೦೦೦ ಸೂ ವೈರಿಗಜ ...{Loading}...
ಸೂ. ವೈರಿಗಜ ಪಂಚಾನನನು ರಣ
ಧೀರನಪ್ರತಿಮಲ್ಲ ಕರ್ಣನು
ದಾರದಲಿ ಹಳಚಿದನು ಹನುಮನ ಹಳವಿಗೆಯ ರಥವ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ : ಶತ್ರುಗಳೆಂಬ ಆನೆಗಳಿಗೆ ಸಿಂಹದಂತೆ ಇರುವವನೂ, ರಣಧೀರನೂ, ಎದುರಾಳಿಗಳೇ ಇಲ್ಲದ ವೀರನೂ, ಆದ ಕರ್ಣನು, ಕಪಿಧ್ವಜದಿಂದ ಕೂಡಿದ ಅರ್ಜುನನ ರಥವನ್ನು ತೀವ್ರವಾಗಿ ಎದುರಿಸಿದನು.
ಪದಾರ್ಥ (ಕ.ಗ.ಪ)
ಹಳಚು-ಎದುರಿಸು, ಹಳವಿಗೆ-ಬಾವುಟ
ಮೂಲ ...{Loading}...
ಸೂ. ವೈರಿಗಜ ಪಂಚಾನನನು ರಣ
ಧೀರನಪ್ರತಿಮಲ್ಲ ಕರ್ಣನು
ದಾರದಲಿ ಹಳಚಿದನು ಹನುಮನ ಹಳವಿಗೆಯ ರಥವ
೦೦೧ ಕೇಳು ಧೃತರಾಷ್ಟ್ರಾವನಿಪ ...{Loading}...
ಕೇಳು ಧೃತರಾಷ್ಟ್ರಾವನಿಪ ನಿ
ನ್ನಾಳಸುಮ್ಮಾನವನು ತನುರೋ
ಮಾಳಿ ಪಲ್ಲವಿಸಿದುದು ಪರಿತೋಷಪ್ರವಾಹದಲಿ
ಕಾಳೆಗಕೆ ಕೈವೊಯ್ದು ಹಗೆವನ
ಮೇಳಯದ ಕಳನೇರಿದನು ತ
ನ್ನಾಳುತನವನು ತೋರಲಾಯ್ತೆನುತುಬ್ಬಿದನು ಕರ್ಣ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಧೃತರಾಷ್ಟ್ರ ಕೇಳು, ಕರ್ಣನಿಗುಂಟಾದ ಸಂತೋಷದ ಪ್ರವಾಹದಲ್ಲಿ ದೇಹ ರೋಮಾಂಚನೆಗೊಂಡಿತು. ಯುದ್ಧಕ್ಕೆ ಸಿದ್ಧನಾಗಿ, ಶತ್ರುಗಳ ಗುಂಪು ಇದ್ದ ಯುದ್ಧಭೂಮಿಯ ಕಡೆಗೆ ನಡೆದನು. ತನ್ನ ಶೌರ್ಯವನ್ನು ತೋರಿಸಲು ಅವಕಾಶ ಸಿಕ್ಕಿತಲ್ಲಾ ಎಂದು ಸಂತೋಷಪಟ್ಟನು” ಎಂದು ಸಂಜಯನು ಹೇಳಿದನು.
ಪದಾರ್ಥ (ಕ.ಗ.ಪ)
ಮೇಳಯ-ಗುಂಪು
ಮೂಲ ...{Loading}...
ಕೇಳು ಧೃತರಾಷ್ಟ್ರಾವನಿಪ ನಿ
ನ್ನಾಳಸುಮ್ಮಾನವನು ತನುರೋ
ಮಾಳಿ ಪಲ್ಲವಿಸಿದುದು ಪರಿತೋಷಪ್ರವಾಹದಲಿ
ಕಾಳೆಗಕೆ ಕೈವೊಯ್ದು ಹಗೆವನ
ಮೇಳಯದ ಕಳನೇರಿದನು ತ
ನ್ನಾಳುತನವನು ತೋರಲಾಯ್ತೆನುತುಬ್ಬಿದನು ಕರ್ಣ ॥1॥
೦೦೨ ಆಳ ಹೊಯ್ ...{Loading}...
ಆಳ ಹೊಯ್ ಹೊಯ್ ನಾಯಕರ ನಿಲ
ಹೇಳು ಕೃಪ ಗುರುನಂದನಾದಿಗ
ಳಾಲಿಗಳಿಗೌತಣವ ರಚಿಸುವೆ ನಿಮಿಷ ಸೈರಿಸಲಿ
ಕಾಳೆಗದಲಿಂದಹಿತರಾಯರ
ಭಾಳಲಿಪಿಗಳನೊರಸುವೆನು ಭೂ
ಪಾಲಕನ ಮೊಗವಡದ ದುಗುಡವನುಗಿವೆ ನಾನೆಂದ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕರ್ಣನು ಸೈನಿಕರನ್ನು ಗದರಿಸಿಕೊಂಡು ‘ನಿಲ್ಲುವಂತೆ ನಾಯಕರಿಗೆ ಹೇಳು. ಕೃಪಾಚಾರ್ಯ, ಅಶ್ವತ್ಥಾಮರ ಕಣ್ಣುಗಳಿಗೆ ನಿಮಿಷದಲ್ಲಿ ಔತಣವನ್ನು ನೀಡುತ್ತೇನೆ. ಅವರು ಸಮಾಧಾನದಿಂದಿರಲಿ ಯುದ್ಧದಲ್ಲಿ ಈ ದಿನ ಶತ್ರುರಾಜರ ಹಣೆಬರಹವನ್ನು ಅಳಿಸಿಹಾಕುತ್ತೇನ. ದೊರೆಯ ಮುಖದಲ್ಲಿ ತುಂಬಿದ ದುಃಖವನ್ನು ದೂರ ಮಾಡುತ್ತೇನೆ’ ಎಂದನು.
ಮೂಲ ...{Loading}...
ಆಳ ಹೊಯ್ ಹೊಯ್ ನಾಯಕರ ನಿಲ
ಹೇಳು ಕೃಪ ಗುರುನಂದನಾದಿಗ
ಳಾಲಿಗಳಿಗೌತಣವ ರಚಿಸುವೆ ನಿಮಿಷ ಸೈರಿಸಲಿ
ಕಾಳೆಗದಲಿಂದಹಿತರಾಯರ
ಭಾಳಲಿಪಿಗಳನೊರಸುವೆನು ಭೂ
ಪಾಲಕನ ಮೊಗವಡದ ದುಗುಡವನುಗಿವೆ ನಾನೆಂದ ॥2॥
೦೦೩ ತರಿಸಿ ಸಾದು ...{Loading}...
ತರಿಸಿ ಸಾದು ಜವಾಜಿಗಳ ಹೊಂ
ಭರಣಿಯಲಿ ಮೊಗೆಮೊಗೆದು ಶಲ್ಯಗೆ
ಸುರಿದು ಹಡಪಿಗ ಚಮರಚಾಹಿಯ ಬಾಣದಾಯಕರ
ಕರೆದು ಮನ್ನಿಸಿ ತನ್ನನತಿವಿ
ಸ್ತರಿಸಿ ಹೊಸಮಡಿವರ್ಗದಲಿ ಮಿಗೆ
ಮೆರೆದು ರಣಸುಮ್ಮಾನದಲಿ ಹೊಗರೇರಿದನು ಕರ್ಣ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಾದು ಜವಾದಿ ಮೊದಲಾದ ಪರಿಮಳ ದ್ರವ್ಯಗಳನ್ನು ತರಿಸಿ ಚಿನ್ನದ ಭರಣಿಯಲ್ಲಿ ತುಂಬಿ ಶಲ್ಯನಿಗೆ ನೀಡಿದ. ಹಡಪಿಗ, ಚಾಮರಧಾರಿ, ಪಕ್ಕದಲ್ಲಿದ್ದ ಬಾಣಗಳನ್ನು ತೆಗೆದುಕೊಡುವವರನ್ನು ಕರೆದು ಗೌರವಿಸಿದ. ತಾನು ಅತ್ಯಂತ ವೈಭವದಿಂದ ಹೊಸ ಮಡಿ ಬಟ್ಟೆಗಳನ್ನು ಧರಿಸಿ, ಚೆನ್ನಾಗಿ ಮೆರೆಯುತ್ತಾ ಯುದ್ಧ ಮಾಡುವ ಸಂತೋಷದಲ್ಲಿ ಕರ್ಣನು ಹೊಳೆಯುತ್ತಿದ್ದ.
ಪಾಠಾನ್ತರ (ಕ.ಗ.ಪ)
ಚಮರ ಬಾಹೆಯ - ಚಮರಚಾಹಿಯ
ಮೂಲ ...{Loading}...
ತರಿಸಿ ಸಾದು ಜವಾಜಿಗಳ ಹೊಂ
ಭರಣಿಯಲಿ ಮೊಗೆಮೊಗೆದು ಶಲ್ಯಗೆ
ಸುರಿದು ಹಡಪಿಗ ಚಮರಚಾಹಿಯ ಬಾಣದಾಯಕರ
ಕರೆದು ಮನ್ನಿಸಿ ತನ್ನನತಿವಿ
ಸ್ತರಿಸಿ ಹೊಸಮಡಿವರ್ಗದಲಿ ಮಿಗೆ
ಮೆರೆದು ರಣಸುಮ್ಮಾನದಲಿ ಹೊಗರೇರಿದನು ಕರ್ಣ ॥3॥
೦೦೪ ತೊಳಗಿ ಬೆಳಗುವ ...{Loading}...
ತೊಳಗಿ ಬೆಳಗುವ ಶಿರದ ಪಚ್ಚೆಯ
ಹಳುಕು ಬೆರಸಿದ ವೀಳೆಯವನಿ
ಕ್ಕೆಲದ ಶಲ್ಯಾದಿಗಳಿಗಿತ್ತನು ವರರಥಾಗ್ರದಲಿ
ಕಳಚಿ ತೆಗೆದನು ಜೋಡ ಮೈವೆ
ಗ್ಗಳಿಸಿ ದಳವೇರಿದುದು ಮನ ಮೊಗ
ಥಳಧಳಿಸೆ ಬಹಳಪ್ರತಾಪದಲಿರ್ದನಾ ಕರ್ಣ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕರ್ಣನು ರಥದ ಮುಂದೆ ಕುಳಿತು ಪ್ರಕಾಶಿಸುತ್ತಿರುವ ಚಿಗುರು ಹಾಗೂ ಪಚ್ಚಕರ್ಪೂರದಿಂದ ಕೂಡಿದ ವೀಳೆಯವನ್ನು ತನ್ನ ಎರಡು ಕಡೆಯಲ್ಲಿದ್ದ ಶಲ್ಯ ಮೊದಲಾದವರಿಗೆ ನೀಡಿದನು. ತನ್ನ ಕವಚವನ್ನು ತೆಗೆದುಹಾಕಿದನು. ಅವನ ದೇಹ ಹೆಚ್ಚಾಗಿ ಉತ್ಸಾಹಗೊಂಡು, ಮನಸ್ಸು, ಮುಖಗಳು ಪ್ರಸನ್ನವಾದವು. ಮಹಾಪ್ರತಾಪಶಾಲಿಯಾಗಿ ಕರ್ಣನು ಕಾಣಿಸುತ್ತಿದ್ದ.
