೧೬

೦೦೦ ಸೂ ರಾಯರಿಪುಭಟಗಿರಿನಿವಹ ...{Loading}...

ಸೂ. ರಾಯರಿಪುಭಟಗಿರಿನಿವಹ ವ
ಜ್ರಾಯುಧನು ಕಲಿ ಪಾರ್ಥನಂಭೋ
ಜಾಯತಾಂಬಕ ಸಹಿತ ಕಂಡನು ಧರ್ಮನಂದನನ

೦೦೧ ಕೇಳು ಧೃತರಾಷ್ಟ್ರಾವನಿಪ ...{Loading}...

ಕೇಳು ಧೃತರಾಷ್ಟ್ರಾವನಿಪ ಬಲು
ಗಾಳೆಗವ ಭೀಮಂಗೆ ಸೇರಿಸಿ
ಪಾಳೆಯಕೆ ತಿರುಗಿದರು ಕೃಷ್ಣಾರ್ಜುನರು ದುಗುಡದಲಿ
ಹೇಳು ಮುರಹರ ಬುದ್ಧಿ ಕದಡಿ ಛ
ಡಾಳಿಸಿತು ಪರಿಭೇೊಸಗೆಯ
ಕೇಳಲರಿಯೆನು ರಾಜವಾರ್ತೆಯನೆಂದನಾ ಪಾರ್ಥ ॥1॥

೦೦೨ ನೋಡುವೆವು ನಡೆ ...{Loading}...

ನೋಡುವೆವು ನಡೆ ಧರ್ಮಪುತ್ರನ
ಕೇಡು ಕಲಿಯುಗ ಬೀಜವೀ ಪರಿ
ಕೂಡದೀ ಹೊತ್ತಿನಲಿ ಧರ್ಮಸ್ಥಿತಿಗೆ ಲಯವಿಲ್ಲ
ಖೇಡನಾಗದಿರಿದಕೆ ಚಿಂತಿಸ
ಬೇಡೆನುತ ಫಲುಗುಣನ ಚಿತ್ತದ
ಪಾಡರಿದು ನುಡಿವುತ್ತ ತಂದನು ಪಾಳೆಯಕೆ ರಥವ ॥2॥

೦೦೩ ಬರಲು ಪಾರ್ಥನ ...{Loading}...

ಬರಲು ಪಾರ್ಥನ ಕಂಡು ಪುರಜನ
ಹರೆದುದಲ್ಲಿಯದಲ್ಲಿ ದುಗುಡದ
ಭರದ ಗುಜುಗುಜು ಗೋಷ್ಠಿಗಳ ಜನಜನದ ಮುಸುಕುಗಳ
ಮುರಿದ ನೀಹಾರದ ವಿಹಾರದ
ಸರಸಿರುಹವನದಂತೆ ಪಾಳೆಯ
ದಿರವು ಲೇಸಲ್ಲೆನುತ ಬಂದನು ರಾಜಮಂದಿರಕೆ ॥3॥

೦೦೪ ಕಳಚಿದನು ಸೀಸಕವ ...{Loading}...

ಕಳಚಿದನು ಸೀಸಕವ ಬೆಂಬ
ತ್ತಳಿಕೆಯನು ವಜ್ರಾಂಗಿ ಮೊಚ್ಚೆಯ
ಬಿಲು ಸರಳನಿಳುಹಿದನು ರಥದಲಿ ದೈತ್ಯರಿಪು ಸಹಿತ
ಇಳಿದು ರಥವನು ರಣದ ಭಾರಿಯ
ಬಳಲಿಕೆಯ ಕೈಕೊಳ್ಳದರಸನ
ನಿಳಯವನು ಹೊಕ್ಕನು ಧನಂಜಯ ಕಂಡನವನಿಪನ ॥4॥

೦೦೫ ಝೊಮ್ಪಿಸುವ ಸಿರಿಮೊಗದ ...{Loading}...

