೧೪

೦೦೦ ಸೂಚನೆ ಮರಳಿದನು ...{Loading}...

ಸೂಚನೆ: ಮರಳಿದನು ಪಾಳೆಯಕೆ ಪಾಂಡವ
ರರಸನಿತ್ತಲು ಪಾರ್ಥ ಕೇಳಿದು
ಬರುತ ಗೆಲಿದನು ಸಕಲ ಕೌರವ ರಾಯ ಮೋಹರವ

೦೦೧ ದೂರುವರಲೇ ಕರ್ಣನೋಲೆಯ ...{Loading}...

ದೂರುವರಲೇ ಕರ್ಣನೋಲೆಯ
ಕಾರತನವನು ಹಿಂದೆ ಕೆಲಬರು
ದೂರಿದರೆ ಫಲವೇನು ಕದನದಲವಗೆ ಸರಿಯಹರೆ
ಹಾರಲೂದಿದನಹಿತ ರಾಯನ
ನೀರತನವನು ತನ್ನ ರಾಯನ
ಸೂರೆಗಡಹಾಯ್ದರಿಯ ತಡೆದನು ಭೂಪ ಕೇಳ್ ಎಂದ ॥1॥

೦೦೨ ಅರರೆ ಸಿಂಹದ ...{Loading}...

ಅರರೆ ಸಿಂಹದ ತೋಳ ತೆಕ್ಕೆಯ
ಕರಿಯ ಸೆಳೆವಂದದಲಿ ಗರುಡನ
ಕೊರಳ ಬಿಲದಲಿ ಬಿಳ್ದ ಸರ್ಪನ ಸೇದುವಂದದಲಿ
ಧರಣಿಪಾಲನ ತೆಗೆದು ಭೀಮನ
ಬರಿಯನೆಚ್ಚನು ಜೋಡ ಜೋಕೆಯ
ಜರುಹಿದನು ಜವಗೆಡಿಸಿದನು ನಿನ್ನಾತನನಿಲಜನ ॥2॥

೦೦೩ ಅರಸ ಕೇಳೈ ...{Loading}...

ಅರಸ ಕೇಳೈ ಕರ್ಣ ಭೀಮರ
ಧರಧುರದ ದೆಖ್ಖಾಯ್ಲತನ ಗ
ಬ್ಬರಿಸಿತಾಹವ ಗರ್ವಿತರ ಗಾಢಾಯ್ಲ ಚೇತನವ
ಧರಣಿಪಾಲನನತ್ತಲವರಾ
ದರಿಸಿದರು ಸಹದೇವ ನಕುಳರು
ಸರಳ ಕಿತ್ತರು ಘಾಯವನು ತೊಳೆತೊಳೆದು ಮಂತ್ರಿಸುತ ॥3॥

೦೦೪ ದುರುದುರಿಪ ಬಿಸಿರಕ್ತವೇರಿನೊ ...{Loading}...

ದುರುದುರಿಪ ಬಿಸಿರಕ್ತವೇರಿನೊ
ಳೊರತೆ ಮಸಗಿತು ಬಹಳ ಧೈರ್ಯದ
ಹೊರಿಗೆ ಮುರಿದುದು ಮೂಗಿನುಸಿರುಬ್ಬೆದ್ದುದಡಿಗಡಿಗೆ
ಅರಿವು ಮರವೆಗಳೊಂದನೊಂದನು
ಮುರಿದು ನೂಕಿದವವನಿಪತಿ ಕಡು
ವೆರಗ ಕೇಣಿಯ ಕೊಂಡವೋಲಿದ್ದನು ವಿಚೇಷ್ಟೆಯಲಿ ॥4॥

೦೦೫ ಜಯಸಮರ ಜಾರಾಯ್ತು ...{Loading}...

