೦೦೦ ಸೂ ಮುತ್ತಿಮೂದಲಿಸಿದರು ...{Loading}...
ಸೂ. ಮುತ್ತಿಮೂದಲಿಸಿದರು ಕುರುರಾ
ಜೋತ್ತಮನನುದಕದಲಿ ಹೊರವಡಿ
ಸುತ್ತ ಕಂಡರು ಪಾಂಡುತನುಜರು ರೋಹಿಣೀಸುತನ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ: ಪಾಂಡವರು ಕೊಳವನ್ನು ಮುತ್ತಿ, ದುರ್ಯೋಧನನನ್ನು ಮೂದಲಿಸಿ, ನೀರಿನಿಂದ ಹೊರಕ್ಕೆ ಹೊರಡಿಸುತ್ತ, ರೋಹಿಣೀಸುತನಾದ ಬಲರಾಮನನ್ನು ಕಂಡರು.
ಮೂಲ ...{Loading}...
ಸೂ. ಮುತ್ತಿಮೂದಲಿಸಿದರು ಕುರುರಾ
ಜೋತ್ತಮನನುದಕದಲಿ ಹೊರವಡಿ
ಸುತ್ತ ಕಂಡರು ಪಾಂಡುತನುಜರು ರೋಹಿಣೀಸುತನ
೦೦೧ ಕೇಳು ಧೃತರಾಷ್ಟ್ರಾವನಿಪ ...{Loading}...
ಕೇಳು ಧೃತರಾಷ್ಟ್ರಾವನಿಪ ರಿಪು
ಜಾಲ ಜಡಿದುದು ಕೊಳನ ತಡಿಯಲಿ
ತೂಳಿದುದು ಬಲುಬೊಬ್ಬೆಯಬ್ಬರವಭ್ರಮಂಡಲವ
ಸೂಳವಿಸಿದವು ಲಗ್ಗೆಯಲಿ ನಿ
ಸ್ಸಾಳ ಬಹುವಿಧ ವಾದ್ಯರವ ಹೆ
ಗ್ಗಾಳೆಗಳು ಚೀರಿದವು ಬೈಸಿಕೆ ಬಿಡೆ ಕುಲಾದ್ರಿಗಳ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧೃತರಾಷ್ಟ್ರ ರಾಜ ಕೇಳು, ಕೊಳದ ದಡದಲ್ಲಿ ಶತ್ರುಗಳ ಸಮೂಹದ ಬೊಬ್ಬೆಯ ಶಬ್ದವು ಆಕಾಶಮಂಡಲವನ್ನು ಆಕ್ರಮಿಸಿತು. ಸೈನ್ಯವು ಮುತ್ತಿಗೆ ಹಾಕಲು, ಅನೇಕ ವಿಧವಾದ ರಣವಾದ್ಯಗಳು, ದೊಡ್ಡ ಕಹಳೆಗಳು, ಕುಲಪರ್ವತಗಳ ಬೆಸುಗೆ ಬಿಡುವಂತೆ ಚೀರಿದವು (ಶಬ್ದಮಾಡಿದುವು)
ಪದಾರ್ಥ (ಕ.ಗ.ಪ)
ಜಡಿ-ಬೊಬ್ಬೆ, ಕೂಗು, ಹೊಡೆ, ಹರಡು, ಬೀಸು, ತೂಳ್-ಮುನ್ನಗ್ಗು, ಹಿಮ್ಮೆಟ್ಟು, ಆಕ್ರಮಣ ಮಾಡು, ಅಭ್ರ-ಆಕಾಶ, ಸೂಳವಿಸು-ಗಟ್ಟಿಧ್ವನಿಮಾಡು, ಬಾರಿಸು, ಹೊಡೆ, ಲಗ್ಗೆ-ಮುತ್ತಿಗೆ, ಗದ್ದಲ, ವಾದ್ಯಗಳ ಮೇಳ.
ಮೂಲ ...{Loading}...
ಕೇಳು ಧೃತರಾಷ್ಟ್ರಾವನಿಪ ರಿಪು
ಜಾಲ ಜಡಿದುದು ಕೊಳನ ತಡಿಯಲಿ
ತೂಳಿದುದು ಬಲುಬೊಬ್ಬೆಯಬ್ಬರವಭ್ರಮಂಡಲವ
ಸೂಳವಿಸಿದವು ಲಗ್ಗೆಯಲಿ ನಿ
ಸ್ಸಾಳ ಬಹುವಿಧ ವಾದ್ಯರವ ಹೆ
ಗ್ಗಾಳೆಗಳು ಚೀರಿದವು ಬೈಸಿಕೆ ಬಿಡೆ ಕುಲಾದ್ರಿಗಳ ॥1॥
೦೦೨ ತಳಮಳಲ ಮೊಗೆಮೊಗೆದು ...{Loading}...
ತಳಮಳಲ ಮೊಗೆಮೊಗೆದು ಕದಡಿತು
ಕೊಳನ ಜಲಚರನಿಚಯವೀ ಬೊ
ಬ್ಬುಳಿಕೆ ಮಿಗಲೊಬ್ಬುಳಿಕೆ ನೆಗೆದವು ವಿಗತವೈರದಲಿ
ದಳವ ಬಿಗಿದಂಬುಜದೊಳಡಗಿದ
ವಳಿನಿಕರ ಹಾರಿದವು ಹಂಸಾ
ವಳಿ ಜವಾಯಿಲತನದಿ ಜಗುಳ್ದವು ಜಕ್ಕವಕ್ಕಿಗಳು ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೊಳದಲ್ಲಿದ್ದ ಜಲಚರ ಸಮೂಹವು ಗಾಬರಿಯಿಂದ ಕೊಳದ ತಳಭಾಗದ ಮಳಲನ್ನು ಮೊಗೆಯಲು ನೀರು ಕದಡಿತು. ಕೊಳದಲ್ಲಿ ನೀರಿನ ಗುಳ್ಳೆಗಳು ಹೆಚ್ಚಿನ ಸಂಖ್ಯೆಯಲ್ಲಿ ಒಟ್ಟೊಟ್ಟಿಗೆ ಮೇಲೆ ಬಂದುವು. ಎಸಳುಗಳನ್ನು ಮುಚ್ಚಿಸಿ ದುಂಬಿಗಳು ತಾವರೆಯ ಹೂವಿನೊಳಗೆ ಅಡಗಿಕೊಂಡವು. ಹಂಸಪಕ್ಷಿಗಳು ಅತಿವೇಗದಿಂದ ಹಾರಿಹೋದವು. ಚಕ್ರವಾಕ ಪಕ್ಷಿಗಳು ನೀರಿನೊಳಕ್ಕೆ ಜಾರಿದವು.
ಪದಾರ್ಥ (ಕ.ಗ.ಪ)
ತಳಮಳಲು-ನೀರಿನ ತಳಭಾಗದಲ್ಲಿನ ಮರಳು, ಮೊಗೆ-ಮೇಲೆ ಹಾಕು, ಬೊಗಸೆಯಲ್ಲಿ ತುಂಬು, ಬೊಬ್ಬುಳಿಕೆ-ನೀರಿನಗುಳ್ಳೆ, ಒಬ್ಬುಳಿಕೆ-ಒಟ್ಟುಗೂಡುವಿಕೆ, ಗುಂಪು, ವಿಗತವೈರ- ವೈರವಿಲ್ಲದ , ಕ್ರೂರ, ದಳ-ಹೂವಿನ ಎಸಳು, ಅಂಬುಜ-ತಾವರೆ, ಕಮಲ (ಅಂಬು-ನೀರು), ಅಳಿ-ದುಂಬಿ, ಜೇನುನೊಣ, ನಿಕರ-ಸಮೂಹ, ಜವಾಯಿಲತನ-ವೇಗ, ಅತಿವೇಗ, ಜಗುಳ್-ಜಾರು, ಮುಳುಗು, ಜಕ್ಕವಕ್ಕಿ-ಚಕ್ರವಾಕ(ಸಂ)
ಮೂಲ ...{Loading}...
ತಳಮಳಲ ಮೊಗೆಮೊಗೆದು ಕದಡಿತು
ಕೊಳನ ಜಲಚರನಿಚಯವೀ ಬೊ
ಬ್ಬುಳಿಕೆ ಮಿಗಲೊಬ್ಬುಳಿಕೆ ನೆಗೆದವು ವಿಗತವೈರದಲಿ
ದಳವ ಬಿಗಿದಂಬುಜದೊಳಡಗಿದ
ವಳಿನಿಕರ ಹಾರಿದವು ಹಂಸಾ
ವಳಿ ಜವಾಯಿಲತನದಿ ಜಗುಳ್ದವು ಜಕ್ಕವಕ್ಕಿಗಳು ॥2॥
೦೦೩ ಬನ್ದುದರಿಬಲ ಕೊಳನ ...{Loading}...
ಬಂದುದರಿಬಲ ಕೊಳನ ತೀರದ
ಲಂದು ವೇಢೈಸಿದರು ಸರಸಿಯ
ಬಂದಿಕಾರರು ಬೊಬ್ಬಿರಿದರಬ್ಬರಕೆ ಧರೆ ಬಿರಿಯೆ
ಅಂದಣದಲೈತಂದು ಧರ್ಮಜ
ನಿಂದನರ್ಜುನ ಭೀಮ ಯಮಳ ಮು
ಕುಂದ ಸಾತ್ಯಕಿ ದ್ರುಪದಸೂನು ಶಿಖಂಡಿಗಳು ಸಹಿತ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶತ್ರುಸೈನ್ಯ ಕೊಳದ ದಡಕ್ಕೆ ಬಂದು ಸರೋವರವನ್ನು ಮುತ್ತಿತು. ಸರೋವರವನ್ನು ಬಂಧಿಸಿರುವಂತಿದ್ದ ಸೈನಿಕರು ಅಬ್ಬರಕ್ಕೆ ಭೂಮಿಸೀಳುವಂತೆ ಬೊಬ್ಬಿರಿದರು. ಧರ್ಮರಾಜನು ಪಲ್ಲಕ್ಕಿಯಲ್ಲಿ ಬಂದು, ಅರ್ಜುನ, ಭೀಮ, ನಕುಲ ಸºದೇವ, ಕೃಷ್ಣ, ಸಾತ್ಯಕಿ, ಧೃಷ್ಟದ್ಯುಮ್ನ ಶಿಖಂಡಿಗಳ ಸಹಿತ ನಿಂತನು.
ಪದಾರ್ಥ (ಕ.ಗ.ಪ)
ವೇಢೈಸು-ಸುತ್ತುವರಿ, ಆವರಿಸು, ಮುತ್ತು
ಮೂಲ ...{Loading}...
ಬಂದುದರಿಬಲ ಕೊಳನ ತೀರದ
ಲಂದು ವೇಢೈಸಿದರು ಸರಸಿಯ
ಬಂದಿಕಾರರು ಬೊಬ್ಬಿರಿದರಬ್ಬರಕೆ ಧರೆ ಬಿರಿಯೆ
ಅಂದಣದಲೈತಂದು ಧರ್ಮಜ
ನಿಂದನರ್ಜುನ ಭೀಮ ಯಮಳ ಮು
ಕುಂದ ಸಾತ್ಯಕಿ ದ್ರುಪದಸೂನು ಶಿಖಂಡಿಗಳು ಸಹಿತ ॥3॥
೦೦೪ ವರ ಯುಧಾಮನ್ಯೂತ್ತಮೌಞ್ಜಸ ...{Loading}...
ವರ ಯುಧಾಮನ್ಯೂತ್ತಮೌಂಜಸ
ರಿರಲು ಪಂಚದ್ರೌಪದೀಸುತ
ರರಸ ನಿಮ್ಮ ಯುಯುತ್ಸು ಸೃಂಜಯ ಸೋಮಕಾದಿಗಳು
ಕರಿಗಳೈನೂರೈದು ಸಾವಿರ
ತುರಗಪಯದಳವೆಂಟು ಸಾವಿರ
ವೆರಡು ಸಾವಿರ ರಥವಿದರಿಮೋಹರದ ಪರಿಶೇಷ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಂಚದ್ರೌಪದೀಸುತರು, ಯುಧಾಮನ್ಯು, ಉತ್ತಮೌಂಜಸರು ಮುಂತಾದವರೊಂದಿಗೆ ಅವರ ಅರಸನಾದ ಧರ್ಮರಾಯನು ಇರಲು, - ಧೃತರಾಷ್ಟ್ರನೇ! ನಿಮ್ಮವನಾದ ಯುಯುತ್ಸು, ಸೃಂಜಯ ಸೋಮಕಾದಿಗಳು ಇದ್ದರು. ಐದು ನೂರು ಆನೆಗಳು, ಐದುಸಾವಿರ ಕುದುರೆಗಳು, ಕಾಲಾಳುಗಳು ಎಂಟುಸಾವಿರ, ಎರಡುಸಾವಿರ ರಥಗಳು, ಇವಿಷ್ಟು ಶತ್ರುಗಳಾದ ಪಾಂಡವರ ಸೈನ್ಯದಲ್ಲಿ ಉಳಿದ ಭಾಗ.
ಪದಾರ್ಥ (ಕ.ಗ.ಪ)
ಪರಿಶೇಷ-ಉಳಿದುದು, ಉಳಿದಭಾಗ.
ಟಿಪ್ಪನೀ (ಕ.ಗ.ಪ)
ಯುಯುತ್ಸು :
ಇವನು ಧೃತರಾಷ್ಟ್ರನಿಗೆ ವೇಶ್ಯಾಂಗನೆಯಲ್ಲಿ ಜನಿಸಿದವನು. ಮಹಾಭಾರತಯುದ್ಧದ ಪ್ರಾರಂಭದಲ್ಲಿ ಯುಯುತ್ಸು ಕೌರವ ಸೈನ್ಯವನ್ನು ಬಿಟ್ಟು ಪಾಂಡವರಲ್ಲಿಗೆ ಬಂದ. ಅದನ್ನು ಸೂಚಿಸಲು ಕವಿ ಇಲ್ಲಿ ‘ನಿಮ್ಮ ಯುಯುತ್ಸು’ - ಎಂದಿದ್ದಾನೆ. ಭೀಷ್ಮ ಪರ್ವದ 2 ನೇ ಸಂಧಿ, 37 ರಿಂದ 40ರವರೆಗಿನ ಪದ್ಯಗಳನ್ನು ನೋಡಿ.
ಮೂಲ ...{Loading}...
ವರ ಯುಧಾಮನ್ಯೂತ್ತಮೌಂಜಸ
ರಿರಲು ಪಂಚದ್ರೌಪದೀಸುತ
ರರಸ ನಿಮ್ಮ ಯುಯುತ್ಸು ಸೃಂಜಯ ಸೋಮಕಾದಿಗಳು
ಕರಿಗಳೈನೂರೈದು ಸಾವಿರ
ತುರಗಪಯದಳವೆಂಟು ಸಾವಿರ
ವೆರಡು ಸಾವಿರ ರಥವಿದರಿಮೋಹರದ ಪರಿಶೇಷ ॥4॥
೦೦೫ ದೇವ ಕಣ್ಡಿರೆ ...{Loading}...
ದೇವ ಕಂಡಿರೆ ಕುರುಪತಿಯ ಮಾ
ಯಾವಿಡಂಬನವಿದ್ಯೆಯನು ನಿ
ಷ್ಠೀವನಾವಿರ್ಭೂತ ಸಲಿಲಸ್ತಂಭ ಡಂಬರವ
ಆವುದಿಲ್ಲಿಯ ವಿಧಿಯ ಸಮರ
ವ್ಯಾವಹಾರಿಕ ವಿಷಯ ತಪ್ಪದೆ
ನೀವು ಬೆಸಸುವುದೆಂದನರಸನು ದೇವಕೀಸುತನ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೇವಾ, ದುರ್ಯೋಧನನ ಮಾಯೆಯ ಸೋಗಿನ ವಿದ್ಯೆಯನ್ನು, (ಮೀನುಗಳಂತೆ) ತಾನೇ ಉಗುಳಿದ ನೀರಿನೊಳಗಿರುವ ಜಲ ಸ್ತಂಭವಿದ್ಯೆಯ ತೋರಿಕೆಯನ್ನು ಕಂಡಿರೇ. ಇಲ್ಲಿ ಯಾವ ವಿಧಾನದಲ್ಲಿ ನಾವು ಯುದ್ಧವನ್ನು ಮಾಡಬೇಕೆಂಬುದನ್ನು ಯಾವ ರೀತಿ ಇಲ್ಲಿ ವ್ಯವಹರಿಸಬೇಕೆಂಬುದನ್ನು ನೀವು ತಪ್ಪದೆ ತಿಳಿಸಬೇಕೆಂದು ಧರ್ಮಜನು ಕೃಷ್ಣನನ್ನು ಕೇಳಿದ.
ಪದಾರ್ಥ (ಕ.ಗ.ಪ)
ವಿಡಂಬನ-ಸೋಗು, ಪರಿಹಾಸ್ಯ, ಅಣಕ, ನಿಷ್ಠೀವನಾವಿರ್ಭೂತ-ಉಗುಳಿದ ನೀರಿನಿಂದ ಕೂಡಿದ, ಸಲಿಲಸ್ತಂಭ-ಜಲಸ್ತಂಭನ, ವಿಧಿ-ವಿಧಾನ.
ಮೂಲ ...{Loading}...
ದೇವ ಕಂಡಿರೆ ಕುರುಪತಿಯ ಮಾ
ಯಾವಿಡಂಬನವಿದ್ಯೆಯನು ನಿ
ಷ್ಠೀವನಾವಿರ್ಭೂತ ಸಲಿಲಸ್ತಂಭ ಡಂಬರವ
ಆವುದಿಲ್ಲಿಯ ವಿಧಿಯ ಸಮರ
ವ್ಯಾವಹಾರಿಕ ವಿಷಯ ತಪ್ಪದೆ
ನೀವು ಬೆಸಸುವುದೆಂದನರಸನು ದೇವಕೀಸುತನ ॥5॥
೦೦೬ ಭರತವಂಶಲಲಾಮ ಕೇಳ್ ...{Loading}...
ಭರತವಂಶಲಲಾಮ ಕೇಳ್ ನೃಪ
ವರರ ಪದ್ಧತಿ ಕಂಟಕದಿನು
ತ್ತರಿಸುವುದು ಕಂಟಕವ ಮಾಯಾವಿಗಳ ವಿದ್ಯೆಗಳ
ಪರಿಹರಿಸುವುದು ಮಾಯೆಯಿಂ ಪ್ರತಿ
ಗರಳದಲಿ ಗರಳವನು ಮಾಯಾ
ಪರರು ಮಾಯೋಪಾಯವಧ್ಯರು ಭೂಪ ಕೇಳ್ ಎಂದ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭರತಕುಲ ಶ್ರೇಷ್ಠನಾದ ಧರ್ಮರಾಯನೇ ಕೇಳು. ರಾಜಶ್ರೇಷ್ಠರ ಪದ್ದತಿಯೆಂದರೆ ಮುಳ್ಳುಗಳಿಗೆ ಮುಳ್ಳಿಂದಲೇ ಉತ್ತರಿಸಬೇಕು (ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು), ಮಾಯಾವಿಗಳ ವಿದ್ಯೆಗಳನ್ನು ಮಾಯೆಯಿಂದಲೇ ಪರಿಹರಿಸಬೇಕು, ವಿಷವನ್ನು ಪ್ರತಿ ವಿಷದಿಂದ ಪರಿಹರಿಸಬೇಕು. ಮಾಯೆಯನ್ನು ಬಳಸುವವರನ್ನು ಮಾಯೆಯ ಉಪಾಯದಿಂದಲೇ ಸಂಹರಿಸಬೇಕು. ರಾಜನೇ ಕೇಳು - ಎಂದು ಕೃಷ್ಣ ಹೇಳಿದ.
ಪದಾರ್ಥ (ಕ.ಗ.ಪ)
ಲಲಾಮ-ಶ್ರೇಷ್ಠ, ಕಂಟಕ-ಮುಳ್ಳು, ವಿಪತ್ತು, ಗರಳ-ವಿಷ, ವಧ್ಯರು-ಕೊಲೆಯಾಗಲು ಅರ್ಹರು, ಕೊಲೆಯಾಗಬೇಕಾದವರು.
ಮೂಲ ...{Loading}...
ಭರತವಂಶಲಲಾಮ ಕೇಳ್ ನೃಪ
ವರರ ಪದ್ಧತಿ ಕಂಟಕದಿನು
ತ್ತರಿಸುವುದು ಕಂಟಕವ ಮಾಯಾವಿಗಳ ವಿದ್ಯೆಗಳ
ಪರಿಹರಿಸುವುದು ಮಾಯೆಯಿಂ ಪ್ರತಿ
ಗರಳದಲಿ ಗರಳವನು ಮಾಯಾ
ಪರರು ಮಾಯೋಪಾಯವಧ್ಯರು ಭೂಪ ಕೇಳೆಂದ ॥6॥
೦೦೭ ಮರಣವೆನ್ದಿಙ್ಗಾಗದನ್ತಿರೆ ...{Loading}...
ಮರಣವೆಂದಿಂಗಾಗದಂತಿರೆ
ವರವ ಕೊಂಡು ಹಿರಣ್ಯಕಾಸುರ
ಸುರನರೋರಗರನು ವಿಭಾಡಿಸಿ ಧರ್ಮಪದ್ಧತಿಗೆ
ಧರಧುರವ ಮಾಡಿದಡೆ ನರಕೇ
ಸರಿಯ ರೂಪಿನೊಳಾದಿವಿಶ್ವಂ
ಭರನು ಗೆಲಿದನು ಮಾಯೆಯನು ಮಾಯಾಭಿಯೋಗದಲಿ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಿರಣ್ಯಕ (ಹಿರಣ್ಯಕಶಿಪು) ತನಗೆ ಎಂದಿಗೂ ಮರಣ ಬಾರದಂತೆ ವರವನ್ನು ಪಡೆದು, ದೇವತೆಗಳು, ಮನುಷ್ಯರು ಮತ್ತು ಸರ್ಪಗಳನ್ನು ಸೋಲಿಸಿ, ಧರ್ಮ ಪದ್ಧತಿಗೆ ಕೋಲಾಹಲವುಂಟುಮಾಡಿದರೆ, ನರಸಿಂಹನ ರೂಪದಲ್ಲಿ ಆದಿವಿಷ್ಣವು ಮಾಯೆಯನ್ನು ಮಾಯಾಪ್ರಯೋಗದಲ್ಲಿಯೇ ಗೆದ್ದ.
ಪದಾರ್ಥ (ಕ.ಗ.ಪ)
ವಿಭಾಡಿಸಿ-ಎದುರಿಸಿ, ಸೋಲಿಸಿ, ಧರಧುರ-ಆಧಿಕ್ಯ, ಹೆಚ್ಚಳ, ಕೋಲಾಹಲ, ನರಕೇಸರಿ-ನರಸಿಂಹ, ವಿಶ್ವಂಭರ-ಜಗತ್ತನ್ನು ಕಾಪಾಡುವವ ಪರಮಾತ್ಮ (ಇಲ್ಲಿ - ವಿಷ್ಣು)
ಟಿಪ್ಪನೀ (ಕ.ಗ.ಪ)
1)“ನರಕೇಸರಿಯರೂಪಿನಲಿ …………………….” ಇದು ಹಿರಣ್ಯಕಶಿಪುವಿಗೆ ಸಂಬಂಧಿಸಿದ ಪ್ರಖ್ಯಾತ ಪೌರಾಣಿಕ ಕಥೆ ಶ್ರೀ ಹರಿಯು ಮಾಯಾರೂಪವನ್ನು - ನರಸಿಂಹರೂಪವನ್ನು ತಾಳಿ ಹಿರಣ್ಯಕಶಿಪುವನ್ನು ಸಂಹರಿಸಿ, ಪ್ರಹ್ಲಾದನನ್ನು ಉದ್ಧರಿಸಿದ ಕಥೆ. ದಶಾವತಾರಗಳಲ್ಲಿ ಒಂದು.
ಮೂಲ ...{Loading}...
ಮರಣವೆಂದಿಂಗಾಗದಂತಿರೆ
ವರವ ಕೊಂಡು ಹಿರಣ್ಯಕಾಸುರ
ಸುರನರೋರಗರನು ವಿಭಾಡಿಸಿ ಧರ್ಮಪದ್ಧತಿಗೆ
ಧರಧುರವ ಮಾಡಿದಡೆ ನರಕೇ
ಸರಿಯ ರೂಪಿನೊಳಾದಿವಿಶ್ವಂ
ಭರನು ಗೆಲಿದನು ಮಾಯೆಯನು ಮಾಯಾಭಿಯೋಗದಲಿ ॥7॥
೦೦೮ ಲಲಿತ ವೈದಿಕ ...{Loading}...
ಲಲಿತ ವೈದಿಕ ಧರ್ಮಮಾರ್ಗವ
ನಳಿದು ಹೆಚ್ಚಿದ ಕಾಲನೇಮಿಯ
ತಲೆಯ ಕೊಂಡನು ಚಕ್ರದಲಿ ದೈತ್ಯಾರಿ ಪೂರ್ವದಲಿ
ಬಲನ ಜಂಭನ ವೃತ್ರನನು ಶೃಂ
ಖಳಿತ ಮಾಯರ ಮಾಯೆಯಿಂದವೆ
ಬಲವಿರೋಧಿ ವಿಭಾಡಿಸಿದನವನೀಶ ಕೇಳ್ ಎಂದ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಹಿಂದೆ ಉತ್ತಮವಾದ ವೇದ ಧರ್ಮಮಾರ್ಗವನ್ನು ನಾಶಮಾಡಿ ಹೆಚ್ಚಿಕೊಂಡಿದ್ದ ಕಾಲನೇಮಿಯ ತಲೆಯನ್ನು ಶ್ರೀವಿಷ್ಣವು ಚಕ್ರದಲ್ಲಿ ತೆಗೆದನು. ಬಲ, ಜಂಭ, ವೃತ್ರ ಮುಂತಾದ ಮಾಯೆಯಿಂದ ಬಂಧಿತರಾದವರನ್ನು, ಮಾಯೆಯಿಂದಲೇ ಇಂದ್ರನು ಸಂಹರಿಸಿದ. ರಾಜನೇ ಕೇಳು ಎಂದು ಕೃಷ್ಣ ಹೇಳಿದ.
ಪದಾರ್ಥ (ಕ.ಗ.ಪ)
ಲಲಿತ-ಸುಂದರ, ಸರಳ, ಮನೋಹರ, (ಇಲ್ಲಿ ‘ಶ್ರೇಷ್ಠ’ ಎಂಬರ್ಥದಲ್ಲಿದೆ), ವೈದಿಕಧರ್ಮ-ವೇದಗಳಲ್ಲಿ ಹೇಳಿರುವ ಧರ್ಮ, ತಲೆಯಕೊಂಡನು-ಸಂಹರಿಸಿದ, ದೈತ್ಯಾರಿ-ರಾಕ್ಷಸರ ಶತ್ರು-ವಿಷ್ಣು, ಶೃಂಖಳಿತ-ಕಟ್ಟಿಹಾಕಲ್ಪಟ್ಟ, ಮಾಯರು-ಮಾಯೆಯ ಪ್ರಭಾವಕ್ಕೆ ಒಳಗಾದವರು, ಬಲವಿರೋಧಿ-ಬಲನೆಂಬ ರಾಕ್ಷಸನ ವಿರೋಧಿ ಇಂದ್ರ, (ಬಲನನ್ನು ಕೊಂದವ-ಇಂದ್ರ), ವಿಭಾಡಿಸು-ನಾಶಪಡಿಸು.