ಪದಾರ್ಥ (ಕ.ಗ.ಪ)
ಹಳುಕು-ಚೂರು
ಪಚ್ಚೆ- ಪಚ್ಚಕರ್ಪೂರ
ದಳವೇರ್-ಉತ್ಸಾಹಗೊಳ್ಳು
ಮೂಲ ...{Loading}...
ತೊಳಗಿ ಬೆಳಗುವ ಶಿರದ ಪಚ್ಚೆಯ
ಹಳುಕು ಬೆರಸಿದ ವೀಳೆಯವನಿ
ಕ್ಕೆಲದ ಶಲ್ಯಾದಿಗಳಿಗಿತ್ತನು ವರರಥಾಗ್ರದಲಿ
ಕಳಚಿ ತೆಗೆದನು ಜೋಡ ಮೈವೆ
ಗ್ಗಳಿಸಿ ದಳವೇರಿದುದು ಮನ ಮೊಗ
ಥಳಧಳಿಸೆ ಬಹಳಪ್ರತಾಪದಲಿರ್ದನಾ ಕರ್ಣ ॥4॥
೦೦೫ ತಳಿತು ಮುತ್ತುವ ...{Loading}...
ತಳಿತು ಮುತ್ತುವ ಮುಗಿಲ ಝಾಡಿಸಿ
ಝಳಪಿಸುವ ರವಿಯಂತೆ ಭುವನವ
ಬೆಳಗಲುದ್ರೇಕಿಸುವ ಭಾರ್ಗವ ಭಾಳಶಿಖಿಯಂತೆ
ಹೊಳೆಹೊಳೆವ ಕರ್ಣಪ್ರತಾಪಾ
ನಳನ ನಾಟ್ಯವ ಕಂಡು ಕೌರವ
ಬಲದೊಳೊಸಗೆಯ ಲಗ್ಗೆ ಮಸಗಿತು ಭೂಪ ಕೇಳ್ ಎಂದ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಹೆಚ್ಚಾಗುತ್ತಾ ತನಗೆ ಮುತ್ತಿಗೆ ಹಾಕುವ ಮೋಡಗಳನ್ನು ಪಕ್ಕಕ್ಕೆ ಸರಿಸಿ ಹೊಳೆಯುವ ಸೂರ್ಯನಂತೆ, ಲೋಕವನ್ನು ಬೆಳಗಲು ಹೆಚ್ಚಾಗುವ ಶಿವನ ಹಣೆಗಣ್ಣಿನ ಬೆಂಕಿಯಂತೆ, ಹೊಳೆಯುತ್ತಿರುವ ಕರ್ಣನ ಪ್ರತಾಪವೆಂಬ ಬೆಂಕಿಯ ನೃತ್ಯವನ್ನು ನೋಡಿ ಕೌರವನ ಸೈನ್ಯದಲ್ಲಿ ಸಂತೋಷದ ಆಕ್ರಮಣವಾಯಿತು’ ಎಂದನು ಸಂಜಯ.
ಪದಾರ್ಥ (ಕ.ಗ.ಪ)
ಭಾರ್ಗವ -ಶಿವ
ಮೂಲ ...{Loading}...
ತಳಿತು ಮುತ್ತುವ ಮುಗಿಲ ಝಾಡಿಸಿ
ಝಳಪಿಸುವ ರವಿಯಂತೆ ಭುವನವ
ಬೆಳಗಲುದ್ರೇಕಿಸುವ ಭಾರ್ಗವ ಭಾಳಶಿಖಿಯಂತೆ
ಹೊಳೆಹೊಳೆವ ಕರ್ಣಪ್ರತಾಪಾ
ನಳನ ನಾಟ್ಯವ ಕಂಡು ಕೌರವ
ಬಲದೊಳೊಸಗೆಯ ಲಗ್ಗೆ ಮಸಗಿತು ಭೂಪ ಕೇಳೆಂದ ॥5॥
೦೦೬ ರಾಯನನುಜನ ರುಧಿರ ...{Loading}...
ರಾಯನನುಜನ ರುಧಿರ ಜೀವದ
ಬೀಯದಲಿ ಕರ್ಣಾತ್ಮಜನ ಕುಲಿ
ಶಾಯುಧನ ಸಾಲೋಕ್ಯದಲಿ ಕಣ್ದೆರೆದ ವೇದನೆಯ
ಆಯಸವ ನೆರೆ ಮರೆದು ಕೌರವ
ರಾಯ ಭುಲ್ಲವಿಸಿದನು ಲಹರಿಯ
ಘಾಯದಲಿ ಸೂಳೈಸಿದವು ನಿಸ್ಸಾಳಕೋಟಿಗಳು ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತನ್ನ ತಮ್ಮ ದುಶ್ಶಾಸನನ ರಕ್ತ ಹಾಗೂ ಜೀವಗಳು ಹೋದದ್ದನ್ನು, ಕರ್ಣನ ಮಗ ವೃಷಸೇನನು ವಜ್ರಾಯುಧನಾದ ಇಂದ್ರನ ಲೋಕಕ್ಕೆ ಸೇರಿದ ಸಂಕಟವನ್ನು ಆಯಾಸವನ್ನು ಪೂರ್ತಿಯಾಗಿ ಮರೆತು ಕೌರವನು ಉತ್ಸಾಹ ತೋರಿಸಿದನು. ಕೋಟಿ ಸಂಖ್ಯೆಯ ನಿಸ್ಸಾಳಗಳು ಶಬ್ದದ ಅಲೆಗಳನ್ನು ಕ್ರಮವಾಗಿ ಉಂಟು ಮಾಡಿದವು.
ಪದಾರ್ಥ (ಕ.ಗ.ಪ)
ಘಾಯ-ಪೆಟ್ಟು
ಮೂಲ ...{Loading}...
ರಾಯನನುಜನ ರುಧಿರ ಜೀವದ
ಬೀಯದಲಿ ಕರ್ಣಾತ್ಮಜನ ಕುಲಿ
ಶಾಯುಧನ ಸಾಲೋಕ್ಯದಲಿ ಕಣ್ದೆರೆದ ವೇದನೆಯ
ಆಯಸವ ನೆರೆ ಮರೆದು ಕೌರವ
ರಾಯ ಭುಲ್ಲವಿಸಿದನು ಲಹರಿಯ
ಘಾಯದಲಿ ಸೂಳೈಸಿದವು ನಿಸ್ಸಾಳಕೋಟಿಗಳು ॥6॥
೦೦೭ ಸಾರಿ ಸುಭಟರ ...{Loading}...
ಸಾರಿ ಸುಭಟರ ಜರೆವ ಕಹಳೆಯ
ಗೌರುಗಳ ತಿತ್ತಿರಿಯ ಚಿನ್ನದ
ಚೀರುಗಳ ನಿಡುಗೊಂಬುಗಳ ಚೆಂಬಕನ ನಿರ್ಘೋಷ
ಡೋರುಗಳೆದುವು ನೆಲನನುದಧಿಯ
ಕಾರಿಸಿದವಡಿಮಳಲನೆನೆ ಹುರಿ
ಯೇರಿತಬ್ಬರವಿವರ ಬಲದಲಿ ಭೂಪ ಕೇಳ್ ಎಂದ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಧೃತರಾಷ್ಟ್ರನೇ ಕೇಳು ಜೋರಾಗಿ ಸುಭಟರನ್ನು ಧಿಕ್ಕರಿಸುವಂತೆ ಕರ್ಕಶ ಶಬ್ದ ಮಾಡುತ್ತಿದ್ದ ಗೌರು ಕಹಳೆಗಳು, ಚೀರಿ ಶಬ್ದ ಮಾಡುತ್ತಿದ್ದ ಚಿನ್ನದ ತೂರ್ಯಗಳು , ಘೋಷ ಮಾಡುತ್ತಿದ್ದ ನಿಡುಗೊಂಬುಗಳು, ಚಂಬಕಗಳು ತಮ್ಮ ಶಬ್ದದಿಂದ ನೆಲವನ್ನೇ ತೂತು ಮಾಡಿದವು ಸಮುದ್ರದ ತಳದ ಮರಳನ್ನು ಮೇಲಕ್ಕೆ ಎರಚುವಂತೆ ಮಾಡಿದವು ಎನ್ನುವಂತೆ ಕೌರವನ ಸೈನ್ಯದಲ್ಲಿ ಆರ್ಭಟ ಹೆಚ್ಚಿತು.” ಎಂದ ಸಂಜಯ.
ಪದಾರ್ಥ (ಕ.ಗ.ಪ)
ಗೌರು-ಕರ್ಕಶ ಧ್ವನಿ ಮಾಡುವ ಒಂದು ಕಹಳೆ,
ಚೆಂಬಕ-ಒಂದು ಬಗೆಯ ತಮಟೆ,
ತಿತ್ತಿರಿ-ತೂರ್ಯ, ಊದುವ ವಾದ್ಯ.
ಡೋರುಗಳೆ-ತೂತು ಕೊರೆ
ಚೀರು-ಕೂಗು,
ಕಾರಿಸು-ಎಗರು, ಎರಚು,
ನಿಡುಗೊಂಬು-ಒಂದು ಬಗೆಯ ಕಹಳೆ
ಮೂಲ ...{Loading}...
ಸಾರಿ ಸುಭಟರ ಜರೆವ ಕಹಳೆಯ
ಗೌರುಗಳ ತಿತ್ತಿರಿಯ ಚಿನ್ನದ
ಚೀರುಗಳ ನಿಡುಗೊಂಬುಗಳ ಚೆಂಬಕನ ನಿರ್ಘೋಷ
ಡೋರುಗಳೆದುವು ನೆಲನನುದಧಿಯ
ಕಾರಿಸಿದವಡಿಮಳಲನೆನೆ ಹುರಿ
ಯೇರಿತಬ್ಬರವಿವರ ಬಲದಲಿ ಭೂಪ ಕೇಳೆಂದ ॥7॥
೦೦೮ ರಥವಿಳಿದು ಬಲವನ್ದು ...{Loading}...
ರಥವಿಳಿದು ಬಲವಂದು ನಿಜಸಾ
ರಥಿಗೆ ಕೈಮುಗಿದಶ್ವಚಯಕತಿ
ರಥಭಯಂಕರನೆರಗಿ ಕಂದವ ತಟ್ಟಿ ಬೋಳೈಸಿ
ರಥವನಡರಿದು ನೋಡಿ ಗಗನದ
ರಥಿಗೆ ತಲೆವಾಗಿದನು ಲೋಕ
ಪ್ರಥಿತಸಾಹಸಮಲ್ಲ ಮುದದಲಿ ತುಡುಕಿದನು ಧನುವ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕರ್ಣನು ರಥದಿಂದ ಇಳಿದು ಬಂದು, ಅದಕ್ಕೆ ಪ್ರದಕ್ಷಿಣೆ ಹಾಕಿ ತನ್ನ ಸಾರಥಿಯಾದ ಶಲ್ಯನಿಗೆ ನಮಸ್ಕರಿಸಿದನು. ರಥದ ಕುದುರೆಗಳಿಗೆ ನಮಸ್ಕಾರ ಮಾಡಿ ಅವುಗಳ ಕುತ್ತಿಗೆಯನ್ನು ತಟ್ಟಿ ಚಪ್ಪರಿಸಿ ಮತ್ತೆ ರಥವನ್ನು ಹತ್ತಿದನು. ಮೇಲೆ ನೋಡಿ ಆಕಾಶದ ರಥಿಕನಾದ ಸೂರ್ಯನಿಗೆ ತಲೆಬಾಗಿ ನಮಸ್ಕರಿಸಿದನು. ಲೋಕವಿಖ್ಯಾತ ವೀರನಾದ ಅವನು ಸಂತೋಷದಿಂದ ಬಿಲ್ಲನ್ನು ಕೈಗೆ ತೆಗೆದುಕೊಂಡನು.
