಮ, ಪರಾನಂದ-ಪರಲೋಕದ ಆನಂದ, ಸ್ವರ್ಗಾನಂದ, ಪರಿತೋಷ-ಸಂತೋಷ, ಪಯಣ-ಪ್ರಯಾಣ(ಸಂ.) ನಿಜಪುರಿ-ಸ್ವಂತಊರು (ಇಲ್ಲಿ, ದ್ವಾರಕೆ)
ಮೂಲ ...{Loading}...
ಕದನದಲಿ ಕಯ್ಯಾರೆ ದೈತ್ಯರ
ಸದೆದು ಭೂಭಾರವನು ಪರಹ
ಸ್ತದಲಿ ಕಟ್ಟಿಸಿ ಕೊಟ್ಟಭಾಷೆಯನುತ್ತರಾಯೆನಿಸಿ
ನದಿಯ ನಂದನನನು ಪರಾನಂ
ದದಲಿಸೇರಿಸಿ ಪರಮ ಪರಿತೋ
ಷದಲಿ ಪಯಣವ ಮಾಡಿದನು ಮುರವೈರಿ ನಿಜಪುರಿಗೆ ॥13॥
೦೧೪ ಯಮಸುತನ ತಕ್ಕೈಸಿ ...{Loading}...
ಯಮಸುತನ ತಕ್ಕೈಸಿ ಭೀಮನ
ಮಮತೆಯನು ಭುಲ್ಲೈಸಿ ಪಾರ್ಥನ
ನಮಿತ ಮಕುಟವ ನೆಗಹಿ ಪುಳಕಾಶ್ರುಗಳ ಪೂರದಲಿ
ಯಮಳರನು ಬೋಳೈಸಿ ರಾಯನ
ರಮಣಿಯನು ಸಂತೈಸಿ ವಿದುರ
ಪ್ರಮುಖರನು ಬೀಳ್ಕೊಟ್ಟು ಬಿಜಯಂಗೈದನಸುರಾರಿ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮರಾಯನನ್ನು ಅಪ್ಪಿಕೊಂಡು, ಭೀಮನ ಮಮತೆಯನ್ನು ಉತ್ಸಾಹದಿಂದ ಸ್ವೀಕರಿಸಿ, ಅರ್ಜುನನ ನಮಸ್ಕರಿಸಿದ ಶಿರವನ್ನು ಎತ್ತಿ, ಆನಂದ ಪುಳಕದಿಂದ ಬರುತ್ತಿದ್ದ ಕಣ್ಣೀರಿನೊಂದಿಗೆ ನಕುಲ ಸಹದೇವರನ್ನು ಸಮಾಧಾನಪಡಿಸಿ, ಧರ್ಮಜನ ಪತ್ನಿ ದ್ರೌಪದಿಯನ್ನು ಸಂತೈಸಿ, ವಿದುರಾದಿ ಪ್ರಮುಖರನ್ನು ಬೀಳ್ಕೊಟ್ಟು ಕೃಷ್ಣ ಅಲ್ಲಿಂದ ಹೊರಟ.
ಪದಾರ್ಥ (ಕ.ಗ.ಪ)
ಯಮಸುತ-ಯಮಧರ್ಮರಾಯನ ಮಗ, ಧರ್ಮರಾಯ, ತಕ್ಕೈಸಿ-ಅಪ್ಪಿಕೊಂಡು, ಮಮತೆ-ಪ್ರೀತಿ, ಭುಲ್ಲೈಸಿ-ಉತ್ಸಾಹಿಸಿ, ನಮಿತ-ನಮಸ್ಕರಿಸಿದ, ಮಕುಟ-ತಲೆ, ಶಿರಸ್ಸು, ಪುಳಕಾಶ್ರು ಪೂರದಲಿ-ಸಂತೋಷದಿಂದ ಸುರಿಯುವ ಕಣ್ಣೀರಿನ ಪ್ರವಾಹದಲ್ಲಿ, ಯಮಳ-ಅವಳಿಗಳಾದ ನಕುಲ ಸಹದೇವರು, ಬಿಜಯಂಗೈದನು-ಹೊರಟನು.
