೦೦೦ ಸೂ ರಾಯ ...{Loading}...
ಸೂ. ರಾಯ ರಿಪುಬಲ ವಿಪಿನ ದಹನನ
ಜೇಯನೇಕಾಂಗದಲಿ ಕೌರವ
ರಾಯ ಬಲಬಹಳಾಂಬುಧಿಯ ಕಲಕಿದನು ಕಲಿ ಭೀಮ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂ : ಶತ್ರುರಾಜರೆಂಬ ಕಾಡಿಗೆ ಕಾಳ್ಗಿಚ್ಚಿನಂತಿರುವ, ಅಜೇಯನಾದ ಕಲಿ ಭೀಮನು, ಏಕಾಂಗಿಯಾಗಿಯೇ ಕೌರವನ ಸೇನಾಸಮುದ್ರವನ್ನು ಕಲಕಿದನು.
ಮೂಲ ...{Loading}...
ಸೂ. ರಾಯ ರಿಪುಬಲ ವಿಪಿನ ದಹನನ
ಜೇಯನೇಕಾಂಗದಲಿ ಕೌರವ
ರಾಯ ಬಲಬಹಳಾಂಬುಧಿಯ ಕಲಕಿದನು ಕಲಿ ಭೀಮ
೦೦೧ ಕೇಳು ಧೃತರಾಷ್ಟ್ರಾವನಿಪ ...{Loading}...
ಕೇಳು ಧೃತರಾಷ್ಟ್ರಾವನಿಪ ದು
ವ್ವಾಳಿಯಲಿ ಕೃಷ್ಣಾರ್ಜುನರು ನಿಜ
ಪಾಳೆಯಕೆ ತಿರುಗಿದರು ಬಳಿಕಿತ್ತಲು ವೃಕೋದರನ
ಆಳುತನದ ಸಘಾಡಿಕೆಯ ನಾ
ಹೇಳಲರಿಯೆನು ಸಕಲ ಕುರುಬಲ
ಜಾಲವೊಂದೆಸೆ ಭೀಮನೊಂದೆಸೆ ಕೇಳು ಕೌತುಕವ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಧೃತರಾಷ್ಟ್ರನೇ ಕೇಳು, ಕೃಷ್ಣ ಅರ್ಜುನರಿಬ್ಬರೂ ಬೇಗ ಬೇಗ ತಮ್ಮ ಪಾಳೆಯಕ್ಕೆ ಹಿಂತಿರುಗಿದರು. ಈ ಕಡೆ ಭೀಮನ ಪರಾಕ್ರಮದ ಹೆಚ್ಚುವಿಕೆಯನ್ನು ನಾನು ಹೇಗೆ ಹೇಳುವುದೋ ತಿಳಿಯುತ್ತಿಲ್ಲ. ಕೌರವರ ಸೈನ್ಯವೆಲ್ಲಾ ಒಂದು ಕಡೆ, ಭೀಮನೊಬ್ಬನೇ ಮತ್ತೊಂದು ಕಡೆ ನಿಂತು ಯುದ್ಧ ಮಾಡಿದ ಆಶ್ಚರ್ಯವನ್ನು ಕೇಳು.” ಎಂದು ಸಂಜಯನು ಹೇಳಿದನು.
ಪದಾರ್ಥ (ಕ.ಗ.ಪ)
ದುವ್ವಾಳಿಸು-ಬೇಗ ಬೇಗ ಮುಂದುವರಿ, ಸಘಾಡಿಕೆ-ಪರಾಕ್ರಮ, ಹೆಚ್ಚು
ಮೂಲ ...{Loading}...
ಕೇಳು ಧೃತರಾಷ್ಟ್ರಾವನಿಪ ದು
ವ್ವಾಳಿಯಲಿ ಕೃಷ್ಣಾರ್ಜುನರು ನಿಜ
ಪಾಳೆಯಕೆ ತಿರುಗಿದರು ಬಳಿಕಿತ್ತಲು ವೃಕೋದರನ
ಆಳುತನದ ಸಘಾಡಿಕೆಯ ನಾ
ಹೇಳಲರಿಯೆನು ಸಕಲ ಕುರುಬಲ
ಜಾಲವೊಂದೆಸೆ ಭೀಮನೊಂದೆಸೆ ಕೇಳು ಕೌತುಕವ ॥1॥
೦೦೨ ಸೆರಗ ಬೀಸಿತು ...{Loading}...
ಸೆರಗ ಬೀಸಿತು ನಿನ್ನವರು ಬೊ
ಬ್ಬಿರಿದರರ್ಜುನನಿತ್ತ ಬೆನ್ನಿನ
ತೆರಿಗೆಯುತ್ಸವ ಧನವ ತೆಗೆ ಭಂಡಾರದೊಳಗೆನುತ
ತುರುಗಿತಲ್ಲಿಯದಲ್ಲಿ ಲಗ್ಗೆಯ
ಬಿರುದನಿಯ ನಿಸ್ಸಾಳ ಕಹಳೆಯ
ಜರಹು ಜೋಡಿಸಿ ಜರುಹಿತಡಕಿಲು ಜಗದ ಜೋಡಿಗಳ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭಯವಾಗುವಂತೆ ನಿನ್ನ ಕಡೆಯವರು ಬೊಬ್ಬೆಹಾಕಿದರು. ಅರ್ಜುನನು ಬೆನ್ನು ತೋರಿಸಿ ಓಡಿದ ಈ ಸಮಯದಲ್ಲಿ ಅವನ ಭಂಡಾರವನ್ನು ಲೂಟಿ ಮಾಡಿ ಎನ್ನುತ್ತ ಸೈನ್ಯ ಮುತ್ತಿಗೆ ಹಾಕಿತು. ಎಲ್ಲೆಂದರಲ್ಲಿ ಲಗ್ಗೆ ಹಾಕಿ, ನಿಸ್ಸಾಳ ಕಹಳೆಗಳಿಂದ ಬಿರುಸಾಗಿ ಶಬ್ದ ಮಾಡಿದಾಗ ಒಂದರ ಮೇಲೆ ಮತ್ತೊಂದನ್ನು ಇಟ್ಟಂತಿರುವ ಈ ಬ್ರಹ್ಮಾಂಡದ ಜೋಡಿ ನಾಶವಾಗುವಂತಾಯಿತು.
ಪದಾರ್ಥ (ಕ.ಗ.ಪ)
ತುರುಗು-ಆವರಿಸು, ಜರುಹು-ನಾಶಮಾಡು, ಅಡಕಿಲು-ರಾಶಿ, ಒಂದರ ಮೇಲೊಂದು ಇಡುವುದು, (ಅಡಕು+ಇಲ್)
ಮೂಲ ...{Loading}...
ಸೆರಗ ಬೀಸಿತು ನಿನ್ನವರು ಬೊ
ಬ್ಬಿರಿದರರ್ಜುನನಿತ್ತ ಬೆನ್ನಿನ
ತೆರಿಗೆಯುತ್ಸವ ಧನವ ತೆಗೆ ಭಂಡಾರದೊಳಗೆನುತ
ತುರುಗಿತಲ್ಲಿಯದಲ್ಲಿ ಲಗ್ಗೆಯ
ಬಿರುದನಿಯ ನಿಸ್ಸಾಳ ಕಹಳೆಯ
ಜರಹು ಜೋಡಿಸಿ ಜರುಹಿತಡಕಿಲು ಜಗದ ಜೋಡಿಗಳ ॥2॥
೦೦೩ ಆರು ಸಾವಿರ ...{Loading}...
ಆರು ಸಾವಿರ ಕುದುರೆ ಕರಿಘಟೆ
ಮೂರು ಸಾವಿರ ಸಾವಿರದ ನಾ
ನೂರು ರಥ ಪರಿಗಣನೆಗೊಂದೇ ಲಕ್ಕ ಪಾಯದಳ
ನೂರು ರಥದಲಿ ಸರಳ ಹೊದೆ ಮೂ
ನೂರು ಪರಿಚಾರರು ಸಹಿತ ಮೈ
ದೋರಿ ನಿಂದನು ಭೀಮನೊಬ್ಬನೆ ತರುಬಿ ಕುರುಬಲವ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಲೆಕ್ಕ ಹಾಕಿದರೆ ಆರುಸಾವಿರ ಕುದುರೆಗಳು, ಮೂರು ಸಾವಿರ ಆನೆಗಳು, ಒಂದು ಸಾವಿರದ ನಾನ್ನೂರು ರಥಗಳು, ಒಂದು ಲಕ್ಷ ಮಂದಿ ಕಾಲಾಳುಗಳು, ಒಂದು ನೂರು ರಥಗಳ ಮೇಲೆ ಬಾಣಗಳ ರಾಶಿ, ಮುನ್ನೂರು ಪರಿಚಾರಕರು - ಇವೆಲ್ಲವಿದ್ದ ಕೌರವನ ಸೈನ್ಯವನ್ನು ಭೀಮನೊಬ್ಬನೇ ಎದುರಿಸುತ್ತಿದ್ದನು.
ಪದಾರ್ಥ (ಕ.ಗ.ಪ)
ಲಕ್ಕ-ಲಕ್ಷ, ತರುಬು-ಅಡ್ಡಗಟ್ಟು
ಮೂಲ ...{Loading}...
ಆರು ಸಾವಿರ ಕುದುರೆ ಕರಿಘಟೆ
ಮೂರು ಸಾವಿರ ಸಾವಿರದ ನಾ
ನೂರು ರಥ ಪರಿಗಣನೆಗೊಂದೇ ಲಕ್ಕ ಪಾಯದಳ
ನೂರು ರಥದಲಿ ಸರಳ ಹೊದೆ ಮೂ
ನೂರು ಪರಿಚಾರರು ಸಹಿತ ಮೈ
ದೋರಿ ನಿಂದನು ಭೀಮನೊಬ್ಬನೆ ತರುಬಿ ಕುರುಬಲವ ॥3॥
೦೦೪ ಅರಸ ಕೇಳೈ ...{Loading}...
ಅರಸ ಕೇಳೈ ನಿಮ್ಮ ದಳದೊಳು
ಗುರುತನುಜ ಕೃತವರ್ಮ ಕೃಪ ನಿ
ನ್ನರಸುಮಗ ರಾಧೇಯ ಶಕುನಿ ಸುಶರ್ಮ ವೃಷಸೇನ
ಮರು ಯವನ ಹಮ್ಮೀರ ಕೇರಳ
ತುರುಕ ಬಾಹ್ಲಿಕ ಮಗಧ ನೇಪಾ
ಳರು ಕುರೂಷಾದಿಗಳು ಸಂಖ್ಯಾತೀತ ಬಲವೆಂದ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೊರೆಯೇ ನಿಮ್ಮ ಸೈನ್ಯದಲ್ಲಿ ದ್ರೋಣಾಚಾರ್ಯರ ಮಗ ಅಶ್ವತ್ಥಾಮ, ಕೃತವರ್ಮ, ಕೃಪಾಚಾರ್ಯ, ನಿನ್ನ ಪ್ರೀತಿಯ ಪುತ್ರ ದುರ್ಯೋಧನ, ಕರ್ಣ, ಶಕುನಿ, ಸುಶರ್ಮ, ವೃಷಸೇನ, ಮೊದಲಾದವರೂ, ಮರುಯವನ, ಹಮ್ಮೀರ, ಕೇರಳ, ತುರುಕ, ಬಾಹ್ಲಿಕ, ಮಗಧ, ನೇಪಾಳ, ಕುರೂಷ ಮೊದಲಾದ ದೇಶದ ದೊರೆಗಳೂ ಅಪಾರ ಸಂಖ್ಯೆಯಲ್ಲಿದ್ದರು.
ಪದಾರ್ಥ (ಕ.ಗ.ಪ)
ಸುಶರ್ಮ-ತ್ರಿಗರ್ತ ದೇಶಾಧಿಪತಿ (ಈಗಿನ ಪಾಕಿಸ್ತಾನದ ಲಾಹೋರ್ನಲ್ಲಿರುವ ಜಲಂಧರ್)
ಟಿಪ್ಪನೀ (ಕ.ಗ.ಪ)
ವೃಷಸೇನ-ಕರ್ಣನ ಮಗ (ಪುರಾಣನಾಮ ಚೂಡಾಮಣಿ)
ಮೂಲ ...{Loading}...
ಅರಸ ಕೇಳೈ ನಿಮ್ಮ ದಳದೊಳು
ಗುರುತನುಜ ಕೃತವರ್ಮ ಕೃಪ ನಿ
ನ್ನರಸುಮಗ ರಾಧೇಯ ಶಕುನಿ ಸುಶರ್ಮ ವೃಷಸೇನ
ಮರು ಯವನ ಹಮ್ಮೀರ ಕೇರಳ
ತುರುಕ ಬಾಹ್ಲಿಕ ಮಗಧ ನೇಪಾ
ಳರು ಕುರೂಷಾದಿಗಳು ಸಂಖ್ಯಾತೀತ ಬಲವೆಂದ ॥4॥
೦೦೫ ಮಾಳವಾನ್ಧ್ರ ಪುಳಿನ್ದ ...{Loading}...
ಮಾಳವಾಂಧ್ರ ಪುಳಿಂದ ಬರ್ಬರ
ಗೌಳ ವಂಗ ದ್ರವಿಡ ಸಿಂಹಳ
ಲಾಳ ಗುರ್ಜರ ಚೀನ ಭೋಟ ಕರಾಳ ಖರ್ಪರರು
ಚೋಳ ಸಿಂಧು ಕಳಿಂಗ ಸಗರ ವ
ರಾಳ ಪಾರ್ಯಾತ್ರಪ್ರಮುಖ ಭೂ
ಪಾಲರಿವರೊಡ್ಡಿನಲಿ ಸಂಖ್ಯಾರಹಿತ ದಳವೆಂದ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಮಾಳವ, ಆಂಧ್ರ, ಪುಳಿಂದ, ಬರ್ಬರ, ಗೌಳ, ವಂಗ, ದ್ರವಿಡ, ಸಿಂಹಳ, ಲಾಳ, ಗುರ್ಜರ, ಚೀನ, ಭೋಟ, ಕರಾಳ, ಖರ್ಪರ, ಚೋಳ, ಸಿಂಧು, ಕಳಿಂಗ, ಸಗರ, ವರಾಳ, ಪಾರಿಯಾತ್ರ ಮೊದಲಾದ ದೇಶಗಳ ಎಣಿಸಲು ಸಾಧ್ಯವಿಲ್ಲದಷ್ಟು ಪ್ರಮುಖ ದೊರೆಗಳು ನಿಮ್ಮವರ ಸೈನ್ಯದಲ್ಲಿದ್ದರು.” ಎಂದು ಸಂಜಯನು ಹೇಳಿದನು
ಮೂಲ ...{Loading}...