ಜಯಸಮರ ಜಾರಾಯ್ತು ತೆಗೆ ಪಾ
ಳೆಯಕೆ ಮರಳಿಚು ರಥವನಿನ್ನೆ
ಲ್ಲಿಯದು ನೆಲ ನೆರೆ ಕುದಿವ ಕುರುಡನ ಮಕ್ಕಳೇ ಕೊಳಲಿ
ನಿಯತವೆಮ್ಮಿಬ್ಬರಿಗೆ ರಾಯನ
ಲಯವೆ ಲಯವಿನ್ನೆನುತಲಾ ಮಾ
ದ್ರಿಯ ಕುಮಾರರು ದೊರೆ ಸಹಿತ ತಿರುಗಿದರು ಪಾಳೆಯಕೆ ॥5॥

೦೦೬ ರಾಯರಥ ಮಡಮುರಿಯೆ ...{Loading}...

ರಾಯರಥ ಮಡಮುರಿಯೆ ಮುರಿದುದು
ನಾಯಕರು ಪಾಂಚಾಲಕರು ವಾ
ನಾಯುಜರು ಮತ್ಸ್ಯ ಪ್ರಬುದ್ಧಕ ಸೋಮಕಾದಿಗಳು
ವಾಯುಹತಿಯಲಿ ಮೇಘದೊಡ್ಡಿಂ
ಗಾಯಸವು ಕರ್ಣಾಸ್ತ್ರ ಹತಿಯಲ
ಪಾಯವರಿರಾಯರಿಗಪೂರ್ವವೆ ಭೂಪ ಕೇಳ್ ಎಂದ ॥6॥

೦೦೭ ಮುರಿದುದೈ ರಿಪುರಾಯದಳ ...{Loading}...

ಮುರಿದುದೈ ರಿಪುರಾಯದಳ ಹಗೆ
ಹರಿದುದೈ ಕುರುಪತಿಗೆ ಹರುಷವ
ಕರೆದುದೈ ಕರ್ಣಪ್ರತಾಪಾಟೋಪ ಜೀಮೂತ
ಇರಿತ ಮೆರೆದುದು ನಿನ್ನವರ ಬೊ
ಬ್ಬಿರಿತ ಜರೆದುದು ವಿಜಯಲಕ್ಷ್ಮಿಯ
ಸೆರಗು ಸೋಂಕಿತು ಕೌರವೇಶ್ವರಗರಸ ಕೇಳ್ ಎಂದ ॥7॥

೦೦೮ ಅರಿಬಲದ ಲಗ್ಗೆಯನು ...{Loading}...

ಅರಿಬಲದ ಲಗ್ಗೆಯನು ನಿಜ ಮೋ
ಹರದ ಮುರಿವಿನ ಸುಗ್ಗಿಯನು ಧರ
ಧುರದ ಪರಬಲದೊಸಗೆಯನು ನಿಜಬಲದ ಹಸುಗೆಯನು
ಮುರಮಥನ ನೋಡಿದನು ಮೂಗಿನ
ಬೆರಳ ತೂಗುವ ಮಕುಟದೊಲಹಿನ
ಬೆರಳ ಕುಡಿಚಮ್ಮಟಿಗೆಯಲಿ ಸೂಚಿಸಿದನರ್ಜುನಗೆ ॥8॥

೦೦೯ ಆರ ರಥವಾ ...{Loading}...

ಆರ ರಥವಾ ಹೋಹುದದು ಹಿಂ
ದಾರವರು ಬಳಿವಳಿಯಲೊಗ್ಗಿನ
ಲೋರಣಿಸಿ ಮುಂಚುವರು ಟೆಕ್ಕೆಯವಾರ ತೇರಿನದು
ಆರ ದಳವದು ಧುರಪಲಾಯನ
ಚಾರು ದೀಕ್ಷಿತರಾಯ್ತು ಫಲುಗುಣ
ಧಾರುಣೀಪತಿಯಾಣೆ ಹೇಳೆಂದಸುರರಿಪು ನುಡಿದ ॥9॥

೦೧೦ ನೋಡಿ ನೋಡಿ ...{Loading}...

ನೋಡಿ ನೋಡಿ ಕಿರೀಟವನು ತೂ
ಗಾಡಿದನು ಕಂಬನಿಗಳಾಲಿಯೊ
ಳೀಡಿರಿದು ಸೋರಿದವು ಸೊಂಪಡಗಿತು ಮುಖಾಂಬುಜದ
ಹೂಡಿದಂಬಿನ ತೋಳ ತೆಗಹಿನ
ಬಾಡಿದುತ್ಸಾಹದ ವಿತಾಳದ
ಬೀಡಿಕೆಯ ಬೇಳುವೆಗೆ ಬೆಬ್ಬಳೆವೋದನಾ ಪಾರ್ಥ ॥10॥

೦೧೧ ಸೇನೆ ಮುರಿಯಲಿ ...{Loading}...

