೦೦೦ ಸೂ ಸವೆದುದಗ್ಗದ ...{Loading}...
ಸೂ. ಸವೆದುದಗ್ಗದ ಪಾಂಡುಸುತ ಕೌ
ರವ ಬಲಾಂಬುಧಿ ಧರ್ಮತನುಜನ
ನವಗಡಿಸಿ ಸಮರದಲಿ ಮಡಿದನು ಮಾದ್ರಭೂಪಾಲ
೦೦೧ ಕೇಳು ಧೃತರಾಷ್ಟ್ರಾವನಿಪ ...{Loading}...
ಕೇಳು ಧೃತರಾಷ್ಟ್ರಾವನಿಪ ಭೂ
ಪಾಲ ಶಲ್ಯರ ಸಮರಕಿವರನು
ಕೂಲವಾದರಲೈ ಕೃಪಾದಿಗಳಿತ್ತಲಾಚೆಯಲಿ
ಮೇಳವಿಸಿತರ್ಜುನ ನಕುಲ ಪಾಂ
ಚಾಲ ಬಲಭೀಮಾದಿಗಳು ಪದ
ಧೂಳಿಯಲಿ ಜಗ ಮುಳುಗೆ ಜೋಡಿಸಿ ಜಡಿದುದುಭಯಬಲ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧೃತರಾಷ್ಟ್ರರಾಜನೇ ಕೇಳು, ಧರ್ಮರಾಯ-ಶಲ್ಯರ ಸಮರಕ್ಕೆ, ಇತ್ತ ಕೃಪಾಚಾರ್ಯಾದಿಗಳು ಸಹಾಯಕರಾದರು; ಆ ಕಡೆಯಲ್ಲಿ ಅರ್ಜನ, ನಕುಲ, ಪಾಂಚಾಲರು, ಭೀಮಾದಿಗಳು ತಮ್ಮ ಪಾದಧೂಳಿಯಿಂದ ಜಗತ್ತೇ ಮುಳುಗಿ ಹೋಯಿತೆಂಬಂತೆ ಹೆಜ್ಜೆ ಹಾಕುತ್ತಾ ನಡೆದರು. ಉಭಯ ಬಲಗಳೂ ಯುದ್ಧಕ್ಕೆ ಒಗ್ಗೂಡಿದವು.
ಮೂಲ ...{Loading}...
ಕೇಳು ಧೃತರಾಷ್ಟ್ರಾವನಿಪ ಭೂ
ಪಾಲ ಶಲ್ಯರ ಸಮರಕಿವರನು
ಕೂಲವಾದರಲೈ ಕೃಪಾದಿಗಳಿತ್ತಲಾಚೆಯಲಿ
ಮೇಳವಿಸಿತರ್ಜುನ ನಕುಲ ಪಾಂ
ಚಾಲ ಬಲಭೀಮಾದಿಗಳು ಪದ
ಧೂಳಿಯಲಿ ಜಗ ಮುಳುಗೆ ಜೋಡಿಸಿ ಜಡಿದುದುಭಯಬಲ ॥1॥
೦೦೨ ಕೆದರಿದನು ಕಲಿಭೀಮ ...{Loading}...
ಕೆದರಿದನು ಕಲಿಭೀಮ ಬಲವಂ
ಕದಲಿ ಸಾತ್ಯಕಿ ನಕುಲರೆಡವಂ
ಕದಲಿ ಚೂಣಿಗೆ ಚಿಮ್ಮಿದರು ಪಾಂಚಾಲನಾಯಕರು
ಮದಮುಖರನಿಕ್ಕಿದನು ಬಾಣೌ
ಘದಲಿ ಫಲುಗುಣನೊಂದು ಕಡೆಯಲಿ
ಸದೆದು ಸವರಿದರೊಂದು ಕಡೆಯಲಿ ದ್ರೌಪದೀಸುತರು ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಲಿಭೀಮನು ಬಲಭಾಗದಿಂದ, ಸಾತ್ಯಕಿ ನಕುಲರು ಎಡ ಭಾಗದಿಂದ ಯುದ್ಧ ಪ್ರಾರಂಭಿಸಿದರು. ಪಾಂಚಾಲನಾಯಕರು ಸೈನ್ಯದ ಮುಂಭಾಗಕ್ಕೆ ಹಾರಿ ಯುದ್ಧಕ್ಕೆ ಧುಮುಕಿದರು. ಗರ್ವಿತರಾದವರನ್ನು ಬಾಣಗಳಿಂದ ಹೊಡೆದು ಅರ್ಜುನನು ಒಂದು ಕಡೆಯಲ್ಲಿ ನಡೆದನು, ಮತ್ತೊಂದು ಕಡೆಯಲ್ಲಿ ದ್ರೌಪದಿಯ ಮಕ್ಕಳು ಕುರುಸೈನ್ಯವನ್ನು ಸದೆದರು.
ಪದಾರ್ಥ (ಕ.ಗ.ಪ)
ಕೆದರು-ಯುದ್ಧ ಪ್ರಾರಂಭಿಸು, ಬಲವಂಕ-ಬಲಭಾಗ, ಚೂಣಿ-ಸೈನ್ಯ, ಮದಮುಖ-ಗರ್ವಿತರಾದವರು, ಔಘ-ಪ್ರವಾಹ, ಸಮೂಹ ಸದೆ-ಹೊಡೆ.
ಮೂಲ ...{Loading}...
ಕೆದರಿದನು ಕಲಿಭೀಮ ಬಲವಂ
ಕದಲಿ ಸಾತ್ಯಕಿ ನಕುಲರೆಡವಂ
ಕದಲಿ ಚೂಣಿಗೆ ಚಿಮ್ಮಿದರು ಪಾಂಚಾಲನಾಯಕರು
ಮದಮುಖರನಿಕ್ಕಿದನು ಬಾಣೌ
ಘದಲಿ ಫಲುಗುಣನೊಂದು ಕಡೆಯಲಿ
ಸದೆದು ಸವರಿದರೊಂದು ಕಡೆಯಲಿ ದ್ರೌಪದೀಸುತರು ॥2॥
೦೦೩ ಕ್ಷಿತಿಪ ಚಿತ್ತೈಸೀಚೆಯಲಿ ...{Loading}...
ಕ್ಷಿತಿಪ ಚಿತ್ತೈಸೀಚೆಯಲಿ ಗುರು
ಸುತ ಸುಶರ್ಮಕ ಶಲ್ಯ ನಿನ್ನಯ
ಸುತನು ಕೃತವರ್ಮನು ಕೃಪಾಚಾರ್ಯಾದಿಗಳು ಮಸಗಿ
ಘೃತಸಮುದ್ರದ ಸೆರಗ ಸೋಂಕಿದ
ಹುತವಹನ ಸೊಂಪಿನಲಿ ವೈರಿ
ಪ್ರತತಿಯನು ತರುಬಿದರು ತರಿದರು ಸರಳ ಸಾರದಲಿ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೊರೆಯೇ ಕೇಳು, ಈ ಭಾಗದಲ್ಲಿ-ಕೌರವರ ಕಡೆ, ಅಶ್ವತ್ಥಾಮ, ಸುಶರ್ಮ, ಶಲ್ಯ, ನಿನ್ನ ಮಗನಾದ ದುರ್ಯೋಧನ, ಕೃತವರ್ಮ, ಕೃಪಾಚಾರ್ಯ ಮುಂತಾದವರು ಕೆರಳಿ, ತುಪ್ಪದ ಸಮುದ್ರದ ತುದಿಯನ್ನು ತಾಗಿದ ಅಗ್ನಿಯ ರೀತಿಯಲ್ಲಿ ವೈರಿಸಮೂಹವನ್ನು ಅಡ್ಡಗಟ್ಟಿ, ಶ್ರೇಷ್ಠವಾದ ಬಾಣಗಳಿಂದ ಶತ್ರುಗಳನ್ನು ತರಿದು ಹಾಕಿದರು.
ಪದಾರ್ಥ (ಕ.ಗ.ಪ)
ಕ್ಷಿತಿಪ-ಭೂಮಿಗೆ ಒಡೆಯ, ರಾಜ, ಮಸಗಿ-ಕೆರಳಿ, ಘೃತ-ತುಪ್ಪ, ಹುತವಹನ-ಅಗ್ನಿ, ಪ್ರತತಿ-ಸಮೂಹ, ತರುಬು-ಅಡ್ಡಗಟ್ಟಿನಿಲ್ಲಿಸು.
ಮೂಲ ...{Loading}...
ಕ್ಷಿತಿಪ ಚಿತ್ತೈಸೀಚೆಯಲಿ ಗುರು
ಸುತ ಸುಶರ್ಮಕ ಶಲ್ಯ ನಿನ್ನಯ
ಸುತನು ಕೃತವರ್ಮನು ಕೃಪಾಚಾರ್ಯಾದಿಗಳು ಮಸಗಿ
ಘೃತಸಮುದ್ರದ ಸೆರಗ ಸೋಂಕಿದ
ಹುತವಹನ ಸೊಂಪಿನಲಿ ವೈರಿ
ಪ್ರತತಿಯನು ತರುಬಿದರು ತರಿದರು ಸರಳ ಸಾರದಲಿ ॥3॥
೦೦೪ ಕೆಣಕಿದಡೆ ಗುರುಸುತನನಡಹಾ ...{Loading}...
ಕೆಣಕಿದಡೆ ಗುರುಸುತನನಡಹಾ
ಯ್ದಣೆದನಂಬಿನಲರ್ಜುನನ ಮಾ
ರ್ಗಣಮಹಾರಣ್ಯದಲಿ ನಡೆದುದು ಕಡಿತ ಗುರುಸುತನ
ರಣವಿಶಾರದರಹಿರಲೇ ನೀ
ವಣಕವೇತಕೆ ರಾಜಗುರುಗಳು
ಸೆಣಸುವರೆ ಸೈರಿಸಿರೆ ನೀವೆನುತೆಚ್ಚನಾ ಪಾರ್ಥ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಶ್ವತ್ಥಾಮನು ಕೆಣಕಿದರೆ, ಅರ್ಜುನನು ಅವನ ಮೇಲೆ ಬಿದ್ದು, ಬಾಣಗಳಿಂದ ಹೊಡೆದ. ಅರ್ಜುನನ ಬಾಣಗಳೆಂಬ ಮಹಾರಣ್ಯವನ್ನು ಗುರುಸುತನಾದ ಅಶ್ವತ್ಥಾಮನು ಕಡಿದುಹಾಕುವುದು ಮುಂದುವರಿಯಿತು. ಅಶ್ವತ್ಥಾಮನು ಅರ್ಜುನನ ಬಾಣಗಳನ್ನು ಕತ್ತರಿಸಿದ. ನೀವು ರಣವಿಶಾರದರಲ್ಲವೇ, ಅಣಕವೇಕೆ? ರಾಜಗುರುಗಳಾದವರು ಯುದ್ಧ ಮಾಡುತ್ತಾರೆಯೆ? ನನ್ನ ಬಾಣವನ್ನು ಸೈರಿಸಿ -ಎನ್ನುತ್ತಾ ಅರ್ಜುನ ಅಶ್ವತ್ಥಾಮನ ಮೇಲೆ ಬಾಣ ಪ್ರಯೋಗ ಮಾಡಿದ.
ಪದಾರ್ಥ (ಕ.ಗ.ಪ)
ಅಣೆ- ಹೊಡೆ ಮಾರ್ಗಣ-ಬಾಣ.
ಮೂಲ ...{Loading}...
ಕೆಣಕಿದಡೆ ಗುರುಸುತನನಡಹಾ
ಯ್ದಣೆದನಂಬಿನಲರ್ಜುನನ ಮಾ
ರ್ಗಣಮಹಾರಣ್ಯದಲಿ ನಡೆದುದು ಕಡಿತ ಗುರುಸುತನ
ರಣವಿಶಾರದರಹಿರಲೇ ನೀ
ವಣಕವೇತಕೆ ರಾಜಗುರುಗಳು
ಸೆಣಸುವರೆ ಸೈರಿಸಿರೆ ನೀವೆನುತೆಚ್ಚನಾ ಪಾರ್ಥ ॥4॥
೦೦೫ ಮೊಗೆದವಶ್ವತ್ಥಾಮನೆಚ್ಚಂ ...{Loading}...
ಮೊಗೆದವಶ್ವತ್ಥಾಮನೆಚ್ಚಂ
ಬುಗಳನರ್ಜುನನಂಬು ಪಾರ್ಥನ
ಬಿಗಿದವಾ ನಿಮಿಷದಲಿ ಭಾರದ್ವಾಜ ಶರಜಾಲ
ತಗಡುಗಿಡಿಗಳ ಸೂಸುವುರಿಧಾ
ರೆಗಳ ಘೃತಲೇಪನದ ಬಂಧದ
ಹೊಗರುಗಣೆ ಹೂಳಿದುವು ಗುರುಸುತನಂಬಿನಂಬುಧಿಯ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಶ್ವತ್ಥಾಮನು ಹೊಡೆದ ಬಾಣಗಳನ್ನು ಪಾರ್ಥನ ಬಾಣಗಳು ಬಾಚಿಕೊಂಡಿವು, ಒಂದೇ ನಿಮಿಷದಲ್ಲಿ ಭಾರದ್ವಾಜನಾದ ಅಶ್ವತ್ಥಾಮನ ಬಾಣಗಳು ಅರ್ಜುನನ್ನು ಕಟ್ಟಿಹಾಕಿದವು. ಲೋಹದ ಹಾಳೆಗಳಿಂದ ಹೊರಡುವ ಕಿಡಿಗಳ, ಹೊರಬರುತ್ತಿರುವ ಬೆಂಕಿಯ ಧಾರೆಯ, ತುಪ್ಪವನ್ನು ಹೊರಗೆ ಸವರಿದ ಬಾಣಗಳು ಅಶ್ವತ್ಥಾಮನ ಬಾಣಗಳ ಸಮುದ್ರವನ್ನು ಮುಚ್ಚಿದವು.
ಪದಾರ್ಥ (ಕ.ಗ.ಪ)
ಮೊಗೆ-ಬಾಚು, ಬೊಗಸೆಯಲ್ಲಿ ಹಿಡಿ, ಹೊರಗುಗಣೆ-ಬಾಣಗಳ ಹೊರಭಾಗ, ಹೂಳು-ತುಂಬು, ನಾಟು, ಮುಚ್ಚು.
ಟಿಪ್ಪನೀ (ಕ.ಗ.ಪ)
ಭಾರದ್ವಾಜ-ದ್ರೋಣನ ತಂದೆ ಭರದ್ವಾಜ, ಅವನ ವಂಶದಲ್ಲಿ ಹುಟ್ಟಿದ ಅಶ್ವಾತ್ಥಾಮನನ್ನು ಭಾರದ್ವಾಜನೆಂದು ಕರೆದಿದೆ.
ಮೂಲ ...{Loading}...
ಮೊಗೆದವಶ್ವತ್ಥಾಮನೆಚ್ಚಂ
ಬುಗಳನರ್ಜುನನಂಬು ಪಾರ್ಥನ
ಬಿಗಿದವಾ ನಿಮಿಷದಲಿ ಭಾರದ್ವಾಜ ಶರಜಾಲ
ತಗಡುಗಿಡಿಗಳ ಸೂಸುವುರಿಧಾ
ರೆಗಳ ಘೃತಲೇಪನದ ಬಂಧದ
ಹೊಗರುಗಣೆ ಹೂಳಿದುವು ಗುರುಸುತನಂಬಿನಂಬುಧಿಯ ॥5॥
೦೦೬ ಅರಸು ಕೇಳಡಹಾಯ್ದು ...{Loading}...
ಅರಸು ಕೇಳಡಹಾಯ್ದು ಪಾರ್ಥನ
ವರ ರಥವ ಹಿಂದಿಕ್ಕಿ ಪವನಜ
ನುರವಣಿಸಿದನು ನಕುಲ ಸಾತ್ಯಕಿ ಸಹಿತ ಗುರುಸುತನ
ಸರಳ ಸರಿವಳೆಗಳ ಸಘಾಡದ
ಲರಿಭಟನು ನನೆದನು ಮಹೋಗ್ರದ
ಧುರವ ಕಂಡನು ನೃಪತಿ ಬಂದನು ಬಿಟ್ಟ ಸೂಠಿಯಲಿ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧೃತರಾಷ್ಟನೇ ಕೇಳು, ಭೀಮನು ಯುದ್ಧರಂಗವನ್ನು ಪ್ರವೇಶಿಸಿ ಅರ್ಜುನನ ರಥವನ್ನು ಹಿಂದಕ್ಕೆ ಹಾಕಿ, ನಕುಲ, ಸಾತ್ಯಕಿಯರೊಂದಿಗೆ ಅಶ್ವತ್ಥಾಮನನ್ನು ಕೆಣಕಿದ. ಬಾಣಗಳ ಮಳೆಯ ಅರ್ಭಟದಲ್ಲಿ ಶತ್ರುಭಟನಾದ ಭೀಮನು ಕುರುಸೈನ್ಯವನ್ನು ನಿರ್ನಾಮ ಮಾಡಿದ. ಇಂತಹ ಮಹೋಗ್ರವಾದ ಯುದ್ಧವನ್ನು ಕಂಡ ದುರ್ಯೋಧನ ವೇಗವಾಗಿ ಬಂದನು.
ಪದಾರ್ಥ (ಕ.ಗ.ಪ)
ಉರವಣಿಸು-ಉತ್ಸಾಹದಿಂದ ಮೇಲೆ ಬೀಳು, ಸವೆದನು-ನಿರ್ನಾಮ ಮಾಡಿದ, ಧುರ-ಯುದ್ಧ, ಸೂಠಿ-ವೇಗ
ಮೂಲ ...{Loading}...
ಅರಸು ಕೇಳಡಹಾಯ್ದು ಪಾರ್ಥನ
ವರ ರಥವ ಹಿಂದಿಕ್ಕಿ ಪವನಜ
ನುರವಣಿಸಿದನು ನಕುಲ ಸಾತ್ಯಕಿ ಸಹಿತ ಗುರುಸುತನ
ಸರಳ ಸರಿವಳೆಗಳ ಸಘಾಡದ
ಲರಿಭಟನು ನನೆದನು ಮಹೋಗ್ರದ
ಧುರವ ಕಂಡನು ನೃಪತಿ ಬಂದನು ಬಿಟ್ಟ ಸೂಠಿಯಲಿ ॥6॥
೦೦೭ ರಾಯ ಹೊಕ್ಕನು ...{Loading}...
ರಾಯ ಹೊಕ್ಕನು ಭೀಮಸೇನನ
ದಾಯ ಬಲುಹೋ ಧರ್ಮಪುತ್ರನ
ದಾಯವಲ್ಲಿದು ನೂಕೆನುತ ಕೃತವರ್ಮಗೌತಮರು
ಸಾಯಕದ ಮಳೆಗರೆದು ಕೌರವ
ರಾಯನನು ಹಿಂದಿಕ್ಕಿ ವೇಢೆಯ
ವಾಯುಜನ ವಂಗಡವ ಮುರಿದರು ತರಿದರರಿಬಲವ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುರ್ಯೋಧನ ಯುದ್ಧರಂಗಕ್ಕೆ ಪ್ರವೇಶಿಸಿದ. ಇದು ಧರ್ಮರಾಯನ ಭಾಗಕ್ಕೆ ಬಂದ ಯುದ್ಧವಲ್ಲ, ಭೀಮಸೇನನ ಪಾಲಿನ ಯುದ್ಧ, ಹಾಗಾಗಿ ಇದು ಬಹು ದೊಡ್ಡ ಕಾಳಗ, ಯುದ್ಧಕ್ಕೆ ಮುಂದುವರಿಯಿರಿ ಎನ್ನುತ್ತ ಕೃತವರ್ಮ ಮತ್ತು ಕೃಪಾಚಾರ್ಯರು ಬಾಣಗಳ ಮಳೆಯನ್ನು ಕರೆದು, ದುರ್ಯೋಧನನನ್ನು ತಮ್ಮ ಹಿಂದಕ್ಕೆ ಬಿಟ್ಟುಕೊಂಡು ಭೀಮನ ಮುತ್ತಿಗೆಯನ್ನು ಮತ್ತು ಅವನ ಸೇನಾಸಮೂಹವನ್ನು ಮುರಿದುಹಾಕಿ ಶತ್ರುಸೈನ್ಯವನ್ನು ತರಿದರು.
ಪದಾರ್ಥ (ಕ.ಗ.ಪ)
ದಾಯ-ಪಾಲು, ಭಾಗ, ಸಾಯಕ-ಬಾಣ, ವೇಢೆಯ-ಮುತ್ತಿಗೆ, ಆಕ್ರಮಣ, ವಂಗಡ-ಗುಂಪು.
ಮೂಲ ...{Loading}...
ರಾಯ ಹೊಕ್ಕನು ಭೀಮಸೇನನ
ದಾಯ ಬಲುಹೋ ಧರ್ಮಪುತ್ರನ
ದಾಯವಲ್ಲಿದು ನೂಕೆನುತ ಕೃತವರ್ಮಗೌತಮರು
ಸಾಯಕದ ಮಳೆಗರೆದು ಕೌರವ
ರಾಯನನು ಹಿಂದಿಕ್ಕಿ ವೇಢೆಯ
ವಾಯುಜನ ವಂಗಡವ ಮುರಿದರು ತರಿದರರಿಬಲವ ॥7॥
೦೦೮ ಪಡಿಬಲಕೆ ಹೊಕ್ಕುದು ...{Loading}...
ಪಡಿಬಲಕೆ ಹೊಕ್ಕುದು ತ್ರಿಗರ್ತರ
ಗಡಣ ಕೃಪ ಕೃತವರ್ಮರಿಗೆ ಸಂ
ಗಡಿಗನಶ್ವತ್ಥಾಮನೀ ಹೇರಾಳ ದಳಸಹಿತ
ಕೊಡಹಿದರು ಪಾಂಡವಬಲವನವ
ಗಡಿಸಿದರು ಪವಮಾನಜನನ
ಕ್ಕುಡಿಸಿ ಬೆಬ್ಬಳೆವೋಯ್ತು ಭೀಮನ ಭಾರಣೆಯ ಭಟರು ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತ್ರಿಗರ್ತರ ಸೈನ್ಯಸಮೂಹವು ಎದುರು ಬಲವನ್ನು ಪ್ರವೇಶಿಸಿತು. ಕೃಪ, ಕೃತವರ್ಮರಿಗೆ ಸಂಗಡನಾಗಿ ಅಶ್ವತ್ಥಾಮ ಹೇರಳವಾದ ತನ್ನ ಬಲಸಹಿತ ಪಾಂಡವ ಸೈನ್ಯವನ್ನು ಕೊಡವಿದನು, ಭೀಮನನ್ನು ಭಂಗಿಸಿ ಅವಹೇಳನ ಮಾಡಲು ಅವನ ಘನತೆಯ ಭಟರುಗಳು ಗಾಬರಿಯಿಂದ ಬೆರಗಾದರು.
ಪದಾರ್ಥ (ಕ.ಗ.ಪ)
ಅವಗಡಿಸು-ಭಂಗಿಸು, ಸೋಲಿಸು, ಹೀಯಾಳಿಸು, ಅಕ್ಕುಡಿಸು-ಹಿಮ್ಮೆಟ್ಟಿಸು, ಬೆಬ್ಬಳೆ-ಬೆರಗು, ಗಾಬರಿ ಭಾರಣೆ-ಘನತೆ, ಮರ್ಯಾದೆ.
ಮೂಲ ...{Loading}...
ಪಡಿಬಲಕೆ ಹೊಕ್ಕುದು ತ್ರಿಗರ್ತರ
ಗಡಣ ಕೃಪ ಕೃತವರ್ಮರಿಗೆ ಸಂ
ಗಡಿಗನಶ್ವತ್ಥಾಮನೀ ಹೇರಾಳ ದಳಸಹಿತ
ಕೊಡಹಿದರು ಪಾಂಡವಬಲವನವ
ಗಡಿಸಿದರು ಪವಮಾನಜನನ
ಕ್ಕುಡಿಸಿ ಬೆಬ್ಬಳೆವೋಯ್ತು ಭೀಮನ ಭಾರಣೆಯ ಭಟರು ॥8॥
೦೦೯ ಫಡ ಎನುತ ...{Loading}...
ಫಡ ಎನುತ ಪಾಂಚಾಲಬಲ ಸಂ
ಗಡಿಸಿತನಿಲಜನೊಡನೆ ಸೃಂಜಯ
ರೆಡೆಯಲಡಹಾಯಿದರು ಸುತ ಸೋಮಾದಿಗಳು ಸಹಿತ
ಕಡೆವಿಡಿದು ಕಲಿಪಾರ್ಥನಂಬಿನ
ವಡಬನೆದ್ದುದು ಕುರುಬಲದ ಹೆ
ಗ್ಗಡಲು ಬರತುದು ಹೇಳಲೇನದ ಭೂಪ ಕೇಳ್ ಎಂದ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಫಡ!ಫಡ! ಎನ್ನುತ್ತ ಪಾಂಚಾಲಬಲವೆಲ್ಲವೂ, ಭೀಮನೊಂದಿಗೆ ಸೇರಿಕೊಂಡಿತು. ಸೃಂಜಯರು ಸುತ-ಸೋಮರೊಂದಿಗೆ ಮೇಲೆ ಬಿದ್ದರು. ಒಂದು ತುದಿಯಿಂದ ಪ್ರಾರಂಭವಾದ ಕಲಿಪಾರ್ಥನ ಬಾಣಗಳೆಂಬ ಬಡಬಾಗ್ನಿಯು ಎದ್ದು ಉರಿಯತೊಡಗಲು ಕುರುಬಲವೆಂಬ ಬಲುಗಡಲು ಬತ್ತಿಹೋಯಿತು. ಅದನ್ನು ಏನು ಹೇಳಲಿ ಎಂದು ಸಂಜಯ ಧೃತರಾಷ್ಟ್ರನಿಗೆ ವಿವರಣೆ ನೀಡಿದ.
ಪದಾರ್ಥ (ಕ.ಗ.ಪ)
ಸಂಗಡಿಸು-ಒಂದುಗೂಡು, ವಡಬ-ಪ್ರಳಯ ಕಾಲದಲ್ಲಿ ಸಮುದ್ರದಲ್ಲಿ ಏಳುವ ಬೆಂಕಿ, ಬರತುದು-ಬತ್ತಿತು.
ಟಿಪ್ಪನೀ (ಕ.ಗ.ಪ)
ಸೃಂಜಯರು-ಶಲ್ಯಪರ್ವದ 2ನೆಯ ಸಂಧಿಯ 23ನೆಯ ಪದ್ಯದ ಟಿಪ್ಪಣಿಯನ್ನು ನೋಡಿ ಸುತ ಸೋಮಾದಿಗಳು-
ಮೂಲ ...{Loading}...
ಫಡ ಎನುತ ಪಾಂಚಾಲಬಲ ಸಂ
ಗಡಿಸಿತನಿಲಜನೊಡನೆ ಸೃಂಜಯ
ರೆಡೆಯಲಡಹಾಯಿದರು ಸುತ ಸೋಮಾದಿಗಳು ಸಹಿತ
ಕಡೆವಿಡಿದು ಕಲಿಪಾರ್ಥನಂಬಿನ
ವಡಬನೆದ್ದುದು ಕುರುಬಲದ ಹೆ
ಗ್ಗಡಲು ಬರತುದು ಹೇಳಲೇನದ ಭೂಪ ಕೇಳೆಂದ ॥9॥
೦೧೦ ಆ ಸಮಯದಲಿ ...{Loading}...
ಆ ಸಮಯದಲಿ ಬಹಳ ಶೌರ್ಯಾ
ವೇಶದಲಿ ನಿನ್ನಾತ ನೂಕಿದ
ನಾ ಶಕುನಿಯೈವತ್ತು ಸಾವಿರ ತುರಗದಳ ಸಹಿತ
ಕೇಸುರಿಯ ಕರ್ಬೊಗೆಯವೊಲು ನಿ
ಟ್ಟಾಸಿನಾಯುಧದಾನೆಗಳು ಕೈ
ವೀಸುವಲ್ಲಿಂ ಮುನ್ನ ಮೊಗೆದುವು ವೈರಿಮೋಹರವ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಸಮಯದಲ್ಲಿ ನಿನ್ನ ಪಕ್ಷದ ಶಕುನಿಯು ಶೌರ್ಯಾವೇಶದಿಂದ ಐವತ್ತು ಸಾವಿರ ಕುದುರೆಗಳ ಸೈನ್ಯಸಮೇತ ಯುದ್ಧಕ್ಕೆ ಮುಂದುವರಿದ. ಮೇಲಿನಿಂದ ಎತ್ತಿ ಬಿಡುವ ಆಯುಧಗಳನ್ನು ಕಟ್ಟಿದ್ದ ಆನೆಗಳು ,ಕೆಂಪಾದ ಉರಿ ದಟ್ಟವಾದ ಹೊಗೆ ಕ್ಷಿಪ್ರವಾಗಿ ವ್ಯಾಪಿಸುವಂತೆ ತಮಗೆ ಯುದ್ಧರಂಗಕ್ಕೆ ಪ್ರವೇಶಿಸಲು, ನಾಯಕರು ಕೈಬೀಸುವ ಮೊದಲೇ ಶತ್ರು ಸೈನ್ಯವನ್ನು ಆಕ್ರಮಿಸಿದವು.
ಪದಾರ್ಥ (ಕ.ಗ.ಪ)
ನಿಟ್ಟಾಸು- ಮೇಲಿನಿಂದ ಎತ್ತಿಬಿಡುವ ( ಆಸು - ಊಧ್ರ್ವ ವಿಮೋಚನೆ- ಶಮಧಾ)
ಮೊಗೆ-ಬಾಚಿಕೊಳ್ಳು, ಆತುಕೊಳ್ಳು, ನುಗ್ಗು.
ಮೂಲ ...{Loading}...