ಪದಾರ್ಥ (ಕ.ಗ.ಪ)
ಕಂದ-ಕುತ್ತಿಗೆ
ಮೂಲ ...{Loading}...
ರಥವಿಳಿದು ಬಲವಂದು ನಿಜಸಾ
ರಥಿಗೆ ಕೈಮುಗಿದಶ್ವಚಯಕತಿ
ರಥಭಯಂಕರನೆರಗಿ ಕಂದವ ತಟ್ಟಿ ಬೋಳೈಸಿ
ರಥವನಡರಿದು ನೋಡಿ ಗಗನದ
ರಥಿಗೆ ತಲೆವಾಗಿದನು ಲೋಕ
ಪ್ರಥಿತಸಾಹಸಮಲ್ಲ ಮುದದಲಿ ತುಡುಕಿದನು ಧನುವ ॥8॥
೦೦೯ ಸರಳ ಹೊದೆಗಳ ...{Loading}...
ಸರಳ ಹೊದೆಗಳ ತುಂಬಿ ಬಂಡಿಯ
ನರಸ ಕಳುಹಿದನೆಂಟುನೂರನು
ಚರರು ಪರಿವೇಷ್ಟಿಸಿತು ಪರಿಚಾರಕರ ವಿಗ್ರಹದ
ಸರಿಸ ಸಿಂಧವನೆತ್ತಿಸುತ ಬೊ
ಬ್ಬಿರಿದು ಜವನಿಕೆವಿಡಿದು ಭೀಮನೊ
ನರನೊ ನಿಲುವವರಾರು ಬರಹೇಳೆಂದನಾ ಕರ್ಣ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುರ್ಯೋಧನನು ಬಾಣಗಳ ಹೊರೆಗಳನ್ನು ತುಂಬಿಕೊಂಡಿದ್ದ ಎಂಟುನೂರು ಬಂಡಿಗಳನ್ನು ಕಳುಹಿಸಿಕೊಟ್ಟನು. ಸೇವಕರು, ಅವನನ್ನು ಸುತ್ತುವರಿದರು. ಪರಿವಾರದವರ ಕೈಯಲ್ಲಿ ಯುದ್ಧದ ಉಚಿತವಾದ ಧ್ವಜಗಳನ್ನು ಎತ್ತಿ ಹಿಡಿಸಿದನು. ಬೊಬ್ಬೆ ಹಾಕುತ್ತಾ, ರಥಕ್ಕೆ ಕಟ್ಟಿದ್ದ ಪರದೆಯನ್ನು ಹಿಡಿದುಕೊಂಡು, ‘ಭೀಮನೋ, ಅರ್ಜುನನೋ ಯಾರು ನಿಲ್ಲುವವರು ನನ್ನ ಮುಂದೆ, ಅವರನ್ನು ಬರಲು ಹೇಳು’ ಎಂದನು ಕರ್ಣ.
ಪದಾರ್ಥ (ಕ.ಗ.ಪ)
ಸರಿಸ-ಉಚಿತ, ಸಿಂಧ-ಧ್ವಜ
ಮೂಲ ...{Loading}...
ಸರಳ ಹೊದೆಗಳ ತುಂಬಿ ಬಂಡಿಯ
ನರಸ ಕಳುಹಿದನೆಂಟುನೂರನು
ಚರರು ಪರಿವೇಷ್ಟಿಸಿತು ಪರಿಚಾರಕರ ವಿಗ್ರಹದ
ಸರಿಸ ಸಿಂಧವನೆತ್ತಿಸುತ ಬೊ
ಬ್ಬಿರಿದು ಜವನಿಕೆವಿಡಿದು ಭೀಮನೊ
ನರನೊ ನಿಲುವವರಾರು ಬರಹೇಳೆಂದನಾ ಕರ್ಣ ॥9॥
೦೧೦ ಮಾತು ತಪ್ಪಿತು ...{Loading}...
ಮಾತು ತಪ್ಪಿತು ರಿಪುಗಳೈವರಿ
ಗೌತಣಿಸಿದೆವು ನೆರವಿನಲಿ ಪುರು
ಹೂತ ಶಿಖಿ ಯಮ ನಿರುತಿ ವರುಣ ಸಮೀರ ಹರಸಖರು
ಆತುಕೊಳಲಿಂದೀ ಸುಯೋಧನ
ಜಾತಪುಣ್ಯನೊ ಧರ್ಮಪುತ್ರನೆ
ಭೂತಭಾಗ್ಯನೊ ಕಾಣಲಹುದೈ ಶಲ್ಯ ಕೇಳ್ ಎಂದ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಅಯ್ಯೋ ನಾನು ಮಾತನಾಡಿದುದರಲ್ಲಿ ಸ್ವಲ್ಪ ತಪ್ಪಾಯಿತು. ಐದು ಜನ ಶತ್ರುಗಳಿಗೂ ಯುದ್ಧಕ್ಕೆ ಬರಲು ಆಹ್ವಾನಿಸುತ್ತಿದ್ದೇನೆ. ಅವರ ಸಹಾಯಕ್ಕೆ ಇಂದ್ರ, ಅಗ್ನಿ, ಯಮ, …. ವಾಯು, ಕುಬೇರರು ಒಟ್ಟಾಗಿ ಬಂದು ಸಹಾಯ ಮಾಡಲಿ, ಈ ದಿನ ದುರ್ಯೋಧನನು ಪೂರ್ವ ಪುಣ್ಯ ಶಾಲಿಯೋ, ಧರ್ಮರಾಯನ ಪುಣ್ಯವೆಲ್ಲಾ ಭೂತಕಾಲದ್ದೋ, ನೋಡಲು ಸಾಧ್ಯವಾಗುತ್ತದೆ ಶಲ್ಯ ’ ಎಂದ ಕರ್ಣ.
ಪದಾರ್ಥ (ಕ.ಗ.ಪ)
ಹರಸಖ-ಕುಬೇರ
ಮೂಲ ...{Loading}...
ಮಾತು ತಪ್ಪಿತು ರಿಪುಗಳೈವರಿ
ಗೌತಣಿಸಿದೆವು ನೆರವಿನಲಿ ಪುರು
ಹೂತ ಶಿಖಿ ಯಮ ನಿರುತಿ ವರುಣ ಸಮೀರ ಹರಸಖರು
ಆತುಕೊಳಲಿಂದೀ ಸುಯೋಧನ
ಜಾತಪುಣ್ಯನೊ ಧರ್ಮಪುತ್ರನೆ
ಭೂತಭಾಗ್ಯನೊ ಕಾಣಲಹುದೈ ಶಲ್ಯ ಕೇಳೆಂದ ॥10॥
೦೧೧ ಸರಳೊಳಾಯ್ದು ಮಹಾಸ್ತ್ರವನು ...{Loading}...
ಸರಳೊಳಾಯ್ದು ಮಹಾಸ್ತ್ರವನು ಸಂ
ವರಿಸಿದನು ಬತ್ತಳಿಕೆಯಲಿ ಮಾ
ರ್ತಿರುವ ಬೆರಳಲಿ ತೀಡಿ ಕೊಪ್ಪಿನ ಬಲುಹನಾರೈದು
ತಿರುವನೇರಿಸಿ ಮಿಡಿಮಿಡಿದು ಪೊಂ
ಬರಹದವನಿನ್ನೂರು ಚಾಪವ
ನಿರಿಸಿದನು ಕೆಲದವರ ತೊಲಗಿಸಿ ವಾಮಭಾಗದಲಿ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಾಣಗಳಲ್ಲಿ ಮಹಾಸ್ತ್ರವನ್ನು ಆರಿಸಿ ಬತ್ತಳಿಕೆಯಲ್ಲಿ ಸಿದ್ಧಪಡಿಸಿಕೊಂಡನು. ಬಿಲ್ಲಿನ ಹಗ್ಗದ ಭಾಗವನ್ನು ಬೆರಳಿನಲ್ಲಿ ತೀಡಿ. ಬಿಲ್ಲಿನ ತುದಿಯ ಬಿಗಿಯಾಗಿರುವುದನ್ನು ಪರೀಕ್ಷಿಸಿ, ಬಿಲ್ಲಿನ ಹೆದೆಯನ್ನು ಕಟ್ಟಿ, ಮತ್ತೆ ಮತ್ತೆ ಮೀಟಿ ನೋಡಿ, ಚಿನ್ನದ ರೇಖೆಗಳಿದ್ದ ಇನ್ನೂರು ಬಿಲ್ಲುಗಳನ್ನು ತನ್ನ ಎಡಭಾಗದಲ್ಲಿ ಇಟ್ಟುಕೊಂಡು ಕರ್ಣನು, ಪಕ್ಕದಲ್ಲಿದ್ದವರನ್ನು ದೂರ ಕಳುಹಿಸಿದನು.
ಪದಾರ್ಥ (ಕ.ಗ.ಪ)
ಮಾರ್ತಿರುಪು-ಬಿಲ್ಲಿನ ಹಗ್ಗದ ಇನ್ನೊಂದು ಭಾಗ, ಕೊಪ್ಪ-ಬಿಲ್ಲಿನ ತುದಿ
ಮೂಲ ...{Loading}...
ಸರಳೊಳಾಯ್ದು ಮಹಾಸ್ತ್ರವನು ಸಂ
ವರಿಸಿದನು ಬತ್ತಳಿಕೆಯಲಿ ಮಾ
ರ್ತಿರುವ ಬೆರಳಲಿ ತೀಡಿ ಕೊಪ್ಪಿನ ಬಲುಹನಾರೈದು
ತಿರುವನೇರಿಸಿ ಮಿಡಿಮಿಡಿದು ಪೊಂ
ಬರಹದವನಿನ್ನೂರು ಚಾಪವ
ನಿರಿಸಿದನು ಕೆಲದವರ ತೊಲಗಿಸಿ ವಾಮಭಾಗದಲಿ ॥11॥
೦೧೨ ತಿರುವ ಬೆರಳಲಿ ...{Loading}...
ತಿರುವ ಬೆರಳಲಿ ಮಿಡಿದು ಕೆನ್ನೆಗೆ
ಬರಸೆಳೆದು ಲುಳಿವಡೆದು ಹೂಡಿದ
ಸರಳ ಕಿವಿವರೆಗುಗಿದು ಬೈಸಿಗೆದೆಗೆದು ಠಾಣದಲಿ
ಪರಿವಿಡಿಯನಾರೈದು ಗರುಡಿಯ
ಗುರುವ ನೆನೆದನು ವೈರಿಸೇನೆಯ
ತರುಬಿ ನಿಂದನು ಕಾದುವಣ್ಣನ ಬೇಗ ಕರೆಯೆನುತ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕರ್ಣನು ಬಿಲ್ಲಿನ ಹಗ್ಗವನ್ನು ಬೆರಳಲ್ಲಿ ಮೀಟಿ, ಕೆನ್ನೆಯವರೆಗೂ ಅದನ್ನು ಸೆಳೆದು ನೋಡಿ, ಚುರುಕಿನಿಂದ, ಬಿಲ್ಲಿಗೆ ಹೂಡಿದ ಬಾಣವನ್ನು ಕಿವಿಯವರೆಗೂ ಎಳೆದು ಕುಳಿತು ಎದ್ದು ಪರೀಕ್ಷಿಸಿ, ಎಲ್ಲ ಕ್ರಮವಾಗಿರುವುದನ್ನು ಗಮನಿಸಿ, ತನ್ನ ಗರುಡಿಯ ಗುರುವಾದ ಪರಶುರಾಮನನ್ನು ಸ್ಮರಿಸಿದನು. ಯುದ್ಧ ಮಾಡುವವರಿದ್ದರೆ ಬೇಗನೇ ಬರಹೇಳು ಎಂದು ಶತ್ರುಸೈನ್ಯವನ್ನು ಅಡ್ಡಗಟ್ಟಿದನು.