ಮೂಲ ...{Loading}...
ಯಮಸುತನ ತಕ್ಕೈಸಿ ಭೀಮನ
ಮಮತೆಯನು ಭುಲ್ಲೈಸಿ ಪಾರ್ಥನ
ನಮಿತ ಮಕುಟವ ನೆಗಹಿ ಪುಳಕಾಶ್ರುಗಳ ಪೂರದಲಿ
ಯಮಳರನು ಬೋಳೈಸಿ ರಾಯನ
ರಮಣಿಯನು ಸಂತೈಸಿ ವಿದುರ
ಪ್ರಮುಖರನು ಬೀಳ್ಕೊಟ್ಟು ಬಿಜಯಂಗೈದನಸುರಾರಿ ॥14॥
೦೧೫ ದೇವ ದುನ್ದುಭಿರವದ ...{Loading}...
ದೇವ ದುಂದುಭಿರವದ ಗಗನದ
ಹೂವಳೆಯ ಪೂರದ ಸಮಸ್ತ ಜ
ನಾವಳಿಯ ಜಯಜೀಯ ನಿರ್ಘೋಷದ ಗಡಾವಣೆಯ
ದೇವಕಿಯ ವಸುದೇವ ರುಕುಮಿಣಿ
ದೇವಿಯಾದಿಯ ಹರುಷದಾವಿ
ರ್ಭಾವ ಮಿಗೆ ನಿಜಪುರವ ಹೊಕ್ಕನು ವೀರನಾರಯಣ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೇವದುಂದುಭಿಗಳ ಧ್ವನಿಯಲ್ಲಿ, ಆಕಾಶದಿಂದ ಬಿದ್ದ ಹೂಮಳೆಯ ಧಾರೆಯಲ್ಲಿ, ಸಮಸ್ತ ಜನಸಮೂಹದ ‘ಮಹಾಸ್ವಾಮಿ, ಜಯವಾಗಲಿ’ ಎಂಬ ಘೋಷಣೆಯ ಮಹಾಧ್ವನಿಯಲ್ಲಿ, ದೇವಕಿ, ವಸುದೇವ, ರುಕ್ಮಣಿಯರೇ ಮುಂತಾದವರ ಸಂತೋಷವು ಉಕ್ಕಿ ಪ್ರಕಟವಾಗುತ್ತಿರಲು ವೀರನಾರಾಯಣನಾದ ಕೃಷ್ಣನು ತನ್ನ ನಗರವಾದ ದ್ವಾರಕಾವತಿಯನ್ನು ಪ್ರವೇಶಿಸಿದನು.
ಪದಾರ್ಥ (ಕ.ಗ.ಪ)
ದೇವದುಂದುಭಿರವ-ದೇವತೆಗಳ ಮಂಗಳ ವಾದ್ಯದ ಧ್ವನಿ, ಗಗನ-ಆಕಾಶ, ಹೂವಳೆ-(ಹೂ+ಮಳೆ) ಹೂವಿನ ಮಳೆ, ಪುಷ್ಪವೃಷ್ಟಿ, ಪೂರದ-ತುಂಬಿದ, ಪ್ರವಾಹದ, ಧಾರೆಯ, ನಿರ್ಘೋಷ-ಶಬ್ದ, ಗಡಾವಣೆ-ಮಹಾಧ್ವನಿ, ಆವಿರ್ಭಾವ-ಪ್ರಕಟ, ಮಿಗೆ-ಹೆಚ್ಚಾಗಲು
ಮೂಲ ...{Loading}...
