೦೦೦ ಸೂ ಗಣ್ಡುಗಲಿ ...{Loading}...
ಸೂ. ಗಂಡುಗಲಿ ಯಮತನುಜನಲಿ ಮಾ
ರ್ತಾಂಡತನಯನ ವಧೆಗೆ ನೇಮವ
ಕೊಂಡು ಕದನೋದ್ಧಾಮದಲಿ ಹೊರವಂಟನಾ ಪಾರ್ಥ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ : ವೀರಪುರುಷ ಧರ್ಮರಾಯನಿಂದ, ಕರ್ಣನನ್ನು ವಧಿಸುವ ಅಪ್ಪಣೆಯನ್ನು ಪಡೆದು, ಯುದ್ಧ ಉತ್ಸಾಹದಿಂದ ಅರ್ಜುನನು ಹೊರಟನು.
ಮೂಲ ...{Loading}...
ಸೂ. ಗಂಡುಗಲಿ ಯಮತನುಜನಲಿ ಮಾ
ರ್ತಾಂಡತನಯನ ವಧೆಗೆ ನೇಮವ
ಕೊಂಡು ಕದನೋದ್ಧಾಮದಲಿ ಹೊರವಂಟನಾ ಪಾರ್ಥ
೦೦೧ ಕೇಳು ಧೃತರಾಷ್ಟ್ರಾವನಿಪ ...{Loading}...
ಕೇಳು ಧೃತರಾಷ್ಟ್ರಾವನಿಪ ಭೂ
ಪಾಲನನು ಸಾಮದಲಿ ಮುರರಿಪು
ಬೋಳವಿಸಿ ಭಾವಜ್ಞ ನಂದಿಸಿದನು ಮನೋವ್ಯಥೆಯ
ಮೇಲುಸುರ ಬಿಕ್ಕುಳಿನ ಬಿಗುಹಿನ
ತಾಳಿಗೆಯ ನೀರುಗಳ ಮುಕ್ಕುಳಿ
ನಾಲಿಗಳ ನರನಾಥ ತೆಗೆದಪ್ಪಿದನು ಫಲುಗುಣನ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಧೃತರಾಷ್ಟ್ರ ದೊರೆಯೇ ಕೇಳು, ಭಾವಜ್ಞನಾದ ಕೃಷ್ಣನು ಧರ್ಮರಾಯನನ್ನು ಸಾಮೋಪಾಯದಿಂದ ಸಮಾಧಾನಪಡಿಸಿ, ಅವನ ಮನಸ್ಸಿನ ವ್ಯಥೆಯ ಬೆಂಕಿಯನ್ನು ಆರಿಸಿದನು. ಆಗ ಮೇಲುಸಿರು ಬಿಡುತ್ತಾ ಬಿಕ್ಕಳಿಸುತ್ತಾ ಮಾತನಾಡಲು ಸಾಧ್ಯವಾಗದೆ ಬಿಗಿಯಾದ ನಾಲಗೆಯಿಂದ ತೆರೆದ ಕಣ್ಣಿನ ಧರ್ಮರಾಯನು ಫಲುಗುಣನನ್ನು ಆಲಂಗಿಸಿಕೊಂಡನು.” ಎಂದು ಸಂಜಯನು ಹೇಳಿದನು
ಪದಾರ್ಥ (ಕ.ಗ.ಪ)
ಬೋಳವಿಸು-ಸಮಾಧಾನಪಡಿಸು, ಭಾವಜ್ಞ-ಮನಸ್ಸಿನ ಇಂಗಿತವನ್ನು ಅರಿಯುವವನು, ಮುಕ್ಕುಳಿ-ಬಾಯಿ
ಮೂಲ ...{Loading}...
ಕೇಳು ಧೃತರಾಷ್ಟ್ರಾವನಿಪ ಭೂ
ಪಾಲನನು ಸಾಮದಲಿ ಮುರರಿಪು
ಬೋಳವಿಸಿ ಭಾವಜ್ಞ ನಂದಿಸಿದನು ಮನೋವ್ಯಥೆಯ
ಮೇಲುಸುರ ಬಿಕ್ಕುಳಿನ ಬಿಗುಹಿನ
ತಾಳಿಗೆಯ ನೀರುಗಳ ಮುಕ್ಕುಳಿ
ನಾಲಿಗಳ ನರನಾಥ ತೆಗೆದಪ್ಪಿದನು ಫಲುಗುಣನ ॥1॥
೦೦೨ ಒರಲುತರಸನ ಮುರುಚಿಕೊಣ್ಡಡಿ ...{Loading}...
ಒರಲುತರಸನ ಮುರುಚಿಕೊಂಡಡಿ
ಗೆರಗೆ ಕೈಯೊಡನವನಿಪತಿ ಮುರಿ
ದೆರಗಿ ಪಾರ್ಥನ ಸೇರಿ ತಕ್ಕೈಸಿದನು ಗೋಳಿಡುತ
ಮರುಗಿದಳು ದ್ರೌಪದಿ ದೃಗಂಬುಗ
ಳೊರತೆಯಲಿ ಸಹದೇವ ನಕುಳರ
ಲರಿಯೆನುಪಮಿಸಲವರ ಬಹುಳಾಕ್ರಂದನ ಧ್ವನಿಯ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನು ಅಳುತ್ತಾ ತನ್ನ ದೇಹವನ್ನು ಮುದುರಿಸಿಕೊಂಡು, ಧರ್ಮರಾಯನ ಪಾದಗಳಿಗೆ ನಮಸ್ಕರಿಸಿದನು. ಅವನು ಬಾಗಿ ಪಾರ್ಥನನ್ನು ಮತ್ತೆ ಆಲಂಗಿಸಿಕೊಂಡು ಗೋಳಿಟ್ಟನು. ದ್ರೌಪದಿಯು ಕಣ್ಣೀರು ಸುರಿಸುತ್ತ ಮರುಗಿದಳು. ಸಹದೇವ ನಕುಳರ ದುಃಖದ ದೊಡ್ಡ ಧ್ವನಿಯನ್ನು ಯಾವುದಕ್ಕೆ ಹೋಲಿಸಲೋ ತಿಳಿಯುವುದಿಲ್ಲ.
ಪದಾರ್ಥ (ಕ.ಗ.ಪ)
ಮುರುಚಿಕೊ-ಮುದುರಿಕೊ
ಮೂಲ ...{Loading}...
ಒರಲುತರಸನ ಮುರುಚಿಕೊಂಡಡಿ
ಗೆರಗೆ ಕೈಯೊಡನವನಿಪತಿ ಮುರಿ
ದೆರಗಿ ಪಾರ್ಥನ ಸೇರಿ ತಕ್ಕೈಸಿದನು ಗೋಳಿಡುತ
ಮರುಗಿದಳು ದ್ರೌಪದಿ ದೃಗಂಬುಗ
ಳೊರತೆಯಲಿ ಸಹದೇವ ನಕುಳರ
ಲರಿಯೆನುಪಮಿಸಲವರ ಬಹುಳಾಕ್ರಂದನ ಧ್ವನಿಯ ॥2॥
೦೦೩ ಮುರಹರನ ಮನ್ತ್ರದಲಿ ...{Loading}...
ಮುರಹರನ ಮಂತ್ರದಲಿ ಶೋಕ
ಜ್ವರಕೆ ಬಿಡುಗಡೆಯಾಯ್ತು ಬಳಿಕಿನೊ
ಳರಸ ಸಿರಿಮೊಗದೊಳೆದು ವಸನಾಂಚಲದೊಳಾನನವ
ಒರಸಿ ಪಾರ್ಥನ ಸಂತವಿಸಿ ಮಂ
ದಿರಕೆ ಬಿಜಯಂಗೈದು ಮುದದಲಿ
ಕರಸಿ ಕಾಣಿಕೆಗೊಂಡು ಪರಿವಾರವನು ಮನ್ನಿಸಿದ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೃಷ್ಣನ ಉಪದೇಶದಿಂದ ಅವರ ಶೋಕದ ಜ್ವರ ದೂರವಾಯಿತು. ಆ ಮೇಲೆ ದೊರೆಯು ತನ್ನ ಸಿರಿಮೊಗವನ್ನು ತೊಳೆದು, ವಸ್ತ್ರದ ಅಂಚಿನಿಂದ ತನ್ನ ಮುಖವನ್ನು ಒರೆಸಿಕೊಂಡು, ಅರ್ಜುನನನ್ನು ಸಮಾಧಾನಪಡಿಸಿ, ಬಿಡಾರಕ್ಕೆ ಹಿಂತಿರುಗಿದನು. ಪರಿವಾರದವರನ್ನು ಕರೆಸಿ ಸಂತೋಷದಿಂದ ಅವರು ಕೊಟ್ಟ ಕಾಣಿಕೆಗಳನ್ನು ಸ್ವೀಕರಿಸಿ, ಗೌರವಿಸಿದನು.
ಮೂಲ ...{Loading}...
ಮುರಹರನ ಮಂತ್ರದಲಿ ಶೋಕ
ಜ್ವರಕೆ ಬಿಡುಗಡೆಯಾಯ್ತು ಬಳಿಕಿನೊ
ಳರಸ ಸಿರಿಮೊಗದೊಳೆದು ವಸನಾಂಚಲದೊಳಾನನವ
ಒರಸಿ ಪಾರ್ಥನ ಸಂತವಿಸಿ ಮಂ
ದಿರಕೆ ಬಿಜಯಂಗೈದು ಮುದದಲಿ
ಕರಸಿ ಕಾಣಿಕೆಗೊಂಡು ಪರಿವಾರವನು ಮನ್ನಿಸಿದ ॥3॥
೦೦೪ ಇಟ್ಟಣಿಸುವರಿಸೈನ್ಯ ಜಲಧಿಗೆ ...{Loading}...
