೦೦೦ ಸೂ ಶಲ್ಯನವಸಾನದಲಿ ...{Loading}...
ಸೂ. ಶಲ್ಯನವಸಾನದಲಿ ಕೌರವ
ಮಲ್ಲ ದಳಪತಿಯಾಗಿ ರಣದಲಿ
ನಿಲ್ಲದಡಗಿದನಿತ್ತ ಸಂಜಯ ಬಂದನಾಹವಕೆ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ: ಶಲ್ಯನ ಮರಣದ ನಂತರ ಕೌರವಮಲ್ಲನಾದ ದುರ್ಯೋಧನ ತಾನೇ ಸೇನಾಪತ್ಯವನ್ನು ವಹಿಸಿಕೊಂಡು, ಯುದ್ಧದಲ್ಲಿ ನಿಲ್ಲಲಾಗದೇ ಅಡಗಿಕೊಂಡ. ಅವನನ್ನು ನೋಡಲು ಸಂಜಯ ಯುದ್ಧ ಭೂಮಿಗೆ ಬಂದ.
ಮೂಲ ...{Loading}...
ಸೂ. ಶಲ್ಯನವಸಾನದಲಿ ಕೌರವ
ಮಲ್ಲ ದಳಪತಿಯಾಗಿ ರಣದಲಿ
ನಿಲ್ಲದಡಗಿದನಿತ್ತ ಸಂಜಯ ಬಂದನಾಹವಕೆ
೦೦೧ ಕೇಳು ಧೃತರಾಷ್ಟ್ರಾವನಿಪ ...{Loading}...
ಕೇಳು ಧೃತರಾಷ್ಟ್ರಾವನಿಪ ಸಿರಿ
ಲೋಲಸಹಿತರ್ಜುನನು ಸೇನಾ
ಜಾಲವನು ಸಂತೈಸಿ ದೊರೆ ಸುಯ್ದಾನವೆಂದೆನುತ
ಆಳೊಡನೆ ಬೆರಸಿದನು ಕುರುಭೂ
ಪಾಲಕನ ಥಟ್ಟಿನಲಿ ಶಸ್ತ್ರ
ಜ್ವಾಲೆಗಳ ಕೆದರಿದನು ಹೊದರಿನ ಹಿಂಡ ಹರೆಗಡಿದ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೇಳು ಧೃತರಾಷ್ಟ್ರ ರಾಜ, ಶ್ರೀಕೃಷ್ಣನ ಸಹಿತ ಅರ್ಜುನನು ತಮ್ಮ ಸೈನ್ಯವನ್ನು ಸಮಾಧಾನಗೊಳಿಸಿ ದೊರೆ ಧರ್ಮಜ ಕ್ಷೇಮದಿಂದ್ದಾನೆ ಎನ್ನುತ್ತ, ಸೈನಿಕರೊಡನೆ ಕೂಡಿಕೊಂಡು ದುರ್ಯೋಧನನ ಸೈನ್ಯದಲ್ಲಿ ಶಸ್ತ್ರಗಳ ಬೆಂಕಿಯನ್ನೇ ಕೆದರಿದ. ಕೌರವಸೈನ್ಯದ ಹಿಂಡನ್ನು ಚಲ್ಲಾಪಿಲ್ಲಿಯಾಗುವಂತೆ ಮಾಡಿ ಕತ್ತರಿಸಿಹಾಕಿದ.
ಪದಾರ್ಥ (ಕ.ಗ.ಪ)
ಸುಯ್ದಾನ-ಕ್ಷೇಮ, ಥಟ್ಟು-ಸೈನ್ಯ, ಹೊದರು-ಗುಂಪು, ಸಮೂಹ, ಹರೆಗಡಿ- ಚಲ್ಲಾಪಿಲ್ಲಿಮಾಡಿ ಕತ್ತರಿಸು.
ಮೂಲ ...{Loading}...
ಕೇಳು ಧೃತರಾಷ್ಟ್ರಾವನಿಪ ಸಿರಿ
ಲೋಲಸಹಿತರ್ಜುನನು ಸೇನಾ
ಜಾಲವನು ಸಂತೈಸಿ ದೊರೆ ಸುಯ್ದಾನವೆಂದೆನುತ
ಆಳೊಡನೆ ಬೆರಸಿದನು ಕುರುಭೂ
ಪಾಲಕನ ಥಟ್ಟಿನಲಿ ಶಸ್ತ್ರ
ಜ್ವಾಲೆಗಳ ಕೆದರಿದನು ಹೊದರಿನ ಹಿಂಡ ಹರೆಗಡಿದ ॥1॥
೦೦೨ ಎಲವೊ ಕಪಟದ್ಯೂತಕೇಳೀ ...{Loading}...
ಎಲವೊ ಕಪಟದ್ಯೂತಕೇಳೀ
ಕಲುಷಿತಾಂತಃಕರಣ ನಿನ್ನೀ
ಬಲಕೆ ಪತಿ ನೀನೋ ಕೃಪಾಚಾರಿಯನೊ ಗುರುಸುತನೊ
ಖಳ ಸುಶರ್ಮನೊ ಶಕುನಿಯೋ ನಿ
ನ್ನುಳಿದವೊಡವುಟ್ಟಿದರೊ ರಾಜಾ
ವಳಿಯೊಳಾರಳಲಿಗರೆನುತ ತೆಗೆದೆಚ್ಚನಾ ಪಾರ್ಥ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಲವೋ, ಕಪಟದ್ಯೂತಕೇಳಿಯಿಂದ ಕಲುಷಿತಗೊಂಡ ಮನಸ್ಸಿನ ದುರ್ಯೋಧನನೇ! ನಿನ್ನ ಈ ಸೈನ್ಯಕ್ಕೆ ಸೇನಾಪತಿ ಯಾರು? ನೀನೋ, ಕೃಪಾಚಾರ್ಯನೋ, ಅಶ್ವತ್ಥಾಮನೋ, ಖಳ ಸುಶರ್ಮನೋ, ಶಕುನಿಯೋ ಅಥವ ನಿನ್ನ ಉಳಿದಿರುವ ತಮ್ಮಂದಿರೋ? ರಾಜರ ಸಮೂಹದಲ್ಲಿ ನಾಯಕತ್ವಕ್ಕೆ ಒದಗುವವರು ಯಾರು ಎಂದು ಹೇಳುತ್ತಾ ಅರ್ಜುನ ಬಾಣ ಪ್ರಯೋಗ ಮಾಡಿದ.
ಪದಾರ್ಥ (ಕ.ಗ.ಪ)
ಅಳಲಿಗ-ಅಳವಡುವವ, ಒದಗುವವ, ಮರುಗುವವನು.
ಮೂಲ ...{Loading}...
ಎಲವೊ ಕಪಟದ್ಯೂತಕೇಳೀ
ಕಲುಷಿತಾಂತಃಕರಣ ನಿನ್ನೀ
ಬಲಕೆ ಪತಿ ನೀನೋ ಕೃಪಾಚಾರಿಯನೊ ಗುರುಸುತನೊ
ಖಳ ಸುಶರ್ಮನೊ ಶಕುನಿಯೋ ನಿ
ನ್ನುಳಿದವೊಡವುಟ್ಟಿದರೊ ರಾಜಾ
ವಳಿಯೊಳಾರಳಲಿಗರೆನುತ ತೆಗೆದೆಚ್ಚನಾ ಪಾರ್ಥ ॥2॥
೦೦೩ ಅರಸ ಕೇಳೈ ...{Loading}...
ಅರಸ ಕೇಳೈ ಮೂರು ಸಾವಿರ
ಕರಿಘಟೆಗಳಿಪ್ಪತ್ತು ಸಾವಿರ
ತುರಗದಳ ರಥವೆರಡುಸಾವಿರ ಲಕ್ಷ ಕಾಲಾಳು
ಅರಸುಗಳು ಮೂನೂರು ನಿಂದುದು
ಕುರುಬಲದ ವಿಸ್ತಾರ ಕೌರವ
ಧರಣಿಪತಿಯೇಕಾದಶಾಕ್ಷೋಹಿಣಿಯ ಶೇಷವಿದು ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧೃತರಾಷ್ಟ್ರನೇ ಕೇಳು, ಮೂರುಸಾವಿರ ಆನೆಗಳ ಸಮೂಹ, ಇಪ್ಪತ್ತು ಸಾವಿರ ಅಶ್ವದಳ, ಎರಡುಸಾವಿರ ರಥಗಳು, ಒಂದು ಲಕ್ಷ ಕಾಲಾಳು, ರಾಜರುಗಳು ಮೂರುನೂರು ಮಂದಿ ದುರ್ಯೋಧನನ ಸೈನ್ಯದಲ್ಲಿ ಯುದ್ಧಕ್ಕೆ ನಿಂತರು. ಇದು ಈಗ ಉಳಿದ ಕೌರವ ಸೈನ್ಯದ ವಿಸ್ತಾರ! ಕೌರವರಾಜನಾದ ದುರ್ಯೋಧನನ ಹನ್ನೊಂದು ಅಕ್ಷೋಹಿಣಿ ಸೈನ್ಯದಲ್ಲಿ ಉಳಿದ ಸೈನ್ಯ! - ಎಂದು ಸಂಜಯ, ದುರ್ಯೋಧನನ ಉಳಿದ ಸೈನ್ಯದ ಲೆಕ್ಕವನ್ನು ಹೇಳುತ್ತಿದ್ದಾನೆ.
ಮೂಲ ...{Loading}...
ಅರಸ ಕೇಳೈ ಮೂರು ಸಾವಿರ
ಕರಿಘಟೆಗಳಿಪ್ಪತ್ತು ಸಾವಿರ
ತುರಗದಳ ರಥವೆರಡುಸಾವಿರ ಲಕ್ಷ ಕಾಲಾಳು
ಅರಸುಗಳು ಮೂನೂರು ನಿಂದುದು
ಕುರುಬಲದ ವಿಸ್ತಾರ ಕೌರವ
ಧರಣಿಪತಿಯೇಕಾದಶಾಕ್ಷೋಹಿಣಿಯ ಶೇಷವಿದು ॥3॥
೦೦೪ ಕರಿಘಟೆಗಳೈನೂರು ಮೂವ ...{Loading}...
ಕರಿಘಟೆಗಳೈನೂರು ಮೂವ
ತ್ತೆರಡು ಸಾವಿರ ಪಾಯದಳ ಸಾ
ವಿರದ ನೂರು ವರೂಥ ವಂಗಡದವನಿಪರು ಸಹಿತ
ತುರುಕ ಬರ್ಬರ ಪಾರಸೀಕರ
ತುರಗವೈಸಾವಿರ ಸಹಿತ ಮೋ
ಹರಿಸಿ ನಿಂದನು ಶಕುನಿ ಥಟ್ಟಿನ ಬಲದ ಬಾಹೆಯಲಿ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಐನೂರು ಆನೆಗಳು, ಮೂವತ್ತೆರಡುಸಾವಿರ ಕಾಲುದಳ, ಒಂದು ಸಾವಿರದ ನೂರು ರಥಗಳು, ಜೊತೆಗೆ ಪ್ರತ್ಯೇಕವಾಗಿ ಕೆಲವರು ರಾಜರುಗಳು ಸಹಿತ, ತುರುಕರು, ಬರ್ಬರರು, ಪಾರಸೀಕರು, ಇವರುಗಳ ಕುದುರೆಗಳು ಐದುಸಾವಿರ ಸಹಿತ ಶಕುನಿ ಗುಂಪುಗೂಡಿ ಸೈನ್ಯದ ಬಲಭಾಗದಲ್ಲಿ ನಿಂತನು.
ಮೂಲ ...{Loading}...
ಕರಿಘಟೆಗಳೈನೂರು ಮೂವ
ತ್ತೆರಡು ಸಾವಿರ ಪಾಯದಳ ಸಾ
ವಿರದ ನೂರು ವರೂಥ ವಂಗಡದವನಿಪರು ಸಹಿತ
ತುರುಕ ಬರ್ಬರ ಪಾರಸೀಕರ
ತುರಗವೈಸಾವಿರ ಸಹಿತ ಮೋ
ಹರಿಸಿ ನಿಂದನು ಶಕುನಿ ಥಟ್ಟಿನ ಬಲದ ಬಾಹೆಯಲಿ ॥4॥
೦೦೫ ನೂರು ರಥವಿನ್ನೂರು ...{Loading}...
ನೂರು ರಥವಿನ್ನೂರು ಗಜವೈ
ನೂರು ಹಯವೈಸಾಸಿರದ ಮೂ
ನೂರು ಸುಭಟರು ಸಹಿತ ಮೋಹರದೆರಡು ಬಾಹೆಯಲಿ
ತೋರಿದರು ಕೃತವರ್ಮ ಕೃಪರೈ
ನೂರು ಗಜ ಗುರುತನುಜ ಸಹಿತೀ
ಮೂರುದಳಕೊತ್ತಾಗಿ ನಿಂದನು ಕೌರವರರಾಯ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನೂರು ರಥಗಳು, ಇನ್ನೂರು ಆನೆಗಳು, ಐನೂರು ಕುದುರೆಗಳು, ಐದುಸಾವಿರದ ಮುನ್ನೂರು ಕಾಲಾಳು ಸಹಿತ ಸೈನ್ಯದ ಎರಡು ಪಕ್ಕಗಳಲ್ಲಿ ಕೃತವರ್ಮ ಮತ್ತು ಕೃಪಾಚಾರ್ಯರು ಕಾಣಿಸಿಕೊಂಡರು. ಐನೂರು ಆನೆಗಳ ಮತ್ತು ಆಶ್ವತ್ಥಾಮನ ಸಹಿತ ಇರುವ ಸೈನ್ಯದ ಈ ಮೂರು ಭಾಗಗಳ ಸಮೀಪದಲ್ಲಿ ದುರ್ಯೋಧನ ನಿಂತನು.
ಮೂಲ ...{Loading}...
ನೂರು ರಥವಿನ್ನೂರು ಗಜವೈ
ನೂರು ಹಯವೈಸಾಸಿರದ ಮೂ
ನೂರು ಸುಭಟರು ಸಹಿತ ಮೋಹರದೆರಡು ಬಾಹೆಯಲಿ
ತೋರಿದರು ಕೃತವರ್ಮ ಕೃಪರೈ
ನೂರು ಗಜ ಗುರುತನುಜ ಸಹಿತೀ
ಮೂರುದಳಕೊತ್ತಾಗಿ ನಿಂದನು ಕೌರವರರಾಯ ॥5॥
೦೦೬ ಕವಿದುದಿದು ದುವ್ವಾಳಿಸುತ ...{Loading}...
ಕವಿದುದಿದು ದುವ್ವಾಳಿಸುತ ರಥ
ನಿವಹ ಬಿಟ್ಟವು ಕುದುರೆ ಸೂಠಿಯ
ಲವಗಡಿಸಿ ತೂಳಿದವು ಹೇರಾನೆಗಳು ಸಂದಣಿಸಿ
ಸವಡಿವೆರಳಲಿ ಸೇದುವಂಬಿನ
ತವಕಿಗರು ತರುಬಿದರು ಬಲುಬಿ
ಲ್ಲವರು ಮೊನೆಮುಂತಾಗಿ ಮೋಹಿತು ಮಿಕ್ಕ ಸಬಳಿಗರು ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೌರವ ಸೈನ್ಯಗಳು ಹೀಗೆ ಕವಿಯಲು, ಅತಿವೇಗವಾಗಿ ರಥಗಳು ಓಡಿದವು, ಕುದುರೆಗಳು ತೀವ್ರಗತಿಯಿಂದ ಮೇಲೆ ಬೀಳುವಂತೆ ಓಡಿದವು, ದೊಡ್ಡ ಆನೆಗಳು ಒಟ್ಟಾಗಿ ಮುನ್ನುಗಿದವು. ಎರಡು ಬೆರಳುಗಳಲ್ಲಿ ಬಿಲ್ಲಿನ ಹೆದೆಯನ್ನು ಎಳೆದು ಬಾಣಗಳನ್ನು ಪ್ರಯೋಗಿಸಲು ಆತುರರಾಗಿರುವ ದೊಡ್ಡ ಬಿಲ್ಲುಗಾರರು ಶತ್ರುಗಳನ್ನು ಅಟ್ಟಿಸಿಕೊಂಡು ಹೋದರು. ಉಳಿದ ಸಬಳವನ್ನು ಹಿಡಿದ ಸೈನಿಕರು ಆ ಸಬಳಗಳ ತುದಿಯನ್ನು ಮುಂದೆ ಮಾಡಿಕೊಂಡು ಒಂದು ಕಡೆ ಸೇರಿದರು.
ಪದಾರ್ಥ (ಕ.ಗ.ಪ)
ದುವ್ವಾಳಿಸು-ತೀವ್ರಗತಿಯಲ್ಲಿ ಚಲಿಸು, ಸೂಠಿ-ವೇಗ, ತೂಳಿದವು-ಮುನ್ನುಗ್ಗಿದುವು, ಹೇರಾನೆ- ದೊಡ್ಡ ಆನೆ, ಸವಡಿ-ಜೋಡಿ, ಎರಡು, ಮೋಹಿತು-ಒಂದುಗೂಡಿತು.
ಮೂಲ ...{Loading}...
ಕವಿದುದಿದು ದುವ್ವಾಳಿಸುತ ರಥ
ನಿವಹ ಬಿಟ್ಟವು ಕುದುರೆ ಸೂಠಿಯ
ಲವಗಡಿಸಿ ತೂಳಿದವು ಹೇರಾನೆಗಳು ಸಂದಣಿಸಿ
ಸವಡಿವೆರಳಲಿ ಸೇದುವಂಬಿನ
ತವಕಿಗರು ತರುಬಿದರು ಬಲುಬಿ
ಲ್ಲವರು ಮೊನೆಮುಂತಾಗಿ ಮೋಹಿತು ಮಿಕ್ಕ ಸಬಳಿಗರು ॥6॥
೦೦೭ ರಣಪರಿಚ್ಛೇದಿಗಳು ಮಿಗೆ ...{Loading}...
ರಣಪರಿಚ್ಛೇದಿಗಳು ಮಿಗೆ ಸಂ
ದಣಿಸಿತೋ ಕುರುಸೇನೆ ವಾದ್ಯದ
ರಣಿತವದ್ರಿಯನೊದೆದುದದುಭುತ ಬೊಬ್ಬೆಗಳ ಲಳಿಯ
ಕುಣಿದವರ್ಜುನನುರುರಥದ ಮುಂ
ಕಣಿಯಲಾರೋಹಕರು ರಥ ಹಯ
ಹೆಣಗಿದವು ಹಯದೊಡನೆ ಕಂದದ ಖುರದ ಹೊಯ್ಲಿನಲಿ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯುದ್ಧದಲ್ಲಿ ಎದುರು ಬಲವನ್ನು ತುಂಡು ಮಾಡುವವರೆಲ್ಲ ಒಂದೆಡೆ ಸೇರಿತೋ ಎಂಬಂತೆ ಕುರುಸೇನೆಯ ವಾದ್ಯದ ಭೋರ್ಗರೆತವು ಬೆಟ್ಟಗಳನ್ನು ಒಡೆದುವೋ ಎಂಬಂತೆ ಅದ್ಭುತವಾದ ಬೊಬ್ಬೆಗಳ ರಭಸವು ಕೇಳಿಬಂತು. ಅರ್ಜುನನ ಶ್ರೇಷ್ಠವಾದ ರಥದ ಮುಂಭಾಗಲ್ಲಿ ಕುದುರೆ ಸವಾರರು ಕುಣಿದರು, ರಥದ ಕುದುರೆಗಳು, ಇತರ ಕುದುರೆಗಳೊಡನೆ ಕುತ್ತಿಗೆಯ ಮತ್ತು ಪಾದಗಳ ಬೀಸುವಿಕೆಯಿಂದ ಹೆಣಗಿದವು.
ಪದಾರ್ಥ (ಕ.ಗ.ಪ)
ಪರಿಚ್ಛೇದಿಗಳು-ತುಂಡುಮಾಡುವವರು, ರಣಿತ-ಶಬ್ಧ, ಉರು-ಶ್ರೇಷ್ಠ, ಮುಂಕಣಿ-ಮುಂಭಾಗ, ಕಂದ-ಕುತ್ತಿಗೆ, ಖುರ-ಕುದುರೆಯ ಪಾದ, ಗೊರಸು, ಹೊಯ್ಲು- ಹೊಡೆತ, ಬೀಸುವಿಕೆ
ಮೂಲ ...{Loading}...
ರಣಪರಿಚ್ಛೇದಿಗಳು ಮಿಗೆ ಸಂ
ದಣಿಸಿತೋ ಕುರುಸೇನೆ ವಾದ್ಯದ
ರಣಿತವದ್ರಿಯನೊದೆದುದದುಭುತ ಬೊಬ್ಬೆಗಳ ಲಳಿಯ
ಕುಣಿದವರ್ಜುನನುರುರಥದ ಮುಂ
ಕಣಿಯಲಾರೋಹಕರು ರಥ ಹಯ
ಹೆಣಗಿದವು ಹಯದೊಡನೆ ಕಂದದ ಖುರದ ಹೊಯ್ಲಿನಲಿ ॥7॥
೦೦೮ ಸುತ್ತುವಲಗೆಯ ಮೇಲೆ ...{Loading}...
ಸುತ್ತುವಲಗೆಯ ಮೇಲೆ ಕಣೆಗಳ
ತೆತ್ತಿಸಿದರೀಚಿನಲಿ ಸಬಳಿಗ
ರೆತ್ತಿದರು ರಾವುತರು ಕೀಲಿಸಿದರು ರಥಧ್ವಜವ
ಮುತ್ತಿದವು ಗಜಸೇನೆ ಪಾರ್ಥನ
ತೆತ್ತಿಗರ ಬರಹೇಳು ವೇಢೆಯ
ಕಿತ್ತು ಮಗುಚುವರಾರೆನುತ ಮುಸುಕಿತ್ತು ಕುರುಸೇನೆ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಥದ ಗೋಲಾಕಾರದ ಹಲಗೆಗಳ ಮೇಲೆ ಬಾಣಗಳನ್ನು ಜೋಡಿಸಿದರು. ಈಚೆ, ಕೌರವ ಸೈನ್ಯದಲ್ಲಿ ಸಬಳ (ಈಟಿ)ಗಳನ್ನು ಹಿಡಿದವರು ರಥಧ್ವಜವನ್ನು ಮೇಲಕ್ಕೆತ್ತಿದರೆ, ಕುದುರೆ ಸವಾರರು ಆ ಧ್ವಜವನ್ನು ರಥಕ್ಕೆ ಜೋಡಿಸಿದರು. ಗಜಸೈನ್ಯ ಮುತ್ತಿದವು ಅರ್ಜುನನ ಜೀವದ ಹೊಣೆಗಾರರು ಯಾರಿದ್ದಾರೆ ಅವರನ್ನು ಬರಹೇಳು, ಸುತ್ತುವರಿದ ಸೈನ್ಯವನ್ನು ಕಿತ್ತು ಅವುಗಳನ್ನು ಮಗುಚಿಹಾಕುವವರು ಯಾರು ಎನ್ನುತ್ತ ಕೌರವ ಸೈನ್ಯ ಮೇಲೆ ಬಿತ್ತು.
ಪದಾರ್ಥ (ಕ.ಗ.ಪ)
ಸುತ್ತುವಲಗೆ-ರಥದ ಗೋಲಾಕಾರದ ಹಲಗೆ, ತೆತ್ತಿಸು-ಸೇರಿಸು, ಜೋಡಿಸು, ಕೀಲಿಸು-ಜೋಡಿಸು, ತೆತ್ತಿಗ-ಜವಾಬ್ದಾರ, ಹೊಣೆಗಾರ, ವೇಢೆ-ಸುತ್ತುಗಟ್ಟು
ಮೂಲ ...{Loading}...
ಸುತ್ತುವಲಗೆಯ ಮೇಲೆ ಕಣೆಗಳ
ತೆತ್ತಿಸಿದರೀಚಿನಲಿ ಸಬಳಿಗ
ರೆತ್ತಿದರು ರಾವುತರು ಕೀಲಿಸಿದರು ರಥಧ್ವಜವ
ಮುತ್ತಿದವು ಗಜಸೇನೆ ಪಾರ್ಥನ
ತೆತ್ತಿಗರ ಬರಹೇಳು ವೇಢೆಯ
ಕಿತ್ತು ಮಗುಚುವರಾರೆನುತ ಮುಸುಕಿತ್ತು ಕುರುಸೇನೆ ॥8॥
೦೦೯ ಅರಸ ಕೇಳೈ ...{Loading}...
ಅರಸ ಕೇಳೈ ಬಳಿಕ ಪಾರ್ಥನ
ಕೆರಳಿಚಿದರೋ ಕಾಲರುದ್ರನ
ಸರಸವಾಡಿದರೋ ಪ್ರಚಂಡಪ್ರಳಯಭೈರವನ
ಪರಿಭವಿಸಿದರೊ ಲಯಕೃತಾಂತನ
ಕರೆದರೋ ಮೂದಲಿಸಿ ನಾವಿ
ನ್ನರಿಯೆವರ್ಜುನನೆಸುಗೆಯಭಿವರ್ಣನೆಯ ನಿರ್ಣಯವ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧೃತರಾಷ್ಟ್ರನೇ ಕೇಳು ಬಳಿಕ ಅರ್ಜುನನನ್ನು ಕೆರಳಿಸಿದರೋ ಕಾಲಭೈರವನೊಂದಿಗೆ ಸರಸವಾಡಿದರೋ, ಪ್ರಚಂಡನಾದ ಪ್ರಳಯಕಾಲದ ಭೈರವನನ್ನು ಸೋಲಿಸಿದರೋ, ಸರ್ವನಾಶಕಾಲದ ಯಮನನ್ನು ಮೂದಲಿಸಿ ಕರೆದರೋ ಎಂಬಂತಿದ್ದ ಅರ್ಜುನನ ಹೊಡೆತವನ್ನು ಅಭಿವರ್ಣಿಸುವ ನಿರ್ಣಯವನ್ನು ನಾವು ಇನ್ನು ತಿಳಿಯೆವು.
ಪದಾರ್ಥ (ಕ.ಗ.ಪ)
ಲಯಕೃತಾಂತ-ಪ್ರಳಯಕಾಲದ ಯಮ.
ಮೂಲ ...{Loading}...
ಅರಸ ಕೇಳೈ ಬಳಿಕ ಪಾರ್ಥನ
ಕೆರಳಿಚಿದರೋ ಕಾಲರುದ್ರನ
ಸರಸವಾಡಿದರೋ ಪ್ರಚಂಡಪ್ರಳಯಭೈರವನ
ಪರಿಭವಿಸಿದರೊ ಲಯಕೃತಾಂತನ
ಕರೆದರೋ ಮೂದಲಿಸಿ ನಾವಿ
ನ್ನರಿಯೆವರ್ಜುನನೆಸುಗೆಯಭಿವರ್ಣನೆಯ ನಿರ್ಣಯವ ॥9॥
೦೧೦ ಎಡದಲೌಕಿದ ಭಟರನಾ ...{Loading}...