ದೇವ ದುಂದುಭಿರವದ ಗಗನದ
ಹೂವಳೆಯ ಪೂರದ ಸಮಸ್ತ ಜ
ನಾವಳಿಯ ಜಯಜೀಯ ನಿರ್ಘೋಷದ ಗಡಾವಣೆಯ
ದೇವಕಿಯ ವಸುದೇವ ರುಕುಮಿಣಿ
ದೇವಿಯಾದಿಯ ಹರುಷದಾವಿ
ರ್ಭಾವ ಮಿಗೆ ನಿಜಪುರವ ಹೊಕ್ಕನು ವೀರನಾರಯಣ ॥15॥
೦೧೬ ಭವದುರಿತಹರವಕಟ ಹರಿನಾ ...{Loading}...
ಭವದುರಿತಹರವಕಟ ಹರಿನಾ
ಮವನು ನೆನೆವರು ಕಾಲಚಕ್ರದ
ಜವನ ಬೇಗೆಯ ಜುಣುಗಿ ಜಾರುವರಖಿಳ ಮಾನವರು
ಕವಿ ಕುಮಾರವ್ಯಾಸಸೂಕ್ತದ
ಸವೆಯದಮೃತವನೊಲಿದೊಲಿದು ಸು
ಶ್ರವಣದಲಿ ಕುಡಿಕುಡಿದು ಪದವಿಯ ಪಡೆವುದೀ ಲೋಕ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹುಟ್ಟು ಸಾವುಗಳೆಂಬ ಪಾಪದ ನಾಶಕವಲ್ಲವೇ ಹರಿನಾಮ, ಅಂತಹ ಹರಿನಾಮವನ್ನು ನೆನೆಯುವ ಎಲ್ಲ ಮಾನವರೂ ಕಾಲಚಕ್ರದ ಯಮನ ಬಾಧೆಯ ಬೆಂಕಿಯನ್ನು ತಪ್ಪಿಸಿ ಜಾರಿಹೋಗುತ್ತಾರೆ. ಕುಮಾರವ್ಯಾಸ ಕವಿಯ ಮಾತುಗಳೆಂಬ ಅಮೃತವನ್ನು ಪ್ರೀತಿಯಿಂದ ಕಿವಿಗಳಲ್ಲಿ ಕೇಳಿ ಕೇಳಿ ಲೋಕವು ಪರಮಪದವಿಯನ್ನು ಪಡೆಯುವುದು.
ಪದಾರ್ಥ (ಕ.ಗ.ಪ)
ಭವ-ಹುಟ್ಟುಸಾವುಗಳೆಂಬ ಚಕ್ರ, ದುರಿತ-ಪಾಪ, ಹರ-ನಾಶಮಾಡುವುದು, ಕಾಲಚಕ್ರ-ಕಾಲವೆಂಬ ಚಕ್ರ; ಯಮನ ಚಕ್ರ, ಜವ-ಯಮ(ಸಂ.) ಬೇಗೆ-ಬೆಂಕಿ, ಉರಿ, ಜುಣಿಗಿ-ತಪ್ಪಿಸಿಕೊಂಡು, ಜಾರುವರು-ಜಾರಿ ಹೋಗುತ್ತಾರೆ, ದಾಟಿ ಹೋಗುತ್ತಾರೆ, ಸೂಕ್ತಿ-ಮಾತುಗಳು, ಒಳ್ಳೆಯ ಮಾತುಗಳು (ಸು+ಉಕ್ತಿ-ಸೂಕ್ತಿ) ಸವೆಯದ-ಕಡಿಮೆಯಾಗದ, ಸುಶ್ರವಣ-ಒಳ್ಳೆಯ ರೀತಿಯಲ್ಲಿ ಕೇಳುವುದು, ಪದವಿ-ಸ್ವರ್ಗದಲ್ಲಿ ಸ್ಥಾನ, ಶ್ರೇಷ್ಠವಾದ ಸ್ಥಾನ
ಮೂಲ ...{Loading}...
