೨೫

೦೦೦ ಸೂ ರಾಯಪರಬಲಮಥನ ...{Loading}...

ಸೂ. ರಾಯಪರಬಲಮಥನ ಕೌರವ
ರಾಯ ಧರಣಿ ವರಾಹ ಕಲಿರಾ
ಧೇಯನೆಚ್ಚನು ರೌದ್ರದರ್ಪದ ಸರ್ಪಬಾಣದಲಿ

೦೦೧ ಹೇಳು ಸಞ್ಜಯ ...{Loading}...

ಹೇಳು ಸಂಜಯ ಹಗೆಗೆ ಬಿದ್ದ ವಿ
ತಾಳವಾವುದು ಕಿವಿಗಳೈದವು
ನಾಲಗೆಯನೊಡ್ಡುವೆನು ವಚನಾಮೃತದ ಸವಿ ಹಿರಿದೆ
ಜಾಳಿಸಿತೆ ಹಗೆ ಕರ್ಣ ಗೆಲಿದನೆ
ಕಾಳೆಗವನೀ ಮಾತುಗಳನೇ
ಹೇಳುತಿರು ಸಾಕೆಂದು ನುಡಿದನು ನಗುತ ಜನನಾಥ ॥1॥

೦೦೨ ಅವನಿಪತಿ ಕೇಳುವಡೆ ...{Loading}...

ಅವನಿಪತಿ ಕೇಳುವಡೆ ಸಾವಿರ
ಕಿವಿಗಳೈದವು ನಿಮ್ಮ ಕರ್ಣನ
ಬವರದಲಿ ರೂಢಿಸಿದ ರೌದ್ರದ ರಾಜಕಾರಿಯವ
ಸವಡಿವೆರಳಿನ ಸೇದುವಂಬಿನ
ತವಕಿಗನ ತಗ್ಗಿಸುವೆ ನಿಲ್ಲೆನು
ತವಗಡದ ಕೋಪದಲಿ ಕಿಡಿಕಿಡಿವೋದನಾ ಕರ್ಣ ॥2॥

೦೦೩ ಮೀರಿತುರಿ ಸುಯ್ಲಿನಲಿ ...{Loading}...

ಮೀರಿತುರಿ ಸುಯ್ಲಿನಲಿ ಕಂಗಳು
ಹೇರಿದವು ಕಡುಗೆಂಪನೊಗಡಿಸಿ
ಕಾರಿದವು ರೋಮಾಳಿ ರೋಷಸ್ವೇದಬಿಂದುಗಳ
ಕೌರಿದವು ಕುಡಿಮೀಸೆ ಕಾದುದು
ಮೋರೆ ಬದ್ದಭ್ರುಕಟಿಯಲಿ ಹುರಿ
ಯೇರಿತಧಿಕಕ್ರೋಧತಾಮಸ ನಿಮ್ಮ ದಳಪತಿಯ ॥3॥

೦೦೪ ಉಗಿದನುರಗಾಸ್ತ್ರವನು ಹೊಮ್ಮೂ ...{Loading}...

ಉಗಿದನುರಗಾಸ್ತ್ರವನು ಹೊಮ್ಮೂ
ಡಿಗೆಯೊಳಗೆ ಹೊರಕಯ್ಯ ಗಾಳಿಗೆ
ಹೊಗೆಯ ಹೊದರಿನ ಹೊರಳಿ ಹಬ್ಬಿತು ಕೂಡೆ ಕಿವಿಯಿಡುತ
ಗಗನ ಗಮನದ ನಿಖಿಳ ವಿಹಗಾ
ಳಿಗಳು ಬೆಂದವು ಗಾಢ ಗರಳದ
ಸೊಗಡ ಸೋಹಿಗೆ ಕಂಠಣಿಸಿತೆರಡೊಡ್ಡು ಕಳವಳಿಸಿ ॥4॥

೦೦೫ ಬೆರಳಲಮ್ಬನು ತೂಗಲುರಿ ...{Loading}...

ಬೆರಳಲಂಬನು ತೂಗಲುರಿ ಫೂ
ತ್ಕರಣೆಯಲಿ ಪಂಠಿಸಿತು ಸುಯ್ಲಿನ
ಧರಧುರದ ಬೆಳುನೊರೆಯ ಲಹರಿಯ ವಿಷದ ಲೋಳೆಗಳ
ಉರವಣಿಸಿದವು ಗರಳ ರಸದ
ಬ್ಬರದ ಬೊಬ್ಬುಳಿಕೆಗಳು ಮುಸುಕಿತು
ಹೊರಳಿಗಿಡಿಗಳ ಛಟಛಟಧ್ವನಿ ಮಸಗಿತಡಿಗಡಿಗೆ ॥5॥

೦೦೬ ಹೊರೆಯವರು ಮರನಾದರಾ ...{Loading}...