ಎಡದಲೌಕಿದ ಭಟರನಾ ವಂ
ಗಡದ ರಾವ್ತರ ಸಮ್ಮುಖದೊಳವ
ಗಡಿಸಿದಾನೆಯ ಥಟ್ಟಿನಾ ತೇರುಗಳ ಸಮರಥರ
ಕಡಿದನೊಂದೇ ಸರಳಿನಲಿ ಚಿನ
ಕಡಿಗಳೆದು ರುಧಿರಾಂಬುರಾಶಿಯೊ
ಳಡಗಿಸಿದ ಚತುರಂಗಬಲವನದೊಂದು ನಿಮಿಷದಲಿ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಡಭಾಗದಿಂದ ಮೇಲೆಬಿದ್ದ ಭಟರನ್ನು, ಕುದುರೆ ಸವಾರರ ಸಮೂಹವನ್ನು, ಎದುರಿನಿಂದ ಮೇಲೆ ಬಿದ್ದ ಆನೆಗಳ ಗುಂಪನ್ನು, ಸೇನೆಯಲ್ಲಿನ ರಥಗಳ ಸಮರಥರನ್ನು ಒಂದೇ ಬಾಣದಲ್ಲಿ ಕಡಿದುಹಾಕಿದನು. ಚತುರಂಗಬಲವನ್ನು ಒಂದು ನಿಮಿಷದಲ್ಲಿ ಸಣ್ಣಸಣ್ಣಗೆ ಕತ್ತರಿಸಿ ರಕ್ತದ ಸಮುದ್ರದೊಳಗೆ ಮುಳುಗಿಸಿದ.
ಪದಾರ್ಥ (ಕ.ಗ.ಪ)
ಚಿನಕಡಿ-ಸಣ್ಣಸಣ್ಣಗೆ ಕತ್ತರಿಸು.
ಮೂಲ ...{Loading}...
ಎಡದಲೌಕಿದ ಭಟರನಾ ವಂ
ಗಡದ ರಾವ್ತರ ಸಮ್ಮುಖದೊಳವ
ಗಡಿಸಿದಾನೆಯ ಥಟ್ಟಿನಾ ತೇರುಗಳ ಸಮರಥರ
ಕಡಿದನೊಂದೇ ಸರಳಿನಲಿ ಚಿನ
ಕಡಿಗಳೆದು ರುಧಿರಾಂಬುರಾಶಿಯೊ
ಳಡಗಿಸಿದ ಚತುರಂಗಬಲವನದೊಂದು ನಿಮಿಷದಲಿ ॥10॥
೦೧೧ ಅಳಿದವಿನ್ನೂರಾನೆ ಸರಳ ...{Loading}...
ಅಳಿದವಿನ್ನೂರಾನೆ ಸರಳ
ಚ್ಚಳಿಸಿದವು ಮೂನೂರು ಪುನರಪಿ
ಮಲಗಿದವು ನೂರಾನೆ ಕೆಡೆದವು ತಾರುಥಟ್ಟಿನಲಿ
ಬಳಿಕ ನೂರು ನಿರಂತರಾಸ್ತ್ರಾ
ವಳಿ ವಿಘಾತಿಗೆ ನೂರು ಲೆಕ್ಕವ
ಕಳೆದವಿನ್ನೂರಾನೆ ಪಾರ್ಥನ ಕೋಲ ತೋಹಿನಲಿ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನ ಬಾಣಗಳ ಗುರಿಯಲ್ಲಿ, ಇನ್ನೂರು ಆನೆಗಳು ಸತ್ತವು. ಮುನ್ನೂರು ಬಾಣಗಳು ಪ್ರಕಾಶಿಸಿದವು, ಪುನಃ ನೂರು ಆನೆಗಳು ಸೈನ್ಯ ಸಮೂಹದಲ್ಲಿ ಬಿದ್ದವು, ಪುನಃ ನೂರು ನಿರಂತರವಾದ ಬಾಣಗಳ ಹೊಡೆತಕ್ಕೆ ನೂರು ಆನೆಗಳು ಸತ್ತು ಪುನಃ ಇನ್ನೂರು ಆನೆಗಳು ನಾಶವಾದವು.
ಪದಾರ್ಥ (ಕ.ಗ.ಪ)
ಅಚ್ಚಳಿಸು-ಪ್ರಕಾಶಿಸು, ಕುಂದಾಗದಿರುವುದು, ತೋಹಿನಲಿ-ಗುರಿ, ಶರಸಂಧಾನ
ಮೂಲ ...{Loading}...
ಅಳಿದವಿನ್ನೂರಾನೆ ಸರಳ
ಚ್ಚಳಿಸಿದವು ಮೂನೂರು ಪುನರಪಿ
ಮಲಗಿದವು ನೂರಾನೆ ಕೆಡೆದವು ತಾರುಥಟ್ಟಿನಲಿ
ಬಳಿಕ ನೂರು ನಿರಂತರಾಸ್ತ್ರಾ
ವಳಿ ವಿಘಾತಿಗೆ ನೂರು ಲೆಕ್ಕವ
ಕಳೆದವಿನ್ನೂರಾನೆ ಪಾರ್ಥನ ಕೋಲ ತೋಹಿನಲಿ ॥11॥
೦೧೨ ರಥ ಮುರಿದುವೈನೂರು ...{Loading}...
ರಥ ಮುರಿದುವೈನೂರು ತತ್ಸಾ
ರಥಿಗಳಳಿದುದು ನೂರು ಮಿಕ್ಕುದು
ರಥವನಿಳಿದೋಡಿದುದು ಸಮರಥರೆಂಟುನೂರೈದು
ಪೃಥವಿಗೊರಗಿದುವೆಂಟು ಸಾವಿರ
ಪೃಥುಳ ಹಯ ನುಗ್ಗಾಯ್ತು ಗಣನೆಯ
ರಥ ಪದಾತಿಯೊಳಿತ್ತಲೆನೆ ಸವರಿದನು ಪರಬಲವ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಐನೂರು ರಥಗಳು ಮುರಿದುಹೋದವು. ಆ ರಥಗಳ ನೂರು ಸಾರಥಿಗಳು ಸತ್ತರು, ಮಿಕ್ಕ ಸಾರಥಿಗಳು ರಥಗಳನ್ನಿಳಿದು ಓಡಿದರು. ಸಮರಥರಾದ ಎಂಟು ನೂರ ಐದು ಮಂದಿ ನೆಲಕ್ಕೆ ಒರಗಿದರು. ಎಂಟು ಸಾವಿರದಷ್ಟು - ಲೆಕ್ಕವಿಲ್ಲದಷ್ಟು ಕುದುರೆಗಳು ನುಗ್ಗಾದವು. ಲೆಕ್ಕಕ್ಕೆ ಸಿಕ್ಕಿದ ರಥ, ಕಾಲಾಳುಗಳು ಈ ಕಡೆಯವೇ - ಕೌರವರ ಕಡೆಯವೇ - ಎಂಬಂತೆ ವಿರೋಧಿ ಬಲವನ್ನು ಅರ್ಜುನ ಸವರಿಹಾಕಿದ.
ಪದಾರ್ಥ (ಕ.ಗ.ಪ)
ಪೃಥುಳ-ಅಸಂಖ್ಯಾತ.
ಮೂಲ ...{Loading}...
ರಥ ಮುರಿದುವೈನೂರು ತತ್ಸಾ
ರಥಿಗಳಳಿದುದು ನೂರು ಮಿಕ್ಕುದು
ರಥವನಿಳಿದೋಡಿದುದು ಸಮರಥರೆಂಟುನೂರೈದು
ಪೃಥವಿಗೊರಗಿದುವೆಂಟು ಸಾವಿರ
ಪೃಥುಳ ಹಯ ನುಗ್ಗಾಯ್ತು ಗಣನೆಯ
ರಥ ಪದಾತಿಯೊಳಿತ್ತಲೆನೆ ಸವರಿದನು ಪರಬಲವ ॥12॥
೦೧೩ ಒದೆದು ರಥವನು ...{Loading}...
ಒದೆದು ರಥವನು ಸೂತರಿಳಿದೋ
ಡಿದರು ಚಾಪವನಿಳುಹಿ ಸಮರಥ
ರೆದೆಯ ನೀವಿತು ದೂರದಲಿ ಕರಿಕಂಧರವನಿಳಿದು
ಕೆದರಿತಾರೋಹಕರು ವಿಕ್ರಮ
ವಿದಿತ ವಿಪುಳ ಪದಸ್ಥಭೂಪರು
ಹುದುಗಿತಲ್ಲಿಯದಲ್ಲಿ ಪಾರ್ಥನ ಸರಳ ಘಾತಿಯಲಿ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನ ಬಾಣದ ಹೊಡೆತಕ್ಕೆ ಸಿಕ್ಕಿ, ಸೂತರುಗಳು ರಥವನ್ನು ಒದ್ದು ಇಳಿದೋಡಿದರು. ಸಮರಥರು ಬಿಲ್ಲುಗಳನ್ನು ಕೆಳಗೆ ಹಾಕಿ ತಮ್ಮ ಎದೆಗಳನ್ನು ಸವರಿಕೊಂಡರು. ದೂರದಲ್ಲಿ ಆನೆಯ ಹೆಗಲಿನಿಂದ ಇಳಿದು ಗಜಾರೋಹಕರು ಚಲ್ಲಾಪಿಲ್ಲಿಯಾದರು. ವೀರರೆಂದು ಹೆಸರಾಂತ ಪದವಿಗಳನ್ನು ಹೊಂದಿದ ಅಸಂಖ್ಯಾತ ರಾಜರು ಸಿಕ್ಕಸಿಕ್ಕಲ್ಲಿ ಅಡಗಿಕೊಂಡರು.
ಪದಾರ್ಥ (ಕ.ಗ.ಪ)
ಪದಸ್ಥ-ಪದವಿಗಳನ್ನು-ಸ್ಥಾನಗಳನ್ನು ಹೊಂದಿದವರು, ಹುದುಗು-ಅಡಗಿಕೊಳ್ಳು,
ಟಿಪ್ಪನೀ (ಕ.ಗ.ಪ)
ಸಮರಥ-ಅತಿರಥ, ಮಹಾರಥ, ಅರ್ಧgಥರಿಗಿಂತ ಕೆಳದರ್ಜೆಯವನು. ಒಮ್ಮೊಗೆ ಒಬ್ಬನನ್ನಷ್ಟೇ ಎದುರಿಸಿ ಕಾದಬಲ್ಲವನು.
ಮೂಲ ...{Loading}...
ಒದೆದು ರಥವನು ಸೂತರಿಳಿದೋ
ಡಿದರು ಚಾಪವನಿಳುಹಿ ಸಮರಥ
ರೆದೆಯ ನೀವಿತು ದೂರದಲಿ ಕರಿಕಂಧರವನಿಳಿದು
ಕೆದರಿತಾರೋಹಕರು ವಿಕ್ರಮ
ವಿದಿತ ವಿಪುಳ ಪದಸ್ಥಭೂಪರು
ಹುದುಗಿತಲ್ಲಿಯದಲ್ಲಿ ಪಾರ್ಥನ ಸರಳ ಘಾತಿಯಲಿ ॥13॥
೦೧೪ ಬಿರುದ ಬಿಸುಟರು ...{Loading}...
ಬಿರುದ ಬಿಸುಟರು ಧ್ವಜದ ಕಂಬವ
ಹರಿಯ ಹೊಯ್ದರು ಕಾಲ ತೊಡರನು
ಧರೆಗೆ ಬಿಸುಟರು ಹಡಪ ಚಾಹಿಯ ಚಮರಧಾರಿಗರ
ದೊರೆಗಳುಳಿದರು ಬೆದರಿ ರಥದಲಿ
ಕರಿಗಳಲಿ ವಾರುವದಿನಿಳೆಗು
ಪ್ಪರಿಸಿದರು ಹರಹಿನಲಿ ಹಾಯ್ದರು ಹೊತ್ತ ದುಗುಡದಲಿ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವೀರರು ತಮ್ಮ ಬಿರುದಿನ ಲಾಂಛನಗಳನ್ನು ಬಿಸಾಡಿದರು. ರಥದ ಬಾವುಟದ ಕಂಬವನ್ನು ಮುರಿಯುವಂತೆ ಹೊಡೆದರು. ತೊಡರಾಗುವ ಕಾಲಿನ ಆಭರಣಗಳನ್ನು ಭೂಮಿಗೆ ಎಸೆದರು. ಹೆದರಿದ ದೊರೆಗಳು ಹಡಪಿಗರು, ಚಾಮರ ಬೀಸುವರು, ಚಾಮರ ಹೊತ್ತವರು ಮುಂತಾದ ಕೆಲಸಗಾರನ್ನು ಬಿಟ್ಟು ರಥದಿಂದ ಕೆಳಕ್ಕೆ ಹಾರಿದರು. ಆನೆ-ಕುದುರೆಗಳ ಮೇಲಿದ್ದವರು ನೆಲಕ್ಕೆ ಹಾರಿ ದುಃಖದಿಂದ ವಿಸ್ತಾರವಾದ ರಣಭೂಮಿಯಲ್ಲಿ ಓಡಿದರು.
ಪದಾರ್ಥ (ಕ.ಗ.ಪ)
ತೊಡರು-ಆಭರಣ, ಚಾಹಿ-ಛತ್ರಿ ಹಿಡಿದವರು (?), ಚಮರಧಾರಿ-ಚಾಮರ ಹೊರುವವರು, ಉಪ್ಪರಿಸು-ಹಾರು, ನೆಗೆ.
ಮೂಲ ...{Loading}...
ಬಿರುದ ಬಿಸುಟರು ಧ್ವಜದ ಕಂಬವ
ಹರಿಯ ಹೊಯ್ದರು ಕಾಲ ತೊಡರನು
ಧರೆಗೆ ಬಿಸುಟರು ಹಡಪ ಚಾಹಿಯ ಚಮರಧಾರಿಗರ
ದೊರೆಗಳುಳಿದರು ಬೆದರಿ ರಥದಲಿ
ಕರಿಗಳಲಿ ವಾರುವದಿನಿಳೆಗು
ಪ್ಪರಿಸಿದರು ಹರಹಿನಲಿ ಹಾಯ್ದರು ಹೊತ್ತ ದುಗುಡದಲಿ ॥14॥
೦೧೫ ಬೆದರಿ ಗಜ ...{Loading}...
ಬೆದರಿ ಗಜ ಮುಂಡಾಸನದಲೋ
ಡಿದುವು ಚಮರೀಮೃಗದವೊಲು ಬಲು
ಗುದುರೆ ಹಾಯ್ದವು ಕಂದದಲಿ ಬಲುನೊಗನನಸಬಡಿದು
ಕುದುರೆಯೆಳೆದವು ಬರಿರಥವನೋ
ಡಿದ ಪದಾತಿಯ ಬಿಸುಟ ಕೈದುವ
ಹೊದೆದುದಿಳೆ ಕಳನಗಲದಲಿ ಕಂಡೆನು ಮಹಾದ್ಭುತವ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೆದರಿದ ಆನೆಗಳು ತಲೆಯನ್ನು ಬಗ್ಗಿಸಿಕೊಂಡು ಓಡಿದುವು. ದೊಡ್ಡ ಕುದುರೆಗಳು ಚಮರೀಮೃಗದಂತೆ ತಮ್ಮ ಕೇಸರವನ್ನು ಒದರುತ್ತಾ ಹೆಗಲ ಮೇಲಿದ್ದ ನೊಗವನ್ನು ಬಲವತ್ತರವಾಗಿ ಬಡಿದು ಕೆಳಕ್ಕೆ ಹಾಕಿ ಓಡಿದವು. ಕುದುರೆಗಳು ಬರಿದಾದ ರಥವನ್ನು ಎಳೆಯುತ್ತಾ ಓಡಿದುವು, ಓಡಿಹೋದ ಕಾಲಾಳುಗಳನ್ನು ಬೀಸಾಡಿದ ಆಯುಧಗಳನ್ನು ಭೂಮಿ ಹೊದ್ದುಕೊಂಡಿರುವಂತೆ ತೋರಿತು, ಯುದ್ಧರಂಗದಲ್ಲೆಲ್ಲಾ ಇಂತಹ ಅನೇಕ ಮಹಾದ್ಭುತಗಳನ್ನು ಕಂಡೆನು.
ಪದಾರ್ಥ (ಕ.ಗ.ಪ)
ಮುಂಡಾಸನ-ತಲೆಬಗ್ಗಿಸಿ, ಸೊಂಡಿಲು ಮುದುರಿ, ಕಂದದಲಿ-ಹೆಗಲಿನಲ್ಲಿ, ಅಸಬಡಿದು-ಬಲವಾಗಿ ಬಡಿದು
ಮೂಲ ...{Loading}...
ಬೆದರಿ ಗಜ ಮುಂಡಾಸನದಲೋ
ಡಿದುವು ಚಮರೀಮೃಗದವೊಲು ಬಲು
ಗುದುರೆ ಹಾಯ್ದವು ಕಂದದಲಿ ಬಲುನೊಗನನಸಬಡಿದು
ಕುದುರೆಯೆಳೆದವು ಬರಿರಥವನೋ
ಡಿದ ಪದಾತಿಯ ಬಿಸುಟ ಕೈದುವ
ಹೊದೆದುದಿಳೆ ಕಳನಗಲದಲಿ ಕಂಡೆನು ಮಹಾದ್ಭುತವ ॥15॥
೦೧೬ ಮರಳಿ ವಾಘೆಯ ...{Loading}...
ಮರಳಿ ವಾಘೆಯ ಕೊಂಡು ರಾವ್ತರು
ತಿರುಗಿದರು ಹಮ್ಮುಗೆಯ ನೇಣ್ಗಳ
ಹರಿದು ಹಕ್ಕರಿಕೆಗಳ ಬಿಸುಟರು ಹಾಯ್ಕಿ ಖಂಡೆಯವ
ಬಿರುದ ಸಂಭಾಳಿಸುವ ಭಟ್ಟರ
ನಿರಿದರಾರೋಹಕರು ಕರಿಗಳ
ತಿರುಹಿ ಗುಳ ರೆಂಚೆಗಳ ಕೊಯ್ದೀಡಾಡಿದರು ನೆಲಕೆ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪುನಃ ಕುದುರೆಗಳ ಲಗಾಮು ಹಿಡಿದು ಕುದುರೆಸವಾರರು ಹಿಂದಕ್ಕೆ ತಿರುಗಿದರು. ಕುದುರೆಗಳಿಗೆ ಬಿಗಿದ ( ಹುರಿಗೊಂಡ) ಹಗ್ಗಗಳನ್ನು ಹರಿದು ಬಿಸುಟರು. ಖಡ್ಗಗಳನ್ನು ಕೆಳಗೆ ಎಸೆದರು. ಬಿರುದನ್ನು ಹೊಗಳುವ ಭಟ್ಟರುಗಳನ್ನು ಕುದುರೆ ಸವಾರರು ಇರಿದರು. ಆನೆಗಳನ್ನು ಹಿಂದಿರುಗಿಸಿ, ಆನೆಗಳ ಮೇಲೆ ಹಾಕುವ ಧರ್ಮ ಅಥವ ಬಟ್ಟೆಯ ಪಾವುಡಗಳನ್ನು ಮತ್ತು ಆನೆಗಳ ಮೇಲೆ ಹಾಕುವ ರೆಂಚೆಗಳನ್ನು ಕೊಯ್ದು ನೆಲಕ್ಕೆ ಬೀಸಾಡಿದರು.
ಪದಾರ್ಥ (ಕ.ಗ.ಪ)
ವಾಘೆ-ಲಗಾಮು, ರಾವ್ತರು-ಕುದುರೆಸವಾರರು, ಹಮ್ಮುಗೆ-ಹಗ್ಗ, ಹಕ್ಕರಿಕೆ-ಕುದುರೆಗಳನ್ನು ರಕ್ಷಿಸುವ ಸಾಧನ, ಖಂಡೆಯ-ಖಡ್ಗ, ಕತ್ತಿ, ಗುಳ-ಆನೆಗಳ ಮೇಲೆಹಾಕುವ ಹೊದ್ದಿಕೆ, ರೆಂಚೆ-ಆನೆ, ಕುದುರೆಗಳ ಬೆನ್ನ ಮೇಲಿನ ಬಟ್ಟೆ.
ಮೂಲ ...{Loading}...
ಮರಳಿ ವಾಘೆಯ ಕೊಂಡು ರಾವ್ತರು
ತಿರುಗಿದರು ಹಮ್ಮುಗೆಯ ನೇಣ್ಗಳ
ಹರಿದು ಹಕ್ಕರಿಕೆಗಳ ಬಿಸುಟರು ಹಾಯ್ಕಿ ಖಂಡೆಯವ
ಬಿರುದ ಸಂಭಾಳಿಸುವ ಭಟ್ಟರ
ನಿರಿದರಾರೋಹಕರು ಕರಿಗಳ
ತಿರುಹಿ ಗುಳ ರೆಂಚೆಗಳ ಕೊಯ್ದೀಡಾಡಿದರು ನೆಲಕೆ ॥16॥
೦೧೭ ರಾಯ ಕೇಳೈ ...{Loading}...
ರಾಯ ಕೇಳೈ ಬಲದ ಬಾಹೆಯ
ನಾಯಕರು ಜಾರಿದರು ವಾಮದ
ಜೇಯ ಸುಭಟರು ಸಿಡಿದು ತರಹರಿಸಿದರು ದೂರದಲಿ
ರಾಯ ಕಂಡನು ಬಳಿಕ ಬಲದ ಪ
ಲಾಯನದ ಪರಿವಿಡಿಯನಸುವಿನ
ಬೀಯಕಿವರಂಜಿದರೆನುತ ಮೂದಲಿಸಿದನು ನೃಪರ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧೃತರಾಷ್ಟ್ರ ಕೇಳು, ಬಲ ಭಾಗದಲ್ಲಿದ್ದ ನಾಯಕರು ತಪ್ಪಿಸಿಕೊಂಡು ಹೋದರು, ಎಡಭಾಗದಲ್ಲಿದ್ದ ಸೋಲಿಸಲಸಾಧ್ಯವಾದ ಸುಭಟರುಗಳು ದೂರಕ್ಕೆ ಸಿಡಿದು ನಡುಗಿ ಹೋದರು. ನಂತರ, ತನ್ನ ಸೈನ್ಯದ ಪಲಾಯನದ ಕ್ರಮವನ್ನು ದುರ್ಯೋಧನ ಕಂಡನು. ತಮ್ಮ ಪ್ರಾಣವನ್ನು ಬಿಡಲು ಇವರುಗಳು ಹೆದರಿದ್ದಾರೆನ್ನುತ್ತ ರಾಜರುಗಳನ್ನು ಮೂದಲಿಸಿದನು.
ಪದಾರ್ಥ (ಕ.ಗ.ಪ)
ಬಾಹೆ-ದಿಕ್ಕು, ತರಹರಿಸು-ಭಯದಿಂದ ನಡುಗು, ಪರಿವಿಡಿ-ಕ್ರಮ, ಬೀಯ-ವ್ಯಯ, ನಾಶ.
ಮೂಲ ...{Loading}...
ರಾಯ ಕೇಳೈ ಬಲದ ಬಾಹೆಯ
ನಾಯಕರು ಜಾರಿದರು ವಾಮದ
ಜೇಯ ಸುಭಟರು ಸಿಡಿದು ತರಹರಿಸಿದರು ದೂರದಲಿ
ರಾಯ ಕಂಡನು ಬಳಿಕ ಬಲದ ಪ
ಲಾಯನದ ಪರಿವಿಡಿಯನಸುವಿನ
ಬೀಯಕಿವರಂಜಿದರೆನುತ ಮೂದಲಿಸಿದನು ನೃಪರ ॥17॥
೦೧೮ ಎಲೆ ಮಹೀಪತಿಗಳಿರ ...{Loading}...
ಎಲೆ ಮಹೀಪತಿಗಳಿರ ಪುಣ್ಯ
ಸ್ಥಳ ಕುರುಕ್ಷೇತ್ರವು ಮಹಾಸ
ತ್ಕುಲದೊಳಗೆ ಜನನವು ನಿಮಗೆ ವೀರಕ್ಷತ್ರಿಯೋತ್ತಮರು
ಅಳುಕದಂಘೈಸಿದಡೆ ಸುರಸಂ
ಕುಲದ ಸೇರುವೆ ತಪ್ಪಿದರೆ ನೀ
ವಿಳಿವಿರೈ ರೌರವದೊಳಾವುದು ಲಾಗು ನಿಮಗೆಂದ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಲೆ ಭೂಪತಿಗಳಿರಾ! ಈ ಕುರುಕ್ಷೇತ್ರ ಪುಣ್ಯ ಸ್ಥಳ. ನೀವು ಮಹಾಸತ್ಕುಲದಲ್ಲಿ ಹುಟ್ಟಿದ್ದೀರಿ. ನೀವು ವೀರ ಕ್ಷತ್ರಿಯೋತ್ತಮರು. ಹೆದರದೆ ಆಶೆಪಟ್ಟು ಯುದ್ಧ ಮಾಡಿದರೆ ಸ್ವರ್ಗದಲ್ಲಿ ದೇವತೆಗಳ ಸಮೂಹದ ಜೊತೆ ಸೇರುವಿರಿ, ತಪ್ಪಿದರೆ ನೀವು ರೌರವ ನರಕಕ್ಕೆ ಹೋಗುತ್ತೀರಿ - ಎಂದು ಕೌರವರಾಯ ಓಡಿ ಹೋಗುತ್ತಿರುವ ತನ್ನ ಪಕ್ಷದ ರಾಜರುಗಳನ್ನು ಕುರಿತು ಹೇಳಿದ.
ಪದಾರ್ಥ (ಕ.ಗ.ಪ)
ಅಂಘÉೈಸು-ಆಶಿಸು, ರೌರವ-ಭೀಕರವಾದ ಒಂದು ನರಕ, ಲಾಗು-ಚಲನೆ, ನೆಗೆತ, ಪ್ರವೇಶ.
ಮೂಲ ...{Loading}...
ಎಲೆ ಮಹೀಪತಿಗಳಿರ ಪುಣ್ಯ
ಸ್ಥಳ ಕುರುಕ್ಷೇತ್ರವು ಮಹಾಸ
ತ್ಕುಲದೊಳಗೆ ಜನನವು ನಿಮಗೆ ವೀರಕ್ಷತ್ರಿಯೋತ್ತಮರು
ಅಳುಕದಂಘೈಸಿದಡೆ ಸುರಸಂ
ಕುಲದ ಸೇರುವೆ ತಪ್ಪಿದರೆ ನೀ
ವಿಳಿವಿರೈ ರೌರವದೊಳಾವುದು ಲಾಗು ನಿಮಗೆಂದ ॥18॥
೦೧೯ ವೀರಮಾತೆಯರೆನ್ದು ತಾಯ್ಗಳ ...{Loading}...
ವೀರಮಾತೆಯರೆಂದು ತಾಯ್ಗಳ
ನಾರು ಕೊಂಡಾಡುವರು ಸತಿಯರು
ವೀರಪತ್ನಿಯರೆಂದು ನುಡಿವರೆ ನಿಮ್ಮ ರಾಣಿಯರ
ವೀರಸಿರಿ ನಿಮಗೆಂದು ವಂದಿಗ
ಳೋರೆ ಕಟಕಿಯಲೆನ್ನರೇ ಕೈ
ವಾರಿಸುವ ಕವಿನಿಕರ ನಾಚದೆ ಶಿವಶಿವಾ ಎಂದ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನೀವು ಹೀಗೆ ಹೇಡಿಗಳಂತೆ ರಣಭೂಮಿಯಿಂದ ಓಡಿಹೋದರೆ ನಿಮ್ಮ ತಾಯಂದಿರನ್ನು ವೀರಮಾತೆಯರೆಂದು ಯಾರು ಕರೆಯುತ್ತಾರೆ. ವೀರಪತ್ನಿಯರೆಂದು ನಿಮ್ಮ ರಾಣಿಯರನ್ನು ಯಾರಾದರೂ ಕರೆಯುತ್ತಾರೆಯೇ, ‘ವೀರಸಿರಿ ನಿಮಗೆ ಸೇರಿದಳು’ ಎಂದು ಹೊಗಳು ಭಟ್ಟರು ಓರೆ ಮಾತುಗಳಿಂದ ಕಟಕಿಯಿಂದ ನಿಮ್ಮನ್ನು ಹಂಗಿಸುವುದಿಲ್ಲವೆ, ಹೊಗಳುವ ಕವಿಸಮೂಹವು ನಿಮ್ಮ ಈ ವರ್ತನೆಯನ್ನು ನೋಡಿ ನಾಚಿಕೊಳ್ಳುವುದಿಲ್ಲವೇ - ಎಂದು ದುರ್ಯೋಧನ ತನ್ನ ಸೈನ್ಯಿಕರು, ಸಾಮಂತರು ಮುಂತಾದವರನ್ನು ಹಂಗಿಸಿದ.
