೦೦೦ ಸೂಚನೆ ಮಡಿದರಾಹವದೊಳಗೆ ...{Loading}...
ಸೂಚನೆ: ಮಡಿದರಾಹವದೊಳಗೆ ಕೌರವ
ನೊಡನೆ ಹುಟ್ಟಿದರನಿಲಸುತನಿಂ
ದಡಿಗಡಿಗೆ ಹಳಚಿದನು ಯಮನಂದನನಾ ಕರ್ಣ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ: ಯುದ್ಧದಲ್ಲಿ ದುರ್ಯೋಧನನ ತಮ್ಮಂದಿರು ಭೀಮನಿಂದ ಮಡಿದರು. ಕರ್ಣನು ಧರ್ಮರಾಯನ ಮೇಲೆ ಮತ್ತೆ ಮತ್ತೆ ಆಕ್ರಮಣಮಾಡಿದನು.
ಪದಾರ್ಥ (ಕ.ಗ.ಪ)
ಹಳಚು-ಆಕ್ರಮಣಮಾಡು
ಮೂಲ ...{Loading}...
ಸೂಚನೆ: ಮಡಿದರಾಹವದೊಳಗೆ ಕೌರವ
ನೊಡನೆ ಹುಟ್ಟಿದರನಿಲಸುತನಿಂ
ದಡಿಗಡಿಗೆ ಹಳಚಿದನು ಯಮನಂದನನಾ ಕರ್ಣ
೦೦೧ ಕೇಳು ಧೃತರಾಷ್ಟ್ರಾವನಿಪ ...{Loading}...
ಕೇಳು ಧೃತರಾಷ್ಟ್ರಾವನಿಪ ನಿ
ನ್ನಾಳನಗ್ಗಳಿಕೆಯ ವಿಘಾತಿಯ
ಗಾಳಿ ತಾಗಿತು ತಿರುಗಿದುದು ಬಳಿಕೀ ಸಮಸ್ತಬಲ
ಕೋಲು ತಪ್ಪಿದ ಫಣಿಯವೊಲು ಲಯ
ಕಾಲಕೊದರುವ ಸಿಡಿಲವೊಲು ಹೀ
ಹಾಳಿಸುತ ತಮತಮಗೆ ಬಯ್ದುದು ಕೂಡೆ ಪರಿವಾರ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧೃತರಾಷ್ಟ್ರ ರಾಜನೆ, ನಿನ್ನ ಸೇನೆಯ ಮೇಲೆ ಅತಿಶಯವಾದ ಹಾನಿಯ ಗಾಳಿ ಬೀಸಿತು. ಬಳಿಕ ಈ ಸಮಸ್ತಬಲವೂ ಹಿಂದಿರುಗಿತು. ಕೋಲಿನ ಹೊಡೆತ ತಪ್ಪಿದ ಹಾವಿನ ಹಾಗೆ, ಲಯಕಾಲಕ್ಕೆ ಆರ್ಭಟಿಸುವ ಸಿಡಿಲಿನ ಹಾಗೆ, ಸಮಸ್ತ ಪರಿವಾರವೂ ಹೀಯಾಳಿಸುತ್ತಾ ತಮ್ಮ ತಮ್ಮಲ್ಲೇ ಬಯ್ದಾಡಿತು.
ಪದಾರ್ಥ (ಕ.ಗ.ಪ)
ವಿಘಾತಿ- ಹಾನಿ
ಮೂಲ ...{Loading}...
ಕೇಳು ಧೃತರಾಷ್ಟ್ರಾವನಿಪ ನಿ
ನ್ನಾಳನಗ್ಗಳಿಕೆಯ ವಿಘಾತಿಯ
ಗಾಳಿ ತಾಗಿತು ತಿರುಗಿದುದು ಬಳಿಕೀ ಸಮಸ್ತಬಲ
ಕೋಲು ತಪ್ಪಿದ ಫಣಿಯವೊಲು ಲಯ
ಕಾಲಕೊದರುವ ಸಿಡಿಲವೊಲು ಹೀ
ಹಾಳಿಸುತ ತಮತಮಗೆ ಬಯ್ದುದು ಕೂಡೆ ಪರಿವಾರ ॥1॥
೦೦೨ ರಣದೊಳೊಪ್ಪಿಸಿಕೊಟ್ಟು ಕರ್ಣನ ...{Loading}...
ರಣದೊಳೊಪ್ಪಿಸಿಕೊಟ್ಟು ಕರ್ಣನ
ಹಣವ ಹೊಳ್ಳಿಸಿ ಮರೆದೆವೇ ಮ
ನ್ನಣೆಯ ಮೋಹವ ತೊರೆದೆವೇ ಕರ್ಪುರದ ವೀಳೆಯವ
ಗುಣ ಪಸಾಯದ ಕಾಣಿಕೆಯ ಹರಿ
ಯಣದ ಹಂತಿಯ ದಾಯದೂಟಕೆ
ಋಣಿಗಳಾದೆವೆ ಶಿವಶಿವಾ ಎಂದೊಳರಿತಖಿಳಬಲ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯುದ್ಧದಲ್ಲಿ ಕರ್ಣನನ್ನು ಶತ್ರುಗಳಿಗೆ ಒಪ್ಪಿಸಿಕೊಟ್ಟು ಅವನಿಂದ ಪಡೆದಿದ್ದ ಸಂಬಳವನ್ನು ಬರಿದುಮಾಡಿ ಅವನನ್ನು ಮರೆತುಬಿಟ್ಟೆವಲ್ಲಾ ! ಅವನು ಮಾಡಿದ್ದ ದಾನ ಸನ್ಮಾನದ ಮೋಹವನ್ನೇ ಬಿಟ್ಟೆವಲ್ಲಾ? ಅವನು ನಮ್ಮ ಗುಣ ಮೆಚ್ಚಿ ನೀಡಿದ್ದ ಕರ್ಪೂರದ ವೀಳಯ, ಉಡುಗೊರೆ, ಕಾಣಿಕೆ, ಸಹ ಪಂಕ್ತಿಭೋಜನದ ಅವಕಾಶ ಪಡೆದು ಉಂಡ ಊಟ -ಇವುಗಳ ಋಣವನ್ನು ತೀರಿಸದೆ ಉಳಿದೆವಲ್ಲಾ? ಶಿವಶಿವಾ! ಎಂದು ಸಮಸ್ತ ಸೈನ್ಯವೂ ಹುಯ್ಯಲಿಟ್ಟಿತು.
ಪದಾರ್ಥ (ಕ.ಗ.ಪ)
ಪಸಾಯ- ಉಡುಗೊರೆ, ದಾಯದೂಟ- ಪಂಕ್ತಿ ಭೋಜನ, ಒಳರು- ಕೂಗು, ಹುಯ್ಯಲಿಡು
ಮೂಲ ...{Loading}...
ರಣದೊಳೊಪ್ಪಿಸಿಕೊಟ್ಟು ಕರ್ಣನ
ಹಣವ ಹೊಳ್ಳಿಸಿ ಮರೆದೆವೇ ಮ
ನ್ನಣೆಯ ಮೋಹವ ತೊರೆದೆವೇ ಕರ್ಪುರದ ವೀಳೆಯವ
ಗುಣ ಪಸಾಯದ ಕಾಣಿಕೆಯ ಹರಿ
ಯಣದ ಹಂತಿಯ ದಾಯದೂಟಕೆ
ಋಣಿಗಳಾದೆವೆ ಶಿವಶಿವಾ ಎಂದೊಳರಿತಖಿಳಬಲ ॥2॥
೦೦೩ ಮೀಸೆಯೇಕಿವ ಸುಡಲಿ ...{Loading}...
ಮೀಸೆಯೇಕಿವ ಸುಡಲಿ ಸುಭಟರ
ವೇಷವೇಕಿವು ತಮ್ಮ ವಧುಗಳು
ಹೇಸಿ ನಮ್ಮನು ಬಿಸುಟು ಹೋಗಳೆ ಚಂಡಿಕಾದೇವಿ
ಭಾಷೆ ಬಾಯಲಿ ಕೈದು ಕೈಯಲಿ
ವಾಸಿಯನು ಬಿಸುಟಕಟ ಜೀವದ
ಲಾಸೆ ಮಾಡಿದೆವೆನುತ ಮರುಗಿತು ಕೂಡೆ ಪರಿವಾರ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಮಗೆ ಮೀಸೆಯೇಕೆ? ಇವನ್ನು ಸುಡಲಿ! ಈ ಸುಭಟರ ವೇಷವೇಕೆ? ನಮ್ಮ ಹೆಂಗಸರು ಹೇಸುವುದಿಲ್ಲವೇ? ಶಸ್ತ್ರಾಭಿಮಾನಿಯಾದ ಚಂಡಿಕಾದೇವಿ ನಮ್ಮನ್ನು ಬಿಟ್ಟು ಹೋಗಿ ಬಿಡುವುದಿಲ್ಲವೆ? ಅಯ್ಯೊ! ನಮ್ಮ ಬಾಯಲ್ಲಿ ಪ್ರತಿಜ್ಞೆ, ಕೈಯಲ್ಲಿ ಆಯುಧ. ಆದರೆ ನಾವು ಪ್ರತಿಜ್ಞೆಯನ್ನು ತೊರೆದು ಜೀವದಲ್ಲಿ ಆಸೆ ಮಾಡಿದೆವು ಎನ್ನುತ್ತ ಸಮಸ್ತ ಪರಿವಾರವೂ ಮರುಗಿತು.
ಪದಾರ್ಥ (ಕ.ಗ.ಪ)
ವಾಸಿ- ಪ್ರತಿಜ್ಞೆ
ಮೂಲ ...{Loading}...
ಮೀಸೆಯೇಕಿವ ಸುಡಲಿ ಸುಭಟರ
ವೇಷವೇಕಿವು ತಮ್ಮ ವಧುಗಳು
ಹೇಸಿ ನಮ್ಮನು ಬಿಸುಟು ಹೋಗಳೆ ಚಂಡಿಕಾದೇವಿ
ಭಾಷೆ ಬಾಯಲಿ ಕೈದು ಕೈಯಲಿ
ವಾಸಿಯನು ಬಿಸುಟಕಟ ಜೀವದ
ಲಾಸೆ ಮಾಡಿದೆವೆನುತ ಮರುಗಿತು ಕೂಡೆ ಪರಿವಾರ ॥3॥
೦೦೪ ಬಯ್ವ ಹೆಣ್ಡಿರ ...{Loading}...
ಬಯ್ವ ಹೆಂಡಿರ ಚಿಂತೆಯಿಲ್ಲದೆ
ಹೊಯ್ವ ಕೀರ್ತಿಯ ಹಂಬಲಿಲ್ಲದೆ
ಒಯ್ವ ನರಕದ ನೆನಹದಿಲ್ಲದೆ ಪತಿಯ ಸಮಯದಲಿ
ಕಾಯ್ವರಾವಲ್ಲೆಂದು ಕೆಲದಲಿ
ಬಯ್ವರಿಗೆ ಮೈಗೊಟ್ಟು ಬದುಕುವ
ದೈವದೂರರು ನಾವೆನುತ ಮರುಗಿತ್ತು ಪರಿವಾರ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಯ್ಯುವ ಹೆಂಡಿರ ಚಿಂತೆಯಿಲ್ಲದೆ, ಕೀರ್ತಿಧಾರೆಯ ಹಂಬಲವಿಲ್ಲದೆ, ಒಯ್ಯುವ ನರಕದ ನೆನಪು ಇಲ್ಲದೆ, ಒಡೆಯನ ಸಮಯದಲ್ಲಿ ಕಾಯುವವರು ನಾವಲ್ಲ ಎಂದು ನೆರೆಯಲ್ಲಿ ಬಯ್ಯುವವರಿಗೆ ಅವಕಾಶ ಕೊಟ್ಟು ಬದುಕುವ ಅದೃಷ್ಟಹೀನರು ನಾವು! ಎನ್ನುತ್ತ ಪರಿವಾರವು ಮರುಗುತ್ತಿತ್ತು.
ಪದಾರ್ಥ (ಕ.ಗ.ಪ)
ಹೊಯ್-ವರ್ಷಿಸು
ಮೂಲ ...{Loading}...
ಬಯ್ವ ಹೆಂಡಿರ ಚಿಂತೆಯಿಲ್ಲದೆ
ಹೊಯ್ವ ಕೀರ್ತಿಯ ಹಂಬಲಿಲ್ಲದೆ
ಒಯ್ವ ನರಕದ ನೆನಹದಿಲ್ಲದೆ ಪತಿಯ ಸಮಯದಲಿ
ಕಾಯ್ವರಾವಲ್ಲೆಂದು ಕೆಲದಲಿ
ಬಯ್ವರಿಗೆ ಮೈಗೊಟ್ಟು ಬದುಕುವ
ದೈವದೂರರು ನಾವೆನುತ ಮರುಗಿತ್ತು ಪರಿವಾರ ॥4॥
೦೦೫ ನುಡಿಯ ಭಣ್ಡರು ...{Loading}...
ನುಡಿಯ ಭಂಡರು ಕೆಲರು ಸಿಂಧದ
ಗುಡಿಯ ಭಂಡರು ಕೆಲರು ಹಾಹೆಯ
ತೊಡರ ಭಂಡರು ಕೆಲರು ಕೆಲರು ಕುಲಕ್ರಮಾಗತದ
ಗಡಬಡೆಯ ಭಂಡರು ವಿಪತ್ತಿನೊ
ಳೊಡೆಯನಿರೆ ಕೈದುಗಳ ಹೊರೆತಲೆ
ಯೊಡನೆ ಬಿಟ್ಟಿಯ ಭಂಡರಾವೆಂದುದು ಭಟವ್ರಾತ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಮ್ಮಲ್ಲಿ ಕೆಲವರು ಮಾತಿನ ಭಂಡರು. ಕೆಲವರು ಎತ್ತಿಹಿಡಿದ ಬಾವುಟದ ರಾಶಿಯ ಭಂಡರು. ಕೆಲವರು ಗೊಂಬೆಗಳಿಂದ ಕೂಡಿದ ಬಿರುದಿನ ಬಳೆಯನ್ನು ಕಾಲಲ್ಲಿ, ತೊಟ್ಟ ಭಂಡರು. ದೃಷ್ಟಿದೋಷದ ಭಂಡರು. ಕೆಲವರು ಕುಲಕ್ರಮಾಗತದ ವಂಶದ ಹಿರಿತನವನ್ನು ಉಗ್ಗಡಿಸುವ ಗಡಿಬಿಡಿಯ ಭಂಡರು. ನಾವಾದರೋ ಒಡೆಯನು ವಿಪತ್ತಿನಲ್ಲಿರುವಾಗ ತಲೆಯಮೇಲೆ ಆಯುಧಗಳನ್ನು ಹೊತ್ತುಕೊಂಡ ಬಿಟ್ಟಿಯ ಭಂಡೆರಾದೆವು. ಎಂದು ಸೈನಿಕರ ಸಮೂಹವು ಹೇಳಿತು.
ಪದಾರ್ಥ (ಕ.ಗ.ಪ)
ಸಿಂಧ- ಬಾವುಟ,
ಹಾಹೆ-ಗೊಂಬೆ (ಗೊಂಬೆಗಳಿಂದ ಕೂಡಿದ ಬಿರುದಿನ ಪೆಂಡೆಯ)
ಮೂಲ ...{Loading}...
ನುಡಿಯ ಭಂಡರು ಕೆಲರು ಸಿಂಧದ
ಗುಡಿಯ ಭಂಡರು ಕೆಲರು ಹಾಹೆಯ
ತೊಡರ ಭಂಡರು ಕೆಲರು ಕೆಲರು ಕುಲಕ್ರಮಾಗತದ
ಗಡಬಡೆಯ ಭಂಡರು ವಿಪತ್ತಿನೊ
ಳೊಡೆಯನಿರೆ ಕೈದುಗಳ ಹೊರೆತಲೆ
ಯೊಡನೆ ಬಿಟ್ಟಿಯ ಭಂಡರಾವೆಂದುದು ಭಟವ್ರಾತ ॥5॥
೦೦೬ ಮೀಸೆ ಸೀದವು ...{Loading}...