ಇಟ್ಟಣಿಸುವರಿಸೈನ್ಯ ಜಲಧಿಗೆ
ಕಟ್ಟೆಯಾದನು ಭೀಮನೊಬ್ಬನ
ಬಿಟ್ಟು ನೋಡುವುದುಚಿತವೇ ಪರಿವಾರ ಪಂಥದಲಿ
ಕೊಟ್ಟ ನೇಮವ ಯಮಳರಿಗೆ ಜಗ
ಜಟ್ಟಿ ಸಾತ್ಯಕಿ ಕಮಲಮುಖಿಯೊಡ
ಹುಟ್ಟಿದನು ಮೊದಲಾಗಿ ನೃಪಜನವೇಳಿ ನೀವೆಂದ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಒಟ್ಟಾಗಿ ಗುಂಪು ಸೇರಿದ ಶತ್ರು ಸೇನಾಸಾಗರಕ್ಕೆ ಕಟ್ಟೆಯಂತೆ ನಿಂತಿರುವ ಭೀಮನೊಬ್ಬನನ್ನೇ ಬಿಡುವುದು ಉಚಿತವಲ್ಲ. ಆದ್ದರಿಂದ ನಕುಲ ಸಹದೇವ, ಜಗಜಟ್ಟಿಯಾದ ಸಾತ್ಯಕಿ, ಧೃಷ್ಟದ್ಯುಮ್ಯ ಮೊದಲಾದ ದೊರೆಗಳು ಯುದ್ಧಕ್ಕೆ ಸಿದ್ಧರಾಗಿ ಎಂದನು ಧರ್ಮರಾಯ.
ಮೂಲ ...{Loading}...
ಇಟ್ಟಣಿಸುವರಿಸೈನ್ಯ ಜಲಧಿಗೆ
ಕಟ್ಟೆಯಾದನು ಭೀಮನೊಬ್ಬನ
ಬಿಟ್ಟು ನೋಡುವುದುಚಿತವೇ ಪರಿವಾರ ಪಂಥದಲಿ
ಕೊಟ್ಟ ನೇಮವ ಯಮಳರಿಗೆ ಜಗ
ಜಟ್ಟಿ ಸಾತ್ಯಕಿ ಕಮಲಮುಖಿಯೊಡ
ಹುಟ್ಟಿದನು ಮೊದಲಾಗಿ ನೃಪಜನವೇಳಿ ನೀವೆಂದ ॥4॥
೦೦೫ ದೇವ ಪರಿವಾರಕ್ಕೆ ...{Loading}...
ದೇವ ಪರಿವಾರಕ್ಕೆ ನೇಮವ
ನೀವ ಸಮಯದಲಿಂದು ನಿಮ್ಮ ಕೃ
ಪಾವಲೋಕನವಾದುದೆನ್ನ ಪರಾಕ್ರಮಾನಳಕೆ
ಜೀವಸಖನಲ್ಲಾ ಸುಯೋಧನ
ನಾವ ಪಾಡು ವಿರೋಧಿಕುಲ ವಿ
ದ್ರಾವಣಕೆ ಕೊಡು ತನಗೆ ನೇಮವನೆಂದನಾ ಪಾರ್ಥ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನು ಧರ್ಮರಾಯನನ್ನು ಕುರಿತು ‘ದೇವ, ಪರಿವಾರದವರಿಗೆ ನೇಮವನ್ನು ಕೊಡುವ ಸಮಯದಲ್ಲಿ ಇಂದು ನಿನ್ನ ಕರುಣೆಯ ದೃಷ್ಟಿ ದೊರೆಯಿತು. ನನ್ನ ಪರಾಕ್ರಮವೆಂಬ ಬೆಂಕಿಗೆ ನೀನು ಗಾಳಿಯಂತೆ. ಇನ್ನು ದುರ್ಯೋಧನನ ಪ್ರಾಣಮಿತ್ರನು ಯಾವ ಲೆಕ್ಕ. ವಿರೋಧಿಗಳ ವಂಶವನ್ನು ನಾಶ ಮಾಡುವಂತೆ ಆಜ್ಞೆಯನ್ನು ನನಗೆ ಕೊಡು’ ಎಂದು ಕೇಳಿದನು.
ಪದಾರ್ಥ (ಕ.ಗ.ಪ)
ವಿದ್ರಾವಣ-ಕರಗಿಸು
ಮೂಲ ...{Loading}...
ದೇವ ಪರಿವಾರಕ್ಕೆ ನೇಮವ
ನೀವ ಸಮಯದಲಿಂದು ನಿಮ್ಮ ಕೃ
ಪಾವಲೋಕನವಾದುದೆನ್ನ ಪರಾಕ್ರಮಾನಳಕೆ
ಜೀವಸಖನಲ್ಲಾ ಸುಯೋಧನ
ನಾವ ಪಾಡು ವಿರೋಧಿಕುಲ ವಿ
ದ್ರಾವಣಕೆ ಕೊಡು ತನಗೆ ನೇಮವನೆಂದನಾ ಪಾರ್ಥ ॥5॥
೦೦೬ ಬರಸು ಭಾಷೆಯನಿನ್ದು ...{Loading}...
ಬರಸು ಭಾಷೆಯನಿಂದು ಕರ್ಣನ
ಶಿರವುಳಿದು ತಾವರೆಯ ನಗೆ ಪೈ
ಸರಿಸಿದರೆ ಮೈಬೆಸುಗೆ ಬಿಟ್ಟರೆ ಜಕ್ಕವಕ್ಕಿಗಳ
ಇರುಳ ಬೀಜವನಿಂದು ನಭದಲಿ
ಹರಹಿದರೆ ಕಲಿಭೀಮನಯ್ಯನ
ಹರಹು ನಿಂದರೆ ಬಳಿಕ ನಿಮ್ಮಯ ತಮ್ಮನಲ್ಲೆಂದ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೀಗೆಂದು ನನ್ನ ಪ್ರತಿಜ್ಞೆ : “ಇಂದು ಅರಳಿದ ತಾವರೆ ಮುದುಡುವುದರೊಳಗೆ, ಜಕವಕ್ಕಿಗಳು ತಮ್ಮ ಜೊತೆಯನ್ನು ಬಿಡುವುದಕ್ಕೆ ಮುಂಚೆ, ರಾತ್ರಿಯು ಅಂಕುರಿಸುವ ಮುಂಚೆ ಭೀಮನ ತಂದೆಯಾದ ವಾಯು ಸುಳಿಯುವುದನ್ನು ನಿಲ್ಲಿಸಿದರೂ ಕರ್ಣನ ತಲೆಯುಳಿದರೆ ನಾನು ನಿನ್ನ ತಮ್ಮನಲ್ಲ “ಎಂದ ಅರ್ಜುನ.
ಪದಾರ್ಥ (ಕ.ಗ.ಪ)
ಪೈಸರಿಸು-ಹಿಂಜರಿ
ಮೂಲ ...{Loading}...
ಬರಸು ಭಾಷೆಯನಿಂದು ಕರ್ಣನ
ಶಿರವುಳಿದು ತಾವರೆಯ ನಗೆ ಪೈ
ಸರಿಸಿದರೆ ಮೈಬೆಸುಗೆ ಬಿಟ್ಟರೆ ಜಕ್ಕವಕ್ಕಿಗಳ
ಇರುಳ ಬೀಜವನಿಂದು ನಭದಲಿ
ಹರಹಿದರೆ ಕಲಿಭೀಮನಯ್ಯನ
ಹರಹು ನಿಂದರೆ ಬಳಿಕ ನಿಮ್ಮಯ ತಮ್ಮನಲ್ಲೆಂದ ॥6॥
೦೦೭ ಖಳನ ಹಿಂಸಾಪರನ ...{Loading}...
ಖಳನ ಹಿಂಸಾಪರನ ಡಂಬನ
ಚಳಮತಿಯ ನಾಸ್ತಿಕನ ನಿಂದಾ
ಕುಳನ ಪರಧನಬಾಧಕನ ದತ್ತಾಪಹಾರಕನ
ಜ್ವಲನದನ ಶಿಶುಘಾತಕನ ಪರಿ
ದಳಿತಧರ್ಮನ ಗತಿಗಳಲಿ ತಾ
ನಿಳಿವೆನಿಂದೇ ಕೊಲ್ಲದಿರ್ದರೆ ಸೂತನಂದನನ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕರ್ಣನನ್ನು ಇಂದೇ ಕೊಲ್ಲದಿದ್ದರೆ ನಾನು ದುಷ್ಟನು, ಹಿಂಸಾಪ್ರವೃತ್ತಿಯೂ, ಡಾಂಭಿಕನೂ, ಚಂಚಲಮತಿಯುಳ್ಳ ನಾಸ್ತಿಕ ನಿಂದಿಸುವ ಚಿಂತೆಯಲ್ಲಿರುವ ಇನ್ನೊಬ್ಬರ ಸಂಪತ್ತನ್ನು ಅಪಹರಿಸುವ ದಾನಗಳನ್ನು ಅಪಹರಿಸುವ ಇನ್ನೊಬ್ಬರ ಆಸ್ತಿಗೆ ಬೆಂಕಿ ಹಚ್ಚುವ ಮಕ್ಕಳನ್ನು ಕೊಲ್ಲುವ ಧರ್ಮವನ್ನು ತುಳಿವವರಿಗೆ ಸಿಗುವ ದುರ್ಗತಿಗಳಿಗೆ ಇಳಿಯುವೆನು.
ಪದಾರ್ಥ (ಕ.ಗ.ಪ)
ಜ್ವಲನ-ಅಗ್ನಿ, ಪರಿದಳಿತ-ತುಳಿದ
ಮೂಲ ...{Loading}...
ಖಳನ ಹಿಂಸಾಪರನ ಡಂಬನ
ಚಳಮತಿಯ ನಾಸ್ತಿಕನ ನಿಂದಾ
ಕುಳನ ಪರಧನಬಾಧಕನ ದತ್ತಾಪಹಾರಕನ
ಜ್ವಲನದನ ಶಿಶುಘಾತಕನ ಪರಿ
ದಳಿತಧರ್ಮನ ಗತಿಗಳಲಿ ತಾ
ನಿಳಿವೆನಿಂದೇ ಕೊಲ್ಲದಿರ್ದರೆ ಸೂತನಂದನನ ॥7॥
೦೦೮ ನೀನಿನಿತ ನೆರೆ ...{Loading}...