ಹೊರೆಯವರು ಮರನಾದರಾ ರಥ
ತುರಗತತಿ ಲಟಕಟಿಸಿದವು ನಿ
ಬ್ಬರದ ಬೆರಗಿನೊಳದ್ದು ಹೋದನು ಶಲ್ಯ ನಿಮಿಷದಲಿ
ಉರಿ ಛಡಾಳಿಸಿ ಪೂತ್ಕೃತಿಯ ಪಂ
ಜರದೊಳಗೆ ಪಲ್ಲವಿಸಿತುಬ್ಬಿದ
ಹೊರಳಿಹೊಗೆಯಂಬರವ ತುಂಬಿತು ಭೂಪ ಕೇಳ್ ಎಂದ ॥6॥

೦೦೭ ಆವರಿಸಿದವು ಪುಷ್ಕಳಾವ ...{Loading}...

ಆವರಿಸಿದವು ಪುಷ್ಕಳಾವ
ರ್ತಾವಳಿಗಳೆನೆ ಬಹಳವಿಷಧೂ
ಮಾವಳಿಯಲೇ ಧಾತುಗೆಟ್ಟುದು ಸಕಳಭುವನಜನ
ದೇವತತಿ ಬೆಂಡಾಯ್ತು ಮೊದಲಿನ
ದೇವರುಬ್ಬಿದರುರಗಪತಿಯ ಫ
ಣಾವಳಿಯ ಗುಡಿಯೆತ್ತಿದವು ಪಾತಾಳಲೋಕದಲಿ ॥7॥

೦೦೮ ಭುಜವ ಹೊಯ್ದರು ...{Loading}...

ಭುಜವ ಹೊಯ್ದರು ಸೂರ್ಯತಕ್ಷಕ
ರಜನ ಸಭೆಯಲಿ ಭಯದಿ ಸುರಪತಿ
ಭಜಿಸಿದನು ಗರುಡನನು ನಿರ್ವಿಷಮಸ್ತು ನರಗೆನುತ
ಗಜರಿದವು ನಿಸ್ಸಾಳವಾದ್ಯ
ವ್ರಜದ ಕಹಳೆಯ ಭಟರ ಬೊಬ್ಬೆಯ
ಗಜಬಜಿಕೆ ಘಾಡಿಸಿತು ಕೌರವಸೈನ್ಯಶರಧಿಯಲಿ ॥8॥

೦೦೯ ಹಣುಗಿದರು ಭೀಮಾದಿಗಳು ...{Loading}...

ಹಣುಗಿದರು ಭೀಮಾದಿಗಳು ಕ
ಟ್ಟೊಣಗಿಲಾದವು ಭಟರ ಮೋರೆಗ
ಳೆಣಿಸುತಿರ್ದರು ಜಪವನರ್ಜುನ ಕೃಷ್ಣನೆಂಬವರು
ಸೆಣಸುವನು ಗಡ ಕೌರವನೊಳಿ
ನ್ನುಣಲಿ ಧರೆಯನು ಧರ್ಮಸುತನೆಂ
ದಣಕವಾಡಿತು ನಿನ್ನ ದುಷ್ಪರಿವಾರ ಹರುಷದಲಿ ॥9॥

೦೧೦ ಮೂಡಿಗೆಯೊಳಮ್ಬುಗಿದು ...{Loading}...

ಮೂಡಿಗೆಯೊಳಂಬುಗಿದು ತಿರುವಿಗೆ
ಹೂಡಲೀ ಹದನಾಯ್ತು ಚಾಪದೊ
ಳೋಡಿಸಿದಡೇನಹುದು ಹರಹರ ಹರ ಮಹಾಸ್ತ್ರವಲೆ
ನೋಡಿರೈ ಗುರುಸುತಕೃಪಾದಿಗ
ಳೋಡದಿರಿ ನೀವೆನುತ ಪುಳಕದ
ಬೀಡಿನಲಿ ಮೈಮುಳುಗಿ ತೂಗಾಡಿದನು ಕುರುರಾಯ ॥10॥

೦೧೧ ಉರಿಯ ಜೀರ್ಕೊಳವಿಗಳವೊಲು ...{Loading}...