ಸೇನೆ ಮುರಿಯಲಿ ಕೌರವನ ದು
ಮ್ಮಾನ ಹರಿಯಲಿ ನನಗೆ ಚಿತ್ತ
ಗ್ಲಾನಿಯೆಳ್ಳನಿತಿಲ್ಲ ಕಟ್ಟಲಿ ಗುಡಿಯ ಗಜನಗರ
ಆ ನರೇಂದ್ರನ ಸಿರಿಮೊಗಕೆ ದು
ಮ್ಮಾನವೋ ಮೇಣ್ ಸುರಪುರಕೆ ಸಂ
ಧಾನವೋ ನಾನರಿಯೆನಳ್ಳೆದೆಯಾದುದೆನಗೆಂದ ॥11॥

೦೧೨ ಧರಣಿಪತಿ ಸಪ್ರಾಣನೇ ...{Loading}...

ಧರಣಿಪತಿ ಸಪ್ರಾಣನೇ ಗಜ
ಪುರದ ರಾಜ್ಯಕೆ ನಿಲಿಸುವೆನು ಮೇಣ್
ಸುರರೊಳಗೆ ಸಮ್ಮೇಳವೇ ಕುಂತೀಕುಮಾರಂಗೆ
ಅರೆಘಳಿಗೆ ಧರ್ಮಜನ ಬಿಟ್ಟಾ
ನಿರೆನು ಮುರಹರ ರಥವ ಮರಳಿಚು
ಮರಳಿಚೈ ರಥ ಮುಂಚುವುದೊ ಮನ ಮುಂಚುವುದೊ ಎಂದ ॥12॥

೦೧೩ ತಿರುಹಿ ವಾಘೆಯ ...{Loading}...

ತಿರುಹಿ ವಾಘೆಯ ಹಿಡಿದು ಹರಿ ಹೂಂ
ಕರಿಸಿ ಬಿಟ್ಟನು ರಥವನಾತನ
ಮುರಿವ ಕಂಡುದು ಲಳಿ ಮಸಗಿ ಸಮಸಪ್ತಕರ ಸೇನೆ
ಅರರೆ ನರ ಪೈಸರಿಸಿದನೊ ಪೈ
ಸರಿಸಿದನೊ ಫಡ ಹೋಗಬಿಡದಿರಿ
ಕುರುನೃಪಾಲನ ಪುಣ್ಯವೆನುತಟ್ಟಿದರು ಸೂಠಿಯಲಿ ॥13॥

೦೧೪ ಕವಿದುದದುಭುತ ಬಲ ...{Loading}...

ಕವಿದುದದುಭುತ ಬಲ ಮುರಾರಿಯ
ತಿವಿದರಡಗಟ್ಟಿದರು ತೇಜಿಯ
ಜವಗೆಡಿಸಿ ತಲೆಯಾರ ತಡೆದರು ತುಡುಕಿದರು ನೊಗನ
ಅವರನೊಂದೇ ನಿಮಿಷದಲಿ ಪರಿ
ಭವಿಸಿ ನಡೆತರೆ ಮುಂದೆ ಗುರುಸಂ
ಭವನ ರಥವಡಹಾಯ್ದುದವನೀಪಾಲ ಕೇಳ್ ಎಂದ ॥14॥

೦೧೫ ಇತ್ತಲಿತ್ತಲು ಪಾರ್ಥ ...{Loading}...

ಇತ್ತಲಿತ್ತಲು ಪಾರ್ಥ ಹೋಗದಿ
ರಿತ್ತಲಶ್ವತ್ಥಾಮನಾಣೆ ಮ
ಹೋತ್ತಮರು ಗುರು ಭೀಷ್ಮರಲಿ ಮೆರೆ ನಿನ್ನ ಸಾಹಸವ
ಕಿತ್ತು ಬಿಸುಡುವೆನಸುವನಿದಿರಾ
ಗತ್ತಲೆಲವೋ ನಿನ್ನ ಜೋಕೆಯ
ಜೊತ್ತಿನಾಹವವಲ್ಲೆನುತ ತರುಬಿದನು ಗುರುಸೂನು ॥15॥

೦೧೬ ಆವುದಿಲ್ಲಿಗುಪಾಯವೀತನ ಭಾವ ...{Loading}...