ಟಿಪ್ಪನೀ (ಕ.ಗ.ಪ)
1)ಕಾಲನೇಮಿ-ನೂರು ತಲೆಗಳನ್ನುಳ್ಳ ಒಬ್ಬ ರಾಕ್ಷಸ. ದೇವತೆಗಳ ವಿರುದ್ಧ ನಡೆದ ಯುದ್ಧದಲ್ಲಿ ದೀರ್ಘದೇಹವನ್ನು ಪಡೆದು ರಣರಂಗ ಪ್ರವೇಶಿಸಿದ. ವಿಷ್ಣುವಿನ ಎದೆಗೆ ಒದ್ದ, ಗರುಡನ ತಲೆಯ ಮೇಲೆ ಗದೆಯಿಂದ ಹೊಡೆದ. ಆಗ ವಿಷ್ಣು ಅವನ ನೂರುತಲೆಗಳನ್ನು ಚಕ್ರಾಯುಧದಿಂದ ಉರುಳಿಸಿದ. (ನೋಡಿ : ಪುರಾಣನಾಮ ಚೂಡಾಮಣಿ)
2) ಬಲ-ಒಬ್ಬ ರಾಕ್ಷಸ ತಾರಕಾಸುರನ ಹತ್ತುಮಂದಿ ಪ್ರಧಾನರಲ್ಲಿ ಒಬ್ಬ. ಇವನ ಮಗಳು ಹಿರಣ್ಯ ಕಶಿಪುವಿನ ಹೆಂಡತಿಯಾದ ಕಯಾದು.
3)ಜಂಭ ವಿಷ್ಣುವಿನಿಂದಲೇ ಸಂಹಾರವಾದ ಒಬ್ಬ ರಾಕ್ಷಸ.(ನೋಡಿರಿ ಪುರಾಣನಾಮ ಚೂಡಾಮಣಿ)
ಮೂಲ ...{Loading}...
ಲಲಿತ ವೈದಿಕ ಧರ್ಮಮಾರ್ಗವ
ನಳಿದು ಹೆಚ್ಚಿದ ಕಾಲನೇಮಿಯ
ತಲೆಯ ಕೊಂಡನು ಚಕ್ರದಲಿ ದೈತ್ಯಾರಿ ಪೂರ್ವದಲಿ
ಬಲನ ಜಂಭನ ವೃತ್ರನನು ಶೃಂ
ಖಳಿತ ಮಾಯರ ಮಾಯೆಯಿಂದವೆ
ಬಲವಿರೋಧಿ ವಿಭಾಡಿಸಿದನವನೀಶ ಕೇಳೆಂದ ॥8॥
೦೦೯ ಹರನ ವರದಲಿ ...{Loading}...
ಹರನ ವರದಲಿ ಹೆಚ್ಚಿ ಭಸ್ಮಾ
ಸುರನು ಶಿವನ ವಿರೋಧಿಸಿದನು
ಬ್ಬರದವನನುರುಹಿದನು ಹರಿ ಮಾಯಾಪ್ರಯೋಗದಲಿ
ಸುರರನರೆಯಾಳಿದನು ಭುವನವ
ನೊರಲಿಸಿದ ರಾವಣನ ರೂಢಿಯ
ಶಿರವ ನರರೂಪಿನಲಿ ಖತಿಯಲಿ ರಾಮ ಖಂಡಿಸಿದ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶಿವನ ವರದಿಂದಲೇ ಹೆಚ್ಚಿಕೊಂಡ ಭಸ್ಮಾಸುರನು ಶಿವನನ್ನೇ ವಿರೋಧಿಸಿದ. ಹರಿಯು ಮಾಯೆಯನ್ನು ಪ್ರಯೋಗಿಸಿ ಆ ಅಹಂಕಾರಿಯನ್ನು ಸುಟ್ಟು ಬೂದಿ ಮಾಡಿದ. ದೇವತೆಗಳನ್ನು ಬಗ್ಗುಬಡಿದು ಅವರನ್ನು ಆಳಿ, ಭೂಮಿಯನ್ನು ಒರಲುವಂತೆ ಮಾಡಿದ ರಾವಣನ ಪ್ರಖ್ಯಾತ ಶಿರಗಳನ್ನು, ಕೋಪಗೊಂಡ ರಾಮ ಮನುಷ್ಯನ ರೂಪಿನಿಂದ ಕತ್ತರಿಸಿದ.
ಪದಾರ್ಥ (ಕ.ಗ.ಪ)
ಹೆಚ್ಚಿ-ಗರ್ವಿಸಿ, ಅಳತೆಮೀರಿ, ಉಬ್ಬರದವ-ಅಹಂಕಾರಿ, ಉರುಹು-ಸುಟ್ಟುಬೂದಿಮಾಡು, ಅರೆಯಾಳ್-ಹಿಮ್ಮೆಟ್ಟಿಸಿ ಅವರನ್ನು ಆಳುವುದು, ಬಗ್ಗು ಬಡಿದು ಆಳುವುದು.
ಟಿಪ್ಪನೀ (ಕ.ಗ.ಪ)
1)ಭಸ್ಮಾಸುರ-ಒಬ್ಬರಾಕ್ಷಸ. ತಾನು ಯಾರ ತಲೆಯ ಮೇಲೆ ಕೈ ಇಡುತ್ತಾನೋ ಅವನು ಸುಟ್ಟು ಬೂದಿಯಾಗಬೇಕೆಂಬ ವರವನ್ನು ಶಿವನಿಂದ ಪಡೆದ. ಕಡೆಗೆ ಶಿವನ ತಲೆಯ ಮೇಲೆಯೇ ಕೈಯಿಡಲು ಹೋದ. ಆಗ ವಿಷ್ಣು ಮೋಹಿನಿಯ ರೂಪವನ್ನು ತಾಳಿ, ನೃತ್ಯವನ್ನು ಕಲಿಸುವ ಉಪಾಯದಿಂದ ಭಸ್ಮಾಸುರನು ತನ್ನ ತಲೆಯ ಮೇಲೆಯೇ ಕೈಯಿಟ್ಟುಕೊಳ್ಳುವಂತೆ ಮಾಡಿದ. ಹಾಗೆ ಮಾಡಿ ಭಸ್ಮಾಸುರ ಸುಟ್ಟುಬೂದಿಯಾದ.
2) ರಾವಣ-ಪ್ರಖ್ಯಾತ ರಾಮಾಯಣದ ಕಥೆಯಲ್ಲಿ ಬರುವ ರಾಕ್ಷಸ. ರಾಮನ ಪತ್ನಿ ಸೀತೆಯನ್ನು ಮಾಯೆಯಿಂದ ಕದ್ದೊಯ್ದ. ಕಡೆಗೆ ರಾಮನು ಅವನನ್ನು ಸಂಹರಿಸಿದ. (ರಾವಣ ಸಂಹಾರಕ್ಕಾಗಿ ವಿಷ್ಣು ಮನುಷ್ಯ ರೂಪವನ್ನು ತಾಳಿದ, ಇದು ಮಾಯೆ)
ಮೂಲ ...{Loading}...
ಹರನ ವರದಲಿ ಹೆಚ್ಚಿ ಭಸ್ಮಾ
ಸುರನು ಶಿವನ ವಿರೋಧಿಸಿದನು
ಬ್ಬರದವನನುರುಹಿದನು ಹರಿ ಮಾಯಾಪ್ರಯೋಗದಲಿ
ಸುರರನರೆಯಾಳಿದನು ಭುವನವ
ನೊರಲಿಸಿದ ರಾವಣನ ರೂಢಿಯ
ಶಿರವ ನರರೂಪಿನಲಿ ಖತಿಯಲಿ ರಾಮ ಖಂಡಿಸಿದ ॥9॥
೦೧೦ ಎಮಗೆ ತಾಯೊಡಹುಟ್ಟಿದನು ...{Loading}...
ಎಮಗೆ ತಾಯೊಡಹುಟ್ಟಿದನು ನಿ
ರ್ಮಮತೆಯಲಿ ನಿರ್ದಾಟಿಸಿದನಾ
ಕ್ರಮದಲೇ ಕಂಸಂಗೆ ಹಿಂಸಾಕೃತಿಯ ರಚಿಸಿದೆವು
ಸಮರದೊಳಗೆ ಸೃಗಾಲನೃಪನಾ
ಕ್ರಮಿಸಿದನು ಠಕ್ಕಿನಲಿ ಮಾಯಾ
ತಿಮಿರವನು ಮಾಯೆಯಲಿ ಗೆಲಿದೆವು ಭೂಪ ಕೇಳ್ ಎಂದ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಮ್ಮ ತಾಯಿಯ ಸಹೋದರನಾದ ಕಂಸ ನಮ್ಮಲ್ಲಿ ಮಮತೆದೋರದೆ ನಮ್ಮನ್ನು ಹೊರತಳ್ಳಿದ. ನಾವು ಸಹ ಅದೇ ರೀತಿಯಲ್ಲಿ ಕಂಸನಿಗೆ ಹಿಂಸೆ ನೀಡಿ ಸಂಹಾರ ಮಾಡಿದೆವು. ಮೋಸದಿಂದ ಸೃಗಾಲರಾಜ ನಮ್ಮ ಮೇಲೆ ಆಕ್ರಮಣ ಮಾಡಲು ನಾವೂ ಸಹ ಅದೇ ರೀತಿಯಲ್ಲಿ ಅವರ ಮಾಯೆಯ ಕತ್ತಲೆಯನ್ನು ಮಾಯೆಯಿಂದಲೇ ಗೆದ್ದೆವು, ರಾಜನೇ ಕೇಳು - ಎಂದು ಕೃಷ್ಣ ಧರ್ಮರಾಯನಿಗೆ ಹೇಳಿದ.
ಪದಾರ್ಥ (ಕ.ಗ.ಪ)
ನಿರ್ದಾಟಿಸು-ನಿರ್ಧಾಟಿಸು-ಹೊರತಳ್ಳು, ಠಕ್ಕು-ಮೋಸ, ಮಾಯಾತಿಮಿರ-ಮಾಯೆಯೆಂಬ ಕತ್ತಲೆ.
ಟಿಪ್ಪನೀ (ಕ.ಗ.ಪ)
ಜರಾಸಂಧನ ಕಾಟದಿಂದ ಮಧುರೆಯಿಂದ ಹೊರ ಹೊರಟ ಕೃಷ್ಣ ಬಲರಾಮರು ನಿಧಿಗಾಗಿ ಗೋಮಂತಕ ಪರ್ವತವನ್ನು ಕುರಿತು ಪ್ರಯಾಣ ಮಾಡುವಾಗ ಪರಶುರಾಮನ ಆಶ್ರಮ ಸಿಗುತ್ತದೆ. ಪರಶುರಾಮನ ಸೂಚನೆಯಂತೆ ಕೃಷ್ಣನು ಸೃಗಾಲವಾಸುದೇವ ಎಂಬ ರಾಜನನ್ನು ಕೊಂದು ಅಗಾಧ ಸಂಪತ್ತನ್ನು ಪಡೆದುಕೊಳ್ಳುತ್ತಾನೆ.
ಮೂಲ ...{Loading}...
ಎಮಗೆ ತಾಯೊಡಹುಟ್ಟಿದನು ನಿ
ರ್ಮಮತೆಯಲಿ ನಿರ್ದಾಟಿಸಿದನಾ
ಕ್ರಮದಲೇ ಕಂಸಂಗೆ ಹಿಂಸಾಕೃತಿಯ ರಚಿಸಿದೆವು
ಸಮರದೊಳಗೆ ಸೃಗಾಲನೃಪನಾ
ಕ್ರಮಿಸಿದನು ಠಕ್ಕಿನಲಿ ಮಾಯಾ
ತಿಮಿರವನು ಮಾಯೆಯಲಿ ಗೆಲಿದೆವು ಭೂಪ ಕೇಳೆಂದ ॥10॥
೦೧೧ ಕಾಲಯವನನ ದನ್ತವಕ್ರನ ...{Loading}...
ಕಾಲಯವನನ ದಂತವಕ್ರನ
ಸಾಲುವನ ಮಾಗಧನ ನರಕನ
ಸೀಳಿದೆವು ಕೃತಮಾಯರನು ಮಾಯಾಪ್ರಪಂಚದಲಿ
ಢಾಳರನು ಢವಳರನು ಠಕ್ಕಿನ
ಠೌಳಿಕಾರರನವರ ವಿದ್ಯೆಯ
ಲಾಳಿಗೊಂಡಡೆ ದೋಷವಿಲ್ಲವನೀಶ ಕೇಳ್ ಎಂದ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಾಲಯವನ, ದಂತವಕ್ರ, ಸಾಲುವ, ಮಾಗಧನಾದ ಜರಾಸಂಧ, ನರಕಾಸುರ, ಇಂತಹ ಮಾಯಾವಿಗಳನ್ನು ಮಾಯೆಯಿಂದಲೇ ಗೆದ್ದೆವು. ಚಮತ್ಕಾರಿಗಳನ್ನು, ತಳುಕುಸ್ವಭಾವದವರನ್ನು, ವಂಚಕರನ್ನು ಅವರವರ ವಿದ್ಯೆಗಳನ್ನೇ ಉಪಯೋಗಿಸಿ ಹೀನ ವೃತ್ತಿಯಲ್ಲಿ ನಡೆಸಿಕೊಂಡರೆ, ರಾಜನೇ ಕೇಳು ಯಾವುದೇ ದೋಷವಿಲ್ಲ.
ಪದಾರ್ಥ (ಕ.ಗ.ಪ)
ಕೃತಮಾಯರು-ಮಾಯೆಯನ್ನು ತೋರುವವರು, ಮಾಯಾವಿಗಳು, ಢಾಳರು-ತಳುಕಿನ ಬುದ್ದಿಯವರು, ಚಮತ್ಕಾರಿಗಳು, ಢವಳರು-ಮೋಸ ಮಾಡುವವರು, ಠಕ್ಕು-ವಂಚನೆ, ಮೋಸ, ಕಳ್ಳತನ, ಠೌಳಿಕಾರ-ವಂಚನೆ ಮಾಡುವವ. ಸುಳ್ಳುಹೇಳುವವನು, ಆಳಿಗೊಳ್-ಹೀನವೃತ್ತಿಯಲ್ಲಿ ನಡೆಸಿಕೋ, ವಿರೋಧಿಸು.
ಟಿಪ್ಪನೀ (ಕ.ಗ.ಪ)
1)ಕಾಲಯವನ 2)ದಂತವಕ್ರ 3)ಸಾಲುವ 4)ಮಾಗಧ-ಇವರೆಲ್ಲರೂ ಕೃಷ್ಣನ ಉಪಾಯದಿಂದ ಹತರಾದವರು, ವಿವರಗಳಿಗೆ: ಉದ್ಯೋಗ ಪರ್ವದ ಮೊದಲನೆಯ ಸಂಧಿಯ 38ನೆಯ ಪದ್ಯದ ಟಿಪ್ಪಣಿಯನ್ನು ನೋಡಿ.
ಮೂಲ ...{Loading}...
ಕಾಲಯವನನ ದಂತವಕ್ರನ
ಸಾಲುವನ ಮಾಗಧನ ನರಕನ
ಸೀಳಿದೆವು ಕೃತಮಾಯರನು ಮಾಯಾಪ್ರಪಂಚದಲಿ
ಢಾಳರನು ಢವಳರನು ಠಕ್ಕಿನ
ಠೌಳಿಕಾರರನವರ ವಿದ್ಯೆಯ
ಲಾಳಿಗೊಂಡಡೆ ದೋಷವಿಲ್ಲವನೀಶ ಕೇಳೆಂದ ॥11॥
೦೧೨ ದ್ಯೂತ ಮೃಗಯಾವ್ಯಸನವಿವು ...{Loading}...
ದ್ಯೂತ ಮೃಗಯಾವ್ಯಸನವಿವು ನೃಪ
ಜಾತಿಗಾದ ವಿನೋದ ಕಪಟ
ದ್ಯೂತವಿದು ನೃಪಧರ್ಮವೇ ಮಾಯಾಭಿಯೋಗದಲಿ
ಸೋತಿರಿಳೆಯನದಂತಿರಲಿ ನಿ
ರ್ಭೀತಿಯಲಿ ನಿಮ್ಮರಸಿಯುಟ್ಟುದ
ನೀತ ಸುಲಿಸಿದನಿವನು ಸುಜನನೆ ಭೂಪ ಹೇಳೆಂದ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜೂಜು, ಬೇಟೆಯ ವ್ಯಸನ, ಇವುಗಳು ರಾಜರಿಗಾಗಿ ಇರುವ ವಿನೋದಗಳು. ಆದರೆ ಕಪಟದ್ಯೂತವು ರಾಜಧರ್ಮವೇ. ಈ ಮಾಯೆಯ ವ್ಯಸನದಲ್ಲಿ ನೀವು ಭೂಮಿಯನ್ನು ಸೋತಿರಿ. ಅದು ಹಾಗಿರಲಿ, ನಿಮ್ಮ ರಾಣಿಯಾದ ದ್ರೌಪದಿಯು ಉಟ್ಟ ಸೀರೆಯನ್ನು ಇವನು (ದುರ್ಯೋಧನನು) ಸುಲಿಸಿದ, ಇವನು ಒಳ್ಳೆಯವನೇ, ರಾಜನೇ ಹೇಳು - ಎಂದ.
ಪದಾರ್ಥ (ಕ.ಗ.ಪ)
ದ್ಯೂತ-ಜೂಜು, ಮೃಗಯಾ-ಬೇಟೆ, ಅಭಿಯೋಗ-ಆಸಕ್ತಿ , ಸುಲಿಸು-ಬಿಡಿಸು, ಸೆಳೆಸು.
ಮೂಲ ...{Loading}...
ದ್ಯೂತ ಮೃಗಯಾವ್ಯಸನವಿವು ನೃಪ
ಜಾತಿಗಾದ ವಿನೋದ ಕಪಟ
ದ್ಯೂತವಿದು ನೃಪಧರ್ಮವೇ ಮಾಯಾಭಿಯೋಗದಲಿ
ಸೋತಿರಿಳೆಯನದಂತಿರಲಿ ನಿ
ರ್ಭೀತಿಯಲಿ ನಿಮ್ಮರಸಿಯುಟ್ಟುದ
ನೀತ ಸುಲಿಸಿದನಿವನು ಸುಜನನೆ ಭೂಪ ಹೇಳೆಂದ ॥12॥
೦೧೩ ಐಹಿಕದ ಸಮ್ಭಾವನೆಯ ...{Loading}...
ಐಹಿಕದ ಸಂಭಾವನೆಯ ಸ
ಮ್ಮೋಹನಕೆ ಮರುಳಾಗಿ ಸುಕೃತ
ದ್ರೋಹವಾಗದಲೇ ಸುಯೋಧನವಧೆಯ ದೆಸೆಯಿಂದ
ಈ ಹದನ ಬಿನ್ನೈಸಿದೆವು ನೀ
ವಾಹವಕೆ ಧರ್ಮಾರ್ಥಶಾಸ್ತ್ರವ
ನೂಹಿಸಿದಿರೆಂದರಸ ನುಡಿಸಿದನಿತ್ತ ಕುರುಪತಿಯ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಐಹಿಕಪ್ರಪಂಚದ ಗೌರವಗಳ ಆಶೆ ಮೋಹಕ್ಕೆ ಒಳಗಾಗಿ, ದುರ್ಯೋಧನನ ವಧೆ ಮಾಡಿದರೆ, ನಮಗೆ ಪುಣ್ಯ ಪ್ರಾಪ್ತಿಗೆ ತೊಡಕಾಗುವುದಿಲ್ಲವೇ, ಎಂದು ಈ ವಿಚಾರವನ್ನು ನಾನು ವಿನಂತಿಸಿಕೊಂಡರೆ, ನೀವು ಯುದ್ಧದಲ್ಲಿ ಧರ್ಮಶಾಸ್ತ್ರವನ್ನು ಊಹಿಸಿದಿರಿ ಎಂದು ಧರ್ಮಜನು ಕೃಷ್ಣನಿಗೆ ಹೇಳಿ, ಇತ್ತ ದುರ್ಯೋಧನನನ್ನು ಮಾತನಾಡಿಸಿದ.
ಪದಾರ್ಥ (ಕ.ಗ.ಪ)
ಐಹಿಕ-ಇಹಜೀವನದ, ಭೂಮಿಯ ಮೇಲಿನ ಬಾಳ್ವಿಕೆಯ, ಸಂಭಾವನೆ-ಗೌರವ, ಮರ್ಯಾದೆ, ಸಮ್ಮೋಹನ-ವಿಶೇಷ ಆಶೆ, ಮರುಳುಗೊಳಿಸುವ ಮೋಹ, ಮರುಳು-ಬುದ್ಧಿಭ್ರಮಣೆ, ಹದನ-ವಿಚಾರ, ಕಾರಣ ವಾರ್ತೆ, ಬಿನ್ನೈಸು-ಪ್ರಾರ್ಥಿಸು, ವಿನಂತಿಸು,
ಆಹವ-ಯುದ್ಧ
ಮೂಲ ...{Loading}...
ಐಹಿಕದ ಸಂಭಾವನೆಯ ಸ
ಮ್ಮೋಹನಕೆ ಮರುಳಾಗಿ ಸುಕೃತ
ದ್ರೋಹವಾಗದಲೇ ಸುಯೋಧನವಧೆಯ ದೆಸೆಯಿಂದ
ಈ ಹದನ ಬಿನ್ನೈಸಿದೆವು ನೀ
ವಾಹವಕೆ ಧರ್ಮಾರ್ಥಶಾಸ್ತ್ರವ
ನೂಹಿಸಿದಿರೆಂದರಸ ನುಡಿಸಿದನಿತ್ತ ಕುರುಪತಿಯ ॥13॥
೦೧೪ ಏಳು ಕೌರವರಾಯ ...{Loading}...
ಏಳು ಕೌರವರಾಯ ಸಲಿಲ
ವ್ಯಾಳನೇ ನೀನಕಟ ಜಲದೊಳ
ಗಾಳುವರೆ ಕಾಳಾಯ್ತು ನಿನ್ನಲಿ ಗರುವ ಶಶಿವಂಶ
ಕಾಳೆಗದೊಳದ್ದಿದೆ ಸಹೋದರ
ಜಾಲ ಪುತ್ರಜ್ಞಾತಿ ಬಂಧು ನೃ
ಪಾಲರನು ನೀ ನೀರೊಳಡಗಿದೆ ಕಷ್ಟವಾಯ್ತೆಂದ ॥14॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೌರವರಾಯನೇ, ನೀರಿನ ಹಾವಿನಂತಿರುವವನೇ, ಅಯ್ಯೋ ನೀನು ನೀರಿನೊಳಗೆ ವಾಸಿಸುವುದೇ! ಶ್ರೇಷ್ಠವಾದ ಚಂದ್ರವಂಶ ನಿನ್ನಲ್ಲಿ ಹಾಳಾಯಿತು. ನಿನ್ನ ಸಹೋದರ ಸಮೂಹವನ್ನು, ಪುತ್ರರನ್ನು ದಾಯಾದಿಗಳನ್ನು, ಬಂಧುಗಳನ್ನು, ರಾಜರನ್ನು ಯುದ್ಧದಲ್ಲಿ ಮುಳುಗಿಸಿದೆ. ನೀನು ನೀರಿನಲ್ಲಿ ಅವಿತುಕೊಂಡೆ. ಇದು ನಿನಗೆ ಕಷ್ಟವಲ್ಲವೇ.
ಪದಾರ್ಥ (ಕ.ಗ.ಪ)
ಸಲಿಲ-ನೀರು, ವ್ಯಾಳ-ಹಾವು, ಆಳುವರೆ-ಮುಳುಗಿರುತ್ತಾರೆಯೆ, ಇರುತ್ತಾರೆಯೆ, ಕಾಳಾಯ್ತು-ಕೆಟ್ಟುಹೋಯಿತು, ಗರುವ-ಶ್ರೇಷ್ಠ, ಶಶಿವಂಶ-ಚಂದ್ರವಂಶ, ಅದ್ದಿದೆ-ಮುಳುಗಿಸಿದೆ, ನಾಶಮಾಡಿದೆ, ಜ್ಞಾತಿ-ದಾಯಾದಿ, ಕಷ್ಟ-ತೊಂದರೆ, ಕಠಿಣ,
ಮೂಲ ...{Loading}...
ಏಳು ಕೌರವರಾಯ ಸಲಿಲ
ವ್ಯಾಳನೇ ನೀನಕಟ ಜಲದೊಳ
ಗಾಳುವರೆ ಕಾಳಾಯ್ತು ನಿನ್ನಲಿ ಗರುವ ಶಶಿವಂಶ
ಕಾಳೆಗದೊಳದ್ದಿದೆ ಸಹೋದರ
ಜಾಲ ಪುತ್ರಜ್ಞಾತಿ ಬಂಧು ನೃ
ಪಾಲರನು ನೀ ನೀರೊಳಡಗಿದೆ ಕಷ್ಟವಾಯ್ತೆಂದ ॥14॥
೦೧೫ ಜಾತಿಮಾತ್ರದಮೇಲೆ ಬನ್ದ ...{Loading}...
ಜಾತಿಮಾತ್ರದಮೇಲೆ ಬಂದ
ಖ್ಯಾತಿವಿಖ್ಯಾತಿಗಳು ನಮಗೆನೆ
ಜಾತರಾದೆವು ನಾವು ನಿರ್ಮಳಸೋಮವಂಶದಲಿ
ಭೀತಿಯಲಿ ನೀ ನೀರ ಹೊಕ್ಕಡೆ
ಮಾತು ತಾಗದೆ ತಮ್ಮನಕಟಾ
ಬೂತುಗಳ ಕೈಬಾಯ್ಗೆ ಬಂದೈ ತಂದೆ ಕುರುರಾಯ ॥15॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಮಗೆ ಹುಟ್ಟಿನಿಂದ ಮಾತ್ರ ಖ್ಯಾತಿ ವಿಖ್ಯಾತಿಗಳು ಬಂದಿರುವುದೆಂದರೆ ನಾವು (ನೀನೂ ಸೇರಿ) ಶುದ್ಧವಾದ ಚಂದ್ರವಂಶದಲ್ಲಿ ಹುಟ್ಟಿದ್ದೇವೆ. ನೀನು ಹೆದರಿಕೆಯಿಂದ ನೀರನ್ನು ಹೊಕ್ಕರೆ ನಿಂದನೆಯ ಮಾತುಗಳು ನಮ್ಮೆಲ್ಲರನ್ನು ತಾಗುವುದಿಲ್ಲವೇ. ಅಲ್ಪರಾದವರ ಕೈ ಬಾಯಿಗೆ ಸಿಕ್ಕಿದೆಯಲ್ಲ, ತಂದೆ ಕುರುರಾಯ.