ನೀನಿನಿತ ನೆರೆ ನುಡಿವರೇ ತ
ನ್ನಾಣೆ ಬಾರೈ ತಂದೆ ಬಾ ಎನು
ತಾ ನರೇಶ್ವರ ತೆಗೆದು ಬಿಗಿಯಪ್ಪಿದನು ಫಲುಗುಣನ
ದಾನವಾಮರರೊಳಗೆ ನಿನಗೆ ಸ
ಮಾನ ಭಟರಿಲ್ಲೆಂಬುದೀ ಸ್ನೇ
ಹಾನುಗುಣವೇ ಲೋಕವರಿಯದೆ ಪಾರ್ಥ ಹೇಳೆಂದ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮರಾಯನು “ಸಹೋದರನೇ ನೀನು ಹೀಗೆ ಕಠಿಣವಾಗಿ ಮಾತನಾಡಬಹುದೇ” ಎನ್ನುತ್ತಾ ಅರ್ಜುನನನ್ನು ಆಲಂಗಿಸಿಕೊಂಡು, ‘ರಾಕ್ಷಸ ದೇವತೆಗಳಲ್ಲಿ ನಿನಗೆ ಸಮಾನರಾದ ಶೂರರು ಇಲ್ಲ ಎನ್ನುವುದು ಬರಿಯ ನನ್ನ ಸ್ನೇಹ ಪ್ರೀತಿಗಳ ಮಾತಲ್ಲ ಲೋಕವೇ ಅದನ್ನು ತಿಳಿದಿದೆ’ ಎಂದನು.
ಮೂಲ ...{Loading}...
ನೀನಿನಿತ ನೆರೆ ನುಡಿವರೇ ತ
ನ್ನಾಣೆ ಬಾರೈ ತಂದೆ ಬಾ ಎನು
ತಾ ನರೇಶ್ವರ ತೆಗೆದು ಬಿಗಿಯಪ್ಪಿದನು ಫಲುಗುಣನ
ದಾನವಾಮರರೊಳಗೆ ನಿನಗೆ ಸ
ಮಾನ ಭಟರಿಲ್ಲೆಂಬುದೀ ಸ್ನೇ
ಹಾನುಗುಣವೇ ಲೋಕವರಿಯದೆ ಪಾರ್ಥ ಹೇಳೆಂದ ॥8॥
೦೦೯ ತಾಯೆನುತ ಘನ ...{Loading}...
ತಾಯೆನುತ ಘನ ಸಾರದುರು ತವ
ಲಾಯಿಗಳ ನೂಕಿದನು ಮುದದಲಿ
ಬಾಯ ತಂಬುಲವಿತ್ತು ತಮ್ಮನ ಮತ್ತೆ ತಕ್ಕೈಸಿ
ರಾಯ ಕೇಳೈ ಬಳಿಕಖಿಳ ದಳ
ನಾಯಕರ ಕರೆಕರೆದು ಕದನ ಪ
ಸಾಯತರಿಗಿತ್ತನು ನೃಪತಿ ಕರ್ಪುರದ ವೀಳೆಯವ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತೆಗೆದುಕೊಂಡು ಬನ್ನಿ ಎಂದು ಹೇಳುತ್ತಾ, ಶಕ್ತಿಯುತವಾದ ಕರ್ಪೂರದ ಪೊಟ್ಟಣಗಳನ್ನು ತರಿಸಿ, ಪ್ರೀತಿಯಿಂದ ಅರ್ಜುನನಿಗೆ ತಾಂಬೂಲವನ್ನು ನೀಡಿ ಮತ್ತೆ ಆಲಂಗಿಸಿಕೊಂಡು, ಆನಂತರ ಎಲ್ಲಾ ಸೇನಾಧಿಪತಿಗಳನ್ನು ಕರೆದು, ಯುದ್ಧದಲ್ಲಿ ಅಧಿಕಾರಿಗಳಾದ ಅವರಿಗೆ ಕರ್ಪೂರದ ವೀಳೆಯವನ್ನು ನೀಡಿದನು.
ಪದಾರ್ಥ (ಕ.ಗ.ಪ)
ತವಲಾಯಿ-ಕರ್ಪೂರದ ಪಟ್ಟಣ, ಪಸಾಯತ-ಅಧಿಕಾರಿ
ಮೂಲ ...{Loading}...
ತಾಯೆನುತ ಘನ ಸಾರದುರು ತವ
ಲಾಯಿಗಳ ನೂಕಿದನು ಮುದದಲಿ
ಬಾಯ ತಂಬುಲವಿತ್ತು ತಮ್ಮನ ಮತ್ತೆ ತಕ್ಕೈಸಿ
ರಾಯ ಕೇಳೈ ಬಳಿಕಖಿಳ ದಳ
ನಾಯಕರ ಕರೆಕರೆದು ಕದನ ಪ
ಸಾಯತರಿಗಿತ್ತನು ನೃಪತಿ ಕರ್ಪುರದ ವೀಳೆಯವ ॥9॥
೦೧೦ ನೇಮವಾಯಿತು ಮತ್ತೆ ...{Loading}...
ನೇಮವಾಯಿತು ಮತ್ತೆ ನೃಪತಿ
ಸ್ತೋಮವರ್ಜುನನೊಡನೆ ಕದನೋ
ದ್ದಾಮರುಬ್ಬರಿಸಿದರು ಪತಿಕರಣೆಗೆ ಮಹೀಪತಿಯ
ಸೋಮಕರು ನಕುಲಾದಿಗಳು ಸುತ
ಸೋಮಕಾದಿ ಕುಮಾರರಖಿಳ ಸ
ನಾಮರೆದ್ದುದು ತೊಡರ ಝಣಝಣ ರವದ ಖಡೆಯದಲಿ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮರಾಯನ ಅಪ್ಪಣೆಯಾಯಿತು. ಯುದ್ಧದಲ್ಲಿ ಉತ್ಸಾಹ ತಳೆದ ರಾಜರು, ದೊರೆಯು ನೀಡಿದ ಮೆಚ್ಚಿಗೆಗೆ ಉಬ್ಬಿ ಹೋದರು. ಸೋಮಕ, ನಕುಲ ಮೊದಲಾದವರು, ಸುತಸೋಮ ಮೊದಲಾದ ಉಪಪಾಂಡವರು, ತಮ್ಮ ಕಾಲಿನಲ್ಲಿ ತೊಟ್ಟುಕೊಂಡಿದ್ದ. ಚಿನ್ನದ ಬಳೆಯ ಆಭರಣಗಳಿಂದ ಶಬ್ದ ಹೊರಹೊಮ್ಮುತ್ತಿರಲು ಉತ್ಸಾಹದಿಂದ ಎದ್ದರು.
ಪದಾರ್ಥ (ಕ.ಗ.ಪ)
ಪತಿಕರಣೆ-ಮೆಚ್ಚಿಗೆ, ಖಡೆಯ-ಚಿನ್ನದ ಬಳೆ, ತೊಡರು-ಆಭರಣ
ಟಿಪ್ಪನೀ (ಕ.ಗ.ಪ)
ಸೋಮಕ-ಒಬ್ಬ ದೊರೆ, ಚಂದ್ರವಂಶದ ಪಾಂಚಾಲ ರಾಜನಾದ ಸಹದೇವನೆಂಬುವವನ ಮಗ
ಸುತಸೋಮ-ಉಪಪಾಂಡವ, ದ್ರೌಪದಿ ಭೀಮಸೇನರ ಮಗ
ಮೂಲ ...{Loading}...
ನೇಮವಾಯಿತು ಮತ್ತೆ ನೃಪತಿ
ಸ್ತೋಮವರ್ಜುನನೊಡನೆ ಕದನೋ
ದ್ದಾಮರುಬ್ಬರಿಸಿದರು ಪತಿಕರಣೆಗೆ ಮಹೀಪತಿಯ
ಸೋಮಕರು ನಕುಲಾದಿಗಳು ಸುತ
ಸೋಮಕಾದಿ ಕುಮಾರರಖಿಳ ಸ
ನಾಮರೆದ್ದುದು ತೊಡರ ಝಣಝಣ ರವದ ಖಡೆಯದಲಿ ॥10॥
೦೧೧ ನುಡಿವ ವಾದ್ಯದ ...{Loading}...
ನುಡಿವ ವಾದ್ಯದ ಜಡಿವ ಕಹಳೆಯ
ಹೊಡೆವ ಭೇರಿಯ ರವದ ರಭಸದೊ
ಳೊಡೆದುದಾ ದಿಗುಭಿತ್ತಿಯೆನೆ ಚಲಿಸುವ ಚತುರ್ಬಲದ
ತುಡುಕು ಚಮರಿಯ ಝಾಡಿಗೆದರಿನ
ಗಡಣಿಸುವ ಝಲ್ಲರಿಯ ದಳ ಬರ
ಸಿಡಿಲ ಮೇಳವದಂತೆ ನೆರೆದುದು ನೃಪತಿಯಿದಿರಿನಲಿ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನುಡಿಸುತ್ತಿರುವ ವಾದ್ಯ, ಜೋರಾಗಿ ಮೊಳಗುತ್ತಿರುವ ಕಹಳೆ, ಹೊಡೆಯುತ್ತಿರುವ ಭೇರಿಗಳ ಶಬ್ದದ ರಭಸದಿಂದ ದಿಕ್ಕಿನ ಗೋಡೆಗಳು ಒಡೆದು ಹೋದವೋ ಎನ್ನುವಂತಿತ್ತು. ಚಲಿಸುವ ಜೋರಾಗಿ ಆಡುತ್ತಿರುವ ಎತ್ತಿ ಹಿಡಿದ ಚಾಮರಗಳು, ಒಟ್ಟಾಗಿ ಬಾರಿಸುತ್ತಿರುವ ಡೋಲುಗಳಿಂದ ಕೂಡಿದ ಚತುರಂಗ ಸೈನ್ಯ ಸಿಡಿಲುಗಳನ್ನು ಒಂದು ಕಡೆ ಕೂಡಿ ಹಾಕಿದಂತೆ ಧರ್ಮರಾಯನ ಎದುರಿನಲ್ಲಿ ಸೇರಿತು.
ಮೂಲ ...{Loading}...
ನುಡಿವ ವಾದ್ಯದ ಜಡಿವ ಕಹಳೆಯ
ಹೊಡೆವ ಭೇರಿಯ ರವದ ರಭಸದೊ
ಳೊಡೆದುದಾ ದಿಗುಭಿತ್ತಿಯೆನೆ ಚಲಿಸುವ ಚತುರ್ಬಲದ
ತುಡುಕು ಚಮರಿಯ ಝಾಡಿಗೆದರಿನ
ಗಡಣಿಸುವ ಝಲ್ಲರಿಯ ದಳ ಬರ
ಸಿಡಿಲ ಮೇಳವದಂತೆ ನೆರೆದುದು ನೃಪತಿಯಿದಿರಿನಲಿ ॥11॥
೦೧೨ ವೀರ ಸೇಸೆಯನಿಕ್ಕಿ ...{Loading}...