ಉರಿಯ ಜೀರ್ಕೊಳವಿಗಳವೊಲು ಪೂ
ತ್ಕರಿಸಿದವು ಫಣಿ ವದನದಲಿ ದ
ಳ್ಳುರಿಯ ಸಿಮಿಸಿಮಿಗಳ ತುಷಾರದ ಕಿಡಿಯ ತುಂತುರಿನ
ಹೊರಳಿಗಿಡಿಗಳ ಕರ್ಬೊಗೆಯ ಕಾ
ಹುರದ ಸುಯ್ಲಿನ ಝಳವ ಗರಳಾ
ಕ್ಷರದ ಜಿಗಿಯಲಿ ಮಾತು ತೋರಿತು ಬೆಸಸು ಬೆಸಸೆನುತ ॥11॥

೦೧೨ ಹೂಡಿದನು ತಿರುವಿನಲಿ ...{Loading}...

ಹೂಡಿದನು ತಿರುವಿನಲಿ ಬಾಣದ
ಝಾಡಿಯುರಿನಾಲಗೆಯ ನಿರುತವ
ನೋಡಿ ಪಾರ್ಥನ ಗಳಕೆ ಸಂಧಾನವ ನಿಧಾನಿಸುತ
ನೋಡಿದನು ಶಲ್ಯನನು ಮಿಗೆ ತೂ
ಗಾಡಿದನು ಕೌರವನ ಪುಣ್ಯದ
ಬೀಡು ಬಿಡುವಡೆ ಕಾಣಲಹುದಿಂದೆಂದನಾ ಕರ್ಣ ॥12॥

೦೧೩ ಏನು ಸಾರಥಿ ...{Loading}...

ಏನು ಸಾರಥಿ ಸರಳು ಪಾಂಡವ
ಸೇನೆಯನು ಗೆಲಲಹುದೆ ಪಾರ್ಥನ
ಮಾನಿನಿಗೆ ವೈಧವ್ಯದೀಕ್ಷಾವಿಧಿಯ ಕೊಡಲಹುದೆ
ಆನಲಮ್ಮುವರುಂಟೆ ನಿನಗಿದು
ಸಾನುರಾಗವೆ ಹೇಳೆನಲು ರವಿ
ಸೂನುವಿನ ರೌದ್ರಾಸ್ತ್ರವನು ಹೊಗಳಿದನು ಮಾದ್ರೇಶ ॥13॥

೦೧೪ ಲೇಸುಮಾಡಿದೆ ಕರ್ಣ ...{Loading}...

ಲೇಸುಮಾಡಿದೆ ಕರ್ಣ ಕೌರವ
ನೀಸುದಿನ ಸಾಕಿದ ಫಲವ ನೀ
ನೈಸಲೇ ತೋರಿದವನೀ ನೃಪಸೈನ್ಯಶರಧಿಯಲಿ
ಈಸು ಕಾಳೆಗವಾದುದೀ ಕ
ಟ್ಟಾಸುರದ ಸರಳೆಲ್ಲಿ ಗುಪ್ತಾ
ವಾಸವಾದುದು ಪೂತುರೆಂದನು ಶಲ್ಯನಿನಸುತನ ॥14॥

೦೧೫ ಆಯಿತಿದು ಸರಳೊಳ್ಳಿತೈ ...{Loading}...

ಆಯಿತಿದು ಸರಳೊಳ್ಳಿತೈ ಕುರು
ರಾಯನಭ್ಯುದಯ ಪ್ರಪಂಚವಿ
ದಾಯಿತೌ ಸಂಧಾನವೊಡಬಡದೆನ್ನ ಚಿತ್ತದಲಿ
ಸಾಯಕವ ನೀ ತಿರುಗಿ ತೊಡು ನಿ
ರ್ದಾಯದಲಿ ನೆಲನಹುದಲಾ ರಾ
ಧೇಯ ಎಂದನು ಶಲ್ಯನವನೀಪಾಲ ಕೇಳ್ ಎಂದ ॥15॥

೦೧೬ ಕೊರಳಿಗೊಡ್ಡಲು ಹೊಳ್ಳುವಾರಿದ ...{Loading}...

ಕೊರಳಿಗೊಡ್ಡಲು ಹೊಳ್ಳುವಾರಿದ
ಸರಳು ಮಕುಟವ ತಾಗುವುದು ಮೇ
ಣುರಕೆ ತೊಟ್ಟರೆ ಕೊಯ್ವುದೀಗಳೆ ಕೊರಳನರ್ಜುನನ
ಮರಳಿ ತೊಡು ತೊಡು ಬೇಗ ಕೌರವ
ನರಸುತನವುಳಿವುದು ಕಣಾ ಹೇ
ವರಿಸದಿರು ಹೇಳುವುದು ಪಥ್ಯವಿದೆಂದನಾ ಶಲ್ಯ ॥16॥

೦೧೭ ಒನ್ದು ಶರಸನ್ಧಾನ ...{Loading}...

