೦೦೦ ಸೂ ರಾಯ ...{Loading}...
ಸೂ. ರಾಯ ಚೌಪಟಮಲ್ಲ ಮಲೆವರಿ
ರಾಯ ಧೂಳೀಪಟ್ಟ ಗರ್ವಿತ
ರಾಯ ಭೀಕರ ಭೀಮ ಕೊಂದನು ಕೌರವಾನುಜನ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ : ಆಕ್ರಮಣ ಮಾಡಿದ ರಾಜರನ್ನು ಗೆಲ್ಲಬಲ್ಲ, ಪ್ರತಿಭಟಿಸುವ ಶತ್ರು ರಾಜರನ್ನು ಧೂಳೀಪಟ ಮಾಡುವ, ಅಹಂಕಾರದಿಂದ ಕೂಡಿದ ರಾಜರಿಗೆ ಭಯವನ್ನುಂಟು ಮಾಡುವ ಭೀಮನು ದುಶ್ಶಾಸನನನ್ನು ಕೊಂದನು.
ಮೂಲ ...{Loading}...
ಸೂ. ರಾಯ ಚೌಪಟಮಲ್ಲ ಮಲೆವರಿ
ರಾಯ ಧೂಳೀಪಟ್ಟ ಗರ್ವಿತ
ರಾಯ ಭೀಕರ ಭೀಮ ಕೊಂದನು ಕೌರವಾನುಜನ
೦೦೧ ಕೇಳು ಧೃತರಾಷ್ಟ್ರಾವನಿಪ ...{Loading}...
ಕೇಳು ಧೃತರಾಷ್ಟ್ರಾವನಿಪ ನಿ
ನ್ನಾಳು ತಲೆಕೆಳಗಾಯ್ತು ಭೀಮನ
ಧಾಳಿ ಹೆಚ್ಚಿತು ಹೊಸತು ದಶಕದ ಮಸಕ ಮಿಗಿಲಾಯ್ತು
ಮೇಲೆಮೇಲುಬ್ಬೇಳ್ವ ರಿಪುಶರ
ಜಾಲ ಧಾರಾಧೂಮವಹ್ನಿ
ಜ್ವಾಲೆಗುರೆ ತೇರೈಸಿ ಕೋರೈಸಿತು ಕುರುಸ್ತೋಮ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಧೃತರಾಷ್ಟ್ರನೇ ಕೇಳು, ನಿನ್ನ ಸೈನಿಕರಿಗೆ ಹೆದರಿಕೆಯಾಯಿತು. ಭೀಮನ ಆಕ್ರಮಣ ಹತ್ತುಪಟ್ಟು ಜೋರಾಯಿತು. ಮೇಲೆ ಮೇಲಕ್ಕೆ ಉಬ್ಬಿ ಏಳುತ್ತಿರುವ ಧಾರಾಕಾರವಾಗಿ ಬೀಳುತ್ತಿದ್ದ ಶತ್ರುಗಳ ಬಾಣಗಳೆಂಬ ಅಗ್ನಿಜ್ವಾಲೆಗೆ ಪೂರ್ತಿಯಾಗಿ ಹೆದರಿ ಸಿಲುಕಿದಂತೆ ಕಾಣಿಸುತ್ತಿತ್ತು ಕೌರವರ ಸೈನ್ಯ.” ಎಂದು ಸಂಜಯನು ಹೇಳಿದನು
ಪದಾರ್ಥ (ಕ.ಗ.ಪ)
ತೇರಯ್ಸು-ಒಟ್ಟಾಗು , ಕೋರಯಿಸು-ಹೆದರು
ಮೂಲ ...{Loading}...
ಕೇಳು ಧೃತರಾಷ್ಟ್ರಾವನಿಪ ನಿ
ನ್ನಾಳು ತಲೆಕೆಳಗಾಯ್ತು ಭೀಮನ
ಧಾಳಿ ಹೆಚ್ಚಿತು ಹೊಸತು ದಶಕದ ಮಸಕ ಮಿಗಿಲಾಯ್ತು
ಮೇಲೆಮೇಲುಬ್ಬೇಳ್ವ ರಿಪುಶರ
ಜಾಲ ಧಾರಾಧೂಮವಹ್ನಿ
ಜ್ವಾಲೆಗುರೆ ತೇರೈಸಿ ಕೋರೈಸಿತು ಕುರುಸ್ತೋಮ ॥1॥
೦೦೨ ಉಲುಕಲಮ್ಮುವರಿಲ್ಲಲಾ ಭಟ ...{Loading}...
ಉಲುಕಲಮ್ಮುವರಿಲ್ಲಲಾ ಭಟ
ರಳುಕಿದರೆ ಭಾರಂಕದವರ
ಗ್ಗಳೆಯ ಬಿರುದರು ಬೀತರೇ ಸೋತರೆ ಪಲಾಯನಕೆ
ಹಲವುಮಾತೇನೆಮ್ಮ ಮಾವನ
ಕಳನ ಹರಿಬಕೆ ನಾವೆ ಇನ್ನೈ
ಸಲೆ ಎನುತ ನೆರಹಿದನು ನಿನ್ನ ಕುಮಾರಕನು ದಳವ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಒಂದೇ ಬಾರಿಗೆ ಮುನ್ನುಗ್ಗಿ ಸಾಹಸ ತೋರಿಸುವ ಸೈನಿಕರು ಇಲ್ಲವೇ ಅಥವಾ ಅಂತಹವರು, ಹೆದರಿದರೇ - ಮಹಾಯುದ್ಧ ಮಾಡುವ ಶ್ರೇಷ್ಠರಾದ ಬಿರುದಿನ ವೀರರು ಭಯಪಟ್ಟರೇ, ಪಲಾಯನ ಮಾಡುವುದಕ್ಕೆ ಮೋಹಗೊಂಡರೇ - ಹಲವು ಮಾತಗಳನ್ನಾಡುವುದರಿಂದ ಪ್ರಯೋಜನವೇನು. ನಮ್ಮ ಮಾವ ಶಕುನಿಯ ಯುದ್ಧದ ಕೆಲಸವನ್ನು ಮುಂದುವರೆಸುವ ಕರ್ತವ್ಯಕ್ಕೆ ನಾನೇ ಸರಿ” ಎನ್ನುತ್ತ ನಿನ್ನ ಕುಮಾರ (ದುಶ್ಶಾಸನ)ನು ಸೈನ್ಯವನ್ನು ಒಟ್ಟುಗೂಡಿಸಿದನು.
ಪದಾರ್ಥ (ಕ.ಗ.ಪ)
ಉಲುಕು-ಒಂದೇ ಬಾರಿಗೆ ಮುನ್ನುಗ್ಗು, ಭಾರಂಕ-ಮಹಾಯುದ್ಧ
ಮೂಲ ...{Loading}...
ಉಲುಕಲಮ್ಮುವರಿಲ್ಲಲಾ ಭಟ
ರಳುಕಿದರೆ ಭಾರಂಕದವರ
ಗ್ಗಳೆಯ ಬಿರುದರು ಬೀತರೇ ಸೋತರೆ ಪಲಾಯನಕೆ
ಹಲವುಮಾತೇನೆಮ್ಮ ಮಾವನ
ಕಳನ ಹರಿಬಕೆ ನಾವೆ ಇನ್ನೈ
ಸಲೆ ಎನುತ ನೆರಹಿದನು ನಿನ್ನ ಕುಮಾರಕನು ದಳವ ॥2॥
೦೦೩ ಆ ವಿಗಡ ...{Loading}...
ಆ ವಿಗಡ ಪರಿವಾರದಲಿ ರಥ
ಸಾವಿರವ ಮೇಳೈಸಿದರು ದಂ
ತ್ಯಾವಳಿಯ ಬೇರೆಣಿಸಿ ನಿಲಿಸಿದರೈದುಸಾವಿರವ
ರಾವುತರೊಳಗ್ಗಳೆಯರನು ದಶ
ಸಾವಿರವ ಜೋಡಿಸಿದರಿನಿಬರು
ಸಾವನೇ ನಿಶ್ಚೈಸಿ ಬಿಗಿದರು ವೀರಕಂಕಣವ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುರ್ಯೋಧನನ ಪರಿವಾರದಲ್ಲಿ ಸಾವಿರ ರಥಗಳನ್ನು ಒಂದು ಕಡೆ ಸೇರಿಸಿದರು. ಐದು ಸಾವಿರ ಆನೆಗಳನ್ನು ಬೇರೆಯಾಗಿ ಲೆಕ್ಕ ಹಾಕಿ ನಿಲ್ಲಿಸಿದರು. ರಾವುತರಲ್ಲಿ ಶ್ರೇಷ್ಠರಾದ ಹತ್ತು ಸಾವಿರ ಜನರನ್ನು ಹೊಂದಿಸಿದರು. ಅಷ್ಟು ಜನ ಸಾವನ್ನೇ ನಿಶ್ಚಯಿಸಿಕೊಂಡು, ಕಂಕಣವನ್ನು ಬಿಗಿದುಕೊಂಡರು.
ಮೂಲ ...{Loading}...
ಆ ವಿಗಡ ಪರಿವಾರದಲಿ ರಥ
ಸಾವಿರವ ಮೇಳೈಸಿದರು ದಂ
ತ್ಯಾವಳಿಯ ಬೇರೆಣಿಸಿ ನಿಲಿಸಿದರೈದುಸಾವಿರವ
ರಾವುತರೊಳಗ್ಗಳೆಯರನು ದಶ
ಸಾವಿರವ ಜೋಡಿಸಿದರಿನಿಬರು
ಸಾವನೇ ನಿಶ್ಚೈಸಿ ಬಿಗಿದರು ವೀರಕಂಕಣವ ॥3॥
೦೦೪ ಕುಡಿತೆಯಲಿ ಕರ್ಪುರವ ...{Loading}...
ಕುಡಿತೆಯಲಿ ಕರ್ಪುರವ ಸುರಿಸುರಿ
ದೊಡನೆ ಸಾದು ಜವಾಜಿಲೇಪವ
ಮುಡಿವ ಹೊಸಹೂಗಳನು ವರಗಂಧಾನುಲೇಪನದ
ಉಡುಗೊರೆಯ ವೀಳೆಯದ ರತ್ನದ
ತೊಡಿಗೆಗಳಲಾ ಪಟುಭಟರ ವಂ
ಗಡವ ಮನ್ನಿಸಿ ನಿನ್ನ ಮಗನನುವಾದನಾಹವಕೆ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಧೃತರಾಷ್ಟ್ರನೇ, ಕೈಗಳ ಮೇಲೆ ಕರ್ಪೂರ ವೀಳೆಯವನ್ನು ಧಾರಾಳವಾಗಿ ಹಾಕಿ, ಜೊತೆಯಲ್ಲಿ ಸಾದು ಜವಾಜಿ ಮೊದಲಾದ ಲೇಪನಗಳನ್ನು, ಮುಡಿಯುವಂತಹ ಹೊಸಹೂಗಳನ್ನು, ಶ್ರೇಷ್ಠವಾದ ಗಂಧವನ್ನು ,ಉಡುಗೊರೆ, ವೀಳೆಯ ಹಾಗೂ ರತ್ನದ ಆಭರಣಗಳನ್ನು ಕೊಟ್ಟು ಬಲಶಾಲಿಗಳಾದ ತನ್ನ ಯೋಧರನ್ನು ಗೌರವಿಸಿ, ನಿನ್ನ ಮಗನು ಯುದ್ಧಕ್ಕೆ ಸಿದ್ಧವಾದನು” ಎಂದನು ಸಂಜಯ.
ಮೂಲ ...{Loading}...
ಕುಡಿತೆಯಲಿ ಕರ್ಪುರವ ಸುರಿಸುರಿ
ದೊಡನೆ ಸಾದು ಜವಾಜಿಲೇಪವ
ಮುಡಿವ ಹೊಸಹೂಗಳನು ವರಗಂಧಾನುಲೇಪನದ
ಉಡುಗೊರೆಯ ವೀಳೆಯದ ರತ್ನದ
ತೊಡಿಗೆಗಳಲಾ ಪಟುಭಟರ ವಂ
ಗಡವ ಮನ್ನಿಸಿ ನಿನ್ನ ಮಗನನುವಾದನಾಹವಕೆ ॥4॥
೦೦೫ ಬಲದೊಳಗೆ ಹೆಸರುಳ್ಳವರು ...{Loading}...
ಬಲದೊಳಗೆ ಹೆಸರುಳ್ಳವರು ನೃಪ
ತಿಲಕ ನೀ ಸಾಕಿದ ಕುಮಾರರು
ಹಳೆಯರಲಿ ಮಿಕ್ಕವರು ಮಕ್ಕಳ ತಂಡದಲಿ ಕೆಲರು
ಅಳಲಿಗರು ದುಶ್ಯಾಸನನ ಬಲ
ದೊಳಗೆ ನಿಂದುದು ಸಾಲಸಿಡಿಲಿನ
ಬಳಗವೋ ನಿನ್ನವರ ಬಣ್ಣಿಸಲರಿಯೆ ನಾನೆಂದ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ದೊರೆಯೇ ನಿನ್ನ ಮಕ್ಕಳು ಶಕ್ತಿಯಲ್ಲಿ ತುಂಬಾ ಹೆಸರು ಮಾಡಿದವರು, ಅವರ ಸೈನ್ಯದಲ್ಲಿ ಕೆಲವರು ಹಿರಿಯರು ಮೊದಲಾದವರು ನಿನ್ನ ಮಕ್ಕಳ ತಂಡದಲ್ಲಿದ್ದಾರೆ. ಶತ್ರುಗಳಿಗೆ ದುಃಖ ತಂದೊಡ್ಡುವಂತಹವರು ದುಶ್ಶಾಸನನ ಸೈನ್ಯದಲ್ಲಿ ನಿಂತಿದ್ದಾರೆ. ಅವರು ಸಾಲು ಸಾಲಾಗಿ ಬರುವ ಸಿಡಿಲಿನ ಬಳಗದಂತೆ ಇದ್ದರು. ನಿನ್ನ ಕಡೆಯವರನ್ನು ಬಣ್ಣಿಸಲು ನನಗೆ ತಿಳಿಯುತ್ತಿಲ್ಲ” ಎಂದನು ಸಂಜಯ.
ಮೂಲ ...{Loading}...
ಬಲದೊಳಗೆ ಹೆಸರುಳ್ಳವರು ನೃಪ
ತಿಲಕ ನೀ ಸಾಕಿದ ಕುಮಾರರು
ಹಳೆಯರಲಿ ಮಿಕ್ಕವರು ಮಕ್ಕಳ ತಂಡದಲಿ ಕೆಲರು
ಅಳಲಿಗರು ದುಶ್ಯಾಸನನ ಬಲ
ದೊಳಗೆ ನಿಂದುದು ಸಾಲಸಿಡಿಲಿನ
ಬಳಗವೋ ನಿನ್ನವರ ಬಣ್ಣಿಸಲರಿಯೆ ನಾನೆಂದ ॥5॥
೦೦೬ ಸಾಲ ಸಿನ್ಧದ ...{Loading}...
ಸಾಲ ಸಿಂಧದ ಮಣಿವ ಗೋವಳಿ
ಗೋಲ ತೂಕದ ತಳಿತ ಚೌರಿಯ
ಜಾಲ ಮೋಹಿದ ಮೇಘಘಟೆಯೆನೆ ಜಡಿವ ಝಲ್ಲರಿಯ
ಜಾಳಿಗೆಯ ಹೊಗರೊಗುವ ವಹ್ನಿ
ಜ್ವಾಲೆಯೆನೆ ಝಳಪಿಸುವ ಕೈದುಗ
ಳೋಳಿ ಹೊಳೆದುದು ಸೆಳೆದುದೀತನ ಗರ್ವವಿಭ್ರಮವ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧ್ವಜಗಳ ಸಾಲು, ಬಾಗಿಸಿ ಹಿಡಿದ ಭಾರಿಯ ದಂಡಗಳು, ಚಿಗುರಿದಂತೆ ಕಾಣುವ ಚಾಮರಗಳು, ಒಟ್ಟುಗೂಡಿದ ಮೋಡಗಳು ಎನ್ನುವಂತಿದ್ದ ತೋರಣಗಳ ಸಮೂಹ, ಕಾಂತಿಯನ್ನು ಹೊಮ್ಮಿಸುತ್ತಿರುವ ಬೆಂಕಿಯ ಜ್ವಾಲೆ ಎನ್ನುವಂತೆ ಝಳಪಿಸುತ್ತಿದ್ದ, ಆಯುಧಗಳು ದುಶ್ಶಾಸನನ ಗರ್ವ ವೈಭವವನ್ನು ತೋರಿಸುತ್ತಿದ್ದವು.
ಮೂಲ ...{Loading}...
ಸಾಲ ಸಿಂಧದ ಮಣಿವ ಗೋವಳಿ
ಗೋಲ ತೂಕದ ತಳಿತ ಚೌರಿಯ
ಜಾಲ ಮೋಹಿದ ಮೇಘಘಟೆಯೆನೆ ಜಡಿವ ಝಲ್ಲರಿಯ
ಜಾಳಿಗೆಯ ಹೊಗರೊಗುವ ವಹ್ನಿ
ಜ್ವಾಲೆಯೆನೆ ಝಳಪಿಸುವ ಕೈದುಗ
ಳೋಳಿ ಹೊಳೆದುದು ಸೆಳೆದುದೀತನ ಗರ್ವವಿಭ್ರಮವ ॥6॥
೦೦೭ ಹರೆದ ಬಲ ...{Loading}...
ಹರೆದ ಬಲ ಹುರಿಗಟ್ಟಿ ಖತಿಯಲಿ
ದೊರೆಯ ಕೂಡೊದಗಿದುದು ಬೀರುವ
ಬಿರುದುಗಹಳೆಯ ದನಿಯ ಘಾಯದ ಭೂರಿ ಭೇರಿಗಳ
ಮೊರೆವ ಬಹುವಿಧ ವಾದ್ಯರಭಸದ
ಧರಧುರದ ಕೆಂಧೂಳಿಯಲಿ ಮೋ
ಹರಿಸಿ ಮುಸುಕಿತು ಭೀಮಸೇನನ ರಥದ ಬಳಸಿನಲಿ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಚೆಲ್ಲಾಪಿಲ್ಲಿಯಾಗಿದ್ದ ಕೌರವನ ಸೈನ್ಯ ಮತ್ತೆ ಒಂದಾಗಿ, ಕೋಪದಿಂದ ದೊರೆಯನ್ನು ಸೇರಿಕೊಂಡಿತು. ಬಿರುದುಗಳನ್ನು ಎಲ್ಲ ಕಡೆ ಬೀರುತ್ತಿರುವ ಕಹಳೆಯ ಧ್ವನಿ, ಜೋರಾಗಿ ಶಬ್ದ ಮಾಡುತ್ತಿರುವ ಭೇರಿಗಳ ಧ್ವನಿ, ಮೊರೆಯುತ್ತಿರುವ ಅನೇಕ ಬಗೆಯ ವಾದ್ಯಗಳ ರಭಸದ ಧ್ವನಿಗಳ ಆರ್ಭಟದೊಂದಿಗೆ ಕೆಂಪು ಧೂಳನ್ನು ಎಬ್ಬಿಸುತ್ತಾ ಭೀಮನ ರಥಕ್ಕೆ ಮುತ್ತಿಗೆ ಹಾಕಿತು.
ಮೂಲ ...{Loading}...
ಹರೆದ ಬಲ ಹುರಿಗಟ್ಟಿ ಖತಿಯಲಿ
ದೊರೆಯ ಕೂಡೊದಗಿದುದು ಬೀರುವ
ಬಿರುದುಗಹಳೆಯ ದನಿಯ ಘಾಯದ ಭೂರಿ ಭೇರಿಗಳ
ಮೊರೆವ ಬಹುವಿಧ ವಾದ್ಯರಭಸದ
ಧರಧುರದ ಕೆಂಧೂಳಿಯಲಿ ಮೋ
ಹರಿಸಿ ಮುಸುಕಿತು ಭೀಮಸೇನನ ರಥದ ಬಳಸಿನಲಿ ॥7॥
೦೦೮ ಸಾರಹೇಳೋ ರಾಯಕುವರ ...{Loading}...
ಸಾರಹೇಳೋ ರಾಯಕುವರ ಮು
ರಾರಿ ದುಶ್ಯಾಸನ ಕಣಾ ಫಡ
ವೈರಿ ಭೀಮ ದ್ವಿರದ ಕುಂಭಸ್ಥಳಕೆ ಪಂಚಮುಖ
ವೀರಮನ್ಮಥ ತ್ರಿಪುರಹರ ಜು
ಜ್ಝಾರ ಭಟ ಜಗಜಟ್ಟಿಗಿದಿರೆ ವಿ
ಕಾರಿಯೇ ಫಡ ಭೀಮನೆನುತೈದಿತು ಭಟಸ್ತೋಮ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುಶ್ಶಾಸನನ ಕಡೆಯ ಸೈನಿಕರು ‘ಮುರನೆಂಬ ರಾಕ್ಷಸನಂತಿರುವ ರಾಜಕುಮಾರಿಗೆ ಕೃಷ್ಣನಂತಿರುವ ದುಶ್ಶಾಸನನು ಬಂದಿದ್ದಾನೆ. ವೈರಿಯಾದ ಭೀಮನೆಂಬ ಆನೆಯ ಕುಂಭಸ್ಥಳವನ್ನು ಪ್ರಹಾರ ಮಾಡುವ ಸಿಂಹ ಇವನು. ವೀರನಾದ ಮನ್ಮಥನನ್ನು ಸುಟ್ಟಂತಹ ಶಿವನಿಗೆ ಸಮಾನನಾದ ಜಗಜಟ್ಟಿ ಇವನು. ವಿಕಾರಿಯಾದ ಭೀಮನು ಇವನ ಎದುರಿನಲ್ಲಿ ನಿಲ್ಲಲು ಸಾಧ್ಯವೇ. ನೋಡೋಣ, ಅವನನ್ನು ಸಮೀಪಕ್ಕೆ ಬರಲು ಹೇಳಿ ಎಂದು ಚಲಿಸಿತು.
ಪದಾರ್ಥ (ಕ.ಗ.ಪ)
ಪಂಚಮುಖ-ಸಿಂಹ, ದ್ವಿರದ-ಆನೆ
ಮೂಲ ...{Loading}...
ಸಾರಹೇಳೋ ರಾಯಕುವರ ಮು
ರಾರಿ ದುಶ್ಯಾಸನ ಕಣಾ ಫಡ
ವೈರಿ ಭೀಮ ದ್ವಿರದ ಕುಂಭಸ್ಥಳಕೆ ಪಂಚಮುಖ
ವೀರಮನ್ಮಥ ತ್ರಿಪುರಹರ ಜು
ಜ್ಝಾರ ಭಟ ಜಗಜಟ್ಟಿಗಿದಿರೆ ವಿ
ಕಾರಿಯೇ ಫಡ ಭೀಮನೆನುತೈದಿತು ಭಟಸ್ತೋಮ ॥8॥
೦೦೯ ದಾಯವಿದು ಮಝ ...{Loading}...
ದಾಯವಿದು ಮಝ ಪೂತು ರಣದ ವಿ
ಡಾಯಿಯಹುದೋ ಕಲಿ ಯುಧಿಷ್ಠಿರ
ರಾಯನಾಣೆ ಸುಯೋಧನಾನುಜನೋಜೆ ಲೇಸೆನುತ
ವಾಯುಸುತನಾಕರ್ಣ ಕರುಷಿತ
ಸಾಯಕನು ರಿಪುಸುಭಟಕುಲ ಲಯ
ದಾಯಕನು ದಳದುಳವ ಹಾಯ್ದನು ವೈರಿಮೋಹರವ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಇದು ಸರಿಯಾದ ಲೆಕ್ಕಾಚಾರ’ ಭೇಷ್. ಕಾಳಗದ ಸಂಭ್ರಮ ಎಂದರೆ ಹೀಗಿರಬೇಕು. ಧರ್ಮರಾಯನ ಆಣೆಯಾಗಿಯೂ, ದುಶ್ಶಾಸನನ ಯುದ್ಧದ ಕ್ರಮ ತುಂಬಾ ಚೆನ್ನಾಗಿದೆ” ಎಂದು ಹೇಳುತ್ತಾ ಕಿವಿಯವರೆಗೂ ಬಿಲ್ಲಿನ ಹಗ್ಗವನ್ನು ಹಿಡಿದೆಳೆದು ಬಾಣಪ್ರಯೋಗಕ್ಕೆ ಸಿದ್ಧನಾದ, ಶತ್ರುಸೈನಿಕರನ್ನು ನಾಶ ಮಾಡುವವನಾದ ಭೀಮನು ಶತ್ರುಗಳ ಮೇಲೆ ಧಾಳಿ ಮಾಡಿದನು.
ಮೂಲ ...{Loading}...
ದಾಯವಿದು ಮಝ ಪೂತು ರಣದ ವಿ
ಡಾಯಿಯಹುದೋ ಕಲಿ ಯುಧಿಷ್ಠಿರ
ರಾಯನಾಣೆ ಸುಯೋಧನಾನುಜನೋಜೆ ಲೇಸೆನುತ
ವಾಯುಸುತನಾಕರ್ಣ ಕರುಷಿತ
ಸಾಯಕನು ರಿಪುಸುಭಟಕುಲ ಲಯ
ದಾಯಕನು ದಳದುಳವ ಹಾಯ್ದನು ವೈರಿಮೋಹರವ ॥9॥
೦೧೦ ನುಸಿಗಳೆನ್ನೆವು ನೀವು ...{Loading}...
ನುಸಿಗಳೆನ್ನೆವು ನೀವು ಜಗಸಾ
ಹಸಿಕರೈ ಕಾಲಾಳು ಜೋಧ
ಪ್ರಸರದೆಸುಗೆಗೆ ಹೆದರುವೆವು ಹೇರಾಳದಂಬುಗಳ
ದಶಕವುಳ್ಳವರಹಿರಿ ಸಮರಥ
ವಿಷಮರಾವ್ತರು ನೋಡುತಿರಿ ಸರ
ಳಿಸಲಿ ನಿಮ್ಮಯ ದೊರೆಗಳೆನುತುರವಣಿಸಿದನು ಭೀಮ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮನು ವೈರಿ ಸೈನಿಕರನ್ನು ಕುರಿತು “ನಿಮ್ಮನ್ನು ಸಾಮಾನ್ಯರು ಎಂದು ಹೇಳುವುದಿಲ್ಲ. ನೀವು ಜಗತ್ತಿನಲ್ಲಿಯೇ ಸಾಹಸಿಗರು. ಕಾಲಾಳುಗಳು, ಆನೆಯ ಮೇಲೆ ಕುಳಿತು ಜೋದರು ಮಾಡುವ ಬಾಣಗಳ ಪ್ರಯೋಗಕ್ಕೆ ಹೆದರುತ್ತೇನೆ. ನಿಮ್ಮ ಬಳಿ ಹತ್ತು ಪಟ್ಟು ಹೆಚ್ಚು ಬಾಣಗಳಿವೆ. ರಥದ ಮೇಲಿರುವವರೂ, ಕುದುರೆಯ ಮೇಲಿರುವ ಬಲಶಾಲಿಗಳಾದ ರಾವುತರೂ ನೀವು ಸುಮ್ಮನೆ ನೋಡುತ್ತಿರಿ. ನಿಮ್ಮ ದೊರೆಗಳು ಬಾಣಪ್ರಯೋಗ ಮಾಡಲಿ” ಎಂದು ಸೂಚಿಸಿ ಮುನ್ನುಗ್ಗಿದನು.
ಪದಾರ್ಥ (ಕ.ಗ.ಪ)
ದಶಕ - ಹತ್ತು ಜನಗಳ ಗುಂಪು
ಸರಳಿಸು - ಬಾಣಪ್ರಯೋಗ ಮಾಡಿ
ಮೂಲ ...{Loading}...
ನುಸಿಗಳೆನ್ನೆವು ನೀವು ಜಗಸಾ
ಹಸಿಕರೈ ಕಾಲಾಳು ಜೋಧ
ಪ್ರಸರದೆಸುಗೆಗೆ ಹೆದರುವೆವು ಹೇರಾಳದಂಬುಗಳ
ದಶಕವುಳ್ಳವರಹಿರಿ ಸಮರಥ
ವಿಷಮರಾವ್ತರು ನೋಡುತಿರಿ ಸರ
ಳಿಸಲಿ ನಿಮ್ಮಯ ದೊರೆಗಳೆನುತುರವಣಿಸಿದನು ಭೀಮ ॥10॥
೦೧೧ ಸಾರಿರೈ ಕಾಲಾಳು ...{Loading}...
ಸಾರಿರೈ ಕಾಲಾಳು ರಥಿಕರು
ಸಾರಿರೈ ರಾವುತರು ಜೋಧರು
ಭಾರಣೆಯಲಿರಿ ದೊರೆಯನರಸುವ ಬಯಲ ಬೊಬ್ಬೆಗಳ
ಆರುಭಟೆಗಾರಳುಕುವರು ಪರಿ
ವಾರ ಕೈಮಾಡದಿರೆನುತ ಕುರು
ವೀರನನುಜರು ತರುಬಿದರು ಪವಮಾನನಂದನನ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಕಾಲಾಳುಗಳೇ ಪಕ್ಕಕ್ಕೆ ಹೋಗಿ, ರಥಿಕರೇ ಬದಿಗೆ ನಿಲ್ಲಿ, ರಾವುತರು, ಜೋಧರು ಒಂದು ಕಡೆ ನಿಲ್ಲಿ. ನಮ್ಮ ದೊರೆಯನ್ನು ಹುಡುಕುವ ವ್ಯರ್ಥವಾದ ಮಾತುಗಳ ಆರ್ಭಟಕ್ಕೆ ಯಾರು ಹೆದರುತ್ತಾರೆ. ಪರಿವಾರದವರು ನೀವು ಅಸ್ತ್ರ ಪ್ರಯೋಗಿಸಬೇಡಿ” ಎಂದು ಹೇಳುತ್ತಾ ದುರ್ಯೋಧನನ ತಮ್ಮಂದಿರು ಭೀಮನನ್ನು ಅಡ್ಡಗಟ್ಟಿ ಮೇಲೆ ಬಿದ್ದರು.
ಪದಾರ್ಥ (ಕ.ಗ.ಪ)
ತರುಬು-ಅಡ್ಡಗಟ್ಟಿ ಮೇಲೆ ಬೀಳು
ಮೂಲ ...{Loading}...
ಸಾರಿರೈ ಕಾಲಾಳು ರಥಿಕರು
ಸಾರಿರೈ ರಾವುತರು ಜೋಧರು
ಭಾರಣೆಯಲಿರಿ ದೊರೆಯನರಸುವ ಬಯಲ ಬೊಬ್ಬೆಗಳ
ಆರುಭಟೆಗಾರಳುಕುವರು ಪರಿ
ವಾರ ಕೈಮಾಡದಿರೆನುತ ಕುರು
ವೀರನನುಜರು ತರುಬಿದರು ಪವಮಾನನಂದನನ ॥11॥
೦೧೨ ಸಡಿಫಡೇನಿದು ತಮ್ಮ ...{Loading}...
ಸಡಿಫಡೇನಿದು ತಮ್ಮ ತಲೆಗಳಿ
ಗೊಡೆಯರಲ್ಲದೆ ಕೌರವಾನುಜ
ರೊಡೆಯರೇ ಪರಿವಾರದಭಿಮಾನಾವಮಾನದಲಿ
ಬಿಡುವವರು ನಾವಲ್ಲ ಭೀಮನ
ಕಡಿಯೊಳಗೆ ಕಡಿವೆರಸಿ ನೆತ್ತರು
ಗುಡಿಯೆವೇ ತಾವೆನುತ ದಳ ಮುಕ್ಕುರುಕಿತನಿಲಜನ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೌರವನ ಸೈನಿಕರು ಸುಮ್ಮನಿರದೆ “ನಮ್ಮ ನಮ್ಮ ಗೌರವಗಳನ್ನು ಕಾಪಾಡಿಕೊಳ್ಳುವುದು ನಮ್ಮ ಕೆಲಸ. ಕೌರವನ ಸಹೋದರರು ಪರಿವಾರದವರ ಗೌರವ - ಅಭಿಮಾನಗಳನ್ನು ಕುರಿತು ಚಿಂತಿಸುವ ಅಗತ್ಯವಿಲ್ಲ. ನಾವು ಸುಮ್ಮನಿರುವುದಿಲ್ಲ. ಭೀಮನ ಹೊಡೆತಕ್ಕೆ ಸರಿಯಾದ ಪ್ರತಿ ಹೊಡೆತವನ್ನು ನಾವೂ ಕೊಟ್ಟು, ಕತ್ತರಿಸಿ ಅವನ ರಕ್ತವನ್ನು ಕುಡಿಯದೇ ಬಿಡುತ್ತೇವೆಯೇ” ಎನ್ನುತ್ತಾ ಭೀಮನ ಮೇಲೆ Éಮುತ್ತಿಗೆ ಹಾಕಿದರು.
ಪದಾರ್ಥ (ಕ.ಗ.ಪ)
ಕಡಿ-ಕತ್ತರಿಸು
ಮೂಲ ...{Loading}...
ಸಡಿಫಡೇನಿದು ತಮ್ಮ ತಲೆಗಳಿ
ಗೊಡೆಯರಲ್ಲದೆ ಕೌರವಾನುಜ
ರೊಡೆಯರೇ ಪರಿವಾರದಭಿಮಾನಾವಮಾನದಲಿ
ಬಿಡುವವರು ನಾವಲ್ಲ ಭೀಮನ
ಕಡಿಯೊಳಗೆ ಕಡಿವೆರಸಿ ನೆತ್ತರು
ಗುಡಿಯೆವೇ ತಾವೆನುತ ದಳ ಮುಕ್ಕುರುಕಿತನಿಲಜನ ॥12॥
೦೧೩ ಏನ ಹೇಳುವೆನರಸ ...{Loading}...
ಏನ ಹೇಳುವೆನರಸ ತೂಳಿದ
ವಾನೆಗಳು ನಾರಾಚನಿಚಯದ
ಸೋನೆ ಸುರಿದುದು ಭೀಮಸೇನನ ರಥದ ಶಿಖರದಲಿ
ಭಾನುಬಿಂಬವ ಮೊಗೆವ ಲೌಡೆಯ
ಮಾನಸದ ಧಕ್ಕಡರು ಕಲಿ ಪವ
ಮಾನತನಯನ ಮುತ್ತಿಕೊಂಡರು ರಾಯರಾವುತರು ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಧೃತರಾಷ್ಟ್ರನೇ, ಏನೆಂದು ಹೇಳಲಿ, ಆನೆಗಳು ಮುನ್ನುಗ್ಗಿದವು. ಭೀಮಸೇನನ ರಥದ ಮೇಲೆ ಬಾಣಗಳ ಸೋನೆ ಮಳೆಯೇ ಸುರಿಯಿತು. ಸೂರ್ಯ ಬಿಂಬವನ್ನು ಆಕ್ರಮಿಸುವ ಲೌಡೆ ಎಂಬ ಆಯುಧದಂತಹ ಕಠಿಣ ಮನಸ್ಕರಾದ ರಾವುತರು ವೀರ ಭೀಮನನ್ನು ಮುತ್ತಿಕೊಂಡರು.” ಎಂದು ಸಂಜಯನು ಹೇಳಿದನು
ಪದಾರ್ಥ (ಕ.ಗ.ಪ)
ಧಕ್ಕಡ-ದೃಢವೀರ, ಮೊಗೆ-ಎತ್ತಿಹಾಕು
ಮೂಲ ...{Loading}...
