೦೦೦ ಸೂ ರಾಯನಯ್ಯನ ...{Loading}...
ಸೂ. ರಾಯನಯ್ಯನ ತಿಳುಹಿದನು ದ್ವೈ
ಪಾಯನನು ಸಾಮದಲಿ ಕಮಳದ
ಳಾಯತಾಕ್ಷಿಯು ಶಾಪವಿತ್ತಳು ಮುಳಿದು ಗಾಂಧಾರಿ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನಾ: ವ್ಯಾಸಮುನಿಯು, ಧೃತರಾಷ್ಟ್ರನಿಗೆ ಉಪಾಯದಿಂದ ಬುದ್ದಿ ಹೇಳಿದನು. ಕಮಲದಳಾಯತಾಕ್ಷಿಯಾದ ಗಾಂಧಾರಿಯು ಕೋಪಗೊಂಡು ಕೃಷ್ಣನಿಗೆ ಶಾಪಕೊಟ್ಟಳು.
ಪದಾರ್ಥ (ಕ.ಗ.ಪ)
ರಾಯನಯ್ಯ-ದುರ್ಯೋಧನನ ತಂದೆ, ಧೃತರಾಷ್ಟ್ರ, ತಿಳುಹು-ಬುದ್ದಿಹೇಳು, ದ್ವೈಪಾಯನ-ವ್ಯಾಸ (ದ್ವೀಪದಲ್ಲಿ ಜನಿಸಿದ್ದರಿಂದ ಈ ಹೆಸರು), ಸಾಮದಲಿ-ಉಪಾಯದಿಂದ, ಸಮಾಧಾನದಿಂದ (ಸಾಮ-ಚತುರೋಪಾಯಗಳಲ್ಲಿ ಮೊದಲನೆಯದು, ಮಿಕ್ಕ ಮೂರು - ದಾನ, ಭೇದ, ದಂಡ) ಕಮಲದಳಾಯತಾಕ್ಷಿ-ಕಮಲ ಪುಷ್ಪದ ದಳಗಳಂತೆ ವಿಶಾಲವಾದ ಕಣ್ಣುಗಳುಳ್ಳವಳು, ಗಾಂಧಾರಿ, ಮುಳಿದು-ಕೋಪಗೊಂಡು
ಮೂಲ ...{Loading}...
ಸೂ. ರಾಯನಯ್ಯನ ತಿಳುಹಿದನು ದ್ವೈ
ಪಾಯನನು ಸಾಮದಲಿ ಕಮಳದ
ಳಾಯತಾಕ್ಷಿಯು ಶಾಪವಿತ್ತಳು ಮುಳಿದು ಗಾಂಧಾರಿ
೦೦೧ ಕೇಳು ಜನಮೇಜಯ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ಕುರುಪತಿ ವಿಳಯವಾರ್ತಾ
ವ್ಯಾಳವಿಷ ವೇಢೈಸಿದುದು ಗಜಪುರದ ಜನಮನವ
ಹೂಳಿದುಬ್ಬಿನ ಹುದಿದ ಮೋನದ
ಸೂಳುಚಿಂತೆಯ ಬಲಿದ ಭೀತಿಯ
ಮೇಲುದುಗುಡದ ದಡಿಯ ವದನದಲಿದ್ದುದಖಿಳಜನ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜನಮೇಜಯರಾಜನೇ ಕೇಳು, ಕುರುಪತಿಯ ಮರಣದ ವಾರ್ತೆಯೆಂಬ ಸರ್ಪದ ವಿಷವು ಹಸ್ತಿನಾವತಿ ನಗರದ ಜನಮನವನ್ನು ಆವರಿಸಿತು. ಉತ್ಸಾಹ ಉಡುಗಿ, ಮೌನ ಹೆಪ್ಪುಗಟ್ಟಿತು. ಮತ್ತೆ ಮತ್ತೆ ಮರುಕಳಿಸಿದ ಚಿಂತೆಯಿಂದ ಮತ್ತು ಅತಿಯಾದ ಭೀತಿಯಿಂದ ಜನರು ದುಃಖತಪ್ತರಾಗಿದ್ದರು ಎಂದು ವೈಶಂಪಾಯನರು ಹೇಳಿದರು.
ಪದಾರ್ಥ (ಕ.ಗ.ಪ)
ವಿಳಯವಾರ್ತಾವ್ಯಾಳವಿಷ-ವಿನಾ±ವಾರ್ತೆಯೆಂಬ ಹಾವಿನ ವಿಷ, ವೇಢೈಸು-ಸುತ್ತುವರಿ, ಆಕ್ರಮಿಸು, ಗಜಪುರ-ಹಸ್ತಿನಾವತಿ, ಹೂಳಿದ-ಹೂತುಹೋದ, ಅವಿತುಕೊಂಡ, ಉಬ್ಬು-ತ್ಸಾಹ, ಅಹಂಕಾರ, ಹುದಿದ-ಅಡಗಿದ, ಅವಿತುಕೊಂಡ, ಸೂಳು-ಬಾರಿಬಾರಿಗೂ ಬರುವ, ಬಲಿದ-ಹೆಚ್ಚಾದ ಬಿಗಿಯಾದ, ಭೀತಿ-ಭಯ, ಹೆದರಿಕೆ, ಮೇಲು ದುಗುಡ-ಹಿರಿದಾದ ಶೋಕ, ವದನ-ಮುಖ, ದಡಿ-ಬಟ್ಟೆಯ ಅಂಚು
ಮೂಲ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ಕುರುಪತಿ ವಿಳಯವಾರ್ತಾ
ವ್ಯಾಳವಿಷ ವೇಢೈಸಿದುದು ಗಜಪುರದ ಜನಮನವ
ಹೂಳಿದುಬ್ಬಿನ ಹುದಿದ ಮೋನದ
ಸೂಳುಚಿಂತೆಯ ಬಲಿದ ಭೀತಿಯ
ಮೇಲುದುಗುಡದ ದಡಿಯ ವದನದಲಿದ್ದುದಖಿಳಜನ ॥1॥
೦೦೨ ಆ ಸಮಯದಲಿ ...{Loading}...
ಆ ಸಮಯದಲಿ ದೇವ ವೇದ
ವ್ಯಾಸಮುನಿ ಬಂದನು ಗತಾಕ್ಷಮ
ಹೀಶನನು ಚರಣದಲಿ ಹೊರಳಿದಡೆತ್ತಿದನು ಹಿಡಿದು
ಆ ಸತಿಯ ಕರಸಿದನು ರಾಣೀ
ವಾಸವೆಲ್ಲವ ಬರಿಸಿ ಧರ್ಮವಿ
ಲಾಸವನು ವಿಸ್ತರಿಸಿದನು ವೈದಿಕ ವಿಧಾನದಲಿ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಸಮಯಕ್ಕೆ ದೇವವೇದವ್ಯಾಸ ಮುನಿ ಅಲ್ಲಿಗೆ ಬಂದನು. ಅಂಧನಾದ ಧೃತರಾಷ್ಟ್ರರಾಜನು ವ್ಯಾಸರ ಪಾದಗಳಲ್ಲಿ ಬಿದ್ದು ಹೊರಳಲು ಅವನನ್ನು ಮೇಲೆತ್ತಿದನು. ಅವನ ಹೆಂಡತಿಯಾದ ಗಾಂಧಾರಿಯನ್ನು ಕರೆಸಿದನು, ಅಂತಃಪುರದ ಸ್ತ್ರೀಯರನ್ನೆಲ್ಲ ಬರಿಸಿದನು. ವೇದ ಮಾರ್ಗದಲ್ಲಿ, ಧರ್ಮವಿಚಾರಗಳನ್ನು ವಿಸ್ತರಿಸಿ ಹೇಳಿದನು.
ಪದಾರ್ಥ (ಕ.ಗ.ಪ)
ಗತಾಕ್ಷಮಹೀಶ-ಕಣ್ಣುಗಳಿಲ್ಲದ ದೊರೆ; ಧೃತರಾಷ್ಟ್ರ, ರಾಣೀವಾಸ-ರಾಜರ ಪತ್ನಿಯರು, ಅಂತಃಪುರವಾಸಿಗಳು, ಧರ್ಮವಿಲಾಸ-ಧರ್ಮದ ನಡವಳಿಕೆಗಳು, ಧರ್ಮದ ವಿವರಗಳು, ವಿಸ್ತರಿಸು-ವಿಸ್ತಾರವಾಗಿ ಹೇಳು, ವೈದಿಕವಿಧಾನ-ವೇದಗಳಲ್ಲಿ ತಿಳಿಸಿರುವ ಕ್ರಮಗಳು
ಮೂಲ ...{Loading}...
ಆ ಸಮಯದಲಿ ದೇವ ವೇದ
ವ್ಯಾಸಮುನಿ ಬಂದನು ಗತಾಕ್ಷಮ
ಹೀಶನನು ಚರಣದಲಿ ಹೊರಳಿದಡೆತ್ತಿದನು ಹಿಡಿದು
ಆ ಸತಿಯ ಕರಸಿದನು ರಾಣೀ
ವಾಸವೆಲ್ಲವ ಬರಿಸಿ ಧರ್ಮವಿ
ಲಾಸವನು ವಿಸ್ತರಿಸಿದನು ವೈದಿಕ ವಿಧಾನದಲಿ ॥2॥
೦೦೩ ನಿನ್ನ ಸುತನುದ್ದಣ್ಡತನದಲಿ ...{Loading}...
ನಿನ್ನ ಸುತನುದ್ದಂಡತನದಲಿ
ನಿನ್ನ ತಮ್ಮನ ತನುಜರನು ಪರಿ
ಖಿನ್ನರನು ಮಾಡಿದನು ಕಪಟದ್ಯೂತಕೇಳಿಯಲಿ
ನಿನ್ನ ಮತ ವಿದುರೋಕ್ತಿಗಳ ಮೇಣ್
ಮನ್ನಿಸಿದನೇ ಜಗವರಿಯೆ ಸಂ
ಪನ್ನ ಶಠನಹನೈ ಸುಯೋಧನನೆಂದನಾ ಮುನಿಪ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಿನ್ನ ಮಗನು ಗರ್ವದಿಂದ ನಿನ್ನ ತಮ್ಮನ ಮಕ್ಕಳಾದ ಪಾಂಡವರನ್ನು ಮೋಸದ ಜೂಜಾಟದಲ್ಲಿ ತೀವ್ರದುಃಖಿತರನ್ನಾಗಿ ಮಾಡಿದನು. ನಿನ್ನ ಅಭಿಪ್ರಾಯ ಮತ್ತು ವಿದುರನ ಮಾತುಗಳನ್ನು ಗೌರವಿಸಿದನೇ. ಪ್ರಪಂಚವೇ ತಿಳಿದಂತೆ ನಿನ್ನ ಮಗ ಸಯೋಧನ ಮಹಾ ಹಠಮಾರಿಯಾಗಿದ್ದಾನೆ ಎಂದು ಆ ಮುನಿಪ ಧೃತರಾಷ್ಟ್ರನಿಗೆ ತಿಳಿಸಿದ.
ಪದಾರ್ಥ (ಕ.ಗ.ಪ)
ಉದ್ದಂಡತನ-ಗರ್ವಸ್ವಭಾವ, ದುಂಡಾವರ್ತಿಸ್ವಭಾವ, ತನುಜರು-ಮಕ್ಕಳು, ಪರಿಖಿನ್ನರು-ವಿಶೇಷವಾಗಿ ದುಃಖಿತರಾದವರು, ಕಪಟದ್ಯೂತಕೇಳಿ-ಮೋಸದ ಜೂಜಿನ ಆಟ, ಮತ-ಅಭಿಪ್ರಾಯ, ವಿದುರೋಕ್ತಿ (ವಿದುರ+ಉಕ್ತಿ-)-ವಿದುರನ ಮಾತುಗಳು, ಮೇಣ್-ಮತ್ತು, ಅಥವಾ, ಸಂಪನ್ನ ಶಠ-ಶಠರಲ್ಲಿ ದೊಡ್ಡವನು
ಮೂಲ ...{Loading}...
ನಿನ್ನ ಸುತನುದ್ದಂಡತನದಲಿ
ನಿನ್ನ ತಮ್ಮನ ತನುಜರನು ಪರಿ
ಖಿನ್ನರನು ಮಾಡಿದನು ಕಪಟದ್ಯೂತಕೇಳಿಯಲಿ
ನಿನ್ನ ಮತ ವಿದುರೋಕ್ತಿಗಳ ಮೇಣ್
ಮನ್ನಿಸಿದನೇ ಜಗವರಿಯೆ ಸಂ
ಪನ್ನ ಶಠನಹನೈ ಸುಯೋಧನನೆಂದನಾ ಮುನಿಪ ॥3॥
೦೦೪ ಸೈರಿಸಿದರೇ ಪಾಣ್ಡುಸುತರಂ ...{Loading}...
ಸೈರಿಸಿದರೇ ಪಾಂಡುಸುತರಂ
ಭೋರುಹಾಕ್ಷಿ ರಜಸ್ವಲೆಯ ಸುಲಿ
ಸೀರೆಯಲಿ ತತ್ಪೂರ್ವಕೃತ ಜತುಗೇಹದಾಹದಲಿ
ವೈರಬಂಧದ ವಿವಿಧ ವಿಷಮ ವಿ
ಕಾರದಲಿ ವಿಗ್ರಹಮುಖವ ವಿ
ಸ್ತಾರಿಸಿದರೇ ಪಾಂಡುಸುತರುತ್ತಮರೆ ಹೇಳೆಂದ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರೌಪದಿಯು ರಜಸ್ವಲೆಯಾಗಿರುವಾಗ ಅವಳ ಸೀರೆಯನ್ನು ಸುಲಿಸುವ ಸಂದರ್ಭದಲ್ಲಿ ಮತ್ತು ಅದಕ್ಕೆ ಮೊದಲು ಅರಗಿನ ಮನೆಯನ್ನು ಸುಡುವ ಸಂದರ್ಭದಲ್ಲಿ ಪಾಂಡವರು ಸೈರಿಸಲಿಲ್ಲವೇ. ಶತ್ರುತ್ವದಿಂದಾದ ವಿವಿಧ ವಿಷಮ ವಿಕಾರಗಳಲ್ಲಿ ಪಾಂಡವರು ಯುದ್ಧವನ್ನು ಪ್ರಾರಂಭಿಸಿದರೇ, ಅವರು ಉತ್ತಮರಲ್ಲವೇ ಹೇಳು - ಎಂದು ವ್ಯಾಸರು ಧೃತರಾಷ್ಟ್ರನನ್ನು ಕೇಳಿದರು.
ಪದಾರ್ಥ (ಕ.ಗ.ಪ)
ಸೈರಿಸು-ತಾಳಿಕೊಳ್ಳು, ತಾಳ್ಮೆಯಿಂದಿರು, ಅಂಭೋರುಹಾಕ್ಷಿ-ತಾವರೆಯಂತೆ ಕಣ್ಣುಳ್ಳವಳು, ದ್ರೌಪದಿ, ಸುಲಿಸೀರೆಯಲಿ-ಸೀರೆಯನ್ನು ಸೆಳೆಯುವ ಸಂದರ್ಭದಲ್ಲಿ, ತತ್ಪೂರ್ವಕ-ಅದರ ಹಿಂದಿನ, ಜತುಗೇಹದಾಹ-ಅರಗಿನ ಮನೆಯನ್ನು ಸುಡುವುದು, ವೈರಬಂಧ-ಗಟ್ಟಿಯಾದ ಶತ್ರುತ್ವ, ವಿಷಮ-ಅತಿ ವಿರೋಧವಾದ, ವಿಕಾರ-ಮಾಡಬಾರದ, ವಿಗ್ರಹಮುಖ-ಯುದ್ಧದ ಪ್ರಾರಂಭ, ಯುದ್ಧಭೂಮಿ, ವಿಸ್ತಾರಿಸು-ಹೆಚ್ಚಿಸು, ಪ್ರಾರಂಭಿಸು
ಮೂಲ ...{Loading}...
ಸೈರಿಸಿದರೇ ಪಾಂಡುಸುತರಂ
ಭೋರುಹಾಕ್ಷಿ ರಜಸ್ವಲೆಯ ಸುಲಿ
ಸೀರೆಯಲಿ ತತ್ಪೂರ್ವಕೃತ ಜತುಗೇಹದಾಹದಲಿ
ವೈರಬಂಧದ ವಿವಿಧ ವಿಷಮ ವಿ
ಕಾರದಲಿ ವಿಗ್ರಹಮುಖವ ವಿ
ಸ್ತಾರಿಸಿದರೇ ಪಾಂಡುಸುತರುತ್ತಮರೆ ಹೇಳೆಂದ ॥4॥
೦೦೫ ಅವರು ಸುಚರಿತರೆನ್ದಲೇ ...{Loading}...
ಅವರು ಸುಚರಿತರೆಂದಲೇ ಮಾ
ಧವನು ನೆರೆ ಮರುಳಾದನವರಿಗೆ
ಶಿವನು ಮೆಚ್ಚಿದು ಶರವನಿತ್ತನು ನರನ ಪತಿಕರಿಸಿ
ಭುವನವೆರಡಾದಲ್ಲಿ ಸಾಧುಗ
ಳವರ ದೆಸೆ ದುಸ್ಸಾಧುಗಳು ನಿ
ನ್ನವರ ದೆಸೆಯಾಯ್ತರ್ಜುನನ ಸೂತಜನ ಸಮರದಲಿ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅವರು ಉತ್ತಮ ಚಾರಿತ್ರ್ಯವುಳ್ಳವರೆಂಬ ಕಾರಣದಿಂದಲೇ ಕೃಷ್ಣ ಅವರಿಗೆ ಮರುಳಾದ, ಶಿವನು ಅರ್ಜುನನನ್ನು ಮನ್ನಿಸಿ ಅವನಿಗೆ ಪಾಶುಪತಾಸ್ತ್ರವನ್ನು ಕೊಟ್ಟ. ಕರ್ಣಾರ್ಜುನ ಕಾಳಗದ ಸಂದರ್ಭದಲ್ಲಿ ಲೋಕವು ಎರಡು ಪಕ್ಷವಾದಾಗ ಸಾಧುಗಳು ಅವರ ಕಡೆಗೆ ಸಾಧುಗಳಲ್ಲದ ಅಯೋಗ್ಯರು ನಿನ್ನವರ ಕಡೆಗೆ ಇದ್ದರು.
ಪದಾರ್ಥ (ಕ.ಗ.ಪ)
ಸುಚರಿತ-ಉತ್ತಮ ಚಾರಿತ್ರ್ಯವುಳ್ಳ, ಮರುಳಾದ-ಸಂಪೂರ್ಣವಾಗಿ ಅವರಿಂದ ಆಕರ್ಷಿತನಾದ, ಪತಿಕರಿಸು-ಗೌರವಿಸು, ಹೊಗಳು, ಸಾಧುಗಳು-ಸಜ್ಜನರು, ದುಸ್ಸಾಧುಗಳು-ದುರ್ಜನರು, ಸೂತಜ-ಸೂತಪುತ್ರ ಕರ್ಣ
ಮೂಲ ...{Loading}...
ಅವರು ಸುಚರಿತರೆಂದಲೇ ಮಾ
ಧವನು ನೆರೆ ಮರುಳಾದನವರಿಗೆ
ಶಿವನು ಮೆಚ್ಚಿದು ಶರವನಿತ್ತನು ನರನ ಪತಿಕರಿಸಿ
ಭುವನವೆರಡಾದಲ್ಲಿ ಸಾಧುಗ
ಳವರ ದೆಸೆ ದುಸ್ಸಾಧುಗಳು ನಿ
ನ್ನವರ ದೆಸೆಯಾಯ್ತರ್ಜುನನ ಸೂತಜನ ಸಮರದಲಿ ॥5॥
೦೦೬ ಅಹುದು ನಿಮ್ಮ ...{Loading}...
ಅಹುದು ನಿಮ್ಮ ಯುಧಿಷ್ಠಿರನು ಗುಣಿ
ಯಹನು ಭೀಮಾರ್ಜುನರು ಬಲ್ಲಿದ
ರಹರು ಕೃಷ್ಣನ ಕೂರ್ಮೆಯಲ್ಲಿ ಕಪರ್ದಿಯೊಲವಿನಲಿ
ಕುಹಕಿಯೆನ್ನವನವನೊಳಗೆ ನಿ
ಸ್ಪೃಹರು ವಿದುರಪ್ರಮುಖ ಸುಜನರು
ವಿಹಿತವೆನಗಿನ್ನಾವುದದ ನೀವ್ ಬೆಸಸಿ ಸಾಕೆಂದ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೌದು. ನಿಮ್ಮ ಧರ್ಮರಾಯ ಸದ್ಗುಣಿಯಾಗಿದ್ದಾನೆ. ಭೀಮಾರ್ಜುನರು ಕೃಷ್ಣನ ಪ್ರೀತಿಯಿಂದ ಮತ್ತು ಶಿವನ ವಿಶ್ವಾಸದಿಂದ ಶಕ್ತಿಶಾಲಿಗಳಾಗಿದ್ದಾರೆ. ನನ್ನವನು (ದುರ್ಯೋಧನ) ಕುಹಕಿ. ವಿದುರಾದಿ ಪ್ರಮುಖರಾದವರು ಉತ್ತಮ ಜನರಾಗಿದ್ದಾರೆ. ಆ ಮಾತು ಸಾಕು. ನನಗೆ ಇನ್ನು ಒಳ್ಳೆಯದು ಯಾವುದು ಅದನ್ನು ಹೇಳಿ - ಎಂದು ಧೃತರಾಷ್ಟ್ರ ವ್ಯಾಸರಿಗೆ ಹೇಳಿದ.
ಪದಾರ್ಥ (ಕ.ಗ.ಪ)
ಗುಣಿ-ಒಳ್ಳೆಯ ಗುಣಗಳನ್ನುಳ್ಳವನು, ಸದ್ಗುಣಿ, ಬಲ್ಲಿದರು-ಶಕ್ತಿಶಾಲಿಗಳು, ಯೋಗ್ಯರು, ಕೂರ್ಮೆ-ಪ್ರೀತಿ, ಕಪರ್ದಿ-ಶಿವ, ಒಲವು-ವಿಶ್ವಾಸ, ಕುಹಕಿ-ಕೆಟ್ಟ ಬುದ್ದಿಯುಳ್ಳವ, ಮೋಸಗಾರ, ವಿಹಿತ-ಒಳ್ಳೆಯದು, ಯೋಗ್ಯವಾದುದು, ಹಿತವಾದುದು, ಬೆಸಸಿ-ತಿಳಿಸಿ
ಮೂಲ ...{Loading}...
ಅಹುದು ನಿಮ್ಮ ಯುಧಿಷ್ಠಿರನು ಗುಣಿ
ಯಹನು ಭೀಮಾರ್ಜುನರು ಬಲ್ಲಿದ
ರಹರು ಕೃಷ್ಣನ ಕೂರ್ಮೆಯಲ್ಲಿ ಕಪರ್ದಿಯೊಲವಿನಲಿ
ಕುಹಕಿಯೆನ್ನವನವನೊಳಗೆ ನಿ
ಸ್ಪೃಹರು ವಿದುರಪ್ರಮುಖ ಸುಜನರು
ವಿಹಿತವೆನಗಿನ್ನಾವುದದ ನೀವ್ ಬೆಸಸಿ ಸಾಕೆಂದ ॥6॥
೦೦೭ ಧರ್ಮವೆಲ್ಲಿಹುದಲ್ಲಿ ಜಯ ...{Loading}...
ಧರ್ಮವೆಲ್ಲಿಹುದಲ್ಲಿ ಜಯ ಸ
ತ್ಕರ್ಮವೆಲ್ಲಿಹುದಲ್ಲಿ ಸಿರಿ ಸ
ದ್ಧರ್ಮಸಂರಕ್ಷಕರು ಹರಿ ಧೂರ್ಜಟಿ ಪಿತಾಮಹರು
ಧರ್ಮದೂರನು ನಿನ್ನವನು ಸ
ತ್ಕರ್ಮಬಾಹಿರನಾತ್ಮರಚಿತ ವಿ
ಕರ್ಮದೋಷದಲಳಿದನಿನ್ನೇನೆಂದನಾ ಮುನಿಪ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಲ್ಲಿ ಧರ್ಮವಿದೆಯೋ ಅಲ್ಲಿ ಜಯವಿರುತ್ತದೆ. ಉತ್ತಮ ಕರ್ಮಗಳು ಎಲ್ಲಿರುತ್ತವೋ ಅಲ್ಲಿ ಐಶ್ವರ್ಯವಿರುತ್ತದೆ. ವಿಷ್ಣು, ಶಿವ ಮತ್ತು ಬ್ರಹ್ಮರುಗಳು ಉತ್ತಮ ಧರ್ಮವನ್ನು ರಕ್ಷಿಸುವವರು. ನಿನ್ನ ಮಗ ಧರ್ಮಕ್ಕೆ ದೂರವಾದವನು. ಒಳ್ಳೆಯ ಕೆಲಸಗಳಿಂದ ಹೊರಗಾದವನು. ತಾನೇ ನಿರ್ಮಿಸಿಕೊಂಡ ಕೆಟ್ಟಕರ್ಮಗಳ ದೋಷದಿಂದ ಮರಣಹೊಂದಿದ, ಇನ್ನೇನು - ಎಂದು ವೇದವ್ಯಾಸ ಮುನಿಪ ಹೇಳಿದ.
ಪದಾರ್ಥ (ಕ.ಗ.ಪ)
ಸತ್ಕರ್ಮ-ಒಳ್ಳೆಯ ಕೆಲಸಗಳು, ಸಿರಿ-ಶ್ರೀ(ಸಂ) ಐಶ್ವರ್ಯ, ಸದ್ಧರ್ಮ-ಒಳ್ಳೆಯಧರ್ಮ, ಹರಿ-ವಿಷ್ಣು, ಧೂರ್ಜಟಿ-ಶಿವ, ಪಿತಾಮಹ-ಬ್ರಹ್ಮ, ಧರ್ಮದೂರ-ಧರ್ಮದಿಂದ ದೂರವಿರುವವನು, ಸತ್ಕರ್ಮಬಾಹಿರ-ಒಳ್ಳೆಯ ಕೆಲಸಗಳಿಂದ ಹೊರತಾದವನು, ಆತ್ಮರಚಿತ-ಸ್ವಯಂರಚಿಸಿಕೊಂಡ, ವಿಕರ್ಮದೋಷ-ಕೆಟ್ಟಕೆಲಸಗಳಿಂದ ಬರುವ ತೊಂದರೆ, ಅಳಿದ-ಮರಣಹೊಂದಿದ, ಮುನಿಪ-ಮುನಿಶ್ರೇಷ್ಠ.
ಮೂಲ ...{Loading}...
ಧರ್ಮವೆಲ್ಲಿಹುದಲ್ಲಿ ಜಯ ಸ
ತ್ಕರ್ಮವೆಲ್ಲಿಹುದಲ್ಲಿ ಸಿರಿ ಸ
ದ್ಧರ್ಮಸಂರಕ್ಷಕರು ಹರಿ ಧೂರ್ಜಟಿ ಪಿತಾಮಹರು
ಧರ್ಮದೂರನು ನಿನ್ನವನು ಸ
ತ್ಕರ್ಮಬಾಹಿರನಾತ್ಮರಚಿತ ವಿ
ಕರ್ಮದೋಷದಲಳಿದನಿನ್ನೇನೆಂದನಾ ಮುನಿಪ ॥7॥
೦೦೮ ಎನಲು ಬಿದ್ದನು ...{Loading}...
ಎನಲು ಬಿದ್ದನು ನೆಲಕೆ ಸಿಂಹಾ
ಸನದಿನಾ ಮುನಿವಚನಶರ ಮರು
ಮೊನೆಗೆ ಬಂದುದು ಬಹಳ ಮೂರ್ಛಾಪಾರವಶ್ಯದಲಿ
ಜನಪನಿರೆ ಗಾಂಧಾರಿ ನೃಪ ಮಾ
ನಿನಿಯರೊರಲಿತು ರಾಜಗೃಹ ರೋ
ದನ ಮಹಾಧ್ವನಿ ಮೀರಿ ಮೊಗೆದುದು ಹಸ್ತಿನಾಪುರವ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವ್ಯಾಸರು ಹಾಗೆನ್ನಲು ಧೃತರಾಷ್ಟ್ರ ಸಿಂಹಾಸನದಿಂದ ನೆಲಕ್ಕೆ ಬಿದ್ದನು. ಮುನಿಯ ಮಾತಿನ ಬಾಣವು ಮರುಹರಿತಗೊಂಡಂತೆ ಆಯ್ತು. ಗಾಢವಾದ ಮೂರ್ಛೆಯಿಂದ ರಾಜ ಪ್ರಜ್ಞೆ ಕಳೆದುಕೊಂಡಿರಲು, ಗಾಂಧಾರಿ ಮತ್ತು ರಾಜನ ಪತ್ನಿಯರು ಅತ್ತರು. ಅವರ ರೋದನದ ಮಹಾಧ್ವನಿ ಅರಮನೆಯನ್ನು ದಾಟಿ ಹಸ್ತಿನಾಪುರವನ್ನು ಆಕ್ರಮಿಸಿತು.
ಪದಾರ್ಥ (ಕ.ಗ.ಪ)
ಮನಿವಚನಶರ-ಮುನಿಯ ಮಾತಿನ ಬಾಣ, ಮರುಮೊನೆ-ಪುನಃ ಹರಿತವಾಗು, ಪಾರವಶ್ಯ-ಪರವಶನಾಗುವುದು, ಪ್ರಜ್ಞೆತಪ್ಪುವುದು, ನೃಪಮಾನಿನಿಯರು-ರಾಜನ ಹೆಂಡತಿಯರು, ಧೃತರಾಷ್ಟ್ರನ ಹೆಂಡತಿಯರು, ಒರಲು-ಅಳು, ರೋದಿಸು, ರಾಜಗೃಹ-ಅರಮನೆ, ಮೀರಿ-ದಾಟಿ, ಮೊಗೆದುದು-ಆಕ್ರಮಿಸಿತು.
ಮೂಲ ...{Loading}...
ಎನಲು ಬಿದ್ದನು ನೆಲಕೆ ಸಿಂಹಾ
ಸನದಿನಾ ಮುನಿವಚನಶರ ಮರು
ಮೊನೆಗೆ ಬಂದುದು ಬಹಳ ಮೂರ್ಛಾಪಾರವಶ್ಯದಲಿ
ಜನಪನಿರೆ ಗಾಂಧಾರಿ ನೃಪ ಮಾ
ನಿನಿಯರೊರಲಿತು ರಾಜಗೃಹ ರೋ
ದನ ಮಹಾಧ್ವನಿ ಮೀರಿ ಮೊಗೆದುದು ಹಸ್ತಿನಾಪುರವ ॥8॥
೦೦೯ ಆರು ಸನ್ತೈಸುವರು ...{Loading}...
ಆರು ಸಂತೈಸುವರು ಲೋಚನ
ವಾರಿ ಹೊನಲಾಯ್ತರಮನೆಯ ನೃಪ
ನಾರಿಯರ ಬಹಳ ಪ್ರಳಾಪವ್ಯಥೆಯ ಬೇಳುವೆಗೆ
ಆರು ಮರುಗರು ಶೋಕಪನ್ನಗ
ಘೋರವಿಷ ಮುನಿವರನ ಹೃದಯವ
ಗೋರಿತೇನೆಂಬೆನು ಲತಾಂಗಿಯರಳಲ ಕಳವಳವ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯಾರು ಶೋಕಪೀಡಿತರಾದ ನಾರಿಯರನ್ನು ಸಂತೈಸುವರು. ಕಣ್ಣೀರು ಪ್ರವಾಹವಾಯಿತು. ಅರಮನೆಯ ರಾಜರ ಮಡದಿಯರುಗಳು ಬಹಳ ಪ್ರಲಾಪದ ವ್ಯಥೆಯ ಆಧಿಕ್ಯಕ್ಕೆ ಯಾರು ತಾನೇ ಮರುಗುವುದಿಲ್ಲ. ಶೋಕವೆಂಬ ಹಾವಿನ ಘೋರವಿಷ ಮುನಿಶ್ರೇಷ್ಠನಾದ ವ್ಯಾಸನ ಹೃದಯವನ್ನು ತಟ್ಟಿತು. ಮಹಿಳೆಯರ ದುಃಖವನ್ನು ಏನು ಹೇಳಲಿ ಎಂದು ವೈಶಂಪಾಯನರು ಜನಮೇಜಯನಿಗೆ ಹೇಳಿದರು.
