೦೦೦ ಸೂ ರಾಯಧರ್ಮಜ ...{Loading}...
ಸೂ. ರಾಯಧರ್ಮಜ ಯಮಳ ಫಲುಗುಣ
ವಾಯುಸುತರರಸಿದರು ಕೌರವ
ರಾಯನನು ಕಳನೊಳಗೆ ಕಾಣದೆ ಮುತ್ತಿದರು ಕೊಳನ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ: ಧರ್ಮರಾಯ, ನಕುಲ ಸಹದೇವರು, ಅರ್ಜುನ, ಭೀಮರು ಕೌರವರಾಯನನ್ನು ಯುದ್ಧಭೂಮಿಯಲ್ಲಿ ಹುಡುಕಿ, ಕಾಣದೆ ಸರೋವರವನ್ನು ಮುತ್ತಿದರು.
ಪದಾರ್ಥ (ಕ.ಗ.ಪ)
ಯಮಳ-ಅವಳಿಜವಳಿ (ನಕುಲ-ಸಹದೇವ) ಕಳ-ಯುದ್ಧಭೂಮಿ, ಮುತ್ತಿದರು- ಸುತ್ತುವರಿದರು.
ಮೂಲ ...{Loading}...
ಸೂ. ರಾಯಧರ್ಮಜ ಯಮಳ ಫಲುಗುಣ
ವಾಯುಸುತರರಸಿದರು ಕೌರವ
ರಾಯನನು ಕಳನೊಳಗೆ ಕಾಣದೆ ಮುತ್ತಿದರು ಕೊಳನ
೦೦೧ ಕೇಳು ಜನಮೇಜಯ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ಸಂಜಯ ಬರುತ ಕುರುಭೂ
ಪಾಲನರಕೆಯ ಭೀಮನವರಿವರಲ್ಲಲೇ ಎನುತ
ಮೇಲೆ ಹತ್ತಿರ ಬರಬರಲು ಸಮ
ಪಾಳಿಯಲಿ ರಥ ಮೂರರಲಿ ಕೃಪ
ಕೋಲ ಗುರುವಿನ ಮಗನಲಾ ಎನುತಲ್ಲಿಗೈತಂದ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜನಮೇಜಯರಾಜನೇ ಕೇಳು, ಸಂಜಯನು ಬರುತ್ತಾ ದೂರದಲ್ಲಿ ಬರುತ್ತಿರುವವರನ್ನು ಕಂಡು ಇವರು, ದುರ್ಯೋಧನನನ್ನು ಹುಡುಕುತ್ತಿರುವ ಭೀಮನ ಕಡೆಯವರಲ್ಲವೇ ಎನ್ನುತ್ತ, ಹತ್ತಿರ ಬರಲು ಪಕ್ಕಪಕ್ಕದಲ್ಲಿ ಮೂರು ರಥಗಳಲ್ಲಿರುವವರು ಕೃಪಾಚಾರ್ಯ, ಅಶ್ವತ್ಥಾಮರಲ್ಲವೇ ಎನ್ನುತ್ತ ಅಲ್ಲಿಗೆ ಬಂದ - ಎಂದು ವೈಶಂಪಾಯನರು ಜನಮೇಜಯ ರಾಯನಿಗೆ ಹೇಳಿದರು.
ಪದಾರ್ಥ (ಕ.ಗ.ಪ)
ಅರಕೆಯ-ಹುಡುಕುವ, ಸಮಪಾಳಿ-ಜೊತೆಜೊತೆಗೆ (ಪಾಳಿ-ಸರದಿ, ಒಬ್ಬರ ನಂತರ ಒಬ್ಬರು) ಕೋಲಗುರು-ಶಸ್ತ್ರವಿದ್ಯೆಯ ಗುರು, ದ್ರೋಣ (ಕೋಲು-ಬಾಣ)
ಟಿಪ್ಪನೀ (ಕ.ಗ.ಪ)
ಮೂರು ರಥಗಳಲ್ಲಿರುವ ಇಬ್ಬರ ಹೆಸರನ್ನು ಮಾತ್ರ ಈ ಪದ್ಯದಲ್ಲಿ ಹೇಳಿದೆ. ಮೂರನೆಯವ ಕೃತವರ್ಮ.
ಮೂಲ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ಸಂಜಯ ಬರುತ ಕುರುಭೂ
ಪಾಲನರಕೆಯ ಭೀಮನವರಿವರಲ್ಲಲೇ ಎನುತ
ಮೇಲೆ ಹತ್ತಿರ ಬರಬರಲು ಸಮ
ಪಾಳಿಯಲಿ ರಥ ಮೂರರಲಿ ಕೃಪ
ಕೋಲ ಗುರುವಿನ ಮಗನಲಾ ಎನುತಲ್ಲಿಗೈತಂದ ॥1॥
೦೦೨ ಇಳಿದು ರಥವನು ...{Loading}...
ಇಳಿದು ರಥವನು ಸಂಜಯನ ಬರ
ಸೆಳೆದು ತಕ್ಕೈಸಿದರು ಹಗೆಯಲಿ
ಸಿಲುಕಿ ಬಂದೈ ಭಾಗ್ಯದಲಿ ಧೃತರಾಷ್ಟ್ರಭೂಪತಿಯ
ಕಲಹಗತಿಯೇನಾಯ್ತು ಶಕುನಿಯ
ದಳದೊಳಿದ್ದನು ಕೌರವೇಶ್ವರ
ನುಳಿದನೇ ಹದನಾವುದೆಂದರು ಭಟರು ಸಂಜಯನ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅವರುಗಳು ರಥದಿಂದಿಳಿದು ಸಂಜಯನನ್ನು ತಬ್ಬಿಕೊಂಡು - ಶತ್ರುಗಳಲ್ಲಿ ಸಿಕ್ಕಿಕೊಂಡು, ಧೃತರಾಷ್ಟ್ರನ ಪುಣ್ಯದಿಂದ ನೀನು ಬದುಕಿಬಂದಿದ್ದೀ. ಯುದ್ಧದ ಸ್ಥಿತಿ ಏನಾಯಿತು. ದುರ್ಯೋಧನ ಶಕುನಿಯ ಸೈನ್ಯದೊಂದಿಗೆ ಇದ್ದ. ಅವನು ಉಳಿದನೇ. ಸುದ್ದಿ ಏನು - ಎಂದು ಆ ಭಟರು ಸಂಜಯನನ್ನು ಕೇಳಿದರು.
ಪದಾರ್ಥ (ಕ.ಗ.ಪ)
ತಕ್ಕೈಸು-ಅಪ್ಪಿಕೊ, ತಬ್ಬಿಕೊ, ಭಾಗ್ಯ-ಪುಣ್ಯ, ಅದೃಷ್ಟ, ಗತಿ-ದಿಕ್ಕು, ಸ್ಥಿತಿ-ಗತಿ, ಹದನ-ಸಮಾಚಾರ, ಸುದ್ದಿ
ಮೂಲ ...{Loading}...
ಇಳಿದು ರಥವನು ಸಂಜಯನ ಬರ
ಸೆಳೆದು ತಕ್ಕೈಸಿದರು ಹಗೆಯಲಿ
ಸಿಲುಕಿ ಬಂದೈ ಭಾಗ್ಯದಲಿ ಧೃತರಾಷ್ಟ್ರಭೂಪತಿಯ
ಕಲಹಗತಿಯೇನಾಯ್ತು ಶಕುನಿಯ
ದಳದೊಳಿದ್ದನು ಕೌರವೇಶ್ವರ
ನುಳಿದನೇ ಹದನಾವುದೆಂದರು ಭಟರು ಸಂಜಯನ ॥2॥
೦೦೩ ಅರಿದುದಿಲ್ಲಾ ಕೌರವೇನ್ದ್ರನ ...{Loading}...
ಅರಿದುದಿಲ್ಲಾ ಕೌರವೇಂದ್ರನ
ನರಸಿ ಶಕುನಿಯ ದಳವ ಮುತ್ತಿದ
ರಿರಿದರವರು ತ್ರಿಗರ್ತರನು ಸೌಬಲ ಸುಶರ್ಮಕರ
ಮುರಿದ ಬವರವ ಬಲಿದು ಗಜ ನೂ
ರರಲಿ ಹೊಕ್ಕನು ರಾಯನಹಿತರ
ಜರಿದು ಝಾಡಿಸಿ ಬೀದಿವರಿದನು ರಾಯದಳದೊಳಗೆ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತಿಳಿದಿಲ್ಲವೇ, ಕೌರವೇಂದ್ರನನ್ನು ಹುಡುಕುತ್ತಾ ಶಕುನಿಯ ಸೈನ್ಯವನ್ನು ಪಾಂಡವರು ಮುತ್ತಿ, ತ್ರಿಗರ್ತರು, ಶಕುನಿ, ಸುಶರ್ಮರನ್ನು ಇರಿದರು. ಹಿಂದಿರುಗಿ ಓಡುತ್ತಿದ್ದ ತನ್ನ ಸೈನ್ಯವನ್ನು ಪುನಃ ಒಗ್ಗೂಡಿಸಿ ದುರ್ಯೋಧನ ಪಾಂಡವರ ವಿರುದ್ಧ ಯುದ್ಧಕ್ಕೆ ನೂರು ಆನೆಗಳೊಂದಿಗೆ ಪ್ರವೇಶಿಸಿದ. ಶತ್ರುಗಳನ್ನು ಜರಿದು, ನಿಂದಿಸಿ, ಧರ್ಮಜನ ಸೈನ್ಯದೊಳಗೆ ಸುತ್ತಾಡಿದ.
ಪದಾರ್ಥ (ಕ.ಗ.ಪ)
ಮುರಿದ-ಹಿಂದಿರುಗಿದ, ಬವರ- ಯುದ್ಧ, ಬಲಿದು-ಒಗ್ಗೂಡಿಸಿ, ಸೇರಿಸಿ, ಜರಿದು-ಬೈದು, ಹೀಯಾಳಿಸಿ, ಝಾಡಿಸಿ-ನಿಂದಿಸಿ, ಒದರಿ, ದಬಾಯಿಸಿ, ಬೀದಿವರಿ-ಎಲ್ಲೆಲ್ಲೂ ಓಡಾಡು
ಮೂಲ ...{Loading}...
ಅರಿದುದಿಲ್ಲಾ ಕೌರವೇಂದ್ರನ
ನರಸಿ ಶಕುನಿಯ ದಳವ ಮುತ್ತಿದ
ರಿರಿದರವರು ತ್ರಿಗರ್ತರನು ಸೌಬಲ ಸುಶರ್ಮಕರ
ಮುರಿದ ಬವರವ ಬಲಿದು ಗಜ ನೂ
ರರಲಿ ಹೊಕ್ಕನು ರಾಯನಹಿತರ
ಜರಿದು ಝಾಡಿಸಿ ಬೀದಿವರಿದನು ರಾಯದಳದೊಳಗೆ ॥3॥
೦೦೪ ಬಳಿಕ ಭೀಮನ ...{Loading}...
ಬಳಿಕ ಭೀಮನ ಗದೆಯಲಿಭ ಶತ
ವಳಿದರೊಬ್ಬನೆ ತಿರುಗಿ ಹಾಯ್ದನು
ಕೊಳುಗುಳದ ಕೋಳ್ಗುದಿಯ ಕೋಲಾಹಲದ ಕೆಸರಿನಲಿ
ತಲೆಗೆ ಬಂದುದು ತನಗೆಯಾಕ್ಷಣ
ಸುಳಿದರೆಮ್ಮಾರಾಧ್ಯ ವರ ಮುನಿ
ತಿಲಕ ವೇದವ್ಯಾಸದೇವರು ಕೃಪೆಯ ಭಾರದಲಿ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಂತರ ಭೀಮನ ಗದೆಯಿಂದ ನೂರು ಆನೆಗಳು ಮರಣಹೊಂದಿದರೆ, ದುರ್ಯೋಧನ ಏಕಾಂಗಿಯಾಗಿ ಹಿಂದಿರುಗಿ, ಯುದ್ಧರಂಗ ದರ್ಶನದ ಅತಿಯಾದ ವ್ಯಥೆಯಿಂದ ಕೋಲಾಹಲವಾಗಿ, ಕೆಸರಿನಲ್ಲಿ ವೇಗವಾಗಿ ನಡೆದನು. ನನ್ನ ತಲೆಗೇ ಅಪಾಯ ಒದಗಿತು. ಆ ಕ್ಷಣದದಲ್ಲಿ ನಮ್ಮ ಆರಾಧ್ಯ ವರಮುನಿಗಳಾದ ವೇದವ್ಯಾಸ ದೇವರು ತಮ್ಮ ಭಕ್ತನನ್ನು ಕಾಯುವುದು ತಮ್ಮ ಹೊಣೆಯೆಂದು ಕೃಪೆಯಿಂದ ಅಲ್ಲಿಗೆ ಬಂದರು.
ಪದಾರ್ಥ (ಕ.ಗ.ಪ)
ಇಭ-ಆನೆ, ಕೊಳುಗುಳ-ಯುದ್ಧಭೂಮಿ, ಕೋಳ್ಗುದಿ -ಅತಿಯಾದ ದುಃಖ, ಭಾರ- ಜವಾಬ್ದಾರಿ, ಹೊಣೆ.
ಮೂಲ ...{Loading}...
ಬಳಿಕ ಭೀಮನ ಗದೆಯಲಿಭ ಶತ
ವಳಿದರೊಬ್ಬನೆ ತಿರುಗಿ ಹಾಯ್ದನು
ಕೊಳುಗುಳದ ಕೋಳ್ಗುದಿಯ ಕೋಲಾಹಲದ ಕೆಸರಿನಲಿ
ತಲೆಗೆ ಬಂದುದು ತನಗೆಯಾಕ್ಷಣ
ಸುಳಿದರೆಮ್ಮಾರಾಧ್ಯ ವರ ಮುನಿ
ತಿಲಕ ವೇದವ್ಯಾಸದೇವರು ಕೃಪೆಯ ಭಾರದಲಿ ॥4॥
೦೦೫ ಸೆಳೆದುಕೊಣ್ಡನು ಮೃತ್ಯುವಿನ ...{Loading}...
ಸೆಳೆದುಕೊಂಡನು ಮೃತ್ಯುವಿನ ಹೆಡ
ತಲೆಯನೊದೆದು ಕೃಪಾಳು ತನ್ನನು
ತಲೆಬಳಿಚಿ ಕಳುಹಿದರೆ ಬಂದೆನು ರಾಯನರಕೆಯಲಿ
ಬಳಲಿ ಬೀಳುತ್ತೇಳುತೊಬ್ಬನೆ
ತಲೆಮುಸುಕಿನಲಿ ನಡೆಯೆ ಕಂಡೆನು
ನೆಲನೊಡೆಯನಹುದಲ್ಲೆನುತ ಸುಳಿದೆನು ಸಮೀಪದಲಿ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮೃತ್ಯುವಿನ ಹೆಡತಲೆಯನ್ನು ಒದೆದು ಕೃಪಾಳುವಾದ ವೇದವ್ಯಾಸ ನನ್ನನ್ನು ಎಳೆದುಕೊಂಡ. ನನ್ನ ತಲೆಯನ್ನು ಉಳಿಸಿ ಕಳುಹಿಸಿದ್ದರಿಂದ, ದುರ್ಯೋಧನನನ್ನು ಹುಡುಕುತ್ತಾ ಬಂದೆ. ಅವನು ಬಳಲಿ, ಬೀಳುತ್ತ ಏಳುತ್ತ ಒಬ್ಬನೇ ತಲೆ ಮುಸುಕುಹಾಕಿಕೊಂಡು ನಡೆಯುತ್ತಿರಲು ನೋಡಿದೆನು. ಇವನು ನಮ್ಮ ಭೂಮಿಯ ಒಡೆಯನಾದ ದುರ್ಯೋಧನನು ಹೌದೇ ಅಲ್ಲವೇ ಎಂದು ಯೋಚಿಸುತ್ತ ಸಮೀಪಕ್ಕೆ ಹೋದೆ.
ಪದಾರ್ಥ (ಕ.ಗ.ಪ)
ಸೆಳೆದುಕೋ-ಎಳೆದುಕೋ, ಅಪಾಯದಿಂದ ಬಿಡಿಸಿಕೋ, ಹೆಡತಲೆ-ತಲೆಯ ಹಿಂಭಾಗ, ತಲೆಬಳಚಿ-ತಲೆಉಳಿಸಿ
ಮೂಲ ...{Loading}...
ಸೆಳೆದುಕೊಂಡನು ಮೃತ್ಯುವಿನ ಹೆಡ
ತಲೆಯನೊದೆದು ಕೃಪಾಳು ತನ್ನನು
ತಲೆಬಳಿಚಿ ಕಳುಹಿದರೆ ಬಂದೆನು ರಾಯನರಕೆಯಲಿ
ಬಳಲಿ ಬೀಳುತ್ತೇಳುತೊಬ್ಬನೆ
ತಲೆಮುಸುಕಿನಲಿ ನಡೆಯೆ ಕಂಡೆನು
ನೆಲನೊಡೆಯನಹುದಲ್ಲೆನುತ ಸುಳಿದೆನು ಸಮೀಪದಲಿ ॥5॥
೦೦೬ ಕಣ್ಡೆನರಸನ ನಿಬ್ಬರವ ...{Loading}...
ಕಂಡೆನರಸನ ನಿಬ್ಬರವ ಬಳಿ
ಕಂಡಲೆದುದತಿಶೋಕಶಿಖಿ ಕೈ
ಗೊಂಡುದಿಲ್ಲರೆಘಳಿಗೆ ಬಳಿಕೆಚ್ಚತ್ತು ಕಂದೆರೆದು
ಖಂಡಿಸಿದನೆನ್ನುಬ್ಬೆಯನು ಹುರಿ
ಗೊಂಡುದಾತನ ಸತ್ವವಾತನ
ದಂಡಿಯಲಿ ಬಹರಾರು ಸುರ ನರ ನಾಗಲೋಕದಲಿ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರಸನ ತಳಮಳವನ್ನು ಕಂಡೆ. ನಂತರ ನನ್ನನ್ನು ಅತಿಯಾದ ಶೋಕಾಗ್ನಿ ಪೀಡಿಸಿತು. ಅರೆಘಳಿಗೆ ಅವನು ಸಹಿಸಲಾಗದೆ ಮೂರ್ಛಿತನಾದ. ಬಳಿಕ ಎಚ್ಚೆತ್ತು ಕಣ್ಣುತೆರೆದು, ನನ್ನ ಶೋಕವನ್ನು ಖಂಡಿಸಿದ. ಅವನ ಸತ್ವ ಹುರುಪುಗೊಂಡಿತು. ದೇವ ಲೋಕ, ಮನುಷ್ಯ ಲೋಕ ಮತ್ತು ನಾಗ ಲೋಕಗಳಲ್ಲಿ ಅವನಿಗೆ ಸರಿಸಮಕ್ಕೆ ಯಾರು ಬರುತ್ತಾರೆ.
ಪದಾರ್ಥ (ಕ.ಗ.ಪ)
ನಿಬ್ಬರ-ಕಳವಳ, ತಳಮಳ, ಉಬ್ಬೆ-ದುಃಖ, ಶೋಕ, ಸೆಖೆ, ಹುರಿಗೊಳ್-ಹುರುಪುಗೊಳ್ಳು ಉತ್ಸಾಹಗೊಳ್ಳು, ದಂಡಿ-ಸಮಾನ, ಸುರ-ನರ-ನಾಗ ಲೋಕ-ಸ್ವರ್ಗ-ಮರ್ತ್ಯ-ಪಾತಾಳ ಲೋಕಗಳು.
ಮೂಲ ...{Loading}...
ಕಂಡೆನರಸನ ನಿಬ್ಬರವ ಬಳಿ
ಕಂಡಲೆದುದತಿಶೋಕಶಿಖಿ ಕೈ
ಗೊಂಡುದಿಲ್ಲರೆಘಳಿಗೆ ಬಳಿಕೆಚ್ಚತ್ತು ಕಂದೆರೆದು
ಖಂಡಿಸಿದನೆನ್ನುಬ್ಬೆಯನು ಹುರಿ
ಗೊಂಡುದಾತನ ಸತ್ವವಾತನ
ದಂಡಿಯಲಿ ಬಹರಾರು ಸುರ ನರ ನಾಗಲೋಕದಲಿ ॥6॥
೦೦೭ ಬನ್ದನೆನ್ನನು ಸನ್ತವಿಡುತಲ ...{Loading}...
ಬಂದನೆನ್ನನು ಸಂತವಿಡುತಲ
ದೊಂದು ಸರಸಿಯ ತಡಿಯಲಳವಡೆ
ನಿಂದು ಸಂವರಿಸಿದನು ಗದೆಯನು ಬಾಹುಮೂಲದಲಿ
ತಂದೆಗರುಹೆಂದೆನಗೆ ಹೇಳಿದು
ಹಿಂದೆ ಮುಂದೆಡಬಲನನಾರೈ
ದಂದವಳಿಯದೆ ನೀರ ಹೊಕ್ಕನು ಕಾಣೆನವನಿಪನ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನನ್ನ ಸಂತಯಿಸುತ್ತಾ ಬಂದು, ಒಂದು ಸರೋವರದ ತೀರದಲ್ಲಿ ಸರಿಹೊಂದುವ ಸ್ಥಳದಲ್ಲಿ ನಿಂತು, ತನ್ನ ಗದೆಯನ್ನು ಹೆಗಲಿನಲ್ಲಿಟ್ಟುಕೊಂಡನು. ತಂದೆಗೆ ತಿಳಿಸು ಎಂದು ನನಗೆ ಹೇಳಿ, ಹಿಂದೆ, ಮುಂದೆ, ಎಡ, ಬಲಗಳನ್ನು ನೋಡಿ, ತನ್ನ ದೇಹದ ಅಂದ ಚಂದಗಳು ಸ್ವಲ್ಪವೂ ಕುಂದದೆ ಇರಲು ನೀರಿನೊಳಕ್ಕೆ ಹೊಕ್ಕನು. ನಂತರ ರಾಜನನ್ನು ನಾನು ಕಾಣಲಿಲ್ಲ.
ಪದಾರ್ಥ (ಕ.ಗ.ಪ)
ಸಂತವಿಡು-ಸಂತಯಿಸು, ಸಮಾಧಾನಪಡಿಸು, ಅಳವಡೆ-ಸರಿಹೊಂದಲು, ಸಂವರಿಸು-ಜೋಪಾನ ಮಾಡು, ಸರಿಯಾಗಿ ಇಡು, ಬಾಹುಮೂಲ-ಭುಜ, ಕಂಕುಳು, ಆರೈಸು-ನೋಡು, ಅಂದವಳಿಯದೆ-ಲಕ್ಷಣವು ಹಾಳಾಗದೆ.
ಮೂಲ ...{Loading}...
ಬಂದನೆನ್ನನು ಸಂತವಿಡುತಲ
ದೊಂದು ಸರಸಿಯ ತಡಿಯಲಳವಡೆ
ನಿಂದು ಸಂವರಿಸಿದನು ಗದೆಯನು ಬಾಹುಮೂಲದಲಿ
ತಂದೆಗರುಹೆಂದೆನಗೆ ಹೇಳಿದು
ಹಿಂದೆ ಮುಂದೆಡಬಲನನಾರೈ
ದಂದವಳಿಯದೆ ನೀರ ಹೊಕ್ಕನು ಕಾಣೆನವನಿಪನ ॥7॥
೦೦೮ ಅವರು ಕಮ್ಬನಿದುಮ್ಬಿದರು ...{Loading}...
ಅವರು ಕಂಬನಿದುಂಬಿದರು ಕೌ
ರವ ಮಹಾವಂಶಾಭಿಚಾರ
ವ್ಯವಸಿತಕೆ ಫಲವಾಯ್ತಲಾ ಯಮನಂದನಾದಿಗಳ
ಶಿವಶಿವಾ ಪವಡಿಸಿತೆ ಚತುರ
ರ್ಣವ ವಿಪರಿಪರಿಧಾನ ಪೃಥ್ವೀ
ಧವನ ಬಾಳಿಕೆ ನೀರೊಳೆಂದಳಲಿದನು ಗುರುಸೂನು ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೃಪ, ಅಶ್ವತ್ಥಾಮ, ಕೃತವರ್ಮರು ಕಣ್ಣೀರು ಹಾಕಿದರು. ಯಮನಂದನಾದಿಗಳು ಕೌರವ ಮಹಾವಂಶದ ಮಾರಣ ಹೋಮಕ್ಕೆ ಮಾಡಿದ ವ್ಯವಸ್ಥೆಗೆ ಫಲ ಒದಗಿತಲ್ಲಾ. ನಾಲ್ಕು ಸಮುದ್ರಗಳೇ ಉಡುವ ಸೀರೆ (ಉಡುಪು)ಗಳಾದ ಭೂಮಿಯ ಪತಿಯಾದವನ ಬಾಳ್ವಿಕೆಯು ನೀರೊಳಗೆ ಮಲಗಿತೇ ಶಿವಾ ಶಿವಾ! ಎಂದು ಅಶ್ವತ್ಥಾಮ ದುಃಖಿಸಿದ.