ಝೊಂಪಿಸುವ ಸಿರಿಮೊಗದ ನೋಟದ
ಸೊಂಪಡಗಿದಾಲಿಗಳ ಧೈರ್ಯದ
ಗುಂಪಳಿದ ನಿಜ ರಾಜತೇಜದ ವಿಪುಳ ವೇದನೆಯ
ಬಿಂಪಗಿವ ಬೇಸರಿನ ತುರುಗಿದ
ತಂಪಿನಗ್ಗಳಿಕೆಯ ವಿಘಾತಿಯ
ಝೊಂಪಿನಲಿ ಹುದುಗಿದ ಮಹೀಶನ ಕಂಡನಾ ಪಾರ್ಥ ॥5॥

೦೦೬ ಬಿಗಿದು ಕಟ್ಟಿದ ...{Loading}...

ಬಿಗಿದು ಕಟ್ಟಿದ ಘಾಯ ಮದ್ದಿನ
ಜಿಗಿಯ ತೈಲದ ತಳಿತ ಲೇಪದ
ಲುಗಿದ ಬಾಣವ್ಯಥೆಯ ಕರ್ಣಧ್ಯಾನಚೇತನದ
ಸೊಗಸು ಮಿಗೆ ದ್ರೌಪದಿಯ ತುದಿವೆರ
ಳುಗುರುವೆರಸಿದ ಸಿರಿಮುಡಿಯ ಬಲು
ದುಗುಡ ಭರದಲಿ ಕುಸಿದ ಭೂಪನ ಕಂಡನಾ ಪಾರ್ಥ ॥6॥

೦೦೭ ನಕುಳ ಧೃಷ್ಟದ್ಯುಮ್ನ ...{Loading}...

ನಕುಳ ಧೃಷ್ಟದ್ಯುಮ್ನ ಸಹದೇ
ವಕ ಯುಧಾಮನ್ಯುಕನು ಸುತಸೋ
ಮಕ ಶತಾನೀಕ ಪ್ರಬುದ್ಧಕ ಚೇಕಿತಾನಕರು
ಸಕಲ ಕೈಕೆಯ ಮತ್ಸ್ಯಸುತ ಸಾ
ತ್ಯಕಿ ಯುಯುತ್ಸು ಶಿಖಂಡಿ ಪ್ರತಿವಿಂ
ದ್ಯಕರು ಪಾರ್ಥನನುಪಚರಿಸಿ ಕುಳ್ಳಿರ್ದರಲ್ಲಲ್ಲಿ ॥7॥

೦೦೮ ಕರಗಿತನ್ತಃಕರಣವಾಲಿಗ ...{Loading}...

ಕರಗಿತಂತಃಕರಣವಾಲಿಗ
ಳೊರತೆಯೆನೆ ಕಣ್ಣಾಲಿಯಲಿ ಕಾ
ತರಿಸಿದವು ಜಲಬಿಂದುಗಳು ಪುರುಹೂತ ನಂದನನ
ಅರಸನಿರವಿದೆಯೆನುತ ನೊಸಲನು
ಚರಣದಲಿ ಚಾಚಿದನು ಚೇಷ್ಟಾ
ಪರಿಗತಿಯನಾರೈವುತಭಿಮುಖನಾಗಿ ಕುಳ್ಳಿರ್ದ ॥8॥

೦೦೯ ನೊನ್ದೆಲಾ ನರನಾಥ ...{Loading}...

ನೊಂದೆಲಾ ನರನಾಥ ವಿಧಿಯೇ
ನೆಂದು ಮುನಿದುದೊ ನಿನಗೆನುತ್ತ ಮು
ಕುಂದನತಿ ಕಾರುಣ್ಯ ದೃಷ್ಟಿಯಲವನಿಪನ ನೋಡಿ
ಮಂದಮಂದದಿ ಪಾಣಿ ಪಲ್ಲವ
ದಿಂದ ತಡವಿದನೇರನಾಗಳೆ
ಕಂದೆರೆದು ನೋಡಿದನು ಭೂಪತಿ ಕೃಷ್ಣ ಫಲುಗುಣರ ॥9॥

೦೧೦ ಹರಿ ಕರಾಬ್ಜಸ್ಪರ್ಶ ...{Loading}...