ಪದಾರ್ಥ (ಕ.ಗ.ಪ)
ವಂದಿಗಳು-ಹೊಗಳುಭಟ್ಟರು, ಓರೆಕಟಕಿ-ಓರೆಮಾತಿನ ಕಟಕಿ, ಓರೆಗಣ್ಣಿನ ನೋಟದಿಂದ ಕಟಕಿಯಾಡುವುದು, ಕೈವಾರಿಸು-ಹೊಗಳು
ಮೂಲ ...{Loading}...
ವೀರಮಾತೆಯರೆಂದು ತಾಯ್ಗಳ
ನಾರು ಕೊಂಡಾಡುವರು ಸತಿಯರು
ವೀರಪತ್ನಿಯರೆಂದು ನುಡಿವರೆ ನಿಮ್ಮ ರಾಣಿಯರ
ವೀರಸಿರಿ ನಿಮಗೆಂದು ವಂದಿಗ
ಳೋರೆ ಕಟಕಿಯಲೆನ್ನರೇ ಕೈ
ವಾರಿಸುವ ಕವಿನಿಕರ ನಾಚದೆ ಶಿವಶಿವಾ ಎಂದ ॥19॥
೦೨೦ ಸೆರೆನರದ ದರ್ಭೆಗಳ ...{Loading}...
ಸೆರೆನರದ ದರ್ಭೆಗಳ ಮಿದುಳಿನ
ಚರುವಿನೆಲುವಿನ ಸಮಿಧೆಗಳ ಬಿಲು
ದಿರುರವದ ಚತುರಂಗರಭಸದ ಸಾಮವೇದಿಗಳ
ಅರುಣಜಲದಾಜ್ಯದ ಸ್ರುವಾದಿಯ
ಶಿರಕಪಾಲದ ವೈರಿಪಶುಬಂ
ಧುರದ ಸಂಗರಯಜ್ಞ ದೀಕ್ಷೆಯ ಮರೆದಿರಕಟೆಂದ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಕ್ತನಾಳಗಳೇ ದರ್ಭೆಗಳು, ಮಿದುಳುಗಳೇ ಹವಿಸ್ಸು, ಮೂಳೆಗಳೇ ಸಮಿತ್ತುಗಳು, ಬಿಲ್ಲುಗಳ ಹೆದೆಗಳ ಝೇಂಕಾರದ ಶಬ್ದ ಮತ್ತು ಚತುರಂಗ ಬಲದ ರಭಸದ ಶಬ್ದವೇ ಸಾಮವೇದ ಘೋಷಣೆ, ರಕ್ತವೇ ತುಪ್ಪ, ತಲೆಯ ಕಪಾಲಗಳೇ ತುಪ್ಪವನ್ನು ಅಗ್ನಿಗೆ ಎರೆಯುವ ಸ್ರುವಾದಿಗಳು ,ವೈರಿಗಳೇ ಯಾಗಪಶುಗಳು. ಈ ರೀತಿಯ ವಿಚಿತ್ರವಾದ ಯಜ್ಞದೀಕ್ಷಿತರಾಗಬೇಕಾದುದು ಕ್ಷತ್ರಿಯರ ಧರ್ಮ. ಇಂತಹ ಯಜ್ಞವನ್ನು ನೀವು ಮರೆತಿರುವಿರಿ ಎಂದು ದುರ್ಯೋಧನ ಓಡಿ ಹೋಗುತ್ತಿರುವ ತನ್ನವರನ್ನು ಹಂಗಿಸಿದ.
ಪದಾರ್ಥ (ಕ.ಗ.ಪ)
ಸೆರೆನರ-ರಕ್ತನಾಳ, ನರ, ಚರುವು-ಹವಿಸ್ಸು, ನೈವೇದ್ಯ, ಹವಿಸ್ಸನ್ನು ತಯಾರಿಸುವ ಪಾತ್ರೆ, ಸಮಿಧೆ-ಸಮಿತ್ತು, ಬಿಲುದಿರು-ಬಿಲ್ಲಿನ ಹೆದೆ, ಸ್ರುವ-ಯಜ್ಞಯಾಗಗಳಲ್ಲಿ ಅಗ್ನಿಗೆ ತುಪ್ಪವನ್ನು ಬಿಡುವ ಸಾಧನ, ಪಶುಬಂಧುರ-ಸುಂದರವಾದ ಯಾಗಪಶು.
ಮೂಲ ...{Loading}...
ಸೆರೆನರದ ದರ್ಭೆಗಳ ಮಿದುಳಿನ
ಚರುವಿನೆಲುವಿನ ಸಮಿಧೆಗಳ ಬಿಲು
ದಿರುರವದ ಚತುರಂಗರಭಸದ ಸಾಮವೇದಿಗಳ
ಅರುಣಜಲದಾಜ್ಯದ ಸ್ರುವಾದಿಯ
ಶಿರಕಪಾಲದ ವೈರಿಪಶುಬಂ
ಧುರದ ಸಂಗರಯಜ್ಞ ದೀಕ್ಷೆಯ ಮರೆದಿರಕಟೆಂದ ॥20॥
೦೨೧ ಇಲ್ಲಿ ಮನುಜಸ್ತ್ರೀಯ ...{Loading}...
ಇಲ್ಲಿ ಮನುಜಸ್ತ್ರೀಯ ಮೇಳವ
ವಲ್ಲಿ ಸುರನಾರಿಯರ ರತಿ ನಿಮ
ಗಿಲ್ಲಿ ಭೌಮವಿಭಿನ್ನರಸ ಪೀಯೂಷರಸವಲ್ಲಿ
ಇಲ್ಲಿಯಧ್ರುವ ವಿಭವವಮರತೆ
ಯಲ್ಲಿ ಕಿಲ್ಬಿಷವಿಲ್ಲಿ ಶಿವಮಯ
ವಲ್ಲಿ ನೀವಿಂದೇನ ನೆನೆದಿರಿ ಶಿವಶಿವಾ ಎಂದ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇಲ್ಲಿ, ಭೂಮಿಯ ಮೇಲಿನ ಬಾಳ್ವಿಕೆಯಲ್ಲಿ ಮಾನವಸ್ತ್ರೀಯರ ಸಂಗವಾದರೆ ಅಲ್ಲಿ, ಸ್ವರ್ಗದಲ್ಲಿ ದೇವವಧುಗಳ ಸಂಗ, ನಿಮಗೆ ಇಲ್ಲಿ ಭೂಲೋಕದ ಷಡ್ರಸಗಳಾದರೆ ಅಲ್ಲಿ ಅಮೃತಪಾನ, ಇಲ್ಲಿನ ನಶ್ವರವಾದ ವೈಭವವಾದರೆ ಅಲ್ಲಿ ಸಾವೇ ಇಲ್ಲದ ಅಮರತ್ವ, ಇಲ್ಲಿ ದೋಷಪೂರಿತ - ಅಲ್ಲಿ ಎಲ್ಲವೂ ಮಂಗಳಮಯ, ಇಂತಹ ಭೂಲೋಕದ ಬಾಳನ್ನು ನೆಚ್ಚಿಕೊಂಡು ಸ್ವರ್ಗಸುಖವನ್ನು ಮರೆತು ನೀವು ಏನು ಯೋಚಿಸಿದಿರಿ ಎಂದು ದುರ್ಯೋಧನ ತನ್ನವರನ್ನು ಹಂಗಿಸಿದ.
ಪದಾರ್ಥ (ಕ.ಗ.ಪ)
ಭೌಮ-ಭೂಮಿಗೆ ಸಂಬಂಧಿಸಿದ, ಭವ್ಯವಾದ, ಪೀಯೂಷ-ಅಮೃತ, ಅಧ್ರುವ-ಅಶಾಶ್ವತ, ಕಿಲ್ಬಿಷ-ಹಾಳಾದ, ಕೊಳೆ, ಕೆಟ್ಟ, ಶಿವಮಯ-ಮಂಗಳಮಯ.
ಮೂಲ ...{Loading}...
ಇಲ್ಲಿ ಮನುಜಸ್ತ್ರೀಯ ಮೇಳವ
ವಲ್ಲಿ ಸುರನಾರಿಯರ ರತಿ ನಿಮ
ಗಿಲ್ಲಿ ಭೌಮವಿಭಿನ್ನರಸ ಪೀಯೂಷರಸವಲ್ಲಿ
ಇಲ್ಲಿಯಧ್ರುವ ವಿಭವವಮರತೆ
ಯಲ್ಲಿ ಕಿಲ್ಬಿಷವಿಲ್ಲಿ ಶಿವಮಯ
ವಲ್ಲಿ ನೀವಿಂದೇನ ನೆನೆದಿರಿ ಶಿವಶಿವಾ ಎಂದ ॥21॥
೦೨೨ ಆವ ಭವದಲಿ ...{Loading}...
ಆವ ಭವದಲಿ ನಿಮ್ಮ ರಾಜ್ಯವ
ದಾವ ಭವದಲಿ ಪುತ್ರಮಿತ್ರರ
ದಾವ ಜನ್ಮಂಗಳ ಸಮಾಗಮ ನಿಮ್ಮ ರಾಣಿಯರು
ಈ ವಿಡಂಬನದೈಹಿಕವ ಸಂ
ಭಾವಿಸುತ ಪರಲೋಕಹಿತವನು
ನೀವು ನೆನೆಯದೆ ಕೆಟ್ಟುದಕೆ ಬೆರಗಾದೆ ನಾನೆಂದ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯಾವ ಹಿಂದಿನ ಜನ್ಮದಲ್ಲಿ ಇದು ನಿಮ್ಮ ರಾಜ್ಯವಾಗಿತ್ತು, ಯಾವ ಹಿಂದಿನ ಜನ್ಮದಲ್ಲಿ ಇವರು ನಿಮ್ಮ ಪುತ್ರ ಮಿತ್ರರಾಗಿದ್ದರು, ಯಾವ ಹಿಂದಿನ ಜನ್ಮಗಳಲ್ಲಿ ನಿಮ್ಮ ರಾಣಿಯರು ನಿಮ್ಮೊಂದಿಗೆ ಸಮಾಗಮ ಹೊಂದಿದ್ದರು; ಭೂಮಿಯ ಮೇಲಿನ ಈ ಬಾಳ್ವಿಕೆ ಕೇವಲ ವಿಡಂಬನೆಯದ್ದು, ಮಾಯೆಯಿಂದ ಕೂಡಿದುದು, ಅಶಾಶ್ವತವಾದುದು, ಇದನ್ನೇ ನಿಜವೆಂದು ತಿಳಿದು ಗೌರವಿಸುತ್ತಾ, ಪರಲೋಕದಲ್ಲಿ ನಿಮಗೆ ಒದಗಬಹುದಾದ ಒಳ್ಳೆಯದನ್ನು ಆಲೋಚಿದೆ, ಕೆಟ್ಟುಹೋದುದಕ್ಕೆ ನಾನು ಬೆರಗಾಗಿದ್ದೇನೆ, ಆಶ್ವರ್ಯಚಕಿತನಾಗಿದ್ದೇನೆ ಎಂದು ದುರ್ಯೋಧನ ಪಲಾಯನ ಮಾಡುತ್ತಿರುವ ತನ್ನವರನ್ನು ಹೀಯಾಳಿಸಿದ.
ಪದಾರ್ಥ (ಕ.ಗ.ಪ)
ಭವ-ಹುಟ್ಟು ಸಾವುಗಳೆಂಬ ಚಕ್ರ, ವಿಡಂಬನೆ-ಅಪಹಾಸ್ಯ, ನಿಜವಲ್ಲದ್ದು, ಸಂಭಾವಿಸು-ಗೌರವಿಸು, ಆದರಿಸು, ಆಲೋಚಿಸು.
ಮೂಲ ...{Loading}...
ಆವ ಭವದಲಿ ನಿಮ್ಮ ರಾಜ್ಯವ
ದಾವ ಭವದಲಿ ಪುತ್ರಮಿತ್ರರ
ದಾವ ಜನ್ಮಂಗಳ ಸಮಾಗಮ ನಿಮ್ಮ ರಾಣಿಯರು
ಈ ವಿಡಂಬನದೈಹಿಕವ ಸಂ
ಭಾವಿಸುತ ಪರಲೋಕಹಿತವನು
ನೀವು ನೆನೆಯದೆ ಕೆಟ್ಟುದಕೆ ಬೆರಗಾದೆ ನಾನೆಂದ ॥22॥
೦೨೩ ನೃಪನ ಮೂದಲೆ ...{Loading}...
ನೃಪನ ಮೂದಲೆ ನಿಜಕುಲಕ್ರಮ
ಕಪಯಶೋಭಯ ಪಾರಲೌಕಿಕ
ದುಪಹತಿ ಪ್ರತಿಭಟರ ನಗೆ ಸೌಭಟಪರಿತ್ಯಾಗ
ಕೃಪಣತೆಯ ದುಷ್ಕೀರ್ತಿ ಭುಜಬಲ
ದಪದಶಾವಿರ್ಭಾವವೀ ಭೂ
ಮಿಪರ ಮರಳಿಚಿತೇನನೆಂಬೆನು ಭೂಪ ಕೇಳ್ ಎಂದ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುರ್ಯೋಧನನ ಈ ರೀತಿಯಾದ ಮೂದಲಿಕೆಯ ಮಾತುಗಳು, ತಮ್ಮ ವಂಶಕ್ಕೆ ಉಂಟಾಗುವ ಅಪಯಶಸ್ಸಿನ ಭಯ, ಪರಲೋಕಸೌಖ್ಯಕ್ಕೆ ವಿಘ್ನ, ಪ್ರತಿಪಕ್ಷದ ಯೋಧರ ಅಪಹಾಸ್ಯದ ನಗು, ಸುಭಟರನ್ನು ಬಿಟ್ಟು ಹೋಗಬೇಕಾದ ಸ್ಥಿತಿ, ತಮ್ಮ ಪ್ರಾಣದ ಮೇಲಿನ ಆಶೆಯ ಅಲ್ಪಬುದ್ಧಿ, ತಮ್ಮ ಭುಜಬಲಕ್ಕೆ ಬರುವ ಅಪಕೀರ್ತಿ - ಈ ಎಲ್ಲ ವಿಚಾರಗಳು ಯುದ್ಧಭೂಮಿಯಿಂದ ಓಡಿ ಹೋಗುತ್ತಿದ್ದ ರಾಜರುಗಳನ್ನು ಕಟ್ಟಿ ಅವರು ಯುದ್ಧಕ್ಕೆ ಹಿಂದಿರುಗುವಂತೆ ಮಾಡಿತು - ಇದರ ವಿಚಾರದಲ್ಲಿ ನಾನು ಏನು ಹೇಳಲಿ ಎಂದು ಸಂಜಯ ಧೃತರಾಷ್ಟ್ರನಿಗೆ ಹೇಳಿದ.
ಪದಾರ್ಥ (ಕ.ಗ.ಪ)
ಉಪಹತಿ-ನಾಶ, ವಿರೋಧ, ವಿಘ್ನ, ಕೃಪಣತೆ-ಲೋಭ, ಜಿಪುಣತನ, ಅಲ್ಪತೆ, ನೀಚತನ, ಆವಿರ್ಭಾವ-ಪ್ರಾಪ್ತವಾಗು, ಒದಗು, ಬರು, ಹುಟ್ಟು.
ಮೂಲ ...{Loading}...
ನೃಪನ ಮೂದಲೆ ನಿಜಕುಲಕ್ರಮ
ಕಪಯಶೋಭಯ ಪಾರಲೌಕಿಕ
ದುಪಹತಿ ಪ್ರತಿಭಟರ ನಗೆ ಸೌಭಟಪರಿತ್ಯಾಗ
ಕೃಪಣತೆಯ ದುಷ್ಕೀರ್ತಿ ಭುಜಬಲ
ದಪದಶಾವಿರ್ಭಾವವೀ ಭೂ
ಮಿಪರ ಮರಳಿಚಿತೇನನೆಂಬೆನು ಭೂಪ ಕೇಳೆಂದ ॥23॥
೦೨೪ ಕರೆದರೊಬ್ಬರನೊಬ್ಬರುರೆ ಧಿ ...{Loading}...
ಕರೆದರೊಬ್ಬರನೊಬ್ಬರುರೆ ಧಿ
ಕ್ಕರಿಸಿದರು ತಮ್ಮೊಬ್ಬರೊಬ್ಬರ
ಬಿರುದ ಹಿಡಿದರು ಬಯ್ದರಪಮಾನಾನುತಾಪದಲಿ
ತಿರುಗಹೇಳೋ ರಾವುತರ ರಥಿ
ಕರ ಗಜಾರೋಹಕರನೆಂದ
ಬ್ಬರಿಸಿ ಚೌರಿಯ ಬೀಸಿ ಮರಳಿತು ಭೂಪತಿವ್ರಾತ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೀಗೆ ಮನಸ್ಸು ಬದಲಿಸಿದ ರಾಜರುಗಳು, ಒಬ್ಬರು ಮತ್ತೊಬ್ಬರನ್ನು, ಮತ್ತೊಬ್ಬರು ಇನ್ನೊಬ್ಬರನ್ನು ಪುನಃ ಯುದ್ಧರಂಗಕ್ಕೆ ಬರಲು ಕರೆದರು. ತಮ್ಮನ್ನೇ ಧಿಕ್ಕರಿಸಿಕೊಂಡರು. ತಮ್ಮ ತಮ್ಮ ಬಿರುದುಗಳನ್ನು ಹೇಳಿಕೊಳ್ಳುತ್ತಾ, ಅಪಮಾನದ ಬೇಗೆಯಲ್ಲಿ ಬಯ್ದುಕೊಂಡರು. ಕುದುರೆ ಸವಾರರನ್ನು, ರಥದಲ್ಲಿರುವವರನ್ನು, ಆನೆಯ ಸವಾರರನ್ನು ಯುದ್ಧಕ್ಕೆ ಹಿಂದಿರುಗಲು ಹೇಳೋ ಎಂದು ಅಬ್ಬರಿಸುತ್ತಾ ರಾಜರ ಸಮೂಹವು ಚೌರಿಯನ್ನು ಬೀಸಿ, ಯುದ್ಧಕ್ಕೆ ಹಿಂದಿರುಗಿತು.
ಪದಾರ್ಥ (ಕ.ಗ.ಪ)
ಉರೆ-ಹೆಚ್ಚಾಗಿ, ವಿಶೇಷವಾಗಿ, ಚೌರಿ-ಪ್ರಾಣಿಗಳ ಕೂದಲಿನಿಂದ ಮಾಡಿದ ಗಾಳಿಬೀಸುವ ಸಾಧನ, ಚಾಮರ.
ಮೂಲ ...{Loading}...
ಕರೆದರೊಬ್ಬರನೊಬ್ಬರುರೆ ಧಿ
ಕ್ಕರಿಸಿದರು ತಮ್ಮೊಬ್ಬರೊಬ್ಬರ
ಬಿರುದ ಹಿಡಿದರು ಬಯ್ದರಪಮಾನಾನುತಾಪದಲಿ
ತಿರುಗಹೇಳೋ ರಾವುತರ ರಥಿ
ಕರ ಗಜಾರೋಹಕರನೆಂದ
ಬ್ಬರಿಸಿ ಚೌರಿಯ ಬೀಸಿ ಮರಳಿತು ಭೂಪತಿವ್ರಾತ ॥24॥
೦೨೫ ವಾರುವಙ್ಗಳ ಬಿಗುಹನೇರಿಸಿ ...{Loading}...
ವಾರುವಂಗಳ ಬಿಗುಹನೇರಿಸಿ
ವಾರಣಂಗಳ ಗುಳವ ಜೋಡಿಸಿ
ತೇರುಗಳ ಕೀಲಚ್ಚು ಕೂಬರಯುಗವನಾರೈದು
ವೀರಪಟ್ಟವ ರಚಿಸಿ ಕಂಕಣ
ದಾರವನು ಕಟ್ಟಿದರು ಸಂಗರ
ವೀರಸಿರಿಯ ವಿವಾಹಸಮಯದ ಸೌಮನಸ್ಯದಲಿ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕುದುರೆಗಳಿಗೆ ಕಟ್ಟಿದ್ದ ಲಗಾಮು ಹಗ್ಗಗಳು ಅಳ್ಳಕವಾಗಿದ್ದುವು. ಅವುಗಳನ್ನು ಸರಿಯಾಗಿ ಬಿಗಿದು ಕಟ್ಟಿದರು. ಆನೆಗಳ ಮೇಲೆ ಪುನಃ ಬಟ್ಟೆಗಳನ್ನು ಹಾಕಿದರು. ರಥಗಳ ಚಕ್ರಗಳ ಕೀಲಚ್ಚು (ಕುಂಭ) ಮತ್ತು ಕಡಾಣೆಯ ಜೋಡಿಗಳನ್ನು ಪರಿಶೀಲಿಸಿದರು. ಸಂಗ್ರಾಮ ವೀರಲಕ್ಷ್ಮಿಯ ವಿವಾಹದ ಸಮಯದಲ್ಲಿ ಬಹು ಸಂತೋಷದಿಂದ ವೀರಪಟ್ಟವನ್ನು ಹಣೆಗೆ ಬಿಗಿದುಕೊಂಡರು. ಮುಂಗೈಗೆ ಕಂಕಣದ ದಾರವನ್ನು ಕಟ್ಟಿಕೊಂಡರು.
ಪದಾರ್ಥ (ಕ.ಗ.ಪ)
ಕೂಬರು-ಈಸು, ಅಚ್ಚು, ಎರಡು ಚಕ್ರಗಳನ್ನು ಸೇರಿಸುವ ದಿಂಡು, ಕೀಲು-ಕಡಾಣೆ, ಸೌಮನಸ್ಯ-ಸಂತೋಷ.
ಟಿಪ್ಪನೀ (ಕ.ಗ.ಪ)
(ಯುದ್ಧದಲ್ಲಿ ವೀರಲಕ್ಷ್ಮಿಯೊಂದಿಗೆ ತಮ್ಮ ವಿವಾಹವೆಂದುಕೊಂಡು ವೀರರು ವರನಂತೆ ಅಲಂಕರಿಸಿಕೊಂಡರೆಂಬುದು ಭಾವ.)
ಮೂಲ ...{Loading}...
ವಾರುವಂಗಳ ಬಿಗುಹನೇರಿಸಿ
ವಾರಣಂಗಳ ಗುಳವ ಜೋಡಿಸಿ
ತೇರುಗಳ ಕೀಲಚ್ಚು ಕೂಬರಯುಗವನಾರೈದು
ವೀರಪಟ್ಟವ ರಚಿಸಿ ಕಂಕಣ
ದಾರವನು ಕಟ್ಟಿದರು ಸಂಗರ
ವೀರಸಿರಿಯ ವಿವಾಹಸಮಯದ ಸೌಮನಸ್ಯದಲಿ ॥25॥
೦೨೬ ದೂಪಿಸಿದ ಬಿಳಿದುಗುಳನುಟ್ಟನು ...{Loading}...
ದೂಪಿಸಿದ ಬಿಳಿದುಗುಳನುಟ್ಟನು
ಲೇಪನಂಗಳ ಹೂಸಿ ಮಧುರಾ
ಳಾಪದಲೆ ಬೋಳೈಸಿ ಸಾರಥಿ ಗಜ ಹಯಾವಳಿಯ
ಭೂಪತಿಯ ರಣಯಜ್ಞಮುಖಕೆ ನಿ
ಜಾಪಘನಪೂರ್ಣಾಹುತಿಯಲೇ
ಶ್ರೀಪತಿಯ ಸಾಯುಜ್ಯವೆನುತಿದಿರಾಯ್ತು ನೃಪಕಟಕ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸುವಾಸನಾಯುಕ್ತವಾಗಿದ್ದ ಬಿಳಿಯ ರೇಷ್ಮೆ ವಸ್ತ್ರಗಳನ್ನು ಉಟ್ಟರು, ಚಂದನ ಶ್ರೀಗಂಧ ಮುಂತಾದ ಅನುಲೇಪನಗಳನ್ನು ಮೈಗೆ ಸವರಿಕೊಂಡರು, ತಮ್ಮ ಸಾರಥಿ, ಕುದುರೆ, ಆನೆಗಳನ್ನು ಮಧುರವಾದ ಧ್ವನಿಯಿಂದ ಸಂತೈಸಿದರು. ದುರ್ಯೋಧನನ ರಣಯಜ್ಞಕ್ಕೆ ತಮ್ಮ ಶರೀರಗಳ ಪೂರ್ಣಾಹುತಿಯಲ್ಲವೇ, ಶ್ರೀಹರಿಯಲ್ಲಿ ಐಕ್ಯವಾಗುವುದೇ ತಮಗೆ ಮೋಕ್ಷವಲ್ಲವೇ - ಎನ್ನುತ್ತ ರಾಜಸಮೂಹವು ಯುದ್ಧಕ್ಕೆ ಎದಿರಾಯಿತು.
ಪದಾರ್ಥ (ಕ.ಗ.ಪ)
ದೂಪಿಸಿದ-ಸುವಾಸನಾವಸ್ತುಗಳನ್ನು ಲೇಪಿಸಿದ್ದ, ದುಗುಳ-ದುಕೂಲ, ರೇಷ್ಮೆಯವಸ್ತ್ರ, ಹೂಸಿ-ಪೂಸಿಕೊಂಡು, ಬೋಳೈಸು-ಪ್ರೀತಿಯಿಂದ ಮುದ್ದಾಡು, ಸಂತಯಿಸು, ನಿಜಾಪಘನ-ಸ್ವಂತ ದೇಹ, ತನ್ನ ದೇಹ, ಸಾಯುಜ್ಯ-ಪರಮಾತ್ಮನಲ್ಲಿ ಐಕ್ಯ, ಮೋಕ್ಷÉ.
ಮೂಲ ...{Loading}...
ದೂಪಿಸಿದ ಬಿಳಿದುಗುಳನುಟ್ಟನು
ಲೇಪನಂಗಳ ಹೂಸಿ ಮಧುರಾ
ಳಾಪದಲೆ ಬೋಳೈಸಿ ಸಾರಥಿ ಗಜ ಹಯಾವಳಿಯ
ಭೂಪತಿಯ ರಣಯಜ್ಞಮುಖಕೆ ನಿ
ಜಾಪಘನಪೂರ್ಣಾಹುತಿಯಲೇ
ಶ್ರೀಪತಿಯ ಸಾಯುಜ್ಯವೆನುತಿದಿರಾಯ್ತು ನೃಪಕಟಕ ॥26॥
೦೨೭ ಅರಿಯಬಹುದೈ ಭಾವಮೈದುನ ...{Loading}...
