೨೦

೦೦೦ ಸೂ ಚಣ್ಡಬಲ ...{Loading}...

ಸೂ. ಚಂಡಬಲ ಪವಮಾನಜನ ಮುಂ
ಕೊಂಡು ವಿರಥನಮಾಡಿ ಕದನೋ
ದ್ದಂಡ ನರನೊಳು ಕಾದಿ ಮಡಿದನು ವೀರವೃಷಸೇನ

೦೦೧ ಅವಧರಿಸು ಧೃತರಾಷ್ಟ್ರನೃಪ ...{Loading}...

ಅವಧರಿಸು ಧೃತರಾಷ್ಟ್ರನೃಪ ನಿ
ನ್ನವಗೆ ತಿಳಿದುದು ಸೊಕ್ಕು ಚಿತ್ತದ
ಬವಣಿ ಬೀತುದು ಮನದ ಜೊಂಪಿಳಿದುದು ಛಡಾಳಿಸಿದ
ಡವರಿಸಿದ ಡೊಳ್ಳಾಸ ರಣಬೇ
ಳುವೆಯ ಬಿಗುಹಡಗಿದವೊಲನಿಬರು
ತವತವಗೆ ನಾಚಿದರು ಕೋಳಾಹಳಕೆ ಪವನಜನ ॥1॥

೦೦೨ ಮುಟ್ಟಿ ಬನ್ದುದು ...{Loading}...

ಮುಟ್ಟಿ ಬಂದುದು ಕೇಡು ನೃಪನೊಡ
ಹುಟ್ಟಿದನ ಹೊಯ್ದರುಣಜಲದಲಿ
ಚಟ್ಟಿರಿದು ರಿಪು ಚಾರಿವರಿದನು ಕಳನ ಚೌಕದಲಿ
ಇಟ್ಟಣಿಸುವೀ ರಣಮದಾಂಧನ
ತೊಟ್ಟುಳಿಕೆಯನು ಕೀಳ್ವ ರಾಯಘ
ರಟ್ಟನಿಲ್ಲಾ ಎನುತ ತನಿಮಸಗಿತು ಭಟಸ್ತೋಮ ॥2॥

೦೦೩ ದೊರೆಯೊಡನೆ ತಲೆಯೊತ್ತಿ ...{Loading}...

ದೊರೆಯೊಡನೆ ತಲೆಯೊತ್ತಿ ಮುರಿದ
ಬ್ಬರಿಗನುಬ್ಬಿದ ಸಮರದಲಿ ನಿ
ಬ್ಬರದ ಬೆರಗಿನೊಳಿದ್ದರೈ ಬಳಿಕೀಗಲರಿತಿರಲಾ
ಅರಸನನುಜನ ಕುಡಿದನೆತ್ತರ
ಬರಿಸುವೆನು ಮೂಗಿನಲಿ ಮಾಣೆನು
ತರಿಯ ರಥದುರವಣೆಗೆ ಕರ್ಣನಸೂನುವಿದಿರಾದ ॥3॥

೦೦೪ ಫಡ ವಿಕಾರವೆ ...{Loading}...

ಫಡ ವಿಕಾರವೆ ನೋಡು ನೆತ್ತರು
ಗುಡುಹಿತನವೇ ನಮ್ಮೊಡನೆ ಮೊಲೆ
ಮುಡಿಯ ಮೂದಲೆಗರುಹರೇ ಕರ್ಣಾದಿನಾಯಕರು
ಕುಡಿದ ರಕುತದ ಜಿಗುಳೆ ನೀ ನಿ
ನ್ನೊಡಲ ನಿಗುಚುವೆ ನಿಲ್ಲೆನುತ ಬಲ
ನೆಡನ ಬಿರುದರ ಮೇಳದಲಿ ತೂಗಿದನು ವೃಷಸೇನ ॥4॥

೦೦೫ ವೀರ ಮಝ ...{Loading}...