ಪದಾರ್ಥ (ಕ.ಗ.ಪ)
ಲೋಚನವಾರಿ-ಕಣ್ಣೀರು, ಹೊನಲು-ಪ್ರವಾಹ, ನೃಪನಾರಿಯರು-ರಾಜರ ಪತ್ನಿಯರು, ಪ್ರಳಾಪ-ಪ್ರಲಾಪ, ಗೋಳಾಟ, ಶೋಕ ಪನ್ನಗ ಘೋರ ವಿಷ-ಶೋಕವೆಂಬ ಭಯಂಕರವಾದ ಹಾವಿನ ವಿಷ, ಅಳಲು-ಗೋಳು, ಕಳವಳ-ದುಃಖ
ಮೂಲ ...{Loading}...
ಆರು ಸಂತೈಸುವರು ಲೋಚನ
ವಾರಿ ಹೊನಲಾಯ್ತರಮನೆಯ ನೃಪ
ನಾರಿಯರ ಬಹಳ ಪ್ರಳಾಪವ್ಯಥೆಯ ಬೇಳುವೆಗೆ
ಆರು ಮರುಗರು ಶೋಕಪನ್ನಗ
ಘೋರವಿಷ ಮುನಿವರನ ಹೃದಯವ
ಗೋರಿತೇನೆಂಬೆನು ಲತಾಂಗಿಯರಳಲ ಕಳವಳವ ॥9॥
೦೧೦ ಎತ್ತಿದರು ಧರಣಿಪನ ...{Loading}...
ಎತ್ತಿದರು ಧರಣಿಪನ ಕಂಗಳೊ
ಳೊತ್ತಿದರು ಪನ್ನೀರನುಸುರಿನ
ತತ್ತಳವನಾರೈದರೊಯ್ಯನೆ ತಾಳವೃಂತದಲಿ
ಬಿತ್ತಿ ತಂಗಾಳಿಯನು ಶೋಕದ
ಹತ್ತಿಗೆಗೆ ಹೊರೆದೆಗೆದು ಮರವೆಯ
ಚಿತ್ತವನು ಚೇತರಿಸಿ ಮೆಲ್ಲನೆ ನುಡಿಸಿದನು ಮುನಿಪ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧೃತರಾಷ್ಟ್ರನನ್ನು ನೆಲದಿಂದ ಮೇಲಕ್ಕೆತ್ತಿದರು. ಪನ್ನೀರಿನಲ್ಲಿ ನೆನೆದ ಬಟ್ಟೆಯನ್ನು ಕಣ್ಣುಗಳಿಗೆ ಒತ್ತಿದರು. ಉಸುರಿನ ಚಲನೆಯನ್ನು ಬೇಗನೆ ಪರೀಕ್ಷಿಸಿ ನೋಡಿದರು. ತಾಳೆಗರಿಯ ಬೀಸಣಿಗೆಯಲ್ಲಿ ತಂಗಾಳಿಯನ್ನು ಬೀಸಿ, ಶೋಕದ ಸೆರೆಯಿಂದ ಹಗುರಗೊಳಿಸಿ, ಮರವೆಯ ಮನಸ್ಸನ್ನು ಚೇತರಿಸುವಂತೆ ಮಾಡಿ, ನಿಧಾನವಾಗಿ ವ್ಯಾಸಮುನಿ ಮಾತನಾಡಿಸಿದ.
ಪದಾರ್ಥ (ಕ.ಗ.ಪ)
ತತ್ತಳ-ಒಂದು ಅನುಕರಣ ಶಬ್ದ, (ಇಲ್ಲಿ ಗಾಳಿ ಚಲಿಸುವ ಶಬ್ದ ಎಂಬ ಅರ್ಥ) ಆರಯ್ದರು-ಪರೀಕ್ಷಿಸಿನೋಡಿದರು, ತಾಳವೃಂತ-ತಾಳೆಗರಿಯಿಂದ ಮಾಡಿದ ಬೀಸಣಿಗೆ, ಬಿತ್ತಿ-ಬೀಸಿ, ಹತ್ತಿಗೆ-ಬಂಧನ, ಹೊರೆದೆಗೆದು-ಹಗುರ ಮಾಡಿ, ಮರವೆ-ಮರವು, ಮಂಪರು, ಚಿತ್ತ-ಮನಸ್ಸು, ಚೇತರಿಸಿ-ಎಚ್ಚರಗೊಳಿಸಿ, ಚೈತನ್ಯಗೊಳಿಸಿ.
ಮೂಲ ...{Loading}...
ಎತ್ತಿದರು ಧರಣಿಪನ ಕಂಗಳೊ
ಳೊತ್ತಿದರು ಪನ್ನೀರನುಸುರಿನ
ತತ್ತಳವನಾರೈದರೊಯ್ಯನೆ ತಾಳವೃಂತದಲಿ
ಬಿತ್ತಿ ತಂಗಾಳಿಯನು ಶೋಕದ
ಹತ್ತಿಗೆಗೆ ಹೊರೆದೆಗೆದು ಮರವೆಯ
ಚಿತ್ತವನು ಚೇತರಿಸಿ ಮೆಲ್ಲನೆ ನುಡಿಸಿದನು ಮುನಿಪ ॥10॥
೦೧೧ ಏನನೆನ್ದೆವು ಹಿನ್ದೆ ...{Loading}...
ಏನನೆಂದೆವು ಹಿಂದೆ ಧರ್ಮ ನಿ
ಧಾನವನು ಕಯ್ಯೊಡನೆ ಮರೆದೆಯಿ
ದೇನು ನಿನ್ನಯ ಮತಿಯ ವಿಭ್ರಮೆ ನಮ್ಮ ಹೇಳಿಕೆಗೆ
ಭಾನುಮತಿಯನು ತಿಳುಹು ನಿನ್ನಯ
ಮಾನಿನಿಯ ಸಂತೈಸು ಸಂಸಾ
ರಾನುಗತಿ ತಾನಿದು ಚತುರ್ದಶ ಜಗದ ಜೀವರಿಗೆ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಿಂದೆ ನಾವು ಧರ್ಮದ ವಿಚಾರವಾಗಿ ಏನು ಹೇಳಿದ್ದೆವು. ಆ ಕ್ಷಣವೇ ಅದನ್ನು ಮರೆತೆ. ಇದೇನು, ಈಗ ನಮ್ಮ ಮಾತಿಗೆ ನಿನ್ನ ಬುದ್ದಿ ಭ್ರಮಿತವಾಯಿತು. ಭಾನುಮತಿಗೆ ಸಮಾಧಾನದ ಬುದ್ಧಿಮಾತುಗಳನ್ನು ಹೇಳು. ನಿನ್ನ ಮಡದಿಯನ್ನು ಸಮಾಧಾನಪಡಿಸು. ಹದಿನಾಲ್ಕು ಲೋಕಗಳ ಎಲ್ಲ ಜೀವಿಗಳ ಸಂಸಾರದ ಕ್ರಮವೇ ಇಂತಹುದು - ಎಂದು ವ್ಯಾಸರು ಧೃತರಾಷ್ಟ್ರನಿಗೆ ಹೇಳಿದರು.
ಪದಾರ್ಥ (ಕ.ಗ.ಪ)
ನಿಧಾನ-ವಿಚಾರ, ಆಲೋಚನೆ, ಕಯ್ಯೊಡನೆ ಮರೆದೆ-ಹೇಳಿದ ತಕ್ಷಣ ಮರೆತೆ, ಮತಿಯ ಭ್ರಮ-ಬುದ್ಧಿಭ್ರಮಣೆ, ಸಂಸಾರಾನುಗತಿ-ಸಂಸಾರದ ಕ್ರಮ, ನಡವಳಿಕೆ
ಟಿಪ್ಪನೀ (ಕ.ಗ.ಪ)
ಚತುರ್ದಶ ಭುವನ: ಇದೇ ಪರ್ವದ 10ನೆಯ ಸಂಧಿಯ 23ನೆಯ ಪದ್ಯದ ಶಬ್ದಾರ್ಥವನ್ನು ನೋಡಿ.ಶ
ಮೂಲ ...{Loading}...
ಏನನೆಂದೆವು ಹಿಂದೆ ಧರ್ಮ ನಿ
ಧಾನವನು ಕಯ್ಯೊಡನೆ ಮರೆದೆಯಿ
ದೇನು ನಿನ್ನಯ ಮತಿಯ ವಿಭ್ರಮೆ ನಮ್ಮ ಹೇಳಿಕೆಗೆ
ಭಾನುಮತಿಯನು ತಿಳುಹು ನಿನ್ನಯ
ಮಾನಿನಿಯ ಸಂತೈಸು ಸಂಸಾ
ರಾನುಗತಿ ತಾನಿದು ಚತುರ್ದಶ ಜಗದ ಜೀವರಿಗೆ ॥11॥
೦೧೨ ಬಹ ವಿಪತ್ತಿನ ...{Loading}...
ಬಹ ವಿಪತ್ತಿನ ಶರಕೆ ಜೋಡೆಂ
ದಿಹುದಲಾ ಸುವಿವೇಕಗತಿ ನಿ
ರ್ದಹಿಸದೇ ಶೋಕಾಗ್ನಿ ಧರ್ಮದ್ರುಮದ ಬೇರುಗಳ
ಅಹಿತರೇ ಜನಿಸಿದಡೆ ಸುತರೆನ
ಬಹುದೆ ದುರ್ಯೋಧನನು ಹಗೆ ನಿನ
ಗಿಹಪರದ ಸುಖಗತಿಗೆ ಸಾಧನ ಧರ್ಮಸುತನೆಂದ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಒಳ್ಳೆಯ ವಿವೇಕದ ರೀತಿನೀತಿಗಳು, ಬರುವ ಆಪತ್ತುಗಳೆಂಬ ಬಾಣದ ವಿರುದ್ಧ ಕವಚವಿದ್ದಂತೆ. ಧರ್ಮವೆಂಬ ವೃಕ್ಷದ ಬೇರುಗಳನ್ನು ಶೋಕದ ಅಗ್ನಿಯು ಸುಟ್ಟುಹಾಕುವುದಿಲ್ಲವೇ. ಶತ್ರುಗಳೇ ಜನಿಸಿದರೆ ಅವರನ್ನು ಮಕ್ಕಳೆನ್ನಬಹುದೇ. ದುರ್ಯೋಧನ ನಿನಗೆ ಶತ್ರು. ನಿನಗೆ ಇಹಪರದ ಉತ್ತಮಗತಿಗೆ ಧರ್ಮರಾಯನೇ ಸಾಧನ - ಎಂದು ವ್ಯಾಸರು ಹೇಳಿದರು.
ಪದಾರ್ಥ (ಕ.ಗ.ಪ)
ವಿಪತ್ತು-ಕೆಟ್ಟಪರಿಣಾಮಗಳು, ಅಪತ್ತುಗಳು, ಶರ-ಬಾಣ, ಜೋಡು-ಕವಚ, ಸುವಿವೇಕಗತಿ-ಉತ್ತಮವಾದ ವಿವೇಕದಿಂದ ದೊರಕುವ ಅಂತಿಮ ಸ್ಥಿತಿ, ನಿರ್ದಹಿಸು-ದಹಿಸು, ಸುಡು, ಶೋಕಾಗ್ನಿ-ಶೋಕವೆಂಬ ಅಗ್ನಿ, ಧರ್ಮದ್ರುಮ-ಧರ್ಮವೆಂಬ ಮರ, ಧರ್ಮತರು, ಅಹಿತ-ಹಿತವನ್ನುಂಟು ಮಾಡದ, ಇಹಪರ-ಇಹಲೋಕ (ಭೂಮಿ) ಮತ್ತು ಪರಲೋಕ (ಸ್ವರ್ಗ-ನರಕಗಳು).
ಮೂಲ ...{Loading}...
ಬಹ ವಿಪತ್ತಿನ ಶರಕೆ ಜೋಡೆಂ
ದಿಹುದಲಾ ಸುವಿವೇಕಗತಿ ನಿ
ರ್ದಹಿಸದೇ ಶೋಕಾಗ್ನಿ ಧರ್ಮದ್ರುಮದ ಬೇರುಗಳ
ಅಹಿತರೇ ಜನಿಸಿದಡೆ ಸುತರೆನ
ಬಹುದೆ ದುರ್ಯೋಧನನು ಹಗೆ ನಿನ
ಗಿಹಪರದ ಸುಖಗತಿಗೆ ಸಾಧನ ಧರ್ಮಸುತನೆಂದ ॥12॥
೦೧೩ ಕೇಳು ಮುನಿಭಾಷಿತವ ...{Loading}...
ಕೇಳು ಮುನಿಭಾಷಿತವ ನೃಪ ನೀ
ನಾಲಿಸುವುದಾತ್ಮಜರನಿಲ್ಲಿಂ
ಮೇಲೆ ಸಲಿಲಾಂಜಲಿಗಳನು ವೈದಿಕವಿಧಾನದಲಿ
ಪಾಲಿಸುವುದಾ ಪಾಂಡುಸುತರ ಸ
ಮೇಳದಲಿ ಸೇರುವುದು ಚಿತ್ತಕೆ
ತಾಳದಿರು ರಾಜಸ ವಿಕಾರವನೆಂದನಾ ವಿದುರ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಾಜನೇ, ವ್ಯಾಸಮುನಿಗಳ ಮಾತುಗಳನ್ನು ಕೇಳು. ನಿನ್ನ ಮಕ್ಕಳ (ಪಾಂಡವರ) ಮಾತುಗಳನ್ನು ಕೇಳು, ಇಲ್ಲಿಂದ ಮುಂದೆ ವೈದಿಕ ವಿಧಾನದಲ್ಲಿ ಜಲಾಂಜಲಿಯನ್ನು ಕೊಡು. ಆ ಪಾಂಡುಸುತರ ಕೂಟವನ್ನು ಸೇರಿಕೊ. ರಾಜಸ ವಿಕಾರವನ್ನು ಮನಸ್ಸಿನಲ್ಲಿ ಹೊಂದಬೇಡ ಎಂದು ವಿದುರ ಧೃತರಾಷ್ಟ್ರನಿಗೆ ಹೇಳಿದ.
ಪದಾರ್ಥ (ಕ.ಗ.ಪ)
ಮುನಿಭಾಷಿತ-ಮುನಿಯ ಮಾತು, ಆತ್ಮಜರು-ಮಕ್ಕಳು, ಸಲಿಲಾಂಜಲಿ-ನೀರಿನಿಂದ ಕೊಡುವ ಶ್ರದ್ಧಾಂಜಲಿ (ಸಲಿಲ-ನೀರು, ಅಂಜಲಿ-ಬೊಗಸೆ) ಸಮೇಳ-ಕೂಟ, ಸೇರುವಿಕೆ, ರಾಜಸವಿಕಾರ-ರಾಜಸಗುಣದ ವಿಕಾರಗಳು (ಗುಣಗಳು 3 ಬಗೆ. ಸತ್ವ-ರಜಸ್-ತಮಸ್. ಇವುಗಳಲ್ಲಿ ಸತ್ವಗುಣ ಉತ್ತಮ, ರಾಜಸಗುಣ ಮಧ್ಯಮ, ತಾಮಸಗುಣ ಅಧಮ)
ಮೂಲ ...{Loading}...
ಕೇಳು ಮುನಿಭಾಷಿತವ ನೃಪ ನೀ
ನಾಲಿಸುವುದಾತ್ಮಜರನಿಲ್ಲಿಂ
ಮೇಲೆ ಸಲಿಲಾಂಜಲಿಗಳನು ವೈದಿಕವಿಧಾನದಲಿ
ಪಾಲಿಸುವುದಾ ಪಾಂಡುಸುತರ ಸ
ಮೇಳದಲಿ ಸೇರುವುದು ಚಿತ್ತಕೆ
ತಾಳದಿರು ರಾಜಸ ವಿಕಾರವನೆಂದನಾ ವಿದುರ ॥13॥
೦೧೪ ತಾಯೆ ಹದುಳಿಸು ...{Loading}...
ತಾಯೆ ಹದುಳಿಸು ದೇವಲೋಕದ
ಲಾಯದಲಿ ಸಲಿಸಾ ಕುಮಾರರ
ನಾಯುಷದ ಲಿಪಿ ಹಣೆಯಲೊರಸಿದಡಾರ ವಶವಿದಕೆ
ರಾಯನಲಿ ಸೊಸೆಯರಿಗೆ ಮಿಕ್ಕಬು
ಜಾಯತಾಕ್ಷಿಯರಿಗೆ ವಿಶೋಕದ
ಬಾಯಿನವ ಕೊಡಿಸೆಂದನಾ ಮುನಿ ಸುಬಲನಂದನೆಗೆ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತಾಯೇ, ಸಮಾಧಾನ ತಂದುಕೋ, ದೇವಲೋಕದಲ್ಲಿ ನಿನ್ನ ಮಕ್ಕಳನ್ನು ಸೇರಿಸಲು ವಿಹಿತ ಕ್ರಮಗಳನ್ನು ಜರುಗಿಸು. ಆಯಸ್ಸಿನ ಬರಹ ಹಣೆಯಲ್ಲಿ ಅಳಿಸಿಹೋದರೆ, ಅದನ್ನು ಯಾರು ತಪ್ಪಿಸಲು ಸಾಧ್ಯ ? ಧೃತರಾಷ್ಟ್ರನಿಂದ ಸೊಸೆಯರಿಗೆ ಮತ್ತು ಉಳಿದ ಮಹಿಳೆಯರಿಗೆ ಸಾಂತ್ವನದ ನುಡಿಗಳೆಂಬ ಬಾಗಿನವನ್ನು ಕೊಡಿಸು - ಎಂದು ವೇದವ್ಯಾಸರು ಗಾಂಧಾರಿಗೆ ಹೇಳಿದರು.
ಪದಾರ್ಥ (ಕ.ಗ.ಪ)
ಹದುಳಿಸು-ಸಮಾಧಾನ ಮಾಡಿಕೊ, ಸಲಿಸು-ನಡೆಸಿಕೊಡು, ಆಯುಷದಲಿಪಿ-ಆಯಸ್ಸಿನ ಬರಹ, ವಿಧಿಬರಹ, ಬ್ರಹ್ಮಬರಹ,
ವಿಶೋಕದ ಬಾಯಿನ-(ಬಾಗಿನ) ಶೋಕದ ಬಾಗಿನ (ಬಾಗಿನ-ಶುಭಕಾರ್ಯಗಳ ನಂತರ ಮುತ್ತೈದೆಯರಿಗೆ ಕೊಡುವ ಎಲಡೆಯಡಿಕೆ, ಉಡುಗೊರೆ ಇತ್ಯಾದಿಗಳು), ಸುಬಲನಂದನೆ-ಸುಬಲರಾಜನ ಮಗಳಾದ ಗಾಂಧಾರಿ.
ಟಿಪ್ಪನೀ (ಕ.ಗ.ಪ)
- “ಬಾಯಿನವ………………………..” ಪತಿ ಮೃತನಾದ ನಂತರ ಪತ್ನಿಗೆ ಕಡೆಯ ಬಾರಿಗೆ ಮಂಗಳದ್ರವ್ಯ ಸಹಿತ ಬಾಗಿನ ಕೊಡುವ ರೂಢಿಯಿದೆ. ಕೌರವರೆಲ್ಲರೂ ಮೃತರಾದ್ದರಿಂದ ಅವನ ಪತ್ನಿಯರಿಗೆ ಬಾಗಿನವನ್ನು ಧೃತರಾಷ್ಟ್ರನಿಂದ ಕೊಡಿಸು ಎಂದು ವ್ಯಾಸರು ಹೇಳುವ ಮೂಲಕ ಇದಕ್ಕೆಲ್ಲಾ ಹೊಣೆ ಧೃತರಾಷ್ಟ್ರನೇ ಎಂದು ಪರ್ಯಾಯವಾಗಿ ವ್ಯಂಗ್ಯವಾಡಿದ್ದಾರೆ.
ಮೂಲ ...{Loading}...
ತಾಯೆ ಹದುಳಿಸು ದೇವಲೋಕದ
ಲಾಯದಲಿ ಸಲಿಸಾ ಕುಮಾರರ
ನಾಯುಷದ ಲಿಪಿ ಹಣೆಯಲೊರಸಿದಡಾರ ವಶವಿದಕೆ
ರಾಯನಲಿ ಸೊಸೆಯರಿಗೆ ಮಿಕ್ಕಬು
ಜಾಯತಾಕ್ಷಿಯರಿಗೆ ವಿಶೋಕದ
ಬಾಯಿನವ ಕೊಡಿಸೆಂದನಾ ಮುನಿ ಸುಬಲನಂದನೆಗೆ ॥14॥
೦೧೫ ಧರಣಿಪತಿ ಹೊರವಣ್ಟನನ್ತಃ ...{Loading}...
ಧರಣಿಪತಿ ಹೊರವಂಟನಂತಃ
ಪುರವ ಬಿಸುಟರು ಭಾನುಮತಿ ಸಹಿ
ತರಸಿಯರು ಹೊರವಂಟರೇಕಾಂಬರದ ಬಿಡುಮುಡಿಯ
ಕರದಬಸುರಿನ ಹೊಯ್ಲ ಕಜ್ಜಳ
ಪರಿಲುಳಿತ ನಯನಾಂಬುಗಳ ಕಾ
ತರಿಪ ಕಮಲಾಕ್ಷಿಯರು ನೆರೆದುದು ಲಕ್ಕ ಸಂಖ್ಯೆಯಲಿ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧೃತರಾಷ್ಟ್ರ ಅರಮನೆಯಿಂದ ಹೊರಟ. ಭಾನುಮತಿ ಸಹಿತವಾಗಿ ರಾಣಿಯರು ಅಂತಃಪುರವನ್ನು ಬಿಟ್ಟು, ಏಕವಸ್ತ್ರ ಮತ್ತು ಬಿಚ್ಚಿದ ಕೂದಲಿನಲ್ಲಿ ಹೊರಹೊರಟರು. ಕೈನಿಂದ ಹೊಟ್ಟೆಯನ್ನು ಬಡಿದುಕೊಳ್ಳುತ್ತಾ, ಲೇಪಿಸಿದ್ದ ಕಾಡಿಗೆಗಳನ್ನೊಳಗೊಂಡು ಸುರಿಯುತ್ತಿರುವ ಕಣ್ಣೀರುಗಳೊಂದಿಗೆ, ದುಃಖಿಸುವ ಮಹಿಳೆಯರು ಲಕ್ಷ ಸಂಖ್ಯೆಯಲ್ಲಿ ಸೇರಿದರು.
ಪದಾರ್ಥ (ಕ.ಗ.ಪ)
ಹೊರವಂಟ-ಹೊರಟ, ಬಿಸುಟರು-ಬಿಟ್ಟು ಹೊರಟರು, ಏಕಾಂಬರ-ಒಂಟಿ ಬಟ್ಟೆ, ಬಿಡುಮುಡಿ-ಬಿಚ್ಚಿದ ತಲೆಕೂದಲು, ಹೊಯ್ಲು-ಹೊಡೆತ, ಕಜ್ಜಳ-ಕಾಡಿಗೆ, ಕಣ್ಣಿಗೆಹಚ್ಚುವ ಕಪ್ಪು, ಪರಿಲುಳಿತ-ಲೇಪಿತವಾದ, ನಯನಾಂಬು-ಕಣ್ಣೀರು (ಅಂಬು-ನೀರು) ಕಾತರಿಪ-ದುಃಖಿಸುವ, ಕಮಲಾಕ್ಷೆಯರು-ಕಮಲದಂತೆ ಕಣ್ಣುಳ್ಳವರು, ಮಹಿಳೆಯರು, ನೆರೆದುದು-ಸೇರಿದುದು, ಲಕ್ಕ-ಲಕ್ಷ(ಸಂ)
ಮೂಲ ...{Loading}...
ಧರಣಿಪತಿ ಹೊರವಂಟನಂತಃ
ಪುರವ ಬಿಸುಟರು ಭಾನುಮತಿ ಸಹಿ
ತರಸಿಯರು ಹೊರವಂಟರೇಕಾಂಬರದ ಬಿಡುಮುಡಿಯ
ಕರದಬಸುರಿನ ಹೊಯ್ಲ ಕಜ್ಜಳ
ಪರಿಲುಳಿತ ನಯನಾಂಬುಗಳ ಕಾ
ತರಿಪ ಕಮಲಾಕ್ಷಿಯರು ನೆರೆದುದು ಲಕ್ಕ ಸಂಖ್ಯೆಯಲಿ ॥15॥
೦೧೬ ವಣಿಜಸತಿಯರು ಶಿಲ್ಪ ...{Loading}...
ವಣಿಜಸತಿಯರು ಶಿಲ್ಪ ಜನವುಪ
ವಣಿಜದಬಲಾಜನವಘಾಟದ
ಗಣಿಕೆಯರು ನಾನಾದಿಗಂತದ ರಾಜಪತ್ನಿಯರು
ಹಿಣಿಲ ಕಬರಿಯ ಹೊಳೆವ ಮುಂದಲೆ
ವಣಿಯ ಮುಕುರ ಮುಖಾಂಬುಜದ ಪದ
ಝಣಝಣತ್ಕೃತಿ ಜಡಿಯೆ ನಡೆದುದು ಬೀದಿಬೀದಿಯಲಿ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವೈಶ್ಯ, ಶಿಲ್ಪಿ , ಉಪವೃತ್ತಿಗಳನ್ನು ಆಶ್ರಯಿಸಿರುವ ವಿವಿಧ ಜನಾಂಗಗಳ ಸ್ತ್ರೀಯರು, ಅತಿಶಯವಾದ ಗಣಿಕಾಸ್ತ್ರೀಯರು, ನಾನಾ ದೇಶಗಳ ರಾಜಪತ್ನಿಯರು, ನಡೆದು ಹೋಗುತ್ತಿದ್ದರು. ಅವರ ತಲೆಗೂದಲಿನ ಹೆರಳುಗಳು, ಮುಂದಲೆ ಮಣಿಗಳು, ಕನ್ನಡಿಯಂತಿರುವ ಮುಖಕಮಲಗಳು ಹೊಳೆಯುತ್ತಿದ್ದವು. ಅವರ ಪಾದಗಳ ಘಟ್ಟಣೆಗೆ ಕಾಲುಗೆಜ್ಜೆಗಳು ಝಣ ಝಣ ಶಬ್ದಮಾಡುತ್ತಿದ್ದವು.
ಪದಾರ್ಥ (ಕ.ಗ.ಪ)
ವಣಿಜ-ವಾಣಿಜ್ಯ, ವ್ಯಾಪಾರವೃತ್ತಿ, ಶಿಲ್ಪಜನ- ಶಿಲ್ಪದ ಕೆಲಸ ಮಾಡುವವರು, ಉಪವಣಿಜ-ಉಪವೃತ್ತಿ, ಅಘಾಟ-ಅತಿಶಯ, ವಿಶೇಷ, ಅಬಲಾಜನ-ಮಹಿಳೆಯರು, ಗಣಿಕೆಯರು-ವೇಶ್ಯಾಸ್ತ್ರೀಯರು, ಹಿಣಿಲು-ಹೆರಳು, ತಲೆಗಂಟು, ಕಬರಿ-ತಲೆಗೂದಲು, ಮುಂದಲೆವಣಿ-ಬೈತಲೆಮಣಿ, ಮುಕುರ-ಕನ್ನಡಿ, ಮುಖಾಂಬುಜ-ಮುಖಕಮಲ, ಪದಝಣಝಣಕೃತಿ-ಕಾಲಿನ ಗೆಜ್ಜೆಯ ಧ್ವನಿ, ಜಡಿಯೆ-ಶಬ್ದ ಮಾಡುತ್ತಿರಲು.
ಮೂಲ ...{Loading}...
ವಣಿಜಸತಿಯರು ಶಿಲ್ಪ ಜನವುಪ
ವಣಿಜದಬಲಾಜನವಘಾಟದ
ಗಣಿಕೆಯರು ನಾನಾದಿಗಂತದ ರಾಜಪತ್ನಿಯರು
ಹಿಣಿಲ ಕಬರಿಯ ಹೊಳೆವ ಮುಂದಲೆ
ವಣಿಯ ಮುಕುರ ಮುಖಾಂಬುಜದ ಪದ
ಝಣಝಣತ್ಕೃತಿ ಜಡಿಯೆ ನಡೆದುದು ಬೀದಿಬೀದಿಯಲಿ ॥16॥
೦೧೭ ಎಸಳುಗಙ್ಗಳ ಬೆಳಗನಶ್ರು ...{Loading}...
ಎಸಳುಗಂಗಳ ಬೆಳಗನಶ್ರು
ಪ್ರಸರ ತಡೆದುದು ಶೋಕಮಯಶಿಖಿ
ಮುಸುಡಕಾಂತಿಯ ಕುಡಿದುದೊಸರುವ ಬಿಸಿಲ ಬೇಗೆಗಳು
ಮಿಸುಪ ಲಾವಣ್ಯಾಂಬುವನು ಬ
ತ್ತಿಸಿದವಂಗುಲಿಯುಪಹತಿಯ ಕೇ
ಣಸರ ಸೆಳೆದುದು ಕುಚದ ಚೆಲುವನು ಕೋಮಲಾಂಗಿಯರ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಚಿಗುರುಕಣ್ಣುಗಳ ಬೆಳಕನ್ನು ಕಣ್ಣೀರು ತಡೆಯಿತು ಶೋಕದ ಅಗ್ನಿ ಮುಖಕಾಂತಿಯನ್ನು ನಾಶ ಮಾಡಿತು. ಬಿಸಿಲಿನ ಬೇಗೆಯು ಹೊಳೆಯುವ ಲಾವಣ್ಯಜಲವನ್ನು (ಬೆವರು ಹನಿಯನ್ನು) ಬತ್ತಿಸಿದವು. ಕೈಬೆರಳುಗಳಿಂದ ಎದೆಯನ್ನು ಘಾತಿಸುವುದರಿಂದ ಕೋಮಲಾಂಗಿಯರ ಕುಚದ ಚೆಲುವು ಮರೆಯಾಯಿತು.
ಪದಾರ್ಥ (ಕ.ಗ.ಪ)
ಎಸಳುಗಂಗಳ-ಚಿಗುರಾದ ಎಲೆಯಂತಿರುವ ಕಣ್ಣುಗಳ, ಅಶ್ರುಪ್ರಸರ-ಕಣ್ಣೀರಿನ ಹರಿವು, ಶಿಖಿ-ಅಗ್ನಿ, ಮುಸುಡು-ಮುಖ, ಒಸರು-ಸ್ರವಿಸು, ಮಿಸುಪ-ಹೊಳೆಯುವ, ಲಾವಣ್ಯಾಂಬು-ಬೆವರ ಹನಿ, ಅಂಗುಲಿ-ಬೆರಳು, ಉಪಹತಿ-ತೊಂದರೆ, ಕೇಣಸರ-ಹೊಟ್ಟೆಕಿಚ್ಚು, ಕರುಬು, ಕುಚ-ಮೊಲೆ, ಸ್ತನ.
ಮೂಲ ...{Loading}...
ಎಸಳುಗಂಗಳ ಬೆಳಗನಶ್ರು
ಪ್ರಸರ ತಡೆದುದು ಶೋಕಮಯಶಿಖಿ
ಮುಸುಡಕಾಂತಿಯ ಕುಡಿದುದೊಸರುವ ಬಿಸಿಲ ಬೇಗೆಗಳು
ಮಿಸುಪ ಲಾವಣ್ಯಾಂಬುವನು ಬ
ತ್ತಿಸಿದವಂಗುಲಿಯುಪಹತಿಯ ಕೇ
ಣಸರ ಸೆಳೆದುದು ಕುಚದ ಚೆಲುವನು ಕೋಮಲಾಂಗಿಯರ ॥17॥
೦೧೮ ತಮ್ಮೊಳೇಕತ್ವದ ಸಖಿತ್ವದ ...{Loading}...