ಆ ಸಮಯದಲಿ ಬಹಳ ಶೌರ್ಯಾ
ವೇಶದಲಿ ನಿನ್ನಾತ ನೂಕಿದ
ನಾ ಶಕುನಿಯೈವತ್ತು ಸಾವಿರ ತುರಗದಳ ಸಹಿತ
ಕೇಸುರಿಯ ಕರ್ಬೊಗೆಯವೊಲು ನಿ
ಟ್ಟಾಸಿನಾಯುಧದಾನೆಗಳು ಕೈ
ವೀಸುವಲ್ಲಿಂ ಮುನ್ನ ಮೊಗೆದುವು ವೈರಿಮೋಹರವ ॥10॥
೦೧೧ ಗಜದಳದ ಘಾಡಿಕೆಗೆ ...{Loading}...
ಗಜದಳದ ಘಾಡಿಕೆಗೆ ವಾಜಿ
ವ್ರಜದ ವೇಢೆಗೆ ಭೀಮನೇ ಗಜ
ಬಜಿಸುವನೆ ಹೊಡೆಸೆಂಡನಾಡಿದನಹಿತ ಮೋಹರವ
ಗುಜರು ಗುಲ್ಮದ ಕುಂಜರಾಶ್ವ
ವ್ರಜದ ಮೆಳೆಯೊಣಗಿದುದು ಪವಮಾ
ನಜ ಪರಾಕ್ರಮಶಿಖಿಯ ಝಳ ಝೊಂಪಿಸಿತು ನಿಮಿಷದಲಿ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆನೆಗಳ ಸೈನ್ಯದ ಸಮೂಹಕ್ಕೆ, ಕುದುರೆಗಳ ಮುತ್ತಿಗೆಗೆ ಗಜಬಜಿಸುವವನು ಭೀಮನೇ? ಶತ್ರುಸೈನ್ಯವನ್ನು ಹೊಡೆ ಚೆಂಡಾಟವಾಡಿದ. ಪೊದೆಯಂತೆ ಹೆಣೆದುಕೊಂಡಿರುವ ಸೇನಾತುಕಡಿಗಳ , ಆನೆ-ಕುದುರೆಗಳ ಸಮೂಹದ ಮುಖಗಳು ಒಣಗಿಹೋದುವು. ಒಂದು ನಿಮಿಷದಲ್ಲಿ ಭೀಮನ ಪರಾಕ್ರಮವೆಂಬ ಅಗ್ನಿಯ ಝುಳ ಶತ್ರುಸೈನಿಕರನ್ನು ಮುತ್ತಿತ್ತು.
ಪದಾರ್ಥ (ಕ.ಗ.ಪ)
ಘಾಡಿಕೆ-ಸಮೂಹ, ವೇಢೆ-ಮುತ್ತಿಗೆ, ಹೊಡೆಸೆಂಡು-ಚಂಡಿನಲ್ಲಿ ಹೊಡೆದಾಡುವ ಆಟ, ಗುಜರು-ಹೆಣೆದುಕೊಂಡಿರುವ, ಜೊಂಡಿನಂತಿರುವ, ಗುಲ್ಮ-ಸೇನೆಯ ಒಂದು ತುಕಡಿ, ಸೇನಾಭಾಗ, ಕುಂಜರ-ಆನೆ, ವ್ರಜ-ಸಮೂಹ, ಮೆಳೆ - ಪೊದೆ
ಮೂಲ ...{Loading}...
ಗಜದಳದ ಘಾಡಿಕೆಗೆ ವಾಜಿ
ವ್ರಜದ ವೇಢೆಗೆ ಭೀಮನೇ ಗಜ
ಬಜಿಸುವನೆ ಹೊಡೆಸೆಂಡನಾಡಿದನಹಿತ ಮೋಹರವ
ಗುಜರು ಗುಲ್ಮದ ಕುಂಜರಾಶ್ವ
ವ್ರಜದ ಮೆಳೆಯೊಣಗಿದುದು ಪವಮಾ
ನಜ ಪರಾಕ್ರಮಶಿಖಿಯ ಝಳ ಝೊಂಪಿಸಿತು ನಿಮಿಷದಲಿ ॥11॥
೦೧೨ ಅಳಿದುದೈನೂರಾನೆ ಸಾವಿರ ...{Loading}...
ಅಳಿದುದೈನೂರಾನೆ ಸಾವಿರ
ಬಲುಗುದುರೆ ರಥ ಮೂರು ಸಾವಿರ
ನೆಲಕೆ ಕೈವರ್ತಿಸಿತು ಭೀಮನ ಹೊಯ್ಲ ಹೋರಟೆಗೆ
ಬಿಲುಹರಿಗೆ ಸಬಳದ ಪದಾತಿಯ
ತಲೆಯ ತೊಡಸಿದನೆಂಟು ಲಕ್ಕವ
ನುಳಿದ ಬಲವೋಲೈಸುತಿರ್ದುದು ಘನ ಪಲಾಯನವ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಐದುನೂರು ಆನೆಗಳು ಮಡಿದವು. ಒಂದು ಸಾವಿರ ದೊಡ್ಡಕುದುರೆಗಳು, ಮೂರುಸಾವಿರ ರಥಗಳು ಭೀಮನ ಹೊಡೆತದ ಹೋರಾಟಕ್ಕೆ ಸಿಕ್ಕಿ ನೆಲಕ್ಕೆ ಬಿದ್ದುವು. ಬಿಲ್ಲು, ಹರಿಗೆ, ಈಟಿಗಳನ್ನು ಹಿಡಿದಿದ್ದ ಕಾಲುದಳಗಳ ಎಂಟು ಲಕ್ಷ ಸೈನಿಕರ ತಲೆಗಳನ್ನು ಭೀಮ ತರಿದು ಹಾಕಿದ. ಬದುಕಿ ಉಳಿದ ಸೈನ್ಯವು ಪಲಾಯನತಂತ್ರವನ್ನು ಓಲೈಸುತ್ತಿತ್ತು-ಪಲಾಯನ ಮಾಡಿತು.
ಪದಾರ್ಥ (ಕ.ಗ.ಪ)
ಕೈವರ್ತಿಸು-ವಶವಾಗು, ಹೊಯ್ಲು-ಹೊಡೆತ, ಹರಿಗೆ-ಒಂದು ಆಯುಧ, ಸಬಳ-ಈಟಿಯಂತಹ ಆಯುಧ.
ಮೂಲ ...{Loading}...
ಅಳಿದುದೈನೂರಾನೆ ಸಾವಿರ
ಬಲುಗುದುರೆ ರಥ ಮೂರು ಸಾವಿರ
ನೆಲಕೆ ಕೈವರ್ತಿಸಿತು ಭೀಮನ ಹೊಯ್ಲ ಹೋರಟೆಗೆ
ಬಿಲುಹರಿಗೆ ಸಬಳದ ಪದಾತಿಯ
ತಲೆಯ ತೊಡಸಿದನೆಂಟು ಲಕ್ಕವ
ನುಳಿದ ಬಲವೋಲೈಸುತಿರ್ದುದು ಘನ ಪಲಾಯನವ ॥12॥
೦೧೩ ತಡೆದನಶ್ವತ್ಥಾಮ ಭೀಮನ ...{Loading}...
ತಡೆದನಶ್ವತ್ಥಾಮ ಭೀಮನ
ಕಡುಹನಾ ಸಹದೇವ ನಕುಲರ
ನಡುಗಿಸಿದನುಡುಗಿಸಿದನಾಟೋಪವನು ಪವನಜನ
ಇಡಿದುದಂಬರವಂಬಿನಲಿ ಕೈ
ಗಡಿಯನಂಬಿನ ಲಕ್ಷ ್ಯಭೇದವ
ನುಡಿಯಬಲ್ಲವನಾರು ಗುರುನಂದನನ ಸಮರದಲಿ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮನ ಪರಾಕ್ರಮವನ್ನು ಅಶ್ವತ್ಥಾಮ ತಡೆದ, ಸಹದೇವ ನಕುಲರನ್ನು ನಡುಗಿಸಿದ, ಭೀಮನ ಆಟೋಪವನ್ನು ಉಡುಗಿಸಿದ. ಆಕಾಶವೆಲ್ಲ ಬಾಣಮಯವಾಯಿತು. ಬಾಣಗಳನ್ನು ಕೈಯಿಂದಲೇ ಕತ್ತರಿಸಿಹಾಕುವ ಅಶ್ವತ್ಥಾಮನ ಲಕ್ಷ್ಯ ಭೇಧವನ್ನು ಯುದ್ಧದಲ್ಲಿ ಹೊಗಳಬಲ್ಲವನಾರು.
ಪದಾರ್ಥ (ಕ.ಗ.ಪ)
ಕಡುಹು-ಶಕ್ತಿ, ಸಾಮರ್ಥ್ಯ, ಸಾಹಸ ಇಡಿದುದು-ಪುಡಿಪುಡಿಮಾಡಿದುದು.
ಮೂಲ ...{Loading}...
ತಡೆದನಶ್ವತ್ಥಾಮ ಭೀಮನ
ಕಡುಹನಾ ಸಹದೇವ ನಕುಲರ
ನಡುಗಿಸಿದನುಡುಗಿಸಿದನಾಟೋಪವನು ಪವನಜನ
ಇಡಿದುದಂಬರವಂಬಿನಲಿ ಕೈ
ಗಡಿಯನಂಬಿನ ಲಕ್ಷ ್ಯಭೇದವ
ನುಡಿಯಬಲ್ಲವನಾರು ಗುರುನಂದನನ ಸಮರದಲಿ ॥13॥
೦೧೪ ಪವನಜನನೆಣ್ಟಮ್ಬಿನಲಿ ಪಾಂ ...{Loading}...
ಪವನಜನನೆಂಟಂಬಿನಲಿ ಪಾಂ
ಡವಸುತರನೈವತ್ತರಲಿ ಯಾ
ದವನನಿಪ್ಪತ್ತಂಬಿನಲಿ ಮಾದ್ರೀಕುಮಾರಕರ
ಕವಲುಗೋಲಿಪ್ಪತ್ತರಲಿ ಮುರಿ
ದವಗಡಿಸಿ ಪಾಂಚಾಲ ಸೃಂಜಯ
ನಿವಹವನು ನೂರಂಬಿನಲಿ ಕೆಡೆಯೆಚ್ಚು ಬೊಬ್ಬಿರಿದ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಶ್ವತ್ಥಾಮನು, ಭೀಮನನ್ನು ಎಂಟು ಬಾಣಗಳಲ್ಲಿ, ಪಾಂಡವರ ಮಕ್ಕಳನ್ನು ಐವತ್ತು ಬಾಣಗಳಲ್ಲಿ, ಯಾದವನಾದ ಕೃಷ್ಣನನ್ನು ಇಪ್ಪತ್ತು ಬಾಣಗಳಲ್ಲಿ, ಮಾದ್ರೀಕುಮಾರರಾದ ನಕುಲ ಸಹದೇವರನ್ನು ಇಪ್ಪತ್ತು ಕವಲು ಬಾಣಗಳಲ್ಲಿ ಹೊಡೆದು ಅವಮಾನ ಪಡಿಸಿ ಪಾಂಚಾಲರ ಮತ್ತು ಸೃಂಜಯರ ಸೈನ್ಯಗಳನ್ನು ಮೂರು ಬಾಣಗಳಲ್ಲಿ ಹೊಡೆದು ಬೊಬ್ಬಿರಿದ.
ಟಿಪ್ಪನೀ (ಕ.ಗ.ಪ)
ಪಾಂಚಾಲರು - ಪಾಂಚಾಲ ದೇಶದ ರಾಜನಾದ ದ್ರುಪದನ ಮಕ್ಕಳಾದ ಧೃಷ್ಟದ್ಯುಮ್ನ, ಶಿಖಂಡಿ ಚೇಕಿತಾನ, ಯುಧಾಮನ್ಯು ಉತ್ತಮೌಂಜಸ ಮತ್ತು ಅವರ ಸೈನ್ಯ ನೋಡಿ
ಸೃಂಜಯ - ಶಲ್ಯಪರ್ವದ 2ನೆಯ ಸಂಧಿಯ 23ನೆಯ ಪದ್ಯದ ಟಿಪ್ಪಣಿಯನ್ನು ನೋಡಿ
ಮೂಲ ...{Loading}...
ಪವನಜನನೆಂಟಂಬಿನಲಿ ಪಾಂ
ಡವಸುತರನೈವತ್ತರಲಿ ಯಾ
ದವನನಿಪ್ಪತ್ತಂಬಿನಲಿ ಮಾದ್ರೀಕುಮಾರಕರ
ಕವಲುಗೋಲಿಪ್ಪತ್ತರಲಿ ಮುರಿ
ದವಗಡಿಸಿ ಪಾಂಚಾಲ ಸೃಂಜಯ
ನಿವಹವನು ನೂರಂಬಿನಲಿ ಕೆಡೆಯೆಚ್ಚು ಬೊಬ್ಬಿರಿದ ॥14॥
೦೧೫ ಏನ ಹೇಳುವೆ ...{Loading}...
ಏನ ಹೇಳುವೆ ಗಜಘಟಾಪ್ರತಿ
ಮಾನದಲಿ ಕೋದಂಬುಗಳು ಹಿಂ
ಡಾನೆಗಳನೇಳೆಂಟನೊದೆದೋಡಿದವು ಪೇಚಕವ
ಭಾನು ರಶ್ಮಿಗಳಂಧಕಾರದ
ಮಾನಗರ್ವವ ಮುರಿವವೊಲು ಗುರು
ಸೂನುವಿನ ಶರ ಸವರಿದವು ಕರಿಘಟೆಯ ಬಲುಮೆಳೆಯ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಏನ ಹೇಳಲಿ! ಆನೆಗಳ ದಂತಗಳ ಮಧ್ಯಪ್ರದೇಶದಲ್ಲಿ ತೂರಿಸಿದ ಬಾಣಗಳು ಏಳೆಂಟು ಹಿಂಡಾನೆಗಳನ್ನು ಸೀಳಿಕೊಂಡು ಯುದ್ಧರಂಗದ ಆಚೆಗೆ ಓಡಿದವು. ಸೂರ್ಯಕಿರಣಗಳು ಅಂಧಕಾರದ ಅಹಂಕಾರವನ್ನು ಮುರಿದು-ಕತ್ತಲೆಯನ್ನು ಓಡಿಸುವಂತೆ-ಗುರುಪುತ್ರನಾದ ಅಶ್ವತ್ಥಾಮನ ಬಾಣಗಳು ಆನೆಗಳ ಗುಂಪೆಂಬ ಬಿದಿರುಮೆಳೆಗಳನ್ನು ಸವರಿಹಾಕಿದವು.
ಪದಾರ್ಥ (ಕ.ಗ.ಪ)
ಪ್ರತಿಮಾನ-ಆನೆಯ ದಂತಗಳ ಮಧ್ಯ ಪ್ರದೇಶ, ಕೋದ-ಪೋಣಿಸಿದ, ತೂರಿಸಿದ ಪೇಚಕ-ಆನೆಯ ಬಾಲದ ಬುಡ.
ಪಾಠಾನ್ತರ (ಕ.ಗ.ಪ)
‘ಪಂಚಕ’ವೆಂಬ ಶಬ್ದ ಇಲ್ಲಿ ಯುದ್ಧರಂಗವೆಂಬರ್ಥದಲ್ಲಿದೆ. ಇದಕ್ಕೆ ‘ಪೇಚಕ’ವೆಂಬ ಪಾಠಾಂತರವಿದೆ. ಪೇಚಕ’ವೆಂದರೆ. ಆನೆಯ ಬಾಲದ ಬುಡ, ಎಂಬರ್ಥವಿದ್ದು, ಆನೆಗಳ ದಂತಗಳ ಮಧ್ಯ ಭಾಗದಿಂದ ಹೊರಟ ಬಾಣ ಅವುಗಳ ಹಿಂಭಾಗದಿಂದ ಹೊರಬಂದಿತು ಎಂಬುದು ಈ ಸಂದರ್ಭದ ಅರ್ಥ: ಈ ಪಾಠಾಂತರವನ್ನು ಸ್ವೀಕರಿಸಿಬಹುದು.
ಮೂಲ ...{Loading}...
ಏನ ಹೇಳುವೆ ಗಜಘಟಾಪ್ರತಿ
ಮಾನದಲಿ ಕೋದಂಬುಗಳು ಹಿಂ
ಡಾನೆಗಳನೇಳೆಂಟನೊದೆದೋಡಿದವು ಪೇಚಕವ
ಭಾನು ರಶ್ಮಿಗಳಂಧಕಾರದ
ಮಾನಗರ್ವವ ಮುರಿವವೊಲು ಗುರು
ಸೂನುವಿನ ಶರ ಸವರಿದವು ಕರಿಘಟೆಯ ಬಲುಮೆಳೆಯ ॥15॥
೦೧೬ ತಾಗಿದವು ಕನ್ದದಲಿ ...{Loading}...
ತಾಗಿದವು ಕಂದದಲಿ ನಾಳಿಕೆ
ಗಾಗಿ ಹೊರವಂಟಶ್ವನಿಕರವ
ನೀಗಿದವು ಶರವೊಂದು ಸಾವಿರ ರಥಹಯಾವಳಿಯ
ಬೀಗಿದವು ಕಾಲಾಳ ಕಬಳಿಸಿ
ತೇಗಿದವು ಚತುರಂಗವನು ವಿನಿ
ಯೋಗಿಸಿದವಂತಕನ ಮನೆಗಂಬುಗಳು ಗುರುಸುತನ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಶ್ವತ್ಥಾಮನ ಬಾಣಗಳು ಕುದುರೆಗಳ ಕುತ್ತಿಗೆಯ ಭಾಗಕ್ಕೆ ತಾಗಿ, ಅಲ್ಲಿಂದ ರಕ್ತನಾಳಗಳನ್ನು ಸೀಳಿಕೊಂಡು ಆಚೆಗೆ ಹೋಗಿ ಕುದುರೆಗಳ ಸಮೂಹವನ್ನು ನಾಶಮಾಡಿದವು. ಒಂದು ಸಾವಿರ ಬಾಣಗಳು ರಥ-ಕುದುರೆಗಳನ್ನು ನಾಶಮಾಡಿದವು. ಅಶ್ವತ್ಥಾಮನ ಬಾಣಗಳು ಕಾಲಾಳುಗಳನ್ನು ತಿಂದು ಮೆರೆದವು. ಚತುರಂಗಬಲವನ್ನು ಯಮನ ಆರೋಗಣೆಗೆ ವಿನಿಯೋಗಿಸಿದವು.
ಪದಾರ್ಥ (ಕ.ಗ.ಪ)
ಕಂದ-ಕುದುರೆಯ ಕುತ್ತಿಗೆ, ನಾಳಿಕೆ-ರಕ್ತನಾಳ, ಬೀಗು-ಮೆರೆ
ಮೂಲ ...{Loading}...
ತಾಗಿದವು ಕಂದದಲಿ ನಾಳಿಕೆ
ಗಾಗಿ ಹೊರವಂಟಶ್ವನಿಕರವ
ನೀಗಿದವು ಶರವೊಂದು ಸಾವಿರ ರಥಹಯಾವಳಿಯ
ಬೀಗಿದವು ಕಾಲಾಳ ಕಬಳಿಸಿ
ತೇಗಿದವು ಚತುರಂಗವನು ವಿನಿ
ಯೋಗಿಸಿದವಂತಕನ ಮನೆಗಂಬುಗಳು ಗುರುಸುತನ ॥16॥
೦೧೭ ಕಡಿವಡೆದುದಿನ್ನೂರು ಗಜ ...{Loading}...
ಕಡಿವಡೆದುದಿನ್ನೂರು ಗಜ ಧರೆ
ಗುಡಿದು ಬಿದ್ದುದು ತೇರು ಸಾವಿರ
ವಡಗುದರಿಯಾಯ್ತಶ್ವಚಯ ಸಾವಿರದ ಮೂನೂರು
ಕಡುಗಲಿಗಳರುವತ್ತು ಸಾವಿರ
ವೊಡಲನಿಕ್ಕಿತು ಪಾಯದಳವು
ಗ್ಗಡದ ಡಾವರ ಡಿಳ್ಳವಾದುದು ವೈರಿಸುಭಟರಿಗೆ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇನ್ನೂರು ಆನೆಗಳು ಕತ್ತರಿಸಿ ಬಿದ್ದವು; ಸಾವಿರ ರಥಗಳು ಮುರಿದು ನೆಲಕ್ಕೆ ಬಿದ್ದವು; ಸಾವಿರದ ಮುನ್ನೂರು ಕುದುರೆಗಳು ಮಾಂಸದ ತುಂಡುಗಳಂತೆ ಕತ್ತರಿಸಲ್ಪಟ್ಟವು, ಪದಾತಿಬಲದ ಅರವತ್ತು ಸಾವಿರ ವೀರರು ತಮ್ಮ ಶರೀರಗಳನ್ನು ಒಪ್ಪಿಸಿದರು. ವೈರಿಸುಭಟರಾದ ಪಾಂಡವರ ಶೌರ್ಯೋತ್ಸಾಹಗಳು ಕಳೆದು ಅವರನ್ನು ನಿರುತ್ಸಾಹ ದೌರ್ಬಲ್ಯಗಳು ಆವರಿಸಿದವು.
ಪದಾರ್ಥ (ಕ.ಗ.ಪ)
ಡಾವರ- ಶೌರ್ಯ, ಉತ್ಸಾಹ ಡಿಳ್ಳ-ದೌರ್ಬಲ್ಯ
ಮೂಲ ...{Loading}...
ಕಡಿವಡೆದುದಿನ್ನೂರು ಗಜ ಧರೆ
ಗುಡಿದು ಬಿದ್ದುದು ತೇರು ಸಾವಿರ
ವಡಗುದರಿಯಾಯ್ತಶ್ವಚಯ ಸಾವಿರದ ಮೂನೂರು
ಕಡುಗಲಿಗಳರುವತ್ತು ಸಾವಿರ
ವೊಡಲನಿಕ್ಕಿತು ಪಾಯದಳವು
ಗ್ಗಡದ ಡಾವರ ಡಿಳ್ಳವಾದುದು ವೈರಿಸುಭಟರಿಗೆ ॥17॥
೦೧೮ ಮತ್ತೆ ಕವಿದುದು ...{Loading}...
ಮತ್ತೆ ಕವಿದುದು ಪಾಂಡುಬಲವರು
ವತ್ತು ಸಾವಿರ ಕುದುರೆ ನೂರಿ
ಪ್ಪತ್ತು ಗಜರಥ ನೂರ ಮೀರಿತು ಲಕ್ಕಪಾಯದಳ
ಸತ್ತಿಗೆಯ ಸಾಲಿನಲಿ ಧರಣಿಯ
ಕಿತ್ತು ಮಗುಚುವ ವಾದ್ಯರಭಸದ
ಲೆತ್ತಿ ನೂಕಿತು ಗುರುತನೂಜನ ರಥದ ಸಮ್ಮುಖಕೆ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾಂಡವರ ಅರವತ್ತು ಸಾವಿರ ಸೈನ್ಯ, ನೂರಿಪ್ಪತ್ತು ಕುದುರೆಗಳು, ನೂರನ್ನು ಮೀರಿದ ಆನೆಗಳು ಮತ್ತು ರಥಗಳು ಒಂದು ಲಕ್ಷ ಕಾಲುದಳ ಪುನಃ ಯುದ್ಧಕ್ಕೆ ಮೇಲೆ ಬಿತ್ತು. ಛತ್ರಗಳ ಸಾಲಿನಲ್ಲಿ, ಭೂಮಿಯನ್ನೇ ಕಿತ್ತು ಮಗುಚುವ ವಾದ್ಯರಭಸದಲ್ಲಿ, ಅಶ್ವತ್ಥಾಮನ ಸಮ್ಮುಖಕ್ಕೆ ಪಾಂಡವರ ಸೈನ್ಯವು ಮುಗಿಬಿದ್ದಿತು.
ಪದಾರ್ಥ (ಕ.ಗ.ಪ)
ಸತ್ತಿಗೆ-ರಾಜಲಾಂಛನವಾದ ಛತ್ರಿ
ಮೂಲ ...{Loading}...
ಮತ್ತೆ ಕವಿದುದು ಪಾಂಡುಬಲವರು
ವತ್ತು ಸಾವಿರ ಕುದುರೆ ನೂರಿ
ಪ್ಪತ್ತು ಗಜರಥ ನೂರ ಮೀರಿತು ಲಕ್ಕಪಾಯದಳ
ಸತ್ತಿಗೆಯ ಸಾಲಿನಲಿ ಧರಣಿಯ
ಕಿತ್ತು ಮಗುಚುವ ವಾದ್ಯರಭಸದ
ಲೆತ್ತಿ ನೂಕಿತು ಗುರುತನೂಜನ ರಥದ ಸಮ್ಮುಖಕೆ ॥18॥
೦೧೯ ಇತ್ತ ಹೇಳಿಕೆಯಾಯ್ತು ...{Loading}...
ಇತ್ತ ಹೇಳಿಕೆಯಾಯ್ತು ಹಯವಿ
ಪ್ಪತ್ತು ಸಾವಿರ ದಂತಿಘಟೆಯೈ
ವತ್ತು ನಾನೂರೇಳು ರಥ ಸಾವಿರದ ನಾನೂರು
ತೆತ್ತಿಗರು ಕಾಲಾಳು ಲಕ್ಕವು
ಹತ್ತಿತಲ್ಲಿಯ ವಾದ್ಯರವ ಕೀ
ರಿತ್ತು ಕಮಲಭವಾಂಡ ವಿಪುಲ ಕಟಾಹಖರ್ಪರವ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೌರವರ ಕಡೆಯಿಂದ, ಇಪ್ಪತ್ತುಸಾವಿರ ಕುದುರೆಗಳು, ಐವತ್ತು ಆನೆಗಳ ಸಮೂಹ, ನಾನೂರ ಏಳು ರಥಗಳು, ಸಾವಿರದ ನಾನೂರು ಸೇವಕರು, ಒಂದು ಲಕ್ಷ ಕಾಲಾಳುಗಳು ಯುದ್ಧರಂಗಕ್ಕೆ ಬರಲು ಆಜ್ಞಾಪಿಸಲಾಯಿತು. ಅಲ್ಲಿನ ವಾದ್ಯಘೋಷವು ಬ್ರಹ್ಮಾಂಡದ ಮೇಲ್ಮೈಯನ್ನೇ ಸೀಳಿಹಾಕಿತು.
ಪದಾರ್ಥ (ಕ.ಗ.ಪ)
ತೆತ್ತಿಗರು-ಸೇವಕರು, ಆಳುಗಳು ಕೀರು-ಗೀರು, ಗಾಯಮಾಡು, ಸೀಳು ಕಟಾಹ-ಕೊಪ್ಪರಿಗೆ, ಅರ್ಧಗೋಲ, ಮೇಲ್ಮೈ ಖರ್ಪರ-ಕಪ್ಪರ, ಚಿಪ್ಪು
ಮೂಲ ...{Loading}...
ಇತ್ತ ಹೇಳಿಕೆಯಾಯ್ತು ಹಯವಿ
ಪ್ಪತ್ತು ಸಾವಿರ ದಂತಿಘಟೆಯೈ
ವತ್ತು ನಾನೂರೇಳು ರಥ ಸಾವಿರದ ನಾನೂರು
ತೆತ್ತಿಗರು ಕಾಲಾಳು ಲಕ್ಕವು
ಹತ್ತಿತಲ್ಲಿಯ ವಾದ್ಯರವ ಕೀ
ರಿತ್ತು ಕಮಲಭವಾಂಡ ವಿಪುಲ ಕಟಾಹಖರ್ಪರವ ॥19॥
೦೨೦ ಉರವಣಿಸಿತಿದು ಗುರುಸುತನ ...{Loading}...
ಉರವಣಿಸಿತಿದು ಗುರುಸುತನ ಹಿಂ
ದಿರಿಸಿ ಪರಬಲದಭಿಮುಖಕೆ ಮೋ
ಹರಿಸಿ ನಿಂದುದು ಕಂಡನಿತ್ತಲು ಶಲ್ಯನಾ ಬಲವ
ಧುರಕೆ ನಾವಿರೆ ಸೇನೆಯುಪಸಂ
ಹರಿಸಬಹುದೇ ದ್ರೋಣ ಭೀಷ್ಮಾ
ದ್ಯರಿಗೆ ನಗೆಗೆಡೆ ನಾವಹೆವೆ ತೆಗೆಯೆನುತ ನಡೆತಂದ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಶ್ವತ್ಥಾಮನನ್ನು ಹಿಂದಕ್ಕೆ ಬಿಟ್ಟುಕೊಂಡು ಕೌರವಸೇನೆ ಶತ್ರುಸೈನ್ಯದ ಎದುರಿನಲ್ಲಿ ಗುಂಪುಗೂಡಿ ಉತ್ಸಾಹದಿಂದ ಮೊರೆಯುತ್ತಿತ್ತು. ಶಲ್ಯ ಪಾಂಡವ ಸೈನ್ಯವನ್ನು ನೋಡಿದ. ಯುದ್ಧಕ್ಕೆ ನಾನಿರುವಾಗ ನಮ್ಮ ಸೇನೆಯನ್ನು ಪಾಂಡವರು ಸಂಹರಿಸಲು ಸಾಧ್ಯವೇ? ದ್ರೋಣ ಭೀಷ್ಮಾದಿಗಳಂತೆ ನಾವು ನಗೆಗೆಡೆಯಾಗಬಹುದೆ? ಎನ್ನುತ್ತಾ ಶಲ್ಯ ಯುದ್ಧಕ್ಕೆ ಮುಂದೆ ಬಂದ.
ಪದಾರ್ಥ (ಕ.ಗ.ಪ)
ಉರವಣಿಸು-ಉತ್ಸಾಹದಿಂದ ಮುನ್ನುಗ್ಗು, ಅಭಿಮುಖ-ಎದುರು, ಮೋಹರಿಸು-ಒಗ್ಗೂಡು, ಉಪಸಂಹರಿಸು-ನಾಶಮಾಡು, ಮುಕ್ತಾಯಮಾಡು.
ಮೂಲ ...{Loading}...