ವೀರ ಸೇಸೆಯನಿಕ್ಕಿ ರಾಯನ
ನಾರಿ ಪರಸಿದಳಖಿಳ ವಿಪ್ರರ
ಚಾರು ಚಾತುರ್ವೇದ ಮಂಗಳಸೂಕ್ತ ಘೋಷದಲಿ
ತೇರನೇರಿದನಸುರರಿಪು ಸಹಿ
ತಾರುಭಟೆಯಲಿ ನೂಕಿದವು ರತು
ನಾರತಿಯ ತಳಿಗೆಗಳು ವರಕಾಂತಾ ಕದಂಬದಲಿ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರೌಪದಿಯು ಅಕ್ಷತೆಯನ್ನು ಹಾಕಿ ಹರಸಿದಳು. ಬ್ರಾಹ್ಮಣರ ಮನೋಹರವಾದ ಚತುರ್ವೇದ ಮಂತ್ರಗಳ ಮಂಗಳಕರವಾದ ಘೋಷದೊಡನೆ ಕೃಷ್ಣನ ಜೊತೆಯಲ್ಲಿ ಅರ್ಜುನನು ರಥವನ್ನು ಹತ್ತಿದನು. ಅಲ್ಲಿದ್ದ ಹೆಣ್ಣು ಮಕ್ಕಳು ಉತ್ಸಾಹದಿಂದ ತಟ್ಟೆಯನ್ನು ಹಿಡಿದು ರತ್ನದ ಆರತಿಯನ್ನು ಮಾಡಿದರು.
ಪದಾರ್ಥ (ಕ.ಗ.ಪ)
ತಳಿಗೆ-ತಟ್ಟೆ, ಸೇಸೆ-ಅಕ್ಷತೆ
ಮೂಲ ...{Loading}...
ವೀರ ಸೇಸೆಯನಿಕ್ಕಿ ರಾಯನ
ನಾರಿ ಪರಸಿದಳಖಿಳ ವಿಪ್ರರ
ಚಾರು ಚಾತುರ್ವೇದ ಮಂಗಳಸೂಕ್ತ ಘೋಷದಲಿ
ತೇರನೇರಿದನಸುರರಿಪು ಸಹಿ
ತಾರುಭಟೆಯಲಿ ನೂಕಿದವು ರತು
ನಾರತಿಯ ತಳಿಗೆಗಳು ವರಕಾಂತಾ ಕದಂಬದಲಿ ॥12॥
೦೧೩ ಕೂಡೆಗರಿಗಟ್ಟಿದವು ರಥದಲಿ ...{Loading}...
ಕೂಡೆಗರಿಗಟ್ಟಿದವು ರಥದಲಿ
ಹೂಡಿದಶ್ವವ್ರಾತವಾನೆಗ
ಳೀಡಿರಿದು ಬರಿಕಯ್ಯನೆತ್ತಿದವೊಲೆದವಡಿಗಡಿಗೆ
ಜೋಡಿಸಿತು ಜಯ ಜಯ ಜಯಧ್ವನಿ
ಕೂಡೆ ಜಗದಗಲದಲಿ ಬಿರುದುಪ
ವಾಡಗಳ ಮೊಗನೆಗಹಿ ಹೊಗಳಿತು ವಂದಿ ಸಂದೋಹ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಥಗಳಲ್ಲಿ ಹೂಡಿದ ಕುದುರೆಗಳು, ತಲೆ ಎತ್ತಿ ಸಿದ್ಧವಾಗಿ ನಿಂತವು. ಆನೆಗಳು ಗುಂಪು ಸೇರಿ ಸೊಂಡಿಲನ್ನು ಮೇಲಕ್ಕೆ ಎತ್ತಿ ಅಲ್ಲಾಡಿಸಿದವು. ಜೊತೆಗೆ ಜಯಜಯ ಧ್ವನಿ ಮತ್ತೆ ಮತ್ತೆ ಎಲ್ಲ ಕಡೆಗೆ ಹರಡಿತು. ಹೊಗಳುಭಟ್ಟರ ಸಮೂಹ ಅರ್ಜುನನ ಬಿರುದು ಹಾಗೂ ಅತಿಮಾನುಷ ಕೆಲಸಗಳನ್ನು ಹಾಡಿ ಹೊಗಳಿತು.
ಪದಾರ್ಥ (ಕ.ಗ.ಪ)
ಈಡಿರಿ-ಬಲವಾಗಿ ಜಗ್ಗು, ಪವಾಡ-ಅತಿಮಾನುಷ ಕೆಲಸ
ಮೂಲ ...{Loading}...
ಕೂಡೆಗರಿಗಟ್ಟಿದವು ರಥದಲಿ
ಹೂಡಿದಶ್ವವ್ರಾತವಾನೆಗ
ಳೀಡಿರಿದು ಬರಿಕಯ್ಯನೆತ್ತಿದವೊಲೆದವಡಿಗಡಿಗೆ
ಜೋಡಿಸಿತು ಜಯ ಜಯ ಜಯಧ್ವನಿ
ಕೂಡೆ ಜಗದಗಲದಲಿ ಬಿರುದುಪ
ವಾಡಗಳ ಮೊಗನೆಗಹಿ ಹೊಗಳಿತು ವಂದಿ ಸಂದೋಹ ॥13॥
೦೧೪ ನಿಳಯವನು ಹೊರವಣ್ಟು ...{Loading}...
ನಿಳಯವನು ಹೊರವಂಟು ಬೀದಿಗ
ಳೊಳಗೆ ಬರೆಬರೆ ಮುಂದೆ ಮೋಹಿದ
ತಳಿಗೆದಂಬುಲ ವೀರಸೇಸೆಯ ಮಂಗಳಾರತಿಯ
ಫಲ ಸಮೂಹದ ಕಾಣಿಕೆಯ ಕೋ
ಮಲೆಯರುಪ್ಪಾರತಿಯ ಮನೆಮನೆ
ಗಳಲಿ ಮನ್ನಿಸಿಕೊಳುತ ಪಾಳೆಯದಿಂದ ಹೊರವಂಟ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನು ಬಿಡಾರದಿಂದ ಹೊರಹೊರಟು ಬೀದಿಗಳಲ್ಲಿ ನಡೆದು ಬರುತ್ತಿದ್ದಾಗ ತಟ್ಟೆಯಲ್ಲಿ ತಾಂಬೂಲವನ್ನೂ ವೀರರಿಗೆ ಉಚಿತವಾದ ಅಕ್ಷತೆಯನ್ನೂ ಮಂಗಳಾರತಿಯನ್ನೂ ಹಣ್ಣುಗಳನ್ನೂ ಕಾಣಿಕೆಯಾಗಿ ಹಿಡಿದು ಎದುರಿಗೆ ಬಂದ ಕೋಮಲೆಯರು ಮಾಡಿದ ಉಪ್ಪಿನ ಆರತಿಯನ್ನು ಸ್ವೀಕರಿಸುತ್ತ ನಡೆದನು.
ಪದಾರ್ಥ (ಕ.ಗ.ಪ)
ಮೋಹು-ಎದುರಾಗು, ಉಪ್ಪಾರತಿ-ಉಪ್ಪಿನ ಆರತಿ
ಮೂಲ ...{Loading}...
ನಿಳಯವನು ಹೊರವಂಟು ಬೀದಿಗ
ಳೊಳಗೆ ಬರೆಬರೆ ಮುಂದೆ ಮೋಹಿದ
ತಳಿಗೆದಂಬುಲ ವೀರಸೇಸೆಯ ಮಂಗಳಾರತಿಯ
ಫಲ ಸಮೂಹದ ಕಾಣಿಕೆಯ ಕೋ
ಮಲೆಯರುಪ್ಪಾರತಿಯ ಮನೆಮನೆ
ಗಳಲಿ ಮನ್ನಿಸಿಕೊಳುತ ಪಾಳೆಯದಿಂದ ಹೊರವಂಟ ॥14॥
೦೧೫ ಮೇಲೆ ಮೊಳಗುವ ...{Loading}...
ಮೇಲೆ ಮೊಳಗುವ ದೇವದುಂದುಭಿ
ಜಾಲದೊಸಗೆಯ ಪಕ್ಷಿಮೃಗದನು
ಕೂಲ ಶಕುನದ ಸೌಮನಸ್ಯದ ಸಾಧುವಾದದಲಿ
ಲಾಲನೆಯ ಮೈವಳಿಯ ಲಳಿಯ ವಿ
ಶಾಲ ಮಂದಾನಿಲನಖಿಳ ಭೂ
ತಾಳಿ ಸಂತೋಷದಲಿ ಪತಿಕರಿಸಿತು ಧನಂಜಯನ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮೇಲೆ ದೇವತೆಗಳು ಮೊಳಗಿಸಿದ ದುಂದುಭಿಗಳ ಮಂಗಳ ಧ್ವನಿ, ಪಕ್ಷಿ ಮೃಗಗಳು ಒಳ್ಳೆಯ ಮನಸ್ಸಿನಿಂದ ಮಾಡಿದ ಸುಂದರ ಅನುಕೂಲ ಶಕುನ ಧ್ವನಿ, ಮನಸ್ಸಿಗೆ ಹಿತವಾಗಿ ಬೀಸಿದ ಮಂದಾನಿಲದ ಬೀಸುವಿಕೆಯಿಂದ ಹಾಗೂ ಎಲ್ಲಾ ಜೀವಿಗಳು ಅರ್ಜುನನನ್ನು ಗೌರವಿಸಿದವು.
ಮೂಲ ...{Loading}...
ಮೇಲೆ ಮೊಳಗುವ ದೇವದುಂದುಭಿ
ಜಾಲದೊಸಗೆಯ ಪಕ್ಷಿಮೃಗದನು
ಕೂಲ ಶಕುನದ ಸೌಮನಸ್ಯದ ಸಾಧುವಾದದಲಿ
ಲಾಲನೆಯ ಮೈವಳಿಯ ಲಳಿಯ ವಿ
ಶಾಲ ಮಂದಾನಿಲನಖಿಳ ಭೂ
ತಾಳಿ ಸಂತೋಷದಲಿ ಪತಿಕರಿಸಿತು ಧನಂಜಯನ ॥15॥
೦೧೬ ನಡೆದು ಬನ್ದುದು ...{Loading}...