ಮೀಸೆ ಸೀದವು ಭಟರ ಸುಯ್ಲಿನ
ಲಾಸೆ ಬೀತುದು ದೇಹದಲಿ ಬಲು
ವಾಸಿಯಲಿ ಮನ ಮುಳುಗಿತನಿಬರಿಗೇಕಮುಖವಾಗಿ
ಬೀಸಿದರು ಚೌರಿಗಳ ಬಲ ವಾ
ರಾಶಿ ಮಸಗಿತು ರಿಪುಗಳಸುವಿನ
ಮೀಸಲನು ತುಡುಕಿದುದು ಮನ ಕೌರವ ಮಹಾರಥರ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭಟರ ನಿಟ್ಟುಸಿರಿನಲ್ಲಿ ಅವರ ಮೀಸೆಗಳು ಸುಟ್ಟುಹೋದವು. ಆಸೆ ಇಂಗಿಹೋಯಿತು. ಆ ಎಲ್ಲರಿಗೂ ಮನಸ್ಸು ಹಠದಲ್ಲಿ ಸಂಲಗ್ನವಾಯಿತು. ಅವರು ಏಕಮುಖವಾಗಿ ಕೂಡಿ ಚೌರಿಗಳನ್ನು ಬೀಸಿದರು. ಸೇನಾಸಮುದ್ರವು ಮುತ್ತಿತು. ಕೌರವ ಮಹಾರಥರ ಮನಸ್ಸು ಶತ್ರುಗಳ ಪ್ರಾಣದ ಮೀಸಲನ್ನು ಹಿಡಿಯಲು ತವಕಿಸಿತು.
ಪದಾರ್ಥ (ಕ.ಗ.ಪ)
ಬಲುವಾಸಿ-ಅಪಾರವಾದ ಕೀರ್ತಿ
ಮೂಲ ...{Loading}...
ಮೀಸೆ ಸೀದವು ಭಟರ ಸುಯ್ಲಿನ
ಲಾಸೆ ಬೀತುದು ದೇಹದಲಿ ಬಲು
ವಾಸಿಯಲಿ ಮನ ಮುಳುಗಿತನಿಬರಿಗೇಕಮುಖವಾಗಿ
ಬೀಸಿದರು ಚೌರಿಗಳ ಬಲ ವಾ
ರಾಶಿ ಮಸಗಿತು ರಿಪುಗಳಸುವಿನ
ಮೀಸಲನು ತುಡುಕಿದುದು ಮನ ಕೌರವ ಮಹಾರಥರ ॥6॥
೦೦೭ ಕುದುರೆ ಕುದುರೆಯ ...{Loading}...
ಕುದುರೆ ಕುದುರೆಯ ಮುಂಚಿದವು ಕರಿ
ಮದಕರಿಯ ಹಿಂದಿಕ್ಕಿದವು ನೂ
ಕಿದವು ರಥ ರಥದಿಂದ ಮುನ್ನ ಮಹಾರಥಾದಿಗಳು
ಇದಿರೊಳೊಬ್ಬನನೊಬ್ಬನೊದಗುವ
ಕದನ ಭರದ ಪದಾತಿ ಪೂರಾ
ಯದಲಿ ಕವಿದುದು ಜಡಿವ ಬಹುವಿಧವಾದ್ಯ ರಭಸದಲಿ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಾರಿಸುತ್ತಿದ್ದ ಹಲವು ಬಗೆಯ ವಾದ್ಯಗಳ ರಭಸದಲ್ಲಿ, ಕುದುರೆ-ಕುದುರೆಯನ್ನು ಹಿಂದಿಕ್ಕಿ ಮುನ್ನುಗ್ಗಿದವು. ಆನೆ-ಮದಿಸಿದ ಆನೆಯನ್ನು ಹಿಂದಿಕ್ಕಿದವು. ರಥ-ರಥಗಳನ್ನು ದಾಟಿ ನುಗ್ಗಿದುವು. ಮಹಾರಥಿಕರು ಮೊದಲಾದವರು ಮುಖಾಮುಖಿಯಾದರು. ಒಬ್ಬರನ್ನೊಬ್ಬರು ಎದುರಿಸುವ ಕಾಲಾಳುಗಳ ಸಮೂಹದಲ್ಲಿ ಯುದ್ಧದ ಸಂಭ್ರಮವು ಕವಿಯಿತು.
ಪದಾರ್ಥ (ಕ.ಗ.ಪ)
ಮುಂಚು-ಮುನ್ನುಗ್ಗು
ಮೂಲ ...{Loading}...
ಕುದುರೆ ಕುದುರೆಯ ಮುಂಚಿದವು ಕರಿ
ಮದಕರಿಯ ಹಿಂದಿಕ್ಕಿದವು ನೂ
ಕಿದವು ರಥ ರಥದಿಂದ ಮುನ್ನ ಮಹಾರಥಾದಿಗಳು
ಇದಿರೊಳೊಬ್ಬನನೊಬ್ಬನೊದಗುವ
ಕದನ ಭರದ ಪದಾತಿ ಪೂರಾ
ಯದಲಿ ಕವಿದುದು ಜಡಿವ ಬಹುವಿಧವಾದ್ಯ ರಭಸದಲಿ ॥7॥
೦೦೮ ಪೂತು ಮಝ ...{Loading}...
ಪೂತು ಮಝ ದಳಪತಿಯ ಹರಿಬವ
ನಾತುದೇ ಕುರುಸೇನೆ ಸುಭಟ
ವ್ರಾತವಳವಿಗೆ ಬರಲಿ ಬರಲಿ ವಿಶೋಕ ನೋಡೆನುತ
ಹೂತ ಸಂಪಗೆ ವನವನಳಿ ಸಂ
ಘಾತ ಮುತ್ತಿದಡೇನೆನುತ ನಿ
ರ್ಭೀತನಿದ್ದನು ಭೀಮ ಸುಮ್ಮಾನದ ಸಘಾಡದಲಿ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪೂತು! ಮಝ! ಕುರುಸೇನೆಯು ದಳಪತಿಯನ್ನು ಕಾಪಾಡುವ ಕರ್ತವ್ಯವನ್ನು ಹೊತ್ತುಕೊಂಡಿತೆ? ಸುಭಟರ ಸಮೂಹವು ನೆರವಿಗೆ ಬರಲಿ! ಬರಲಿ! ಚಿಂತೆಯಿಲ್ಲದೆ ನೆಮ್ಮದಿಯಾಗಿ ನೋಡು, ಹೂಬಿಟ್ಟ ಸಂಪಿಗೆಯ ವನವನ್ನು ದುಂಬಿಗಳ ಸಮೂಹವು ಮುತ್ತಿದರೆ ತಾನೆ ಏನು ಎಂದು ನಿರ್ಭೀತನಾದ ಭೀಮನು ತನ್ನ ಸಾರಥಿಯಾದ ವಿಶೋಕನಿಗೆ ಹೇಳುತ್ತ ಸಂತೋಷದ ಭರದಲ್ಲಿದ್ದನು.
ಮೂಲ ...{Loading}...
ಪೂತು ಮಝ ದಳಪತಿಯ ಹರಿಬವ
ನಾತುದೇ ಕುರುಸೇನೆ ಸುಭಟ
ವ್ರಾತವಳವಿಗೆ ಬರಲಿ ಬರಲಿ ವಿಶೋಕ ನೋಡೆನುತ
ಹೂತ ಸಂಪಗೆ ವನವನಳಿ ಸಂ
ಘಾತ ಮುತ್ತಿದಡೇನೆನುತ ನಿ
ರ್ಭೀತನಿದ್ದನು ಭೀಮ ಸುಮ್ಮಾನದ ಸಘಾಡದಲಿ ॥8॥
೦೦೯ ಕವಿದುದಿದು ಗರಿಗಟ್ಟಿ ...{Loading}...
ಕವಿದುದಿದು ಗರಿಗಟ್ಟಿ ಕೌರವ
ನಿವಹ ಮೋಡಾಮೋಡಿಯಲಿ ರಣ
ದವಕಿ ಕರ್ಣದ್ರೋಹಿಯಾವೆಡೆ ತೋರು ತೋರೆನುತ
ತಿವಿವ ಬಲ್ಲೆಹದಿಡುವ ಚಕ್ರದ
ಕವಿವ ಬಾಣದ ಹೊಯ್ವ ಖಡ್ಗದ
ವಿವಿಧಬಲ ಬಿಡದೌಕಿ ಮುತ್ತಿತು ಪವನನಂದನನ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಕೌರವ ಸಮೂಹ ವೇಗವಾಗಿ (ಕೈಚಳಕದದೊಂದಿಗೆ) ಗರಿಗಟ್ಟಿ ಕವಿಯಿತು. ಯುದ್ಧಕ್ಕಾಗಿ ತವಕಪಡುವ ಕರ್ಣನ ದ್ರೋಹಿ ಎಲ್ಲಿದ್ದಾನೆ ತೋರಿಸು, ತೋರಿಸು ಎನ್ನುತ್ತ ತಿವಿಯುವ ಈಟಿಯ, ಇಡುವ ಚಕ್ರದ, ಕವಿಯುವ ಬಾಣದ, ಹೊಡೆಯುವ ಖಡ್ಗದ ವಿವಿಧ ಸೇನೆಗಳು ಬಿಡದೆ ಒಂದುಗೂಡಿ ಭೀಮನನ್ನು ಮುತ್ತಿದವು.
ಪದಾರ್ಥ (ಕ.ಗ.ಪ)
ಮೋಡಾಮೋಡಿ-ಇಂದ್ರಜಾಲ,
ಮೂಲ ...{Loading}...
ಕವಿದುದಿದು ಗರಿಗಟ್ಟಿ ಕೌರವ
ನಿವಹ ಮೋಡಾಮೋಡಿಯಲಿ ರಣ
ದವಕಿ ಕರ್ಣದ್ರೋಹಿಯಾವೆಡೆ ತೋರು ತೋರೆನುತ
ತಿವಿವ ಬಲ್ಲೆಹದಿಡುವ ಚಕ್ರದ
ಕವಿವ ಬಾಣದ ಹೊಯ್ವ ಖಡ್ಗದ
ವಿವಿಧಬಲ ಬಿಡದೌಕಿ ಮುತ್ತಿತು ಪವನನಂದನನ ॥9॥
೦೧೦ ಸಿಕ್ಕಿದನು ರಿಪು ...{Loading}...
ಸಿಕ್ಕಿದನು ರಿಪು ಸ್ವಾಮಿದ್ರೋಹನು
ಚುಕ್ಕಿಯೋ ತಡೆ ಹೋಗಬಿಡದಿರಿ
ಹೊಕ್ಕುಳಲಿ ಮಗುವುಂಟೆ ಹಣೆಯಲಿ ನೋಟವೇ ಹಗೆಗೆ
ಹೊಕ್ಕು ಹೊಯ್ ಹೊಯ್ ನೆತ್ತರೊಬ್ಬರಿ
ಗೊಕ್ಕುಡಿತೆಯೇ ಸಾಕೆನುತ ಬಲ
ಮುಕ್ಕುರುಕಿತನಿಲಜನ ಕಾಣೆನು ನಿಮಿಷಮಾತ್ರದಲಿ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸ್ವಾಮಿದ್ರೋಹಿಯಾದ ಶತ್ರುವು ಸಿಕ್ಕಿದನು. ಸಿಕ್ಕದಿರುವುದಕ್ಕೆ ಅವನೇನು ನಕ್ಷತ್ರವೆ? ಅವನನ್ನು ತಡೆಯಿರಿ, ಹೋಗಲು ಬಿಡಬೇಡಿ. ಅವನೇನು ವಿಷ್ಣುವೆ, ಶಿವನೆ? ಹೊಕ್ಕು ಹೊಡೆ! ಹೊಡೆ! ಶತ್ರುವಿನ ನೆತ್ತರು ಒಬ್ಬರಿಗೆ ಒಂದು ಬೊಗಸೆಯೇ ಸಾಕು ಎನ್ನುತ್ತ ಸೈನ್ಯವು ಮುತ್ತಿತು. ನಿಮಿಷಮಾತ್ರದಲ್ಲಿ ಭೀಮನು ಕಾಣೆಯಾದನು.
ಪದಾರ್ಥ (ಕ.ಗ.ಪ)
ಕುಡಿತೆ-ಗುಟುಕು, ಮುಕ್ಕುರುಕು-ಮುತ್ತು
ಮೂಲ ...{Loading}...
ಸಿಕ್ಕಿದನು ರಿಪು ಸ್ವಾಮಿದ್ರೋಹನು
ಚುಕ್ಕಿಯೋ ತಡೆ ಹೋಗಬಿಡದಿರಿ
ಹೊಕ್ಕುಳಲಿ ಮಗುವುಂಟೆ ಹಣೆಯಲಿ ನೋಟವೇ ಹಗೆಗೆ
ಹೊಕ್ಕು ಹೊಯ್ ಹೊಯ್ ನೆತ್ತರೊಬ್ಬರಿ
ಗೊಕ್ಕುಡಿತೆಯೇ ಸಾಕೆನುತ ಬಲ
ಮುಕ್ಕುರುಕಿತನಿಲಜನ ಕಾಣೆನು ನಿಮಿಷಮಾತ್ರದಲಿ ॥10॥
೦೧೧ ಹರಿಬದೋಲೆಯಕಾರರೋ ಮು ...{Loading}...
ಹರಿಬದೋಲೆಯಕಾರರೋ ಮು
ಕ್ಕುರುಕಿದರೊ ಪವನಜನು ಸಿಕ್ಕಿದ
ದೊರೆಯ ಬಿಡಿಸೋ ನೂಕೆನುತ ಪಾಂಚಾಲ ಕೈಕೆಯರು
ವರ ನಕುಳ ಸಹದೇವ ಸಾತ್ಯಕಿ
ತುರುಕ ಬರ್ಬರ ಭೋಟ ಮಾಗಧ
ಮರು ಪುಳಿಂದಾದಿಗಳು ಕವಿದುದು ನೃಪನ ಸನ್ನೆಯಲಿ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಿಷ್ಠರಾದ ಶತ್ರು ಸೈನಿಕರು ಭೀಮನನ್ನು ಮುತ್ತಿದ್ದಾರೆ. ಅವನನ್ನು ಬಿಡಿಸಿ! ನುಗ್ಗಿ ಎನ್ನುತ್ತ ಧರ್ಮರಾಯನು ಸನ್ನೆ ಮಾಡಲಾಗಿ ಪಾಂಚಾಲ, ಕೈಕೆಯ, ಶ್ರೇಷ್ಠರಾದ ನಕುಳ, ಸಹದೇವ, ಸಾತ್ಯಕಿ, ತುರುಕ, ಬರ್ಬರ, ಭೋಟ, ಮಾಗಧ, ಮರು, ಪುಳಿಂದ ಮೊದಲಾದವರು ಮುನ್ನುಗ್ಗಿದರು.
ಮೂಲ ...{Loading}...
ಹರಿಬದೋಲೆಯಕಾರರೋ ಮು
ಕ್ಕುರುಕಿದರೊ ಪವನಜನು ಸಿಕ್ಕಿದ
ದೊರೆಯ ಬಿಡಿಸೋ ನೂಕೆನುತ ಪಾಂಚಾಲ ಕೈಕೆಯರು
ವರ ನಕುಳ ಸಹದೇವ ಸಾತ್ಯಕಿ
ತುರುಕ ಬರ್ಬರ ಭೋಟ ಮಾಗಧ
ಮರು ಪುಳಿಂದಾದಿಗಳು ಕವಿದುದು ನೃಪನ ಸನ್ನೆಯಲಿ ॥11॥
೦೧೨ ಸರಕಟಿಸಿ ರಿಪುರಾಯದಳ ...{Loading}...