ಉರವಣಿಸಿತಿದು ಗುರುಸುತನ ಹಿಂ
ದಿರಿಸಿ ಪರಬಲದಭಿಮುಖಕೆ ಮೋ
ಹರಿಸಿ ನಿಂದುದು ಕಂಡನಿತ್ತಲು ಶಲ್ಯನಾ ಬಲವ
ಧುರಕೆ ನಾವಿರೆ ಸೇನೆಯುಪಸಂ
ಹರಿಸಬಹುದೇ ದ್ರೋಣ ಭೀಷ್ಮಾ
ದ್ಯರಿಗೆ ನಗೆಗೆಡೆ ನಾವಹೆವೆ ತೆಗೆಯೆನುತ ನಡೆತಂದ ॥20॥
೦೨೧ ದಳವ ತೆಗೆತೆಗೆ ...{Loading}...
ದಳವ ತೆಗೆತೆಗೆ ತಾನಿರಲು ಕುರು
ಬಲಕೆ ಬೀಯವೆ ಕೌರವೇಂದ್ರನ
ಕೆಲಬಲದ ಸುಯಿಧಾನದಲಿ ಕೃಪಗುರುಸುತಾದಿಗಳು
ನಿಲಲಿ ಶಕುನಿಯ ತುರಗದಳ ಹಿ
ನ್ನೆಲೆಗೆ ಹೋಗಲಿ ರಾಯದಳವೆ
ಮ್ಮಳವ ನೋಡುತ್ತಿರಲಿಯೆಂದನು ಶಲ್ಯ ಕುರುಪತಿಗೆ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಾನಿರಲು ಇಷ್ಟೊಂದು ದೊಡ್ಡಸಂಖ್ಯೆಯ ಸೈನ್ಯವು ಅವಶ್ಯವಿಲ್ಲ. ಅವುಗಳನ್ನು ತೆಗೆಸು. ನಾನಿರುವಾಗ ಕುರುಸೈನ್ಯಕ್ಕೆ ನಷ್ಟವಾಗುವುದುಂಟೆ? ನಿನ್ನ ಎಡಬಲಗಳಲ್ಲಿ ಅವನ ರಕ್ಷಣೆಗೆ ಕೃಪಾಚಾರ್ಯ ಮತ್ತು ಅಶ್ವತ್ಥಾಮಾದಿಗಳು ನಿಲ್ಲಲಿ, ಶಕುನಿಯ ಕುದುರೆಗಳ ಸೈನ್ಯವು ಹಿಂಭಾಗಕ್ಕೆ ಸರಿಯಲಿ. ರಾಯದಳವು ನಮ್ಮ ಸಾಹಸ ಶೌರ್ಯವನ್ನು ನೋಡುತ್ತಿರಲಿ ಎಂದು ಶಲ್ಯ ದುರ್ಯೋಧನನಿಗೆ ಹೇಳಿದ.
ಪದಾರ್ಥ (ಕ.ಗ.ಪ)
ಬೀಯ-ವ್ಯಯ, ನಷ್ಟ ಸುಯಿಧಾನ-ರಕ್ಷಣೆ
ಮೂಲ ...{Loading}...
ದಳವ ತೆಗೆತೆಗೆ ತಾನಿರಲು ಕುರು
ಬಲಕೆ ಬೀಯವೆ ಕೌರವೇಂದ್ರನ
ಕೆಲಬಲದ ಸುಯಿಧಾನದಲಿ ಕೃಪಗುರುಸುತಾದಿಗಳು
ನಿಲಲಿ ಶಕುನಿಯ ತುರಗದಳ ಹಿ
ನ್ನೆಲೆಗೆ ಹೋಗಲಿ ರಾಯದಳವೆ
ಮ್ಮಳವ ನೋಡುತ್ತಿರಲಿಯೆಂದನು ಶಲ್ಯ ಕುರುಪತಿಗೆ ॥21॥
೦೨೨ ಕೇಳು ಕೃಪ ...{Loading}...
ಕೇಳು ಕೃಪ ಕೃತವರ್ಮ ಗುರುಸುತ
ಕೇಳು ಶಕುನಿ ಸುಶರ್ಮ ಸಾಲ್ವನೃ
ಪಾಲ ರಾಯನ ಮಂತ್ರಿ ಸಚಿವ ಪಸಾಯ್ತರಾದವರು
ಕೇಳಿರೈ ಭೀಷ್ಮಾದಿ ಸುಭಟರ
ಕಾಳೆಗವ ಕಂಡಿರಿ ಮದೀಯ ಕ
ರಾಳ ಕದನೋತ್ಸವವ ನೋಡುವುದೆಂದನಾ ಶಲ್ಯ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೃಪಾಚಾರ್ಯ, ಕೃತವರ್ಮ, ಅಶ್ವತ್ಥಾಮ, ಶಕುನಿ, ಸುಶರ್ಮ, ಸಾಲ್ವರಾಜ, ರಾಜನ ಮಂತ್ರಿಗಳು, ಸಾಮಂತರಾಜರೇ ಕೇಳಿ! ನೀವುಗಳು ಈವರೆಗೆ ಭೀಷ್ಮಾದಿ ಮಹಾ ವೀರರ ಯುದ್ಧವನ್ನು ಕಂಡಿದ್ದೀರಿ. ನಮ್ಮ ಭೀಕರವಾದ ರಣೋತ್ಸವವನ್ನು ಈಗ ನೋಡಿ ಎಂದು ಶಲ್ಯ ಘೋಷಿಸಿದ.
ಪದಾರ್ಥ (ಕ.ಗ.ಪ)
ಪಸಾಯ್ತ-ಸಾಮಂತರಾಜ, ಮದೀಯ-ನಮ್ಮ
ಮೂಲ ...{Loading}...
ಕೇಳು ಕೃಪ ಕೃತವರ್ಮ ಗುರುಸುತ
ಕೇಳು ಶಕುನಿ ಸುಶರ್ಮ ಸಾಲ್ವನೃ
ಪಾಲ ರಾಯನ ಮಂತ್ರಿ ಸಚಿವ ಪಸಾಯ್ತರಾದವರು
ಕೇಳಿರೈ ಭೀಷ್ಮಾದಿ ಸುಭಟರ
ಕಾಳೆಗವ ಕಂಡಿರಿ ಮದೀಯ ಕ
ರಾಳ ಕದನೋತ್ಸವವ ನೋಡುವುದೆಂದನಾ ಶಲ್ಯ ॥22॥
೦೨೩ ತರಿಸಿ ಕಾಞ್ಚನಮಯ ...{Loading}...
ತರಿಸಿ ಕಾಂಚನಮಯ ರಥವ ಸಂ
ವರಿಸಿದನು ಟೆಕ್ಕೆಯವನೆತ್ತಿಸಿ
ಸರಳ ತುಂಬಿದ ಬಂಡಿಗಳ ಕೆಲಬಲಕೆ ಜೋಡಿಸಿದ
ಬಿರುದನೊದರುವ ಪಾಠಕರ ಮೋ
ಹರಕೆ ಮಣಿಕಾಂಚನವ ಮೊಗೆದಿ
ತ್ತರರೆ ಕರೆಯೋ ಧರ್ಮಜನನೆಂದುಬ್ಬಿದನು ಶಲ್ಯ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಚಿನ್ನದ ರಥವನ್ನು ತರಿಸಿ, ಅದಕ್ಕೆ ಬೇಕಾದ ಎಲ್ಲ ಸೌಕರ್ಯಗಳನ್ನು ಅಳವಡಿಸಿದ. ಬಾವುಟವನ್ನು ರಥದ ಮೇಲಕ್ಕೆ ಎತ್ತಿ ಕಟ್ಟಿಸಿದ. ಬಾಣಗಳನ್ನು ತುಂಬಿದ್ದ ಬಂಡಿಗಳನ್ನು ರಥದ ಎಡಬಲಕ್ಕೆ ಜೋಡಿಸಿದ. ತನ್ನ ಬಿರುದುಗಳನ್ನು ಘೋಷಿಸುತ್ತಿದ್ದ ಹೊಗಳುಭಟ್ಟರ ಸಮೂಹಕ್ಕೆ ಬೆಲೆಯುಳ್ಳ ಮಣಿಗಳು ಮತ್ತು ಚಿನ್ನವನ್ನು ಬೊಗಸೆಯಲ್ಲಿ ತೆಗೆದುಕೊಟ್ಟ. ಅರರೆ! ಧರ್ಮರಾಜನನ್ನು ಕರೆಯೋ! ಎಂದು ಹೇಳುತ್ತಾ ಶಲ್ಯ ಉತ್ಸಾಹಿತನಾದ.
ಪದಾರ್ಥ (ಕ.ಗ.ಪ)
ಕಾಂಚನ-ಚಿನ್ನ, ಟೆಕ್ಕೆಯ-ಬಾವುಟ, ಪಾಠಕರು-ಹೊಗಳುಭಟ್ಟರು, ಮೋಹರ-ಸೈನ್ಯ
ಮೂಲ ...{Loading}...
ತರಿಸಿ ಕಾಂಚನಮಯ ರಥವ ಸಂ
ವರಿಸಿದನು ಟೆಕ್ಕೆಯವನೆತ್ತಿಸಿ
ಸರಳ ತುಂಬಿದ ಬಂಡಿಗಳ ಕೆಲಬಲಕೆ ಜೋಡಿಸಿದ
ಬಿರುದನೊದರುವ ಪಾಠಕರ ಮೋ
ಹರಕೆ ಮಣಿಕಾಂಚನವ ಮೊಗೆದಿ
ತ್ತರರೆ ಕರೆಯೋ ಧರ್ಮಜನನೆಂದುಬ್ಬಿದನು ಶಲ್ಯ ॥23॥
೦೨೪ ರಾಯ ನಿಲುವನೊ ...{Loading}...
ರಾಯ ನಿಲುವನೊ ಮೇಣು ಪಾರ್ಥನೊ
ವಾಯುಸುತನೋ ನಿಮ್ಮ ಮೂವರೊ
ಳಾಯುಧವ ಕೊಂಡಾರು ಹೊಕ್ಕರು ನಿಲುವೆನವರೊಡನೆ
ನಾಯಕರು ಮಿಕ್ಕವರೊಡನೆ ಬಿಲು
ಸಾಯಕವನೊಡ್ಡಿದಡೆ ಕೌರವ
ರಾಯನಾಣೆಯೆನುತ್ತ ಮದವೇರಿದನು ಕಲಿಶಲ್ಯ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯುದ್ಧಕ್ಕೆ ನನ್ನನ್ನು ಎದುರಿಸಿ ನಿಲ್ಲುವವನು ಯಾರು? ಧರ್ಮರಾಯನೋ, ಅರ್ಜುನನೋ ಅಥವಾ ಭೀಮನೋ? ಈ ಮೂವರಲ್ಲಿ ಆಯುಧವನ್ನು ಹಿಡಿದು ಯಾರೇ ಎದುರಾದರೂ ಅವರ ವಿರುದ್ಧ ನಾನು ಯುದ್ಧಕ್ಕೆ ನಿಲ್ಲತ್ತೇನೆ. ಇನ್ನು ಮಿಕ್ಕ ನಾಯಕರೊಡನೆ ಬಿಲ್ಲು ಬಾಣಗಳನ್ನು ಹಿಡಿದರೆ ಕೌರವರಾಯನ ಆಣೆ ಎನ್ನುತ್ತಾ ಕಲಿಶಲ್ಯ ಮದವೇರಿ ಉತ್ಸಾಹಿಸಿದ.
ಪದಾರ್ಥ (ಕ.ಗ.ಪ)
ಬಿಲು-ಸಾಯಕ-ಬಿಲ್ಲು ಬಾಣ
ಮೂಲ ...{Loading}...
ರಾಯ ನಿಲುವನೊ ಮೇಣು ಪಾರ್ಥನೊ
ವಾಯುಸುತನೋ ನಿಮ್ಮ ಮೂವರೊ
ಳಾಯುಧವ ಕೊಂಡಾರು ಹೊಕ್ಕರು ನಿಲುವೆನವರೊಡನೆ
ನಾಯಕರು ಮಿಕ್ಕವರೊಡನೆ ಬಿಲು
ಸಾಯಕವನೊಡ್ಡಿದಡೆ ಕೌರವ
ರಾಯನಾಣೆಯೆನುತ್ತ ಮದವೇರಿದನು ಕಲಿಶಲ್ಯ ॥24॥
೦೨೫ ಬೆರಳ ತುಟಿಗಳ ...{Loading}...
ಬೆರಳ ತುಟಿಗಳ ಬೊಬ್ಬೆ ಮಿಗಲ
ಬ್ಬರಿಸಿದವು ನಿಸ್ಸಾಳತತಿ ಜ
ರ್ಝರ ಮೃದಂಗದ ಪಣಹ ಪಟಹದ ಗೌರುಗಹಳೆಗಳ
ಉರು ರಭಸವಳ್ಳಿರಿಯೆ ರಥಚೀ
ತ್ಕರಣೆ ರಥಹಯ ಹೇಷಿತದ ನಿ
ಷ್ಠುರ ನಿನಾದದಲೌಕಿ ಹೊಕ್ಕನು ಶಲ್ಯನಾಹವವ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೇಳುಗರು ಬೆರಳನ್ನು ತುಟಿಗಳ ಮೇಲಿಟ್ಟು ಆಶ್ಚರ್ಯವನ್ನು ಸೂಚಿಸುತ್ತಿರಲು, ನಿಸ್ಸಾಳಗಳೆಂಬ ವಾದ್ಯಗಳು ಬೊಬ್ಬಿರಿದು ಅಬ್ಬರಿಸಿದುವು. ಹೊಡೆತದಿಂದ ಜರ್ಝರಿತವಾದ ಮೃದಂಗದ, ನಗಾರಿಯ, ಕಹಳೆಗಳ ರಭಸವು ತಿವಿಯುತ್ತಿರಲು, ರಥದ ಶಬ್ಧ ಮತ್ತು ರಥದ ಕುದುರೆಗಳ ಹೇಷಾರವದ ಭಯಂಕರವಾದ ಶಬ್ದಗಳೊಂದಿಗೆ ಶಲ್ಯನು ಉತ್ಸಾಹದಿಂದ ಯುದ್ಧರಂಗವನ್ನು ಪ್ರವೇಶಿಸಿದ.
ಪದಾರ್ಥ (ಕ.ಗ.ಪ)
ನಿಸ್ಸಾಳ-ಒಂದುವಾದ್ಯ, ಜರ್ಝರ-ಹರಿದ, ಚೂರಾದ, ಪಣಹ-ಒಂದುವಾದ್ಯ, ಪಟಹ-ನಗಾರಿಯಂತಹ ಒಂದುವಾದ್ಯ, ಗೌರುಗಹಳೆ-ಒಂದು ವಿಧವಾದ ಕಹಳೆ, ಹೇಷಿತ-ಕುದುರೆಗಳ ಕೆನೆತದ ಶಬ್ಧ
ಮೂಲ ...{Loading}...
ಬೆರಳ ತುಟಿಗಳ ಬೊಬ್ಬೆ ಮಿಗಲ
ಬ್ಬರಿಸಿದವು ನಿಸ್ಸಾಳತತಿ ಜ
ರ್ಝರ ಮೃದಂಗದ ಪಣಹ ಪಟಹದ ಗೌರುಗಹಳೆಗಳ
ಉರು ರಭಸವಳ್ಳಿರಿಯೆ ರಥಚೀ
ತ್ಕರಣೆ ರಥಹಯ ಹೇಷಿತದ ನಿ
ಷ್ಠುರ ನಿನಾದದಲೌಕಿ ಹೊಕ್ಕನು ಶಲ್ಯನಾಹವವ ॥25॥
೦೨೬ ದಳಪತಿಯ ಸುಮ್ಮಾನಮುಖ ...{Loading}...
ದಳಪತಿಯ ಸುಮ್ಮಾನಮುಖ ಬೆಳ
ಬೆಳಗುತದೆ ಗಂಗಾಕುಮಾರನ
ಕಳಶಜನ ರಾಧಾತನೂಜನ ರಂಗಭೂಮಿಯಿದು
ಕಳನನಿದನಾಕ್ರಮಿಸುವಡೆ ವೆ
ಗ್ಗಳೆಯ ಮಾದ್ರಮಹೀಶನಲ್ಲದೆ
ಕೆಲರಿಗೇನಹುದೆನುತೆ ಕೊಂಡಾಡಿತ್ತು ಕುರುಸೇನೆ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದಳಪತಿಯಾದ ಶಲ್ಯನ ಉತ್ಸಾಹದ ಮುಖ ಬೆಳಗುತ್ತಿದೆ. ಗಂಗಾ ಕುಮಾರನಾದ ಭೀಷ್ಮನ, ಕಳಶಜನಾದ ದ್ರೋಣನ ರಾಧಾತನುಜನಾದ ಕರ್ಣನ ರಂಗಭೂಮಿಯಿದು. ಇಂತಹ ಯುದ್ಧರಂಗವನ್ನು ಆಕ್ರಮಿಸಿ ಹೋರಾಡಬೇಕಾದರೆ ಶ್ರೇಷ್ಠನಾದ ಶಲ್ಯನಿಗಲ್ಲದೆ ಇತರರಿಗೆ ಸಾಧ್ಯವಾಗುತ್ತದೆಯೆ-ಎಂದು ಕುರುಸೈನ್ಯ ಶಲ್ಯನನ್ನು ಕೊಂಡಾಡಿತು.
ಪದಾರ್ಥ (ಕ.ಗ.ಪ)
ಕಳ-ಯುದ್ಧಭೂಮಿ, ಕಣ, ವೆಗ್ಗಳೆಯ-ಹಿರಿತನದ, ಶ್ರೇಷ್ಠನಾದ
ಮೂಲ ...{Loading}...
ದಳಪತಿಯ ಸುಮ್ಮಾನಮುಖ ಬೆಳ
ಬೆಳಗುತದೆ ಗಂಗಾಕುಮಾರನ
ಕಳಶಜನ ರಾಧಾತನೂಜನ ರಂಗಭೂಮಿಯಿದು
ಕಳನನಿದನಾಕ್ರಮಿಸುವಡೆ ವೆ
ಗ್ಗಳೆಯ ಮಾದ್ರಮಹೀಶನಲ್ಲದೆ
ಕೆಲರಿಗೇನಹುದೆನುತೆ ಕೊಂಡಾಡಿತ್ತು ಕುರುಸೇನೆ ॥26॥
೦೨೭ ಪೂತು ಮಝರೇ ...{Loading}...
ಪೂತು ಮಝರೇ ಶಲ್ಯ ಹೊಕ್ಕನೆ
ಸೂತಜನ ಹರಿಬದಲಿ ವೀರ
ವ್ರಾತಗಣನೆಯೊಳೀತನೊಬ್ಬನೆ ಹಾ ಮಹಾದೇವ
ಧಾತುವೊಳ್ಳಿತು ದಿಟ್ಟನೈ ನಿ
ರ್ಭೀತಗರ್ವಿತನಿವನೆನುತ ಭಟ
ರೀತನನು ಹೊಗಳಿದರು ಸಾತ್ಯಕಿ ಸೋಮಕಾದಿಗಳು ॥27॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭಲರೇ! ಕರ್ಣನ ಹೊಣೆಯನ್ನು ಹೊತ್ತು ಶಲ್ಯ ರಣಭೂಮಿಯನ್ನು ಹೊಕ್ಕನೆ! ವೀರರ ಸಮೂಹವನ್ನು ಎಣಿಸಿದರೆ, ನಿಜವಾದ ವೀರನೆಂಬುವನು ಇವನೊಬ್ಬನೇ ಅಲ್ಲವೇ ಮಹಾದೇವ! ಇವನ ಧೈರ್ಯ ಬಲು ಒಳ್ಳೆಯದಿದೆ. ದಿಟ್ಟನೂ, ನಿರ್ಭೀತನೂ, ಅದರಿಂದ ಹೆಮ್ಮೆಯುಳ್ಳವನೂ ಆದ ವೀರಭಟನಿವನೆಂದು ಸಾತ್ಯಕಿ, ಸೋಮಕ ಮುಂತಾದವರು ಶಲ್ಯನನ್ನು ಹೊಗಳಿದರು.
ಪದಾರ್ಥ (ಕ.ಗ.ಪ)
ಹರಿಬ-ಕೆಲಸ, ಹೊಣೆ, ಜವಾಬ್ದಾರಿ,
ಧಾತು-ವೀರತ್ವ, ಶೌರ್ಯ
ಮೂಲ ...{Loading}...
ಪೂತು ಮಝರೇ ಶಲ್ಯ ಹೊಕ್ಕನೆ
ಸೂತಜನ ಹರಿಬದಲಿ ವೀರ
ವ್ರಾತಗಣನೆಯೊಳೀತನೊಬ್ಬನೆ ಹಾ ಮಹಾದೇವ
ಧಾತುವೊಳ್ಳಿತು ದಿಟ್ಟನೈ ನಿ
ರ್ಭೀತಗರ್ವಿತನಿವನೆನುತ ಭಟ
ರೀತನನು ಹೊಗಳಿದರು ಸಾತ್ಯಕಿ ಸೋಮಕಾದಿಗಳು ॥27॥
೦೨೮ ತಡೆದು ನಿನ್ದನು ...{Loading}...
ತಡೆದು ನಿಂದನು ಪರಬಲವ ನಿ
ಮ್ಮೊಡೆಯನಾವೆಡೆ ಸೇನೆ ಕದನವ
ಕೊಡಲಿ ಕೊಂಬವನಲ್ಲ ಕೈದುವ ಸೆಳೆಯೆನುಳಿದರಿಗೆ
ಪೊಡವಿಗೊಡೆಯನು ಕೌರವೇಶ್ವರ
ನೊಡನೆ ಸಲ್ಲದು ಗಡ ಶರಾಸನ
ವಿಡಿಯ ಹೇಳಾ ಧರ್ಮಜನನೆಂದುರುಬಿದನು ಶಲ್ಯ ॥28॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎದುರು ಸೈನ್ಯವನ್ನು ಶಲ್ಯ ತಡೆದು ನಿಲ್ಲಿಸಿದ. ನಿಮ್ಮ ಯಜಮಾನನು ಎಲ್ಲಿದ್ದಾನೆ ತೋರಿಸಿ. ನಿಮ್ಮ ಸೈನ್ಯವು ನನ್ನೊಂದಿಗೆ ಯುದ್ಧಕ್ಕೆ ನಿಂತರೂ ನಾನು ಅವರೊಂದಿಗೆ ಯುದ್ಧ ಮಾಡಲು ಆಯುಧವನ್ನು ಸೆಳೆಯುವವನಲ್ಲ. ಭೂಮಿಗೆ ಒಡೆಯನಾದ ಕೌರವೇಶ್ವರನೊಡನೆ ನಿನಗೆ ಯುದ್ಧವು ಸಲ್ಲದು! ನನ್ನೆದುರು ಯುದ್ಧ ಮಾಡಲು ಬಿಲ್ಲು ಹಿಡಿಯಲು ಹೇಳು ಎನ್ನುತ್ತ ಶಲ್ಯ ಧರ್ಮರಾಯನನ್ನು ಬೆನ್ನಟ್ಟಿದ.
ಪದಾರ್ಥ (ಕ.ಗ.ಪ)
ಕೈದು-ಆಯುಧ, ಶರಾಸನ-ಬಾಣಕ್ಕೆ ಆಸನವಾದುದು, ಬಿಲ್ಲು
ಮೂಲ ...{Loading}...
ತಡೆದು ನಿಂದನು ಪರಬಲವ ನಿ
ಮ್ಮೊಡೆಯನಾವೆಡೆ ಸೇನೆ ಕದನವ
ಕೊಡಲಿ ಕೊಂಬವನಲ್ಲ ಕೈದುವ ಸೆಳೆಯೆನುಳಿದರಿಗೆ
ಪೊಡವಿಗೊಡೆಯನು ಕೌರವೇಶ್ವರ
ನೊಡನೆ ಸಲ್ಲದು ಗಡ ಶರಾಸನ
ವಿಡಿಯ ಹೇಳಾ ಧರ್ಮಜನನೆಂದುರುಬಿದನು ಶಲ್ಯ ॥28॥
೦೨೯ ಚೆಲ್ಲಿತದು ನಾನಾಮುಖಕೆ ...{Loading}...
ಚೆಲ್ಲಿತದು ನಾನಾಮುಖಕೆ ನಿಂ
ದಲ್ಲಿ ನಿಲ್ಲದೆ ಸೃಂಜಯಾದ್ಯರ
ನಲ್ಲಿ ಕಾಣೆನು ಸೋಮಕರ ಪಾಂಚಾಲ ಮೋಹರವ
ಕೆಲ್ಲೆಯಲಿ ಭೀಮಾರ್ಜುನರು ಬಲು
ಬಿಲ್ಲನೊದರಿಸೆ ಕದನಚೌಪಟ
ಮಲ್ಲ ತಾನಿದಿರಾಗಿ ನಿಂದನು ಪಾಂಡವರ ರಾಯ ॥29॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾಂಡವರ ಸೈನ್ಯ ನಿಂದಲ್ಲಿ ನಿಲ್ಲದೆ ನಾನಾ ದಿಕ್ಕುಗಳಲ್ಲಿ ಚಲ್ಲಾಪಿಲ್ಲಿಯಾಯಿತು. ಸೃಂಜಯರು, ಸೋಮಕರು ಮತ್ತು ಪಾಂಚಾಲರ ಸೈನ್ಯವನ್ನು ಅಲ್ಲಿ ಕಾಣೆ. ಅಕ್ಕಪಕ್ಕಗಳಲ್ಲಿ ಭೀಮಾರ್ಜುನರು ತಮ್ಮ ಭಾರಿಯಾದ ಬಿಲ್ಲುಗಳನ್ನು ಶಬ್ದ ಮಾಡಲು ಕದನಚೌಪಟಮಲ್ಲನಾದ ಧರ್ಮರಾಯ ಶಲ್ಯನನ್ನು ಎದುರಿಸಿ ನಿಂತನು.
ಪದಾರ್ಥ (ಕ.ಗ.ಪ)
ಕೆಲ್ಲೆ-ಅಕ್ಕಪಕ್ಕ, ಒದರಿಸು-ಶಬ್ದಮಾಡಿಸು, ಚೌಪಟ ಮಲ್ಲ-ನಾಲ್ಕೂದಿಕ್ಕಿನಿಂದಲೂ ಕಾದಾಡಬಲ್ಲ ವೀರ.
ಮೂಲ ...{Loading}...
ಚೆಲ್ಲಿತದು ನಾನಾಮುಖಕೆ ನಿಂ
ದಲ್ಲಿ ನಿಲ್ಲದೆ ಸೃಂಜಯಾದ್ಯರ
ನಲ್ಲಿ ಕಾಣೆನು ಸೋಮಕರ ಪಾಂಚಾಲ ಮೋಹರವ
ಕೆಲ್ಲೆಯಲಿ ಭೀಮಾರ್ಜುನರು ಬಲು
ಬಿಲ್ಲನೊದರಿಸೆ ಕದನಚೌಪಟ
ಮಲ್ಲ ತಾನಿದಿರಾಗಿ ನಿಂದನು ಪಾಂಡವರ ರಾಯ ॥29॥
೦೩೦ ಜೀಯ ಬುಧನ ...{Loading}...
ಜೀಯ ಬುಧನ ಪುರೂರವನ ಸುತ
ನಾಯುವಿನ ನಹುಷನ ಯಯಾತಿಯ
ದಾಯಭಾಗದ ಭೋಗನಿಧಿಯವತರಿಸಿದೈ ಧರೆಗೆ
ಜೇಯನೆನಿಸಿದೆ ಜೂಜಿನಲಿ ರಣ
ಜೇಯನಹನೀ ಕೌರವನು ನಿ
ನ್ನಾಯತಿಯ ಸಂಭಾವಿಸೆಂದುದು ವಂದಿಜನಜಲಧಿ ॥30॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜೀಯ! ಬುಧನ, ಅವನ ಮಗನಾದ ಪುರೂವನ, ಅವನ ಮಗನಾದ ಆಯುವಿನ, ಅವನ ಮಗನಾದ ನಹುಷನ, ಅವನ ಮಗನಾದ ಯಯಾತಿಯ ಭೂಮಿಗೆ ಹಕ್ಕುದಾರನಾಗಿ ಅದನ್ನು ಭೋಗಿಸಲು ಈ ಭೂಮಿಯ ಮೇಲೆ ಜನಿಸಿದ್ದೀಯ. ಜೂಜಿನಲ್ಲಿ ಪರಾಜಿತನಾದೆ, ಆದರೆ ಈ ದುರ್ಯೋಧನನು ಯುದ್ಧದಲ್ಲಿ ನಿನ್ನಿಂದ ಜಯಿಸಲ್ಪಡುವವನಾಗಿದ್ದಾನೆ. ಇನ್ನು ನಿನ್ನ ಪರಾಕ್ರಮಕ್ಕೆ ಗೌರವವನ್ನು ಕೊಟ್ಟು ಯುದ್ಧವನ್ನು ಪ್ರಾರಂಭಿಸು-ಎಂದು ಹೊಗಳುಭಟ್ಟರು ಧರ್ಮರಾಯನನ್ನು ಹುರಿದುಂಬಿಸಿದರು.
ಪದಾರ್ಥ (ಕ.ಗ.ಪ)
ದಾಯಭಾಗ-ಬರಬೇಕಾದ ಪಾಲು, ಜೇಯ-ಜಯಿಸಲು ಯೋಗ್ಯನಾದ, ರಣಜೇಯ-ಯುದ್ಧದಲ್ಲಿ ಗೆಲ್ಲಲ್ಪಡುವವನು, ಆಯತಿ-ಶಕ್ತಿ, ಪರಾಕ್ರಮ, ಸಂಭಾವಿಸು-ಗೌರವಿಸು, ವಂದಿಜನ ಜಲಧಿ-ಹೊಗಳುಭಟ್ಟರೆಂಬ ಸಮುದ್ರದಷ್ಟು ದೊಡ್ಡ ಸಂಖ್ಯೆಯ ಜನ
ಟಿಪ್ಪನೀ (ಕ.ಗ.ಪ)
ಬುಧನ ……………." ಈ ಎಲ್ಲವೂ ಪಾಂಡವ-ಕೌರವ ವಂಶದ ಹಿರಿಯರ ಹೆಸರುಗಳು, ಚಂದ್ರನಿಂದ ಬುಧ ಹುಟ್ಟಿದ ಆನಂತರ ಈ ಪದ್ಯದಲ್ಲಿರುವ ಕ್ರಮದಂತೆ ಇತರರ ಜನಿಸಿದರು. ಆದಿಪರ್ವ-2ನೇ ಸಂಧಿ: 16 ರಿಂದ 20ನೇ ಪದ್ಯಗಳನ್ನು ನೋಡಿ.
