೦೦೦ ಸೂ ಸಕಲ ...{Loading}...
ಸೂ. ಸಕಲ ದನುಜ ಭುಜಂಗ ವೃಂದಾ
ರಕಮಹಾಭೂತಾದಿಲೋಕ
ಪ್ರಕರವೆರಡೊಡ್ಡಾಯ್ತು ಕರ್ಣಾರ್ಜುನರ ಕದನದಲಿ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ : ಕರ್ಣ ಅರ್ಜುನರ ಯುದ್ಧ ಸಂದರ್ಭದಲ್ಲಿ ರಾಕ್ಷಸ, ಸರ್ಪ, ದೇವತೆ, ಪಂಚಮಹಾಭೂತಗಳ ಸಮೂಹ ಎರಡು ಗುಂಪಾಯಿತು.
ಮೂಲ ...{Loading}...
ಸೂ. ಸಕಲ ದನುಜ ಭುಜಂಗ ವೃಂದಾ
ರಕಮಹಾಭೂತಾದಿಲೋಕ
ಪ್ರಕರವೆರಡೊಡ್ಡಾಯ್ತು ಕರ್ಣಾರ್ಜುನರ ಕದನದಲಿ
೦೦೧ ಹೇಳು ಸಞ್ಜಯ ...{Loading}...
ಹೇಳು ಸಂಜಯ ಕರ್ಣಪಾರ್ಥರ
ಕಾಳೆಗದೊಳೇನಾಯ್ತು ಚಿತ್ರವ
ಕೇಳುವೆನು ಕರ್ಣಾಮೃತವೊ ಕರ್ಣವ್ಯಥಾಹವವೊ
ಹೇಳು ನೀನಂಜದಿರು ಕುರುಕುಲ
ಕಾಲಸರ್ಪನ ತಾಯುದರ ಸೀ
ತಾಳಮಳಿಗೆಯಲೇ ಮಹಾದ್ಭುತವೇನು ಹೇಳೆಂದ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧೃತರಾಷ್ಟ್ರನು ಸಂಜಯನನ್ನು ಕೇಳಿದನು - “ಹೇಳು ಸಂಜಯ, ಕರ್ಣ ಅರ್ಜುನರ ಯುದ್ಧದಲ್ಲಿ ಏನಾಯ್ತು, ಆ ಯುದ್ಧದ ಅದ್ಭುತವನ್ನು ಕೇಳಿಸಿಕೊಳ್ಳುವ. ಅದು ಕಿವಿಗೆ ಅಮೃತದಂತೆ ಹಿತವೋ, ಇಲ್ಲ ಕರ್ಣನಿಗೆ ಒದಗಿದ ಯುದ್ಧದ ಅಪಜಯ ಅಹಿತವೋ? ಹೇಳು ನೀನು ಅಳುಕಬೇಡ. ಕುರುವಂಶವೆಂಬ ಕಾಳಸರ್ಪನ ತಾಯಿಯ ಹೊಟ್ಟೆ ಸೀತಾಳಮಳಿಗೆಯಲ್ಲವೇ? ಏನು ಮಹಾ ಅದ್ಭುತ ನಡೆಯಿತು ಹೇಳು.”
ಪದಾರ್ಥ (ಕ.ಗ.ಪ)
ಸೀತಾಳ ಮಳಿಗೆ- ತಂಪಿನ ನೆಲೆ?
ಟಿಪ್ಪನೀ (ಕ.ಗ.ಪ)
sಸೀತಾಳಮಳಿಗೆ ಎಬ ಪದವು ಕನ್ನಡ ಶಾಸನಗಳಲ್ಲಿ ಪ್ರಯೋಗವಾಗಿದ್ದು ಅವುಗಳ ವಿವರ ಈ ಮುಂದಿನಂತಿದೆ.
- ಶುಭಕೃತು ಸಂವತ್ಸರದ ಪಾಲ್ಗುನ ಶು 15 ಲು ಅಂಜನಗಿರಿಯ ಶಾಂತೀಶ್ವರಗೆ ಬಿದಿರೆಯ ಸಿತಾಳಮಳಿಗೆಯ ಸಮಸ್ತ ಹಲರು ಮಾಡಿದ
ಧರ್ಮ [ ಎಪಿಗ್ರಾಫಿಯ ಕರ್ನಾಟಿಕ, ಸಂಪುಟ-1 {ಪರಿಷ್ಕೃತ}, ಕೊಡಗು ಜಿಲ್ಲೆ, ಮಡಿಕೇರಿ ತಾಲ್ಲೂಕು, ಅಂಜನಗಿರಿ, ಶಾಸನ ಸಂಖ್ಯೆ-19,
ಪುಟ 16, ಶಾಸನದ ಕಾಲ-ಕ್ರಿ.ಶ. 30-10-1544]
ಮೂಲ ...{Loading}...
ಹೇಳು ಸಂಜಯ ಕರ್ಣಪಾರ್ಥರ
ಕಾಳೆಗದೊಳೇನಾಯ್ತು ಚಿತ್ರವ
ಕೇಳುವೆನು ಕರ್ಣಾಮೃತವೊ ಕರ್ಣವ್ಯಥಾಹವವೊ
ಹೇಳು ನೀನಂಜದಿರು ಕುರುಕುಲ
ಕಾಲಸರ್ಪನ ತಾಯುದರ ಸೀ
ತಾಳಮಳಿಗೆಯಲೇ ಮಹಾದ್ಭುತವೇನು ಹೇಳೆಂದ ॥1॥
೦೦೨ ಅರಸ ಕೇಳಾದರೆ ...{Loading}...
ಅರಸ ಕೇಳಾದರೆ ಮಹಾವಿ
ಸ್ತರವನಾ ಕರ್ಣಾರ್ಜುನರ ರಥ
ಸರಿಸದಲಿ ಚಾಚಿದುವು ನೋಟಕರಾದುದುಭಯಬಲ
ಹರಿ ವಿರಿಂಚ ಸುರೇಂದ್ರ ದಿಗುಪಾ
ಲರು ಚತುರ್ದಶ ಮನುಗಳಾದಿ
ತ್ಯರು ಭುಜಂಗಮ ವಿಶ್ವವಸುಗಳು ನೆರೆದುದಭ್ರದಲಿ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಹಾಗಾದರೆ ದೊರೆಯೇ ಕೇಳು, ವಿಸ್ತಾರವಾಗಿ ಹೇಳುತ್ತೇನೆ - ಆ ಕರ್ಣಾರ್ಜುನರ ರಥಗಳು ಮುಖಾಮುಖಿಯಾದವು. ಉಭಯ ಬಲದ ಸೈನಿಕರು ಪ್ರೇಕ್ಷಕರಾದರು. ನಾರಾಯಣ (?), ಬ್ರಹ್ಮ, ಇಂದ್ರ, ದಿಗ್ಪಾಲಕರು, 14 ಮನುಗಳು, ಸೂರ್ಯರು, ಸರ್ಪಗಳು, ವಿಶ್ವಾವಸುಗಳು ಆಕಾಶದಲ್ಲಿ ಗುಂಪು ಸೇರಿದರು” ಎಂದ ಸಂಜಯ.
ಪದಾರ್ಥ (ಕ.ಗ.ಪ)
ಸರಿಸ-ಎದುರು
ಪಾಠಾನ್ತರ (ಕ.ಗ.ಪ)
ಹರಿ – ಹರ ?
ಮೂಲ ...{Loading}...
ಅರಸ ಕೇಳಾದರೆ ಮಹಾವಿ
ಸ್ತರವನಾ ಕರ್ಣಾರ್ಜುನರ ರಥ
ಸರಿಸದಲಿ ಚಾಚಿದುವು ನೋಟಕರಾದುದುಭಯಬಲ
ಹರಿ ವಿರಿಂಚ ಸುರೇಂದ್ರ ದಿಗುಪಾ
ಲರು ಚತುರ್ದಶ ಮನುಗಳಾದಿ
ತ್ಯರು ಭುಜಂಗಮ ವಿಶ್ವವಸುಗಳು ನೆರೆದುದಭ್ರದಲಿ ॥2॥
೦೦೩ ಏನ ಹೇಳುವೆನವನಿಪತಿ ...{Loading}...
ಏನ ಹೇಳುವೆನವನಿಪತಿ ವೈ
ಮಾನಿಕರ ಹಂತಿಗಳ ಹರ ಚತು
ರಾನನರ ವೊಡ್ಡೋಲಗದ ವಾಗ್ಜನಿತ ವಿಗ್ರಹವ
ಭಾನುಜನ ಭಾರಣೆಯನರ್ಜುನ
ನಾನಲಳವೇ ಫಲುಗುಣಗೆ ರವಿ
ಸೂನುವೇ ಫಡಪಾಡೆ ಎಂದುದು ಮೇಲೆ ಸುರಕಟಕ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಂಜಯನು ಮುಂದುವರಿಸಿ " ದೊರೆಯೇ ದೇವತೆಗಳ ಪಂಕ್ತಿಗಳ ನಡುವೆ, ಶಿವ ಹಾಗೂ ಬ್ರಹ್ಮನ ಒಡ್ಡೋಲಗದಲ್ಲಿ ನಡೆದ ಮಾತಿನ ಯುದ್ಧವನ್ನು ಏನೆಂದು ಹೇಳಲಿ. ಸೂರ್ಯಪುತ್ರ ಕರ್ಣನ ರಭಸವನ್ನು ತಡೆದುಕೊಳ್ಳಲು ಅರ್ಜುನನ ಕೈಯಲ್ಲಿ ಸಾಧ್ಯವೇ ಎಂದೂ ಅರ್ಜುನನಿಗೆ ಕರ್ಣನು ಹೇಗೆ ಸಮನಾಗುತ್ತಾನೆ ಎಂದೂ ದೇವತೆಗಳು ಆಕಾಶದಲ್ಲಿ ನಿಂತು ಮಾತನಾಡಿಕೊಂಡರು."
ಪದಾರ್ಥ (ಕ.ಗ.ಪ)
ವೈಮಾನಿಕರು-ದೇವತೆಗಳು, ಚತುರಾನನ-ಬ್ರಹ್ಮ, ಭಾರಣೆ-ರಭಸ
ಮೂಲ ...{Loading}...
ಏನ ಹೇಳುವೆನವನಿಪತಿ ವೈ
ಮಾನಿಕರ ಹಂತಿಗಳ ಹರ ಚತು
ರಾನನರ ವೊಡ್ಡೋಲಗದ ವಾಗ್ಜನಿತ ವಿಗ್ರಹವ
ಭಾನುಜನ ಭಾರಣೆಯನರ್ಜುನ
ನಾನಲಳವೇ ಫಲುಗುಣಗೆ ರವಿ
ಸೂನುವೇ ಫಡಪಾಡೆ ಎಂದುದು ಮೇಲೆ ಸುರಕಟಕ ॥3॥
೦೦೪ ರಾಸಿ ತಾರಾಗಣಸಹಿತವಾ ...{Loading}...
ರಾಸಿ ತಾರಾಗಣಸಹಿತವಾ
ಕಾಶ ಕರ್ಣನ ಕಡೆ ಸಮೀರ ಹು
ತಾಶನಾಂಬುಧಿ ಗಿರಿಸಹಿತಲೀ ಧರಣಿ ಪಾರ್ಥನಲಿ
ಆ ಸುರಾರಿಪ್ರಮುಖ ಯಕ್ಷರಿ
ಗಾಸೆ ಕರ್ಣನ ಮೇಲೆ ನಾಕನಿ
ವಾಸಿ ನಿರ್ಜರನಿಕರವಾದುದು ನರನ ಕೈವಾರ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಕ್ಷತ್ರಗಳ ಸಹಿತವಾಗಿ ಹನ್ನೆರಡು ರಾಶಿಗಳು ಕರ್ಣನ ಪರವಾಗಿದ್ದರೆ, ವಾಯು, ಅಗ್ನಿ, ಸಮುದ್ರ ಸಪ್ತ ಕುಲಪರ್ವತಗಳು ಜೊತೆಯಲ್ಲಿ ಭೂಮಿ ಪಾರ್ಥನ ಕಡೆ ಸೇರಿದರು. ಆ ರಾಕ್ಷಸರು ಯಕ್ಷರು ಮೊದಲಾದ ಪ್ರಮುಖರಿಗೆ ಕರ್ಣನ ಮೇಲೆ ಒಲವು. ಸ್ವರ್ಗ ನಿವಾಸಿಗಳಾದ ದೇವತೆಗಳು ಅರ್ಜುನನನ್ನು ಹೊಗಳುತ್ತಿದ್ದರು.
ಪದಾರ್ಥ (ಕ.ಗ.ಪ)
ಹುತಾಶ-ಅಗ್ನಿ, ಕೈವಾರ-ಹೊಗಳಿಕೆ
ಮೂಲ ...{Loading}...
ರಾಸಿ ತಾರಾಗಣಸಹಿತವಾ
ಕಾಶ ಕರ್ಣನ ಕಡೆ ಸಮೀರ ಹು
ತಾಶನಾಂಬುಧಿ ಗಿರಿಸಹಿತಲೀ ಧರಣಿ ಪಾರ್ಥನಲಿ
ಆ ಸುರಾರಿಪ್ರಮುಖ ಯಕ್ಷರಿ
ಗಾಸೆ ಕರ್ಣನ ಮೇಲೆ ನಾಕನಿ
ವಾಸಿ ನಿರ್ಜರನಿಕರವಾದುದು ನರನ ಕೈವಾರ ॥4॥
೦೦೫ ವಿತತ ಮನ್ತ್ರಾಖ್ಯಾನ ...{Loading}...
ವಿತತ ಮಂತ್ರಾಖ್ಯಾನ ವೇದ
ಸ್ಮೃತಿ ಪುರಾಣ ಷಡಂಗವಿಂದ್ರನ
ಸುತನ ದೆಸೆಯುಚ್ಚಾಟನಸ್ತಂಭಾದಿ ವಿದ್ಯಗಳು
ಕ್ಷಿತಿಪ ಕೇಳೈ ಕರ್ಣನತ್ತಲು
ಕ್ರತುಗಳಾ ದೆಸೆಯಾಭಿಚಾರ
ಕ್ರತುಗಳೀ ದೆಸೆಯಾಗಿ ನಿಂದವು ನೃಪತಿ ಕೇಳ್ ಎಂದ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಶ್ರೇಷ್ಠವಾದ ಮಂತ್ರಗಳು, ಆಖ್ಯಾನಗಳೂ, ವೇದಗಳು, ಸ್ಮೃತಿಗಳು, ಪುರಾಣಗಳು, ಆರು ವೇದಾಂಗಗಳು, ಇಂದ್ರನ ಮಗನ ಪರವಾಗಿದ್ದವು. ಉಚ್ಚಾಟನ, ಸ್ತಂಭನ ಮೊದಲಾದ ವಾಮಾಚಾರ ವಿದ್ಯೆಗಳು (ತಂತ್ರಶಾಸ್ತ್ರ) ಕರ್ಣನ ಪರವಾಗಿದ್ದವು. ದೊರೆಯೇ ಕೇಳು, ಯಜ್ಞಗಳು ಅರ್ಜುನನ ಪರವಾಗಿದ್ದವು. ತಂತ್ರಶಾಸ್ತ್ರದಲ್ಲಿ ಪ್ರಸಿದ್ಧವಾದ ಅಭಿಚಾರ ಕರ್ಮಗಳು ಕರ್ಣನ ಪರವಾಗಿದ್ದವು”. ಎಂದ ಸಂಜಯ.
ಟಿಪ್ಪನೀ (ಕ.ಗ.ಪ)
ಆಖ್ಯಾನ-ಕಥೆ, ಪುರಾಣ, ಇತಿಹಾಸಗಳಲ್ಲಿ ಬರುವ ವಿಶೇಷ ವೃತ್ತಾಂತಗಳು, ಉಚ್ಚಾಟನ-ಭೂತಪ್ರೇತಗಳನ್ನು ಓಡಿಸುವ ವಿದ್ಯೆ,
ಸ್ತಂಭನ-ಪ್ರವಾಹ ಅಥವಾ ಕರ್ಮ ಮೊದಲಾದವುಗಳನ್ನು ನಿಲ್ಲಿಸುವುದು,
ಅಭಿಚಾರ ಕರ್ಮ-ಅಥರ್ವವೇದ ಮತ್ತು ತಂತ್ರಶಾಸ್ತ್ರಗಳಲ್ಲಿ ಪ್ರಸಿದ್ಧವಾದ ಮಾರಣ, ಉಚ್ಚಾಟನ, ಸ್ತಂಭನ ಮೊದಲಾದ ಕರ್ಮಗಳು
ಮೂಲ ...{Loading}...
ವಿತತ ಮಂತ್ರಾಖ್ಯಾನ ವೇದ
ಸ್ಮೃತಿ ಪುರಾಣ ಷಡಂಗವಿಂದ್ರನ
ಸುತನ ದೆಸೆಯುಚ್ಚಾಟನಸ್ತಂಭಾದಿ ವಿದ್ಯಗಳು
ಕ್ಷಿತಿಪ ಕೇಳೈ ಕರ್ಣನತ್ತಲು
ಕ್ರತುಗಳಾ ದೆಸೆಯಾಭಿಚಾರ
ಕ್ರತುಗಳೀ ದೆಸೆಯಾಗಿ ನಿಂದವು ನೃಪತಿ ಕೇಳೆಂದ ॥5॥
೦೦೬ ವಿವಿಧ ರತ್ನಾವಳಿ ...{Loading}...