ಒಂದು ಶರಸಂಧಾನ ನಾಲಗೆ
ಯೊಂದು ನಮ್ಮಲಿ ಕುಟಿಲವಿದ್ಯವ
ನೆಂದು ಕಂಡೈ ಶಲ್ಯ ನಾವಡಿಯಿಡೆವಧರ್ಮದಲಿ
ಇಂದು ಹೂಡಿದ ಶರವನಿಳುಹುವು
ದಂದವೇ ನೀನರಿಯೆ ಹೆರಸಾ
ರೆಂದು ತಿರುವಿನೊಳಂಬನೊದೆದನು ಕರ್ಣ ಬೊಬ್ಬಿಡುತ ॥17॥

೦೧೮ ಏನ ಹೇಳುವೆ ...{Loading}...

ಏನ ಹೇಳುವೆ ಬಳಿಕ ಭುವನ
ಗ್ಲಾನಿಯನು ತೆಗೆದೋಡಿದರು ವೈ
ಮಾನಿಕರು ವೆಂಠಣಿಸಿತುರಿಯಪ್ಪಳಿಸಿತಂಬರವ
ಕಾನಿಡುವ ಕಬ್ಬೊಗೆಯ ಚೂರಿಸು
ವಾನನದ ಕಟವಾಯ ಲೋಳೆಯ
ಜೇನಹುಟ್ಟಿಯ ಬಸಿವ ವಿಷದಲಿ ಬಂದುದುರಗಾಸ್ತ್ರ ॥18॥

೦೧೯ ಕಾದಲೆಳಸಿದ ಪಾಣ್ಡವರ ...{Loading}...

ಕಾದಲೆಳಸಿದ ಪಾಂಡವರ ಸಂ
ವಾದ ತೀರಿತು ಕೌರವೇಂದ್ರನು
ಸಾಧಿಸಿದ ಹಗೆ ಸಫಲವಾದುದು ಸಮರಭೂಮಿಯಲಿ
ಹೋದನರ್ಜುನನೀ ಮಹಾಸ್ತ್ರದ
ಬಾಧೆಗಿದಿರಿಲ್ಲೆನುತ ಘನಚಿಂ
ತೋದಧಿಯಲುರೆ ಮುಳುಗಿ ಮರುಗಿತು ಮೇಲೆ ಸುರಕಟಕ ॥19॥

೦೨೦ ಹಾ ವೃಕೋದರ ...{Loading}...

ಹಾ ವೃಕೋದರ ನಕುಲ ಹಾ ಸಹ
ದೇವ ಹಾ ಧರ್ಮಜ ಧನಂಜಯ
ಹಾವಿನಗ್ನಿಗೆ ಹವಿಗಳಾದಿರೆ ಹಾ ಮಹಾದೇವ
ಸಾವಡೆಯು ಶಸ್ತ್ರಪ್ರಹಾರದ
ಸಾವು ಕ್ಷತ್ರಿಯ ಕುಲಕೆ ಭಂಗವೆ
ಹಾ ವಿಧಿಯೆ ಎಂದೊದರಿ ಮರುಗಿತು ಪಾಂಡುಸುತಸೇನೆ ॥20॥

೦೨೧ ತುರಗತತಿ ತಲೆಗುತ್ತಿದವು ...{Loading}...

ತುರಗತತಿ ತಲೆಗುತ್ತಿದವು ಮದ
ಕರಿಗಳೊದರಿದವಸವಳಿದು ರಥ
ತುರಗವೆಳೆದವು ರಥವನಾಗಳೆ ವಿಷದ ಝಳಹೊಯ್ದು
ಸುರಿವ ಗರಳದ ಗಾಳಿ ಸೋಂಕಿದ
ನರಗೆ ನಂಜೇರಿತು ಭಯಂಕರ
ತರದ ಭಾರಿಯ ವಿಷಕೆ ಕೊಳ್ಗುದಿಗೊಂಡುದರಿಸೇನೆ ॥21॥

೦೨೨ ಗರುಡಪಞ್ಚಾಕ್ಷರಿಯ ಮನ್ತ್ರೋ ...{Loading}...

ಗರುಡಪಂಚಾಕ್ಷರಿಯ ಮಂತ್ರೋ
ಚ್ಚರಣೆಯಲಿ ಭೂನಾಗಸತ್ವದ
ಬೆರಳ ಮುದ್ರಿಕೆಗಳಲಿ ರಕ್ಷಾಯಂತ್ರಮಂತ್ರದಲಿ
ಮರಕತದ ಘುಟಿಕೆಯಲಿ ವಿಷಸಂ
ಹರಣ ವಿವಿಧೋಪಾಯದಲಿ ನೃಪ
ವರರು ನಿಂದುದು ಭೀಮಸೇನಾದಿಗಳು ದುಗುಡದಲಿ ॥22॥

೦೨೩ ಹಿನ್ದೆ ಭಗದತ್ತಾಯುದಧಿ ...{Loading}...