ಪದಾರ್ಥ (ಕ.ಗ.ಪ)
ಅಭಿಚಾರ-ಅಥರ್ವವೇದದಲ್ಲಿನ ಮಾರಣ, ಸ್ತಂಭನ ಮುಂತಾದ ಕರ್ಮಗಳು, ಮಾಟ ಮಂತ್ರಗಳು, ವ್ಯವಸಿತ-ವ್ಯವಸ್ಥೆ, ಚತುರಾರ್ಣವ-ಚತುಃಸ್ಸಾಗರ, ಭೂಮಿಯ ನಾಲ್ಕುದಿಕ್ಕಿಗೆ ಇರುವ ಸಮುದ್ರಗಳು, ಪರಿಧಾನ-ಸೀರೆ, ವಸ್ತ್ರ ಇತ್ಯಾದಿ ಉಡುವ ಬಟ್ಟೆಗಳು, (ವಿಪರಿಪರಿಧಾನ-ಆವರಿಸಲ್ಪಟ್ಟ) ಪೃಥ್ವೀಧವ-ಭೂದೇವಿಯ ಪತಿ ಭೂಪತಿ, ರಾಜ (ಇಲ್ಲಿ ದುರ್ಯೋಧನ)
ಟಿಪ್ಪನೀ (ಕ.ಗ.ಪ)
1)‘‘ಚತುರಾರ್ಣವ ವಿಪರಿಪರಿಧಾನ ………." ಸಮುದ್ರರಾಜ ಭೂದೇವಿಗೆ ನಾಲ್ಕೂ ದಿಕ್ಕಿನಿಂದ ಬಟ್ಟೆಯನ್ನು ಉಡಿಸಿದಂತೆ ಇದ್ದ. ಇದರಿಂದ ಭೂದೇವಿಯ ಮಾನಮರ್ಯಾದೆಗಳು ಉಳಿದುವು. ಈಗ ಅದೇ ಭೂದೇವಿಯ ಪತಿಯಾದ ದುರ್ಯೋಧನ ಸಮುದ್ರದಲ್ಲಿ ಮುಳುಗಿ ಮಾನಗೆಟ್ಟ - ಎಂಬುದು ಇಲ್ಲಿನ ಅರ್ಥವಿರಬಹುದೆಂದು ಭಾವಿಸಲಾಗಿದೆ.
ಮೂಲ ...{Loading}...
ಅವರು ಕಂಬನಿದುಂಬಿದರು ಕೌ
ರವ ಮಹಾವಂಶಾಭಿಚಾರ
ವ್ಯವಸಿತಕೆ ಫಲವಾಯ್ತಲಾ ಯಮನಂದನಾದಿಗಳ
ಶಿವಶಿವಾ ಪವಡಿಸಿತೆ ಚತುರ
ರ್ಣವ ವಿಪರಿಪರಿಧಾನ ಪೃಥ್ವೀ
ಧವನ ಬಾಳಿಕೆ ನೀರೊಳೆಂದಳಲಿದನು ಗುರುಸೂನು ॥8॥
೦೦೯ ಅಳಲದಿರಿ ಗಜಪುರಿಗೆ ...{Loading}...
ಅಳಲದಿರಿ ಗಜಪುರಿಗೆ ಸತಿಯರ
ಕಳುಹುವೆನು ನೀವವನಿಪಾಲನ
ತಿಳುಹಲಾಪಡೆ ಸಂಧಿಗೊಡಬಡಿಸುವದು ಕುರುಪತಿಯ
ಕೊಳನ ತಡಿಯಲಿ ಕಾಣದಂತಿರೆ
ಬಳಸಿ ನೀವೆಂದವರನತ್ತಲು
ಕಳುಹಿ ಸಂಜಯ ಬಂದು ಹೊಕ್ಕನು ನೃಪನ ಪಾಳೆಯವ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನೀವು ದುಃಖಿಸಬೇಡಿ. ಎಲ್ಲ ಹೆಂಗಸರನ್ನು ಹಸ್ತಿನಾವತಿಗೆ ಕಳುಹಿಸುತ್ತೇನೆ. ನೀವು ದುರ್ಯೋಧನನಿಗೆ ತಿಳಿಸಿ ಹೇಳಲು ಸಾಧ್ಯವಾಗುವುದಾದರೆ ಅವನನ್ನು ಸಂಧಿಗೆ ಒಪ್ಪಿಸುವುದು. ಕೊಳದ ದಡದಲ್ಲಿ ಯಾರಿಗೂ ಕಾಣಿಸಿಕೊಳ್ಳದಂತೆ ನೀವು ಕೊಳವನ್ನು ಸುತ್ತುವರಿಯಿರಿ ಎಂದು ಸಂಜಯ, ಅವರನ್ನು ಕೊಳದತ್ತ ಕಳುಹಿಸಿ, ತಾನು ಬಂದು ಧೃತರಾಷ್ಟ್ರನ ಬೀಡನ್ನು ಪ್ರವೇಶಿಸಿದ.
ಪದಾರ್ಥ (ಕ.ಗ.ಪ)
ಅಳಲು-ದುಃಖ
ಮೂಲ ...{Loading}...
ಅಳಲದಿರಿ ಗಜಪುರಿಗೆ ಸತಿಯರ
ಕಳುಹುವೆನು ನೀವವನಿಪಾಲನ
ತಿಳುಹಲಾಪಡೆ ಸಂಧಿಗೊಡಬಡಿಸುವದು ಕುರುಪತಿಯ
ಕೊಳನ ತಡಿಯಲಿ ಕಾಣದಂತಿರೆ
ಬಳಸಿ ನೀವೆಂದವರನತ್ತಲು
ಕಳುಹಿ ಸಂಜಯ ಬಂದು ಹೊಕ್ಕನು ನೃಪನ ಪಾಳೆಯವ ॥9॥
೦೧೦ ಅರಮನೆಗೆ ಬನ್ದಖಿಳ ...{Loading}...
ಅರಮನೆಗೆ ಬಂದಖಿಳ ಸಚಿವರ
ಕರಸಿದನು ಸರಹಸ್ಯವನು ವಿ
ಸ್ತರಿಸಿದನು ಸರ್ವಾಪಹಾರವ ನೃಪಪಲಾಯನವ
ಅರಸಿಯರಿದಳು ಭಾನುಮತಿ ಮಿ
ಕ್ಕರಸಿಯರಿಗರುಹಿಸಿದಳಂತಃ
ಪುರದೊಳಲ್ಲಿಂದಲ್ಲಿ ಹರೆದುದು ಕೂಡೆ ರಣಭೀತಿ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಂಜಯ ಧೃತರಾಷ್ಟ್ರನ ಪಾಳೆಯದ ಅರಮನೆಗೆ ಬಂದು ಎಲ್ಲಾ ಸಚಿವರನ್ನು ಕರೆಸಿದನು. ರಹಸ್ಯವಾಗಿರಬೇಕಾದ ವಿಚಾರವನ್ನು ವಿಸ್ತಾರವಾಗಿ ಕೌರವರೆಲ್ಲರ ಮರಣ ಮತ್ತು ದುರ್ಯೋಧನನ ಪಲಾಯನವನ್ನು ಎಲ್ಲರಿಗೂ ತಿಳಿಯುವಂತೆ ಹೇಳಿದನು. ಈ ವಿಚಾರ ಭಾನುಮತಿಗೂ ತಿಳಿಯಿತು. ಉಳಿದ ರಾಣಿಯರಿಗೆ ಅವಳು ತಿಳಿಸಿದಳು. ಅಂತಃಪುರದೊಳಗೆ ಅಲ್ಲಿಂದಲ್ಲಿಗೆ ಈ ಸುದ್ದಿ ಹರಡಿ ಯುದ್ಧದ ಪರಿಣಾಮದ ಭೀತಿಯು ತಲೆದೋರಿತು.
ಪದಾರ್ಥ (ಕ.ಗ.ಪ)
ಸರ್ವಾಪಹಾರ-ಎಲ್ಲರ ಪ್ರಾಣಗಳೂ ಅಪಹಾರವಾದುದು, ಹರೆದುದು-ಪ್ರಕಟವಾಯಿತು, ಸುದ್ದಿ ತಿಳಿಯಿತು.
ಟಿಪ್ಪನೀ (ಕ.ಗ.ಪ)
1)ಇದು ಸಂಜಯನ ಮೂರ್ಖತನದ ಮತ್ತೊಂದು ಉದಾರಣೆ. ವಿಷಯವು ರಹಸ್ಯವಾಗಿರಲಿ, ನಾವು ಸೋತ ಸುದ್ದಿಯನ್ನು ಹರಡಬೇಡ, ಭಾನುಮತಿಗೆ ನಾನು ಗೆಲ್ಲುವ ಬಗ್ಗೆ ನಂಬಿಕೆಯಿಂದ ಹೇಳು-ಎಂದು ದುರ್ಯೋಧನ ಹೇಳಿಕಳಿಸಿದ್ದರೆ, ಸಂಜಯ ಅದಕ್ಕೆ ವಿರುದ್ಧವಾದುದನ್ನೇ ಮಾಡಿದ್ದಾನೆ.
ಮೂಲ ...{Loading}...
ಅರಮನೆಗೆ ಬಂದಖಿಳ ಸಚಿವರ
ಕರಸಿದನು ಸರಹಸ್ಯವನು ವಿ
ಸ್ತರಿಸಿದನು ಸರ್ವಾಪಹಾರವ ನೃಪಪಲಾಯನವ
ಅರಸಿಯರಿದಳು ಭಾನುಮತಿ ಮಿ
ಕ್ಕರಸಿಯರಿಗರುಹಿಸಿದಳಂತಃ
ಪುರದೊಳಲ್ಲಿಂದಲ್ಲಿ ಹರೆದುದು ಕೂಡೆ ರಣಭೀತಿ ॥10॥
೦೧೧ ಕೂಡೆ ಗಜಬಜವಾಯ್ತು ...{Loading}...
ಕೂಡೆ ಗಜಬಜವಾಯ್ತು ಪಾಳೆಯ
ವೋಡಿತಲ್ಲಿಯದಲ್ಲಿ ಜನವ
ಲ್ಲಾಡಿದುದು ಕ್ರಯವಿಕ್ರಯದ ವಾಣಿಜ್ಯವೀಥಿಯಲಿ
ಹೂಡಿದವು ಬಂಡಿಗಳು ಹರಿದೆಡೆ
ಯಾಡಿದವು ಕೊಲ್ಲಾರಿಗಳು ರಥ
ಗೂಡಿದವು ಬದ್ದರದ ದಂಡಿಗೆ ಬಂದವರಮನೆಗೆ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೂಡಲೇ ಪಾಳೆಯದಲ್ಲಿ ಗಜಬಜವಾಯಿತು. ಅಲ್ಲಿದ್ದ ಜನವೆಲ್ಲಾ ಹಾಗೆಯೇ ಓಡಿದರು. ವ್ಯಾಪಾರದ ಬೀದಿಯಲ್ಲಿ ಜನ ತಲ್ಲಣಿಸಿದರು. ಗಾಡಿಗಳನ್ನು ಹೂಡಿದರು. ಸರಕು ತುಂಬಿದ ಗಾಡಿಗಳ ಓಡಾಟ ಪ್ರಾರಂಭವಾಯಿತು. ರಥಗಳು ಒಂದೆಡೆ ಸೇರಿ ಸಿದ್ಧವಾದುವು. ಭದ್ರವಾದ ಪಲ್ಲಕ್ಕಿಗಳು ಅರಮನೆಗೆ ಬಂದುವು.
ಪದಾರ್ಥ (ಕ.ಗ.ಪ)
ಗಜಬಜ-ಗಲಿಬಿಲಿ, ವಾಣಿಜ್ಯ-ವ್ಯಾಪಾರ, ವೀಥಿ(ಸಂ)-ಬೀದಿ, ಕೊಲ್ಲಾರಿ- ಸರಕು ತುಂಬಿದ ಬಂಡಿ, ಬದ್ಧರ-ಭದ್ರವಾದ, ಗಟ್ಟಿಮುಟ್ಟಾದ, ದಂಡಿಗೆ-ಪಲ್ಲಕ್ಕಿ, ಮೇನೆ.
ಮೂಲ ...{Loading}...
ಕೂಡೆ ಗಜಬಜವಾಯ್ತು ಪಾಳೆಯ
ವೋಡಿತಲ್ಲಿಯದಲ್ಲಿ ಜನವ
ಲ್ಲಾಡಿದುದು ಕ್ರಯವಿಕ್ರಯದ ವಾಣಿಜ್ಯವೀಥಿಯಲಿ
ಹೂಡಿದವು ಬಂಡಿಗಳು ಹರಿದೆಡೆ
ಯಾಡಿದವು ಕೊಲ್ಲಾರಿಗಳು ರಥ
ಗೂಡಿದವು ಬದ್ದರದ ದಂಡಿಗೆ ಬಂದವರಮನೆಗೆ ॥11॥
೦೧೨ ಭಾನುಮತಿ ಹೊರವಣ್ಟಳರಸನ ...{Loading}...
ಭಾನುಮತಿ ಹೊರವಂಟಳರಸನ
ಮಾನಿನಿಯರು ಸಹಸ್ರಸಂಖ್ಯೆಯೊ
ಳಾನನೇಂದುಪ್ರಭೆ ವಿಭಾಡಿಸೆ ಬಿಸಿಲ ಬೇಗೆಗಳ
ಭಾನುದತ್ತನ ಸೈಂಧವನ ರವಿ
ಸೂನುವಿನ ದುಶ್ಶಾಸನನ ಜಲ
ಜಾನನೆಯರೊಗ್ಗಿನಲಿ ರಥವೇರಿದರು ದುಗುಡದಲಿ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭಾನುಮತಿ ಪಾಳಯದಿಂದ ಹೊರಟಳು, ರಾಜನ ಮಡದಿಯರುಗಳು ಸಾವಿರ ಸಂಖ್ಯೆಯಲ್ಲಿ, ಅವರ ಮುಖಚಂದ್ರನ ಬೆಳಕು ಬಿಸಿಲಿನ ತಾಪವನ್ನು ತರಹರಿಸುವಂತೆ ಹೊರಟರು. ಭಾನುದತ್ತನ, ಸೈಂಧವನ, ಕರ್ಣನ, ದುಶ್ಯಾಸನನ ಮಡದಿಯರುಗಳು ಒಂದುಗೂಡಿ, ದುಃಖದಿಂದ ರಥಗಳನ್ನು ಹತ್ತಿದರು.
ಪದಾರ್ಥ (ಕ.ಗ.ಪ)
ಮಾನಿನಿ-ಹೆಂಗಸು, ಯುವತಿ, ಮಡದಿ, ಆನನೇಂದು ಪ್ರಭೆ-ಮುಖಚಂದ್ರನ ಹೊಳಪು, ಬೆಳಕು, ಜಲಜ-ತಾವರೆ, ನೀರಿನಲ್ಲಿ ಹುಟ್ಟಿದುದು, ದುಗುಡ-ದುಃಖ, ಚಿಂತೆ.
ಮೂಲ ...{Loading}...
ಭಾನುಮತಿ ಹೊರವಂಟಳರಸನ
ಮಾನಿನಿಯರು ಸಹಸ್ರಸಂಖ್ಯೆಯೊ
ಳಾನನೇಂದುಪ್ರಭೆ ವಿಭಾಡಿಸೆ ಬಿಸಿಲ ಬೇಗೆಗಳ
ಭಾನುದತ್ತನ ಸೈಂಧವನ ರವಿ
ಸೂನುವಿನ ದುಶ್ಶಾಸನನ ಜಲ
ಜಾನನೆಯರೊಗ್ಗಿನಲಿ ರಥವೇರಿದರು ದುಗುಡದಲಿ ॥12॥
೦೧೩ ಸರಕ ಹಿಡಿದವು ...{Loading}...
ಸರಕ ಹಿಡಿದವು ಬಂಡಿ ಶತಸಾ
ವಿರ ನೃಪಾಲಯದಿಂದ ವಿವಿಧಾ
ಭರಣಭರಿತದ ಭೂರಿ ಪೆಟ್ಟಿಗೆ ಘಾಡಿಸಿತು ರಥವ
ವರ ದುಕೂಲದ ಪಟ್ಟಕರ್ಮದ
ಥರದದಿಂದೊತ್ತಿದವು ಚಾಮೀ
ಕರಮಯದ ಬಹುವಿಧದ ಭಾಂಡದ ಬಂಡಿ ನೂಕಿದವು ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನೂರುಸಾವಿರ ಬಂಡಿಗಳು ಸಾಮಗ್ರಿಗಳನ್ನು ತುಂಬಿಕೊಂಡವು. ರಾಜಭವನದಿಂದ ವಿವಿಧ ಆಭರಣಗಳ ದೊಡ್ಡ ಪೆಟ್ಟಿಗೆಗಳು ರಥವನ್ನು ಬಲವಂತವಾಗಿ ಒಳಹೊಕ್ಕವು. ಪಟ್ಟೆಕೆಲಸಗಳನ್ನು ಮಾಡಿದ್ದ ಶ್ರೇಷ್ಠ ರೇಷ್ಮೆಯ ಬಟ್ಟೆಗಳನ್ನು ಒಂದರ ಮೇಲೊಂದರಂತೆ ಜೋಡಿಸಿ ತುಂಬಿದ, ಮತ್ತು ಚಿನ್ನದ ಬಹುವಿಧವಾದ ಪೆಟ್ಟಿಗೆಗಳನ್ನು ತುಂಬಿದ್ದ ಬಂಡಿಗಳು ಹೊರಟವು.
ಪದಾರ್ಥ (ಕ.ಗ.ಪ)
ಸರಕು-ಸಾಮಗ್ರಿಗಳು, ಪದಾರ್ಥಗಳು, ಭೂರಿ-ದೊಡ್ಡದಾದ, ಘಾಡಿಸಿತು-ಬಲವಂತವಾಗಿ ಪ್ರವೇಶಿಸಿತು, ದುಕೂಲ-ರೇಷ್ಮೆಬಟ್ಟೆ, ಪಟ್ಟಕರ್ಮದ-ಬಣ್ಣಬಣ್ಣದ ಚಿತ್ರದ ಕೆಲಸಗಳನ್ನು ಮಾಡಿರುವ, ಥರದದಿಂದ-(ಥರ-ಸ್ಥರ) ಪದರ. ಒಂದರ ಮೇಲೊಂದನ್ನು ಜೋಡಿಸಿರುವುದು, ಚಾಮೀಕರ-ಚಿನ್ನ, ಭಾಂಡ-ಪೆಟ್ಟಿಗೆ, ದೊಡ್ಡ ಪಾತ್ರೆ, ನೂಕಿದವು-ಹೊರಟವು.
ಟಿಪ್ಪನೀ (ಕ.ಗ.ಪ)
ಥರದಿಂದ –> ಥರದಲಂದ
ಮೂಲ ...{Loading}...
ಸರಕ ಹಿಡಿದವು ಬಂಡಿ ಶತಸಾ
ವಿರ ನೃಪಾಲಯದಿಂದ ವಿವಿಧಾ
ಭರಣಭರಿತದ ಭೂರಿ ಪೆಟ್ಟಿಗೆ ಘಾಡಿಸಿತು ರಥವ
ವರ ದುಕೂಲದ ಪಟ್ಟಕರ್ಮದ
ಥರದದಿಂದೊತ್ತಿದವು ಚಾಮೀ
ಕರಮಯದ ಬಹುವಿಧದ ಭಾಂಡದ ಬಂಡಿ ನೂಕಿದವು ॥13॥
೦೧೪ ಬಳಿಯ ಚೌರಿಯ ...{Loading}...
ಬಳಿಯ ಚೌರಿಯ ಹೊರೆಯ ಚಿತ್ರಾ
ವಳಿ ವಿಧಾನದ ಹಾಸುಗಳ ಹೊಂ
ಬಳಿಯ ತೆರೆಸೀರೆಗಳ ಛತ್ರ ವ್ಯಜನ ಸೀಗುರಿಯ
ಹೊಳೆವ ಪಟ್ಟೆಯಲೋಡಿಗೆಯ ಹೊಂ
ಗೆಲಸದೊಳುಝಗೆಗಳ ಸುವರ್ಣಾ
ವಳಿಯ ದಿಂಡುಗಳೊಟ್ಟಿದವು ಬಂಡಿಗಳ ಜವ ಜಡಿಯೆ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಕ್ಕದಲ್ಲಿದ್ದ ಕೂದಲಿನ ಬೀಸುಗುಚ್ಚುಗಳು, ಕಟ್ಟುಗಳು, ವಿವಿಧ ಚಿತ್ರಗಳನ್ನು ಬಿಡಿಸಿರುವ ನೆಲಹಾಸುಗಳು, ಚಿನ್ನದ ಲೇಪನವುಳ್ಳ ತೆರೆಗಳಾಗಿ ಉಪಯೋಗಿಸುವ ಬಟ್ಟೆಗಳು, ಛತ್ರಿ, ಬೀಸಣಿಗೆ, ಚಾಮರಗಳು, ಹೊಳೆಯುವ ರೇಷ್ಮೆಯ ಬಟ್ಟೆಗಳನ್ನು ಹೊದ್ದಿಸಿದ ಒರಗುದಿಂಬುಗಳು (ಲೋಡುಗಳು) ಚಿನ್ನದ ಕಸೂತಿ ಮಾಡಿರುವ ಒಳ್ಳೆಯ ಉಡುಪುಗಳು, ಚಿನ್ನದಿಂದ ಕೂಡಿದ ದಿಂಡುಗಳು ಗಾಡಿಗಳಲ್ಲಿ ಒಟ್ಟಲ್ಪಟ್ಟಿದ್ದುವು. ಗಾಡಿಗಳ ವೇಗ ಹೆಚ್ಚಾಯಿತು.
ಪದಾರ್ಥ (ಕ.ಗ.ಪ)
ಚೌರಿ-ಕೂದಲಿನಿಂದ ಮಾಡಿದ ಗಾಳಿಬೀಸುವ ಕುಚ್ಚುಗಳು, ಹೊರೆ-ಕಟ್ಟು, ಗಂಟು, ಮೂಟೆ, ಚಿತ್ರಾವಳಿವಿಧಾನದ-ವಿವಿಧ ಚಿತ್ರಗಳನ್ನು ಬಿಡಿಸಿರುವ, ಹಾಸುಗಳು-ನೆಲಕ್ಕೆ ಹಾಸುವ ಬಟ್ಟೆಗಳು ಅಥವ ಹಾಸಿಗೆಯ ಮೇಲೆ ಹಾಸುವ ಬಟ್ಟೆಗಳು, ಹೊಂಬಳಿ-ಚಿನ್ನವನ್ನು ಲೇಪಿಸಿದ ವಸ್ತ್ರ (ಪಳಿ-ವಸ್ತ್ರ), ತೆರೆಸೀರೆ-ತೆರೆಯಾಗಿ ಉಪಯೋಗಿಸುವ ಬಟ್ಟೆ, ಛತ್ರ-ಛತ್ರಿ, ವ್ಯಜನ-ಬೀಸಣಿಗೆ, ಸೀಗುರಿ-ಚಮರ, ಪಟ್ಟೆ-ರೇಷ್ಮೆಯ ವಸ್ತ್ರ, ಲೋಡಿಗೆ-ಒರಗುದಿಂಬು, ಹೊಂಗೆಲಸದ-ಚಿನ್ನದ ಕಸೂತಿಯ, ಒಳಝಗೆ-ಒಳಉಡುಪು (ಝಗೆ-ನಿಲುವಂಗಿ), ದಿಂಡು-ಬಾಳೆಯದಿಂಡಿನ ಆಕಾರದ ವಸ್ತು.
ಮೂಲ ...{Loading}...