ಭವದುರಿತಹರವಕಟ ಹರಿನಾ
ಮವನು ನೆನೆವರು ಕಾಲಚಕ್ರದ
ಜವನ ಬೇಗೆಯ ಜುಣುಗಿ ಜಾರುವರಖಿಳ ಮಾನವರು
ಕವಿ ಕುಮಾರವ್ಯಾಸಸೂಕ್ತದ
ಸವೆಯದಮೃತವನೊಲಿದೊಲಿದು ಸು
ಶ್ರವಣದಲಿ ಕುಡಿಕುಡಿದು ಪದವಿಯ ಪಡೆವುದೀ ಲೋಕ ॥16॥
೦೧೭ ಶ್ರೀಮದಮರಾಧೀಶ ನುತಗುಣ ...{Loading}...
ಶ್ರೀಮದಮರಾಧೀಶ ನುತಗುಣ
ತಾಮರಸಪದ ವಿಪುಳನಿರ್ಮಳ
ನಾಮನನುಪಮ ನಿಖಿಳಯತಿಪತಿದಿವಿಜವಂದಿತನು
ರಾಮನೂರ್ಜಿತನಾಮ ಸುಧೆಯಾ
ರಾಮನಾಹವಭೀಮ ರಘುಕುಲ
ರಾಮ ಪಾಲಿಸುವೊಲಿದು ಗದುಗಿನ ವೀರನಾರಯಣ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೇವೇಂದ್ರನಿಂದ ಹೊಗಳಲ್ಪಟ್ಟ ಪಾದಕಮಲಗಳನ್ನುಳ್ಳವನೂ, ಭವ್ಯವಾದ ನಿರ್ಮಲನಾಮನೂ, ಅನುಪಮರಾದ ಎಲ್ಲ ಯತಿಶ್ರೇಷ್ಠರು ಮತ್ತು ದೇವತೆಗಳಿಂದ ವಂದಿತನೂ, ರಾಮನೆಂಬ ಹೆಸರನ್ನು ಉನ್ನತಿಗೊಯ್ದವನೂ, ಅಮೃತಕ್ಕೆ ನಿವಾಸವೂ, ಯುದ್ಧದಲ್ಲಿ ಭೀಮ ಪರಾಕ್ರಮಿಯೂ ಆದ ರಘುಕುಲರಾಮನಾದ ಗದುಗಿನ ವೀರನಾರಾಯಣನೇ ಪ್ರೀತಿಯಿಂದ ನಮ್ಮನ್ನು ಕಾಪಾಡು.
ಪದಾರ್ಥ (ಕ.ಗ.ಪ)
ಅಮರಾಧೀಶ-ದೇವತೆಗಳ ಒಡೆಯ, ಇಂದ್ರ, ನುತಗುಣ-ಹೊಗಳಲ್ಪಟ್ಟಗುಣ, ತಾಮರಸ-ತಾವರೆಹೂ, ಪದ-ಪಾದ, ವಿಪುಳ-ಹೆಚ್ಚಾದ, ನಿರ್ಮಳ-ಶುದ್ಧವಾದ, ಅನುಪಮ-ಹೋಲಿಕೆಯಿಲ್ಲದ, ನಿಖಿಳ-ಸಮಸ್ತ, ಯತಿಪತಿ-ಮುನಿಶ್ರೇಷ್ಠರು, ದಿವಿಜ-ದೇವತೆ, ವಂದಿತ-ನಮಸರಿಸಲ್ಪಟ್ಟ, ಊರ್ಜಿತನಾಮ-ಹೆಸರಿಗೆ ಉನ್ನತಿಯನ್ನು ತಂದವನು, ಸುಧೆಯಾರಾಮ-ಅಮೃತಕ್ಕೆ ನೆಲೆ, ಆಹವಭೀಮ-ಯುದ್ಧದಲ್ಲಿ ಭೀಮಪರಾಕ್ರಮಿಯಾದವನು.
ಟಿಪ್ಪನೀ (ಕ.ಗ.ಪ)
ಇದೇ ಪದ್ಯವು ಸ್ವಲ್ಪ ವ್ಯತ್ಯಾಸಗಳೊಂದಿಗೆ ಪೀಠಿಕಾ ಸಂಧಿಯ 8 ನೆಯ ಪದ್ಯವಾಗಿಯೂ ಬಂದಿದೆ.