ಹಿಂದೆ ಭಗದತ್ತಾಯುದಧಿ ನೆರೆ
ಬೆಂದು ಬದುಕಿತು ಬಳಿಕಲೀ ಗುರು
ನಂದನನ ನಾರಾಯಣಾಸ್ತ್ರದಿನಾದುದಪಘಾತ
ಅಂದುಪಾಯದಲುಳಿದೆವೀ ಗೋ
ವಿಂದನಿಂದಪಮೃತ್ಯುವಿದನು ಮು
ಕುಂದ ತಾನೇ ಬಲ್ಲನೆನುತಿರ್ದುದು ಭಟಸ್ತೋಮ ॥23॥

೦೨೪ ಜನಪ ಕೇಳೈ ...{Loading}...

ಜನಪ ಕೇಳೈ ಬಳಿಕ ಭೀಮಾ
ರ್ಜುನ ನಕುಲ ಸಹದೇವ ಸಾತ್ಯಕಿ
ತನತನಗೆ ದಿವ್ಯಾಸ್ತ್ರನಿಕರದಲೆಚ್ಚರಹಿಶರವ
ಅನಿತು ಶರವನು ನುಂಗಿ ಮಗುಳೆ
ಚ್ಚನಿತನೊಳುಕೊಳುತಾಜ್ಯಧಾರೆಗೆ
ನನೆದ ಹುತವಹನಂತೆ ಹೆಚ್ಚಿತು ತೀವ್ರ ಫಣಿಬಾಣ ॥24॥

೦೨೫ ಆರು ನಿಲಿಸುವರಕಟ ...{Loading}...

ಆರು ನಿಲಿಸುವರಕಟ ದುಷ್ಪ್ರತಿ
ಕಾರ ಶರವಿದು ಭೀಮಪಾರ್ಥರ
ಕೂರಲಗುಗಳು ಶಿವಶಿವಾ ಕೆಚ್ಚಾಯ್ತು ಕದಳಿಗಳ
ಕೌರವನ ಜಯವಧುವಿನೊಡೆನೆಯ
ಸೇರುಗೆಯ ಕೂಟಣೆಯೊ ಶರವಿ
ನ್ನಾರಿಗೊರಲುವೆವಕಟೆನುತ ತಲ್ಲಣಿಸಿತರಿಸೇನೆ ॥25॥

೦೨೬ ನಾಲಗೆಯ ಚೂರಣದ ...{Loading}...

ನಾಲಗೆಯ ಚೂರಣದ ದಳ್ಳುರಿ
ಜಾಳಿಗೆಯ ಚಮ್ಮಟದ ಗರಳದ
ಲೋಳೆಗಳ ಚಾರಣದ ಕಿಡಿಗಳ ಖಡುಗ ಪೂರಯದ
ಧೂಳಿಯುಗೆಯಬ್ಬರದ ಬಲುಗೈ
ಯಾಳವೊಲು ಭುಗಿಲೆಂಬ ರವದಲಿ
ಮೇಲುವಾಯ್ದುದು ಕೊರಳ ಸರಿಸಕೆ ಕಲಿಧನಂಜಯನಾ ॥26॥

೦೨೭ ಅರಸ ಕೇಳೇಸೇಸು ...{Loading}...

ಅರಸ ಕೇಳೇಸೇಸು ಬಾರಿಯ
ಕೊರಳಡಾಯುಧ ಕಳಚದೇಸು
ಬ್ಬರದ ಮಾರಿಯ ಬಿಂಕ ಮುರಿಯದು ಪಾಂಡುತನಯರಿಗೆ
ಹರಿಯ ಹರಹಿನ ವಜ್ರಪಂಜರ
ದರಗಿಣಿಯಲೇ ಪಾರ್ಥನಹಿ ಮಂ
ಜರನ ಮರುಕವ ಕೊಂಬುದೇ ಧೃತರಾಷ್ಟ್ರ ಕೇಳ್ ಎಂದ ॥27॥

೦೨೮ ನಡುಗುತಿರ್ದುದು ಸುರಕಟಕ ...{Loading}...

ನಡುಗುತಿರ್ದುದು ಸುರಕಟಕ ಬೊ
ಬ್ಬಿಡುತರ್ಲಿದುದು ನಮ್ಮ ಬಲ ಮೊರೆ
ಯಿಡುತಲಿರ್ದುದು ಪಾರ್ಥನಳವಿಗೆ ಪಾಂಡುಸುತಸೇನೆ
ತಡೆಯದೈದಂಗುಲಕೆ ರಥವನು
ನೆಡಿಸಿದನು ಹರಿ ಧರೆಗೆ ಪಾರ್ಥನ
ಮುಡಿಯ ಸರಿಸಕೆ ಬಾಣ ಬಂದುದು ಕೊಲುವ ತವಕದಲಿ ॥28॥

೦೨೯ ಅಣೆದುದಹಿ ಮಕುಟವನು ...{Loading}...