ಪದಾರ್ಥ (ಕ.ಗ.ಪ)
ಜಾತಿ-ಹುಟ್ಟು, ಹುಟ್ಟಿನಿಂದ ಬಂದುದು, ಖ್ಯಾತಿ-ಕೀರ್ತಿ, ಒಳ್ಳೆಯ ಹೆಸರು, ಪ್ರಚಾರ, ಮಾತುತಾಗದೆ-ನಿಂದನೆಯ ಮಾತುಗಳು ತಟ್ಟುವುದಿಲ್ಲವೆ, ಬೂತು-ಅಲ್ಪರು, ನಾಚಿಕೆಗೇಡಿ,
ಮೂಲ ...{Loading}...
ಜಾತಿಮಾತ್ರದಮೇಲೆ ಬಂದ
ಖ್ಯಾತಿವಿಖ್ಯಾತಿಗಳು ನಮಗೆನೆ
ಜಾತರಾದೆವು ನಾವು ನಿರ್ಮಳಸೋಮವಂಶದಲಿ
ಭೀತಿಯಲಿ ನೀ ನೀರ ಹೊಕ್ಕಡೆ
ಮಾತು ತಾಗದೆ ತಮ್ಮನಕಟಾ
ಬೂತುಗಳ ಕೈಬಾಯ್ಗೆ ಬಂದೈ ತಂದೆ ಕುರುರಾಯ ॥15॥
೦೧೬ ನಾಡೊಳರ್ಧವ ಕೊಡದೆ ...{Loading}...
ನಾಡೊಳರ್ಧವ ಕೊಡದೆ ಹೋದಡೆ
ಬೇಡಿದೈದೂರುಗಳ ಕೊಡುಯೆನ
ಲೇಡಿಸಿದಲೈ ಸೂಚಿಯಗ್ರಪ್ರಮಿತಧಾರುಣಿಯ
ಕೂಡೆ ನೀ ಕೊಡೆನೆಂದು ದರ್ಪವ
ಮಾಡಿ ಸಕಲ ಮಹೀತಳವ ಹೋ
ಗಾಡಿ ಹೊಕ್ಕೈ ಜಲವನಾವೆಡೆ ನಿನ್ನ ಛಲವೆಂದ ॥16॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನೀನು ರಾಜ್ಯದಲ್ಲಿ ಅರ್ಧಭಾಗವನ್ನು ಕೊಡದಿದ್ದಾಗ, ನಾವು ಕೇಳಿದ ಐದು ಊರುಗಳನ್ನು ಕೊಡು ಎನ್ನಲು ನಮ್ಮನ್ನು ಅಪಹಾಸ್ಯ ಮಾಡಿದೆ. ಸೂಜಿಯ ಮೊನೆಯನ್ನು ಊರುವಷ್ಟು ಜಾಗವನ್ನು ಸಹ ಕೊಡುವುದಿಲ್ಲವೆಂದು ದರ್ಪವನ್ನು ಮಾಡಿ, ಈಗ ಸಕಲ ಭೂಮಿಯನ್ನು ಬಿಟ್ಟು, ನೀರನ್ನು ಹೊಕ್ಕಿದ್ದೀಯ. ನಿನ್ನ ಚಲ ಈಗೆಲ್ಲಿ ಹೋಯಿತು?
ಪದಾರ್ಥ (ಕ.ಗ.ಪ)
ಏಡಿಸು-ಅಪಹಾಸ್ಯಮಾಡು, ಹೀನಾಯಿಸು, ಸೂಚಿಯಗ್ರಪ್ರಮಿತ-ಸೂಜಿಯ ತುದಿಯನ್ನು ಊರುವಷ್ಟು ಅಳತೆಯ (ಪ್ರಮಿತ-ಅಳತೆ)
ಮೂಲ ...{Loading}...
ನಾಡೊಳರ್ಧವ ಕೊಡದೆ ಹೋದಡೆ
ಬೇಡಿದೈದೂರುಗಳ ಕೊಡುಯೆನ
ಲೇಡಿಸಿದಲೈ ಸೂಚಿಯಗ್ರಪ್ರಮಿತಧಾರುಣಿಯ
ಕೂಡೆ ನೀ ಕೊಡೆನೆಂದು ದರ್ಪವ
ಮಾಡಿ ಸಕಲ ಮಹೀತಳವ ಹೋ
ಗಾಡಿ ಹೊಕ್ಕೈ ಜಲವನಾವೆಡೆ ನಿನ್ನ ಛಲವೆಂದ ॥16॥
೦೧೭ ಹೇಳಿದರಲಾ ಭೀಷ್ಮವಿದುರರು ...{Loading}...
ಹೇಳಿದರಲಾ ಭೀಷ್ಮವಿದುರರು
ಮೇಲುದಾಯದ ತಾಗುಥಟ್ಟನು
ಕೇಳದಖಿಳಾಕ್ಷೋಹಿಣಿಯ ಕ್ಷತ್ರಿಯರ ತಡೆಗಡಿಸಿ
ಕಾಳೆಗದೊಳೊಟ್ಟೈಸಿ ನೀರೊಳು
ಬೀಳುವುದ ನಿನಗಾರು ಬುದ್ಧಿಯ
ಹೇಳಿದರು ನುಡಿ ನುಡಿ ಸುಯೋಧನ ಎಂದನಾ ಭೂಪ ॥17॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಷ್ಮ ವಿದುರರು ಮುಂದೆ ಒದಗಬಹುದಾದ ಆಗುಹೋಗುಗಳನ್ನು ಹೇಳಲಿಲ್ಲವೇ! ಅದನ್ನು ಕೇಳದೆ ಸಂಪೂರ್ಣ ಅಕ್ಷೋಹಿಣಿಯ ಕ್ಷತ್ರಿಯರನ್ನು ಯುದ್ಧದಲ್ಲಿ ನಾಶಮಾಡಿ, ಈಗ ನೀರಿನಲ್ಲಿ ಬೀಳುವುದನ್ನು ನಿನಗೆ ಯಾರು ಹೇಳಿಕೊಟ್ಟರು ಮಾತನಾಡು ದುರ್ಯೋಧನ - ಎಂದು ಧರ್ಮಜ ಹೇಳಿದ.
ಪದಾರ್ಥ (ಕ.ಗ.ಪ)
ಮೇಲುದಾಯ-ಮುಂದೊದಗುವ, ಮುಂದೆ ಬರುವ, ತಾಗುಥಟ್ಟು-ದೋಷ, ಅಪರಾಧ, ತೊಂದರೆ, ಮೇಲೆಬೀಳು, ತಡೆಗಡಿಸಿ-ಕಡಿಸಿಹಾಕಿ, ಕತ್ತರಿಸಿ, ಸಂಹಾರವಾಗುವಂತೆ ಮಾಡಿ, ಒಟ್ಟೈಸು- ಒಡ್ಡಯಿಸು, ಸೋಲಿಸು, ಅಡ್ಡಗಟ್ಟು, ತಡೆಮಾಡು.
ಮೂಲ ...{Loading}...
ಹೇಳಿದರಲಾ ಭೀಷ್ಮವಿದುರರು
ಮೇಲುದಾಯದ ತಾಗುಥಟ್ಟನು
ಕೇಳದಖಿಳಾಕ್ಷೋಹಿಣಿಯ ಕ್ಷತ್ರಿಯರ ತಡೆಗಡಿಸಿ
ಕಾಳೆಗದೊಳೊಟ್ಟೈಸಿ ನೀರೊಳು
ಬೀಳುವುದ ನಿನಗಾರು ಬುದ್ಧಿಯ
ಹೇಳಿದರು ನುಡಿ ನುಡಿ ಸುಯೋಧನ ಎಂದನಾ ಭೂಪ ॥17॥
೦೧೮ ಕಣ್ಡೆವನ್ದೊಬ್ಬನ ಪಲಾಯನ ...{Loading}...
ಕಂಡೆವಂದೊಬ್ಬನ ಪಲಾಯನ
ಪಂಡಿತನನುತ್ತರನನಾತನ
ಗಂಡ ನೀನಾದೈ ಪಲಾಯನಸಿರಿಯ ಸೂರೆಯಲಿ
ಭಂಡರಿಬ್ಬರು ಭೂಮಿಪರೊಳಾ
ಭಂಡನಿಗೆ ನೀ ಮಿಗಿಲು ಸಲಿಲದ
ಕೊಂಡದಲಿ ಹೊಕ್ಕನೆ ವಿರಾಟಜನೆಂದನಾ ಭೂಪ ॥18॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಂದು, ಪಲಾಯನಪಂಡಿತನಾದ ಒಬ್ಬ ಉತ್ತರನನ್ನು ಕಂಡೆವು. ಪಲಾಯನಲಕ್ಷ್ಮಿಯನ್ನು ಸೂರೆಗೊಳ್ಳುವಲ್ಲಿ ನೀನು ಅವನ ಒಡೆಯನಾದೆ. (ಅವನಿಗೂ ಮಿಗಿಲಾದೆ) ರಾಜರುಗಳಲ್ಲಿ ಇಬ್ಬರು ಭಂಡರು, ಅವನಿಗಿಂತ ನೀನೇ ಹೆಚ್ಚು ಭಂಡ. ಉತ್ತರನು ನೀರಿನ ಹೊಂಡವನ್ನು ಹೊಕ್ಕನೇ - ಎಂದು ಧರ್ಮಜ ಹೇಳಿದ.
ಪದಾರ್ಥ (ಕ.ಗ.ಪ)
ಪಲಾಯನಪಂಡಿತ-ಯುದ್ಧದಿಂದ ಓಡಿಹೋಗುವ ಶಾಸ್ತ್ರದಲ್ಲಿ ಪಂಡಿತ, ಗಂಡ-ಪತಿ, ಒಡೆಯ, ಯಜಮಾನ, ಹಿರಿಯ, ಸೂರೆ-ಸೂರೆ ಹೊಡೆಯುವುದು, ಕೊಂಡ-ಹೊಂಡ, ವಿರಾಟಜ-ವಿರಾಟನಮಗ, ಉತ್ತರ.
ಟಿಪ್ಪನೀ (ಕ.ಗ.ಪ)
ಈ ಪ್ರಸಂಗ ವಿರಾಟಪರ್ವದ ಉತ್ತರ ಗೋಗ್ರಹಣದಲ್ಲಿ ಪ್ರಸ್ತಾಪವಾಗಿದೆ.
ಮೂಲ ...{Loading}...
ಕಂಡೆವಂದೊಬ್ಬನ ಪಲಾಯನ
ಪಂಡಿತನನುತ್ತರನನಾತನ
ಗಂಡ ನೀನಾದೈ ಪಲಾಯನಸಿರಿಯ ಸೂರೆಯಲಿ
ಭಂಡರಿಬ್ಬರು ಭೂಮಿಪರೊಳಾ
ಭಂಡನಿಗೆ ನೀ ಮಿಗಿಲು ಸಲಿಲದ
ಕೊಂಡದಲಿ ಹೊಕ್ಕನೆ ವಿರಾಟಜನೆಂದನಾ ಭೂಪ ॥18॥
೦೧೯ ಅಡವಿಯೇ ನೆಲೆ ...{Loading}...
ಅಡವಿಯೇ ನೆಲೆ ಪಾಂಡುಸುತರಿಗೆ
ಕೊಡೆನು ಧರಣಿಯನೆಂದು ಖಡುಗವ
ಜಡಿದೆಲಾ ನಿನ್ನೋಲಗದ ನಾರಿಯರ ಸಮ್ಮುಖದಿ
ಖಡುಗವನು ಕಳನೊಳಗೆ ಹಾಯಿಕಿ
ನಡುಗೊಳನ ನೀನೋಡಿ ಹೊಕ್ಕಡೆ
ಮಡದಿಯರು ತಮತಮಗೆ ನಗರೇ ಹೊಯ್ದು ಕರತಳವ ॥19॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾಂಡವರಿಗೆ ಅರಣ್ಯವೇ ಮನೆ ಅವರಿಗೆ ಭೂಮಿಯನ್ನು ಕೊಡುವುದಿಲ್ಲವೆಂದು, ನಿನ್ನ ಓಲಗದ ಹೆಂಗಸರ ಮುಂದೆ ಹೇಳುತ್ತಾ, ಖಡ್ಗವನ್ನು ಬಡಿದೆಯಲ್ಲವೇ. ಈಗ ಖಡ್ಗವನ್ನು ಯುದ್ಧಭೂಮಿಯಲ್ಲಿ ಬಿಸಾಡಿ. ಓಡಿಹೋಗಿ ಕೊಳದ ಮಧ್ಯದಲ್ಲಿ ಹೊಕ್ಕೆಯಲ್ಲಾ, ಮಹಿಳೆಯರು ತಾವೇ ಕೈಗಳನ್ನು ಹೊಡೆದುಕೊಂಡು ನಗುವುದಿಲ್ಲವೆ?
ಪದಾರ್ಥ (ಕ.ಗ.ಪ)
ಜಡಿ-ಹೊಡೆ, ಬಡಿ, ಓಲಗ-ದರ್ಬಾರ್, ರಾಜಸಭೆ, ಕಳ-ಯುದ್ಧ ಭೂಮಿ.
ಮೂಲ ...{Loading}...
ಅಡವಿಯೇ ನೆಲೆ ಪಾಂಡುಸುತರಿಗೆ
ಕೊಡೆನು ಧರಣಿಯನೆಂದು ಖಡುಗವ
ಜಡಿದೆಲಾ ನಿನ್ನೋಲಗದ ನಾರಿಯರ ಸಮ್ಮುಖದಿ
ಖಡುಗವನು ಕಳನೊಳಗೆ ಹಾಯಿಕಿ
ನಡುಗೊಳನ ನೀನೋಡಿ ಹೊಕ್ಕಡೆ
ಮಡದಿಯರು ತಮತಮಗೆ ನಗರೇ ಹೊಯ್ದು ಕರತಳವ ॥19॥
೦೨೦ ಜೀವಸಖ ರಾಧೇಯನಾತನ ...{Loading}...
ಜೀವಸಖ ರಾಧೇಯನಾತನ
ಸಾವಿನಲಿ ನೀನುಳಿದೆ ಸೋದರ
ಮಾವ ಶಕುನಿಯ ಸೈಂಧವನ ದುಶ್ಯಾಸನಾದಿಗಳ
ಸಾವಿನಲಿ ಹಿಂದುಳಿದ ಜೀವನ
ಜೀವನವೆ ಜೀವನನಿವಾಸವಿ
ದಾವ ಗರುವಿಕೆ ಕೊಳನ ಹೊರವಡು ಕೈದುಗೊಳ್ಳೆಂದ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಿನ್ನ ಜೀವದ ಗೆಳೆಯನಾದ ಕರ್ಣ ಸತ್ತರೂ ನೀನು ಬದುಕಿದ್ದೀ, ಸೋದರ ಮಾವನಾದ ಶಕುನಿಯ, ಸೈಂಧವನ, ದುಶ್ಯಾಸನಾದಿಗಳ ಮರಣದ ನಂತರವೂ ಬದುಕಿರುವ ನಿನ್ನ ಜೀವನ ಒಂದು ಜೀವನವೇ. ಜೀವನವು ಯಾವಾಗಲೂ ಒಂದೆಡೆ ಇರುವುದಲ್ಲ. ನೀರೊಳಗೆ ಮುಳುಗಿರುವುದು ಯಾವ ಹೆಗ್ಗಳಿಕೆ? ಕೊಳವನ್ನು ಬಿಟ್ಟು ಹೊರಡು ಆಯುಧವನ್ನು ಹಿಡಿ - ಎಂದ.
ಪದಾರ್ಥ (ಕ.ಗ.ಪ)
ಕೈದು-ಆಯುಧ.
ಮೂಲ ...{Loading}...
ಜೀವಸಖ ರಾಧೇಯನಾತನ
ಸಾವಿನಲಿ ನೀನುಳಿದೆ ಸೋದರ
ಮಾವ ಶಕುನಿಯ ಸೈಂಧವನ ದುಶ್ಯಾಸನಾದಿಗಳ
ಸಾವಿನಲಿ ಹಿಂದುಳಿದ ಜೀವನ
ಜೀವನವೆ ಜೀವನನಿವಾಸವಿ
ದಾವ ಗರುವಿಕೆ ಕೊಳನ ಹೊರವಡು ಕೈದುಗೊಳ್ಳೆಂದ ॥20॥
೦೨೧ ಓಡಿ ಕೈದುವ ...{Loading}...
ಓಡಿ ಕೈದುವ ಹಾಯ್ಕಿ ಕಳನೊಳು
ಹೇಡಿಗರ ಹಿಡಿದಳುಕಿ ಬದುಕಿದ
ಗೂಡಿಹುದೆ ಗರುವಾಯಿಯಲಿ ಕಲ್ಪಾಂತಪರಿಯಂತ
ಓಡಿ ಪಾತಾಳವನು ಹೊಕ್ಕಡೆ
ಕೂಡೆ ಸಂಧಿಸಿ ನಿನ್ನ ಬೇಂಟೆಯ
ನಾಡದಿಹ ಠಾವುಂಟೆ ಕುರುಪತಿ ಕೈದುಗೊಳ್ಳೆಂದ ॥21॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯುದ್ಧಭೂಮಿಯಿಂದ ಓಡಿ, ಆಯುಧವನ್ನು ಕೆಳಕ್ಕೆ ಎಸೆದು, ಹೇಡಿಗಳನ್ನು ಕೂಡಿಕೊಂಡು ಬದುಕಿದ ಶರೀರವು ಸುಖದಿಂದ ಕಲ್ಪಾಂತರಗಳ ಕಡೆಯವರೆಗೆ ಉಳಿಯುತ್ತದೆಯೆ? ನೀನು ಓಡಿ ಪಾತಾಳವನ್ನು ಹೊಕ್ಕರೂ, ಅಲ್ಲಿಯೂ ನಿನ್ನನ್ನು ಸಂಧಿಸಿ, ನಿನ್ನ ಬೇಟೆಯನ್ನು ಆಡದಿರುವ ಜಾಗವುಂಟೆ ದುರ್ಯೋಧನಾ, ಆಯುಧವನ್ನು ಹಿಡಿ ಎಂದ.
ಪದಾರ್ಥ (ಕ.ಗ.ಪ)
ಕೈದು-ಆಯುಧ (ಕೈಯ+ಅದು) ಗೂಡು-ದೇಹ, ಗರುವಾಯಿ-ಗರ್ವ, ಠಾವು-ತಾವು, ಜಾಗ.
ಮೂಲ ...{Loading}...
ಓಡಿ ಕೈದುವ ಹಾಯ್ಕಿ ಕಳನೊಳು
ಹೇಡಿಗರ ಹಿಡಿದಳುಕಿ ಬದುಕಿದ
ಗೂಡಿಹುದೆ ಗರುವಾಯಿಯಲಿ ಕಲ್ಪಾಂತಪರಿಯಂತ
ಓಡಿ ಪಾತಾಳವನು ಹೊಕ್ಕಡೆ
ಕೂಡೆ ಸಂಧಿಸಿ ನಿನ್ನ ಬೇಂಟೆಯ
ನಾಡದಿಹ ಠಾವುಂಟೆ ಕುರುಪತಿ ಕೈದುಗೊಳ್ಳೆಂದ ॥21॥
೦೨೨ ಭರತ ನಹುಷ ...{Loading}...
ಭರತ ನಹುಷ ಯಯಾತಿ ನಳ ಸಂ
ವರಣ ಸಗರ ದಿಳೀಪ ನೃಗ ರಘು
ವರ ಪುರೂರವ ದುಂದುಮಾರ ಭಗೀರಥಾದಿಗಳು
ಧರಣಿಪಾಲರನಂತಸಮರದೊ
ಳರಿಬಲವ ಸವರಿದರು ನಿನ್ನವೊ
ಲುರುಳಿದವರಾರುದಕದಲಿ ನೃಪ ಕೈದುಗೊಳ್ಳೆಂದ ॥22॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭರತ, ನಹುಷ, ಯಯಾತಿ, ನಳ, ಸಂವರಣ, ಸಗರ, ದಿಲೀಪ, ನೃಗ, ರಘುವರ, (ರಾಮ), ಪುರೂರವ, ದುಂದುಮಾರ, ಭಗೀರಥನೇ ಮುಂತಾದ ರಾಜರುಗಳು, ಸುದೀರ್ಘವಾದ ಯುದ್ಧಗಳಲ್ಲಿ ಶತ್ರುಸೈನ್ಯವನ್ನು ಸವರಿ ಹಾಕಿದರು. ನಿನ್ನಂತೆ ನೀರೊಳಗೆ ಬಿದ್ದವರಾರು? ಆಯುಧವನ್ನು ಹಿಡಿಯೆಂದ.
ಟಿಪ್ಪನೀ (ಕ.ಗ.ಪ)
ನೃಗ - ನೃಗ ಇಕ್ಷ್ವಾಕು ವಂಶದ ಒಬ್ಬ ದೊರೆ. ವೈವಸ್ವತಮನುವಿನ ಪೀಳಿಗೆಯವನು. ಇವನು ಇಕ್ಷ್ವಾಕು ದೊರೆಯ ತಮ್ಮ.
ನೃಗ ತುಂಬ ಧರ್ಮಪರನಾಗಿದ್ದ. ನ್ಯಾಯ ವಿಚಕ್ಷಣನಾಗಿದ್ದ ದೊರೆ. ಒಂದು ಸಮಾರಂಭದ ದಿನ ‘ಪುಷ್ಕರ’ದಲ್ಲಿ ಸಾವಿರಾರು ಹಸುಗಳನ್ನು ಬ್ರಾಹ್ಮಣರಿಗೆ ದಾನ ಮಾಡಿದ. ಪುಷ್ಕರದ ಬಳಿ ಪರ್ವತ ಎಂಬ ಬ್ರಾಹ್ಮಣನಿದ್ದ ಆತನಿಗೂ ನೃಗ ಹಸುವನ್ನು ದಾನವಾಗಿ ಕೊಟ್ಟ. ಅನಂತರ ಅನಾರತ ಎಂಬ ಬ್ರಾಹ್ಮಣ ಅಲ್ಲಿಗೆ ಬಂದ. ಅಷ್ಟು ಹೊತ್ತಿಗೆ ನೃಗನು ತನ್ನ ಬಳಿ ಇದ್ದ ಹಸುಗಳನ್ನೆಲ್ಲ ದಾನ ಮಾಡಿ ಆಗಿತ್ತು.
ಆದರೆ ಪರ್ವತನು ತಾನು ದಾನವಾಗಿ ತೆಗೆದುಕೊಂಡಿದ್ದ ಹಸವನ್ನು ಅಲ್ಲಿಯೇ ಕಟ್ಟಿ ಹಾಕಿ ಕಾಡಿಗೆ ಹೋಗಿದ್ದ. ನೃಗನಿಗೆ ಇದಾವುದೂ ತಿಳಿಯದು. ಮಾಲಿಕರಿಲ್ಲದೆ ಒಂಟಿಯಾಗಿದ್ದ ಹಸು ತನ್ನದೆಂದೇ ತಿಳಿದು ಅನಾರತನಿಗೆ ದಾನ ಮಾಡಿಬಿಟ್ಟ.
ಅನಾರತ ದಾನ ಸವೀಕಾರ ಮಾಡಿ ಸಂತೋಷದಿಂದ ರಾಜನನ್ನು ಹರಸಿ ಹೋದ. ರಾಜ ಅವನ ಪರಿವಾರ ಮತ್ತು ಮಂತ್ರಿವರ್ಗ ದಾನಕ್ರಿಯೆಯ ನಂತರ ಅರಮನೆಗೆ ಹಿಂದಿರುಗಿಯಾಗಿತ್ತು.
ಕಾಡಿನ ಕೆಲಸ ಮುಗಿಸಿಕೊಂಡು ಪರ್ವತ ಪುಷ್ಕರಕ್ಕೆ ಬಂದ. ಅಲ್ಲಿ ತಾನುಕಟ್ಟಿ ಹಾಕಿದ ಹಸು ಕಾಣಲಿಲ್ಲ. ದಾನದ ಹಸುವನ್ನು ಹಾಗೆಲ್ಲ ಯಾರೂ ಕದಿಯುವುದಿಲ್ಲ ಎಂಬ ನಂಬಿಕೆ ಅವನಿಗಿತ್ತು. ಅದನ್ನು ಹುಡುಕುತ್ತ ಹೋದ. ಕೊನೆಗೆ ಅನಾರತನ ಮನೆಯಲ್ಲಿ ದನ ಇರುವುದು ತಿಳಿಯಿತು.
ಅಲ್ಲಿಗೆ ಹೋದ. ಅನಾರತ ತನ್ನ ಹಸುವನ್ನು ಕದ್ದಿದ್ದಾನೆ ಎಂದು ಹುಯಿಲೆಬ್ಬಿಸಿದ. ಆದರೆ ಅನಾರತ ತಾನು ಅದನ್ನು ಕದಿಯಲಿಲ್ಲವೆಂದೂ ಮಹಾರಾಜನೇ ದಾನವಾಗಿ ಕೊಟ್ಟಿದ್ದಾನೆಂದೂ ವಾದಿಸಿದ. ಕೊನೆಗೆ ವಿವಾದ ಪರಿಹಾರಕ್ಕಾಗಿ ಇಬ್ಬರೂ ನೃಗ ಮಹಾರಾಜನ ಬಳಿಗೆ ಬಂದರು. ಕಾವಲುಗಾರನ ಮೂಲಕ ತಾವು ಅಹವಾಲು ತಂದಿರುವುದಾಗಿ ಹೇಳಿ ಕಳಿಸಿದರು. ಆದರೆ ಆ ಕಾವಲುಗಾರರು ಮಹಾರಾಜನಿಗೆ ಈ ವಿಷಯವನ್ನು ಹೇಳುವ ಗೋಜಿಗೆ ಹೋಗಲಿಲ್ಲ. ಇಬ್ಬರು ಬ್ರಾಹ್ಮಣರಿಗೆ ಕೋಪಬಂತು.