ವೀರ ಮಝ ಸೇನಾಧಿಪತಿಯ ಕು
ಮಾರ ನೂಕಿದನೆನುತಖಿಳಪರಿ
ವಾರ ಕವಿದುದು ಕರಿ ರಥಾಶ್ವ ಪದಾತಿಯೊಡ್ಡಿನಲಿ
ಆರು ಪೊಗಳುವರನಿಲಸುತನ ಸ
ಧಾರತನವನು ಮೇಲೆ ಬೀಳ್ವ ಕ
ಠೋರ ಶಸ್ತ್ರವ್ರಜವ ನೂಕಿದನಡ್ಡವರಿಗೆಯಲಿ ॥5॥

೦೦೬ ಅಕಟ ಮಗುವಿನ ...{Loading}...

ಅಕಟ ಮಗುವಿನ ಕೂಡೆ ಬಲುನಾ
ಯಕರು ಬಯಸಿದರಳಿವನಿದು ಸೇ
ವಕರ ಪಂಥವಲಾ ವಿರೋಧವೆ ಎನುತ ಮುರಿದೆದ್ದು
ಲಕುಟಹತನಿರ್ಭಿನ್ನಭಾಂಡ
ಪ್ರಕರವೋ ನಿನ್ನಾಳುಕುದುರೆಯೊ
ಸಕಲ ಸುಭಟರನೊಕ್ಕಲಿಕ್ಕಿದನೊಂದುನಿಮಿಷದಲಿ ॥6॥

೦೦೭ ನುಗ್ಗ ಬಡಿದಞ್ಜಿಸಿದ ...{Loading}...

ನುಗ್ಗ ಬಡಿದಂಜಿಸಿದ ಗೆಲವಿನ
ಸುಗ್ಗಿಗಿದೆ ಮಳೆಗಾಲವೆನುತ ನಿ
ರಗ್ರ್ಗಳಿತ ಭುಜಶೌರ್ಯ ಸುರಿದನು ಸರಳ ಸರಿವಳೆಯ
ಬಗ್ಗಿ ಕವಿವಂಬುಗಳ ಗರಿಗಳ
ಲಗ್ಗೆಗರಿನಾಯಕರ ಕಿವಿಗಳು
ನೆಗ್ಗಿದವು ಮುಗ್ಗಿದವು ಮನ ಮಾರಂಕದತಿರಥರ ॥7॥

೦೦೮ ಬಲುಹು ಮಗುವಿನ ...{Loading}...

ಬಲುಹು ಮಗುವಿನ ಶೌರ್ಯವೀಸ
ಗ್ಗಳೆಯನೈ ಶಿವಯೆನುತ ಚಿತ್ತದೊ
ಳಳುಕಿ ಹೂಡಿದನಂಬನವಧಾನದಲಿ ಬಿಡೆಯರಿದು
ಹಿಳುಕುಹಿಳುಕುಗಳೊರಸೊರಸು ಮುಂ
ಕೊಳಿಸೆ ಹಿಂದಣಿನಂಬನಂಬು
ಚ್ಚಳಿಸಲೆಚ್ಚನು ಭೀಮ ರವಿನಂದನನ ನಂದನನ ॥8॥

೦೦೯ ಕೆಣಕಿದುರಿಯನ್ದದಲಿ ದಣ್ಡೆಯೊ ...{Loading}...

ಕೆಣಕಿದುರಿಯಂದದಲಿ ದಂಡೆಯೊ
ಳಣೆದ ಕಾಳೋರಗನವೊಲು ಚ
ಡ್ಡಣೆಯ ಚಪಳಕ್ರೋಧಶಿಖಿ ಮೋಹಿದುದು ಮೋರೆಯಲಿ
ಕಣೆಗಳೋ ಕಲ್ಪಾಂತವಹ್ನಿಯ
ಡೊಣೆಗಳೋ ಹಾಳಾಹಳದ ಡಾ
ವಣಿಗಳೋ ನಾವರಿಯೆವೆಚ್ಚನು ವೀರ ವೃಷಸೇನ ॥9॥

೦೧೦ ಫಲಿತ ಶಾಳೀವನವ ...{Loading}...

ಫಲಿತ ಶಾಳೀವನವ ಮುತ್ತಿದ
ಗಿಳಿಗಳೋ ತಾವರೆಯ ತೆಕ್ಕೆಯೊ
ಳಿಳಿದ ಮರಿದುಂಬಿಗಳೊ ವೃಷಸೇನನ ಶರಾವಳಿಯೊ
ಹಿಳುಕು ಹೇರಿದವಾತನಶ್ವಾ
ವಳಿಯಲಾತನ ಸೂತನೊಡಲಲಿ
ಹಲವು ಮಾತೇನಾತನಂಗೋಪಾಂಗ ನಿಕರದಲಿ ॥10॥

೦೧೧ ಕೂಡೆ ಹಾಹಾಧ್ವನಿಯ ...{Loading}...