ನಡೆದು ಬಂದುದು ರಾಯದಳ ಮುಂ
ಗುಡಿಯ ವಾದ್ಯಧ್ವನಿಯ ಥಟ್ಟಣೆ
ತುಡುಕಿತರಿ ಚತುರಂಗ ಚಪಳರ ಕರ್ಣ ಕೋಟರವ
ನಡುಗಿದವು ಕೈದುಗಳು ಜೋಧರ
ಕೊಡಹಿದವು ಗಜರಾಜಿ ವಾಜಿಯ
ಗಡಣವೀಡಾಡಿದವು ರಾವ್ತರನಿವರ ಥಟ್ಟಿನಲಿ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮರಾಯನ ಸೈನ್ಯ ಮುಂಚೂಣಿಯ ವಾದ್ಯಧ್ವನಿಗಳ ಆರ್ಭಟದೊಂದಿಗೆ ಮುಂದಕ್ಕೆ ನಡೆದು ಬಂದಿತು. ಅದರ ರಭಸ ಶತ್ರುರಾಜರ ಚತುರಂಗ ಸೈನ್ಯದ ಚಂಚಲ ಮನಸ್ಸಿನವರ ಕಿವಿಯ ಪೊಟರೆಗಳಿಗೆ ಬಡಿಯಿತು. ಅದರಿಂದ ಅವರ ಕೈಯಲ್ಲಿದ್ದ ಆಯುಧಗಳು ನಡುಗಿದವು. ಮಾವುತರನ್ನು ಆನೆಗಳು ಕೆಳಕ್ಕೆ ಕೆಡಹಿದವು. ಕುದುರೆಗಳು ರಾವುತರನ್ನು ಬೀಳಿಸಿದವು.
ಪದಾರ್ಥ (ಕ.ಗ.ಪ)
ಕೋಟರ-ಸಮೂಹ ಪೊಟರೆ, ಥಟ್ಟಣೆ-ರಭಸ
ಮೂಲ ...{Loading}...
ನಡೆದು ಬಂದುದು ರಾಯದಳ ಮುಂ
ಗುಡಿಯ ವಾದ್ಯಧ್ವನಿಯ ಥಟ್ಟಣೆ
ತುಡುಕಿತರಿ ಚತುರಂಗ ಚಪಳರ ಕರ್ಣ ಕೋಟರವ
ನಡುಗಿದವು ಕೈದುಗಳು ಜೋಧರ
ಕೊಡಹಿದವು ಗಜರಾಜಿ ವಾಜಿಯ
ಗಡಣವೀಡಾಡಿದವು ರಾವ್ತರನಿವರ ಥಟ್ಟಿನಲಿ ॥16॥
೦೧೭ ಅರಸ ಕೇಳೈ ...{Loading}...
ಅರಸ ಕೇಳೈ ಸಮರಭೂಮಿಗೆ
ಪರಿದರರಸಾಳುಗಳು ರಾಯನ
ಸಿರಿಮುಡಿಗೆ ಸುಕ್ಷೇಮ ಮುಚ್ಚಿದವೇರುಮದ್ದಿನಲಿ
ಮರಳಿ ನೇಮವ ಕೊಂಡು ಫಲುಗುಣ
ಬರುತಲೈದನೆ ಜೀಯ ನಿಮ್ಮಯ
ಚರಣ ಸರಸಿಜದಾಣೆಯೆಂದರು ಭೀಮಸೇನಂಗೆ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಧೃತರಾಷ್ಟ್ರನೇ ಕೇಳು, ಧರ್ಮರಾಯನ ದೂತರು ಯುದ್ಧ ಭೂಮಿಗೆ ಓಡಿ ಬಂದು “ಧರ್ಮರಾಯನ ಗಾಯಗಳಿಗೆ ಔಷಧಿಯನ್ನು ಹಾಕಿದುದರಿಂದ ಅದು ವಾಸಿಯಾಗಿ ಅವನು ಕ್ಷೇಮವಾಗಿದ್ದಾನೆ. ಅರ್ಜುನನು ಮತ್ತೆ ಧರ್ಮರಾಯನಿಂದ ಅಪ್ಪಣೆ ಪಡೆದು ಯುದ್ಧ ಭೂಮಿಗೆ ಬರುತ್ತಿದ್ದಾನೆ. ನಿಮ್ಮ ಪಾದಕಮಲಗಳ ಆಣೆಯಾಗಿ ನಮ್ಮ ಮಾತು ನಿಜ” ಎಂದು ಭೀಮನಿಗೆ ಹೇಳಿದರು.” ಎಂದು ಸಂಜಯನು ಹೇಳಿದನು.
ಪದಾರ್ಥ (ಕ.ಗ.ಪ)
ಏರುಮದ್ದು-ಗಾಯಕ್ಕೆ ಹಾಕುವ ಔಷಧಿ
ಮೂಲ ...{Loading}...
ಅರಸ ಕೇಳೈ ಸಮರಭೂಮಿಗೆ
ಪರಿದರರಸಾಳುಗಳು ರಾಯನ
ಸಿರಿಮುಡಿಗೆ ಸುಕ್ಷೇಮ ಮುಚ್ಚಿದವೇರುಮದ್ದಿನಲಿ
ಮರಳಿ ನೇಮವ ಕೊಂಡು ಫಲುಗುಣ
ಬರುತಲೈದನೆ ಜೀಯ ನಿಮ್ಮಯ
ಚರಣ ಸರಸಿಜದಾಣೆಯೆಂದರು ಭೀಮಸೇನಂಗೆ ॥17॥
೦೧೮ ಜೋಡು ಬಿರಿದುದು ...{Loading}...
ಜೋಡು ಬಿರಿದುದು ಹರುಷಜಲ ಕಡೆ
ಗೋಡಿವರಿದುದು ರೋಮಪುಳಕದ
ಬೀಡು ಬಿಟ್ಟುದು ಮೈಯನುಬ್ಬಿದನೊಲೆದನಡಿಗಡಿಗೆ
ನೀಡುವರೆ ತಳುವೆನುತ ತೆಗೆದೀ
ಡಾಡಿದನು ದೂತರಿಗೆ ರತುನದ
ಜೋಡಣೆಯ ಭುಜ ಕಂಠ ಕರ್ಣಾಂಘ್ರಿಗಳ ಭೂಷಣವ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಸುದ್ದಿಯಿಂದ ಭೀಮನಿಗೆ ಸಂತೋಷವಾಗಿ ಮೈಯುಬ್ಬಿ ತೊಟ್ಟಿದ್ದ ಕವಚ ಬಿರಿಯುವಂತಾಯಿತು. ಸಂತೋಷದ ಕಣ್ಣೀರು ಕೋಡಿ ಹರಿಯಿತು. ರೋಮಾಂಚನವಾಯಿತು. ಅವನು ತನ್ನ ದೇಹವನ್ನು ಸಂತೋಷದಿಂದ ಓಲಾಡಿಸಿದನು. ಕರೆದು ಕೊಡುವುದಕ್ಕೆ ಆರಂಭಿಸಿದರೆ ತಡವಾಗುತ್ತದೆಯೇನೋ ಎಂದು ತನ್ನ ಭುಜ, ಕುತ್ತಿಗೆ, ಕಿವಿ, ಕಾಲುಗಳಲ್ಲಿದ್ದ ರತ್ನ ಖಚಿತವಾದ ಆಭರಣಗಳನ್ನು ದೂತರ ಬಳಿಗೆ ಎಸೆದನು.
ಮೂಲ ...{Loading}...
ಜೋಡು ಬಿರಿದುದು ಹರುಷಜಲ ಕಡೆ
ಗೋಡಿವರಿದುದು ರೋಮಪುಳಕದ
ಬೀಡು ಬಿಟ್ಟುದು ಮೈಯನುಬ್ಬಿದನೊಲೆದನಡಿಗಡಿಗೆ
ನೀಡುವರೆ ತಳುವೆನುತ ತೆಗೆದೀ
ಡಾಡಿದನು ದೂತರಿಗೆ ರತುನದ
ಜೋಡಣೆಯ ಭುಜ ಕಂಠ ಕರ್ಣಾಂಘ್ರಿಗಳ ಭೂಷಣವ ॥18॥
೦೧೯ ರಾಯ ಹದುಳಿಸಿದನೆ ...{Loading}...
ರಾಯ ಹದುಳಿಸಿದನೆ ಮಹಾದೇ
ವಾಯಿದೆತ್ತಣ ಪುಣ್ಯವೋ ರಣ
ದಾಯಸವ ಸೈರಿಸಿದ ತನಗಿದು ಸಫಲವಾಯಿತಲ
ದಾಯ ಬಂದುದು ನಮಗೆ ಹೋ ಲೇ
ಸಾಯಿತೇಳು ವಿಶೋಕ ಸಾಕುಳಿ
ದಾಯುಧದ ಪರಿಗಣಿತವನು ಹೇಳೆಂದನಾ ಭೀಮ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮರಾಯನು ಸುಧಾರಿಸಿಕೊಂಡನೇ ಶಿವನೇ ಇದು ಎಂತಹ ಪುಣ್ಯದ ಸುದ್ದಿ - ಯುದ್ಧದಲ್ಲಿ ಆಯಾಸವನ್ನು ಸಹಿಸಿಕೊಂಡು ಹೋರಾಡುತ್ತಿದ್ದ ತನಗೆ ಒಳ್ಳೆಯ ಪ್ರತಿಫಲ ಸಿಕ್ಕಂತಾಯಿತು. ಈಗ ನಮಗೆ ಅನುಕೂಲವಾದ ಹೊತ್ತು ಬಂದಂತಾಯಿತು. ಒಳ್ಳೆಯದಾಯಿತು. ಆಯುಧಗಳು ಎಷ್ಟು ಉಳಿದಿವೆ ಎಂಬ ಲೆಕ್ಕವನ್ನು ಹೇಳು ಎಂದು ವಿಶೋಕನನ್ನು ಕೇಳಿದನು.