ಬಳಿಯ ಚೌರಿಯ ಹೊರೆಯ ಚಿತ್ರಾ
ವಳಿ ವಿಧಾನದ ಹಾಸುಗಳ ಹೊಂ
ಬಳಿಯ ತೆರೆಸೀರೆಗಳ ಛತ್ರ ವ್ಯಜನ ಸೀಗುರಿಯ
ಹೊಳೆವ ಪಟ್ಟೆಯಲೋಡಿಗೆಯ ಹೊಂ
ಗೆಲಸದೊಳುಝಗೆಗಳ ಸುವರ್ಣಾ
ವಳಿಯ ದಿಂಡುಗಳೊಟ್ಟಿದವು ಬಂಡಿಗಳ ಜವ ಜಡಿಯೆ ॥14॥
೦೧೫ ಕರವತಿಗೆ ಹೊಙ್ಗಳಸ ...{Loading}...
ಕರವತಿಗೆ ಹೊಂಗಳಸ ಹೊಂಗೊ
ಪ್ಪರಿಗೆ ದೀಪಸ್ತಂಭ ಹೇಮದ
ಸರಪಣಿಯ ಮಣಿಮಯದ ಜಂತ್ರದ ಜೀವಪುತ್ರಿಗಳ
ಮರಕತದ ಮಧುಪಾತ್ರೆ ನೀಲದ
ಕರಗ ವೈಡೂರಿಯದ ಪಡಿಗವ
ಚರರು ತಂದೊಟ್ಟಿದರು ಬಂಡಿಗೆ ಭಾರಸಂಖ್ಯೆಯಲಿ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಮಂಡಲಗಳು, ಚಿನ್ನದ ಕಳಸಗಳು, ಚಿನ್ನದ ಕೊಪ್ಪರಿಗೆ, ದೀಪದ ಕಂಬಗಳು, ಚಿನ್ನದ ಸರಪಣಿಯಿಂದ ಕೂಡಿದ ವಿವಿಧ ಮಣಿಗಳನ್ನು ಮೆಟ್ಟಿರುವ ಯಂತ್ರದ ಯುವತಿಯರು, ಮರಕತದಿಂದ ಮಾಡಿದ ಮಧುಪಾತ್ರೆಗಳು, ನೀಲದ ಮಡಕೆಗಳು, ವೈಢೂರ್ಯದ ತಟ್ಟೆಗಳನ್ನು ಸೇವಕರು ಭಾರಿಸಂಖ್ಯೆಗಳಲ್ಲಿ ತಂದು ಗಾಡಿಯಲ್ಲಿ ಒಟ್ಟಿದರು.
ಪದಾರ್ಥ (ಕ.ಗ.ಪ)
ಕರವತಿಗೆ-ಕಮಂಡಲ, ನೀರಿನ ಪಾತ್ರೆ, ಜಂತ್ರದ ಜೀವ ಪುತ್ರಿಗಳು-ಯಂತ್ರಮಯವಾದ, ಜೀವಂತವಿರುವ ಯುವತಿಯರೆಂಬಂತಿರುವ ಬೊಂಬೆಗಳು, ಮರಕತ-ನವರತ್ನಗಳಲ್ಲಿ ಒಂದು, ಪಚ್ಚೆ, ನೀಲ-ನವರತ್ನಗಳಲ್ಲಿ ಒಂದು, ಕರಗ-ಮಡಿಕೆ, ಪಾತ್ರೆ, ವೈಡೂರಿಯ-ವೈಡೂರ್ಯ, ಪಡಿಗ-ತಟ್ಟೆ ,ಗಂಗಳ
ಮೂಲ ...{Loading}...
ಕರವತಿಗೆ ಹೊಂಗಳಸ ಹೊಂಗೊ
ಪ್ಪರಿಗೆ ದೀಪಸ್ತಂಭ ಹೇಮದ
ಸರಪಣಿಯ ಮಣಿಮಯದ ಜಂತ್ರದ ಜೀವಪುತ್ರಿಗಳ
ಮರಕತದ ಮಧುಪಾತ್ರೆ ನೀಲದ
ಕರಗ ವೈಡೂರಿಯದ ಪಡಿಗವ
ಚರರು ತಂದೊಟ್ಟಿದರು ಬಂಡಿಗೆ ಭಾರಸಂಖ್ಯೆಯಲಿ ॥15॥
೦೧೬ ಮೆರೆವ ಗಜ ...{Loading}...
ಮೆರೆವ ಗಜ ಹಯಶಾಲೆಯಲಿ ಮೈ
ಮುರಿಕ ವೃದ್ಧ ವ್ಯಾಧಿತಾವಳಿ
ಮರಿಗುದುರೆ ಮರಿಯಾನೆ ತೆಗೆದವು ಲಕ್ಕ ಸಂಖ್ಯೆಯಲಿ
ಉರುವ ಭಂಡಾರದ ಮಹಾರ್ಘದ
ನೆರವಣಿಗೆ ಗಾಢಿಸಿತು ಬೀದಿಯ
ತೆರಹು ಕೆತ್ತವು ಹೊತ್ತ ಸರಕಿನ ಬಹಳ ಬಂಡಿಗಳ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶೋಭಿಸುತ್ತಿದ್ದ ಗಜಶಾಲೆ, ಹಯಶಾಲೆಗಳಲ್ಲಿ ಕೈಕಾಲುಗಳಿಲ್ಲದ ಮೈಗೆ ಗಾಯಗಳಾದ, ವಯಸ್ಸಾದ, ವ್ಯಾಧಿಗ್ರಸ್ಥವಾದ ಮರಿಗುದುರೆ, ಮರಿಯಾನೆಗಳು ಲಕ್ಷ ಸಂಖ್ಯೆಯಲ್ಲಿ ಹೊರಟವು. ಶ್ರೇಷ್ಠವಾದ ಭಂಡಾರದಲ್ಲಿದ್ದ ಅತ್ಯಂತ ಬೆಲೆಯುಳ್ಳ ಸಾಮಗ್ರಿಗಳು ಒಂದೆಡೆ ಸೇರಿ ಪ್ರಕಾಶ ಬೀರಿತು. ಬೀದಿಯ ತೆರವಾಗಿದ್ದ ಖಾಲಿಸ್ಥಳಗಳು ಸರಕುಗಳನ್ನು ಹೊತ್ತ ದೊಡ್ಡ ಬಂಡಿಗಳಿಂದ ಭರ್ತಿಯಾದವು.
ಪದಾರ್ಥ (ಕ.ಗ.ಪ)
ವ್ಯಾಧಿತ-ವ್ಯಾಧಿಗ್ರಸ್ಥ, ರೋಗದ, ಉರುವ-ಶ್ರೇಷ್ಠ, ಮಹಾಘ್ರ್ಯ-ಹೆಚ್ಚುಬೆಲೆಬಾಳುವ, ನೆರವಣಿಗೆ-ಸೇರ್ಪಡೆ, ಕೂಡುವಿಕೆ ತುಂಬುವಿಕೆ, ಗಾಢಿಸು-ಪ್ರಭಾವಿಸು, ತೆರಹು-ತೆರವಾದಸ್ಥಳ, ಖಾಲಿಜಾಗ, ಕೆತ್ತವು-ಆವರಿಸಿದುವು ತುಂಬಿದವು, ಭರ್ತಿಯಾದವು.
ಮೂಲ ...{Loading}...
ಮೆರೆವ ಗಜ ಹಯಶಾಲೆಯಲಿ ಮೈ
ಮುರಿಕ ವೃದ್ಧ ವ್ಯಾಧಿತಾವಳಿ
ಮರಿಗುದುರೆ ಮರಿಯಾನೆ ತೆಗೆದವು ಲಕ್ಕ ಸಂಖ್ಯೆಯಲಿ
ಉರುವ ಭಂಡಾರದ ಮಹಾರ್ಘದ
ನೆರವಣಿಗೆ ಗಾಢಿಸಿತು ಬೀದಿಯ
ತೆರಹು ಕೆತ್ತವು ಹೊತ್ತ ಸರಕಿನ ಬಹಳ ಬಂಡಿಗಳ ॥16॥
೦೧೭ ರಾಯನರಮನೆ ಮಣ್ಡವಿಗೆ ...{Loading}...
ರಾಯನರಮನೆ ಮಂಡವಿಗೆ ಗುಡಿ
ಲಾಯ ಚವುಕಿಗೆ ನಿಖಿಳ ಭವನ ನಿ
ಕಾಯವನು ತೆಗೆದೊಟ್ಟಿದರು ಬಂಡಿಗಳ ಹಂತಿಯಲಿ
ರಾಯನನುಜರ ದ್ರೋಣ ಕೃಪ ರಾ
ಧೇಯ ಸೈಂಧವ ಶಕುನಿ ರಾಜಪ
ಸಾಯಿತರ ಗುಡಿಗೂಢಚಂಪಯವೇರಿದವು ರಥವ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಾಜನ ಅರಮನೆ, ಸಣ್ಣ ಮಂಟಪಗಳು, ಗೋಪುರಗಳು, ಆನೆ-ಕುದುರೆಗಳ ಲಾಯಗಳು, ಕಾವಲುಗಾರರ ಸಣ್ಣ ಕಟ್ಟಡಗಳು ಮುಂತಾದ ಎಲ್ಲ ಕಟ್ಟಡ ಸಮೂಹಗಳನ್ನು ತೆಗೆದು ಸಾಲು ಸಾಲು ಬಂಡಿಗಳಲ್ಲಿ ಒಟ್ಟಿದರು. ದುರ್ಯೋಧನನ ತಮ್ಮಂದಿರ, ದ್ರೋಣ, ಕೃಪ, ಕರ್ಣ, ಸೈಂಧವ, ಶಕುನಿ ಮತ್ತಿತರ ರಾಜರ ಉಡುಗೆ ತೊಡುಗೆಗಳು, ಅಧಿಕಾರಿಗಳ ತಾತ್ಕಾಲಿಕ ಮನೆಗಳು, ಡೇರೆಗಳು, ರಥದ ಮೇಲೆ ಏರಿದವು.
ಪದಾರ್ಥ (ಕ.ಗ.ಪ)
ಮಂಡವಿಗೆ-ಸಣ್ಣಮಂಟಪ, ಗುಡಿ-ಗೋಪುರ, ಚವುಕಿಗೆ-ರಕ್ಷಣಾಗೃಹ, ಪಸಾಯಿತ-ಬಟ್ಟೆಗಳ ಹೊಣೆ ಹೊತ್ತ ಅಧಿಕಾರಿ, ಗೂಢಚಂಪಯ-ಗುಡಾರದ ಡೇರೆ.
ಮೂಲ ...{Loading}...
ರಾಯನರಮನೆ ಮಂಡವಿಗೆ ಗುಡಿ
ಲಾಯ ಚವುಕಿಗೆ ನಿಖಿಳ ಭವನ ನಿ
ಕಾಯವನು ತೆಗೆದೊಟ್ಟಿದರು ಬಂಡಿಗಳ ಹಂತಿಯಲಿ
ರಾಯನನುಜರ ದ್ರೋಣ ಕೃಪ ರಾ
ಧೇಯ ಸೈಂಧವ ಶಕುನಿ ರಾಜಪ
ಸಾಯಿತರ ಗುಡಿಗೂಢಚಂಪಯವೇರಿದವು ರಥವ ॥17॥
೦೧೮ ಪಾಳೆಯಕೆ ಗಜಪುರದ ...{Loading}...
ಪಾಳೆಯಕೆ ಗಜಪುರದ ವಂಕಕೆ
ಕೀಲಿಸಿತು ದಂಡಿಗೆಯ ಸಂದಣಿ
ಮೇಲುಸರಕಿನ ಬಂಡಿ ತಲೆವೊರೆಯೆತ್ತು ಕಂಬಿಗಳ
ಹೇಳಲೇನು ಸಮುದ್ರ ವಿಭವವ
ನೇಳಿಸುವ ಪಾಳೆಯದ ಸಿರಿ ಶೂ
ನ್ಯಾಲಯಕೆ ಜೋಡಿಸಿತಲೈ ಜನಮೇಜಯ ಕ್ಷಿತಿಪ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯುದ್ಧರಂಗದಲ್ಲಿನ ಪಾಳೆಯವನ್ನು ಮತ್ತು ಹಸ್ತಿನಾವತಿಯ ಒಂದು ಭಾಗವನ್ನು ಪಲ್ಲಕ್ಕಿಗಳು ಗುಂಪು ಸೇರಿಸಿತೆಂಬಂತೆ ಸಾಲುಸಾಲಾಗಿ ಪಲ್ಲಕ್ಕಿಗಳು ಮುಂದುವರಿಯುತ್ತಿದ್ದವು. ಅತಿ ಎತ್ತರದವರೆಗೂ ಸಾಮಗ್ರಿಗಳನ್ನು ತುಂಬಿದ್ದ ಬಂಡಿಗಳ ಮೂಲಕ, ತಲೆಹೊರೆಯ ಮೇಲೆ, ಎತ್ತುಗಳ ಮೇಲೆ, ಅಡ್ಡೆಗಳ ಮೇಲೆ - ಹೀಗೆ ವಿಧವಿಧವಾಗಿ ಸಾಮಗ್ರಿಗಳ ಸಾಗಾಟ ನಡೆಯುತ್ತಿತ್ತು. ಸಮುದ್ರದ ವೈಭವವನ್ನು ನಾಚಿಸುವಂತಿದ್ದ ಪಾಳೆಯದ ಸಂಪತ್ತು ಶೂನ್ಯಾಲಯವಾದ ಹಸ್ತಿನಾವತಿಗೆ ಸೇರಿತಲ್ಲಾ ಜನಮೇಜಯರಾಜ.
ಪದಾರ್ಥ (ಕ.ಗ.ಪ)
ವಂಕ-ಭಾಗ, ಪಕ್ಕ, ಒಂದು ಕಡೆ, ಕೀಲಿಸು-ಜೋಡಿಸು, ಸೇರಿಸು, ಕಂಬಿ-ಸಾಮಗ್ರಿಗಳನ್ನು ಅಥವ ನೀರನ್ನು ಹೊರಲು ಉಪಯೋಗಿಸುವ ಕಬ್ಬಿಣದ (ಅಥವ ಬಿದಿರಿನ) ಅಡ್ಡೆ, ಸಮುದ್ರವಿಭವ-ಯಾವಾಗಲೂ ಭರ್ತಿಯಾಗಿರುವ ಸಮುದ್ರದ ವೈಭವ, ಏಳಿಸು-ಏಡಿಸು, ನಾಚಿಕೆಪಡಿಸು, ಶೂನ್ಯಾಲಯ-ಖಾಲಿಯಾದ ಮನೆ, ಜೋಡಿಸಿತು-ಸೇರಿಸಿತು.
ಮೂಲ ...{Loading}...
ಪಾಳೆಯಕೆ ಗಜಪುರದ ವಂಕಕೆ
ಕೀಲಿಸಿತು ದಂಡಿಗೆಯ ಸಂದಣಿ
ಮೇಲುಸರಕಿನ ಬಂಡಿ ತಲೆವೊರೆಯೆತ್ತು ಕಂಬಿಗಳ
ಹೇಳಲೇನು ಸಮುದ್ರ ವಿಭವವ
ನೇಳಿಸುವ ಪಾಳೆಯದ ಸಿರಿ ಶೂ
ನ್ಯಾಲಯಕೆ ಜೋಡಿಸಿತಲೈ ಜನಮೇಜಯ ಕ್ಷಿತಿಪ ॥18॥
೦೧೯ ತುಮ್ಬಿತಿದು ಗಜಪುರವನಲ್ಲಿಯ ...{Loading}...
ತುಂಬಿತಿದು ಗಜಪುರವನಲ್ಲಿಯ
ಕಂಬನಿಯ ಕಾಲುವೆಯನದನೇ
ನೆಂಬೆನೈ ಗಜಬಜಿಕೆ ಮೊಳೆತುದು ಕೇರಿಕೇರಿಯಲಿ
ಲಂಬಿಸಿತು ಭಯತಿಮಿರ ಶೋಕಾ
ಡಂಬರದ ಡಾವರ ವಿವೇಕವ
ಚುಂಬಿಸಿತು ಧೃತರಾಷ್ಟ್ರ ವಿದುರರ ಪೌರ ಪರಿಜನದ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧೃತರಾಷ್ಟ್ರನ ಪರಿವಾರ, ಹೆಂಗಸರ ಸಮೂಹ ಮತ್ತು ವಿವಿಧ ಸಾಮಗ್ರಿಗಳು ಹಸ್ತಿನಾವತಿಯಲ್ಲಿ ತುಂಬಿದುವು. ಅಲ್ಲಿಯ ಕಣ್ಣೀರಿನ ಕಾಲುವೆಯನ್ನು ಏನು ಹೇಳಲಿ ಕೇರಿ ಕೇರಿಗಳಲ್ಲಿ ಗಜಬಜ ಶಬ್ದವು ಪ್ರಾರಂಭವಾಯಿತು. ಭಯವೆಂಬ ಕತ್ತಲೆ ಆವರಿಸಿತು. ಧೃತರಾಷ್ಟ್ರ, ವಿದುರ, ಪುರಜನರು ಮತ್ತು ಪರಿವಾರದವರ ತೀವ್ರವಾಗಿ ಪ್ರಕಟವಾದ ಶೋಕ ವಿವೇಕವನ್ನು ಮೈಮರೆಸಿತು.
ಪದಾರ್ಥ (ಕ.ಗ.ಪ)
ಲಂಬಿಸು-ವಿಸ್ತಾರವಾಗು, ಹಿಗ್ಗು, ಹೆಚ್ಚಿಸು, ಭಯತಿಮಿರ-ಭಯವೆಂಬ ಕತ್ತಲೆ, ಶೋಕಾಡಂಬರ-ದುಃಖದ ಪ್ರಕಟ, ಡಾವರ-ತೀವ್ರತೆ, ಭಯಂಕರ, ಕೋಟಲೆ, ಪರಿಜನ-ಪರಿವಾರದವರು, ಬಂಧುಗಳು.
ಮೂಲ ...{Loading}...
ತುಂಬಿತಿದು ಗಜಪುರವನಲ್ಲಿಯ
ಕಂಬನಿಯ ಕಾಲುವೆಯನದನೇ
ನೆಂಬೆನೈ ಗಜಬಜಿಕೆ ಮೊಳೆತುದು ಕೇರಿಕೇರಿಯಲಿ
ಲಂಬಿಸಿತು ಭಯತಿಮಿರ ಶೋಕಾ
ಡಂಬರದ ಡಾವರ ವಿವೇಕವ
ಚುಂಬಿಸಿತು ಧೃತರಾಷ್ಟ್ರ ವಿದುರರ ಪೌರ ಪರಿಜನದ ॥19॥
೦೨೦ ಬನ್ದು ಸಞ್ಜಯನನ್ಧನೃಪತಿಯ ...{Loading}...
ಬಂದು ಸಂಜಯನಂಧನೃಪತಿಯ
ಮಂದಿರವ ಹೊಕ್ಕಖಿಳ ನಾರೀ
ವೃಂದವನು ಕಳುಹಿದನು ದಂಡಿಗೆಗಳಲಿ ಮನೆಮನೆಗೆ
ಬಂದರಾರೆನೆ ಸಂಜಯನು ಜೀ
ಯೆಂದಡುತ್ಸಾಹದಲಿ ಬಂದೈ
ತಂದೆ ಸಂಜಯ ಬಾಯೆನುತ ತಡವಿದನು ಬೋಳೈಸಿ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಂಜಯ ಬಂದು, ಧೃತರಾಷ್ಟ್ರನ ಮನೆಯನ್ನು ಪ್ರವೇಶಿಸಿ ಸಮಸ್ತ ಮಹಿಳಾ ಸಮೂಹವನ್ನು ಪಲ್ಲಕ್ಕಿಗಳಲ್ಲಿ ಅವರವರ ಮನೆಗಳಿಗೆ ಕಳಿಸಿದನು. ಬಂದವರು ಯಾರು - ಎಂದು ಧೃತರಾಷ್ಟ್ರ ಕೇಳಲು - ಸಂಜಯ, ಮಹಾಸ್ವಾಮಿ - ಎನ್ನಲು ಉತ್ಸಾಹದಿಂದ, ತಂದೆ ಸಂಜಯ, ಬಂದೆಯಾ ಬಾ- ಎನ್ನುತ್ತ ಸಮಾಧಾನಮಾಡಿ ಅವನ ಮೈತಡವಿದ.
ಪದಾರ್ಥ (ಕ.ಗ.ಪ)
ದಂಡಿಗೆ-ಪಲ್ಲಕ್ಕಿ, ಮೇನೆ
ಮೂಲ ...{Loading}...
ಬಂದು ಸಂಜಯನಂಧನೃಪತಿಯ
ಮಂದಿರವ ಹೊಕ್ಕಖಿಳ ನಾರೀ
ವೃಂದವನು ಕಳುಹಿದನು ದಂಡಿಗೆಗಳಲಿ ಮನೆಮನೆಗೆ
ಬಂದರಾರೆನೆ ಸಂಜಯನು ಜೀ
ಯೆಂದಡುತ್ಸಾಹದಲಿ ಬಂದೈ
ತಂದೆ ಸಂಜಯ ಬಾಯೆನುತ ತಡವಿದನು ಬೋಳೈಸಿ ॥20॥
೦೨೧ ಹೋಗಿ ತಳುವಿದೆ ...{Loading}...
ಹೋಗಿ ತಳುವಿದೆ ಕೌರವೇಂದ್ರನ
ನೀಗಿದಳೆ ಜಯಲಕ್ಷ್ಮಿ ಪಾಂಡವ
ರಾಗುಹೋಗೇನಾಯ್ತು ಶಕುನಿಯ ಹಯದ ಮೋಹರವ
ತಾಗಿ ಮುರಿದನೆ ಭೀಮನೀ ಮೇ
ಲ್ಪೋಗಿನಾಹವವೇನು ರಾಯನ
ತಾಗು ಥಟ್ಟೇನಾಯ್ತು ಸಂಜಯ ತಿಳಿಯಹೇಳೆಂದ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೋಗಿ, ಬರಲು ತಡಮಾಡಿದೆ. ಜಯಲಕ್ಷ್ಮಿಯು ಕೌರವೇಂದ್ರನನ್ನು ಬಿಟ್ಟು ಹೋದಳೆ, ಪಾಂಡವರ ಆಗು ಹೋಗುಗಳು ಏನಾಯ್ತು, ಭೀಮನು, ಶಕುನಿಯ ಕುದುರೆಯ ಸೈನ್ಯವನ್ನು ಎದುರಿಸಿ ನಾಶ ಮಾಡಿದನೆ? ಆ ನಂತರದ ಯುದ್ಧದ ಸಮಾಚಾರವೇನು, ದುರ್ಯೋಧನನ ಶಕ್ತವಾದ ಸೈನ್ಯವೇನಾಯಿತು - ಸಂಜಯ, ತಿಳಿಸಿಹೇಳು ಎಂದು ಧೃತರಾಷ್ಟ್ರ ಕೇಳಿದ.
ಪದಾರ್ಥ (ಕ.ಗ.ಪ)
ತಳುವು-ತಡಮಾಡು, ನೀಗು-ಕಳೆ, ಬಿಟ್ಟು ಹೋಗು, ಮೇಲ್ಪೋಗು-ಮೇಲೆ ಪೋಗಿನ-ಮುಂದಿನ ಆಗು ಹೋಗು, ಆ ನಂತರದ, ತಾಗುಥಟ್ಟು-ಯುದ್ಧಮಾಡುವ ಶಕ್ತಿಯುತ ಸೈನ್ಯ
ಮೂಲ ...{Loading}...
ಹೋಗಿ ತಳುವಿದೆ ಕೌರವೇಂದ್ರನ
ನೀಗಿದಳೆ ಜಯಲಕ್ಷ್ಮಿ ಪಾಂಡವ
ರಾಗುಹೋಗೇನಾಯ್ತು ಶಕುನಿಯ ಹಯದ ಮೋಹರವ
ತಾಗಿ ಮುರಿದನೆ ಭೀಮನೀ ಮೇ
ಲ್ಪೋಗಿನಾಹವವೇನು ರಾಯನ
ತಾಗು ಥಟ್ಟೇನಾಯ್ತು ಸಂಜಯ ತಿಳಿಯಹೇಳೆಂದ ॥21॥
೦೨೨ ಶಕುನಿ ಬಿದ್ದನು ...{Loading}...