ಏನ ಹೇಳುವೆನರಸ ತೂಳಿದ
ವಾನೆಗಳು ನಾರಾಚನಿಚಯದ
ಸೋನೆ ಸುರಿದುದು ಭೀಮಸೇನನ ರಥದ ಶಿಖರದಲಿ
ಭಾನುಬಿಂಬವ ಮೊಗೆವ ಲೌಡೆಯ
ಮಾನಸದ ಧಕ್ಕಡರು ಕಲಿ ಪವ
ಮಾನತನಯನ ಮುತ್ತಿಕೊಂಡರು ರಾಯರಾವುತರು ॥13॥
೦೧೪ ಬಳಸಿನಲಿ ಚಾಚಿದವು ...{Loading}...
ಬಳಸಿನಲಿ ಚಾಚಿದವು ರಥಸಂ
ಕುಳ ಪದಾತಿಯ ಕೈದು ಮೀರಿದ
ವಳವಿಯಲಿ ಮೊನೆಗಾಣಿಸಿದರರಿಸೂತವಾಜಿಗಳ
ಸಿಲುಕಿದನು ಫಡ ಸ್ವಾಮಿದ್ರೋಹಿಗೆ
ಬಲೆಯ ಹಾಯಿಕೊ ಗಂಡುಮೀನ
ಗ್ಗಳೆಯ ಗಾಣವ ಕೊಳ್ಳದೆನುತೌಕಿದರು ಬಳಸಿನಲಿ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಥಗಳು ಭೀಮನನ್ನು ಸುತ್ತಿಕೊಂಡವು. ಪದಾತಿಗಳ ಆಯುಧಗಳು ಹೆಚ್ಚು ಹೆಚ್ಚು ಪ್ರಯೋಗವಾದವು. ತುಂಬಾ ಸಾಹಸದಿಂದ ಭೀಮನ ಸಾರಥಿಗಳನ್ನು ಕುದುರೆಗಳನ್ನು ಬಾಣಗಳಿಂದ ಚುಚ್ಚಿದರು. ‘ಸ್ವಾಮಿದ್ರೋಹಿ, ಸಿಕ್ಕಿ ಹಾಕಿಕೊಂಡಿದ್ದಾನೆ, ಬಲವಾದ ಗಾಳಕ್ಕೂ ಸಿಗದ ದೊಡ್ಡ ಮೀನಿನಂತಿರುವ ಇವನನ್ನು ಬಲೆ ಹಾಕಿ ಹಿಡಿಯೋಣ, ಎನ್ನುತ್ತಾ ಭೀಮನನ್ನು ಸುತ್ತುವರಿದರು.
ಮೂಲ ...{Loading}...
ಬಳಸಿನಲಿ ಚಾಚಿದವು ರಥಸಂ
ಕುಳ ಪದಾತಿಯ ಕೈದು ಮೀರಿದ
ವಳವಿಯಲಿ ಮೊನೆಗಾಣಿಸಿದರರಿಸೂತವಾಜಿಗಳ
ಸಿಲುಕಿದನು ಫಡ ಸ್ವಾಮಿದ್ರೋಹಿಗೆ
ಬಲೆಯ ಹಾಯಿಕೊ ಗಂಡುಮೀನ
ಗ್ಗಳೆಯ ಗಾಣವ ಕೊಳ್ಳದೆನುತೌಕಿದರು ಬಳಸಿನಲಿ ॥14॥
೦೧೫ ಧೂಳು ಮುಸುಕಿತು ...{Loading}...
ಧೂಳು ಮುಸುಕಿತು ಸುತ್ತುವಳಯದ
ಲಾಳು ಹೊಕ್ಕುದು ಹೊಯ್ಲ ಹೊದರಿನ
ಬಾಳುಗಿಡಿಗಳ ಖಣಿಖಟಿಲ ಘಲ್ಲಣೆಯ ಗರ್ಗರದ
ಮೇಲುಮೇಲುಬ್ಬೇಳ್ವ ಬೊಬ್ಬೆಯ
ತೂಳುವರೆ ಕಹಳೆಗಳ ಘೋಳಾ
ಘೋಳಿ ಮಸಗಿತು ಭೀಮಸೇನನ ರಥದ ಬಳಸಿನಲಿ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧೂಳು ಮುಸುಕಿತು. ಸುತ್ತಲೂ ಸೈನಿಕರು ಮುತ್ತಿಕೊಂಡರು. ಕತ್ತಿಯ ಹೊಡೆತದಿಂದ ಉಂಟಾದ ಖಣಿ ಖಟಿಲ ಶಬ್ದಗಳು, ಘಲ್ ಎಂದು ಶಬ್ದ ಮಾಡುತ್ತಿರುವ ಕಾಲಿನ ಕಡಗಗಳು ಹೆಚ್ಚು ಹೆಚ್ಚಾಗುತ್ತಿದ್ದ ಬೊಬ್ಬೆಗಳು, ಅದನ್ನು ಮುಚ್ಚಿ ಹಾಕುತ್ತಿದ್ದ ತಮಟೆ, ಕಹಳೆಯ ಶಬ್ದಗಳು ಭೀಮನ ರಥದ ಸುತ್ತಲೂ ಜೋರಾದವು.
ಪದಾರ್ಥ (ಕ.ಗ.ಪ)
ಘಲ್ಲಣೆ-ಘಲ್ ಎಂಬ ಶಬ್ದ,
ಗರ್ಗರ-ಕಾಲಿನ ಕಡಗ,
ಪರೆ-ತಮ್ಮಟೆ
ಮೂಲ ...{Loading}...
ಧೂಳು ಮುಸುಕಿತು ಸುತ್ತುವಳಯದ
ಲಾಳು ಹೊಕ್ಕುದು ಹೊಯ್ಲ ಹೊದರಿನ
ಬಾಳುಗಿಡಿಗಳ ಖಣಿಖಟಿಲ ಘಲ್ಲಣೆಯ ಗರ್ಗರದ
ಮೇಲುಮೇಲುಬ್ಬೇಳ್ವ ಬೊಬ್ಬೆಯ
ತೂಳುವರೆ ಕಹಳೆಗಳ ಘೋಳಾ
ಘೋಳಿ ಮಸಗಿತು ಭೀಮಸೇನನ ರಥದ ಬಳಸಿನಲಿ ॥15॥
೦೧೬ ಅಳಲಿಗರಲೇ ಕೌರವಾನುಜ ...{Loading}...
ಅಳಲಿಗರಲೇ ಕೌರವಾನುಜ
ರಳುಕದಿರಿದರಲೈ ವಿಘಾತಿಗೆ
ಸಿಲುಕದಿರನೋ ಭೀಮನೆನುತುಬ್ಬಿದರು ನಿನ್ನವರು
ಜಲನಿಧಿಯೊಳುಬ್ಬೆದ್ದ ತೆರೆಯಲಿ
ಮುಳುಗುವುದೆ ಮಂದರವೆನುತ ಕಳ
ವಳಿಸಿದವರೇನರಿಯರೇ ತಮ್ಮವನ ಕೈಗುಣವ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇನ್ನೊಬ್ಬರಿಗೆ ವ್ಯಥೆಯನ್ನುಂಟು ಮಾಡುವವರಲ್ಲವೇ ಕೌರವನ ತಮ್ಮಂದಿರು. ಹೆದರದೆ ಯುದ್ಧ ಮಾಡುತ್ತಿದ್ದಾರೆ. ಭೀಮನು ಅವರ ಆಕ್ರಮಣಕ್ಕೆ ಸಿಗದೇ ಇರುತ್ತಾನೆಯೇ ಎಂದು ನಿನ್ನ ಕಡೆಯವರು ಉಬ್ಬಿ ಹೋದರು. ಸಮುದ್ರವನ್ನು ಮಥಿಸಿದ ಕಾಲದಲ್ಲಿ ಎದ್ದ ತೆರೆಗಳಲ್ಲಿ ಮಂದರ ಪರ್ವತವು ಮುಳುಗಿ ಹೋಯಿತೇ? ಹಾಗೆ ಭೀಮನು ಸೋಲುತ್ತಾನೆಯೇ ‘ತಮ್ಮ ನಾಯಕನ ಶೌರ್ಯದ ಗುಣ ಅವರಿಗೆ ಗೊತ್ತಿಲ್ಲವೇ’ ಎಂದನು ಸಂಜಯ.
ಪದಾರ್ಥ (ಕ.ಗ.ಪ)
ಅಳಲಿಗ-ವ್ಯಥೆಯನ್ನು ಉಂಟು ಮಾಡುವವರು
ಮೂಲ ...{Loading}...
ಅಳಲಿಗರಲೇ ಕೌರವಾನುಜ
ರಳುಕದಿರಿದರಲೈ ವಿಘಾತಿಗೆ
ಸಿಲುಕದಿರನೋ ಭೀಮನೆನುತುಬ್ಬಿದರು ನಿನ್ನವರು
ಜಲನಿಧಿಯೊಳುಬ್ಬೆದ್ದ ತೆರೆಯಲಿ
ಮುಳುಗುವುದೆ ಮಂದರವೆನುತ ಕಳ
ವಳಿಸಿದವರೇನರಿಯರೇ ತಮ್ಮವನ ಕೈಗುಣವ ॥16॥
೦೧೭ ತೆಗಸಬೇಹುದು ಪವನಜನ ...{Loading}...
ತೆಗಸಬೇಹುದು ಪವನಜನ ಮು
ತ್ತಿಗೆಯನೆನುತುರವಣಿಪ ನಕುಲಾ
ದಿಗಳ ಕಂಡನು ಕರೆದು ಮರುಳಾಡಿದನು ಕಲಿಪಾರ್ಥ
ತೆಗಸಬೇಹುದು ತರಣಿಬಿಂಬವ
ತಗುಳ್ವ ತಿಮಿರವ ನಿಮ್ಮ ಹಂಗಿನ
ನುಗುಳಗಂಡಿಯ ನುಸುಳುದಲೆಗನೆ ಮರಳಿ ನೀವೆಂದ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶತ್ರುಗಳು ಭೀಮನ ಮೇಲೆ ಹಾಕಿದ ಮುತ್ತಿಗೆಯನ್ನು ತೆಗೆಸಬೇಕೆಂದು ಮುಂದೆ ನುಗ್ಗುತ್ತಿದ್ದ ನಕುಲ ಮೊದಲಾದವರನ್ನು ನೋಡಿ, ಅವರನ್ನು ಕರೆಯುತ್ತಾ, ಅವರ ಭ್ರಮೆಯನ್ನು ಟೀಕಿಸಿದನು ಅರ್ಜುನ. “ಸೂರ್ಯಬಿಂಬವನ್ನು ಆವರಿಸುವ ಕತ್ತಲೆಯನ್ನು ತೆಗೆಯುವ ಕೆಲಸ ಏಕೆ ಮಾಡಬೇಕು ? ಭೀಮನು ನಿಮ್ಮ ಹಂಗಿನ ಎಂಜಲಿನ ಒಂದು ಕಂಡಿಯಲ್ಲಿ ನುಸುಳಿ ತಲೆ ತಪ್ಪಿಸಿಕೊಳ್ಳುವಂತಹವನೇ? ನೀವು ಹಿಂತಿರುಗಿ” ಎಂದನು.
ಪದಾರ್ಥ (ಕ.ಗ.ಪ)
ತರಣಿಬಿಂಬ-ಸೂರ್ಯಬಿಂಬ
ಮೂಲ ...{Loading}...
ತೆಗಸಬೇಹುದು ಪವನಜನ ಮು
ತ್ತಿಗೆಯನೆನುತುರವಣಿಪ ನಕುಲಾ
ದಿಗಳ ಕಂಡನು ಕರೆದು ಮರುಳಾಡಿದನು ಕಲಿಪಾರ್ಥ
ತೆಗಸಬೇಹುದು ತರಣಿಬಿಂಬವ
ತಗುಳ್ವ ತಿಮಿರವ ನಿಮ್ಮ ಹಂಗಿನ
ನುಗುಳಗಂಡಿಯ ನುಸುಳುದಲೆಗನೆ ಮರಳಿ ನೀವೆಂದ ॥17॥
೦೧೮ ಮಾತು ಹಿಞ್ಚಿತ್ತಿದು ...{Loading}...
ಮಾತು ಹಿಂಚಿತ್ತಿದು ವಿಲಂಬಿಸ
ದಾತ ಮುರಿದನು ಮುತ್ತಿದಿಭಸಂ
ಘಾತವನು ಪಲ್ಲಟಿಸಿ ಕಡಿ ಕೊಚ್ಚಿದನು ತೇರುಗಳ
ಆತು ತಾಗಿದ ರಾವುತರ ಸುರ
ಜಾತಿಯಲಿ ಕಂಡೆನು ಪದಾತಿ
ವ್ರಾತ ಪಾಣಿಗ್ರಹಣವನು ಗೀರ್ವಾಣವಧುಗಳಲಿ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನ ಮಾತು ಮುಗಿಯುವುದಕ್ಕೆ ಮುಂಚಿತವಾಗಿಯೇ, ಭೀಮನು ನಿಧಾನಿಸದೆ , ತನ್ನನ್ನು ಮುತ್ತಿದ ಆನೆಗಳ ಸಮೂಹವನ್ನು ಓಡಿಸಿದನು. ತಿರುಗಿ ರಥಗಳನ್ನು ಕಡಿದು ಕೊಚ್ಚಿ ಹಾಕಿದನು. ಮೇಲೆ ಬೀಳುತ್ತಿದ್ದ ರಾವುತರು ಪದಾತಿಗಳಿಗೆ ದೇವತಾಸ್ತ್ರೀಯರ ಜೊತೆ ವಿವಾಹ ಮಾಡಿಸಿದನು ಎಂದರೆ ಸ್ವರ್ಗ ಸೇರುವಂತೆ ಮಾಡಿದನು.
ಪದಾರ್ಥ (ಕ.ಗ.ಪ)
ಇಭಸಂಘಾತ-ಆನೆಗಳ ಸಮೂಹ
ಮೂಲ ...{Loading}...
ಮಾತು ಹಿಂಚಿತ್ತಿದು ವಿಲಂಬಿಸ
ದಾತ ಮುರಿದನು ಮುತ್ತಿದಿಭಸಂ
ಘಾತವನು ಪಲ್ಲಟಿಸಿ ಕಡಿ ಕೊಚ್ಚಿದನು ತೇರುಗಳ
ಆತು ತಾಗಿದ ರಾವುತರ ಸುರ
ಜಾತಿಯಲಿ ಕಂಡೆನು ಪದಾತಿ
ವ್ರಾತ ಪಾಣಿಗ್ರಹಣವನು ಗೀರ್ವಾಣವಧುಗಳಲಿ ॥18॥
೦೧೯ ಬಲನೆಡನ ಗದೆ ...{Loading}...
ಬಲನೆಡನ ಗದೆ ಖಡುಗದಲಿ ರಿಪು
ಜಲನಿಧಿಯನೀಸಾಡಿದನು ಹೆ
ಬ್ಬಲದ ಹೆಬ್ಬೆಳೆ ಸಾಲಕೊಯ್ಲಿನ ಮೆದೆಗಳೊಟ್ಟಿಲಲಿ
ತಳಕುಗಳ ವರ ರಥ ಹಯದ ಹೊಸ
ಮೆಳೆಯ ಕಡಿತದ ಕರಿಘಟಾಳಿಯ
ಬಲುಮೊರಡಿಗಳ ಸವರಿ ತಳಪಟಮಾಡಿದನು ಭೀಮ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮನು ತನ್ನ ಬಲಗೈಯಲ್ಲಿ ಗದೆಯನ್ನು, ಎಡಗೈಯಲ್ಲಿ ಖಡ್ಗವನ್ನು ಹಿಡಿದು ಶತ್ರು ಸಾಗರದಲ್ಲಿ ಈಜಾಡಿದನು. ದೊಡ್ಡ ಸೈನ್ಯದ ದೊಡ್ಡ ಬೆಳೆಯ ಸಾಲನ್ನು ಕೊಯ್ದು ಮೆದೆಗಳ ರಾಶಿ ಹಾಕಿದನು. ಆಡಂಬರದ ರಥದ ಕುದುರೆಗಳ ಹೊಸ ಮೆಳೆಯನ್ನು ಕತ್ತರಿಸಿದನು. ಆನೆಗಳೆಂಬ ದೊಡ್ಡ ಕಲ್ಲು ಗುಡ್ಡಗಳನ್ನು ಸವರಿ ನೆಲಸಮ ಮಾಡಿದನು.
ಪದಾರ್ಥ (ಕ.ಗ.ಪ)
ಮೊರಡಿ-ಕಲ್ಲು ಗುಡ್ಡ
ಮೂಲ ...{Loading}...
ಬಲನೆಡನ ಗದೆ ಖಡುಗದಲಿ ರಿಪು
ಜಲನಿಧಿಯನೀಸಾಡಿದನು ಹೆ
ಬ್ಬಲದ ಹೆಬ್ಬೆಳೆ ಸಾಲಕೊಯ್ಲಿನ ಮೆದೆಗಳೊಟ್ಟಿಲಲಿ
ತಳಕುಗಳ ವರ ರಥ ಹಯದ ಹೊಸ
ಮೆಳೆಯ ಕಡಿತದ ಕರಿಘಟಾಳಿಯ
ಬಲುಮೊರಡಿಗಳ ಸವರಿ ತಳಪಟಮಾಡಿದನು ಭೀಮ ॥19॥
೦೨೦ ಅಸಿಯಲಿಟ್ಟರೆದನ್ತೆ ಬಲ ...{Loading}...
ಅಸಿಯಲಿಟ್ಟರೆದಂತೆ ಬಲ ನಿ
ಪ್ಪಸರದಲಿ ನುಗ್ಗಾಯ್ತು ನೀಗಿದ
ರಸುವನೀ ದುಶ್ಯಾಸನನ ನಂಬುಗೆಯ ಪರಿವಾರ
ಬಸಿವ ನೆತ್ತರ ಮೆಯ್ಯ ಕರುಳಿನ
ಕುಸುರಿಗಳ ತಲೆಮಿದುಳ ಮೆತ್ತಿಗೆ
ವಸೆಯ ತೊರಳೆಯ ತೊಂಗಲಲಿ ರಂಜಿಸಿತು ರಣಭೂಮಿ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕತ್ತಿಯಲ್ಲಿ ಹೊಡೆದು ಅರೆದ ಹಾಗೆ, ಕೌರವನ ಸೈನ್ಯ ಬೇಗ ಬೇಗ ಭಯಂಕರವಾಗಿ ನುಗ್ಗಾಗಿ ಹೋಯಿತು. ದುಶ್ಶಾಸನನ ಆಪ್ತ ಪರಿವಾರದವರು ಪ್ರಾಣ ಬಿಟ್ಟರು. ದೇಹದಿಂದ ಸುರಿಯುತ್ತಿದ್ದ ರಕ್ತ, ಕರುಳಿನ ಚೂರು, ತಲೆಯ ಮಿದುಳಿಗೆ ಮೆತ್ತಿಕೊಂಡಿರುವ ಕೊಬ್ಬು, ಗುಲ್ಮಗಳ ಗೊಂಚಲುಗಳಿಂದ ಯುದ್ಧಭೂಮಿ ರಂಜನೆಯನ್ನುಂಟು ಮಾಡುತ್ತಿತ್ತು.
ಪದಾರ್ಥ (ಕ.ಗ.ಪ)
ನಿಪ್ಪಸರ-ಕ್ರೂರ, ನಿಷ್ಠುರ, ಕುಸುರಿ-ತುಂಡು, ಚೂರು , ಮೆತ್ತಿಗೆ ವಸೆ-ಮೆತ್ತಿಕೊಂಡಿರುವ ಕೊಬ್ಬು, ತೊರಳೆ-ಗುಲ್ಮ, ತೊಂಗಲು-ಗೊಂಚಲು
ಮೂಲ ...{Loading}...
ಅಸಿಯಲಿಟ್ಟರೆದಂತೆ ಬಲ ನಿ
ಪ್ಪಸರದಲಿ ನುಗ್ಗಾಯ್ತು ನೀಗಿದ
ರಸುವನೀ ದುಶ್ಯಾಸನನ ನಂಬುಗೆಯ ಪರಿವಾರ
ಬಸಿವ ನೆತ್ತರ ಮೆಯ್ಯ ಕರುಳಿನ
ಕುಸುರಿಗಳ ತಲೆಮಿದುಳ ಮೆತ್ತಿಗೆ
ವಸೆಯ ತೊರಳೆಯ ತೊಂಗಲಲಿ ರಂಜಿಸಿತು ರಣಭೂಮಿ ॥20॥
೦೨೧ ಹೋರಿ ಹಙ್ಗಿಗರಾದೆವೇ ...{Loading}...
ಹೋರಿ ಹಂಗಿಗರಾದೆವೇ ಪರಿ
ವಾರ ನೆರೆದುದು ನಾಕದಲಿ ತೆಗೆ
ವೀರಕಂಕಣವೇಕೆನುತ ದುರಿಯೋಧನಾನುಜರು
ತೇರ ಸೂತನ ಸೂಚನೆಯ ಚೀ
ತ್ಕಾರ ಪರಿಧಾವನೆಯ ಧೂಳಿಯ
ಲೋರಣದ ಭಾರಣೆಯಲೈದಿದರನಿಲನಂದನನ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಹೋರಾಟದಲ್ಲಿ ನಾವು ಹಂಗಿಗರಾಗಿ ಇನ್ನೂ ಉಳಿದುಕೊಂಡಿದ್ದೇವೆ. ನಮ್ಮ ಪರಿವಾರದವರು ಹೋರಾಡಿ ಸ್ವರ್ಗ ಸೇರಿದ್ದಾರೆ. ಛೀ, ನಾವು ವೀರ ಕಂಕಣವನ್ನು ಕಟ್ಟಿಕೊಂಡಿರುವುದು ಅನ್ವರ್ಥವಲ್ಲ’ ಎನ್ನುತ್ತಾ ಕೌರವನ ತಮ್ಮಂದಿರು, ಸಾರಥಿಗಳಿಗೆ ಸೂಚಿಸಿ ರಥದ ಚಕ್ರಗಳು ಚೀತ್ಕಾರ ಮಾಡುತ್ತಿರಲು ಒಂದಾಗಿ ರಭಸದಿಂದ ವಾಯುಪುತ್ರ ಭೀಮನ ಸಮೀಪಕ್ಕೆ ಬಂದರು.
ಪದಾರ್ಥ (ಕ.ಗ.ಪ)
ಪರಿಧಾವನೆ-ರಭಸವಾಗಿ ಓಡುವುದು
ಮೂಲ ...{Loading}...
ಹೋರಿ ಹಂಗಿಗರಾದೆವೇ ಪರಿ
ವಾರ ನೆರೆದುದು ನಾಕದಲಿ ತೆಗೆ
ವೀರಕಂಕಣವೇಕೆನುತ ದುರಿಯೋಧನಾನುಜರು
ತೇರ ಸೂತನ ಸೂಚನೆಯ ಚೀ
ತ್ಕಾರ ಪರಿಧಾವನೆಯ ಧೂಳಿಯ
ಲೋರಣದ ಭಾರಣೆಯಲೈದಿದರನಿಲನಂದನನ ॥21॥
೦೨೨ ಇನ್ದಲೇ ನೀವ್ ...{Loading}...
ಇಂದಲೇ ನೀವ್ ಗದೆಯ ಹಬ್ಬಕೆ
ಬಂದಿರೈ ಲೇಸಾಯ್ತು ನೀವೇ
ನೆಂದಿರೈ ನಿಮ್ಮಣ್ಣದೇವನ ಮುಂದೆ ಭಾಷೆಗಳ
ತಂದಿರೈ ತಳ್ಳಂಕವನು ನಮ
ಗೆಂದು ಕೊಡುವಿರಿ ಕೌರವನ ತ
ಮ್ಮಂದಿರೈ ನೀವೆನುತ ಸುಳಿದನು ಸಿಂಹನಾದದಲಿ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮನು ‘ಇಂದು ನೀವು ನನ್ನ ಗದೆಗೆ ಹಬ್ಬದ ಸಂಭ್ರಮ ಉಂಟು ಮಾಡುವುದಕ್ಕೆ ಬಂದಿದ್ದೀರ. ಒಳ್ಳೆಯದೇ ಆಯಿತು. ನೀವು ನಿಮ್ಮ ಅಣ್ಣನ ಮುಂದೆ ಏನು ಪ್ರತಿಜ್ಞೆ ಮಾಡಿ ಬಂದಿದ್ದೀರಿ. ನನಗೆ ಭಯವನ್ನು ಯಾವಾಗ ತಂದು ಕೊಡುವಿರಿ. ನೀವು ಕೌರವನ ಸಹೋದರರಲ್ಲವೇ’ ಎನ್ನುತ್ತಾ ಸಿಂಹನಾದ ಮಾಡಿ ಮುನ್ನುಗ್ಗಿದನು.
ಪದಾರ್ಥ (ಕ.ಗ.ಪ)
ತಳ್ಳಂಕ-ಚಿಂತೆ, ಭಯ
ಮೂಲ ...{Loading}...
ಇಂದಲೇ ನೀವ್ ಗದೆಯ ಹಬ್ಬಕೆ
ಬಂದಿರೈ ಲೇಸಾಯ್ತು ನೀವೇ
ನೆಂದಿರೈ ನಿಮ್ಮಣ್ಣದೇವನ ಮುಂದೆ ಭಾಷೆಗಳ
ತಂದಿರೈ ತಳ್ಳಂಕವನು ನಮ
ಗೆಂದು ಕೊಡುವಿರಿ ಕೌರವನ ತ
ಮ್ಮಂದಿರೈ ನೀವೆನುತ ಸುಳಿದನು ಸಿಂಹನಾದದಲಿ ॥22॥
೦೨೩ ಗಿಡಿಗನೆತ್ತಲು ಗಿಣಿಯ ...{Loading}...
ಗಿಡಿಗನೆತ್ತಲು ಗಿಣಿಯ ಮರಿಗಳ
ಗಡಣವೆತ್ತಲು ತೋಳನೆತ್ತಲು
ತೊಡಕುವರೆ ತಗರೆತ್ತಲಿವರಿಗೆ ಗೆಲವು ಸೋಲವನು
ನುಡಿಯಲಮ್ಮೆನು ನಿನ್ನ ಮಕ್ಕಳ
ಮಿಡುಕಿನಂತರವೇನು ಪ್ರಳಯದ
ಸಿಡಿಲ ಬಲುಹೋ ಭೀಮನೋ ನಾವರಿಯೆವಿದನೆಂದ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಗಿಡಗನ ಮುಂದೆ ಗಿಣಿ ಮರಿಗಳೇ ? ತೋಳನ ಎದುರು ಹೋರಾಡಲು ಟಗರಿಗೆ ಸಾಧ್ಯವೇ ? ಇಲ್ಲಿ ಯಾರು ಗೆದ್ದರು ಯಾರು ಸೋತರು ಎಂದು ಹೇಳಲು ನನಗೆ ಧೈರ್ಯವಿಲ್ಲ. ನಿನ್ನ ಮಕ್ಕಳ ಪರಾಕ್ರಮ ಎಷ್ಟು ದೊಡ್ಡದೋ, ಪ್ರಳಯಕಾಲದ ಸಿಡಿಲಿನ ಶಕ್ತಿಯೋ ಅಥವಾ ಭೀಮನೋ ಹೇಳಲು ನನಗೆ ತಿಳಿಯುತ್ತಿಲ್ಲ’ ಎಂದ ಸಂಜಯ.
ಪದಾರ್ಥ (ಕ.ಗ.ಪ)
ತೊಡಕು-ಯುದ್ಧಕ್ಕೆ ತೊಡಗು, ಮಿಡುಕು-ಪರಾಕ್ರಮ
ಮೂಲ ...{Loading}...
ಗಿಡಿಗನೆತ್ತಲು ಗಿಣಿಯ ಮರಿಗಳ
ಗಡಣವೆತ್ತಲು ತೋಳನೆತ್ತಲು
ತೊಡಕುವರೆ ತಗರೆತ್ತಲಿವರಿಗೆ ಗೆಲವು ಸೋಲವನು
ನುಡಿಯಲಮ್ಮೆನು ನಿನ್ನ ಮಕ್ಕಳ
ಮಿಡುಕಿನಂತರವೇನು ಪ್ರಳಯದ
ಸಿಡಿಲ ಬಲುಹೋ ಭೀಮನೋ ನಾವರಿಯೆವಿದನೆಂದ ॥23॥
೦೨೪ ಥಟ್ಟುಗೆಡಹಿ ಕುಮಾರಕರನರೆ ...{Loading}...
ಥಟ್ಟುಗೆಡಹಿ ಕುಮಾರಕರನರೆ
ಯಟ್ಟಿ ಹೊಯ್ದನು ಕೆಲಬಲದಲಡ
ಗಟ್ಟಿದರನಪ್ಪಳಿಸಿದನು ಚಿಗಿದಾನೆವರಿವರಿದು
ಇಟ್ಟಣಿಸಿ ಹೊಕ್ಕೆಸುವವರ ಹುಡಿ
ಗುಟ್ಟಿದನು ಹೆಣಸಾಲಿನಲಿ ಮಡು
ಗಟ್ಟಿ ನಿಂದುದು ರಕ್ತಜಲ ನರನಾಥ ಕೇಳ್ ಎಂದ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಿನ್ನ ಮಕ್ಕಳ ಗುಂಪನ್ನು ಕೆಡವಿದನು. ಬೆನ್ನಟ್ಟಿಕೊಂಡು ಹೋಗಿ ಹೊಡೆದನು. ಅಕ್ಕಪಕ್ಕದಲ್ಲಿ ಅಡ್ಡಗಟ್ಟಿ ಬಂದವರಿಗೆ ಅಪ್ಪಳಿಸಿ ಹೊಡೆದನು. ನೆಗೆಯುತ್ತಾ ಆನೆಯಂತೆ ಮುನ್ನುಗ್ಗಿ ಗುಂಪಾಗಿ ಮೇಲೆ ಬೀಳುತ್ತಾ ಬಾಣ ಪ್ರಯೋಗಿಸುತ್ತಿರುವವರನ್ನು ಪುಡಿ ಮಾಡಿದನು. ಹೆಣಗಳ ಸಾಲು ರಕ್ತದ ಮಡುವಿನಲ್ಲಿ ಬೀಳುವಂತಾಯಿತು.
ಮೂಲ ...{Loading}...
ಥಟ್ಟುಗೆಡಹಿ ಕುಮಾರಕರನರೆ
ಯಟ್ಟಿ ಹೊಯ್ದನು ಕೆಲಬಲದಲಡ
ಗಟ್ಟಿದರನಪ್ಪಳಿಸಿದನು ಚಿಗಿದಾನೆವರಿವರಿದು
ಇಟ್ಟಣಿಸಿ ಹೊಕ್ಕೆಸುವವರ ಹುಡಿ
ಗುಟ್ಟಿದನು ಹೆಣಸಾಲಿನಲಿ ಮಡು
ಗಟ್ಟಿ ನಿಂದುದು ರಕ್ತಜಲ ನರನಾಥ ಕೇಳೆಂದ ॥24॥
೦೨೫ ಒನ್ದು ಹಲಗೆಯಲೈದು ...{Loading}...
ಒಂದು ಹಲಗೆಯಲೈದು ಹರಿಬಕೆ
ಬಂದು ಹೊಕ್ಕವರೈದು ಖತಿಯಲಿ
ಹಿಂದ ಕೆಣಕಿದರೆಂಟು ಮಗುಳಿಬ್ಬರನು ಕದನದಲಿ
ಕೊಂದನಿಂತಿಪ್ಪತ್ತು ನಿನ್ನಯ
ನಂದನರು ನೀಗಿದರು ನೆಲನನು
ನಿಂದು ಕರೆದನು ಬಳಿಕ ದುಶ್ಶಾಸನನ ಕಲಿಭೀಮ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಒಂದು ಗುರಾಣಿಯಿಂದ ಐದು ಜನರನ್ನು, ಯುದ್ಧಕ್ಕೆ ಬಂದು ಮುನ್ನುಗ್ಗಿದ ಐದು ಜನರನ್ನು, ಹಿಂದಿನಿಂದ ಕೋಪದಿಂದ ಬಂದ ಎಂಟು ಜನರನ್ನು, ಮತ್ತೆ ಇಬ್ಬರನ್ನು ಹೀಗೆ ಕೊಂದಾಗ ನಿನ್ನ ಇಪ್ಪತ್ತು ಮಂದಿ ಮಕ್ಕಳು ನೆಲಬಿಟ್ಟು ಸಾವನ್ನಪ್ಪಿದರು. ಆ ನಂತರ ಭೀಮನು ನಿಂತು ದುಶ್ಶಾಸನನನ್ನು ಹೋರಾಟಕ್ಕೆ ಆಹ್ವಾನಿಸಿದನು.
ಪದಾರ್ಥ (ಕ.ಗ.ಪ)
ಹಲಗೆ-ಗುರಾಣಿ, ಹರಿಬ-ಕಾರ್ಯ, ಕರ್ತವ್ಯ
ಮೂಲ ...{Loading}...
ಒಂದು ಹಲಗೆಯಲೈದು ಹರಿಬಕೆ
ಬಂದು ಹೊಕ್ಕವರೈದು ಖತಿಯಲಿ
ಹಿಂದ ಕೆಣಕಿದರೆಂಟು ಮಗುಳಿಬ್ಬರನು ಕದನದಲಿ
ಕೊಂದನಿಂತಿಪ್ಪತ್ತು ನಿನ್ನಯ
ನಂದನರು ನೀಗಿದರು ನೆಲನನು
ನಿಂದು ಕರೆದನು ಬಳಿಕ ದುಶ್ಶಾಸನನ ಕಲಿಭೀಮ ॥25॥
೦೨೬ ಧಾರುಣೀಪತಿ ಕೇಳು ...{Loading}...
ಧಾರುಣೀಪತಿ ಕೇಳು ನಿನ್ನ ಕು
ಮಾರರಲಿ ತೊಂಬತ್ತಯೆಂಟರ
ಪಾರುಖಾಣೆಯ ಲೆಕ್ಕ ಸಂದುದು ನಿಮ್ಮ ಚಿತ್ತದಲಿ
ಸಾರಭೂತರಲೇ ಸಮಸ್ತವಿ
ಕಾರಿಗಳೊಳೀ ವಿಶ್ವನೃಪ ಸಂ
ಹಾರರಿಬ್ಬರ ಬೀಯವನು ಮೇಲಿನ್ನು ಕೇಳ್ ಎಂದ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧೃತರಾಷ್ಟ್ರನೇ ಕೇಳು, ನಿನ್ನ ಮಕ್ಕಳಲ್ಲಿ, ತೊಂಬತ್ತೆಂಟು ಮಂದಿ ಭೀಮನಿಗೆ ಕೊಡುವ ಉಡುಗೊರೆಯಂತೆ ಸಾವನ್ನು ಪಡೆದುದು ನಿನಗೆ ತಿಳಿಯಿತೇ? ಎಲ್ಲಾ ವಿಕಾರಿಗಳಲ್ಲೆಲ್ಲಾ ಫಟಿಂಗರಾದ, ವಿಶ್ವದ ದೊರೆಗಳನ್ನು ನಾಶ ಮಾಡುವ ಕೆಲಸದಲ್ಲಿ ಮಗ್ನರಾಗಿರುವ ಉಳಿದ ಇಬ್ಬರ ನಾಶದ ಸಂಗತಿಯನ್ನು ಹೇಳುತ್ತೇನೆ - ಎಂದನು ಸಂಜಯ
ಪದಾರ್ಥ (ಕ.ಗ.ಪ)
ಪಾರುಖಾಣೆ-ಉಡುಗೊರೆ
ಮೂಲ ...{Loading}...