ಮಾಳವಾಂಧ್ರ ಪುಳಿಂದ ಬರ್ಬರ
ಗೌಳ ವಂಗ ದ್ರವಿಡ ಸಿಂಹಳ
ಲಾಳ ಗುರ್ಜರ ಚೀನ ಭೋಟ ಕರಾಳ ಖರ್ಪರರು
ಚೋಳ ಸಿಂಧು ಕಳಿಂಗ ಸಗರ ವ
ರಾಳ ಪಾರ್ಯಾತ್ರಪ್ರಮುಖ ಭೂ
ಪಾಲರಿವರೊಡ್ಡಿನಲಿ ಸಂಖ್ಯಾರಹಿತ ದಳವೆಂದ ॥5॥
೦೦೬ ಇದ್ದುದಾ ಸಮಸಪ್ತಕರು ...{Loading}...
ಇದ್ದುದಾ ಸಮಸಪ್ತಕರು ಜಗ
ವದ್ದ ಜಲಧಿಯ ತೆರೆಯವೊಲು ಮುಳಿ
ದೆದ್ದ ಹರಿಬಲದಂತೆ ದುಶ್ಯಾಸನನ ಪಾಯದಳ
ದೊದ್ದೆಯಲ್ಲದೆ ದೊರೆಗಳೇ ಜರೆ
ದೆದ್ದುದೆರಡಕ್ಷೋಣಿಯನಿಬರಿ
ಗಿದ್ದನೊಬ್ಬನೆ ಭೀಮನವನೀಪಾಲ ಕೇಳ್ ಎಂದ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ದೊರೆಯೇ ಕೇಳು ಸಮಸಪ್ತಕರು ಜಗತ್ತನ್ನೇ ಮುಳುಗಿಸಬಲ್ಲ ಸಮುದ್ರದ ಅಲೆಯಂತೆ ಇದ್ದರು. ಕೋಪದಿಂದ ಮೇಲಕ್ಕೆ ಎದ್ದ ಸಿಂಹದ ಗುಂಪಿನಂತೆ ದುಶ್ಶಾಸನನ ಕಾಲಾಳುಗಳ ಸೈನ್ಯ ಕಾಣಿಸುತ್ತಿತ್ತು. ಸಾಮಾನ್ಯ ಸೈನಿಕರಲ್ಲದೆ, ಜೋರಾಗಿ ಆರ್ಭಟಿಸುತ್ತಿದ್ದ ಎರಡು ಅಕ್ಷೋಹಿಣಿ ಸಂಖ್ಯೆಯ ದೊರೆಗಳೂ ನಿಮ್ಮ ಕಡೆ ಇದ್ದರು. ಅವರೆಲ್ಲರ ಎದುರಿಗೆ ಇದ್ದವನು ಭೀಮನೊಬ್ಬನೆ” ಎಂದು ಸಂಜಯನು ವಿವರಿಸಿದನು.
ಪದಾರ್ಥ (ಕ.ಗ.ಪ)
ಹರಿ-ಸಿಂಹ, ದೊದ್ದೆ-ಸಾಮಾನ್ಯ,
ಟಿಪ್ಪನೀ (ಕ.ಗ.ಪ)
ಸಂಶಪ್ತಕರು : ಯುದ್ಧವನ್ನು ಪೂರ್ವನಿಶ್ಚಯ ಮಾಡಿಕೊಂಡು ಹೋರಾಡುವವರು ಸಂಶಪ್ತಕರು. ಯುದ್ದ ಪರ್ವಗಳಲ್ಲಿ ಇವರ ಹೆಸರು ಅನೇಕ ಬಾರಿ ಪ್ರಸ್ತಾವಗೊಂಡಿವೆ. ಸಂಶಪ್ತಕರು ಎಂದರೆ ಒಟ್ಟಿಗೆ ಪ್ರತಿಜ್ಞೆ ಮಾಡಿ ಯುದ್ಧಕ್ಕೆ ಬಂದವರು ಎಂದರ್ಥ.
ರಾಕ್ಷಸರು ಅರ್ಜುನನನ್ನು ವಧಿಸಲು ಸಂಶಪ್ತಕರಾಗಿ ಹುಟ್ಟಿ ಬಂದರು ಎಂದು ಯಾನಸಂಧಿಪರ್ವ ಹೇಳುತ್ತದೆ. ಸಂಶಪ್ತಕರಲ್ಲಿ ತ್ರಿಗರ್ತರೇ ಮುಖ್ಯರಾದವರು. ವಿರಾಟ ರಾಜ್ಯದ ಬದಿಗಿದ್ದ ತ್ರಿಗರ್ತರು ಪಾಂಡವ ವೈರಿಗಳು. ಕೌರವನ ಪರವಾಗಿ ಹೋರಾಡಿದವರು. ‘‘ನಾವು ಅರ್ಜುನನನ್ನು ಕೊಲ್ಲುತ್ತೇವೆ ಅಥವಾ ಅವನಿಂದ ಹತರಾಗುತ್ತೇವೆ’’ ಎಂದು ಘೋಷಿಸಿ ಇವರು ಹೋರಾಟಕ್ಕೆ ನಿಲ್ಲುತ್ತಿದ್ದರು.
ತ್ರಿಗರ್ತರಾಜನಾದ ಸುಶರ್ಮ, ಸತ್ಯೇಷು, ಸತ್ಯಕರ್ಮ, ಸತ್ಯದೇವ ಮತ್ತು ಸತ್ಯರಥ ಎಂಬ ಐವರು ಸೋದರರು ಕೌರವನ ಪರವಾಗಿ ಒಂಭತ್ತು ಕೋಟಿ ಸೇನೆಯೊಂದಿಗೆ ಕುರುಕ್ಷೇತ್ರದಲ್ಲ್ಲಿ ಹೋರಾಡಿದವರು. ಇವರೇ ಅಲ್ಲದೆ ರಾಕ್ಷಸ ಕುಲದ ಸಂಶಪ್ತಕರೂ ಇದ್ದಾರೆ. ಈ ರಾಕ್ಷಸ ಸಂಶಪ್ತಕರ ಮುಖ್ಯಸ್ಥ ಸುಧನ್ವ. ಇವರೆಲ್ಲ ಅರ್ಜುನನಿಂದ ಹತರಾಗುತ್ತಾರೆ. ಅಳಿದುಳಿದ ಸೇನೆ ಅಶ್ವತ್ಥಾಮನ ಜೊತೆ ಉಳಿಯುತ್ತದೆ.
ಅರಣ್ಯಪರ್ವದ ಘೋಷಯಾತ್ರೋಪರ್ವದಲ್ಲಿ ಕೌರವನು ಪಾಂಡವರನ್ನು ಭಂಗಪಡಿಸಲೆಂದು ಬಂದು ಚಿತ್ರಸೇನನೆಂಬ ಗಂಧರ್ವನಿಂದ ತಾನೇ ಭಂಗಿತನಾಗಿ ಅರ್ಜುನನ ಕೃಪೆಯಿಂದಾಗಿ ಬದುಕಿ ಬರುತ್ತಾನಷ್ಟೆ. ಜೀವನದಲ್ಲಿ ಜುಗುಪ್ಸೆ ಹೊಂದಿ ಊರಿಗೂ ಹೋಗದೆ ಗಂಗಾತೀರದಲ್ಲಿ ಪ್ರಾಯೋಪವೇಶಕ್ಕೆ ಸಿದ್ಧನಾಗುತ್ತಾನೆ.
ಆಗ ರಾಕ್ಷಸರು ಮಾಯಾವಿದ್ಯೆಯಿಂದ ಕೌರವನನ್ನು ತಮ್ಮಲ್ಲಿಗೆ ಕರೆತಂದು ಯುದ್ಧಲ್ಲಿ ತಾವೆಲ್ಲ ಕೌರವನ ಸಹಾಯಕ್ಕೆ ಇರುವುದಾಗಿ ಘೋಷಿಸಿ ಹಸ್ತಿನಾವತಿಗೆ ಕಳುಹಿಸುತ್ತಾರೆ. ದ್ರೋಣರು ಸೇನಾಪತಿಗಳಾಗಿ ಹೋರಾಡಿದ ದಿನಗಳಲ್ಲಿ ಇವರೆಲ್ಲ ಅರ್ಜುನನೊಂದಿಗೆ ಯುದ್ಧ ಘೋಷಿಸಿ ಹೋರಾಡುತ್ತಾರೆ. ಎಲ್ಲರೂ ಅರ್ಜುನನಿಂದ ಹತರಾಗುತ್ತಾರೆ.
ಮಹಾಭಾರತದ 72ನೇ ಉಪಪರ್ವದ ಹೆಸರೇ ಸಂಶಪ್ತಕ ವಧಪರ್ವ. ದ್ರೋಣಾಚಾರ್ಯರು, ಅರ್ಜುನನು ಇರುವವರೆಗೆ ಧರ್ಮರಾಯನನ್ನು ಸೆರೆಹಿಡಿಯಲು ಸಾಧ್ಯವಾಗುವುದಿಲ್ಲ ಎಂದಾಗ ಅಲ್ಲಿದ್ದ ಸುಶರ್ಮ ಮತ್ತು ಸೋದರರು ತಾವು ಅರ್ಜುನನನ್ನು ಯುದ್ಧಕ್ಕೆ ಎಳೆಯುವುದಾಗಿ ಪ್ರತಿಜ್ಞೆ ಮಾಡಿ ಅರ್ಜುನನೊಂದಿಗೆ ಯುದ್ಧ ಘೋಷಿಸಿ ಕುರುಕ್ಷೇತ್ರದ ದಕ್ಷಿಣ ಭಾಗವನ್ನು ಯುದ್ಧ ಭೂಮಿಯಾಗಿ ಆರಿಸಿಕೊಳ್ಳುತ್ತಾರೆ. ಅವರಿಗೆ ಪಾಂಚಾಲರಾಜನ ಗೋವುಗಳನ್ನು ಹಿಡಿದ ಸಂದರ್ಭದಲ್ಲಿ ಪಾಂಡವರಿಂದ ಸೋಲು ಉಂಟಾಗಿ ಅವಮಾನವಾಗಿತ್ತು. ಅದರ ಸೇಡು ತೀರಿಸಿಕೊಳ್ಳಲು ಅವರು ಹತ್ತು ಸಾವಿರ ರಥಗಳ ಸೇನೆಯೊಂದಿಗೆ ಯುದ್ಧಕ್ಕೆ ನಿಲ್ಲುತ್ತಾರೆ. ಭೀಷ್ಮ ಪರ್ವದಲ್ಲಿ ಇವರು ಭೀಷ್ಮರಿಗೆ ಬೆಂಗಾವಲಾಗಿ ನಿಂತು ಸೋತು ಓಡಿದ್ದರು. ಈಗ ಅರ್ಜುನನ ವಿರುದ್ಧ ಸಮರವನ್ನು ಸಾರಿ ಎಲ್ಲರೂ ಒಬ್ಬೊಬ್ಬರಾಗಿ ಅರ್ಜುನನಿಂದ ಹತರಾಗುತ್ತಾರೆ. ಇವರಿಂದ ಕೌರವನಿಗೆ ಆದ ಒಂದೇ ಉಪಕಾರವೆಂದರೆ ಇವರು ಅರ್ಜುನನನ್ನು ದಕ್ಷಿಣ ದೇಶಕ್ಕೆ ಎಳೆದೊಯ್ದದ್ದರಿಂದ ಅಭಿಮನ್ಯುವಿನ ವಧೆ ಮಾಡಲು ಅಭಿಮನ್ಯುವಿನ ವಧೆ ಮಾಡಲು ದ್ರೋಣನಿಗೆ ಸಾಧ್ಯವಾದದ್ದು.ಸಮಸಪ್ತಕರು-ಸಂಶಪ್ತಕರು- ತ್ರಿಗರ್ತ ದೇಶದ ದೊರೆ ಸುಶರ್ಮ, ಅವನ ತಮ್ಮಂದಿರಾದ ಸತ್ಯೇಷು, ಸತ್ಯಕರ್ಮ, ಸತ್ಯದೇವ, ಸತ್ಯರಥ, ಈ ಐದುಜನಕ್ಕೆ ಅನ್ವಯವಾಗುವ ಹೆಸರು. ಯುದ್ಧದಲ್ಲಿ ಶಪಥ ಮಾಡಿ ಯುದ್ಧ ಮಾಡುವವರಿಗೆಲ್ಲ ಈ ಹೆಸರು ಸಲ್ಲುತ್ತದೆ.
ಮೂಲ ...{Loading}...
ಇದ್ದುದಾ ಸಮಸಪ್ತಕರು ಜಗ
ವದ್ದ ಜಲಧಿಯ ತೆರೆಯವೊಲು ಮುಳಿ
ದೆದ್ದ ಹರಿಬಲದಂತೆ ದುಶ್ಯಾಸನನ ಪಾಯದಳ
ದೊದ್ದೆಯಲ್ಲದೆ ದೊರೆಗಳೇ ಜರೆ
ದೆದ್ದುದೆರಡಕ್ಷೋಣಿಯನಿಬರಿ
ಗಿದ್ದನೊಬ್ಬನೆ ಭೀಮನವನೀಪಾಲ ಕೇಳೆಂದ ॥6॥
೦೦೭ ಹೇಳು ಸಞ್ಜಯ ...{Loading}...
