೦೦೦ ಸೂ ಚಣ್ಡ ...{Loading}...
ಸೂ. ಚಂಡ ಭುಜಬಲ ವಿಕ್ರಮನ ಮಾ
ರ್ತಂಡತನಯನ ವಿಜಯಸಿರಿ ಮುಂ
ಕೊಂಡು ಮನ್ನಿಸಿ ಭುಜಕೆ ಬಂದಳು ಕಲಿಧನಂಜಯನ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ : ಪ್ರಚಂಡ ಭುಜಬಲ ಪರಾಕ್ರಮಿಯಾದ ಸೂರ್ಯನ ಮಗ ಕರ್ಣನ ವಿಜಯಲಕ್ಷ್ಮಿ, ವೀರ ಅರ್ಜುನನನ್ನು ಮನ್ನಿಸಿ, ಅವನ ಭುಜದಲ್ಲಿ ಬಂದು ನೆಲಸಿದಳು.
ಮೂಲ ...{Loading}...
ಸೂ. ಚಂಡ ಭುಜಬಲ ವಿಕ್ರಮನ ಮಾ
ರ್ತಂಡತನಯನ ವಿಜಯಸಿರಿ ಮುಂ
ಕೊಂಡು ಮನ್ನಿಸಿ ಭುಜಕೆ ಬಂದಳು ಕಲಿಧನಂಜಯನ
೦೦೧ ಕೇಳು ಧೃತರಾಷ್ಟ್ರಾವನಿಪ ...{Loading}...
ಕೇಳು ಧೃತರಾಷ್ಟ್ರಾವನಿಪ ನಿ
ನ್ನಾಳ ಜಯಸಿರಿ ಸರ್ಪಬಾಣದ
ಮೇಳೆಯದ ಸೀಮೆಯಲಿ ನಿಂದುದು ಹಲವು ಮಾತೇನು
ಹೇಳಿ ಫಲವೇನಿನ್ನು ಮುಂದಣ
ಕಾಳೆಗದ ಕರ್ಣಾಮೃತದ ಮಳೆ
ಗಾಲ ಮಾದು ವಿಲೋಚನದ ಮಳೆಗಾಲವಾಯ್ತೆಂದ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಧೃತರಾಷ್ಟ್ರ ದೊರೆಯೇ ಕೇಳು, ನಿನ್ನ ಸೈನ್ಯದ ಜಯಲಕ್ಷ್ಮಿ, ಸರ್ಪಾಸ್ತ್ರದ ಸಹಯೋಗದವರೆಗೂ ಜೊತೆಯಲ್ಲಿದ್ದಳು. ಇನ್ನು ಮಾತನ್ನಾಡುವುದರಿಂದ ಏನು ಪ್ರಯೋಜನ. ಇಲ್ಲಿಯವರೆಗೂ ಕರ್ಣಾಮೃತವಾಗಿದ್ದ ಮಳೆಗಾಲ ಮುಗಿದು ಮುಂದಿನ ಯುದ್ಧದಲ್ಲಿ ಕಣ್ಣೀರಿನ ಮಳೆಗಾಲ ಆರಂಭವಾಗುತ್ತದೆ’ ಎಂದ ಸಂಜಯ.
ಮೂಲ ...{Loading}...
ಕೇಳು ಧೃತರಾಷ್ಟ್ರಾವನಿಪ ನಿ
ನ್ನಾಳ ಜಯಸಿರಿ ಸರ್ಪಬಾಣದ
ಮೇಳೆಯದ ಸೀಮೆಯಲಿ ನಿಂದುದು ಹಲವು ಮಾತೇನು
ಹೇಳಿ ಫಲವೇನಿನ್ನು ಮುಂದಣ
ಕಾಳೆಗದ ಕರ್ಣಾಮೃತದ ಮಳೆ
ಗಾಲ ಮಾದು ವಿಲೋಚನದ ಮಳೆಗಾಲವಾಯ್ತೆಂದ ॥1॥
೦೦೨ ಕಳಿದ ಹೂವಿನ ...{Loading}...
ಕಳಿದ ಹೂವಿನ ಪರಿಮಳವೊ ಧರೆ
ಗಿಳಿದ ಸೂರ್ಯಪ್ರಭೆಯೊ ಶರದದ
ಹೊಳೆಯೊ ಮೇಘಸ್ಥಿತಿಯೊ ಸುರಪತಿ ಚಾಪ ವಿಭ್ರಮವೊ
ಇಳಿದ ಜವ್ವನದೊಲುಮೆಯೋ ಕುರು
ಬಲವ ಕಂಡೆನು ಜೀಯ ಜಯದ
ಗ್ಗಳಿಕೆಗಳ ಜಾರುಗಳ ನಿನ್ನ ಕುಮಾರನೊಡ್ಡಿನಲಿ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೊರೆಯೇ ಬಾಡಿ ಹೋದ ಹೂವಿನ ಸುವಾಸನೆಯೋ, ಭೂಮಿಗೆ ಇಳಿದು ಬಂದ ಸೂರ್ಯನ ಬೆಳಕೋ, ಶರತ್ಕಾಲದ ನದಿಯೋ, ಮೋಡಗಳ ಸ್ಥಿತಿಯೋ, ಇಂದ್ರನ ಕಾಮನಬಿಲ್ಲಿನ ಸೌಂದರ್ಯವೋ, ಯೌವ್ವನ ಇಳಿಮುಖವಾಗುವ ಕಾಲದ ಪ್ರೀತಿಯೋ - ಹೀಗೆ ಇಳಿಮುಖವಾದ ಕೌರವನ ಸೈನ್ಯವನ್ನು ನಾನು ನೋಡಿದೆ. ಜೀಯ, ಜಯವಾಗಲಿ ಎಂಬುದಾಗಲಿ, ಶ್ರೇಷ್ಠತೆಗಳನ್ನು ಹೇಳುವುದಾಗಲಿ ನಿನ್ನ ಮಗನ ಸೈನ್ಯದಲ್ಲಿ ಜಾರಿ ಓಡಿ ಹೋಗಿತ್ತು.
ಮೂಲ ...{Loading}...
ಕಳಿದ ಹೂವಿನ ಪರಿಮಳವೊ ಧರೆ
ಗಿಳಿದ ಸೂರ್ಯಪ್ರಭೆಯೊ ಶರದದ
ಹೊಳೆಯೊ ಮೇಘಸ್ಥಿತಿಯೊ ಸುರಪತಿ ಚಾಪ ವಿಭ್ರಮವೊ
ಇಳಿದ ಜವ್ವನದೊಲುಮೆಯೋ ಕುರು
ಬಲವ ಕಂಡೆನು ಜೀಯ ಜಯದ
ಗ್ಗಳಿಕೆಗಳ ಜಾರುಗಳ ನಿನ್ನ ಕುಮಾರನೊಡ್ಡಿನಲಿ ॥2॥
೦೦೩ ಆಗಳಳಿದುದು ಸರ್ಪಶರ ...{Loading}...
ಆಗಳಳಿದುದು ಸರ್ಪಶರ ತಾ
ನಾಗಳೇ ಕುರುರಾಯ ಭುಜವನು
ನೀಗಿದಳು ಜಯವಧು ಧರಾವಧು ಭಾಗ್ಯವಧು ಸಹಿತ
ಆಗಳೇ ಬಿನ್ನೈಸೆನೇ ರಣ
ದಾಗುಹೋಗಿನ ಹೊರಿಗೆಯನು ತಾ
ನೀಗಿ ಬಿಸುಟನು ತನ್ನ ಸತ್ಯಸ್ಥಿತಿಗೆ ಕಲಿಕರ್ಣ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯಾವಾಗ ಸರ್ಪಾಸ್ತ್ರ ನಾಶವಾಯಿತೋ ಆಗಲೇ ದುರ್ಯೋಧನನ ಭುಜವನ್ನು ಜಯಲಕ್ಷ್ಮಿಯು, ಭೂಲಕ್ಷ್ಮಿ ಹಾಗೂ ಭಾಗ್ಯಲಕ್ಷ್ಮಿಯ ಜೊತೆಯಲ್ಲಿ ತ್ಯಜಿಸಿದಳು. ದೊರೆಯೇ ತನ್ನ ಸತ್ಯ ಪರಿಪಾಲನೆಗಾಗಿ ಕರ್ಣನು, ಯುದ್ಧರಂಗದ ಪರಿಣಾಮವನ್ನು ಗಮನಿಸಲಿಲ್ಲ ಎಂಬ ವಿಚಾರವನ್ನು ಈಗಾಗಲೇ ನಿನಗೆ ತಿಳಿಸಿದ್ದೇನೆ ಎಂದ ಸಂಜಯ.
ಮೂಲ ...{Loading}...
ಆಗಳಳಿದುದು ಸರ್ಪಶರ ತಾ
ನಾಗಳೇ ಕುರುರಾಯ ಭುಜವನು
ನೀಗಿದಳು ಜಯವಧು ಧರಾವಧು ಭಾಗ್ಯವಧು ಸಹಿತ
ಆಗಳೇ ಬಿನ್ನೈಸೆನೇ ರಣ
ದಾಗುಹೋಗಿನ ಹೊರಿಗೆಯನು ತಾ
ನೀಗಿ ಬಿಸುಟನು ತನ್ನ ಸತ್ಯಸ್ಥಿತಿಗೆ ಕಲಿಕರ್ಣ ॥3॥
೦೦೪ ಆದರೇನದು ಮತ್ತೆ ...{Loading}...
ಆದರೇನದು ಮತ್ತೆ ಕರ್ಣನ
ಕೈದುಕಾರತನಕ್ಕೆ ಸುಭಟರು
ಮೇದಿನಿಯೊಳಾರುಂಟು ಪಡಿ ದೈವಾಭಿಮುಖವುಳಿಯೆ
ಹೋದೆ ಹೋಗಿನ್ನೆನುತ ಕಣೆಗಳ
ಸಾದುಗಳ ತನಿವೀರರಸದಲಿ
ತೇದು ಚಿತ್ರವ ಬರೆದನರ್ಜುನನಂಗಭಿತ್ತಿಯಲಿ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆದರೆ ಏನು, ಕರ್ಣನು ತೋರಿಸಿದ ಆಯುಧಗಳ ಪ್ರಯೋಗದ ಕೌಶಲ್ಯಕ್ಕೆ ಸಮಾನರಾದ ವೀರರು ಈ ಭೂಮಿಯ ಮೇಲೆ ಯಾರಿದ್ದಾರೆ, ದೈವ ಪ್ರತಿಕೂಲವಾಯಿತು ಎಂಬುದನ್ನು ಬಿಟ್ಟು. ಸರ್ಪಾಸ್ತ್ರ ಹೋದರೆ ಹೋಗಲಿ ಎನ್ನುತ್ತಾ , ಕರ್ಣನು ಬಾಣಗಳನ್ನು ಸಮೃದ್ಧವಾದ ವೀರ ರಸವೆಂಬ ಪರಿಮಳ ದ್ರವ್ಯಗಳಲ್ಲಿ ತೇಯ್ದು ಅರ್ಜುನನ ದೇಹವೆಂಬ ಗೋಡೆಯ ಮೇಲೆ (ರಕ್ತದಲ್ಲಿ) ಚಿತ್ರಗಳನ್ನು ಬರೆದನು.
ಪದಾರ್ಥ (ಕ.ಗ.ಪ)
ಸಾದು-ಪರಿಮಳದ್ರವ್ಯ
ಮೂಲ ...{Loading}...
ಆದರೇನದು ಮತ್ತೆ ಕರ್ಣನ
ಕೈದುಕಾರತನಕ್ಕೆ ಸುಭಟರು
ಮೇದಿನಿಯೊಳಾರುಂಟು ಪಡಿ ದೈವಾಭಿಮುಖವುಳಿಯೆ
ಹೋದೆ ಹೋಗಿನ್ನೆನುತ ಕಣೆಗಳ
ಸಾದುಗಳ ತನಿವೀರರಸದಲಿ
ತೇದು ಚಿತ್ರವ ಬರೆದನರ್ಜುನನಂಗಭಿತ್ತಿಯಲಿ ॥4॥
೦೦೫ ಮತ್ತೆ ಕೃಷ್ಣನನೆಚ್ಚು ...{Loading}...
ಮತ್ತೆ ಕೃಷ್ಣನನೆಚ್ಚು ಹನುಮನ
ತೆತ್ತಿಸಿದ ಕೂರಂಬಿನಲಿ ಕೈ
ವರ್ತಿಸಿದನೀರೆಂಟು ಶರವನು ತುರಗದೇಹದಲಿ
ಹೊತ್ತಿದುದು ಕಡುಗೋಪ ವಹ್ನಿಯೊ
ಳಿತ್ತಲಿದೆ ನಿಲ್ಲೆನುತ ಪಾರ್ಥನ
ಮೆತ್ತಿ ನೂರಂಬಿನಲಿ ಪುನರಪಿ ಕಪಿಯನೊಡೆಯೆಚ್ಚ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕರ್ಣನು ಮತ್ತೆ ಕೃಷ್ಣನನ್ನು ಬಾಣದಿಂದ ಹೊಡೆದನು. ಹನುಮಂತನ ದೇಹಕ್ಕೆ ಹರಿತವಾದ ಬಾಣಗಳನ್ನು ನಾಟಿಸಿದನು. ಕುದುರೆಗಳ ಶರೀರದ ಮೇಲೆ ಹದಿನಾರು ಬಾಣಗಳನ್ನು ಪ್ರಯೋಗಿಸಿ ಕೈ ಚಳಕವನ್ನು ತೋರಿಸಿದನು. ಹೆಚ್ಚಾದ ಉರಿಯುವ ಬೆಂಕಿಯಂತಹ ಕೋಪದಿಂದ ‘ಈ ಕಡೆ ನಿಲ್ಲು’ ಎನ್ನುತ್ತಾ ಅರ್ಜುನನನ್ನು ನೂರು ಬಾಣಗಳಿಂದ ಮೆತ್ತಿ, ಮತ್ತೆ ಹನುಮಂತನಿಗೆ ಗಾಯವಾಗುವಂತೆ ಬಾಣ ಪ್ರಯೋಗಿಸಿದನು.
ಪದಾರ್ಥ (ಕ.ಗ.ಪ)
ತೆತ್ತಿಸು-ನಾಟಿಸು, ಕೈವರ್ತಿಸು-ಕೈ ಚಳಕ ತೋರಿಸು
ಮೂಲ ...{Loading}...
ಮತ್ತೆ ಕೃಷ್ಣನನೆಚ್ಚು ಹನುಮನ
ತೆತ್ತಿಸಿದ ಕೂರಂಬಿನಲಿ ಕೈ
ವರ್ತಿಸಿದನೀರೆಂಟು ಶರವನು ತುರಗದೇಹದಲಿ
ಹೊತ್ತಿದುದು ಕಡುಗೋಪ ವಹ್ನಿಯೊ
ಳಿತ್ತಲಿದೆ ನಿಲ್ಲೆನುತ ಪಾರ್ಥನ
ಮೆತ್ತಿ ನೂರಂಬಿನಲಿ ಪುನರಪಿ ಕಪಿಯನೊಡೆಯೆಚ್ಚ ॥5॥
೦೦೬ ನೆಲನ ಬೇಟದ ...{Loading}...
ನೆಲನ ಬೇಟದ ಬೇಗೆಗೋಸುಗ
ರಳಿವರಿವದಿರು ಪಾಂಡುನಂದನ
ರಳಿಯಲವದಿರ ಬಳಿಯ ವೇಳಾಯಿತನು ಕೃಷ್ಣ ಗಡ
ಅಳಿಯಲಥವಾ ನಿಲಲಿ ಹಣುಹಂ
ಪಲು ಮೆಲಿದು ನೀನಿವರ ಬಲೆಯಲಿ
ಸಿಲುಕಿ ನೊಂದೈ ತಂದೆ ಪವನಜ ಎಂದನಾ ಕರ್ಣ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ನೆಲದ ಮೇಲಿನ ಮೋಹದಿಂದ, ಆಸೆಯಿಂದ ಈ ಪಾಂಡವರು ಯುದ್ಧ ಮಾಡಿ ಸಾಯುತ್ತಿದ್ದಾರೆ. ಅವರ ಬಳಿಯ ಸೇವಕನಷ್ಟೇ ಈ ಕೃಷ್ಣ. ಅವರು ಸಾಯಲಿ ಬದುಕಲಿ, ಹಣ್ಣುಹಂಪಲು ತಿಂದು ಬದುಕಿರಬೇಕಾದ ನೀನು ಇವರ ಬಲೆಯಲ್ಲಿ ಸಿಕ್ಕಿ ಹಾಕಿಕೊಂಡು ನೋಯುತ್ತಿದ್ದೀಯೇ ತಂದೆ ವಾಯುಪುತ್ರ’ ಎಂದು ಹನುಮಂತನನ್ನು ಆಡಿಕೊಂಡನು.
ಮೂಲ ...{Loading}...
ನೆಲನ ಬೇಟದ ಬೇಗೆಗೋಸುಗ
ರಳಿವರಿವದಿರು ಪಾಂಡುನಂದನ
ರಳಿಯಲವದಿರ ಬಳಿಯ ವೇಳಾಯಿತನು ಕೃಷ್ಣ ಗಡ
ಅಳಿಯಲಥವಾ ನಿಲಲಿ ಹಣುಹಂ
ಪಲು ಮೆಲಿದು ನೀನಿವರ ಬಲೆಯಲಿ
ಸಿಲುಕಿ ನೊಂದೈ ತಂದೆ ಪವನಜ ಎಂದನಾ ಕರ್ಣ ॥6॥
೦೦೭ ಬಾಯಿಬಡಿಕನಲಾ ವೃಥಾ ...{Loading}...