ಶಕುನಿ ಬಿದ್ದನು ಜೀಯ ಸಹದೇ
ವಕನ ಕೈಯಲುಳೂಕ ಮಡಿದನು
ನಕುಲನಂಬಿನಲಾ ತ್ರಿಗರ್ತ ಸುಶರ್ಮಕಾದಿಗಳು
ಸಕಲ ಗಜಹಯಸೇನೆ ಸಮಸ
ಪ್ತಕರು ಪಾರ್ಥನ ಶರದಲಮರೀ
ನಿಕರವನು ಸೇರಿದರು ಹೇಳುವುದೇನು ರಣರಸವ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸ್ವಾಮಿ, ಸಹದೇವನಿಂದ ಶಕುನಿ ಹತನಾದ. ನಕುಲನ ಬಾಣದಿಂದ ಉಲೂಕ ಮಡಿದ. ತ್ರಿಗರ್ತರಾದ ಸುಶರ್ಮಾದಿಗಳು, ಗಜಸೈನ್ಯ, ಹಯಸೈನ್ಯ ಸಮಸಪ್ತಕರು, ಅರ್ಜುನನ ಬಾಣಗಳಿಂದ ನಿರ್ನಾಮವಾಗಿ ದೇವತಾ ಸ್ತ್ರೀಯರ ಸಮೂಹವನ್ನು ಸೇರಿದರು. ರಣರಸವನ್ನು ಹೇಳುವುದೇನು - ಎಂದು ಸಂಜಯ ಧೃತರಾಷ್ಟ್ರನಿಗೆ ಹೇಳಿದ.
ಪದಾರ್ಥ (ಕ.ಗ.ಪ)
ಅಮರೀನಿಕರ-ದೇವತಾಸ್ತ್ರೀ ಸಮೂಹ
ಮೂಲ ...{Loading}...
ಶಕುನಿ ಬಿದ್ದನು ಜೀಯ ಸಹದೇ
ವಕನ ಕೈಯಲುಳೂಕ ಮಡಿದನು
ನಕುಲನಂಬಿನಲಾ ತ್ರಿಗರ್ತ ಸುಶರ್ಮಕಾದಿಗಳು
ಸಕಲ ಗಜಹಯಸೇನೆ ಸಮಸ
ಪ್ತಕರು ಪಾರ್ಥನ ಶರದಲಮರೀ
ನಿಕರವನು ಸೇರಿದರು ಹೇಳುವುದೇನು ರಣರಸವ ॥22॥
೦೨೩ ಬಳಿಕ ನೂರಾನೆಯಲಿ ...{Loading}...
ಬಳಿಕ ನೂರಾನೆಯಲಿ ನಿನ್ನವ
ನಳವಿಗೊಟ್ಟನು ಭೀಮಸೇನನ
ಚಲಗತಿಯ ಚಾತುರ ಚಪೇಟ ಪದಪ್ರಹಾರದಲಿ
ಕಳನೊಳಗೆ ಕೋಡೂರಿ ಮಗ್ಗುಲ
ನೆಲಕೆ ಕೀಲಿಸಲಾನೆಯಿಂದಿಳೆ
ಗಿಳಿದು ಹಾಯ್ದನು ಭಯದಿನೇಕಾಂಗದಲಿ ಕುರುರಾಯ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಂತರ ಒಂದು ನೂರು ಆನೆಗಳೊಂದಿಗೆ ನಿನ್ನ ದುರ್ಯೋಧನ ಯುದ್ಧಕ್ಕೆ ಎದುರಾದ, ಭೀಮಸೇನನ ವೇಗಗತಿಯ, ಚಾತುರ್ಯದ, ಅಂಗೈ ಮತ್ತು ಪಾದಗಳ ಹೊಡೆತದಿಂದ ಯುದ್ಧಭೂಮಿಯಲ್ಲಿ ದಂತಗಳನ್ನು ನೆಲಕ್ಕೆ ಊರಿ ಒಂದು ಮಗ್ಗುಲನ್ನು ನೆಲಕ್ಕೆ ತಾಗಿಸಿ ಒರಗಿದ ಆನೆಯ ಮೇಲಿನಿಂದ ದುರ್ಯೋಧನ ನೆಲಕ್ಕೆ ನೆಗೆದು ಭಯದಿಂದ ಏಕಾಂಗಿಯಾಗಿ ಓಡಿದ.
ಪದಾರ್ಥ (ಕ.ಗ.ಪ)
ಅಳವಿಗೊಡು-ಯುದ್ಧಕ್ಕೆ ಎದುರಾಗು, ಚಲಗತಿ-ಚಂಚಲ ನಡಿಗೆ, ವೇಗ, ಚಾತುರ-ಚಾತುರ್ಯ, ಬುದ್ಧಿವಂತಿಕೆ, ಚಪೇಟ-ಬೆರಳುಗಳನ್ನು ಬಿಚ್ಚಿದ ಅಂಗೈ, ಅಂಗೈನಿಂದ ಹೊಡೆತ.
ಮೂಲ ...{Loading}...
ಬಳಿಕ ನೂರಾನೆಯಲಿ ನಿನ್ನವ
ನಳವಿಗೊಟ್ಟನು ಭೀಮಸೇನನ
ಚಲಗತಿಯ ಚಾತುರ ಚಪೇಟ ಪದಪ್ರಹಾರದಲಿ
ಕಳನೊಳಗೆ ಕೋಡೂರಿ ಮಗ್ಗುಲ
ನೆಲಕೆ ಕೀಲಿಸಲಾನೆಯಿಂದಿಳೆ
ಗಿಳಿದು ಹಾಯ್ದನು ಭಯದಿನೇಕಾಂಗದಲಿ ಕುರುರಾಯ ॥23॥
೦೨೪ ಕುರುಪತಿಯನರಸುತ್ತ ತಾನೈ ...{Loading}...
ಕುರುಪತಿಯನರಸುತ್ತ ತಾನೈ
ತರಲು ಸಾತ್ಯಕಿ ಕಂಡು ಸೂಠಿಯ
ಲುರವಣಿಸಿ ಹರಿತಂದು ಹಿಡಿದನು ಹೊಯ್ದು ಕೆಲಬಲನ
ಕರೆದು ಧೃಷ್ಟದ್ಯುಮ್ನ ತನ್ನಯ
ಶಿರವನರಿಯೆನೆ ಬಳಿಕ ಸಾತ್ಯಕಿ
ಕರದ ಖಡುಗವನುಗಿದು ಹೂಡಿದನೆನ್ನ ಗಂಟಲಲಿ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಾನು ದುರ್ಯೋಧನನನ್ನು ಹುಡುಕುತ್ತಾ ಬರುತ್ತಿರಲು, ಸಾತ್ಯಕಿ ಕಂಡು ವೇಗವಾಗಿ, ಆತುರದಿಂದ ಓಡಿಬಂದು ನನ್ನನ್ನು ಹಿಡಿದು ಕೆಲಬಲದಲ್ಲಿದ್ದವರನ್ನು ಹೊಡೆದು ಓಡಿಸಿದ. ನಂತರ ಧೃಷ್ಟದ್ಯುಮ್ನನು ಕರೆದು ಕರೆದು ನನ್ನ ತಲೆಯನ್ನು ಕತ್ತರಿಸಲು ಸಾತ್ಯಕಿಗೆ ತಿಳಿಸಿದ. ಆಗ ಸಾತ್ಯಕಿ ತನ್ನ ಕೈಯಲ್ಲಿದ್ದ ಕತ್ತಿಯನ್ನು ಸೆಳೆದು ನನ್ನ ಗಂಟಲಿಗೆ ಹೂಡಿದ.
ಪದಾರ್ಥ (ಕ.ಗ.ಪ)
ಸೂಠಿ-ವೇಗ, ಉರವಣೆ-ಆತುರ,
ಪಾಠಾನ್ತರ (ಕ.ಗ.ಪ)
ಶಿರವನರಿಯನೆ-ಶಿರವನರಿಯೆನೆ
ಪಾಠಾಂತರ ಸೂಚನೆ
ಗದಾಪರ್ವ: ಮೈ.ವಿ.ವಿ.
ಸಂ : ಎನ್.ಅನಂತರಂಗಾಚಾರ್
ಮೂಲ ...{Loading}...
ಕುರುಪತಿಯನರಸುತ್ತ ತಾನೈ
ತರಲು ಸಾತ್ಯಕಿ ಕಂಡು ಸೂಠಿಯ
ಲುರವಣಿಸಿ ಹರಿತಂದು ಹಿಡಿದನು ಹೊಯ್ದು ಕೆಲಬಲನ
ಕರೆದು ಧೃಷ್ಟದ್ಯುಮ್ನ ತನ್ನಯ
ಶಿರವನರಿಯೆನೆ ಬಳಿಕ ಸಾತ್ಯಕಿ
ಕರದ ಖಡುಗವನುಗಿದು ಹೂಡಿದನೆನ್ನ ಗಂಟಲಲಿ ॥24॥
೦೨೫ ಜಲಧಿಯಲಿ ಫಣಿವದನದಲಿ ...{Loading}...
ಜಲಧಿಯಲಿ ಫಣಿವದನದಲಿ ರಿಪು
ಬಲದ ಮುಖದಲಿ ಸಿಡಿಲ ಹೊಯ್ಲಲಿ
ಹಳುವದಲಿ ಗಿರಿಶಿಖರದಲಿ ದಾವಾಗ್ನಿ ಮಧ್ಯದಲಿ
ಸಿಲುಕಿದಡೆ ಬಿಡಿಸುವವಲೇ ಪ್ರತಿ
ಫಲಿತ ಪೂರ್ವಾದತ್ತ ಪುಣ್ಯಾ
ವಳಿಗಳೆಂಬುದು ತನ್ನೊಳಾದುದು ಭೂಪ ಕೇಳ್ ಎಂದ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಮುದ್ರದಲ್ಲಿ, ಸರ್ಪದಬಾಯಿಯಲ್ಲಿ ಶತ್ರು ಸೈನ್ಯದ ಮುಂದೆ, ಸಿಡಿಲ ಹೊಡೆತದಲ್ಲಿ, ಕಾಡಿನಲ್ಲಿ, ಬೆಟ್ಟದ ಶಿಖರದಲ್ಲಿ, ದಾವಾಗ್ನಿಯ ಮಧ್ಯದಲ್ಲಿ ಸಿಕ್ಕಿಕೊಂಡರೆ ಹಿಂದೆ ಸಂಗ್ರಹಿಸಿದ ಪುಣ್ಯಗಳೇ ಈಗ ಪ್ರತಿಫಲಿಸಿ ಬಿಡಿಸುತ್ತವಲ್ಲವೇ - ಎಂಬ ಮಾತು ನನ್ನ ವಿಷಯದಲ್ಲಿ ನಿಜವಾಯಿತು - ಎಂದು ಸಂಜಯ ಧೃತರಾಷ್ಟ್ರನಿಗೆ ಹೇಳಿದ.
ಪದಾರ್ಥ (ಕ.ಗ.ಪ)
ಫಣಿವದನ-ಸರ್ಪನ ಬಾಯಿ, ಹೊಯ್ಲ-ಹೊಡೆತ, ಹಳುವ-ಅರಣ್ಯ, ದಾವಾಗ್ನಿ-ಪ್ರಚಂಡ ಬೆಂಕಿ, ಪೂರ್ವಾದತ್ತ-ಹಿಂದೆ ಸೇರಿಸಿಕೊಂಡ, ಹಿಂದಿನಿಂದ ಬಂದ
ಮೂಲ ...{Loading}...
ಜಲಧಿಯಲಿ ಫಣಿವದನದಲಿ ರಿಪು
ಬಲದ ಮುಖದಲಿ ಸಿಡಿಲ ಹೊಯ್ಲಲಿ
ಹಳುವದಲಿ ಗಿರಿಶಿಖರದಲಿ ದಾವಾಗ್ನಿ ಮಧ್ಯದಲಿ
ಸಿಲುಕಿದಡೆ ಬಿಡಿಸುವವಲೇ ಪ್ರತಿ
ಫಲಿತ ಪೂರ್ವಾದತ್ತ ಪುಣ್ಯಾ
ವಳಿಗಳೆಂಬುದು ತನ್ನೊಳಾದುದು ಭೂಪ ಕೇಳೆಂದ ॥25॥
೦೨೬ ಆವ ವಹಿಲದೊಳಾದುದಾವಿ ...{Loading}...
ಆವ ವಹಿಲದೊಳಾದುದಾವಿ
ರ್ಭಾವವೆಂದಾನರಿಯೆನಾಗಳೆ
ದೇವಮುನಿಯಡ್ಡೈಸಿ ಹಿಡಿದನು ಕೊರಳಡಾಯುಧವ
ಸಾವು ತಪ್ಪಿತು ಬಾದರಾಯಣ
ನೋವಿ ಕೃಪೆಯಲಿ ಮೈದಡವಿ ಸಂ
ಭಾವಿಸುತ ಕುರುಪತಿಯನರಸೆಂದೆನಗೆ ನೇಮಿಸಿದ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯಾವ ವೇಗದಲ್ಲಿ ಬರವಾಯಿತೆಂದು ನಾನು ತಿಳಿಯೆನು - ಆಗಲೇ ದೇವಮುನಿಯಾದ ವ್ಯಾಸ ಅಲ್ಲಿಗೆ ಬಂದು ನನ್ನ ಗಂಟಲಿಗೆ ಒಡ್ಡಿದ್ದ ಕತ್ತಿಯನ್ನು ತಡೆದು ಹಿಡಿದುಕೊಂಡನು. ನನಗೆ ಬಂದ ಸಾವು ತಪ್ಪಿತು. ವ್ಯಾಸನು ಪ್ರೀತಿಯಿಂದ ಮತ್ತು ಕೃಪೆಯಿಂದ ನನ್ನ ಮೈದಡವಿ ನನಗೆ ಸಾಂತ್ವನ ನೀಡಿ ಕುರುಪತಿಯನ್ನು ಹುಡುಕು - ಎಂದು ನನಗೆ ಆದೇಶೀಸಿದ.
ಪದಾರ್ಥ (ಕ.ಗ.ಪ)
ವಹಿಲ-ಶೀಘ್ರವಾಗಿ, ಬೇಗ, ಆವಿರ್ಭಾವ-ಬರವು, ಪ್ರತ್ಯಕ್ಷ, ಅಡ್ಡೈಸು-ತಡೆ, ಅಡ್ಡಿಮಾಡು, ಓವಿ-ಪ್ರೀತಿಯಿಂದ, ಸಂಭಾವಿಸು-ಸಾಂತ್ವನ ನೀಡು, ಸಂತೈಸು.
ಮೂಲ ...{Loading}...
ಆವ ವಹಿಲದೊಳಾದುದಾವಿ
ರ್ಭಾವವೆಂದಾನರಿಯೆನಾಗಳೆ
ದೇವಮುನಿಯಡ್ಡೈಸಿ ಹಿಡಿದನು ಕೊರಳಡಾಯುಧವ
ಸಾವು ತಪ್ಪಿತು ಬಾದರಾಯಣ
ನೋವಿ ಕೃಪೆಯಲಿ ಮೈದಡವಿ ಸಂ
ಭಾವಿಸುತ ಕುರುಪತಿಯನರಸೆಂದೆನಗೆ ನೇಮಿಸಿದ ॥26॥
೦೨೭ ಬೀಳುಕೊಣ್ಡೆನು ಮುನಿಯನವನೀ ...{Loading}...
ಬೀಳುಕೊಂಡೆನು ಮುನಿಯನವನೀ
ಪಾಲಕನನರಸಿದೆನು ಕಳನೊಳು
ಸಾಲ ಹೆಣನೊಟ್ಟಿಲ ಕಬಂಧದ ರುಧಿರಪೂರದಲಿ
ಬೀಳುತೇಳುತ ನಿಲುತ ಬಳಲಿದು
ಕಾಲುನಡೆಯಲಿ ಸುಳಿವ ಕುರುಭೂ
ಪಾಲಕನ ಕಂಡೊಡನೆ ಬಂದೆನು ಕೊಳನ ತಡಿಗಾಗಿ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವ್ಯಾಸಮುನಿಯನ್ನು ಬೀಳುಕೊಂಡು ಬಂದು, ದುರ್ಯೋಧನನನ್ನು ಯುದ್ಧ ಭೂಮಿಯಲ್ಲಿ ಹುಡುಕಿದೆ. ಸಾಲಾಗಿ ಒಟ್ಟಿದ್ದ ಹೆಣಗಳ ಮೆದೆಯನ್ನು, ರಕ್ತ ಸುರಿಯುತ್ತಿದ್ದ ದೇಹದ ಮುಂಡಗಳನ್ನು ಹತ್ತಿ ಇಳಿದು, ಬೀಳುತ್ತ, ಏಳುತ್ತ, ನಿಲ್ಲುತ್ತ ಬಳಲಿ ಕಾಲುನಡಿಗೆಯಲ್ಲಿ ನಡೆಯುತ್ತಿದ್ದ ಕುರುಭೂಪಾಲಕನನ್ನು ಕಂಡು ಅವನೊಡನೆ ಕೊಳದ ದಡಕ್ಕೆ ಬಂದೆ.
ಮೂಲ ...{Loading}...
ಬೀಳುಕೊಂಡೆನು ಮುನಿಯನವನೀ
ಪಾಲಕನನರಸಿದೆನು ಕಳನೊಳು
ಸಾಲ ಹೆಣನೊಟ್ಟಿಲ ಕಬಂಧದ ರುಧಿರಪೂರದಲಿ
ಬೀಳುತೇಳುತ ನಿಲುತ ಬಳಲಿದು
ಕಾಲುನಡೆಯಲಿ ಸುಳಿವ ಕುರುಭೂ
ಪಾಲಕನ ಕಂಡೊಡನೆ ಬಂದೆನು ಕೊಳನ ತಡಿಗಾಗಿ ॥27॥
೦೨೮ ಇಳಿದು ಸರಸಿಯ ...{Loading}...
ಇಳಿದು ಸರಸಿಯ ಮಧ್ಯದಲಿ ನೃಪ
ತಿಲಕ ನಿಂದನು ಪಾಳೆಯವ ನೀ
ಕಳುಹು ಗಜಪುರಿಗೆನಲು ಬಂದೆನು ಪಥದ ಮಧ್ಯದಲಿ
ಸುಳಿವ ಕಂಡೆನು ಕೃಪನನಾ ಗುರು
ಗಳ ಮಗನ ಕೃತವರ್ಮಕನನಂ
ದುಳಿದ ಮೂವರ ಕಳುಹಿದೆನು ಕುರುಪತಿಯ ಹೊರೆಗಾಗಿ ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸರೋವರದ ಒಳಕ್ಕೆ ಇಳಿದು ಅದರ ಮಧ್ಯಕ್ಕೆ ಹೋಗಿ ಕುರುಭೂಪಾಲ ನಿಂತುಕೊಂಡು, ನೀನು ಪಾಳೆಯವನ್ನು ಹಸ್ತಿನಾವತಿಗೆ ಕಳುಹಿಸು ಎಂದು ಹೇಳಲು ಹಿಂದಿರುಗಿ ಬರುತ್ತಿದ್ದ ದಾರಿಯ ಮಧ್ಯದಲ್ಲಿ ಕೃಪ ಅಶ್ವತ್ಥಾಮ ಕೃತವರ್ಮರನ್ನು ಕಂಡೆನು. ಅಂದು ಬದುಕಿ ಉಳಿದಿದ್ದ ಈ ಮೂವರನ್ನು ದುರ್ಯೋಧನನ ಸಮೀಪಕ್ಕೆ ಕಳುಹಿಸಿದೆನು.
ಪದಾರ್ಥ (ಕ.ಗ.ಪ)
ಪಥ-ದಾರಿ, ಹೊರೆಗೆ-ಸಮೀಪಕ್ಕೆ.
ಮೂಲ ...{Loading}...
ಇಳಿದು ಸರಸಿಯ ಮಧ್ಯದಲಿ ನೃಪ
ತಿಲಕ ನಿಂದನು ಪಾಳೆಯವ ನೀ
ಕಳುಹು ಗಜಪುರಿಗೆನಲು ಬಂದೆನು ಪಥದ ಮಧ್ಯದಲಿ
ಸುಳಿವ ಕಂಡೆನು ಕೃಪನನಾ ಗುರು
ಗಳ ಮಗನ ಕೃತವರ್ಮಕನನಂ
ದುಳಿದ ಮೂವರ ಕಳುಹಿದೆನು ಕುರುಪತಿಯ ಹೊರೆಗಾಗಿ ॥28॥
೦೨೯ ತನ್ದೆನಿಲ್ಲಿಗೆ ಸಕಲ ...{Loading}...
ತಂದೆನಿಲ್ಲಿಗೆ ಸಕಲ ನಾರೀ
ವೃಂದವನು ಕುರುಪತಿಯ ನೇಮದ
ಲಿಂದಿನೀ ವೃತ್ತಾಂತ ವರ್ತಿಸಿತಿಲ್ಲಿ ಪರಿಯಂತ
ಮುಂದೆ ಹೇಳುವುದೇನು ನೀ ಬೆಸ
ಸೆಂದಡವನೀಪತಿಯ ಹೊರೆಗೈ
ತಂದನೇ ಗುರುಸೂನು ಮೇಲಣ ಹದನ ಹೇಳೆಂದ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುರ್ಯೋಧನನ ಆದೇಶದಂತೆ ಎಲ್ಲ ಸ್ತ್ರೀ ಸಮುದಾಯವನ್ನು ಹಸ್ತಿನಾಪುರಕ್ಕೆ ತಂದೆ. ಇಂದಿನ ಈ ಸಮಾಚಾರವು ಇಲ್ಲಿಯವರೆಗೆ ಹೀಗೆ ನಡೆಯಿತು; ಮುಂದೆ ಹೇಳುವುದೇನೆಂದು ನೀನು ಆದೇಶಿಸು - ಎಂದು ಸಂಜಯ ಕೇಳಲು, ಅಶ್ವತ್ಥಾಮನು ದುರ್ಯೋಧನನ ಸಮೀಪಕ್ಕೆ ಬಂದನೇ, ಅದರ ನಂತರದ ವೃತ್ತಾಂತವನ್ನು ಹೇಳು - ಎಂದು ಧೃತರಾಷ್ಟ್ರ ಕೇಳಿದ.
ಪದಾರ್ಥ (ಕ.ಗ.ಪ)
ನೇಮ-ಹೇಳಿಕೆ, ಆದೇಶ, ಆಜ್ಞೆ, ವರ್ತಿಸಿತು-ನಡೆಯಿತು, ಪರಿಯಂತ-ವರೆಗೆ, ಹದನ-ವಾರ್ತೆ, ವಿಚಾರ, ಕಾರಣ.
ಮೂಲ ...{Loading}...
ತಂದೆನಿಲ್ಲಿಗೆ ಸಕಲ ನಾರೀ
ವೃಂದವನು ಕುರುಪತಿಯ ನೇಮದ
ಲಿಂದಿನೀ ವೃತ್ತಾಂತ ವರ್ತಿಸಿತಿಲ್ಲಿ ಪರಿಯಂತ
ಮುಂದೆ ಹೇಳುವುದೇನು ನೀ ಬೆಸ
ಸೆಂದಡವನೀಪತಿಯ ಹೊರೆಗೈ
ತಂದನೇ ಗುರುಸೂನು ಮೇಲಣ ಹದನ ಹೇಳೆಂದ ॥29॥
೦೩೦ ಅರಸ ಕೇಳ್ ...{Loading}...
ಅರಸ ಕೇಳ್ ಕೃಪ ಗುರುಜ ಕೃತವ
ರ್ಮರು ರಥಾಶ್ವಂಗಳನು ದೂರದ
ಲಿರಿಸಿ ತಲೆಮುಸುಕಿನಲಿ ಬಂದರು ಕೊಳನ ತಡಿಗಾಗಿ
ತರುಲತೆಗಳಿರುಬಿನಲಿ ಕಂಜಾ
ಕರದ ತಡಿಯಲಿ ನಿಂದು ಮೆಲ್ಲನೆ
ಕರೆದು ಕೇಳಿಸಿ ಹೇಳಿದರು ತಂತಮ್ಮ ಹೆಸರುಗಳ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧೃತರಾಷ್ಟ್ರ ಕೇಳು, ಕೃಪ, ಅಶ್ವತ್ಥಾಮ, ಕೃತವರ್ಮರುಗಳು, ರಥ - ಕುದುರೆಗಳನ್ನು ದೂರದಲ್ಲಿ ನಿಲ್ಲಿಸಿ, ತಲೆಯ ಮೇಲೆ ಮುಸುಕು ಹಾಕಿಕೊಂಡು ಕೊಳದ ಸಮೀಪಕ್ಕೆ ಬಂದರು. ಮರಬಳ್ಳಿಗಳ ಸಂದಿಯಿಂದ ಕೊಳದ ದಡದಲ್ಲಿ ನಿಂತು ದುರ್ಯೋಧನನ ಹೆಸರನ್ನು ಕರೆದು ತಮ್ಮ ಧ್ವನಿಯನ್ನು ಅವನಿಗೆ ಕೇಳಿಸಿ, ತಮ್ಮ ತಮ್ಮ ಹೆಸರುಗಳನ್ನು ಹೇಳಿದರು.