ಹೇಳು ಸಂಜಯ ವಿಸ್ತರಿಸಿ ಕಾ
ಲಾಳು ಮೇಲಾಳಿನಲಿ ಭೀಮನ
ಕಾಳೆಗದ ಕೌತುಕವನೀ ಹೆಬ್ಬಲದ ದುರ್ಬಲವ
ಆಳು ಹಿರಿದಿದ್ದೇನು ಫಲ ಹೀ
ಹಾಳಿ ದೈವಕೆ ಬೇರೆ ಪರಿಯ ವಿ
ತಾಳವಿಲ್ಲ ವಿಪಕ್ಷಪಾತದೊಳೆಂದನಂಧನೃಪ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಸಂಜಯ ಇನ್ನಷ್ಟು ವಿಸ್ತರಿಸಿ ಹೇಳು ; ಕಾಲಾಳುಗಳು ಹಾಗೂ ಮಹಾನಾಯಕರೊಡನೆ ಭೀಮನು ನಡೆಸಿದ ಯುದ್ಧದ ಆಶ್ಚರ್ಯದ ರೀತಿಯನ್ನು. ಹಾಗೆಯೇ ನಮ್ಮ ದೊಡ್ಡ ಸೈನ್ಯದ ದೌರ್ಬಲ್ಯವನ್ನು ಹೇಳು. ಹೆಚ್ಚು ಸಂಖ್ಯೆಯ ಸೈನಿಕರು ಇದ್ದೂ ಏನೂ ಫಲವಿಲ್ಲ. ಹಠಮಾರಿ ದೈವಕ್ಕೆ ಶತ್ರುನಾಶದಲ್ಲಿ ಬೇರೆ ಚಿಂತೆ ಇಲ್ಲ” ಎಂದನು ಕುರುಡು ದೊರೆ ಧೃತರಾಷ್ಟ್ರ.
ಪದಾರ್ಥ (ಕ.ಗ.ಪ)
ಹೀಹಾಳಿ-ಹಠ, ವಿತಾಳ-ಚಿಂತೆ
ಮೂಲ ...{Loading}...
ಹೇಳು ಸಂಜಯ ವಿಸ್ತರಿಸಿ ಕಾ
ಲಾಳು ಮೇಲಾಳಿನಲಿ ಭೀಮನ
ಕಾಳೆಗದ ಕೌತುಕವನೀ ಹೆಬ್ಬಲದ ದುರ್ಬಲವ
ಆಳು ಹಿರಿದಿದ್ದೇನು ಫಲ ಹೀ
ಹಾಳಿ ದೈವಕೆ ಬೇರೆ ಪರಿಯ ವಿ
ತಾಳವಿಲ್ಲ ವಿಪಕ್ಷಪಾತದೊಳೆಂದನಂಧನೃಪ ॥7॥
೦೦೮ ಅರಸ ಕೇಳಾದಡೆ ...{Loading}...
ಅರಸ ಕೇಳಾದಡೆ ಮಹಾ ಸಾ
ಗರಕೆ ಮುನಿ ಮಂಡಿಸಿದವೊಲು ಸಂ
ಹರಣ ದಿನದಲಿ ಜಗಕೆ ಮಲೆವ ಮಹೇಶನಂದದಲಿ
ಅರಿ ಹಿರಣ್ಯಾಕ್ಷನ ಬಲಕೆ ಕೋ
ಡೆರಗಿ ನಿಂದ ವರಾಹನಂತಿರೆ
ಪರಬಲಾಂತಕ ಭೀಮ ನಿಂದನು ತರುಬಿ ಪರಬಲವ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಹಾಗಾದರೆ ಅರಸ, ಕೇಳು, ಸಮುದ್ರದ ಮೇಲೆ ಕೋಪಗೊಂಡು ಅದರ ಎದುರು ಕುಳಿತುಕೊಂಡ ಅಗಸ್ತ್ಯ ಋಷಿಯಂತೆ , ಲೋಕವನ್ನು ನಾಶಮಾಡುವ ಪ್ರಳಯಕಾಲದ ದಿವಸಗಳಲ್ಲಿ ಜಗತ್ತಿನ ಮೇಲೆ ಕೋಪಗೊಂಡ ಈಶ್ವರನಂತೆ , ಶತ್ರುವಾದ ಹಿರಣ್ಯಾಕ್ಷನ ಸೈನ್ಯದ ಎದುರಿನಲ್ಲಿ ತನ್ನ ದಾಡೆಯನ್ನು ಮುಂದೆ ಚಾಚಿ ನಿಂತ ವರಾಹಾವತಾರದ ನಾರಾಯಣನಂತೆ , ಶತ್ರುಬಲಕ್ಕೆ ಯಮನಾದ ಭೀಮನು ಶತ್ರುಬಲವನ್ನು ಎದುರಿಸಿ ನಿಂತಿದ್ದನು.
ಮೂಲ ...{Loading}...
ಅರಸ ಕೇಳಾದಡೆ ಮಹಾ ಸಾ
ಗರಕೆ ಮುನಿ ಮಂಡಿಸಿದವೊಲು ಸಂ
ಹರಣ ದಿನದಲಿ ಜಗಕೆ ಮಲೆವ ಮಹೇಶನಂದದಲಿ
ಅರಿ ಹಿರಣ್ಯಾಕ್ಷನ ಬಲಕೆ ಕೋ
ಡೆರಗಿ ನಿಂದ ವರಾಹನಂತಿರೆ
ಪರಬಲಾಂತಕ ಭೀಮ ನಿಂದನು ತರುಬಿ ಪರಬಲವ ॥8॥
೦೦೯ ಆತನಿನ್ದಙ್ಘವಣೆಯನು ನಿ ...{Loading}...
ಆತನಿಂದಂಘವಣೆಯನು ನಿ
ನ್ನಾತ ಕಂಡನು ಮೆಚ್ಚಿದನು ಮಝ
ಪೂತು ಭೀಮ ಸುಧೀರನೈ ಸದ್ಗುಣಕೆ ಮತ್ಸರವೆ
ಈತನೊಬ್ಬನೆ ಕೌರವರಸಂ
ಖ್ಯಾತವೆಂಬುದು ಲೋಕ ಸಾಕಿ
ನ್ನೀತ ಮರಳಲಿ ಎಂದು ಭಟ್ಟರನಟ್ಟಿದನು ಭೂಪ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮನ ಈ ಸಾಹಸವನ್ನು ನಿನ್ನ ಮಗ ಕೌರವನು ನೋಡಿ ಮೆಚ್ಚಿಕೊಂಡನು. “ಭೇಷ್ ಭೀಮ ನೀನು ಮಹಾಬಲಶಾಲಿ, ಗುಣಕ್ಕೆ ಮತ್ಸರಿಸಬಾರದು. ಭೀಮನೊಬ್ಬನೇ ಇದ್ದಾನೆ. ಕೌರವರು ಅಸಂಖ್ಯಾತರಿದ್ದಾರೆ ಎಂದು ಲೋಕ ನಿಂದಿಸುತ್ತದೆ. ಆದ್ದರಿಂದ ನೀನು ಹಿಂತಿರುಗುವುದು ಸರಿಯಾದದ್ದು “ಎಂದು ತನ್ನ ಭಟರ ಮೂಲಕ ಹೇಳಿಕಳುಹಿಸಿದನು.
ಪದಾರ್ಥ (ಕ.ಗ.ಪ)
ಅಂಘವಣೆ-ಸಾಹಸ
ಮೂಲ ...{Loading}...
ಆತನಿಂದಂಘವಣೆಯನು ನಿ
ನ್ನಾತ ಕಂಡನು ಮೆಚ್ಚಿದನು ಮಝ
ಪೂತು ಭೀಮ ಸುಧೀರನೈ ಸದ್ಗುಣಕೆ ಮತ್ಸರವೆ
ಈತನೊಬ್ಬನೆ ಕೌರವರಸಂ
ಖ್ಯಾತವೆಂಬುದು ಲೋಕ ಸಾಕಿ
ನ್ನೀತ ಮರಳಲಿ ಎಂದು ಭಟ್ಟರನಟ್ಟಿದನು ಭೂಪ ॥9॥
೦೧೦ ಬನ್ದು ಭಟ್ಟರು ...{Loading}...
ಬಂದು ಭಟ್ಟರು ಭೀಮಸೇನಂ
ಗೆಂದರೆಲೆ ಕೌಂತೇಯ ನೀ ನಿ
ನ್ನಂದಿನಗ್ಗದ ದುಂದುಮಾರನ ಕಾರ್ತವೀರ್ಯಕನ
ಸಂದ ಭರತ ಭಗೀರಥಾದಿಗ
ಳಿಂದ ಮಿಗಿಲು ಮಹಾಪ್ರಚಂಡರೊ
ಳಿಂದು ನಿನಗೆಣೆಯಾರು ದನುಜಾಮರರ ಥಟ್ಟಿನಲಿ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮನ ಬಳಿಗೆ ಬಂದ ದುರ್ಯೋಧನನ ದೂತರು, ಹೀಗೆ ಹೇಳಿದರು: “ಎಲೆ ಕೌಂತೇಯ, ನೀನು ಈ ಹಿಂದೆ ಆಗಿಹೋದ ಶ್ರೇಷ್ಠನಾದ ದುಂದುಮಾರ, ಕಾರ್ತವೀರ್ಯ, ಭರತ, ಭಗೀರಥ ಮೊದಲಾದವರಿಗಿಂತ ಹೆಚ್ಚಾಗಿದ್ದೀಯೆ. ರಾಕ್ಷಸರು ದೇವತೆಗಳ ಗುಂಪಿನಲ್ಲಿ, ಮಹಾಪ್ರಚಂಡರಲ್ಲಿ ನಿನಗೆ ಸರಿಸಮಾನರಾದವರು ಯಾರಿದ್ದಾರೆ.”
ಪದಾರ್ಥ (ಕ.ಗ.ಪ)
ಅಗ್ಗ-ಶ್ರೇಷ್ಠ, ಥಟ್ಟು-ಸೈನ್ಯ
ಟಿಪ್ಪನೀ (ಕ.ಗ.ಪ)
ದುಂದುಮಾರ-ಸೂರ್ಯವಂಶದ ಶತ್ರುಜಿತನೆಂಬ ಅರಸನ ಮಗ. ಋತಧ್ವಜ, ಕುವಲಾಶ್ವ ಇವನ ನಾಮಾಂತರಗಳು. ದುಂದು ಎಂಬ ರಾಕ್ಷಸನನ್ನು ಕೊಂದದ್ದರಿಂದ ದುಂದುಮಾರ ಎಂದು ಹೆಸರು ಪಡೆದ.
ಕಾರ್ತವೀರ್ಯ-ಕೃತವೀರ್ಯನ ಮಗನಾದ ಅರ್ಜುನ. ಆದ್ದರಿಂದ ಕಾರ್ತವೀರ್ಯಾರ್ಜುನ ಎಂಬ ಹೆಸರು. ವಿಂಧ್ಯ ಪರ್ವತ ಪ್ರದೇಶದ ಮಾಹೀಷ್ಮತೀ ನಗರದ ಅರಸ. ತನ್ನ ಕುಲಗುರುವಾದ ಗರ್ಗಮುನಿಯ ಉಪದೇಶದಿಂದ ದತ್ತಾತ್ರೇಯನನ್ನು ಉಪಾಸನೆ ಮಾಡಿ ಅಜೇಯತ್ವವನ್ನು, ಯುದ್ಧ ಸಮಯದಲ್ಲಿ ಸಾವಿರ ತೋಳನ್ನು ಪಡೆಯುವ ವರಗಳನ್ನು ಪಡೆದವನು.
ಮೂಲ ...{Loading}...
ಬಂದು ಭಟ್ಟರು ಭೀಮಸೇನಂ
ಗೆಂದರೆಲೆ ಕೌಂತೇಯ ನೀ ನಿ
ನ್ನಂದಿನಗ್ಗದ ದುಂದುಮಾರನ ಕಾರ್ತವೀರ್ಯಕನ
ಸಂದ ಭರತ ಭಗೀರಥಾದಿಗ
ಳಿಂದ ಮಿಗಿಲು ಮಹಾಪ್ರಚಂಡರೊ
ಳಿಂದು ನಿನಗೆಣೆಯಾರು ದನುಜಾಮರರ ಥಟ್ಟಿನಲಿ ॥10॥
೦೧೧ ರಾಯ ಜಗಜಟ್ಟಿಗಳು ...{Loading}...
ರಾಯ ಜಗಜಟ್ಟಿಗಳು ರಿಪು ಕುರು
ರಾಯ ಥಟ್ಟಿನೊಳಿನಿಬರಿಗೆ ನಿ
ನ್ನಾಯತದಿ ನಿಲುವಂಘವಣೆಗಾವೇನ ಹೇಳುವೆವು
ರಾಯನನು ಸಂತೈಸುವುದು ಮಾ
ದ್ರೇಯ ಫಲುಗುಣ ಸಹಿತ ನಿಲು ನಿ
ನ್ನಾಯತದಿ ನಮ್ಮರಸನೊಲ್ಲನು ನಿನ್ನೊಡನೆ ರಣವ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಶತ್ರು ಕೌರವನ ಸೈನ್ಯದಲ್ಲಿರುವ ಜಗಜಟ್ಟಿಗಳಾದ ರಾಜರನ್ನು ಧೈರ್ಯದಿಂದ ಎದುರಿಸಿ ನಿಲ್ಲುವ ನಿನ್ನ ಸಾಹಸವನ್ನು ನಾವು ಏನು ಹೇಳುವುದು. ಹಿಂತಿರುಗಿ ಹೋಗಿ ಧರ್ಮರಾಯನಿಗೆ ಸಮಾಧಾನ ಮಾಡು, ಅರ್ಜುನ ಹಾಗೂ ಮಾದ್ರಿಯ ಮಕ್ಕಳಾದ ನಕುಲ ಸಹದೇವರ ಜೊತೆಯಲ್ಲಿ ಇದ್ದು ನಿನ್ನ ಸಾಹಸವನ್ನು ತೋರಿಸು, ನಿನ್ನ ಒಬ್ಬನ ಜೊತೆಯಲ್ಲಿಯೇ ಯುದ್ಧ ಮಾಡಲು ನಮ್ಮ ಅರಸನು ಬಯಸುವುದಿಲ್ಲ.
ಪದಾರ್ಥ (ಕ.ಗ.ಪ)
ಆಯತ-ಪರಾಕ್ರಮ
ಮೂಲ ...{Loading}...
ರಾಯ ಜಗಜಟ್ಟಿಗಳು ರಿಪು ಕುರು
ರಾಯ ಥಟ್ಟಿನೊಳಿನಿಬರಿಗೆ ನಿ
ನ್ನಾಯತದಿ ನಿಲುವಂಘವಣೆಗಾವೇನ ಹೇಳುವೆವು
ರಾಯನನು ಸಂತೈಸುವುದು ಮಾ
ದ್ರೇಯ ಫಲುಗುಣ ಸಹಿತ ನಿಲು ನಿ
ನ್ನಾಯತದಿ ನಮ್ಮರಸನೊಲ್ಲನು ನಿನ್ನೊಡನೆ ರಣವ ॥11॥
೦೧೨ ಆಗಲದು ತಪ್ಪೇನು ...{Loading}...