ಮೂಲ ...{Loading}...
ಜೀಯ ಬುಧನ ಪುರೂರವನ ಸುತ
ನಾಯುವಿನ ನಹುಷನ ಯಯಾತಿಯ
ದಾಯಭಾಗದ ಭೋಗನಿಧಿಯವತರಿಸಿದೈ ಧರೆಗೆ
ಜೇಯನೆನಿಸಿದೆ ಜೂಜಿನಲಿ ರಣ
ಜೇಯನಹನೀ ಕೌರವನು ನಿ
ನ್ನಾಯತಿಯ ಸಂಭಾವಿಸೆಂದುದು ವಂದಿಜನಜಲಧಿ ॥30॥
೦೩೧ ಹರಿಗೆ ಹೊಡವಣ್ಟಸ್ತ್ರ ...{Loading}...
ಹರಿಗೆ ಹೊಡವಂಟಸ್ತ್ರ ಶಿಕ್ಷಾ
ಗುರುವ ಮನದಲಿ ನೆನೆದು ಹೊಸ ಬಿಲು
ದಿರುವನೇರಿಸಿ ಮಿಡಿದು ನಿಜ ಸಾರಥಿಯ ಬೋಳೈಸಿ
ವರ ರಥವ ನೂಕಿದನು ಪವನಜ
ನರ ನಕುಲ ಸಹದೇವ ಸಾತ್ಯಕಿ
ಬರಲು ಬಲನೆಡವಂಕದಲಿ ನರನಾಥನಿದಿರಾದ ॥31॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶ್ರೀ ಕೃಷ್ಣನಿಗೆ ನಮಸ್ಕಾರ ಮಾಡಿ, ದ್ರೋಣಾಚಾರ್ಯರನ್ನು ಮನದಲ್ಲಿ ಜ್ಞಾಪಿಸಿಕೊಂಡು, ಹೊಸತಾದ ಬಿಲ್ಲಿಗೆ ಹೆದೆಯನ್ನೇರಿಸಿ ಅದನ್ನು ಮಿಡಿದು ಝೇಂಕರಿಸಿ, ತನ್ನ ಸಾರಥಿಯನ್ನು ಸಮಾಧಾನಿಸಿ, ಭೀಮ, ಅರ್ಜುನ, ನಕುಲ, ಸಹದೇವರು ಎಡಬಲಗಳಲ್ಲಿ ಬರುತ್ತಿರಲು ಧರ್ಮರಾಯನು ತನ್ನ ರಥವನ್ನು ಚಾಲನೆ ಮಾಡಿ ಶಲ್ಯನಿಗೆ ಇದಿರಾದ.
ಪದಾರ್ಥ (ಕ.ಗ.ಪ)
ಹೊಡವಂಟು-ಪೊಡಮಟ್ಟು, ನಮಸ್ಕಾರಮಾಡಿ, ಬಿಲುದಿರುವು-ಬಿಲ್ಲಿನ ತಿರುವು, ಹೆದೆ
ಮೂಲ ...{Loading}...
ಹರಿಗೆ ಹೊಡವಂಟಸ್ತ್ರ ಶಿಕ್ಷಾ
ಗುರುವ ಮನದಲಿ ನೆನೆದು ಹೊಸ ಬಿಲು
ದಿರುವನೇರಿಸಿ ಮಿಡಿದು ನಿಜ ಸಾರಥಿಯ ಬೋಳೈಸಿ
ವರ ರಥವ ನೂಕಿದನು ಪವನಜ
ನರ ನಕುಲ ಸಹದೇವ ಸಾತ್ಯಕಿ
ಬರಲು ಬಲನೆಡವಂಕದಲಿ ನರನಾಥನಿದಿರಾದ ॥31॥
೦೩೨ ಮಾವನವರೇ ನಿಮ್ಮ ...{Loading}...
ಮಾವನವರೇ ನಿಮ್ಮ ಹಿಂಸೆಗೆ
ನಾವು ಕಡುಗೆವು ಕ್ಷತ್ರಜಾತಿಯ
ಜೀವನವಲೇ ಕಷ್ಟವಿದು ಕಾರ್ಪಣ್ಯತರವಾಗಿ
ನೀವು ಸೈರಿಸಬೇಕು ನಮ್ಮ ಶ
ರಾವಳಿಯನೆನುತವನಿಪತಿ ಬಾ
ಣಾವಳಿಯ ಕೆದರಿದನು ಸೇನಾಪತಿಯ ಸಮ್ಮುಖಕೆ ॥32॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಾವನವರೇ! ನಿಮ್ಮ ಹಿಂಸೆಗೆ ನಾವು ಕೋಪಗೊಳ್ಳೆವು. ನಮ್ಮದು ಕ್ಷತ್ರಿಯ ಜಾತಿಯ ಜೀವನವಲ್ಲವೇ! ಬಲುಕಷ್ಟದ ಕಾರ್ಪಣ್ಯದ ಜೀವನವಿದು. ಅಧಿಕವಾಗಿ ನೀವು ನಮ್ಮ ಬಾಣಗಳನ್ನು ಸೈರಿಸಿಕೊಳ್ಳಬೇಕು ಎನ್ನುತ್ತಾ ಧರ್ಮರಾಯನು ಶಲ್ಯನ ಮುಂದಕ್ಕೆ ಬಾಣಗಳನ್ನು ಪ್ರಯೋಗಿಸಿದ.
ಪದಾರ್ಥ (ಕ.ಗ.ಪ)
ಕಡುಗು-ಕೋಪಿಸು, ಕೆದರು-ಪ್ರಯೋಗಿಸು, ಚಲ್ಲಿಬಿಡು.
ಮೂಲ ...{Loading}...
ಮಾವನವರೇ ನಿಮ್ಮ ಹಿಂಸೆಗೆ
ನಾವು ಕಡುಗೆವು ಕ್ಷತ್ರಜಾತಿಯ
ಜೀವನವಲೇ ಕಷ್ಟವಿದು ಕಾರ್ಪಣ್ಯತರವಾಗಿ
ನೀವು ಸೈರಿಸಬೇಕು ನಮ್ಮ ಶ
ರಾವಳಿಯನೆನುತವನಿಪತಿ ಬಾ
ಣಾವಳಿಯ ಕೆದರಿದನು ಸೇನಾಪತಿಯ ಸಮ್ಮುಖಕೆ ॥32॥
೦೩೩ ನಿನಗೆ ಮಾತುಳರಾವು ...{Loading}...
ನಿನಗೆ ಮಾತುಳರಾವು ಮಾಣಲಿ
ಮುನಿಯೆಮಗೆ ಮೊರೆಯಲ್ಲ ದುಶ್ಯಾ
ಸನ ಜಯದ್ರಥರಲ್ಲಲಾ ಸಂಬಂಧಿಗಳು ನಿನಗೆ
ಜನಪ ಧರ್ಮದ ಹಿಂಸೆ ಬಂದುದು
ನಿನಗೆ ಸಾಕದನಾಡಲೇತಕೆ
ಮನದ ಗರ್ವದ ಗಾಢವೈಸೆನುತೆಚ್ಚನಾ ಶಲ್ಯ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಾವು ನಿನಗೆ ಮಾವಂದಿರು, ಆ ಮಾತು ಹಾಗಿರಲಿ, ನೀನು ನಮ್ಮ ವಿರುದ್ಧ ಕೋಪಿಸಿಕೊಂಡರೆ, ನಾವು ನಿಮ್ಮ ವಿರುದ್ಧ ಮೊರೆಯುವವರಲ್ಲ (ಕೂಗಾಡುವವರಲ್ಲ). ನಿನಗೆ ದುಶ್ಶಾಸನ ಜಯದ್ರಥರು ಸಂಬಂಧಿಗಳಲ್ಲವೆ?! (ಅವರನ್ನು ಕೊಂದ ನಿನಗೆ ನಮ್ಮ ಮೇಲೆ ನಂಟಸ್ತಿಕೆಯ ಪ್ರೀತಿಯೇ-ಎಂಬುದು ಶಲ್ಯನ ಮಾತಿನ ಭಾವ) ಆದ್ದರಿಂದ ಧರ್ಮರಾಯ, ನಿನಗೆ ಧರ್ಮದ ಹಿಂಸೆ ಬಂದಿದೆ. ನೀನು ಧರ್ಮಕ್ಕೆ ಹಿಂಸೆಯನ್ನುಂಟು ಮಾಡುತ್ತಿದ್ದೀಯ! ಅದನ್ನು ನಾವು ಆಡಬಾರದು. ನಿನ್ನ ಮನಸ್ಸಿನ ಗಾಢವಾದ ಗರ್ವವೆಷ್ಟು! ಎನ್ನುತ್ತಾ ಶಲ್ಯ ಧರ್ಮಜನ ಮೇಲೆ ಬಾಣ ಪ್ರಯೋಗಿಸಿದ.
ಪದಾರ್ಥ (ಕ.ಗ.ಪ)
ಮೊರೆ-ಶಬ್ದಮಾಡು, ಕೂಗಾಡು.
ಮೂಲ ...{Loading}...
ನಿನಗೆ ಮಾತುಳರಾವು ಮಾಣಲಿ
ಮುನಿಯೆಮಗೆ ಮೊರೆಯಲ್ಲ ದುಶ್ಯಾ
ಸನ ಜಯದ್ರಥರಲ್ಲಲಾ ಸಂಬಂಧಿಗಳು ನಿನಗೆ
ಜನಪ ಧರ್ಮದ ಹಿಂಸೆ ಬಂದುದು
ನಿನಗೆ ಸಾಕದನಾಡಲೇತಕೆ
ಮನದ ಗರ್ವದ ಗಾಢವೈಸೆನುತೆಚ್ಚನಾ ಶಲ್ಯ ॥33॥
೦೩೪ ಅರಸ ಕೇಳ್ ...{Loading}...
ಅರಸ ಕೇಳ್ ಶಲ್ಯನ ಯುಧಿಷ್ಠಿರ
ಧರಣಿಪನ ಸಂಗ್ರಾಮವಂದಿನ
ಸುರನದೀನಂದನನ ದ್ರೋಣನ ಸೂತಸಂಭವನ
ನರನ ಭೂರಿಶ್ರವನ ಭೀಮನ
ಕುರುಪತಿಯ ವೃಷಸೇನ ಸೌಭ
ದ್ರರ ಸಮಗ್ರಾಹವವ ಮರಸಿತು ಹೇಳಲೇನೆಂದ ॥34॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೊರೆಯೇ ಕೇಳು, ಶಲ್ಯ ಮತ್ತು ಯುಧಿಷ್ಠಿರರ ನಡುವಿನ ಸಂಗ್ರಾಮವು, ಹಿಂದೆ ನಡೆದ ಭೀಷ್ಮಾಚಾರ್ಯನ, ದ್ರೋಣಾಚಾರ್ಯನ, ಕರ್ಣನ, ಅರ್ಜುನನ, ಭೂರಿಶ್ರವನ, ಭೀಮನ, ದುರ್ಯೋಧನನ, ವೃಷಸೇನನ, ಅಭಿಮನ್ಯುವಿನ ಸಮಗ್ರ ಯುದ್ಧವನ್ನು ಮರೆಸುವಂತಿತ್ತು.
ಟಿಪ್ಪನೀ (ಕ.ಗ.ಪ)
ಭೂರಿಶ್ರವ-ಚಂದ್ರವಶಂದ ಸೋಮದತ್ತನ ಮಗ. ಮಹಾಭಾರತದ ಯುದ್ಧದಲ್ಲಿ ಅರ್ಜುನ ಇವನ ತೋಳನ್ನು ಕಡಿದುಹಾಕಿದ. ನಂತರ ಭೂರಿಶ್ರವ ಪ್ರಾಯೋಪವೇಶಮಾಡಿ ಕುಳಿತಿದ್ದಾಗ ಸಾತ್ಯಕಿ ಇವನ ರುಂಡವನ್ನು ಉರುಳಿಸಿದ. (ದ್ರೋಣಪರ್ವ 14ನೆಯ ಸಂಧಿ ಪದ್ಯಗಳು 10 ರಿಂದ 22)
ಮೂಲ ...{Loading}...
ಅರಸ ಕೇಳ್ ಶಲ್ಯನ ಯುಧಿಷ್ಠಿರ
ಧರಣಿಪನ ಸಂಗ್ರಾಮವಂದಿನ
ಸುರನದೀನಂದನನ ದ್ರೋಣನ ಸೂತಸಂಭವನ
ನರನ ಭೂರಿಶ್ರವನ ಭೀಮನ
ಕುರುಪತಿಯ ವೃಷಸೇನ ಸೌಭ
ದ್ರರ ಸಮಗ್ರಾಹವವ ಮರಸಿತು ಹೇಳಲೇನೆಂದ ॥34॥
೦೩೫ ದಿಟ್ಟನೈ ಭೂಪತಿಗಳಲಿ ...{Loading}...
ದಿಟ್ಟನೈ ಭೂಪತಿಗಳಲಿ ಜಗ
ಜಟ್ಟಿಯೈ ನಿನಗಸ್ತ್ರವಿದ್ಯವ
ಕೊಟ್ಟವನ ನಾ ಬಲ್ಲೆನದನಿನ್ನಾಡಿ ಫಲವೇನು
ತೊಟ್ಟ ಜೋಹದ ವಾಸಿಯೆಂಬುದ
ಬಿಟ್ಟು ನಮಗೊಡ್ಡುವುದು ನಿನ್ನೊಡ
ವುಟ್ಟಿದರನಿಬ್ಬರನೆನುತ ತೆಗೆದೆಚ್ಚನಾ ಶಲ್ಯ ॥35॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೂಪತಿಗಳಲ್ಲಿ ನೀನು ದಿಟ್ಟನಾಗಿದ್ದೀಯ! ಜಗಜಟ್ಟಿಯಾಗಿದ್ದಿ! ನಿನಗೆ ಅಸ್ತ್ರವಿದ್ಯೆಗಳನ್ನು ಹೇಳಿಕೊಟ್ಟವನಾರೆಂದು ನನಗೆ ಗೊತ್ತು. ಅದನ್ನು ಹೇಳಿ ಫಲವೇನು! ನೀನು ತೊಟ್ಟಿರುವ ವೇಷಕ್ಕೆ (ಯೋಧನ ವೇಷ) ಸರಿಯಾಗಿ ನೀನು ನಡೆದುಕೊಳ್ಳಬೇಕೆಂಬ ವಿಚಾರವನ್ನು ಬಿಟ್ಟು ನಿನ್ನ ಒಡಹುಟ್ಟಿದಿಬ್ಬರನ್ನು-ಭೀಮಾರ್ಜುನರನ್ನು-ನನ್ನ ಮುಂದೆ ಯುದ್ಧಕ್ಕೆ ಒಡ್ಡು-ಎನ್ನುತ್ತ ಶಲ್ಯ ಧರ್ಮಜನನ್ನು ಅಪಹಾಸ್ಯ ಮಾಡುತ್ತಾ ಅವನ ಮೇಲೆ ಬಾಣ ಪ್ರಯೋಗ ಮಾಡಿದ.
ಪದಾರ್ಥ (ಕ.ಗ.ಪ)
ಜೋಹ-ವೇಷ, ಸೋಗು
ಟಿಪ್ಪನೀ (ಕ.ಗ.ಪ)
ನಮಗೊಡ್ಡುವುದು ನಿನ್ನೊಡವುಟ್ಟಿದರನಿಬ್ಬರನು……. ಎಂಬ ಶಲ್ಯನ ಮಾತಿನಲ್ಲಿ ಧರ್ಮರಾಯ ಜೂಜಿನಲ್ಲಿ ತಮ್ಮಂದಿರನ್ನು ಪಣವಾಗಿ ಒಡ್ಡಿದ ವಿಚಾರವನ್ನು ಹಂಗಿಸುವಂತಿದೆ.
ಮೂಲ ...{Loading}...
ದಿಟ್ಟನೈ ಭೂಪತಿಗಳಲಿ ಜಗ
ಜಟ್ಟಿಯೈ ನಿನಗಸ್ತ್ರವಿದ್ಯವ
ಕೊಟ್ಟವನ ನಾ ಬಲ್ಲೆನದನಿನ್ನಾಡಿ ಫಲವೇನು
ತೊಟ್ಟ ಜೋಹದ ವಾಸಿಯೆಂಬುದ
ಬಿಟ್ಟು ನಮಗೊಡ್ಡುವುದು ನಿನ್ನೊಡ
ವುಟ್ಟಿದರನಿಬ್ಬರನೆನುತ ತೆಗೆದೆಚ್ಚನಾ ಶಲ್ಯ ॥35॥
೦೩೬ ಮಾವ ಭೀಮಾರ್ಜುನರ ...{Loading}...
ಮಾವ ಭೀಮಾರ್ಜುನರ ಭಾರಣೆ
ಗಾವ ನಿಲುವನು ಸಾಕದಂತಿರ
ಲೀ ವಿಚಿತ್ರ ಕಳಂಬ ಖಂಡನ ಪಂಡಿತತ್ವವನು
ನೀವು ತೋರಿರೆ ಸಾಕು ಸಾಮ
ಥ್ರ್ಯಾವಲಂಬನವುಳ್ಳಡೀ ಶ
ಸ್ತ್ರಾವಳಿಯ ಸೈರಿಸಿಯೆನುತ ಯಮಸೂನು ತೆಗೆದೆಚ್ಚ ॥36॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶಲ್ಯ ಮಾವ! ಭೀಮಾರ್ಜುನರ ಹೊಡೆತಕ್ಕೆ ಯಾರು ನಿಲ್ಲುತ್ತಾರೆ? ಆ ಮಾತು ಸಾಕು. ನನ್ನ ಈ ವಿಚಿತ್ರವಾದ ಬಾಣವನ್ನು ಖಂಡಿಸುವ ಪಾಂಡಿತ್ಯವನ್ನು ನೀವು ತೋರಿಸಿ, (ನಿಮ್ಮ ವ್ಯಂಗ್ಯದ ಮಾತಿನ ಪಾಂಡಿತ್ಯ ಬೇಡ). ನಿಮಗೆ ಸಾಮಥ್ರ್ಯವಿದ್ದರೆ ನನ್ನ ಈ ಶಸ್ತ್ರಗಳನ್ನು ಸೈರಿಸಿ-ಎನ್ನುತ್ತಾ ಧರ್ಮರಾಯ ಶಲ್ಯನ ಮೇಲೆ ಬಾಣ ಪ್ರಯೋಗ ಮಾಡಿದ.
ಪದಾರ್ಥ (ಕ.ಗ.ಪ)
ಭಾರಣೆ-ಹೊಡೆತ, ಸಾಮಥ್ರ್ಯ, ಕಳಂಬ-ಬಾಣ
ಮೂಲ ...{Loading}...
ಮಾವ ಭೀಮಾರ್ಜುನರ ಭಾರಣೆ
ಗಾವ ನಿಲುವನು ಸಾಕದಂತಿರ
ಲೀ ವಿಚಿತ್ರ ಕಳಂಬ ಖಂಡನ ಪಂಡಿತತ್ವವನು
ನೀವು ತೋರಿರೆ ಸಾಕು ಸಾಮ
ಥ್ರ್ಯಾವಲಂಬನವುಳ್ಳಡೀ ಶ
ಸ್ತ್ರಾವಳಿಯ ಸೈರಿಸಿಯೆನುತ ಯಮಸೂನು ತೆಗೆದೆಚ್ಚ ॥36॥
೦೩೭ ಧರಣಿಪತಿಯಮ್ಬುಗಳನೆಡೆಯಲಿ ...{Loading}...
ಧರಣಿಪತಿಯಂಬುಗಳನೆಡೆಯಲಿ
ತರಿದು ತುಳುಕಿದನಂಬಿನುಬ್ಬಿನ
ಗರಿಯ ಗಾಳಿಯ ದಾಳಿ ಪೈಸರಿಸಿದುದು ಪರ್ವತವ
ಮೊರೆವ ಕಣೆ ಮಾರ್ಗಣೆಗಳನು ಕ
ತ್ತರಿಸಿದವು ಬಳಿಯಂಬುಗಳು ಪಡಿ
ಸರಳ ತೂಳಿದಡೆಚ್ಚರೆಚ್ಚರು ಮೆಚ್ಚಲುಭಯಬಲ ॥37॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮರಾಜನ ಬಾಣಗಳನ್ನು ದಾರಿಯಲ್ಲೇ ಶಲ್ಯ ಕತ್ತರಿಸಿಹಾಕಿದನು. ತನ್ನ ಬತ್ತಳಿಕೆಯಿಂದ ಬಾಣಗಳನ್ನು ಮೊಗೆದು ತೆಗೆದು ಪ್ರಯೋಗಿಸಲು ಆ ಬಾಣಗಳ ಗರಿಯಿಂದ ಹೊರಟ ಗಾಳಿಯು ಪರ್ವತಗಳನ್ನು ಹಿಮ್ಮೆಟ್ಟಿಸಿತು. ಮೊರೆವ ಶಬ್ದದಿಂದ ಬರುತ್ತಿದ್ದ ಬಾಣಗಳು ಪ್ರತಿಬಾಣಗಳನ್ನು ಕತ್ತರಿಸಿದುವು. ಪಕ್ಕದಲ್ಲಿ ಬರುತ್ತಿದ್ದ ಬಾಣಗಳು ಎದುರಿನಿಂದ ಬರುತ್ತಿದ್ದ ಬಾಣಗಳನ್ನು ಓಡಿಸಿಕೊಂಡು ಹೋಗಲು ಉಭಯ ಬಲಗಳವರೂ ಬಾಣ ಪ್ರಯೋಗ ಮಾಡುತ್ತಿದ್ದರು.
ಪದಾರ್ಥ (ಕ.ಗ.ಪ)
ಪೈಸರಿಸು-ಹಿಮ್ಮೆಟ್ಟಿಸು, ಮಾರ್ಗಣೆ-ಎದುರು ಬಾಣ, ತೂಳು-ಓಡು, ಅಟ್ಟು, ತಳ್ಳು
ಮೂಲ ...{Loading}...
ಧರಣಿಪತಿಯಂಬುಗಳನೆಡೆಯಲಿ
ತರಿದು ತುಳುಕಿದನಂಬಿನುಬ್ಬಿನ
ಗರಿಯ ಗಾಳಿಯ ದಾಳಿ ಪೈಸರಿಸಿದುದು ಪರ್ವತವ
ಮೊರೆವ ಕಣೆ ಮಾರ್ಗಣೆಗಳನು ಕ
ತ್ತರಿಸಿದವು ಬಳಿಯಂಬುಗಳು ಪಡಿ
ಸರಳ ತೂಳಿದಡೆಚ್ಚರೆಚ್ಚರು ಮೆಚ್ಚಲುಭಯಬಲ ॥37॥
೦೩೮ ಸೈರಿಸಾದಡೆಯೆನುತ ಮುಳಿದು ...{Loading}...
ಸೈರಿಸಾದಡೆಯೆನುತ ಮುಳಿದು ವ
ಹೀರಮಣ ಮದ್ರಾಧಿಪನನೆ
ಚ್ಚಾರಿದನು ಮಗುಳೆಚ್ಚು ಪುನರಪಿಯೆಚ್ಚು ಮಗುಳೆಸಲು
ಕೂರಲಗು ಸೀಸಕವ ಕವಚವ
ಹೋರುಗಳೆದವು ನೆತ್ತರಿನ ಬಾ
ಯ್ಧಾರೆಗಳ ತೋರಿದವು ದಳಪತಿಯಪರಭಾಗದಲಿ ॥38॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆದರೆ, ನನ್ನ ಈ ಬಾಣಗಳನ್ನು ಸೈರಿಸು-ಎನ್ನುತ್ತಾ ಧರ್ಮರಾಯ ಕೋಪದಿಂದ ಶಲ್ಯನನ್ನು ಬಾಣದಿಂದ ಹೊಡೆದು ಅಬ್ಬರಿಸಿದನು, ಪುನಃ ಮತ್ತೊಮ್ಮೆ ಮಗದೊಮ್ಮೆ ಹೊಡೆಯಲು ಅವು ಶಲ್ಯನ ಹರಿತವಾದ ಕತ್ತಿಯನ್ನು ಶಿರಸ್ತ್ರಾಣವನ್ನು, ಕವಚವನ್ನು ಕತ್ತರಿಸಿದವು. ಧರ್ಮರಾಯನು ಬಿಟ್ಟ ಶಸ್ತ್ರಗಳು, ಶಲ್ಯನ ಹಿಂಭಾಗದಲ್ಲಿ ಹೊರಬಂದು ರಕ್ತದಿಂದ ತೊಯ್ದ ಹರಿತವಾದ ತುದಿಗಳನ್ನು ತೋರಿಸುತ್ತಿದ್ದುವು.
ಪದಾರ್ಥ (ಕ.ಗ.ಪ)
ಹೋರುಗಳೆ-ಸೀಳುವುದು, ಜಖಂಗೊಳಿಸುವುದು, ಬಾಯ್ಧಾರೆ-ಕತ್ತಿಯ ಅಲಗು
ಮೂಲ ...{Loading}...
ಸೈರಿಸಾದಡೆಯೆನುತ ಮುಳಿದು ವ
ಹೀರಮಣ ಮದ್ರಾಧಿಪನನೆ
ಚ್ಚಾರಿದನು ಮಗುಳೆಚ್ಚು ಪುನರಪಿಯೆಚ್ಚು ಮಗುಳೆಸಲು
ಕೂರಲಗು ಸೀಸಕವ ಕವಚವ
ಹೋರುಗಳೆದವು ನೆತ್ತರಿನ ಬಾ
ಯ್ಧಾರೆಗಳ ತೋರಿದವು ದಳಪತಿಯಪರಭಾಗದಲಿ ॥38॥
೦೩೯ ಪ್ರಳಯಪವನನ ಹೊಯ್ಲಿನಲಿ ...{Loading}...
ಪ್ರಳಯಪವನನ ಹೊಯ್ಲಿನಲಿ ಕಳ
ವಳಿಸಿದಮರಾದ್ರಿಯವೊಲುದುರಿದ
ಬಿಲುಸರಳ ಹೆಗಲೋರೆಗೊರಳರೆಮುಚ್ಚುಗಣ್ಣುಗಳ
ತಳಿತ ರಕ್ತಾಂಕುರದ ಬಳಕೆಗೆ
ಬಳಲಿದಿಂದ್ರಿಯಕುಳದ ಮೂರ್ಛಾ
ವಿಲಸಿತಾಂಗದ ಶಲ್ಯನಿದ್ದನು ರಥದ ಮಧ್ಯದಲಿ ॥39॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪ್ರಳಯಕಾಲದ ಬಿರುಗಾಳಿಯ ಹೊಡೆತಕ್ಕೆ ಸಿಕ್ಕಿ ವ್ಯಾಕುಲಗೊಂಡ ದೇವಗಿರಿಯಂತೆ, ಬಿಲ್ಲುಬಾಣಗಳು ಕೆಳಗೆ ಬಿದ್ದಿರಲು, ಹೆಗಲಿನ ಮೇಲೆ ಓರೆಯಾಗಿ ಬಾಗಿದ ಕೊರಳಿನ, ಅರೆಮುಚ್ಚಿದ್ದ ಕಣ್ಣುಗಳ, ದೇಹದಲ್ಲಿ ಚಿಮುಕಿಸಿದಂತೆ ಹೊರಬರುತ್ತಿರುವ ರಕ್ತದಿಂದಾಗಿ ಬಳಲಿದ ಇಂದ್ರಿಯಗಳಿಂದ ಕೂಡಿದ, ಮೂರ್ಛೆಯಿಂದ ಆವರಿಸಲ್ಪಟ್ಟು ಶಲ್ಯನು ರಥದ ಮಧ್ಯದಲ್ಲಿದ್ದ.
ಪದಾರ್ಥ (ಕ.ಗ.ಪ)
ಅಮರಾದ್ರಿ-ದೇವಗಿರಿ, ಮೇರುಪರ್ವತ, ತಳಿತ-ಚಿಮುಕಿಸಿದ
ಮೂಲ ...{Loading}...
ಪ್ರಳಯಪವನನ ಹೊಯ್ಲಿನಲಿ ಕಳ
ವಳಿಸಿದಮರಾದ್ರಿಯವೊಲುದುರಿದ
ಬಿಲುಸರಳ ಹೆಗಲೋರೆಗೊರಳರೆಮುಚ್ಚುಗಣ್ಣುಗಳ
ತಳಿತ ರಕ್ತಾಂಕುರದ ಬಳಕೆಗೆ
ಬಳಲಿದಿಂದ್ರಿಯಕುಳದ ಮೂರ್ಛಾ
ವಿಲಸಿತಾಂಗದ ಶಲ್ಯನಿದ್ದನು ರಥದ ಮಧ್ಯದಲಿ ॥39॥
೦೪೦ ಅರಸ ಕೇಳೈ ...{Loading}...