ಮೂಲ ...{Loading}...
ಶ್ರೀಮದಮರಾಧೀಶ ನುತಗುಣ
ತಾಮರಸಪದ ವಿಪುಳನಿರ್ಮಳ
ನಾಮನನುಪಮ ನಿಖಿಳಯತಿಪತಿದಿವಿಜವಂದಿತನು
ರಾಮನೂರ್ಜಿತನಾಮ ಸುಧೆಯಾ
ರಾಮನಾಹವಭೀಮ ರಘುಕುಲ
ರಾಮ ಪಾಲಿಸುವೊಲಿದು ಗದುಗಿನ ವೀರನಾರಯಣ ॥17॥
೦೧೮ ಅರಸ ವೈಶಮ್ಪಾಯನಿಗೆ ...{Loading}...
ಅರಸ ವೈಶಂಪಾಯನಿಗೆ ನಿಜ
ಕರವ ಮುಗಿದು ಸುವರ್ಣವಸ್ತ್ರಾ
ಭರಣ ಗೋವ್ರಜ ಭೂಮಿ ಕನ್ಯಾದಾನ ಮಣಿಗಣದಿ
ಹಿರಿದು ಪರಿಯಲಿ ಮನದಣಿವವೋ
ಲುರುತರದ ದ್ರವ್ಯಾದಿಗಳ ಭೂ
ಸುರರಿಗಿತ್ತನು ರಾಯ ಜನಮೇಜಯಮಹೀಪಾಲ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಾಜನಾದ ಜನಮೇಜಯನು ವೈಶಂಪಾಯನ ಮುನಿಗೆ ತನ್ನ ಕೈಗಳನ್ನು ಮುಗಿದು, ಚಿನ್ನ, ವಸ್ತ್ರ, ಆಭರಣ, ಗೋವು ಭೂಮಿ, ಕನ್ಯೆ, ಶ್ರೇಷ್ಠ ಮಣಿಗಳು ಮುಂತಾದ ಶ್ರೇಷ್ಠವಾದ ದ್ರವ್ಯಾದಿಗಳನ್ನು ದೊಡ್ಡ ಪ್ರಮಾಣದಲ್ಲಿ, ಮನದಣಿಯುವಂತೆ, ಬ್ರಾಹ್ಮಣರಿಗೆ ದಾನವಾಗಿ ನೀಡಿದನು.
ಪದಾರ್ಥ (ಕ.ಗ.ಪ)
ಸುವರ್ಣ-ಸ್ವರ್ಣ, ಚಿನ್ನ, ಗೋವ್ರಜ-ಗೋವುಗಳ ಸಮೂಹ, ಮಣಿಗಣ-ಬೆಲೆಬಾಳುವ ಮಣಿಗಳ ಮೊತ್ತ, ಉರುತರದ-ಶ್ರೇಷ್ಠವಾದ, ದ್ರವ್ಯಾದಿಗಳು-ಶ್ರೇಷ್ಠ ವಸ್ತುಗಳೇ ಮೊದಲಾದವುಗಳು, ಭೂಸುರರು-ಬ್ರಾಹ್ಮಣರು
ಟಿಪ್ಪನೀ (ಕ.ಗ.ಪ)
- ವೈಶಂಪಾಯಮುನಿ-ವೈಶಂಪಾಯನನೆಂಬ ಋಷಿ. ಈತನು ಜನಮೇಜಯನು ಮಾಡಿದ ಸರ್ಪಯಾಗದ ಸಂದರ್ಭದಲ್ಲಿ, ಸರ್ಪನಾಶದ ದೋಷದ ಪರಿಹಾರಕ್ಕಾಗಿ, ಮಹಾಭಾರತದ ಕಥೆಯನ್ನು ಜನಮೇಜಯರಾಯನಿಗೆ ಹೇಳಿದನು.