ಬಾಯಿಬಡಿಕನಲಾ ವೃಥಾ ರಾ
ಧೇಯ ಮದವೇಕಿನ್ನು ನಿನಗಹಿ
ಸಾಯಕದ ಸಾವಿನಲಿ ನೀರಿಳಿಸುವೆನು ನೆತ್ತರಲಿ
ತಾಯ ಬಸುರಿಂಬಿಲ್ಲ ನೀನುಳಿ
ವಾಯತಿಕೆಯಿನ್ನೆಂತು ಕೌರವ
ರಾಯ ನೋಡಲಿ ಕರೆಯೆನುತ ತೆಗೆದೆಚ್ಚನಾ ಪಾರ್ಥ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಗ ಅರ್ಜುನನು ‘ರಾಧೇಯ, ನೀನು ಬರಿಯ ಬಾಯಿಯ ಬಡಾಯಿಯವನು. ನಿನಗೆ ಅಹಂಕಾರದ ಮಾತೇಕೆ? ಸರ್ಪಾಸ್ತ್ರ ನಾಶವಾದರೂ ಇರುವ ನಿನ್ನ ಮದವನ್ನು ರಕ್ತ ಸುರಿಸಿ ಇಳಿಸುತ್ತೇನೆ. ಬದುಕಲು ನೀನು ಬಯಸಿದರೂ, ತಾಯಿಯ ಹೊಟ್ಟೆಯಲ್ಲಿ ನಿನಗೆ ಸ್ಥಳವಿಲ್ಲ. ನೀನು ಉಳಿಯುವುದು ಹೇಗೆ? ಅದನ್ನು ದುರ್ಯೋಧನನು ನೋಡಲಿ’ ಎನ್ನುತ್ತಾ ಬಾಣ ಪ್ರಯೋಗಿಸಿದನು.
ಮೂಲ ...{Loading}...
ಬಾಯಿಬಡಿಕನಲಾ ವೃಥಾ ರಾ
ಧೇಯ ಮದವೇಕಿನ್ನು ನಿನಗಹಿ
ಸಾಯಕದ ಸಾವಿನಲಿ ನೀರಿಳಿಸುವೆನು ನೆತ್ತರಲಿ
ತಾಯ ಬಸುರಿಂಬಿಲ್ಲ ನೀನುಳಿ
ವಾಯತಿಕೆಯಿನ್ನೆಂತು ಕೌರವ
ರಾಯ ನೋಡಲಿ ಕರೆಯೆನುತ ತೆಗೆದೆಚ್ಚನಾ ಪಾರ್ಥ ॥7॥
೦೦೮ ಆರು ಶರದಿನ್ದೆಚ್ಚು ...{Loading}...
ಆರು ಶರದಿಂದೆಚ್ಚು ಮಗುಳೀ
ರಾರುಬಾಣದಲೌಕಿ ಮೂವ
ತ್ತಾರು ಮಾರ್ಗಣದಿಂದ ಮುಕ್ಕುರಿಕಿದನು ರಿಪುಭಟನ
ಮೂರುಬಾಣದಲರಿಯ ದೇಹವ
ಕೀರಿದನು ಮತ್ತೆರಡುಶರದಲಿ
ಜಾರಲೆಚ್ಚನು ಜರೆದು ಕರ್ಣನ ಕರ್ಣಕುಂಡಲವ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನು ಮೊದಲು ಆರು ಬಾಣಗಳಿಂದ ಕರ್ಣನನ್ನು ಹೊಡೆದನು. ಮತ್ತೆ ಹನ್ನೆರಡು ಬಾಣಗಳಿಂದ ಒತ್ತಿದನು, ಮೂವತ್ತಾರು ಬಾಣಗಳಿಂದ ಮುತ್ತಿದನು. ಮೂರು ಬಾಣಗಳಿಂದ ಶತ್ರುವಿನ ದೇಹವನ್ನು ಗೀಚಿದನು. ನಿಂದಿಸುತ್ತಾ ಮತ್ತೆ ಎರಡು ಬಾಣಗಳಿಂದ ಕರ್ಣನ ಕಿವಿಯ ಆಭರಣಗಳು ಕಳಚುವಂತೆ ಹೊಡೆದನು.
ಪದಾರ್ಥ (ಕ.ಗ.ಪ)
ಮುಕ್ಕುರಿಕು-ಮುತ್ತಿಗೆ ಹಾಕು, ಕೀರು-ಗೀಚು
ಮೂಲ ...{Loading}...
ಆರು ಶರದಿಂದೆಚ್ಚು ಮಗುಳೀ
ರಾರುಬಾಣದಲೌಕಿ ಮೂವ
ತ್ತಾರು ಮಾರ್ಗಣದಿಂದ ಮುಕ್ಕುರಿಕಿದನು ರಿಪುಭಟನ
ಮೂರುಬಾಣದಲರಿಯ ದೇಹವ
ಕೀರಿದನು ಮತ್ತೆರಡುಶರದಲಿ
ಜಾರಲೆಚ್ಚನು ಜರೆದು ಕರ್ಣನ ಕರ್ಣಕುಂಡಲವ ॥8॥
೦೦೯ ಜೋಡ ಕಡಿದನು ...{Loading}...
ಜೋಡ ಕಡಿದನು ಸೀಸಕವನೀ
ಡಾಡಿದನು ಕೆಲಬಲದ ಕಣೆಗಳ
ನೀಡುಕಾರರನಿಕ್ಕಿದನು ಗರಿಸಹಿತ ಸರಳುಗಿಯೆ
ಹೂಡಿದಂಬಿನ ಹೊದೆಯ ಬಂಡಿಯ
ತೋಡ ಕಡಿದನು ಛತ್ರ ಚಮರದ
ಝಾಡಿಗಳ ತರಿದೊಟ್ಟಿದನು ಕಲಿಪಾರ್ಥ ನಿಮಿಷದಲಿ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನು ನಿಮಿಷ ಮಾತ್ರದಲ್ಲಿ ಕರ್ಣನ ಕವಚವನ್ನು ಕತ್ತರಿಸಿದನು. ತಲೆಯ ಶೀರ್ಷಕವನ್ನು ಕಿತ್ತು ಹಾಕಿದನು. ಅವನ ಅಕ್ಕಪಕ್ಕದಲ್ಲಿದ್ದು ಕರ್ಣನಿಗೆ ಬಾಣಗಳನ್ನು ನೀಡುತ್ತಿದ್ದವರಿಗೆ ಗರಿ ಸಮೇತವಾಗಿ ಬಾಣಗಳು ಅವರ ದೇಹದಿಂದ ಹೊರಕ್ಕೆ ಬರುವಂತೆ ಹೊಡೆದನು. ಬಾಣಗಳ ಹೊರೆಯನ್ನು ಹೊತ್ತಿದ್ದ ಚಲಿಸುತ್ತಿದ್ದ ಬಂಡಿಯ ಚಕ್ರದ ಬಳೆಗಳನ್ನು ಮುರಿದು ಹಾಕಿದನು. ಛತ್ರ ಚಾಮರಗಳ ಸಮೂಹವನ್ನು ಕತ್ತರಿಸಿ ರಾಶಿ ಹಾಕಿದನು.
ಪದಾರ್ಥ (ಕ.ಗ.ಪ)
ನೀಡುಗಾರ- ಕೊಡುವವನು
ತೋಡು-ಬಳೆ,
ಝಾಡಿ-ಒತ್ತೊತ್ತಾದ ಸಮೂಹ
ಮೂಲ ...{Loading}...
ಜೋಡ ಕಡಿದನು ಸೀಸಕವನೀ
ಡಾಡಿದನು ಕೆಲಬಲದ ಕಣೆಗಳ
ನೀಡುಕಾರರನಿಕ್ಕಿದನು ಗರಿಸಹಿತ ಸರಳುಗಿಯೆ
ಹೂಡಿದಂಬಿನ ಹೊದೆಯ ಬಂಡಿಯ
ತೋಡ ಕಡಿದನು ಛತ್ರ ಚಮರದ
ಝಾಡಿಗಳ ತರಿದೊಟ್ಟಿದನು ಕಲಿಪಾರ್ಥ ನಿಮಿಷದಲಿ ॥9॥
೦೧೦ ಈತನಖ್ಖುಡಿಸುವನೆ ಬಳಕಿನೊ ...{Loading}...
ಈತನಖ್ಖುಡಿಸುವನೆ ಬಳಕಿನೊ
ಳಾ ತತುಕ್ಷಣವರ್ಜುನನ ಚಮ
ರಾತಪತ್ರವ್ಯೂಹವನು ಕೈದುಗಳ ಬಂಡಿಗಳ
ಘಾತಿಸಿದನೆಡಬಲದ ಸುಭಟ
ವ್ರಾತವನು ಕೆದರಿದನು ಸರಳ ವಿ
ಘಾತಿಯಲಿ ಬಲುಘಾಯವಡೆದನು ಪಾರ್ಥನಡಿಗಡಿಗೆ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಕರ್ಣನು ಹೆದರುತ್ತಾನೆಯೇ, ತಕ್ಷಣದಲ್ಲಿಯೇ ಅರ್ಜುನನ ಚಾಮರ, ಬೆಳ್ಗೊಡೆಗಳ ಸಮೂಹವನ್ನು ಆಯುಧಗಳ ಬಂಡಿಗಳನ್ನು ಹೊಡೆದನು. ಅವನ ಎಡಬಲದಲ್ಲಿದ್ದ ವೀರರ ಸಮೂಹವನ್ನು ಚೆಲ್ಲಾಪಿಲ್ಲಿಯಾಗಿ ಓಡಿಸಿದನು. ಅರ್ಜುನನು ಮತ್ತೆ ಮತ್ತೆ ಬಾಣಗಳ ಪೆಟ್ಟಿನಿಂದ ವಿಪರೀತ ಗಾಯವನ್ನು ಪಡೆದನು.
ಪದಾರ್ಥ (ಕ.ಗ.ಪ)
ಅಖ್ಖುಡಿಸು-ಹೆದರು
ಮೂಲ ...{Loading}...
ಈತನಖ್ಖುಡಿಸುವನೆ ಬಳಕಿನೊ
ಳಾ ತತುಕ್ಷಣವರ್ಜುನನ ಚಮ
ರಾತಪತ್ರವ್ಯೂಹವನು ಕೈದುಗಳ ಬಂಡಿಗಳ
ಘಾತಿಸಿದನೆಡಬಲದ ಸುಭಟ
ವ್ರಾತವನು ಕೆದರಿದನು ಸರಳ ವಿ
ಘಾತಿಯಲಿ ಬಲುಘಾಯವಡೆದನು ಪಾರ್ಥನಡಿಗಡಿಗೆ ॥10॥
೦೧೧ ಅರಸ ಹೇಳುವುದೇನು ...{Loading}...
ಅರಸ ಹೇಳುವುದೇನು ರಾಯನ
ಸಿರಿಯ ಪೈಸರವನು ಸುಯೋಧನ
ನರಸುತನದಾಧಾರ ಮೂಲಸ್ತಂಭ ಭಂಜನವ
ನರನ ಜಯವೆಲ್ಲಿಯದು ದೈವವ
ಮರುಳುಮಾಡಿದರವರು ನಿಮ್ಮಯ
ಧರಣಿ ನಿಮಗನುಚಿತವ ನೆನೆದಳು ಹೇಳಲೇನೆಂದ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ದೊರೆಯೇ, ಕೌರವ ರಾಯನ ಲಕ್ಷ್ಮಿ ಹಿಂಜರಿದ ವಿಚಾರವನ್ನು, ದುರ್ಯೋಧನನ ಆರಸುತನಕ್ಕೆ ಮೂಲಾಧಾರವಾಗಿದ್ದ ಕಂಬ ಮುರಿದು ಹೋದುದನ್ನು, ಏನೆಂದು ಹೇಳಲಿ. ಅರ್ಜುನನು ಜಯಗಳಿಸಿದ ಎಂದಲ್ಲ. ಆ ಪಾಂಡವರು ದೇವರಿಗೆ ಮರುಳು ಮಾಡಿ ಹಾಗೆ ಜಯಪಡೆಯುತ್ತಿದ್ದಾರೆ. ನಿಮ್ಮ ಭೂದೇವಿಯೇ ನಿಮಗೆ ದ್ರೋಹವನ್ನು ಯೋಚಿಸಿದಳು” ಎಂದ ಸಂಜಯ.
ಪದಾರ್ಥ (ಕ.ಗ.ಪ)
ಪೈಸರ-ಹಿಂಜರಿಕೆ
ಮೂಲ ...{Loading}...
ಅರಸ ಹೇಳುವುದೇನು ರಾಯನ
ಸಿರಿಯ ಪೈಸರವನು ಸುಯೋಧನ
ನರಸುತನದಾಧಾರ ಮೂಲಸ್ತಂಭ ಭಂಜನವ
ನರನ ಜಯವೆಲ್ಲಿಯದು ದೈವವ
ಮರುಳುಮಾಡಿದರವರು ನಿಮ್ಮಯ
ಧರಣಿ ನಿಮಗನುಚಿತವ ನೆನೆದಳು ಹೇಳಲೇನೆಂದ ॥11॥
೦೧೨ ಧರೆ ನೆನೆದ ...{Loading}...
ಧರೆ ನೆನೆದ ದುಷ್ಕೃತವದೇನೆಂ
ದರಸ ಬೆಸಗೊಂಬೈ ನಿರಂತರ
ಸುರಿವ ರುಧಿರಾಸಾರದಲಿ ಕೆಸರೆದ್ದು ಕಳನೊಳಗೆ
ಹರಿವ ಬಿಂಕದ ರಥದ ಗಾಲಿಯ
ಗರುವತನ ಗಾಳಾಯ್ತಲೇ ಖೊ
ಪ್ಪರಿಸಿ ತಗ್ಗಿತು ತೇರು ತಡೆದುದು ಭಟನ ಸಾಹಸವ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೂದೇವಿಯು ಮಾಡಿದ ಕೆಟ್ಟಕೆಲಸ ಏನು ಎಂದು ಪ್ರಶ್ನಿಸುತ್ತೀಯೇ, ಹೇಳುತ್ತೇನೆ ಕೇಳು. ಒಂದೇ ಸಮನಾಗಿ ಸುರಿಯುತ್ತಿದ್ದ ರಕ್ತದ ಜಡಿಮಳೆಯಲ್ಲಿ ನೆನೆದು ರಣರಂಗವೆಲ್ಲಾ ಕೆಸರಾಗಿತ್ತು. ಅದರಲ್ಲಿ ಚಲಿಸಿದ ರಥದ ಗಾಂಭೀರ್ಯ - ಶ್ರೇಷ್ಠತೆಗಳೆಲ್ಲಾ ಹಾಳಾಗಿ, ರಥ ತಗ್ಗಿ ಕೆಸರಲ್ಲಿ ಸಿಕ್ಕಿಕೊಂಡು ಒಲೆದಾಡುತ್ತಾ; ಕರ್ಣನ ಸಾಹಸಕ್ಕೆ ತಡೆಯೊಡ್ಡಿತು.
ಪದಾರ್ಥ (ಕ.ಗ.ಪ)
ಆಸಾರ-ಜಡಿಮಳೆ, ಗಾಳು-ಕೀಳು, ಖೊಪ್ಪರಿಸು-ಒಲೆದಾಡು
ಮೂಲ ...{Loading}...
ಧರೆ ನೆನೆದ ದುಷ್ಕೃತವದೇನೆಂ
ದರಸ ಬೆಸಗೊಂಬೈ ನಿರಂತರ
ಸುರಿವ ರುಧಿರಾಸಾರದಲಿ ಕೆಸರೆದ್ದು ಕಳನೊಳಗೆ
ಹರಿವ ಬಿಂಕದ ರಥದ ಗಾಲಿಯ
ಗರುವತನ ಗಾಳಾಯ್ತಲೇ ಖೊ
ಪ್ಪರಿಸಿ ತಗ್ಗಿತು ತೇರು ತಡೆದುದು ಭಟನ ಸಾಹಸವ ॥12॥
೦೧೩ ಗಾಲಿಯದ್ದವು ಕೂಡೆ ...{Loading}...
ಗಾಲಿಯದ್ದವು ಕೂಡೆ ಯಂತ್ರದ
ಕೀಲುಗಳು ಕಳಚಿದವು ಹಯತತಿ
ತೂಳಿ ಸತ್ವದಲೌಕಿ ಸೆಳೆದವು ಕುಸಿದು ನಿಜಮುಖವ
ಮೇಲು ಮಿಡುಕದು ತೇರು ಕುರುಬಲ
ಜಾಲ ಜರಿದುದು ವೈರಿ ಬಲದಲಿ
ಸೂಳವಿಸಿದರು ಭುಜವನೊದರಿತು ಬೆರಳ ಬಾಯ್ಗಳಲಿ ॥13॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಥದ ಚಕ್ರಗಳು ಕೆಸರಿನಲ್ಲಿ ಕುಸಿದು ಸಿಕ್ಕಿಕೊಂಡವು. ಅದರ ಚಕ್ರದ ಕೀಲುಗಳು ಕಳಚಿ ಬಿದ್ದವು. ಕುದುರೆಗಳು ಮುಖವನ್ನು ತಗ್ಗಿಸಿ, ತಮ್ಮ ಶಕ್ತಿಯನ್ನೆಲ್ಲಾ ವಿನಿಯೋಗಿಸಿ ರಥವನ್ನು ಮುಂದಕ್ಕೆ ಎಳೆಯಲು ಯತ್ನಿಸಿದವು. ರಥವು ಮೇಲಕ್ಕೆ ಅಲ್ಲಾಡಲಿಲ್ಲ. ಕೌರವನ ಸೈನ್ಯ ಅದನ್ನು ನೋಡಿ ಹಿಂಜರಿಯಿತು. ಶತ್ರು ಸೈನ್ಯದವರು ಬಾಯಲ್ಲಿ ಬೆರಳಿಟ್ಟು ಭುಜವನ್ನು ಅಲುಗಾಡಿಸುತ್ತ ಗಟ್ಟಿಯಾಗಿ ಕೂಗಿದರು.
ಪದಾರ್ಥ (ಕ.ಗ.ಪ)
ಸೂಳವಿಸು-ಗಟ್ಟಿಯಾಗಿ ಕೂಗು
ಮೂಲ ...{Loading}...