ಕೂಡೆ ಹಾಹಾಧ್ವನಿಯ ರವವ
ಲ್ಲಾಡಿಸಿತು ಪರಬಲವನೀತನ
ತೋಡು ಬೀಡಿನ ಸಂಚ ಸೆಳೆದುದು ಹಗೆಯ ಸಾಹಸವ
ಓಡಲರಿಯದೆ ಭೀಮನಂಬಿನ
ರೂಢಿ ನಿಗುಚದೆ ಕಾದುವರೆ ಜಯ
ಜೋಡಿಸದೆ ಜೋವಳಿಸಿ ಜವಗುಂದಿದನು ಕಲಿಭೀಮ ॥11॥

೦೧೨ ಅರಸ ಕೇಳೈ ...{Loading}...

ಅರಸ ಕೇಳೈ ಬಳಿಕ ಭೀಮನ
ತರಹರವನರಿದಾಚೆಯಲಿ ಸಂ
ವರಿಸಿಕೊಂಡನು ನಕುಳ ಬಿಟ್ಟನು ಸೂಠಿಯಲಿ ರಥವ
ತರುವಲಿಯೆ ನೀನಿದಿರಹುದೆ ಫಡ
ಸರಿಸವೇ ಭೀಮಂಗೆ ನೀನೆನು
ತರಿಭಟನ ಕೆಣಕಿದನು ಕೆದರಿದನಸ್ತ್ರ ಸಂತತಿಯ ॥12॥

೦೧೩ ಆರಿವರು ನಕುಲಾಙ್ಕರೇ ...{Loading}...

ಆರಿವರು ನಕುಲಾಂಕರೇ ಜು
ಜ್ಝಾರರೇ ನಿಮ್ಮಣ್ಣನಾಡಿ ದು
ಹಾರದಲಿ ಸೆರೆಯೋದನಾತನ ಹರಿಬವೇ ನಿಮಗೆ
ತೀರದೇ ನಿಮ್ಮಲಿ ವೃಥಾಹಂ
ಕಾರವೇಕಿದು ಪಾರ್ಥನೆಂಬನ
ತೋರಿರೇ ನೀ ಸಾರೆನುತ ತೆಗೆದೆಚ್ಚು ಬೊಬ್ಬಿರಿದ ॥13॥

೦೧೪ ಮಗುವು ನಿನ್ನೊಡನೇನು ...{Loading}...

ಮಗುವು ನಿನ್ನೊಡನೇನು ಸರಿಯೋ
ಮಿಗಿಲೊ ಶರವಿವ ಹೇಳೆಸುತ ಕೈ
ಮಗುಚಿದನು ಹೊದೆಯಂಬನೀತನಮೇಲೆ ನಿಮಿಷದಲಿ
ಮುಗಿಲ ಹರಿಗೆಗೆ ಮಾರುತನ ಬಂ
ದಿಗೆಯ ಹೊಯ್ಲೆನೆ ನಕುಳನೆಚ್ಚಂ
ಬುಗಳು ಕಿಡಿಸೂಸಿದವು ಕಂಡನು ರಥದ ಬಳಸಿನಲಿ ॥14॥

೦೧೫ ಮರಳಿ ನಕುಲನನೆಚ್ಚನಾತನ ...{Loading}...

ಮರಳಿ ನಕುಲನನೆಚ್ಚನಾತನ
ತುರಗವನು ಮುರಿಯೆಚ್ಚನಾತನ
ವರ ರಥವ ಸಾರಥಿಯನಾತನ ಟೆಕ್ಕೆಯವ ಧನುವ
ಉರುಳೆಗಡಿದನು ಮತ್ತೆ ಜೋಡಿಸಿ
ಪರಿತರಲು ಮುರಿಯೆಚ್ಚು ಪುನರಪಿ
ಹುರುಳುಗೆಡಿಸಿದನರಸಿ ಹರಿದನು ಮತ್ತೆ ಪವನಜನ ॥15॥

೦೧೬ ನಕುಲ ಮುರಿದನು ...{Loading}...