ಅಣೆದುದಹಿ ಮಕುಟವನು ತಾರಾ
ಗಣದ ಮಧ್ಯದ ಚಂದ್ರಮನ ಹೊ
ಯ್ದಣಲೊಳಡಸಿದ ರಾಹುವಿನ ರಹಿಯಾಯ್ತು ನಿಮಿಷದಲಿ
ಕುಣಿಕೆ ಮುರಿದುದು ಮೌಕ್ತಿಕದ ಕೀ
ಲಣದ ವಜ್ರದ ಮಾಣಿಕದ ವರ
ಮಣಿಗಳೊಕ್ಕವು ರಕುತ ಮಿದುಳೊಡಸೂಸಿದಂದದಲಿ ॥29॥

೦೩೦ ಬಿದ್ದುದೇ ಫಲುಗುಣನ ...{Loading}...

ಬಿದ್ದುದೇ ಫಲುಗುಣನ ತಲೆಯಡಿ
ಗದ್ದುದೇ ನಮ್ಮಾಟ ಜಯವಧು
ಕದ್ದಳೇ ರಣದೊಸಗೆಗೇಳ್ವಳೆ ದ್ರೌಪದಾದೇವಿ
ಇದ್ದುದೇ ಧರ್ಮಜನ ಸಿರಿ ತಳ
ಕದ್ದುದೇ ನಮ್ಮೊಡಲನಸು ಬಿಡ
ದಿದ್ದುದೇ ಹಾ ಎನುತ ಭೀಮಾದಿಗಳು ಹೊರಳಿದರು ॥30॥

೦೩೧ ವಿಷವ ತೆಗೆದಳು ...{Loading}...

ವಿಷವ ತೆಗೆದಳು ದ್ರುಪದಸುತೆ ಕೈ
ಮುಸುಕಿನಲಿ ಚೀಲಾಯವುಗಿದನು
ವಸುಮತೀಶ್ವರನಾ ಮುಹೂರ್ತಕೆ ದೂತರೈತಂದು
ಒಸಗೆ ಜೀಯರ್ಜುನನ ಮಕುಟದ
ಬೆಸುಗೆ ಮುರಿದುದು ಹರಿ ವರೂಥವ
ಕುಸಿಯಲೊತ್ತಿದನಿಂದು ತಪ್ಪಿತು ತೀವ್ರ ಫಣಿಬಾಣ ॥31॥

೦೩೨ ಎನಲು ಸನ್ತೈಸಿತ್ತು ...{Loading}...

ಎನಲು ಸಂತೈಸಿತ್ತು ರಾಯನ
ಮನೆಯವರು ಪಾಂಡವರ ಸೇನಾ
ವನಧಿ ಬಿಡೆ ಗರ್ಜಿಸಿತು ಬಹುವಿಧ ವಾದ್ಯರಭಸದಲಿ
ವಿನುತ ಮಕುಟವ ಕಡಿದು ಕಂಗನೆ
ಕನಲಿತಹಿ ತಲೆ ಬದುಕಿತೇ ಹಾ
ಎನುತ ಹಲುಮೊರೆಯುತ್ತ ಹರಿದುದು ಕರ್ಣನಿದ್ದೆಡೆಗೆ ॥32॥

೦೩೩ ತೊಡು ತೊಡಿನ್ನೊಮ್ಮೆನ್ನನಕಟಾ ...{Loading}...

ತೊಡು ತೊಡಿನ್ನೊಮ್ಮೆನ್ನನಕಟಾ
ಕೆಡಿಸಿದೆಯಲಾ ರಾಜಕಾರ್ಯವ
ನುಡಿದು ಹೇಳನೆ ನಿನ್ನ ಸಾರಥಿ ಲಕ್ಷ್ಯಭೇದನವ
ಅಡಗಲಿನ್ನೀರೇಳು ಭುವನದೊ
ಳಡಗಿ ತಿಂಬೆನು ನರನನೆಂದವ
ಗಡಿಸಿ ಕರ್ಣನ ಬೆಸನ ಬೇಡಿತು ಮತ್ತೆ ಫಣಿಬಾಣ ॥33॥

೦೩೪ ಶಿವನ ಮರೆಯನು ...{Loading}...

