೧೨

೦೦೦ ಸೂ ರಾಯದಳದುಳಕಾರ ...{Loading}...

ಸೂ. ರಾಯದಳದುಳಕಾರ ಕೌರವ
ರಾಯಸೇನಾಸೂರೆಕಾರನ
ಜೇಯನೋ ಕಲಿಭೀಮ ಗೆಲಿದನು ಭಾನುನಂದನನ

೦೦೧ ಏನ ಹೇಳುವೆನರಸ ...{Loading}...

ಏನ ಹೇಳುವೆನರಸ ಪಾಂಡವ
ಸೇನೆಗಾದ ವಿಪತ್ತನರಸನ
ಹಾನಿಯನು ನಿನ್ನವರ ಸುಮ್ಮಾನದ ಸಘಾಡಿಕೆಯ
ಭಾನುಸುತನೋ ಕೌರವನ ಮದ
ದಾನೆಯೋ ಕುರುಸೈನ್ಯ ನಳಿನೀ
ಭಾನು ಮಝ ಭಾಪೆಂದು ಹೊಗಳಿತು ಕೂಡೆ ಪರಿವಾರ ॥1॥

೦೦೨ ಇವರ ಹರುಷದ ...{Loading}...

ಇವರ ಹರುಷದ ನಗೆಯನಾ ಬಲ
ದವರ ಮೋರೆಯ ಹೊಗೆಯನೀ ಬಲ
ದವರ ಭುಜದುರೆವೊಯ್ಲನಾ ಬಲದವರ ಬಿಸುಸುಯ್ಲ
ಇವರೊಸಗೆ ಕೈಗುಡಿಯನಾ ಬಲ
ದವರ ಗೆಲುವಿನ ಗಡಿಯ ನೀ ಚಿ
ತ್ತವಿಸಿದೈ ಧೃತರಾಷ್ಟ್ರ ಎಂದನು ಸಂಜಯನು ನಗುತ ॥2॥

೦೦೩ ಅಳುವವರ ನಗಿಸುವುದು ...{Loading}...

ಅಳುವವರ ನಗಿಸುವುದು ನಗುವರ
ನಳಿಸುವುದು ಗೆಲಿದವರ ಸೋಲಿಸಿ
ಗೆಲಿಸುವುದು ಸೋತವರನೀ ವಿಪರೀತಗತಿ ವಿಧಿಗೆ
ಅಳಲದಿರು ಸುಮ್ಮಾನದಲಿ ವೆ
ಗ್ಗಳಿಸದಿರು ನಿನ್ನವರು ನಿಮಿಷದೊ
ಳಳಲುದೊರೆಯಲಿ ಮುಳುಗುವಂದವನಿನ್ನು ಕೇಳ್ ಎಂದ ॥3॥

೦೦೪ ಲಳಿಯ ಲಹರಿಯಲಬ್ಬರದ ...{Loading}...

ಲಳಿಯ ಲಹರಿಯಲಬ್ಬರದ ಕಳ
ಕಳದ ವಾದ್ಯದ ಲಗ್ಗೆಯಲಿ ಪರ
ಬಲವ ಹೊಕ್ಕನು ಮತ್ತೆ ಮೂದಲಿಸುತ್ತ ಮಹಿಪತಿಯ
ಎಲೆಲೆ ರಾಯನ ರಣಕೆ ಮಾರಿದ
ತಲೆಯ ಕದ್ದಿರೆ ಕುನ್ನಿಗಳಿರೆನು
ತೊಳಗೊಳಗೆ ಬಿಡೆ ಜರೆದು ಜೋಡಿಸಿ ನೂಕಿತರಿಸೇನೆ ॥4॥

೦೦೫ ಅಕಟ ರಾಯನ ...{Loading}...

