೦೦೦ ಸೂ ಶಿವಶಿವಿದು ...{Loading}...
ಸೂ. ಶಿವಶಿವಿದು ತಾರಕನ ಗುಹನಾ
ಹವವೊ ಮೇಣ್ ರಾವಣನ ರಾಮನ
ಬವರವೋ ಹೊಸತಾಯ್ತು ಕರ್ಣಾರ್ಜುನರ ಸಂಗ್ರಾಮ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ : ಶಿವಶಿವಾ ಇದು ತಾರಕಾಸುರ -ಷಣ್ಮುಖರ ಯುದ್ಧವೋ ಅಥವಾ ರಾವಣ- ರಾಮರ ಯುದ್ಧವೋ ಎನ್ನುವಂತೆ ಕರ್ಣಾರ್ಜುನರ ಯುದ್ಧ ಹೊಸದಾಗಿ ಕಾಣುತ್ತಿತ್ತು.
ಮೂಲ ...{Loading}...
ಸೂ. ಶಿವಶಿವಿದು ತಾರಕನ ಗುಹನಾ
ಹವವೊ ಮೇಣ್ ರಾವಣನ ರಾಮನ
ಬವರವೋ ಹೊಸತಾಯ್ತು ಕರ್ಣಾರ್ಜುನರ ಸಂಗ್ರಾಮ
೦೦೧ ಕೇಳು ಧೃತರಾಷ್ಟ್ರಾವನಿಪ ...{Loading}...
ಕೇಳು ಧೃತರಾಷ್ಟ್ರಾವನಿಪ ಭೂ
ಪಾಲ ಮೊಗದಿರುಹಿದೊಡೆ ಬಳಿಕೀ
ಕೋಲಗುರುವಿನಸೂನು ಮುರಿದನು ಬಿಗಿದ ದುಗುಡದಲಿ
ಕೋಲ ಹೊದೆಯೆಂಬತ್ತು ಬಂಡಿಯ
ಹೇಳಿದನು ಕರ್ಣಂಗೆ ಕುರುಭೂ
ಪಾಲ ತಾನೊತ್ತಾಗಿ ನಿಂದನು ಸಕಲದಳಸಹಿತ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧೃತರಾಷ್ಟ್ರನೇ ಕೇಳು, “ದುರ್ಯೋಧನನು ತನ್ನ ಮಾತಿಗೆ ಮುಖ ತಿರುಗಿಸಿದಾಗ, ಬಾಣವಿದ್ಯೆಯ ಗುರು ದ್ರೋಣಾಚಾರ್ಯನ ಮಗ ಅಶ್ವತ್ಥಾಮನು ದುಃಖದಿಂದ ಹಿಂತಿರುಗಿದನು. ಈ ಕಡೆ ಕೌರವನು, ಎಂಬತ್ತು ಬಂಡಿಗಳಲ್ಲಿ ಬಾಣಗಳ ಹೊರೆಯನ್ನು ಕರ್ಣನಿಗೆ ಒದಗಿಸುವಂತೆ ಹೇಳಿ ಸಕಲ ಸೈನ್ಯ ಸಮೇತನಾಗಿ ತಾನೇ ಅವನ ಸಹಾಯಕ್ಕೆ ನಿಂತುಕೊಂಡನು.” ಎಂದು ಸಂಜಯನು ಹೇಳಿದನು
ಮೂಲ ...{Loading}...
ಕೇಳು ಧೃತರಾಷ್ಟ್ರಾವನಿಪ ಭೂ
ಪಾಲ ಮೊಗದಿರುಹಿದೊಡೆ ಬಳಿಕೀ
ಕೋಲಗುರುವಿನಸೂನು ಮುರಿದನು ಬಿಗಿದ ದುಗುಡದಲಿ
ಕೋಲ ಹೊದೆಯೆಂಬತ್ತು ಬಂಡಿಯ
ಹೇಳಿದನು ಕರ್ಣಂಗೆ ಕುರುಭೂ
ಪಾಲ ತಾನೊತ್ತಾಗಿ ನಿಂದನು ಸಕಲದಳಸಹಿತ ॥1॥
೦೦೨ ಅರಸ ಹೇಳುವುದೇನು ...{Loading}...
ಅರಸ ಹೇಳುವುದೇನು ಬಳಿಕಿ
ಬ್ಬರ ಮಹಾಕೋದಂಡಚಂಡ
ಸ್ಫುರಿತಮೌರ್ವೀನಾದ ಮುಸುಕಿತು ಸಕಲ ದಿಗುತಟವ
ಸ್ಫುರದಮಂದೋದ್ಭಿನ್ನ ಭಾಸ್ವ
ತ್ಕಿರಣಗರ್ಭಕಳಾಪಭದ್ರಾ
ಕರಣಕಳಿತಧ್ವಾಂತಬಿಂಬಕಳಂಬಸಂತತಿಯ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ದೊರೆಯೇ ಏನು ಹೇಳಲಿ, ಕರ್ಣ ಅರ್ಜುನರ ದೊಡ್ಡ ಬಿಲ್ಲುಗಳ ಹೆದೆಯಿಂದ ಉಂಟಾದ ಶಬ್ದವು ದಿಕ್ಕಿನ ಎಲ್ಲಾ ಅಂಚುಗಳನ್ನು ಮುಚ್ಚಿಹಾಕಿತು. ಬಾಣಗಳು ಕವಿದಾಗ ಉಂಟಾದ ಕತ್ತಲೆಯನ್ನು ಬಾಣಗಳ ಕಿಡಿUಳಿಂದ ಹೊರಹೊಮ್ಮಿದ ಕಾಂತಿಯು ನಿವಾರಿಸಿತು.
ಪದಾರ್ಥ (ಕ.ಗ.ಪ)
ಧ್ವಾಂತ-ಕತ್ತಲೆ, ಕಳಂಬ-ಬಾಣ
ಭದ್ರಾಕರಣ - ಕ್ಷೌರ, ಇಲ್ಲಿ ನಿವಾರಣೆ
ಮೂಲ ...{Loading}...
ಅರಸ ಹೇಳುವುದೇನು ಬಳಿಕಿ
ಬ್ಬರ ಮಹಾಕೋದಂಡಚಂಡ
ಸ್ಫುರಿತಮೌರ್ವೀನಾದ ಮುಸುಕಿತು ಸಕಲ ದಿಗುತಟವ
ಸ್ಫುರದಮಂದೋದ್ಭಿನ್ನ ಭಾಸ್ವ
ತ್ಕಿರಣಗರ್ಭಕಳಾಪಭದ್ರಾ
ಕರಣಕಳಿತಧ್ವಾಂತಬಿಂಬಕಳಂಬಸಂತತಿಯ ॥2॥
೦೦೩ ಗಬ್ಬರಿಸಿದುದು ಗಗನವನು ...{Loading}...
ಗಬ್ಬರಿಸಿದುದು ಗಗನವನು ಬಲು
ಬೊಬ್ಬೆ ಬಹುವಿಧವಾದ್ಯರಭಸದ
ನಿಬ್ಬರದ ನಿಡುಸೂಳು ಸೂಳೈಸಿದುದು ದಿಗುತಟವ
ಉಬ್ಬುಗೆಡದಿರಿ ಕರ್ಣಪಾರ್ಥ ಸ
ಗರ್ಭರಹಿರೋ ಪೂತು ಮಝ ಎಂ
ಬಬ್ಬರಣೆ ಸುರರೂಢಿಯಲಿ ಝೊಂಪಿಸಿತು ಮೂಜಗವ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೈನಿಕರು ಹಾಕುತ್ತಿದ್ದ ಬೊಬ್ಬೆ. ಆಕಾಶವನ್ನೆಲ್ಲಾ ಆವರಿಸಿತು. ಅನೇಕ ಬಗೆಯ ವಾದ್ಯಗಳ ರಭಸದ ಅತಿಶಯವಾದ ದೀರ್ಘವಾದ ಕೂಗು ದಿಕ್ಕಿನ ಅಂಚುಗಳನ್ನು ಹೊಡೆದವು. “ಉತ್ಸಾಹವನ್ನು ಕಳೆದುಕೊಳ್ಳಬೇಡಿ. ನೀವು ಒಳ್ಳೆಯ ಗರ್ಭದಲ್ಲಿ ಹುಟ್ಟಿದವರು. ‘ಭೇಷ್’ " ಎಂದು ದೇವತೆಗಳು ಕೂಗುತ್ತಿದ್ದುದು ಮೂರೂ ಲೋಕಗಳನ್ನು ಅಲುಗಾಡಿಸಿತು.
ಮೂಲ ...{Loading}...
ಗಬ್ಬರಿಸಿದುದು ಗಗನವನು ಬಲು
ಬೊಬ್ಬೆ ಬಹುವಿಧವಾದ್ಯರಭಸದ
ನಿಬ್ಬರದ ನಿಡುಸೂಳು ಸೂಳೈಸಿದುದು ದಿಗುತಟವ
ಉಬ್ಬುಗೆಡದಿರಿ ಕರ್ಣಪಾರ್ಥ ಸ
ಗರ್ಭರಹಿರೋ ಪೂತು ಮಝ ಎಂ
ಬಬ್ಬರಣೆ ಸುರರೂಢಿಯಲಿ ಝೊಂಪಿಸಿತು ಮೂಜಗವ ॥3॥
೦೦೪ ಅಡಿಗಡಿಗೆ ಹೊರೆ ...{Loading}...
ಅಡಿಗಡಿಗೆ ಹೊರೆ ಹೆಚ್ಚಿತಿಬ್ಬರು
ಹಿಡಿದ ಖಾತಿ ದಿಗಂತಕೋಶದ
ತಡಿಯ ಬಿಲುಟಂಕಾರ ಮುಸುಕಿತು ಲೋಕ ಪದಿನಾಲ್ಕ
ಜಡಿದ ಶೌರ್ಯದ ಮೈಗಳುಬ್ಬಿನ
ಗುಡಿಯಿಡಿದ ರೋಮಾಳಿ ರಿಪುಗಳ
ಕುಡಿದ ಕಂಗಳ ಸುಭಟರೆಚ್ಚಾಡಿದರು ಚಳಕದಲಿ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇಬ್ಬರಿಗೂ ಮತ್ತೆ ಮತ್ತೆ ಕೋಪ ಹೆಚ್ಚಾಯಿತು. ದಿಗಂತವನ್ನೂ ಬುಡದವರೆಗೂ ಹದಿನಾಲ್ಕು ಲೋಕಗಳನ್ನೂ ಬಿಲ್ಲಿನ ಠೇಂಕಾರ ಶಬ್ದವು ಆವರಿಸಿತು. ಇಬ್ಬರಲ್ಲಿಯೂ ಹೆಚ್ಚಾಗುತ್ತಿದ್ದ ಶೌರ್ಯದಿಂದ ಮೈಯುಬ್ಬಿ ರೋಮಾಂಚನ ಉಂಟಾಯಿತು. ಶತ್ರುಗಳನ್ನು ಪರಸ್ಪರ ಕಣ್ಣಿನಲ್ಲೇ ನುಂಗುತ್ತಾ ವೀರರು ಚಾತುರ್ಯದಿಂದ ಹೋರಾಡಿದರು.
ಮೂಲ ...{Loading}...
ಅಡಿಗಡಿಗೆ ಹೊರೆ ಹೆಚ್ಚಿತಿಬ್ಬರು
ಹಿಡಿದ ಖಾತಿ ದಿಗಂತಕೋಶದ
ತಡಿಯ ಬಿಲುಟಂಕಾರ ಮುಸುಕಿತು ಲೋಕ ಪದಿನಾಲ್ಕ
ಜಡಿದ ಶೌರ್ಯದ ಮೈಗಳುಬ್ಬಿನ
ಗುಡಿಯಿಡಿದ ರೋಮಾಳಿ ರಿಪುಗಳ
ಕುಡಿದ ಕಂಗಳ ಸುಭಟರೆಚ್ಚಾಡಿದರು ಚಳಕದಲಿ ॥4॥
೦೦೫ ಬಿರಿದುವಿಬ್ಬರ ಜೋಡು ...{Loading}...
ಬಿರಿದುವಿಬ್ಬರ ಜೋಡು ಮೈಯು
ಬ್ಬರಿಸೆ ಹಳಹಳಿಕೆಯ ಸುತೇಜವ
ಸುರಿದುವಿಬ್ಬರ ಮೋರೆ ಗಂಟಿಕ್ಕಿದುವು ಹುಬ್ಬುಗಳು
ಅರಳ್ವ ನಿಡುಗಂಗಳ ನಿಹಾರದ
ಕರದ ಚಳಕದ ಕಾದ ನಾಸಿಕ
ದೆರಲ ಕೆತ್ತುವ ಮೀಸೆಗಳ ಭಟರೆಚ್ಚರುರವಣಿಸಿ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇಬ್ಬರ ದೇಹ ಉಬ್ಬಿ, ಕವಚಗಳು ಕಿತ್ತು ಹೋದವು. ಪ್ರಖರವಾದ ತೇಜಸ್ಸನ್ನು ಇಬ್ಬರ ಮುಖಗಳು ಹೊರಹೊಮ್ಮಿದವು. ಹುಬ್ಬುಗಳು ಗಂಟಿಕ್ಕಿದವು. ಅರಳುತ್ತಿರುವ ವಿಶಾಲವಾದ ಕಣ್ಣುಗಳ, ಶಬ್ದ ಮಾಡುತ್ತಿರುವ ಕೈಗಳ ವೇಗ, ಬಿಸಿಯುಸಿರನ್ನು ಬಿಡುತ್ತಿದ್ದ ಮೂಗು, ಕುಣಿಯುತ್ತಿದ್ದ ಮೀಸೆಗಳಿಂದ ಕೂಡಿದ ಇಬ್ಬರೂ ಮುನ್ನುಗ್ಗಿ ಯುದ್ಧ ಮಾಡಿದರು.
ಪದಾರ್ಥ (ಕ.ಗ.ಪ)
ಹಳಹಳಿಕೆ-ಪ್ರಖರ, ನಿಹಾರ-ಅಧಿಕಶಬ್ದ, ಎರಲು-ಗಾಳಿ,
ಮೂಲ ...{Loading}...
ಬಿರಿದುವಿಬ್ಬರ ಜೋಡು ಮೈಯು
ಬ್ಬರಿಸೆ ಹಳಹಳಿಕೆಯ ಸುತೇಜವ
ಸುರಿದುವಿಬ್ಬರ ಮೋರೆ ಗಂಟಿಕ್ಕಿದುವು ಹುಬ್ಬುಗಳು
ಅರಳ್ವ ನಿಡುಗಂಗಳ ನಿಹಾರದ
ಕರದ ಚಳಕದ ಕಾದ ನಾಸಿಕ
ದೆರಲ ಕೆತ್ತುವ ಮೀಸೆಗಳ ಭಟರೆಚ್ಚರುರವಣಿಸಿ ॥5॥
೦೦೬ ವಹಿಲವನು ವೇಢೈಸುವಡೆ ...{Loading}...
ವಹಿಲವನು ವೇಢೈಸುವಡೆ ನರ
ರಹಿಪತಿಗಳೇ ಭಟರ ಪಡಿಯಿಡ
ಬಹುದೆ ಪಲ್ಲವ ಪಂಡಿತರ ಸತೃಣಾಸಿಗಳ ಗತಿಯ
ಅಹಿಯ ಶರಮಾನದ ಸುತಾಳ
ಗ್ರಹಮುಖದ ಸರವಾದಿಗಳು ಸರ
ವಹಿಯ ನಾಯಕವಾಡಿಗಳೆ ನರನಾಥ ಕೇಳ್ ಎಂದ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಈ ವೀರರ ವೇಗವನ್ನು ನಿರ್ಣಯಿಸಲು ಇವರೇನು ಆದಿಶೇಷರೇ? ಈ ವೀರರ ವೇಗವನ್ನು ನೃತ್ಯ ಪಂಡಿತರ ಹುಲ್ಲಿನಂತಹ ಖಡ್ಗ ಹಿಡಿದವರ ವೇಗದೊಂದಿಗೆ ಹೋಲಿಸಬಹುದೇ? ಇವರು ಸರ್ಪಬಂಧ ಶರಬಂದ ಎಂಬ ಚಿತ್ರಕಾವ್ಯಗಳನ್ನು ಬರೆಯುವವರೇ? ಗ್ರಹದ ಚಲನೆಯನ್ನು ಹೇಳುವ ಜ್ಯೋತಿಷಿಗಳೇ? ಸಂಗೀತಗಾರರೇ, ಹಾವಾಡಿಸುವವರ ನಾಯಕರೇ?” ದೊರೆಯೇ ಕೇಳು ಎಂದು ಸಂಜಯನು ಹೇಳಿದನು.