ಸರಕಟಿಸಿ ರಿಪುರಾಯದಳ ಸಂ
ವರಿಸಿಕೊಂಡುದು ಸಿಕ್ಕಿದಹಿತನ
ಸೆರೆಯ ಬಿಡದಿರಿ ಬಿಡದಿರಂಜದಿರಂಜದಿರಿ ಎನುತ
ಗುರುಜ ಕೃಪ ಕೃತವರ್ಮ ಯವನೇ
ಶ್ವರ ಕಳಿಂಗ ಕರೂಷ ಕೌರವ
ರರಸ ಮೊದಲಾದಖಿಳ ಬಲ ಜೋಡಿಸಿತು ಝಡಿತೆಯಲಿ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶತ್ರುರಾಜರ ಸೈನ್ಯವು ರಭಸದಿಂದ ನುಗ್ಗಿ ಒಗ್ಗೂಡಿತು. ಸಿಕ್ಕಿದ ಶತ್ರುವಿನ ಸೆರೆಯನ್ನು ಬಿಡಬೇಡಿ, ಬಿಡಬೇಡಿ. ಅಂಜಬೇಡಿ, ಅಂಜಬೇಡಿ ಎನ್ನುತ್ತ ಆಶ್ವತ್ಥಾಮ ಕೃಪ ಕೃತವರ್ಮ ಯವನೇಶ್ವರ ಕಳಿಂಗ ಕರೂಷ ದುರ್ಯೋಧನ ಮೊದಲಾದವರ ಸಮಸ್ತ ಸೈನ್ಯವು ವೇಗವಾಗಿ ಒದಗಿಬಂತು.
ಪದಾರ್ಥ (ಕ.ಗ.ಪ)
ಸರಕಟಿಸು-ರಭಸದಿಂದ ನುಗ್ಗು, ಸಂವರಿಸು-ರಕ್ಷಿಸು ಝಡಿತೆ-ವೇಗ
ಮೂಲ ...{Loading}...
ಸರಕಟಿಸಿ ರಿಪುರಾಯದಳ ಸಂ
ವರಿಸಿಕೊಂಡುದು ಸಿಕ್ಕಿದಹಿತನ
ಸೆರೆಯ ಬಿಡದಿರಿ ಬಿಡದಿರಂಜದಿರಂಜದಿರಿ ಎನುತ
ಗುರುಜ ಕೃಪ ಕೃತವರ್ಮ ಯವನೇ
ಶ್ವರ ಕಳಿಂಗ ಕರೂಷ ಕೌರವ
ರರಸ ಮೊದಲಾದಖಿಳ ಬಲ ಜೋಡಿಸಿತು ಝಡಿತೆಯಲಿ ॥12॥
೦೧೩ ಏನ ಹೇಳುವೆನರಸ ...{Loading}...
ಏನ ಹೇಳುವೆನರಸ ಕರ್ಣನ
ಹಾನಿ ಹರಿಬದ ಬವರವನು ಪವ
ಮಾನನಂದನ ನಿಮಿಷದಲಿ ಮುಸುಕಿದನು ಬಾಣದಲಿ
ದಾನವರ ಥಟ್ಟಣೆಯ ಕೀಲಣ
ದಾ ನಗರಿಯನು ನೆಗ್ಗಿದಂತಿರ
ಲೀ ನಿಘಾತದ ಸೇನೆ ಮುರಿದುದು ಭಟನ ಭಾರಣೆಗೆ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರಸನೆ, ಕರ್ಣನ ಹಾನಿ ಮತ್ತು ಹೊಣೆಗಾರಿಕೆಯ ಯುದ್ಧವನ್ನು ಏನೆಂದು ಹೇಳಲಿ? ಭೀಮನು ನಿಮಿಷದಲ್ಲಿ ಬಾಣಗಳಿಂದ ಅವರನ್ನು ಮುತ್ತಿದನು. ಭಯಂಕರವಾದ ರಹಸ್ಯಮಯವಾದ ಆ ತ್ರಿಪುರಗಳನ್ನು ನುಚ್ಚುನೂರು ಮಾಡಿದಂತೆ ಆ ಭಟನ ಆ ರಭಸಕ್ಕೆ ಈ ನಾಶಕಾರಿಯಾದ ಸೇನೆಯು ಒಗ್ಗೊಡೆಯಿತು.
ಮೂಲ ...{Loading}...
ಏನ ಹೇಳುವೆನರಸ ಕರ್ಣನ
ಹಾನಿ ಹರಿಬದ ಬವರವನು ಪವ
ಮಾನನಂದನ ನಿಮಿಷದಲಿ ಮುಸುಕಿದನು ಬಾಣದಲಿ
ದಾನವರ ಥಟ್ಟಣೆಯ ಕೀಲಣ
ದಾ ನಗರಿಯನು ನೆಗ್ಗಿದಂತಿರ
ಲೀ ನಿಘಾತದ ಸೇನೆ ಮುರಿದುದು ಭಟನ ಭಾರಣೆಗೆ ॥13॥
೦೧೪ ಸಿಲುಕುವುವು ಮೃಗಪಕ್ಷಿ ...{Loading}...
ಸಿಲುಕುವುವು ಮೃಗಪಕ್ಷಿ ಹೂಡಿದ
ಬಲೆಗಳಲಿ ಕಾಡಾನೆ ಬೀಸಿದ
ಬಲೆಯ ಕೊಂಬುದೆ ನಿನ್ನ ದಳ ಥಟ್ಟೈಸಿ ಮುತ್ತಿದರೆ
ಅಳುಕುವನೆ ಕಲಿ ಭೀಮನೆಡದಲಿ
ಕಲಕಿದನು ಬಲವಂಕದಲಿ ಕೈ
ವಳಿಸಿ ಕೊಂದನು ವರ ಪುರೋಭಾಗವ ವಿಭಾಡಿಸಿದ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೂಡಿದ ಬಲೆಗಳಲ್ಲಿ ಮೃಗಪಕ್ಷಿಗಳು ಸಿಲುಕುತ್ತವೆ. ಆದರೆ ಬೀಸಿದ ಬಲೆಯನ್ನು ಕಾಡಾನೆಯು ಲಕ್ಷಿಸುತ್ತದೆಯೆ? ನಿನ್ನ ಸೈನ್ಯವು ಒಗ್ಗೂಡಿ ಮುತ್ತಿದರೆ ಕಲಿ ಭೀಮನು ಅಳುಕುತ್ತಾನೆಯೆ? ಅವನು ಎಡಭಾಗವನ್ನು ಕಲಕಿ, ಬಲಭಾಗವನ್ನು ಬಾಚಿ ಕೊಂದು, ಮುಖ್ಯ್ಠವಾದ ಮುಂಭಾಗವನ್ನು ನಾಶಮಾಡಿದನು.
ಪದಾರ್ಥ (ಕ.ಗ.ಪ)
ಕೈವಳಿಸು-ಕೈಯಿಂದ ಬಳಸು, ವಿಭಾಡಿಸು-ನಾಶಮಾಡು
ಮೂಲ ...{Loading}...
ಸಿಲುಕುವುವು ಮೃಗಪಕ್ಷಿ ಹೂಡಿದ
ಬಲೆಗಳಲಿ ಕಾಡಾನೆ ಬೀಸಿದ
ಬಲೆಯ ಕೊಂಬುದೆ ನಿನ್ನ ದಳ ಥಟ್ಟೈಸಿ ಮುತ್ತಿದರೆ
ಅಳುಕುವನೆ ಕಲಿ ಭೀಮನೆಡದಲಿ
ಕಲಕಿದನು ಬಲವಂಕದಲಿ ಕೈ
ವಳಿಸಿ ಕೊಂದನು ವರ ಪುರೋಭಾಗವ ವಿಭಾಡಿಸಿದ ॥14॥
೦೧೫ ಆಳ ಮೇಳೆಯ ...{Loading}...
ಆಳ ಮೇಳೆಯ ಮುರಿದುದೀ ಸಾ
ಯಾಳು ಸತ್ತುದು ಹಲವು ಪಡಿಬಲ
ದಾಳು ಕೂಡದ ಮುನ್ನ ಕೊಂದನು ಕೋಟಿ ಸಂಖ್ಯೆಗಳ
ಮೇಲೆ ಮೇಲೊಡಗವಿವ ಸಮರಥ
ಜಾಲವನು ಮುರಿಯೆಚ್ಚು ನಿಮಿಷಕೆ
ಧೂಳಿಪಟ ಮಾಡಿದನು ಕರ್ಣನ ಮನ್ನಣೆಯ ಭಟರ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯೋಧರ ಒಗ್ಗು ಮುರಿಯಿತು. ಸಾಯುವವರು ಸಾಯಲಿದ್ದವರು ಹಲವರು ಸತ್ತರು. ಭೀಮನು ಶತ್ರುಸೇನೆಯ ಕೋಟಿ ಸಂಖ್ಯೆಗಳ ಯೋಧರನ್ನು ಅವರು ಕೂಡುವ ಮುನ್ನವೇ ಕೊಂದನು. ಮತ್ತೆ ಮತ್ತೆ ಒಟ್ಟಾಗಿ ಕವಿಯುವ ಸಮರಥರ ಜಾಲವನ್ನು ಮುರಿದು, ಕರ್ಣನ ಮನ್ನಣೆಯ ಭಟರನ್ನು ನಿಮಿಷದಲ್ಲಿ ಧೂಳಿಪಟ ಮಾಡಿದನು.
ಮೂಲ ...{Loading}...
ಆಳ ಮೇಳೆಯ ಮುರಿದುದೀ ಸಾ
ಯಾಳು ಸತ್ತುದು ಹಲವು ಪಡಿಬಲ
ದಾಳು ಕೂಡದ ಮುನ್ನ ಕೊಂದನು ಕೋಟಿ ಸಂಖ್ಯೆಗಳ
ಮೇಲೆ ಮೇಲೊಡಗವಿವ ಸಮರಥ
ಜಾಲವನು ಮುರಿಯೆಚ್ಚು ನಿಮಿಷಕೆ
ಧೂಳಿಪಟ ಮಾಡಿದನು ಕರ್ಣನ ಮನ್ನಣೆಯ ಭಟರ ॥15॥
೦೧೬ ಮತ್ತೆ ಕವಿದುದು ...{Loading}...
ಮತ್ತೆ ಕವಿದುದು ಮೇಲೆ ಪಡಿಬಲ
ವೊತ್ತಿ ಹೊಕ್ಕುದು ಹೆಣದ ಬೆಟ್ಟವ
ಹತ್ತಿ ಹುಡಿಹುಡಿ ಮಾಡಿ ಹಿಡಿದರು ರಥದ ಕುದುರೆಗಳ
ಕುತ್ತಿದರು ಸಾರಥಿಯನಾತನ
ತೆತ್ತಿಸಿದರಿಟ್ಟಿಯಲಿ ಭೀಮನ
ಮುತ್ತಿ ಕೈಮಾಡಿದರು ರವಿಸುತ ಸಾಕಿದತಿಬಳರು ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶತ್ರುಗಳ ಸೈನ್ಯವು ಮತ್ತೆ ಮೇಲೆ ಕವಿಯಿತು. ಒತ್ತಿ ಹೊಕ್ಕಿತು. ರವಿಸುತ ಸಾಕಿದ ಅತಿಬಳರು ಹೆಣದ ಬೆಟ್ಟವನ್ನು ಹತ್ತಿ ಹುಡಿಹುಡಿಮಾಡಿ ರಥದ ಕುದುರೆಗಳನ್ನು ಹಿಡಿದರು. ಸಾರಥಿಯನ್ನು ಕುತ್ತಿ ಆತನನ್ನು ಈಟಿಯಲ್ಲಿ ನೆಟ್ಟರು. ಭೀಮನನ್ನು ಮುತ್ತಿ ಕೈಮಾಡಿದರು.
ಪದಾರ್ಥ (ಕ.ಗ.ಪ)
ಕುತ್ತು-ತಿವಿ, ತೆತ್ತಿಸು-ನಟಿಸು
ಮೂಲ ...{Loading}...
ಮತ್ತೆ ಕವಿದುದು ಮೇಲೆ ಪಡಿಬಲ
ವೊತ್ತಿ ಹೊಕ್ಕುದು ಹೆಣದ ಬೆಟ್ಟವ
ಹತ್ತಿ ಹುಡಿಹುಡಿ ಮಾಡಿ ಹಿಡಿದರು ರಥದ ಕುದುರೆಗಳ
ಕುತ್ತಿದರು ಸಾರಥಿಯನಾತನ
ತೆತ್ತಿಸಿದರಿಟ್ಟಿಯಲಿ ಭೀಮನ
ಮುತ್ತಿ ಕೈಮಾಡಿದರು ರವಿಸುತ ಸಾಕಿದತಿಬಳರು ॥16॥
೦೧೭ ಇಳಿದು ರಥವನು ...{Loading}...
ಇಳಿದು ರಥವನು ಗದೆಯ ಕೊಂಡ
ಪ್ಪಳಿಸಿದನು ಹೊರಕೈಯಲರೆದಿ
ಟ್ಟಳಿಸಿದರನೆಡಗಾಲಲೊದೆದನು ಹೊಯ್ದು ಮುಡುಹಿನಲಿ
ಕಲಕಿದನು ಕೌರವ ಮಹಾಬಲ
ಜಲಧಿಯನು ಸರ್ವಾಂಗ ಶೋಣಿತ
ಜಲದಲೆಸೆದನು ನನೆದ ಜಾಜಿನ ಗಿರಿಯವೊಲು ಭೀಮ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮನು ರಥದಿಂದ ಇಳಿದು ಗದೆಯನ್ನು ತೆಗೆದುಕೊಂಡು ಅಪ್ಪಳಿಸಿದನು. ಮುತ್ತಿದವರನ್ನು ಹೊರಕೈಯಲ್ಲಿ ಹೊಸೆದಿಕ್ಕಿ ಎಡಗಾಲಿನಲ್ಲಿ ಒದ್ದನು. ಹೆಗಲಿನಲ್ಲಿ ಹೊಡೆದು ಕೌರವ ಮಹಾಬಲಜಲಧಿಯನ್ನು ಕಲಕಿದನು. ಭೀಮನ ಇಡೀ ದೇಹ ನೆನೆದ ಕಾವಿಯಕಲ್ಲಿನ ಬೆಟ್ಟದ ಹಾಗೆ ರಕ್ತಮಯನಾಗಿ ಕಾಣಿತು.
ಪದಾರ್ಥ (ಕ.ಗ.ಪ)
ಇಟ್ಟಳಿಸು-ದಟ್ಟವಾಗು, ಮುತ್ತು ಮುಡುಹು-ಹೆಗಲು, ಜಾಜಿನಗಿರಿ-ಕೆಂಪು ಬಣ್ಣದ ಕಲ್ಲುಗಳ ಬೆಟ್ಟ
ಮೂಲ ...{Loading}...
ಇಳಿದು ರಥವನು ಗದೆಯ ಕೊಂಡ
ಪ್ಪಳಿಸಿದನು ಹೊರಕೈಯಲರೆದಿ
ಟ್ಟಳಿಸಿದರನೆಡಗಾಲಲೊದೆದನು ಹೊಯ್ದು ಮುಡುಹಿನಲಿ
ಕಲಕಿದನು ಕೌರವ ಮಹಾಬಲ
ಜಲಧಿಯನು ಸರ್ವಾಂಗ ಶೋಣಿತ
ಜಲದಲೆಸೆದನು ನನೆದ ಜಾಜಿನ ಗಿರಿಯವೊಲು ಭೀಮ ॥17॥
೦೧೮ ಸವರಿದನು ರವಿಸುತನ ...{Loading}...
ಸವರಿದನು ರವಿಸುತನ ಪರಿವಾ
ರವನು ಮಗುಳುಬ್ಬೆದ್ದ ಕೌರವ
ನಿವಹದಲಿ ಕಾದಿದನು ದುರ್ಯೋಧನ ಸಹೋದರರ
ತಿವಿದು ನಾಲ್ವರ ಕೊಂದನುಬ್ಬರಿ
ಸುವರ ಗರ್ವವ ಮುರಿದು ಪ್ರಳಯದ
ಭವನ ರೌದ್ರದವೋಲು ಭುಲ್ಲಯಿಸಿದನು ಕಲಿಭೀಮ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮನು ಕರ್ಣನ ಪರಿವಾರವನ್ನು ಸವರಿಹಾಕಿದನು. ಮತ್ತೆ ಉತ್ಸಾಹದಿಂದ ಎದ್ದ ಕೌರವಸಮೂಹದ ಜೊತೆ ಹೋರಾಡಿದನು. ದುರ್ಯೋಧನನ ಸಹೋದರರನ್ನು ತಿವಿದು ನಾಲ್ವರನ್ನು ಕೊಂದನು. ಕಲಿಭೀಮನು ಉಬ್ಬಿ ಮೆರೆಯುವವರ ಗರ್ವವನ್ನು ಮುರಿದು ಪ್ರಳಯದ ರುದ್ರನ ರೌದ್ರದ ಹಾಗೆ ಸಂಭ್ರಮಿಸಿದನು.