ಆವುದಿಲ್ಲಿಗುಪಾಯವೀತನ
ಭಾವ ಬೆಟ್ಟಿತು ತೆರಹುಗೊಡನಿಂ
ದೀ ವಿಸಂಧಿಯೊಳರಿಯೆನವನಿಪನಾಗುಹೋಗುಗಳ
ದೇವ ಹದನೇನೆನುತ ವರ ಗಾಂ
ಡೀವಿ ಮುಕ್ತಕಳಂಬಕಾಂಡ
ಪ್ರಾವರಣದಲಿ ಮುಸುಕಿದನು ಗುರುನಂದನನ ರಥವ ॥16॥

೦೧೭ ಖೂಳ ತೆಗೆ ...{Loading}...

ಖೂಳ ತೆಗೆ ಹೆರಸಾರು ಠಕ್ಕಿನ
ಠೌಳಿಯಾಟವೆ ಕದನ ಕುಟಿಲದ
ಬೇಳುವೆಯ ಡೊಳ್ಳಾಸ ಮದ್ದಿನ ಮಾಯೆ ನಮ್ಮೊಡನೆ
ಅಳುತನವುಳ್ಳೊಡೆ ಮಹಾಸ್ತ್ರದ
ಜಾಳಿಗೆಯನುಗಿಯೆನುತ ಪಾರ್ಥನ
ಕೋಲುಗಳ ನೆರೆ ತರಿದನು ತೀವಿದನಂಬಿನಲಿ ನಭವ ॥17॥

೦೧೮ ಸರಳ ಹರಿಮೇಖಳೆಗೆ ...{Loading}...

ಸರಳ ಹರಿಮೇಖಳೆಗೆ ನೀವೇ
ಗುರುಗಳಲ್ಲಾ ನಿಮ್ಮ ವಿದ್ಯೆಯ
ಹುರುಳುಗೆಡಿಸುವಿರೆನುತ ಗುರುಸುತನಂಬ ಹರೆಗಡಿದು
ತುರಗದಲಿ ರಥಚಕ್ರದಲಿ ಕೂ
ಬರದೊಳೀಸಿನಲಚ್ಚಿನಲಿ ದು
ರ್ಧರ ಶಿಳೀಮುಖ ಜಾಳವನು ಜೋಡಿಸಿದನಾ ಪಾರ್ಥ ॥18॥

೦೧೯ ತಳಿವ ನಿನ್ನಮ್ಬಿನ ...{Loading}...

ತಳಿವ ನಿನ್ನಂಬಿನ ಮಳೆಗೆ ಮನ
ನಲಿವ ಚಾತಕಿಯರಿಯೆಲಾ ಕಳ
ವಳಿಸದಿರು ಕೊಳ್ಳಾದಡೆನುತೆಚ್ಚನು ಧನಂಜಯನ
ಹೊಳೆವ ಕಣೆ ಹೊಕ್ಕಿರಿದ ದಾರಿಯೊ
ಳುಳಿದ ಕಣೆ ದಾಂಟಿದವು ಗುರುಸುತ
ತುಳುಕಿದನು ಫಲುಗುಣನ ಮೈಯಲಿ ರಕುತ ರಾಟಳವ ॥19॥

೦೨೦ ಕಡುಗಿದರೆ ಕಾಲಾಗ್ನಿ ...{Loading}...

ಕಡುಗಿದರೆ ಕಾಲಾಗ್ನಿ ರುದ್ರನ
ಕಡುಹನಾನುವರೀತನೇ ಸೈ
ಗೆಡೆವ ರೋಮದ ಧೂಮ್ರವಕ್ತ್ರದ ಸ್ವೇದಬಿಂದುಗಳ
ಜಡಿವ ರೋಷದ ಭರದಲಡಿಗಡಿ
ಗೊಡಲನೊಲೆದು ಮಹಾಸ್ತ್ರದಲಿ ಕಡಿ
ಕಡಿದು ಬಿಸುಟನು ಗುರುಸುತನ ಸಾರಥಿಯ ರಥಹಯವ ॥20॥

೦೨೧ ಧನುವನುರು ಬತ್ತಳಿಕೆಗಳನಂ ...{Loading}...