ಶಿವನ ಮರೆಯನು ಹೊಗಲಿ ಮೇಣ್ ವಾ
ಸವನ ಸೀಮೆಯೊಳಿರಲಿ ಪಾತಾ
ಳವನು ಹೊಗಲಂಬುಧಿಯ ಮುಳುಗಲಿ ಜವನ ಕೆಳೆಗೊಳಲಿ
ಭುವನಕತಿಶಯವಾಗಿ ರಣದಲಿ
ತಿವಿವೆ ಪಾರ್ಥನನೆನಲು ಕೇಳಿದು
ರವಿಯ ಮಗ ಬೆರಗಾಗಿ ಬೆಸಗೊಂಡನು ಶಿಳೀಮುಖವ ॥34॥

೦೩೫ ಎಸಲು ಸರಳುಗಳತ್ತಲೇ ...{Loading}...

ಎಸಲು ಸರಳುಗಳತ್ತಲೇ ಕೀ
ಲಿಸುವವಲ್ಲದೆ ಮತ್ತೆ ಮರಳಿದು
ಬೆಸನ ಬೇಡುವ ಬಾಣವೆಂಬುದನರಿಯೆ ನಾ ಕೇಳ್ದು
ವಿಶಿಖ ನೀನಾರೆನಲು ಕಿಡಿಗಳ
ಕುಸುರಿಗಳನುದ್ಗರಿಸಿ ನುಡಿದುದು
ವಿಷಮನರಿಯಾ ಕಾಳಕೂಟ ಕರಂಡ ಕಾನನದ ॥35॥

೦೩೬ ಉರಗಪತಿ ತಾನಶ್ವಸೇನನು ...{Loading}...

ಉರಗಪತಿ ತಾನಶ್ವಸೇನನು
ಸುರಪತಿಯ ಖಾಂಡವದೊಳಿಹೆನದ
ನುರುಹುವಂದಿನೊಳೆನ್ನನರೆಗಡಿದೀ ದುರಾತ್ಮಕನ
ಶಿರವನರಿವೆನು ಬೇಗ ತೊಡು ತೊಡು
ಬೆರಗ ಹಾರದಿರೆನಲು ಸತ್ಯದ
ಪರಮಸೀಮೆಗೆ ತಪ್ಪಲಮ್ಮದೆ ಕರ್ಣನಿಂತೆಂದ ॥36॥

೦೩೭ ಅರಿಯೆ ನಾ ...{Loading}...

ಅರಿಯೆ ನಾ ನೀನೆಂದು ಲೋಗರ
ಮರೆಯಲರಿಗಳ ಗೆಲುವ ಕರ್ಣನೆ
ಯರಿಯಲಾ ನೀನೆನ್ನ ಹವಣನು ತೊಡುವುದಿಲ್ಲೆನಲು
ಮರುಗಿದನು ಶಲ್ಯನು ನೃಪಾಲನ
ನಿರಿದೆಯೋ ರಾಧೇಯ ನೀನೆಂ
ದುರುಬೆಯಲಿ ಕೋಪಿಸುತ ಕರ್ಣನ ಬಯ್ದು ಗಜರಿದನು ॥37॥

೦೩೮ ತೊಡು ತೊಡೆಲವೋ ...{Loading}...

ತೊಡು ತೊಡೆಲವೋ ಶರವು ರಿಪುವನು
ತಡೆಗಡಿವೆನೆಂದೊದರುತದೆ ನೃಪ
ನೊಡೆತನಕೆ ನೀ ಬಯಸಿದಾ ಮತವುಂಟೆ ರಿಪುಗಳಲಿ
ನುಡಿದ ಭಾಷೆಗೆ ನಾವು ಹೇಳಿತ
ನೊಡಬಡುವ ನೀನಲ್ಲ ಕುರುಪತಿ
ಬಿಡದೆ ನಿನ್ನನು ಸಲಹಿತಕ್ಕುಪಕಾರಿ ನೀನೆಂದ ॥38॥

೦೩೯ ಎಲವೊ ನಿನ್ನನು ...{Loading}...

ಎಲವೊ ನಿನ್ನನು ಜಗವರಿಯೆ ಕ
ಬ್ಬಿಲನ ಮಗನನು ಮರಸಿ ಕುರುಪತಿ
ಕುಲಜನನು ಮಾಡಿದನಲಾ ಒಡನುಂಡು ಪತಿಕರಿಸಿ
ನೆಲನು ಹೇಸದೆ ನಿನ್ನ ಕೀರ್ತಿಯ
ಬೆಳಗು ಮಾಸದೆ ಬಿಡದೆ ಸಾಕಿದ
ಹೊಲೆಯನವಸರಕೊದಗುವನು ನೀ ಕಷ್ಟ ಹೋಗೆಂದ ॥39॥

೦೪೦ ನಮ್ಬಿ ಹಿಡಿದರೆ ...{Loading}...