ಪದಾರ್ಥ (ಕ.ಗ.ಪ)
ಉಬ್ಬೇಳು-ಉತ್ಸಾಹದಿಂದ ಏಳು, ಭುಲ್ಲಯಿಸು-ಸಂಭ್ರಮಿಸು
ಮೂಲ ...{Loading}...
ಸವರಿದನು ರವಿಸುತನ ಪರಿವಾ
ರವನು ಮಗುಳುಬ್ಬೆದ್ದ ಕೌರವ
ನಿವಹದಲಿ ಕಾದಿದನು ದುರ್ಯೋಧನ ಸಹೋದರರ
ತಿವಿದು ನಾಲ್ವರ ಕೊಂದನುಬ್ಬರಿ
ಸುವರ ಗರ್ವವ ಮುರಿದು ಪ್ರಳಯದ
ಭವನ ರೌದ್ರದವೋಲು ಭುಲ್ಲಯಿಸಿದನು ಕಲಿಭೀಮ ॥18॥
೦೧೯ ಶಿವ ಶಿವಾ ...{Loading}...
ಶಿವ ಶಿವಾ ಕೌರವನ ತಮ್ಮದಿ
ರವಗಡಿಸಿದರು ನಂದೋಪನಂದರು
ಜವಗೆ ಜೇವಣಿಯಾದರೇ ಕಲಿ ಭೀಮನಿದಿರಿನಲಿ
ತಿವಿವರಿನ್ನಾರೆನುತ ಗುರುಸಂ
ಭವ ಕೃಪಾದಿಗಳೊತ್ತಿ ನಡೆತಹ
ರವವ ಕೇಳಿದು ಕುದಿದನವಮಾನದಲಿ ಕಲಿಕರ್ಣ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶಿವ ಶಿವಾ! ಕೌರವನ ತಮ್ಮಂದಿರು ನಾಶವಾದರು. ನಂದೋಪನಂದರು ಯಮನಿಗೆ ಊಟವಾದರಲ್ಲಾ! ಕಲಿ ಭೀಮನ ಎದುರಿನಲ್ಲಿ ಇರಿಯುವವರು ಇನ್ನು ಯಾರು? ಎನ್ನುತ್ತ ಅಶ್ವತ್ಥಾಮ ಕೃಪ ಮೊದಲಾದವರು ಸಂದಣಿಯಲ್ಲಿ ನಡೆದು ಬರುವ ಶಬ್ದವನ್ನು ಕಲಿಕರ್ಣನು ಕೇಳಿ ಅವಮಾನದಿಂದ ಕುದಿದನು.
ಮೂಲ ...{Loading}...
ಶಿವ ಶಿವಾ ಕೌರವನ ತಮ್ಮದಿ
ರವಗಡಿಸಿದರು ನಂದೋಪನಂದರು
ಜವಗೆ ಜೇವಣಿಯಾದರೇ ಕಲಿ ಭೀಮನಿದಿರಿನಲಿ
ತಿವಿವರಿನ್ನಾರೆನುತ ಗುರುಸಂ
ಭವ ಕೃಪಾದಿಗಳೊತ್ತಿ ನಡೆತಹ
ರವವ ಕೇಳಿದು ಕುದಿದನವಮಾನದಲಿ ಕಲಿಕರ್ಣ ॥19॥
೦೨೦ ಪೂತು ದೈವವೆ ...{Loading}...
ಪೂತು ದೈವವೆ ಭೀಮಸೇನನ
ಘಾತಿಯಲಿ ಸೊಪ್ಪಾದೆನೈ ಸುಡ
ಲೇತಕೀ ಧನುವೇತಕೀ ದಿವ್ಯಾಸ್ತ್ರ ನಿಕರಗಳು
ಜಾತಿ ನಾನೆಂದೆನ್ನನಗ್ಗಿಸಿ
ಭೂತಳಾಧಿಪ ಸಾಕಿದನು ತಾ
ನೇತರಿಂದುಪಕಾರಿ ಎಂದನು ಸುಯ್ದು ಕಲಿಕರ್ಣ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಲಿಕರ್ಣನು ನಿಟ್ಟುಸಿರಿಟ್ಟು ಪೂತು! ದೈವವೆ! ಭೀಮಸೇನನ ಹೊಡೆತದಿಂದ ಸೋತು ಸೊಪ್ಪಾದೆನಲ್ಲಾ! ಏತಕ್ಕೆ ಈ ಧನುಸ್ಸು? ಏತಕ್ಕೆ ಈ ದಿವ್ಯಾಸ್ತ್ರಗಳು? ಇವನ್ನು ಸುಡಲಿ! ನಾನು ಶ್ರೇಷ್ಠ ಯೋಧನೆಂದು ನನ್ನನ್ನು ದೊಡ್ಡವನನ್ನಾಗಿಸಿ ದುರ್ಯೋಧನನು ಸಾಕಿದನು. ತಾನು ಅವನಿಗೆ ಹೇಗೆ ಉಪಕಾರಿಯಾದೆ? ಎಂದನು.
ಪದಾರ್ಥ (ಕ.ಗ.ಪ)
ಜಾತಿ- ಶ್ರೇಷ್ಠ, ಅಗ್ಗಿಸು- ಶ್ರೇಷ್ಠನಾಗಿ ಮಾಡು
ಮೂಲ ...{Loading}...
ಪೂತು ದೈವವೆ ಭೀಮಸೇನನ
ಘಾತಿಯಲಿ ಸೊಪ್ಪಾದೆನೈ ಸುಡ
ಲೇತಕೀ ಧನುವೇತಕೀ ದಿವ್ಯಾಸ್ತ್ರ ನಿಕರಗಳು
ಜಾತಿ ನಾನೆಂದೆನ್ನನಗ್ಗಿಸಿ
ಭೂತಳಾಧಿಪ ಸಾಕಿದನು ತಾ
ನೇತರಿಂದುಪಕಾರಿ ಎಂದನು ಸುಯ್ದು ಕಲಿಕರ್ಣ ॥20॥
೦೨೧ ಎಲೆ ಮರುಳೆ ...{Loading}...
ಎಲೆ ಮರುಳೆ ರಾಧೇಯ ಫಡ ಮನ
ವಿಳುಹದಿರು ತಪ್ಪೇನು ಸೋಲವು
ಗೆಲವು ದೈವಾಧೀನ ನಿನ್ನಾಳ್ತನಕೆ ಕುಂದೇನು
ಹಲಬರಮರಾಸುರರೊಳಗೆ ಹೆ
ಬ್ಬಲವೆ ದುರ್ಬಲವಾಯ್ತು ನೀ ಮನ
ವಳುಕದಿರು ಹಿಡಿ ಧನುವನನುವಾಗೆಂದನಾ ಶಲ್ಯ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಲೆ ಮರುಳೆ! ಕರ್ಣ! ಫಡ! ಮನಸ್ಸನ್ನು ಕುಗ್ಗಿಸಿಕೊಳ್ಳಬೇಡ. ತಪ್ಪೇನು? ಸೋಲು ಗೆಲವು ದೈವಾಧೀನ. ನಿನ್ನ ಪರಾಕ್ರಮಕ್ಕೆ ಇದರಿಂದ ಏನು ಕುಂದಾಯಿತು? ಹಲವು ದೇವತೆಗಳು ಮತ್ತು ರಾಕ್ಷಸರ ದೊಡ್ಡ ಸೈನ್ಯವೇ ಕೆಲವು ವೇಳೆ ದುರ್ಬಲವಾಯಿತು. ನೀನು ಮನಸ್ಸಿನಲ್ಲಿ ಅಳುಕಬೇಡ. ಧನುವನ್ನು ಹಿಡಿ. ಸಿದ್ಧವಾಗು ಎಂದು ಶಲ್ಯನು ಹೇಳಿದನು.
ಮೂಲ ...{Loading}...
ಎಲೆ ಮರುಳೆ ರಾಧೇಯ ಫಡ ಮನ
ವಿಳುಹದಿರು ತಪ್ಪೇನು ಸೋಲವು
ಗೆಲವು ದೈವಾಧೀನ ನಿನ್ನಾಳ್ತನಕೆ ಕುಂದೇನು
ಹಲಬರಮರಾಸುರರೊಳಗೆ ಹೆ
ಬ್ಬಲವೆ ದುರ್ಬಲವಾಯ್ತು ನೀ ಮನ
ವಳುಕದಿರು ಹಿಡಿ ಧನುವನನುವಾಗೆಂದನಾ ಶಲ್ಯ ॥21॥
೦೨೨ ಖಾತಿ ಮೊಳೆತುದು ...{Loading}...
ಖಾತಿ ಮೊಳೆತುದು ಮತ್ತೆ ಬಲ ಸಂ
ಘಾತಕಭಯವನಿತ್ತು ಬಾಣ
ವ್ರಾತವನು ಹೊದೆಗೆದರಿ ಹೊಸ ಹೊಗರೆದ್ದನಡಿಗಡಿಗೆ
ಭೂತನಾಥನ ಮರೆಯ ಹೊಗಲಿ ಮ
ಹೀತಳೇಶನ ಹಿಡಿವೆನೆನುತ ವಿ
ಧೂತ ರಿಪುಬಲ ರಥವ ಬಿಟ್ಟನು ಧರ್ಮಜನ ಹೊರೆಗೆ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕರ್ಣನ ಕೋಪ ಮೊಳೆಯಿತು. ಅವನು ಸೈನ್ಯಸಮೂಹಕ್ಕೆ ಮತ್ತೆ ಅಭಯವನ್ನು ಕೊಟ್ಟು ಎಲ್ಲೆಡೆ ಬಾಣಗಳ ಸಮೂಹವನ್ನು ದಟ್ಟವಾಗಿ ಹರಡಿ ಹೊಸ ಉತ್ಸಾಹದಿಂದ ತೇಜೋವಂತನಾದನು. ಅಡಿಗಡಿಗೆ, ‘ಧರ್ಮರಾಯನು ಶಿವನ ಮರೆಯನ್ನು ಹೊಕ್ಕರೂ ಅವನನ್ನು ಹಿಡಿಯುತ್ತೇನೆ’ ಎನ್ನುತ್ತ ಧರ್ಮಜನ ಸಮೀಪಕ್ಕೆ ರಥವನ್ನು ಬಿಟ್ಟನು.
ಪದಾರ್ಥ (ಕ.ಗ.ಪ)
ಹೊದೆಗೆದರು-ಎಲ್ಲೆಡೆ ಹರಡು, ಹೊಗರೇಳು- ಉತ್ಸಾಹಿತನಾಗು
ಮೂಲ ...{Loading}...
ಖಾತಿ ಮೊಳೆತುದು ಮತ್ತೆ ಬಲ ಸಂ
ಘಾತಕಭಯವನಿತ್ತು ಬಾಣ
ವ್ರಾತವನು ಹೊದೆಗೆದರಿ ಹೊಸ ಹೊಗರೆದ್ದನಡಿಗಡಿಗೆ
ಭೂತನಾಥನ ಮರೆಯ ಹೊಗಲಿ ಮ
ಹೀತಳೇಶನ ಹಿಡಿವೆನೆನುತ ವಿ
ಧೂತ ರಿಪುಬಲ ರಥವ ಬಿಟ್ಟನು ಧರ್ಮಜನ ಹೊರೆಗೆ ॥22॥
೦೨೩ ಕಾಲಯಮನೋ ಕರ್ಣನೋ ...{Loading}...
ಕಾಲಯಮನೋ ಕರ್ಣನೋ ಭೂ
ಪಾಲಕನ ಬೆಂಬತ್ತಿದನು ಪಾಂ
ಚಾಲೆಯೋಲೆಯ ಕಾವರಿಲ್ಲಾ ಎನುತ ಬಲನೊದರೆ
ಕೇಳಿದನು ಕಳವಳವನೀ ರಿಪು
ಜಾಲವನು ಜರೆದಡ್ಡಹಾಯ್ದನು
ಗಾಳಿಗುದಿಸಿದ ವೀರನದ್ಭುತ ಸಿಂಹನಾದದಲಿ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇವನೇನು ಕಾಲಯಮನೋ, ಕರ್ಣನೋ! ಧರ್ಮರಾಯನನ್ನು ಬೆನ್ನಟ್ಟಿದನು. ದ್ರೌಪದಿಯ ಓಲೆಯನ್ನು ಕಾಪಾಡುವವರಿಲ್ಲವಲ್ಲಾ ಎನ್ನುತ್ತ ಸೈನ್ಯವು ಕೂಗುತ್ತಿರಲು, ಶತ್ರುಸಮೂಹವನ್ನು ಹೀಯಾಳಿಸುತ್ತ ವೀರನಾದ ಭೀಮನು ಅದ್ಭುತವಾದ ಸಿಂಹನಾದವನ್ನು ಮಾಡುತ್ತಾ ಕರ್ಣನನ್ನು ಅಡ್ಡಗಟ್ಟಿದನು.
ಮೂಲ ...{Loading}...
ಕಾಲಯಮನೋ ಕರ್ಣನೋ ಭೂ
ಪಾಲಕನ ಬೆಂಬತ್ತಿದನು ಪಾಂ
ಚಾಲೆಯೋಲೆಯ ಕಾವರಿಲ್ಲಾ ಎನುತ ಬಲನೊದರೆ
ಕೇಳಿದನು ಕಳವಳವನೀ ರಿಪು
ಜಾಲವನು ಜರೆದಡ್ಡಹಾಯ್ದನು
ಗಾಳಿಗುದಿಸಿದ ವೀರನದ್ಭುತ ಸಿಂಹನಾದದಲಿ ॥23॥
೦೨೪ ಮತ್ತೆ ಕರ್ಣನ ...{Loading}...
ಮತ್ತೆ ಕರ್ಣನ ಭೀಮನಾಹವ
ಹೊತ್ತಿದುದು ಹಿಂದಾದ ಹೆಕ್ಕಳ
ಹತ್ತು ಸಾವಿರ ಹಡೆಯದೇ ಫಡ ನೂಕು ನೂಕೆನುತ
ಮತ್ತೆ ಗಜಘಟೆಯಾರು ಸಾವಿರ
ಮುತ್ತಿದವು ಸೌಬಲನ ಥಟ್ಟಿನೊ
ಳೊತ್ತಿಬಿಟ್ಟವು ನಾಲ್ಕು ಸಾವಿರ ಕುದುರೆ ರಥಸಹಿತ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮತ್ತೆ ಕರ್ಣ ಮತ್ತು ಭೀಮರ ಯುದ್ಧವು ಆರಂಭವಾಯಿತು. ಹಿಂದೆ ನನ್ನನ್ನು ಗೆದ್ದ ಗರ್ವಕ್ಕೆ ಪ್ರತಿಯಾಗಿ ಅದರ ಹತ್ತು ಸಾವಿರ ಮಡಿಯಷ್ಟು ಸೋಲನ್ನು ಉಣಿಸುತ್ತೇನೆ. ಫಡ! ನೂಕು ನೂಕು ಎನ್ನುತ್ತ ಮತ್ತೆ ಆರು ಸಾವಿರ ಆನೆಗಳ ಸಮೂಹ ಭೀಮನನ್ನು ಮುತ್ತಿದವು. ಸೌಬಲನ ಸೈನ್ಯದ ಒಳಗೆ ನಾಲ್ಕು ಸಾವಿರ ಕುದುರೆಗಳು ರಥಸಹಿತ ಆಕ್ರಮಿಸಿದವು.