ತಮ್ಮೊಳೇಕತ್ವದ ಸಖಿತ್ವದ
ಸೊಮ್ಮಿನಲಿ ಶ್ರುತಿಯಶ್ರುಜಲವನು
ನಿರ್ಮಿಸಿದವೆನೆ ಕರ್ಣಪೂರದ ಮುತ್ತು ಸೂಸಿದವು
ನೆಮ್ಮಿತತಿಶಯ ಶೋಕವಹ್ನಿಯ
ರೊಮ್ಮಿಗೆಯ ಕರಣಂಗಳಲಿ ನೃಪ
ಧರ್ಮಪತ್ನಿಯರಳುತ ಹೊರವಂಟರು ಪುರಾಂತರವ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತಮ್ಮೊಳಗೆ ಕಣ್ಣು-ಕಿವಿಗಳೊಳಗೆ ಭೇದವಿಲ್ಲದ ಸ್ನೇಹದ ನಂಟಿನಲ್ಲಿ ಕಿವಿಗಳು ಸಹ ಕಣ್ಣೀರನ್ನು ಸುರಿಸಿದುವೋ ಎಂಬಂತೆ ಕಿವಿಯ ಆಭರಣಗಳ ಮುತ್ತುಗಳು ಚೆಲ್ಲಿದುವು. ಅತಿಶಯವಾದ ಶೋಕಾಗ್ನಿತಪ್ತರಾದ ರಾಜಪತ್ನಿಯರು ಪರಸ್ಪರ ಕೈ ಹಿಡಿದುಕೊಂಡು, ಅಳುತ್ತಾ, ನಗರದಿಂದ ಹೊರಟರು.
ಪದಾರ್ಥ (ಕ.ಗ.ಪ)
ಏಕತ್ವ-ಒಂದೇ ಎಂಬ ಭಾವ, ಸಖಿತ್ವ-ಸ್ನೇಹಭಾವ, ಸೊಮ್ಮು-ನಂಟಸ್ತಿಕೆ, ಶ್ರುತಿ-ಕಿವಿ, ಅಶ್ರುಜಲ-ಕಣ್ಣೀರು, ಕರ್ಣಪೂರ-ಕಿವಿಯ ಆಭರಣ, ಸೂಸಿದವು-ಚೆಲ್ಲಿದವು, ನೆಮ್ಮಿತು-ಆಧಾರವಾಯಿತು, ಶೋಕವಹ್ನಿ-ಶೋಕಾಗ್ನಿ, ಒಮ್ಮಿಗೆ–ಒಟ್ಟು ಸೇರುವುದು, ಕರಣಂಗಳು-ಕೆಲಸಮಾಡುವ ಅಂಗಗಳು, (ಇಲ್ಲಿ, ಕೈಗಳು ಎಂಬ ಅರ್ಥ) ಪುರಾಂತರ-ಪಟ್ಟಣದ ಹೊರಭಾಗ
ಮೂಲ ...{Loading}...
ತಮ್ಮೊಳೇಕತ್ವದ ಸಖಿತ್ವದ
ಸೊಮ್ಮಿನಲಿ ಶ್ರುತಿಯಶ್ರುಜಲವನು
ನಿರ್ಮಿಸಿದವೆನೆ ಕರ್ಣಪೂರದ ಮುತ್ತು ಸೂಸಿದವು
ನೆಮ್ಮಿತತಿಶಯ ಶೋಕವಹ್ನಿಯ
ರೊಮ್ಮಿಗೆಯ ಕರಣಂಗಳಲಿ ನೃಪ
ಧರ್ಮಪತ್ನಿಯರಳುತ ಹೊರವಂಟರು ಪುರಾಂತರವ ॥18॥
೦೧೯ ಉಡಿದು ಬಿದ್ದವು ...{Loading}...
ಉಡಿದು ಬಿದ್ದವು ಸೂಡಗವು ಬಿಗು
ಹಡಗಿ ಕಳೆದವು ತೋಳಬಂದಿಗ
ಳೊಡನೊಡನೆ ಚೆಲ್ಲಿದವು ಮುತ್ತಿನ ಹಾರಚಯ ಹರಿದು
ಬಿಡುಮುಡಿಯ ಕಡುತಿಮಿರ ಕಾರಿದು
ದುಡುಗಣವನೆನೆ ಸೂಸಕದ ಮು
ತ್ತಡಿಸಿ ಸುರಿದವು ನೆಲಕೆ ನೃಪವನಿತಾಕದಂಬದಲಿ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನೃಪವನಿತೆಯರ ಸಮೂಹದಲ್ಲಿ ಕೈ ಕಡಗಗಳು ಮುರಿದು ಬಿದ್ದುವು. ತೋಳಿನ ಆಭರಣಗಳು ಜಾರಿ ಬಿದ್ದುವು. ಮುತ್ತಿನ ಹಾರಗಳು ಹರಿದು ಜೊತೆಜೊತೆಯಾಗಿ ಮುತ್ತಿನ ಮಣಿಗಳು ಚಲ್ಲಾಡಿದುವು. ಬಿಟ್ಟತಲೆಗೂದಲಿನ ಕತ್ತಲೆಯು ನಕ್ಷತ್ರಸಮೂಹವನ್ನು ಕಾರಿದಂತೆ, ಬೈತಲೆಯ ಮಣಿಗಳು ನೆಲಕ್ಕೆ ಸುರಿದವು.
ಪದಾರ್ಥ (ಕ.ಗ.ಪ)
ಉಡಿದು-ಮುರಿದು, ಸೂಡಗ-ಕಡಗ, ಬಳೆ, ಬಿಗುಹಡಗಿ-ಸಡಿಲವಾಗಿ, ಕಳೆದವು-ಕಳಚಿ ಬಿದ್ದವು, ಹಾರಚಯ-ಹಾರಗಳ ಗುಂಪು, ತೋಳಬಂದಿ-ತೋಳಿಗೆ ಹಾಕುವ ಬಳೆಯಂತಹ ಆಭರಣ, ಬಿಡುಮುಡಿ-ಬಿಟ್ಟಕೊದಲು, ಕಡುತಿಮಿರ-ಗಾಢವಾದ ಕತ್ತಲು, ಉಡುಗಣ-ನಕ್ಷತ್ರರಾಶಿ, ಸೂಸಕ-ಬೈತಲೆಮಣಿ, ಮುತ್ತಡಸಿ-(ಮುತ್ತು-ಅಡಸಿ) ಮುತ್ತುಗಳು ಕೂಡಿಕೊಂಡು, ನೃಪವನಿತಾಕದಂಬ-ರಾಜಮಹಿಳೆಯರ ಸಮೂಹ
ಮೂಲ ...{Loading}...
ಉಡಿದು ಬಿದ್ದವು ಸೂಡಗವು ಬಿಗು
ಹಡಗಿ ಕಳೆದವು ತೋಳಬಂದಿಗ
ಳೊಡನೊಡನೆ ಚೆಲ್ಲಿದವು ಮುತ್ತಿನ ಹಾರಚಯ ಹರಿದು
ಬಿಡುಮುಡಿಯ ಕಡುತಿಮಿರ ಕಾರಿದು
ದುಡುಗಣವನೆನೆ ಸೂಸಕದ ಮು
ತ್ತಡಿಸಿ ಸುರಿದವು ನೆಲಕೆ ನೃಪವನಿತಾಕದಂಬದಲಿ ॥19॥
೦೨೦ ಗಾಳಿಯರಿಯದ ಮುನ್ನ ...{Loading}...
ಗಾಳಿಯರಿಯದ ಮುನ್ನ ರವಿಕಿರ
ಣಾಳಿ ಸೋಂಕದಪೂರ್ವರೂಪಿನ
ಮೇಲೆ ಬೀಳುವವೆಂಬವೊಲು ಕಡುವಿಸಿಲು ಬಿರುಗಾಳಿ
ತೂಳಿದವು ತರುಣಿಯರನಾವವ
ರಾಲಿಯರಿಯದ ನೆಲೆಯನಾ ಚಾಂ
ಡಾಲಜನ ಪರಿಯಂತ ಕಂಡುದು ರಾಯ ರಾಣಿಯರ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಮೊದಲು ಗಾಳಿಯೂ ತಿಳಿಯದ, ಸೂರ್ಯಕಿರಣಗಳೂ ಸೋಕದ ಅಪೂರ್ವವಾದ ಸೌಂದರ್ಯದ ಮೇಲೆ ಬೀಳೋಣವೆಂಬಂತೆ ಕಡುಬಿಸಿಲು ಬಿರುಗಾಳಿಗಳು ಆ ತರುಣಿಯರ ಮೇಲೆ ಬಿದ್ದವು. ಯಾರ ಕಣ್ಣುಗಳೂ ಕಾಣದ ಅಂಗಾಂಗಗಳನ್ನು ಚಾಂಡಾಲರೂ ಸೇರಿ ಎಲ್ಲ ಜನರೂ ರಾಜಮಹಿಳೆಯರನ್ನು ಕಂಡರು.
ಪದಾರ್ಥ (ಕ.ಗ.ಪ)
ಅರಿಯದು-ತಿಳಿಯದು, ರವಿಕಿರಣಾಳಿ-ಸೂರ್ಯನ ಕಿರಣಗಳ ಸಮೂಹ, ಸೋಂಕದ-ತಾಗದ, ಮುಟ್ಟದ, ಕಡುವಿಸಿಲು-(ಕಡು-ಬಿಸಿಲು)-ತೀವ್ರವಾದ ಬಿಸಿಲು, ತಳಿದವು-ಮೇಲೆ ಬಿದ್ದುವು, ಅಪ್ಪಳಿಸಿದುವು, ಆವವರ-ಯಾರೊಬ್ಬರ, ಆಲಿ-ಕಣ್ಣು, ನೆಲೆ-ಸ್ಥಳ, ಜಾಗ, ಪ್ರದೇಶ, ಚಾಂಡಾಲಜನ-ಚಾಂಡಾಲರು, ಅಂತ್ಯಜರು, ಪರಿಯಂತ-ಅಲ್ಲಿನವರೆಗೂ
ಮೂಲ ...{Loading}...
ಗಾಳಿಯರಿಯದ ಮುನ್ನ ರವಿಕಿರ
ಣಾಳಿ ಸೋಂಕದಪೂರ್ವರೂಪಿನ
ಮೇಲೆ ಬೀಳುವವೆಂಬವೊಲು ಕಡುವಿಸಿಲು ಬಿರುಗಾಳಿ
ತೂಳಿದವು ತರುಣಿಯರನಾವವ
ರಾಲಿಯರಿಯದ ನೆಲೆಯನಾ ಚಾಂ
ಡಾಲಜನ ಪರಿಯಂತ ಕಂಡುದು ರಾಯ ರಾಣಿಯರ ॥20॥
೦೨೧ ಅರಸ ಚಿತ್ತೈಸವರು ...{Loading}...
ಅರಸ ಚಿತ್ತೈಸವರು ಹಸ್ತಿನ
ಪುರವ ಹೊರವಡೆ ದೂರದಲಿ ಕೃಪ
ಗುರುಜ ಕೃತವರ್ಮಕರು ಕಂಡರು ಕೌರವೇಶ್ವರನ
ಅರಸಿಯರ ನಾನಾದಿಗಂತದ
ಧರಣಿಪರ ಭಗದತ್ತ ಮಾದ್ರೇ
ಶ್ವರ ಜಯದ್ರಥ ಕರ್ಣ ದುಶ್ಯಾಸನರ ರಾಣಿಯರ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜನಮೇಜಯ ರಾಜನೇ ಕೇಳು, ಅವರು ಹಸ್ತಿನಾಪುರವನ್ನು ಬಿಟ್ಟುಹೊರಡಲು, ದೂರದಲ್ಲಿ ಕೃಪ, ಅಶ್ವತ್ಥಾಮ, ಕೃತವರ್ಮರು ಧೃತರಾಷ್ಟ್ರರಾಜನನ್ನು ಮತ್ತು ರಾಣಿಯರನ್ನು, ಹಾಗೂ, ಭಗದತ್ತ, ಶಲ್ಯ, ಜಯದ್ರಥ, ಕರ್ಣ, ದುಶ್ಶಾಸನ ಮುಂತಾದ ನಾನಾ ದಿಕ್ಕುಗಳ ರಾಜರ ರಾಣಿಯರನ್ನು ಕಂಡರು.
ಪದಾರ್ಥ (ಕ.ಗ.ಪ)
ಚಿತ್ತೈಸು-ಕೇಳು, ನಾನಾದಿಗಂತದ-ವಿವಿಧ ದಿಕ್ಕುಗಳ, ವಿವಿಧ ದೇಶಗಳ
ಮೂಲ ...{Loading}...
ಅರಸ ಚಿತ್ತೈಸವರು ಹಸ್ತಿನ
ಪುರವ ಹೊರವಡೆ ದೂರದಲಿ ಕೃಪ
ಗುರುಜ ಕೃತವರ್ಮಕರು ಕಂಡರು ಕೌರವೇಶ್ವರನ
ಅರಸಿಯರ ನಾನಾದಿಗಂತದ
ಧರಣಿಪರ ಭಗದತ್ತ ಮಾದ್ರೇ
ಶ್ವರ ಜಯದ್ರಥ ಕರ್ಣ ದುಶ್ಯಾಸನರ ರಾಣಿಯರ ॥21॥
೦೨೨ ಗಣಿಕೆಯರನೇಕಾದಶಾಕ್ಷೋ ಹಿಣಿಯ ...{Loading}...
ಗಣಿಕೆಯರನೇಕಾದಶಾಕ್ಷೋ
ಹಿಣಿಯ ನೃಪರಾಣಿಯರನಾ ಪ
ಟ್ಟಣ ಜನದ ಪರಿಜನದ ಬಹುಕಾಂತಾ ಕದಂಬಕವ
ರಣಮಹೀದರುಶನಕೆ ಬಹು ಸಂ
ದಣಿಯ ಕಂಡರು ಧರ್ಮಸುತನಿ
ನ್ನುಣಲಿ ಧರಣಿಯನೆಂದು ಸುಯ್ದರು ಬಯ್ದು ಕಮಲಜನ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಣಭೂಮಿಯ ದರ್ಶನಕ್ಕೆ ಬರುತ್ತಿರುವ ವೇಶ್ಯಾಜನರನ್ನು, ಹನ್ನೊಂದು ಅಕ್ಷೋಹಿಣಿಯ ಜನರ ರಾಜಪತ್ನಿಯರನ್ನು, ಆ ಹಸ್ತಿನಾನಗರದ ಪರಿವಾರಜನದ ಬಹುಸಂಖ್ಯೆಯ ಮಹಿಳಾ ಜನಸಮೂಹವನ್ನು, ಅಶ್ವತ್ಥಾಮಾದಿಗಳು ಕಂಡರು. ಧರ್ಮರಾಯನು ಇನ್ನು ಭೂಮಿಯನ್ನು ಅನುಭವಿಸಲಿ ಎಂದು ಬ್ರಹ್ಮನನ್ನು ಬಯ್ದು ಬಿಸುಸುಯ್ದರು.
ಪದಾರ್ಥ (ಕ.ಗ.ಪ)
ಗಣಿಕೆಯರು-ವೇಶ್ಯೆಯರು, ಏಕಾದಶಾಕ್ಷೋಹಿಣಿ-ಹನ್ನೊಂದು ಅಕ್ಷೋಹಿಣಿ, ಪರಿಜನ-ಪರಿವಾರದಜನ, ಸೇವಕಜನ, ಬಹುಕಾಂತಾಕದಂಬಕ-ಬಹು ಸಂಖ್ಯೆಯ ಮಹಿಳೆಯರ ಸಮೂಹ, ರಣಮಹಿ-ರಣಭೂಮಿ, ಯುದ್ಧಭೂಮಿ, ಸಂದಣಿ-ಜನಸಮೂಹ, ಉಣಲಿಧರಣಿಯನು-ಈ ಭೂಮಿಯ ಆಳ್ವಿಕೆಯ ಭೋಗವನ್ನು ಉಣ್ಣಲಿ, ಸುಯ್ದರು-ಬಿಸುಸುಯ್ದರು, ನಿಟ್ಟುಸಿರು ಬಿಟ್ಟರು, ಕಮಲಜ-ಬ್ರಹ್ಮ
ಮೂಲ ...{Loading}...
ಗಣಿಕೆಯರನೇಕಾದಶಾಕ್ಷೋ
ಹಿಣಿಯ ನೃಪರಾಣಿಯರನಾ ಪ
ಟ್ಟಣ ಜನದ ಪರಿಜನದ ಬಹುಕಾಂತಾ ಕದಂಬಕವ
ರಣಮಹೀದರುಶನಕೆ ಬಹು ಸಂ
ದಣಿಯ ಕಂಡರು ಧರ್ಮಸುತನಿ
ನ್ನುಣಲಿ ಧರಣಿಯನೆಂದು ಸುಯ್ದರು ಬಯ್ದು ಕಮಲಜನ ॥22॥
೦೨೩ ಬನ್ದು ಧೃತರಾಷ್ಟ್ರಾವನೀಶನ ...{Loading}...
ಬಂದು ಧೃತರಾಷ್ಟ್ರಾವನೀಶನ
ಮುಂದೆ ನಿಂದರು ರಾಯಕಟಕವ
ಕೊಂದ ರಜನಿಯ ರಹವನಭಿವರ್ಣಿಸಿದರರಸಂಗೆ
ಸಂದುದೇ ಛಲವೆನ್ನ ಮಗನೇ
ನೆಂದನೈ ಹರಿಬದಲಿ ಹರುಷವ
ತಂದಿರೈ ತಮಗಿನ್ನು ಲೇಸಾಯ್ತೆಂದನಂಧನೃಪ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅವರುಗಳು (ಅಶ್ವತ್ಥಾಮ, ಕೃಪ, ಕೃತವರ್ಮ) ಬಂದು ಧೃತರಾಷ್ಟ್ರನ ಮುಂದೆ ನಿಂದರು. ರಾಜನ ಸೈನ್ಯವನ್ನು ಕೊಂದ ರಾತ್ರಿಯ ಯುದ್ಧದ ಸೋಜಿಗವನ್ನು ಧೃತರಾಷ್ಟ್ರನಿಗೆ ವರ್ಣಿಸಿದರು. ಛಲವು ಸಫಲವಾಯಿತೇ. ನನ್ನ ಮಗನು ಏನೆಂದ, ಈ ಕೆಲಸದಲ್ಲಿ ನನಗೆ ಸಂತೋಷವನ್ನು ತಂದಿರಿ. ಇನ್ನು ನಮಗೆ ಒಳ್ಳೆಯದಾಯಿತು ಎಂದು ಧೃತರಾಷ್ಟ್ರ ಹೇಳಿದ.
ಪದಾರ್ಥ (ಕ.ಗ.ಪ)
ರಾಯಕಟಕ-ರಾಜನ ಸೈನ್ಯ, ರಜನಿ-ರಾತ್ರಿ, ರಹ- ಆಶ್ಚರ್ಯ, ಅಭಿವರ್ಣಿಸು-ವಿವರವಾಗಿ ತಿಳಿಸು, ಸಂದುದೇ-ಮುಗಿಯಿತೇ, ಸಫಲವಾಯಿತೇ, ಛಲ-ಚಲ, ಹಠ, ಹರಿಬ-ಕೆಲಸ, ಹೊಣೆ, ಲೇಸು-ಒಳ್ಳೆಯದು
ಮೂಲ ...{Loading}...
ಬಂದು ಧೃತರಾಷ್ಟ್ರಾವನೀಶನ
ಮುಂದೆ ನಿಂದರು ರಾಯಕಟಕವ
ಕೊಂದ ರಜನಿಯ ರಹವನಭಿವರ್ಣಿಸಿದರರಸಂಗೆ
ಸಂದುದೇ ಛಲವೆನ್ನ ಮಗನೇ
ನೆಂದನೈ ಹರಿಬದಲಿ ಹರುಷವ
ತಂದಿರೈ ತಮಗಿನ್ನು ಲೇಸಾಯ್ತೆಂದನಂಧನೃಪ ॥23॥
೦೨೪ ಪತಿಕರಿಸಿದನು ನಮ್ಮನಹಿತ ...{Loading}...
ಪತಿಕರಿಸಿದನು ನಮ್ಮನಹಿತ
ಸ್ಥಿತಿಯನೆಲ್ಲವ ತಿಳಿದನಮರಾ
ವತಿಯ ಸತಿಯರ ಸೋಂಕಿನಲಿ ಸೇರಿದನು ನಿಮಿಷದಲಿ
ಕ್ಷಿತಿಪನಂತ್ಯದೊಳಲ್ಲಿ ಶಸ್ತ್ರ
ಚ್ಯುತಿಯಮಾಡಿ ವಿರಾಗದಲಿ ವನ
ಗತಿಕರಾವೈತಂದೆವೆಂದರು ಗುರುಸುತಾದಿಗಳು ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುರ್ಯೋಧನನು ನಮ್ಮನ್ನು ಆದರಿಸಿದ. ಶತ್ರುಗಳ ಸ್ಥಿತಿಯನ್ನೆಲ್ಲವನ್ನು ತಿಳಿದುಕೊಂಡ, ನಂತರ ಸ್ವರ್ಗದ ರಾಜಧಾನಿಯಾದ ಅಮರಾವತಿಯ ದೇವತಾಸ್ತ್ರೀಯರ ಸಮೀಪಕ್ಕೆ ಸೇರಿಕೊಂಡನು (ಮರಣ ಹೊಂದಿದ). ರಾಜನ ಅಂತ್ಯದಲ್ಲಿ, ನಾವು ಶಸ್ತ್ರಗಳನ್ನು ಕೆಳಗೆ ಹಾಕಿ, ವೈರಾಗ್ಯದಿಂದ ಅರಣ್ಯ ಪ್ರವೇಶಿಸುವ ಮಾರ್ಗದಲ್ಲಿ ಇಲ್ಲಿಗೆ ಬಂದೆವೆಂದು ಅಶ್ವತ್ಥಾಮಾದಿಗಳು ಹೇಳಿದರು.
ಪದಾರ್ಥ (ಕ.ಗ.ಪ)
ಪತಿಕರಿಸು-ಉಪಚರಿಸು, ಒಪ್ಪು, ಗೌರವಿಸು, ಅಮರಾವತಿ-ಸ್ವರ್ಗದ ರಾಜಧಾನಿ, ಸೋಕಿನಲಿ-ಮೈತಾಗುವಷ್ಟು ಸಮೀಪದಲ್ಲಿ, ಕ್ಷಿತಿಪ-ಭೂಮಿಗೆ ಒಡೆಯ, ರಾಜ (ಇಲ್ಲಿ, ದುರ್ಯೋಧನ) ಅಂತ್ಯದಲಿ-ಸಾವಿನಲ್ಲಿ, ಶಸ್ತ್ರಚ್ಯುತಿ-ಆಯುಧವನ್ನು ಕೈಬಿಟ್ಟು, ವಿರಾಗ-ವೈರಾಗ್ಯ, ವನಗತಿಕ-ಅರಣ್ಯಕ್ಕೆ ಹೋಗುವ, ಅರಣ್ಯವೇ ಗತಿಯಾದವ, ಐತಂದೆವು-ಬಂದೆವು.
ಮೂಲ ...{Loading}...
ಪತಿಕರಿಸಿದನು ನಮ್ಮನಹಿತ
ಸ್ಥಿತಿಯನೆಲ್ಲವ ತಿಳಿದನಮರಾ
ವತಿಯ ಸತಿಯರ ಸೋಂಕಿನಲಿ ಸೇರಿದನು ನಿಮಿಷದಲಿ
ಕ್ಷಿತಿಪನಂತ್ಯದೊಳಲ್ಲಿ ಶಸ್ತ್ರ
ಚ್ಯುತಿಯಮಾಡಿ ವಿರಾಗದಲಿ ವನ
ಗತಿಕರಾವೈತಂದೆವೆಂದರು ಗುರುಸುತಾದಿಗಳು ॥24॥
೦೨೫ ಲೇಸು ಮಾಡಿದಿರಿನ್ನು ...{Loading}...
ಲೇಸು ಮಾಡಿದಿರಿನ್ನು ನಿಮಗಿ
ನ್ನೈಸಲೇ ಕರ್ತವ್ಯವೆನೆ ಧರ
ಣೀಶನನು ಬೀಳ್ಕೊಂಡರವರಗಲಿದರು ತಮ್ಮೊಳಗೆ
ವ್ಯಾಸಮುನಿಯಾಶ್ರಮವ ಗಂಗಾ
ದೇಶವನು ತದ್ದಾ ್ವರಕಿಯ ಸಂ
ವೇಶಿಸಿದರೈ ಗುರುಜ ಕೃಪ ಕೃತವರ್ಮರೊಲವಿನಲಿ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಒಳ್ಳೆಯದು ಮಾಡಿದಿರಿ. ಇನ್ನು ನಿಮಗೆ ಕರ್ತವ್ಯವು ಅಷ್ಟೇ ಅಲ್ಲವೆ (ಅರಣ್ಯವಾಸ) - ಎಂದು ಧೃತರಾಷ್ಟ್ರನು ಹೇಳಲು, ಅವನನ್ನು ಬೀಳ್ಕೊಂಡು ಅಶ್ವತ್ಥಾಮನು ವ್ಯಾಸಾಶ್ರಮಕ್ಕೂ, ಕೃಪಾಚಾರ್ಯನು ಗಂಗಾದೇಶಕ್ಕೂ (ಹಸ್ತಿನಾವತಿ) ಕೃತವರ್ಮನು ದ್ವಾರಕಿಗೂ ತೆರಳಿದರು.
ಪದಾರ್ಥ (ಕ.ಗ.ಪ)
ಲೇಸು-ಒಳ್ಳೆಯದು, ಐಸಲೇ-ಅಷ್ಟೇಅಲ್ಲವೆ, ಗಂಗಾದೇಶ-ಗಂಗಾತೀರ, ಸಂವೇಶಿಸು-ಪ್ರವೇಶಿಸು, ಗುರುಜ-ಅಶ್ವತ್ಥಾಮ.
ಮೂಲ ...{Loading}...
ಲೇಸು ಮಾಡಿದಿರಿನ್ನು ನಿಮಗಿ
ನ್ನೈಸಲೇ ಕರ್ತವ್ಯವೆನೆ ಧರ
ಣೀಶನನು ಬೀಳ್ಕೊಂಡರವರಗಲಿದರು ತಮ್ಮೊಳಗೆ
ವ್ಯಾಸಮುನಿಯಾಶ್ರಮವ ಗಂಗಾ
ದೇಶವನು ತದ್ದಾ ್ವರಕಿಯ ಸಂ
ವೇಶಿಸಿದರೈ ಗುರುಜ ಕೃಪ ಕೃತವರ್ಮರೊಲವಿನಲಿ ॥25॥
೦೨೬ ತಿರುಗಿದರು ಬಳಿಕಿತ್ತಲೀ ...{Loading}...
ತಿರುಗಿದರು ಬಳಿಕಿತ್ತಲೀ ಮೋ
ಹರದ ಕಾಂತಾಕೋಟಿ ಬಂದುದು
ಹರಳುಮುಳ್ಳುಗಳೊತ್ತುಗಾಲಿನ ದೂರತರಪಥರ
ಉರಿಯ ಜಠರದ ಬಿಸಿಲ ಝಳದಲಿ
ಹುರಿದ ಕದಪುಗಳೆರಡು ಕಡೆಯಲಿ
ಸುರಿವ ನಯನಾಂಬುಗಳ ರಾಜನಿತಂಬಿನೀನಿಕರ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಶ್ವತ್ಥಾಮಾದಿಗಳು ಅತ್ತ ತಿರುಗಿದರು. ನಂತರ ಇತ್ತ ಗುಂಪುಗುಂಪಾಗಿ ಕೋಟಿಸಂಖ್ಯೆಯ ಮಹಿಳೆಯರು ಬಂದರು. ಅವರ ಕಾಲುಗಳಿಗೆ ಕಲ್ಲಿನ ಹರಳುಗಳು ಮತ್ತು ಮುಳ್ಳುಗಳು ಒತ್ತುತ್ತಿದ್ದವು. ದೂರದಾರಿಯನ್ನು ನಡೆದು ಬಂದ, ಅವರು, ಬಿಸಿಲಿನ ಕಾವಿನಲ್ಲಿ ಸೀದುಹೋಗಿದ್ದರು. ಮತ್ತು ಎರಡೂ ಕಪೋಲಗಳು ಕಣ್ಣೀರಿನಿಂದ ತೋಯ್ದಿದ್ದವು. ಹೀಗಿದ್ದ ರಾಜಮಹಿಳೆಯರ ಸಮೂಹವು ಬಂದಿತು.
ಪದಾರ್ಥ (ಕ.ಗ.ಪ)
ತಿರುಗಿದರು-ಹಿಂದಿರುಗಿದರು, ಮೋಹರದ-ಗುಂಪಿನಲ್ಲಿರುವ, ಕಾಂತಾಕೋಟಿ-ಕೋಟಿಸಂಖ್ಯೆಯ ಮಹಿಳೆಯರು, ಹರಳು-ಕಲ್ಲಿನ ಚೂರುಗಳು, ಬಿಸಿಲ ಝಳ-ಬಿಸಿಲಿನ ಕಾವು, ದೂರತರಪಥರ-ದೂರದ ದಾರಿಯನ್ನು ನಡೆದು ಬಂದವರ, ಹುರಿ-ಧಾನ್ಯಗಳನ್ನು ಬಾಣಲೆಯಲ್ಲಿ ಹುರಿಯಯುವುದು, ಕಪ್ಪಾಗುವುದು, ಕದಪು-ಕೆನ್ನೆ, ಕಪೋಲ, ನಿತಂಬಿನೀನಿಕರ-ಮಹಿಳಾ ಸಮೂಹ.
ಮೂಲ ...{Loading}...
ತಿರುಗಿದರು ಬಳಿಕಿತ್ತಲೀ ಮೋ
ಹರದ ಕಾಂತಾಕೋಟಿ ಬಂದುದು
ಹರಳುಮುಳ್ಳುಗಳೊತ್ತುಗಾಲಿನ ದೂರತರಪಥರ
ಉರಿಯ ಜಠರದ ಬಿಸಿಲ ಝಳದಲಿ
ಹುರಿದ ಕದಪುಗಳೆರಡು ಕಡೆಯಲಿ
ಸುರಿವ ನಯನಾಂಬುಗಳ ರಾಜನಿತಂಬಿನೀನಿಕರ ॥26॥
೦೨೭ ಬನ್ದುದೀ ಗಜಪುರದ ...{Loading}...
ಬಂದುದೀ ಗಜಪುರದ ನಾರೀ
ವೃಂದ ಧೃತರಾಷ್ಟ್ರಾವನೀಶನ
ಮುಂದೆ ವೇದವ್ಯಾಸ ಸಂಜಯ ವಿದುರ ಪೌರಜನ
ಮುಂದಣಾಹವರಂಗಧಾರುಣಿ
ಯೊಂದು ಕೆಲದುಪವನದ ನೆಳಲಲಿ
ನಿಂದುದಿವರಾಗಮನವನು ಕೇಳಿದನು ಯಮಸೂನು ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧೃತರಾಷ್ಟ್ರನ ಮುಂದೆ ಹಸ್ತಿನಾಪುರದ ಈ ನಾರೀಸಮೂಹ, ವೇದವ್ಯಾಸ, ಸಂಜಯ, ವಿದುರ, ಪುರಜನಗಳು ಬಂದರು. ಎದುರಿನಲ್ಲಿರುವ ಯುದ್ಧರಂಗದ ಪಕ್ಕದ ಉಪವನದ ನೆರಳಿನಲ್ಲಿ ಇವರು ನಿಂತರು. ಇವರ ಆಗಮನವನ್ನು ಧರ್ಮರಾಯ ಕೇಳಿದ.