ಅರಿಯಬಹುದೈ ಭಾವಮೈದುನ
ಮೆರೆ ಭುಜಾಟೋಪವನು ಹಿಂದಣ
ಕೊರತೆಯನು ಕಳೆ ಮಗನೆ ಬೊಪ್ಪಕುಲಕ್ರಮಾಗತವ
ಮರೆಯದಿರು ಮುಂಗಲಿತನಕೆ ತಾ
ನಿರಿವೆ ನಾ ಮುನ್ನೆಂದು ತಮ್ಮೊಳು
ಜರೆದರೊಡವುಟ್ಟಿದರು ಬಾಂಧವ ಮಿತ್ರ ಭೂಮಿಪರು ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭಾವಮೈದುನನೇ ಈಗ ನಿನ್ನ ಶಕ್ತಿ ಸಾಮರ್ಥ್ಯಗಳನ್ನು ತಿಳಿಯುವ ಕಾಲ ಬಂದಿದೆ, ನಿನ್ನ ಭುಜಬಲವನ್ನು ಪ್ರದರ್ಶಿಸು ಎಂದು ಭಾವ ತನ್ನ ಭಾವಮೈದುನನಿಗೆ ಹೇಳುತ್ತಿದ್ದ. ಹಿಂದಿನ ದಿನಗಳಲ್ಲಿ ಯುದ್ಧ ಮಾಡದಿರುವ ಕೊರತೆಯನ್ನು ಇಂದಿನ ಯುದ್ಧದಲ್ಲಿ ಕಳೆಯುವಂತೆ ಯುದ್ಧ ಮಾಡು ಮಗನೇ, ತಂದೆಯ ವಂಶಪಾರಂಪರ್ಯವಾಗಿ ಬಂದ ಶೌರ್ಯವನ್ನು ಮರೆಯದಿರು ಎಂದು ತಂದೆ, ಮಗನಿಗೆ ಬುದ್ದಿಹೇಳುತ್ತಿದ್ದ. ನಾನು ಮೊದಲು ತಾನು ಮೊದಲು ಯುದ್ಧ ಮಾಡುತ್ತೇನೆಂದು ಅಣ್ಣತಮ್ಮಂದಿರು ತಮ್ಮತಮ್ಮೊಳಗೆ ಸ್ಪರ್ಧಿಸುತ್ತಿದ್ದರು.
ಪದಾರ್ಥ (ಕ.ಗ.ಪ)
ಮುಂಗಲಿತನ-ಮುಂ+ಕಲಿತನ-ಮೊದಲು ಯುದ್ಧ ಮಾಡುವ ಶೌರ್ಯ
ಮೂಲ ...{Loading}...
ಅರಿಯಬಹುದೈ ಭಾವಮೈದುನ
ಮೆರೆ ಭುಜಾಟೋಪವನು ಹಿಂದಣ
ಕೊರತೆಯನು ಕಳೆ ಮಗನೆ ಬೊಪ್ಪಕುಲಕ್ರಮಾಗತವ
ಮರೆಯದಿರು ಮುಂಗಲಿತನಕೆ ತಾ
ನಿರಿವೆ ನಾ ಮುನ್ನೆಂದು ತಮ್ಮೊಳು
ಜರೆದರೊಡವುಟ್ಟಿದರು ಬಾಂಧವ ಮಿತ್ರ ಭೂಮಿಪರು ॥27॥
೦೨೮ ನೂಕಿತೊನ್ದೇ ವಾಘೆಯಲಿ ...{Loading}...
ನೂಕಿತೊಂದೇ ವಾಘೆಯಲಿ ಹಯ
ನಾಕು ಸಾವಿರ ರಥದ ಜೋಡಿಯ
ಜೋಕೆ ಕವಿದುದು ಮೂರು ಸಾವಿರ ರಾಜಪುತ್ರರಲಿ
ತೋಕುವಂಬಿನ ಜೋದರೊಗ್ಗಿನೊ
ಳೌಕಿದವು ಸಾವಿರ ಮದೇಭಾ
ನೀಕ ಬೊಬ್ಬೆಯ ಲಳಿಯಲೌಕಿತು ಲಕ್ಕ ಪಾಯದಳ ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಾಲ್ಕು ಕುದುರೆಗಳು ಒಂದೇ ಹಗ್ಗದ ಹಿಡಿತದಲ್ಲಿ ಮುಂದೆ ನಡೆದುವು. ಸಾವಿರ ಜೋಡಿ ರಥಗಳು ಸಾಲಾಗಿ ಮೂರುಸಾವಿರ ರಾಜಪುತ್ರರರೊಡನೆ ಯುದ್ಧಕ್ಕೆ ಓಡಿದುವು. ಬಾಣವನ್ನು ಪ್ರಯೋಗ ಮಾಡುತ್ತಿರುವ ಸಾಲು ಸಾಲು ಯೋಧರ ಸಮೂಹದಲ್ಲಿ ಸಾವಿರ ಮದಿಸಿದ ಆನೆಗಳು ನುಗ್ಗಿದುವು. ಒಂದು ಲಕ್ಷ ಕಾಲಾಳುಗಳ ದಳ ಬೊಬ್ಬೆಹೊಡೆಯುತ್ತಾ ಉತ್ಸಾಹದಿಂದ ಮುನ್ನುಗ್ಗಿತು.
ಪದಾರ್ಥ (ಕ.ಗ.ಪ)
ವಾಘೆ- ಲಗಾಮು , ಜೋಕೆ-ಸಾಲಾಗಿ, ಎಚ್ಚರಿಕೆ, ಸೊಗಸು, ತೋಕು-ಪ್ರಯೋಗಿಸು, ಎಸೆ, ಹೊಡಿ.
ಮೂಲ ...{Loading}...
ನೂಕಿತೊಂದೇ ವಾಘೆಯಲಿ ಹಯ
ನಾಕು ಸಾವಿರ ರಥದ ಜೋಡಿಯ
ಜೋಕೆ ಕವಿದುದು ಮೂರು ಸಾವಿರ ರಾಜಪುತ್ರರಲಿ
ತೋಕುವಂಬಿನ ಜೋದರೊಗ್ಗಿನೊ
ಳೌಕಿದವು ಸಾವಿರ ಮದೇಭಾ
ನೀಕ ಬೊಬ್ಬೆಯ ಲಳಿಯಲೌಕಿತು ಲಕ್ಕ ಪಾಯದಳ ॥28॥
೦೨೯ ಸುರಿದುದಮ್ಬಿನ ಸೋನೆ ...{Loading}...
ಸುರಿದುದಂಬಿನ ಸೋನೆ ರಥಿಕರ
ಕರಿಘಟೆಯ ಥಟ್ಟಿಂದ ಕಕ್ಕಡೆ
ಪರಶು ಶೂಲ ಮುಸುಂಡಿ ಸೆಲ್ಲೆಹ ಸಬಳ ಶಕ್ತಿಗಳು
ಅರಿಬಲಾಬ್ಧಿಯನೀಸಿದವು ತ
ತ್ತುರಗ ರಥವನು ಬೀಸಿದವು ಮದ
ಕರಿಗಳಿಕ್ಕಡಿಘಾಯಕೊದಗಿತು ರಾಯರಾವುತರು ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಥದಲ್ಲಿ ನಿಂತು ಯುದ್ಧ ಮಾಡುವವರ ಮತ್ತು ಆನೆಗಳ ಸಮೂಹದ ಸೈನ್ಯದಿಂದ ಬಾಣಗಳ ಸೋನೆಮಳೆಯೇ ಸುರಿಯಿತು. ಕಕ್ಕಡೆ, ಕೊಡಲಿ, ಶೂಲ, ಮುಸುಂಡಿ, ಸೆಲ್ಲಹ, ಸಬಳ ಶಕ್ತಿ ಮುಂತಾದ ಆಯುಧಗಳು ಶತ್ರುಸೈನ್ಯವೆಂಬ ಸಮುದ್ರವನ್ನು ಈಜಿದವು. ಕುದುರೆ ಮತ್ತು ರಥಗಳನ್ನು ಮದಗಜಗಳು ಬೀಸಿ ಒಗೆದವು. ರಾಜರು, ಕುದುರೆ ಸವಾರರು ಎರಡು ಕಡೆಗಳಿಂದಲೂ ಘಾಯಕ್ಕೆ ಒಳಗಾದರು.
ಪದಾರ್ಥ (ಕ.ಗ.ಪ)
ಕಕ್ಕಡೆ-ಒಂದು ಆಯುಧ, ಪರಶು-ಕೊಡಲಿಯೆಂಬ ಆಯುಧ, ಮುಸುಂಡಿ-ಒಂದು ಆಯುಧ, ಸೆಲ್ಲೆಹ-ಶಲ್ಯವೆಂಬ ಆಯುಧ, ಸಬಳ-ಒಂದು ಆಯುಧ, ಶಕ್ತಿ-ಒಂದು ಆಯುಧ, ಇಕ್ಕಡಿ-ಎರಡೂ ಕಡೆಯಿಂದ ಬೀಳುವ ಹೊಡೆತ
ಮೂಲ ...{Loading}...
ಸುರಿದುದಂಬಿನ ಸೋನೆ ರಥಿಕರ
ಕರಿಘಟೆಯ ಥಟ್ಟಿಂದ ಕಕ್ಕಡೆ
ಪರಶು ಶೂಲ ಮುಸುಂಡಿ ಸೆಲ್ಲೆಹ ಸಬಳ ಶಕ್ತಿಗಳು
ಅರಿಬಲಾಬ್ಧಿಯನೀಸಿದವು ತ
ತ್ತುರಗ ರಥವನು ಬೀಸಿದವು ಮದ
ಕರಿಗಳಿಕ್ಕಡಿಘಾಯಕೊದಗಿತು ರಾಯರಾವುತರು ॥29॥
೦೩೦ ನೆರೆ ಪರಿಚ್ಛೇದಿಸಿದ ...{Loading}...
ನೆರೆ ಪರಿಚ್ಛೇದಿಸಿದ ಬಲ ಮು
ಕ್ಕುರಿಕಿತೋ ನಿಜಸೈನ್ಯಸಾಗರ
ಬರತುದೋ ಬಲುಗೈಗಳೆದೆಗಳ ಕೆಚ್ಚು ಕರಗಿತಲಾ
ಮುರಿದು ಬರುತಿದೆ ಸೃಂಜಯರು ಕೈ
ಮುರಿದರೇ ಪಾಂಚಾಲಭಟರೆಂ
ದೊರಲಿದುದು ಮಂತ್ರಿಗಳು ರಾಯನ ರಥದ ಬಳಸಿನಲಿ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವಿಭಾಗವಾಗಿದ್ದ ಕೌರವ ಬಲವು ಒಂದುಗೂಡಿ ಆವರಿಸುತ್ತಾ ಬಂದಿತೋ, ತನ್ನ ಸೈನ್ಯಸಾಗರ ಬತ್ತಿಹೋಯಿತೋ, ತನ್ನವರಲ್ಲಿ ಬಲಶಾಲಿಗಳಾದವರ ಎದೆಯ ಕೆಚ್ಚು ಕರಗಿಹೋಯಿತೇ. ಸೃಂಜಯರ ಸೈನ್ಯವು ಹಿಂದಿರುಗಿ ಬರುತ್ತಿದೆ. ಪಾಂಚಾಲ ಸೈನ್ಯದ ಭಟರು ಕೈ ಮುರಿದುಕೊಂಡು ಬರುತ್ತಿದ್ದಾರೆಯೇ! ಎಂದು ಧರ್ಮಜನ ರಥದ ಸುತ್ತಲೂ ಇದ್ದ ಮಂತ್ರಿಗಳು ಚೀತ್ಕಾರ ಮಾಡಿದರು.
ಪದಾರ್ಥ (ಕ.ಗ.ಪ)
ಪರಿಚ್ಛೇದಿಸು-ವಿಭಾಗಮಾಡು, ಒಡೆದುಹಾಕು, ಮುಕ್ಕರಿಸು-ಆವರಿಸು, ಸುತ್ತುಗಟ್ಟು, ಬರತುದು-ಬತ್ತಿಹೋಯಿತು.
ಟಿಪ್ಪನೀ (ಕ.ಗ.ಪ)
1)ಸೃಂಜಯರು: ಶಲ್ಯಪರ್ವದ 3ನೇ ಸಂಧಿಯ 23ನೆಯ ಪದ್ಯದ ಟಿಪ್ಪಣಿಯನ್ನು ನೋಡಿ.
2) ಪಾಂಚಾಲರು-ಪಾಂಚಾಲದೇಶದವರು, ದ್ರೌಪದಿಯ ತಂದೆ. ದೃಪದ ಪಾಂಚಾಲ ದೇಶದ ಅರಸ. ಅವನ ಮಕ್ಕಳು ಮತ್ತು ಸೈನ್ಯಕ್ಕೆ ಪಾಂಚಾಲರೆಂದು ಹೆಸರು. ಅವನ ಮಕ್ಕಳು: ದೃಷ್ಟದ್ಯುಮ್ನ, ಶಿಖಂಡಿ, ಚೇಕಿತಾನ. ಯುಧಾಮನ್ಯು, ಉತ್ತಮೌಂಜಸ
ಮೂಲ ...{Loading}...
ನೆರೆ ಪರಿಚ್ಛೇದಿಸಿದ ಬಲ ಮು
ಕ್ಕುರಿಕಿತೋ ನಿಜಸೈನ್ಯಸಾಗರ
ಬರತುದೋ ಬಲುಗೈಗಳೆದೆಗಳ ಕೆಚ್ಚು ಕರಗಿತಲಾ
ಮುರಿದು ಬರುತಿದೆ ಸೃಂಜಯರು ಕೈ
ಮುರಿದರೇ ಪಾಂಚಾಲಭಟರೆಂ
ದೊರಲಿದುದು ಮಂತ್ರಿಗಳು ರಾಯನ ರಥದ ಬಳಸಿನಲಿ ॥30॥
೦೩೧ ಅರಸ ಕೇಳು ...{Loading}...
ಅರಸ ಕೇಳು ಯುಧಿಷ್ಠಿರನ ಮೇ
ಲುರವಣಿಸಿತೀ ಸೇನೆ ಭೀಮನ
ಬಿರುದ ತಡೆದವು ಸಾವಿರಾನೆಗಳೊಂದು ಬಾಹೆಯಲಿ
ಅರರೆ ರಾವುತೆನುತ್ತ ಕವಿದುದು
ತುರಗ ಸಾವಿರ ನಕುಲ ಸಹದೇ
ವರಿಗೆ ಸಾತ್ಯಕಿಗಾಗಿ ಬಿಟ್ಟನು ರಥವನಾ ದ್ರೌಣಿ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧೃತರಾಷ್ಟ್ರರಾಜನೇ ಕೇಳು, ಕೌರವನ ಸೈನ್ಯವು ಯುಧಿಷ್ಠಿರನ ಮೇಲೆ ಉತ್ಸಾಹದಿಂದ ಬಿತ್ತು. ಒಂದು ಸಾವಿರ ಆನೆಗಳು ಒಂದು ದಿಕ್ಕಿನಲ್ಲಿ ಭೀಮನ ಬಿರುದು ಹೆಚ್ಚುಗಾರಿಕೆಗಳನ್ನು ತಡೆದುವು. ‘ಅರರೆ ರಾವುತು’ ಎನ್ನುತ್ತಾ ಒಂದು ಸಾವಿರ ಕುದುರೆಗಳು ಮೇಲೆ ಬಿದ್ದುವು. ನಕುಲ, ಸಹದೇವ ಮತ್ತು ಸಾತ್ಯಕಿಯ ವಿರುದ್ಧವಾಗಿ ಅಶ್ವತ್ಥಾಮ ತನ್ನ ರಥವನ್ನು ಹರಿಸಿದ.
ಪದಾರ್ಥ (ಕ.ಗ.ಪ)
ಉರವಣೆ-ಆತುರ, ಸಂಭ್ರಮ, ರಭಸ, ರಾವುತು-ಭಲೇ, ಮೆಚ್ಚುಗೆಯ ಮಾತು
ಮೂಲ ...{Loading}...
ಅರಸ ಕೇಳು ಯುಧಿಷ್ಠಿರನ ಮೇ
ಲುರವಣಿಸಿತೀ ಸೇನೆ ಭೀಮನ
ಬಿರುದ ತಡೆದವು ಸಾವಿರಾನೆಗಳೊಂದು ಬಾಹೆಯಲಿ
ಅರರೆ ರಾವುತೆನುತ್ತ ಕವಿದುದು
ತುರಗ ಸಾವಿರ ನಕುಲ ಸಹದೇ
ವರಿಗೆ ಸಾತ್ಯಕಿಗಾಗಿ ಬಿಟ್ಟನು ರಥವನಾ ದ್ರೌಣಿ ॥31॥
೦೩೨ ರಾಯದಳದಲೆ ಚಾತುರಙ್ಗದ ...{Loading}...
ರಾಯದಳದಲೆ ಚಾತುರಂಗದ
ಬೀಯ ಬೆದರಿಸಿತದಟರನು ಬಲು
ನಾಯಕರಿಗಿದಿರೊಡ್ಡಿದರು ಕೃಪ ಭೋಜ ಗುರುಸುತರು
ಆಯಿತೀ ರಣವೆನುತ ಪಾಂಡವ
ರಾಯ ಹೊಕ್ಕನು ಬಳಿಕಲಾ ಕ
ರ್ಣಾಯತಾಸ್ತ್ರನು ಕಂಡನರ್ಜುನನಾ ಮಹಾದ್ಭುತವ ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಾಜನ ಸೈನ್ಯದಲ್ಲಿ ಚತುರಂಗಬಲದ ನಾಶವು ಶಕ್ತಿಶಾಲಿಗಳನ್ನು ಸಹ ಬೆದರಿಸಿತು. ಕೃಪಾಚಾರ್ಯ, ಭೋಜ ಮತ್ತು ಅಶ್ವತ್ಥಾಮರು ಪಾಂಡವರ ಪಕ್ಷದ ಹೆಸರಾಂತ ನಾಯಕರಿಗೆ ಇದಿರುಬಿದ್ದರು. ಈ ಯುದ್ಧ ಇನ್ನೇನು ಮುಗಿಯಿತು, ಕೌರವರು ಗೆದ್ದರು - ಎನ್ನುತ್ತಾ ಧರ್ಮರಾಯನು ಯುದ್ಧರಂಗವನ್ನು ಪ್ರವೇಶಿಸಿದನು. ಈ ಮಹಾ ಅದ್ಭುತವನ್ನು ಕಿವಿಯವರೆಗೂ ಬಿಲ್ಲಿನ ಹೆದೆಯನ್ನು ಎಳೆದು ಬಾಣ ಪ್ರಯೋಗಕ್ಕೆ ಸನ್ನದ್ಧನಾಗಿ ನಿಂತ ಅರ್ಜುನನು ನೋಡಿದನು.
ಪದಾರ್ಥ (ಕ.ಗ.ಪ)
ಬೀಯ-ವ್ಯಯ, ನಾಶ, ಆಯತ-ಸನ್ನದ್ಧ,
ಮೂಲ ...{Loading}...
ರಾಯದಳದಲೆ ಚಾತುರಂಗದ
ಬೀಯ ಬೆದರಿಸಿತದಟರನು ಬಲು
ನಾಯಕರಿಗಿದಿರೊಡ್ಡಿದರು ಕೃಪ ಭೋಜ ಗುರುಸುತರು
ಆಯಿತೀ ರಣವೆನುತ ಪಾಂಡವ
ರಾಯ ಹೊಕ್ಕನು ಬಳಿಕಲಾ ಕ
ರ್ಣಾಯತಾಸ್ತ್ರನು ಕಂಡನರ್ಜುನನಾ ಮಹಾದ್ಭುತವ ॥32॥
೦೩೩ ಮೇಲುಲೋಕವ ಬಯಸಿ ...{Loading}...
ಮೇಲುಲೋಕವ ಬಯಸಿ ಕುರುಬಲ
ಮೇಲೆ ಬಿದ್ದುದು ಜೀಯ ಜಡಿದು ನೃ
ಪಾಲನೇಕಾಂಗದಲಿ ಹೊಕ್ಕನು ಹೊದರನೊಡೆಬಡಿದು
ಮೇಲುದಾಯದಲವನಿಪನ ಸಂ
ಭಾಳಿಸುವೆನೆನೆ ನಗುತ ಲಕ್ಷ್ಮೀ
ಲೋಲ ಚಪ್ಪರಿಸಿದನು ನರನುದ್ದಂಡವಾಜಿಗಳ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸ್ವರ್ಗಪ್ರಾಪ್ತಿಯನ್ನು ಬಯಸಿ ಕುರುಸೈನ್ಯವು ಪಾಂಡವ ಸೈನ್ಯದ ಮೇಲೆ ಬಿತ್ತ್ತು. ಸ್ವಾಮೀ, ಧರ್ಮಜನು ಏಕಾಂಗಿಯಾಗಿ ಕುರುಸೈನ್ಯದ ಸಮೂಹದೊಂದಿಗೆ ಹೊಡೆದಾಡುತ್ತಿದ್ದಾನೆ. ರಣಭೂಮಿಯ ಮೇಲುಭಾಗದಿಂದ ನಾವು ಧರ್ಮರಾಯನ ಯುದ್ಧವನ್ನು ನಿರ್ವಹಿಸೋಣವೆಂದು ಅರ್ಜುನ ಹೇಳಲು, ಕೃಷ್ಣನು ನಗುತ್ತಾ ಅರ್ಜುನನ ಪ್ರಚಂಡ ಕುದುರೆಗಳನ್ನು ಚಪ್ಪರಿಸಿದನು.
ಪದಾರ್ಥ (ಕ.ಗ.ಪ)
ಮೇಲುಲೋಕ-ಸ್ವರ್ಗ, ಹೊದರು-ರಾಶಿ, ಗುಂಪು, ಮೇಲುದಾಯ-ಮೇಲುಭಾಗ, ಸಂಭಾಳಿಸು-ನಿರ್ವಹಿಸು, ನಿಭಾಯಿಸು, ಉದ್ದಂಡ-ಪ್ರಬಲ, ಪ್ರಚಂಡವಾದ
ಮೂಲ ...{Loading}...
ಮೇಲುಲೋಕವ ಬಯಸಿ ಕುರುಬಲ
ಮೇಲೆ ಬಿದ್ದುದು ಜೀಯ ಜಡಿದು ನೃ
ಪಾಲನೇಕಾಂಗದಲಿ ಹೊಕ್ಕನು ಹೊದರನೊಡೆಬಡಿದು
ಮೇಲುದಾಯದಲವನಿಪನ ಸಂ
ಭಾಳಿಸುವೆನೆನೆ ನಗುತ ಲಕ್ಷ್ಮೀ
ಲೋಲ ಚಪ್ಪರಿಸಿದನು ನರನುದ್ದಂಡವಾಜಿಗಳ ॥33॥
೦೩೪ ಅರಸ ಕೇಳೈ ...{Loading}...
ಅರಸ ಕೇಳೈ ನಿಮಿಷದಲಿ ನೃಪ
ವರನ ರಥದಿಂ ಮುನ್ನ ಪಾರ್ಥನ
ತಿರುವಿನಬ್ಬರ ಕೇಳಲಾದುದು ಕಳನ ಚೌಕದಲಿ
ಅರರೆ ದೊರೆಯೋ ಕೊಳ್ಳಿವನ ಕೈ
ಮರೆಯದಿರಿ ಕುರುಧರಣಿಪನ ಹಗೆ
ಹರಿಯಲೆಂದುರವಣಿಸಿ ಕವಿದುದು ಕೂಡೆ ಕುರುಸೇನೆ ॥34॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧೃತರಾಷ್ಟ್ರನೇ ಕೇಳು, ಒಂದೇ ನಿಮಿಷದಲ್ಲಿ ಧರ್ಮರಾಯನ ರಥದ ಮೊದಲೇ, ಯುದ್ಧರಂಗದಲ್ಲಿ ಅರ್ಜುನನ ಬಿಲ್ಲಿನ ಹೆದೆಯ ಠೇಂಕಾರ ಕೇಳಿಬಂತು ಅರರೆ! ದೊರೆಯೇ! ಅವನು ಹಾಗಿರಲಿ, ಮೊದಲು ಇವನನ್ನು ಎದುರಿಸಿ, ದಿಗ್ಭ್ರಮೆಗೊಳ್ಳದಿರಿ. ಕುರುಭೂಪಾಲನ ಹಗೆ ನಾಶವಾಗಲಿ ಎಂದು ಉತ್ಸಾಹದಿಂದ ಒಂದುಗೂಡಿ ಕುರುಸೈನ್ಯವು ಅರ್ಜುನನನ್ನು ಮುತ್ತಿತು.
ಪದಾರ್ಥ (ಕ.ಗ.ಪ)
ತಿರುವು-ಬಿಲ್ಲಿನ ಹೆದೆ, ಹಗ್ಗ, ಕಳನ-ಯುದ್ಧ ಭೂಮಿಯ, ಕೈಮರೆ-ವಿಸ್ಮಯ, ಬೆರಗು, ದಿಗ್ಭ್ರಮೆ, (ಕೈಮರೇ ವಿಸ್ಮಯೇ-ಶ.ಮ.ದ)
ಮೂಲ ...{Loading}...
ಅರಸ ಕೇಳೈ ನಿಮಿಷದಲಿ ನೃಪ
ವರನ ರಥದಿಂ ಮುನ್ನ ಪಾರ್ಥನ
ತಿರುವಿನಬ್ಬರ ಕೇಳಲಾದುದು ಕಳನ ಚೌಕದಲಿ
ಅರರೆ ದೊರೆಯೋ ಕೊಳ್ಳಿವನ ಕೈ
ಮರೆಯದಿರಿ ಕುರುಧರಣಿಪನ ಹಗೆ
ಹರಿಯಲೆಂದುರವಣಿಸಿ ಕವಿದುದು ಕೂಡೆ ಕುರುಸೇನೆ ॥34॥
೦೩೫ ಮೋಹಿದವು ಭರಿಕೈಗಳನು ...{Loading}...
ಮೋಹಿದವು ಭರಿಕೈಗಳನು ರಥ
ವಾಹತತಿಗಾನೆಗಳು ವಂಶ
ದ್ರೋಹಿ ಸಿಲುಕಿದನೆನುತ ತಡೆದರು ರಥಿಕರೆಡಬಲನ
ಗಾಹಿಸಿತು ದೂಹತ್ತಿ ಲೌಡೆಯ
ರಾಹುತರು ಕಟ್ಟಳವಿಯಲಿ ಕವಿ
ದೋಹಡಿಸದೌಂಕಿತು ಪದಾತಿ ಧನಂಜಯನ ರಥವ ॥35॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆನೆಗಳು ಓಡುತ್ತಿರುವ ರಥದ ಕುದುರೆಗಳಿಗೆ ತಮ್ಮ ಸೊಂಡಿಲುಗಳನ್ನು ನೀಡಿದುವು. ವಂಶದ್ರೋಹಿಯಾದ ಅರ್ಜುನ ಸಿಕ್ಕಿದನೆಂದು ರಥದಲ್ಲಿ ಯುದ್ಧ ಮಾಡುವವರು, ಅವನ ಎಡಬಲದ ಸೈನ್ಯಿಕರನ್ನು ತಡೆದರು. ಕೌರವಬಲವು ತನ್ನ ಪ್ರಭಾವವನ್ನು ಹೆಚ್ಚಿಸಿಕೊಂಡು ಎರಡೂ ಕೈಗಳಿಂದ ಯುದ್ಧ ಮಾಡಲು ಅನುವಾದ ಕತ್ತಿಗಳನ್ನು ಹಿಡಿದವರು, ಕಬ್ಬಿಣದ ಆಯುಧಗಳನ್ನು ಹಿಡಿದ ಕುದುರೆ ಸವಾರ ಮತ್ತು ಪದಾತಿ ಬಲಗಳು ತಮ್ಮ ಪ್ರಬಲ ಹೋರಾಟದಿಂದ ಅರ್ಜುನನ ರಥವನ್ನು ತಡೆದು ಅವನು ಇಳಿದು ಹೋಗದಂತೆ ಅವನ ವಿರುದ್ಧ ಯುದ್ಧಕ್ಕೆ ತೊಡಗಿದರು.