ಧನುವನುರು ಬತ್ತಳಿಕೆಗಳನಂ
ಬಿನ ಹೊದೆಯನುರು ಟೆಕ್ಕೆಯವ ಜೋ
ಡಿನ ಬನವ ಕಡಿದಿಕ್ಕಿದನು ಸೆಕ್ಕಿದನು ಸರಳುಗಳ
ಧನು ವರೂಥದ ಹಾನಿ ಗುರು ನಂ
ದನನ ಗರ್ವವಿನಾಶಿಯೇ ಫಡ
ಎನುತ ಪಾರ್ಥನ ತರುಬಿ ನಿಂದನು ಸೆಳೆದಡಾಯುಧದಿ ॥21॥

೦೨೨ ದಿಟ್ಟನೈ ಗುರುಸೂನು ...{Loading}...

ದಿಟ್ಟನೈ ಗುರುಸೂನು ಶಿವ ಜಗ
ಜಟ್ಟಿಯಲ್ಲಾ ಕೌರವೇಂದ್ರನ
ಥಟ್ಟಿನಲಿ ಭಟರಾರೆನುತ ತಲೆದೂಗಿದನು ಪಾರ್ಥ
ಇಟ್ಟಣಿಸಿದನು ಹಿಂದೆ ಕೃಪನಡ
ಗಟ್ಟಿದನು ಸಮಸಪ್ತಕರು ಸಲೆ
ಮುಟ್ಟಿ ಬಂದರು ಕೌರವೇಶ್ವರ ಸಕಲಬಲ ಸಹಿತ ॥22॥

೦೨೩ ತಡೆಯಿ ಪಾರ್ಥನನಿವನ ...{Loading}...

ತಡೆಯಿ ಪಾರ್ಥನನಿವನ ರಾಯನ
ಕೆಡಹಿದನು ಕಲಿ ಕರ್ಣನೀಗಳೆ
ಮುಡುಹುವನು ಪವನಜನನೊಂದರೆಘಳಿಗೆ ಮಾತ್ರದಲಿ
ಬಿಡಿದಿರೀತನನೆನುತ ಕುರುಪತಿ
ಯೊಡನೆ ದುಶ್ಯಾಸನ ಕೃಪಾದಿಗ
ಳಡಸಿದರು ಕೆಂಗೋಲ ಮಳೆಯಲಿ ನಾದಿದರು ನರನ ॥23॥

೦೨೪ ಅವನಿಪನ ಕಾಣಿಕೆಗೆ ...{Loading}...

ಅವನಿಪನ ಕಾಣಿಕೆಗೆ ಬಹು ವಿ
ಘ್ನವನು ಬಲಿದುದೆ ದೈವ ಯಂತ್ರವ
ನವಗಡಿಸಿ ನೂಕುವರೆ ನಮ್ಮಳವೇ ಶಿವಾ ಎನುತ
ಕವಲುಗೋಲೈದರಲಿ ಕೃಪ ಕೌ
ರವನ ತಮ್ಮಂದಿರ ಸುಸನ್ನಾ
ಹವ ವಿಸಂಚಿಸಿ ಬಗಿದು ಸಮಸಪ್ತಕರನೊಡೆಹಾಯ್ಸಿ ॥24॥

೦೨೫ ಹೋಗಹೋಗಲು ಮತ್ತೆ ...{Loading}...

ಹೋಗಹೋಗಲು ಮತ್ತೆ ಕುರುಬಲ
ಸಾಗರದ ಭಟಲಹರಿ ಲಳಿಯಲಿ
ತಾಗಿದರು ತುಡುಕಿದರು ತಡೆದರು ನಾಲ್ಕು ದೆಸೆಗಳಲಿ
ನೀಗಿದರು ಶಸ್ರ್ರಾಸ್ತ್ರವನು ಕೈ
ಲಾಗಿನಲಿ ಮರಳಿದರು ಪುನರಪಿ
ತಾಗಿದರು ಗುರುಸೂನು ಕೃತವರ್ಮಾದಿ ನಾಯಕರು ॥25॥

೦೨೬ ಮೇಲೆ ಬಿದ್ದುದು ...{Loading}...