ಹರಿ ಕರಾಬ್ಜಸ್ಪರ್ಶ ಮಾತ್ರ
ಸ್ಫುರಣದಿಂದಾಪ್ಯಾಯಿತಾಂತಃ
ಕರಣನಾದನು ನನೆದನುದ್ಗತ ಬಾಷ್ಪವಾರಿಯಲಿ
ಮುರಿಯದೇರಿನ ಮೈವಳಿಗೆ ಲಘು
ತರದ ಲುಳಿಯಲಿ ಮೈಯ ಬಲಿದಾ
ದರಿಸಿ ಕುಳ್ಳಿರ್ದನು ಮಹೀಪತಿ ಮಾನಿನಿಯ ಮಲಗಿ ॥10॥

೦೧೧ ಹದುಳವೇ ಪಾರ್ಥಙ್ಗೆ ...{Loading}...

ಹದುಳವೇ ಪಾರ್ಥಂಗೆ ಹೇರಾ
ಳದಲಿ ಕಾದಿದನಾ ಸುಶರ್ಮನ
ಕದನ ಬೆಟ್ಟಿತು ಶಪಥವಲ್ಲಾ ತಮ್ಮೊಳನಿಬರಿಗೆ
ಕೆದರಿದನು ಕೊಲ್ಲಣಿಗೆಯಲಿ ಬಂ
ದೊದಗಿ ನೀವವದಿರಲಿ ಸುಯ್ದಾ
ನದಲಿ ಬಂದುದೆ ಲಕ್ಷವೆಂದನು ನೃಪತಿ ಕೃಷ್ಣಂಗೆ ॥11॥

೦೧೨ ಆಯಿತಿದು ನೀ ...{Loading}...

ಆಯಿತಿದು ನೀ ಬಂದ ಪರಿ ರಿಪು
ರಾಯ ಥಟ್ಟಿನೊಳೊಕ್ಕಲಿಕ್ಕಿದ
ದಾಯವೊಳ್ಳಿತು ದಿಟ್ಟನಾವನು ನಿನ್ನ ಹೋಲಿಸಲು
ಕಾಯಿದರಿ ಕಳುಹಿದನೊ ಮೇಣಡ
ಹಾಯಿದನೊ ಕರ್ಣಂಗೆ ಮಾಡಿದು
ಪಾಯವಾವುದು ಪಾರ್ಥ ಹೇಳೆಂದವನಿಪತಿ ನುಡಿದ ॥12॥

೦೧೩ ಬೇರೆ ಸಮಸಪ್ತಕರೊಳೆಕ್ಕಟಿ ...{Loading}...

ಬೇರೆ ಸಮಸಪ್ತಕರೊಳೆಕ್ಕಟಿ
ತೋರಿಸಿದೆ ನೀ ತೊಂಡಿನೋಲೆಯ
ಕಾರತನವನು ಸೂತಸುತನಿಲ್ಲವರ ಥಟ್ಟಿನಲಿ
ಹಾರಲೂದಿ ಸುಶರ್ಮನವದಿರ
ಸೂರಿ ತಿರುಗಿದ ಬಳಿಕ ಕೈ ಮೈ
ತೋರಿದನೆ ಕಲಿಕರ್ಣ ನಿನ್ನೊಡನೆಂದನಾ ಭೂಪ ॥13॥

೦೧೪ ಎಲೆ ಧನಞ್ಜಯ ...{Loading}...

ಎಲೆ ಧನಂಜಯ ಸೂತತನಯನ
ಗೆಲಿದು ಬಂದೆಯೊ ದಿವಿಜ ನಗರಿಗೆ
ಕಳುಹಿ ಬಂದೆಯೊ ಕಂಡು ಕೆಣಕದೆ ಬಂದೆಯೋ ಮೇಣು
ಉಳುಹಿ ಬಿಡುವನೆ ಸಮರ ಮುಖದಲಿ
ಮಲೆತನಾದರೆ ಕರ್ಣನೇನ
ಗ್ಗಳಿಕೆವಡೆದನೊ ಶಿವ ಶಿವಾ ಎಂದರಸ ಬಿಸುಸುಯ್ದ ॥14॥

೦೧೫ ಜೀಯ ಖಾತಿಯಿದೇಕೆ ...{Loading}...