ಅಕಟ ರಾಯನ ಹರಿಬದಲಿ ಸೇ
ವಕರಿಗಾದುದು ಸೂರೆ ವೃಂದಾ
ರಕ ವಧೂವರ್ಗದಲಿ ಚಾಳಿಸಬೇಡ ವಿಗ್ರಹಕೆ
ವಿಕಳಬಲನಿವನೇನು ಭಾಳಾಂ
ಬಕನೊ ಬಲಿಬಂಧಕನೊ ಸುರಪಾ
ಲಕನೋ ಫಡಫಡ ಎನುತ ಕವಿದುದು ಕರ್ಣನಿದಿರಿನಲಿ ॥5॥

೦೦೬ ಅರಸ ಕೇಳಾಕ್ಷಣಕೆ ...{Loading}...

ಅರಸ ಕೇಳ್ ಆ ಕ್ಷಣಕೆ ರುಧಿರದ
ಬಿರುವೊನಲ ಬಲುಗೆಸರ ನೆಣ-ವಸೆಯ್
ಅರಿಲ ನೆಲದಲಿ ಧೂಳಿಯ್ ಎದ್ದುದು ದಳದ ಪದ-ಹತಿಗೆ
ಸರ-ಕಟಿಸಿ ರಿಪು ಸರ್ವದಳ ಸಂ
ವರಿಸಿ ನೂಕಿತು ಕಲ್ಪ-ಮೇಘದ
ಸರಿವಳೆಗೆ ಸಿಗುರೆದ್ದು ಕೊಬ್ಬಿದ ಕಡಲಿನ್ ಅಂದದಲಿ ॥6॥

೦೦೭ ನೊನ್ದನೇ ಧರ್ಮಜನು ...{Loading}...

ನೊಂದನೇ ಧರ್ಮಜನು ಭಂಗಕೆ
ತಂದನೇ ರಾಧೇಯನಕಟಕ
ಟಿಂದು ಮಡಿದರೆ ಭೀಮಪಾರ್ಥರು ಭೀತಿಯೇಕಿದಕೆ
ನೊಂದನೀ ಪರಿ ತನ್ನ ಕಂಗಳ
ಮುಂದೆ ನರಪತಿ ಪಾರ್ಥನಿನ್ನೇ
ನೆಂದು ಮುನಿವನೊ ಶಿವಶಿವಾ ಎಂದಳಲಿದನು ಭೀಮ ॥7॥

೦೦೮ ಅರಸ ಮುರಿವಡೆದಲ್ಲಿ ...{Loading}...

ಅರಸ ಮುರಿವಡೆದಲ್ಲಿ ದಿಕ್ಕನೆ
ಬೆರಸಿದನೆ ಬವರವನೆನುತ ನ
ಮ್ಮರಸಿ ನಗಳೇ ಭಂಡವೀರನ ಮಾತ ತೆಗೆಯೆನುತ
ಅರಸ ತಾನಿನ್ನಾವ ಪರಿ ಹೇ
ವರಿಸುವನೊ ತಾ ಮುನ್ನ ಕರ್ಣನ
ಶರಹತಿಯಲೇಕಳಿದುದಿಲ್ಲಾ ಎನುತ ಚಿಂತಿಸಿದ ॥8॥

೦೦೯ ನರನ ಖಾತಿಗೆ ...{Loading}...

ನರನ ಖಾತಿಗೆ ದ್ರೌಪದಿಯ ತೂ
ತ್ತಿರುಗಳುಪಹಾಸ್ಯಕ್ಕೆ ನೃಪತಿಯ
ಮರಣ ಸಾದೃಶ್ಯ ಪ್ರಹಾರವ್ಯಥೆಯ ಕಾಣಿಕೆಗೆ
ಅರರೆ ಭಾಜನವಾದೆನೈ ಹರ
ಹರ ಮಹಾದೇವಾ ಎನುತ ತುದಿ
ವೆರಳಲಾಲಿಯ ನೀರ ಮಿಡಿದಳಲಿದನು ಕಲಿಭೀಮ ॥9॥

೦೧೦ ಅರಸ ಕೇಳೈ ...{Loading}...