ಪದಾರ್ಥ (ಕ.ಗ.ಪ)
ದಾಯ-ಅನುಕೂಲವಾದ ಹೊತ್ತು,
ಟಿಪ್ಪನೀ (ಕ.ಗ.ಪ)
ವಿಶೋಕ-ಭೀಮನ ಸಾರಥಿ, ಶ್ರೀಕೃಷ್ಣನಿಗೆ ಕುಬ್ಜಾ ಅಥವಾ ತ್ರಿವಕ್ರೆಯೆಂಬವಳಲ್ಲಿ ಜನಿಸಿದವನು. ಇವನಿಗೆ ಅಶೋಕನೆಂದೂ ಹೆಸರುಂಟು. (ಪುರಾಣನಾಮ ಚೂಡಾಮಣಿ)
ಮೂಲ ...{Loading}...
ರಾಯ ಹದುಳಿಸಿದನೆ ಮಹಾದೇ
ವಾಯಿದೆತ್ತಣ ಪುಣ್ಯವೋ ರಣ
ದಾಯಸವ ಸೈರಿಸಿದ ತನಗಿದು ಸಫಲವಾಯಿತಲ
ದಾಯ ಬಂದುದು ನಮಗೆ ಹೋ ಲೇ
ಸಾಯಿತೇಳು ವಿಶೋಕ ಸಾಕುಳಿ
ದಾಯುಧದ ಪರಿಗಣಿತವನು ಹೇಳೆಂದನಾ ಭೀಮ ॥19॥
೦೨೦ ಉಳಿದ ಕೈದುಗಳೇಸು ...{Loading}...
ಉಳಿದ ಕೈದುಗಳೇಸು ಬಂಡಿಯ
ಲುಳಿದ ಸರಳಿನ ಹೊದೆಯ ಲೆಕ್ಕವ
ತಿಳಿದು ಹೇಳೈ ತಂದೆ ಸಾರಥಿ ನೋಡಲಹುದಿನ್ನು
ಅಳಲಿಸಿದ ಕೌರವನ ರಕ್ತದ
ಮಳೆಯೊಳಲ್ಲದೆ ತನ್ನ ಕೋಪಾ
ನಳನ ಝಳವಡಗದು ಯುಧಿಷ್ಠಿರ ರಾಯನಾಣೆಂದ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ರಥದಲ್ಲಿ ಉಪಯೋಗಕ್ಕೆ ಬರುವಂತಹ ಎಷ್ಟು ಆಯುಧಗಳು ಉಳಿದಿವೆ. ಎಷ್ಟು ಬಾಣಗಳ ಹೊರೆ ಉಳಿದಿದೆ. ಲೆಕ್ಕ ಹಾಕಿ ಹೇಳು ಸಾರಥಿ. ನಮ್ಮನ್ನು ಅಳಲಿಸಿದ ಕೌರವನ ರಕ್ತದ ಮಳೆಯಲ್ಲಿ ಅಲ್ಲದೆ ನನ್ನ ಕೋಪದ ಬೆಂಕಿಯ ಝಳ ಕಡಿಮೆಯಾಗುವುದಿಲ್ಲ’ ಎಂದು ಕೇಳಿದನು.
ಪದಾರ್ಥ (ಕ.ಗ.ಪ)
ಹೊದೆ-ಕಟ್ಟು, ರಾಶಿ
ಮೂಲ ...{Loading}...
ಉಳಿದ ಕೈದುಗಳೇಸು ಬಂಡಿಯ
ಲುಳಿದ ಸರಳಿನ ಹೊದೆಯ ಲೆಕ್ಕವ
ತಿಳಿದು ಹೇಳೈ ತಂದೆ ಸಾರಥಿ ನೋಡಲಹುದಿನ್ನು
ಅಳಲಿಸಿದ ಕೌರವನ ರಕ್ತದ
ಮಳೆಯೊಳಲ್ಲದೆ ತನ್ನ ಕೋಪಾ
ನಳನ ಝಳವಡಗದು ಯುಧಿಷ್ಠಿರ ರಾಯನಾಣೆಂದ ॥20॥
೦೨೧ ಅರಸ ಚಿತ್ತವಿಸುಳಿದ ...{Loading}...
ಅರಸ ಚಿತ್ತವಿಸುಳಿದ ಧನು ಹ
ನ್ನೆರಡುಸಾವಿರ ಬಲುಸರಳು ಹ
ನ್ನೆರಡುಸಾವಿರ ಬೋಳೆಯೈನೂರರ್ಧಚಂದ್ರಶರ
ಪರಿಗಳಿತ ಲುಳಿಯಂಬು ಕಣಗಿಲ
ಸರಳುಗೂಡಿಪ್ಪತ್ತು ಸಾವಿರ
ವೆರಡುಸಾವಿರವುಳಿದವೀ ನಾರಾಚ ನಿಕರದಲಿ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಅರಸನೇ ಕೇಳು ಹನ್ನೆರಡು ಸಾವಿರ ಬಿಲ್ಲುಗಳು ಉಳಿದಿವೆ. ಹನ್ನೊಂದು ಸಾವಿರ ಶಕ್ತಿಯುತವಾದ ಬಾಣಗಳು, ಐನೂರು ಮರದ ಬಾಣಗಳು, ಒಟ್ಟು ಇಪ್ಪತ್ತು ಸಾವಿರ ಸಂಖ್ಯೆಯ ಅರ್ಧಚಂದ್ರ ಬಾಣಗಳು, ಆಕ್ರಮಣ ವೇಗದ ಬಾಣಗಳು, ಕಣಗಿಲ ಎಂಬ ಬಾಣಗಳು ಹಾಗೂ ಎರಡು ಸಾವಿರ ನಾರಾಚ ಬಾಣಗಳು ಉಳಿದಿವೆ’. ಎಂದನು ವಿಶೋಕ.
ಪದಾರ್ಥ (ಕ.ಗ.ಪ)
ಬೋಳೆ-ಮರದ ಬಾಣ, ಪರಿಗಳಿತ-ಎದುರಾಳಿಯನ್ನು ಚಚ್ಚುವ, ಲುಳಿಯಂಬು-ವೇಗದ ಬಾಣ, ನಾರಾಚ-ಬಾಣ
ಮೂಲ ...{Loading}...
ಅರಸ ಚಿತ್ತವಿಸುಳಿದ ಧನು ಹ
ನ್ನೆರಡುಸಾವಿರ ಬಲುಸರಳು ಹ
ನ್ನೆರಡುಸಾವಿರ ಬೋಳೆಯೈನೂರರ್ಧಚಂದ್ರಶರ
ಪರಿಗಳಿತ ಲುಳಿಯಂಬು ಕಣಗಿಲ
ಸರಳುಗೂಡಿಪ್ಪತ್ತು ಸಾವಿರ
ವೆರಡುಸಾವಿರವುಳಿದವೀ ನಾರಾಚ ನಿಕರದಲಿ ॥21॥
೦೨೨ ಆಲಿಸೈ ಮುಗುಳಮ್ಬು ...{Loading}...
ಆಲಿಸೈ ಮುಗುಳಂಬು ಸಾವಿರ
ವೇಳು ಬಳಿಕೊಂಬತ್ತು ಸಾವಿರ
ಕೋಲು ಮೀಂಟೆಯ ಕವಲುಗಣೆ ಹನ್ನೆರಡುಸಾವಿರವು
ಮೇಲೆ ಸಾವಿರ ನಾಲ್ಕು ಮುಮ್ಮೊನೆ
ಬೋಳೆಯಂಬೀರೈದುಸಾವಿರ
ನಾಳಿಯಂಬುಗಳಾರುಬಂಡಿಯ ಲೆಕ್ಕವಿದೆಯೆಂದ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- " ಕೇಳು, ಏಳು ಸಾವಿರ ಮುಗುಂಬು ಬಾಣಗಳು, ಒಂಬತ್ತು ಸಾವಿರ ‘ಕೋಲು’ ಬಾಣಗಳು, ಹನ್ನೆರಡು ಸಾವಿರ ಕವೆಗೋಲುಗಳು ಅದರ ಜೊತೆಯಲ್ಲಿ ನಾಲ್ಕು ಸಾವಿರ ಚೂಪಾದ ಮರದ ಬಾಣಗಳು, ಹತ್ತು ಸಾವಿರ ‘ನಾಳಿ’ ಎಂಬ ಮರದ ಬಾಣಗಳು - ಇವು ನಮ್ಮ ಆರು ರಥಗಳಲ್ಲಿವೆ” ಎಂದು ವಿಶೋಕನು ಲೆಕ್ಕ ಒಪ್ಪಿಸಿದ.
ಪದಾರ್ಥ (ಕ.ಗ.ಪ)
ಮುಗುಳಂಬು - ಒಂದು ಬಗೆಯ ಚಿಕ್ಕ ಬಾಣ
ಮೀಂಟೆ-ಕವಣೆ
ಮುಮ್ಮೊನೆ-ಮೂರು ಮೊನೆ
ಮೂಲ ...{Loading}...
ಆಲಿಸೈ ಮುಗುಳಂಬು ಸಾವಿರ
ವೇಳು ಬಳಿಕೊಂಬತ್ತು ಸಾವಿರ
ಕೋಲು ಮೀಂಟೆಯ ಕವಲುಗಣೆ ಹನ್ನೆರಡುಸಾವಿರವು
ಮೇಲೆ ಸಾವಿರ ನಾಲ್ಕು ಮುಮ್ಮೊನೆ
ಬೋಳೆಯಂಬೀರೈದುಸಾವಿರ
ನಾಳಿಯಂಬುಗಳಾರುಬಂಡಿಯ ಲೆಕ್ಕವಿದೆಯೆಂದ ॥22॥
೦೨೩ ಪರಶು ಮುಸಲ ...{Loading}...