ಪದಾರ್ಥ (ಕ.ಗ.ಪ)
ಮೋಹು-ಎತ್ತಿಹಿಡಿ, ಕವಿ, ಮುಟ್ಟಿಸು, ಭರಿಕೈ-ಆನೆಯ ಸೊಂಡಿಲು, ರಥವಾಹತತಿ-ಕುದುರೆಗಳಸಮೂಹ, ಗಾಹ-ಪ್ರಭಾವ, ಹಿಡಿತ, ಮೋಸ, ದೂಹತ್ತಿ-ಎರಡು ಕೈಗಳಿಂದ ಹಿಡಿದು ಯುದ್ಧ ಮಾಡುವ ಕತ್ತಿ, ಲೌಡೆ-ಕಬ್ಬಿಣದ ಆಯುಧ, ಓಹಡಿಸು-ಇಳಿತ, ಹಿಂದೆ ಸರಿ, ಕಟ್ಟಳವಿ-ಪ್ರಬಲ ಶಕ್ತಿ, ಬಿಗಿಯಾದ ಹೋರಾಟ
ಮೂಲ ...{Loading}...
ಮೋಹಿದವು ಭರಿಕೈಗಳನು ರಥ
ವಾಹತತಿಗಾನೆಗಳು ವಂಶ
ದ್ರೋಹಿ ಸಿಲುಕಿದನೆನುತ ತಡೆದರು ರಥಿಕರೆಡಬಲನ
ಗಾಹಿಸಿತು ದೂಹತ್ತಿ ಲೌಡೆಯ
ರಾಹುತರು ಕಟ್ಟಳವಿಯಲಿ ಕವಿ
ದೋಹಡಿಸದೌಂಕಿತು ಪದಾತಿ ಧನಂಜಯನ ರಥವ ॥35॥
೦೩೬ ಏನನೆಮ್ಬೆನು ಜೀಯ ...{Loading}...
ಏನನೆಂಬೆನು ಜೀಯ ಕುರುಬಲ
ದಾನೆಗಳ ವಿಕ್ರಮವನತಿರಥ
ರೇನ ನಿಲುವರು ಕೆಲಬಲನ ಚತುರಂಗದುಪಹತಿಗೆ
ಭಾನುಮಂಡಲವಕಟ ತಿಮಿರಾಂ
ಭೋನಿಧಿಯಲಕ್ಕಾಡಿತೆಂಬವೊ
ಲಾ ನಿರಂತರ ದಳದ ಥಟ್ಟಣೆ ಧೂಳಿಪಟವಾಯ್ತು ॥36॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕುರುಬಲದ ಆನೆಗಳ ಪ್ರತಾಪವನ್ನು ಏನು ಹೇಳಲಿ ಸ್ವಾಮಿ! ಅಕ್ಕಪಕ್ಕದ ಚತುರಂಗ ಬಲದ ಹೊಡೆತಕ್ಕೆ ಅತಿರಥರು ಹೇಗೆ ನಿಲ್ಲಲು ಸಾಧ್ಯ. ಸೂರ್ಯಮಂಡಲವು ಕತ್ತಲಿನ ಸಮುದ್ರದಲ್ಲಿ ಮುಳುಗಾಡಿತೆಂಬಂತೆ ನಿರಂತರವಾಗಿ ಕಾಡುತ್ತಿದ್ದ ಸೈನ್ಯದ ಕಾಲ ತುಳಿತದಿಂದ ಆಕಾಶವೆಲ್ಲವೂ ಧೂಳಿನಿಂದ ತುಂಬಿ ಹೋಯಿತು.
ಪದಾರ್ಥ (ಕ.ಗ.ಪ)
ಅಕ್ಕಾಡು-ಮುಳುಗು, ಥಟ್ಟಣೆ-ಕಾಲ ತುಳಿತ.
ಮೂಲ ...{Loading}...
ಏನನೆಂಬೆನು ಜೀಯ ಕುರುಬಲ
ದಾನೆಗಳ ವಿಕ್ರಮವನತಿರಥ
ರೇನ ನಿಲುವರು ಕೆಲಬಲನ ಚತುರಂಗದುಪಹತಿಗೆ
ಭಾನುಮಂಡಲವಕಟ ತಿಮಿರಾಂ
ಭೋನಿಧಿಯಲಕ್ಕಾಡಿತೆಂಬವೊ
ಲಾ ನಿರಂತರ ದಳದ ಥಟ್ಟಣೆ ಧೂಳಿಪಟವಾಯ್ತು ॥36॥
೦೩೭ ಮುಙ್ಕುಡಿಯ ಹಿಡಿದಾನೆಗಳನೆಡ ...{Loading}...
ಮುಂಕುಡಿಯ ಹಿಡಿದಾನೆಗಳನೆಡ
ವಂಕಕೌಕಿದ ರಥಚಯವ ಬಲ
ವಂಕಕೊತ್ತಿದ ರಾವುತರನುಬ್ಬೆದ್ದ ಪಯದಳದ
ಶಂಕೆಯನು ನಾ ಕಾಣೆ ಬಲನೆಡ
ವಂಕವನು ತರಿದೊಟ್ಟಿದನು ಮಾ
ರಂಕ ನಿಲುವುದೆ ಪಾರ್ಥ ಮುನಿದಡೆ ಭೂಪ ಕೇಳ್ ಎಂದ ॥37॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನು, ಕೌರವ ಸೈನ್ಯದ ಮುಂಭಾಗದಲ್ಲಿದ್ದ ಆನೆಗಳನ್ನು ಎಡಭಾಗಕ್ಕೆ ನೂಕಿದ. ರಥಸಮೂಹಗಳನ್ನು ಬಲಭಾಗಕ್ಕೆ ಒತ್ತಿದ. ಕುದುರೆ ಸವಾರರ ಮತ್ತು ಕಾಲುದಳದವರ ಹೆದರಿಕೆಯನ್ನು ನಾನು ಹೇಳಲಾರೆ. ಎಡಬಲದ ಸೈನ್ಯವನ್ನು ಕತ್ತರಿಸಿ ಹಾಕಿ ಒಟ್ಟಿದನು. ಪಾರ್ಥ ಕೋಪಗೊಂಡರೆ ಎದುರು ಸೈನ್ಯ ನಿಲ್ಲಲು ಸಾಧ್ಯವೇ - ಧೃತರಾಷ್ಟ್ರ ಕೇಳು ಎಂದು ಸಂಜಯ ಯುದ್ಧದ ವಿವರವನ್ನು ನೀಡಿದ.
ಪದಾರ್ಥ (ಕ.ಗ.ಪ)
ಮುಂಕುಡಿ-ಮುಂಭಾಗ, ಸೈನ್ಯದ ಮುಂಭಾಗ, ಮುಂಚೂಣಿ, ಮಾರಂಕ-ಪ್ರತಿಸ್ಪರ್ಧಿ, ಎದುರುಸೈನ್ಯ.
ಮೂಲ ...{Loading}...
ಮುಂಕುಡಿಯ ಹಿಡಿದಾನೆಗಳನೆಡ
ವಂಕಕೌಕಿದ ರಥಚಯವ ಬಲ
ವಂಕಕೊತ್ತಿದ ರಾವುತರನುಬ್ಬೆದ್ದ ಪಯದಳದ
ಶಂಕೆಯನು ನಾ ಕಾಣೆ ಬಲನೆಡ
ವಂಕವನು ತರಿದೊಟ್ಟಿದನು ಮಾ
ರಂಕ ನಿಲುವುದೆ ಪಾರ್ಥ ಮುನಿದಡೆ ಭೂಪ ಕೇಳೆಂದ ॥37॥
೦೩೮ ಉಡಿಯೆ ಮೋರೆಯ ...{Loading}...
ಉಡಿಯೆ ಮೋರೆಯ ಜೋಡು ಜೋದರ
ಕೊಡಹಿ ಹಾಯ್ದವು ದಂತಿಘಟೆ ಖುರ
ಕಡಿವಡಿಯೆ ಕುದುರೆಗಳು ಹಾಯ್ದವು ಹಾಯ್ಕಿ ರಾವುತರ
ಮಡಿಯೆ ಸಾರಥಿ ಮಗ್ಗಿದವು ರಥ
ನಡೆದು ಕಾದಿ ಮಹಾರಥರು ಮೆದೆ
ಗೆಡೆದುದುಳಿದ ಪದಾತಿಪತನವನರಿಯೆ ನಾನೆಂದ ॥38॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆನೆಗಳ ಮುಖಕ್ಕೆ ಹಾಕಿದ ರಕ್ಷಾಕವಚಗಳು ಅರ್ಜುನನ ಬಾಣಹತಿಯಿಂದ ಮುರಿದು ಹೋಗಲು ಆನೆಗಳು ತಮ್ಮ ಮೇಲೆ ಕುಳಿತಿದ್ದ ಯೋಧರನ್ನು ಕೊಡಹಿ ನೆಲಕ್ಕೆ ಎಸೆದು ಓಡಿದವು. ಕುದುರೆಗಳ ಪಾದಗಳು ಕತ್ತರಿಸಿ ಹೋಗಲು ಸವಾರರನ್ನು ನೆಲಕ್ಕೆ ಕೊಡಹಿ ಹಾಕಿ ಓಡಿದವು. ಸಾರಥಿಗಳು ಮಡಿಯಲು ರಥಗಳು ನಾಶವಾದವು. ಕಾಲಾಳುಗಳು, ಮಹಾರಥರು ಯುದ್ಧ ಮಾಡುತ್ತಲೇ ರಾಶಿರಾಶಿಯಾಗಿ ಮಡಿದರು. ಇನ್ನುಳಿದ ಕಾಲಾಳುಗಳ ನಿರ್ನಾಮವನ್ನು ನಾನು ತಿಳಿಯೆ - ಎಂದು ಸಂಜಯ ಧೃತರಾಷ್ಟ್ರನಿಗೆ ಹೇಳಿದ.
ಪದಾರ್ಥ (ಕ.ಗ.ಪ)
ಮೋರೆಯ ಜೋಡು-ಆನೆಯ ಮುಖದ ರಕ್ಷಾಕವಚ, ಮಗ್ಗು-ನಾಶವಾಗು, ನೆಗ್ಗಿಹೋಗು, ಮೆದೆ-ಗುಂಪು, ಸಮೂಹ
ಮೂಲ ...{Loading}...
ಉಡಿಯೆ ಮೋರೆಯ ಜೋಡು ಜೋದರ
ಕೊಡಹಿ ಹಾಯ್ದವು ದಂತಿಘಟೆ ಖುರ
ಕಡಿವಡಿಯೆ ಕುದುರೆಗಳು ಹಾಯ್ದವು ಹಾಯ್ಕಿ ರಾವುತರ
ಮಡಿಯೆ ಸಾರಥಿ ಮಗ್ಗಿದವು ರಥ
ನಡೆದು ಕಾದಿ ಮಹಾರಥರು ಮೆದೆ
ಗೆಡೆದುದುಳಿದ ಪದಾತಿಪತನವನರಿಯೆ ನಾನೆಂದ ॥38॥
೦೩೯ ಕರಿಘಟೆಗಳೈನೂರು ರಥ ...{Loading}...
ಕರಿಘಟೆಗಳೈನೂರು ರಥ ಸಾ
ವಿರದ ಮೂನೂರೆರಡು ಸಾವಿರ
ತುರಗದಳವೆಂಬತ್ತು ಸಾವಿರ ವಿಗಡ ಪಾಯದಳ
ತೆರಳಿತಂತಕಪುರಿಗೆ ಪುನರಪಿ
ತುರಗ ಸಾವಿರ ನೂರು ರಥ ಮದ
ಕರಿಗಳಿನ್ನೂರೆಂಟು ಸಾವಿರಗಣಿತ ಪಾಯದಳ ॥39॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಐನೂರು ಆನೆಗಳು, ಸಾವಿರದ ಮುನ್ನೂರ ಎರಡು ರಥಗಳು, ಒಂದು ಸಾವಿರ ಕುದುರೆಗಳ ಸೈನ್ಯ, ಎಂಬತ್ತು ಸಾವಿರ ಸಂಖ್ಯೆಯ ಗರ್ವಿತರಾದ ಕಾಲಾಳುಗಳ ಸೈನ್ಯ ಯಮನ ಪಟ್ಟಣಕ್ಕೆ ಹೋದವು. ಪುನಃ ಸಾವಿರ ಕುದುರೆಗಳು, ನೂರು ರಥಗಳು, ಇನ್ನೂರೆಂಟು ಮದಗಜಗಳು, ಸಾವಿರ ಸಂಖ್ಯೆಯ ಪದಾತಿದಳದ ಸೈನ್ಯಿಕರು ನಿರ್ನಾಮರಾದರು.
ಮೂಲ ...{Loading}...
ಕರಿಘಟೆಗಳೈನೂರು ರಥ ಸಾ
ವಿರದ ಮೂನೂರೆರಡು ಸಾವಿರ
ತುರಗದಳವೆಂಬತ್ತು ಸಾವಿರ ವಿಗಡ ಪಾಯದಳ
ತೆರಳಿತಂತಕಪುರಿಗೆ ಪುನರಪಿ
ತುರಗ ಸಾವಿರ ನೂರು ರಥ ಮದ
ಕರಿಗಳಿನ್ನೂರೆಂಟು ಸಾವಿರಗಣಿತ ಪಾಯದಳ ॥39॥
೦೪೦ ಮತ್ತೆ ಮೇಲೊಡಗವಿದ ...{Loading}...
ಮತ್ತೆ ಮೇಲೊಡಗವಿದ ನೂರರು
ವತ್ತು ಗಜ ರಥಯೂಥ ನೂರಿ
ಪ್ಪತ್ತು ಮೂನೂರಶ್ವಚಯ ಸಾವಿರದ ನಾನೂರು
ಪತ್ತಿ ಮರಳೈವತ್ತು ಗಜ ಮೂ
ವತ್ತು ರಥವಿನ್ನೂರು ಹಯವರು
ವತ್ತು ನಾನೂರಿಂದ ಮೇಲಾಯ್ತುಳಿದ ಪಾಯದಳ ॥40॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪುನಃ ಮೇಲೆ ಬಿದ್ದ ನೂರರವತ್ತು ಆನೆಗಳು, ನೂರಿಪ್ಪತ್ತು ರಥಸಮೂಹ, ಮುನ್ನೂರು ಕುದುರೆಗಳು, ಒಂದು ಸಾವಿರದ ನಾನೂರು ಪತ್ತಿ, ಪುನಃ ಐವತ್ತು ಆನೆಗಳು, ಮೂವತ್ತು ರಥಗಳು, ಇನ್ನೂರು ಕುದುರೆಗಳು, ಇಪ್ಪತ್ತನಾಲ್ಕು ಸಾವಿರಕ್ಕ್ಕಿಂತ ಹೆಚ್ಚಾದ ಕಾಲು ದಳದ ಸೈನ್ಯ ನಾಶವಾದವು.
ಪಾಠಾನ್ತರ (ಕ.ಗ.ಪ)
- ಮೂವತ್ತು ‘ಶರ’ ಎಂಬಲ್ಲಿ ಮೂವತ್ತು ‘ರಥ’ ಎಂದಿರಬೇಕು. ಹಿಂದಿನ ಸಾಲುಗಳಲ್ಲಿ ಚತುರಂಗ ಬಲವನ್ನು ಹೇಳಿದ್ದಾನೆ. ಅವುಗಳನ್ನೇ ಪುನಃ (ಮರಳಿ) ಹೇಳಿರುವುದರಿಂದ ಹಿಂದಿನ ಸಾಲುಗಳಲ್ಲಿರುವಂತೆಯೇ ಇಲ್ಲಿ ‘ರಥ’ ಬರಬೇಕು. ಬಾಣವಲ್ಲ.
- ಮೇಲಾಯ್ತುಳಿದ ಪಾಯದಳವೆಂಬಲ್ಲಿ ಮೇಲಾಯ್ತಳಿದ ಪಾಯದಳವೆಂದಿರಬೇಕು. ಇಲ್ಲಿ ನಾಶವಾದ ಚತುರ್ಬಲಗಳ ಲೆಕ್ಕ ನೀಡುತ್ತಿದ್ದಾನೆ.
ಮೂಲ ...{Loading}...
ಮತ್ತೆ ಮೇಲೊಡಗವಿದ ನೂರರು
ವತ್ತು ಗಜ ರಥಯೂಥ ನೂರಿ
ಪ್ಪತ್ತು ಮೂನೂರಶ್ವಚಯ ಸಾವಿರದ ನಾನೂರು
ಪತ್ತಿ ಮರಳೈವತ್ತು ಗಜ ಮೂ
ವತ್ತು ರಥವಿನ್ನೂರು ಹಯವರು
ವತ್ತು ನಾನೂರಿಂದ ಮೇಲಾಯ್ತುಳಿದ ಪಾಯದಳ ॥40॥
೦೪೧ ಬಿರುದುಪಾಡಿನ ಭಾಷೆಗಳ ...{Loading}...
ಬಿರುದುಪಾಡಿನ ಭಾಷೆಗಳ ನಿ
ಷ್ಠುರದ ನುಡಿಗಳ ರಾಜವರ್ಗದ
ಮರಳುದಲೆಯನೆ ಕಾಣೆನರ್ಜುನನಾಹವಾಗ್ರದಲಿ
ಹರಿವ ರಕುತದ ತಳಿತ ಖಂಡದ
ಶಿರದ ಹರಹಿನ ಕುಣಿವ ಮುಂಡದ
ಕರಿ ತುರಗ ಪಯದಳದ ಹೆಣಮಯವಾಯ್ತು ರಣಭೂಮಿ ॥41॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಿರುದುಗಳನ್ನುಳ್ಳ ವೀರರ ಹೀನಸ್ಥಿತಿಯ, ಭಾಷೆಗಳನ್ನು ಕೊಟ್ಟು (ತಾನು ಹೀಗೆ ಯುದ್ಧ ಮಾಡುತ್ತೇನೆ, ಇಂತಹವರನ್ನು ಕೊಲ್ಲುತ್ತೇನೆ, ಮುಂತಾಗಿ), ನಿಷ್ಠುರದ ಮಾತುಗಳನ್ನು ವೈರಿ ಸೇನೆಯ ವಿರುದ್ಧವಾಗಿ ಆಡಿದ ರಾಜರುಗಳ ಹಿಂದಿರುಗುವಿಕೆಯೆಂಬಂತೆ, ಅಂತಹವರುಗಳನ್ನು ಅರ್ಜುನನ ಯುದ್ಧದ ಮುಂಭಾಗದಲ್ಲಿ ಕಾಣೆನು. ಹರಿಯುತ್ತಿರುವ ರಕ್ತದ, ಚೂರುಚೂರಾಗಿ ಚದುರಿ ಬಿದ್ದಿರುವ ಮಾಂಸಗಳ, ಬಹು ವಿಶಾಲವಾದ ರಣ ಭೂಮಿಯಲ್ಲಿ ಹರಡಿ ಬಿದ್ದಿರುವ ತಲೆಗಳ, ಅರೆಜೀವವಾಗಿ ಕುಣಿಯುತ್ತಿರುವ ಮುಂಡದ, ಆನೆ, ಕುದುರೆ, ಕಾಲುದಳದ ಸೈನಿಕರ ಹೆಣಮಯವಾಗಿ ಕಾಣುತ್ತಿತ್ತು. ಆ ರಣಭೂಮಿ.
ಪದಾರ್ಥ (ಕ.ಗ.ಪ)
ಪಾಡು-ಸ್ಥಿತಿ, ಹೀನಸ್ಥಿತಿ, ಅವಸ್ಥೆ, ಸಮಾನತೆ, ಮರಳುದಲೆ-ಹಿಂದಿರುಗುವಿಕೆ, ತಳಿತ- ಚದುರಿಬಿದ್ದ, ಹರಹು-ವಿಸ್ತಾರ,
ಮೂಲ ...{Loading}...
ಬಿರುದುಪಾಡಿನ ಭಾಷೆಗಳ ನಿ
ಷ್ಠುರದ ನುಡಿಗಳ ರಾಜವರ್ಗದ
ಮರಳುದಲೆಯನೆ ಕಾಣೆನರ್ಜುನನಾಹವಾಗ್ರದಲಿ
ಹರಿವ ರಕುತದ ತಳಿತ ಖಂಡದ
ಶಿರದ ಹರಹಿನ ಕುಣಿವ ಮುಂಡದ
ಕರಿ ತುರಗ ಪಯದಳದ ಹೆಣಮಯವಾಯ್ತು ರಣಭೂಮಿ ॥41॥
೦೪೨ ಮುರಿದುದೆಡಬಲವಙ್ಕ ಪಾರ್ಥನ ...{Loading}...
ಮುರಿದುದೆಡಬಲವಂಕ ಪಾರ್ಥನ
ತರುಬಿದನು ನಿನ್ನಾತ ಸೈರಿಸಿ
ಹರಿದಳವ ಕೂಡಿದನು ಕಲಿಮಾಡಿದನು ಕಾಲಾಳ
ಒರಲಿದವು ಬಹುವಿಧದ ವಾದ್ಯದ
ಬಿರುದನಿಗಳುಬ್ಬೆದ್ದು ಮಾರಿಯ
ಸೆರಗ ಹಿಡಿದನು ಕೌರವೇಶ್ವರನರ್ಜುನನ ಕೆಣಕಿ ॥42॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನ ಎಡ-ಬಲಭಾಗಗಳ ಸೈನ್ಯಗಳು ಚದುರಿಹೋದವು. ನಿನ್ನ ದುರ್ಯೋಧನ, ಅರ್ಜುನನನ್ನು ಅಡ್ಡಗಟ್ಟಿದ. ನಂತರ ಸಮಾಧಾನಿಸಿಕೊಂಡು ಕುದುರೆಗಳ ಸೈನ್ಯವನ್ನು ಕೂಡಿಕೊಂಡನು. ಕಾಲಾಳುಗಳನ್ನು ಹುರಿದುಂಬಿಸಿ, ಅವರಲ್ಲಿ ವೀರತ್ವವನ್ನು ತುಂಬಿದನು. ಅನೇಕ ವಿಧದ ವಾದ್ಯಗಳ ವಿವಿಧ ಧ್ವನಿಗಳು ಶಬ್ದ ಮಾಡಿದುವು. ಇದರಿಂದ ಉತ್ಸಾಹಿತನಾದ ಕೌರವ ಅರ್ಜುನನನ್ನು ಕೆಣಕಿ ಮಾರಿಯ ಸೆರಗನ್ನು ಹಿಡಿದನು (ಮಾರಿ ದೇವತೆಯನ್ನು ಯುದ್ಧಕ್ಕೆ ಆಹ್ವಾನಿಸಿದಂತೆ).
ಪದಾರ್ಥ (ಕ.ಗ.ಪ)
ತರುಬು-ಅಡ್ಡಗಟ್ಟು, ನಿಲ್ಲಿಸು, ಹರಿದಳ-ಕುದುರೆಗಳ ಸೈನ್ಯ
ಮೂಲ ...{Loading}...
ಮುರಿದುದೆಡಬಲವಂಕ ಪಾರ್ಥನ
ತರುಬಿದನು ನಿನ್ನಾತ ಸೈರಿಸಿ
ಹರಿದಳವ ಕೂಡಿದನು ಕಲಿಮಾಡಿದನು ಕಾಲಾಳ
ಒರಲಿದವು ಬಹುವಿಧದ ವಾದ್ಯದ
ಬಿರುದನಿಗಳುಬ್ಬೆದ್ದು ಮಾರಿಯ
ಸೆರಗ ಹಿಡಿದನು ಕೌರವೇಶ್ವರನರ್ಜುನನ ಕೆಣಕಿ ॥42॥
೦೪೩ ಕೊಲುವಡನುಚಿತವಿನ್ದು ಭೀಮಗೆ ...{Loading}...
ಕೊಲುವಡನುಚಿತವಿಂದು ಭೀಮಗೆ
ಕಳೆದ ಮೀಸಲು ನಿನ್ನ ತನು ನೀ
ನೊಲಿದ ಪರಿಯಿಂದೆಸು ವಿಭಾಡಿಸು ರಚಿಸು ಭಾಷೆಗಳ
ಅಳುಕಿದೆವು ನಿನಗೆಂದು ರಾಯನ
ಬಳಿಯ ಜೋದರ ರಾವುತರ ರಥಿ
ಗಳ ಪದಾತಿಯನಿಕ್ಕಿದನು ಸೆಕ್ಕಿದನು ಸರಳುಗಳ ॥43॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುರ್ಯೋಧನ! ನಿನ್ನ ದೇಹ ಭೀಮನಿಗೋಸ್ಕರವಾಗಿರುವ ಮೀಸಲು, ಆದ್ದರಿಂದ ನಾನು ನಿನ್ನನ್ನು ಕೊಲ್ಲುವುದು ನ್ಯಾಯವಲ್ಲ. ನೀನು ನನ್ನ ಮೇಲೆ ನಿನಗಿಷ್ಟ ಬಂದ ರೀತಿಯಲ್ಲಿ ಆಯುಧಗಳನ್ನು ಪ್ರಯೋಗಿಸು , ನನ್ನನ್ನು ಧಿಕ್ಕರಿಸು, ನಾಶಮಾಡು, ನಿನಗೆ ಬೇಕಾದಷ್ಟು ಪ್ರತಿಜ್ಞೆಗಳನ್ನು ಮಾಡು. ; ಈಗ ನಾವು ನಿನಗೆ ಹೆದರಿದ್ದೇವೆ ಎಂದು ಮೂದಲಿಸಿದ ಅರ್ಜುನ, ದುರ್ಯೋಧನನ ಅಕ್ಕಪಕ್ಕದಲ್ಲಿದ್ದ ಯೋಧರ, ಕುದುರೆ ಸವಾರರ, ರಥದಲ್ಲಿದ್ದವರ, ಕಾಲಾಳುಗಳ ಮೇಲೆ ಯುದ್ಧಕ್ಕೆ ತೊಡಗಿ ಅವರನ್ನು ಬಾಣಗಳಿಂದ ಹೊಡೆದು, ಬಾಣಗಳನ್ನು ಅವರ ಮೈಯಲ್ಲಿ ನಾಟಿಸಿದ’
ಪದಾರ್ಥ (ಕ.ಗ.ಪ)
ಎಸು-ಆಯುಧವನ್ನು ಪ್ರಯೋಗಿಸು, ಬಾಣ ಪ್ರಯೋಗಿಸು, ಹೊಡೆ, ಸೆಕ್ಕು-ನಾಟಿಸು, ವಿಭಾಡಿಸು-ಧಿಕ್ಕರಿಸು, ಸೋಲಿಸು, ಸೀಳಿಹಾಕು.
ಮೂಲ ...{Loading}...
ಕೊಲುವಡನುಚಿತವಿಂದು ಭೀಮಗೆ
ಕಳೆದ ಮೀಸಲು ನಿನ್ನ ತನು ನೀ
ನೊಲಿದ ಪರಿಯಿಂದೆಸು ವಿಭಾಡಿಸು ರಚಿಸು ಭಾಷೆಗಳ
ಅಳುಕಿದೆವು ನಿನಗೆಂದು ರಾಯನ
ಬಳಿಯ ಜೋದರ ರಾವುತರ ರಥಿ
ಗಳ ಪದಾತಿಯನಿಕ್ಕಿದನು ಸೆಕ್ಕಿದನು ಸರಳುಗಳ ॥43॥
೦೪೪ ಜನಪ ಕೇಳೈ ...{Loading}...