ಪದಾರ್ಥ (ಕ.ಗ.ಪ)
ಇರುಬು-ಇಕ್ಕಟ್ಟಾದ ಪ್ರದೇಶ, ಸಂದಿ, ಕಂಜಾಕರ-ತಾವರೆ ಹೂಗಳಿಗೆ ನೆಲೆಯಾದುದು, ಸರೋವರ (ಕಂಜ-ತಾವರೆ, ಕಮಲ).
ಮೂಲ ...{Loading}...
ಅರಸ ಕೇಳ್ ಕೃಪ ಗುರುಜ ಕೃತವ
ರ್ಮರು ರಥಾಶ್ವಂಗಳನು ದೂರದ
ಲಿರಿಸಿ ತಲೆಮುಸುಕಿನಲಿ ಬಂದರು ಕೊಳನ ತಡಿಗಾಗಿ
ತರುಲತೆಗಳಿರುಬಿನಲಿ ಕಂಜಾ
ಕರದ ತಡಿಯಲಿ ನಿಂದು ಮೆಲ್ಲನೆ
ಕರೆದು ಕೇಳಿಸಿ ಹೇಳಿದರು ತಂತಮ್ಮ ಹೆಸರುಗಳ ॥30॥
೦೩೧ ಬದುಕಿ ಬನ್ದಿರೆ ...{Loading}...
ಬದುಕಿ ಬಂದಿರೆ ಭೀಮ ನಿಮ್ಮನು
ಗದೆಯ ಸವಿಗಾಣಿಸನಲಾ ಸಾ
ಕಿದನ ಸಮಯಕೆ ಸುಳಿದಿರೈ ಸಾಹಿತ್ಯರೇಖೆಯಲಿ
ಕದನದಲಿ ಸೌಬಲ ಸುಶರ್ಮರ
ಹೊದರ ಹರೆಗಡಿವಲ್ಲಿ ನೀವ್ ಮಾ
ಡಿದ ಪರಾಕ್ರಮವಾವುದೆಂದನು ನೃಪತಿ ಖಾತಿಯಲಿ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜೀವ ಉಳಿಸಿಕೊಂಡು ಬಂದಿರಾ, ಭೀಮ ನಿಮಗೆ ಗದೆಯ ರುಚಿಯನ್ನು ತೋರಿಸಲಿಲ್ಲವೇ, ನಿಮ್ಮನ್ನು ಇಷ್ಟದಿನ ಸಾಕಿದವನ (ನನ್ನ) ಸಮಯಕ್ಕೆ ಸರಿಯಾಗಿ ಇತ್ತ ಸುಳಿದಿರಲ್ಲಾ ಒಟ್ಟಾಗಿ. ಯುದ್ಧದಲ್ಲಿ ಶಕುನಿ- ಸುಶರ್ಮರ ಸೈನ್ಯ ಸಮೂಹವನ್ನು ಚಲ್ಲಾಪಿಲ್ಲಿಯಾಗಿ ಓಡುವಂತೆ ತರಿದು ಹಾಕುತ್ತಿದ್ದಾಗ ನೀವು ಮಾಡಿದ ಪರಾಕ್ರಮವು ಯಾವುದು - ಎಂದು ದುರ್ಯೋಧನ ಕೋಪದಿಂದ ಕೃಪ, ಅಶ್ವತ್ಥಾಮ ಮತ್ತು ಕೃತವರ್ಮರುಗಳನ್ನು ಕೇಳಿದ.
ಪದಾರ್ಥ (ಕ.ಗ.ಪ)
ಸಾಹಿತ್ಯರೇಖೆ- ಸಾಹಚರ್ಯದಲ್ಲಿ , ಒಟ್ಟಾಗಿ, ಹೊದರು-ಗುಂಪು, ಸಮೂಹ, ರಾಶಿ, ಹರೆಗಡಿ-ಚಲ್ಲಾಪಿಲ್ಲಿಮಾಡು, ಚದುರಿಸು.
ಮೂಲ ...{Loading}...
ಬದುಕಿ ಬಂದಿರೆ ಭೀಮ ನಿಮ್ಮನು
ಗದೆಯ ಸವಿಗಾಣಿಸನಲಾ ಸಾ
ಕಿದನ ಸಮಯಕೆ ಸುಳಿದಿರೈ ಸಾಹಿತ್ಯರೇಖೆಯಲಿ
ಕದನದಲಿ ಸೌಬಲ ಸುಶರ್ಮರ
ಹೊದರ ಹರೆಗಡಿವಲ್ಲಿ ನೀವ್ ಮಾ
ಡಿದ ಪರಾಕ್ರಮವಾವುದೆಂದನು ನೃಪತಿ ಖಾತಿಯಲಿ ॥31॥
೦೩೨ ಜೀಯ ಖತಿಯೇಕೆಮ್ಮೊಡನೆ ...{Loading}...
ಜೀಯ ಖತಿಯೇಕೆಮ್ಮೊಡನೆ ಚ
ಕ್ರಾಯುಧನ ಚಾತುರ್ಯದಲಿ ರಣ
ದಾಯತಪ್ಪಿತು ಭಟರು ಬೀತುದು ಹೇಳಲೇನದನು
ಕಾಯಿದರೊ ಕಾದಿದರೊ ಗುರು ಗಾಂ
ಗೇಯ ಸೈಂಧವ ಮಾದ್ರಪತಿ ರಾ
ಧೇಯರನುಗತವಾಗದಿಹುದಪರಾಧ ನಮಗೆಂದ ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸ್ವಾಮೀ, ನಮ್ಮೊಂದಿಗೆ ಕೋಪವೇಕೆ, ಕೃಷ್ಣನ ಚಾತುರ್ಯದಿಂದ ಯುದ್ಧದ ಹದ ತಪ್ಪಿಹೋಯಿತು. ವೀರಸೈನ್ಯಿಕರು ನಾಶವಾದರು. ಅದನ್ನು ಹೇಳುವುದೇನು. ದ್ರೋಣ, ಭೀಷ್ಮ, ಸೈಂಧವ, ಶಲ್ಯ, ಕರ್ಣ ಇವರುಗಳು ಯುದ್ಧದಲ್ಲಿ ನಮ್ಮ ಸೈನ್ಯವನ್ನು ಕಾಪಾಡಿದರೋ, ಯುದ್ಧಮಾಡಿದರೋ, ಅವರುಗಳ ಹಿಂದೆ ಹೋಗದ ಅಪರಾಧ ನಮಗೆ ಬಂದಿದೆ - ಎಂದ (ಅಶ್ವತ್ಥಾಮ)
ಪದಾರ್ಥ (ಕ.ಗ.ಪ)
ಖತಿ-ಕೋಪ, ಆಯ-ಬಿಗಿ, ಹದ, ಬೀತುದು-ನಾಶವಾಯಿತು, ಅನುಗತ-ಹಿಂದೆ ಹೋಗುವುದು.
ಮೂಲ ...{Loading}...
ಜೀಯ ಖತಿಯೇಕೆಮ್ಮೊಡನೆ ಚ
ಕ್ರಾಯುಧನ ಚಾತುರ್ಯದಲಿ ರಣ
ದಾಯತಪ್ಪಿತು ಭಟರು ಬೀತುದು ಹೇಳಲೇನದನು
ಕಾಯಿದರೊ ಕಾದಿದರೊ ಗುರು ಗಾಂ
ಗೇಯ ಸೈಂಧವ ಮಾದ್ರಪತಿ ರಾ
ಧೇಯರನುಗತವಾಗದಿಹುದಪರಾಧ ನಮಗೆಂದ ॥32॥
೦೩೩ ಅರಸ ಹೊರವಡು ...{Loading}...
ಅರಸ ಹೊರವಡು ಭೀಮಪಾರ್ಥರ
ಕರುಳ ಬೀಯವ ಭೂತನಿಕರಕೆ
ಬರಿಸುವೆವು ನೀ ನೋಡಲೊಡ್ಡುವೆವಸ್ತ್ರಸಂತತಿಯ
ಗರುವರಿಹರೇ ನೀರೊಳಾ ಹಿಮ
ಕರ ಮಹಾನ್ವಯ ಕೀರ್ತಿ ಜಲದೊಳು
ಕರಗದಿಹುದೇ ಕಷ್ಟವೃತ್ತಿಯದೆಂದರವನಿಪನ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುರ್ಯೋಧನ ನೀರಿನಿಂದ ಹೊರಕ್ಕೆ ಬಾ. ಭೀಮಾರ್ಜನರ ಕರುಳ ಭೋಜನವನ್ನು ಭೂತಸಮೂಹಕ್ಕೆ ಬಡಿಸುವೆವು. ನೀನು ನೋಡುತ್ತಿರುವಂತೆ ಅಸ್ತ್ರಗಳ ಸಮೂಹವನ್ನೇ ಯುದ್ಧದಲ್ಲಿ ಪ್ರಯೋಗಿಸುತ್ತೇವೆ. ಅಭಿಮಾನವುಳ್ಳವರು ನೀರೊಳಗಿರುತ್ತಾರೆಯೇ. ಮಹಾನ್ ಚಂದ್ರವಂಶದ ಕೀರ್ತಿ ನೀರಿನಲ್ಲಿ ಕರಗಿಹೋಗುವುದಿಲ್ಲವೇ, ಅದು ಬಹು ಹೀನಾಯವಾದ ಕೆಲಸ - ಎಂದು ಆ ಮೂವರೂ ದುರ್ಯೋಧನನಿಗೆ ಹೇಳಿದರು.
ಪದಾರ್ಥ (ಕ.ಗ.ಪ)
ಬೀಯ-ಆಹಾರ, ಭೋಜನ, ಬರಿಸು-ಬಡಿಸು, ಗರುವ-ಅಭಿಮಾನಿ, ಅಹಂಕಾರಿ, ಹಿರಿಮೆಯುಳ್ಳವ, ಹಿಮಕರ-ಚಂದ್ರ (ಹಿಮವನ್ನುಂಟುಮಾಡುವವ) ಮಹಾನ್ವಯ-ಶ್ರೇಷ್ಠವಂಶ, ಕಷ್ಟ-ಹೀನ, ನೀಚ
ಟಿಪ್ಪನೀ (ಕ.ಗ.ಪ)
- ಬರಿಸು-ಬಡಿಸು ಎಂಬುದಕ್ಕೆ ಪರ್ಯಾಯವಾಗಿ ಈ ಪದವನ್ನು ಬಳಸಲಾಗಿದೆ. ಇದು ಪ್ರಾಸಕ್ಕೋಸ್ಕರ ‘ಡ’ ಕಾರದ ಸ್ಥಾನದಲ್ಲಿ ‘ರ’ ಕಾರದ ಪ್ರಯೋಗ.
ಮೂಲ ...{Loading}...
ಅರಸ ಹೊರವಡು ಭೀಮಪಾರ್ಥರ
ಕರುಳ ಬೀಯವ ಭೂತನಿಕರಕೆ
ಬರಿಸುವೆವು ನೀ ನೋಡಲೊಡ್ಡುವೆವಸ್ತ್ರಸಂತತಿಯ
ಗರುವರಿಹರೇ ನೀರೊಳಾ ಹಿಮ
ಕರ ಮಹಾನ್ವಯ ಕೀರ್ತಿ ಜಲದೊಳು
ಕರಗದಿಹುದೇ ಕಷ್ಟವೃತ್ತಿಯದೆಂದರವನಿಪನ ॥33॥
೦೩೪ ಏಳು ಕುರುಪತಿ ...{Loading}...
ಏಳು ಕುರುಪತಿ ಪಾಂಡುತನಯ
ವ್ಯಾಳಸೇನೆಗೆ ಸಿಂಹವಿದೆ ನಿ
ನ್ನಾಳ ಬಿಡು ನೀ ನೋಡುತಿರು ಕರ್ಣಾದಿ ಸುಭಟರಲಿ
ಜಾಳಿಸಿದ ಜಯಕಾಮಿನಿಯ ಜಂ
ಘಾಳತನವನು ನಿಲಿಸಿ ನಿನ್ನಯ
ತೋಳಿನಲಿ ತೋರುವೆವು ಮೈದೋರೆಂದರವನಿಪನ ॥34॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುರ್ಯೋಧನಾ ಏಳು ಪಾಂಡವರ ಸೈನ್ಯವೆಂಬ ಸೊಕ್ಕಿನಾನೆಗಳಿಗೆ ಸಿಂಹದಂತೆ ನಾವಿದ್ದೇವೆ. ನಮ್ಮಲ್ಲಿ ನಿನಗೆ ಇಷ್ಟವಾದವರೊಬ್ಬರನ್ನು ಯುದ್ಧಕ್ಕೆ ಬಿಟ್ಟು ನೋಡುತ್ತಿರು. ಕರ್ಣಾದಿ ಶ್ರೇಷ್ಠಯೋಧರಿಂದ ತಪ್ಪಿಸಿಕೊಂಡು ಹೋದ ಜಯಲಕ್ಷಿಯ ವೇಗವನ್ನು ನಿಲ್ಲಿಸಿ, ಅವಳನ್ನು ನಿನ್ನ ತೋಳಿನಲ್ಲಿರುವಂತೆ ಮಾಡಿ ತೋರಿಸುತ್ತೇವೆ. ನೀನು ನೀರಿನಿಂದ ಹೊರಗೆ ಬಂದು ಮೈದೋರು ಎಂದು ದುರ್ಯೋಧನನಿಗೆ ಹೇಳಿದರು.
ಪದಾರ್ಥ (ಕ.ಗ.ಪ)
ವ್ಯಾಳ-ಸೊಕ್ಕಿದ ಆನೆ. ಜಾಳಿಸು-ಜಾರಿಹೋಗು, ತಪ್ಪಿಸಿಕೊ, ಅಪಹರಿಸು, ಹೀನಯಿಸು, ಜಯಕಾಮಿನಿ-ಜಯವನ್ನು ಆಶಿಸುವ ಮಹಿಳೆ, ಜಯಶ್ರೀ, ಜಯಲಕ್ಷ್ಮಿ, ಜಂಘಾಳತನ-ವೇಗವಾಗಿ ಓಡುವ ಸ್ವಭಾವ
ಮೂಲ ...{Loading}...
ಏಳು ಕುರುಪತಿ ಪಾಂಡುತನಯ
ವ್ಯಾಳಸೇನೆಗೆ ಸಿಂಹವಿದೆ ನಿ
ನ್ನಾಳ ಬಿಡು ನೀ ನೋಡುತಿರು ಕರ್ಣಾದಿ ಸುಭಟರಲಿ
ಜಾಳಿಸಿದ ಜಯಕಾಮಿನಿಯ ಜಂ
ಘಾಳತನವನು ನಿಲಿಸಿ ನಿನ್ನಯ
ತೋಳಿನಲಿ ತೋರುವೆವು ಮೈದೋರೆಂದರವನಿಪನ ॥34॥
೦೩೫ ಒಪ್ಪದಿದು ಭೀಷ್ಮಾದಿಯವ್ವನ ...{Loading}...
ಒಪ್ಪದಿದು ಭೀಷ್ಮಾದಿಯವ್ವನ
ದರ್ಪದಲಿ ಜಾರಿದ ಜಯಾಂಗನೆ
ಮುಪ್ಪಿನಲಿ ನಮಗೊಲಿವುದರಿದೇಕಾಕಿಯಾದೆವಲೆ
ತಪ್ಪಿದುದನೀ ಸಲಿಲವಾಸದೊ
ಳೊಪ್ಪವಿಡುವೆನು ನಾಳೆ ನೀವ್ ತೊಲ
ಗಿಪ್ಪುದಿಂದಿನೊಳೆಂದನವನಿಪನಾ ಕೃಪಾದಿಗಳ ॥35॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಿಮ್ಮ ಮಾತು ಒಪ್ಪತಕ್ಕದಲ್ಲ. ಭೀಷ್ಮಾದಿಗಳ ಯೌವನದ ದರ್ಪದಲ್ಲಿ - ಭೀಷ್ಮಾದಿಗಳ ಯುದ್ಧ ಪ್ರಾರಂಭದ ದಿನಗಳಲ್ಲಿ -ನಮ್ಮ ಪಕ್ಷದಿಂದ ಸರಿದು ಹೋದ ಜಯಶ್ರೀಯು, ಈ ಮುಪ್ಪಿನಲ್ಲಿ - ಯುದ್ಧದ ಕಡೆಗಾಲದಲ್ಲಿ - ನಮಗೆ ಒಲಿಯುವುದಿಲ್ಲ. ನಾವು ಏಕಾಂಗಿಯಾದೆವಲ್ಲವೇ, ನೀರಿನಲ್ಲಿ ಮುಳುಗಿರುವುದರಿಂದಾಗಿ ಕಳೆದು ಹೋಗಿರುವ ನನ್ನ ಗೌರವವನ್ನು ನಾಳೆ ಸರಿಪಡಿಸಿಕೊಂಡು ಜೋಪಾನ ಮಾಡುತ್ತೇನೆ. ಇಂದು ತೊಲಗುವುದು - ಎಂದು ದುರ್ಯೋಧನ ಕೃಪಾದಿಗಳಿಗೆ ಹೇಳಿದ.
ಪದಾರ್ಥ (ಕ.ಗ.ಪ)
ತಪ್ಪಿದುದ-ತಪ್ಪಿಸಿಕೊಂಡು ಹೋಗಿರುವ, ಕಾಣೆಯಾಗಿರುವ, ಸಲಿಲವಾಸ-ನೀರೊಳಗಿರುವಿಕೆ.
ಮೂಲ ...{Loading}...
ಒಪ್ಪದಿದು ಭೀಷ್ಮಾದಿಯವ್ವನ
ದರ್ಪದಲಿ ಜಾರಿದ ಜಯಾಂಗನೆ
ಮುಪ್ಪಿನಲಿ ನಮಗೊಲಿವುದರಿದೇಕಾಕಿಯಾದೆವಲೆ
ತಪ್ಪಿದುದನೀ ಸಲಿಲವಾಸದೊ
ಳೊಪ್ಪವಿಡುವೆನು ನಾಳೆ ನೀವ್ ತೊಲ
ಗಿಪ್ಪುದಿಂದಿನೊಳೆಂದನವನಿಪನಾ ಕೃಪಾದಿಗಳ ॥35॥
೦೩೬ ಇವೆ ...{Loading}...
ಇವೆ ಮಹಾಮಂತ್ರಾಸ್ತ್ರಸಂತತಿ
ಯಿವೆ ಮಹಾಧನುರಾಜ್ಯಸತ್ಕೃತಿ
ಸವನ ಸಾಪೇಕ್ಷಂಗಳಿವೆ ತ್ರೈರಥಿಕರೊಬ್ಬರಲಿ
ಅವನಿಪತಿ ನೀ ಸೇಸೆದಳಿ ಮಿ
ಕ್ಕವರು ಸೇನೆ ವಿರೋಧಿವರ್ಗಕೆ
ದಿವವೊ ಧರೆಯೋ ನೋಡಲಹುದೇಳೆಂದನಾ ದ್ರೌಣಿ ॥36॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಹಾ ಮಂತ್ರಾಸ್ತ್ರಗಳ ಸಮೂಹವೆ ಇದೆ. ಮಹಾಧನುಸ್ಸುಗಳು ಇವೆ. ರಾಜ್ಯವನ್ನು ಪಡೆಯುವ ಹವನ ಹೋಮಗಳಿಗೆ ಸಮನಾಗಿರುವ ಶ್ರೇಷ್ಠ ಕೆಲಸಕ್ಕೆ ನಾವು ಸಿದ್ಧರಾಗಿದ್ದೇವೆ. ಮೂರು ಜನ ರಥಿಕರಾದ ನಮ್ಮಲ್ಲಿ ಶ್ರೇಷ್ಠ ಆಯುಧಗಳು ಇವೆ. ರಾಜನೇ ಮಂತ್ರಾಕ್ಷತೆಗಳನ್ನು ಹಾಕಿ ಸೇನಾಪತಿಯ ಪಟ್ಟವನ್ನು ನಾವು ಮೂವರಲ್ಲಿ ಒಬ್ಬರಿಗೆ ಕಟ್ಟು, ಉಳಿದವರೇ ಮಿಕ್ಕ ನಿನ್ನ ಸೈನ್ಯವಾಗುತ್ತೇವೆ. ವಿರೋಧಿಗಳ ಗುಂಪಿಗೆ ಸ್ವರ್ಗಪ್ರಾಪ್ತಿಯೋ ಅಥವ ಭೂಮಿಪ್ರಾಪ್ತಿಯೋ ನೋಡಬಹುದು ಏಳು ಎಂದು ಅಶ್ವತ್ಥಾಮ ದುರ್ಯೋಧನನಿಗೆ ಹೇಳಿದ.
ಪದಾರ್ಥ (ಕ.ಗ.ಪ)
ಸವನ-ಹೋಮ, ಸಾಪೇಕ್ಷ-ಹೊಂದಿಕೊಂಡಿರುವ, ಪೂರಕವಾಗಿರುವ, ಹೋಲಿಸಬಹುದಾದ, ಸೇಸೆದಳಿ-ಮಂತ್ರಾಕ್ಷತೆಹಾಕು, ದಿವ-ಸ್ವರ್ಗ.
ಮೂಲ ...{Loading}...
ಇವೆ ಮಹಾಮಂತ್ರಾಸ್ತ್ರಸಂತತಿ
ಯಿವೆ ಮಹಾಧನುರಾಜ್ಯಸತ್ಕೃತಿ
ಸವನ ಸಾಪೇಕ್ಷಂಗಳಿವೆ ತ್ರೈರಥಿಕರೊಬ್ಬರಲಿ
ಅವನಿಪತಿ ನೀ ಸೇಸೆದಳಿ ಮಿ
ಕ್ಕವರು ಸೇನೆ ವಿರೋಧಿವರ್ಗಕೆ
ದಿವವೊ ಧರೆಯೋ ನೋಡಲಹುದೇಳೆಂದನಾ ದ್ರೌಣಿ ॥36॥
೦೩೭ ಸೇಸೆದಳಿದೆನು ಭೀಷ್ಮಗಗ್ಗದ ...{Loading}...
ಸೇಸೆದಳಿದೆನು ಭೀಷ್ಮಗಗ್ಗದ
ಭಾಷೆ ನಿಮ್ಮಯ್ಯನಲಿ ಗತವಾ
ಯ್ತೇಸ ಪತಿಕರಿಸಿದೆನು ಕರ್ಣನನಂದು ನೀನರಿಯ
ಓಸರಿಸಿದನೆ ಮಾದ್ರಪತಿ ಬಳಿ
ಕೀಸು ಬಂದುದು ದೈವದೊಲಹಿನ
ಪೈಸರಕೆ ನೀವೇನ ಮಾಡುವಿರೆಂದನಾ ಭೂಪ ॥37॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಷ್ಮನಿಗೆ ಸೇನಾಪತಿಯ ಪಟ್ಟಕಟ್ಟಿದೆ, ದೊಡ್ಡದಾದ ಪ್ರತಿಜ್ಞೆಯು ನಿಮ್ಮ ಅಪ್ಪನಾದ ದ್ರೋಣನಲ್ಲಿ ಮುಗಿಯಿತು. ಅಂದು ನಾನು ಕರ್ಣನನ್ನು ಎಷ್ಟು ಗೌರವಿಸಿದೆನೆಂದು ನಿನಗೆ ತಿಳಿದಿಲ್ಲವೆ. ಮಾದ್ರಪತಿಯಾದ ಶಲ್ಯ ಅವರ ಜಾಗವನ್ನು ತುಂಬಿದನೆ, ಬಳಿಕ ಈ ಸ್ಥಿತಿಗೆ ಬಂತು. ಅದೃಷ್ಟದ ಒಲವು ಹಿಂದಕ್ಕೆ ಸರಿದರೆ ನೀವು ತಾನೆ ಏನು ಮಾಡುತ್ತೀರಿ ಎಂದು ದುರ್ಯೋಧನ ಹೇಳಿದ.