ಗಾಲಿಯದ್ದವು ಕೂಡೆ ಯಂತ್ರದ
ಕೀಲುಗಳು ಕಳಚಿದವು ಹಯತತಿ
ತೂಳಿ ಸತ್ವದಲೌಕಿ ಸೆಳೆದವು ಕುಸಿದು ನಿಜಮುಖವ
ಮೇಲು ಮಿಡುಕದು ತೇರು ಕುರುಬಲ
ಜಾಲ ಜರಿದುದು ವೈರಿ ಬಲದಲಿ
ಸೂಳವಿಸಿದರು ಭುಜವನೊದರಿತು ಬೆರಳ ಬಾಯ್ಗಳಲಿ ॥13॥
೦೧೪ ಮೂಗಿನಲಿ ಬೆರಳಿಟ್ಟು ...{Loading}...
ಮೂಗಿನಲಿ ಬೆರಳಿಟ್ಟು ಮಕುಟವ
ತೂಗಿ ತೊನೆದನು ಪೂತು ಮಝ ನಿ
ರ್ಭಾಗಧೇಯನು ರಾಯನಕಟಾ ಶಿವ ಮಹಾದೇವ
ಈಗಳಿದು ತಾನೇನು ವಿಧಿ ಬರೆ
ದೋಗಟೆಯೊ ಕುರುವಂಶ ವಜ್ರದ
ಬೇಗಡೆಯೊ ಮಾಮಾ ಎನುತ ಮರುಗಿದನು ಕಲಿ ಕರ್ಣ ॥14॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅದನ್ನು ನೋಡಿದ ಕರ್ಣನು, ಆಶ್ಚರ್ಯದಿಂದ ತನ್ನ ಮೂಗಿನ ಮೇಲೆ ಬೆರಳಿಟ್ಟು ತಲೆಯನ್ನು ತೂಗಾಡಿಸಿದನು. ‘ಈ ಕೌರವನು ಭಾಗ್ಯವನ್ನು ಕಳೆದುಕೊಂಡವನಾಗಿದ್ದಾನೆ. ಅಯ್ಯೋ ಶಿವನೇ. ಈಗ ಇದು ಆದದ್ದು ಏನು? ಬ್ರಹ್ಮನು ಬರೆದ ಒಗಟೋ ಅಥವಾ ಕೌರವನ ವಂಶವೆಂಬ ವಜ್ರದಲ್ಲಿ ಉಂಟಾದ ರಂಧ್ರವೋ ಅಯ್ಯೋ ಎನ್ನುತ್ತ ಮರುಗಿದನು.
ಪದಾರ್ಥ (ಕ.ಗ.ಪ)
ಬೇಗಡೆ-ರಂಧ್ರ, ಬಿರುಕು
ಓಗಟೆ - ಒಗಟು
ಮೂಲ ...{Loading}...
ಮೂಗಿನಲಿ ಬೆರಳಿಟ್ಟು ಮಕುಟವ
ತೂಗಿ ತೊನೆದನು ಪೂತು ಮಝ ನಿ
ರ್ಭಾಗಧೇಯನು ರಾಯನಕಟಾ ಶಿವ ಮಹಾದೇವ
ಈಗಳಿದು ತಾನೇನು ವಿಧಿ ಬರೆ
ದೋಗಟೆಯೊ ಕುರುವಂಶ ವಜ್ರದ
ಬೇಗಡೆಯೊ ಮಾಮಾ ಎನುತ ಮರುಗಿದನು ಕಲಿ ಕರ್ಣ ॥14॥
೦೧೫ ಶಿವನ ಬಲುಹುಣ್ಟೆಮ್ಬೆನೇ ...{Loading}...
ಶಿವನ ಬಲುಹುಂಟೆಂಬೆನೇ ಶಿವ
ನವರ ಕಡೆ ಹರಿಯೆಂಬೆನೇ ಪಾಂ
ಡವರ ಬಂಡಿಯ ಬೋವನಿಂದ್ರಾದ್ಯರು ಸಹಾಯಿಗಳು
ಅವರು ಸಾಕ್ಷಾತರ್ಜುನರು ನ
ಮ್ಮವನಿ ನಮಗುಂಟೆಂಬೆನೇ ಕೌ
ರವನ ಪುಣ್ಯವನರಿಯೆನಿದು ಹದನೆಂದನಾ ಕರ್ಣ ॥15॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ನಮಗೆ ಶಿವನ ಶಕ್ತಿಯೇ ಇದು ಎಂದು ಹೇಳೋಣವೆಂದರೆ, ಪಾಂಡವರ ಕಡೆ ಶಿವನೇ ಸೇರಿದ್ದಾನೆ. ಕೃಷ್ಣ ಎಂದು ಹೇಳಿದರೆ ಅವರ ಕಡೆಯ ಬಂಡಿ ಹೊಡೆಯುವ ಸೂತನಾಗಿದ್ದಾನೆ. ಇಂದ್ರ ಮೊದಲಾದವರು ಅರ್ಜುನನಿಗೆ ನೇರವಾಗಿ ಸಹಾಯಕರಾಗಿದ್ದಾರೆ. ನಮ್ಮ ಭೂಮಿ ನಮಗೆ ಇದ್ದೇ ಇದೆಯಲ್ಲಾ ಎನ್ನೋಣವೆಂದರೆ, ಕೌರವನ ಪುಣ್ಯ ಎಂತಹುದೋ ತಿಳಿದಿಲ್ಲ, ಈ ರೀತಿ ಆಯಿತು’ ಎಂದು ಚಿಂತಿಸಿದನು ಕರ್ಣ.
ಪದಾರ್ಥ (ಕ.ಗ.ಪ)
ಸಾಕ್ಷಾತರ್ಜುನರು = ನೇರವಾಗಿ ಅರ್ಜುನನನಿಗೆ ಸಂಬಂಧಿಸಿದವರು.
ಮೂಲ ...{Loading}...
ಶಿವನ ಬಲುಹುಂಟೆಂಬೆನೇ ಶಿವ
ನವರ ಕಡೆ ಹರಿಯೆಂಬೆನೇ ಪಾಂ
ಡವರ ಬಂಡಿಯ ಬೋವನಿಂದ್ರಾದ್ಯರು ಸಹಾಯಿಗಳು
ಅವರು ಸಾಕ್ಷಾತರ್ಜುನರು ನ
ಮ್ಮವನಿ ನಮಗುಂಟೆಂಬೆನೇ ಕೌ
ರವನ ಪುಣ್ಯವನರಿಯೆನಿದು ಹದನೆಂದನಾ ಕರ್ಣ ॥15॥
೦೧೬ ಇಳುಹಿದನು ರಥದೊಳಗೆ ...{Loading}...
ಇಳುಹಿದನು ರಥದೊಳಗೆ ಚಾಪವ
ನಳವಡಿಸಿದನು ಸೆರಗನಲ್ಲಿಂ
ದಿಳಿದು ಗಾಲಿಯನಲುಗಿ ಪಾರ್ಥನ ನೋಡಿ ನಸುನಗುತ
ಎಲೆ ಧನಂಜಯ ಸೈರಿಸುವುದರೆ
ಗಳಿಗೆಯನು ರಥವೆತ್ತಿ ನಿನಗಾ
ನಳವಿಗೊಡುವೆನು ತನ್ನ ಪರಿಯನು ಬಳಿಕ ನೋಡೆಂದ ॥16॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕರ್ಣನು ರಥದ ಒಳಗೆ ತನ್ನ ಬಿಲ್ಲನ್ನು ಇಟ್ಟು, ಸೆರಗನ್ನು ಸರಿಪಡಿಸಿಕೊಂಡು, ರಥದಿಂದ ಇಳಿದು ಚಕ್ರವನ್ನು ಅಲುಗಾಡಿಸಿ ನೋಡಿ, ಅರ್ಜುನನ ಕಡೆಗೆ ನೋಡುತ್ತಾ ನಸುನಗುತ್ತಾ ‘ಎಲೈ ಅರ್ಜುನ, ಸ್ವಲ್ಪ ಸುಮ್ಮನಿರು. ಅರ್ಧ ಘಳಿಗೆಯಲ್ಲಿ ರಥವನ್ನು ಎತ್ತಿ, ನಿನಗೆ ಎದುರಾಗಿ ಸಾಹಸವನ್ನು ತೋರಿಸುತ್ತೇನೆ. ನನ್ನ ಶೌರ್ಯದ ರೀತಿಯನ್ನು ಆಮೇಲೆ ನೋಡುವೆಯಂತೆ’ ಎಂದನು.
ಮೂಲ ...{Loading}...
ಇಳುಹಿದನು ರಥದೊಳಗೆ ಚಾಪವ
ನಳವಡಿಸಿದನು ಸೆರಗನಲ್ಲಿಂ
ದಿಳಿದು ಗಾಲಿಯನಲುಗಿ ಪಾರ್ಥನ ನೋಡಿ ನಸುನಗುತ
ಎಲೆ ಧನಂಜಯ ಸೈರಿಸುವುದರೆ
ಗಳಿಗೆಯನು ರಥವೆತ್ತಿ ನಿನಗಾ
ನಳವಿಗೊಡುವೆನು ತನ್ನ ಪರಿಯನು ಬಳಿಕ ನೋಡೆಂದ ॥16॥
೦೧೭ ರೂಡಿಸಿದ ಭಟ ...{Loading}...
ರೂಡಿಸಿದ ಭಟ ನೀನು ಪಂಥದ
ಪಾಡುಗಳ ಬಲ್ಲವನು ಶಾಸ್ತ್ರವ
ಖೋಡಿಗಳೆವವನಲ್ಲ ಲೌಕಿಕ ವೈದಿಕ ಸ್ಥಿತಿಯ
ನಾಡೆ ಬಲ್ಲಿರಿ ಶಸ್ತ್ರಹೀನರ
ಕೂಡೆ ವಾಹನಹೀನರಲಿ ಕೈ
ಮಾಡಲನುಚಿತವೆಂಬ ಮಾರ್ಗವನೆಂದನಾ ಕರ್ಣ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ’ ನೀನು ಪ್ರಸಿದ್ಧನಾದ ಯೋಧ. ಯುದ್ಧದ ನೀತಿಗಳನ್ನು ತಿಳಿದವನು, ಶಾಸ್ತ್ರವನ್ನು ತಿರಸ್ಕರಿಸುವವನಲ್ಲ. ಲೌಕಿಕ ಯಾವುದು ವೈದಿಕ ಸಮ್ಮತ ಯಾವುದು ಎಂಬುದನ್ನು ಚೆನ್ನಾಗಿ ತಿಳಿದಿರುವವನು’ ಶಸ್ತ್ರಹೀನರಾಗಿರುವವರ ಮೇಲಾಗಲಿ, ವಾಹನ ಇಲ್ಲದವರ ಮೇಲಾಗಲಿ ಕೈ ಮಾಡುವುದು ಅನುಚಿತ ಎಂಬ ಮಾರ್ಗವನ್ನು ತಿಳಿದವನು’ ಎಂದನು ಕರ್ಣ.
ಮೂಲ ...{Loading}...
ರೂಡಿಸಿದ ಭಟ ನೀನು ಪಂಥದ
ಪಾಡುಗಳ ಬಲ್ಲವನು ಶಾಸ್ತ್ರವ
ಖೋಡಿಗಳೆವವನಲ್ಲ ಲೌಕಿಕ ವೈದಿಕ ಸ್ಥಿತಿಯ
ನಾಡೆ ಬಲ್ಲಿರಿ ಶಸ್ತ್ರಹೀನರ
ಕೂಡೆ ವಾಹನಹೀನರಲಿ ಕೈ
ಮಾಡಲನುಚಿತವೆಂಬ ಮಾರ್ಗವನೆಂದನಾ ಕರ್ಣ ॥17॥
೦೧೮ ಎನುತ ಗಾಲಿಯನಲುಗಿ ...{Loading}...
ಎನುತ ಗಾಲಿಯನಲುಗಿ ಕೀಲ
ಚ್ಚಿನಲಿ ಮುಂಗೈಗೊಟ್ಟು ಮೊಳಕಾ
ಲಿನಲಿ ಧರಣಿಯನೌಕಿ ತಗ್ಗಿದ ರಥದ ನೆಗಹುತಿರೆ
ದನುಜರಿಪು ಚಮ್ಮಟಿಗೆಯಲಿ ಫಲು
ಗುಣನ ತಿವಿದನು ನೋಡು ರಾಧಾ
ತನುಜನಿರವನು ಬೇಗಮಾಡೆಂದರ್ಜುನನ ಜರೆದ ॥18॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಂದು ಹೇಳುತ್ತಾ, ಕರ್ಣನು ರಥದ ಚಕ್ರವನ್ನು ಅಲುಗಾಡಿಸುತ್ತಾ ಅದರ ಕೀಲು ಅಚ್ಚುಗಳನ್ನು ಮುಂಗೈಯಿಂದ ಹಿಡಿದು, ಭೂಮಿಯ ಮೇಲೆ ಮೊಳಕಾಲನ್ನು ಊರಿ. ಕೆಸರಿನ ತಗ್ಗಿನಲ್ಲಿ ಸಿಕ್ಕಿದ್ದ ರಥವನ್ನು ಎತ್ತಲು ಪ್ರಾರಂಭಿಸಿದನು . ಆಗ ಕೃಷ್ಣನು ಚಾವಟಿಯಿಂದ ಅರ್ಜುನನನ್ನು ತಿವಿದು, ‘ನೋಡು ಕರ್ಣನು ಇರುವ ಸ್ಥಿತಿಯನ್ನು’ ಬೇಗ ಮಾಡಬೇಕಾದುದನ್ನು ಮಾಡು’ ಎಂದು ಬಲವಾಗಿ ಹೇಳಿದನು.
ಮೂಲ ...{Loading}...
ಎನುತ ಗಾಲಿಯನಲುಗಿ ಕೀಲ
ಚ್ಚಿನಲಿ ಮುಂಗೈಗೊಟ್ಟು ಮೊಳಕಾ
ಲಿನಲಿ ಧರಣಿಯನೌಕಿ ತಗ್ಗಿದ ರಥದ ನೆಗಹುತಿರೆ
ದನುಜರಿಪು ಚಮ್ಮಟಿಗೆಯಲಿ ಫಲು
ಗುಣನ ತಿವಿದನು ನೋಡು ರಾಧಾ
ತನುಜನಿರವನು ಬೇಗಮಾಡೆಂದರ್ಜುನನ ಜರೆದ ॥18॥
೦೧೯ ಎಸು ಮರುಳೆ ...{Loading}...
ಎಸು ಮರುಳೆ ಗಾಂಡೀವಿಯಾಪ
ತ್ತೆಸಗಿದಾಗಳೆ ಹಗೆಯ ಗೆಲುವುದು
ವಸುಮತೀಶರ ನೀತಿ ತೊಡು ತೊಡು ದಿವ್ಯಮಾರ್ಗಣವ
ವಿಷಮವೀರನು ರಥವ ಮೇಳಾ
ಪಿಸದ ಮುನ್ನವೆ ಹರಿವ ನೆನೆ ಸೈ
ರಿಸಿದ ಬಳಿಕೀ ಕರ್ಣ ಕೈಕೊಂಬನೆ ತ್ರಿಯಂಬಕನ ॥19॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಹುಚ್ಚು ಅರ್ಜುನನೇ ಬಾಣ ಪ್ರಯೋಗಿಸು, ಶತ್ರುವಿಗೆ ಅಪಾಯ ಒದಗಿದಾಗಲೆ ಗೆಲ್ಲುವುದು ರಾಜರ ನೀತಿ, ಬೇಗ ತೊಡು ದಿವ್ಯವಾದ ಬಾಣವನ್ನು. ಅಸಾಮಾನ್ಯವಾದ ಕರ್ಣನು ರಥವನ್ನು ಮೇಲೆ ಎತ್ತುವ ಮೊದಲೇ, ಅವನನ್ನು ನಾಶ ಮಾಡುವ ಬಗೆಯನ್ನು ನೆನಪಿಸಿಕೋ, ಈಗ ಏನಾದರೂ ನೀನು ಸುಮ್ಮನಿದ್ದರೆ, ಆ ಮೇಲೆ ಈ ಕರ್ಣನು ಮುಕ್ಕಣ್ಣನಾದ ಶಿವನನ್ನೂ ಲೆಕ್ಕಿಸುವುದಿಲ್ಲ’ ಎಂದನು ಕೃಷ್ಣ.
ಪದಾರ್ಥ (ಕ.ಗ.ಪ)
ಹರಿವ- ಹರಿಬ
ಮೂಲ ...{Loading}...
ಎಸು ಮರುಳೆ ಗಾಂಡೀವಿಯಾಪ
ತ್ತೆಸಗಿದಾಗಳೆ ಹಗೆಯ ಗೆಲುವುದು
ವಸುಮತೀಶರ ನೀತಿ ತೊಡು ತೊಡು ದಿವ್ಯಮಾರ್ಗಣವ
ವಿಷಮವೀರನು ರಥವ ಮೇಳಾ
ಪಿಸದ ಮುನ್ನವೆ ಹರಿವ ನೆನೆ ಸೈ
ರಿಸಿದ ಬಳಿಕೀ ಕರ್ಣ ಕೈಕೊಂಬನೆ ತ್ರಿಯಂಬಕನ ॥19॥
೦೨೦ ಏನನೆಮ್ಬೆನು ಜೀಯ ...{Loading}...
ಏನನೆಂಬೆನು ಜೀಯ ಕರ್ಣಂ
ಗೇನಹನೊ ಫಲುಗುಣನು ಬಳಿಕಾ
ದಾನವಾರಿಯ ನುಡಿಯ ಕೇಳಿದು ಕೇಳಿದಾಕ್ಷಣಕೆ
ಗ್ಲಾನಿಯಲಿ ಮುಳುಗಿದನು ಮನದಭಿ
ಮಾನ ಸರ್ಪನ ಕೆಡಹಿ ಧೈರ್ಯನಿ
ಧಾನವನು ಕೈಸೂರೆಗೊಂಡುದು ಶೋಕವರ್ಜುನನ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಏನೆಂದು ಹೇಳಲಿ ದೊರೆಯೆ, ಕರ್ಣನಿಗೆ ಯಾವ ರೀತಿ ಸಂಬಂಧವೋ ಅರ್ಜುನನಿಗೆ, ಕೃಷ್ಣನ ಮಾತುಗಳನ್ನು ಕೇಳಿದ ತಕ್ಷಣ ಅವನು ಚಿಂತೆಯಲ್ಲಿ ಮುಳುಗಿದನು. ಅವನ ಮನಸ್ಸಿನಲ್ಲಿದ್ದ ಅಭಿಮಾನದ ಸರ್ಪವನ್ನು ಕೆಳಕ್ಕೆ ತಳ್ಳಿ, ಧೈರ್ಯವನ್ನು ಕೊಳ್ಳೆ ಹೊಡೆದು, ದುಃಖವು ಆವರಿಸಿತು.