ಜನಪ ಕೇಳೈ ನಿನ್ನ ಮಗನ
ರ್ಜುನನನೆಚ್ಚನು ಫಲುಗುಣಾಸ್ತ್ರವ
ಚಿನಕಡಿದು ಮಗುಳೆಚ್ಚು ಪಾರ್ಥನೊಳೇರ ತೋರಿಸಿದ
ಮನದ ಮದ ಮೀರಿತು ಕಿರೀಟಿಯ
ಮೊನೆಗಣೆಯ ಮನ್ನಿಸದೆ ದುರ್ಯೋ
ಧನನು ದುವ್ವಾಳಿಸಿದನವನೀಪತಿಯ ಮೋಹರಕೆ ॥44॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧೃತರಾಷ್ಟ್ರನೇ ಕೇಳು, ನಿನ್ನ ಮಗ ದುರ್ಯೋಧನ ಅರ್ಜುನನನ್ನು ಬಾಣದಿಂದ ಹೊಡೆದ, ಪಾರ್ಥನ ಅಸ್ತ್ರವನ್ನು ತುಂಡುತುಂಡಾಗಿ ಕತ್ತರಿಸಿದ. ಪುನಃ ಅವನ ಮೇಲೆ ಬಾಣ ಪ್ರಯೋಗ ಮಾಡಿ, ಅರ್ಜುನನ ದೇಹದಲ್ಲಿ ಗಾಯಗಳು ಕಾಣುವಂತೆ ಮಾಡಿದ. ಮನಸ್ಸಿನ ಮದ ಹೆಚ್ಚಿತು. ಅರ್ಜುನನ ಹರಿತವಾದ ಬಾಣಗಳನ್ನು ಎದುರಿಸದೆ, ದುರ್ಯೋಧನ ಧರ್ಮರಾಯ ಯುದ್ಧ ಮಾಡುತ್ತಿದ್ದ ಸ್ಥಳಕ್ಕೆ ವೇಗವಾಗಿ ತನ್ನ ಕುದುರೆಯನ್ನು ಓಡಿಸಿದ.
ಪದಾರ್ಥ (ಕ.ಗ.ಪ)
ಚಿನಕಡಿದು-ಸಣ್ಣಸಣ್ಣ ತುಂಡುಗಳಾಗಿ ಕತ್ತರಿಸಿ, ಏರು-ಗಾಯ, ಪೆಟ್ಟು, ದುವ್ವಾಳಿಸು-ವೇಗವಾಗಿ ಹೋಗು, ಕುದುರೆಗಳನ್ನು ವೇಗವಾಗಿ ಓಡಿಸು.
ಮೂಲ ...{Loading}...
ಜನಪ ಕೇಳೈ ನಿನ್ನ ಮಗನ
ರ್ಜುನನನೆಚ್ಚನು ಫಲುಗುಣಾಸ್ತ್ರವ
ಚಿನಕಡಿದು ಮಗುಳೆಚ್ಚು ಪಾರ್ಥನೊಳೇರ ತೋರಿಸಿದ
ಮನದ ಮದ ಮೀರಿತು ಕಿರೀಟಿಯ
ಮೊನೆಗಣೆಯ ಮನ್ನಿಸದೆ ದುರ್ಯೋ
ಧನನು ದುವ್ವಾಳಿಸಿದನವನೀಪತಿಯ ಮೋಹರಕೆ ॥44॥
೦೪೫ ಅರಸುಮೋಹರ ಸಿಲುಕಿದುದು ...{Loading}...
ಅರಸುಮೋಹರ ಸಿಲುಕಿದುದು ದೊರೆ
ಬೆರಸಿ ಹೊಯ್ದನು ಬೇಹ ಸುಭಟರು
ಮರಳಿಯೆನೆ ಮುಂಚಿದರು ಪಂಚದ್ರೌಪದೀಸುತರು
ಧರಣಿಪತಿಯ ವಿಘಾತಿಗೊಪ್ಪಿಸಿ
ಶಿರವನೆನುತುಬ್ಬೆದ್ದು ಪಾಂಚಾ
ಲರು ಪ್ರಬುದ್ಧಕ ಸೃಂಜಯರು ರಂಜಿಸಿತು ಚೂಣಿಯಲಿ ॥45॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮರಾಯನ ಸೈನ್ಯ ಪ್ರತಿಸೈನ್ಯಕ್ಕೆ ಸಿಕ್ಕಿಕೊಂಡಿದೆ. ದುರ್ಯೋಧನ ಧರ್ಮರಾಯನನ್ನು ತಡೆದು ಯುದ್ಧ ಮಾಡುತ್ತಿದ್ದಾನೆ. ಯುದ್ಧವನ್ನು ಬಯಸುವ ಸುಭಟರು ಹಿಂದಿರುಗಿ ಎನ್ನಲು ದ್ರೌಪದಿಯ ಐದೂ ಜನ ಮಕ್ಕಳು ಯುದ್ಧರಂಗದ ಮುಂಭಾಗಕ್ಕೆ ಬಂದರು. ತಮ್ಮ ತಲೆಗಳನ್ನು ಧರ್ಮಜನ ಕಷ್ಟಕ್ಕೆ ಒಪ್ಪಿಸೋಣ ಎಂದು ಉತ್ಸಾಹದಿಂದ ಪಾಂಚಾಲರು, ಪ್ರಬುದ್ಧಕ ಸೃಂಜಯರು ಸೈನ್ಯದ ಮುಂಭಾಗದಲ್ಲಿ ಆವೇಶದಿಂದ ಯುದ್ಧಮಾಡುತ್ತಿದ್ದರು.
ಪದಾರ್ಥ (ಕ.ಗ.ಪ)
ಬೇಹ-ಬೇಕಾದ,ಬಯಸುವ, ವಿಘಾತಿ-ಕಷ್ಟ, ಪೆಟ್ಟು, ನಾಶಕರ,
ರಂಜಿಸು-ಸೊಗಸಾಗಿ ಕಾಣಿಸು, ಅಂದವಾಗಿ ಕಾಣಿಸು,
ಪ್ರಬುದ್ಧಕರು- ಪಾಂಚಾಲರ ಒಂದು ದಳ.
ಮೂಲ ...{Loading}...
ಅರಸುಮೋಹರ ಸಿಲುಕಿದುದು ದೊರೆ
ಬೆರಸಿ ಹೊಯ್ದನು ಬೇಹ ಸುಭಟರು
ಮರಳಿಯೆನೆ ಮುಂಚಿದರು ಪಂಚದ್ರೌಪದೀಸುತರು
ಧರಣಿಪತಿಯ ವಿಘಾತಿಗೊಪ್ಪಿಸಿ
ಶಿರವನೆನುತುಬ್ಬೆದ್ದು ಪಾಂಚಾ
ಲರು ಪ್ರಬುದ್ಧಕ ಸೃಂಜಯರು ರಂಜಿಸಿತು ಚೂಣಿಯಲಿ ॥45॥
೦೪೬ ಇತ್ತ ಪಡಿಬಲವಾಗಿ ...{Loading}...
ಇತ್ತ ಪಡಿಬಲವಾಗಿ ಸಾವಿರ
ಮತ್ತಗಜಘಟೆ ಕೌರವೇಂದ್ರನ
ತೆತ್ತಿಗರು ತೂಳಿದರು ಪಾಂಚಾಲಪ್ರಬುದ್ಧಕರ
ಹತ್ತು ಸಾವಿರ ಪಾಯದಳ ಹೊಗ
ರೆತ್ತಿದಲಗಿನ ಹೊಳಹಿನಂತಿರೆ
ಮುತ್ತಿತವನೀಪತಿಯ ಮೋಹರದೆರಡು ಬಾಹೆಯಲಿ ॥46॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಕಡೆಯಲ್ಲಿ (ಕೌರವರ ಕಡೆಯಲ್ಲಿ) ಪಾಂಡವ ಬಲಕ್ಕೆ ಪ್ರತಿಬಲವಾಗಿ ಸಾವಿರ ಮದಿಸಿದ ಆನೆಗಳ ಸೈನ್ಯದೊಂದಿಗೆ ಕೌರವೇಂದ್ರನ ಆಪ್ತರು ಪಾಂಚಾಲ ಪ್ರಬುದ್ಧಕರನ್ನು ಅಟ್ಟಿದರು. ಪ್ರಕಾಶಮಾನವಾದ ಕತ್ತಿಯ ಅಲಗುಗಳ ಪ್ರಭೆಯಂತಿದ್ದ ಹತ್ತುಸಾವಿರ ಕಾಲಾಳುಗಳ ದಳ ದುರ್ಯೋಧನನ ಸೈನ್ಯದ ಎರಡೂ ಭಾಗಗಳಲ್ಲಿ ಮುತ್ತಿತು.
ಪದಾರ್ಥ (ಕ.ಗ.ಪ)
ಪಡಿಬಲ-ಪ್ರತಿಬಲ, ತೆತ್ತಿಗರು-ಆಪ್ತರು, ಸಂಬಂಧಿಗಳು, ಸ್ನೇಹಿತರು, ತೂಳ್-ಅಟ್ಟು, ಓಡಿಸು, ಹೊಗರು-ಪ್ರಕಾಶ, ಹೊಳಹು-ಹೊಳೆಯುವುದು, ಬೆಳಗುವುದು
ಮೂಲ ...{Loading}...
ಇತ್ತ ಪಡಿಬಲವಾಗಿ ಸಾವಿರ
ಮತ್ತಗಜಘಟೆ ಕೌರವೇಂದ್ರನ
ತೆತ್ತಿಗರು ತೂಳಿದರು ಪಾಂಚಾಲಪ್ರಬುದ್ಧಕರ
ಹತ್ತು ಸಾವಿರ ಪಾಯದಳ ಹೊಗ
ರೆತ್ತಿದಲಗಿನ ಹೊಳಹಿನಂತಿರೆ
ಮುತ್ತಿತವನೀಪತಿಯ ಮೋಹರದೆರಡು ಬಾಹೆಯಲಿ ॥46॥
೦೪೭ ನೂರು ರಥದಲಿ ...{Loading}...
ನೂರು ರಥದಲಿ ಬಲುಗುದುರೆ ನಾ
ನೂರರಲಿ ಕುರುರಾಯ ಸೂಠಿಯ
ಲೇರಿದನು ಧರ್ಮಜನ ದಳ ನುಗ್ಗಾಯ್ತು ನಿಮಿಷದಲಿ
ಮೀರಿದವು ಗಜಘಟೆಗಳಾವೆಡೆ
ತೋರು ದೊರೆಗಳನೆನುತ ಬೊಬ್ಬಿರಿ
ದೇರಿಸಿದರರಿಭಟರು ನೃಪತಿಗೆ ಜೋದರಂಬುಗಳ ॥47॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನೂರು ರಥಗಳು ಮತ್ತು ನಾನೂರು ದೊಡ್ಡ ಕುದುರೆಗಳೊಂದಿಗೆ ದುರ್ಯೋಧನ ವೇಗವಾಗಿ ಯುದ್ಧಕ್ಕೆ ಪ್ರವೇಶಿಸಿದ. ಒಂದು ನಿಮಿಷದಲ್ಲಿ ಧರ್ಮರಾಯನ ಸೈನ್ಯ ನುಗ್ಗುನುರಿಯಾಯ್ತು. ಆನೆಗಳ ಸೈನ್ಯವು ಮೀರಿ ಬಂದು ಧರ್ಮಜನ ಸೈನ್ಯದ ವಿರುದ್ಧ ನಿಂತವು. ರಾಜರಾದವರೆಲ್ಲಿ ತೋರಿಸಿ ಎನ್ನುತ್ತಾ ಶತ್ರುಸೈನ್ಯವು ಬೊಬ್ಬಿರಿದು ಶಬ್ದ ಮಾಡಿತು. ಯೋಧರು ಧರ್ಮಜನ ಮೇಲೆ ಬಾಣಗಳನ್ನು ಪ್ರಯೋಗಿಸಿದರು.
ಪದಾರ್ಥ (ಕ.ಗ.ಪ)
ಸೂಠಿ-ವೇಗ, ಆತುರ
ಮೂಲ ...{Loading}...
ನೂರು ರಥದಲಿ ಬಲುಗುದುರೆ ನಾ
ನೂರರಲಿ ಕುರುರಾಯ ಸೂಠಿಯ
ಲೇರಿದನು ಧರ್ಮಜನ ದಳ ನುಗ್ಗಾಯ್ತು ನಿಮಿಷದಲಿ
ಮೀರಿದವು ಗಜಘಟೆಗಳಾವೆಡೆ
ತೋರು ದೊರೆಗಳನೆನುತ ಬೊಬ್ಬಿರಿ
ದೇರಿಸಿದರರಿಭಟರು ನೃಪತಿಗೆ ಜೋದರಂಬುಗಳ ॥47॥
೦೪೮ ಏನು ಹೇಳುವೆನವನಿಪತಿ ...{Loading}...
ಏನು ಹೇಳುವೆನವನಿಪತಿ ಯಮ
ಸೂನುವಿನ ಸುಕ್ಷಾತ್ರವನು ನಿ
ನ್ನಾನೆಗಳನಗ್ಗಳೆಯ ರಾವ್ತರ ರಥಪದಾತಿಗಳ
ಭಾನುಬಿಂಬವ ತಗೆವ ತಮದ ವಿ
ತಾನದಂತಿರೆ ವಿರಸವಾಯ್ತು ಶ
ರಾನುಗತಶರಜಾಲ ಜನದ ವಿಡಾಯ್ಲತನವೆಂದ ॥48॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯುಮಸುತನಾದ ಧರ್ಮಜನ ಕ್ಷತ್ರಿಯರಿಗೆ ಉಚಿತವಾದ ವೀರ ಸ್ವಭಾವವನ್ನು ಏನ ಹೇಳಲಿ ಧೃತರಾಷ್ಟ್ರ! ನಿನ್ನ ಪಕ್ಷದ ಆನೆಗಳನ್ನು, ಹೆಚ್ಚುಗಾರಿಕೆಯ ಕುದುರೆ ಸವಾರರನ್ನು, ಕಾಲುದಳದವರನ್ನು, ಸೂರ್ಯಬಿಂಬವನ್ನು ಸ್ಥಗಿತಗೊಳಿಸುವಂತೆ ಕತ್ತಲೆಯ ಅಂಚಿನಂತೆ ಬಾಣಗಳ ಹಿಂದೆ ಬಾಣಗಳು ಬರುವ ರೀತಿಯು ಸಾಲುಗಟ್ಟಿ ಬರುವ ಜನರಂತೆ ಸೊಗಸಿತು’ ಎಂದು ಸಂಜಯನು ಹೇಳಿದನು.
ಪದಾರ್ಥ (ಕ.ಗ.ಪ)
ತಗೆ-ಸ್ತಂಭನ, ತಡೆ, ವಿತಾನ-ಅಂಚುತೋರಣ, ಛಾವಣಿ, ಚಪ್ಪರ, ಶರಾನುಗತ ಶರಜಾಲ- ಒಂದು ಬಾಣದ ಹಿಂದೆ ಮೊತ್ತೊಂದರಂತೆ ಬರುವ ಬಾಣಗಳ ಜಾಲ, ವಿಡಾಯ್ಲತನ-ಆಡಂಬರ, ಠೀವಿ, ಗತ್ತು, ವೈಖರಿ
ಪಾಠಾನ್ತರ (ಕ.ಗ.ಪ)
ವಿರಸವಾಯ್ತು……….ವೆಂದ ಎಂಬುದಕ್ಕೆ ‘ಕ’ (ಪ್ರಾಚೀನ ಪ್ರತಿ)ಯಲ್ಲಿನ ಪಾಠಾಂತರ ಹೀಗಿದೆ: “ಕವಿದ ಕೌರವ ಸೇನೆಯನು ಶರಜಾಲದಲಿ ಹರೆಗಡಿದನವನೀಶ”. ಅರ್ಥಸ್ಪಷ್ಟತೆಯ ದೃಷ್ಟಿಯಿಂದ ಮತ್ತು ‘ಕ’ಪ್ರತಿಯ ಪ್ರಾಚೀನತೆಯ ದೃಷ್ಟಿಯಿಂದ ಈ ಪಾಠಾಂತರವನ್ನು ಅಂಗೀಕರಿಸಬಹುದು. - ಎ.ವಿ.ಪ್ರಸನ್ನ
ಮೂಲ ...{Loading}...
ಏನು ಹೇಳುವೆನವನಿಪತಿ ಯಮ
ಸೂನುವಿನ ಸುಕ್ಷಾತ್ರವನು ನಿ
ನ್ನಾನೆಗಳನಗ್ಗಳೆಯ ರಾವ್ತರ ರಥಪದಾತಿಗಳ
ಭಾನುಬಿಂಬವ ತಗೆವ ತಮದ ವಿ
ತಾನದಂತಿರೆ ವಿರಸವಾಯ್ತು ಶ
ರಾನುಗತಶರಜಾಲ ಜನದ ವಿಡಾಯ್ಲತನವೆಂದ ॥48॥
೦೪೯ ಆಳ ಕೊನ್ದನು ...{Loading}...
ಆಳ ಕೊಂದನು ನೂರ ಪುನರಪಿ
ಸೀಳಿದನು ಮೂನೂರನುಕ್ಕಿನ
ಬೋಳೆಯಂಬಿಗೆ ಬೀರಿದನು ನಾಲ್ಕೈದು ಸಾವಿರವ
ಮೇಲೆ ಮೂಸಾವಿರದ ಸವಡಿಯ
ಸೀಳಿಸಿದನಿನ್ನೂರು ಕುದುರೆಗೆ
ಕಾಲನೂರಲಿ ಲಾಯ ನೀಡಿತು ನೃಪತಿ ಕೇಳ್ ಎಂದ ॥49॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮಜನು ನೂರುಜನ ಕಾಲಾಳುಗಳನ್ನು ಕೊಂದನು. ಪುನಃ ಮುನ್ನೂರು ಕಾಲಾಳುಗಳನ್ನು ಸೀಳಿದನು. ಉಕ್ಕಿನಲ್ಲಿ ಮಾಡಿದ, ಕುದುರೆಗಳ ಲಾಳದ ಆಕಾರದಲ್ಲಿನ ಬಾಣಗಳಿಂದ ನಾಲ್ಕೈದು ಸಾವಿರ ಸೈನಿಕರನ್ನು ಗುರಿ ಮಾಡಿದನು. ಆನಂತರ ಮೂರು ಸಾವಿರ ಹೆಣ್ಣು ಆನೆಗಳನ್ನು ಸೀಳಿದನು. ಇನ್ನೂರು ಕುದುರೆಗಳಿಗೆ ಯಮನ ಊರಿನ ಲಾಯದಲ್ಲಿ ಜಾಗವಾಯಿತು ರಾಜನೇ ಕೇಳು ಎಂದ.
ಪದಾರ್ಥ (ಕ.ಗ.ಪ)
ಬೋಳೆಯಂಬು-ಕುದುರೆಲಾಳದ ಆಕಾರದ ಬಾಣ, ಸವಡಿ-ಹೆಣ್ಣು ಆನೆ, ಜೋಡಿ.
ಮೂಲ ...{Loading}...
ಆಳ ಕೊಂದನು ನೂರ ಪುನರಪಿ
ಸೀಳಿದನು ಮೂನೂರನುಕ್ಕಿನ
ಬೋಳೆಯಂಬಿಗೆ ಬೀರಿದನು ನಾಲ್ಕೈದು ಸಾವಿರವ
ಮೇಲೆ ಮೂಸಾವಿರದ ಸವಡಿಯ
ಸೀಳಿಸಿದನಿನ್ನೂರು ಕುದುರೆಗೆ
ಕಾಲನೂರಲಿ ಲಾಯ ನೀಡಿತು ನೃಪತಿ ಕೇಳೆಂದ ॥49॥
೦೫೦ ಚೆಲ್ಲಿದವು ರಥ ...{Loading}...
ಚೆಲ್ಲಿದವು ರಥ ಗಾಲಿ ಮುರಿದವು
ಗೆಲ್ಲೆಗೆಡೆದವು ಕೂಡೆ ಕಂಬುಗೆ
ಯಲ್ಲಿ ಕಾಣೆನು ಕೊಚ್ಚಿದಚ್ಚಿನ ಕಡಿದ ಕೀಲುಗಳ
ಎಲ್ಲಿಯವು ರಥವಾಜಿ ವಾಜಿಗೆ
ತೆಲ್ಲಟಿಯಲೇ ರಥಿಕ ಸೂತರು
ಬಲ್ಲಿದರು ಕುರುಳಿಂಗೆ ಹಾಯ್ದರು ಸುರರ ಸೂಳೆಯರ ॥50॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಥಗಳು ದಿಕ್ಕಾಪಾಲಾದವು. ಗಾಲಿಗಳು ಮುರಿದು ಹೋದವು. ರಥದ ಸುತ್ತ ಅಳವಡಿಸಿದ ಕಂಬಿಗಳು ಮುರಿದು ಬಿದ್ದವು. ಕೊಚ್ಚಿ ಹಾಕಲಾದ ರಥದ ಅಚ್ಚು ಮತ್ತು ಕೀಲುಗಳನ್ನು ಅಲ್ಲಿ ಕಾಣೆನು - (ದೂರ ದೂರಕ್ಕೆ ಚದುರಿ ಬಿದ್ದಿದ್ದವು) ರಥಕುದುರೆಗಳೆಲ್ಲಿಯವು! ಕುದುರೆಗಳಿಗೆ ಬಳುವಳಿಯಾಗಿ ಬಂದವರಲ್ಲವೇ ರಥಿಕರು ಮತ್ತು ಸೂತರು. ರಥಿಕರು, ಸೂತರು, ಧೈರ್ಯವಂತರಾದ ಸೈನಿಕರು ದೇವವಧುಗಳ ಮುಂಗೂದಲನ್ನು ಹಿಡಿದು ಅವರನ್ನು ತಮ್ಮವರನ್ನಾಗಿ ಮಾಡಿಕೊಳ್ಳಲು ಸ್ವರ್ಗಕ್ಕೆ ಓಡಿದರು. (ಕುದುರೆಗಳು ಸತ್ತರೆ ಅವುಗಳೊಂದಿಗೆ ಸೂತರೂ ಸತ್ತರು ಎಂದು ಭಾವ)
ಪದಾರ್ಥ (ಕ.ಗ.ಪ)
ಚೆಲ್ಲಿದುವು-ಚಲ್ಲಾಪಿಯಾದವು, ಮುರಿದು ಹೋದವು, ಗೆಲ್ಲೆಗಡೆ-ತುಂಡುತುಂಡಾಗು, ಕೊಂಬೆಯನ್ನು ಕತ್ತರಿಸಿದಂತಾಗು, ತೆಲ್ಲಟಿ-ಒಂದನ್ನು ಕೊಟ್ಟಾಗ ಅದರೊಂದಿಗೆ ಮತ್ತೊಂದು ವಸ್ತುವನ್ನು ಉಚಿತವಾಗಿ ಕೊಡುವುದು, ಬಳುವಳಿ.
ಮೂಲ ...{Loading}...
ಚೆಲ್ಲಿದವು ರಥ ಗಾಲಿ ಮುರಿದವು
ಗೆಲ್ಲೆಗೆಡೆದವು ಕೂಡೆ ಕಂಬುಗೆ
ಯಲ್ಲಿ ಕಾಣೆನು ಕೊಚ್ಚಿದಚ್ಚಿನ ಕಡಿದ ಕೀಲುಗಳ
ಎಲ್ಲಿಯವು ರಥವಾಜಿ ವಾಜಿಗೆ
ತೆಲ್ಲಟಿಯಲೇ ರಥಿಕ ಸೂತರು
ಬಲ್ಲಿದರು ಕುರುಳಿಂಗೆ ಹಾಯ್ದರು ಸುರರ ಸೂಳೆಯರ ॥50॥
೦೫೧ ಉಳಿಗಡಿಯ ನಾನೂರು ...{Loading}...
ಉಳಿಗಡಿಯ ನಾನೂರು ಕುದುರೆಗ
ಳಳಿದವರಸನ ಶರಹತಿಗೆ ಮು
ಮ್ಮುಳಿತವಾದುದು ಹತ್ತು ಸಾವಿರ ವಿಗಡ ಪಾಯದಳ
ಕಳಚಿ ಕೆಡೆದವು ನೂರು ರಥ ವೆ
ಗ್ಗಳೆಯತನವರಿರಾಯರಲಿ ಹೆ
ಕ್ಕಳಿಸೆ ಕಳವಳಿಸಿದನು ಕೌರವರಾಯ ಖಾತಿಯಲಿ ॥51॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬದುಕಿ ಉಳಿದಿದ್ದ ಕುದುರೆಗಳ ಪೈಕಿ ನಾನೂರು ಕುದುರೆಗಳು ಸತ್ತವು. ಧರ್ಮರಾಜನ ಬಾಣಪ್ರಯೋಗಕ್ಕೆ ಹತ್ತುಸಾವಿರ ವೀರ ಕಾಲಾಳುಗಳು ನಿರ್ಬಲರಾದರು, ನಾಶವಾದರು, ನೂರು ರಥಗಳು ಕಳಚಿ ಬಿದ್ದವು. ಶತ್ರು ರಾಜರಲ್ಲಿ ಹೆಚ್ಚುಗಾರಿಕೆ ಜಾಸ್ತಿಯಾಗಲು ದುರ್ಯೋಧನ ಕೋಪದಿಂದ ಕಳವಳಿಸಿದ.
ಪದಾರ್ಥ (ಕ.ಗ.ಪ)
ಉಳಿಗಡಿ-ಬದುಕುಳಿದ, ಉಳಿಕೆಯಾದ, ಮುಮ್ಮುಳಿತ-ನಿರ್ಬಲ, ರೂಪುಗೆಟ್ಟ ನಾಶ, ವೆಗ್ಗಳೆ- ಹೆಚ್ಚುಗಾರಿಕೆ, ಶ್ರೇಷ್ಠ, ಹೆಕ್ಕಳಿಸು-ಹೆಚ್ಚಾಗು, ಗರ್ವಿಸು, ಉತ್ಸಾಹಿಸು.
ಟಿಪ್ಪನೀ (ಕ.ಗ.ಪ)
ಉಳಿಗಡಿ - ಉಳಿಯಂತೆ ಕಠಿಣವಾದ ಎಂಬ ಅರ್ಥವೂ ಇರಬಹುದು.
ಮೂಲ ...{Loading}...
ಉಳಿಗಡಿಯ ನಾನೂರು ಕುದುರೆಗ
ಳಳಿದವರಸನ ಶರಹತಿಗೆ ಮು
ಮ್ಮುಳಿತವಾದುದು ಹತ್ತು ಸಾವಿರ ವಿಗಡ ಪಾಯದಳ
ಕಳಚಿ ಕೆಡೆದವು ನೂರು ರಥ ವೆ
ಗ್ಗಳೆಯತನವರಿರಾಯರಲಿ ಹೆ
ಕ್ಕಳಿಸೆ ಕಳವಳಿಸಿದನು ಕೌರವರಾಯ ಖಾತಿಯಲಿ ॥51॥
೦೫೨ ಜೋಡಿಸಿದ ಸಾವಿರ ...{Loading}...
ಜೋಡಿಸಿದ ಸಾವಿರ ಗಜಂಗಳ
ನೀಡಿರಿದರಂಕುಶದಿ ನೆತ್ತಿಯ
ತೋಡಿಬಿಟ್ಟರು ನೃಪನ ಮತದಲಿ ದೊರೆಯ ಸಮ್ಮುಖಕೆ
ಜೋಡಿಸಿದ ಭರಿಕಯ್ಯ ಪರಿಘದ
ಲೌಡಿಗಳ ಪಟ್ಟೆಯದಲೊಬ್ಬುಳಿ
ಗೂಡಿ ತೂಳಿದವಾನೆಗಳು ಯಮಸುತನ ಪಡಿಮುಖಕೆ ॥52॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುರ್ಯೋಧನನ ಆದೇಶದಂತೆ ಅವರ ಸೈನ್ಯದ ಒಂದು ಸಾವಿರ ಆನೆಗಳನ್ನು ನೆತ್ತಿಯಲ್ಲಿ ಅಂಕುಶದಿಂದ ಇರಿದು, ಅವುಗಳಿಗೆ ಕೋಪಬರಿಸಿ ಧರ್ಮರಾಯನ ಮುಂದಕ್ಕೆ ಓಡಿಸಿದರು. ಸೊಂಡಿಲುಗಳಿಗೆ ಜೋಡಿಸಿ ಕಟ್ಟಿದ್ದ ಕಬ್ಬಿಣದ ದೊಣ್ಣೆ, ಕಬ್ಬಿಣದ ಆಯುಧ, ನೀಳವಾದ ಕತ್ತಿ ಮುಂತಾದ ಆಯುಧಗಳಿಂದ ಒಟ್ಟುಗೂಡಿ ಆನೆಗಳು ಧರ್ಮರಾಯನ ಮೇಲೆ ಆಕ್ರಮಣ ಮಾಡಲು ಅವನ ಮುಂದಕ್ಕೆ ನುಗ್ಗಿದವು.