ಪದಾರ್ಥ (ಕ.ಗ.ಪ)
ವೇಡೈಸು-ಆವರಿಸು, ಸತೃಣಾಸಿ-ಹುಲ್ಲಿನ ಕತ್ತಿ,
ಪಲ್ಲವ-(ನಾಟ್ಯ) ಮೂವತ್ತು ಬಗೆಯ ನೃತ್ಯ ಹಸ್ತಗಳಲ್ಲಿ ಒಂದು. ಎರಡು ಪತಾಕ ಹಸ್ತಗಳನ್ನೂ ಹೊರಕ್ಕೆ ಸುತ್ತಿಸುತ್ತ ತೋಳುಗಳನ್ನು ಮೇಲಕ್ಕೆತ್ತಿ ನೀಡಿ ಒಳಕ್ಕೆ ಸುತ್ತಿಸುತ್ತ ಕೈಗಳನ್ನು ಸ್ವಸ್ತಿಕದಂತೆ ಹಿಡಿಯುವುದು,
ಶರ-ಚಿತ್ರಕಾವ್ಯದ ಒಂದು ಬಗೆ, ಬಾಣದ ಆಕಾರಕ್ಕೆ ಹೊಂದುವಂತೆ ಬರೆದ ಪದ್ಯ,
ಸುತಾಳ ಗ್ರಹಮುಖ-ಜ್ಯೋತಿಷ,
ಸರವಾದಿ-ಸಂಗೀತಗಾರ, (ಸಂ: ಸ್ವರವಾದಿನ್),
ಸರವಹಿ-ಸರ್ಪಗಜ,
ನಾಯಕವಾಡಿ-ದಳಪತಿ, ಒಡೆಯ
ಮೂಲ ...{Loading}...
ವಹಿಲವನು ವೇಢೈಸುವಡೆ ನರ
ರಹಿಪತಿಗಳೇ ಭಟರ ಪಡಿಯಿಡ
ಬಹುದೆ ಪಲ್ಲವ ಪಂಡಿತರ ಸತೃಣಾಸಿಗಳ ಗತಿಯ
ಅಹಿಯ ಶರಮಾನದ ಸುತಾಳ
ಗ್ರಹಮುಖದ ಸರವಾದಿಗಳು ಸರ
ವಹಿಯ ನಾಯಕವಾಡಿಗಳೆ ನರನಾಥ ಕೇಳೆಂದ ॥6॥
೦೦೭ ಕಣೆ ಕಣೆಯನಿಟ್ಟೊರಸಿದುವು ...{Loading}...
ಕಣೆ ಕಣೆಯನಿಟ್ಟೊರಸಿದುವು ಕೂ
ರ್ಗಣೆಗೆ ಮಾರ್ಗಣೆ ಚಾಚಿದುವು ಕಣೆ
ಕಣೆಗೆ ಮಲೆತುವು ತರುಬಿದವು ಕಣೆ ಕಣೆಯ ಪಡಿಮುಖವ
ಕಣೆ ಕಣೆಗೆ ತೆರಳಿದವು ಕಣೆ ಮಾ
ರ್ಗಣೆಯನಣೆದವು ಹಿಂಡುಗಣೆ ಸಂ
ದಣಿಗಣೆಯಲಕ್ಕಾಡಿದವು ರಣಧೀರರೆಸುಗೆಗಳು ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಾಣಗಳು ಬಾಣಗಳ ಮೇಲೆ ಬಿದ್ದು ನಾಶ ಮಾಡಿದವು. ಚೂಪಾದ ಬಾಣಗಳಿಗೆ ಮಾರ್ಗಣೆಗಳು ಎದುರಾದವು. ಬಾಣವನ್ನು ಬಾಣಗಳು ಪ್ರತಿಭಟಿಸಿದವು. ಬಾಣಗಳು ಬಾಣಗಳನ್ನು ಎದುರಿಸಿ ಮುತ್ತಿಕೊಂಡವು. ಬಾಣ ಬಾಣಗಳ ಮೇಲೆ ಬಿದ್ದವು. ಬಾಣಗಳು ಮಾರ್ಗಣೆಗಳನ್ನು ಹೊಡೆದವು. ಹಿಂಡು ಹಿಂಡಾದ ಬಾಣಗಳು ಗುಂಪು ಗುಂಪಾಗಿದ್ದ ಬಾಣಗಳ ಮೇಲೆ ಬಿದ್ದವು. ಹೀಗೆ ಇದ್ದವು ವೀರರ ಬಾಣ ಪ್ರಯೋಗಗಳು.
ಪದಾರ್ಥ (ಕ.ಗ.ಪ)
ಅಣೆ-ಹಿಂಸಿಸು, ಅಕ್ಕಾಡು-ನಾಶ
ಮೂಲ ...{Loading}...
ಕಣೆ ಕಣೆಯನಿಟ್ಟೊರಸಿದುವು ಕೂ
ರ್ಗಣೆಗೆ ಮಾರ್ಗಣೆ ಚಾಚಿದುವು ಕಣೆ
ಕಣೆಗೆ ಮಲೆತುವು ತರುಬಿದವು ಕಣೆ ಕಣೆಯ ಪಡಿಮುಖವ
ಕಣೆ ಕಣೆಗೆ ತೆರಳಿದವು ಕಣೆ ಮಾ
ರ್ಗಣೆಯನಣೆದವು ಹಿಂಡುಗಣೆ ಸಂ
ದಣಿಗಣೆಯಲಕ್ಕಾಡಿದವು ರಣಧೀರರೆಸುಗೆಗಳು ॥7॥
೦೦೮ ಎಸುವ ಗತಿಗೊಮ್ಮೊಮ್ಮೆ ...{Loading}...
ಎಸುವ ಗತಿಗೊಮ್ಮೊಮ್ಮೆ ಜಗ ಗ
ರ್ಜಿಸಿದುದಾಯೆಂದೆರಡು ಥಟ್ಟಿನೊ
ಳೊಸಗೆಯಲಿ ಮೊಳಗಿದವು ಕೋಹಿನ ಕೋಟಿನಿಸ್ಸಾಳ
ನಿಶಿತ ಶರವೋ ಪ್ರಳಯಸೂರ್ಯರ
ಮಸಕವೋ ಹರನೇತ್ರವಹ್ನಿಯ
ಹಸರವೋ ಹೆಸರಿಡುವನಾವನು ಭೂಪ ಕೇಳ್ ಎಂದ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ದೊರೆಯೇ ಕೇಳು ಅವರ ಬಾಣ ಪ್ರಯೋಗದ ವೇಗಕ್ಕೆ ಒಂದೊಂದು ಬಾರಿ ಜಗತ್ತು ‘ಆ’ ಎಂದು ಆಶ್ಚರ್ಯದಿಂದ ಗರ್ಜಿಸುವಂತಾಯಿತು. ಎರಡೂ ಸೈನ್ಯಗಳಲ್ಲಿ ಸಾಲು ಸಾಲು ಕೋಟಿ ನಿಸ್ಸಾಳಗಳು ಸಂತೋಷದಿಂದ ಮೊಳಗಿದವು. ಚೂಪಾದ ಬಾಣವೋ, ಪ್ರಳಯಕಾಲದ ಸೂರ್ಯರ ಕೋಪವೋ, ಶಿವನ ಹಣೆಗಣ್ಣಿನ ಬೆಂಕಿಯ ಹರಡುವಿಕೆಯೋ? ಅದಕ್ಕೆ ಹೆಸರಿಡಲು ಯಾರಿಗೆ ಸಾಧ್ಯ’ ಎಂದು ಸಂಜಯನು ಹೇಳಿದನು.
ಪದಾರ್ಥ (ಕ.ಗ.ಪ)
ಕೋಹು-ಸಾಲು
ಮೂಲ ...{Loading}...
ಎಸುವ ಗತಿಗೊಮ್ಮೊಮ್ಮೆ ಜಗ ಗ
ರ್ಜಿಸಿದುದಾಯೆಂದೆರಡು ಥಟ್ಟಿನೊ
ಳೊಸಗೆಯಲಿ ಮೊಳಗಿದವು ಕೋಹಿನ ಕೋಟಿನಿಸ್ಸಾಳ
ನಿಶಿತ ಶರವೋ ಪ್ರಳಯಸೂರ್ಯರ
ಮಸಕವೋ ಹರನೇತ್ರವಹ್ನಿಯ
ಹಸರವೋ ಹೆಸರಿಡುವನಾವನು ಭೂಪ ಕೇಳೆಂದ ॥8॥
೦೦೯ ಇವರ ಬಿಲುದನಿ ...{Loading}...
ಇವರ ಬಿಲುದನಿ ತುರಗ ಹೇಷಾ
ರವದ ಘಲ್ಲಣಿ ಸೂತರಬ್ಬರ
ವಿವಿಧವಾದ್ಯನಿನಾದ ದಳವೆರಡರ ಮಹಾರಭಸ
ಅವಿರಳಾಸ್ತ್ರಧ್ವಾನವಭ್ರದ
ದಿವಿಜನಿಕರದ ಸಾಧುವಾದದಿ
ಭುವನ ಶಬ್ದಬ್ರಹ್ಮಮಯವಾಯ್ತೊಂದು ನಿಮಿಷದಲಿ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇವರ ಬಿಲ್ಲಿನ ಧ್ವನಿ, ಕುದುರೆಗಳು ಮಾಡುತ್ತಿದ್ದ ‘ಹೇಷಾರವ’ದ ಆರ್ಭಟ, ಸೂತರ ಆರ್ಭಟ, ವಿವಿಧ ವಾದ್ಯಗಳ ಶಬ್ದ, ಎರಡೂ ಕಡೆಯ ಸೈನ್ಯದ ರಭಸ, ಒಂದೇ ಸಮನಾಗಿ ಕೇಳುತ್ತಿದ್ದ ಅಸ್ತ್ರಗಳ ಧ್ವನಿ, ಆಕಾಶದಲ್ಲಿದ್ದ ದೇವತೆಗಳ ‘ಸಾಧುವಾದ’ ಇವುಗಳಿಂದ ಪ್ರಪಂಚವೆಲ್ಲಾ ಒಂದು ನಿಮಿಷ ಶಬ್ದ ಬ್ರಹ್ಮಮಯವಾಯ್ತು.
ಪದಾರ್ಥ (ಕ.ಗ.ಪ)
ಘಲ್ಲಣಿ-ತೊಂದರೆ, ಆರ್ಭಟ
ಮೂಲ ...{Loading}...
ಇವರ ಬಿಲುದನಿ ತುರಗ ಹೇಷಾ
ರವದ ಘಲ್ಲಣಿ ಸೂತರಬ್ಬರ
ವಿವಿಧವಾದ್ಯನಿನಾದ ದಳವೆರಡರ ಮಹಾರಭಸ
ಅವಿರಳಾಸ್ತ್ರಧ್ವಾನವಭ್ರದ
ದಿವಿಜನಿಕರದ ಸಾಧುವಾದದಿ
ಭುವನ ಶಬ್ದಬ್ರಹ್ಮಮಯವಾಯ್ತೊಂದು ನಿಮಿಷದಲಿ ॥9॥
೦೧೦ ಮುಞ್ಚುವುದು ಕೈಮನವ ...{Loading}...
ಮುಂಚುವುದು ಕೈಮನವ ಕೈಮೆಯ
ಸಂಚವನು ಮನ ಮುಂಚುವುದು ಮಿಗೆ
ವಂಚಿಸುವುದಂಬುಗಳ ಗತಿ ಕೈಮನದ ಕಲುಹೆಗಳ
ಮುಂಚಿದಂಬುಗಳಾರನೇಳನು
ಹಿಂಚಿದವು ಹೊಂಬರಹದಂಬಿನ
ಮಿಂಚುಗಳಲೆವೆ ಹಳಚಿದವು ಹರಿಹರ ಪುರಂದರರ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಇಬ್ಬರು ವೀರರ ಕರಚಳಕ ಮನಸ್ಸನ್ನು ಮೀರುತ್ತಿತ್ತು. ಒಂದೊಂದು ಬಾರಿ ಮನಸ್ಸು ಕರಚಳಕವನ್ನು ಮೀರುತ್ತಿತ್ತು. ಬಾಣಗಳ ವೇಗ, ಕರಚಳಕ ಹಾಗೂ ಮನಸ್ಸನ್ನು ಯುದ್ಧಕೌಶಲವು ಮೀರುತ್ತಿತ್ತು. ಹಾಗೆ ವೇಗವಾಗಿ ಪ್ರಯೋಗವಾದ ಬಾಣಗಳು, ಆರು ಏಳು ಬಾಣಗಳನ್ನು ದಾಟಿ ಮುಂದೆ ಹೋದವು. ಚಿನ್ನದ ಬರಹಗಳ ಬಾಣಗಳು ಬೀರುತ್ತಿದ್ದ ಮಿಂಚುಗಳಲ್ಲಿ ಹರಿಹರ ಮತ್ತು ಇಂದ್ರರು ಕಣ್ಣು ಮಿಟುಕಿಸುವಂತಾಯಿತು.
ಪದಾರ್ಥ (ಕ.ಗ.ಪ)
ಕೈಮೆ-ಕರ ಚಳಕ, ಕಲುಹೆ-ವಿದ್ಯೆ.
ಹಳಚು-ರೆಪ್ಪೆ ಹೊಡೆ/ ಕಣ್ಣು ಮಿಟುಕಿಸು.
ಮೂಲ ...{Loading}...
ಮುಂಚುವುದು ಕೈಮನವ ಕೈಮೆಯ
ಸಂಚವನು ಮನ ಮುಂಚುವುದು ಮಿಗೆ
ವಂಚಿಸುವುದಂಬುಗಳ ಗತಿ ಕೈಮನದ ಕಲುಹೆಗಳ
ಮುಂಚಿದಂಬುಗಳಾರನೇಳನು
ಹಿಂಚಿದವು ಹೊಂಬರಹದಂಬಿನ
ಮಿಂಚುಗಳಲೆವೆ ಹಳಚಿದವು ಹರಿಹರ ಪುರಂದರರ ॥10॥
೦೧೧ ಮನದೊಳಗೆ ಮೊಗೆದೀಣ್ಟಿದರು ...{Loading}...
ಮನದೊಳಗೆ ಮೊಗೆದೀಂಟಿದರು ಕ
ಣ್ಣಿನಲಿ ಕಾರಿದರಡಿಗಡಿಗೆ ಕಿವಿ
ಗೊನೆಗಳಲಿ ಕುಡಿಕುಡಿದುಗುಳಿದರು ಮೂದಲೆಯ ಮಾತುಗಳ
ಮನದಲಂಕುರವಾಗಿ ಕಡೆಗ
ಣ್ಣಿನಲಿ ಪಲ್ಲವವಾಗಿ ರಣವಾ
ತಿನಲಿ ಹೂತುದು ಕರ್ಣಪಾರ್ಥರ ರೋಷಮಯಚೂತ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕರ್ಣ ಅರ್ಜುನರು ಪರಸ್ಪರ ಮನಸ್ಸಿನಲ್ಲೇ ಮೊಗೆದು ಕುಡಿದರು, ದೃಷ್ಟಿ ಇಟ್ಟು ನೋಡುತ್ತಾ ಕಣ್ಣಿನಿಂದಲೇ ಪರಸ್ಪರ ಕಿಡಿಗಾರಿದರು. ಮತ್ತೆ ಮತ್ತೆ ಕಿವಿಯಿಂದ ಮಾತುಗಳನ್ನು ಕೇಳಿ, ಮೂದಲಿಸುವ ಮಾತುಗಳನ್ನು ಬಾಯಿಂದ ಆಡಿದರು. ಕರ್ಣ ಅರ್ಜುನರ ಕೋಪದಿಂದ ಕೂಡಿದ ಮಾವಿನ ಮರ ಮನಸ್ಸಿನಲ್ಲಿ ಮೊಳಕೆ ಒಡೆದು ಕಡೆಗಣ್ಣಿನಲ್ಲಿ ಚಿಗುರಾಗಿ, ಯುದ್ಧಾವೇಶದ ಮಾತುಗಳಲ್ಲಿ ಹೂ ಬಿಟ್ಟಿತು.
ಮೂಲ ...{Loading}...
ಮನದೊಳಗೆ ಮೊಗೆದೀಂಟಿದರು ಕ
ಣ್ಣಿನಲಿ ಕಾರಿದರಡಿಗಡಿಗೆ ಕಿವಿ
ಗೊನೆಗಳಲಿ ಕುಡಿಕುಡಿದುಗುಳಿದರು ಮೂದಲೆಯ ಮಾತುಗಳ
ಮನದಲಂಕುರವಾಗಿ ಕಡೆಗ
ಣ್ಣಿನಲಿ ಪಲ್ಲವವಾಗಿ ರಣವಾ
ತಿನಲಿ ಹೂತುದು ಕರ್ಣಪಾರ್ಥರ ರೋಷಮಯಚೂತ ॥11॥
೦೧೨ ಅರಸ ಕೇಳೈ ...{Loading}...