- ಜನಮೇಜಯ-ಈತನು ಅಭಿಮನ್ಯುವಿನ ಮಗನಾದ ಪರೀಕ್ಷಿತರಾಜನ ಮಗ.
ಮೂಲ ...{Loading}...
ಅರಸ ವೈಶಂಪಾಯನಿಗೆ ನಿಜ
ಕರವ ಮುಗಿದು ಸುವರ್ಣವಸ್ತ್ರಾ
ಭರಣ ಗೋವ್ರಜ ಭೂಮಿ ಕನ್ಯಾದಾನ ಮಣಿಗಣದಿ
ಹಿರಿದು ಪರಿಯಲಿ ಮನದಣಿವವೋ
ಲುರುತರದ ದ್ರವ್ಯಾದಿಗಳ ಭೂ
ಸುರರಿಗಿತ್ತನು ರಾಯ ಜನಮೇಜಯಮಹೀಪಾಲ ॥18॥
೦೧೯ ಸರ್ಪಯಾಗದೊಳಾದ ಕರ್ಮದ ...{Loading}...
ಸರ್ಪಯಾಗದೊಳಾದ ಕರ್ಮದ
ದರ್ಪವನು ಕೆಡೆಯೊದೆದು ಬೆಳಗಿದ
ನುಪ್ಪರದ ರವಿತೇಜದಲಿ ಸುರನರರು ಬೆರಗಾಗೆ
ತಪ್ಪದೀ ಭಾರತವ ಕೇಳ್ದಂ
ಗಪ್ಪುದಮರಸ್ತ್ರೀಕದಂಬದೊ
ಳೊಪ್ಪುವಿಂದ್ರನ ಪದವಿಯೆಂದನು ಸೂತ ಕೈಮುಗಿದು ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜನಮೇಜಯರಾಯನು ಸರ್ಪಯಾಗದಿಂದುಂಟಾದ ಅತಿಶಯವಾದ ಪಾಪಕರ್ಮಗಳನ್ನು ಕಳೆದುಕೊಂಡು , ಸುರನರರು ಬೆರಗಾಗುವಂತೆ ಉತ್ಕೃಷ್ಟವಾದ ಸೂರ್ಯನ ತೇಜಸ್ಸಿನಲ್ಲಿ ಪ್ರಕಾಶಿಸಿದನು. ಈ ಭಾರತದ ಕಥೆಯನ್ನು ಕೇಳಿದವನಿಗೆ ದೇವನಾರಿಯರ ಸಮೂಹದಲ್ಲಿ ಶೋಭಿಸುವ ಇಂದ್ರನ ಪದವಿಯು ತಪ್ಪದೇ ದೊರೆಯುತ್ತದೆ ಎಂದು ಹೇಳಿ ಸೂತನು ಕಥೆಯನ್ನು ಕೇಳುತ್ತಿದ್ದವರಿಗೆಲ್ಲರಿಗೂ ಕೈಮುಗಿದ.
ಪದಾರ್ಥ (ಕ.ಗ.ಪ)
ದರ್ಪ-ಅಹಂಕಾರ, ಉದ್ದಟತನ, ಕೆಡೆಯೊಡೆದು-ಕೆಡೆಯುವಂತೆ ಒದೆದು, ಬೀಳುವಂತೆ ಒದೆದು, ಉಪ್ಪರ-ಉನ್ನತಿ, ಅತಿಶಯ, ಉತ್ಕೃಷ್ಟ, ರವಿತೇಜ-ಸೂರ್ಯನ ತೇಜಸ್ಸು, ಸೂರ್ಯನಪ್ರಭೆ, ಅಪ್ಪುದು-ಆಗುವುದು, ದೊರೆಯುವುದು, ಅಮರಸ್ತ್ರೀ-ದೇವಲೋಕ ಮಹಿಳೆ, ಕದಂಬ-ಗುಂಪು, ಸಮೂಹ
ಮೂಲ ...{Loading}...