ಪದಾರ್ಥ (ಕ.ಗ.ಪ)
ಆಹವರಂಗ-ಯುದ್ಧರಂಗ, ಧಾರುಣಿ-ಭೂಮಿ, ಕೆಲದ-ಪಕ್ಕದ, ಉಪವನ-ಸಣ್ಣ ಉದ್ಯಾನವನ
ಮೂಲ ...{Loading}...
ಬಂದುದೀ ಗಜಪುರದ ನಾರೀ
ವೃಂದ ಧೃತರಾಷ್ಟ್ರಾವನೀಶನ
ಮುಂದೆ ವೇದವ್ಯಾಸ ಸಂಜಯ ವಿದುರ ಪೌರಜನ
ಮುಂದಣಾಹವರಂಗಧಾರುಣಿ
ಯೊಂದು ಕೆಲದುಪವನದ ನೆಳಲಲಿ
ನಿಂದುದಿವರಾಗಮನವನು ಕೇಳಿದನು ಯಮಸೂನು ॥27॥
೦೨೮ ಮುರಮಥನ ಸಾತ್ಯಕಿ ...{Loading}...
ಮುರಮಥನ ಸಾತ್ಯಕಿ ಯುಧಿಷ್ಠಿರ
ಧರಣಿಪತಿ ನರ ಭೀಮ ಮಾದ್ರೇ
ಯರುಗಳೈವರ ಸಾರಥಿಗಳು ಯುಯುತ್ಸು ದಾರುಕರು
ತೆರಳಿತೇಳಕ್ಷೋಹಿಣಿಯ ನೃಪ
ರರಸಿಯರು ದ್ರೌಪದಿಯ ರೋದನ
ಸರದ ಗಾನದ ಜಠರತಾಡನ ತಾಳಮೇಳದಲಿ ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೃಷ್ಣ, ಸಾತ್ಯಕಿ, ಧರ್ಮಜ, ಅರ್ಜುನ, ಭೀಮ, ನಕುಲ ಸಹದೇವರು, ಈ ಐವರ ಸಾರಥಿಗಳು ಯುಯುತ್ಸು ದಾರುಕರು, ಏಳು ಅಕ್ಷೋಹಿಣಿಯ ರಾಜರ ಅರಸಿಯರು ತಮ್ಮ ಹೊಟ್ಟೆಯನ್ನು ಹೊಡೆದುಕೊಳ್ಳುತ್ತ, ಜೋರಾಗಿ ಅಳುತ್ತಿದ್ದ ದ್ರೌಪದಿಯ ಸಂಗಡ ಬಂದರು.
ಪದಾರ್ಥ (ಕ.ಗ.ಪ)
ರೋದನಸರದ-ಅಳುವ ಸ್ವರದ, ಜಠರತಾಡನ-ಹೊಟ್ಟೆಯನ್ನು ಬಡಿಯುವುದು,
ಮೂಲ ...{Loading}...
ಮುರಮಥನ ಸಾತ್ಯಕಿ ಯುಧಿಷ್ಠಿರ
ಧರಣಿಪತಿ ನರ ಭೀಮ ಮಾದ್ರೇ
ಯರುಗಳೈವರ ಸಾರಥಿಗಳು ಯುಯುತ್ಸು ದಾರುಕರು
ತೆರಳಿತೇಳಕ್ಷೋಹಿಣಿಯ ನೃಪ
ರರಸಿಯರು ದ್ರೌಪದಿಯ ರೋದನ
ಸರದ ಗಾನದ ಜಠರತಾಡನ ತಾಳಮೇಳದಲಿ ॥28॥
೦೨೯ ಇವರು ಬನ್ದರು ...{Loading}...
ಇವರು ಬಂದರು ದೂರದಲಿ ಮಾ
ಧವನ ಮತದಲಿ ನಿಂದರಾಚೆಯ
ಯುವತಿಜನ ಗಾಂಧಾರಿ ಕುಂತೀ ಭಾನುಮತಿ ಸಹಿತ
ವಿವಿಧವಿಕೃತವಿಳಾಸನಯನೋ
ದ್ಭವಪಯಸ್ತಿಮಿರಾಂಶುಕೆಯರಂ
ದವನಿಯಲಿ ಕೆಡೆದೊರಲುತಿರ್ದರು ತಾರು ಥಟ್ಟಿನಲಿ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇವರು (ಪಾಂಡವರು) ಬಂದು, ಕೃಷ್ಣನ ಅಭಿಪ್ರಾಯದಂತೆ ದೂರದಲ್ಲಿ ನಿಂತರು. ಆಚೆಯಲ್ಲಿ ಯುವತಿಯರು ಗಾಂಧಾರಿ, ಕುಂತಿ, ಭಾನುಮತಿ ಸಹಿತವಾಗಿ, ದುಃಖಪರವಶರಾಗಿ, ಏನು ಮಾಡುವರೆಂದೂ ತಿಳಿಯದೆ ತೀವ್ರವಾದ ಶೋಕದಿಂದ ಗುಂಪು ಗುಂಪಾಗಿ ನೆಲದ ಮೇಲೆ ಬಿದ್ದು ರೋಧಿಸುತ್ತಿದ್ದರು.
ಪದಾರ್ಥ (ಕ.ಗ.ಪ)
ಮತ-ಅಭಿಪ್ರಾಯ, ವಿಕೃತವಿಳಾಸ-ಸಹಜವಲ್ಲದ ನಡವಳಿಕೆ, ವಿಕಾರದ ನಡವಳಿಕೆ, ನಯನೋದ್ಭವ-ಕಣ್ಣಿನಿಂದ ಹುಟ್ಟಿದ, ಪಯಸ್-ನೀರು, ತಿಮಿರಾಂಶುಕೆಯರು-ಕತ್ತಲು ಕವಿದವರು, ಅವನಿ-ನೆಲ, ಭೂಮಿ, ಕೆಡೆದು-ಬಿದ್ದು, ಒರಲು-ಗೋಳಿಡು.
ಮೂಲ ...{Loading}...
ಇವರು ಬಂದರು ದೂರದಲಿ ಮಾ
ಧವನ ಮತದಲಿ ನಿಂದರಾಚೆಯ
ಯುವತಿಜನ ಗಾಂಧಾರಿ ಕುಂತೀ ಭಾನುಮತಿ ಸಹಿತ
ವಿವಿಧವಿಕೃತವಿಳಾಸನಯನೋ
ದ್ಭವಪಯಸ್ತಿಮಿರಾಂಶುಕೆಯರಂ
ದವನಿಯಲಿ ಕೆಡೆದೊರಲುತಿರ್ದರು ತಾರು ಥಟ್ಟಿನಲಿ ॥29॥
೦೩೦ ಅರಸ ಕೇಳ್ ...{Loading}...
ಅರಸ ಕೇಳ್ ಧೃತರಾಷ್ಟ್ರ ಸಂಜಯ
ವರ ಮುನಿಪ ವಿದುರಾದಿ ಪರಿಜನ
ಪುರಜನಾವಳಿಯಿದ್ದುದುಪವನದೊಂದು ಬಾಹೆಯಲಿ
ನೆರೆದುದೀಚೆಯಲೊಂದೆಸೆಯಲು
ತ್ತರೆ ಸುಭದ್ರೆಯರಾದಿ ಯಾದವ
ರರಸಿಯರು ಸಹಿತೊರಲುತಿರ್ದಳ್ ದ್ರೌಪದೀದೇವಿ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜನಮೇಜಯರಾಜನೇ ಕೇಳು, ಧೃತರಾಷ್ಟ್ರ, ಸಂಜಯ, ವ್ಯಾಸ, ವಿದುರಾದಿ, ಪರಿಜನ ಪುರಜನರು ಉಪವನದ ಒಂದು ಭಾಗದಲ್ಲಿದ್ದರು. ಈಚೆಯ ದಿಕ್ಕಿನಲ್ಲಿ ಉತ್ತರೆ, ಸುಭದ್ರೆಯರಾದಿಯಾದ ಯಾದವರ ರಾಣಿಯರು ಸಹಿತ ದ್ರೌಪದಿ ರೋಧಿಸುತ್ತಿದ್ದಳು.
ಪದಾರ್ಥ (ಕ.ಗ.ಪ)
ಪುರಜನಾವಳಿ-ಪುರಜನರ ಸಮೂಹ, ಬಾಹೆಯಲಿ-ಹೊರಭಾಗದಲ್ಲಿ, ನೆರೆದುದು-ಗುಂಪು ಸೇರಿತು.
ಮೂಲ ...{Loading}...
ಅರಸ ಕೇಳ್ ಧೃತರಾಷ್ಟ್ರ ಸಂಜಯ
ವರ ಮುನಿಪ ವಿದುರಾದಿ ಪರಿಜನ
ಪುರಜನಾವಳಿಯಿದ್ದುದುಪವನದೊಂದು ಬಾಹೆಯಲಿ
ನೆರೆದುದೀಚೆಯಲೊಂದೆಸೆಯಲು
ತ್ತರೆ ಸುಭದ್ರೆಯರಾದಿ ಯಾದವ
ರರಸಿಯರು ಸಹಿತೊರಲುತಿರ್ದಳ್ ದ್ರೌಪದೀದೇವಿ ॥30॥
೦೩೧ ಹರಿಸಹಿತ ಪಾಣ್ಡವರದೊನ್ದೆಸೆ ...{Loading}...
ಹರಿಸಹಿತ ಪಾಂಡವರದೊಂದೆಸೆ
ಯಿರೆ ಚತುರ್ವಿಧವಾದುದೀ ಮೋ
ಹರದೊಳಾಯ್ತೆಡೆಯಾಟ ವೇದವ್ಯಾಸ ವಿದುರರಿಗೆ
ಧರಣಿಪನ ಕಾಣಿಸುವುದಂಧನ
ನಿರುಪಮಿತ ಶೋಕಾನಳನ ಸಂ
ಹರಿಸುವುದು ನಯವೆಂದು ವೇದವ್ಯಾಸಮುನಿ ನುಡಿದ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೃಷ್ಣ ಸಹಿತವಾಗಿ ಪಾಂಡವರು ಒಂದು ದಿಕ್ಕಿನಲ್ಲಿರಲು ಈ ಗುಂಪು ನಾಲ್ಕು ವಿಧಗಳಾದುವು. ಈ ಗುಂಪುಗಳ ನಡುವೆ ವಿದುರ ವೇದವ್ಯಾಸರಿಗೆ ಓಡಾಟವಾಯಿತು. ಧರ್ಮರಾಯನಿಗೆ ಧೃತರಾಷ್ಟ್ರನನ್ನು ಕಾಣಿಸುವುದು ಮತ್ತು ಧೃತರಾಷ್ಟ್ರನ ಅಸಮಾನವಾದ ಶೋಕಾಗ್ನಿಯನ್ನು ಪರಿಹರಿಸುವುದು ನಯವೆಂದು ವೇದವ್ಯಾಸ ಮುನಿ ಹೇಳಿದ.
ಪದಾರ್ಥ (ಕ.ಗ.ಪ)
ಚತುರ್ವಿಧ-ನಾಲ್ಕುವಿಧ, ಮೋಹರ-ಗುಂಪು, ಎಡಯಾಟ-ಪದೇಪದೇ ಹೋಗಿ ಬರುವುದು, ನಿರುಪಮಿತ-ಉಪಮಾನವಿಲ್ಲದ, ಸಮಾನವಿಲ್ಲದ, ಶೋಕಾನಳ-ಶೋಕಾಗ್ನಿ, ಸಂಹರಿಸು-ನಾಶಗೊಳಿಸು, ನಯ-ಒಳ್ಳೆಯದು, ಉತ್ತಮವಾದುದು.
ಮೂಲ ...{Loading}...
ಹರಿಸಹಿತ ಪಾಂಡವರದೊಂದೆಸೆ
ಯಿರೆ ಚತುರ್ವಿಧವಾದುದೀ ಮೋ
ಹರದೊಳಾಯ್ತೆಡೆಯಾಟ ವೇದವ್ಯಾಸ ವಿದುರರಿಗೆ
ಧರಣಿಪನ ಕಾಣಿಸುವುದಂಧನ
ನಿರುಪಮಿತ ಶೋಕಾನಳನ ಸಂ
ಹರಿಸುವುದು ನಯವೆಂದು ವೇದವ್ಯಾಸಮುನಿ ನುಡಿದ ॥31॥
೦೩೨ ಇದಕೆ ಸಂಶಯವೇನು ...{Loading}...
ಇದಕೆ ಸಂಶಯವೇನು ಬೊಪ್ಪನ
ಪದಯುಗವ ಕಾಣಿಸುವುದೆಮ್ಮನು
ಹದುಳವಿಡುವುದು ಹಸ್ತಿನಾಪುರದರಸುತನ ತನಗೆ
ಒದೆದು ನೂಕಿದ ಹದನ ಮಕುಟಾ
ಗ್ರದಲಿ ಧರಿಸುವೆವೆಂದು ಬಿನ್ನವಿ
ಪುದು ಮಹೀಪತಿಗೆಂದು ಮುನಿಗರುಹಿದನು ಯಮಸೂನು ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇದಕ್ಕೆ ಸಂಶಯವೇನು, ಅಪ್ಪನ (ಧೃತರಾಷ್ಟ್ರನ) ಪಾದಗಳನ್ನು ಕಾಣಿಸುವುದು. ನಮ್ಮನ್ನು ಕ್ಷೇಮದಿಂದಿರುವಂತೆ ಮಾಡುವುದು. ಹಸ್ತಿನಾವತಿಯ ಅರಸನಾದ ಧೃತರಾಷ್ಟ್ರನು ಕಾಲಿನಲ್ಲಿ ಒದೆದು ನೂಕಿದ ಕಾರ್ಯವನ್ನು ನಮ್ಮ ತಲೆಯ ಮೇಲೆ ಹೊತ್ತು ನಡೆಸುವೆವು ಎಂದು ಧೃತರಾಷ್ಟ್ರನಿಗೆ ತಿಳಿಸುವುದು - ಎಂದು ಧರ್ಮರಾಯನು ವ್ಯಾಸರಿಗೆ ಹೇಳಿದನು.
ಪದಾರ್ಥ (ಕ.ಗ.ಪ)
ಪದಯುಗ-ಪಾದದ್ವಂದ್ವ, ಎರಡುಪಾದಗಳು, ಹದುಳವಿಡು-ಕ್ಷೇಮದಿಂದಿರಿಸು, ಸಮಾಧಾನದಿಂದಿರಿಸು, ಅರಸುತನ-ರಾಜತ್ವ, ರಾಜ್ಯಭಾರ ಮಾಡುವವರು, ಹದನ-ಕೆಲಸ, ಕಾರ್ಯ, ಸಂಗತಿ, ಮಕುಟಾಗ್ರ-ತಲೆಯತುದಿ, ನೆತ್ತಿ, ಬಿನ್ನವಿಪುದು-ತಿಳಿಸುವುದು.
ಮೂಲ ...{Loading}...
ಇದಕೆ ಸಂಶಯವೇನು ಬೊಪ್ಪನ
ಪದಯುಗವ ಕಾಣಿಸುವುದೆಮ್ಮನು
ಹದುಳವಿಡುವುದು ಹಸ್ತಿನಾಪುರದರಸುತನ ತನಗೆ
ಒದೆದು ನೂಕಿದ ಹದನ ಮಕುಟಾ
ಗ್ರದಲಿ ಧರಿಸುವೆವೆಂದು ಬಿನ್ನವಿ
ಪುದು ಮಹೀಪತಿಗೆಂದು ಮುನಿಗರುಹಿದನು ಯಮಸೂನು ॥32॥
೦೩೩ ಲೇಸನಾಡಿದೆ ಮಗನೆ ...{Loading}...
ಲೇಸನಾಡಿದೆ ಮಗನೆ ಧರ್ಮದ
ಮೀಸಲಲ್ಲಾ ನಿನ್ನ ಮತಿ ಬಳಿ
ಕೈಸಲೇಯೆನುತವರು ಬಂದರು ಭೂಪತಿಯ ಹೊರೆಗೆ
ಆ ಸುಯೋಧನ ನಿನ್ನ ಮಗನ
ಲ್ಲೀ ಸಮಂಜಸ ಧರ್ಮಜನ ಹಿಡಿ
ದೀಸುವುದು ಭವಜಲನಿಧಿಯನೆಂದಮಳಮುನಿ ನುಡಿದ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಒಳ್ಳೆಯದನ್ನು ಹೇಳಿದೆ ಮಗನೆ. ನಿನ್ನ ಬುದ್ಧಿಯು ಧರ್ಮಕ್ಕೆ ಮೀಸಲಲ್ಲವೇ, ಬಳಿಕ ಇನ್ನೇನು, ಎನ್ನುತ್ತಾ ಅವರು (ವಿದುರ-ವೇದವ್ಯಾಸರು) ಧೃತರಾಷ್ಟ್ರನ ಸಮೀಪಕ್ಕೆ ಬಂದರು. ಆ ದುರ್ಯೋಧನ ನಿನ್ನ ಮಗನಲ್ಲ. ಯೋಗ್ಯನಾದ ಈ ಧರ್ಮರಾಯನನ್ನು ಹಿಡಿದುಕೊಂಡು ಭವಸಾಗರವನ್ನು ಈಜುವುದುದೆಂದು ಶ್ರೇಷ್ಠ ಮುನಿಯಾದ ವೇದವ್ಯಾಸ ನುಡಿದ.
ಪದಾರ್ಥ (ಕ.ಗ.ಪ)
ಲೇಸು-ಒಳ್ಳೆಯದು, ನ್ಯಾಯವಾದುದು, ಧರ್ಮದ ಮೀಸಲು-ಧರ್ಮಕ್ಕಾಗಿ ಮೀಸಲಾಗಿರುವುದು, ಐಸಲೇ-ಅಲ್ಲವೇ, ಅಷ್ಟೇ ಅಲ್ಲವೇ, ಹೊರೆಗೆ-ಸಮೀಪಕ್ಕೆ, ಸಮಂಜಸ-ಯೋಗ್ಯ, ತಕ್ಕ, ಈಸು-ಈಜು, ಭವಜಲಧಿ-ಹುಟ್ಟುಸಾವುಗಳೆಂಬ ಸಾಗರ, ಅಮಳ-ಶ್ರೇಷ್ಠ
ಮೂಲ ...{Loading}...
ಲೇಸನಾಡಿದೆ ಮಗನೆ ಧರ್ಮದ
ಮೀಸಲಲ್ಲಾ ನಿನ್ನ ಮತಿ ಬಳಿ
ಕೈಸಲೇಯೆನುತವರು ಬಂದರು ಭೂಪತಿಯ ಹೊರೆಗೆ
ಆ ಸುಯೋಧನ ನಿನ್ನ ಮಗನ
ಲ್ಲೀ ಸಮಂಜಸ ಧರ್ಮಜನ ಹಿಡಿ
ದೀಸುವುದು ಭವಜಲನಿಧಿಯನೆಂದಮಳಮುನಿ ನುಡಿದ ॥33॥
೦೩೪ ನೃಪನ ಕಾಣಿಸಿಕೊಮ್ಬುದನಿಬರ ...{Loading}...
ನೃಪನ ಕಾಣಿಸಿಕೊಂಬುದನಿಬರ
ನುಪಚರಿಸುವುದು ನಿನ್ನ ಮಕ್ಕಳ
ಕೃಪಣತೆಯನಾರೈವರಲ್ಲವರೈವರುತ್ತಮರು
ಉಪಹತಿಯ ನೆನೆಯದಿರು ದುರ್ಜನ
ರಪಕೃತಿಗೆ ಫಲವಾಯ್ತು ಧರ್ಮವೆ
ರಪಣವಿಹಪರಲೋಕಕೆಲೆ ಧೃತರಾಷ್ಟ್ರ ಕೇಳ್ ಎಂದ ॥34॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಾಜನನ್ನು ನೋಡುವುದು. ಎಲ್ಲರನ್ನೂ ಉಪಚಾರ ಮಾಡುವುದು. ಅವರು ನಿನ್ನ ಮಕ್ಕಳ ನೀಚ ಬುದ್ಧಿಯನ್ನು ಪರಿಗಣಿಸುವವರಲ್ಲ. ಅವರೈವರೂ ಉತ್ತಮರು. ನಿನ್ನ ಮಕ್ಕಳಿಗಾದ ತೊಂದರೆಗಳನ್ನು ನೆನಪಿಸಿಕೊಳ್ಳಬೇಡ. ಕೆಟ್ಟ ಜನರ ಕೆಟ್ಟ ಕೆಲಸಗಳಿಗೆ ಸರಿಯಾದ ಫಲ ಸಿಕ್ಕಿತು. ಇಹ-ಪರಗಳೆರಡಕ್ಕೂ ಧರ್ಮವೇ ಆಸ್ತಿ, ಕೇಳು ಧೃತರಾಷ್ಟ್ರ ಎಂದು ಮುನಿ ನುಡಿದ.
ಪದಾರ್ಥ (ಕ.ಗ.ಪ)
ಅನಿಬರನು-ಎಲ್ಲರನ್ನೂ, ಕೃಪಣತೆ-ನೀಚತನ, ಆರೈ-ನೋಡು, ಪರೀಕ್ಷಿಸು, ಉಪಹತಿ-ತೊಂದರೆ, ಅಪಕೃತಿ-ಕೆಟ್ಟಕೆಲಸ, ರಪಣ-ಆಸ್ತಿ, ಇಹಪರ-ಭೂಮಿಯ ಮೇಲಿನ ಮತ್ತು ಆನಂತರದ (ಸ್ವರ್ಗದ) ಬದುಕು.
ಮೂಲ ...{Loading}...
ನೃಪನ ಕಾಣಿಸಿಕೊಂಬುದನಿಬರ
ನುಪಚರಿಸುವುದು ನಿನ್ನ ಮಕ್ಕಳ
ಕೃಪಣತೆಯನಾರೈವರಲ್ಲವರೈವರುತ್ತಮರು
ಉಪಹತಿಯ ನೆನೆಯದಿರು ದುರ್ಜನ
ರಪಕೃತಿಗೆ ಫಲವಾಯ್ತು ಧರ್ಮವೆ
ರಪಣವಿಹಪರಲೋಕಕೆಲೆ ಧೃತರಾಷ್ಟ್ರ ಕೇಳೆಂದ ॥34॥
೦೩೫ ಹೈ ಹಸಾದವು ...{Loading}...
ಹೈ ಹಸಾದವು ನಿಮ್ಮ ಚಿತ್ತಕೆ
ಬೇಹ ಹದನೇ ಕಾರ್ಯಗತಿ ಸಂ
ದೇಹವೇ ಪಾಂಡುವಿನ ಮಕ್ಕಳು ಮಕ್ಕಳವರೆಮಗೆ
ಕಾಹುರರು ಕಲ್ಮಷರು ಬಂಧು
ದ್ರೋಹಿಗಳು ಗತವಾಯ್ತು ನಿಷ್ಪ್ರ
ತ್ಯೂಹವಿನ್ನೇನವರಿಗೆಂದನು ಮುನಿಗೆ ಧೃತರಾಷ್ಟ್ರ ॥35॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೋ, ನಿಮ್ಮ ಮಾತು ನನಗೆ ಪ್ರಸಾದರೂಪದವು. ನಿಮ್ಮ ಮನಸ್ಸಿಗೆ ಬರುವ ವಿಚಾರವೇ ನನಗೆ ಕೆಲಸ ಮಾಡುವುದಕ್ಕೆ ಮಾರ್ಗದರ್ಶನ. ಇದಕ್ಕೆ ಸಂದೇಹವೇ, ಪಾಂಡುವಿನ ಮಕ್ಕಳೇ ನನಗೆ ಮಕ್ಕಳು. ಸೊಕ್ಕಿನವರು, ಪಾಪಿಗಳು, ಬಂಧು ದ್ರೋಹಿಗಳು ನಾಶವಾದರು. ಇನ್ನೇನು ಅವರಿಗೆ (ಪಾಂಡವರಿಗೆ) ಯಾವ ಅಡಚಣೆಗಳೂ ಇಲ್ಲದಂತಾಯಿತು - ಎಂದು ಧೃತರಾಷ್ಟ್ರ ವ್ಯಾಸರಿಗೆ ಹೇಳಿದ.
ಪದಾರ್ಥ (ಕ.ಗ.ಪ)
ಹಸಾದ-ಮಹಾಪ್ರಸಾದ, ನೀವು ಹೇಳಿದಂತಾಗಲಿ. ಬೇಹ-ಬೇಕಾದ, ಹದನು-ವಿಚಾರ, ಕೆಲಸ, ಕಾರ್ಯಗತಿ-ಕೆಲಸದ ರೀತಿ, ಕಾಹುರರು-ಸೊಕ್ಕಿನವರು, ಕಲ್ಮಷರು-ಪಾಪಿಗಳು, ನಿಷ್ಟ್ರತ್ಯೂಹ-ತಡೆಯಿಲ್ಲದ (ಪ್ರತ್ಯೂಹ-ತಡೆ) ಗತವಾಯ್ತು-ನಾಶವಾಯಿತು.
ಟಿಪ್ಪನೀ (ಕ.ಗ.ಪ)
ಈ ಪದ್ಯದಲ್ಲಿ ಬರುವ ಮಾತುಗಳನ್ನು - ಧೃತರಾಷ್ಟ್ರ ಬಹುಶಃ ವ್ಯಂಗ್ಯದ ಧ್ವನಿಯಲ್ಲಿ ಹೇಳಿದ್ದಾನೆ.
ಮೂಲ ...{Loading}...
ಹೈ ಹಸಾದವು ನಿಮ್ಮ ಚಿತ್ತಕೆ
ಬೇಹ ಹದನೇ ಕಾರ್ಯಗತಿ ಸಂ
ದೇಹವೇ ಪಾಂಡುವಿನ ಮಕ್ಕಳು ಮಕ್ಕಳವರೆಮಗೆ
ಕಾಹುರರು ಕಲ್ಮಷರು ಬಂಧು
ದ್ರೋಹಿಗಳು ಗತವಾಯ್ತು ನಿಷ್ಪ್ರ
ತ್ಯೂಹವಿನ್ನೇನವರಿಗೆಂದನು ಮುನಿಗೆ ಧೃತರಾಷ್ಟ್ರ ॥35॥
೦೩೬ ಖಳನ ಹೃದಯದ ...{Loading}...
ಖಳನ ಹೃದಯದ ಕಾಳಕೂಟದ
ಗುಳಿಗೆಗಳನಿವರೆತ್ತ ಬಲ್ಲರು
ತಿಳುಹಿ ನುಡಿದೊಡಬಡಿಸಿದರು ನಾನಾ ಪ್ರಕಾರದಲಿ
ಘಳಿಲನೀಚೆಗೆ ಬಂದು ಹದನನು
ನಳಿನನಾಭಂಗರುಹೆ ನಸುನಗು
ತೊಳಗೊಳಗೆ ಹರಿ ವಿಶ್ವಕರ್ಮನ ನೆನೆದು ನೇಮಿಸಿದ ॥36॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುಷ್ಟನ ಹೃದಯದಲ್ಲಿನ ಮಹಾವಿಷದ ಗುಳಿಗೆಗಳನ್ನು ಇವರು ಎಲ್ಲಿ ಬಲ್ಲರು. ನಾನಾ ವಿಧವಾಗಿ ಬುದ್ಧಿ ಹೇಳಿ ಧೃತರಾಷ್ಟ್ರನನ್ನು ಒಪ್ಪಿಸಿದರು. ಕೂಡಲೇ ಈಚೆಗೆ ಬಂದು (ವ್ಯಾಸ ವಿದುರರು) ಈ ವಿಚಾರವನ್ನು ಕೃಷ್ಣನಿಗೆ ತಿಳಿಸಲು ಅವನು ಒಳಗೊಳಗೇ ನಸುನಗುತ್ತಾ ವಿಶ್ವಕರ್ಮನನ್ನು ಮನಸ್ಸಿನಲ್ಲಿ ನೆನೆದು ಬರಮಾಡಿ ಅವನಿಗೆ ಒಂದು ಕೆಲಸವನ್ನು ಹೇಳಿದ.
ಪದಾರ್ಥ (ಕ.ಗ.ಪ)
ಖಳ-ದುಷ್ಟ, ಕಾಳಕೂಟದ ಗುಳಿಗೆ-ಮಹಾವಿಷದ ಮಾತ್ರೆಗಳು, ವಿಷಗುಳಿಗೆಗಳು, ತಿಳಿಹಿ-ತಿಳಿಯಹೇಳಿ, ಬುದ್ಧಿ ಹೇಳಿ, ಒಡಬಡಿಸು– ಒಪ್ಪಿಸು, ಘಳಿಲನೆ-ತಕ್ಷಣ, ಕೂಡಲೇ, ಬೇಗ, ಹದನನು-ವಿಷಯವನ್ನು, ವಿಶ್ವಕರ್ಮ-ದೇವತೆಗಳ ಶಿಲ್ಪಿ, ನೇಮಿಸಿದ-ಒಂದು ಕೆಲಸಕ್ಕೆ ನಿಗದಿಗೊಳಿಸಿದ.
ಮೂಲ ...{Loading}...
ಖಳನ ಹೃದಯದ ಕಾಳಕೂಟದ
ಗುಳಿಗೆಗಳನಿವರೆತ್ತ ಬಲ್ಲರು
ತಿಳುಹಿ ನುಡಿದೊಡಬಡಿಸಿದರು ನಾನಾ ಪ್ರಕಾರದಲಿ
ಘಳಿಲನೀಚೆಗೆ ಬಂದು ಹದನನು
ನಳಿನನಾಭಂಗರುಹೆ ನಸುನಗು
ತೊಳಗೊಳಗೆ ಹರಿ ವಿಶ್ವಕರ್ಮನ ನೆನೆದು ನೇಮಿಸಿದ ॥36॥
೦೩೭ ನೆನೆದ ಘಳಿಗೆಯೊಳಾತ ...{Loading}...
ನೆನೆದ ಘಳಿಗೆಯೊಳಾತ ಕಟ್ಟು
ಕ್ಕಿನಲಿ ಸರ್ವಾವಯವವನು ಸಂ
ಜನಿಸಿದನು ಪ್ರತಿರೂಪವನು ಪವಮಾನನಂದನನ
ದನುಜರಿಪುಸಹಿತವರು ಬಂದರು
ಮುನಿಯೊಡನೆ ಬಳಿಕಂಧನೃಪತಿಗೆ
ವಿನಯದಲಿ ಮೆಯ್ಯಿಕ್ಕಿದನು ಭಕ್ತಿಯಲಿ ಯಮಸೂನು ॥37॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನೆನೆದ ಕೂಡಲೇ ವಿಶ್ವಕರ್ಮನು ಬಂದು ಗಟ್ಟಿಯಾದ ಉಕ್ಕಿನಿಂದ ಭೀಮನ ಪ್ರತಿರೂಪದಂತೆ ಸರ್ವ ಅಂಗಾಂಗಗಳನ್ನೂ ನಿರ್ಮಿಸಿದ. ಕೃಷ್ಣನ ಸಹಿತವಾಗಿ ಪಾಂಡವರು ವ್ಯಾಸರೊಡನೆ ಬಂದರು. ನಂತರ ಧೃತರಾಷ್ಟ್ರನಿಗೆ ಧರ್ಮರಾಯನು ವಿನಯ ಮತ್ತು ಭಕ್ತಿಯಿಂದ ನಮಸ್ಕಾರ ಮಾಡಿದ.
ಪದಾರ್ಥ (ಕ.ಗ.ಪ)
ಕಟ್ಟುಕ್ಕಿನಲ್ಲಿ-ಗಟ್ಟಿಯಾದ ಉಕ್ಕಿನಲ್ಲಿ, ಸರ್ವಾವಯವ-ಎಲ್ಲ ಅಂಗಗಳೂ, ಸಂಜನಿಸು-ಸೃಷ್ಟಿಸು, ಪ್ರತಿರೂಪ-ತದ್ರೂಪ, ಅದೇ ರೀತಿಯ ರೂಪ, ಮೆಯ್ಯಿಕ್ಕು-ನಮಸ್ಕರಿಸು, ದೀರ್ಘದಂಡ ನಮಸ್ಕಾರ ಮಾಡು.