ಅರಸ ಕೇಳೈ ಮರವೆಗಾತ್ಮನ
ನೆರವ ಕೊಟ್ಟು ಮುಹೂರ್ತಮಾತ್ರಕೆ
ಮರಳಿಚಿದವೊಲು ಕಂದೆರೆದು ನೋಡಿದನು ಕೆಲಬಲನ
ಸರಳ ಕಿತ್ತೌಷಧಿಯ ಲೇಪವ
ನೊರಸಿದನು ತೊಳೆತೊಳೆದು ನೂತನ
ವರ ದುಕೂಲವನುಟ್ಟು ಕೊಂಡನು ನಗುತ ವೀಳೆಯವ ॥40॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧೃತರಾಷ್ಟ್ರನೇ ಕೇಳು ಮರವಿಗೆ ಆತ್ಮವನ್ನು ಎರವು ನೀಡಿ (ಆತ್ಮನನ್ನು ಮರವೆಯ ಅಧೀನ ಮಾಡಿ) ಸ್ವಲ್ಪಕಾಲ ಮರವೆಯನ್ನೇ ಮುಂದು ಮಾಡಿ ಕ್ಷಣ ಮಾತ್ರದಲ್ಲಿ ಪುನಃ ಆ ಸಾಲವನ್ನು-ಎರವನ್ನು-ಮರಳಿಸಿದಂತೆ ಎಚ್ಚರಗೊಂಡು ಶಲ್ಯ ಕಣ್ಣುಬಿಟ್ಟು ಎಡಬಲನ ನೋಡಿದ. ದೇಹದಲ್ಲಿ ನಾಟಿದ್ದ ಬಾಣಗಳನ್ನು ಕಿತ್ತು ಗಾಯವನ್ನು ತೊಳೆದು ಔಷಧಿಯ ಲೇಪವನ್ನು ಗಾಯಗಳಿಗೆ ಹಚ್ಚಿದ. ಹೊಸದಾದ ರೇಷ್ಮೆಯ ವಸ್ತ್ರಗಳನ್ನು ಧರಿಸಿ ವೀಳಯವನ್ನು ಹಾಕಿಕೊಂಡು ನಗುತ್ತಾ ಪುನಃ ಯುದ್ಧಕ್ಕೆ ಸಿದ್ಧನಾದ.
ಪದಾರ್ಥ (ಕ.ಗ.ಪ)
ದುಕೂಲ- ರೇಷ್ಮೆಯ ವಸ್ತ್ರಗಳು.
ಮೂಲ ...{Loading}...
ಅರಸ ಕೇಳೈ ಮರವೆಗಾತ್ಮನ
ನೆರವ ಕೊಟ್ಟು ಮುಹೂರ್ತಮಾತ್ರಕೆ
ಮರಳಿಚಿದವೊಲು ಕಂದೆರೆದು ನೋಡಿದನು ಕೆಲಬಲನ
ಸರಳ ಕಿತ್ತೌಷಧಿಯ ಲೇಪವ
ನೊರಸಿದನು ತೊಳೆತೊಳೆದು ನೂತನ
ವರ ದುಕೂಲವನುಟ್ಟು ಕೊಂಡನು ನಗುತ ವೀಳೆಯವ ॥40॥
೦೪೧ ತುಡುಕಿದನು ಬಿಲುಸರಳನಕಟವ ...{Loading}...
ತುಡುಕಿದನು ಬಿಲುಸರಳನಕಟವ
ಗಡಿಸಿದನಲಾ ಧರ್ಮಸುತನು
ಗ್ಗಡದಲೊಂದು ಮುಹೂರ್ತವಾಯಿತೆ ಹಗೆಗೆ ಸುಮ್ಮಾನ
ತೊಡಕಿದೆಡೆಗೆ ಜಯಾಪಜಯ ಸಂ
ಗಡಿಸುವುವು ತಪ್ಪೇನು ಯಮಸುತ
ಹಿಡಿ ಧನುವನನುವಾಗೆನುತ ಮೂದಲಿಸಿದನು ಶಲ್ಯ ॥41॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಿಲ್ಲು ಬಾಣಗಳನ್ನು ಕೈಗೆತ್ತಿಕೊಂಡು, ಧರ್ಮರಾಯನು ಉಗ್ಗಡಿಸಿ, ನನ್ನನ್ನು ಸೋಲಿಸಿದನಲ್ಲವೆ! ಒಂದು ಮುಹೂರ್ತ ಮಾತ್ರದಷ್ಟು ಸಮಯ ಶತ್ರುವಾದ ಧರ್ಮಜನಿಗೆ ಸುಮ್ಮಾನವಾಯಿತೆ. ಯುದ್ಧಕ್ಕೆ ತೊಡಗಿದರೆ ಜಯಾಪಜಯಗಳು ಬಲುಸಹಜ ತಪ್ಪೇನು, ಯಮಸುತನೇ ಬಿಲ್ಲನ್ನು ಹಿಡಿದು ಯುದ್ಧಕ್ಕೆ ಸಿದ್ಧನಾಗು-ಎಂದು ಶಲ್ಯ ಮೂದಲಿಸಿದ.
ಪದಾರ್ಥ (ಕ.ಗ.ಪ)
ಅವಗಡಿಸು-ಹೀಯಾಳಿಸು, ಸೋಲಿಸು, ಭಂಗಿಸು, ಸುಮ್ಮಾನ-ಸಂತೋಷ, ಹಿಗ್ಗು.
ಮೂಲ ...{Loading}...
ತುಡುಕಿದನು ಬಿಲುಸರಳನಕಟವ
ಗಡಿಸಿದನಲಾ ಧರ್ಮಸುತನು
ಗ್ಗಡದಲೊಂದು ಮುಹೂರ್ತವಾಯಿತೆ ಹಗೆಗೆ ಸುಮ್ಮಾನ
ತೊಡಕಿದೆಡೆಗೆ ಜಯಾಪಜಯ ಸಂ
ಗಡಿಸುವುವು ತಪ್ಪೇನು ಯಮಸುತ
ಹಿಡಿ ಧನುವನನುವಾಗೆನುತ ಮೂದಲಿಸಿದನು ಶಲ್ಯ ॥41॥
೦೪೨ ನರನ ರಥವದೆ ...{Loading}...
ನರನ ರಥವದೆ ಮರೆಯಹೊಗು ಮುರ
ಹರನ ಮರೆವೊಗು ಭೀಮಸೇನನ
ಕರಸಿ ನೂಕು ಶಿಖಂಡಿ ಸಾತ್ಯಕಿ ಸೃಂಜಯಾದಿಗಳ
ಅರಸುಗುರಿಗಳ ಹೊಯ್ಸು ಗೆಲುವಿನ
ಗರುವನಾದಡೆ ನಿಲ್ಲೆನುತಲು
ಬ್ಬರಿಸಿ ಮಾದ್ರಾಧೀಶನೆಚ್ಚನು ಧರ್ಮನಂದನನ ॥42॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮರಾಯ! ಅಗೋ ಅಲ್ಲಿ ನೋಡು, ಅರ್ಜುನನ ರಥವಿದೆ. ಅದರ ಹಿಂದೆ ಅವಿತಿಟ್ಟುಕೋ. ಕೃಷ್ಣನ ಮರೆಹೋಗು, ಭೀಮನನ್ನು ಸಹಾಯಕ್ಕೆ ಕರೆಸು, ಶಿಖಂಡಿ, ಸಾತ್ಯಕಿ, ಸೃಂಜಯಾದಿಗಳನ್ನು ಯುದ್ಧರಂಗದ ಮುಂದಕ್ಕೆ ನೂಕು. ಅರಸು ಕುರಿಗಳನ್ನು ಮುಂದೆ ಬಿಟ್ಟು ಅವರನ್ನು ಸಂಹರಿಸು. ಗೆಲುವಿನ ಹೆಮ್ಮೆಯುಳ್ಳವನಾದರೆ, ಶ್ರೇಷ್ಠನಾದರೆ, ನನ್ನ ಎದುರು ನಿಲ್ಲು ಎಂದು ಅಬ್ಬರಿಸುತ್ತಾ ಶಲ್ಯ ಧರ್ಮರಾಯನನ್ನು ಬಾಣಗಳಿಂದ ಹೊಡೆದ.
ಪದಾರ್ಥ (ಕ.ಗ.ಪ)
ಅರಸುಗುರಿಗಳು-ಅರಸರೆಂಬ ಕುರಿಗಳು, ಹೊಯ್ಯು-ಬಲಿಹಾಕು.
ಮೂಲ ...{Loading}...
ನರನ ರಥವದೆ ಮರೆಯಹೊಗು ಮುರ
ಹರನ ಮರೆವೊಗು ಭೀಮಸೇನನ
ಕರಸಿ ನೂಕು ಶಿಖಂಡಿ ಸಾತ್ಯಕಿ ಸೃಂಜಯಾದಿಗಳ
ಅರಸುಗುರಿಗಳ ಹೊಯ್ಸು ಗೆಲುವಿನ
ಗರುವನಾದಡೆ ನಿಲ್ಲೆನುತಲು
ಬ್ಬರಿಸಿ ಮಾದ್ರಾಧೀಶನೆಚ್ಚನು ಧರ್ಮನಂದನನ ॥42॥
೦೪೩ ಏನ ಹೇಳುವೆ ...{Loading}...
ಏನ ಹೇಳುವೆ ಭಟನ ಶರ ಸಂ
ಧಾನವನು ಪುಂಖಾನುಪುಂಖವಿ
ಧಾನವನು ಝೇಂಕಾರಶರಜಾಳಪ್ರಸಾರಣವ
ಆ ನಿರಂತರ ಸರಳ ಸಾರದ
ಸೋನೆ ಸದೆದುದು ಧರ್ಮಸುತನರ
ಣಾನುರಾಗವ ತೊಳೆದುದದ್ಭುತವಾಯ್ತು ನಿಮಿಷದಲಿ ॥43॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವೀರಭಟನಾದ ಶಲ್ಯನ ಬಾಣ ಪ್ರಯೋಗವನ್ನು ಹೇಗೆ ವರ್ಣಿಸಲಿ, ಒಂದರ ಹಿಂದೆ ಒಂದು ಬಾಣ ಹೋಗುವ ವಿಧಾನವನ್ನು, ಝೇಂಕರಿಸುತ್ತಾ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಾ ಮುಂಬರಿಯುವ ಬಾಣಗಳ ಪ್ರಯೋಗವನ್ನು ಹೇಗೆ ಹೇಳಲಿ. ಹಾಗೆ ನಿರಂತರವಾಗಿ ಸುರಿದ ಬಾಣಗಳ ಸೋನೆಯ ಮಳೆಯು ಧರ್ಮರಾಯನ ಮುಖದ ಮೇಲೆ ಸಂತೋಷದ ನಸುಗೆಂಪನ್ನು ತೊಳೆದುಹಾಕಿತು. ಒಂದು ನಿಮಿಷದಲ್ಲಿ ಅದ್ಭುತವಾದ ಸ್ಥಿತಿ ನಿರ್ಮಾಣವಾಯಿತು.
ಪದಾರ್ಥ (ಕ.ಗ.ಪ)
ಪುಂಖ-ಗರಿಗಳಿಂದ ಕೂಡಿದ ಬಾಣದ ಹಿಂಭಾಗ, ಪುಂಖಾನುಪುಂಖ-ಗರಿಯನ್ನು ಹಿಂಬಾಲಿಸುವ ಮತ್ತೊಂದು ಗರಿ, ಒಂದಾದ ಮೇಲೆ ಒಂದರಂತೆ ಬರುವ ಬಾಣಗಳು.
ಮೂಲ ...{Loading}...
ಏನ ಹೇಳುವೆ ಭಟನ ಶರ ಸಂ
ಧಾನವನು ಪುಂಖಾನುಪುಂಖವಿ
ಧಾನವನು ಝೇಂಕಾರಶರಜಾಳಪ್ರಸಾರಣವ
ಆ ನಿರಂತರ ಸರಳ ಸಾರದ
ಸೋನೆ ಸದೆದುದು ಧರ್ಮಸುತನರ
ಣಾನುರಾಗವ ತೊಳೆದುದದ್ಭುತವಾಯ್ತು ನಿಮಿಷದಲಿ ॥43॥
೦೪೪ ಸರಳ ಮುರಿಯೆಸಲಾ ...{Loading}...
ಸರಳ ಮುರಿಯೆಸಲಾ ಸರಳ ಕ
ತ್ತರಿಸಿ ಹತ್ತಂಬಿನಲಿ ರಾಯನ
ಬರಿಯ ಕವಚವ ಹರಿಯಲೆಚ್ಚನು ಮೂರು ಬಾಣದಲಿ
ಶಿರದ ಸೀಸಕವನು ನಿಘಾತದ
ಲೆರಡು ಶರದಲಿ ಮತ್ತೆ ಭೂಪತಿ
ಯುರವನಗುಳಿದನೆಂಟರಲಿ ಮಗುಳೆಚ್ಚು ಬೊಬ್ಬಿರಿದ ॥44॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಒಂದು ಬಾಣವು ಮತ್ತೊಂದು ಬಾಣವನ್ನು ಕತ್ತರಿಸಿ ಎಸೆಯಲು, ಆ ಬಾಣವನ್ನು ಮತ್ತೊಂದರಿಂದ ಕತ್ತರಿಸಿದ ಶಲ್ಯ (ಹತ್ತು ಬಾಣಗಳಲ್ಲಿ) ಧರ್ಮಜನ ಸೊಂಟಕ್ಕೆ ಕಟ್ಟಿದ್ದ ಕವಚವನ್ನು ಚೂರು ಚೂರಾಗುವಂತೆ ಹೊಡೆದನು. ಮೂರು ಬಾಣದಲ್ಲಿ ತಲೆಗೆ ಧರಿಸಿದ್ದ ಸೀಸಕವನ್ನು, ಎರಡು ಬಾಣಗಳ ಹೊಡೆತದಿಂದ ರಾಜನ ಎದೆಯನ್ನು ತೋಡಿದನು. ಎಂಟು ಬಾಣದಲ್ಲಿ ಪುನಃ ಹೊಡೆದು ಬೊಬ್ಬರಿದು ಶಬ್ದ ಮಾಡಿದ.
ಪದಾರ್ಥ (ಕ.ಗ.ಪ)
ಬರಿ-ಸೊಂಟದ ಪ್ರದೇಶ, ಕವಚವನ್ನು ಕಟ್ಟುವ ಸ್ಥಳ, ಸೀಸಕ-ತಲೆಯರಕ್ಷಣೆಗೆ ಹಾಕುವ ಶಿರಸ್ತ್ರಾಣ, ನಿಘಾತ-ಹೊಡೆತ, ಉರ-ಎದೆ, ಅಗುಳು-ತೋಡು
ಮೂಲ ...{Loading}...
ಸರಳ ಮುರಿಯೆಸಲಾ ಸರಳ ಕ
ತ್ತರಿಸಿ ಹತ್ತಂಬಿನಲಿ ರಾಯನ
ಬರಿಯ ಕವಚವ ಹರಿಯಲೆಚ್ಚನು ಮೂರು ಬಾಣದಲಿ
ಶಿರದ ಸೀಸಕವನು ನಿಘಾತದ
ಲೆರಡು ಶರದಲಿ ಮತ್ತೆ ಭೂಪತಿ
ಯುರವನಗುಳಿದನೆಂಟರಲಿ ಮಗುಳೆಚ್ಚು ಬೊಬ್ಬಿರಿದ ॥44॥
೦೪೫ ಗರುಡತುಣ್ಡದ ಹತಿಗೆ ...{Loading}...
ಗರುಡತುಂಡದ ಹತಿಗೆ ಫಣಿಯೆದೆ
ಬಿರಿವವೊಲು ಯಮಸುತನ ತನು ಜ
ಜ್ರ್ಝರಿತವಾದುದು ಜರಿವ ಜೋಡಿನ ಜಿಗಿಯ ಶೋಣಿತದ
ಮುರಿದ ಕಂಗಳ ಮಲಗಿನಲಿ ಪೈ
ಸರದ ಗಾತ್ರದ ಗಾಢವೇದನೆ
ಯುರವಣಿಸೆ ಸೊಂಪಡಗಿ ನಿಮಿಷ ಮಹೀಶ ಮೈಮರೆದ ॥45॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಗರುಡನ ಕೊಕ್ಕಿನ ಹೊಡೆತಕ್ಕೆ, ಸರ್ಪದ ಎದೆ ಬಿರಿದು ಹೋಗುವಂತೆ, ಶಲ್ಯನ ಬಾಣಗಳಿಂದ ಯುಮಸುತನಾದ ಧರ್ಮರಾಯನ ದೇಹ ಜಜ್ರ್ಝರಿತವಾಯಿತು. ಕವಚವು ಹರಿದು ಜರಿದು ಹೋಯ್ತು, ದೇಹವು ರಕ್ತ ಮೆತ್ತಿಕೊಂಡು ಅಂಟಾಯಿತು. ಕಣ್ಣುಗಳು ತಿರುಗುತ್ತಿರಲು, ಒರಗಿ ಕುಳಿತ ಧರ್ಮರಾಯನ ಶರೀರವೆಲ್ಲ ಕುಗ್ಗಿಹೋಗಲು, ಗಾಢವಾದ ನೋವಿನಿಂದ ದೇಹದ ಸೊಂಪು ನಾಶವಾಗಿ ಒಂದು ನಿಮಿಷ ಧರ್ಮರಾಯ ಮೂರ್ಛೆಹೋದ.
ಪದಾರ್ಥ (ಕ.ಗ.ಪ)
ಗರುಡತುಂಡ-ಗರುಡನ ಕೊಕ್ಕು, ಜರಿವ-ಕೆಳಗೆ ಇಳಿಯುವ, ಜರಿದು ಹೋಗುವ , ಜಿಗಿ-ಅಂಟಿದ, ಮೆತ್ತಿಕೊಂಡ, ಮುರಿದ-ತಿರುಗಿದ, ಮಲಗು-ಒರಗು, ಪೈಸರ- ಹಿಮ್ಮೆಟ್ಟು, ಕುಗ್ಗು
ಮೂಲ ...{Loading}...
ಗರುಡತುಂಡದ ಹತಿಗೆ ಫಣಿಯೆದೆ
ಬಿರಿವವೊಲು ಯಮಸುತನ ತನು ಜ
ಜ್ರ್ಝರಿತವಾದುದು ಜರಿವ ಜೋಡಿನ ಜಿಗಿಯ ಶೋಣಿತದ
ಮುರಿದ ಕಂಗಳ ಮಲಗಿನಲಿ ಪೈ
ಸರದ ಗಾತ್ರದ ಗಾಢವೇದನೆ
ಯುರವಣಿಸೆ ಸೊಂಪಡಗಿ ನಿಮಿಷ ಮಹೀಶ ಮೈಮರೆದ ॥45॥
೦೪೬ ಬಿದ್ದನಾಚೆಯ ದೊರೆ ...{Loading}...
ಬಿದ್ದನಾಚೆಯ ದೊರೆ ಸುಯೋಧನ
ಗೆದ್ದನಿನ್ನೇನೆನುತ ಸುಭಟರ
ನದ್ದಿತತಿಸುಮ್ಮಾನಸಾಗರ ನಿನ್ನ ಮೋಹರದ
ಅದ್ದರೋ ಶೋಕಾಂಬುಧಿಯಲೊಡೆ
ಬಿದ್ದರೋ ಭೀಮಾರ್ಜುನರಿಗುಸು
ರಿದ್ದುದೋ ಬರಹೇಳೆನುತ ಬೊಬ್ಬಿರಿದನಾ ಶಲ್ಯ ॥46॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಚೆಯ ಪಕ್ಷದ ದೊರೆಯಾದ ಧರ್ಮರಾಯ ಬಿದ್ದ, ಇನ್ನೇನು ಸುಯೋಧನ ಗೆದ್ದ-ಎನ್ನುತ್ತಿರುವ ಕೌರವ ಸುಭಟರ ಉತ್ಸಾಹವು ನಿನ್ನ ಸೈನ್ಯವನ್ನು ಸಂತೋಷದ ಸಮುದ್ರದಲ್ಲಿ ಅದ್ದಿತು; ಪಾಂಡವರು ಶೋಕಸಾಗರದಲ್ಲಿ ಅದ್ದಿದರೋ, ಮುಳುಗಿ ಹೋದರೋ, ಭೀಮಾರ್ಜುನರಿಗೆ ಉಸಿರು ಇದೆಯೆ? ಅವರನ್ನು ಬರಹೇಳು ಎನ್ನುತ್ತಾ ಶಲ್ಯ ಬೊಬ್ಬಿರಿದ.
ಪದಾರ್ಥ (ಕ.ಗ.ಪ)
ಸುಮ್ಮಾನ-ಸಂತೋಷ
ಮೂಲ ...{Loading}...
ಬಿದ್ದನಾಚೆಯ ದೊರೆ ಸುಯೋಧನ
ಗೆದ್ದನಿನ್ನೇನೆನುತ ಸುಭಟರ
ನದ್ದಿತತಿಸುಮ್ಮಾನಸಾಗರ ನಿನ್ನ ಮೋಹರದ
ಅದ್ದರೋ ಶೋಕಾಂಬುಧಿಯಲೊಡೆ
ಬಿದ್ದರೋ ಭೀಮಾರ್ಜುನರಿಗುಸು
ರಿದ್ದುದೋ ಬರಹೇಳೆನುತ ಬೊಬ್ಬಿರಿದನಾ ಶಲ್ಯ ॥46॥
೦೪೭ ಗಜಬಜಿಸಿದುದು ವೈರಿಸುಭಟ ...{Loading}...
ಗಜಬಜಿಸಿದುದು ವೈರಿಸುಭಟ
ವ್ರಜ ನಕುಲ ಸಹದೇವ ಸಾತ್ಯಕಿ
ವಿಜಯ ಧೃಷ್ಟದ್ಯುಮ್ನ ಭೀಮ ದ್ರೌಪದೀಸುತರು
ವಿಜಿತನೋ ವಿಗತಾಸುವೋ ಧ
ರ್ಮಜನ ಹದನೇನೆನುತ ಚಿಂತಾ
ರಜನಿಯಲಿ ಕಂಗೆಟ್ಟುದಾ ಬಲವರಸ ಕೇಳ್ ಎಂದ ॥47॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಿನ್ನ ವೈರಿ ಸುಭಟ ಸಮೂಹದಲ್ಲಿ ನಕುಲ, ಸಹದೇವ, ಸಾತ್ಯಕಿ, ಅರ್ಜುನ, ಧೃಷ್ಟದ್ಯುಮ್ನ, ಭೀಮ, ದ್ರೌಪದೀಸುತರು ಆತಂಕಗೊಂಡು ಗಜಬಜಿಸಿದರು. ಧರ್ಮರಾಯನು ಸೋತಿದ್ದಾನೋ ಅಥವ ಪ್ರಾಣವನ್ನೇ ಕಳೆದುಕೊಂಡಿದ್ದಾನೋ ಎಂಬ ಚಿಂತೆಯಲ್ಲಿ ಆ ಬಲವು ಕಂಗೆಟ್ಟು ಹೋಯಿತು-ಕೇಳು ಧೃತರಾಷ್ಟ್ರ-ಎಂದು ಸಂಜಯ ಹೇಳಿದನು.
ಪದಾರ್ಥ (ಕ.ಗ.ಪ)
ಗಜಬಜಿಸು-ಕೋಲಾಹಲ ಮಾಡು, ವ್ರಜ-ಸಮೂಹ, ವಿಜಿತ-ಗೆಲ್ಲಲ್ಪಟ್ಟವನು, ಸೋತವನು, ವಿಗತಾಸು–ಪ್ರಾಣ ಕಳೆದುಕೊಂಡವನು, ಚಿಂತಾರಜನಿ-ಚಿಂತೆಯೆಂಬ ಕತ್ತಲು (ರಜನಿ-ರಾತ್ರಿ,ಕತ್ತಲು)
ಮೂಲ ...{Loading}...
ಗಜಬಜಿಸಿದುದು ವೈರಿಸುಭಟ
ವ್ರಜ ನಕುಲ ಸಹದೇವ ಸಾತ್ಯಕಿ
ವಿಜಯ ಧೃಷ್ಟದ್ಯುಮ್ನ ಭೀಮ ದ್ರೌಪದೀಸುತರು
ವಿಜಿತನೋ ವಿಗತಾಸುವೋ ಧ
ರ್ಮಜನ ಹದನೇನೆನುತ ಚಿಂತಾ
ರಜನಿಯಲಿ ಕಂಗೆಟ್ಟುದಾ ಬಲವರಸ ಕೇಳೆಂದ ॥47॥
೦೪೮ ಕ್ಷಣಕೆ ಮರಳೆಚ್ಚತ್ತನಸ್ತ್ರ ...{Loading}...
ಕ್ಷಣಕೆ ಮರಳೆಚ್ಚತ್ತನಸ್ತ್ರ
ವ್ರಣವ ತೊಳೆದರು ಘಾಯದಲಿ ಕೇ
ವಣಿಸಿದರು ದಿವ್ಯೌಷಧಿಯ ಗಂಧಾನುಲೇಪದಲಿ
ರಣವಿಜಯ ನವ ವಸನ ಮಣಿಭೂ
ಷಣ ಪರಿಷ್ಕೃತನಾಗಿ ತಿರುವಿನ
ಗೊಣೆಯವನು ನೇವರಿಸಿದನು ಸಂತೈಸಿ ಸಂಹನವ ॥48॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಒಂದು ಕ್ಷಣದಲ್ಲಿ ಧರ್ಮರಾಯ ಪುನಃ ಎಚ್ಚೆತ್ತುಕೊಂಡ. ಅವನ ದೇಹದ ಮೇಲಾಗಿದ್ದ ಶಸ್ತ್ರಗಳ ಗಾಯಗಳನ್ನು ತೊಳೆದರು. ಗಾಯಕ್ಕೆ ದಿವ್ಯವಾದ ಔಷಧಿಗಳನ್ನು ಲೇಪಿಸಿದರು. ಗಂಧವೇ ಮುಂತಾದ ಔಷಧಿಯುಕ್ತ ಸುಗಂಧ ದ್ರವ್ಯಗಳನ್ನು ಲೇಪಿಸಿದರು. ರಣವಿಜಯನಾದ ಧರ್ಮರಾಯನು ಹೊಸವಸ್ತ್ರ, ಮಣಿಹಾರಗಳು, ಮುಂತಾದುವುಗಳಿಂದ ಮರು ಅಲಂಕೃತನಾಗಿ, ಬಿಲ್ಲಿನ ಹೆದೆಯ ತುದಿಯನ್ನು ನೇವರಿಸಿ, ಸೈನಿಕರನ್ನು ಸಂತೈಸಿ ಯುದ್ಧಕ್ಕೆ ಸಿದ್ಧನಾದ.
ಪದಾರ್ಥ (ಕ.ಗ.ಪ)
ಕೇವಣಿಸು-ಲೇಪಿಸು, ಜೋಡಿಸು, ಹರಳನ್ನು ಕೂರಿಸುವುದು, ಪರಿಷ್ಕೃತ-ತಿದ್ದಿದ, ಸರಿಪಡಿಸಿದ, ಸಂಹನ- ದೇಹ
ಮೂಲ ...{Loading}...
ಕ್ಷಣಕೆ ಮರಳೆಚ್ಚತ್ತನಸ್ತ್ರ
ವ್ರಣವ ತೊಳೆದರು ಘಾಯದಲಿ ಕೇ
ವಣಿಸಿದರು ದಿವ್ಯೌಷಧಿಯ ಗಂಧಾನುಲೇಪದಲಿ
ರಣವಿಜಯ ನವ ವಸನ ಮಣಿಭೂ
ಷಣ ಪರಿಷ್ಕೃತನಾಗಿ ತಿರುವಿನ
ಗೊಣೆಯವನು ನೇವರಿಸಿದನು ಸಂತೈಸಿ ಸಂಹನವ ॥48॥
೦೪೯ ಮರವೆ ಮಸಳಿತೆ ...{Loading}...
ಮರವೆ ಮಸಳಿತೆ ಭೂಮಿಪತಿ ಕಂ
ದೆರೆದಿರೇ ಭೀಮಾರ್ಜುನರು ನಿ
ಮ್ಮಿರಿತಕೊದಗಿದರಿಲ್ಲಲಾ ನೀವೇಕೆ ರಣವೇಕೆ
ನೆರೆ ಧನುರ್ವೇದಾರ್ಥಸಾರವ
ನರಿವೆಯಾದರೆ ಕೊಳ್ಳೆನುತ ಬಿಡೆ
ತರಿದನೆಂಟಂಬಿನಲಿ ಧ್ವಜ ರಥ ಹಯವನಾ ಶಲ್ಯ ॥49॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೂಪತಿಗಳೇ, ನಿಮ್ಮ ಮರೆವು ಮಾಯವಾಯಿತೆ? ಕಣ್ಣು ತೆರೆದಿರೆ? ಭೀಮಾರ್ಜುನರು ನಿಮ್ಮ ಯುದ್ಧಕ್ಕೆ ಒದಗಲಿಲ್ಲವಲ್ಲಾ! ನೀವೇಕೆ ಯುದ್ಧವೇಕೆ! ನೀನೇನಾದರೂ ಧನುರ್ವೇದದ ಸಾರವನ್ನು ತಿಳಿದವನಾದರೆ ಇದನ್ನು ಎದುರಿಸು ಎಂದು ಶಲ್ಯನು ಎಂಟು ಬಾಣಗಳಲ್ಲಿ ಬಾವುಟ, ರಥ ಮತ್ತು ಕುದುರೆಗಳನ್ನು ತರಿದುಹಾಕಿದ.
ಪದಾರ್ಥ (ಕ.ಗ.ಪ)
ಮಸಳು-ಪುನಃಪ್ರಾಪ್ತಿಯಾಗು, ಧನುರ್ವೇದ-ಬಿಲ್ವಿದ್ಯೆಯೆಂಬ ವೇದ
ಮೂಲ ...{Loading}...
ಮರವೆ ಮಸಳಿತೆ ಭೂಮಿಪತಿ ಕಂ
ದೆರೆದಿರೇ ಭೀಮಾರ್ಜುನರು ನಿ
ಮ್ಮಿರಿತಕೊದಗಿದರಿಲ್ಲಲಾ ನೀವೇಕೆ ರಣವೇಕೆ
ನೆರೆ ಧನುರ್ವೇದಾರ್ಥಸಾರವ
ನರಿವೆಯಾದರೆ ಕೊಳ್ಳೆನುತ ಬಿಡೆ
ತರಿದನೆಂಟಂಬಿನಲಿ ಧ್ವಜ ರಥ ಹಯವನಾ ಶಲ್ಯ ॥49॥
೦೫೦ ಧನುವನೆರಡಮ್ಬಿನಲಿ ಮಗುಳೆ ...{Loading}...