ಮೂಲ ...{Loading}...
ಏನನೆಂಬೆನು ಜೀಯ ಕರ್ಣಂ
ಗೇನಹನೊ ಫಲುಗುಣನು ಬಳಿಕಾ
ದಾನವಾರಿಯ ನುಡಿಯ ಕೇಳಿದು ಕೇಳಿದಾಕ್ಷಣಕೆ
ಗ್ಲಾನಿಯಲಿ ಮುಳುಗಿದನು ಮನದಭಿ
ಮಾನ ಸರ್ಪನ ಕೆಡಹಿ ಧೈರ್ಯನಿ
ಧಾನವನು ಕೈಸೂರೆಗೊಂಡುದು ಶೋಕವರ್ಜುನನ ॥20॥
೦೨೧ ಮುಕ್ಕಿದನು ಮಹಿಮೆಯನು ...{Loading}...
ಮುಕ್ಕಿದನು ಮಹಿಮೆಯನು ಕಂಗಳು
ಮುಕ್ಕುಳಿಸಿದವು ನೀರನಹಿತನೊ
ಳುಕ್ಕುವನುರಾಗದಲಿ ಕೊಂಡನು ಬಳಿಕ ವೀಳೆಯವ
ಸಿಕ್ಕಿದನು ಕರುಣಾಲತಾಂಗಿಯ
ತೆಕ್ಕೆಯಲಿ ನಾನೇನ ಹೇಳುವೆ
ನೊಕ್ಕಲಿಕ್ಕಿತು ಶೋಕವರ್ಜುನನಂತರಂಗದಲಿ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನು ತನ್ನ ಮಹಿಮಾಶಕ್ತಿಗಳನ್ನು ಮರೆತುಬಿಟ್ಟನು. ಕಣ್ಣುಗಳಿಂದ ನೀರು ಉಕ್ಕಿದವು. ಶತ್ರುವಿನ ಬಗೆಗೆ ಉಕ್ಕುತ್ತಿರುವ ಪ್ರೀತಿಯ ವೀಳೆಯವನ್ನು ಸ್ವೀಕರಿಸಿದನು. ಕರುಣೆ ಎಂಬ ಹೆಣ್ಣಿನ ಆಲಿಂಗನದಲ್ಲಿ ಸಿಕ್ಕಿ ಬಿದ್ದನು. ನಾನು ಏನನ್ನು ಹೇಳಲಿ? ಅರ್ಜುನನ ಮನಸ್ಸಿನಲ್ಲಿ ದುಃಖ ಮನೆ ಮಾಡಿತು.
ಮೂಲ ...{Loading}...
ಮುಕ್ಕಿದನು ಮಹಿಮೆಯನು ಕಂಗಳು
ಮುಕ್ಕುಳಿಸಿದವು ನೀರನಹಿತನೊ
ಳುಕ್ಕುವನುರಾಗದಲಿ ಕೊಂಡನು ಬಳಿಕ ವೀಳೆಯವ
ಸಿಕ್ಕಿದನು ಕರುಣಾಲತಾಂಗಿಯ
ತೆಕ್ಕೆಯಲಿ ನಾನೇನ ಹೇಳುವೆ
ನೊಕ್ಕಲಿಕ್ಕಿತು ಶೋಕವರ್ಜುನನಂತರಂಗದಲಿ ॥21॥
೦೨೨ ತೇರಿನಲಿ ಚಾಚಿದನು ...{Loading}...
ತೇರಿನಲಿ ಚಾಚಿದನು ಮೆಲ್ಲನೆ
ಭಾರಿ ಧನುವನು ಕಯ್ಯ ಕಣೆಗಳ
ನೋರೆಯಲಿ ಸೈತಿರಿಸೆ ಕಂಡನು ಮತ್ತೆ ಮುರವೈರಿ
ಹಾರವೇಕೈ ಕಂಗಳಲಿ ಕ
ಸ್ತೂರಿಯೇಕೈ ಕದಪಿನಲಿ ಶೃಂ
ಗಾರವಿದು ವಿಪತರೀತವೇನೈ ಪಾರ್ಥ ಹೇಳೆಂದ ॥22॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನು ರಥದಲ್ಲಿ ತನ್ನ ಭಾರಿ ಬಿಲ್ಲನ್ನು ಮೆಲ್ಲಗೆ ಇಳಿಸಿದನು. ಕೈಲಿದ್ದ ಬಾಣಗಳನ್ನು ಪಕ್ಕಕ್ಕೆ ಇಟ್ಟನು. ಅದನ್ನು ನೋಡಿ ಕೃಷ್ಣನು. ‘ಅರ್ಜುನ, ಇದು ಏನು, ನಿನ್ನ ಕಣ್ಣುಗಳಲ್ಲಿ ಏನೋ ನಿರೀಕ್ಷೆ ಕಾಣಿಸುತ್ತಿದೆ. ಕುತ್ತಿಗೆಯಲ್ಲಿರಬೇಕಾದ ಹಾರ ಕಣ್ಣಿನಲ್ಲಿರುವಂತೆ, ಹಣೆಯಲ್ಲಿರಬೇಕಾದ ಕಸ್ತೂರಿ ಕೆನ್ನೆಯ ಮೇಲೆ ಕಾಣುವಂತೆ, ವಿಪರೀತ ಶೃಂಗಾರವನ್ನು ಎಂದರೆ ಅಲ್ಲದ ಶೃಂಗಾರ ಮಾಡಿಕೊಂಡಿರುವವನಂತೆ ಕಾಣಿಸುತ್ತಿದ್ದೀಯೆ’ ಎಂದು ಪ್ರಶ್ನಿಸಿದ.
ಮೂಲ ...{Loading}...
ತೇರಿನಲಿ ಚಾಚಿದನು ಮೆಲ್ಲನೆ
ಭಾರಿ ಧನುವನು ಕಯ್ಯ ಕಣೆಗಳ
ನೋರೆಯಲಿ ಸೈತಿರಿಸೆ ಕಂಡನು ಮತ್ತೆ ಮುರವೈರಿ
ಹಾರವೇಕೈ ಕಂಗಳಲಿ ಕ
ಸ್ತೂರಿಯೇಕೈ ಕದಪಿನಲಿ ಶೃಂ
ಗಾರವಿದು ವಿಪತರೀತವೇನೈ ಪಾರ್ಥ ಹೇಳೆಂದ ॥22॥
೦೨೩ ದೇವ ಹಗೆಯಾಗಿರನು ...{Loading}...
ದೇವ ಹಗೆಯಾಗಿರನು ಕರ್ಣನಿ
ದಾವ ಹದನೆಂದರಿಯೆ ಮನದಲಿ
ನೋವು ಮಿಗುವುದು ಕೈಗಳೇಳವು ತುಡುಕುವಡೆ ಧನುವ
ಜೀವವೀತನಮೇಲೆ ಕರಗುವು
ದಾವ ಸಖನೋ ಶತ್ರುವೆಂಬೀ
ಭಾವನೆಯ ಬಗೆ ಬೀಳುಕೊಂಡುದು ಕರ್ಣನಾರೆಂದ ॥23॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನು ‘ದೇವ ಈ ಕರ್ಣನು ಶತ್ರುವಾಗಿರಲಾರ. ಇದು ಏನು ಎಂದು ತಿಳಿಯುತ್ತಿಲ್ಲ. ಮನಸ್ಸಿನಲ್ಲಿ ನೋವು ಹೆಚ್ಚಾಗುತ್ತಿದೆ. ಬಿಲ್ಲನ್ನು ಹಿಡಿಯಲು ಕೈಗಳು ನಿರಾಕರಿಸುತ್ತಿವೆ. ನನ್ನ ಜೀವ ಇವನನ್ನು ಕಂಡು ಕರಗಿಹೋಗುತ್ತಿದೆ. ಇವನು ಯಾವ ಸ್ನೇಹಿತನೋ, ಶತ್ರು ಎಂಬ ಭಾವನೆಯೇ ನನ್ನ ಮನಸ್ಸಿನಲ್ಲಿಂದ ದೂರವಾಗಿದೆ, ಕರ್ಣನು ಯಾರು’ ಎಂದು ಕೇಳಿದ.
ಮೂಲ ...{Loading}...
ದೇವ ಹಗೆಯಾಗಿರನು ಕರ್ಣನಿ
ದಾವ ಹದನೆಂದರಿಯೆ ಮನದಲಿ
ನೋವು ಮಿಗುವುದು ಕೈಗಳೇಳವು ತುಡುಕುವಡೆ ಧನುವ
ಜೀವವೀತನಮೇಲೆ ಕರಗುವು
ದಾವ ಸಖನೋ ಶತ್ರುವೆಂಬೀ
ಭಾವನೆಯ ಬಗೆ ಬೀಳುಕೊಂಡುದು ಕರ್ಣನಾರೆಂದ ॥23॥
೦೨೪ ಕೌರವನ ಮೇಲಿಲ್ಲದಗ್ಗದ ...{Loading}...
ಕೌರವನ ಮೇಲಿಲ್ಲದಗ್ಗದ
ವೈರವೀತನಮೇಲೆ ನಮಗಪ
ಕಾರಿಯೀತನು ಮರಣದನುಸಂಧಾನವಿನ್ನೆಬರ
ವೈರವುಪಶಮಿಸಿತು ಯುಧಿಷ್ಠಿರ
ವೀರನಿಂದಿಮ್ಮಡಿಯ ನೇಹದ
ಭಾರವಣೆ ತೋರುವುದಿದೇನೈ ಕರ್ಣನಾರೆಂದ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ದುರ್ಯೋಧನನ ಮೇಲಿರುವುದಕ್ಕಿಂತ ಹೆಚ್ಚು ವೈರ ಈ ಕರ್ಣನ ಮೇಲೆ. ಇವನು ನಮಗೆ ಅಪಕಾರ ಮಾಡಿದವನು. ಇಷ್ಟು ಕಾಲ ಇವನ ಸಾವಿನ ಬಗೆಗೆ ಯೋಚಿಸುತ್ತಿದ್ದೆ. ಈಗ ವೈರ ಶಾಂತವಾಯಿತು. ಧರ್ಮರಾಯನಿಗಿಂತ ಎರಡು ಪಟ್ಟು ಹೆಚ್ಚು ಸ್ನೇಹದ ಭಾರ ಇವನ ಮೇಲೆ ತೋರುತ್ತಿದೆ. ಕರ್ಣನು ಯಾರು’ ಎಂದು ಪ್ರಶ್ನಿಸಿದ.
ಮೂಲ ...{Loading}...
ಕೌರವನ ಮೇಲಿಲ್ಲದಗ್ಗದ
ವೈರವೀತನಮೇಲೆ ನಮಗಪ
ಕಾರಿಯೀತನು ಮರಣದನುಸಂಧಾನವಿನ್ನೆಬರ
ವೈರವುಪಶಮಿಸಿತು ಯುಧಿಷ್ಠಿರ
ವೀರನಿಂದಿಮ್ಮಡಿಯ ನೇಹದ
ಭಾರವಣೆ ತೋರುವುದಿದೇನೈ ಕರ್ಣನಾರೆಂದ ॥24॥
೦೨೫ ಆಸುರದ ವ್ಯಾಮೋಹವಿದು ...{Loading}...
ಆಸುರದ ವ್ಯಾಮೋಹವಿದು ಡೊ
ಳ್ಳಾಸವೋ ಕೌರವರ ಥಟ್ಟಿನ
ವೈಸಿಕವೊ ನಿಮ್ಮಡಿಯ ಮಾಯಾಮಯದ ಮಾಲೆಗಳೊ
ವಾಸಿ ಬೀತುದು ಛಲಗಿಲದ ಕಾ
ಳಾಸ ಸೋತುದು ಕರ್ಣನಲಿ ಹಿರಿ
ದಾಸೆಯಾಯಿತು ಕೃಷ್ಣ ಕರುಣಿಸು ಕರ್ಣನಾರೆಂದ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭಯಂಕರವಾದ ಈ ವ್ಯಾಮೋಹ ನನಗೆ ವಂಚನೆ ಮಾಡುತ್ತಿದೆಯೋ. ಕೌರವನ ಸೈನ್ಯದ ಸೋಗು ಹೀಗೆ ಕಾಣುತ್ತಿದೆಯೋ, ಅಥವಾ ನಿನ್ನ ಮಾಯೆಯಿಂದ ಸೃಷ್ಟಿಯಾದ ದೃಶ್ಯಗಳೋ, ಕರ್ಣನ ಮೇಲಿನ ನನ್ನ ಸ್ಪರ್ಧೆ ಹಾಳಾಗಿ ಹೋಯಿತು, ನನಗಿದ್ದ ಛಲಗಿಲದ ಗಾಢತೆ ತಗ್ಗಿತು. ಕರ್ಣನ ಬಗ್ಗೆ ವಿಶೇಷ ಪ್ರೀತಿ ಮೂಡಿತು. ಕೃಷ್ಣ ಕರುಣೆ ತೋರು, ಕರ್ಣನು ಯಾರು ಎಂದು ಪ್ರಶ್ನಿಸಿದ.
ಪದಾರ್ಥ (ಕ.ಗ.ಪ)
ಡೊಳ್ಳಾಸ-ವಂಚನೆ, ವೈಸಿಕ-ಮೋಸ, ಸೋಗು,
ಕಾಳಾಸ-ಗಾಢತೆ
ಆಸುರ-ಭಯಂಕರ,
ವಾಸಿ-ಸ್ಪರ್ಧೆ
ಮೂಲ ...{Loading}...
ಆಸುರದ ವ್ಯಾಮೋಹವಿದು ಡೊ
ಳ್ಳಾಸವೋ ಕೌರವರ ಥಟ್ಟಿನ
ವೈಸಿಕವೊ ನಿಮ್ಮಡಿಯ ಮಾಯಾಮಯದ ಮಾಲೆಗಳೊ
ವಾಸಿ ಬೀತುದು ಛಲಗಿಲದ ಕಾ
ಳಾಸ ಸೋತುದು ಕರ್ಣನಲಿ ಹಿರಿ
ದಾಸೆಯಾಯಿತು ಕೃಷ್ಣ ಕರುಣಿಸು ಕರ್ಣನಾರೆಂದ ॥25॥
೦೨೬ ಕಾಲಯವನನುಪಾಯದಿನ್ದವೆ ...{Loading}...
ಕಾಲಯವನನುಪಾಯದಿಂದವೆ
ಬೀಳಿಸಿದೆ ಮಾಗಧನನಾ ಪರಿ
ಸೀಳಿಸಿದೆ ಭೀಷ್ಮಾದಿಗಳ ಸೋಲಿಸಿದೆ ಸಾಮದಲಿ
ಡಾಳನತಿ ಡೊಂಕಣಿಯ ಠಕ್ಕಿನ
ಠೌಳಿಕಾರನು ನಿನ್ನ ಮಾಯೆಯ
ಹೇಳಲಮ್ಮೆನು ಕೃಷ್ಣ ಕರುಣಿಸು ಕರ್ಣನಾರೆಂದ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಾಲಯವನನನ್ನು ಉಪಾಯದಿಂದಲೇ ಕೊಂದು ಹಾಕಿದೆ, ಮಾಗಧನಾದ ಜರಾಸಂಧನನ್ನು ಆ ರೀತಿ ಸೀಳಿ ಹಾಕಿಸಿದೆ. ಸಾಮೋಪಾಯದಿಂದ ಭೀಷ್ಮ ಮೊದಲಾದವರನ್ನು ಸೋಲಿಸಿದೆ. ಸುಂದರನಾದ ನೀನು ಅತ್ಯಂತ ವಕ್ರ ಮಾರ್ಗದ ಮೋಸಗಾರ. ನಿನ್ನ ಮಾಯೆಯನ್ನು ಬಣ್ಣಿಸಲು ನನಗೆ ಸಾಧ್ಯವಿಲ್ಲ. ಕೃಷ್ಣ ಕರುಣೆ ತೋರು, ಕರ್ಣನು ಯಾರು ಎಂದು ಪ್ರಶ್ನಿಸಿದ.
ಪದಾರ್ಥ (ಕ.ಗ.ಪ)
ಡಾಳ-ಸುಂದರ,
ಡೊಂಕಣಿ-ಈಟಿ?
ಠೌಳಿಕಾರ-ಮೋಸಗಾರ
ಟಿಪ್ಪನೀ (ಕ.ಗ.ಪ)
ಕಾಲಯವನ-ಯಾದವರ ಪುರೋಹಿತನಾದ ಗರ್ಗ ಮಹರ್ಷಿಯ ಮಗ ಸಿಟ್ಟುಮಾಡಿಕೊಂಡು, ತನಗೆ ಯಾದವರನ್ನು ಧ್ವಂಸಮಾಡುವ ಮಗ ಹುಟ್ಟಬೇಕೆಂದು ಶಿವನನ್ನು ಪ್ರಾರ್ಥಿಸಿದ. ಯವನ ರಾಜ ಎಂಬುವವನಿಗೂ ಯಾದವರಿಗೂ ಬಹಳ ಕಾಲದಿಂದ ಮನಸ್ತಾಪ ಇತ್ತು. ಅದನ್ನು ತಿಳಿದಿದ್ದ ಯವನರಾಜ ಗರ್ಗ ಮುನಿಯನ್ನು ಬರಮಾಡಿಕೊಂಡು ತನ್ನ ಬಳಿ ನಿಲ್ಲಿಸಿಕೊಂಡ. ಆನಂತರ ಗರ್ಗ ಮುನಿಗೆ ಒಬ್ಬ ಅಪ್ಸರಸ್ತ್ರೀಯಿಂದ ಹುಟ್ಟಿದ ಮಗನೇ ಕಾಲಯವನ. ಕಾಲಯವನ ಮಹಾಬಲಶಾಲಿಯಾಗಿ ಬೆಳೆದು ದ್ವಾರಕೆಯ ಮೇಲೆ ಆಕ್ರಮಣ ಮಾಡಿದ. ಕೃಷ್ಣನಿಗೂ ಇವನನ್ನು ಸೋಲಿಸಲು ಸಾಧ್ಯವಾಗದೇ ಓಡಿಹೋಗಬೇಕಾಯಿತು. ಕೃಷ್ಣನು ಓಡಿ ಹೋಗಿ ಮುಚುಕುಂದನು ಮಲಗಿದ್ದ ಗವಿಯಲ್ಲಿ ಅಡಗಿಕೊಂಡು ಕಾಲಯವನನೂ ಅದೇ ಗವಿಯನ್ನು ಪ್ರವೇಶಿಸಿ, ಮಲಗಿದ್ದ ಮುಚುಕುಂದನನ್ನೇ ಕೃಷ್ಣನೆಂದು ಭಾವಿಸಿ ಎಡಗಾಲಿನಿಂದ ಅವನನ್ನು ಒದ್ದ. ನಿದ್ರೆಯಿಂದ ಎಚ್ಚತ್ತ ಮುಚುಕುಂದ ಕೋಪದಿಂದ ನೋಡಿದಾಗ ಕಾಲಯವನ ಸುಟ್ಟು ಬೂದಿಯಾದ.