ಮೂಲ ...{Loading}...
ನೆನೆದ ಘಳಿಗೆಯೊಳಾತ ಕಟ್ಟು
ಕ್ಕಿನಲಿ ಸರ್ವಾವಯವವನು ಸಂ
ಜನಿಸಿದನು ಪ್ರತಿರೂಪವನು ಪವಮಾನನಂದನನ
ದನುಜರಿಪುಸಹಿತವರು ಬಂದರು
ಮುನಿಯೊಡನೆ ಬಳಿಕಂಧನೃಪತಿಗೆ
ವಿನಯದಲಿ ಮೆಯ್ಯಿಕ್ಕಿದನು ಭಕ್ತಿಯಲಿ ಯಮಸೂನು ॥37॥
೦೩೮ ಬಾ ಮಗನೆ ...{Loading}...
ಬಾ ಮಗನೆ ಕುರುರಾಜವಂಶ ಶಿ
ರೋಮಣಿಯೆ ನಿರ್ಧೂತ ರಾಜಸ
ತಾಮಸನೆ ಸತ್ಯೈಕನಿಧಿ ಬಾ ಕಂದ ಬಾ ಎನುತ
ಭೂಮಿಪನ ತೆಗೆದಪ್ಪಿ ಬಹಳ
ಪ್ರೇಮದಲಿ ಮುಂಡಾಡಿದನು ಕಲಿ
ಭೀಮನೋ ಬಾ ಮಗನೆ ಬಾರೈ ಕಂದ ಬಾ ಎಂದ ॥38॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಾ ಮಗನೆ, ಕುರುರಾಜವಂಶದ ಶಿರೋಮಣಿಯೆ, ರಾಜಸ ತಾಮಸ ಗುಣರಹಿತನೆ, ಸತ್ವಗುಣಕ್ಕೆ ಏಕೈಕ ನಿಧಿಯೇ, ಬಾ, ಕಂದ ಬಾ, ಎನ್ನುತ್ತ, ಧೃತರಾಷ್ಟ್ರ ಧರ್ಮರಾಯನನ್ನು ತೆಗೆದಪ್ಪಿಕೊಂಡು, ಬಹಳ ಪ್ರೇಮದಿಂದ ಮುದ್ದಾಡಿದನು. ನಂತರ ಕಲಿಭೀಮನೇ, ಬಾ ಮಗನೆ, ಬಾರೈ ಕಂದ, ಬಾ ಎಂದ.
ಪದಾರ್ಥ (ಕ.ಗ.ಪ)
ಕುರುರಾಜವಂಶಶಿರೋಮಣಿ-ಕುರುರಾಜಕುಲಕ್ಕೆ ಶಿರಸ್ಸಿನ ಆಭರಣದಂತಿರುವವನು (ಇಲ್ಲಿ, ಧರ್ಮರಾಯ), ನಿರ್ಧೂತ-ನಾಶಪಡಿಸಿದವ, ರಾಜಸ ತಾಮಸ-ತ್ರಿಗುಣಗಳಾದ ಸತ್ವ, ರಜಸ್, ತಮಸ್ ಎಂಬುವುಗಳಲ್ಲಿ ರಜಸ್ಸು ಮತ್ತು ತಮಸ್ಸುಗಳೆಂಬೆರಡು ಗುಣಗಳು, ಸತ್ವೈಕನಿಧಿ-ಸತ್ವಗುಣಕ್ಕೆ ಏಕೈಕ ಆಕರನಾದವನು. (ಸತ್ವ-ಶ್ರೇಷ್ಠ, ರಾಜಸ-ಮಧ್ಯಮ, ತಾಮಸ-ಅಧಮ) ಮುಂಡಾಡು-ಮುದ್ದಾಡು
ಮೂಲ ...{Loading}...
ಬಾ ಮಗನೆ ಕುರುರಾಜವಂಶ ಶಿ
ರೋಮಣಿಯೆ ನಿರ್ಧೂತ ರಾಜಸ
ತಾಮಸನೆ ಸತ್ಯೈಕನಿಧಿ ಬಾ ಕಂದ ಬಾ ಎನುತ
ಭೂಮಿಪನ ತೆಗೆದಪ್ಪಿ ಬಹಳ
ಪ್ರೇಮದಲಿ ಮುಂಡಾಡಿದನು ಕಲಿ
ಭೀಮನೋ ಬಾ ಮಗನೆ ಬಾರೈ ಕಂದ ಬಾ ಎಂದ ॥38॥
೦೩೯ ಭೀಮನನು ಹಿನ್ದಿಕ್ಕಿ ...{Loading}...
ಭೀಮನನು ಹಿಂದಿಕ್ಕಿ ಲೋಹದ
ಭೀಮನನು ಮುಂದಿರಿಸಿದಡೆ ಸು
ಪ್ರೇಮನಪ್ಪಿದಡೇನನೆಂಬೆನು ಮೋಹವನು ಮಗನ
ಆ ಮಹಾವಜ್ರಾಯತ ಪ್ರೋ
ದ್ದಾಮದಾಯಸ ಭೀಮತನು ನಿ
ರ್ನಾಮವೆನೆ ನುಗ್ಗಾಗಿ ಬಿದ್ದುದು ನೃಪನ ತಕ್ಕೆಯಲಿ ॥39॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೃಷ್ಣನು, ಭೀಮನನ್ನು ಹಿಂದೆ ಕಳಿಸಿ, ಲೋಹದಲ್ಲಿ ಮಾಡಿದ ಭೀಮನ ವಿಗ್ರಹವನ್ನು ಧೃತರಾಷ್ಟ್ರನ ಮುಂದೆ ಇಟ್ಟರೆ, ನಟನೆಯ ಪ್ರೇಮದಿಂದ ಧೃತರಾಷ್ಟ್ರನು ಅದನ್ನು ಅಪ್ಪಿದನು. ಮಗನ ಮೇಲಿನ ಮೋಹವನ್ನು ಏನೆಂದು ಹೇಳಲಿ. ಉಕ್ಕಿನಲ್ಲಿ ನಿರ್ಮಿಸಿದ ಭೀಮನ ಪ್ರತಿಮೆ ನಿರ್ನಾಮವಾಯಿತೆನ್ನಲು ಧೃತರಾಷ್ಟ್ರನ ತೆಕ್ಕೆಯಲ್ಲಿ ನುಗ್ಗಾಗಿ ಬಿದ್ದಿತು.
ಪದಾರ್ಥ (ಕ.ಗ.ಪ)
ಸುಪ್ರೇಮನು-ಬಹಳ ಪ್ರೀತಿಯುಳ್ಳವನು (ವ್ಯಂಗ್ಯದಿಂದ ಹೇಳಿರುವ ಮಾತು) ಮೋಹ-ಪ್ರೀತಿ, ವಜ್ರಾಯತ-ವಜ್ರಕಠಿಣವಾದ, ಪ್ರೊದ್ದಾಮ-ಅತಿಹೆಚ್ಚಿನ, ಆಯಸದ-ಕಬ್ಬಿಣದ, ಭೀಮತನು-ಭೀಮನ ಪ್ರತಿಮೆ, ನುಗ್ಗಾಗಿ-ನುಜ್ಜುಗುಜ್ಜಾಗಿ, ತೆಕ್ಕೆ-ಅಪ್ಪುಗೆ
ಮೂಲ ...{Loading}...
ಭೀಮನನು ಹಿಂದಿಕ್ಕಿ ಲೋಹದ
ಭೀಮನನು ಮುಂದಿರಿಸಿದಡೆ ಸು
ಪ್ರೇಮನಪ್ಪಿದಡೇನನೆಂಬೆನು ಮೋಹವನು ಮಗನ
ಆ ಮಹಾವಜ್ರಾಯತ ಪ್ರೋ
ದ್ದಾಮದಾಯಸ ಭೀಮತನು ನಿ
ರ್ನಾಮವೆನೆ ನುಗ್ಗಾಗಿ ಬಿದ್ದುದು ನೃಪನ ತಕ್ಕೆಯಲಿ ॥39॥
೦೪೦ ಮಗನೆ ಹಾ ...{Loading}...
ಮಗನೆ ಹಾ ಹಾ ಭೀಮ ನೊಂದೈ
ಮಗನೆ ಕೆಟ್ಟೆನು ಕೆಟ್ಟೆನಕಟೆಂ
ದೊಗುಮಿಗೆಯ ಶೋಕದಲಿ ನೆರೆ ಮರುಗಿದನು ಧೃತರಾಷ್ಟ್ರ
ದುಗಡ ಬೇಡೊಮ್ಮಿಂಗೆ ನಿಮ್ಮಯ
ಮಗನುಳಿದ ನಿಮ್ಮಧಿಕರೋಷದ
ಹಗರಣದ ಹಗೆ ಹೋಯಿತೆಂದನು ನಗುತ ಮುರವೈರಿ ॥40॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಗನೆ, ಹಾ, ಹಾ, ಭೀಮ, ನೊಂದೆಯಾ, ಮಗನೆ ಕೆಟ್ಟೆನು ಕೆಟ್ಟೆನು, ಅಯ್ಯೋ ಎಂದು ಅತಿಯಾದ ಶೋಕದಿಂದ ವಿಶೇಷವಾಗಿ ಧೃತರಾಷ್ಟ್ರ ಮರುಗಿದ. ದುಃಖಬೇಡ. ಈಗ ನಿಮ್ಮ ಮಗ ಉಳಿದ. ನಿಮ್ಮ ಅತಿಯಾದ ರೋಷದ, ನಿಂದ್ಯವಾದ ಶತ್ರುತ್ವವು ನಾಶವಾಯಿತೆಂದು ಕೃಷ್ಣ ನಗುತ್ತಾ ಹೇಳಿದ.
ಪದಾರ್ಥ (ಕ.ಗ.ಪ)
ಒಗುಮಿಗೆ-ಅತಿಯಾದ, ನೆರೆ-ಹೆಚ್ಚಾಗಿ, ವಿಶೇಷವಾಗಿ, ಮರುಗು-ದುಃಖಿಸು, ದುಗುಡ-ದುಃಖ, ಹಗರಣ-ನಿಂದೆ, ಹಗೆ- ಶತ್ರುತ್ವ
ಮೂಲ ...{Loading}...
ಮಗನೆ ಹಾ ಹಾ ಭೀಮ ನೊಂದೈ
ಮಗನೆ ಕೆಟ್ಟೆನು ಕೆಟ್ಟೆನಕಟೆಂ
ದೊಗುಮಿಗೆಯ ಶೋಕದಲಿ ನೆರೆ ಮರುಗಿದನು ಧೃತರಾಷ್ಟ್ರ
ದುಗಡ ಬೇಡೊಮ್ಮಿಂಗೆ ನಿಮ್ಮಯ
ಮಗನುಳಿದ ನಿಮ್ಮಧಿಕರೋಷದ
ಹಗರಣದ ಹಗೆ ಹೋಯಿತೆಂದನು ನಗುತ ಮುರವೈರಿ ॥40॥
೦೪೧ ತ್ರಾಣವಿಮ್ಮಡಿಸಿತ್ತು ಕೋಪದ ...{Loading}...
ತ್ರಾಣವಿಮ್ಮಡಿಸಿತ್ತು ಕೋಪದ
ಕೇಣವೆಚ್ಚರಿಸಿದಡೆ ನೃಪ ಸ
ತ್ರಾಣದಲಿ ತನಿಬಗಿಯೆ ನುಗ್ಗಾಯ್ತಾಯಸ ಪ್ರತಿಮೆ
ಮಾಣು ಭಯವನು ಭೀಮ ಭೂಪನ
ಕಾಣು ಹೋಗೆನೆ ನಡುಗಿ ಭುವನ
ಪ್ರಾಣನಾತ್ಮಜ ಬಿದ್ದನಾ ಧೃತರಾಷ್ಟ್ರನಂಘ್ರಿಯಲಿ ॥41॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧೃತರಾಷ್ಟ್ರನ ಶಕ್ತಿಯು ಇಮ್ಮಡಿಯಾಗಿತ್ತು. ಕೋಪದ ಕಾರಣದಿಂದಾಗಿ ಹೊಟ್ಟೆಯಕಿಚ್ಚು ಅವನನ್ನು ನಿಮ್ಮ ವಿರುದ್ಧ ಎಚ್ಚರಿಸಲು ಅವನು ಸಶಕ್ತನಾಗಿ ಬಿಗಿಯಾಗಿ ಅಪ್ಪಲು ಉಕ್ಕಿನ ಪ್ರತಿಮೆಯು ನುಗ್ಗಾಯಿತು. ಕೃಷ್ಣನು ‘ಭೀಮ, ಭಯವನ್ನು ಬಿಡು. ಧೃತರಾಷ್ಟ್ರರಾಜನನ್ನು ಕಾಣುಹೋಗು’ ಎನ್ನಲು ಭೀಮನು ನಡುಗುತ್ತಾ ಧೃತರಾಷ್ಟ್ರನ ಪಾದಗಳ ಮೇಲೆ ಬಿದ್ದನು.
ಪದಾರ್ಥ (ಕ.ಗ.ಪ)
ತ್ರಾಣ-ಶಕ್ತಿ, ಇಮ್ಮಡಿಸು-ಎರಡರಷ್ಟಾಗು, ಕೇಣ-ಹೊಟ್ಟೆಕಿಚ್ಚು, ಸತ್ರಾಣ-ಹೆಚ್ಚಾದ ಶಕ್ತಿ, ತನಿಬಗಿಯೆ-ಹೆಚ್ಚಾಗಿ ಸೀಳಲು (ಇಲ್ಲಿ, ಹೆಚ್ಚಿನ ಶಕ್ತಿಯಿಂದ ತಬ್ಬಿಕೊಳ್ಳಲು - ಎಂಬ ಅರ್ಥ) ಆಯಸಪ್ರತಿಮೆ-ಉಕ್ಕಿನ ಪ್ರತಿಮೆ, ಮಾಣು-ಬಿಡು, ಭುವನಪ್ರಾಣನಾತ್ಮಜ-ವಾಯುವಿನ ವರದಿಂದ ಹುಟ್ಟಿದವ, ಭೀಮ, ಅಂಘ್ರಿ-ಪಾದ
ಮೂಲ ...{Loading}...
ತ್ರಾಣವಿಮ್ಮಡಿಸಿತ್ತು ಕೋಪದ
ಕೇಣವೆಚ್ಚರಿಸಿದಡೆ ನೃಪ ಸ
ತ್ರಾಣದಲಿ ತನಿಬಗಿಯೆ ನುಗ್ಗಾಯ್ತಾಯಸ ಪ್ರತಿಮೆ
ಮಾಣು ಭಯವನು ಭೀಮ ಭೂಪನ
ಕಾಣು ಹೋಗೆನೆ ನಡುಗಿ ಭುವನ
ಪ್ರಾಣನಾತ್ಮಜ ಬಿದ್ದನಾ ಧೃತರಾಷ್ಟ್ರನಂಘ್ರಿಯಲಿ ॥41॥
೦೪೨ ಪವನಸುತನೇ ಬಾ ...{Loading}...
ಪವನಸುತನೇ ಬಾ ಎನುತ ತ
ಕ್ಕವಿಸಿದನು ಬಳಿಕೆರಗಿದಡೆ ವಾ
ಸವನ ಸುತ ಬಾ ಕಂದ ಎಂದಪ್ಪಿದನು ಫಲುಗುಣನ
ತವಕದಿಂದೆರಗಿದಡೆ ಮಾದ್ರಿಯ
ಜವಳಿಮಕ್ಕಳನಪ್ಪಿದನು ಕೌ
ರವಕುಲಾಗ್ರಣಿಗಳಿರ ಕುಳ್ಳಿರಿಯೆಂದನಂಧನೃಪ ॥42॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮನೇ, ಬಾ, ಎನ್ನುತ್ತಾ ಧೃತರಾಷ್ಟ್ರ ಅಪ್ಪಿಕೊಂಡ. ನಂತರ ಅರ್ಜುನ ನಮಸ್ಕರಿಸಿದರೆ, ಇಂದ್ರನ ಮಗನೇ, ಬಾ, ಕಂದ, ಎಂದು ಅವನನ್ನು ಅಪ್ಪಿದನು. ಆತಂಕದಿಂದ ಬಂದು ನಮಸ್ಕರಿಸಿದರೆ ಮಾದ್ರಿಯ ಅವಳಿಮಕ್ಕಳಾದ ನಕುಲಸಹದೇವರುಗಳನ್ನು ಅಪ್ಪಿಕೊಂಡ. ಕೌರವ ಕುಲದ ಶ್ರೇಷ್ಠರುಗಳಿರಾ ಕುಳಿತುಕೊಳ್ಳಿ ಎಂದು ಧೃತರಾಷ್ಟ್ರ ಹೇಳಿದ
ಪದಾರ್ಥ (ಕ.ಗ.ಪ)
ಪವನಸುತ-ವಾಯುವಿನಮಗ, ಭೀಮ, ತಕ್ಕವಿಸು-ತಕ್ಕೈಸು, ಅಪ್ಪಿಕೋ, ವಾಸವಸುತ-ಇಂದ್ರನಮಗ, ಅರ್ಜುನ, ತವಕದಿಂದ-ಆತಂಕದಿಂದ , ಬೇಗ, ಜವಳಿ-ಅವಳಿ, ಜೋಡಿ, ಕೌರವ ಕುಲಾಗ್ರಣಿಗಳು-ಕುರುವಂಶದ ಶ್ರೇಷ್ಠರು
ಟಿಪ್ಪನೀ (ಕ.ಗ.ಪ)
(ಇಲ್ಲಿ ಧೃತರಾಷ್ಟ್ರ ವ್ಯಂಗ್ಯವಾಗಿ ಹೇಳುತ್ತಾನೆಂದು ಅನುಮಾನಿಸಬಹುದು.)
ಮೂಲ ...{Loading}...
ಪವನಸುತನೇ ಬಾ ಎನುತ ತ
ಕ್ಕವಿಸಿದನು ಬಳಿಕೆರಗಿದಡೆ ವಾ
ಸವನ ಸುತ ಬಾ ಕಂದ ಎಂದಪ್ಪಿದನು ಫಲುಗುಣನ
ತವಕದಿಂದೆರಗಿದಡೆ ಮಾದ್ರಿಯ
ಜವಳಿಮಕ್ಕಳನಪ್ಪಿದನು ಕೌ
ರವಕುಲಾಗ್ರಣಿಗಳಿರ ಕುಳ್ಳಿರಿಯೆಂದನಂಧನೃಪ ॥42॥
೦೪೩ ಕುರುಮಹೀಪತಿ ನಮ್ಮ ...{Loading}...
ಕುರುಮಹೀಪತಿ ನಮ್ಮ ಪೂರ್ವಜ
ರರಸು ತತ್ಸಂತಾನ ಪಾರಂ
ಪರೆಯನಳಿವಡೆ ಕೆಲಬರಾದರು ಹೋದರವರಿಂದು
ಭರತಕುಲವನು ಹೊರೆದು ಮಿಗೆ ವಿ
ಸ್ತರಿಸು ಮಗನೆ ಸುಯೋಧನಾದ್ಯರ
ದುರುಳುತನದವಗುಣವನೆಮ್ಮನು ನೋಡಿ ಮರೆಯೆಂದ ॥43॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕುರುರಾಜನಾದ ಧರ್ಮರಾಯನೇ, ನಮ್ಮ ಹಿಂದಿನ ಅರಸರ ಸಂತಾನ ಪರಂಪರೆಯನ್ನು ನಾಶಮಾಡಲು ಹುಟ್ಟಿದ್ದ ಕೆಲವರು ಇಂದು ಸತ್ತರು. ಭರತವಂಶವನ್ನು ಕಾಪಾಡಿ ಅದನ್ನು ಬೆಳೆಸು. ಮಗನೇ! ಸುಯೋಧನಾದಿಗಳ ದುಷ್ಟತನದ ದುರ್ಗುಣಗಳನ್ನು, ನಮ್ಮನ್ನು ನೋಡಿ ಮರೆಯೆಂದು ಧೃತರಾಷ್ಟ್ರ ಧರ್ಮರಾಜನಿಗೆ ಹೇಳಿದ
ಪದಾರ್ಥ (ಕ.ಗ.ಪ)
ಕುರುಮಹೀಪತಿ-ಕುರುವಂಶದ ರಾಜ, (ಇಲ್ಲಿ ಧರ್ಮರಾಯ) ಪೂರ್ವಜರು-ಹಿಂದಿನವರು, ತತ್ಸಂತಾನಪಾರಂಪರೆ-ಅವರ ಸಂತಾನದ ಪರಂಪರೆ, ಅಳಿವಡೆ-ನಾಶಮಾಡಲು, ಕೆಲಬರು-ಕೆಲವರು, ಹೋದರು-ನಾಶಹೊಂದಿದರು, ಭರತಕುಲ-ದುಷ್ಯಂತನ ಮಗನಿಂದಾಗಿ ಕುರುವಂಶಕ್ಕೆ ‘ಭರತಕುಲ’ವೆಂಬ ಹೆಸರು ಬಂತು, ಹೊರೆದು-ಕಾಪಾಡಿ, ಮಿಗೆ-ಹೆಚ್ಚಾಗಿ, ವಿಸ್ತರಿಸು-ಬೆಳೆಸು, ಅವಗುಣ-ಕೆಟ್ಟಗುಣ
ಮೂಲ ...{Loading}...
ಕುರುಮಹೀಪತಿ ನಮ್ಮ ಪೂರ್ವಜ
ರರಸು ತತ್ಸಂತಾನ ಪಾರಂ
ಪರೆಯನಳಿವಡೆ ಕೆಲಬರಾದರು ಹೋದರವರಿಂದು
ಭರತಕುಲವನು ಹೊರೆದು ಮಿಗೆ ವಿ
ಸ್ತರಿಸು ಮಗನೆ ಸುಯೋಧನಾದ್ಯರ
ದುರುಳುತನದವಗುಣವನೆಮ್ಮನು ನೋಡಿ ಮರೆಯೆಂದ ॥43॥
೦೪೪ ಅವರೊಳವಗುಣವೇ ಚಿರನ್ತನ ...{Loading}...
ಅವರೊಳವಗುಣವೇ ಚಿರಂತನ
ಭವದ ಕಿಲ್ಬಿಷ ಕರ್ಮಪಾಕ
ಪ್ರವರ ದುರಿಯೋಧನನ ಸವ್ಯಪದೇಶಮಾತ್ರದಲಿ
ಎವಗೆ ರಚಿಸಿತು ರಾಜ್ಯವಿಭ್ರಂ
ಶವನು ತತ್ಸುಕೃತೋದಯಪ್ರಾ
ಭವವೆ ತಿರುಗಿಸಿತೆಂದು ನಯದಲಿ ಧರ್ಮಸುತ ನುಡಿದ ॥44॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅವರಲ್ಲಿ ಕೆಟ್ಟಗುಣವೇ! ಶಾಶ್ವತವಾದ ಹುಟ್ಟುಸಾವುಗಳೆಂಬ ಈ ಭವದ (ಅನೇಕ ಜನ್ಮಗಳ) ದುಷ್ಕರ್ಮಗಳು, ದುರ್ಯೋಧನನ ವಿರೋಧವೆಂಬ ಕಾರಣದಿಂದ, ನಮಗೆ ರಾಜ್ಯ ನಾಶವನ್ನು ತಂದುಕೊಟ್ಟಿತು. ಹಾಗೆಯೇ ಪೂರ್ವ ಸುಕೃತದ ಫಲವು ನಮ್ಮ ಅದೃಷ್ಟವನ್ನು ಬದಲಾಯಿಸಿತು - ಎಂದು ಧರ್ಮರಾಯನು ವಿನಯದಿಂದ ನುಡಿದ.
ಪದಾರ್ಥ (ಕ.ಗ.ಪ)
ಚಿರಂತನ-ಶಾಶ್ವತವಾದ, ಹಿಂದಿನಿಂದ ಬಂದ, ಭವ-ಹುಟ್ಟುಸಾವುಗಳು, ಕಿಲ್ಬಿಷ-ಕೆಟ್ಟ, ಕರ್ಮಪಾಕ-ಹಿಂದಿನ ಜನ್ಮಗಳಿಂದ ಕೂಡಿಹಾಕೊಂಡು ಬಂದ ಪಾಪಗಳು, ಪ್ರವರ-ಸಮೂಹ, ಹೆಚ್ಚಾದ, ಶ್ರೇಷ್ಠವಾದ, ಸವ್ಯ-ವಿರೋಧ, ಎಡಭಾಗ, ಅಪದೇಶ-ಕಾರಣ, ಎವಗೆ-ಎಮಗೆ, ನಮಗೆ, ರಾಜ್ಯವಿಭ್ರಂಶ-ರಾಜ್ಯನಾಶ, ತತ್ಸುಕೃತೋದಯ-ಆ ಪುಣ್ಯದ ಉದಯ, ಪ್ರಾಭವ-ಶ್ರೇಷ್ಠತೆ, ತಿರುಗಿಸಿತು-ಬದಲಾಯಿಸಿತು.
ಮೂಲ ...{Loading}...
ಅವರೊಳವಗುಣವೇ ಚಿರಂತನ
ಭವದ ಕಿಲ್ಬಿಷ ಕರ್ಮಪಾಕ
ಪ್ರವರ ದುರಿಯೋಧನನ ಸವ್ಯಪದೇಶಮಾತ್ರದಲಿ
ಎವಗೆ ರಚಿಸಿತು ರಾಜ್ಯವಿಭ್ರಂ
ಶವನು ತತ್ಸುಕೃತೋದಯಪ್ರಾ
ಭವವೆ ತಿರುಗಿಸಿತೆಂದು ನಯದಲಿ ಧರ್ಮಸುತ ನುಡಿದ ॥44॥
೦೪೫ ಸಾಕಿದನ್ತಿರಲಬಲೆಯರೊಳು ...{Loading}...
ಸಾಕಿದಂತಿರಲಬಲೆಯರೊಳು
ದ್ರೇಕಿ ನಿಮ್ಮಯ ಹಿರಿಯ ತಾಯು
ದ್ರೇಕವನು ಪರಿಹರಿಸು ಶೋಕಕ್ರೋಧದುಪಟಳಕೆ
ಆಕೆ ಸೈರಿಸಲರಿಯಳರಿವಿನೊ
ಳಾಕೆವಾಳರು ತಿಳಿಹಿ ತಮ್ಮನ
ನಾಕೆಯನು ಕಾಣಿಸುವುದೆಂದನು ವ್ಯಾಸ ವಿದುರರಿಗೆ ॥45॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಮಾತು ಸಾಕು, ಹಾಗಿರಲಿ, ಮಹಿಳೆಯರಲ್ಲಿ ನಿಮ್ಮ ಹಿರಿಯ ತಾಯಿಯಾದ (ದೊಡ್ಡಮ್ಮ) ಗಾಂಧಾರಿ ಉದ್ರೇಕ ಸ್ವಭಾವದವಳು. ಅವಳ ಉದ್ರೇಕವನ್ನು ಕಳೆ. ಶೋಕ ಮತ್ತು ಕ್ರೋಧಗಳ ಹೊಡೆತವನ್ನು ಅವಳು ಸಹಿಸಲಾರಳು. ತಿಳುವಳಿಕೆಯಿಂದ, ಹಿರಿಯರಾದವರು ಅವಳಿಗೆ ತಿಳಿಯ ಹೇಳಿ, ಈ ತಮ್ಮನನ್ನು (ಧರ್ಮರಾಯನನ್ನು) ಆಕೆಗೆ ಕಾಣಿಸಬೇಕು ಎಂದು ಧೃತರಾಷ್ಟ್ರ ವ್ಯಾಸ ವಿದುರರಿಗೆ ಹೇಳಿದ.
ಪದಾರ್ಥ (ಕ.ಗ.ಪ)
ಅಬಲೆ-ಹೆಂಗಸು, ಉದ್ರೇಕಿ-ಕೋಪಿಷ್ಠೆ, ಉದ್ರೇಕ-ಕೋಪ, ಶೋಕಕ್ರೋಧದುಪಟಳ-ಶೋಕ ಮತ್ತು ಕೋಪದ ತೊಂದರೆ, ಅರಿವಿನೊಳಾಕೆವಾಳರು-ತಿಳಿವಿನಲ್ಲಿ ಶ್ರೇಷ್ಠರಾದವರು, ತಿಳಿಹಿ-ಬುದ್ದಿಹೇಳಿ, ತಮ್ಮನನು-ಈ ತಮ್ಮನನ್ನು, ಧರ್ಮಜನನ್ನು
ಮೂಲ ...{Loading}...
ಸಾಕಿದಂತಿರಲಬಲೆಯರೊಳು
ದ್ರೇಕಿ ನಿಮ್ಮಯ ಹಿರಿಯ ತಾಯು
ದ್ರೇಕವನು ಪರಿಹರಿಸು ಶೋಕಕ್ರೋಧದುಪಟಳಕೆ
ಆಕೆ ಸೈರಿಸಲರಿಯಳರಿವಿನೊ
ಳಾಕೆವಾಳರು ತಿಳಿಹಿ ತಮ್ಮನ
ನಾಕೆಯನು ಕಾಣಿಸುವುದೆಂದನು ವ್ಯಾಸ ವಿದುರರಿಗೆ ॥45॥
೦೪೬ ವಿದುರ ವೇದವ್ಯಾಸ ...{Loading}...
ವಿದುರ ವೇದವ್ಯಾಸ ಮುನಿಯೀ
ಹದನನರುಹುವೆವೆಂದು ರಾಯನ
ಸುದತಿಯಲ್ಲಿಗೆ ಬಂದು ನುಡಿದರು ಮಧುರವಚನದಲಿ
ಕದಪನಂಗೈಗಿತ್ತು ತಲೆಗು
ತ್ತಿದಳು ನಯನೋದಕದ ಪರಿವಾ
ಹದಲಿ ನನೆದಳು ಮಹಿಳೆಯಿದ್ದಳು ಬಹಳ ಮೋನದಲಿ ॥46॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವಿದುರ, ವೇದವ್ಯಾಸ ಮುನಿಗಳು ಈ ಸಂಗತಿಯನ್ನು ತಿಳಿಸುವೆವೆಂದು ಧೃತರಾಷ್ಟ್ರನ ಮಡದಿಯಾದ ಗಾಂಧಾರಿಯಲ್ಲಿಗೆ ಬಂದು ಮಧುರವಾದ ನುಡಿಗಳಿಂದ ಅವಳಿಗೆ ಹೇಳಿದರು. ಗಾಂಧಾರಿಯು ಕಪೋಲವನ್ನು ಅಂಗೈಯ ಮೇಲಿಟ್ಟುಕೊಂಡು ತಲೆಬಾಗಿಸಿ,. ಕಣ್ಣೀರಿನ ಪ್ರವಾಹದಲ್ಲಿ ನನೆದುಹೋಗಿ ಗಾಢ ಮೌನದಲ್ಲಿದ್ದಳು.
ಪದಾರ್ಥ (ಕ.ಗ.ಪ)
ಹದನ-ಸಂಗತಿ, ವಿಚಾರ, ಸುದತಿ-ಮಹಿಳೆ, ಕದಪು-ಕಪೋಲ, ಕೆನ್ನೆ, ತಲೆಗುತ್ತು-ತಲೆತಗ್ಗಿಸು, ನಯನೋದಕ-(ನಯನ+ಉದಕ)-ಕಣ್ಣೀರು, ಪರಿವಾಹ-ಪ್ರವಾಹ, ಮೋನ-ಮೌನ(ಸಂ)
ಮೂಲ ...{Loading}...