ಧನುವನೆರಡಂಬಿನಲಿ ಮಗುಳೆ
ಚ್ಚನು ಮಹೀಶನ ಸಾರಥಿಯ ಮೈ
ನನೆಯೆ ನವ ರುಧಿರದಲಿ ಮರಳೆಚ್ಚನು ಯುಧಿಷ್ಠಿರನ
ಮನನ ಶಾಸ್ತ್ರ ಶ್ರವಣ ನಿಯಮಾ
ವನ ಸಮಾಧಿ ಧ್ಯಾನ ವಿದ್ಯಾ
ವಿನಯವಲ್ಲದೆ ರಣದ ಜಂಜಡವೇಕೆ ನಿಮಗೆಂದ ॥50॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯುಧಿಷ್ಠರನ ಬಿಲ್ಲನ್ನು ಎರಡು ಬಾಣಗಳಲ್ಲಿ ಹೊಡೆದ; ಧರ್ಮರಾಯನ ಸಾರಥಿಯ ಮೈ ರಕ್ತದಲ್ಲಿ ನೆನೆಯುವಂತೆ ಪುನಃ ಹೊಡೆದನು; ಯುಧಿಷ್ಠರನನ್ನು ಪುನಃ ಹೊಡೆದನು. ಮನನ, ಶಾಸ್ತ್ರ, ಶ್ರವಣ, ನಿಯಮ, ಆಸನ, ಸಮಾಧಿ, ಧ್ಯಾನ ವಿದ್ಯಾವಿನಯ ಮುಂತಾದ ಅಧ್ಯಾತ್ಮ ವಿದ್ಯೆಗಳಲ್ಲದೇ ಈ ಯುದ್ಧದ ಜಂಜಾಟ ನಿಮಗೇಕೆಂದು ಶಲ್ಯ ಅಪಹಾಸ್ಯ ಮಾಡಿದ.
ಮೂಲ ...{Loading}...
ಧನುವನೆರಡಂಬಿನಲಿ ಮಗುಳೆ
ಚ್ಚನು ಮಹೀಶನ ಸಾರಥಿಯ ಮೈ
ನನೆಯೆ ನವ ರುಧಿರದಲಿ ಮರಳೆಚ್ಚನು ಯುಧಿಷ್ಠಿರನ
ಮನನ ಶಾಸ್ತ್ರ ಶ್ರವಣ ನಿಯಮಾ
ವನ ಸಮಾಧಿ ಧ್ಯಾನ ವಿದ್ಯಾ
ವಿನಯವಲ್ಲದೆ ರಣದ ಜಂಜಡವೇಕೆ ನಿಮಗೆಂದ ॥50॥
೦೫೧ ಉಡಿದು ಬಿದ್ದುದು ...{Loading}...
ಉಡಿದು ಬಿದ್ದುದು ಚಾಪ ಸಾರಥಿ
ಕಡಿವಡೆದು ರಥ ನುಗ್ಗುನುಸಿಯಾ
ಯ್ತಡಗುದರಿಯಾಯ್ತಶ್ವಚಯ ಸಜ್ಜೋಡು ತಡಿ ಸಹಿತ
ನಡುಗಿತರಿಬಲವವನಿಪತಿ ಕಾ
ಲ್ನಡೆಗೆ ಬಂದನು ಮತ್ತೆ ರಥವಂ
ಗಡವ ಮೇಳೈಸಿದನು ನಗುತಡರಿದನು ಮಣಿರಥವ ॥51॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮರಾಯನ ಬಿಲ್ಲು ಮುರಿದು ಬಿತ್ತು. ಸಾರಥಿಯನ್ನು ಕತ್ತರಿಸಿಹಾಕಿದ. ರಥ ನುಜ್ಜುಗುಜ್ಜಾಯಿತು. ಕುದುರೆಗಳ ಕವಚ ಮತ್ತು ಅವುಗಳ ಮೇಲೆ ಹಾಸಿದ ಹಾಸಿಗೆ ಸಹಿತವಾಗಿ ಕುದುರೆಗಳ ಮಾಂಸವನ್ನು ಕತ್ತರಿಸಿಟ್ಟಂತಾಯಿತು. ಶತ್ರುಸೈನ್ಯವು (ಪಾಂಡವರ ಸೈನ್ಯವು) ಭಯದಿಂದ ನಡುಗಿ ಹೋಯಿತು. ಧರ್ಮರಾಯ ರಥದಿಂದ ಇಳಿದು ಕಾಲ್ನಡೆಯಲ್ಲಿ ಬರಬೇಕಾಯಿತು. ಪುನಃ ಬೇರೆ ಬೇರೆ ರಥಗಳನ್ನು ಸಿದ್ಧಪಡಿಸಿಕೊಂಡು ನಗುತ್ತ ಮಣಿಖಚಿತ ರಥವನ್ನು ಏರಿದನು.
ಪದಾರ್ಥ (ಕ.ಗ.ಪ)
ಸಜ್ಜೋಡು-ಕುದುರೆಯ ಬೆನ್ನಿನ ಮೇಲೆ ಹಾಕಿದ ಕವಚ, ತಡಿ-ಕುದುರೆಯ ಬೆನ್ನ ಮೇಲಿನ ಬಟ್ಟೆ, ವಂಗಡ-ಬೇರೆ, ವ್ಯತ್ಯಾಸ
ಮೂಲ ...{Loading}...
ಉಡಿದು ಬಿದ್ದುದು ಚಾಪ ಸಾರಥಿ
ಕಡಿವಡೆದು ರಥ ನುಗ್ಗುನುಸಿಯಾ
ಯ್ತಡಗುದರಿಯಾಯ್ತಶ್ವಚಯ ಸಜ್ಜೋಡು ತಡಿ ಸಹಿತ
ನಡುಗಿತರಿಬಲವವನಿಪತಿ ಕಾ
ಲ್ನಡೆಗೆ ಬಂದನು ಮತ್ತೆ ರಥವಂ
ಗಡವ ಮೇಳೈಸಿದನು ನಗುತಡರಿದನು ಮಣಿರಥವ ॥51॥
೦೫೨ ಬೊಬ್ಬಿರಿದುದಾ ಸೇನೆ ...{Loading}...
ಬೊಬ್ಬಿರಿದುದಾ ಸೇನೆ ರಾಯನ
ಸರ್ಬದಳ ಜೋಡಿಸಿತು ಸೋಲದ
ಮಬ್ಬು ಹರೆದುದು ಜಯದ ಜಸವೇರಿದನು ನರನಾಥ
ಉಬ್ಬಿದನು ಸತ್ಕ್ಷತ್ರತೇಜದ
ಗರ್ಭ ಗಾಡಿಸಿತಾರಿ ಮಿಡಿದನು
ತೆಬ್ಬಿನಸ್ತ್ರವ ತೂಗಿ ತುಳುಕಿದನಂಬಿನಂಬುಧಿಯ ॥52॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬೊಬ್ಬೆ ಹೊಡೆಯುತ್ತ, ಪಾಂಡವರ ಎಲ್ಲ ಸೈನ್ಯವೂ ಒಂದೆಡೆ ಸೇರಿತು. ಸೋಲಿನ ಮಬ್ಬುಗತ್ತಲೆ ಹರಿಯಿತು. ಧರ್ಮರಾಯನು ಜಯದ ಯಶಸ್ಸನ್ನು ಹತ್ತಿದ. ಉಬ್ಬಿ ಉತ್ಸಾಹಿತನಾದ. ಉತ್ತಮ ಕ್ಷಾತ್ರ ತೇಜಸ್ಸಿನ ದೇಹಕಾಂತಿ ಎದ್ದುಕಾಣಿಸಿತು. ಆರ್ಭಟಿಸುತ್ತಾ ಬಿಲ್ಲಿನ ಹೆದೆಯನ್ನು ಝೇಂಕರಿಸುತ್ತಾ ಬಿಲ್ಲನ್ನು ತೂಗಿ ಬಾಣಗಳ ಸಮುದ್ರವನ್ನು ತುಳುಕಿದ.
ಪದಾರ್ಥ (ಕ.ಗ.ಪ)
ಸರ್ಬದಳ-ಸಕಲದಳ, ಜಸ-ಯಶಸ್ಸು, ಗಾಡಿಸು-ಚೆನ್ನಾಗಿಕಾಣಿಸು, ಆರಿ-ಆರ್ಭಟಿಸಿ, ತೆಬ್ಬು-ಬಿಲ್ಲಿನಹೆದೆ.
ಮೂಲ ...{Loading}...
ಬೊಬ್ಬಿರಿದುದಾ ಸೇನೆ ರಾಯನ
ಸರ್ಬದಳ ಜೋಡಿಸಿತು ಸೋಲದ
ಮಬ್ಬು ಹರೆದುದು ಜಯದ ಜಸವೇರಿದನು ನರನಾಥ
ಉಬ್ಬಿದನು ಸತ್ಕ್ಷತ್ರತೇಜದ
ಗರ್ಭ ಗಾಡಿಸಿತಾರಿ ಮಿಡಿದನು
ತೆಬ್ಬಿನಸ್ತ್ರವ ತೂಗಿ ತುಳುಕಿದನಂಬಿನಂಬುಧಿಯ ॥52॥
೦೫೩ ಕಾದುಕೊಳು ಮಾದ್ರೇಶ ...{Loading}...
ಕಾದುಕೊಳು ಮಾದ್ರೇಶ ಕುರುಬಲ
ವೈದಿಬರಲಿಂದಿನಲಿ ನಿನ್ನಯ
ಮೈದುನನ ಕಾಣಿಕೆಯಲೇ ಸಂಘಟನೆಗೀ ಸರಳು
ಕೈದುಕಾತಿಯರುಂಟೆ ಕರೆ ನೀ
ನೈದಲಾರೆಯೆನುತ್ತ ಮೂನೂ
ರೈದು ಶರದಲಿ ಕಡಿದನಾ ಸಾರಥಿಯ ರಥ ಹಯವ ॥53॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಾದ್ರೇಶನಾದ ಶಲ್ಯನೇ, ನಿನ್ನನ್ನು ಕಾಪಾಡಿಕೋ. ಕುರುಬಲವೆಲ್ಲ ಒಟ್ಟಾಗಿಬರಲಿ. ಈ ದಿನ ನಿನ್ನ ಭಾವಮೈದುನನಾದ ನನ್ನ ಕಾಣಿಕೆಯೆಂದರೆ ನಿಮ್ಮನ್ನೆಲ್ಲ ಒಟ್ಟುಗೂಡಿಸಲಿರುವ ಈ ಬಾಣಗಳ ಸಮೂಹವಲ್ಲವೇ! ಶ್ರೇಷ್ಠವಾದ ಆಯುಧಪಾಣಿಗಳಿದ್ದಲ್ಲಿ ಕರೆಸು, ನೀನು ಈ ಯುದ್ಧವನ್ನು ಎದುರಿಸಲಾರೆ ಎನ್ನುತ್ತಾ ಮುನ್ನೂರು ಬಾಣದಲ್ಲಿ ಧರ್ಮರಾಯನು ಶಲ್ಯನ ಸಾರಥಿಯನ್ನು, ರಥವನ್ನು ಕುದುರೆಗಳನ್ನು ಹೊಡೆದ.
ಪದಾರ್ಥ (ಕ.ಗ.ಪ)
ಐದಿಬರಲಿ-ಒಟ್ಟಾಗಿ ಬರಲಿ, ಸಂಘಟನೆಗೆ-ಸೈನ್ಯವನ್ನು ಒಂದೆಡೆ ಸೇರಿಸಲು, ಒಟ್ಟಾಗಿ ನಾಶಮಾಡಲು, ಕೈದುಕಾತಿಯರು-ಆಯುಧಗಳನ್ನು ಹಿಡಿದವರು - ಅದು ‘ಕೈದುಕಾರರು’ ಆಗಬೇಕು, ಐದು-ಏಗು, ನಿರ್ವಹಿಸು.
ಮೂಲ ...{Loading}...
ಕಾದುಕೊಳು ಮಾದ್ರೇಶ ಕುರುಬಲ
ವೈದಿಬರಲಿಂದಿನಲಿ ನಿನ್ನಯ
ಮೈದುನನ ಕಾಣಿಕೆಯಲೇ ಸಂಘಟನೆಗೀ ಸರಳು
ಕೈದುಕಾತಿಯರುಂಟೆ ಕರೆ ನೀ
ನೈದಲಾರೆಯೆನುತ್ತ ಮೂನೂ
ರೈದು ಶರದಲಿ ಕಡಿದನಾ ಸಾರಥಿಯ ರಥ ಹಯವ ॥53॥
೦೫೪ ತೇರು ಹುಡಿಹುಡಿಯಾಯ್ತು ...{Loading}...
ತೇರು ಹುಡಿಹುಡಿಯಾಯ್ತು ಹೂಡಿದ
ವಾರುವಂಗಳನಲ್ಲಿ ಕಾಣೆನು
ಸಾರಥಿಯ ತಲೆ ನೆಲದೊಳದ್ದುದು ಮಿದುಳ ಜೊಂಡಿನಲಿ
ಆರಿ ಬೊಬ್ಬಿರಿದರಸನೆಸಲು
ಬ್ಬಾರದಲಿ ಕಣೆಯಡಸಿದವು ಕೈ
ವಾರವೇಕೆ ಛಡಾಳಿಸಿತು ಚಪಳತೆ ಯುಧಿಷ್ಠಿರನ ॥54॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಥ ಪುಡಿಪುಡಿಯಾಯ್ತು. ರಥಕ್ಕೆ ಹೂಡಿದ್ದ ಕುದುರೆಗಳೇ ಕಾಣೆಯಾದವು. ಸಾರಥಿಯ ತಲೆ ಮಿದುಳಿನ ಜೊಂಡುಗಳ ಸಹಿತ ನೆಲದಲ್ಲಿ ಹೂತುಹೋಯಿತು. ಬೊಬ್ಬಿರಿದು ಶಬ್ಧ ಮಾಡುತ್ತಾ ಅರಸನು ಬಾಣ ಪ್ರಯೋಗ ಮಾಡಲು ಸಂಭ್ರಮದಿಂದ ಬಾಣಗಳು ಶತ್ರುಸೈನಿಕರ ಮೇಲೆ ಬಿದ್ದವು. ಇನ್ನು ಹೊಗಳಿಕೆಯೇಕೆ! ಯುಧಿಷ್ಠರನ ಚಟುವಟಿಕೆ ಒಮ್ಮೆಗೇ ಹೆಚ್ಚಿತು.
ಪದಾರ್ಥ (ಕ.ಗ.ಪ)
ವಾರುವ-ಕುದುರೆ, ಜೊಂಡು-ಹುಲ್ಲಿನ ಕಂತೆ, ಉಬ್ಬರ-ಸಂಭ್ರಮ, ಅಡಸು-ಮೇಲೆಬೀಳು, ಕೈವಾರ-ಹೊಗಳಿಕೆ, ಛಡಾಳಿಸು-ಹೆಚ್ಚಳವಾಗು, ಚಪಳತೆ-ಚಟುವಟಿಕೆ, ಚಂಚಲತೆ
ಪಾಠಾನ್ತರ (ಕ.ಗ.ಪ)
ಬೊಬ್ಬಿರಿದರಸವೆಸಲು-ಬೊಬ್ಬರಿದರಸನೆಸಲು ಇವುಗಳಲ್ಲಿ ‘ಅರಸವೆಸಲು’ ಎಂಬುದಕ್ಕೆ ಅರ್ಥಸ್ಪಷ್ಟತೆಯಿಲ್ಲದ್ದರಿಂದ ಅರಸನೆಸಲು (ಅರಸನು = ಎಸಲು) ಎಂಬುದು ಸರಿಯಾದ ಪಾಠ. ಆದ್ದರಿಂದ ಅದನ್ನು ಸ್ವೀಕರಿಸಿದೆ.
ಶಲ್ಯಪರ್ವ, ಮೈ.ವಿ.ವಿ. - ಇಲ್ಲಿಯೂ ಇದೇ ಪಾಠವಿದೆ.
ಮೂಲ ...{Loading}...
ತೇರು ಹುಡಿಹುಡಿಯಾಯ್ತು ಹೂಡಿದ
ವಾರುವಂಗಳನಲ್ಲಿ ಕಾಣೆನು
ಸಾರಥಿಯ ತಲೆ ನೆಲದೊಳದ್ದುದು ಮಿದುಳ ಜೊಂಡಿನಲಿ
ಆರಿ ಬೊಬ್ಬಿರಿದರಸನೆಸಲು
ಬ್ಬಾರದಲಿ ಕಣೆಯಡಸಿದವು ಕೈ
ವಾರವೇಕೆ ಛಡಾಳಿಸಿತು ಚಪಳತೆ ಯುಧಿಷ್ಠಿರನ ॥54॥
೦೫೫ ಅರಸ ಕೇಳೈ ...{Loading}...
ಅರಸ ಕೇಳೈ ಬಳಿಕ ಮಾದ್ರೇ
ಶ್ವರನ ರಥ ಸಾರಥಿ ವಿಸಂಚಿಸ
ಲುರಿದನಧಿಕಕ್ರೋಧಶಿಖಿ ಪಲ್ಲೈಸಿತಕ್ಷಿಯಲಿ
ಕುರುಬಲದ ತಲ್ಲಣವನುರೆ ಸಂ
ಹರಿಸಿ ಹರಿಗೆಯಡಾಯುಧದಲರಿ
ಧರಣಿಪನಮೇಲ್ವಾಯ್ದು ಹೊಯ್ದನು ರಥ ಹಯಾವಳಿಯ ॥55॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧೃತರಾಷ್ಟ್ರ ಕೇಳು! ನಂತರ ಮಾದ್ರೇಶನಾದ ಶಲ್ಯನ ರಥ, ಸಾರಥಿಗಳು ತುಂಡುತುಂಡಾಗಗಲು ಶಲ್ಯ ಅಧಿಕ ಕೋಪದಿಂದ ಉರಿದುಹೋದ. ಕ್ರೋಧಾಗ್ನಿ ಅವನ ಕಣ್ಣುಗಳಲ್ಲಿ ವಿಸ್ತರಿಸಿತು. ಕುರುಸೈನ್ಯದ ತಲ್ಲಣವನ್ನು ನಿಲ್ಲಿಸಿ, ಹರಿಗೆ, ಅಡಾಯುಧ ಮುಂತಾದ ಆಯುಧಗಳಿಂದ ಶತ್ರುರಾಜನಾದ ಧರ್ಮರಾಯನ ಮೇಲೆ ಹಾಯ್ದು ರಥ ಕುದುರೆಗಳನ್ನು ಹೊಡೆದ.
ಪದಾರ್ಥ (ಕ.ಗ.ಪ)
ವಿಸಂಚಿಸು-ತುಂಡಾಗು, ಬೇರ್ಪಡು, ಪಲ್ಲೈಸು-ವಿಸ್ತರಿಸು, ಕುಡಿಯಡು, ಹರಿಗೆ-ಒಂದು ಆಯುಧ, ಅಡಾಯುಧ-ಒಂದು ಆಯುಧ
ಮೂಲ ...{Loading}...
ಅರಸ ಕೇಳೈ ಬಳಿಕ ಮಾದ್ರೇ
ಶ್ವರನ ರಥ ಸಾರಥಿ ವಿಸಂಚಿಸ
ಲುರಿದನಧಿಕಕ್ರೋಧಶಿಖಿ ಪಲ್ಲೈಸಿತಕ್ಷಿಯಲಿ
ಕುರುಬಲದ ತಲ್ಲಣವನುರೆ ಸಂ
ಹರಿಸಿ ಹರಿಗೆಯಡಾಯುಧದಲರಿ
ಧರಣಿಪನಮೇಲ್ವಾಯ್ದು ಹೊಯ್ದನು ರಥ ಹಯಾವಳಿಯ ॥55॥
೦೫೬ ವಾರುವನ ವೈಚಿತ್ರಗತಿಯ ...{Loading}...
ವಾರುವನ ವೈಚಿತ್ರಗತಿಯ ನಿ
ಹಾರದಲಿ ಸಾರಥಿ ನರೇಂದ್ರನ
ತೇರ ತಿರುಗಿಸಿದನು ವಿಘಾತಿಯಲೊಂದು ಬಾಹೆಯಲಿ
ಆರಿ ಹೊಯ್ದನು ಹಯವನಗ್ಗದ
ವಾರಣಾವಳಿಗಳ ಪದಾತಿಯ
ತೇರ ತೆಕ್ಕೆಯನಿಕ್ಕಿದನು ಪ್ರತ್ಯೇಕಸಾವಿರವ ॥56॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕುದುರೆಗಳು ವಿಚಿತ್ರ ನಡೆಗಳಲ್ಲಿ ಶೂನ್ಯ ನೋಟದಿಂದ ವಿಮುಖವಾಗಲು ಸಾರಥಿಯು ಧರ್ಮರಾಯನ ರಥವನ್ನು ಇನ್ನೇನು ನಾಶವಾಯಿತೆನ್ನುವಾಗ ಯುದ್ಧರಂಗದ ಒಂದು ಹೊರಭಾಗಕ್ಕೆ ತಿರುಗಿಸಿದ. ಶಲ್ಯನು ಕುದುರೆಗಳನ್ನು, ಶ್ರೇಷ್ಠವಾದ ಆನೆಗಳನ್ನು, ಕಾಲುದಳವನ್ನು ಅಬ್ಬರಿಸಿ ಹೊಡೆದ. ಪ್ರತ್ಯೇಕವಾಗಿ ಸಾವಿರ ರಥಗಳನ್ನು ಒಂದರಮೇಲೊಂದು ಜೋಡಿಸಿದಂತೆ ತೆಕ್ಕೆಯಿಕ್ಕಿದ.
ಪದಾರ್ಥ (ಕ.ಗ.ಪ)
ನಿಹಾರ-ಶೂನ್ಯ, ಆಕಾರ, ವಿಘಾತಿ-ವಿನಾಶ, ಬಾಹೆ-ಹೊರಗೆ, ದಿಕ್ಕು
ಮೂಲ ...{Loading}...
ವಾರುವನ ವೈಚಿತ್ರಗತಿಯ ನಿ
ಹಾರದಲಿ ಸಾರಥಿ ನರೇಂದ್ರನ
ತೇರ ತಿರುಗಿಸಿದನು ವಿಘಾತಿಯಲೊಂದು ಬಾಹೆಯಲಿ
ಆರಿ ಹೊಯ್ದನು ಹಯವನಗ್ಗದ
ವಾರಣಾವಳಿಗಳ ಪದಾತಿಯ
ತೇರ ತೆಕ್ಕೆಯನಿಕ್ಕಿದನು ಪ್ರತ್ಯೇಕಸಾವಿರವ ॥56॥
೦೫೭ ಮಲೆತ ಧೃಷ್ಟದ್ಯುಮ್ನನನು ...{Loading}...
ಮಲೆತ ಧೃಷ್ಟದ್ಯುಮ್ನನನು ಭಯ
ಗೊಳಿಸಿ ಸೋಮಕ ಸೃಂಜಯರನ
ಪ್ಪಳಿಸಿದನು ಸಾತ್ಯಕಿ ಯುಧಾಮನ್ಯೂತ್ತಮೌಂಜಸರ
ದಳದೊಳೋಡಿಸಿ ಮುರಿದು ಚಾತು
ರ್ಬಲವ ಸವರಿ ಶಿಖಂಡಿ ನಕುಲರ
ಹೊಲಬುಗೆಡಿಸಿ ಮಹೀಪತಿಯ ಪಡಿಮುಖಕೆ ಮಾರಾಂತ ॥57॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶಲ್ಯನು ಗರ್ವಿಸಿ ನಿಂತ ಧೃಷ್ಟದ್ಯುಮ್ನನನ್ನು ಬೆದರಿಸಿ, ಸೋಮಕ, ಸೃಂಜಯರನ್ನು ಅಪ್ಪಳಿಸಿ ಸಾತ್ಯಕಿ, ಯುಧಾಮನ್ಯು, ಉತ್ತಮೌಂಜಸರನ್ನು ಸೈನ್ಯದಿಂದ ಹಿಮ್ಮುಖವಾಗಿ ಓಡಿಸಿ ಚತುರಂಗಬಲವನ್ನು ಸವರಿಹಾಕಿ, ಶಿಖಂಡಿ-ನಕುಲರನ್ನು ದಿಕ್ಕುತಪ್ಪಿಸಿ, ಧರ್ಮರಾಯನ ಎದುರಿಗೆ ಯುದ್ಧಕ್ಕೆ ಎದುರಾದ.
ಪದಾರ್ಥ (ಕ.ಗ.ಪ)
ಮಲೆತ-ಗರ್ವಿಸಿದ, ಹೊಲಬುಗೆಡಿಸು-ದಿಕ್ಕುತಪ್ಪಿಸು, ಪಡಿಮುಖ-ಎದುರುಭಾಗ
ಮೂಲ ...{Loading}...
ಮಲೆತ ಧೃಷ್ಟದ್ಯುಮ್ನನನು ಭಯ
ಗೊಳಿಸಿ ಸೋಮಕ ಸೃಂಜಯರನ
ಪ್ಪಳಿಸಿದನು ಸಾತ್ಯಕಿ ಯುಧಾಮನ್ಯೂತ್ತಮೌಂಜಸರ
ದಳದೊಳೋಡಿಸಿ ಮುರಿದು ಚಾತು
ರ್ಬಲವ ಸವರಿ ಶಿಖಂಡಿ ನಕುಲರ
ಹೊಲಬುಗೆಡಿಸಿ ಮಹೀಪತಿಯ ಪಡಿಮುಖಕೆ ಮಾರಾಂತ ॥57॥
೦೫೮ ಎಸು ಯುಧಿಷ್ಠಿರ ...{Loading}...
ಎಸು ಯುಧಿಷ್ಠಿರ ಹಲಗೆ ಖಡ್ಗವ
ಕುಸುರಿದರಿಯಾ ಚಾಪವಿದ್ಯಾ
ಕುಶಲನೆಂಬರಲೈ ತನುತ್ರ ರಥಂಗಳಿಲ್ಲೆಮಗೆ
ಅಸುವ ತಡೆವರೆ ರಣಪಲಾಯನ
ವೆಸೆವುದೇ ಕ್ಷತ್ರಿಯರಿಗತಿಸಾ
ಹಸಿಕನಾದಡೆ ನಿಲ್ಲೆನುತ ಮೂದಲಿಸಿದನು ಶಲ್ಯ ॥58॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮರಾಯನೇ ಗುರಾಣಿ-ಬಿಲ್ಲುಗಳನ್ನು ತುಂಡುತುಂಡು ಮಾಡು. ನಿನ್ನನ್ನು ಬಿಲ್ಲು ವಿದ್ಯೆಯಲ್ಲಿ ಕುಶಲನೆನ್ನುತ್ತಾರಲ್ಲವೇ! ನಮ್ಮಲ್ಲಿ ಈಗ ಕವಚವಾಗಲೀ ರಥವಾಗಲೀ ಇಲ್ಲ. ಪ್ರಾಣವನ್ನು ಉಳಿಸಿಕೊಳ್ಳಬೇಕಾದರೆ ಕ್ಷತ್ರಿಯರು ಯುದ್ಧಭೂಮಿಯಿಂದ ಓಡಿಹೋಗುತ್ತಾರೆಯೇ? ಅತಿಸಾಹಸಿಯಾದಡೆ ನನ್ನೆದುರಿನಲ್ಲಿ ನಿಂತು ಯುದ್ಧ ಮಾಡು ಎಂದು ಶಲ್ಯ ಧರ್ಮಜನನ್ನು ಮೂದಲಿಸಿದ.
ಪದಾರ್ಥ (ಕ.ಗ.ಪ)
ಹಲಗೆ-ಗುರಾಣಿ, ತನುತ್ರ-ಕವಚ
ಮೂಲ ...{Loading}...
ಎಸು ಯುಧಿಷ್ಠಿರ ಹಲಗೆ ಖಡ್ಗವ
ಕುಸುರಿದರಿಯಾ ಚಾಪವಿದ್ಯಾ
ಕುಶಲನೆಂಬರಲೈ ತನುತ್ರ ರಥಂಗಳಿಲ್ಲೆಮಗೆ
ಅಸುವ ತಡೆವರೆ ರಣಪಲಾಯನ
ವೆಸೆವುದೇ ಕ್ಷತ್ರಿಯರಿಗತಿಸಾ
ಹಸಿಕನಾದಡೆ ನಿಲ್ಲೆನುತ ಮೂದಲಿಸಿದನು ಶಲ್ಯ ॥58॥
೦೫೯ ಅಕಟಕಟ ಧರ್ಮಜನನೀ ...{Loading}...
ಅಕಟಕಟ ಧರ್ಮಜನನೀ ಕಂ
ಟಕಕೆ ಕೈವರ್ತಿಸಿದರೇ ಪಾ
ತಕರು ಪಾಂಡವರೆನುತ ಕುರುಬಲವೆಲ್ಲ ಸಮತಳಿಸೆ
ವಿಕಟ ರೋಷಶಿಖಿಸ್ಫುಲಿಂಗ
ಪ್ರಕಟ ಭೀಷಣಸಹಿತ ಕೌಕ್ಷೇ
ಯಕವ ಖಂಡಿಸಿ ಧರೆ ಬಿರಿಯೆ ಬೊಬ್ಬಿರಿದನಾ ಭೀಮ ॥59॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಕಟಾ! ಧರ್ಮರಾಯನನ್ನು ಈ ಕಂಟಕಕ್ಕೆ ಈಡು ಮಾಡಿದರೇ ಪಾಪಿಗಳಾದ ಪಾಂಡವರು ಎನ್ನುತ್ತ ಕುರುಬಲವೆಲ್ಲವೂ ಒಟ್ಟು ಸೇರಿತು. ಭಯಂಕರವಾದ ರೋಷಾಗ್ನಿಯು ಪ್ರಕಟವಾಗಲು ಭಯಾನಕವಾಗಿ ಭೀಮನು ಶಲ್ಯನ ಖಡ್ಗವನ್ನು ಕತ್ತರಿಸಿ ಭೂಮಿಯೇ ಬಿರಿದುಹೋಗುವಂತೆ ಬೊಬ್ಬಿರಿದ.