ಒಮ್ಮೆ ದಾನ ಕೊಟ್ಟು ಮನಸ್ಸು ಬದಲಾಯಿಸುವ ಈ ದೊರೆ ಗೋಸುಂಬೆಯ ಸ್ವಭಾವದವನೆಂದು ನಿಶ್ಚಯಿಸಿ ಅವನು ಓತಿಯಾಗಲಿ ಎಂದು ಶಾಪವಿತ್ತರು. ಆಗ ದೊರೆಗೆ ಸಂಗತಿ ತಿಳಿಯಿತು. ಅವನು ಇಬ್ಬರ ಬಳಿಗೆ ಓಡಿಬಂದು ಕ್ಷಮೆಯಾಚಿಸಿದ. ಮುಂದೆ ಸಾವಿರ ವರ್ಷಗಳಲ್ಲಿ ಶ್ರೀಕೃಷ್ಣನು ಬಂದು ಈ ಓತಿಯನ್ನು ಸ್ಪರ್ಶಿಸಿದರೆ ಶಾಪವಿಮುಕ್ತ ಎಂದು ಬ್ರಾಹ್ಮಣರು ಹೇಳಿದರು.
ನೃಗನು ದ್ವಾರಕೆಯ ಒಂದು ಬಾವಿಯಲ್ಲಿ ಓತಿಯಾಗಿದ್ದ. ಸಾಂಬ ಮೊದಲಾದ ಗೆಳೆಯರು ಅದನ್ನು ನೀರಿನಿಂದ ಎತ್ತಲು ಯತ್ನಿಸಿ ಸೋತರು. ಕೊನೆಗೆ ಶ್ರೀಕೃಷ್ಣನೇ ಬಂದು ಓತಿಯನ್ನು ತೆಗೆಸಿ ಮುಟ್ಟಿದಾಗ ಆ ಓತಿ ನೃಗಮಹಾರಾಜನಾಯಿತು. ಅಲ್ಲಿದ್ದವರೆಲ್ಲ ಬೆರಗಾದರು.
ದೂರನ್ನು ಸ್ವೀಕರಿಸಬೇಕಾದ ರಾಜ ಸರಿಯದ ಭದ್ರತಾ ಪಡೆಯನ್ನಿಡದೆ ಕಾವಲುಗಾರರು ಬೇಜವಾಬ್ದಾರಿಯಿಂದ ವರ್ತಿಸಲು ಅವಕಾಶ ಕೊಟ್ಟಿದ್ದರಿಂದ ನೃಗರಾಜನಿಗೆ ಶಾಪ ಬಂದಿತು. ಅಲ್ಲದೆ ಒಮ್ಮೆ ಕೊಟ್ಟ ಹಸುವನ್ನು ಮತ್ತೆ ದಾನ ಮಾಡುವ ಲಘು ವರ್ತನೆಯನ್ನು ನೃಗನು ತೋರಿದ್ದು ಅವನ ಅಧಃಪತನಕ್ಕೆ ಕಾರಣವಾಯಿತು.ನೃಗ ಇಕ್ಷ್ವಾಕು ವಂಶದ ಒಬ್ಬ ದೊರೆ. ವೈವಸ್ವತಮನುವಿನ ಪೀಳಿಗೆಯವನು. ಇವನು ಇಕ್ಷ್ವಾಕು ದೊರೆಯ ತಮ್ಮ.
ನೃಗ ತುಂಬ ಧರ್ಮಪರನಾಗಿದ್ದ. ನ್ಯಾಯ ವಿಚಕ್ಷಣನಾಗಿದ್ದ ದೊರೆ. ಒಂದು ಸಮಾರಂಭದ ದಿನ ‘ಪುಷ್ಕರ’ದಲ್ಲಿ ಸಾವಿರಾರು ಹಸುಗಳನ್ನು ಬ್ರಾಹ್ಮಣರಿಗೆ ದಾನ ಮಾಡಿದ. ಪುಷ್ಕರದ ಬಳಿ ಪರ್ವತ ಎಂಬ ಬ್ರಾಹ್ಮಣನಿದ್ದ ಆತನಿಗೂ ನೃಗ ಹಸುವನ್ನು ದಾನವಾಗಿ ಕೊಟ್ಟ. ಅನಂತರ ಅನಾರತ ಎಂಬ ಬ್ರಾಹ್ಮಣ ಅಲ್ಲಿಗೆ ಬಂದ. ಅಷ್ಟು ಹೊತ್ತಿಗೆ ನೃಗನು ತನ್ನ ಬಳಿ ಇದ್ದ ಹಸುಗಳನ್ನೆಲ್ಲ ದಾನ ಮಾಡಿ ಆಗಿತ್ತು.
ಆದರೆ ಪರ್ವತನು ತಾನು ದಾನವಾಗಿ ತೆಗೆದುಕೊಂಡಿದ್ದ ಹಸವನ್ನು ಅಲ್ಲಿಯೇ ಕಟ್ಟಿ ಹಾಕಿ ಕಾಡಿಗೆ ಹೋಗಿದ್ದ. ನೃಗನಿಗೆ ಇದಾವುದೂ ತಿಳಿಯದು. ಮಾಲಿಕರಿಲ್ಲದೆ ಒಂಟಿಯಾಗಿದ್ದ ಹಸು ತನ್ನದೆಂದೇ ತಿಳಿದು ಅನಾರತನಿಗೆ ದಾನ ಮಾಡಿಬಿಟ್ಟ.
ಅನಾರತ ದಾನ ಸವೀಕಾರ ಮಾಡಿ ಸಂತೋಷದಿಂದ ರಾಜನನ್ನು ಹರಸಿ ಹೋದ. ರಾಜ ಅವನ ಪರಿವಾರ ಮತ್ತು ಮಂತ್ರಿವರ್ಗ ದಾನಕ್ರಿಯೆಯ ನಂತರ ಅರಮನೆಗೆ ಹಿಂದಿರುಗಿಯಾಗಿತ್ತು.
ಕಾಡಿನ ಕೆಲಸ ಮುಗಿಸಿಕೊಂಡು ಪರ್ವತ ಪುಷ್ಕರಕ್ಕೆ ಬಂದ. ಅಲ್ಲಿ ತಾನುಕಟ್ಟಿ ಹಾಕಿದ ಹಸು ಕಾಣಲಿಲ್ಲ. ದಾನದ ಹಸುವನ್ನು ಹಾಗೆಲ್ಲ ಯಾರೂ ಕದಿಯುವುದಿಲ್ಲ ಎಂಬ ನಂಬಿಕೆ ಅವನಿಗಿತ್ತು. ಅದನ್ನು ಹುಡುಕುತ್ತ ಹೋದ. ಕೊನೆಗೆ ಅನಾರತನ ಮನೆಯಲ್ಲಿ ದನ ಇರುವುದು ತಿಳಿಯಿತು.
ಅಲ್ಲಿಗೆ ಹೋದ. ಅನಾರತ ತನ್ನ ಹಸುವನ್ನು ಕದ್ದಿದ್ದಾನೆ ಎಂದು ಹುಯಿಲೆಬ್ಬಿಸಿದ. ಆದರೆ ಅನಾರತ ತಾನು ಅದನ್ನು ಕದಿಯಲಿಲ್ಲವೆಂದೂ ಮಹಾರಾಜನೇ ದಾನವಾಗಿ ಕೊಟ್ಟಿದ್ದಾನೆಂದೂ ವಾದಿಸಿದ. ಕೊನೆಗೆ ವಿವಾದ ಪರಿಹಾರಕ್ಕಾಗಿ ಇಬ್ಬರೂ ನೃಗ ಮಹಾರಾಜನ ಬಳಿಗೆ ಬಂದರು. ಕಾವಲುಗಾರನ ಮೂಲಕ ತಾವು ಅಹವಾಲು ತಂದಿರುವುದಾಗಿ ಹೇಳಿ ಕಳಿಸಿದರು. ಆದರೆ ಆ ಕಾವಲುಗಾರರು ಮಹಾರಾಜನಿಗೆ ಈ ವಿಷಯವನ್ನು ಹೇಳುವ ಗೋಜಿಗೆ ಹೋಗಲಿಲ್ಲ. ಇಬ್ಬರು ಬ್ರಾಹ್ಮಣರಿಗೆ ಕೋಪಬಂತು.
ಒಮ್ಮೆ ದಾನ ಕೊಟ್ಟು ಮನಸ್ಸು ಬದಲಾಯಿಸುವ ಈ ದೊರೆ ಗೋಸುಂಬೆಯ ಸ್ವಭಾವದವನೆಂದು ನಿಶ್ಚಯಿಸಿ ಅವನು ಓತಿಯಾಗಲಿ ಎಂದು ಶಾಪವಿತ್ತರು. ಆಗ ದೊರೆಗೆ ಸಂಗತಿ ತಿಳಿಯಿತು. ಅವನು ಇಬ್ಬರ ಬಳಿಗೆ ಓಡಿಬಂದು ಕ್ಷಮೆಯಾಚಿಸಿದ. ಮುಂದೆ ಸಾವಿರ ವರ್ಷಗಳಲ್ಲಿ ಶ್ರೀಕೃಷ್ಣನು ಬಂದು ಈ ಓತಿಯನ್ನು ಸ್ಪರ್ಶಿಸಿದರೆ ಶಾಪವಿಮುಕ್ತ ಎಂದು ಬ್ರಾಹ್ಮಣರು ಹೇಳಿದರು.
ನೃಗನು ದ್ವಾರಕೆಯ ಒಂದು ಬಾವಿಯಲ್ಲಿ ಓತಿಯಾಗಿದ್ದ. ಸಾಂಬ ಮೊದಲಾದ ಗೆಳೆಯರು ಅದನ್ನು ನೀರಿನಿಂದ ಎತ್ತಲು ಯತ್ನಿಸಿ ಸೋತರು. ಕೊನೆಗೆ ಶ್ರೀಕೃಷ್ಣನೇ ಬಂದು ಓತಿಯನ್ನು ತೆಗೆಸಿ ಮುಟ್ಟಿದಾಗ ಆ ಓತಿ ನೃಗಮಹಾರಾಜನಾಯಿತು. ಅಲ್ಲಿದ್ದವರೆಲ್ಲ ಬೆರಗಾದರು.
ದೂರನ್ನು ಸ್ವೀಕರಿಸಬೇಕಾದ ರಾಜ ಸರಿಯದ ಭದ್ರತಾ ಪಡೆಯನ್ನಿಡದೆ ಕಾವಲುಗಾರರು ಬೇಜವಾಬ್ದಾರಿಯಿಂದ ವರ್ತಿಸಲು ಅವಕಾಶ ಕೊಟ್ಟಿದ್ದರಿಂದ ನೃಗರಾಜನಿಗೆ ಶಾಪ ಬಂದಿತು. ಅಲ್ಲದೆ ಒಮ್ಮೆ ಕೊಟ್ಟ ಹಸುವನ್ನು ಮತ್ತೆ ದಾನ ಮಾಡುವ ಲಘು ವರ್ತನೆಯನ್ನು ನೃಗನು ತೋರಿದ್ದು ಅವನ ಅಧಃಪತನಕ್ಕೆ ಕಾರಣವಾಯಿತು.
ಮೂಲ ...{Loading}...
ಭರತ ನಹುಷ ಯಯಾತಿ ನಳ ಸಂ
ವರಣ ಸಗರ ದಿಳೀಪ ನೃಗ ರಘು
ವರ ಪುರೂರವ ದುಂದುಮಾರ ಭಗೀರಥಾದಿಗಳು
ಧರಣಿಪಾಲರನಂತಸಮರದೊ
ಳರಿಬಲವ ಸವರಿದರು ನಿನ್ನವೊ
ಲುರುಳಿದವರಾರುದಕದಲಿ ನೃಪ ಕೈದುಗೊಳ್ಳೆಂದ ॥22॥
೦೨೩ ಕೊಳನ ಬಿಡು ...{Loading}...
ಕೊಳನ ಬಿಡು ಕಾದೇಳು ಹಿಂದಣ
ಹಳಿವ ತೊಳೆ ಹೇರಾಳ ಬಾಂಧವ
ಬಳಗ ಭೂಮೀಶ್ವರರ ಬಹಳಾಕ್ಷೋಹಿಣೀದಳವ
ಅಳಿದಕೀರ್ತಿಯ ಕೆಸರ ತೊಳೆ ಭೂ
ವಳಯಮಾನ್ಯನು ದೈನ್ಯವೃತ್ತಿಯ
ಬಳಸುವರೆ ಸುಡು ಮರುಳೆ ಕುರುಪತಿ ಕೈದುಗೊಳ್ಳೆಂದ ॥23॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೊಳವನ್ನು ಬಿಟ್ಟು ಹೊರಗೆ ಬಂದು ಯುದ್ಧ ಮಾಡಲು ಏಳು. ಹಿಂದಿನ ಅಪಮಾನಗಳನ್ನು ತೊಳೆ. ಬಹುದೊಡ್ಡ ಬಾಂಧವರ ಬಳಗವನ್ನು ನಾಶಪಡಿಸಿದ ಅಪಕೀರ್ತಿಯ ಕೆಸರನ್ನು ತೊಳೆ. ಭೂವಲಯದಲ್ಲಿ ಗೌರವಾನ್ವಿತನಾದವನು ದೈನ್ಯದ ಸ್ಥಿತಿಯನ್ನು ಅವಲಂಬಿಸುವುದೆ, ಆಯ್ಯೋ ಮರುಳೇ ಸುಡು (ಇಂತಹ ಲಜ್ಜಾಭರಿತ ಬಾಳ್ವಿಕೆಯನ್ನು) ಕುರುಪತಿಯೇ ಕೈಯಲ್ಲಿ ಆಯುಧವನ್ನು ಹಿಡಿದುಕೋ.
ಪದಾರ್ಥ (ಕ.ಗ.ಪ)
ಹಳಿವು-ಅಪಮಾನ, ಅಪಕೀರ್ತಿ, ಕೆಟ್ಟಹೆಸರು, ವಿನಾಶ, ಹೇರಾಳ-ಹೇರಳ, ದೊಡ್ಡದಾದ.
ಮೂಲ ...{Loading}...
ಕೊಳನ ಬಿಡು ಕಾದೇಳು ಹಿಂದಣ
ಹಳಿವ ತೊಳೆ ಹೇರಾಳ ಬಾಂಧವ
ಬಳಗ ಭೂಮೀಶ್ವರರ ಬಹಳಾಕ್ಷೋಹಿಣೀದಳವ
ಅಳಿದಕೀರ್ತಿಯ ಕೆಸರ ತೊಳೆ ಭೂ
ವಳಯಮಾನ್ಯನು ದೈನ್ಯವೃತ್ತಿಯ
ಬಳಸುವರೆ ಸುಡು ಮರುಳೆ ಕುರುಪತಿ ಕೈದುಗೊಳ್ಳೆಂದ ॥23॥
೦೨೪ ವಿಷವನಿಕ್ಕಿದೆ ಹಾವಿನಲಿ ...{Loading}...
ವಿಷವನಿಕ್ಕಿದೆ ಹಾವಿನಲಿ ಬಂ
ಧಿಸಿದೆ ಮಡುವಿನೊಳಿಕ್ಕಿ ಬಳಿಕು
ಬ್ಬಸವ ಮಾಡಿದೆ ಹಿಂದೆ ಮನಮುನಿಸಾಗಿ ಬಾಲ್ಯದಲಿ
ವಸತಿಯಲಿ ಬಳಿಕಗ್ನಿದೇವರ
ಪಸರಿಸಿದೆ ಪುಣ್ಯದಲಿ ನಾವ್ ಜೀ
ವಿಸಿದೆವಡಗಿದಡಿನ್ನು ಬಿಡುವೆನೆಯೆಂದನಾ ಭೀಮ ॥24॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಿಂದೆ ಬಾಲ್ಯದಲ್ಲಿ ಮನಸ್ಸಿನಲ್ಲುಂಟಾದ ದ್ವೇಷದಿಂದ ವಿಷವನ್ನು ಇಟ್ಟೆ. ಹಾವಿನಿಂದ ಕಟ್ಟಿಹಾಕಿದೆ. ನದಿಯ ಮಡುವಿನಲ್ಲಿ ಮುಳುಗಿಸಿ ಸಂಕಟಪಡಿಸಿದೆ, ನಂತರ ಮನೆಗೆ ಬೆಂಕಿಹಾಕಿದೆ. ನಮ್ಮ ಪುಣ್ಯದಿಂದ ನಾವು ಬದುಕಿ ಉಳಿದೆವು. ಇಷ್ಟೆಲ್ಲಾ ಮಾಡಿ ಈಗ ನೀನು ಅವಿತು ನೀರಿನಲ್ಲಿದ್ದರೆ ನಾನು ಬಿಡುತ್ತೇನೆಯೆ ಎಂದು ಭೀಮ ಹೇಳಿದ.
ಪದಾರ್ಥ (ಕ.ಗ.ಪ)
ಮಡುವು-ಆಳವಾದ ನೀರು, ಉಬ್ಬಸ-ಸಂಕಟ, ತೊಂದರೆ, ವಸತಿ-ವಾಸಿಸುವಸ್ಥಳ, ಮನೆ, ಪಸರಿಸು-ಹೆಚ್ಚುವಂತೆ ಮಾಡು, ಎಲ್ಲೆಡೆಗೂ ವಿಸ್ತರಿಸು.
ಟಿಪ್ಪನೀ (ಕ.ಗ.ಪ)
‘ವಸತಿಯಲಿ ಬಳಿಕಗ್ನಿದೇವರ ಪಸರಿಸಿದೆ’ - ಇದರ ವಿವರಕ್ಕೆ ಆದಿಪರ್ವದ ಎಂಟನೆಯ ಸಂಧಿಯನ್ನು ನೋಡುವುದು. ‘ಅರಗಿನ ಮನೆ’ಯ ಪ್ರಸಂಗ.
ಮೂಲ ...{Loading}...
ವಿಷವನಿಕ್ಕಿದೆ ಹಾವಿನಲಿ ಬಂ
ಧಿಸಿದೆ ಮಡುವಿನೊಳಿಕ್ಕಿ ಬಳಿಕು
ಬ್ಬಸವ ಮಾಡಿದೆ ಹಿಂದೆ ಮನಮುನಿಸಾಗಿ ಬಾಲ್ಯದಲಿ
ವಸತಿಯಲಿ ಬಳಿಕಗ್ನಿದೇವರ
ಪಸರಿಸಿದೆ ಪುಣ್ಯದಲಿ ನಾವ್ ಜೀ
ವಿಸಿದೆವಡಗಿದಡಿನ್ನು ಬಿಡುವೆನೆಯೆಂದನಾ ಭೀಮ ॥24॥
೦೨೫ ಎಲವೊ ರಾಯನ ...{Loading}...
ಎಲವೊ ರಾಯನ ಪಟ್ಟದರಸಿಯ
ಸುಲಿಸಿದಾ ಛಲವೆಲ್ಲಿ ಹಗೆಗಳ
ಹಳುವದಲಿ ಹೊಗಿಸಿದೆನೆನಿಪ ಸುಮ್ಮಾನ ತಾನೆಲ್ಲಿ
ಖಳ ಶಿರೋಮಣಿ ನಿನ್ನ ತಲೆಗೂ
ದಲಲಿ ಕೈಗಳ ಕಟ್ಟಿ ಖೇಚರ
ನೆಳೆಯೆ ಬಿಡಿಸಿದರಾರು ಕೌರವ ಎಂದನಾ ಭೀಮ ॥25॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಲವೋ ದುರ್ಯೋಧನಾ ಧರ್ಮರಾಜನ ಪಟ್ಟದರಸಿಯಾದ ದ್ರೌಪದಿಯ ಸೀರೆಯನ್ನು ಸುಲಿಸಿದ ನಿನ್ನ ಅಂದಿನ ಛಲವೆಲ್ಲಿ. ನಿನ್ನ ಶತ್ರುಗಳನ್ನು ಅರಣ್ಯದಲ್ಲಿ ತಿರುಗಿಸಿದೆನೆಂಬ ಸುಮ್ಮಾನ ಈಗೆಲ್ಲಿ. ಖಳಶ್ರೇಷ್ಠನೇ, ನಿನ್ನ ತಲೆಯ ಕೂದಲಿನಿಂದ ಕೈಗಳನ್ನು ಕಟ್ಟಿ ಗಂಧರ್ವನು ಎಳೆದುಕೊಂಡು ಹೋಗುತ್ತಿರುವಾಗ ನಿನ್ನನ್ನು ಬಿಡಿಸಿದವರು ಯಾರು - ಎಂದು ಭೀಮ ಕೇಳಿದ.
ಪದಾರ್ಥ (ಕ.ಗ.ಪ)
ಛಲ-ಹಠ, ಅಹಂಕಾರ, ಹಳುವ-ಕಾಡು, ಹೊಗಿಸು-ಹೋಗುವಂತೆ ಮಾಡು, ತಿರುಗಿಸು, ಅಲೆಸು, ಖಳಶಿರೋಮಣಿ-ದುಷ್ಟರಲ್ಲಿ ಶ್ರೇಷ್ಠನಾದವನು. ಅತಿದುಷ್ಟ (ಶಿರೋಮಣಿ-ತಲೆಯಲ್ಲಿ ಧರಿಸುವ ರತ್ನ, ಶ್ರೇಷ್ಠವಾದುದು) ಖೇಚರ-ಆಕಾಶಸಂಚಾರಿ, ಗಂಧರ್ವ.
ಮೂಲ ...{Loading}...
ಎಲವೊ ರಾಯನ ಪಟ್ಟದರಸಿಯ
ಸುಲಿಸಿದಾ ಛಲವೆಲ್ಲಿ ಹಗೆಗಳ
ಹಳುವದಲಿ ಹೊಗಿಸಿದೆನೆನಿಪ ಸುಮ್ಮಾನ ತಾನೆಲ್ಲಿ
ಖಳ ಶಿರೋಮಣಿ ನಿನ್ನ ತಲೆಗೂ
ದಲಲಿ ಕೈಗಳ ಕಟ್ಟಿ ಖೇಚರ
ನೆಳೆಯೆ ಬಿಡಿಸಿದರಾರು ಕೌರವ ಎಂದನಾ ಭೀಮ ॥25॥
೦೨೬ ಭೀಮನೆನೆ ಭುಗಿಲೆಮ್ಬ ...{Loading}...
ಭೀಮನೆನೆ ಭುಗಿಲೆಂಬ ರೋಷದ
ತಾಮಸವ ಬೀಳ್ಕೊಟ್ಟೆಲಾ ನಿ
ರ್ನಾಮವಾದುದೆ ಬಿರುದು ಪಾಂಡವತಿಮಿರರವಿಯೆಂಬ
ಭೀಮವನದಾವಾಗ್ನಿ ಹೊರವಡು
ಭೀಮಭಾಸ್ಕರರಾಹು ಹೊರವಡು
ಭೀಮಗರ್ಜನೆ ಮಧುರಗೀತವೆ ನೃಪತಿಯೇಳೆಂದ ॥26॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಭೀಮ’ ನೆಂಬ ಹೆಸರು ಹೇಳಿದರೆ ಭುಗಿಲೇಳುವ ರೋಷದ ತಾಮಸಸ್ವಭಾವವನ್ನು ಬೀಳುಕೊಟ್ಟಟೆಯಾ ‘ಪಾಂಡವರೆಂಬ ಕತ್ತಲಿಗೆ ಸೂರ್ಯನಂತಿರುವವನು’ ಎಂಬ ಬಿರುದು ನಾಶವಾಯಿತೆ? ಭೀಮನೆಂಬ ಕಾಡಿಗೆ ದಾವಾಗ್ನಿಯಂತಿರುವವನೇ ಹೊರಕ್ಕೆ ಬಾ. ಭೀಮನೆಂಬ ಸೂರ್ಯನಿಗೆ ರಾಹುವಂತಿರುವವನೇ ಹೊರಕ್ಕೆ ಬಾ. ಭೀಮಗರ್ಜನೆ ನಿನಗೆ ಮಧುರವಾದ ಸಂಗೀತವನ್ನು ಕೇಳಿದಂತೆ ಆಗುತ್ತಿದೆಯೇ, ರಾಜನೇ ಏಳು - ಎಂದ.
ಪದಾರ್ಥ (ಕ.ಗ.ಪ)
ತಾಮಸ-ತಾಮಸ ಬುದ್ಧಿ, ಅಂಧಕಾರ ತುಂಬಿದ ಬುದ್ಧಿ.
ಟಿಪ್ಪನೀ (ಕ.ಗ.ಪ)
1)ಭೀಮವನದಾವಾಗ್ನಿ 2)ಭೀಮಭಾಸ್ಕಾರರಾಹು ಇವು ದುರ್ಯೋಧನನ ಬಿರುದುಗಳು. ಅವುಗಳನ್ನು ಭೀಮನೇ ಅವನಿಗೆ ನೆನಪಿಸುತ್ತಿರುವುದು ಸ್ವಾರಸ್ಯಕರವಾದ ವ್ಯಂಗ್ಯವಾಗಿದೆ.
ಮೂಲ ...{Loading}...
ಭೀಮನೆನೆ ಭುಗಿಲೆಂಬ ರೋಷದ
ತಾಮಸವ ಬೀಳ್ಕೊಟ್ಟೆಲಾ ನಿ
ರ್ನಾಮವಾದುದೆ ಬಿರುದು ಪಾಂಡವತಿಮಿರರವಿಯೆಂಬ
ಭೀಮವನದಾವಾಗ್ನಿ ಹೊರವಡು
ಭೀಮಭಾಸ್ಕರರಾಹು ಹೊರವಡು
ಭೀಮಗರ್ಜನೆ ಮಧುರಗೀತವೆ ನೃಪತಿಯೇಳೆಂದ ॥26॥
೦೨೭ ಕೆಡಹಿ ದುಶ್ಯಾಸನನ ...{Loading}...
ಕೆಡಹಿ ದುಶ್ಯಾಸನನ ರಕುತವ
ಕುಡಿದವನು ತಾನಲ್ಲಲೇ ನಿ
ನ್ನೊಡನೆ ಹುಟ್ಟಿದ ನೂರ ನುಂಗಿದ ಕಾಲಯಮನಲ್ಲಾ
ಅಡಗಿದಡೆ ಬಿಡುವೆನೆ ಭಯಜ್ವರ
ಹಿಡಿದ ನಿನ್ನನು ಸೆಳೆದು ರಣದಲಿ
ತೊಡೆಯ ಕಳುಚವ ಮೃತ್ಯು ಭೀಮನ ಕಯ್ಯ ನೋಡೆಂದ ॥27॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುಶ್ಶಾಸನನನ್ನು ನೆಲಕ್ಕೆ ಕೆಡವಿ ಅವನ ರಕ್ತವನ್ನು ಕುಡಿದವನು ನಾನಲ್ಲವೇ. ನಿನ್ನೊಡನೆ ಹುಟ್ಟಿದ ನೂರುಜನ ಸಹೋದರರನ್ನು ನುಂಗಿದ ಕಾಲಯಮನಲ್ಲವೇ ನಾನು. ಅಡಗಿ ಕುಳಿತರೆ ಬಿಡುತ್ತೇನೆಯೇ. ಯುದ್ಧದ ಜ್ವರ ಹಿಡಿದಿರುವ ನಿನ್ನನ್ನು ಎಳೆದು, ಯುದ್ಧದಲ್ಲಿ ತೊಡೆಯನ್ನು ಮುರಿದುಹಾಕುವ ಮೃತ್ಯುವಾದ ಈ ಭೀಮನ ಕಯ್ಯನ್ನು ನೋಡು - ಎಂದ.