ಪದಾರ್ಥ (ಕ.ಗ.ಪ)
ಲುಳಿ-ಚುರುಕು, ಡಾಣ-ದೊಣ್ಣೆ, ಬೈಸಿಗೆದೆಗೆ-ಕುಳಿತು ಎದ್ದು ಮಾಡುವ ಬಸ್ಕಿ
ಮೂಲ ...{Loading}...
ತಿರುವ ಬೆರಳಲಿ ಮಿಡಿದು ಕೆನ್ನೆಗೆ
ಬರಸೆಳೆದು ಲುಳಿವಡೆದು ಹೂಡಿದ
ಸರಳ ಕಿವಿವರೆಗುಗಿದು ಬೈಸಿಗೆದೆಗೆದು ಠಾಣದಲಿ
ಪರಿವಿಡಿಯನಾರೈದು ಗರುಡಿಯ
ಗುರುವ ನೆನೆದನು ವೈರಿಸೇನೆಯ
ತರುಬಿ ನಿಂದನು ಕಾದುವಣ್ಣನ ಬೇಗ ಕರೆಯೆನುತ ॥12॥
೦೧೩ ಭೀತಿಗೊಳುತದೆ ಮಾರುಬಲ ...{Loading}...
ಭೀತಿಗೊಳುತದೆ ಮಾರುಬಲ ಮಝ
ಪೂತು ದಕ್ಕಡ ದಿಟ್ಟರಿಪು ಸಂ
ಘಾತ ವಾರಿಧಿ ಬಾಡಬಾನಲ ಕೀರ್ತಿಜಗಝಂಪ
ಜಾತರಿಪು ನಿರ್ಮಥನ ವೈರಿ
ವ್ರಾತ ಕಾನನ ಧೂಮಕೇತುವ
ರಾತಿಹರ ಜಯ ಜೀಯ ಎಂದುದು ವಂದಿಸಂದೋಹ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೊಗಳುಭಟ್ಟರು ‘ಶತ್ರು ಸೈನ್ಯ ಭಯಗೊಳ್ಳುತ್ತಿದೆ. ಭೇಷ್, ಭೇಷ್ ವೀರ, ಧೈರ್ಯಶಾಲಿಯಾದ ಶತ್ರು ಸೈನ್ಯವೆಂಬ ಸಮುದ್ರವನ್ನು ನುಂಗುವ ವಡಬಾಗ್ನಿ, ಕೀರ್ತಿಯಿಂದ ಜಗತ್ತೇ ಮೈಮರೆಸುವ, ಹುಟ್ಟುವ ಶತ್ರುಗಳನ್ನು ನಾಶ ಮಾಡುವ, ವೈರಿಗಳ ಸಮೂಹವೆಂಬ ಕಾಡಿಗೆ ಧೂಮಕೇತು, ಶತ್ರುನಾಶ ಮಾಡುವ ಸ್ವಾಮಿಗೆ ಜಯವಾಗಲಿ’ ಎಂದು ಹೊಗಳಿದರು.
ಪದಾರ್ಥ (ಕ.ಗ.ಪ)
ದಕ್ಕಡ-ವೀರ, ಜಗಝಂಪ-ಜಗತ್ತನ್ನೇ ಮೈಮರೆಸುವ
ಮೂಲ ...{Loading}...
ಭೀತಿಗೊಳುತದೆ ಮಾರುಬಲ ಮಝ
ಪೂತು ದಕ್ಕಡ ದಿಟ್ಟರಿಪು ಸಂ
ಘಾತ ವಾರಿಧಿ ಬಾಡಬಾನಲ ಕೀರ್ತಿಜಗಝಂಪ
ಜಾತರಿಪು ನಿರ್ಮಥನ ವೈರಿ
ವ್ರಾತ ಕಾನನ ಧೂಮಕೇತುವ
ರಾತಿಹರ ಜಯ ಜೀಯ ಎಂದುದು ವಂದಿಸಂದೋಹ ॥13॥
೦೧೪ ಒಳಗೆ ಸುಳಿಸುಳಿಗೊಣ್ಡು ...{Loading}...
ಒಳಗೆ ಸುಳಿಸುಳಿಗೊಂಡು ಪಾಂಡವ
ಬಲಪಯೋಧಿ ಪರಿಭ್ರಮಿಸೆ ಕ
ಕ್ಕುಳಿಸಿದಗ್ಗಳಿಕೆಗಳ ಸುಕ್ಕಿದ ಸಾಹಸೋನ್ನತಿಯ
ಕಳಕಳವ ಕಣ್ದೆರವೆಗಳ ಮನ
ಗಲಿತನದ ಮುಳುಮೆಟ್ಟುಗಳ ವೆ
ಗ್ಗಳೆಯರಿದ್ದುದು ಭೀಮಸಾತ್ಯಕಿ ಸೃಂಜಯಾದಿಗಳು ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾಂಡವರ ಸೈನ್ಯವೆಂಬ ಸಮುದ್ರವು ಒಳಗೇ ಸುಳಿಗೊಳ್ಳುತ್ತಾ ಸುತ್ತು ಹೊಡೆಯುತ್ತಿತ್ತು. ಅದರ ಹಿರಿಮೆ ಚಿಂತೆಗೆ ಒಳಗಾಗಿತ್ತು. ಅದರ ಸಾಹಸದ ಉನ್ನತಿ ಕುಗ್ಗುತ್ತಿತ್ತು. ಅದು ಕಳಕಳ ಶಬ್ದ ಮಾಡುತ್ತಾ ಕಣ್ಣು ಕಣ್ಣು ಬಿಡುತ್ತಾ ತನ್ನ ಶೌರ್ಯವನ್ನು ಮನಸ್ಸಿನಲ್ಲೇ ಅಡಗಿಸಿಕೊಂಡು, ಮುಳ್ಳು ತುಳಿದಂತೆ ನಡೆಯುತ್ತಿತ್ತು. ಭೀಮ ಸಾತ್ಯಕಿ ಸೃಂಜಯ ಮೊದಲಾದ ಶ್ರೇಷ್ಠರೂ ಹೀಗಾಗಿದ್ದರು.
ಪದಾರ್ಥ (ಕ.ಗ.ಪ)
ಕಕ್ಕುಳಿಸು-ಚಿಂತೆಗೆ ಒಳಗಾಗು, ವೆಗ್ಗಳೆ-ಶ್ರೇಷ್ಠ
ಮೂಲ ...{Loading}...
ಒಳಗೆ ಸುಳಿಸುಳಿಗೊಂಡು ಪಾಂಡವ
ಬಲಪಯೋಧಿ ಪರಿಭ್ರಮಿಸೆ ಕ
ಕ್ಕುಳಿಸಿದಗ್ಗಳಿಕೆಗಳ ಸುಕ್ಕಿದ ಸಾಹಸೋನ್ನತಿಯ
ಕಳಕಳವ ಕಣ್ದೆರವೆಗಳ ಮನ
ಗಲಿತನದ ಮುಳುಮೆಟ್ಟುಗಳ ವೆ
ಗ್ಗಳೆಯರಿದ್ದುದು ಭೀಮಸಾತ್ಯಕಿ ಸೃಂಜಯಾದಿಗಳು ॥14॥
೦೧೫ ಮುಸುಕಿತೋ ಕರ್ಣಪ್ರತಾಪದ ...{Loading}...
ಮುಸುಕಿತೋ ಕರ್ಣಪ್ರತಾಪದ
ಬಿಸಿಲು ಪಾಂಡವ ಕುಮುದ ಕಾನನ
ವಿಸರವನು ವಿಗ್ರಹದ ಮುಖ ಲೇಸೆನುತ ಕುರುಸೇನೆ
ಮಸಗಿದಂಬುಧಿಯಂತೆ ಮಿಗೆ ಗ
ರ್ಜಿಸಲು ಗರುವರ ಗಾಢ ಶೌರ್ಯದ
ಬೆಸುಗೆ ಬಿಡೆ ಗಾಂಡಿವವ ದನಿಮಾಡಿದನು ಕಲಿಪಾರ್ಥ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾಂಡವರ ಸೈನ್ಯವೆಂಬ ಕುಮುದದ ಕಾಡಿನ ಸಮೂಹದ ಮೇಲೆ ಕರ್ಣನ ಶೌರ್ಯವೆಂಬ ಬಿಸಿಲು ಮುಚ್ಚಿಕೊಂಡಿತು. ಈ ಯುದ್ಧದ ರೀತಿ ಚೆನ್ನಾಗಿದೆ ಎನ್ನುತ್ತಾ ಕೌರವ ಸೈನ್ಯ ಉಕ್ಕುತ್ತಿರುವ ಸಮುದ್ರದಂತೆ ಜೋರಾಗಿ ಗರ್ಜಿಸಿತು. ಆಗ ಶ್ರೇಷ್ಠರ ಅಪಾರ ಶೌರ್ಯ ಅಡಗುವ ಹಾಗೆ ವೀರ ಅರ್ಜುನನು ತನ್ನ ಗಾಂಡಿವದ ಠೇಂಕಾರವನ್ನು ಮಾಡಿದನು.
ಮೂಲ ...{Loading}...
ಮುಸುಕಿತೋ ಕರ್ಣಪ್ರತಾಪದ
ಬಿಸಿಲು ಪಾಂಡವ ಕುಮುದ ಕಾನನ
ವಿಸರವನು ವಿಗ್ರಹದ ಮುಖ ಲೇಸೆನುತ ಕುರುಸೇನೆ
ಮಸಗಿದಂಬುಧಿಯಂತೆ ಮಿಗೆ ಗ
ರ್ಜಿಸಲು ಗರುವರ ಗಾಢ ಶೌರ್ಯದ
ಬೆಸುಗೆ ಬಿಡೆ ಗಾಂಡಿವವ ದನಿಮಾಡಿದನು ಕಲಿಪಾರ್ಥ ॥15॥
೦೧೬ ಅರಸ ಕೇಳೈ ...{Loading}...
ಅರಸ ಕೇಳೈ ಧೂರ್ಜಟಿಯ ಡಾ
ವರದ ಡಮರಧ್ವನಿಯೊ ವಿಲಯದ
ಬರಸಿಡಿಲ ಬೊಬ್ಬಾಟವೋ ಕಲ್ಪಾಂತಸಾಗರದ
ತೆರೆಗಳಬ್ಬರವೋ ಧನಂಜಯ
ಕರನಿಹಿತಗಾಂಡಿವದ ಮೌರ್ವೀ
ಸ್ಫುರಿತ ಕಳಕಳವೊದೆದುದಬುಜಭವಾಂಡಮಂಡಲವ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಧೃತರಾಷ್ಟ್ರನೇ ಕೇಳು, ಶಿವನ ಡಮರುಗದ ಅತಿಶಯ ಧ್ವನಿಯೋ, ಪ್ರಳಯಕಾಲದ ಬರಸಿಡಿಲನ ಆರ್ಭಟವೋ, ಯುಗದ ಕೊನೆಯಲ್ಲಿ ಉಕ್ಕುವ ಸಮುದ್ರದ ಅಲೆಗಳ ಅಬ್ಬರವೋ, ಎನ್ನುವಂತೆ ಅರ್ಜುನನ ಕೈಯ ಮಿಡಿತದಿಂದ ಗಾಂಡಿವದ ಹೆದೆಯಿಂದ ಹೊರಟ ಕಳಕಳ ಶಬ್ದ ಬ್ರಹ್ಮಾಂಡ ಮಂಡಲವನ್ನೆಲ್ಲಾ ತಿವಿಯಿತು.” ಎಂದು ಸಂಜಯನು ಹೇಳಿದನು
ಪದಾರ್ಥ (ಕ.ಗ.ಪ)
ಡಾವರ- ತೀವ್ರತೆ,
ಧೂರ್ಜಟಿ -ಶಿವ
ಮೂಲ ...{Loading}...