ಪದಾರ್ಥ (ಕ.ಗ.ಪ)
ಕೈವರ್ತಿಸು-ಒಪ್ಪಿಸು, ವಿಕಟ-ಭಯಂಕರ, ರೋಷಶಿಖಿಸ್ಫುಲಿಂಗ-ಕೋಪಾಗ್ನಿಯು ಕಿಡಿ, ಭೀಷಣ-ಭಯಾನಕವಾದ, ಕೌಕ್ಷೇಯಕ-ಖಡ್ಗ
ಮೂಲ ...{Loading}...
ಅಕಟಕಟ ಧರ್ಮಜನನೀ ಕಂ
ಟಕಕೆ ಕೈವರ್ತಿಸಿದರೇ ಪಾ
ತಕರು ಪಾಂಡವರೆನುತ ಕುರುಬಲವೆಲ್ಲ ಸಮತಳಿಸೆ
ವಿಕಟ ರೋಷಶಿಖಿಸ್ಫುಲಿಂಗ
ಪ್ರಕಟ ಭೀಷಣಸಹಿತ ಕೌಕ್ಷೇ
ಯಕವ ಖಂಡಿಸಿ ಧರೆ ಬಿರಿಯೆ ಬೊಬ್ಬಿರಿದನಾ ಭೀಮ ॥59॥
೦೬೦ ಲೇಸ ಮಾಡಿದೆ ...{Loading}...
ಲೇಸ ಮಾಡಿದೆ ಭೀಮ ಕಟ್ಟಾ
ಳೈಸಲೇ ನೀನವರೊಳಗೆ ನಿ
ನ್ನಾಸೆಯಲ್ಲಾ ಧರ್ಮಪುತ್ರನ ಸತ್ವಸಂಪದಕೆ
ಐಸೆ ಬಳಿಕೇನೆನುತ ಶಲ್ಯಮ
ಹೀಶ ಮುರಿಯಲು ಹೊಸ ರಥವ ಮೇ
ಳೈಸಿ ಸಾರಥಿ ಸಂಧಿಸಿದನವಧಾನ ಜೀಯೆನುತ ॥60॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮ! ಒಳ್ಳೆಯದನ್ನು ಮಾಡಿದೆ. ಪಾಂಡವರಲ್ಲಿ ನೀನು ಕಟ್ಟಾಳಲ್ಲವೇ ಧರ್ಮಪುತ್ರನ ಸತ್ವದ ಏಳಿಗೆಯೇ ನಿನ್ನಾಸೆಯಲ್ಲವೇ. ಅಷ್ಟೇ ಅಲ್ಲವೇ, ಇನ್ನೇನು ಎನ್ನುತ್ತಾ ಶಲ್ಯನು ಹಿಂದಿರುಗಲು, ಅವನ ಸಾರಥಿಯು ಹೊಸರಥವನ್ನು ಅಣಿಗೊಳಿಸಿ, ಮಹಾಸ್ವಾಮಿ ಇತ್ತ ಗಮನಿಸಿ ಎಂದು ಶಲ್ಯನ ಗಮನವನ್ನು ಸೆಳೆದ.
ಪದಾರ್ಥ (ಕ.ಗ.ಪ)
ಸಂಪದ-ಐಶ್ವರ್ಯ, ಏಳಿಗೆ ಅಭಿವೃದ್ಧಿ, ಮುರಿ-ತಿರುಗು, ಹಿಂತಿರುಗು, ಅವಧಾನ-ಗಮನ.
ಮೂಲ ...{Loading}...
ಲೇಸ ಮಾಡಿದೆ ಭೀಮ ಕಟ್ಟಾ
ಳೈಸಲೇ ನೀನವರೊಳಗೆ ನಿ
ನ್ನಾಸೆಯಲ್ಲಾ ಧರ್ಮಪುತ್ರನ ಸತ್ವಸಂಪದಕೆ
ಐಸೆ ಬಳಿಕೇನೆನುತ ಶಲ್ಯಮ
ಹೀಶ ಮುರಿಯಲು ಹೊಸ ರಥವ ಮೇ
ಳೈಸಿ ಸಾರಥಿ ಸಂಧಿಸಿದನವಧಾನ ಜೀಯೆನುತ ॥60॥
೦೬೧ ರಥಕೆ ಬನ್ದು ...{Loading}...
ರಥಕೆ ಬಂದು ಪಸಾಯವನು ಸಾ
ರಥಿಗೆ ಕೊಟ್ಟನು ಚಾಪಶರವನು
ರಥದೊಳಗೆ ತುಂಬಿದನು ನಂಬಿಸಿದನು ಸುಯೋಧನನ
ಪೃಥೆಯ ಮಕ್ಕಳ ರಣಪರಾಕ್ರಮ
ವೃಥೆ ಕಣಾ ಕರ್ಣಾದಿ ಸುಭಟ
ವ್ಯಥೆಯ ನಿಲಿಸುವೆನೆನುತ ಮೂದಲಿಸಿದನು ಧರ್ಮಜನ ॥61॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶಲ್ಯ ಹೊಸರಥಕ್ಕೆ ಬಂದು ಸಾರಥಿಗೆ ಬಹುಮಾನಗಳನ್ನು ನೀಡಿದ. ಬಿಲ್ಲುಬಾಣಗಳನ್ನು ರಥದೊಳಕ್ಕೆ ತುಂಬಿದ. ಸುಯೋಧನನಿಗೆ ನಂಬಿಕೆಯುಂಟಾಗುವಂತೆ ಮಾಡಿದ. ಕುಂತೀದೇವಿಯ ಮಕ್ಕಳ ರಣಪರಾಕ್ರಮ ವ್ಯರ್ಥ. ಕರ್ಣಾದಿಸುಭಟರ ಸಾವಿನಿಂದುಂಟಾಗಿರುವ ನಿನ್ನ ವ್ಯಥೆಯನ್ನು ನಿಲ್ಲಿಸುತ್ತೇನೆ ಎಂದು ದುರ್ಯೋಧನನಿಗೆ ಆಶ್ವಾಸನೆ ಕೊಡುತ್ತಾ ಧರ್ಮಜನನ್ನು ಮೂದಲಿಸಿದ.
ಪದಾರ್ಥ (ಕ.ಗ.ಪ)
ಪಸಾಯ-ಬಹುಮಾನ, ಮೆಚ್ಚುಗೆ, ಪೃಥೆ-ಕುಂತಿ, ವೃಥೆ-ವೃಥಾ, ನಿಷ್ಟ್ರಯೋಜಕ
ಮೂಲ ...{Loading}...
ರಥಕೆ ಬಂದು ಪಸಾಯವನು ಸಾ
ರಥಿಗೆ ಕೊಟ್ಟನು ಚಾಪಶರವನು
ರಥದೊಳಗೆ ತುಂಬಿದನು ನಂಬಿಸಿದನು ಸುಯೋಧನನ
ಪೃಥೆಯ ಮಕ್ಕಳ ರಣಪರಾಕ್ರಮ
ವೃಥೆ ಕಣಾ ಕರ್ಣಾದಿ ಸುಭಟ
ವ್ಯಥೆಯ ನಿಲಿಸುವೆನೆನುತ ಮೂದಲಿಸಿದನು ಧರ್ಮಜನ ॥61॥
೦೬೨ ಸಾರಥಿಗೆ ಸೂಚಿಸಿ ...{Loading}...
ಸಾರಥಿಗೆ ಸೂಚಿಸಿ ನೃಪಾಲನ
ಸಾರೆ ದುವ್ವಾಳಿಸಲು ಮಿಗೆ ನೃಪ
ನೋರೆಗೊಂಡನು ತಿರುಗೆ ತಿರುಗಿದನೊಲೆದೊಡೊಡನೊಲೆದು
ಚೂರಿಸುವ ನಾರಾಚವಿಕ್ರಮ
ದೋರಣೆಗೆ ನಾರಾಚಿಸಿತು ವಿ
ಸ್ತಾರದಲಿ ವಿಸ್ತರಿಸಿದನು ಜಯಸಮರಸಾಹಸವ ॥62॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮರಾಯನ ಸಮೀಪಕ್ಕೆ ವೇಗವಾಗಿ ರಥವನ್ನು ಓಡಿಸಲು ಸಾರಥಿಗೆ ಸೂಚಿಸಿದ. ಧರ್ಮರಾಯ ಪಕ್ಕಕ್ಕೆ ತಿರುಗಿದ. ಶಲ್ಯ ತಿರುಗಿದರೆ ಧರ್ಮಜನೂ ತಿರುಗಿದ, ಓರೆಯಾದರೆ ತಾನೂ ಓರೆಯಾದ. ದೇಹದೊಳಹೋಗುವ ಬಾಣಗಳ ಅಚ್ಚುಕಟ್ಟಿನ ಸಾಲುಗಳ ಕ್ರಮದಿಂದ, ಬಾಣಗಳು ದೂರದೂರ ಪ್ರದೇಶದವರೆಗೂ ವ್ಯಾಪಿಸಿದುವು. ಶಲ್ಯನು ಸಮರದ ಜಯಸಂಪಾದನೆಯ ಸಾಹಸವನ್ನು ವಿಸ್ತರಿಸಿದ.
ಪದಾರ್ಥ (ಕ.ಗ.ಪ)
ದುವ್ವಾಳಿಸು-ನಾಗಾಲೋಟ, ವೇಗವಾಗಿ ಓಡು, ಚೂರಿಸು-ಚೂರಿಯಿಂದ ಇರಿ, ನಾರಾಚ-ಬಾಣ, ನಾರಾಚಿಸು-ಬಾಣಪ್ರಯೋಗಿಸು.
ಮೂಲ ...{Loading}...
ಸಾರಥಿಗೆ ಸೂಚಿಸಿ ನೃಪಾಲನ
ಸಾರೆ ದುವ್ವಾಳಿಸಲು ಮಿಗೆ ನೃಪ
ನೋರೆಗೊಂಡನು ತಿರುಗೆ ತಿರುಗಿದನೊಲೆದೊಡೊಡನೊಲೆದು
ಚೂರಿಸುವ ನಾರಾಚವಿಕ್ರಮ
ದೋರಣೆಗೆ ನಾರಾಚಿಸಿತು ವಿ
ಸ್ತಾರದಲಿ ವಿಸ್ತರಿಸಿದನು ಜಯಸಮರಸಾಹಸವ ॥62॥
೦೬೩ ಹಿನ್ದೆ ಕರ್ಣನು ...{Loading}...
ಹಿಂದೆ ಕರ್ಣನು ಫಲುಗುಣನು ಬಳಿ
ಕಿಂದು ಶಲ್ಯಯುಧಿಷ್ಠಿರರು ಸಾ
ನಂದದಲಿ ಸಮತಳಿಸಿ ಕಾದಿದರುಭಯಬಲ ಹೊಗಳೆ
ಇಂದು ಮಾದ್ರಾಧೀಶ್ವರಗೆ ಯಮ
ನಂದನನು ಯಮಸುತಗೆ ಪಡಿ ತಾ
ಸಂದನೈ ಮಾದ್ರಾಧಿಪತಿಯೆಂದುದು ಭಟಸ್ತೋಮ ॥63॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಿಂದೆ ಕರ್ಣಾರ್ಜುನರು ಹೋರಾಡಿದಂತೆ, ಇಂದು ಶಲ್ಯ ಯುಧಿಷ್ಠಿರರು ಸಂತೋಷದಿಂದ ಸಮಸಮವಾಗಿ ಕಾದಿದರು. ಉಭಯ ಸೈನ್ಯಗಳು ಇವರ ಯುದ್ಧವನ್ನು ಹೊಗಳಿದವು. ಈ ದಿನ ಮಾದ್ರಾಧಿಪತಿಯಾದ ಶಲ್ಯನಿಗೆ ಧರ್ಮರಾಯ, ಧರ್ಮರಾಯನಿಗೆ ಶಲ್ಯನು ಸಮಸಮವಾದರು ಎಂದು ಭಟರುಗಳು ಹೊಗಳುತ್ತಿದ್ದರು.
ಪದಾರ್ಥ (ಕ.ಗ.ಪ)
ಸಮತಳಿಸು-ಸಮಬಲವಾಗಿ
ಮೂಲ ...{Loading}...
ಹಿಂದೆ ಕರ್ಣನು ಫಲುಗುಣನು ಬಳಿ
ಕಿಂದು ಶಲ್ಯಯುಧಿಷ್ಠಿರರು ಸಾ
ನಂದದಲಿ ಸಮತಳಿಸಿ ಕಾದಿದರುಭಯಬಲ ಹೊಗಳೆ
ಇಂದು ಮಾದ್ರಾಧೀಶ್ವರಗೆ ಯಮ
ನಂದನನು ಯಮಸುತಗೆ ಪಡಿ ತಾ
ಸಂದನೈ ಮಾದ್ರಾಧಿಪತಿಯೆಂದುದು ಭಟಸ್ತೋಮ ॥63॥
೦೬೪ ಅರಸ ಕೇಳೈ ...{Loading}...
ಅರಸ ಕೇಳೈ ಕೃಷ್ಣಶಕ್ತಿ
ಸ್ಫುರಣವೈಸಲೆ ನಿಮ್ಮ ಬಲ ಸಂ
ಹರಣಕಾವುದು ಬೀಜ ನಿರ್ದೈವರ ವಿಲಾಸವಿದು
ಹರಿ ಯುಧಿಷ್ಠಿರ ನೃಪನನೆಕ್ಕಟಿ
ಗರೆದು ನಿಜಶಕ್ತಿಪ್ರಯೋಗವ
ನೊರೆದಡೊಡಬಟ್ಟನು ಹಸಾದದ ಮಧುರವಚನದಲಿ ॥64॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧೃತರಾಷ್ಟ್ರನೇ ಕೇಳು. ನಿಮ್ಮ ಸೈನ್ಯದ ನಾಶಕ್ಕೆ ಯಾವುದು ಬೀಜವೆಂದು ತಿಳಿದೆ! ಕೃಷ್ಣ ಶಕ್ತಿಯ ಪ್ರಕಾಶವಲ್ಲವೇ ಅದಕ್ಕೆ ಕಾರಣ! ಇದು ದೈವವಿಹೀನರ ವಿಲಾಸ! ಕೃಷ್ಣನು ಯುಧಿಷ್ಠಿರನನ್ನು ಪ್ರತ್ಯೇಕವಾಗಿ ಕರೆದು ಅವನ ಶಕ್ತ್ಯಾಯುಧ ಪ್ರಯೋಗದ ವಿವರಗಳನ್ನು ತಿಳಿಸಿದ. ಮಹಾಪ್ರಸಾದವೆಂದು ಸಂತೋಷದ ಮಾತಿನಿಂದ ಧರ್ಮರಾಯ ಅದಕ್ಕೆ ಒಪ್ಪಿದ.
ಪದಾರ್ಥ (ಕ.ಗ.ಪ)
ಸ್ಫುರಣ-ಪ್ರಕಟಗೊಳ್ಳುವುದು, ಪ್ರಕಾಶಿಸುವುದು, ವಿಲಾಸ-ಲಾವಣ್ಯ, ಸೊಬಗು, ಚೆಲುವು, ವಿನೋದ, ಎಕ್ಕಟಿಗರೆ-ಪ್ರತ್ಯೇಕವಾಗಿ ಸ್ಪಲ್ಪದೂರಕ್ಕೆ ಕರೆದುಕೊಂಡು ಹೋಗು.
ಮೂಲ ...{Loading}...
ಅರಸ ಕೇಳೈ ಕೃಷ್ಣಶಕ್ತಿ
ಸ್ಫುರಣವೈಸಲೆ ನಿಮ್ಮ ಬಲ ಸಂ
ಹರಣಕಾವುದು ಬೀಜ ನಿರ್ದೈವರ ವಿಲಾಸವಿದು
ಹರಿ ಯುಧಿಷ್ಠಿರ ನೃಪನನೆಕ್ಕಟಿ
ಗರೆದು ನಿಜಶಕ್ತಿಪ್ರಯೋಗವ
ನೊರೆದಡೊಡಬಟ್ಟನು ಹಸಾದದ ಮಧುರವಚನದಲಿ ॥64॥
೦೬೫ ಆಯಿದನು ಶಸ್ತ್ರಾಸ್ತ್ರದಲಿ ...{Loading}...
ಆಯಿದನು ಶಸ್ತ್ರಾಸ್ತ್ರದಲಿ ದಿ
ವ್ಯಾಯುಧವನರೆಬಳಿದ ವರ ತಪ
ನೀಯರೇಖೆಯ ಕುಣಿವ ಗಂಟೆಯ ಹೊಳೆವ ಹೊಂಗರಿಯ
ಬಾಯಿಧಾರೆಯ ತೈಲಲೇಪನ
ದಾಯತದ ಚೌರಿಗಳ ರಿಪುಭಟ
ನಾಯುಷದ ಕಡೆವಗಲ ಭುಕ್ತಿಯ ಶಕ್ತಿಯನು ನೃಪತಿ ॥65॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮಜನು ತನ್ನ ಶಸ್ತ್ರಾಸ್ತ್ರಗಳಲ್ಲಿ ದಿವ್ಯವಾದ ಒಂದು ಆಯುಧವನ್ನು ಆಯ್ದುಕೊಂಡನು. ಅರ್ಧಭಾಗಕ್ಕೆ ಬಳಿದ ಚಿನ್ನದ ರೇಖೆಗಳಿಂದ ಕೂಡಿದ, ಕುಣಿಯುತ್ತಿರುವ ಗಂಟೆಗಳನ್ನುಳ್ಳ, ಹೊಳೆಯುತ್ತಿರುವ ಚಿನ್ನದ ಗರಿಗಳನ್ನುಳ್ಳ ಹರಿತವಾದ ಬಾಯನ್ನುಳ್ಳ, ಎಣ್ಣೆಯನ್ನು ಸವರಿದ್ದ ದೊಡ್ಡ ಚೌರಿಗಳನ್ನು ಕಟ್ಟಿದ್ದ ಶತ್ರುಭಟನಾದ ಶಲ್ಯನ ಆಯುಷ್ಯದ ಕಡೆಯ ಹಗಲಿನ ಭೊಜನಕ್ಕೆ ಸಿದ್ಧವಾಗಿದ್ದ ಶಕ್ತ್ಯಾಯುಧವನ್ನು ಧರ್ಮರಾಯ ಆಯ್ದುಕೊಂಡ.
ಪದಾರ್ಥ (ಕ.ಗ.ಪ)
ಅರೆಬಳಿದ-ಅರ್ಧಭಾಗಕ್ಕೆ ಬಳಿದಿರುವ, ತಪನೀಯರೇಖೆ-ಚಿನ್ನದ ರೇಖೆ, ಹೊಂಗರಿ-ಚಿನ್ನದಗರಿ (ಬಾಣದ ಹಿಂದಿನ ಗರಿ) ಬಾಯಿಧಾರೆ-ಹರಿತವಾದ ಅಲಗು (ಬಾಯಿ-ಅಲಗು), ತೈಲಲೇಪನದ-ಎಣ್ಣೆಯನ್ನು ಸವರಿದ್ದ, ಆಯತದ-ದೊಡ್ಡದಾದ, ಉದ್ದವಾದ, ಲಕ್ಷಣವಾದ, ಚೌರಿ-ಕೂದಲಿನಿಂದ ಮಾಡಿದ ಕುಚ್ಚು , ಕಡೆವಗಲು-ಕಡೆಯ ದಿನ, ಭುಕ್ತಿ-ಭೋಜನ, ಶಕ್ತಿ-ಶಕ್ತ್ಯಾಯುಧ.
ಮೂಲ ...{Loading}...
ಆಯಿದನು ಶಸ್ತ್ರಾಸ್ತ್ರದಲಿ ದಿ
ವ್ಯಾಯುಧವನರೆಬಳಿದ ವರ ತಪ
ನೀಯರೇಖೆಯ ಕುಣಿವ ಗಂಟೆಯ ಹೊಳೆವ ಹೊಂಗರಿಯ
ಬಾಯಿಧಾರೆಯ ತೈಲಲೇಪನ
ದಾಯತದ ಚೌರಿಗಳ ರಿಪುಭಟ
ನಾಯುಷದ ಕಡೆವಗಲ ಭುಕ್ತಿಯ ಶಕ್ತಿಯನು ನೃಪತಿ ॥65॥
೦೬೬ ತುಡುಕಿದನು ಹೊಸರವಿಯ ...{Loading}...
ತುಡುಕಿದನು ಹೊಸರವಿಯ ತೇಜದ
ದಡಿಯನುಗಿದಂದದಲಿ ಹೊಳೆಹೊಳೆ
ವುಡುನಿಕರವುಚ್ಚಳಿಪವೊಲು ಮಣಿಮಯದ ಕಾಂತಿಗಳ
ಕುಡಿಮೊನೆಯ ಪಡಿಮುಖದಲೊದರುವ
ಕಿಡಿಯ ಘಂಟಾರವದ ರಭಸದ
ಝಡಪದಲಿ ಜೋಡಿಸಿದ ಶಕ್ತಿಯಲಿಟ್ಟನವನೀಶ ॥66॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೊಸ ಸೂರ್ಯನ ತೇಜಸ್ಸನ್ನು ಸೆಳೆಯುವ ರೀತಿಯಲ್ಲಿನ ದಂಡಾಯುಧವನ್ನು ಧರ್ಮರಾಯ ಸೆಳೆದ. ಹೊಳೆಹೊಳೆಯುವ ನಕ್ಷತ್ರಸಮೂಹವು ಬೆಳಕನ್ನು ಎರಚುವ ರೀತಿಯಲ್ಲಿ, ಮಣಿರತ್ನಗಳ ಕಾಂತಿಯಿಂದ, ಹರಿತವಾದ ತುದಿಯ, ಎರಡೂ ಭಾಗಗಳಲ್ಲಿ ಚಲ್ಲುವ ಕಿಡಿಗಳ, ಗಂಟೆಗಳ ಶಬ್ದದಿಂದ, ಎರಗಲು ಸಿದ್ಧವಾಗಿ ಜೋಡಿಸಿದ್ದ ಶಕ್ತ್ಯಾಯುಧದಿಂದ ಧರ್ಮಜ ಶಲ್ಯನನ್ನು ಹೊಡೆದ.
ಪದಾರ್ಥ (ಕ.ಗ.ಪ)
ದಡಿ-ದಂಡ, ಉಗಿ-ಸೆಳೆ, ಉಡುನಿಕರ-ನಕ್ಷತ್ರಸಮೂಹ, ಉಚ್ಚಳಿಪ-ಎರಚುವ, ಹಾರುವ, ನೆಗೆಯುವ, ಕುಡಿಮೊನೆ-ಹರಿತವಾದ ತುದಿ, ಪಡಿಮುಖ-ಎದುರು ಮುಖ, ಒದರು-ಕೆದರು, ಎರಚು, ಘಂಟಾರವ-ಗಂಟೆಗಳ ಶಬ್ದ, ಝುಡಪ-ಎರಗುವ, ಶಕ್ತಿ-ಶಕ್ತ್ಯಾಯುಧ, ಇಟ್ಟ-ಹೊಡೆದ.
ಮೂಲ ...{Loading}...
ತುಡುಕಿದನು ಹೊಸರವಿಯ ತೇಜದ
ದಡಿಯನುಗಿದಂದದಲಿ ಹೊಳೆಹೊಳೆ
ವುಡುನಿಕರವುಚ್ಚಳಿಪವೊಲು ಮಣಿಮಯದ ಕಾಂತಿಗಳ
ಕುಡಿಮೊನೆಯ ಪಡಿಮುಖದಲೊದರುವ
ಕಿಡಿಯ ಘಂಟಾರವದ ರಭಸದ
ಝಡಪದಲಿ ಜೋಡಿಸಿದ ಶಕ್ತಿಯಲಿಟ್ಟನವನೀಶ ॥66॥
೦೬೭ ಇದಿರೊಳೆಚ್ಚನು ಶಲ್ಯನಮ್ಬಿನ ...{Loading}...
ಇದಿರೊಳೆಚ್ಚನು ಶಲ್ಯನಂಬಿನ
ಹೊದೆ ಸವೆಯೆ ಹರಿತಪ್ಪ ಶಕ್ತಿಯ
ತುದಿಗೆ ಕಬಳಗ್ರಾಸವಾದುದಲೈ ವಿಚಿತ್ರವಲಾ
ಹೊದರುಗಿಡಿಗಳ ಕೇಸುರಿಯ ಹಾ
ರದಲಿ ಹರಿತಂದಹಿತ ದಳಪತಿ
ಯೆದೆಯನೊದೆದುದು ನೆಲಕೆ ನಟ್ಟುದು ನಾಲ್ಕು ಮುಷ್ಟಿಯಲಿ ॥67॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶಲ್ಯನು ಇದಿರಿನಿಂದ ಬಾಣ ಪ್ರಯೋಗ ಮಾಡಿದನು. ಅವನ ಬಾಣಗಳ ಬತ್ತಳಿಕೆಯೇ ಸವೆದುಹೋಯಿತು. ಅವನು ಬಿಟ್ಟ ಬಾಣಗಳೆಲ್ಲವೂ, ಎದುರಿನಿಂದ ವೇಗವಾಗಿ ಬರುತ್ತಿದ್ದ ಶಕ್ಯಾಯುಧಕ್ಕೆ ಬಾಯಿತುತ್ತಿನ ಆಹಾರವಾದವು. ಇದು ಎಂಥ ವಿಚಿತ್ರ! ಆ ಆಯುಧದಿಂದ ಎರಚುತ್ತಿರುವ ಕಿಡಿಗಳು ಶಕ್ಯಾಯುಧಕ್ಕೆ ಕೇಸುರಿಯ ಬಣ್ಣದ ಹಾರದಂತೆ ಕಾಣಿಸುತ್ತಿರಲು, ವೇಗವಾಗಿ ಬಂದ ಆ ಆಯುಧ ಶತ್ರುಸೈನ್ಯದ ಸೇನಾಪತಿಯಾದ ಶಲ್ಯನ ಎದೆಯನ್ನು ಪ್ರವೇಶಿಸಿ ಅಲ್ಲಿಂದ ಬೆನ್ನಿನಲ್ಲಿ ಆಚೆಗೆ ಹಾರಿ ನಾಲ್ಕು ಮುಷ್ಟಿಯಷ್ಟು ಆಳದಲ್ಲಿ ನೆಲಕ್ಕೆ ಹೊಕ್ಕಿತು.
ಪದಾರ್ಥ (ಕ.ಗ.ಪ)
ಹೊದೆ-ಬತ್ತಳಿಕೆ, ಕಬಳ-ತುತ್ತು, ಗ್ರಾಸ-ಆಹಾರ
ಮೂಲ ...{Loading}...
ಇದಿರೊಳೆಚ್ಚನು ಶಲ್ಯನಂಬಿನ
ಹೊದೆ ಸವೆಯೆ ಹರಿತಪ್ಪ ಶಕ್ತಿಯ
ತುದಿಗೆ ಕಬಳಗ್ರಾಸವಾದುದಲೈ ವಿಚಿತ್ರವಲಾ
ಹೊದರುಗಿಡಿಗಳ ಕೇಸುರಿಯ ಹಾ
ರದಲಿ ಹರಿತಂದಹಿತ ದಳಪತಿ
ಯೆದೆಯನೊದೆದುದು ನೆಲಕೆ ನಟ್ಟುದು ನಾಲ್ಕು ಮುಷ್ಟಿಯಲಿ ॥67॥
೦೬೮ ಕಾರಿದನು ರುಧಿರವನು ...{Loading}...
ಕಾರಿದನು ರುಧಿರವನು ಧರಣಿಗೆ
ಹಾರಿ ಬಿದ್ದನು ಮಾದ್ರಪತಿಯೆದೆ
ಡೋರಿನಲಿ ಡಾವರಿಸಿದವು ರಕ್ತಾಂಬುಧಾರೆಗಳು
ಮೀರಿತಸು ಕಂಠವನು ನಾಸಿಕ
ಕೇರಿದುದು ನಿಟ್ಟುಸುರು ನಿಮಿಷಕೆ
ಚೀರಿದುದು ಕುರುರಾಯದಳ ಶಲ್ಯಾವಸಾನದಲಿ ॥68॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶಲ್ಯ ರಕ್ತ ಕಾರಿದನು. ರಥದಿಂದ ಭೂಮಿಯ ಮೇಲೆ ಹಾರಿಬಿದ್ದನು. ಎದೆಯ ದೊಗರಿನಿಂದ (ಕುಳಿಯಿಂದ) ರಕ್ತದ ಪ್ರವಾಹ ಚಿಮ್ಮಿ ಮುನ್ನುಗ್ಗಿತು. ಶಲ್ಯನ ಪ್ರಾಣವು ಕಂಠವನ್ನು ದಾಟಿ, ನಿಟ್ಟುಸಿರು ಮೂಗಿನವರೆಗೆ ಏರಿತು. ಒಂದು ನಿಮಿಷದಲ್ಲಿ ಶಲ್ಯಾವಸಾನವಾಗಿ ಕುರುರಾಜನ ಸೈನ್ಯವೆಲ್ಲವೂ ಚೀರಿತು.
ಪದಾರ್ಥ (ಕ.ಗ.ಪ)
ರುಧಿರ-ರಕ್ತ, ಡೋರು-ಕುಳಿ ತೂತು, ದೊಗರು, ಡಾವರಿಸು-ಚಿಮ್ಮು, ಧಗೆ, ತಾಪ
ಮೂಲ ...{Loading}...