ಅರಸ ಕೇಳೈ ಬೊಬ್ಬಿರಿದು ಚ
ಪ್ಪರಿಸಿ ತೇಜಿಯ ನೂಕಿದನು ಮುರ
ಹರನು ಸೂಠಾಸೂಠಿಯಲಿ ಕೈದೋರಿದನು ಪಾರ್ಥ
ಖುರಪುಟದಲಾಕಾಶವನು ಕ
ತ್ತರಿಸುವವೊಲುಬ್ಬರದಲತಿನಿ
ಬ್ಬರದ ಗತಿಯಲಿ ನಿಗುರಿದವು ರಥವಾಜಿಗಳು ನರನ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ದೊರೆಯೇ ಕೇಳು, ಶ್ರೀಕೃಷ್ಣನು ಬೊಬ್ಬೆ ಹಾಕುತ್ತಾ ಕುದುರೆಗಳನ್ನು ಚಪ್ಪರಿಸುತ್ತಾ ರಥವನ್ನು ಮುಂದಕ್ಕೆ ಓಡಿಸಿದನು. ಅದೇ ವೇಗದಲ್ಲಿ ಅರ್ಜುನನೂ ತನ್ನ ಕೈಚಳಕವನ್ನು ತೋರಿಸಿದನು. ಅರ್ಜುನನ ರಥದ ಕುದುರೆಗಳು ತಮ್ಮ ಗೊರಸುಗಳಿಂದ ಆಕಾಶವನ್ನೇ ಕತ್ತರಿಸುವಂತೆ ಶಬ್ದ ಮಾಡುತ್ತಾ ಅತಿವೇಗದಿಂದ ಮೆಲಕ್ಕೆಗರುತ್ತಿದ್ದವು. " ಎಂದು ಸಂಜಯನು ಹೇಳಿದನು.
ಮೂಲ ...{Loading}...
ಅರಸ ಕೇಳೈ ಬೊಬ್ಬಿರಿದು ಚ
ಪ್ಪರಿಸಿ ತೇಜಿಯ ನೂಕಿದನು ಮುರ
ಹರನು ಸೂಠಾಸೂಠಿಯಲಿ ಕೈದೋರಿದನು ಪಾರ್ಥ
ಖುರಪುಟದಲಾಕಾಶವನು ಕ
ತ್ತರಿಸುವವೊಲುಬ್ಬರದಲತಿನಿ
ಬ್ಬರದ ಗತಿಯಲಿ ನಿಗುರಿದವು ರಥವಾಜಿಗಳು ನರನ ॥12॥
೦೧೩ ಕುಬುಬೆನುತ ಬೊಬ್ಬಿರಿದನುಗ್ರ ...{Loading}...
ಕುಬುಬೆನುತ ಬೊಬ್ಬಿರಿದನುಗ್ರ
ಪ್ರಬಲ ವಾನರ ರಾಜನಿದಿರಲಿ
ಕಬಳಿಸಿದವರ್ಜುನನ ಶರ ಕರ್ಣನ ಪತಾಕಿನಿಯ
ಶಬರರೂಪ ವರಾಹದೈತ್ಯನ
ನಿಬಿಡದರ್ಪವ ಮುರಿವವೊಲು ವರ
ವಿಬುಧತತಿ ಕೊಂಡಾಡೆ ಕಳೆಯೇರಿದನು ಕಲಿಪಾರ್ಥ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
13 ಅರ್ಜುನನ ರಥ ಧ್ವಜದಲ್ಲಿದ್ದ ಕಪಿಶ್ರೇಷ್ಠನಾದ ಹನುಮಂತನು ಕುಬುಬು ಎಂದು ಗರ್ಜಿಸಿದನು. ಈಶ್ವರನು ಬೇಟೆಗಾರನ ರೂಪದಲ್ಲಿ ಬಂದು ವರಾಹ ರೂಪದಲ್ಲಿದ್ದ ಮೂಕಾಸುರನೆಂಬ ರಾಕ್ಷಸನ ಅಹಂಕಾರವನ್ನು ನಾಶಮಾಡಿದಂತೆ, ಅರ್ಜುನನ ಬಾಣಗಳು ಕರ್ಣನ ಸೈನ್ಯವನ್ನು ನುಂಗಿಹಾಕಿದವು. ಸುರ ಸಮೂಹ ಹೊಗಳುತ್ತಿರಲು, ಅರ್ಜುನನಿಗೆ ಉತ್ಸಾಹ ಮತ್ತಷ್ಟು ಹೆಚ್ಚಾಯಿತು.
ಪದಾರ್ಥ (ಕ.ಗ.ಪ)
ವಿಬುಧ - ದೇವತೆ
ಮೂಲ ...{Loading}...
ಕುಬುಬೆನುತ ಬೊಬ್ಬಿರಿದನುಗ್ರ
ಪ್ರಬಲ ವಾನರ ರಾಜನಿದಿರಲಿ
ಕಬಳಿಸಿದವರ್ಜುನನ ಶರ ಕರ್ಣನ ಪತಾಕಿನಿಯ
ಶಬರರೂಪ ವರಾಹದೈತ್ಯನ
ನಿಬಿಡದರ್ಪವ ಮುರಿವವೊಲು ವರ
ವಿಬುಧತತಿ ಕೊಂಡಾಡೆ ಕಳೆಯೇರಿದನು ಕಲಿಪಾರ್ಥ ॥13॥
೦೧೪ ಏನ ಹೇಳುವೆನರಸ ...{Loading}...
ಏನ ಹೇಳುವೆನರಸ ಕೇಳ್ ನಿ
ನ್ನಾನೆಯಗ್ಗಳಿಕೆಯನು ಮುಂದಣ
ದಾನವಾಂತಕನುರವನೆಚ್ಚನು ಜೋಡನೊಡೆಬಗಿದು
ಆ ನಿರೂಢಿಯ ಹಯದ ಘಾಯವ
ನೇನನೆಂಬೆನು ಜೀಯ ಸಿಂಧದ
ವಾನರನ ವೇದನೆಯ ಗಣನೆಯನರಿಯೆ ನಾನೆಂದ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಧೃತರಾಷ್ಟ್ರ , ನಿನ್ನ ಪ್ರೀತಿಯ ಕರ್ಣನ ಶ್ರೇಷ್ಠತೆಯನ್ನು ಏನು ಹೇಳಲಿ. ಅರ್ಜುನನ ರಥದ ಮುಂದೆ ಇದ್ದ ಕೃಷ್ಣನ ಎದೆಯ ಕವಚವನ್ನು ಸೀಳುವಂತೆ. ಬಾಣದಿಂದ ಹೊಡೆದನು. ಪ್ರಸಿದ್ಧವಾದ ರಥದ ಕುದುರೆಗಳಿಗೆ ಆದ ಗಾಯವನ್ನು ಏನೆಂದು ಹೇಳಲಿ, ಧ್ವಜದಲ್ಲಿದ್ದ ಆಂಜನೇಯನಿಗೆ ಆದ ನೋವಿನ ಪ್ರಮಾಣವನ್ನು ಹೇಳಲು ಸಾಧ್ಯವಿಲ್ಲ.” ಎಂದು ಸಂಜಯನು ಹೇಳಿದನು.
ಪದಾರ್ಥ (ಕ.ಗ.ಪ)
ನಿರೂಢಿ-ಪ್ರಸಿದ್ಧ
ಮೂಲ ...{Loading}...
ಏನ ಹೇಳುವೆನರಸ ಕೇಳ್ ನಿ
ನ್ನಾನೆಯಗ್ಗಳಿಕೆಯನು ಮುಂದಣ
ದಾನವಾಂತಕನುರವನೆಚ್ಚನು ಜೋಡನೊಡೆಬಗಿದು
ಆ ನಿರೂಢಿಯ ಹಯದ ಘಾಯವ
ನೇನನೆಂಬೆನು ಜೀಯ ಸಿಂಧದ
ವಾನರನ ವೇದನೆಯ ಗಣನೆಯನರಿಯೆ ನಾನೆಂದ ॥14॥
೦೧೫ ಬರಸೆಳೆದ ಬಿಲುಗೋಲಿನಲಿ ...{Loading}...
ಬರಸೆಳೆದ ಬಿಲುಗೋಲಿನಲಿ ನಿ
ಷ್ಠುರದ ಶರಸಂಧಾನದಲಿ ರಥ
ತುರಗವನು ಕೆಡೆಯೆಚ್ಚನರ್ಜುನನಸಮಬಾಣದಲಿ
ಸುರಪನಾಯುಧಹತಿಗೆ ಕುಲಗಿರಿ
ತೆರಳುವಂತಿರಲೊಂದು ಯೋಜನ
ವರೆಗೆ ತಿರ್ರನೆ ತಿರುಗಿ ತೊಲಗಿತು ಕರ್ಣರಥವಂದು ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನು ಬಲವಾಗಿ ಬಿಲ್ಲನ್ನು ಸೆಳೆದು ನಿಷ್ಠುರವಾಗಿ ವಿಶೇಷವಾದ ಬಾಣ ಪ್ರಯೋಗಿಸಿ, ಕರ್ಣನ ರಥದ ಕುದುರೆಗಳು ಬೀಳುವಂತೆ ಮಾಡಿದನು. ಇಂದ್ರನ ವಜ್ರಾಯುಧದ ಏಟಿಗೆ ಕುಲಪರ್ವತಗಳು ಓಡಿ ಹೋಗುವಂತೆ. ಕರ್ಣನ ರಥ ಒಂದು ಯೋಜನದವರೆಗೆ ತಿರ್ರನೆ ತಿರುಗುತ್ತಾ ದೂರ ಹೋಯಿತು.
ಮೂಲ ...{Loading}...
ಬರಸೆಳೆದ ಬಿಲುಗೋಲಿನಲಿ ನಿ
ಷ್ಠುರದ ಶರಸಂಧಾನದಲಿ ರಥ
ತುರಗವನು ಕೆಡೆಯೆಚ್ಚನರ್ಜುನನಸಮಬಾಣದಲಿ
ಸುರಪನಾಯುಧಹತಿಗೆ ಕುಲಗಿರಿ
ತೆರಳುವಂತಿರಲೊಂದು ಯೋಜನ
ವರೆಗೆ ತಿರ್ರನೆ ತಿರುಗಿ ತೊಲಗಿತು ಕರ್ಣರಥವಂದು ॥15॥
೦೧೬ ಔಕಿ ವಾಘೆಯ ...{Loading}...
ಔಕಿ ವಾಘೆಯ ಕೊಂಡು ಶಲ್ಯನು
ನೂಕಿದನು ತೇಜಿಯನು ಸಮರ
ವ್ಯಾಕುಳದಿನಾ ಕರ್ಣ ಸೆಳೆದನು ದಿವ್ಯಮಾರ್ಗಣವ
ನಾಕನಿಳಯರು ನಡುಗೆ ಶರ ಕ
ರ್ಣಾಕರುಷಣಪ್ರೌಢಿಯಲಿ ನಿಂ
ದಾ ಕಿರೀಟಿಯ ರಥವನೆಚ್ಚನು ಭಾನುಸುತ ಮುಳಿದು ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶಲ್ಯನು ಕುದುರೆಗಳ ಲಗಾಮನ್ನು ಬಲವಾಗಿ ಅದುಮಿ ಹಿಡಿದುಕೊಂಡು ಕುದುರೆಯನ್ನು ಮುನ್ನುಗ್ಗಿಸಿದನು. ಯುದ್ಧದಲ್ಲಿ ಚಿಂತೆಗೆ ಒಳಗಾಗಿದ್ದ ಕರ್ಣನು ದಿವ್ಯವಾದ ಬಾಣವನ್ನು ಪ್ರಯೋಗಿಸಿದನು. ಅದರಿಂದ ದೇವತೆಗಳು ನಡುಗಿದರು. ರವಿಸುತನಾದ ಕರ್ಣನು ಕೋಪದಿಂದ ಬಾಣವನ್ನು ಕಿವಿಯವರೆಗೂ ಸೆಳೆದು, ಅತ್ಯಂತ ಪ್ರೌಢಿಮೆಯಿಂದ, ಅರ್ಜುನನ ರಥದ ಮೇಲೆ ಪ್ರಯೋಗಿಸಿದನು.
ಪಾಠಾನ್ತರ (ಕ.ಗ.ಪ)
ಕರ್ಣಾಕರುಷ- ಕಣಾಕರುಷಣ : ಕರ್ಣಪರ್ವ, ಮೈ.ವಿ.ವಿ.-ಎನ್. ಅನಂತರಂಗಾಚಾರ್
ಮೂಲ ...{Loading}...
ಔಕಿ ವಾಘೆಯ ಕೊಂಡು ಶಲ್ಯನು
ನೂಕಿದನು ತೇಜಿಯನು ಸಮರ
ವ್ಯಾಕುಳದಿನಾ ಕರ್ಣ ಸೆಳೆದನು ದಿವ್ಯಮಾರ್ಗಣವ
ನಾಕನಿಳಯರು ನಡುಗೆ ಶರ ಕ
ರ್ಣಾಕರುಷಣಪ್ರೌಢಿಯಲಿ ನಿಂ
ದಾ ಕಿರೀಟಿಯ ರಥವನೆಚ್ಚನು ಭಾನುಸುತ ಮುಳಿದು ॥16॥
೦೧೭ ಅರಿಯ ಶರಹತಿಗಳುಕಿ ...{Loading}...
ಅರಿಯ ಶರಹತಿಗಳುಕಿ ತಿರ್ರನೆ
ತಿರುಗಿ ಪಾರ್ಥನ ತೇರು ಬಿಲ್ಲಂ
ತರಕೆ ಹಿಂದಕೆ ತೊಲಗೆ ಕಂಡು ಮುರಾರಿ ಬೆರಗಾದ
ಅರರೆ ಧಣುಧಣು ಪೂತು ಪಾಯಿಕು
ಸರಿಯ ಕಾಣೆನು ಭಾಪೆನುತ ವಿ
ಸ್ತರಿಸಿ ದಾನವವೈರಿ ಕರ್ಣನ ಹಿರಿದು ಹೊಗಳಿದನು ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶತ್ರುವಿನ ಬಾಣದ ಏಟಿಗೆ ತಿರ್ರನೆ ತಿರುಗಿ ಅರ್ಜುನನ ರಥ ಒಂದು ಬಿಲ್ಲು ದೂರದ ಅಂತರಕ್ಕೆ ಸರಿದದ್ದನ್ನು ಕಂಡು ಕೃಷ್ಣನಿಗೇ ಆಶ್ಚರ್ಯವಾಯಿತು. ‘ಅರೆ ಭೇಷ್, ಇವನಿಗೆ ಸರಿಸಮಾನರಾದವರನ್ನು ನಾನು ನೋಡಿಲ್ಲ’ ಎನ್ನುತ್ತಾ ಕರ್ಣನನ್ನು ಹೆಚ್ಚು ಹೆಚ್ಚು ಹೊಗಳಿದನು.
ಮೂಲ ...{Loading}...
ಅರಿಯ ಶರಹತಿಗಳುಕಿ ತಿರ್ರನೆ
ತಿರುಗಿ ಪಾರ್ಥನ ತೇರು ಬಿಲ್ಲಂ
ತರಕೆ ಹಿಂದಕೆ ತೊಲಗೆ ಕಂಡು ಮುರಾರಿ ಬೆರಗಾದ
ಅರರೆ ಧಣುಧಣು ಪೂತು ಪಾಯಿಕು
ಸರಿಯ ಕಾಣೆನು ಭಾಪೆನುತ ವಿ
ಸ್ತರಿಸಿ ದಾನವವೈರಿ ಕರ್ಣನ ಹಿರಿದು ಹೊಗಳಿದನು ॥17॥
೦೧೮ ನಲವು ನಿಲೆ ...{Loading}...