ವಿದುರ ವೇದವ್ಯಾಸ ಮುನಿಯೀ
ಹದನನರುಹುವೆವೆಂದು ರಾಯನ
ಸುದತಿಯಲ್ಲಿಗೆ ಬಂದು ನುಡಿದರು ಮಧುರವಚನದಲಿ
ಕದಪನಂಗೈಗಿತ್ತು ತಲೆಗು
ತ್ತಿದಳು ನಯನೋದಕದ ಪರಿವಾ
ಹದಲಿ ನನೆದಳು ಮಹಿಳೆಯಿದ್ದಳು ಬಹಳ ಮೋನದಲಿ ॥46॥
೦೪೭ ದುಗುಡವನು ಬಿಡು ...{Loading}...
ದುಗುಡವನು ಬಿಡು ಮೋಹಬಂಧ
ಸ್ಥಗಿತ ಚಿತ್ತವ ಕದಡು ಹಣಿಯಲಿ
ಮಗಳೆ ಮರುಳಾದೌ ವಿಳಾಸದ ವಿಹಿತವಿಹಪರಕೆ
ಅಗಡುಮಕ್ಕಳ ತಾಯ್ಗೆ ತಪ್ಪದು
ಬೆಗಡುಬೇಗೆ ಸುಯೋಧನಾದ್ಯರ
ವಿಗಡತನವನು ನೆನೆದು ನೀ ನೋಡೆಂದನಾ ಮುನಿಪ ॥47॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುಃಖವನ್ನು ಬಿಡು, ಮಕ್ಕಳ ಮೇಲಿನ ಮೋಹದಿಂದ ಬಂಧಿತವಾಗಿರುವ ಮನಸ್ಸಿನ ಕೊಳೆ ನಾಶವಾಗಲಿ. ಮಗಳೇ ಗಾಂಧಾರಿ, ಮರುಳಾಡಿದೆಯಲ್ಲ! ಬಾಳ್ವೆಯ ಸಂಭ್ರಮಗಳೇನಿದ್ದರೂ ಇಹಪರಕ್ಕೆ ಒಳ್ಳೆಯದಾಗಬೇಕಲ್ಲವೆ. ದುಷ್ಟ ಮಕ್ಕಳನ್ನು ಹೆತ್ತ ತಾಯಿಗೆ ಭಯಭೀತಿಗಳ ಬೆಂಕಿ ತಪ್ಪುವುದಿಲ್ಲ. ದುರ್ಯೋಧನಾದಿಗಳ ದುಷ್ಟಬುದ್ದಿಗಳನ್ನು ನೀನು ಯೋಚಿಸಿ ನೋಡು - ಎಂದು ವೇದವ್ಯಾಸ ಹೇಳಿದ.
ಪದಾರ್ಥ (ಕ.ಗ.ಪ)
ದುಗುಡ-ದುಃಖ, ಮೋಹಬಂಧಸ್ಥಗಿತ ಚಿತ್ತ-ಮಕ್ಕಳ ವೇಲಿನ ವ್ಯಾಮೋಹದಿಂದ ಬಂಧಿತವಾಗಿರುವ ಮನಸ್ಸು, ಕದಡು-ಕೊಳೆ, ಕಲ್ಮಷ, ಹಣಿಯಲಿ-ನಾಶವಾಗಲಿ, ಹರಿಯಲಿ, ಮರುಳಾದೌ-ಭ್ರಮಿತಳಾದೆಯಲ್ಲಾ, ವಿಳಾಸ-ಸಂಭ್ರಮ, ಉಲ್ಲಾಸ, ವಿಹಿತ-ಒಳ್ಳೆಯದು, ಇಹಪರಕೆ-ಇಹಲೋಕ ಪರಲೋಕಗಳೆರಡಕ್ಕೂ, ಅಗಡು-ದುಷ್ಟ, ಬೆಗಡು-ಶಂಕೆ, ಬೇಗೆ-ಉರಿ, ಬೆಂಕಿ, ವಿಗಡತನ-ದುಷ್ಟತನ
ಮೂಲ ...{Loading}...
ದುಗುಡವನು ಬಿಡು ಮೋಹಬಂಧ
ಸ್ಥಗಿತ ಚಿತ್ತವ ಕದಡು ಹಣಿಯಲಿ
ಮಗಳೆ ಮರುಳಾದೌ ವಿಳಾಸದ ವಿಹಿತವಿಹಪರಕೆ
ಅಗಡುಮಕ್ಕಳ ತಾಯ್ಗೆ ತಪ್ಪದು
ಬೆಗಡುಬೇಗೆ ಸುಯೋಧನಾದ್ಯರ
ವಿಗಡತನವನು ನೆನೆದು ನೀ ನೋಡೆಂದನಾ ಮುನಿಪ ॥47॥
೦೪೮ ಮುನಿಯದಿರು ಗಾನ್ಧಾರಿ ...{Loading}...
ಮುನಿಯದಿರು ಗಾಂಧಾರಿ ದಿಟ ನಿ
ನ್ನನುಜನಿಕ್ಕಿದ ಸಾರಿ ನಿನ್ನಯ
ತನುಜರನು ನಿನ್ನಖಿಳಮಿತ್ರಜ್ಞಾತಿಬಾಂಧವರ
ಮನುಜಪತಿಗಳನಂತವನು ರಿಪು
ಜನಪ ಶರವಹ್ನಿಯಲಿ ಬೇಳಿದು
ದಿನಿತು ಶೋಕೋದ್ರೇಕ ನಿನಗೇಕೆಂದನಾ ಮುನಿಪ ॥48॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಗಾಂಧಾರಿ, ಕೋಪಿಸಿಕೊಳ್ಳಬೇಡ ನಿಜವಾಗಿಯೂ ನಿನ್ನ ತಮ್ಮನಾದ ಶಕುನಿಯು ಹಾಕಿದ ಪಗಡೆಯ ದಾಳಗಳು, ನಿನ್ನ ಮಕ್ಕಳನ್ನು, ನಿನ್ನೆಲ್ಲಾ ಮಿತ್ರರು, ದಾಯಾದಿಗಳು, ಬಂಧುಬಾಂಧವರನ್ನು, ಲೆಕ್ಕವಿಲ್ಲದಷ್ಟು ರಾಜರುಗಳನ್ನು ಶತ್ರುರಾಜರ ಬಾಣವೆಂಬ ಅಗ್ನಿಯಲ್ಲಿ ಬೇಯಿಸಿತು. ನಿನಗೆ ಇಷ್ಟೊಂದು ಶೋಕವೇಕೆಂದು ವೇದವ್ಯಾಸರು ಕೇಳಿದರು.
ಪದಾರ್ಥ (ಕ.ಗ.ಪ)
ಸಾರಿ-ಪಗಡೆಯದಾಳ, ಜ್ಞಾತಿ-ದಾಯಾದಿ, ಮನುಜಪತಿ-ರಾಜ, ಅನಂತ-ಕಡೆಯಿಲ್ಲದ, ಲೆಕ್ಕವಿಲ್ಲದ, ರಿಪುಜನಪ-ಶತ್ರುರಾಜ, ಶರವಹ್ನಿ-ಬಾಣವೆಂಬ ಬೆಂಕಿ, ಬೇಳಿದುದು-ಬೇಯಿಸಿತು, ಸುಟ್ಟಿತು, ಶೋಕೋದ್ರೇಕ-(ಶೋಕ+ಉದ್ರೇಕ) ದುಃಖ ಮತ್ತು ಕೋಪ, ಹೆಚ್ಚಾದ ದುಃಖ
ಮೂಲ ...{Loading}...
ಮುನಿಯದಿರು ಗಾಂಧಾರಿ ದಿಟ ನಿ
ನ್ನನುಜನಿಕ್ಕಿದ ಸಾರಿ ನಿನ್ನಯ
ತನುಜರನು ನಿನ್ನಖಿಳಮಿತ್ರಜ್ಞಾತಿಬಾಂಧವರ
ಮನುಜಪತಿಗಳನಂತವನು ರಿಪು
ಜನಪ ಶರವಹ್ನಿಯಲಿ ಬೇಳಿದು
ದಿನಿತು ಶೋಕೋದ್ರೇಕ ನಿನಗೇಕೆಂದನಾ ಮುನಿಪ ॥48॥
೦೪೯ ಅಳಿದವರಿಗಳಲುವುದು ಸಲ್ಲದು ...{Loading}...
ಅಳಿದವರಿಗಳಲುವುದು ಸಲ್ಲದು
ನಿಲಲಿ ಸಾಕದು ನಿಮ್ಮ ಚಿತ್ತದ
ನೆಲೆಯ ಬಯಕೆಯ ಬೆಸಸಿರೇ ಕರ್ತವ್ಯವೇನೆಮಗೆ
ಕಳವಳಿಪ ಕುಂತೀಸುತರ ಕಣು
ವಳೆಗವಗ್ರಹವಾಗು ನಿರ್ಜರ
ರೊಳಗೆ ಮಕ್ಕಳ ಮಾನ್ಯರನು ಮಾಡೆಂದನಾ ಮುನಿಪ ॥49॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸತ್ತವರಿಗೆ ಅಳುವುದೂ ಯೋಗ್ಯವಲ್ಲ!(ವ್ಯಂಗ್ಯ). ಅದು ಹಾಗಿರಲಿ, ನಿಮ್ಮ ಮನಸ್ಸಿನಲ್ಲಿರುವ ಆಶಯವನ್ನು ಹೇಳಿರಿ. ನಮಗೀಗ ಏನು ಕರ್ತವ್ಯ? ಎಂದು ಗಾಂಧಾರಿ ಕೇಳಿದಳು. ದುಃಖಿತರಾಗಿರುವ ಕುಂತಿಯ ಮಕ್ಕಳ (ಪಾಂಡವರನ್ನು)ಕಣ್ಣೀರಿನ ಮಳೆಗೆ ಅಡ್ಡಿಯುಂಟುಮಾಡು (ಕಣ್ಣೀರನ್ನು ತೊಡೆ). ನಿನ್ನ ಸತ್ತ ಮಕ್ಕಳಿಗೆ ಸದ್ಗತಿ ದೊರಕುವ ಹಾಗೆ ಮಾಡು.
ಪದಾರ್ಥ (ಕ.ಗ.ಪ)
ಅಳಿದವರು-ಸತ್ತವರು, ಅಳಲು-ದುಃಖಿಸು, ಸಲ್ಲದು-ಸೇರದು, ಯೋಗ್ಯವಲ್ಲ, ಚಿತ್ತದ ನೆಲೆ-ಮನಸ್ಸಿನಲ್ಲಿರುವುದು, ಬಯಕೆ-ಆಶಯ, ಬೆಸಸು-ಹೇಳು, ಆದೇಶಿಸು, ಕಳವಳಿಪ-ದುಃಖಿಸುತ್ತಿರುವ, ಕಣುವಳೆ-ಕಣ್ಣಿನಮಳೆ, ಕಣ್ಣೀರು, ಅವಗ್ರಹ-ತಡೆ, ಅಡ್ಡಿ, ನಿರ್ಜರ-ಮುಪ್ಪಿಲ್ಲದ, ದೇವತೆ, ಮಾನ್ಯರು-ಮನ್ನಣೆಯುಳ್ಳವರು.
ಮೂಲ ...{Loading}...
ಅಳಿದವರಿಗಳಲುವುದು ಸಲ್ಲದು
ನಿಲಲಿ ಸಾಕದು ನಿಮ್ಮ ಚಿತ್ತದ
ನೆಲೆಯ ಬಯಕೆಯ ಬೆಸಸಿರೇ ಕರ್ತವ್ಯವೇನೆಮಗೆ
ಕಳವಳಿಪ ಕುಂತೀಸುತರ ಕಣು
ವಳೆಗವಗ್ರಹವಾಗು ನಿರ್ಜರ
ರೊಳಗೆ ಮಕ್ಕಳ ಮಾನ್ಯರನು ಮಾಡೆಂದನಾ ಮುನಿಪ ॥49॥
೦೫೦ ನಮ್ಬಿಸುವುದೈವರನು ಕಾಣಿಸಿ ...{Loading}...
ನಂಬಿಸುವುದೈವರನು ಕಾಣಿಸಿ
ಕೊಂಬುದನಿಬರ ಕರಣವೃತ್ತಿಗೆ
ತುಂಬುವುದು ತನಿಹರುಷವನು ಸೌಹಾರ್ದಶೋಭೆಯಲಿ
ಝೊಂಬಿಸಲಿ ಕೌರವರು ನಾಕ ನಿ
ತಂಬಿನಿಯರಳಕವನು ಮಗಳೆ ವಿ
ಡಂಬಿಸುವ ಖಳರಭಿಮತಕೆ ಮನವೀಯಬೇಡೆಂದ ॥50॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಐದೂ ಜನ ಪಾಂಡವರಲ್ಲಿ ನೀನು ವಿಶ್ವಾಸವನ್ನು ತೋರು. ಮತ್ತು ಅವರನ್ನು ನೋಡಿ. ಅವರ ಮನಸ್ಸನ್ನು ಸಮಾಧಾನಗೊಳಿಸು. ನಿನ್ನ ಮಕ್ಕಳಾದ ಕೌರವರು ಸ್ವರ್ಗದ ಸ್ತ್ರೀಯರ ಮುಂಗುರುಳನ್ನು ಹಿಡಿಯಲಿ (ಸ್ವರ್ಗಸುಖವನ್ನು ಪಡೆಯಲಿ) ಮಗಳೆ, ಮೋಸದಿಂದ ನಡೆಯುವ ದುಷ್ಟರ ಅಭಿಪ್ರಾಯಕ್ಕೆ ನಿನ್ನ ಮನಸ್ಸನ್ನು ಕೊಡಬೇಡ ಎಂದು ವ್ಯಾಸರು ಹೇಳಿದರು.
ಪದಾರ್ಥ (ಕ.ಗ.ಪ)
ನಂಬಿಸುವುದು-ನಂಬಿಕೆ ಹುಟ್ಟಿಸುವುದು, ಕರಣವೃತ್ತಿ-ಇಂದ್ರಿಯಗಳ ಸ್ವಭಾವ, ತನಿಹರುಷ-ವಿಶೇಷವಾದ ಸಂತೋಷ, . ಸೌಹಾರ್ದಶೋಭೆ-ಒಳ್ಳೆಯ ಹೃದಯದ ಕಾಂತಿ., ಝೊಂಬಿಸಲಿ-ಸೆಳೆಯಲಿ, ನಾಕ-ಸ್ವರ್ಗ, ನಿತಂಬಿನಿ-ಸ್ತ್ರೀ, ಅಳಕ-ಮುಂಗುರುಳು, ತಲೆಗೂದಲು, ವಿಡಂಬಿಸುವ-ಮೋಸಮಾಡುವ, ನಟನೆಮಾಡುವ, ಖಳರ-ದುಷ್ಟರ, ಅಭಿಮತ-ಅಭಿಪ್ರಾಯ
ಮೂಲ ...{Loading}...
ನಂಬಿಸುವುದೈವರನು ಕಾಣಿಸಿ
ಕೊಂಬುದನಿಬರ ಕರಣವೃತ್ತಿಗೆ
ತುಂಬುವುದು ತನಿಹರುಷವನು ಸೌಹಾರ್ದಶೋಭೆಯಲಿ
ಝೊಂಬಿಸಲಿ ಕೌರವರು ನಾಕ ನಿ
ತಂಬಿನಿಯರಳಕವನು ಮಗಳೆ ವಿ
ಡಂಬಿಸುವ ಖಳರಭಿಮತಕೆ ಮನವೀಯಬೇಡೆಂದ ॥50॥
೦೫೧ ರಾಯನನು ಕಾಣಿಸಿದಿರೇ ...{Loading}...
ರಾಯನನು ಕಾಣಿಸಿದಿರೇ ಪ್ರ
ಜ್ಞಾಯತಾಕ್ಷನ ತಿಳಿಹಿ ಬಂದಿರೆ
ತಾಯಿಗಳು ನಾವೈಸಲೇ ಬಲುಹುಂಟೆ ನಮಗಿನ್ನು
ಸಾಯೆ ಸಾವೆನು ಕುರುಕುಲಾಗ್ರಣಿ
ನೋಯೆ ನೋವೆನು ತನಗೆ ದುರಭಿ
ಪ್ರಾಯವುಂಟೇ ಮಾವ ಎಂದಳು ಮುನಿಗೆ ಗಾಂಧಾರಿ ॥51॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾಂಡವರಿಗೆ ಧೃತರಾಷ್ಟ್ರನನ್ನು ಕಾಣಿಸಿದಿರೇ. ಪ್ರಜ್ಞೆಯೇ ಕಣ್ಣುಗಳಾದ, ಅಂಧನಾದ ಧೃತರಾಷ್ಟ್ರನಿಗೆ ಬುದ್ದಿ ಹೇಳಿ ಬಂದಿರೇ, ನಾವು ಹೆಂಗಸರಲ್ಲವೇ, ನಮಗಿನ್ನು ಶಕ್ತಿಯುಂಟೇ. ಕುರುಕುಲಾಗ್ರಣಿಯಾದ ಧೃತರಾಷ್ಟ್ರ ಸತ್ತರೆ ನಾನೂ ಸಾಯುತ್ತೇನೆ. ನೊಂದರೆ ನಾನೂ ನೋಯುತ್ತೇನೆ. ಅಷ್ಟಲ್ಲದೆ ನನಗೆ ಬೇರೆ ಕೆಟ್ಟ ಅಭಿಪ್ರಾಯವುಂಟೇ ಮಾವ - ಎಂದು ಗಾಂಧಾರಿ ವ್ಯಾಸರಿಗೆ ಹೇಳಿದಳು.
ಪದಾರ್ಥ (ಕ.ಗ.ಪ)
ರಾಜ-(ಇಲ್ಲಿ ಧೃತರಾಷ್ಟ್ರ), ಪ್ರಜ್ಞಾಯತಾಕ್ಷ-ಪ್ರಜ್ಞೆಯೇ ಕಣ್ಣಾಗಿ ಉಳ್ಳವನು, ಅಂಧ, ಧೃತರಾಷ್ಟ್ರ, ತಿಳಿಹಿ-ಬುದ್ದಿಹೇಳಿ, ತಿಳಿಸಿ, ತಾಯಿಗಳು-ಹೆಂಗಸರು, ಬಲುಹು-ಶಕ್ತಿ, ಸಾಮಥ್ರ್ಯ, ಕುರುಕುಲಾಗ್ರಣಿ-ಕುರುವಂಶೀಯರಲ್ಲಿ ಶ್ರೇಷ್ಠನಾದವನು, ಹಿರಿಯನಾದವನು, ಧೃತರಾಷ್ಟ್ರ, ದುರಭಿಪ್ರಾಯ-ಕೆಟ್ಟ ಅಭಿಪ್ರಾಯ
ಟಿಪ್ಪನೀ (ಕ.ಗ.ಪ)
- ‘ಮಾವ’ ಎಂದಳು ಮುನಿಗೆ ಗಾಂಧಾರಿ - ಗಾಂಧಾರಿಯ ಪತಿ ಧೃತರಾಷ್ಟ್ರ. ಅವನು ವ್ಯಾಸರಿಂದ ಕಾಶಿರಾಜಪುತ್ರಿಯಾದ ಅಂಬಿಕೆಗೆ ಹುಟ್ಟಿದವನು. ಆದ್ದರಿಂದ ವ್ಯಾಸರು ಗಾಂಧಾರಿಗೆ ಮಾವನಾಗುತ್ತಾರೆ. (ಆದಿಪರ್ವ : 3ನೆಯ ಸಂಧಿಯ 5 ರಿಂದ 10ರವರೆಗಿನ ಪದ್ಯಗಳನ್ನು ನೋಡಿ)
ಮೂಲ ...{Loading}...
ರಾಯನನು ಕಾಣಿಸಿದಿರೇ ಪ್ರ
ಜ್ಞಾಯತಾಕ್ಷನ ತಿಳಿಹಿ ಬಂದಿರೆ
ತಾಯಿಗಳು ನಾವೈಸಲೇ ಬಲುಹುಂಟೆ ನಮಗಿನ್ನು
ಸಾಯೆ ಸಾವೆನು ಕುರುಕುಲಾಗ್ರಣಿ
ನೋಯೆ ನೋವೆನು ತನಗೆ ದುರಭಿ
ಪ್ರಾಯವುಂಟೇ ಮಾವ ಎಂದಳು ಮುನಿಗೆ ಗಾಂಧಾರಿ ॥51॥
೦೫೨ ಐಸಲೇ ಗುಣಮಯವಚೋವಿ ...{Loading}...
ಐಸಲೇ ಗುಣಮಯವಚೋವಿ
ನ್ಯಾಸವಿದು ಸಾರೆನುತ ಮರಳಿದು
ಭೂಸುರಾಗ್ರಣಿ ಬಂದು ನುಡಿದನು ಧರ್ಮನಂದನಗೆ
ರೋಷವಹ್ನಿಯನುಪಶಮಾಂಬು ವಿ
ಳಾಸದಲಿ ನಿಲಿಸೇಳು ನೃಪನ ಮ
ಹಾಸತಿಯ ಖತಿ ಹಿರಿದು ನಮಗೊಳಗಾಗಿ ಭಯವೆಂದ ॥52॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೌದಲ್ಲವೇ, ಗುಣಭರಿತವಾದ ಮಾತಿನ ಕ್ರಮವಿದು - ಹೋಗು - ಎನ್ನುತ್ತಾ ವೇದವ್ಯಾಸ ಬಂದು ಧರ್ಮರಾಯನಿಗೆ ಹೇಳಿದ - ಗಾಂಧಾರಿಯ ಕೋಪಾಗ್ನಿಯನ್ನು ಒಳ್ಳೆಯ ಮಾತುಗಳಿಂದ ಉಪಶಮನ ಮಾಡು. ; ಹೊರಡು. ಗಾಂಧಾರಿಯ ಕೋಪ ಹಿರಿದಾಗಿದೆ. ನಮ್ಮನ್ನೂ ಸೇರಿದಂತೆ ಎಲ್ಲರಿಗೂ ಸಹ ಭಯವೆಂದು ವ್ಯಾಸಮುನಿ ಹೇಳಿದ.
ಪದಾರ್ಥ (ಕ.ಗ.ಪ)
ಐಸಲೇ-ಹೌದಲ್ಲವೇ, ಅಷ್ಟೇ ಅಲ್ಲವೇ, ಗುಣಮಯ-ಗುಣದಿಂದ ಕೂಡಿದ, ವಚೋವಿನ್ಯಾಸ-ಮಾತಿನಧಾಟಿ, ಮಾತಿನವರಸೆ, ಮಾತಿನ ಕ್ರಮ, ಸಾರೆನುತ-ಹೋಗು ಎನ್ನುತ್ತ, ಮರಳಿದು-ಪುನಃ, ಭೂಸುರಾಗ್ರಣಿ-ಬ್ರಾಹ್ಮಣರಲ್ಲಿ ಅಗ್ರಗಣ್ಯನಾದವನು, (ಇಲ್ಲಿ, ವ್ಯಾಸ), ರೋಷವಹ್ನಿ-ಕೋಪವೆಂಬ ಬೆಂಕಿ, ಉಪಶಮಾಂಬು-ಉಪಶಮನವೆಂಬಜಲ (ಅಂಬು- ನೀರು), ವಿಳಾಸ-ಒಳ್ಳೆಯ ಶೈಲಿ, ಖತಿ-ಕೋಪ, ನಮಗೊಳಗಾಗಿ-ನಮ್ಮನ್ನು ಒಳಗೊಂಡು, ನಮಗೂ ಸಹ.
ಮೂಲ ...{Loading}...
ಐಸಲೇ ಗುಣಮಯವಚೋವಿ
ನ್ಯಾಸವಿದು ಸಾರೆನುತ ಮರಳಿದು
ಭೂಸುರಾಗ್ರಣಿ ಬಂದು ನುಡಿದನು ಧರ್ಮನಂದನಗೆ
ರೋಷವಹ್ನಿಯನುಪಶಮಾಂಬು ವಿ
ಳಾಸದಲಿ ನಿಲಿಸೇಳು ನೃಪನ ಮ
ಹಾಸತಿಯ ಖತಿ ಹಿರಿದು ನಮಗೊಳಗಾಗಿ ಭಯವೆಂದ ॥52॥
೦೫೩ ಹರಿ ವಿದುರ ...{Loading}...
ಹರಿ ವಿದುರ ಪಾರಾಶರಾತ್ಮಜ
ವರ ಮಹೀಪತಿ ಭೀಮ ಮಾದ್ರೇ
ಯರು ಧನಂಜಯ ಸಹಿತ ಬಂದರು ಬಹಳ ವಿನಯದಲಿ
ಚರಣದಲಿ ಮೆಯ್ಯಿಕ್ಕಿದರೆ ನೃಪ
ವರನ ನೆಗಹಿದಳನಿಲಸುತ ಸಿತ
ತುರಗ ಮಾದ್ರೀಸುತರು ಪದಕೆರಗಿದರು ಭೀತಿಯಲಿ ॥53॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೃಷ್ಣ, ವಿದುರ, ವ್ಯಾಸ, ಧರ್ಮರಾಯ, ಭೀಮ, ನಕುಲ ಸಹದೇವ, ಅರ್ಜುನ -(ಇವರೆಲ್ಲರೂ) ಬಂದರು. ಬಹಳ ವಿನಯದಿಂದ ಪಾದಗಳಿಗೆ ಬಿದ್ದು ನಮಸ್ಕರಿಸಿದ ಗಾಂಧಾರಿಯು ಧರ್ಮರಾಯನನ್ನು ಮೇಲೆತ್ತಿದಳು. ಭೀಮ, ಅರ್ಜುನ, ನಕುಲ, ಸಹದೇವರು ಹೆದರಿಕೆಯಿಂದ ಅವಳ ಕಾಲಿಗೆ ಬಿದ್ದರು.
ಪದಾರ್ಥ (ಕ.ಗ.ಪ)
ಪಾರಾಶರಾತ್ಮಜ-ವ್ಯಾಸ, ಮಹೀಪತಿ-ರಾಜ, (ಇಲ್ಲಿ ಧರ್ಮರಾಯ), ಮೆಯ್ಯಿಕ್ಕು-ದೀರ್ಘದಂಡ ನಮಸ್ಕಾರ ಮಾಡು, ನೆಗಹು-ಮೇಲೆತ್ತು, ಅನಿಲಸುತ-ವಾಯುವಿನಮಗ, ಭೀಮ, ಸಿತತುರಗ-ಬಿಳಿಯ ಕುದುರೆಯನ್ನುಳ್ಳವ, ಅರ್ಜುನ
ಟಿಪ್ಪನೀ (ಕ.ಗ.ಪ)
‘ಪಾರಾಶರಾತ್ಮಜ-‘ಇದು ‘ಪರಾಶರಾತ್ಮಜ’ಎಂದಿರಬೇಕು. ಪರಾಶರ ಮುನಿಗೆ ಯೋಜನ ಗಂಧಿಯಲ್ಲಿ (ಸತ್ಯವತಿಯಲ್ಲಿ) ಹುಟ್ಟಿದವನು ವ್ಯಾಸ. ಆದಿ ಪರ್ವದ 2ನೆಯ ಸಂಧಿಯ 22, 23, 24ನೆಯ ಪದ್ಯಗಳನ್ನು ನೋಡಿ). ಪಾರಾಶರಾತ್ಮಜ ಎಂಬುದು ಈ ಸಂದರ್ಭದಲ್ಲಿ ತಪ್ಪು ಪ್ರಯೋಗ. ಪಾರಾಶರನೆಂದರೆ ವ್ಯಾಸ. ಪಾರಾಶರಾತ್ಮಜನೆಂದರೆ ಧೃತರಾಷ್ಟ್ರ ಪಾಂಡು ವಿದುರ ಇವರುಗಳಲ್ಲೊಬ್ಬ. ಇಲ್ಲಿ ‘ಪಾರಾಶರಾತ್ಮಜ’ಎಂದು ವ್ಯಾಸನನ್ನು ಉದ್ದೇಶಿಸಿ ಹೇಳಿದೆ. ಛಂದಸ್ಸಿನ ಉಪಯೋಗಕ್ಕಾಗಿ ಹೀಗೆ ಹೇಳಿರಬಹುದು.
ಮೂಲ ...{Loading}...
ಹರಿ ವಿದುರ ಪಾರಾಶರಾತ್ಮಜ
ವರ ಮಹೀಪತಿ ಭೀಮ ಮಾದ್ರೇ
ಯರು ಧನಂಜಯ ಸಹಿತ ಬಂದರು ಬಹಳ ವಿನಯದಲಿ
ಚರಣದಲಿ ಮೆಯ್ಯಿಕ್ಕಿದರೆ ನೃಪ
ವರನ ನೆಗಹಿದಳನಿಲಸುತ ಸಿತ
ತುರಗ ಮಾದ್ರೀಸುತರು ಪದಕೆರಗಿದರು ಭೀತಿಯಲಿ ॥53॥
೦೫೪ ಏಳಿರೈ ಸಾಕೇಳಿ ...{Loading}...
ಏಳಿರೈ ಸಾಕೇಳಿ ಮಕ್ಕಳಿ
ರೇಳಿರೈ ದೇಸಿಗರು ನಾವ್ ಭೂ
ಪಾಲಕರು ನೀವೀಸು ನಮ್ಮಲಿ ಭೀತಿ ನಿಮಗೇಕೆ
ಬಾಲೆಯರು ನಾವಂಧಕರು ನಿ
ಮ್ಮಾಳಿಕೆಯೊಳೇ ನಿಮ್ಮ ಹಂತಿಯ
ಕೂಳಿನಲಿ ಬೆಂದೊಡಲ ಹೊರೆವವರೆಂದಳಿಂದುಮುಖಿ ॥54॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಏಳಿರಿ, ಸಾಕು ಏಳಿ ಮಕ್ಕಳೆ ಏಳಿ. ನಾವು ದಿಕ್ಕಿಲ್ಲದವರು. ನೀವು ಭೂಪಾಲಕರು. ನಮ್ಮಲ್ಲಿ ನಿಮಗೆ ಇಷ್ಟು ಭಯವೇಕೆ. ನಾವು ಹೆಂಗಸರು, ಕುರುಡರು, ನಿಮ್ಮ ಆಳ್ವಿಕೆಯಲ್ಲಿ ಸಾಲಿನಲ್ಲಿ ಕುಳಿತು (ಸಾಮಾನ್ಯ ಜನರೊಂದಿಗೆ) ನೀವು ಹಾಕುವ ಕೂಳನ್ನು ತಿಂದು ಈ ಸುಟ್ಟ ದೇಹವನ್ನು ಹೊರೆಯುವವರು ನಾವು ಎಂದು ಗಾಂಧಾರಿ ಹೇಳಿದಳು.
ಪದಾರ್ಥ (ಕ.ಗ.ಪ)
ದೇಸಿಗರು-ದಿಕ್ಕಿಲ್ಲದವರು, ದಾರಿಹೋಕರು, ಈಸು-ಇಷ್ಟು, ಹಂತಿಯ ಕೂಳು-ಸಾಲಿನಲ್ಲಿ ಕುಳಿತು ಮಾಡುವ ಊಟ, ಬೆಂದೊಡಲ-ಸುಟ್ಟದೇಹವನ್ನು, ಹಾಳು ದೇಹವನ್ನು, ಹೊರೆವವರು-ಕಾಪಾಡುವವರು.
ಮೂಲ ...{Loading}...
ಏಳಿರೈ ಸಾಕೇಳಿ ಮಕ್ಕಳಿ
ರೇಳಿರೈ ದೇಸಿಗರು ನಾವ್ ಭೂ
ಪಾಲಕರು ನೀವೀಸು ನಮ್ಮಲಿ ಭೀತಿ ನಿಮಗೇಕೆ
ಬಾಲೆಯರು ನಾವಂಧಕರು ನಿ
ಮ್ಮಾಳಿಕೆಯೊಳೇ ನಿಮ್ಮ ಹಂತಿಯ
ಕೂಳಿನಲಿ ಬೆಂದೊಡಲ ಹೊರೆವವರೆಂದಳಿಂದುಮುಖಿ ॥54॥
೦೫೫ ತಾಯೆ ಖತಿಬೇಡಿನ್ನು ...{Loading}...