ಮೂಲ ...{Loading}...
ಕಾಲಯವನನುಪಾಯದಿಂದವೆ
ಬೀಳಿಸಿದೆ ಮಾಗಧನನಾ ಪರಿ
ಸೀಳಿಸಿದೆ ಭೀಷ್ಮಾದಿಗಳ ಸೋಲಿಸಿದೆ ಸಾಮದಲಿ
ಡಾಳನತಿ ಡೊಂಕಣಿಯ ಠಕ್ಕಿನ
ಠೌಳಿಕಾರನು ನಿನ್ನ ಮಾಯೆಯ
ಹೇಳಲಮ್ಮೆನು ಕೃಷ್ಣ ಕರುಣಿಸು ಕರ್ಣನಾರೆಂದ ॥26॥
೦೨೭ ಋಷಿಗಳನುಮತದಿನ್ದ ಕುನ್ತಿಯ ...{Loading}...
ಋಷಿಗಳನುಮತದಿಂದ ಕುಂತಿಯ
ಬಸುರಲೇನುದಯಿಸನಲೇ ನೀ
ನಸುರರಿಪು ಬಹು ಕಪಟನಾಟಕ ಸೂತ್ರಧಾರನಲೆ
ವಸುಮತಿಯ ಭಾರವನು ಸಲೆ ಹಿಂ
ಗಿಸುವ ಕೃತ್ಯವು ನಿನ್ನದೆನಗು
ಬ್ಬಸವಿದೇನೆಂದರಿಯೆನಕಟಾ ಕರ್ಣನಾರೆಂದ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಋಷಿಗಳು ಕೊಟ್ಟ ವರದಿಂದ ಕುಂತಿಯ ಗರ್ಭದಲ್ಲಿ ಏನಾದರೂ ಹುಟ್ಟಿದವನೇ ಈ ಕರ್ಣ. ನೀನು ರಾಕ್ಷಸರ ಶತ್ರು, ವಿಪರೀತ ಕಪಟ ನಾಟಕದ ಸೂತ್ರವನ್ನು ಹಿಡಿದವನು. ಭೂಭಾರವನ್ನು ಇಳಿಸುವ ಕೆಲಸ ನಿನ್ನದು. ನನಗೆ ಈ ಸಂಕಟ ಏಕಾಗುತ್ತಿದೆ ತಿಳಿಯುತ್ತಿಲ್ಲ. ಅಯ್ಯೋ ಕರ್ಣನು ಯಾರು’ ಎಂದು ಕೇಳಿದ.
ಮೂಲ ...{Loading}...
ಋಷಿಗಳನುಮತದಿಂದ ಕುಂತಿಯ
ಬಸುರಲೇನುದಯಿಸನಲೇ ನೀ
ನಸುರರಿಪು ಬಹು ಕಪಟನಾಟಕ ಸೂತ್ರಧಾರನಲೆ
ವಸುಮತಿಯ ಭಾರವನು ಸಲೆ ಹಿಂ
ಗಿಸುವ ಕೃತ್ಯವು ನಿನ್ನದೆನಗು
ಬ್ಬಸವಿದೇನೆಂದರಿಯೆನಕಟಾ ಕರ್ಣನಾರೆಂದ ॥27॥
೦೨೮ ಧರೆಯ ಬಿಡುವೆವು ...{Loading}...
ಧರೆಯ ಬಿಡುವೆವು ಕುರುಪತಿಗೆ ನಾ
ವರುವರೊಡವುಟ್ಟಿದರು ವಿಪಿನಾಂ
ತರದೊಳಗೆ ಭಜಿಸುವೆವು ನಿನ್ನನು ಭಾವಶುದ್ಧಿಯಲಿ
ತೆರಳುವೀ ಸಿರಿಗೋಸುಗರ ಸೋ
ದರನ ಕೊಲವೆನೆ ಕೃಷ್ಣ ಕರುಣಿಸು
ಕರುಣಿಸಕಟಾ ಕೃಷ್ಣ ಕರುಣಿಸು ಕರ್ಣನಾರೆಂದ ॥28॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೌರವನಿಗೆ ಈ ರಾಜ್ಯವನ್ನು ಬಿಟ್ಟುಕೊಡುತ್ತೇವೆ. ನಾವು ಆರು ಜನ ಸಹೋದರರು ಕಾಡಿನಲ್ಲಿ ನಿನ್ನನ್ನು ಭಾವ ಶುದ್ಧಿಯಿಂದ ಭಜಿಸುತ್ತೇವೆ. ಚಂಚಲವಾದ ಈ ಲಕ್ಷ್ಮೀಗೋಸ್ಕರ, ಸಹೋದರರನ್ನು ಕೊಲ್ಲಲೇ, ಕೃಷ್ಣ ಕರುಣಿಸು, ಕರುಣಿಸು, ಕರ್ಣನು ಯಾರು ಎಂದು ಮತ್ತೆ ಮತ್ತೆ ಬೇಡಿಕೊಂಡ.
ಮೂಲ ...{Loading}...
ಧರೆಯ ಬಿಡುವೆವು ಕುರುಪತಿಗೆ ನಾ
ವರುವರೊಡವುಟ್ಟಿದರು ವಿಪಿನಾಂ
ತರದೊಳಗೆ ಭಜಿಸುವೆವು ನಿನ್ನನು ಭಾವಶುದ್ಧಿಯಲಿ
ತೆರಳುವೀ ಸಿರಿಗೋಸುಗರ ಸೋ
ದರನ ಕೊಲವೆನೆ ಕೃಷ್ಣ ಕರುಣಿಸು
ಕರುಣಿಸಕಟಾ ಕೃಷ್ಣ ಕರುಣಿಸು ಕರ್ಣನಾರೆಂದ ॥28॥
೦೨೯ ದೂರುವವರಾವಲ್ಲ ಕರುಣವ ...{Loading}...
ದೂರುವವರಾವಲ್ಲ ಕರುಣವ
ತೋರಿ ಬಿನ್ನಹಮಾಡಿದೆನು ಹಗೆ
ಯೇರದಿವನಲಿ ಸೇರುವುದು ಸೋದರದ ಸಂಬಂಧ
ಆರೆನೀತನ ಕೊಲೆಗೆ ಹೃದಯವ
ಸೂರೆಗೊಂಡನು ಕರ್ಣನಕಟಾ
ತೋರಿ ನುಡಿಯಾ ಕೃಷ್ಣ ಕರುಣಿಸು ಕರ್ಣನಾರೆಂದ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ನಾನು ಯಾರನ್ನೂ ದೂರುವುದಿಲ್ಲ. ಕರುಣೆಯನ್ನು ತೋರಿಸು, ಕೇಳಿಕೊಳ್ಳುತ್ತಿದ್ದೇನೆ. ಇವನಲ್ಲಿ ಶತ್ರುತ್ವ ಉಂಟಾಗುತ್ತಿಲ್ಲ. ಸೋದರಿಕೆಯ ಸಂಬಂಧ ಉಂಟಾಗುತ್ತಿದೆ. ಇವನ ಕೊಲೆಗೆ ಮನಸ್ಸು ಬರುತ್ತಿಲ್ಲ. ಈ ಕರ್ಣನು ಹೃದಯವನ್ನು ಸೂರೆಗೊಂಡಿದ್ದಾನೆ. ಅಯ್ಯೋ ಕೃಷ್ಣ ವಿವರಿಸಿ ಹೇಳು, ಕರ್ಣನು ಯಾರು’ ಎಂದು ಬೇಡಿಕೊಂಡ.
ಮೂಲ ...{Loading}...
ದೂರುವವರಾವಲ್ಲ ಕರುಣವ
ತೋರಿ ಬಿನ್ನಹಮಾಡಿದೆನು ಹಗೆ
ಯೇರದಿವನಲಿ ಸೇರುವುದು ಸೋದರದ ಸಂಬಂಧ
ಆರೆನೀತನ ಕೊಲೆಗೆ ಹೃದಯವ
ಸೂರೆಗೊಂಡನು ಕರ್ಣನಕಟಾ
ತೋರಿ ನುಡಿಯಾ ಕೃಷ್ಣ ಕರುಣಿಸು ಕರ್ಣನಾರೆಂದ ॥29॥
೦೩೦ ಅರಸ ಕೇಳೈ ...{Loading}...
ಅರಸ ಕೇಳೈ ಬಳಿಕ ಪಾರ್ಥನ
ಕರುಣರಸದಾಳಾಪ ವಾಗ್ವಿ
ಸ್ತರಕೆ ಮನದಲಿ ಮರುಗಿದನು ಮುರವೈರಿ ನಸುನಗುತ
ಕೆರಳಿದನು ಮಾತಿನಲಿ ಸುಡು ಬಾ
ಹಿರನಲಾ ನೀ ನಿನ್ನ ವಂಶಕೆ
ಸರಿಯೆ ಸೂತನ ಮಗನಿದೇನೆಂದಸುರರಿಪು ಜರೆದ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೊರೆಯೇ ಕೇಳು, ಅರ್ಜುನನ ಕರುಣೆಯನ್ನು ಉಕ್ಕಿಸುವ ಮಾತಿನ ವೈಭವವನ್ನು ಕಂಡು ಕೃಷ್ಣನು ಮನಸ್ಸಿನಲ್ಲೇ ಮರುಗಿದನು. ನಸುನಕ್ಕನು. ಅವನ ಮಾತುಗಳಿಗೆ ಕೋಪಿಸಿದನು. ‘ಸುಡಬೇಕು ನಿನ್ನನ್ನು, ಅಯೋಗ್ಯ ನೀನು. ನಿನ್ನ ವಂಶಕ್ಕೆ ಸೂತಪುತ್ರ ಕರ್ಣನು ಹೇಗೆ ಸಮಾನನಾಗುತ್ತಾನೆ. ಇದೇನು ನಿನ್ನ ನಡವಳಿಕೆ, ಎಂದು ನಿಂದಿಸಿದ.
ಮೂಲ ...{Loading}...
ಅರಸ ಕೇಳೈ ಬಳಿಕ ಪಾರ್ಥನ
ಕರುಣರಸದಾಳಾಪ ವಾಗ್ವಿ
ಸ್ತರಕೆ ಮನದಲಿ ಮರುಗಿದನು ಮುರವೈರಿ ನಸುನಗುತ
ಕೆರಳಿದನು ಮಾತಿನಲಿ ಸುಡು ಬಾ
ಹಿರನಲಾ ನೀ ನಿನ್ನ ವಂಶಕೆ
ಸರಿಯೆ ಸೂತನ ಮಗನಿದೇನೆಂದಸುರರಿಪು ಜರೆದ ॥30॥
೦೩೧ ವಾಸಿಗಾದುದೆ ಜಾತಿಸಙ್ಕರ ...{Loading}...
ವಾಸಿಗಾದುದೆ ಜಾತಿಸಂಕರ
ಬೇಸರಾಯಿತೆ ಧೃತಿಗೆ ಕಲಿತನ
ಕೀಸು ಮೊಲೆಗಳು ಮೂಡಿದವಲಾ ಪಾರ್ಥ ಸಮರದಲಿ
ಹೂಸಕದ ಛಲವೀಯಹಂಕೃತಿ
ಮೀಸಲಳಿದುದೆ ಶಿವಶಿವಾ ನಿ
ರ್ದೋಷದಲಿ ಬಹುದೋಷವಿದು ವಿಪರೀತವಾಯ್ತೆಂದ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೃಷ್ಣನು “ಅರ್ಜುನ, ಈ ಯುದ್ಧದಲ್ಲಿ ‘ನಿನ್ನ ಕರ್ಣನ ಮೇಲಿನ ಸ್ಪರ್ಧೆ ಹಾಳಾಯಿತೆ. ಧೈರ್ಯಕ್ಕೆ ಬೇಸರ ಬಂದಿದೆಯೇ, ಶೌರ್ಯಕ್ಕೆ ಇಷ್ಟೊಂದು ಮೊಲೆಗಳು ಮೂಡಿ ಹೇಡಿತನ ಒದಗಿತೇ, ನಿನ್ನ ಛಲ ಅಹಂಕಾರ ಇವೆಲ್ಲಾ ಆಡಂಬರವಾಗಿ ತನ್ನ ಬೆಲೆಯನ್ನು ಕಳೆದುಕೊಂಡವೇ. ಅಯ್ಯೋ ಶಿವನೆ ಯಾವುದೇ ದೋಷವಿಲ್ಲದ ನಿನ್ನಲ್ಲಿ ಇಷ್ಟೊಂದು ದೋಷ ಉಂಟಾದದ್ದು ಆಶ್ಚರ್ಯಕರ’ ಎಂದನು.
ಮೂಲ ...{Loading}...
ವಾಸಿಗಾದುದೆ ಜಾತಿಸಂಕರ
ಬೇಸರಾಯಿತೆ ಧೃತಿಗೆ ಕಲಿತನ
ಕೀಸು ಮೊಲೆಗಳು ಮೂಡಿದವಲಾ ಪಾರ್ಥ ಸಮರದಲಿ
ಹೂಸಕದ ಛಲವೀಯಹಂಕೃತಿ
ಮೀಸಲಳಿದುದೆ ಶಿವಶಿವಾ ನಿ
ರ್ದೋಷದಲಿ ಬಹುದೋಷವಿದು ವಿಪರೀತವಾಯ್ತೆಂದ ॥31॥
೦೩೨ ಕ್ಷಿತಿಯೊಳೀ ಕ್ಷತ್ರಿಯರ ...{Loading}...
ಕ್ಷಿತಿಯೊಳೀ ಕ್ಷತ್ರಿಯರ ಧರ್ಮ
ಸ್ಥಿತಿಯನರಿಯಾ ಕೃಷ್ಣ ಚಾಪ
ಚ್ಯುತರನಪಗತವಾಹನರ ಪರಿಮುಕ್ತ ಕೇಶಿಗಳ
ಗತಿವಿಹೀನರ ದೈನ್ಯವಾಚಾ
ಯುತರ ತರು ವಲ್ಮೀಕ ಜಲ ಸಂ
ಗತರನಿರಿವುದು ಧರ್ಮವೇ ನಾವರಿಯೆವಿದನೆಂದ ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನು ‘ಭೂಮಿಯ ಮೇಲೆ ಕ್ಷತ್ರಿಯರು ಹೇಗೆ ನಡೆದುಕೊಳ್ಳಬೇಕು ಎಂಬ ಧರ್ಮಸ್ಥಿತಿಯನ್ನು ನೀನು ತಿಳಿದಿಲ್ಲವೇ. ಬಿಲ್ಲು ಬಿಟ್ಟವರನ್ನು, ವಾಹನ ಕಳೆದುಕೊಂಡವರನ್ನು, ತಲೆಗಂಟನ್ನು ಬಿಚ್ಚಿಕೊಂಡವರನ್ನು, ಗತಿ ಇಲ್ಲದವರನ್ನು, ದೀನತೆಯಿಂದ ಮಾತನಾಡುವವರನ್ನು, ಮರ, ಹುತ್ತ, ನೀರು - ಇವುಗಳ ಆಶ್ರಯದಲ್ಲಿರುವವರನ್ನು ಕೊಲ್ಲುವುದು ಧರ್ಮವೇ. ಅಂತಹ ವಿಚಾರ ನನಗೆ ತಿಳಿಯದು ಕೃಷ್ಣ’ ಎಂದನು.
ಮೂಲ ...{Loading}...
ಕ್ಷಿತಿಯೊಳೀ ಕ್ಷತ್ರಿಯರ ಧರ್ಮ
ಸ್ಥಿತಿಯನರಿಯಾ ಕೃಷ್ಣ ಚಾಪ
ಚ್ಯುತರನಪಗತವಾಹನರ ಪರಿಮುಕ್ತ ಕೇಶಿಗಳ
ಗತಿವಿಹೀನರ ದೈನ್ಯವಾಚಾ
ಯುತರ ತರು ವಲ್ಮೀಕ ಜಲ ಸಂ
ಗತರನಿರಿವುದು ಧರ್ಮವೇ ನಾವರಿಯೆವಿದನೆಂದ ॥32॥
೦೩೩ ಹೇಳು ಹೇಳಿನ್ನೊಮ್ಮೆ ...{Loading}...