ಅರಸ ಕೇಳೈ ಧೂರ್ಜಟಿಯ ಡಾ
ವರದ ಡಮರಧ್ವನಿಯೊ ವಿಲಯದ
ಬರಸಿಡಿಲ ಬೊಬ್ಬಾಟವೋ ಕಲ್ಪಾಂತಸಾಗರದ
ತೆರೆಗಳಬ್ಬರವೋ ಧನಂಜಯ
ಕರನಿಹಿತಗಾಂಡಿವದ ಮೌರ್ವೀ
ಸ್ಫುರಿತ ಕಳಕಳವೊದೆದುದಬುಜಭವಾಂಡಮಂಡಲವ ॥16॥
೦೧೭ ಘೀಳಿಡಲು ಕಿವಿಗಳಲಿ ...{Loading}...
ಘೀಳಿಡಲು ಕಿವಿಗಳಲಿ ಕುರುಬಲ
ಜಾಲ ಜರಿದುದು ಜಾತಭುವನಾ
ಸ್ಫಾಳ ಪುನರಾಗತ ಮಹಾಧ್ವನಿ ಕದಡಿತಂಬುಧಿಯ
ಮೇಲುಮೊಳಗಿನ ದನಿಯನಾಲಿಸಿ
ಹೀಲಿಗೆದರುವ ನವಿಲವೊಲು ನಿ
ನ್ನಾಳು ಬಾಹಪ್ಪಳಿಸಿ ಹಿಗ್ಗಿದನರಸ ಕೇಳ್ ಎಂದ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅರ್ಜುನನ ಗಾಂಡಿವದ ಧ್ವನಿ ಕೌರವ ಸೈನ್ಯದ ಕಿವಿಗಳಲ್ಲಿ ಘೀಳಿಟ್ಟಾಗ, ಅದು ಹಿಂದೆ ಸರಿಯುವಂತಾಯಿತು. ಬ್ರಹ್ಮಾಂಡವನ್ನು ಅಪ್ಪಳಿಸಿದ ಆ ಧ್ವನಿ ಮತ್ತೆ ಬಂದು ಸಮುದ್ರವನ್ನೇ ಕದಡಿತು. ಆಕಾಶದಿಂದ ಬಂದ ಈ ಧ್ವನಿಯನ್ನು ಕೇಳಿಸಿಕೊಂಡು ತನ್ನ ಗರಿಯನ್ನು ಬಿಚ್ಚುವ ನವಿಲಿನಂತೆ, ವೀರನಾದ ನಿನ್ನ ಕರ್ಣನು ಸಂತೋಷದಿಂದ ಭುಜವನ್ನು ತಟ್ಟಿಕೊಂಡನು ಧೃತರಾಷ್ಟ್ರ ಕೇಳು” ಎಂದು ಸಂಜಯನು ಹೇಳಿದನು.
ಪದಾರ್ಥ (ಕ.ಗ.ಪ)
ಆಸ್ಫಾಳ-ಅಪ್ಪಳಿಸು
ಮೂಲ ...{Loading}...
ಘೀಳಿಡಲು ಕಿವಿಗಳಲಿ ಕುರುಬಲ
ಜಾಲ ಜರಿದುದು ಜಾತಭುವನಾ
ಸ್ಫಾಳ ಪುನರಾಗತ ಮಹಾಧ್ವನಿ ಕದಡಿತಂಬುಧಿಯ
ಮೇಲುಮೊಳಗಿನ ದನಿಯನಾಲಿಸಿ
ಹೀಲಿಗೆದರುವ ನವಿಲವೊಲು ನಿ
ನ್ನಾಳು ಬಾಹಪ್ಪಳಿಸಿ ಹಿಗ್ಗಿದನರಸ ಕೇಳೆಂದ ॥17॥
೦೧೮ ಸನ್ತವಿಸಿತಾ ಸೇನೆ ...{Loading}...
ಸಂತವಿಸಿತಾ ಸೇನೆ ಕುರುಬಲ
ಕಂತುಹರನುದ್ಯೋಗವಾಗೆ ನಿ
ರಂತರದ ನಿಸ್ಸಾಳಸೂಳಿನ ಲಗ್ಗೆದಂಬಟದ
ಅಂತರಿಕ್ಷದೊಳುಲಿವ ಸುಮನಸ
ಸಂತತಿಯ ಘನಸಾಧುವಾದಶ
ಕುಂತಸೂಚಿತ ಭದ್ರಭಾಷಣವೆಸೆದುದಾಚೆಯಲಿ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೌರವನ ಸೈನ್ಯವೆಂಬ ಮನ್ಮಥನನ್ನು ನಾಶ ಮಾಡುವ ಶಿವನಂತಹ ಅರ್ಜುನನು ಸಿದ್ಧವಾಗಲು, ಪಾಂಡವರ ಸೈನ್ಯಕ್ಕೆ ಸಮಾಧಾನವಾಯಿತು. ಒಂದೇ ಸಮನಾಗಿ ನಿಸ್ಸಾಳಗಳು ಶಬ್ದ ಮಾಡಿದವು ತಮ್ಮಟೆಗಳು ಬಾರಿಸಿದವು. ಆಕಾಶದಲ್ಲಿದ್ದ ದೇವತೆಗಳು ಮಾಡಿದ, ಒಳ್ಳೆಯದಾಗಲಿ ಎಂಬ ಹರಕೆಯಿಂದ ಒಳ್ಳೆಯ ಶಕುನಗಳು ಮಂಗಳಕರ ಮಾತುಗಳು ಶೋಭಿಸಿದವು.
ಪದಾರ್ಥ (ಕ.ಗ.ಪ)
ಸಾಧುವಾದ-ಒಳ್ಳೆಯ ಮಾತುಗಳು, ಹರಕೆಯ ನುಡಿ, ಸುಮನಸಂತತಿ-ದೇವತೆಗಳು
ಮೂಲ ...{Loading}...
ಸಂತವಿಸಿತಾ ಸೇನೆ ಕುರುಬಲ
ಕಂತುಹರನುದ್ಯೋಗವಾಗೆ ನಿ
ರಂತರದ ನಿಸ್ಸಾಳಸೂಳಿನ ಲಗ್ಗೆದಂಬಟದ
ಅಂತರಿಕ್ಷದೊಳುಲಿವ ಸುಮನಸ
ಸಂತತಿಯ ಘನಸಾಧುವಾದಶ
ಕುಂತಸೂಚಿತ ಭದ್ರಭಾಷಣವೆಸೆದುದಾಚೆಯಲಿ ॥18॥
೦೧೯ ಹರಿಗೆ ಕೈಮುಗಿದೆರಗಿ ...{Loading}...
ಹರಿಗೆ ಕೈಮುಗಿದೆರಗಿ ತೇರಿನ
ಹರಿಗಳಿಗೆ ವಂದಿಸಿ ಪತಾಕೆಯ
ಹರಿಗೆ ನಮಿಸಿ ನಿಜಾಯುಧಕೆ ಕೈಮುಗಿದು ಜೇವೊಡೆದು
ಹರಿ ಧನಂಜಯ ಧರ್ಮ ನೈರುತಿ
ವರುಣ ಮಾರುತ ವೈಶ್ರವಣ ಶಂ
ಕರ ವಿರಿಂಚಾದಿಗಳಿಗಭಿವಂದಿಸಿದನಾ ಪಾರ್ಥ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಜುನನು ಕೃಷ್ಣನಿಗೆ ರಥದ ಕುದುರೆಗಳಿಗೆ ಧ್ವಜದಲ್ಲಿದ್ದ ಹನುಮಂತನಿಗೆ ತನ್ನ ಆಯುಧಗಳಿಗೆ ನಮಸ್ಕರಿಸಿ, ಗಾಂಡಿವದ ಹೆದೆಯನ್ನು ಮೀಟಿ ಶಬ್ದ ಮಾಡಿ, ಇಂದ್ರ, ಅಗ್ನಿ, ಯಮ, ನಿಋತಿ, ವರುಣ, ವಾಯು, ಕುಬೇರ, ಈಶಾನ, ಬ್ರಹ್ಮರಿಗೆ ನಮಸ್ಕರಿಸಿದನು.
ಪದಾರ್ಥ (ಕ.ಗ.ಪ)
ಹರಿ-ಕೃಷ್ಣ, ಕುದುರೆ, ಇಂದ್ರ, ಧನಂಜಯ-ಅಗ್ನಿ, ವಿರಿಂಚಿ-ಬ್ರಹ್ಮ, ವೈಶ್ರವಣ-ಕುಬೇರ
ಟಿಪ್ಪನೀ (ಕ.ಗ.ಪ)
ವೈಶ್ರವಣ - ‘ಕುಬೇರಾಯ ವೈಶ್ರವಣಾಯ ಮಹಾರಾಜಾಯ ನಮಃ’ ಎಂಬ ಆಶೀರ್ವಚನ ಸದಾ ನಮ್ಮ ಕಿವಿಗೆ ಬೀಳುತ್ತಿರುತ್ತದೆ. ಈ ವೈಶ್ರವಣನೇ ಕುಬೇರ. ಯಕ್ಷಾಧಿಪತಿ ಎಂದರೂ ಇವನೇ. ಕೈಲಾಸದ ಬಳಿಯ ಮಂದರ ಪರ್ವತದ ಅಲಕಾವತಿ ಈತನ ರಾಜಧಾನಿ. ಇದನ್ನು ವೈರಾಜವೆಂದೂ ಕರೆಯುತ್ತಾರೆ. ಉತ್ತರ ದಿಕ್ಕಿನ ಅದಿಪತಿಯೂ ಹೌದು. ನರವಾಹ, ರಾಜರಾಜ ಎಂದರೂ ಈತನೇ.
ರಾಕ್ಷಸಾಧಿಪತಿ ಪುಲಸ್ತ್ಯ ಪ್ರಜಾಪತಿ ಹಾಗೂ ಮಾನಿನೀ (ಹವಿರ್ಭೂ) ಇವರ ಮಗನೇ ವೈಶ್ರವಣನ ತಂದೆಯದ ವಿಶ್ರವಸ್, ವಿಶ್ರವಸ್ ಹಗೂ ದಯವವರ್ಣಿನೀ (ಇಡಾಟಿಡ)ಇವರ ಪುತ್ರನಾದ ವೈಶ್ರವಣನನ್ನು ಲೋಕಪಾಲನನ್ನಾಗಿ ವಿತ್ತಾಧಿಪತಿಯಾಗಿ ನೇಮಕ ಮಾಡಲಾಯಿತು.