ತಾಯೆ ಖತಿಬೇಡಿನ್ನು ಧರಣಿಗೆ
ರಾಯನೇ ಧೃತರಾಷ್ಟ್ರನಾತನ
ಬಾಯ ತಂಬುಲ ಬೀಳುಡೆಯ ಬಲದಿಂದ ಬದುಕುವೆವು
ತಾಯೆ ನೀವಿನ್ನೆಮಗೆ ಕುಂತಿಯ
ತಾಯಿತನವಂತಿರಲಿ ಕರುಣಿಸಿ
ಕಾಯಬೇಕೆಂದರಸ ಮಗುಳೆರಗಿದನು ಚರಣದಲಿ ॥55॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತಾಯೆ! ಇನ್ನು ಕೋಪಬೇಡ. ಈ ಭೂಮಿಗೆ ಧೃತರಾಷ್ಟ್ರನೇ ರಾಜ. ಅವನ ಬಾಯ ತಾಂಬೂಲ ಮತ್ತು ಬಿಚ್ಚಿಕಳಚಿದ ಮೈಲಿಗೆ ಬಟ್ಟೆಯ ಸಹಾಯದಿಂದ ನಾವು ಬದುಕುತ್ತೇವೆ. ಇನ್ನು ಮುಂದೆ ಕುಂತಿಯ ತಾಯ್ತನವು ಹಾಗಿರಲಿ, ನೀವೇ ನಮಗೆ ತಾಯಿ. ಕರುಣೆಯಿಂದ ನಮ್ಮನ್ನು ಸಲಹಬೇಕೆಂದು ಧರ್ಮರಾಯ ಪುನಃ ಅವಳ ಕಾಲಿಗೆ ಬಿದ್ದ.
ಪದಾರ್ಥ (ಕ.ಗ.ಪ)
ಖತಿ-ಕೋಪ, ರಾಯ-ರಾಜ, ಬಾಯತಂಬುಲ-ಬಾಯಿಯಲ್ಲಿರುವ ತಾಂಬೂಲ, ಬೀಳುಡೆ-ಉಟ್ಟುತೆಗೆದು ಹಾಕಿದ ಬಟ್ಟೆ, ಮೈಲಿಗೆ ಬಟ್ಟೆ, ಮಗುಳೆರಗಿದನು-ಪುನಃ ನಮಸ್ಕರಿಸಿದನು, ಚರಣ-ಪಾದ
ಮೂಲ ...{Loading}...
ತಾಯೆ ಖತಿಬೇಡಿನ್ನು ಧರಣಿಗೆ
ರಾಯನೇ ಧೃತರಾಷ್ಟ್ರನಾತನ
ಬಾಯ ತಂಬುಲ ಬೀಳುಡೆಯ ಬಲದಿಂದ ಬದುಕುವೆವು
ತಾಯೆ ನೀವಿನ್ನೆಮಗೆ ಕುಂತಿಯ
ತಾಯಿತನವಂತಿರಲಿ ಕರುಣಿಸಿ
ಕಾಯಬೇಕೆಂದರಸ ಮಗುಳೆರಗಿದನು ಚರಣದಲಿ ॥55॥
೦೫೬ ಧರ್ಮ ನಿಮ್ಮದು ...{Loading}...
ಧರ್ಮ ನಿಮ್ಮದು ಮಗನೆ ಬರಿಯ ವಿ
ಕರ್ಮವೆಮ್ಮದು ತನ್ನ ಮಕ್ಕಳು
ದುರ್ಮತಿಗಳನ್ಯಾಯಶೀಲರಸಾಧುಸಂಗತರು
ನಿರ್ಮಳರು ನೀವೈವರಾಹವ
ಧರ್ಮಕುಶಲರು ಲೋಕ ಮೆಚ್ಚಲು
ಧರ್ಮ ನಿಮಗಿನ್ನೆನುತ ತಲೆಗುತ್ತಿದಳು ಗಾಂಧಾರಿ ॥56॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನೀವು ಮಾಡಿದುದು ಧರ್ಮ. ನಮ್ಮದು ಮಾಡಬಾರದ ಕೆಲಸಗಳು. ನನ್ನ ಮಕ್ಕಳು ದುರ್ಬುದ್ಧಿಯವರು, ಅನ್ಯಾಯಶೀಲರು, ಅಯೋಗ್ಯರ ಜತೆ ಸ್ನೇಹವುಳ್ಳವರು. ನೀವು ಐದೂಜನ ನಿರ್ಮಲರು, ಯುದ್ಧಧರ್ಮ ಕುಶಲರು. ಪ್ರಪಂಚವೇ ಮೆಚ್ಚುವಂತೆ ಇನ್ನು ಮುಂದೆಯೂ ನಿಮ್ಮದು ಧರ್ಮವೆ - ಎಂದು ಗಾಂಧಾರಿ ತಲೆತಗ್ಗಿಸಿದಳು.
ಪದಾರ್ಥ (ಕ.ಗ.ಪ)
ವಿಕರ್ಮ-ಕೆಟ್ಟಕೆಲಸ, ದುರ್ಮತಿಗಳು-ಕೆಟ್ಟಬುದ್ಧಿಯುಳ್ಳವರು, ಅನ್ಯಾಯಶೀಲರು-ಅನ್ಯಾಯದ ನಡವಳಿಕೆಯುಳ್ಳವರು, ಅಸಾಧುಸಂಗತರು-ಅಯೋಗ್ಯರ ಸಂಗಡ ಇರುವವರು, ನಿರ್ಮಳರು-ಶುದ್ಧಬುದ್ಧಿಯುಳ್ಳವರು, ಅಹವಧರ್ಮಕುಶಲರು-ಯುದ್ಧ ಧರ್ಮ ನಿಪುಣರು, ತಲೆಗುತ್ತಿದಳು-ತಲೆತಗ್ಗಿಸಿದಳು
ಮೂಲ ...{Loading}...
ಧರ್ಮ ನಿಮ್ಮದು ಮಗನೆ ಬರಿಯ ವಿ
ಕರ್ಮವೆಮ್ಮದು ತನ್ನ ಮಕ್ಕಳು
ದುರ್ಮತಿಗಳನ್ಯಾಯಶೀಲರಸಾಧುಸಂಗತರು
ನಿರ್ಮಳರು ನೀವೈವರಾಹವ
ಧರ್ಮಕುಶಲರು ಲೋಕ ಮೆಚ್ಚಲು
ಧರ್ಮ ನಿಮಗಿನ್ನೆನುತ ತಲೆಗುತ್ತಿದಳು ಗಾಂಧಾರಿ ॥56॥
೦೫೭ ಧರ್ಮವಾಗಲಿ ಮೇಣು ...{Loading}...
ಧರ್ಮವಾಗಲಿ ಮೇಣು ರಣದಲ
ಧರ್ಮವಾಗಲಿ ಖಾತಿಯಲಿ ಪರ
ಮರ್ಮಘಾತಕವಾಯ್ತು ಸಾಕಿನ್ನೆಂದು ಫಲವೇನು
ನಿರ್ಮಳಾಂತಃಕರಣಕೃತಪರಿ
ಕರ್ಮವಿಳಸಿತೆ ತಾಯೆ ಸೈರಿಪು
ದುಮ್ಮಳವು ಬೇಡೆಂದು ಮೆಯ್ಯಿಕ್ಕಿದನು ಕಲಿಭೀಮ ॥57॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮವೇ ಅಗಲಿ ಅಥವಾ ಯುದ್ಧದಲ್ಲಿ ಅಧರ್ಮವೇ ಆಗಲಿ ಕೋಪದಿಂದ ಇತರರ ಮನಸ್ಸಿಗೆ ಆಘಾತವಾಯಿತು. ಸಾಕು ಇನ್ನದನ್ನು ಆಡಿ ಫಲವೇನು. ನಿರ್ಮಲವಾದ ಅಂತಃಕರಣದಿಂದ ಮಾಡಲ್ಪಟ್ಟ ಕರ್ಮಗಳಿಂದ ಭೂಷಿತಳಾದ ತಾಯಿಯೇ ಸೈರಣೆ ತೆಗೆದುಕೋ ದುಃಖ ಬೇಡ - ಎಂದು ಕಲಿಭೀಮ ಧೀರ್ಘದಂಡ ನಮಸ್ಕಾರ ಮಾಡಿದ.
ಪದಾರ್ಥ (ಕ.ಗ.ಪ)
ಖಾತಿ-ಕೋಪ, ಪರಮರ್ಮ-ಬೇರೆಯವರ ಮನಸ್ಸು, ಘಾತಕ-ಆಘಾತಕರ, ನಿರ್ಮಲಾಂತಃಕರಣ-ಪರಿಶುದ್ಧವಾದ ಮನಸ್ಸಿನ, ಕೃತ ಪರಿಕರ್ಮ-ಮಾಡಿದ ಕರ್ಮಗಳು, ವಿಳಸಿತೆ-ಭೂಷಿತೆ, ಉಮ್ಮಳ-ದುಃಖ, ಮೈಯಿಕ್ಕು-ದೀರ್ಘದಂಡ ನಮಸ್ಕಾರ ಮಾಡು.
ಮೂಲ ...{Loading}...
ಧರ್ಮವಾಗಲಿ ಮೇಣು ರಣದಲ
ಧರ್ಮವಾಗಲಿ ಖಾತಿಯಲಿ ಪರ
ಮರ್ಮಘಾತಕವಾಯ್ತು ಸಾಕಿನ್ನೆಂದು ಫಲವೇನು
ನಿರ್ಮಳಾಂತಃಕರಣಕೃತಪರಿ
ಕರ್ಮವಿಳಸಿತೆ ತಾಯೆ ಸೈರಿಪು
ದುಮ್ಮಳವು ಬೇಡೆಂದು ಮೆಯ್ಯಿಕ್ಕಿದನು ಕಲಿಭೀಮ ॥57॥
೦೫೮ ಏಳು ತಮ್ಮ ...{Loading}...
ಏಳು ತಮ್ಮ ವೃಥಾ ವಿಡಂಬನ
ದಾಳಿಯಾಟವಿದೇಕೆ ಸೈರಿಸ
ಹೇಳಿದೈ ಸೈರಿಸದೆ ಮುನಿದಡೆ ನಿಮಗೆ ಕೇಡಹುದೆ
ಕಾಳೆಗದ ಕೃತಸಮಯ ಸತ್ಯವ
ಪಾಲಿಸಿದವರು ನೀವಲೇ ದಿಟ
ಖೂಳರಾವೈಸಲೆ ಎನುತ ಗಜರಿದಳು ಗಾಂಧಾರಿ ॥58॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಏಳು ತಮ್ಮ. ಅನವಶ್ಯಕವಾಗಿ ಮೋಸದ ಸುಳ್ಳು ಆಟವೇಕೆ. ಸೈರಿಸಲು ಹೇಳಿದೆ, ಸೈರಿಸಿದೆ. ನಾನು ಕೋಪಗೊಂಡರೆ ನಿನಗೆ ಕೆಟ್ಟದ್ದಾಗುತ್ತದೆಯೇ. ಯುದ್ಧದ ಸಮಯದಲ್ಲಿ ಪ್ರತಿಜ್ಞೆ ಮಾಡಿದಂತೆ ಸತ್ಯವನ್ನು ಪಾಲಿಸಿದವರು ನೀವಲ್ಲವೇ. ನಿಜ ನಾವೇ ಆಯೋಗ್ಯರಲ್ಲವೇ ಎನ್ನುತ್ತ ಗಾಂಧಾರಿ ಗದರಿದಳು.
ಪದಾರ್ಥ (ಕ.ಗ.ಪ)
ವಿಡಂಬನ-ಮೋಸ, ಅಳಿಯಾಟ-ಸುಳ್ಳಾಟ, ಕಳ್ಳಾಟ, ಕೃತಸಮಯ-ಪ್ರತಿಜ್ಞೆ ಮಾಡಿದವ, ಖೂಳರು-ಅಯೋಗ್ಯರು, ಆವೈಸಲೆ-ನಾವಲ್ಲವೆ, ಗಜರು-ಗದರು
ಮೂಲ ...{Loading}...
ಏಳು ತಮ್ಮ ವೃಥಾ ವಿಡಂಬನ
ದಾಳಿಯಾಟವಿದೇಕೆ ಸೈರಿಸ
ಹೇಳಿದೈ ಸೈರಿಸದೆ ಮುನಿದಡೆ ನಿಮಗೆ ಕೇಡಹುದೆ
ಕಾಳೆಗದ ಕೃತಸಮಯ ಸತ್ಯವ
ಪಾಲಿಸಿದವರು ನೀವಲೇ ದಿಟ
ಖೂಳರಾವೈಸಲೆ ಎನುತ ಗಜರಿದಳು ಗಾಂಧಾರಿ ॥58॥
೦೫೯ ಹೊರಿಸುವಡೆ ದುಷ್ಕೀರ್ತಿ ...{Loading}...
ಹೊರಿಸುವಡೆ ದುಷ್ಕೀರ್ತಿ ನಮ್ಮಲಿ
ಹೊರಿಗೆಯಾಯಿತು ನಾಭಿಯಿಂ ಕೆಳ
ಗೆರಗುವುದು ಗದೆಯಿಂದ ಸಲ್ಲದು ಶಸ್ತ್ರವಿದ್ಯೆಯಲಿ
ಅರಿಕೆಯಿಂದನ್ಯಾಯವೀ ಜಗ
ವರಿಯೆ ನಮ್ಮದು ತಾಯೆ ನೀ ಮನ
ಮುರಿಯದವಧರಿಸುವಡೆ ಬಿನ್ನಹವೆಂದನಾ ಭೀಮ ॥59॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಮ್ಮ ಮೇಲೆ ಅಪಕೀರ್ತಿಯನ್ನು ಹೊರಿಸಬೇಕಾದಲ್ಲಿ ನಮ್ಮನ್ನು ಹೊಣೆಮಾಡಿರಿ. ಶಸ್ತ್ರವಿದ್ಯೆಯಲ್ಲಿ, ಗದಾಯುದ್ಧದಲ್ಲಿ ನಾಭಿಯಿಂದ ಕೆಳಕ್ಕೆ ಹೊಡೆಯುವುದು ಸಲ್ಲದು. ತಿಳಿದೂ ಆದ ಈ ಅನ್ಯಾಯ, ಪ್ರಪಂಚವೇ ತಿಳಿದಂತೆ ನಮ್ಮದೇ ಆಗಿದೆ. ತಾಯೇ ನೀವು ಮನಸ್ಸನ್ನು ತಿರುಗಿಸಬೇಡ (ಕೋಪ ಮಾಡಿಕೊಳ್ಳಬೇಡ). ನೀವು ಕೇಳುವುದಾದರೆ ನನ್ನ ಕೋರಿಕೆಯಿದೆ - ಎಂದು ಭೀಮ ಹೇಳಿದ.
ಪದಾರ್ಥ (ಕ.ಗ.ಪ)
ಹೊರಿಸು-ಹೊರೆಯನ್ನು ಹಾಕು, ಜವಾಬ್ದಾರಿಯನ್ನು ಹೇರು, ದುಷ್ಕೀರ್ತಿ-ಕೆಟ್ಟಹೆಸರು, ಅಪಕೀರ್ತಿ, ಹೊರಿಗೆ-ಹೊಣೆ, ಜವಾಬ್ದಾರಿ, ನಾಭಿ-ಹೊಕ್ಕಳು, ಅರಿಕೆ-ತಿಳಿವು, ಮನಮುರಿ-ಮನಸ್ಸನ್ನು ಕಡಿದುಕೋ, ಮನಸ್ಸು ತಿರುಗಿಸು, ಕೋಪಗೊಳ್ಳು, ಅವಧರಿಸು-ಕೇಳು, ಬಿನ್ನಹ-ಮನವಿ, ಕೋರಿಕೆ.
ಮೂಲ ...{Loading}...
ಹೊರಿಸುವಡೆ ದುಷ್ಕೀರ್ತಿ ನಮ್ಮಲಿ
ಹೊರಿಗೆಯಾಯಿತು ನಾಭಿಯಿಂ ಕೆಳ
ಗೆರಗುವುದು ಗದೆಯಿಂದ ಸಲ್ಲದು ಶಸ್ತ್ರವಿದ್ಯೆಯಲಿ
ಅರಿಕೆಯಿಂದನ್ಯಾಯವೀ ಜಗ
ವರಿಯೆ ನಮ್ಮದು ತಾಯೆ ನೀ ಮನ
ಮುರಿಯದವಧರಿಸುವಡೆ ಬಿನ್ನಹವೆಂದನಾ ಭೀಮ ॥59॥
೦೬೦ ಅರಗಿನರಮನೆ ಕೊಣ್ಡವೆಮ್ಮೈ ...{Loading}...
ಅರಗಿನರಮನೆ ಕೊಂಡವೆಮ್ಮೈ
ವರು ಸಮಿತ್ತುಗಳಾ ಸುಯೋಧನ
ಪರಮಯಜಮಾನನು ಜಯಾಧ್ವರ ವಿಧಿಯಪೂರ್ವವನು
ಕುರುನೃಪತಿಯನುಭವಿಸಿದನು ತ
ಚ್ಚರಿತವೇನನ್ಯಾಯಪಥವೇ
ಧುರದೊಳೆಮಗನ್ಯಾಯವೈಸಲೆ ದೈವಕೃತವೆಂದ ॥60॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರಗಿನ ಅರಮನೆಯೆ ಅಗ್ನಿಕುಂಡ. ನಾವೈದು ಜನ ಸಮಿತ್ತುಗಳು. ಸುಯೋಧನ ಯಜ್ಞದ ಯಜಮಾನ. ವಿಶೇಷವಾದ ವಿಜಯದ ಯಜ್ಞವನ್ನು ಕುರುರಾಜನು ನಡೆಸಿದನು. ಆ ಕೆಲಸವೇನು ಅನ್ಯಾಯದ ದಾರಿಯಲ್ಲವೇ. ಯುದ್ಧದಲ್ಲಿ ನಮಗೆ ಅನ್ಯಾಯದ ಪಟ್ಟವೇ, ಇದು ದೈವದಿಂದಾದುದು -
ಪದಾರ್ಥ (ಕ.ಗ.ಪ)
ಕೊಂಡ- ಅಗ್ನಿಕುಂಡ, ಸಮಿತ್ತು-ಸಮಿಧಾ, ಸೌದೆ, ಯಜ್ಞದಲ್ಲಿ ಉಪಯೋಗಿಸುವ ಸೌದೆ, ಕಡ್ಡಿಗಳು, ಯಜಮಾನ-ಯಜ್ಞದೀಕ್ಷಿತನಾಗಿ ಯಜ್ಞವನ್ನು ಮಾಡುವವನು, ಜಯಾಧ್ವರವಿಧಿ-ಜಯ ಸಂಪಾದಿಸುವ ಯುದ್ಧವೆಂಬ ಯಜ್ಞ ಕ್ರಮ, ತಚ್ಚರಿತ-ಆ ಕೆಲಸ ಆ ನಡವಳಿಕೆ, ಅನ್ಯಾಯಪಥ-ಅನ್ಯಾಯದ ದಾರಿ, ಧುರ-ಯುದ್ಧ, ದೈವಕೃತ-ದೈವದಿಂದ ಆದುದು. ವಿಧಿಯಾಟ.
ಮೂಲ ...{Loading}...
ಅರಗಿನರಮನೆ ಕೊಂಡವೆಮ್ಮೈ
ವರು ಸಮಿತ್ತುಗಳಾ ಸುಯೋಧನ
ಪರಮಯಜಮಾನನು ಜಯಾಧ್ವರ ವಿಧಿಯಪೂರ್ವವನು
ಕುರುನೃಪತಿಯನುಭವಿಸಿದನು ತ
ಚ್ಚರಿತವೇನನ್ಯಾಯಪಥವೇ
ಧುರದೊಳೆಮಗನ್ಯಾಯವೈಸಲೆ ದೈವಕೃತವೆಂದ ॥60॥
೦೬೧ ಕಪಟದಲಿ ಜೂಜಾಡಿ ...{Loading}...
ಕಪಟದಲಿ ಜೂಜಾಡಿ ರಾಜ್ಯವ
ನಪಹರಿಸಿದಡೆ ಧರ್ಮ ನಿಮ್ಮದು
ಕೃಪಣತೆಯ ನಾನೇನ ಹೇಳುವೆನಾ ಸುಯೋಧನನ
ದ್ರುಪದಪುತ್ರಿಯ ಗಾಢ ಗರುವಿಕೆ
ಗುಪಹತಿಯ ಮಾಡುವುದು ಧರ್ಮದ
ವಿಪುಳ ಪಥ ನಿಮ್ಮದು ಮಹಾಧರ್ಮಜ್ಞರಹಿರೆಂದ ॥61॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮೋಸದಿಂದ ಜೂಜಾಡಿ ರಾಜ್ಯವನ್ನು ಕಿತ್ತುಕೊಂಡರೆ ಧರ್ಮ ನಿಮ್ಮದು. ಆ ಸುಯೋಧನನ ಲೋಭ ಬುದ್ದಿಯನ್ನು ನಾನೇನು ಹೇಳಲಿ. ದ್ರೌಪದಿಯ ಮಹತ್ತಾದ ಗೌರವಕ್ಕೆ ತೊಂದರೆಯನ್ನು ಮಾಡುವುದು ನಿಮ್ಮ ಧರ್ಮದ ಮಹಾಪಥ. ನೀವು ಮಹಾಧರ್ಮಜ್ಞರಾಗಿದ್ದೀರಿ ಎಂದ.
ಪದಾರ್ಥ (ಕ.ಗ.ಪ)
ಕಪಟ-ಮೋಸ, ಅಪಹರಿಸು-ಕಿತ್ತುಕೋ, ಲಪಟಾಯಿಸು, ಕೃಪಣತೆ-ಲೋಭ, ಜಿಪುಣತನ, ದುರಾಸೆ, ಗಾಢ-ಹಿರಿದಾದ, ತೀವ್ರವಾದ, ಗರುವಿಕೆ-ಹಿರಿತನ, ಗೌರವ, ಉಪಹತಿ-ತೊಂದರೆ, ವಿಪುಳಪಥ-ದೊಡ್ಡದಾರಿ, ಧರ್ಮಜ್ಞ-ಧರ್ಮವನ್ನು ತಿಳಿದವನು.
ಮೂಲ ...{Loading}...
ಕಪಟದಲಿ ಜೂಜಾಡಿ ರಾಜ್ಯವ
ನಪಹರಿಸಿದಡೆ ಧರ್ಮ ನಿಮ್ಮದು
ಕೃಪಣತೆಯ ನಾನೇನ ಹೇಳುವೆನಾ ಸುಯೋಧನನ
ದ್ರುಪದಪುತ್ರಿಯ ಗಾಢ ಗರುವಿಕೆ
ಗುಪಹತಿಯ ಮಾಡುವುದು ಧರ್ಮದ
ವಿಪುಳ ಪಥ ನಿಮ್ಮದು ಮಹಾಧರ್ಮಜ್ಞರಹಿರೆಂದ ॥61॥
೦೬೨ ಲಲನೆ ಋತುಮತಿಯೆನ್ದಡೆಯು ...{Loading}...
ಲಲನೆ ಋತುಮತಿಯೆಂದಡೆಯು ಸಭೆ
ಗೆಳೆದು ತಂದವರಧಿಕಸಜ್ಜನ
ರಳಿಕುಳಾಳಿಕೆಯುಟ್ಟ ಸೀರೆಯನೂರುಮಧ್ಯದಲಿ
ಸುಲಿಸಿದರು ಧಾರ್ಮಿಕರು ತಾವೇ
ಖಳರು ನೀವೇ ಸುಜನರೆಮ್ಮೀ
ಸ್ಖಲಿತವನು ನೀವಿನ್ನು ಸೈರಿಸಿ ತಾಯೆ ನಮಗೆಂದ ॥62॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರೌಪದಿಯು ಋತುಮತಿಯೆಂದು ಹೇಳಿದರೂ ಸಭೆಗೆಳೆದು ತಂದವರು ಬಹಳ ಸಜ್ಜನರು. ಅವಳು ಉಟ್ಟಸೀರೆಯನ್ನು ಊರಮಧ್ಯದಲ್ಲಿ ಸುಲಿಸಿದವರು ಧಾರ್ಮಿಕರು. ನಾವೇ ದುಷ್ಟರು. ನೀವೇ ಸುಜನರು. ನಮ್ಮ ತಪ್ಪನ್ನು ನಮಗಾಗಿ ನೀವಿನ್ನು ಸೈರಿಸಿ ತಾಯೇ ಎಂದು ಭೀಮ ಹೇಳಿದ.
ಪದಾರ್ಥ (ಕ.ಗ.ಪ)
ಲಲನೆ-ಹೆಂಗಸು (ಇಲ್ಲಿ, ದ್ರೌಪದಿ) ಅಳಿಕುಳಾಳಕಿ-ದುಂಬಿಗಳಂತೆ ಮುಂಗುರುಗಳುಳ್ಳವಳು (ಇಲ್ಲಿ ದ್ರೌಪದಿ), ಸ್ಖಲಿತ-ತಪ್ಪು,
ಮೂಲ ...{Loading}...
ಲಲನೆ ಋತುಮತಿಯೆಂದಡೆಯು ಸಭೆ
ಗೆಳೆದು ತಂದವರಧಿಕಸಜ್ಜನ
ರಳಿಕುಳಾಳಿಕೆಯುಟ್ಟ ಸೀರೆಯನೂರುಮಧ್ಯದಲಿ
ಸುಲಿಸಿದರು ಧಾರ್ಮಿಕರು ತಾವೇ
ಖಳರು ನೀವೇ ಸುಜನರೆಮ್ಮೀ
ಸ್ಖಲಿತವನು ನೀವಿನ್ನು ಸೈರಿಸಿ ತಾಯೆ ನಮಗೆಂದ ॥62॥
೦೬೩ ಕದನವಿಜಯದ ಭಙ್ಗಿ ...{Loading}...
ಕದನವಿಜಯದ ಭಂಗಿ ತಲೆಗೇ
ರಿದುದೊ ಮೇಲಂಕಣದಲೊಡವು
ಟ್ಟಿದನ ನೆತ್ತರುಗುಡಿಹಿ ನಿನ್ನೊಡನೆನಗೆ ಮಾತೇನು
ಇದಿರಲಿರದಿರು ಸಾರು ಕರೆ ಧ
ರ್ಮದ ವಿಡಂಬದ ಧರ್ಮಪುತ್ರನ
ಹದನ ಕೇಳುವೆನೆನುತ ಕಳವಳಿಸಿದಳು ಗಾಂಧಾರಿ ॥63॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯುದ್ಧದ ವಿಜಯದ ಭಂಗಿ ತಲೆಗೆ ಹತ್ತಿತೋ. ಯುದ್ಧದ ಕಟ್ಟೆಯಲ್ಲಿ ಸಹೋದರನಾದ ದುಶ್ಶಾಸನನ ರಕ್ತವನ್ನು ಕುಡಿದವನೆ, ನಿನ್ನೊಡನೆ ನನಗೆ ಮಾತೇನು. ನನ್ನೆದುರು ಇರಬೇಡ, ಹೋಗು. ಧರ್ಮದ ವಿಡಂಬನಕನಾದ ಧರ್ಮರಾಯನನ್ನು ಕರೆ, ಅವನ ವಿಚಾರವನ್ನು ಕೇಳುತ್ತೇನೆ - ಎನ್ನುತ್ತ ಗಾಂಧಾರಿ ಕೋಪಿಸಿದಳು.
ಪದಾರ್ಥ (ಕ.ಗ.ಪ)
ಭಂಗಿ-ಬಂಗಿ, ಅಮಲು, ಮೇಲಣಂಕಣ-ಯುದ್ಧರಂಗದ ಎತ್ತರ ಪ್ರದೇಶ, ಒಡವುಟ್ಟಿದವನ-ಸಹೋದರನ (ಇಲ್ಲಿ ದುಶ್ಶಾಸನನ), ನೆತ್ತರಗುಡಿಹಿ-ರಕ್ತಕುಡಿಯುವವನು, ಸಾರು-ನಡೆ, ವಿಡಂಬದ-ಅವಹೇಳನದ, ಹದನ-ವಿಚಾರ, ಕಳವಳಿಸು-ಕೋಪಿಸು, ದುಃಖಿಸು
ಮೂಲ ...{Loading}...
ಕದನವಿಜಯದ ಭಂಗಿ ತಲೆಗೇ
ರಿದುದೊ ಮೇಲಂಕಣದಲೊಡವು
ಟ್ಟಿದನ ನೆತ್ತರುಗುಡಿಹಿ ನಿನ್ನೊಡನೆನಗೆ ಮಾತೇನು
ಇದಿರಲಿರದಿರು ಸಾರು ಕರೆ ಧ
ರ್ಮದ ವಿಡಂಬದ ಧರ್ಮಪುತ್ರನ
ಹದನ ಕೇಳುವೆನೆನುತ ಕಳವಳಿಸಿದಳು ಗಾಂಧಾರಿ ॥63॥
೦೬೪ ಧರಣಿಪತಿ ಕೇಳ್ ...{Loading}...
ಧರಣಿಪತಿ ಕೇಳ್ ಸುಬಲಜೆಯ ನಿ
ಷ್ಠುರದ ನುಡಿಯಲಿ ನಡುಗಿ ಭೂಪತಿ
ಕರವ ಮುಗಿದತಿವಿನಯಭರದಲಿ ಬಾಗಿ ಭೀತಿಯಲಿ
ಕರುಣಿಸೌ ಗಾಂಧಾರಿ ನಿರ್ಮಳ
ಕುರುಕುಲಾನ್ವಯಜನನಿ ಕೋಪ
ಸ್ಫುರಣದಲಿ ಶಪಿಸೆನಗೆ ಶಾಪಾರುಹನು ತಾನೆಂದ ॥64॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜನಮೇಜಯರಾಯನೇ ಕೇಳು, ಗಾಂಧಾರಿಯ ನಿಷ್ಠುರವಾದ ಮಾತುಗಳಿಂದ ಧರ್ಮರಾಯನು ಭಯದಿಂದ ನಡುಗಿ ಅತಿವಿನಯದಿಂದ ಕೈಮುಗಿದು ಬಾಗಿ ನಮಸ್ಕರಿಸಿದ. ಪರಿಶುದ್ಧವಾದ ಕುರುವಂಶಕ್ಕೆ ಮಾತೆಯಾದ ಗಾಂಧಾರಿಯೇ ಕರುಣಿಸು. ಅತಿಯಾಗಿ ಕೋಪಗೊಂಡಿರುವ ನೀನು ನನಗೆ ಶಾಪವನ್ನು ಕೊಡು. ನಾನು ಶಾಪಕ್ಕೆ ಅರ್ಹನಾಗಿದ್ದೇನೆ - ಎಂದ.
ಪದಾರ್ಥ (ಕ.ಗ.ಪ)
ಸುಬಲಜೆ-ಸು¨ಲ ರಾಜನ ಮಗಳು, ಗಾಂಧಾರಿ, ನಿಷ್ಠುರ-ಕೋಪ, ಕರ್ಕಶ, ಕಡ್ಡಿ ಮುರಿದಂತೆ, ಕುರುಕುಲಾನ್ವಯ-ಕುರುವಂಶ, ಕೋಪಸ್ಫುರಣ-ಕೋಪಹೆಚ್ಚುವುದು, ಶಾಪಾರುಹ-ಶಾಪಕ್ಕೆ ಅರ್ಹನಾದವ
ಮೂಲ ...{Loading}...
ಧರಣಿಪತಿ ಕೇಳ್ ಸುಬಲಜೆಯ ನಿ
ಷ್ಠುರದ ನುಡಿಯಲಿ ನಡುಗಿ ಭೂಪತಿ
ಕರವ ಮುಗಿದತಿವಿನಯಭರದಲಿ ಬಾಗಿ ಭೀತಿಯಲಿ
ಕರುಣಿಸೌ ಗಾಂಧಾರಿ ನಿರ್ಮಳ
ಕುರುಕುಲಾನ್ವಯಜನನಿ ಕೋಪ
ಸ್ಫುರಣದಲಿ ಶಪಿಸೆನಗೆ ಶಾಪಾರುಹನು ತಾನೆಂದ ॥64॥
೦೬೫ ಶಾಪವನು ನೀ ...{Loading}...