ಹೇಳು ಹೇಳಿನ್ನೊಮ್ಮೆ ಧರ್ಮವ
ಕೇಳಿದರಿಯೆವು ನಿಮ್ಮ ಕಯ್ಯಲಿ
ಕೇಳಲಾಗದೆ ರಾಜಧರ್ಮ ಪುರಾಣ ಸಂಗತಿಯ
ಆಳಿವನಘಾಟವೆ ದೊಠಾರಿಸಿ
ಸೋಲಿಸುವುದೇನರಿದೆ ಬಲುಗೈ
ಯಾಳಲಾ ನೀ ರಣಕೆ ದಿಟ ವಸುದೇವನಾಣೆಂದ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೃಷ್ಣನು “ಆಹಾ ಹೇಳು, ಇನ್ನೊಂದು ಬಾರಿ ಧರ್ಮದ ವಿಚಾರವನ್ನು ಹೇಳು, ನಾನು ಅದನ್ನು ಕೇಳೂ ಇಲ್ಲ ತಿಳಿದೂ ಇಲ್ಲ. ನಿನ್ನ ಕೈಯಲ್ಲಿ ರಾಜಧರ್ಮ ಪುರಾಣ ವಿಚಾರಗಳನ್ನು ಕೇಳಿ ತಿಳಿದುಕೊಳ್ಳುವುದರಲ್ಲಿ ಏನೂ ತಪ್ಪಿಲ್ಲ. ಈ ವೀರ ಕರ್ಣನು ಮಹಾವೀರನೇ. ಅವನನ್ನು ಮೀರಿಸಿ ಸೋಲಿಸುವುದು ಅಸಾಧ್ಯವೇ. ವಸುದೇವನ ಆಣೆಯಾಗಿಯೂ ನೀನು ಯುದ್ಧದಲ್ಲಿ ಮಹಾಬಲಶಾಲಿ ಎಂದುಕೊಂಡಿದ್ದೆ” ಎಂದು ಅರ್ಜುನನನ್ನು ವ್ಯಂಗ್ಯ ಮಾಡಿದನು.
ಪದಾರ್ಥ (ಕ.ಗ.ಪ)
ದೊಠಾರಿಸು-ಬಲಿಷ್ಠನಾಗು, ಅಘಾಟ-ಅಧಿಕ
ಮೂಲ ...{Loading}...
ಹೇಳು ಹೇಳಿನ್ನೊಮ್ಮೆ ಧರ್ಮವ
ಕೇಳಿದರಿಯೆವು ನಿಮ್ಮ ಕಯ್ಯಲಿ
ಕೇಳಲಾಗದೆ ರಾಜಧರ್ಮ ಪುರಾಣ ಸಂಗತಿಯ
ಆಳಿವನಘಾಟವೆ ದೊಠಾರಿಸಿ
ಸೋಲಿಸುವುದೇನರಿದೆ ಬಲುಗೈ
ಯಾಳಲಾ ನೀ ರಣಕೆ ದಿಟ ವಸುದೇವನಾಣೆಂದ ॥33॥
೦೩೪ ಈಗಲೀ ಧರ್ಮಶ್ರವಣ ...{Loading}...
ಈಗಲೀ ಧರ್ಮಶ್ರವಣ ನೀ
ನಾಗಳೇರಿಸಿ ನುಡಿದ ಭಾಷೆಗೆ
ಮೂಗುಹೋದುದೆ ಮರೆದಲಾ ಮಾತುಗಳು ಹಳಸುವವೆ
ಹೋಗಲೆಲೆ ಮರುಳೇ ವಿಭಾಡಿಸು
ಬೇಗದಲಿ ಬಹುರಾಜಕಾರ್ಯವ
ನೀಗಳೇ ತಿದ್ದುವೆನು ತೊಲಗಿಸು ಸೂತಜನ ಶಿರವ ॥34॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಈಗ ಈ ಧರ್ಮದ ಮಾತುಗಳು, ನೀನು ಹಿಂದೆ ಮಾಡಿದ್ದ ಪ್ರತಿಜ್ಞೆಯನ್ನು ಸೋಲಿಸಿದವೇ? ಅದನ್ನು ಮರೆತು ಬಿಟ್ಟೆಯಾ. ನಿನ್ನ ಮಾತುಗಳೆಲ್ಲಾ ಹಳಸಿ ಹೋದುವೆ. ಹೋಗು ಹುಚ್ಚೇ. ಬೇಗ ಶತ್ರುವನ್ನು ನಾಶಮಾಡು. ನೀನು ಮಾಡಬೇಕಾದ ರಾಜಕಾರ್ಯವನ್ನು ಈಗಲೇ ಹೇಳುತ್ತೇನೆ. ಕರ್ಣನ ತಲೆಯನ್ನು ಕತ್ತರಿಸು’ ಎಂದನು ಕೃಷ್ಣ.
ಪದಾರ್ಥ (ಕ.ಗ.ಪ)
ವಿಭಾಡಿಸು-ನಾಶಮಾಡು, ತಿದ್ದು-ಹೇಳು
ಮೂಲ ...{Loading}...
ಈಗಲೀ ಧರ್ಮಶ್ರವಣ ನೀ
ನಾಗಳೇರಿಸಿ ನುಡಿದ ಭಾಷೆಗೆ
ಮೂಗುಹೋದುದೆ ಮರೆದಲಾ ಮಾತುಗಳು ಹಳಸುವವೆ
ಹೋಗಲೆಲೆ ಮರುಳೇ ವಿಭಾಡಿಸು
ಬೇಗದಲಿ ಬಹುರಾಜಕಾರ್ಯವ
ನೀಗಳೇ ತಿದ್ದುವೆನು ತೊಲಗಿಸು ಸೂತಜನ ಶಿರವ ॥34॥
೦೩೫ ಅಕಟ ನಿಷ್ಕರುಣಿಯೆ ...{Loading}...
ಅಕಟ ನಿಷ್ಕರುಣಿಯೆ ವೃಥಾ ಪಾ
ತಕವಿದೇಕೈ ಹೇಳು ಜಯಕಾ
ಮುಕರು ನಾವೊಲ್ಲದಡೆ ನಿಮಗೇಕೀಸು ನಿರ್ಬಂಧ
ಪ್ರಕಟ ಕುರುವಂಶದಲಿ ಯದುರಾ
ಜಕರೊಡನೆ ಹಗೆಯಿಲ್ಲಲೇ ಮತಿ
ವಿಕಳನಾದೆನು ಕೃಷ್ಣ ಕರ್ಣನ ಕೊಲುವನಲ್ಲೆಂದ ॥35॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅದಕ್ಕೆ ಅರ್ಜುನನು “ಅಯ್ಯೋ ಕರುಣೆಯಿಲ್ಲದ ಕೃಷ್ಣ, ಅನ್ಯಾಯವಾದ ಈ ಪಾಪವನ್ನು ಏಕೆ ಮಾಡಬೇಕು. ಜಯವನ್ನು ಬಯಸುತ್ತಿರುವವರು ನಾವಾದರೂ, ನೀನೇಕೆ ಇಷ್ಟೊಂದು ಬಲವಂತ ಮಾಡುತ್ತಿದ್ದೀಯೆ. ಕುರುವಂಶದವರ ಜೊತೆಯಲ್ಲಿ ನಿಮ್ಮ ಯಾದವ ವಂಶದವರಿಗೆ ಯಾವ ವೈರವೂ ಇಲ್ಲ ಎಂಬುದು ಎಲ್ಲರಿಗೂ ತಿಳಿದಿದೆ. ನನಗೆ ತಲೆ ಕೆಡುತ್ತಿದೆ. ಕರ್ಣನನ್ನು ಕೊಲ್ಲುವುದಿಲ್ಲ” ಎಂದ.
ಮೂಲ ...{Loading}...
ಅಕಟ ನಿಷ್ಕರುಣಿಯೆ ವೃಥಾ ಪಾ
ತಕವಿದೇಕೈ ಹೇಳು ಜಯಕಾ
ಮುಕರು ನಾವೊಲ್ಲದಡೆ ನಿಮಗೇಕೀಸು ನಿರ್ಬಂಧ
ಪ್ರಕಟ ಕುರುವಂಶದಲಿ ಯದುರಾ
ಜಕರೊಡನೆ ಹಗೆಯಿಲ್ಲಲೇ ಮತಿ
ವಿಕಳನಾದೆನು ಕೃಷ್ಣ ಕರ್ಣನ ಕೊಲುವನಲ್ಲೆಂದ ॥35॥
೦೩೬ ಬಿಸುಟು ಹೋದನು ...{Loading}...
ಬಿಸುಟು ಹೋದನು ರಥವ ಸಾರಥಿ
ವಸುಧೆಯಲಿ ರಥವದ್ದು ಕೆಡೆದುದು
ನಿಶಿತಮಾರ್ಗಣವಿಲ್ಲ ಕಯ್ಯಲಿ ದಿವ್ಯಧನುವಿಲ್ಲ
ಎಸುವಡೆಂತೇಳುವುವು ಕಯ್ ನೀ
ಬೆಸಸುವಡೆ ಮನವೆಂತು ಬಂದುದು
ಬಸುರ ಶಿಖಿ ಬಲುಹಾಯ್ತು ಕರ್ಣನ ಕೊಲುವನಲ್ಲೆಂದ ॥36॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಸಾರಥಿಯು ರಥವನ್ನು ಬಿಟ್ಟು ಹೋಗಿದ್ದಾನೆ. ರಥ ಭೂಮಿಯಲ್ಲಿ ಹೂತು ಬಿದ್ದಿದೆ. ಕೈಯಲ್ಲಿ ಹರಿತವಾದ ಬಾಣಗಳಿಲ್ಲ. ದಿವ್ಯವಾದ ಬಿಲ್ಲೂ ಸಹ ಇಲ್ಲ. ಹೀಗಿರುವಾಗ ಅವನನ್ನು ಹೊಡೆಯಲು ಕೈ ಹೇಗೆ ಏಳುತ್ತದೆ. ಹಾಗೆ ಮಾಡು ಎಂದು ಹೇಳಲು ನಿನಗೆ ಮನಸ್ಸಾದರೂ ಹೇಗೆ ಬರುತ್ತದೆ. ನನ್ನ ಹೊಟ್ಟೆಯಲ್ಲಿನ ಸಂಕಟದ ಉರಿ ಹೆಚ್ಚಾಗುತ್ತಿದೆ. ಕರ್ಣನನ್ನು ನಾನು ಕೊಲ್ಲುವುದಿಲ್ಲ’ ಎಂದ.
ಮೂಲ ...{Loading}...
ಬಿಸುಟು ಹೋದನು ರಥವ ಸಾರಥಿ
ವಸುಧೆಯಲಿ ರಥವದ್ದು ಕೆಡೆದುದು
ನಿಶಿತಮಾರ್ಗಣವಿಲ್ಲ ಕಯ್ಯಲಿ ದಿವ್ಯಧನುವಿಲ್ಲ
ಎಸುವಡೆಂತೇಳುವುವು ಕಯ್ ನೀ
ಬೆಸಸುವಡೆ ಮನವೆಂತು ಬಂದುದು
ಬಸುರ ಶಿಖಿ ಬಲುಹಾಯ್ತು ಕರ್ಣನ ಕೊಲುವನಲ್ಲೆಂದ ॥36॥
೦೩೭ ಗುರುವನೆಸುವಡೆ ಮೇಣು ...{Loading}...
ಗುರುವನೆಸುವಡೆ ಮೇಣು ಭೀಷ್ಮನ
ಸರಳ ತಡಿಕೆಗೆ ಚಾಚುವಡೆ ಧಿ
ಕ್ಕರಿಸುವಡೆ ಕೃಪ ಶಲ್ಯ ಸೈಂಧವ ಮುಖ್ಯ ಬಾಂಧವರ
ತೆರಳಿದೆನೆ ತೇರೈಸಿದೆನೆ ಹೇ
ವರಿಸಿದೆನೆ ಹೋರಿದೆನೆ ಕಲಿತನ
ಕರಗಿತೇನೆಂದರಿಯೆ ಕರ್ಣನ ಕೊಲುವನಲ್ಲೆಂದ ॥37॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
37.” ಗುರು ದ್ರೋಣರ ಮೇಲೆ ಬಾಣ ಪ್ರಯೋಗಿಸುವಾಗ ಅಥವಾ ಭೀಷ್ಮರನ್ನು ಬಾಣದ ಮಂಚದ ಮೇಲೆ ಬೀಳಿಸುವಾಗ, ಕೃಪ, ಶಲ್ಯ, ಸೈಂಧವ ಮೊದಲಾದ ಬಂಧುಗಳನ್ನು ಧಿಕ್ಕರಿಸಿ ಯುದ್ಧ ಮಾಡಿದಾಗ ಹೆದರಿದೆನೆ, ಓಡಿ ಹೋದೆನೇ, ಅಸಹ್ಯ ಪಟ್ಟೆನೇ, ವಿರೋಧ ಮಾಡಿದೆನೆ? ಈಗ ಯಾಕೋ ನನ್ನ ಕಲಿತನವೇ ಕರಗಿ ಹೋಗಿದೆ. ಕರ್ಣನನ್ನು ಕೊಲ್ಲುವುದಿಲ್ಲ “ಎಂದ.
ಪದಾರ್ಥ (ಕ.ಗ.ಪ)
ಹೋರು-ವಿರೋಧ, ತೇರೈಸು-ಓಡಿಹೋಗು
ಮೂಲ ...{Loading}...
ಗುರುವನೆಸುವಡೆ ಮೇಣು ಭೀಷ್ಮನ
ಸರಳ ತಡಿಕೆಗೆ ಚಾಚುವಡೆ ಧಿ
ಕ್ಕರಿಸುವಡೆ ಕೃಪ ಶಲ್ಯ ಸೈಂಧವ ಮುಖ್ಯ ಬಾಂಧವರ
ತೆರಳಿದೆನೆ ತೇರೈಸಿದೆನೆ ಹೇ
ವರಿಸಿದೆನೆ ಹೋರಿದೆನೆ ಕಲಿತನ
ಕರಗಿತೇನೆಂದರಿಯೆ ಕರ್ಣನ ಕೊಲುವನಲ್ಲೆಂದ ॥37॥
೦೩೮ ಬಳಿಕ ಭೀಮಾದಿಗಳ ...{Loading}...
ಬಳಿಕ ಭೀಮಾದಿಗಳ ಮನದಲಿ
ಸುಳಿದುದೈ ಸಂದೇಹವೀತನ
ಕೊಲುವುದೇನನುಚಿತವೊ ಮೇಣುಚಿತವೊ ಶಿವಾ ಎನುತ
ಅಳುಕಿದರು ದ್ರೌಪದಿ ಯುಧಿಷ್ಠಿರ
ರೊಳಗೊಳಗೆ ಸಂತಾಪಶಿಖಿಯಲಿ
ತಳಿತ ದುಗುಡದ ಬಿಗಿದ ಬೆರಗಿನೊಳಿದ್ದುದಾಚೆಯಲಿ ॥38॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಗ ಭೀಮ ಮೊದಲಾದವರ ಮನಸ್ಸಿನಲ್ಲೂ, ‘ಅಯ್ಯೋ ಶಿವನೇ ಈ ಕರ್ಣನನ್ನು ಕೊಲ್ಲುವುದು ಉಚಿತವೋ ಅನುಚಿತವೋ’ ಎಂಬ ಸಂದೇಹ ಮೂಡಿತು. ಹೆಚ್ಚಾಗುತ್ತಿದ್ದ ದುಃಖ, ವಿಪರೀತ ಆಶ್ಚರ್ಯಗಳಿಂದ ಕೂಡಿ ದ್ರೌಪದಿ, ಧರ್ಮರಾಯರೂ ಸಹ ಒಳಗೊಳಗೇ ದುಃಖದ ಬೆಂಕಿಯಲ್ಲಿ ನೊಂದರು.
ಮೂಲ ...{Loading}...
ಬಳಿಕ ಭೀಮಾದಿಗಳ ಮನದಲಿ
ಸುಳಿದುದೈ ಸಂದೇಹವೀತನ
ಕೊಲುವುದೇನನುಚಿತವೊ ಮೇಣುಚಿತವೊ ಶಿವಾ ಎನುತ
ಅಳುಕಿದರು ದ್ರೌಪದಿ ಯುಧಿಷ್ಠಿರ
ರೊಳಗೊಳಗೆ ಸಂತಾಪಶಿಖಿಯಲಿ
ತಳಿತ ದುಗುಡದ ಬಿಗಿದ ಬೆರಗಿನೊಳಿದ್ದುದಾಚೆಯಲಿ ॥38॥
೦೩೯ ಮೊದಲಲೆರಡೊಡ್ಡಿನಲಿ ಸುಮ್ಮಾ ...{Loading}...
ಮೊದಲಲೆರಡೊಡ್ಡಿನಲಿ ಸುಮ್ಮಾ
ನದ ಸಘಾಡವ ಕಂಡೆನೀಗಳು
ತುದಿಗೆ ಬರೆವರೆ ಕಂಡೆನಿವರವರೆರಡು ಥಟ್ಟಿನಲಿ
ತುದಿವೆರಳ ಕಂಬನಿಯ ಬಳಸಿದ
ಬೆದರುಗಳ ಕುಕ್ಕುಳಿಸಿದುತ್ಸಾ
ಹದ ವಿಘಾತಿಯ ನಟ್ಟ ಚಿಂತೆಯನರಸ ಕೇಳ್ ಎಂದ ॥39॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ದೊರೆಯೇ ಕೇಳು. ಯುದ್ಧ ಆರಂಭವಾದಾಗ ಎರಡೂ ಸೈನ್ಯದಲ್ಲಿ ಸಂತೋಷ ಸಂಭ್ರಮಗಳಿದ್ದವು. ಈಗ ಯುದ್ದ ಕೊನೆಗೆ ಬರುತ್ತಿದೆ. ಎರಡೂ ಸೈನ್ಯದಲ್ಲಿ ತುದಿ ಬೆರಳಿನಿಂದ ಕಣ್ಣೀರು ಒರೆಸಿಕೊಳ್ಳುವ, ಬೆದರಿಕೆಯಿಂದ ಕೂಡಿದ, ತಳಮಳಗೊಂಡ ಉತ್ಸಾಹ, ಹಾಳಾಗುತ್ತೇವೆಯೇನೋ ಎಂಬ ಮನಸ್ಸಿಗೆ ನಾಟಿದ ಚಿಂತೆ ವ್ಯಕ್ತವಾಗುತ್ತಿದೆ’ ಎಂದ ಸಂಜಯ.
ಪದಾರ್ಥ (ಕ.ಗ.ಪ)
ಕುಕ್ಕುಳಿಸು-ತಳಮಳಗೊಳ್ಳು, ವಿಘಾತಿ-ನಾಶ
ಮೂಲ ...{Loading}...