ಅರಸ ಕೇಳೈ ಶೋಕರಸಸಾ
ಗರದೊಳದ್ದುದೊ ವಡಬನೆನೆ ಕ
ಣ್ಣರಳಿದವು ಕುಡಿಮೀಸೆ ಕುಣಿದವು ಸುಯ್ಲ ಹೊಗೆ ಮಸಗೆ
ಕರ ನಡುಗೆ ಮೈ ಬಲಿಯೆ ಹುಬ್ಬುಗ
ಳುರೆ ಬಿಗಿಯೆ ಕಂಗಳಲಿ ಕೆಂಗಿಡಿ
ಸುರಿಯೆ ವೀರಾವೇಶದಲಿ ಮಸಗಿದನು ಕಲಿಭೀಮ ॥10॥

೦೧೧ ಧರಣಿಪನ ಸಂರಕ್ಷೆಗೈಸಾ ...{Loading}...

ಧರಣಿಪನ ಸಂರಕ್ಷೆಗೈಸಾ
ವಿರ ರಥವನಿಪ್ಪತ್ತು ಸಾವಿರ
ತುರಗವನು ಹದಿನಾರು ಸಾವಿರ ಮತ್ತಗಜಘಟೆಯ
ದೊರೆಗಳನು ಸಹದೇವ ಸಾತ್ಯಕಿ
ವರನಕುಳ ಸುತಸೋಮ ಪಾಂಚಾ
ಲರ ಕುಮಾರಾನೀಕವನು ಕರೆಕರೆದು ನೇಮಿಸಿದ ॥11॥

೦೧೨ ವೈರಿ ಕರ್ಣನ ...{Loading}...

ವೈರಿ ಕರ್ಣನ ಕಾಂತೆಯರ ದೃಗು
ವಾರಿ ಧಾರೆಯಲೆನ್ನ ಭಾರಿಯ
ಭೂರಿ ಕೋಪಾನಳನ ಲಳಿಯನು ತಗ್ಗಿಸುವೆನೆನುತ
ಧಾರುಣೀಪತಿಗೆರಗಿ ನಿಜ ಪರಿ
ವಾರವನು ಸುಯ್ದಾನವರಸೆನು
ತಾರುಭಟೆಯಲಿ ಭೀಮ ಮೊಳಗಿದನಹಿತ ಮೋಹರಕೆ ॥12॥

೦೧೩ ಬೀಳ ಹೊಯ್ ...{Loading}...

ಬೀಳ ಹೊಯ್ ಹೊಯ್ ಬಿಡೆಯದಲಿ ಹೊ
ಕ್ಕಾಳುತೆಗೆಯಲಿ ಧರ್ಮಪುತ್ರನ
ಮೇಲುನೋಟದಲಿರಲಿ ನೋಡಲಿ ನಮ್ಮ ನಾಟಕವ
ಆಳ ನಿಲಿಸೋ ನಿಲಿಸೆನುತ ಸಂ
ಸ್ಥಾಳಿತೋದ್ಧತ ಚಪಳ ಚಾಪ ಕ
ರಾಳ ಮೌರ್ವೀನಾದ ಭೀಷಣನಾದನಾ ಭೀಮ ॥13॥

೦೧೪ ಪವನಸುತನಿಙ್ಗಿತವ ಮನದಂ ...{Loading}...

ಪವನಸುತನಿಂಗಿತವ ಮನದಂ
ಘವಣೆಯನು ಮಾದ್ರೇಶ ಕಂಡನು
ರವಿಸುತನ ನೋಡಿದನು ಮುಖದಲಿ ಮುರಿದು ತೋರಿದನು
ಇವನ ಬಲ್ಲೈ ಭೀಮನೋ ಭೈ
ರವನೋ ಭರ್ಗನೊ ಮನುಜ ಕಂಠೀ
ರವನೊ ಕಾಲಾಂತಕನೊ ಕೋಳಾಹಳವಿದೇನೆಂದ ॥14॥

೦೧೫ ಉರಿಯ ಚೂಣಿಯಲುಸುರ ...{Loading}...