ವಿವಿಧ ರತ್ನಾವಳಿ ಮಹಾನಿಧಿ
ಯವರ ದೆಸೆ ರಜತಾದಿ ಲೋಹ
ಪ್ರವರ ಧಾತುಗಳಿತ್ತಲತ್ತಲು ನಿಮ್ಮ ಥಟ್ಟಿನಲಿ
ರವಿ ಶನೈಶ್ಚರ ರಾಹು ಬುಧ ಭಾ
ರ್ಗವರು ಕರ್ಣನ ದೆಸೆಯಲಾ ಮಿ
ಕ್ಕವರು ಪಾರ್ಥನ ದೆಸೆಯಲಾಯಿತು ರಾಯ ಕೇಳ್ ಎಂದ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ದೊರೆಯೇ ಕೇಳು ಬಗೆಬಗೆಯ ರತ್ನಗಳು, ಮಹಾನಿಧಿಗಳು ಅರ್ಜುನನ ಕಡೆ, ಬೆಳ್ಳಿ ಮೊದಲಾದ ಲೋಹಗಳು ಕರ್ಣನ ಕಡೆ. ಸೂರ್ಯ, ಶನಿ, ರಾಹು, ಬುಧ, ಶುಕ್ರರು ಕರ್ಣನ ಪರವಾದರೆ, ಉಳಿದ ಗ್ರಹಗಳೆಲ್ಲಾ ಅರ್ಜುನನ ಕಡೆಗೆ ಇದ್ದವು.” ಎಂದ ಸಂಜಯ.
ಪದಾರ್ಥ (ಕ.ಗ.ಪ)
ಧಾತು-ವಾತ, ಪಿತ್ತ, ಕಫ, ರಕ್ತ, ಮಾಂಸ, ಮೇದ, ಆಸ್ತಿ, ಮಜ್ಜ, ವೀರ್ಯ ಮೊದಲಾದ ಲೋಹೇತರ ವಸ್ತು,, ಭಾರ್ಗವ-ಶುಕ್ರಚಾರ್ಯ, ಶುಕ್ರಗ್ರಹ
ಮೂಲ ...{Loading}...
ವಿವಿಧ ರತ್ನಾವಳಿ ಮಹಾನಿಧಿ
ಯವರ ದೆಸೆ ರಜತಾದಿ ಲೋಹ
ಪ್ರವರ ಧಾತುಗಳಿತ್ತಲತ್ತಲು ನಿಮ್ಮ ಥಟ್ಟಿನಲಿ
ರವಿ ಶನೈಶ್ಚರ ರಾಹು ಬುಧ ಭಾ
ರ್ಗವರು ಕರ್ಣನ ದೆಸೆಯಲಾ ಮಿ
ಕ್ಕವರು ಪಾರ್ಥನ ದೆಸೆಯಲಾಯಿತು ರಾಯ ಕೇಳೆಂದ ॥6॥
೦೦೭ ಶೇಷ ಕಾರ್ಕೋಟಕನು ...{Loading}...
ಶೇಷ ಕಾರ್ಕೋಟಕನು ತಕ್ಷಕ
ವಾಸುಕಿ ಪ್ರಮುಖರಿಗೆ ವಿಜಯದ
ವಾಸಿ ಪಾರ್ಥನ ಮೇಲೆಯುಳಿದೀ ಕ್ರೂರಫಣಿಗಳಿಗೆ
ಆಸೆ ಕರ್ಣನ ಮೇಲೆ ಖಗಮೃಗ
ಕೇಸರಿಗಳಾಚೆಯಲಿ ಜಂಬುಕ
ಕಾಸರ ವ್ಯಾಳಾದಿ ಖಗಮೃಗವಿತ್ತಲಾಯ್ತೆಂದ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆದಿಶೇಷ, ಕಾರ್ಕೋಟಕ, ತಕ್ಷಕ, ವಾಸುಕಿ ಮೊದಲಾದ ಸರ್ಪಗಳಿಗೆ ಅರ್ಜುನನ ವಿಜಯದ ಮೇಲೆ ಆಸೆ; ಉಳಿದ ಕ್ರೂರ ಸರ್ಪಗಳಿಗೆ ಕರ್ಣನ ಮೇಲೆ ಆಸೆ; ಪಕ್ಷಿಗಳು, ಮೃಗಗಳು, ಸಿಂಹಗಳು ಅರ್ಜುನನ ಪಕ್ಷವಾದರೆ, ನರಿ, ಕಾಡುಕೋಣ, ಚಿರತೆ ಮೊದಲಾದ ಪ್ರಾಣಿಗಳು ಕರ್ಣನ ಕಡೆ ಇದ್ದವು.
ಪದಾರ್ಥ (ಕ.ಗ.ಪ)
ಕಾರ್ಕೋಟಕ-ನಳನ ಕಥೆಯಲ್ಲಿ ಬರುವ ಸರ್ಪ, ತಕ್ಷಕ-ಕಶ್ಯಪ, ಕದ್ರುವಿನ ಮಗ, 27 ನಾಗ ಕುಲಗಳಿಗೆ ರಾಜ, ಖಾಂಡವ ವನ ದಹನ ಕಾಲದಲ್ಲಿ ತಪ್ಪಿಸಿಕೊಂಡವನು. ಕಾಸರ-ಕಾಡುಕೋಣ ವ್ಯಾಳ-ಚಿರತೆ, ಜಂಬುಕ-ನರಿ, ವಾಸುಕಿ-ಸರ್ಪರಾಜ, ಭೋಗವತಿ ಪಟ್ಟಣದ ದೊರೆ, ತಕ್ಷಕ, ಕಾರ್ಕೋಟಕ ಮೊದಲಾದವರ ಸಹೋದರ
ಮೂಲ ...{Loading}...
ಶೇಷ ಕಾರ್ಕೋಟಕನು ತಕ್ಷಕ
ವಾಸುಕಿ ಪ್ರಮುಖರಿಗೆ ವಿಜಯದ
ವಾಸಿ ಪಾರ್ಥನ ಮೇಲೆಯುಳಿದೀ ಕ್ರೂರಫಣಿಗಳಿಗೆ
ಆಸೆ ಕರ್ಣನ ಮೇಲೆ ಖಗಮೃಗ
ಕೇಸರಿಗಳಾಚೆಯಲಿ ಜಂಬುಕ
ಕಾಸರ ವ್ಯಾಳಾದಿ ಖಗಮೃಗವಿತ್ತಲಾಯ್ತೆಂದ ॥7॥
೦೦೮ ಯಾತುಧಾನ ಕುಬೇರ ...{Loading}...
ಯಾತುಧಾನ ಕುಬೇರ ಕಿನ್ನರ
ಮಾತೃಗಣ ಕರ್ಣನಲಿ ಸುಮನೋ
ಜಾತ ಚಿತ್ರರಥಾದಿ ಗಂಧರ್ವರು ವಿಪಕ್ಷದಲಿ
ಭೂತಗಣವೀಚೆಯಲಿ ದೆಸೆ ದಿಗು
ಜಾತ ಮನು ವಸು ನಾರದಾದಿ ಮ
ಹಾತಪಸ್ವಿಗಳತ್ತಲಾಯಿತು ರಾಯ ಕೇಳ್ ಎಂದ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ದೊರೆಯೇ ಕೇಳು ರಾಕ್ಷಸ, ಕುಬೇರ, ಕಿನ್ನರರು, ಸಪ್ತ ಮಾತೃಕೆಯರ ಗುಂಪು ಕರ್ಣನ ಪರವಾಗಿದ್ದರೆ. ಸುಮನೋಜಾತ, ಚಿತ್ರರಥ ಮೊದಲಾದ ಗಂಧರ್ವರು ಶತ್ರು ಪಕ್ಷದ ಪರವಾಗಿದ್ದರು. ಭೂತಗಣಗಳು ನಮ್ಮ ಕಡೆ ಇದ್ದವು. ದಿಗುಜಾತ, ಮನು, ವಸು, ನಾರದ ಮೊದಲಾದ ಮಹಾತಪಸ್ವಿಗಳು ಆ ಕಡೆ ಇದ್ದರು” ಎಂದ ಸಂಜಯ.
ಪದಾರ್ಥ (ಕ.ಗ.ಪ)
ಯಾತುಧಾನ-ರಾಕ್ಷಸ, ಸುಮನೋಜಾತ, ಚಿತ್ರರಥ, ದಿಗುಜಾತ-ಗಂಧರ್ವ ದೇವತೆಗಳು
ಮೂಲ ...{Loading}...
ಯಾತುಧಾನ ಕುಬೇರ ಕಿನ್ನರ
ಮಾತೃಗಣ ಕರ್ಣನಲಿ ಸುಮನೋ
ಜಾತ ಚಿತ್ರರಥಾದಿ ಗಂಧರ್ವರು ವಿಪಕ್ಷದಲಿ
ಭೂತಗಣವೀಚೆಯಲಿ ದೆಸೆ ದಿಗು
ಜಾತ ಮನು ವಸು ನಾರದಾದಿ ಮ
ಹಾತಪಸ್ವಿಗಳತ್ತಲಾಯಿತು ರಾಯ ಕೇಳೆಂದ ॥8॥
೦೦೯ ಭರತ ನಳ ...{Loading}...
ಭರತ ನಳ ನಹುಷಾದಿ ಭೂಮೀ
ಶ್ವರರು ಪಾರ್ಥನ ದೆಸೆಗೆ ಮಹಿಷಾ
ಸುರ ದಶಾನನ ತಾರಕಾದಿಗಳಾದುದೀಚೆಯಲಿ
ಸುರಮುನಿಗಳಿಂದ್ರಾನಲಾಂತಕ
ವರುಣ ವಾಯು ಮಹೇಶ ವಿದ್ಯಾ
ಧರರು ಪಾರ್ಥನ ದೆಸೆಯಲೈದಿತು ಭೂಪ ಕೇಳ್ ಎಂದ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ದೊರೆಯೇ ಕೇಳು ಭರತ, ನಳ, ನಹುಷ ಮೊದಲಾದ ದೊರೆಗಳು ಪಾರ್ಥನ ಪರವಾಗಿದ್ದರೆ, ಮಹಿಷಾಸುರ, ರಾವಣ, ತಾರಕ ಮೊದಲಾದವರು ನಮ್ಮ ಕಡೆ ಇದ್ದರು. ದೇವ ಮುನಿಗಳು, ಇಂದ್ರ, ಅಗ್ನಿ, ಯಮ, ವರುಣ, ವಾಯು, ಈಶಾನ, ವಿದ್ಯಾಧರರು ಅರ್ಜುನನ ಪರವಾಗಿ ಮಾತನಾಡಿದರು” ಎಂದ ಸಂಜಯ.
ಮೂಲ ...{Loading}...
ಭರತ ನಳ ನಹುಷಾದಿ ಭೂಮೀ
ಶ್ವರರು ಪಾರ್ಥನ ದೆಸೆಗೆ ಮಹಿಷಾ
ಸುರ ದಶಾನನ ತಾರಕಾದಿಗಳಾದುದೀಚೆಯಲಿ
ಸುರಮುನಿಗಳಿಂದ್ರಾನಲಾಂತಕ
ವರುಣ ವಾಯು ಮಹೇಶ ವಿದ್ಯಾ
ಧರರು ಪಾರ್ಥನ ದೆಸೆಯಲೈದಿತು ಭೂಪ ಕೇಳೆಂದ ॥9॥
೦೧೦ ಖ್ಯಾತಿ ತೇಜಸ್ತೋಮ ...{Loading}...
ಖ್ಯಾತಿ ತೇಜಸ್ತೋಮ ವೀರ
ಪ್ರೀತಿ ವಿಕ್ರಮ ಸತ್ಯ ಸಿದ್ಧಿ ವಿ
ಭೂತಿ ಶೌರ್ಯ ತಪಃ ಕ್ಷಮಾದಿಗಳಾದುದಾಚೆಯಲಿ
ಭೀತಿ ಕಾಮ ಕ್ರೋಧ ಕಲಿ ದು
ರ್ನೀತಿ ಮದವಖ್ಯಾತಿ ಮಾನವಿ
ಘಾತಿ ವಿಭ್ರಮ ಕೈತವಾದಿಗಳಾದುದೀಚೆಯಲಿ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಖ್ಯಾತಿ, ತೇಜಸ್ಸಿನ ಸಮೂಹ, ವೀರ, ಪ್ರೀತಿ, ವಿಕ್ರಮ, ಸತ್ಯಸಿದ್ಧಿ, ವೈಭವದ ಸಾಹಸ, ತಪಸ್ಸು, ಕ್ಷಮಾ ಮೊದಲಾದ ಗುಣಗಳು ಅವರ ಕಡೆಗಾದವು. ಭಯ, ಕಾಮ, ಕ್ರೋಧ, ಕಲಿ, ದುರ್ನೀತಿ, ಮದ, ಅಪಖ್ಯಾತಿ, ಮಾನಭಂಗ, ಭ್ರಾಂತಿ, ಮೋಸಗಳು ನಮ್ಮ ಕಡೆಗೆ ಬಂದವು.
ಪದಾರ್ಥ (ಕ.ಗ.ಪ)
ವಿಭ್ರಮ-ಭ್ರಾಂತಿ, ಕೈತವ-ಮೋಸ
ಮೂಲ ...{Loading}...
ಖ್ಯಾತಿ ತೇಜಸ್ತೋಮ ವೀರ
ಪ್ರೀತಿ ವಿಕ್ರಮ ಸತ್ಯ ಸಿದ್ಧಿ ವಿ
ಭೂತಿ ಶೌರ್ಯ ತಪಃ ಕ್ಷಮಾದಿಗಳಾದುದಾಚೆಯಲಿ
ಭೀತಿ ಕಾಮ ಕ್ರೋಧ ಕಲಿ ದು
ರ್ನೀತಿ ಮದವಖ್ಯಾತಿ ಮಾನವಿ
ಘಾತಿ ವಿಭ್ರಮ ಕೈತವಾದಿಗಳಾದುದೀಚೆಯಲಿ ॥10॥
೦೧೧ ಭೃಗು ವಸಿಷ್ಠಾಙ್ಗಿರಸ ...{Loading}...
ಭೃಗು ವಸಿಷ್ಠಾಂಗಿರಸ ದಕ್ಷಾ
ದಿಗಳು ಪಾರ್ಥನ ಪಕ್ಷವಾಯ್ತೀ
ಚೆಗೆ ಪುಲಸ್ತ್ಯ ಮರೀಚಿ ವಿಶ್ವಾಮಿತ್ರ ಗೌತಮರು
ಜಗದ ಜೀವರು ಧಾತುಮೂಲಾ
ದಿಗಳೊಳಿಕ್ಕಟ್ಟಾದುದೀ ಕಾ
ಳೆಗ ಚತುರ್ದಶ ಭುವನಜನ ಸಂಕ್ಷೋಭವಾಯ್ತೆಂದ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೃಗು, ವಸಿಷ್ಠ ಅಂಗಿರಸ ದಕ್ಷ ಮೊದಲಾದವರು ಅರ್ಜುನನ ಪಕ್ಷ ವಹಿಸಿದರು. ಪುಲಸ್ತ್ಯ, ಮರೀಚಿ, ವಿಶ್ವಾಮಿತ್ರ, ಗೌತಮರು ನಮ್ಮ ಕಡೆಗಾದರು. ಜಗತ್ತಿನ ಜೀವಕ್ಕೆ ಕಾರಣರಾದವರು ಸಪ್ತಧಾತುಗಳಿಗೆ ಕಾರಣರಾಗುವ ಶಕ್ತಿಗಳು ಎರಡು ಪಂಗಡವಾಗಿ ನಿಂತರು. ಅರ್ಜುನ ಕರ್ಣರ ಈ ಯುದ್ಧ ಹದಿನಾಲ್ಕು ಲೋಕಗಳ ಜನಗಳ ಸಂಕಟಕ್ಕೆ ಕಾರಣವಾಯಿತು.
ಟಿಪ್ಪನೀ (ಕ.ಗ.ಪ)
ಭೃಗು-ಒಬ್ಬ ಬ್ರಹ್ಮರ್ಷಿ, ಬ್ರಹ್ಮನ ಹೃದಯದಿಂದ ಜನಿಸಿದವನು, ಪುಲೋಮೆಯ ಪತಿ.
ವಸಿಷ್ಠ-ಒಬ್ಬ ಬ್ರಹ್ಮರ್ಷಿ, ಬ್ರಹ್ಮನ ಮಾನಸಪುತ್ರ, ಆರುಂಧತಿಯ ಪತಿ,
ಅಂಗಿರಸ-ಬ್ರಹ್ಮನ ಮಾನಸಪುತ್ರ, ಒಬ್ಬ ಬ್ರಹ್ಮರ್ಷಿ, - ವಸುಧೆಯ - ಸುಭಾಳ ಪತಿ.
ದಕ್ಷ-ಬ್ರಹ್ಮನ ಬಲಗೈ ಹೆಬ್ಬೆಟ್ಟಿನಿಂದ ಉತ್ಪನ್ನನಾದವನು - ಮೀರಿಣಿಯ ಪತಿ,
ಪುಲಸ್ತ್ಯ-ಬ್ರಹ್ಮನ ಮಾನಸಪುತ್ರ ಪತ್ನಿ, ಹವಿರ್ಭುಕೆಳ ಮಗ ಅಗಸ್ತ್ಯ, ಪತ್ನಿ ಇಲೆಬಿಲೆಯ ಮಗ ಕುಬೇರ, ಪತ್ನಿ ಕೇಶಿನಿಯ ಮಗ ರಾವಣ
ಮೂಲ ...{Loading}...