ಆಗಲದು ತಪ್ಪೇನು ಧರ್ಮಜ
ನಾಗುಹೋಗರ್ಜುನನ ಮೇಲೆ ವಿ
ಭಾಗದಲಿ ಬಂದುದು ಸುಯೋಧನ ಸೈನ್ಯಧುರವೆಮಗೆ
ಈಗಳೊಬ್ಬನೆ ವಿಷಮ ವಿಗ್ರಹ
ಯಾಗದಲಿ ರಿಪುಸುಭಟ ಪಶು ಹಿಂ
ಸಾಗಮವ ತೋರುವೆನು ಸೈರಿಸಿಯೆಂದನಾ ಭೀಮ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅದಕ್ಕೆ ಭೀಮನು “ನಿಮ್ಮ ಒಡೆಯನ ಮಾತಿನಲ್ಲಿ ತಪ್ಪೇನೂ ಇಲ್ಲ. ಧರ್ಮರಾಯನ ಆಗುಹೋಗುಗಳನ್ನು ಅರ್ಜುನನು ನೋಡಿಕೊಳ್ಳುತ್ತಾನೆ. ನನ್ನ ಭಾಗಕ್ಕೆ ಸುಯೋಧನನ ಸೈನ್ಯದ ಮೇಲೆ ಯುದ್ಧಮಾಡುವ ಕೆಲಸ ಒದಗಿದೆ. ಈಗ ನಾನು ಒಬ್ಬನೇ ಭಯಂಕರವಾದ ಯುದ್ಧವೆಂಬ ಯಾಗದಲ್ಲಿ ಶತ್ರುಸೈನಿಕರೆಂಬ ಹಸುಗಳನ್ನು ಬಲಿಕೊಟ್ಟು, ನನ್ನ ಪರಾಕ್ರಮವನ್ನು ತೋರಿಸುತ್ತೇನೆ, ಸ್ವಲ್ಪ ಸಮಾಧಾನದಿಂದ ಇರಿ” ಎಂದನು.
ಪದಾರ್ಥ (ಕ.ಗ.ಪ)
ವಿಗ್ರಹ-ಯುದ್ಧ, ಧುರ-ಯುದ್ಧ, ಹಿಂಸಾಗಮ-ಹಿಂಸೆಯೆಂಬ ಶಾಸ್ತ್ರ
ಮೂಲ ...{Loading}...
ಆಗಲದು ತಪ್ಪೇನು ಧರ್ಮಜ
ನಾಗುಹೋಗರ್ಜುನನ ಮೇಲೆ ವಿ
ಭಾಗದಲಿ ಬಂದುದು ಸುಯೋಧನ ಸೈನ್ಯಧುರವೆಮಗೆ
ಈಗಳೊಬ್ಬನೆ ವಿಷಮ ವಿಗ್ರಹ
ಯಾಗದಲಿ ರಿಪುಸುಭಟ ಪಶು ಹಿಂ
ಸಾಗಮವ ತೋರುವೆನು ಸೈರಿಸಿಯೆಂದನಾ ಭೀಮ ॥12॥
೦೧೩ ವಿವಿಧ ಮಣಿ ...{Loading}...
ವಿವಿಧ ಮಣಿ ಕನಕಾದಿ ವಸ್ತುವ
ನವರಿಗಿತ್ತನು ತನ್ನ ಪಾಠಕ
ನಿವಹವನು ಕಳುಹಿದನು ಕೌರವ ಬಲದ ಸುಭಟರಿಗೆ
ಅವರು ಬಂದರು ಕರ್ಣ ಗುರು ಸಂ
ಭವ ಸುಶರ್ಮಕ ಶಕುನಿ ಕೃಪ ಕೌ
ರವ ನೃಪಾದಿಗಳಿದಿರಲೊದರಿದರನಿಲಜನ ಮತವ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುರ್ಯೋಧನನ ಕಡೆಯ ಹೊಗಳು ಭಟ್ಟರಿಗೆ ವಿವಿಧ ಬಗೆಯ ರತ್ನ, ಚಿನ್ನದ ವಸ್ತುಗಳನ್ನು ಉಡುಗೊರೆಯಾಗಿ ಕೊಟ್ಟು ಕಳುಹಿಸಿದನು. ಹಿಂದೆಯೇ ತನ್ನ ದೂತರನ್ನು ಕೌರವನ ಬಳಿಯ ಮಹಾವೀರರ ಬಳಿಗೆ ಕಳುಹಿಸಿದನು. ಅವರು ಬಂದು ಕರ್ಣ, ಅಶ್ವತ್ಥಾಮ, ಸುಶರ್ಮ, ಶಕುನಿ, ಕೃಪ, ಕೌರವ ಮೊದಲಾದವರ ಮುಂದೆ ವಾಯುಪುತ್ರನ ಅಭಿಪ್ರಾಯವನ್ನು ಹೇಳಿದರು.
ಪದಾರ್ಥ (ಕ.ಗ.ಪ)
ಒದರು-ಹೇಳು
ಮೂಲ ...{Loading}...
ವಿವಿಧ ಮಣಿ ಕನಕಾದಿ ವಸ್ತುವ
ನವರಿಗಿತ್ತನು ತನ್ನ ಪಾಠಕ
ನಿವಹವನು ಕಳುಹಿದನು ಕೌರವ ಬಲದ ಸುಭಟರಿಗೆ
ಅವರು ಬಂದರು ಕರ್ಣ ಗುರು ಸಂ
ಭವ ಸುಶರ್ಮಕ ಶಕುನಿ ಕೃಪ ಕೌ
ರವ ನೃಪಾದಿಗಳಿದಿರಲೊದರಿದರನಿಲಜನ ಮತವ ॥13॥
೦೧೪ ಮುರಿದು ಲೋಕವ ...{Loading}...
ಮುರಿದು ಲೋಕವ ನುಂಗಿದರೆ ಕ
ಟ್ಟಿರುವೆಯೇ ಕಾಲಂಗೆ ಕತ್ತಲೆ
ಯಿರಿತದಲಿ ಕೈದೀವಿಗೆಯ ಹಂಗೇಕೆ ದಿನಮಣಿಗೆ
ಮರೆದೆಲಾ ರಾಧೇಯ ಕೃಪ ನಿಲು
ಹೊರಗೆ ಗುರುಸುತ ನಿನ್ನ ಗರ್ವವ
ಹೆರಿಸುವವು ಭೀಮಾಸ್ತ್ರವೆಂದುದು ವಂದಿ ಸಂದೋಹ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಲೋಕವನ್ನು ಪುಡಿಮಾಡಿ ನುಂಗಬೇಕು ಎಂದುಕೊಂಡಿರುವ ಯಮನಿಗೆ ಕಟ್ಟಿರುವೆಗಳು ಯಾವ ಲೆಕ್ಕ. ಕತ್ತಲೆಯ ಮೇಲೆ ಯುದ್ಧ ಮಾಡಲು ಸೂರ್ಯನಿಗೆ ಪಂಜು ಬೆಳಕಿನ ಸಹಾಯವೇಕೆ ಬೇಕು. ಕರ್ಣನೇ ಹಿಂದೆ ಆದದ್ದನ್ನು ಮರೆತುಬಿಟ್ಟೆಯಾ, ಕೃಪ ದೂರ ನಿಂತುಕೋ, ಅಶ್ವತ್ಥಾಮ ನಿನ್ನ ಗರ್ವದ ಗರ್ಭ ತುಂಬಿದೆ ಅದಕ್ಕೆ ಭೀಮನ ಆಯುಧಗಳು ಹೆರಿಗೆ ಮಾಡಿಸುತ್ತದೆ “ಎಂದಿತು ಭೀಮನ ಹೊಗಳುಭಟ್ಟರ ಗುಂಪು.
ಮೂಲ ...{Loading}...
ಮುರಿದು ಲೋಕವ ನುಂಗಿದರೆ ಕ
ಟ್ಟಿರುವೆಯೇ ಕಾಲಂಗೆ ಕತ್ತಲೆ
ಯಿರಿತದಲಿ ಕೈದೀವಿಗೆಯ ಹಂಗೇಕೆ ದಿನಮಣಿಗೆ
ಮರೆದೆಲಾ ರಾಧೇಯ ಕೃಪ ನಿಲು
ಹೊರಗೆ ಗುರುಸುತ ನಿನ್ನ ಗರ್ವವ
ಹೆರಿಸುವವು ಭೀಮಾಸ್ತ್ರವೆಂದುದು ವಂದಿ ಸಂದೋಹ ॥14॥
೦೧೫ ಆಸೆಯೇ ಜೀವದಲಿ ...{Loading}...
ಆಸೆಯೇ ಜೀವದಲಿ ಕುರುಧರ
ಣೀಶ ಬಿಡು ರಾಜ್ಯವನು ಮಾತಿನ
ವಾಸಿಯೇ ಕೊಡು ಕದನವನು ಸಾಕುಳಿದ ಮಾತೇನು
ಈ ಸುಶರ್ಮಕ ಶಕುನಿ ಸಲೆ ದು
ಶ್ಯಾಸನಾದಿ ಪಿಪೀಲಕರು ತಮ
ಗೇಸು ಬಲುಹುಂಟೈಸನೊದಗಲಿ ಎಂದರವರಂದು ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅವರು ಮಾತನ್ನು ಮುಂದುವರಿಸಿ “ಕೌರವನೇ ಜೀವದ ಮೇಲೆ ಆಸೆ ಇದ್ದರೆ, ರಾಜ್ಯವನ್ನು ಬಿಟ್ಟುಕೊಡು. ಮಾತಿನ ಛಲ ಇದೆಯೇ, ಯುದ್ಧವನ್ನು ಮಾಡು. ಉಳಿದ ಮಾತುಗಳ ಅಗತ್ಯವಿಲ್ಲ. ಈ ಸುಶರ್ಮಕ ಶಕುನಿ ದುಶ್ಶಾಸನ ಮೊದಲಾದ ಇರುವೆಯಂತಹ ಕ್ಷುದ್ರ ಜೀವಿಗಳು ತಮಗೆ ಎಷ್ಟು ಬಲವಿದೆಯೋ ಅಷ್ಟನ್ನೂ ಪ್ರಯೋಗಿಸಿ ಯುದ್ಧಮಾಡಲಿ” ಎಂದರು.
ಪದಾರ್ಥ (ಕ.ಗ.ಪ)
ಪಿಪೀಲಕ-ಗೊದ್ದ, ದೊಡ್ಡ ಕಪ್ಪು ಇರುವೆ, ಕ್ಷುದ್ರ ಜೀವಿ,
ಮೂಲ ...{Loading}...
ಆಸೆಯೇ ಜೀವದಲಿ ಕುರುಧರ
ಣೀಶ ಬಿಡು ರಾಜ್ಯವನು ಮಾತಿನ
ವಾಸಿಯೇ ಕೊಡು ಕದನವನು ಸಾಕುಳಿದ ಮಾತೇನು
ಈ ಸುಶರ್ಮಕ ಶಕುನಿ ಸಲೆ ದು
ಶ್ಯಾಸನಾದಿ ಪಿಪೀಲಕರು ತಮ
ಗೇಸು ಬಲುಹುಂಟೈಸನೊದಗಲಿ ಎಂದರವರಂದು ॥15॥
೦೧೬ ಇವರು ಕಳುಹಿದರುಚಿತದಲಿ ...{Loading}...
ಇವರು ಕಳುಹಿದರುಚಿತದಲಿ ನಿ
ನ್ನವರು ಮಸಗಿದ ಕಡಲವೊಲು ಬಲು
ದವಕಿಗರು ಕೋಲಳವಿಗೊಂಡರು ಕೋಡ ಕೈಗಳಲಿ
ತವತವಗೆ ದೆಖ್ಖಾಯ ಮಿಗೆಯು
ತ್ಸವದಲುರುಬಿದರವನಿಪಾಲನ
ಗವಿಯ ಘಾಡಿಕೆ ಜೋಡಿಸಿತು ಗೀರ್ವಾಣರಾಲಿಗಳ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೌರವನ ಕಡೆಯವರು ಆ ಪಾಠಕರನ್ನು ಉಚಿತವಾಗಿ ಗೌರವಿಸಿ ಕಳುಹಿಸಿದರು. ನಿನ್ನವರು ಉಬ್ಬಿದ ಸಮುದ್ರದಂತೆ ಅತಿಯಾದ ತವಕದಿಂದ ಕೈಯಲ್ಲಿ ಬಾಣಗಳನ್ನು ಹಿಡಿದರು. ತಾವು ತಾವೇ ಗಲಭೆ ಮಾಡುತ್ತಾ ಹೆಚ್ಚಾದ ಉತ್ಸಾಹದಲ್ಲಿ ಭೀಮನ ಮೇಲೆ ಆಕ್ರಮಣ ಮಾಡಿದರು. ಈ ದೊಡ್ಡ ಮುತ್ತಿಗೆಯಿಂದ ದೇವತೆಗಳ ಕಣ್ಣುಗಳಿಗೆ ಸಂತೋಷವಾಯಿತು.
ಮೂಲ ...{Loading}...
ಇವರು ಕಳುಹಿದರುಚಿತದಲಿ ನಿ
ನ್ನವರು ಮಸಗಿದ ಕಡಲವೊಲು ಬಲು
ದವಕಿಗರು ಕೋಲಳವಿಗೊಂಡರು ಕೋಡ ಕೈಗಳಲಿ
ತವತವಗೆ ದೆಖ್ಖಾಯ ಮಿಗೆಯು
ತ್ಸವದಲುರುಬಿದರವನಿಪಾಲನ
ಗವಿಯ ಘಾಡಿಕೆ ಜೋಡಿಸಿತು ಗೀರ್ವಾಣರಾಲಿಗಳ ॥16॥
೦೧೭ ಇನ್ನರಿಯಬಹುದೆನುತ ರಾಯನ ...{Loading}...