ನಕುಲ ಮುರಿದನು ಭೀಮ ನಿಲು ಕಾ
ರ್ಮುಕವ ಹಿಡಿ ಬಿಡು ಸರಳನಳುಕುವ
ಡಕಟ ಕೊಲ್ಲೆನು ನಿನ್ನ ತಮ್ಮನ ಕರಸು ಫಲುಗುಣನ
ವಿಕಳರುಳಿದಿರಲಾಗದೀ ಸಾ
ಯಕದ ಸೃಷ್ಟಿವಿರಿಂಚ ಸುಭಟ
ಪ್ರಕರದೊಳು ತಾನೆನುತ ತೆಗೆದೆಚ್ಚನು ವೃಕೋದರನ ॥16॥

೦೧೭ ಮುರಿದು ನಕುಲನ ...{Loading}...

ಮುರಿದು ನಕುಲನ ಭೀಮಸೇನನ
ನರಸಿ ಹಿಡಿದನು ಬವರವನು ಭಟ
ನುರುಬೆ ಬಲುಹೋ ದಿಟ್ಟನಿವ ಕೌರವರ ಥಟ್ಟಿನಲಿ
ತೆರಹುಗೊಡದಿರಿ ನೂಕುನೂಕೆನು
ತುರುಬಿದನು ಸಹದೇವನೀತನ
ತರುಬಿ ಮೂದಲಿಸಿದನು ಮುಸುಕಿದನಂಬಿನಲಿ ರಥವ ॥17॥

೦೧೮ ಮೊದಲ ಬಲುಹನು ...{Loading}...

ಮೊದಲ ಬಲುಹನು ಕಂಡೆನಿನ್ನೀ
ತುದಿವರನ ತನಿಗೆಚ್ಚು ನಮ್ಮನು
ಬೆದರಿಸುವುದೋ ಶಿವಶಿವಾ ತಪ್ಪೇನು ತಪ್ಪೇನು
ಸದೆಗರಿವದಿರ ಗೆಲುವುದಾವಂ
ಗದಲಿ ಬಹುದೋ ಎನುತ ಪರಿಹಾ
ಸದಲಿ ರಿಪುಭಟನಂಬುಗಳ ಕೆದರಿದನು ಕಣೆಗಳಲಿ ॥18॥

೦೧೯ ಆತನೊಡನೆಯೆ ತೇರುತುರಗ ...{Loading}...

ಆತನೊಡನೆಯೆ ತೇರುತುರಗ
ವ್ರಾತವನು ಹುಡಿಮಾಡಿ ರಥಹಯ
ಸೂತ ಧನು ಶಸ್ತ್ರೌಘ ಕವಚ ಧ್ವಜ ಪತಾಕೆಗಳ
ಘಾತಿಸಿದನೈದಂಬಿನಲಿ ಮಗು
ಳಾತನುರವನು ತೋಡಿ ತೊಲಗಿಸಿ
ವಾತಜನನರಸಿದನು ಮೂದಲಿಸಿದನು ಸರಳಿನಲಿ ॥19॥

೦೨೦ ಶಿವಶಿವಾ ಸಹದೇವ ...{Loading}...

ಶಿವಶಿವಾ ಸಹದೇವ ನಕುಲರ
ಬವರ ಮುರಿದುದು ಬಿಡದೆ ಬಳಿಯಲಿ
ಪವನಜನ ತುಡುಕಿದನು ನೂಕಲಿ ಸರ್ವದಳವೆನುತ
ತವತವಗೆ ಸುತಸೋಮಕಾದಿಗ
ಳವಗಡಿಸಿದರು ಮತ್ಸ್ಯಕೈಕೆಯ
ನಿವಹ ಸಾತ್ಯಕಿ ಚೇಕಿತಾನರು ಕವಿದರುರವಣಿಸಿ ॥20॥

೦೨೧ ಎಲೆಲೆ ಪಾಣ್ಡವ ...{Loading}...