ಭೃಗು ವಸಿಷ್ಠಾಂಗಿರಸ ದಕ್ಷಾ
ದಿಗಳು ಪಾರ್ಥನ ಪಕ್ಷವಾಯ್ತೀ
ಚೆಗೆ ಪುಲಸ್ತ್ಯ ಮರೀಚಿ ವಿಶ್ವಾಮಿತ್ರ ಗೌತಮರು
ಜಗದ ಜೀವರು ಧಾತುಮೂಲಾ
ದಿಗಳೊಳಿಕ್ಕಟ್ಟಾದುದೀ ಕಾ
ಳೆಗ ಚತುರ್ದಶ ಭುವನಜನ ಸಂಕ್ಷೋಭವಾಯ್ತೆಂದ ॥11॥
೦೧೨ ಲೋಕವಿವರಲಿ ಪಕ್ಷಪಾತವಿ ...{Loading}...
ಲೋಕವಿವರಲಿ ಪಕ್ಷಪಾತವಿ
ದೇಕೆ ನೋಡೈ ನಿಮ್ಮ ಕರ್ಣನು
ಲೋಕವಿಖ್ಯಾತಪ್ರತಾಪನಲಾ ಮಹಾದೇವ
ಆ ಕೃತ ತ್ರೇತೆಯಲಿ ಕಾದಿದ
ನೇಕ ದಿವಿಜಕ್ಷತ್ರದನುಜಾ
ನೀಕವೀ ಪರಿ ಚಿತ್ರವಿಲ್ಲವನೀಶ ಕೇಳ್ ಎಂದ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಹದಿನಾಲ್ಕು ಲೋಕದ ಜನ ಈ ವೀರರಿಬ್ಬರಲ್ಲಿ ಪಕ್ಷಪಾತ ಮಾಡುತ್ತಿರುವುದು ಆಶ್ಚರ್ಯಕರವಾಗಿದೆ. ನಿಮ್ಮ ಕರ್ಣನು ಲೋಕದಲ್ಲಿ ಪ್ರಖ್ಯಾತನಾದ ಸಾಹಸಿ. ಆ ಕೃತಯುಗ ತ್ರೇತಾಯುಗಗಳಲ್ಲಿ ಯುದ್ಧ ಮಾಡಿದ ಅನೇಕ ದೇವತೆಗಳು ಕ್ಷತ್ರಿಯರು ರಾಕ್ಷಸರುಗಳ ಸಮೂಹದಲ್ಲಿ ಹೀಗೆ ಪ್ರಸಿದ್ಧರಾದವರಿಲ್ಲ.” ಎಂದು ಸಂಜಯನು ಹೇಳಿದನು.
ಮೂಲ ...{Loading}...
ಲೋಕವಿವರಲಿ ಪಕ್ಷಪಾತವಿ
ದೇಕೆ ನೋಡೈ ನಿಮ್ಮ ಕರ್ಣನು
ಲೋಕವಿಖ್ಯಾತಪ್ರತಾಪನಲಾ ಮಹಾದೇವ
ಆ ಕೃತ ತ್ರೇತೆಯಲಿ ಕಾದಿದ
ನೇಕ ದಿವಿಜಕ್ಷತ್ರದನುಜಾ
ನೀಕವೀ ಪರಿ ಚಿತ್ರವಿಲ್ಲವನೀಶ ಕೇಳೆಂದ ॥12॥
೦೧೩ ಅರಸ ಕೇಳೈ ...{Loading}...
ಅರಸ ಕೇಳೈ ಶಕ್ರ ಸೂರ್ಯರ
ಮರುಳುತನವೋ ಮೇಣು ಮತ್ರ್ಯಾ
ಚರಣೆಗಳ ನಾಟಕವೊ ಮೇಣ್ ಸಾಂಸಾರಿಕ ಭ್ರಮೆಯೊ
ನರನಲೇ ಲೋಕೈಕವೀರನು
ಧಿರುರೆ ಮಝ ಭಾಪೆಂಬ ಸಡಿಫಡ
ಸರಿಯೆ ಕರ್ಣಂಗೆಂಬ ಕಳಕಳ ಕೇಳಲಾಯ್ತೆಂದ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ದೊರೆಯೇ ಕೇಳು, ಇಂದ್ರ ಸೂರ್ಯರ ಹುಚ್ಚಾಟವೋ ಅಥವಾ ಮನುಷ್ಯರಂತೆ ನಡೆಯುತ್ತಿರುವ ನಾಟಕವೋ ಅಥವಾ ಎಲ್ಲರಿಗೂ ಉಂಟಾಗುವ ಸಂಸಾರದ ಮೇಲಿನ ಮೋಹವೋ! ಅರ್ಜುನನು ಲೋಕೈಕ ವೀರ, ಭೇಷ್ ಎಂಬ ಅವನು ಕರ್ಣನಿಗೆ ಸಮನಾಗುತ್ತಾನೆಯೇ ಎಂಬ, ಕಳಕಳ ಧ್ವನಿಗಳು ಕೇಳಿಸುತ್ತಿದ್ದವು " ಎಂದು ಸಂಜಯನು ಹೇಳಿದನು.
ಪದಾರ್ಥ (ಕ.ಗ.ಪ)
ಧಿರು-ಮೆಚ್ಚಿಗೆಯನ್ನು ಸೂಚಿಸುವ ಮಾತು
ಮೂಲ ...{Loading}...
ಅರಸ ಕೇಳೈ ಶಕ್ರ ಸೂರ್ಯರ
ಮರುಳುತನವೋ ಮೇಣು ಮತ್ರ್ಯಾ
ಚರಣೆಗಳ ನಾಟಕವೊ ಮೇಣ್ ಸಾಂಸಾರಿಕ ಭ್ರಮೆಯೊ
ನರನಲೇ ಲೋಕೈಕವೀರನು
ಧಿರುರೆ ಮಝ ಭಾಪೆಂಬ ಸಡಿಫಡ
ಸರಿಯೆ ಕರ್ಣಂಗೆಂಬ ಕಳಕಳ ಕೇಳಲಾಯ್ತೆಂದ ॥13॥
೦೧೪ ಈ ಪರಿಯಲೆರಡಿಟ್ಟ ...{Loading}...
ಈ ಪರಿಯಲೆರಡಿಟ್ಟ ಜಗದಾ
ಳಾಪವನು ಕರ್ಣಾರ್ಜುನರ ಪ
ಕ್ಷೋಪಚಾರ ಪ್ರಕಟ ಕಲಹ ಕಠೋರ ಕಳಕಳವ
ಆ ಪುರಂದರ ಕಮಲಸಖರಾ
ಟೋಪವನು ಭುವನಾಪಘಾತವ
ನಾ ಪಿತಾಮಹನರಿದು ಸಂತೈಸಿದನು ಸಾಮದಲಿ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೀಗೆ ಎರಡು ಪಂಗಡಗಳಾಗಿ ಒಡೆದು ಹೋದ ಕರ್ಣ ಅರ್ಜುನರ ಪಕ್ಷ ವಹಿಸಿ, ಪರವಾಗಿ ಮಾತಿನ ಜಗಳ ಮಾಡುತ್ತಿದ್ದ, ಲೋಕದವರ ವಾದ ವಿವಾದಗಳನ್ನು ಲೋಕವನ್ನು ನಾಶ ಮಾಡುವಂತಹ ಆ ಇಂದ್ರ ಹಾಗೂ ಸೂರ್ಯರ ಆವೇಶದ ಮಾತುಗಳನ್ನು ಬ್ರಹ್ಮನು ಕೇಳಿ ಸಾಮೋಪಾಯದಿಂದ ಅವರನ್ನು ಸಮಾಧಾನ ಪಡಿಸಿದನು.
ಮೂಲ ...{Loading}...
ಈ ಪರಿಯಲೆರಡಿಟ್ಟ ಜಗದಾ
ಳಾಪವನು ಕರ್ಣಾರ್ಜುನರ ಪ
ಕ್ಷೋಪಚಾರ ಪ್ರಕಟ ಕಲಹ ಕಠೋರ ಕಳಕಳವ
ಆ ಪುರಂದರ ಕಮಲಸಖರಾ
ಟೋಪವನು ಭುವನಾಪಘಾತವ
ನಾ ಪಿತಾಮಹನರಿದು ಸಂತೈಸಿದನು ಸಾಮದಲಿ ॥14॥
೦೧೫ ಅರಸ ಚಿತ್ತೈಸುಭಯಬಲದು ...{Loading}...
ಅರಸ ಚಿತ್ತೈಸುಭಯಬಲದು
ಬ್ಬರದ ಬಹುವಿಧವಾದ್ಯರವದು
ಬ್ಬರವ ಮುಕ್ಕಳಿಸಿತು ಪಾಠಕ ನಿಕರ ನಿರ್ಘೋಷ
ಸುರರ ಕಳಕಳವೀ ಧ್ವನಿಯನು
ತ್ತರಿಸಿತೀ ಬಲುಗಜಬಜವ ನಡ
ತರದೊಳಿಕ್ಕಿತು ಕರ್ಣಪಾರ್ಥರ ಚಾಪಟಂಕಾರ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೊರೆಯೇ ಗಮನವಿಟ್ಟು ಕೇಳು, ಎರಡೂ ಕಡೆಯ ಸೈನ್ಯದವರು ರಭಸದಿಂದ ಮಾಡುತ್ತಿದ್ದ ಅನೇಕ ವಾದ್ಯಗಳ ಶಬ್ದವನ್ನು ಹೊಗಳುಭಟ್ಟರ ಘೋಷದ ಧ್ವನಿ ಮುಚ್ಚಿ ಹಾಕಿತ್ತು. ದೇವತೆಗಳ ಕಳಕಳ ಶಬ್ದ ಈ ಧ್ವನಿಯನ್ನು ಮೀರಿಸಿತು. ಈ ವಿಪರೀತ ಶಬ್ದಗಳನ್ನೆಲ್ಲಾ ಕರ್ಣ ಅರ್ಜುನರ ಬಿಲ್ಲಿನ ಶಬ್ದಗಳು ನಿಸ್ತೇಜ ಮಾಡಿದವು.
ಪದಾರ್ಥ (ಕ.ಗ.ಪ)
ಮುಕ್ಕಳಿಸು-ಕುಡಿದು ಉಗಿ, ಅಡತರದೊಳಿಕ್ಕು-ನಿಸ್ತೇಜ ಮಾಡು
ಮೂಲ ...{Loading}...
ಅರಸ ಚಿತ್ತೈಸುಭಯಬಲದು
ಬ್ಬರದ ಬಹುವಿಧವಾದ್ಯರವದು
ಬ್ಬರವ ಮುಕ್ಕಳಿಸಿತು ಪಾಠಕ ನಿಕರ ನಿರ್ಘೋಷ
ಸುರರ ಕಳಕಳವೀ ಧ್ವನಿಯನು
ತ್ತರಿಸಿತೀ ಬಲುಗಜಬಜವ ನಡ
ತರದೊಳಿಕ್ಕಿತು ಕರ್ಣಪಾರ್ಥರ ಚಾಪಟಂಕಾರ ॥15॥
೦೧೬ ಅಳವಿಯಙ್ಕೆಯ ಮೀರಿ ...{Loading}...
ಅಳವಿಯಂಕೆಯ ಮೀರಿ ರಥರಥ
ಹಳಚಿದವು ಬಹುಮಾನದಲಿ ವೆ
ಗ್ಗಳಿಸಿದವು ವೇಗಾಯ್ಲವಾಜಿಯ ಲಳಿಯ ಲಹರಿಯಲಿ
ಹೊಳೆದವೆಡಬಲವಾಘೆ ಸನ್ನೆಯ
ಸುಳಿವ ಸುಭಟರ ಬವರಿ ಭಂಗಿಯ
ಲುಳಿಯ ಸೂತರ ರೇಖೆ ಸೆಳೆದುದು ಜನದ ಕಣ್ಮನವ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತಮ್ಮ ಶಕ್ತಿ ಸಾಮಥ್ರ್ಯಗಳನ್ನು ಮೀರಿ ರಥಗಳು ಒಂದನ್ನೊಂದು ಎದುರಿಸಿದವು. ವೇಗದಿಂದ ಓಡುವ ಕುದುರೆಗಳ ಕೌಶಲ್ಯದ ಓಟದಲ್ಲಿ ಲೆಕ್ಕಾಚಾರದಿಂದ ಬಿರುಸಾಗಿ ಓಡಿದವು. ಹೊಳೆಯುತ್ತಿರುವ, ಎಡಬಲಗಳಲ್ಲಿದ್ದ ಲಗಾಮುಗಳ ಸನ್ನೆಯಿಂದ ರಥವನ್ನು ಓಡಿಸುತ್ತಿದ್ದ ಕೈಚಳಕದ ಸೂತರ ಸಾಲಿನ ಯುದ್ಧಭಂಗಿಗಳು ಜನರ ಕಣ್ಣು ಮನಸ್ಸುಗಳನ್ನು ಆಕರ್ಷಿಸಿತು.
ಮೂಲ ...{Loading}...
ಅಳವಿಯಂಕೆಯ ಮೀರಿ ರಥರಥ
ಹಳಚಿದವು ಬಹುಮಾನದಲಿ ವೆ
ಗ್ಗಳಿಸಿದವು ವೇಗಾಯ್ಲವಾಜಿಯ ಲಳಿಯ ಲಹರಿಯಲಿ
ಹೊಳೆದವೆಡಬಲವಾಘೆ ಸನ್ನೆಯ
ಸುಳಿವ ಸುಭಟರ ಬವರಿ ಭಂಗಿಯ
ಲುಳಿಯ ಸೂತರ ರೇಖೆ ಸೆಳೆದುದು ಜನದ ಕಣ್ಮನವ ॥16॥
೦೧೭ ಉಪ್ಪರಿಸಿ ಲಳಿಯೆದ್ದು ...{Loading}...
ಉಪ್ಪರಿಸಿ ಲಳಿಯೆದ್ದು ಸೂತರ
ಚಪ್ಪರಣೆಗಳ ಮೀರಿ ಖುರದಲಿ
ಖೊಪ್ಪರಿಸಿ ಹೊಯ್ದಾಡಿದವು ಹೇಷಿತದ ಹಲ್ಲಣೆಯ
ದರ್ಪದಲಿ ತೇಜಿಗಳು ತೇಜಿಯ
ತಪ್ಪಡಿಗೆ ಲಟಕಟಿಸಿದವು ರಣ
ವೊಪ್ಪಿತೈ ಕರ್ಣಾರ್ಜುನರ ರಥವಾಜಿ ವಾಜಿಗಳ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕರ್ಣ ಅರ್ಜುನರ ರಥದ ಕುದುರೆಗಳು ಕುಶಲತೆಯಿಂದ ಎಗರೆಗರುತ್ತ, ಸೂತರು ಚಪ್ಪರಿಸುತ್ತಿರಲು ಗೊರಸುಗಳಿಂದ ಬಡಿದಾಡಿದವು. ದರ್ಪದಿಂದ ಹೇಷಾರವವನ್ನು ಮಾಡಿದವು. ಕುದುರೆಗಳು ಪರಸ್ಪರ ತೊಡರುಗಾಲು ಕೊಡಲು ತವಕಿಸಿದವು. ಕರ್ಣ ಮತ್ತು ಅರ್ಜುನರ ರಥದ ಕುದುರೆಗಳು ಯುದ್ಧರಂಗದಲ್ಲಿ ಶೋಭಿಸಿದವು.
ಪದಾರ್ಥ (ಕ.ಗ.ಪ)
ಉಪ್ಪರಿಸು-ಮೇಲಕ್ಕೆಳು, ಖುರ-ಕಾಲಿನ ಗೊರಸು, ಖೊಪ್ಪರಿಸು-ಬಡಿದಾಡು, ಹಲ್ಲಣೆ-ಜೀನು, ತಪ್ಪಡಿ-ದಾಪುಗಾಲು, ತೊಯ್ದಿರುವುದು, ಲಟಕಟಿಸು-ಆತುರಪಡು.
ಮೂಲ ...{Loading}...
ಉಪ್ಪರಿಸಿ ಲಳಿಯೆದ್ದು ಸೂತರ
ಚಪ್ಪರಣೆಗಳ ಮೀರಿ ಖುರದಲಿ
ಖೊಪ್ಪರಿಸಿ ಹೊಯ್ದಾಡಿದವು ಹೇಷಿತದ ಹಲ್ಲಣೆಯ
ದರ್ಪದಲಿ ತೇಜಿಗಳು ತೇಜಿಯ
ತಪ್ಪಡಿಗೆ ಲಟಕಟಿಸಿದವು ರಣ
ವೊಪ್ಪಿತೈ ಕರ್ಣಾರ್ಜುನರ ರಥವಾಜಿ ವಾಜಿಗಳ ॥17॥
೦೧೮ ಅರಸ ಕೇಳೇನೆಮ್ಬೆನೈ ...{Loading}...
ಅರಸ ಕೇಳೇನೆಂಬೆನೈ ಕಪಿ
ವರನ ಕೋಳಾಹಳದ ಕದನವ
ಕರೆದು ನಖದಲಿ ಹೊಯ್ದು ಕರದಲಿ ಕಾದುವಂದದಲಿ
ಮುರಿದು ಬಾಲದಲಡಿಗಡಿಗೆ ಬೊ
ಬ್ಬಿರಿದು ಹೆಣಗಿದನಿನಸುತನ ಭಾ
ಸುರದ ಹೇಮಧ್ವಜದ ಹಲಗೆಯ ಹಸ್ತಿಕಕ್ಷದಲಿ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ದೊರೆಯೇ ಕೇಳು, ಹನುಮಂತನು ಯುದ್ಧದಲ್ಲಿ ಮಾಡಿದ ಗಲಭೆಯನ್ನು ಏನೆಂದು ಹೇಳಲಿ. ಕಾಲು ಕೆರೆದು ಆಹ್ವಾನಿಸಿ, ಕೈಗಳನ್ನು ಹೊಯ್ದು ಯುದ್ಧ ಮಾಡುವ ರೀತಿಯಲ್ಲಿ, ತನ್ನ ಬಾಲವನ್ನು ತಿರುಗಿಸುತ್ತಾ, ಬೊಬ್ಬೆ ಹಾಕುತ್ತಾ, ಕರ್ಣನ ರಥದ ಹೇಮಧ್ವಜದಲ್ಲಿದ್ದ ಸಿಂಹದ ಮೇಲೆ ಬಿದ್ದನು.” ಎಂದು ಸಂಜಯನು ಹೇಳಿದನು
ಪದಾರ್ಥ (ಕ.ಗ.ಪ)
ಹಸ್ತಿಕಕ್ಷ-ಸಿಂಹ
ಮೂಲ ...{Loading}...