ಇನ್ನರಿಯಬಹುದೆನುತ ರಾಯನ
ಮನ್ನಣೆಯ ಮದಸೊಕ್ಕಿದಾನೆಗ
ಳೆನ್ನ ಬಿಡು ಬಿಡು ತನ್ನ ಬಿಡು ಬಿಡು ಎನುತ ಖಾತಿಯಲಿ
ತಿನ್ನಡಗನೊಡೆಹೊಯ್ದು ಭೀಮನ
ಬೆನ್ನಲುಗಿ ತನಿಗರುಳನಕಟಾ
ಕುನ್ನಿಗಳಿರೆನುತೊದಗಿದರು ದುಶ್ಯಾಸನಾದಿಗಳು ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಇನ್ನು ನಮ್ಮ ಶೌರ್ಯವನ್ನು ತಿಳಿಯಬಹುದು’ ಎನ್ನುತ್ತಾ ಕೌರವನ ಪ್ರೀತಿಗೆ ಪಾತ್ರರಾದ, ಮದದಿಂದ ಸೊಕ್ಕಿದ ದುಶ್ಶಾಸನ ಮೊದಲಾದವರು ‘ನಮ್ಮನ್ನು ಮುಂದಕ್ಕೆ ಬಿಡು’ ಎಂದು ಕೇಳಿಕೊಳ್ಳುತ್ತಾ ಕೋಪದಿಂದ ‘ಭೀಮನನ್ನು ಬಡಿದು ಅವನ ಮಾಂಸವನ್ನು ತಿನ್ನು, ಬೆನ್ನಿಂದ ಕರುಳನ್ನು ಹೊರತೆಗೆ’, ಎಂದು ಆರ್ಭಟಿಸುತ್ತಾ ‘ಅಯ್ಯೋ ನಾಯಿಗಳಿರಾ’ ಎಂದು ನಿಂದಿಸುತ್ತಾ ಭೀಮನ ಮೇಲೆ ಬಿದ್ದರು.
ಪದಾರ್ಥ (ಕ.ಗ.ಪ)
ಅಡಗು-ಮಾಂಸ, ಅಲುಗು-ಕೀಳು
ಮೂಲ ...{Loading}...
ಇನ್ನರಿಯಬಹುದೆನುತ ರಾಯನ
ಮನ್ನಣೆಯ ಮದಸೊಕ್ಕಿದಾನೆಗ
ಳೆನ್ನ ಬಿಡು ಬಿಡು ತನ್ನ ಬಿಡು ಬಿಡು ಎನುತ ಖಾತಿಯಲಿ
ತಿನ್ನಡಗನೊಡೆಹೊಯ್ದು ಭೀಮನ
ಬೆನ್ನಲುಗಿ ತನಿಗರುಳನಕಟಾ
ಕುನ್ನಿಗಳಿರೆನುತೊದಗಿದರು ದುಶ್ಯಾಸನಾದಿಗಳು ॥17॥
೦೧೮ ಈತನೇ ನಮಗರ್ಜುನನು ...{Loading}...
ಈತನೇ ನಮಗರ್ಜುನನು ಕೊ
ಳ್ಳೀತನನು ಹೊಯ್ ಹೊಯ್ಯೆನುತ ಗತ
ಭೀತರಿಟ್ಟಣಿಸಿದರು ಸಮಸಪ್ತಕರು ವಂಗಡಿಸಿ
ಪೂತು ಮಝರೇ ಭೀಮ ಎನುತವೆ
ಸೂತಸುತನೌಕಿದನು ಕೃಪ ಗುರು
ಜಾತ ಕೃತವರ್ಮಾದಿ ರಥಿಕರು ಹೊಕ್ಕರುರವಣಿಸಿ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭಯವಿಲ್ಲದ ಸಮಸಪ್ತಕರು ‘ಈ ಭೀಮನೇ ನಮಗೆ ಅರ್ಜುನನು, ಇವನನ್ನು ಹಿಡಿದು ಹೊಡೆಯಿರಿ’ ಎನ್ನುತ್ತಾ ಒಟ್ಟಾಗಿ ಮುನ್ನುಗ್ಗಿದರು. ಅವರ ಜೊತೆಗೂಡಿದ ಕರ್ಣನು ಭಲೇ ಎಂದು ಭೀಮನನ್ನು ಹೊಗಳುತ್ತಾ ಮುಂದಕ್ಕೆ ನುಗ್ಗಿದನು. ಕೃಪ, ಅಶ್ವತ್ಥಾಮ, ಕೃತವರ್ಮ ಮೊದಲಾದ ವೀರರು ರಭಸದಿಂದ ಮಧ್ಯೆ ನುಗ್ಗಿದರು.
ಮೂಲ ...{Loading}...
ಈತನೇ ನಮಗರ್ಜುನನು ಕೊ
ಳ್ಳೀತನನು ಹೊಯ್ ಹೊಯ್ಯೆನುತ ಗತ
ಭೀತರಿಟ್ಟಣಿಸಿದರು ಸಮಸಪ್ತಕರು ವಂಗಡಿಸಿ
ಪೂತು ಮಝರೇ ಭೀಮ ಎನುತವೆ
ಸೂತಸುತನೌಕಿದನು ಕೃಪ ಗುರು
ಜಾತ ಕೃತವರ್ಮಾದಿ ರಥಿಕರು ಹೊಕ್ಕರುರವಣಿಸಿ ॥18॥
೦೧೯ ಒನ್ದು ದೆಸೆಯಲಿ ...{Loading}...
ಒಂದು ದೆಸೆಯಲಿ ರಾಯನಿಪ್ಪ
ತ್ತೊಂದು ಸಾವಿರ ರಥ ಸಹಿತುಘೇ
ಯೆಂದು ಬಿಟ್ಟನು ಭೀಮಸೇನನ ರಥದ ಸಮ್ಮುಖಕೆ
ಅಂದು ಗೋಗ್ರಹಣದಲಿ ಫಲುಗುಣ
ನಿಂದನನಿಬರಿಗರಸ ಚಿತ್ತೈ
ಸಿಂದು ಸೈರಿಸಿ ನಿಂದನನಿಬರಿಗೊಬ್ಬನೇ ಭೀಮ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಒಂದು ಕಡೆಯಿಂದ ದುರ್ಯೋಧನನು ‘ಉಘೇ’ ಎನ್ನುತ್ತಾ ಭೀಮನ ರಥದ ಮುಂದಕ್ಕೆ ತನ್ನ ಇಪ್ಪತ್ತೊಂದು ಸಾವಿರ ರಥ ಸೈನ್ಯವನ್ನು ತಂದು ನಿಲ್ಲಿಸಿದನು. ಹಿಂದೆ ಗೋಗ್ರಹಣದ ಸಮಯದಲ್ಲಿ ಎಲ್ಲ ಶತ್ರುಗಳ ಎದುರಿನಲ್ಲಿ ಅರ್ಜುನನೊಬ್ಬನೇ ನಿಂತಂತೆ, ಈಗ ಭೀಮನೊಬ್ಬನೇ ಕೌರವನ ಸೈನ್ಯವನ್ನು ಎದುರಿಸಿ ನಿಂತನು.
ಮೂಲ ...{Loading}...
ಒಂದು ದೆಸೆಯಲಿ ರಾಯನಿಪ್ಪ
ತ್ತೊಂದು ಸಾವಿರ ರಥ ಸಹಿತುಘೇ
ಯೆಂದು ಬಿಟ್ಟನು ಭೀಮಸೇನನ ರಥದ ಸಮ್ಮುಖಕೆ
ಅಂದು ಗೋಗ್ರಹಣದಲಿ ಫಲುಗುಣ
ನಿಂದನನಿಬರಿಗರಸ ಚಿತ್ತೈ
ಸಿಂದು ಸೈರಿಸಿ ನಿಂದನನಿಬರಿಗೊಬ್ಬನೇ ಭೀಮ ॥19॥
೦೨೦ ಕೀರಿ ಕಾಲಿಡೆ ...{Loading}...
ಕೀರಿ ಕಾಲಿಡೆ ದಿಕ್ಕರಿಗಳೆದೆ
ಡೋರುವೋಗಲು ಸರ್ವ ಲಗ್ಗೆಯ
ಲೇರಿತೀ ದಳ ದಳವುಳಿಸಿ ದಳಪತಿಯ ನೇಮದಲಿ
ಏರು ಸೂರೆಗೆ ಹಾರಿ ಮೀಸಲಿ
ನೇರು ನಮ್ಮದು ತಮ್ಮದೆನುತು
ಬ್ಬೇರಿ ಭೀಮನ ಮುತ್ತಿದರು ಮೆತ್ತಿದರು ಸರಳಿನಲಿ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೇನಾಪತಿ ಕರ್ಣನ ಆದೇಶದಂತೆ ಕೌರವ ಸೈನ್ಯವೆಲ್ಲವೂ ಕೂಗುತ್ತಾ ಮುಂದಕ್ಕೆ ಹೆಜ್ಜೆ ಹಾಕಿದಾಗ ದಿಗ್ಗಜಗಳಿಗೂ ಎದೆಬಿರಿಯುವಂತಹ ಭಯವಾಯಿತು. ಎಲ್ಲ ಕಡೆಯಿಂದಲೂ ಆತುರವಾಗಿ ಧಾಳಿ ಮಾಡಿದ ಕೌರವ ಸೈನ್ಯ “ಶತ್ರುವನ್ನು ಗಾಯಗೊಳಿಸುವ ಕೆಲಸ ನಮ್ಮದು, ತಮ್ಮದು” ಎಂದು ಪೈಪೋಟಿ ಮಾಡುತ್ತಾ ಭೀಮನ ಮೇಲೆ ಬಾಣಗಳನ್ನು ಪ್ರಯೋಗಿಸಿತು.
ಪದಾರ್ಥ (ಕ.ಗ.ಪ)
ದಳವುಳ-ಆತುರ, ಡೋರುವೋಗು-ತೂತಾಗು
ಮೂಲ ...{Loading}...
ಕೀರಿ ಕಾಲಿಡೆ ದಿಕ್ಕರಿಗಳೆದೆ
ಡೋರುವೋಗಲು ಸರ್ವ ಲಗ್ಗೆಯ
ಲೇರಿತೀ ದಳ ದಳವುಳಿಸಿ ದಳಪತಿಯ ನೇಮದಲಿ
ಏರು ಸೂರೆಗೆ ಹಾರಿ ಮೀಸಲಿ
ನೇರು ನಮ್ಮದು ತಮ್ಮದೆನುತು
ಬ್ಬೇರಿ ಭೀಮನ ಮುತ್ತಿದರು ಮೆತ್ತಿದರು ಸರಳಿನಲಿ ॥20॥
೦೨೧ ಅರಸ ಕೇಳೈ ...{Loading}...
ಅರಸ ಕೇಳೈ ನಿಮ್ಮ ಭೀಮನ
ಪರಿಯನೀ ಸರ್ವಾಸ್ತ್ರಘಾತ
ಸ್ಫುರಣ ಮದಕರಿ ಮಕ್ಷಿಕಾ ಸಂಘಾತದಂದದಲಿ
ಕೆರಳಿ ಕವಿದನು ಕೆದರಿದುರಿ ಕ
ರ್ಪುರಕೆ ಕವಿವಂದದಲಿ ಕರ್ಣನ
ಗುರುಸುತನ ಕುರುಪತಿಯ ದುಶ್ಯಾಸನನ ರಥಕಾಗಿ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧೃತರಾಷ್ಟ್ರನೇ, ನಿಮ್ಮ ಭೀಮನ ಶೌರ್ಯದ ರೀತಿಯನ್ನು ಕೇಳು. ಅವನ ಮೇಲೆ ಬಿದ್ದ ಎಲ್ಲ ಅಸ್ತ್ರದ ಪೆಟ್ಟುಗಳೂ ಮದದಾನೆಯ ಮೇಲೆ ನೊಣಗಳು ಬಿದ್ದಂತಾಯಿತು. ಉರಿ ವ್ಯಾಪಿಸುತ್ತಾ ಕರ್ಪೂರದ ಮೇಲೆ ಬೀಳುವಂತೆ, ಅವನು ಕೋಪಗೊಂಡ ಕರ್ಣ, ಅಶ್ವತ್ಥಾಮ, ದುರ್ಯೋಧನ, ದುಶ್ಶಾಸನರ ರಥಗಳ ಮೇಲೆ ಆಕ್ರಮಣ ಮಾಡಿದನು.
ಪದಾರ್ಥ (ಕ.ಗ.ಪ)
ಮಕ್ಷಿಕ -ನೊಣ
ಮೂಲ ...{Loading}...
ಅರಸ ಕೇಳೈ ನಿಮ್ಮ ಭೀಮನ
ಪರಿಯನೀ ಸರ್ವಾಸ್ತ್ರಘಾತ
ಸ್ಫುರಣ ಮದಕರಿ ಮಕ್ಷಿಕಾ ಸಂಘಾತದಂದದಲಿ
ಕೆರಳಿ ಕವಿದನು ಕೆದರಿದುರಿ ಕ
ರ್ಪುರಕೆ ಕವಿವಂದದಲಿ ಕರ್ಣನ
ಗುರುಸುತನ ಕುರುಪತಿಯ ದುಶ್ಯಾಸನನ ರಥಕಾಗಿ ॥21॥
೦೨೨ ಎಚ್ಚನವರವರೆಚ್ಚ ಬಾಣವ ...{Loading}...
ಎಚ್ಚನವರವರೆಚ್ಚ ಬಾಣವ
ಕೊಚ್ಚಿದನು ಕೋಲಳವಿಗೊಡ್ಡಿದ
ನಿಚ್ಚಟರ ನೀಗಿದನು ತಾಗಿದನರಸು ಮೋಹರವ
ಹೆಚ್ಚಿ ವೀರಾವೇಶದಲಿ ಬಹ
ಬಿಚ್ಚು ರಥಿಕರನಾಯ್ದು ಧೈರ್ಯದ
ಕೆಚ್ಚ ಮುರಿದನು ಕದಡಿದನು ರಿಪುಸುಭಟ ಸಾಗರವ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶತ್ರುಗಳ ಬಾಣಗಳನ್ನೆಲ್ಲಾ ತನ್ನ ಬಾಣಗಳಿಂದ ಕೊಚ್ಚಿ ಹಾಕಿದನು. ತನ್ನ ಬಾಣಗಳ ಶಕ್ತಿಯನ್ನು ಎದುರಿಸಲು ಬಂದ ವೀರರನ್ನೆಲ್ಲಾ ಕೊಂದು ಹಾಕಿದನು. ವೀರಾವೇಶದಿಂದ ಮೇಲೆ ಬಿದ್ದ ರಥಿಕರನ್ನು ಹುಡುಕಿ ಹುಡುಕಿ ಅವರ ಧೈರ್ಯವನ್ನು ಮುರಿದು, ಶತ್ರು ವೀರರ ಸಮುದ್ರವನ್ನು ಕದಡಿದನು.