ಉರಿಯ ಚೂಣಿಯಲುಸುರ ಹೊಗೆಯು
ಬ್ಬರಿಸುತದೆ ಕೆಂಪೇರಿದಕ್ಷಿಯ
ಲೆರಡು ಕೋಡಿಯಲೊಗುತಲದೆ ಕಿಡಿಗಳ ತುಷಾರಚಯ
ಸ್ಫುರದಹಂಕಾರ ಪ್ರತಾಪ
ಜ್ವರದಿ ಮೈ ಕಾಹೇರುತದೆ ನಿ
ಬ್ಬರದ ಬರವಿಂದೀತನದು ಕಲಿಕರ್ಣ ನೋಡೆಂದ ॥15॥

೦೧೬ ಕಾಯಲಳವೇ ಕರ್ಣ ...{Loading}...

ಕಾಯಲಳವೇ ಕರ್ಣ ಬರಿಯ ನ
ವಾಯಿಯಲಿ ಫಲವಿಲ್ಲ ದೇಹದ
ಬೀಯಕಿದು ಹೊತ್ತಲ್ಲ ಸಾಧಕವಿದಕೆ ಬೇರುಂಟು
ಸಾಯಲಡಸಿದ ಬಡತನಕ್ಕೆ ಪ
ಲಾಯನವೆ ನಿಕ್ಷೇಪವಿದೆ ಬಯ
ಲಾಯಸವು ನಮಗೇತಕೆಂದನು ಮಾದ್ರಪತಿ ನಗುತ ॥16॥

೦೧೭ ನೀ ಮರುಳಲಾ ...{Loading}...

ನೀ ಮರುಳಲಾ ಶಲ್ಯ ಫಡ ಸು
ತ್ರಾಮನೇ ಸಮವರ್ತಿಯೇ ಜಿತ
ಕಾಮನೇ ಬಡ ಭೀಮನುರುಬೆಗೆ ಖೇಡನಾದೆಯಲ
ತಾಮಸನ ತಡೆಗಡಿದು ಭೂತ
ಸ್ತೋಮಕುಣಬಡಿಸುವೆನು ಜಯ ಸಂ
ಗ್ರಾಮ ರುದ್ರನು ಕರ್ಣನಾರೆಂದರಿಯೆ ನೀನೆಂದ ॥17॥

೦೧೮ ಅಕಟ ಬಲುಗೈಯಹೆ ...{Loading}...

ಅಕಟ ಬಲುಗೈಯಹೆ ಕಣಾ ಸಾ
ಧಕನು ನಾನದಕೆನ್ನೆನಿಂದಿನ
ವಿಕಟ ಕೋಪಾಟೋಪ ಭೀಮನ ದಂಡಿಯದು ಬೇರೆ
ತ್ರಿಕಟುಕದ ಕಜ್ಜಾಯವಿದು ಬಾ
ಲಕರ ಸೊಗಸೇ ಕರ್ಣ ಹೇಳ್ ಕೌ
ತುಕದ ಮಾತೇ ನಿನ್ನ ಮೇಲಾಣೆಂದನಾ ಶಲ್ಯ ॥18॥

೦೧೯ ನುಡಿನುಡಿಗೆ ಭಙ್ಗಿಸುವೆ ...{Loading}...

ನುಡಿನುಡಿಗೆ ಭಂಗಿಸುವೆ ನೀ ನಿ
ನ್ನಡಿಗಡಿಗೆ ತಲೆಯೊತ್ತುವೆನೊ ನಿ
ನ್ನೊಡನೆ ಬಂದರಿಯೊಡನೆ ತಲೆಯೊತ್ತುವೆನೊ ತವಕದಲಿ
ಪಡಿಮುಖದೊಳೌಕುವ ವಿರೋಧಿಯ
ಕಡುಹ ತಗ್ಗಿಸಿ ನಿನ್ನ ಮೆಚ್ಚಿಸಿ
ಕೊಡುವೆನಿನ್ನರೆಗಳಿಗೆ ಸೈರಿಸು ಮಾದ್ರಪತಿಯೆಂದ ॥19॥

೦೨೦ ಇತ್ತಲೀ ಮಾತಿಙ್ಗೆ ...{Loading}...