ಅರಸ ಕೇಳೇನೆಂಬೆನೈ ಕಪಿ
ವರನ ಕೋಳಾಹಳದ ಕದನವ
ಕರೆದು ನಖದಲಿ ಹೊಯ್ದು ಕರದಲಿ ಕಾದುವಂದದಲಿ
ಮುರಿದು ಬಾಲದಲಡಿಗಡಿಗೆ ಬೊ
ಬ್ಬಿರಿದು ಹೆಣಗಿದನಿನಸುತನ ಭಾ
ಸುರದ ಹೇಮಧ್ವಜದ ಹಲಗೆಯ ಹಸ್ತಿಕಕ್ಷದಲಿ ॥18॥
೦೧೯ ಏನ ಹೇಳುವೆ ...{Loading}...
ಏನ ಹೇಳುವೆ ಸೂತತನದಭಿ
ಮಾನವೇರಿದ ಪರಿಯನಾ ವೇ
ಷಾನುರೂಪ ವಿಚೇಷ್ಟೆಯನು ಲೋಕೈಕ ಚೇಷ್ಟಕನ
ನೀನೆನಗೆ ಸಾರಥಿತನದಲಿ ಸ
ಮಾನನೇ ಫಡ ತುರಗಹೃದಯ
ಜ್ಞಾನ ನಿನಗೇಕೆನುತ ಶಲ್ಯನ ಜರಿದನಸುರಾರಿ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ದೊರೆಯೇ, ಲೋಕದ ಚೇಷ್ಟೆಗಳಿಗೆಲ್ಲಾ ಕಾರಣನಾದ ಕೃಷ್ಣನ ಸೂತತನದ ಅಭಿಮಾನ ಹೆಚ್ಚಾದ ರೀತಿಯನ್ನು ಆ ವೇಷಕ್ಕೆ ತಕ್ಕ ಆತನ ನಡವಳಿಕೆಯನ್ನು ಏನೆಂದು ಹೇಳಲಿ. ‘ನೀನು ನನಗೆ ಸಾರಥ್ಯದಲ್ಲಿ ಸಮಾನನಾಗುತ್ತೀಯಾ, ಛೀ ಕುದುರೆಯ ಹೃದಯವನ್ನು ಅರ್ಥ ಮಾಡಿಕೊಳ್ಳುವ ಕೆಲಸ ನಿನಗೆ ಏಕೆ’ ಎನ್ನುತ್ತಾ ಶಲ್ಯನನ್ನು ನಿಂದಿಸಿದನು.” ಎಂದು ಸಂಜಯನು ಹೇಳಿದನು.
ಮೂಲ ...{Loading}...
ಏನ ಹೇಳುವೆ ಸೂತತನದಭಿ
ಮಾನವೇರಿದ ಪರಿಯನಾ ವೇ
ಷಾನುರೂಪ ವಿಚೇಷ್ಟೆಯನು ಲೋಕೈಕ ಚೇಷ್ಟಕನ
ನೀನೆನಗೆ ಸಾರಥಿತನದಲಿ ಸ
ಮಾನನೇ ಫಡ ತುರಗಹೃದಯ
ಜ್ಞಾನ ನಿನಗೇಕೆನುತ ಶಲ್ಯನ ಜರಿದನಸುರಾರಿ ॥19॥
೦೨೦ ಅಕಟ ಗೋರಕ್ಷಕನೆ ...{Loading}...
ಅಕಟ ಗೋರಕ್ಷಕನೆ ಪಶುಪಾ
ಲಕರ ಮಕ್ಕಳೊಳಶ್ವಹೃದಯ
ಪ್ರಕಟ ವಿಜ್ಞಾನಂಗಳುದಿಸಿದವೇ ವಿಶೇಷವಲಾ
ವಿಕಳರಾವಿದನೆತ್ತಬಲ್ಲೆವು
ಸಕಲಗುಣಸರ್ವಜ್ಞ ನಿನಗೀ
ಬಕವಿಡಂಬನವೇಕೆನುತ ಮೂದಲಿಸಿದನು ಶಲ್ಯ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶಲ್ಯನೂ ‘ಅಯ್ಯೋ ದನಕಾಯುವವನೇ, ದನಕಾಯುವವರ ಎಂದರೆ ಗೊಲ್ಲರ ಮಕ್ಕಳಿಗೆ ಅಶ್ವ ಹೃದಯವನ್ನು ಅರ್ಥ ಮಾಡಿಕೊಳ್ಳುವ ಬುದ್ಧಿ ಹುಟ್ಟಿತೇ ? ಹಾಗಾದರೆ ಅದು ವಿಶೇಷ ವಿಚಾರ. ಬುದ್ಧಿ ಇಲ್ಲದ ನಮಗೆ ಇವೆಲ್ಲಾ ಏನು ಗೊತ್ತು. ಸಕಲ ಗುಣ ಸರ್ವಜ್ಞನಾದ ನಿನಗೆ ಏಕೆ ಈ ಬಕಧ್ಯಾನದ ಬಗೆಯ ನಡವಳಿಕೆ?’ ಎಂದು ಕೃಷ್ಣನನ್ನು ಮೂದಲಿಸಿದ.
ಪದಾರ್ಥ (ಕ.ಗ.ಪ)
ಬಕವಿಡಂಬನ-ಬಕ ಪಕ್ಷಿ ಎಂದರೆ ಕೊಕ್ಕರೆ ನಿಶ್ಚಲವಾಗಿ ಧ್ಯಾನ ಮುದ್ರೆಯಲ್ಲಿ ನಿಂತಿದ್ದರೂ, ಧ್ಯಾನ ಮಾಡುತ್ತಿರುವುದಿಲ್ಲ.
ಮೂಲ ...{Loading}...
ಅಕಟ ಗೋರಕ್ಷಕನೆ ಪಶುಪಾ
ಲಕರ ಮಕ್ಕಳೊಳಶ್ವಹೃದಯ
ಪ್ರಕಟ ವಿಜ್ಞಾನಂಗಳುದಿಸಿದವೇ ವಿಶೇಷವಲಾ
ವಿಕಳರಾವಿದನೆತ್ತಬಲ್ಲೆವು
ಸಕಲಗುಣಸರ್ವಜ್ಞ ನಿನಗೀ
ಬಕವಿಡಂಬನವೇಕೆನುತ ಮೂದಲಿಸಿದನು ಶಲ್ಯ ॥20॥
೦೨೧ ಧಾರುಣೀಪತಿ ಕೇಳು ...{Loading}...
ಧಾರುಣೀಪತಿ ಕೇಳು ಬಿಲುಟಂ
ಕಾರ ಕದನೋಪಕ್ರಮದೊಳೋಂ
ಕಾರವಾಯಿತು ಕಾರ್ಮುಕಸ್ವಾಧ್ಯಾಯವಿಸ್ತರಕೆ
ಭೂರಿ ಬಹುವಿಧ ಬಾಣವರ್ಗವಿ
ಹಾರವೆಸೆದುದು ಕರ್ಣಪಾರ್ಥರು
ದಾರ ಸಮರಾರಂಭವಳ್ಳಿರಿದುದು ಜಗತ್ರಯವ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ದೊರೆಯೇ ಕೇಳು, ಯುದ್ಧ ಪ್ರಾರಂಭದಲ್ಲಿ ಬಿಲ್ಲಿನ ಟಂಕಾರ ಶಬ್ದ, ಬಿಲ್ಲಿನ ವಿದ್ಯೆಯೆಂಬ ವೇದಾಧ್ಯಯನಕ್ಕೆ ಓಂಕಾರ ಹಾಕಿದಂತಾಯಿತು. ಅನೇಕ ಬಗೆಯ ಬಾಣಗಳ ಪ್ರಯೋಗ ಶೋಭಾಯಮಾನವಾಯಿತು. ಕರ್ಣ ಅರ್ಜುನರ ವಿಸ್ತಾರವಾದ ಯುದ್ಧದ ಆರಂಭ ಮೂರು ಲೋಕಗಳನ್ನು ಚುಚ್ಚಿತು.” ಎಂದು ಸಂಜಯನು ಹೇಳಿದನು
ಪದಾರ್ಥ (ಕ.ಗ.ಪ)
ಸ್ವಾಧ್ಯಾಯ-ವೇದಾಧ್ಯಯನ, ವಿಹಾರ-ಸುತ್ತಾಟ, ಅಳ್ಳಿರಿ-ಚುಚ್ಚು
ಮೂಲ ...{Loading}...
ಧಾರುಣೀಪತಿ ಕೇಳು ಬಿಲುಟಂ
ಕಾರ ಕದನೋಪಕ್ರಮದೊಳೋಂ
ಕಾರವಾಯಿತು ಕಾರ್ಮುಕಸ್ವಾಧ್ಯಾಯವಿಸ್ತರಕೆ
ಭೂರಿ ಬಹುವಿಧ ಬಾಣವರ್ಗವಿ
ಹಾರವೆಸೆದುದು ಕರ್ಣಪಾರ್ಥರು
ದಾರ ಸಮರಾರಂಭವಳ್ಳಿರಿದುದು ಜಗತ್ರಯವ ॥21॥
೦೨೨ ಸೂತಜಾತಿಯೊಳೀ ಧನುರ್ವೇ ...{Loading}...
ಸೂತಜಾತಿಯೊಳೀ ಧನುರ್ವೇ
ದಾತಿಶಯವೆಂತಾಯ್ತು ಪಾರ್ಥಿವ
ಜಾತಿಯಧ್ಯಾಪನವಿಧಾನನಿಯೋಗವಾವನದು
ಪೂತು ಮಝರೇ ಸೈರಿಸಾದಡೆ
ಸೂತನಂದನ ಎನುತ ಬಾಣ
ವ್ರಾತದಲಿ ಹೊದಿಸಿದನು ಕರ್ಣನ ರಥವನಾ ಪಾರ್ಥ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಸೂತ ಜಾತಿಯಲ್ಲಿ ಈ ಬಿಲ್ಲನ್ನು ಹಿಡಿಯುವ ವಿದ್ಯೆ ಹೇಗೆ ಅತಿಶಯವಾಗಿ ಸಿದ್ಧಿಸಿತು? ಕ್ಷತ್ರಿಯ ಗುಂಪಿನವರಿಗೆ ಸೇರಿದ ಈ ವಿದ್ಯೆಯನ್ನು ನಿನಗೆ ಹೇಳಿಕೊಟ್ಟವರು ಯಾರು. ಭೇಷ್, ಸೂತಪುತ್ರ, ಇದನ್ನು ಸಹಿಸು ನೋಡೋಣ’ ಎನ್ನುತ್ತಾ ಅರ್ಜುನನು ಕರ್ಣನ ರಥವನ್ನು ಬಾಣಗಳಿಂದ ಮುಚ್ಚಿಹಾಕಿದನು.
ಪದಾರ್ಥ (ಕ.ಗ.ಪ)
ನಿಯೋಗ-ಕೆಲಸ
ಮೂಲ ...{Loading}...
ಸೂತಜಾತಿಯೊಳೀ ಧನುರ್ವೇ
ದಾತಿಶಯವೆಂತಾಯ್ತು ಪಾರ್ಥಿವ
ಜಾತಿಯಧ್ಯಾಪನವಿಧಾನನಿಯೋಗವಾವನದು
ಪೂತು ಮಝರೇ ಸೈರಿಸಾದಡೆ
ಸೂತನಂದನ ಎನುತ ಬಾಣ
ವ್ರಾತದಲಿ ಹೊದಿಸಿದನು ಕರ್ಣನ ರಥವನಾ ಪಾರ್ಥ ॥22॥
೦೨೩ ಹರೆಗಡಿದನಾ ಕ್ಷಣದೊಳಾತನ ...{Loading}...
ಹರೆಗಡಿದನಾ ಕ್ಷಣದೊಳಾತನ
ಶರವನೆಲವೋ ಪಾರ್ಥ ನಿಮ್ಮೈ
ವರಿಗೆ ಜನಕನು ಪಾಂಡು ನೀವಧ್ಯಯನಯೋಗ್ಯರಲಾ
ಧರೆಯೊಳಗ್ಗದ ರಾಜಸೂಯಾ
ಧ್ವರಕೆ ಪತ್ನಿಯೊ ಯೋಗ್ಯೆ ಯಜಮಾ
ನರುಗಳೈ ನೀವೇನಹೇಳುವೆವೆನುತ ತೆಗೆದೆಚ್ಚ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕರ್ಣನು ಅರ್ಜುನನ ಬಾಣಗಳನ್ನು ಕ್ಷಣದಲ್ಲಿ ಕತ್ತರಿಸಿದನು. “ಎಲವೋ ಅರ್ಜುನ, ನೀವು ಐದು ಜನರಿಗೆ ಪಾಂಡುವೇ ತಂದೆ. ಆದ್ದರಿಂದ ನೀವು ಬಿಲ್ವಿದ್ಯೆಯನ್ನು ಕಲಿಯಲು ಯೋಗ್ಯರಾದಿರಿ. ಭೂಮಿಯಲ್ಲಿ ಶ್ರೇಷ್ಠವಾದ ರಾಜಸೂಯಯಾಗಕ್ಕೆ ನಿಮ್ಮ ಹೆಂಡತಿ ಯೋಗ್ಯಳು. ನೀವು ಯಜಮಾನರುಗಳು - ಇದನ್ನು ಏನೆಂದು ಹೇಳುವುದೋ?” ಎಂದು ಚುಚ್ಚಿ ನುಡಿಯುತ್ತಾ ಬಲವಾಗಿ ಬಾಣಪ್ರಯೋಗಿಸಿದ.
ಪದಾರ್ಥ (ಕ.ಗ.ಪ)
ಹರೆಗಡಿ-ಕತ್ತರಿಸು
ಮೂಲ ...{Loading}...
ಹರೆಗಡಿದನಾ ಕ್ಷಣದೊಳಾತನ
ಶರವನೆಲವೋ ಪಾರ್ಥ ನಿಮ್ಮೈ
ವರಿಗೆ ಜನಕನು ಪಾಂಡು ನೀವಧ್ಯಯನಯೋಗ್ಯರಲಾ
ಧರೆಯೊಳಗ್ಗದ ರಾಜಸೂಯಾ
ಧ್ವರಕೆ ಪತ್ನಿಯೊ ಯೋಗ್ಯೆ ಯಜಮಾ
ನರುಗಳೈ ನೀವೇನಹೇಳುವೆವೆನುತ ತೆಗೆದೆಚ್ಚ ॥23॥
೦೨೪ ಸೂಳೆಯರು ಗಡ ...{Loading}...
ಸೂಳೆಯರು ಗಡ ಸಾಮಗಾನವ
ನಾಳಿಗೊಂಬರು ಗಡ ದಿನೇಶನ
ಮೇಳವನು ಮುದುಗೂಗೆ ಮೆಚ್ಚದು ಹಾನಿಯೇನದಕೆ
ಆಳುತನದಂಘವಣೆಯುಂಟೇ
ಬೋಳೆಯಂಬಿನಲಾಡಿಕೊಳು ಬಿಡು
ಜಾಳುನುಡಿಗಳ ಜವಳಿವಾತನೆನುತ್ತ ನರನೆಚ್ಚ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಸೂಳೆಯರು ಸಾಮವೇದ ಪಠಣವನ್ನು ಅಪಹಾಸ್ಯ ಮಾಡಿದಂತೆ ಅಲ್ಲವೇ? ಸೂರ್ಯನ ಸಹವಾಸವನ್ನು ಗೂಬೆ ಮೆಚ್ಚುವುದಿಲ್ಲ ಅಲ್ಲವೇ? ಅದರಿಂದ ಸಾಮಗಾನಕ್ಕೂ ಸೂರ್ಯನಿಗೂ ಏನು ಹಾನಿಯಾಯಿತು ? ನಿನಗೆ ಶೂರ ಪುರುಷನ ಸಾಮಥ್ರ್ಯವಿದೆಯೇ ದೇವತೆಗಳು ನೀಡಿದ ಬಾಣಗಳನ್ನು ಪ್ರಯೋಗಿಸು, ಅರ್ಥವಿಲ್ಲದ ನುಡಿಗಟ್ಟುಗಳನ್ನು ಆಡುವುದನ್ನು ನಿಲ್ಲಿಸು” ಎಂದು ಅರ್ಜುನನು ಬಾಣ ಪ್ರಯೋಗಿಸಿದ.
ಪದಾರ್ಥ (ಕ.ಗ.ಪ)
ಆಳಿಗೊಳ್-ಹೀನಾಯ ಮಾಡು, ಜವಳಿವಾತು-ದ್ವಂದ್ವಾರ್ಥದ ಮಾತು.
ಮೂಲ ...{Loading}...
ಸೂಳೆಯರು ಗಡ ಸಾಮಗಾನವ
ನಾಳಿಗೊಂಬರು ಗಡ ದಿನೇಶನ
ಮೇಳವನು ಮುದುಗೂಗೆ ಮೆಚ್ಚದು ಹಾನಿಯೇನದಕೆ
ಆಳುತನದಂಘವಣೆಯುಂಟೇ
ಬೋಳೆಯಂಬಿನಲಾಡಿಕೊಳು ಬಿಡು
ಜಾಳುನುಡಿಗಳ ಜವಳಿವಾತನೆನುತ್ತ ನರನೆಚ್ಚ ॥24॥
೦೨೫ ಆತನೆಚ್ಚ ಶರೌಘವನು ...{Loading}...