ಪದಾರ್ಥ (ಕ.ಗ.ಪ)
ಈಡಿರಿ-ಚುಚ್ಚು, ಗಾಯ ಮಾಡು, ಇರಿ, ಭರಿಕೈ-ಸೊಂಡಿಲು, ಪರಿಘ-ಕಬ್ಬಿಣದ ದೊಣ್ಣೆ, ಶೂಲ, ಲೌಡಿ-ಕಬ್ಬಿಣದ ಒಂದು ಆಯುಧ, ಪಟ್ಟೆಯ-ನೀಳವಾದ ಕತ್ತಿ, ತೂಳ್-ಅಕ್ರಮಿಸು, ಮುನ್ನುಗ್ಗು, ಪಡಿಮುಖ-ಎದುರುಭಾಗ.
ಮೂಲ ...{Loading}...
ಜೋಡಿಸಿದ ಸಾವಿರ ಗಜಂಗಳ
ನೀಡಿರಿದರಂಕುಶದಿ ನೆತ್ತಿಯ
ತೋಡಿಬಿಟ್ಟರು ನೃಪನ ಮತದಲಿ ದೊರೆಯ ಸಮ್ಮುಖಕೆ
ಜೋಡಿಸಿದ ಭರಿಕಯ್ಯ ಪರಿಘದ
ಲೌಡಿಗಳ ಪಟ್ಟೆಯದಲೊಬ್ಬುಳಿ
ಗೂಡಿ ತೂಳಿದವಾನೆಗಳು ಯಮಸುತನ ಪಡಿಮುಖಕೆ ॥52॥
೦೫೩ ಎಲೆಲೆ ಭೂಪತಿ ...{Loading}...
ಎಲೆಲೆ ಭೂಪತಿ ಸಿಕ್ಕಿದನು ಗಜ
ಬಲದ ಭಾರಣೆ ಬಲುಹೆನುತ ಬಲ
ಕಳವಳಿಸೆ ಕೇಳಿದನಲೈ ಕಲಿಭೀಮನಾಚೆಯಲಿ
ಪ್ರಳಯದಿವಸದ ಶಿಖಿಯ ಡಾವರ
ದೊಳಗೆ ಶ್ರವಮಾಡಿದನೆನಲು ಮಿಗೆ
ಮೊಳಗೆ ಮಂಡಿಯನಿಕ್ಕಿ ಮಲೆತನು ಸಿಂಹನಾದದಲಿ ॥53॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಲೆಲೆ! ಧರ್ಮರಾಯ ಆನೆಗಳ ಸೈನ್ಯಕ್ಕೆ ಸಿಕ್ಕಿದನು. ಅವುಗಳ ಶಕ್ತಿ ಬಲುದೊಡ್ಡದು ಎಂದು ಪಾಂಡವರ ಸೈನ್ಯ ಕಳವಳಿಸುತ್ತಿದ್ದಂತೆ ಆಚೆಯಲ್ಲಿದ್ದ ಭೀಮ ಆ ಕಳಕಳವನ್ನು ಕೇಳಿಸಿಕೊಂಡ. ಪ್ರಳಯಕಾಲದ ಅಗ್ನಿಯ ಪ್ರತಾಪದ ವಿರುದ್ಧ ಶ್ರಮವಹಿಸಿದನೆಂಬಂತೆ ಆರ್ಭಟಿಸಿದ ಭೀಮ ನೆಲಕ್ಕೆ ಮಂಡಿಯನ್ನು ಕೊಟ್ಟು, ವೀರಮಂಡಿ ಹಾಕಿ ಕುಳಿತು, ಸಿಂಹನಾದದಿಂದ ಮಲೆತುನಿಂತ.
ಪದಾರ್ಥ (ಕ.ಗ.ಪ)
ಭಾರಣೆ-ಶಕ್ತಿ, ಶ್ರಮ, ಪರಾಕ್ರಮ, ಡಾವರ-ಪ್ರತಾಪ, ತಾಪ, ಧಗೆ, ತೀವ್ರತೆ, ಶ್ರವ-ಶ್ರಮ, ಕೆಲಸ, ಮೊಳಗು-ಸಿಡಿಲಿನಂತೆ ಶಬ್ದ ಮಾಡು, ಮಲೆ-ದಿಟ್ಟತನ, ಉದ್ದಟತನ, ಗರ್ವ.
ಟಿಪ್ಪನೀ (ಕ.ಗ.ಪ)
ಸಿಂಹನಾದದಲಿ-ಆನೆಗೆ ಸಿಂಹ ಪ್ರಬಲ ಶತ್ರು, ಗೆಲವು ಸಿಂಹಕ್ಕೆ. ಇಲ್ಲಿ ಆನೆಗಳು ಧರ್ಮಜನ ಮೇಲೆ ಬಿದ್ದಾಗ ಭೀಮ ಸಿಂಹನಾದ ಮಾಡಿದನೆಂಬುದು ಅರ್ಥಪೂರ್ಣವಾದ ಧ್ವನಿಯಿಂದ ಕೂಡಿದೆ.
ಮೂಲ ...{Loading}...
ಎಲೆಲೆ ಭೂಪತಿ ಸಿಕ್ಕಿದನು ಗಜ
ಬಲದ ಭಾರಣೆ ಬಲುಹೆನುತ ಬಲ
ಕಳವಳಿಸೆ ಕೇಳಿದನಲೈ ಕಲಿಭೀಮನಾಚೆಯಲಿ
ಪ್ರಳಯದಿವಸದ ಶಿಖಿಯ ಡಾವರ
ದೊಳಗೆ ಶ್ರವಮಾಡಿದನೆನಲು ಮಿಗೆ
ಮೊಳಗೆ ಮಂಡಿಯನಿಕ್ಕಿ ಮಲೆತನು ಸಿಂಹನಾದದಲಿ ॥53॥
೦೫೪ ಚೆಲ್ಲಿದವು ಗಜಯೂಥವಪ್ರತಿ ...{Loading}...
ಚೆಲ್ಲಿದವು ಗಜಯೂಥವಪ್ರತಿ
ಮಲ್ಲ ಭೀಮನ ಗದೆಯ ಘಾತಿಯ
ಘಲ್ಲಣೆಗೆ ಕಂಠಣಿಸಿದವು ಟೆಂಠಣಿಸುವಾನೆಗಳು
ಸೆಲ್ಲೆಹದ ಮಳೆಗರೆದು ಭೀಮನ
ಘಲ್ಲಿಸಿದರಾರೋಹಕರು ಬಲು
ಬಿಲ್ಲ ಜಂತ್ರದ ನಾಳಿಯಂಬಿನ ಸರಳ ಸಾರದಲಿ ॥54॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆನೆಗಳ ಸಮೂಹವು ಭೀಮನ ಗದೆಯ ಹೊಡೆತಕ್ಕೆ ದಿಕ್ಕಾಪಾಲಾದವು. ಠೇಂಕಾರ ಮಾಡುತ್ತ ಗರ್ವಿತವಾಗಿದ್ದ ಆನೆಗಳು ಅಪ್ರತಿಮಲ್ಲನಾದಂತಹ ಭೀಮನ ಗದೆಯ ಹೊಡೆತದ ಪ್ರತಾಪಕ್ಕೆ ಸಿಕ್ಕಿ ಹೆದರಿಹೋದವು. ದುರ್ಯೋಧನನ ಪಕ್ಷದ ಕುದುರೆ ಸವಾರರು ಈಟಿಗಳ ಮಳೆಗರೆದು ಯಂತ್ರಗಳಂತಿರುವ ದೊಡ್ಡ ಬಿಲ್ಲುಗಳ ಹೆದೆಯಿಂದ ಶ್ರೇಷ್ಠ ಬಾಣಗಳನ್ನು ತೂರಿ ಭೀಮನನ್ನು ಪೀಡಿಸಿದರು.
ಪದಾರ್ಥ (ಕ.ಗ.ಪ)
ಘಲ್ಲಣೆ-ಪ್ರತಾಪ, ಹುಯಿಲು, ಗಲಾಟೆ, ಕಂಠಣಿಸು-ಕುಗ್ಗು, ಹೆದರು, ಟೆಂoಣಿÉಸು-ಗರ್ವಿಸು, ಅಹಂಕಾರ ಪಡು, ಸೆಲ್ಲೆಹ-ಈಟಿ, ಘಲ್ಲಿಸು-ಪೀಡಿಸು, ನಾಳಿಯಂಬು-ನಾಳಗಳಂತೆ ತೆಳುವಾದ ಬಾಣಗಳು.
ಮೂಲ ...{Loading}...
ಚೆಲ್ಲಿದವು ಗಜಯೂಥವಪ್ರತಿ
ಮಲ್ಲ ಭೀಮನ ಗದೆಯ ಘಾತಿಯ
ಘಲ್ಲಣೆಗೆ ಕಂಠಣಿಸಿದವು ಟೆಂಠಣಿಸುವಾನೆಗಳು
ಸೆಲ್ಲೆಹದ ಮಳೆಗರೆದು ಭೀಮನ
ಘಲ್ಲಿಸಿದರಾರೋಹಕರು ಬಲು
ಬಿಲ್ಲ ಜಂತ್ರದ ನಾಳಿಯಂಬಿನ ಸರಳ ಸಾರದಲಿ ॥54॥
೦೫೫ ಜನಪ ಕೇಳೈ ...{Loading}...
ಜನಪ ಕೇಳೈ ಜಡಿವ ತುಂತು
ರ್ವನಿಗಳನು ಬಿರುಗಾಳಿ ಮೊಗೆವವೊ
ಲನಿತು ಸೆಲ್ಲೆಹ ಶರವಳೆಯ ಗದೆಯಿಂದ ಘಟ್ಟಿಸಿದ
ಜಿನುಗುವಳೆಯಲಿ ಪರ್ವತದ ಶಿಲೆ
ನೆನೆವುದೇ ಗಜಸೇನೆ ಕದಳೀ
ವನವಲೇ ಕಲಿಭೀಮದಿಗ್ಗಜ ಗಾಢ ಪದಹತಿಗೆ ॥55॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧೃತರಾಷ್ಟ್ರ ಕೇಳು; ತುಂತುರು ಹನಿಗಳನ್ನು ವೇಗವಾಗಿ ಬರುವ ಬಿರುಗಾಳಿ ನಾಶಮಾಡುವಂತೆ ಭೀಮ ತನ್ನ ಮೇಲೆ ಬಿದ್ದ ಅಷ್ಟೂ, ಈಟಿಗಳು, ಬಾಣಗಳು, ಮುಂತಾದ ಶಸ್ತ್ರಾಸ್ತ್ರಗಳನ್ನು ತನ್ನ ಗದೆಯಿಂದ ನಿರ್ನಾಮ ಮಾಡಿದ. ಜಿನುಗುಮಳೆಯಲ್ಲಿ ಪರ್ವತದ ಶಿಲೆ ನೆನೆದು ಮೆತ್ತಗಾಗುತ್ತದೆಯೆ! ಕಲಿಭೀಮನೆಂಬ ದಿಗ್ಗಜದ ಘಾಡವಾದ ಕಾಲ್ತುಳಿತಕ್ಕೆ ಆನೆಗಳ ಸೈನ್ಯ ಬಾಳೆಯ ತೋಟದಂತಲ್ಲವೇ!
ಮೂಲ ...{Loading}...
ಜನಪ ಕೇಳೈ ಜಡಿವ ತುಂತು
ರ್ವನಿಗಳನು ಬಿರುಗಾಳಿ ಮೊಗೆವವೊ
ಲನಿತು ಸೆಲ್ಲೆಹ ಶರವಳೆಯ ಗದೆಯಿಂದ ಘಟ್ಟಿಸಿದ
ಜಿನುಗುವಳೆಯಲಿ ಪರ್ವತದ ಶಿಲೆ
ನೆನೆವುದೇ ಗಜಸೇನೆ ಕದಳೀ
ವನವಲೇ ಕಲಿಭೀಮದಿಗ್ಗಜ ಗಾಢ ಪದಹತಿಗೆ ॥55॥
೦೫೬ ಅವನಿಪನ ಹಿನ್ದಿಕ್ಕಿ ...{Loading}...
ಅವನಿಪನ ಹಿಂದಿಕ್ಕಿ ಗಜಯೂ
ಥವ ವಿಭಾಡಿಸಿ ಹಿಂಡ ಕೆದರಿದ
ನವಗಡಿಸಿದನು ಹಾರಲೂದಿದನೊದೆದು ಬೊಬ್ಬಿರಿದ
ತಿವಿದನಣಸಿನಲೂರಿ ಮೊನೆಯಲಿ
ಸವಡಿಯಾನೆಯನೆತ್ತಿದನು ಬಲ
ಬವರಿಯೆಡಬವರಿಯಲಿ ತಡೆಗಾಲ್ವೊಯ್ದನಾ ಭೀಮ ॥56॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮನು ಧರ್ಮರಾಯನನ್ನು ಹಿಂದೆಬಿಟ್ಟು, ಆನೆಗಳ ಸೈನ್ಯವನ್ನು ನಾಶಗೊಳಿಸಿ, ಆನೆಗಳ ಹಿಂಡನ್ನು ಚಲ್ಲಾಪಿಲ್ಲಿಮಾಡಿ, ಗಾಳಿಯಲ್ಲಿ ಹಾರಿಹೋಗುವಂತೆ ಊದಿದನು. ಆನೆಗಳನ್ನು ಹಿಮ್ಮೆಟ್ಟಿಸಿ ಬೊಬ್ಬಿರಿದು ಶಬ್ದಮಾಡಿದ. ಆನೆಗಳನ್ನು ತಿವಿದ, ಆನೆಯ ದಂತಗಳಿಗೆ ಹಾಕಿದ್ದ ಲೋಹದ ಕಟ್ಟುಗಳನ್ನು ಹಿಡಿದು ಆನೆಗಳ ತಲೆಗಳನ್ನು ಬಗ್ಗಿಸಿ, ಪುನಃ ದಂತಗಳ ತುದಿಯನ್ನು ಹಿಡಿದು ಜೋಡಿ ಆನೆಗಳನ್ನು ಮೇಲಕ್ಕೆ ಎತ್ತಿ ಎಡಸುತ್ತಿನಿಂದ ತಿರುಗಿಸಿ ಎಸೆದನು, ಹಾಗೆಯೇ ಕೆಲವನ್ನು ಬಲಸುತ್ತಿನಿಂದ ತಿರುಗಿಸಿ ಎಸೆದನು. ಓಡುತ್ತಿರುವ ಆನೆಗಳಿಗೆ ಅಡ್ಡಗಾಲು ಕೊಟ್ಟು ಅವುಗಳನ್ನು ಬೀಳಿಸಿದನು.
ಪದಾರ್ಥ (ಕ.ಗ.ಪ)
ವಿಭಾಡಿಸು-ನಾಶಮಾಡು, ಅಣಸಿಲು-ಆನೆಗಳ ದಂತಕ್ಕೆ ಹಾಕಿರುವ ಲೋಹದ ಕಟ್ಟುಗಳು; ಕೀಲು, ಸವಡಿ-ಜೋಡಿ, ಬವರಿ-ಸುತ್ತಿಸು;ಬುಗುರಿ
ಮೂಲ ...{Loading}...
ಅವನಿಪನ ಹಿಂದಿಕ್ಕಿ ಗಜಯೂ
ಥವ ವಿಭಾಡಿಸಿ ಹಿಂಡ ಕೆದರಿದ
ನವಗಡಿಸಿದನು ಹಾರಲೂದಿದನೊದೆದು ಬೊಬ್ಬಿರಿದ
ತಿವಿದನಣಸಿನಲೂರಿ ಮೊನೆಯಲಿ
ಸವಡಿಯಾನೆಯನೆತ್ತಿದನು ಬಲ
ಬವರಿಯೆಡಬವರಿಯಲಿ ತಡೆಗಾಲ್ವೊಯ್ದನಾ ಭೀಮ ॥56॥
೦೫೭ ಒರಲಿ ತಿವಿದನು ...{Loading}...
ಒರಲಿ ತಿವಿದನು ಕರಿಯ ಬರಿಯೆಲು
ಮುರಿಯಲೊದೆದನು ಸದೆದು ದಾಡೆಯ
ತಿರುಹಿ ಕಿತ್ತನು ಬಿಕ್ಕಿದನು ಬಿದುವಿನಲಿ ಬಲುಗದೆಯ
ಜರೆದನಾರೋಹಕರ ತಲೆಗಳ
ತರಿದು ಬಿಸುಟನು ಗಜಘಟೆಯ ಥ
ಟ್ಟೊರಗಿದವು ತಡಿಸಹಿತ ನವರುಧಿರಾಂಬುಪೂರದಲಿ ॥57॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆರ್ಭಟ ಮಾಡುತ್ತಾ ಭೀಮ ಆನೆಗಳನ್ನು ತಿವಿದನು. ಸೊಂಟದ ಎಲುಬುಗಳು ಪುಡಿಯಾಗುವಂತೆ ಒದೆದನು. ಆನೆಗಳನ್ನು ಬಡಿದು ಅವುಗಳ ದಂತಗಳನ್ನು ತಿರುಗಿಸಿ ಕಿತ್ತುಹಾಕಿದನು. ತನ್ನ ಬಲಗಡೆಯ ಆನೆಯ ಗಂಡಸ್ಥಳವನ್ನು ಹೊಡೆದನು. ಸವಾರರನ್ನು ಜರೆದನು, ಅವರ ತಲೆಗಳನ್ನು ಕತ್ತರಿಸಿ ಎಸೆದನು. ಆನೆಗಳ ಸೈನ್ಯವು ಹೊಸರಕ್ತದ ಪ್ರವಾಹದಲ್ಲಿ ತಮ್ಮ ಮೇಲಿದ್ದ ಕಬ್ಬಿಣದ ದಂಡಗಳ ಸಹಿತವಾಗಿ ಒರಗಿದವು.
ಪದಾರ್ಥ (ಕ.ಗ.ಪ)
ಬರಿ-ಸೊಂಟ, ಬಿಕ್ಕು-ಬೀಸು, ತೂರಿಸು, ಸಿಕ್ಕಿಸು, ಬಿದು-ಆನೆಗಳ ಗಂಡಸ್ಥಳ, ಕುಂಭಸ್ಥಳ, ದಡಿ-ದಂಡ, ಕೋಲು, ಆಯುಧ
ಮೂಲ ...{Loading}...
ಒರಲಿ ತಿವಿದನು ಕರಿಯ ಬರಿಯೆಲು
ಮುರಿಯಲೊದೆದನು ಸದೆದು ದಾಡೆಯ
ತಿರುಹಿ ಕಿತ್ತನು ಬಿಕ್ಕಿದನು ಬಿದುವಿನಲಿ ಬಲುಗದೆಯ
ಜರೆದನಾರೋಹಕರ ತಲೆಗಳ
ತರಿದು ಬಿಸುಟನು ಗಜಘಟೆಯ ಥ
ಟ್ಟೊರಗಿದವು ತಡಿಸಹಿತ ನವರುಧಿರಾಂಬುಪೂರದಲಿ ॥57॥
೦೫೮ ಗುಳವನುಗಿದಾರೋಹಕರ ಮುಂ ...{Loading}...
ಗುಳವನುಗಿದಾರೋಹಕರ ಮುಂ
ದಲೆಯ ಸೆಳೆದೊಡಮೆಟ್ಟಿದನು ಮಂ
ಡಳಿಸಿದೊಡ್ಡಿನ ಮೇಲೆ ಹಾಯ್ದನು ಹೊಯ್ದನುರವಣಿಸಿ
ಕಳಚಿದನು ದಾಡೆಗಳ ಭರಿಕೈ
ಗಳನು ತುಂಡಿಸಿ ವಾಲಧಿಯ ಬರ
ಸೆಳೆದು ಕೊಡಹಿದನಾನೆಗಳ ನಾನಾವಿಧಾನದಲಿ ॥58॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆನೆಗಳ ಮೇಲೆ ಇದ್ದ ಬಟ್ಟೆಗಳನ್ನು ಎಳೆದು ಮೇಲೆ ಕುಳಿತಿದ್ದ ಯೋಧರ ಮುಂದಲೆಯನ್ನು ಹಿಡಿದೆಳೆದು ನೆಲಕ್ಕೆ ಹಾಕಿ ಕಾಲಿನಲ್ಲಿ ಮೆಟ್ಟಿದನು. ಒಂದಾಗಿ ಬಂದ ಸೈನ್ಯಸಮೂಹದ ಮೇಲೆ ಬಿದ್ದು ಉತ್ಸಾಹದಿಂದ ಹೊಡೆದ. ಆನೆಗಳ ದಾಡೆಗಳನ್ನು ಗುದ್ದಿ ಕಳಚಿಹಾಕಿದನು. ಸೊಂಡಿಲುಗಳನ್ನು ತುಂಡು ಮಾಡಿದನು. ಬಾಲಗಳನ್ನು ಹಿಡಿದೆಳೆದು ಆನೆಗಳನ್ನು ಕೊಡವಿ ಹಾಕಿದನು. ಹೀಗೆ ನಾನಾ ವಿಧದಲ್ಲಿ ಭೀಮನ ಗಜಸಂಹಾರ ಮುಂದುವರಿಯಿತು.
ಪದಾರ್ಥ (ಕ.ಗ.ಪ)
ಗುಳ-ಆನೆಗಳ ಮೇಲೆ ಹಾಸುವ ಬಟ್ಟೆ, ಮಂಡಳಿಸಿದ-ಗುಂಪಾಗಿದ್ದ, ಒಟ್ಟಾಗಿದ್ದ, ವಾಲಧಿ-ಬಾಲ
ಮೂಲ ...{Loading}...
ಗುಳವನುಗಿದಾರೋಹಕರ ಮುಂ
ದಲೆಯ ಸೆಳೆದೊಡಮೆಟ್ಟಿದನು ಮಂ
ಡಳಿಸಿದೊಡ್ಡಿನ ಮೇಲೆ ಹಾಯ್ದನು ಹೊಯ್ದನುರವಣಿಸಿ
ಕಳಚಿದನು ದಾಡೆಗಳ ಭರಿಕೈ
ಗಳನು ತುಂಡಿಸಿ ವಾಲಧಿಯ ಬರ
ಸೆಳೆದು ಕೊಡಹಿದನಾನೆಗಳ ನಾನಾವಿಧಾನದಲಿ ॥58॥
೦೫೯ ಕೋಡ ಕಿತ್ತನು ...{Loading}...
ಕೋಡ ಕಿತ್ತನು ನೂರು ಗಜವ ವಿ
ಭಾಡಿಸಿದನಿನ್ನೂರನಡಹಾ
ಯ್ದೋಡಿದವು ನೂರಾನೆ ಭೀಮನ ಗದೆಯ ಗಾಳಿಯಲಿ
ಜೋಡಿಗೆಡೆದವು ನೂರು ಮಗ್ಗುಲ
ನೀಡಿದವು ನಾನೂರು ಪುನರಪಿ
ಕೇಡುಗಂಡವು ನೂರು ಭೀಮನ ಗದೆಯ ಘಾಯದಲಿ ॥59॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನೂರು ಆನೆಗಳ ದಂತಗಳನ್ನು ಕಿತ್ತುಹಾಕಿದ. ಇನ್ನೂರು ಆನೆಗಳನ್ನು ಸಂಹರಿಸಿದ. ಭೀಮನ ಗದೆಯ ಗಾಳಿಯಲ್ಲಿ ನೂರು ಆನೆಗಳು ಓಡಿಹೋದುವು. ಜೋಡಿಯಾಗಿದ್ದ ನೂರು ಆನೆಗಳು ಪರಸ್ಪರ ಬಿಟ್ಟೋಡಿದುವು. ಮಗ್ಗುಲನ್ನು ನೆಲಕ್ಕೆ ಒರಗಿಸಿ ನೂರು ಆನೆಗಳು ಬಿದ್ದವು. ಪುನಃ ನೂರು ಆನೆಗಳು ಭೀಮನ ಗದೆಯ ಹೊಡೆತದಿಂದ ಸತ್ತವು.
ಪದಾರ್ಥ (ಕ.ಗ.ಪ)
ಕೋಡು-ಆನೆಗಳ ದಾಡೆ, ದಂತ, ಕೇಡುಗಂಡವು-ಕೇಡನ್ನು ಕಂಡವು, ನಾಶಗೊಂಡವು, ತೊಂದರೆಗೆ ಒಳಗಾದವು
ಮೂಲ ...{Loading}...
ಕೋಡ ಕಿತ್ತನು ನೂರು ಗಜವ ವಿ
ಭಾಡಿಸಿದನಿನ್ನೂರನಡಹಾ
ಯ್ದೋಡಿದವು ನೂರಾನೆ ಭೀಮನ ಗದೆಯ ಗಾಳಿಯಲಿ
ಜೋಡಿಗೆಡೆದವು ನೂರು ಮಗ್ಗುಲ
ನೀಡಿದವು ನಾನೂರು ಪುನರಪಿ
ಕೇಡುಗಂಡವು ನೂರು ಭೀಮನ ಗದೆಯ ಘಾಯದಲಿ ॥59॥
೦೬೦ ಧರಣಿಪತಿ ಕೇಳ್ ...{Loading}...
ಧರಣಿಪತಿ ಕೇಳ್ ಭೀಮಸೇನನ
ಧರಧುರದ ದೆಖ್ಖಾಳದಲಿ ನ
ಮ್ಮರಸ ನಿಂದನು ಕಾದಿದನು ನೂರಾನೆಯಲಿ ಮಲೆತು
ಸರಳ ಸಾರದಲನಿಲಜನ ರಥ
ತುರಗವನು ಸಾರಥಿಯನಾತನ
ಭರವಸವ ನಿಲಿಸಿದನು ನಿಮಿಷಾರ್ಧದಲಿ ಕುರುರಾಯ ॥60॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧೃತರಾಷ್ಟ್ರನೇ ಕೇಳು! , ನಮ್ಮ ಅರಸನಾದ ದುರ್ಯೋಧನ ನೂರು ಆನೆಗಳ ಬಲವನ್ನು ಇಟ್ಟುಕೊಂಡು ಭೀಮಸೇನನ ಹೆಚ್ಚಾದ ಆಟೋ¥ವನ್ನು ಎದುರಿಸಿ ಕಾದಿದನು. ಬಾಣದ ಸಾರಸರ್ವಸ್ವವನ್ನು ಉಪಯೋಗಿಸಿ ಭೀಮನ ರಥದ ಕುದುರೆಗಳನ್ನು ಸಾರಥಿಯನ್ನು, ಭೀಮನ ವೇಗವನ್ನು ನಿಮಿಷಾರ್ಧದಲ್ಲಿ ನಿಲ್ಲಿಸಿದನು.
ಪದಾರ್ಥ (ಕ.ಗ.ಪ)
ಧರಧುರ-ಹೆಚ್ಚಳ, ಆಧಿಕ್ಯ, ದೆಖ್ಖಾಳ-ಆಟೋಪ, ವೈಭವ
ಮೂಲ ...{Loading}...