ಸರ್ಪಯಾಗದೊಳಾದ ಕರ್ಮದ
ದರ್ಪವನು ಕೆಡೆಯೊದೆದು ಬೆಳಗಿದ
ನುಪ್ಪರದ ರವಿತೇಜದಲಿ ಸುರನರರು ಬೆರಗಾಗೆ
ತಪ್ಪದೀ ಭಾರತವ ಕೇಳ್ದಂ
ಗಪ್ಪುದಮರಸ್ತ್ರೀಕದಂಬದೊ
ಳೊಪ್ಪುವಿಂದ್ರನ ಪದವಿಯೆಂದನು ಸೂತ ಕೈಮುಗಿದು ॥19॥
೦೨೦ ವೇದಪಾರಾಯಣದ ಫಲ ...{Loading}...
ವೇದಪಾರಾಯಣದ ಫಲ ಗಂ
ಗಾದಿ ತೀರ್ಥಸ್ನಾನಫಲ ಕೃ
ಚ್ಛ್ರಾದಿ ತಪಸಿನ ಫಲವು ಜ್ಯೋತಿಷ್ಟೋಮಯಾಗಫಲ
ಮೇದಿನಿಯನೊಲಿದಿತ್ತ ಫಲ ವ
ಸ್ತ್ರಾದಿ ಕನ್ಯಾದಾನಫಲವಹು
ದಾದರಿಸಿ ಭಾರತದೊಳೊಂದಕ್ಷರವ ಕೇಳ್ದರಿಗೆ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವೇದಗಳನ್ನು ಪಾರಾಯಣ ಮಾಡುವುದರಿಂದ ಗಂಗಾನದಿಯೇ ಮುಂತಾದ ಪುಣ್ಯನದಿಗಳಲ್ಲಿ ಸ್ನಾನಮಾಡುವುದರಿಂದ, ಕೃಚ್ಛೃವೇ ಮುಂತಾದ ತಪಸ್ಸುಗಳಿಂದ , ಜ್ಯೋತಿಷ್ಟೋಮ ಯಾಗವನ್ನು ಮಾಡುವುದರಿಂದ , ಸಂತೋಷದಿಂದ ಭೂಮಿಯನ್ನು ದಾನ ಮಾಡುವುದರಿಂದ ದೊರೆಯುವ ಫಲ, ವಸ್ತ್ರಗಳು ಮತ್ತು ಕನ್ಯೆಯನ್ನು ದಾನ ಮಾಡುವುದರಿಂದ ದೊರೆಯುವ ಫಲವು, ಈ ಭಾರತದಲ್ಲಿ ಒಂದು ಅಕ್ಷರವನ್ನಾದರೂ ಆದರದಿಂದ ಕೇಳಿದವರಿಗೆ ದೊರೆಯುತ್ತದೆ.
ಪದಾರ್ಥ (ಕ.ಗ.ಪ)
ಕೃಚ್ಛ್ರ-ಪ್ರಾಯಶ್ಚಿತ್ತ ವ್ರತಗಳಲ್ಲೊಂದು, ಜ್ಯೋತಿಷ್ಟೋಮ- , ಮೇದಿನಿ-ಭೂಮಿ, ಆದರಿಸಿ-ಗೌರವಿದಿಂದ, ಪ್ರೀತಿಯಿಂದ
ಟಿಪ್ಪನೀ (ಕ.ಗ.ಪ)
- ಕೃಚ್ಛ್ರ
- ಜ್ಯೋತಿಷ್ಟೋಮ