ಆತನೆಚ್ಚ ಶರೌಘವನು ಕಡಿ
ದೀತ ನುಡಿದನು ಹೊಳ್ಳುವಾತಿನ
ಹೋತುದರಿಹಿಗಳಿವರುಪಾಧ್ಯರು ನಾವು ಸೂಳೆಯರು
ಏತಕೀ ಬಳೆಗೈಗೆ ಬಿಲು ಹಿಣಿ
ಲೇತಕೀ ಚೊಲ್ಲೆಹಕೆ ಚಲ್ಲಣ
ವೇತಕೀ ಹೆಣ್ಣುಡಿಗೆಗೆನುತೆಚ್ಚನು ಧನಂಜಯನ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನು ಪ್ರಯೋಗಿಸಿದ ಬಾಣಗಳನ್ನು ಕತ್ತರಿಸಿ ಕರ್ಣನು - “ಇವರು ಅರ್ಥವಿಲ್ಲದ ಮಾತುಗಳನ್ನಾಡುವ ಹೋತಗಳನ್ನು ಬಲಿ ಕೊಡುವ ಗುರು ಪುರೋಹಿತರು, ನಾವು ಸೂಳೆಯರು” ಎನ್ನುತ್ತಾ ‘ಬಳೆ ತೊಟ್ಟಿದ್ದ ನಿನ್ನ ಕೈಗೆ ಬಿಲ್ಲು ಏಕೆ ? ಈ ತುರುಬಿನ ತುದಿಗೆ ಗಂಟು ಏಕೆ ? ಹೆಣ್ಣಿನ ಉಡಿಗೆ ತೊಟ್ಟಿದ್ದವನಿಗೆ ಈ ಉದ್ದನೆಯ ಚಲ್ಲಣವೇಕೆ ?’ ಎನ್ನುತ್ತಾ ಅರ್ಜುನನ ಮೇಲೆ ಬಾಣ ಪ್ರಯೋಗಿಸಿದನು.
ಪದಾರ್ಥ (ಕ.ಗ.ಪ)
ಹೋತು+ತರಿಹಿಗಳು-ಹೋತಗಳನ್ನು ಬಲಿಕೊಡುವವರು, ಉಪಾಧ್ಯ-ಗುರು, ಹಿಣಿಲು-ಜಡೆಯ ಗಂಟು ಚೊಲ್ಲಹ - ತುರುಬಿನ ತುದಿ, ಚಲ್ಲಣ-ಉದ್ದನೆಯ ಚಡ್ಡಿ
ಮೂಲ ...{Loading}...
ಆತನೆಚ್ಚ ಶರೌಘವನು ಕಡಿ
ದೀತ ನುಡಿದನು ಹೊಳ್ಳುವಾತಿನ
ಹೋತುದರಿಹಿಗಳಿವರುಪಾಧ್ಯರು ನಾವು ಸೂಳೆಯರು
ಏತಕೀ ಬಳೆಗೈಗೆ ಬಿಲು ಹಿಣಿ
ಲೇತಕೀ ಚೊಲ್ಲೆಹಕೆ ಚಲ್ಲಣ
ವೇತಕೀ ಹೆಣ್ಣುಡಿಗೆಗೆನುತೆಚ್ಚನು ಧನಂಜಯನ ॥25॥
೦೨೬ ಕಾಣಿಸಿದನೈ ಕೌರವನ ...{Loading}...
ಕಾಣಿಸಿದನೈ ಕೌರವನ ಹರಿ
ವಾಣದಾಯದ ಹಂತಿಕಾರನು
ಕಾಣಿಕೊಂಕನು ನಮ್ಮ ಚರಿತಕೆ ಹಾ ಮಹಾದೇವ
ಜಾಣತನವೊಳ್ಳೆಯದು ಧರ್ಮಜ
ನಾಣೆ ಬಲ್ಲೆನು ದಿಟವೆನುತ ಬಲು
ಸಾಣೆಯಲಗಿನ ಸರಿಯ ಸುರಿದನು ಸವರಿ ರಿಪುಶರವ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಕೌರವನ ಎದುರು ಸಾಲಿನಲ್ಲಿ ನಿಂತು ಅವನ ತಟ್ಟೆಯಲ್ಲಿ ಊಟ ಮಾಡಿದ ಎಂದರೆ, ಕೌರವನ ಎಂಜಲನ್ನು ತಿಂದ, ಈ ಕರ್ಣನು, ಅಯ್ಯೋ ಶಿವನೇ ನಮ್ಮ ನಡವಳಿಕೆಯಲ್ಲಿಯೇ ದೋಷವನ್ನು ತೋರಿಸುತ್ತಿದ್ದಾನೆ. ಇವನ ಜಾಣತನ ಚೆನ್ನಾಗಿದೆ. ಧರ್ಮರಾಯನ ಆಣೆಯಾಗಿಯೂ ಅದು ಸತ್ಯ ಎಂಬುದು ನನಗೆ ತಿಳಿದಿದೆ. " ಎನ್ನುತ್ತಾ ಅರ್ಜುನನು ಶತ್ರು ಬಾಣಗಳನ್ನು ಸವರಿ ಬಲವಾಗಿ ಚೂಪು ಮಾಡಿದ ತುದಿಗಳುಳ್ಳ ಬಾಣಗಳ ಮಳೆಯನ್ನೇ ಸುರಿಸಿದನು.
ಪದಾರ್ಥ (ಕ.ಗ.ಪ)
ಹಂತಿಕಾರ-ಸಾಲಿನಲ್ಲಿ ನಿಲ್ಲುವವನು, ಕಾಣಿಕೊಂಕು-ದೋಷ
ಮೂಲ ...{Loading}...
ಕಾಣಿಸಿದನೈ ಕೌರವನ ಹರಿ
ವಾಣದಾಯದ ಹಂತಿಕಾರನು
ಕಾಣಿಕೊಂಕನು ನಮ್ಮ ಚರಿತಕೆ ಹಾ ಮಹಾದೇವ
ಜಾಣತನವೊಳ್ಳೆಯದು ಧರ್ಮಜ
ನಾಣೆ ಬಲ್ಲೆನು ದಿಟವೆನುತ ಬಲು
ಸಾಣೆಯಲಗಿನ ಸರಿಯ ಸುರಿದನು ಸವರಿ ರಿಪುಶರವ ॥26॥
೦೨೭ ರಾಯತನದಲಿ ಬೆರೆತು ...{Loading}...
ರಾಯತನದಲಿ ಬೆರೆತು ರಾಜ್ಯ
ಶ್ರೀಯ ನೆರೆ ಹೋಗಾಡಿ ಪರರಿಗೆ
ಜೀಯ ಬೆಸಸುವುದೆಂದು ಜೀವಿಸುವವರು ನಾವಲ್ಲ
ರಾಯತನವೆಮಗಿಲ್ಲ ಕೌರವ
ರಾಯನೋಲೆಯಕಾರರಹೆವೆ
ಮ್ಮಾಯತವು ತಾ ಬೇರೆನುತ ಕವಿದೆಚ್ಚನಾ ಕರ್ಣ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ರಾಜರೆಂಬ ಗರ್ವದಿಂದ, ತಮ್ಮ ರಾಜ್ಯಲಕ್ಷ್ಮಿಯನ್ನು ಸಂಪೂರ್ಣವಾಗಿ ಕಳೆದುಕೊಂಡು, ಪರರಾಜರ ಬಳಿ ಹೋಗಿ ‘ಸ್ವಾಮಿ, ಅಪ್ಪಣೆ ಏನು’ ಎಂದು ದೀನರಾಗಿ ಬದುಕುವವರು ನಾವಲ್ಲ. ನಮಗೆ ಕ್ಷತ್ರಿಯರ ‘ರಾಯತನ’ದ ಗುಣ ಇಲ್ಲ. ಕೌರವನ ಓಲೆಯಕಾರರು ನಾವು ಎಂದರೆ ಹೇಳಿದಂತೆ ಕೇಳುವವರು. ನಮ್ಮ ಶೌರ್ಯದ ರೀತಿಯೇ ಬೇರೆ ಸ್ವರೂಪದ್ದು’ “ಎಂದು ಕರ್ಣನು ಬಾಣಗಳಿಂದ ಆಕ್ರಮಣ ಮಾಡಿದನು.
ಮೂಲ ...{Loading}...
ರಾಯತನದಲಿ ಬೆರೆತು ರಾಜ್ಯ
ಶ್ರೀಯ ನೆರೆ ಹೋಗಾಡಿ ಪರರಿಗೆ
ಜೀಯ ಬೆಸಸುವುದೆಂದು ಜೀವಿಸುವವರು ನಾವಲ್ಲ
ರಾಯತನವೆಮಗಿಲ್ಲ ಕೌರವ
ರಾಯನೋಲೆಯಕಾರರಹೆವೆ
ಮ್ಮಾಯತವು ತಾ ಬೇರೆನುತ ಕವಿದೆಚ್ಚನಾ ಕರ್ಣ ॥27॥
೦೨೮ ಆವ ಹಞ್ಜರಕೂಳಿ ...{Loading}...
ಆವ ಹಂಜರಕೂಳಿ ಮೊಗವಲೆ
ಯಾವಗಾಣವು ಬೀಸುವಲೆಯುರೆ
ತೀವಿದುದಕದ ಮಡುವೆಯಿದು ಸಂಗ್ರಾಮಭೂಮಿ ಕಣಾ
ಹೇವವಿಲ್ಲದೆ ಕಾದಬೇಹುದು
ಧೀವರರವೋಲ್ ತಡಿಕೆವಲೆಯಲಿ
ಲಾವುಗೆಯ ಹೊಯ್ದಂದವಲ್ಲೆನುತೆಚ್ಚನಾ ಪಾರ್ಥ ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಇದು ಯುದ್ಧಭೂಮಿ, ಮೀನು ಹಿಡಿಯುವ ಬುಟ್ಟಿಯಲ್ಲ, ದೊಡ್ಡ ಬಲೆಯಲ್ಲ, ಕÉೂಕ್ಕೆಯಲ್ಲ, ಬೀಸುವ ಬಲೆಯಲ್ಲ. ನೀರು ತುಂಬಿದ ಮಡುವಲ್ಲ. ಇಲ್ಲಿ ಹಿಂಜರಿಯದೇ ಯುದ್ಧ ಮಾಡಬೇಕು. ಬೆಸ್ತನಂತೆ, ತಡಿಕೆ ಬಲೆಯನ್ನು ಬೀಸಿ, ಹಕ್ಕಿಯನ್ನು ಹೊಡೆದು ಹಿಡಿಯುವಂತಲ್ಲಾ” ಎನ್ನುತ್ತಾ ಅರ್ಜುನನು ಬಾಣ ಪ್ರಯೋಗಿಸಿದನು.
ಪದಾರ್ಥ (ಕ.ಗ.ಪ)
ಹಂಜರಕೂಳಿ-ಮೀನು ಹಿಡಿಯುವ ಬುಟ್ಟಿ, ಮೊಗವಲೆ-ದೊಡ್ಡ ಬಲೆ, ಗಾಣ-ಗಾಳ, ಹೇವ-ಅಸಹ್ಯ, ಹಿಂಜರಿಕೆ, ನಾಚಿಕೆ,
ಧೀವರ-ಬೆಸ್ತ, ಲಾವುಗೆ-ಒಂದು ಬಗೆಯ ಹಕ್ಕಿ
ಮೂಲ ...{Loading}...
ಆವ ಹಂಜರಕೂಳಿ ಮೊಗವಲೆ
ಯಾವಗಾಣವು ಬೀಸುವಲೆಯುರೆ
ತೀವಿದುದಕದ ಮಡುವೆಯಿದು ಸಂಗ್ರಾಮಭೂಮಿ ಕಣಾ
ಹೇವವಿಲ್ಲದೆ ಕಾದಬೇಹುದು
ಧೀವರರವೋಲ್ ತಡಿಕೆವಲೆಯಲಿ
ಲಾವುಗೆಯ ಹೊಯ್ದಂದವಲ್ಲೆನುತೆಚ್ಚನಾ ಪಾರ್ಥ ॥28॥
೦೨೯ ನೀವು ನುಡಿದುದು ...{Loading}...
ನೀವು ನುಡಿದುದು ಹುಸಿಯೆ ಕೂಳಿಯ
ತೀವಿ ತೀವೆವು ಕೊಳಚೆಗಳ ಬಾ
ಣಾವಳಿಯ ತಡಿಕೆಯಲಿ ಹೊಯ್ವೆವು ನಕುಲ ಜಾತಿಯನು
ನಾವು ನಿಮ್ಮಯ ಹೃದಯಸರಸಿಯ
ಜೀವಮತ್ಸ್ಯಕೆ ಗಾಣವಿಕ್ಕುವ
ಧೀವರರು ನೋಡೆನುತ ಪಾರ್ಥನನೆಚ್ಚನಾ ಕರ್ಣ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನೀನು ಹೇಳಿದುದರಲ್ಲಿ ತಪ್ಪೇನೂ ಇಲ್ಲ. ಬುಟ್ಟಿಯನ್ನು ತುಂಬಿಸಿ, ಕೊಳಚೆ ಮೀನುಗಳನ್ನು ಹೊರತೆಗೆಯುತ್ತೇವೆ. ಬಾಣಗಳ ತಡಿಕೆ ಬಲೆಯನ್ನು ಹಾಕಿ ಮುಂಗುಸಿ ಜಾತಿಯ ಶತ್ರುಗಳನ್ನು ಹೊಡೆದು ಹಾಕುತ್ತೇವೆ. ನಾವು ನಿಮ್ಮ ಹೃದಯ ಸರೋವರದಲ್ಲಿರುವ ಜೀವ ಎಂಬ ಮೀನುಗಳಿಗೆ ಗಾಳ ಹಾಕುವ ಬೆಸ್ತರು ನೋಡು " ಎನ್ನುತ್ತಾ ಕರ್ಣನು ಅರ್ಜುನನ ಮೇಲೆ ಬಾಣ ಪ್ರಯೋಗಿಸಿದನು.
ಪದಾರ್ಥ (ಕ.ಗ.ಪ)
ನಕುಲ-ಮುಂಗುಸಿ, ಕೂಳಿಯ ತೀರಿ-ಗುಣಿಯನ್ನು/ಬುಟ್ಟಿಯನ್ನು ತುಂಬಿ
ಮೂಲ ...{Loading}...
ನೀವು ನುಡಿದುದು ಹುಸಿಯೆ ಕೂಳಿಯ
ತೀವಿ ತೀವೆವು ಕೊಳಚೆಗಳ ಬಾ
ಣಾವಳಿಯ ತಡಿಕೆಯಲಿ ಹೊಯ್ವೆವು ನಕುಲ ಜಾತಿಯನು
ನಾವು ನಿಮ್ಮಯ ಹೃದಯಸರಸಿಯ
ಜೀವಮತ್ಸ್ಯಕೆ ಗಾಣವಿಕ್ಕುವ
ಧೀವರರು ನೋಡೆನುತ ಪಾರ್ಥನನೆಚ್ಚನಾ ಕರ್ಣ ॥29॥
೦೩೦ ಬೇರೆ ಕೆಲವಮ್ಬುಗಳು ...{Loading}...
ಬೇರೆ ಕೆಲವಂಬುಗಳು ಗಡ ಮೈ
ದೋರಿದವು ನಿನಗೆಂಬರವ ನೀ
ತೋರಿಸಾ ನಿನಗಾಯ್ತು ಗಡ ಶಶಿಮೌಳಿಯುಪದೇಶ
ಹಾರುಗಣೆಗಳ ಹರಸಿ ಹೆಮ್ಮೆಯ
ಬೀರಿ ಚದುರಿಗತನವ ಮೆರೆದರೆ
ನೀರನೆಂಬರೆ ನಿನ್ನನೆನುತೆಚ್ಚನು ಧನಂಜಯನ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ವಿಶೇಷವಾದ ಕೆಲವು ಬಾಣಗಳು ನಿನ್ನ ಕೈವಶವಾಗಿವೆ ಎನ್ನುತ್ತಾರೆ. ಅವುಗಳನ್ನು ನೀನು ಪ್ರಯೋಗಿಸು. ನಿನಗೆ ಚಂದ್ರಮೌಳಿಯಾದ ಶಿವನ ಉಪದೇಶವಾಗಲಿಲ್ಲವೇ, ಹಾರಿ ಬರುವ ಬಾಣಗಳನ್ನು ಪ್ರಯೋಗಿಸಿ, ಹೆಮ್ಮೆಯನ್ನು ಬೀರುತ್ತಾ ಜಾಣತನವನ್ನು ತೋರಿಸಿದರೆ ನಿನ್ನನ್ನು ಜಾಣ ಎಂದು ಯಾರು ಕರೆಯುತ್ತಾರೆ?’ ಎಂದು ಕರ್ಣನು ಅರ್ಜುನನ ಮೇಲೆ ಬಾಣ ಪ್ರಯೋಗಿಸಿದನು.
ಪದಾರ್ಥ (ಕ.ಗ.ಪ)
ನೀರ-ಜಾಣ
ಮೂಲ ...{Loading}...
ಬೇರೆ ಕೆಲವಂಬುಗಳು ಗಡ ಮೈ
ದೋರಿದವು ನಿನಗೆಂಬರವ ನೀ
ತೋರಿಸಾ ನಿನಗಾಯ್ತು ಗಡ ಶಶಿಮೌಳಿಯುಪದೇಶ
ಹಾರುಗಣೆಗಳ ಹರಸಿ ಹೆಮ್ಮೆಯ
ಬೀರಿ ಚದುರಿಗತನವ ಮೆರೆದರೆ
ನೀರನೆಂಬರೆ ನಿನ್ನನೆನುತೆಚ್ಚನು ಧನಂಜಯನ ॥30॥
೦೩೧ ಮೊಲನ ಬೇಣ್ಟೆಗೆ ...{Loading}...