ಪದಾರ್ಥ (ಕ.ಗ.ಪ)
ಕಳಚು-ಬೇರ್ಪಡಿಸು, ಪ್ರತ್ಯೇಕಿಸು, ತುಂಡುಮಾಡು, ಮುರಿದುಹಾಕು.
ಟಿಪ್ಪನೀ (ಕ.ಗ.ಪ)
1)“ನಿನ್ನೊಡನೆ ಹುಟ್ಟಿದ ನೂರ ನುಂಗಿದ ……..” ದುರ್ಯೋಧನನ ಜೊತೆ ಹುಟ್ಟಿದ ಅವನ ತಮ್ಮಂದಿರು ತೊಂಬತ್ತೊಂಬತ್ತು ಜನ. ಅವನ ಮತ್ತೊಬ್ಬ ತಮ್ಮ, ಧೃತರಾಷ್ಟ್ರನಿಗೆ ವೇಶ್ಯಾಂಗನೆಗೆ ಹುಟ್ಟಿದ ಯುಯುತ್ಸು. ಹೀಗಾಗಿ ಕೌರವರು ಒಟ್ಟು ನೂರು ಒಂದು ಜನ. ಆದರೆ ಯುಯುತ್ಸು ಯುದ್ಧದ ಪ್ರಾರಂಭದ ದಿನ ಧರ್ಮರಾಯನ ಪಕ್ಷಕ್ಕೆ ಪಕ್ಷಾಂತರ ಮಾಡಿದ. ಆದ್ದರಿಂದ ತೊಂಬತ್ತೊಂಬತ್ತು ಜನ ಮಾತ್ರ ದುರ್ಯೋಧನನ ತಮ್ಮಂದಿರು ಅವನ ಪರವಾಗಿ ಯುದ್ಧ ಭೂಮಿಯಲ್ಲಿ ಭೀಮನಿಂದ ಹತರಾದರು. ಆದರೆ ಇಲ್ಲಿ ‘ನೂರ ನುಂಗಿದವನಲ್ಲವೇ’ ಎಂದು ಭೀಮ ಹೇಳುತ್ತಾನೆ. ಇಲ್ಲಿನ ಲೆಕ್ಕಾಚಾರ ಸರಿಯಿಲ್ಲ.
ಮೂಲ ...{Loading}...
ಕೆಡಹಿ ದುಶ್ಯಾಸನನ ರಕುತವ
ಕುಡಿದವನು ತಾನಲ್ಲಲೇ ನಿ
ನ್ನೊಡನೆ ಹುಟ್ಟಿದ ನೂರ ನುಂಗಿದ ಕಾಲಯಮನಲ್ಲಾ
ಅಡಗಿದಡೆ ಬಿಡುವೆನೆ ಭಯಜ್ವರ
ಹಿಡಿದ ನಿನ್ನನು ಸೆಳೆದು ರಣದಲಿ
ತೊಡೆಯ ಕಳುಚವ ಮೃತ್ಯು ಭೀಮನ ಕಯ್ಯ ನೋಡೆಂದ ॥27॥
೦೨೮ ಜಲವಹೊಕ್ಕನ ಹುಲ್ಲ ...{Loading}...
ಜಲವಹೊಕ್ಕನ ಹುಲ್ಲ ಕಚ್ಚಿದ
ಖಳನ ತರುಗಿರಿಶಿಖರದಲಿ ಕಾ
ಲ್ದೊಳಸಿದನ ವಲ್ಮೀಕಸಂಗತನನು ನಿರಾಯುಧನ
ಕೊಲುವುದನುಚಿತವೆಂಬ ಶಾಸ್ತ್ರವ
ತಿಳಿದು ನಂಬಿದೆ ನಿನ್ನನೊಬ್ಬನ
ಕೊಲುವುದಕೆ ಶ್ರುತಶಾಸ್ತ್ರರಾವಲ್ಲೆಂದನಾ ಭೀಮ ॥28॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನೀರಿನಲ್ಲಿ ಹೊಕ್ಕವನನ್ನು, ಹುಲ್ಲನ್ನು ಕಚ್ಚಿಕೊಂಡಿರುವ ದುಷ್ಟನನ್ನು (ಹುಲ್ಲು ಕಚ್ಚಿಕೊಂಡಿರುವವನನ್ನು) ಮರ, ಬೆಟ್ಟಗಳ ತುದಿಯಲ್ಲಿರುವವನನ್ನು, ಹುತ್ತದೊಳಗಿರುವವನನ್ನು, ಕೈಯಲ್ಲಿ ಆಯುಧವಿಲ್ಲದವನನ್ನು ಕೊಲ್ಲುವುದು ಅನುಚಿತವೆಂಬ ಶಾಸ್ತ್ರವನ್ನು ತಿಳಿದು, ನಂಬಿದ್ದೇನೆ. ಆದರೆ ನಿನ್ನೊಬ್ಬನನ್ನು ಕೊಲ್ಲುವುದಕ್ಕೆ ನಾವು ಶಾಸ್ತ್ರವನ್ನು ತಿಳಿದವರಲ್ಲ - ಎಂದು ಭೀಮ ಹೇಳಿದ.
ಪದಾರ್ಥ (ಕ.ಗ.ಪ)
ಕಾಲ್ದೊಳಸು-ತಿರುಗಾಡು, ಓಡಾಡು, ವಲ್ಮೀಕ-ಹಾವಿನ ಹುತ್ತ, ಸಂಗತ- ಜೊತೆಯಲ್ಲಿದ್ದವನು, ಶ್ರುತಶಾಸ್ತ್ರರು-ಶಾಸ್ತ್ರವನ್ನು ತಿಳಿದವರು.
ಟಿಪ್ಪನೀ (ಕ.ಗ.ಪ)
- ಈ ಪದ್ಯವನ್ನು ಕರ್ಣ ಪರ್ವದ 26ನೆಯ ಸಂಧಿಯ 32ನೆಯ ಪದ್ಯದೊಂದಿಗೆ ಹೋಲಿಸಬಹುದು.
ಮೂಲ ...{Loading}...
ಜಲವಹೊಕ್ಕನ ಹುಲ್ಲ ಕಚ್ಚಿದ
ಖಳನ ತರುಗಿರಿಶಿಖರದಲಿ ಕಾ
ಲ್ದೊಳಸಿದನ ವಲ್ಮೀಕಸಂಗತನನು ನಿರಾಯುಧನ
ಕೊಲುವುದನುಚಿತವೆಂಬ ಶಾಸ್ತ್ರವ
ತಿಳಿದು ನಂಬಿದೆ ನಿನ್ನನೊಬ್ಬನ
ಕೊಲುವುದಕೆ ಶ್ರುತಶಾಸ್ತ್ರರಾವಲ್ಲೆಂದನಾ ಭೀಮ ॥28॥
೦೨೯ ಅರಸನಲಿ ಹಗೆಯಿಲ್ಲ ...{Loading}...
ಅರಸನಲಿ ಹಗೆಯಿಲ್ಲ ಯಮಳರು
ತರಳರಲಿ ಮುನಿಸಿಲ್ಲ ಫಲುಗುಣ
ನರೆವಿರೋಧಿ ಸಗರ್ವಿ ಭೀಮನ ಬಾಡ ಕೊಯ್ಕೊಯ್ದು
ಮರುಳ ಬಳಗವ ತಣಿಸಿದಡೆ
ಹಿರಿಯರಸರಲಿ ಸಂಧಾನವೆಂಬೈ
ಕುರುಪತಿಯೆ ನೆರೆ ವೈರಿ ಭೀಮನ ಸೀಳಲೇಳೆಂದ ॥29॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮರಾಜನಲ್ಲಿ ಶತ್ರುತ್ವವಿಲ್ಲ, ಅವಳಿಜವಳಿಗಳೂ ಚಿಕ್ಕವರೂ ಆದ ನಕುಲ ಸಹದೇವರಲ್ಲಿ ಕೋಪವಿಲ್ಲ, ಅರ್ಜುನನು ಅರ್ಧಶತ್ರು, ಗರ್ವಿತನಾದ ಭೀಮನ ಮಾಂಸವನ್ನು ಕೊಯ್ದು ತುಂಡು ಮಾಡಿ ಭೂತಸಮೂಹವನ್ನು ತೃಪ್ತಿಪಡಿಸಿದ ಮೇಲೆ ಹಿರಿಯ ರಾಜನಾದ ಧರ್ಮಜನಲ್ಲಿ ಸಂಧಾನವೆಂದು ಹೇಳಿದೆ. ಆದ್ದರಿಂದ ಕುರುಪತಿಯೇ ಈಗ ಪರಮ ವ್ಶೆರಿಯಾದ ಭೀಮನನ್ನು ಸೀಳಿಹಾಕಲು ಏಳು - ಎಂದು ಭೀಮ ಮೂದಲಿಸಿದ.
ಪದಾರ್ಥ (ಕ.ಗ.ಪ)
ಹಗೆ-ಶತ್ರುತ್ವ, ದ್ವೇಷ, ಯಮಳರು-ಅವಳಿಜವಳಿಗಳು, ನಕುಲ ಸಹದೇವರು, ಬಾಡು-ಮಾಂಸ, ಮರುಳು-ಭೂತಬೇತಾಳಗಳು
ಮೂಲ ...{Loading}...
ಅರಸನಲಿ ಹಗೆಯಿಲ್ಲ ಯಮಳರು
ತರಳರಲಿ ಮುನಿಸಿಲ್ಲ ಫಲುಗುಣ
ನರೆವಿರೋಧಿ ಸಗರ್ವಿ ಭೀಮನ ಬಾಡ ಕೊಯ್ಕೊಯ್ದು
ಮರುಳ ಬಳಗವ ತಣಿಸಿದಡೆ
ಹಿರಿಯರಸರಲಿ ಸಂಧಾನವೆಂಬೈ
ಕುರುಪತಿಯೆ ನೆರೆ ವೈರಿ ಭೀಮನ ಸೀಳಲೇಳೆಂದ ॥29॥
೦೩೦ ತನತನಗೆ ಸಾತ್ಯಕಿ ...{Loading}...
ತನತನಗೆ ಸಾತ್ಯಕಿ ಯಮಳ ಫಲು
ಗುಣರು ಪಂಚದ್ರೌಪದೀನಂ
ದನರು ಧೃಷ್ಟದ್ಯುಮ್ನ ಸೃಂಜಯ ಸೋಮಕಾದಿಗಳು
ಅನುಚಿತವು ಸಲಿಲಪ್ರವೇಶವು
ಜನಪತಿಗೆ ಕರ್ತವ್ಯವೆಂಬುದು
ಜನಜನಿತವೆಂದುಲಿದುದೈದೆ ಸಮುದ್ರಘೋಷದಲಿ ॥30॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಾತ್ಯಕಿ, ನಕುಲ ಸಹದೇವರು, ಅರ್ಜುನ, ದ್ರೌಪದಿಯ ಐದು ಜನ ಮಕ್ಕಳು, ಧೃಷ್ಟದ್ಯುಮ್ನ, ಸೃಂಜಯ, ಸೋಮಕ ಮುಂತಾದವರು, ರಾಜನಾದನವನಿಗೆ ನೀರಿನೊಳಗೆ ಮುಳುಗಿರುವುದು ಅನುಚಿತವಾದುದು. ರಾಜನಿಗೆ ಇದು ಕರ್ತವ್ಯವೇ (ಮಾಡಬಹುದಾದ ಕೆಲಸವೇ) ಎಂಬುದು ಜನಜನಿತ ವಿಚಾರವೆಂದು ತಾವು ತಾವೇ ಸಮುದ್ರದ ಘೋಷದಂತೆ ಮಾತನಾಡಿಕೊಂಡರು.
ಪದಾರ್ಥ (ಕ.ಗ.ಪ)
ಜನಜನಿತ-ಎಲ್ಲ ಜನಕ್ಕೂ ತಿಳಿದ, ಜನಗಳಲ್ಲಿ ಪ್ರಚಲಿತವಿರುವ, ಸಮುದ್ರಘೋಷ-ಸಮುದ್ರದ ಅಲೆಗಳ ಮೊರೆತ.
ಪಾಠಾನ್ತರ (ಕ.ಗ.ಪ)
ಅನುಚಿತವು ಸಲಿಲ ಪ್ರವೇಶವು ಜನಪತಿಗೆ ಕರ್ತವ್ಯವೆಂಬುದು ಜನಜನಿತವೆಂದುಲಿದುದೈ. ಎಂಬಲ್ಲಿನ ‘ಜನಪತಿಗೆ ಕರ್ತವ್ಯವೆಂಬುದು’ ಎಂಬುದಕ್ಕೆ ಅರ್ಥಸ್ಪಷ್ಟವಾಗುವುದಿಲ್ಲ. ಇದಕ್ಕೆ ‘ಕರ್ತವ್ಯವೇಯಿದು’ ಎಂಬ ಒಂದು ಪಾಠಾಂತರವಿದೆ. ಇದು ರಾಜನಾದವನ ಕರ್ತವ್ಯವಲ್ಲ, ಅವನು ಮಾಡುವ ಕೆಲಸವಲ್ಲ - ಎಂಬ ಅರ್ಥವನ್ನು ಕೊಡುತ್ತದೆ. ಈ ಪಾಠಾಂತರವು ‘ಕರ್ತವ್ಯವೆಂಬುದು’ ಎಂಬ ಪಾಠಕ್ಕಿಂತ ಅರ್ಥಕ್ಕೆ ಹೆಚ್ಚು ಸಮಂಜಸವಾಗಿದೆ. ಈ ಪಾಠಾಂತರವನ್ನು ಮೈಸೂರು ವಿಶ್ವವಿದ್ಯಾಲಯದ ಓರಿಯಂಟಲ್ ಲೈಬ್ರರಿ ಪಬ್ಲಿಕೇಷನ್ ಅವರು ಪ್ರಕಟಿಸಿರುವ ‘ಶಲ್ಯಗದಾಪರ್ವಗಳು’ ಗ್ರಂಥದಿಂದ ಸ್ವೀಕರಿಸಿದೆ. ಇದಕ್ಕೆ ಮತ್ತೂ ಸಮಂಜಸವೆನ್ನಿಸುವ ಮತ್ತೊಂದು ಪಾಠವನ್ನು ಸೂಚಿಸಬಹುದು. ‘ಜನಪತಿಗಕರ್ತವ್ಯವೆಂಬುದು’ (ಜನಪತಿಗೆ+ಅಕರ್ತವ್ಯ) ರಾಜನಾದವನು ಮಾಡಬಾರದ ಕೆಲಸ. ಆದರೆ ಇದು ಊಹಾತ್ಮಕಪಾಠ.
ಮೂಲ ...{Loading}...
ತನತನಗೆ ಸಾತ್ಯಕಿ ಯಮಳ ಫಲು
ಗುಣರು ಪಂಚದ್ರೌಪದೀನಂ
ದನರು ಧೃಷ್ಟದ್ಯುಮ್ನ ಸೃಂಜಯ ಸೋಮಕಾದಿಗಳು
ಅನುಚಿತವು ಸಲಿಲಪ್ರವೇಶವು
ಜನಪತಿಗೆ ಕರ್ತವ್ಯವೆಂಬುದು
ಜನಜನಿತವೆಂದುಲಿದುದೈದೆ ಸಮುದ್ರಘೋಷದಲಿ ॥30॥
೦೩೧ ಅರಸ ಕೇಳೈ ...{Loading}...
ಅರಸ ಕೇಳೈ ನಿನ್ನ ಮಗನು
ಬ್ಬರಿಸಿದನು ರೋಮಾಂಚದಲಿ ಗ
ಬ್ಬರಿಸುತಧಿಕಕ್ರೋಧಶಿಖಿ ಕರಣೇಂದ್ರಿಯಾದಿಗಳ
ತುರುಗಿದಂತಃಖೇದ ಮಂತ್ರಾ
ಕ್ಷರಕೆ ಜವನಿಕೆಯಾದುದೈ ನಿ
ರ್ಭರದ ವೀರಾವೇಶದಲಿ ಪಲ್ಲಟಿಸಿದನು ಭೂಪ ॥31॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧೃತರಾಷ್ಟ್ರನೇ ಕೇಳು, ನಿನ್ನ ಮಗ ದುರ್ಯೋಧನನು ಆತುರಗೊಂಡ. ರೋಮಾಂಚನದಿಂದ, ಗರ್ವಿಸಿದ. ಅದರ ಪರಿಣಾಮವಾಗಿ ಹೆಚ್ಚಿದ ಕ್ರೋಧಾಗ್ನಿಯಿಂದ ಕರಣೇಂದ್ರಿಯಗಳಲ್ಲಿ ತುಂಬಿದ ಮನಸ್ಸಿನ ದುಃಖವು ಜಲಮಂತ್ರಕ್ಕೆ ತೆರೆಯಾಯಿತು (ಜಲಮಂತ್ರವನ್ನು ಮುಚ್ಚಿ, ಮರೆಸಿತು) ಅತಿಶಯವಾದ ವೀರಾವೇಶದಿಂದ ದುರ್ಯೋಧನ ತನ್ನ ತೀರ್ಮಾನವನ್ನು ಬದಲಾಯಿಸಿದ.
ಪದಾರ್ಥ (ಕ.ಗ.ಪ)
ಉಬ್ಬರಿಸು-ಆತುರಗೊಳ್ಳು, ಹೊರಬೀಳು, ಗರ್ವಿಸು, ರೋಮಾಂಚ-ಪುಳಕದಿಂದ ಮೈ ಕೂದಲುಗಳು ನಿಮಿರುವುದು, ಗಬ್ಬರಿಸು-ಆವರಿಸು,ವ್ಯಾಪಿಸು, ಕ್ರೋಧಶಿಖಿ-ಕ್ರೋಧಾಗ್ನಿ, (ಕ್ರೋಧ-ಕೋಪ, ಸಿಟ್ಟು, ರೇಗುವುದು), ಕರಣೇಂದ್ರಿಯ-ಐದು ಇಂದ್ರಿಯಗಳು, ಕಣ್ಣು, ಕಿವಿ. ಮೂಗು, ನಾಲಗೆ, ಚರ್ಮ, ತುರುಗು-ಮುತ್ತಿಕೋ, ತುರುಕು, ಅಂಥಃಖೇದ-ಮನಸ್ಸಿನೊಳಗಿನ ದುಃಖ, ಜವನಿಕೆ-ಯವನಿಕಾ(ಸಂ) ತೆರೆ, ಪರದೆ, ನಿರ್ಭರ-ವೇಗ, ರಭಸ, ಸಂಪೂರ್ಣವಾದ, ಅತಿಶಯ, ವಿಶೇಷ, ಪಲ್ಲಟಿಸು-ಬದಲಿಸು,
ಮೂಲ ...{Loading}...
ಅರಸ ಕೇಳೈ ನಿನ್ನ ಮಗನು
ಬ್ಬರಿಸಿದನು ರೋಮಾಂಚದಲಿ ಗ
ಬ್ಬರಿಸುತಧಿಕಕ್ರೋಧಶಿಖಿ ಕರಣೇಂದ್ರಿಯಾದಿಗಳ
ತುರುಗಿದಂತಃಖೇದ ಮಂತ್ರಾ
ಕ್ಷರಕೆ ಜವನಿಕೆಯಾದುದೈ ನಿ
ರ್ಭರದ ವೀರಾವೇಶದಲಿ ಪಲ್ಲಟಿಸಿದನು ಭೂಪ ॥31॥
೦೩೨ ಮರೆದುದುದಕಸ್ತಮ್ಭ ಸಲಿಲದ ...{Loading}...
ಮರೆದುದುದಕಸ್ತಂಭ ಸಲಿಲದ
ಹೊರಗೆ ಬೊಬ್ಬುಳಿಕೆಗಳ ತೆರೆ ನೊರೆ
ದುರುಗಿದವು ಘುಳುಘುಳಿಸಿ ಜಲಬುದ್ಬುದದ ಚೂಣಿಯಲಿ
ದುರುದುರಿಪ ಬಿಸುಸುಯ್ಲ ಸೆಕೆಯಲಿ
ಮರುಗಿ ಕುದಿದುದು ನೀರು ಭೀಮನ
ಬಿರುನುಡಿಯ ಬೇಳಂಬದಲಿ ಬೆಂಡಾದನಾ ಭೂಪ ॥32॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜಲಸ್ತಂಭನ ವಿದ್ಯೆ ಮರೆತುಹೋಯಿತು. ನೀರಿನ ಮೇಲ್ಭಾಗದಲ್ಲಿ ನೀರಿನ ಗುಳ್ಳೆಗಳನ್ನು ಅಲೆಗಳು, ನೊರೆಗಳು, ಸೇರಿಕೊಂಡು ಪ್ರಕಟವಾದುವು. ಘುಳುಘುಳು ಶಬ್ದದಿಂದ ನೀರಿನ ಗುಳ್ಳೆಗಳ ಮುಂಭಾಗದಲ್ಲಿ ಉಕ್ಕಿಬರುವ ಬಿಸಿಯುಸಿರಿನ ಶಾಖದಲ್ಲಿ ಸರೋವರದ ನೀರು ಮರಳಿ ಕುದಿಯಿತು. ಭೀಮನ ಬಿರುಮಾತಿನ ಉಪದ್ರದಿಂದ ದುರ್ಯೋಧನ ಬಳಲಿ ಬೆಂಡಾಗಿಹೋದ.
ಪದಾರ್ಥ (ಕ.ಗ.ಪ)
ಉದಕಸ್ತಂಭ-ಜಲಸ್ತಂಭನ ವಿದ್ಯೆ, ಬೊಬ್ಬಳಿಕೆ-ನೀರಿನ ಗುಳ್ಳೆಗಳು, ತುರುಗು-ತುರುಕು, ತುಂಬು, ಬುದ್ಬುದ -ಬೊಬ್ಬಳಿ, ನೀರಿನಗುಳ್ಳೆ, ಚೂಣಿ-ಮುಂಭಾಗ, ದುರುದುರಿಪ-ಉಕ್ಕಿಬರುವ, ಬಿಸುಸುಯ್ಲು-ಬಿಸಿಯುಸಿರು, ಬಿಸಿಗಾಳಿ, ಮರುಗು-ಹಾಲು, ನೀರು ಇತ್ಯಾದಿ ದ್ರವಗಳು ಕುದಿಯುವ ಮೊದಲು ಮಾಡುವ ಶಬ್ದ, ಮರಳುವುದು, ಬೇಳಂಬ-ಉಪದ್ರವ, ಉಪಹತಿ, ಆಹುತಿ, ಸುಟ್ಟುನಾಶವಾಗು, ಬೆಂಡಾದ-ಬಳಲಿದ
ಟಿಪ್ಪನೀ (ಕ.ಗ.ಪ)
ಇದೇ ಸಂದರ್ಭವನ್ನು ರನ್ನ ‘ನೀರೊಳಗಿರ್ದುಂ ಬೆಮರ್ತನುರಗಪತಾಕಂ’ ಎಂದು ವರ್ಣಿಸಿದರೆ, ಕುಮಾರವ್ಯಾಸ ಕೊಳದ ನೀರೇ ಕುದಿಯಿತು ಎಂದು ವರ್ಣಿಸುತ್ತಾನೆ.
ಮೂಲ ...{Loading}...
ಮರೆದುದುದಕಸ್ತಂಭ ಸಲಿಲದ
ಹೊರಗೆ ಬೊಬ್ಬುಳಿಕೆಗಳ ತೆರೆ ನೊರೆ
ದುರುಗಿದವು ಘುಳುಘುಳಿಸಿ ಜಲಬುದ್ಬುದದ ಚೂಣಿಯಲಿ
ದುರುದುರಿಪ ಬಿಸುಸುಯ್ಲ ಸೆಕೆಯಲಿ
ಮರುಗಿ ಕುದಿದುದು ನೀರು ಭೀಮನ
ಬಿರುನುಡಿಯ ಬೇಳಂಬದಲಿ ಬೆಂಡಾದನಾ ಭೂಪ ॥32॥
೦೩೩ ಜ್ಞಾನವಳಿದುದು ವೀರಪಣದಭಿ ...{Loading}...
ಜ್ಞಾನವಳಿದುದು ವೀರಪಣದಭಿ
ಮಾನ ಮಸೆದುದು ಮಂತ್ರನಿಷ್ಠೆಯ
ಮೌನ ಹಿಂಬೆಳೆಯಾಯ್ತು ಮೋಹಿದುದಾಹವವ್ಯಸನ
ದೀನಮನ ಹೊರಗಳೆದುದುದಕ
ಸ್ಥಾನಭಾವಕೆ ನಾಚಿದನು ತವ
ಸೂನು ತಳವೆಳಗಾದನಹಿತವಚೋವಿಘಾತದಲಿ ॥33॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತಾನು ನೀರೊಳಗೆ ಒಂದು ದಿನ ಕಳೆಯಬೇಕೆಂಬ ಜ್ಞಾನ ಅಳಿದುಹೋಯಿತು. ವೀರಪ್ರತಿಜ್ಞೆಯ ಅಭಿಮಾನ ಮನಸ್ಸಿನಲ್ಲಿ ಉದ್ರೇಕಗೊಂಡಿತು. ಜಲಸ್ತಂಭ ಮಂತ್ರಜಪದಿಂದ ತಾಳಿದ್ದ ಮೌನ ಹಿಂದೆ ಸರಿಯಿತು. ಯುದ್ಧದ ಆಸೆ ಆವರಿಸಿತು. ಆವರೆಗೆ ದೈನ್ಯವಾಗಿದ್ದ ಮನಸ್ಸು ಆವರಿಸಿದ್ದ ಪೊರೆಯನ್ನು ಕಳಚಿಕೊಂಡಿತು. ನೀರಿನಲ್ಲಿರುವುದಕ್ಕಾಗಿ ನಾಚಿಕೊಂಡ. ನಿನ್ನ ಮಗ, ಶತ್ರುವಾದ ಭೀಮನ ಮಾತಿನ ಆಘಾತದಿಂದ ಗಾಬರಿಗೊಂಡ.
ಪದಾರ್ಥ (ಕ.ಗ.ಪ)
ಅಳಿ-ನಾಶವಾಗು, ಪಣ-ಶಪಥ, ಪ್ರತಿಜ್ಞೆ, ಜೂಜಿಗೆ ಒಡ್ಡಿದ ವಸ್ತು, ಮಸೆ-ಉದ್ರೇಕಗೊಳ್ಳು, ಹರಿತಗೊಳಿಸು, ಹಿಂಬೆಳೆ-ಹಿಂದೆಸರಿ, ಕಡಿಮೆಯಾಗು, ಮೋಹಿದುದು-ಆವರಿಸಿತು, ಅಹವವ್ಯಸನ-ಯುದ್ಧದ ಆಶೆ, ತಳವೆಳಗು-ಗಾಬರಿ, ಚಿಂತೆ, ಬೆರಗು, ವಿಘಾತ-ಹೊಡೆತ, ಪೆಟ್ಟು, ಏಟು, ಆಘಾತ.