ಧಾರುಣೀಪತಿ ಕೇಳು ನಿನ್ನ ಕು
ಮಾರರಲಿ ತೊಂಬತ್ತಯೆಂಟರ
ಪಾರುಖಾಣೆಯ ಲೆಕ್ಕ ಸಂದುದು ನಿಮ್ಮ ಚಿತ್ತದಲಿ
ಸಾರಭೂತರಲೇ ಸಮಸ್ತವಿ
ಕಾರಿಗಳೊಳೀ ವಿಶ್ವನೃಪ ಸಂ
ಹಾರರಿಬ್ಬರ ಬೀಯವನು ಮೇಲಿನ್ನು ಕೇಳೆಂದ ॥26॥
೦೨೭ ಮುರಿದುದಚ್ಚಾಳಚ್ಚುಕುದುರೆಗ ...{Loading}...
ಮುರಿದುದಚ್ಚಾಳಚ್ಚುಕುದುರೆಗ
ಳುರುಕುಗೊಂಡುದು ನಿನ್ನವರು ಹೊ
ಕ್ಕಿರಿದು ಹೋಗಾಡಿದರು ತನ್ನ ಸಹೋದರವ್ರಜವ
ಹೊರಗೆ ಕರ್ಣಕೃಪಾದಿಗಳು ಮೈ
ಮರೆವ ಹೊತ್ತಾಯ್ತಿವನ ನೆತ್ತರ
ಸುರಿಯದೆಡೆಯಲಿ ಬಿಡೆನೆನುತ ಪವನಜನು ಗರ್ಜಿಸಿದ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಥದ ನೆಚ್ಚಿನ ಶೂರರು ನಾಶವಾದರು. ನೆಚ್ಚಿನ ಕುದುರೆಗಳು ಹಿಮ್ಮೆಟ್ಟಿದವು. ನಿನ್ನವರು ಒಳಕ್ಕೆ ನುಗ್ಗಿ ಯುದ್ಧ ಮಾಡಿ ತಮ್ಮ ಸಹೋದರರನ್ನು ಕಳೆದುಕೊಂಡರು. ಹೊರಗಡೆ ಯುದ್ಧ ಮಾಡುತ್ತಿದ್ದ ಕೃಪ, ಕರ್ಣ ಮೊದಲಾದವರು ಮೂರ್ಛೆ ಹೋಗುವಂತಾಯಿತು. “ಈ ದುಶ್ಶಾಸನನ ರಕ್ತ ನೆಲಕ್ಕೆ ಸುರಿಯಲು ಬಿಡುವುದಿಲ್ಲ” ಎನ್ನುತ್ತಾ ಭೀಮನು ಗರ್ಜಿಸಿದನು.
ಪದಾರ್ಥ (ಕ.ಗ.ಪ)
ಅಚ್ಚಾಳು-ನೆಚ್ಚಿನ ವೀರ, ಉರುಕುಗೊಳ್-ಹಿಮ್ಮೆಟ್ಟು
ಮೂಲ ...{Loading}...
ಮುರಿದುದಚ್ಚಾಳಚ್ಚುಕುದುರೆಗ
ಳುರುಕುಗೊಂಡುದು ನಿನ್ನವರು ಹೊ
ಕ್ಕಿರಿದು ಹೋಗಾಡಿದರು ತನ್ನ ಸಹೋದರವ್ರಜವ
ಹೊರಗೆ ಕರ್ಣಕೃಪಾದಿಗಳು ಮೈ
ಮರೆವ ಹೊತ್ತಾಯ್ತಿವನ ನೆತ್ತರ
ಸುರಿಯದೆಡೆಯಲಿ ಬಿಡೆನೆನುತ ಪವನಜನು ಗರ್ಜಿಸಿದ ॥27॥
೦೨೮ ದೊರೆಯ ತಮ್ಮನ ...{Loading}...
ದೊರೆಯ ತಮ್ಮನ ತವಕ ತೋಟಿಗೆ
ತಿರುಗುತದೆ ತಡವೇನು ನೂಕೆನು
ತರಸ ಕೇಳೈ ತನತನಗೆ ದುಶ್ಯಾಸನನ ರಥವ
ಪರಿಹರಿಸಿಕೊಂಡೇರಿತೀ ದಳ
ದುರವಣೆಯ ಸೈರಿಸಿದಡವನೀ
ಶ್ವರನಲೇ ಕಲಿಭೀಮನಲ್ಲದೆ ಧೀರನಾರೆಂದ ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ದುಶ್ಶಾಸನನು ಇನ್ನೇನು ಯುದ್ಧವನ್ನು ಪ್ರಾರಂಭಿಸಿ ಬಿಡುತ್ತಾನೆ. ನಾವು ತಡಮಾಡಬಾರದು. ಮುಂದೆ ಹೋಗೋಣ’ ಎನ್ನುತ್ತಾ ಸೈನಿಕರು ದುಶ್ಶಾಸನನ ರಥವನ್ನು ಹಿಂದಕ್ಕೆ ಹಾಕಿ, ಭೀಮನ ಮೇಲೆ ಆಕ್ರಮಣ ಮಾಡಿದರು. ಈ ಸೈನ್ಯದ ಭೀಕರ ರಭಸವನ್ನು ಭೀಮನನ್ನು ಬಿಟ್ಟು ಬೇರೆ ಯಾರು ತಡೆಯಲು ಸಾಧ್ಯ.
ಮೂಲ ...{Loading}...
ದೊರೆಯ ತಮ್ಮನ ತವಕ ತೋಟಿಗೆ
ತಿರುಗುತದೆ ತಡವೇನು ನೂಕೆನು
ತರಸ ಕೇಳೈ ತನತನಗೆ ದುಶ್ಯಾಸನನ ರಥವ
ಪರಿಹರಿಸಿಕೊಂಡೇರಿತೀ ದಳ
ದುರವಣೆಯ ಸೈರಿಸಿದಡವನೀ
ಶ್ವರನಲೇ ಕಲಿಭೀಮನಲ್ಲದೆ ಧೀರನಾರೆಂದ ॥28॥
೦೨೯ ನೂಕದಿರಿ ಸಙ್ಘಟಿಸಿ ...{Loading}...
ನೂಕದಿರಿ ಸಂಘಟಿಸಿ ಹೋಹೋ
ಸಾಕು ಸಾಕಾ ಮೆಚ್ಚಿದೆನು ತಳು
ವೇಕೆ ದುಶ್ಯಾಸನ ವೃಥಾ ನೀ ಹೊತ್ತುಗಳೆವೆಯಲಾ
ನೀ ಕಳೆದುಕೊಳು ಧನುವ ನಮ್ಮ ವಿ
ವೇಕವನು ದಳ ನೋಡುತಿರಲಿ ನಿ
ರಾಕುಳದಲೆಚ್ಚಾಡುವೆವು ನಿಲ್ಲೆಂದನಾ ಭೀಮ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಒಟ್ಟಾಗಿ ನುಗ್ಗಬೇಡಿ, ಸಾಕು, ನಿಮ್ಮ ಸಾಹಸವನ್ನು ಮೆಚ್ಚಿಕೊಂಡಿದ್ದೇನೆ. ದುಶ್ಶಾಸನ, ಏಕೆ ನಿಧಾನ ಮಾಡುತ್ತೀಯಾ, ಸುಮ್ಮನೆ ಕಾಲ ಕಳೆಯುತ್ತೀಯಾ, ನಿನ್ನ ಬಿಲ್ಲನ್ನು ಹಿಡಿದುಕೋ, ನಮ್ಮ ಯುದ್ಧ ಚಾತುರ್ಯವನ್ನು ಎರಡೂ ಕಡೆಯ ಸೈನಿಕರು ನೋಡುತ್ತಿರಲಿ. ನಿಶ್ಚಿಂತೆಯಿಂದ ನಾವಿಬ್ಬರೂ ಬಾಣ ಪ್ರಯೋಗ ಮಾಡಿ ಯುದ್ಧ ಮಾಡೋಣ, ನಿಲ್ಲು” ಎಂದನು ಭೀಮ.
ಟಿಪ್ಪನೀ (ಕ.ಗ.ಪ)
ದುಶ್ಶಾಸನ- ತನ್ನ ಬದುಕಕನ್ನು ಉದ್ದಕ್ಕೂ ದುರ್ಯೋಧನನ ಭಕ್ತಿಗೇ ಮೀಸಲಾಗಿರಿಸಕೊಂಡು ಅವನ್ನನೇ ಅನುಸರಿಸಿದ ಸ್ವಂತ ವಿವೇಚನೆ ಲವಲೇಶವೂ ಇಲ್ಲದೆ ವ್ಯಕ್ತಿ ದುಶ್ಯಾಸನ. ಹಾಗೇ ಆರಿಸಿಕೊಂಡ ವ್ಯಕ್ತಿ ದುರ್ಮಾರ್ಗಬೋಧಕನಾದರಂತೂ ಅನುಕರಿಸಿದವನ ಬಾಳು ಮೂರಾಬಟ್ಟೆಯಾಗುತ್ತದೆ. ದುಶ್ಯಾಸನ
ಮೂಲ ...{Loading}...
ನೂಕದಿರಿ ಸಂಘಟಿಸಿ ಹೋಹೋ
ಸಾಕು ಸಾಕಾ ಮೆಚ್ಚಿದೆನು ತಳು
ವೇಕೆ ದುಶ್ಯಾಸನ ವೃಥಾ ನೀ ಹೊತ್ತುಗಳೆವೆಯಲಾ
ನೀ ಕಳೆದುಕೊಳು ಧನುವ ನಮ್ಮ ವಿ
ವೇಕವನು ದಳ ನೋಡುತಿರಲಿ ನಿ
ರಾಕುಳದಲೆಚ್ಚಾಡುವೆವು ನಿಲ್ಲೆಂದನಾ ಭೀಮ ॥29॥
೦೩೦ ರೂಢಿಸಿದ ಭಟ ...{Loading}...
ರೂಢಿಸಿದ ಭಟ ನೀನು ಹರಿಬವ
ಬೇಡಿ ತೊಡಕಿದೆ ನಾನು ಖಾಡಾ
ಖಾಡಿಯಲಿ ಸಿಗುರಿಲ್ಲ ತೆಗೆ ಹಂಗೇಕೆ ತೆತ್ತಿಗರ
ನೋಡುತಿರಲೀ ಬಲವೆರಡು ಹೋ
ಗಾಡು ನಮ್ಮನು ಮೇಣು ನಿನ್ನನು
ಸೂಡುದರಿವೆನು ಸತ್ವದಳತೆಯ ಕಾಣಲಹುದೆಂದ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಪ್ರಸಿದ್ಧನಾದ ಶೂರ ನೀನು, ನಿನ್ನ ಜೊತೆಯಲ್ಲಿ ಯುದ್ಧ ಮಾಡುವ ಕರ್ತವ್ಯದಿಂದ ನಾನು ಬಂದಿದ್ದೇನೆ. ನಮ್ಮ ಯುದ್ಧದಲ್ಲಿ ಕೊರತೆ ಇರುವುದಿಲ್ಲ. ದಾಸರ ಹಂಗು ನಮಗೆ ಏಕೆ ಬೇಕು. ಈ ಎರಡೂ ಸೈನ್ಯದವರು ನೋಡುತ್ತಿರಲಿ. ನನ್ನನ್ನು ಇಲ್ಲದಂತೆ ಮಾಡು, ಇಲ್ಲ ನಾನು ನಿನ್ನನ್ನು ಹುಲ್ಲು ಕತ್ತರಿಸುವಂತೆ ಕತ್ತರಿಸಿ ಹಾಕುತ್ತೇನೆ. ನಮ್ಮ ಸತ್ವದ ಪ್ರಮಾಣ ಎಷ್ಟೆಂದು ತಿಳಿಯಲಿ’ ಎಂದನು ಭೀಮ.
ಪದಾರ್ಥ (ಕ.ಗ.ಪ)
ಸಿಗುರು-ಕೊರತೆ, ಸೂಡುದರಿ-ಹುಲ್ಲನ್ನು ಕತ್ತರಿಸು
ಮೂಲ ...{Loading}...
ರೂಢಿಸಿದ ಭಟ ನೀನು ಹರಿಬವ
ಬೇಡಿ ತೊಡಕಿದೆ ನಾನು ಖಾಡಾ
ಖಾಡಿಯಲಿ ಸಿಗುರಿಲ್ಲ ತೆಗೆ ಹಂಗೇಕೆ ತೆತ್ತಿಗರ
ನೋಡುತಿರಲೀ ಬಲವೆರಡು ಹೋ
ಗಾಡು ನಮ್ಮನು ಮೇಣು ನಿನ್ನನು
ಸೂಡುದರಿವೆನು ಸತ್ವದಳತೆಯ ಕಾಣಲಹುದೆಂದ ॥30॥
೦೩೧ ತೊಲಗಿರೈ ಪರಿವಾರ ...{Loading}...
ತೊಲಗಿರೈ ಪರಿವಾರ ಬಾಳೆಯ
ತಳಿಯ ಮುರಿವತಿಸಹಸಿ ಗಡ ಮರಿ
ಮೊಲನ ಬೇಟೆಯ ವೀರ ಗಡ ಬಾಣಪ್ರಯೋಗದಲಿ
ಸಲೆ ಮೃಗದ ಸಾಹಸಿಕ ಗಡ ಕು
ಟ್ಮಳಿತ ಕೇತಕಿ ತೀಕ್ಷ ್ಣ ಗಡ ನೀ
ವಳವಿಗೊಡದಿರಿ ಎನುತ ನಿನ್ನ ಕುಮಾರನನುವಾದ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುಶ್ಶಾಸನನು ತನ್ನ ಪರಿವಾರದವರನ್ನು ಕುರಿತು ‘ನೀವೆಲ್ಲ ದೂರ ಹೋಗಿ, ಬಾಳೆಯ ಸಸಿಯನ್ನು ಮುರಿಯುವ ಮಹಾಶೂರನಲ್ಲವೇ, ಮೊಲದ ಮರಿಯನ್ನು ಬೇಟೆಯಾಡುವ ವೀರನಲ್ಲವೇ, ಬಾಣ ಪ್ರಯೋಗದಿಂದ ಜಿಂಕೆಯನ್ನು ಕೊಲ್ಲುವ ಸಾಹಸಿಯಲ್ಲವೇ, ಕೇದಗೆಯ ಮೊಗ್ಗಿನಂತೆ ಹರಿತವಾಗಿರುವವನಲ್ಲವೇ ಈ ಭೀಮ. ಅವನನ್ನು ನೀವು ಎದುರಿಸಬೇಡಿ’ ಎಂದು ವ್ಯಂಗ್ಯ ಮಾಡುತ್ತಾ ಹೋರಾಟಕ್ಕೆ ಸಿದ್ಧನಾದ.
ಪದಾರ್ಥ (ಕ.ಗ.ಪ)
ಕುಟ್ಮಳ-ಮೊಗ್ಗು
ಮೂಲ ...{Loading}...
ತೊಲಗಿರೈ ಪರಿವಾರ ಬಾಳೆಯ
ತಳಿಯ ಮುರಿವತಿಸಹಸಿ ಗಡ ಮರಿ
ಮೊಲನ ಬೇಟೆಯ ವೀರ ಗಡ ಬಾಣಪ್ರಯೋಗದಲಿ
ಸಲೆ ಮೃಗದ ಸಾಹಸಿಕ ಗಡ ಕು
ಟ್ಮಳಿತ ಕೇತಕಿ ತೀಕ್ಷ ್ಣ ಗಡ ನೀ
ವಳವಿಗೊಡದಿರಿ ಎನುತ ನಿನ್ನ ಕುಮಾರನನುವಾದ ॥31॥
೦೩೨ ಪೂತು ಸುಭಟ ...{Loading}...
ಪೂತು ಸುಭಟ ಸುಯೋಧನನ ಸಹ
ಜಾತನಲ್ಲಾ ಮತ್ತೆ ಕೆಲಬರಿ
ಗೀ ತವಕವೀ ಶೌರ್ಯವೀ ಬಲುಹೀಸುದಿಟ್ಟತನ
ಸೋತುದುಂಟೇ ಹೊಳ್ಳುವಾತಿನ
ಹೂತೊಡಬೆ ನಿನಗಿಲ್ಲ ಧೈರ್ಯದ
ಧಾತುವೊಳ್ಳಿತು ಕೊಳ್ಳೆನುತ ತೆಗೆದೆಚ್ಚನಾ ಭೀಮ ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮನೂ ಸಿದ್ಧನಾಗಿ ‘ಭೇಷ್, ವೀರ, ದುರ್ಯೋಧನನ ತಮ್ಮನಲ್ಲವೇ ನೀನು. ಈ ತವಕ, ಈ ಶೌರ್ಯ, ಈ ಶಕ್ತಿ, ಇಷ್ಟೊಂದು ಧೈರ್ಯ ಇರುವ ನೀನು ಬೇರೆಯವರಿಗೆ ಸೋತದ್ದಿದೆಯೇ ? ಅರ್ಥವಿಲ್ಲದ ಮಾತನ್ನು ನೀನು ಆಡುವವನಲ್ಲ. (ಪೊಳ್ಳು ಮಾತಿನ ಹೂವಿನ ಅಲಂಕಾರ ಬಯಸದವನು) ನಿನ್ನ ಧೈರ್ಯ ಶಕ್ತಿಗಳು ಚೆನ್ನಾಗಿವೆ. ತೆಗೆದುಕೋ’ ಎನ್ನುತ್ತಾ ಬಲವಾಗಿ ಬಾಣಗಳನ್ನು ಪ್ರಯೋಗಿಸಿದನು.
ಮೂಲ ...{Loading}...
ಪೂತು ಸುಭಟ ಸುಯೋಧನನ ಸಹ
ಜಾತನಲ್ಲಾ ಮತ್ತೆ ಕೆಲಬರಿ
ಗೀ ತವಕವೀ ಶೌರ್ಯವೀ ಬಲುಹೀಸುದಿಟ್ಟತನ
ಸೋತುದುಂಟೇ ಹೊಳ್ಳುವಾತಿನ
ಹೂತೊಡಬೆ ನಿನಗಿಲ್ಲ ಧೈರ್ಯದ
ಧಾತುವೊಳ್ಳಿತು ಕೊಳ್ಳೆನುತ ತೆಗೆದೆಚ್ಚನಾ ಭೀಮ ॥32॥
೦೩೩ ಫಡ ಎನುತ ...{Loading}...
ಫಡ ಎನುತ ಪವನಜನ ಬಾಣವ
ಕಡಿದು ಕೂರಂಬಿನಲಿ ಭೀಮನ
ಕೆಡೆಯೆಸುತ ಮುರಿಯೆಚ್ಚು ಮಗುಳೆಚ್ಚಂಬ ಹರೆಗಡಿದು
ಎಡೆಯಲೆಚ್ಚಂಬುಗಳನಿಬ್ಬರು
ಕಡಿದರಂಬಂಬುಗಳ ಹೋರಟೆ
ಕಿಡಿಗೆದರೆ ನಿಬ್ಬರದ ಕದನವ ಕಂಡೆನಿಬ್ಬರಲಿ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- " ಭಲೆ! " ಎನ್ನುತ್ತಾ ದುಶ್ಶಾಸನನು ಭೀಮನ ಬಾಣಗಳನ್ನು ತನ್ನ ಹರಿತವಾದ ಬಾಣಗಳಿಂದ ಕತ್ತರಿಸಿದನು. ಅವನು ಕೆಳಕ್ಕೆ ಬೀಳುವಂತೆ ಬಾಣಗಳನ್ನು ಪ್ರಯೋಗಿಸಿದನು. ಒಬ್ಬರು ಮತ್ತೊಬ್ಬರ ಬಾಣಗಳನ್ನು ತುಂಡುಮಾಡಿ ಹೋರಾಡಿದರು. ಬಾಣಗಳ ತಾಕಲಾಟದಿಂದ ಕಿಡಿಗಳು ಎದ್ದವು. ಅತಿಶಯದ ಕದನ ಇಬ್ಬರಲ್ಲಿ ನಡೆದದ್ದನ್ನು ನಾನು ನೋಡಿದೆ" ಎಂದ ಸಂಜಯ.
ಪದಾರ್ಥ (ಕ.ಗ.ಪ)
ಹರೆಗಡಿ-ಕಡಿದು ಚೆಲ್ಲು
ಮೂಲ ...{Loading}...
ಫಡ ಎನುತ ಪವನಜನ ಬಾಣವ
ಕಡಿದು ಕೂರಂಬಿನಲಿ ಭೀಮನ
ಕೆಡೆಯೆಸುತ ಮುರಿಯೆಚ್ಚು ಮಗುಳೆಚ್ಚಂಬ ಹರೆಗಡಿದು
ಎಡೆಯಲೆಚ್ಚಂಬುಗಳನಿಬ್ಬರು
ಕಡಿದರಂಬಂಬುಗಳ ಹೋರಟೆ
ಕಿಡಿಗೆದರೆ ನಿಬ್ಬರದ ಕದನವ ಕಂಡೆನಿಬ್ಬರಲಿ ॥33॥
೦೩೪ ಸವೆಯೆ ಸರಳೆಚ್ಚಾಡಿದರು ...{Loading}...
ಸವೆಯೆ ಸರಳೆಚ್ಚಾಡಿದರು ಕಲಿ
ಪವನಸುತ ದುಶ್ಯಾಸನರ ರಣ
ದವಕಿಗರ ಕೋಪಾಗ್ನಿ ಭುಗಿಭುಗಿಲೆಂದುದಡಿಗಡಿಗೆ
ಅವನಿಗಿಳಿಬಿಡು ಧನುವ ತೆಗೆ ಖಡು
ಗವನೆನುತ ರಥದಿಂದ ಹಾಯ್ದರು
ಬವರಿಗರು ಬಿನ್ನಣದಿ ಹೊಯ್ದಾಡಿದರಡಾಯುಧದಿ ॥34॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇಬ್ಬರು ವೀರರು ದುಶ್ಶಾಸನ - ಭೀಮರು ಬಾಣಗಳು ಮುಗಿಯುವವರೆಗೂ ಧನುರ್ಯುದ್ಧವನ್ನು ಮಾಡಿದರು. ಯುದ್ಧ ಮಾಡುವುದರ ಬಗ್ಗೆ ತವಕವಿದ್ದ ಇಬ್ಬರ ಕೋಪದ ಬೆಂಕಿ ಭುಗಿ ಭುಗಿಲ್ ಎಂದು ಹೆಚ್ಚಾಯಿತು. ‘ಬಿಲ್ಲನ್ನು ಭೂಮಿಯ ಮೇಲೆ ಬಿಸಾಡು, ಖಡ್ಗವನ್ನು ತೆಗೆದುಕೋ’ ಎಂದು ಹೇಳುತ್ತಾ ಇಬ್ಬರೂ ರಥದಿಂದ ಧುಮುಕಿದರು. ಈ ಯುದ್ಧ ವೀರರು ಅಡಾಯುಧವೆಂಬ ಕತ್ತಿಯನ್ನು ಹಿಡಿದು ಶಿಸ್ತಿನಿಂದ ಹೋರಾಡಿದರು.
ಪದಾರ್ಥ (ಕ.ಗ.ಪ)
ಬವರಿಗ-ಯುದ್ಧ ಮಾಡುವವ
ಮೂಲ ...{Loading}...
ಸವೆಯೆ ಸರಳೆಚ್ಚಾಡಿದರು ಕಲಿ
ಪವನಸುತ ದುಶ್ಯಾಸನರ ರಣ
ದವಕಿಗರ ಕೋಪಾಗ್ನಿ ಭುಗಿಭುಗಿಲೆಂದುದಡಿಗಡಿಗೆ
ಅವನಿಗಿಳಿಬಿಡು ಧನುವ ತೆಗೆ ಖಡು
ಗವನೆನುತ ರಥದಿಂದ ಹಾಯ್ದರು
ಬವರಿಗರು ಬಿನ್ನಣದಿ ಹೊಯ್ದಾಡಿದರಡಾಯುಧದಿ ॥34॥
೦೩೫ ಚಾರಣದ ಚಮ್ಮಟದ ...{Loading}...
ಚಾರಣದ ಚಮ್ಮಟದ ಖಡುಗದ
ಪಾರಗದಲುಚ್ಚಟದ ಲುಳಿಯ
ಖ್ಖಾರದೊಡ್ಡಿನ ಹೊಯ್ಲ ಹೋರಟೆಗಳ ಸುರೇಖೆಗಳ
ಸಾರತರಶ್ರಮರೊದಗಿದರು ಜ
ಜ್ಝಾರರುಬ್ಬಣ ಮುರಿಯೆ ಕಾದಿ ಕ
ಠಾರಿಗಳಲೇ ತರುಬಿ ನಿಂದರು ದಂಡೆ ಮಂಡಿಯಲಿ ॥35॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಚಲಿಸುವ, ಚಾವಟಿಯಂತೆ ಕತ್ತಿಯನ್ನು ಆಡಿಸುತ್ತಾ, ಅದರ ಏಟನ್ನು ತಪ್ಪಿಸುತ್ತಾ, ಉನ್ನತವಾದ ಪರಾಕ್ರಮದ ಕೈಚಳಕವನ್ನು ತೋರಿಸುತ್ತಾ, ಜೋರಾಗಿ ಕೂಗುತ್ತಾ ಒಟ್ಟಾಗಿ ಪ್ರಹಾರ ಮಾಡುತ್ತಾ ನಡೆಸಿದ ಹೋರಾಟದಿಂದ ಅವರು ಆಯಾಸಗೊಂಡರು. ಈ ಪ್ರಬಲವಾದ ಯುದ್ಧದಲ್ಲಿ ಅವರ ಕತ್ತಿಗಳು ಮುರಿದು ಹೋದಾಗ, ಕಠಾರಿಗಳನ್ನು ಹಿಡಿದು ಮಂಡಿಗಳನ್ನು ಊರಿ ನಿಂತು ಹೋರಾಡಿದರು.
ಪದಾರ್ಥ (ಕ.ಗ.ಪ)
ಚಾರಣ-ಚಲನೆ, ಚಮ್ಮಟ-ಚಾವಟಿ, ಪಾರಗ-ದಾಟುವವನು, ಲುಳಿ-ಕೈಚಳಕ, ಉಖ್ಖಾರ-ಕತ್ತಿಯನ್ನು ಹಿರಿದು ಯುದ್ಧಕ್ಕೆ ಸಿದ್ಧವಾಗಿರುವ ಒಂದು ಬಗೆ.
ಜಜ್ಝಾರ-ಪ್ರಬಲ ಯುದ್ಧ, ಉಬ್ಬಣ-ಒಂದು ಬಗೆಯ ಕತ್ತಿ, ದಂಡೆಮಂಡಿ-ಕುಸ್ತಿಯ ಒಂದು ಪಟ್ಟು - ಮಂಡಿಯನ್ನು ಊರಿ ನಿಲ್ಲುವುದು.
ಮೂಲ ...{Loading}...
ಚಾರಣದ ಚಮ್ಮಟದ ಖಡುಗದ
ಪಾರಗದಲುಚ್ಚಟದ ಲುಳಿಯ
ಖ್ಖಾರದೊಡ್ಡಿನ ಹೊಯ್ಲ ಹೋರಟೆಗಳ ಸುರೇಖೆಗಳ
ಸಾರತರಶ್ರಮರೊದಗಿದರು ಜ
ಜ್ಝಾರರುಬ್ಬಣ ಮುರಿಯೆ ಕಾದಿ ಕ
ಠಾರಿಗಳಲೇ ತರುಬಿ ನಿಂದರು ದಂಡೆ ಮಂಡಿಯಲಿ ॥35॥
೦೩೬ ಲುಳಿಯ ಪಯಪಾಡುಗಳ ...{Loading}...
ಲುಳಿಯ ಪಯಪಾಡುಗಳ ದಂಡೆಯ
ಬಳಿಯ ಲೋಹದ ಲವಣಿಗಳ ಮನ
ಲಳಿಯ ಲಾಗಿನ ದೃಷ್ಟಿಯೋರೆಯ ಕೊಂಕಿದವಯವದ
ಬಲಿದ ದಂಡೆಯ ಮರೆಯ ದೇಹದ
ತಳಿತ ಠಾಣದ ಹಜ್ಜೆ ಹಜ್ಜೆಯ
ನೆಲನ ಪಲ್ಲಟದರಿಭಟರು ಕಾದಿದರು ಖಾತಿಯಲಿ ॥36॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೈಚಳಕವನ್ನು ತೋರಿಸುತ್ತ, ಕಾಲನ್ನು ಚುರುಕಾಗಿ ಚಲಿಸಿ ಮಂಡಿಯೂರಿ ನಿಂತು, ಜೊತೆಯಲ್ಲಿದ್ದ ಲೋಹಗಳ ಕಾಂತಿ, ಮನಸ್ಸಿನಲ್ಲಿ ಮೂಡಿದ ಆಲೋಚನೆಯ ಅಲೆಗಳ ಹೆಚ್ಚುವಿಕೆ, ಕೊಂಕಾದ ದೃಷ್ಟಿ, ಕೊಂಕಿದ ದೇಹ, ಸ್ಥಿರವಾಗಿ ಮಂಡಿಯೂರಿ ನಿಂತು, ಶತ್ರುವಿನ ಆಕ್ರಮಣದಿಂದ ತಪ್ಪಿಸಿಕೊಳ್ಳುತ್ತಾ ಹೆಜ್ಜೆಯನ್ನು ಬದಲಾಯಿಸಿಕೊಳ್ಳುತ್ತಾ ಇಬ್ಬರೂ ಕೋಪದಿಂದ ಹೋರಾಡಿದರು.
ಪದಾರ್ಥ (ಕ.ಗ.ಪ)
ಪಯಪಾಡು-ಕಾಲಿನ ನಡಿಗೆಯ ಒಂದು ರೀತಿ,
ಮೂಲ ...{Loading}...
ಲುಳಿಯ ಪಯಪಾಡುಗಳ ದಂಡೆಯ
ಬಳಿಯ ಲೋಹದ ಲವಣಿಗಳ ಮನ
ಲಳಿಯ ಲಾಗಿನ ದೃಷ್ಟಿಯೋರೆಯ ಕೊಂಕಿದವಯವದ
ಬಲಿದ ದಂಡೆಯ ಮರೆಯ ದೇಹದ
ತಳಿತ ಠಾಣದ ಹಜ್ಜೆ ಹಜ್ಜೆಯ
ನೆಲನ ಪಲ್ಲಟದರಿಭಟರು ಕಾದಿದರು ಖಾತಿಯಲಿ ॥36॥
೦೩೭ ಬಿಡಿಸಿದರೆ ಕುತ್ತುವ ...{Loading}...
ಬಿಡಿಸಿದರೆ ಕುತ್ತುವ ವಿಘಾತಿಯ
ಮಡಮುರಿಯಲೇ ಕಳೆವ ದಂಡೆಯ
ತುಡುಕಿದಡೆ ನೋಡುವ ನಿವಾರಿಸಿ ಜಡಿದು ಝಳಪಿಸುವ
ಪಡಿಮುಖದೊಳಂಘೈಸಿ ಬವರಿಯ
ಲೊಡಲನೊಲೆವ ಕಠಾರಿಕಾರರ
ಬಿಡುಶ್ರಮದ ಬಿನ್ನಣಕೆ ಮಝ ಭಾಪೆಂದುದುಭಯಬಲ ॥37॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಿಡಿಸಿಕೊಂಡಾಗ ತಿವಿಯುತ್ತಾ, ಪೆಟ್ಟಿನಿಂದ ತಪ್ಪಿಸಿಕೊಂಡು ಹಿಮ್ಮೆಟ್ಟುವ, ಮಂಡಿಯನ್ನು ಹಿಡಿಯಲು ಬಂದಾಗ ದೃಷ್ಟಿಸಿ ನೋಡುವ, ಅದರಿಂದ ತಪ್ಪಿಸಿಕೊಂಡು ಆರ್ಭಟಿಸಿ ಕಠಾರಿಯನ್ನು ಝಳಪಿಸುವ, ಮುಖಾಮುಖಿಯಾಗಿ ನಿಂತು ಹೋರಾಟ ಮಾಡುತ್ತಾ ಯುದ್ಧರಂಗದಲ್ಲಿ ಶರೀರವನ್ನು ಓಡಾಡಿಸುವ ಕಠಾರಿಯನ್ನು ಹಿಡಿದು ಹೋರಾಡುತ್ತಿದ್ದ ಈ ಇಬ್ಬರ ಏಕಾಂಗ ಸಾಹಸವನ್ನು, ಹೋರಾಟದ ರೀತಿಯನ್ನು ನೋಡಿ ಎರಡೂ ಕಡೆಯ ಸೈನಿಕರು ಹೊಗಳಿದರು.
ಪದಾರ್ಥ (ಕ.ಗ.ಪ)
ಕುತ್ತು-ತಿವಿ, ಮಡಮುರಿ-ಹಿಮ್ಮೆಟ್ಟು, ವಿಘಾತಿ-ಪೆಟ್ಟು, ಜಡಿದು-ಆರ್ಭಟಿಸು
ಪಡಿಮುಖ>ಪ್ರತಿಮುಖ-ಇದಿರುಮುಖ/ಮುಖಾಮುಖಿ, ಅಂಘೈಸು-ಹೋರಾಡು, ಬಿಡುಶ್ರಮ-ಏಕಾಂಗ ಸಾಹಸ
ಮೂಲ ...{Loading}...
ಬಿಡಿಸಿದರೆ ಕುತ್ತುವ ವಿಘಾತಿಯ
ಮಡಮುರಿಯಲೇ ಕಳೆವ ದಂಡೆಯ
ತುಡುಕಿದಡೆ ನೋಡುವ ನಿವಾರಿಸಿ ಜಡಿದು ಝಳಪಿಸುವ
ಪಡಿಮುಖದೊಳಂಘೈಸಿ ಬವರಿಯ
ಲೊಡಲನೊಲೆವ ಕಠಾರಿಕಾರರ
ಬಿಡುಶ್ರಮದ ಬಿನ್ನಣಕೆ ಮಝ ಭಾಪೆಂದುದುಭಯಬಲ ॥37॥
೦೩೮ ಕಣೆಯ ಕಾಲಾಟದಲಿ ...{Loading}...
ಕಣೆಯ ಕಾಲಾಟದಲಿ ಹಿರಿಯು
ಬ್ಬಣದ ಹೋರಟೆಯಲಿ ಕಠಾರಿಯ
ಕುಣಿಹದಲಿ ಮಸೆಗಾಣದಿದ್ದುದು ನಿನ್ನ ದೇಹದಲಿ
ರಣಮುಖದೊಳಿದು ನಮ್ಮ ಪುಣ್ಯದ
ರಿಣವಿಶೇಷ ಕಣಾ ಎನುತ ರಿಪು
ಗಣಭಯಂಕರ ಭೀಮ ನುಡಿದನು ಕೌರವಾನುಜನ ॥38॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಸಾಯುವಂತೆ ಹೊಡೆದ ಬಾಣಗಳಿಂದ, ದೊಡ್ಡ ಕತ್ತಿಯ ಹೋರಾಟದಲ್ಲಿ, ಕಠಾರಿಯ ತಿವಿತದಲ್ಲಿ ನಿನ್ನ ದೇಹಕ್ಕೆ ಗಾಯವಾಗಲಿಲ್ಲ. ಯುದ್ಧದಲ್ಲಿ ನಮ್ಮ ಪುಣ್ಯದ ಋಣದಿಂದ ಹೀಗಾಯಿತು. ಎಂದರೆ ನಿನ್ನನ್ನು ದೈಹಿಕವಾಗಿ ಎದುರಿಸುವ ಕಾಲ ಬಂದಿತು” ಎಂದು ಭೀಮನು ದುಶ್ಶಾಸನನಿಗೆ ಹೇಳಿದನು.