ಈ ಸಂಧಿಯಲ್ಲಿ ಪ್ರಸ್ತಾಪವಿರುವ ಭೀಷ್ಮನ ನೀತಿಬೋಧನೆ, ಧರ್ಮರಾಯನ ಪಟ್ಟಾಭಿಷೇಕ, ಭೀಷ್ಮನ ದೇಹತ್ಯಾಗ ಇತ್ಯಾದಿ ವಿವರಗಳು ಮೂಲಭಾರತದ ‘ಶಾಂತಿಪರ್ವ’ ಮತ್ತು ‘ಅನುಶಾಸನ ಪರ್ವ’ಗಳೆಂಬ ಎರಡು ಪ್ರತ್ಯೇಕ ಪರ್ವಗಳಲ್ಲಿ ಪ್ರಸ್ತಾಪವಾಗಿವೆ. ಅವುಗಳನ್ನು ತಿಮ್ಮಣ್ಣ ಕವಿಯು ಕನ್ನಡದಲ್ಲಿ ರಚಿಸಿದ್ದಾನೆ. ಈ ಎರಡು ಪರ್ವಗಳನ್ನು ಒಳಗೊಂಡಂತೆ ತಿಮ್ಮಣ್ಣ ಕವಿಯು ರಚಿಸಿರುವ ಕಡೆಯ 8 ಪರ್ವಗಳನ್ನು “ಕನ್ನಡ ಭಾರತ” ಎಂಬ ಗ್ರಂಥದಲ್ಲಿ ಪ್ರಕಟಿಸಲಾಗಿದೆ. ಸಂಪಾದಕ ಡಾ|| ಎ.ವಿ. ಪ್ರಸನ್ನ, ಪ್ರಕಟಣೆ. ಕನ್ನಡ ವಿಶ್ವವಿದ್ಯಾಲಯ, ಹಂಪಿ.
ಮೂಲ ...{Loading}...
ವೇದಪಾರಾಯಣದ ಫಲ ಗಂ
ಗಾದಿ ತೀರ್ಥಸ್ನಾನಫಲ ಕೃ
ಚ್ಛ್ರಾದಿ ತಪಸಿನ ಫಲವು ಜ್ಯೋತಿಷ್ಟೋಮಯಾಗಫಲ
ಮೇದಿನಿಯನೊಲಿದಿತ್ತ ಫಲ ವ
ಸ್ತ್ರಾದಿ ಕನ್ಯಾದಾನಫಲವಹು
ದಾದರಿಸಿ ಭಾರತದೊಳೊಂದಕ್ಷರವ ಕೇಳ್ದರಿಗೆ ॥20॥
೦೨೧ ಇತಿ ಶ್ರೀಮದಚಿನ್ತ್ಯ ...{Loading}...
ಇತಿ ಶ್ರೀಮದಚಿಂತ್ಯ ಮಹಿಮ ಗದುಗಿನ
ವೀರನಾರಾಯಣ ಚರಣಾರವಿಂದ ಮಕರಂದ
ಮಧುಪಾನ ಪರಿಪುಷ್ಟ ವಚಃ ಷಟ್ಪದೀ ನಿಕಾಯ
ಶ್ರೀಮತ್ಕುಮಾರವ್ಯಾಸ ಯೋಗೀಂದ್ರ ವಿರಚಿತಮಪ್ಪ
ಕರ್ಣಾಟ ಭಾರತ ಕಥಾಮಂಜರಿಯೊಳ್
ಗದಾಪರ್ವಂ ಸಮಾಪ್ತಮಾದುದು.
ಸರ್ವ-ಟೀಕೆಗಳು ...{Loading}...
ಮೂಲ ...{Loading}...
ಇತಿ ಶ್ರೀಮದಚಿಂತ್ಯ ಮಹಿಮ ಗದುಗಿನ
ವೀರನಾರಾಯಣ ಚರಣಾರವಿಂದ ಮಕರಂದ
ಮಧುಪಾನ ಪರಿಪುಷ್ಟ ವಚಃ ಷಟ್ಪದೀ ನಿಕಾಯ
ಶ್ರೀಮತ್ಕುಮಾರವ್ಯಾಸ ಯೋಗೀಂದ್ರ ವಿರಚಿತಮಪ್ಪ
ಕರ್ಣಾಟ ಭಾರತ ಕಥಾಮಂಜರಿಯೊಳ್
ಗದಾಪರ್ವಂ ಸಮಾಪ್ತಮಾದುದು.