ಮೂಲ ...{Loading}...
ಜ್ಞಾನವಳಿದುದು ವೀರಪಣದಭಿ
ಮಾನ ಮಸೆದುದು ಮಂತ್ರನಿಷ್ಠೆಯ
ಮೌನ ಹಿಂಬೆಳೆಯಾಯ್ತು ಮೋಹಿದುದಾಹವವ್ಯಸನ
ದೀನಮನ ಹೊರಗಳೆದುದುದಕ
ಸ್ಥಾನಭಾವಕೆ ನಾಚಿದನು ತವ
ಸೂನು ತಳವೆಳಗಾದನಹಿತವಚೋವಿಘಾತದಲಿ ॥33॥
೦೩೪ ಜಲಧಿ ಮಧ್ಯದೊಳೇಳ್ವ ...{Loading}...
ಜಲಧಿ ಮಧ್ಯದೊಳೇಳ್ವ ವಡಬಾ
ನಲನವೊಲು ತವಕದಲಿ ತಡಿಗ
ವ್ವಳಿಸಿದನು ತತ್ಕ್ರೋಧಶಿಖಿ ಕಿಡಿಮಸಗೆ ಕಂಗಳಲಿ
ಹೊಳೆವ ಭಾರಿಯ ಹೆಗಲ ಗದೆ ಕರ
ತಳದ ವಿಪುಳ ಸಘಾಡಗರ್ವದ
ಚಳನಯನದ ಛಡಾಳಛಲದ ನೃಪಾಲ ಹೊರವಂಟ ॥34॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಮುದ್ರಮಧ್ಯದಿಂದ ಏಳುವ ಪ್ರಳಯಕಾಲದ ಬೆಂಕಿಯಂತೆ ಆತುರದಿಂದ ದುರ್ಯೋಧನ ದಡಕ್ಕೆ ಅಪ್ಪಳಿಸಿದ. ಕ್ರೋಧಾಗ್ನಿಯ ಕಿಡಿಗಳು ಕಣ್ಣುಗಳಲ್ಲಿ ಮಸೆಯಲು, ಹೆಗಲಲ್ಲಿರುವ ಹೊಳೆಯುತ್ತಿದ್ದ ಭಾರಿಯ ಗದೆಯನ್ನು ಕೈಯಲ್ಲಿ ಬಿಗಿಯಾಗಿ ಹಿಡಿದಿದ್ದಾನೆ. ಗರ್ವದಿಂದ, ಚಲಿಸುತ್ತಿರುವ ಕಣ್ಣಾಲಿಗಳ, ಉದ್ರೇಕಗೊಂಡ ಛಲದ ದುರ್ಯೋಧನ ಕೊಳದಿಂದ ಹೊರಬಂದ.
ಪದಾರ್ಥ (ಕ.ಗ.ಪ)
ವಡಬಾನಲ-ಪ್ರಳಯಕಾಲದ ಅಗ್ನಿ, ತವಕ-ಆತುರ, ತಡಿಗೆ-ದಡಕ್ಕೆ, ಅವ್ಪಳಿಸು-ಅಪ್ಪಳಿಸು, ಚಳನಯನ-ಚಲಿಸುತ್ತಿರುವ ಕಣ್ಣಗುಡ್ಡೆಗಳು, ಛಡಾಳ-ಉದ್ರೇಕ, ರಭಸ, ಕೆರಳು
ಟಿಪ್ಪನೀ (ಕ.ಗ.ಪ)
ಈ ಪದ್ಯವನ್ನು ರನ್ನನ ಗದಾಯುದ್ಧದ “ರಸೆಯಿಂ ಕಾಲಾಗ್ನಿರುದ್ರಂ ಪೊರಮಡುವವೋಲ್…’ ಎಂಬ ಪದ್ಯದೊಂದಿಗೆ ಹೋಲಿಸಬಹುದು.
ಮೂಲ ...{Loading}...
ಜಲಧಿ ಮಧ್ಯದೊಳೇಳ್ವ ವಡಬಾ
ನಲನವೊಲು ತವಕದಲಿ ತಡಿಗ
ವ್ವಳಿಸಿದನು ತತ್ಕ್ರೋಧಶಿಖಿ ಕಿಡಿಮಸಗೆ ಕಂಗಳಲಿ
ಹೊಳೆವ ಭಾರಿಯ ಹೆಗಲ ಗದೆ ಕರ
ತಳದ ವಿಪುಳ ಸಘಾಡಗರ್ವದ
ಚಳನಯನದ ಛಡಾಳಛಲದ ನೃಪಾಲ ಹೊರವಂಟ ॥34॥
೦೩೫ ಅರಳಿತರಸನ ವದನ ...{Loading}...
ಅರಳಿತರಸನ ವದನ ಭೀಮನ
ಹರುಷವುಕ್ಕಿತು ಪಾರ್ಥನುಬ್ಬಿದ
ನುರುಮುದದಿನುರೆ ನಕುಲನುಬ್ಬರಿಸಿದನು ಸಹದೇವ
ಹರಕೆಯಲಿ ದೈವಂಗಳಿತ್ತವು
ವರವನೆಂದರು ದ್ರೌಪದೀಸುತ
ರುರು ಶಿಖಂಡಿ ದ್ರುಪದಸುತ ಸಾತ್ಯಕಿಗಳೊಲವಿನಲಿ ॥35॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮರಾಯನ ಮುಖ ಸಂತೋಷದಿಂದ ಅರಳಿತು. ಭೀಮನ ಸಂತೋಷ ಉಕ್ಕಿತು. ಅರ್ಜುನ ಉಬ್ಬಿದ, ನಕುಲ ಅತಿಶಯವಾಗಿ ಸಂತೋಷಗೊಂಡ, ಸಹದೇವ ಉಬ್ಬಿದ. ನಾವು ಕಟ್ಟಿದ ಅನೇಕ ಹರಕೆಗಳಿಂದ ದೇವತೆಗಳು ನಮಗೆ ವರಗಳನ್ನು ಕೊಟ್ಟರು - ಎಂದು ದ್ರೌಪದಿಯ ಮಕ್ಕಳು, ಶಿಖಂಡಿ, ಧೃಷ್ಟದ್ಯುಮ್ನ ಸಾತ್ಯಕಿಗಳು ಸಂತೋಷದಿಂದ ಹೇಳಿದರು.
ಪದಾರ್ಥ (ಕ.ಗ.ಪ)
ವದನ-ಮುಖ, ಮುದ-ಸಂತೋಷ, ಉಬ್ಬರಿಸು-ಉಬ್ಬು, ದೊಡ್ಡದಾಗು.
ಮೂಲ ...{Loading}...
ಅರಳಿತರಸನ ವದನ ಭೀಮನ
ಹರುಷವುಕ್ಕಿತು ಪಾರ್ಥನುಬ್ಬಿದ
ನುರುಮುದದಿನುರೆ ನಕುಲನುಬ್ಬರಿಸಿದನು ಸಹದೇವ
ಹರಕೆಯಲಿ ದೈವಂಗಳಿತ್ತವು
ವರವನೆಂದರು ದ್ರೌಪದೀಸುತ
ರುರು ಶಿಖಂಡಿ ದ್ರುಪದಸುತ ಸಾತ್ಯಕಿಗಳೊಲವಿನಲಿ ॥35॥
೦೩೬ ನಗೆ ಮಸಗಿ ...{Loading}...
ನಗೆ ಮಸಗಿ ಕರತಳವ ಹೊಯ್ಹೊ
ಯ್ದೊಗುಮಿಗೆಯ ಹರುಷದಲಿ ನಕುಲಾ
ದಿಗಳು ಬೊಬ್ಬಿರಿದಾರಿದರು ಬಹುವಾದ್ಯರವದೊಡನೆ
ಅಗಿದು ಗುಡಿಗಟ್ಟಿದವು ಮುಂಗಾ
ಲುಗಳ ಹೊಯ್ಲಲಿ ತೇಜಿಗಳು ಕೈ
ನೆಗಹಿ ಜಯಸೂಚನೆಯಲೊಲೆದವು ಪಟ್ಟದಾನೆಗಳು ॥36॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಗುವಿನಿಂದ ವಿಜೃಂಭಿಸಿ, ಕೈಹೊಡೆದು ಚಪ್ಪಾಳೆತಟ್ಟಿ ಹೆಚ್ಚಾದ ಹರ್ಷದಿಂದ ನಕುಲಾದಿಗಳು ವಿವಿಧ ವಾದ್ಯ ಧ್ವನಿಗಳೊಂದಿಗೆ ಬೊಬ್ಬಿರಿದರು, ಅಟ್ಟಹಾಸಗೈದರು. ಕುದುರೆಗಳು ಉತ್ಸಾಹದಿಂದ ಗುಂಪುಗೂಡಿ ಮುಂಗಾಲುಗಳನ್ನು ಬೀಸಿದವು. ಪಟ್ಟದ ಆನೆಗಳು ವಿಜಯದ ಸೂಚಕವಾಗಿ ಸೊಂಡಿಲುಗಳನ್ನು ಮೇಲಕ್ಕೆತ್ತಿ ತಲೆಯನ್ನು ಅಲ್ಲಾಡಿಸಿದುವು.
ಪದಾರ್ಥ (ಕ.ಗ.ಪ)
ಮಸಗು-ವಿಜೃಂಭಿಸು, ಹರಡು, ಪ್ರಕಟವಾಗು, ಕೆರಳು, ಉಜ್ಜು, ಒಗುಮಿಗೆ-ಹೆಚ್ಚಳ, ಅಗಿದು-ಉತ್ಸಾಹದಿಂದ, ಹಿಗ್ಗಿನಿಂದ, ಗರ್ಜಿಸಿ, ತೊನೆದಾಡಿ, ಗುಡಿಗಟ್ಟು-ಒಟ್ಟಾಗು, ಗುಂಪು ಕಟ್ಟು, ಬಾವುಟವನ್ನು ಕಟ್ಟು, ಸಂತೋಷಗೊಳ್ಳು,, ಕೈ-ಸೊಂಡಿಲು.
ಮೂಲ ...{Loading}...
ನಗೆ ಮಸಗಿ ಕರತಳವ ಹೊಯ್ಹೊ
ಯ್ದೊಗುಮಿಗೆಯ ಹರುಷದಲಿ ನಕುಲಾ
ದಿಗಳು ಬೊಬ್ಬಿರಿದಾರಿದರು ಬಹುವಾದ್ಯರವದೊಡನೆ
ಅಗಿದು ಗುಡಿಗಟ್ಟಿದವು ಮುಂಗಾ
ಲುಗಳ ಹೊಯ್ಲಲಿ ತೇಜಿಗಳು ಕೈ
ನೆಗಹಿ ಜಯಸೂಚನೆಯಲೊಲೆದವು ಪಟ್ಟದಾನೆಗಳು ॥36॥
೦೩೭ ಧರಣಿಪತಿ ಕೇಳ್ ...{Loading}...
ಧರಣಿಪತಿ ಕೇಳ್ ಕೊಳನ ತಡಿಯಲಿ
ಕುರುಕುಲಾಗ್ರಣಿ ನಿಂದು ನೋಡಿದ
ನರಿಭಟರ ಸುಮ್ಮಾನವನು ಸಂಭ್ರಾಂತಚೇತನವ
ಉರಿದುದಾ ಮಸ್ತಕದ ರೋಷೋ
ತ್ಕರದ ಝಳಝಾಡಿಸಿತು ಶುಭ್ರ
ಸ್ಫುರಣದಂತನಿಪೀಡಿತಾಧರನಾದನಾ ಭೂಪ ॥37॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಾಜನೇ ಕೇಳು, ದುರ್ಯೋಧನನು ಕೊಳದ ದಡದಲ್ಲಿ ನಿಂತು ಶತ್ರು ಸೈನ್ಯದ ವೀರರ ಸಂತೋಷವನ್ನು ಮತ್ತು ಮನಸ್ಸಿನ ಸ್ಥಿರತೆಯನ್ನು ಕಳೆದುಕೊಂಡಂತೆ ಆಡುತ್ತಿರುವವರನ್ನು ನೋಡಿದ. ಅವನ ತಲೆಯೊಳಗಿನ, ಹೆಚ್ಚುತ್ತಿರುವ ರೋಷದ ಬಿಸಿಯ ಝಳ ಉರಿಯಿತು. ಶುಭ್ರವಾಗಿ ಹೊಳೆಯುವ ಹಲ್ಲುಗಳಿಂದ ತುಟಿಗಳನ್ನು ಕಚ್ಚಿಕೊಂಡ.
ಪದಾರ್ಥ (ಕ.ಗ.ಪ)
ಸಂಭ್ರಾಂತಚೇತನ-ಸ್ಥಿರತೆ ಕಳೆದುಕೊಂಡ ಮನಸ್ಸು, ಅತ್ಯುತ್ಸಾಹದ ಮನಸ್ಸು, ಮಸ್ತಕ-ತಲೆ, ಹಣೆ, ರೋಷೋತ್ಕರ-ಹೆಚ್ಚಿದ ರೋಷ, ಸ್ಫುರಣ-ಹೊಳೆಯುವುದು, ದಂತನಿಪೀಡಿತಾಧರ-ಹಲ್ಲಿನಿಂದ ಕಚ್ಚಲ್ಪಟ್ಟ ತುಟ್ಟಿಗಳು.
ಮೂಲ ...{Loading}...
ಧರಣಿಪತಿ ಕೇಳ್ ಕೊಳನ ತಡಿಯಲಿ
ಕುರುಕುಲಾಗ್ರಣಿ ನಿಂದು ನೋಡಿದ
ನರಿಭಟರ ಸುಮ್ಮಾನವನು ಸಂಭ್ರಾಂತಚೇತನವ
ಉರಿದುದಾ ಮಸ್ತಕದ ರೋಷೋ
ತ್ಕರದ ಝಳಝಾಡಿಸಿತು ಶುಭ್ರ
ಸ್ಫುರಣದಂತನಿಪೀಡಿತಾಧರನಾದನಾ ಭೂಪ ॥37॥
೦೩೮ ಪೂತು ಮಝ ...{Loading}...
ಪೂತು ಮಝ ಕುರುಪತಿಯ ಘನಸ
ತ್ವಾತಿಶಯವೈ ಕೌರವಾನ್ವಯ
ಜಾತನಲ್ಲಾ ಬುಧ ಪುರೂರವಸಕ್ರಮಾಗತರ
ಖ್ಯಾತನಲ್ಲಾ ಬಂದುದೊಂದ
ಖ್ಯಾತಿ ಸಲಿಲದ ಗಾಹವುಳಿದಂ
ತೀತನೊಳು ದೊರೆಯಾರು ಸರಿಯೆಂದನು ಮಹೀಪಾಲ ॥38॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
38, ಪೂತು, ಮಝು, ದುರ್ಯೋಧನನ ಘನವಾದ ಸತ್ವಾತಿಶಯವಲ್ಲವೆ. ಕುರುವಂಶದಲ್ಲಿ ಹುಟ್ಟಿದವನಲ್ಲವೇ, ಬುಧ, ಪುರೂರುವ, ಮುಂತಾದವರ ವಂಶದಲ್ಲಿ ಜನಿಸಿದವನಲ್ಲವೇ? ನೀರಿನೊಳಗೆ ಮುಳುಗಿದ ಒಂದು ಅಪಖ್ಯಾತಿಯನ್ನು ಬಿಟ್ಟರೆ ಇವನಿಗೆ ಸರಿದೊರೆಯಾರು - ಎಂದು ಧರ್ಮರಾಯ ಹೇಳಿದ.
ಪದಾರ್ಥ (ಕ.ಗ.ಪ)
ಪೂತು-ಹೊಗಳಿಕೆಯ ಉದ್ಗಾರ, ಭಲೇ, ಶಹಬ್ಬಾಸ್, ಮಝ-ಹೊಗಳಿಕೆಯ ಉದ್ಗಾರ, ಭಲೇ, ಶಹಬ್ಬಾಸ್, ಅನ್ವಯ-ವಂಶ, ಜಾತ-ಹುಟ್ಟಿದವನು, ಗಾಹ-ನೀರಿನಲ್ಲಿ ಮುಳುಗುವುದು, ದೊರೆ- ಸಮಾನ.
ಪಾಠಾನ್ತರ (ಕ.ಗ.ಪ)
ಪುರೂರವಶಕ್ರಮಾಗತರ - ಪುರೂರವಸಕ್ರಮಾಗತರ
ಕುಮಾರವ್ಯಾಸ ಭಾರತ - ಅ ರಾ ಸೇ
ಟಿಪ್ಪನೀ (ಕ.ಗ.ಪ)
- ಬುಧ-ಬೃಹಸ್ಪತಿಯ ಹೆಂಡತಿಯಾದ ತಾರೆಯಲ್ಲಿ ಚಂದ್ರನಿಂದ ಜನಿಸಿದವ. ಒಂದು ಗ್ರಹ, ಚಂದ್ರವಂಶದವ.
- ಪುರೂರವ-ಬುಧನಿಂದ ಇಳೆಯೆಂಬುವಳಲ್ಲಿ ಜನಿಸಿದವ. ಚಂದ್ರವಂಶದವ. ಇವನಿಗೆ ಊರ್ವಶಿಯಲ್ಲಿ ಆಯು, ಧೀಮಂತ, ಅಮಾವಸು, ದೃಢಾಯು, ವನಾಯು, ಶತಾಯು ಎಂಬ ಮಕ್ಕಳು ಜನಿಸಿದರು.
ಮೂಲ ...{Loading}...
ಪೂತು ಮಝ ಕುರುಪತಿಯ ಘನಸ
ತ್ವಾತಿಶಯವೈ ಕೌರವಾನ್ವಯ
ಜಾತನಲ್ಲಾ ಬುಧ ಪುರೂರವಸಕ್ರಮಾಗತರ
ಖ್ಯಾತನಲ್ಲಾ ಬಂದುದೊಂದ
ಖ್ಯಾತಿ ಸಲಿಲದ ಗಾಹವುಳಿದಂ
ತೀತನೊಳು ದೊರೆಯಾರು ಸರಿಯೆಂದನು ಮಹೀಪಾಲ ॥38॥
೦೩೯ ಅರಸ ತೊಡು ...{Loading}...
ಅರಸ ತೊಡು ಕವಚವನು ಚಾಮೀ
ಕರ ಪರಿಷ್ಕೃತ ವಜ್ರಮಯ ಬಂ
ಧುರದ ಸೀಸಕವಿದೆ ದುಕೂಲವರಾನುಲೇಪನವ
ಪರಿಹರಿಸಬೇಡೊಲವಿನಲಿ ಪತಿ
ಕರಿಸೆನುತ ಪೆಟ್ಟಿಗೆಯ ಮುಚ್ಚಳ
ತೆರೆದು ಮುಂದಿರಿಸಿದನು ಸೌಹಾರ್ದದಲಿ ಯಮಸೂನು ॥39॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರಸಾ, ಕವಚವನ್ನು ತೊಟ್ಟುಕೋ, ಚಿನ್ನದಿಂದ ಅಲಂಕರಿಸಲ್ಪಟ್ಟ, ವಜ್ರದಿಂದ ಕೂಡಿದ ಸುಂದರವಾದ ಶಿರಸ್ತ್ರಾಣವಿದೆ. ರೇಷ್ಮೆಯ ವಸ್ತ್ರಗಳು ಮತ್ತು ವಿವಿಧ ಸುಂಗಧ ಲೇಪನಗಳಿವೆ. ಇವುಗಳನ್ನು ತಿರಸ್ಕರಿಸಬೇಡ. ಸಂತೋಷದಿಂದ ಸ್ವೀಕರಿಸು - ಎನ್ನುತ್ತಾ ಧರ್ಮರಾಯನು ಪೆಟ್ಟಿಗೆಯ ಮುಚ್ಚಳವನ್ನು ತೆಗೆದು ಸೌಹಾರ್ದದಿಂದ ದುರ್ಯೋಧನನ ಮುಂದಿಟ್ಟ.
ಪದಾರ್ಥ (ಕ.ಗ.ಪ)
ಚಾಮೀಕರ-ಚಿನ್ನ, ಪರಿಷ್ಕೃತ-ತಿದ್ದಿದ, ಅಲಂಕರಿಸಿದ, ಸರಿಪಡಿಸಿದ, ಬಂಧುರ-ಸುಂದರವಾದ ಗಟ್ಟಿಯಾದ, ಲಕ್ಷಣವಾದ, ಸೀಸಕ-ಶಿರಸ್ತ್ರ್ತಾಣ, ದುಕೂಲ-ರೇಷ್ಮೆಯ ವಸ್ತ್ರ, ಅನುಲೇಪನ-ಸುವಾಸನೆಗಾಗಿ ಹೆಚ್ಚಿಕೊಳ್ಳುವ ಲೇಪನಗಳು, ಪರಿಹರಿಸು-ತಿರಸ್ಕರಿಸು, ನಾಶಮಾಡು, ಪತಿಕರಿಸು-ಸ್ವೀಕರಿಸು, ಸೌಹಾರ್ದ-ಪರಸ್ಪರ ವಿಶ್ವಾಸ ಭಾವನೆ, ಪರಸ್ಪರ ಪ್ರೀತಿ.
ಮೂಲ ...{Loading}...
ಅರಸ ತೊಡು ಕವಚವನು ಚಾಮೀ
ಕರ ಪರಿಷ್ಕೃತ ವಜ್ರಮಯ ಬಂ
ಧುರದ ಸೀಸಕವಿದೆ ದುಕೂಲವರಾನುಲೇಪನವ
ಪರಿಹರಿಸಬೇಡೊಲವಿನಲಿ ಪತಿ
ಕರಿಸೆನುತ ಪೆಟ್ಟಿಗೆಯ ಮುಚ್ಚಳ
ತೆರೆದು ಮುಂದಿರಿಸಿದನು ಸೌಹಾರ್ದದಲಿ ಯಮಸೂನು ॥39॥
೦೪೦ ಪೂರವಿಸಿದನು ಗನ್ಧವನು ...{Loading}...
ಪೂರವಿಸಿದನು ಗಂಧವನು ಸರ
ಳೋರೆಪೋರೆಯ ಮೈಯ ಘಾಯದ
ಹೇರುಗಳ ಹೂಳಿದನು ವರಕಸ್ತುರಿಯ ಸಾರದಲಿ
ಸಾರತರ ಸಾದಿನ ಜವಾಜಿಯ
ಭೂರಿ ಪರಿಮಳದಿಂದ ನವಕ
ಸ್ತೂರಿ ತಿಲಕವ ರಚಿಸಿ ಗೆಲಿದನು ತಿಗುರ ತವಕದಲಿ ॥40॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಗಂಧವನ್ನು ಪೂಸಿಕೊಂಡನು. ಬಾಣಗಳಿಂದಾಗಿ ಮೈಯಲ್ಲಿ ಆದ ಓರೆ ಪೋರೆಯ ಗಾಯಗಳನ್ನು ಕಸ್ತೂರಿಯ ಸಾರದಲ್ಲಿ ತುಂಬಿದನು. ಶ್ರೇಷ್ಠವಾದ ಸಾದು, ಜವಾಜಿಗಳ ಹೆಚ್ಚಿನ ಪರಿಮಳದ ಹೊಸತಾದ ಕಸ್ತೂರಿ ತಿಲಕವನ್ನು ಹಣೆಯಲ್ಲಿಟ್ಟು ಆತುರಾತುರವಾಗಿ ಸುಗಂಧ ದ್ರವ್ಯಗಳನ್ನು ಮೈಗೆ ಪೂಸಿಕೊಂಡ.
ಪದಾರ್ಥ (ಕ.ಗ.ಪ)
ಪೂರವಿಸು-ಪೂಸಿಕೊಳ್ಳುವುದು, ಹೇರುಗಳು-ಗಾಯದಿಂದಾದ ತೂತುಗಳು, ಸಾದು, ಜವಾಜಿ-ಸುಗಂಧ ದ್ರವ್ಯಗಳು, ಭೂರಿ-ಹೆಚ್ಚಾದ, ವಿಶೇಷವಾದ, ತಿಗುರು-ಸುಗಂಧದ್ರವ್ಯವನ್ನು ಲೇಪಿಸುವುದು, ಪೂಸುವುದು, ತವಕ-ಆತುರ, ಉತ್ಸಾಹ.
ಮೂಲ ...{Loading}...
ಪೂರವಿಸಿದನು ಗಂಧವನು ಸರ
ಳೋರೆಪೋರೆಯ ಮೈಯ ಘಾಯದ
ಹೇರುಗಳ ಹೂಳಿದನು ವರಕಸ್ತುರಿಯ ಸಾರದಲಿ
ಸಾರತರ ಸಾದಿನ ಜವಾಜಿಯ
ಭೂರಿ ಪರಿಮಳದಿಂದ ನವಕ
ಸ್ತೂರಿ ತಿಲಕವ ರಚಿಸಿ ಗೆಲಿದನು ತಿಗುರ ತವಕದಲಿ ॥40॥
೦೪೧ ತೆಗೆದು ವಜ್ರಾಙ್ಗಿಯನು ...{Loading}...
ತೆಗೆದು ವಜ್ರಾಂಗಿಯನು ಮೈಯಲಿ
ಬಿಗಿದು ಹೊಂಬರಹದ ಸುರತ್ನಾ
ಳಿಗಳ ಬಲುಸೀಸಕವನಳವಡಿಸಿದನು ಸಿರಿಮುಡಿಗೆ
ಝಗಝಗಿಪ ಬೆಳುದಿಂಗಳಿನ ತೆಳು
ದಗಡೆನಲು ತೊಳಗುವ ದುಕೂಲವ
ಬಿಗಿದು ಮೊನೆಮುಂಜೆರಗನಳವಡಿಸಿದನು ದೇಸಿಯಲಿ ॥41॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಲೋಹದ ಕವಚವನ್ನು ಪೆಟ್ಟಿಗೆಯಿಂದ ತೆಗೆದು ಮೈಗೆ ಬಿಗಿದುಕೊಂಡ. ಚಿನ್ನದ ಬರಹಗಳನ್ನುಳ್ಳ ಶ್ರೇಷ್ಠವಾದ ರತ್ನಗಳನ್ನು ಮೆಟ್ಟಿದ್ದ ಗಟ್ಟಿಯಾದ ಶಿರಸ್ತ್ರಾಣವನ್ನು ತನ್ನ ಶ್ರೀಮುಡಿಗೆ ಅಳವಡಿಸಿದ. ಝಗಝಗಿಸುತ್ತಿದ್ದ, ಬೆಳುದಿಂಗಳಿನ ತಗಡೋ ಎಂಬುವಂತಿದ್ದ ಹೊಳೆಯುತ್ತಿದ್ದ ರೇಷ್ಮೆಯ ಧೋತ್ರವನ್ನುಟ್ಟು ತುದಿಸೆರಗನ್ನು ದೇಸೀರೀತಿಯಲ್ಲಿ ಎತ್ತಿಕಟ್ಟಿದನು.