ಪದಾರ್ಥ (ಕ.ಗ.ಪ)
ನಿಚ್ಚಟ- ಗಟ್ಟಿಮನಸ್ಸು.
ಮೂಲ ...{Loading}...
ಎಚ್ಚನವರವರೆಚ್ಚ ಬಾಣವ
ಕೊಚ್ಚಿದನು ಕೋಲಳವಿಗೊಡ್ಡಿದ
ನಿಚ್ಚಟರ ನೀಗಿದನು ತಾಗಿದನರಸು ಮೋಹರವ
ಹೆಚ್ಚಿ ವೀರಾವೇಶದಲಿ ಬಹ
ಬಿಚ್ಚು ರಥಿಕರನಾಯ್ದು ಧೈರ್ಯದ
ಕೆಚ್ಚ ಮುರಿದನು ಕದಡಿದನು ರಿಪುಸುಭಟ ಸಾಗರವ ॥22॥
೦೨೩ ತುಡುಕುವಾನೆಯನೀಸಿನಲಿ ಖುರ ...{Loading}...
ತುಡುಕುವಾನೆಯನೀಸಿನಲಿ ಖುರ
ವಿಡುವ ಕುದುರೆಯನೊತ್ತಿ ಹಾಯ್ಸುವ
ಬಿಡು ರಥವ ತಲೆವರಿಗೆಯಲಿ ತವಕಿಸುವ ಕಾಲಾಳ
ಕಡಿದನಂಬಿನೊಳಾ ಗಜವನಾ
ಕಡು ಹಯವನಾ ರಥವನಾ ವಂ
ಗಡವ ಕಾಲಾಳುಗಳನೊಂದು ವಿಘಳಿಗೆ ಮಾತ್ರದಲಿ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮೇಲೆ ಬೀಳುತ್ತಿರುವ ಆನೆಗಳನ್ನು, ವೇಗವಾಗಿ ಹೆಜ್ಜೆಹಾಕುತ್ತಿರುವ ಕುದುರೆಗಳನ್ನು, ಮುನ್ನುಗ್ಗಿ ಓಡಿ ಬರುತ್ತಿರುವ ರಥಗಳನ್ನು, ಗುರಾಣಿ ಹಿಡಿದು ತವಕಿಸುತ್ತಿರುವ ಕಾಲಾಳುಗಳನ್ನು ಕಡಿದು ಹಾಕಿದನು. ಆ ಆನೆ, ರಭಸದ ಕುದುರೆ, ರಥ ಹಾಗೂ ಕಾಲಾಳುಗಳ ಗುಂಪನ್ನು ಒಂದು ವಿಘಳಿಗೆ ಸಮಯದಲ್ಲಿ ನಾಶ ಮಾಡಿದನು.
ಪದಾರ್ಥ (ಕ.ಗ.ಪ)
ತಲೆವರಿಗೆ-ಗುರಾಣಿ, ವಿಘಳಿಗೆ-(ಸಂ: ವಿಘಟಿಕಾ-ಗಳಿಗೆಯ ಆರಂಭ)
ಮೂಲ ...{Loading}...
ತುಡುಕುವಾನೆಯನೀಸಿನಲಿ ಖುರ
ವಿಡುವ ಕುದುರೆಯನೊತ್ತಿ ಹಾಯ್ಸುವ
ಬಿಡು ರಥವ ತಲೆವರಿಗೆಯಲಿ ತವಕಿಸುವ ಕಾಲಾಳ
ಕಡಿದನಂಬಿನೊಳಾ ಗಜವನಾ
ಕಡು ಹಯವನಾ ರಥವನಾ ವಂ
ಗಡವ ಕಾಲಾಳುಗಳನೊಂದು ವಿಘಳಿಗೆ ಮಾತ್ರದಲಿ ॥23॥
೦೨೪ ಮುನ್ದೆ ಸಬಳಿಗರೆಡ ...{Loading}...
ಮುಂದೆ ಸಬಳಿಗರೆಡ ಬಲದಲೋ
ರಂದದಲಿ ಬಿಲ್ಲಾಳು ದೊರೆಗಳ
ಮುಂದೆ ಹರಿಗೆಗಳೆರಡು ಬಾಹೆಯಲಾನೆ ಕುದುರೆಗಳು
ಸಂದಣಿಸಿದುದು ಮತ್ತೆ ಬೀಳುವ
ಮಂದಿಗದು ನೆರವಾಯ್ತು ನೆಗ್ಗಿದ
ನೊಂದು ಹಲಗೆಯಲೇರಿದವರನು ಭೂಪ ಕೇಳ್ ಎಂದ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮುಂದೆ ಸಬಳವನ್ನು ಹಿಡಿದ ವೀರರು, ಎಡಬಲಗಳಲ್ಲಿ ಕ್ರಮವಾಗಿ ಬಿಲ್ಲಾಳುಗಳು, ದೊರೆಗಳ ಮುಂದೆ ಗುರಾಣಿಗಳು ಎರಡೂ ಕಡೆಯಲ್ಲಿ ಆನೆ ಕುದುರೆಗಳು ಒಟ್ಟಾಗಿ ಸೇರಿತ್ತು. ಅದು ಸತ್ತು ಬೀಳುವ ಸೈನಿಕರಿಗೆ ಸಹಾಯ ಮಾಡುತ್ತಿತ್ತು. ಒಂದೇ ಹೊಡೆತದಲ್ಲಿ ಮೇಲಾಳುಗಳನ್ನು ಪುಡಿಮಾಡಿದನು.
ಮೂಲ ...{Loading}...
ಮುಂದೆ ಸಬಳಿಗರೆಡ ಬಲದಲೋ
ರಂದದಲಿ ಬಿಲ್ಲಾಳು ದೊರೆಗಳ
ಮುಂದೆ ಹರಿಗೆಗಳೆರಡು ಬಾಹೆಯಲಾನೆ ಕುದುರೆಗಳು
ಸಂದಣಿಸಿದುದು ಮತ್ತೆ ಬೀಳುವ
ಮಂದಿಗದು ನೆರವಾಯ್ತು ನೆಗ್ಗಿದ
ನೊಂದು ಹಲಗೆಯಲೇರಿದವರನು ಭೂಪ ಕೇಳೆಂದ ॥24॥
೦೨೫ ಮುರಿದು ನೆಗ್ಗಿದ ...{Loading}...
ಮುರಿದು ನೆಗ್ಗಿದ ರಥವ ಬರಿಕೈ
ಹರಿದು ಬೀಳುವ ಗಜವ ಘಾಯದ
ನೆರುವಣಿಗೆಯಲಿ ನೆಗ್ಗಿ ಮುಗ್ಗಿದ ಕುದುರೆ ಕಾಲಾಳ
ಅರಿಯೆನಭಿವರ್ಣಿಸಲು ಬಲ ಮು
ಕ್ಕುರಿಕಿಕೊಂಡುದು ಮೇಲೆ ಮೇಲ
ಳ್ಳಿರಿವ ಕಹಳೆಯ ಬಹಳ ಬಹುವಿಧ ವಾದ್ಯರಭಸದಲಿ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮುರಿದು ಪುಡಿಯಾದ ರಥ, ಸೊಂಡಿಲು ಕತ್ತರಿಸಿ ಕೆಳಕ್ಕೆ ಬೀಳುವ ಆನೆ, ಹೆಚ್ಚು ಗಾಯಗಳನ್ನು ಪಡೆದು ಹಿಂಜರಿಯುತ್ತಿದ್ದ, ಮುಗ್ಗರಿಸುತ್ತಿದ್ದ ಕುದುರೆ, ಕಾಲಾಳುಗಳನ್ನು ಬಣ್ಣಿಸಲು ಸಾಧ್ಯವಿಲ್ಲ. ಮತ್ತೆ ಮತ್ತೆ ಭಯಪಡಿಸುತ್ತಿದ್ದ ಕಹಳೆಗಳ ಧ್ವನಿ ಮತ್ತು ಅನೇಕ ಬಗೆಯ ವಾದ್ಯಗಳ ರಭಸದಿಂದ ಕೂಡಿ ಕೌರವನ ಸೈನ್ಯ ಮುತ್ತಿಗೆ ಹಾಕಿತು.
ಪದಾರ್ಥ (ಕ.ಗ.ಪ)
ನೆರುವಣಿಗೆ-ಹೆಚ್ಚುವಿಕೆ, ಮುಕ್ಕುರಿಕೆ-ಮುತ್ತುವುದು ,
ಮೂಲ ...{Loading}...
ಮುರಿದು ನೆಗ್ಗಿದ ರಥವ ಬರಿಕೈ
ಹರಿದು ಬೀಳುವ ಗಜವ ಘಾಯದ
ನೆರುವಣಿಗೆಯಲಿ ನೆಗ್ಗಿ ಮುಗ್ಗಿದ ಕುದುರೆ ಕಾಲಾಳ
ಅರಿಯೆನಭಿವರ್ಣಿಸಲು ಬಲ ಮು
ಕ್ಕುರಿಕಿಕೊಂಡುದು ಮೇಲೆ ಮೇಲ
ಳ್ಳಿರಿವ ಕಹಳೆಯ ಬಹಳ ಬಹುವಿಧ ವಾದ್ಯರಭಸದಲಿ ॥25॥
೦೨೬ ಸಿಕ್ಕಿದನು ಹಗೆ ...{Loading}...
ಸಿಕ್ಕಿದನು ಹಗೆ ಸ್ವಾಮಿದ್ರೋಹಿಯ
ಸೆಕ್ಕಿ ಸುರಗಿಯೊಳಿವನ ಖಂಡವ
ನಿಕ್ಕುಳಿನೊಳೊಡೆಯವಚಿ ಕೊಯ್ ಸುಂಟಿಗೆಯ ತಿನ್ನೆನುತ
ಹೊಕ್ಕು ಹೊಯ್ದರು ರಥವನಳವಿಗೆ
ಮಿಕ್ಕು ಕೈ ಮಾಡಿದರು ಕಾಲ್ದುಳಿ
ಯೊಕ್ಕಿಲಲಿ ಬೇಸರಿಸಿದರು ಪವಮಾನನಂದನನ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶತ್ರು ಸಿಕ್ಕಿಹಾಕಿಕೊಂಡಿದ್ದಾನೆ. ಈ ಸ್ವಾಮಿದ್ರೋಹಿಯನ್ನು ಸುರುಗಿಯಲ್ಲಿ ಸಿಕ್ಕಿಸಿ, ಇವನ ಮಾಂಸಖಂಡವನ್ನು ಇಕ್ಕುಳದಿಂದ ಒಡೆಯಿರಿ, ಒತ್ತಿಹಿಡಿದು ಕೊಯ್ದು ಹಾಕಿ, ಹೃದಯದ ಮಾಂಸವನ್ನು ತಿನ್ನಿರಿ ಎನ್ನುತ್ತ ಸೈನ್ಯದ ಒಳಕ್ಕೆ ನುಗ್ಗಿ ಹೊಡೆದರು. ರಥದ ಮೇಲೆ ಆಕ್ರಮಣ ನಡೆಸಿದರು. ಕಾಲುತುಳಿತದಿಂದ ವಾಯುಪುತ್ರ ಭೀಮನಿಗೆ ಬೇಸರ ಉಂಟು ಮಾಡಿದರು.
ಪದಾರ್ಥ (ಕ.ಗ.ಪ)
ಸುಂಟಿಗೆ-ಹೃದಯದ ಮಾಂಸ
ಮೂಲ ...{Loading}...
ಸಿಕ್ಕಿದನು ಹಗೆ ಸ್ವಾಮಿದ್ರೋಹಿಯ
ಸೆಕ್ಕಿ ಸುರಗಿಯೊಳಿವನ ಖಂಡವ
ನಿಕ್ಕುಳಿನೊಳೊಡೆಯವಚಿ ಕೊಯ್ ಸುಂಟಿಗೆಯ ತಿನ್ನೆನುತ
ಹೊಕ್ಕು ಹೊಯ್ದರು ರಥವನಳವಿಗೆ
ಮಿಕ್ಕು ಕೈ ಮಾಡಿದರು ಕಾಲ್ದುಳಿ
ಯೊಕ್ಕಿಲಲಿ ಬೇಸರಿಸಿದರು ಪವಮಾನನಂದನನ ॥26॥
೦೨೭ ನೆಲಕೆ ದೊಪ್ಪನೆ ...{Loading}...
ನೆಲಕೆ ದೊಪ್ಪನೆ ಹಾಯ್ದು ಕೊಂಡನು
ಹಲಗೆ ಗದೆಯನು ಮೇಲುವಾಯ್ದ
ಪ್ಪಳಿಸಿದರೆ ಕುಪ್ಪಳಿಸಿತರಿಬಲ ಘಾಯ ಘಾಯದಲಿ
ತಲೆಗಳೊಟ್ಟಿಲ ಕರಿಗಳಟ್ಟೆಯ
ನೆಳೆವ ರಕುತದ ಹೊನಲ ಮುಂಡದ
ಲಳಿಯ ನಾಟ್ಯದಲೆಸೆದುದೈ ಬೀಭತ್ಸ ರೌದ್ರದಲಿ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮನು ನೆಲದ ಮೇಲಕ್ಕೆ ತಕ್ಷಣ ಎಗರಿ ಗುರಾಣಿ ಗದೆಗಳನ್ನು ಹಿಡಿದು, ಮೇಲೆ ಬಿದ್ದು ಅಪ್ಪಳಿಸಿದಾಗ ಶತ್ರುಸೈನ್ಯ ಗಾಯಗಳಿಂದ ಕುಪ್ಪಳಿಸಿತು. ತಲೆಗಳ ರಾಶಿ, ಆನೆಗಳ ದೇಹಗಳನ್ನು ಕೊಚ್ಚಿಕೊಂಡು ಹೋಗುವ ರಕ್ತದ ಪ್ರವಾಹದಲ್ಲಿ ದೇಹದ ಮುಂಡಭಾಗದ ಅಲೆಗಳ ಕುಣಿತದ ದೃಶ್ಯ ರುದ್ರಭಯಂಕರವಾಗಿತ್ತು.
ಮೂಲ ...{Loading}...