ಧರಣಿಪತಿ ಕೇಳ್ ಭೀಮಸೇನನ
ಧರಧುರದ ದೆಖ್ಖಾಳದಲಿ ನ
ಮ್ಮರಸ ನಿಂದನು ಕಾದಿದನು ನೂರಾನೆಯಲಿ ಮಲೆತು
ಸರಳ ಸಾರದಲನಿಲಜನ ರಥ
ತುರಗವನು ಸಾರಥಿಯನಾತನ
ಭರವಸವ ನಿಲಿಸಿದನು ನಿಮಿಷಾರ್ಧದಲಿ ಕುರುರಾಯ ॥60॥
೦೬೧ ಒದೆದು ರಥವನು ...{Loading}...
ಒದೆದು ರಥವನು ಧರೆಗೆ ಧುಮ್ಮಿ
ಕ್ಕಿದನು ಕೌರವರಾಯ ಮೈದೋ
ರಿದೆಯಲಾ ಕಲಿಯಾಗು ಪಾಲಿಸದಿರು ಪಲಾಯನವ
ರದನಿಗಳ ರೌದ್ರಾಹವಕೆ ಕೋ
ವಿದನಲೇ ಕೊಳ್ಳೆನುತ ಕರಿಗಳ
ಕೆದರಿದನು ಕಲಿಜೋದರಂಬಿನ ಸರಿಯ ಸೈರಿಸುತ ॥61॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಥವನ್ನು ಒದ್ದು ನೆಲಕ್ಕೆ ಧುಮುಕಿದ ಭೀಮ - ಕೌರವರಾಯನೇ ಈಗ ಪತ್ತೆಯಾದೆಯಲ್ಲವೇ ಇನ್ನು ಧೈರ್ಯವಂತನಾಗು. ಪಲಾಯನವಾದವನ್ನು ಪಾಲಿಸಿ ಓಡಿ ಹೋಗಬೇಡ. ನೀನು ಆನೆಗಳ ರುದ್ರಭಯಂಕರವಾದ ಯುದ್ಧದಲ್ಲಿ ಪಂಡಿತನಲ್ಲವೇ, ಇಗೋ ನೋಡು, ಎನ್ನುತ್ತಾ ಆನೆಯ ಮೇಲಿದ್ದ ವೀರರ ಬಾಣಗಳ ಮಳೆಯನ್ನು ಸೈರಿಸಿ, ಆನೆಗಳ ಗುಂಪನ್ನು ಚದುರಿಸಿದನು.
ಪದಾರ್ಥ (ಕ.ಗ.ಪ)
ರದನಿ-ರದನ(ದಾಡೆ) ಉಳ್ಳದ್ದು, ಆನೆ, ಸರಿ-ಸುರಿಮಳೆ
ಮೂಲ ...{Loading}...
ಒದೆದು ರಥವನು ಧರೆಗೆ ಧುಮ್ಮಿ
ಕ್ಕಿದನು ಕೌರವರಾಯ ಮೈದೋ
ರಿದೆಯಲಾ ಕಲಿಯಾಗು ಪಾಲಿಸದಿರು ಪಲಾಯನವ
ರದನಿಗಳ ರೌದ್ರಾಹವಕೆ ಕೋ
ವಿದನಲೇ ಕೊಳ್ಳೆನುತ ಕರಿಗಳ
ಕೆದರಿದನು ಕಲಿಜೋದರಂಬಿನ ಸರಿಯ ಸೈರಿಸುತ ॥61॥
೦೬೨ ಏನ ಹೇಳುವೆನವನಿಪನ ...{Loading}...
ಏನ ಹೇಳುವೆನವನಿಪನ ಮದ
ದಾನೆ ಮುರಿದವು ಭೀಮಸೇನನೊ
ವೈನತೇಯನೊ ಕರಿಗಳೋ ಕಾಳೋರಗನ ದಳವೊ
ಮಾನನಿಧಿ ಮುರಿವಡೆದನೈ ವೈ
ರಾನುಬಂಧದ ಬೇಗುದಿಯ ದು
ಮ್ಮಾನ ದಳವೇರಿದುದು ಹೇರಿತು ಭೀತಿ ಭೂಪತಿಗೆ ॥62॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಏನ ಹೇಳಲಿ ಧೃತರಾಷ್ಟ್ರ, ದುರ್ಯೋಧನನ ಮದಿಸಿದ ಆನೆಗಳು ನಾಶವಾದವು ಗರುಡನಿಗೆ ಉಗ್ರಸರ್ಪಗಳು ಹೇಗೋ ಹಾಗೆ ಭೀಮಸೇನನಿಗೆ ಈ ಆನೆಗಳ ಸೈನ್ಯವಾಯಿತು. ಮಾನನಿಧಿಯಾದ ದುರ್ಯೋಧನ ಯುದ್ಧಕ್ಕೆ ವಿಮುಖನಾದ. ಪರಸ್ಪರ ವೈರತ್ವದ ಹೃದಯದ ಕಿಚ್ಚಿನಿಂದ ದುಃಖ ಹೆಚ್ಚುತ್ತಾಹೋಯಿತು. ಭೂಪತಿಯಾದ ದುರ್ಯೋಧನನಿಗೆ ಭೀತಿ ಆವರಿಸಿತು.
ಪದಾರ್ಥ (ಕ.ಗ.ಪ)
ವೈನತೇಯ-ಗರುಡ, ಕಾಳೋರಗ-ಕಾಳಸರ್ಪ, ಮುರಿವಡೆ-ವಿಮುಖನಾಗು, ಹಿಂದಿರುಗು, ಬೇಗುದಿ-ಹೊಟ್ಟೆಕಿಚ್ಚು, ದುಮ್ಮಾನ-ದುಗುಡ, ದುಃಖ, ದಳವೇರು-ಹೆಚ್ಚುತ್ತಾ ಹೋಗುವುದು.
ಟಿಪ್ಪನೀ (ಕ.ಗ.ಪ)
1)“ವೈನತೇಯನೋ……………”- ಗರುಡ-ನಾಗರು ದಾಯಾದಿಗಳು, ಪರಸ್ಪರ ಬದ್ಧ ದ್ವೇಷಿಗಳು: ಕನ್ನಡ ಭಾರತ:ಅನುಶಾಸನ ಪರ್ವ. ಮೂರನೆಯ ಸಂಧಿಯನ್ನು ನೋಡಿ
ಮೂಲ ...{Loading}...
ಏನ ಹೇಳುವೆನವನಿಪನ ಮದ
ದಾನೆ ಮುರಿದವು ಭೀಮಸೇನನೊ
ವೈನತೇಯನೊ ಕರಿಗಳೋ ಕಾಳೋರಗನ ದಳವೊ
ಮಾನನಿಧಿ ಮುರಿವಡೆದನೈ ವೈ
ರಾನುಬಂಧದ ಬೇಗುದಿಯ ದು
ಮ್ಮಾನ ದಳವೇರಿದುದು ಹೇರಿತು ಭೀತಿ ಭೂಪತಿಗೆ ॥62॥
೦೬೩ ನೂರು ಗಜವಕ್ಕಾಡಲವನಿಪ ...{Loading}...
ನೂರು ಗಜವಕ್ಕಾಡಲವನಿಪ
ನೇರಿದನು ವಾರುವನನೆಡದಲಿ
ಜಾರಿದನು ಸೂಠಿಯಲಿ ದುವ್ವಾಳಿಸಿ ತುರಂಗಮವ
ಆರು ಸಾವಿರ ಕುದುರೆ ರಥವೈ
ನೂರು ಗಜಘಟೆ ನೂರು ಮೂವ
ತ್ತಾರು ಸಾವಿರ ಪಾಯದಳದಲಿ ಬಂದನಾ ಶಕುನಿ ॥63॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತನ್ನ ಜೊತೆಗಿದ್ದ ನೂರು ಆನೆಗಳು ಭಯದಿಂದ ನಡುಗಲು ದುರ್ಯೋಧನ ಕುದುರೆಯನ್ನು ಏರಿದನು. ಕುದುರೆಯನ್ನು ವೇಗವಾಗಿ ಓಡಿಸಿ, ಬಲುಬೇಗ ಯುದ್ಧರಂಗದ ಎಡಭಾಗದಿಂದ ಜಾರಿಕೊಂಡ. ಆರು ಸಾವಿರ ಕುದುರೆ, ಐನೂರು ರಥಗಳು, ನೂರು ಆನೆಗಳ ಸೈನ್ಯ, ಮುವತ್ತಾರು ಸಾವಿರ ಕಾಲುದಳದೊಂದಿಗೆ ಶಕುನಿ ಯುದ್ಧಕ್ಕೆ ಬಂದ.
ಪದಾರ್ಥ (ಕ.ಗ.ಪ)
ಅಕ್ಕಾಡು-ಅಳ್ಳಾಡು, ಭಯದಿಂದ ನಡುಗು, ಬೆದರು, ವಾರುವ-ಕುದುರೆ, ಸೂಠಿ-ವೇಗ, ದುವ್ವಾಳಿಸು-ಕುದುರೆಯನ್ನು ವೇಗವಾಗಿ ಓಡಿಸು, ಜಾರು-ತಪ್ಪಿಸಿಕೊಂಡು ಹೋಗು.
ಮೂಲ ...{Loading}...
ನೂರು ಗಜವಕ್ಕಾಡಲವನಿಪ
ನೇರಿದನು ವಾರುವನನೆಡದಲಿ
ಜಾರಿದನು ಸೂಠಿಯಲಿ ದುವ್ವಾಳಿಸಿ ತುರಂಗಮವ
ಆರು ಸಾವಿರ ಕುದುರೆ ರಥವೈ
ನೂರು ಗಜಘಟೆ ನೂರು ಮೂವ
ತ್ತಾರು ಸಾವಿರ ಪಾಯದಳದಲಿ ಬಂದನಾ ಶಕುನಿ ॥63॥
೦೬೪ ಶಕುನಿ ಕಣ್ಡನು ...{Loading}...
ಶಕುನಿ ಕಂಡನು ಕೌರವೇಂದ್ರನ
ನಕಟ ನೀನೇಕಾಂಗದಲಿ ಹೋ
ರಿಕೆಗೆ ಬಂದೈ ಗರುವ ಗುರುಸುತ ಭೋಜ ಗೌತಮರು
ಸಕಲಬಲ ನುಗ್ಗಾಯ್ತೆ ಸಮಸ
ಪ್ತಕರು ನಿನ್ನಯ ಮೂಲಬಲವಿದೆ
ವಿಕಳನಾಗದಿರೆಂದು ಸಂತೈಸಿದನು ಕುರುಪತಿಯ ॥64॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತಪ್ಪಿಸಿಕೊಂಡು ಹೋಗುತ್ತಿರುವ ದುರ್ಯೋಧನನನ್ನು ಶಕುನಿ ಕಂಡ. ಆಯ್ಯೋ! ನೀನು ಏಕಾಂಗಿಯಾಗಿ ಯುದ್ಧಕ್ಕೆ ಬಂದೆಯಾ? ಗರುವರಾದ ಅಶ್ವತ್ಥಾಮ, ಕೃತವರ್ಮ, ಕೃಪ ಮುಂತಾದ ವೀರರು ಮತ್ತವರ ಎಲ್ಲ ಸೈನ್ಯವೂ ನಾಶವಾಯಿತೇ? ನಿನ್ನ ಮೂಲಬಲವಾದ ಸಮಸಪ್ತಕರು ಬದುಕಿದ್ದಾರೆ, ಆದ್ದರಿಂದ ನೀನು ಧೈರ್ಯಗುಂದಬೇಡವೆಂದು ಶಕುನಿ ದುರ್ಯೋಧನನನ್ನು ಸಮಾಧಾನಪಡಿಸಿದ.
ಪದಾರ್ಥ (ಕ.ಗ.ಪ)
ಹೋರಿಕೆ-ಹೋರಾಟ, ಯುದ,್ಧ ಗರುವ-ಶ್ರೇಷ್ಠರಾದ, ಗರ್ವವುಳ್ಳ,, ವಿಕಳ- ಧೈರ್ಯಗುಂದಿದ, ಮರುಳಾದ.
ಮೂಲ ...{Loading}...
ಶಕುನಿ ಕಂಡನು ಕೌರವೇಂದ್ರನ
ನಕಟ ನೀನೇಕಾಂಗದಲಿ ಹೋ
ರಿಕೆಗೆ ಬಂದೈ ಗರುವ ಗುರುಸುತ ಭೋಜ ಗೌತಮರು
ಸಕಲಬಲ ನುಗ್ಗಾಯ್ತೆ ಸಮಸ
ಪ್ತಕರು ನಿನ್ನಯ ಮೂಲಬಲವಿದೆ
ವಿಕಳನಾಗದಿರೆಂದು ಸಂತೈಸಿದನು ಕುರುಪತಿಯ ॥64॥
೦೬೫ ದಳಪತಿಯು ಪವಡಿಸಿದನರಸನ ...{Loading}...
ದಳಪತಿಯು ಪವಡಿಸಿದನರಸನ
ಸುಳಿವು ಸಿಲುಕಿತು ಭಯದ ಬಲೆಯಲಿ
ಮೊಳಗುತದೆ ನಿಸ್ಸಾಳ ಸುಮ್ಮಾನದಲಿ ರಿಪುಬಲದ
ಉಳಿದರೋ ಗುರುಸೂನು ಕೃಪರೇ
ನಳಿದರೋ ಪಾಳೆಯದೊಳಗೆ ರಥ
ವಿಳಿದರೋ ತಾನೇನೆನುತ ಚಿಂತಿಸಿತು ಕುರುಸೇನೆ ॥65॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದಳಪತಿಯಾದ ಶಲ್ಯ ಯುದ್ಧದಲ್ಲಿ ಮರಣಹೊಂದಿದ. ದುರ್ಯೋಧನನ ಚೈತನ್ಯ ಭಯದ ಬಲೆಯಲ್ಲಿ ಸಿಕ್ಕಿಕೊಂಡಿದೆ. ಶತ್ರುಗಳಾದ ಪಾಂಡವ ಸೈನ್ಯದ ರಣವಾದ್ಯಗಳು ಉತ್ಸಾಹದಿಂದ ಮೊಳಗುತ್ತಿವೆ. ಅಶ್ವತ್ಥಾಮ, ಕೃಪಾಚಾರ್ಯರು ಬದುಕಿದ್ದಾರೋ ಅಥವ ಅವರು ಸತ್ತು ಹೋಗಿದ್ದಾರೋ ಅಥವ ಪಾಳೆಯಕ್ಕೆ ಹೋಗಿ ರಥದಿಂದ ಇಳಿದು ಕುಳಿತಿದ್ದಾರೋ, ಏನಾಯಿತಿದು, ಎನ್ನುತ್ತ ಕುರು ಸೈನ್ಯ ಚಿಂತಿಸತೊಡಗಿತು.
ಪದಾರ್ಥ (ಕ.ಗ.ಪ)
ಸುಳಿವು-ಗುರುತು, ಪತ್ತೆ (ಈ ಸಂದರ್ಭದಲ್ಲಿ ಚೈತನ್ಯ)
ಮೂಲ ...{Loading}...
ದಳಪತಿಯು ಪವಡಿಸಿದನರಸನ
ಸುಳಿವು ಸಿಲುಕಿತು ಭಯದ ಬಲೆಯಲಿ
ಮೊಳಗುತದೆ ನಿಸ್ಸಾಳ ಸುಮ್ಮಾನದಲಿ ರಿಪುಬಲದ
ಉಳಿದರೋ ಗುರುಸೂನು ಕೃಪರೇ
ನಳಿದರೋ ಪಾಳೆಯದೊಳಗೆ ರಥ
ವಿಳಿದರೋ ತಾನೇನೆನುತ ಚಿಂತಿಸಿತು ಕುರುಸೇನೆ ॥65॥
೦೬೬ ಕೂಡೆ ಹರಿಹಞ್ಚಾದ ...{Loading}...
ಕೂಡೆ ಹರಿಹಂಚಾದ ಸುಭಟರು
ಕೂಡಿಕೊಂಡುದು ನೊಂದು ನಸಿದವ
ರೋಡಿದವರೊಗ್ಗಾಯ್ತು ಕುರುರಾಯನ ಪರೋಕ್ಷದಲಿ
ನೋಡಲಹುದಾಹವದೊಳಗೆ ಕೈ
ಮಾಡಿಸಿದ ವಸುಧಾಂಗನೆಗೆ ಬೆಲೆ
ಮಾಡುವುದು ಮತವೆಂದು ಕವಿದುದು ಮತ್ತೆ ಕುರುಸೇನೆ ॥66॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹರಿಹಂಚಾಗಿ, ದಿಕ್ಕಾಪಾಲಾಗಿದ್ದ ವೀರರು ಒಂದೆಡೆ ಸೇರಿಕೊಂಡರು. ಏಟುತಿಂದು ನೊಂದವರು ಓಡಿಹೋದವರು, ದುರ್ಯೋಧನನು ಇಲ್ಲದ ಆ ಸಮಯದಲ್ಲಿ ಅವನ ಈ ಸೈನ್ಯವೆಲ್ಲವೂ ಒಗ್ಗಟ್ಟಾಗಿ ಬಂದು ಸಾಲುಸಾಲಾಗಿ ನಿಂತಿತು. ಈಗ ನೋಡಬೇಕಾಗಿದೆ, ಯುದ್ಧದಲ್ಲಿ ಹೋರಾಟ ಮಾಡುವಂತೆ ಮಾಡಿದ ಭೂಮಿಯೆಂಬ ಅಂಗನೆಗೆ ನಾವಿಂದು ಬೆಲೆ ಕಟ್ಟೋಣ (ಕೊಳ್ಳಲು) ಎಂದುಕೊಂಡು ಕುರುಸೈನ್ಯ ಪುನಃ ಒಂದಾಗಿ ಪಾಂಡವ ಸೈನ್ಯದ ಮೇಲೆ ಬಿತ್ತು.
ಪದಾರ್ಥ (ಕ.ಗ.ಪ)
ನಸಿದವರು-ಸೊರಗಿದವರು, ಕ್ಷೀಣವಾದವರು, ಒಗ್ಗಾಯ್ತು-ಗುಂಪಾಯಿತು, ಶಿಸ್ತಿನಿಂದ ಸಾಲಾಯಿತು, ವಸುಧಾಂಗನೆ-ಭೂಮಿಯೆಂಬ ಹೆಣ್ಣು, ಬೆಲೆಮಾಡು-ಬೆಲೆಕಟ್ಟು, (ಬೆಲೆವೆಣ್ಣು ಎಂದು ಭೂಮಿಯನ್ನು ಹೀಯಾಳಿಸುವ ಅರ್ಥದಲ್ಲಿ)
ಮೂಲ ...{Loading}...
ಕೂಡೆ ಹರಿಹಂಚಾದ ಸುಭಟರು
ಕೂಡಿಕೊಂಡುದು ನೊಂದು ನಸಿದವ
ರೋಡಿದವರೊಗ್ಗಾಯ್ತು ಕುರುರಾಯನ ಪರೋಕ್ಷದಲಿ
ನೋಡಲಹುದಾಹವದೊಳಗೆ ಕೈ
ಮಾಡಿಸಿದ ವಸುಧಾಂಗನೆಗೆ ಬೆಲೆ
ಮಾಡುವುದು ಮತವೆಂದು ಕವಿದುದು ಮತ್ತೆ ಕುರುಸೇನೆ ॥66॥
೦೬೭ ಬಿಡದಲಾ ಕುರುಸೈನ್ಯ ...{Loading}...
ಬಿಡದಲಾ ಕುರುಸೈನ್ಯ ಹಕ್ಕಲು
ಗಡಿಯ ಭಟರೊಗ್ಗಾಯ್ತಲಾ ದೊರೆ
ಮಡಿದನೋ ಬಳಲಿದನೊ ಮಿಗೆ ಪೂರಾಯಘಾಯದಲಿ
ಪಡೆಯ ಜಂಜಡ ನಿಲಲಿ ಕೌರವ
ರೊಡೆಯನಾವೆಡೆ ನೋಡು ನೋಡೆಂ
ದೊಡನೊಡನೆ ಪವಮಾನಸುತನರಸಿದನು ಕುರುಪತಿಯ ॥67॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇಷ್ಟಾದರೂ ಕೌರವ ಸೈನ್ಯ ಸುಮ್ಮನಾಗುತ್ತಿಲ್ಲವಲ್ಲ! ಧಾನ್ಯವನ್ನು ಬೇರ್ಪಡಿಸಿದ ಮೇಲೆ ಉಳಿಯುವ ಹುಲ್ಲನ್ನು ಮೆದೆ ಒಟ್ಟಿದಂತೆ ಈ ಸೈನ್ಯ ಒಟ್ಟಾಗುತ್ತಿದೆಯಲ್ಲಾ. ಶತ್ರುವಾದ ದುರ್ಯೋಧನ ಸತ್ತನೋ ಇಲ್ಲ ಬಲುಗಾಯದಿಂದ ಬಳಲಿದ್ದಾನೋ. ಈ ಸೈನ್ಯದ ಜಂಜಡ ಸಾಕು. ದುರ್ಯೋಧನ ಎಲ್ಲಿದ್ದಾನೆಂಬುದನ್ನು ಬೇಗ ನೋಡು ಎಂದು ತನಗೇ ಹೇಳಿಕೊಂಡು ಭೀಮ ಅವನನ್ನು ಹುಡುಕಿದ.
ಪದಾರ್ಥ (ಕ.ಗ.ಪ)
ಹಕ್ಕಲು-ಬೆಳೆಕೊಯ್ದ, ಒಗ್ಗಾಯ್ತು-ಒಟ್ಟುಗೂಡಿತು, ಸಾಲಾಗಿ ನಿಂತಿತು, ಪೂರಾಯ-ದೊಡ್ಡದಾದ, ಹೆಚ್ಚಾದ, ಮುಕ್ತಾಯ, ಜಂಜಡ-ಚಿಂತೆ, ತೊಂದರೆ.
ಮೂಲ ...{Loading}...
ಬಿಡದಲಾ ಕುರುಸೈನ್ಯ ಹಕ್ಕಲು
ಗಡಿಯ ಭಟರೊಗ್ಗಾಯ್ತಲಾ ದೊರೆ
ಮಡಿದನೋ ಬಳಲಿದನೊ ಮಿಗೆ ಪೂರಾಯಘಾಯದಲಿ
ಪಡೆಯ ಜಂಜಡ ನಿಲಲಿ ಕೌರವ
ರೊಡೆಯನಾವೆಡೆ ನೋಡು ನೋಡೆಂ
ದೊಡನೊಡನೆ ಪವಮಾನಸುತನರಸಿದನು ಕುರುಪತಿಯ ॥67॥
೦೬೮ ಅರಸ ಕೇಳೈ ...{Loading}...
ಅರಸ ಕೇಳೈ ಕೌರವೇಂದ್ರನ
ನರಸುತರ್ಜುನ ಭೀಮ ಸಾತ್ಯಕಿ
ಧರಣಿಪತಿ ಸಹದೇವ ನಕುಲರು ಕೂಡೆ ಕಳನೊಳಗೆ
ತಿರುಗಿದರು ಬಳಿಕಿತ್ತಲೀ ಮೋ
ಹರವ ಧೃಷ್ಟದ್ಯುಮ್ನ ಸೃಂಜಯ
ರೊರಸಿದರು ನಿಶ್ಶೇಷ ಕೌರವನೃಪಚತುರ್ಬಲವ ॥68॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧೃತರಾಷ್ಟ್ರನೇ ಕೇಳು, ದುರ್ಯೋಧನನನ್ನು ಹುಡುಕುತ್ತಾ, ಭೀಮ, ಸಾತ್ಯಕಿ, ಧರ್ಮಜ, ಸಹದೇವ, ನಕುಲ ಮುಂತಾದವರು ಯುದ್ಧಭೂಮಿಯಲ್ಲಿ ತಿರುಗಿದರು ನಂತರ ಕೌರವನ ಚತುರಂಗ ಸೈನ್ಯವನ್ನು ಧೃಷ್ಯದ್ಯುಮ್ನ, ಸೃಂಜಯರು ನಿಶ್ಶೇಷವಾಗಿ ಒರಸಿಹಾಕಿದರು.
ಮೂಲ ...{Loading}...
ಅರಸ ಕೇಳೈ ಕೌರವೇಂದ್ರನ
ನರಸುತರ್ಜುನ ಭೀಮ ಸಾತ್ಯಕಿ
ಧರಣಿಪತಿ ಸಹದೇವ ನಕುಲರು ಕೂಡೆ ಕಳನೊಳಗೆ
ತಿರುಗಿದರು ಬಳಿಕಿತ್ತಲೀ ಮೋ
ಹರವ ಧೃಷ್ಟದ್ಯುಮ್ನ ಸೃಂಜಯ
ರೊರಸಿದರು ನಿಶ್ಶೇಷ ಕೌರವನೃಪಚತುರ್ಬಲವ ॥68॥
೦೬೯ ಧರಣಿಪತಿ ಕೇಳಿನ್ನು ...{Loading}...
ಧರಣಿಪತಿ ಕೇಳಿನ್ನು ಮೇಲಣ
ಧುರದ ವೃತ್ತಾಂತವನು ಕುರುಪತಿ
ಯಿರವನರಿಯೆನು ಕಂಡುಬಹೆನೇ ನೇಮವೇ ತನಗೆ
ಗುರುಸುತನು ಕೃಪ ಭೋಜ ಶಕುನಿಗ
ಳರಸನನು ಪರಿವೇಷ್ಟಿಸಿದರದ
ನರಿದು ಬಹೆನೆನೆ ಕಳುಹಿದನು ಧೃತರಾಷ್ಟ್ರ ಸಂಜಯನ ॥69॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧೃತರಾಷ್ಟ್ರ ಇನ್ನು ಮುಂದಿನ ಯುದ್ಧದ ವೃತ್ತಾಂತವನ್ನು ಕೇಳು. ದುರ್ಯೋಧನನ ಇರುವಿಕೆ ನನ್ನ ದಿವ್ಯದೃಷ್ಟಿಗೆ ಗೋಚರಿಸುತ್ತಿಲ್ಲ. ನಾನೇ ಯುದ್ಧಭೂಮಿಗೆ ಹೋಗಿ ನೋಡಿ ಬರಲೇ, ನನಗೆ ನಿಮ್ಮ ಅನುಮತಿ ಇದೆಯೇ. ದುರ್ಯೋಧನನನ್ನು ಅಶ್ವತ್ಥಾಮ, ಕೃಪ, ಕೃತವರ್ಮ, ಶಕುನಿಗಳು ಸುತ್ತುವರಿದರು. (ಆದರೆ ದುರ್ಯೋಧನ ಕಾಣುತ್ತಿಲ್ಲ) ಅದನ್ನು ತಿಳಿದು ಬರುತ್ತೇನೆಂದು ಸಂಜಯ ಧೃತರಾಷ್ಟ್ರನನ್ನು ಕೇಳಲು ಧೃತರಾಷ್ಟ್ರ ಒಪ್ಪಿ ಸಂಜಯನನ್ನು ಕಳುಹಿದ.
ಪದಾರ್ಥ (ಕ.ಗ.ಪ)
ಪರಿವೇಷ್ಟಿಸು-ಸುತ್ತುವರಿ, ಮುಚ್ಚಿಹಾಕು.
ಮೂಲ ...{Loading}...
ಧರಣಿಪತಿ ಕೇಳಿನ್ನು ಮೇಲಣ
ಧುರದ ವೃತ್ತಾಂತವನು ಕುರುಪತಿ
ಯಿರವನರಿಯೆನು ಕಂಡುಬಹೆನೇ ನೇಮವೇ ತನಗೆ
ಗುರುಸುತನು ಕೃಪ ಭೋಜ ಶಕುನಿಗ
ಳರಸನನು ಪರಿವೇಷ್ಟಿಸಿದರದ
ನರಿದು ಬಹೆನೆನೆ ಕಳುಹಿದನು ಧೃತರಾಷ್ಟ್ರ ಸಂಜಯನ ॥69॥