‘sಪಾಂಡವಾನಾಂ ಯತ್ರ ವೈಶ್ರವಣೇನಚ’ ಎಂಬ ಮಹಾಭಾರತೋಕ್ತಿಯೂ ಇದೆ. ವನಪರ್ವದಲ್ಲಿ ವೈಶ್ರವಣನು ಪಾಂಡವರನ್ನು ಗಂಧಮಾದನದಲ್ಲಿ ಭೇಟಿ ಮಾಡಿ ಸಾಂತ್ವನ ಹೇಳಿದನೆಂದು ಉಕ್ತವಾಗಿದೆ. ಅರ್ಜುನನ ಬಳಿ ಇದ್ದ ಮಹಾಸ್ತ್ರಗಳಲ್ಲಿ ವೈಶ್ರವಣಾಸ್ತ್ರವೂ ಒಂದು. ಅರ್ಜುನನಿಗೆ ‘ಅಂತರ್ಧಾನಾಸ್ತ್ರ’ವನ್ನು ಬಳುವಳಿಯಾಗಿ ಕೊಟ್ಟಿದ್ದ ವೈಶ್ರವಣನು ಅರ್ಜುನನ ಪಕ್ಷಪಾತಿಯೂ ಹೌದು.
ಕುಬೇರ ಎಂಬ ಶಬ್ದಕ್ಕೆ ಕು-ಕುತ್ಸಿತವಾದ, ಬೇರೆ-ದೇಹದವನು ಎಂದು ಅರ್ಥೈಸಲಾಗಿದೆ. ಹುಟ್ಟಿದಾಗ ಬಹಳ ಭಯಂಕರವಾಗಿ ಕಾಣುತ್ತಿದ್ದ ಈತನನ್ನು ತಂದೆ ವಿಶ್ರವಸ್ಸು ‘ಸೋಮ’ ಎಂಬ ಸೌಮ್ಯೋಕ್ತಿಯಿಂದ ಕರೆದಾಗ ಇವನಿಗೆ ಸೌಮ್ಯ ಆಕಾರ ಪ್ರಾಪ್ತವಾಯಿತು.
ಮುಂದೆ ತಂದೆಯನ್ನು ಬಿಟ್ಟು ಯಜ್ಞ ಬ್ರಹ್ಮನ ಬಳಿ ಇದ್ದುದರಿಂದ ಕೆರಳಿದ ವಿಶ್ರವಸ್ ತನ್ನದ ಏಹದ ತೇಜಸ್ಸಿನಿಂದ ಮತ್ತೊಬ್ಬ ವಿಶ್ರವಸ್ಸನನ್ನು ಸೃಷ್ಟಿಸಿ ವೈಶ್ರವಣನ ಮೇಲೆ ಕಳುಹಿಸಿದ. ಆದರೆ ಬ್ರಹ್ಮನಿಂದ ಅಮರತ್ವದ ಲೇಪನವಾಗಿ ವೈಶ್ರವಣ ಉಳಿದುಕೊಂಡ.
ಈತನ ಮಲತಾಯಿಯ ಮಗನೇ ರಾವಣ. ರಾವಣನನ್ನು ಕುಬೇರನನ್ನು ಸೋಲಿಸಿ ಅವನ ಪುಷ್ಪಕ ವಿಮಾನವನ್ನು ಕಿತ್ತುಕೊಂಡು ಶ್ರೀಲಂಕೆಯಿಂದ ಓಡಿಸಿದ್ದ.
ವೈಶ್ರವಣನ ಸಭೆ ಪುರಾಣ ಪ್ರಸಿದ್ಧವಾದದ್ದು. ಇಂದ್ರಸಭೆಯಷ್ಟೆ ಮಹತ್ವದ್ದಾಗಿದ್ದು ಅನೇಕ ಪುಣ್ಯಪುರುಷರಿಂದ ಕೂಡಿತ್ತು. ಅಲ್ಲದೆ ದಿಕ್ಪಾಲಕನಾಗಿ ಗುರುತಿಸಲ್ಪಟ್ಟ ಕುಬೇರನು ಈಶ್ವರನಿಗೆ ಅತ್ಯಂತ ಆತ್ಮೀಯನಾಗಿದ್ದ.
ಶಿವನ ಕೃಪೆಯಿಂದಲೇ ಅಲಕಾವತಿಯಲ್ಲಿ ರಾಜಧಾನಿಯನ್ನು ನಿರ್ಮಿಸಿಕೊಂಡ. ಕಾಳಿದಾಸನು ಹೇಳುವಂತೆ ‘ಹರಶಿರಶ್ಚಂದ್ರಿಯಕಾ ಧೌತ ಹರ್ಮೃ’ಗಳಿಂದ ಕೂಡಿದ್ದ ಅಲಕಾವತಿಯ ಸೌಂದರ್ಯವು ಅನೇಕ ಪುರಾಣಗಳಲ್ಲಿ ವರ್ಣಿತವಾಗಿದೆ.
ಹಾಗೆ ನೋಡಿದರೆ ಕುಬೇರ ರಾಕ್ಷಸ ಕುಲದವನು. ಆದರೆ ಬ್ರಹ್ಮನ ಸಹಾಯದಿಂದ ಅಮರತ್ವವನ್ನು ಪಡೆದವನು. ತನ್ನ ಗುಣದಿಂದಾಗಿ ದಿಕ್ಪಾಲಕನೂ, ಧನಾದಿಪತಿಯೂ ಆದವನು. ಈ ವೈಶ್ರವಣನು ಲೋಕಮೋಹಕನೆಂದು ಪ್ರಸಿದ್ಧನಾದ ನಳಕೂಬರ ಎಂಬ ಮಗನನ್ನು ಪಡೆದಿದ್ದನು.‘ಕುಬೇರಾಯ ವೈಶ್ರವಣಾಯ ಮಹಾರಾಜಾಯ ನಮಃ’ ಎಂಬ ಆಶೀರ್ವಚನ ಸದಾ ನಮ್ಮ ಕಿವಿಗೆ ಬೀಳುತ್ತಿರುತ್ತದೆ. ಈ ವೈಶ್ರವಣನೇ ಕುಬೇರ. ಯಕ್ಷಾಧಿಪತಿ ಎಂದರೂ ಇವನೇ. ಕೈಲಾಸದ ಬಳಿಯ ಮಂದರ ಪರ್ವತದ ಅಲಕಾವತಿ ಈತನ ರಾಜಧಾನಿ. ಇದನ್ನು ವೈರಾಜವೆಂದೂ ಕರೆಯುತ್ತಾರೆ. ಉತ್ತರ ದಿಕ್ಕಿನ ಅದಿಪತಿಯೂ ಹೌದು. ನರವಾಹ, ರಾಜರಾಜ ಎಂದರೂ ಈತನೇ.
ರಾಕ್ಷಸಾಧಿಪತಿ ಪುಲಸ್ತ್ಯ ಪ್ರಜಾಪತಿ ಹಾಗೂ ಮಾನಿನೀ (ಹವಿರ್ಭೂ) ಇವರ ಮಗನೇ ವೈಶ್ರವಣನ ತಂದೆಯದ ವಿಶ್ರವಸ್, ವಿಶ್ರವಸ್ ಹಗೂ ದಯವವರ್ಣಿನೀ (ಇಡಾಟಿಡ)ಇವರ ಪುತ್ರನಾದ ವೈಶ್ರವಣನನ್ನು ಲೋಕಪಾಲನನ್ನಾಗಿ ವಿತ್ತಾಧಿಪತಿಯಾಗಿ ನೇಮಕ ಮಾಡಲಾಯಿತು.
‘sಪಾಂಡವಾನಾಂ ಯತ್ರ ವೈಶ್ರವಣೇನಚ’ ಎಂಬ ಮಹಾಭಾರತೋಕ್ತಿಯೂ ಇದೆ. ವನಪರ್ವದಲ್ಲಿ ವೈಶ್ರವಣನು ಪಾಂಡವರನ್ನು ಗಂಧಮಾದನದಲ್ಲಿ ಭೇಟಿ ಮಾಡಿ ಸಾಂತ್ವನ ಹೇಳಿದನೆಂದು ಉಕ್ತವಾಗಿದೆ. ಅರ್ಜುನನ ಬಳಿ ಇದ್ದ ಮಹಾಸ್ತ್ರಗಳಲ್ಲಿ ವೈಶ್ರವಣಾಸ್ತ್ರವೂ ಒಂದು. ಅರ್ಜುನನಿಗೆ ‘ಅಂತರ್ಧಾನಾಸ್ತ್ರ’ವನ್ನು ಬಳುವಳಿಯಾಗಿ ಕೊಟ್ಟಿದ್ದ ವೈಶ್ರವಣನು ಅರ್ಜುನನ ಪಕ್ಷಪಾತಿಯೂ ಹೌದು.
ಕುಬೇರ ಎಂಬ ಶಬ್ದಕ್ಕೆ ಕು-ಕುತ್ಸಿತವಾದ, ಬೇರೆ-ದೇಹದವನು ಎಂದು ಅರ್ಥೈಸಲಾಗಿದೆ. ಹುಟ್ಟಿದಾಗ ಬಹಳ ಭಯಂಕರವಾಗಿ ಕಾಣುತ್ತಿದ್ದ ಈತನನ್ನು ತಂದೆ ವಿಶ್ರವಸ್ಸು ‘ಸೋಮ’ ಎಂಬ ಸೌಮ್ಯೋಕ್ತಿಯಿಂದ ಕರೆದಾಗ ಇವನಿಗೆ ಸೌಮ್ಯ ಆಕಾರ ಪ್ರಾಪ್ತವಾಯಿತು.
ಮುಂದೆ ತಂದೆಯನ್ನು ಬಿಟ್ಟು ಯಜ್ಞ ಬ್ರಹ್ಮನ ಬಳಿ ಇದ್ದುದರಿಂದ ಕೆರಳಿದ ವಿಶ್ರವಸ್ ತನ್ನದ ಏಹದ ತೇಜಸ್ಸಿನಿಂದ ಮತ್ತೊಬ್ಬ ವಿಶ್ರವಸ್ಸನನ್ನು ಸೃಷ್ಟಿಸಿ ವೈಶ್ರವಣನ ಮೇಲೆ ಕಳುಹಿಸಿದ. ಆದರೆ ಬ್ರಹ್ಮನಿಂದ ಅಮರತ್ವದ ಲೇಪನವಾಗಿ ವೈಶ್ರವಣ ಉಳಿದುಕೊಂಡ.
ಈತನ ಮಲತಾಯಿಯ ಮಗನೇ ರಾವಣ. ರಾವಣನನ್ನು ಕುಬೇರನನ್ನು ಸೋಲಿಸಿ ಅವನ ಪುಷ್ಪಕ ವಿಮಾನವನ್ನು ಕಿತ್ತುಕೊಂಡು ಶ್ರೀಲಂಕೆಯಿಂದ ಓಡಿಸಿದ್ದ.
ವೈಶ್ರವಣನ ಸಭೆ ಪುರಾಣ ಪ್ರಸಿದ್ಧವಾದದ್ದು. ಇಂದ್ರಸಭೆಯಷ್ಟೆ ಮಹತ್ವದ್ದಾಗಿದ್ದು ಅನೇಕ ಪುಣ್ಯಪುರುಷರಿಂದ ಕೂಡಿತ್ತು. ಅಲ್ಲದೆ ದಿಕ್ಪಾಲಕನಾಗಿ ಗುರುತಿಸಲ್ಪಟ್ಟ ಕುಬೇರನು ಈಶ್ವರನಿಗೆ ಅತ್ಯಂತ ಆತ್ಮೀಯನಾಗಿದ್ದ.