ಪರಶು ಮುಸಲ ಮುಸುಂಡಿ ಸೆಲ್ಲೆಹ
ಪರಿಘ ತೋಮರ ಚಕ್ರವಸಿ ಮು
ದ್ಗರ ತ್ರಿಶೂಲ ಕಠಾರಿ ಖೇಟಕ ಪಿಂಡಿವಾಳಚಯ
ಸುರಗಿ ಮೊದಲಾದಖಿಳ ಶಸ್ತ್ರೋ
ತ್ಕರವನೊಂದೇ ಬಂಡಿಯಲಿ ಸಂ
ವರಿಸಿದೆನು ರಿಪುರಾಯರೊಡಲಲಿ ಬೀಯಮಾಡೆಂದ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಕೊಡಲಿ, ಒನಕೆ, ಮುಸುಂಡಿ, ಬರ್ಚಿ, ಕಬ್ಬಿಣದ ದೊಣ್ಣೆ, ತೋಮರ, ಚಕ್ರ, ಖಡ್ಗ, ಗದೆ, ತ್ರಿಶೂಲ, ಕಠಾರಿ, ಗುರಾಣಿ, ಪಿಂಡಿವಾಳ, ಸುರಗಿ ಮೊದಲಾದ ಎಲ್ಲಾ ಶಸ್ತ್ರಾಸ್ತ್ರಗಳನ್ನು ಒಂದೇ ರಥದಲ್ಲಿ ಜೋಡಿಸಿದ್ದೇನೆ. ಅವುಗಳನ್ನು ಶತ್ರುರಾಜರ ದೇಹದಲ್ಲಿ ಖರ್ಚು ಮಾಡು’ ಎಂದು ಹೇಳಿದ.
ಪದಾರ್ಥ (ಕ.ಗ.ಪ)
ಮುಸಲ-ಒನಕೆ, ಸೆಲ್ಲೆಹ-ಬರ್ಚಿ, ಪರಿಘ-ಕಬ್ಬಿಣದ ದೊಣ್ಣೆ, ಮುದ್ಗರ-ಗದೆ, ಖೇಟಕ-ಗುರಾಣಿ, ಪಿಂಡಿವಾಳ-(ಭಿಂಡಿವಾಳ ) - ಒಂದು ಆಯುಧ
ಮೂಲ ...{Loading}...
ಪರಶು ಮುಸಲ ಮುಸುಂಡಿ ಸೆಲ್ಲೆಹ
ಪರಿಘ ತೋಮರ ಚಕ್ರವಸಿ ಮು
ದ್ಗರ ತ್ರಿಶೂಲ ಕಠಾರಿ ಖೇಟಕ ಪಿಂಡಿವಾಳಚಯ
ಸುರಗಿ ಮೊದಲಾದಖಿಳ ಶಸ್ತ್ರೋ
ತ್ಕರವನೊಂದೇ ಬಂಡಿಯಲಿ ಸಂ
ವರಿಸಿದೆನು ರಿಪುರಾಯರೊಡಲಲಿ ಬೀಯಮಾಡೆಂದ ॥23॥
೦೨೪ ಪೂತು ಸಾರಥಿ ...{Loading}...
ಪೂತು ಸಾರಥಿ ಈಸುಬಾಣ
ವ್ರಾತವುಳಿದುದೆ ತನ್ನ ಕರ ಕಂ
ಡೂತಿಯನು ಕಳುಚುವೆನಲಾ ಕೌರವನ ನೆತ್ತಿಯಲಿ
ಆತನೇನಾದನು ಯುಧಿಷ್ಠಿರ
ಸೋತು ಪಿಂಗಿದನೆಂಬ ಹಂಬಲು
ಬೀತುದಿನ್ನೇನೆನ್ನ ನೋಡಾ ಎನುತ ಗರ್ಜಿಸಿದ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮನು ‘ಭೇಷ್ ಸಾರಥಿ, ಇಷ್ಟೊಂದು ಬಾಣಗಳು ಉಳಿದಿವೆಯೇ, ಕೌರವ ನಿನಗೆ ನೆತ್ತಿಯ ಮೇಲೆ ಹೊಡೆಯುವುದರ ಮೂಲಕ ನನ್ನ ಕೈಗಳಿಗೆ ಆಗುತ್ತಿರುವ ನವೆಯನ್ನು ದೂರ ಮಾಡಿಕೊಳ್ಳುತ್ತೇನೆ. ಧರ್ಮರಾಯನು ಸೋತು ಹಿಮ್ಮೆಟ್ಟಿದನು ಎಂಬ ಆತಂಕ ದೂರವಾಯಿತು. ಇನ್ನು ನನ್ನ ಶೌರ್ಯವನ್ನು ನೋಡು, ಎಂದು ಗರ್ಜಿಸಿದನು.
ಪದಾರ್ಥ (ಕ.ಗ.ಪ)
ಕಂಡೂತಿ-ನವೆ
ಮೂಲ ...{Loading}...
ಪೂತು ಸಾರಥಿ ಈಸುಬಾಣ
ವ್ರಾತವುಳಿದುದೆ ತನ್ನ ಕರ ಕಂ
ಡೂತಿಯನು ಕಳುಚುವೆನಲಾ ಕೌರವನ ನೆತ್ತಿಯಲಿ
ಆತನೇನಾದನು ಯುಧಿಷ್ಠಿರ
ಸೋತು ಪಿಂಗಿದನೆಂಬ ಹಂಬಲು
ಬೀತುದಿನ್ನೇನೆನ್ನ ನೋಡಾ ಎನುತ ಗರ್ಜಿಸಿದ ॥24॥
೦೨೫ ಚಳಯದಲಿ ಫಲುಗುಣನ ...{Loading}...
ಚಳಯದಲಿ ಫಲುಗುಣನ ಮೋಹರ
ಕಳನ ಪೊಕ್ಕುದು ಹಲವು ಮೊನೆಯಲಿ
ತಳಿತು ನಿಂದುದು ಜಡಿವ ಬಹುವಿಧವಾದ್ಯರಭಸದಲಿ
ಅಳುಕಿತೀ ನಮ್ಮವರು ಭೀಮನ
ಸುಳಿವಿನಲಿ ಸೊಪ್ಪಾದೆವರ್ಜುನ
ನೆಳತಟಕೆ ನಿಲವೆಂತೆನುತ ನೆಗ್ಗಿದುದು ದುಗುಡದಲಿ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನ ಸೈನ್ಯ ಲಗುಬಗೆಯಿಂದ ಯುದ್ಧರಂಗವನ್ನು ಅನೇಕ ದಿಕ್ಕುಗಳಿಂದ ಪ್ರವೇಶಿಸಿತು. ಅನೇಕ ವಾದ್ಯಗಳ ಧ್ವನಿಯ ರಭಸದೊಂದಿಗೆ ವಿಸ್ತಾರವಾಗಿ ನಿಂತುಕೊಂಡಿತು ಹೆದರಿತು. ನಮ್ಮ ಸೈನಿಕರು ‘ಭೀಮನ ಹೋರಾಟದಲ್ಲಿ ಸೊಪ್ಪಾಗಿ ಸೊರಗಿ ಹೋಗಿದ್ದೇವೆ. ಇನ್ನು ಅರ್ಜುನ ಬಂದು ಎಳೆದಾಡಿದರೆ ಹೇಗೆ ನಿಲ್ಲುವುದು’ ಎಂದು ದುಃಖದಲ್ಲಿ ಕುಗ್ಗಿ ಹೋದರು.
ಪದಾರ್ಥ (ಕ.ಗ.ಪ)
ಚಳಯ-ಲಗುಬಗೆ ,
ನೆಗ್ಗು-ಕುಗ್ಗು
ಮೂಲ ...{Loading}...
ಚಳಯದಲಿ ಫಲುಗುಣನ ಮೋಹರ
ಕಳನ ಪೊಕ್ಕುದು ಹಲವು ಮೊನೆಯಲಿ
ತಳಿತು ನಿಂದುದು ಜಡಿವ ಬಹುವಿಧವಾದ್ಯರಭಸದಲಿ
ಅಳುಕಿತೀ ನಮ್ಮವರು ಭೀಮನ
ಸುಳಿವಿನಲಿ ಸೊಪ್ಪಾದೆವರ್ಜುನ
ನೆಳತಟಕೆ ನಿಲವೆಂತೆನುತ ನೆಗ್ಗಿದುದು ದುಗುಡದಲಿ ॥25॥
೦೨೬ ದಳದ ಮಧ್ಯದೊಳೊನ್ದು ...{Loading}...
ದಳದ ಮಧ್ಯದೊಳೊಂದು ರಥದಲಿ
ಹೊಳೆದು ದುವ್ವಾಳಿಸಿ ಧನಂಜಯ
ನಿಲಿಸಿದನು ನಿಜರಥವ ಭೀಮನ ರಥದ ಮುಂಬಿನಲಿ
ಬಳಿಕ ತನ್ನಿಂದಾದ ಕೋಳಾ
ಹಳವನಾ ತರುವಾಯಲವ್ಯಾ
ಕುಳ ಸಮಾಧಾನವನು ಬಿನ್ನಹಮಾಡಿದನು ಪಾರ್ಥ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೈನ್ಯದ ಮಧ್ಯದಲ್ಲಿ ಒಂದು ರಥದಲ್ಲಿ ಪ್ರಕಾಶಿಸುತ್ತಾ, ಮುನ್ನುಗ್ಗಿ ಅರ್ಜುನನು ತನ್ನ ರಥವನ್ನು ಭೀಮನ ರಥದ ಮುಂಭಾಗದಲ್ಲಿ ನಿಲ್ಲಿಸಿದನು. ಆನಂತರ ತನ್ನಿಂದಾದ ಅವಾಂತರವನ್ನೂ ಆಮೇಲೆ ಅದು ಚಿಂತಾದೂರವಾಗಿ ಸಮಾಧಾನವಾದುದನ್ನೂ ಭೀಮನ ಬಳಿ ಹೇಳಿಕೊಂಡನು.
ಪದಾರ್ಥ (ಕ.ಗ.ಪ)
ದುವ್ವಾಳಿಸು-ಮುನ್ನುಗ್ಗು, ಅವ್ಯಾಕುಲ-ಚಿಂತೆಯಿಲ್ಲದೆ
ಮೂಲ ...{Loading}...
ದಳದ ಮಧ್ಯದೊಳೊಂದು ರಥದಲಿ
ಹೊಳೆದು ದುವ್ವಾಳಿಸಿ ಧನಂಜಯ
ನಿಲಿಸಿದನು ನಿಜರಥವ ಭೀಮನ ರಥದ ಮುಂಬಿನಲಿ
ಬಳಿಕ ತನ್ನಿಂದಾದ ಕೋಳಾ
ಹಳವನಾ ತರುವಾಯಲವ್ಯಾ
ಕುಳ ಸಮಾಧಾನವನು ಬಿನ್ನಹಮಾಡಿದನು ಪಾರ್ಥ ॥26॥
೦೨೭ ಜನಪ ಕೇಳೈ ...{Loading}...