ಜೀಯ ಖಾತಿಯಿದೇಕೆ ಕರ್ಣನ
ಕಾಯಿದುಳುಹಿದೆನೊಂದು ಬಾರಿ ವಿ
ಘಾಯದಲಿ ಘಟ್ಟಿಸುವೆನೀಗಳೆ ಹಾಯ್ಕು ವೀಳೆಯವ
ರಾಯದಳಗಿಳವೆನ್ನ ಕೂಡೆ ನ
ವಾಯಿಯೇ ಕಲಿ ಕರ್ಣನಾಯುಷ
ಹೋಯಿತಿದೆಯೆಂದೊರಸಿದನು ವಾಮಾಂಘ್ರಿಯಲಿ ನೆಲನ ॥15॥

೦೧೬ ಈಸು ಪರಿಯಲಿ ...{Loading}...

ಈಸು ಪರಿಯಲಿ ನಿಮ್ಮ ಚಿತ್ತದೊ
ಳಾಸರಾಯಿತೆ ನಮ್ಮ ದುಷ್ಕೃತ
ವಾಸನಾ ಫಲವೈಸಲೇ ತಾನಿದ್ದು ಫಲವೇನು
ಆ ಸುಯೋಧನ ವಿಗಡ ಭಟ ವಾ
ರಾಸಿಯನು ಮುಕ್ಕುಳಿಸುವೆನು ಧರ
ಣೀಶ ನಿಮ್ಮಡಿಯಾಣೆ ನೇಮವ ಕೊಂಡೆ ನಾನೆಂದ ॥16॥

೦೧೭ ನಾಲಗೆಯ ನೆಣಗೊಬ್ಬು ...{Loading}...

ನಾಲಗೆಯ ನೆಣಗೊಬ್ಬು ಮಿಕ್ಕು ಛ
ಢಾಳಿಸಿದರೇನಹುದು ಕರ್ಣನ
ಕೋಲಗರಿ ಸೋಂಕಿದರೆ ಸೀಯದೆ ಸಿತಗತನ ನಿನಗೆ
ವೀಳೆಯವ ತಾ ಕರ್ಣನಾಯುಷ
ಕೋಳುವೋಯಿತ್ತೆಂಬ ಗರ್ವನ
ಗಾಳುತನವನು ನಂಬಲರಿವೆನೆ ಪಾರ್ಥ ಹೇಳೆಂದ ॥17॥

೦೧೮ ನಿನಗೆ ಮಣಿವವನಲ್ಲ ...{Loading}...

ನಿನಗೆ ಮಣಿವವನಲ್ಲ ರಾಧಾ
ತನಯನವ ಹೆಚ್ಚಾಳು ಕಡ್ಡಿಯ
ಮೊನೆಗೆ ಕೊಂಬನೆ ನಿನ್ನನೀ ಹೆಮ್ಮಕ್ಕಳಿದಿರಿನಲಿ
ಕನಲಿ ಕಳವಳಿಸಿದರೆ ನೀನಾ
ತನ ವಿಭಾಡಿಸಲಾಪ ಸತ್ವದ
ಮನವ ಬಲ್ಲೆನು ಪಾರ್ಥ ನುಡಿಯದಿರೆಂದನಾ ಭೂಪ ॥18॥

೦೧೯ ಬಲನ ಜಮ್ಭನ ...{Loading}...

ಬಲನ ಜಂಭನ ಕೈಟಭನ ದಶ
ಗಳನ ನಮುಚಿಯ ಕಾಲನೇಮಿಯ
ಬಲ ನಿಶುಂಭ ಹಿರಣ್ಯಕಾದಿಯ ಖಳರ ಸಂದೋಹ
ಅಳವಿಗೊಡುವರೆ ಪಾಡಹುದು ನೀ
ನಿಲುಕಲಳವೇ ಕರ್ಣಜಯವತಿ
ಸುಲಭವೇ ನಿನ್ನಂದದವರಿಗೆ ಪಾರ್ಥ ಹೇಳೆಂದ ॥19॥

೦೨೦ ಜಾಣತನದಲಿ ಕಾದಿ ...{Loading}...