ನಂಬಿ ಹಿಡಿದರೆ ನದಿಯ ಮಗ ಹಗೆ
ಯಂಬಿಗಿತ್ತನು ಕಾಯವನು ಮಗ
ನೆಂಬ ನೆವದಲಿ ತನುವ ಬಿಸುಟನು ಗರುಡಿಯಾಚಾರ್ಯ
ಅಂಬು ಬೆಸನನು ಬೇಡಿದಡೆ ನೀ
ನೆಂಬನೀ ವಿಧಿಯಾದೆ ಮೂವರ
ನಂಬಿ ಕೌರವ ಕೆಟ್ಟನಕಟಕಟೆಂದನಾ ಶಲ್ಯ ॥40॥

೦೪೧ ಮಾತೆಗಿತ್ತೆನು ಭಾಷೆಯನು ...{Loading}...

ಮಾತೆಗಿತ್ತೆನು ಭಾಷೆಯನು ನಿ
ನ್ನಾತಗಳೊಳೈವರೊಳಗಾರಿದಿ
ರಾತಡೆಯು ತಲೆಗಾದು ಬಿಡುವೆನು ಕೊಲುವುದಿಲ್ಲೆಂದು
ಮಾತುಗಳು ಕವಲಾದ ಬಳಿಕಿ
ನ್ನೇತಕೀ ತನುವಿದನು ಪಾರ್ಥನ
ಖಾತಿಗೊಪ್ಪಿಸಿ ಕಳೆವೆನೆಂದನು ತನ್ನ ಮನದೊಳಗೆ ॥41॥

೦೪೨ ಮರುಳಲಾ ಮಾದ್ರೇಶ ...{Loading}...

ಮರುಳಲಾ ಮಾದ್ರೇಶ ಮರಳಿದ
ಶರವ ತೊಡುವೆನೆ ಸೈರಿಸೆನೆ ಕಾ
ತರಿಸಿ ವಾಘೆಯ ಬಿಸುಟು ಕಿಡಿಕಿಡಿವೋಗಿ ಖಾತಿಯಲಿ
ಅರಸನೊಲಿದಂತಾಗಲೆನ್ನದು
ಮರುಳುತನ ಕುಲಹೀನನಲಿ ಗುಣ
ವರಸಲೇಕೆಂದೆನುತ ಧುಮ್ಮಿಕ್ಕಿದನು ಧಾರುಣಿಗೆ ॥42॥

೦೪೩ ಕಣ್ಡುದೀ ವ್ಯತಿಕರವನೀತನ ...{Loading}...

ಕಂಡುದೀ ವ್ಯತಿಕರವನೀತನ
ನಂಡಲೆದು ಫಲವಿಲ್ಲಲಾ ಕೈ
ಕೊಂಡು ನೋಡುವೆನೆನ್ನ ಸಾಮಥ್ರ್ಯದ ಸಘಾಡದಲಿ
ಚಂಡಿಯಾದೆನು ತಾನೆನುತ ಖತಿ
ಗೊಂಡು ಮರಳಿತು ಸರ್ಪಶರವಾ
ಖಂಡಳಾತ್ಮಜನತ್ತ ಹಾಳಾಹಳದ ಚೂಣಿಯಲಿ ॥43॥

೦೪೪ ಇವನ ಬಲ್ಲೈ ...{Loading}...

ಇವನ ಬಲ್ಲೈ ಪಾರ್ಥ ಚಕ್ಷು
ಶ್ರವನಿವನು ತಕ್ಷಕನ ಮಗ ಖಾಂ
ಡವದ ಬೇಳಂಬದಲಿ ಬದುಕಿದ ತಲೆಯೊಳಡಹಾಯ್ದು
ಇವನ ಮೂಡಿಗೆಯೊಳಗೆ ಶರವಾ
ಯ್ತಿವನು ತಾನೇ ಮರಳಿದನು ನೀ
ನವಧರಿಸಿಕೊಳ್ಳೆನುತ ನುಡಿದನು ದೈತ್ಯರಿಪು ನಗುತ ॥44॥

೦೪೫ ಅರಸ ಕೇಳೈ ...{Loading}...

ಅರಸ ಕೇಳೈ ಕರ್ಣಶಕ್ತಿ
ಸ್ಫುರಣಸಹಿತೀ ಬಾಣವತಿದು
ರ್ಧರವದಲ್ಲದೆ ಬರಿಯ ವಿಷದುಬ್ಬರದ ಸಾಹಸವ
ನರನಲೇ ಕೈಕೊಳ್ಳದೀ ಬಹ
ಸರಳನೈದಂಬುಗಳಲೆಡೆಯಲಿ
ತರಿದು ಬಿಸುಟನು ವೀರನಾರಾಯಣನ ನೇಮದಲಿ ॥45॥

+೨೫ ...{Loading}...