ಮೊಲನ ಬೇಂಟೆಗೆ ತಿವಿದು ಹಾಸವ
ಕಳುಚುವರೆ ಕೇಸರಿಯನಕಟಾ
ಕೊಳಚೆಯುದಕಕೆ ಕೊಂಬುದೇ ಹರಗೋಲ ಬಾಡಗೆಯ
ಗಳಹತನವೇ ಹರನ ಬಾಣಾ
ವಳಿಗೆ ಗುರಿಯೇ ನೀನೆನುತ ಕೈ
ಚಳಕದಲಿ ರಿಪುಶರವ ಖಂಡಿಸಿ ತುಳುಕಿದನು ಪಾರ್ಥ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಮೊಲದ ಬೇಟೆಯಾಡಲು ಸಿಂಹವನ್ನು ಚುಚ್ಚಿ ಹಗ್ಗದ ಸೆರೆಯಿಂದ ಬಿಟ್ಟು ಕಳಿಸುತ್ತಾರೆಯೇ. ಅಯ್ಯೋ ಕೊಳಚೆಯ ನೀರನ್ನು ದಾಟಲು ದೋಣಿಯನ್ನು ಬಾಡಿಗೆಗೆ ಪಡೆಯುತ್ತಾರೆಯೇ. ಬಾಯಿಗೆ ಬಂದದ್ದನ್ನು ಹೇಳುತ್ತಿದ್ದೀಯಲ್ಲಾ, ನಿನ್ನನ್ನು ಶಿವನು ಕೊಟ್ಟ ಬಾಣಕ್ಕೆ ಗುರಿಮಾಡಬೇಕೆ?” ಎನ್ನುತ್ತಾ ಶತ್ರುವಿನ ಬಾಣವನ್ನು ಕತ್ತರಿಸಿ ಅರ್ಜುನನು ಬಾಣಗಳಿಂದ ಅವನನ್ನು ಮುಚ್ಚಿಹಾಕಿದನು.
ಪದಾರ್ಥ (ಕ.ಗ.ಪ)
ಹಾಸ-ಪಾಶ, ಹಗ್ಗ, ಹರಿಗೋಲು-ದೋಣಿ, ತುಳುಕು-ತುಂಬಿ
ಮೂಲ ...{Loading}...
ಮೊಲನ ಬೇಂಟೆಗೆ ತಿವಿದು ಹಾಸವ
ಕಳುಚುವರೆ ಕೇಸರಿಯನಕಟಾ
ಕೊಳಚೆಯುದಕಕೆ ಕೊಂಬುದೇ ಹರಗೋಲ ಬಾಡಗೆಯ
ಗಳಹತನವೇ ಹರನ ಬಾಣಾ
ವಳಿಗೆ ಗುರಿಯೇ ನೀನೆನುತ ಕೈ
ಚಳಕದಲಿ ರಿಪುಶರವ ಖಂಡಿಸಿ ತುಳುಕಿದನು ಪಾರ್ಥ ॥31॥
೦೩೨ ಡೊಮ್ಬಿಯೇಕೈ ಪಾರ್ಥ ...{Loading}...
ಡೊಂಬಿಯೇಕೈ ಪಾರ್ಥ ಬಯಲಾ
ಡಂಬರವ ನಾವರಿಯೆವೇ ತ್ರಿ
ಯಂಬಕಾಸ್ತ್ರದ ತೊಡಹವಲ್ಲಾ ನಿನ್ನ ವಿಕ್ರಮಕೆ
ಶಂಬರಾರಿಯ ಕಣೆಯವೊಲು ನಿ
ನ್ನಂಬು ಬಲ್ಲಿದವೆಂದು ಕೆಲದವ
ರೆಂಬರೈ ಹುಸಿಯಲ್ಲೆನುತ ರಿಪುಶರವ ಖಂಡಿಸಿದ ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅರ್ಜುನ, ಸುಮ್ಮ ಸುಮ್ಮನೆ ಏಕೆ ಗಲಭೆ ಮಾಡುತ್ತೀಂiÉ.ು ಈ ವ್ಯರ್ಥವಾದ ಆಡಂಬರದ ಮಾತುಗಳ ಪ್ರದರ್ಶನ ನನಗೆ ತಿಳಿದಿಲ್ಲವೇ. ಮುಕ್ಕಣ್ಣನಾದ ಶಿವನು ಕೊಟ್ಟ ಅಸ್ತ್ರ, ನಿನ್ನ ಶೌರ್ಯಕ್ಕೆ ಒಂದು ಆಭರಣ ಇದ್ದಂತೆ. ಶಂಬರಾಸುರನ ಶತ್ರುವಾದ ಪ್ರದ್ಯುಮ್ನನ ಬಾಣದಂತೆ ನಿನ್ನ ಬಾಣ ಶಕ್ತಿಯುತವೆಂದು ಕೆಲವರು ಹೇಳುತ್ತಾರೆ. ಅದೇನೂ ಸುಳ್ಳಲ್ಲವಲ್ಲ” ಎನ್ನುತ್ತಾ ಶತ್ರುವಿನ ಬಾಣಗಳನ್ನು ಕತ್ತರಿಸಿದನು.
ಪದಾರ್ಥ (ಕ.ಗ.ಪ)
ಬಯಲಾಡಂಬರ-ವ್ಯರ್ಥವಾದ ಪ್ರದರ್ಶನ, ತೊಡಹು-ಆಭರಣ
ಟಿಪ್ಪನೀ (ಕ.ಗ.ಪ)
ಶಂಬರ>ಶಬರ ಆದರೆ ಶಬರಾರಿ ಮನ್ಮಥ ಆಗುತ್ತಾನೆ.
ಶಂಬರ-ದನುವಿನ ಒಬ್ಬ ಮಗ, ರಾಕ್ಷಸ, ಮಹಾಮಾಯಾವಿ ಕೃಷ್ಣನ ಮಗ ಪ್ರದ್ಯುಮ್ನನಿಂದ ಹತನಾದವನು.
ಮೂಲ ...{Loading}...
ಡೊಂಬಿಯೇಕೈ ಪಾರ್ಥ ಬಯಲಾ
ಡಂಬರವ ನಾವರಿಯೆವೇ ತ್ರಿ
ಯಂಬಕಾಸ್ತ್ರದ ತೊಡಹವಲ್ಲಾ ನಿನ್ನ ವಿಕ್ರಮಕೆ
ಶಂಬರಾರಿಯ ಕಣೆಯವೊಲು ನಿ
ನ್ನಂಬು ಬಲ್ಲಿದವೆಂದು ಕೆಲದವ
ರೆಂಬರೈ ಹುಸಿಯಲ್ಲೆನುತ ರಿಪುಶರವ ಖಂಡಿಸಿದ ॥32॥
೦೩೩ ಲೇಸನಾಡಿದೆ ಕರ್ಣ ...{Loading}...
ಲೇಸನಾಡಿದೆ ಕರ್ಣ ನೀನೇ
ನೈಸುಖೂಳನೆ ನಿನ್ನವಂದಿಗ
ವೇಷ ವಧುಗಳ ನುಗಿವಡಿವು ಮದನಾಸ್ತ್ರವೇಕಲ್ಲ
ಈ ಶರಾವಳಿ ಕುಸುಮಮಯ ನೀ
ನೈಸೆ ವನಿತಾಮಯನು ಪುಷ್ಪಶ
ರಾಸನನು ತಾನೆನುತ ಕಣೆಗೆದರಿದನು ಕಲಿಪಾರ್ಥ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಸರಿಯಾಗಿ ಹೇಳಿದೆ ಕರ್ಣ. ನೀನು ಏನು ಅಷ್ಟೊಂದು ದುಷ್ಟನೇ. ನಿನ್ನಂತಹ ಗಂಡು ವೇಷ ಧರಿಸಿರುವ ಹೆಣ್ಣುಗಳನ್ನು ಗೆಲ್ಲಲು ನನ್ನ ಬಾಣ ಮನ್ಮಥನ ಬಾಣ ಏಕಾಗಬಾರದು? ಈ ಬಾಣಗಳು ಹೂಗಳಂತೆ, ನೀನು ಹೆಂಗಸಿನಂತೆ, ನಾನು ಹೂಬಾಣದ ಬಿಲ್ಲನ್ನು ಹಿಡಿದಿರುವ ಮನ್ಮಥ. " ಎನ್ನುತ್ತಾ ಅರ್ಜುನನು ತನ್ನ ಬಾಣಗಳನ್ನು ಪ್ರಯೋಗಿಸಿದನು.
ಪದಾರ್ಥ (ಕ.ಗ.ಪ)
ಶರಾಸನ-ಬಿಲ್ಲು
ಮೂಲ ...{Loading}...
ಲೇಸನಾಡಿದೆ ಕರ್ಣ ನೀನೇ
ನೈಸುಖೂಳನೆ ನಿನ್ನವಂದಿಗ
ವೇಷ ವಧುಗಳ ನುಗಿವಡಿವು ಮದನಾಸ್ತ್ರವೇಕಲ್ಲ
ಈ ಶರಾವಳಿ ಕುಸುಮಮಯ ನೀ
ನೈಸೆ ವನಿತಾಮಯನು ಪುಷ್ಪಶ
ರಾಸನನು ತಾನೆನುತ ಕಣೆಗೆದರಿದನು ಕಲಿಪಾರ್ಥ ॥33॥
೦೩೪ ಗಣ್ಡುಗಲಿ ನೀ ...{Loading}...
ಗಂಡುಗಲಿ ನೀ ಕಾಮನೈ ಕೈ
ಕೊಂಡೆವೈ ತಪ್ಪೇನು ನಾವೇ
ಖಂಡಪರಶುಗಳಾಗೆವೇ ಭವದೀಯ ವಿಗ್ರಹಕೆ
ಕಂಡೆ ನಿನ್ನನು ಸುಭಟವೇಷದ
ಭಂಡನೋ ಫಡ ಹೋಗೆನುತ ಪರಿ
ಮಂಡಳಿತ ಕೋದಂಡನೆಚ್ಚನು ಕರ್ಣನರ್ಜುನನ ॥34॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನೀನು ವೀರ, ನೀನು ಮನ್ಮಥನೇ. ಆದನ್ನು ನಾನು ಒಪ್ಪಿಕೊಂಡೆ. ನಿನ್ನೊಡನೆ ಯುದ್ಧ ಮಾಡಲು ನಾನೇ ಶಿವನಾಗುತ್ತೇನೆ. ನಿನ್ನನ್ನು ನಾನು ಅರ್ಥಮಾಡಿಕೊಂಡಿದ್ದೇನೆ ವೀರನ ವೇಷ ಧರಿಸಿದ ನಾಚಿಕೆಯಿಲ್ಲದವನು ನೀನು - ಹೋಗು” ಎನ್ನುತ್ತಾ ಬಾಗಿದ ಬಿಲ್ಲನ್ನು ಉಳ್ಳ ಕರ್ಣನು ಅರ್ಜುನನ ಮೇಲೆ ಬಾಣ ಪ್ರಯೋಗಿಸಿದನು.
ಪದಾರ್ಥ (ಕ.ಗ.ಪ)
ಪರಿಮಂಡಲಿತ - ಬಾಗಿದ
ಕೋದಂಡ-ಬಿಲ್ಲು
ಮೂಲ ...{Loading}...
ಗಂಡುಗಲಿ ನೀ ಕಾಮನೈ ಕೈ
ಕೊಂಡೆವೈ ತಪ್ಪೇನು ನಾವೇ
ಖಂಡಪರಶುಗಳಾಗೆವೇ ಭವದೀಯ ವಿಗ್ರಹಕೆ
ಕಂಡೆ ನಿನ್ನನು ಸುಭಟವೇಷದ
ಭಂಡನೋ ಫಡ ಹೋಗೆನುತ ಪರಿ
ಮಂಡಳಿತ ಕೋದಂಡನೆಚ್ಚನು ಕರ್ಣನರ್ಜುನನ ॥34॥
೦೩೫ ನಿಮಿಷ ನಿಮಿಷಕೆ ...{Loading}...
ನಿಮಿಷ ನಿಮಿಷಕೆ ಹೆಚ್ಚಿತಿಬ್ಬರ
ತಿಮಿರಮಯ ಘನರೋಷವಿಬ್ಬರ
ಸಮರಸಾಹಸಶೌರ್ಯವಿಬ್ಬರ ಕಣೆಯ ಕೈಚಳಕ
ಶ್ರಮವಿಧಾನವ್ಯಾಪ್ತಿಯಿಬ್ಬರ
ಗಮಕವಿಬ್ಬರ ಗಾಢವಿಬ್ಬರ
ಸಮತೆಯಿಬ್ಬರ ಗರ್ವವಿಬ್ಬರ ತೀವ್ರತರತೇಜ ॥35॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಿಮಿಷ ನಿಮಿಷಕ್ಕೂ ಕರ್ಣ ಅರ್ಜುನರಿಬ್ಬರ ಅಜ್ಞಾನದಿಂದ ಕೂಡಿದ ವಿಪರೀತ ಕೋಪದ ಅಬ್ಬರ, ಯುದ್ಧ ಸಾಹಸ, ಶೌರ್ಯ, ಬಾಣಪ್ರಯೋಗದ ಕೈಚಳಕ, ಅದರ ವಿಸ್ತಾರ, ವೇಗ, ದೃಢತೆ, ಸಮಾನತೆ, ಗರ್ವ, ತೀವ್ರವಾದ ತೇಜಸ್ಸುಗಳು, ಹೆಚ್ಚಾದವು.
ಪದಾರ್ಥ (ಕ.ಗ.ಪ)
ಗಮಕ-ವೇಗ, ಗಾಢ-ದೃಢತೆ
ಮೂಲ ...{Loading}...
ನಿಮಿಷ ನಿಮಿಷಕೆ ಹೆಚ್ಚಿತಿಬ್ಬರ
ತಿಮಿರಮಯ ಘನರೋಷವಿಬ್ಬರ
ಸಮರಸಾಹಸಶೌರ್ಯವಿಬ್ಬರ ಕಣೆಯ ಕೈಚಳಕ
ಶ್ರಮವಿಧಾನವ್ಯಾಪ್ತಿಯಿಬ್ಬರ
ಗಮಕವಿಬ್ಬರ ಗಾಢವಿಬ್ಬರ
ಸಮತೆಯಿಬ್ಬರ ಗರ್ವವಿಬ್ಬರ ತೀವ್ರತರತೇಜ ॥35॥
೦೩೬ ಜನಪ ಕೇಳೈ ...{Loading}...
ಜನಪ ಕೇಳೈ ಬಳಿಕ ಕರ್ಣಾ
ರ್ಜುನರ ಸಮಸಂಗ್ರಾಮವನು ಗುರು
ತನುಜ ಕಂಡನು ಕೌರವೇಂದ್ರನ ಬಳಿಗೆ ನಡೆತಂದು
ತನತನಗೆ ತೊಲಗಿತು ಮಹೀಶರ
ಮೊನೆಯ ಸಮರಥರಾಜಿ ಗುರುನಂ
ದನನಲಾ ಎನುತಿದಿರುವಂದನು ನಿನ್ನ ಮಗ ನಗುತ ॥36॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಧೃತರಾಷ್ಟ್ರನೇ ಕೇಳು, ಆ ನಂತರ ಕರ್ಣಾರ್ಜುನರ ಸಮಸಮ ಯುದ್ಧವನ್ನು ನೋಡಿದ ಅಶ್ವತ್ಥಾಮನು, ದುರ್ಯೋಧನನ ಬಳಿಗೆ ಬಂದು ಅವನನ್ನು ನೋಡಿದನು. ಅವನು ಬರುತ್ತಿದ್ದುದನ್ನು ನೋಡಿದ ದೊರೆಗಳ ಸೈನ್ಯದ ಮುಂಭಾಗದಲ್ಲಿದ್ದ ಸಮರಥರ ಸಮೂಹ ಪಕ್ಕಕ್ಕೆ ಸರಿಯಿತು. ಗುರುಪುತ್ರನೇ ಎನ್ನುತ್ತಾ ನಿನ್ನ ಮಗ ನಗುತ್ತಾ ಅವನನ್ನು ಎದಿರುಗೊಂಡನು.” ಎಂದು ಸಂಜಯನು ಹೇಳಿದನು.
ಪದಾರ್ಥ (ಕ.ಗ.ಪ)
ಮೊನೆ-ಮುಂಭಾಗ
ಮೂಲ ...{Loading}...
ಜನಪ ಕೇಳೈ ಬಳಿಕ ಕರ್ಣಾ
ರ್ಜುನರ ಸಮಸಂಗ್ರಾಮವನು ಗುರು
ತನುಜ ಕಂಡನು ಕೌರವೇಂದ್ರನ ಬಳಿಗೆ ನಡೆತಂದು
ತನತನಗೆ ತೊಲಗಿತು ಮಹೀಶರ
ಮೊನೆಯ ಸಮರಥರಾಜಿ ಗುರುನಂ
ದನನಲಾ ಎನುತಿದಿರುವಂದನು ನಿನ್ನ ಮಗ ನಗುತ ॥36॥
೦೩೭ ಏನು ಬನ್ದಿರಿ ...{Loading}...