ಪದಾರ್ಥ (ಕ.ಗ.ಪ)
ವಜ್ರಾಂಗಿ-ವಜ್ರದಷ್ಟು ಕಠಿಣವಾದ ಲೋಹದ ಕವಚ, ಹೊಂಬರಹ-ಚಿನ್ನದ ರೇಖೆಗಳಲ್ಲಿನ ಬರಹ, ಮುಂಜೆರಗು-ಸೆರಗಿನ ಮುಂಭಾಗ, ಧೋತ್ರದ ಮುಂಭಾಗದ ತುದಿ, ದೇಸಿಯಲ್ಲಿ- ಸುಂದರವಾಗಿ.
ಮೂಲ ...{Loading}...
ತೆಗೆದು ವಜ್ರಾಂಗಿಯನು ಮೈಯಲಿ
ಬಿಗಿದು ಹೊಂಬರಹದ ಸುರತ್ನಾ
ಳಿಗಳ ಬಲುಸೀಸಕವನಳವಡಿಸಿದನು ಸಿರಿಮುಡಿಗೆ
ಝಗಝಗಿಪ ಬೆಳುದಿಂಗಳಿನ ತೆಳು
ದಗಡೆನಲು ತೊಳಗುವ ದುಕೂಲವ
ಬಿಗಿದು ಮೊನೆಮುಂಜೆರಗನಳವಡಿಸಿದನು ದೇಸಿಯಲಿ ॥41॥
೦೪೨ ಘೋಳಿಸಿದ ಕರ್ಪೂರ ...{Loading}...
ಘೋಳಿಸಿದ ಕರ್ಪೂರ ಕಸ್ತ್ತುರಿ
ವೀಳೆಯವ ಕೊಂಡೆದ್ದು ಸಮರಾ
ಭೀಳ ಗದೆಯನು ತಿರುಹಿದನು ಪಯಪಾಡನಾರೈದು
ಆಳು ಕವಿಯಲಿ ರಾವುತರ ಸಮ
ಪಾಳಿಯಲಿ ಬಿಡಿ ಜೋದರಾನೆಯ
ತೂಳಿಸಲಿ ಸಮರಥರು ಸರಳಿಸಿಯೆಂದನಾ ಭೂಪ ॥42॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಚನ್ನಾಗಿ ಕಲಸಿದ ಪಚ್ಚಕರ್ಪೂರ, ಕಸ್ತೂರಿ, ವೀಳಯಗಳನ್ನು ಕೊಂಡು ಎದ್ದು ನಿಂತು, ಯುದ್ಧದಲ್ಲಿ ಭೀಕರ ಪರಿಣಾಮವನ್ನುಂಟು ಮಾಡುವ ಗದೆಯನ್ನು, ಕಾಲುಗಳನ್ನು ಇಡುವ ಕ್ರಮವನ್ನು ನೋಡಿ ತಿರುಗಿಸಿದನು. ನಿಮ್ಮ ಕಾಲಾಳುಗಳು ಯುದ್ಧಕ್ಕೆ ಸಿದ್ಧರಾಗಲಿ. ಕುದುರೆ ಸವಾರರನ್ನು ಕ್ರಮವಾದ ಸರದಿಯಲ್ಲಿ ಬಿಡಿ. ಯೋಧರು ಆನೆಗಳನ್ನು ಮುಂದಕ್ಕೆ ಅಟ್ಟಲಿ, ಸಮರಥರುಗಳು ರಥಗಳಲ್ಲಿ ಓಡಿಬರಲಿ - ಎಂದು ದುರ್ಯೋಧನ ಘೋಷಿಸಿದ.
ಪದಾರ್ಥ (ಕ.ಗ.ಪ)
ಘೋಳಿಸು- ಚನ್ನಾಗಿ ಕಲಸು ಆಭೀಳ-ಭಯಂಕರ, ಭೀಕರ, ಪಯಪಾಡು-ಹೆಜ್ಜೆಯಿಡುವ ಕ್ರಮ, ತೂಳಿಸು-ಅಟ್ಟು, ನೂಕು, ಓಡಿಸು, ಸರಳಿಸು-ಓಡಿಬರು, ಆಕ್ರಮಿಸು, ಹಾರು, ನೆಗೆ.
ಮೂಲ ...{Loading}...
ಘೋಳಿಸಿದ ಕರ್ಪೂರ ಕಸ್ತ್ತುರಿ
ವೀಳೆಯವ ಕೊಂಡೆದ್ದು ಸಮರಾ
ಭೀಳ ಗದೆಯನು ತಿರುಹಿದನು ಪಯಪಾಡನಾರೈದು
ಆಳು ಕವಿಯಲಿ ರಾವುತರ ಸಮ
ಪಾಳಿಯಲಿ ಬಿಡಿ ಜೋದರಾನೆಯ
ತೂಳಿಸಲಿ ಸಮರಥರು ಸರಳಿಸಿಯೆಂದನಾ ಭೂಪ ॥42॥
೦೪೩ ಹಿಡಿ ಧನುವನೆಲೆ ...{Loading}...
ಹಿಡಿ ಧನುವನೆಲೆ ಭೂಪ ಪವನಜ
ತುಡುಕು ಗದೆಯನು ಪಾರ್ಥ ಸಮರಕೆ
ತಡೆಯದಿರು ಮಾದ್ರೀಕು ಮಾರಕರೇಳಿ ಕಾಳೆಗಕೆ
ಮಿಡುಕು ಧೃಷ್ಟದ್ಯುಮ್ನ ಸಾತ್ಯಕಿ
ಹೊಡಕರಿಸು ಪಾಂಚಾಲ ನೀ ವಂ
ಗಡದೊಳೆಮ್ಮೊಡನೇಳ್ವುದೊಬ್ಬನೆ ನಿಲುವೆ ತಾನೆಂದ ॥43॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಲೆ ಧರ್ಮರಾಯ ಬಿಲ್ಲನ್ನು ಹಿಡಿ, ಭೀಮ ಗದೆಯನ್ನು ಕೈಗೆ ತೆಗೆದುಕೋ, ಅರ್ಜುನ ಯುದ್ಧಕ್ಕೆ ತಡಮಾಡಬೇಡ, ನಕುಲ ಸಹದೇವರೇ ಯುದ್ಧಕ್ಕೆ ಏಳಿ, ಧೃಷ್ಟದ್ಯುಮ್ನ ಧೈರ್ಯತಾಳು, ಸಾತ್ಯಕಿ ಮುಖದೋರು, ಧೃಷ್ಟದ್ಯುಮ್ನ ನೀನು ನಿನ್ನ ಸೈನ್ಯ ಸಮೂಹದೊಂದಿಗೆ ಕಾಳಗಕ್ಕೆ ಏಳುವುದು. ನಾನು ಒಬ್ಬನೇ ಯುದ್ಧಕ್ಕೆ ನಿಲ್ಲುತ್ತೇನೆ ಎಂದು ದುರ್ಯೋಧನ ಹೇಳಿದ.
ಪದಾರ್ಥ (ಕ.ಗ.ಪ)
ತುಡುಕು-ತೆಗೆದುಕೋ, ಸೆಳೆದುಕೊ, ವೇಗವಾಗಿ ಕೈಗೆತೆಗೆದುಕೋ, ತಡೆಯದಿರು-ತಡಮಾಡಬೇಡ, ಹಿಂದೆಗೆಯ ಬೇಡ, ಮಿಡುಕು-ಧೈರ್ಯ, ಹೊಡಕರಿಸು-ಮುಖತೋರಿಸು, ಕಾಣಿಸಿಕೋ, ಹೊರಗೆಬಾ, ವಂಗಡ- ಪಂಗಡ, ಗುಂಪು, ಸಮೂಹ
ಮೂಲ ...{Loading}...
ಹಿಡಿ ಧನುವನೆಲೆ ಭೂಪ ಪವನಜ
ತುಡುಕು ಗದೆಯನು ಪಾರ್ಥ ಸಮರಕೆ
ತಡೆಯದಿರು ಮಾದ್ರೀಕು ಮಾರಕರೇಳಿ ಕಾಳೆಗಕೆ
ಮಿಡುಕು ಧೃಷ್ಟದ್ಯುಮ್ನ ಸಾತ್ಯಕಿ
ಹೊಡಕರಿಸು ಪಾಂಚಾಲ ನೀ ವಂ
ಗಡದೊಳೆಮ್ಮೊಡನೇಳ್ವುದೊಬ್ಬನೆ ನಿಲುವೆ ತಾನೆಂದ ॥43॥
೦೪೪ ದಿಟ್ಟನೈ ನೃಪರಾವು ...{Loading}...
ದಿಟ್ಟನೈ ನೃಪರಾವು ಮಝ ಜಗ
ಜಟ್ಟಿಯಲ್ಲಾ ದೊರೆಗಳೊಡನೀ
ಥಟ್ಟಿಗೊಬ್ಬನೆ ನಿಲುವೆನೆಂದನದಾವ ಸತ್ವನಿಧಿ
ಹುಟ್ಟಿದವರಿಗೆ ಸಾವು ಹಣೆಯಲಿ
ಕಟ್ಟಿಹುದು ವಿಧಿಯೆಂದಡೀ ಪರಿ
ಮುಟ್ಟೆ ದೀವಸಿಯಾವನೆಂದುದು ನಿಖಿಳ ಪರಿವಾರ ॥44॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುರ್ಯೋಧನ ಬಲುಗಟ್ಟಿಗ, ನಾವುಗಳು ರಾಜರು, ಭಾಪು ನೀನು ಜಗಜಟ್ಟಿಯಲ್ಲವೇ (ದುರ್ಯೋಧನ). ರಾಜರುಗಳನ್ನುಳ್ಳ ಈ ಸೈನ್ಯದ ವಿರುದ್ಧ ಒಬ್ಬನೇ ನಿಲ್ಲುತ್ತೇನೆ ಎಂದವನು ಎಂತಹ ಸತ್ವನಿಧಿಯಲ್ಲವೇ. ಹುಟ್ಟಿದವರಿಗೆ ವಿಧಿಯು ಸಾವನ್ನು ಕಟ್ಟಿಟ್ಟಿರುತ್ತದೆ. ಈ ರೀತಿ ಎದುರಿಸಲು ಯಾರು ಧೈರ್ಯಸ್ಥರಾಗಿರುತ್ತಾರೆಂದು ಸಕಲ ಪರಿವಾರವೂ ಹೇಳುತ್ತಿತ್ತು.
ಪದಾರ್ಥ (ಕ.ಗ.ಪ)
ಥಟ್ಟು-ಸೈನ್ಯ, ಸತ್ವನಿಧಿ-ಶಕ್ತಿಸಾಮರ್ಥ್ಯಕ್ಕೆ ಆಕರ, ಮುಟ್ಟು-ಎದುರಿಸು, ಯುದ್ಧಕ್ಕೆ ಸಿದ್ಧನಾಗು, ದೀವಸಿ-ಧೈರ್ಯಸ್ಥ.
ಮೂಲ ...{Loading}...
ದಿಟ್ಟನೈ ನೃಪರಾವು ಮಝ ಜಗ
ಜಟ್ಟಿಯಲ್ಲಾ ದೊರೆಗಳೊಡನೀ
ಥಟ್ಟಿಗೊಬ್ಬನೆ ನಿಲುವೆನೆಂದನದಾವ ಸತ್ವನಿಧಿ
ಹುಟ್ಟಿದವರಿಗೆ ಸಾವು ಹಣೆಯಲಿ
ಕಟ್ಟಿಹುದು ವಿಧಿಯೆಂದಡೀ ಪರಿ
ಮುಟ್ಟೆ ದೀವಸಿಯಾವನೆಂದುದು ನಿಖಿಳ ಪರಿವಾರ ॥44॥
೦೪೫ ಮೆಚ್ಚಿದನು ಯಮಸೂನು ...{Loading}...
ಮೆಚ್ಚಿದನು ಯಮಸೂನು ಛಲ ನಿನ
ಗೊಚ್ಚತವಲೈ ವೈರಿಭಟರಲಿ
ಬೆಚ್ಚಿದಾಡಿದೆಯಾದಡೇನದು ನಮ್ಮೊಳೈವರಲಿ
ಮೆಚ್ಚಿದರ ನೀ ವರಿಸಿ ಕಾದುವು
ದಚ್ಚರಿಯ ಮಾತೇನು ಗೆಲವಿನ
ನಿಚ್ಚಟನೆ ನೆಲಕೊಡೆಯನಹುದಿದು ಸಮಯಕೃತವೆಂದ ॥45॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮರಾಯ ದುರ್ಯೋಧನನ ಧೈರ್ಯವನ್ನು ಮೆಚ್ಚಿದ. ಛಲ ನಿನಗೆ ಮೀಸಲಲ್ಲವೇ. ಶತ್ರು ಸೈನ್ಯಿಕರೊಂದಿಗೆ ಹೆದರದೆ ಯುದ್ಧ ಮಾಡಿದೆ. ನಮ್ಮವರಲ್ಲಿ ನಿನಗೆ ಯಾರೊಡನೆ ಇಷ್ಟವೋ ಅವರೊಂದಿಗೆ ಯುದ್ಧ ಮಾಡು. ನಾನು ಹೇಳುವುದು ಆಶ್ವರ್ಯದ ಮಾತಲ್ಲ. ಗೆಲುವನ್ನು ಪಡೆಯುವ ಪರಾಕ್ರಮಿಯೇ ಈ ಭೂಮಿಗೆ ಒಡೆಯನಾಗುತ್ತಾನೆ. ಇದು ನಮ್ಮಿಬ್ಬರ ನಡುವಿನ ಒಡಂಬಡಿಕೆಯಾಗಲಿ ಎಂದು ಧರ್ಮರಾಯ ಹೇಳಿದ.
ಪದಾರ್ಥ (ಕ.ಗ.ಪ)
ಒಚ್ಚತ-ಮೀಸಲು, ಮುಡಿಪು, ಬೆಚ್ಚಿದೆ-ಹೆದರಿದೆ, ಭಯಗೊಂಡೆ, ನಿಚ್ಚಟ-ಪರಾಕ್ರಮ, ಮೋಸವಿಲ್ಲದ, ಸ್ಥಿರವಾದ, ಸಮಯಕೃತ-ಒಡಂಬಡಿಕೆಯಾದುದು, ಒಪ್ಪಂದವಾದುದು, (ಸಮಯ-ಒಪ್ಪಂದ, ಒಡಂಬಡಿಕೆ)
ಪಾಠಾನ್ತರ (ಕ.ಗ.ಪ)
ಬೆಚ್ಚಿದಾಡಿದೆ - ಎಂಬ ಬದಲಿಗೆ ಬೆಚ್ಚದಾಡಿದೆ ಎಂಬ ಪಾಠ ಹೆಚ್ಚು ಅರ್ಥಪೂರ್ಣ ಆದರೆ ಇದು ಊಹಾತ್ಮಕ ಪಾಠ.
ಮೂಲ ...{Loading}...
ಮೆಚ್ಚಿದನು ಯಮಸೂನು ಛಲ ನಿನ
ಗೊಚ್ಚತವಲೈ ವೈರಿಭಟರಲಿ
ಬೆಚ್ಚಿದಾಡಿದೆಯಾದಡೇನದು ನಮ್ಮೊಳೈವರಲಿ
ಮೆಚ್ಚಿದರ ನೀ ವರಿಸಿ ಕಾದುವು
ದಚ್ಚರಿಯ ಮಾತೇನು ಗೆಲವಿನ
ನಿಚ್ಚಟನೆ ನೆಲಕೊಡೆಯನಹುದಿದು ಸಮಯಕೃತವೆಂದ ॥45॥
೦೪೬ ನಿನಗೆ ಸೋಲವೆ ...{Loading}...
ನಿನಗೆ ಸೋಲವೆ ನಾವು ಭೂಕಾ
ಮಿನಿಯನಾಳ್ವೆವು ನಮ್ಮೊಳೊಬ್ಬರು
ನಿನಗೆ ಸೋತಡೆ ಮಿಕ್ಕ ನಾಲ್ವರು ನಿನಗೆ ಕಿಂಕರರು
ನಿನಗೆ ಹಸ್ತಿನಪುರದ ಸಿರಿ ಸಂ
ಜನಿತವೀ ಸಂಕೇತವೇ ಸಾ
ಧನ ನಿನಗೆ ನಮಗೆಂದು ನುಡಿದನು ಧರ್ಮಸುತ ನಗುತ ॥46॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನೀನು ಸೋತರೆ ನಾವು ಭೂದೇವಿಯನ್ನು ಆಳುತ್ತೇವೆ. ನಮ್ಮಲ್ಲಿ ಯಾರಾದರೊಬ್ಬರು ನಿನಗೆ ಸೋತರೆ, ಉಳಿದ ನಾಲುವರು ನಿನಗೆ ಸೇವಕರಾಗುತ್ತೇವೆ. ನಿನಗೆ ಹಸ್ತಿನಾವತಿಯ ಐಶ್ವರ್ಯ ಪ್ರಾಪ್ತಿಯಾಗುತ್ತದೆ. ನನ್ನ ನಿನ್ನ ನಡುವಿನ ಈ ಒಪ್ಪಂದವೇ ಇದಕ್ಕೆ ಸಾಧನವೆಂದು ಧರ್ಮರಾಯ ನಗುತ್ತ ನುಡಿದ.
ಪದಾರ್ಥ (ಕ.ಗ.ಪ)
ಭೂಕಾಮಿನಿ-ಭೂದೇವಿ, ಭೂಮಿಯೆಂಬ ಹೆಂಗಸು, ಸಂಜನಿತ-ಹುಟ್ಟಿದುದು, ಪ್ರಾಪ್ತವಾದುದು, ಸಂಕೇತ-ಒಪ್ಪಂದ
ಮೂಲ ...{Loading}...
ನಿನಗೆ ಸೋಲವೆ ನಾವು ಭೂಕಾ
ಮಿನಿಯನಾಳ್ವೆವು ನಮ್ಮೊಳೊಬ್ಬರು
ನಿನಗೆ ಸೋತಡೆ ಮಿಕ್ಕ ನಾಲ್ವರು ನಿನಗೆ ಕಿಂಕರರು
ನಿನಗೆ ಹಸ್ತಿನಪುರದ ಸಿರಿ ಸಂ
ಜನಿತವೀ ಸಂಕೇತವೇ ಸಾ
ಧನ ನಿನಗೆ ನಮಗೆಂದು ನುಡಿದನು ಧರ್ಮಸುತ ನಗುತ ॥46॥
೦೪೭ ಹಾ ಯುಧಿಷ್ಠಿರ ...{Loading}...
ಹಾ ಯುಧಿಷ್ಠಿರ ನಿಮ್ಮ ಕೂಡೆಮ
ಗಾಯಛಲವಿಲ್ಲರ್ಜುನನು ಮಗು
ವೀ ಯಮಳರಿಗೆ ಕೈದುಗೊಳ್ಳೆನು ಹೊಯ್ದು ಕೆಣಕಿದಡೆ
ಬಾಯಿಬಡಿಕನು ಸತ್ವದಲಿ ನಾ
ಗಾಯುತದ ಬಲನೆಂಬ ಡೊಂಬಿನ
ವಾಯುವಿನ ಮಗನೆನ್ನೊಡನೆ ಮಾರಾಂತಡಹುದೆಂದ ॥47॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಾ, ಯುಧಿಷ್ಠರ ನಿಮ್ಮ ಜೊತೆ ನಮಗೆ ಯಾವುದೇ ರೀತಿಯ ಛಲವಿಲ್ಲ. ಅರ್ಜುನ ನನ್ನೆದುರು ಮಗು. ಈ ಅವಳಿಜವಳಿಗಳಾದ ನಕುಲ ಸಹದೇವರ ವಿರುದ್ಧ ಆಯುಧ ಹಿಡಿಯುವುದಿಲ್ಲ. ಹೊಡೆದು ಕೆಣಕಿದರೆ, ಬಾಯಿಬಡಿಕನಾದ, ಶಕ್ತಿಯಲ್ಲಿ ಆನೆಯ ಬಲವನ್ನುಳ್ಳವನೆಂದು ಅಹಂಕಾರದಿಂದ ಕರೆದುಕೊಳ್ಳುವ ವಾಯುಸುತನಾದ ಭೀಮ ನನ್ನ ವಿರುದ್ಧ ನಿಂತರೆ ಆಗಬಹುದೆಂದು ದುರ್ಯೋಧನ ಹೇಳಿದ.
ಪದಾರ್ಥ (ಕ.ಗ.ಪ)
ಆಯ-ಹೆಚ್ಚಾದ, ನಾಗಾಯುತ-ಆನೆಗೆ ಸಮನಾದ, ಡೊಂಬಿನ-ಅಹಂಕಾರದ, ಮೋಸದ.
ಮೂಲ ...{Loading}...
ಹಾ ಯುಧಿಷ್ಠಿರ ನಿಮ್ಮ ಕೂಡೆಮ
ಗಾಯಛಲವಿಲ್ಲರ್ಜುನನು ಮಗು
ವೀ ಯಮಳರಿಗೆ ಕೈದುಗೊಳ್ಳೆನು ಹೊಯ್ದು ಕೆಣಕಿದಡೆ
ಬಾಯಿಬಡಿಕನು ಸತ್ವದಲಿ ನಾ
ಗಾಯುತದ ಬಲನೆಂಬ ಡೊಂಬಿನ
ವಾಯುವಿನ ಮಗನೆನ್ನೊಡನೆ ಮಾರಾಂತಡಹುದೆಂದ ॥47॥
೦೪೮ ವರಿಸಿದೆನು ಭೀಮನನು ...{Loading}...
ವರಿಸಿದೆನು ಭೀಮನನು ನೀವಾ
ದರಿಸುವಡೆ ಧರ್ಮವನು ದುರ್ಜನ
ಸರಣಿಯಲಿ ನೀವ್ ಬಹಡೆ ದಳಸಹಿತೈವರಿದಿರಹುದು
ತೆರಳುವವರಾವಲ್ಲ ನೀವ್ ಪತಿ
ಕರಿಸಿದುದೆ ನಮ್ಮಿಷ್ಟವೆನೆ ಮುರ
ಹರ ಯುಧಿಷ್ಠಿರನೃಪನನೆಕ್ಕಟಿಗರೆದು ಗರ್ಜಿಸಿದ ॥48॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನೀವು ಧರ್ಮವನ್ನು ಗೌರವಿಸುತ್ತೀರಾದರೆ, ನಾನು ಭೀಮನನ್ನು ಯುದ್ಧಕ್ಕೆ ಆಶೆಪಟ್ಟಿದ್ದೇನೆ. ದುರ್ಜನರ ಸಾಲಿನಲ್ಲಿ ನೀವು ಬರುವಿರಾದರೆ, ನಿಮ್ಮ ಸೈನ್ಯಸಮೇತ ನೀವು ಇಷ್ಟಪಟ್ಟು ಸ್ವೀಕರಿಸಿದುದೇ ನಮಗೂ ಇಷ್ಟವೆಂದು ದುರ್ಯೋಧನ ಹೇಳಲು, ಕೃಷ್ಣ ಯುಧಿಷ್ಠಿರರಾಜನನ್ನು ಪ್ರತ್ಯೇಕವಾಗಿ ಕರೆದು ಗರ್ಜಿಸಿದ.
ಪದಾರ್ಥ (ಕ.ಗ.ಪ)
ವರಿಸು-ಇಷ್ಟಪಡು, ಆಯ್ಕೆ ಮಾಡಿಕೋ, ಸರಣಿ-ಸಾಲು, ಪತಿಕರಿಸು-ಒಪ್ಪು, ಮೆಚ್ಚು, ಸ್ವೀಕರಿಸು, ಎಕ್ಕಟಿಗರೆದು-ದೂರಕ್ಕೆ ಕರೆದು, ಒಬ್ಬನನ್ನೇ ಕರೆದು, ಪ್ರತ್ಯೇಕವಾಗಿ ಕರೆದು.
ಮೂಲ ...{Loading}...
ವರಿಸಿದೆನು ಭೀಮನನು ನೀವಾ
ದರಿಸುವಡೆ ಧರ್ಮವನು ದುರ್ಜನ
ಸರಣಿಯಲಿ ನೀವ್ ಬಹಡೆ ದಳಸಹಿತೈವರಿದಿರಹುದು
ತೆರಳುವವರಾವಲ್ಲ ನೀವ್ ಪತಿ
ಕರಿಸಿದುದೆ ನಮ್ಮಿಷ್ಟವೆನೆ ಮುರ
ಹರ ಯುಧಿಷ್ಠಿರನೃಪನನೆಕ್ಕಟಿಗರೆದು ಗರ್ಜಿಸಿದ ॥48॥
೦೪೯ ಮರುಳೆ ನೀ ...{Loading}...
ಮರುಳೆ ನೀ ಹೆಚ್ಚಾಳುತನಕು
ಬ್ಬರಿಸಿ ನುಡಿದೆ ಸುಯೋಧನನ ನೀ
ನರಿಯಲಾಗದೆ ಕೈಗೆ ಬಂದರೆ ಕದನಭೂಮಿಯಲಿ
ಸರಿಸದಲಿ ಮಲೆತವನು ಜೀವಿಸಿ
ಮರಳಲರಿವನೆ ನಮ್ಮೊಳೊಬ್ಬನ
ವರಿಸು ವಿಗ್ರಹಕೆಂದು ನಮ್ಮನು ಕೊಂದೆ ನೀನೆಂದ ॥49॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮರುಳೆ, ನೀನು ದೊಡ್ಡ ವೀರತನದಿಂದ ಉಬ್ಬಿ ಮಾತನಾಡಿದೆ. ದುರ್ಯೋಧನನನ್ನು ನೀನು ಸರಿಯಾಗಿ ತಿಳಿಯಬಾರದೆ. ಯುದ್ಧ ಭೂಮಿಯಲ್ಲಿ ಅವನ ಕೈಗೆ ಸಿಕ್ಕಿದರೆ, ತಾನು ಅವನ ಸಮಾನನೆಂದು ಸೊಕ್ಕಿ ಅಹಂಕಾರಪಟ್ಟವನು ಬದುಕಿ ಹಿಂದಿರುಗುತ್ತಾನೆಯೇ, ‘ನಮ್ಮಲ್ಲಿ ಒಬ್ಬನನ್ನು ಯುದ್ಧಕ್ಕೆ ಆಯ್ದುಕೋ’ ಎಂದು ಹೇಳಿ, ನಮ್ಮನ್ನು ನೀನು ಕೊಂದೆ - ಎಂದು ಕೃಷ್ಣ ಧರ್ಮರಾಯನನ್ನು ಹೀಯಾಳಿಸಿದ.
ಪದಾರ್ಥ (ಕ.ಗ.ಪ)
ಹೆಚ್ಚಾಳುತನ-ದೊಡ್ಡ ವೀರನೆಂಬ ಭಾವ, ಉಬ್ಬರಿಸಿ-ಉಬ್ಬಿ, ಉತ್ಸಾಹಗೊಂಡು, ಸರಿಸ- ಸಮೀಪ, ಇದಿರು, ಮಲೆತವನು-ಎದುರು ಬಿದ್ದವನು, ವಿಗ್ರಹ-ಯುದ್ಧ,
ಮೂಲ ...{Loading}...