ನಲವು ನಿಲೆ ಫಲುಗುಣನು ಹೂಡಿದ
ಹಿಳುಕನೀಡಾಡಿದನು ಲೋಕದ
ಬಳಕೆ ಕೌತುಕವೆನುತ ತೂಗಿದನಮಳ ಮಕುಟವನು
ಒಲವರವಲಾ ಮುರಹರಂಗೀ
ಬಲದೊಳಗೆ ಸಾಹಸವ ಸುಡಸು
ಡಲೆನುತ ದುಗುಡವ ಪಿಡಿದು ಫಲುಗುಣನಿಳುಹಿದನು ಧನುವ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನು ಸಂತೋಷವನ್ನು ಕಳೆದುಕೊಂಡು, ತಾನು ಬಿಲ್ಲಿಗೆ ಹೂಡಿದ್ದ ಬಾಣವನ್ನು ಕೆಳಕ್ಕೆ ಎಸೆದನು. ಈ ಲೋಕದ ರೀತಿಯೇ ಆಶ್ಚರ್ಯಕರ ಎನ್ನುತ್ತಾ ತನ್ನ ತಲೆಯನ್ನು ತೂಗಿದನು. ‘ಈ ಕೃಷ್ಣನಿಗೆ ಕರ್ಣನ ಶಕ್ತಿಯ ಬಗೆಗೆ ಪ್ರೀತಿ. ನನ್ನ ಸಾಹಸವನ್ನು ಸುಡಬೇಕು’ ಎಂದುಕೊಂಡು ದುಃಖಿಸುತ್ತಾ ತನ್ನ ಬಿಲ್ಲನ್ನು ಕೆಳಗೆ ಇಳಿಸಿದನು.
ಮೂಲ ...{Loading}...
ನಲವು ನಿಲೆ ಫಲುಗುಣನು ಹೂಡಿದ
ಹಿಳುಕನೀಡಾಡಿದನು ಲೋಕದ
ಬಳಕೆ ಕೌತುಕವೆನುತ ತೂಗಿದನಮಳ ಮಕುಟವನು
ಒಲವರವಲಾ ಮುರಹರಂಗೀ
ಬಲದೊಳಗೆ ಸಾಹಸವ ಸುಡಸು
ಡಲೆನುತ ದುಗುಡವ ಪಿಡಿದು ಫಲುಗುಣನಿಳುಹಿದನು ಧನುವ ॥18॥
೦೧೯ ಏನು ಫಲುಗುಣ ...{Loading}...
ಏನು ಫಲುಗುಣ ಧರ್ಮಜನ ಮದ
ದಾನೆ ದುಗುಡವಿದೇನು ಪೇಳೈ
ನೀನು ಧನುವನು ತೊರೆದ ಕಾರಣವೇನು ಪೊಸತೀಗ
ಏನು ಹದ ಹೇಳೆನಲು ಕೇಳೆಲೆ
ದಾನವಾಂತಕ ನುಡಿಯಲಾವುದು
ಹಾನಿಯೆಮಗಿಲ್ಲೆನುತ ಮೇಗರೆನುಡಿದನಾ ಪಾರ್ಥ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಧರ್ಮಜನ ಮದದಾನೆಯಾದ ಅರ್ಜುನ, ಇದೇನು ನಿನ್ನ ದುಃಖ? ಹೇಳು, ನೀನು ಬಿಲ್ಲನ್ನು ಕೆಳಕ್ಕೆ ಹಾಕಿದ ಕಾರಣವೇನು ? ಈಗ ಹೊಸದೇನು ಆಗಿದೆ? ’ ಎಂದು ಕೃಷ್ಣನು ಕೇಳಿದಾಗ, ಅರ್ಜುನನು ‘ಎಲೆ, ದಾನವಾಂತಕ, ಹೇಳುವಂತಹ ಕಷ್ಟವೇನೂ ನನಗಾಗಿಲ್ಲ’ ಎಂದು ತೇಲಿಸಿ ಉತ್ತರಿಸಿದನು.
ಮೂಲ ...{Loading}...
ಏನು ಫಲುಗುಣ ಧರ್ಮಜನ ಮದ
ದಾನೆ ದುಗುಡವಿದೇನು ಪೇಳೈ
ನೀನು ಧನುವನು ತೊರೆದ ಕಾರಣವೇನು ಪೊಸತೀಗ
ಏನು ಹದ ಹೇಳೆನಲು ಕೇಳೆಲೆ
ದಾನವಾಂತಕ ನುಡಿಯಲಾವುದು
ಹಾನಿಯೆಮಗಿಲ್ಲೆನುತ ಮೇಗರೆನುಡಿದನಾ ಪಾರ್ಥ ॥19॥
೦೨೦ ಹೇಳು ಹೇಳೆನ್ನಾಣೆ ...{Loading}...
ಹೇಳು ಹೇಳೆನ್ನಾಣೆ ಚಿತ್ತದೊ
ಳಾಳುವುದ ಮರೆಮಾಡದಿರು ನಿಜ
ಲೋಲ ಧರ್ಮಜನಾಣೆ ನಿನಗೆನೆ ಪಾರ್ಥ ನಸುನಗುತ
ಕಾಲಗುಣವೆಂದರಿಯೆ ಮೇಣ್ ತ
ನ್ನಾಳುತನ ಪುಸಿಯಾಯ್ತು ರಿಪುಭಟ
ನಾಳುತನ ದಿಟವಾಯ್ತು ಕೌತುಕವೆಂದನಾ ಪಾರ್ಥ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನ ನನ್ನಾಣೆ ಹೇಳು, ಮನಸ್ಸಿನಲ್ಲಿರುವುದನ್ನು ಮರೆಮಾಚಬೇಡ. ಧರ್ಮರಾಯನ ಮೇಲೆ ಆಣೆ ನಿನಗೆ ಎಂದಾಗ ಅರ್ಜುನನು ನಗುತ್ತಾ ‘ಇದು ಕಾಲಗುಣವೋ ಏನೋ ನನಗೆ ತಿಳಿಯದು. ನನ್ನ ಶೌರ್ಯ ಸುಳ್ಳಾಯ್ತು, ಶತ್ರುವೀರನ ಶೌರ್ಯ ನಿಜವಾಯ್ತು, ಇದು ಆಶ್ಚರ್ಯ’ ಎಂದನು.
ಮೂಲ ...{Loading}...
ಹೇಳು ಹೇಳೆನ್ನಾಣೆ ಚಿತ್ತದೊ
ಳಾಳುವುದ ಮರೆಮಾಡದಿರು ನಿಜ
ಲೋಲ ಧರ್ಮಜನಾಣೆ ನಿನಗೆನೆ ಪಾರ್ಥ ನಸುನಗುತ
ಕಾಲಗುಣವೆಂದರಿಯೆ ಮೇಣ್ ತ
ನ್ನಾಳುತನ ಪುಸಿಯಾಯ್ತು ರಿಪುಭಟ
ನಾಳುತನ ದಿಟವಾಯ್ತು ಕೌತುಕವೆಂದನಾ ಪಾರ್ಥ ॥20॥
೦೨೧ ಒನ್ದು ಯೋಜನವರೆಗೆ ...{Loading}...
ಒಂದು ಯೋಜನವರೆಗೆ ತಿರುಗಿತು
ಹಿಂದಕಹಿತನ ತೇರು ತಾನೆಸ
ಲೊಂದು ಬಿಲ್ಲಂತರಕೆ ತೊಲಗಿತು ನಮ್ಮ ರಥವಿಂದು
ಇಂದು ಕರ್ಣನ ಸಾಹಸಕೆ ಮನ
ಸಂದು ಪತಿಕರಿಸಿದಿರಿ ಕೌತುಕ
ವೆಂದು ಕಾಲವ ಬೈದೆನೆಂದನು ಪಾರ್ಥನಾ ಹರಿಗೆ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನನ್ನ ಬಾಣದಿಂದ ಶತ್ರುವಿನ ರಥ ಒಂದು ಯೋಜನದವರೆಗೆ ಹಿಮ್ಮೆಟ್ಟಿತು. ಅವನ ಬಾಣ ಪ್ರಯೋಗದಿಂದ ನಮ್ಮ ರಥ ಒಂದು ಬಿಲ್ಲಿನ ಅಂತರದಷ್ಟು ಮಾತ್ರ ಹಿಮ್ಮೆಟ್ಟಿತು. ಹೀಗಿದ್ದರೂ. ಕರ್ಣನ ಸಾಹಸಕ್ಕೆ ಮನಸ್ಫೂರ್ತಿಯಾಗಿ ಮೆಚ್ಚಿಕೊಳ್ಳುತ್ತಿದ್ದೀರ. ಇದೇನು ಆಶ್ಚರ್ಯ ಎಂದು ಕಾಲನನ್ನು ಟೀಕಿಸಿದೆ, ಎಂದು ಕೃಷ್ಣನಿಗೆ ಅರ್ಜುನನು ಹೇಳಿದನು.
ಮೂಲ ...{Loading}...
ಒಂದು ಯೋಜನವರೆಗೆ ತಿರುಗಿತು
ಹಿಂದಕಹಿತನ ತೇರು ತಾನೆಸ
ಲೊಂದು ಬಿಲ್ಲಂತರಕೆ ತೊಲಗಿತು ನಮ್ಮ ರಥವಿಂದು
ಇಂದು ಕರ್ಣನ ಸಾಹಸಕೆ ಮನ
ಸಂದು ಪತಿಕರಿಸಿದಿರಿ ಕೌತುಕ
ವೆಂದು ಕಾಲವ ಬೈದೆನೆಂದನು ಪಾರ್ಥನಾ ಹರಿಗೆ ॥21॥
೦೨೨ ಆಳುತನದಲಿ ವೀರಕರ್ಣನ ...{Loading}...
ಆಳುತನದಲಿ ವೀರಕರ್ಣನ
ಹೋಲುವರ ನಾ ಕಾಣೆನೈ ಸುರ
ಪಾಲಕರು ತಾವಾನಬಹುದೇ ಕರ್ಣನುರವಣೆಯ
ಕೋಲು ಯೋಜನವರೆಗೆ ತೊಲಗಿಸಿ
ಜಾಳಿಸಿತ ನೀ ನುಡಿವೆ ನಿಜ ಬಿ
ಲ್ಲಾಳತನವನು ನಿನ್ನ ಮನದಲಿ ತಿಳಿದು ನೋಡೆಂದ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶ್ರೀಕೃಷ್ಣನು ‘ವೀರನಾದ ಕರ್ಣನಿಗೆ ಸಮಾನರಾದವರನ್ನು ನಾನು ನೋಡಿಲ್ಲ. ದೇವತೆಗಳಿಗೆ ಒಡೆಯರಾದವರಿಗೂ ಕರ್ಣನ ರಭಸವನ್ನು ತಡೆದುಕೊಳ್ಳಲು ಸಾಧ್ಯವೇ ? ನಿನ್ನ ಬಾಣ ಅವನ ರಥವನ್ನು ಒಂದು ಯೋಜನದವರೆಗೆ ತಳ್ಳಿತೆಂದು ನೀನು ಹೇಳುತ್ತೀಯೇ - ಆದರೆ ನಿನ್ನ ಬಾಣ ಪ್ರಯೋಗದ ಪರಾಕ್ರಮವನ್ನು ಯೋಚಿಸಿ ನೋಡು’ ಎಂದನು.
ಮೂಲ ...{Loading}...
ಆಳುತನದಲಿ ವೀರಕರ್ಣನ
ಹೋಲುವರ ನಾ ಕಾಣೆನೈ ಸುರ
ಪಾಲಕರು ತಾವಾನಬಹುದೇ ಕರ್ಣನುರವಣೆಯ
ಕೋಲು ಯೋಜನವರೆಗೆ ತೊಲಗಿಸಿ
ಜಾಳಿಸಿತ ನೀ ನುಡಿವೆ ನಿಜ ಬಿ
ಲ್ಲಾಳತನವನು ನಿನ್ನ ಮನದಲಿ ತಿಳಿದು ನೋಡೆಂದ ॥22॥
೦೨೩ ಬಸುರೊಳಗೆ ಬ್ರಹ್ಮಾಣ್ಡಕೋಟಿಯ ...{Loading}...
ಬಸುರೊಳಗೆ ಬ್ರಹ್ಮಾಂಡಕೋಟಿಯ
ಮುಸುಕಿಕೊಂಡಿಹ ನಾ ಸಹಿತ ಮೇ
ಲೆಸೆವ ಸಿಂಧದ ಹನುಮಸಹಿತೀ ದಿವ್ಯಹಯಸಹಿತ
ಎಸುಗೆಯಲಿ ತೊಲಗಿಸುವ ಕರ್ಣನ
ಅಸಮಸಾಹಸ ಪಿರಿದೊ ಹುಲುರಥ
ದೆಸುಗೆ ನಿನ್ನಗ್ಗಳಿಕೆ ಪಿರಿದೋ ಪಾರ್ಥ ಹೇಳೆಂದ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಹೊಟ್ಟೆಯಲ್ಲಿ ಬ್ರಹ್ಮಾಂಡ ಕೋಟಿಯನ್ನು ಇಟ್ಟುಕೊಂಡಿರುವ ನನ್ನ ಸಮೇತ, ಮೇಲೆ ಧ್ವಜದಲ್ಲಿರುವ ಹನುಮಂತನ ಸಹಿತ, ಈ ದಿವ್ಯವಾದ ಕುದುರೆಗಳ ಜೊತೆಯಲ್ಲಿರುವ ರಥವನ್ನು ತನ್ನ ಬಾಣಪ್ರಯೋಗದಿಂದ ಹಿಮ್ಮೆಟ್ಟಿಸುವ ಕರ್ಣನ ಮಹಾ ಸಾಹಸ ದೊಡ್ಡದೇ, ಸಾಮಾನ್ಯ ರಥವನ್ನು ಹಿಮ್ಮೆಟ್ಟಿಸುವಂತೆ ಬಾಣ ಪ್ರಯೋಗಿಸಿದ ನಿನ್ನ ಶ್ರೇಷ್ಠತೆ ದೊಡ್ಡದೇ ‘ಹೇಳು ಅರ್ಜುನ’ ಎಂದ ಕೃಷ್ಣ.
ಮೂಲ ...{Loading}...
ಬಸುರೊಳಗೆ ಬ್ರಹ್ಮಾಂಡಕೋಟಿಯ
ಮುಸುಕಿಕೊಂಡಿಹ ನಾ ಸಹಿತ ಮೇ
ಲೆಸೆವ ಸಿಂಧದ ಹನುಮಸಹಿತೀ ದಿವ್ಯಹಯಸಹಿತ
ಎಸುಗೆಯಲಿ ತೊಲಗಿಸುವ ಕರ್ಣನ
ಅಸಮಸಾಹಸ ಪಿರಿದೊ ಹುಲುರಥ
ದೆಸುಗೆ ನಿನ್ನಗ್ಗಳಿಕೆ ಪಿರಿದೋ ಪಾರ್ಥ ಹೇಳೆಂದ ॥23॥
೦೨೪ ಎನಲು ತಳವೆಳಗಾಗಿ ...{Loading}...
ಎನಲು ತಳವೆಳಗಾಗಿ ಫಲುಗುಣ
ಧನುವ ಕೊಂಡನು ದನುಜವೈರಿಗೆ
ಮನದ ಗರ್ವವನುಸುರಲರಿಯದೆ ಬಾಗಿದನು ಶಿರವ
ಮೊನೆಯಲಗಿನಂಬಿನಲಿ ಕರ್ಣನ
ಧನುವನಿಕ್ಕಡಿಗಳೆದು ಫಲುಗುಣ
ನನವರತ ಬಹುಸತ್ವದಲಿ ಮತ್ಸರಿಸಿ ಕಾದಿದನು ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೃಷ್ಣನ ಮಾತನ್ನು ಕೇಳಿ ಅರ್ಜುನನಿಗೆ ಆಶ್ಚರ್ಯವಾಯಿತು. ಬಿಲ್ಲನ್ನು ಕೈಗೆ ತೆಗೆದುಕೊಂಡನು. ಕೃಷ್ಣನಿಗೆ ತನ್ನ ಮನಸ್ಸಿನ ಗರ್ವವನ್ನು ಹೇಳಲು ತಿಳಿಯದೆ ತಲೆಯನ್ನು ತಗ್ಗಿಸಿದನು. ಚೂಪಾದ ಬಾಣದಿಂದ ಕರ್ಣನ ಬಿಲ್ಲನ್ನು ಎರಡು ಭಾಗ ಮಾಡಿ ಸೀಳಿ ಅರ್ಜುನನು ಹೆಚ್ಚಿನ ಕೋಪದಿಂದ ತನ್ನ ಶಕ್ತಿ ಮೀರಿ ಯುದ್ಧ ಮಾಡಿದನು.
ಮೂಲ ...{Loading}...