ಎಲೆಲೆ ಪಾಂಡವ ಸರ್ವದಳವಿ
ಟ್ಟಳಿಸಿತೋ ಸುಕುಮಾರನೊಬ್ಬನೆ
ನಿಲುವುದರಿದೋ ನೂಕೆನುತ ಕುರುಸೇನೆ ಸಂವರಿಸೆ
ಉಲುಕದಿರಿ ಭಾರಣೆಯ ಭಟರ
ಗ್ಗಳೆಯರೆನ್ನೀ ಮಕ್ಕಳಾಟಿಕೆ
ಯಳವನೀಕ್ಷಿಸಿ ಸಾಕೆನುತ ತರುಬಿದನು ಪರಬಲವ ॥21॥

೦೨೨ ತೇರನೆಚ್ಚನು ಕುದುರೆಕಾರರ ...{Loading}...

ತೇರನೆಚ್ಚನು ಕುದುರೆಕಾರರ
ದೂರದಲಿ ಖಂಡಿಸಿದನೊಗ್ಗಿನ
ವಾರಣೌಘವ ಸೀಳಿದನು ಹೂಳಿದನು ರಕುತದಲಿ
ಆರು ಬಲ್ಲರು ಪಯದಳವನಾ
ವೀರ ಸುತಸೋಮಾದಿ ನಿಖಿಳಕು
ಮಾರರಂಘವಣೆಗಳ ಸೆಳೆದುದು ಭೀತಿರಸಜಲಧಿ ॥22॥

೦೨೩ ಉಗುಳುಗುಳು ದುಶ್ಯಾಸನನ ...{Loading}...

ಉಗುಳುಗುಳು ದುಶ್ಯಾಸನನ ನೀ
ನುಗುಳು ಮಗುಳಿನ್ನಾರ ಬಸುರನು
ಹೊಗುವೆ ಮೊಲೆಮುಡಿಯಾರಿಗಿವು ಫಡ ನಿಲ್ಲು ನಿಲ್ಲೆನುತ
ಹೊಗರೊಗುವ ಹೊಸಮಸೆಯ ಬಾಯ್ಧಾ
ರೆಗಳ ಬಂಬಲುಗಿಡಿಯ ಬಾಣಾ
ಳಿಗಳಲೀತನ ಹೂಳಿದನು ಕಾಣೆನು ವೃಕೋದರನ ॥23॥

೦೨೪ ಕಳವಳಿಸಿತರಿಸೇನೆ ಬೊಬ್ಬೆಯೊ ...{Loading}...

ಕಳವಳಿಸಿತರಿಸೇನೆ ಬೊಬ್ಬೆಯೊ
ಳುಲಿದುದೀ ನಮ್ಮವರು ಕಂಡನು
ಬಳಿಕ ಮುರರಿಪು ತೋರಿದನು ಪಾರ್ಥಂಗೆ ಪವನಜನ
ಎಲೆ ಧನಂಜಯ ಭೀಮಲಯ ನಿ
ಮ್ಮಳಿವು ನಮ್ಮ ಪರೋಕ್ಷದಲಿ ನಾ
ವುಳಿವರಲ್ಲೀ ಹವಣ ಕಂಡೆವು ಕರ್ಣತನಯನಲಿ ॥24॥

೦೨೫ ಈಸು ಘನವೇ ...{Loading}...

ಈಸು ಘನವೇ ಕೃಷ್ಣ ಮಗುವಿವ
ನೈಸರವನೆಂದಿದ್ದೆನಾದರೆ
ಹಾಯ್ಸು ರಥವನು ಭೀಮಸೇನನ ರಥದ ಮುಂಗುಡಿಗೆ
ವಾಸಿಯೇಕಿವನಲಿ ವಚೋವಿ
ನ್ಯಾಸದಿಂ ರಥ ಮುಂಚಿತಹಿತನ
ಘಾಸಿಯಿಂದನಿಲಜನನುಗಿದನು ಬಗಿದು ರಿಪುಶರವ ॥25॥

೦೨೬ ಎಸುಗೆ ಚೆಲುವನು ...{Loading}...