ಮೊದಲಲೆರಡೊಡ್ಡಿನಲಿ ಸುಮ್ಮಾ
ನದ ಸಘಾಡವ ಕಂಡೆನೀಗಳು
ತುದಿಗೆ ಬರೆವರೆ ಕಂಡೆನಿವರವರೆರಡು ಥಟ್ಟಿನಲಿ
ತುದಿವೆರಳ ಕಂಬನಿಯ ಬಳಸಿದ
ಬೆದರುಗಳ ಕುಕ್ಕುಳಿಸಿದುತ್ಸಾ
ಹದ ವಿಘಾತಿಯ ನಟ್ಟ ಚಿಂತೆಯನರಸ ಕೇಳೆಂದ ॥39॥
೦೪೦ ಮತ್ತೆ ಜರೆದನು ...{Loading}...
ಮತ್ತೆ ಜರೆದನು ದನುಜರಿಪು ತಲೆ
ಗುತ್ತಿದನು ಕಲಿ ಪಾರ್ಥನಾತನ
ಕುತ್ತಿ ಬರಸೆಳೆದಂತೆ ಭಂಗಿಸಿದನು ಮುರಧ್ವಂಸಿ
ಒತ್ತುವವು ಫಲುಗುಣನ ನುಡಿ ಮಿಗೆ
ಕೆತ್ತುವವು ಹರಿವಚನವಾತನ
ಚಿತ್ತವನು ಸಂತೈಸಿ ಹರಿ ತಿಳುಹಿದನು ಸಾಮದಲಿ ॥40॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೃಷ್ಣನು ಅರ್ಜುನನನ್ನು ಮತ್ತೆ ನಿಂದಿಸಿದನು. ವೀರ ಅರ್ಜುನನು ತಲೆ ತಗ್ಗಿಸಿದನು. ಅವನನ್ನು ಬಲವಾಗಿ ಹೊಡೆದು ಸೆಳೆದಂತೆ ಮುರಾರಿಯು ಅವಮಾನ ಮಾಡಿದನು. ಅರ್ಜುನನ ಮಾತುಗಳು ಹಿಂದೆಗೆದವು. ಕೃಷ್ಣನ ಮಾತುಗಳು ಅವನ ಮನಸ್ಸನ್ನು ತಹಬಂದಿಗೆ ತಂದು ಅದಕ್ಕೊಂದು ರೂಪವನ್ನು ನೀಡಿದವು. ಕೃಷ್ಣನು ಸಾಮೋಪಾಯದಿಂದ ಅರ್ಜುನನಿಗೆ ತಿಳಿವಳಿಕೆಯನ್ನು ನೀಡಿದನು.
ಪದಾರ್ಥ (ಕ.ಗ.ಪ)
ಒತ್ತು-ಅದುಮು, ಹಿಂದೆಗೆ,
ಕೆತ್ತು-ಕಂಡರಿಸು, ರೂಪಗೊಡು
ಮೂಲ ...{Loading}...
ಮತ್ತೆ ಜರೆದನು ದನುಜರಿಪು ತಲೆ
ಗುತ್ತಿದನು ಕಲಿ ಪಾರ್ಥನಾತನ
ಕುತ್ತಿ ಬರಸೆಳೆದಂತೆ ಭಂಗಿಸಿದನು ಮುರಧ್ವಂಸಿ
ಒತ್ತುವವು ಫಲುಗುಣನ ನುಡಿ ಮಿಗೆ
ಕೆತ್ತುವವು ಹರಿವಚನವಾತನ
ಚಿತ್ತವನು ಸಂತೈಸಿ ಹರಿ ತಿಳುಹಿದನು ಸಾಮದಲಿ ॥40॥
೦೪೧ ಎಲೆ ಧನಞ್ಜಯ ...{Loading}...
ಎಲೆ ಧನಂಜಯ ನೀನು ಹಿಮಕರ
ಕುಲದ ಸುಕುಮಾರಕನು ಲೋಕದ
ಕುಲವಿಹೀನನು ಕರ್ಣನಿವ ನಿನಗೆಂತು ಸರಿಯಹನು
ತಲೆಯ ಮಾರಿ ಶರೀರವನು ಸಲೆ
ಸಲಹಲೋಸುಗ ಕೌರವನ ತಂ
ಬುಲಕೆ ಕಯ್ಯಾಂತವನು ಬಂಧುವೆ ಪಾರ್ಥ ಹೇಳೆಂದ ॥41॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಎಲೆ ಅರ್ಜುನ, ನೀನು ಚಂದ್ರವಂಶದಲ್ಲಿ ಹುಟ್ಟಿದ ಸುಕುಮಾರ. ಈ ಕರ್ಣ ಲೋಕದಲ್ಲಿ ಕುಲಹೀನನಾಗಿ ಹುಟ್ಟಿದವನು. ಇವನು ನಿನಗೆ ಹೇಗೆ ಸಮಾನನಾಗುತ್ತಾನೆ. ತನ್ನ ಅಭಿಮಾನ ಗೌರವಗಳನ್ನು ಮಾರಿ, ಶರೀರವನ್ನು ಸಲಹುವುದಕ್ಕಾಗಿ ದುರ್ಯೋಧನನ ಎಂಜಲಿಗೆ ಕೈಯೊಡ್ಡಿದವನು ನಿನ್ನ ನೆಂಟ ಹೇಗಾಗುತ್ತಾನೆ? ಎಂದನು ಕೃಷ್ಣ.
ಮೂಲ ...{Loading}...
ಎಲೆ ಧನಂಜಯ ನೀನು ಹಿಮಕರ
ಕುಲದ ಸುಕುಮಾರಕನು ಲೋಕದ
ಕುಲವಿಹೀನನು ಕರ್ಣನಿವ ನಿನಗೆಂತು ಸರಿಯಹನು
ತಲೆಯ ಮಾರಿ ಶರೀರವನು ಸಲೆ
ಸಲಹಲೋಸುಗ ಕೌರವನ ತಂ
ಬುಲಕೆ ಕಯ್ಯಾಂತವನು ಬಂಧುವೆ ಪಾರ್ಥ ಹೇಳೆಂದ ॥41॥
೦೪೨ ಕೇಡಹೊತ್ತಿಸಿ ನಿಮ್ಮ ...{Loading}...
ಕೇಡಹೊತ್ತಿಸಿ ನಿಮ್ಮ ಬೇಂಟೆಯ
ನಾಡಿಸಿದನಿವ ಜೂಜನಾಡಿಸಿ
ನಾಡ ಕೊಳಿಸಿದ ಹಿಸುಣನಿವ ನಿಮ್ಮೆಲ್ಲರನು ಕೆಡಿಸಿ
ನಾಡ ಸಂಧಾನವನು ನಾವ್ ಮಾ
ತಾಡಲೆಮ್ಮನು ಬಿಗಿಯಲನುವನು
ಮಾಡಿಸಿದನೀ ಕರ್ಣ ನಿಮಗತಿಹಿತವನಹನೆಂದ ॥42॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ನಿಮ್ಮ ಹಾಗೂ ಕೌರವರ ನಡುವೆ ದ್ವೇಷದ ಬೆಂಕಿಯನ್ನು ಹೊತ್ತಿಸಿ, ನಿಮ್ಮ ಬೇಟೆಯಾಡುವಂತೆ ಮಾಡಿದವನು ಇವನೇ, ಪಗಡೆಯ ಜೂಜನ್ನು ಆಡಿಸಿ ನಿಮ್ಮೆಲ್ಲರಿಗೂ ಕೇಡು ಉಂಟು ಮಾಡಿ, ರಾಜ್ಯವನ್ನು ಕಿತ್ತುಕೊಳ್ಳಲು ಕಾರಣನಾದ ಚಾಡಿಕೋರ ಇವನೇ. ರಾಜ್ಯದ ಸಂಧಿಕಾರ್ಯಕ್ಕೆಂದು ನಾನು ಹೋದಾಗ, ನನ್ನನ್ನು ಸೆರೆ ಹಿಡಿಯಲು ಏರ್ಪಾಡು ಮಾಡಿಸಿದವನು ಇವನೇ. ಈ ಕರ್ಣ ಈಗ ನಿಮಗೆ ಅತ್ಯಂತ ಹಿತವಾದ ವ್ಯಕ್ತಿ ಆಗಿಬಿಟ್ಟನೇ’ ಎಂದನು ಕೃಷ್ಣ.
ಮೂಲ ...{Loading}...
ಕೇಡಹೊತ್ತಿಸಿ ನಿಮ್ಮ ಬೇಂಟೆಯ
ನಾಡಿಸಿದನಿವ ಜೂಜನಾಡಿಸಿ
ನಾಡ ಕೊಳಿಸಿದ ಹಿಸುಣನಿವ ನಿಮ್ಮೆಲ್ಲರನು ಕೆಡಿಸಿ
ನಾಡ ಸಂಧಾನವನು ನಾವ್ ಮಾ
ತಾಡಲೆಮ್ಮನು ಬಿಗಿಯಲನುವನು
ಮಾಡಿಸಿದನೀ ಕರ್ಣ ನಿಮಗತಿಹಿತವನಹನೆಂದ ॥42॥
೦೪೩ ಕೊಲ್ಲನೇ ಅಭಿಮನ್ಯುವನು ...{Loading}...
ಕೊಲ್ಲನೇ ಅಭಿಮನ್ಯುವನು ಹಗೆ
ಯಲ್ಲವೇ ಮಾರುತಿಯ ಕೊರಳನು
ಬಿಲ್ಲ ಕೊಪ್ಪಿನೊಳೆಳೆಯನೇ ಕೆಡೆಯೆಸನೆ ಧರ್ಮಜನ
ಖುಲ್ಲನೀತಿಯ ನೆನೆಯದಿರು ನೀ
ನೆಲ್ಲಿಯವನೀ ವೈರಿ ಕರ್ಣನ
ದೆಲ್ಲಿಯವನೆಸು ಮರುಳೆ ಎಂದನು ನಿಜವ ತೋರಿಸದೆ ॥43॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇವನು ಅಭಿಮನ್ಯುವನು ಕೊಲ್ಲಲಿಲ್ಲವೇ, ನಿಮ್ಮ ಶತ್ರುವಲ್ಲವೇ, ಭೀಮನ ಕೊರಳಿಗೆ ಬಿಲ್ಲ ಕೊಪ್ಪನ್ನು ಹಾಕಿ ಎಳೆದು ಅವಮಾನಿಸಲಿಲ್ಲವೇ. ಧರ್ಮರಾಯನು ಕೆಳಗೆ ಬೀಳುವಂತೆ ಬಾಣದಿಂದ ಹೊಡೆಯಲಿಲ್ಲವೇ. ದುಷ್ಟ ನೀತಿಯನ್ನು ಯೋಚಿಸಬೇಡ. ನೀನು ಯಾರು? ಈ ಕರ್ಣನು ಯಾರು? ಹುಚ್ಚೇ ಮೊದಲು ಬಾಣದಿಂದ ಹೊಡೆ’ ಎಂದು ಕೃಷ್ಣನು ಕರ್ಣನ ವಿಷಯವನ್ನು ಮರೆಮಾಚಿ, ಅರ್ಜುನನನ್ನು ಉತ್ತೇಜಿಸಿದನು.
ಮೂಲ ...{Loading}...
ಕೊಲ್ಲನೇ ಅಭಿಮನ್ಯುವನು ಹಗೆ
ಯಲ್ಲವೇ ಮಾರುತಿಯ ಕೊರಳನು
ಬಿಲ್ಲ ಕೊಪ್ಪಿನೊಳೆಳೆಯನೇ ಕೆಡೆಯೆಸನೆ ಧರ್ಮಜನ
ಖುಲ್ಲನೀತಿಯ ನೆನೆಯದಿರು ನೀ
ನೆಲ್ಲಿಯವನೀ ವೈರಿ ಕರ್ಣನ
ದೆಲ್ಲಿಯವನೆಸು ಮರುಳೆ ಎಂದನು ನಿಜವ ತೋರಿಸದೆ ॥43॥
೦೪೪ ಬೀಸಿದನು ನಿಜ ...{Loading}...
ಬೀಸಿದನು ನಿಜ ಮಾಯೆಯನು ಡೊ
ಳ್ಳಾಸದಲಿ ಹರಹಿದನು ತಮವನು
ರೋಷವನು ಬಿತ್ತಿದನು ಮನದಲಿ ನರನ ಕಲಿಮಾಡಿ
ಐಸೆ ಬಳಿಕೇನೆನ್ನಖಿಳಗುಣ
ದೋಷ ನಿನ್ನದು ಪುಣ್ಯಪಾಪದ
ವಾಸಿ ನಮಗೇಕೆನುತ ಕೊಂಡನು ಧನುವನಾ ಪಾರ್ಥ ॥44॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನ ಮನಸ್ಸಿನ ಮೇಲೆ ಕೃಷ್ಣನು ತನ್ನ ಮಾತಿನ ಮೋಸದ ಮಾಯೆಯನ್ನು ಬೀಸಿ, ಅಜ್ಞಾನವೆಂಬ ಕತ್ತಲನ್ನು ತುಂಬಿದನು, ರೋಷವೆಂಬ ಬೀಜವನ್ನು ಅವನ ಮನಸ್ಸಿನಲ್ಲಿ ಬಿತ್ತನೆ ಮಾಡಿ, ಅವನನ್ನು ಮತ್ತೆ ಕಲಿಯನ್ನಾಗಿ ಮಾಡಿದನು. ಕೃಷ್ಣನ ಮಾಯೆಗೆ ಒಳಗಾದ ಅರ್ಜುನನು ‘ಅಷ್ಟೇ ತಾನೆ, ಆ ಮೇಲೆ ಇನ್ನೇನು, ನನ್ನ ಎಲ್ಲಾ ಗುಣ ದೋಷಗಳಿಗೆ ನೀನೇ ಹೊಣೆ. ಪುಣ್ಯ ಪಾಪಗಳ ಚಿಂತೆ ನಮಗೆ ಏಕೆ’ ಎನ್ನುತ್ತಾ ಬಿಲ್ಲನ್ನು ಕೈಗೆ ತೆಗೆದುಕೊಂಡನು.
ಪದಾರ್ಥ (ಕ.ಗ.ಪ)
ಡೊಳ್ಳಾಸ-ವಂಚನೆ
ಮೂಲ ...{Loading}...
ಬೀಸಿದನು ನಿಜ ಮಾಯೆಯನು ಡೊ
ಳ್ಳಾಸದಲಿ ಹರಹಿದನು ತಮವನು
ರೋಷವನು ಬಿತ್ತಿದನು ಮನದಲಿ ನರನ ಕಲಿಮಾಡಿ
ಐಸೆ ಬಳಿಕೇನೆನ್ನಖಿಳಗುಣ
ದೋಷ ನಿನ್ನದು ಪುಣ್ಯಪಾಪದ
ವಾಸಿ ನಮಗೇಕೆನುತ ಕೊಂಡನು ಧನುವನಾ ಪಾರ್ಥ ॥44॥
೦೪೫ ಹಿಡಿ ಧನುವನನುವಾಗು ...{Loading}...
ಹಿಡಿ ಧನುವನನುವಾಗು ಸಾಕಿ
ನ್ನೆಡಬಲನ ಹಾರದಿರೆನುತ ಕಯ್
ಗಡಿಯನೆಚ್ಚನು ನೂರು ಶರದಲಿ ಸೂತನಂದನನ
ತೊಡಗಿತೇ ಕಕ್ಕುಲಿತೆ ಮನದಲಿ
ಫಡ ಎನುತ ನೂರಂಬನೆಡೆಯಲಿ
ಕಡಿದು ಬಿಸುಟನು ಸೆಳೆದು ಕಿಗ್ಗಟ್ಟಿನ ಕಠಾರಿಯಲಿ ॥45॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಬಿಲ್ಲನ್ನು ಹಿಡಿದುಕೋ, ಸಾಕು, ಆ ಕಡೆ ಈ ಕಡೆ ಸಹಾಯಕ್ಕಾಗಿ ನೋಡಬೇಡ’, ಎಂದು ಕರ್ಣನಿಗೆ ಹೇಳುತ್ತಾ, ಅವನ ಕೈಯಲ್ಲಿದ್ದ ಕಡಿವಾಣವನ್ನು ನೂರು ಬಾಣಗಳಿಂದ ಹೊಡೆದನು. ಆಗ ಕರ್ಣನು ‘ಛೀ ಮನಸ್ಸಿನಲ್ಲಿ ಚಿಂತೆ ಆರಂಭವಾಯಿತೇ’ ಎನ್ನುತ್ತಾ ಅರ್ಜುನನ ನೂರು ಬಾಣಗಳನ್ನು ತನ್ನ ಸೊಂಟದ ಸಣ್ಣ ಗಂಟಿನಲ್ಲಿದ್ದ ಕಠಾರಿಯ ಸಹಾಯದಿಂದ, ದಾರಿಯಲ್ಲೇ ಕತ್ತರಿಸಿ ಹಾಕಿದನು.
ಪದಾರ್ಥ (ಕ.ಗ.ಪ)
ಕೈಗಡಿ-ಕಡಿವಾಣ, ಕಿಗ್ಗಟ್ಟು-ಸಣ್ಣಗಂಟು
ಮೂಲ ...{Loading}...
ಹಿಡಿ ಧನುವನನುವಾಗು ಸಾಕಿ
ನ್ನೆಡಬಲನ ಹಾರದಿರೆನುತ ಕಯ್
ಗಡಿಯನೆಚ್ಚನು ನೂರು ಶರದಲಿ ಸೂತನಂದನನ
ತೊಡಗಿತೇ ಕಕ್ಕುಲಿತೆ ಮನದಲಿ
ಫಡ ಎನುತ ನೂರಂಬನೆಡೆಯಲಿ
ಕಡಿದು ಬಿಸುಟನು ಸೆಳೆದು ಕಿಗ್ಗಟ್ಟಿನ ಕಠಾರಿಯಲಿ ॥45॥
೦೪೬ ರಥವ ಸನ್ತೈಸಿದನು ...{Loading}...