ಪದಾರ್ಥ (ಕ.ಗ.ಪ)
ಹೆಕ್ಕಳ-ಗರ್ವ
ಒತ್ತಿಬಿಡು- ಆಕ್ರಮಿಸು
ಮೂಲ ...{Loading}...
ಮತ್ತೆ ಕರ್ಣನ ಭೀಮನಾಹವ
ಹೊತ್ತಿದುದು ಹಿಂದಾದ ಹೆಕ್ಕಳ
ಹತ್ತು ಸಾವಿರ ಹಡೆಯದೇ ಫಡ ನೂಕು ನೂಕೆನುತ
ಮತ್ತೆ ಗಜಘಟೆಯಾರು ಸಾವಿರ
ಮುತ್ತಿದವು ಸೌಬಲನ ಥಟ್ಟಿನೊ
ಳೊತ್ತಿಬಿಟ್ಟವು ನಾಲ್ಕು ಸಾವಿರ ಕುದುರೆ ರಥಸಹಿತ ॥24॥
೦೨೫ ಸನ್ದಣಿಸಿ ದಳ ...{Loading}...
ಸಂದಣಿಸಿ ದಳ ನೂಕಿಕೊಂಡೈ
ತಂದುದಿದು ರವಿಸುತನ ತೊಲಗಿಸಿ
ಮುಂದೆ ಮೋಹರದೆಗೆದು ಮೂದಲಿಸಿತು ಮರುತ್ಸುತನ
ಬಂದುದೇ ಕರ್ಣಂಗೆ ಪಡಿಬಲ
ತಂದುದೇ ನಮಗೊಸಗೆಯನು ಲೇ
ಸೆಂದು ಸುಭಟರ ದೇವ ಸುಮ್ಮಾನದಲಿ ಲಾಗಿಸಿದ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸÉೈನ್ಯವು ಒಟ್ಟಗೂಡಿ ಮುನ್ನುಗ್ಗಿ ಬಂದಿತು. ಅದು ಕರ್ಣನನ್ನು ತೊಲಗಿಸಿ, ಮುಂಭಾಗದ ಸೈನ್ಯವನ್ನು ಒಡ್ಡಿನಿಂತು ಭೀಮನನ್ನು ಮೂದಲಿಸಿತು. ‘ಕರ್ಣನಿಗೆ ಬೆಂಬಲವಾಗಿ ಸೈನ್ಯ ಬಂದಿತೆ? ನಮಗೆ ಸಂತೋಷವನ್ನು ತಂದಿತಲ್ಲವೇ? ಒಳ್ಳೆಯದು!’ ಎಂದು ಸುಭಟರ ದೇವನಾದ ಭೀಮನು ಸಂತೋಷದಿಂದ ಕುಣಿದನು.
ಪದಾರ್ಥ (ಕ.ಗ.ಪ)
ಲಾಗಿಸು-ಹಾರು
ಮೂಲ ...{Loading}...
ಸಂದಣಿಸಿ ದಳ ನೂಕಿಕೊಂಡೈ
ತಂದುದಿದು ರವಿಸುತನ ತೊಲಗಿಸಿ
ಮುಂದೆ ಮೋಹರದೆಗೆದು ಮೂದಲಿಸಿತು ಮರುತ್ಸುತನ
ಬಂದುದೇ ಕರ್ಣಂಗೆ ಪಡಿಬಲ
ತಂದುದೇ ನಮಗೊಸಗೆಯನು ಲೇ
ಸೆಂದು ಸುಭಟರ ದೇವ ಸುಮ್ಮಾನದಲಿ ಲಾಗಿಸಿದ ॥25॥
೦೨೬ ದಳದೊಳಗೆ ದಳವುಳಿಸಿದನು ...{Loading}...
ದಳದೊಳಗೆ ದಳವುಳಿಸಿದನು ಕೆಲ
ಬಲನನೆಚ್ಚನು ಕೇಣವಿಲ್ಲದೆ
ನಿಲುಕಿದರಿಗಳು ಚಿಗಿದರಮರೀಜನದ ತೋಳಿನಲಿ
ತಲೆಗಳೊಟ್ಟಿಲ ತೋಳ ಕಡಿಗಳ
ತಳಿದ ಖಂಡದ ಕುಣಿವ ಮುಂಡದ
ಸುಳಿಯ ರಕುತದ ಕಡಲ ರೌಕುಳವಾಯ್ತು ನಿಮಿಷದಲಿ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮನು ಶತ್ರುಗಳ ಸೈನ್ಯದೊಳಗೆ ಕೋಲಾಹಲ ಮಾಡಿದನು. ಅಕ್ಕಪಕ್ಕಗಳಲ್ಲಿ ಹೊಡೆದನು. ಆಲೋಚಿಸದೆ ಸಿಕ್ಕಿಬಿದ್ದ ಶತ್ರುಗಳು ಸತ್ತು ಅಪ್ಸರೆಯರ ತೋಳಿಗೆ ಜಿಗಿದರು! ನಿಮಿಷದಲ್ಲಿ ರಣರಂಗವು ತಲೆಗಳ ರಾಶಿಯ, ತೋಳುಗಳ ತುಂಡುಗಳ, ಸೂಸಾಡಿದ ಖಂಡದ, ಕುಣಿಯುವ ಮುಂಡದ, ರಕ್ತದ ಸುಳಿಯ ಕಡಲಾಗಿ, ಎಲ್ಲವೂ ಅಸ್ತವ್ಯಸ್ತವಾಯಿತು.
ಪದಾರ್ಥ (ಕ.ಗ.ಪ)
ಕೇಣ-ಆಲೋಚನೆ, ರೌಕುಳ-ಹೆಚ್ಚಳ
ಮೂಲ ...{Loading}...
ದಳದೊಳಗೆ ದಳವುಳಿಸಿದನು ಕೆಲ
ಬಲನನೆಚ್ಚನು ಕೇಣವಿಲ್ಲದೆ
ನಿಲುಕಿದರಿಗಳು ಚಿಗಿದರಮರೀಜನದ ತೋಳಿನಲಿ
ತಲೆಗಳೊಟ್ಟಿಲ ತೋಳ ಕಡಿಗಳ
ತಳಿದ ಖಂಡದ ಕುಣಿವ ಮುಂಡದ
ಸುಳಿಯ ರಕುತದ ಕಡಲ ರೌಕುಳವಾಯ್ತು ನಿಮಿಷದಲಿ ॥26॥
೦೨೭ ಬಿಟ್ಟ ಸೂಠಿಯೊಳೊಗ್ಗು ...{Loading}...
ಬಿಟ್ಟ ಸೂಠಿಯೊಳೊಗ್ಗು ಮುರಿಯದೆ
ಬಿಟ್ಟ ಕುದುರೆಯ ದಳವ ಕೊಂದನು
ಬೆಟ್ಟವನು ಬಲವೈರಿ ತರಿವವೊಲಿಭದ ಮೋಹರವ
ಥಟ್ಟುಗೆಡಹಿದನುರವಣಿಸಿ ಸಾ
ಲಿಟ್ಟು ರಥವಾಜಿಗಳ ನೆರೆ ಹುಡಿ
ಗುಟ್ಟಿದನು ಕಾಲಾಳ ಘಾಸಿಯನರಿಯೆ ನಾನೆಂದ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನಡೆಸಿದ ವೇಗದಲ್ಲಿ ಕಟ್ಟು ಒಡೆಯದಂತೆ ನುಗ್ಗಿಸಿದ ಕುದುರೆಯ ದಳವನ್ನು ಭೀಮನು ಕೊಂದನು. ಬೆಟ್ಟವನ್ನು ಇಂದ್ರನು ತರಿಯುವ ಹಾಗೆ ಭೀಮನು ಗಜಸೇನೆಯನ್ನು ಒತ್ತೊತ್ತಾಗಿ ಕÉಡಹಿದನು. ರಥ ಕುದುರೆಗಳನ್ನು ಸಂಭ್ರಮದಿಂದ ಸಾಲಾಗಿ ಪುಡಿಮಾಡಿದನು. ಕಾಲಾಳುಗಳಿಗಾದ ಘಾಸಿಯನ್ನಂತೂ ನಾನು ಅರಿಯೆ” ಎಂದು ಸಂಜಯನು ಹೇಳಿದನು.
ಮೂಲ ...{Loading}...
ಬಿಟ್ಟ ಸೂಠಿಯೊಳೊಗ್ಗು ಮುರಿಯದೆ
ಬಿಟ್ಟ ಕುದುರೆಯ ದಳವ ಕೊಂದನು
ಬೆಟ್ಟವನು ಬಲವೈರಿ ತರಿವವೊಲಿಭದ ಮೋಹರವ
ಥಟ್ಟುಗೆಡಹಿದನುರವಣಿಸಿ ಸಾ
ಲಿಟ್ಟು ರಥವಾಜಿಗಳ ನೆರೆ ಹುಡಿ
ಗುಟ್ಟಿದನು ಕಾಲಾಳ ಘಾಸಿಯನರಿಯೆ ನಾನೆಂದ ॥27॥
೦೨೮ ಮುರಿಯೆ ಪಡಿಬಲವಾಕೆಯಲಿ ...{Loading}...
ಮುರಿಯೆ ಪಡಿಬಲವಾಕೆಯಲಿ ಬಿಡೆ
ಜರೆದು ಬಿಟ್ಟನು ರಥವ ಭೀಮನ
ಬಿರುಬ ಕೊಳ್ಳದೆ ನೂಕಿದನು ಧರ್ಮಜನ ಸಮ್ಮುಖಕೆ
ಇರಿತಕಂಜದಿರಂಜದಿರು ಕೈ
ಮರೆಯದಿರು ಕಲಿಯಾಗೆನುತ ಬೊ
ಬ್ಬಿರಿದು ಧಾಳಾಧೂಳಿಯಲಿ ತಾಗಿದನು ಕಲಿಕರ್ಣ ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಸರೆಗಾಗಿ ಬಂದ ಬೆಂಬಲದ ಪಡೆ ನಾಶವಾಗಲು, ಅದನ್ನು ಚೆನ್ನಾಗಿ ಹೀಯಾಳಿಸಿ, ಕರ್ಣನು ತನ್ನ ರಥವನ್ನು ಮುನ್ನುಗ್ಗಿಸಿದನು. ಭೀಮನ ಉಬ್ಬಟೆಯನ್ನು ಲಕ್ಷಿಸದೆ ಧರ್ಮಜನ ಸಮ್ಮುಖಕ್ಕೆ ಅದನ್ನು ನಡೆಸಿದನು. ಇರಿತಕ್ಕೆ ಅಂಜಬೇಡ, ಅಂಜಬೇಡ. ಶಕ್ತಿಗುಂದಬೇಡ. ಶೂರನಾಗು ಎಂದು ಬೊಬ್ಬಿರಿಯುತ್ತ ಕಲಿಕರ್ಣನು ರಭಸವಾಗಿ ತಾಗಿದನು.
ಪದಾರ್ಥ (ಕ.ಗ.ಪ)
ಆಕೆ-ಆಸರೆ,
ಕೈಮರೆ-ಶಕ್ತಿಗುಂದು,
ಧಾಳಾಧೂಳಿ-ವಿಪ್ಲವ
ಮೂಲ ...{Loading}...
ಮುರಿಯೆ ಪಡಿಬಲವಾಕೆಯಲಿ ಬಿಡೆ
ಜರೆದು ಬಿಟ್ಟನು ರಥವ ಭೀಮನ
ಬಿರುಬ ಕೊಳ್ಳದೆ ನೂಕಿದನು ಧರ್ಮಜನ ಸಮ್ಮುಖಕೆ
ಇರಿತಕಂಜದಿರಂಜದಿರು ಕೈ
ಮರೆಯದಿರು ಕಲಿಯಾಗೆನುತ ಬೊ
ಬ್ಬಿರಿದು ಧಾಳಾಧೂಳಿಯಲಿ ತಾಗಿದನು ಕಲಿಕರ್ಣ ॥28॥
೦೨೯ ಎಚ್ಚನರಸನ ಭುಜವ ...{Loading}...
ಎಚ್ಚನರಸನ ಭುಜವ ಕೆಲ ಸಾ
ರ್ದೆಚ್ಚನಾತನ ಸಾರಥಿಯ ರಥ
ದಚ್ಚನಾತನ ಹಯವನವನೀಪತಿಯ ಟೆಕ್ಕೆಯವ
ಎಚ್ಚು ಮೂದಲಿಸಿದನು ಪುನರಪಿ
ಯೆಚ್ಚು ಭಂಗಿಸಿ ನೃಪನ ಮರ್ಮವ
ಚುಚ್ಚಿ ನುಡಿದನು ಘಾಸಿ ಮಾಡಿದನಾ ನೃಪಾಲಕನ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕರ್ಣನು ಧರ್ಮರಾಯನ ಭುಜವನ್ನು ಬಾಣದಿಂದ ಹೊಡೆದನು. ಅವನ ಸಾರಥಿಯ ಸಮೀಪಕ್ಕೆ ಹೋಗಿ ಅವನನ್ನು, ರಥದ ಅಚ್ಚನ್ನು, ಅವನ ಕುದುರೆಯನ್ನು, ಧರ್ಮರಾಯನ ರಥದ ಧ್ವಜವನ್ನು ಹೊಡೆದು ಅವನನ್ನು ಮೂದಲಿಸಿದನು. ಮತ್ತೆ ಹೊಡೆದು ಅವಮಾನಿಸಿ ಧರ್ಮರಾಯನ ಮರ್ಮವನ್ನು ಚುಚ್ಚಿ ನುಡಿದು ನೋಯಿಸಿದನು.
ಮೂಲ ...{Loading}...
ಎಚ್ಚನರಸನ ಭುಜವ ಕೆಲ ಸಾ
ರ್ದೆಚ್ಚನಾತನ ಸಾರಥಿಯ ರಥ
ದಚ್ಚನಾತನ ಹಯವನವನೀಪತಿಯ ಟೆಕ್ಕೆಯವ
ಎಚ್ಚು ಮೂದಲಿಸಿದನು ಪುನರಪಿ
ಯೆಚ್ಚು ಭಂಗಿಸಿ ನೃಪನ ಮರ್ಮವ
ಚುಚ್ಚಿ ನುಡಿದನು ಘಾಸಿ ಮಾಡಿದನಾ ನೃಪಾಲಕನ ॥29॥
೦೩೦ ಚೆಲ್ಲಿತವನೀಪತಿಯ ಮೋಹರ ...{Loading}...
ಚೆಲ್ಲಿತವನೀಪತಿಯ ಮೋಹರ
ವೆಲ್ಲ ನೆರೆ ನುಗ್ಗಾಯ್ತು ರಾಯನ
ಘಲ್ಲಿಸಿದನೇಳೆಂಟು ಬಾಣದಲೀತನಡಿಗಡಿಗೆ
ಅಲ್ಲಿಯದುಭುತ ರಣವನಪ್ರತಿ
ಮಲ್ಲ ಮಾರುತಿ ಕೇಳಿದನು ಮಗು
ಳಲ್ಲಿಯೇ ಮೊಳಗಿದನು ನಿಮಿಷಕೆ ಕರ್ಣನಿದಿರಿನಲಿ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮರಾಯನ ಸೈನ್ಯವೆಲ್ಲವೂ ಚೆಲ್ಲಾಪಿಲ್ಲಿಯಾಯಿತು; ಸೋತು ಚೆನ್ನಾಗಿ ನುಗ್ಗಾಯಿತು. ಕರ್ಣನು ಏಳೆಂಟು ಬಾಣಗಳಿಂದ ಮತ್ತೆ ಮತ್ತೆ ಧರ್ಮರಾಯನ್ನು ಪೀಡಿಸಿದನು. ಅಲ್ಲಿಯ ಅದ್ಭುತ ರಣದ ಸುದ್ದಿಯನ್ನು ಅಪ್ರತಿಮಲ್ಲನಾದ ಭೀಮನು ಅಲ್ಲಿಂದಲೇ ಕೇಳಿ ನಿಮಿಷದಲ್ಲಿ ಕರ್ಣನ ಎದುರಿಗೆ ಬಂದು ನಿಂತು ಘರ್ಜಿಸಿದನು.