ಶಿವನ ಕೃಪೆಯಿಂದಲೇ ಅಲಕಾವತಿಯಲ್ಲಿ ರಾಜಧಾನಿಯನ್ನು ನಿರ್ಮಿಸಿಕೊಂಡ. ಕಾಳಿದಾಸನು ಹೇಳುವಂತೆ ‘ಹರಶಿರಶ್ಚಂದ್ರಿಯಕಾ ಧೌತ ಹರ್ಮೃ’ಗಳಿಂದ ಕೂಡಿದ್ದ ಅಲಕಾವತಿಯ ಸೌಂದರ್ಯವು ಅನೇಕ ಪುರಾಣಗಳಲ್ಲಿ ವರ್ಣಿತವಾಗಿದೆ.
ಹಾಗೆ ನೋಡಿದರೆ ಕುಬೇರ ರಾಕ್ಷಸ ಕುಲದವನು. ಆದರೆ ಬ್ರಹ್ಮನ ಸಹಾಯದಿಂದ ಅಮರತ್ವವನ್ನು ಪಡೆದವನು. ತನ್ನ ಗುಣದಿಂದಾಗಿ ದಿಕ್ಪಾಲಕನೂ, ಧನಾದಿಪತಿಯೂ ಆದವನು. ಈ ವೈಶ್ರವಣನು ಲೋಕಮೋಹಕನೆಂದು ಪ್ರಸಿದ್ಧನಾದ ನಳಕೂಬರ ಎಂಬ ಮಗನನ್ನು ಪಡೆದಿದ್ದನು.
ಮೂಲ ...{Loading}...
ಹರಿಗೆ ಕೈಮುಗಿದೆರಗಿ ತೇರಿನ
ಹರಿಗಳಿಗೆ ವಂದಿಸಿ ಪತಾಕೆಯ
ಹರಿಗೆ ನಮಿಸಿ ನಿಜಾಯುಧಕೆ ಕೈಮುಗಿದು ಜೇವೊಡೆದು
ಹರಿ ಧನಂಜಯ ಧರ್ಮ ನೈರುತಿ
ವರುಣ ಮಾರುತ ವೈಶ್ರವಣ ಶಂ
ಕರ ವಿರಿಂಚಾದಿಗಳಿಗಭಿವಂದಿಸಿದನಾ ಪಾರ್ಥ ॥19॥
೦೨೦ ಭರತಕುಲಸಮ್ಭಾಳು ಜಯ ...{Loading}...
ಭರತಕುಲಸಂಭಾಳು ಜಯ ಹಿಮ
ಕರ ಪುರೂರವ ನಹುಷ ನಳ ನೃಗ
ವರ ಯಯಾತಿಪ್ರಕಟ ವಿಮಳಾನ್ವಯದೊಳವತರಿಸಿ
ಧುರಕೆ ಮನವಳುಕಿದರೆ ಹಜ್ಜೆಯ
ತಿರುಪಿದಡೆ ಕುಲಕೋಟಿಕೋಟಿಗೆ
ನರಕವೆಂದೆಚ್ಚರಿಸಿದರು ಭಟ್ಟರು ನಿಜಾನ್ವಯವ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭರತ ವಂಶದಲ್ಲಿ ಜನಿಸಿದ ವೀರನೇ, ನಿನಗೆ ಜಯವಾಗಲಿ ಚಂದ್ರ, ಪುರೂರವ, ನಹುಷ, ನಳ, ನೃಗ, ಯಯಾತಿ ಮೊದಲಾದ ಪ್ರಸಿದ್ಧರು ಹುಟ್ಟಿದ ವಂಶದಲ್ಲಿ ಜನಿಸಿ ಯುದ್ಧ ಮಾಡಲು ಹಿಂಜರಿದರೆ, ಮುಂದಿಟ್ಟ ಹೆಜ್ಜೆಯನ್ನು ಹಿಂದಕ್ಕೆ ಹಾಕಿದರೆ, ನಿನ್ನ ವಂಶದವರಿಗೆಲ್ಲಾ ನರಕ ಪ್ರಾಪ್ತಿಯಾಗುತ್ತದೆ ಎಂದು ಹೊಗಳು ಭಟ್ಟರು ಅರ್ಜುನನಿಗೆ, ಅವನ ವಂಶವನ್ನು ನೆನಪು ಮಾಡಿ ಎಚ್ಚರಿಸಿದರು.
ಪದಾರ್ಥ (ಕ.ಗ.ಪ)
ಅನ್ವಯ-ವಂಶ
ಮೂಲ ...{Loading}...
ಭರತಕುಲಸಂಭಾಳು ಜಯ ಹಿಮ
ಕರ ಪುರೂರವ ನಹುಷ ನಳ ನೃಗ
ವರ ಯಯಾತಿಪ್ರಕಟ ವಿಮಳಾನ್ವಯದೊಳವತರಿಸಿ
ಧುರಕೆ ಮನವಳುಕಿದರೆ ಹಜ್ಜೆಯ
ತಿರುಪಿದಡೆ ಕುಲಕೋಟಿಕೋಟಿಗೆ
ನರಕವೆಂದೆಚ್ಚರಿಸಿದರು ಭಟ್ಟರು ನಿಜಾನ್ವಯವ ॥20॥
೦೨೧ ಹಿಡಿಯೆ ಜವನಿಕೆ ...{Loading}...
ಹಿಡಿಯೆ ಜವನಿಕೆ ಸಕಲಬಲ ಸಂ
ಗಡಿಸಿತೊಂದೇ ಮುಖದಲೀ ದಳ
ಗಡಣಿಸಿತು ಮುಂದಿಕ್ಕಿ ಕರ್ಣನನೇಕಮುಖವಾಗಿ
ಪಡಿಬಲಕೆ ಭೀಮಾದಿಭಟರಾ
ಕಡೆಯಲನುವಾಯ್ತೀಚೆಯಲಿ ನೆಲ
ನೊಡೆಯ ಕೃಪ ಗುರುಜಾದಿಗಳು ಕೈಗೈದರೊಗ್ಗಿನಲಿ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯದ್ದಾರಂಬವನ್ನು ಸೂಚಿಸಲು ಬಟ್ಟಬೀಲಾಗಿ ಸೈನ್ಯವೆಲ್ಲವೂ ವ್ಯವಸ್ಥಿತವಾಗಿ ಒಮ್ಮುಖವಾಗಿ ನಿಂತುಕೊಂಡಿತು. ನಿಮ್ಮ ಸೈನ್ಯ ಕರ್ಣನನ್ನು ಮುಂದಿರಿಸಿಕೊಂಡಿತು. ಆ ಕಡೆ ಶತ್ರು ಸೈನ್ಯದಲ್ಲಿ ಭೀಮ ಮೊದಲಾದ ವೀರರು ಸಿದ್ಧವಾದರು. ಈ ಕಡೆ ಭೂಪತಿಯಾದ ದುರ್ಯೋಧನ, ಕೃಪಾಚಾರ್ಯ, ಅಶ್ವತ್ಥಾಮರು ಒಟ್ಟಾಗಿ ಉತ್ಸಾಹಿಸಿದರು.
ಪದಾರ್ಥ (ಕ.ಗ.ಪ)
ಜವನಿಕೆ-ತೆರೆ, ? ಕೈಗೈ-ಸಹಾಯಮಾಡು
ಮೂಲ ...{Loading}...
ಹಿಡಿಯೆ ಜವನಿಕೆ ಸಕಲಬಲ ಸಂ
ಗಡಿಸಿತೊಂದೇ ಮುಖದಲೀ ದಳ
ಗಡಣಿಸಿತು ಮುಂದಿಕ್ಕಿ ಕರ್ಣನನೇಕಮುಖವಾಗಿ
ಪಡಿಬಲಕೆ ಭೀಮಾದಿಭಟರಾ
ಕಡೆಯಲನುವಾಯ್ತೀಚೆಯಲಿ ನೆಲ
ನೊಡೆಯ ಕೃಪ ಗುರುಜಾದಿಗಳು ಕೈಗೈದರೊಗ್ಗಿನಲಿ ॥21॥
೦೨೨ ದಳವೆರಡ ಹಿನ್ದಿಕ್ಕಿ ...{Loading}...
ದಳವೆರಡ ಹಿಂದಿಕ್ಕಿ ರಥರಥ
ಹೊಳೆದು ಸುಳಿದೌಕಿದವು ಕುಲಗಿರಿ
ಕುಲಗಿರಿಗೆ ದಿಕ್ಕರಿಗೆ ದಿಕ್ಕರಿ ಜೋಳಿದೆಗೆದಂತೆ
ಬಲನ ವಜ್ರನ ಕಾಲನೇಮಿಯ
ಜಲರುಹಾಕ್ಷನ ರಾವಣನ ರಘು
ಕುಲನ ದೆಖ್ಖಾದೆಖ್ಖಿ ಜೋಡಿಸಿತಾತನೀತನಲಿ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎರಡೂ ಕಡೆಯ ಸೈನ್ಯವನ್ನು ಹಿಂದೆ ಹಾಕಿ ಕುಲಪರ್ವತವನ್ನು ಕುಲ ಪರ್ವತ ದಿಗ್ಗಜವನ್ನು ದಿಗ್ಗಜ ಜೋಡಿಯಾಗಿ ಎದುರಿಸಿದಂತೆ ಅರ್ಜುನ - ಕರ್ಣರ ರಥಗಳು ಹೊಳೆಯುತ್ತಾ ಮುಂದೆ ನುಗ್ಗಿ ಎದುರಾದವು. ಬಲನನ್ನು ಇಂದ್ರ, ಕಾಲನೇಮಿಯನ್ನು ಕಮಲಾಕ್ಷನಾದ ವಿಷ್ಣು, ರಾವಣನನ್ನು ರಾಮ ಮುಖಾಮುಖಿಯಾಗಿ ಎದುರಿಸಿದಂತೆ ಅವರಿಬ್ಬರ ಜೋಡಿ ಕಾಣಿಸಿತು.
ಪದಾರ್ಥ (ಕ.ಗ.ಪ)
ಜೋಳಿದೆಗೆ-ಜೋಡಿಯಾಗಿ ಎದುರಿಸು,
ಟಿಪ್ಪನೀ (ಕ.ಗ.ಪ)
ಕಾಲನೇಮಿ- ಮಾರೀಚನ ಮಗ, ಸಂಜೀವಿನಿಯನ್ನು ತರುವಾಗ, ಮುನಿಯ ವೇಷದಿಂದ ಹನುಮಂತನಿಗೆ ಅಡ್ಡಿಪಡಿಸಿದವನು.
ಬಲ>ವಲ ಒಬ್ಬರಾಕ್ಷಸ ಇಂದ್ರನು ತನ್ನ ವಜ್ರಾಯುಧದಿಂದ ಸೀಳಿ ಹಾಕಿಒದ - ಪದ್ಮಪುರಾಣ, ಭೂಮಿಕಾಂಡ
ಮೂಲ ...{Loading}...
ದಳವೆರಡ ಹಿಂದಿಕ್ಕಿ ರಥರಥ
ಹೊಳೆದು ಸುಳಿದೌಕಿದವು ಕುಲಗಿರಿ
ಕುಲಗಿರಿಗೆ ದಿಕ್ಕರಿಗೆ ದಿಕ್ಕರಿ ಜೋಳಿದೆಗೆದಂತೆ
ಬಲನ ವಜ್ರನ ಕಾಲನೇಮಿಯ
ಜಲರುಹಾಕ್ಷನ ರಾವಣನ ರಘು
ಕುಲನ ದೆಖ್ಖಾದೆಖ್ಖಿ ಜೋಡಿಸಿತಾತನೀತನಲಿ ॥22॥
೦೨೩ ನೆಲನ ರಾಜ್ಯಶ್ರೀಯ ...{Loading}...