ಶಾಪವನು ನೀ ಹೆಸರಿಸೌ ಸ
ರ್ವಾಪರಾಧಿಗಳಾವು ನಿಮ್ಮಯ
ಕೋಪ ತಿಳಿಯಲಿ ತಾಯೆ ಫಲಿಸಲಿ ಬಂಧುವಧೆ ನಮಗೆ
ನೀ ಪತಿವ್ರತೆ ನಿನ್ನ ಖತಿ ಜೀ
ವಾಪಹಾರವು ತಮಗೆ ನಿಮ್ಮನು
ತಾಪವಡಗಲಿ ತನ್ನನುರುಹೆಂದೆರಗಿದನು ಪದಕೆ ॥65॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶಾಪವೇನೆಂದು ನೀನು ಹೇಳು. ನಾವು ಸರ್ವಾಪರಾಧಿಗಳಾಗಿದ್ದೇವೆ. ನಿಮ್ಮ ಕೋಪ ಶಮನವಾಗಲಿ. ತಾಯೇ ಬಂಧುವಧೆಯ ದೋಷ ನಮಗೆ ಫಲವಾಗಲಿ (ಪ್ರಾಪ್ತವಾಗಲಿ). ನೀನು ಪತಿವ್ರತೆ. ನಿನ್ನ ಕೋಪ ನಮ್ಮ ಪ್ರಾಣವನ್ನೇ ತೆಗೆಯುತ್ತದೆ. ನಿಮ್ಮ ಕೋಪತಾಪಗಳು ನಿಲ್ಲಲಿ. ನನ್ನನ್ನು ಸುಟ್ಟುಬಿಡು ಎಂದು ಧರ್ಮರಾಯ ಅವಳ ಪಾದಗಳಿಗೆ ನಮಸ್ಕರಿಸಿದ.
ಪದಾರ್ಥ (ಕ.ಗ.ಪ)
ಸರ್ವಾಪರಾಧಿಗಳು-ಎಲ್ಲ ರೀತಿಯ ಪಾಪಗಳನ್ನು ಮಾಡಿದವರು, ತಿಳಿಯಲಿ-ಶಮನವಾಗಲಿ, ನಾಶವಾಗಲಿ, ಫಲಿಸಲಿ ಬಂಧುವಧೆ-ಬಂದುಗಳ ಸಂಹಾರಕ್ಕೆ ತಕ್ಕ ಪ್ರತಿಫಲ ದೊರೆಯಲಿ, ಖತಿ-ಕೋಪ, ಅನುತಾಪ-ಬೇಗುದಿ, ಕೋಪದಿಂದಾದ ತಾಪ, ಜೀವಾಪಹಾರ-ಪ್ರಾಣವನ್ನು ತೆಗೆಯುವುದು, ಉರುಹು-ಸುಡು, ಎರಗು-ದೀರ್ಘದಂಡ ನಮಸ್ಕಾರ ಮಾಡು, ಕಾಲಮೇಲೆ ಬೀಳು.
ಮೂಲ ...{Loading}...
ಶಾಪವನು ನೀ ಹೆಸರಿಸೌ ಸ
ರ್ವಾಪರಾಧಿಗಳಾವು ನಿಮ್ಮಯ
ಕೋಪ ತಿಳಿಯಲಿ ತಾಯೆ ಫಲಿಸಲಿ ಬಂಧುವಧೆ ನಮಗೆ
ನೀ ಪತಿವ್ರತೆ ನಿನ್ನ ಖತಿ ಜೀ
ವಾಪಹಾರವು ತಮಗೆ ನಿಮ್ಮನು
ತಾಪವಡಗಲಿ ತನ್ನನುರುಹೆಂದೆರಗಿದನು ಪದಕೆ ॥65॥
೦೬೬ ನನೆದುದನ್ತಃಕರಣ ಕರುಣಾ ...{Loading}...
ನನೆದುದಂತಃಕರಣ ಕರುಣಾ
ವಿನುತ ರಸದಲಿ ಖತಿಯ ಝಳ ಝೊ
ಮ್ಮಿನಲಿ ಜಡಿದುದು ಜಾರಿತಗ್ಗದ ಪುತ್ರಶತಶೋಕ
ಜನಪ ಕೇಳೈ ರಾಜಸದ ಸಂ
ಜನಿತ ತಾಮಸಬೀಜಶೇಷದ
ವನಜಮುಖಿ ನೋಡಿದಳು ನಖಪಂಕ್ತಿಗಳನವನಿಪನ ॥66॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕರುಣರಸದಲ್ಲಿ ಆಕೆಯ ಹೃದಯ ನನೆದು ಹೋಯಿತು. ಕೋಪದ ಹೊಯ್ಲು ಮಬ್ಬಿನಲ್ಲಿ ಸೇರಿಹೋಯಿತು. ನೂರು ಜನ ಮಕ್ಕಳನ್ನು ಕಳೆದುಕೊಂಡ ತೀವ್ರವಾದ ದುಃಖ ಜಾರಿಹೋಯಿತು. ರಾಜನೇ ಕೇಳು ರಾಜಸಗುಣದಿಂದ ಹುಟ್ಟಿದ ತಾಮಸದ ಬೀಜದ ಶೇಷಭಾಗವು ಉಳಿದಿದ್ದ ಗಾಂಧಾರಿಯು, ಧರ್ಮರಾಯನ ಕಾಲಿನ ಉಗುರುಗಳನ್ನು ನೋಡಿದಳು.
ಪದಾರ್ಥ (ಕ.ಗ.ಪ)
ಅಂತಃಕರಣ-ಮನಸ್ಸು, ಹೃದಯ, ಕರುಣಾವಿನುತರಸ-ಶ್ರೇಷ್ಠವಾದ ಕರುಣರಸ (ನವರಸಗಳಲ್ಲಿ ಒಂದಾದ ಕರುಣರಸ), ಖತಿ-ಖಾತಿ, ಕೋಪ, ಝಳ-ಕೋಪದ ಬಿಸಿ, ಝೊಮ್ಮಿನಲಿ-ಮಬ್ಬಿನಲ್ಲಿ, ಜಡಿದುದು-ಬಡಿಯಿತು, (ಇಲ್ಲಿ ಸೇರಿಹೋಗು ಎಂಬರ್ಥದಲ್ಲಿದೆ), ಜಾರಿತು-ಹರಿದುಹೋಯಿತು, ನಾಶವಾಯಿತು, ಅಗ್ಗದ-ಹೆಚ್ಚಿನ, ತೀವ್ರವಾದ, ಪುತ್ರಶತಶೋಕ-ನೂರುಜನ ಮಕ್ಕಳನ್ನು ಕಳೆದುಕೊಂಡ ಶೋಕ, ರಾಜಸ-ತ್ರಿಗುಣಗಳಲ್ಲಿ ಮಧ್ಯಮಗುಣ), ತಾಮಸ-ತ್ರಿಗುಣಗಳಲ್ಲಿ ಅಧಮ ಗುಣ (ಶ್ರೇಷ್ಠಗುಣ-ಸತ್ವಗುಣ), ಬೀಜಶೇಷ-ಬೀಜವು ನಾಶವಾದರೂ ಉಳಿದ ಸ್ವಲ್ಪ ಭಾಗ, ವನಜಮುಖಿ-ತಾವರೆಯಂತೆ ಮುಖವುಳ್ಳ ಗಾಂಧಾರಿ (ಈ ಸಂದರ್ಭಕ್ಕೆ ಈ ಶಬ್ಧ ಸೂಕ್ತವಾಗಿಲ್ಲ), ನಖಪಂಕ್ತಿ-ಕಾಲಿನ ಉಗುರುಗಳು ಸಾಲು.
ಮೂಲ ...{Loading}...
ನನೆದುದಂತಃಕರಣ ಕರುಣಾ
ವಿನುತ ರಸದಲಿ ಖತಿಯ ಝಳ ಝೊ
ಮ್ಮಿನಲಿ ಜಡಿದುದು ಜಾರಿತಗ್ಗದ ಪುತ್ರಶತಶೋಕ
ಜನಪ ಕೇಳೈ ರಾಜಸದ ಸಂ
ಜನಿತ ತಾಮಸಬೀಜಶೇಷದ
ವನಜಮುಖಿ ನೋಡಿದಳು ನಖಪಂಕ್ತಿಗಳನವನಿಪನ ॥66॥
೦೬೭ ಉರಿದವರಸನ ನಖನಿಕರ ...{Loading}...
ಉರಿದವರಸನ ನಖನಿಕರ ಹೊಗೆ
ವೆರಸಿ ಕೌರಿಡಲೋಡಿ ಹೊಕ್ಕರು
ನರವೃಕೋದರರಸುರರಿಪುವಿನ ಪಶ್ಚಿಮಾಂಗದಲಿ
ಹರಿಯಭಯಕರವೆತ್ತಿ ಯಮಜಾ
ದ್ಯರನು ಸಂತೈಸಿದನು ರೋಷ
ಸ್ಫುರಣವಡಗಿತು ಸುಬಲಸುತೆಗಿನ್ನಂಜಬೇಡೆಂದ ॥67॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮರಾಯನ ಕಾಲಿನ ಉಗುರುಗಳ ಸಮೂಹ ಹೊತ್ತಿ ಉರಿದುವು. ಹೊಗೆಯಿಂದ ಕೂಡಿ ಕವರುತ್ತಿರಲು ಅರ್ಜುನ ಭೀಮರು ಓಡಿಹೋಗಿ ಕೃಷ್ಣನ ಹಿಂಭಾಗದಲ್ಲಿ ಅಡಗಿಕೊಂಡರು. ಕೃಷ್ಣ ಕೈಯೆತ್ತಿ ಧರ್ಮರಾಯಾದಿಗಳನ್ನು ಸಮಾಧಾನಗೊಳಿಸಿದ. ಗಾಂಧಾರಿಗೆ ರೋಷದ ಹಬ್ಬುಗೆಯಡಗಿತು. ಇನ್ನು ಹೆದರಬೇಡ ಎಂದು ಹೇಳಿದ.
ಪದಾರ್ಥ (ಕ.ಗ.ಪ)
ನಖನಿಕರ-ಉಗುರುಗಳ ಸಮೂಹ, ಹೊಗೆವೆರಸಿ-(ಹೊಗೆ+ಬೆರಸಿ), ಹೊಗೆಯಿಂದ ಕೂಡಿ, ಕೌರಿಡು-ಒಳಗೊಳಗೇ ಹೊತ್ತಿಕೊಂಡು ಉರಿ, ಅಸುರರಿಪು-ಕೃಷ್ಣ, ಪಶ್ಚಿಮಾಂಗ-ಹಿಂಭಾಗ, ಹರಿ-ಕೃಷ್ಣ, ಅಭಯಕರ-ಅಭಯಹಸ್ತ, ಕಾಪಾಡುವ ಭರವಸೆಯನ್ನು ಸೂಚಿಸುವ ಚಿಹ್ನೆಯ ಹಸ್ತ, ರೋಷಸ್ಫುರಣ-ರೋಷದ ಹಬ್ಬುವಿಕೆ
ಮೂಲ ...{Loading}...
ಉರಿದವರಸನ ನಖನಿಕರ ಹೊಗೆ
ವೆರಸಿ ಕೌರಿಡಲೋಡಿ ಹೊಕ್ಕರು
ನರವೃಕೋದರರಸುರರಿಪುವಿನ ಪಶ್ಚಿಮಾಂಗದಲಿ
ಹರಿಯಭಯಕರವೆತ್ತಿ ಯಮಜಾ
ದ್ಯರನು ಸಂತೈಸಿದನು ರೋಷ
ಸ್ಫುರಣವಡಗಿತು ಸುಬಲಸುತೆಗಿನ್ನಂಜಬೇಡೆಂದ ॥67॥
೦೬೮ ಕೃತಕ ಭೀಮನ ...{Loading}...
ಕೃತಕ ಭೀಮನ ಕೊಂಡು ಮುಳುಗಿತು
ಕ್ಷಿತಿಪತಿಯ ರೋಷಾಗ್ನಿಯಾತನ
ಸತಿಯ ಖತಿ ಮಗ್ಗಿತು ಮಹೀಶನ ನಖಮರೀಚಿಯಲಿ
ಜಿತವಿರೋಧವ್ಯಾಪ್ತಿ ಬಹಳ
ವ್ಯತಿಕರದೊಳಾಯ್ತೆಂದು ಲಕ್ಷ್ಮೀ
ಪತಿ ನರೇಂದ್ರನ ಸಂತವಿಟ್ಟನು ಸಾರವಚನದಲಿ ॥68॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೃತಕ ಭೀಮನನ್ನು ನಾಶಮಾಡಿ ಧೃತರಾಷ್ಟ್ರನ ಕೋಪಾಗ್ನಿಯು ಶಮನವಾಯಿತು. ಅವನ ಪತ್ನಿಯ ಕೋಪವು ಧರ್ಮರಾಯನ ಕಾಲಿನ ಉಗುರುಗಳು ಸುಟ್ಟಾಗ ನಂದಿತು. ಬಹಳ ಆಪತ್ತಿಗೆ ಕಾರಣವಾಗಬಹುದಾಗಿದ್ದ ದಂಪತಿಗಳ ಕೋಪವು ಇಷ್ಟಕ್ಕೇ ಮುಗಿಯಿತು ಎಂದು ಕೃಷ್ಣ ಧರ್ಮರಾಯನನ್ನು ನಯವಾದ ಮಾತುಗಳ ಮೂಲಕ ಸಂತಯಿಸಿದ.
ಪದಾರ್ಥ (ಕ.ಗ.ಪ)
ಕೃತಕಭೀಮ-ಭೀಮನ ವಿಗ್ರಹ, ಮೂರ್ತಿ, ಮುಳುಗಿತು-ನಾಶವಾಯಿತು, ನಂದಿತು, ಕ್ಷಿತಿಪತಿ-ಭೂಮಿಗೆ ಒಡೆಯ, ರೋಷಾಗ್ನಿ-ರೋಷದ ಬೆಂಕಿ, ಖತಿ-ಕೋಪ, ಮಗ್ಗಿತು-ನಾಶವಾಯಿತು, ನಂದಿತು, ಜಿತವಿರೋಧ-ವಿರೋಧವನ್ನು ಗೆದ್ದ, ವ್ಯಾಪ್ತಿ-ವಿಸ್ತಾರ, ವ್ಯತಿಕರ-ಆಪತ್ತು, ವಿರೋಧ, ಲಕ್ಷ್ಮೀಪತಿ-ಲಕ್ಷ್ಮಿಯ ಒಡೆಯ-ಗಂಡ, ವಿಷ್ಣು, ಕೃಷ್ಣ, ಸಂತವಿಟ್ಟನು-ಸಂತೈಸಿದನು, ಸಮಾಧಾನ ಮಾಡಿದನು, ಸಾರವಚನ-ನಯವಾದ ಮಾತು.
ಮೂಲ ...{Loading}...
ಕೃತಕ ಭೀಮನ ಕೊಂಡು ಮುಳುಗಿತು
ಕ್ಷಿತಿಪತಿಯ ರೋಷಾಗ್ನಿಯಾತನ
ಸತಿಯ ಖತಿ ಮಗ್ಗಿತು ಮಹೀಶನ ನಖಮರೀಚಿಯಲಿ
ಜಿತವಿರೋಧವ್ಯಾಪ್ತಿ ಬಹಳ
ವ್ಯತಿಕರದೊಳಾಯ್ತೆಂದು ಲಕ್ಷ್ಮೀ
ಪತಿ ನರೇಂದ್ರನ ಸಂತವಿಟ್ಟನು ಸಾರವಚನದಲಿ ॥68॥
೦೬೯ ಭೀತಿ ಬೇಡೆಲೆ ...{Loading}...
ಭೀತಿ ಬೇಡೆಲೆ ಮಕ್ಕಳಿರ ನಿ
ರ್ಧೂತ ಧರ್ಮಸ್ಥಿತಿಗಳನ್ವಯ
ಘಾತಕರು ತಮ್ಮಿಂದ ತಾವಳಿದರು ರಣಾಗ್ರದಲಿ
ನೀತಿಯಲಿ ನೀವಿನ್ನು ಪಾಲಿಸಿ
ಭೂತಳವನುರೆ ಕಳಿದ ಬಂಧು
ವ್ರಾತಕುದಕವನೀವುದೆಂದಳು ನೃಪಗೆ ಗಾಂಧಾರಿ ॥69॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಕ್ಕಳೆ, ಭೀತಿ ಬೇಡ. ಧರ್ಮಮಾರ್ಗ ವಿದೂರರು ವಂಶವಿನಾಶಕರು ಯುದ್ಧದಲ್ಲಿ ತಮ್ಮಿಂದ ತಾವೇ ಸತ್ತರು. ಭೂಮಿಯನ್ನು ಇನ್ನು ನೀವು ನೀತಿಯಿಂದ ಪಾಲಿಸಿ. ಹೆಚ್ಚಿನ ಸಂಖ್ಯೆಯಲ್ಲಿ ಪ್ರಾಣಬಿಟ್ಟಿರುವ ಬಂಧುಗಳ ಸಮೂಹಕ್ಕೆ ಜಲಾಂಜಲಿಯನ್ನು ಕೊಡುವುದು ಎಂದು ಗಾಂಧಾರಿ ಧರ್ಮಜನಿಗೆ ಹೇಳಿದಳು.
ಪದಾರ್ಥ (ಕ.ಗ.ಪ)
ನಿರ್ಧೂಘಾತಧರ್ಮಸ್ಥಿತಿ-ಧರ್ಮವನ್ನು ಕೈಬಿಟ್ಟ, ಧರ್ಮಮಾರ್ಗದಿಂದ ದೂರಸರಿದ, ಅನ್ವಯಘಾತಕರು-ವಂಶನಾಶಕರು, ಉರೆ-ಹೆಚ್ಚು, ಹೆಚ್ಚಾಗಿ, ಬಂಧುವ್ರಾತ-ಬಂಧುಗಳ ಸಮೂಹ, ಉದಕವನೀವುದು-ಶ್ರದ್ಧಾಂಜಲಿಯನ್ನು ಕೊಡುವುದು.
ಮೂಲ ...{Loading}...
ಭೀತಿ ಬೇಡೆಲೆ ಮಕ್ಕಳಿರ ನಿ
ರ್ಧೂತ ಧರ್ಮಸ್ಥಿತಿಗಳನ್ವಯ
ಘಾತಕರು ತಮ್ಮಿಂದ ತಾವಳಿದರು ರಣಾಗ್ರದಲಿ
ನೀತಿಯಲಿ ನೀವಿನ್ನು ಪಾಲಿಸಿ
ಭೂತಳವನುರೆ ಕಳಿದ ಬಂಧು
ವ್ರಾತಕುದಕವನೀವುದೆಂದಳು ನೃಪಗೆ ಗಾಂಧಾರಿ ॥69॥
೦೭೦ ಅನುನಯವ ರಚಿಸಿದಳು ...{Loading}...
ಅನುನಯವ ರಚಿಸಿದಳು ಕೌರವ
ಜನನಿ ಲೇಸಾಯ್ತೆನುತ ಬಂದರು
ವಿನಯದಲಿ ಮೆಯ್ಯಿಕ್ಕಿದರು ನಿಜ ಮಾತೆಯಂಘ್ರಿಯಲಿ
ನನೆದಳಕ್ಷಿಪಯಃಪ್ರವಾಹದೊ
ಳನಿಬರನು ತೆಗೆದಪ್ಪಿ ಕುಂತೀ
ವನಿತೆ ಸಂತೈಸಿದಳು ನಯದಲಿ ತನ್ನ ನಂದನರ ॥70॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೌರವಜನನಿಯಾದ ಗಾಂಧಾರಿ ಒಪ್ಪಿಗೆಯಾಗುವ ವಿಚಾರವನ್ನು ಹೇಳಿದಳು. ಒಳ್ಳೆಯದಾಯಿತು ಎನ್ನುತ್ತ ಬಂದು ತಮ್ಮ ತಾಯಿಯಾದ ಕುಂತಿಗೆ ವಿನಯದಿಂದ ನಮಸ್ಕಾರ ಮಾಡಿದರು. ಅವಳು ಕಣ್ಣೀರಿನ ಪ್ರವಾಹದಲ್ಲಿ ನನೆದಳು. ಎಲ್ಲರನ್ನೂ ಅಪ್ಪಿಕೊಂಡು ಕುಂತೀನಾರಿಯು ತನ್ನ ಮಕ್ಕಳನ್ನು ನಯದಿಂದ ಸಮಾಧಾನ ಮಾಡಿದಳು.
ಪದಾರ್ಥ (ಕ.ಗ.ಪ)
ಅನುನಯ-ಪ್ರೀತಿ, ಮನವೊಲಿಕೆ, ಅಕ್ಷಿ-ಕಣ್ಣು, ಪಯಸ್ಸು-ನೀರು, ಸಂತೈಸು-ಸಮಾಧಾನಿಸು, ನಯ-ಮೃದುತ್ವ, ನೀತಿ,
ಮೂಲ ...{Loading}...
ಅನುನಯವ ರಚಿಸಿದಳು ಕೌರವ
ಜನನಿ ಲೇಸಾಯ್ತೆನುತ ಬಂದರು
ವಿನಯದಲಿ ಮೆಯ್ಯಿಕ್ಕಿದರು ನಿಜ ಮಾತೆಯಂಘ್ರಿಯಲಿ
ನನೆದಳಕ್ಷಿಪಯಃಪ್ರವಾಹದೊ
ಳನಿಬರನು ತೆಗೆದಪ್ಪಿ ಕುಂತೀ
ವನಿತೆ ಸಂತೈಸಿದಳು ನಯದಲಿ ತನ್ನ ನಂದನರ ॥70॥
೦೭೧ ಏಳು ಧರ್ಮಜ ...{Loading}...
ಏಳು ಧರ್ಮಜ ಪುತ್ರಶೋಕ
ವ್ಯಾಳವಿಷಮೂರ್ಛಿತೆಯಲಾ ಪಾಂ
ಚಾಲಸುತೆಯನು ತಿಳುಹಿ ಕಾಣಿಸು ಸುಬಲನಂದನೆಯ
ಬಾಲೆಯರನಾ ಭಾನುಮತಿಯ ಛ
ಡಾಳದುಃಖವನಪಹರಿಸು ಪಡಿ
ತಾಳ ಬೇಡೆನೆ ಬಂದರನಿಬರು ದ್ರೌಪದಿಯ ಹೊರೆಗೆ ॥71॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಏಳು ಧರ್ಮರಾಯ. ಪುತ್ರಶೋಕವೆಂಬ ಸರ್ಪದ ವಿಷದಿಂದ ಮೂರ್ಛಿತೆಯಲ್ಲವೇ ದ್ರೌಪದಿ: ಅವಳಿಗೆ ಸಮಾಧಾನ ಹೇಳಿ ಗಾಂಧಾರಿಯನ್ನು ಕಾಣಿಸು. ಬಾಲೆಯರಾದ ಭಾನುಮತಿ ಮುಂತಾದವರನ್ನು ಆವರಿಸಿರುವ ದುಃಖವನ್ನು ನಿವಾರಿಸು. ತಡಮಾಡುವುದು ಬೇಡವೆಂದು ಹೇಳಲು, ಪಾಂಡವರು ದ್ರೌಪದಿಯ ಸಮೀಪಕ್ಕೆ ಬಂದರು.
ಪದಾರ್ಥ (ಕ.ಗ.ಪ)
ವ್ಯಾಳವಿಷ-ಹಾವಿನವಿಷ, ಮೂರ್ಛಿತೆ-ಪ್ರಜ್ಞೆಯನ್ನು ಕಳೆದುಕೊಂಡವಳು, ಪಾಂಚಾಲಸುತೆ-ಪಾಂಚಾಲರಾಜನ ಮಗಳು, ದ್ರೌಪದಿ, ತಿಳುಹಿ-ಸಮಾಧಾನ ಹೇಳಿ, ಸುಬಲನಂದನೆ-ಸುಬಲರಾಜನ ಮಗಳು, ಗಾಂಧಾರಿ, ಛಡಾಳದುಃಖ-ಹೊತ್ತಿಉರಿಯುತ್ತಿರುವ ದುಃಖ, ಅಪಹರಿಸು-ಪರಿಹರಿಸು, ಪಡಿತಾಳ-ತಡ, ವಿಳಂಬ, ಅನಿಬರು-ಎಲ್ಲರೂ, ಹೊರೆಗೆ-ಸಮೀಪಕ್ಕೆ
ಮೂಲ ...{Loading}...
ಏಳು ಧರ್ಮಜ ಪುತ್ರಶೋಕ
ವ್ಯಾಳವಿಷಮೂರ್ಛಿತೆಯಲಾ ಪಾಂ
ಚಾಲಸುತೆಯನು ತಿಳುಹಿ ಕಾಣಿಸು ಸುಬಲನಂದನೆಯ
ಬಾಲೆಯರನಾ ಭಾನುಮತಿಯ ಛ
ಡಾಳದುಃಖವನಪಹರಿಸು ಪಡಿ
ತಾಳ ಬೇಡೆನೆ ಬಂದರನಿಬರು ದ್ರೌಪದಿಯ ಹೊರೆಗೆ ॥71॥
೦೭೨ ಕರೆದು ತನ್ದರು ...{Loading}...
ಕರೆದು ತಂದರು ವಿಗತಲೋಚನ
ನರಸಿಯನು ಕಾಣಿಸಿದರತ್ತೆಯ
ಚರಣಯುಗಳದೊಳೆರಗೆ ಹಿಡಿದೆತ್ತಿದಳು ಗಾಂಧಾರಿ
ಮರುಳು ಮಗಳೆ ಕುಮಾರ ವರ್ಗದ
ಮರಣ ಸೊಸೆಯತ್ತೆಯರಿಗೊಂದೇ
ಪರಿ ವೃಥಾ ವ್ಯಥೆಯೇಕೆನುತ ಸಂತೈಸಿದಳು ಸತಿಯ ॥72॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರೌಪದಿಯನ್ನು ಕರೆದುತಂದರು. ಧೃತರಾಷ್ಟ್ರನ ಪತ್ನಿಯಾದ ಗಾಂಧಾರಿಯನ್ನು ಕಾಣಿಸಿದರು. ಅತ್ತೆಯ ಪಾದಗಳಿಗೆ ಅವಳು ಎರಗಲು ಗಾಂಧಾರಿ ಹಿಡಿದೆತ್ತಿದಳು. ಮರುಳು ಮಗಳೇ, ಮಕ್ಕಳ ಮರಣ, ಅತ್ತೆ ಸೊಸೆಯರಿಗೆ ಒಂದೇ ರೀತಿಯಾಗಿದೆ. ಸುಮ್ಮನೆ ದುಃಖವೇಕೆ - ಎನ್ನುತ್ತ ಗಾಂಧಾರಿ ದ್ರೌಪದಿಯನ್ನು ಸಂತಯಿಸಿದಳು.
ಪದಾರ್ಥ (ಕ.ಗ.ಪ)
ವಿಗತಲೋಚನ-ಕಣ್ಣಿಲ್ಲದವನು ಧೃತರಾಷ್ಟ್ರ, ಚರಣಯುಗ-ಎರಡೂ ಪಾದಗಳು, ವೃಥಾ-ಸುಮ್ಮನೆ, ಅನವಶ್ಯಕವಾಗಿ, ವ್ಯಥೆ-ದುಃಖ, ಸಂತೈಸು-ಸಮಾಧಾನಪಡಿಸು.
ಮೂಲ ...{Loading}...
ಕರೆದು ತಂದರು ವಿಗತಲೋಚನ
ನರಸಿಯನು ಕಾಣಿಸಿದರತ್ತೆಯ
ಚರಣಯುಗಳದೊಳೆರಗೆ ಹಿಡಿದೆತ್ತಿದಳು ಗಾಂಧಾರಿ
ಮರುಳು ಮಗಳೆ ಕುಮಾರ ವರ್ಗದ
ಮರಣ ಸೊಸೆಯತ್ತೆಯರಿಗೊಂದೇ
ಪರಿ ವೃಥಾ ವ್ಯಥೆಯೇಕೆನುತ ಸಂತೈಸಿದಳು ಸತಿಯ ॥72॥
೦೭೩ ಸರಿಯಲೌ ಸುತಶೋಕ ...{Loading}...
ಸರಿಯಲೌ ಸುತಶೋಕ ನಮ್ಮಿ
ಬ್ಬರಿಗೆ ನಮ್ಮೊಳುವೆರೆಸಿ ವೈರೋ
ತ್ಕರವಿಸಂಸ್ಥುಳರಣವಿಧಾನವ ನಮ್ಮೊಳಗೆ ರಚಿಸಿ
ಎರಡು ಬಲದಲಿ ಸಕಲ ಭೂಮೀ
ಶ್ವರರ ಚಾತುರ್ಬಲವನುಪಸಂ
ಹರಿಸಿದಾತನು ತಾನೆ ಗದುಗಿನ ವೀರನಾರಯಣ ॥73॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಮ್ಮಿಬ್ಬರಿಗೂ ಪುತ್ರಶೋಕ ಸಮಾನವಾದುದು. ನಮ್ಮೊಳಗೆ ಸೇರಿಕೊಂಡು ವೈರವನ್ನು ಹೆಚ್ಚಿಸುವ ಪರಸ್ಪರರನ್ನು ವಿನಾಶಮಾಡುವ ಯುದ್ಧ ಕ್ರಮವನ್ನು ನಮ್ಮಲ್ಲಿಯೇ ಉಂಟುಮಾಡಿ ಎರಡೂ ಸೈನ್ಯದಲ್ಲಿ ಚತುರಂಗ ಬಲವನ್ನು ಸಂಹಾರ ಮಾಡಿದವನು ಗದುಗಿನ ವೀರನಾರಾಯಣ ತಾನೇ ಅಲ್ಲವೇ.
ಪದಾರ್ಥ (ಕ.ಗ.ಪ)
ಸುತಶೋಕ-ಮಕ್ಕಳನ್ನು ಕಳೆದುಕೊಂಡ ಶೋಕ, ನಮ್ಮೊಳುವೆರಸಿ-(ನಮ್ಮೊಳು+ಬೆರಸಿ) ನಮ್ಮೊಳಗೆ ಸೇರಿ, ವೈರೋತ್ಕರವಿಸಂಸ್ಥುಳ-ವೈರವನ್ನು ಹೆಚ್ಚಿಸಿ ಪರಸ್ಪರ ವಿನಾಶ ಮಾಡುವ, ರಣವಿಧಾನ-ಯುದ್ಧದ ರೀತಿ, ಚಾತುರ್ಬಲ-ಚತುರಂಗ ಬಲ, ಆನೆ, ಕುದುರೆ, ರಥ, ಕಾಲಾಳು ಎಂಬ ನಾಲ್ಕು ವಿಭಾಗದಿಂದ ಕೂಡಿದ ಸೈನ್ಯ, ಉಪಸಂಹರಿಸು-ಸಂಹಾರ ಮಾಡು, ಮುಕ್ತಾಯ ಮಾಡು,
ಮೂಲ ...{Loading}...
ಸರಿಯಲೌ ಸುತಶೋಕ ನಮ್ಮಿ
ಬ್ಬರಿಗೆ ನಮ್ಮೊಳುವೆರೆಸಿ ವೈರೋ
ತ್ಕರವಿಸಂಸ್ಥುಳರಣವಿಧಾನವ ನಮ್ಮೊಳಗೆ ರಚಿಸಿ
ಎರಡು ಬಲದಲಿ ಸಕಲ ಭೂಮೀ
ಶ್ವರರ ಚಾತುರ್ಬಲವನುಪಸಂ
ಹರಿಸಿದಾತನು ತಾನೆ ಗದುಗಿನ ವೀರನಾರಯಣ ॥73॥