ಕಾರಿದನು ರುಧಿರವನು ಧರಣಿಗೆ
ಹಾರಿ ಬಿದ್ದನು ಮಾದ್ರಪತಿಯೆದೆ
ಡೋರಿನಲಿ ಡಾವರಿಸಿದವು ರಕ್ತಾಂಬುಧಾರೆಗಳು
ಮೀರಿತಸು ಕಂಠವನು ನಾಸಿಕ
ಕೇರಿದುದು ನಿಟ್ಟುಸುರು ನಿಮಿಷಕೆ
ಚೀರಿದುದು ಕುರುರಾಯದಳ ಶಲ್ಯಾವಸಾನದಲಿ ॥68॥
೦೬೯ ಅಹಹ ಸೇನಾಪತಿಯ ...{Loading}...
ಅಹಹ ಸೇನಾಪತಿಯ ಮಗ್ಗುಲು
ಮಹಿಗೆ ಬಿದ್ದುದು ಬೆಚ್ಚಿತೀಚೆಯ
ಬಹಳಬಲರಿನ್ನಾರು ಕುರುಸೇನಾಧುರಂಧರರು
ಮಿಹಿರಸುತ ಗುರು ಭೀಷ್ಮರಲಿ ಸ
ನ್ನಿಹಿತನಾದನು ಶಲ್ಯನೆನೆ ಕಿಂ
ಗಹನವೀ ರಣವೆನುತ ಶಲ್ಯಾನುಜನು ಮಾರಾಂತ ॥69॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಹಹ! ಶಲ್ಯನ ಮಗ್ಗುಲು ಭೂಮಿಗೆ ಬಿದ್ದಿತು. ಕುರುಪತಿಯ ವೀರಭಟರು ಬೆಚ್ಚಿದರು. ಇನ್ನು ಕುರುಸೇನಾನಾಯಕರು ಯಾರು, ಶಲ್ಯನು ಕರ್ಣ, ದ್ರೋಣ, ಭೀಷ್ಮರಲ್ಲಿ ಸೇರಿಹೋದನು ಎನ್ನುತ್ತಿರಲು ಈ ಯುದ್ಧವು ಯಾವ ಮಹತ್ತರವಾದುದು ಎನ್ನುತ್ತ ಶಲ್ಯನ ತಮ್ಮನು ಯುದ್ಧಕ್ಕೆ ಎದಿರಾದ.
ಪದಾರ್ಥ (ಕ.ಗ.ಪ)
ಮಗ್ಗುಲು ಮಹಿಗೆ ಬಿದ್ದುದು-ಮಗುಚಿ ಬಿದ್ದ. ಧುರಂಧರ-ಹೊಣೆಹೊತ್ತವ, ನಾಯಕ ಮಿಹಿರಸುತ-ಸೂರ್ಯನ ಮಗ, ಕರ್ಣ ಕಿಂಗಹನ-ಏನು ಮಹಾ! ಏನು ಗಹನವಾದದ್ದು?
ಮೂಲ ...{Loading}...
ಅಹಹ ಸೇನಾಪತಿಯ ಮಗ್ಗುಲು
ಮಹಿಗೆ ಬಿದ್ದುದು ಬೆಚ್ಚಿತೀಚೆಯ
ಬಹಳಬಲರಿನ್ನಾರು ಕುರುಸೇನಾಧುರಂಧರರು
ಮಿಹಿರಸುತ ಗುರು ಭೀಷ್ಮರಲಿ ಸ
ನ್ನಿಹಿತನಾದನು ಶಲ್ಯನೆನೆ ಕಿಂ
ಗಹನವೀ ರಣವೆನುತ ಶಲ್ಯಾನುಜನು ಮಾರಾಂತ ॥69॥
೦೭೦ ಗೆಲವು ನಿನಗಾಯ್ತರಸ ...{Loading}...
ಗೆಲವು ನಿನಗಾಯ್ತರಸ ಹರಿಬಕೆ
ನಿಲುಕಿದೆನ್ನನು ಸಂತವಿಸಿ ನಿಜ
ಬಲದಲೊಸಗೆಯ ಮಾಡಿಸಾ ಮಾದ್ರೇಶಮಾರಣವ
ಅಳುಕದಿದಿರಾಗೆನುತ ಬಾಣಾ
ವಳಿಯ ತವಿಸೆ ನಿರಂತರಾಸ್ತ್ರದ
ಜಲನಿಧಿಗೆ ವಡಬಾಗ್ನಿಯಾದನು ನಗುತ ಯಮಸೂನು ॥70॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈಗ ನಿನಗೆ ಗೆಲುವಾಗಿದೆ ಧರ್ಮರಾಯ. ಈ ಯುದ್ಧದ ಹೊಣೆಗೆ ನಿಂತಿರುವ ನನ್ನನ್ನು ಸಮಾಧಾನಿಸಿ. ನಿನ್ನ ಸೈನ್ಯದಲ್ಲಿ ನನ್ನ ಅಣ್ಣನಾದ ಶಲ್ಯನ ಮರಣದ ಸಂತೋಷಕ್ಕೆ ಮಂಗಳಾಚರಣೆಯನ್ನು ಮಾಡಿಸುವೆಯಂತೆ. ಹೆದರದೆ ನನಗೆ ಎದುರಾಗೆನುತ ಬಾಣಗಳನ್ನು ಪ್ರಯೋಗ ಮಾಡಲು, ನಿರಂತರವಾಗಿ ಸುರಿಯುವ ಬಾಣಗಳ ಸಮುದ್ರಕ್ಕೆ, ಧರ್ಮರಾಯನು ಪ್ರಳಯಕಾಲದ ಅಗ್ನಿಯಾದನು.
ಪದಾರ್ಥ (ಕ.ಗ.ಪ)
ಹರಿಬ-ಹೊಣೆ, ಜವಾಬ್ದಾರಿ, ಒಸಗೆ-ಮಂಗಳಕರ ಕೆಲಸಗಳನ್ನು ಮಾಡುವುದು, ಉತ್ಸಾಹಿಸುವುದು, ತವಿಸು-ವೆಚ್ಚಮಾಡು (ಬಾಣ ಪ್ರಯೋಗ ಮಾಡಿ ಅವುಗಳನ್ನು ವೆಚ್ಚ ಮಾಡುವುದು) ವಡಬಾಗ್ನಿ-ಪ್ರಳಯಕಾಲದ ಅಗ್ನಿ
ಮೂಲ ...{Loading}...
ಗೆಲವು ನಿನಗಾಯ್ತರಸ ಹರಿಬಕೆ
ನಿಲುಕಿದೆನ್ನನು ಸಂತವಿಸಿ ನಿಜ
ಬಲದಲೊಸಗೆಯ ಮಾಡಿಸಾ ಮಾದ್ರೇಶಮಾರಣವ
ಅಳುಕದಿದಿರಾಗೆನುತ ಬಾಣಾ
ವಳಿಯ ತವಿಸೆ ನಿರಂತರಾಸ್ತ್ರದ
ಜಲನಿಧಿಗೆ ವಡಬಾಗ್ನಿಯಾದನು ನಗುತ ಯಮಸೂನು ॥70॥
೦೭೧ ಆತನಸ್ತ್ರವ ಮುರಿಯೆಸುತ ...{Loading}...
ಆತನಸ್ತ್ರವ ಮುರಿಯೆಸುತ ರಥ
ಸೂತ ಹಯವನು ತರಿದು ಬಾಣ
ವ್ರಾತದಲಿ ಶಲ್ಯಾನುಜನ ಹೂಳಿದನು ಹರಹಿನಲಿ
ಈತನನು ಕೆಡಹಿದನು ಸಾಲ್ವಮ
ಹೀತಳಾಧಿಪನವನ ಹರಿಬಕೆ
ಭೂತಳೇಶನ ಕೆಣಕಿ ಕಂಡನು ವರ ಸುರವ್ರಜವ ॥71॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮರಾಯನು ಶಲ್ಯನ ತಮ್ಮನ ಬಾಣಗಳನ್ನು ಕತ್ತರಿಸಿ ಎಸೆಯುತ್ತಾ ಅವನ ರಥ, ಸಾರಥಿ ಕುದುರೆಗಳನ್ನು ತರಿದುಹಾಕಿ ಬಾಣ ಸಮೂಹದಿಂದ ಶಲ್ಯನ ತಮ್ಮನನ್ನು ಹೂತುಹಾಕಿದನು. ಸಾಲ್ವರಾಜನು ಧರ್ಮಜನನ್ನು ಕೆಡವಿದನು. ಶಲ್ಯಾನುಜನ ಸಾವಿನ ಸೇಡಿಗಾಗಿ ಸಾಲ್ವನು ಧರ್ಮಜನನ್ನು ಕೆಣಕಿ ಸ್ವರ್ಗಪ್ರವೇಶ ಮಾಡಿ ದೇವತೆಗಳ ಸಮೂಹವನ್ನು ಕಂಡನು. (ಮರಣ ಹೊಂದಿದನು)
ಪದಾರ್ಥ (ಕ.ಗ.ಪ)
ಸುರವ್ರಜ-ದೇವತೆಗಳ ಸಮೂಹ
ಟಿಪ್ಪನೀ (ಕ.ಗ.ಪ)
ಸಾಲ್ವರಾಜ-ಮ್ಲೇಚ್ಛದೇಶದ ಅರಸು. ಈ ಪದ್ಯದಲ್ಲಿ ಸಾಲ್ವನನ್ನು ಕೊಂದವನು ಧರ್ಮರಾಯನೆಂದಿದೆ. ಆದರೆ ಮೂಲ ಭಾರತದಲ್ಲಿ, ಕೊಂದವನು ‘ಸಾತ್ಯಕಿ’ಯೆಂದಿದೆ.
ಮೂಲ ...{Loading}...
ಆತನಸ್ತ್ರವ ಮುರಿಯೆಸುತ ರಥ
ಸೂತ ಹಯವನು ತರಿದು ಬಾಣ
ವ್ರಾತದಲಿ ಶಲ್ಯಾನುಜನ ಹೂಳಿದನು ಹರಹಿನಲಿ
ಈತನನು ಕೆಡಹಿದನು ಸಾಲ್ವಮ
ಹೀತಳಾಧಿಪನವನ ಹರಿಬಕೆ
ಭೂತಳೇಶನ ಕೆಣಕಿ ಕಂಡನು ವರ ಸುರವ್ರಜವ ॥71॥
೦೭೨ ಆರಿ ಹೊಕ್ಕುದು ...{Loading}...
ಆರಿ ಹೊಕ್ಕುದು ಶಲ್ಯನೃಪಪರಿ
ವಾರ ಮಾದ್ರದ ನಾಯಕರು ಜ
ಜ್ಝಾರ ಮನ್ನೆಯ ಮಂಡಳಿಕ ಸಾಮಂತಸಂದೋಹ
ಭೂರಿಬಲ ಸಾಲ್ವನ ಭಟಾವಳಿ
ಯಾರುಭಟೆಯಲಿ ನೂಕಿದುದು ವಿ
ಸ್ತಾರಿಸಿತಲೈ ಧರ್ಮನಂದನನೊಡನೆ ಬಲುಸಮರ ॥72॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶಲ್ಯರಾಜನ ಪರಿವಾರ ಬೊಬ್ಬಿರಿದು ಯುದ್ಧರಂಗವನ್ನು ಪ್ರವೇಶಿಸಿತು. ಮಾದ್ರದೇಶದ ನಾಯಕರು, ವೀರರಾದ ಮಾನ್ಯರಾದ ನಾಯಕರು, ಮಾಂಡಲಿಕರು ಮತ್ತು ಸಾಮಂತ ಸಮೂಹಗಳು, ವಿಶೇಷವಾದ ಶಕ್ತಿಶಾಲಿ ಸೈನ್ಯ, ಸಾಲ್ವರಾಜನ ಸೈನಿಕರು ಆರ್ಭಟದಿಂದ ಮುನ್ನುಗ್ಗಿದರು. ಅವರಿಗೂ ಧರ್ಮರಾಯನಿಗೂ ಮಹಾಸಮರ ಬೆಳೆಯಿತು.
ಪದಾರ್ಥ (ಕ.ಗ.ಪ)
ಆರಿ-ಬೊಬ್ಬಿರಿದು, ಜಜ್ಝಾರ-ವೀರರಾದ, ಮನ್ನೆಯರು-ನಾಯಕರು, ಮಂಡಳಿಕ-ಅಧೀನರಾಜರು, ಸಾಮಂತರು-ಅಧೀನರಾಜರು
ಮೂಲ ...{Loading}...
ಆರಿ ಹೊಕ್ಕುದು ಶಲ್ಯನೃಪಪರಿ
ವಾರ ಮಾದ್ರದ ನಾಯಕರು ಜ
ಜ್ಝಾರ ಮನ್ನೆಯ ಮಂಡಳಿಕ ಸಾಮಂತಸಂದೋಹ
ಭೂರಿಬಲ ಸಾಲ್ವನ ಭಟಾವಳಿ
ಯಾರುಭಟೆಯಲಿ ನೂಕಿದುದು ವಿ
ಸ್ತಾರಿಸಿತಲೈ ಧರ್ಮನಂದನನೊಡನೆ ಬಲುಸಮರ ॥72॥
೦೭೩ ಕೇಳಿದನು ಕುರುರಾಯ ...{Loading}...
ಕೇಳಿದನು ಕುರುರಾಯ ಮಾದ್ರನೃ
ಪಾಲನವಸಾನವನು ಕರಸಿದ
ನಾಳು ಕುದುರೆಯ ರಥ ಮದೋತ್ಕಟ ಗಜಘಟಾವಳಿಯ
ಮೇಳವದ ಮೋಡಿಯಲಿ ರಥ ದು
ವ್ವಾಳಿಸಿತು ಫಡ ಪಾಂಡುತನುಜರ
ಸಾಲ ಹೊಯ್ ಹೊಯ್ಯೆನುತ ಹೊಕ್ಕನು ಲಳಿಯ ಲಗ್ಗೆಯಲಿ ॥73॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುರ್ಯೋಧನ ಮಾದ್ರರಾಜನಾದ ಶಲ್ಯನ ಮರಣದ ಸುದ್ದಿಯನ್ನು ಕೇಳಿದ. ಆಳು, ಕುದುರೆಗಳು, ಮದಿಸಿದ ಆನೆಗಳ ಸಮೂಹ ಮತ್ತು ಸೈನ್ಯಸಮೂಹದ ಮೋಡಿಯಲ್ಲಿ ದುರ್ಯೋಧನನ ರಥ ವೇಗವಾಗಿ ಮುನ್ನಡೆಯಿತು. ಫಡ! ಪಾಂಡವರ ಮತ್ತವರ ಸೈನ್ಯದ ಸಾಲು ಸಾಲುಗಳನ್ನು ಹೊಡೆದುಹಾಕಿ ಎನ್ನುತ್ತಾ ರಭಸದ ಮುತ್ತಿಗೆಯ ಆಕ್ರಮಣ ಮಾಡಿ ಯುದ್ಧ ರಂಗವನ್ನು ಹೊಕ್ಕ.
ಪದಾರ್ಥ (ಕ.ಗ.ಪ)
ಮೇಳವ-ಸೇರಿಕೆ, ಒಗ್ಗೂಡು, ದುವ್ವಾಳಿಸು-ರಭಸವಾಗಿ ಓಡು, ಲಳಿ-ಆವೇಗ, ರಭಸ, ಲಗ್ಗೆ-ಮುತ್ತಿಗೆ, ಆಕ್ರಮಣ
ಮೂಲ ...{Loading}...
ಕೇಳಿದನು ಕುರುರಾಯ ಮಾದ್ರನೃ
ಪಾಲನವಸಾನವನು ಕರಸಿದ
ನಾಳು ಕುದುರೆಯ ರಥ ಮದೋತ್ಕಟ ಗಜಘಟಾವಳಿಯ
ಮೇಳವದ ಮೋಡಿಯಲಿ ರಥ ದು
ವ್ವಾಳಿಸಿತು ಫಡ ಪಾಂಡುತನುಜರ
ಸಾಲ ಹೊಯ್ ಹೊಯ್ಯೆನುತ ಹೊಕ್ಕನು ಲಳಿಯ ಲಗ್ಗೆಯಲಿ ॥73॥
೦೭೪ ರಾಯನೊಡನೆ ಸಮಸ್ತ ...{Loading}...
ರಾಯನೊಡನೆ ಸಮಸ್ತ ಬಲವಡು
ಪಾಯಲೌಕಿತು ಪಾರ್ಥ ಸಾತ್ಯಕಿ
ವಾಯುಸುತರಾಚೆಯಲಿ ಮೇಳೈಸಿತ್ತು ನೃಪಸೇನೆ
ಸಾಯಕದ ಸೂಠಿಗಳ ಸಬಳದ
ಪಾಯದಳ ರಥ ವಾಜಿ ಗಜಘಟೆ
ಲಾಯಶುದ್ಧದ ತೇಜಿ ಹೊಕ್ಕವು ವಾಘೆಸರಿಸದಲಿ ॥74॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮರಾಯನೊಡನೆ ಪಾಂಡವರ ಸಮಸ್ತ ಸೈನ್ಯವೂ ಮತ್ತೊಂದು ದಿಕ್ಕಿನಿಂದ ಬಂದು ಸೇರಿತು; ಅರ್ಜುನ, ಸಾತ್ಯಕಿ, ಭೀಮರ ಸಮೀಪದಲ್ಲಿ ಬೀಡುಬಿಟ್ಟಿತು. ಬಿಲ್ಲುಗಳ ಮತ್ತು ವೇಗವಾಗಿ ಹೊಗುವ ಈಟಿಗಳನ್ನು ಹಿಡಿದ ಕಾಲಾಳುಗಳ ಸೈನ್ಯ, ರಥಗಳು, ಕುದುರೆಯಾಳುಗಳು, ಆನೆಗಳ ಸೈನ್ಯ, ಶ್ರೇಷ್ಠವಾದ ಕುದುರೆಗಳು ಲಗಾಮುಗಳ ಸಾಲುಸಾಲುಗಳು ಕಾಣುತ್ತಿರುವಂತೆ ಯುದ್ಧರಂಗವನ್ನು ಪ್ರವೇಶಿಸಿದುವು.
ಪದಾರ್ಥ (ಕ.ಗ.ಪ)
ಅಡುಪಾಯ-ಎರಡನೆಯದಾರಿ, ಸಾಯಕ-ಬಿಲ್ಲು, ಸೂಠಿ-ಚುರುಕು, ವೇಗ, ವಾಘೆ-ಲಗಾಮು, ಸರಿಸ-ಸಾಲಾಗಿ, ಸರಳವಾಗಿ, ಯೋಗ್ಯವಾದುದು
ಮೂಲ ...{Loading}...
ರಾಯನೊಡನೆ ಸಮಸ್ತ ಬಲವಡು
ಪಾಯಲೌಕಿತು ಪಾರ್ಥ ಸಾತ್ಯಕಿ
ವಾಯುಸುತರಾಚೆಯಲಿ ಮೇಳೈಸಿತ್ತು ನೃಪಸೇನೆ
ಸಾಯಕದ ಸೂಠಿಗಳ ಸಬಳದ
ಪಾಯದಳ ರಥ ವಾಜಿ ಗಜಘಟೆ
ಲಾಯಶುದ್ಧದ ತೇಜಿ ಹೊಕ್ಕವು ವಾಘೆಸರಿಸದಲಿ ॥74॥
೦೭೫ ಥಟ್ಟನೊಡಹೊಯ್ದವನಿಪತಿ ಜಗ ...{Loading}...
ಥಟ್ಟನೊಡಹೊಯ್ದವನಿಪತಿ ಜಗ
ಜಟ್ಟಿಗಳ ಕೆಣಕಿದನು ನಕುಲನ
ನಟ್ಟಿದನು ಸಹದೇವನಡಹಾಯ್ದರೆ ವಿಭಾಡಿಸಿದ
ಬಿಟ್ಟ ಧೃಷ್ಟದ್ಯುಮ್ನನನು ಹುಡಿ
ಗುಟ್ಟಿದನು ಸಾತ್ಯಕಿಯ ಜೋಡಿನ
ಲೊಟ್ಟಿದನು ಕೂರಂಬುಗಳನುಬ್ಬಿನಲಿ ಕುರುರಾಯ ॥75॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಒಮ್ಮೆಗೇ ಆಯುಧ ಪ್ರಯೋಗ ಮಾಡಿ, ದುರ್ಯೋಧನನು ಜಗಜಟ್ಟಿಗಳನ್ನು ಕೆಣಕಿದ. ನಕುಲನನ್ನು ದೂರಕ್ಕೆ ಕಳಿಸಿದನು. ಸಹದೇವನು ಮೇಲೆ ಬಿದ್ದರೆ ಅವನನ್ನು ಸೋಲಿಸಿದ. ಧೃಷ್ಟದ್ಯುಮ್ನನನ್ನು ಹುಡಿಹುಡಿಮಾಡಿ ಸೋಲಿಸಿದ. ಉತ್ಸಾಹದಿಂದ ಕುರುರಾಯನು ಸಾತ್ಯಕಿಯ ಕವಚದಲ್ಲಿ ಹರಿತವಾದ ಬಾಣಗಳನ್ನು ನೆಟ್ಟನು.
ಪದಾರ್ಥ (ಕ.ಗ.ಪ)
ವಿಭಾಡಿಸು-ಸೋಲಿಸು, ನಾಶಮಾಡು, ಉಬ್ಬಿನಲಿ-ಉತ್ಸಾಹದಲ್ಲಿ, ಆವೇಶದಲ್ಲಿ, ಅಹಂಕಾರದಲ್ಲಿ
ಮೂಲ ...{Loading}...
ಥಟ್ಟನೊಡಹೊಯ್ದವನಿಪತಿ ಜಗ
ಜಟ್ಟಿಗಳ ಕೆಣಕಿದನು ನಕುಲನ
ನಟ್ಟಿದನು ಸಹದೇವನಡಹಾಯ್ದರೆ ವಿಭಾಡಿಸಿದ
ಬಿಟ್ಟ ಧೃಷ್ಟದ್ಯುಮ್ನನನು ಹುಡಿ
ಗುಟ್ಟಿದನು ಸಾತ್ಯಕಿಯ ಜೋಡಿನ
ಲೊಟ್ಟಿದನು ಕೂರಂಬುಗಳನುಬ್ಬಿನಲಿ ಕುರುರಾಯ ॥75॥
೦೭೬ ಮರಳಿ ಪಞ್ಚದ್ರೌಪದೇಯರ ...{Loading}...
ಮರಳಿ ಪಂಚದ್ರೌಪದೇಯರ
ಪರಿಭವಿಸಿದನು ಧರ್ಮಪುತ್ರನ
ತೆರಳಿಚಿದ ಸಹದೇವ ನಕುಲರ ಮತ್ತೆ ಸೋಲಿಸಿದ
ವರ ಯುಧಾಮನ್ಯೂತ್ತಮೌಜರ
ಹೊರಳಿಸಿದನವನಿಯಲಿ ಭೀಮಾ
ದ್ಯರಿಗೆ ಭೀತಿಯ ಬೀರಿದನು ಬೇಸರದೆ ಕುರುರಾಯ ॥76॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪುನಃ ದ್ರೌಪದಿಯ ಐವರು ಮಕ್ಕಳನ್ನು ಸೋಲಿಸಿದನು. ಧರ್ಮಜನನ್ನು ಹಿಮ್ಮೆಟ್ಟಿಸಿದ. ಸಹದೇವ ನಕುಲರನ್ನು ಪುನಃ ಸೋಲಿಸಿದ. ಯುಧಾಮನ್ಯು, ಉತ್ತಮೌಜಸರನ್ನು ನೆಲದ ಮೇಲೆ ಹೊರಳುವಂತೆ ಮಾಡಿದ. ಬೇಸರವಿಲ್ಲದೆ ಭೀಮಾದಿಗಳಿಗೆ ಭೀತಿಯನ್ನುಂಟುಮಾಡುತ್ತಾ ದುರ್ಯೋಧನ ಯುದ್ಧ ಮಾಡಿದ.
ಪದಾರ್ಥ (ಕ.ಗ.ಪ)
ಪರಿಭವಿಸು-ಸೋಲಿಸು, ತೆರಳಿಚು-ಹಿಂದಕ್ಕೆ ಕಳಿಸು, ಹೊರಳಿಸು-ನೆಲದ ಮೇಲೆ ಹೊರಳಾಡಿಸು, ಬೀರಿದನು-ತೋರಿಸಿದನು, ಉಂಟುಮಾಡಿದನು.
ಮೂಲ ...{Loading}...
ಮರಳಿ ಪಂಚದ್ರೌಪದೇಯರ
ಪರಿಭವಿಸಿದನು ಧರ್ಮಪುತ್ರನ
ತೆರಳಿಚಿದ ಸಹದೇವ ನಕುಲರ ಮತ್ತೆ ಸೋಲಿಸಿದ
ವರ ಯುಧಾಮನ್ಯೂತ್ತಮೌಜರ
ಹೊರಳಿಸಿದನವನಿಯಲಿ ಭೀಮಾ
ದ್ಯರಿಗೆ ಭೀತಿಯ ಬೀರಿದನು ಬೇಸರದೆ ಕುರುರಾಯ ॥76॥
೦೭೭ ಕೆದರುತದೆ ನಮ್ಮವರ ...{Loading}...
ಕೆದರುತದೆ ನಮ್ಮವರ ದಳ ದೊರೆ
ಯದಟು ಸುಕ್ಕಿತು ರಾಯನೊಬ್ಬನೆ
ಕದನದಲಿ ಕೈದೋರಿ ಭಂಗಿಸಿದನು ಮಹಾರಥರ
ಹೊದರು ತಳಿತುದು ಲಗ್ಗೆವರೆ ಮೋ
ನದಲಿ ಮಗುಳ್ದುವು ಪಾರ್ಥ ದಿವ್ಯಾ
ಸ್ತ್ರದಲಿ ಕೈಮಾಡೆಂದು ನುಡಿದನು ವೀರನಾರಯಣ ॥77॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಮ್ಮ ಪಕ್ಷದ ಸೈನ್ಯ ದುರ್ಯೋಧನನ ಹೊಡೆತಕ್ಕೆ ಸಿಕ್ಕಿ ಚದುರಿಹೋಗುತ್ತಿದೆ. ಧರ್ಮರಾಯನ ಧೈರ್ಯ ಕುಗ್ಗುತ್ತಿದೆ. ದುರ್ಯೋಧನನೊಬ್ಬನೆ ಯುದ್ಧದಲ್ಲಿ ಮಹಾರಥರನ್ನು ಅವಮಾನಗೊಳಿಸಿದ್ದಾನೆ. ನಮ್ಮ ಸೈನ್ಯದ ಗುಂಪು ಚೆಲ್ಲಾಪಿಲ್ಲಿಯಾಗುತ್ತಿದೆ. ನೀನು ದಿವ್ಯಾಸ್ತ್ರಗಳನ್ನು ಪ್ರಯೋಗಿಸಿ ಯುದ್ಧಮಾಡು-ಎಂದು ವೀರನಾರಾಯಣನಾದ ಶ್ರೀಕೃಷ್ಣ ಅರ್ಜುನನಿಗೆ ಆದೇಶ ನೀಡಿದ.
ಪದಾರ್ಥ (ಕ.ಗ.ಪ)
ಕೆದರು-ಬೇರೆಬೇರೆಯಾಗು, ಚೆಲ್ಲಾಪಿಲ್ಲಿಯಾಗು, ಅದಟು-ಧೈರ್ಯ, ಸುಕ್ಕಿತು-ಕುಗ್ಗಿತು, ಭಂಗಿಸು-ಸೋಲಿಸು, ಅವಮಾನಮಾಡು, ಹೊದರು-ಗುಂಪು, ತಳಿತುದು-ಚುಮುಕಿಸಿದಂತೆ ಚೆಲ್ಲಾಪಿಲ್ಲಿಯಾಗು
ಮೂಲ ...{Loading}...
ಕೆದರುತದೆ ನಮ್ಮವರ ದಳ ದೊರೆ
ಯದಟು ಸುಕ್ಕಿತು ರಾಯನೊಬ್ಬನೆ
ಕದನದಲಿ ಕೈದೋರಿ ಭಂಗಿಸಿದನು ಮಹಾರಥರ
ಹೊದರು ತಳಿತುದು ಲಗ್ಗೆವರೆ ಮೋ
ನದಲಿ ಮಗುಳ್ದುವು ಪಾರ್ಥ ದಿವ್ಯಾ
ಸ್ತ್ರದಲಿ ಕೈಮಾಡೆಂದು ನುಡಿದನು ವೀರನಾರಯಣ ॥77॥
೦೭೮ ಇತಿ ಶ್ರೀಮದಚಿನ್ತ್ಯ ...{Loading}...
ಇತಿ ಶ್ರೀಮದಚಿಂತ್ಯ ಮಹಿಮ ಗದುಗಿನ
ವೀರನಾರಾಯಣ ಚರಣಾರವಿಂದ ಮಕರಂದ
ಮಧುಪಾನ ಪರಿಪುಷ್ಟ ವಚಃ ಷಟ್ಪದೀ ನಿಕಾಯ
ಶ್ರೀಮತ್ಕುಮಾರವ್ಯಾಸ ಯೋಗೀಂದ್ರ ವಿರಚಿತಮಪ್ಪ
ಕರ್ಣಾಟ ಭಾರತ ಕಥಾಮಂಜರಿಯೊಳ್
ಶಲ್ಯಪರ್ವಂ ಸಮಾಪ್ತಮಾದುದು.
ಸರ್ವ-ಟೀಕೆಗಳು ...{Loading}...
ಮೂಲ ...{Loading}...
ಇತಿ ಶ್ರೀಮದಚಿಂತ್ಯ ಮಹಿಮ ಗದುಗಿನ
ವೀರನಾರಾಯಣ ಚರಣಾರವಿಂದ ಮಕರಂದ
ಮಧುಪಾನ ಪರಿಪುಷ್ಟ ವಚಃ ಷಟ್ಪದೀ ನಿಕಾಯ
ಶ್ರೀಮತ್ಕುಮಾರವ್ಯಾಸ ಯೋಗೀಂದ್ರ ವಿರಚಿತಮಪ್ಪ
ಕರ್ಣಾಟ ಭಾರತ ಕಥಾಮಂಜರಿಯೊಳ್
ಶಲ್ಯಪರ್ವಂ ಸಮಾಪ್ತಮಾದುದು.