ಪದಾರ್ಥ (ಕ.ಗ.ಪ)
ಅಗ್ಗದ-ಶ್ರೇಷ್ಠವಾದ, ದೊಡ್ಡದಾದ, ಪತಿಕರಿಸು-ಉಪಚರಿಸು, ಗೌರವಿಸು, ಓಸರಿಸು-ಪರ್ಯಾಯವಾಗು (?) ಪೈಸರ-ಹಿಂದೆ ಸರಿಯುವಿಕೆ.
ಮೂಲ ...{Loading}...
ಸೇಸೆದಳಿದೆನು ಭೀಷ್ಮಗಗ್ಗದ
ಭಾಷೆ ನಿಮ್ಮಯ್ಯನಲಿ ಗತವಾ
ಯ್ತೇಸ ಪತಿಕರಿಸಿದೆನು ಕರ್ಣನನಂದು ನೀನರಿಯ
ಓಸರಿಸಿದನೆ ಮಾದ್ರಪತಿ ಬಳಿ
ಕೀಸು ಬಂದುದು ದೈವದೊಲಹಿನ
ಪೈಸರಕೆ ನೀವೇನ ಮಾಡುವಿರೆಂದನಾ ಭೂಪ ॥37॥
೦೩೮ ರಣದೊಳಾ ಗಾಙ್ಗೇಯಗಿಮ್ಮಡಿ ...{Loading}...
ರಣದೊಳಾ ಗಾಂಗೇಯಗಿಮ್ಮಡಿ
ಗುಣವ ತೋರುವೆನಪ್ಪನವರಿಂ
ದೆಣಿಸಿಕೊಳು ಮೂವಡಿಯನಗ್ಗದ ಸೂತನಂದನನ
ರಣಕೆ ನಾಲ್ವಡಿ ಮಾದ್ರರಾಜನ
ಹೊಣಕೆಗೈದು ಸುಶರ್ಮ ಶಕುನಿಗ
ಳೆಣಿಸುವಡೆ ಪಾಡಲ್ಲ ನೋಡೇಳೆಂದನಾ ದ್ರೌಣಿ ॥38॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯುದ್ಧದಲ್ಲಿ ಭೀಷ್ಮರಿಗಿಂತ ಎರಡು ಪಟ್ಟು ಶಕ್ತಿ ಸಾಮರ್ಥ್ಯಗಳನ್ನು ತೋರಿಸುತ್ತೇನೆ. ಲೆಕ್ಕಹಾಕಿ ಬೇಕಾದರೆ ನೋಡು, ನನ್ನ ತಂದೆಯವರಿಗಿಂತ ಮೂರು ಪಟ್ಟು, ಕರ್ಣನ ಕಾಳಗಕ್ಕಿಂತ ನಾಲ್ಕು ಪಟ್ಟು, ಶಲ್ಯನ ಕಾಳಗಕ್ಕಿಂತ ಐದು ಪಟ್ಟು ಪ್ರತಾಪವನ್ನು ತೋರಿಸುತ್ತೇನೆ. ಇನ್ನು ಸುಶರ್ಮ ಶಕುನಿಗಳ ಸಾಹಸಕ್ಕಿಂತ ನಾನು ಎಷ್ಟು ಪಟ್ಟು ಮಿಗಿಲು ಎಂಬುದನ್ನು ಎಣಿಸಲು ಸಾಧ್ಯವಿಲ್ಲ. ಇದನ್ನು ನೋಡಲು ಏಳು ಎಂದು ಅಶ್ವತ್ಥಾಮ ಹೇಳಿದ.
ಪದಾರ್ಥ (ಕ.ಗ.ಪ)
ಹೊಣಕೆ-ಕಾಳಗ, ಸ್ಪರ್ದೆ, ಮೇಲಾಟ, ಪಾಡು-ಸಾಧ್ಯ
ಮೂಲ ...{Loading}...
ರಣದೊಳಾ ಗಾಂಗೇಯಗಿಮ್ಮಡಿ
ಗುಣವ ತೋರುವೆನಪ್ಪನವರಿಂ
ದೆಣಿಸಿಕೊಳು ಮೂವಡಿಯನಗ್ಗದ ಸೂತನಂದನನ
ರಣಕೆ ನಾಲ್ವಡಿ ಮಾದ್ರರಾಜನ
ಹೊಣಕೆಗೈದು ಸುಶರ್ಮ ಶಕುನಿಗ
ಳೆಣಿಸುವಡೆ ಪಾಡಲ್ಲ ನೋಡೇಳೆಂದನಾ ದ್ರೌಣಿ ॥38॥
೦೩೯ ಖರೆಯರೈ ನೀವುಭಯ ...{Loading}...
ಖರೆಯರೈ ನೀವುಭಯ ರಾಯರ
ಗುರುಗಳದು ಕುಂದಿಲ್ಲ ಕೃಪನೇ
ಹಿರಿಯನಾಚಾರಿಯನು ಯಾದವರೊಳಗೆ ಕೃತವರ್ಮ
ಗರುವರೈ ನೀವಿಲ್ಲಿ ರಣಬಾ
ಹಿರರೆ ಸಾಕಂತಿರಲಿ ಸುಕೃತದೊ
ಳರಗೆಲಸಿಗಳು ನಾವೆ ನಿಮ್ಮಲಿ ಕೊರತೆಯಿಲ್ಲೆಂದ ॥39॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನೀವು ಸತ್ಯವಂತರು. ಕೌರವ - ಪಾಂಡವರಿಬ್ಬರಿಗೂ ಗುರುಗಳಾದವರು. ತಪ್ಪಿಲ್ಲ. ಕೃಪನೇ ಹಿರಿಯನು, ಆಚಾರ್ಯ. ಯಾದವರಲ್ಲಿ ಕೃತವರ್ಮ. ಇಷ್ಟೂಜನ ಈಗ ಇಲ್ಲಿ ಹಿರಿಯರು, ವೀರರು. ನೀವು ಯುದ್ಧವಿಮುಖರೇ, ಸಾಕು ಆ ಮಾತು ಹಾಗಿರಲಿ. ನಮ್ಮ ಪುಣ್ಯದಲ್ಲಿ ನಾವೇ ಅರೆಗೆಲಸಿಗಳು. ನಿಮ್ಮಲ್ಲಿ ಯಾವುದೂ ಕೊರತೆಯಿಲ್ಲ ಎಂದು ದುರ್ಯೋಧನ (ವ್ಯಂಗ್ಯವಾಗಿ) ಈ ಮೂವರಿಗೂ ಹೇಳಿದ.
ಪದಾರ್ಥ (ಕ.ಗ.ಪ)
ಖರೆಯರು-ಸತ್ಯವಂತರು, ನಿಜವನ್ನು ಹೇಳುವವರು (ಖರೆ-ಸತ್ಯ - ನಿಜ) ಗರುವ-ಹೆಮ್ಮೆಪಡುವವರು, ಅಭಿಮಾನಿಗಳು, ಹಿರಿಮೆಯುಳ್ಳವರು, ರಣಬಾಹಿರ-ಯುದ್ಧವಿಮುಖರು, ಯುದ್ಧದಿಂದ ಓಡಿದವರು, ಸುಕೃತ-ಪುಣ್ಯ,ಶುಭ, ಅರೆಗೆಲಸಿ-ಅರೆಬರೆ ಕೆಲಸ ಮಾಡುವವ
ಮೂಲ ...{Loading}...
ಖರೆಯರೈ ನೀವುಭಯ ರಾಯರ
ಗುರುಗಳದು ಕುಂದಿಲ್ಲ ಕೃಪನೇ
ಹಿರಿಯನಾಚಾರಿಯನು ಯಾದವರೊಳಗೆ ಕೃತವರ್ಮ
ಗರುವರೈ ನೀವಿಲ್ಲಿ ರಣಬಾ
ಹಿರರೆ ಸಾಕಂತಿರಲಿ ಸುಕೃತದೊ
ಳರಗೆಲಸಿಗಳು ನಾವೆ ನಿಮ್ಮಲಿ ಕೊರತೆಯಿಲ್ಲೆಂದ ॥39॥
೦೪೦ ಅರಸ ಕೇಳೈ ...{Loading}...
ಅರಸ ಕೇಳೈ ಸುಕೃತವನು ವಿ
ಸ್ತರಿಸುವೆನು ಪೂರಾಯವೆನೆ ಕಾ
ಹುರದ ನುಡಿ ಬೇಡೇಳು ನಡೆವುದು ಹಸ್ತಿನಾಪುರಿಗೆ
ಅರಿಗಳೈತಂದೌಕಿದಡೆ ಗಜ
ಪುರದ ದುರ್ಗವ ಬಲಿದು ನಿಲುವುದು
ಪರಮಮಂತ್ರವಿದೆಂದನಶ್ವತ್ಥಾಮನವನಿಪನ ॥40॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುರ್ಯೋಧನಾ ಕೇಳು, (ನಿನ್ನ) ಪುಣ್ಯವನ್ನು ಸಂಪೂರ್ಣವೆನ್ನುವಂತೆ ದೊಡ್ಡದು ಮಾಡುತ್ತೇನೆ. ಕಠಿಣವಾದ ವ್ಯಂಗ್ಯದ ಮಾತುಬೇಡ. ನೀರಿನಿಂದ ಏಳು, ಹಸ್ತಿನಾಪುರಕ್ಕೆ ಹೋಗೋಣ. ಶತ್ರುಗಳು ಅಲ್ಲಿಗೆ ಬಂದು ಯುದ್ಧಕ್ಕೆ ನಿಂತರೆ ಹಸ್ತಿನಾವತಿಯ ಕೋಟೆಬಾಗಿಲುಗಳನ್ನು ಭದ್ರಪಡಿಸಿಕೊಂಡು ಯುದ್ಧಕ್ಕೆ ನಿಲ್ಲುವುದು. ಇದೇ ಪರಮ ಮಂತ್ರವೆಂದು ಅಶ್ವತ್ಥಾಮ ಹೇಳಿದ.
ಪದಾರ್ಥ (ಕ.ಗ.ಪ)
ಪೂರಾಯ-ಸಂಪೂರ್ಣ, ಕಾಹುರ-ಕಠಿಣ, ಕ್ರೂರ, ವ್ಯಂಗ್ಯ, ಔಕು-ಯುದ್ಧಮಾಡು, ಒತ್ತಾಯಿಸು, ಮೇಲೆ ಬೀಳು, ಬಲಿದು-ಬಿಗಿ ಮಾಡಿ, ಭದ್ರಗೊಳಿಸಿ.
ಮೂಲ ...{Loading}...
ಅರಸ ಕೇಳೈ ಸುಕೃತವನು ವಿ
ಸ್ತರಿಸುವೆನು ಪೂರಾಯವೆನೆ ಕಾ
ಹುರದ ನುಡಿ ಬೇಡೇಳು ನಡೆವುದು ಹಸ್ತಿನಾಪುರಿಗೆ
ಅರಿಗಳೈತಂದೌಕಿದಡೆ ಗಜ
ಪುರದ ದುರ್ಗವ ಬಲಿದು ನಿಲುವುದು
ಪರಮಮಂತ್ರವಿದೆಂದನಶ್ವತ್ಥಾಮನವನಿಪನ ॥40॥
೦೪೧ ಸಲಿಲ ಮಧ್ಯದೊಳಿನ್ದಿನಿರುಳನು ...{Loading}...
ಸಲಿಲ ಮಧ್ಯದೊಳಿಂದಿನಿರುಳನು
ಕಳೆದೆನಾದಡೆ ಪಾಂಡುಪುತ್ರರ
ಗೆಲುವೆನುದಯದೊಳಿದುವೆ ನಿಶ್ಚಯವೆನ್ನ ಚಿತ್ತದಲಿ
ಅಳುಕಿ ಕದನದೊಳೋಡಿ ನಗರಿಯ
ಲಲನೆಯರ ಮರೆಗೊಂಬೆನೇ ನೀವ್
ತೊಲಗಿ ಭೀಮನ ಬೇಹು ಬಹುದಿರಬೇಡ ನೀವೆಂದ ॥41॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇಂದಿನ ರಾತ್ರಿಯನ್ನು ನೀರಿನ ಮಧ್ಯದಲ್ಲಿ ಕಳೆದರೆ, ಬೆಳಿಗ್ಗೆ ಪಾಂಡವರನ್ನು ಗೆಲ್ಲುತ್ತೇನೆ. ಇದು ನನ್ನ ಮನಸ್ಸಿನ ದೃಢವಾದ ತೀರ್ಮಾನ. ಹೆದರಿ ಯುದ್ಧ ಭೂಮಿಯಿಂದ ಓಡಿ, ನಗರದಲ್ಲಿ ಹೆಂಗಸರ ಮರೆಯಲ್ಲಿರುವವನೇ ನಾನು! ನೀವು ಇಲ್ಲಿಂದ ತೊಲಗಿ. ಭೀಮನ ಗುಪ್ತಚರರು ಬರುತ್ತಾರೆ, ಇಲ್ಲಿ ಇರಬೇಡಿ - ಎಂದು ದುರ್ಯೋಧನ ಹೇಳಿದ.
ಪದಾರ್ಥ (ಕ.ಗ.ಪ)
ಬೇಹು-ಗೂಢಚಾರರು, ಗುಪ್ತಚಾರರು.
ಮೂಲ ...{Loading}...
ಸಲಿಲ ಮಧ್ಯದೊಳಿಂದಿನಿರುಳನು
ಕಳೆದೆನಾದಡೆ ಪಾಂಡುಪುತ್ರರ
ಗೆಲುವೆನುದಯದೊಳಿದುವೆ ನಿಶ್ಚಯವೆನ್ನ ಚಿತ್ತದಲಿ
ಅಳುಕಿ ಕದನದೊಳೋಡಿ ನಗರಿಯ
ಲಲನೆಯರ ಮರೆಗೊಂಬೆನೇ ನೀವ್
ತೊಲಗಿ ಭೀಮನ ಬೇಹು ಬಹುದಿರಬೇಡ ನೀವೆಂದ ॥41॥
೦೪೨ ಅರಸ ಕೇಳೈ ...{Loading}...
ಅರಸ ಕೇಳೈ ದೈವಯೋಗವ
ಪರಿಹರಿಸಲಾರಳವು ಪವನಜ
ನರಮನೆಯ ಮೃಗವೇಂಟೆಕಾರರು ಮಾಂಸಭಾರದಲಿ
ಬರುತ ನೀರಡಿಸಿದರು ಕಂಡರು
ಸರಸಿಯನು ನೀರ್ಗುಡಿಯಲೈತಂ
ದಿರಿಸಿದರು ತೀರದಲಿ ಬಹಳಾಮಿಷದ ಕಂಬಿಗಳ ॥42॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧೃತರಾಷ್ಟ್ರ ಕೇಳು, ದೈವಯೋಗವನ್ನು ನಿವಾರಿಸಲು ಯಾರಿಗೆ ಸಾಧ್ಯ. ಭೀಮನ ಅರಮನೆಯ ಬೇಟೆಗಾರರು ಮಾಂಸವನ್ನು ಹೊತ್ತು, ಅದರ ಭಾರದಲ್ಲಿ ಬರುತ್ತ ಬಾಯಾರಿಕೆಗೊಂಡು ಸರೋವರವನ್ನು ಕಂಡರು. ನೀರು ಕುಡಿಯಲು ಬಂದು, ಮಾಂಸವನ್ನು ತುಂಬಿದ್ದ ಅಡ್ಡೆಗಳನ್ನು ದಡದಲ್ಲಿಟ್ಟರು.
ಪದಾರ್ಥ (ಕ.ಗ.ಪ)
ದೈವಯೋಗ-ವಿಧಿಬರಹ, ಅಳವು-ಸಾಧ್ಯ, ಶಕ್ತಿ, ಮೃಗವೇಂಟೆಕಾರ-ಪ್ರಾಣಿಗಳನ್ನು ಬೇಟೆಯಾಡುವವನು, ಬೇಡ, ಆಮಿಷ-ಮಾಂಸ, ಲೋಭ, ಆಸೆ.
ಮೂಲ ...{Loading}...
ಅರಸ ಕೇಳೈ ದೈವಯೋಗವ
ಪರಿಹರಿಸಲಾರಳವು ಪವನಜ
ನರಮನೆಯ ಮೃಗವೇಂಟೆಕಾರರು ಮಾಂಸಭಾರದಲಿ
ಬರುತ ನೀರಡಿಸಿದರು ಕಂಡರು
ಸರಸಿಯನು ನೀರ್ಗುಡಿಯಲೈತಂ
ದಿರಿಸಿದರು ತೀರದಲಿ ಬಹಳಾಮಿಷದ ಕಂಬಿಗಳ ॥42॥
೦೪೩ ಚರಣ ವದನವ ...{Loading}...
ಚರಣ ವದನವ ತೊಳೆದು ನಿರ್ಮಳ
ತರವರಾಂಬುವನೀಂಟಿದರು ಕೃಪ
ಗುರುಸುತರ ನುಡಿಗಳನು ನಡುನೀರಲಿ ನೃಪಧ್ವನಿಯ
ಅರಿದರಿವರಾಲಿಸಿದರೇನಿದು
ಕುರುಪತಿಯ ತತ್ಸುಭಟವಾದೋ
ತ್ತರವಲಾ ಲೇಸಾಯ್ತೆನುತ ಕೇಳಿದರು ಮರೆವಿಡಿದು ॥43॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಾಲು, ಮುಖವನ್ನು ತೊಳೆದು, ನಿರ್ಮಳವಾದ, ಉತ್ತಮವಾದ ನೀರನ್ನು ಕುಡಿದರು. ಕೃಪ, ಅಶ್ವತ್ಥಾಮರ ಮಾತುಗಳನ್ನು ಮತ್ತು ನಡು ನೀರಿನೊಳಗಿನಿಂದ ಬರುತ್ತಿರುವ ದುರ್ಯೋಧನನ ಧ್ವನಿಯನ್ನು ತಿಳಿದು ಆಲಿಸಿ ಕೇಳಿಸಿಕೊಂಡರು. ಇದೇನಿದು, ದುರ್ಯೋಧನನ ಮತ್ತು ಆ ವೀರರ ವಾದ ಮತ್ತು ಉತ್ತರಗಳಂತಿವೆಯಲ್ಲಾ ಒಳ್ಳೆಯದಾಯಿತು - ಎಂದುಕೊಂಡು ಪೊದೆಗಳ ಮರೆಯಲ್ಲಿದ್ದು ಕೇಳಿಸಿಕೊಂಡರು.
ಪದಾರ್ಥ (ಕ.ಗ.ಪ)
ವಾದೋತ್ತರ-ವಾದ ಮತ್ತು ಉತ್ತರ, ವಾದ ಪ್ರತಿವಾದಗಳು.
ಮೂಲ ...{Loading}...
ಚರಣ ವದನವ ತೊಳೆದು ನಿರ್ಮಳ
ತರವರಾಂಬುವನೀಂಟಿದರು ಕೃಪ
ಗುರುಸುತರ ನುಡಿಗಳನು ನಡುನೀರಲಿ ನೃಪಧ್ವನಿಯ
ಅರಿದರಿವರಾಲಿಸಿದರೇನಿದು
ಕುರುಪತಿಯ ತತ್ಸುಭಟವಾದೋ
ತ್ತರವಲಾ ಲೇಸಾಯ್ತೆನುತ ಕೇಳಿದರು ಮರೆವಿಡಿದು ॥43॥
೦೪೪ ಆಯಿತಿದು ನೃಪರಾಜಕಾರ್ಯದ ...{Loading}...
ಆಯಿತಿದು ನೃಪರಾಜಕಾರ್ಯದ
ದಾಯಕಿದು ಧುರಪಥವಲಾ ಕುರು
ರಾಯಗುಪ್ತ ನಿವಾಸವರ್ಥಪ್ರದವಲಾ ನಮಗೆ
ಕಾಯಿದಿರು ಕಂಡೌ ಸರೋಜದ
ತಾಯಿ ಸರಸಿಯೆನುತ್ತ ಹೋದರು
ವಾಯುತನುಜನ ಬೇಂಟೆಕಾರರು ನಗುತ ಪಾಳೆಯಕೆ ॥44॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಮ್ಮ ರಾಜನ ರಾಜಕಾರ್ಯದ ಗೆಲುವಿಗೆ ಇದು ರಾಜಮಾರ್ಗವಲ್ಲವೇ, ನಮಗೆ ಕುರುರಾಯನ ಗುಪ್ತವಾಸವು ಧನವನ್ನು ತಂದು ಕೊಡುತ್ತದಲ್ಲವೇ ಎಂದುಕೊಂಡು, ಕಮಲಪುಷ್ಪಗಳಿಗೆ ತಾಯಿಯಾಗಿರುವ ಈ ಸರೋವರವೇ, ದುರ್ಯೋಧನನು ಸರೋವರದೊಳಗೇ ಇರುವಂತೆ ಕಾಪಾಡಿಕೊಂಡಿರಿ ಎನ್ನುತ್ತ, ಭೀಮನ ಬೇಟೆಗಾರರು ನಗುತ್ತಾ ಪಾಳೆಯಕ್ಕೆ ಹೋದರು.
ಪದಾರ್ಥ (ಕ.ಗ.ಪ)
ದಾಯ-ಗೆಲವು, ಆಸ್ತಿ, ಪಾಲು, ಧುರಪಧ-ರಾಜಮಾರ್ಗ, ಯುದ್ಧದ ದಾರಿ (ಧುರ-ಯುದ್ಧ,)
ಮೂಲ ...{Loading}...
ಆಯಿತಿದು ನೃಪರಾಜಕಾರ್ಯದ
ದಾಯಕಿದು ಧುರಪಥವಲಾ ಕುರು
ರಾಯಗುಪ್ತ ನಿವಾಸವರ್ಥಪ್ರದವಲಾ ನಮಗೆ
ಕಾಯಿದಿರು ಕಂಡೌ ಸರೋಜದ
ತಾಯಿ ಸರಸಿಯೆನುತ್ತ ಹೋದರು
ವಾಯುತನುಜನ ಬೇಂಟೆಕಾರರು ನಗುತ ಪಾಳೆಯಕೆ ॥44॥
೦೪೫ ಅರಸ ಕೇಳ್ ...{Loading}...
ಅರಸ ಕೇಳ್ ಸಮಸಪ್ತಕರ ಸಂ
ಹರಿಸಿ ಶಕುನಿಯ ಮುರಿದು ಕಳನಲಿ
ದೊರೆಯ ಕಾಣದೆ ಭೀಮಸೇನಾರ್ಜುನರು ದುಗುಡದಲಿ
ಹರಿಸಿದರು ದೂತರನು ಕೌರವ
ಧರಣಿಪನ ಪಾಳೆಯಕೆ ಹಸ್ತಿನ
ಪುರಿಗೆ ಕೂಡೆ ದಿಗಂತದಲಿ ಚರರರಸಿದರು ನೃಪನ ॥45॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧೃತರಾಷ್ಟ್ರ ಕೇಳು, ಭೀಮಾರ್ಜುನರು, ಸಮಸಪ್ತಕರನ್ನು ಸಂಹರಿಸಿ, ಶಕುನಿಯನ್ನು ಕೊಂದು, ಯುದ್ಧಭೂಮಿಯಲ್ಲಿ ದುರ್ಯೋಧನನನ್ನು ಕಾಣದೆ, ಚಿಂತೆಯಿಂದ ದೂತರನ್ನು, ದುರ್ಯೋಧನನ ಪಾಳೆಯಕ್ಕೆ, ಹಸ್ತಿನಾವತಿಗೆ ಕಳುಹಿದರು. ದೂತರು ಕೂಡಲೇ ದಿಕ್ಕುಗಳ ಮೂಲೆಮೂಲೆಗಳಲ್ಲಿ ದುರ್ಯೋಧನನನ್ನು ಹುಡುಕಿದರು.
ಪದಾರ್ಥ (ಕ.ಗ.ಪ)
ಹರಿಸು-ಹೋಗಬಿಡು, ಕಳಿಸು, ವೇಗವಾಗಿ ಹೋಗಲು ಕಳಿಸು, ದುಗುಡ-ವ್ಯಸನ, ಚಿಂತೆ, ಉಮ್ಮಳ, ದಿಗಂತ-ದಿಕ್ಕಿನ ಅಂತ್ಯದ ಸ್ಥಳ, ದಿಕ್ಕುಗಳ ಮೂಲೆ
ಮೂಲ ...{Loading}...