ಪದಾರ್ಥ (ಕ.ಗ.ಪ)
ಉಬ್ಬಣ-ಕತ್ತಿ
ಮೂಲ ...{Loading}...
ಕಣೆಯ ಕಾಲಾಟದಲಿ ಹಿರಿಯು
ಬ್ಬಣದ ಹೋರಟೆಯಲಿ ಕಠಾರಿಯ
ಕುಣಿಹದಲಿ ಮಸೆಗಾಣದಿದ್ದುದು ನಿನ್ನ ದೇಹದಲಿ
ರಣಮುಖದೊಳಿದು ನಮ್ಮ ಪುಣ್ಯದ
ರಿಣವಿಶೇಷ ಕಣಾ ಎನುತ ರಿಪು
ಗಣಭಯಂಕರ ಭೀಮ ನುಡಿದನು ಕೌರವಾನುಜನ ॥38॥
೦೩೯ ಸಾಕಿದೇತಕೆ ಮಲ್ಲ ...{Loading}...
ಸಾಕಿದೇತಕೆ ಮಲ್ಲ ಶ್ರಮದಲಿ
ನೂಕಿನೋಡುವೆವಿನ್ನು ಕೈದುಗ
ಳೇಕೆ ದೃಢಮುಷ್ಠೀ ಪ್ರಹಾರ ಪ್ರಕಟಸತ್ವರಿಗೆ
ಈ ಕುಮಾರಕರೊಳಗೆ ನೀನೇ
ಜೋಕೆಯುಳ್ಳವನಹೆ ನಿಯುದ್ಧ
ವ್ಯಾಕರಣಪಾಂಡಿತ್ಯವೆಮಗುಂಟೆಂದನಾ ಭೀಮ ॥39॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಇನ್ನು ಇವೆಲ್ಲ ಏತಕ್ಕೆ ? ಮಲ್ಲಯುದ್ಧವನ್ನು ಮಾಡೋಣ. ಮುಷ್ಟಿ ಪ್ರಹಾರದ ಶಕ್ತಿಯುಳ್ಳವರಿಗೆ ಆಯುಧಗಳು ಇನ್ನು ಏಕೆ ? ಈ ಕುಮಾರರ ಗುಂಪಿನಲ್ಲಿ ನೀನೇ ಪ್ರೌಢಿಮೆ ಇರುವವನು. ಮಲ್ಲಯುದ್ಧವನ್ನು ಮಾಡುವ ಪರಿಣತಿ ನನಗೂ ಇದೆ” ಎಂದನು ಭೀಮ.
ಪದಾರ್ಥ (ಕ.ಗ.ಪ)
ಜೋಕೆ-ಪ್ರೌಢಿಮೆ, ನಿಯುದ್ಧ-ಮಲ್ಲಯುದ್ಧ
ಮೂಲ ...{Loading}...
ಸಾಕಿದೇತಕೆ ಮಲ್ಲ ಶ್ರಮದಲಿ
ನೂಕಿನೋಡುವೆವಿನ್ನು ಕೈದುಗ
ಳೇಕೆ ದೃಢಮುಷ್ಠೀ ಪ್ರಹಾರ ಪ್ರಕಟಸತ್ವರಿಗೆ
ಈ ಕುಮಾರಕರೊಳಗೆ ನೀನೇ
ಜೋಕೆಯುಳ್ಳವನಹೆ ನಿಯುದ್ಧ
ವ್ಯಾಕರಣಪಾಂಡಿತ್ಯವೆಮಗುಂಟೆಂದನಾ ಭೀಮ ॥39॥
೦೪೦ ಏಸನಗ್ಗಿಸಿಕೊಮ್ಬೆ ನಿನಗಿ ...{Loading}...
ಏಸನಗ್ಗಿಸಿಕೊಂಬೆ ನಿನಗಿ
ನ್ನೈಸು ಕೈದುಗಳಲ್ಲಿ ಕೃತವ
ಭ್ಯಾಸವಾ ಕೈದುಗಳ ಬಾಯಿಗೆ ನಿನ್ನ ಬೀರುವೆನು
ಏಸು ಬೇಹುದು ಮಲ್ಲತನ ನಿನ
ಗೈಸು ಬಿನ್ನಾಣದಲಿ ನಿನ್ನಯ
ಸೀಸವಾಳವ ಹೊಯ್ವೆನೆಂದನು ನಿನ್ನ ಮಗ ನಗುತ ॥40॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅದಕ್ಕೆ ದುಶ್ಶಾಸನನು. “ಎಷ್ಟು ಆಯುಧಗಳನ್ನು ನಾಶ ಮಾಡಬಲ್ಲೆ ನೀನು. ನಿನಗೆ ಎಷ್ಟು ಆಯುಧಗಳು ತಿಳಿದಿದೆಯೋ, ಆ ಆಯುಧಗಳಿಗೆ ನಿನ್ನನ್ನು ಆಹುತಿ ಕೊಡುವೆನು. ನಿನಗೆ ಎಷ್ಟು ಬೇಕೋ ಅಷ್ಟು ಮಲ್ಲಯುದ್ಧವನ್ನು, ಹಾಗೆಯೇ ಮಾಡಿ, ನಿನ್ನ ಸೀಸದ ಖಡ್ಗವನ್ನು ಮುರಿದು ಹಾಕುವೆನು” ಎಂದನು.
ಪದಾರ್ಥ (ಕ.ಗ.ಪ)
ಅಗ್ಗಿಸು-ಹಾಳುಮಾಡು, ಸೀಸವಾಳ-? ಸೀಸ = ಸೀರ್ಷ- ತಲೆ, ವಾಳ >ಪಾಲ, ಶಿರಸ್ತ್ರಾಣ
ಮೂಲ ...{Loading}...
ಏಸನಗ್ಗಿಸಿಕೊಂಬೆ ನಿನಗಿ
ನ್ನೈಸು ಕೈದುಗಳಲ್ಲಿ ಕೃತವ
ಭ್ಯಾಸವಾ ಕೈದುಗಳ ಬಾಯಿಗೆ ನಿನ್ನ ಬೀರುವೆನು
ಏಸು ಬೇಹುದು ಮಲ್ಲತನ ನಿನ
ಗೈಸು ಬಿನ್ನಾಣದಲಿ ನಿನ್ನಯ
ಸೀಸವಾಳವ ಹೊಯ್ವೆನೆಂದನು ನಿನ್ನ ಮಗ ನಗುತ ॥40॥
೦೪೧ ತರಿಸಿ ಬಿಗಿದರು ...{Loading}...
ತರಿಸಿ ಬಿಗಿದರು ಚಲ್ಲಣವ ಠ
ಪ್ಪರವನಳವಡೆಗಟ್ಟಿದರು ಕ
ಸ್ತುರಿಯ ತಿಲಕವನೊಟ್ಟಿದರು ನೊಸಲಿನಲಿ ಮುಡುಹಿನಲಿ
ಕರತಳವ ಮಾರುದ್ದಿ ಭುಜದಲಿ
ಶಿರದಲಂದಕ್ಕಡದ ಮಣ್ಣನು
ಬೆರಳಲುದುರಿಚಿ ಬಾಳುಗೆಂದರು ನೆನೆದು ನಿಂಬಜೆಯ ॥41॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮ ದುಶ್ಶಾಸನರಿಬ್ಬರೂ ಚಲ್ಲಣಗಳನ್ನು ತರಿಸಿ ಹಾಕಿಕೊಂಡರು. ಮಲ್ಲಗಚ್ಚೆಯನ್ನು ಬಿಗಿಯಾಗಿ ಕಟ್ಟಿಕೊಂಡರು. ಕಸ್ತೂರಿಯ ತಿಲಕವನ್ನು ಹಣೆಯಲ್ಲಿ ಇಟ್ಟುಕೊಂಡರು. ಹೆಗಲನ್ನು ಅಂಗೈಗಳಿಂದ ಬಲವಾಗಿ ಹೊಡೆದುಕೊಂಡರು. ಭುಜ- ತಲೆಗಳ ಮೇಲೆ ಅಖಾಡದ ಮಣ್ಣನ್ನು ಬೆರಳುಗಳಿಂದ ಎರಚಿಕೊಂಡರು. ನಿಂಬಜೆ ಎಂಬ ದೇವತೆಗೆ ಜಯವಾಗಲಿ ಎಂದು ಸ್ಮರಿಸಿದರು.
ಪದಾರ್ಥ (ಕ.ಗ.ಪ)
ಚಲ್ಲಣ-ಚಡ್ಡಿ, ಠಪ್ಪರ-ಟೆಪ್ಪರ-ಮಲ್ಲಗಚ್ಚೆ, ಮಲ್ಲಗಂಟು ಮುಡುಹು-ಹೆಗಲು, ಮಾರುದ್ದಿ-ಬಲವಾಗಿ ತಿಕ್ಕಿ / ಹೊಡೆದು, ಅಕ್ಕಡ-ಅಖಾಡ,
ನಿಂಬಜೆ- ಯುದ್ಧಾಭಿಮಾನಿ ದೇವತೆ
ಮೂಲ ...{Loading}...
ತರಿಸಿ ಬಿಗಿದರು ಚಲ್ಲಣವ ಠ
ಪ್ಪರವನಳವಡೆಗಟ್ಟಿದರು ಕ
ಸ್ತುರಿಯ ತಿಲಕವನೊಟ್ಟಿದರು ನೊಸಲಿನಲಿ ಮುಡುಹಿನಲಿ
ಕರತಳವ ಮಾರುದ್ದಿ ಭುಜದಲಿ
ಶಿರದಲಂದಕ್ಕಡದ ಮಣ್ಣನು
ಬೆರಳಲುದುರಿಚಿ ಬಾಳುಗೆಂದರು ನೆನೆದು ನಿಂಬಜೆಯ ॥41॥
೦೪೨ ಸೂಳವಿಸಿದರು ಭುಜಶಿಖರ ...{Loading}...
ಸೂಳವಿಸಿದರು ಭುಜಶಿಖರ ನಿ
ಸ್ಸಾಳವನು ನೆಲಕುಣಿಯೆ ದಿಕ್ಕಿನ
ಮೂಲೆ ಬಿರಿಯೆ ಪಯೋಧಿಗಳಲಿ ಪಯೋಧಿ ಪಲ್ಲಟಿಸೆ
ಘೀಳಿಡಲು ಕಿವಿಗಳಲಿ ಸೇನಾ
ಜಾಳವೆರಡರೊಳುಭಯದಿಗು ಶುಂ
ಡಾಲ ಕೈಯಿಕ್ಕುವವೊಲಿವರೊತ್ತಿದರು ತೋಳ್ಗಳಲಿ ॥42॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎತ್ತರವಾದ ಭುಜಗಳೆಂಬ ಭೇರಿಯಿಂದ ಶಬ್ದ ಮಾಡಿದರು. ಆಗ ಭೂಮಿ ಕಂಪಿಸಿತು. ದಿಕ್ಕಿನ ಮೂಲೆಗಳು ಬಿರುಕು ಬಿಟ್ಟವು. ಸಮುದ್ರಗಳು ಪರಸ್ಪರ ಡಿಕ್ಕಿ ಹೊಡೆದವು. ಇವರ ಗರ್ಜನೆಗಳು ಉಭಯ ಸೈನ್ಯದ ಕಿವಿಗಳಿಗೆ ಅಪ್ಪಳಿಸಿದವು. ಎರಡು ದಿಕ್ಕಿನ ಆನೆಗಳು ಸೊಂಡಿಲನ್ನು ಚಾಚಿ ಹೋರಾಡುವಂತೆ ಇಬ್ಬರೂ ತೋಳುಗಳನ್ನು ಒತ್ತಿ ಹಿಡಿದರು.
ಮೂಲ ...{Loading}...
ಸೂಳವಿಸಿದರು ಭುಜಶಿಖರ ನಿ
ಸ್ಸಾಳವನು ನೆಲಕುಣಿಯೆ ದಿಕ್ಕಿನ
ಮೂಲೆ ಬಿರಿಯೆ ಪಯೋಧಿಗಳಲಿ ಪಯೋಧಿ ಪಲ್ಲಟಿಸೆ
ಘೀಳಿಡಲು ಕಿವಿಗಳಲಿ ಸೇನಾ
ಜಾಳವೆರಡರೊಳುಭಯದಿಗು ಶುಂ
ಡಾಲ ಕೈಯಿಕ್ಕುವವೊಲಿವರೊತ್ತಿದರು ತೋಳ್ಗಳಲಿ ॥42॥
೦೪೩ ತೆಗೆದು ಗಳಹತ್ತದಲಿ ...{Loading}...
ತೆಗೆದು ಗಳಹತ್ತದಲಿ ಕೊರಳನು
ಬಿಗಿಯೆ ಬಿಡಿಸುವ ತೋರಹತ್ತದ
ಹೊಗುತೆಯನು ವಂಚಿಸುವ ತಳಹತ್ತದಲಿ ತವಕಿಸುವ
ಲಗಡಿಯಲಿ ಲಟಕಟಿಸುವಂತರ
ಲಗಡಿಯಲಿ ಲಾಲಿಸುವ ಡೊಕ್ಕರ
ಣೆಗಳ ಬಿಗುಹಿನ ಬಿಡೆಯ ಬಿನ್ನಾಣದಲಿ ಹೆಣಗಿದರು ॥43॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕುತ್ತಿಗೆಗೆ ಹಾಕಿದ ಕೈಯನ್ನು ಬಿಡಿಸಿಕೊಂಡು, ಬಲವಾದ ಹಸ್ತದ ಏಟನ್ನು ತಪ್ಪಿಸುತ್ತಾ, ಕಾಲನ್ನು ಹಿಡಿದು ಬೀಳಿಸುವ ಪ್ರಯತ್ನ ಮಾಡುತ್ತಾ, ಹೊಡೆತ ಬಿದ್ದಾಗ ಕಂಪಿಸುವ, ಒಳಮುಖದ ಹೊಡೆತವನ್ನು ಕೊಟ್ಟಾಗ ಬೀಗುವ, ಅಮುಕಿ ಹಿಡಿಯುವ ಬಲವಾದ ಬಿಗಿತದ ಲೆಕ್ಕಾಚಾರದಲ್ಲಿ ಇಬ್ಬರೂ ಹೆಣಗಾಡಿದರು.
ಪದಾರ್ಥ (ಕ.ಗ.ಪ)
ಗಳಹತ್ತ, ತೋರಹತ್ತ, ತಳಹತ್ತ-ಪೈಲ್ವಾನರ ಪಟ್ಟುಗಳು, ಲಗಡಿ-ಹೊಡೆತ, ಡೊಕ್ಕರಣೆ-ಅಮುಕಿ ಹಿಡಿಯುವುದು, ಬಿಡೆಯ-ಬಲವಾದ, ಅಂತರಲಗಡಿ-ಒಳಮುಖದ ಹೊಡೆತ
ಮೂಲ ...{Loading}...
ತೆಗೆದು ಗಳಹತ್ತದಲಿ ಕೊರಳನು
ಬಿಗಿಯೆ ಬಿಡಿಸುವ ತೋರಹತ್ತದ
ಹೊಗುತೆಯನು ವಂಚಿಸುವ ತಳಹತ್ತದಲಿ ತವಕಿಸುವ
ಲಗಡಿಯಲಿ ಲಟಕಟಿಸುವಂತರ
ಲಗಡಿಯಲಿ ಲಾಲಿಸುವ ಡೊಕ್ಕರ
ಣೆಗಳ ಬಿಗುಹಿನ ಬಿಡೆಯ ಬಿನ್ನಾಣದಲಿ ಹೆಣಗಿದರು ॥43॥
೦೪೪ ಘಾಯವೇ ಜಗಜಟ್ಟಿ ...{Loading}...
ಘಾಯವೇ ಜಗಜಟ್ಟಿ ಮಲ್ಲರಿ
ಗಾಯಸವು ಜೊಕ್ಕೆಯವು ಬಿಡುವಡು
ಪಾಯ ಕೇಳ್ ಎಂದೊದೆದು ದಂಡೆಯನೊಡ್ಡಿದನು ಭೀಮ
ರಾಯ ಕೇಳೈ ಸಿಡಿಲ ತಿವಿಗುಳ
ತಾಯಿಮನೆಯೋ ಪವನಜನ ಬಲು
ಘಾಯವೋ ಘನ ತೋರಹತ್ತರು ತಿವಿದರುರವಣಿಸಿ ॥44॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಹೊಡೆತವೇ ಜಗಜಟ್ಟಿ ಮಲ್ಲನಿಗೆ, ಆಯಾಸದ ಕೆಲಸ ವರಸೆಗಳಿಂದ ಬಿಡಿಸಿಕೊಳ್ಳಲು ಇದು ಸರಿಯಾದ ಮಾರ್ಗ" ಎನ್ನುತ್ತಾ ಮೊಣಕಾಲನ್ನು ಊರಿ ಭೀಮನು ದುಶ್ಶಾಸನನನ್ನು ತಿವಿಯಲು ಮುಂದಾದ. ಧೃತರಾಷ್ಟ್ರನೇ ಕೇಳು ಆ ತಿವಿತ ಸಿಡಿಲುಗಳು ತನ್ನ ತವರು ಮನೆಯಿಂದ ಹೊರಬರುತ್ತಿವೆಯೇ ಭೀಮನ ಹೊಡೆತಗಳು ಎನ್ನುವಂತಿತ್ತು. ಬಲವಾದ ಹಸ್ತದ ಅವರಿಬ್ಬರೂ ಮುಂದೆ ನುಗ್ಗಿ ತಿವಿದಾಡಿದರು.
ಪದಾರ್ಥ (ಕ.ಗ.ಪ)
ಚೊಕ್ಕೆಯ-ವರಸೆ, ದಂಡೆ-ಮೊಣಕಾಲೂರಿದ ಸ್ಥಿತಿ
ಮೂಲ ...{Loading}...
ಘಾಯವೇ ಜಗಜಟ್ಟಿ ಮಲ್ಲರಿ
ಗಾಯಸವು ಜೊಕ್ಕೆಯವು ಬಿಡುವಡು
ಪಾಯ ಕೇಳೆಂದೊದೆದು ದಂಡೆಯನೊಡ್ಡಿದನು ಭೀಮ
ರಾಯ ಕೇಳೈ ಸಿಡಿಲ ತಿವಿಗುಳ
ತಾಯಿಮನೆಯೋ ಪವನಜನ ಬಲು
ಘಾಯವೋ ಘನ ತೋರಹತ್ತರು ತಿವಿದರುರವಣಿಸಿ ॥44॥
೦೪೫ ಮೈಗೆ ಮೇಣದ ...{Loading}...
ಮೈಗೆ ಮೇಣದ ಹಾಹೆ ಸರಿ ಮುಂ
ಗೈಗೆ ಮೇರುವಿನಿರವು ದೊರೆ ಹೊರ
ಕೈಗೆ ವಜ್ರದ ಹೊಯ್ಲು ಪಡಿಘಟ್ಟಣೆ ಮಹಾದೇವ
ಕೈಗಡಿಯ ಪಟುಭಟರೊಳಗೆ ಬಲು
ಗೈಗಳೆಂದಮರಾಳಿ ಹೊಗಳಲು
ಹೊಯ್ಗುಳಿನ ಹೊಸನಾಟಕವನಭಿನಯಿಸಿ ಕಾದಿದರು ॥45॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮ ದುಶ್ಶಾಸನರ ದೇಹಗಳಿಗೆ ಮೇಣದ ಬೊಂಬೆಗಳು ಸರಿಸಮಾನ, ಮುಂಗೈಗಳಿಗೆ ಮೇರು ಪರ್ವತಗಳ ಕಾಠಿಣ್ಯ ಸಮಾನ. ಕೈಗಳ ಹೊಡೆತ ವಜ್ರಾಯುಧದ ಹೊಡೆತಕ್ಕೆ ಸಮಾನ, ಶಿವನೇ, ಮುಷ್ಟಿಯುದ್ಧದ ಮಲ್ಲರಲ್ಲಿ ಬಲವಾದ ಕೈಗಳು ಇವರದು, ಎಂದು ದೇವತೆಗಳು ಹೊಗಳಲು, ಇಬ್ಬರೂ ಒಬ್ಬರು ಮತ್ತೊಬ್ಬರನ್ನು ಹೊಡೆಯುವ ಹೊಸ ರೀತಿಯ ಮಲ್ಲಯುದ್ಧವನ್ನು ಅಭಿನಯಿಸಿ ತೋರಿಸುವಂತೆ ಹೋರಾಡಿದರು.
ಪದಾರ್ಥ (ಕ.ಗ.ಪ)
ಹಾಹೆ-ಬೊಂಬೆ, ಪಡಿಘಟ್ಟಣೆ-ಪ್ರತಿ ಹೊಡೆತ
ಮೂಲ ...{Loading}...
ಮೈಗೆ ಮೇಣದ ಹಾಹೆ ಸರಿ ಮುಂ
ಗೈಗೆ ಮೇರುವಿನಿರವು ದೊರೆ ಹೊರ
ಕೈಗೆ ವಜ್ರದ ಹೊಯ್ಲು ಪಡಿಘಟ್ಟಣೆ ಮಹಾದೇವ
ಕೈಗಡಿಯ ಪಟುಭಟರೊಳಗೆ ಬಲು
ಗೈಗಳೆಂದಮರಾಳಿ ಹೊಗಳಲು
ಹೊಯ್ಗುಳಿನ ಹೊಸನಾಟಕವನಭಿನಯಿಸಿ ಕಾದಿದರು ॥45॥
೦೪೬ ಒನ್ದು ಭೀಮನ ...{Loading}...
ಒಂದು ಭೀಮನ ಮೇಲೆ ನಿನ್ನಯ
ನಂದನನ ಮೇಲೆರಡು ಕೊಂತೀ
ನಂದನಗೆ ನಾಲ್ಕೆಂಟು ನಿನ್ನ ಕುಮಾರನಂಗದಲಿ
ಸಂದಣಿಸಿದವು ಘಾಯ ಘಾಯದ
ಮುಂದೆ ಹೊದರೆದ್ದವು ಸುಘಾಯದ
ಬಂದಿಯಲಿ ಸಿಲುಕಿತ್ತು ನಿನ್ನ ಕುಮಾರನಂಘವಣೆ ॥46॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಒಂದು ಗಾಯ ಭೀಮನಿಗಾದರೆ, ನಿನ್ನ ಮಗನಿಗೆ ಎರಡು ಗಾಯಗಳಾಗುತ್ತಿದ್ದವು. ಭೀಮನಿಗೆ ನಾಲ್ಕು ಗಾಯಗಳಾದರೆ ನಿನ್ನ ಮಗನಿಗೆ ಎಂಟು ಗಾಯಗಳು ಆಗುತ್ತಿದ್ದವು. ಹೀಗೆ ಗಾಯಗಳ ಮೇಲೆ ಗಾಯಗಳು ಆಗಿ, ನಿನ್ನ ಮಗನ ಪರಾಕ್ರಮ ಗಾಯಗಳ ಬಂದಿಯಾಯಿತು.
ಪದಾರ್ಥ (ಕ.ಗ.ಪ)
ಅಂಘವಣೆ-ಪರಾಕ್ರಮ
ಮೂಲ ...{Loading}...
ಒಂದು ಭೀಮನ ಮೇಲೆ ನಿನ್ನಯ
ನಂದನನ ಮೇಲೆರಡು ಕೊಂತೀ
ನಂದನಗೆ ನಾಲ್ಕೆಂಟು ನಿನ್ನ ಕುಮಾರನಂಗದಲಿ
ಸಂದಣಿಸಿದವು ಘಾಯ ಘಾಯದ
ಮುಂದೆ ಹೊದರೆದ್ದವು ಸುಘಾಯದ
ಬಂದಿಯಲಿ ಸಿಲುಕಿತ್ತು ನಿನ್ನ ಕುಮಾರನಂಘವಣೆ ॥46॥
೦೪೭ ತ್ರಾಣವೆಳದಾಯ್ತಖಿಳಶೌರ್ಯದ ...{Loading}...
ತ್ರಾಣವೆಳದಾಯ್ತಖಿಳಶೌರ್ಯದ
ಚೂಣಿ ಮುರಿದುದು ಘರ್ಮಜಲವು
ಗ್ರಾಣಿಸಿತು ಭುಜಬಲವನಂಕುರಿಸಿತ್ತು ರಣಭೀತಿ
ಪ್ರಾಣಪವನನ ಬೀಡುಬಿಟ್ಟುದು
ಗೋಣಿನಲಿ ಗರುವಾಯಿಗೆಡೆ ರಣ
ಹೂಣಿಗನು ಜವಗುಂದಿದನು ದುಶ್ಯಾಸನನು ಬಳಿಕ ॥47॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುಶ್ಶಾಸನನ ಶಕ್ತಿ ಕಡಿಮೆಯಾಯಿತು. ಪರಾಕ್ರಮದಿಂದ ಮುನ್ನುಗ್ಗುತ್ತಿದ ರಭಸ ಹಾಳಾಯಿತು. ಬೆವರಿನ ನೀರು ಹೆಚ್ಚಾಯಿತು. ಬಾಹುಬಲದಲ್ಲಿ ಯುದ್ಧ ಭೀತಿಯುಂಟಾಯಿತು. ಕುತ್ತಿಗೆಗೆ ಪ್ರಾಣ ಬಂದು ನಿಂತಿತು. ತನ್ನ ಶ್ರೇಷ್ಠತೆ ಹಾಳಾಗಿ, ಪ್ರತಿಜ್ಞೆಯಂತೆ ಯುದ್ಧರಂಗದಲ್ಲಿ ಹೋರಾಡುವ ಅವನು ಓಡಾಡುವ ಶಕ್ತಿಯನ್ನೇ ಕಳೆದುಕೊಂಡನು.
ಪದಾರ್ಥ (ಕ.ಗ.ಪ)
ಘರ್ಮಜಲ-ಬೆವರು ನೀರು
ಮೂಲ ...{Loading}...
ತ್ರಾಣವೆಳದಾಯ್ತಖಿಳಶೌರ್ಯದ
ಚೂಣಿ ಮುರಿದುದು ಘರ್ಮಜಲವು
ಗ್ರಾಣಿಸಿತು ಭುಜಬಲವನಂಕುರಿಸಿತ್ತು ರಣಭೀತಿ
ಪ್ರಾಣಪವನನ ಬೀಡುಬಿಟ್ಟುದು
ಗೋಣಿನಲಿ ಗರುವಾಯಿಗೆಡೆ ರಣ
ಹೂಣಿಗನು ಜವಗುಂದಿದನು ದುಶ್ಯಾಸನನು ಬಳಿಕ ॥47॥
೦೪೮ ಹೊಯ್ದು ತುರುಬನು ...{Loading}...
ಹೊಯ್ದು ತುರುಬನು ಹಿಡಿದು ತಡಗಾ
ಲ್ವೊಯ್ದು ಕೆಡಹಿದನಸಬಡಿದು ಹೊಯ್
ಹೊಯ್ದು ಬಿಡೆ ಖೊಪ್ಪರಿಸಿ ಡೊಕ್ಕರವಿಕ್ಕಿ ರಾಘೆಯಲಿ
ಹಾಯ್ದವಾಲಿಗಳುಸುರ ಪಾಳೆಯ
ವೆಯ್ದೆ ಬಿಟ್ಟುದು ಮೂಗಿನಲಿ ಕೈ
ಗೆಯ್ದು ತುಡುಕಿದ ಶೋಣಿತಕೆ ಲಟಕಟಸಿದನು ಭೀಮ ॥48॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮನು ದುಶ್ಶಾಸನನ ತಲೆಗೂದಲನ್ನು ಹಿಡಿದು, ತಡೆಗಾಲನ್ನು ಒಡ್ಡಿ ಕೆಡವಿದನು. ತಲೆಬುರುಡೆಗೆ ಗುದ್ದಿ, ಉಸಿರಾಡದಂತೆ ಮಾಡಿ, ತೊಡೆಗಳಿಗೆ ಹೊಡೆದು ತುಳಿದನು. ಅವನ ಕಣ್ಣು ಗುಡ್ಡೆಗಳು ಹೊರಬಂದಂತಾದವು. ಉಸಿರು ಮೂಗಿನಲ್ಲಿ ಪಾಳೆಯವನ್ನು ಬಿಟ್ಟಿತು ಎಂದರೆ ಏದುಸಿರು ಬಿಡುವಂತಾಯಿತು. ಭೀಮನು ಉತ್ಸಾಹದಿಂದ ದುಶ್ಶಾಸನನ ರಕ್ತವನ್ನು ಕೈಚಾಚಿ ಹಿಡಿದನು.
ಪದಾರ್ಥ (ಕ.ಗ.ಪ)
ಖೊಪ್ಪರಿಸು- ಮೊಳಕಯ, ಮೊಳಕಲುಗಳಿಂದ ತಿವಿಯುವ , ಮಲ್ಲಯುದ್ಧದ ಒಂದು ವರಸೆ.
ಡೊಕ್ಕರವಿಕ್ಕು-ಉಸಿರಾಡದಂತೆ ಮಾಡು, ರಾಘೆ- ?
ಲಟಕಟಿಸು-ಆತುರಪಡು, ತುಡುಕು-ಹಿಡಿ, ಶೋಣಿತ-ರಕ್ತ
ಮೂಲ ...{Loading}...
ಹೊಯ್ದು ತುರುಬನು ಹಿಡಿದು ತಡಗಾ
ಲ್ವೊಯ್ದು ಕೆಡಹಿದನಸಬಡಿದು ಹೊಯ್
ಹೊಯ್ದು ಬಿಡೆ ಖೊಪ್ಪರಿಸಿ ಡೊಕ್ಕರವಿಕ್ಕಿ ರಾಘೆಯಲಿ
ಹಾಯ್ದವಾಲಿಗಳುಸುರ ಪಾಳೆಯ
ವೆಯ್ದೆ ಬಿಟ್ಟುದು ಮೂಗಿನಲಿ ಕೈ
ಗೆಯ್ದು ತುಡುಕಿದ ಶೋಣಿತಕೆ ಲಟಕಟಸಿದನು ಭೀಮ ॥48॥
೦೪೯ ಹರಿ ಮದೋತ್ಕಟ ...{Loading}...
ಹರಿ ಮದೋತ್ಕಟ ದಂತಿಯನು ಡೊ
ಕ್ಕರಿಸಿ ಡಾವರಿಸುವವೊಲಾ ನರ
ಹರಿ ಹಿರಣ್ಯಕಶಿಪುವನಂಕದ ಮೇಲೆ ತೆಗೆವಂತೆ
ಅರಸ ನಿನ್ನ ಕುಮಾರಕನ ನಡು
ತರದೊಳಗೆ ಕೆಡಹಿದನು ಕೊಬ್ಬಿದ
ಮರುಷ ಹರುಷ ನಿಯುದ್ಧದಕ್ಕಡನಾದನಾ ಭೀಮ ॥49॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಿಂಹವು ಮದದಾನೆಯನ್ನು ಉಸಿರಾಡದಂತೆ ಮಾಡಿ, ಉತ್ಸಾಹದಿಂದ ಇರುವಂತೆ, ನರಸಿಂಹಾವತಾರದಲ್ಲಿ ವಿಷ್ಣುವು ಹಿರಣ್ಯಕಶಿಪುವನ್ನು ತೊಡೆಯ ಮೇಲೆ ಇಟ್ಟುಕೊಳ್ಳುವಾಗ ಮಾಡಿದಂತೆ, ಭೀಮನು ನಿನ್ನ ಮಗನ ಸೊಂಟವನ್ನು ಹಿಡಿದು ಕೆಡವಿದನು. ಶೂರನಾದ ಭೀಮನು ಕೊಬ್ಬಿದ ಕೋಪ, ಹೆಚ್ಚಿದ ಸಂತೋಷದಿಂದ ಬಾಹು ಯುದ್ಧದಲ್ಲಿ ದುಶ್ಶಾಸನನ್ನು ಚಚ್ಚಿದನು.
ಪದಾರ್ಥ (ಕ.ಗ.ಪ)
ಡಾವರಿಸು-ಉತ್ಸಾಹ, ಮರುಷ-ವಿಚಾರ, ನಿಯುದ್ಧ-ಬಾಹುಯುದ್ಧ, ದಕ್ಕಡ-ಧೈರ್ಯ
ಟಿಪ್ಪನೀ (ಕ.ಗ.ಪ)
ಹಿರಣ್ಯಕಶಿಪು - ಒಬ್ಬ ಪುರಾಣೋಕ್ತ ರಾಕ್ಷಸ. ಮಹಾಭಾರತದ ಆದಿಪರ್ವ ದ್ರೋಣವಧ ಪರ್ವ, ನಾರಾಯಣಾಸ್ತ್ರಮೋಕ್ಷ ಪರ್ವ ಅನುಶಾಸನಿಕ ಪರ್ವಗಳಲ್ಲಿ ಇವನ ಕಥನವಿದೆ.
ಕಶ್ಯಪ ಮತ್ತು ದಿತಿ ಇವರಿಗೆ ಹುಟ್ಟಿದ ಮಕ್ಕಳನ್ನು ದೈತ್ಯರು ಎನ್ನುತ್ತಾರೆ. ಹಿರಣ್ಯಾಕ್ಷ, ಹಿರಣ್ಯಕಶಿಪು ಮತ್ತು ವಜ್ರಾಂಗ ಎಂಬ ಮೂವರು ಗಂಡುಮಕ್ಕಳನ್ನು ಸಿಂಹಿಕ ಎಂಬ ಮಗಳನ್ನು ದಿತಿ ಹೆತ್ತಳು. ಹಿರಣ್ಯಾಕ್ಷನನ್ನು ವಿಷ್ಣುವು ವರಾಹ ರೂಪದಲ್ಲಿ ಅವತರಿಸಿ ಕೊಂದ ಕಥೆ ಪ್ರಸಿದ್ಧವಾಗಿದೆ. ಅಂದಿನಿಂದ ಹಿರಣ್ಯಕಶಿಪು ವಿಷ್ಣುದ್ವೇಷಿಯಾದ. ಬ್ರಹ್ಮನನ್ನು ಕುರಿತು ತಪಸ್ಸು ಮಾಡಿ ತನಗೆ ಹಗಲು-ರಾತ್ರಿಗಳಲ್ಲಿ ಸಾವು ಬರಬಾರದು, ಮನೆಯ ಒಳಗೆ ಹೊರಗೆ ಸಾವು ಬರಬಾರದು, ಯಾವ ಆಯುಧದಿಂದಲೂ ಸಾವು ಘಟಿಸಬಾರದು ಎಂದೆಲ್ಲ ವರವನ್ನು ಪಡೆದಿದ್ದ.