ಮೇಲೆ ಬಿದ್ದುದು ಮತ್ತೆ ಬಲಮೇ
ಘಾಳಿ ನೂಕಿತು ನರನ ರಥ ಸುಳಿ
ಗಾಳಿಯಂತಿರೆ ತಿರುತಿರುಗಿದುದು ವಿಶ್ವತೋಮುಖದಿ
ಹೇಳಲೇನವನೀಶ ಚಪಳ ಛ
ಡಾಳ ಪಾರ್ಥನ ವಿಕ್ರಮಾಗ್ನಿ
ಜ್ವಾಲೆಯಲಿ ನೆರೆ ಸೀದು ಸೀಕರಿವೋಯ್ತು ಕುರುಸೇನೆ ॥26॥

೦೨೭ ಗುರುಸುತನ ಮುರಿಯೆಚ್ಚು ...{Loading}...

ಗುರುಸುತನ ಮುರಿಯೆಚ್ಚು ಶಕುನಿಯ
ಪರಿಭವಿಸಿ ಕೃತವರ್ಮಕನ ವಿ
ಸ್ತರಿಸಲೀಯದೆ ಕೇರಳ ದ್ರವಿಡಾಂಧ್ರ ಕೌಸಲರ
ಹುರುಳುಗೆಡಿಸಿ ಸುಯೋಧನನ ಮೊಗ
ಮುರಿಯಲೆಚ್ಚು ಸುಷೇಣ ಗೌತಮ
ರುರವಣಿಯ ನೆಗ್ಗೊತ್ತಿ ಹಾಯ್ದನು ಮತ್ತೆ ಸೈವರಿದು ॥27॥

೦೨೮ ಆವರಿಸಿದುದು ಮತ್ತೆ ...{Loading}...

ಆವರಿಸಿದುದು ಮತ್ತೆ ಹೊಸ ಮೇ
ಳಾವದಲಿ ಕುರುಸೇನೆ ಘನ ಗಾಂ
ಡೀವ ವಿಗಳಿತ ವಿಶಿಖ ವಿಸರದ ವಹಿಗೆ ವಂಚಿಸದೆ
ಲಾವಣಿಗೆಗೊಳಲಲಸಿ ಯಮನನು
ಜೀವಿಗಳು ಜಡರಾಯ್ತು ಫಲುಗುಣ
ನಾವ ವಹಿಲದಲೆಸುವನೆಂಬುದನರಿಯೆ ನಾನೆಂದ ॥28॥

೦೨೯ ಜಾಳಿಸಿತು ರಥ ...{Loading}...

ಜಾಳಿಸಿತು ರಥ ಜಡಿವ ಕೌರವ
ನಾಳ ಝೋಂಪಿಸಿ ಡೊಂಬು ಮಾಡುವ
ಜಾಳ ಝಾಡಿಸಿ ಬೈದು ಹೊಕ್ಕನು ಮತ್ತೆ ಗುರುಸೂನು
ಖೂಳ ಫಡಫಡ ಜಾರದಿರು ತೋ
ರಾಳ ತೂರಿದ ಡೊಂಬು ಬೇಡ ವಿ
ಡಾಳ ವಿದ್ಯೆಗಳೆಮ್ಮೊಡನೆಯೆನುತೆಚ್ಚನರ್ಜುನನ ॥29॥

೦೩೦ ಗುರುಸುತನನೊಟ್ಟೈಸಿ ಫಲುಗುಣ ...{Loading}...

ಗುರುಸುತನನೊಟ್ಟೈಸಿ ಫಲುಗುಣ
ತಿರುಗಿ ಹಾಯ್ದನು ಮುಂದೆ ಶರಪಂ
ಜರವ ಹೂಡಿದನೀತನಾತನ ಬಯ್ದು ಬೆಂಬತ್ತಿ
ಸರಳ ಹರಹಿನ ಹೂಟವನು ಕಾ
ಹುರದ ಕಡುಹಿನಲೊದೆದು ಬೊಬ್ಬಿರಿ
ದುರವಣಿಸಿದನು ಪಾರ್ಥನೀತನ ಧನುವ ಖಂಡಿಸಿದ ॥30॥

೦೩೧ ಧನು ಮುರಿಯೆ ...{Loading}...