ಇತ್ತಲೀ ಮಾತಿಂಗೆ ಮುನ್ನ ವಿ
ಯತ್ತಳವನಳ್ಳಿರಿವ ಸಿಂಧದ
ಸುತ್ತು ಝಲ್ಲರಿ ಚೌರಿಗಳ ಫಲ್ಲಣೆಯ ಘಂಟೆಗಳ
ಹೊತ್ತ ಕೋಪದ ಹೊಗೆವ ಮುಖದೌ
ಡೊತ್ತುವಧರದ ವೈರಿ ಸೇನೆಯ
ಕುತ್ತಿ ತೇಗುವ ಮನದ ಮಾರುತಿ ಮೊಳಗಿದನು ಮುಂದೆ ॥20॥

೦೨೧ ಎಲೆಲೆ ಭೀಮನು ...{Loading}...

ಎಲೆಲೆ ಭೀಮನು ಶಿವಶಿವಾ ದಳ
ದುಳವ ಹಾಯ್ದನೊ ದಿಟ್ಟರಾವೆಡೆ
ನಿಲಿಸಲಾಪವರಿಲ್ಲಲಾ ಕುರುರಾಯನಾನೆಗಳು
ಕಳಕಳದ ಕಾಲಾಟ ರಾಯನ
ದಳಕೆ ದುರ್ಲಭವೆನುತ ಮಿಗೆ ಮುಂ
ಕೊಳಿಸಿ ಭೀಮನ ತುಡುಕಿದರು ರವಿಸುತನ ಪರಿವಾರ ॥21॥

೦೨೨ ಕವಿದವಾನೆಗಳಟ್ಟಿ ರಾವ್ತರು ...{Loading}...

ಕವಿದವಾನೆಗಳಟ್ಟಿ ರಾವ್ತರು
ತಿವಿದರಂಬಿನ ಸರಿಯ ಸಾರದೊ
ಳವಘಟಿಸಿದರು ರಥಿಕರುರವಣಿಸಿದರು ಸಬಳಿಗರು
ಸವಗ ಖಂಡಿಸಲೊದಗಿದರು ಬಿ
ಲ್ಲವರು ಕಟ್ಟಿರಿಕಾರರಾತನ
ಜವಗೆಡಿಸಿದರು ಕಡಲುವಡಬನ ತಡೆದು ನಿಲುವಂತೆ ॥22॥

೦೨೩ ನುಸಿಗಳಳವಿಯ ಥಟ್ಟಣೆಯ ...{Loading}...

ನುಸಿಗಳಳವಿಯ ಥಟ್ಟಣೆಯ ತೋ
ರಿಸಿದರೋ ಬಲುಹಾಯ್ತು ರಾಯನ
ಘಸಣಿಗಕಟ ವಿಶೋಕ ನೋಡೈ ಪೂತು ವಿಧಿಯೆನುತ
ಮಸಗಿ ಮೊಗೆದನು ಹೊಗುವ ಸೇನಾ
ಪ್ರಸರವನು ಕುಡಿತೆಯಲಿ ಚೆಲ್ಲಿದ
ನಸಮಬಲನಡಹಾಯ್ಸಿ ಕೊಂಡನು ನೆಲನನಳವಿಯಲಿ ॥23॥

೦೨೪ ಎಲವೊ ಸೂತನ ...{Loading}...