ಬ್ರಹ್ಮಾಂಡ ಮತ್ತು ವಾಯು ಪುರಾಣಗಳಲ್ಲಿ ‘ಹಿರಣ್ಯಕಶಿಪು’ ಎಂಬ ಹೆಸರು ಇವನಿಗೆ ಬಂದ ಬಗೆಗೆ ವಿವರಣೆಯಿದೆ. ಕಶ್ಯಪನು ಅಶ್ವಮೇಧಯಾಗವನ್ನು ಮಾಡುತ್ತಿದ್ದಾಗ ಭಾಗವಹಿಸಲು ಬರುವ ಮಹರ್ಷಿಗಳಿಗೆಂದು ಒಂದು ‘ಹಿರಣ್ಯ ಆಸನ’ ಇರಿಸಿದ್ದ. ಗರ್ಭಿಣಿಯಾಗಿದ್ದ ದಿತಿ ಆ ಹಿರಣ್ಯಾಸನದ ಮೇಲೆ ಕುಳಿತು ಅಲ್ಲೇ ಮಗುವನ್ನು ಹೆತ್ತುದರಿಂದ ಮಗುವಿಗೆ ಹಿರಣ್ಯಕಶಿಪು ಎಂಬ ಹೆಸರು ಬಂದಿತಂತೆ. ಇವನು ಹಿಂದೆ ನಿಶುಭಂ ಎಂಬ ರಾಕ್ಷಸನಾಗಿದ್ದನೆಂದೂ ಹೇಳಲಾಗಿದೆ.
‘ಸರ್ವಾಮರೈಶ್ವರ್ಯ’ ಎನ್ನಿಸಿಕೊಂಡ ಹಿರಣ್ಯಕಶಿಪು ತಪಸ್ಸಿನೀಂದ ಶಕ್ತಿಪಡೆದ ಮೇಲೆ ಒಂದು ಶೂಲವನ್ನು ಹಿಡಿದು ವಿóಷ್ಣುವನ್ನು ಅಟ್ಟಿಸಿಕೊಂಡು ವೈಕುಂಠಕ್ಕೆ ಬಂದ. ಇವನನ್ನು ಗೆಲ್ಲಲಾರದೆ ವಿಷ್ಣುವು ಕೊನೆಗೆ ಸೂಕ್ಷ್ಮರೂಪದಲ್ಲಿ ಇವನ ಮೂಗಿನ ರಂಧ್ರವನ್ನು ಪ್ರವೇಶಿಸಿ ಹಿರಣ್ಯಕಶಿಪುವಿನ ಹೃದಯದಲ್ಲಿ ಅವಿತುಕೊಂಡ. ಇದು ತಿಳಿಯದೆ ಹಿರಣ್ಯಕಶಿಪು ವಿಷ್ಣು ತಪ್ಪಿಸಿಕೊಂಡನೆಂದು ಭಾವಿಸಿ ಭೂಮಿ ಆಕಾಶ ಪಾತಾಳಗಳಲ್ಲೆಲ್ಲ ಹುಡುಕಿದ. ಕೊನೆಗೆ ವಿಷ್ಣು ಸತ್ತನೆಂದು ತಿಳಿದು ಸುಮ್ಮನಾದ. ಆದರೆ ಅವನ ವಿಷ್ಣುದ್ವೇಷ ಮಾತ್ರ ನಿಲ್ಲಲಿಲ್ಲ. ತನ್ನ ಸಾಮ್ರಾಜ್ಯದಲ್ಲಿ ಯಾರೂ ವಿಷ್ಣುವಿನ ಹೆಸರನ್ನು ಎತ್ತಬಾರದೆಂದೂ ‘ದೇವಾಲಯಗಳಲ್ಲಿ ‘ಹಿರಣ್ಯಾಯ ನಮಃ’ ಎಂಬ ಹೊಸ ಮಂತ್ರವನ್ನು ಹೇಳಬೇಕೆಂದು ಆಜ್ಞೆ ಮಾಡಿದ. ಆದರೆ ಲೋಕವೆಲ್ಲ ಇವನ ಆಜ್ಞೆಗೆ ತಲೆಬಾಗಿದಾಗ ಮನೆಯಲ್ಲಿಯೇ ವಿರೋಧ ಬಂದದ್ದು ಒಂದು ಆಶ್ಚರ್ಯದ ಘಟನೆ,
ಹಿರಣ್ಯ ಕಶಿಪುವಿನ ಪತ್ನಿ ಜಂಭರಾಕ್ಷಸ ಪುತ್ರಿಯಾದ ಕಯಾದು. (ಕೆಲವೆಡೆ ಲೀಲಾವತಿ ಎಂದೂ ಹೇಳಲಾಗಿದೆ) ಈ ದಂಪತಿಗಳಿಗೆ ಪ್ರಹ್ಲಾದ, ಅನುಹ್ಲಾದ, ಶಿಬಿ, ಭಾಷ್ಯಲ ಎಂಬ ನಾಲ್ವರು ಗಂಡುಮಕ್ಕಳು, ಹರಿಣೀ ಎಂಬ ಮಗಳೂ ಇದ್ದರು ಪ್ರಹ್ಲಾದನು ಮಹಾವಿಷ್ಣುಭಕ್ತನಾಗಿದ್ದು ತಂದೆಯ ಎಲ್ಲ ಉಪಟಳಗಳನ್ನೂ ಸಹಿಸಿಕೊಂಡ ಕೊನೆಗೆ ಕಂಭವನ್ನೊಡೆದು ನೃಸಿಂಹ ರೂಪದಲ್ಲಿ ಬಂದ ವಿಷ್ಣು ಹೊಸ್ತಿಲ ಭಾಗದಲ್ಲಿ ಉಗುರುಗಳನ್ನೇ ಆಯುಧ ಮಾಡಿಕೊಂಡು ಹಿರಣ್ಯಕಶಿಪುವನ್ನು ಕೊಂದುಹಾಕಿದ.ಜಂಭ-ರಾಕ್ಷಸ ರಾಜನಾಗಿದ್ದ ತಾರಕಾಸುರನ ಹತ್ತು ಮಂದಿ ಪ್ರಧಾನರಲ್ಲಿ ಒಬ್ಬನು. ಇವನ ಮಗಳಾದ ಕಯಾದು ಹಿರಣ್ಯಕಶಿಪುವನ್ನು ಮದುವೆಯಾಗಿ ಪ್ರಹ್ಲಾದನೇ ಮೊದಲಾದ ನಾಲ್ವರು ಪುತ್ರರನ್ನು ಪಡೆದಳು.
ಉರಗರಾಜಕುಮಾರಿ - ಉಲೂಪಿ - ನಾಗಕನ್ಯಕೆ. ಕೌರವ್ಯನೆಂಬ ನಾಗರಾಜನ ಮಗಳು. ಅರ್ಜುನ ತೀರ್ಥಯಾತ್ರೆಗೆ ಹೋಗಿದ್ದಾಗ ಇವಳನ್ನು ಮದುವೆಯಾಗಿ ಇರಾವಂತನೆಂಬ ಮಗನನ್ನು ಪಡೆದನು. ಮುಂದೆ ಪಾಂಡವರು ಅಶ್ವಮೇಧ ಯಾಗ ಮಾಡಿದ ಸಂದರ್ಭದಲ್ಲಿ ಅರ್ಜುನನಿಗೂ ಬಭ್ರುವಾಹನನಿಗೂ ಯುದ್ಧವಾಗಿ ಹತನಾದ ಅರ್ಜುನನನ್ನು ಇವಳು ಸಂಜೀವನ ಮಣಿಯಿಂದ ಬದುಕಿಸಿದಳು.
ಮೂಲ ...{Loading}...
ಹರಿ ಮದೋತ್ಕಟ ದಂತಿಯನು ಡೊ
ಕ್ಕರಿಸಿ ಡಾವರಿಸುವವೊಲಾ ನರ
ಹರಿ ಹಿರಣ್ಯಕಶಿಪುವನಂಕದ ಮೇಲೆ ತೆಗೆವಂತೆ
ಅರಸ ನಿನ್ನ ಕುಮಾರಕನ ನಡು
ತರದೊಳಗೆ ಕೆಡಹಿದನು ಕೊಬ್ಬಿದ
ಮರುಷ ಹರುಷ ನಿಯುದ್ಧದಕ್ಕಡನಾದನಾ ಭೀಮ ॥49॥
೦೫೦ ಸಿಕ್ಕಿದೆಯಲಾ ...{Loading}...
ಸಿಕ್ಕಿದೆಯಲಾ ಸ್ವಾಮಿದ್ರೋಹಿಯೆ
ಸೊಕ್ಕಿದೆಯಲಾ ಹಿಂದೆ ಜೂಜಿನ
ಲಕ್ಕಜವ ಮಾಡಿದೆಯಲಾ ಮಾನಿನಿಯ ಮುಡಿವಿಡಿದು
ಚುಕ್ಕಿಗಳಲಾ ನಿನ್ನವರು ಕೈ
ಯಿಕ್ಕ ಹೇಳಾ ನಿನ್ನನೊಬ್ಬನ
ನಿಕ್ಕಿ ನೋಡಿದರಕಟೆನುತ ಮೂದಲಿಸಿದನು ಭೀಮ ॥50॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮನು ದುಶ್ಶಾಸನನನ್ನು “ಸ್ವಾಮಿದ್ರೋಹಿ, ಸಿಕ್ಕಿಬಿದ್ದೆಯಲ್ಲಾ. ಹಿಂದೆ ಜೂಜಿನ ಸಂದರ್ಭದಲ್ಲಿ ಸೊಕ್ಕಿದ್ದೆ. ಮಾನಿನಿಯಾದ ದ್ರೌಪದಿಯ ಮುಡಿಯನ್ನು ಹಿಡಿದು ಮಾತ್ಸರ್ಯವನ್ನು ತೋರಿಸಿದೆ. ನಿನ್ನ ಕಡೆಯವರು ಅಲ್ಪರು. ತಮ್ಮ ಕೈಚಳಕವನ್ನು ತೋರಿಸಲು ಅವರಿಗೆ ಹೇಳು. ನಿನ್ನೊಬ್ಬನನ್ನೇ ಮುಂದೆ ಬಿಟ್ಟು ನೋಡುತ್ತಿದ್ದಾರೆ. ಆಹಾ” ಎನ್ನುತ್ತ ಮೂದಲಿಸಿದನು.
ಪದಾರ್ಥ (ಕ.ಗ.ಪ)
ಅಕ್ಕಜ-ಮಾತ್ಸರ್ಯ
ಮೂಲ ...{Loading}...
ಸಿಕ್ಕಿದೆಯಲಾ ಸ್ವಾಮಿದ್ರೋಹಿಯೆ
ಸೊಕ್ಕಿದೆಯಲಾ ಹಿಂದೆ ಜೂಜಿನ
ಲಕ್ಕಜವ ಮಾಡಿದೆಯಲಾ ಮಾನಿನಿಯ ಮುಡಿವಿಡಿದು
ಚುಕ್ಕಿಗಳಲಾ ನಿನ್ನವರು ಕೈ
ಯಿಕ್ಕ ಹೇಳಾ ನಿನ್ನನೊಬ್ಬನ
ನಿಕ್ಕಿ ನೋಡಿದರಕಟೆನುತ ಮೂದಲಿಸಿದನು ಭೀಮ ॥50॥
೦೫೧ ಉಕ್ಕಿದುದು ತನಿಹರುಷ ...{Loading}...
ಉಕ್ಕಿದುದು ತನಿಹರುಷ ಮೈಯೊಳ
ಗೊಕ್ಕವಾ ಪುಳಕಾಂಬು ಕಂಗಳು
ಮುಕ್ಕುಳಿಸಿದುವು ಮುನ್ನ ದುಶ್ಯಾಸನನ ಶೋಣಿತವ
ಬಿಕ್ಕುವಹಿತನನಡಿಗಡಿಗೆ ಎವೆ
ಯಿಕ್ಕದೀಕ್ಷಿಸಿ ತಣಿಯದಿನ್ನಕ
ಸಿಕ್ಕಿ ಸಿಡಿಮಿಡಿಗೊಂಬ ರೋಷವೆ ರಾಜ್ಯಮಾಡೆಂದ ॥51॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುಶ್ಶಾಸನನು ಸಿಕ್ಕಿದುದಕ್ಕೆ ಭೀಮನಿಗೆ ವಿಪರೀತ ಸಂತೋಷವಾಯಿತು, ಮೈಯಲ್ಲಿ ರೋಮಾಂಚನದ ಬೆವರು ಹರಿಯಿತು. ಅವನು ಕಣ್ಣುಗಳಲ್ಲೇ ದುಶ್ಶಾಸನನ ರಕ್ತವನ್ನು ಮುಕ್ಕಳಿಸುವಂತೆ ನೋಡಿದನು. ಹೆದರಿ ಬಿಕ್ಕುತ್ತಿದ್ದ ಶತ್ರುವನ್ನು ಮತ್ತೆ ಮತ್ತೆ ಎವೆಯಿಕ್ಕದೇ ನೋಡಿ ಸಮಾಧಾನವಾಗದೇ ‘ಇದುವರೆಗೂ ಹಿಡಿತದಲ್ಲಿದ್ದು ಸಿಡಿಮಿಡಿಗೊಳ್ಳುತ್ತಿದ್ದ ರೋಷವೇ, ನಿನ್ನನ್ನು ಬಿಡುಗಡೆ ಮಾಡಿದ್ದೇನೆ, ರಾಜ್ಯಭಾರ ಮಾಡು’ ಎಂದು ಕೋಪವನ್ನು ಪ್ರದರ್ಶಿಸಲು ಆರಂಭಿಸಿದನು.
ಮೂಲ ...{Loading}...
ಉಕ್ಕಿದುದು ತನಿಹರುಷ ಮೈಯೊಳ
ಗೊಕ್ಕವಾ ಪುಳಕಾಂಬು ಕಂಗಳು
ಮುಕ್ಕುಳಿಸಿದುವು ಮುನ್ನ ದುಶ್ಯಾಸನನ ಶೋಣಿತವ
ಬಿಕ್ಕುವಹಿತನನಡಿಗಡಿಗೆ ಎವೆ
ಯಿಕ್ಕದೀಕ್ಷಿಸಿ ತಣಿಯದಿನ್ನಕ
ಸಿಕ್ಕಿ ಸಿಡಿಮಿಡಿಗೊಂಬ ರೋಷವೆ ರಾಜ್ಯಮಾಡೆಂದ ॥51॥
೦೫೨ ಎತ್ತಿ ಕಳೆದಿರಿ ...{Loading}...
ಎತ್ತಿ ಕಳೆದಿರಿ ವನಕೆ ನಾವ್ ನಿ
ಮ್ಮೆತ್ತುಗಳಲಾ ಬೀದಿಯಲಿ ಬೆಂ
ಬತ್ತಿ ಕೊಂಕಿನ ಬೆರಳಲೇಡಿಸಿ ಬಯ್ದು ಭಂಗಿಸಿದೈ
ತೊತ್ತಲಾ ಪಾಂಚಾಲೆ ನಾವ್ ನಿ
ಮ್ಮೆತ್ತುಗಳಲಾ ಹಿಂದೆ ಕಿಚ್ಚಿನ
ತುತ್ತು ವಿಷದುಬ್ಬಟೆಗಳನು ನೆನೆಯೆಂದನಾ ಭೀಮ ॥52॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ನಮ್ಮನ್ನು ಅನ್ಯಾಯವಾಗಿ ಕಾಡಿಗೆ ತಳ್ಳಿದಿರಿ. ಹಾಗೆ ಹೋಗುವಾಗ ನಮ್ಮನ್ನು ನಿಮ್ಮ ಎತ್ತುಗಳಂತೆ ಭಾವಿಸಿ ಬೀದಿಯಲ್ಲಿ ಹಿಂಬಾಲಿಸಿ ಬೆರಳು ತೋರಿಸುತ್ತಾ ಹಾಸ್ಯ ಮಾಡಿ, ಬಯ್ದು ಅವಮಾನಿಸಿದಿರಿ, ಪಾಂಚಾಲಿಯು ದಾಸಿಯೇ, ನಾವು ನಿಮ್ಮ ಎತ್ತುಗಳೇ, ಹಿಂದೆ ಬೆಂಕಿಗೆ ಆಹಾರ ಮಾಡಲು ಪ್ರಯತ್ನಿಸಿದ್ದು, ವಿಷ ಹಾಕಿ ಕೊಲ್ಲಲು ಯತ್ನಿಸಿದ್ದು - ಅವುಗಳನ್ನು ನೆನೆದುಕೋ’ ಎಂದನು ಭೀಮ.
ಮೂಲ ...{Loading}...
ಎತ್ತಿ ಕಳೆದಿರಿ ವನಕೆ ನಾವ್ ನಿ
ಮ್ಮೆತ್ತುಗಳಲಾ ಬೀದಿಯಲಿ ಬೆಂ
ಬತ್ತಿ ಕೊಂಕಿನ ಬೆರಳಲೇಡಿಸಿ ಬಯ್ದು ಭಂಗಿಸಿದೈ
ತೊತ್ತಲಾ ಪಾಂಚಾಲೆ ನಾವ್ ನಿ
ಮ್ಮೆತ್ತುಗಳಲಾ ಹಿಂದೆ ಕಿಚ್ಚಿನ
ತುತ್ತು ವಿಷದುಬ್ಬಟೆಗಳನು ನೆನೆಯೆಂದನಾ ಭೀಮ ॥52॥
೦೫೩ ಎರಗಿದನು ಕಟವಾಯ ...{Loading}...
ಎರಗಿದನು ಕಟವಾಯ ಹಲುಗಳ
ಮುರಿಯಲುಗುರಲಿ ಹೊಯ್ದು ಹೃದಯವ
ನುರೆ ಬಗಿದು ಮೊಗೆಮೊಗೆದು ರಕ್ತವ ಕುಡಿತೆಕುಡಿತೆಯಲಿ
ಸುರಿಸುರಿದು ಸುರಿದಡಿಗಡಿಗೆ ಚ
ಪ್ಪಿರಿದು ಚಪ್ಪಿರಿದಿದರ ಮಧುರಕೆ
ನೆರೆವವೇ ಸುಧೆಯಿಕ್ಷುರಸಗಿಸವೆಂದನಾ ಭೀಮ ॥53॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುಶ್ಶಾಸನನ ಹಲ್ಲುಗಳು ಮುರಿಯುವಂತೆ ಕಟವಾಯಿಗೆ ಹೊಡೆದನು. ಉಗುರನ್ನು ಚುಚ್ಚಿ ಹೃದಯ ಭಾಗವನ್ನು ಬಗಿದು, ಬೊಗಸೆಯಿಂದ ರಕ್ತವನ್ನು ಮೊಗೆ ಮೊಗೆದು ಕುಡಿದನು. ಚಪ್ಪರಿಸುತ್ತಾ, ಮತ್ತೆ ಮತ್ತೆ ರಕ್ತವನ್ನು ಕುಡಿದು ಇದರ ರುಚಿಗೆ ಅಮೃತ, ಕಬ್ಬಿನ ಹಾಲು ಮೊದಲಾದವುಗಳು ಸಮಾನವೇ ಎಂದು ಹೇಳಿಕೊಂಡನು ಭೀಮ.
ಮೂಲ ...{Loading}...
ಎರಗಿದನು ಕಟವಾಯ ಹಲುಗಳ
ಮುರಿಯಲುಗುರಲಿ ಹೊಯ್ದು ಹೃದಯವ
ನುರೆ ಬಗಿದು ಮೊಗೆಮೊಗೆದು ರಕ್ತವ ಕುಡಿತೆಕುಡಿತೆಯಲಿ
ಸುರಿಸುರಿದು ಸುರಿದಡಿಗಡಿಗೆ ಚ
ಪ್ಪಿರಿದು ಚಪ್ಪಿರಿದಿದರ ಮಧುರಕೆ
ನೆರೆವವೇ ಸುಧೆಯಿಕ್ಷುರಸಗಿಸವೆಂದನಾ ಭೀಮ ॥53॥
೦೫೪ ಆಡಿದುದು ಹುಸಿಯಲ್ಲ ...{Loading}...
ಆಡಿದುದು ಹುಸಿಯಲ್ಲ ನೀ ಸವಿ
ನೋಡು ಕರ್ಣನರೇಂದ್ರ ಕೌರವ
ನೋಡು ಸವಿಯನು ಶಕುನಿ ಕೃಪಕೃತವರ್ಮ ಗುರುಸುತರು
ನೋಡಿರೈ ಹೇವರಿಸುವರೆ ಕೈ
ಮಾಡಿರೈ ನಿಮ್ಮಾತನಳಿವನು
ನೋಡುತಿಹುದೇ ನಿಮಗೆ ನೀತಿಯೆ ಎಂದನಾ ಭೀಮ ॥54॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮನು ‘ನಾನು ಹೇಳಿದುದು ಸುಳ್ಳಲ್ಲ ಕರ್ಣ, ನೀನೂ ರುಚಿ ನೋಡು. ದುರ್ಯೋಧನ ನೀನೂ ಸವಿದು ನೋಡು. ಶಕುನಿ, ಕೃಪ, ಕೃತವರ್ಮ, ಅಶ್ವತ್ಥಾಮರು ಬಂದು ರುಚಿ ನೋಡಿರಿ. ಅಸಹ್ಯವಾಗುತ್ತಿದ್ದೆಯೇ, ನಿಮ್ಮ ಸಾಹಸವನ್ನು ತೋರಿಸಿ, ನಿಮ್ಮವನ ನಾಶವನ್ನು ನೋಡಿಯೂ ಸುಮ್ಮನಿರುವುದು ನಿಮಗೆ ನೀತಿಯೇ’ ಎಂದನು.
ಪದಾರ್ಥ (ಕ.ಗ.ಪ)
ಹೇವರಿಸು-ಅಸಹ್ಯ ಪಡು
ಮೂಲ ...{Loading}...
ಆಡಿದುದು ಹುಸಿಯಲ್ಲ ನೀ ಸವಿ
ನೋಡು ಕರ್ಣನರೇಂದ್ರ ಕೌರವ
ನೋಡು ಸವಿಯನು ಶಕುನಿ ಕೃಪಕೃತವರ್ಮ ಗುರುಸುತರು
ನೋಡಿರೈ ಹೇವರಿಸುವರೆ ಕೈ
ಮಾಡಿರೈ ನಿಮ್ಮಾತನಳಿವನು
ನೋಡುತಿಹುದೇ ನಿಮಗೆ ನೀತಿಯೆ ಎಂದನಾ ಭೀಮ ॥54॥
೦೫೫ ಬಿಡಿಸಲಾಗದೆ ಕೈದುಕಾತಿಯ ...{Loading}...
ಬಿಡಿಸಲಾಗದೆ ಕೈದುಕಾತಿಯ
ರಡಬಳವನೀ ಹುಲಿಯ ಬಾಯಲಿ
ಕೆಡವಿ ಕಳೆದಿರಲಾ ಸುಯೋಧನ ಕರ್ಣ ಗುರುಸುತರು
ಸುಡಲಿ ನಿಮ್ಮನು ಮೊಲೆಗಳಿಲ್ಲದ
ಕಡುಮುಹುಳಿ ನಿಮಗೇಕೆ ನಿಮ್ಮನು
ನುಡಿಸುವವರಾವಲ್ಲೆನುತ ಮದವೇರಿದನು ಭೀಮ ॥55॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಬಿಡಿಸಲು ಸಾಧ್ಯವಿಲ್ಲವೇ. ಈ ಹೆಂಗಸಿನಂತಹ ದುಶ್ಶಾಸನನ ಮಾಂಸ ನನ್ನಂತಹ ಹುಲಿಯ ಬಾಯಿಗೆ ಸಿಗುವಂತೆ ಮಾಡಿದಿರಲ್ಲಾ, ದುರ್ಯೋಧನ, ಕರ್ಣ, ಅಶ್ವತ್ಥಾಮರು ನೀವು ಎಂತಹ ವೀರರು, ನಿಮ್ಮನ್ನು ಸುಡಬೇಕು. ಮೊಲೆಗಳಿಲ್ಲದ ಮೂಳಿಗಳು ನೀವು. ನಿಮ್ಮನ್ನು ಮಾತನಾಡಿಸಲೂ ನನಗೆ ಬೇಸರವಾಗುತ್ತಿದೆ, ಎಂದು ಭೀಮ ಮದದಿಂದ ನುಡಿದನು.
ಪದಾರ್ಥ (ಕ.ಗ.ಪ)
ಮುಹುಳಿ-ಮೂಳಿ, ಹೆಂಗಸು
ಮೂಲ ...{Loading}...
ಬಿಡಿಸಲಾಗದೆ ಕೈದುಕಾತಿಯ
ರಡಬಳವನೀ ಹುಲಿಯ ಬಾಯಲಿ
ಕೆಡವಿ ಕಳೆದಿರಲಾ ಸುಯೋಧನ ಕರ್ಣ ಗುರುಸುತರು
ಸುಡಲಿ ನಿಮ್ಮನು ಮೊಲೆಗಳಿಲ್ಲದ
ಕಡುಮುಹುಳಿ ನಿಮಗೇಕೆ ನಿಮ್ಮನು
ನುಡಿಸುವವರಾವಲ್ಲೆನುತ ಮದವೇರಿದನು ಭೀಮ ॥55॥
೦೫೬ ಎಲೆಲೆ ಕೌರವ ...{Loading}...
ಎಲೆಲೆ ಕೌರವ ಮೋಹರದ ಮಂ
ಡಳಿಕರಿರ ದುಶ್ಯಾಸನನ ತೊ
ಟ್ಟುಳಿಕೆಗಾಂತಿದೆ ಹರಣವಕಟಾ ಕಾಯಲೆಳಸಿರಲಾ
ಸಲಹಿದವನೊಡಹುಟ್ಟಿದೀತನ
ಕೊಲುವೆಡೆಗೆ ಮತವೇ ಮಹೀಶರ
ಕುಲಕೆ ಪಂಥವಿದೇ ಎನುತ ಮೂದಲಿಸಿದನು ಭೀಮ ॥56॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಎಲೈ ಕೌರವನ ಸೈನ್ಯದ ಮಾಂಡಳಿಕರೇ, ದುಶ್ಶಾಸನನ ಪ್ರಾಣ ಇನ್ನೊಂದು ತೊಟ್ಟು ಮಾತ್ರ ಉಳಿದಿದೆ. ಅದನ್ನು ಕಾಪಾಡಲು ಮನಸ್ಸು ಮಾಡಿ, ಸ್ವಾಮಿಯ ತಮ್ಮನನ್ನು ನಾನು ಕೊಲ್ಲುತ್ತಿರುವುದು ನಿಮಗೆ ಸರಿ ಎಂದು ತೋರುತ್ತಿದೆಯೇ, ಇದು ದೊರೆಗಳ ಲಕ್ಷಣವೇ? ಎಂದು ಮೂದಲಿಸಿದನು ಭೀಮ.
ಮೂಲ ...{Loading}...
ಎಲೆಲೆ ಕೌರವ ಮೋಹರದ ಮಂ
ಡಳಿಕರಿರ ದುಶ್ಯಾಸನನ ತೊ
ಟ್ಟುಳಿಕೆಗಾಂತಿದೆ ಹರಣವಕಟಾ ಕಾಯಲೆಳಸಿರಲಾ
ಸಲಹಿದವನೊಡಹುಟ್ಟಿದೀತನ
ಕೊಲುವೆಡೆಗೆ ಮತವೇ ಮಹೀಶರ
ಕುಲಕೆ ಪಂಥವಿದೇ ಎನುತ ಮೂದಲಿಸಿದನು ಭೀಮ ॥56॥
೦೫೭ ಏನ ಹೇಳುವೆನರಸ ...{Loading}...
ಏನ ಹೇಳುವೆನರಸ ಕೌರವ
ಸೇನೆ ಗರಹೊಡೆದಂತೆ ಬಹಳಾಂ
ಭೋನಿಧಿಯಲದ್ದಂತೆ ಬೆಗಡಿನ ಸೊಗಡ ಸೆರೆವಿಡಿದು
ಮೋನದಲಿ ಮನವಳುಕಿ ಯೋಗ
ಧ್ಯಾನಪರರಾದಂತೆ ಚಿತ್ತ
ಗ್ಲಾನಿಯೊಳಗೆಲೆಮಿಡುಕದಿದ್ದುದು ನಿನ್ನ ಪರಿವಾರ ॥57॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಧೃತರಾಷ್ಟ್ರ ಏನು ಹೇಳಲಿ, ಕೌರವನ ಸೈನ್ಯವು ಗ್ರಹ ಬಡಿದಂತೆ, ಮಹಾ ಸಮುದ್ರದಲ್ಲಿ ಮುಳುಗಿ ಹೋದಂತೆ, ಆಶ್ಚರ್ಯದಲ್ಲಿ ಸೆರೆಯಾಗಿ, ಹೆದರಿ, ಯೋಗಧ್ಯಾನದಲ್ಲಿರುವವರಂತೆ ಮೌನದಲ್ಲಿತ್ತು. ಭಯದಿಂದ ಸ್ವಲ್ಪವೂ ಅಲುಗದೆ ನಿನ್ನ ಪರಿವಾರದವರು ನಿಂತಿದ್ದರು.” ಎಂದು ಸಂಜಯನು ಹೇಳಿದನು.
ಮೂಲ ...{Loading}...
ಏನ ಹೇಳುವೆನರಸ ಕೌರವ
ಸೇನೆ ಗರಹೊಡೆದಂತೆ ಬಹಳಾಂ
ಭೋನಿಧಿಯಲದ್ದಂತೆ ಬೆಗಡಿನ ಸೊಗಡ ಸೆರೆವಿಡಿದು
ಮೋನದಲಿ ಮನವಳುಕಿ ಯೋಗ
ಧ್ಯಾನಪರರಾದಂತೆ ಚಿತ್ತ
ಗ್ಲಾನಿಯೊಳಗೆಲೆಮಿಡುಕದಿದ್ದುದು ನಿನ್ನ ಪರಿವಾರ ॥57॥
೦೫೮ ಅಡಿಗಡಿಗೆ ಕದುಕಿರಿದು ...{Loading}...
ಅಡಿಗಡಿಗೆ ಕದುಕಿರಿದು ರಕುತವ
ಕುಡಿತೆಯಲಿ ಕುಡಿಕುಡಿದು ಬೆರಳಲಿ
ಮಿಡಿದು ಕದನಸ್ಥಾನದೇವತೆಯರಿಗೆ ಕೈಕೊಳಿಸಿ
ಕುಡಿದು ಮಿಕ್ಕುದನಖಿಳಭೂತಕೆ
ಬಡಿಸಿ ಚಪ್ಪಿರಿದಾರಿ ಬೊಬ್ಬಿರಿ
ದೊಡನೊಡನೆ ನೊರೆನೆತ್ತರೋಕುಳಿಯಾಡಿದನು ಭೀಮ ॥58॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮನು ಮತ್ತೆ ಮತ್ತೆ ಕಚ್ಚಿ / ಚುಚ್ಚಿ ಬೊಗಸೆಯಲ್ಲಿ ರಕ್ತವನ್ನು ತೆಗೆದುಕೊಂಡು ಕುಡಿದು, ಬೆರಳಲ್ಲಿ ಅದನ್ನು ತೋರಿಸುತ್ತಾ, ಯುದ್ಧರಂಗದ ದೇವತೆಗಳಿಗೆ ನೈವೇದ್ಯ ಮಾಡಿ, ಮತ್ತೆ ಕುಡಿದು, ಹೆಚ್ಚಾಗಿ ಉಳಿದದ್ದನ್ನು ಎಲ್ಲಾ ಭೂತಗಣಗಳಿಗೆ ಬಡಿಸಿ, ಚಪ್ಪರಿಸುತ್ತಾ, ಜೋರಾಗಿ ಕೂಗುತ್ತಾ, ರಕ್ತದ ಓಕುಳಿಯಾಟವನ್ನು ಆಡಿದನು.
ಪದಾರ್ಥ (ಕ.ಗ.ಪ)
ಕದುಕು-ಕಚ್ಚು
ಮೂಲ ...{Loading}...
ಅಡಿಗಡಿಗೆ ಕದುಕಿರಿದು ರಕುತವ
ಕುಡಿತೆಯಲಿ ಕುಡಿಕುಡಿದು ಬೆರಳಲಿ
ಮಿಡಿದು ಕದನಸ್ಥಾನದೇವತೆಯರಿಗೆ ಕೈಕೊಳಿಸಿ
ಕುಡಿದು ಮಿಕ್ಕುದನಖಿಳಭೂತಕೆ
ಬಡಿಸಿ ಚಪ್ಪಿರಿದಾರಿ ಬೊಬ್ಬಿರಿ
ದೊಡನೊಡನೆ ನೊರೆನೆತ್ತರೋಕುಳಿಯಾಡಿದನು ಭೀಮ ॥58॥
೦೫೯ ಎಲವೆಲವೊ ಗುರುಸೂನು ...{Loading}...
ಎಲವೆಲವೊ ಗುರುಸೂನು ಭೂಮಂ
ಡಲದೊಳಗೆ ನಿಮ್ಮಯ್ಯನೂ ನೀ
ನುಳಿಯೆ ಭಟರಿಲ್ಲೆಂಬ ಗರ್ವದ ಗಿರಿಯನೇರಿಹಿರಿ
ನಿಲುಕಲಾಗದೆ ಕೌರವಾನುಜ
ನುಳಿವು ಸೊಗಸದೆ ನಿನಗೆ ಬಿಲುವಿಡಿ
ದುಳುಹಿರೈ ಲೇಸಹುದೆನುತ ಮೂದಲಿಸಿದನು ಭೀಮ ॥59॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಎಲವೋ ಅಶ್ವತ್ಥಾಮ, ನೀನೂ ನಿಮ್ಮ ತಂದೆಯೂ ಬಿಟ್ಟರೆ ಈ ಭೂಮಿಯ ಮೇಲೆ ಬೇರೆ ಯಾರೂ ವೀರರಿಲ್ಲ ಎಂದು ಗರ್ವದ ಬೆಟ್ಟದ ಮೇಲೆ ಕುಳಿತಿದ್ದಿರಿ. ಈಗ ಏನು ಮಾಡುತ್ತಿದ್ದೀಯೆ? ದುಶ್ಶಾಸನನು ಬದುಕಿರುವುದು ನಿನಗೆ ಇಷ್ಟವಿಲ್ಲವೇ ? ಬಿಲ್ಲು ಹಿಡಿದು ಅವನನ್ನು ಉಳಿಸುವುದು ಒಳ್ಳೆಯದಲ್ಲವೇ” ಎಂದು ಮೂದಲಿಸಿದನು ಭೀಮ.
ಮೂಲ ...{Loading}...
ಎಲವೆಲವೊ ಗುರುಸೂನು ಭೂಮಂ
ಡಲದೊಳಗೆ ನಿಮ್ಮಯ್ಯನೂ ನೀ
ನುಳಿಯೆ ಭಟರಿಲ್ಲೆಂಬ ಗರ್ವದ ಗಿರಿಯನೇರಿಹಿರಿ
ನಿಲುಕಲಾಗದೆ ಕೌರವಾನುಜ
ನುಳಿವು ಸೊಗಸದೆ ನಿನಗೆ ಬಿಲುವಿಡಿ
ದುಳುಹಿರೈ ಲೇಸಹುದೆನುತ ಮೂದಲಿಸಿದನು ಭೀಮ ॥59॥
೦೬೦ ಎಲೆ ಕೃಪಾಚಾರಿಯ ...{Loading}...