ಎಸುಗೆ ಚೆಲುವನು ಹಾಲುಗಲ್ಲದ
ಹಸುಳೆಯಂಗವಿದಲ್ಲ ತುಂಬಿಯ
ದೆಸೆಗೆ ಕೆಂದಾವರೆಯ ಬನವೇ ವನದವಾನಳನು
ಉಸುರದೀ ಜಯದೊಪ್ಪದಲಿ ಜಾ
ಳಿಸುವರೊಳ್ಳಿತು ತೊಲಗೆನುತ ನಿ
ಪ್ಪಸರದಲಿ ತೆಗೆದೆಚ್ಚನರ್ಜುನನಿನಸುತನಸುತನ ॥26॥

೦೨೭ ಚಾರುಪೌರುಷ ಸಮರವಿಹ್ವಳ ...{Loading}...

ಚಾರುಪೌರುಷ ಸಮರವಿಹ್ವಳ
ತಾರಕರು ನೀವ್ ನಮ್ಮದಿದು ಕೌ
ಮಾರದೆಸೆ ತಾಮಸವಲೇ ನಿಮಗಾನು ಸಮಬಳನೆ
ಕೂರಲಗು ತೊಲೆಗೋಲಿನಲಿ ನಿ
ಮ್ಮಾರುಭಟೆಯನು ನಮ್ಮ ಬಾಹುವಿ
ಕಾರಬಲವನು ತೂಗಿಯೆನುತೆಚ್ಚನು ಧನಂಜಯನ ॥27॥

೦೨೮ ಮುರಮಥನ ಚಿತ್ತೈಸಿದೈ ...{Loading}...

ಮುರಮಥನ ಚಿತ್ತೈಸಿದೈ ತರು
ವರಿಯ ಸಾಭಿಪ್ರಾಯ ವಾಕ್ಯ
ಸ್ಫುರಣವನು ಸಭ್ಯಾಂಗ ಭಾಷಿತ ಭಾವ ನಿಷ್ಠುರವ
ಪರಿಹೃತಿಯೆ ಕರ್ತವ್ಯವೆನುತು
ಚ್ಚರಿಸಿದನು ಮೌರ್ವೀ ನಿನಾದ
ಸ್ಫುರಿತ ವಿಮಳ ಪ್ರಣವಮುಖ ಶರಸೂಕ್ತಸಂತತಿಯ ॥28॥

೦೨೯ ಅದು ಬಳಿಕ ...{Loading}...

ಅದು ಬಳಿಕ ಲೋಕಾಯತಾಂಗ
ಚ್ಛದನ ಪರನಾರಾಚ ನಿರ್ಮಾ
ಣದಲಿ ಭಂಗಿತವಾಯ್ತು ಪಾರ್ಥನ ಬಾಣದೊಡ್ಡವಣೆ
ಬಿದಿರ ಮೊಳೆಯಲಿ ಹರಿವುದೇ ಬೆ
ಟ್ಟದಲಿ ಹರಿಯದ ವಸ್ತು ಹರನಿಂ
ದೊದಗಿದಂಬಿನ ಹವಣ ತೋರೆಂದೆಚ್ಚನರ್ಜುನನ ॥29॥

೦೩೦ ದನುಜರಿಪು ಹುಸಿಯಲ್ಲ ...{Loading}...

ದನುಜರಿಪು ಹುಸಿಯಲ್ಲ ನಮ್ಮೊ
ಡ್ಡಿನಲಿ ಭಟನಭಿಮನ್ಯು ಪರರೊ
ಡ್ಡಿನಲಿ ಭಟನಿವನಲ್ಲದಿಲ್ಲ ಕುಮಾರವರ್ಗದಲಿ
ತನಗೆ ದೇವತ್ರಿತಯವಲ್ಲದೆ
ದನುಜ ದಿವಿಜಾದಿ ತ್ರಿಲೋಕದ
ಜನವಿದಿರೆ ಮೆಚ್ಚಿಸಿತು ಮಗುವಿನ ದಿಟ್ಟತನವೆಂದ ॥30॥

೦೩೧ ಪೂತುರೇ ವೃಷಸೇನ ...{Loading}...