ಮರುಳೆ ನೀ ಹೆಚ್ಚಾಳುತನಕು
ಬ್ಬರಿಸಿ ನುಡಿದೆ ಸುಯೋಧನನ ನೀ
ನರಿಯಲಾಗದೆ ಕೈಗೆ ಬಂದರೆ ಕದನಭೂಮಿಯಲಿ
ಸರಿಸದಲಿ ಮಲೆತವನು ಜೀವಿಸಿ
ಮರಳಲರಿವನೆ ನಮ್ಮೊಳೊಬ್ಬನ
ವರಿಸು ವಿಗ್ರಹಕೆಂದು ನಮ್ಮನು ಕೊಂದೆ ನೀನೆಂದ ॥49॥
೦೫೦ ಗೆಲಿದಡೈವರೊಳೊಬ್ಬನನು ಮಿ ...{Loading}...
ಗೆಲಿದಡೈವರೊಳೊಬ್ಬನನು ಮಿ
ಕ್ಕುಳಿದವರು ಕಿಂಕರರು ಗಡ ನೀ
ತಿಳಿದು ನುಡಿದಾ ನಿನ್ನನಾಹವಮುಖಕೆ ವರಿಸಿದಡೆ
ಗೆಲಲು ಬಲ್ಲಾ ನೀನು ಫಲುಗುಣ
ಗೆಲುವನೇ ನಿನ್ನುಳಿದರಿಬ್ಬರು
ನಿಲುವರೇ ಕುರುಪತಿಯಘಾಟದ ಗದೆಯ ಘಾಯದಲಿ ॥50॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಿಮ್ಮೈವರಲ್ಲಿ ಒಬ್ಬನನ್ನು ದುರ್ಯೋಧನ ಗೆದ್ದರೆ ಮಿಕ್ಕುಳಿದವರು ಅವನಿಗೆ ಸೇವಕರಲ್ಲವೆ! ನೀನು ತಿಳಿದು ಈ ಮಾತನ್ನಾಡಿದೆಯಾ? ಒಂದು ವೇಳೆ ಯುದ್ಧಕ್ಕೆ ನಿನ್ನನ್ನು ಇಷ್ಟಪಟ್ಟು ಕರೆದರೆ ನೀನು ಗೆಲ್ಲಬಲ್ಲೆಯಾ? ಅರ್ಜುನ ಗೆಲ್ಲುತ್ತಾನೆಯೆ? ನಿನ್ನ ತಮ್ಮಂದಿರಲ್ಲಿ ಉಳಿದಿಬ್ಬರು, ದುರ್ಯೋಧನನ ಗದೆಯ ಅತಿಶಯವಾದ ಹೊಡೆತಕ್ಕೆ ನಿಲ್ಲುತ್ತಾರೆಯೆ?
ಪದಾರ್ಥ (ಕ.ಗ.ಪ)
ಅಘಾಟ-ಅತಿಶಯವಾದ
ಮೂಲ ...{Loading}...
ಗೆಲಿದಡೈವರೊಳೊಬ್ಬನನು ಮಿ
ಕ್ಕುಳಿದವರು ಕಿಂಕರರು ಗಡ ನೀ
ತಿಳಿದು ನುಡಿದಾ ನಿನ್ನನಾಹವಮುಖಕೆ ವರಿಸಿದಡೆ
ಗೆಲಲು ಬಲ್ಲಾ ನೀನು ಫಲುಗುಣ
ಗೆಲುವನೇ ನಿನ್ನುಳಿದರಿಬ್ಬರು
ನಿಲುವರೇ ಕುರುಪತಿಯಘಾಟದ ಗದೆಯ ಘಾಯದಲಿ ॥50॥
೦೫೧ ಇನ್ದು ನಮ್ಮಯ ...{Loading}...
ಇಂದು ನಮ್ಮಯ ಭಾಗ್ಯಲಕ್ಷ್ಮಿಯ
ಕಂದೆರೆವೆಯಲಿ ಭೀಮ ಕಾದುವು
ದೆಂದು ಜಾರಿಸಿ ನಿಮ್ಮ ಬಿಟ್ಟನು ನಮ್ಮ ಪುಣ್ಯದಲಿ
ಇಂದಿನೀ ಸಮರದಲಿ ಪವನಜ
ನಿಂದಡೇನಹುದೆಂಬ ಚಿತ್ತದ
ಸಂದೆಯವು ನಮಗುಂಟು ಕೌರವನೈಸು ಬಲುಹೆಂದ ॥51॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ದಿನ ನಮ್ಮ ಭಾಗ್ಯಲಕ್ಷ್ಮಿಯ ಕೃಪಾಕಟಾಕ್ಷದಿಂದ ‘ಭೀಮ ನನ್ನೊಂದಿಗೆ ಯುದ್ಧಮಾಡಲಿ’ ಎಂದು ಹೇಳಿ, ದುರ್ಯೋಧನ ನಮ್ಮ ಪುಣ್ಯದಿಂದ ನಿಮ್ಮನ್ನು ಬಿಟ್ಟು ಬಿಟ್ಟ. ಇಂದಿನ ಈ ಯುದ್ಧದಲ್ಲಿ ಅವನ ಮುಂದೆ ಭೀಮ ನಿಂತರೆ ಪರಿಣಾಮವೇನಾಗಬಹುದೋ ಎಂಬ ಮನಸ್ಸಿನ ಸಂದೇಹ ನಮಗಿದೆ, ಕೌರವನು ಅಷ್ಟು ಬಲಶಾಲಿ - ಎಂದು ಕೃಷ್ಣ ಹೇಳಿದ.
ಪದಾರ್ಥ (ಕ.ಗ.ಪ)
ಕಂದೆರವೆ-ಕಣ್ಣು ಬಿಡುವಿಕೆ, ಕೃಪಾಕಟಾಕ್ಷ ಬೀರುವುದು, ಸಂದೆಯ-ಸಂದೇಹ (ಸಂ) ಬಲುಹು-ಬಲ
ಮೂಲ ...{Loading}...
ಇಂದು ನಮ್ಮಯ ಭಾಗ್ಯಲಕ್ಷ್ಮಿಯ
ಕಂದೆರೆವೆಯಲಿ ಭೀಮ ಕಾದುವು
ದೆಂದು ಜಾರಿಸಿ ನಿಮ್ಮ ಬಿಟ್ಟನು ನಮ್ಮ ಪುಣ್ಯದಲಿ
ಇಂದಿನೀ ಸಮರದಲಿ ಪವನಜ
ನಿಂದಡೇನಹುದೆಂಬ ಚಿತ್ತದ
ಸಂದೆಯವು ನಮಗುಂಟು ಕೌರವನೈಸು ಬಲುಹೆಂದ ॥51॥
೦೫೨ ಎಲೆ ಮುರಾನ್ತಕ ...{Loading}...
ಎಲೆ ಮುರಾಂತಕ ನಿಮ್ಮ ಮುಂದ
ಗ್ಗಳೆಯತನವೆಮಗಿಲ್ಲ ನಿಮ್ಮಡಿ
ಗಳ ಸುಧಾಕರುಣಾವಧಾನವೆ ವಜ್ರಕವಚವಲಾ
ಮಲೆತ ಹಗೆವನ ಪಡಿಮುಖದ ಬಲು
ವಲಗೆಯಲಿ ಗದೆಯಿಂದ ರಾಯನ
ಬಲುಹ ಬಿರುದಾವಳಿಯ ಬರೆವೆನು ಕೃಷ್ಣ ಕೇಳ್ ಎಂದ ॥52॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಲೆ ಕೃಷ್ಣ, ನಿಮ್ಮ ಮುಂದೆ ಹೆಚ್ಚುಗಾರಿಕೆಯ ಬುದ್ಧಿ ನಮಗಿಲ್ಲ. ನಿಮ್ಮ ಅಮೃತದಂತಹ ಕರುಣೆಯ ದೃಷ್ಟಿಯೇ ನಮಗೆ ವಜ್ರಕವಚವಲ್ಲವೇ. ಸೊಕ್ಕಿನಿಂತ ಶತ್ರುವಿನ ಮುಖವೆಂಬ ಹಲಗೆಯ ಮೇಲೆ ಗದೆಯಿಂದ, ಧರ್ಮರಾಯನ ಹೆಗ್ಗಳಿಕೆಯ ಬಿರುದುಗಳನ್ನು ಬರೆಯುತ್ತೇನೆ ಕೇಳು ಕೃಷ್ಣ ಎಂದ(ಭೀಮ).
ಪದಾರ್ಥ (ಕ.ಗ.ಪ)
ಅಗ್ಗಳೆಯತನ-ಶ್ರೇಷ್ಠನೆಂಬ ಭಾವನೆ, ಹಿರಿಯತನ, ಸುಧಾಕರುಣಾವಧಾನ-ಕರುಣಾಮೃತದ ನೋಟ, ವಜ್ರಕವಚ-ಭೇದಿಸಲಾಗದ ಕವಚ, ಮಲೆತ-ಸೊಕ್ಕಿದ, ಮದವೇರಿದ, ರೋಷದಿಂದ ಎದುರುನಿಂತ, ಅಹಂಕಾರದ, ಪಡಿಮುಖ-ಪ್ರತಿಮುಖ, ಎದುರುಮುಖ, ವಿರೋಧಿ, ಬಲುವಲಗೆ-ದೊಡ್ಡ ಹಲಗೆ, ಬಲುಹು-ಬಲ, ಹೆಚ್ಚುಗಾರಿಕೆ, ಹಿರಿಮೆ.
ಮೂಲ ...{Loading}...
ಎಲೆ ಮುರಾಂತಕ ನಿಮ್ಮ ಮುಂದ
ಗ್ಗಳೆಯತನವೆಮಗಿಲ್ಲ ನಿಮ್ಮಡಿ
ಗಳ ಸುಧಾಕರುಣಾವಧಾನವೆ ವಜ್ರಕವಚವಲಾ
ಮಲೆತ ಹಗೆವನ ಪಡಿಮುಖದ ಬಲು
ವಲಗೆಯಲಿ ಗದೆಯಿಂದ ರಾಯನ
ಬಲುಹ ಬಿರುದಾವಳಿಯ ಬರೆವೆನು ಕೃಷ್ಣ ಕೇಳೆಂದ ॥52॥
೦೫೩ ಪೂತು ಮಝ ...{Loading}...
ಪೂತು ಮಝ ಭಟ ಎನುತ ಕಂಸಾ
ರಾತಿ ಕೊಂಡಾಡಿದನು ಸಾತ್ಯಕಿ
ಭೂತಳಾಧಿಪ ಪಾರ್ಥ ಯಮಳಾದಿಗಳು ನಲವಿನಲಿ
ವಾತಜನ ಹೊಗಳಿದರು ಸುಭಟ
ವ್ರಾತಸೌಹಾರ್ದದಲಿ ಶೌರ್ಯ
ಖ್ಯಾತಿಯನು ಬಣ್ಣಿಸಿದುದವನೀಪಾಲ ಕೇಳ್ ಎಂದ ॥53॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪೂತು, ಮಝ, ಶ್ರೇಷ್ಠಭಟನೇ, ಎಂದು ಕಂಸವೈರಿಯು ಭೀಮನನ್ನು ಕೊಂಡಾಡಿದನು. ಸಾತ್ಯಕಿ, ಧರ್ಮಜ, ಅರ್ಜುನ, ನಕುಲ ಸಹದೇವರುಗಳು ಭೀಮನನ್ನು ಹೊಗಳಿದರು. ಸುಭಟರ ಸಮೂಹವು ಸಂತೋಷ ಭಾವದಿಂದ ಭೀಮನ ಶೌರ್ಯದ ಖ್ಯಾತಿಯನ್ನು ಹೊಗಳಿತು - ಕೇಳು ಎಂದು ಧೃತರಾಷ್ಟ್ರನಿಗೆ ಸಂಜಯ ಹೇಳಿದ.
ಪದಾರ್ಥ (ಕ.ಗ.ಪ)
ಕಂಸಾರಾತಿ-ಕಂಸನ ಶತ್ರು-ಕೃಷ್ಣ, ವಾತಜ-ವಾಯುವಿನ ಪುತ್ರ-ಭೀಮ, ಸೌಹಾರ್ದ-ಒಳ್ಳಯ ಹೃದಯದಿಂದ, ಸಂತೋಷದಿಂದ, ಖ್ಯಾತಿ-ಒಳ್ಳೆಯ ಹೆಸರು.
ಮೂಲ ...{Loading}...
ಪೂತು ಮಝ ಭಟ ಎನುತ ಕಂಸಾ
ರಾತಿ ಕೊಂಡಾಡಿದನು ಸಾತ್ಯಕಿ
ಭೂತಳಾಧಿಪ ಪಾರ್ಥ ಯಮಳಾದಿಗಳು ನಲವಿನಲಿ
ವಾತಜನ ಹೊಗಳಿದರು ಸುಭಟ
ವ್ರಾತಸೌಹಾರ್ದದಲಿ ಶೌರ್ಯ
ಖ್ಯಾತಿಯನು ಬಣ್ಣಿಸಿದುದವನೀಪಾಲ ಕೇಳೆಂದ ॥53॥
೦೫೪ ಗದೆಯ ಕೊಣ್ಡನು ...{Loading}...
ಗದೆಯ ಕೊಂಡನು ಕೌರವೇಂದ್ರನ
ನಿದಿರುಗೊಂಡನು ಭೀಮ ಬಲವಂ
ಕದಲಿ ವಾಮಾಂಗದಲಿ ಬಳಸಿದರಗ್ರಜಾನುಜರು
ಕದನಭೂಮಿಯ ಬಿಡವರಿದು ನಿಂ
ದುದು ಚತುರ್ಬಲ ಸುತ್ತಿ ಗಗನದೊ
ಳೊದಗಿದುದು ಸುರನಿಕರ ತೀವಿ ವಿಮಾನವೀಥಿಯಲಿ ॥54॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮ ಗದೆಯನ್ನು ಹಿಡಿದುಕೊಂಡು ಕೌರವೇಂದ್ರನನ್ನು ಎದುರುಗೊಂಡ. ಅವನ ಬಲ ಮತ್ತು ಎಡ ಭಾಗಗಳಲ್ಲಿ ಅಣ್ಣ ತಮ್ಮಂದಿರು ಸೇರಿದರು. ಯುದ್ಧಭೂಮಿಯಲ್ಲಿನ ತೆರವಾದ ಜಾಗವನ್ನು ನೋಡಿ ಚತುರಂಗ ಬಲಗಳು ಸುತ್ತಲೂ ನಿಂದವು. ಆಕಾಶದಲ್ಲಿ ದೇವತೆಗಳ ಸಮೂಹವು ವಿಮಾನದ ಬೀದಿಯಲ್ಲಿ ತುಂಬಿ ನಿಂತಿತು.
ಪದಾರ್ಥ (ಕ.ಗ.ಪ)
ಬಲವಂಕ-ಬಲಭಾಗ, ವಾಮಾಂಗ-ಎಡಭಾಗ, ಬಿಡವರಿದು-ತೆರವಾದ ಸ್ಥಳವನ್ನು ನೋಡಿ, ಖಾಲಿ ಇರುವ ಜಾಗವನ್ನು ನೋಡಿ, ತೀವಿ-ತುಂಬಿ, ಭರ್ತಿಯಾಗಿ, ವೀಧಿ-ಬೀದಿ
ಮೂಲ ...{Loading}...
ಗದೆಯ ಕೊಂಡನು ಕೌರವೇಂದ್ರನ
ನಿದಿರುಗೊಂಡನು ಭೀಮ ಬಲವಂ
ಕದಲಿ ವಾಮಾಂಗದಲಿ ಬಳಸಿದರಗ್ರಜಾನುಜರು
ಕದನಭೂಮಿಯ ಬಿಡವರಿದು ನಿಂ
ದುದು ಚತುರ್ಬಲ ಸುತ್ತಿ ಗಗನದೊ
ಳೊದಗಿದುದು ಸುರನಿಕರ ತೀವಿ ವಿಮಾನವೀಥಿಯಲಿ ॥54॥
೦೫೫ ಚಟುಳತರ ಭಾರಙ್ಕದಙ್ಕದ ...{Loading}...
ಚಟುಳತರ ಭಾರಂಕದಂಕದ
ಭಟರು ತರುಬಿದರುಬ್ಬೆಯಲಿ ಲಟ
ಕಟಿಸಿದವು ಕಣ್ಣಾಲಿ ಬದ್ಧಭ್ರುಕುಟಿಭಂಗದಲಿ
ಕಟುವಚನ ವಿಕ್ಷೇಪರೋಷ
ಸ್ಫುಟನವೇಲ್ಲಿತವಾಕ್ಯಭಂಗೀ
ಘಟನ ವಿಘಟನದಿಂದ ಮೂದಲಿಸಿದರು ಮುಳಿಸಿನಲಿ ॥55॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅತಿವೇಗದ, ಸ್ಪರ್ಧೆಯ ರಂಗದಲ್ಲಿದ್ದ ವೀರರು, ಉತ್ಸಾಹದಿಂದ ಮುಂದೆಬಂದರು. ಕಣ್ಣಿನ ಗುಡ್ಡೆಗಳು, ಕೋಪದಿಂದ ವೇಗವಾಗಿ ಚಲಿಸಿದವು. ಹುಬ್ಬುಗಂಟುಗಳು ಮುರಿದವು. ಕಟುವಾದ ಮಾತುಗಳಿಂದ, ತೀವ್ರವಾಗಿ ಎಸೆದ ಮಾತುಗಳಿಂದ, ರೋಷದಿಂದ ಕಂಪಿಸುವ ಮಾತುಗಳಿಂದ, ಕುಟಿಲ ಮಾತುಗಳಿಂದ, ಭಂಗವಾದ ಮಾತುಗಳಿಂದ, ಒಟ್ಟು ಸೇರಿದ ಮಾತುಗಳಿಂದ, ಬೇರ್ಪಡಿಸಿದ ಮಾತುಗಳಿಂದ ಭಟರು ಕೋಪದಿಂದ ಮೂದಲಿಸಿದರು.
ಪದಾರ್ಥ (ಕ.ಗ.ಪ)
ಚಟುಳ-ಬೇಗ, ತ್ವರೆ, ಭಾರಂಕ-ಸ್ಪರ್ಧೆ, ಸೆಣಸು,
ವಿಕ್ಷೇಪ-ಎಸೆಯುವುದು,
ಸ್ಫುಟನ-ಒಡೆಯುವಿಕೆ, ಬಿರಿಯುವಿಕೆ,
ವೇಲ್ಲಿತ-ಕಂಪಿಸಿದ ,
ಘಟನ-ಸೇರುವಿಕೆ, ಕೂಡುವಿಕೆ, ಸಂಭವ,
ವಿಘಟನ-ಒಡೆ, ಬಿಡುಗಡೆ, ಬೇರ್ಪಡಿಸು,
ಉಬ್ಬು-ಉತ್ಸಾಹ, ಹಿಗ್ಗು, ದೊಡ್ಡದಾಗು,
ತರುಬು-ತಡೆ, ಅಡ್ಡಗಟ್ಟು, ಹೊರಡಿಸು,
ಮುಳಿಸು-ಕೋಪ
ಮೂಲ ...{Loading}...
ಚಟುಳತರ ಭಾರಂಕದಂಕದ
ಭಟರು ತರುಬಿದರುಬ್ಬೆಯಲಿ ಲಟ
ಕಟಿಸಿದವು ಕಣ್ಣಾಲಿ ಬದ್ಧಭ್ರುಕುಟಿಭಂಗದಲಿ
ಕಟುವಚನ ವಿಕ್ಷೇಪರೋಷ
ಸ್ಫುಟನವೇಲ್ಲಿತವಾಕ್ಯಭಂಗೀ
ಘಟನ ವಿಘಟನದಿಂದ ಮೂದಲಿಸಿದರು ಮುಳಿಸಿನಲಿ ॥55॥
೦೫೬ ಅರಸ ಕೇಳಿವರಿಬ್ಬರುಬ್ಬಿನ ...{Loading}...
ಅರಸ ಕೇಳಿವರಿಬ್ಬರುಬ್ಬಿನ
ಧುರದ ಥಟ್ಟಣೆ ಪಸರಿಸಿತು ಸುರ
ನರರನಾ ಸಮಯದಲಿ ಪೂರ್ವೋತ್ತರದ ದೆಸೆಯಿಂದ
ವರ ಮುನಿಸ್ತೋಮದ ನಡುವೆ ಕಂ
ಧರದ ಮುಸಲದ ವಿಮಳ ನೀಲಾಂ
ಬರದ ರಾಮನ ಸುಳಿವ ಕಂಡರು ಕೃಷ್ಣ ಪಾಂಡವರು ॥56॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಾಜನೇ ಕೇಳು, ಇವರಿಬ್ಬರ ಯುದ್ಧದ ಉತ್ಸಾಹದ ಧ್ವನಿಯು ದೇವತೆಗಳು ಮತ್ತು ಮನುಷ್ಯರನ್ನು ಆವರಿಸಿತು. ಆ ಸಮಯಕ್ಕೆ ಪೂರ್ವೋತ್ತರದ (ನೈಋತ್ಯ) ದಿಕ್ಕಿನಿಂದ ಶ್ರೇಷ್ಠ ಮುನಿಗಳ ಸಮೂಹದ ನಡುವೆ, ಹೆಗಲ ಮೇಲೆ ಗದೆಯನ್ನು ಹೊಂದಿದ್ದ ಶುದ್ಧವಾದ ನೀಲಿಯ ಬಟ್ಟೆಯನ್ನುಟ್ಟ ಬಲರಾಮನ ಬರವನ್ನು ಕೃಷ್ಣ, ಪಾಂಡವರು ನೋಡಿದರು.
ಪದಾರ್ಥ (ಕ.ಗ.ಪ)
ಉಬ್ಬಿನ-ಉತ್ಸಾಹದ, ಧುರ-ಯುದ್ಧ, ಥಟ್ಟಣೆ-ಶಬ್ಧ, ಧ್ವನಿ, ಪೂರ್ವೋತ್ತರ-ನೈಋತ್ಯದಿಕ್ಕು, ದೆಸೆ-ದಿಕ್ಕು, ಕಂಧರ-ಹೆಗಲು, ಮುಸಲ-ಗದೆ, ವಿಮಲ-ಶುದ್ಧವಾದ, ನೀಲಾಂಬರ-ನೀಲಿಯ ಬಣ್ಣದ ಬಟ್ಟೆ.
ಮೂಲ ...{Loading}...
ಅರಸ ಕೇಳಿವರಿಬ್ಬರುಬ್ಬಿನ
ಧುರದ ಥಟ್ಟಣೆ ಪಸರಿಸಿತು ಸುರ
ನರರನಾ ಸಮಯದಲಿ ಪೂರ್ವೋತ್ತರದ ದೆಸೆಯಿಂದ
ವರ ಮುನಿಸ್ತೋಮದ ನಡುವೆ ಕಂ
ಧರದ ಮುಸಲದ ವಿಮಳ ನೀಲಾಂ
ಬರದ ರಾಮನ ಸುಳಿವ ಕಂಡರು ಕೃಷ್ಣ ಪಾಂಡವರು ॥56॥
೦೫೭ ಆ ನಿಖಿಳ ...{Loading}...
ಆ ನಿಖಿಳ ಪರಿವಾರದನುಸಂ
ಧಾನ ದೃಷ್ಟಿಗಳತ್ತ ತಿರುಗಿದ
ವೇನನೆಂಬೆನು ಮುಸಲಧರನಾಗಮನ ಸಂಗತಿಯ
ಈ ನರೇಂದ್ರನ ಸುಮುಖತೆಯ ಸು
ಮ್ಮಾನ ಹೊಳೆದುದು ಭಯದಿ ಕುಂತೀ
ಸೂನುಗಳು ಮರೆಗೊಳುತಲಿರ್ದುದು ವೀರನರಾಯಣನ ॥57॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಎಲ್ಲ ಪರಿವಾರದವರ ಪರೀಕ್ಷೆ ಮಾಡುವಂತಿರುವ ದೃಷ್ಟಿಗಳು ಅತ್ತ ತಿರುಗಿದವು, ಮುಸಲಧರನಾದ ಬಲರಾಮನ ಆಗಮನದ ವಿಷಯವನ್ನು ಏನು ಹೇಳಲಿ. ಈ ನರೇಂದ್ರನ - ದುರ್ಯೋಧನನ ಸಂತೋಷದ ಮುಖದಲ್ಲಿ ಆನಂದ ಭಾವವು ಪ್ರಕಾಶಿಸಿತು. ಕುಂತಿಯ ಮಕ್ಕಳು ಭಯದಿಂದ ವೀರನಾರಾಯಣನ - ಕೃಷ್ಣನ - ಹಿಂದೆ ಅವಿತುಕೊಳ್ಳುತ್ತಿದ್ದರು.
ಪದಾರ್ಥ (ಕ.ಗ.ಪ)
ನಿಖಿಳ-ಎಲ್ಲ, ಸಮಸ್ತ, ಅನು¸ಂಧಾನ-ಪರೀಕ್ಷೆ, ಧ್ಯಾನ, ಯೋಜನೆ, ಮುಸಲಧರ-ಗದಾಧರ, ಬಲರಾಮ, ಸುಮುಖ-ಹಸನ್ಮುಖ, ಸಂತೋಷ ಭಾವದ ಮುಖ, ಸುಮ್ಮಾನ -ಅನಂದ.
ಟಿಪ್ಪನೀ (ಕ.ಗ.ಪ)
- ವೀರನರಯಣಿ ವೀರನಾರಾಯಣಿ ಎಂಬುದರ ಅಶುದ್ಧರೂಪ. ವೀರನಾರಯಣ, ವೀರನರಯಣ ಮುಂತಾದ ರೂಪಗಳನ್ನು ಛಂದಸ್ಸಿನ ಅನುಕೂಲಕ್ಕಾಗಿ ಕವಿ ಬಳಸಿದ್ದಾನೆ, ಇದು ಕುಮಾರವ್ಯಾಸನ ಸಹಜಗುಣ.
ಮೂಲ ...{Loading}...
ಆ ನಿಖಿಳ ಪರಿವಾರದನುಸಂ
ಧಾನ ದೃಷ್ಟಿಗಳತ್ತ ತಿರುಗಿದ
ವೇನನೆಂಬೆನು ಮುಸಲಧರನಾಗಮನ ಸಂಗತಿಯ
ಈ ನರೇಂದ್ರನ ಸುಮುಖತೆಯ ಸು
ಮ್ಮಾನ ಹೊಳೆದುದು ಭಯದಿ ಕುಂತೀ
ಸೂನುಗಳು ಮರೆಗೊಳುತಲಿರ್ದುದು ವೀರನರಾಯಣನ ॥57॥