ಎಲೆ ಕೃಪಾಚಾರಿಯ ಸುಯೋಧನ
ನೊಳಗೆ ಸೇರುವೆ ಹಿರಿದು ನಿಮಗೀ
ಖಳನ ಕೊಲೆಯನು ನೀವು ಮನಗೊಟ್ಟೊಲಿದು ನೋಡುವರೆ
ಎಲೆ ಶಕುನಿಯೆಲೆ ಶಲ್ಯ ಎಲೆ ಬಾ
ಹಿಲಿಕ ಕೃತವರ್ಮಾದಿ ವೀರರು
ಸೆಳೆದುಕೊಳಿ ದುಶ್ಯಾಸನನನೆನುತೊರಲಿದನು ಭೀಮ ॥60॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಎಲೈ ಕೃಪಾಚಾರ್ಯ, ನಿನಗೆ ದುರ್ಯೋಧನನ ಬಳಿ ಹಿರಿಯ ಸ್ಥಾನವಿದೆ. ಈ ದುಷ್ಟನನ್ನು ನಾನು ಕೊಲೆ ಮಾಡುತ್ತಿದ್ದರೂ ನೀನು ಪ್ರೀತಿಯಿಂದ ನೋಡುವುದು ಸರಿಯೆ”. “ಎಲೈ ಶಕುನಿ, ಎಲೆ ಶಲ್ಯ, ಎಲೆ ಬಾಹ್ಲಿಕ, ಕೃತವರ್ಮ ಮೊದಲಾದ ವೀರರೆ, ಈ ದುಶ್ಶಾಸನನನ್ನು ಬಿಡಿಸಿಕೊಳ್ಳಿ ನನ್ನಿಂದ’ ಎಂದು ಕೂಗಿದನು ಭೀಮ.
ಮೂಲ ...{Loading}...
ಎಲೆ ಕೃಪಾಚಾರಿಯ ಸುಯೋಧನ
ನೊಳಗೆ ಸೇರುವೆ ಹಿರಿದು ನಿಮಗೀ
ಖಳನ ಕೊಲೆಯನು ನೀವು ಮನಗೊಟ್ಟೊಲಿದು ನೋಡುವರೆ
ಎಲೆ ಶಕುನಿಯೆಲೆ ಶಲ್ಯ ಎಲೆ ಬಾ
ಹಿಲಿಕ ಕೃತವರ್ಮಾದಿ ವೀರರು
ಸೆಳೆದುಕೊಳಿ ದುಶ್ಯಾಸನನನೆನುತೊರಲಿದನು ಭೀಮ ॥60॥
೦೬೧ ಪತಿಗೆ ಮಲೆವರಗಣ್ಡನಾಳ್ದಗೆ ...{Loading}...
ಪತಿಗೆ ಮಲೆವರಗಂಡನಾಳ್ದಗೆ
ಹಿತವ ಕೌರವಕುಲಕೆ ಕಣು ಗತಿ
ಮತಿಯೆನಿಸಿ ನೀ ಕರ್ಣನೆಂಬುದು ಸಕಲಜನಜನಿತ
ಪತಿಯ ಸಹಸಂಭವನ ಮರಣ
ವ್ಯತಿಕರವ ನೋಡಿದಡೆ ದುಷ್ಕೀ
ರಿತಿಯ ಮೊಳೆ ಹೊಮ್ಮುವವಲೇ ರವಿಸುತನೆ ಕೇಳ್ ಎಂದ ॥61॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಒಡೆಯನನ್ನು ಪ್ರತಿಭಟಿಸುವವರಿಗೆ ಗಂಡಾಂತರ, ಸ್ವಾಮಿಗೆ ಹಿತಕಾರಿ, ಕೌರವ ಕುಲಕ್ಕೆ ಕಣ್ಣು, ಅವರ ಸ್ಥಿತಿಗತಿಗಳಿಗೆ ಕರ್ಣನೇ ಕಾರಣ ಎಂಬುದು ಜಗತ್ತಿನಲ್ಲಿ ಪ್ರಸಿದ್ಧವಾದ ಮಾತುಗಳು. ಅಂತಹ ನೀನು ಒಡೆಯನ ಸಹೋದರನ ಸಾವನ್ನು ನೋಡುತ್ತಾ ನಿಂತಿದ್ದರೆ, ಅಪಕೀರ್ತಿಯ ಮೊಳಕೆಗಳು ಹೊರ ಹೊಮ್ಮುವುದಿಲ್ಲವೇ ಕರ್ಣ ಕೇಳು’ ಎಂದು ಭೀಮನು ಕರ್ಣನನ್ನು ಕೆಣಕಿದನು.
ಮೂಲ ...{Loading}...
ಪತಿಗೆ ಮಲೆವರಗಂಡನಾಳ್ದಗೆ
ಹಿತವ ಕೌರವಕುಲಕೆ ಕಣು ಗತಿ
ಮತಿಯೆನಿಸಿ ನೀ ಕರ್ಣನೆಂಬುದು ಸಕಲಜನಜನಿತ
ಪತಿಯ ಸಹಸಂಭವನ ಮರಣ
ವ್ಯತಿಕರವ ನೋಡಿದಡೆ ದುಷ್ಕೀ
ರಿತಿಯ ಮೊಳೆ ಹೊಮ್ಮುವವಲೇ ರವಿಸುತನೆ ಕೇಳೆಂದ ॥61॥
೦೬೨ ಕರೆದು ಮೂದಲಿಸಿದರೆ ...{Loading}...
ಕರೆದು ಮೂದಲಿಸಿದರೆ ರಣಭೀ
ಕರರು ಮರಳುವರವರಿಗೆತ್ತಿದ
ಬಿರುದಿನಗ್ಗದವೀರ ನೋಡುತ್ತಿಹರೆ ಕಲಿಕರ್ಣ
ಹರಣವಿದೆ ದುಶ್ಯಾಸನನ ತೆಗೆ
ಬರಸೆಳೆವ ಬಲುಹುಳ್ಳಡೆನುತು
ಬ್ಬರಿಸಿ ಗಜರಿನ ಗರುವನೊರಲಿದನಹಿತವೀರರಿಗೆ ॥62॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಪಲಾಯನ ಮಾಡುತ್ತಿರುವವರನ್ನು ಕರೆದು ಮೂದಲಿಸಿದರೆ ಸಾಕು ರಣಭಯಂಕರ ಎನ್ನಿಸಿಕೊಂಡಿರುವವರು ಯುದ್ಧರಂಗಕ್ಕೆ ಹಿಂತಿರುಗುತ್ತಾರೆ. ನೀನು, ಅವರೆಲ್ಲರಲ್ಲಿ ಪ್ರಸಿದ್ಧನಾದ ಬಿರುದುಗಳ ಮಹಾವೀರ, ನೋಡುತ್ತಾ ನಿಂತಿದ್ದೀಯಲ್ಲಾ ದುಶ್ಶಾಸನನ ಪ್ರಾಣ ಇನ್ನೂ ಉಳಿದಿದೆ. ಬಾಣ ಪ್ರಯೋಗ ಮಾಡುವ ಶಕ್ತಿ ಇದ್ದರೆ ಬಿಡಿಸಿಕೊ’ ಎಂದು ಹೇಳಿ ಉಬ್ಬಿ ಭೀಮನು ಶತ್ರುವೀರನಾದ ಕರ್ಣನನ್ನು ಆಹ್ವಾನಿಸಿದನು.
ಪದಾರ್ಥ (ಕ.ಗ.ಪ)
ಗಜರು-ಗರ್ಜಿಸು
ಮೂಲ ...{Loading}...
ಕರೆದು ಮೂದಲಿಸಿದರೆ ರಣಭೀ
ಕರರು ಮರಳುವರವರಿಗೆತ್ತಿದ
ಬಿರುದಿನಗ್ಗದವೀರ ನೋಡುತ್ತಿಹರೆ ಕಲಿಕರ್ಣ
ಹರಣವಿದೆ ದುಶ್ಯಾಸನನ ತೆಗೆ
ಬರಸೆಳೆವ ಬಲುಹುಳ್ಳಡೆನುತು
ಬ್ಬರಿಸಿ ಗಜರಿನ ಗರುವನೊರಲಿದನಹಿತವೀರರಿಗೆ ॥62॥
೦೬೩ ಆಕೆವಾಳರು ಕರ್ಣಗುರುಸುತ ...{Loading}...
ಆಕೆವಾಳರು ಕರ್ಣಗುರುಸುತ
ರೀ ಕೃಪಾಚಾರಿಯರು ತಾವೇ
ಕೈಕವೀರರು ನಿನ್ನನೊಬ್ಬನನೊಪ್ಪುಗೊಟ್ಟರಲಾ
ಏಕೆ ತರುಬಿದಿರಿವರನಾಹವ
ಭೀಕರರನವಿವೇಕಿಗಳು ಇವ
ರೇಕೆ ನೀವೇಕೆಂದು ದುಶ್ಶಾಸನನ ನೋಡಿದನು ॥63॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮನು ದುಶ್ಶಾಸನನನ್ನು ದೃಷ್ಟಿ ಇಟ್ಟು ನೋಡುತ್ತಾ, ‘ಈ ಕರ್ಣ, ಅಶ್ವತ್ಥಾಮ, ಕೃಪಾಚಾರ್ಯ ಇವರೆಲ್ಲಾ ಮಹಾಶೂರರು, ಏಕೈಕವೀರರು, ನಿನ್ನೊಬ್ಬನನ್ನು ನನಗೆ ಒಪ್ಪಿಸಿ ಬಿಟ್ಟಿದ್ದಾರಲ್ಲಾ, ಇಂಥವರನ್ನು, ಯುದ್ಧದಲ್ಲಿ ಭಯಪಡುವವರನ್ನು, ಅವಿವೇಕಿಗಳನ್ನು ಏಕೆ ಸೇರಿಸಿಕೊಂಡಿದ್ದೀರಿ, ಇವರನ್ನು ನೀವು ಏಕೆ ನಂಬಿದಿರಿ’ ಎಂದು ಮೂದಲಿಸಿದನು.
ಪದಾರ್ಥ (ಕ.ಗ.ಪ)
ತರುಬು-ಮುಂದಕ್ಕೆ ಕಳುಹಿಸು, ಆಹವಭೀಕರ-ಯುದ್ಧ ಭಯಸ್ಥ
ಮೂಲ ...{Loading}...
ಆಕೆವಾಳರು ಕರ್ಣಗುರುಸುತ
ರೀ ಕೃಪಾಚಾರಿಯರು ತಾವೇ
ಕೈಕವೀರರು ನಿನ್ನನೊಬ್ಬನನೊಪ್ಪುಗೊಟ್ಟರಲಾ
ಏಕೆ ತರುಬಿದಿರಿವರನಾಹವ
ಭೀಕರರನವಿವೇಕಿಗಳು ಇವ
ರೇಕೆ ನೀವೇಕೆಂದು ದುಶ್ಶಾಸನನ ನೋಡಿದನು ॥63॥
೦೬೪ ಮರಣ ನೆರೆಹೊರೆಯಾಯ್ತು ...{Loading}...
ಮರಣ ನೆರೆಹೊರೆಯಾಯ್ತು ನಿನ್ನಯ
ಹರಣವೆನ್ನಂಗಯ್ಯಲಿದೆ ನಿ
ಮ್ಮರಸನನು ಕರಸೆಲವೊ ಕಾದಿಸು ನಿನ್ನ ರಕ್ಷಿಸಲಿ
ಅರಿಬಲದೊಳಿದಿರಿಲ್ಲ ನಿಜಮೋ
ಹರದೊಳಗೆ ಮಿಡುಕುಳ್ಳ ವೀರರು
ಮರಳಿಚಲಿ ನಿನ್ನುವನೆನುತ ನೋಡಿದನು ತನ್ನವರ ॥64॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮನು ದುಶ್ಶಾಸನನನ್ನು ನೋಡುತ್ತಾ ‘ಇನ್ನೇನು ನಿನ್ನ ಮರಣ ಹತ್ತಿರಕ್ಕೆ ಬಂದಿತು. ನಿನ್ನ ಪ್ರಾಣ ಈಗ ನನ್ನ ಅಂಗೈಯಲ್ಲಿದೆ. ನಿಮ್ಮ ದೊರೆಯನ್ನು ಕರೆಸು, ಯುದ್ಧ ಮಾಡಿಸು, ಅವನು ನಿನ್ನನ್ನು ಕಾಪಾಡಿಕೊಳ್ಳಲಿ’ ಎಂದನು. ‘ಶತ್ರುಸೇನೆಯಲ್ಲಿ ಎದುರಾಳಿಗಳೇ ಇಲ್ಲವಲ್ಲಾ, ನಮ್ಮ ಸೈನ್ಯದಲ್ಲಿ ಶೂರಗುಣವುಳ್ಳ ವೀರರು ಇದ್ದರೆ, ನಿನ್ನನ್ನು ರಕ್ಷಿಸಲಿ’ ಎಂದು ತನ್ನ ಕಡೆಯ ಸೈನಿಕರ ಕಡೆಗೆ ತಿರುಗಿ ನೋಡಿದನು.
ಮೂಲ ...{Loading}...
ಮರಣ ನೆರೆಹೊರೆಯಾಯ್ತು ನಿನ್ನಯ
ಹರಣವೆನ್ನಂಗಯ್ಯಲಿದೆ ನಿ
ಮ್ಮರಸನನು ಕರಸೆಲವೊ ಕಾದಿಸು ನಿನ್ನ ರಕ್ಷಿಸಲಿ
ಅರಿಬಲದೊಳಿದಿರಿಲ್ಲ ನಿಜಮೋ
ಹರದೊಳಗೆ ಮಿಡುಕುಳ್ಳ ವೀರರು
ಮರಳಿಚಲಿ ನಿನ್ನುವನೆನುತ ನೋಡಿದನು ತನ್ನವರ ॥64॥
೦೬೫ ಎಲವೊ ಧೃಷ್ಟದ್ಯುಮ್ನ ...{Loading}...
ಎಲವೊ ಧೃಷ್ಟದ್ಯುಮ್ನ ಸಾತ್ಯಕಿ
ಎಲೆ ಶಿಖಂಡಿಪ್ರಮುಖನಾಯಕ
ರಳುಕದಿಹ ಮನವುಳ್ಳಡಿದಿರಾಗಿವನ ಸಲಹುವುದು
ಹಲಬರಲಿ ಫಲವೇನು ದಾನವ
ಕುಲ ದಿಶಾಪಟಕೃಷ್ಣ ಮುನಿದಡೆ
ಕಳೆದುಕೊಳು ಕೌಮೋದಕಿಯನೆಂದೊದರಿದನು ಭೀಮ ॥65॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುಶ್ಶಾಸನನನ್ನು ಉಳಿಸಲು ತನ್ನ ಕಡೆಯ ಧೃಷ್ಟದ್ಯುಮ್ನ, ಸಾತ್ಯಕಿ, ಶಿಖಂಡಿ ಮೊದಲಾದ ಪ್ರಮುಖ ನಾಯಕರನ್ನೇ ಕರೆಯುತ್ತಾ, ‘ಹೆದರದಿರುವ ಮನಸ್ಸಿದ್ದರೆ ನನ್ನನ್ನು ಎದುರಿಸಿ ಇವನನ್ನು ಉಳಿಸಿ’ ಎಂದನು. ‘ಇವರಿಂದ ಏನು ಪ್ರಯೋಜನ, ರಾಕ್ಷಸ ಕುಲವನ್ನು ನಾಶ ಮಾಡುವ ಯಮನಾದ ಕೃಷ್ಣನೇ ನಿನ್ನನ್ನು ಕರೆಯುತ್ತಿದ್ದೇನೆ. ನಿನಗೆ ಕೋಪ ಇದ್ದರೆ, ನಿನ್ನ ಕೌಮೋದಕಿ ಎಂಬ ಗದೆಯನ್ನು ಹಿಡಿದು ಬಾ’ ಎಂದು ಕೂಗಿದನು ಭೀಮ.
ಮೂಲ ...{Loading}...
ಎಲವೊ ಧೃಷ್ಟದ್ಯುಮ್ನ ಸಾತ್ಯಕಿ
ಎಲೆ ಶಿಖಂಡಿಪ್ರಮುಖನಾಯಕ
ರಳುಕದಿಹ ಮನವುಳ್ಳಡಿದಿರಾಗಿವನ ಸಲಹುವುದು
ಹಲಬರಲಿ ಫಲವೇನು ದಾನವ
ಕುಲ ದಿಶಾಪಟಕೃಷ್ಣ ಮುನಿದಡೆ
ಕಳೆದುಕೊಳು ಕೌಮೋದಕಿಯನೆಂದೊದರಿದನು ಭೀಮ ॥65॥
೦೬೬ ಕೇಳು ಫಲುಗುಣ ...{Loading}...
ಕೇಳು ಫಲುಗುಣ ಲೋಕಮೂರರೊ
ಳಾಳು ನೀನೆಂದೆಂಬ ಗರ್ವವ
ಪಾಲಿಸುವೊಡಿದಿರಾಗು ತೊಡು ಗಾಂಡಿವದಲಂಬುಗಳ
ಆಳುತನ ನಿನಗುಳ್ಳೊಡಹಿತನ
ಪಾಲಿಸುವೊಡೇಳೆಂದೆನಲು ಜಯ
ಲೋಲ ಸುಗತಿಯೊಳಿಳಿದನರ್ಜುನನಮಳಮಣಿರಥವ ॥66॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನನ್ನು ಕುರಿತು ‘ಫಲುಗುಣ, ಮೂರು ಲೋಕಗಳಲ್ಲಿ ನೀನೊಬ್ಬನೇ ವೀರ ಎಂಬ ಬಿರುದನ್ನು ಉಳಿಸಿಕೊಳ್ಳಬೇಕೆಂದಿದ್ದರೆ ನನ್ನನ್ನು ಎದುರಿಸಿ ಗಾಂಡಿವದಲ್ಲಿ ಬಾಣಗಳನ್ನು ಹೂಡು. ನೀನು ನಿಜವಾಗಿಯೂ ವೀರನಾದರೆ, ಶತ್ರುವನ್ನು ರಕ್ಷಿಸಲು ಮುಂದೆ ಬಾ,’ ಎಂದಾಗ, ಜಯಿಸಬೇಕೆಂಬ ಅಪೇಕ್ಷೆಯಿಂದ, ಅರ್ಜುನನು ತನ್ನ ಮಣಿಮಯ ರಥದಿಂದ ಇಳಿದು ಬರಲು ಸಿದ್ಧನಾದನು.
ಮೂಲ ...{Loading}...
ಕೇಳು ಫಲುಗುಣ ಲೋಕಮೂರರೊ
ಳಾಳು ನೀನೆಂದೆಂಬ ಗರ್ವವ
ಪಾಲಿಸುವೊಡಿದಿರಾಗು ತೊಡು ಗಾಂಡಿವದಲಂಬುಗಳ
ಆಳುತನ ನಿನಗುಳ್ಳೊಡಹಿತನ
ಪಾಲಿಸುವೊಡೇಳೆಂದೆನಲು ಜಯ
ಲೋಲ ಸುಗತಿಯೊಳಿಳಿದನರ್ಜುನನಮಳಮಣಿರಥವ ॥66॥
೦೬೭ ಅಹುದಹುದು ತಪ್ಪೇನು ...{Loading}...
ಅಹುದಹುದು ತಪ್ಪೇನು ತಪ್ಪೇ
ನಹಿತದುಶ್ಯಾಸನನ ಸಲಹುವೆ
ನಹಿತಬಲವೆನಗನಿಲಸುತನೆನುತೈದೆ ಬರೆ ಕಂಡು
ಬಹಳ ಭೀತಿಯೊಳಸುರರಿಪು ಸ
ನ್ನಿಹಿತ ಚಾಪವ ಹಿಡಿದು ಮನದು
ಮ್ಮಹವ ಕೆಡಿಸಿ ಕಿರೀಟಿಯನು ನಿಲಿಸಿದನು ರಥದೊಳಗೆ ॥67॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಹೌದು ಹೌದು ಅದರಲ್ಲಿ ತಪ್ಪೇನೂ ಇಲ್ಲ. ಶತ್ರುವಾದ ದುಶ್ಶಾಸನನನ್ನು ರಕ್ಷಿಸುತ್ತೇನೆ. ಈಗ ನನಗೆ ಭೀಮನೇ ಶತ್ರು !, ಎನ್ನುತ್ತಾ ಅರ್ಜುನನು ಮುಂದೆ ಬರಲು, ಅದರಿಂದ ಭಯಗೊಂಡ ಕೃಷ್ಣನು, ಅವನು ಎತ್ತಿ ಹಿಡಿದಿದ್ದ ಬಿಲ್ಲನ್ನು ಕೆಳಗಿಳಿಸುವಂತೆ ಮಾಡಿ, ಮನಸ್ಸಿನ ಉತ್ಸಾಹಕ್ಕೆ ಅಡ್ಡಿ ಬಂದು, ರಥದಲ್ಲಿಯೇ ಉಳಿಯುವಂತೆ ನೋಡಿಕೊಂಡನು.
ಮೂಲ ...{Loading}...
ಅಹುದಹುದು ತಪ್ಪೇನು ತಪ್ಪೇ
ನಹಿತದುಶ್ಯಾಸನನ ಸಲಹುವೆ
ನಹಿತಬಲವೆನಗನಿಲಸುತನೆನುತೈದೆ ಬರೆ ಕಂಡು
ಬಹಳ ಭೀತಿಯೊಳಸುರರಿಪು ಸ
ನ್ನಿಹಿತ ಚಾಪವ ಹಿಡಿದು ಮನದು
ಮ್ಮಹವ ಕೆಡಿಸಿ ಕಿರೀಟಿಯನು ನಿಲಿಸಿದನು ರಥದೊಳಗೆ ॥67॥
೦೬೮ ಅಹುದು ಭೀಮನ ...{Loading}...
ಅಹುದು ಭೀಮನ ಗೆಲುವ ಭಟನೀ
ನಹೆಯಲೇ ನಾವಂಜುವೆವು ನಿ
ರ್ವಹಿಸಬಹುದೇ ಕಾಲರುದ್ರನ ಕೆಣಕಿ ಕದನದಲಿ
ಸಹಜವಿದು ಸಾಕ್ಷಾದುಮಾಪತಿ
ಯಹ ಕಣಾ ಪವನಜನ ನೋಡಲು
ಬಹಡೆ ನೋಡೆಂದಸುರರಿಪು ನುಡಿದನು ಧನಂಜಯಗೆ ॥68॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನನ್ನು ಎಚ್ಚರಿಸುತ್ತಾ ‘ಹೌದು ನೀನು ಭೀಮನನ್ನು ಗೆಲ್ಲುವ ವೀರನಾಗಿದ್ದೀಯೆ. ನಾನೇ ಹೆದರುತ್ತೇನೆ. ಕಾಲರುದ್ರನಂತಿರುವ ಭೀಮನನ್ನು ಕೆಣಕಿ ಯುದ್ಧದಲ್ಲಿ ಉಳಿಯಬಹುದೇ. ನಾನು ಹೇಳುತ್ತಿರುವುದು ನಿಜವಾದ ಮಾತು. ಈ ಭೀಮ ಸಾಕ್ಷಾತ್ ಉಮಾಪತಿಯಾದ ಶಿವ. ಅದನ್ನು ಕಾಣುವ ಮನಸ್ಸಿದ್ದರೆ ಯೋಚಿಸಿ ನೋಡು, ಎಂದನು ಕೃಷ್ಣ.
ಮೂಲ ...{Loading}...
ಅಹುದು ಭೀಮನ ಗೆಲುವ ಭಟನೀ
ನಹೆಯಲೇ ನಾವಂಜುವೆವು ನಿ
ರ್ವಹಿಸಬಹುದೇ ಕಾಲರುದ್ರನ ಕೆಣಕಿ ಕದನದಲಿ
ಸಹಜವಿದು ಸಾಕ್ಷಾದುಮಾಪತಿ
ಯಹ ಕಣಾ ಪವನಜನ ನೋಡಲು
ಬಹಡೆ ನೋಡೆಂದಸುರರಿಪು ನುಡಿದನು ಧನಂಜಯಗೆ ॥68॥
೦೬೯ ಕಣ್ಡನರ್ಜುನ ತ್ರಿಪುರದಹನದ ...{Loading}...
ಕಂಡನರ್ಜುನ ತ್ರಿಪುರದಹನದ
ಖಂಡಪರಶುವೊಲಿರ್ದ ಭೀಮನ
ದಂಡಿಯನು ಥಟ್ಟೈಸಿ ಭೂತಗಳೆಡಬಲದೊಳಿರಲು
ಚಂಡಬಲನಹನೈ ವೃಕೋದರ
ಗಂಡುಗಲಿಗಿದಿರಾವನೆನುತಾ
ಖಂಡಲಾತ್ಮಜನೆರಗಿದನು ಮುರವೈರಿಯಂಘ್ರಿಯಲಿ ॥69॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮನನ್ನು ಆಗ ಗಮನಿಸಿ ನೋಡಿದಾಗ ಅರ್ಜುನನಿಗೆ ತ್ರಿಪುರದಹನದ ‘ಶಿವ’ನಂತೆ ಕಾಣುತ್ತಿದ್ದ ಭೀಮನ ಎಡಬಲಗಳೆರಡೂ ಕಡೆಯಲ್ಲೂ ಗುಂಪು ನಿಂತಿದ್ದವರು ಶಿವನ ಭೂತಗಣಗಳಂತೆ ಕಾಣಿಸಿದರು. ಈ ಭೀಮ ಪ್ರಚಂಡ ಬಲಶಾಲಿ, ಈ ಗಂಡುಗಲಿಯನ್ನು ಎದುರಿಸುವವನು ಯಾರು ಎಂದು ಇಂದ್ರನ ಮಗನಾದ ಅರ್ಜುನನು ಕೃಷ್ಣನ ಪಾದಗಳಿಗೆ ನಮಸ್ಕರಿಸಿದನು.
ಪದಾರ್ಥ (ಕ.ಗ.ಪ)
ಆಖಂಡಲಾತ್ಮಜ-ಇಂದ್ರನ ಮಗ, ಖಂಡ ಪರಶು-ಶಿವ
ಮೂಲ ...{Loading}...
ಕಂಡನರ್ಜುನ ತ್ರಿಪುರದಹನದ
ಖಂಡಪರಶುವೊಲಿರ್ದ ಭೀಮನ
ದಂಡಿಯನು ಥಟ್ಟೈಸಿ ಭೂತಗಳೆಡಬಲದೊಳಿರಲು
ಚಂಡಬಲನಹನೈ ವೃಕೋದರ
ಗಂಡುಗಲಿಗಿದಿರಾವನೆನುತಾ
ಖಂಡಲಾತ್ಮಜನೆರಗಿದನು ಮುರವೈರಿಯಂಘ್ರಿಯಲಿ ॥69॥
೦೭೦ ಉಭಯ ವೀರರ ...{Loading}...
ಉಭಯ ವೀರರ ನೋಡಿ ಸಂಗರ
ರಭಸದಲಿ ಮೂದಲಿಸಿ ಚಾಪ
ಪ್ರಭವ ಚಪಲರ ಚದುರುಗೆಡಿಸಿದ ಭುಜಬಲೋನ್ನತಿಯ
ಸಭೆಯೊಳಾದವಮಾನದಹನ
ಪ್ರಭೆಯ ನಂದಿಸಲಾಯ್ತಲಾ ರಿಪು
ಸುಭಟನುರವೆಂಬಭ್ರ ಸಂಭವ ರುಧಿರಜಲವೆಂದ ॥70॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮನು ತನ್ನ ಮಾತುಗಳನ್ನು ಸಮರ್ಥಿಸಿಕೊಳ್ಳುತ್ತಾ, ‘ಎರಡೂ ಕಡೆಯ ವೀರರನ್ನು ಯುದ್ಧ ರಭಸದಲ್ಲಿ ಬಿಲ್ವಿದ್ಯೆಯಲ್ಲಿ ಪ್ರವೀಣರಾದವರನ್ನು ಮೂದಲಿಸಿದೆ. ಇದರಿಂದ ಈ ಶತ್ರು ಭಟನ ಎದೆಯೆಂಬ ಆಕಾಶದಿಂದ ಚಿಮ್ಮಿದ ರಕ್ತದಿಂದ ನಮ್ಮ ಭುಜಬಲದ ಹಿರಿಮೆಗೆ ಉಂಟಾದ ಅವಮಾನದ ಬೆಂಕಿಯ ಪ್ರಭೆಯನ್ನು ಆರಿಸಲು ಸಾಧ್ಯವಾಯಿತು’ ಎಂದುಕೊಂಡ.
ಪದಾರ್ಥ (ಕ.ಗ.ಪ)
ಸಂಗರ-ಯುದ್ಧ
ಮೂಲ ...{Loading}...
ಉಭಯ ವೀರರ ನೋಡಿ ಸಂಗರ
ರಭಸದಲಿ ಮೂದಲಿಸಿ ಚಾಪ
ಪ್ರಭವ ಚಪಲರ ಚದುರುಗೆಡಿಸಿದ ಭುಜಬಲೋನ್ನತಿಯ
ಸಭೆಯೊಳಾದವಮಾನದಹನ
ಪ್ರಭೆಯ ನಂದಿಸಲಾಯ್ತಲಾ ರಿಪು
ಸುಭಟನುರವೆಂಬಭ್ರ ಸಂಭವ ರುಧಿರಜಲವೆಂದ ॥70॥
೦೭೧ ಕೆಡೆದ ಹಗೆಯೊರಲಿನಲಿ ...{Loading}...
ಕೆಡೆದ ಹಗೆಯೊರಲಿನಲಿ ಕಿವಿ ಎಡೆ
ಯುಡುಗದೀಕ್ಷಿಸಿ ಕಂಗಳಾ ಖಳ
ನೊಡಲ ಕಡಿಗೆಡಹಿನಲಿ ಮೈ ರಿಪುಮಾಂಸಗಂಧದಲಿ
ಬಿಡದೆ ನಾಸಿಕ ಖಳನ ರಕುತವ
ಕುಡಿದು ನಾಲಗೆ ಸೊಗಸೆ ಸೊಕ್ಕಿದ
ನೊಡನೊಡನೆ ಪಂಚೇಂದ್ರಿಯ ಪ್ರೀತಿಯಲಿ ಕಲಿಭೀಮ ॥71॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೆಳಗೆ ಬಿದ್ದ ಶತ್ರುವಿನ ಕೂಗಿನಿಂದ ಕಿವಿ, ಒಂದೇ ಸಮನೆ ನೋಡುತ್ತಿದ್ದುದರಿಂದ ಕಣ್ಣು, ಆ ದುಷ್ಟನ ದೇಹವನ್ನು ಕಡಿದು ಕೆಡವಿದುದರಿಂದ ಮೈ, ಶತ್ರುವಿನ ಮಾಂಸದ ವಾಸನೆಯಿಂದ ಮೂಗು, ದುಷ್ಟನ ರಕ್ತವನ್ನು ಕುಡಿದುದರಿಂದ ನಾಲಗೆ - ಇವುಗಳಿಗೆ ಸಂತೋಷವುಂಟಾಯಿತು. ಇದರಿಂದ ಕಲಿಭೀಮನ ಪಂಚೇಂದ್ರಿಯಗಳಿಗೆ ಸೊಕ್ಕಿದಷ್ಟು ಸಂತೋಷವಾಯಿತು.
ಮೂಲ ...{Loading}...
ಕೆಡೆದ ಹಗೆಯೊರಲಿನಲಿ ಕಿವಿ ಎಡೆ
ಯುಡುಗದೀಕ್ಷಿಸಿ ಕಂಗಳಾ ಖಳ
ನೊಡಲ ಕಡಿಗೆಡಹಿನಲಿ ಮೈ ರಿಪುಮಾಂಸಗಂಧದಲಿ
ಬಿಡದೆ ನಾಸಿಕ ಖಳನ ರಕುತವ
ಕುಡಿದು ನಾಲಗೆ ಸೊಗಸೆ ಸೊಕ್ಕಿದ
ನೊಡನೊಡನೆ ಪಂಚೇಂದ್ರಿಯ ಪ್ರೀತಿಯಲಿ ಕಲಿಭೀಮ ॥71॥
೦೭೨ ಘನಪರಾಕ್ರಮಿ ಭೀಮಸೇನಗೆ ...{Loading}...
ಘನಪರಾಕ್ರಮಿ ಭೀಮಸೇನಗೆ
ವಿನುತ ಭುಜಗೇಂದ್ರಂಗೆ ದುಶ್ಶಾ
ಸನನ ಜೀವಾನಿಳನ ಪಾರಣೆ ಸಮರಭೂಮಿಯಲಿ
ಮುನಿವನಾರಿವನೊಳಗೆ ಕರುಳಿನ
ಘನ ನಿಶಾಕರಬಿಂಬದುದಯದೊ
ಳನಿಲಜನ ಮುಖ ಕುಮುದ ನಸುನಗೆಯೆಸಳು ಪಸರಿಸಿತು ॥72॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಹಾ ಪರಾಕ್ರಮಿಯಾದ ಭೀಮನೆಂಬ ಸರ್ಪಕ್ಕೆ ಯುದ್ಧದಲ್ಲಿ ದುಶ್ಶಾಸನ, ಎಂಬುವವನ ಜೀವವೆಂಬ ಗಾಳಿ ಪಾರಣೆಯಾಯಿತು. (ಆಹಾರದ ಹಬ್ಬವಾಯಿತು). ಈ ಭೀಮನ ಮೇಲೆ ಕೋಪಗೊಳ್ಳುವವರು ಯಾರು ? ದುಶ್ಶಾಸನನ ಕರುಳುಗಳೆಂಬ ದೊಡ್ಡ ಚಂದ್ರಬಿಂಬದ ಉದಯದಿಂದ, ಭೀಮನ ಮುಖವೆಂಬ ಕುಮುದದ ಹೂವಿನ ನಸುನಗೆಯ ದಳಗಳು ಅರಳಿದವು, ಎಂದರೆ ಸಂತಸವಾಯಿತು.
ಮೂಲ ...{Loading}...
ಘನಪರಾಕ್ರಮಿ ಭೀಮಸೇನಗೆ
ವಿನುತ ಭುಜಗೇಂದ್ರಂಗೆ ದುಶ್ಶಾ
ಸನನ ಜೀವಾನಿಳನ ಪಾರಣೆ ಸಮರಭೂಮಿಯಲಿ
ಮುನಿವನಾರಿವನೊಳಗೆ ಕರುಳಿನ
ಘನ ನಿಶಾಕರಬಿಂಬದುದಯದೊ
ಳನಿಲಜನ ಮುಖ ಕುಮುದ ನಸುನಗೆಯೆಸಳು ಪಸರಿಸಿತು ॥72॥
೦೭೩ ಉಕ್ಕಿದುದು ಕಡುಗೋಪ ...{Loading}...
ಉಕ್ಕಿದುದು ಕಡುಗೋಪ ರಕುತದ
ಸೊಕ್ಕಿನಲಿ ಸೊಗಡೇರಿ ಕಂಗಳ
ಲುಕ್ಕಿದುದು ಕಡುಗೆಂಪು ತೊದಳಿನ ಗಜರು ಘಾಡಿಸಿತು
ಮಿಕ್ಕ ರಕುತವ ಮೊಗೆದು ಬದಿಗಳೊ
ಳೊಕ್ಕ ಕರುಳ್ಗಳನಾಯ್ದು ಮೂಲೆಗ
ಳೊಕ್ಕಿನಲಿ ಕೈಯಿಕ್ಕಿ ರಿಂಗಣಗುಣಿದನಾ ಭೀಮ ॥73॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುಶ್ಶಾಸನನ ರಕ್ತವನ್ನು ಕುಡಿದ ಸೊಕ್ಕಿನ ಸೊಗಡಿನಿಂದ ಭೀಮನ ಕೋಪ ಉಕ್ಕಿ ಹೆಚ್ಚಾಯಿತು. ಕಣ್ಣುಗಳಲ್ಲಿ ಕಡುಕೆಂಪು ಉಂಟಾಯಿತು. ಅವನ ಮಾತುಗಳು ತಡೆದು ತಡೆದು ಗರ್ಜಿಸಿದವು. ಉಳಿದಿದ್ದ ರಕ್ತವನ್ನು ಮೊಗೆದು ಪಕ್ಕೆಗಳಲ್ಲಿ ಸಿಕ್ಕಿದ್ದ ಕರುಳುಗಳನ್ನು ಕೈ ಹಾಕಿ ತೆಗೆದು ಸುತ್ತು ಹೊಡೆಯುತ್ತಾ ಕುಣಿದಾಡಿದನು.