ನೆಲನ ರಾಜ್ಯಶ್ರೀಯ ತುರುಬಿಂ
ಗಳುಕದಂಘೈಸಿದ ವಿರೋಧಿಯ
ಲಲನೆಯರ ಶ್ರುತಿಪತ್ರ ಸೀಳಲಿ ಸಾಲ ಹಿಂಗಿತಲ
ಅಳಿದ ವೃಷಸೇನಕನ ತಾಯ್ಗಳು
ಮೆಲಲಿ ವೀಳೆಯವನು ಕಿರೀಟಿಯ
ತಲೆಯ ತೆರಿಗೆಗೆ ತಾವೆ ಹೊಣೆಯೆಂದುದು ಭಟಸ್ತೋಮ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೂಮಿಯೆಂಬ ರಾಜಲಕ್ಷ್ಮಿಯ ತುರುಬನ್ನು ಹಿಡಿಯಲು ಹಿಂಜರಿಯದೇ ಸಾಹಸವನ್ನು ತೋರಿಸುತ್ತಿರುವ ಶತ್ರುಗಳ ಹೆಂಡತಿಯರ ಕಿವಿಯ ಓಲೆಗಳು ಕತ್ತರಿಸಿ ಹೋಗಲಿ. ಈಗ ಸಾಲ ತೀರಿದಂತಾಯಿತು. ಸತ್ತ ವೃಷಸೇನನ ತಾಯಂದಿರು ಸಂತೋಷದಿಂದ ವೀಳೆಯವನ್ನು ಹಾಕಿಕೊಳ್ಳಲಿ. ಅರ್ಜುನನ ತಲೆಯೆಂಬ ತೆರಿಗೆಗೆ ನಾವೇ ಹೊಣೆ ಎಂದರೆ ತಲೆಯನ್ನು ಕತ್ತರಿಸಿ ತರುತ್ತೇವೆ ಎಂದು ಕೌರವನ ಸೈನಿಕÉರು ಕೂಗಿದರು.
ಪದಾರ್ಥ (ಕ.ಗ.ಪ)
ಶ್ರುತಿಪತ್ರ-ಕಿವಿಯೋಲೆ
ಮೂಲ ...{Loading}...
ನೆಲನ ರಾಜ್ಯಶ್ರೀಯ ತುರುಬಿಂ
ಗಳುಕದಂಘೈಸಿದ ವಿರೋಧಿಯ
ಲಲನೆಯರ ಶ್ರುತಿಪತ್ರ ಸೀಳಲಿ ಸಾಲ ಹಿಂಗಿತಲ
ಅಳಿದ ವೃಷಸೇನಕನ ತಾಯ್ಗಳು
ಮೆಲಲಿ ವೀಳೆಯವನು ಕಿರೀಟಿಯ
ತಲೆಯ ತೆರಿಗೆಗೆ ತಾವೆ ಹೊಣೆಯೆಂದುದು ಭಟಸ್ತೋಮ ॥23॥
೦೨೪ ಇಟ್ಟಣಿಸುತದೆ ಧುರಕೆ ...{Loading}...
ಇಟ್ಟಣಿಸುತದೆ ಧುರಕೆ ರಾಯಘ
ರಟ್ಟ ಪಾರ್ಥನ ತೇರು ತೇಜವ
ದಿಟ್ಟಿಸುವಡೆವೆ ಸೀಯ್ಯವೇ ಫಡ ಸೂತಸುತನಳವೆ
ಕೆಟ್ಟುದಿನ್ನೇನಹಿತಬಲ ಜಗ
ಜಟ್ಟಿ ಗೆಲಿದನು ಧರ್ಮಪುತ್ರನ
ಪಟ್ಟದಾನೆಯೆನುತ್ತಲಿರ್ದುದು ಪಾಂಡುಸುತಸೇನೆ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ರಾಯರನ್ನು ಬೀಸುವ ಕಲ್ಲಾದ ಅರ್ಜುನನ ರಥ ಯುದ್ಧಕ್ಕೆ ಮುನ್ನುಗ್ಗುತ್ತಿದೆ. ಅದರ ತೇಜಸ್ಸನ್ನು ದೃಷ್ಟಿ ಇಟ್ಟು ನೋಡಿದರೆ ಕಣ್ಣುಗಳು ಸೀದು ಹೋಗುವುದಿಲ್ಲವೇ, ಸೂತಪುತ್ರನ ಕೈಯಲ್ಲಿ ಸಾಧ್ಯವೇ. ಶತ್ರು ಸೈನ್ಯ ಇನ್ನೇನು ಸೋತಂತಾಯಿತು. ಜಗಜಟ್ಟಿಯಾದ ಧರ್ಮರಾಯನ ಪಟ್ಟದಾನೆಯಂತಹ ಅರ್ಜುನನು ಗೆಲ್ಲುತ್ತಾನೆ’ ಎಂದು ಪಾಂಡವರ ಸೈನ್ಯ ಹೇಳಿಕೊಂಡಿತು.
ಪದಾರ್ಥ (ಕ.ಗ.ಪ)
ಇಟ್ಟಣಿಸು-ಮುನ್ನುಗ್ಗು
ಮೂಲ ...{Loading}...
ಇಟ್ಟಣಿಸುತದೆ ಧುರಕೆ ರಾಯಘ
ರಟ್ಟ ಪಾರ್ಥನ ತೇರು ತೇಜವ
ದಿಟ್ಟಿಸುವಡೆವೆ ಸೀಯ್ಯವೇ ಫಡ ಸೂತಸುತನಳವೆ
ಕೆಟ್ಟುದಿನ್ನೇನಹಿತಬಲ ಜಗ
ಜಟ್ಟಿ ಗೆಲಿದನು ಧರ್ಮಪುತ್ರನ
ಪಟ್ಟದಾನೆಯೆನುತ್ತಲಿರ್ದುದು ಪಾಂಡುಸುತಸೇನೆ ॥24॥
೦೨೫ ಉಲಿದುದೀ ಬಲ ...{Loading}...
ಉಲಿದುದೀ ಬಲ ಸೂತಸುತನ
ಗ್ಗಳಿಕೆಯನು ಕೊಂಡಾಡಿ ಪಾರ್ಥನ
ಬಲುಹ ಬಹುವಿಧದಿಂದ ಬಣ್ಣಿಸುತಿದ್ದುದಾ ಸೇನೆ
ಲಳಿಯ ಲಗ್ಗೆಯ ನಿಖಿಳವಾದ್ಯದ
ಕಳಕಳವನಡಿಗಿಕ್ಕಿ ಮಲೆತುದು
ಬಲದೊಳಿಬ್ಬರ ಬಿರುದ ಪಾಡುಪವಾಡುಗಳ ರಭಸ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಕಡೆಯ ಕೌರವನ ಸೈನ್ಯ ಸೂತಪುತ್ರ ಕರ್ಣನ ಹಿರಿಮೆಯನ್ನು ಕೊಂಡಾಡಿ ಕೂಗು ಹಾಕಿತು. ಆ ಕಡೆಯ ಸೈನ್ಯ ಅರ್ಜುನನ ಶಕ್ತಿಯನ್ನು ಬಗೆಬಗೆಯಲ್ಲಿ ಬಣ್ಣಿಸುತ್ತಿತ್ತು. ತಡೆಯಿಲ್ಲದ ಆಕ್ರಮಣ, ಎಲ್ಲಾ ವಾದ್ಯಗಳ ಕಳಕಳ ಶಬ್ದವನ್ನು ಕೆಳಕ್ಕೆ ತುಳಿಯುವಂತೆ ಕರ್ಣ ಅರ್ಜುನರ ಶೌರ್ಯ ಅತಿಮಾನುಷ ಶಕ್ತಿಗಳನ್ನು ಹೊಗಳುತ್ತಿದ್ದವರ ಶಬ್ದದ ರಭಸ ಹೆಚ್ಚಾಯಿತು.
ಮೂಲ ...{Loading}...
ಉಲಿದುದೀ ಬಲ ಸೂತಸುತನ
ಗ್ಗಳಿಕೆಯನು ಕೊಂಡಾಡಿ ಪಾರ್ಥನ
ಬಲುಹ ಬಹುವಿಧದಿಂದ ಬಣ್ಣಿಸುತಿದ್ದುದಾ ಸೇನೆ
ಲಳಿಯ ಲಗ್ಗೆಯ ನಿಖಿಳವಾದ್ಯದ
ಕಳಕಳವನಡಿಗಿಕ್ಕಿ ಮಲೆತುದು
ಬಲದೊಳಿಬ್ಬರ ಬಿರುದ ಪಾಡುಪವಾಡುಗಳ ರಭಸ ॥25॥
೦೨೬ ಭಾರಿಯಙ್ಕದ ಭಟರಿವರು ...{Loading}...
ಭಾರಿಯಂಕದ ಭಟರಿವರು ಜು
ಜ್ಝಾರರೈ ತಮ್ಮಾಯತವ ತ
ಮ್ಮಾರುಭಟೆಯನು ಲಕ್ಷ್ಯ ಲಕ್ಷಣ ಭೇದ ಭಂಗಿಗಳ
ಸಾರತರ ಕೋದಂಡಪಂಡಿತ
ರಾರಯಿಕೆಯಲಿ ತರುಬಿ ನಿಂದರು
ಭಾರತದೊಳಿಂದೊಂದು ಚಿತ್ರವ ಕಂಡೆ ನಾನೆಂದ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇವರಿಬ್ಬರೂ ಮಹಾ ಯುದ್ಧವೀರರು, ಪರಾಕ್ರಮಿಗಳು. ತಮ್ಮ ಪರಾಕ್ರಮದಲ್ಲಿ ಆರ್ಭಟದಲ್ಲಿ ಗುರಿಯನ್ನು ಹಿಡಿದು ಶತ್ರುವನ್ನು ಭೇದಿಸುವ ಭಂಗಿಗಳಲ್ಲಿ, ಹಿರಿಮೆಯುಳ್ಳ ಬಿಲ್ವಿದ್ಯೆಯಲ್ಲಿ ರಕ್ಷಣೆ ನೀಡುವುದರಲ್ಲಿ ಪಂಡಿತರು. ಒಬ್ಬರು ಮತ್ತೊಬ್ಬರನ್ನು ಎದುರಿಸಿ ನಿಂತರು. ಭಾರತ ಯುದ್ಧದಲ್ಲಿ ಇದು ಒಂದು ಅದ್ಭುತವಾದ ದೃಶ್ಯವನ್ನು ನಾನು ಕಂಡೆ ಎಂದು ಸಂಜಯನು ಹೇಳಿದನು.
ಪದಾರ್ಥ (ಕ.ಗ.ಪ)
ಜುಜ್ಝಾರ-ಪರಾಕ್ರಮಿ
ಮೂಲ ...{Loading}...
ಭಾರಿಯಂಕದ ಭಟರಿವರು ಜು
ಜ್ಝಾರರೈ ತಮ್ಮಾಯತವ ತ
ಮ್ಮಾರುಭಟೆಯನು ಲಕ್ಷ್ಯ ಲಕ್ಷಣ ಭೇದ ಭಂಗಿಗಳ
ಸಾರತರ ಕೋದಂಡಪಂಡಿತ
ರಾರಯಿಕೆಯಲಿ ತರುಬಿ ನಿಂದರು
ಭಾರತದೊಳಿಂದೊಂದು ಚಿತ್ರವ ಕಂಡೆ ನಾನೆಂದ ॥26॥