ಏನು ಬಂದಿರಿ ಕಾಳೆಗದ ಹದ
ನೇನು ಪಾಂಡವರಾಜತಿಮಿರಕೆ
ಭಾನುವಿನ ಭಾರಣೆಯ ಬಲುಹೇ ನಿಮ್ಮ ದಳಪತಿಯ
ಆನಲಳವೇ ಪಾರ್ಥನೀತನ
ನೇನು ಹದನೈ ರಾಜಕಾರ್ಯನಿ
ಧಾನವೇನೆಂದರಸ ನುಡಿದನು ದ್ರೋಣನಂದನನ ॥37॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುರ್ಯೋಧನನು ಅಶ್ವತ್ಥಾಮನನ್ನು ಮಾತನಾಡಿಸುತ್ತಾ ‘ಏನು ಈ ಕಡೆಗೆ ಬಂದಿರಲ್ಲ. ಯುದ್ಧ ಹೇಗೆ ನಡೆಯುತ್ತಿದೆ. ಪಾಂಡವ ರಾಜರೆಂಬ ಕತ್ತಲೆಗೆ ನಿಮ್ಮ ಸೇನಾಪತಿಯೆಂಬ ಸೂರ್ಯನ ಆಕ್ರಮಣ ಬಲವಾಗಿ ಆಯಿತೇ. ಅರ್ಜುನನಿಗೆ ಇವನನ್ನು (ಕರ್ಣನನ್ನು) ಎದುರಿಸಲು ಸಾಮಥ್ರ್ಯವಿದೆಯೇ ? ಏನು ಸಮಾಚಾರ. ಏನು ಅಂತಹ ರಾಜ್ಯಕಾರ್ಯದ ವಿಚಾರ,’ ಎಂದು ಕೇಳಿದನು.
ಮೂಲ ...{Loading}...
ಏನು ಬಂದಿರಿ ಕಾಳೆಗದ ಹದ
ನೇನು ಪಾಂಡವರಾಜತಿಮಿರಕೆ
ಭಾನುವಿನ ಭಾರಣೆಯ ಬಲುಹೇ ನಿಮ್ಮ ದಳಪತಿಯ
ಆನಲಳವೇ ಪಾರ್ಥನೀತನ
ನೇನು ಹದನೈ ರಾಜಕಾರ್ಯನಿ
ಧಾನವೇನೆಂದರಸ ನುಡಿದನು ದ್ರೋಣನಂದನನ ॥37॥
೦೩೮ ಏನನೆಮ್ಬೆನು ಜೀಯ ...{Loading}...
ಏನನೆಂಬೆನು ಜೀಯ ಕರ್ಣನ
ನಾನುವಡೆ ಫಲುಗುಣನ ಪಾಡೆ ಕೃ
ಶಾನುನೇತ್ರನೊ ಕೈಟಭಾರಿಯೊ ಕಮಲಸಂಭವನೊ
ಆ ನಿರೂಢಿಯ ದೊರೆಗಳಿವನ ಸ
ಮಾನರೇ ಗುಣದಲಿ ಸಮತ್ಸರ
ಮಾನಿಸನೆ ನಿನ್ನಾಣೆ ಭಾರದ್ವಾಜನಾಣೆಂದ ॥38॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಶ್ವತ್ಥಾಮನು “ಸ್ವಾಮಿ ಏನೆಂದು ಹೇಳಲಿ - ಬೆಂಕಿಯ ಕಣ್ಣಿನ ಶಿವನೋ, ಕೈಟಭನ ಶತ್ರುವಾದ ವಿಷ್ಣುವೋ, ಕಮಲ ಸಂಭವನಾದ ಬ್ರಹ್ಮನೋ ಎನ್ನುವಂತಿರುವ ಕರ್ಣನನ್ನು ಎದುರಿಸುವುದು ಅರ್ಜುನನ ಕೈಯಲ್ಲಿ ಆಗುವ ಕೆಲಸವೇ. ಆ ಪ್ರಸಿದ್ಧ ದೊರೆಗಳು ಈ ಕರ್ಣನ ಸಮಾನರಲ್ಲ ನಮ್ಮ ಅಪ್ಪನ ಆಣೆಯಾಗಿ ಗುಣದಲ್ಲಿ ನನಗೆ ಮಾತ್ಸರ್ಯವಿಲ್ಲ” ಎಂದನು.
ಪದಾರ್ಥ (ಕ.ಗ.ಪ)
ನಿರೂಢಿ-ಪ್ರಸಿದ್ಧ,
ಕೃಶಾನು-ಅಗ್ನಿ
ಟಿಪ್ಪನೀ (ಕ.ಗ.ಪ)
ಕೈಟಭ-ವಿಷ್ಣುವಿನ ಕಿವಿಯ ಕೊಳೆಯಿಂದ ಹುಟ್ಟಿದವನು. ಮಧುವಿನ ತಮ್ಮ. ವಿಷ್ಣುವಿನಿಂದ ವರವನ್ನು ಪಡೆದು ಅವನಿಂದಲೇ ಹತರಾದವರು ಮಧು ಕೈಟಭರು.
ಮೂಲ ...{Loading}...
ಏನನೆಂಬೆನು ಜೀಯ ಕರ್ಣನ
ನಾನುವಡೆ ಫಲುಗುಣನ ಪಾಡೆ ಕೃ
ಶಾನುನೇತ್ರನೊ ಕೈಟಭಾರಿಯೊ ಕಮಲಸಂಭವನೊ
ಆ ನಿರೂಢಿಯ ದೊರೆಗಳಿವನ ಸ
ಮಾನರೇ ಗುಣದಲಿ ಸಮತ್ಸರ
ಮಾನಿಸನೆ ನಿನ್ನಾಣೆ ಭಾರದ್ವಾಜನಾಣೆಂದ ॥38॥
೦೩೯ ಹರಿ ಮಹೇಶ್ವರರಾಳುತನಕಿ ...{Loading}...
ಹರಿ ಮಹೇಶ್ವರರಾಳುತನಕಿ
ಬ್ಬೆರಳು ಮಿಗಿಲರ್ಜುನನ ಬಲುಹೀ
ಧರೆಯರಿಯಲೀ ಹೊತ್ತಿನಲಿ ನಿನ್ನಾತನಗ್ಗಳಿಕೆ
ಸರಿಗೆ ಸಂದುದೆ ಸಾಕು ತೂಗಿದ
ಡರಸ ರವೆ ಕುಂದದು ಪರಸ್ಪರ
ವರಸುಕಾರ್ಯದ ವಾಸಿ ಬಂದುದು ರಾಯ ಕೇಳ್ ಎಂದ ॥39॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ದೊರೆಯೇ ಕೇಳು ವಿಷ್ಣು, ಶಿವನ ಪರಾಕ್ರಮಕ್ಕಿಂತ ಅರ್ಜುನನ ಶಕ್ತಿ ಎರಡು ಬೆರಳು ಹೆಚ್ಚು. ಭೂಮಿಗೆಲ್ಲಾ ಗೊತ್ತಾಗುವ ಹಾಗೆ ಈ ಸಮಯದಲ್ಲಿ ನಿನ್ನ ಕಡೆಯ ಕರ್ಣನ ಶಕ್ತಿಯು, ಅರ್ಜುನನಿಗೆ ಸರಿಸಮಾನವಾಗಿದೆ. ಹೋಲಿಸಿದರೆ ಒಂದು ರವೆಯಷ್ಟೂ ಕಡಿಮೆಯಿಲ್ಲ. ಆದರೆ ಒಂದು ರಾಜಕಾರ್ಯದ ಪರಿಸ್ಥಿತಿ ಉಂಟಾಗಿದೆ. ಅದಕ್ಕೇ ಬಂದಿದ್ದೇನೆ” ಎಂದ ಅಶ್ವತ್ಥಾಮ.
ಪದಾರ್ಥ (ಕ.ಗ.ಪ)
ವಾಸಿ-ಸ್ಥಿತಿ
ಮೂಲ ...{Loading}...
ಹರಿ ಮಹೇಶ್ವರರಾಳುತನಕಿ
ಬ್ಬೆರಳು ಮಿಗಿಲರ್ಜುನನ ಬಲುಹೀ
ಧರೆಯರಿಯಲೀ ಹೊತ್ತಿನಲಿ ನಿನ್ನಾತನಗ್ಗಳಿಕೆ
ಸರಿಗೆ ಸಂದುದೆ ಸಾಕು ತೂಗಿದ
ಡರಸ ರವೆ ಕುಂದದು ಪರಸ್ಪರ
ವರಸುಕಾರ್ಯದ ವಾಸಿ ಬಂದುದು ರಾಯ ಕೇಳೆಂದ ॥39॥
೦೪೦ ಒಮ್ಮೆ ಮುರಿವುದು ...{Loading}...
ಒಮ್ಮೆ ಮುರಿವುದು ವೈರಿದಳ ಮ
ತ್ತೊಮ್ಮೆ ಮುರಿವುದು ನಮ್ಮ ದಳ ಬಳಿ
ಕೊಮ್ಮೆ ಮಕ್ಕಳತಂಡವವರಲಿ ನಮ್ಮ ಥಟ್ಟಿನಲಿ
ನಮ್ಮ ದೆಸೆ ಬಲುದೊರೆಗಳಳಿವಿನೊ
ಳೊಮ್ಮೆ ಹೋಯಿತು ಹೊತ್ತು ರಣದಲಿ
ನಮ್ಮ ವಿಳಸಕೆ ಮೇಲುವಾಸಿ ನೃಪಾಲ ಕೇಳ್ ಎಂದ ॥40॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಒಂದು ಬಾರಿ ಶತ್ರು ಸೈನ್ಯ ಹಿಂದೆ ಸರಿದರೆ, ಮತ್ತೊಂದು ಬಾರಿ ನಮ್ಮ ಸೈನ್ಯ ಹಿಮ್ಮೆಟ್ಟುತ್ತಿತ್ತು. ಆ ಮೇಲೆ ಅವರ ಕಡೆಯ ರಾಜಕುಮಾರರ ತಂಡ ಹೋದರೆ, ನಮ್ಮ ಸೈನ್ಯದ ದೊಡ್ಡ ದೊರೆಗಳ ಸಾವಿನಿಂದ ನಮ್ಮ ಅದೃಷ್ಟ ಯುದ್ಧರಂಗದಲ್ಲಿ ಹಾಳಾಯಿತು. ನಮ್ಮ ವೈಭವದ ಉತ್ತಮಸ್ಥಿತಿ ಯುದ್ಧದಲ್ಲಿ ಸುಟ್ಟು ಹೋದಂತೆ ಆಗಿದೆ " ಎಂದ ಅಶ್ವತ್ಥಾಮ.
ಪದಾರ್ಥ (ಕ.ಗ.ಪ)
ಮೇಲುವಾಸಿ-ಉತ್ತಮಸ್ಥಿತಿ
ಮೂಲ ...{Loading}...
ಒಮ್ಮೆ ಮುರಿವುದು ವೈರಿದಳ ಮ
ತ್ತೊಮ್ಮೆ ಮುರಿವುದು ನಮ್ಮ ದಳ ಬಳಿ
ಕೊಮ್ಮೆ ಮಕ್ಕಳತಂಡವವರಲಿ ನಮ್ಮ ಥಟ್ಟಿನಲಿ
ನಮ್ಮ ದೆಸೆ ಬಲುದೊರೆಗಳಳಿವಿನೊ
ಳೊಮ್ಮೆ ಹೋಯಿತು ಹೊತ್ತು ರಣದಲಿ
ನಮ್ಮ ವಿಳಸಕೆ ಮೇಲುವಾಸಿ ನೃಪಾಲ ಕೇಳೆಂದ ॥40॥
೦೪೧ ಸರಿಗಳೆವೆನೆರಡಙ್ಕವನು ನಾ ...{Loading}...
ಸರಿಗಳೆವೆನೆರಡಂಕವನು ನಾ
ಕರಸಿ ಕೊಡುವೆನು ಧರ್ಮಜನನೆರ
ಡರಸುಗಳು ಸರಿಯಾಗಿ ಭೋಗಿಸುವುದು ಮಹೀತಳವ
ಅರಸ ಕರ್ಣನ ಕೆಡಿಸದಿರು ನಿ
ಷ್ಠುರದ ನುಡಿಯಿದು ಕೆಂಡದಲಿ ಕ
ರ್ಪುರವ ಹಾಯ್ಕದಿರೆಂದು ರಾಯನ ಗಲ್ಲವನು ಪಿಡಿದ ॥41॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಎರಡೂ ಪಕ್ಷದವರನ್ನು ನಾನು ಸಮಾಧಾನ ಮಾಡುತ್ತೇನೆ. ಧರ್ಮರಾಯನನ್ನು ಕರೆಸುತ್ತೇನೆ. ನೀವು ಇಬ್ಬರೂ ದೊರೆಗಳು ಸಮಾನವಾಗಿ ಭೂಮಿಯನ್ನು ಆಳಿ ಸುಖವಾಗಿರಿ. ದೊರೆಯೇ ಕರ್ಣನನ್ನು ಹಾಳುಮಾಡಬೇಡ. ನನ್ನ ಮಾತು ನಿಷ್ಠುರವಾಗಿ ನಿನಗೆ ತೋರಬಹುದು. ಕರ್ಪೂರವನ್ನು ಕೆಂಡದಲ್ಲಿ ಹಾಕಿದಂತೆ ಮಾಡಬೇಡ” ಎಂದು ಅಶ್ವತ್ಥಾಮನು ಕೌರವನ ಗಲ್ಲವನ್ನು ಹಿಡಿದು ಬೇಡಿಕೊಂಡನು.
ಪದಾರ್ಥ (ಕ.ಗ.ಪ)
ಸರಿಗಳೆ-ಗುರುತಿಸು, ಸಂಪೂರ್ಣವಾಗಿ ನಾಶವಾಗು
ಮೂಲ ...{Loading}...
ಸರಿಗಳೆವೆನೆರಡಂಕವನು ನಾ
ಕರಸಿ ಕೊಡುವೆನು ಧರ್ಮಜನನೆರ
ಡರಸುಗಳು ಸರಿಯಾಗಿ ಭೋಗಿಸುವುದು ಮಹೀತಳವ
ಅರಸ ಕರ್ಣನ ಕೆಡಿಸದಿರು ನಿ
ಷ್ಠುರದ ನುಡಿಯಿದು ಕೆಂಡದಲಿ ಕ
ರ್ಪುರವ ಹಾಯ್ಕದಿರೆಂದು ರಾಯನ ಗಲ್ಲವನು ಪಿಡಿದ ॥41॥
೦೪೨ ಆಗಲಿದು ತಪ್ಪೇನು ...{Loading}...
ಆಗಲಿದು ತಪ್ಪೇನು ಸಂಪ್ರತಿ
ಯಾಗಬೇಡೆಂದೆನೆ ಮಹಾಹವ
ವೀಗ ಸರಿಬರಿಯಾಯ್ತು ಬಂದುದು ವಾಸಿಯೆಂದಿರಲೆ
ಈಗಲಭಿಮನ್ಯುವಿಗೆ ಲಕ್ಷಣ
ಹೋಗಲಾ ಸೈಂಧವಗೆ ದ್ರುಪದನ
ನೀಗಲದು ಸರಿಯಾಗಲೆಂದನು ಕೌರವರರಾಯ ॥42॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುರ್ಯೋಧನನು, ‘ಆಗಲಿ, ಅದಕ್ಕೇನು ತಪ್ಪಿಲ್ಲ. ಸಂಧಿಯಾಗುವುದು ಬೇಡ ಎಂದು ನಾನು ಹೇಳಲಿಲ್ಲವಲ್ಲ, ಮಹಾಯುದ್ಧ ಈಗ ಸರಿಸಮಾನವಾಗಿ, ರಾಜಕಾರ್ಯದ ಸ್ಥಿತಿ ಬಂದಿದೆ ಎಂದೆಯಲ್ಲವೇ. ಈಗ ಅಭಿಮನ್ಯುವಿಗೆ ಪ್ರತಿಯಾಗಿ ಲಕ್ಷಣನ ಸಾವು ಸರಿಯಾಗಿದೆ. ಸೈಂಧವನಿಗೆ ಪ್ರತಿಯಾಗಿ ದ್ರುಪದನು ಸತ್ತದ್ದು ಅಲ್ಲಿಗೆ ಸರಿಯಾಯಿತು. É” ಎಂದನು.
ಪದಾರ್ಥ (ಕ.ಗ.ಪ)
ಸಂಪ್ರತಿ-ಸಂಧಿ
ಮೂಲ ...{Loading}...
ಆಗಲಿದು ತಪ್ಪೇನು ಸಂಪ್ರತಿ
ಯಾಗಬೇಡೆಂದೆನೆ ಮಹಾಹವ
ವೀಗ ಸರಿಬರಿಯಾಯ್ತು ಬಂದುದು ವಾಸಿಯೆಂದಿರಲೆ
ಈಗಲಭಿಮನ್ಯುವಿಗೆ ಲಕ್ಷಣ
ಹೋಗಲಾ ಸೈಂಧವಗೆ ದ್ರುಪದನ
ನೀಗಲದು ಸರಿಯಾಗಲೆಂದನು ಕೌರವರರಾಯ ॥42॥
೦೪೩ ಗುರುನದೀಸುತರಳಿವುಭಯರಾ ...{Loading}...