ನೆಲಕೆ ದೊಪ್ಪನೆ ಹಾಯ್ದು ಕೊಂಡನು
ಹಲಗೆ ಗದೆಯನು ಮೇಲುವಾಯ್ದ
ಪ್ಪಳಿಸಿದರೆ ಕುಪ್ಪಳಿಸಿತರಿಬಲ ಘಾಯ ಘಾಯದಲಿ
ತಲೆಗಳೊಟ್ಟಿಲ ಕರಿಗಳಟ್ಟೆಯ
ನೆಳೆವ ರಕುತದ ಹೊನಲ ಮುಂಡದ
ಲಳಿಯ ನಾಟ್ಯದಲೆಸೆದುದೈ ಬೀಭತ್ಸ ರೌದ್ರದಲಿ ॥27॥
೦೨೮ ಕರಿ ಕೆಡೆಯೆ ...{Loading}...
ಕರಿ ಕೆಡೆಯೆ ಕಾಲಿನಲಿ ಜೋದರು
ತೆರಳದೆಚ್ಚಾಡಿದರು ರಥಚಯ
ಮುರಿಯೆ ಕಾಲಿನಲೊದಗಿದರು ಸಮರಥ ಮಹಾರಥರು
ಹರಿಯೆ ಹಯ ರೂಢಿಯಲಿ ನಿಂದ
ಬ್ಬರಿಸಿದರು ರಾವುತರು ಭೀಮನ
ಬಿರುಗದೆಯ ಘಲ್ಲಣೆಗೆ ಚೆಲ್ಲಿತು ನಿಮ್ಮ ಪರಿವಾರ ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆನೆಗಳು ಕೆಳಗೆ ಉರುಳಿದರೂ, ಅದರ ಮಾವುತರು ಓಡಿಹೋಗದೆ ಕಾಲಾಳುಗಳಾಗಿ ಹೋರಾಡಿದರು. ರಥಗಳು ಮುರಿದು ಹೋದರೂ, ಸಮರಥ ಮಹಾರಥರು ಕಾಲಾಳುಗಳಾಗಿ ಯುದ್ಧದಲ್ಲಿ ಸಹಾಯ ಮಾಡಿದರು. ಕುದುರೆಗಳು ಬಿದ್ದರೂ, ರಾವುತರು ಕ್ರಮವಾಗಿ ನಿಂತು ಅಬ್ಬರಿಸಿ ಹೋರಾಡಿದರು. ಭೀಮನ ಬಿರುಸಾದ ಗದೆಯ ಪೆಟ್ಟುಗಳಿಗೆ ನಿಮ್ಮ ಸೈನ್ಯ ಚೆಲ್ಲಾಪಿಲ್ಲಿಯಾಯಿತು.
ಮೂಲ ...{Loading}...
ಕರಿ ಕೆಡೆಯೆ ಕಾಲಿನಲಿ ಜೋದರು
ತೆರಳದೆಚ್ಚಾಡಿದರು ರಥಚಯ
ಮುರಿಯೆ ಕಾಲಿನಲೊದಗಿದರು ಸಮರಥ ಮಹಾರಥರು
ಹರಿಯೆ ಹಯ ರೂಢಿಯಲಿ ನಿಂದ
ಬ್ಬರಿಸಿದರು ರಾವುತರು ಭೀಮನ
ಬಿರುಗದೆಯ ಘಲ್ಲಣೆಗೆ ಚೆಲ್ಲಿತು ನಿಮ್ಮ ಪರಿವಾರ ॥28॥
೦೨೯ ರಾವುತರು ಕಡಿವಡೆಯೆ ...{Loading}...
ರಾವುತರು ಕಡಿವಡೆಯೆ ಕಾಂಭೋ
ಜಾವಳಿಗಳೋಡಿದವು ಜೋದರ
ಜೀವ ಜಾಳಿಸೆ ಬೀದಿವರಿದವು ಗಜಘಟಾಳಿಗಳು
ತಾವು ನಿಬ್ಬರ ಗತಿಯ ರಥ ತುರ
ಗಾವಳಿಗಳೆಳೆದವು ರಥಂಗಳ
ನಾ ವಿಗಡ ವಿಗ್ರಹ ಮಹಾದ್ಭುತವರಸ ಕೇಳ್ ಎಂದ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಾವುತರು ಏಟು ತಿಂದು ಬಿದ್ದಾಗ, ಕುದುರೆಗಳು ಓಡಿಹೋದವು, ಮಾವುತರ ಜೀವ ಹೋದಾಗ ಆನೆಗಳು ಚೆಲ್ಲಾಪಿಲ್ಲಿಯಾಗಿ ಓಡಿದವು, ರಥಿಕರು ಮಡಿದಾಗ ರಥದ ಕುದುರೆಗಳೇ ರಥಗಳನ್ನು ಜೋರಾಗಿ ಎಳೆದುಕೊಂಡು ಹೋದವು. ಆ ಭಯಂಕರ ಯುದ್ಧ ಮಹಾ ಅದ್ಭುತವಾಗಿತ್ತು ದೊರೆಯೇ ಕೇಳು ಎಂದು ಸಂಜಯನು ಹೇಳಿದನು.
ಪದಾರ್ಥ (ಕ.ಗ.ಪ)
ಕಾಂಭೋಜಾವಳಿ-ಕಾಂಭೋಜ ದೇಶದ ಕುದುರೆಗಳು
ಮೂಲ ...{Loading}...
ರಾವುತರು ಕಡಿವಡೆಯೆ ಕಾಂಭೋ
ಜಾವಳಿಗಳೋಡಿದವು ಜೋದರ
ಜೀವ ಜಾಳಿಸೆ ಬೀದಿವರಿದವು ಗಜಘಟಾಳಿಗಳು
ತಾವು ನಿಬ್ಬರ ಗತಿಯ ರಥ ತುರ
ಗಾವಳಿಗಳೆಳೆದವು ರಥಂಗಳ
ನಾ ವಿಗಡ ವಿಗ್ರಹ ಮಹಾದ್ಭುತವರಸ ಕೇಳೆಂದ ॥29॥
೦೩೦ ಕೆಡೆದ ಝಲ್ಲರಿಗಳ ...{Loading}...
ಕೆಡೆದ ಝಲ್ಲರಿಗಳ ರಥಾಗ್ರದೊ
ಳುಡಿದ ಸಿಂಧದ ಮಕುಟ ಪದಕದ
ಖಡೆಯ ಸರಪಣಿ ತೋಳಬಂದಿಯ ವಜ್ರಮಾಣಿಕದ
ಕಡುಕು ಹೀರಾವಳಿಯ ಹಾರದ
ಕಡಿಯ ರಚನೆಯ ರಾಶಿ ಯಮನಂ
ಗಡಿಯ ಪಸರವಿದೆನಲು ಮೆರೆದುದು ಕೂಡೆ ರಣಭೂಮಿ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಥದ ಮುಂದೆ ಕೆಳಗೆ ಬಿದ್ದ ತೋರಣಗಳು, ಮುರಿದ ಧ್ವಜಗಳು, ಕಿರೀಟದ ಪದಕಗಳು, ಕಾಲ್ಗಡಗ, ಸರಪಣಿ, ತೋಳಬಂದಿ, ಕಿವಿಯ ವಜ್ರ ಮಾಣಿಕ್ಯದ ಕಡುಕು, ತುಂಡಾದ ವಜ್ರದ ಸರ, ಯಮನ ಅಂಗಡಿಯ ಮಾರಾಟದ ವಸ್ತುಗಳು ಇವು ಎನ್ನುವಂತೆ ರಣರಂಗ ಮೆರೆಯುತ್ತಿತ್ತು.
ಪದಾರ್ಥ (ಕ.ಗ.ಪ)
ಖಡೆಯ-ಕಾಲುಕಡಗ, ಹೀರಾವಳಿ-ವಜ್ರದ ಸರ
ಮೂಲ ...{Loading}...
ಕೆಡೆದ ಝಲ್ಲರಿಗಳ ರಥಾಗ್ರದೊ
ಳುಡಿದ ಸಿಂಧದ ಮಕುಟ ಪದಕದ
ಖಡೆಯ ಸರಪಣಿ ತೋಳಬಂದಿಯ ವಜ್ರಮಾಣಿಕದ
ಕಡುಕು ಹೀರಾವಳಿಯ ಹಾರದ
ಕಡಿಯ ರಚನೆಯ ರಾಶಿ ಯಮನಂ
ಗಡಿಯ ಪಸರವಿದೆನಲು ಮೆರೆದುದು ಕೂಡೆ ರಣಭೂಮಿ ॥30॥
೦೩೧ ಕಡಿದ ಹಕ್ಕರಿಕೆಗಳ ...{Loading}...
ಕಡಿದ ಹಕ್ಕರಿಕೆಗಳ ಸೀಳಿದ
ದಡಿಯ ನೆಗ್ಗಿದ ಗುಳದ ರೆಂಚೆಯ
ಸಿಡಿದ ಸೀಸಕ ಬಾಹುರಕ್ಷೆಯ ಜೋಡು ಮೊಚ್ಚೆಯದ
ಉಡಿದ ಮಿಣಿ ಮೊಗರಂಬ ಗದ್ದುಗೆ
ಬಡಿಗೆಗಳ ಸೂತ್ರಿಕೆಯ ಕಬ್ಬಿಯ
ಕಡಿಯಣದ ಕುಸುರಿಗಳಲೆಸೆದುದು ಕೂಡೆ ರಣಭೂಮಿ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಿತ್ತುಹೋದ ಹಲ್ಲಣಗಳು, ಸೀಳಿಹೋದ ದಂಡಗಳು (ಕೋಲು) ತಗ್ಗಿ ಹೋದ ಸಲಾಕೆಗಳು, ರೆಂಚೆಗಳು, ಒಡೆದುಹೋದ ಸೀಸಕ (ತಲೆಯ ಟೋಪಿ), ಬಾಹು ರಕ್ಷೆಗಳು, ಕವಚಗಳು, ಚಪ್ಪಲಿಗಳು, ಕಿತ್ತುಹೋದ ಹಗ್ಗ, ಆನೆ ಕುದುರೆಗಳ ಮುಖವಾಡಗಳು, ಪೀಠಗಳು, ಬಡಿಗೆಗಳು, ಸುತ್ತಿಗೆಗಳು, ಕಡಿವಾಣಗಳು, ಮೊದಲಾದವುಗಳ ಚೂರುಗಳಿಂದ ರಣಭೂಮಿ ಶೋಭಿಸುತ್ತಿತ್ತು.
ಪದಾರ್ಥ (ಕ.ಗ.ಪ)
ಮೊಗರಂಬ-ಆನೆ ಕುದುರೆಗಳಿಗೆ ಹಾಕುವ ಮುಖವಾಡ,
ಕಬ್ಬಿ-ಕಡಿವಾಣ
ಮೂಲ ...{Loading}...
ಕಡಿದ ಹಕ್ಕರಿಕೆಗಳ ಸೀಳಿದ
ದಡಿಯ ನೆಗ್ಗಿದ ಗುಳದ ರೆಂಚೆಯ
ಸಿಡಿದ ಸೀಸಕ ಬಾಹುರಕ್ಷೆಯ ಜೋಡು ಮೊಚ್ಚೆಯದ
ಉಡಿದ ಮಿಣಿ ಮೊಗರಂಬ ಗದ್ದುಗೆ
ಬಡಿಗೆಗಳ ಸೂತ್ರಿಕೆಯ ಕಬ್ಬಿಯ
ಕಡಿಯಣದ ಕುಸುರಿಗಳಲೆಸೆದುದು ಕೂಡೆ ರಣಭೂಮಿ ॥31॥
೦೩೨ ಮುರಿದ ದೂಹತ್ತಿಗಳ ...{Loading}...
ಮುರಿದ ದೂಹತ್ತಿಗಳ ನೆಗ್ಗಿದ
ಸುರಗಿಗಳ ಚಿನಕಡಿಯ ತೋಮರ
ಪರಶು ಸೆಲ್ಲೆಹ ಚಕ್ರ ಸಬಳ ಮುಸುಂಡಿ ಲೌಡೆಗಳ
ಹರಿದ ಹೊದೆಯಂಬುಡಿದ ಬಿಲ್ಲಿನ
ಬಿರಿದ ಬತ್ತಳಿಕೆಗಳ ಸೀಳಿದ
ಹರಿಗೆಗಳ ಹೇರಾಳದಲಿ ರಂಜಿಸಿತು ರಣಭೂಮಿ ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಸಂಖ್ಯವಾಗಿದ್ದ ಮುರಿದುಹೋದ ದೂಹತ್ತಿಗಳು, ಛಿದ್ರವಾದ ಸುರಗಿಗಳು, ಚಿಕ್ಕಚಿಕ್ಕದಾಗಿ ಕತ್ತರಿಸಿ ಹೋದ ತೋಮರ, ಕೊಡಲಿ, ಬರ್ಜಿ, ಚಕ್ರ, ಈಟಿ, ಮುಸುಂಡಿ, ಲೌಡೆ ಎಂಬ ಆಯುಧಗಳು, ಕಿತ್ತು ಹೋದ ಬತ್ತಳಿಕೆ, ಬಾಣ ಮುರಿದು ಹೋದ ಬಿಲ್ಲು, ಒಡೆದು ಹೋದ ಬತ್ತಳಿಕೆಗಳು, ಸೀಳಿಹೋದ ಗುರಾಣಿಗಳು - ಇವುಗಳಿಂದ ರಣಭೂಮಿ ರಂಜಿಸುತ್ತಿತ್ತು.
ಮೂಲ ...{Loading}...
ಮುರಿದ ದೂಹತ್ತಿಗಳ ನೆಗ್ಗಿದ
ಸುರಗಿಗಳ ಚಿನಕಡಿಯ ತೋಮರ
ಪರಶು ಸೆಲ್ಲೆಹ ಚಕ್ರ ಸಬಳ ಮುಸುಂಡಿ ಲೌಡೆಗಳ
ಹರಿದ ಹೊದೆಯಂಬುಡಿದ ಬಿಲ್ಲಿನ
ಬಿರಿದ ಬತ್ತಳಿಕೆಗಳ ಸೀಳಿದ
ಹರಿಗೆಗಳ ಹೇರಾಳದಲಿ ರಂಜಿಸಿತು ರಣಭೂಮಿ ॥32॥
೦೩೩ ಉರುಳ್ವ ತಲೆಗಳ ...{Loading}...