ಎನಲು ತಳವೆಳಗಾಗಿ ಫಲುಗುಣ
ಧನುವ ಕೊಂಡನು ದನುಜವೈರಿಗೆ
ಮನದ ಗರ್ವವನುಸುರಲರಿಯದೆ ಬಾಗಿದನು ಶಿರವ
ಮೊನೆಯಲಗಿನಂಬಿನಲಿ ಕರ್ಣನ
ಧನುವನಿಕ್ಕಡಿಗಳೆದು ಫಲುಗುಣ
ನನವರತ ಬಹುಸತ್ವದಲಿ ಮತ್ಸರಿಸಿ ಕಾದಿದನು ॥24॥
೦೨೫ ಎಚ್ಚನೀತನ ಸಾರಥಿಯ ...{Loading}...
ಎಚ್ಚನೀತನ ಸಾರಥಿಯ ಮಗು
ಳೆಚ್ಚನೀತನ ರಥವ ವಾಜಿಯ
ನೆಚ್ಚನೀತನ ಧನುವನೀತನ ಸಿಂಧ ಸೀಗುರಿಯ
ಎಚ್ಚನೀತನ ನಿಶಿತಶಸ್ತ್ರವ
ಕೊಚ್ಚಿದನು ಮಗುಳೆಚ್ಚು ಪುನರಪಿ
ಯೆಚ್ಚು ಕರ್ಣನ ಹೊಳ್ಳುಗಳೆದನು ಪಾರ್ಥ ನಿಮಿಷದಲಿ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನು ಕರ್ಣನ ಸಾರಥಿಯನ್ನು, ರಥವನ್ನು, ಕುದುರೆಯನ್ನು, ಬಿಲ್ಲನ್ನು, ಧ್ವಜವನ್ನು, ಸೀಗುರಿಯನ್ನು, ಹರಿತವಾದ ಶಸ್ತ್ರಗಳನ್ನು ಬಾಣ ಪ್ರಯೋಗದಿಂದ ಕೊಚ್ಚಿ ಹಾಕಿದನು. ಮತ್ತೆ ಮತ್ತೆ ಬಾಣಗಳನ್ನು ಪ್ರಯೋಗಿಸಿ, ಕರ್ಣನ ಸತ್ವ ನಿಮಿಷದಲ್ಲಿ ಹಾಳಾಗುವಂತೆ ಮಾಡಿದನು.
ಮೂಲ ...{Loading}...
ಎಚ್ಚನೀತನ ಸಾರಥಿಯ ಮಗು
ಳೆಚ್ಚನೀತನ ರಥವ ವಾಜಿಯ
ನೆಚ್ಚನೀತನ ಧನುವನೀತನ ಸಿಂಧ ಸೀಗುರಿಯ
ಎಚ್ಚನೀತನ ನಿಶಿತಶಸ್ತ್ರವ
ಕೊಚ್ಚಿದನು ಮಗುಳೆಚ್ಚು ಪುನರಪಿ
ಯೆಚ್ಚು ಕರ್ಣನ ಹೊಳ್ಳುಗಳೆದನು ಪಾರ್ಥ ನಿಮಿಷದಲಿ ॥25॥
೦೨೬ ಬೊಬ್ಬಿರಿದುದಾ ಸೇನೆ ...{Loading}...
ಬೊಬ್ಬಿರಿದುದಾ ಸೇನೆ ಸೋಲದ
ಮಬ್ಬು ಮುಸುಕಿದುದೀ ಬಲವನೀ
ಯುಬ್ಬೆಯನು ಸೈರಿಸುತ ಸಾಹಸಮಲ್ಲ ತನಿಗೆದರಿ
ಇಬ್ಬರಿಗೆ ಫಡ ಹುಬ್ಬನಿಕ್ಕುವ
ಳೊಬ್ಬಳೇ ಜಯಲಕ್ಷಿ ್ಮ ಬೊಡ್ಡಿಯ
ಕೊಬ್ಬ ನಿಲಿಸುವೆನೆನುತ ಖತಿಯಲಿ ಮಸಗಿದನು ಕರ್ಣ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾಂಡವರ ಸೈನ್ಯ ಬೊಬ್ಬೆ ಹಾಕಿತು. ಸೋಲಿನ ಕತ್ತಲೆ ನಮ್ಮ ಸೈನ್ಯವನ್ನು ಮುತ್ತಿಕೊಂಡಿತು. ಈ ಸೈನ್ಯವನ್ನು ಅದರ ಉಬ್ಬಾಟವನ್ನು ಸಹಿಸಿಕೊಳ್ಳುತ್ತಾ, ಸಾಹಸಮಲ್ಲನಾದ ಕರ್ಣನು ಹೆಚ್ಚಿದ ಕೋಪದಿಂದ ‘ಈ ಜಯಲಕ್ಷ್ಮಿಯು ಒಬ್ಬಳೇ ಇಬ್ಬರಿಗೂ ತನ್ನ ಕಣ್ಣನ್ನು ಹೊಡೆದು ಆಸೆ ತೋರಿಸುತ್ತಾಳೆ. ಇವಳ ಕೊಬ್ಬನ್ನು ನಾಶಮಾಡುತ್ತೇನೆ’ ಎನ್ನುತ್ತಾ ಕೋಪದಿಂದ ವಿಜೃಂಭಿಸಿದನು.
ಮೂಲ ...{Loading}...
ಬೊಬ್ಬಿರಿದುದಾ ಸೇನೆ ಸೋಲದ
ಮಬ್ಬು ಮುಸುಕಿದುದೀ ಬಲವನೀ
ಯುಬ್ಬೆಯನು ಸೈರಿಸುತ ಸಾಹಸಮಲ್ಲ ತನಿಗೆದರಿ
ಇಬ್ಬರಿಗೆ ಫಡ ಹುಬ್ಬನಿಕ್ಕುವ
ಳೊಬ್ಬಳೇ ಜಯಲಕ್ಷಿ ್ಮ ಬೊಡ್ಡಿಯ
ಕೊಬ್ಬ ನಿಲಿಸುವೆನೆನುತ ಖತಿಯಲಿ ಮಸಗಿದನು ಕರ್ಣ ॥26॥
೦೨೭ ಹನುಮನನು ಮತ್ತೊಮ್ಮೆ ...{Loading}...
ಹನುಮನನು ಮತ್ತೊಮ್ಮೆ ಪುನರಪಿ
ದನುಜರಿಪುವನು ಮತ್ತೆ ಹಯವನು
ಧನುವನರ್ಜುನನಂಬುಗಳನಾ ಛತ್ರ ಚಾಮರವ
ಮೊನೆಗಣೆಯಲೇ ಮುಸುಕಿದನು ಮು
ಮ್ಮೊನೆಯ ಬೋಳೆಯ ತೊಡಚಿ ಕೌರವ
ಜನಪನಾವೆಡೆ ನೋಡಹೇಳೆನುತುಬ್ಬಿದನು ಕರ್ಣ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮತ್ತೊಂದು ಬಾರಿ ಹನುಮಂತನನ್ನು ್ತ ಕೃಷ್ಣನನ್ನು, ಕುದುರೆಯನ್ನು, ಅರ್ಜುನನ ಬಿಲ್ಲು ಬಾಣಗಳನ್ನು, ಛತ್ರ ಚಾಮರಗಳನ್ನು ತನ್ನ ಚೂಪಾದ ಬಾಣಗಳಿಂದ ಮತ್ತೆ ಮತ್ತೆ ಮುಚ್ಚಿ ಹಾಕಿದನು ಮೂರು ಮೊನೆಗಳಿಂದ ಕೂಡಿದ ಬಾಣವನ್ನು ಹೂಡಿ ‘ಕೌರವರಾಯ ಎಲ್ಲಿದ್ದಾನೆ, ಇದನ್ನು ನೋಡಲು ಹೇಳು’ ಎನ್ನುತ್ತಾ ಉತ್ಸಾಹದಿಂದ ಉಬ್ಬಿ ಹೋದನು ಕರ್ಣ.
ಪದಾರ್ಥ (ಕ.ಗ.ಪ)
ತೊಡಚು-ತೊಡು, ಹೂಡು
ಮೂಲ ...{Loading}...
ಹನುಮನನು ಮತ್ತೊಮ್ಮೆ ಪುನರಪಿ
ದನುಜರಿಪುವನು ಮತ್ತೆ ಹಯವನು
ಧನುವನರ್ಜುನನಂಬುಗಳನಾ ಛತ್ರ ಚಾಮರವ
ಮೊನೆಗಣೆಯಲೇ ಮುಸುಕಿದನು ಮು
ಮ್ಮೊನೆಯ ಬೋಳೆಯ ತೊಡಚಿ ಕೌರವ
ಜನಪನಾವೆಡೆ ನೋಡಹೇಳೆನುತುಬ್ಬಿದನು ಕರ್ಣ ॥27॥
೦೨೮ ಮೊದಲಲಾ ಭೀಷ್ಮನ ...{Loading}...
ಮೊದಲಲಾ ಭೀಷ್ಮನ ಶರಾಘಾ
ತದಲಿ ನೊಂದೆನು ಬಳಿಕ ಕರ್ಣನ
ಕದನದಲಿ ತಪ್ಪಲ್ಲ ತಪ್ಪಲ್ಲೆನುತ ಮುರವೈರಿ
ಗದಗದಿಸುತಶ್ವವನು ಬೋಳೈ
ಸಿದನು ಹನುಮನ ನೋಡಿ ತಲೆದೂ
ಗಿದನು ಮಂದಸ್ಮಿತಮಧುರಮುಖಕಮಳನೊಲವಿನಲಿ ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಈ ಮೊದಲು ಆ ಭೀಷ್ಮನ ಬಾಣದ ಪೆಟ್ಟಿನಿಂದ ನೊಂದೆ. ಆ ಮೇಲೆ ಈಗ ಕರ್ಣನ ಯುದ್ಧದಲ್ಲಿ ನೋವಾಗಿದೆ. ತಪ್ಪೇನಿಲ್ಲ’ ಎನ್ನುತ್ತಾ ತಡೆದು ತಡೆದು ಮಾತನಾಡುತ್ತಾ ಕೃಷ್ಣನು ಕುದುರೆಗಳನ್ನು ಮೈಸವರಿ ಸಮಾಧಾನ ಮಾಡಿದನು. ಮಂದಹಾಸವನ್ನು ಬೀರುವ ಮುಖಕಮಲದ ಕೃಷ್ಣನು ಹನುಮಂತನ ಕಡೆಗೆ ನೋಡಿ ತಲೆದೂಗಿದನು.
ಮೂಲ ...{Loading}...
ಮೊದಲಲಾ ಭೀಷ್ಮನ ಶರಾಘಾ
ತದಲಿ ನೊಂದೆನು ಬಳಿಕ ಕರ್ಣನ
ಕದನದಲಿ ತಪ್ಪಲ್ಲ ತಪ್ಪಲ್ಲೆನುತ ಮುರವೈರಿ
ಗದಗದಿಸುತಶ್ವವನು ಬೋಳೈ
ಸಿದನು ಹನುಮನ ನೋಡಿ ತಲೆದೂ
ಗಿದನು ಮಂದಸ್ಮಿತಮಧುರಮುಖಕಮಳನೊಲವಿನಲಿ ॥28॥
೦೨೯ ಶರಹತಿಯಲುರೆ ನೊನ್ದು ...{Loading}...
ಶರಹತಿಯಲುರೆ ನೊಂದು ಧೂಪಿಸಿ
ತರಹರಿಸುವಶ್ವಾಳಿ ಕೃಷ್ಣನ
ಕರುಣವಚನಾಮೃತರಸದಿನಾಪ್ಯಾಯನಂಬಡೆದು
ಖುರದಲವನಿಯ ಪೊಯ್ದು ಲಳಿ ಮಿಗ
ಲುರವಣಿಸಿದವು ಹನುಮನಂತಃ
ಕರಣ ಹದುಳಿಸಿ ಹಿಗ್ಗಿದನು ನರನಾಥ ಕೇಳ್ ಎಂದ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಧೃತರಾಷ್ಟ್ರ ಕೇಳು ‘ಕರ್ಣನ ಬಾಣದ ಪೆಟ್ಟಿನಿಂದ ಹೆಚ್ಚು ನೊಂದು’ ಕಂಪಿಸುತ್ತಿದ್ದ ಕುದುರೆಗಳು ಕೃಷ್ಣನ ಕರುಣೆಯ ಮಾತುಗಳೆಂಬ ಅಮೃತರಸದಿಂದ ತೃಪ್ತಿಯನ್ನು ಪಡೆದು, ತಮ್ಮ ಗೊರಸಿನಿಂದ ಭೂಮಿಯನ್ನು ಒದೆಯುತ್ತಾ, ಹೆಚ್ಚು ಉತ್ಸಾಹದಿಂದ ಮುಂದುವರೆದವು. ಹನುಮಂತನ ಮನಸ್ಸಿಗೆ ಕ್ಷೇಮವೆನಿಸಿ ಅವನು ಸಂತೋಷಪಟ್ಟ,” ಎಂದ ಸಂಜಯ.
ಪದಾರ್ಥ (ಕ.ಗ.ಪ)
ಧೂಪಿಸು-ಸಂತಪ್ತವಾಗು, ನೋಯು
ಮೂಲ ...{Loading}...
ಶರಹತಿಯಲುರೆ ನೊಂದು ಧೂಪಿಸಿ
ತರಹರಿಸುವಶ್ವಾಳಿ ಕೃಷ್ಣನ
ಕರುಣವಚನಾಮೃತರಸದಿನಾಪ್ಯಾಯನಂಬಡೆದು
ಖುರದಲವನಿಯ ಪೊಯ್ದು ಲಳಿ ಮಿಗ
ಲುರವಣಿಸಿದವು ಹನುಮನಂತಃ
ಕರಣ ಹದುಳಿಸಿ ಹಿಗ್ಗಿದನು ನರನಾಥ ಕೇಳೆಂದ ॥29॥
೦೩೦ ಬಳಿಕ ಹೇಳುವುದೇನು ...{Loading}...
ಬಳಿಕ ಹೇಳುವುದೇನು ಪಾರ್ಥನ
ಮುಳಿಸಿನಲಿ ಕಾಲಾಗ್ನಿ ಜಿಹ್ವಾ
ವಳಿಯ ಲಳಿಯಲಿ ಕುಪಿತಕಾಳೋರಗನ ವದನದಲಿ
ಸುಳಿವವನ ಸಾಹಸವನಾತನ
ಬಲುಹನಾತನ ಜಯವನಾತನ
ನಿಲವ ಕಂಡವರಾರು ಸುರ ನರ ನಾಗಲೋಕದಲಿ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಆ ಮೇಲೆ ನಡೆದದ್ದನ್ನು ಏನು ಹೇಳಲಿ ? ಅರ್ಜುನನು ಕೋಪಗೊಂಡಿರುವಾಗ ಪ್ರಳಯಕಾಲದ ಅಗ್ನಿಯ ನಾಲಗೆಯ ವಿಜೃಂಭಣೆಯಲ್ಲಿ, ಕೋಪಗೊಂಡ ಕಾಳಸರ್ಪನ ಮುಖದಲ್ಲಿ ಸುಳಿದಾಡುವವನು ಎಂಬಂತೆ ಸಾಹಸ ತೋರಿಸುತ್ತಾನೆ. ಅವನ ಶಕ್ತಿಯನ್ನು ಅವನಿಗೆ ಸಿಕ್ಕ ಜಯವನ್ನು ಅವನ ವ್ಯಕ್ತಿತ್ವವನ್ನು ಕಂಡವರು, ದೇವತೆಗಳು, ನರರು, ನಾಗಲೋಕಗಳಲ್ಲಿ ಯಾರಿದ್ದಾರೆ?’ ಎಂದನು.
ಮೂಲ ...{Loading}...
ಬಳಿಕ ಹೇಳುವುದೇನು ಪಾರ್ಥನ
ಮುಳಿಸಿನಲಿ ಕಾಲಾಗ್ನಿ ಜಿಹ್ವಾ
ವಳಿಯ ಲಳಿಯಲಿ ಕುಪಿತಕಾಳೋರಗನ ವದನದಲಿ
ಸುಳಿವವನ ಸಾಹಸವನಾತನ
ಬಲುಹನಾತನ ಜಯವನಾತನ
ನಿಲವ ಕಂಡವರಾರು ಸುರ ನರ ನಾಗಲೋಕದಲಿ ॥30॥
೦೩೧ ರಾಯ ಕೇಳಭಿಮನ್ತ್ರಿಸಿದನಾ ...{Loading}...