ಪದಾರ್ಥ (ಕ.ಗ.ಪ)
ಘಲ್ಲಿಸು-ಪೀಡಿಸು
ಮೂಲ ...{Loading}...
ಚೆಲ್ಲಿತವನೀಪತಿಯ ಮೋಹರ
ವೆಲ್ಲ ನೆರೆ ನುಗ್ಗಾಯ್ತು ರಾಯನ
ಘಲ್ಲಿಸಿದನೇಳೆಂಟು ಬಾಣದಲೀತನಡಿಗಡಿಗೆ
ಅಲ್ಲಿಯದುಭುತ ರಣವನಪ್ರತಿ
ಮಲ್ಲ ಮಾರುತಿ ಕೇಳಿದನು ಮಗು
ಳಲ್ಲಿಯೇ ಮೊಳಗಿದನು ನಿಮಿಷಕೆ ಕರ್ಣನಿದಿರಿನಲಿ ॥30॥
೦೩೧ ಅಳಲಿಸಿದನೇ ಧರ್ಮಪುತ್ರನ ...{Loading}...
ಅಳಲಿಸಿದನೇ ಧರ್ಮಪುತ್ರನ
ಬಳಿಚಿ ಬಿಟ್ಟೆನು ನಾಯ ಕೊಲ್ಲದೆ
ಕಳುಹಿದರೆ ಬೆಂಬಿಡನಲಾ ಮರುಕೊಳಿಸಿ ಮರುಕೊಳಿಸಿ
ತಲೆ ಕೊರಳ ಸಂಪ್ರತಿಗೆ ಭೇದವ
ಬಳಸಿದರೆ ಸಾಕೈಸಲೇ ಎನು
ತುಲಿದು ಕಣೆಗಳ ಕೆದರಿ ಕರ್ಣನ ತರುಬಿದನು ಭೀಮ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕರ್ಣನು ಧರ್ಮಪುತ್ರನನ್ನು ನೋಯಿಸಿದನಲ್ಲಾ? ಈ ನಾಯಿಯನ್ನು ಕೊಲ್ಲದೆ ಜಾರಿಕೊಳ್ಳುವಂತೆ ಬಿಟ್ಟುಬಿಟ್ಟೆನು. ಆದರೆ ಇವನು ಪುನಹ ಹಿಂಬಾಲಿಸುತ್ತಿದ್ದಾನಲ್ಲಾ. ಅವನ ತಲೆ ಕೊರಳುಗಳಿಗಿರುವ ಸಂಧಿಯನ್ನು ಬಿಡಿಸಿದರೆ ಸಾಕು ತಾನೇ? ಎಂದು ಭೀಮನು ಬಾಣಗಳನ್ನು ಹರಡಿ ಕರ್ಣನನ್ನು ಅಡ್ಡಗಟ್ಟಿದನು.
ಪದಾರ್ಥ (ಕ.ಗ.ಪ)
ಬಳಚು-ಸವರು,
ಮೂಲ ...{Loading}...
ಅಳಲಿಸಿದನೇ ಧರ್ಮಪುತ್ರನ
ಬಳಿಚಿ ಬಿಟ್ಟೆನು ನಾಯ ಕೊಲ್ಲದೆ
ಕಳುಹಿದರೆ ಬೆಂಬಿಡನಲಾ ಮರುಕೊಳಿಸಿ ಮರುಕೊಳಿಸಿ
ತಲೆ ಕೊರಳ ಸಂಪ್ರತಿಗೆ ಭೇದವ
ಬಳಸಿದರೆ ಸಾಕೈಸಲೇ ಎನು
ತುಲಿದು ಕಣೆಗಳ ಕೆದರಿ ಕರ್ಣನ ತರುಬಿದನು ಭೀಮ ॥31॥
೦೩೨ ಭೀಮಸೇನನ ದಳಪತಿಯ ...{Loading}...
ಭೀಮಸೇನನ ದಳಪತಿಯ ಸಂ
ಗ್ರಾಮ ಮಸೆದುದು ಮತ್ತೆ ಕೈಕೊಳ
ಲೀ ಮಹಾರಥರೆನುತ ಕೈ ಬೀಸಿದನು ಕುರುರಾಯ
ಸೋಮದತ್ತನ ಸೂನು ಕೃಪನು
ದ್ದಾಮ ಶಕುನಿ ಸುಯೋಧನಾನುಜ
ನಾ ಮಹಾಹವಕೊದಗಿದರು ಕೃತವರ್ಮ ಗುರುಸುತರು ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮಸೇನನ ಹಾಗೂ ಸೇನಾಪತಿಯ (ಕರ್ಣನ) ಯುದ್ಧವು ವಿಷಮಿಸಿತು. ಈಗ ತನ್ನ ಮಹಾರಥರು ಮತ್ತೆ ಯುದ್ಧವನ್ನು ಕೈಗೊಳ್ಳಲಿ’ ಎಂದು ದುರ್ಯೋಧನನು ಕೈ ಬೀಸಿದನು. ಸೋಮದತ್ತನ ಮಗ, ಕೃಪ, ಉದ್ದಾಮನಾದ ಶಕುನಿ, ಸುಯೋಧನನ ಅನುಜ, ಕೃತವರ್ಮ, ಅಶ್ವತ್ಥಾಮ - ಇವರು ಮಹಾಯುದ್ಧಕ್ಕೆ ಒದಗಿದರು.
ಪದಾರ್ಥ (ಕ.ಗ.ಪ)
ಮಸೆ- ತೀವ್ರಗೊಳ್ಳು
ಮೂಲ ...{Loading}...
ಭೀಮಸೇನನ ದಳಪತಿಯ ಸಂ
ಗ್ರಾಮ ಮಸೆದುದು ಮತ್ತೆ ಕೈಕೊಳ
ಲೀ ಮಹಾರಥರೆನುತ ಕೈ ಬೀಸಿದನು ಕುರುರಾಯ
ಸೋಮದತ್ತನ ಸೂನು ಕೃಪನು
ದ್ದಾಮ ಶಕುನಿ ಸುಯೋಧನಾನುಜ
ನಾ ಮಹಾಹವಕೊದಗಿದರು ಕೃತವರ್ಮ ಗುರುಸುತರು ॥32॥
೦೩೩ ಅಖಿಳ ಬಲ ...{Loading}...
ಅಖಿಳ ಬಲ ಭಾರಣೆಯಲೊಂದೇ
ಮುಖದಲೊಡ್ಡಿತು ಪವನಜನ ಸಂ
ಮುಖದೊಳನಿಬರು ಕೆಣಕಿದರು ಕಲ್ಪಾಂತಭೈರವನ
ಸುಖಿಗಳಕಟಾ ನೀವು ಸಮರೋ
ನ್ಮುಖರಹರೆ ಕರ್ಣಂಗೆ ಸಾವಿನ
ಸಖಿಗಳೇ ಲೇಸೆನುತ ಕೈಕೊಂಡೆಚ್ಚನಾ ಭೀಮ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
33.ಸಮಸ್ತ ಸೇನೆಯು ಕೋಲಾಹಲ ಮಾಡುತ್ತಾ ಭೀಮನ ಎದುರಿನಲ್ಲಿ ಒಂದೇ ಕಡೆ ಮುತ್ತಿತ್ತು. ಎಲ್ಲರೂ ಆ ಕಲ್ಪಾಂತಭೈರವನನ್ನು ಕೆಣಕಿದರು. ಭೀಮನು, ‘ಅಯ್ಯೊ! ನೀವು ಸುಖಿಗಳು! ಯುದ್ಧೋನ್ಮುಖರಾಗಬಹುದೇ? ನೀವು ಕರ್ಣನಿಗೆ ಸಾವಿನಲ್ಲಿ ಜೊತೆಗಾರರು! ಒಳ್ಳೆಯದಾಯಿತು!’ ಎನ್ನುತ್ತಾ ಬಾಣಗಳನ್ನು ಪ್ರಯೋಗಿಸಿದನು.
ಪದಾರ್ಥ (ಕ.ಗ.ಪ)
ಭಾರಣೆ-ಕೋಲಾಹಲ
ಮೂಲ ...{Loading}...
ಅಖಿಳ ಬಲ ಭಾರಣೆಯಲೊಂದೇ
ಮುಖದಲೊಡ್ಡಿತು ಪವನಜನ ಸಂ
ಮುಖದೊಳನಿಬರು ಕೆಣಕಿದರು ಕಲ್ಪಾಂತಭೈರವನ
ಸುಖಿಗಳಕಟಾ ನೀವು ಸಮರೋ
ನ್ಮುಖರಹರೆ ಕರ್ಣಂಗೆ ಸಾವಿನ
ಸಖಿಗಳೇ ಲೇಸೆನುತ ಕೈಕೊಂಡೆಚ್ಚನಾ ಭೀಮ ॥33॥
೦೩೪ ಗುರುಸುತನನೈವತ್ತು ಬಾಣದ ...{Loading}...
ಗುರುಸುತನನೈವತ್ತು ಬಾಣದ
ಲರಸನನುಜರ ಕೃಪನ ಕೃತವ
ರ್ಮರನು ಮೂನೂರಂಬಿನಲಿ ವೃಷಸೇನ ಸೌಬಲರ
ಸರಳು ಮೂವತ್ತರಲಿ, ಪುನರಪಿ
ಗುರುಸುತಾದಿ ಮಹಾರಥರನೆರ
ಡೆರಡರಲಿ, ಮುರಿಯೆಚ್ಚು ವಿಮುಖರ ಮಾಡಿದನು ಭೀಮ ॥34॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮನು ಅಶ್ವತ್ಥಾಮನನ್ನು ಐವತ್ತು ಬಾಣಗಳಲ್ಲಿ, ದುರ್ಯೋಧನನ ತಮ್ಮಂದಿರನ್ನೂ ಕೃಪ ಕೃತವರ್ಮರನ್ನು ಮುನ್ನೂರು ಬಾಣಗಳಲ್ಲಿ, ವೃಷಸೇನ ಸೌಬಲರನ್ನು ಮೂವತ್ತು ಬಾಣಗಳಲ್ಲಿ, ಮತ್ತೆ ಅಶ್ವತ್ಥಾಮ ಮೊದಲಾದ ಮಹಾರಥರನ್ನು ಎರಡೆರಡು ಬಾಣಗಳಲ್ಲಿ ಅವರು ಹಿಂದಿರುಗುವಂತೆ ಹೊಡೆದು ಯುದ್ಧ ವಿಮುಖರನ್ನಾಗಿ ಮಾಡಿದನು.
ಮೂಲ ...{Loading}...
ಗುರುಸುತನನೈವತ್ತು ಬಾಣದ
ಲರಸನನುಜರ ಕೃಪನ ಕೃತವ
ರ್ಮರನು ಮೂನೂರಂಬಿನಲಿ ವೃಷಸೇನ ಸೌಬಲರ
ಸರಳು ಮೂವತ್ತರಲಿ, ಪುನರಪಿ
ಗುರುಸುತಾದಿ ಮಹಾರಥರನೆರ
ಡೆರಡರಲಿ, ಮುರಿಯೆಚ್ಚು ವಿಮುಖರ ಮಾಡಿದನು ಭೀಮ ॥34॥
೦೩೫ ಮತ್ತೆ ಜೋಡಿಸಿ ...{Loading}...
ಮತ್ತೆ ಜೋಡಿಸಿ ಕೌರವೇಂದ್ರನ
ನೊತ್ತಲಿಕ್ಕಿ ಮಹಾರಥರು ರಿಪು
ಮತ್ತದಂತಿಯ ಕೆಣಕಿದರು ಕೆದರಿದರು ಮಾರ್ಗಣವ
ಎತ್ತಲವನೀಪತಿಯ ಮೋಹರ
ವತ್ತ ಮೆಲ್ಲನೆ ರಥವ ಬಿಟ್ಟನು
ಮತ್ತೆ ಮೂದಲಿಸಿದನು ಯಮಸೂನುವನು ಕಲಿಕರ್ಣ ॥35॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಹಾರಥರು ಮತ್ತೆ ಕೂಡಿಕೊಂಡು, ಕೌರವೇಂದ್ರನನ್ನು ಪಕ್ಕಕ್ಕೆ ಸರಿಸಿ, ಮದಿಸಿದ ಆನೆಯಂಥ ಶತ್ರುವಾದ ಭೀಮನನ್ನು ಕೆಣಕಿ ಬಾಣಗಳನ್ನು ಸೂಸಿದರು. ಕಲಿಯಾದ ಕರ್ಣನು ಧರ್ಮರಾಯನ ಸೈನ್ಯವಿರುವ ಕಡೆಗೆ ಮೆಲ್ಲನೆ ರಥವನ್ನು ಬಿಟ್ಟು ಅವನನ್ನು ಮತ್ತೆ ಮೂದಲಿಸಿದನು.
ಪದಾರ್ಥ (ಕ.ಗ.ಪ)
ಒತ್ತಲಿಕ್ಕು-ಪಕ್ಕಕ್ಕೆ ಸರಿಸು
ಮೂಲ ...{Loading}...
ಮತ್ತೆ ಜೋಡಿಸಿ ಕೌರವೇಂದ್ರನ
ನೊತ್ತಲಿಕ್ಕಿ ಮಹಾರಥರು ರಿಪು
ಮತ್ತದಂತಿಯ ಕೆಣಕಿದರು ಕೆದರಿದರು ಮಾರ್ಗಣವ
ಎತ್ತಲವನೀಪತಿಯ ಮೋಹರ
ವತ್ತ ಮೆಲ್ಲನೆ ರಥವ ಬಿಟ್ಟನು
ಮತ್ತೆ ಮೂದಲಿಸಿದನು ಯಮಸೂನುವನು ಕಲಿಕರ್ಣ ॥35॥
೦೩೬ ದ್ರೋಣ ಬರಸಿದ ...{Loading}...
ದ್ರೋಣ ಬರಸಿದ ಭಾಷೆಯೆಂದೇ
ಕ್ಷೋಣಿಪತಿ ಬಗೆಯದಿರು ತನ್ನನು
ವಾಣಿಯದ ವಿವರದಲಿ ಸಲಹನು ಕೌರವರ ರಾಯ
ಪ್ರಾಣದಾಸೆಯ ಮರೆದು ತನ್ನೊಳು
ಕೇಣವಿಲ್ಲದೆ ಕಾದೆನುತ ನಿ
ತ್ರಾಣನನು ನಿಬ್ಬರದ ನುಡಿಗಳಲಿರಿದನಾ ಕರ್ಣ ॥36॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕರ್ಣನು, “ಧರ್ಮರಾಯನೇ, ದ್ರೋಣ ಮಾಡಿದ ಭಾಷೆಯೆಂದೇನೂ ಯೋಚಿಸಬೇಡ. ದುರ್ಯೋಧನನು ವ್ಯಾವಹಾರಿಕವಾಗಿ ತನ್ನನ್ನು ಕಾಪಾಡಿಲ್ಲ (ನೋಡಿಕೊಂಡಿಲ್ಲ.) ಪ್ರಾಣದಾಸೆಯನ್ನು ಮರೆತು ನನ್ನಲ್ಲಿ ದಾಕ್ಷಿಣ್ಯವಿಲ್ಲದೆ ಯುದ್ಧಮಾಡು” ಎನ್ನುತ್ತ ನಿಶ್ಶಕ್ತನಾದ ಧರ್ಮರಾಯನನ್ನು ಕಠಿನೋಕ್ತಿಗಳಿಂದ ಇರಿದನು.
ಪದಾರ್ಥ (ಕ.ಗ.ಪ)
ಕ್ಷೋಣಿಪತಿ-ಭೂಪತಿ, ರಾಜ
ವಾಣಿಯ-ವ್ಯವಹಾರ,
ನಿಬ್ಬರ- ಒರಟಾದ,
ಕೇಣ- ದಾಕ್ಷಿಣ್ಯ
ಮೂಲ ...{Loading}...