ಜನಪ ಕೇಳೈ ಬಳಿಕ ಭೀಮಾ
ರ್ಜುನರ ಮೋಹರಕೈದುಸಾವಿರ
ಕನಕಮಯರಥಸಹಿತ ಬಿಟ್ಟನು ಶಕುನಿ ಸೂಠಿಯಲಿ
ಅನಿಲಸುತನರ್ಜುನನ ನೀ ಸಾ
ರೆನುತ ಕೆದರಿದನಹಿತನಂಬಿನ
ಮೊನೆಯೊಳಳ್ಳಿರಿದೌಕಿ ತುಡುಕುವ ತೇರ ತೆಕ್ಕೆಯಲಿ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧೃತರಾಷ್ಟನೇ ಕೇಳು, ಭೀಮಾರ್ಜುನರ ಸೈನ್ಯದ ಮೇಲೆ ಶಕುನಿಯು ಬಂಗಾರದ ಅಲಂಕಾರದಿಂದ ಕೂಡಿದ ಐದು ಸಾವಿರ ರಥಗಳನ್ನು ಮುನ್ನುಗ್ಗಿಸಿದನು. ಭೀಮನು ‘ಅರ್ಜುನನೇ ನೀನು ದೂರ ಹೋಗು’ ಎನ್ನುತ್ತಾ ರಥದಲ್ಲಿ ಕುಳಿತು ಶಕುನಿಯನ್ನು ಹಿಡಿಯಲು ಯತ್ನಿಸುತ್ತಾ ಪಕ್ಕೆ ಬಿರಿಯುವಂತೆ ತನ್ನ ಬಾಣಗಳ ಮೊನೆಯಿಂದ ಅವನಿಗೆ ಬಲವಾಗಿ ಹೊಡೆದನು.
ಪದಾರ್ಥ (ಕ.ಗ.ಪ)
ತೆಕ್ಕೆ-ಹಿಡಿತ, ತುಡುಕು-ಹಿಡಿ
ಮೂಲ ...{Loading}...
ಜನಪ ಕೇಳೈ ಬಳಿಕ ಭೀಮಾ
ರ್ಜುನರ ಮೋಹರಕೈದುಸಾವಿರ
ಕನಕಮಯರಥಸಹಿತ ಬಿಟ್ಟನು ಶಕುನಿ ಸೂಠಿಯಲಿ
ಅನಿಲಸುತನರ್ಜುನನ ನೀ ಸಾ
ರೆನುತ ಕೆದರಿದನಹಿತನಂಬಿನ
ಮೊನೆಯೊಳಳ್ಳಿರಿದೌಕಿ ತುಡುಕುವ ತೇರ ತೆಕ್ಕೆಯಲಿ ॥27॥
೦೨೮ ಒನ್ದು ಶರಸನ್ಧಾನದಲಿ ...{Loading}...
ಒಂದು ಶರಸಂಧಾನದಲಿ ಕವಿ
ತಂದವೈಸಾವಿರ ರಥಾವಳಿ
ಯೊಂದು ಧನುವಿನೊಳೀತ ಮೊಗೆದನು ಸರಳಸಾಗರವ
ಸಂದಣಿಸಿತಾ ರಥಿಕರಾ ಹಯ
ವೃಂದವಾ ಸಾರಥಿಗಳಾ ರಥ
ಕೊಂದುಹತ್ತರ ಲೆಕ್ಕದಲಿ ಮಿಕ್ಕವು ಶರವ್ರಾತ ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಒಂದು ಬಾರಿ ಬಾಣ ಪ್ರಯೋಗದಿಂದ ಮೇಲೆ ಬಿದ್ದ ಐದು ಸಾವಿರ ರಥಗಳನ್ನು ನಾಶ ಮಾಡಿ, ಒಂದೇ ಬಿಲ್ಲಿನ ಸಹಾಯದಿಂದ ಬಾಣಗಳ ಸಾಗರವನ್ನೇ ಭೀಮನು ಮೊಗಚಿ ಹಾಕಿದನು. ಗುಂಪು ಸೇರಿ ಆಕ್ರಮಣ ಮಾಡಿದ ರಥಿಕರು, ಅವರ ಕುದುರೆಗಳು, ಸಾರಥಿಗಳು ಎಷ್ಟು ಸಂಖ್ಯೆಯಲ್ಲಿ ಇದ್ದವೋ ಅದಕ್ಕೆ ಹತ್ತುಪಟ್ಟು ಬಾಣಗಳನ್ನು ಪ್ರಯೋಗಿಸಿದನು.
ಮೂಲ ...{Loading}...
ಒಂದು ಶರಸಂಧಾನದಲಿ ಕವಿ
ತಂದವೈಸಾವಿರ ರಥಾವಳಿ
ಯೊಂದು ಧನುವಿನೊಳೀತ ಮೊಗೆದನು ಸರಳಸಾಗರವ
ಸಂದಣಿಸಿತಾ ರಥಿಕರಾ ಹಯ
ವೃಂದವಾ ಸಾರಥಿಗಳಾ ರಥ
ಕೊಂದುಹತ್ತರ ಲೆಕ್ಕದಲಿ ಮಿಕ್ಕವು ಶರವ್ರಾತ ॥28॥
೦೨೯ ಒಗ್ಗಿನೈಸಾವಿರ ರಥಾವಳಿ ...{Loading}...
ಒಗ್ಗಿನೈಸಾವಿರ ರಥಾವಳಿ
ಮುಗ್ಗಿದವು ಕಣೆ ತಾಗಿ ರಥಿಕರು
ನೆಗ್ಗಿದರು ಮೇಲಂಬು ಸುಳಿದೊಯ್ದವು ಸಜೀವಿಗಳ
ಒಗ್ಗೊಡೆದು ಕಲಿಶಕುನಿ ಘಾಯದ
ಸುಗ್ಗಿಯಲಿ ಲಘುವಾಗಿ ಹರುಷದ
ಮುಗ್ಗಿಲೊಣಗಿಲ ಮೋರೆಯಲಿ ತಿರುಗಿದನು ಮೋಹರಕೆ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಒಟ್ಟಾಗಿ ಮೇಲೆ ಬಿದ್ದ ಐದು ಸಾವಿರ ರಥಗಳೂ ಬಾಣಗಳು ತಗುಲಿ ಮುಗ್ಗರಿಸಿದವು. ರಥಿಕರು ಕುಗ್ಗಿ ಹೋದರು. ಬಾಣಗಳು ಅವರ ಪ್ರಾಣಗಳನ್ನು ತೆಗೆದವು. ವ್ಯೂಹ ನಾಶವಾಗಿ ವೀರನಾದ ಶಕುನಿ ಹೆಚ್ಚು ಗಾಯಗಳನ್ನು ಪಡೆದು ಸೋತು ಸಂತೋಷವನ್ನು ಕಳೆದುಕೊಂಡು ಮುಖ ಒಣಗಿಸಿಕೊಂಡು ಯದ್ಧರಂಗದಿಂದ ಹಿಂತಿರುಗಿದನು.
ಪದಾರ್ಥ (ಕ.ಗ.ಪ)
ಒಗ್ಗಿನ-ಒಟ್ಟಾಗಿ
ಮೂಲ ...{Loading}...
ಒಗ್ಗಿನೈಸಾವಿರ ರಥಾವಳಿ
ಮುಗ್ಗಿದವು ಕಣೆ ತಾಗಿ ರಥಿಕರು
ನೆಗ್ಗಿದರು ಮೇಲಂಬು ಸುಳಿದೊಯ್ದವು ಸಜೀವಿಗಳ
ಒಗ್ಗೊಡೆದು ಕಲಿಶಕುನಿ ಘಾಯದ
ಸುಗ್ಗಿಯಲಿ ಲಘುವಾಗಿ ಹರುಷದ
ಮುಗ್ಗಿಲೊಣಗಿಲ ಮೋರೆಯಲಿ ತಿರುಗಿದನು ಮೋಹರಕೆ ॥29॥
೦೩೦ ಶಕುನಿ ಮುರಿದನು ...{Loading}...
ಶಕುನಿ ಮುರಿದನು ಬೇಹ ದಳನಾ
ಯಕರು ತಿರುಗಿತು ಭೀಮಸೇನನ
ವಿಕಟ ಸಿಂಹಧ್ವನಿಗೆ ಜರಿದುದು ಭಟರ ಬಲುಹೃದಯ
ಅಕಟಕಟ ಕುರುಸೇನೆ ನಿರ್ನಾ
ಯಕವಲಾ ಹಾ ಎನುತ ಮಂತ್ರಿ
ಪ್ರಕರ ಮರುಗಿತು ತುರುಗಿತಲ್ಲಿಯದಲ್ಲಿ ಕಳವಳಿಸಿ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶಕುನಿ ಸೋತು ಹಿಂದಿರುಗಿದನು. ಸಮರ್ಥರಾದ ಸೇನಾನಾಯಕರು ಹಿಂತಿರುಗಿದರು. ಭೀಮನ ಭಯಂಕರವಾದ ಸಿಂಹಧ್ವನಿಗೆ ಭಟರ ಎದೆಗಳು ನಡುಗಿದವು. ಅಯ್ಯೋ ಕೌರವನ ಸೈನ್ಯಕ್ಕೆ ನಾಯಕರು ಇಲ್ಲದಂತಾಯಿತೇ ಎನ್ನುತ್ತ ಮಂತ್ರಿಗಳು, ಅಲ್ಲಲ್ಲಿ ಗುಂಪು ಸೇರಿ ನಿಂತು ಕಳವಳಗೊಂಡರು.
ಪದಾರ್ಥ (ಕ.ಗ.ಪ)
ಬೇಹ-ಸಮರ್ಥರಾದ
ಮೂಲ ...{Loading}...
ಶಕುನಿ ಮುರಿದನು ಬೇಹ ದಳನಾ
ಯಕರು ತಿರುಗಿತು ಭೀಮಸೇನನ
ವಿಕಟ ಸಿಂಹಧ್ವನಿಗೆ ಜರಿದುದು ಭಟರ ಬಲುಹೃದಯ
ಅಕಟಕಟ ಕುರುಸೇನೆ ನಿರ್ನಾ
ಯಕವಲಾ ಹಾ ಎನುತ ಮಂತ್ರಿ
ಪ್ರಕರ ಮರುಗಿತು ತುರುಗಿತಲ್ಲಿಯದಲ್ಲಿ ಕಳವಳಿಸಿ ॥30॥