ಎಲವೊ ಸೂತನ ಮಗನೆ ರಾಯನ
ನಳಲಿಸಿದೆಲಾ ನಿನ್ನ ರಕುತವ
ತುಳುಕುವೆನು ಹಿಂದಿಕ್ಕಿಕೊಂಬನ ತೋರು ತೋರೆನುತ
ಬಲುಸರಿಯ ನಾರಾಚದಲಿ ಕ
ತ್ತಲಿಸೆ ದಸೆ ಕೈಮಾಡಿದನು ಕೈ
ಚಳಕದೆಸುಗೆಯ ಕೇಣದಳತೆಯನರಿಯೆ ನಾನೆಂದ ॥24॥

೦೨೫ ಏನ ಹೇಳುವೆನಿತ್ತಲೀ ...{Loading}...

ಏನ ಹೇಳುವೆನಿತ್ತಲೀ ರವಿ
ಸೂನುವೇ ದುರ್ಬಲನೆ ಭೀಮನ
ನೂನ ಶರಸಂಘಾತವನು ಖಂಡಿಸಿದನಾಕ್ಷಣಕೆ
ದೀನನೇ ಶರನಿಕರದಲಿ ಪವ
ಮಾನಜನೊ ಪಾತಾಳಿಯೋ ಕಲಿ
ವೈನತೇಯನೋ ಕರ್ಣನೋ ನಾವರಿಯೆವಿದನೆಂದ ॥25॥

೦೨೬ ಅರಸ ಕೇಳಾಶ್ಚರಿಯವನು ...{Loading}...

ಅರಸ ಕೇಳಾಶ್ಚರಿಯವನು ಟೆ
ಬ್ಬರಿಸುವನೆ ಕಲಿಭೀಮನುಬ್ಬಟೆ
ಯರಿಗಳಾಹವ ಧೀರರಾದರೆ ಧಾತುಗೆಡುವವನೆ
ಶರ ಧನುವ ಹಾಯ್ಕಿದನು ಧೊಪ್ಪನೆ
ಧರೆಗೆ ಧುಮ್ಮಿಕ್ಕಿದನು ಖಡುಗವ
ತಿರುಹಿ ಬೆರಸಿದನಳವಿಯಲಿ ಕುರುಸೇನೆ ಕಳವಳಿಸೆ ॥26॥

೦೨೭ ಹೊಡೆದು ತಲೆಯನು ...{Loading}...

ಹೊಡೆದು ತಲೆಯನು ಹಗೆಯ ರಕುತವ
ಕುಡಿವೆನಲ್ಲದೊಡವನಿಪಾಲನ
ಕೆಡೆನುಡಿದ ನಾಲಗೆಯ ಕೀಳುವೆನೆನುತ ಕೋಪದಲಿ
ಸಿಡಿವ ಕಿಡಿಗಳ ಕೋಪಶಿಖಿಯು
ಗ್ಗಡದ ಮಾರುತಿ ಹೊಯ್ದು ಕರ್ಣನ
ಕೆಡಹಿದನು ಮುರಿಯೊದೆದನೆದೆಯನು ಹಾಯ್ದು ಮುಂದಲೆಗೆ ॥27॥

೦೨೮ ಬಾಯ ಬಿಟ್ಟುದು ...{Loading}...

ಬಾಯ ಬಿಟ್ಟುದು ಸೇನೆ ಕೌರವ
ರಾಯನಾವೆಡೆ ದಳಕೆ ಬಲುಗೈ
ನಾಯಕರು ಕೃಪ ಗುರುಸುತರು ಕೈಗೊಟ್ಟರೇ ಹಗೆಗೆ
ವಾಯುಜನ ಕೈದೊಳಸಿನಲಿ ಕುರು
ರಾಯ ರಾಜ್ಯಶ್ರೀಯ ಮುಂದಲೆ
ಹೋಯಿತೋ ಹಾ ಎನುತ ಮರುಗಿತು ಕೂಡೆ ಕುರುಸೇನೆ ॥28॥

೦೨೯ ಥಟ್ಟುಗೆಡಹಿದ ಕರ್ಣನನು ...{Loading}...