ಅರಸ ಕೇಳ್ ಸಮಸಪ್ತಕರ ಸಂ
ಹರಿಸಿ ಶಕುನಿಯ ಮುರಿದು ಕಳನಲಿ
ದೊರೆಯ ಕಾಣದೆ ಭೀಮಸೇನಾರ್ಜುನರು ದುಗುಡದಲಿ
ಹರಿಸಿದರು ದೂತರನು ಕೌರವ
ಧರಣಿಪನ ಪಾಳೆಯಕೆ ಹಸ್ತಿನ
ಪುರಿಗೆ ಕೂಡೆ ದಿಗಂತದಲಿ ಚರರರಸಿದರು ನೃಪನ ॥45॥
೦೪೬ ಹರಿದು ದೂತರು ...{Loading}...
ಹರಿದು ದೂತರು ನೃಪನ ಕಾಣದೆ
ಮರಳಿದರು ಯಮಸೂನು ದುಗುಡದ
ಭರದ ಭಾರವಣೆಯಲಿ ಹೊಕ್ಕನು ತನ್ನ ಪಾಳೆಯವ
ಕುರುನೃಪತಿ ತಪ್ಪಿದನು ಭೀಷ್ಮಾ
ದ್ಯರ ವಿಜಯ ವ್ಯಥೆಯಾಯ್ತು ಹಸ್ತಿನ
ಪುರದ ಸಿರಿ ಜಾರಿದಳು ತನಗೆಂದರಸ ಬಿಸುಸುಯ್ದ ॥46॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೂತರು ಸುತ್ತಾಡಿ ದುರ್ಯೋಧನನನ್ನು ಕಾಣದೆ ಹಿಂದಿರುಗಿದರು. ಯಮಸುತನಾದ ಧರ್ಮರಾಯನು ಚಿಂತೆಯ ಭಾರದಲ್ಲಿ ತನ್ನ ಪಾಳೆಯಕ್ಕೆ ಹೋದ. ಕುರುರಾಜ ತಪ್ಪಿಸಿಕೊಂಡನು. ಭೀಷ್ಮಾದಿಗಳನ್ನು ಗೆದ್ದುದು ಈಗ ಸಂತೋಷದ ಬದಲಿಗೆ ವ್ಯಥೆಯಾಯಿತು. ಹಸ್ತಿನಪುರದ ಐಶ್ವರ್ಯಲಕ್ಷ್ಮಿ ತನ್ನಿಂದ ಜಾರಿಹೋದಳು - ತನಗೆ ಸಿಕ್ಕದಾದಳು - ಎಂದು ಧರ್ಮಜ ಬಿಸಿಯುಸುರನ್ನು ಬಿಟ್ಟ.
ಪದಾರ್ಥ (ಕ.ಗ.ಪ)
ಭಾರವಣೆ-ಭಾರವಾದ ಹೃದಯ, ಭಾರ
ಮೂಲ ...{Loading}...
ಹರಿದು ದೂತರು ನೃಪನ ಕಾಣದೆ
ಮರಳಿದರು ಯಮಸೂನು ದುಗುಡದ
ಭರದ ಭಾರವಣೆಯಲಿ ಹೊಕ್ಕನು ತನ್ನ ಪಾಳೆಯವ
ಕುರುನೃಪತಿ ತಪ್ಪಿದನು ಭೀಷ್ಮಾ
ದ್ಯರ ವಿಜಯ ವ್ಯಥೆಯಾಯ್ತು ಹಸ್ತಿನ
ಪುರದ ಸಿರಿ ಜಾರಿದಳು ತನಗೆಂದರಸ ಬಿಸುಸುಯ್ದ ॥46॥
೦೪೭ ಹೆಣನ ಬಗಿದರಸಿದರು ...{Loading}...
ಹೆಣನ ಬಗಿದರಸಿದರು ಕರಿಗಳ
ಹಣಿದದಲಿ ನೋಡಿದರು ರಥಸಂ
ದಣಿಗಳೊಟ್ಟಿಲ ಕೆದರಿ ಭೀಷ್ಮನ ಸರಳ ಮಂಚದಲಿ
ಹಣುಗಿದರು ಭಗದತ್ತನಾನೆಯ
ನಣೆದುನೋಡಿದರರುಣವಾರಿಯ
ಕೆಣಕಿ ಕೂಡರಸಿದರು ಚಾರರು ಕಳನ ಚೌಕದಲಿ ॥47॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಚಾರರು ಯುದ್ಧಭೂಮಿಯಲ್ಲಿ ಹೆಣದ ರಾಶಿಯನ್ನು ಬಗೆದು ದುರ್ಯೋಧನ ಅಲ್ಲಿ ಅವಿತಿದ್ದಾನೆಯೋ ಎಂದು ಹುಡುಕಿದರು. ಆನೆಗಳ ಸಮೂಹದಲ್ಲಿ ನೋಡಿದರು. ರಥ ಸಮೂಹಗಳ ರಾಶಿಗಳನ್ನು ಕೆದರಿ, ಭೀಷ್ಮನ ಶರಮಂಚದಲ್ಲಿ ಹುಡುಕಿದರು. ಭಗದತ್ತನ ಆನೆಯನ್ನು ಹೊಡೆದು ನೋಡಿದರು. ರಕ್ತದ ಮಡುವುಗಳಲ್ಲಿ ಕಲಕಿ ನೋಡಿದರು.
ಪದಾರ್ಥ (ಕ.ಗ.ಪ)
ಹಣಿದ-ಗುಂಪು, ಹೊಡೆತ, ಗಾಯ, ಒಟ್ಟಿಲು-ಒಟ್ಟಿರುವುದು, ರಾಶಿ, ಹಣುಗು-ಇಣುಕು, ಅಣೆ-ಹೊಡೆ, ಅರುಣವಾರಿ-ಕೆಂಪುನೀರು, ರಕ್ತ, ಕೆಣಕು-ಕಲಕುವುದು, ಕೋಪಗೊಳಿಸುವುದು
ಮೂಲ ...{Loading}...
ಹೆಣನ ಬಗಿದರಸಿದರು ಕರಿಗಳ
ಹಣಿದದಲಿ ನೋಡಿದರು ರಥಸಂ
ದಣಿಗಳೊಟ್ಟಿಲ ಕೆದರಿ ಭೀಷ್ಮನ ಸರಳ ಮಂಚದಲಿ
ಹಣುಗಿದರು ಭಗದತ್ತನಾನೆಯ
ನಣೆದುನೋಡಿದರರುಣವಾರಿಯ
ಕೆಣಕಿ ಕೂಡರಸಿದರು ಚಾರರು ಕಳನ ಚೌಕದಲಿ ॥47॥
೦೪೮ ಹರಿಹರಿದು ಕೂಡರಸಿ ...{Loading}...
ಹರಿಹರಿದು ಕೂಡರಸಿ ದೂತರು
ಮರಳಿ ಬಂದರು ದುಗುಡಭರದಲಿ
ಬೆರಳ ಮೂಗಿನಲಿದ್ದುದವನಿಪಸಹಿತ ಪರಿವಾರ
ಇರುಳು ಬೇಗೆಯ ಚಕ್ರವಾಕಕೆ
ತರಣಿ ತಲೆದೋರಿದವೊಲಟವೀ
ಚರರಿಗರಸಗೆ ಭಾವಭಾವ ವ್ಯಕ್ತವಾಯ್ತೆಂದ ॥48॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೂತರು ತಿರುಗಿ ತಿರುಗಿ ಜೊತೆಯಲ್ಲಿ ಹುಡುಕಿ ಹಿಂದಿರುಗಿದರು. ಚಿಂತೆಯ ಭಾರದಲ್ಲಿ ಧರ್ಮರಾಯನ ಪರಿವಾರವೆಲ್ಲವೂ ಬೆರಳ ಮೇಲೆ ಮೂಗನ್ನಿಟ್ಟುಕೊಂಡಿತ್ತು. ಇರುಳಿನ ವಿರಹದ ಬೇಗೆಯಿಂದ ಬೇಯುತ್ತಿದ್ದ ಚಕ್ರವಾಕ ಪಕ್ಷಿಗಳಿಗೆ ಸೂರ್ಯ ಕಾಣಿಸಿದಂತೆ ಬೇಡರಿಗೆ ಮತ್ತು ಧರ್ಮರಾಯನಿಗೆ ಪರಸ್ಪರ ಮನಸ್ಸುಗಳು ಒಂದಾದುವು (ಪರಸ್ಪರ ಭೇಟಿಯಾಯಿತು) ಎಂದು ಸಂಜಯ ದೃತರಾಷ್ಟ್ರನಿಗೆ ಹೇಳಿದ.
ಪದಾರ್ಥ (ಕ.ಗ.ಪ)
ಬೆರಳ ಮೂಗಿನಲ್ಲಿ-ಆಶ್ಚರ್ಯದಿಂದ ಅಥವಾ ಚಿಂತೆಯಿಂದ ಬೆರಳನ್ನು ಮೂಗಿನ ಮೇಲಿಡುಸುವುದು, ಬೇಗೆ-ಉರಿ, ಸೆಕೆ, ಚಕ್ರವಾಕ-ಚಕ್ರವಾಕ ಪಕ್ಷಿಗಳು, ಜಕ್ಕವಕ್ಕಿ, ಅಟವೀಚರರು-ಕಾಡಿನಲ್ಲಿ ಸಂಚರಿಸುವವರು, ಬೇಡರು, ಭಾವಭಾವ-ಪರಸ್ಪರ, ಒಂದೇ ಭಾವ
ಟಿಪ್ಪನೀ (ಕ.ಗ.ಪ)
1)“ಇರುಳು ಚಕ್ರವಾಕಕೆ ….” ಗಂಡು ಹೆಣ್ಣು ಚಕ್ರವಾಕ ಪಕ್ಷಿಗಳು ಹಗಲಿನಲ್ಲಿ ಪರಸ್ಪರ ಅಪ್ಪಿಕೊಂಡಿರುತ್ತವೆ. ರಾತ್ರಿಯಾದ ಕೂಡಲೇ ಬೇರ್ಪಡುತ್ತವೆ ಎಂಬುದು ಕವಿಸಮಯ. ಧರ್ಮರಾಯನ ಮನಸ್ಸು ಏನನ್ನು ಆಲೋಚಿಸುತ್ತಿತ್ತೋ ಆ ವಿಷಯದ ಸುದ್ದಿಯನ್ನೇ ಹೇಳಲು ಬಂದವರು ಈ ಬೇಡರು. ಹಾಗಾಗಿ ಅವರಿಬ್ಬರ ಮನಸ್ಸುಗಳು ಒಂದೇ ವಿಚಾರವನ್ನು ಅಪ್ಪಿಕೊಂಡವು - ಎಂದು ಭಾವ.
ಮೂಲ ...{Loading}...
ಹರಿಹರಿದು ಕೂಡರಸಿ ದೂತರು
ಮರಳಿ ಬಂದರು ದುಗುಡಭರದಲಿ
ಬೆರಳ ಮೂಗಿನಲಿದ್ದುದವನಿಪಸಹಿತ ಪರಿವಾರ
ಇರುಳು ಬೇಗೆಯ ಚಕ್ರವಾಕಕೆ
ತರಣಿ ತಲೆದೋರಿದವೊಲಟವೀ
ಚರರಿಗರಸಗೆ ಭಾವಭಾವ ವ್ಯಕ್ತವಾಯ್ತೆಂದ ॥48॥
೦೪೯ ತನ್ದ ಮಾಂಸದ ...{Loading}...
ತಂದ ಮಾಂಸದ ಕಂಬಿಗಳನು ಪು
ಳಿಂದರೊಪ್ಪಿಸಿ ಭೀಮಸೇನನ
ಮಂದಿರವ ಸಾರಿದರು ಕಂಡರು ಜನದ ಕಳವಳವ
ಇಂದಿನೀ ಸಂಗ್ರಾಮಜಯದಲಿ
ಬಂದ ಜಾಡ್ಯವಿದೇನು ಬಿನ್ನಹ
ವೆಂದು ಸಲುಗೆಯ ಶಬರಪತಿ ನುಡಿಸಿದನು ಪವನಜನ ॥49॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತಾವು ತಂದ ಮಾಂಸದ ಅಡ್ಡೆಗಳನ್ನು ಬೇಡರು ಒಪ್ಪಿಸಿ, ಭೀಮನ ಮನೆಗೆ ನಡೆದರು. ಅಲ್ಲಿದ್ದ ಜನರ ಕಳವಳವನ್ನು ನೋಡಿದರು. ಇಂದಿನ ಈ ಯುದ್ಧದಲ್ಲಿ ವಿಜಯದ ಸಮಯದಲ್ಲಿ ನಿಮಗೆ ಬಂದ ಜಾಡ್ಯವೇನು ಹೇಳಿ, ಇದು ನನ್ನ ಬಿನ್ನಹ ಎಂದು ಭೀಮನೊಂದಿಗೆ ಸಲುಗೆಯಿದ್ದ ಬೇಡರ ನಾಯಕ ಅವನನ್ನು ಮಾತನಾಡಿಸಿದ.
ಪದಾರ್ಥ (ಕ.ಗ.ಪ)
ಕಂಬಿ-ಅಡ್ಡೆ, ಸಾಮಗ್ರಿಗಳನ್ನು ಹೊರಲು ಇರುವ ದೊಡ್ಡ ತಕ್ಕಡಿಯ ಆಕಾರದ ಸಾಧನ, ಪುಳಿಂದ-ಬೇಡ, ಶಬರ, ಜಾಡ್ಯ-ಜಡ್ಡ್ವು, ಖಾಯಿಲೆ, ಬಿನ್ನಹ-ಮನವಿ, ಬೇಡಿಕೆ
ಮೂಲ ...{Loading}...
ತಂದ ಮಾಂಸದ ಕಂಬಿಗಳನು ಪು
ಳಿಂದರೊಪ್ಪಿಸಿ ಭೀಮಸೇನನ
ಮಂದಿರವ ಸಾರಿದರು ಕಂಡರು ಜನದ ಕಳವಳವ
ಇಂದಿನೀ ಸಂಗ್ರಾಮಜಯದಲಿ
ಬಂದ ಜಾಡ್ಯವಿದೇನು ಬಿನ್ನಹ
ವೆಂದು ಸಲುಗೆಯ ಶಬರಪತಿ ನುಡಿಸಿದನು ಪವನಜನ ॥49॥
೦೫೦ ರಣಮುಖದೊಳೇ ಕಾದಶಾಕ್ಷೋ ...{Loading}...
ರಣಮುಖದೊಳೇ ಕಾದಶಾಕ್ಷೋ
ಹಿಣಿಯ ಗೆಲಿದುದು ವಿಫಲವಾದುದು
ಜುಣುಗಿದರಿನೃಪನಾವ ಜವನಿಕೆ ಮರೆಯೊಳಡಗಿದನೊ
ತೃಣವನದೊಳಿರುಬಿನಲಿ ಮೆಳೆಸಂ
ದಣಿಗಳಲಿ ಮರಗಾಡಿನಲಿ ಮೃಗ
ಗಣದ ನೆಲೆಯಲಿ ಕಾಣಿರಲೆ ನೀವೆಂದನಾ ಭೀಮ ॥50॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯುದ್ಧದಲ್ಲಿ ಹನ್ನೊಂದು ಅಕ್ಷೋಹಿಣಿ ಸೈನ್ಯವನ್ನು ಗೆದ್ದುದು ಪ್ರಯೋಜನವಾಗಲಿಲ್ಲ. ಯುದ್ಧಭೂಮಿಯಿಂದ ಜಾರಿದ ಶತ್ರುರಾಜ ಯಾವ ತೆರೆಯ ಮರೆಯಲ್ಲಿ ಅಡಗಿದನೋ ತಿಳಿಯದು. ಹುಲ್ಲುಗಾವಲಿನಲ್ಲಿ, ಇಕ್ಕಟ್ಟಾದ ಜಾಗದಲ್ಲಿ, ಬಿದಿರುಮಳೆಗಳ ಗುಂಪಿನಲ್ಲಿ, ಮರಗಳ ಕಾಡಿನಲ್ಲಿ, ವನ್ಯಮೃಗಗಳು ವಾಸಿಸುವ ಗುಹೆ, ಪೊಟರೆ ಮುಂತಾದುವುಗಳಲ್ಲಿ ನೀವು ಅವನನ್ನು ಕಾಣಲಿಲ್ಲವೇ ಎಂದು ಭೀಮ ಬೇಡರನ್ನು ಕೇಳಿದ.
ಪದಾರ್ಥ (ಕ.ಗ.ಪ)
ಜುಣುಗು-ಜಾರಿಹೋಗು, ಕಾಣದಂತೆ ತಪ್ಪಿಸಿಕೊಳ್ಳು, ಜವನಿಕೆ-ಯವನಿಕಾ(ಸಂ), ತೆರೆ, ಪರದೆ, ತೃಣವನ-ಹುಲ್ಲುಗಾವಲು, ಇರುಬು-ಇಕ್ಕಟ್ಟಾದ ಜಾಗ, ಸಂದಿಗೊಂದಿ, ಮೆಳೆಸಂದಣಿ-ಬಿದಿರುಮೆಳೆಗಳು
ಮೂಲ ...{Loading}...
ರಣಮುಖದೊಳೇ ಕಾದಶಾಕ್ಷೋ
ಹಿಣಿಯ ಗೆಲಿದುದು ವಿಫಲವಾದುದು
ಜುಣುಗಿದರಿನೃಪನಾವ ಜವನಿಕೆ ಮರೆಯೊಳಡಗಿದನೊ
ತೃಣವನದೊಳಿರುಬಿನಲಿ ಮೆಳೆಸಂ
ದಣಿಗಳಲಿ ಮರಗಾಡಿನಲಿ ಮೃಗ
ಗಣದ ನೆಲೆಯಲಿ ಕಾಣಿರಲೆ ನೀವೆಂದನಾ ಭೀಮ ॥50॥
೦೫೧ ಆದರೆಕ್ಕಟಿ ಬಿನ್ನಹವ ...{Loading}...
ಆದರೆಕ್ಕಟಿ ಬಿನ್ನಹವ ನೀ
ವಾದರಿಪುದೆನೆ ತುಷ್ಟನಾಗಿ ವೃ
ಕೋದರನು ಕರಸಿದನು ಪರಿಮಿತಕಾ ಪುಳಿಂದಕರ
ಆದುದೇ ನೆಲೆ ಕುರುಪತಿಗೆ ದು
ರ್ಭೇದವಿದು ಮೆಚ್ಚುಂಟು ನಿಮಗೆನ
ಲಾ ದುರಾತ್ಮಕರರುಹಿದರು ಧೃತರಾಷ್ಟ್ರ ಕೇಳ್ ಎಂದ ॥51॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆದರೆ ಪ್ರತ್ಯೇಕವಾಗಿ ನಿಮ್ಮೊಂದಿಗೆ ಹೇಳುವುದಿದೆ. ನೀವು ಆದರದಿಂದ ಕೇಳಬೇಕು - ಎನ್ನಲು ಸಂತುಷ್ಟನಾಗಿ ಆ ಬೇಡರನ್ನು ಒಂದು ಪ್ರತ್ಯೇಕವಾದ, ಬೇರಾರೂ ಬರಲಾಗದ ಸ್ಥಳಕ್ಕೆ ಕರೆದುಕೊಂಡುಹೋದ. ಕುರುಪತಿಯು ಒಂದು ನಿರ್ದಿಷ್ಟ ಸ್ಥಳದಲ್ಲಿ ಇದ್ದಾನೆಯೇ. ಈ ರಹಸ್ಯವು ಭೇದಿಸಲಾಗದ್ದು. ಹೇಳಿದರೆ ನಿಮಗೆ ಬಹುಮಾನವುಂಟು ಎಂದು ಭೀಮ ಹೇಳಲು ಅ ಪಾಪಿಗಳು ಹೇಳಿದರು - ಎಂದು ಸಂಜಯ ಧೃತರಾಷ್ಟ್ರನಿಗೆ ಹೇಳಿದ.
ಪದಾರ್ಥ (ಕ.ಗ.ಪ)
ಎಕ್ಕಟಿ-ಪ್ರತ್ಯೇಕ ಸ್ಥಳ, ಗುಟ್ಟಾದ ಸ್ಥಳ, ಪರಿಮಿತಕೆ-ಬೇರೆಯವರು ಬರದಂತೆ ಇರುವ ಪ್ರತ್ಯೇಕ ಸ್ಥಳ, ಗುಪ್ತ ಸಮಾಲೋಚನಾ ಸ್ಥಳ, ಬೇಕಾದವರಷ್ಟೇ ಇರುವ ಸ್ಥಳ, ಮೆಚ್ಚು-ಬಹುಮಾನ, ಹೊಗಳಿಕೆ, ದುರಾತ್ಮಕರು-ಪಾಪಿಗಳು, ಕೆಟ್ಟವರು.
ಮೂಲ ...{Loading}...
ಆದರೆಕ್ಕಟಿ ಬಿನ್ನಹವ ನೀ
ವಾದರಿಪುದೆನೆ ತುಷ್ಟನಾಗಿ ವೃ
ಕೋದರನು ಕರಸಿದನು ಪರಿಮಿತಕಾ ಪುಳಿಂದಕರ
ಆದುದೇ ನೆಲೆ ಕುರುಪತಿಗೆ ದು
ರ್ಭೇದವಿದು ಮೆಚ್ಚುಂಟು ನಿಮಗೆನ
ಲಾ ದುರಾತ್ಮಕರರುಹಿದರು ಧೃತರಾಷ್ಟ್ರ ಕೇಳೆಂದ ॥51॥
೦೫೨ ಜೀಯ ಕುರುಪತಿ ...{Loading}...
ಜೀಯ ಕುರುಪತಿ ಗುಪ್ತದಲಿ ದ್ವೈ
ಪಾಯನನ ಸರಸಿಯಲಿ ಸಮರವಿ
ಧಾಯಕದ ವಾರ್ತೆಯನು ತನ್ನವರೊಡನೆ ತೀರದಲಿ
ಬಾಯಿಗೇಳಿಸುತಿರ್ದ ನಾವ್ ತ
ತ್ತೋಯಪಾನಕೆ ತಿರುಗಿ ಕಂಡೆವು
ರಾಯನಂಘ್ರಿಗಳಾಣೆಯೆಂದರು ಶಬರರನಿಲಜಗೆ ॥52॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಒಡೆಯನೇ, ಕುರುಪತಿಯು ಗುಪ್ತವಾಗಿ ದ್ವೈಪಾಯನ ಸರೋವರದಲ್ಲಿ ಯುದ್ಧನಿರ್ಣಯದ ವಾರ್ತೆಯನ್ನು ತನ್ನವರಿಗೆ ಮಾತನಾಡಿ ಹೇಳುತ್ತಿದ್ದ. ನಾವು ಆ ಸರೋವರಕ್ಕೆ ನೀರು ಕುಡಿಯಲು ಹೋಗಿ ಇದನ್ನು ಕಂಡೆವು (ಕೇಳಿದೆವು) ಧರ್ಮರಾಯನ ಪಾದಕಮಲಗಳ ಆಣೆಯಾಗಿ ಇದು ನಿಜ ಎಂದು ಬೇಡರ ನಾಯಕ ಭೀಮನಿಗೆ ಹೇಳಿದ.
ಪದಾರ್ಥ (ಕ.ಗ.ಪ)
ವಿಧಾಯಕ-ನಿರ್ಣಯ, ಶಾಸನ, ನಿಯಾಮಿಕ, ವಿಧಿಸುವ, ಬಾಯಿಗೇಳು-ಮಾತುಕೇಳುವಂತೆ ಮಾಡು.
ಮೂಲ ...{Loading}...
ಜೀಯ ಕುರುಪತಿ ಗುಪ್ತದಲಿ ದ್ವೈ
ಪಾಯನನ ಸರಸಿಯಲಿ ಸಮರವಿ
ಧಾಯಕದ ವಾರ್ತೆಯನು ತನ್ನವರೊಡನೆ ತೀರದಲಿ
ಬಾಯಿಗೇಳಿಸುತಿರ್ದ ನಾವ್ ತ
ತ್ತೋಯಪಾನಕೆ ತಿರುಗಿ ಕಂಡೆವು
ರಾಯನಂಘ್ರಿಗಳಾಣೆಯೆಂದರು ಶಬರರನಿಲಜಗೆ ॥52॥
೦೫೩ ಇತ್ತನವದಿರಿಗಙ್ಗಚಿತ್ತವ ...{Loading}...