ಜಾಣತನದಲಿ ಕಾದಿ ಹಿಂಗುವ
ದ್ರೋಣನಲ್ಲಳವಿಯಲಿ ಕಳವಿನ
ಕೇಣದಲಿ ಕೊಂಡಾಡುವರೆ ಗಾಂಗೇಯನಿವನಲ್ಲ
ಸಾಣೆಗಂಡಲಗಿವನು ಸಮರಕೆ
ಹೂಣಿಗನು ರಿಪುಬಲದ ಹಾಣಾ
ಹಾಣಿಕಾರನು ಕರ್ಣನಳುಕುವನಲ್ಲ ನಿನಗೆಂದ ॥20॥

೦೨೧ ಜಾಳ ಜರೆದು ...{Loading}...

ಜಾಳ ಜರೆದು ಜಡಾತ್ಮರಿಗೆ ಜಂ
ಘಾಳತನವನು ಮೆರೆದು ಖೋಡಿಯ
ಖೂಳರನು ಖೊಪ್ಪರಿಸಿ ಚೂಣಿಯ ಚರರ ಚಪ್ಪರಿಸಿ
ಆಳುತನದಲಿ ಬೆರೆವ ನಿನಗವ
ಸೋಲಲರಿಯನು ನಿನ್ನ ಗಂಟಲ
ಗಾಳ ನಿನಗಳುಕುವನೆ ಕರ್ಣನು ಪಾರ್ಥ ಹೇಳೆಂದ ॥21॥

೦೨೨ ಏನ ಹೇಳುವೆನೆನ್ನ ...{Loading}...

ಏನ ಹೇಳುವೆನೆನ್ನ ದಳದಲಿ
ತಾನು ಭೀಮನ ಥಟ್ಟಿನಲಿ ಬಳಿ
ಕೀ ನಕುಲ ಸಹದೇವ ಸಾತ್ಯಕಿ ದ್ರುಪದರೊಡ್ಡಿನಲಿ
ಮಾನನಿಧಿ ರಾಧೇಯನತ್ತಲು
ತಾನೆ ತನುಮಯವಾಯ್ತು ಪಾಂಡವ
ಸೇನೆ ಬಡ ಸಾಹಸಿಕರೆಣೆಯೇ ಸೂತತನಯಂಗೆ ॥22॥

೦೨೩ ಎಲ್ಲಿ ಕರ್ಣನು ...{Loading}...

ಎಲ್ಲಿ ಕರ್ಣನು ತಿರುಗಿ ನೋಡಿದ
ಡಲ್ಲಿ ತಾನೆಡವಂಕ ಬಲ ಮುಖ
ದಲ್ಲಿ ಸೂತಜನೆಂತು ದೆಸೆಗಳ ನೋಡೆ ಕರ್ಣಮಯ
ಎಲ್ಲಿ ನೋಡಿದಡಲ್ಲಿ ಕರ್ಣನ
ಬಿಲ್ಲ ಬೊಬ್ಬೆ ರಥಾಶ್ವರವವೆದೆ
ದಲ್ಲಣದ ದೆಖ್ಖಾಳ ರಚನಾ ರಸಿಕನವನೆಂದ ॥23॥

೦೨೪ ಮುರಿದು ಹರಿಹಞ್ಚಾದ ...{Loading}...

ಮುರಿದು ಹರಿಹಂಚಾದ ನಿಜ ಮೋ
ಹರವ ನೆರೆ ಸಂತೈಸಿ ಜೋಡಿಸಿ
ಜರೆದು ಗರಿಗಟ್ಟಿದ ವಿರೋಧಿ ವ್ರಜದ ಥಟ್ಟಣೆಯ
ಮುರಿದು ಕುರಿದರಿ ಮಾಡಿ ದೊರೆಗಳ
ನರಸಿ ಕಾದಿ ವಿಭಾಡಿಸುವ ರಣ
ದುರುಬೆಕಾರನನೆಂತು ಸೈರಿಸಿ ಗೆಲುವೆ ನೀನೆಂದ ॥24॥

೦೨೫ ಕಾದಿ ನೊನ್ದೆನು ...{Loading}...