ರಾಯ ಕೇಳಭಿಮಂತ್ರಿಸಿದನಾ
ಗ್ನೇಯವನು ಹೂಡಿದನು ಸುರಕುಲ
ಬಾಯಬಿಡಲಂಬುಗಿದು ಹಾಯ್ದುದು ಬಿಲುದಿರುವನೊದೆದು
ವಾಯು ಪಡಿಬಲವಾಗೆ ಕಿಡಿಗಳ
ಬಾಯಿಧಾರೆಯ ಹೊದರ ಕರ್ಬೊಗೆ
ಲಾಯದಲಿ ಲವಣಿಸುವ ದಳ್ಳುರಿದಿರುಳ ಚೂಣಿಯಲಿ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧೃತರಾಷ್ಟ್ರನೇ ಕೇಳು, ಕರ್ಣನು ಆಗ್ನೇಯಾಸ್ತ್ರವನ್ನು ಮಂತ್ರಪೂರ್ವಕವಾಗಿ ಪ್ರಯೋಗಿಸಿದನು. ಅದರಿಂದ ದೇವತೆಗಳು ಬಾಯಿ ಬಾಯಿ ಬಿಡುವಂತಾಯಿತು. ಆ ಆಜ್ಞೇಯಾಸ್ತ್ರವು ಚೂಪಾದ ಬಾಯಿಯ, ಕಪ್ಪಾದ ಹೊಗೆಯನ್ನುಗುಳುತ್ತಾ , ದಟ್ಟವಾಗಿ ಹೊಮ್ಮಿದ್ದರಿಂದ ರಾತ್ರಿ ಆವರಿಸಿತೋ ಎಂಬಂತಾಗಿ, ಅದು ಬಿಲ್ಲಿನ ಹೆದೆಯನ್ನು ಒದ್ದು ಗಾಳಿಯ ಸಹಾಯವನ್ನು ಪಡೆದು ಮುನ್ನುಗ್ಗಿತು.
ಪದಾರ್ಥ (ಕ.ಗ.ಪ)
ಲವಣಿಸು-ಹೊಮ್ಮು
ಮೂಲ ...{Loading}...
ರಾಯ ಕೇಳಭಿಮಂತ್ರಿಸಿದನಾ
ಗ್ನೇಯವನು ಹೂಡಿದನು ಸುರಕುಲ
ಬಾಯಬಿಡಲಂಬುಗಿದು ಹಾಯ್ದುದು ಬಿಲುದಿರುವನೊದೆದು
ವಾಯು ಪಡಿಬಲವಾಗೆ ಕಿಡಿಗಳ
ಬಾಯಿಧಾರೆಯ ಹೊದರ ಕರ್ಬೊಗೆ
ಲಾಯದಲಿ ಲವಣಿಸುವ ದಳ್ಳುರಿದಿರುಳ ಚೂಣಿಯಲಿ ॥31॥
೦೩೨ ಅಹಹ ಬೆನ್ದುದು ...{Loading}...
ಅಹಹ ಬೆಂದುದು ಲೋಕವಿನ್ನಾ
ರಹಿಮುಖವ ಚುಂಬಿಸುವರೋ ವಿ
ಗ್ರಹದ ಫಲನಿಗ್ರಹವಲಾ ಶಿವ ಎನುತ ಸುರರುಲಿಯೆ
ವಹಿಲ ಮಿಗೆ ವರುಣಾಸ್ತ್ರದಲಿ ಹುತ
ವಹನ ಬಿಂಕವ ಬಿಡಿಸಿದನು ಜಯ
ವಹುದೆ ಪರರಿಗೆ ಪಾರ್ಥನಿರೆ ಜನನಾಥ ಕೇಳ್ ಎಂದ ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “‘ಅಯ್ಯೋ ಲೋಕವೆಲ್ಲಾ ಸುಟ್ಟುಹೋಯಿತು. ಈ ಸರ್ಪದ ಮುಖಕ್ಕೆ ಇನ್ನು ಯಾರು ಮುತ್ತಿಡುವ ಧೈರ್ಯ ಮಾಡುತ್ತಾರೋ ಯುದ್ಧದ ಫಲ ನಾಶವಲ್ಲವೇ, ಅಯ್ಯೋ ಶಿವನೇ ಎಂದು ದೇವತೆಗಳು ಕೂಗು ಹಾಕಿದರು. ಆದರೆ ಅರ್ಜುನನು ವೇಗವಾಗಿ ವಾರುಣಾಸ್ತ್ರವನ್ನು ಪ್ರಯೋಗಿಸಿ ಅಗ್ನಿಯ ಆರ್ಭಟದಿಂದ ಸೈನ್ಯವನ್ನು ಮುಕ್ತ ಮಾಡಿದನು. ಧೃತರಾಷ್ಟ್ರ , ಅರ್ಜುನನು ಇರುವಾಗ ಇತರರಿಗೆ ಜಯ ದೊರೆಯುತ್ತದೆಯೇ ಕೇಳು” ಎಂದ ಸಂಜಯ.
ಮೂಲ ...{Loading}...
ಅಹಹ ಬೆಂದುದು ಲೋಕವಿನ್ನಾ
ರಹಿಮುಖವ ಚುಂಬಿಸುವರೋ ವಿ
ಗ್ರಹದ ಫಲನಿಗ್ರಹವಲಾ ಶಿವ ಎನುತ ಸುರರುಲಿಯೆ
ವಹಿಲ ಮಿಗೆ ವರುಣಾಸ್ತ್ರದಲಿ ಹುತ
ವಹನ ಬಿಂಕವ ಬಿಡಿಸಿದನು ಜಯ
ವಹುದೆ ಪರರಿಗೆ ಪಾರ್ಥನಿರೆ ಜನನಾಥ ಕೇಳೆಂದ ॥32॥
೦೩೩ ಸರಳ ಝಳ ...{Loading}...
ಸರಳ ಝಳ ಝಾಡಿಸಿತು ಕಬ್ಬೊಗೆ
ಪರೆದುದಲ್ಲಿಯದಲ್ಲಿ ತಂಪಿನ
ಸರಳಮೊನೆಯಲಿ ಸಿಂಪಿಸುವ ತುಂತುರ ತುಷಾರದಲಿ
ಅರಿಬಲದ ಬೊಬ್ಬಾಟದಲಿ ಧರೆ
ಬಿರಿಯಲರ್ಜುನ ಹೂಡಿದನು ಹೂಂ
ಕರಣ ಮಾನಿತ ಮಂತ್ರಮಂಡಿತ ಮೇಘಮಾರ್ಗಣವ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತಂಪಾದ ವಾರುಣಾಸ್ತ್ರದ ಬಾಣದ ಮೊನೆಯಿಂದ ಸೂಸುತ್ತಿದ್ದ ತುಂತುರು ಹನಿಗಳಿಂದ, ಕರ್ಣನ ಆಗ್ನೇಯಾಸ್ತ್ರದ ಬಿಸಿ ಆರಿಹೋಯಿತು. ಕರಿಯ ಹೊಗೆ ಚೆದುರಿ ಹೋಯಿತು. ಶತ್ರು ಬಲದ ಆರ್ಭಟದಿಂದ ಭೂಮಿ ಬಿರಿಯುವಂತಾಯಿತು. ಆಗ ಅರ್ಜುನನು ‘ಹೂಂ’ ಎಂದು ಮಂತ್ರೋಚ್ಚಾರಣೆ ಮಾಡಿ ‘ಮೇಘಾಸ್ತ್ರ’ವನ್ನು ಹೂಡಿದನು.
ಮೂಲ ...{Loading}...
ಸರಳ ಝಳ ಝಾಡಿಸಿತು ಕಬ್ಬೊಗೆ
ಪರೆದುದಲ್ಲಿಯದಲ್ಲಿ ತಂಪಿನ
ಸರಳಮೊನೆಯಲಿ ಸಿಂಪಿಸುವ ತುಂತುರ ತುಷಾರದಲಿ
ಅರಿಬಲದ ಬೊಬ್ಬಾಟದಲಿ ಧರೆ
ಬಿರಿಯಲರ್ಜುನ ಹೂಡಿದನು ಹೂಂ
ಕರಣ ಮಾನಿತ ಮಂತ್ರಮಂಡಿತ ಮೇಘಮಾರ್ಗಣವ ॥33॥
೦೩೪ ಹೊಗೆಯ ಹೊರಳಿಯ ...{Loading}...
ಹೊಗೆಯ ಹೊರಳಿಯ ವಿವಿಧವರ್ಣದ
ಮುಗಿಲ ಪಾಳೆಯವೆತ್ತಿ ಬಿಟ್ಟುದು
ಗಗನದಗಲದಲೌಕಿದವು ದೆಸೆದೆಸೆಯ ಮೂಲೆಗಳ
ಹಗಲುಗತ್ತಲೆಕಟ್ಟಿತೇನಿದು
ಯುಗದ ಕಡೆಯೋ ಶಿವಶಿವಾ ಎನೆ
ಜಗ ಜಗತ್ಪ್ರಾಣಾಸ್ತ್ರವನು ಹೂಡಿದನು ಕಲಿಕರ್ಣ ॥34॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅದು ಹೊಗೆಯ ಗುಂಪಿನ ಅನೇಕ ಬಣ್ಣದ ಮೋಡಗಳ ಬಿಡಾರವನ್ನು ಆಕಾಶದಲ್ಲಿ ಹರಡಿ, ದಿಕ್ಕು ದಿಕ್ಕಿನ ಮೂಲೆಗಳನ್ನು ಒತ್ತಿತು. ಹಗಲಿನ ಹೊತ್ತು ಕತ್ತಲೆ ಉಂಟಾಯಿತಲ್ಲಾ. ಏನಿದು . ಯುಗದ ಕೊನೆಗಾಲ ಬಂತೇ ಶಿವನೇ ಎನ್ನುವಂತಾದಾಗ, ಕರ್ಣನು, ‘ವಾಯುವ್ಯಾಸ್ತ್ರ’ವನ್ನು ಪ್ರಯೋಗಿಸಿದನು.
ಮೂಲ ...{Loading}...
ಹೊಗೆಯ ಹೊರಳಿಯ ವಿವಿಧವರ್ಣದ
ಮುಗಿಲ ಪಾಳೆಯವೆತ್ತಿ ಬಿಟ್ಟುದು
ಗಗನದಗಲದಲೌಕಿದವು ದೆಸೆದೆಸೆಯ ಮೂಲೆಗಳ
ಹಗಲುಗತ್ತಲೆಕಟ್ಟಿತೇನಿದು
ಯುಗದ ಕಡೆಯೋ ಶಿವಶಿವಾ ಎನೆ
ಜಗ ಜಗತ್ಪ್ರಾಣಾಸ್ತ್ರವನು ಹೂಡಿದನು ಕಲಿಕರ್ಣ ॥34॥
೦೩೫ ಅಟ್ಟಿ ಹೊಯ್ದುದು ...{Loading}...
ಅಟ್ಟಿ ಹೊಯ್ದುದು ನಿರಿಮುಗಿಲನರೆ
ಯಟ್ಟಿ ಕೊಡಹಿತು ತಳಿತಮೇಘದ
ಥಟ್ಟು ಮುರಿದುದು ಬೀಸಿದವು ಬಿರುಗಾಳಿ ಬಲ ಬೆದರೆ
ಇಟ್ಟಣಿಸಿ ಕೈಯೊಡನೆ ಕೊಂಡನು
ಬೆಟ್ಟವುರುಳುವ ಬಾಣವನು ಜಗ
ಜಟ್ಟಿ ಕೌರವರಾಯ ಬಾಳೆನುತೆಚ್ಚನಾ ಕರ್ಣ ॥35॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತೆರೆಗಳಂತೆ ಆಕಾಶದಲ್ಲಿ ಹಬ್ಬಿದ್ದ ಮೋಡಗಳನ್ನು ವಾಯುವ್ಯಾಸ್ತ್ರ ಅಟ್ಟಿಸಿಕೊಂಡು ಹೋಗಿ ಹೊಡೆಯಿತು. ಹಿಂಸಿಸಿ ಕೆಳಕ್ಕೆ ಬೀಳಿಸಿತು. ಹರಡಿದ್ದ ಮೋಡದ ಸಮೂಹ ನಾಶವಾಯಿತು. ಸೈನ್ಯ ಬೆದರುವಂತೆ ಬಿರುಗಾಳಿ ಬೀಸಿತು. ಕರ್ಣನು ತನ್ನ ಸೈನ್ಯವನ್ನು ಸೇರಿಸಿಕೊಂಡು ಬೆಟ್ಟವನ್ನೇ ಉರುಳಿಸುವ ಬಾಣವನ್ನು ಕೈಗೆ ತೆಗೆದುಕೊಂಡು ‘ಜಗಜಟ್ಟಿಯಾದ ಕೌರವನು ಬದುಕಲಿ’ ಎಂದು ಹೇಳುತ್ತಾ ಪ್ರಯೋಗಿಸಿದನು.
ಪದಾರ್ಥ (ಕ.ಗ.ಪ)
ಅರೆಯಟ್ಟು-ಹಿಂಸಿಸು, ಇಟ್ಟಣಿಸು-ಗುಂಪು ಸೇರು
ಮೂಲ ...{Loading}...
ಅಟ್ಟಿ ಹೊಯ್ದುದು ನಿರಿಮುಗಿಲನರೆ
ಯಟ್ಟಿ ಕೊಡಹಿತು ತಳಿತಮೇಘದ
ಥಟ್ಟು ಮುರಿದುದು ಬೀಸಿದವು ಬಿರುಗಾಳಿ ಬಲ ಬೆದರೆ
ಇಟ್ಟಣಿಸಿ ಕೈಯೊಡನೆ ಕೊಂಡನು
ಬೆಟ್ಟವುರುಳುವ ಬಾಣವನು ಜಗ
ಜಟ್ಟಿ ಕೌರವರಾಯ ಬಾಳೆನುತೆಚ್ಚನಾ ಕರ್ಣ ॥35॥
೦೩೬ ಗಿರಿಯ ಡೆಙ್ಕಣಿಜನ್ತ್ರವನು ...{Loading}...
ಗಿರಿಯ ಡೆಂಕಣಿಜಂತ್ರವನು ತರ
ಹರಿಸುವವರಾರರಸ ಢಾವಣಿ
ಗಿರಿಯ ಧಾಳಿಗೆ ಧಾತುಗೆಟ್ಟುದು ಪಾಂಡುಸುತಸೇನೆ
ಅರರೆ ಕೆಡೆಕೆಡೆಯೆನುತ ವಜ್ರದ
ಸರಳನುಗಿದನದಾವ ವಹಿಲದೊ
ಳುರುಳೆಗಡಿದನು ಪರ್ವತಾಸ್ತ್ರವನಿಂದ್ರಸುತ ನಗುತ ॥36॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೊರೆಯೇ, ಬೆಟ್ಟದ ರೂಪದ ಆಯುಧ ಯಂತ್ರದ ಆಕ್ರಮಣವನ್ನು ಸಹಿಸಿಕೊಳ್ಳಲು ಯಾರಿಗೆ ಸಾಧ್ಯ. ಸಾಲುಸಾಲಾಗಿ ಮೇಲೆ ಬೀಳುತ್ತಿದ್ದ ‘ಗಿರಿಯ’ ಅಸ್ತ್ರದ ಧಾಳಿಗೆ ಪಾಂಡವರ ಸೈನ್ಯ ಶಕ್ತಿಗುಂದಿತು. ಅರೆ ‘ಕೆಳಕ್ಕೆ ಬೀಳು’ ಎಂದು ಹೇಳುತ್ತಾ ಅರ್ಜುನನು ನಗುತ್ತಾ ವಜ್ರಾಸ್ತ್ರವನ್ನು ಪ್ರಯೋಗಿಸಿ ಪರ್ವತಾಸ್ತ್ರವನ್ನು ಬೇಗ ಉರುಳುವಂತೆ ಕತ್ತರಿಸಿ ಹಾಕಿದನು.
ಪದಾರ್ಥ (ಕ.ಗ.ಪ)
ಡೆಂಕಣಿ-ಒಂದು ಬಗೆಯ ಆಯುಧ,
ಢಾವಣಿ-ದಾವಣಿ, ಸಾಲು
ಮೂಲ ...{Loading}...
ಗಿರಿಯ ಡೆಂಕಣಿಜಂತ್ರವನು ತರ
ಹರಿಸುವವರಾರರಸ ಢಾವಣಿ
ಗಿರಿಯ ಧಾಳಿಗೆ ಧಾತುಗೆಟ್ಟುದು ಪಾಂಡುಸುತಸೇನೆ
ಅರರೆ ಕೆಡೆಕೆಡೆಯೆನುತ ವಜ್ರದ
ಸರಳನುಗಿದನದಾವ ವಹಿಲದೊ
ಳುರುಳೆಗಡಿದನು ಪರ್ವತಾಸ್ತ್ರವನಿಂದ್ರಸುತ ನಗುತ ॥36॥
೦೩೭ ಆವ ಚಳಕದೊಳರ್ಜುನನು ...{Loading}...