ಪದಾರ್ಥ (ಕ.ಗ.ಪ)
ಗಜರು-ಗರ್ಜನೆ, ರಿಂಗಣಗುಣಿ-ಜಾರಿಜಾರಿ ಸುತ್ತು ಹೊಡೆದು ಕುಣಿ
ಮೂಲ ...{Loading}...
ಉಕ್ಕಿದುದು ಕಡುಗೋಪ ರಕುತದ
ಸೊಕ್ಕಿನಲಿ ಸೊಗಡೇರಿ ಕಂಗಳ
ಲುಕ್ಕಿದುದು ಕಡುಗೆಂಪು ತೊದಳಿನ ಗಜರು ಘಾಡಿಸಿತು
ಮಿಕ್ಕ ರಕುತವ ಮೊಗೆದು ಬದಿಗಳೊ
ಳೊಕ್ಕ ಕರುಳ್ಗಳನಾಯ್ದು ಮೂಲೆಗ
ಳೊಕ್ಕಿನಲಿ ಕೈಯಿಕ್ಕಿ ರಿಂಗಣಗುಣಿದನಾ ಭೀಮ ॥73॥
೦೭೪ ಬಳಿಕ ಪರಿತೋಷದಲಿ ...{Loading}...
ಬಳಿಕ ಪರಿತೋಷದಲಿ ಮಾರುತಿ
ಲಲನೆಯಲ್ಲಿಗೆ ಕಳುಹಿದನು ತ
ನ್ನೊಲವಿನಾಹವವಾದುದೈತಹುದೆನಲು ಬೇಗದಲಿ
ನಳಿನಮುಖಿ ನಲವೇರಿ ಮೇಳದ
ಕೆಳದಿಯರು ಕೈಗೊಡಲು ನೇವುರ
ದೆಳಮೊಳಗು ಮೋಹಿಸಲು ಮಾನಿನಿ ಬಂದಳಾಯೆಡೆಗೆ ॥74॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಮೇಲೆ ಸಂತೋಷದಿಂದ ಭೀಮನು ದ್ರೌಪದಿಯ ಬಳಿಗೆ ದೂತರನ್ನು ‘ನಿನ್ನ ಪ್ರೀತಿಯ ಯುದ್ಧ ನಡೆದಿದೆ. ಬೇಗ ಬಾ’ ಎಂದು ಹೇಳಿ ಕಳುಹಿಸಿದನು. ನಳಿನಮುಖಿಯಾದ ದ್ರೌಪದಿಯು ಸಂತೋಷ ಹೆಚ್ಚಾಗಿ ತನ್ನ ಸಖಿಯರ ಕೈ ಹಿಡಿದು ಗೆಜ್ಜೆಗಳ ಧ್ವನಿ ಆಕರ್ಷಿಸುತ್ತಿರಲು, ಯುದ್ಧಭೂಮಿಯ ಆ ಸ್ಥಳಕ್ಕೆ ಬಂದಳು.
ಮೂಲ ...{Loading}...
ಬಳಿಕ ಪರಿತೋಷದಲಿ ಮಾರುತಿ
ಲಲನೆಯಲ್ಲಿಗೆ ಕಳುಹಿದನು ತ
ನ್ನೊಲವಿನಾಹವವಾದುದೈತಹುದೆನಲು ಬೇಗದಲಿ
ನಳಿನಮುಖಿ ನಲವೇರಿ ಮೇಳದ
ಕೆಳದಿಯರು ಕೈಗೊಡಲು ನೇವುರ
ದೆಳಮೊಳಗು ಮೋಹಿಸಲು ಮಾನಿನಿ ಬಂದಳಾಯೆಡೆಗೆ ॥74॥
೦೭೫ ಮನಸಿಜನ ಮದದಾನೆ ...{Loading}...
ಮನಸಿಜನ ಮದದಾನೆ ಮೊಗಸಿದ
ಳನುವರಕೆ ಮಝ ಮಾಯೆ ಮೆಚ್ಚಿನ
ಮನದ ಕಡುಹಿನ ಖಾತಿಯೆಂತುಟೊ ಕೌರವನ ಮೇಲೆ
ಎನಲು ದಿವಿಜರು ಝಣಝಣಾಯಿತ
ನಿನದದುರವಣೆ ಮಿಗಲು ಘನಸಂ
ಜನಿತ ಪದತಳ ಚಲನಕೃತಿಯಿಂದೈದಿದಳು ರಣವ ॥75॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಮನ್ಮಥನ ಮದದಾನೆಯಾದ ದ್ರೌಪದಿ ಯುದ್ಧರಂಗದ ಕಡೆಗೆ ಹೊರಡಲು ಸಿದ್ಧಳಾದಳು / ದುಶ್ಶಾಸನನ ಮೇಲೆ ಅವಳಿಗೆ ಎಷ್ಟು ಕೋಪ ಇದೆಯೋ’ ಎಂದು ದೇವತೆಗಳು ಮಾತನಾಡಿಕೊಂಡರು. ಝಣ ಝಣ ಎಂದು ಕಾಲುಗೆಜ್ಜೆಗಳು ಅತಿಶಯ ಶಬ್ದ ಮಾಡುತ್ತಿರಲು ಪದ ಚಲನೆಯಿಂದ ಮೋಡಗಳ ಧ್ವನಿಯುಂಟಾಗುತ್ತಿದೆಯೋ ಎನ್ನುವಂತೆ ನಡೆಯುತ್ತಾ ರಣರಂಗವನ್ನು ಸಮೀಪಿಸಿದಳು.
ಪದಾರ್ಥ (ಕ.ಗ.ಪ)
ಮೊಗಸು-ಸಿದ್ಧನಾಗು,
ಮೂಲ ...{Loading}...
ಮನಸಿಜನ ಮದದಾನೆ ಮೊಗಸಿದ
ಳನುವರಕೆ ಮಝ ಮಾಯೆ ಮೆಚ್ಚಿನ
ಮನದ ಕಡುಹಿನ ಖಾತಿಯೆಂತುಟೊ ಕೌರವನ ಮೇಲೆ
ಎನಲು ದಿವಿಜರು ಝಣಝಣಾಯಿತ
ನಿನದದುರವಣೆ ಮಿಗಲು ಘನಸಂ
ಜನಿತ ಪದತಳ ಚಲನಕೃತಿಯಿಂದೈದಿದಳು ರಣವ ॥75॥
೦೭೬ ಅರರೆ ಭೀಮನ ...{Loading}...
ಅರರೆ ಭೀಮನ ವಿಜಯಲಕ್ಷ್ಮಿಯ
ಬರವೊ ಕೌರವನೃಪನ ಮರಣಾಂ
ಕುರವ ಸೂಚಿಸುವಾತುರಶ್ರೀಸತಿಯ ಸಂಭ್ರಮವೊ
ಅರಿಭಟರಿಗದ್ಭುತವೆನಲು ಭೀ
ಕರರು ದುರ್ಧರವೆಂದೆನಲು ಪಂ
ಕರುಹಮುಖಿ ನಡೆತಂದಳಾ ಪವಮಾನಜನ ಹೊರೆಗೆ ॥76॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಓಹೋ ಭೀಮನ ವಿಜಯಲಕ್ಷ್ಮಿಯು ಬಂದಿದ್ದಾಳೆಯೋ, ಕೌರವನ ಮರಣದ ಅಂಕುರವನ್ನು ಸೂಚಿಸುವ ಆತುರದಿಂದ ಕೂಡಿದ ಲಕ್ಷ್ಮಿಯ ಸಂಭ್ರಮದ ಆಗಮನವೋ, ಎಂಬಂತೆ ಶತ್ರು ಸೈನಿಕರಿಗೆ ಅದ್ಭುತವಾಗಿ ಕಾಣಿಸಿತು. ಭಯಂಕರರಾದವರೂ ಸಹ ಇದು ಮಹಾ ಉಗ್ರವಾದ ದೃಶ್ಯ ಎಂದು ಹೇಳುತ್ತಿರುವಾಗ ಭೀಮನ ಸಮೀಪಕ್ಕೆ ಕಮಲಮುಖಿಯಾದ ದ್ರೌಪದಿ ನಡೆದು ಬಂದಳು.
ಪದಾರ್ಥ (ಕ.ಗ.ಪ)
ಪಂಕರುಹ-ಕಮಲ
ಮೂಲ ...{Loading}...
ಅರರೆ ಭೀಮನ ವಿಜಯಲಕ್ಷ್ಮಿಯ
ಬರವೊ ಕೌರವನೃಪನ ಮರಣಾಂ
ಕುರವ ಸೂಚಿಸುವಾತುರಶ್ರೀಸತಿಯ ಸಂಭ್ರಮವೊ
ಅರಿಭಟರಿಗದ್ಭುತವೆನಲು ಭೀ
ಕರರು ದುರ್ಧರವೆಂದೆನಲು ಪಂ
ಕರುಹಮುಖಿ ನಡೆತಂದಳಾ ಪವಮಾನಜನ ಹೊರೆಗೆ ॥76॥
೦೭೭ ಬರುತ ಕಣ್ಡಳು ...{Loading}...
ಬರುತ ಕಂಡಳು ಭೀಮಸೇನನ
ಧುರಪರಾಕ್ರಮವಹ್ನಿ ಭುಗಿಲೆಂ
ದರಿ ಭಯಂಕರ ರೌದ್ರರೂಪಿನೊಳಿರಲು ಬರಲಂಜಿ
ತಿರುಗೆ ಕಂಡನು ಪವನಸುತ ಪಂ
ಕರುಹಮುಖಿಯನು ಕರೆದು ನಿನ್ನಯ
ಭರದ ಬಯಕೆಯಿದಾಯ್ತೆ ದಿಟ ನೋಡೆಂದು ತೋರಿಸಿದ ॥77॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬರುತ್ತಾ ಯುದ್ಧ ಪರಾಕ್ರಮದ ಬೆಂಕಿ ಭುಗಿಲ್ ಎಂದು ಹೊತ್ತಿಕೊಂಡಿದ್ದ ಶತ್ರು ಭಯಂಕರವಾದ ರೌದ್ರ ರೂಪದಲ್ಲಿದ್ದ ಭೀಮಸೇನನನ್ನು ನೋಡಿದಳು. ಅವನ ಹತ್ತಿರಕ್ಕೆ ಹೋಗಲು ಹೆದರಿ, ಹಿಂತಿರುಗಲು ನೋಡಿದಾಗ, ಭೀಮನು ನೋಡಿ, ಆ ಕಮಲ ಮುಖಿಯನ್ನು ಕರೆದು, ನಿನ್ನ ತೀವ್ರವಾದ ಬಯಕೆ ನಿಜವಾಗಿ ತೀರಿದೆಯಲ್ಲವೇ ನೋಡು’ ಎಂದು ದುಶ್ಶಾಸನನನ್ನು ತೋರಿಸಿದನು.
ಮೂಲ ...{Loading}...
ಬರುತ ಕಂಡಳು ಭೀಮಸೇನನ
ಧುರಪರಾಕ್ರಮವಹ್ನಿ ಭುಗಿಲೆಂ
ದರಿ ಭಯಂಕರ ರೌದ್ರರೂಪಿನೊಳಿರಲು ಬರಲಂಜಿ
ತಿರುಗೆ ಕಂಡನು ಪವನಸುತ ಪಂ
ಕರುಹಮುಖಿಯನು ಕರೆದು ನಿನ್ನಯ
ಭರದ ಬಯಕೆಯಿದಾಯ್ತೆ ದಿಟ ನೋಡೆಂದು ತೋರಿಸಿದ ॥77॥
೦೭೮ ಆರಿವನು ನೀ ...{Loading}...
ಆರಿವನು ನೀ ಕೊಟ್ಟ ಭಾಷೆಯ
ಕಾರಣಿಕ ಖಳರೊಳಗಿದಾವನು
ವೀರ ದುಶ್ಶಾಸನ ಕಣಾ ಅಂತಾದಡಾಯ್ತೆನುತ
ಸಾರಿದಳು ಸರಸಿಜವದನೆ ಭ
ರ್ತಾರನನು ನಸುನಗುತ ಚರಣದ
ಚಾರು ನೇವುರವುಲಿಯಲೊದೆದಳು ಖಳನ ಮಸ್ತಕವ ॥78॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ನೀನು ಮಾಡಿದ ಪ್ರತಿಜ್ಞೆಗೆ ಕಾರಣನಾದ ದುಷ್ಟರಲ್ಲಿ ಇವನು ಯಾರು, ಯಾರು ?’ ಎಂದು ದ್ರೌಪದಿಯು ಪ್ರಶ್ನಿಸಿದಳು. ಇವನು ದುಶ್ಶಾಸನನಲ್ಲವೇ ಎಂದಾಗ, ಹಾಗಾದರೆ, ಸರಿ ಎನ್ನುತ್ತ ನಸುನಗುತ್ತಾ ಗಂಡನ ಹತ್ತಿರಕ್ಕೆ ಬಂದಳು. ತನ್ನ ಕಾಲಿನ ಮನೋಹರವಾದ ಗೆಜ್ಜೆಗಳು ಶಬ್ದ ಮಾಡುತ್ತಿರಲು, ದುಷ್ಟನ ತಲೆಯನ್ನು ಒದ್ದಳು.
ಮೂಲ ...{Loading}...
ಆರಿವನು ನೀ ಕೊಟ್ಟ ಭಾಷೆಯ
ಕಾರಣಿಕ ಖಳರೊಳಗಿದಾವನು
ವೀರ ದುಶ್ಶಾಸನ ಕಣಾ ಅಂತಾದಡಾಯ್ತೆನುತ
ಸಾರಿದಳು ಸರಸಿಜವದನೆ ಭ
ರ್ತಾರನನು ನಸುನಗುತ ಚರಣದ
ಚಾರು ನೇವುರವುಲಿಯಲೊದೆದಳು ಖಳನ ಮಸ್ತಕವ ॥78॥
೦೭೯ ನುಡಿವುದರಿದೇ ನುಡಿದ ...{Loading}...
ನುಡಿವುದರಿದೇ ನುಡಿದ ಭಾಷೆಯ
ಕಡೆತನಕ ಪೂರೈಸಿ ಮಾಡುವ
ಕಡುಗಲಿಗಳಾರುಂಟು ಜಗದೊಳು ನಿನ್ನ ಹೋಲುವರು
ಮೃಡಪರಾಕ್ರಮಿ ನನ್ನ ಹೋಲುವ
ಮಡದಿಯರು ನಿನ್ನಂದದೊಡೆಯರ
ಪಡೆವುದೇ ಪರಮೈಕಸೌಖ್ಯವಿದೆಂದಳಿಂದುಮುಖಿ ॥79॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಪ್ರತಿಜ್ಞೆಯನ್ನು ಮಾಡುವುದು ಏನೂ ಕಷ್ಟವಲ್ಲ. ಆದರೆ ಆಡಿದುದನ್ನು ಕಡೆಯವರೆಗೂ ಉಳಿಸಿಕೊಂಡು ಅದರಂತೆ ನಡೆಯುವ ನಿನಗೆ ಸಮಾನರಾದ ವೀರರು ಜಗತ್ತಿನಲ್ಲಿ ಯಾರಿದ್ದಾರೆ ? ಶಿವನಂತೆ ಪರಾಕ್ರಮಶಾಲಿಯೇ, ನನ್ನಂತಹ ಹೆಣ್ಣುಗಳಿಗೆ ನಿನ್ನಂತಹ ಗಂಡಂದಿರನ್ನು ಪಡೆಯುವುದೇ ಶ್ರೇಷ್ಠವಾದ ಸುಖ’ ಎಂದು ಹೊಗಳಿದಳು.
ಮೂಲ ...{Loading}...
ನುಡಿವುದರಿದೇ ನುಡಿದ ಭಾಷೆಯ
ಕಡೆತನಕ ಪೂರೈಸಿ ಮಾಡುವ
ಕಡುಗಲಿಗಳಾರುಂಟು ಜಗದೊಳು ನಿನ್ನ ಹೋಲುವರು
ಮೃಡಪರಾಕ್ರಮಿ ನನ್ನ ಹೋಲುವ
ಮಡದಿಯರು ನಿನ್ನಂದದೊಡೆಯರ
ಪಡೆವುದೇ ಪರಮೈಕಸೌಖ್ಯವಿದೆಂದಳಿಂದುಮುಖಿ ॥79॥
೦೮೦ ತರುಣಿ ಕುಳ್ಳಿರು ...{Loading}...
ತರುಣಿ ಕುಳ್ಳಿರು ಸ್ವಾಮಿದ್ರೋಹಿಯ
ಕರುಳ ಮುಡಿ ಬಾ ನಿನ್ನ ಖಾತಿಯ
ಪರಿಹರಿಸುವೆನು ಖಳನ ರುಧಿರಸ್ನಾನಕೆಳಸುವರೆ
ಸರಸಿಜಾನನೆ ಕೊಳ್ಳೆನುತ ಖಳ
ನುರವನಿಬ್ಬಗಿಮಾಡಿ ಕುಡಿತೆಯ
ಲರುಣಜಲವನು ಮೊಗೆದು ಮಾನಿನಿಗಿತ್ತನಾ ಭೀಮ ॥80॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮನು ದ್ರೌಪದಿಯನ್ನು ‘ಹೆಣ್ಣೇ ಬಾ ಕುಳಿತುಕೋ, ಸ್ವಾಮಿದ್ರೋಹಿಯ ಕರುಳನ್ನು ಮುಡಿದುಕೋ, ನಿನ್ನ ಕೋಪವನ್ನು ಪರಿಹರಿಸುತ್ತೇನೆ, ಈ ದುಷ್ಟನ ರಕ್ತದಲ್ಲಿ ಸ್ನಾನ ಮಾಡುವ ಬಯಕೆ ಇದೆಯೇ. ಸರಸಿಜಮುಖಿಯೇ ತೆಗೆದುಕೋ’ ಎನ್ನುತ್ತಾ ದುಶ್ಶಾಸನನ ಎದೆಯನ್ನು ಎರಡು ಭಾಗವಾಗಿ ಬಗಿಯುತ್ತಾ, ಬೊಗಸೆಯಲ್ಲಿ ರಕ್ತವನ್ನು ಮೊಗೆದು, ಅವಳಿಗೆ ಕೊಟ್ಟನು.
ಮೂಲ ...{Loading}...
ತರುಣಿ ಕುಳ್ಳಿರು ಸ್ವಾಮಿದ್ರೋಹಿಯ
ಕರುಳ ಮುಡಿ ಬಾ ನಿನ್ನ ಖಾತಿಯ
ಪರಿಹರಿಸುವೆನು ಖಳನ ರುಧಿರಸ್ನಾನಕೆಳಸುವರೆ
ಸರಸಿಜಾನನೆ ಕೊಳ್ಳೆನುತ ಖಳ
ನುರವನಿಬ್ಬಗಿಮಾಡಿ ಕುಡಿತೆಯ
ಲರುಣಜಲವನು ಮೊಗೆದು ಮಾನಿನಿಗಿತ್ತನಾ ಭೀಮ ॥80॥
೦೮೧ ಶೋಣಿತಾಮ್ಬುವಿನಿನ್ದ ತರುಣಿಯ ...{Loading}...
ಶೋಣಿತಾಂಬುವಿನಿಂದ ತರುಣಿಯ
ವೇಣಿಯನು ನಾದಿದನು ದಂತ
ಶ್ರೇಣಿಯಲಿ ಬಾಚಿದನು ಬೈತಲೆದೆಗೆದು ಚೆಲುವಿನಲಿ
ರಾಣಿ ಹುಸಿಯದೆ ಹೇಳು ಹೇಳೆ
ನ್ನಾಣೆ ಸೊಗಸೇ ಖಳನ ದಂತ
ಶ್ರೇಣಿ ತವೆ ಪಾವನವೆಯೆಂದನು ಪವನಸುತ ನಗುತ ॥81॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಕ್ತದ ನೀರಿನಿಂದ ದ್ರೌಪದಿಯ ತಲೆಗೂದಲನ್ನು ನೆನೆಸಿದನು. ಹಲ್ಲಿನ ಸಾಲಿನಿಂದ ತಲೆಯನ್ನು ಬೈತಲೆ ತೆಗೆದು ಸುಂದರವಾಗಿ ಬಾಚಿದನು. ‘ರಾಣಿ ನಿಜವಾಗಿ ಹೇಳು, ನನ್ನ ಮೇಲೆ ಆಣೆ, ಸಂತೋಷವಾಯಿತೇ, ಈ ಹಲ್ಲಿನ ಸಾಲುಗಳು ಪವಿತ್ರವಾದವೇ’ ಎಂದು ಭೀಮನು ನಗುತ್ತಾ ನುಡಿದನು.
ಮೂಲ ...{Loading}...
ಶೋಣಿತಾಂಬುವಿನಿಂದ ತರುಣಿಯ
ವೇಣಿಯನು ನಾದಿದನು ದಂತ
ಶ್ರೇಣಿಯಲಿ ಬಾಚಿದನು ಬೈತಲೆದೆಗೆದು ಚೆಲುವಿನಲಿ
ರಾಣಿ ಹುಸಿಯದೆ ಹೇಳು ಹೇಳೆ
ನ್ನಾಣೆ ಸೊಗಸೇ ಖಳನ ದಂತ
ಶ್ರೇಣಿ ತವೆ ಪಾವನವೆಯೆಂದನು ಪವನಸುತ ನಗುತ ॥81॥
೦೮೨ ಮುಡಿಗೆ ಹಾಯ್ದವನುದರರಕ್ತವ ...{Loading}...
ಮುಡಿಗೆ ಹಾಯ್ದವನುದರರಕ್ತವ
ತೊಡೆದು ಕಬರಿಯ ಕಟ್ಟೆ ಕಟ್ಟುವೆ
ನುಡಿಗೆಯಳಿದನ ಚರ್ಮವನು ನೀನುಡಿಸಲುಟ್ಟಪೆನು
ಎಡೆಯಲೊಯ್ಯಾರದಲಿ ಕಟ್ಟೆನು
ಮುಡಿಯ ಮಡಿಯುಡೆನೆಂಬ ತೇಜದ
ನುಡಿದ ನುಡಿ ಸಲೆ ಸಂದುದೇ ತನ್ನಾಣೆ ಹೇಳೆಂದ ॥82॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ತಲೆಗೂದಲಿಗೆ ಕೈ ಹಾಕಿದವನ ಹೊಟ್ಟೆಯ ರಕ್ತವನ್ನು ಬಳಿದುಕೊಂಡ ಮೇಲೆಯೇ ಕೂದಲನ್ನು ಗಂಟು ಹಾಕಿಕೊಳ್ಳುತ್ತೇನೆ. ನನ್ನ ವಸ್ತ್ರವನ್ನು ಸೆಳೆದವನ ಚರ್ಮವನ್ನು ನೀನು ಉಡಿಸಿದಾಗ ಉಟ್ಟುಕೊಳ್ಳುತ್ತೇನೆ. ಈ ಮಧ್ಯೆ ಸಿಂಗಾರಕ್ಕಾಗಿ ಮುಡಿಯನ್ನು ಕಟ್ಟುವುದಿಲ್ಲ, ಮಡಿಯ ವಸ್ತ್ರವನ್ನು ಉಡುವುದಿಲ್ಲ ಎಂಬ ನಿನ್ನ ರಭಸದ ಪ್ರತಿಜ್ಞೆಗಳು ನೆರವೇರಿದುವೇ. ನನ್ನ ಆಣೆಯಾಗಿ ಹೇಳು’ ಎಂದನು ಭೀಮ.
ಮೂಲ ...{Loading}...
ಮುಡಿಗೆ ಹಾಯ್ದವನುದರರಕ್ತವ
ತೊಡೆದು ಕಬರಿಯ ಕಟ್ಟೆ ಕಟ್ಟುವೆ
ನುಡಿಗೆಯಳಿದನ ಚರ್ಮವನು ನೀನುಡಿಸಲುಟ್ಟಪೆನು
ಎಡೆಯಲೊಯ್ಯಾರದಲಿ ಕಟ್ಟೆನು
ಮುಡಿಯ ಮಡಿಯುಡೆನೆಂಬ ತೇಜದ
ನುಡಿದ ನುಡಿ ಸಲೆ ಸಂದುದೇ ತನ್ನಾಣೆ ಹೇಳೆಂದ ॥82॥
೦೮೩ ಖಳನ ತೆಳುದೊಗಲುಗಿದು ...{Loading}...
ಖಳನ ತೆಳುದೊಗಲುಗಿದು ವಾಸ
ಚ್ಚಲವ ಸಲಿಸಿದನವ ಜಠರದೊ
ಳೊಳಗರುಳನುಗಿದಬುಜವದನೆಯ ಮುಡಿಗೆ ಮುಡಿಸಿದನು
ತಳುಕಿದನು ಖಳನುರದ ರಕ್ತದ
ತಿಳಕವನು ರಚಿಸಿದನು ಹರುಷದೊ
ಳುಲಿದು ಕೀಚಕವೈರಿ ನೋಡಿದನೊಲಿದು ನಿಜಸತಿಯ ॥83॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುಷ್ಟನ ತೆಳುವಾದ ಚರ್ಮವನ್ನು ಸುಲಿದು. ಅವಳ ಬಟ್ಟೆಗೆ ಅಂಟಿಸಿದನು. ಅವನ ಹೊಟ್ಟೆಯಿಂದ ಕರುಳನ್ನು ಕಿತ್ತು ಕಮಲಮುಖಿಯ ಮುಡಿಗೆ ಮುಡಿಸಿದನು. ಆಕೆಯನ್ನು ಆಲಂಗಿಸಿಕೊಂಡು ದುಷ್ಟನ ಎದೆಯ ರಕ್ತದ ತಿಲಕವನ್ನು ಇಟ್ಟನು. ಸಂತೋಷದಿಂದ ಕೂಗುತ್ತಾ ಕೀಚಕವೈರಿಯಾದ ಭೀಮ ತನ್ನ ಹೆಂಡತಿಯನ್ನು ಪ್ರೀತಿಯಿಂದ ನೋಡಿದನು.
ಪದಾರ್ಥ (ಕ.ಗ.ಪ)
ತಳುಕು-ಆಲಂಗಿಸು
ಮೂಲ ...{Loading}...
ಖಳನ ತೆಳುದೊಗಲುಗಿದು ವಾಸ
ಚ್ಚಲವ ಸಲಿಸಿದನವ ಜಠರದೊ
ಳೊಳಗರುಳನುಗಿದಬುಜವದನೆಯ ಮುಡಿಗೆ ಮುಡಿಸಿದನು
ತಳುಕಿದನು ಖಳನುರದ ರಕ್ತದ
ತಿಳಕವನು ರಚಿಸಿದನು ಹರುಷದೊ
ಳುಲಿದು ಕೀಚಕವೈರಿ ನೋಡಿದನೊಲಿದು ನಿಜಸತಿಯ ॥83॥
೦೮೪ ಪಸರಿಸಿದ ಪರಿವಾರ ...{Loading}...
ಪಸರಿಸಿದ ಪರಿವಾರ ಶರಧಿಯ
ಮಸಕ ಮುಸುಳಿತು ತೊಡೆಯಲಡಗೆಡೆ
ದ ಸುಹೃದನ ದರುಶನದೊಳಗೆ ಮಸಗಿದವು ಮುಡುಹುಗಳು
ಶಶಿವದನೆಯುತ್ಸಾಹವತಿ ಢಾ
ಳಿಸಿತು ಭೀಮನಹರುಷಜಲನಿಧಿ
ವಿಸಟವರಿದುದು ಕೇಳು ಜನಮೇಜಯ ಮಹೀಪಾಲ ॥84॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜನಮೇಜಯನೇ ಕೇಳು, ವಿಸ್ತಾರವಾಗಿ ನಿಂತಿದ್ದ, ದುಶ್ಶಾಸನನ ಪರಿವಾರಸಮುದ್ರದ ಉತ್ಸಾಹವೆಲ್ಲಾ ಮಂಕಾಯಿತು. ಕೆಳಕ್ಕೆ ಬಿದ್ದಿದ್ದ ದುಷ್ಟನನ್ನು ಕಂಡಾಗ ಮಾಡಿದಾಗ ಅವರ ಹೆಗಲುಗಳು ಕುಸಿದವು. ಚಂದ್ರವದನೆಯಾದ ದ್ರೌಪದಿಯ ಉತ್ಸಾಹ ಹೆಚ್ಚಾಯಿತು. ಭೀಮನ ಸಂತೋಷ ಸಾಗರಕ್ಕೆ ಎಲ್ಲೆ ಇಲ್ಲದಂತಾಯಿತು.
ಪದಾರ್ಥ (ಕ.ಗ.ಪ)
ಮುಡುಹು-ಹೆಗಲು, ವಿಸಟವರಿ-ವಿಸ್ತಾರವಾಗು
ಮೂಲ ...{Loading}...
ಪಸರಿಸಿದ ಪರಿವಾರ ಶರಧಿಯ
ಮಸಕ ಮುಸುಳಿತು ತೊಡೆಯಲಡಗೆಡೆ
ದ ಸುಹೃದನ ದರುಶನದೊಳಗೆ ಮಸಗಿದವು ಮುಡುಹುಗಳು
ಶಶಿವದನೆಯುತ್ಸಾಹವತಿ ಢಾ
ಳಿಸಿತು ಭೀಮನಹರುಷಜಲನಿಧಿ
ವಿಸಟವರಿದುದು ಕೇಳು ಜನಮೇಜಯ ಮಹೀಪಾಲ ॥84॥
೦೮೫ ಎಡದ ತೊಡೆಯಲಿ ...{Loading}...
ಎಡದ ತೊಡೆಯಲಿ ಮಡದಿ ಬಲುವಗೆ
ಯೊಡಲು ಬಲವಂಕದಲಿ ನೆಗಹಿದ
ಕುಡಿವೆರಳ ನಿಡುಗರುಳ ಮಾಲೆಯ ರೌದ್ರರಚನೆಯಲಿ
ಕಡುಮನದ ಖತಿಗಾರ ಭೀಮನ
ಕಡುಹು ಹೋಲುವೆಯಾಯ್ತು ಕಂಭದೊ
ಳೊಡೆದು ಮೂಡಿದ ಮೃಗದ ಮೊಗದ ಮಹಾಸುರಾಂತಕನ ॥85॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತನ್ನ ಎಡದ ತೊಡೆಯ ಮೇಲೆ ದ್ರೌಪದಿ, ಮಹಾಶತ್ರುವಿನ ದೇಹ ಬಲ ತೊಡೆಯ ಮೇಲೆ, ಬೆರಳಿನ ತುದಿಯಲ್ಲಿ ಎತ್ತಿ ಹಿಡಿದ ಉದ್ದನೆಯ ಕರುಳಿನ ಮಾಲೆಯ ಭಯಂಕರ ಸ್ವರೂಪದಲ್ಲಿ. ಕಠಿಣ ಮನಸ್ಸಿನ ಕೋಪಿಷ್ಠ ಭೀಮನ ಆ ಸಾಹಸದ ಭಂಗಿ, ಕಂಭವನ್ನು ಒಡೆದು ಹೊರಬಂದ ಸಿಂಹದ ಮುಖದ ರಾಕ್ಷಸ ಶತ್ರುವಾದ ನರಸಿಂಹಾವತಾರದ ನರಸಿಂಹನಂತೆ ಇತ್ತು.
ಮೂಲ ...{Loading}...
ಎಡದ ತೊಡೆಯಲಿ ಮಡದಿ ಬಲುವಗೆ
ಯೊಡಲು ಬಲವಂಕದಲಿ ನೆಗಹಿದ
ಕುಡಿವೆರಳ ನಿಡುಗರುಳ ಮಾಲೆಯ ರೌದ್ರರಚನೆಯಲಿ
ಕಡುಮನದ ಖತಿಗಾರ ಭೀಮನ
ಕಡುಹು ಹೋಲುವೆಯಾಯ್ತು ಕಂಭದೊ
ಳೊಡೆದು ಮೂಡಿದ ಮೃಗದ ಮೊಗದ ಮಹಾಸುರಾಂತಕನ ॥85॥
೦೮೬ ಕೆಲದ ತಲೆಯದ್ರಿಗಳ ...{Loading}...
ಕೆಲದ ತಲೆಯದ್ರಿಗಳ ಮೂಳೆಯ
ಹೊಳೆವ ಸಾಲಿನ ಸುಂಟಗೆಯ ತೊಂ
ಗಲಿನ ತೋರಣದೊಟ್ಟಿಲಟ್ಟೆಯ ಕರುಳ ಮಾಲೆಗಳ
ತಿಳಿದ ರಕುತದ ಕೊಳನ ಘನಕೊಳು
ಗುಳದ ತೋಪಿನ ನಡುವೆ ಮಾರುತಿ
ಲಲನೆಸಹಿತಾಡಿದನು ಶೋಣಿತವಾರಿಯೋಕುಳಿಯ ॥86॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಕ್ಕದಲ್ಲಿದ್ದ ಬೆಟ್ಟಗಳಂತಿದ್ದ ತಲೆಗಳು, ಹೊಳೆಯುತ್ತಿರುವ ಮೂಳೆಯ ಸಾಲುಗಳು, ಹೃದಯ ಗುಂಡಿಗೆಗಳ ಗೊಂಚಲಿನ ತೋರಣ, ದೇಹಗಳ ರಾಶಿಗಳು, ಕರುಳಿನ ಮಾಲೆಗಳು, ತೆಳ್ಳಗಾದ ರಕ್ತದ ಕೊಳಗಳು, ದೊಡ್ಡ ಯುದ್ಧರಂಗವೆಂಬ ತೋಪಿನ ನಡುವೆ, ಭೀಮನು ತನ್ನ ಹೆಂಡತಿಯಾದ ದ್ರೌಪದಿಯೊಡನೆ ರಕ್ತದ ಓಕುಳಿಯಾಟವಾಡಿದನು.
ಪದಾರ್ಥ (ಕ.ಗ.ಪ)
ಸುಂಟಗೆ-ಗುಂಡಿಗೆ, ಹೃದಯ, ತೊಂಗಲು-ಗೊಂಚಲು
ಮೂಲ ...{Loading}...
ಕೆಲದ ತಲೆಯದ್ರಿಗಳ ಮೂಳೆಯ
ಹೊಳೆವ ಸಾಲಿನ ಸುಂಟಗೆಯ ತೊಂ
ಗಲಿನ ತೋರಣದೊಟ್ಟಿಲಟ್ಟೆಯ ಕರುಳ ಮಾಲೆಗಳ
ತಿಳಿದ ರಕುತದ ಕೊಳನ ಘನಕೊಳು
ಗುಳದ ತೋಪಿನ ನಡುವೆ ಮಾರುತಿ
ಲಲನೆಸಹಿತಾಡಿದನು ಶೋಣಿತವಾರಿಯೋಕುಳಿಯ ॥86॥
೦೮೭ ಕೊಳುಗುಳದ ಜಯಲಕ್ಷ್ಮಿಗಾಯಿತು ...{Loading}...