ಧನು ಮುರಿಯೆ ದಿಟ್ಟಾಯ ತನವೀ
ತನಲಿ ಸಾಕಿನ್ನೆನುತ ಗುರು ನಂ
ದನನು ಮುರಿದನು ಹೊಗರು ಮೋರೆಯ ಹೊತ್ತ ದುಗುಡದಲಿ
ಅನಿಲಸೂನುವ ಹಳಚಿದರು ಮು
ಮ್ಮೊನೆಯ ಬೋಳೆಯ ಮೈಯ ಕೊಳು ಕೊಡೆ
ಯೆನಗೆ ತನಗೆಂಬಗ್ಗಳಿಕೆಗಳ ಮೆರೆದರಿಚ್ಛೆಯಲಿ ॥31॥

೦೩೨ ತರಣಿತನಯನ ತೆಗೆದು ...{Loading}...

ತರಣಿತನಯನ ತೆಗೆದು ಭೀಮನೊ
ಳುರವಣಿಸಿ ಗುರುಸೂನು ಕಾದು
ತ್ತಿರೆ ಧನಂಜಯ ತೆರಳಿದನು ಪಾಳೆಯದ ಪಥವಿಡಿದು
ಅರರೆ ಫಲುಗುಣನೋಟವನು ಸಂ
ಗರ ಸಮರ್ಥರ ನೋಟವನು ನ
ಮ್ಮರಸ ಕಂಡನಲಾ ಎನುತ ನೂಕಿದನು ಕಲಿಕರ್ಣ ॥32॥

೦೩೩ ನೆರೆದುದಲ್ಲಿಯದಲ್ಲಿ ಕಹಳೆಯ ...{Loading}...

ನೆರೆದುದಲ್ಲಿಯದಲ್ಲಿ ಕಹಳೆಯ
ಧರಧುರದ ನಿಸ್ಸಾಳ ಸೂಳಿನ
ಮೊರೆವ ಭೇರಿಯ ರಾಯಗಿಡಿಗನ ಜಡಿವ ಚಂಬಕನ
ತುರಗ ಕರಿ ರಥ ಪಾಯದಳ ಚಾ
ಮರದ ಧವಳಚ್ಛತ್ರ ಪಟ ಪಳ
ಹರದ ಪಡಪಿನಲೌಕಿ ನಡೆದುದು ಮುಂದೆ ಪಾಯದಳ ॥33॥

೦೩೪ ಕವಿದು ಕೆನ್ಧೂಳಿಡುವ ...{Loading}...

ಕವಿದು ಕೆಂಧೂಳಿಡುವ ಸೇನಾ
ಟವಿಯ ನೋಡುತ ಹಿಂದೆ ಕರ್ಣನ
ಲವಲವಿಕೆಯಾಯತವ ಕಂಡನು ಕದನಕೇಳಿಯಲಿ
ಅವನಿಪನ ದರುಶನವೆನಗೆ ಸಂ
ಭವಿಸಲರಿಯದು ಭಾಪುರೇ ಕೌ
ರವ ಮಹಾರ್ಣವವೆನುತ ಮಕುಟವ ತೂಗಿದನು ಪಾರ್ಥ ॥34॥

೦೩೫ ಬಳಿಕ ಸೇನಾಸ್ತಮ್ಭ ...{Loading}...

ಬಳಿಕ ಸೇನಾಸ್ತಂಭ ಶರದಲಿ
ನಿಲಿಸಿದನು ಮಾರ್ಬಲವನಿತ್ತಲು
ಚಳೆಯದಲಿ ಹಿಮ್ಮೆಟ್ಟುತಿರೆ ಕಂಡನು ಧನಂಜಯನ
ಹೊಳಹು ದೂವಾಳಿಯಲಿ ಪಾರ್ಥನ
ಕೆಲಕೆ ಬಿಟ್ಟನು ರಥವ ನಿಲು ನಿ
ಲ್ಲೆಲವೊ ಹೋಗದಿರೆನುತ ಬೆಂಬತ್ತಿದನು ಕಲಿಕರ್ಣ ॥35॥

೦೩೬ ಕಣ್ಡನರ್ಜುನನಿದಿರೊಳಿವನು ...{Loading}...