ಇತ್ತನವದಿರಿಗಂಗಚಿತ್ತವ
ನುತ್ತಮಾಂಬರ ವೀರ ನೂಪುರರ
ಮುತ್ತಿನೇಕಾವಳಿಯ ಕರ್ಣಾಭರಣ ಮುದ್ರಿಕೆಯ
ಹೊತ್ತ ಹರುಷದ ಹೊಳೆವ ಕಂಗಳ
ತೆತ್ತಿಸಿದ ಪುಳಕದ ಸಘಾಡಿಕೆ
ವೆತ್ತ ಸುಮ್ಮಾನದಲಿ ಬಂದನು ರಾಯನರಮನೆಗೆ ॥53॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತನ್ನ ಅಂಗವಸ್ತ್ರವನ್ನು ಉತ್ತಮವಾದ ರೇಶ್ಮೆಯ ಬಟ್ಟೆಗಳನ್ನು, ವೀರರು ಕಾಲಿನಲ್ಲಿ ಧರಿಸುವ ಆಭರಣಗಳು, ಮುತ್ತಿನ ಏಕಾವಳಿಹಾರಗಳು, ಕಿವಿಯ ಆಭರಣಗಳು, ಉಂಗುರಗಳನ್ನು ಭೀಮ ಬೇಡರಿಗೆ ಕೊಟ್ಟ. ಹರುಷಿತನಾಗಿ, ಹೊಳೆಯುವ ಕಣ್ಣುಗಳನ್ನುಳ್ಳವನಾಗಿ, ಪುಳಕದಿಂದ ಕೂಡಿದ, ಠೀವಿಯಿಂದ ಸುಮ್ಮಾನ ಪಡುತ್ತಾ ಭೀಮ ಧರ್ಮರಾಯನ ಮನೆಗೆ ಬಂದ.
ಪದಾರ್ಥ (ಕ.ಗ.ಪ)
ಅಂಗಚಿತ್ತ-ಅಂಗವಸ್ತ್ರ, ಅಂಬರ-ರೇಷ್ಮೆಯ ಬಟ್ಟೆ, ನೂಪುರ-ಕಾಲಿಗೆ ಹಾಕುವ ಆಭರಣ, ಗೆಜ್ಜೆ, ಏಕಾವಳಿ-ಸರ, ಮುದ್ರಿಕೆ-ಉಂಗುರ, ತೆತ್ತಿಸು-ಸೇರಿಸು, ಜೋಡಿಸು, ಹೊಂದು, ನಾಟಿಸು, ಪುಳಕ-ರೋಮಾಂಚನ, ಸಘಾಡಿಕೆ-ದರ್ಪ, ಠೀವಿ, ಸುಮ್ಮಾನ-ಸಂತೋಷಾತಿರೇಕ, ಉತ್ಸಾಹ.
ಮೂಲ ...{Loading}...
ಇತ್ತನವದಿರಿಗಂಗಚಿತ್ತವ
ನುತ್ತಮಾಂಬರ ವೀರ ನೂಪುರರ
ಮುತ್ತಿನೇಕಾವಳಿಯ ಕರ್ಣಾಭರಣ ಮುದ್ರಿಕೆಯ
ಹೊತ್ತ ಹರುಷದ ಹೊಳೆವ ಕಂಗಳ
ತೆತ್ತಿಸಿದ ಪುಳಕದ ಸಘಾಡಿಕೆ
ವೆತ್ತ ಸುಮ್ಮಾನದಲಿ ಬಂದನು ರಾಯನರಮನೆಗೆ ॥53॥
೦೫೪ ಗುಡಿಯ ಕಟ್ಟಿಸು ...{Loading}...
ಗುಡಿಯ ಕಟ್ಟಿಸು ಜೀಯ ಚರರಿಗೆ
ಕೊಡು ಪಸಾಯವನರಿನೃಪನ ತಲೆ
ವಿಡಿದರಾ ದ್ವೈಪಾಯನ ಸರೋವರದ ಮಧ್ಯದಲಿ
ಅಡಗಿದನು ತಡಿವಿಡಿದು ನಿಂದವ
ರೊಡನೆ ಮಾತಾಡಿದನು ಗಡ ನಿ
ಮ್ಮಡಿಯೆ ಬಲ್ಲಿರಿ ರಾಜಕಾರ್ಯವನೆಂದನಾ ಭೀಮ ॥54॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಾವುಟಗಳನ್ನು ಕಟ್ಟಿಸು, ಸೇವಕರಿಗೆ ಬಹುಮಾನಗಳನ್ನು ಕೊಡು, ಅವರು ಶತ್ರುರಾಜನನ್ನು ದ್ವೈಪಾಯನ ಸರೋವರದ ಮಧ್ಯದಲ್ಲಿ ಪತ್ತೆ ಮಾಡಿದ್ದಾರೆ. ಸರೋವರದಲ್ಲಿ ಅಡಗಿಕೊಂಡಿದ್ದಾನೆ, ದಡದಲ್ಲಿ ನಿಂತವರೊಂದಿಗೆ ಮಾತನಾಡಿದ್ದಾನೆ. ಇನ್ನು ಮುಂದಿನ ರಾಜಕಾರ್ಯವನ್ನು ನೀವೇ ಬಲ್ಲಿರಿ ಎಂದು ಭೀಮ, ಧರ್ಮರಾಯನಿಗೆ ಹೇಳಿದ.
ಪದಾರ್ಥ (ಕ.ಗ.ಪ)
ಗುಡಿ-ಬಾವುಟ, ಪಸಾಯ-ಬಹುಮಾನ, ಉಡುಗೊರೆ, ದಾನ, ತಲೆವಿಡಿ- ಸೆರೆಹಿಡಿ, ತಡಿವಿಡಿದು-ದಡದಲ್ಲಿ, ನಿಮ್ಮಡಿ-ನೀವು (ಗೌರವದಿಂದ ಹೇಳುವ ಮಾತು)
ಮೂಲ ...{Loading}...
ಗುಡಿಯ ಕಟ್ಟಿಸು ಜೀಯ ಚರರಿಗೆ
ಕೊಡು ಪಸಾಯವನರಿನೃಪನ ತಲೆ
ವಿಡಿದರಾ ದ್ವೈಪಾಯನ ಸರೋವರದ ಮಧ್ಯದಲಿ
ಅಡಗಿದನು ತಡಿವಿಡಿದು ನಿಂದವ
ರೊಡನೆ ಮಾತಾಡಿದನು ಗಡ ನಿ
ಮ್ಮಡಿಯೆ ಬಲ್ಲಿರಿ ರಾಜಕಾರ್ಯವನೆಂದನಾ ಭೀಮ ॥54॥
೦೫೫ ಕರೆ ಮುಕುನ್ದನನರ್ಜುನನ ...{Loading}...
ಕರೆ ಮುಕುಂದನನರ್ಜುನನ ಸಂ
ವರಣೆ ಬರಲಿ ಶಿಖಂಡಿ ಪಾಂಚಾ
ಲರಿಗೆ ನೇಮಿಸು ಕರಸು ಧೃಷ್ಟದ್ಯುಮ್ನ ಸೃಂಜಯರ
ಕರಿ ತುರಗ ರಥವಿಶ್ರಮವನಿಂ
ದಿರುಳಿನಲಿ ನೂಕುವುದು ಹೊರವಡಿ
ಹೊರವಡೆನೆ ನಿಸ್ಸಾಳ ಸೂಳವಿಸಿದವು ಲಗ್ಗೆಯಲಿ ॥55॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೃಷ್ಣನನ್ನು ಕರಸು, ಅರ್ಜುನ ಪರಿವಾರ ಸಮೇತನಾಗಿ ಬರಲಿ, ಶಿಖಂಡಿ ಪಾಂಚಾಲರಿಗೆ ಬರಲು ಆದೇಶಕೊಡು. ಧೃಷ್ಟದ್ಯುಮ್ನ ಸೃಂಜಯರುಗಳನ್ನು ಕರಸು. ಆನೆ, ಕುದುರೆ, ರಥಗಳು, ಯುದ್ಧ ಶ್ರಮವನ್ನು ಇಂದು ರಾತ್ರಿ ಪರಿಹರಿಸಿಕೊಳ್ಳಲಿ. ಹೊರಡಿ, ಹೊರಡಿ ಎಂದು ಭೀಮ ಹೇಳಲು ರಣವಾದ್ಯಗಳು ಗುಂಪಿನಲ್ಲಿ ಸೇರಿಕೊಂಡು ಭೋರ್ಗರೆದುವು.
ಪದಾರ್ಥ (ಕ.ಗ.ಪ)
ವಿಶ್ರಮ-ಶ್ರಮ, ಆಯಾಸ, ನೂಕು-ಕಳೆ, ನೀಗು, ಪರಿಹರಿಸು, ನಿಸ್ಸಾಳ-ಒಂದು ರಣವಾದ್ಯ, ಲಗ್ಗೆ-ವಾದ್ಯಧ್ವನಿಗಳ ಮೇಳ, ಮುತ್ತಿಗೆ, ಆಕ್ರಮಣ.
ಮೂಲ ...{Loading}...
ಕರೆ ಮುಕುಂದನನರ್ಜುನನ ಸಂ
ವರಣೆ ಬರಲಿ ಶಿಖಂಡಿ ಪಾಂಚಾ
ಲರಿಗೆ ನೇಮಿಸು ಕರಸು ಧೃಷ್ಟದ್ಯುಮ್ನ ಸೃಂಜಯರ
ಕರಿ ತುರಗ ರಥವಿಶ್ರಮವನಿಂ
ದಿರುಳಿನಲಿ ನೂಕುವುದು ಹೊರವಡಿ
ಹೊರವಡೆನೆ ನಿಸ್ಸಾಳ ಸೂಳವಿಸಿದವು ಲಗ್ಗೆಯಲಿ ॥55॥
೦೫೬ ಅವರ ಸುಮ್ಮಾನವನು ...{Loading}...
ಅವರ ಸುಮ್ಮಾನವನು ಸೇನಾ
ನಿವಹ ರಭಸದ ಭೂರಿಭೇರಿಯ
ವಿವಿಧ ವಾದ್ಯಧ್ವನಿಯ ರಥಗಜಹಯದ ಗರ್ಜನೆಯ
ಇವರು ಕೇಳಿದರಕಟಕಟ ಕೌ
ರವನ ಗುಪ್ತ ಪ್ರಕಟವಾದುದೆ
ಶಿವಶಿವಾ ಹರಿಸರ್ವಗತನಹುದೆಂದನಾ ದ್ರೌಣಿ ॥56॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅವರ ಸಂತೋಷದ ಉತ್ಸಾಹವನ್ನು, ಸೇನಾಸಮೂಹದ ರಭಸದ ಘನವಾದ ಭೇರಿ ಮತ್ತಿತರ ವಿವಿಧ ರಣವಾದ್ಯಗಳ ಧ್ವನಿಯನ್ನು, ರಥಗಳು, ಕುದುರೆಗಳು ಮತ್ತು ಆನೆಗಳ ಗರ್ಜನೆಯನ್ನು ಇವರು (ಅಶ್ವತ್ಥಾಮ, ಕೃಪ, ಕೃತವರ್ಮರು) ಕೇಳಿದರು. ಅಯ್ಯಯ್ಯೋ! ಕೌರವನಿರುವ ಗುಪ್ತಸ್ಥಾನವು ಪಾಂಡವರಿಗೆ ತಿಳಿದು ಹೋಯಿತೆ. ಶಿವ ಶಿವಾ, ಹರಿಯು ಎಲ್ಲೆಲ್ಲಿಯೂ ವ್ಯಾಪಿಸಿದ್ದಾನೆ - ಎಂದು ಅಶ್ವತ್ಥಾಮ ಹೇಳಿದ.
ಪದಾರ್ಥ (ಕ.ಗ.ಪ)
ಸುಮ್ಮಾನ-ಸಂತೋಷಾತಿರೇಕ, ಉತ್ಸಾಹ, ಸರ್ವಗತ-ಎಲ್ಲೆಲ್ಲೂ ಇರುವ.
ಮೂಲ ...{Loading}...
ಅವರ ಸುಮ್ಮಾನವನು ಸೇನಾ
ನಿವಹ ರಭಸದ ಭೂರಿಭೇರಿಯ
ವಿವಿಧ ವಾದ್ಯಧ್ವನಿಯ ರಥಗಜಹಯದ ಗರ್ಜನೆಯ
ಇವರು ಕೇಳಿದರಕಟಕಟ ಕೌ
ರವನ ಗುಪ್ತ ಪ್ರಕಟವಾದುದೆ
ಶಿವಶಿವಾ ಹರಿಸರ್ವಗತನಹುದೆಂದನಾ ದ್ರೌಣಿ ॥56॥
೦೫೭ ಏಳು ಕುರುಪತಿ ...{Loading}...
ಏಳು ಕುರುಪತಿ ಪಾಂಡುನಂದನ
ರಾಳು ಬರುತಿದೆ ನಾವು ನಾಲ್ವರು
ಕಾಳೆಗದೊಳಂಘೈಸುವೆವು ಬಿಡುಬಿಡು ಸರೋವರವ
ಹೇಳು ಮನವೇನೆನಲು ನೀವಿ
ನ್ನೇಳಿ ದೂರದಲಿರಿ ವಿರೋಧಿಗ
ಳಾಳು ಮಾಡುವುದೇನು ಸಲಿಲದೊಳೆಂದನಾ ಭೂಪ ॥57॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುರ್ಯೋಧನ, ನೀರಿನಿಂದ ಏಳು. ಪಾಂಡವರ ಸೈನ್ಯ ಬರುತ್ತಿದೆ. ನಾವು ನಾಲ್ಕೂಜನ ಯುದ್ಧದಲ್ಲಿ ಪಾಂಡವರನ್ನು ಎದುರಿಸೋಣ. ಸರೋವರವನ್ನು ಬಿಡು ನಿನ್ನ ಮನಸ್ಸು ಏನು ಹೇಳು - ಎಂದು ಅಶ್ವತ್ಥಾಮಾದಿಗಳು ಹೇಳಲು, ನೀವು ಇನ್ನು ಹೊರಡಿ, ದೂರದಲ್ಲಿರಿ ನೀರಿನೊಳಗೆ ಶತ್ರುಸೈನ್ಯಿಕರು ಏನು ಮಾಡಲು ಸಾಧ್ಯ - ಎಂದು ದುರ್ಯೋಧನನು ಹೇಳಿದನು.
ಪದಾರ್ಥ (ಕ.ಗ.ಪ)
ಅಂಘೈಸು-ಅಂಗೈಸು, ಎದುರಿಸು, ಸಲಿಲ-ನೀರು.
ಮೂಲ ...{Loading}...
ಏಳು ಕುರುಪತಿ ಪಾಂಡುನಂದನ
ರಾಳು ಬರುತಿದೆ ನಾವು ನಾಲ್ವರು
ಕಾಳೆಗದೊಳಂಘೈಸುವೆವು ಬಿಡುಬಿಡು ಸರೋವರವ
ಹೇಳು ಮನವೇನೆನಲು ನೀವಿ
ನ್ನೇಳಿ ದೂರದಲಿರಿ ವಿರೋಧಿಗ
ಳಾಳು ಮಾಡುವುದೇನು ಸಲಿಲದೊಳೆಂದನಾ ಭೂಪ ॥57॥
೦೫೮ ಅನಿಮಿಷರು ಗನ್ಧರ್ವ ...{Loading}...
ಅನಿಮಿಷರು ಗಂಧರ್ವ ಯಕ್ಷರು
ಮುನಿದು ಮಾಡುವುದೇನು ಮಾಯದ
ಮನುಜರಿಗೆ ತಾ ಸಾಧ್ಯವಹೆನೇ ತನ್ನನರಿಯಿರಲಾ
ವಿನುತ ಸಲಿಲಸ್ತಂಭವಿದ್ಯೆಯೊ
ಳೆನಗಿರವು ಪಾತಾಳದಲಿ ಯಮ
ತನುಜನೇಗುವ ರೂಹುದೋರದೆ ಹೋಗಿ ನೀವೆಂದ ॥58॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೇವತೆಗಳು, ಗಂಧರ್ವರು, ಯಕ್ಷರು ಕೋಪ ಮಾಡಿಕೊಂಡು ಏನು ಮಾಡಬಲ್ಲರು. ಅಂತಹುದರಲ್ಲಿ ಮಾಯೆಯ ಮನುಷ್ಯರಿಗೆ ನಾನು ದಕ್ಕುತ್ತೇನೆಯೆ. ನನ್ನನ್ನು ನೀವು ಇನ್ನೂ ತಿಳಿದಿಲ್ಲವಲ್ಲಾ. ಸಲಿಲಸ್ತಂಭನ ವಿದ್ಯೆಯಿಂದ ನನಗೆ ಪಾತಾಳದಲ್ಲಿ ನೆಲೆ. ಧರ್ಮರಾಯನು ಏನು ಮಾಡಬಲ್ಲ. ನಿಮ್ಮ ಇರುವಿಕೆಯನ್ನು ಅವರಿಗೆ ತೋರಿಸದೆ ನೀವು ಇಲ್ಲಿಂದ ಹೋಗಿ ಎಂದು ದುರ್ಯೋಧನ ಹೇಳಿದ.
ಪದಾರ್ಥ (ಕ.ಗ.ಪ)
ಅನಿಮಿಷ-ದೇವತೆಗಳು, ಕಣ್ಣುರೆಪ್ಪೆ ಮಿಟುಕಿಸದೇ ಇರುವವರು, ಮಾಯದ ಮನುಜರು - ಮರುಳುಮಾಡುವ ಮನುಷ್ಯರು, ಸಾಧ್ಯವಾಗು-ದಕ್ಕುವುದು, ಅವರ ಕೈಗೆ ಸಿಕ್ಕುವುದು, ಏಗು-ನಿಭಾಯಿಸು
ಮೂಲ ...{Loading}...
ಅನಿಮಿಷರು ಗಂಧರ್ವ ಯಕ್ಷರು
ಮುನಿದು ಮಾಡುವುದೇನು ಮಾಯದ
ಮನುಜರಿಗೆ ತಾ ಸಾಧ್ಯವಹೆನೇ ತನ್ನನರಿಯಿರಲಾ
ವಿನುತ ಸಲಿಲಸ್ತಂಭವಿದ್ಯೆಯೊ
ಳೆನಗಿರವು ಪಾತಾಳದಲಿ ಯಮ
ತನುಜನೇಗುವ ರೂಹುದೋರದೆ ಹೋಗಿ ನೀವೆಂದ ॥58॥
೦೫೯ ಉರವಣಿಸಿತರಿಸೇನೆ ಮುತ್ತಿತು ...{Loading}...
ಉರವಣಿಸಿತರಿಸೇನೆ ಮುತ್ತಿತು
ಸರಸಿಯನು ವೇಢೆಯಲಿ ಗಿಡುಮೆಳೆ
ತರುಲತೆಯಲೊಳಕೊಂಡು ನಿಂದುದು ಚತುರಚತುರಂಗ
ನರರ ಗರ್ಜನೆ ವಾದ್ಯರವ ಕರಿ
ತುರಗ ರಥ ನಿರ್ಘೋಷ ಪರ್ವತ
ಬಿರಿಯೆ ಮೊಳಗಿತು ಸಿಲುಕಿದನು ಸಿಲುಕಿದನು ಹಗೆಯೆನುತ ॥59॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶತ್ರುಗಳಾದ ಪಾಂಡವರ ಸೈನ್ಯವು ಸಡಗರಿಸಿತು. ಸೈನ್ಯ ಶೀಘ್ರವಾಗಿ ಕೊಳವನ್ನು ಮುತ್ತಿತು. ಚತುರಂಗ ಸೈನ್ಯವೂ ಗಿಡ ಮೆಳೆ ಮರ - ಬಳ್ಳಿಗಳನ್ನು ಸೇರಿಸಿಕೊಂಡು ನಿಂತಿತು. ಮನುಷ್ಯರ ಗರ್ಜನೆ, ವಾದ್ಯಗಳ ಶಬ್ದ, ಆನೆ ಕುದುರೆ ರಥಗಳ ಶಬ್ದಗಳು ಪರ್ವತವನ್ನೇ ಸೀಳುವಂತೆ ಶತ್ರು ಸಿಕ್ಕಿದನು ಸಿಕ್ಕಿದನು ಎನ್ನುತ್ತಾ ಮೊಳಗಿದುವು.
ಪದಾರ್ಥ (ಕ.ಗ.ಪ)
ಉರವಣಿಸು-ಸಡಗರಿಸು, ಸಂಭ್ರಮಿಸು, ಆತುರಪಡು, ವೇಢೆ-ಸುತ್ತುವರಿ, ಮೆಳೆ-ಮುಳ್ಳಿನ ಗಿಡಬಳ್ಳಿಗಳ ಪೊದೆ, ನಿರ್ಘೋಷ-ಜೋರಾದ ಶಬ್ದ.
ಮೂಲ ...{Loading}...
ಉರವಣಿಸಿತರಿಸೇನೆ ಮುತ್ತಿತು
ಸರಸಿಯನು ವೇಢೆಯಲಿ ಗಿಡುಮೆಳೆ
ತರುಲತೆಯಲೊಳಕೊಂಡು ನಿಂದುದು ಚತುರಚತುರಂಗ
ನರರ ಗರ್ಜನೆ ವಾದ್ಯರವ ಕರಿ
ತುರಗ ರಥ ನಿರ್ಘೋಷ ಪರ್ವತ
ಬಿರಿಯೆ ಮೊಳಗಿತು ಸಿಲುಕಿದನು ಸಿಲುಕಿದನು ಹಗೆಯೆನುತ ॥59॥
೦೬೦ ಇವರು ತಿರುಗಿದರಿನ್ನು ...{Loading}...
ಇವರು ತಿರುಗಿದರಿನ್ನು ದೈವ
ವ್ಯವಸಿತವೆ ಫಲಿಸುವುದಲಾ ಕೌ
ರವನ ಸಿರಿ ಪಣ್ಯಾಂಗನಾವಿಭ್ರಮವ ವರಿಸಿತಲಾ
ಅವರಿಗಿದನಾರರುಹಿದರೊ ಪಾಂ
ಡವರಿಗಾವುದು ಕೊರತೆ ಪುಣ್ಯ
ಪ್ರವರ ಗದುಗಿನ ವೀರನಾರಾಯಣನ ಕರುಣದಲಿ ॥60॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೈವ ಹೇಗೆ ವ್ಯವಸ್ಥೆ ಮಾಡುತ್ತದೋ ಹಾಗೆ ನಡಯುತ್ತದೆ. ಕೌರವನ ಐಶ್ವರ್ಯವು ವೇಶ್ಯಾಸ್ತ್ರೀಯರ ಸಂಭ್ರಮಕ್ಕೆ ಸಮನಾಯಿತು (ತಾತ್ಕಾಲಿಕ) ಪಾಂಡವರಿಗೆ ಈ ಸ್ಥಳವನ್ನು ಯಾರು ತಿಳಿಸಿದರೋ. ಪುಣ್ಯಪ್ರದವಾದ ಬಿರುದುಗಳನ್ನುಳ್ಳ ಗದುಗಿನ ವೀರನಾರಾಯಣನ ಕರುಣದಿಂದ, ಪಾಂಡವರಿಗೆ ಇನ್ನಾವ ಕೊರತೆಯಿದ್ದೀತು - ಎಂದುಕೊಳ್ಳುತ್ತಾ ಅಶ್ವತ್ಥಾಮ, ಕೃಪ, ಕೃತವರ್ಮರು ಅಲ್ಲಿಂದ ಹಿಂದಿರುಗಿದರು.
ಪದಾರ್ಥ (ಕ.ಗ.ಪ)
ವ್ಯವಸಿತ-ವ್ಯವಸ್ಥೆ, ಏರ್ಪಾಟು, ಪಣ್ಯಾಂಗನೆ-ವೇಶ್ಯಾಸ್ತ್ರೀ, ವಿಲಾಸಿನಿ, ಪುಣ್ಯಪ್ರವರ-ಕೇಳಿದರೆ ಪುಣ್ಯ ದೊರೆಯುವ ಬಿರುದು (ಹೆಸರು)ಗಳನ್ನುಳ್ಳವನು.
ಮೂಲ ...{Loading}...
ಇವರು ತಿರುಗಿದರಿನ್ನು ದೈವ
ವ್ಯವಸಿತವೆ ಫಲಿಸುವುದಲಾ ಕೌ
ರವನ ಸಿರಿ ಪಣ್ಯಾಂಗನಾವಿಭ್ರಮವ ವರಿಸಿತಲಾ
ಅವರಿಗಿದನಾರರುಹಿದರೊ ಪಾಂ
ಡವರಿಗಾವುದು ಕೊರತೆ ಪುಣ್ಯ
ಪ್ರವರ ಗದುಗಿನ ವೀರನಾರಾಯಣನ ಕರುಣದಲಿ ॥60॥