ಥಟ್ಟುಗೆಡಹಿದ ಕರ್ಣನನು ಕೈ
ಮುಟ್ಟದಿರು ಹೆರಸಾರು ಪಾರ್ಥನು
ಕೊಟ್ಟ ಭಾಷೆಯ ಮರೆದೆಲಾ ಕೈತಪ್ಪ ಮಾಡದಿರು
ಬಿಟ್ಟು ಹಿಂಗೆಲೆ ಭೀಮ ಭೀತಿಯ
ಬಿಟ್ಟು ಬೆರಸಿದೆ ಸಾಕು ಹರಿಬಕೆ
ಮುಟ್ಟಿಸಿದ ಗೆಲವಾಯ್ತು ಮರಳಿನ್ನೆಂದನಾ ಶಲ್ಯ ॥29॥

೦೩೦ ದುರುಳತನದಿನ್ದಣ್ಣ ದೇವನ ...{Loading}...

ದುರುಳತನದಿಂದಣ್ಣ ದೇವನ
ಹುರುಳುಗೆಡೆ ನುಡಿದನು ವಿರೋಧಿಯ
ಶರಹತಿಗೆ ಬೆಂಡಾಗನಿವನ ದುರುಕ್ತಿ ಶರಹತಿಗೆ
ಅರಸ ಬಳಲಿದನೇನ ಮಾಡುವೆ
ದುರುಳ ನುಡಿದನ ನಾಲಗೆಯ ನಿಡು
ಸೆರೆಯ ಬಿಡಿಸುವೆ ಮಾವ ಸೈರಿಸಿಯೆಂದನಾ ಭೀಮ ॥30॥

೦೩೧ ಸಾಕು ಹೆರತೆಗೆ ...{Loading}...

ಸಾಕು ಹೆರತೆಗೆ ಘಾಯವಡೆದವಿ
ವೇಕಿ ಮೈ ಮರೆದಿದ್ದ ಹೊತ್ತಿದು
ನೀ ಕುಠಾರನಲಾ ಕಿರೀಟಿಯ ಭಾಷಿತದ್ರುಮಕೆ
ಲೋಕಮಾನ್ಯನು ಕರ್ಣ ಕುರುಬಲ
ದಾಕೆವಾಳನು ಭಂಗವಡೆದುದೆ
ಸಾಕು ನೀ ಸಾರೆಂದು ಭೀಮನ ನೂಕಿದನು ಶಲ್ಯ ॥31॥

೦೩೨ ರಥಕೆ ಮರಳಿದನಾತನೀತನ ...{Loading}...

ರಥಕೆ ಮರಳಿದನಾತನೀತನ
ವ್ಯಥೆಯನೇನೆಂಬೆನು ಸುಯೋಧನ
ರಥಿಗಳುಬ್ಬಟೆ ಗರ್ಭವಿಕ್ಕಿತು ನಿಮಿಷಮಾತ್ರದಲಿ
ರಥದೊಳಗೆ ಮಾದ್ರೇಶನೀ ಸಮ
ರಥನ ಸಂತೈಸಿದನು ಕವಳ
ಪ್ರಥಿತ ಮಂತ್ರೌಷಧಿಗಳಲಿ ಹದುಳಿಸಿದನಾ ಕರ್ಣ ॥32॥

೦೩೩ ಆರಿತದು ಬೊಬ್ಬೆಯಲಿ ...{Loading}...

ಆರಿತದು ಬೊಬ್ಬೆಯಲಿ ದುಗುಡದ
ಭಾರದಲಿ ತಲೆಗುತ್ತಿತಿವರು
ಬ್ಬಾರದಲಿ ಭುಲ್ಲವಿಸಿತವರು ವಿಘಾತಿಯಿಂದಿವರು
ಪೂರವಿಸಿದುದು ಪುಳಕದಲಿ ದೃಗು
ವಾರಿ ಪೂರದಲಿವರಖಿಳ ಪರಿ
ವಾರವಿದ್ದುದು ಕೇಳು ಜನಮೇಜಯ ಮಹೀಪಾಲ ॥33॥

+೧೨ ...{Loading}...