ಪೂತುರೇ ವೃಷಸೇನ ಶರಸಂ
ಘಾತವಿದೆಕೋ ಸೈರಿಸಾದಡೆ
ಪಾತಕಕ್ಕೋಸರಿಸಿದೆವಲೇ ಭ್ರೂಣಹತಿಯೆಂಬ
ಮಾತು ಹಲವರಲೇನು ಪಾರ್ಥಿವ
ಜಾತಿಗೆನುತ ಮಹಾಸ್ತ್ರನಿಕರದೊ
ಳೀತನನು ಮುಸುಕಿದನು ಶರಮಯವಾಯ್ತು ರಣಭೂಮಿ ॥31॥

೦೩೨ ಆವ ವಹಿಲದೊಳರ್ಜುನನ ...{Loading}...

ಆವ ವಹಿಲದೊಳರ್ಜುನನ ಬಾ
ಣಾವಳಿಯ ತರಿದೊಟ್ಟಿ ಮಗುಳೆ ಶ
ರಾವಳಿಯ ಕೊನೆಗಳಲಿ ಮುದ್ರಿಸಿದನು ಧನಂಜಯನ
ನಾವರಿಯೆವೀಸದುಭುತವನಿವ
ಕಾವನೇ ಮಿಕ್ಕವರನರ್ಜುನ
ದೇವನಲಿ ಸರಿಮಿಗಿಲ ಕಾದಿದನರಸ ಕೇಳ್ ಎಂದ ॥32॥

೦೩೩ ನರನ ಮಾರಙ್ಕದ ...{Loading}...

ನರನ ಮಾರಂಕದ ಮಹೇಂದ್ರಗೆ
ಚರಣಯುಗ ಬೆನ್ನಿನಲಿ ಬವರದೊ
ಳರಿದಲೈ ಭೀಷ್ಮಾದಿಗಳಿಗೀ ರಣದ ಮೇಳಾಪ
ಜರಡನೈ ಭಾರಂಕದಾಳಿವ
ತರಳನೇ ಸುರಗಿರಿಯನಾನುವ
ಕೊರಳ ಸತ್ವವೆ ಶಿವಶಿವೆಂದುದು ಮೇಲೆ ಸುರಕಟಕ ॥33॥

೦೩೪ ಎಸಲು ಕಡಿದನು ...{Loading}...

ಎಸಲು ಕಡಿದನು ಝೂಡಿಯಲಿ ಝೊಂ
ಪಿಸಲು ಜಡಿದನು ಚಳಕದಲಿ ಜಾ
ಳಿಸಿದರೊಂದಕ್ಕೆರಡು ನಾಲ್ಕಕ್ಕೆಂಟು ತೋರಿಸಿದ
ಮುಸುಕಿದರೆ ಮಂತ್ರಾಸ್ತ್ರದಲಿ ಮೋ
ಹಿಸಿದ ಸರಿಸಕೆ ಸರಿಸ ವಿಷಮಕೆ
ವಿಷಮಗತಿ ಶರಸಾರ ಸಾಳಂಗದಲಿ ರಂಜಿಸಿದ ॥34॥

೦೩೫ ಆಯಿತಿದು ಸಮರದಲಿ ...{Loading}...

ಆಯಿತಿದು ಸಮರದಲಿ ಗುರು ಗಾಂ
ಗೇಯ ಕರ್ಣದ್ರೌಣಿಗಳ ತರು
ವಾಯ ಲೆಕ್ಕಕೆ ಸಂದನೈ ಮಝ ಪೂತು ಪಾಯ್ಕೆನುತ
ಸಾಯಕವನಭಿಮಂತ್ರಿಸುತ ವೈ
ನಾಯಕಾಸ್ತ್ರವ ಹೂಡಿದನು ಬಲ
ಬಾಯಬಿಡೆ ಚಿಗಿದಂಬು ಕಡಿದುದು ಕರ್ಣನಂದನನ ॥35॥

೦೩೬ ಚಿಗಿದ ತಲೆ ...{Loading}...

ಚಿಗಿದ ತಲೆ ಬೊಬ್ಬಿರಿಯೆ ಬಳಿಕಾ
ಳುಗಳ ದೇವನು ಮುಷ್ಟಿಬಳಿಗೋ
ಲುಗಳನೈದಾರೇಳ ಹಳುಹಳುವಾಯಿಯೆಸುಗೆಯಲಿ
ತೆಗೆದು ನಿಂದುದು ಭಯರಸದ ಹ
ಬ್ಬುಗೆಯಲುಬ್ಬಿದ ಶೋಕದೊಡ್ಡಿನ
ಮುಗಿಲು ಕರೆದುದು ಕುರುಬಲದ ಕಂಬನಿಯ ಬಿರುವಳೆಯ ॥36॥

೦೩೭ ಕದಡಿತೀ ಬಲಜಲಧಿ ...{Loading}...