ಆವ ಚಳಕದೊಳರ್ಜುನನು ತಿಮಿ
ರಾವಲಂಬದ ಸರಳಲೆಚ್ಚನು
ನಾವರಿಯೆವಿರುಳಂಧತಮ ಮುದ್ರಿಸಿತು ದೃಷ್ಟಿಗಳ
ಆವನಾವನನರಿವನೋ ತಾ
ನಾವನಿದಿರಾರೆಂಬ ಭೇದವ
ಠಾವು ತೋರದು ತಮದೊಳದ್ದುದು ಕೂಡೆ ಕುರುಸೇನೆ ॥37॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅರ್ಜುನನು ಮತ್ತೆ ಯಾವ ಕೈಚಳಕವನ್ನು ತೋರಿಸುತ್ತಾ ಕತ್ತಲೆಯನ್ನು ಉಂಟು ಮಾಡುವ ಅಸ್ತ್ರವನ್ನು ಪ್ರಯೋಗಿಸಿದನೋ ನನಗೆ ತಿಳಿಯಲಿಲ್ಲ. ಅದರಿಂದ ಎಲ್ಲರ ಕಣ್ಣುಗಳಿಗೆ ಕತ್ತಲೆ ಕಟ್ಟಿತು. ಯಾರು ಯಾರು ಹೋರಾಡುತ್ತಿದ್ದಾರೆ, ತಾನು ಯಾರು, ಎದುರಾಳಿ ಯಾರು ಎಂಬ ಭೇದವೇ ತೋರದಂತೆ, ಕೌರವ ಸೈನ್ಯ ಕತ್ತಲಲ್ಲಿ ಮುಳುಗಿ ಹೋಯಿತು” ಎಂದ ಸಂಜಯ.
ಮೂಲ ...{Loading}...
ಆವ ಚಳಕದೊಳರ್ಜುನನು ತಿಮಿ
ರಾವಲಂಬದ ಸರಳಲೆಚ್ಚನು
ನಾವರಿಯೆವಿರುಳಂಧತಮ ಮುದ್ರಿಸಿತು ದೃಷ್ಟಿಗಳ
ಆವನಾವನನರಿವನೋ ತಾ
ನಾವನಿದಿರಾರೆಂಬ ಭೇದವ
ಠಾವು ತೋರದು ತಮದೊಳದ್ದುದು ಕೂಡೆ ಕುರುಸೇನೆ ॥37॥
೦೩೮ ವೈರಿಶರಕೇನರಿಯನೇ ಪ್ರತಿ ...{Loading}...
ವೈರಿಶರಕೇನರಿಯನೇ ಪ್ರತಿ
ಕಾರವನು ನಿನ್ನಾತನಗ್ಗದ
ಸೌರಮಯಮಂತ್ರಾಭಿಮಂತ್ರಿತ ಭಾನುಮಾರ್ಗಣವ
ಆರು ಕಂಡರು ತಿಮಿರಜನಿತವಿ
ಕಾರವನು ಹೇಳಿಗೆಯ ಮುಚ್ಚುಳ
ಜಾರಿಸಿದ ಫಣಿಯಂತೆ ಭುಲ್ಲವಿಸಿತ್ತು ಕುರುಸೇನೆ ॥38॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶತ್ರುವಿನ ಬಾಣಕ್ಕೆ ಪ್ರತಿ ಬಾಣದ ಪ್ರಯೋಗವೇನೂ ಕರ್ಣನಿಗೆ ತಿಳಿಯದೆ? ಅವನು ಶ್ರೇಷ್ಠವಾದ ಸೂರ್ಯ ಮಂತ್ರವನ್ನು ಪಠಿಸುತ್ತಾ ಸೂರ್ಯಾಸ್ತ್ರವನ್ನು ಹೂಡಿದನು. ತಿಮಿರಾಸ್ತ್ರದ ಕತ್ತಲೆಯಿಂದ ಉಂಟಾಗಿದ್ದ ಭಯ, ಕಾಣುತ್ತಿದ್ದ ಹಾಗೆಯೇ ಇಲ್ಲವಾಯಿತು. ಬುಟ್ಟಿಯ ಮುಚ್ಚಳವನ್ನೇ ಈಚೆಗೆಸದು ನೆಗೆದು ಬರುವ ಹಾವಿನಂತೆ ಕೌರವನ ಸೈನ್ಯ, ಸಂಭ್ರಮಿಸಿತು.
ಪದಾರ್ಥ (ಕ.ಗ.ಪ)
ಭುಲ್ಲವಿಸು-ಸಂಭ್ರಮಿಸು
ಮೂಲ ...{Loading}...
ವೈರಿಶರಕೇನರಿಯನೇ ಪ್ರತಿ
ಕಾರವನು ನಿನ್ನಾತನಗ್ಗದ
ಸೌರಮಯಮಂತ್ರಾಭಿಮಂತ್ರಿತ ಭಾನುಮಾರ್ಗಣವ
ಆರು ಕಂಡರು ತಿಮಿರಜನಿತವಿ
ಕಾರವನು ಹೇಳಿಗೆಯ ಮುಚ್ಚುಳ
ಜಾರಿಸಿದ ಫಣಿಯಂತೆ ಭುಲ್ಲವಿಸಿತ್ತು ಕುರುಸೇನೆ ॥38॥
೦೩೯ ಆಗಳೇ ತೆಗೆದುರಗಬಾಣವ ...{Loading}...
ಆಗಳೇ ತೆಗೆದುರಗಬಾಣವ
ತೂಗಿ ಬಿಟ್ಟನು ನಿನ್ನ ಕರ್ಣನ
ಲಾಗುವೇಗವನೇನನೆಂಬೆನು ಚಾಪತಂತ್ರದಲಿ
ಸೀಗುರಿಸುವುರಿವಿಷದ ಲೋಳೆಯ
ಲಾಗಿಸುವ ನಾಲಗೆಯ ಸುಯ್ಲಿನ
ಬೇಗುದಿಯ ತೊಡಬೆಗಳ ಹಾವ್ ತುಡುಕಿದವು ಥಟ್ಟಿನಲಿ ॥39॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಗಲೇ, ಕರ್ಣನು ಸರ್ಪಾಸ್ತ್ರವನ್ನು ತೆಗೆದು ಗುರಿ ನೋಡಿ ಪ್ರಯೋಗಿಸಿದನು. ದೊರೆಯೇ ನಿನ್ನ ಕರ್ಣನ ಬಿಲ್ಲು ವಿದ್ಯೆಯ ತಂತ್ರದ ಕುಶಲತೆಯನ್ನೂ ವೇಗವನ್ನೂ ಏನೆಂದು ಹೇಳಲಿ?. ಬಿಡುಬೀಸಾಗಿ ಓಡಾಡುವ, ವಿಷದ ಉರಿಯ ಅಂಟುದ್ರವವನ್ನು ವೇಗವಾಗಿ ಕಾರುತ್ತಿರುವ ನಾಲಗೆಯ, ಕುದಿಯುವ ಬಿಸಿಯ ಉಸಿರಿನಿಂದ ತುಂಬಿದ ಹಾವುಗಳು ಸೈನ್ಯವನ್ನು ಆಕ್ರಮಿಸಿದವು.
ಮೂಲ ...{Loading}...
ಆಗಳೇ ತೆಗೆದುರಗಬಾಣವ
ತೂಗಿ ಬಿಟ್ಟನು ನಿನ್ನ ಕರ್ಣನ
ಲಾಗುವೇಗವನೇನನೆಂಬೆನು ಚಾಪತಂತ್ರದಲಿ
ಸೀಗುರಿಸುವುರಿವಿಷದ ಲೋಳೆಯ
ಲಾಗಿಸುವ ನಾಲಗೆಯ ಸುಯ್ಲಿನ
ಬೇಗುದಿಯ ತೊಡಬೆಗಳ ಹಾವ್ ತುಡುಕಿದವು ಥಟ್ಟಿನಲಿ ॥39॥
೦೪೦ ಎಲೆಲೆ ಹಾವೋ ...{Loading}...
ಎಲೆಲೆ ಹಾವೋ ಹಾವು ಕೆಂಡದ
ಮಳೆಯ ತಡೆವವೆ ಕೊಡೆಯೆನುತ ಕಳ
ವಳಿಸಿತಲ್ಲಿಯದಲ್ಲಿ ಹರೆದುದು ಹುದುಗಿ ಹೊದರೊಡೆದು
ಬಲುವಿಷದ ಕಿರುವನಿಯ ಹಾವಿನ
ಮಳೆಗೆ ಗರುಡಾಸ್ತ್ರದಲಿ ತನ್ನಯ
ದಳಕೆ ಹಿಡಿದನು ಕೊಡೆಯನರೆಘಳಿಗೆಯಲಿ ಕಲಿಪಾರ್ಥ ॥40॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಲೆ ಹಾವುಗಳು ಕೆಂಡದ ಮಳೆಯನ್ನು ಕರೆಯುತ್ತಿವೆ. ನಮ್ಮ ಕೊಡೆಗಳು ಅದನ್ನು ತಡೆಯಲು ಸಮರ್ಥವೇ ಎನ್ನುತ್ತಾ ಚಿಂತಿಸುತ್ತಾ ಪಾಂಡವರ ಸೈನ್ಯದ ವ್ಯವಸ್ಥೆ ಹಾಳಾಗಿ ಚೆದರಿ, ಬಚ್ಚಿಟ್ಟುಕೊಂಡಿತು. ಬಲವಾದ ವಿಷದಿಂದ ಕೂಡಿದ ಸಣ್ಣ ಹನಿಗಳನ್ನು ಸುರಿಸುತ್ತಿದ್ದ ಹಾವುಗಳ ಮಳೆಗೆ, ವೀರನಾದ ಅರ್ಜುನನು ಅರ್ಧ ಗಳಿಗೆಯಲ್ಲಿಯೇ ಗರುಡಾಸ್ತ್ರದ ಕೊಡೆಯನ್ನು ಹಿಡಿದು ತನ್ನ ಸೈನ್ಯವನ್ನು ರಕ್ಷಿಸಿದನು.
ಮೂಲ ...{Loading}...
ಎಲೆಲೆ ಹಾವೋ ಹಾವು ಕೆಂಡದ
ಮಳೆಯ ತಡೆವವೆ ಕೊಡೆಯೆನುತ ಕಳ
ವಳಿಸಿತಲ್ಲಿಯದಲ್ಲಿ ಹರೆದುದು ಹುದುಗಿ ಹೊದರೊಡೆದು
ಬಲುವಿಷದ ಕಿರುವನಿಯ ಹಾವಿನ
ಮಳೆಗೆ ಗರುಡಾಸ್ತ್ರದಲಿ ತನ್ನಯ
ದಳಕೆ ಹಿಡಿದನು ಕೊಡೆಯನರೆಘಳಿಗೆಯಲಿ ಕಲಿಪಾರ್ಥ ॥40॥
೦೪೧ ಏಸು ಹಾವುದುರಿದವು ...{Loading}...
ಏಸು ಹಾವುದುರಿದವು ರಣದೊಳ
ಗೈಸು ಹದ್ದೆರಗಿದವು ತುಂಡಿಸಿ
ಬೀಸಿ ಬಿಸುಟವು ಕಡಿಗಳನು ಕೌರವನ ಥಟ್ಟಿನಲಿ
ಏಸು ಪರಿಯಲಿ ನರನ ಬಿನ್ನಣ
ವೈಸುಪರಿ ಕರ್ಣನಲಿ ಕರ್ಣನ
ಕೌಶಲವದೆನಿತನಿತು ಪರಿಯನು ಕಂಡೆನಾತನಲಿ ॥41॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಷ್ಟು ಹಾವುಗಳು ಯುದ್ಧದಲ್ಲಿ ಉದುರಿದವೋ ಅಷ್ಟು ಹದ್ದುಗಳು ಅವುಗಳ ಮೇಲೆ ಬಿದ್ದು ಕತ್ತರಿಸಿ ತುಂಡುಗಳನ್ನು ಕೌರವನ ಸೈನ್ಯದ ಮೇಲೆ ಹಾಕಿದವು. ಎಷ್ಟು ರೀತಿಯಲ್ಲಿ ಅರ್ಜುನನು ತನ್ನ ಚಾತುರ್ಯವನ್ನು ತೋರಿಸಿದನೋ ಅಷ್ಟು ರೀತಿಯಲ್ಲಿ ಕರ್ಣನಲ್ಲಿ ಚಾತುರ್ಯದ ಪ್ರತಿಕ್ರಿಯೆಯಿತ್ತು. ಕರ್ಣನಿಗೆ ಎಷ್ಟು ಕೌಶಲವಿತ್ತೋ, ಅದೇ ರೀತಿಯ ಕುಶಲತೆ ಅರ್ಜುನನಲ್ಲೂ ಕಾಣುತ್ತಿತ್ತು.
ಮೂಲ ...{Loading}...
ಏಸು ಹಾವುದುರಿದವು ರಣದೊಳ
ಗೈಸು ಹದ್ದೆರಗಿದವು ತುಂಡಿಸಿ
ಬೀಸಿ ಬಿಸುಟವು ಕಡಿಗಳನು ಕೌರವನ ಥಟ್ಟಿನಲಿ
ಏಸು ಪರಿಯಲಿ ನರನ ಬಿನ್ನಣ
ವೈಸುಪರಿ ಕರ್ಣನಲಿ ಕರ್ಣನ
ಕೌಶಲವದೆನಿತನಿತು ಪರಿಯನು ಕಂಡೆನಾತನಲಿ ॥41॥
೦೪೨ ಬಲುಹು ಭೀಷ್ಮದ್ರೋಣರಿನ್ದ ...{Loading}...
ಬಲುಹು ಭೀಷ್ಮದ್ರೋಣರಿಂದ
ಗ್ಗಳವಲಾ ಕರ್ಣಂಗೆನುತ ಪಡಿ
ಬಲಕ ಬಂದರು ಭೀಮ ಸಾತ್ಯಕಿ ನಕುಲ ಸಹದೇವ
ದಳದೊಳದಟುಳ್ಳವರು ಪಾರ್ಥನ
ಕೆಲಬಲದಲುರವಣಿಸಿದರು ವೆ
ಗ್ಗಳೆಯನೈ ನಿನ್ನಾತನಿಂದಿನಲೆರಡುಥಟ್ಟಿನಲಿ ॥42॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “‘ಭೀಷ್ಮ ದ್ರೋಣರಿಗಿಂತ ಈ ಕರ್ಣನಿಗೆ ಶಕ್ತಿ ಅತಿಶಯವಾಗಿದೆ’ ಎನ್ನುತ್ತಾ ಭೀಮ, ಸಾತ್ಯಕಿ, ನಕುಲ, ಸಹದೇವರು ಸಹಾಯಕ್ಕೆ ಬಂದರು. ಸೈನ್ಯದಲ್ಲಿದ್ದ ಪರಾಕ್ರಮಿಗಳು ಅರ್ಜುನನ ಅಕ್ಕಪಕ್ಕದಲ್ಲಿ ನಿಂತು ಮುನ್ನುಗ್ಗಿದರು. ನಿನ್ನ ಕರ್ಣನು ಈ ದಿನದ ಎರಡೂ ಕಡೆಯ ಸೈನ್ಯದಲ್ಲಿ ಶ್ರೇಷ್ಠನಾಗಿದ್ದ” ಎಂದು ಸಂಜಯನು ಹೇಳಿದನು.
ಮೂಲ ...{Loading}...
ಬಲುಹು ಭೀಷ್ಮದ್ರೋಣರಿಂದ
ಗ್ಗಳವಲಾ ಕರ್ಣಂಗೆನುತ ಪಡಿ
ಬಲಕ ಬಂದರು ಭೀಮ ಸಾತ್ಯಕಿ ನಕುಲ ಸಹದೇವ
ದಳದೊಳದಟುಳ್ಳವರು ಪಾರ್ಥನ
ಕೆಲಬಲದಲುರವಣಿಸಿದರು ವೆ
ಗ್ಗಳೆಯನೈ ನಿನ್ನಾತನಿಂದಿನಲೆರಡುಥಟ್ಟಿನಲಿ ॥42॥
೦೪೩ ಎಲೆ ಧನಞ್ಜಯ ...{Loading}...