ರಥವ ಸಂತೈಸಿದನು ಬಳಿಕತಿ
ರಥ ಭಯಂಕರನೇರಿದನು ನಿಜ
ರಥವನತಿಹರುಷದಲಿ ತೊಳೆದನು ಚರಣ ಕರತಳವ
ಪೃಥಿವಿ ನೆನದಪಕಾರ ಲೋಕ
ಪ್ರಥಿತವಾಯಿತು ಸಾಕು ಬದುಕಲಿ
ಪೃಥೆಯ ಮಕ್ಕಳೆನುತ್ತ ಕೊಂಡನು ನಗುತ ವೀಳೆಯವ ॥46॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕರ್ಣನು ತನ್ನ ರಥವನ್ನು ಸಿದ್ಧಪಡಿಸಿಕೊಂಡನು. ಆಮೇಲೆ ಅತಿರಥರಿಗೆ ಭಯಂಕರನಾದ ಅವನು ರಥವನ್ನು ಹತ್ತಿ ಕುಳಿತು, ತನ್ನ ಕೈಕಾಲುಗಳನ್ನು ಸಂತೋಷದಿಂದ ತೊಳೆದುಕೊಂಡನು. “ಭೂದೇವಿಯು ನನ್ನ ಬಗ್ಗೆ ಯೋಚಿಸಿದ ಅಪಕಾರ, ಲೋಕ ಪ್ರಸಿದ್ಧವಾಯಿತು. ಹೋಗಲಿ ಹೋಗಲಿ, ಕುಂತಿಯ ಮಕ್ಕಳು ಬದುಕಿಕೊಳ್ಳಲಿ” ಎನ್ನುತ್ತ ವೀಳೆಯವನ್ನು ಹಾಕಿಕೊಂಡು ಸಿದ್ಧನಾದನು.
ಮೂಲ ...{Loading}...
ರಥವ ಸಂತೈಸಿದನು ಬಳಿಕತಿ
ರಥ ಭಯಂಕರನೇರಿದನು ನಿಜ
ರಥವನತಿಹರುಷದಲಿ ತೊಳೆದನು ಚರಣ ಕರತಳವ
ಪೃಥಿವಿ ನೆನದಪಕಾರ ಲೋಕ
ಪ್ರಥಿತವಾಯಿತು ಸಾಕು ಬದುಕಲಿ
ಪೃಥೆಯ ಮಕ್ಕಳೆನುತ್ತ ಕೊಂಡನು ನಗುತ ವೀಳೆಯವ ॥46॥
೦೪೭ ಧನುವ ಕೊಣ್ಡನು ...{Loading}...
ಧನುವ ಕೊಂಡನು ಹಯವ ಜರೆದ
ರ್ಜುನನ ತರುಬಿದನಖಿಳ ಕುರುಬಲ
ವನಧಿಗಭಯವನಿತ್ತು ಮುಸುಕಿದನಂಬಿನಲಿ ನರನ
ಕನಲಿದವು ನಿಸ್ಸಾಳ ರಿಪುನೃಪ
ಜನವ ಬಯ್ದವು ಕಹಳೆ ಬಹುವಿಧ
ನಿನದದಲಿ ಗರ್ಜಿಸಿದವೆರಡೊಡ್ಡಿನಲಿ ಘನವಾದ್ಯ ॥47॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕರ್ಣನು ಬಿಲ್ಲನ್ನು ತೆಗೆದುಕೊಂಡನು, ಕುದುರೆಗಳನ್ನು ಗದರಿಸಿಕೊಂಡು, ಅರ್ಜುನನನ್ನು ತಡೆದು ನಿಲ್ಲಿಸಿದನು. ಕೌರವನ ಸೈನ್ಯಕ್ಕೆ ಅಭಯವನ್ನು ಕೊಟ್ಟು. ಅರ್ಜುನನನ್ನು ಬಾಣಗಳಿಂದ ಮುಚ್ಚಿದನು. ನಿಸ್ಸಾಳಗಳು ಕೋಪದಿಂದ ಶಬ್ದ ಮಾಡಿದವು. ಕಹಳೆಗಳು ಶತ್ರುರಾಜರನ್ನು ಬಯ್ಯುವಂತೆ ಕೂಗಿದವು. ದೊಡ್ಡ ವಾದ್ಯಗಳು ಎರಡೂ ಕಡೆಯ ಸೈನ್ಯದಲ್ಲಿ ಅನೇಕ ವಿಧದಲ್ಲಿ ಶಬ್ದಮಾಡುತ್ತಾ ಗರ್ಜಿಸಿದವು.
ಮೂಲ ...{Loading}...
ಧನುವ ಕೊಂಡನು ಹಯವ ಜರೆದ
ರ್ಜುನನ ತರುಬಿದನಖಿಳ ಕುರುಬಲ
ವನಧಿಗಭಯವನಿತ್ತು ಮುಸುಕಿದನಂಬಿನಲಿ ನರನ
ಕನಲಿದವು ನಿಸ್ಸಾಳ ರಿಪುನೃಪ
ಜನವ ಬಯ್ದವು ಕಹಳೆ ಬಹುವಿಧ
ನಿನದದಲಿ ಗರ್ಜಿಸಿದವೆರಡೊಡ್ಡಿನಲಿ ಘನವಾದ್ಯ ॥47॥
೦೪೮ ಅಳುಕಿದನೆ ರಥ ...{Loading}...
ಅಳುಕಿದನೆ ರಥ ಮುಗ್ಗಿದರೆ ಕಳ
ವಳಿಸಿದನೆ ಶಲ್ಯಾಪಸರಣಕೆ
ಕೆಲಬಲನ ಹಾರಿದನೆ ನರನವಗಡಿಸಿ ಕಾದಿದಡೆ
ಬಲಿಮಥನ ಮಝ ಭಾಪು ಪಾಂಡವ
ಬಲದಿಶಾಪಟ ರಾಯಮದನ
ಪ್ರಳಯಹರ ಭಾಪೆಂದು ಹೊಗಳಿತು ವಂದಿಸಂದೋಹ ॥48॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಥವು ನೆಲದಲ್ಲಿ ಹೂತು ಹೋದಾಗ ಹೆದರಿದನೇ, ಶಲ್ಯನು ಬಿಟ್ಟು ಹೋದದಕ್ಕೆ ಚಿಂತಿಸಿದನೇ, ಅರ್ಜುನನು ಪ್ರತಿಭಟಿಸಿ ಯುದ್ಧ ಮಾಡಿದಾಗ ಮತ್ತೊಬ್ಬರ ಸಹಾಯವನ್ನು ನಿರೀಕ್ಷಿಸಿದನೇ ಕರ್ಣ, ಬಲಿಯನ್ನು ಸಂಹಾರ ಮಾಡಿದ ಕೃಷ್ಣನಂತೆ, ಭೇಷ್ ಪಾಂಡವ ಸೈನ್ಯವನ್ನು ದಿಕ್ಕಾಪಾಲು ಮಾಡುವವನು, ಪಾಂಡವ ರಾಯರೆಂಬ ಮನ್ಮಥರ ನಾಶ ಮಾಡುವ ಶಿವ ಎಂದು ವಂಧಿ ಮಾಗಧರು ಕರ್ಣನನ್ನು ಹೊಗಳಿದರು.
ಮೂಲ ...{Loading}...
ಅಳುಕಿದನೆ ರಥ ಮುಗ್ಗಿದರೆ ಕಳ
ವಳಿಸಿದನೆ ಶಲ್ಯಾಪಸರಣಕೆ
ಕೆಲಬಲನ ಹಾರಿದನೆ ನರನವಗಡಿಸಿ ಕಾದಿದಡೆ
ಬಲಿಮಥನ ಮಝ ಭಾಪು ಪಾಂಡವ
ಬಲದಿಶಾಪಟ ರಾಯಮದನ
ಪ್ರಳಯಹರ ಭಾಪೆಂದು ಹೊಗಳಿತು ವಂದಿಸಂದೋಹ ॥48॥
೦೪೯ ಅರಸ ಕೇಳೈ ...{Loading}...
ಅರಸ ಕೇಳೈ ಜೂಜುಗಾರರ
ಸಿರಿಯ ಸಡಗರ ಕಳಿವಗಲ ತಾ
ವರೆಯ ನಗೆ ಸಜ್ಜನರ ಖಾತಿ ನಿತಂಬಿನೀ ಸ್ನೇಹ
ಪರಮಯೋಗಿಯ ಲೀಲೆ ಕೌರವ
ರರಸನೊಡ್ಡಿನ ಜಯವಿದೀಸರ
ಗರುಡಿಯೊಂದೇ ಶ್ರಮವ ಕೊಡುವುದು ಶಕ್ರಧನುವೆಂದ ॥49॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ದೊರೆಯೇ ಕೇಳು, ಜೂಜುಗಾರರ ಸಂಪತ್ತಿನ ಸಂಭ್ರಮ, ಸಂಜೆಯ ಸಮಯದ ಕಮಲದ ನಗೆ, ಸಜ್ಜನರಿಗೆ ಒದಗುವ ದುಃಖ, ಸ್ತ್ರಿಯರ ಸ್ನೇಹ, ಶ್ರೇಷ್ಠ ಯೋಗಿಯ ಲೀಲೆ, ದುರ್ಯೋಧನನ ಸೈನ್ಯದ ಜಯ - ಇವುಗಳು ಕಾಮನ ಬಿಲ್ಲಿನಂತೆ ಕ್ಷಣಿಕವಾದವು.” ಎಂದು ಸಂಜಯನು ಹೇಳಿದನು.
ಮೂಲ ...{Loading}...
ಅರಸ ಕೇಳೈ ಜೂಜುಗಾರರ
ಸಿರಿಯ ಸಡಗರ ಕಳಿವಗಲ ತಾ
ವರೆಯ ನಗೆ ಸಜ್ಜನರ ಖಾತಿ ನಿತಂಬಿನೀ ಸ್ನೇಹ
ಪರಮಯೋಗಿಯ ಲೀಲೆ ಕೌರವ
ರರಸನೊಡ್ಡಿನ ಜಯವಿದೀಸರ
ಗರುಡಿಯೊಂದೇ ಶ್ರಮವ ಕೊಡುವುದು ಶಕ್ರಧನುವೆಂದ ॥49॥
೦೫೦ ಉಬ್ಬಿದನು ನಿನ್ನಾತನಾತನ ...{Loading}...
ಉಬ್ಬಿದನು ನಿನ್ನಾತನಾತನ
ತುಬ್ಬಿನಲಿ ಕುರುಬಲದ ಹರುಷದ
ಜಬ್ಬುರಿಯ ಹುರಿಗೂಡಿ ತೋರಿತು ಚಾರು ಚತುರಂಗ
ತೆಬ್ಬಿ ತುಳುಕುವ ಕಣೆಯ ಕಣೆಯಲಿ
ಹಬ್ಬಿ ಹರೆದುದು ತೋರದಲಿ ಬಲಿ
ದುಬ್ಬುಗವಳದ ಕಣ್ಣುಗಳು ಕರ್ಣಾವಸಾನದಲಿ ॥50॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಿನ್ನ ಮಗ ದುರ್ಯೋಧನನು ಕರ್ಣನನ್ನು ನೋಡಿ ಉಬ್ಬಿ ಹೋದನು. ಮನೋಹರವಾz ಕೌರವ ಸೈನ್ಯವು ಸಂತೋಷ ಹೆಮ್ಮೆಗಳ ಜೊತೆಯಲ್ಲಿ ಒಂದಾಯಿತು. ಇಲ್ಲಿಯವರೆಗೆ ಸಂತೋಷದಿಂದಿದ್ದ ಕಣ್ಣುಗಳು, ಕರ್ಣನ ಅವಸಾನ ಕಾಲದಲ್ಲಿ. ಒಂದರ ಮೇಲೊಂದು ಬಿದ್ದು ಸುತ್ತಿಕೊಳ್ಳುವ ಬಾಣಗಳು ಹರಡಿಕೊಂಡು ವಿಸ್ತಾರವಾದದ್ದನ್ನು ನೋಡಿದವು.
ಪದಾರ್ಥ (ಕ.ಗ.ಪ)
ತುಬ್ಬು-ತಿಳಿಸು, ಪತ್ತೆಮಾಡು,
ಜಬ್ಬುರಿ-ಹೆಮ್ಮೆ,
ತಬ್ಬಿ-ಸುತ್ತಿಕೊ,
ಉಬ್ಬುಗವಳ-ಸಂತೋಷದ ಆಹಾರ
ಮೂಲ ...{Loading}...
ಉಬ್ಬಿದನು ನಿನ್ನಾತನಾತನ
ತುಬ್ಬಿನಲಿ ಕುರುಬಲದ ಹರುಷದ
ಜಬ್ಬುರಿಯ ಹುರಿಗೂಡಿ ತೋರಿತು ಚಾರು ಚತುರಂಗ
ತೆಬ್ಬಿ ತುಳುಕುವ ಕಣೆಯ ಕಣೆಯಲಿ
ಹಬ್ಬಿ ಹರೆದುದು ತೋರದಲಿ ಬಲಿ
ದುಬ್ಬುಗವಳದ ಕಣ್ಣುಗಳು ಕರ್ಣಾವಸಾನದಲಿ ॥50॥
೦೫೧ ಹತ್ತು ಶರದಲಿ ...{Loading}...
ಹತ್ತು ಶರದಲಿ ತುರಗವನು ಮೂ
ವತ್ತರಲಿ ಮುರವೈರಿಯನು ತೊಂ
ಬತ್ತರಲಿ ಫಲುಗುಣನನೈವತ್ತಂಬಿನಲಿ ಕಪಿಯ
ಮತ್ತೆ ಮೂವತ್ತರಲಿ ಮಗುಳರು
ವತ್ತರಲಿ ನರರಥವ ನೂರೈ
ವತ್ತು ಶರದಲಿ ಘಾಯಗಾಣಿಸಿದನು ಚತುರ್ಬಲವ ॥51॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕರ್ಣನು ಹತ್ತು ಬಾಣಗಳಿಂದ ಅರ್ಜುನನ ರಥದ ಕುದುರೆಗಳನ್ನು, ಮೂವತ್ತು ಬಾಣಗಳಿಂದ ಕೃಷ್ಣನನ್ನು, ತೊಂಬತ್ತು ಬಾಣಗಳಿಂದ ಅರ್ಜುನನನ್ನು, ಐವತ್ತು ಬಾಣಗಳಿಂದ ಹನುಮಂತನನ್ನು, ಮತ್ತೆ ಮೂವತ್ತು ಬಾಣಗಳಿಂದ, ಮತ್ತೆ ಅರುವತ್ತು ಬಾಣಗಳಿಂದ ಅರ್ಜುನನ ರಥವನ್ನು ನೂರೈವತ್ತು ಬಾಣಗಳಿಂದ ಚತುರಂಗ ಸೈನ್ಯವನ್ನು ಹೊಡೆದು ಗಾಯವುಂಟು ಮಾಡಿದನು.
ಮೂಲ ...{Loading}...
ಹತ್ತು ಶರದಲಿ ತುರಗವನು ಮೂ
ವತ್ತರಲಿ ಮುರವೈರಿಯನು ತೊಂ
ಬತ್ತರಲಿ ಫಲುಗುಣನನೈವತ್ತಂಬಿನಲಿ ಕಪಿಯ
ಮತ್ತೆ ಮೂವತ್ತರಲಿ ಮಗುಳರು
ವತ್ತರಲಿ ನರರಥವ ನೂರೈ
ವತ್ತು ಶರದಲಿ ಘಾಯಗಾಣಿಸಿದನು ಚತುರ್ಬಲವ ॥51॥
೦೫೨ ಬಲಜಲಧಿ ಸುಳಿಗೊಣ್ಡು ...{Loading}...
ಬಲಜಲಧಿ ಸುಳಿಗೊಂಡು ಪಾರ್ಥನ
ಬಳಿಗೆ ತೆಗೆದುದು ತೆಗೆದುದೀತನ
ಕಲಿತನದ ವಿಕ್ರಮ ಧನಂಜಯನಾ ಧನಂಜಯನ
ಅಳುಕಿದರು ಭೀಮಾದಿಗಳು ತ
ಲ್ಲಳಿಸಿತಾಚೆಯ ಥಟ್ಟು ಕೌರವ
ದಳದ ಕಳಕಳ ಕೆಟ್ಟುದೊಂದರೆಗಳಿಗೆ ಮಾತ್ರದಲಿ ॥52॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾಂಡವರ ಸೈನ್ಯವೆಂಬ ಸಮುದ್ರ ಸುಳಿಯನ್ನು ಪಡೆದಂತೆ ತಿರುಗುತ್ತಾ, ಅರ್ಜುನನ ಸಮೀಪಕ್ಕೆ ಓಡಿ ಹೋಯಿತು. ಕರ್ಣನ ಶೌರ್ಯದ ಬೆಂಕಿ, ಧನಂಜಯನನ್ನು ಹಿಮ್ಮೆಟ್ಟುವಂತೆ ಮಾಡಿತು. ಭೀಮ ಮೊದಲಾದವರು ಹೆದರಿದರು. ಆಚೆಯ ಕಡೆಗಿದ್ದ ಎಂದರೆ ಪಾಂಡವರ ಸೈನ್ಯ ನಡುಗಿತು. ಕೌರವ ಸೈನ್ಯದ ಕಳಕಳ ಶಬ್ದ ಒಂದು ಅರ್ಧಗಳಿಗೆ ನಿಂತು ಹೋಯಿತು.
ಮೂಲ ...{Loading}...
ಬಲಜಲಧಿ ಸುಳಿಗೊಂಡು ಪಾರ್ಥನ
ಬಳಿಗೆ ತೆಗೆದುದು ತೆಗೆದುದೀತನ
ಕಲಿತನದ ವಿಕ್ರಮ ಧನಂಜಯನಾ ಧನಂಜಯನ
ಅಳುಕಿದರು ಭೀಮಾದಿಗಳು ತ
ಲ್ಲಳಿಸಿತಾಚೆಯ ಥಟ್ಟು ಕೌರವ
ದಳದ ಕಳಕಳ ಕೆಟ್ಟುದೊಂದರೆಗಳಿಗೆ ಮಾತ್ರದಲಿ ॥52॥