ಗುರುನದೀಸುತರಳಿವುಭಯರಾ
ಯರಿಗೆ ಸರಿ ದುಶ್ಯಾಸನನ ನೆ
ತ್ತರದಿ ಪಾನಕ್ರೀಡನಾ ಸೌಭಾಗ್ಯಸಂಪದಕೆ
ಸರಿಯದಾವದು ಕರ್ಣತನಯನ
ಮರಣಕಾವುದು ಸರಿಸ ಭೀಮನ
ಕರುಳಲೆನ್ನಯ ಕರುಳು ತೊಡಕಲು ಮೇಲೆ ಸಂಧಾನ ॥43॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುರ್ಯೋಧನನು “ಗುರು ದ್ರೋಣಾಚಾರ್ಯ, ಗಂಗಾಪುತ್ರ ಭೀಷ್ಮರ ಸಾವು ಇಬ್ಬರಿಗೂ ಸರಿ. ದುಶ್ಶಾಸನನ ರಕ್ತವನ್ನು ಕುಡಿದು ಆಟವಾಡಿದ ಆ ಭೀಮನ ಸೌಭಾಗ್ಯ ಸಂಪತ್ತಿಗೆ ಸರಿಯಾದುದು ಯಾವುದಿದೆ? ಕರ್ಣನ ಮಗ ವೃಷಸೇನನ ಮರಣಕ್ಕೆ ಸಮಾನವಾದುದು ಯಾವುದಿದೆ? ಭೀಮನ ಕರುಳಿನಲ್ಲಿ ನನ್ನ ಕರುಳು ಹೆಣೆದುಕೊಂಡ ಮೇಲೆಯೇ ಸಂಧಾನದ ವಿಷಯ” ಎಂದನು.
ಮೂಲ ...{Loading}...
ಗುರುನದೀಸುತರಳಿವುಭಯರಾ
ಯರಿಗೆ ಸರಿ ದುಶ್ಯಾಸನನ ನೆ
ತ್ತರದಿ ಪಾನಕ್ರೀಡನಾ ಸೌಭಾಗ್ಯಸಂಪದಕೆ
ಸರಿಯದಾವದು ಕರ್ಣತನಯನ
ಮರಣಕಾವುದು ಸರಿಸ ಭೀಮನ
ಕರುಳಲೆನ್ನಯ ಕರುಳು ತೊಡಕಲು ಮೇಲೆ ಸಂಧಾನ ॥43॥
೦೪೪ ಈ ದಿವಿಜರೀ ...{Loading}...
ಈ ದಿವಿಜರೀ ಸೇನೆಯೀ ಕ
ರ್ಣಾದಿ ಸುಭಟರು ನಾವು ನೀವೀ
ಮೇದಿನೀಶ್ವರರಖಿಳನಾಯಕರವರ ಥಟ್ಟಿನಲಿ
ಈ ದುರಾಗ್ರಹವುಚಿತವಲ್ಲೆನೆ
ಸೋದರನ ತನುಗೆಡಹಿ ರಕುತವ
ಸೇದಿ ಸೊಕ್ಕಿದ ಭೀಮನೊಡನೆಮಗೆಂತು ಸಂಧಾನ ॥44॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುರ್ಯೋಧನನು ‘ಈ ದೇವತೆಗಳು, ಈ ಸೈನ್ಯ, ಈ ಕರ್ಣ ಮೊದಲಾದ ವೀರರು, ನಾವು, ನೀವು ಈ ಭೂಪತಿಗಳು, ಇಬ್ಬರ ಸೈನ್ಯದಲ್ಲಿಯೂ ಎಲ್ಲಾ ಸೇನಾಧಿಪತಿಗಳೂ ‘ಈ ಕೆಟ್ಟ ಕೋಪ ಉಚಿತವಲ್ಲ’ ಎಂದು ಹೇಳುತ್ತಿದ್ದರೂ, ನನ್ನ ಸಹೋದರನ ದೇಹವನ್ನು ಕೆಡವಿ ರಕ್ತವನ್ನು ಹೀರಿ, ಸೊಕ್ಕಿದ ಭೀಮನ ಜೊತೆಯಲ್ಲಿ ನನಗೆ ಸಂಧಾನ ಹೇಗೆ ಸಾಧ್ಯವಾಗುತ್ತದೆ?’ ಎಂದನು.
ಪದಾರ್ಥ (ಕ.ಗ.ಪ)
ಸೇದು-ಹೀರು
ಮೂಲ ...{Loading}...
ಈ ದಿವಿಜರೀ ಸೇನೆಯೀ ಕ
ರ್ಣಾದಿ ಸುಭಟರು ನಾವು ನೀವೀ
ಮೇದಿನೀಶ್ವರರಖಿಳನಾಯಕರವರ ಥಟ್ಟಿನಲಿ
ಈ ದುರಾಗ್ರಹವುಚಿತವಲ್ಲೆನೆ
ಸೋದರನ ತನುಗೆಡಹಿ ರಕುತವ
ಸೇದಿ ಸೊಕ್ಕಿದ ಭೀಮನೊಡನೆಮಗೆಂತು ಸಂಧಾನ ॥44॥
೦೪೫ ನಿರಿಗರುಳನುಗಿದುಗಿದು ...{Loading}...
ನಿರಿಗರುಳನುಗಿದುಗಿದು ನೆತ್ತರಿ
ನೊರವಿನಲಿ ಮೊಗೆಮೊಗೆದು ಬಾಯೊಳ
ಗೆರೆದು ಸವಿನೋಡೆಂದು ನಿಮಗೆಲ್ಲರಿಗೆ ಕೈನೀಡಿ
ಇರಿದಿರಿದು ಮೂದಲಿಸಿ ಮಿಗೆ ಚ
ಪ್ಪರಿದು ಚಪ್ಪರಿದಾಡಿ ರಕುತವ
ಸುರಿದು ಸೊಕ್ಕಿದ ಭೀಮನೊಡನೆಮಗೆಂತು ಸಂಧಾನ ॥45॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಸುಕ್ಕು ಸುಕ್ಕಾಗಿದ್ದ ಕರುಳನ್ನು ಈಚೆಗೆ ಸೆಳೆದು, ಚಿಮ್ಮುತ್ತಿದ್ದ ರಕ್ತವನ್ನು ಕೈಯಿಂದ ಮೊಗೆದು ತಾನು ಕುಡಿದದ್ದಷ್ಟೇ ಅಲ್ಲ, ನಿಮಗೆಲ್ಲರಿಗೂ ರುಚಿನೋಡಿ ಎಂದು ತೋರಿಸಿ, ಚುಚ್ಚುವಂತೆ ಮೂದಲಿಸಿ ಮಾತನಾಡಿ ರಕ್ತವನ್ನು ಚಪ್ಪರಿಸುತ್ತಾ ಕುಣಿದಾಡಿದ, ರಕ್ತವನ್ನು ಸುರಿದ ಅಹಂಕಾರದ ಭೀಮನ ಜೊತೆಯಲ್ಲಿ ನನಗೆ ಸಂಧಾನ ಹೇಗೆ ಸಾಧ್ಯ?” ಎಂದ ಕೌರವ.
ಪದಾರ್ಥ (ಕ.ಗ.ಪ)
ನಿರಿ-ಸುಕ್ಕು, ಬರವಿ-ಬರತೆ, ನೀರಿನ ಒಸರು
ಮೂಲ ...{Loading}...
ನಿರಿಗರುಳನುಗಿದುಗಿದು ನೆತ್ತರಿ
ನೊರವಿನಲಿ ಮೊಗೆಮೊಗೆದು ಬಾಯೊಳ
ಗೆರೆದು ಸವಿನೋಡೆಂದು ನಿಮಗೆಲ್ಲರಿಗೆ ಕೈನೀಡಿ
ಇರಿದಿರಿದು ಮೂದಲಿಸಿ ಮಿಗೆ ಚ
ಪ್ಪರಿದು ಚಪ್ಪರಿದಾಡಿ ರಕುತವ
ಸುರಿದು ಸೊಕ್ಕಿದ ಭೀಮನೊಡನೆಮಗೆಂತು ಸಂಧಾನ ॥45॥
೦೪೬ ಆಡಲೇಕಿದನಿನ್ನು ಹಿನ್ದಣ ...{Loading}...
ಆಡಲೇಕಿದನಿನ್ನು ಹಿಂದಣ
ಕೇಡನೆಣಿಸಿದಡೇನು ಫಲ ತಾ
ಗೂಡಿ ಹಲಬರು ಜೀವಪುರುಷರು ಹೆಂಗಳಾದೆವಲೆ
ನೋಡದಿರು ಹಿಂದಾದ ಭಂಗವ
ನಾಡದಿರು ಬಹುಬಂಧುವರ್ಗದ
ಕೇಡದೆಲ್ಲವನೊಬ್ಬ ಕರ್ಣನ ನೋಡಿ ಮರೆಯೆಂದ ॥46॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಶ್ವತ್ಥಾಮನು ‘ಅದನ್ನು ಏಕೆ ಮತ್ತೆ ಹೇಳುತ್ತೀಯಾ, ಹಿಂದೆ ಆದ ಕೆಟ್ಟದ್ದನ್ನು ಈಗ ಲೆಕ್ಕ ಹಾಕಿದರೆ ಅದರಿಂದ ಏನು ಪ್ರಯೋಜನ. ನಾನೂ ಸೇರಿದಂತೆ ಹಲವರು ವೀರ ಪುರುಷರು ಹೆಂಗಸರಂತೆ ಆದೆವು ಎಂದರೆ ಹೇಡಿಗಳಾದೆವು. ಹಿಂದೆ ಆದ ಅವಮಾನವನ್ನು ಲೆಕ್ಕಿಸಬೇಡ. ಎಲ್ಲಾ ಬಂಧುವರ್ಗದವರಿಗಾದ ಕೆಟ್ಟದ್ದನ್ನು ನೆನೆಸಬೇಡ. ಅದನ್ನೆಲ್ಲಾ ಒಬ್ಬ ಕರ್ಣನನ್ನು ನೋಡಿ ಮರೆ’ ಎಂದನು.
ಮೂಲ ...{Loading}...
ಆಡಲೇಕಿದನಿನ್ನು ಹಿಂದಣ
ಕೇಡನೆಣಿಸಿದಡೇನು ಫಲ ತಾ
ಗೂಡಿ ಹಲಬರು ಜೀವಪುರುಷರು ಹೆಂಗಳಾದೆವಲೆ
ನೋಡದಿರು ಹಿಂದಾದ ಭಂಗವ
ನಾಡದಿರು ಬಹುಬಂಧುವರ್ಗದ
ಕೇಡದೆಲ್ಲವನೊಬ್ಬ ಕರ್ಣನ ನೋಡಿ ಮರೆಯೆಂದ ॥46॥
೦೪೭ ಅನುಜರಳಿದುದು ನೂರು ...{Loading}...
ಅನುಜರಳಿದುದು ನೂರು ಬವರದಿ
ತನುಜರಳಿದುದು ನೂರು ಬಾಂಧವ
ಜನರು ಸಂಖ್ಯಾರಹಿತ ಬಿದ್ದೇನವದಿರಿದ್ದೇನು
ಎನಗೆ ಕರ್ಣನ ಜೀವವೇ ಜೀ
ವನವಿದೆಂಬೆಯಲಾ ಸಹೋದರ
ತನುಜರೆಲ್ಲರನೊಬ್ಬ ಕರ್ಣನ ನೋಡಿ ಮರೆಯೆಂದ ॥47॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಶ್ವತ್ಥಾಮನು ಮಾತನ್ನು ಮುಂದುವರೆಸಿ, “ಯುದ್ಧದಲ್ಲಿ ಸತ್ತ ನಿನ್ನ ನೂರು ಜನ ಸಹೋದರರು, ನಿನ್ನ ನೂರು ಜನ ಮಕ್ಕಳು, ಬಂಧು ಜನಗಳಿಗೆ ಲೆಕ್ಕವೇ ಇಲ್ಲ. ಅವರು ಇದ್ದರೇನು ಸತ್ತರೇನು ನನಗೆ ಕರ್ಣನ ಜೀವವೇ ಜೀವನ ಎಂದು ಹೇಳುತ್ತೀಯಲ್ಲಾ. ಸಹೋದರರು, ಮಕ್ಕಳು ಎಲ್ಲರನ್ನೂ ಕರ್ಣನೊಬ್ಬನನ್ನು ನೋಡಿ ಮರೆ’ ಎಂದನು.
ಮೂಲ ...{Loading}...
ಅನುಜರಳಿದುದು ನೂರು ಬವರದಿ
ತನುಜರಳಿದುದು ನೂರು ಬಾಂಧವ
ಜನರು ಸಂಖ್ಯಾರಹಿತ ಬಿದ್ದೇನವದಿರಿದ್ದೇನು
ಎನಗೆ ಕರ್ಣನ ಜೀವವೇ ಜೀ
ವನವಿದೆಂಬೆಯಲಾ ಸಹೋದರ
ತನುಜರೆಲ್ಲರನೊಬ್ಬ ಕರ್ಣನ ನೋಡಿ ಮರೆಯೆಂದ ॥47॥
೦೪೮ ರಣದೊಳಳಿದೀ ಸಕಲಬಾನ್ಧವ ...{Loading}...
ರಣದೊಳಳಿದೀ ಸಕಲಬಾಂಧವ
ಗುಣವಿದೆಲ್ಲವನೊಬ್ಬ ಕರ್ಣನ
ಗುಣವ ಕಂಡೇ ಮರೆದೆಯಕಟೀ ಕರ್ಣನಳಿವಿನಲಿ
ಎಣೆಯಗಲಿ ನೀ ಬದುಕುವೈ ಧಾ
ರುಣಿಯ ಪತಿಯೇ ಪಾರ್ಥವಹ್ನಿಯ
ನಣೆದು ಕರ್ಣನನುಳುಹಿಕೊಳು ಸಂಪ್ರತಿಯ ಮಾಡೆಂದ ॥48॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಯುದ್ಧದಲ್ಲಿ ಸತ್ತ ಎಲ್ಲಾ ಬಂಧುಗಳನ್ನು ಕರ್ಣನ ಗುಣವನ್ನು ನೋಡುತ್ತಾ ಮರೆತಿದ್ದೆ. ಅಯ್ಯೋ ಈ ಕರ್ಣನ ನಾಶವಾದರೆ, ಅವನ ಸಹವಾಸದಿಂದ ದೂರವಾಗಿ ನೀನು ಬದುಕುತ್ತೀಯಾ, ಭೂಪತಿಯೇ ಅರ್ಜುನನ ಕೋಪದ ಬೆಂಕಿಯನ್ನು ತಡೆದು ಕರ್ಣನನ್ನು ಉಳಿಸಿಕೋ, ಸಂಧಿಯನ್ನು ಮಾಡಿಕೋ’ ಎಂದು ಅಶ್ವತ್ಥಾಮನು ಹೇಳಿದನು.
ಪದಾರ್ಥ (ಕ.ಗ.ಪ)
ಎಣೆ-ಜೊತೆ, ಅಣೆರ್-ತಡೆದು
ಮೂಲ ...{Loading}...
ರಣದೊಳಳಿದೀ ಸಕಲಬಾಂಧವ
ಗುಣವಿದೆಲ್ಲವನೊಬ್ಬ ಕರ್ಣನ
ಗುಣವ ಕಂಡೇ ಮರೆದೆಯಕಟೀ ಕರ್ಣನಳಿವಿನಲಿ
ಎಣೆಯಗಲಿ ನೀ ಬದುಕುವೈ ಧಾ
ರುಣಿಯ ಪತಿಯೇ ಪಾರ್ಥವಹ್ನಿಯ
ನಣೆದು ಕರ್ಣನನುಳುಹಿಕೊಳು ಸಂಪ್ರತಿಯ ಮಾಡೆಂದ ॥48॥
೦೪೯ ಗುರುತನುಜ ನೀವಾಡಿದುದ ...{Loading}...
ಗುರುತನುಜ ನೀವಾಡಿದುದ ದಿ
ಕ್ಕರಿಸುವವರಾವಲ್ಲ ಕರ್ಣನ
ಹಿರಿಯ ಮಗನನು ಪಾರ್ಥನುದರದೊಳಾ ಸಹೋದರನ
ದುರುಳ ಭೀಮನ ಬಸಿರ ಬಗಿದು
ತ್ತರಿಸುವೆನು ಭಾಷೆಯನು ನೀವ್ ಹಿರಿ
ಯರಸರಲಿ ಯಮಳರಲಿ ಸಂಧಿಯ ಮಾಡಿಕೊಡಿಯೆಂದ ॥49॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಗುರುಪುತ್ರ ಅಶ್ವತ್ಥಾಮನೇ ನೀವು ಆಡಿದ ಮಾತನ್ನು ನಾನು ಧಿಕ್ಕರಿಸುವವನಲ್ಲ, ಕರ್ಣನ ಹಿರಿಯ ಮಗ ವೃಷಸೇನನನ್ನು ಅರ್ಜುನನ ಹೊಟ್ಟೆಯಿಂದ, ನನ್ನ ತಮ್ಮ ದುಶ್ಶಾಸನನನ್ನು ದುಷ್ಟ ಭೀಮನ ಹೊಟ್ಟೆಯಿಂದ ಬಗಿದು ತೆಗೆದು. ಆ ಮೇಲೆ ಮಾತು ಕೊಡುತ್ತೇನೆ. ನೀವು ಧರ್ಮರಾಯ, ನಕುಲ ಸಹದೇವನ ಜೊತೆ ಸಂಧಿಯನ್ನು ಏರ್ಪಾಡು ಮಾಡಿ” ಎಂದನು ದುರ್ಯೋಧನ.
ಪದಾರ್ಥ (ಕ.ಗ.ಪ)
ಉತ್ತರಿಸು-ಹೇಳು
ಮೂಲ ...{Loading}...
ಗುರುತನುಜ ನೀವಾಡಿದುದ ದಿ
ಕ್ಕರಿಸುವವರಾವಲ್ಲ ಕರ್ಣನ
ಹಿರಿಯ ಮಗನನು ಪಾರ್ಥನುದರದೊಳಾ ಸಹೋದರನ
ದುರುಳ ಭೀಮನ ಬಸಿರ ಬಗಿದು
ತ್ತರಿಸುವೆನು ಭಾಷೆಯನು ನೀವ್ ಹಿರಿ
ಯರಸರಲಿ ಯಮಳರಲಿ ಸಂಧಿಯ ಮಾಡಿಕೊಡಿಯೆಂದ ॥49॥