ಎಲೆ ಧನಂಜಯ ಸಾಲದೇ ಹೆ
ಬ್ಬುಲಿಯ ಕಾಲಾಟದಲಿ ಮೃಗಶಿಶು
ಮಲೆತಡೇನಗ್ಗಳೆಯನೇ ಮೂಲೋಕವರಿವುದಲೇ
ಅಳವಿಗೊಡದಿರು ಸೂತತನಯನ
ತಲೆಯ ಬೆಸುಗೆಯ ಬಿಡಿಸುವಂಬಿನ
ಹಿಳುಕನುಗಿಯಾ ಹೊಳ್ಳುಗಣೆಯೇಕೆಂದನಾ ಭೀಮ ॥43॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮನು ಅರ್ಜುನನನ್ನು ಪ್ರೋತ್ಸಾಹಿಸುತ್ತಾ ‘ಎಲೆ, ಧನಂಜಯ, ಇಷ್ಟು ಹೊತ್ತು ಯುದ್ಧ ಮಾಡಿದ್ದು ಸಾಲದೇ, ಬೇಗ ಮುಗಿಸಬಾರದೇ. ಹೆಬ್ಬುಲಿಯ ಕಾಲಿಗೆ ಸಿಕ್ಕಿದ ಮೇಲೆ ಜಿಂಕೆಯ ಮರಿ ಪ್ರತಿಭಟಿಸಿದರೆ, ಬಲಶಾಲಿಯಾಗುತ್ತದೆಯೇ ? ಇದು ಮೂರು ಲೋಕಕ್ಕೂ ತಿಳಿದಿದೆ. ಹೋರಾಟಕ್ಕೆ ಅವಕಾಶವನ್ನೇ ಕೊಡಬೇಡ, ಸೂತಪುತ್ರ ಕರ್ಣನ ತಲೆಯ ಬೆಸುಗೆಯನ್ನು ಶರೀರದಿಂದ ಬಿಡಿಸುವ ಬಾಣವನ್ನು ಹಿಡಿ, ಅಶಕ್ತ ಬಾಣಗಳನ್ನು ಏಕೆ ಪ್ರಯೋಗಿಸುತ್ತೀಯಾ, ಎಂದನು.
ಮೂಲ ...{Loading}...
ಎಲೆ ಧನಂಜಯ ಸಾಲದೇ ಹೆ
ಬ್ಬುಲಿಯ ಕಾಲಾಟದಲಿ ಮೃಗಶಿಶು
ಮಲೆತಡೇನಗ್ಗಳೆಯನೇ ಮೂಲೋಕವರಿವುದಲೇ
ಅಳವಿಗೊಡದಿರು ಸೂತತನಯನ
ತಲೆಯ ಬೆಸುಗೆಯ ಬಿಡಿಸುವಂಬಿನ
ಹಿಳುಕನುಗಿಯಾ ಹೊಳ್ಳುಗಣೆಯೇಕೆಂದನಾ ಭೀಮ ॥43॥
೦೪೪ ಪುಸಿಯೆ ಭೀಮನ ...{Loading}...
ಪುಸಿಯೆ ಭೀಮನ ಮಾತು ಹೂಸುಕ
ದೆಸುಗೆ ತಾನೇಕಿನ್ನು ರಿಪು ನಿ
ಪ್ಪಸರದಲಿ ಕಲಿಯೇರಿದರೆ ಕೈಕೊಳ್ಳನೀಶ್ವರನ
ಹುಸಿಕಣೆಯಲೇನಹುದು ತೆಗೆ ಹರ
ವಿಶಿಖವನು ತೊಡು ಬೇಗಮಾಡೆಂ
ದಸುರರಿಪುವರ್ಜುನನ ಜರೆದನು ಭೂಪ ಕೇಳ್ ಎಂದ ॥44॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಭೀಮ ಹೇಳುತ್ತಿರುವುದರಲ್ಲಿ ತಪ್ಪೇನಿಲ್ಲ. ತೋರಿಕೆಯ ಆಟದ ಬಾಣ ಪ್ರಯೋಗಗಳು ಇನ್ನು ಸಾಕು. ಶತ್ರುವು ನಿಷ್ಠುರತೆಯಿಂದ ವೀರಾವೇಶಕ್ಕೆ ಒಳಗಾದರೆ ಈಶ್ವರನನ್ನೇ ಲೆಕ್ಕಿಸುವುದಿಲ್ಲ. ಬಲವಿಲ್ಲದ ಬಾಣಗಳಿಂದ ಏನಾಗುತ್ತದೆ. ಶಿವನು ಕೊಟ್ಟ ಪಾಶುಪತಾಸ್ತ್ರವನ್ನು ತೆಗೆದು ಬೇಗ ಪ್ರಯೋಗಿಸು” ಎಂದು ಕೃಷ್ಣನು ಅರ್ಜುನನನ್ನು ಆಕ್ಷೇಪಣೆಯೊಂದಿಗೆ ಒತ್ತಾಯ ಮಾಡಿದನು.
ಪದಾರ್ಥ (ಕ.ಗ.ಪ)
ಹೂಸುಕ-ಹೂಸಕ-ತೋರಿಕೆಯ, ನಿಪ್ಪಸರ-ನಿಷ್ಠುರ
ಮೂಲ ...{Loading}...
ಪುಸಿಯೆ ಭೀಮನ ಮಾತು ಹೂಸುಕ
ದೆಸುಗೆ ತಾನೇಕಿನ್ನು ರಿಪು ನಿ
ಪ್ಪಸರದಲಿ ಕಲಿಯೇರಿದರೆ ಕೈಕೊಳ್ಳನೀಶ್ವರನ
ಹುಸಿಕಣೆಯಲೇನಹುದು ತೆಗೆ ಹರ
ವಿಶಿಖವನು ತೊಡು ಬೇಗಮಾಡೆಂ
ದಸುರರಿಪುವರ್ಜುನನ ಜರೆದನು ಭೂಪ ಕೇಳೆಂದ ॥44॥
೦೪೫ ಕ್ರೋಧಶಿಖಿ ಭುಲ್ಲವಿಸೆ ...{Loading}...
ಕ್ರೋಧಶಿಖಿ ಭುಲ್ಲವಿಸೆ ಮುಳಿದು ವಿ
ರೋಧಿಯನು ನೋಡಿದನು ಮುಳುಗಲಿ
ರಾಧೆ ಕಂಬನಿಗಳಲಿ ಕುದಿಯಲಿ ಪುತ್ರಶೋಕದಲಿ
ಆಧಿ ತೀರಲಿ ನಮ್ಮ ಸೇನಾ
ವ್ಯಾಧಿಗಿದೆ ಮದ್ದೆನುತ ಪರಬಲ
ಸಾಧಕನು ಬ್ರಹ್ಮಾಸ್ತ್ರವನು ತೊಟ್ಟೆಚ್ಚನಾ ಪಾರ್ಥ ॥45॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನ ಕೋಪದ ಬೆಂಕಿ ಹೆಚ್ಚಾಯಿತು. ಕೋಪದಿಂದ ಶತ್ರುವನ್ನು ನೋಡಿದನು. ಇಂದು ರಾಧೆಯು ಕಣ್ಣೀರಿನಲ್ಲಿ ಮುಳುಗಲಿ, ಪುತ್ರಶೋಕದಲ್ಲಿ ಕುದಿಯಲಿ, ನಮ್ಮ ಸೈನ್ಯದ ಮಾನಸಿಕ ತೊಂದರೆಗಳು ಮುಗಿಯಲಿ, ನಮ್ಮ ಸೈನ್ಯದ ರೋಗಕ್ಕೆ ಇದೇ ಔಷಧಿ ಎನ್ನುತ್ತಾ ಶತ್ರು ಸೈನ್ಯವನ್ನು ಸೋಲಿಸುವವನಾದ ಅರ್ಜುನನು ಬ್ರಹ್ಮಾಸ್ತ್ರವನ್ನು ಹೂಡಿದನು.
ಪದಾರ್ಥ (ಕ.ಗ.ಪ)
ಆಧಿ-ಮಾನಸಿಕ ತೊಂದರೆ
ಮೂಲ ...{Loading}...
ಕ್ರೋಧಶಿಖಿ ಭುಲ್ಲವಿಸೆ ಮುಳಿದು ವಿ
ರೋಧಿಯನು ನೋಡಿದನು ಮುಳುಗಲಿ
ರಾಧೆ ಕಂಬನಿಗಳಲಿ ಕುದಿಯಲಿ ಪುತ್ರಶೋಕದಲಿ
ಆಧಿ ತೀರಲಿ ನಮ್ಮ ಸೇನಾ
ವ್ಯಾಧಿಗಿದೆ ಮದ್ದೆನುತ ಪರಬಲ
ಸಾಧಕನು ಬ್ರಹ್ಮಾಸ್ತ್ರವನು ತೊಟ್ಟೆಚ್ಚನಾ ಪಾರ್ಥ ॥45॥
೦೪೬ ಶಿವಶಿವಾ ...{Loading}...
ಶಿವಶಿವಾ ಬ್ರಹ್ಮಾಸ್ತ್ರವಿದಲಾ
ಭುವನಜನ ಸಂಹಾರಶರ ಸಂ
ಭವಿಸಿತೋ ಹಾ ಎನುತ ಹರೆದುದು ಮೇಲೆ ದಿವಿಜಗಣ
ತವಕದಲಿ ತತ್ಪ್ರತಿಮಹಾಸ್ತ್ರವ
ಜವಳಿವೆರಳಿಂದುಗಿದು ಬಿಡೆ ತಿವಿ
ತಿವಿದು ತಮ್ಮೊಳಗಡಗಿದವು ದಿವ್ಯಾಸ್ತ್ರವಭ್ರದಲಿ ॥46॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಯ್ಯೋ ಶಿವನೇ, ಲೋಕದ ಜನರನ್ನೆಲ್ಲಾ ಸಂಹರಿಸುವ ಬ್ರಹ್ಮಾಸ್ತ್ರದ ಪ್ರಯೋಗವಾಯಿತು ಎನ್ನುತ್ತಾ ಆಕಾಶದಲ್ಲಿದ್ದ ದೇವತೆಗಳು ಚೆಲ್ಲಾಪಿಲ್ಲಿಯಾದರು. ಕರ್ಣನು ಬೇಗ ಪ್ರತಿಯಾಗಿ ಇನ್ನೊಂದು ಬ್ರಹ್ಮಾಸ್ತ್ರವನ್ನು ತನ್ನ ಎರಡು ಬೆರಳಿನ ಸಹಾಯದಿಂದ ಪ್ರಯೋಗಿಸಿದಾಗ, ಆ ಎರಡೂ ಬ್ರಹ್ಮಾಸ್ತ್ರಗಳು ತಿವಿದಾಡಿ ಆಕಾಶದಲ್ಲಿ ಮರೆಯಾಗಿ ಹೋದವು.
ಮೂಲ ...{Loading}...
ಶಿವಶಿವಾ ಬ್ರಹ್ಮಾಸ್ತ್ರವಿದಲಾ
ಭುವನಜನ ಸಂಹಾರಶರ ಸಂ
ಭವಿಸಿತೋ ಹಾ ಎನುತ ಹರೆದುದು ಮೇಲೆ ದಿವಿಜಗಣ
ತವಕದಲಿ ತತ್ಪ್ರತಿಮಹಾಸ್ತ್ರವ
ಜವಳಿವೆರಳಿಂದುಗಿದು ಬಿಡೆ ತಿವಿ
ತಿವಿದು ತಮ್ಮೊಳಗಡಗಿದವು ದಿವ್ಯಾಸ್ತ್ರವಭ್ರದಲಿ ॥46॥
೦೪೭ ಆ ಮಹಾಸ್ತ್ರದ ...{Loading}...
ಆ ಮಹಾಸ್ತ್ರದ ಹಾನಿ ರೋಷದ
ತಾಮಸಾಗ್ನಿಯಲುರಿದು ಬಿಡಲು
ದ್ದಾಮನರ್ಜುನ ಕೊಂಡನಗ್ಗದ ಜಾತಮನ್ಯುವನು
ಆ ಮಹಾಬಾಣಾಭಿಮುಖದಲಿ
ಸೋಮಧರ ಮಾರ್ಗಣವನಿಂತೀ
ಭೀಮವಿಕ್ರಮ ಕರ್ಣನೆಚ್ಚನು ರಾಯ ಕೇಳ್ ಎಂದ ॥47॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತನ್ನ ಮಹಾಸ್ತ್ರ ವಿಫಲವಾದದ್ದರಿಂದ, ಕೋಪದಿಂದ ಕುದಿಯುತ್ತಾ ಉದ್ದಾಮನಾದ ಅರ್ಜುನನು ಶ್ರೇಷ್ಠವಾದ ಜಾತಮನ್ಯು ಎಂಬ ಅಸ್ತ್ರವನ್ನು ಪ್ರಯೋಗಿಸಲು ಸಿದ್ಧನಾದನು. ಆ ಮಹಾ ಬಾಣದ ಎದುರಿಗೆ ಸೋಮಧರ ಎಂಬ ಬಾಣವನ್ನು ಭೀಮ ವಿಕ್ರಮನಾದ ಕರ್ಣನು ಪ್ರಯೋಗಿಸಿದನು.
ಪಾಠಾನ್ತರ (ಕ.ಗ.ಪ)
‘ನೂದಿ’ ಎಂಬುದಕ್ಕೆ ‘ಲುರಿದು’ ಪಾಠವೂ ಇದೆ. ಅದನ್ನು ಸ್ವೀಕರಿಸಿದೆ
ಕರ್ಣಪರ್ವ, ಮೈ.ವಿ.ವಿ., ಎನ್. ಅನಂತರಂಗಾಚಾರ್
ಟಿಪ್ಪನೀ (ಕ.ಗ.ಪ)
ಜಾತಮನ್ಯು - ಕೋಪದಿಂದ ಕೂಡಿದ
ಸೋಮಧರ - ಚಂದ್ರನಂತೆ ತಂಪನ್ನು ನೀಡುವ
ಮೂಲ ...{Loading}...
ಆ ಮಹಾಸ್ತ್ರದ ಹಾನಿ ರೋಷದ
ತಾಮಸಾಗ್ನಿಯಲುರಿದು ಬಿಡಲು
ದ್ದಾಮನರ್ಜುನ ಕೊಂಡನಗ್ಗದ ಜಾತಮನ್ಯುವನು
ಆ ಮಹಾಬಾಣಾಭಿಮುಖದಲಿ
ಸೋಮಧರ ಮಾರ್ಗಣವನಿಂತೀ
ಭೀಮವಿಕ್ರಮ ಕರ್ಣನೆಚ್ಚನು ರಾಯ ಕೇಳೆಂದ ॥47॥
೦೪೮ ಆತನಲಿ ಕೌಬೇರ ...{Loading}...
ಆತನಲಿ ಕೌಬೇರ ಮಾರ್ಗಣ
ವೀತನಲಿ ವಾಯವ್ಯಶರ ಬಳಿ
ಕಾತನಲಿ ನೈರುತ್ಯವಿತ್ತಲು ಸೋಮವರ್ತಿಶರ
ಆತನಲಿ ಸಾಮುದ್ರ ರೋಷಣ
ವೀತನಲಿ ವಡಬಾಸ್ತ್ರವಿಂತಿರ
ಲಾತನೀತನ ಸಮರ ಸರಿ ನರನಾಥ ಕೇಳ್ ಎಂದ ॥48॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅರ್ಜುನನು ಕೌಬೇರಾಸ್ತ್ರವನ್ನು ಪ್ರಯೋಗಿಸಿದರೆ ಕರ್ಣನು ವಾಯುವ್ಯಾಸ್ತ್ರವನ್ನು ಬಿಟ್ಟನು. ಆನಂತರ ಅವನಿಂದ ನೈರುತ್ಯ ಬಾಣಕ್ಕೆ ಇವನ ಬಳಿ ಸೋಮವರ್ತಿ ಬಾಣವಿತ್ತು. ಅವನ ಸಮುದ್ರಾಸ್ತ್ರ ಪ್ರಯೋಗಕ್ಕೆ ಇವನು ವಡಬಾಸ್ತ್ರ ಪ್ರಯೋಗಿಸಿದನು. ಹೀಗಿರಲು ಅವರಿಬ್ಬರ ಯುದ್ಧ ಸರಿಸಮನಾಗಿ ನಡೆಯಿತು. ಧೃತರಾಷ್ಟ್ರ ಕೇಳು” ಎಂದ ಸಂಜಯ
ಮೂಲ ...{Loading}...
ಆತನಲಿ ಕೌಬೇರ ಮಾರ್ಗಣ
ವೀತನಲಿ ವಾಯವ್ಯಶರ ಬಳಿ
ಕಾತನಲಿ ನೈರುತ್ಯವಿತ್ತಲು ಸೋಮವರ್ತಿಶರ
ಆತನಲಿ ಸಾಮುದ್ರ ರೋಷಣ
ವೀತನಲಿ ವಡಬಾಸ್ತ್ರವಿಂತಿರ
ಲಾತನೀತನ ಸಮರ ಸರಿ ನರನಾಥ ಕೇಳೆಂದ ॥48॥