ಕಂಡನರ್ಜುನನಿದಿರೊಳಿವನು
ದ್ದಂಡತನವನು ನೃಪತಿ ಚಿಂತಾ
ಖಂಡಧೈರ್ಯರು ನಾವಲಾ ಹೊತ್ತಲ್ಲ ಕಾದುವರೆ
ಕಂಡಿರೇ ಮುರವೈರಿ ದಳಪತಿ
ಚಂಡಬಳನಹ ನಡುಹಗಲ ಮಾ
ರ್ತಾಂಡನಂತಿರೆ ತೋರುತೈದನೆ ರಥವ ತಿರುಹೆಂದ ॥36॥

೦೩೭ ಜೀವಿಸಿರಲಾವಾವ ಲೇಸಿನ ...{Loading}...

ಜೀವಿಸಿರಲಾವಾವ ಲೇಸಿನ
ಠಾವ ಕಾಣೆನು ಜೀಯ ಕರ್ಣನ
ನಾವು ತೊಡಚುವರಲ್ಲ ತೆರಳಿಚು ಪಾಳೆಯಕೆ ರಥವ
ಈ ವಿಗಡನಂತಿರಲೆನುತ ಗಾಂ
ಡೀವಿ ಚಾಪವನಿಳುಹೆ ರಥವನು
ದೇವಕೀಸುತ ನೂಕಿದನು ಪವಮಾನ ವೇಗದಲಿ ॥37॥

೦೩೮ ಬರುತ ಭೀಮನ ...{Loading}...

ಬರುತ ಭೀಮನ ಕಂಡರಾತನ
ಹೊರೆಗೆ ಬಿಟ್ಟರು ರಥವನರ್ಜುನ
ಕರೆದು ಬೆಸಗೊಂಡನು ನೃಪಾಲನ ಕ್ಷೇಮ ಕೌಶಲವ
ಅರಸನಿಂದು ಸಜೀವಿಯೋ ಸುರ
ಪುರ ನಿವಾಸಿಯೊ ಹದನನೇನೆಂ
ದರಿಯೆನೀ ಸಂಗ್ರಾಮ ಧುರವೆನಗೆಂದನಾ ಭೀಮ ॥38॥

೦೩೯ ಆದಡೆಲೆ ಪವಮಾನಸುತ ...{Loading}...

ಆದಡೆಲೆ ಪವಮಾನಸುತ ನೀ
ನಾದರಿಸು ನಡೆ ನೃಪತಿಯನು ನಾ
ಕಾದುವೆನು ಕೌರವರ ಸಕಲಬಲ ಪ್ರಘಾಟದಲಿ
ಕೈದುಕಾರರು ನಿಖಿಳ ದೆಸೆಗಳ
ಲೈದಿ ಬರುತಿದೆ ನೀ ಮರಳು ನಾ
ಛೇದಿಸುವೆನರೆಘಳಿಗೆ ಮಾತ್ರದಲೆಂದನಾ ಪಾರ್ಥ ॥39॥

೦೪೦ ಎಲೆ ಧನಞ್ಜಯ ...{Loading}...

ಎಲೆ ಧನಂಜಯ ನೀನೆ ಬಲುಗೈ
ಯುಳಿದವರು ರಣಖೇಡರೇ ಕುರು
ಬಲವನೊಬ್ಬನೆ ಕೇಣಿಗೊಂಡೆನು ಕರ್ಣ ಮೊದಲಾಗಿ
ಅಳಿಕಿಸುವೆನೀಕ್ಷಣಕೆ ತನ್ನ
ಗ್ಗಳಿಕೆಯನು ನೋಡವನಿಪಾಲನ
ಬಳಲಿಕೆಯ ಸಂತೈಸು ನಡೆ ನೀನೆಂದನಾ ಭೀಮ ॥40॥

+೧೪ ...{Loading}...