ಕಾದಿ ನೊಂದೆನು ತಾನು ಬಳಿಕ ವೃ
ಕೋದರನೆಯಡಹಾಯ್ದನಾತನ
ಕಾದಿ ನಿಲಿಸಿ ಮದೀಯ ರಥವನು ಮತ್ತೆ ಕೆಣಕಿದನು
ಮೂದಲಿಸಿ ಸಹದೇವ ನಕುಲರು
ಕಾದಲಿವದಿರ ಮುರಿದನಗ್ಗದ
ಕೈದುಕಾರರ ದೇವ ಕರ್ಣನ ಗೆಲುವರಾರೆಂದ ॥25॥

೦೨೬ ಮಲೆತು ಧಾಳಾಧೂಳಿಯಲಿ ...{Loading}...

ಮಲೆತು ಧಾಳಾಧೂಳಿಯಲಿ ಬಲ
ಸುಳಿ ಮಸಗಿಯೆನ್ನೊಬ್ಬನನು ಮೈ
ಬಳಸಿ ಕಾದಿತು ವೀರ ಕರ್ಣನ ಕೂಡೆ ತಲೆಯೊತ್ತಿ
ಒಲವರವು ನಿನಗುಳ್ಳರಾಗಳೆ
ನಿಲಿಸಿದಾ ನೀ ಬಂದು ಬಯಲ
ಗ್ಗಳಿಕೆಯನೆ ಬಿಡೆ ಕೆದರುತಿಹೆ ಮಾಣೆಂದು ನೃಪ ನುಡಿದ ॥26॥

೦೨೭ ಉಕ್ಕಿದುದು ತನಿ ...{Loading}...

ಉಕ್ಕಿದುದು ತನಿ ವೀರರಸ ಕುದಿ
ದುಕ್ಕಿ ಹರಿದುದು ರೌದ್ರರಸವವ
ರಕ್ಕಜವ ನಭಕೊತ್ತಿ ಪರಿದುದು ಶಾಂತಿರಸಲಹರಿ
ಮಿಕ್ಕು ಬಹಳ ಕ್ರೋಧವೊಡಲೊಳ
ಗುಕ್ಕಿತಮಳೋತ್ಸಾಹ ಚಾಪಳ
ಸುಕ್ಕಿತೊಂದೇ ನಿಮಿಷ ಮೋನದೊಳಿರ್ದನಾ ಪಾರ್ಥ ॥27॥

೦೨೮ ಹೇಳಲಞ್ಜುವೆನಾ ಸುಶರ್ಮಕ ...{Loading}...

ಹೇಳಲಂಜುವೆನಾ ಸುಶರ್ಮಕ
ನಾಳು ತಾಯಿಗೆ ಮಕ್ಕಳಾಗದೆ
ಬೀಳಹೊಯ್ದು ನಿಹಾರದಲಿ ತಿರುಗಿದೆನು ಹರಿಸಹಿತ
ಕೋಲಗುರುವಿನ ಮಗನಲೇ ಹರಿ
ಧಾಳಿ ಹರಿದಡಗಟ್ಟಿ ತಡೆದನು
ಹೇಳಿ ಫಲವಿನ್ನೇನೆನುತ ಬಿಸುಸುಯ್ದನಾ ಪಾರ್ಥ ॥28॥

೦೨೯ ಇಟ್ಟಣಿಸಿಕೊಣ್ಡೆನ್ನೊಡನೆ ...{Loading}...

ಇಟ್ಟಣಿಸಿಕೊಂಡೆನ್ನೊಡನೆ ಸರಿ
ಗಟ್ಟಿ ಕಾದಿದ ರವಿಸುತನ ಹುಡಿ
ಗುಟ್ಟಿದೆನು ರಥವಾಜಿ ಸೂತ ಶರಾಸನಾದಿಗಳ
ಮುಟ್ಟೆ ಬಂದನು ಖಡುಗದಲಿ ಮೈ
ಮುಟ್ಟಿ ಹೆಣಗಿದೆನಾಕ್ಷಣಕೆ ಸಾ
ಲಿಟ್ಟು ಸರಿದುದು ಸಕಲ ಕೌರವ ಸೇನೆ ಸರಿಸದಲಿ ॥29॥

೦೩೦ ತೊಡಕಿದನು ಗಡ ...{Loading}...