ದ್ರೋಣ ಬರಸಿದ ಭಾಷೆಯೆಂದೇ
ಕ್ಷೋಣಿಪತಿ ಬಗೆಯದಿರು ತನ್ನನು
ವಾಣಿಯದ ವಿವರದಲಿ ಸಲಹನು ಕೌರವರ ರಾಯ
ಪ್ರಾಣದಾಸೆಯ ಮರೆದು ತನ್ನೊಳು
ಕೇಣವಿಲ್ಲದೆ ಕಾದೆನುತ ನಿ
ತ್ರಾಣನನು ನಿಬ್ಬರದ ನುಡಿಗಳಲಿರಿದನಾ ಕರ್ಣ ॥36॥
೦೩೭ ಬಿಡನು ರಾಯನ ...{Loading}...
ಬಿಡನು ರಾಯನ ಬೆನ್ನನೀತನ
ಕೆಡಹಿ ರಕುತವ ಕುಡಿಯೆನುತ ಬಲ
ನೆಡನೊಳಿಟ್ಟಣಿಸಿದರು ಸಾತ್ಯಕಿ ನಕುಳ ಸಹದೇವ
ತುಡುಕಿದರು ಪಾಂಚಾಲ ಮತ್ಸ್ಯರ
ಗಡಣ ಕೈಕಯ ಪಂಚಪಾಂಡವ
ರಡಸಿದರು ಹೊದಿಸಿದರು ಕಣೆಯಲಿ ರವಿಸುತನ ರಥವ ॥37॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಾತ್ಯಕಿ ನಕುಳ ಸಹದೇವರು, ‘ಇವನು ಧರ್ಮರಾಯನ ಬೆನ್ನನ್ನು ಬಿಡುವುದಿಲ್ಲ. ಇವನನ್ನು ಉರುಳಿಸಿ ಇವನ ರಕ್ತವನ್ನು ಕುಡಿ’ ಎನ್ನುತ್ತ ಎಡ ಬಲಗಳಲ್ಲಿ ನೆರೆದರು. ಪಾಂಚಾಲ, ಮತ್ಸ್ಯರ ಸಮೂಹ ಎರಗಿ ತುಡುಕಿದರು. ಕೈಕೆಯ, ಪಂಚಪಾಂಡವರು ಕರ್ಣನ ರಥವನ್ನು ಆಕ್ರಮಿಸಿ ಬಾಣಗಳಿಂದ ಮುಚ್ಚಿದರು.
ಮೂಲ ...{Loading}...
ಬಿಡನು ರಾಯನ ಬೆನ್ನನೀತನ
ಕೆಡಹಿ ರಕುತವ ಕುಡಿಯೆನುತ ಬಲ
ನೆಡನೊಳಿಟ್ಟಣಿಸಿದರು ಸಾತ್ಯಕಿ ನಕುಳ ಸಹದೇವ
ತುಡುಕಿದರು ಪಾಂಚಾಲ ಮತ್ಸ್ಯರ
ಗಡಣ ಕೈಕಯ ಪಂಚಪಾಂಡವ
ರಡಸಿದರು ಹೊದಿಸಿದರು ಕಣೆಯಲಿ ರವಿಸುತನ ರಥವ ॥37॥
೦೩೮ ಇನಿಬರೊನ್ದೇ ಸೂಠಿಯಲಿ ...{Loading}...
ಇನಿಬರೊಂದೇ ಸೂಠಿಯಲಿ ಮುಂ
ಮೊನೆಯ ಬೋಳೆಯ ಸುರಿದರಡಿಗಡಿ
ಗಿನಿಬರಂಬನು ಮುರಿದು ತರಿದನು ಸೂತ ವಾಜಿಗಳ
ತನತನಗೆ ಹೊಸ ರಥದೊಳೊಂದೊ
ಗ್ಗಿನಲಿ ಕವಿದೆಚ್ಚರು ಮಹಾಹವ
ವೆನಗೆ ಬಣ್ಣಿಸಲರಿದು ಧರಣೀಪಾಲ ಕೇಳ್ ಎಂದ ॥38॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಇಷ್ಟು ಜನರೂ ಕರ್ಣನ ಮೇಲೆ ಒಂದೇ ವೇಗದಲ್ಲಿ ಚೂಪಾದ ಬಾಣಗಳ ಮಳೆಯನ್ನು ಸುರಿಸಿದರು. ಕರ್ಣನು ಅವರೆಲ್ಲರ ಬಾಣಗಳನ್ನು ಅಡಿಗಡಿಗೆ ಕತ್ತರಿಸಿ ಸಾರಥಿಯನ್ನೂ ಕುದುರೆಗಳನ್ನೂ ತರಿದನು. ಹೊಸ ರಥದಲ್ಲಿ ಅವರೆಲ್ಲರೂ ಒಂದೊಂದು ಗುಂಪಾಗಿ ಮುತ್ತಿ ಬಾಣಗಳನ್ನು ಬಿಟ್ಟರು. ಆ ಮಹಾಯುದ್ಧವನ್ನು ಬಣ್ಣಿಸಲು ನನಗೆ ಸಾಧ್ಯವಿಲ್ಲ ಧರಣೀಪಾಲನೇ, ಕೇಳು” ಎಂದು ಸಂಜಯನು ಹೇಳಿದನು.
ಮೂಲ ...{Loading}...
ಇನಿಬರೊಂದೇ ಸೂಠಿಯಲಿ ಮುಂ
ಮೊನೆಯ ಬೋಳೆಯ ಸುರಿದರಡಿಗಡಿ
ಗಿನಿಬರಂಬನು ಮುರಿದು ತರಿದನು ಸೂತ ವಾಜಿಗಳ
ತನತನಗೆ ಹೊಸ ರಥದೊಳೊಂದೊ
ಗ್ಗಿನಲಿ ಕವಿದೆಚ್ಚರು ಮಹಾಹವ
ವೆನಗೆ ಬಣ್ಣಿಸಲರಿದು ಧರಣೀಪಾಲ ಕೇಳೆಂದ ॥38॥
೦೩೯ ಭಟರು ಮುತ್ತಿದರಿನಸುತನ ...{Loading}...
ಭಟರು ಮುತ್ತಿದರಿನಸುತನ ಲಟ
ಕಟಿಸಲೆಚ್ಚರು ಶಿವ ಶಿವಾ ನಿ
ಚ್ಚಟದ ನಿಬ್ಬರದಂಘವಣೆ ಮಝ ಪೂತು ಲೇಸೆನುತ
ನಿಟಿಲನೇತ್ರನ ನಯನ ಶಿಖಿಯು
ಬ್ಬಟೆಗೆ ಸಮ ಜೋಡಿಸಿತು ಕರ್ಣನ
ಚಟುಳ ವಿಕ್ರಮಪವನ ಪರಿಗತ ಬಾಣಶಿಖಿನಿಕರ ॥39॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭಟರು ಕರ್ಣನನ್ನು ಮುತ್ತಿದರು. ಅವನು ಆಯಾಸಗೊಳ್ಳುವಂತೆ ಬಾಣವನ್ನು ಬಿಟ್ಟರು. ಶಿವ ಶಿವಾ! ನಿಶ್ಚಯದ ನಿರ್ಭರವಾದ ಸಾಹಸವಿದು! ಮಝ! ಪೂತು! ಲೇಸು! ಎನ್ನುತ್ತ, ಕರ್ಣನ ಚುರುಕಾದ ಪರಾಕ್ರಮದ ಗಾಳಿಗೆ ಸಿಕ್ಕು ನುಗ್ಗುವ ಬಾಣಜ್ವಾಲೆಗಳು ಹಣೆಗಣ್ಣಿನವನ ಕಣ್ಣಿನ ಬೆಂಕಿಯ ತೀಕ್ಷ್ಣತೆಗೆ ಸಮವಾದುವು.
ಪದಾರ್ಥ (ಕ.ಗ.ಪ)
ಲಟಕಟಿಸು-ಹೀಗಳೆ, ಅಂಘವಣೆ-ರೀತಿ
ಮೂಲ ...{Loading}...
ಭಟರು ಮುತ್ತಿದರಿನಸುತನ ಲಟ
ಕಟಿಸಲೆಚ್ಚರು ಶಿವ ಶಿವಾ ನಿ
ಚ್ಚಟದ ನಿಬ್ಬರದಂಘವಣೆ ಮಝ ಪೂತು ಲೇಸೆನುತ
ನಿಟಿಲನೇತ್ರನ ನಯನ ಶಿಖಿಯು
ಬ್ಬಟೆಗೆ ಸಮ ಜೋಡಿಸಿತು ಕರ್ಣನ
ಚಟುಳ ವಿಕ್ರಮಪವನ ಪರಿಗತ ಬಾಣಶಿಖಿನಿಕರ ॥39॥
೦೪೦ ನಕುಳನನು ನೋಯಿಸಿದ ...{Loading}...
ನಕುಳನನು ನೋಯಿಸಿದ ಸಹದೇ
ವಕನ ಘಾಯಂಬಡಿಸಿದನು ಸಾ
ತ್ಯಕಿಯ ಮಸೆಗಾಣಿಸಿದನಾ ಪಾಂಚಾಲ ಕೈಕೆಯರ
ವಿಕಳಗೊಳಿಸಿದನಾ ಮಹಾರಥ
ನಿಕರ ಸೈರಿಸಿ ಮತ್ತೆ ಮೇಳಾ
ಪಕದಲಂಘೈಸಿದರು ತಡೆದರು ಭಾನುನಂದನನ ॥40॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕರ್ಣನು ನಕುಳನನ್ನು ನೋಯಿಸಿದನು. ಸಹದೇವ ಮತ್ತು ಸಾತ್ಯಕಿಯರನ್ನು ಗಾಯಗೊಳಿಸಿದನು. ಪಾಂಚಾಲ ಕೈಕಯರನ್ನು ಗಾಬರಿಗೊಳಿಸಿದನು. ಆ ಮಹಾರಥರ ಸಮೂಹವು ಸುಧಾರಿಸಿಕೊಂಡು ಮತ್ತೆ ಒಂದುಗೂಡಿ ಆಕ್ರಮಿಸಿ ಕರ್ಣನನ್ನು ತಡೆಯಿತು.
ಪದಾರ್ಥ (ಕ.ಗ.ಪ)
ಮಸೆಗಾಣಿಸು-ಗಾಯಗೊಳಿಸು, ಮೇಳಾಪ-ಒಂದುಗೂಡು, ಅಂಘೈಸು-ಮೇಲೆಬೀಳು
ಮೂಲ ...{Loading}...
ನಕುಳನನು ನೋಯಿಸಿದ ಸಹದೇ
ವಕನ ಘಾಯಂಬಡಿಸಿದನು ಸಾ
ತ್ಯಕಿಯ ಮಸೆಗಾಣಿಸಿದನಾ ಪಾಂಚಾಲ ಕೈಕೆಯರ
ವಿಕಳಗೊಳಿಸಿದನಾ ಮಹಾರಥ
ನಿಕರ ಸೈರಿಸಿ ಮತ್ತೆ ಮೇಳಾ
ಪಕದಲಂಘೈಸಿದರು ತಡೆದರು ಭಾನುನಂದನನ ॥40॥
೦೪೧ ಹೇಳಲರಿಯೆನು ನಿನ್ನವನ ...{Loading}...
ಹೇಳಲರಿಯೆನು ನಿನ್ನವನ ಕ
ಟ್ಟಾಳುತನವನು ದೇವ ದೈತ್ಯರ
ಕಾಳೆಗದಲಿವನಂತೆ ಬಲ್ಲಿದರಿಲ್ಲ ಬಿಲ್ಲಿನಲಿ
ಆಳ ಮುರಿದನು ಹೂಣೆ ಹೊಗುವು
ಬ್ಬಾಳುಗಳ ಬಲು ದೇಹದಂಬಿನ
ಕೀಲಣದ ಕಾಳಾಸದಿರಿತವ ಮೆರೆದನಾ ಕರ್ಣ ॥41॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಿನ್ನವನಾದ ಕರ್ಣನ ಕಟ್ಟಾಳುತನವನ್ನು ಹೇಳಲರಿಯೆ. ದೇವತೆಗಳು ಮತ್ತು ದೈತ್ಯರ ಕಾಳಗದಲ್ಲಿ ಬಿಲ್ಲುವಿದ್ಯೆಯಲ್ಲಿ ಸಮರ್ಥರಾದವರಿಲ್ಲ. ಇವನು ಯೋಧರನ್ನು ನಾಶಮಾಡಿದನು. ಇವನಂತೆ ಸುತ್ತುಗಟ್ಟಿ ದಾಳಿಮಾಡುವ ಶೂರರ ಬಲಿಷ್ಠವಾದ ದೇಹಗಳಲ್ಲಿ ಬಾಣಗಳನ್ನು ಕೀಲಿಸಿ ಬೆಸುಗೆಹಾಕುವಂಥ ಇರಿತವನ್ನು ಅವನು ಮೆರೆದನು.
ಪದಾರ್ಥ (ಕ.ಗ.ಪ)
ಹೂಣೆಹೊಗು-ಸುತ್ತಗಟ್ಟಿ ದಾಳಿಮಾಡು, ಉಬ್ಬಾಳು-ಉತ್ಸಾಹಿಯಾದ ಶೂರ, ಕೀಲಣ-ಕೂಡಿಸುವಿಕೆ, ಕೀಲಿಸುವಿಕೆ, ಕಾಳಾಸ-ಬೆಸುಗೆ
ಮೂಲ ...{Loading}...
ಹೇಳಲರಿಯೆನು ನಿನ್ನವನ ಕ
ಟ್ಟಾಳುತನವನು ದೇವ ದೈತ್ಯರ
ಕಾಳೆಗದಲಿವನಂತೆ ಬಲ್ಲಿದರಿಲ್ಲ ಬಿಲ್ಲಿನಲಿ
ಆಳ ಮುರಿದನು ಹೂಣೆ ಹೊಗುವು
ಬ್ಬಾಳುಗಳ ಬಲು ದೇಹದಂಬಿನ
ಕೀಲಣದ ಕಾಳಾಸದಿರಿತವ ಮೆರೆದನಾ ಕರ್ಣ ॥41॥
೦೪೨ ಸರಳ ಹತಿಯಲಿ ...{Loading}...
ಸರಳ ಹತಿಯಲಿ ನಕುಲ ಸಾತ್ಯಕಿ
ಬಿರುದ ಸಹದೇವಾದಿ ವೀರರು
ಪಿರಿದು ನೊಂದರು ಮತ್ತೆ ತರುಬಿದನವನಿಪಾಲಕನ
ಅರಸ ಹಿಡಿಹಿಡಿ ಧನುವನಿನ್ನೆರ
ಡರಸನಾನದು ಧರಣಿಯೊಬ್ಬನ
ಶಿರದ ಬರಹವ ತೊಡೆವೆನಿದೆಯೆಂದೆನುತ ತೆಗೆದೆಚ್ಚ ॥42॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಾಣಗಳ ಹೊಡೆತದಿಂದ ನಕುಲ ಸಾತ್ಯಕಿಗಳು ಬಿರುದಿನ ಸಹದೇವ ಮೊದಲಾದ ವೀರರು ತುಂಬಾ ನೊಂದರು. ಕರ್ಣನು ಧರ್ಮರಾಯನನ್ನು ಮತ್ತೆ ಅಡ್ಡಗಟ್ಟಿದನು. ‘ಅರಸನೇ ಬಿಲ್ಲನ್ನು ಹಿಡಿ! ಹಿಡಿ!! ಭೂಮಿ ಇಬ್ಬರು ಅರಸರನ್ನು ಇನ್ನು ಹೊಂದಿರುವುದಿಲ ್ಲ! ಈಗ ಒಬ್ಬನ ಹಣೆಯ ಬರಹವನ್ನು ತೊಡೆಯುತ್ತೇನೆ!’ ಎಂದು ಹೇಳುತ್ತ ಬಾಣವನ್ನು ತೆಗೆದು ಪ್ರಯೋಗಿಸಿದನು.
ಮೂಲ ...{Loading}...