ಕೊಳುಗುಳದ ಜಯಲಕ್ಷ್ಮಿಗಾಯಿತು
ಚಲನಸುತನಲಿ ಮದುವೆಯೆನೆ ಮಂ
ಗಳಮುಹೂರ್ತಕದೊಳಗೆ ಮುಳುಗಿದ ಘಳಿಗೆವಟ್ಟಿಲೆನೆ
ತಲೆ ಕಪಾಲದ ಸಾಲಶೋಣಿತ
ಜಲದಲಂದೊಪ್ಪಿದವು ರಣದೊಳು
ಕಳದೊಳದ್ಭುತರಚನೆ ಮಿಗೆ ಸೌರಂಭ ರಂಜಿಸಿತು ॥87॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯುದ್ಧಲಕ್ಷ್ಮಿಗೆ ವಾಯುಪುತ್ರನ ಜೊತೆಯಲ್ಲಿ ವಿವಾಹವಾಯಿತು ಎನ್ನುವಂತಾಯಿತು. ಮಂಗಳ ಮುಹೂರ್ತದಲ್ಲಿ ಸಿದ್ಧಪಡಿಸಿದ ಘಳಿಗೆ ಬಟ್ಟಲು ಎನ್ನುವಂತಿದ್ದ, ತಲೆ ಬುರುಡೆಗಳ ಸಾಲುಗಳು ರಕ್ತದಿಂದ ತುಂಬಿ ಚೆನ್ನಾಗಿ ಕಾಣಿಸುತ್ತಿದ್ದವು. ರಣರಂಗದಲ್ಲಿ ಇದು ಅದ್ಭುತವಾಗಿ, ವಿಶೇಷ ಸುಂದರವಾಗಿ ಕಾಣಿಸುತ್ತಿತ್ತು.
ಮೂಲ ...{Loading}...
ಕೊಳುಗುಳದ ಜಯಲಕ್ಷ್ಮಿಗಾಯಿತು
ಚಲನಸುತನಲಿ ಮದುವೆಯೆನೆ ಮಂ
ಗಳಮುಹೂರ್ತಕದೊಳಗೆ ಮುಳುಗಿದ ಘಳಿಗೆವಟ್ಟಿಲೆನೆ
ತಲೆ ಕಪಾಲದ ಸಾಲಶೋಣಿತ
ಜಲದಲಂದೊಪ್ಪಿದವು ರಣದೊಳು
ಕಳದೊಳದ್ಭುತರಚನೆ ಮಿಗೆ ಸೌರಂಭ ರಂಜಿಸಿತು ॥87॥
೦೮೮ ಉಡಿದು ಕೆಡೆದ ...{Loading}...
ಉಡಿದು ಕೆಡೆದ ಸಿತಾತಪತ್ರದ
ನಡುವೆ ಹರಿಸಾಲಿನ ಕಪಾಲದ
ಗಡಣವಿರೆ ಚೆಲುವಾಯ್ತು ಜನಮೇಜಯಮಹೀಪಾಲ
ಅಡಗನಂತಕಗಗಲ ತಂದುಣ
ಬಡಿಸಲಿಕ್ಕಿದ ತಳಿಗೆಯೊಳು ಸಂ
ಗಡಿಸಿದವು ಕೆಲವಟ್ಟಲೆನೆ ರಂಜಿಸಿತು ರಣಭೂಮಿ ॥88॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಜನಮೇಜಯ ರಾಯ, ಮುರಿದು ಕೆಳಗೆ ಬಿದ್ದಿದ್ದ ಬಿಳಿಯ ಆತಪತ್ರ (-ಕೊಡೆ) ದ ಮಧ್ಯೆ ಕುದುರೆಗಳ ಸಾಲಿನ ತಲೆಗಳ ಸಮೂಹ ಚೆಲುವಾಗಿ ಕಾಣಿಸುತ್ತಿತ್ತು. ಯಮನಿಗೆ, ಮಾಂಸವನ್ನು ಎಡೆಯಾಗಿ ತಂದು ಬಡಿಸಿದ ತಟ್ಟೆಯೊಳಗಿಟ್ಟ ಪಕ್ಕದಲ್ಲಿದ್ದ ಬಟ್ಟಲುಗಳು ಎನ್ನುವಂತೆ ಯುದ್ಧ ಭೂಮಿ ರಂಜಿಸಿತು.” ಎಂದು ವೈಶಂಪಾಯನರು ಹೇಳಿದರು.
ಪದಾರ್ಥ (ಕ.ಗ.ಪ)
ಅಗಲು-ತಟ್ಟೆ
ಮೂಲ ...{Loading}...
ಉಡಿದು ಕೆಡೆದ ಸಿತಾತಪತ್ರದ
ನಡುವೆ ಹರಿಸಾಲಿನ ಕಪಾಲದ
ಗಡಣವಿರೆ ಚೆಲುವಾಯ್ತು ಜನಮೇಜಯಮಹೀಪಾಲ
ಅಡಗನಂತಕಗಗಲ ತಂದುಣ
ಬಡಿಸಲಿಕ್ಕಿದ ತಳಿಗೆಯೊಳು ಸಂ
ಗಡಿಸಿದವು ಕೆಲವಟ್ಟಲೆನೆ ರಂಜಿಸಿತು ರಣಭೂಮಿ ॥88॥
೦೮೯ ಸರಳ ತುದಿಹಿಳುಕಿನಲಿ ...{Loading}...
ಸರಳ ತುದಿಹಿಳುಕಿನಲಿ ಸಬಳದ
ಸುರಗಿಗಳ ಸೂನಗಿಯ ಬಂಡಿಯ
ಶರಗಳಲಿ ಸಿಲುಕಿರ್ದ ಸುಭಟರ ಕಡಿಕು ಮೆರೆದಿರಲು
ಅರರೆ ಜವನಂಗಡಿಯೊಳಿಕ್ಕಿದ
ತರತರದೊಳಿಹ ಪಸರವೆನೆ ಸಿಂ
ಗರಿಸಿತೈ ರಣಭೂಮಿ ಜನಮೇಜಯ ಮಹೀಪಾಲ ॥89॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜನಮೇಜಯನೇ ಕೆಳು “ಬಾಣಗಳ ಹಿಂತುದಿ , ಈಟಿಗಳು, ಕತ್ತಿಗಳು, ಶೂಲಗಳು, ರಥಗಳಲ್ಲಿ ಸಿಕ್ಕಿಕೊಂಡಿದ್ದ ಸೈನಿಕರ ಅಂಗ ಭಾಗಗಳು. ಎಲ್ಲೆಲ್ಲಿಯೂ ಕಾಣಿಸುತ್ತಿದ್ದವು. ಯಮನ ಅಂಗಡಿಯೊಳಗೆ ಇಟ್ಟ ವಿವಿಧ ರೀತಿಯ ಸರಕುಗಳು ಎನ್ನುವಂತೆ ರಣಭೂಮಿ ಸಿಂಗಾರವಾಗಿ ಕಾಣುತ್ತಿತ್ತು.” ಎಂದು ವೈಶಂಪಾಯನರು ಹೇಳಿದರು.
ಪದಾರ್ಥ (ಕ.ಗ.ಪ)
ಹಿಳುಕು-ಹಿಂತುದಿ, ಸಬಳ-ಈಟಿ, ಸೂನಗಿ-ಶೂಲ, ಕಡಿಕು-ದೇಹಭಾಗ
ಮೂಲ ...{Loading}...
ಸರಳ ತುದಿಹಿಳುಕಿನಲಿ ಸಬಳದ
ಸುರಗಿಗಳ ಸೂನಗಿಯ ಬಂಡಿಯ
ಶರಗಳಲಿ ಸಿಲುಕಿರ್ದ ಸುಭಟರ ಕಡಿಕು ಮೆರೆದಿರಲು
ಅರರೆ ಜವನಂಗಡಿಯೊಳಿಕ್ಕಿದ
ತರತರದೊಳಿಹ ಪಸರವೆನೆ ಸಿಂ
ಗರಿಸಿತೈ ರಣಭೂಮಿ ಜನಮೇಜಯ ಮಹೀಪಾಲ ॥89॥
೦೯೦ ಸಿಡಿದ ಕಣ್ಣಾಲಿಗಳು ...{Loading}...
ಸಿಡಿದ ಕಣ್ಣಾಲಿಗಳು ಜವನಂ
ಗಡಿಯ ನೀಲದ ಹಸರದಂತಿರ
ಲಡಗು ಮೆರೆದುದು ಸೂನೆಗಾರರ ಹಸರದಂದದಲಿ
ಹೊಡೆಗೆಡೆದ ಗಜದಟ್ಟೆ ರಕುತದ
ಕಡಲೊಳದ್ದವು ಬೀತರಸುಗಳ
ಪಡಗು ಜವಲೋಕಕ್ಕೆ ಜಂಗುಳಿಸಿರ್ದುವೆಂಬಂತೆ ॥90॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಿಡಿದು ಬಿದ್ದಿದ್ದ ಕಣ್ಣು ಗುಡ್ಡೆಗಳು ಯಮನ ಅಂಗಡಿಯಲ್ಲಿರುವ ನೀಲಮಣಿಯ ರಾಶಿಯಂತೆ, ಮಾಂಸವು ಸೂನೆಗಾರರ ಸರಕಿನ ರಾಶಿಯಂತೆ, ಸತ್ತ ಅರಸುಗಳೆಂಬ ಹಡಗುಗಳು ಯಮನಲೋಕಕ್ಕೆ ಗುಂಪುಗೂಡಿ ಹೋಗಿವೆ ಎಂಬಂತೆ ರಾಶಿರಾಶಿಯಾಗಿ ಬಿದ್ದಿದ್ದ ಆನೆಗಳ ಶರೀರಗಳು ರಕ್ತದ ಸಮುದ್ರದಲ್ಲಿ ಮುಳುಗಿದ್ದವು.
ಪದಾರ್ಥ (ಕ.ಗ.ಪ)
ಜಂಗುಳಿಸು-ಗುಂಪುಗೂಡು
ಮೂಲ ...{Loading}...
ಸಿಡಿದ ಕಣ್ಣಾಲಿಗಳು ಜವನಂ
ಗಡಿಯ ನೀಲದ ಹಸರದಂತಿರ
ಲಡಗು ಮೆರೆದುದು ಸೂನೆಗಾರರ ಹಸರದಂದದಲಿ
ಹೊಡೆಗೆಡೆದ ಗಜದಟ್ಟೆ ರಕುತದ
ಕಡಲೊಳದ್ದವು ಬೀತರಸುಗಳ
ಪಡಗು ಜವಲೋಕಕ್ಕೆ ಜಂಗುಳಿಸಿರ್ದುವೆಂಬಂತೆ ॥90॥
೦೯೧ ಬನ್ದ ತೊರೆಗಳ ...{Loading}...
ಬಂದ ತೊರೆಗಳ ಕುಡಿದೆನತಿ ಢಗೆ
ಯಿಂದ ಸಕಲ ಸರೋರುಹಾಂಬುವ
ನೊಂದೆ ಶ್ವಾಸದಲೀಂಟಿದೆನು ಶಂಕಿಸದು ಕೋಪಾಗ್ನಿ
ಇಂದು ದುಶ್ಯಾಸನನ ಶೋಣಿತ
ದೊಂದು ಕುಡಿತೆಯಲಾ ಮಹಾಶಿಖಿ
ನಂದಿತೇನಿದು ಚಿತ್ರವಲ್ಲಾ ಸೂತ ಹೇಳೆಂದ ॥91॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಸಿಕ್ಕಿದ ನದಿಗಳ ನೀರನ್ನೆಲ್ಲಾ ಕುಡಿದೆ, ಬಾಯಾರಿಕೆಯ ಕಾರಣದಿಂದ ಎಲ್ಲಾ ಸರೋವರದ ನೀರನ್ನು ಒಂದೇ ಉಸಿರಿನಲ್ಲಿ ಕುಡಿದೆ, ಅದರಿಂದ ನನ್ನ ಕೋಪವೆಂಬ ಬೆಂಕಿ ಆರಲಿಲ್ಲ. ಇಂದು ದುಶ್ಶಾಸನನ ರಕ್ತವನ್ನು ಒಂದು ಕುಡಿತೆಯಲ್ಲಿ ಕುಡಿದ ತಕ್ಷಣ ನನ್ನ ಮಹಾ ದಾಹದ ಬೆಂಕಿ ಕಡಿಮೆಯಾಯಿತಲ್ಲಾ. ಇದು ವಿಚಿತ್ರವಲ್ಲವೇ ಸೂತ” - ಎಂದು ಭೀಮನು ತನ್ನ ಸಾರಥಿಯನ್ನು ಕೇಳಿದನು.
ಮೂಲ ...{Loading}...
ಬಂದ ತೊರೆಗಳ ಕುಡಿದೆನತಿ ಢಗೆ
ಯಿಂದ ಸಕಲ ಸರೋರುಹಾಂಬುವ
ನೊಂದೆ ಶ್ವಾಸದಲೀಂಟಿದೆನು ಶಂಕಿಸದು ಕೋಪಾಗ್ನಿ
ಇಂದು ದುಶ್ಯಾಸನನ ಶೋಣಿತ
ದೊಂದು ಕುಡಿತೆಯಲಾ ಮಹಾಶಿಖಿ
ನಂದಿತೇನಿದು ಚಿತ್ರವಲ್ಲಾ ಸೂತ ಹೇಳೆಂದ ॥91॥
೦೯೨ ಇವನ ನೆತ್ತರ ...{Loading}...
ಇವನ ನೆತ್ತರ ಕುಡಿವ ರಿಪುಕೌ
ರವರ ನೂರ್ವರ ಕಡಿವ ಭಾಷೆಗ
ಳೆವಗೆ ಪೂರಾಯವು ಸುಯೋಧನಹರಣವೊಂದುಳಿಯೆ
ಅವನಿ ಜಳ ಶಿಖಿ ಪವನ ಪುಷ್ಕರ
ದಿವಿಜ ದನುಜೋರಗಮುಖಾಖಿಳ
ಭುವನಜನ ನೀವ್ ಕೇಳಿಯೆಂದನು ಭೀಮ ಮೊಗನೆಗಹಿ ॥92॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಈ ದುಶ್ಶಾಸನನ ರಕ್ತವನ್ನು ಕುಡಿಯುವ, ನೂರು ಜನ ಕೌರವರನ್ನು ಕತ್ತರಿಸಿ ಹಾಕುವ ಪ್ರತಿಜ್ಞೆಗಳು ದುರ್ಯೋಧನನ ಪ್ರಾಣವೊಂದು ಉಳಿದಂತೆ ಇಂದು ನನಗೆ ನೆರವೇರಿದವು. ಭೂಮಿ, ಜಲ, ಬೆಂಕಿ, ವಾಯು, ಆಕಾಶ, ದೇವತೆಗಳು, ರಾಕ್ಷಸರು, ಸರ್ಪಗಳು, ಹಾಗೂ ಲೋಕದ ಜನಗಳೇ ನೀವೆಲ್ಲಾ ಕೇಳಿ” ಎಂದು ಭೀಮನು ಮುಖವನ್ನೆತ್ತಿ ಘೋಷಿಸಿದ.
ಪದಾರ್ಥ (ಕ.ಗ.ಪ)
ಪುಷ್ಕರ-ಆಕಾಶ
ಮೂಲ ...{Loading}...
ಇವನ ನೆತ್ತರ ಕುಡಿವ ರಿಪುಕೌ
ರವರ ನೂರ್ವರ ಕಡಿವ ಭಾಷೆಗ
ಳೆವಗೆ ಪೂರಾಯವು ಸುಯೋಧನಹರಣವೊಂದುಳಿಯೆ
ಅವನಿ ಜಳ ಶಿಖಿ ಪವನ ಪುಷ್ಕರ
ದಿವಿಜ ದನುಜೋರಗಮುಖಾಖಿಳ
ಭುವನಜನ ನೀವ್ ಕೇಳಿಯೆಂದನು ಭೀಮ ಮೊಗನೆಗಹಿ ॥92॥
೦೯೩ ಮಡದಿಯನು ಕಳುಹಿದನು ...{Loading}...
ಮಡದಿಯನು ಕಳುಹಿದನು ಕೆಳದಿಯ
ರೊಡನೆ ನಡೆತರೆ ನಾಕುಕಡೆಯಲಿ
ಹಿಡಿದ ಜವನಿಕೆಗಳಲಿ ಜಲರುಹವದನೆ ಗಮಿಸಿದಳು
ತುಡುಕಿ ವಾಮಾಂಘ್ರಿಯಲಿ ಹಗೆಯನು
ಮಡದಲೊದೆದನು ಬಳಿಕ ಕೌರವ
ಪಡೆಯ ಪವನಜ ಕೊಟ್ಟನಂತಕಪುರವನಾಂತರಕೆ ॥93॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮನು ದ್ರೌಪದಿಯನ್ನು ಹಿಂದಕ್ಕೆ ಕಳುಹಿಸಿದನು. ತನ್ನ ಸಖಿಯರು ನಾಲ್ಕು ಕಡೆಯಲ್ಲಿ ಹಿಡಿದ ತೆರೆಗಳ ನಡುವೆ ಆ ಕಮಲಮುಖಿ ಹಿಂದಿರುಗಿದಳು. ಭೀಮನು ಶತ್ರುವಿನ ದೇಹವನ್ನು ಹಿಡಿದು, ತನ್ನ ಎಡಗಾಲಿನ ಹಿಮ್ಮಡಿಯಿಂದ ಒದ್ದು, ಆ ಮೇಲೆ ಕೌರವನ ಪಡೆಯನ್ನು ಯಮನ ಪಟ್ಟಣಕ್ಕೆ ಕಳುಹಿಸಿದನು.
ಮೂಲ ...{Loading}...
ಮಡದಿಯನು ಕಳುಹಿದನು ಕೆಳದಿಯ
ರೊಡನೆ ನಡೆತರೆ ನಾಕುಕಡೆಯಲಿ
ಹಿಡಿದ ಜವನಿಕೆಗಳಲಿ ಜಲರುಹವದನೆ ಗಮಿಸಿದಳು
ತುಡುಕಿ ವಾಮಾಂಘ್ರಿಯಲಿ ಹಗೆಯನು
ಮಡದಲೊದೆದನು ಬಳಿಕ ಕೌರವ
ಪಡೆಯ ಪವನಜ ಕೊಟ್ಟನಂತಕಪುರವನಾಂತರಕೆ ॥93॥
೦೯೪ ಅರಿಯ ಹೆಣನನು ...{Loading}...
ಅರಿಯ ಹೆಣನನು ಹಾಯ್ಕಿ ನೊರೆನೆ
ತ್ತರಲಿ ಬೊಟ್ಟಿಟ್ಟನು ವರೂಥದ
ಹೊರಗೆ ಬಂದನು ಕಳಶಜಲದಲಿ ತೊಳೆದು ಕರಪದವ
ಪರಿಹೃತಶ್ರಮನಾಗಿ ವರಕ
ರ್ಪುರದ ಕಸ್ತುರಿಗಂಧಲೇಪವ
ನೊರಸಿ ಹೊಸಮಡಿವರ್ಗದಲಿ ರಂಜಿಸಿದನಾ ಭೀಮ ॥94॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶತ್ರುವಿನ ಹೆಣವನ್ನು ಒಂದು ಕಡೆ ಎಸೆದು, ಅವನ ನೊರೆ ರಕ್ತದಿಂದ ಹಣೆಯ ಮೇಲೆ ತಿಲಕವನ್ನು ಇಟ್ಟನು. ರಥದಿಂದ ಹೊರಗೆಬಂದು, ಕಳಶದ ನೀರಿನಲ್ಲಿ ಕೈಗಳನ್ನು ತೊಳೆದು, ಆಯಾಸ ಪರಿಹಾರ ಮಾಡಿಕೊಂಡು, ಕರ್ಪೂರ ಕಸ್ತೂರಿ ಗಂಧ ಲೇಪನವನ್ನು ಮಾಡಿಕೊಂಡು, ಹೊಸ ಬಟ್ಟೆಯನ್ನು ಧರಿಸಿ ರಂಜಿಸಿದನು ಭೀಮ.
ಮೂಲ ...{Loading}...
ಅರಿಯ ಹೆಣನನು ಹಾಯ್ಕಿ ನೊರೆನೆ
ತ್ತರಲಿ ಬೊಟ್ಟಿಟ್ಟನು ವರೂಥದ
ಹೊರಗೆ ಬಂದನು ಕಳಶಜಲದಲಿ ತೊಳೆದು ಕರಪದವ
ಪರಿಹೃತಶ್ರಮನಾಗಿ ವರಕ
ರ್ಪುರದ ಕಸ್ತುರಿಗಂಧಲೇಪವ
ನೊರಸಿ ಹೊಸಮಡಿವರ್ಗದಲಿ ರಂಜಿಸಿದನಾ ಭೀಮ ॥94॥
೦೯೫ ವೀಳೆಯವ ಕೊಣ್ಡನು ...{Loading}...
ವೀಳೆಯವ ಕೊಂಡನು ವರೂಥದ
ಮೇಲುವಲಗೆಯ ಗದ್ದುಗೆಗೆ ರಿಪು
ಕಾಲಭೈರವನಡರಿದನು ತುಡುಕಿದನು ನಿಜಧನುವ
ಕಾಳೆಗಕೆ ಕಡೆಹಾರವೇ ತೆಗೆ
ಯಾಳನಾಗಲಿ ಬಂದು ಕುರು ಭೂ
ಪಾಲ ಬೀಳಲಿ ಧರ್ಮರಾಯನ ಚರಣಕಮಲದಲಿ ॥95॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮತ್ತೆ ವೀಳೆಯವನ್ನು ತೆಗೆದುಕೊಂಡು, ರಥದ ಮೇಲಿರುವ ಹಲಗೆಯ ಪೀಠದ ಮೇಲೆ ಹತ್ತಿ ಕುಳಿತನು ಕಾಲ ಭೈರವನಾದ ಭೀಮ. ತನ್ನ ಬಿಲ್ಲನ್ನು ಹಿಡಿದನು. ‘ಕಾಳೆಗದಲ್ಲಿ ಕೊನೆ ಎನ್ನುವುದು ಇದೆಯೇ, ಸೈನ್ಯವನ್ನು ಹಿಂತೆಗೆದು, ಕೌರವನು ಧರ್ಮರಾಯನ ಪಾದಗಳಿಗೆ ಶರಣಾಗಲಿ ಎಂದನು.
ಮೂಲ ...{Loading}...
ವೀಳೆಯವ ಕೊಂಡನು ವರೂಥದ
ಮೇಲುವಲಗೆಯ ಗದ್ದುಗೆಗೆ ರಿಪು
ಕಾಲಭೈರವನಡರಿದನು ತುಡುಕಿದನು ನಿಜಧನುವ
ಕಾಳೆಗಕೆ ಕಡೆಹಾರವೇ ತೆಗೆ
ಯಾಳನಾಗಲಿ ಬಂದು ಕುರು ಭೂ
ಪಾಲ ಬೀಳಲಿ ಧರ್ಮರಾಯನ ಚರಣಕಮಲದಲಿ ॥95॥
೦೯೬ ಎನುತ ಬಿಟ್ಟನು ...{Loading}...
ಎನುತ ಬಿಟ್ಟನು ರಥವ ದುರಿಯೋ
ಧನನ ಮೋಹರಕಾಗಿ ಬಂಡಿಯ
ಬಿನುಗುಗಳು ಕೈದೋರಿರೈ ಪುನ್ನಾಮನಾರಿಯರು
ಅನುಜರಾವೆಡೆ ಕರಸು ಕೌರವ
ಜನಪ ಕರ್ಣಾದಿಗಳ ಬಿಂಕವ
ನೆನಗೆ ತೋರಾಯೆನುತ ಮೊಳಗಿದನರಸನಿದಿರಿನಲಿ ॥96॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಂದು ಹೇಳುತ್ತಾ, ದುರ್ಯೋಧನನ ಸೈನ್ಯದ ಕಡೆಗೆ ಭೀಮನು ರಥವನ್ನು ಬಿಟ್ಟನು. “ರಥವನ್ನು ಹತ್ತಿರುವ ಸಾಮಾನ್ಯ ವೀರರೇ, ಗಂಡಸಿನ ಹೆಸರನ್ನು ಹೊತ್ತಿರುವ ಹೆಣ್ಣುಗಳೇ, ನಿಮ್ಮ ಕೈಚಳಕವನ್ನು ತೋರಿಸಿ. ಕೌರವ, ನಿನ್ನ ತಮ್ಮಂದಿರು ಎಲ್ಲಿದ್ದಾರೆ. ಅವರನ್ನು ನನ್ನ ಎದುರಿಗೆ ಕರೆಸು. ಕರ್ಣ ಮೊದಲಾದವರ ಬಿಂಕವನ್ನು ನನಗೆ ತೋರಿಸು” ಎಂದು ಕೌರವನ ಎದುರಿನಲ್ಲಿ ಗರ್ಜಿಸಿದನು.
ಮೂಲ ...{Loading}...
ಎನುತ ಬಿಟ್ಟನು ರಥವ ದುರಿಯೋ
ಧನನ ಮೋಹರಕಾಗಿ ಬಂಡಿಯ
ಬಿನುಗುಗಳು ಕೈದೋರಿರೈ ಪುನ್ನಾಮನಾರಿಯರು
ಅನುಜರಾವೆಡೆ ಕರಸು ಕೌರವ
ಜನಪ ಕರ್ಣಾದಿಗಳ ಬಿಂಕವ
ನೆನಗೆ ತೋರಾಯೆನುತ ಮೊಳಗಿದನರಸನಿದಿರಿನಲಿ ॥96॥
೦೯೭ ನಿಯತ ಜಯಲುಬ್ಧಕನು ...{Loading}...
ನಿಯತ ಜಯಲುಬ್ಧಕನು ರಣಭೂ
ಮಿಯಲಿ ಹರಿಸಲು ಜಯದ ಸಿರಿಯನು
ಭಯವಿಹೀನರು ಬೆರಗುಗೊಂಡರು ಭೀಮನುರವಣೆಗೆ
ಹಯದ ವಾಘೆಯನಿಳುಹಿದರು ಮ
ನ್ನೆಯರು ಮನಗುಂದಿದರು ಕುರುಸೇ
ನೆಯಲಿ ಕಾಣಿಸಲಾದುದಪಜಯಸಿರಿಯ ಸಂಭ್ರಮವು ॥97॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಒಂದೇ ಸಮನಾಗಿ ಜಯವನ್ನು ಬೇಟೆಯಾಡುವವನಾದ ಭೀಮನು ಜಯದ ಸಂಪತ್ತನ್ನು ರಣರಂಗದಲ್ಲಿ ಹರಿದಾಡಿಸಲು, ಭಯ ದೂರವಾದವರೂ, ಅವನ ರಭಸಕ್ಕೆ ಆಶ್ಚರ್ಯ ಪಡುವಂತಾಯಿತು. ಅವರೆಲ್ಲ ಕುದುರೆಯ ಲಗಾಮನ್ನು ಸಡಿಲ ಮಾಡಿದರು. ಮಾನ್ಯ ವೀರರಿಗೆಲ್ಲ ಮನಸ್ಸು ಕುಂದಿತು. ಕೌರವ ಸೇನೆಯಲ್ಲಿ ಅಪಜಯಲಕ್ಷ್ಮಿಯ ಸಂಭ್ರಮ ಕಾಣಿಸಿತು ಎಂದರೆ ಸೋಲಿನ ವಾತಾವರಣ ಬೆಳೆಯಿತು.
ಮೂಲ ...{Loading}...
ನಿಯತ ಜಯಲುಬ್ಧಕನು ರಣಭೂ
ಮಿಯಲಿ ಹರಿಸಲು ಜಯದ ಸಿರಿಯನು
ಭಯವಿಹೀನರು ಬೆರಗುಗೊಂಡರು ಭೀಮನುರವಣೆಗೆ
ಹಯದ ವಾಘೆಯನಿಳುಹಿದರು ಮ
ನ್ನೆಯರು ಮನಗುಂದಿದರು ಕುರುಸೇ
ನೆಯಲಿ ಕಾಣಿಸಲಾದುದಪಜಯಸಿರಿಯ ಸಂಭ್ರಮವು ॥97॥
೦೯೮ ಬೆಟ್ಟವಾದವು ಬಿಸುಟ ...{Loading}...
ಬೆಟ್ಟವಾದವು ಬಿಸುಟ ಕೈದುಗ
ಳೊಟ್ಟಿಲಾದುವು ಸಿಂಧ ಸೆಳೆರಥ
ವಿಟ್ಟೆಡೆಗಳಲಿ ಮಿಸುಕಲಸದಳವಾದುದನಿಲಂಗೆ
ಥಟ್ಟು ಮುರಿದುದು ಪಟುಭಟರು ಧೃತಿ
ಗೆಟ್ಟು ದೆಸೆದೆಸೆಗಳಲಿ ಮಿಗೆ ಸಾ
ಲಿಟ್ಟು ಸರಿದುದು ಕೇಳು ಜನಮೇಜಯಮಹೀಪಾಲ ॥98॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಜನಮೇಜಯನೇ, ಬಿಸಾಟ ಆಯುಧಗಳು ಬೆಟ್ಟದಂತೆ ರಾಶಿಯಾದುವು, ಬಾವುಟಗಳ ದಂಡಗಳ ರಾಶಿಗಳು ಬಿದ್ದವು. ರಥಗಳು ಬಿದ್ದ ಸ್ಥಳದಲ್ಲಿ ಗಾಳಿಗೆ ಬೀಸಲು ಸಾಧ್ಯವಾಗದಾಯಿತು. ಸೈನ್ಯ ವ್ಯೂಹ ಮುರಿದು ಹೋಯಿತು. ಮಹಾವೀರರು ಧೈರ್ಯಗೆಟ್ಟು ದಿಕ್ಕು ದಿಕ್ಕಿಗೆ ಸಾಲಾಗಿ ಜಾರಿಕೊಂಡರು.” ಎಂದು ವೈಶಂಪಾಯನರು ಹೇಳಿದರು.
ಮೂಲ ...{Loading}...
ಬೆಟ್ಟವಾದವು ಬಿಸುಟ ಕೈದುಗ
ಳೊಟ್ಟಿಲಾದುವು ಸಿಂಧ ಸೆಳೆರಥ
ವಿಟ್ಟೆಡೆಗಳಲಿ ಮಿಸುಕಲಸದಳವಾದುದನಿಲಂಗೆ
ಥಟ್ಟು ಮುರಿದುದು ಪಟುಭಟರು ಧೃತಿ
ಗೆಟ್ಟು ದೆಸೆದೆಸೆಗಳಲಿ ಮಿಗೆ ಸಾ
ಲಿಟ್ಟು ಸರಿದುದು ಕೇಳು ಜನಮೇಜಯಮಹೀಪಾಲ ॥98॥
೦೯೯ ಬಿಸುಟರಮಲಚ್ಛತ್ರವನು ಕೂ ...{Loading}...
ಬಿಸುಟರಮಲಚ್ಛತ್ರವನು ಕೂ
ರಸಿಯನೀಡಾಡಿದರು ರಾಯರು
ಮುಸುಡ ತಿರುಹುತ ಮಕುಟವರ್ಧನಕೋಟಿ ಸಮರದಲಿ
ಜಸವ ಮಾರಿದರಾಯುಧಂಗಳ
ಹೆಸರ ವೀರರು ಬಾಹುಬಲಸಾ
ಹಸರು ಕಂಗೆಟ್ಟೋಡಿದರು ಪವನಜನ ಸಮರದಲಿ ॥99॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಿರೀಟಧಾರಿಗಳಾದ ದೊರೆಗಳು ಯುದ್ಧದಲ್ಲಿ ತಮ್ಮ ನಿರ್ಮಲವಾದ ಕೊಡೆಗಳನ್ನು ಬಿಸಾಟರು. ಚೂಪಾದ ಕತ್ತಿಯನ್ನು ಎಸೆದರು, ತಮ್ಮ ಮುಖವನ್ನು ತಿರುಗಿಸಿಕೊಂಡರು. ಆಯುಧಗಳ ಪ್ರಯೋಗದಲ್ಲಿ ಪ್ರಸಿದ್ಧರಾದ ವೀರರು ತಮ್ಮ ಕೀರ್ತಿಯನ್ನು ಮಾರಿಕೊಂಡರು, ಎಂದರೆ ಸೋತರು. ಭೀಮನ ಮೇಲಿನ ಯುದ್ಧದಲ್ಲಿ ಬಾಹು ಬಲ ಸಾಹಸಿಗಳು ಕಂಗೆಟ್ಟು ಓಡಿಹೋದರು.
ಮೂಲ ...{Loading}...
ಬಿಸುಟರಮಲಚ್ಛತ್ರವನು ಕೂ
ರಸಿಯನೀಡಾಡಿದರು ರಾಯರು
ಮುಸುಡ ತಿರುಹುತ ಮಕುಟವರ್ಧನಕೋಟಿ ಸಮರದಲಿ
ಜಸವ ಮಾರಿದರಾಯುಧಂಗಳ
ಹೆಸರ ವೀರರು ಬಾಹುಬಲಸಾ
ಹಸರು ಕಂಗೆಟ್ಟೋಡಿದರು ಪವನಜನ ಸಮರದಲಿ ॥99॥
೧೦೦ ಬಲ ಮುರಿದು ...{Loading}...
ಬಲ ಮುರಿದು ಬರುತಿರ್ದುದೈ ಕಡೆ
ಜಲಧಿಯ ತೆರೆ ತಿರುಗಿದಂತಿರೆ
ತಲೆಮುಸುಕಿನಲಿ ನೋಟದುರವಣೆಕಾರ ನಾಯಕರು
ನೆಲೆದೆಗೆದು ನಮ್ಮವರು ನೃಪನರ
ನೆಲೆಗೆ ಸೇರದೆ ಸರಿಯೆ ಕಂಡನು
ನಳಿನಮಿತ್ರನಮೊಮ್ಮ ತಡೆದನು ಭೀಮನುರವಣೆಯ ॥100॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಮುದ್ರದ ಅಂಚಿನಲ್ಲಿ ಅಲೆ ತಿರುಗಿ ಬಂದಂತೆ, ಕೌರವನ ಸೈನ್ಯ ಸೋತು ಹಿಂತಿರುಗಿ ಬರುತ್ತಿತ್ತು. ತಲೆಯ ಮೇಲೆ ಮುಸುಕು ಹಾಕಿಕೊಂಡು, ಕಣ್ಣು ತಪ್ಪಿಸಿಕೊಂಡು ನಡೆಯುತ್ತಾ, ಹೋಗಬೇಕಾದ ಸ್ಥಳಕ್ಕೆ ಹೋಗದೆ, ರಾಜನ ಬಿಡಾರದ ಬಳಿಗೆ ಹೋಗದೆ ಬೇರೆಯ ಕಡೆ ಹೋಗುತ್ತಿರಲು, ಸೂರ್ಯನ ಮೊಮ್ಮಗನಾದ ವೃಷಸೇನನು ಭೀಮನ ರಭಸದ ನಡೆಯನ್ನು ತಡೆದನು.
ಪದಾರ್ಥ (ಕ.ಗ.ಪ)
ಉರವಣಿಕಾರ-ಮುನ್ನುಗ್ಗುವವರು
ಮೂಲ ...{Loading}...
ಬಲ ಮುರಿದು ಬರುತಿರ್ದುದೈ ಕಡೆ
ಜಲಧಿಯ ತೆರೆ ತಿರುಗಿದಂತಿರೆ
ತಲೆಮುಸುಕಿನಲಿ ನೋಟದುರವಣೆಕಾರ ನಾಯಕರು
ನೆಲೆದೆಗೆದು ನಮ್ಮವರು ನೃಪನರ
ನೆಲೆಗೆ ಸೇರದೆ ಸರಿಯೆ ಕಂಡನು
ನಳಿನಮಿತ್ರನಮೊಮ್ಮ ತಡೆದನು ಭೀಮನುರವಣೆಯ ॥100॥