ತೊಡಕಿದನು ಗಡ ಗರುಡ ಹಾವಿನ
ತಡಿಕೆವಲೆಯಲಿ ನಿನ್ನ ಗಮನವ
ತಡೆದರೈ ತಪ್ಪೇನು ಕೌರವ ದಳದ ನಾಯಕರು
ಕಡುಹಿನಲಿ ತಡವಾದುದುಳಿದಂ
ತೆಡೆಯಲುಳಿವರ್ಜುನನೆ ನಮ್ಮವ
ಗಡವ ಕೇಳಿದು ನಿಲ್ಲನೆಂದನು ನಗುತ ಯಮಸೂನು ॥30॥

೦೩೧ ಏನನೆಮ್ಬೆನು ನಮ್ಮ ...{Loading}...

ಏನನೆಂಬೆನು ನಮ್ಮ ಪುಣ್ಯದ
ಹಾನಿ ತಲೆದೋರಿದರೆ ಭೀಮನ
ಸೂನುವಿರಲಭಿಮನ್ಯುವಿರಲೆವಗೀ ವಿಪತ್ತಹುದೆ
ಆ ನದೀಜ ದ್ರೋಣರಲಿ ತಾ
ಹಾನಿಯನು ಮಿಗೆ ಕಂಡೆನೇ ನೆರೆ
ಹೀನನನು ಕಂಡಾದಡೆಯು ಬದುಕುವುದು ಲೇಸೆಂದ ॥31॥

೦೩೨ ಅರಳಿಚದೆ ಮಧುಮಾಸ ...{Loading}...

ಅರಳಿಚದೆ ಮಧುಮಾಸ ಮಾಣಲಿ
ವರುಷ ಋತುವೇ ಸಾಕು ಜಾತಿಗೆ
ಜರಡರೆಮಗಿನ್ನೇನು ಪೂರ್ವಪ್ರಕೃತಿ ವನವಾಸ
ಸಿರಿಗೆ ಕಕ್ಕುಲಿತೆಯೆ ವಿಪಕ್ಷವ
ಬೆರಸಿ ಬದುಕುವೆವೈಸಲೇ ವರ
ಗುರುವಲಾ ಧೃತರಾಷ್ಟ್ರನೂಣೆಯವೇನು ಹೇಳೆಂದ ॥32॥

೦೩೩ ಬರಿದೆ ಬಯಸಿದಡಹುದೆ ...{Loading}...

ಬರಿದೆ ಬಯಸಿದಡಹುದೆ ರಾಜ್ಯದ
ಹೊರಿಗೆಯನು ನಿಶ್ಯಂಕೆಯಲಿ ಹೊ
ಕ್ಕಿರಿದು ಬಹ ಸತ್ವಾತಿಶಯ ಬೇಹುದು ರಣಾಗ್ರದಲಿ
ಇರಿದು ಮೇಣ್ ರಿಪುರಾಯರನು ಕು
ಕ್ಕುರಿಸುವರೆ ರಾಧೇಯನಂತಿರ
ಲುರುವನೊಬ್ಬನೆ ಬೇಹುದಲ್ಲದಡಿಲ್ಲ ಜಯವೆಂದ ॥33॥

೦೩೪ ಎವಗೆ ವಿಕ್ರಮವೆಮ್ಬಡೀ ...{Loading}...

ಎವಗೆ ವಿಕ್ರಮವೆಂಬಡೀ ರೌ
ರವವ ಕಂಡೆನು ಕರ್ಣನಂತಿರ
ಲೆವಗೆ ಧೀವಸಿಯಾಗಿ ಕಾದುವರೆಂಬರವರಿಲ್ಲ
ಬವರ ಗೆಲುವರೆ ಹರಿಗೆ ಕೊಡು ಗಾಂ
ಡಿವವ ಸಾರಥಿಯಾಗು ನೀನೆಂ
ದವಗಡಿಸಿದನು ವೀರ ನಾರಾಯಣನ ಮೈದುನನ ॥34॥

+೧೬ ...{Loading}...