ಕದಡಿತೀ ಬಲಜಲಧಿ ಕಲ್ಪಾಂ
ತದ ಸಮುದ್ರದವೊಲು ಮಹಾಧ್ವನಿ
ಗದಗದಿಸೆ ಹಾ ಕರ್ಣಸುತ ಹಾ ಕರ್ಣಸುತ ಎನುತ
ಕೆದರಿತೀಶನ ಭಾಳದುರಿನೇ
ತ್ರದವೊಲುರಿದುದು ಸೂತಸುತ ಸಾ
ಕಿದ ಕುಮಾರನ ಮೇಳವದ ಮನ್ನಣೆಯ ಪರಿವಾರ ॥37॥

೦೩೮ ನೂಕಿತೀ ಬಲದಳದ ...{Loading}...

ನೂಕಿತೀ ಬಲದಳದ ಪದಹತಿ
ಗೇಕೆ ಬಿರಿಯದು ಧರಣಿ ದಿಕ್ಕರಿ
ಯೋಕರಿಸದೇ ಮದವನಾದರೆ ಪುಣ್ಯನಬುಜಭವ
ಈ ಕಡುಹಿನಾತಗಳನಾನುವ
ಡೀ ಕಪರ್ದಿಯೆ ಸಾಕು ಕೆಲನವ
ರಾಕೆವಾಳರೆ ಎನುತಲಿರ್ದುದು ಮೇಲೆ ಸುರಕಟಕ ॥38॥

೦೩೯ ಉರಿಯ ಸರಿಗೇರಿದ ...{Loading}...

ಉರಿಯ ಸರಿಗೇರಿದ ಪತಂಗಕೆ
ಮರಳುದಲೆಯೇ ಮತ್ತೆ ರಣದಲಿ
ನರನೊಡನೆ ಕಳನೇರಿದಾತನ ಸತಿ ಸುವಾಸಿನಿಯೆ
ಅರಳ ಹೊಸ ಸಂಪಗೆಯ ಮಧುವನು
ಮರಿಗೆ ತಹವೇ ತುಂಬಿಗಳು ಕೇ
ಳರಸ ಹರಿಬಕೆ ಹೊಕ್ಕ ಸುಭಟರ ಕಾಣೆ ನಾನೆಂದ ॥39॥

೦೪೦ ಕೇಣವಿಲ್ಲದೆ ಹೊಕ್ಕ ...{Loading}...

ಕೇಣವಿಲ್ಲದೆ ಹೊಕ್ಕ ಕುದುರೆಗ
ಳಾಣತಿಯ ತುಂಬಿಯ ಕಪೋಲ
ದ್ರೋಣಿಯೊರತೆಯ ಮದದ ಕರಿಗಳ ಕಡುಹ ನಿಜರಥದ
ಸಾಣೆಯಲಗಿನ ಸರಿಯ ಸೋನೆಯ
ಜಾಣತನವೋ ಜಯದ ಸುಭಟರ
ಕಾಣೆನೈ ಕಣೆಯೆರಡರಲಿ ಸಂವರಿಸಿದನು ಪಾರ್ಥ ॥40॥

೦೪೧ ವೀರದುಶ್ಯಾಸನನು ಕರ್ಣಕು ...{Loading}...

ವೀರದುಶ್ಯಾಸನನು ಕರ್ಣಕು
ಮಾರಕರು ನೀ ಸಾಕಿದಗ್ಗಳ
ವೀರದಳ ಕೌರವ ಸಹೋದರಸೇನೆ ಮೊದಲಾಗಿ
ತೀರಿತಾಹವದಲಿ ಕುರುವ್ರಜ
ವಾರುಧಿಗೆ ಸರಿಯಾಯ್ತು ನಿನ್ನ ಕು
ಮಾರನಿಂಗಿತವರಿದು ಸಮರಕೆ ಕರ್ಣನನುವಾದ ॥41॥

+೨೦ ...{Loading}...