ಉರುಳ್ವ ತಲೆಗಳ ಕುಣಿವ ಮುಂಡದ
ಹೊರಳ್ವ ಕರಿಗಳ ಗದೆಯ ಹೊಯ್ಲಲಿ
ನರಳ್ವ ವೀರರ ಮಿದುಳ ಜೋರಿನ ಜೊಂಡೆ ಜೋಡಣೆಯ
ಅರಳ್ವ ಕಡಿನಾಳಿಕೆಯ ರಕುತಕೆ
ಮರಲ್ವ ಭೂತವ್ರಜದ ಝೋಂಪಿಸಿ
ಕೆರಳ್ವ ಭಟರಟ್ಟೆಗಳಲೆಸೆದುದು ಕೂಡೆ ರಣಭೂಮಿ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಉರುಳುತ್ತಿರುವ ತಲೆಗಳು, ಕುಣಿಯುತ್ತಿರುವ ಮುಂಡಗಳು, ಹೊರಳಾಡುತ್ತಿರುವ ಆನೆಗಳು, ಗದೆಯ ಏಟಿನಿಂದ ನರಳುತ್ತಿರುವ ವೀರರ ಮಿದುಳಿನ ಹಗುರವಾದ ದೊಡ್ಡ ಗಡ್ಡೆಗಳು, ಸೋರುತ್ತಿರುವ ಕತ್ತರಿಸಿ ಹೋಗಿರುವ ತಮ್ಮ ರಕ್ತನಾಳಕ್ಕೆ ಮರುಳಾಗಿ ಮತ್ತೆ ಮತ್ತೆ ಬರುತ್ತಿರುವ ಭೂತಗಳಿಗೆ ಬೆಚ್ಚಿಬೀಳುತ್ತಾ ಕೋಪಿಸುತ್ತಿರುವ ಸೈನಿಕರ ದೇಹಗಳಿಂದ ಕೂಡಿ ರಣಭೂಮಿ ಶೋಭಿಸುತ್ತಿತ್ತು.
ಪದಾರ್ಥ (ಕ.ಗ.ಪ)
ಜೊಂಡು-ಹಗುರ, ಬೆಂಡು, ಅಟ್ಟೆ-ದೇಹ,
ಮೂಲ ...{Loading}...
ಉರುಳ್ವ ತಲೆಗಳ ಕುಣಿವ ಮುಂಡದ
ಹೊರಳ್ವ ಕರಿಗಳ ಗದೆಯ ಹೊಯ್ಲಲಿ
ನರಳ್ವ ವೀರರ ಮಿದುಳ ಜೋರಿನ ಜೊಂಡೆ ಜೋಡಣೆಯ
ಅರಳ್ವ ಕಡಿನಾಳಿಕೆಯ ರಕುತಕೆ
ಮರಲ್ವ ಭೂತವ್ರಜದ ಝೋಂಪಿಸಿ
ಕೆರಳ್ವ ಭಟರಟ್ಟೆಗಳಲೆಸೆದುದು ಕೂಡೆ ರಣಭೂಮಿ ॥33॥
೦೩೪ ಅಲ್ಲಿ ಕರ್ಣನ ...{Loading}...
ಅಲ್ಲಿ ಕರ್ಣನ ರಥದ ತೇಜಿಯ
ಘಲ್ಲಿಸಿದನಾ ಕ್ಷಣದೊಳಿಚ್ಚೆಯ
ಕೆಲ್ಲೆಯಲಿ ಕಾದಿದನು ಚಿಗಿದನು ಕೌರವನ ಹೊರೆಗೆ
ಅಲ್ಲಿ ಹೊಯ್ದು ಸುಶರ್ಮನವದಿರ
ಚೆಲ್ಲಬಡಿದನು ದಳದ ನಾಯಕ
ರೆಲ್ಲರಿಗೆ ಸವಿದೋರಿದನು ಬಲುಗದೆಯ ಹೊಯ್ಲುಗಳ ॥34॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮನು ಕರ್ಣನ ರಥದ ಕುದುರೆಗಳನ್ನು ಹೊಡೆದನು. ಆ ನಂತರ ಇಷ್ಟಬಂದ ಆಯುಧಗಳಿಂದ ಹೊಡೆದನು. ಕೌರವನು ಇದ್ದ ಕಡೆಗೆ ನೆಗೆದನು. ಅಲ್ಲಿ ಹೋರಾಡುತ್ತಾ ಸುಶರ್ಮ ಮೊದಲಾದವರನ್ನು ಚೆದುರಿ ಹೋಗುವಂತೆ ಬಡಿದನು. ದಳಪತಿಗಳಿಗೆಲ್ಲಾ ತನ್ನ ಗದೆಯ ಪೆಟ್ಟಿನ ರುಚಿಯನ್ನು ತೋರಿಸಿದನು.
ಪದಾರ್ಥ (ಕ.ಗ.ಪ)
ತೇಜಿ-ಕುದುರೆ, ಕೆಲ್ಲೆ-ಆಯುಧ, ಚೆಲ್ಲಬಡಿ-ಚೆದರಿಹೋಗುವಂತೆ ಹೊಡೆ
ಮೂಲ ...{Loading}...
ಅಲ್ಲಿ ಕರ್ಣನ ರಥದ ತೇಜಿಯ
ಘಲ್ಲಿಸಿದನಾ ಕ್ಷಣದೊಳಿಚ್ಚೆಯ
ಕೆಲ್ಲೆಯಲಿ ಕಾದಿದನು ಚಿಗಿದನು ಕೌರವನ ಹೊರೆಗೆ
ಅಲ್ಲಿ ಹೊಯ್ದು ಸುಶರ್ಮನವದಿರ
ಚೆಲ್ಲಬಡಿದನು ದಳದ ನಾಯಕ
ರೆಲ್ಲರಿಗೆ ಸವಿದೋರಿದನು ಬಲುಗದೆಯ ಹೊಯ್ಲುಗಳ ॥34॥
೦೩೫ ಇತ್ತಲಿತ್ತಲು ಭೀಮನೆನ್ದುರೆ ...{Loading}...
ಇತ್ತಲಿತ್ತಲು ಭೀಮನೆಂದುರೆ
ಮುತ್ತಿ ಮುಸುಕಿತು ಸೇನೆ ಚಿಮ್ಮಿದ
ನತ್ತಲಾಚೆಯಲಲ್ಲಿ ದಳ ಘಾಡಿಸಿತು ವೇಢೆಯಲಿ
ಇತ್ತ ಹಾಯ್ದನು ಕೌರವನ ರಥ
ದತ್ತ ಚಿಗಿದನು ಗುರುಸುತಾದಿಗ
ಳತ್ತಲಲ್ಲಿಗೆ ಮೊಳಗಿದನು ಮೋದಿದನು ಪಟುಭಟರ ॥35॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇಗೋ ಭೀಮ ಈ ಕಡೆಗೆ ಬಂದ ಎಂದು ಶತ್ರುಸೈನ್ಯ ಮುತ್ತಿಗೆ ಹಾಕಿದಾಗ ಭೀಮನು ಆ ಕಡೆಗೆ ನೆಗೆದನು. ಅಲ್ಲಿಯೂ ಸೈನ್ಯ ಮುಗಿ ಬಿದ್ದಾಗ, ಸುತ್ತುತ್ತಾ ಇನ್ನೊಂದು ಕಡೆಗೆ ನಡೆದನು. ಕೌರವನ ರಥದ ಕಡೆಗೆ ನೆಗೆದನು. ಅಶ್ವತ್ಥಾಮ ಮೊದಲಾದವರು ಇದ್ದ ಕಡೆಗೆ ಹೋಗಿ ಆರ್ಭಟಿಸಿದನು. ಬಲಶಾಲಿಗಳನ್ನೆಲ್ಲಾ ಅಪ್ಪಳಿಸಿ ಹೊಡೆದನು.
ಪದಾರ್ಥ (ಕ.ಗ.ಪ)
ವೇಢೆ-ಸುತ್ತು, ಮೋದು-ಅಪ್ಪಳಿಸಿ ಹೊಡೆ
ಮೂಲ ...{Loading}...
ಇತ್ತಲಿತ್ತಲು ಭೀಮನೆಂದುರೆ
ಮುತ್ತಿ ಮುಸುಕಿತು ಸೇನೆ ಚಿಮ್ಮಿದ
ನತ್ತಲಾಚೆಯಲಲ್ಲಿ ದಳ ಘಾಡಿಸಿತು ವೇಢೆಯಲಿ
ಇತ್ತ ಹಾಯ್ದನು ಕೌರವನ ರಥ
ದತ್ತ ಚಿಗಿದನು ಗುರುಸುತಾದಿಗ
ಳತ್ತಲಲ್ಲಿಗೆ ಮೊಳಗಿದನು ಮೋದಿದನು ಪಟುಭಟರ ॥35॥
೦೩೬ ಕರಿಘಟೆಯ ಮರೆವೊಕ್ಕು ...{Loading}...
ಕರಿಘಟೆಯ ಮರೆವೊಕ್ಕು ನಿಂದರು
ನರರು ತೇಜಿಗಳೋಡಿ ತೇರಿನ
ಮರೆಯ ಸಾರ್ದವು ತೇರು ಹಾಯ್ದವು ದೊರೆಯ ಹಿನ್ನೆಲೆಗೆ
ಕರಿಮುರಿದು ಕಾಲಾಳು ಕಾಲಾ
ಳ್ತೆರಳಿ ದೊರೆಗಳ ಹಿಂದೆ ದೊರೆ ಪೈ
ಸರಿಸಿತಲ್ಲಿಯದಲ್ಲಿ ಭೀಮನ ಹೊಯ್ಲ ಹೋರಟೆಗೆ ॥36॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮನ ಹೊಡೆತದ ರಭಸವನ್ನು ತಡೆಯಲಾರದೆ ಕಾಲಾಳು ಸೈನಿಕರು ಆನೆಗಳ ಹಿಂದೆ ಹೋಗಿ ಆಶ್ರಯ ಪಡೆದರು. ಕುದುರೆಗಳು ಓಡಿ ಹೋಗಿ ರಥಗಳ ಹಿಂದೆ ನಿಂತವು. ತೇರುಗಳು ದೊರೆಗಳ ಹಿಂದೆ ನಿಂತು ರಕ್ಷಣೆ ಪಡೆದುಕೊಂಡವು. ಆನೆಗಳು ಬಿದ್ದು ಕಾಲಾಳುಗಳು ಹೆದರಿ ದೊರೆಗಳ ಹಿಂದೆ ಅವಿತುಕೊಂಡರು. ದೊರೆಗಳೂ ಹೆದರಿ ಹಿಂದೆ ಸರಿದರು.
ಪದಾರ್ಥ (ಕ.ಗ.ಪ)
ಪೈಸರಿಸು-ಹೆದರು, ಹಿಂದೆ ಸರಿ
ಮೂಲ ...{Loading}...
ಕರಿಘಟೆಯ ಮರೆವೊಕ್ಕು ನಿಂದರು
ನರರು ತೇಜಿಗಳೋಡಿ ತೇರಿನ
ಮರೆಯ ಸಾರ್ದವು ತೇರು ಹಾಯ್ದವು ದೊರೆಯ ಹಿನ್ನೆಲೆಗೆ
ಕರಿಮುರಿದು ಕಾಲಾಳು ಕಾಲಾ
ಳ್ತೆರಳಿ ದೊರೆಗಳ ಹಿಂದೆ ದೊರೆ ಪೈ
ಸರಿಸಿತಲ್ಲಿಯದಲ್ಲಿ ಭೀಮನ ಹೊಯ್ಲ ಹೋರಟೆಗೆ ॥36॥
೦೩೭ ಪೂತು ಮಝ ...{Loading}...
ಪೂತು ಮಝ ರಿಪುರಾಯ ಮನ್ಮಥ
ಭೂತನಾಥ ವಿರೋಧಿಬಲ ಪುರು
ಹೂತ ರಾಯಘರಟ್ಟ ವೈರಿನಿಕಾಯಗಿರಿವಜ್ರ
ಏತಕೀ ಸೂಳೆಯರು ಕ್ಷತ್ರಿಯ
ಜಾತಿಯಲಿ ಜನಿಸಿದರು ಶಿವ ಶಿವ
ಪೂತು ಗಂಡಿಗನೆಂದು ಗರ್ಜಿಸಿತಖಿಳ ವಂದಿಜನ ॥37॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮನ ಶೌರ್ಯವನ್ನು ಕಂಡ ಹೊಗಳುಭಟ್ಟರು ‘ಭೇಷ್, ಶತ್ರುರಾಜರೆಂಬ ಮನ್ಮಥರಿಗೆ ಭೂತನಾಥ ಶಿವನಂತಿರುವ, ಶತ್ರುಬಲಕ್ಕೆ ಇಂದ್ರನಂತಿರುವವನು, ಶತ್ರುರಾಯರನ್ನು ಪುಡಿಮಾಡುವ ಬೀಸುವ ಕಲ್ಲು, ಶತ್ರು ಸಮೂಹವೆಂಬ ಬೆಟ್ಟಗಳಿಗೆ ವಜ್ರಾಯುಧ, ಎಂದು ಹೊಗಳಿ ಉಳಿದವರನ್ನು ಹೀಗಳೆಯುತ್ತಾ ‘ಏತಕ್ಕೆ ಈ ಸೂಳೆಯರು ಕ್ಷತ್ರಿಯ ಜಾತಿಯಲ್ಲಿ ಹುಟ್ಟಿದರೋ ಶಿವನೇ’ ಎಂದು ಟೀಕಿಸಿದರು. ‘ಭಲಾ, ನೀನೇ ವೀರ’ ಎಂದು ಜೋರಾಗಿ ಕೂಗಿದರು.
ಪದಾರ್ಥ (ಕ.ಗ.ಪ)
ಪುರುಹೂತ-ಇಂದ್ರ
ಮೂಲ ...{Loading}...
ಪೂತು ಮಝ ರಿಪುರಾಯ ಮನ್ಮಥ
ಭೂತನಾಥ ವಿರೋಧಿಬಲ ಪುರು
ಹೂತ ರಾಯಘರಟ್ಟ ವೈರಿನಿಕಾಯಗಿರಿವಜ್ರ
ಏತಕೀ ಸೂಳೆಯರು ಕ್ಷತ್ರಿಯ
ಜಾತಿಯಲಿ ಜನಿಸಿದರು ಶಿವ ಶಿವ
ಪೂತು ಗಂಡಿಗನೆಂದು ಗರ್ಜಿಸಿತಖಿಳ ವಂದಿಜನ ॥37॥