ಸರಳ ಹತಿಯಲಿ ನಕುಲ ಸಾತ್ಯಕಿ
ಬಿರುದ ಸಹದೇವಾದಿ ವೀರರು
ಪಿರಿದು ನೊಂದರು ಮತ್ತೆ ತರುಬಿದನವನಿಪಾಲಕನ
ಅರಸ ಹಿಡಿಹಿಡಿ ಧನುವನಿನ್ನೆರ
ಡರಸನಾನದು ಧರಣಿಯೊಬ್ಬನ
ಶಿರದ ಬರಹವ ತೊಡೆವೆನಿದೆಯೆಂದೆನುತ ತೆಗೆದೆಚ್ಚ ॥42॥
೦೪೩ ಅಕಟಕಟ ರಾಧೇಯ ...{Loading}...
ಅಕಟಕಟ ರಾಧೇಯ ಕೇಳೀ
ನಕುಳನೀ ಸಹದೇವನೀ ಸಾ
ತ್ಯಕಿ ನರೇಶ್ವರರೆನಿಸುವೀ ಕುಂತೀಕುಮಾರಕರು
ಅಕುಟಿಲರು ನಯಕೋವಿದರು ಧಾ
ರ್ಮಿಕರ ಕೊಲಬೇಡಿವರನತಿ ಬಾ
ಧಕರು ಭೀಮಾರ್ಜುನರ ಸಂಹರಿಸೆಂದನಾ ಶಲ್ಯ ॥43॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಅಕಟಕಟ! ಕರ್ಣನೇ ಕೇಳು! ಈ ನಕುಳ, ಈ ಸಹದೇವ, ಈ ಸಾತ್ಯಕಿ, ದೊರೆಗಳೆನಿಸುವ ಈ ಕುಂತೀಕುಮಾರರು ಕುಟಿಲವಿಲ್ಲದವರು, ನಯಕೋವಿದರು, ಧಾರ್ಮಿಕರು. ಇವರನ್ನು ಕೊಲ್ಲಬೇಡ. ಅತಿಯಾಗಿ ಬಾಧಿಸುವ ಭೀಮಾರ್ಜುನರನ್ನು ಸಂಹರಿಸು’ ಎಂದು ಶಲ್ಯನು ಹೇಳಿದನು.
ಮೂಲ ...{Loading}...
ಅಕಟಕಟ ರಾಧೇಯ ಕೇಳೀ
ನಕುಳನೀ ಸಹದೇವನೀ ಸಾ
ತ್ಯಕಿ ನರೇಶ್ವರರೆನಿಸುವೀ ಕುಂತೀಕುಮಾರಕರು
ಅಕುಟಿಲರು ನಯಕೋವಿದರು ಧಾ
ರ್ಮಿಕರ ಕೊಲಬೇಡಿವರನತಿ ಬಾ
ಧಕರು ಭೀಮಾರ್ಜುನರ ಸಂಹರಿಸೆಂದನಾ ಶಲ್ಯ ॥43॥
೦೪೪ ಮುಳಿದು ಕಬ್ಬಿನ ...{Loading}...
ಮುಳಿದು ಕಬ್ಬಿನ ತೋಟದಲಿ ನರಿ
ಹುಲಿಯವೋಲ್ ಗರ್ಜಿಸಿತು ಗಡ ಹೆ
ಕ್ಕಳದ ಹೇರಾಳದಲಿ ಹೆಣಗಿದೆ ಬಾಲವೃದ್ಧರಲಿ
ಬಲುಹು ನಿನಗುಂಟಾದಡಿತ್ತಲು
ಫಲುಗುಣನ ಕೂಡಾಡು ನಡೆ ಮರು
ವಲಗೆಯನು ಭೀಮನಲಿ ಬೇಡಿನ್ನೆಂದನಾ ಶಲ್ಯ ॥44॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಕಬ್ಬಿನ ತೋಟದಲ್ಲಿ ನರಿಯು ಕೋಪಗೊಂಡು ಹುಲಿಯ ಹಾಗೆ ಗರ್ಜಿಸಿತಲ್ಲವೆ! ನೀನು ಈವರೆಗೆ ಗರ್ವಾತಿಶಯದಿಂದ ಬಾಲಕರ ಮತ್ತು ವೃದ್ಧರ ಜೊತೆಯಲ್ಲಿ ಬಹುವಾಗಿ ಹೆಣಗಾಡಿದೆ. ನಿನ್ನಲ್ಲಿ ಪೌರುಷವಿದ್ದುದಾದರೆ ಈ ಕಡೆ ಅರ್ಜುನನ ಜೊತೆ ಮುಂದಿನ ಆಟವನ್ನು ಆಡುವೆಯಂತೆ, ನಡೆ. ಅಥವಾ ಮುಂದಿನ ಆಟವನ್ನು ಭೀಮನಲ್ಲಿ ಬೇಡುವೆಯಂತೆ." ಎಂದು ಶಲ್ಯನು ಹೇಳಿದನು.
ಮೂಲ ...{Loading}...
ಮುಳಿದು ಕಬ್ಬಿನ ತೋಟದಲಿ ನರಿ
ಹುಲಿಯವೋಲ್ ಗರ್ಜಿಸಿತು ಗಡ ಹೆ
ಕ್ಕಳದ ಹೇರಾಳದಲಿ ಹೆಣಗಿದೆ ಬಾಲವೃದ್ಧರಲಿ
ಬಲುಹು ನಿನಗುಂಟಾದಡಿತ್ತಲು
ಫಲುಗುಣನ ಕೂಡಾಡು ನಡೆ ಮರು
ವಲಗೆಯನು ಭೀಮನಲಿ ಬೇಡಿನ್ನೆಂದನಾ ಶಲ್ಯ ॥44॥
೦೪೫ ಎನಲು ಕಿಡಿಕಿಡಿವೋಗಿ ...{Loading}...
ಎನಲು ಕಿಡಿಕಿಡಿವೋಗಿ ಭೀಮಾ
ರ್ಜುನರ ತೋರಾದರೆ ಎನುತ ನಿಜ
ಧನುವ ಮಿಡಿದಬ್ಬರಿಸಲಿತ್ತಲು ರಾಯದಳದೊಳಗೆ
ಅನಿಲಜನ ಕಾಲಾಟ ಕದಳೀ
ವನದ ಕಾಡಾನೆಯ ಮೃಗಾಳಿಯ
ವನಚರರ ದೆಖ್ಖಾಳದಬ್ಬರ ಕಾಣಲಾಯ್ತೆಂದ ॥45|
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಶಲ್ಯನು ಹಾಗೆ ಹೇಳಲು, ಕರ್ಣನು ಕೆರಳಿ ‘ಹಾಗಾದರೆ ಭೀಮಾರ್ಜುನರನ್ನು ತೋರಿಸು’ ಎನ್ನುತ್ತ ತನ್ನ ಧನುಸ್ಸನ್ನು ಠಂಕಾರಮಾಡಿ ಅಬ್ಬರಿಸಲು, ಇತ್ತ ದುರ್ಯೋಧನನ ಸೈನ್ಯದೊಳಗೆ ಭೀಮನ ಕಾಲಾಟವು ಬಾಳೆಯ ತೋಟದಕ್ಕೆ ನುಗ್ಗಿದ ಕಾಡಾನೆಯಂತೆ, ವನಚರರ ಬೇಟೆಯ ಗೊಂದಲದ ಅಬ್ಬರದಂತೆ ಕಾಣಿಸಿತು” ಎಂದು ಸಂಜಯನು ಹೇಳಿದನು.
ಪದಾರ್ಥ (ಕ.ಗ.ಪ)
ದೆಖ್ಖಾಳ-ಕೋಲಾಹಲ, ಗೊಂದಲ
ಮೂಲ ...{Loading}...
ಎನಲು ಕಿಡಿಕಿಡಿವೋಗಿ ಭೀಮಾ
ರ್ಜುನರ ತೋರಾದರೆ ಎನುತ ನಿಜ
ಧನುವ ಮಿಡಿದಬ್ಬರಿಸಲಿತ್ತಲು ರಾಯದಳದೊಳಗೆ
ಅನಿಲಜನ ಕಾಲಾಟ ಕದಳೀ
ವನದ ಕಾಡಾನೆಯ ಮೃಗಾಳಿಯ
ವನಚರರ ದೆಖ್ಖಾಳದಬ್ಬರ ಕಾಣಲಾಯ್ತೆಂದ ॥45|
೦೪೬ ಮಣ್ಡಳಿಸಿ ಬಲಜಲಧಿ ...{Loading}...
ಮಂಡಳಿಸಿ ಬಲಜಲಧಿ ಸುಳಿ ಸುಳಿ
ಗೊಂಡು ಸಿಕ್ಕಿದ ಕೌರವೇಂದ್ರನ
ಕೊಂಡು ಹಿಂಗುವ ಜೋಕೆ ನೂಕದೆ ಡಗೆಯ ಡಾವರದ
ಗಂಡುಗುಂದಿನ ಬೀತ ಬಿರುದಿನ
ತೊಂಡುಗೇಡಿನ ಜಯದ ಜಾರಿನ
ಖಂಡ ಶೌರ್ಯದ ಧೀರರಿದ್ದುದು ನೃಪನ ಬಳಸಿನಲಿ ॥46॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶತ್ರುಗಳ ಸೈನ್ಯಸಮುದ್ರವು ಒಂದುಗೂಡಿ ಸುಳಿಸುಳಿಗೊಂಡು ಅದರಲ್ಲಿ ಸಿಕ್ಕಿದ ಕೌರವೇಂದ್ರನನ್ನು ಉಳಿಸಿಕೊಂಡು ಹಿಂದಿರುಗುವ ಎಚ್ಚರ ಕೆಲಸಕ್ಕೆ ಬಾರದೆ ದುರ್ಯೋಧನನ ಸುತ್ತಲೂ ಭಯದ ತೀವ್ರತೆಯ, ಕ್ಷೀಣವಾದ ಪರಾಕ್ರಮದ, ಕಳೆದುಹೋದ ಬಿರುದಿನ, ಸೊಕ್ಕು ಮುರಿದ ಜಯವು ಜಾರಿಹೋದ, ಕಡಿದುಹೋದ ಶೌರ್ಯದ ಧೀರರು ಇದ್ದರು.
ಪದಾರ್ಥ (ಕ.ಗ.ಪ)
ಡಗೆಯ ಡಾವರ-ಭಯದ ತೀವ್ರತೆ, ಗಂಡುಗುಂದು-ಪರಾಕ್ರಮ ನಾಶವಾಗು, ತೊಂಡುಗೇಡು-ದುಷ್ಟತನ ಖಂಡಶೌರ್ಯ- ಕಡಿದುಹೋದ ಶೌರ್ಯ,
ಮೂಲ ...{Loading}...
ಮಂಡಳಿಸಿ ಬಲಜಲಧಿ ಸುಳಿ ಸುಳಿ
ಗೊಂಡು ಸಿಕ್ಕಿದ ಕೌರವೇಂದ್ರನ
ಕೊಂಡು ಹಿಂಗುವ ಜೋಕೆ ನೂಕದೆ ಡಗೆಯ ಡಾವರದ
ಗಂಡುಗುಂದಿನ ಬೀತ ಬಿರುದಿನ
ತೊಂಡುಗೇಡಿನ ಜಯದ ಜಾರಿನ
ಖಂಡ ಶೌರ್ಯದ ಧೀರರಿದ್ದುದು ನೃಪನ ಬಳಸಿನಲಿ ॥46॥
೦೪೭ ವಾಯದಲಿ ಕೌರವನ ...{Loading}...
ವಾಯದಲಿ ಕೌರವನ ವಿಜಯ
ಶ್ರೀಯ ಸೆರೆವೋಯಿತ್ತು ಶಿವ ಶಿವ
ಕಾಯಲಾಪವರಿಲ್ಲಲಾ ಗುರುಸೂನು ಮೊದಲಾದ
ನಾಯಕರು ದುಷ್ಕೀರ್ತಿ ನಾರಿಯ
ನಾಯಕರು ಸುಪಲಾಯನದ ನಿ
ರ್ಣಾಯಕರು ಮಝ ಪೂತುರೆಂದುದು ನಿಖಿಳ ಪರಿವಾರ ॥47॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೌರವನ ವಿಜಯಶ್ರೀ ವ್ಯರ್ಥವಾಗಿ ಸೆರೆಯಾಯಿತು. ಶಿವ ಶಿವ! ಕಾಪಾಡಲು ಸಮರ್ಥರಾದವರು ಇಲ್ಲವಲ್ಲಾ! ಅಶ್ವತ್ಥಾಮ ಮೊದಲಾದ ನಾಯಕರು ಅಪಕೀರ್ತಿ ಎಂಬ ನಾರಿಯ ನಾಯಕರು! ಪಲಾಯನದ ನಿರ್ಣಾಯಕರು! ಮಝ! ಪೂತುರೆ! ಎಂದು ಸಮಸ್ತ ಪರಿವಾರವು ಹೇಳಿತು.
ಪದಾರ್ಥ (ಕ.ಗ.ಪ)
ವಾಯ-ವ್ಯರ್ಥ
ಮೂಲ ...{Loading}...
ವಾಯದಲಿ ಕೌರವನ ವಿಜಯ
ಶ್ರೀಯ ಸೆರೆವೋಯಿತ್ತು ಶಿವ ಶಿವ
ಕಾಯಲಾಪವರಿಲ್ಲಲಾ ಗುರುಸೂನು ಮೊದಲಾದ
ನಾಯಕರು ದುಷ್ಕೀರ್ತಿ ನಾರಿಯ
ನಾಯಕರು ಸುಪಲಾಯನದ ನಿ
ರ್ಣಾಯಕರು ಮಝ ಪೂತುರೆಂದುದು ನಿಖಿಳ ಪರಿವಾರ ॥47॥
೦೪೮ ಕೇಳಿದನು ಕಳವಳವ ...{Loading}...
ಕೇಳಿದನು ಕಳವಳವ ಕಿವಿಗೊ
ಟ್ಟಾಲಿಸಿದನೆಲೆ ಕರ್ಣ ಕರ್ಣ ಛ
ಡಾಳ ರವವೇನದು ಸುಯೋಧನ ಸೈನ್ಯ ಮಧ್ಯದಲಿ
ಖೂಳ ಬಿಡಿಸಾ ಭೀಮಸೇನನ
ತೋಳುವಲೆಯಲಿ ಸಿಕ್ಕಿದನು ಭೂ
ಪಾಲನಕಟಕಟೆನುತ ತೇಜಿಯ ತಿರುಹಿದನು ಶಲ್ಯ ॥48॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶಲ್ಯನು ಆ ಕಳವಳವನ್ನು ಕೇಳಿದನು, ಕಿವಿಗೊಟ್ಟು ಆಲಿಸಿದನು. ‘ಎಲೆ ಕರ್ಣ, ಕರ್ಣಕಠೋರವಾದ ಆ ಸದ್ದು ಯಾವುದು? ಸೈನ್ಯದ ಮಧ್ಯದಲ್ಲಿ ದುರ್ಯೋಧನನು ಭೀಮಸೇನನ ತೋಳುಗಳ ಬಲೆಯಲ್ಲಿ ಸಿಕ್ಕಿದನು! ಅಯ್ಯೋ! ನೀಚ! ಅಯ್ಯೋ! ಅವನನ್ನು ಬಿಡಿಸು’ ಎನ್ನತ್ತ ಶಲ್ಯನು ಕುದುರೆಯನ್ನು ತಿರುಗಿಸಿದನು.
ಪದಾರ್ಥ (ಕ.ಗ.ಪ)
ಕರ್ಣ ಛಡಾಳ-ಕರ್ಣಕಠೋರ
ಮೂಲ ...{Loading}...
ಕೇಳಿದನು ಕಳವಳವ ಕಿವಿಗೊ
ಟ್ಟಾಲಿಸಿದನೆಲೆ ಕರ್ಣ ಕರ್ಣ ಛ
ಡಾಳ ರವವೇನದು ಸುಯೋಧನ ಸೈನ್ಯ ಮಧ್ಯದಲಿ
ಖೂಳ ಬಿಡಿಸಾ ಭೀಮಸೇನನ
ತೋಳುವಲೆಯಲಿ ಸಿಕ್ಕಿದನು ಭೂ
ಪಾಲನಕಟಕಟೆನುತ ತೇಜಿಯ ತಿರುಹಿದನು ಶಲ್ಯ ॥48॥